ಹಿರಿಯರು ಹಾಗೂ ವಿಶ್ವ ಹಿಂದೂ ಪರಿಷತ್ ಬೆಂಗಳೂರು ಉತ್ತರದ ಅಧ್ಯಕ್ಷರಾಗಿದ್ದ ಶ್ರೀ ಬಿ.ಎಸ್. ನಾಗೇಂದ್ರ ರಾವ್ ಅವರ ನಿಧನದ ಸುದ್ದಿ ತಿಳಿದು ತೀವ್ರ ದುಃಖವಾಗಿದೆ.
ಮೃತರ ಆತ್ಮಕ್ಕೆ ಭಗವಂತನು ಚಿರಶಾಂತಿಯನ್ನು ಕರುಣಿಸಲಿ ಹಾಗೂ ಅವರ ಕುಟುಂಬದ ಸದಸ್ಯರು ಮತ್ತು ಅಭಿಮಾನಿಗಳಿಗೆ ಈ ದುಃಖವನ್ನು ಭರಿಸುವ ಶಕ್ತಿಯನ್ನು ನೀಡಲಿ ಎಂದು ಪ್ರಾರ್ಥಿಸುತ್ತೇನೆ.
ಓಂ ಶಾಂತಿ 🙏🏼
B. S. Yediyurappa
Bookanakere Siddalingappa Yediyurappa (born 27 February 1943), also known as B.S. Yediyurappa or BSY, is an Indian politician who served four terms as the chief minister of Karnataka from 2007 to 2022 as a member of the Karnataka Legislative Assembly, though his tenure was not continuous. More on Wikipedia
-
B.S.Yediyurappa
@BSYBJP
-
B.S.Yediyurappa
@BSYBJP
12ನೇ ಶತಮಾನದಲ್ಲಿಯೇ ಸಮಾನತೆ, ಸಾಮಾಜಿಕ ನ್ಯಾಯ, ಕಾಯಕ ಮತ್ತು ದಾಸೋಹದ ಮೂಲಕ ಮನುಕುಲಕ್ಕೆ ಹೊಸ ದಿಕ್ಕು ತೋರಿದ ವಿಶ್ವಗುರು ಅಣ್ಣ ಬಸವಣ್ಣನವರು ಕನ್ನಡ ನಾಡಿನ ಹೆಮ್ಮೆ ಮಾತ್ರವಲ್ಲ, ಇಡೀ ವಿಶ್ವದ ಮಾನವೀಯ ಮೌಲ್ಯಗಳ ಪ್ರತೀಕ. ಇತ್ತೀಚೆಗೆ ಕೃತಿಕಾರ ಶ್ರೀ ರವಿ ಹಂಜ್ ಅವರ “ಬಸವ ಮಂಟಪ” ಕೃತಿಯಲ್ಲಿ ಅಣ್ಣ ಬಸವಣ್ಣನವರ ಗೌರವ ಮತ್ತು ಚಿಂತನೆಗಳಿಗೆ ಧಕ್ಕೆ ತರುವಂತಹ ವಿಷಯಗಳನ್ನು ಉಲ್ಲೇಖಿಸಿರುವುದಾಗಿ ಹೇಳಲಾಗುತ್ತಿದ್ದು, ಜಗಜ್ಯೋತಿ ಬಸವೇಶ್ವರರ ಬಗ್ಗೆ ಯಾರೇ ಕೀಳಾಗಿ ಮಾತನಾಡಿದ್ದರೂ ಅದನ್ನು ಅತ್ಯಂತ ಕಟುವಾಗಿ ಮತ್ತು ತೀವ್ರವಾಗಿ ಖಂಡಿಸುತ್ತೇನೆ.
-
B.S.Yediyurappa
@BSYBJP
Congratulations to Team India on winning the #mensu19asiacup Final against Pakistan! Proud of our young players for this wonderful victory. Wishing the team many more wins ahead.
-
B.S.Yediyurappa
@BSYBJP
ಪಕ್ಷ ಸಂಘಟನೆ, ಮುಂಬರುವ ಜಿಲ್ಲಾ ಪಂಚಾಯ್ತಿ, ತಾಲೂಕ್ ಪಂಚಾಯ್ತಿ, ಉಪಚುನಾವಣೆ ಸೇರಿದಂತೆ ಹಲವಾರು ಮಹತ್ವದ ವಿಷಯಗಳ ಕುರಿತು ಸಮಾಲೋಚನೆ ನಡೆಸಲು ಇಂದು ರಾಜ್ಯ ಉಸ್ತುವಾರಿಗಳು ಮತ್ತು ರಾಜ್ಯಾಧ್ಯಕ್ಷರ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ನಡೆದ ರಾಜ್ಯ ಪ್ರಮುಖರ ವಿಶೇಷ ಸಭೆಯಲ್ಲಿ ಪಾಲ್ಗೊಳ್ಳಲಾಯಿತು.
@BJP4Karnataka -
B.S.Yediyurappa
@BSYBJP
ರಾಜಧಾನಿ ಬೆಂಗಳೂರಿಗೆ ಇಂದು ಆಗಮಿಸಿದ ಆದರಣೀಯ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಜೀ ಅವರನ್ನು ಹೆಚ್.ಎ.ಎಲ್ ವಿಮಾನ ನಿಲ್ದಾಣದಲ್ಲಿ ಸನ್ಮಾನ್ಯ ರಾಜ್ಯಪಾಲರಾದ ಶ್ರೀಮತಿ ಡಾ.ಸುಧಾ ಯಾದವ್, ಮುಖ್ಯಮಂತ್ರಿ ಶ್ರೀ ಡಿಕೆ ಶಿವಕುಮಾರ್, ಪಕ್ಷದ ರಾಜ್ಯಾಧ್ಯಕ್ಷ ಶ್ರೀ ಬಿ.ವೈ.ವಿಜಯೇಂದ್ರ ಮತ್ತಿತರ ಗಣ್ಯರೊಂದಿಗೆ ಆತ್ಮೀಯವಾಗಿ ಸ್ವಾಗತಿಸಲಾಯಿತು.
@narendramodi -
B.S.Yediyurappa
@BSYBJP
ಈ ಭ್ರಷ್ಟ ಕಾಂಗ್ರೆಸ್ ಸರ್ಕಾರ ದುರಾಡಳಿತದ ಫಲವಾಗಿ ಅಗತ್ಯ ವಸ್ತುಗಳ ಬೆಲೆ ಏರಿಕೆಯ ಅತಿಯಾದ ಹೊರೆಯಿಂದ ರಾಜ್ಯದ ಜನತೆ ತೀವ್ರ ಸಂಕಷ್ಟ ಎದುರಿಸುತ್ತಿದ್ದು, ಈ ಜನವಿರೋಧಿ ಬೆಲೆ ಏರಿಕೆಯನ್ನು ಖಂಡಿಸಿ ಇಂದು ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಪಕ್ಷದ ರಾಜ್ಯಾಧ್ಯಕ್ಷ ಶ್ರೀ ಬಿ.ವೈ.ವಿಜಯೇಂದ್ರ ನೇತೃತ್ವದಲ್ಲಿ ಹಾಗೂ ಪಕ್ಷದ ಎಲ್ಲಾ ನಾಯಕರು, ಸಂಸದರು, ಶಾಸಕರು, ಮುಖಂಡರು ಮತ್ತು ಕಾರ್ಯಕರ್ತರೊಂದಿಗೆ ಬೃಹತ್ ಪ್ರತಿಭಟನೆ ನಡೆಸಲಾಯಿತು.
-
B.S.Yediyurappa
@BSYBJP
ಭಾರತ ರತ್ನ ಪುರಸ್ಕೃತರು, ಹಿರಿಯ ರಾಜಕೀಯ ಮುತ್ಸದ್ದಿ ಹಾಗೂ ಮಾಜಿ ಉಪ ಪ್ರಧಾನಮಂತ್ರಿಗಳಾದ ಶ್ರೀ ಎಲ್. ಕೆ. ಅಡ್ವಾಣಿ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು.
-
B.S.Yediyurappa
@BSYBJP
ನಾಡಿನ ಸಮಸ್ತ ಜನತೆಗೆ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು.
-
B.S.Yediyurappa
@BSYBJP
ಶಿಸ್ತು, ರಾಷ್ಟ್ರಪ್ರೇಮ ಹಾಗೂ ಸೇವಾ ಮನೋಭಾವದ ಸಂಕೇತವಾಗಿರುವ 'ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್ ಸಂಸ್ಥಾಪನಾ ದಿನ'ದ ಸಂದರ್ಭದಲ್ಲಿ ವಿಶೇಷ ಅಂಚೆ ಚೀಟಿ ಬಿಡುಗಡೆ ಮಾಡಲಾಯಿತು. ಸ್ಕೌಟ್ಸ್ ಆಂಡ್ ಗೈಡ್ಸ್ ನ ಸಮಸ್ತ ಸದಸ್ಯರಿಗೆ ಹಾಗೂ ಯುವ ಕೆಡೆಟ್ಸ್ ಗೆ ಸ್ಥಾಪನಾ ದಿನದ ಶುಭಾಶಯಗಳು. ಈ ಸಂದರ್ಭದಲ್ಲಿ ಮಾಜಿ ಸಚಿವರು ಮತ್ತು ಕರ್ನಾಟಕ ರಾಜ್ಯ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ರಾಜ್ಯ ಮುಖ್ಯ ಆಯುಕ್ತರಾದ ಶ್ರೀ ಡಾ ಪಿ.ಜಿ.ಆರ್. ಸಿಂಧ್ಯ ಮತ್ತಿತರ ಪ್ರಮುಖರು ಉಪಸ್ಥಿತರಿದ್ದರು
-
B.S.Yediyurappa
@BSYBJP
ಬಿಜೆಪಿ ರಾಜ್ಯಾಧ್ಯಕ್ಷರಾದ ಶ್ರೀ @BYVijayendra ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. ತಮಗೆ ಭಗವಂತನು ಉತ್ತಮ ಆರೋಗ್ಯ, ದೀರ್ಘಾಯುಷ್ಯ, ಜನಸೇವೆ ಸಲ್ಲಿಸುವ ಶಕ್ತಿ ದಯಪಾಲಿಸಲಿ ಎಂದು ಹಾರೈಸುವೆ.💐
-
B.S.Yediyurappa
@BSYBJP
ಬೆಂಗಳೂರಿನ ಲೋಕಭವನಕ್ಕೆ ಇಂದು ತೆರಳಿ ನಮ್ಮ ಘನತೆವೆತ್ತ ರಾಜ್ಯಪಾಲರಾದ ಡಾ. ಸುಧಾ ಯಾದವ್ ಜೀ ರವರನ್ನು ಸೌಹಾರ್ದಯುತವಾಗಿ ಭೇಟಿಯಾಗಿ, ದೀಪಾವಳಿ ಹಬ್ಬದ ಶುಭಾಶಯಗಳನ್ನು ಸಲ್ಲಿಸಲಾಯಿತು.
@drsudhayadav -
B.S.Yediyurappa
@BSYBJP
ಬೆಂಗಳೂರಿನ ಪಕ್ಷದ ಕಾರ್ಯಾಲಯದಲ್ಲಿ ಇಂದು ನಡೆದ ಪಕ್ಷದ ಕೋರ್ ಕಮಿಟಿ ಸಭೆಯಲ್ಲಿ ಭಾಗವಹಿಸಲಾಯಿತು. ಪಕ್ಷದ ನೂತನ ರಾಜ್ಯ ಉಸ್ತುವಾರಿ, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಶ್ರೀ ಹರೀಶ್ ದ್ವಿವೇದಿ, ರಾಜ್ಯಾಧ್ಯಕ್ಷ ಶ್ರೀ ವಿಜಯೇಂದ್ರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ರಾಜ್ಯ ಕೋರ್ ಕಮಿಟಿ ಸದಸ್ಯರು ಪಾಲ್ಗೊಂಡಿದ್ದರು.
@HarishD_BJP -
B.S.Yediyurappa
@BSYBJP
ನಾಡಿನ ಸಮಸ್ತ ಜನತೆಗೆ 71ನೇ ಕರ್ನಾಟಕ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು.
-
B.S.Yediyurappa
@BSYBJP
ದೇಶದ ಏಕತೆಗಾಗಿ ಶ್ರಮಿಸಿದ, ಉಕ್ಕಿನ ಮನುಷ್ಯ ಭಾರತ ರತ್ನ ಶ್ರೀ ಸರ್ದಾರ್ ವಲ್ಲಭಭಾಯ್ ಪಟೇಲ್ ಅವರ ಜಯಂತಿ ಹಾಗೂ ರಾಷ್ಟ್ರೀಯ ಏಕತಾ ದಿನದ ಶುಭಾಶಯಗಳು.
-
B.S.Yediyurappa
@BSYBJP
ಹಿರಿಯ ಮುತ್ಸದ್ಧಿಗಳಾದ ಮಾಜಿ ಪ್ರಧಾನಮಂತ್ರಿ ಸನ್ಮಾನ್ಯ ಶ್ರೀ ಹೆಚ್.ಡಿ.ದೇವೇಗೌಡರನ್ನು ಇಂದು ಪದ್ಮನಾಭನಗರದ ಅವರ ನಿವಾಸದಲ್ಲಿ ಆತ್ಮೀಯವಾಗಿ ಭೇಟಿ ಮಾಡಿ, ಅವರ ಯೋಗಕ್ಷೇಮ ವಿಚಾರಿಸಿ, ಇತ್ತೀಚಿನ ವಿಧಾನ ಪರಿಷತ್ ಚುನಾವಣೆಯಲ್ಲಿ ಎನ್.ಡಿ.ಎ ಮೈತ್ರಿಕೂಟದ ಅಭ್ಯರ್ಥಿಗಳು ಸಾಧಿಸಿದ ಗೆಲುವಿಗಾಗಿ ಅಭಿನಂದಿಸಿ, ದೀಪಾವಳಿ ಹಬ್ಬದ ಶುಭಾಶಯಗಳನ್ನು ಸಲ್ಲಿಸಲಾಯಿತು.
-
B.S.Yediyurappa
@BSYBJP
ರಾಜ್ಯ ವಿಧಾನ ಪರಿಷತ್ತಿನ ಶಿಕ್ಷಕರ ಹಾಗೂ ಪದವೀಧರ ಕ್ಷೇತ್ರಗಳ ನಾಲ್ಕು ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವು ಸಾಧಿಸಿರುವ ಎನ್.ಡಿ.ಎ ಮೈತ್ರಿಕೂಟದ ಅಭ್ಯರ್ಥಿಗಳಾದ ಶ್ರೀ ಶಶೀಲ್ ನಮೋಶಿ, ಶ್ರೀ ಡಾ. ಎಸ್.ವಿ.ಸಂಕನೂರ, ಶ್ರೀ ಕೆ.ಎಂ.ಸುರೇಶ್ ಹಾಗೂ ಶ್ರೀ ಎ.ಪಿ.ರಂಗನಾಥ್ ರವರಿಗೆ ನನ್ನ ಹಾರ್ದಿಕ ಅಭಿನಂದನೆಗಳು. ಈ ಗೆಲುವು ರಾಜ್ಯದ ಪ್ರಬುದ್ಧ ಮತದಾರರು ಆಡಳಿತಾರೂಢ ಕಾಂಗ್ರೆಸ್ ಪಕ್ಷದ ವಿರುದ್ಧ ನೀಡಿರುವ ಸುಸ್ಪಷ್ಟ ಜನಾದೇಶವಾಗಿದೆ ಮತ್ತು ಪ್ರಧಾನಿ ಶ್ರೀ ನರೇಂದ್ರ ಮೋದಿ ಜೀ ರವರ ನೇತೃತ್ವದ ಎನ್.ಡಿ.ಎ ಸರ್ಕಾರದ ಅಭಿವೃದ್ಧಿ ರಾಜಕಾರಣದ ಸಮರ್ಥನೆಯಾಗಿದೆ.
ಮತದಾರರು ಇಟ್ಟಿರುವ ವಿಶ್ವಾಸಕ್ಕೆ ತಕ್ಕಂತೆ ವಿಜೇತ ಅಭ್ಯರ್ಥಿಗಳು ಜನಪರವಾಗಿ ಕಾರ್ಯನಿರ್ವಹಿಸಲಿದ್ದಾರೆ. ನಮ್ಮ ಅಭ್ಯರ್ಥಿಗಳ ಮೇಲೆ ವಿಶ್ವಾಸವಿಟ್ಟು ಬೆಂಬಲಿಸಿದ ಸಮಸ್ತ ಪ್ರಜ್ಞಾವಂತ ಮತದಾರ ಬಂಧುಗಳಿಗೆ ಹಾಗೂ ಈ ಐತಿಹಾಸಿಕ ಗೆಲುವಿಗಾಗಿ ಕ್ಷೇತ್ರ ಮಟ್ಟದಲ್ಲಿ ಹಗಲಿರುಳು ಪರಿಶ್ರಮಿಸಿದ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಕೂಟದ ರಾಜ್ಯಾಧ್ಯಕ್ಷರು, ಎಲ್ಲ ನಾಯಕರು, ಜನಪ್ರತಿನಿಧಿಗಳು ಹಾಗೂ ಪ್ರತಿಯೊಬ್ಬ ನಿಷ್ಠಾವಂತ ಕಾರ್ಯಕರ್ತರಿಗೆ ಅಭಿನಂದನೆಗಳು. ಆಯ್ಕೆಗೊಂಡ ನೂತನ ಶಾಸಕರ ಯಶಸ್ವಿ ಕಾರ್ಯನಿರ್ವಹಣೆಗೆ ನನ್ನ ಶುಭಹಾರೈಕೆಗಳು. -
B.S.Yediyurappa
@BSYBJP
ನಾಡಿನ ಸಮಸ್ತ ಜನತೆಗೆ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿಯ ಹಾರ್ದಿಕ ಶುಭಾಶಯಗಳು.
-
B.S.Yediyurappa
@BSYBJP
ನಾಡಿನ ಹೆಮ್ಮೆಯ ವೀರವನಿತೆ, ಸ್ವಾತಂತ್ರ್ಯ ಹೋರಾಟದ ಅಪ್ರತಿಮ ಶಕ್ತಿ ಕಿತ್ತೂರು ರಾಣಿ ಚೆನ್ನಮ್ಮ ಅವರ ಜಯಂತಿಯ ಹಾರ್ದಿಕ ಶುಭಾಶಯಗಳು.
-
B.S.Yediyurappa
@BSYBJP
ನಾಡಿನ ಸಮಸ್ತ ಜನತೆಗೆ ವಿಜಯದಶಮಿಯ ಹಾರ್ದಿಕ ಶುಭಾಶಯಗಳು. ನಾಡದೇವಿ ಶ್ರೀ ಚಾಮುಂಡೇಶ್ವರಿ ತಾಯಿಯು ಎಲ್ಲರಿಗೂ ಸುಖ, ಶಾಂತಿ, ಸಮೃದ್ಧಿಯನ್ನು ಕರುಣಿಸಲಿ.
#vijayadashami #happydasara -
B.S.Yediyurappa
@BSYBJP
ರಾಷ್ಟ್ರ ಸೇವೆ, ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಕೊಂಡಿರುವ ಎಲ್ಲಾ ಸ್ವಯಂಸೇವಕರಿಗೆ ರಾಷ್ಟ್ರೀಯ ಸ್ವಯಂಸೇವಕ ಸಂಘ ಸ್ಥಾಪನಾ ದಿನದ ಹಾರ್ದಿಕ ಶುಭಾಶಯಗಳು.
#rssvijayadashami #rssವಿಜಯದಶಮಿ -
B.S.Yediyurappa
@BSYBJP
ನಾಡಿನ ಸಮಸ್ತ ಜನತೆಗೆ ಪವಿತ್ರ ಮಹಾನವಮಿ ಹಾಗೂ ಆಯುಧ ಪೂಜೆಯ ಹಾರ್ದಿಕ ಶುಭಾಶಯಗಳು.
#mahanavami #ayudhapooje -
B.S.Yediyurappa
@BSYBJP
ಆಗ್ನೇಯ ಪದವೀಧರ ಕ್ಷೇತ್ರದ ಎನ್.ಡಿ.ಎ ಮೈತ್ರಿಕೂಟದ ನಮ್ಮ ಅಭ್ಯರ್ಥಿ ಶ್ರೀ ಕೆ.ಎಂ.ಸುರೇಶ್ ಅವರ ಪರವಾಗಿ ಇಂದು ದಾವಣಗೆರೆಯಲ್ಲಿ ಬೃಹತ್ ಪ್ರಚಾರ ಸಭೆಯಲ್ಲಿ ಭಾಗವಹಿಸಿ, ಮತಯಾಚಿಸಲಾಯಿತು. ಜನರ ವಿಶ್ವಾಸವೇ ನಮ್ಮ ಶಕ್ತಿ, ಜನ ಸಮರ್ಥನೆಯೊಂದಿಗೆ, ಅಭಿವೃದ್ಧಿ ಮತ್ತು ಪರಿವರ್ತನೆಯತ್ತ ಮತ್ತಷ್ಟು ವಿಶ್ವಾಸದಿಂದ ಮುನ್ನಡೆಯಲಿದ್ದೇವೆ.
-
B.S.Yediyurappa
@BSYBJP
My hearty congratulations to Dr. Sudha Yadav Ji on her appointment as the hon'ble Governor of Karnataka.
With her vast experience and dedication to public service, the constitutional values of our state will be further strengthened under her guidance.
@drsudhayadav -
B.S.Yediyurappa
@BSYBJP
ಶಿವಮೊಗ್ಗದಲ್ಲಿ ಇಂದು 'BSC ಟೆಕ್ಸ್ಟೈಲ್ಸ್' ನೂತನ ಬೃಹತ್ ಮಳಿಗೆಯನ್ನು ಇಂದು ಉದ್ಘಾಟಿಸಲಾಯಿತು. ವಿಶ್ವಾಸಾರ್ಹ ಪರಂಪರೆ ಹೊಂದಿರುವ ಈ ಸಂಸ್ಥೆ, ನಮ್ಮ ಮಲೆನಾಡಿನ ವಾಣಿಜ್ಯ ಕ್ಷೇತ್ರಕ್ಕೆ ಹೊಸ ಮೆರುಗು ನೀಡಿ, ಜನರಿಗೆ ಉತ್ತಮ ಸೇವೆ ಹಾಗೂ ಸ್ಥಳೀಯರಿಗೆ ಉದ್ಯೋಗಾವಕಾಶಗಳನ್ನು ಸೃಷ್ಟಿಸಲಿ ಎಂದು ಆಶಿಸುತ್ತೇನೆ. ಈ ಸಂದರ್ಭದಲ್ಲಿ ಕೇಂದ್ರ ಸಚಿವ ಶ್ರೀ ವಿ.ಸೋಮಣ್ಣ ಮತ್ತು ಹಲವಾರು ಜನಪ್ರತಿನಿಧಿಗಳು, ಪ್ರಮುಖರು ಉಪಸ್ಥಿತರಿದ್ದರು,
-
B.S.Yediyurappa
@BSYBJP
ಬೆಂಗಳೂರಿನ ಬಿಜೆಪಿ ರಾಜ್ಯ ಕಾರ್ಯಾಲಯ 'ಜಗನ್ನಾಥ ಭವನ'ದಲ್ಲಿ ಇಂದು ಪಕ್ಷದ ನೂತನ ರಾಜ್ಯದ ಸಹ ಉಸ್ತುವಾರಿ ಶ್ರೀ ಡಾ. ಕಸಂ ವೆಂಕಟೇಶ್ವರುಲು, ರಾಷ್ಟ್ರೀಯ ಉಪಾಧ್ಯಕ್ಷರಾದ ಶ್ರೀ ಪ್ರೊ ಎಂ.ನಾಗರಾಜ್ ಮತ್ತು ರಾಜ್ಯಾಧ್ಯಕ್ಷ ಶ್ರೀ ಬಿ ವೈ ವಿಜಯೇಂದ್ರ ರವರ ನೇತೃತ್ವದಲ್ಲಿ ನಡೆದ ರಾಜ್ಯ ಕೋರ್ ಕಮಿಟಿ ಸಭೆಯಲ್ಲಿ ಪಾಲ್ಗೊಂಡು, ಪಕ್ಷ ಸಂಘಟನೆ, ಮುಂಬರುವ ವಿಧಾನ ಪರಿಷತ್ ಚುನಾವಣೆ ಸೇರಿದಂತೆ ಎಲ್ಲ ಪ್ರಮುಖ ವಿಷಯಗಳ ಕುರಿತು ಸಮಾಲೋಚನೆ ನಡೆಸಲಾಯಿತು.
-
B.S.Yediyurappa
@BSYBJP
ನಾಡಿನ ಸಮಸ್ತ ಜನತೆಗೆ ನವರಾತ್ರಿಯ ಶುಭಾಶಯಗಳು.
-
B.S.Yediyurappa
@BSYBJP
Deeply saddened by the passing of Padma Shri awardee Shri Nana Patekar, a profoundly sensitive artist of Indian cinema.
I pray for eternal peace to the departed soul and for strength to his family, friends, and millions of admirers to bear this immense loss. Om Shanti. 🙏 -
B.S.Yediyurappa
@BSYBJP
ರಾಷ್ಟ್ರಸೇವೆಯೇ ಧರ್ಮ, ಜನಸೇವೆಯೇ ಧ್ಯೇಯ!
ಸಾರ್ವಜನಿಕ ಸೇವೆಯಲ್ಲಿ ಸರಿ ಸಾಟಿಯಿಲ್ಲಿದ ಮೈಲಿಗಲ್ಲನ್ನು ದಾಟುತ್ತಿರುವ ಆದರಣೀಯ ಪ್ರಧಾನಮಂತ್ರಿ ಶ್ರೀ @narendramodi ಜೀ ರವರು ಸರ್ಕಾರದ ಮುಖ್ಯಸ್ಥರಾಗಿ ಇಂದು ಸತತ 25 ವರ್ಷಗಳ ಐತಿಹಾಸಿಕ ಅಧಿಕಾರಾವಧಿಯನ್ನು ಪೂರ್ಣಗೊಳಿಸಿದ್ದಾರೆ. ಈ ನಿಮಿತ್ತ ಸೇವಾ ಸಂಕಲ್ಪ ಅಭಿಯಾನದ ಅಂಗವಾಗಿ ಬೆಂಗಳೂರಿನಲ್ಲಿ ಇಂದು ಆಯೋಜಿಸಲಾಗಿದ್ದ 'ಸೇವಾ ಜ್ಯೋತಿ ಯಾತ್ರೆ' ಹಾಗೂ 'ವಿಕಸಿತ ಭಾರತ ಸಂಕಲ್ಪ ಸಭೆ'ಯಲ್ಲಿ ಭಾಗವಹಿಸಲಾಯಿತು.
ನೆಚ್ಚಿನ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಜೀ ಅವರ ನಾಯಕತ್ವದಲ್ಲಿ 'ವಿಕಸಿತ ಭಾರತ 2047' ನಿರ್ಮಾಣಕ್ಕಾಗಿ ಸಾಮೂಹಿಕ ಸಂಕಲ್ಪ ಸ್ವೀಕರಿಸಿ, 'ಸೇವಾ ಜ್ಯೋತಿ' ಪ್ರಜ್ವಲಿಸುವ ಮೂಲಕ ಸಮರ್ಪಣಾ ಭಾವದ ಜನಸೇವೆಯತ್ತ ಮುನ್ನಡೆಯುವ ದೃಢಸಂಕಲ್ಪ ನಮ್ಮದು!
#25yearsofseva #sevajyothiyatre #sevasankalpabhiyan -
B.S.Yediyurappa
@BSYBJP
ವಿಧಾನ ಪರಿಷತ್ ಸದಸ್ಯರಾದ ಶ್ರೀ ಶಶೀಲ್ ಜಿ. ನಮೋಶಿ ಅವರ ಪೂಜ್ಯ ಮಾತೃಶ್ರೀ ಶ್ರೀಮತಿ ಭೂದೇವಿ ಗಂಗಾಧರ ನಮೋಶಿ ಅವರ ನಿಧನಕ್ಕೆ ತೀವ್ರ ಸಂತಾಪಗಳು.
ಮೃತರ ಆತ್ಮಕ್ಕೆ ಚಿರಶಾಂತಿ ದೊರೆಯಲಿ. ಶ್ರೀ ಶಶೀಲ್ ನಮೋಶಿ ಹಾಗೂ ಕುಟುಂಬದವರಿಗೆ ಈ ದುಃಖವನ್ನು ಭರಿಸುವ ಶಕ್ತಿಯನ್ನು ಭಗವಂತನು ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ. -
B.S.Yediyurappa
@BSYBJP
Nerves of steel as India defend 211 and defeat Pakistan! Congratulations to Captain Shreyas Iyer and Team India on a memorable triumph. This is a proud moment for every Indian.
#asiangames2026 -
B.S.Yediyurappa
@BSYBJP
ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ ಹಾಗೂ ಮಾಜಿ ಪ್ರಧಾನಿ, ಭಾರತರತ್ನ ಶ್ರೀ ಲಾಲ್ ಬಹದ್ದೂರ್ ಶಾಸ್ತ್ರೀಜಿ ಅವರ ಜಯಂತಿಯಂದು ಭಕ್ತಿಪೂರ್ವಕ ನಮನಗಳು.
-
B.S.Yediyurappa
@BSYBJP
"ಏಸೂರು ಕೊಟ್ಟರೂ ಈಸೂರು ಕೊಡೆವು" - ಸ್ವಾಭಿಮಾನ, ಆತ್ಮಗೌರವ, ಹೋರಾಟದ ಕಿಚ್ಚು ಈಸೂರಿನ ಮಣ್ಣಿನ ಕಣಕಣದಲ್ಲಿದೆ. 1942ರಲ್ಲಿ ಇದೇ ದಿನದಂದು, ದೇಶದ ಮೊದಲ ಸ್ವತಂತ್ರ ಗ್ರಾಮವೆಂದು ಘೋಷಿಸಲ್ಪಟ್ಟ ಶಿಕಾರಿಪುರದ ಈಸೂರಿನ ಪವಿತ್ರ ಮಣ್ಣಿನಲ್ಲಿ ಇಂದು, ದೇಶದ ಸ್ವಾತಂತ್ರ್ಯಕ್ಕಾಗಿ ನಗುಮುಖದಿಂದ ಗಲ್ಲಿಗೇರಿದ ಐವರು ಹುತಾತ್ಮ ವೀರ ಸ್ವಾತಂತ್ರ್ಯ ಯೋಧರ ಜೊತೆಗೆ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಈಸೂರಿನ ಅಂದಿನ ಎಲ್ಲಾ 65 ಹಿರಿಯರಿಗೆ ಗೌರವ ನಮನಗಳನ್ನು ಸಲ್ಲಿಸಿ ಅವರೆಲ್ಲರ ಭಾವಚಿತ್ರವನ್ನು ಸ್ಮಾರಕ ಭವನದಲ್ಲಿ ಅನಾವರಣಗೊಳಿಸಲಾಯಿತು.
-
B.S.Yediyurappa
@BSYBJP
ರಿಪ್ಪನ್ಪೇಟೆಯಲ್ಲಿ ಇಂದು ಬಸವೇಶ್ವರ ವೀರಶೈವ ಸಮಾಜದ ವತಿಯಿಂದ ಆಯೋಜಿಸಲಾಗಿದ್ದ ಆನಂದಪುರ ಮುರುಘಾಮಠದ ಪರಮಪೂಜ್ಯ ಜಗದ್ಗುರು ಶ್ರೀ ಡಾ.ಮಲ್ಲಿಕಾರ್ಜುನ ಮುರುಘಾರಾಜೇಂದ್ರ ಮಹಾಸ್ವಾಮಿಗಳ 'ಅಮೃತ ಮಹೋತ್ಸವ'ದಲ್ಲಿ ಪಾಲ್ಗೊಂಡು, ಇದೇ ಸಂದರ್ಭದಲ್ಲಿ ಪರಮಪೂಜ್ಯ ಶ್ರೀಗಳ ಆಶೀರ್ವಾದ ಹಾಗೂ ಸಮಾಜದ ಬಂಧುಗಳು ಅತ್ಯಂತ ಅಭಿಮಾನಪೂರ್ವಕವಾಗಿ ನೀಡಿದ ಅಭಿನಂದನೆಗಳನ್ನು ವಿನಯಪೂರ್ವಕವಾಗಿ ಸ್ವೀಕರಿಸಲಾಯಿತು. ಜನರ ಆಶೀರ್ವಾದವೇ ನನ್ನ ಶಕ್ತಿ, ಜನರ ಅಭಿಮಾನ, ಪ್ರೀತಿ, ಹಾರೈಕೆಗಳಿಗೆ ನಾನು ಸದಾ ಋಣಿಯಾಗಿದ್ದೇನೆ.
-
B.S.Yediyurappa
@BSYBJP
ರಾಷ್ಟ್ರಸೇವೆಯೇ ಜೀವನದ ಧ್ಯೇಯವಾಗಿಸಿಕೊಂಡ, ಅಂತ್ಯೋದಯದ ಪರಿಕಲ್ಪನೆಯ ಮೂಲಕ ಸಮಾಜದ ಕಟ್ಟಕಡೆಯ ವ್ಯಕ್ತಿಯ ಬದುಕಿಗೂ ಬೆಳಕು ನೀಡಿದ ಮಹಾನ್ ಚಿಂತಕ, ಸಂಘಟಕ ಹಾಗೂ ಮಾರ್ಗದರ್ಶಕ ಪಂಡಿತ್ ದೀನದಯಾಳ್ ಉಪಾಧ್ಯಾಯ ಅವರ ಜನ್ಮದಿನದಂದು ಶತ ಶತ ನಮನಗಳು.
-
B.S.Yediyurappa
@BSYBJP
ರಾಜ್ಯ ಉಸ್ತುವಾರಿಗಳಾಗಿ ನಿಯುಕ್ತಿಗೊಂಡ ಶ್ರೀ ಹರೀಶ್ ದ್ವಿವೇದಿ ಅವರಿಗೆ ಮತ್ತು ಸಹ ಉಸ್ತುವಾರಿಗಳಾಗಿ ನಿಯುಕ್ತಿಗೊಂಡ ಡಾ. ಕಾಸಂ ವೆಂಕಟೇಶ್ವರಲು ಅವರಿಗೆ ಅಭಿನಂದನೆಗಳು.
@HarishD_BJP @KasamBJP -
B.S.Yediyurappa
@BSYBJP
Heartiest congratulations to our Indian women’s cricket team on winning the Gold at the Asian Games. Our Nari Shakti continues to make the nation proud on the world stage! Jai Hind!🇮🇳
#asiangames -
B.S.Yediyurappa
@BSYBJP
ಆದರಣೀಯ ಪ್ರಧಾನಿ ಶ್ರೀ ನರೇಂದ್ರ ಮೋದಿ ಜೀ ರವರ ಜನ್ಮದಿನದ ಅಂಗವಾಗಿ ಮಲೇಶ್ವರದಲ್ಲಿ ಆಯೋಜಿಸಲಾಗಿದ್ದ ಗಣೇಶೋತ್ಸವ, ಗಂಗಾರತಿ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು, ನಂತರ ಬ್ಯಾಟರಾಯನಪುರದ ಚಿಕ್ಕಜಾಲ ಶ್ರೀ ಕೋಟೆ ಆಂಜನೇಯ ಸ್ವಾಮಿ ದೇವಾಲಯದಲ್ಲಿ ಸೇವಾ ಸಂಕಲ್ಪ ಅಭಿಯಾನದ ಪ್ರಯುಕ್ತ ಆಶೀರ್ವಾದದ ದೀಪ ಬೆಳಗಿ ಪ್ರಧಾನಿಗಳಿಗೆ ಶುಭ ಕೋರಲಾಯಿತು.
#ashirwadkadiya -
B.S.Yediyurappa
@BSYBJP
ನಮ್ಮೆಲ್ಲರ ಹೆಮ್ಮೆಯ ನಾಯಕ, ಸನ್ಮಾನ್ಯ ಪ್ರಧಾನಿ ಶ್ರೀ @narendramodi ಜೀ ರವರ ಜನ್ಮದಿನದ ಶುಭ ಸಂದರ್ಭದಲ್ಲಿ, ಇಂದು ನಮ್ಮ ಮನೆಯ ದೇವರ ಎದುರಿಗೆ, ಶ್ರೀ ಮೋದಿಜೀ ರವರಿಗೆ ಭಗವಂತನ ಶ್ರೀರಕ್ಷೆ ಸದಾ ಇರಲಿ ಎಂದು ವಿಶೇಷವಾಗಿ ಪ್ರಾರ್ಥಿಸಿ, ಆಶೀರ್ವಾದದ ದೀಪವನ್ನು ಬೆಳಗಿಸಲಾಯಿತು.
#ashirwadkadiya -
B.S.Yediyurappa
@BSYBJP
ಸಮಸ್ತ ಕಲ್ಯಾಣ ಕರ್ನಾಟಕ ಜನತೆಗೆ ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆಯ ಶುಭಾಶಯಗಳು.
#kalyanakarnatakautsav #ಕಲ್ಯಾಣಕರ್ನಾಟಕಉತ್ಸವ -
B.S.Yediyurappa
@BSYBJP
ನಾಡಿನ ಸಮಸ್ತ ಜನತೆಗೆ ದೇವಶಿಲ್ಪಿ ವಿಶ್ವಕರ್ಮ ಜಯಂತಿಯ ಶುಭಾಶಯಗಳು.
-
B.S.Yediyurappa
@BSYBJP
From Gujarat to Delhi, 25 remarkable years of dedicated public service, guided by one unwavering commitment: Nation First.
Heartfelt birthday greetings to our Hon’ble Prime Minister Shri @narendramodi Ji. Your visionary leadership and tireless service continue to inspire millions. May you be blessed with good health, strength and a long life to continue guiding our nation towards greater heights.
ಸೇವೆ, ಸಾಧನೆ ಮತ್ತು ಸಮರ್ಪಣೆಗಳ 25 ವರ್ಷಗಳ ಸಾರ್ಥಕ ಸಾರ್ವಜನಿಕ ಜೀವನದಲ್ಲಿ, ತಮಗೆ ರಾಷ್ಟ್ರಸೇವೆಯೇ ಉಸಿರು, ಭಾರತವೇ ಮೊದಲು. ಹೆಮ್ಮೆಯ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಜೀ ರವರಿಗೆ ಜನ್ಮದಿನದ ಹೃದಯಪೂರ್ವಕ ಶುಭಾಶಯಗಳು.
#ashirwadkadiya #sevasankalpabhiyan
#happybdaypmmodi -
B.S.Yediyurappa
@BSYBJP
ಕನ್ನಡದ ಕೀರ್ತಿಯನ್ನು ರಾಷ್ಟ್ರಮಟ್ಟದಲ್ಲಿ ಎತ್ತರಕ್ಕೆ ಕೊಂಡೊಯ್ದಿರುವ ನಮ್ಮ ಹೆಮ್ಮೆಯ ಕಲಾವಿದ ಶ್ರೀ ಅನಂತ್ ನಾಗ್ ಅವರಿಗೆ ಪ್ರತಿಷ್ಠಿತ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಲಭಿಸಿರುವುದು ಕನ್ನಡಿಗರೆಲ್ಲರಿಗೂ ಅಪಾರ ಸಂತಸ, ಹೆಮ್ಮೆ ಮತ್ತು ಸಂಭ್ರಮದ ಕ್ಷಣ.
ಹಲವು ದಶಕಗಳ ತಮ್ಮ ಸುದೀರ್ಘ ಕಲಾಯಾತ್ರೆಯಲ್ಲಿ ಸಹಜ ಅಭಿನಯ, ಅಪೂರ್ವ ಪ್ರತಿಭೆ ಹಾಗೂ ವೈವಿಧ್ಯಮಯ ಪಾತ್ರಗಳ ಮೂಲಕ ಕನ್ನಡ ಸೇರಿದಂತೆ ಭಾರತೀಯ ಚಿತ್ರರಂಗವನ್ನು ಶ್ರೀಮಂತಗೊಳಿಸಿರುವ ಅನಂತ್ ನಾಗ್ ಅವರು, ತಾವು ಅಭಿನಯಿಸಿದ ಪ್ರತಿಯೊಂದು ಪಾತ್ರಕ್ಕೂ ತಮ್ಮದೇ ಆದ ವಿಶಿಷ್ಟ ಜೀವಂತಿಕೆ, ಆಳ ಮತ್ತು ಆತ್ಮೀಯತೆಯನ್ನು ತುಂಬಿದ್ದಾರೆ.
ಅವರ ಅಮೋಘ ಕಲಾಸೇವೆ, ಅಪಾರ ಪ್ರತಿಭೆ ಹಾಗೂ ಚಿತ್ರರಂಗಕ್ಕೆ ನೀಡಿರುವ ಅಮೂಲ್ಯ ಕೊಡುಗೆಯನ್ನು ಗುರುತಿಸಿ ಸಂದಿರುವ ಈ ಪ್ರತಿಷ್ಠಿತ ಗೌರವವು ನಿಜಕ್ಕೂ ಕನ್ನಡಿಗರೆಲ್ಲರಿಗೂ ಹೆಮ್ಮೆಯ ಸಂಗತಿ.
ಪ್ರೀತಿಯ ಅನಂತ್ ನಾಗ್ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು ಹಾಗೂ ಆತ್ಮೀಯ ಶುಭಾಶಯಗಳು.
ಈ ಪ್ರತಿಷ್ಠಿತ ಗೌರವವು ಅವರ ಅಪೂರ್ವ ಕಲಾಯಾತ್ರೆಗೆ ಮತ್ತಷ್ಟು ಮೆರುಗು ನೀಡಲಿ. ಅವರ ಕಲಾಸೇವೆ, ಸರಳತೆ ಮತ್ತು ಅದ್ಭುತ ಅಭಿನಯವು ಇನ್ನೂ ಹಲವು ವರ್ಷಗಳ ಕಾಲ ನಮ್ಮೆಲ್ಲರನ್ನು ರಂಜಿಸುತ್ತಾ, ಪ್ರೇರೇಪಿಸುತ್ತಾ ಮುಂದುವರಿಯಲಿ ಎಂದು ಹಾರೈಸುತ್ತೇನೆ. -
B.S.Yediyurappa
@BSYBJP
ನಾಡಿನ ಸಮಸ್ತ ಜನತೆಗೆ ಗೌರಿ - ಗಣೇಶ ಹಬ್ಬದ ಹಾರ್ದಿಕ ಶುಭಾಷಯಗಳು.
-
B.S.Yediyurappa reposted
B.S.Yediyurappa
@BSYBJP
Heartfelt birthday greetings to Aadaraniya Sarsanghachalak Shri Mohan Bhagwat ji. May you be blessed with good health and a long life dedicated to the service of Bharat.
@DrMohanBhagwat @RSSorg -
B.S.Yediyurappa
@BSYBJP
ಪರಮಪೂಜ್ಯ ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳು ಹಾಗೂ ಜಗದ್ಗುರು ಶ್ರೀ ಗಣಪತಿ ಸಚ್ಚಿದಾನಂದ ಮಹಾಸ್ವಾಮಿಗಳವರ ದಿವ್ಯ ಸಾನ್ನಿಧ್ಯದಲ್ಲಿ, ಜೆ.ಎಸ್.ಎಸ್ ಮಹಾವಿದ್ಯಾಪೀಠದ ವತಿಯಿಂದ ಮೈಸೂರಿನಲ್ಲಿ ನಿರ್ಮಿಸಲಾಗಿರುವ 'ಜೆಎಸ್ಎಸ್ ಹಿರಿಯರ ಮನೆ' ಹಾಗೂ 'ಶಿವ ದೇವಾಲಯ'ವನ್ನು ಇಂದು ಉದ್ಘಾಟಿಸಲಾಯಿತು. ಜೀವನದ ಸಂಧ್ಯಾಕಾಲದಲ್ಲಿರುವ ಹಿರಿಯ ನಾಗರಿಕರಿಗೆ ಅಗತ್ಯ ಆಸರೆಯ ಜೊತೆಗೆ, ಅವರ ಆರೈಕೆ, ಪೋಷಣೆ ಹಾಗೂ ನೆಮ್ಮದಿಯ ಜೀವನಕ್ಕೆ ಪೂರಕವಾದ ಇಂತಹ ಸಮಾಜಮುಖಿ ಸೇವೆಗಳನ್ನು ಸುತ್ತೂರು ಶ್ರೀಮಠ ಸಾರ್ಥಕವಾಗಿ ಮುಂದುವರಿಸಿಕೊಂಡು ಹೋಗುತ್ತಿರುವುದು ನಿಜಕ್ಕೂ ಸ್ತುತ್ಯರ್ಹ.
-
B.S.Yediyurappa
@BSYBJP
ಶಿಕಾರಿಪುರದಲ್ಲಿ ಇಂದು ರಾಷ್ಟ್ರೋತ್ಥಾನ ಬಳಗ ಆಯೋಜಿಸಿದ್ದ, ಸಂಘದ ಹಿರಿಯ ಪ್ರಚಾರಕ ದಿವಂಗತ ಶ್ರೀ ಮೈ.ಚ. ಜಯದೇವ ಅವರ ಕುರಿತ ಕೃತಿ ‘ಅವಿಶ್ರಾಂತ ಧ್ಯೇಯಜೀವಿ ಮೈ.ಚ. ಜಯದೇವ: ಬದುಕು-ನೆನಪು’ ಹಾಗೂ ನಾಡೋಜ ಡಾ|| ಎಸ್.ಆರ್. ರಾಮಸ್ವಾಮಿ ಅವರ ‘ಇತಿಹಾಸದ ಸೆರಗು’ ಕೃತಿಗಳನ್ನು ಲೋಕಾರ್ಪಣೆಗೊಳಿಸಲಾಯಿತು.
-
B.S.Yediyurappa
@BSYBJP
ಶ್ರೀಕೃಷ್ಣ ಜನ್ಮಾಷ್ಟಮಿಯ ಪವಿತ್ರ ಸಂದರ್ಭದಲ್ಲಿ ಇಂದು ಶಿವಮೊಗ್ಗ ನಗರದ ಶ್ರೀ ಕೃಷ್ಣ ದೇವಸ್ಥಾನಕ್ಕೆ ಭೇಟಿ ನೀಡಿ, ಬಾಲ ಗೋಪಾಲನ ದರ್ಶನ ಪಡೆದು, ನಾಡಿನ ಒಳಿತಿಗಾಗಿ ವಿಶೇಷ ಪೂಜೆ-ಪ್ರಾರ್ಥನೆಗಳನ್ನು ಸಲ್ಲಿಸಲಾಯಿತು. ಬಳಿಕ, ಶ್ರೀ ಸಾಯಿಬಾಬಾ ಮಂದಿರಕ್ಕೆ ಭೇಟಿ ನೀಡಿ, ಪೂಜ್ಯ ಸಾಯಿ ಭಗವಾನರ ದರ್ಶನ ಪಡೆದು ಪೂಜೆ ನೆರವೇರಿಸಲಾಯಿತು. ಶ್ರೀಕೃಷ್ಣನ ಶ್ರೀರಕ್ಷೆ ಮತ್ತು ಬಾಬಾರ ಕಾರುಣ್ಯ ಭಕ್ತಜನತೆಯ ಮೇಲೆ ಸದಾ ಇರಲಿ.
-
B.S.Yediyurappa
@BSYBJP
ನಾಡಿನ ಸಮಸ್ತ ಭಕ್ತ ಜನತೆಗೆ ಶ್ರೀಕೃಷ್ಣ ಜನ್ಮಾಷ್ಟಮಿಯ ಭಕ್ತಿಪೂರ್ವಕ ಶುಭಾಶಯಗಳು.
-
B.S.Yediyurappa
@BSYBJP
ಕನ್ನಡಿಗರ ಆಕ್ರೋಶದ ಕಹಳೆಯಾಗಿ, ರೈತರು, ಮಹಿಳೆಯರು, ಯುವಜನರು, ಶ್ರಮಿಕರು ಹಾಗೂ ಜನಸಾಮಾನ್ಯರ ಧ್ವನಿಯಾಗಿ, ಪಕ್ಷದ ‘ಬಳ್ಳಾರಿ ಚಲೋ’ ಪಾದಯಾತ್ರೆಗೆ ಇಂದು ಲಿಂಗಸೂಗೂರಿನಲ್ಲಿ ಚಾಲನೆ ನೀಡಲಾಯಿತು. ಇದಕ್ಕೂ ಮುನ್ನ ಪಕ್ಷದ ಎಲ್ಲ ನಾಯಕರ ಉಪಸ್ಥಿತಿಯಲ್ಲಿ ಬೃಹತ್ ಬಹಿರಂಗ ಸಭೆಯನ್ನು ಉದ್ದೇಶಿಸಿ ಮಾತನಾಡಲಾಯಿತು. ಅಧಿಕಾರದ ಮದದಲ್ಲಿ ಜನರ ಹಿತವನ್ನು ಮರೆತು, ಭ್ರಷ್ಟಾಚಾರ ಮತ್ತು ದುರಾಡಳಿತದಲ್ಲಿ ಮುಳುಗಿರುವ ಜನವಿರೋಧಿ ಕಾಂಗ್ರೆಸ್ ಸರ್ಕಾರದ ವಿರುದ್ಧದ ಈ ಪ್ರತಿಭಟನಾ ಪಾದಯಾತ್ರೆ ಕೇವಲ ರಾಜಕೀಯ ಹೋರಾಟವಲ್ಲ, ಇದು ಕರ್ನಾಟಕದ ಹಿತಕ್ಕಾಗಿ ನಡೆಯುತ್ತಿರುವ ಜನಾಂದೋಲನ! ಜನವಿರೋಧಿ ಕಾಂಗ್ರೆಸ್ ಸರ್ಕಾರವನ್ನು ಕಿತ್ತೊಗೆಯುವವರೆಗೆ ನಮ್ಮ ಹೋರಾಟ ನಿಲ್ಲುವುದಿಲ್ಲ.
-
B.S.Yediyurappa
@BSYBJP
ಮಂತ್ರಾಲಯದ ಶ್ರೀ ಗುರು ರಾಘವೇಂದ್ರ ಸ್ವಾಮಿಗಳ 355ನೇ ಆರಾಧನಾ ಮಹೋತ್ಸವದ ಪಾವನ ಸಂದರ್ಭದಲ್ಲಿ, ಶ್ರೀ ಗುರು ರಾಘವೇಂದ್ರ ರಾಯರ ಮೂಲ ಬೃಂದಾವನದ ದರ್ಶನ ಪಡೆದು, ವಿಶೇಷ ಪೂಜೆ ಹಾಗೂ ಪ್ರಾರ್ಥನೆ ಸಲ್ಲಿಸಲಾಯಿತು.
-
B.S.Yediyurappa
@BSYBJP
ಸುತ್ತೂರು ಮಠದ ಪರಮಪೂಜ್ಯ ಶ್ರೀ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳಿಗೆ ಜನ್ಮದಿನದ ಭಕ್ತಿಪೂರ್ವಕ ಶುಭಾಶಯಗಳು.🙏
-
B.S.Yediyurappa
@BSYBJP
ಮಂತ್ರಾಲಯದ ಗುರುಸಾರ್ವಭೌಮ ಶ್ರೀ ರಾಘವೇಂದ್ರ ಸ್ವಾಮಿಗಳ 355ನೇ ಆರಾಧನಾ ಮಹೋತ್ಸವದ ಪಾವನ ಸಂದರ್ಭದಲ್ಲಿ, ಗುರುಗಳ ದಿವ್ಯ ಚರಣಗಳಿಗೆ ಭಕ್ತಿಪೂರ್ವಕ ನಮನಗಳು. 🙏
-
B.S.Yediyurappa reposted
BJP Karnataka
@BJP4Karnataka
ಪ್ರಧಾನಿ ಶ್ರೀ @narendramodi ಅವರ ಮನ್ ಕೀ ಬಾತ್ ಕಾರ್ಯಕ್ರಮವು 30 ಆಗಸ್ಟ್ 2026 ರಂದು ಬೆಳಿಗ್ಗೆ 11 ಗಂಟೆಗೆ ಪ್ರಸಾರವಾಗಲಿದೆ.
#mannkibaat -
B.S.Yediyurappa
@BSYBJP
ನವಲಗುಂದ ಕ್ಷೇತ್ರದ ಮಾಜಿ ಶಾಸಕರು, ಆತ್ಮೀಯರಾಗಿದ್ದ ಶ್ರೀ ಡಾ. ಆರ್.ಬಿ.ಸಿರಿಯಣ್ಣನವರ ನಿಧನದ ಸುದ್ದಿ ತಿಳಿದು ತೀವ್ರ ದುಃಖವಾಯಿತು. ವೈದ್ಯರಾಗಿ, ಜನಸೇವಕರಾಗಿ ಕ್ಷೇತ್ರದ ಜನರ ಏಳಿಗೆಗೆ ನಿರಂತರ ಶ್ರಮಿಸಿದ್ದ ಅವರ ಅಗಲಿಕೆಯಿಂದ ಒಬ್ಬ ಸರಳ ಸಜ್ಜನಿಕೆಯ ರಾಜಕಾರಣಿಯನ್ನು ನಾಡು ಕಳೆದುಕೊಂಡಿದೆ. ಭಗವಂತ ಅವರ ಆತ್ಮಕ್ಕೆ ಶಾಂತಿ ನೀಡಲಿ. ಅವರ ಕುಟುಂಬ ವರ್ಗಕ್ಕೆ ಹಾಗೂ ಬೆಂಬಲಿಗರಿಗೆ ನನ್ನ ತೀವ್ರ ಸಂತಾಪಗಳು. ಓಂ ಶಾಂತಿ🙏
-
B.S.Yediyurappa
@BSYBJP
ನಾಡಿನ ಸಮಸ್ತ ಜನತೆಗೆ ವರಮಹಾಲಕ್ಷ್ಮಿ ಹಬ್ಬದ ಹಾರ್ದಿಕ ಹಾಗೂ ಭಕ್ತಿಪೂರ್ವಕ ಶುಭಾಶಯಗಳು.
-
B.S.Yediyurappa
@BSYBJP
ತಿಪಟೂರಿಗೆ ಇಂದು ತೆರಳಿ ಆತ್ಮೀಯರು, ಸರಳ ಸಜ್ಜನಿಕೆಯ ಹಿರಿಯ ನಾಯಕ, ಮಾಜಿ ಸಚಿವರಾದ ಶ್ರೀ ಬಿ.ಸಿ ನಾಗೇಶ್ ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದು, ಗೌರವ ನಮನಗಳನ್ನು ಸಲ್ಲಿಸಲಾಯಿತು. ಅವರ ಆತ್ಮಕ್ಕೆ ಸದ್ಗತಿಯನ್ನು ಪ್ರಾರ್ಥಿಸಿ, ಅವರ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿ ಸಂತಾಪ ವ್ಯಕ್ತಪಡಿಸಲಾಯಿತು.
-
B.S.Yediyurappa
@BSYBJP
ಪಕ್ಷದ ನಿಷ್ಠಾವಂತ ನಾಯಕ, ತಿಪಟೂರು ಕ್ಷೇತ್ರದ ಮಾಜಿ ಶಾಸಕರು, ಮಾಜಿ ಸಚಿವರು, ಆತ್ಮೀಯರಾದ ಶ್ರೀ ಬಿ.ಸಿ.ನಾಗೇಶ್ ಅವರ ಅಗಲಿಕೆಯ ಸುದ್ದಿ ಕೇಳಿ ಮನಸ್ಸಿಗೆ ತೀವ್ರ ಆಘಾತವಾಗಿದೆ. ಸಂಘದ ದಿನಗಳಿಂದಲೂ ಕಠಿಣ ಪರಿಶ್ರಮ, ಅಪ್ರತಿಮ ನಿಷ್ಠೆ ಮತ್ತು ಸೈದ್ಧಾಂತಿಕ ಬದ್ಧತೆಯಿಂದಲೇ ತಮ್ಮ ಛಾಪು ಮೂಡಿಸಿದ್ದ ಅವರು, ಜನಪ್ರಿಯ ಶಾಸಕರಾಗಿ, ಸಚಿವರಾಗಿ ಅತ್ಯಂತ ಪ್ರಾಮಾಣಿಕತೆಯಿಂದ ಕೆಲಸ ಮಾಡಿದ್ದರು, ಸದಾ ಶಿಸ್ತು ಹಾಗೂ ಅವರ ನಗುಮುಖದ ಒಡನಾಟವನ್ನು ನಾನು ಎಂದಿಗೂ ಮರೆಯಲು ಸಾಧ್ಯವಿಲ್ಲ. ಅವರ ನಿರ್ಗಮನದಿಂದ ನಮ್ಮ ಪಕ್ಷ ಒಬ್ಬ ದಕ್ಷ ನಾಯಕರನ್ನು ಹಾಗೂ ನಾನು ಒಬ್ಬ ಆಪ್ತ ಸಹವರ್ತಿಯನ್ನು ಕಳೆದುಕೊಂಡಂತಾಗಿದೆ. ಭಗವಂತನು ಅವರ ಆತ್ಮಕ್ಕೆ ಸದ್ಗತಿ ಕರುಣಿಸಲಿ, ಅವರ ಕುಟುಂಬ ವರ್ಗ ಹಾಗೂ ಕಾರ್ಯಕರ್ತರ ದುಃಖದಲ್ಲಿ ನಾನು ಭಾಗಿಯಾಗಿ ತೀವ್ರ ಸಂತಾಪವನ್ನು ವ್ಯಕ್ತಪಡಿಸುತ್ತೇನೆ. ಓಂ ಶಾಂತಿ 🙏🏼
-
B.S.Yediyurappa
@BSYBJP
ಪೂಜ್ಯ ಸದ್ಗುರು ಶ್ರೀ ಮಧುಸೂದನ ಸಾಯಿರವರು ಶಿವಮೊಗ್ಗದಲ್ಲಿ ಇಂದು 'ದಿವ್ಯ ಸಂಜೆ' ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಗಮಿಸಿದ ಸಂದರ್ಭದಲ್ಲಿ ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆಯಲಾಯಿತು.
-
B.S.Yediyurappa reposted
BJP Karnataka
@BJP4Karnataka
ನಾಡಿನ ಸಮಸ್ತ ಜನತೆಗೆ ನಾಗರಪಂಚಮಿ ಹಬ್ಬದ ಹಾರ್ದಿಕ ಶುಭಾಶಯಗಳು.
#nagarapanchami -
B.S.Yediyurappa
@BSYBJP
ದೇಶ ಕಂಡ ಮಹಾನ್ ನಾಯಕ, ಅದ್ವಿತೀಯ ಮುತ್ಸದ್ಧಿ, ಮಾಜಿ ಪ್ರಧಾನಮಂತ್ರಿ ಭಾರತರತ್ನ ಶ್ರೀ ಅಟಲ್ ಬಿಹಾರಿ ವಾಜಪೇಯಿ ಅವರ ಪುಣ್ಯತಿಥಿಯಂದು ಆ ಮಹಾನ್ ಚೇತನಕ್ಕೆ ಗೌರವ ಪೂರ್ವಕ ಪ್ರಣಾಮಗಳು.
-
B.S.Yediyurappa reposted
BJP Karnataka
@BJP4Karnataka
ನವದೆಹಲಿಯ ಐತಿಹಾಸಿಕ ಕೆಂಪುಕೋಟೆಯಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ರಾಷ್ಟ್ರಧ್ವಜಾರೋಹಣ ನೆರವೇರಿಸಿದರು.
ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ, ಬಲಿದಾನವನ್ನು ಸ್ಮರಿಸುತ್ತಾ,
ವಿಕಸಿತ ಭಾರತ – ಬಲಿಷ್ಠ ಭಾರತ ನಿರ್ಮಾಣದ ಸಂಕಲ್ಪದೊಂದಿಗೆ ಮುನ್ನಡೆಯೋಣ.
🇮🇳 ಜೈ ಹಿಂದ್! ಜೈ ಭಾರತ್!🇮🇳
#indiaindependenceday #80thindependencedayThis media couldn't be displayed. See it on the original post. -
B.S.Yediyurappa reposted
BJP Karnataka
@BJP4Karnataka
ಪ್ರಧಾನಿ ಶ್ರೀ ನರೇಂದ್ರ ಮೋದಿಯವರು 80 ನೇ ಸ್ವಾತಂತ್ರ್ಯ ದಿನದಂದು ದೆಹಲಿಯ ಕೆಂಪು ಕೋಟೆಯಲ್ಲಿ 13 ನೇ ಬಾರಿಗೆ ರಾಷ್ಟ್ರ ಧ್ವಜಾರೋಹಣ ನೆರವೇರಿಸಿದರು.
#80thindependenceday #indiaindependenceday -
B.S.Yediyurappa reposted
BJP Karnataka
@BJP4Karnataka
ಬ್ರಿಟೀಷರ ವಿರುದ್ಧ ಸಮರ ಸಾರಿದ ಕರುನಾಡಿನ ಧೀರ ಯೋಧ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅವರ ಜನ್ಮದಿನದಂದು ಶತ ಶತ ನಮನಗಳು.
#sangollirayanna #ಸಂಗೊಳ್ಳಿರಾಯಣ್ಣ -
B.S.Yediyurappa
@BSYBJP
ದೇಶದ ಸಮಸ್ತ ಜನತೆಗೆ 80ನೇ ಸ್ವಾತಂತ್ರ್ಯ ದಿನಾಚರಣೆಯ ಹಾರ್ದಿಕ ಶುಭಾಶಯಗಳು. 🇮🇳
#independenceday2026 -
B.S.Yediyurappa
@BSYBJP
ಭಾರತ್ ಮಾತಾ ಕೀ ಜೈ!! 🇮🇳
ಪ್ರಧಾನಿ ಶ್ರೀ ನರೇಂದ್ರ ಮೋದಿ ಜೀ ರವರು ನೀಡಿದ 'ಮನೆ ಮನೆ ಯಲ್ಲೂ ತ್ರಿವರ್ಣ ಧ್ವಜ' ಅಭಿಯಾನದ ಕರೆಯ ಮೇರೆಗೆ ಇಂದು ನನ್ನ ನಿವಾಸದಲ್ಲಿ ಹೆಮ್ಮೆಯಿಂದ ನಮ್ಮ ರಾಷ್ಟ್ರಧ್ವಜವನ್ನು ಹಾರಿಸಲಾಯಿತು.
#harghartiranga ಅಭಿಯಾನದ ಭಾಗವಾಗಿ ದೇಶದ ಪ್ರತಿಯೊಂದು ಮನೆ, ಗ್ರಾಮ ಮತ್ತು ನಗರಗಳಲ್ಲಿ, ತ್ರಿವರ್ಣ ಧ್ವಜವನ್ನು ಹೆಮ್ಮೆ ಮತ್ತು ದೇಶಭಕ್ತಿಯಿಂದ ಹಾರಿಸಲಾಗುತ್ತಿದೆ. ಭಾರತಮಾತೆಯ ಗೌರವದಲ್ಲಿ ಎಲ್ಲ ಮನೆಗಳ ಮೇಲೆ ನಮ್ಮ ರಾಷ್ಟ್ರಧ್ವಜ ರಾರಾಜಿಸಲಿ! ವಿಕಸಿತ ಭಾರತ ನಿರ್ಮಾಣದ ದೃಢಸಂಕಲ್ಪದೊಂದಿಗೆ ಈ ಸ್ವಾತಂತ್ರ್ಯೋತ್ಸವವನ್ನು ಹೆಮ್ಮೆಯಿಂದ ಆಚರಿಸೋಣ!
ವಂದೇ ಮಾತರಂ!! 🇮🇳 -
B.S.Yediyurappa
@BSYBJP
ಬೆಂಗಳೂರಿನಲ್ಲಿ ಇಂದು ರಾಜ್ಯ ಉಸ್ತುವಾರಿ ಶ್ರೀ ರಾಧಾ ಮೋಹನ್ ಅಗ್ರವಾಲ್, ರಾಜ್ಯಾಧ್ಯಕ್ಷ ಶ್ರೀ ಬಿ.ವೈ.ವಿಜಯೇಂದ್ರ ಸೇರಿದಂತೆ ಎಲ್ಲ ರಾಜ್ಯ ನಾಯಕರೊಂದಿಗೆ ಪ್ರಸಕ್ತ ರಾಜಕೀಯ ವಿದ್ಯಮಾನಗಳು, ಮುಂದಿನ ಕಾರ್ಯತಂತ್ರಗಳು, ಪಕ್ಷ ಸಂಘಟನೆಯನ್ನು ಇನ್ನಷ್ಟು ಬಲಪಡಿಸುವ ನಿಟ್ಟಿನಲ್ಲಿ ಚರ್ಚಿಸಲು ಇಂದು ಪಕ್ಷದ ಕೋರ್ ಕಮಿಟಿ ಸಭೆಯಲ್ಲಿ ಪಾಲ್ಗೊಳ್ಳಲಾಯಿತು.
-
B.S.Yediyurappa
@BSYBJP
A warm welcome to Hon’ble Prime Minister Shri @narendramodi ji to the cultural city of Mysuru for the historic inauguration of the Viveka Smaraka.
-
B.S.Yediyurappa
@BSYBJP
ಕಾವೇರಿ ನೀರಿನ ವಿಚಾರದಲ್ಲಿ ರಾಜ್ಯದ ಹಿತ ಕಾಯಲು ವಿಫಲವಾಗಿರುವ ಕಾಂಗ್ರೆಸ್ ಸರ್ಕಾರದ ವಿರುದ್ಧ ಇಂದು ಶ್ರೀರಂಗಪಟ್ಟಣದ ಕೆ.ಆರ್.ಎಸ್ ಅಣೆಕಟ್ಟು ಬಳಿ ಹಮ್ಮಿಕೊಂಡ ರೈತರ ಬೃಹತ್ ಪ್ರತಿಭಟನೆಯಲ್ಲಿ ಭಾಗವಹಿಸಲಾಯಿತು. ರಾಜ್ಯದ ಜನರ ಕುಡಿಯುವ ನೀರಿನ ಹಿತರಕ್ಷಣೆಗಿಂತ ದೆಹಲಿಯಲ್ಲಿ ಸ್ವಾರ್ಥ ರಾಜಕೀಯದಲ್ಲೇ ನಿರತವಾಗಿರುವ ಈ ಕಾಂಗ್ರೆಸ್ ಸರ್ಕಾರ, ನ್ಯಾಯಮಂಡಳಿಗಳಲ್ಲಿ ಬಲವಾದ ವಾದ ಮಂಡಿಸದೆ ನಮ್ಮ ರೈತರಿಗೆ ವಂಚನೆ ಎಸಗಿದೆ. ನಮ್ಮ ಜನರ, ನಮ್ಮ ಅನ್ನದಾತರ ಪರವಾಗಿ, ಅವರ ಹಿತರಕ್ಷಣೆಗಾಗಿ ಪಕ್ಷ ಗಟ್ಟಿಯಾಗಿ ಅವರೊಂದಿಗೆ ನಿಲ್ಲಲಿದ್ದು, ಮೇಕೆದಾಟು ಯೋಜನೆಯನ್ನು ತಕ್ಷಣವೇ ಕೈಗೆತ್ತಿಕೊಂಡು ಕಾವೇರಿ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ರಾಜ್ಯ ಸರ್ಕಾರಕ್ಕೆ ಮತ್ತೊಮ್ಮೆ ಆಗ್ರಹಿಸುತ್ತೇನೆ.
-
B.S.Yediyurappa
@BSYBJP
ಜ್ಞಾನದ ಬೆಳಕು ನೀಡಿ, ಸನ್ಮಾರ್ಗದಲ್ಲಿ ಮುನ್ನಡೆಸುವ ಗುರುವೇ ಬದುಕಿನ ನಿಜವಾದ ಮಾರ್ಗದರ್ಶಕ.
ಎಲ್ಲಾ ಪೂಜ್ಯ ಗುರುಗಳಿಗೆ ಭಕ್ತಿಪೂರ್ವಕ ನಮನಗಳು. ನಾಡಿನ ಸಮಸ್ತ ಜನತೆಗೆ ಗುರುಪೂರ್ಣಿಮೆಯ ಹಾರ್ದಿಕ ಶುಭಾಶಯಗಳು. 🙏
#gurupurnima -
B.S.Yediyurappa
@BSYBJP
ಶಿವಮೊಗ್ಗ ಕ್ಷೇತ್ರದ ಮಾಜಿ ಶಾಸಕರು, ಮಾಜಿ ಶಾಸಕರ ವೇದಿಕೆಯ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದ ಶ್ರೀ ಹೆಚ್.ಎಂ.ಚಂದ್ರಶೇಖರಪ್ಪನವರ ಅಗಲಿಕೆಯ ಸುದ್ದಿ ತೀವ್ರ ನೋವು ತಂದಿದೆ. ದೇವರು ಅವರ ಆತ್ಮಕ್ಕೆ ಸದ್ಗತಿ ಕರುಣಿಸಲಿ ಹಾಗೂ ಈ ಆಘಾತವನ್ನು ಸಹಿಸುವ ಶಕ್ತಿಯನ್ನು ಅವರ ಕುಟುಂಬ ವರ್ಗ ಮತ್ತು ಬೆಂಬಲಿಗರಿಗೆ ನೀಡಲಿ ಎಂದು ಪ್ರಾರ್ಥಿಸುತ್ತೇನೆ. ಓಂ ಶಾಂತಿ🙏🏼
-
B.S.Yediyurappa reposted
Narendra Modi
@narendramodi
More strict actions against paper leaks to come in tomorrow’s Cabinet!
This media couldn't be displayed. See it on the original post. -
B.S.Yediyurappa
@BSYBJP
ಶ್ರೀ ಸಿದ್ದಗಂಗಾ ಶ್ರೀಮಠದ ಪರಮಪೂಜ್ಯ ಶ್ರೀ ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳಿಗೆ ಜನ್ಮದಿನದ ಭಕ್ತಿಪೂರ್ವಕ ಶುಭಾಶಯಗಳು.
-
B.S.Yediyurappa
@BSYBJP
ಇತ್ತೀಚೆಗೆ ನಮ್ಮನ್ನಗಲಿದ ಹಿರಿಯ ನಾಯಕ ಶ್ರೀ ರಾಮಚಂದ್ರಗೌಡರ ಗೌರವಾರ್ಥ ಪಕ್ಷದ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ನಡೆದ 'ನುಡಿನಮನ' ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಾಯಿತು.
-
B.S.Yediyurappa
@BSYBJP
ಶ್ರೀ ಆದಿಚುಂಚನಗಿರಿ ಮಠಾಧೀಶರಾದ ಪರಮಪೂಜ್ಯ ಶ್ರೀ ಡಾ. ನಿರ್ಮಲಾನಂದನಾಥ ಸ್ವಾಮಿಗಳಿಗೆ ಜನ್ಮದಿನದ ಭಕ್ತಿಪೂರ್ವಕ ಶುಭಾಶಯಗಳು.
@Jaisrigurudev -
B.S.Yediyurappa
@BSYBJP
ಮಾಜಿ ಪ್ರಧಾನಿ ಶ್ರೀ ಹೆಚ್.ಡಿ.ದೇವೇಗೌಡರ ಧರ್ಮಪತ್ನಿ ಹಾಗೂ ಕೇಂದ್ರ ಸಚಿವ ಶ್ರೀ ಹೆಚ್.ಡಿ.ಕುಮಾರಸ್ವಾಮಿಯವರ ತಾಯಿ ಶ್ರೀಮತಿ ಚೆನ್ನಮ್ಮನವರು ವಿಧಿವಶರಾದ ವಿಷಯ ತಿಳಿದು ಅತೀವ ದುಃಖವಾಗಿದೆ. ಗೌಡರ ಸುದೀರ್ಘ ರಾಜಕೀಯ ಜೀವನದ ಏಳು-ಬೀಳುಗಳಲ್ಲಿ ನಿರಂತರವಾಗಿ ಬೆಂಬಲವಾಗಿ ನಿಂತು, ಇಡೀ ಕುಟುಂಬಕ್ಕೆ ಮಾತೃಶಕ್ತಿಯಾಗಿದ್ದ ಸರಳ ಸಜ್ಜನಿಕೆಯ ತಾಯಿ ಚೆನ್ನಮ್ಮನವರ ಅಗಲಿಕೆ ಗೌಡರ ಇಡೀ ಕುಟುಂಬಕ್ಕೆ ದೊಡ್ಡ ನಷ್ಟವಾಗಿದೆ. ಭಗವಂತನು ಮೃತರ ಆತ್ಮಕ್ಕೆ ಚಿರಶಾಂತಿಯನ್ನು ಕರುಣಿಸಲಿ, ಹಾಗೂ ಶ್ರೀ ದೇವೇಗೌಡರು, ಶ್ರೀ ಕುಮಾರಸ್ವಾಮಿ ಮತ್ತು ಅವರ ಇಡೀ ಕುಟುಂಬಕ್ಕೆ ಈ ದುಃಖವನ್ನು ತಡೆದುಕೊಳ್ಳುವ ಶಕ್ತಿಯನ್ನು ನೀಡಲಿ ಎಂದು ಪ್ರಾರ್ಥಿಸುತ್ತಾ, ನನ್ನ ತೀವ್ರ ಸಂತಾಪಗಳನ್ನು ವ್ಯಕ್ತಪಡಿಸುತ್ತಿದ್ದೇನೆ. ಓಂ ಶಾಂತಿ🙏🏼
-
B.S.Yediyurappa
@BSYBJP
ಬಿಡದಿ ಟೌನ್ಶಿಪ್ ನೆಪದಲ್ಲಿ ಕಾಂಗ್ರೆಸ್ ಸರ್ಕಾರ ನಡೆಸುತ್ತಿರುವ ರೈತರ ಫಲವತ್ತಾದ ಭೂಮಿಯ ಕಬಳಿಕೆ ಯತ್ನ ಹಾಗೂ ನಮ್ಮ ರೈತರ ಮೇಲಿನ ದೌರ್ಜನ್ಯದ ವಿರುದ್ಧ, ಇಂದು ಬೆಂಗಳೂರಿನಲ್ಲಿ ಪಕ್ಷದ ವತಿಯಿಂದ ಆಯೋಜಿಸಲಾಗಿದ್ದ ಪ್ರತಿಭಟನಾ ಸಮಾವೇಶದಲ್ಲಿ ಪಾಲ್ಗೊಳ್ಳಲಾಯಿತು. ಪಕ್ಷದ ರಾಜ್ಯಾಧ್ಯಕ್ಷರ ನೇತೃತ್ವದಲ್ಲಿ, ನಮ್ಮ ಎಲ್ಲಾ ನಾಯಕರು, ಜನಪ್ರತಿನಿಧಿಗಳು, ಮುಖಂಡರು, ಸಹಸ್ರಾರು ಕಾರ್ಯಕರ್ತರು ಭಾಗವಹಿಸಿದ್ದ ಈ ಭಾರಿ ಪ್ರತಿಭಟನೆಯಲ್ಲಿ ಪಾಲ್ಗೊಂಡು, ರಾಜ್ಯ ಸರ್ಕಾರ ಬಲವಂತದ ಭೂಸ್ವಾಧೀನ ನಡೆಸುವ ಪ್ರಯತ್ನಗಳನ್ನು ತಕ್ಷಣವೇ ಕೈಬಿಡಬೇಕು, ಸಂಕಷ್ಟದಲ್ಲಿರುವ ರೈತರಿಗೆ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಲಾಯಿತು.
-
B.S.Yediyurappa
@BSYBJP
ನನ್ನ ರಾಜಕೀಯ ಜೀವನದ ಆಪ್ತ ಒಡನಾಡಿಗಳಲ್ಲಿ ಒಬ್ಬರಾದ ಪಕ್ಷದ ಹಿರಿಯ ನಾಯಕ ಶ್ರೀ ರಾಮಚಂದ್ರ ಗೌಡರ ಅಗಲಿಕೆ ವೈಯಕ್ತಿಕವಾಗಿಯೂ ನನಗೆ ತೀವ್ರ ಆಘಾತವನ್ನು ಉಂಟುಮಾಡಿದೆ. ಇಂದು ಅವರ ನಿವಾಸಕ್ಕೆ ತೆರಳಿ, ಶ್ರದ್ಧಾಂಜಲಿ ಸಲ್ಲಿಸಿ, ಅವರ ಕುಟುಂಬ ಸದಸ್ಯರಲ್ಲಿ ತೀವ್ರ ಸಂತಾಪ ವ್ಯಕ್ತಪಡಿಸಲಾಯಿತು.
-
B.S.Yediyurappa
@BSYBJP
ಮತ್ತೋರ್ವ ಸೋದರನನ್ನು ನಾನು ಕಳೆದುಕೊಂಡಿದ್ದೇನೆ. ನನ್ನ ದಶಕಗಳ ಕಾಲದ ಆತ್ಮೀಯ ಒಡನಾಡಿ, ಹಿರಿಯ ನಾಯಕ ಹಾಗೂ ಮಾಜಿ ಸಚಿವ ಶ್ರೀ ರಾಮಚಂದ್ರ ಗೌಡರ ನಿಧನದ ಸುದ್ದಿ ಅತೀವ ದುಃಖವನ್ನು ತಂದಿದೆ. ಜನಸಂಘದ ದಿನಗಳಿಂದಲೂ ಹೆಗಲಿಗೆ ಹೆಗಲು ಕೊಟ್ಟು, ಹಗಲಿರುಳು ಶ್ರಮಿಸಿ, ರಾಜ್ಯದಲ್ಲಿ ಪಕ್ಷವನ್ನು ತಳಮಟ್ಟದಿಂದ ಜೊತೆಯಾಗಿ ಕಟ್ಟಿದ ಹೋರಾಟದ ದಿನಗಳು ಕಣ್ಣಮುಂದೆ ಸುಳಿಯುತ್ತಿವೆ. ನನ್ನ ಸಚಿವ ಸಂಪುಟದ ಸಹೋದ್ಯೋಗಿಯಾಗಿ ಅವರ ಆಡಳಿತಾತ್ಮಕ ದಕ್ಷತೆ ಹಾಗೂ ಬದ್ಧತೆಯನ್ನು ನಾನು ಅತ್ಯಂತ ಹತ್ತಿರದಿಂದ ಕಂಡಿದ್ದೇನೆ.
ಅವರ ಅಗಲಿಕೆ ಪಕ್ಷಕ್ಕೆ, ಸಾರ್ವಜನಿಕ ಕ್ಷೇತ್ರಕ್ಕೆ ಮಾತ್ರವಲ್ಲ, ವೈಯಕ್ತಿಕವಾಗಿ ನನ್ನಲ್ಲಿಯೂ ದೊಡ್ಡ ನಿರ್ವಾತವನ್ನು ಸೃಷ್ಟಿಸಿದೆ. ದೇವರು ಅವರ ಆತ್ಮಕ್ಕೆ ಸದ್ಗತಿಯನ್ನು ದಯಪಾಲಿಸಲಿ, ಅವರ ಕುಟುಂಬ ಸದಸ್ಯರಿಗೆ, ಅಭಿಮಾನಿಗಳಿಗೆ ಈ ದುಃಖವನ್ನು ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ. ಓಂ ಶಾಂತಿ🙏 -
B.S.Yediyurappa
@BSYBJP
ಭಾರತೀಯ ಚಿತ್ರಸಂಗೀತ ಲೋಕದ ಧ್ರುವತಾರೆ, ಅನ್ವರ್ಥ ‘ಗಾನ ಕೋಗಿಲೆ’ ಶ್ರೀಮತಿ ಎಸ್. ಜಾನಕಿ ಅವರ ನಿಧನದ ಸುದ್ದಿ ಅತೀವ ದುಃಖವನ್ನುಂಟು ಮಾಡಿದೆ.
ತಮ್ಮ ಸುಮಧುರ ಕಂಠದ ಮೂಲಕ ಕೋಟ್ಯಂತರ ಜನರ ಹೃದಯ ಗೆದ್ದ ಅವರು ಭಾರತೀಯ ಸಂಗೀತ ಲೋಕಕ್ಕೆ ನೀಡಿದ ಕೊಡುಗೆ ಅವಿಸ್ಮರಣೀಯ. ಅವರ ಅಗಲಿಕೆಯಿಂದ ಸಂಗೀತ ಕ್ಷೇತ್ರಕ್ಕೆ ತುಂಬಲಾರದ ನಷ್ಟವಾಗಿದೆ.
ಭಗವಂತನು ಅವರ ಆತ್ಮಕ್ಕೆ ಚಿರಶಾಂತಿ ನೀಡಲಿ. ಅವರ ಕುಟುಂಬಸ್ಥರು ಹಾಗೂ ಅಪಾರ ಅಭಿಮಾನಿಗಳಿಗೆ ಈ ದುಃಖವನ್ನು ಭರಿಸುವ ಶಕ್ತಿಯನ್ನು ಕರುಣಿಸಲಿ. ಓಂ ಶಾಂತಿ. 🙏🏼 -
B.S.Yediyurappa
@BSYBJP
ನಮ್ಮ ಪ್ರಜಾಪ್ರಭುತ್ವದ ಯಶಸ್ಸು ಮತ್ತು ಬಲವರ್ಧನೆ ಪ್ರತಿಯೊಬ್ಬ ಮತದಾರರ ಸಕ್ರಿಯ ಪಾಲ್ಗೊಳ್ಳುವಿಕೆಯ ಮೇಲೆ ನಿಂತಿದೆ. ಮತದಾನ ನಮ್ಮ ಹಕ್ಕು ಮತ್ತು ಕರ್ತವ್ಯ. ದೋಷಮುಕ್ತ ಹಾಗೂ ಪಾರದರ್ಶಕ ಮತದಾರರ ಪಟ್ಟಿ ನಮ್ಮ ಪ್ರಜಾಪ್ರಭುತ್ವದ ಮೂಲಭೂತ ಅಗತ್ಯ.
ಇಂದು ಸ್ವಗೃಹಕ್ಕೆ ಆಗಮಿಸಿದ ಬಿ.ಎಲ್.ಓ ರವರಿಗೆ ಎಲ್ಲಾ ವಿವರಗಳನ್ನು ಒದಗಿಸಿ ಎಸ್.ಐ.ಆರ್ ಪ್ರಕ್ರಿಯೆಯಲ್ಲಿ ಭಾಗವಹಿಸಲಾಯಿತು. ಪ್ರತಿಯೊಬ್ಬ ಅರ್ಹ ಮತದಾರರೂ ಕೂಡ ಎಸ್.ಐ.ಆರ್ ಪ್ರಕ್ರಿಯೆಯಲ್ಲಿ ತಪ್ಪದೇ ಪಾಲ್ಗೊಳ್ಳಿ, ಸರಿಯಾದ ವಿವರ ನೀಡುವ ಮೂಲಕ ಸಹಕರಿಸಿ ಎಂದು ಮತ್ತೊಮ್ಮೆ ಮನವಿ ಮಾಡಿಕೊಳ್ಳುತ್ತೇನೆ. -
B.S.Yediyurappa
@BSYBJP
ನಾಡಿನ ಸಮಸ್ತ ಜನತೆಗೆ ನಾಡಪ್ರಭು ಕೆಂಪೇಗೌಡರ ಜಯಂತಿಯ ಹೃತ್ಪೂರ್ವಕ ಶುಭಾಶಯಗಳು.
-
B.S.Yediyurappa
@BSYBJP
ನಾಡಿನ ಖ್ಯಾತ ಮಠಗಳಲ್ಲಿ ಒಂದಾಗಿರುವ ಕನಕಪುರದ ಶ್ರೀ ದೇಗುಲ ಮಠದ ಪೀಠಾಧ್ಯಕ್ಷರಾಗಿದ್ದ ಪರಮಪೂಜ್ಯ ಶ್ರೀ ಮುಮ್ಮಡಿ ನಿರ್ವಾಣ ಮಹಾಸ್ವಾಮಿಗಳು ಶಿವೈಕ್ಯರಾದ ಸುದ್ದಿ ಅತ್ಯಂತ ನೋವನ್ನು ತಂದಿದೆ. ಪೂಜ್ಯರ ಧಾರ್ಮಿಕ ಸಾಧನೆ, ತಪೋನಿಷ್ಠೆ, ಸೇವಾಕಾರ್ಯಗಳು, ಸಮಾಜಮುಖಿ ಚಿಂತನೆಗಳು ಸದಾ ಸ್ಮರಣೀಯ. ಪೂಜ್ಯ ಸ್ವಾಮೀಜಿಗಳ ಅಗಲಿಕೆಯಿಂದ ನಾಡು ಒಬ್ಬ ಶ್ರೇಷ್ಠ ಸಾಧಕ ಮಾರ್ಗದರ್ಶಕರನ್ನು ಕಳೆದುಕೊಂಡಿದೆ. ಪೂಜ್ಯರ ಆತ್ಮಕ್ಕೆ ಚಿರಶಾಂತಿಯನ್ನು ಕೋರುತ್ತೇನೆ. ಅವರ ಅಪಾರ ಭಕ್ತರಿಗೆ ಗುರುಗಳ ಅಗಲಿಕೆಯ ದುಃಖವನ್ನು ಭರಿಸುವ ಶಕ್ತಿಯನ್ನು ದೇವರು ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ. ಓಂ ಶಾಂತಿ🙏🏻
-
B.S.Yediyurappa
@BSYBJP
ಅಂತಾರಾಷ್ಟ್ರೀಯ ಯೋಗ ದಿನದ ಶುಭಾಶಯಗಳು.
ಯೋಗವು ಆರೋಗ್ಯಕರ ದೇಹ, ನೆಮ್ಮದಿಯ ಮನಸ್ಸು ಮತ್ತು ಸದೃಢ ಜೀವನದ ಆಧಾರ. ಯೋಗವನ್ನು ಅಳವಡಿಸೋಣ, ಆರೋಗ್ಯವನ್ನು ಕಾಪಾಡೋಣ.
#internationalyogaday2026 -
B.S.Yediyurappa
@BSYBJP
Heartiest birthday wishes to Hon’ble President of India, Smt. Droupadi Murmu Ji. Wishing you good health, happiness, and continued success in serving the nation.
@rashtrapatibhvn -
B.S.Yediyurappa
@BSYBJP
ಕರ್ನಾಟಕ ವಿಧಾನ ಪರಿಷತ್ತಿನ ದ್ವೈವಾರ್ಷಿಕ ಚುನಾವಣೆಯಲ್ಲಿ ಜಯಗಳಿಸಿದ ಬಿಜೆಪಿ ಅಭ್ಯರ್ಥಿಗಳಾದ ಶ್ರೀ ಲಿಂಗರಾಜ್ ಪಾಟೀಲ್ ಹಾಗೂ ಶ್ರೀ ಆರ್. ರಘು ಕೌಟಿಲ್ಯ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು.
@BJP4Karnataka -
B.S.Yediyurappa
@BSYBJP
ವಿಶ್ವಪ್ರಸಿದ್ಧ ಸಂಸ್ಕೃತ ಗ್ರಾಮ ಮತ್ತೂರಿನಲ್ಲಿ ನಡೆದ ಬಿಜೆಪಿ ಹಿರಿಯ ಮುಖಂಡರು ಹಾಗೂ ಮಾಜಿ ವಿಧಾನ ಪರಿಷತ್ ಸದಸ್ಯರಾದ ಲಿಂ. ಭಾನುಪ್ರಕಾಶ್ ಅವರ ದ್ವಿತೀಯ ವರ್ಷದ ಭಕ್ತಿಪೂರ್ವಕ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.
-
B.S.Yediyurappa
@BSYBJP
ಜ್ಞಾನ, ಸೇವೆ ಮತ್ತು ಸಂಸ್ಕಾರದ ಸಂಗಮವಾಗಿರುವ ಸಿರಿಗೆರೆ ಬೃಹನ್ಮಠದ ತರಳುಬಾಳು ಜಗದ್ಗುರು ಪರಮಪೂಜ್ಯ ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿಗಳ ಜನ್ಮದಿನದಂದು ಅವರಿಗೆ ನನ್ನ ಭಕ್ತಿಪೂರ್ವಕ ಪ್ರಣಾಮಗಳು.🙏
-
B.S.Yediyurappa
@BSYBJP
ಭಾರತದ ಪ್ರಜಾಪ್ರಭುತ್ವದ ಇತಿಹಾಸದಲ್ಲೇ ಅತ್ಯಂತ ಸುದೀರ್ಘ ಅವಧಿಗೆ ಸತತವಾಗಿ ದೇಶವನ್ನು ಮುನ್ನಡೆಸಿದ ಚುನಾಯಿತ ಪ್ರಧಾನಮಂತ್ರಿಯಾಗಿ ಅಪೂರ್ವ ಮೈಲಿಗಲ್ಲು ಸಾಧಿಸಿದ ನಮ್ಮ ಹೆಮ್ಮೆಯ ಪ್ರಧಾನಮಂತ್ರಿ ಶ್ರೀ @narendramodi ಜೀ ಅವರ ಗೌರವಾರ್ಥ ಇಂದು ಬೆಂಗಳೂರಿನ ಸಂಜಯನಗರದ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ, ಅವರಿಗೆ ಆಯುರಾರೋಗ್ಯ, ಯಶಸ್ಸು ಹಾಗೂ ದೇವರ ಪೂರ್ಣ ಅನುಗ್ರಹ ನಿರಂತರವಾಗಿರಲೆಂದು ಪ್ರಾರ್ಥಿಸಲಾಯಿತು.
ಈ ಸಂದರ್ಭದಲ್ಲಿ ಸಂಸದ ಶ್ರೀ ಲಹರ್ ಸಿಂಗ್ ಸಿರೋಯಾ ಸೇರಿದಂತೆ ಹಲವಾರು ಪ್ರಮುಖರು ಉಪಸ್ಥಿತರಿದ್ದರು.
#12yearsofseva -
B.S.Yediyurappa
@BSYBJP
Today marks a historic milestone in Bharat’s democratic journey as Hon’ble Prime Minister Shri @narendramodi ji becomes the longest-serving elected Prime Minister in independent India’s history.
My heartfelt congratulations and best wishes to Modi ji. May he continue to lead Bharat to even greater heights in the years ahead.
#12yearsofseva -
B.S.Yediyurappa
@BSYBJP
ಸಂಡೂರು ರಾಜವಂಶದ ಯುವ ನಾಯಕ ಶ್ರೀ ಕಾರ್ತಿಕ್ ಘೋರ್ಪಡೆ ಅವರ ಅಕಾಲಿಕ ನಿಧನದ ಸುದ್ದಿ ತೀವ್ರ ದುಃಖವನ್ನುಂಟು ಮಾಡಿದೆ. ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ ಹಾಗೂ ಅವರ ಕುಟುಂಬದ ಸದಸ್ಯರಿಗೆ ಮತ್ತು ಆಪ್ತರಿಗೆ ಈ ದುಃಖವನ್ನು ಭರಿಸುವ ಶಕ್ತಿ ದೊರಕಲಿ ಎಂದು ಪ್ರಾರ್ಥಿಸುತ್ತೇನೆ. ಓಂ ಶಾಂತಿ. 🙏🏼
-
B.S.Yediyurappa
@BSYBJP
ಮಾಜಿ ಮುಖ್ಯಮಂತ್ರಿ ದಿವಂಗತ ಶ್ರೀ ದೇವರಾಜ ಅರಸು ಅವರ ಮೊಮ್ಮಗ ಹಾಗೂ ಕಾಂಗ್ರೆಸ್ ಯುವ ಮುಖಂಡ ಶ್ರೀ ಸೂರಜ್ ಹೆಗ್ಡೆ ಅವರ ಅಕಾಲಿಕ ನಿಧನದ ಸುದ್ದಿ ತೀವ್ರ ದುಃಖ ತಂದಿದೆ. ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ ಹಾಗೂ ಕುಟುಂಬದವರಿಗೆ ಈ ನೋವನ್ನು ಭರಿಸುವ ಶಕ್ತಿ ದೊರಕಲಿ ಎಂದು ಪ್ರಾರ್ಥಿಸುತ್ತೇನೆ. ಓಂ ಶಾಂತಿ 🙏🏼
-
B.S.Yediyurappa
@BSYBJP
ರಾಜ್ಯಸಭೆಗೆ ಬಿಜೆಪಿ ಅಭ್ಯರ್ಥಿಯಾಗಿ ಆಯ್ಕೆಯಾಗಿರುವ ಪ್ರೊ. ಎಂ. ನಾಗರಾಜ್ ಅವರು ಹಾಗೂ ವಿಧಾನ ಪರಿಷತ್ತಿಗೆ ಬಿಜೆಪಿ ಅಭ್ಯರ್ಥಿಗಳಾಗಿ ಆಯ್ಕೆಯಾಗಿರುವ ಶ್ರೀ ಲಿಂಗರಾಜ ಪಾಟೀಲ ಮತ್ತು ಶ್ರೀ ಆರ್. ರಘು ಕೌಟಿಲ್ಯ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು.
-
B.S.Yediyurappa
@BSYBJP
Warm birthday wishes to the Hon’ble Chief Minister of Uttar Pradesh, Shri Yogi Adityanath ji. Wishing him good health, a long life, and continued service to the nation.
@myogiadityanath @CMOfficeUP -
B.S.Yediyurappa
@BSYBJP
ಎಲ್ಲರಿಗೂ ವಿಶ್ವ ಪರಿಸರ ದಿನದ ಶುಭಾಶಯಗಳು.
ಸ್ವಗೃಹದ ಆವರಣದಲ್ಲಿ ಸಸಿ ನೆಡುವ ಮೂಲಕ ಪರಿಸರ ದಿನವನ್ನು ಆಚರಿಸಲಾಯಿತು. ನಮ್ಮ ಭೂಮಿಯನ್ನು ಹಸಿರಾಗಿಸುವ ಸಂಕಲ್ಪದೊಂದಿಗೆ, ‘ತಾಯಿಯ ಹೆಸರಿನಲ್ಲೊಂದು ಸಸಿ’ ನೆಟ್ಟು ಅದನ್ನು ಪೋಷಿಸುವ ಜವಾಬ್ದಾರಿ ಹೊತ್ತು ಪರಿಸರ ಸಂರಕ್ಷಣೆಗೆ ಕೈಜೋಡಿಸೋಣ.
#worldenvironmentday #enpedmaakenaam -
B.S.Yediyurappa reposted
BJP Karnataka
@BJP4Karnataka
ಪರಿಸರವನ್ನು ನಾವು ರಕ್ಷಿಸಿದರೆ ಅದು ನಮ್ಮನ್ನು ಸಂರಕ್ಷಿಸುತ್ತದೆ. ಪರಿಸರವನ್ನು ಮಲಿನಗೊಳಿಸದೆ, ದುರ್ಬಳಕೆ ಮಾಡದೆ ನೈಸರ್ಗಿಕ ಪ್ರಕೃತಿಯನ್ನು ಸಂರಕ್ಷಿಸೋಣ. ಎಲ್ಲರಿಗೂ ವಿಶ್ವ ಪರಿಸರ ದಿನಾಚರಣೆಯ ಶುಭಾಶಯಗಳು.
#worldenvironmentday #ವಿಶ್ವಪರಿಸರದಿನಾಚರಣೆ -
B.S.Yediyurappa
@BSYBJP
ಕರ್ನಾಟಕ ರಾಜ್ಯದ ನೂತನ ಮುಖ್ಯಮಂತ್ರಿಗಳಾಗಿ ಪ್ರಮಾಣ ವಚನ ಸ್ವೀಕರಿಸಿದ ಸನ್ಮಾನ್ಯ ಶ್ರೀ ಡಿ.ಕೆ.ಶಿವಕುಮಾರ್ ಅವರಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳು. ನಾಡಿನ ಹಿತರಕ್ಷಣೆ, ಸರ್ವತೋಮುಖ ಅಭಿವೃದ್ಧಿ ಹಾಗೂ "ಸರ್ವರಿಗೂ ಸಮಬಾಳು, 'ಸರ್ವರಿಗೂ ಸಮಪಾಲು, ಸಾಮಾಜಿಕ ನ್ಯಾಯ' ತತ್ವದಡಿಯಲ್ಲಿ ಸಮಾಜದ ಕಟ್ಟಕಡೆಯ ಪ್ರಜೆಯ ಕಲ್ಯಾಣಕ್ಕಾಗಿ ಶ್ರಮಿಸಲು ಭಗವಂತನು ತಮಗೆ ಪೂರ್ಣ ಶಕ್ತಿ, ಆಯುರಾರೋಗ್ಯ ಕರುಣಿಸಲಿ. ರಾಜ್ಯದ ಒಳಿತಿನ ವಿಷಯದಲ್ಲಿ ನಮ್ಮ ಸಕಾರಾತ್ಮಕ ಸಹಕಾರ ಯಾವಾಗಲೂ ಇರಲಿದ್ದು, ನಿಮ್ಮ ಅಧಿಕಾರಾವಧಿಯು ನಾಡಿಗೆ ಶಾಂತಿ, ಸಮೃದ್ಧಿ ತರಲಿ ಎಂದು ಹಾರೈಸುತ್ತೇನೆ.
ನಿಯೋಜಿತ ಮುಖ್ಯಮಂತ್ರಿಗಳಾದ ಶ್ರೀ ಡಿ.ಕೆ. ಶಿವಕುಮಾರ್ ಅವರು ಇಂದು ಬೆಳಿಗ್ಗೆ ನಮ್ಮ ಸ್ವಗೃಹಕ್ಕೆ ಆಗಮಿಸಿ, ಅವರ ಪ್ರಮಾಣ ವಚನ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಸಂದರ್ಭದಲ್ಲಿ ಅವರನ್ನು ಆತ್ಮೀಯವಾಗಿ ಅಭಿನಂದಿಸಿ, ಶುಭ ಹಾರೈಸಲಾಯಿತು.
@DKShivakumar -
B.S.Yediyurappa
@BSYBJP
ಚಾಂಪಿಯನ್ಗಳಿಗೆ ಹಾರ್ದಿಕ ಅಭಿನಂದನೆಗಳು!
ಸತತ ಪ್ರಶಸ್ತಿಗಳ ಗೆಲುವು RCB ತಂಡದ ಪರಿಶ್ರಮ, ಏಕತೆ ಮತ್ತು ಗೆಲುವಿನ ಛಲಕ್ಕೆ ದೊರೆತ ಅತ್ಯುತ್ತಮ ಫಲ. ತಂಡದೊಂದಿಗೆ ಸದಾ ನಿಂತ ಅಭಿಮಾನಿಗಳ ಪ್ರೋತ್ಸಾಹವೂ ಈ ಯಶಸ್ಸಿನ ಪ್ರಮುಖ ಶಕ್ತಿ.
ಬೆಂಗಳೂರುಗೆ ಹೆಮ್ಮೆಯ ಕ್ಷಣ, RCB ಅಭಿಮಾನಿಗಳಿಗೆ ಹಬ್ಬದ ಸಂಭ್ರಮ.
Congratulations to the champions!
Winning consecutive titles is a testament to RCB’s consistency, resilience, and championship spirit.
A proud day for Bengaluru and a memorable moment for every RCB supporter.
#championsagain #rcb #eesalacupnamdu #ipl2026 #rcbvsgt -
B.S.Yediyurappa reposted
BJP Karnataka
@BJP4Karnataka
ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರ ಮನ್ ಕೀ ಬಾತ್ ಕಾರ್ಯಕ್ರಮವು 31 ಮೇ 2026 ರಂದು ಬೆಳಿಗ್ಗೆ 11 ಗಂಟೆಗೆ ಪ್ರಸಾರವಾಗಲಿದೆ.
#mannkibaat -
B.S.Yediyurappa
@BSYBJP
ಹಿರಿಯರು, ಮಾಜಿ ಸಚಿವರಾದ ಶ್ರೀ ವೆಂಕಟರಮಣಪ್ಪನವರು ನಿಧನರಾದ ಸುದ್ದಿ ತಿಳಿದು ತೀವ್ರ ದುಃಖವಾಗಿದೆ. ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದ ಅವರು, ಪಾವಗಡ ಕ್ಷೇತ್ರ ಹಾಗೂ ತುಮಕೂರು ಜಿಲ್ಲೆಯ ಅಭಿವೃದ್ಧಿಗೆ ಮತ್ತು ಸಚಿವರಾಗಿ ತಮ್ಮದೇ ಆದ ಕೊಡುಗೆ ನೀಡಿದ್ದರು. ದೇವರು ಮೃತರ ಆತ್ಮಕ್ಕೆ ಚಿರಶಾಂತಿ ನೀಡಲಿ ಹಾಗೂ ಅವರ ಒಡನಾಡಿಗಳು, ಕುಟುಂಬಸ್ಥರು ಮತ್ತು ಅಭಿಮಾನಿಗಳಿಗೆ ಈ ದುಃಖವನ್ನು ಭರಿಸುವ ಶಕ್ತಿ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ. ಓಂ ಶಾಂತಿ🙏🏻
-
B.S.Yediyurappa
@BSYBJP
Warm Eid ul-Adha wishes to all.
May this special occasion bring joy, success, good health, and unity among everyone. -
B.S.Yediyurappa
@BSYBJP
Warm birthday wishes to Shri @nitin_gadkari Ji, Hon’ble Union Minister for Road Transport and Highways!
May you be blessed with good health, happiness, and many more years of dedicated service to the nation. -
B.S.Yediyurappa
@BSYBJP
ದೇಶಸೇವೆ, ಪರಿವರ್ತನಾ ನಾಯಕತ್ವ ಮತ್ತು ರಾಷ್ಟ್ರ ನಿರ್ಮಾಣದ ಯಶಸ್ವೀ 12 ವರ್ಷಗಳನ್ನು ಪೂರ್ಣಗೊಳಿಸಿದ ಮಾನ್ಯ ಪ್ರಧಾನಮಂತ್ರಿ ಶ್ರೀ @narendramodi ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು ಮತ್ತು ಶುಭಾಶಯಗಳು.
ನಿಮ್ಮ ದೂರದೃಷ್ಟಿಯ ನಾಯಕತ್ವದಲ್ಲಿ ಭಾರತ ವಿಕಸಿತ ರಾಷ್ಟ್ರದತ್ತ ದೃಢವಾಗಿ ಸಾಗುತ್ತಿದೆ.
#12yearsofmodigovernment #ವಿಕಸಿತಭಾರತ
@BJP4India
B.S.Yediyurappa
@BSYBJP
Heartiest congratulations and best wishes to Hon’ble Prime Minister Shri @narendramodi ji on the successful completion of 12 years of dedicated service, transformative leadership, and nation-building.
India continues to march towards a stronger and self-reliant future under your visionary leadership.
#12yearsofmodigovernment #viksitbharat -
B.S.Yediyurappa reposted
Narendra Modi
@narendramodi
Every Padma awardee has had an inspiring life journey. The official Padma Awards Instagram page highlights some of their fascinating efforts. Do have a look.
www.instagram.com/padmaawards/ -
B.S.Yediyurappa reposted
Narendra Modi
@narendramodi
India’s strength lies in such remarkable individuals whose work enriches our collective journey.
Here are some more glimpses from the Padma ceremony.
@PadmaAwards -
B.S.Yediyurappa reposted
PMO India
@PMOIndia
Deeply pained to hear about a mishap in Karwar district, Karnataka. My condolences to those who have lost their loved ones. May the injured recover at the earliest.
An ex-gratia of Rs. 2 lakh from PMNRF would be given to the next of kin of each deceased. The injured would be given Rs. 50,000: PM @narendramodi -
B.S.Yediyurappa reposted
PMO India
@PMOIndia
ಕರ್ನಾಟಕದ ಕಾರವಾರ ಜಿಲ್ಲೆಯಲ್ಲಿ ಸಂಭವಿಸಿದ ದುರಂತದ ಬಗ್ಗೆ ಕೇಳಿ ತೀವ್ರ ಆಘಾತವಾಯಿತು. ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡವರಿಗೆ ನನ್ನ ಸಂತಾಪಗಳು. ಗಾಯಗೊಂಡವರು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಹಾರೈಸುತ್ತೇನೆ.
ಮೃತರ ವಾರಸುದಾರರಿಗೆ ಪಿ.ಎಂ.ಎನ್.ಆರ್.ಎಫ್ ವತಿಯಿಂದ ತಲಾ 2 ಲಕ್ಷ ರೂಪಾಯಿ ಹಾಗೂ ಗಾಯಗೊಂಡವರಿಗೆ 50,000 ರೂಪಾಯಿ ಪರಿಹಾರ ನೀಡಲಾಗುವುದು: ಪ್ರಧಾನಮಂತ್ರಿ @narendramodi -
B.S.Yediyurappa
@BSYBJP
ಪಕ್ಷದ ನಮ್ಮ ರಾಷ್ಟ್ರೀಯ ಅಧ್ಯಕ್ಷ ಶ್ರೀ ನಿತಿನ್ ನಬಿನ್ ರವರ ನೇತೃತ್ವದಲ್ಲಿ, ರಾಜ್ಯಾಧ್ಯಕ್ಷ ಶ್ರೀ ಬಿ.ವೈ.ವಿಜಯೇಂದ್ರ, ರಾಜ್ಯ ಉಸ್ತುವಾರಿ ಶ್ರೀ ರಾಧಾ ಮೋಹನ್ ದಾಸ್ ಅಗ್ರವಾಲ್ , ಸಹ ಉಸ್ತುವಾರಿ ಶ್ರೀ ಸುಧಾಕರ್ ರೆಡ್ಡಿರವರೂ ಸೇರಿದಂತೆ ರಾಜ್ಯ ಕೋರ್ ಕಮಿಟಿಯಾ ಎಲ್ಲಾ ಸದಸ್ಯರ ಉಪಸ್ಥಿತಿಯಲ್ಲಿ ಬೆಂಗಳೂರಿನ ಪಕ್ಷದ ಕೇಂದ್ರ ಕಚೇರಿಯಲ್ಲಿ ಇಂದು ನಡೆದ ಕೋರ್ ಕಮಿಟಿ ಸಭೆಯಲ್ಲಿ ಪಾಲ್ಗೊಳ್ಳಲಾಯಿತು.
-
B.S.Yediyurappa
@BSYBJP
ಪಕ್ಷದ ನಮ್ಮ ರಾಷ್ಟ್ರೀಯ ಅಧ್ಯಕ್ಷ ಶ್ರೀ ನಿತಿನ್ ನಬಿನ್ ರವರ ನೇತೃತ್ವದಲ್ಲಿ, ರಾಜ್ಯಾಧ್ಯಕ್ಷ ಶ್ರೀ ಬಿ.ವೈ.ವಿಜಯೇಂದ್ರ, ರಾಜ್ಯ ಉಸ್ತುವಾರಿ ಶ್ರೀ ರಾಧಾ ಮೋಹನ್ ದಾಸ್ ಅಗ್ರವಾಲ್ , ಸಹ ಉಸ್ತುವಾರಿ ಶ್ರೀ ಸುಧಾಕರ್ ರೆಡ್ಡಿರವರೂ ಸೇರಿದಂತೆ ರಾಜ್ಯ ಕೋರ್ ಕಮಿಟಿಯಾ ಎಲ್ಲಾ ಸದಸ್ಯರ ಉಪಸ್ಥಿತಿಯಲ್ಲಿ ಬೆಂಗಳೂರಿನ ಪಕ್ಷದ ಕೇಂದ್ರ ಕಚೇರಿಯಲ್ಲಿ ಇಂದು ನಡೆದ ಕೋರ್ ಕಮಿಟಿ ಸಭೆಯಲ್ಲಿ ಪಾಲ್ಗೊಳ್ಳಲಾಯಿತು.
-
B.S.Yediyurappa
@BSYBJP
Delighted to welcome BJP National President Shri @NitinNabin Ji to my residence this morning during his first visit to Karnataka. I extend my heartfelt gratitude to him for graciously accepting our invitation, and also thank all senior party leaders and dignitaries who joined us on the occasion.
-
B.S.Yediyurappa
@BSYBJP
ಕರ್ನಾಟಕಕ್ಕೆ ಆಗಮಿಸುತ್ತಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾದ ಶ್ರೀ @NitinNabin ಅವರಿಗೆ ಆತ್ಮೀಯ ಸ್ವಾಗತ.
ನಿಮ್ಮ ಭೇಟಿ ರಾಜ್ಯದ ಕಾರ್ಯಕರ್ತರಲ್ಲಿ ಹೊಸ ಚೈತನ್ಯ ಮತ್ತು ಉತ್ಸಾಹ ತುಂಬಲಿದೆ.
#karnatakawelcomesnitinnabinji -
B.S.Yediyurappa
@BSYBJP
Heartfelt birthday greetings to @BJP4India National President Shri @NitinNabin ji.
May you be blessed with a long, healthy, and successful life filled with happiness and energy to continue serving the nation tirelessly. -
B.S.Yediyurappa
@BSYBJP
ಭಾರತದ ಮಾಜಿ ಪ್ರಧಾನಿಗಳೂ, ನಾಡಿನ ಹೆಮ್ಮೆಯ ಹಿರಿಯ ನಾಯಕರೂ ಆದ ಸನ್ಮಾನ್ಯ ಶ್ರೀ ಎಚ್.ಡಿ. ದೇವೇಗೌಡ ಅವರಿಗೆ ಹುಟ್ಟುಹಬ್ಬದ ಹೃತ್ಪೂರ್ವಕ ಶುಭಾಶಯಗಳು.
ಭಗವಂತನು ತಮಗೆ ಉತ್ತಮ ಆರೋಗ್ಯ, ದೀರ್ಘಾಯುಷ್ಯ ಹಾಗೂ ನೆಮ್ಮದಿ ಕರುಣಿಸಲಿ. ತಮ್ಮ ಅಮೂಲ್ಯ ಮಾರ್ಗದರ್ಶನ ನಮ್ಮ ರಾಜ್ಯ ಮತ್ತು ರಾಷ್ಟ್ರಕ್ಕೆ ಸದಾ ದೊರಕಲಿ ಎಂದು ಹಾರೈಸುತ್ತೇನೆ.
@H_D_Devegowda -
B.S.Yediyurappa
@BSYBJP
ಶಿವಮೊಗ್ಗದಲ್ಲಿ ಇಂದು ಜರುಗಿದ ಪರಮಪೂಜ್ಯರುಗಳಾದ ಶ್ರೀ ಪಂಚಪೀಠಗಳ ಜಗದ್ಗುರುಗಳ ಐತಿಹಾಸಿಕ 'ಅಡ್ಡಪಲ್ಲಕ್ಕಿ ಮಹೋತ್ಸವ' ಹಾಗೂ 'ಬೃಹತ್ ಧರ್ಮಜಾಗೃತಿ ಸಮಾವೇಶ'ದಲ್ಲಿ ಪಾಲ್ಗೊಳ್ಳಲಾಯಿತು. ಹಾಗೆಯೇ ಪಂಚ ಪೀಠಾಧೀಶ್ವರರೊಂದಿಗೆ, ಎಲ್ಲ ಹರಗುರು ಚರಮೂರ್ತಿಗಳ ಸಮಕ್ಷಮದಲ್ಲಿ, ನಗರದ ಸಮಸ್ತ ವೀರಶೈವ ಲಿಂಗಾಯತ ಸಮಾಜದ ಬಂಧುಗಳ ಹಾಗೂ ಬೃಹತ್ ಸಂಖ್ಯೆಯಲ್ಲಿ ಉಪಸ್ಥಿತರಿದ್ದ ನಾಗರಿಕರ ಸಮ್ಮುಖದಲ್ಲಿ, ಪ್ರೀತಿ, ಅಭಿಮಾನ ಹಾಗೂ ಆಶೀರ್ವಾದಪೂರ್ವಕವಾಗಿ ನೀಡಲಾದ ಕೃತಜ್ಞತಾ ಸನ್ಮಾನವನ್ನು ಅತ್ಯಂತ ಧನ್ಯತಾಭಾವದಿಂದ ಸ್ವೀಕರಿಸಲಾಯಿತು.
-
B.S.Yediyurappa
@BSYBJP
ಬಾಳೆಹೊನ್ನೂರು ಪೀಠದ ಜಗದ್ಗುರು ಪರಮಪೂಜ್ಯ ಶ್ರೀ ಪ್ರಸನ್ನ ರೇಣುಕ ಡಾ. ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರು ಹಾಗೂ ಕಾಶಿ ಪೀಠದ ಜಗದ್ಗುರು ಪರಮಪೂಜ್ಯ ಶ್ರೀ ವಿದ್ಯಾ ವಾಚಸ್ಪತಿ ಡಾ. ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು ಹಾಗೂ ಇನ್ನನೇಕ ಸಂತರ, ಶರಣರ ದಿವ್ಯಸಾನ್ನಿಧ್ಯದಲ್ಲಿ, ನಮ್ಮ ಶಿವಮೊಗ್ಗದ ಶ್ರೀ ಬಸವೇಶ್ವರಸ್ವಾಮಿ ಪಟ್ಟಣ ಪತ್ತಿನ ಸಹಕಾರ ಸಂಘದ ಶತಮಾನೋತ್ಸವ ಸಂಭ್ರಮ ಕಾರ್ಯಕ್ರಮವನ್ನು ಇಂದು ಉದ್ಘಾಟಿಸಲಾಯಿತು. 1925ರಲ್ಲಿ ಆರಂಭಗೊಂಡ ಈ ಸಹಕಾರ ಸಂಘ, ನೂರು ವರ್ಷಗಳಿಂದ ಯಶಸ್ವಿಯಾಗಿ, ಸಾರ್ಥಕ ಸೇವೆ ಸಲ್ಲಿಸುತ್ತಾ ಬಂದಿರುವ ಮಾದರಿ ಸಂಸ್ಥೆಯಾಗಿದೆ. ಸಂಘದ ಎಲ್ಲಾ ಸದಸ್ಯರಿಗೂ ಶತಮಾನೋತ್ಸವ ಸಂಭ್ರಮದ ಶುಭಹಾರೈಕೆಗಳ ಜೊತೆಗೆ ಸಂಸ್ಥೆಯು ಮುಂದಿನ ದಿನಗಳಲ್ಲಿ ಇನ್ನಷ್ಟು ಎತ್ತರಕ್ಕೆ ಬೆಳೆದು, ಇನ್ನೂ ಹೆಚ್ಚಿನ ರೀತಿಯಲ್ಲಿ ಜನಸೇವೆಯಲ್ಲಿ ತೊಡಗಿಕೊಳ್ಳಲಿ ಎಂದು ಹಾರೈಸಲಾಯಿತು.
-
B.S.Yediyurappa
@BSYBJP
ಸಂಘದ ಹಿರಿಯ ಪ್ರಚಾರಕರು, ಹಲವಾರು ಸಂಸ್ಥೆಗಳನ್ನು ಕಟ್ಟಿ ಮುನ್ನಡೆಸಿದ ಸಂಘಟನೆಯ ರೂವಾರಿಗಳು, ನನ್ನ ಪಾಲಿಗೆ ಹಿರಿಯಣ್ಣನಂತೆ ಸದಾ ಮಾರ್ಗದರ್ಶಿಗಳಾಗಿದ್ದ ಆದರಣೀಯ ಶ್ರೀ ಮೈ.ಚ. ಜಯದೇವ ರವರ ಕುರಿತಾದ ‘ಅವಿಶ್ರಾಂತ ಧ್ಯೇಯಜೀವಿʼ ಪುಸ್ತಕ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಾಯಿತು. ಸುತ್ತೂರು ಮಠದ ಪರಮಪೂಜ್ಯ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳು ಹಾಗೂ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಕಾರ್ಯವಾಹರಾದ ಶ್ರೀ ದತ್ತಾತ್ರೇಯ ಹೊಸಬಾಳೆ ಜೀ ರವರಿಂದ ಪುಸಕ್ತ ಲೋಕಾರ್ಪಣೆಗೊಂಡಿತು. ಸಂಘದ ಹಿರಿಯರು, ರಾಜಕೀಯ ಮುಖಂಡರು, ಜಯದೇವಣ್ಣನವರ ಅಪಾರ ಅಭಿಮಾನಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
-
B.S.Yediyurappa
@BSYBJP
Heartiest congratulations to Shri @himantabiswa ji on being elected as the Leader of the @BJP4Assam and NDA Legislative Party. This reflects the immense faith and confidence in your dynamic leadership and commitment to Assam’s progress. My heartfelt best wishes for a successful and impactful tenure in the service of the people.
-
B.S.Yediyurappa
@BSYBJP
ಪಶ್ಚಿಮ ಬಂಗಾಳ, ಅಸ್ಸಾಂ ಮತ್ತು ಪುದುಚೇರಿ ಚುನಾವಣೆಗಳಲ್ಲಿ ಪಕ್ಷ ಅಭೂತಪೂರ್ವ ಜನಾದೇಶ ಸಾಧಿಸಿದ ಬಳಿಕ ರಾಜ್ಯಕ್ಕೆ ಇಂದು ಆಗಮಿಸಿದ ಹೆಮ್ಮೆಯ ಪ್ರಧಾನಿ ಶ್ರೀ @narendramodi ಜೀ ರವರನ್ನು ಬೆಂಗಳೂರಿನಲ್ಲಿ ಪಕ್ಷದ ರಾಜ್ಯ ಘಟಕದ ವತಿಯಿಂದ ಆಯೋಜಿಸಲಾಗಿದ್ದ ಅಭಿನಂದನಾ ಸಮಾರಂಭದಲ್ಲಿ ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು.
-
B.S.Yediyurappa
@BSYBJP
ಕರ್ನಾಟಕದ ಮಹಾಜನತೆಗೆ ಹೃದಯ ತುಂಬಿದ ಕೃತಜ್ಞತಾಪೂರ್ವಕ ನಮಸ್ಕಾರಗಳು.🙏
-
B.S.Yediyurappa
@BSYBJP
ರಾಜ್ಯ ಸಚಿವರಾದ ಶ್ರೀ ಡಿ. ಸುಧಾಕರ್ ಅವರ ನಿಧನದ ಸುದ್ದಿ ಕೇಳಿ ತೀವ್ರ ದುಃಖವಾಯಿತು.
ಭಗವಂತನು ಅವರ ಆತ್ಮಕ್ಕೆ ಚಿರಶಾಂತಿ ನೀಡಲಿ ಹಾಗೂ ಕುಟುಂಬದವರಿಗೆ ಈ ದುಃಖವನ್ನು ಭರಿಸುವ ಶಕ್ತಿ ನೀಡಲಿ.
ಓಂ ಶಾಂತಿ. 🙏 -
B.S.Yediyurappa
@BSYBJP
ಜನರ ಪ್ರೀತಿ, ಅಭಿಮಾನಿಗಳಿಂದ ಹೃದಯ ತುಂಬಿದೆ. ಕಳೆದ ಐದು ದಶಕಗಳ ನನ್ನ ಪ್ರಾಮಾಣಿಕ ಹೋರಾಟ, ಜನಸೇವೆಗಳನ್ನು ಗಮನಿಸಿ, ಅಭಿನಂದಿಸಿ, ಆಶೀರ್ವದಿಸಲು ಬೃಹತ್ ಅಭಿನಂದನೋತ್ಸವವನ್ನು ಅರ್ಥಪೂರ್ಣವಾಗಿ ಆಯೋಜಿಸಿ, ನನ್ನ ನಿರೀಕ್ಷೆಯನ್ನೂ ಮೀರಿ ಯಶಸ್ವಿಗೊಳಿಸಿದ ಲಕ್ಷ ಲಕ್ಷ ಅಭಿಮಾನಿಗಳಿಗೆ ನನ್ನ ಹೃತ್ಪೂರ್ವಕ ಧನ್ಯವಾದಗಳನ್ನು ಸಲ್ಲಿಸುತ್ತೇನೆ.
ತಮ್ಮ ಬಿಡುವಿಲ್ಲದ ಕಾರ್ಯಗಳ ಒತ್ತಡದ ನಡುವೆಯೂ ಆಗಮಿಸಿ ಶುಭ ಹಾರೈಸಿದ ಕೇಂದ್ರ ಗೃಹ ಸಚಿವ ಶ್ರೀ @AmitShah ಜೀ ಅವರಿಗೆ, ನನ್ನನ್ನು ಆಶೀರ್ವದಿಸಿ ಹರಸಲು ದಿವ್ಯ ಸಾನ್ನಿಧ್ಯ ವಹಿಸಿದ್ದ ನಾಡಿನ ಎಲ್ಲ ಪರಮಪೂಜ್ಯ ಸ್ವಾಮೀಜಿಗಳಿಗೆ, ಹರ ಗುರು ಚರ ಮೂರ್ತಿಗಳಿಗೆ, ಪಕ್ಷದ ಎಲ್ಲಾ ನಾಯಕರಿಗೆ, ಜನಪ್ರತಿನಿಧಿಗಳಿಗೆ, ಸಂಘಟಕರಿಗೆ ಹಾಗೂ ಎಲ್ಲಾ ನಮ್ಮ ನಿಷ್ಠಾವಂತ ಕಾರ್ಯಕರ್ತರಿಗೆ ನಾನು ಸದಾ ಆಭಾರಿಯಾಗಿದ್ದೇನೆ. ನನ್ನಲ್ಲಿ ಶಕ್ತಿ ಇರುವವರೆಗೂ, ನನ್ನ ಕೊನೆಯ ಉಸಿರಿರುವವರೆಗೂ, ಪಕ್ಷ ಸಂಘಟನೆಗೆ, ನಾಡು ನುಡಿಯ, ನಾಡಿನ ಜನರ ಸೇವೆಗೆ ನನ್ನ ಪ್ರಾಮಾಣಿಕ ಪ್ರಯತ್ನಗಳು ಮುಂದುವರಿಯಲಿದೆ. ನಿಮ್ಮೆಲ್ಲರ ಪ್ರೀತಿ, ಅಭಿಮಾನ, ಬೆಂಬಲ, ಹಾರೈಕೆ ಆಶೀರ್ವಾದಗಳೇ ನನ್ನ ಶಕ್ತಿ.
ಮತ್ತೊಮ್ಮೆ ಪ್ರತಿಯೊಬ್ಬರಿಗೂ ನನ್ನ ಅಭಿವಂದನೆಗಳು. ಕಾರ್ಯಕ್ರಮಕ್ಕೆ ಆಗಮಿಸಿದ ಪ್ರತಿಯೊಬ್ಬರೂ ಸುರಕ್ಷಿತವಾಗಿ ತಮ್ಮ ತಮ್ಮ ಊರು, ಮನೆಗಳಿಗೆ ತಲುಪಲಿ, ಯಾರಿಗೂ ಏನೂ ತೊಂದರೆಯಾಗದಿರಲಿ ಎಂದು ಪ್ರಾರ್ಥಿಸುತ್ತೇನೆ. -
B.S.Yediyurappa
@BSYBJP
Heartiest congratulations to Shri @SuvenduWB Ji on taking oath as Chief Minister of West Bengal. I am confident that under your decisive leadership, West Bengal will realise the dream of Sonar Bangla — a new era of peace, prosperity and cultural resurgence. Wishing you the strength to fulfil the people’s aspirations and restore Bengal’s glory.
-
B.S.Yediyurappa
@BSYBJP
ಪಕ್ಷದ ಮುಖಂಡರು, ನಿಷ್ಠಾವಂತ ಕಾರ್ಯಕರ್ತರಾಗಿದ್ದ ಶ್ರೀ ಜಗದೀಶ್ ಹಿರೇಮನಿ ಅವರ ಅಕಾಲಿಕ ನಿಧನದ ಸುದ್ದಿ ಕೇಳಿ ಮನಸ್ಸಿಗೆ ತೀವ್ರ ದುಃಖವಾಗಿದೆ. ಅನೇಕ ವರ್ಷಗಳಿಂದ ಪಕ್ಷದಲ್ಲಿ ಸಕ್ರಿಯರಾಗಿ, ವಿವಿಧ ಹುದ್ದೆಗಳಲ್ಲಿದ್ದು ಸಂಘಟನೆಗೆ ಸೇವೆ ಸಲ್ಲಿಸಿದ್ದ ಶ್ರೀ ಜಗದೀಶ್ ಹಿರೇಮನಿ ಅವರ ಅಕಾಲಿಕ ಅಗಲಿಕೆಯಿಂದ ಪಕ್ಷ ಒಬ್ಬ ಉತ್ಸಾಹಿ, ಯುವ ನೇತಾರನನ್ನು ಕಳೆದುಕೊಂಡಿದೆ.
ಎಬಿವಿಪಿ ಪೂರ್ಣಾವಧಿ ಕಾರ್ಯಕರ್ತರಾಗಿ, ಪಕ್ಷದಲ್ಲಿ ರಾಜ್ಯ ಕಾರ್ಯದರ್ಶಿಗಳಾಗಿ, ಕೇಂದ್ರ ಸಫಾಯಿ ಕರ್ಮಚಾರಿ ಆಯೋಗದ ಸದಸ್ಯರಾಗಿ ಸೇವೆ ಸಲ್ಲಿಸಿದ್ದ ಅವರು, ವಿಶೇಷ ತೀವ್ರ ಪರಿಷ್ಕರಣೆ ಜಾಗೃತಿ ಅಭಿಯಾನದ ರಾಜ್ಯ ಸಂಚಾಲಕರಾಗಿ ಸೇವೆ ಸಲ್ಲಿಸುತ್ತಿದ್ದರು. ಅವರ ಸರಳತೆ ಮತ್ತು ಕರ್ತವ್ಯನಿಷ್ಠೆ ಮರೆಯಲು ಸಾಧ್ಯವಿಲ್ಲ. ಭಗವಂತನು ಅವರ ಆತ್ಮಕ್ಕೆ ಚಿರಶಾಂತಿಯನ್ನು ಕರುಣಿಸಲಿ ಮತ್ತು ಅವರ ಕುಟುಂಬಕ್ಕೆ ಈ ನೋವನ್ನು ಭರಿಸುವ ಶಕ್ತಿಯನ್ನು ನೀಡಲಿ ಎಂದು ಪ್ರಾರ್ಥಿಸುತ್ತೇನೆ. ಓಂ ಶಾಂತಿ -
B.S.Yediyurappa
@BSYBJP
Heartiest congratulations to Shri @RajeevRC_X ji on his remarkable victory in Nemom. This is indeed a historic moment for the NDA in Keralam, as we secure three seats, including notable victories for Shri @VMBJP ji in Kazhakkoottam and Shri B.B.Gopakumar ji in Chathannoor.
This significant breakthrough reflects the growing trust of the people of Keralam in the visionary leadership of Hon’ble Prime Minister Shri @narendramodi ji. My heartfelt best wishes to all the winning candidates and our dedicated karyakartas, whose tireless efforts made this success possible. -
B.S.Yediyurappa
@BSYBJP
ನೆಚ್ಚಿನ ಪ್ರಧಾನಿ ಶ್ರೀ @narendramodi ಜೀರವರ ವಿಕಸಿತ ಭಾರತದ ಪರಿಕಲ್ಪನೆಯಲ್ಲಿ ವಿಶ್ವಾಸವಿಟ್ಟು ಆಶೀರ್ವದಿಸಿದ ಪಶ್ಚಿಮ ಬಂಗಾಳ, ಅಸ್ಸಾಂ ಮತ್ತು ಪುದುಚೇರಿಯ ಜನರಿಗೆ ಹೃತ್ಪೂರ್ವಕ ಕೃತಜ್ಞತೆಗಳು! ಈ ಜನಾದೇಶ ಸನ್ಮಾನ್ಯ ಪ್ರಧಾನಿ ಶ್ರೀ ನರೇಂದ್ರ ಮೋದಿಜೀ ರವರ ಬಲಿಷ್ಟ ನಾಯಕತ್ವಕ್ಕೆ ಮತ್ತೊಂದು ಸಾಕ್ಷಿಯಾಗಿದೆ. ಪಕ್ಷದ ಗೆಲುವಿನ ಅಭಿಯಾನವನ್ನು ಸಮರ್ಥವಾಗಿ ಮುನ್ನಡೆಸುತ್ತಿರುವ ಗೃಹಸಚಿವ ಶ್ರೀ @AmitShah ಜೀ ಮತ್ತು ನಮ್ಮ ರಾಷ್ಟ್ರೀಯ ಅಧ್ಯಕ್ಷ ಶ್ರೀ @NitinNabin ಜೀ ರವರಿಗೂ ಗೌರವದ ಅಭಿನಂದನೆಗಳು. ಈ ಐತಿಹಾಸಿಕ ಜನಾದೇಶವನ್ನು ಸಾಧಿಸಿದ ನಮ್ಮ ದಣಿವರಿಯದ ನಿಷ್ಠಾವಂತ ಕಾರ್ಯಕರ್ತರಿಗೂ ಅಭಿನಂದನೆಗಳು. ರಾಜ್ಯದ ಉಪಚುನಾವಣೆಯಲ್ಲಿ ಫಲಿತಾಂಶ ನಮ್ಮ ಪರವಾಗಿಲ್ಲದಿದ್ದರೂ, ನಮ್ಮ ಪಕ್ಷದ ನಮ್ಮ ಕಾರ್ಯಕರ್ತರ ನಿಷ್ಠೆ ಮತ್ತು ಸಂಘಟನೆಯ ಸಂಕಲ್ಪ ದೃಢವಾಗಿದ್ದು, ಗುರಿ ಮುಟ್ಟುವವರೆಗೂ ನಮ್ಮ ಹೋರಾಟ ಮತ್ತು ಪ್ರಯತ್ನಗಳನ್ನು ಮುಂದುವರಿಸೋಣ.
-
B.S.Yediyurappa
@BSYBJP
Heartiest congratulations to the people of West Bengal, Assam & Puducherry for placing their trust in PM @narendramodi Ji's vision of a #viksitbharat! I congratulate HM @AmitShah Ji & National President @NitinNabin Ji for steering this victory and to all the work of our tireless karyakartas who made this possible.
To Karnataka’s karyakartas- though results weren't in our favour, our resolve to serve our people remains firm. Let us continue our good work and we will return stronger -
B.S.Yediyurappa
@BSYBJP
ಅಚಲ ಸಂಕಲ್ಪ ಮತ್ತು ಹೋರಾಟದ ಫಲವಾಗಿ, ಹೈಕೋರ್ಟ್ ಆದೇಶದ ಮೇರೆಗೆ ನಡೆದ ಶೃಂಗೇರಿ ವಿಧಾನಸಭಾ ಕ್ಷೇತ್ರದ ಅಂಚೆ ಮತಗಳ ಮರು ಎಣಿಕೆಯಲ್ಲಿ ಶ್ರೀ ಡಿ.ಎನ್. ಜೀವರಾಜ್ ಅವರು ಗೆಲುವು ಸಾಧಿಸಿದ್ದಾರೆ. ಅವರಿಗೆ ಹಾಗೂ ಕ್ಷೇತ್ರದ ಎಲ್ಲಾ ಮತದಾರರಿಗೆ ಹಾರ್ದಿಕ ಶುಭಾಶಯಗಳು.
#bjp4karnataka -
B.S.Yediyurappa
@BSYBJP
ಆತ್ಮೀಯರಾದ ಶ್ರೀ @blsanthosh ಜೀ, ಭಾರತೀಯ ಜನತಾ ಪಾರ್ಟಿಯ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿಗಳಾಗಿ ಇಡೀ ದೇಶಾದ್ಯಂತ ಪಕ್ಷದ ಸಂಘಟನೆಯನ್ನು ಅತ್ಯಂತ ಸಮರ್ಥವಾಗಿ ನಿರ್ವಹಿಸುತ್ತಿದ್ದಾರೆ.
ಇಂದು ನಮ್ಮ ಮನೆಗೆ ಸೌಹಾರ್ದಯುತ ಭೇಟಿ ನೀಡಿ ನನ್ನೊಂದಿಗೆ ಉಪಹಾರ ಸೇವಿಸಿದರು. ಸದ್ಯ ನಿರೀಕ್ಷೆಯಲ್ಲಿರುವ ಪಂಚರಾಜ್ಯಗಳ ವಿಧಾನ ಸಭಾ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಬಿಜೆಪಿ ಐತಿಹಾಸಿಕ ಗೆಲುವು ಸಾಧಿಸುವ ಬಗ್ಗೆ ಆತ್ಮವಿಶ್ವಾಸ ವ್ಯಕ್ತಪಡಿಸಿದರು.
50 ವರ್ಷಗಳ ನನ್ನ ಯಶಸ್ವಿ ರಾಜಕೀಯ ಪಯಣದ ಕುರಿತು ಆತ್ಮೀಯವಾಗಿ ಶುಭಾಶಯ ಸಲ್ಲಿಸಿದರು. ಸಂತೋಷ್ ಜೀ ಅವರ ಸಂಘಟನಾ ಸಾಮರ್ಥ್ಯ-ಚತುರತೆ ಪ್ರತಿಯೊಬ್ಬ ಕಾರ್ಯಕರ್ತನಿಗೂ ಸ್ಪೂರ್ತಿಯ ಸೆಲೆಯಾಗಿದೆ. -
B.S.Yediyurappa
@BSYBJP
ದೇಶದ ಪ್ರಗತಿಗಾಗಿ ಹಗಲಿರುಳು ದುಡಿಯುತ್ತಿರುವ ಎಲ್ಲಾ ಕಾರ್ಮಿಕರಿಗೆ ಕಾರ್ಮಿಕರ ದಿನದ ಹಾರ್ದಿಕ ಶುಭಾಶಯಗಳು.!
#shramevjayate #labourday -
B.S.Yediyurappa reposted
BJP Karnataka
@BJP4Karnataka
ವಿಶ್ವಕ್ಕೆ ಶಾಂತಿ ಸಂದೇಶ ಪಸರಿಸಿದ ಭಗವಾನ್ ಬುದ್ಧನ ಜನ್ಮದಿನವಾದ ಬುದ್ಧ ಪೂರ್ಣಿಮೆಯ ಶುಭಾಶಯಗಳು.
#buddhapoornima -
B.S.Yediyurappa reposted
BJP Karnataka
@BJP4Karnataka
ನಾಡಿನ ಸಮಸ್ತ ಜನತೆಗೆ ನರಸಿಂಹ ಜಯಂತಿಯ ಶುಭಾಶಯಗಳು.
#narasimhajayanthi -
B.S.Yediyurappa
@BSYBJP
*ನೇಪಾಳದ ಬಾಗ್ಮತಿ ತೀರದಿಂದ ಕರುನಾಡಿನ ತುಂಗೆಯ ತೀರಕ್ಕೆ ಬಂದ ಪಶುಪತಿನಾಥ!* ರಂಭಾಪುರಿ ಪೀಠದ ಪರಮಪೂಜ್ಯ ಜಗದ್ಗುರು ಶ್ರೀ ಡಾ. ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರ ಹಾಗೂ ಅನೇಕ ಸಂತರ ದಿವ್ಯ ಸಾನ್ನಿಧ್ಯದಲ್ಲಿ, ಶಿವಮೊಗ್ಗದಲ್ಲಿ ನೂತನವಾಗಿ ನಿರ್ಮಾಣವಾಗಿರುವ ಪಂಚಮುಖಿ ಶಿವಲಿಂಗ ರೂಪವಾದ ಶ್ರೀ ಪಶುಪತಿನಾಥನ ಪ್ರತಿಷ್ಠಾಪನೆ, ಕಳಸಾರೋಹಣ ಹಾಗೂ ಧರ್ಮಸಭೆಯಲ್ಲಿ ಪಾಲ್ಗೊಳ್ಳಲಾಯಿತು.
-
B.S.Yediyurappa
@BSYBJP
ಸಿರಿಗೆರೆ ಬೃಹನ್ಮಠದ ಶ್ರೀ ತರಳಬಾಳು ಜಗದ್ಗುರು ಪರಮಪೂಜ್ಯ ಶ್ರೀ ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳ ದಿವ್ಯಸಾನ್ನಿಧ್ಯದಲ್ಲಿ, ಶಿವಮೊಗ್ಗದ ಸೂಗೂರು ಗ್ರಾಮದಲ್ಲಿ ಇಂದು ನಡೆದ ಶ್ರೀ ಮೃಡಬಸವೇಶ್ವರ ಸ್ವಾಮಿ ದೇವಸ್ಥಾನದ ಲೋಕಾರ್ಪಣೆ, ಪ್ರಾಣ ಪ್ರತಿಷ್ಠಾಪನೆ ಹಾಗೂ ಕಳಸಾರೋಹಣ, ಶ್ರೀ ಮರುಳ ಸಿದ್ದೇಶ್ವರ ದೇವಸ್ಥಾನದ ನೂತನ ಕಳಸಾರೋಹಣ ಮತ್ತು ಶ್ರೀ ಈಶ್ವರಯ್ಯ ಗಂಗಮ್ಮ ಸಮುದಾಯ ಭವನದ ಉದ್ಘಾಟನಾ ಮಹೋತ್ಸವಗಳಲ್ಲಿ ಪಾಲ್ಗೊಳ್ಳಲಾಯಿತು.
-
B.S.Yediyurappa reposted
BJP Karnataka
@BJP4Karnataka
ತತ್ವಜ್ಞಾನಿ, ಅದ್ವೈತ ಸಿದ್ಧಾಂತವನ್ನು ಪ್ರತಿಪಾದಿಸಿ, ಧರ್ಮ ಸಂಸ್ಥಾಪನೆಗಾಗಿ ದೇಶದ ನಾಲ್ಕು ದಿಕ್ಕುಗಳಲ್ಲಿ ಪೀಠಗಳನ್ನು ಸ್ಥಾಪಿಸಿ ಧಾರ್ಮಿಕ ಜಾಗೃತಿಯನ್ನುಂಟು ಮಾಡಿದ ದಿವ್ಯ ಚೇತನ ಆದಿ ಗುರು ಶ್ರೀ ಶಂಕರಾಚಾರ್ಯರ ಜಯಂತಿಯ ಶುಭಾಶಯಗಳು.
#shankarajayanthi -
B.S.Yediyurappa
@BSYBJP
I strongly condemn the highly irresponsible and unacceptable statement made by Shri @kharge ji, who has referred to our Hon’ble Prime Minister, Shri @narendramodi ji, in derogatory and unbecoming terms. To use language of this nature against a democratically elected Prime Minister, who has been entrusted with a third consecutive mandate by the people of India, is not merely a political remark - it is an insult to the dignity of the office and an insult to the millions of citizens who have reposed their faith in his leadership.
Public life demands restraint, responsibility, and respect for institutions. Unfortunately, such statements reflect a disturbing decline in political discourse and do little to serve the interests of democracy. At a time when India’s global stature is steadily rising and our Prime Minister is widely respected on the world stage, remarks of this kind diminish the seriousness of public debate and only underscore political frustration. I urge Shri Kharge ji to withdraw his statement and tender an unconditional apology to the people of India. Political differences must never cross the boundaries of decency and respect.
@BJP4Karnataka @BJP4India -
B.S.Yediyurappa
@BSYBJP
ಮಾನ್ಯ ಶ್ರೀ @kharge ಯವರೇ, ದೇಶದ ಹೆಮ್ಮೆಯ ಪ್ರಧಾನಮಂತ್ರಿ ಸನ್ಮಾನ್ಯ ಶ್ರೀ ನರೇಂದ್ರ ಮೋದಿ ಜೀ ರವರನ್ನು 'ಭಯೋತ್ಪಾದಕ' ಎಂದು ತೀರಾ ಕೀಳು ಮಟ್ಟದಲ್ಲಿ ನೀವು ನೀಡಿರುವ ಹೇಳಿಕೆ ನಿಮ್ಮ ದುರಹಂಕಾರದ ಪರಮಾವಧಿ ಮಾತ್ರವಲ್ಲ, ಅದು ನಿಮ್ಮ ಕೊಳಕು, ವಿಷಕಾರಿ ಮನಸ್ಥಿತಿಯನ್ನು ಅನಾವರಣಗೊಳಿಸಿದೆ. ಮಾನ್ಯ ಖರ್ಗೆಯವರೇ, ಹೆಮ್ಮೆಯ ಪ್ರಧಾನಿ ಶ್ರೀ ಮೋದಿ ಜೀ ರವರ ನಾಯಕತ್ವದ ಮೇಲೆ ಅಚಲ ವಿಶ್ವಾಸವಿಟ್ಟು ಭಾರತದ ಜನತೆ ಸತತ ಮೂರನೇ ಬಾರಿಗೆ ಅವರನ್ನು ಪ್ರಧಾನಿ ಪೀಠದಲ್ಲಿ ಕೂರಿಸಿದ್ದಾರೆ. ಅವರನ್ನು ಟೀಕಿಸುವ ಭರದಲ್ಲಿ ಹೀಗೆ ಅವಮಾನಿಸುವುದು ಎಂದರೆ ಮೋದಿ ಜೀ ರವರನ್ನು ಬೆಂಬಲಿಸಿದ ಕೋಟ್ಯಂತರ ಭಾರತೀಯರನ್ನು ಅಪಮಾನಿಸಿದಂತೆ! ಕಾಂಗ್ರೆಸ್ ನಾಯಕರಿಗೆ ಇಂತಹ ದುರ್ವರ್ತನೆ ಅಭ್ಯಾಸವಾಗಿಬಿಟ್ಟಿದೆ. ಚುನಾವಣೆ ಬಂದಾಗಲೆಲ್ಲ ಇಂತಹ ಕೀಳು ಮಟ್ಟದ ಹೇಳಿಕೆಗಳನ್ನು ನೀಡುತ್ತಲೇ ಬಂದಿದ್ದು, ಜನರು ನಿಮಗೆ ಪಾಠ ಕಲಿಸುತ್ತಲೇ ಬಂದಿದ್ದಾರೆ. ಆದರೂ ತಿದ್ದಿಕೊಳ್ಳದ ನಿಮ್ಮ ವರ್ತನೆ ನಿಮ್ಮ ಅಹಂಕಾರಕ್ಕೆ ಕನ್ನಡಿ ಹಿಡಿದಿದೆ.
ಮಾನ್ಯ ಖರ್ಗೆಯವರೇ, ಭಾರತದ ಪ್ರಧಾನಿ ಶ್ರೀ @narendramodi ಜೀ ರವರು ಅಪ್ರತಿಮ ಜಾಗತಿಕ ನಾಯಕ ಎಂದು ವಿಶ್ವದ ಹಲವಾರು ದೇಶಗಳ ನೇತಾರರು ಕೊಂಡಾಡುತ್ತಿದ್ದಾರೆ. ವಿಶ್ವದ 26ಕ್ಕೂ ಅಧಿಕ ರಾಷ್ಟ್ರಗಳು ತಮ್ಮ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಗಳನ್ನು ನೀಡಿ ಮೋದಿ ಜೀ ಯವರ ನಾಯಕತ್ವವನ್ನು ಗೌರವಿಸಿವೆ. ಇಡೀ ಜಗತ್ತೇ ಭಾರತದತ್ತ ಹೆಮ್ಮೆಯಿಂದ ನೋಡುತ್ತಿರುವಾಗ, ಕೇವಲ ನಿಮ್ಮ ರಾಜಕೀಯ ವೈಷಮ್ಯಕ್ಕಾಗಿ ದೇಶದ ಪ್ರಧಾನಮಂತ್ರಿಗಳ ಬಗ್ಗೆ ಇಷ್ಟು ಕೀಳುಮಟ್ಟದ ಶಬ್ದಗಳನ್ನು ಬಳಸುವುದು, ನಿಮ್ಮ ಕೀಳು ಮನಸ್ಥಿತಿಯನ್ನು ಮತ್ತು ನಿಮ್ಮ ರಾಜಕೀಯ ಹತಾಶೆಯನ್ನು ಸಾಬೀತುಪಡಿಸಿದೆ. ಅಧಿಕಾರದ ಹಪಾಹಪಿಯಲ್ಲಿ, ಒಂದು ಮನೆತನವನ್ನು ಸಂತೋಷಪಡಿಸುವ ಭರದಲ್ಲಿ ನಿಮ್ಮ ಘನತೆಯನ್ನು ಕಳೆದುಕೊಂಡಿದ್ದೀರಿ. ಹಿರಿಯರಾದ ನಿಮ್ಮಿಂದ ಇಂತಹ ಬೇಜವಾಬ್ದಾರಿ ಹೇಳಿಕೆಗಳನ್ನು ನಾಡಿನ ಜನತೆ ಎಂದಿಗೂ ಕ್ಷಮಿಸುವುದಿಲ್ಲ. ಇಂತಹ ಕೀಳು ಮಟ್ಟದ ಅಸಂಬದ್ಧ ಹೇಳಿಕೆಗೆ ಕೂಡಲೇ ಕ್ಷಮೆ ಯಾಚಿಸಿ ಎಂದು ಆಗ್ರಹಿಸುತ್ತೇನೆ.
@BJP4Karnataka -
B.S.Yediyurappa
@BSYBJP
ನಾಡಿನ ಸಮಸ್ತ ಜನತೆಗೆ ಬಸವ ಜಯಂತಿ ಹಾಗೂ ಅಕ್ಷಯ ತೃತೀಯಾ ದಿನದ ಹಾರ್ದಿಕ ಶುಭಾಶಯಗಳು.
"ಇವನಾರವ, ಇವನಾರವ, ಇವನಾರವನೆಂದೆನಿಸದಿರಯ್ಯಾ. ಇವ ನಮ್ಮವ, ಇವ ನಮ್ಮವ, ಇವ ನಮ್ಮವನೆಂದೆನಿಸಯ್ಯಾ ಕೂಡಲಸಂಗಮದೇವಾ" ಎಂದು ಬಾಳನ್ನು ಬೆಳಗುವ ಕಾಯಕ - ದಾಸೋಹದ ತತ್ವಗಳನ್ನು ನೀಡಿದ ಜಗಜ್ಯೋತಿ ಅಣ್ಣ ಬಸವಣ್ಣನವರಿಗೆ ವಂದಿಸುತ್ತಾ, ಈ ಅಕ್ಷಯ ತೃತೀಯಾ ಶುಭ ದಿನವು ಎಲ್ಲರ ಬಾಳಿನಲ್ಲಿ ಸುಖ, ಶಾಂತಿ ಮತ್ತು ಸಮೃದ್ಧಿಯನ್ನು ಅಕ್ಷಯವಾಗಿಸಲಿ ಎಂದು ಪ್ರಾರ್ಥಿಸುತ್ತೇನೆ.
#basavajayanthi #akshayatritiya -
B.S.Yediyurappa
@BSYBJP
ಚಿಕ್ಕಮಗಳೂರಿನಲ್ಲಿ ಇಂದು ಶ್ರೀ ವೀರಶೈವ ಲಿಂಗಾಯತ ಸಮಾಜದ ವತಿಯಿಂದ, ನನ್ನ ಧರ್ಮಪತ್ನಿ ದಿವಂಗತ ಶ್ರೀಮತಿ ಮೈತ್ರಾದೇವಿ ಅವರ ಹೆಸರಿನಲ್ಲಿ ನಿರ್ಮಾಣಗೊಂಡಿರುವ ನೂತನ ಸಮುದಾಯ ಭವನವನ್ನು ಲೋಕಾರ್ಪಣೆಗೊಳಿಸಲಾಯಿತು. ಈ ಭವನವು ಸಮಸ್ತ ಸಮಾಜದ ಸತ್ಕಾರ್ಯಗಳಿಗೆ ಆಸರೆಯಾಗಲಿ ಎಂದು ಆಶಿಸುತ್ತೇನೆ. ಜನರ, ಅಭಿಮಾನಿಗಳ ಪ್ರೀತಿ, ಆತ್ಮೀಯತೆ ಮತ್ತು ಗೌರವಕ್ಕೆ ನಾನು ಸದಾ ಋಣಿ.
-
B.S.Yediyurappa
@BSYBJP
What we witnessed in the Lok Sabha today is deeply disappointing. The Congress, TMC, DMK and Samajwadi Party came together to block a crucial Constitution Amendment Bill aimed at ensuring 33% reservation for women in Parliament and State Assemblies.
Denying women their rightful representation and celebrating it reflects a mindset that does not prioritize empowerment or national progress. This is not just about a bill, it is about respect for Nari Shakti.
The voice of women cannot be ignored. This moment will be remembered, and accountability will follow in every election ahead.
@narendramodi @AmitShah @BJP4India @BJP4Karnataka -
B.S.Yediyurappa
@BSYBJP
ಬಿಹಾರದ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಶ್ರೀ ಸಾಮ್ರಾಟ್ ಚೌಧರಿ ಅವರಿಗೆ ಹಾರ್ದಿಕ ಅಭಿನಂದನೆಗಳು.
Heartfelt congratulations to Shri Samrat Choudhary on assuming office as the Chief Minister of Bihar. Wishing him great success in leading the state towards progress and development.
#biharcm #samratchoudhary -
B.S.Yediyurappa
@BSYBJP
ಶ್ರೀ ಕ್ಷೇತ್ರ ಆದಿಚುಂಚನಗಿರಿ ಮಹಾಸಂಸ್ಥಾನ ಮಠದಲ್ಲಿ ನಡೆಯುವ ಶ್ರೀ ಗುರು ಭೈರವೈಕ್ಯ ಮಂದಿರ ಲೋಕಾರ್ಪಣೆ ಸಮಾರಂಭಕ್ಕೆ ಆಗಮಿಸುತ್ತಿರುವ ಭಾರತದ ಗೌರವಾನ್ವಿತ ಪ್ರಧಾನಮಂತ್ರಿ ಶ್ರೀ @narendramodi ಅವರಿಗೆ ಕರ್ನಾಟಕದ ಜನತೆ ಪರವಾಗಿ ಆತ್ಮೀಯ ಸ್ವಾಗತ.
#karnatakawelcomesmodiji -
B.S.Yediyurappa
@BSYBJP
ದೇಶದ ಪ್ರಗತಿ, ಸಮಾಜದಲ್ಲಿ ಸಮಾನತೆಯ ಸಾಕಾರಕ್ಕೆ ತಮ್ಮ ಜೀವನವನ್ನೇ ಮುಡಿಪಾಗಿಟ್ಟ ಮೇರು ನಾಯಕ, ಸಂವಿಧಾನಶಿಲ್ಪಿ ಭಾರತರತ್ನ ಡಾ. ಬಿ.ಆರ್.ಅಂಬೇಡ್ಕರ್ ಅವರ ಜಯಂತಿಯಂದು ಆ ಮಹಾನ್ ಚೇತನಕ್ಕ ಶ್ರದ್ಧಾಪೂರ್ವಕ ಪ್ರಣಾಮಗಳು.
#ambedkarjayanti2026 -
B.S.Yediyurappa
@BSYBJP
ಹಿರಿಯರು, ರಾಷ್ಟ್ರೋತ್ಥಾನ ಪರಿಷತ್ತಿನ ಮಾಜಿ ಅಧ್ಯಕ್ಷರು, ಆತ್ಮೀಯರೂ ಆಗಿದ್ದ ನಾಡೋಜ ಶ್ರೀ ಡಾ ಎಸ್.ಆರ್.ರಾಮಸ್ವಾಮಿ ಅವರು ಇಂದು ಬೆಳಿಗ್ಗೆ ಲಿಂಗೈಕ್ಯರಾದ ಸುದ್ದಿ ಕೇಳಿ ತೀವ್ರ ದುಃಖವಾಗಿದೆ. ಶ್ರೀ ರಾಮಸ್ವಾಮಿ ಅವರು ಕೇವಲ ಒಬ್ಬ ಪತ್ರಕರ್ತರಾಗಿ ಅಥವಾ ಸಾಹಿತಿಗಳಾಗಿ ಮಾತ್ರವಲ್ಲದೆ, ನೂರಾರು ಜನರಿಗೆ ಮಾರ್ಗದರ್ಶಕರೂ ಆಗಿದ್ದ ಹಿರಿಯ ಚೇತನ. ತಮ್ಮ ವೈಚಾರಿಕ ಬರಹಗಳ ಮೂಲಕ ಜಾಗೃತಿ ಮೂಡಿಸಿದ್ಧ ಅವರು, ಸರಳ ಸಜ್ಜನಿಕೆಯ ಸಾಕಾರಮೂರ್ತಿಯಾಗಿದ್ದರು. ಅವರ ನಿಧನದಿಂದ ಕನ್ನಡ ಸಾರಸ್ವತ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ.
ಭಗವಂತನು ಅವರ ಆತ್ಮಕ್ಕೆ ಶಾಂತಿ ನೀಡಲಿ ಹಾಗೂ ಅವರ ಕುಟುಂಬ, ಶಿಷ್ಯ ವರ್ಗ, ಅಭಿಮಾನಿ ಬಳಗಕ್ಕೆ ಈ ನೋವನ್ನು ಭರಿಸುವ ಶಕ್ತಿಯನ್ನು ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ. ಓಂ ಶಾಂತಿ🙏🏻 -
B.S.Yediyurappa
@BSYBJP
ಬಾಗಲಕೋಟೆ ವಿಧಾನಸಭಾ ಕ್ಷೇತ್ರದ ಮತದಾರ ಬಂಧುಗಳಲ್ಲಿ ವಿನಂತಿ 🙏
ಬಾಗಲಕೋಟೆ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುತ್ತಿರುವ ಬಿಜೆಪಿ ಅಭ್ಯರ್ಥಿ ಶ್ರೀ ವೀರಣ್ಣ ಚರಂತಿಮಠ ಅವರನ್ನು ಪ್ರಚಂಡ ಬಹುಮತಗಳಿಂದ ಗೆಲ್ಲಿಸೋಣ, ಕಾಂಗ್ರೆಸ್ ದುರಾಡಳಿತವನ್ನು ಹಿಮ್ಮೆಟ್ಟಿಸೋಣ.
#bjp4bagalkot -
B.S.Yediyurappa
@BSYBJP
ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಮತದಾರ ಬಂಧುಗಳಲ್ಲಿ ವಿನಂತಿ 🙏
ಸಾಮಾನ್ಯ ಕುಟುಂಬದಿಂದ ಬಂದಿರುವ ಬಿಜೆಪಿ ಅಭ್ಯರ್ಥಿಯಾದ ಶ್ರೀ ಶ್ರೀನಿವಾಸ ಟಿ. ದಾಸಕರಿಯಪ್ಪ ಅವರು ಬಡವರ ಕಷ್ಟವನ್ನು ಅರಿತಿರುವವರು. ಕ್ಷೇತ್ರದ ಸಮಗ್ರ ಅಭಿವೃದ್ಧಿಗಾಗಿ ಉಪಚುನಾವಣೆಯಲ್ಲಿ ಕ್ರಮ ಸಂಖ್ಯೆ 2 ಕ್ಕೆ ನಿಮ್ಮ ಅಮೂಲ್ಯ ಮತವನ್ನು ನೀಡಿ, ಭಾರೀ ಅಂತರದಿಂದ ಗೆಲ್ಲಿಸಬೇಕೆಂದು ವಿನಂತಿಸುತ್ತೇನೆ.
#bjp4davanageresouth -
B.S.Yediyurappa
@BSYBJP
ಬಾಗಲಕೋಟೆ ಉಪಚುನಾವಣಾ ಪ್ರಚಾರದ ಅಂಗವಾಗಿ ಇಂದು ವೀರಶೈವ ಲಿಂಗಾಯತ ಮತ್ತು ಹಿಂದೂ ಸಮಾಜಗಳ ಸಭೆಯಲ್ಲಿ, ನಮ್ಮ ಅಭ್ಯರ್ಥಿ ಶ್ರೀ ವೀರಣ್ಣ ಚರಂತಿಮಠ ಪರವಾಗಿ ಮತಯಾಚಿಸಲಾಯಿತು.
-
B.S.Yediyurappa
@BSYBJP
ಪಕ್ಷದ ಸ್ಥಾಪನಾ ದಿವಸದ ಅಂಗವಾಗಿ ಬಾಗಲಕೋಟೆಯ ಪಕ್ಷದ ಕಚೇರಿಯಲ್ಲಿ ಇಂದು ಪಕ್ಷದ ಧ್ವಜಾರೋಹಣ ನಡೆಸಿ, ಜನಸಂಘದ ಕಾಲದಿಂದಲೂ ಸಂಘಟನೆಯಲ್ಲಿ ಸಕ್ರಿಯರಾಗಿದ್ದ ಹಿರಿಯ ಕಾರ್ಯಕರ್ತರನ್ನು ಸನ್ಮಾನಿಸುವ ಮೂಲಕ ಆಚರಿಸಲಾಯಿತು. ಮಾಜಿ ಮುಖ್ಯಮಂತ್ರಿ, ಸಂಸದ ಶ್ರೀ ಬಸವರಾಜ ಬೊಮ್ಮಾಯಿ, ಜಿಲ್ಲಾಧ್ಯಕ್ಷ ಶ್ರೀ ಶಾಂತಗೌಡ ಪಾಟೀಲ ಸೇರಿದಂತೆ ಹಲವಾರು ಪ್ರಮುಖರು, ಕಾರ್ಯಕರ್ತರು ಉಪಸ್ಥಿತರಿದ್ದರು.
-
B.S.Yediyurappa
@BSYBJP
ಪಕ್ಷದ ಎಲ್ಲಾ ನಮ್ಮ ಹೆಮ್ಮೆಯ ಕಾರ್ಯಕರ್ತರಿಗೂ, ಹಿತೈಷಿಗಳಿಗೂ ಭಾರತೀಯ ಜನತಾ ಪಾರ್ಟಿಯ 'ಸ್ಥಾಪನಾ ದಿನ'ದ ಹೃತ್ಪೂರ್ವಕ ಶುಭಾಶಯಗಳು ವಿಶ್ವದ ಅತಿ ದೊಡ್ಡ ರಾಜಕೀಯ ಪಕ್ಷವಾಗಿ ಬೆಳೆದಿರುವ ಭಾರತೀಯ ಜನತಾ ಪಾರ್ಟಿಯನ್ನು ಕಟ್ಟಿದ, ಸಂಘಟನೆಗಾಗಿ ದುಡಿದ ಎಲ್ಲ ಹಿರಿಯರ ಸಂಸ್ಮರಣೆಗಳ ಜೊತೆಗೆ, ಸಮೃದ್ಧ, ಸಶಕ್ತ, ವಿಕಸಿತ ಭಾರತಕ್ಕಾಗಿ ಸಂಘಟನೆಯನ್ನು ಬಲಪಡಿಸುತ್ತಾ ನಾವೆಲ್ಲರೂ ಒಂದಾಗಿ ಮುನ್ನಡೆಯುವ ಸಂಕಲ್ಪವನ್ನು ಪುನರುಚ್ಚರಿಸೋಣ.
#bjpfoundationday #sthapnadiwas -
B.S.Yediyurappa
@BSYBJP
ಬಾಗಲಕೋಟೆ ಉಪಚುನಾವಣಾ ಪ್ರಚಾರದ ಅಂಗವಾಗಿ ಇಂದು ಕ್ಷೇತ್ರದ ರಾಂಪೂರ ಹಾಗೂ ಕಮತಗಿಯಲ್ಲಿ, ಕೇಂದ್ರ ಸಚಿವರು, ಮಾಜಿ ಮುಖ್ಯಮಂತ್ರಿಗಳೂ ಆಗಿರುವ ಶ್ರೀ ಹೆಚ್.ಡಿ.ಕುಮಾರಸ್ವಾಮಿ ಮತ್ತಿತರ ನಾಯಕರೊಂದಿಗೆ ಬೃಹತ್ ಜನಾಶೀರ್ವಾದ ಸಭೆ ನಡೆಸಿ, ನಮ್ಮ ಅಭ್ಯರ್ಥಿ ಶ್ರೀ ವೀರಣ್ಣ ಚರಂತಿಮಠ ಅವರ ಪರವಾಗಿ ಮತ ಯಾಚಿಸಲಾಯಿತು. ನಮ್ಮ ಮೈತ್ರಿ ಶಕ್ತಿ ಪಕ್ಷದ ಅಭ್ಯರ್ಥಿಯ ಭರ್ಜರಿ ಗೆಲುವಿಗೆ ಮುನ್ನುಡಿ ಬರೆಯುತ್ತಿದೆ.
-
B.S.Yediyurappa
@BSYBJP
ಬಂಜಾರ ಸಮಾಜದ ಶ್ರಮ, ಸಂಸ್ಕೃತಿ ಮತ್ತು ಪರಂಪರೆ ನಾಡಿನ ಹೆಮ್ಮೆಯಾಗಿದೆ. ಇಂದು ಬಾಗಲಕೋಟೆಯ ಉಪಚುನಾವಣಾ ಪ್ರಚಾರದ ಅಂಗವಾಗಿ, ನಮ್ಮ ಬಂಜಾರಾ ಸಮಾಜದ ಪ್ರಮುಖರೊಂದಿಗೆ ಸಭೆ ನಡೆಸಿ ಪಕ್ಷದ ಅಭ್ಯರ್ಥಿ ಶ್ರೀ ವೀರಣ್ಣ ಚರಂತಿಮಠ ಅವರ ಪರವಾಗಿ ಮತಯಾಚಿಸಲಾಯಿತು. ಕೇಂದ್ರ ಸಚಿವ ಶ್ರೀ ಪ್ರಲ್ಹಾದ ಜೋಶಿ, ಮಾಜಿ ಸಚಿವ, ಶಾಸಕ ಶ್ರೀ ಪ್ರಭು ಚವ್ಹಾಣ ಸೇರಿದಂತೆ ಹಲವು ನಾಯಕರು, ಮುಖಂಡರು, ಉಪಸ್ಥಿತರಿದ್ದರು
-
B.S.Yediyurappa
@BSYBJP
ಹನುಮ ಜಯಂತಿಯಂದು ಶಿಕಾರಿಪುರದ ಪ್ರಸಿದ್ಧ ಶ್ರೀ ಹುಚ್ಚರಾಯಸ್ವಾಮಿ ದೇವಾಲಯದಲ್ಲಿ ಕುಟುಂಬ ಸಮೇತ ಪೂಜೆ ಸಲ್ಲಿಸಿ, ಸಹಸ್ರಾರು ಭಕ್ತರೊಂದಿಗೆ ಸ್ವಾಮಿಯ ರಥೋತ್ಸವದಲ್ಲಿ ಪಾಲ್ಗೊಳ್ಳಲಾಯಿತು.
-
B.S.Yediyurappa
@BSYBJP
ನಾಡಿನ ಸಮಸ್ತ ಜನತೆಗೆ ಹನುಮ ಜಯಂತಿಯ ಶುಭಾಶಯಗಳು.
#hanumajayanti -
B.S.Yediyurappa
@BSYBJP
ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಬೃಹತ್ ರೋಡ್ ಶೋ ಮೂಲಕ ಪಕ್ಷದ ಅಭ್ಯರ್ಥಿ ಪರ ಪ್ರಚಾರ ನಡೆಸಲಾಯಿತು. ಹೆಚ್ಚಿನ ಸಂಖ್ಯೆಯಲ್ಲಿ ಅತ್ಯಂತ ಉತ್ಸಾಹದಿಂದ ಪಾಲ್ಗೊಂಡ ನಮ್ಮ ಸಾವಿರಾರು ಕಾರ್ಯಕರ್ತರ ಬದ್ಧತೆ ಹಾಗೂ ಜನತೆಯ ವಿಶ್ವಾಸವೇ ಪಕ್ಷದ ಗೆಲುವಿಗೆ ದಿಕ್ಸೂಚಿ.
-
B.S.Yediyurappa
@BSYBJP
ದಾವಣಗೆರೆ ದಕ್ಷಿಣ ಕ್ಷೇತ್ರದ ಉಪಚುನಾವಣೆಯ ಪ್ರಚಾರದ ಅಂಗವಾಗಿ ಇಂದು ಕ್ಷೇತ್ರದ ಆರ್ಯ ವೈಶ್ಯ ಸಮುದಾಯದ ಬಂಧುಗಳ ಸಭೆ ನಡೆಸಿ ನಮ್ಮ ಅಭ್ಯರ್ಥಿ ಶ್ರೀ ಶ್ರೀನಿವಾಸ್ ದಾಸಕರಿಯಪ್ಪ ಪರವಾಗಿ ಮತಯಾಚನೆ ನಡೆಸಲಾಯಿತು.
-
B.S.Yediyurappa
@BSYBJP
ತ್ರಿವಿಧ ದಾಸೋಹಿ, ಲಿಂಗೈಕ್ಯ ಪದ್ಮಭೂಷಣ ಡಾ. ಶ್ರೀ ಶಿವಕುಮಾರ ಸ್ವಾಮೀಜಿಗಳ ಜಯಂತಿಯಂದು ಆ ಪುಣ್ಯಚೇತನಕೆ ಅನಂತ ಪ್ರಣಾಮಗಳು.
-
B.S.Yediyurappa
@BSYBJP
ಬದಲಾವಣೆಯ ಗಾಳಿ ಬೀಸುತ್ತಿರುವ ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ, ಉಪಚುನಾವಣೆ ಪ್ರಯುಕ್ತ ಪಕ್ಷದ ಅಭ್ಯರ್ಥಿ ಶ್ರೀ ಶ್ರೀನಿವಾಸ್ ದಾಸಕರಿಯಪ್ಪ ಅವರ ಪರವಾಗಿ ಬೃಹತ್ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮತಪ್ರಚಾರ ಕೈಗೊಳ್ಳಲಾಯಿತು.
-
B.S.Yediyurappa
@BSYBJP
ತ್ರಿವಿಧ ದಾಸೋಹಿ, ಲೋಕೋತ್ತರ ಸಾಧಕ ಶರಣ, 'ನಡೆದಾಡುವ ದೇವರು' ಪದ್ಮಭೂಷಣ, ಪರಮಪೂಜ್ಯ ಡಾ. ಶ್ರೀ ಶಿವಕುಮಾರ ಸ್ವಾಮೀಜಿಗಳ ಜಯಂತ್ಯುತ್ಸವದ ಮುನ್ನಾ ದಿನವಾದ ಇಂದು ಸಿದ್ಧಗಂಗೆಯ ಶ್ರೀಮಠಕ್ಕೆ ತೆರಳಿ, ಗುರುಗಳ ಪುಣ್ಯ ಗದ್ದುಗೆಗೆ ಭಕ್ತಿಪೂರ್ವಕ ವಿಶೇಷ ಪೂಜೆ-ಪ್ರಾರ್ಥನೆಗಳನ್ನು ಸಲ್ಲಿಸಲಾಯಿತು. ನಾಡಿನ ಮೇಲೆ ಆ ಮಹಾಸ್ವಾಮಿಗಳ ಆಶೀರ್ವಾದ ಸದಾ ಇರಲಿ ಎಂದು ಪ್ರಾರ್ಥಿಸಲಾಯಿತು. ಈ ಸಂದರ್ಭದಲ್ಲಿ ಪಕ್ಷದ ಜಿಲ್ಲಾಧ್ಯಕ್ಷರು, ಶಾಸಕರು, ಪ್ರಮುಖ ನಾಯಕರು, ಕಾರ್ಯಕರ್ತರು ಉಪಸ್ಥಿತರಿದ್ದರು.
-
B.S.Yediyurappa
@BSYBJP
ನಾಡಿನ ಸಮಸ್ತ ಜನತೆಗೆ ಭಗವಾನ್ ಮಹಾವೀರ ಜಯಂತಿಯ ಹಾರ್ದಿಕ ಶುಭಾಶಯಗಳು.
#mahavirjayanthi -
B.S.Yediyurappa
@BSYBJP
Congratulations Royal Challengers Bengaluru on an impressive victory over Sunrisers Hyderabad at M. Chinnaswamy Stadium—what a way to kick off IPL2026!
#ipl2026 #rcb #srh
@RCBTweets -
B.S.Yediyurappa
@BSYBJP
ನಾಡಿನ ಸಮಸ್ತ ಜನತೆಗೆ ಶ್ರೀ ರಾಮ ನವಮಿಯ ಹಾರ್ದಿಕ ಶುಭಾಶಯಗಳು! 🙏
#ramanavami -
B.S.Yediyurappa
@BSYBJP
ದಾವಣಗೆರೆ ದಕ್ಷಿಣ ಕ್ಷೇತ್ರದ ಉಪಚುನಾವಣೆ ಅಂಗವಾಗಿ ಇಂದು ನಮ್ಮ ಪಕ್ಷದ ಅನೇಕ ನಾಯಕರು, ಮುಖಂಡರು ಹಾಗೂ ಸಾವಿರಾರು ಕಾರ್ಯಕರ್ತರೊಂದಿಗೆ ಭವ್ಯ ರೋಡ್ ಶೋ ನಡೆಸಿ, ನಮ್ಮ ಅಭ್ಯರ್ಥಿ ಶ್ರೀ ಶ್ರೀನಿವಾಸ್ ಟಿ ದಾಸಕರಿಯಪ್ಪ ಅವರ ನಾಮಪತ್ರ ಸಲ್ಲಿಕೆ ಕಾರ್ಯಕ್ರಮದಲ್ಲಿ ಭಾಗವಹಿಸಲಾಯಿತು.
ಕ್ಷೇತ್ರದಾದ್ಯಂತ ಕಾಂಗ್ರೆಸ್ ವಿರುದ್ಧ ತೀವ್ರ ಜನಾಕ್ರೋಶ ವ್ಯಕ್ತವಾಗುತ್ತಿದ್ದು, ನಮ್ಮ ಪಕ್ಷದ ಪರ ಜನಬೆಂಬಲ ಸ್ಪಷ್ಟವಾಗಿ ಕಾಣುತ್ತಿದೆ. ಈ ಬಾರಿ ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ನಮ್ಮ ಪಕ್ಷದ ಗೆಲುವು ನಿಶ್ಚಿತ. -
B.S.Yediyurappa
@BSYBJP
A historic milestone in India’s journey.
Under the leadership of @narendramodi ji, the nation has witnessed years of stability, decisive governance, and transformative progress.
A journey that continues to inspire.
#pradhansevakmodi -
B.S.Yediyurappa
@BSYBJP
ನಾಡಿನ ಎಲ್ಲಾ ಮುಸ್ಲಿಂ ಬಾಂಧವರಿಗೆ ಪವಿತ್ರ ರಂಜಾನ್ ಹಬ್ಬದ ಶುಭಾಶಯಗಳು.
-
B.S.Yediyurappa
@BSYBJP
ಬಾಗಲಕೋಟೆ ಮತ್ತು ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗೆ ಅಭ್ಯರ್ಥಿಗಳಾಗಿ ಆಯ್ಕೆಯಾದ ಶ್ರೀ ವೀರಣ್ಣ ಚರಂತಿಮಠ ಮತ್ತು ಶ್ರೀ ಶ್ರೀನಿವಾಸ್ ಟಿ. ದಾಸಕರಿಯಪ್ಪ ಅವರಿಗೆ ಅಭಿನಂದನೆಗಳು.
-
B.S.Yediyurappa
@BSYBJP
Delighted to have met Smt Nirmala Sitharaman ji and Shri Ashwini Vaishnaw ji during my visit to New Delhi.
@nsitharaman @AshwiniVaishnaw -
B.S.Yediyurappa
@BSYBJP
At @BJP4India’s Central Election Committee meeting at the BJP Headquarters in New Delhi today for the 2026 Assembly elections in the presence of Hon’ble PM Shri @narendramodi ji, Shri @NitinNabin ji, Shri @AmitShah ji, Shri @rajnathsingh ji and other senior leaders.
-
B.S.Yediyurappa
@BSYBJP
ನಾಡಿನ ಸಮಸ್ತ ಜನತೆಗೆ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು.
Wishing everyone a happy and prosperous Ugadi. -
B.S.Yediyurappa
@BSYBJP
Visited the Pradhan Mantri Sangrahalaya in New Delhi. A truly inspiring experience showcasing the journey, vision, and contributions of India’s Prime Ministers through interactive and immersive exhibits. A must-visit to understand India’s democratic legacy.
#pmsangrahalaya
@PMSangrahalaya -
B.S.Yediyurappa
@BSYBJP
Had a wonderful time at the incredibly talented @rishabsmusic concert with my family. I laud him and his parents for championing music and mental health, and wish him more success!
-
B.S.Yediyurappa
@BSYBJP
Proud moment for the nation! 🇮🇳🏆
Team India become the first team to win the ICC T20 World Cup in consecutive editions, sealing the 2026 title with a brilliant victory over New Zealand. Heartiest congratulations to the entire team for this historic achievement.
#t20wc2026 -
B.S.Yediyurappa
@BSYBJP
ಸುತ್ತೂರು ಮಠದ ಪರಮಪೂಜ್ಯ ಶ್ರೀ ಶಿವರಾತ್ರಿ ದೇಶೀಕೇಂದ್ರ ಮಹಾಸ್ವಾಮಿಗಳು, ಸಿದ್ದಗಂಗಾ ಮಠದ ಪರಮಪೂಜ್ಯ ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳು, ಸೋಮಹಳ್ಳಿ ಶಿಲಾಮಠದ ಪರಮಪೂಜ್ಯ ಶ್ರೀ ಸಿದ್ದಮಲ್ಲಸ್ವಾಮಿಗಳು ಸೇರಿದಂತೆ ಹಲವಾರು ಪ್ರಮುಖ ಸಂತರ ಸಾನ್ನಿಧ್ಯದಲ್ಲಿ, ಚಾಮರಾಜನಗರ ಜಿಲ್ಲೆಯ ಸೋಮಹಳ್ಳಿಯಲ್ಲಿ ವೀರಸಿಂಹಾಸನ ಶಿಲಾಮಠದಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮ ಹಾಗು ಧರ್ಮಸಭೆಯಲ್ಲಿ ಪಾಲ್ಗೊಳ್ಳಲಾಯಿತು.
ನಂತರ ಮೈಸೂರಿನ ಮಾದಹಳ್ಳಿಯಲ್ಲಿರುವ ಶ್ರೀ ಉಕ್ಕಿನಕಂತೆ ಮಠದಲ್ಲಿ ನಡೆದ ಶ್ರೀ ಬೂದಿಸ್ವಾಮಿಗಳ ಆರಾಧನೆ ಮತ್ತು ಧಾರ್ಮಿಕ ಸಭೆಯಲ್ಲಿ, ಪರಮಪೂಜ್ಯ ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳು, ಶ್ರೀ ದೇಗುಲ ಮಠದ ಪರಮಪೂಜ್ಯ ಶ್ರೀ ಮುಮ್ಮಡಿ ನಿರ್ವಾಣ ಮಹಾಸ್ವಾಮಿಗಳು, ಶ್ರೀ ಆದಿಚುಂಚನಗಿರಿ ಶಾಖಾ ಮಠದ ಪರಮಪೂಜ್ಯ ಶ್ರೀ ಸೋಮನಾಥ ಸ್ವಾಮಿಗಳ ದಿವ್ಯ ಸಾನ್ನಿಧ್ಯದಲ್ಲಿ ಭಾಗವಹಿಸಲಾಯಿತು. -
B.S.Yediyurappa
@BSYBJP
ಮೈಸೂರು ಹಾಗೂ ಚಾಮರಾಜನಗರ ಜಿಲ್ಲಾ ಪ್ರವಾಸದ ಸಂದರ್ಭದಲ್ಲಿ, ನಾಡಿನ ಅಧಿದೇವತೆ ತಾಯಿ ಚಾಮುಂಡೇಶ್ವರಿಯ ಸನ್ನಿಧಿಗೆ ಇಂದು ಭೇಟಿ ನೀಡಿ, ವಿಶೇಷ ಪೂಜೆ, ಪ್ರಾರ್ಥನೆಗಳನ್ನು ಸಲ್ಲಿಸಲಾಯಿತು. ನಂತರ ಸುತ್ತೂರು ಮಠಕ್ಕೆ ಭೇಟಿ ನೀಡಿ ಪರಮಪೂಜ್ಯ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳ ಆಶೀರ್ವಾದ ಪಡೆಯಲಾಯಿತು.
-
B.S.Yediyurappa
@BSYBJP
ಸಮಸ್ತ ಭಕ್ತಜನರಿಗೆ ಶ್ರೀಮದ್ ಆದಿ ಜಗದ್ಗುರು ರೇಣುಕಾಚಾರ್ಯರ ಜಯಂತಿ ಮಹೋತ್ಸವದ ಭಕ್ತಿಪೂರ್ವಕ ಶುಭಾಶಯಗಳು.
-
B.S.Yediyurappa
@BSYBJP
ನನ್ನ ಜನ್ಮದಿನದಂದು ನಿಮ್ಮೆಲ್ಲರ ಅತ್ಯಂತ ಪ್ರೀತಿ, ಆತ್ಮೀಯತೆ ಮತ್ತು ಅಭಿಮಾನದ ಹಾರೈಕೆ ಮತ್ತು ಆಶೀರ್ವಾದಗಳು ನನ್ನನ್ನು ವಿನಮ್ರನಾಗಿಸಿದೆ. ನನ್ನ ಕರ್ಮಭೂಮಿ ಶಿಕಾರಿಪುರಕ್ಕೆ ಆಗಮಿಸಿ ಹರಸಿದ ಎಲ್ಲ ಸ್ವಾಮೀಜಿಗಳಿಗೂ, ಗಣ್ಯರಿಗೂ, ನಾಯಕರಿಗೂ, ಮುಖಂಡರಿಗೂ, ನನ್ನ ಪ್ರೀತಿಯ ಕಾರ್ಯಕರ್ತರಿಗೂ, ತಾಯಂದಿರೂ ಸೇರಿದಂತೆ ಶಿಕಾರಿಪುರದ ಸಮಸ್ತ ನಾಗರಿಕ ಬಂಧುಗಳಿಗೂ ನನ್ನ ಅಭಿಮಾನಪೂರ್ವಕ ಕೃತಜ್ಞತೆಗಳು. ಶುಭಹಾರೈಸಿದ ಪ್ರತಿಯೊಬ್ಬರಿಗೂ ನನ್ನ ಹೃತ್ಪೂರ್ವಕ ಧನ್ಯವಾದಗಳು.
ಹಾಗೆಯೇ, ರಾಜ್ಯಾದ್ಯಂತ ಹಲವಾರು ಸೇವಾ ಕಾರ್ಯಗಳ ಮೂಲಕ, ಆನ್ ಲೈನ್ ಮೂಲಕ ನನ್ನನ್ನು ಹಾರೈಸಿದ ಪ್ರತಿಯೊಬ್ಬರಿಗೂ ಕೃತಜ್ಞತಾಪೂರ್ವಕ ಧನ್ಯವಾದಗಳು. ಈ ಐದಾರು ದಶಕಗಳಲ್ಲಿ, ಪ್ರಾಮಾಣಿಕವಾಗಿ, ನನಗೆ ಸಾಧ್ಯವಾದ ರೀತಿಯಲ್ಲಿ ನನ್ನ ಸಾರ್ವಜನಿಕ ಜೀವನ, ರೈತ ಪರ ಹೋರಾಟ, ಜನ ಪರ ಸೇವೆ ಸಲ್ಲಿಸಿರುವುದನ್ನು ಮನ್ನಿಸಿ, ನಿಮ್ಮೆಲ್ಲರ ಪ್ರೀತಿ, ಅಭಿಮಾನಿಗಳನ್ನು ಕಂಡು ನನ್ನ ಹೃದಯ ತುಂಬಿ ಬಂದಿದೆ. ನಿಮ್ಮೆಲ್ಲರ ಪ್ರೀತಿ, ಅಭಿಮಾನಗಳೇ ನನಗೆ ಎಂದಿಗೂ ಶ್ರೀರಕ್ಷೆ. -
B.S.Yediyurappa
@BSYBJP
Humbled by the overwhelming blessings and wishes from all my friends, supporters, party workers, and people of Karnataka.
My life remains dedicated to the service of the people of my country. Your unwavering faith is the strength that keeps me moving forward and I thank you all for your continued support. -
B.S.Yediyurappa
@BSYBJP
ಶಿಕಾರಿಪುರ ತಾಲ್ಲೂಕಿನ ಮುಡ್ನಳ್ಳಿ ಗ್ರಾಮದ ಬೂತ್ ಸಂಖ್ಯೆ 138ರ ವ್ಯಾಪ್ತಿಯಲ್ಲಿರುವ ಶ್ರೀ ಶೇಖರಗೌಡ್ರು ಅವರ ನಿವಾಸದಲ್ಲಿ ರಾಜ್ಯಾಧ್ಯಕ್ಷರಾದ ಶ್ರೀ @BYVijayendra ಹಾಗೂ ಶಿವಮೊಗ್ಗ ಸಂಸದರಾದ ಶ್ರೀ @BYRBJP ಅವರೊಂದಿಗೆ ಸ್ಥಳೀಯರು, ಮುಖಂಡರು ಮತ್ತು ಕಾರ್ಯಕರ್ತರು ಸೇರಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ‘ಮನ್ ಕಿ ಬಾತ್’ ಕಾರ್ಯಕ್ರಮವನ್ನು ವೀಕ್ಷಿಸಲಾಯಿತು.
-
B.S.Yediyurappa
@BSYBJP
ರಾಷ್ಟ್ರಕವಿ ಕುವೆಂಪು ಅವರ ನೆಚ್ಚಿನ ಶಿಷ್ಯರಾಗಿ, ಕನ್ನಡ ಸಾರಸ್ವತ ಲೋಕವನ್ನು ಶ್ರೀಮಂತಗೊಳಿಸಿದ ರಾಷ್ಟ್ರಕವಿ ಡಾ. ಜಿ. ಎಸ್. ಶಿವರುದ್ರಪ್ಪನವರ ಜನ್ಮಶತಮಾನೋತ್ಸವದ ಅಂಗವಾಗಿ ಇಂದು ಶಿವಮೊಗ್ಗದ ಕರ್ನಾಟಕ ಸಂಘದಲ್ಲಿ ಆಯೋಜಿಸಲಾಗಿದ್ದ 'ಕಾವ್ಯ ಸೌರಭ' ಹಾಗೂ 'ಜಿ.ಎಸ್.ಎಸ್. ಪುರಸ್ಕಾರ' ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಾಯಿತು.
-
B.S.Yediyurappa
@BSYBJP
ಬೆಂಗಳೂರಿನಲ್ಲಿ ಇಂದು ನಡೆದ ರಾಜ್ಯ ಕಾರ್ಯಕಾರಿಣಿ ಸಭೆಯಲ್ಲಿ ನನ್ನ ರಾಜಕೀಯ ಜೀವನದ 50 ವರ್ಷಗಳ ಪಯಣವನ್ನು ಸ್ಮರಿಸಿ, ಪಕ್ಷದ ರಾಜ್ಯ ಘಟಕ ನೀಡಿದ ಆತ್ಮೀಯ ಸನ್ಮಾನವನ್ನು ಸ್ವೀಕರಿಸಲಾಯಿತು.
ಈ ಸುದೀರ್ಘ ಪಯಣದಲ್ಲಿ ನನ್ನ ಜೊತೆಗೆ ಪಯಣಿಸುವ, ಬೆಂಬಲವಾಗಿ ನಿಂತಿರುವ ಪಕ್ಷದ ಕಾರ್ಯಕರ್ತರು, ನಾಯಕರು ಹಾಗೂ ಅಪಾರ ಪ್ರೀತಿ ಮತ್ತು ಆಶೀರ್ವಾದ ನೀಡಿದ ರಾಜ್ಯದ ಜನತೆಗೆ ನಾನು ಸದಾ ಆಭಾರಿಯಾಗಿದ್ದೇನೆ.
ಜನಸೇವೆಯೇ ನನ್ನ ಧ್ಯೇಯವಾಗಿದ್ದು, ಮುಂದೆಯೂ ಇದೇ ನಿಷ್ಠೆಯಿಂದ ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ. ಜನತೆಯ ಆಶೀರ್ವಾದ ಮತ್ತು ಬೆಂಬಲವೇ ನನ್ನ ಶಕ್ತಿ, ನನಗೆ ಶ್ರೀರಕ್ಷೆ! -
B.S.Yediyurappa
@BSYBJP
ನಾಡಿನ ಸಮಸತ ಭಕ್ತ ಜನತೆಗೆ ಮಹಾಶಿವರಾತ್ರಿ ಹಬ್ಬದ ಹಾದಿ೯ಕ ಶುಭಾಶಯಗಳು.
-
B.S.Yediyurappa
@BSYBJP
ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಮತ್ತು ಭಾಲ್ಕಿಯ ಶಾಂತಿವರ್ಧಕ ಶಿಕ್ಷಣ ಸಂಸ್ಥೆ ಆಯೋಜಿಸಿದ್ದ, ಲಿಂಗೈಕ್ಯ ಶತಾಯುಷಿ ಲೋಕನಾಯಕ ಡಾ. ಭೀಮಣ್ಣ ಖಂಡ್ರೆ ನುಡಿನಮನ ಕಾರ್ಯಕ್ರಮದಲ್ಲಿ ಇಂದು ಪಾಲ್ಗೊಳ್ಳಲಾಯಿತು.
-
B.S.Yediyurappa
@BSYBJP
In respectful remembrance of the Pulwama martyrs. Their service, sacrifice and love for the motherland will never be forgotten. The nation stands united in gratitude and pride.
-
B.S.Yediyurappa
@BSYBJP
ಅಂತ್ಯೋದಯದ ಮೂಲಕ ಸಮಾಜದ ಅತೀ ಹಿಂದುಳಿದವರ ಕಲ್ಯಾಣವನ್ನು ಕನಸುಗಂಡ, ಏಕಾತ್ಮ ಮಾನವತಾವಾದದ ತತ್ತ್ವವನ್ನು ಪ್ರತಿಪಾದಿಸಿದ ಪಂಡಿತ್ ದೀನದಯಾಳ್ ಉಪಾಧ್ಯಾಯ ಅವರ ಪುಣ್ಯತಿಥಿಯಂದು ಗೌರವಪೂರ್ವಕ ನಮನಗಳು. ಅವರ ಆದರ್ಶಗಳು ಸದಾ ನಮಗೆ ದಾರಿದೀಪವಾಗಿರಲಿ.
#samarpandiwas #panditdeendayalupadhyaya -
B.S.Yediyurappa
@BSYBJP
ಮುಂಬರುವ GBA ವ್ಯಾಪ್ತಿಯ ಪಾಲಿಕೆಗಳ ಚುನಾವಣೆಯ ಹಿನ್ನೆಲೆಯಲ್ಲಿ, ಇಂದು ಬೆಂಗಳೂರಿನ ಪಕ್ಷದ ಕೇಂದ್ರ ಕಚೇರಿಯಲ್ಲಿ ವಿಶೇಷ ಸಭೆ ನಡೆಯಿತು. ಸಭೆಯಲ್ಲಿ GBA ಚುನಾವಣಾ ಉಸ್ತುವಾರಿಗಳಾದ ಶ್ರೀ @rammadhav_ , ಸಹ ಉಸ್ತುವಾರಿಗಳಾದ ಶ್ರೀ @DrSatishPoonia ಮತ್ತು ಶ್ರೀ @SanjayRupadhyay ಉಪಸ್ಥಿತರಿದ್ದರು.
-
B.S.Yediyurappa
@BSYBJP
Brilliant performance by Team India to bag the Under-19 World Cup final against England. The future of Indian cricket looks bright and is in safe hands. Special kudos to Vaibhav Sooryavanshi for his match-defining contribution.
#u19worldcup -
B.S.Yediyurappa
@BSYBJP
RCB ಮಹಿಳಾ ತಂಡಕ್ಕೆ ಅಭಿನಂದನೆಗಳು!.
ನಂಬಿಕೆಯಿಂದ ಗೆಲುವಿನವರೆಗೆ ಮತ್ತೊಮ್ಮೆ,
RCB ಮಹಿಳಾ ತಂಡವು WPL 2026 ಕಿರೀಟವನ್ನು ಎರಡನೇ ಬಾರಿ ಮುಡಿಗೇರಿಸಿಕೊಂಡಿದೆ.
Congratulations to the champions.
RCB Women lift the WPL trophy again in 2026.
A season to remember. A team to celebrate.
#rcbwomen #wpl2026 #rcbchampions #bengalurupride -
B.S.Yediyurappa
@BSYBJP
ಕೇಂದ್ರ ವಿತ್ತ ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್ ರವರು ಇಂದು ಮಂಡಿಸಿದ ಕೇಂದ್ರ ಬಜೆಟ್ 2026-27 ನೇರ ಪ್ರಸಾರವನ್ನು ಬೆಂಗಳೂರಿನ ಪಕ್ಷದ ಕೇಂದ್ರ ಕಚೇರಿಯಲ್ಲಿ, ವಿಪಕ್ಷ ನಾಯಕ ಶ್ರೀ ಆರ್.ಅಶೋಕ, ಪರಿಷತ್ ವಿರೋಧ ಪಕ್ಷ ನಾಯಕ ಶ್ರೀ ಛಲವಾದಿ ನಾರಾಯಣಸ್ವಾಮಿ ಸೇರಿದಂತೆ ಹಲವಾರು ನಾಯಕರು ಮತ್ತು ಕಾರ್ಯಕರ್ತರೊಂದಿಗೆ ವೀಕ್ಷಿಸಲಾಯಿತು. ನಂತರ ಮಾಧ್ಯಮ ಮಿತ್ರರೊಂದಿಗೆ ಬಜೆಟ್ ಕುರಿತಂತೆ ಮಾಹಿತಿ ಹಂಚಿಕೊಳ್ಳಲಾಯಿತು
-
B.S.Yediyurappa
@BSYBJP
ಶೃಂಗೇರಿ ಶ್ರೀ ಶಾರದಾ ಪೀಠದ ಪೀಠಾಧಿಪತಿಗಳಾದ ಪರಮಪೂಜ್ಯ ಜಗದ್ಗುರು ಶ್ರೀ ವಿಧುಶೇಖರ ಭಾರತೀ ಮಹಾಸ್ವಾಮಿಗಳನ್ನು ಇಂದು ಬೆಂಗಳೂರಿನ ಶಂಕರ ಮಠದಲ್ಲಿ ಭೇಟಿಯಾಗಿ ಆಶೀರ್ವಾದ ಪಡೆಯಲಾಯಿತು.
-
B.S.Yediyurappa
@BSYBJP
ವಿವಿಧ ಕ್ಷೇತ್ರಗಳಲ್ಲಿ ಅಸಾಧಾರಣ ಸಾಧನೆ ಮಾಡಿದ ನಾಡಿನ ಗಣ್ಯರನ್ನು ಗುರುತಿಸಿ, ಗೌರವಿಸುವ ಪ್ರತಿಷ್ಠಿತ ಟಿವಿ9 ಕನ್ನಡ ವಾಹಿನಿ ವತಿಯಿಂದ ನೀಡಲಾಗುವ 'ನವ ನಕ್ಷತ್ರ ಸನ್ಮಾನ' ಕಾರ್ಯಕ್ರಮದಲ್ಲಿ ಪಾಲ್ಗೊಂಡು, ಆದಿಚುಂಚನಗಿರಿ ಪೀಠಾಧ್ಯಕ್ಷರಾದ ಪರಮಪೂಜ್ಯ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಗಳ ದಿವ್ಯ ಸಾನ್ನಿಧ್ಯದಲ್ಲಿ, ವಾಹಿನಿಯವರು ಅತ್ಯಂತ ಆತ್ಮೀಯತೆ ಮತ್ತು ಅಭಿಮಾನದಿಂದ ನೀಡಿದ ಜೀವಮಾನ ಸಾಧನೆ ಪ್ರಶಸ್ತಿ ಗೌರವವನ್ನು ಸ್ವೀಕರಿಸಲಾಯಿತು.
@tv9kannada -
B.S.Yediyurappa
@BSYBJP
ಮುದ್ದಿನ ಹಸು, ಕರುಗಳೊಂದಿಗೆ ಸ್ವಲ್ಪ ಹೊತ್ತು ಕಳೆಯುವುದು, ನನ್ನ ದಿನಚರಿಯಲ್ಲಿ ಅತ್ಯಂತ ಸಂತಸ, ಸಮಾಧಾನ ನೀಡುವ ಕ್ಷಣಗಳು. ಶಿಕಾರಿಪುರದಲ್ಲಿದ್ದಾಗ ಮುದ್ದಿನ ಕರುಗಳಾದ ರುಕ್ಮಿಣಿ ಮತ್ತು ಗೋಪಾಲರೊಂದಿಗೆ ಕಳೆಯುವ ಕೆಲ ಸಮಯ ದಿನವಿಡೀ ಚೈತನ್ಯ ನೀಡುತ್ತದೆ.
-
B.S.Yediyurappa
@BSYBJP
Shocked and deeply saddened by the tragic death of Maharashtra Deputy Chief Minister Ajit Pawar ji in a plane crash. My heartfelt sympathies to his family, supporters and the people of the state.
Om Shanti. -
B.S.Yediyurappa
@BSYBJP
ಗಣರಾಜ್ಯೋತ್ಸವದ ಸಂದರ್ಭದಲ್ಲಿ ‘ರಾಷ್ಟ್ರಪತಿ ಪದಕ’ ಪುರಸ್ಕಾರಕ್ಕೆ ಭಾಜನರಾಗಿರುವ ನಮ್ಮ ರಾಜ್ಯದ ಪೊಲೀಸ್ ಇಲಾಖೆಯ 22 ಪೊಲೀಸ್ ಅಧಿಕಾರಿಗಳಿಗೆ ಹೃದಯಪೂರ್ವಕ ಅಭಿನಂದನೆಗಳು.
-
B.S.Yediyurappa reposted
BJP Karnataka
@BJP4Karnataka
ವೀರ ರಾಣಿ ಕಿತ್ತೂರು ಚೆನ್ನಮ್ಮನ ನಿಷ್ಠ ಬಂಟನಾಗಿ, ಬ್ರಿಟಿಷರ ವಿರುದ್ಧ ಕೆಚ್ಚೆದೆಯಿಂದ ಹೋರಾಡಿದ ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅವರ ಬಲಿದಾನ ದಿನದಂದು ಶತ ಶತ ನಮನಗಳು.
#sangollirayanna -
B.S.Yediyurappa
@BSYBJP
Congratulations to all the Padma Awardees from Karnataka for 2026, in recognition of their outstanding contributions to our nation.
#padmaawards2026
B.S.Yediyurappa
@BSYBJP
-
B.S.Yediyurappa
@BSYBJP
ನಾಡಿನ ಸಮಸ್ತ ಜನತೆಗೆ 77ನೇ ಗಣರಾಜ್ಯೋತ್ಸವದ ಶುಭಾಶಯಗಳು.
-
B.S.Yediyurappa reposted
Narendra Modi
@narendramodi
Congratulations to all the Padma Awardees for their outstanding contributions to our nation. Their excellence, dedication and service across diverse fields enrich the fabric of our society. The honour reflects the spirit of commitment and excellence that continues to inspire generations.
Padma Awards
@PadmaAwards
Kindly Visit: www.padmaawards.gov.in/Document/pdf/notifications/PadmaAw…
#peoplespadma
#padmaawards2026 -
B.S.Yediyurappa
@BSYBJP
ಪರಮಪೂಜ್ಯ ಶ್ರೀ ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳು ಹಾಗೂ ಪುತ್ತಿಗೆ ಮಠದ ಪರಮಪೂಜ್ಯ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮಿಗಳ ದಿವ್ಯಸಾನ್ನಿಧ್ಯದಲ್ಲಿ ಉಕ್ಕಿನ ನಗರಿ ಭದ್ರಾವತಿಯಲ್ಲಿ ನಡೆದ ಸಿರಿಗೆರೆ ಶ್ರೀ ತರಳಬಾಳು ಜಗದ್ಗುರು ಬೃಹನ್ಮಠದ ವತಿಯಿಂದ ಆಯೋಜಿಸಲಾಗಿದ್ದ ತರಳಬಾಳು ಹುಣ್ಣಿಮೆ ಮಹೋತ್ಸವದಲ್ಲಿ ಪಾಲ್ಗೊಳ್ಳಲಾಯಿತು.
-
B.S.Yediyurappa reposted
BJP Karnataka
@BJP4Karnataka
ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರ ಮನ್ ಕೀ ಬಾತ್ ಕಾರ್ಯಕ್ರಮವು 25 ಜನವರಿ 2026 ರಂದು ಬೆಳಿಗ್ಗೆ 11 ಗಂಟೆಗೆ ಪ್ರಸಾರವಾಗಲಿದೆ.
#mannkibaat -
B.S.Yediyurappa
@BSYBJP
ಇಂದು ನನ್ನ ನಿವಾಸಕ್ಕೆ ಆಗಮಿಸಿದ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಯ ನೂತನ ರಾಷ್ಟ್ರೀಯ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದ ಶ್ರೀ ಈಶ್ವರ ಖಂಡ್ರೆ ಅವರನ್ನು ಹೃತ್ಪೂರ್ವಕವಾಗಿ ಅಭಿನಂದಿಸಿ, ಗೌರವಿಸಲಾಯಿತು.
@eshwar_khandre -
B.S.Yediyurappa
@BSYBJP
ತ್ರಿವಿಧ ದಾಸೋಹದ ಆದರ್ಶದಿಂದ ಅನೇಕ ಬದುಕುಗಳನ್ನು ಬೆಳಗಿದ, ಭಕ್ತರ ಪಾಲಿನ ನಡೆದಾಡುವ ದೇವರಾಗಿದ್ದ ಸಿದ್ದಗಂಗಾ ಶ್ರೀಮಠದ ಪರಮಪೂಜ್ಯ ಶ್ರೀ ಶ್ರೀ ಡಾ. ಶಿವಕುಮಾರ ಮಹಾಸ್ವಾಮೀಜಿಗಳ ಪುಣ್ಯಸ್ಮರಣೆಯಂದು ಭಕ್ತಿಪೂರ್ವಕ ಅನಂತ ಪ್ರಣಾಮಗಳು.🙏
-
B.S.Yediyurappa
@BSYBJP
ಪಕ್ಷದ ನೂತನ ರಾಷ್ಟ್ರೀಯ ಅಧ್ಯಕ್ಷರಾಗಿ ಜವಾಬ್ದಾರಿ ವಹಿಸಿಕೊಂಡಿರುವ ಶ್ರೀ ನಿತಿನ್ ನಬಿನ್ ಅವರನ್ನು ನವದೆಹಲಿಯ ಪಕ್ಷದ ಕೇಂದ್ರ ಕಚೇರಿಯಲ್ಲಿ ಹೃತ್ಪೂರ್ವಕವಾಗಿ ಅಭಿನಂದಿಸಲಾಯಿತು.
Met with and congratulated Shri Nitin Nabin Ji on assuming charge as the National President of the BJP at the party headquarters in New Delhi today.
@NitinNabin @BJP4India -
B.S.Yediyurappa reposted
BJP
@BJP4India
लाइव देखें: भारतीय जनता पार्टी संगठन पर्व। x.com/i/broadcasts/1ynKOMZzqWWJR
-
B.S.Yediyurappa
@BSYBJP
Shri Nitin Nabin ji was recommended for the post of BJP National President by Karnataka’s State President, Core Committee Members, and senior leaders of the BJP in New Delhi today
@BJP4India @BJP4Karnataka -
B.S.Yediyurappa
@BSYBJP
ಹಿರಿಯ ರಾಜಕಾರಣಿಗಳು, ಮಾಜಿ ಸಚಿವ ಶ್ರೀ ಭೀಮಣ್ಣ ಖಂಡ್ರೆ ಅವರ ನಿಧನದ ವಿಷಯ ತಿಳಿದು ಅತ್ಯಂತ ದುಃಖವಾಗಿದೆ. ಸ್ವಾತಂತ್ರ್ಯ ಹೋರಾಟ, ಕರ್ನಾಟಕ ಏಕೀಕರಣಗಳಲ್ಲಿ ಸಕ್ರಿಯರಾಗಿದ್ದ ಅವರು ಶಾಸಕರಾಗಿ, ಸಚಿವರಾಗಿ ತಮ್ಮ ಸುದೀರ್ಘ ಸಾರ್ವಜನಿಕ ಜೀವನದಲ್ಲಿ ಸಹಕಾರ ಕ್ಷೇತ್ರ, ಶೈಕ್ಷಣಿಕ ಕ್ಷೇತ್ರಗಳಲ್ಲಿ ಗಮನಾರ್ಹ ಸಾಧನೆ ಮಾಡಿದ್ದರು. ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಅಧ್ಯಕ್ಷರಾಗಿ ಕೂಡ ಉತ್ತಮ ಸೇವೆ ಸಲ್ಲಿಸಿದ್ದರು.
ವೈಯಕ್ತಿಕವಾಗಿ ಕೂಡ ಅವರೊಂದಿಗೆ ಅತ್ಯಂತ ಗೌರವದ ಒಡನಾಟ ಹೊಂದಿದ್ದು, ಅಭಿವೃದ್ಧಿ ಕಾರ್ಯಗಳು, ಸಮಾಜದ ಹಿತರಕ್ಷಣೆ ಇತ್ಯಾದಿ ಹಲವಾರು ವಿಷಯಗಳ ಕುರಿತು ಅವರೊಂದಿಗೆ ನಡೆಸಿದ್ದ ಚರ್ಚೆ, ಸಮಾಲೋಚನೆಗಳನ್ನು ನಾನೆಂದಿಗೂ ಮರೆಯುವುದು ಸಾಧ್ಯವಿಲ್ಲ. ಅವರ ನಿಧನದಿಂದ ರಾಜ್ಯ ರಾಜಕಾರಣದ ಒಂದು ಸುದೀರ್ಘ ಮತ್ತು ಸಜ್ಜನಿಕೆಯ ಅಧ್ಯಾಯ ಅಂತ್ಯಗೊಂಡಿದೆ. ಅವರ ಆತ್ಮಕ್ಕೆ ಚಿರಶಾಂತಿಯನ್ನು ಕೋರುತ್ತಾ, ಈ ದುಃಖವನ್ನು ಭರಿಸುವ ಶಕ್ತಿಯನ್ನು ಕುಟುಂಬದವರಿಗೆ ಮತ್ತು ಅಭಿಮಾನಿಗಳಿಗೆ ದೇವರು ನೀಡಲಿ ಎಂದು ಪ್ರಾರ್ಥಿಸುತ್ತೇನೆ. ಓಂ ಶಾಂತಿ -
B.S.Yediyurappa
@BSYBJP
The resounding mandate for the @BJP4Maharashtra-led #mahayuti alliance in Maharashtra’s civic body elections reflects the people’s unwavering faith in the politics of development. Heartiest congratulations to our dedicated karyakartas for this historic verdict.
Under the visionary leadership of Hon’ble PM Shri @narendramodi Ji and the able guidance of CM Shri @Dev_Fadnavis Ji, Maharashtra has once again chosen progress. -
B.S.Yediyurappa
@BSYBJP
ಎಲ್ಲರಿಗೂ ಮಕರ ಸಂಕ್ರಾಂತಿ ಹಬ್ಬದ ಸಂಭ್ರಮದ ಶುಭಾಶಯಗಳು.
-
B.S.Yediyurappa reposted
Vijayendra Yediyurappa
@BYVijayendra
ಪಕ್ಷದ ಜಿಲ್ಲಾವಾರು ಪದಾಧಿಕಾರಿಗಳ ಸಭೆಗಳನ್ನು ಇಂದೂ ಕೂಡ ನಡೆಸಲಾಗುತ್ತಿದ್ದು, ರಾಯಚೂರು, ಮಂಗಳೂರು, ಉಡುಪಿ, ಕೊಡಗು ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ ಪದಾಧಿಕಾರಿಗಳೊಂದಿಗೆ ಸಭೆ ನಡೆಸಿ ಹಲವರು ವಿಷಯಗಳ ಕುರಿತಂತೆ ಚರ್ಚಿಸಲಾಯಿತು. ಸಂಘಟನೆಯ ಬಲವರ್ಧನೆ ಮತ್ತು ಮುಂಬರುವ ಚುನಾವಣಾ ಸವಾಲುಗಳ ಕುರಿತಂತೆ ವಿಸ್ತೃತ ಸಮಾಲೋಚನೆಗಳನ್ನು ನಡೆಸಲಾಯಿತು. ಸಂಘಟಿತ ಶಕ್ತಿಯೇ ವಿಜಯಕ್ಕೆ ಮುನ್ನುಡಿ.
#bjp4karnataka -
B.S.Yediyurappa
@BSYBJP
ವಿಶ್ವಗುರು ಸ್ವಾಮಿ ವಿವೇಕಾನಂದರ ಜಯಂತಿಯಂದು ಅವರ ಚಿಂತನೆಗಳನ್ನು ಸ್ಮರಿಸಿ, ಯುವ ಭಾರತವನ್ನು ಇನ್ನಷ್ಟು ಬಲಿಷ್ಠಗೊಳಿಸುವ ಸಂಕಲ್ಪ ಮಾಡೋಣ. ಎಲ್ಲರಿಗೂ ರಾಷ್ಟ್ರೀಯ ಯುವ ದಿನದ ಹಾರ್ದಿಕ ಶುಭಾಶಯಗಳು.
#nationalyouthday #swamivivekananda -
B.S.Yediyurappa
@BSYBJP
ರಾಜ್ಯದಲ್ಲಿ ಸಂಘಟನಾ ಶಕ್ತಿಯನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ನಡೆಯುತ್ತಿರುವ ಜಿಲ್ಲಾವಾರು ವಿಶೇಷ ಸಭೆಗಳ ಅಂಗವಾಗಿ ಇಂದು ಚಿತ್ರದುರ್ಗ, ಬಳ್ಳಾರಿ ಮತ್ತು ಶಿವಮೊಗ್ಗ ಜಿಲ್ಲೆಗಳ ಸಭೆಗಳಲ್ಲಿ ಭಾಗವಹಿಸಲಾಯಿತು.
-
B.S.Yediyurappa
@BSYBJP
ರಾಜ್ಯದಲ್ಲಿ ಸಂಘಟನಾ ಶಕ್ತಿಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ನಡೆಯುತ್ತಿರುವ ಜಿಲ್ಲಾವಾರು ವಿಶೇಷ ಸಭೆಗಳ ಭಾಗವಾಗಿ ಇಂದು ಕೊಪ್ಪಳ, ವಿಜಯಪುರ, ಹಾಸನ ಮತ್ತು ರಾಮನಗರ ಜಿಲ್ಲೆಗಳ ಸಭೆಗಳಲ್ಲಿ ಪಾಲ್ಗೊಳ್ಳಲಾಯಿತು.
-
B.S.Yediyurappa
@BSYBJP
ರಾಜ್ಯದಲ್ಲಿ ಸಂಘಟನೆ ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ನಡೆಯುತ್ತಿರುವ ಜಿಲ್ಲಾವಾರು ವಿಶೇಷ ಸಭೆಗಳಲ್ಲಿ ಇಂದು ಪಾಲ್ಗೊಳ್ಳಲಾಯಿತು.
-
B.S.Yediyurappa
@BSYBJP
ಬಾಳೆಹೊನ್ನೂರು ರಂಭಾಪುರಿ ಪೀಠದ ವೀರಸಿಂಹಾಸನಾಧೀಶ್ವರರಾದ ಪರಮಪೂಜ್ಯ ಶ್ರೀ ಪ್ರಸನ್ನರೇಣುಕ ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರವರ ಜನ್ಮದಿನದ ಪಾವನ ಸಂದರ್ಭದಲ್ಲಿ ಅವರಿಗೆ ಭಕ್ತಿಪೂರ್ವಕ ಪ್ರಣಾಮಗಳು. ಅವರ ದಿವ್ಯ ಆಶೀರ್ವಾದ ಸದಾ ನಮ್ಮ ಮೇಲೆ ಇರಲಿ.
-
B.S.Yediyurappa
@BSYBJP
ಇಂದು ಬೆಂಗಳೂರಿನಲ್ಲಿ ನಡೆದ ಪಕ್ಷದ ಕೋರ್ ಕಮಿಟಿ ಸಭೆಯಲ್ಲಿ ಪ್ರಸಕ್ತ ರಾಜಕೀಯ ಬೆಳವಣಿಗೆಗಳು ಹಾಗೂ ಮುಂಬರುವ ಸ್ಥಳೀಯ ಸಂಸ್ಥೆ ಚುನಾವಣೆಗಳಿಗೆ ಸಂಬಂಧಿಸಿದಂತೆ ಪಕ್ಷ ಸಂಘಟನೆಯನ್ನು ತಳಮಟ್ಟದಿಂದ ಬಲಪಡಿಸುವ ಕುರಿತು ಚರ್ಚಿಸಲಾಯಿತು.
-
B.S.Yediyurappa
@BSYBJP
Warm birthday wishes to former Union minister and former party president Shri Murli Manohar Joshi Ji. Wishing you the best.
@drmmjoshibjp -
B.S.Yediyurappa
@BSYBJP
ಹಂಪಿ ಹೇಮಕೂಟ ಮಹಾಸಂಸ್ಥಾನದ ಪರಮಪೂಜ್ಯ ಶ್ರೀ ದಯಾನಂದ ಪುರಿ ಮಹಾಸ್ವಾಮೀಜಿ ಮತ್ತು ನಿತ್ಯಾನಂದ ಯೋಗಾಶ್ರಮದ ಪರಮಪೂಜ್ಯ ಶ್ರೀ ಯೋಗಾನಂದ ಸರಸ್ವತಿ ಸಾಮೀಜಿಗಳ ದಿವ್ಯ ಸಾನ್ನಿಧ್ಯದಲ್ಲಿ ಬೆಂಗಳೂರಿನ ದೇವಾಂಗ ಸಂಘ ಆಯೋಜಿಸಿದ್ದ ದೇವಾಂಗ ಸಂಘದ ಶತಮಾನೋತ್ಸವ ಸಮಾರೋಪ ಸಮಾರಂಭದಲ್ಲಿ ಇಂದು ಪಾಲ್ಗೊಳ್ಳಲಾಯಿತು.
-
B.S.Yediyurappa
@BSYBJP
ವಿಜಯಪುರದ ಜ್ಞಾನಯೋಗಾಶ್ರಮದ ಪರಮಪೂಜ್ಯ ಜ್ಞಾನಯೋಗಿ ಸಿದ್ದೇಶ್ವರ ಶ್ರೀ ಅವರು ನಾಡಿಗೆ ನೀಡಿದ ಜ್ಞಾನ ಪರಂಪರೆಯನ್ನು ಸ್ಮರಿಸುತ್ತಾ, ಅವರ ಪುಣ್ಯಸ್ಮರಣೆಯಂದು ಭಕ್ತಿಪೂರ್ವಕ ನಮನಗಳು.
-
B.S.Yediyurappa
@BSYBJP
ನಿಟ್ಟೆ ಸಮೂಹ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕ, ಶಿಕ್ಷಣ ತಜ್ಞ ಶ್ರೀ ಎನ್. ವಿನಯ್ ಹೆಗ್ಡೆ ಅವರ ನಿಧನದ ಸುದ್ದಿ ತಿಳಿದು ಅತೀವ ದುಃಖ ತಂದಿದೆ. ದೇವರು ಅವರ ಆತ್ಮಕ್ಕೆ ಸದ್ಗತಿ ನೀಡಲಿ. ಕುಟುಂಬದವರಿಗೆ ದುಃಖ ಭರಿಸುವ ಶಕ್ತಿ ನೀಡಲಿ. ಓಂ ಶಾಂತಿ 🙏🏼
-
B.S.Yediyurappa
@BSYBJP
ನಾಡಿನ ಸಮಸ್ತ ಜನತೆಗೆ 2026ರ ಹೊಸ ವರ್ಷದ ಹಾರ್ದಿಕ ಶುಭಾಶಯಗಳು.
-
B.S.Yediyurappa
@BSYBJP
ಪರಮ ಪವಿತ್ರ ವೈಕುಂಠ ಏಕಾದಶಿ ದಿನವಾದ ಇಂದು ನಗರದ ವಿವಿಧ ದೇಗುಲಗಳಿಗೆ ತೆರಳಿ, ದೇವರ ದರ್ಶನ ಪಡೆದು ವಿಶೇಷ ಪೂಜೆ, ಪ್ರಾರ್ಥನೆಗಳನ್ನು ಸಲ್ಲಿಸಲಾಯಿತು.
#vaikunthaekadashi -
B.S.Yediyurappa
@BSYBJP
ನಾಡಿನ ಸಮಸ್ತ ಜನತೆಗೆ ವೈಕುಂಠ ಏಕಾದಶಿಯ ಹಾರ್ದಿಕ ಶುಭಾಶಯಗಳು. 🙏
-
B.S.Yediyurappa
@BSYBJP
ಕನ್ನಡದ ಮೊದಲ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ, ಕರ್ನಾಟಕ ರತ್ನ ರಾಷ್ಟ್ರಕವಿ ಕುವೆಂಪು ಅವರ ಜನ್ಮದಿನದಂದು ಗೌರವಪೂರ್ಣ ನಮನಗಳು.
ಸಾಹಿತ್ಯದ ಮೂಲಕ ಮಾನವೀಯ ಮೌಲ್ಯಗಳನ್ನು ಬಿತ್ತಿದ ಅವರು, ಕನ್ನಡಿಗರ ಚಿಂತನೆ ಮತ್ತು ಸಂಸ್ಕೃತಿಗೆ ದಿಕ್ಕು ನೀಡಿದ ಶಾಶ್ವತ ಪ್ರೇರಣೆ. -
B.S.Yediyurappa
@BSYBJP
ಭಾರತೀಯ ಜನತಾ ಪಕ್ಷದ ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ಹಿರಿಯ ನಾಯಕರು ಹಾಗೂ ಬಿಬಿಎಂಪಿ ಮಾಜಿ ಸದಸ್ಯರಾದ ಶ್ರೀ ಗಂಗಬೈರಯ್ಯ ಅವರ ನಿಧನದ ಸುದ್ದಿ ತಿಳಿದು ತೀವ್ರ ದುಃಖವಾಗಿದೆ. ಭಗವಂತನು ಅವರ ಆತ್ಮಕ್ಕೆ ಸದ್ಗತಿ ನೀಡಲಿ. ಅವರ ಕುಟುಂಬ ಸದಸ್ಯರಿಗೆ ಹಾಗೂ ಅಪಾರ ಅಭಿಮಾನಿಗಳಿಗೆ ಈ ದುಃಖವನ್ನು ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ. ಓಂ ಶಾಂತಿ. 🙏
-
B.S.Yediyurappa reposted
Narendra Modi
@narendramodi
Do listen to this month’s #mannkibaat.
x.com/i/broadcasts/1rmxPvXzRDQGN -
B.S.Yediyurappa reposted
BJP Karnataka
@BJP4Karnataka
ಪ್ರಧಾನಿ ಶ್ರೀ @narendramodi ಅವರ ಮನ್ ಕೀ ಬಾತ್ ಕಾರ್ಯಕ್ರಮವು 28 ಡಿಸೆಂಬರ್ 2025 ರಂದು ಬೆಳಿಗ್ಗೆ 11 ಗಂಟೆಗೆ ಪ್ರಸಾರವಾಗಲಿದೆ.
#mannkibaat -
B.S.Yediyurappa
@BSYBJP
ಇಂದು ಶಿಕಾರಿಪುರದಲ್ಲಿ ಶ್ರೀ ಶಂಖೇಶ್ವರ ಪಾರ್ಶ್ವನಾಥ ಜೈನ ಟ್ರಸ್ಟ್ನ ಆಚಾರ್ಯ ಶ್ರೀ ವಿಜಯ ಪ್ರಭಾಕರ್ ಸುರೀಶ್ವರಜಿ ಮಹಾರಾಜ ಪೂಜ್ಯರ ಪಾವನ ಆಶೀರ್ವಾದವನ್ನು ಪಡೆದುಕೊಳ್ಳಲಾಯಿತು.
-
B.S.Yediyurappa
@BSYBJP
ಇಂದು ದಾವಣಗೆರೆ ನಗರದಲ್ಲಿ ಅಖಿಲ ಭಾರತ ವೀರಶೈವ-ಲಿಂಗಾಯತ ಮಹಾಸಭೆಯ ರಾಷ್ಟ್ರೀಯ ಅಧ್ಯಕ್ಷರು, ಮಾಜಿ ಸಚಿವರು ಹಾಗೂ ಶಾಸಕರಾದ ಲಿಂ. ಡಾ. ಶಾಮನೂರು ಶಿವಶಂಕರಪ್ಪ ಅವರ ಸ್ಮರಣಾರ್ಥ ಆಯೋಜಿಸಲಾದ “ಶಿವಗಣಾರಾಧನೆ ಮತ್ತು ನುಡಿನಮನ” ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಾಯಿತು.
-
B.S.Yediyurappa
@BSYBJP
“ದೈವಜ್ಞ ದರ್ಶನ” ಕಾರ್ಯಕ್ರಮದಲ್ಲಿ ಪರಮ ಪೂಜ್ಯ ಶ್ರೀ ಶ್ರೀ ಸಚ್ಚಿದಾನಂದ ಜ್ಞಾನೇಶ್ವರ ಭಾರತಿ ಮಹಾಸ್ವಾಮೀಜಿಗಳು ಹಾಗೂ ಶ್ರೀ ಶ್ರೀ ಸುಜ್ಞಾನೇಶ್ವರ ಭಾರತಿ ಸ್ವಾಮೀಜಿಗಳ ದಿವ್ಯ ಸಾನಿಧ್ಯದಲ್ಲಿ ಭಾಗವಹಿಸಿ ಆಶೀರ್ವಾದ ಸ್ವೀಕರಿಸಲಾಯಿತು.
-
B.S.Yediyurappa
@BSYBJP
ಯುಗಪುರುಷ, ಮಾಜಿ ಪ್ರಧಾನಮಂತ್ರಿ, ಭಾರತರತ್ನ ದಿ. ಅಟಲ್ ಬಿಹಾರಿ ವಾಜಪೇಯಿಯವರ 101ನೇ ಜನ್ಮದಿನಾಚರಣೆ ಅಂಗವಾಗಿ ಶಿಕಾರಿಪುರದಲ್ಲಿ ನಡೆದ ಪಕ್ಷದ ಕಾರ್ಯಕ್ರಮದಲ್ಲಿ ಇಂದು ಪಾಲ್ಗೊಳ್ಳಲಾಯಿತು.
-
B.S.Yediyurappa
@BSYBJP
ಅಜಾತಶತ್ರು ಎಂದು ಗುರುತಿಸಿಕೊಂಡ ಧೀಮಂತ ನೇತಾರ, ದೇಶದ ಆಡಳಿತಕ್ಕೆ ಹೊಸ ದಿಕ್ಕು ನೀಡಿದ ಹಾಗೂ ಭಾರತದ ಅಭಿವೃದ್ಧಿ ರಥವನ್ನು ಮುನ್ನಡೆಸಿದ ಭಾರತರತ್ನ ದಿ. ಶ್ರೀ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮದಿನದಂದು ಪೂಜ್ಯ ಅಟಲ್ ಜೀ ಅವರಿಗೆ ನನ್ನ ಹೃದಯಸ್ಪರ್ಶಿ ನುಡಿ ನಮನಗಳು.
-
B.S.Yediyurappa
@BSYBJP
ಚಿತ್ರದುರ್ಗದ ಬಳಿ ನಡೆದ ಬಸ್ ಅಗ್ನಿ ದುರಂತದ ಸುದ್ದಿ ಮನಸ್ಸಿಗೆ ತೀವ್ರ ಆಘಾತ ನೀಡಿದೆ. ಮೃತ ಆತ್ಮಗಳಿಗೆ ಶಾಂತಿ ಸಿಗಲಿ, ಗಾಯಗೊಂಡವರು ಬೇಗ ಚೇತರಿಸಿಕೊಳ್ಳಲಿ ಎಂದು ಹಾರೈಸುತ್ತೇನೆ. ಅಗಲಿದವರ ಕುಟುಂಬಗಳಿಗೆ ನನ್ನ ಸಂತಾಪಗಳು.🙏
-
B.S.Yediyurappa
@BSYBJP
ನಾಡಿನ ಎಲ್ಲ ನಮ್ಮ ಕ್ರೈಸ್ತ ಬಂಧುಗಳಿಗೆ ಕ್ರಿಸ್ಮಸ್ ಹಬ್ಬದ ಶುಭಾಶಯಗಳು. ಈ ಕ್ರಿಸ್ಮಸ್ ಹಬ್ಬವು ಎಲ್ಲರಿಗೂ ಮಂಗಳವನ್ನು ಉಂಟುಮಾಡಲಿ ಎಂದು ಆಶಿಸುತ್ತೇನೆ.
-
B.S.Yediyurappa
@BSYBJP
ದೇಶ ಕಂಡ ಆದರ್ಶ ನೇತಾರ, ಮುತ್ಸದ್ಧಿ ಸಂಸದೀಯಪಟು, ಅಜಾತಶತೃ, ನನ್ನ ಹೆಮ್ಮೆಯ ಮಾರ್ಗದರ್ಶಕರೂ ಆಗಿದ್ದ ಮಾಜಿ ಪ್ರಧಾನಿ ಭಾರತರತ್ನ ದಿವಂಗತ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮದಿನದಂದು ಅವರಿಗೆ ಅನಂತ ಪ್ರಣಾಮಗಳು.
#goodgovernanceday -
B.S.Yediyurappa
@BSYBJP
ಮಾಜಿ ಪ್ರಧಾನಮಂತ್ರಿ ದಿವಂಗತ ಶ್ರೀ ಚೌಧರಿ ಚರಣ್ ಸಿಂಗ್ ಅವರ ಜನ್ಮದಿನದ ಹಿನ್ನೆಲೆಯಲ್ಲಿ, ದೇಶದ ಎಲ್ಲ ಅನ್ನದಾತ ರೈತರಿಗೆ ರಾಷ್ಟ್ರೀಯ ರೈತರ ದಿನದ ಶುಭಾಶಯಗಳು.
#kisandiwas #nationalfarmersday -
B.S.Yediyurappa reposted
BJP Karnataka
@BJP4Karnataka
ಆರ್ಎಸ್ಎಸ್ ಸಿದ್ಧಾಂತದ ವ್ಯಕ್ತಿಗಳನ್ನು ಪ್ರಮುಖ ಹುದ್ದೆಗಳಿಗೆ ನೇಮಿಸಲಾಗುತ್ತಿದೆ ಎಂದು ಆರೋಪಿಸುತ್ತಿರುವ ರಾಹುಲ್ ಗಾಂಧಿ ಅವರೇ, ಆರ್ಎಸ್ಎಸ್ ಸಿದ್ಧಾಂತದ ವ್ಯಕ್ತಿಗಳು ಸಂವಿಧಾನಾತ್ಮಕ ಹುದ್ದೆಗಳನ್ನು ಹೊಂದುವುದನ್ನು ನಿಷೇಧಿಸುವ ಕಾನೂನು ದೇಶದಲ್ಲಿದೆಯೇ? ಪ್ರಧಾನಿ ಆರ್ಎಸ್ಎಸ್ ಸಿದ್ಧಾಂತದವರು ಅಂತೆಯೇ ಗೃಹಸಚಿವರು ಕೂಡಾ. ಅವರು ಜನಬೆಂಬಲದಿಂದ ಬಂದಿದ್ದಾರೆಯೇ ಹೊರತು ನಿಮ್ಮ ಕೃಪೆಯಿಂದಲ್ಲ.
- ಶ್ರೀ @AmitShah , ಕೇಂದ್ರ ಗೃಹ ಹಾಗೂ ಸಹಕಾರ ಸಚಿವರು
#indiasupportssir -
B.S.Yediyurappa
@BSYBJP
ಇಂದು ಶಿಕಾರಿಪುರದಲ್ಲಿ ನಡೆದ ಶ್ರೀ ವೀರಭದ್ರೇಶ್ವರ ಸ್ವಾಮಿ ರಥೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಾಯಿತು.
-
B.S.Yediyurappa
@BSYBJP
ಬೆಳಗಾವಿ ಲೋಕಸಭಾ ಕ್ಷೇತ್ರದ ಸಂಸದರು ಹಾಗೂ ಮಾಜಿ ಮುಖ್ಯಮಂತ್ರಿಗಳಾದ ಶ್ರೀ ಜಗದೀಶ್ ಶೆಟ್ಟರ್ ಅವರಿಗೆ ಜನ್ಮದಿನದ ಶುಭಾಶಯಗಳು.
@JagadishShettar -
B.S.Yediyurappa
@BSYBJP
ಕೇಂದ್ರ ಉಕ್ಕು ಮತ್ತು ಬೃಹತ್ ಕೈಗಾರಿಕಾ ಸಚಿವರು, ಮಾಜಿ ಮುಖ್ಯಮಂತ್ರಿಗಳು ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷರಾದ ಶ್ರೀ @hd_kumaraswamy ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು.
-
B.S.Yediyurappa
@BSYBJP
Vijay Diwas is a moment to reflect on the courage and sacrifice of our soldiers who led India to victory in 1971. Their discipline and duty protected the nation and left a lasting legacy of pride, and their spirit continues to inspire us Indians.
-
B.S.Yediyurappa
@BSYBJP
ಶಿವಮೊಗ್ಗದ ಅಲ್ಲಮಪ್ರಭು ಮೈದಾನದಲ್ಲಿ ನಡೆಯುತ್ತಿರುವ, ನಾಡಿನ ಸಾಂಸ್ಕೃತಿಕ ವೈಭವದ, ಕಲೆ, ಸಂಗೀತ, ನೃತ್ಯ, ಯಕ್ಷಗಾನದ ಸಂಸ್ಕೃತಿಯನ್ನು ಅನಾವರಣಗೊಳಿಸಿದ ಆಳ್ವಾಸ್ ನುಡಿಸಿರಿ ವಿರಾಸತ್ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಾಯಿತು.
-
B.S.Yediyurappa
@BSYBJP
ಹಿರಿಯ ನಾಯಕರು, ಮಾಜಿ ಸಚಿವರು, ಜನಪ್ರಿಯ ಶಾಸಕರು, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಯ ರಾಷ್ಟ್ರೀಯ ಅಧ್ಯಕ್ಷರು, ಅತ್ಯಂತ ಆತ್ಮೀಯರೂ ಆಗಿದ್ದ ಶ್ರೀ ಶಾಮನೂರು ಶಿವಶಂಕರಪ್ಪನವರ ನಿಧನ ಸುದ್ದಿ ಕೇಳಿ ಅತೀವ ದುಃಖವಾಗಿದೆ. ಅವರ ನಿಧನದಿಂದ ನಾಡು ಒಬ್ಬ ಹಿರಿಯ ರಾಜಕಾರಣಿಯನ್ನು ಕಳೆದುಕೊಂಡಿದೆ. ವಿಶೇಷವಾಗಿ ವೀರಶೈವ ಲಿಂಗಾಯತ ಸಮಾಜದ ಹಿರಿಯ ನಾಯಕನ ಯುಗಾಂತ್ಯವಾಗಿದೆ.
ಶಿಕ್ಷಣ, ಅರೋಗ್ಯ ಮತ್ತು ಸಮಾಜ ಸೇವೆಯ ಮೂಲಕ ಲಕ್ಷಾಂತರ ಜನರ ಬದುಕನ್ನು ಬೆಳಗಿದ್ದ, ಶಾಮನೂರು ಶಿವಶಂಕರಪ್ಪನವರ ದಶಕಗಳ ಸುದೀರ್ಘ ಸೇವೆ, ಜನಪರ ಕಾಳಜಿ ಮತ್ತು ಸಾಧನೆಗಳು ಮಾದರಿಯಾಗಿದೆ. ಅವರ ಅಗಲಿಕೆಯಿಂದ ರಾಜ್ಯ ರಾಜಕಾರಣಕ್ಕೆ, ಅದರಲ್ಲೂ ವಿಶೇಷವಾಗಿ ದಾವಣಗೆರೆ ಜಿಲ್ಲೆಗೆ ಮತ್ತು ವೀರಶೈವ ಲಿಂಗಾಯತ ಮಹಾಸಭೆಗೆ ತುಂಬಲಾರದ ನಷ್ಟವಾಗಿದೆ.
ಅವರೊಂದಿಗಿನ ದಶಕಗಳ ಒಡನಾಟ, ಸಮಾಜದ ಒಗ್ಗಟ್ಟಿಗಾಗಿ ಅವರ ತುಡಿತ, ಅವರ ನಿರಂತರ ಪ್ರಯತ್ನಗಳನ್ನು ಹತ್ತಿರದಿಂದ ಕಂಡಿದ್ದೇನೆ. ವೈಯಕ್ತಿಕವಾಗಿ ಒಬ್ಬ ಆತ್ಮೀಯ ಹಿರಿಯಣ್ಣನನ್ನು ಕಳೆದುಕೊಂಡಿದ್ದೇನೆ. ಭಗವಂತನು ಅವರ ಆತ್ಮಕ್ಕೆ ಸದ್ಗತಿ ನೀಡಲಿ, ಅವರ ಕುಟುಂಬ ಸದಸ್ಯರಿಗೆ, ಅಪಾರ ಅಭಿಮಾನಿಗಳಿಗೆ ಈ ದುಃಖವನ್ನು ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ. ಓಂ ಶಾಂತಿ. 🙏 -
B.S.Yediyurappa
@BSYBJP
Heartiest congratulations to Shri Nitin Nabin ji on his appointment as National Working President of the Bharatiya Janata party.
@NitinNabin
@BJP4India -
B.S.Yediyurappa
@BSYBJP
Shri Shivraj Patil ji’s passing is a deep loss. Remembering his calm presence and dedication during his tenure as Union Home Minister, and my thoughts are with his family and loved ones. Om Shanti.
-
B.S.Yediyurappa
@BSYBJP
ವಿಜಯಪುರ ಜಿಲ್ಲೆ ಬಸವನ ಬಾಗೇವಾಡಿಯ ಪೂಜ್ಯ ಶ್ರೀ ಚನ್ನಬಸವ ಮಹಾಸ್ವಾಮಿಗಳು ಲಿಂಗೈಕ್ಯರಾದ ಸುದ್ದಿ ತಿಳಿದು ಅತೀವ ದುಃಖವಾಗಿದೆ. ಕಲ್ಲುಗಳ ಮೇಲೆ ವಚನಗಳನ್ನು ಕೆತ್ತಿಸಿ ಧರ್ಮಪ್ರಸಾರ ನಡೆಸಿಕೊಂಡು ಬಂದಿದ್ದ ಶ್ರೀಗಳು ತಮ್ಮ ಹಲವು ಧಾರ್ಮಿಕ ಸಮಾಜಮುಖಿ ಸೇವಾಕಾರ್ಯಗಳಿಂದ ಭಕ್ತರ ಪಾಲಿಗೆ ಆರಾಧ್ಯರಾಗಿದ್ದರು. ದೇವರು ಅವರ ಆತ್ಮಕ್ಕೆ ಸದ್ಗತಿ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ. ಓಂ ಶಾಂತಿ
-
B.S.Yediyurappa
@BSYBJP
ರಾಷ್ಟ್ರೀಯ ಸ್ವಯಂಸೇವಕ ಸಂಘದ ಪೂಜ್ಯ ಸರಕಾರ್ಯವಾಹರಾದ ಶ್ರೀ ದತ್ತಾತ್ರೇಯ ಹೊಸಬಾಳೆ ಜೀ ಅವರಿಗೆ ಜನ್ಮದಿನದ ಶುಭಾಶಯಗಳು. ದೇವರು ನಿಮಗೆ ಸುಖ, ಶಾಂತಿ ಮತ್ತು ಉತ್ತಮ ಆರೋಗ್ಯವನ್ನು ಕರುಣಿಸಲಿ.
-
B.S.Yediyurappa
@BSYBJP
ಸೋಂದಾ ಸ್ವರ್ಣವಲ್ಲೀ ಸಂಸ್ಥಾನದ ಪೂಜ್ಯ ಶ್ರೀ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳ ನೇತೃತ್ವದಲ್ಲಿ, ಹಲವಾರು ಪೂಜ್ಯ ಸಂತರ ದಿವ್ಯಸಾನ್ನಿಧ್ಯದಲ್ಲಿ, ಶಿವಮೊಗ್ಗದಲ್ಲಿ ಇಂದು ನಡೆದ ಬೃಹತ್ ಶ್ರೀ ಭಗವದ್ಗೀತಾ ಅಭಿಯಾನ 2025, ರಾಜ್ಯಮಟ್ಟದ ಮಹಾಸಮರ್ಪಣೆ ಕಾರ್ಯಕ್ರಮದಲ್ಲಿ ಭಾಗವಹಿಸಲಾಯಿತು. ಕೇರಳ ರಾಜ್ಯಪಾಲರಾದ ಗೌರವಾನ್ವಿತ ಶ್ರೀ ರಾಜೇಂದ್ರ ವಿಶ್ವನಾಥ ಅರೇಕರ್, ಕೇಂದ್ರ ಸಚಿವ ಶ್ರೀ ಎಚ್.ಡಿ. ಕುಮಾರಸ್ವಾಮಿ, ಸಂಸದರು, ಶಾಸಕರು, ಗಣ್ಯರು ಉಪಸ್ಥಿತರಿದ್ದರು.
-
B.S.Yediyurappa
@BSYBJP
ಕನ್ನಡ ಚಿತ್ರರಂಗದ ಹಿರಿಯ ಕಲಾವಿದ ಶ್ರೀ ಎಂ.ಎಸ್.ಉಮೇಶ್ ರವರ ನಿಧನದ ಸುದ್ದಿ ತಿಳಿದು ತುಂಬಾ ದುಃಖವಾಯಿತು. ಅವರ ಅಗಲಿಕೆಯಿಂದ ಚಿತ್ರರಂಗ ತನ್ನ ಒಬ್ಬ ಹಿರಿಯ ಕಲಾವಿದನನ್ನು ಕಳೆದುಕೊಂಡಿದೆ. ಅವರ ಆತ್ಮಕ್ಕೆ ಚಿರಶಾಂತಿ ದೊರಕಲಿ. ಕುಟುಂಬಕ್ಕೆ ಈ ದುಃಖವನ್ನು ಭರಿಸುವ ಶಕ್ತಿ ದೇವರು ನೀಡಲಿ ಎಂದು ಪ್ರಾರ್ಥಿಸುತ್ತೇನೆ. ಓಂ ಶಾಂತಿ 🙏🏻
-
B.S.Yediyurappa reposted
Narendra Modi
@narendramodi
Sharing this month’s #mannkibaat. Do listen! x.com/i/broadcasts/1vAGRQVeRQVKl
-
B.S.Yediyurappa
@BSYBJP
Live : ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಲಕ್ಷ ಕಂಠ ಗೀತಾ ಪಾರಾಯಣ ಕಾರ್ಯಕ್ರಮದಲ್ಲಿ ಪ್ರಧಾನಿ ಶ್ರೀ @narendramodi.
#vishwa_gita_paryaya
www.youtube.com/live/dvbJ7CrNB-Q -
B.S.Yediyurappa
@BSYBJP
Live : ಉಡುಪಿಯಲ್ಲಿ ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರ ರೋಡ್ ಶೋ
#vishwa_gita_paryaya @narendramodi
www.youtube.com/live/evXyWey2ylo -
B.S.Yediyurappa
@BSYBJP
ಶ್ರೀಮದ್ ಶ್ರೀಶೈಲ ಸೂರ್ಯ ಸಿಂಹಾಸನಾಧೀಶ್ವರ ಶ್ರೀ ಶ್ರೀ ಶ್ರೀ 1008 ಜಗದ್ಗುರು ಡಾ. ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಭಗವತ್ಪಾದರ ಜನ್ಮದಿನದಂದು ಭಕ್ತಿಪೂರ್ವಕ ಪ್ರಣಾಮಗಳು. 🙏
-
B.S.Yediyurappa reposted
BJP Karnataka
@BJP4Karnataka
ವಿಶ್ವ ಗೀತಾ ಪರ್ಯಾಯದ ಬೃಹತ್ ಗೀತೋತ್ಸವ "ಲಕ್ಷ ಕಂಠ ಗೀತಾ ಪಾರಾಯಣ" ಕಾರ್ಯಕ್ರಮಕ್ಕೆ ಉಡುಪಿಗೆ ಆಗಮಿಸುತ್ತಿರುವ ಪ್ರಧಾನಿ ಶ್ರೀ @narendramodi ಅವರಿಗೆ ಹಾರ್ದಿಕ ಸ್ವಾಗತ.
#vishwa_gita_paryaya -
B.S.Yediyurappa reposted
Narendra Modi
@narendramodi
ಉಡುಪಿಯ ಶ್ರೀ ಕೃಷ್ಣ ಮಠಕ್ಕೆ ಭೇಟಿ ನೀಡಿ ಲಕ್ಷ ಕಂಠ ಗೀತಾ ಪಾರಾಯಣ ಕಾರ್ಯಕ್ರಮದಲ್ಲಿ ಭಾಗವಹಿಸುವ ಅವಕಾಶ ದೊರೆತಿರುವುದು ನನಗೆ ಗೌರವದ ವಿಷಯ. ಗೀತಾ ಪಠಣಕ್ಕಾಗಿ ಸಮಾಜದ ವಿವಿಧ ವರ್ಗಗಳ ಜನರನ್ನು ಒಂದೆಡೆ ಸೇರಿಸುವ ವಿಶೇಷ ಕಾರ್ಯಕ್ರಮ ಇದಾಗಿದೆ. ಈ ಮಠವು ನಮ್ಮ ಸಾಂಸ್ಕೃತಿಕ ಜೀವನದಲ್ಲಿ ಅತ್ಯಂತ ವಿಶೇಷ ಮಹತ್ವವನ್ನು ಹೊಂದಿದೆ. ಶ್ರೀ ಮಧ್ವಾಚಾರ್ಯರಿಂದ ಪ್ರೇರಿತವಾದ ಈ ಮಠವು, ಸಮಾಜ ಸೇವೆಯಲ್ಲಿ ಮುಂಚೂಣಿಯಲ್ಲಿದೆ.
www.pib.gov.in/PressReleasePage.aspx?PRID=2195198 -
B.S.Yediyurappa reposted
Narendra Modi
@narendramodi
I am honoured to be visiting Sri Krishna Matha in Udupi to take part in the Laksha Kantha Gita Parayana programme tomorrow, 28th November. This is a special gathering that brings together people from different sections of society for a recital of the Gita. This Matha has a very special significance in our cultural life. Inspired by Sri Madhvacharya, it has been at the forefront of serving society.
www.pib.gov.in/PressReleasePage.aspx?PRID=2195198 -
B.S.Yediyurappa
@BSYBJP
ಆತ್ಮೀಯ ಕೇಂದ್ರ ಸಚಿವ ಶ್ರೀ @JoshiPralhad ಯವರಿಗೆ ಜನ್ಮದಿನದ ಹೃದಯಪೂರ್ವಕ ಶುಭಾಶಯಗಳು. ದೇಶ ಸೇವೆಯಲ್ಲಿ ನಿಮ್ಮ ಶ್ರಮ ಮತ್ತು ನಿಷ್ಠೆ ಮುಂದುವರಿಯಲಿ. ದೇವರ ಕೃಪೆ ಸದಾ ನಿಮ್ಮೊಂದಿಗಿರಲಿ ಎಂದು ಹಾರೈಸುವೆ.
-
B.S.Yediyurappa
@BSYBJP
ಸಂವಿಧಾನವೇ ನಮ್ಮ ರಾಷ್ಟ್ರಧರ್ಮ. ಪ್ರತಿಯೊಬ್ಬ ಭಾರತೀಯನ ಸ್ವಾತಂತ್ರ್ಯ, ಹಕ್ಕು ಮತ್ತು ಘನತೆಯನ್ನು ಸಂವಿಧಾನವೇ ರಕ್ಷಿಸುತ್ತದೆ. ಸಮಾನತೆಯೊಂದಿಗೆ ನಮ್ಮ ವಿಚಾರ, ಅಭಿವ್ಯಕ್ತಿ, ಶ್ರದ್ಧೆ ಮತ್ತು ಉಪಾಸನೆಯ ಸ್ವಾತಂತ್ರ್ಯವೂ ಸಂವಿಧಾನದ ಅಡಕವಾಗಿದೆ. ಸಂವಿಧಾನದ ಮೌಲ್ಯಗಳನ್ನು ಕಾಪಾಡುವ ಕರ್ತವ್ಯವನ್ನು ನಾವು ಎಲ್ಲಾ ಸಮಯದಲ್ಲೂ ನಿರ್ವಹಿಸೋಣ.
#constitutionday -
B.S.Yediyurappa
@BSYBJP
ಭಾರತೀಯ ಆಡಳಿತ ಸೇವೆಯ ಹಿರಿಯ ಅಧಿಕಾರಿಗಳಾದ ಶ್ರೀ ಮಹಾಂತೇಶ ಬೀಳಗಿ (ಐ.ಎ.ಎಸ್) ಅವರ ಅಕಾಲಿಕ ನಿಧನದ ಸುದ್ದಿ ತಿಳಿದು ತೀವ್ರ ಆಘಾತ ಹಾಗೂ ದುಃಖವಾಗಿದೆ. ರಾಜ್ಯ ಖನಿಜ ನಿಗಮದ ವ್ಯವಸ್ಥಾಪಕ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದ ಅವರು, ಈ ಹಿಂದೆ ಹಲವಾರು ಉನ್ನತ ಹುದ್ದೆಗಳಲ್ಲಿ ದಕ್ಷತೆ ಹಾಗೂ ಪ್ರಾಮಾಣಿಕತೆಯಿಂದ ಕಾರ್ಯನಿರ್ವಹಿಸಿದ್ದರು. ಅವರ ಅಕಾಲಿಕ ನಿಧನದಿಂದ ರಾಜ್ಯ ಒಬ್ಬ ಹಿರಿಯ ಅಧಿಕಾರಿಯನ್ನು ಕಳೆದುಕೊಂಡಿದೆ. ಅಪಘಾತದಲ್ಲಿ ಶ್ರೀ ಬೀಳಗಿ ಅವರೊಂದಿಗೆ ಇನ್ನು ಮೂವರು ಪ್ರಾಣ ಕಳೆದುಕೊಂಡಿರುವುದು ಅತ್ಯಂತ ನೋವಿನ ಸಂಗತಿ. ದೇವರು ಅವರ ಆತ್ಮಕ್ಕೆ ಸದ್ಗತಿ ಕರುಣಿಸಲಿ, ಅಪಘಾತದಲ್ಲಿ ಮೃತರಾದ ಕುಟುಂಬಗಳಿಗೂ ಈ ದುಃಖವನ್ನು ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ. ಓಂ ಶಾಂತಿ🙏
-
B.S.Yediyurappa reposted
Narendra Modi
@narendramodi
To witness the Dharma Dhwajarohan Utsav at Shri Ram Janmabhoomi Mandir is a moment crores of people in India and the world have waited for. History has been made in Ayodhya and this inspires us even more to walk the path shown by Prabhu Shri Ram.
This media couldn't be displayed. See it on the original post. -
B.S.Yediyurappa
@BSYBJP
Hearty congratulations to Shri @NitishKumar Ji on taking oath as the Chief Minister of Bihar again. My best wishes to the Deputy CMs and all ministers who will undoubtedly work towards the progress of the state.
-
B.S.Yediyurappa
@BSYBJP
ಆತ್ಮೀಯರು, ಚಿಕ್ಕಪೇಟಿ ಕ್ಷೇತ್ರದ ಮಾಜಿ ಶಾಸಕರಾದ ಡಾI ಡಿ.ಹೇಮಚಂದ್ರ ಸಾಗರ್ ಅವರ ಪುತ್ರಿ, ಕುಮಾರಿ ನತಾಷಾ ಹೆಚ್. ಸಾಗರ್ ಅವರ ಅಕಾಲಿಕ ಅಗಲಿಕೆಯ ಸುದ್ದಿ ಕೇಳಿ ತೀವ್ರ ಆಘಾತವಾಗಿದೆ. ಇಂದು ಅವರ ನಿವಾಸಕ್ಕೆ ಭೇಟಿ ನೀಡಿ, ಅವರ ಪುತ್ರಿಯ ಪಾರ್ಥಿವ ಶರೀರಕ್ಕೆ ಅಂತಿಮ ನಮನಗಳನ್ನು ಸಲ್ಲಿಸಿ, ಕುಟುಂಬದವರಿಗೆ ಸಾಂತ್ವನ ಹೇಳಲಾಯಿತು. ಓಂ ಶಾಂತಿ. 🙏
-
B.S.Yediyurappa
@BSYBJP
ನಮ್ಮ ಶಿಕಾರಿಪುರದ ಹಿರಿಯ ಮತ್ತು ನಿಷ್ಠಾವಂತ ಕಾರ್ಯಕರ್ತರನ್ನು ಇಂದು ಭೇಟಿ ಮಾಡಿ ಸಂತೋಷವಾಯಿತು.
-
B.S.Yediyurappa
@BSYBJP
ಬಿಹಾರ ಎನ್.ಡಿ.ಎ ಗೆ ಸ್ಪಷ್ಟ ಮತ್ತು ಅಭೂತಪೂರ್ವ ಜನಾದೇಶ ನೀಡಿದೆ. ಪ್ರಧಾನಿ ಶ್ರೀ @narendramodi ರವರ ಅಭಿವೃದ್ಧಿಪರ, ದಿಟ್ಟ ನಾಯಕತ್ವದಲ್ಲಿ ಅಲ್ಲಿನ ಜನತೆ ದೃಢವಿಶ್ವಾಸ ವ್ಯಕ್ತಪಡಿಸಿದ್ದು, ಜನತೆ ಇಟ್ಟ ನಂಬಿಕೆಗೆ ತಕ್ಕಂತೆ ಬಿಹಾರದ ವಿಕಾಸಕ್ಕಾಗಿ ಎನ್.ಡಿ.ಎ ಕಾರ್ಯನಿರ್ವಹಿಸಲಿದೆ. ಈ ಐತಿಹಾಸಿಕ ಗೆಲುವಿಗಾಗಿ ನಮ್ಮ ಎಲ್ಲ ವಿಜೇತ ಶಾಸಕರಿಗೂ, ಹಗಲಿರುಳೂ ದುಡಿದ ಕಾರ್ಯಕರ್ತರಿಗೂ ಅಭಿನಂದನೆಗಳು.
-
B.S.Yediyurappa
@BSYBJP
ಜೀವನಪೂರ್ತಿ ಮರಗಳನ್ನು ಬೆಳೆಸಿ ಪರಿಸರಕ್ಕೆ ಅಮ್ಮನಂತೆ ಸೇವೆ ಮಾಡಿದ ತಿಮ್ಮಕ್ಕ ಅವರಿಗೆ ಗೌರವಪೂರ್ಣ ಶ್ರದ್ದಾಂಜಲಿ. ಅವರ ಸರಳತೆ, ಮಾನವೀಯತೆ ಮತ್ತು ನಿಸರ್ಗದ ಮೇಲಿನ ಪ್ರೀತಿ ಮುಂದಿನ ಪೀಳಿಗೆಗಳಿಗೂ ಪ್ರೇರಣೆ.
ಓಂ ಶಾಂತಿಃ -
B.S.Yediyurappa
@BSYBJP
Bihar gives the NDA a clear and confident mandate. Your trust strengthens our commitment to keep working towards development.
Congrats to Shri @narendramodi ji for his steady leadership and guidance.
#biharelection2025
@AmitShah @JPNadda
@BJP4India @BJP4Bihar @BJP4Karnataka -
B.S.Yediyurappa
@BSYBJP
ಮಲ್ಲನಮೂಲೆ ಸುಕ್ಷೇತ್ರ ಶ್ರೀ ಗುರು ಕಂಬಳೇಶ್ವರ ಮಠದ ಪೀಠಾಧಿಪತಿಗಳಾಗಿದ್ದ ಪರಮಪೂಜ್ಯ ಶ್ರೀ ಚನ್ನಬಸವ ಶ್ರೀಗಳು ಲಿಂಗೈಕ್ಯರಾದ ಸುದ್ದಿ ತಿಳಿದು ಅತೀವ ದುಃಖವಾಗಿದೆ. ಶ್ರೀಗಳ ಆತ್ಮಕ್ಕೆ ಸದ್ಗತಿ ಪ್ರಾಪ್ತಿಯಾಗಲಿ, ಪೂಜ್ಯರ ಅಗಲಿಕೆಯ ನೋವನ್ನು ಭರಿಸುವ ಶಕ್ತಿಯನ್ನು ದೇವರು ಎಲ್ಲರಿಗೂ ನೀಡಲಿ ಎಂದು ಪ್ರಾರ್ಥಿಸುತ್ತೇನೆ. ಓಂ ಶಾಂತಿ 🙏🏼
-
B.S.Yediyurappa
@BSYBJP
Extremely saddened by the tragic blast near Red Fort in Delhi. My deepest sympathies to the families who lost their loved ones. Prayers for the early recovery of those injured and strength to everyone affected.
-
B.S.Yediyurappa
@BSYBJP
ಕಾವ್ಯ ಮತ್ತು ಕೀರ್ತನೆಗಳ ಮೂಲಕ ಶಾಶ್ವತವಾದ ಸಂದೇಶ ನೀಡಿದ ದಾಸಶ್ರೇಷ್ಠ ಕನಕದಾಸರ ಜಯಂತಿಗೆ ಹೃತ್ಪೂರ್ವಕ ಶುಭಾಶಯಗಳು.
#kanakajayanthi -
B.S.Yediyurappa
@BSYBJP
“Vande Mataram” was more than a song — it was the soul of our freedom movement. 150 years later, its message of unity and pride continues to guide India’s journey toward greater strength and progress.
#vandemataram150 -
B.S.Yediyurappa
@BSYBJP
ಬಿಜೆಪಿ ರಾಜ್ಯಾಧ್ಯಕ್ಷರಾದ ಶ್ರೀ @BYVijayendra ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. ತಮಗೆ ಭಗವಂತನು ಉತ್ತಮ ಆರೋಗ್ಯ, ದೀರ್ಘಾಯುಷ್ಯ, ಜನಸೇವೆ ಸಲ್ಲಿಸುವ ಶಕ್ತಿ ದಯಪಾಲಿಸಲಿ ಎಂದು ಹಾರೈಸುವೆ.💐
@BJP4Karnataka -
B.S.Yediyurappa
@BSYBJP
With Shri P. V. N. Madhav, BJP Andhra Pradesh State President, during his visit today. It was a pleasant interaction- exchanging views on party organization and current developments.
@MadhavBJP @BJP4Andhra -
B.S.Yediyurappa
@BSYBJP
ಬಾಗಲಕೋಟೆ ವಿಧಾನಸಭಾ ಕ್ಷೇತ್ರದ ಶಾಸಕ ಶ್ರೀ ಹುಲ್ಲಪ್ಪ ಯಮನಪ್ಪ ಮೇಟಿ ಅವರ ಅಗಲಿಕೆ ಅತ್ಯಂತ ವಿಷಾದನೀಯವಾಗಿದೆ. ದೇವರು ಅವರ ಆತ್ಮಕ್ಕೆ ಶಾಂತಿ ನೀಡಲಿ.🙏
-
B.S.Yediyurappa
@BSYBJP
History Created! 🇮🇳🏆
Team India are the ICC Women’s World Cup 2025 Champions!
A brilliant win over South Africa — full of courage, skill, and spirit.
#wwc2025 #teamindia #champions #proudmoment
@BCCI @BCCIWomen -
B.S.Yediyurappa reposted
Narendra Modi
@narendramodi
ಇಂದು, ನಾವು ಕನ್ನಡ ರಾಜ್ಯೋತ್ಸವವನ್ನು ಆಚರಿಸುತ್ತಿರುವಾಗ, ಕರ್ನಾಟಕದ ಜನರಿಗೆ ಪ್ರತೀಕವಾಗಿರುವ ಶ್ರೇಷ್ಠತೆ ಮತ್ತು ಶ್ರಮಶೀಲ ಸ್ವಭಾವವನ್ನು ನಾವು ಆಚರಿಸುತ್ತೇವೆ. ಸಾಹಿತ್ಯ, ಕಲೆ, ಸಂಗೀತ ಮತ್ತಿತರ ಕ್ಷೇತ್ರಗಳಲ್ಲಿ ಪ್ರತಿಫಲಿಸುವ ಕರ್ನಾಟಕದ ಶ್ರೀಮಂತ ಸಂಸ್ಕೃತಿಯನ್ನು ಸಹ ನಾವು ಆಚರಿಸುತ್ತೇವೆ. ಈ ರಾಜ್ಯವು ಜ್ಞಾನದಲ್ಲಿ ಅಡಗಿರುವ ಪ್ರಗತಿಯ ಮನೋಭಾವವನ್ನು ಪ್ರತಿಬಿಂಬಿಸುತ್ತದೆ. ರಾಜ್ಯದ ಜನರು ಸಂತೋಷ ಮತ್ತು ಆರೋಗ್ಯದಿಂದ ಇರಲಿ ಎಂದು ನಾನು ಪ್ರಾರ್ಥಿಸುತ್ತೇನೆ.
-
B.S.Yediyurappa
@BSYBJP
ಸರ್ವರಿಗೂ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು. ಕನ್ನಡ ನಾಡಿನ ವೈಭವ, ಕಲೆ, ಸಾಹಿತ್ಯ, ಸಂಸ್ಕೃತಿ ಎಲ್ಲವೂ ಅನನ್ಯ. ಈ ಹೆಮ್ಮೆಯ ಪರಂಪರೆಯನ್ನು ಮುಂದಿನ ಪೀಳಿಗೆಗೆ ಉಳಿಸಿ ಬೆಳೆಸುವ ಸಂಕಲ್ಪ ಮಾಡೋಣ.
-
B.S.Yediyurappa
@BSYBJP
ದೇಶದ ಏಕತೆಗಾಗಿ ಶ್ರಮಿಸಿದ, ಉಕ್ಕಿನ ಮನುಷ್ಯ ಭಾರತ ರತ್ನ ಶ್ರೀ ಸರ್ದಾರ್ ವಲ್ಲಭಭಾಯ್ ಪಟೇಲ್ ಅವರ ಜಯಂತಿ ಹಾಗೂ ರಾಷ್ಟ್ರೀಯ ಏಕತಾ ದಿನದ ಶುಭಾಶಯಗಳು.
#rashtriyaektadiwas2025 #runforunity
#sardarpatel150
#ektadiwasbharat -
B.S.Yediyurappa
@BSYBJP
ಕನ್ನಡಿಗರೆಲ್ಲರ ಮನದಲ್ಲಿ ಚಿರಸ್ಥಾಯಿಯಾಗಿ ನೆಲೆಸಿರುವ ಕರ್ನಾಟಕ ರತ್ನ, ಪವರ್ ಸ್ಟಾರ್ ಶ್ರೀ ಪುನೀತ್ ರಾಜ್ ಕುಮಾರ್ ಅವರ ಪುಣ್ಯಸ್ಮರಣೆಯ ಸಂಸ್ಮರಣೆಗಳು.
#puneethrajkumar -
B.S.Yediyurappa reposted
Narendra Modi
@narendramodi
Sharing this month's #mannkibaat. Do tune in! x.com/i/broadcasts/1zqKVdVlOoZJB
-
B.S.Yediyurappa
@BSYBJP
ಧೈರ್ಯ, ತ್ಯಾಗ ಮತ್ತು ದೇಶಭಕ್ತಿಯ ಪ್ರತಿರೂಪವಾದ ಕಿತ್ತೂರು ರಾಣಿ ಚೆನ್ನಮ್ಮನವರ ಸ್ಮರಣೆಯು ನಮ್ಮ ಮನಗಳಲ್ಲಿ ಸದಾ ಜೀವಂತವಾಗಿರಲಿ.
ರಾಣಿ ಚೆನ್ನಮ್ಮ ಜಯಂತಿಯ ಶುಭಾಶಯಗಳು. -
B.S.Yediyurappa
@BSYBJP
ಖ್ಯಾತ ಉದ್ಯಮಿ ಹಾಗೂ ಬಯೋಕಾನ್ ಸಂಸ್ಥೆಯ ಮುಖ್ಯಸ್ಥೆ @kiranshaw ಅವರು ಇಂದು ನಮ್ಮ ನಿವಾಸಕ್ಕೆ ಆಗಮಿಸಿ ಬೆಳಕಿನ ಹಬ್ಬ ದೀಪಾವಳಿಯ ಶುಭಾಶಯಗಳನ್ನು ತಿಳಿಸಿದರು. ಈ ಸಂದರ್ಭದಲ್ಲಿ ಶಿವಮೊಗ್ಗ ಸಂಸದ ಶ್ರೀ @BYRBJP ಅವರು ಸಹ ಉಪಸ್ಥಿತರಿದ್ದರು.
-
B.S.Yediyurappa
@BSYBJP
ನಾಡಿನ ಸಮಸ್ತ ಜನತೆಗೆ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು. ದೀಪದ ಬೆಳಕಿನಂತೆ ಪ್ರತಿಯೊಬ್ಬರ ಬದುಕು ಪ್ರಕಾಶಮಾನವಾಗಿ ಬೆಳಗಲಿ. ಮನೆಮನಗಳಲ್ಲಿ ಸುಖ, ಸಂತೋಷ, ನೆಮ್ಮದಿ, ಸಮೃದ್ಧಿ ನೆಲೆಸಲೆಂದು ಪ್ರಾರ್ಥಿಸೋಣ.
#deepavali2025 -
B.S.Yediyurappa reposted
Vice-President of India
@VPIndia
Former Chief Minister of Karnataka, Shri B. S. Yediyurappa, called on Hon’ble Vice-President Shri C. P. Radhakrishnan at the Vice-President’s Enclave today.
-
B.S.Yediyurappa reposted
Nirmala Sitharaman Office
@nsitharamanoffc
Shri B.S. Yediyurappa (@BSYBJP), former Chief Minister of Karnataka, calls on Smt @nsitharaman.
-
B.S.Yediyurappa
@BSYBJP
Was an honour to meet with the Hon’ble @FinMinIndia Smt @nsitharaman Ji in New Delhi today.
-
B.S.Yediyurappa
@BSYBJP
An honour to have met with our Hon’ble Prime Minister Shri @narendramodi ji in New Delhi ahead of Deepavali.
@PMOIndia @BJP4India @BJP4Karnataka -
B.S.Yediyurappa
@BSYBJP
ಬಿಹಾರ ವಿಧಾನಸಭಾ ಚುನಾವಣೆ ಹಿನ್ನಲೆಯಲ್ಲಿ ಇಂದು ನವದೆಹಲಿಯಲ್ಲಿ, ಮಾನ್ಯ ಪ್ರಧಾನಿ ಶ್ರೀ @narendramodi ಜೀ, ರಾಷ್ಟ್ರೀಯ ಅಧ್ಯಕ್ಷ ಶ್ರೀ @JPNadda, ಗೃಹ ಸಚಿವ ಶ್ರೀ @AmitShah, ರಕ್ಷಣಾ ಸಚಿವ ಶ್ರೀ @rajnathsingh ಸೇರಿದಂತೆ ಹಿರಿಯ ನಾಯಕರ ಉಪಸ್ಥಿತಿಯಲ್ಲಿ ಪಕ್ಷದ ಕೇಂದ್ರೀಯ ಸಂಸದೀಯ ಮಂಡಳಿ ಹಾಗೂ ಚುನಾವಣಾ ಸಮಿತಿ ಸಭೆಯಲ್ಲಿ ಪಾಲ್ಗೊಳ್ಳಲಾಯಿತು.
@BJP4India @BJP4Karnataka -
B.S.Yediyurappa
@BSYBJP
ಇಂದು ಮಣಿಪಾಲ್ ಆಸ್ಪತ್ರೆಗೆ ಭೇಟಿ ನೀಡಿ, ನಮ್ಮ ದೇಶದ ಹಿರಿಯ ನಾಯಕರು ಹಾಗೂ ಮಾಜಿ ಪ್ರಧಾನ ಮಂತ್ರಿ ಶ್ರೀ ಎಚ್.ಡಿ. ದೇವೇಗೌಡರನ್ನು ಭೇಟಿಯಾಗಿ ಅವರ ಆರೋಗ್ಯ ವಿಚಾರಿಸಲಾಯಿತು. ದೇಶ ಮತ್ತು ರೈತರ ಹಿತಕ್ಕಾಗಿ ಸದಾ ಶ್ರಮಿಸಿದ ಈ ಮಹಾನ್ ನಾಯಕರು ಶೀಘ್ರ ಚೇತರಿಸಿಕೊಂಡು ಉತ್ತಮ ಆರೋಗ್ಯದಲ್ಲಿ ಇರಲಿ ಎಂದು ಹಾರೈಸುತ್ತೇನೆ.
@H_D_Devegowda -
B.S.Yediyurappa
@BSYBJP
ಭಾರತೀಯ ಜನತಾ ಪಕ್ಷದ ಹಿರಿಯ ಮಾರ್ಗದರ್ಶಕರು, ಮಾಜಿ ವಿಧಾನ ಪರಿಷತ್ ಸದಸ್ಯರು ಹಾಗೂ ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯ ಕಾರ್ಯಕರ್ತರಾದ ಶ್ರೀ ಕೃ. ನರಹರಿ ಅವರ ಪಾರ್ಥಿವ ಶರೀರಕ್ಕೆ ಪುಷ್ಪನಮನ ಸಲ್ಲಿಸಿ ಅಂತಿಮ ಗೌರವ ಅರ್ಪಿಸಲಾಯಿತು.
-
B.S.Yediyurappa
@BSYBJP
ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯ ಕಾರ್ಯಕರ್ತರು ಹಾಗೂ ಮಾಜಿ ವಿಧಾನ ಪರಿಷತ್ ಸದಸ್ಯರಾದ ಮತ್ತು ಬಿಜೆಪಿಯ ಹಿರಿಯ ಮಾರ್ಗದರ್ಶಕರಾದ ಶ್ರೀ ಕ್ರು. ನರಹರಿ ಅವರ ನಿಧನದ ಸುದ್ದಿ ಕೇಳಿ ತೀವ್ರ ದುಃಖವಾಗಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ.🙏
-
B.S.Yediyurappa
@BSYBJP
ನಾಡಿನ ಸಮಸ್ತ ಜನತೆಗೆ ಶ್ರೀ ವಾಲ್ಮೀಕಿ ಜಯಂತಿಯ ಹಾರ್ದಿಕ ಶುಭಾಶಯಗಳು.
ಜಗತ್ತಿಗೆ ಮೊಟ್ಟಮೊದಲ ಮಹಾಕಾವ್ಯ ‘ರಾಮಾಯಣ’ವನ್ನು ರಚಿಸಿ, ಜೀವನ ಮೌಲ್ಯಗಳನ್ನು ಬೋಧಿಸಿದ ಆದಿಕವಿ ಮಹರ್ಷಿ ವಾಲ್ಮೀಕಿಗಳಿಗೆ ಈ ಜಯಂತಿಯಂದು ನನ್ನ ಭಕ್ತಿಪೂರ್ವಕ ನಮನಗಳು.
#maharshivalmikijayanti -
B.S.Yediyurappa
@BSYBJP
ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಂಸ್ಥಾಪನಾ ದಿನದಂದು, ಸಂಘದ ಎಲ್ಲಾ ನಮ್ಮ ಸ್ವಯಂಸೇವಕರಿಗೆ, ಹಿತೈಷಿಗಳಿಗೆ ಮತ್ತು ಅಭಿಮಾನಿಗಳಿಗೆ ಹೆಮ್ಮೆಯ ಶುಭಾಶಯಗಳು. ಒಂದು ಶತಮಾನದಿಂದ ಸಂಘವು, ದೇಶಭಕ್ತಿ, ಸೇವೆ, ಶಿಸ್ತು ಮತ್ತು ರಾಷ್ಟ್ರ ನಿರ್ಮಾಣದ ಧ್ಯೇಯದೊಂದಿಗೆ, ಸಮರ್ಪಣಾಭಾವದಿಂದ ಮುನ್ನಡೆಯುತ್ತಿದೆ. ಭಾರತದ ಏಕತೆ, ಶ್ರೇಷ್ಠತೆ ಮತ್ತು ಸಮಗ್ರತೆಯೊಂದಿಗೆ ಸಂಘವೂ ಸದಾ ಬೆಳೆಯಲಿ, ಬೆಳಗಲಿ.
#ಸಂಘಶತಾಬ್ಧಿ #rssfoundationday -
B.S.Yediyurappa
@BSYBJP
ಅಪ್ರತಿಮ ದೇಶಭಕ್ತ, ಹಿರಿಯ ಸ್ವಾತಂತ್ರ್ಯ ಹೋರಾಟಗಾರ, ಮಾಜಿ ಪ್ರಧಾನಿ, ಭಾರತರತ್ನ ಶ್ರೀ ಲಾಲ್ ಬಹದ್ದೂರ್ ಶಾಸ್ತ್ರೀಜಿ ಅವರ ಜಯಂತಿಯಂದು ಆ ಮಹಾನ್ ಚೇತನಕ್ಕೆ ಶ್ರದ್ಧಾಪೂರ್ವಕ ನಮನಗಳು.
-
B.S.Yediyurappa
@BSYBJP
ಸತ್ಯ, ಅಹಿಂಸೆ, ಸ್ವಾವಲಂಬನೆಗಳ ಸಾಕಾರ ಮೂರ್ತಿ, ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯವರ ಜಯಂತಿಯಂದು ಆ ಮಹಾನ್ ಚೇತನಕ್ಕೆ ಭಾವಪೂರ್ಣ ಪ್ರಣಾಮಗಳು.
-
B.S.Yediyurappa
@BSYBJP
ನಾಡಿನ ಜನತೆಗೆ ವಿಜಯದಶಮಿ ಹಬ್ಬದ ಹೃತ್ಪೂರ್ವಕ ಶುಭಾಶಯಗಳು. ನಾಡದೇವಿ ಚಾಮುಂಡೇಶ್ವರಿ ತಾಯಿಯು ಎಲ್ಲರಿಗೂ ಸುಖ, ಶಾಂತಿ, ಸಮೃದ್ಧಿಗಳನ್ನು ಅನುಗ್ರಹಿಸಲಿ ಎಂದು ಪ್ರಾರ್ಥಿಸುತ್ತೇನೆ.
-
B.S.Yediyurappa
@BSYBJP
ಎಲ್ಲರಿಗೂ ಮಹಾನವಮಿ ಹಾಗೂ ಆಯುಧ ಪೂಜೆಯ ಹಾರ್ದಿಕ ಶುಭಾಶಯಗಳು. ಆ ಜಗನ್ಮಾತೆಯು ನಿಮ್ಮೆಲ್ಲರ ಜೀವನದಲ್ಲಿ ಶಕ್ತಿ, ಶಾಂತಿ, ಯೋಗಕ್ಷೇಮ ಮತ್ತು ಸಮೃದ್ಧಿಯನ್ನು ಅನುಗ್ರಹಿಸಲಿ ಎಂದು ಪ್ರಾರ್ಥಿಸುತ್ತೇನೆ.
-
B.S.Yediyurappa
@BSYBJP
Congratulations to Team India on a memorable victory against Pakistan in the Asia Cup. The determination and teamwork displayed by our players have made the nation proud. Best wishes for more success ahead.
#asiacup2025 #indvpak #teamindia -
B.S.Yediyurappa
@BSYBJP
ನೆಚ್ಚಿನ ಪ್ರಧಾನಿ ಶ್ರೀ ನರೇಂದ್ರ ಮೋದಿಯವರು ಪ್ರತಿ ತಿಂಗಳು ದೇಶವನ್ನುದ್ದೇಶಿಸಿ ನಡೆಸಿಕೊಡುವ 'ಮನ್ ಕಿ ಬಾತ್' ಕಾರ್ಯಕ್ರಮವನ್ನು ಇಂದು ಬೆಂಗಳೂರಿನ ಸ್ವಗೃಹದಲ್ಲಿ ವೀಕ್ಷಿಸಲಾಯಿತು. #mannkibaat
@narendramodi @PMOIndia @mannkibaat -
B.S.Yediyurappa
@BSYBJP
ತಮಿಳುನಾಡಿನ ಕರೂರಿನಲ್ಲಿ ರಾಜಕೀಯ ಸಭೆ ನಡೆಯುತ್ತಿರುವಾಗ ಸಂಭವಿಸಿರುವ ಭೀಕರ ಕಾಲ್ತುಳಿತದ ಘಟನೆ ಮನಸ್ಸನ್ನು ಕದಡಿದೆ. ಈ ಘೋರ ದುರ್ಘಟನೆಯಲ್ಲಿ, ಮಕ್ಕಳು, ತಾಯಂದಿರು ಸೇರಿದಂತೆ 39ಕ್ಕೂ ಹೆಚ್ಚು ಮಂದಿ ಸಾವನ್ನಪಿರುವುದು ಅತೀವ ದುಃಖವನ್ನು ಉಂಟುಮಾಡಿದೆ. ಮೃತರ ಕುಟುಂಬಗಳಲ್ಲಿ ನನ್ನ ತೀವ್ರ ಸಂತಾಪ ವ್ಯಕ್ತಪಡಿಸುತ್ತೇನೆ. ಗಾಯಾಳುಗಳು ಶೀಘ್ರ ಗುಣಮುಖರಾಗಲಿ ಎಂದು ಹಾರೈಸುತ್ತೇನೆ.
-
B.S.Yediyurappa
@BSYBJP
ಸಂಘಟನೆ, ಹೋರಾಟ ಸೇರಿದಂತೆ ಪಕ್ಷದ ಕಾರ್ಯತಂತ್ರಗಳ ಬಗ್ಗೆ, ರಾಜ್ಯ ಉಸ್ತುವಾರಿ ಶ್ರೀ @AgrawalRMD, ಸಹ ಉಸ್ತುವಾರಿ ಶ್ರೀ @ReddySudhakar21, ರಾಜ್ಯಾಧ್ಯಕ್ಷ ಶ್ರೀ @BYVijayendra, ಕೇಂದ್ರ ಸಚಿವ ಶ್ರೀ @JoshiPralhad ಸೇರಿದಂತೆ ಪ್ರಮುಖ ನಾಯಕರ ಉಪಸ್ಥಿತಿಯಲ್ಲಿ ಇಂದು ಕೋರ್ ಕಮಿಟಿ ಸಭೆಯಲ್ಲಿ ಚರ್ಚಿಸಲಾಯಿತು. @BJP4Karnataka
-
B.S.Yediyurappa
@BSYBJP
ನೆಚ್ಚಿನ ಪ್ರಧಾನಿ ಶ್ರೀ @narendramodi ರವರ ಜನಪ್ರಿಯ “ಮನ್ ಕಿ ಬಾತ್” ಕಾರ್ಯಕ್ರಮ ನಾಳೆ ಬೆಳಿಗ್ಗೆ 11 ಗಂಟೆಗೆ ಪ್ರಸಾರವಾಗಲಿದೆ, ತಪ್ಪದೇ ಆಲಿಸೋಣ.
#mannkibaat -
B.S.Yediyurappa
@BSYBJP
ನಿನ್ನೆ ವಿಧಿವಶರಾದ ನಾಡಿನ ಹೆಮ್ಮೆಯ ಸಾಕ್ಷಿ ಪ್ರಜ್ಞೆ, ಸರಸ್ವತಿ ಸಮ್ಮಾನ್ ಪುರಸ್ಕೃತ ಹಿರಿಯ ದಿಗ್ಗಜ ಸಾಹಿತಿ, ಪದ್ಮವಿಭೂಷಣ ಡಾ|| ಎಸ್.ಎಲ್. ಭೈರಪ್ಪನವರ ಪಾರ್ಥಿವ ಶರೀರಕ್ಕೆ ಇಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಅಂತಿಮ ನಮನಗಳನ್ನು ಸಲ್ಲಿಸಿ, ಗೌರವ ಅರ್ಪಿಸಲಾಯಿತು. ಅವರ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿ ಸಂತಾಪ ಸೂಚಿಸಲಾಯಿತು.
ತನ್ನ ಮೇರು ಸಾಹಿತಿಯನ್ನು ಕಳೆದುಕೊಂಡ ಕನ್ನಡ ಸಾರಸ್ವತ ಲೋಕ ಅನಾಥವಾಗಿದೆ. ಡಾ.ಭೈರಪ್ಪನವರು ಭೂತಿಕವಾಗಿ ನಮ್ಮ ನಡುವೆ ಇರದಿದ್ದರೂ ಅವರ ಕೃತಿಗಳ ಮೂಲಕ, ಅವರ ಕೋಟ್ಯಂತರ ಅಭಿಮಾನಿಗಳ ಹೃದಯದಲ್ಲಿ ಚಿರಸ್ಥಾಯಿಯಾಗಿದ್ದಾರೆ. -
B.S.Yediyurappa
@BSYBJP
ಅಂತ್ಯೋದಯ ಮತ್ತು ರಾಷ್ಟ್ರೀಯವಾದದ ದೃಢ ಸಂಕಲ್ಪದೊಂದಿಗೆ ಬಲಿಷ್ಠ ಸಂಘಟನೆಗೆ ಅಡಿಪಾಯ ಕಟ್ಟಿದ ಜನಸಂಘದ ಸಂಸ್ಥಾಪಕ ಪಂಡಿತ್ ದೀನದಯಾಳ್ ಉಪಾಧ್ಯಾಯರ ಜಯಂತಿಯಂದು ಆ ಮಹಾನ್ ಚೇತನಕ್ಕೆ ಶ್ರದ್ಧಾಪೂರ್ವಕ ಪ್ರಣಾಮಗಳು.
#panditdeendayalupadhyay #antyodaydiwas -
B.S.Yediyurappa
@BSYBJP
ನಾಡಿನ ಸಾಕ್ಷಿ ಪ್ರಜ್ಞೆಯಂತಿದ್ದ ಅದ್ವಿತೀಯ ಸಾಹಿತಿ, ಕನ್ನಡ ಸಾರಸ್ವತ ಲೋಕಕ್ಕೆ 'ಸರಸ್ವತಿ ಸಮ್ಮಾನ್' ಗೌರವವನ್ನು ತಂದುಕೊಟ್ಟ, ಪದ್ಮಭೂಷಣ ಡಾ|| ಎಸ್.ಎಲ್.ಭೈರಪ್ಪನವರು ವಿಧಿವಶರಾದ ಸುದ್ದಿ ತಿಳಿದು ಅತ್ಯಂತ ಆಘಾತವಾಗಿದೆ. ಕನ್ನಡ ಸಾಹಿತ್ಯವನ್ನು ರಾಷ್ಟ್ರೀಯ ಮಟ್ಟದಲ್ಲಿ ಮೆರೆಸಿದ, ದೇಶ ವಿದೇಶಗಳ ಸಾಹಿತ್ಯಾಸಕ್ತರ ನೆಚ್ಚಿನ ಸಾಹಿತಿಗಳಾಗಿದ್ದ, ಆ ಹಿರಿಯ ಸಾಹಿತಿಯನ್ನು ಕಳೆದುಕೊಂಡು ಕನ್ನಡ ನಾಡು, ನುಡಿ ಅನಾಥವಾದಂತಾಗಿದೆ, ಒಬ್ಬ ದಿಗ್ಗಜ ಸಾಹಿತಿಯನ್ನು, ಸಾಧಕ ಶ್ರೇಷ್ಠರನ್ನು ನಾವು ಕಳೆದುಕೊಂಡಿದ್ದೇವೆ. ಆ ದಿವ್ಯ, ಸಾರಸ್ವತ ಚೇತನಕ್ಕೆ ದೇವರು ಸದ್ಗತಿಯನ್ನು ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ.
ಡಾ.ಭೈರಪ್ಪನವರು ತಮ್ಮ ಅಗಾಧ ಪಾಂಡಿತ್ಯಪೂರ್ಣ ಕಾದಂಬರಿಗಳ ಮೂಲಕ ಭಾರತೀಯ ಸಂಸ್ಕೃತಿ, ಇತಿಹಾಸ, ತತ್ವಶಾಸ್ತ್ರ ಮತ್ತು ಮಾನವ ಸಂಬಂಧಗಳನ್ನು ಅತ್ಯಂತ ಆಳವಾಗಿ ವಿಶ್ಲೇಷಿಸುವ ಅಪೂರ್ವ ಕೃತಿಗಳನ್ನು ರಚಿಸಿ, ನಾಡಿನ ಸಾರಸ್ವತ ಪ್ರಪಂಚವನ್ನು ಶ್ರೀಮಂತಗೊಳಿಸಿದ್ದಾರೆ. ಅವರ ವಂಶವೃಕ್ಷ, ಪರ್ವ, ಸಾರ್ಥ, ಆವರಣದಂತಹ ಕೃತಿಗಳು ಕನ್ನಡ ಸಾಹಿತ್ಯಕ್ಕೆ ಒಂದು ಹೊಸ ದಿಕ್ಕನ್ನೇ ನೀಡಿವೆ. ಅಗಲಿದ ಮಹಾನ್ ಚೇತನಕ್ಕೆ ಅಶ್ರುಪೂರ್ಣ ಶ್ರದ್ಧಾಂಜಲಿಗಳನ್ನು ಸಲ್ಲಿಸುತ್ತಾ, ಅವರ ಕುಟುಂಬದವರಿಗೆ, ಅಪಾರ ಅಭಿಮಾನಿಗಳಿಗೆ ಆ ಮೇರು ವ್ಯಕ್ತಿತ್ವದ ಅಗಲಿಕೆಯ ದುಃಖವನ್ನು ಭರಿಸುವ ಶಕ್ತಿಯನ್ನು ದೇವರು ನೀಡಲಿ ಎಂದು ಕೋರುತ್ತೇನೆ. ಓಂ ಶಾಂತಿ🙏 -
B.S.Yediyurappa
@BSYBJP
ಜನಪ್ರಿಯ ಶಾಸಕರು, ಆತ್ಮೀಯರೂ ಆದ ಶ್ರೀ ಸುರೇಶ್ ಕುಮಾರ್ ಅವರ ಮಾತೃಶ್ರೀ ಶ್ರೀಮತಿ ಸುಶೀಲಮ್ಮನವರು ಇಂದು ವಿಧಿವಶರಾದ ಸುದ್ದಿ ತಿಳಿದು ಅತೀವ ದುಃಖವಾಗಿದೆ. ಅಗಲಿದ ಹಿರಿಯ ಚೇತನಕ್ಕೆ ದೇವರು ಸದ್ಗತಿ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ, ದುಃಖತಪ್ತ ಕುಟುಂಬದವರಲ್ಲಿ ತೀವ್ರ ಸಂತಾಪ ವ್ಯಕ್ತಪಡಿಸುತ್ತೇನೆ. ಓಂ ಶಾಂತಿ🙏🏼
@nimmasuresh -
B.S.Yediyurappa
@BSYBJP
-
B.S.Yediyurappa
@BSYBJP
ಜನಸೇವೆ, ಸಂಘಟನೆ ಮತ್ತು ನಾಡಿನ ಅಭಿವೃಧ್ಧಿಗಾಗಿ ನಿರಂತರ ಶ್ರಮಿಸಿದ ಹಿರಿಯ ನಾಯಕ, ಆತ್ಮೀಯ ಮಿತ್ರ ದಿವಂಗತ ಶ್ರೀ ಅನಂತಕುಮಾರ್ ಅವರ ಜನ್ಮದಿನದಂದು ಆ ಅದಮ್ಯ ಚೇತನಕ್ಕೆ ನನ್ನ ನಮನಗಳು.
-
B.S.Yediyurappa
@BSYBJP
ನಾಡಿನ ಸಮಸ್ತ ಜನತೆಗೆ ನವರಾತ್ರಿಯ ಶುಭಾಶಯಗಳು. ಜಗನ್ಮಾತೆಯ ಕೃಪೆ ನಾಡಿನ ಮೇಲೆ ಸದಾ ಇರಲಿ ಎಂದು ಹಾರೈಸುತ್ತೇನೆ.
-
B.S.Yediyurappa reposted
Narendra Modi
@narendramodi
My address to the nation. x.com/i/broadcasts/1RDGlAbkdarJL
-
B.S.Yediyurappa
@BSYBJP
ಆದರಣೀಯ ಪ್ರಧಾನಿ ಶ್ರೀ @narendramodi ರವರ 75ನೇ ಜನ್ಮದಿನದ ಪ್ರಯುಕ್ತ ಚಾಲನೆ ನೀಡಲಾಗಿರುವ ಸೇವಾ ಪಾಕ್ಷಿಕದ ಅಂಗವಾಗಿ ಬೆಂಗಳೂರಿನಲ್ಲಿ ಇಂದು ಪೌರಕಾರ್ಮಿಕರು, ಪಕ್ಷದ ಪ್ರಮುಖರು, ಮುಖಂಡರು ಮತ್ತು ನೂರಾರು ಕಾರ್ಯಕರ್ತರೊಂದಿಗೆ ಸ್ವಚ್ಛತಾ ಕಾರ್ಯ, ಸಸಿ ನೆಡುವುದೂ ಸೇರಿದಂತೆ ಹಲವು ಸೇವಾ ಕಾರ್ಯಗಳಲ್ಲಿ ಪಾಲ್ಗೊಳ್ಳಲಾಯಿತು. @BJP4Karnataka
#happybirthdaymodiji -
B.S.Yediyurappa
@BSYBJP
Heartfelt birthday greetings to our beloved Prime Minister Shri @narendramodi Ji. Your visionary leadership and tireless service continue to inspire millions. May you be blessed with good health and strength to steer our nation to greater heights.
ಜನ್ಮದಿನದ ಹಾರ್ದಿಕ ಶುಭಾಶಯಗಳು ಆದರಣೀಯ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಜೀ!!
#happybirthdaymodiji @PMOIndia @BJP4India @BJP4Karnataka -
B.S.Yediyurappa
@BSYBJP
ಸಮುದಾಯವನ್ನು ಒಡೆಯುವ ನಿಟ್ಟಿನಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರ ಮತ್ತೊಂದು ಸಾಮಾಜಿಕ ಸಮೀಕ್ಷೆಯ ಹೆಸರಿನಲ್ಲಿ ನಡೆಸಲು ಮುಂದಾಗಿರುವ ಹುನ್ನಾರದ ಕುರಿತು ವೀರಶೈವ ಲಿಂಗಾಯತ ಸಮುದಾಯದ ಪ್ರಮುಖರೊಂದಿಗೆ ಇಂದು ಚರ್ಚಿಸಲಾಯಿತು.
ಸಮಗ್ರ ಸಮುದಾಯ ಒಗ್ಗಟ್ಟಿನಿಂದ, ಎಲ್ಲ ಸಂತರ, ಹಿರಿಯರ ಮಾರ್ಗದರ್ಶನದಲ್ಲಿ ಮುನ್ನಡೆಯಲು ತೀರ್ಮಾನಿಸಲಾಗಿದ್ದು, ಸಮಾಜ ಒಡೆಯುವ ಯಾವುದೇ ರಾಜಕೀಯ ಕುತಂತ್ರಗಳನ್ನು ಮೆಟ್ಟಿ ನಿಲ್ಲಲಾಗುವುದು. -
B.S.Yediyurappa
@BSYBJP
ಹಾಸನ ಜಿಲ್ಲೆಯ ಮೊಸಳೆ ಹೊಸಳ್ಳಿಯಲ್ಲಿ ನಿನ್ನೆ ರಾತ್ರಿ ಗಣೇಶ ವಿಸರ್ಜನೆ ಮೆರವಣಿಗೆ ವೇಳೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ 8 ಜನರು ಮೃತಪಟ್ಟು, 20ಕ್ಕೂ ಹೆಚ್ಚು ಜನ ಗಾಯಗೊಂಡಿರುವ ಸುದ್ದಿ ತಿಳಿದು ತೀವ್ರ ಆಘಾತವಾಗಿದೆ. ದುರ್ಘಟನೆಯ ತೀವ್ರತೆ ಮನಸ್ಸನ್ನು ಕದಡಿದೆ.
ಮೃತಪಟ್ಟವರ ಆತ್ಮಕ್ಕೆ ಸದ್ಗತಿ ಸಿಗಲಿ, ಅವರ ಕುಟುಂಬದವರಿಗೆ ನೋವನ್ನು ಭರಿಸುವ ಶಕ್ತಿಯನ್ನು ದೇವರು ನೀಡಲಿ, ದುರಂತದಲ್ಲಿ ಗಾಯಗೊಂಡವರು ಆದಷ್ಟು ಶೀಘ್ರ ಗುಣಮುಖರಾಗಲಿ ಎಂದು ಪ್ರಾರ್ಥಿಸುತ್ತೇನೆ. -
B.S.Yediyurappa
@BSYBJP
ನಾಡು ಕಂಡ ಮೇರು ಕಲಾವಿದರಾದ ಅಭಿಮಾನಿಗಳ ನೆಚ್ಚಿನ 'ಸಾಹಸಸಿಂಹ' ಡಾ. ವಿಷ್ಣುವರ್ಧನ್ ಹಾಗೂ 'ಅಭಿನಯ ಸರಸ್ವತಿ' ಬಿ. ಸರೋಜಾದೇವಿ ಅವರಿಗೆ ಮರಣೋತ್ತರವಾಗಿ ‘ಕರ್ನಾಟಕ ರತ್ನ’ ಪ್ರಶಸ್ತಿ ಘೋಷಿಸಲಾಗಿದ್ದು, ಸಮಸ್ತ ಕನ್ನಡ ಕಲಾಭಿಮಾನಿಗಳ ಆಶಯಕ್ಕೆ ಮನ್ನಣೆ ದೊರೆತಂತಾಗಿದೆ.
-
B.S.Yediyurappa
@BSYBJP
Heartfelt birthday greetings to Aadaraniya Sarsanghachalak Shri Mohan Bhagwat ji. May you be blessed with good health and a long life dedicated to the service of Bharat.
@DrMohanBhagwat @RSSorg -
B.S.Yediyurappa
@BSYBJP
ಸುತ್ತೂರು ಸಂಸ್ಥಾನದ ಪರಮಪೂಜ್ಯ ಶ್ರೀ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳು, ಆದಿಚುಂಚನಗಿರಿ ಮಠದ ಪರಮಪೂಜ್ಯ ಶ್ರೀ ಶ್ರೀ ಡಾ. ನಿರ್ಮಲಾನಂದನಾಥ ಮಹಾಸ್ವಾಮಿಗಳು ಸೇರಿದಂತೆ ಹಲವು ಸಂತರ ದಿವ್ಯ ಸಾನ್ನಿಧ್ಯದಲ್ಲಿ, ಮಹಾನಗರ ಪಾಲಿಕೆ ವತಿಯಿಂದ ಬೆಂಗಳೂರಿನಲ್ಲಿ ನಿರ್ಮಿಸಲಾಗಿರುವ ಜಗಜ್ಯೋತಿ ಬಸವೇಶ್ವರರ ಪುತ್ಥಳಿ ಅನಾವರಣ ಸಮಾರಂಭದಲ್ಲಿ ಇಂದು ಪಾಲ್ಗೊಳ್ಳಲಾಯಿತು.
-
B.S.Yediyurappa
@BSYBJP
ನಾಡಿನ ಸಮಸ್ತ ಜನತೆಗೆ ಓಣಂ ಹಬ್ಬ, ಈದ್ ಮಿಲಾದ್ ಹಾಗೂ ಶಿಕ್ಷಕರ ದಿನಾಚರಣೆಯ ಶುಭ ಹಾರೈಕೆಗಳು. ಶಿಕ್ಷಣ ನೀಡಿ ಬದುಕಲು ಕಳಿಸಿದ ಶಿಕ್ಷಕರ ಸಂಸ್ಮರಣೆಗಳ ಜೊತೆಗೆ, ಈ ಸಂಭ್ರಮದ ದಿನವು ಎಲ್ಲರಿಗೂ ದೇವರಲ್ಲಿ ಶರಣಾಗತಿ, ಸುಗ್ಗಿಯ ಸಂಭ್ರಮವನ್ನು ಹಾಗು ಏಕತೆ, ಭ್ರಾತೃತ್ವದ ಭಾವನೆಯನ್ನು ಮತ್ತಷ್ಟು ಗಟ್ಟಿಗೊಳಿಸಲಿ ಎಂದು ಹಾರೈಸುತ್ತೇನೆ.
#onam #eidmilad #teachersday -
B.S.Yediyurappa
@BSYBJP
ಹೆಮ್ಮೆಯ ಪ್ರಧಾನಮಂತ್ರಿ ಸನ್ಮಾನ್ಯ ಶ್ರೀ @narendramodi ಜೀ ಮತ್ತು ಕೇಂದ್ರ ವಿತ್ತ ಸಚಿವ ಶ್ರೀಮತಿ @nsitharaman ರವರ ನೇತೃತ್ವದಲ್ಲಿ, ಜಿಎಸ್ಟಿ ಕೌನ್ಸಿಲ್ ಅನುಮೋದಿಸಿರುವ ಸುಧಾರಣಾ ಕ್ರಮಗಳು ಸ್ವಾಗತಾರ್ಹ, ಶ್ಲಾಘನೀಯ ಮಾತ್ರವಲ್ಲ, ಜನರ ಜೀವನಮಟ್ಟದಲ್ಲಿ ಮಹತ್ವಪೂರ್ಣ ಪರಿವರ್ತನೆ ಉಂಟುಮಾಡಬಲ್ಲ ಐತಿಹಾಸಿಕ ತೀರ್ಮಾನವಾಗಿದೆ. ಈ ಸುಧಾರಣೆಗಳು ದೇಶದ ಆರ್ಥಿಕತೆಯನ್ನು ಬಲಪಡಿಸುವಲ್ಲಿ ಕೇಂದ್ರ ಸರ್ಕಾರದ ಮತ್ತೊಂದು ಮಹತ್ವಪೂರ್ಣ ಮೈಲಿಗಲ್ಲಾಗಿದೆ. ದೇಶದ ಜನತೆಗೆ ದಸರಾ, ದೀಪಾವಳಿ ಹಬ್ಬಕ್ಕೆ ಕೇಂದ್ರ ಸರ್ಕಾರ ಸಂಭ್ರಮದ ಕೊಡುಗೆ ನೀಡಿದೆ.
ವಿಶೇಷವಾಗಿ ನಮ್ಮ ಅನ್ನದಾತ ರೈತರಿಗೆ ನೆರವಾಗಲು ರಸಗೊಬ್ಬರ ಇತ್ಯಾದಿಗಳ ಮೇಲಿನ ತೆರಿಗೆಯನ್ನು ಶೇ. 12 ರಿಂದ ಶೇ. 5ಕ್ಕೆ ಇಳಿಕೆ ಮಾಡಲಾಗಿದೆ. ಈ ಪರಿವರ್ತನಾತ್ಮಕ ಕ್ರಮಗಳು ನಾಗರಿಕರ ಜೀವನ ಮಟ್ಟವನ್ನು ಸುಧಾರಿಸಲಿದೆ, ಸಣ್ಣ ಮತ್ತು ಮಾಧ್ಯಮ ವರ್ಗದ ಉದ್ಯಮಗಳ ವ್ಯವಹಾರವನ್ನು ಮತ್ತಷ್ಟು ಸುಗಮಗೊಳಿಸಲಿದ್ದು, ಸ್ಥಳೀಯ ಉತ್ಪಾದನೆ ಮತ್ತು ಉದ್ಯಮಶೀಲತೆಗೆ ಮತ್ತಷ್ಟು ಶಕ್ತಿ ನೀಡಿದೆ.
ವಿಕಸಿತ ಭಾರತ ನಿರ್ಮಾಣದ ನಿಟ್ಟಿನಲ್ಲಿ ದೇಶದ ಆರ್ಥಿಕತೆಯನ್ನು ಮತ್ತಷ್ಟು ಬಲಿಷ್ಠಗೊಳಿಸಲು, ಎಲ್ಲರನ್ನೂ ಒಳಗೊಂಡಂತೆ ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಧ್ಯೇಯದಂತೆ, ಈ ಅಭಿವೃದ್ಧಿ ಕೇಂದ್ರಿತ ಜನಾನುರಾಗಿ ನಿರ್ಣಯಗಳಿಗಾಗಿ ಮತ್ತೊಮ್ಮೆ ಮಾನ್ಯ ಪ್ರಧಾನಮಂತ್ರಿಗಳಿಗೆ, ಮಾನ್ಯ ಕೇಂದ್ರ ವಿತ್ತ ಸಚಿವರಿಗೆ ಮತ್ತು ಜಿಎಸ್ಟಿ ಮಂಡಳಿಗೆ ಹೃತ್ಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ.
#viksitbharat #sabkasaathsabkavikas #nextgengst #nextgengstreforms
@PMOIndia @GST_Council @BJP4Karnataka @nsitharamanoffc -
B.S.Yediyurappa
@BSYBJP
The latest GST reform marks another significant stride by the central government in strengthening India’s economy. Congratulations to PM Shri. @narendramodi ji and FM Smt. @nsitharaman ji on spearheading this initiative.
@BJP4India @BJP4Karnataka @PMOIndia -
B.S.Yediyurappa
@BSYBJP
ಈಶ ಪ್ರತಿಷ್ಠಾನದ ಸದ್ಗುರು ಶ್ರೀ ಜಗ್ಗಿ ವಾಸುದೇವ್ ಅವರಿಗೆ ಜನ್ಮದಿನದ ಶುಭಾಶಯಗಳು. ನಿಮ್ಮ ಮಾರ್ಗದರ್ಶನ ಮತ್ತು ಸೇವಾಕಾರ್ಯಗಳು ಇನ್ನಷ್ಟು ಬೆಳಗುವಂತೆ ದೇವರು ಆಶೀರ್ವದಿಸಲಿ ಎಂದು ಹಾರೈಸುತ್ತೇನೆ.
@SadhguruJV @ishafoundation -
B.S.Yediyurappa
@BSYBJP
ಸುತ್ತೂರು ಮಠದ ಪರಮಪೂಜ್ಯ ಶ್ರೀ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳಿಗೆ ಜನ್ಮದಿನದ ಭಕ್ತಿಪೂರ್ವಕ ಶುಭಾಶಯಗಳು. ಅವರ ಅನುಗ್ರಹ, ಆಶೀರ್ವಾದ, ಸೇವಾ ಕಾರ್ಯ, ಮಾರ್ಗದರ್ಶನಗಳು ಸಮಾಜದ ಮೇಲೆ ನಿರಂತರವಾಗಿರಲಿ ಎಂದು ಪ್ರಾರ್ಥಿಸುತ್ತೇನೆ.
-
B.S.Yediyurappa reposted
Narendra Modi
@narendramodi
Sharing this month's #mannkibaat. Do tune in! x.com/i/broadcasts/1OyJAjmAQVWxb
-
B.S.Yediyurappa
@BSYBJP
ಮಾಜಿ ಕೇಂದ್ರ ಸಚಿವರು, ಕೇರಳ ಬಿಜೆಪಿ ರಾಜ್ಯಾಧ್ಯಕ್ಷರು, ಆತ್ಮೀಯರೂ ಆದ ರಾಜೀವ್ ಚಂದ್ರಶೇಖರ್ ಅವರ ತಂದೆ, ನಿವೃತ್ತ ಏರ್ ಕಮೋಡರ್ ಶ್ರೀ ಎಂ.ಕೆ.ಚಂದ್ರಶೇಖರ್ ವಿಧಿವಶರಾದ ಸುದ್ದಿ ಅತ್ಯಂತ ನೋವನ್ನು ಉಂಟುಮಾಡಿದೆ.
ಅವರ ನಿಧನದಿಂದ ದೇಶ ಒಬ್ಬ ಹಿರಿಯ ಯೋಧನನ್ನು ಕಳೆದುಕೊಂಡಿದೆ. ಅವರ ಆತ್ಮಕ್ಕೆ ಸದ್ಗತಿ ಪ್ರಾರ್ಥಿಸುತ್ತಾ, ಈ ದುಃಖವನ್ನು ಭರಿಸುವ ಶಕ್ತಿಯನ್ನು ಅವರ ಕುಟುಂಬಕ್ಕೆ ದೇವರು ನೀಡಲಿ ಎಂದು ಕೋರುತ್ತೇನೆ. ಓಂ ಶಾಂತಿ🙏🏼
@RajeevRC_X -
B.S.Yediyurappa
@BSYBJP
ನಾಡಿನ ಸಮಸ್ತ ಜನತೆಗೆ ಶ್ರೀ ವಿನಾಯಕ ಚತುರ್ಥಿ ಹಬ್ಬದ ಹಾರ್ದಿಕ ಶುಭಾಶಯಗಳು. ವಿಘ್ನಗಳನ್ನು ನಾಶಪಡಿಸಿ ಶ್ರೀ ವಿಘ್ನೇಶ್ವರನು ಎಲ್ಲರಿಗೂ ಮಂಗಳವನ್ನು ಅನುಗ್ರಹಿಸಲಿ ಎಂದು ಪ್ರಾರ್ಥಿಸುತ್ತೇನೆ.
-
B.S.Yediyurappa
@BSYBJP
ಎಲ್ಲ ಭಕ್ತ ಜನತೆಗೆ ಸ್ವರ್ಣಗೌರಿ ಹಬ್ಬದ ಹಾರ್ದಿಕ ಶುಭಾಶಯಗಳು. ಜಗನ್ಮಾತೆ ಎಲ್ಲರಿಗೂ ಯಶಸ್ಸು, ಸಂತೋಷ, ಆರೋಗ್ಯ, ನೆಮ್ಮದಿ ಮತ್ತು ಸಮೃದ್ಧಿಯನ್ನು ಅನುಗ್ರಹಿಸಲಿ ಎಂದು ಪ್ರಾರ್ಥಿಸುತ್ತೇನೆ.
-
B.S.Yediyurappa
@BSYBJP
My warm greetings and best wishes to you on your birthday hon'ble Finance Minister Smt. @nsitharaman Ji. May you be blessed with good health, happiness, and greater strength in your dedicated service to Bharat.
@nsitharamanoffc -
B.S.Yediyurappa
@BSYBJP
ನನ್ನ ಕರ್ಮಭೂಮಿ ಶಿಕಾರಿಪುರದಲ್ಲಿ ಇಂದು ಸಂಭ್ರಮ, ಸಾರ್ಥಕತೆಗಳಿಂದ ನಡೆದ ತಾಲ್ಲೂಕು ವ್ಯವಸಾಯೋತ್ಪನ್ನಗಳ ಮಾರಾಟ ಸಹಕಾರ ಸಂಘದ ವಜ್ರ ಮಹೋತ್ಸವ ಹಾಗೂ ಸ್ಮರಣ ಸಂಚಿಕೆ ಬಿಡುಗಡೆ ಸಮಾರಂಭದಲ್ಲಿ ಪಾಲ್ಗೊಳ್ಳಲಾಯಿತು. ಸಂಸದ ಶ್ರೀ @BYRBJP ಸೇರಿದಂತೆ ಜನಪ್ರತಿನಿಧಿಗಳು, ಸಂಘದ ಪದಾಧಿಕಾರಿಗಳು, ಅಪಾರ ಸಂಖ್ಯೆಯಲ್ಲಿ ರೈತಬಂಧುಗಳು, ನಾಗರಿಕರು ಉಪಸ್ಥಿತರಿದ್ದರು.
-
B.S.Yediyurappa
@BSYBJP
ಬೆಕ್ಕಿನಕಲ್ಮಠದ ಪೂಜ್ಯ ಶ್ರೀ ಡಾ॥ ಮಲ್ಲಿಕಾರ್ಜುನ ಮುರುಘರಾಜೇಂದ್ರ ಮಹಾಸ್ವಾಮಿಗಳು, ತೋಂಟದಾರ್ಯಮಠದ ಪೂಜ್ಯ ಶ್ರೀ ನಿಜಗುಣ ಪ್ರಭುತೋಂಟದಾರ್ಯ ಮಹಾಸ್ವಾಮಿಗಳು, ಬಸವತತ್ವ ಪೀಠದ ಪೂಜ್ಯ ಶ್ರೀ ಡಾ. ಬಸವ ಮರುಳಸಿದ್ದ ಸ್ವಾಮಿಗಳ ದಿವ್ಯಸಾನ್ನಿಧ್ಯದಲ್ಲಿ ಶಿವಮೊಗ್ಗದಲ್ಲಿ ಇಂದು ಶಿವಕುಮಾರ ಸ್ವಾಮೀಜಿಗಳ ನೌಕರರ ಸಂಘದ ವತಿಯಿಂದ ಆಯೋಜಿಸಲಾಗಿದ್ದ ವಿದ್ಯಾರ್ಥಿನಿಲಯ ಲೋಕಾರ್ಪಣೆ, ಸಂಘದ ಆಡಳಿತ ಕಚೇರಿ ಉದ್ಘಾಟನೆ, ಮಕ್ಕಳಿಗೆ ಪ್ರತಿಭಾ ಪುರಸ್ಕಾರ, ಶ್ರೀಕ್ಷೇತ್ರ ಸಿದ್ಧಗಂಗಾ ಮಠಕ್ಕೆ ಅಕ್ಕಿ ಸಮರ್ಪಣೆ ಮುಂತಾದ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಾಯಿತು.
ಸಂಸದರಾದ ಶ್ರೀ @BYRBJP, ಶಾಸಕರು, ಪ್ರಮುಖರು, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಶ್ರೀ ಸಿ.ಎಸ್. ಷಡಾಕ್ಷರಿ ಸೇರಿದಂತೆ ಹಲವಾರು ಗಣ್ಯರು ಉಪಸ್ಥಿತರಿದ್ದರು. -
B.S.Yediyurappa
@BSYBJP
ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಪರಮಪೂಜ್ಯ ಶ್ರೀ ಕುಮಾರ ಚಂದ್ರಶೇಖರನಾಥ ಮಹಾಸ್ವಾಮೀಜಿಗಳ ಅಗಲಿಕೆಯ ಸುದ್ದಿ ಕೇಳಿ ತೀವ್ರ ಆಘಾತವಾಗಿದೆ. ನಾಡಿನ ಶೈಕ್ಷಣಿಕ, ಧಾರ್ಮಿಕ ಕ್ಷೇತ್ರಗಳಿಗೆ ಮತ್ತು ಸೇವಾ ಕಾರ್ಯಗಳ ಮೂಲಕ ಅಪಾರ ಕೊಡುಗೆ ನೀಡಿದ್ದ ಪೂಜ್ಯ ಗುರುಗಳು ಆದರ್ಶಪ್ರಾಯ ಜೀವನ ನಡೆಸಿದ್ದರು. ಪೂಜ್ಯ ಶ್ರೀಗಳ ಆತ್ಮಕ್ಕೆ ದೇವರು ಚಿರಶಾಂತಿಯನ್ನು ಕರುಣಿಸಲಿ, ಅಪಾರ ಭಕ್ತವೃಂದಕ್ಕೆ ಗುರುಗಳ ಅಗಲಿಕೆಯ ದುಃಖವನ್ನು ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ. ಓಂ ಶಾಂತಿ 🙏
-
B.S.Yediyurappa
@BSYBJP
"ಕೃಷ್ಣಂ ವಂದೇ ಜಗದ್ಗುರುಂ"
ನಾಡಿನ ಸಮಸ್ತ ಭಕ್ತ ಜನತೆಗೆ ಶ್ರೀಕೃಷ್ಣ ಜನ್ಮಾಷ್ಟಮಿಯ ಭಕ್ತಿಪೂರ್ವಕ ಶುಭಾಶಯಗಳು. ಭಕ್ತಿ ಎನ್ನುವ ಬೆಣ್ಣೆಯನ್ನು ಕದ್ದ ಶ್ರೀಕೃಷ್ಣನೇ ಗೀತಾಚಾರ್ಯನಾಗಿ ಜಗತ್ತಿಗೆ ಜ್ಞಾನಾಮೃತವನ್ನೂ ನೀಡಿದ. ಅಂತಹ ಅವತಾರಪುರುಷ ಶ್ರೀಕೃಷ್ಣನ ಶ್ರೀರಕ್ಷೆ ನಾಡಿನ ಮೇಲೆ ಸದಾ ಇರಲಿ ಎಂದು ಪ್ರಾರ್ಥಿಸೋಣ. -
B.S.Yediyurappa
@BSYBJP
ದೇಶ ಕಂಡ ಮಹಾನ್ ನಾಯಕ, ಅದ್ವಿತೀಯ ಮುತ್ಸದ್ಧಿ, ಮಾಜಿ ಪ್ರಧಾನಮಂತ್ರಿ ಭಾರತರತ್ನ ಶ್ರೀ ಅಟಲ್ ಬಿಹಾರಿ ವಾಜಪೇಯಿ ಅವರ ಪುಣ್ಯತಿಥಿಯಂದು ಆ ಮಹಾನ್ ಚೇತನಕ್ಕೆ ಗೌರವ ಪೂರ್ವಕ ಪ್ರಣಾಮಗಳು. ಪೂಜ್ಯ ಅಟಲ್ ಜೀ ಒಬ್ಬ ಶ್ರೇಷ್ಠ ರಾಜಕಾರಣಿಯಾಗಿ ಮಾತ್ರವಲ್ಲದೆ, ಒಬ್ಬ ಕವಿ ಹೃದಯದ ದಿಟ್ಟ ನೇತಾರನಾಗಿ, ದೇಶದ ಅಭಿವೃದ್ಧಿಗೆ ಅಪಾರ ಕೊಡುಗೆ ನೀಡಿದ ಅಪ್ರತಿಮ ಆಡಳಿತಗಾರನಾಗಿ ಭಾರತೀಯರ ಹೃದಯದಲ್ಲಿ ಶಾಶ್ವತವಾಗಿ ನೆಲೆಸಿದ್ದಾರೆ.
#atalbiharivajpayee #sadaiva_atal -
B.S.Yediyurappa
@BSYBJP
ಸ್ವರಾಜ್ಯದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಪರಾಕ್ರಮಿ ನಾಯಕ ಶ್ರೀ ಸಂಗೊಳ್ಳಿ ರಾಯಣ್ಣನವರ ಜನ್ಮದಿನದಂದು, ಆ ಕ್ಷಾತ್ರ ಚೇತನಕ್ಕೆ ಅನಂತ ಪ್ರಣಾಮಗಳು. ಅವರ ಕೆಚ್ಚೆದೆಯ ದೇಶಪ್ರೇಮ, ತ್ಯಾಗ ಮತ್ತು ಹೋರಾಟಗಳು ರಾಷ್ಟ್ರ ಭಕ್ತರಿಗೆ ನಿರಂತರ ಪ್ರೇರಣೆ ನೀಡುತ್ತಿದೆ.
-
B.S.Yediyurappa
@BSYBJP
ನಮ್ಮ ದೇಶ, ನಮ್ಮ ಹೆಮ್ಮೆ! 🇮🇳
79ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಇಂದು ಶಿವಮೊಗ್ಗದ ಸ್ವಗೃಹದಲ್ಲಿ ರಾಷ್ಟ್ರ ದ್ವಜಾರೋಹಣೆ ನಡೆಸಿ, ನಂತರ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಲಾಯಿತು. ವಿಕಸಿತ ಭಾರತ ನಿರ್ಮಾಣದೆಡೆಗಿನ ನಮ್ಮ ಕರ್ತವ್ಯ ನಿರ್ವಹಣೆಯ ಸಂಕಲ್ಪದೊಂದಿಗೆ ನಾವೆಲ್ಲರೂ ಒಂದಾಗಿ ಮುನ್ನಡೆಯೋಣ. ಜೈ ಹಿಂದ್, ವಂದೇ ಮಾತರಂ🙏🏼 -
B.S.Yediyurappa
@BSYBJP
ಸಮಸ್ತ ಭಾರತೀಯರಿಗೆ 79ನೇ ಸ್ವಾತಂತ್ರ್ಯ ದಿನಾಚರಣೆಯ ಹಾರ್ದಿಕ ಶುಭಾಶಯಗಳು. ನಮ್ಮ ಸ್ವಾತಂತ್ರ್ಯ ಸಂಗ್ರಾಮದ ಇತಿಹಾಸ ಯಾವುದೇ ಸವಾಲನ್ನು ಎದುರಿಸುವ ಆತ್ಮವಿಶ್ವಾಸ ಮೂಡಿಸುವ ಜೊತೆಗೆ ಭವ್ಯ ರಾಷ್ಟ್ರನಿರ್ಮಾಣದ ನಿಟ್ಟಿನಲ್ಲಿ ನಮ್ಮ ಕರ್ತವ್ಯಗಳನ್ನೂ ನೆನಪಿಸುತ್ತದೆ. ಬನ್ನಿ, ನಾವೆಲ್ಲರೂ ಒಂದಾಗಿ, ಸಮೃದ್ಧ, ಸಶಕ್ತ, ವಿಕಸಿತ ಭಾರತಕ್ಕಾಗಿ ಮುನ್ನಡೆಯೋಣ. ಜೈ ಹಿಂದ್! 🇮🇳
#independenceday2025 -
B.S.Yediyurappa
@BSYBJP
ಕಲಬುರ್ಗಿಯ ಶರಣಬಸವೇಶ್ವರ ಸಂಸ್ಥಾನದ ಪೀಠಾಧಿಪತಿಗಳಾದ ಪರಮಪೂಜ್ಯ ಡಾ. ಶರಣಬಸವಪ್ಪ ಅಪ್ಪನವರು ಲಿಂಗೈಕ್ಯರಾದ ಸುದ್ದಿ ತಿಳಿದು ಅತ್ಯಂತ ದುಃಖವಾಗಿದೆ. ಧರ್ಮ ಜಾಗೃತಿ, ಸಮಾಜ ಸೇವೆ, ಶೈಕ್ಷಣಿಕ ಕ್ಷೇತ್ರದಲ್ಲಿ ಅದಮ್ಯ ಸಾಧನೆ ಮಾಡಿದ ಅವರ ನಿಧನದಿಂದ ಒಬ್ಬ ಶ್ರೇಷ್ಠ ಕಾಯಕಯೋಗಿ ಗುರುಗಳನ್ನು ನಾವು ಕಳೆದುಕೊಂಡಿದ್ದೇವೆ. ಅವರ ಆಶೀರ್ವಾದ ಭಕ್ತರ ಮೇಲೆ ಸದಾ ಇರಲಿ ಎಂದು ಪ್ರಾರ್ಥಿಸುತ್ತಾ, ಅವರ ಅಪಾರ ಭಕ್ತರಿಗೆ, ಶಿಷ್ಯರಿಗೆ, ಗುರುಗಳ ಅಗಲಿಕೆಯ ನೋವನ್ನು ಭರಿಸುವ ಶಕ್ತಿಯನ್ನು ದೇವರು ನೀಡಲಿ ಎಂದು ಪ್ರಾರ್ಥಿಸುತ್ತೇನೆ.
-
B.S.Yediyurappa
@BSYBJP
ನಮ್ಮ ಮನೆ, ನಮ್ಮ ಹೆಮ್ಮೆ, ನಮ್ಮ ತ್ರಿವರ್ಣ ಧ್ವಜ! 🇮🇳
ಸ್ವಾತಂತ್ರ್ಯದ ಅಮೂಲ್ಯ ಸ್ಮರಣೆಯನ್ನು ಹೃದಯದಲ್ಲಿ ಜಾಗೃತಿಗೊಳಿಸುವ ಹರ್ ಘರ್ ತಿರಂಗಾ ಅಭಿಯಾನದಲ್ಲಿ ಭಾಗಿಯಾದ ಹೆಮ್ಮೆ ಮತ್ತು ಸಂತೋಷ. ನಮ್ಮ ರಾಷ್ಟ್ರ ಧ್ವಜ ಹಾರುವಾಗ, ಹೃದಯದಲ್ಲಿ ಹೆಮ್ಮೆ ಹೆಚ್ಚುತ್ತದೆ, ದೇಶಪ್ರೇಮ ಮತ್ತಷ್ಟು ಪ್ರಜ್ವಲಿಸುತ್ತದೆ.
#harghartiranga #hgt2025 -
B.S.Yediyurappa
@BSYBJP
ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಗಳ 354ನೇ ಆರಾಧನಾ ಮಹೋತ್ಸವದಂದು ಗುರುಸಾರ್ವಭೌಮರ ಚರಣಗಳಿಗೆ ಭಕ್ತಿಪೂರ್ವಕ ಪ್ರಣಾಮಗಳು.
-
B.S.Yediyurappa
@BSYBJP
ಬೆಂಗಳೂರು ಮೆಟ್ರೋ 2ನೇ ಹಂತದ ಹಳದಿ ಮಾರ್ಗ ಉದ್ಘಾಟನೆ, ಬೆಂಗಳೂರು ಮೆಟ್ರೋ 3ನೇ ಹಂತದ ಶಂಕುಸ್ಥಾಪನೆ, 3 ವಂದೇ ಭಾರತ್ ಎಕ್ಸ್ ಪ್ರೆಸ್ ರೈಲುಗಳಿಗೆ ಚಾಲನೆ ಸೇರಿದಂತೆ ಹಲವಾರು ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಸಲುವಾಗಿ ಬೆಂಗಳೂರಿಗೆ ಇಂದು ಆಗಮಿಸಿದ ಹೆಮ್ಮೆಯ ಪ್ರಧಾನಮಂತ್ರಿ ಸನ್ಮಾನ್ಯ ಶ್ರೀ @narendramodi ರವರಿಗೆ ಹೆಚ್.ಎ.ಎಲ್ ವಿಮಾನ ನಿಲ್ದಾಣಕ್ಕೆ ತೆರಳಿ ಸ್ವಾಗತ ಕೋರಲಾಯಿತು. ಈ ಸಂದರ್ಭದಲ್ಲಿ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಶ್ರೀ ಆರ್.ಅಶೋಕ ಮತ್ತು ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
@PMOIndia @BJP4Karnataka @RAshokaBJP -
B.S.Yediyurappa
@BSYBJP
ನಾಡು ಕಂಡ ಅಪರೂಪದ ಹಿರಿಯ ವಿದ್ವಾಂಸರು, ಕನ್ನಡ, ಸಂಸ್ಕೃತ ಭಾಷೆಗಳಲ್ಲಿ ಹಲವಾರು ಶಾಸ್ತ್ರೀಯ ಕೃತಿಗಳನ್ನು ರಚಿಸಿದ ಹೆಮ್ಮೆಯ ಸಾಹಿತಿ, ಕವಿ, ಚಿಂತಕರು, ಜನಪ್ರಿಯ ಪ್ರವಚನಕಾರರಾಗಿದ್ದ ದಿವಂಗತ ಪದ್ಮಶ್ರೀ ವಿದ್ಯಾವಾಚಸ್ಪತಿ ಡಾ. ಬನ್ನಂಜೆ ಗೋವಿಂದಾಚಾರ್ಯರ 90ನೇ ಜನ್ಮವರ್ಧಂತಿ ಸಂದರ್ಭದಲ್ಲಿ ಆ ಸಾಧಕ ಚೇತನಕ್ಕೆ ಅನಂತ ಪ್ರಣಾಮಗಳು.
-
B.S.Yediyurappa
@BSYBJP
ರಕ್ಷಾ ಬಂಧನದ ಪವಿತ್ರ ಸಂದರ್ಭದಲ್ಲಿ ಎಲ್ಲರಿಗೂ ಹೃದಯಪೂರ್ವಕ ಶುಭಾಶಯಗಳು. ಸಹೋದರ ಸಹೋದರಿಯರ ನಡುವಿನ ಪ್ರೀತಿ, ವಿಶ್ವಾಸ ಮತ್ತು ರಕ್ಷಣೆಯ ಪವಿತ್ರ ಬದ್ಧತೆ ಯಾವಾಗಲೂ ಸದೃಢವಾಗಿರಲಿ.
#rakshabandhan2025 -
B.S.Yediyurappa
@BSYBJP
ಎಲ್ಲರಿಗೂ ವರಮಹಾಲಕ್ಷ್ಮಿ ಹಬ್ಬದ ಭಕ್ತಿಪೂರ್ವಕ ಶುಭಾಶಯಗಳು. ಜಗನ್ಮಾತೆ ಮಹಾಲಕ್ಷ್ಮಿ ಎಲ್ಲರಿಗೂ ಸುಖ, ಸಮೃದ್ಧಿ, ಆರೋಗ್ಯ, ಯಶಸ್ಸುಗಳನ್ನು ಕರುಣಿಸಲಿ, ಎಲ್ಲರ ನೋವು, ಸಂಕಷ್ಟಗಳನ್ನು ಪರಿಹರಿಸಲಿ ಎಂದು ಪ್ರಾರ್ಥಿಸೋಣ.
-
B.S.Yediyurappa
@BSYBJP
ರಾಜ್ಯದ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಸಿದ್ದರಾಮಯ್ಯನವರಿಗೆ ಜನ್ಮದಿಂದ ಹಾರ್ದಿಕ ಶುಭಾಶಯಗಳು. ದೇವರ ಅನುಗ್ರಹ ಸದಾ ಇರಲಿ ಎಂದು ಹಾರೈಸುತ್ತೇನೆ.
@siddaramaiah @CMofKarnataka -
B.S.Yediyurappa
@BSYBJP
ಬೆಕ್ಕಿನಕಲ್ಮಠದ ಪೂಜ್ಯ ಡಾ. ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಮಹಾಸ್ವಾಮಿಗಳು, ಬಸವತತ್ವ ಪೀಠದ ಪೂಜ್ಯ ಶ್ರೀ ಡಾ. ಬಸವ ಮರುಳಸಿದ್ದ ಸ್ವಾಮಿಗಳ ದಿವ್ಯ ಸಾನ್ನಿಧ್ಯದಲ್ಲಿ ಶಿವಮೊಗ್ಗದಲ್ಲಿ ಇಂದು ಶ್ರೀ ಬಸವೇಶ್ವರ ವೀರಶೈವ ಲಿಂಗಾಯತ ಸಮಾಜ ಸೇವಾ ಸಂಘದ ವತಿಯಿಂದ ನಡೆದ ಪ್ರತಿಭಾ ಪುರಸ್ಕಾರ ಮತ್ತು ಅಭಿನಂದನಾ ಸಮಾರಂಭದಲ್ಲಿ ಪಾಲ್ಗೊಳ್ಳಲಾಯಿತು.
-
B.S.Yediyurappa
@BSYBJP
ಅಖಿಲ ಭಾರತ ವೀರಶೈವ-ಲಿಂಗಾಯತ ಮಹಾಸಭಾದ ಬೆಂಗಳೂರು ನಗರ ಜಿಲ್ಲಾ ಘಟಕದ ವತಿಯಿಂದ ಇಂದು ನಗರದಲ್ಲಿ ಆಯೋಜಿಸಲಾಗಿದ್ದ ಸಾಧಕರಿಗೆ ಸನ್ಮಾನ ಸಮಾರಂಭದಲ್ಲಿ ಪಾಲ್ಗೊಂಡು, ಸಮಿತಿಯವರು ಅಭಿಮಾನಪೂರ್ವಕವಾಗಿ ನೀಡಿದ 'ಬಸವಶ್ರೀ' ಗೌರವವನ್ನು ಸ್ವೀಕರಿಸಲಾಯಿತು. ತುಮಕೂರಿನ ಸಿದ್ದಗಂಗೆಯ ಪರಮಪೂಜ್ಯ ಶ್ರೀ ಶಿವಸಿದ್ದೇಶ್ವರ ಸ್ವಾಮೀಜಿ, ಕೆ.ವಿ.ವಿ.ಸಂಸ್ಥೆಯ ಅಧ್ಯಕ್ಷರಾದ ಶ್ರೀ ಬಿ.ಎಸ್.ಪರಮಶಿವಯ್ಯ ಸೇರಿದಂತೆ ಹಲವಾರು ಗಣ್ಯರು, ಪ್ರಮುಖರು ಉಪಸ್ಥಿತರಿದ್ದರು.
-
B.S.Yediyurappa
@BSYBJP
ನೆಚ್ಚಿನ ಪ್ರಧಾನಿ ಶ್ರೀ ನರೇಂದ್ರ ಮೋದಿಯವರು ದೇಶವನ್ನುದ್ದೇಶಿಸಿ ಪ್ರತಿ ತಿಂಗಳು ನಡೆಸಿಕೊಡುವ 'ಮನ್ ಕಿ ಬಾತ್' ಕಾರ್ಯಕ್ರಮವನ್ನು ಇಂದು ಬೆಂಗಳೂರಿನ ಸ್ವಗೃಹದಲ್ಲಿ ವೀಕ್ಷಿಸಲಾಯಿತು. #mannkibaat
@narendramodi @PMOIndia @mannkibaat -
B.S.Yediyurappa
@BSYBJP
ಭಾರತೀಯ ಸೇನಾಪಡೆಗಳ ನಮ್ಮ ವೀರ ಯೋಧರ ಕರ್ತವ್ಯನಿಷ್ಠೆ, ಧೈರ್ಯ, ದೇಶಭಕ್ತಿ ಅದ್ವಿತೀಯ. ದೇಶ ರಕ್ಷಣೆಯ ಕಾಯಕದಲ್ಲಿ ಪ್ರಾಣತ್ಯಾಗ ಮಾಡಿರುವ ಹುತಾತ್ಮ ಯೋಧರ ಋಣ ನಮ್ಮೆಲ್ಲರ ಮೇಲಿದೆ. ನಮ್ಮ ಸೈನಿಕರು ಮತ್ತು ಅವರ ಕುಟುಂಬಗಳ ನಿಸ್ವಾರ್ಥ ಸೇವೆ, ತ್ಯಾಗಗಳಿಗೆ ಈ ಕಾರ್ಗಿಲ್ ವಿಜಯ ದಿವಸದಂದು ಗೌರವಪೂರ್ವಕ ನಮನಗಳನ್ನು ಸಲ್ಲಿಸೋಣ. #kargilvijaydivas
-
B.S.Yediyurappa
@BSYBJP
ಹೆಮ್ಮೆಯ ನಾಯಕ ಶ್ರೀ ನರೇಂದ್ರ ಮೋದಿ ಜೀ ಈ ದೇಶ ಕಂಡ ಅತ್ಯಂತ ಶ್ರೇಷ್ಠ ಪ್ರಧಾನಮಂತ್ರಿಗಳು. ವಿಶ್ವವೇ ನಿಬ್ಬರಗಾಗುವಂತೆ ಭಾರತದ ಸಾಮರ್ಥ್ಯವನ್ನು ವಿಸ್ತರಿಸಿ, ದೇಶದ ಸಾರ್ವಭೌಮತ್ವವನ್ನು ಜಾಗತಿಕವಾಗಿ ಮುಂಚೂಣಿಗೆ ತಂದು ನಿಲ್ಲಿಸಿದ್ದು ಪ್ರಧಾನಿ ಶ್ರೀ ನರೇಂದ್ರ ಮೋದಿಜೀ ರವರು. ಹಲವು ಐತಿಹಾಸಿಕ ಪ್ರಥಮಗಳಿಗೆ ಕಾರಣರಾಗಿರುವ ಅವರು ಇದೀಗ ಭಾರತದ ಪ್ರಧಾನಿಗಳಾಗಿ ಸತತ 4,078 ದಿನಗಳನ್ನು ಪೂರೈಸುವ ಮೂಲಕ ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಭಾರತದ ಪ್ರಧಾನಿಗಳ ದ್ವಿತೀಯ ಸತತ ಸೇವಾ ದಾಖಲೆಯನ್ನು ದಾಟಿ ಚಾರಿತ್ರಿಕ ಹೆಜ್ಜೆ ಇಟ್ಟಿದ್ದಾರೆ.
ಭಾರತವನ್ನು ಇನ್ನಷ್ಟು ಬಲಿಷ್ಠಗೊಳಿಸುವ ನಿಟ್ಟಿನಲ್ಲಿ ಅವರ ಸೇವೆ ಹಾಗೂ ಅವಧಿ ಹಲವು ಪ್ರಥಮಗಳನ್ನು ಸಾಧಿಸುವತ್ತ ಮುನ್ನುಗ್ಗಲಿ ಎಂದು ಹೃತ್ಪೂರ್ವಕವಾಗಿ ಹಾರೈಸಿ ಅಭಿನಂದಿಸುತ್ತೇನೆ.
@narendramodi @PMOIndia -
B.S.Yediyurappa
@BSYBJP
A proud moment for the nation and every karyakarta of the BJP.
Congratulations to PM Shri @narendramodi Ji on completing 4,078 consecutive days in office, becoming the second longest-serving Prime Minister in India’s history.
Your leadership continues to redefine governance, inspire generations and strengthen Bharat’s place on the global stage.
@PMOIndia -
B.S.Yediyurappa
@BSYBJP
ಸಿದ್ದಗಂಗೆಯ ಶ್ರೀಮಠವನ್ನು ಗುರುಗಳು ಹಾಕಿಕೊಟ್ಟ ದಾರಿಯಲ್ಲಿಯೇ ಅತ್ಯುತ್ತಮವಾಗಿ ಮುನ್ನಡೆಸಿಕೊಂಡು ಹೋಗುತ್ತಿರುವ ಶ್ರೀ ಸಿದ್ದಗಂಗಾ ಮಠದ ಪೀಠಾಧಿಪತಿ ಪರಮಪೂಜ್ಯ ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳಿಗೆ ಜನ್ಮದಿನದ ಭಕ್ತಿಪೂರ್ವಕ ಶುಭಾಶಯಗಳು. ಅವರ ಮಾರ್ಗದರ್ಶನ ಹಾಗೂ ಆಶೀರ್ವಾದ ಭಕ್ತರ ಮೇಲೆ ಸದಾ ಇರಲಿ ಎಂದು ಪ್ರಾರ್ಥಿಸುತ್ತೇನೆ.
-
B.S.Yediyurappa
@BSYBJP
ದಾವಣಗೆರೆಯಲ್ಲಿ ನಡೆಯುತ್ತಿರುವ ಶ್ರೀ ಜಗದ್ಗುರು ಪಂಚಪೀಠಾಧೀಶ್ವರರ ಅಪೂರ್ವ, ದಿವ್ಯಸಾನ್ನಿಧ್ಯದಲ್ಲಿ, ವೀರಶೈವ ಪೀಠಾಚಾರ್ಯರ ಹಾಗೂ ಶಿವಾಚಾರ್ಯರ ಶೃಂಗ ಸಮ್ಮೇಳನದಲ್ಲಿ ಇಂದು ಪಾಲ್ಗೊಳ್ಳಲಾಯಿತು. ಸಮಾಜದ ಎಲ್ಲ ಶ್ರೀಚರಣರು, ಶ್ರೀ ಶಾಮನೂರು ಶಿವಶಂಕರಪ್ಪನವರು ಸೇರಿದಂತೆ ಎಲ್ಲ ಮುಖಂಡರು, ಗಣ್ಯರು ಈ ಬೃಹತ್ ಸಭೆಯಲ್ಲಿ ಉಪಸ್ಥಿತರಿದ್ದರು.
-
B.S.Yediyurappa
@BSYBJP
ಶ್ರೀ ಆದಿಚುಂಚನಗಿರಿ ಮಠಾಧೀಶರಾದ ಪರಮಪೂಜ್ಯ ಶ್ರೀ ಡಾ. ನಿರ್ಮಲಾನಂದನಾಥ ಸ್ವಾಮಿಗಳಿಗೆ ಜನ್ಮದಿನದ ಭಕ್ತಿಪೂರ್ವಕ ಶುಭಾಶಯಗಳು. ಶ್ರೀಗಳ ಧಾರ್ಮಿಕ, ಆಧ್ಯಾತ್ಮಿಕ ಚಿಂತನೆಗಳು, ಸನಾತನ ಸಂಸ್ಕೃತಿಯ ರಕ್ಷಣೆ ಮತ್ತು ಶೈಕ್ಷಣಿಕ, ಆರೋಗ್ಯ ಕ್ಷೇತ್ರಗಳ ಸೇವಾಕಾರ್ಯಗಳು ಮತ್ತಷ್ಟು ಸಾರ್ಥಕವಾಗಿ ಮುಂದುವರಿಯಲಿ ಎಂದು ಪ್ರಾರ್ಥಿಸುತ್ತೇನೆ.
@Jaisrigurudev -
B.S.Yediyurappa
@BSYBJP
ಶ್ರೀ ಶಿವಶರಣ ಮಾದಾರ ಚನ್ನಯ್ಯ ಗುರುಪೀಠದ ಪೀಠಾಧಿಪತಿಗಳಾದ ಪರಮಪೂಜ್ಯ ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿಗಳಿಗೆ ಜನ್ಮದಿನದ ಭಕ್ತಿಪೂರ್ವಕ ಶುಭಾಶಯಗಳು.
-
B.S.Yediyurappa
@BSYBJP
ಕಾರ್ಕಳ ಕ್ಷೇತ್ರದ ಜನಪ್ರಿಯ ಶಾಸಕರು, ಪಕ್ಷದ ನಾಯಕರಾದ ಶ್ರೀ ವಿ.ಸುನೀಲ್ ಕುಮಾರ್ ಅವರ ತಂದೆ ಶ್ರೀ ಎಂ.ಕೆ.ವಾಸುದೇವ ಅವರು ನಿಧನರಾದ ಸುದ್ದಿ ಕೇಳಿ ಅತ್ಯಂತ ದುಃಖವಾಗಿದೆ. 'ವಾಸು ಮಾಷ್ಟ್ರು' ಎಂದೇ ಪರಿಚಿತರಾಗಿದ್ದ ಅವರು ಹಿರಿಯ ಸ್ವಯಂಸೇವಕರಾಗಿ ಹಲವಾರು ದಶಕಗಳ ಕಾಲ ಸಂಘದ ಕಾರ್ಯಗಳಲ್ಲಿ ಸಕ್ರಿಯರಾಗಿದ್ದರು. ಅಗಲಿದ ಹಿರಿಯರ ಆತ್ಮಕ್ಕೆ ಚಿರಶಾಂತಿಯನ್ನು ಪ್ರಾರ್ಥಿಸುತ್ತಾ, ಅವರ ಶೋಕತಪ್ತ ಕುಟುಂಬದ ಸದಸ್ಯರು, ಬಂಧು ಮಿತ್ರರು ಹಾಗು ಅಭಿಮಾನಿಗಳಲ್ಲಿ ತೀವ್ರ ಸಂತಾಪಗಳನ್ನು ಸಲ್ಲಿಸುತ್ತೇನೆ. ಓಂ ಶಾಂತಿ 🙏
-
B.S.Yediyurappa
@BSYBJP
ಹೆಮ್ಮೆಯ, ಸಂಭ್ರಮದ ಕ್ಷಣ! ದಶಕಗಳ ಹೋರಾಟ, ಶರಾವತಿ ಹಿನ್ನೀರಿನ ಸಂತ್ರಸ್ತರ ಅಪೇಕ್ಷೆ ಈಡೇರಿದ ಸಾರ್ಥಕ ಸಂದರ್ಭ!!
ಶರಾವತಿ ನದಿ ಹಿನ್ನೀರಿಗೆ ನಿರ್ಮಿಸಲಾಗಿರುವ ಅತ್ಯಾಧುನಿಕ ತಾಂತ್ರಿಕ ವ್ಯವಸ್ಥೆಯ 2.25 ಕಿ.ಮೀ ಉದ್ದದ ದೇಶದ ಎರಡನೇ ಅತಿ ದೊಡ್ಡದಾದ ಭವ್ಯ ಸಂಪರ್ಕ ಸೇತುವೆ, "ಅಂಬಾರಗೋಡ್ಲು - ಕಳಸವಳ್ಳಿ - ಸಿಗಂದೂರು ಸೇತುವೆ"ಯನ್ನು ಹೆಮ್ಮೆಯ ಪ್ರಧಾನಿ ಶ್ರೀ @narendramodi ಜೀ ಅವರ ಪರವಾಗಿ ಕೇಂದ್ರ ಭೂಸಾರಿಗೆ ಸಚಿವ ಸನ್ಮಾನ್ಯ ಶ್ರೀ @nitin_gadkari ಜೀ ಹಾಗೂ ಕೇಂದ್ರ ಆಹಾರ ನಾಗರೀಕ ಸರಬರಾಜು ಸಚಿವ ಶ್ರೀ @JoshiPralhad ರವರ ಉಪಸ್ಥಿತಿಯಲ್ಲಿ ಇಂದು ಲೋಕಾರ್ಪಣೆಗೊಳಿಸಲಾಯಿತು.
ಹಿರಿಯರಾದ ಶ್ರೀ ಕಾಗೋಡು ತಿಮ್ಮಪ್ಪನವರು, ಪಕ್ಷದ ರಾಜ್ಯಾಧ್ಯಕ್ಷ ಶ್ರೀ @BYVijayendra, ಸ್ಥಳೀಯ ಸಂಸದರಾದ ಶ್ರೀ @BYRBJP ಸೇರಿದಂತೆ ಹಲವಾರು ಜನಪ್ರತಿನಿಧಿಗಳು, ಶಾಸಕರು, ಗಣ್ಯರು, ಸಾವಿರಾರು ಸಂಖ್ಯೆಯಲ್ಲಿ ನೆರೆದಿದ್ದ ಸಾರ್ವಜನಿಕರ ಉಪಸ್ಥಿತಿಯಲ್ಲಿ ನಡೆದ ಲೋಕಾರ್ಪಣೆ ಸಮಾರಂಭದ ಅಂಗವಾಗಿ ನಡೆದ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಾಯಿತು.
@PMOIndia @MORTHIndia @OfficeOfNG @BJP4Karnataka -
B.S.Yediyurappa
@BSYBJP
ಹಿರಿಯ ಕಲಾವಿದೆ, ಅಭಿನಯ ಸರಸ್ವತಿ ಎಂದೇ ಖ್ಯಾತರಾಗಿದ್ದ ಪದ್ಮಭೂಷಣ ಬಿ.ಸರೋಜಾದೇವಿ ಅವರು ವಿಧಿವಶರಾದ ಸುದ್ದಿ ತಿಳಿದು ಅತ್ಯಂತ ದುಃಖವಾಗಿದೆ. ಕನ್ನಡ, ತಮಿಳು, ತೆಲುಗು ಹಿಂದಿ ಸೇರಿದಂತೆ ಹಲವಾರು ಭಾಷೆಗಳ 200ಕ್ಕೂ ಅಧಿಕ ಚಲನಚಿತ್ರಗಳಲ್ಲಿ ಅಭಿನಯಿಸಿದ್ದ ಅವರ ನಿಧನದಿಂದ ಭಾರತೀಯ ಚಿತ್ರರಂಗ ತನ್ನ ಮಾತೃಸ್ವರೂಪಿ ಕಲಾವಿದೆಯನ್ನು ಕಳೆದುಕೊಂಡಂತಾಗಿದೆ.
ಅವರ ಅಭಿನಯದ ಕಿತ್ತೂರು ಚೆನ್ನಮ್ಮ, ಭಕ್ತ ಕನಕದಾಸ, ಕಸ್ತೂರಿ ನಿವಾಸ ಮೊದಲಾದ ಅನೇಕ ಸ್ಮರಣೀಯ ಚಿತ್ರಗಳು ಅವರ ಕಲಾವಂತಿಕೆಯನ್ನು ಶಾಶ್ವತವಾಗಿರಿಸಿದೆ.
ಅವರ ಆತ್ಮಕ್ಕೆ ಚಿರಶಾಂತಿಯನ್ನು ಕೋರುತ್ತಾ, ದೇವರು ಅವರ ಕುಟುಂಬದವರಿಗೆ, ಅವರ ಅಪಾರ ಅಭಿಮಾನಿಗಳಿಗೆ ಆ ಹಿರಿಯ ಕಲಾವಿದೆಯ ಅಗಲಿಕೆಯ ನೋವನ್ನು ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ. ಓಂ ಶಾಂತಿ 🙏🏼 -
B.S.Yediyurappa
@BSYBJP
ಹಿರಿಯ ರಾಜಕಾರಣಿ, ವಿಧಾನ ಪರಿಷತ್ತಿನ ಮಾಜಿ ಸಭಾಪತಿಗಳು, ಅಖಿಲ ಭಾರತ ವೀರಶೈವ ಮಹಾಸಭಾ ರಾಜ್ಯ ಘಟಕದ ಮಾಜಿ ಅಧ್ಯಕ್ಷರೂ ಆದ ಶ್ರೀ ಎನ್.ತಿಪ್ಪಣ್ಣರವರು ವಿಧಿವಶರಾದ ಸುದ್ದಿ ಕೇಳಿ ಅತೀವ ದುಃಖವಾಗಿದೆ.
ನಾಲ್ಕು ಬಾರಿ ವಿಧಾನ ಪರಿಷತ್ ಸದಸ್ಯರಾಗಿ, ವಿರೋಧ ಪಕ್ಷದ ಉಪನಾಯಕರಾಗಿ, ಸಭಾಪತಿಯಾಗಿ ಕೆಲಸ ಮಾಡಿದ್ದ ಶ್ರೀ ತಿಪ್ಪಣ್ಣನವರನ್ನು ಹತ್ತಿರದಿಂದ ಕಂಡಿದ್ದೇನೆ. ತಮ್ಮ ಸರಳ ವ್ಯಕ್ತಿತ್ವ, ಸಕಾರಾತ್ಮಕ ರಾಜಕಾರಣದಿಂದಲೇ ರಾಜಕಾರಣದಲ್ಲಿ ಅವರು ತಮ್ಮ ಛಾಪು ಮೂಡಿಸಿದ್ದರು. ಅಖಿಲ ಭಾರತ ವೀರಶೈವ ಮಹಾಸಭಾದ ರಾಜ್ಯ ಘಟಕದ ಅಧ್ಯಕ್ಷರಾಗಿ ಕೂಡ ಅವರು ಉತ್ತಮವಾಗಿ ಕಾರ್ಯನಿರ್ವಹಿಸಿದ್ದರು. ಅವರ ನಿಧನದಿಂದ ರಾಜ್ಯ ರಾಜಕೀಯ ಕ್ಷೇತ್ರದಲ್ಲಿ ವಿಶಿಷ್ಟ ಹೆಜ್ಜೆಗುರುತು ಮೂಡಿಸಿದ್ದ ಹಿರಿಯ ರಾಜಕಾರಣಿಯನ್ನು ನಾವು ಕಳೆದುಕೊಂಡಿದ್ದೇವೆ.
ದೇವರು ಆ ಹಿರಿಯ ಚೇತನಕ್ಕೆ ಸದ್ಗತಿಯನ್ನು ಕರುಣಿಸಲಿ, ಅವರ ಕುಟುಂಬ, ಬಂಧು ಮಿತ್ರರು ಮತ್ತು ಅಭಿಮಾನಿಗಳಿಗೆ ಹಿರಿಯರ ಅಗಲಿಕೆಯ ನೋವನ್ನು ಭರಿಸುವ ಶಕ್ತಿಯನ್ನು ನೀಡಲಿ ಎಂದು ಪ್ರಾರ್ಥಿಸುತ್ತೇನೆ. ಓಂ ಶಾಂತಿ 🙏 -
B.S.Yediyurappa
@BSYBJP
"ಗುರುವಿನ ಕರುಣದಿಂದ ಸಜ್ಜನ ಸದ್ಭಕ್ತರ ಸದ್ಗೋಷ್ಠಿಯ ಕಂಡೆ ಚೆನ್ನಮಲ್ಲಿಕಾರ್ಜುನಯ್ಯಾ" - ಗುರು ಪೂರ್ಣಿಮೆಯ ಪವಿತ್ರ ದಿನವಾದ ಇಂದು, ಶ್ರೀಶೈಲ ಜಗದ್ಗುರು ಪರಮಪೂಜ್ಯ ಶ್ರೀ ಡಾ.ಚನ್ನಸಿದ್ದರಾಮ ಪಂಡಿತಾರಾಧ್ಯ ಭಗವತ್ಪಾದರು, ವಿಶ್ವ ಒಕ್ಕಲಿಗ ಮಹಾಸಂಸ್ಥಾನ ಮಠದ ಪರಮಪೂಜ್ಯ ಶ್ರೀ ನಿಶ್ಚಲಾನಂದ ಸ್ವಾಮಿಗಳು, ಶ್ರೀಕ್ಷೇತ್ರ ಏಕದಳ ಬಿಲ್ವ ಬಂಡೆ ಮಠದ ಪರಮಪೂಜ್ಯ ಶ್ರೀ ಸಚ್ಚಿದಾನಂದ ಸ್ವಾಮೀಜಿ ಸೇರಿದಂತೆ ಹಲವಾರು ಗುರುಗಳನ್ನು ಭೇಟಿ ಮಾಡಿ, ಆಶೀರ್ವಾದ ಪಡೆದು, ಸಮಾಜದ ಒಳಿತಿಗಾಗಿ ಪ್ರಾರ್ಥಿಸಲಾಯಿತು.
#gurupurnima2025 -
B.S.Yediyurappa
@BSYBJP
Warm birthday wishes to Hon’ble Defence Minister Shri @rajnathsingh ji. Wishing you continued good health, strength, and many more years of leadership and service to Bharat.
@RajnathSingh_in -
B.S.Yediyurappa
@BSYBJP
ದೇಶದ ಏಕತೆ ಮತ್ತು ಸಮಗ್ರತೆಗಾಗಿ ತಮ್ಮ ಜೀವನವನ್ನೇ ಅರ್ಪಿಸಿದ ಅಪ್ರತಿಮ ರಾಷ್ಟ್ರೀಯವಾದಿ ನೇತಾರ ಡಾ. ಶ್ಯಾಮಾಪ್ರಸಾದ್ ಮುಖರ್ಜಿ ರವರ ಜನ್ಮದಿನದಂದು ಆ ರಾಷ್ಟ್ರನಿಷ್ಠ ಚೇತನಕ್ಕೆ ಗೌರವಪೂರ್ವಕ ಪ್ರಣಾಮಗಳು.
#shyamaprasadmukherjee -
B.S.Yediyurappa
@BSYBJP
ಜನಪ್ರಿಯ ಶಾಸಕರು, ಮಾನ್ಯ ವಿರೋಧ ಪಕ್ಷದ ನಾಯಕರು, ಆತ್ಮೀಯರೂ ಆಗಿರುವ ಶ್ರೀ ಆರ್.ಅಶೋಕ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. ದೇವರ ಆಶೀರ್ವಾದ ಸದಾ ಇರಲಿ ಎಂದು ಹಾರೈಸುತ್ತೇನೆ.
@RAshokaBJP -
B.S.Yediyurappa
@BSYBJP
ನಾಡಿನ ಸಮಸ್ತ ಜನತೆಗೆ ನಾಡಪ್ರಭು ಕೆಂಪೇಗೌಡರ ಜಯಂತಿಯ ಹೃತ್ಪೂರ್ವಕ ಶುಭಾಶಯಗಳು. ಕೆಂಪೇಗೌಡರ ದೂರದರ್ಶಿತ್ವ ಮತ್ತು ಸಾಧನೆಗಳು ಆದರ್ಶಪ್ರಾಯವಾಗಿದೆ.
-
B.S.Yediyurappa
@BSYBJP
Today marks 50 years since the darkest assault on Indian democracy - the Congress-imposed Emergency of 1975. Fundamental rights were suspended, the Constitution throttled, Parliament silenced, and the press gagged. It wasn’t war or national crisis, but a desperate attempt by the then PM to cling to power after her disqualification by the Allahabad HC. Congress put its survival above the soul of our democracy. #samvidhanhatyadiwas
In Karnataka, the repression was brutal. I was a young activist, jailed in Shimoga and Bellary for opposing PM Indira Gandhi’s dictatorship. Journalists were arrested, student protests in Davanagere, Raichur, Udupi crushed, and countless volunteers and farmers beaten or jailed. Senior leaders like Vajpayee, Advani, and George Fernandes were imprisoned in Bengaluru Central Jail for resisting Congress' draconian move. Karnataka became a battleground of defiance.
Congress even passed the 42nd Amendment to hijack democracy. But India’s spirit prevailed. In 1977, the people decisively rejected Congress.
On #samvidhanhatyadiwas, we honour every patriot who resisted #emergency1975. Under PM @narendramodi ji, we are building a Viksit Bharat rooted in constitutional values. Jai Hind! 🇮🇳
#emergency50years -
B.S.Yediyurappa
@BSYBJP
1975ರ ತುರ್ತು ಪರಿಸ್ಥಿತಿ ಘಟಿಸಿ ಐದು ದಶಕಗಳು ಕಳೆದಿವೆ. ಆ ಕರಾಳ ನೆನಪುಗಳು, ಅಂದು ಹೋರಾಡಿದ, ಆ ದಿನಗಳ ಅನ್ಯಾಯಗಳನ್ನು ಅನುಭವಿಸಿದ, ಕಣ್ಣಾರೆ ಕಂಡ ನಮಗೆಲ್ಲ ಎಂದಿಗೂ ಮರೆಯಲಾಗದ ಕಠೋರ ಅನುಭವದ ಬುತ್ತಿಯಾಗಿ ಜೊತೆಯಲ್ಲೇ ಉಳಿದು ಬಂದಿದೆ. #emergency1975 #emergency50years
-
B.S.Yediyurappa
@BSYBJP
50 ವರ್ಷಗಳ ಹಿಂದೆ, ಇದೇ ದಿನದಂದು, ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಲಾಗಿತ್ತು. ಪ್ರಜೆಗಳ ಮೂಲಭೂತ ಹಕ್ಕುಗಳನ್ನು ಹತ್ತಿಕ್ಕಲಾಗಿತ್ತು, ಮಾಧ್ಯಮಗಳ ಸ್ವಾತಂತ್ರ್ಯಕ್ಕೆ ಬೀಗ ಹಾಕಲಾಗಿತ್ತು, ಸಾವಿರಾರು ಜನರನ್ನು ಬಂಧಿಸಿ, ಕಾರಾಗೃಹಕ್ಕೆ ತಳ್ಳಲಾಯಿತು. ಕಾಂಗ್ರೆಸ್ಸಿನ ದಬ್ಬಾಳಿಕೆ, ಐತಿಹಾಸಿಕ ಪ್ರಮಾದಗಳನ್ನು ದೇಶ ಎಂದಿಗೂ ಮರೆಯುವುದಿಲ್ಲ.
#darkdaysofemergency #emergency1975 #50yearsofemergency -
B.S.Yediyurappa
@BSYBJP
ಸ್ವತಂತ್ರ ಭಾರತದ ಇತಿಹಾಸದ ಅತ್ಯಂತ ಕರಾಳ ಅಧ್ಯಾಯ ತುರ್ತು ಪರಿಸ್ಥಿತಿ. ಅಂದಿನ ಕಾಂಗ್ರೆಸ್ ಸರ್ಕಾರದ ಸಂವಿಧಾನ, ಪ್ರಜಾಪ್ರಭುತ್ವ ವಿರೋಧಿ ಪ್ರಮಾದಕ್ಕೆ 50 ವರ್ಷ ಸಂದಿದ್ದು, ಈ ಸಂದರ್ಭದಲ್ಲಿ ಸಿಟಿಜನ್ ಫಾರ್ ಸೋಷಿಯಲ್ ಜಸ್ಟೀಸ್ ಸಂಸ್ಥೆ ವತಿಯಿಂದ ಬೆಂಗಳೂರಿನಲ್ಲಿ ಇಂದು ಆಯೋಜಿಸಲಾಗಿದ್ದ '1975 - ತುರ್ತು ಪರಿಸ್ಥಿತಿ 50ನೇ ವರ್ಷ ಕರಾಳ ದಿನಗಳು' ಕಾರ್ಯಕ್ರಮದಲ್ಲಿ, ಖ್ಯಾತ ಚಿಂತಕರಾದ ಶ್ರೀ ಎಸ್. ಗುರುಮೂರ್ತಿ ಅವರೊಂದಿಗೆ ಪಾಲ್ಗೊಳ್ಳಲಾಯಿತು. ಇದಕ್ಕೂ ಮುನ್ನ ಅಂದಿನ ಕರಾಳ ದಿನಗಳನ್ನು ನೆನಪಿಸುವ ಛಾಯಾಚಿತ್ರ ಪ್ರದರ್ಶನವನ್ನು ಉದ್ಘಾಟಿಸಲಾಯಿತು.
#emergency1975 -
B.S.Yediyurappa
@BSYBJP
ಭಾರತೀಯ ಜನಸಂಘದ ಸಂಸ್ಥಾಪಕರಾದ ಡಾ.ಶ್ಯಾಮಪ್ರಸಾದ್ ಮುಖರ್ಜಿಯವರ ಸ್ಮೃತಿ ದಿವಸ ಹಾಗೂ ಜನಸಂಘದ ಸ್ಥಾಪಕ ಸದಸ್ಯರಾದ ದಿವಂಗತ ಶ್ರೀ ಜಗನ್ನಾಥರಾವ್ ಜೋಶಿ ಅವರ ಜಯಂತಿ ಅಂಗವಾಗಿ ಇಂದು ಬೆಂಗಳೂರಿನ ಪಕ್ಷದ ಕಚೇರಿಯಲ್ಲಿ ಈರ್ವರು ಹಿರಿಯ ನಾಯಕರ ಗೌರವಾರ್ಥ ಪುಷ್ಪಾರ್ಚನೆ ಸಲ್ಲಿಸಿ, ನಂತರ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಲಾಯಿತು.
-
B.S.Yediyurappa
@BSYBJP
ಎಲ್ಲರಿಗೂ ಅಂತಾರಾಷ್ಟ್ರೀಯ ಯೋಗ ದಿನದ ಶುಭಾಶಯಗಳು. ಭಾರತ ಜಗತ್ತಿಗೆ ನೀಡಿದ ಮಹೋನ್ನತ ಕೊಡುಗೆ ಯೋಗ. ದೇಹ, ಮನಸ್ಸು ಮತ್ತು ಆತ್ಮಶಕ್ತಿಯನ್ನು ಒಂದುಗೂಡಿಸುವ ಈ ಜೀವನ ವಿಧಾನ, ಸದಾ ನಮ್ಮ ದೈನಂದಿನ ಬದುಕಿನ ಭಾಗವಾಗಿರಲಿ.
#internationalyogaday2025 -
B.S.Yediyurappa
@BSYBJP
Warm birthday wishes to Hon’ble President of India, Smt. Droupadi Murmu Ji. Your life and leadership are an inspiration to millions. Wishing you good health and a long life.
@rashtrapatibhvn -
B.S.Yediyurappa
@BSYBJP
ಇಂದು ಬೆಂಗಳೂರಿಗೆ ಆಗಮಿಸಿದ ಕೇಂದ್ರ ಗೃಹ ಸಚಿವರಾದ ಸನ್ಮಾನ್ಯ ಶ್ರೀ ಅಮಿತ್ ಶಾ ರವರನ್ನು ಸೌಹಾರ್ದಯುತವಾಗಿ ಭೇಟಿ ಮಾಡಿ ಸ್ವಾಗತ ಕೋರಲಾಯಿತು.
@AmitShah @BJP4Karnataka -
B.S.Yediyurappa
@BSYBJP
ಹಿರಿಯರು, ಜನಪ್ರಿಯ ಶಾಸಕರು ಮತ್ತು ಆತ್ಮೀಯರೂ ಆಗಿರುವ ಶ್ರೀ ಶಾಮನೂರು ಶಿವಶಂಕರಪ್ಪನವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. ದೇವರ ಅನುಗ್ರಹ ಸದಾ ಇರಲಿ ಎಂದು ಹಾರೈಸುತ್ತೇನೆ.
-
B.S.Yediyurappa
@BSYBJP
ಸಮಾಜ ನಿಷ್ಠ ಸಂತರು, ಆಧ್ಯಾತ್ಮಿಕ ರಾಯಭಾರಿಗಳು, ಶ್ರೇಷ್ಠ ವಿದ್ವಾಂಸರಾದ ಸಿರಿಗೆರೆ ಬೃಹನ್ಮಠದ ತರಳುಬಾಳು ಜಗದ್ಗುರು ಪರಮಪೂಜ್ಯ ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿಗಳ ಜನ್ಮದಿನದಂದು ಅವರಿಗೆ ಭಕ್ತಿಪೂರ್ವಕ ಪ್ರಣಾಮಗಳು. ಅವರ ಆಶೀರ್ವಾದ ಮತ್ತು ಮಾರ್ಗದರ್ಶನ ಸಮಾಜದ ಮೇಲೆ ನಿರಂತರವಾಗಿರಲಿ ಎಂದು ಪ್ರಾರ್ಥಿಸುತ್ತೇನೆ.
-
B.S.Yediyurappa
@BSYBJP
ಅಹಮದಾಬಾದ್ ನಲ್ಲಿ ಸಂಭವಿಸಿರುವ ಹೃದಯವಿದ್ರಾವಕ ವಿಮಾನ ದುರಂತದಲ್ಲಿ ನೂರಾರು ಪ್ರಯಾಣಿಕರು ದುರ್ಮರಣಕ್ಕೀಡಾಗಿರುವ ಸುದ್ದಿ ಕೇಳಿ ದಿಗ್ಭ್ರಮೆ ಉಂಟಾಗಿದೆ. ನಮ್ಮ ಪಕ್ಷದ ಹಿರಿಯ ನಾಯಕರು, ಗುಜರಾತ್ ಮಾಜಿ ಮುಖ್ಯಮಂತ್ರಿಗಳಾದ ಶ್ರೀ ವಿಜಯ್ ರೂಪಾನಿ ಅವರೂ ಈ ವಿಮಾನ ಅಪಘಾತದಲ್ಲಿ ವಿಧಿವಶರಾಗಿರುವ ಸುದ್ದಿ ತೀವ್ರ ಆಘಾತವನ್ನುಂಟು ಮಾಡಿದೆ.
ದುರಂತದಲ್ಲಿ ಸಾವಿಗೀಡಾದ ಪ್ರಯಾಣಿಕರ ಕುಟುಂಬಸ್ಥರ ನೋವು ಊಹಿಸಲಸಾಧ್ಯ. ಈ ಕುಟುಂಬಗಳಿಗೆ ನೋವು ಭರಿಸುವ ಶಕ್ತಿಯನ್ನು ಆ ದೇವರು ದಯಪಾಲಿಸಲಿ ಎಂದು ಪ್ರಾರ್ಥಿಸುತ್ತೇನೆ. ನಂಬಲಸಾಧ್ಯ ಎನಿಸುವ ರೀತಿಯಲ್ಲಿ ನಡೆದಿರುವ ಈ ಘೋರ ವಿಮಾನ ದುರಂತಕ್ಕೆ ಇಡೀ ದೇಶ ಕಂಬನಿ ಮಿಡಿಯುತ್ತಿದೆ. -
B.S.Yediyurappa
@BSYBJP
Deeply shocked and saddened by the Air India plane crash in Ahmedabad. The trauma is heartbreaking. My thoughts and prayers are with all those on board and their families.
-
B.S.Yediyurappa
@BSYBJP
Proudly extend my heartfelt greetings and best wishes to Hon’ble Shri @narendramodi ji on the anniversary of your swearing-in as Prime Minister of Bharat for a historic 3rd term. Your steadfast leadership inspires a billion dreams. Under your guidance, #viksitbharat is not just a vision - it is the nation’s resolute journey of progress, pride, and purpose. #11yearsofpmmodi #11yearsofseva
@PMOIndia @BJP4India @BJP4Karnataka -
B.S.Yediyurappa
@BSYBJP
ಸ್ವತಃ ಮುಖ್ಯಮಂತ್ರಿ, ಉಪಮುಖ್ಯಮಂತ್ರಿಗಳೇ ಮುಂದೆ ನಿಂತು ಇಡೀ ಸರ್ಕಾರವೇ ವ್ಯವಸ್ಥೆಯ ಜವಾಬ್ದಾರಿ ಹೊತ್ತು, ಆರ್.ಸಿ.ಬಿ ವಿಜಯೋತ್ಸವದ ಆಚರಣೆಗೆ ಮುಂದಾಗಿ, ಇಂತಹ ಬಹುದೊಡ್ಡ ದುರಂತಕ್ಕೆ ಕಾರಣವಾಗಿರುವಾಗ, ತಮ್ಮ ನೈತಿಕ ಜವಾಬ್ದಾರಿಯನ್ನು ಮರೆತು, ಜನರ ಆಕ್ರೋಶವನ್ನು ತಣ್ಣಗಾಗಿಸಬಹುದೆಂಬ ದುರಾಲೋಚನೆಯಿಂದ ಪೊಲೀಸ್ ಆಯುಕ್ತರೂ ಸೇರಿದಂತೆ ಐವರು ಪೊಲೀಸ್ ಅಧಿಕಾರಿಗಳನ್ನು ಬಲಿಪಶು ಮಾಡಿ ಅಮಾನತು ಮಾಡಿರುವುದು ನಾಚಿಕೆಗೇಡಿನ ಕ್ರಮವಾಗಿದೆ. ಸಮಾರಂಭಕ್ಕೂ ಮುನ್ನವೇ ಕಾಲ್ತುಳಿತದಿಂದ ಸಾವು-ನೋವಾಗಿರುವ ಸುದ್ದಿ ತಲುಪಿದರೂ ಭಂಡತನದಿಂದ ಸನ್ಮಾನ ಕಾರ್ಯಕ್ರಮವನ್ನು ಮುಗಿಸಿ, ನಂತರ ಚಿನ್ನಸ್ವಾಮಿ ಸ್ಟೇಡಿಯಂನಲ್ಲೂ ಕಾರ್ಯಕ್ರಮ ಮುಂದುವರೆಸಿ, ಕಾಂಗ್ರೆಸ್ ಸರ್ಕಾರ ಕರುನಾಡಿನಲ್ಲಿ ಕರಾಳ ಇತಿಹಾಸ ಸೃಷ್ಟಿಸಿದೆ.
ಜನರ ಆಕ್ರೋಶವನ್ನು ತಣಿಸಲು ಹಾಗೂ ಉಚ್ಚ ನ್ಯಾಯಾಲಯದ ನ್ಯಾಯದಂಡದಿಂದ ತಪ್ಪಿಸಿಕೊಳ್ಳಲು ಅಧಿಕಾರಿಗಳನ್ನು ಅಮಾನತುಗೊಳಿಸಿರುವುದು ಕುರ್ಚಿಗೆ ಅಂಟಿ ಕೂರುವ ಸ್ವಾರ್ಥದ ಕ್ರಮವಾಗಿದೆ. ಮುಖ್ಯಮಂತ್ರಿ @siddaramaiah ನವರಿಗೆ, ಉಪ-ಮುಖ್ಯಮಂತ್ರಿ @DKShivakumar ಹಾಗೂ ಗೃಹಮಂತ್ರಿ @DrParameshwara ಅವರಿಗೆ ಕನಿಷ್ಠ ನೈತಿಕತೆ ಇದ್ದರೆ ಈ ದುರಂತ ಘಟನೆಯ ಜವಾಬ್ದಾರಿ ಹೊತ್ತು ಈ ಕೂಡಲೇ ರಾಜಿನಾಮೆ ನೀಡಲಿ. -
B.S.Yediyurappa
@BSYBJP
Warm birthday wishes to the Hon’ble Chief Minister of Uttar Pradesh, Mahant Shri Yogi Adityanath ji. Wishing him good health, a long life, and continued service to the nation.
@myogiadityanath @CMOfficeUP -
B.S.Yediyurappa
@BSYBJP
ವರ್ತಮಾನದ ಜೊತೆಗೆ ನಮ್ಮ ಭವಿಷ್ಯದ ಪೀಳಿಗೆಗೂ ಸಮೃದ್ಧ, ಸುರಕ್ಷಿತ ಪರಿಸರ ಸಂರಕ್ಷಣೆ ನಮ್ಮೆಲ್ಲರ ಕರ್ತವ್ಯ. ಎಲ್ಲರೂ ಒಂದಾಗಿ, ಉತ್ತಮ ಪರಿಸರವನ್ನು ನಿರ್ಮಿಸುವ ನಿಟ್ಟಿನಲ್ಲಿ ಒಗ್ಗಟ್ಟಿನಿಂದ ಮುನ್ನಡೆಯೋಣ. ಎಲ್ಲರಿಗೂ ವಿಶ್ವ ಪರಿಸರ ದಿನದ ಹಾರ್ದಿಕ ಶುಭಾಶಯಗಳು.
#worldenvironmentday2025 #beatplasticpollution -
B.S.Yediyurappa
@BSYBJP
ಐಪಿಎಲ್ ಗೆದ್ದ ಆರ್.ಸಿ.ಬಿ ತಂಡದ ವಿಜಯೋತ್ಸವ ಸಂಭ್ರಮಾಚರಣೆ ಸಂದರ್ಭದಲ್ಲಿ, ಬೆಂಗಳೂರಿನಲ್ಲಿ ಅಭಿಮಾನಿಗಳ ನೂಕುನುಗ್ಗಲು, ಕಾಲ್ತುಳಿತದಲ್ಲಿ 10ಕ್ಕೂ ಅಧಿಕ ಅಭಿಮಾನಿಗಳು ಸಾವನ್ನಪ್ಪಿದ್ದಾರೆ, ಬಹಳಷ್ಟು ಮಂದಿ ಗಾಯಗೊಂಡಿದ್ದಾರೆ ಎಂಬ ಆಘಾತಕರ ವರದಿಗಳು ಬರುತ್ತಿದ್ದು, ಅತೀವ ದುಃಖದ ಜೊತೆಗೆ ದಿಗ್ಭ್ರಮೆ ಉಂಟುಮಾಡಿದೆ. ದುರಂತದಲ್ಲಿ ಜೀವ ಕಳೆದುಕೊಂಡ ಅಭಿಮಾನಿಗಳ ಕುಟುಂಬದವರ ದುಃಖಕ್ಕೆ ಸಾಂತ್ವನ ಹೇಳಲು ಪದಗಳೇ ಸಿಗುತ್ತಿಲ್ಲ. ದಯಮಾಡಿ ಜನರು ಸಂಯಮ ವಹಿಸಿ, ಸುರಕ್ಷತೆಗೆ ಆದ್ಯತೆ ನೀಡಿ ಎಂದು ಕೈಮುಗಿದು ಕೋರುತ್ತೇನೆ. ಗಾಯಗೊಂಡವರು ಶೀಘ್ರದಲ್ಲಿ ಗುಣಮುಖರಾಗಲಿ ಎಂದು ಪ್ರಾರ್ಥಿಸುತ್ತೇನೆ.
ಸಮರ್ಪಕ ವ್ಯವಸ್ಥೆ, ಅಗತ್ಯ ಬಂದೋಬಸ್ತ್ ಮಾಡುವಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿರುವುದು ಮೇಲ್ನೋಟಕ್ಕೆ ಕಾಣುತ್ತಿದೆ. ಇಂತಹ ಅಸಮರ್ಥ, ಬೇಜವಾಬ್ದಾರಿ ರಾಜ್ಯಸರ್ಕಾರದ ವೈಫಲ್ಯದಿಂದ ಸಂಭ್ರಮೋತ್ಸವಕ್ಕೆ ಸೂತಕದ ಛಾಯೆ ಆವರಿಸಿದೆ. ಲಕ್ಷಾಂತರ ಅಭಿಮಾನಿಗಳು ಸೇರುವ ಸಾಧ್ಯತೆ ಗೊತ್ತಿದ್ದೂ, ವ್ಯವಸ್ಥೆ ಮಾಡಲು ಸಾಧ್ಯವಾಗದಿದ್ದರೆ ಕಾರ್ಯಕ್ರಮಕ್ಕೆ ಅವಕಾಶ ನೀಡಿದ್ದಾದರೂ ಏಕೆ? ಮುನ್ನೆಚ್ಚರಿಕೆ ವಹಿಸಿ ತಡೆಯಬಹುದಾಗಿದ್ದ ದುರಂತಕ್ಕೆ ಈ ಅಸಮರ್ಥ ಸರ್ಕಾರ ಹೊಣೆ ಹೊರಲೇಬೇಕು. ಮೊದಲು ಜನರ ಸುರಕ್ಷತೆಗೆ ಬೇಕಾದ ಎಲ್ಲ ಅಗತ್ಯ ಕ್ರಮಗಳನ್ನು ಪೊಲೀಸರು ಕೂಡಲೇ ಕೈಗೊಳ್ಳಬೇಕು ಎಂದು ಒತ್ತಾಯಿಸುತ್ತೇನೆ.
@CMofKarnataka @siddaramaiah @DKShivakumar @BJP4Karnataka -
B.S.Yediyurappa
@BSYBJP
ಐಪಿಎಲ್ 2025 ಪ್ರಶಸ್ತಿ ಗೆದ್ದ ಬೆಂಗಳೂರಿನ ಆರ್.ಸಿ.ಬಿ ತಂಡಕ್ಕೆ ಹೃತ್ಪೂರ್ವಕ ಅಭಿನಂದನೆಗಳು. ಅಂತೂ ಈ ಸಲ ಕಪ್ ನಮ್ಮದಾಯಿತು. ಸರಣಿ ಆರಂಭಗೊಂಡ 18 ವರ್ಷಗಳ ನಂತರ ಪ್ರಶಸ್ತಿ ಗೆದ್ದ ಬೆಂಗಳೂರಿನ ತಂಡದ ಸತತ ಪ್ರಯತ್ನ, ದೃಢನಿಶ್ಚಯ ಮತ್ತು ಅಭಿಮಾನಿಗಳ ಅಸದೃಶ ಬೆಂಬಲಗಳನ್ನು ಸಂಭ್ರಮಿಸುವ ಅರ್ಹ ಗೆಲುವು ಇದಾಗಿದೆ. ಮುಂದೆಯೂ ತಂಡ ಉತ್ತಮ ಪ್ರಯತ್ನ ಮುಂದುವರಿಸಲಿ ಎಂದು ಹಾರೈಸುತ್ತೇನೆ.
A proud moment for all #rcb fans. Congratulations to @RCBTweets on winning IPL 2025. -
B.S.Yediyurappa
@BSYBJP
‘ಕನ್ನಡವೇ ಸತ್ಯ, ಕನ್ನಡವೇ ನಿತ್ಯ’ ಕನ್ನಡಿಗರ ಘೋಷ ವಾಕ್ಯ ಮಾತ್ರವಲ್ಲ, ಇದು ಕನ್ನಡಾಂಬೆ ತಾಯಿ ಭುವನೇಶ್ವರಿ ದೇವಿಯ ಮೇಲಿರುವ ಕನ್ನಡಿಗರ ದೀಕ್ಷೆ. ಕನ್ನಡ ಯಾವುದೇ ನಿರ್ದಿಷ್ಟ ಭಾಷೆಯಿಂದ ಹುಟ್ಟಿಕೊಂಡಿಲ್ಲ ಎಂದು ಅನೇಕ ಹಿರಿಯ ಭಾಷಾ ಪರಿಣಿತರು ಸಿದ್ದ ಮಾಡಿ ತೋರಿಸಿದ್ದಾರೆ. ಇತಿಹಾಸ, ಭಾಷಾಶಾಸ್ತ್ರ ತಜ್ಞರಲ್ಲದ ಕಲಾವಿದ ಕಮಲ್ ಹಾಸನ್ ಕನ್ನಡ ಭಾಷೆಯ ಬಗ್ಗೆ ಸಂವೇದನಾರಹಿತವಾಗಿ ಮಾತನಾಡಿರುವುದು ಅತ್ಯಂತ ಖೇದನೀಯ ಮತ್ತು ಖಂಡನಾರ್ಹ. ಅನಗತ್ಯವಾಗಿ ಶಾಂತಿ, ಸೌಹಾರ್ದತೆ, ಸಾಮರಸ್ಯಕ್ಕೆ ಭಂಗವುಂಟು ಮಾಡುವ ಅವರ ವರ್ತನೆ ಸರಿಯಲ್ಲ. ಅವರ ಅಭಿಪ್ರಾಯ ಮಂಡನೆಯ ಭರದಲ್ಲಿ ಕೋಟ್ಯಂತರ ಕನ್ನಡಿಗರ ಭಾವನೆಗಳಿಗೆ ಘಾಸಿಯುಂಟು ಮಾಡಿದ್ದು, ಅವರು ಗೌರವಯುತವಾಗಿ ಕನ್ನಡ ಮತ್ತು ಕನ್ನಡಿಗರ ಕ್ಷಮೆ ಕೇಳಲೇಬೇಕು. ಕ್ಷಮೆ ಕೇಳುವುದರಿಂದ ಯಾರೂ ಸಣ್ಣವರಾಗುವುದಿಲ್ಲ, ದುರಹಂಕಾರದಿಂದ ಯಾರೂ ದೊಡ್ಡವರಾಗುವುದಿಲ್ಲ!
-
B.S.Yediyurappa
@BSYBJP
ನಾನು ಮುಖ್ಯಮಂತ್ರಿಯಾಗಿದ್ದಾಗ ಜಾರಿಗೆ ತಂದಿದ್ದ ಭಾಗ್ಯಲಕ್ಷ್ಮಿ ಯೋಜನೆಯ ಯಶಸ್ಸು, ಫಲಾನುಭವಿಗಳಿಗೆ ಸಿಗುತ್ತಿರುವ ನೆರವು, ಅನುಕೂಲಗಳ ಮಾಹಿತಿ ನಿಜಕ್ಕೂ ಸಂತೃಪ್ತಿ ತಂದಿದೆ. ಈ ಯೋಜನೆ ನಮ್ಮ ಹೆಣ್ಣುಮಕ್ಕಳ ಜೀವನದಲ್ಲಿ ಬದಲಾವಣೆಯುಂಟು ಮಾಡುತ್ತಿದೆ ಎನ್ನುವುದು ಸಾರ್ಥಕತೆಯ ಭಾವ ಮೂಡಿಸಿದೆ. ಇಂತಹ ಜನಪರ ಯೋಜನೆಗಳನ್ನು ಎಲ್ಲ ಸರ್ಕಾರಗಳು ಸಮರ್ಪಕವಾಗಿ ಅನುಷ್ಠಾನಗೊಳಿಸಬೇಕು ಎಂದು ಒತ್ತಾಯಿಸುತ್ತೇನೆ.
-
B.S.Yediyurappa
@BSYBJP
ಪಕ್ಷದ ಕಾರ್ಯಚಟುವಟಿಕೆಗಳು, ಸಂಘಟನೆ ಸೇರಿದಂತೆ ಹಲವಾರು ಪ್ರಚಲಿತ ವಿದ್ಯಮಾನಗಳ ಕುರಿತಂತೆ ಬೆಂಗಳೂರಿನಲ್ಲಿ ಇಂದು ನಡೆದ ಕೋರ್ ಕಮಿಟಿ ಸಭೆಯಲ್ಲಿ ಚರ್ಚಿಸಲಾಯಿತು. ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಶ್ರೀ @AgrawalRMD, ರಾಜ್ಯಾಧ್ಯಕ್ಷ ಶ್ರೀ @BYVijayendra, ರಾಜ್ಯ ಸಹ-ಉಸ್ತುವಾರಿ ಶ್ರೀ @ReddySudhakar21, ವಿಧಾನ ಪರಿಷತ್ ವಿಪಕ್ಷ ನಾಯಕ ಶ್ರೀ @NswamyChalavadi, ಮಾಜಿ ಮುಖ್ಯಮಂತ್ರಿ ಶ್ರೀ @BSBommai, ಶ್ರೀ @DVSadanandGowda ಸೇರಿದಂತೆ ಹಿರಿಯ ನಾಯಕರು, ಪದಾಧಿಕಾರಿಗಳು ಪಾಲ್ಗೊಂಡಿದ್ದರು.
@BJP4Karnataka -
B.S.Yediyurappa
@BSYBJP
ಪ್ರಖರ ಚಿಂತಕ, ಭಾರತಾಂಬೆಯ ಸ್ವಾತಂತ್ರ್ಯಕ್ಕಾಗಿ ಜೀವನವನ್ನೇ ಮುಡಿಪಾಗಿಟ್ಟ ಅಪ್ರತಿಮ ದೇಶಭಕ್ತ, ಸ್ವಾತಂತ್ರ್ಯವೀರ ಶ್ರೀ ವಿನಾಯಕ ದಾಮೋದರ್ ಸಾವರ್ಕರ್ ಅವರ ಜಯಂತಿಯಂದು ಆ ಮಹಾನ್ ಚೇತನಕ್ಕೆ ಆದರಪೂರ್ವಕ ಪ್ರಣಾಮಗಳು.
-
B.S.Yediyurappa
@BSYBJP
ಭಾರತೀಯ ಜನತಾ ಪಾರ್ಟಿಯ ನಿಜವಾದ ಶಕ್ತಿಯೇ ಪಕ್ಷದ ನಿಷ್ಠಾವಂತ ಕಾರ್ಯಕರ್ತರು. ಪಕ್ಷದ ಶಿಸ್ತು, ತತ್ವ, ಸಿದ್ದಾಂತ ಮತ್ತು ನಾಯಕತ್ವಕ್ಕೆ ಎಲ್ಲರೂ ಬದ್ಧರಾಗಿರಲೇಬೇಕು. ಪಕ್ಷಕ್ಕಿಂತ ಯಾರೂ ದೊಡ್ಡವರಲ್ಲ. ಹಲವಾರು ಬಾರಿ ಎಚ್ಚರಿಕೆ ನೀಡಲಾಗಿದ್ದರೂ ಪಕ್ಷ ವಿರೋಧಿ ಚಟುವಟಿಕೆಗಳನ್ನು ಮುಂದುವರೆಸಿದ್ದ ಶ್ರೀ ಶಿವರಾಮ್ ಹೆಬ್ಬಾರ್ ಮತ್ತು ಶ್ರೀ ಎಸ್.ಟಿ.ಸೋಮಶೇಖರ್ ಅವರನ್ನು ಪಕ್ಷದಿಂದ ಉಚ್ಚಾಟಿಸುವ ನಿರ್ಧಾರವನ್ನು ಕೇಂದ್ರ ಶಿಸ್ತು ಸಮತಿ ತೆಗೆದುಕೊಂಡಿದೆ. ಪಕ್ಷದ ಎಲ್ಲಾ ನಮ್ಮ ನಿಷ್ಠಾವಂತ ನಾಯಕರು, ಪದಾಧಿಕಾರಿಗಳು, ಕಾರ್ಯಕರ್ತರು ಇಂತಹ ಯಾವುದೇ ಬೆಳವಣಿಗೆಗಳಿಂದ ವಿಚಲಿತರಾಗದೆ ಪಕ್ಷ ಸಂಘಟನೆಯ ಕಾರ್ಯದಲ್ಲಿ ನಿರತರಾಗಿದ್ದಾರೆ.
-
B.S.Yediyurappa
@BSYBJP
Warm birthday greetings to Union Minister Shri Nitin Gadkari Ji. Best wishes for a long and healthy life.
@nitin_gadkari -
B.S.Yediyurappa
@BSYBJP
ಅಂತಾರಾಷ್ಟ್ರೀಯ 'ಬೂಕರ್ ಪ್ರಶಸ್ತಿ'ಗೆ ಭಾಜನರಾಗಿರುವ ನಾಡಿನ ಹೆಸರಾಂತ ಹಿರಿಯ ಸಾಹಿತಿ ಬಾನು ಮುಷ್ತಾಕ್ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು. ಕನ್ನಡದ ಕೃತಿಗೆ ಮೊದಲ ಬಾರಿಗೆ ಅಂತಾರಾಷ್ಟ್ರೀಯ ಬೂಕರ್ ಪ್ರಶಸ್ತಿ ಲಭಿಸಿದ್ದು, ನಮ್ಮ ನಾಡು, ನುಡಿ, ಸಾಹಿತ್ಯ ಮತ್ತು ಸೊಗಡಿಗೆ ಇದೊಂದು ಹೆಮ್ಮೆಯ ಮೈಲಿಗಲ್ಲಾಗಿದೆ. ಬಾನು ಮುಷ್ತಾಕ್ ಅವರ "ಹಸೀನಾ ಮತ್ತು ಇತರ ಕತೆಗಳು" ಕೃತಿಯ ಇಂಗ್ಲಿಷ್ ಅನುವಾದ "ಹಾರ್ಟ್ ಲ್ಯಾಂಪ್" ಕೃತಿಗೆ ಪ್ರಶಸ್ತಿ ಲಭಿಸಿದ್ದು, ಅನುವಾದಕಿ ದೀಪಾ ಭಸ್ಥಿ ಅವರಿಗೂ ಆದರಪೂರ್ವಕ ಅಭಿನಂದನೆಗಳು!
#internationalbooker2025 -
B.S.Yediyurappa
@BSYBJP
ಹಿರಿಯ ರಾಜಕೀಯ ಧುರೀಣ, ಮುತ್ಸದ್ಧಿ ನೇತಾರ, ಮಾಜಿ ಪ್ರಧಾನಮಂತ್ರಿಗಳಾದ ಮಾನ್ಯ ಶ್ರೀ ಹೆಚ್.ಡಿ.ದೇವೇಗೌಡರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. ದೇವರ ಆಶೀರ್ವಾದ ಸದಾ ತಮ್ಮ ಮೇಲಿರಲಿ ಎಂದು ಪ್ರಾರ್ಥಿಸುತ್ತೇನೆ.
@H_D_Devegowda -
B.S.Yediyurappa
@BSYBJP
ಸಂಘದ ಮಾನ್ಯ ಸರಕಾರ್ಯವಾಹರಾದ ಶ್ರೀ ದತ್ತಾತ್ರೇಯ ಹೊಸಬಾಳೆ, ಹಿರಿಯರಾದ ಶ್ರೀ ಸು.ರಾಮಣ್ಣ, ಶ್ರೀ ಭ.ಮ.ಶ್ರೀಕಂಠ, ಶ್ರೀ ಪಿ.ವಿ.ಕೃಷ್ಣಭಟ್, ಶ್ರೀ ಶಂಕರಮೂರ್ತಿ ಸೇರಿದಂತೆ ಹಲವು ಗಣ್ಯರೊಂದಿಗೆ, ಆತ್ಮೀಯರೂ, ನನ್ನ ಮಾರ್ಗದರ್ಶಕರೂ ಆಗಿದ್ದ ದಿ. ಶ್ರೀ ಹಿರಿಯೂರು ಕೃಷ್ಣಮೂರ್ತಿಗಳ ಸಂಸ್ಮರಣಾರ್ಥ, ಶಿವಮೊಗ್ಗದಲ್ಲಿ ಇಂದು ನಡೆದ 'ಕೃಷ್ಣ ಸ್ಮೃತಿ' ಗ್ರಂಥದ ಬಿಡುಗಡೆ ಸಮಾರಂಭದಲ್ಲಿ ಪಾಲ್ಗೊಳ್ಳಲಾಯಿತು.
-
B.S.Yediyurappa
@BSYBJP
ಬೆಂಗಳೂರಿಗೆ ಆಗಮಿಸಿರುವ ನಮ್ಮ ಪಕ್ಷದ ರಾಜ್ಯ ಉಸ್ತುವಾರಿಗಳಾದ ಡಾ.ರಾಧಾ ಮೋಹನ್ ದಾಸ್ ಅಗರ್ವಾಲ್ ಅವರನ್ನು ಇಂದು ಸ್ವಾಗತಿಸಿ, ಸೌಹಾರ್ದ ಭೇಟಿ ನಡೆಸಲಾಯಿತು.
@AgrawalRMD @BJP4Karnataka -
B.S.Yediyurappa
@BSYBJP
ಯುಪಿಎಸ್ಸಿ ಪರೀಕ್ಷೆಯಲ್ಲಿ ಅಖಿಲ ಭಾರತ ಮಟ್ಟದಲ್ಲಿ 41ನೇ ರ್ಯಾಂಕ್ ಮತ್ತು ರಾಜ್ಯ ಮಟ್ಟದಲ್ಲಿ 2ನೇ ರ್ಯಾಂಕ್ ಪಡೆದಿರುವ ಹಾವೇರಿಯ ಡಾ.ಸಚಿನ್ ಬಸವರಾಜ್ ಗುತ್ತೂರು ಅವರನ್ನು ಇಂದು ಸನ್ಮಾನಿಸಿ ಅಭಿನಂದನೆ ಸಲ್ಲಿಸಲಾಯಿತು. ಎಂಬಿಬಿಎಸ್ ಪದವೀಧರರಾಗಿರುವ ಅವರು ತಮ್ಮ ಪ್ರತಿಭೆ ಮತ್ತು ಕಠಿಣ ಪರಿಶ್ರಮದಿಂದ ಯುಪಿಎಸ್ಸಿಯಲ್ಲಿ ಉತ್ತಮ ಯಶಸ್ಸನ್ನು ಪಡೆದಿದ್ದು, ಅವರ ಉಜ್ವಲ ಭವಿಷ್ಯಕ್ಕೆ ಶುಭ ಕೋರಲಾಯಿತು.
-
B.S.Yediyurappa
@BSYBJP
ಕನ್ನಡದ ಖ್ಯಾತ ವಿಮರ್ಶಕ, ಶಿಕ್ಷಣ ತಜ್ಞ, ಹಿರಿಯ ಸಾಹಿತಿ, ಕವಿ ಶ್ರೀ ಜಿ.ಎಸ್.ಸಿದ್ದಲಿಂಗಯ್ಯ ಅವರ ನಿಧನದ ಸುದ್ದಿ ತಿಳಿದು ಅತೀವ ದುಃಖವಾಗಿದೆ. ವಚನ ಸಾಹಿತ್ಯದಲ್ಲಿ ವಿಶೇಷ ವಿದ್ವತ್ತನ್ನು ಗಳಿಸಿದ್ದ ಅವರು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಅಪಾರ ಸೇವೆ ಸಲ್ಲಿಸಿದ್ದರು. ಅವರ ನಿಧನದಿಂದ ಕನ್ನಡ ಸಾರಸ್ವತ ಲೋಕ ಒಬ್ಬ ಹಿರಿಯ ಸಾಹಿತಿಯನ್ನು ಕಳೆದುಕೊಂಡಿದೆ. ಅವರ ಆತ್ಮಕ್ಕೆ ಸದ್ಗತಿಯನ್ನು ಪ್ರಾರ್ಥಿಸುತ್ತಾ, ಅವರ ಕುಟುಂಬ ಹಾಗೂ ಅಭಿಮಾನಿಗಳಲ್ಲಿ ತೀವ್ರ ಸಂತಾಪಗಳನ್ನು ಸಲ್ಲಿಸುತ್ತೇನೆ. ಓಂ ಶಾಂತಿ 🙏
-
B.S.Yediyurappa
@BSYBJP
ಭಾರತೀಯ ಸೇನಾಪಡೆಗಳ ಬಗ್ಗೆ ಪ್ರತಿಯೊಬ್ಬ ಭಾರತೀಯನಿಗೂ ಹೆಮ್ಮೆ ಇದೆ. ಪಹಲ್ಗಾಮ್ನಲ್ಲಿ ಮುಗ್ಧ ನಾಗರಿಕರ ಕ್ರೂರ ಹತ್ಯೆಗೆ ಭಾರತದ ಪ್ರತಿಕ್ರಿಯೆಯೇ ಆಪರೇಷನ್ ಸಿಂಧೂರ್. ಭಾರತ ಮತ್ತು ಭಾರತೀಯರ ಮೇಲಿನ ಯಾವುದೇ ದಾಳಿಗೆ ತಕ್ಕ ಪ್ರತ್ಯುತ್ತರ ನೀಡಲು ಪ್ರಧಾನಿ ಶ್ರೀ @narendramodi ಸರ್ಕಾರ ದೃಢನಿಶ್ಚಯ ಹೊಂದಿದೆ. ಭಯೋತ್ಪಾದನೆ ವಿರುದ್ಧ ನಮ್ಮ ಹೋರಾಟ ಅಚಲ, ಉಗ್ರ ದಮನ ನಿಶ್ಚಿತ! ಭಾರತ್ ಮಾತಾ ಕೀ ಜೈ!
ಜೈ ಹಿಂದ್! 🇮🇳
#pahalgamterroristattack -
B.S.Yediyurappa
@BSYBJP
ಮಂಗಳೂರಿನಲ್ಲಿ ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಅವರನ್ನು ದುಷ್ಕರ್ಮಿಗಳು ನಡುರಸ್ತೆಯಲ್ಲೇ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಭೀಕರವಾಗಿ ಹತ್ಯೆ ಮಾಡಿರುವ ಘಟನೆ ಅತ್ಯಂತ ಆಘಾತವನ್ನುಂಟು ಮಾಡಿದೆ. ದುಷ್ಕರ್ಮಿಗಳಿಗೆ ಕಾನೂನಿನ ಕಿಂಚತ್ ಭಯವೂ ಇಲ್ಲದಂತಾಗಿದ್ದು, ಇಂತಹ ಅಮಾನುಷ ಅಪರಾಧಗಳು ರಾಜ್ಯದಲ್ಲಿ ಹದಗೆಟ್ಟಿರುವ ಕಾನೂನು-ಸುವ್ಯವಸ್ಥೆಗೆ ಕನ್ನಡಿ ಹಿಡಿದಿದೆ. ರಾಜ್ಯ ಸರ್ಕಾರ ಕೂಡಲೇ ಅಪರಾಧಿಗಳನ್ನು ಬಂಧಿಸಬೇಕು ಎಂದು ಆಗ್ರಹಿಸುತ್ತೇನೆ.
ಮೃತ ಕಾರ್ಯಕರ್ತನ ಆತ್ಮಕ್ಕೆ ಸದ್ಗತಿ ಕೋರುತ್ತಾ, ಅವರ ಕುಟುಂಬ ವರ್ಗದವರಲ್ಲಿ ತೀವ್ರ ಸಂತಾಪ ವ್ಯಕ್ತಪಡಿಸುತ್ತೇನೆ. ಹಲ್ಲೆಗೊಳಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮತ್ತೊಬ್ಬ ಹಿಂದೂ ಕಾರ್ಯಕರ್ತ ಶೀಘ್ರದಲ್ಲಿ ಗುಣಮುಖರಾಗಲಿ ಎಂದು ಪ್ರಾರ್ಥಿಸುತ್ತೇನೆ. -
B.S.Yediyurappa
@BSYBJP
ಭಾರತೀಯ ಸನಾತನ ಜ್ಞಾನ ಪರಂಪರೆಯನ್ನು ಉಳಿಸಿ, ಬೆಳೆಸಿದ ಇಬ್ಬರು ಮಹಾನ್ ದಾರ್ಶನಿಕರಾದ ಶ್ರೀ ಆದಿ ಶಂಕರಾಚಾರ್ಯರ ಮತ್ತು ಶ್ರೀ ರಾಮಾನುಜಾಚಾರ್ಯರ ಜಯಂತಿಯಂದು ಅವರ ಶ್ರೀಚರಣಗಳಿಗೆ ಅನಂತ ಪ್ರಣಾಮಗಳು. ಶತಮಾನಗಳ ಹಿಂದೆಯೇ ಅವರು ಉಪದೇಶಿಸಿದ ಭಕ್ತಿ ಮತ್ತು ಸಾಧನೆಗಳ ತತ್ವಜ್ಞಾನ ಇಂದಿಗೂ ಕೂಡ ಆಧ್ಯಾತ್ಮ ಚಿಂತನೆಗಳ ದಾರಿಯನ್ನು ಬೆಳಗಿಸುತ್ತಿವೆ.
-
B.S.Yediyurappa
@BSYBJP
ನಾಡು ಕಂಡ ಹಿರಿಯ ಮುತ್ಸದ್ದಿ, ಮಾಜಿ ಮುಖ್ಯಮಂತ್ರಿ, ಪದ್ಮವಿಭೂಷಣ ದಿವಂಗತ ಶ್ರೀ ಎಸ್.ಎಂ.ಕೃಷ್ಣ ಅವರ ಜನ್ಮದಿನದಂದು ಆ ಸಾಧಕ ಚೇತನಕ್ಕೆ ಆದರಪೂರ್ವಕ ನಮನಗಳು.
-
B.S.Yediyurappa
@BSYBJP
ನಮ್ಮ ಶ್ರಮಿಕರ ಪರಿಶ್ರಮವೇ ದೇಶದ ಪ್ರಗತಿಯ ಬುನಾದಿ. ಕಾಯಕ ಯೋಗಿಗಳೆನಿಸಿರುವ ಎಲ್ಲ ಶ್ರಮಿಕ ಬಂಧುಗಳಿಗೆ ಅಂತಾರಾಷ್ಟ್ರೀಯ ಕಾರ್ಮಿಕ ದಿನದ ಶುಭಾಶಯಗಳು!
#laboursday #internationalworkersday -
B.S.Yediyurappa
@BSYBJP
ಶತಶತಮಾನಗಳ ಹಿಂದೆಯೇ ನಾಡಿನಲ್ಲಿ ಆಧ್ಯಾತ್ಮಿಕ, ಸಾಮಾಜಿಕ, ಹಾಗೂ ವೈಚಾರಿಕ ಕ್ರಾಂತಿಗೆ ನಾಂದಿ ಹಾಡಿದ ಸಮಾಜ ಸುಧಾರಕ, ಶರಣ ಶ್ರೇಷ್ಠ, ವಿಶ್ವಗುರು ಅಣ್ಣ ಬಸವಣ್ಣನವರ ಜಯಂತಿಯಂದು ಆ ಯುಗಪುರುಷನಿಗೆ ಅನಂತ ಪ್ರಣಾಮಗಳನ್ನು ಸಲ್ಲಿಸುತ್ತಾ, ಸರ್ವರಿಗೂ ಅಣ್ಣ ಬಸವಣ್ಣನವರ ಜಯಂತಿಯ ಭಕ್ತಿಪೂರ್ವಕ ಶುಭಾಶಯಗಳನ್ನು ತಿಳಿಸುತ್ತೇನೆ.
-
B.S.Yediyurappa
@BSYBJP
ಪ್ರಖ್ಯಾತ ಬಾಹ್ಯಾಕಾಶ ವಿಜ್ಞಾನಿ, ಇಸ್ರೋ ಸಂಸ್ಥೆಯ ಮಾಜಿ ಅಧ್ಯಕ್ಷ, ಪದ್ಮವಿಭೂಷಣ ಡಾ ಕೆ.ಕಸ್ತೂರಿ ರಂಗನ್ ಅವರು ವಿಧಿವಶರಾದ ಸುದ್ದಿ ಅತ್ಯಂತ ದುಃಖವನ್ನುಂಟು ಮಾಡಿದೆ. ಅವರ ಅಗಲಿಕೆಯಿಂದ ಬಾಹ್ಯಾಕಾಶ ಕ್ಷೇತ್ರದ ಹಿರಿಯ ಸಾಧಕ ವಿಜ್ಞಾನಿಯನ್ನು ದೇಶ ಕಳೆದುಕೊಂಡಿದೆ. ವೈಯಕ್ತಿಕವಾಗಿ ಒಬ್ಬ ಹಿರಿಯ, ಪರಿಣಿತ ಒಡನಾಡಿಯನ್ನು ನಾನು ಕಳೆದುಕೊಂಡಿದ್ದು, ಅನೇಕ ಸಂದರ್ಭಗಳಲ್ಲಿ ಅವರು ನೀಡುತ್ತಿದ್ದ ಸಲಹೆ, ಸೂಚನೆಗಳನ್ನು ನಾನೆಂದಿಗೂ ಮರೆಯಲಾರೆ.
ವಿಜ್ಞಾನ ಕ್ಷೇತ್ರದ ಜೊತೆಗೆ ರಾಷ್ಟ್ರೀಯ ಶಿಕ್ಷಣ ನೀತಿಯ ಕರಡು ಸಮಿತಿಯ ಅಧ್ಯಕ್ಷರಾಗಿ, ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ ಕುಲಪತಿಗಳಾಗಿ, ಕರ್ನಾಟಕ ಜ್ಞಾನ ಆಯೋಗದ ಅಧ್ಯಕ್ಷರಾಗಿ, ರಾಜ್ಯಸಭೆಯ ಸದಸ್ಯರಾಗಿ, ಯೋಜನಾ ಆಯೋಗದ ಸದಸ್ಯರಾಗಿ ಅವರು ಅಪಾರ ಕೊಡುಗೆ ಸಲ್ಲಿಸಿದ್ದಾರೆ. ಅವರ ಆತ್ಮಕ್ಕೆ ಸದ್ಗತಿ ಪ್ರಾರ್ಥಿಸುತ್ತಾ, ಅವರ ಕುಟುಂಬದ ಸದಸ್ಯರಲ್ಲಿ ತೀವ್ರ ಸಂತಾಪಗಳನ್ನು ಸಲ್ಲಿಸುತ್ತೇನೆ. ಓಂ ಶಾಂತಿ 🙏🏼 -
B.S.Yediyurappa
@BSYBJP
ಭಾರತೀಯ ಚಿತ್ರರಂಗಕ್ಕೆ ಅಪಾರ ಕೊಡುಗೆ ನೀಡಿರುವ ಕನ್ನಡ ಕಲಾ ಪ್ರಪಂಚದ ಅದ್ವಿತೀಯ ಸಾಧಕ, ವರನಟ, ಪದ್ಮಭೂಷಣ, ಕರ್ನಾಟಕ ರತ್ನ ದಿ|| ಡಾ.ರಾಜಕುಮಾರ್ ಅವರ ಜನ್ಮದಿನದಂದು, ಆ ಮಹಾನ್ ಕಲಾರಾಧಕ ಚೇತನಕ್ಕೆ ಅಭಿಮಾನಪೂರ್ವಕ ನಮನಗಳು.
-
B.S.Yediyurappa
@BSYBJP
ಜಮ್ಮು-ಕಾಶ್ಮೀರದ ಅನಂತನಾಗ್ ಜಿಲ್ಲೆಯ ಪಹಲ್ಗಾಮ್ ನಲ್ಲಿ ಅಮಾಯಕ ಪ್ರವಾಸಿಗರ ಮೇಲೆ ನಡೆದಿರುವ ಹೀನ ಭಯೋತ್ಪಾದಕ ದಾಳಿಯನ್ನು ಕಟುವಾಗಿ ಖಂಡಿಸುತ್ತೇನೆ. ಮುಗ್ಧ ಜನರನ್ನು ಹತ್ಯೆಗೈದಿರುವ ನೀಚ ರಾಕ್ಷಸರಿಗೆ ಕ್ಷಮೆಯೇ ಇಲ್ಲ. ಈ ಅಮಾನವೀಯ ದಾಳಿಯಲ್ಲಿ, ಪ್ರವಾಸಕ್ಕೆ ತೆರಳಿದ್ದ ಶಿವಮೊಗ್ಗದ ಉದ್ಯಮಿ ಶ್ರೀ ಮಂಜುನಾಥ್ ಮೃತಪಟ್ಟಿರುವ ಸುದ್ದಿ ಅತ್ಯಂತ ಆಘಾತವನ್ನುಂಟು ಮಾಡಿದ್ದು, ಅವರ ಕುಟುಂಬದವರಲ್ಲಿ ಅತೀವ ಸಂತಾಪಗಳನ್ನು ವ್ಯಕ್ತಪಡಿಸುತ್ತೇನೆ. ಗಾಯಗೊಂಡ ಪ್ರವಾಸಿಗರು ಶೀಘ್ರ ಗುಣಮುಖರಾಗಲೆಂದು ಪ್ರಾರ್ಥಿಸುತ್ತೇನೆ.
-
B.S.Yediyurappa
@BSYBJP
ಸಂವಿಧಾನ ಶಿಲ್ಪಿ, ಭಾರತರತ್ನ ಡಾII ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಜಯಂತಿಯಂದು ಆ ಮಹಾನ್ ಚೇತನಕ್ಕೆ ಆದರಪೂರ್ವಕ ಪ್ರಣಾಮಗಳು.
#ambedkarjayanti2025 -
B.S.Yediyurappa
@BSYBJP
ಹನುಮ ಜಯಂತಿಯ ಪವಿತ್ರ ಸಂದರ್ಭದಲ್ಲಿ ಇಂದು ಶಿಕಾರಿಪುರದ ಪ್ರಸಿದ್ಧ ಶ್ರೀ ಹುಚ್ಚರಾಯಸ್ವಾಮಿ ದೇವಾಲಯಕ್ಕೆ ಕುಟುಂಬದ ಸದಸ್ಯರೊಂದಿಗೆ ತೆರಳಿ, ವಿಶೇಷ ಪೂಜೆ, ಪ್ರಾರ್ಥನೆಗಳನ್ನು ಸಲ್ಲಿಸಿ, ಸಹಸ್ರಾರು ಭಕ್ತರೊಂದಿಗೆ ಸ್ವಾಮಿಯ ರಥೋತ್ಸವದಲ್ಲಿ ಪಾಲ್ಗೊಳ್ಳಲಾಯಿತು.
-
B.S.Yediyurappa
@BSYBJP
ನಾಡಿನ ಸಮಸ್ತ ಭಕ್ತ ಜನತೆಗೆ ಹನುಮ ಜಯಂತಿಯ ಶುಭಾಶಯಗಳು. ನಾಡಿನಲ್ಲಿ ಮೇಲೆ, ಎಲ್ಲ ಭಕ್ತರ ಮೇಲೆ ಆಂಜನೇಯ ಸ್ವಾಮಿಯ ಕೃಪೆ ಸದಾ ಇರಲಿ ಎಂದು ಪ್ರಾರ್ಥಿಸುತ್ತೇನೆ.
-
B.S.Yediyurappa
@BSYBJP
ನಾಡಿನ ಸಮಸ್ತ ಜನತೆಗೆ ಭಗವಾನ್ ಮಹಾವೀರ ಜಯಂತಿಯ ಹಾರ್ದಿಕ ಶುಭಾಶಯಗಳು. ಕೊನೆಯ ತೀರ್ಥಂಕರರಾದ ವರ್ಧಮಾನ ಮಹಾವೀರರ ತತ್ವೋಪದೇಶಗಳು ಜಗತ್ತಿಗೆ ಸತ್ಯ, ಅಹಿಂಸೆ, ಸಹಾನುಭೂತಿ, ಅಪರಿಗ್ರಹಗಳ ಬೆಳಕನ್ನು ನೀಡಿದೆ.
#mahaveerjayanti -
B.S.Yediyurappa
@BSYBJP
ಪಕ್ಷದ ಸ್ಥಾಪನಾ ದಿನದ ಅಂಗವಾಗಿ ಬೆಂಗಳೂರಿನ ಪಕ್ಷದ ಕಚೇರಿಯಲ್ಲಿ ಇಂದು ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ, ರಾಜ್ಯಾಧ್ಯಕ್ಷ ಶ್ರೀ @BYVijayendra, ಮಾಜಿ ಮುಖ್ಯಮಂತ್ರಿ ಶ್ರೀ @DVSadanandGowda ಸೇರಿದಂತೆ ಹಲವಾರು ನಾಯಕರು, ಪದಾಧಿಕಾರಿಗಳು, ಮತ್ತು ಕಾರ್ಯಕರ್ತರೊಂದಿಗೆ ಪಾಲ್ಗೊಳ್ಳಲಾಯಿತು.
#bjpfoundationday2025 #bjpsthapnadiwas -
B.S.Yediyurappa
@BSYBJP
ಪಕ್ಷದ ಸ್ಥಾಪನಾ ದಿವಸದ ಈ ಸಂದರ್ಭದಲ್ಲಿ, ಬೆಂಗಳೂರಿನ ನನ್ನ ನಿವಾಸದ ಮೇಲೆ ಪಕ್ಷದ ಧ್ವಜಾರೋಹಣ ನೆರವೇರಿಸಲಾಯಿತು. ಮತ್ತೊಮ್ಮೆ ಎಲ್ಲಾ ನಮ್ಮ ಪಕ್ಷದ ಕಾರ್ಯಕರ್ತರಿಗೆ ಸ್ಥಾಪನಾ ದಿನದ ಹೃತ್ಪೂರ್ವಕ ಶುಭಾಶಯಗಳು. ಮನೆ ಮನೆಗಳ ಪಕ್ಷದ ಧ್ವಜ ರಾರಾಜಿಸಲಿ. ನಮ್ಮ ಪಕ್ಷ ನಮ್ಮ ಹೆಮ್ಮೆ!
#bjpfoundationday #sthapnadiwas -
B.S.Yediyurappa
@BSYBJP
ಪಕ್ಷದ ಎಲ್ಲಾ ನಮ್ಮ ಹೆಮ್ಮೆಯ ಕಾರ್ಯಕರ್ತರಿಗೂ, ಹಿತೈಷಿಗಳಿಗೂ ಭಾರತೀಯ ಜನತಾ ಪಾರ್ಟಿಯ 'ಸ್ಥಾಪನಾ ದಿನ'ದ ಹೃತ್ಪೂರ್ವಕ ಶುಭಾಶಯಗಳು. ವಿಶ್ವದ ಅತಿ ದೊಡ್ಡ ರಾಜಕೀಯ ಪಕ್ಷವಾಗಿ ಬೆಳೆದಿರುವ ಭಾರತೀಯ ಜನತಾ ಪಾರ್ಟಿಯನ್ನು ಕಟ್ಟಿದ, ಸಂಘಟನೆಗಾಗಿ ದುಡಿದ ಎಲ್ಲ ಹಿರಿಯರ ಸಂಸ್ಮರಣೆಗಳ ಜೊತೆಗೆ, ಸಮೃದ್ಧ, ಸಶಕ್ತ, ವಿಕಸಿತ ಭಾರತಕ್ಕಾಗಿ ಸಂಘಟನೆಯನ್ನು ಬಲಪಡಿಸುತ್ತಾ ನಾವೆಲ್ಲರೂ ಒಂದಾಗಿ ಮುನ್ನಡೆಯುವ ಸಂಕಲ್ಪವನ್ನು ಪುನರುಚ್ಚರಿಸೋಣ. #bjpfoundationday
@BJP4India @BJP4Karnataka -
B.S.Yediyurappa
@BSYBJP
ನಾಡಿನ ಸಮಸ್ತ ಭಕ್ತ ಜನತೆಗೆ ಶ್ರೀರಾಮ ನವಮಿ ಹಬ್ಬದ ಹಾರ್ದಿಕ ಶುಭಾಶಯಗಳು.
-
B.S.Yediyurappa
@BSYBJP
ತನ್ನ ಕೆಟ್ಟ ಆಡಳಿತ, ಆರ್ಥಿಕ ಸವಾಲುಗಳನ್ನು ನಿರ್ವಹಿಸುವಲ್ಲಿ ತನ್ನ ವೈಫಲ್ಯಗಳನ್ನು ಮುಚ್ಚಿಕೊಳ್ಳಲು ರಾಜ್ಯ ಕಾಂಗ್ರೆಸ್ ಸರ್ಕಾರ ಜನಸಾಮಾನ್ಯರ ಮೇಲೆ ಬೆಲೆ ಏರಿಕೆ ಬರೆ ಎಳೆಯುತ್ತಲೇ ಬಂದಿದೆ. ಜನರ ಆಕ್ರೋಶಕ್ಕೆ ಧ್ವನಿಯಾಗಿ ಬೆಲೆ ಏರಿಕೆಯ ಕೆಟ್ಟ ನೀತಿಗಳ ವಿರುದ್ಧ ಪಕ್ಷ ಬೆಂಗಳೂರಿನಲ್ಲಿ ನಡೆಸುತ್ತಿರುವ ಅಹೋರಾತ್ರಿ ಧರಣಿ ಪ್ರತಿಭಟನೆಯಲ್ಲಿ ಇಂದು ಮತ್ತೆ ಪಾಲ್ಗೊಳ್ಳಲಾಯಿತು. ರಾಜ್ಯಾದ್ಯಂತ ಹೋರಾಟ ನಡೆಸಿ ಭ್ರಷ್ಟ ಕಾಂಗ್ರೆಸ್ ಸರ್ಕಾರಕ್ಕೆ ಜನಾಕ್ರೋಶದ ಬಿಸಿ ಮುಟ್ಟಿಸುವ ಜನಾಂದೋಲನವನ್ನು ಹತ್ತಿಕ್ಕುವ ನಿಟ್ಟಿನಲ್ಲಿ ಈ ಜನವಿರೋಧಿ ಸರ್ಕಾರ ನಮ್ಮನ್ನು ಬಂಧಿಸಿದೆ. ಆದರೆ ರಾಜ್ಯ ಸರ್ಕಾರ ಬೆಲೆ ಏರಿಕೆಯ ನಿರ್ಣಯಗಳನ್ನು ಹಿಂಪಡೆಯುವವರೆಗೂ ನಮ್ಮ ಹೋರಾಟ ನಿಲ್ಲುವುದಿಲ್ಲ. @BJP4Karnataka
-
B.S.Yediyurappa
@BSYBJP
ದುರಾಡಳಿತ, ಭ್ರಷ್ಟಾಚಾರ, ಶೂನ್ಯ ಅಭಿವೃದ್ಧಿ, ಸ್ವಾರ್ಥ ರಾಜಕೀಯಗಳ ಜನವಿರೋಧಿ ನೀತಿ ಅನುಸರಿಸುತ್ತಿರುವ ಕಾಂಗ್ರೆಸ್ ಸರ್ಕಾರದ ವಿರುದ್ಧ ಪಕ್ಷ ನಿರಂತರ ಹೋರಾಡಲಿದೆ. ಬೆಲೆ ಏರಿಕೆ ಬಿಸಿಯನ್ನು ಸರ್ಕಾರಕ್ಕೆ ಮುಟ್ಟಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರದ ವೈಫಲ್ಯಗಳ ವಿರುದ್ಧ ಪಕ್ಷದ ಜನ ಜಾಗೃತಿ ಹೋರಾಟದಲ್ಲಿ ಪಾಲ್ಗೊಳ್ಳಲಾಯಿತು. @BJP4Karnataka
-
B.S.Yediyurappa
@BSYBJP
ಸಿದ್ದಗಂಗೆಯ ಸಾಧಕ ಶಕಪುರುಷರು, ತ್ರಿವಿಧ ದಾಸೋಹಿ, ಲಿಂಗೈಕ್ಯ ಪದ್ಮಭೂಷಣ ಡಾ. ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿಗಳ ಜಯಂತಿಯಂದು ಆ ಪುಣ್ಯಚೇತನಕೆ ಅನಂತ ಪ್ರಣಾಮಗಳು.
-
B.S.Yediyurappa
@BSYBJP
ನಾಡಿನ ಎಲ್ಲಾ ಮುಸ್ಲಿಂ ಬಾಂಧವರಿಗೆ ಪವಿತ್ರ ರಂಜಾನ್ ಹಬ್ಬದ ಶುಭಾಶಯಗಳು. ಈ ಈದ್-ಉಲ್-ಫಿತ್ರ್ ದಿನದಂದು ಎಲ್ಲರ ಜೀವನದಲ್ಲಿ ಸಂತೋಷ, ಉತ್ತಮ ಆರೋಗ್ಯ, ಯಶಸ್ಸುಗಳನ್ನು ಆ ದೇವರು ಅನುಗ್ರಹಿಸಲಿ ಎಂದು ಪ್ರಾರ್ಥಿಸೋಣ.
#ramadan #ramzan2025 #eidulfitr2025 -
B.S.Yediyurappa
@BSYBJP
ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಂಸ್ಥಾಪಕರಾದ ಆದರಣೀಯ ಶ್ರೀ ಕೇಶವ್ ಬಲಿರಾಮ್ ಹೆಡಗೆವಾರ್ ಅವರ ಜಯಂತಿಯಂದು ಆ ಮಹಾನ್ ಚೇತನಕ್ಕೆ ಅನಂತ ಪ್ರಣಾಮಗಳು.
-
B.S.Yediyurappa
@BSYBJP
ಎಲ್ಲರಿಗೂ ಯುಗಾದಿ ಹಬ್ಬದ ಶುಭಾಶಯಗಳು. ಈ ನೂತನ ಸಂವತ್ಸರವು ಎಲ್ಲರಿಗೂ ಮಂಗಳವನ್ನುಂಟು ಮಾಡಲಿ, ಹೊಸ ಭರವಸೆ, ಹೊಸ ಹುರುಪಿನೊಂದಿಗೆ ನಿಮ್ಮೆಲ್ಲರ ಜೀವನ ಸಂತಸಮಯವಾಗಿರಲಿ ಎಂದು ಹಾರೈಸುತ್ತೇನೆ.
-
B.S.Yediyurappa
@BSYBJP
ಕನ್ನಡಿಗರ ಕಣ್ಮಣಿ, ವರನಟ ಡಾ.ರಾಜ್ ಕುಮಾರ್ ಪುತ್ರ, ಅಭಿಮಾನಿಗಳ ಪ್ರೀತಿಯ ಪವರ್ ಸ್ಟಾರ್, ಕರ್ನಾಟಕ ರತ್ನ ದಿ. ಶ್ರೀ ಪುನೀತ್ ರಾಜಕುಮಾರ್ ಅವರ ಜನ್ಮದಿನದಂದು ಆ ಸಾಧಕ ಚೇತನಕ್ಕೆ ಅಭಿಮಾನಪೂರ್ವಕ ನಮನಗಳು.
-
B.S.Yediyurappa
@BSYBJP
ಎಲ್ಲರಿಗೂ ಹೋಳಿ ಹಬ್ಬದ ಸಂಭ್ರಮದ ಶುಭಾಶಯಗಳು. ಸಂತಸ, ಸಮೃದ್ಧಿಗಳ ಬಣ್ಣಗಳು ನಿಮ್ಮೆಲ್ಲರ ಬದುಕಿನಲ್ಲಿ ತುಂಬಿರಲಿ ಎಂದು ಹಾರೈಸುತ್ತೇನೆ.
-
B.S.Yediyurappa
@BSYBJP
16ನೇ ಬಾರಿಗೆ ಬಜೆಟ್ ಮಂಡಿಸಿದ ದಾಖಲೆ ಬಿಟ್ಟರೆ ಸನ್ಮಾನ್ಯ ಮುಖ್ಯಮಂತ್ರಿ ಶ್ರೀ @siddaramaiah ನವರು ಇಂದು ಮಂಡಿಸಿದ ಬಜೆಟ್ ರಾಜ್ಯದ ಅಭಿವೃದ್ಧಿಯ ವಿರುದ್ಧ ದಿಕ್ಕಿನಲ್ಲಿ ಸಾಗಿದೆ. ತಮ್ಮ ಅಲ್ಪಸಂಖ್ಯಾತ ತುಷ್ಟೀಕರಣ ನೀತಿಯನ್ನು ಬಜೆಟ್ ಗೂ ವಿಸ್ತರಿಸಿದ್ದೇ ಈ ಸರ್ಕಾರದ ಸಾಧನೆಯಾಗಿದೆ.
ಬಜೆಟ್ ನಲ್ಲಿ ಮುಸ್ಲಿಂ ಗುತ್ತಿಗೆದಾರರಿಗೆ ಧರ್ಮಾಧಾರಿತ ಮೀಸಲಾತಿ ನೀಡುವ ಮೂಲಕ ಸಂವಿಧಾನದ ಸದಾಶಯಗಳನ್ನು ಗಾಳಿಗೆ ತೂರಿರುವುದು, ಸಾಲದ ಹೊರೆ ಹೆಚ್ಚಿಸಿರುವುದು, ಕಲ್ಯಾಣ ಕರ್ನಾಟಕ ಅಭಿವೃದ್ಧಿಯತ್ತ ನಿರ್ಲಕ್ಷ್ಯ, ಕಳೆದ ಬಜೆಟ್ ಘೋಷಣೆಗಳ ಅನುಷ್ಠಾನದ ಬಗ್ಗೆ ಮೌನ, ಗ್ಯಾರಂಟಿ ಹೆಸರಿನಲ್ಲಿ ಅಭಿವೃದ್ಧಿ ಕಾರ್ಯಗಳ ಬಗ್ಗೆ ಬಜೆಟ್ ನಲ್ಲಿ ನಿರ್ಲಕ್ಷ್ಯ ವಹಿಸಲಾಗಿದೆ. ಬೆಂಗಳೂರಿನ ಅಭಿವೃದ್ಧಿಗೆ ಹೆಚ್ಚಿನ ಗಮನ ನೀಡಿಲ್ಲ.
ಈ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ 2 ಸಾವಿರಕ್ಕೂ ಅಧಿಕ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದರೂ, ರೈತರಿಗಾಗಿ ಬಜೆಟ್ ನಲ್ಲಿ ಯಾವುದೇ ವಿಶೇಷ ಯೋಜನೆ ನೀಡಿಲ್ಲ. ರೈತರ ಆದಾಯ ಹೆಚ್ಚಳಕ್ಕೆ ಯಾವುದೇ ಕ್ರಮಗಳಿಲ್ಲ. ಸ್ಪಷ್ಟತೆಯಿಲ್ಲದ ಈ ಬಜೆಟ್ ರಾಜ್ಯದ ಅಭಿವೃದ್ಧಿಗೆ ಮಾರಕವಾಗಿದೆ.
#congressfailskarnataka @BJP4Karnataka -
B.S.Yediyurappa
@BSYBJP
ಹಿರಿಯ ಶಿಕ್ಷಣ ತಜ್ಞರು, ಪಿಇಎಸ್ ಸಂಸ್ಥೆಗಳ ಸ್ಥಾಪಕ ಅಧ್ಯಕ್ಷರು, ಪಿಇಎಸ್ ವಿಶ್ವವಿದ್ಯಾಲಯದ ಕುಲಪತಿಗಳು, ಮಾಜಿ ವಿಧಾನ ಪರಿಷತ್ ಸದಸ್ಯರು, ಆತ್ಮೀಯರೂ ಆಗಿದ್ದ ಶ್ರೀ ಎಂ.ಆರ್.ದೊರೆಸ್ವಾಮಿ ರವರು ವಿಧಿವಶರಾಗಿರುವುದು ಅತ್ಯಂತ ದುಃಖ ತಂದಿದೆ. ಅವರ ನಿಧನದಿಂದ ನಾಡು ಒಬ್ಬ ಅತ್ಯುತ್ತಮ ಶಿಕ್ಷಣ ತಜ್ಞರನ್ನು ಕಳೆದುಕೊಂಡಿದೆ. ವೈಯಕ್ತಿಕವಾಗಿ ಒಬ್ಬ ಆತ್ಮೀಯ ಮಿತ್ರರನ್ನು ಕಳೆದುಕೊಂಡಿದ್ದೇನೆ.
ದೇವರು ಅವರ ಆತ್ಮಕ್ಕೆ ಸದ್ಗತಿಯನ್ನು ನೀಡಲಿ ಎಂದು ಪ್ರಾರ್ಥಿಸುತ್ತಾ, ಅವರ ಕುಟುಂಬ ಹಾಗೂ ಅಭಿಮಾನಿಗಳಲ್ಲಿ ನನ್ನ ತೀವ್ರ ಸಂತಾಪಗಳನ್ನು ವ್ಯಕ್ತಪಡಿಸುತ್ತೇನೆ. ಓಂ ಶಾಂತಿ 🙏🏼 -
B.S.Yediyurappa
@BSYBJP
I would like to express my heartfelt gratitude to everyone who took the time to extend their wishes, and visit me on the occasion of my birthday. The confidence you place in me serves as a constant source of strength and inspires me to remain dedicated to serving the people of this state and our nation, and I am profoundly thankful for your unwavering support.
-
B.S.Yediyurappa
@BSYBJP
ಆತ್ಮೀಯ ಬಂಧುಗಳೇ,
ನನ್ನ ಜನ್ಮದಿನವನ್ನು ತಾವೆಲ್ಲರೂ ತುಂಬು ಹೃದಯದ ಪ್ರೀತಿ ವ್ಯಕ್ತಪಡಿಸಿ, ಅಭಿಮಾನದ ಹೊಳೆಯಲ್ಲಿ ನನ್ನನ್ನು ತೇಲಿಸಿ ಸಂಭ್ರಮಿಸಿದ್ದೀರಿ. ಇಂತಹ ಅಪೂರ್ವವಾದ ಕ್ಷಣಗಳನ್ನು ನಾನೆಂದೂ ಮರೆಯಲಾಗದು. ನಿಮ್ಮೆಲ್ಲರ ಪ್ರೀತಿಯ ಋಣ ತೀರಿಸಲಾಗದು. ನಿಮ್ಮೆಲ್ಲರ ಹಾರೈಕೆ ಪ್ರೀತ್ಯಾದರಗಳು ನನ್ನ ಸಾರ್ವಜನಿಕ ಬದುಕಿನ ಜೀವಸತ್ವವಾಗಿದೆ. ಇದರ ಪರಿಣಾಮವಾಗಿಯೇ ಈ ಕ್ಷಣಕ್ಕೂ ನನ್ನಲ್ಲಿನ ಹೋರಾಟದ ಉತ್ಸಾಹ ಕುಗ್ಗಿಲ್ಲ, ಬದಲಾಗಿ ಅದು ಇಮ್ಮಡಿಸುತ್ತಲೇ ಇದೆ. ನಾಡಿಗಾಗಿ, ಜನರಿಗಾಗಿ, ಪಕ್ಷ ಕಟ್ಟುವ ಕಾಯಕಕ್ಕಾಗಿ, ಕಾರ್ಯಕರ್ತರ ಅಭಿಲಾಷೆಗಾಗಿ ನನ್ನ ಜೀವನದ ಕೊನೆ ಉಸಿರಿರುವವರೆಗೂ ಕ್ರಿಯಾಶೀಲನಾಗಿ ಹೋರಾಡುವ ಹಾಗೂ ಸ್ಪಂದಿಸುವ ಅದಮ್ಯ ಉತ್ಸಾಹ ನನ್ನಲ್ಲಿ ಬಲವಾಗಿ ಬೇರೂರಿದೆ. ನಿಮ್ಮೆಲ್ಲರ ಪ್ರೀತಿ, ವಿಶ್ವಾಸ, ಅಭಿಮಾನಕ್ಕೆ ನನ್ನ ಹೃತ್ಪೂರ್ವಕ ಕೃತಜ್ಞತೆಗಳು. -
B.S.Yediyurappa
@BSYBJP
ಧನ್ಯವಾದಗಳು!
Sadananda Gowda
@DVSadanandGowda
ಕರ್ನಾಟಕದ ಮಾಜಿ ಮುಖ್ಯಮಂತ್ರಿ, ಬಿಜೆಪಿ ಹಿರಿಯ ನಾಯಕ ಶ್ರೀ ಬಿ.ಎಸ್. ಯಡಿಯೂರಪ್ಪ ಅವರಿಗೆ ಹಾರ್ದಿಕ ಜನ್ಮದಿನ ಶುಭಾಶಯಗಳು.
ಅವರು ದೀರ್ಘಾಯುಷ್ಯ, ಉತ್ತಮ ಆರೋಗ್ಯ ಮತ್ತು ಹಿತಕರ ಜೀವನವನ್ನು ಹೊಂದಲಿ ಎಂದು ಪ್ರಾರ್ಥಿಸುತ್ತೇವೆ. ಅವರ ನಾಯಕತ್ವ ಮತ್ತು ಸೇವಾ ಕಾರ್ಯಗಳು ರಾಜ್ಯದ ಹಾಗೂ ಪಕ್ಷದ ಬಲವರ್ಧನಕ್ಕೆ ಶಕ್ತಿಯಾಗಿರಲಿ. -
B.S.Yediyurappa
@BSYBJP
ತಮ್ಮ ಹಾರೈಕೆಗಳಿಗೆ ಧನ್ಯವಾದಗಳು ಶ್ರೀ @siddaramaiah ಅವರೇ!
Siddaramaiah
@siddaramaiah
ಹಿರಿಯ ರಾಜಕಾರಣಿ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು.
ಇನ್ನೂ ಹೆಚ್ಚಿನ ಆಯಸ್ಸು, ಉತ್ತಮ ಆರೋಗ್ಯವನ್ನು ಕೊಟ್ಟು ಭಗವಂತ ತಮಗೆ ಕರುಣಿಸಲಿ ಎಂದು ಹಾರೈಸುತ್ತೇನೆ. -
B.S.Yediyurappa
@BSYBJP
ಧನ್ಯವಾದಗಳು!
V. Somanna
@VSOMANNA_BJP
ಭಾರತೀಯ ಜನತಾ ಪಕ್ಷದ ಹಿರಿಯ ನಾಯಕರು, ಮಾಜಿ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಬಿ.ಎಸ್.ಯಡಿಯೂರಪ್ಪ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳನ್ನು ಕೋರುತ್ತೇನೆ.
ಶ್ರೀ ದೇವರು ತಮಗೆ ಉತ್ತಮ ಆಯುರಾರೋಗ್ಯ ನೀಡಿ ಕಾಪಾಡಲಿ ಎಂದು ಪ್ರಾರ್ಥಿಸುತ್ತೇನೆ.
@BSYBJP -
B.S.Yediyurappa
@BSYBJP
Thank you Shri @vishnudsai Ji.
Vishnu Deo Sai
@vishnudsai
कर्नाटक के पूर्व मुख्यमंत्री श्री बी.एस. येदियुरप्पा जी, आपको जन्मदिन की हार्दिक बधाई एवं शुभकामनाएं।
प्रभु श्रीराम से आपके उत्तम स्वास्थ्य एवं मंगलमय जीवन की कामना करता हूं।
@BSYBJP -
B.S.Yediyurappa
@BSYBJP
ಧನ್ಯವಾದಗಳು!
M B Patil
@MBPatil
ನಾಡಿನ ಮುತ್ಸದ್ಧಿ ರಾಜಕಾರಣಿಗಳು, ಮಾಜಿ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ @BSYBJP ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. ದೇವರು ಅವರಿಗೆ ಉತ್ತಮ ಆರೋಗ್ಯ, ದೀರ್ಘಾಯುಷ್ಯವನ್ನು ದಯಪಾಲಿಸಲೆಂದು ಪ್ರಾರ್ಥಿಸುತ್ತೇನೆ.
#bsyediyurappa -
B.S.Yediyurappa
@BSYBJP
Thank you!
Suresh Prabhu
@sureshpprabhu
Wishing my dear friend and sr colleague @BSYBJP a long ,happy, healthy life.
-
B.S.Yediyurappa
@BSYBJP
ಧನ್ಯವಾದಗಳು!
Tejasvi Surya
@Tejasvi_Surya
ಮಾಜಿ ಮುಖ್ಯಮಂತ್ರಿಗಳು, ಬಿಜೆಪಿಯ ಹಿರಿಯ ನಾಯಕರಾದ ಶ್ರೀ @BSYBJP ರವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು.
ತಮ್ಮ ಅವಿರತ ಹೋರಾಟ, ಸಂಘಟನಾ ಚಾತುರ್ಯತೆಯಿಂದ ರಾಜ್ಯದಲ್ಲಿ ಬಿಜೆಪಿಯನ್ನು ಬೇರುಮಟ್ಟದಿಂದ ಸಜ್ಜುಗೊಳಿಸಿ, ನನ್ನಂತಹ ಲಕ್ಷಾಂತರ ಕಾರ್ಯಕರ್ತರಿಗೆ ಮಾದರಿಯಾಗಿರುವ ಶ್ರೀ ಯಡಿಯೂರಪ್ಪ ರವರಿಗೆ ಇನ್ನಷ್ಟು ಹೆಚ್ಚಿನ ಆರೋಗ್ಯ, ಸುಖ- ಶಾಂತಿ, ನೆಮ್ಮದಿ ದಯಪಾಲಿಸಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ. -
B.S.Yediyurappa
@BSYBJP
Thank you Shri @DrMohanYadav51 Ji.
Dr Mohan Yadav
@DrMohanYadav51
भारतीय जनता पार्टी के वरिष्ठ नेता एवं कर्नाटक के पूर्व मुख्यमंत्री श्री बी.एस.येदियुरप्पा जी को जन्मदिन की हार्दिक बधाई एवं शुभकामनाएं।
प्रभु श्री राम जी से आपके उत्तम स्वास्थ्य, दीर्घायु और यशस्वी जीवन की कामना करता हूँ।
@BSYBJP -
B.S.Yediyurappa
@BSYBJP
ಧನ್ಯವಾದಗಳು!
P C Mohan
@PCMohanMP
ರಾಜ್ಯದ ಜನರ, ರೈತ ಬಂಧುಗಳ, ದುರ್ಬಲರ ಆಶೋತ್ತರಗಳಿಗಾಗಿ ದುಡಿಯುತ್ತಿರುವ ದಣಿವರಿಯದ ನಾಯಕ, ತಮ್ಮ ಜೀವನವನ್ನು ರೈತರ ಅಭ್ಯುದಯಕ್ಕಾಗಿ ಮೀಸಲಿಟ್ಟ ಹುಟ್ಟು ಹೋರಾಟಗಾರ, ಯುವಕರ ನೆಚ್ಚಿನ ರಾಜಾಹುಲಿ ಶ್ರೀ ಬಿಎಸ್ ಯಡಿಯೂರಪ್ಪನವರಿಗೆ ಜನ್ಮದಿನದ ಹಾರ್ದಿಕ ಶುಭಕಾಮನೆಗಳು. ಭಗವಂತನ ಅನುಗ್ರಹ ಸದಾ ತಮ್ಮ ಮೇಲಿರಲಿ ಎಂದು ಶುಭ ಕೋರುತ್ತೇನೆ.
-
B.S.Yediyurappa
@BSYBJP
ಧನ್ಯವಾದಗಳು!
Dr.C.N.Manjunath
@DrCNManjunath
ಹಿರಿಯ ಮುತ್ಸದಿ ರಾಜಕಾರಣಿ, ಮಾಜಿ ಮುಖ್ಯಮಂತ್ರಿಗಳು, ರೈತಪರ ನಾಯಕರು ಆದ ಶ್ರೀ @BSYBJP ಅವರಿಗೆ ಜನ್ಮದಿನದ ಶುಭಾಶಯಗಳು.
ಭಗವಂತನು ತಮಗೆ ಉತ್ತಮ ಆಯುರಾರೋಗ್ಯವನ್ನು ಕರುಣಿಸಿ ನಾಡಿನ ಜನಸೇವೆ ಮಾಡಲು ಇನ್ನಷ್ಟು ಶಕ್ತಿ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ.
#birthdaywishes #bsyeddyurappa -
B.S.Yediyurappa
@BSYBJP
ಧನ್ಯವಾದಗಳು!
Dr Sudhakar K
@DrSudhakar_
ನಾಡಿನ ಧೀಮಂತ ನಾಯಕರು, ನಮ್ಮ ಪಕ್ಷದ ರಾಷ್ಟ್ರೀಯ ಸಂಸದೀಯ ಮಂಡಳಿಯ ಸದಸ್ಯರು, ಮಾಜಿ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ @BSYBJP ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು.
ಭಗವಂತ ಅವರಿಗೆ ಉತ್ತಮ ಆಯುರಾರೋಗ್ಯ ನೀಡಿ ಆಶೀರ್ವದಿಸಲಿ, ನಮ್ಮ ನಾಡಿಗೆ ಅವರ ಮಾರ್ಗದರ್ಶನ ಇನ್ನಷ್ಟು ದೀರ್ಘ ಕಾಲ ಸಿಗುವಂತಾಗಲಿ ಎಂದು ಪ್ರಾರ್ಥಿಸುತ್ತೇನೆ. -
B.S.Yediyurappa
@BSYBJP
ಧನ್ಯವಾದಗಳು!
Yaduveer Wadiyar
@yaduveerwadiyar
Warm Birthday Greetings to Shri @BSYBJP, a Visionary Leader, Senior Statesman, and Former Chief Minister of Karnataka. Your unwavering dedication and service to the people have inspired generations. May this year bring you abundant health, happiness, and continued strength to lead and inspire.
-
B.S.Yediyurappa
@BSYBJP
ಧನ್ಯವಾದಗಳು ಕು. @ShobhaBJP ಅವರೇ!
Shobha Karandlaje
@ShobhaBJP
ಭಾರತೀಯ ಜನತಾ ಪಕ್ಷದ ಹಿರಿಯ ನಾಯಕರು, ಮಾಜಿ ಮುಖ್ಯಮಂತ್ರಿಗಳು ಹಾಗೂ ಕೇಂದ್ರ ಬಿಜೆಪಿ ಸಂಸದೀಯ ಮಂಡಳಿಯ ಸದಸ್ಯರಾದ ಶ್ರೀ ಬಿ.ಎಸ್ ಯಡಿಯೂರಪ್ಪ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು.
ಆ ದೇವರು ತಮಗೆ ದೀರ್ಘಾಯುಷ್ಯ, ಆಯುರಾರೋಗ್ಯ ಕೊಟ್ಟು ಆಶೀರ್ವದಿಸಲಿ ಎಂದು ಪ್ರಾರ್ಥಿಸುತ್ತೇನೆ. @BSYBJP -
B.S.Yediyurappa
@BSYBJP
ಧನ್ಯವಾದಗಳು ಶ್ರೀ @RAshokaBJP ಅವರೇ!
R. Ashoka
@RAshokaBJP
ರೈತಬಂಧು, ಜನನಾಯಕ,
ಬಿಜೆಪಿಯ ಹಿರಿಯ ಮುತ್ಸದ್ದಿ ನಾಯಕರು, ಮಾಜಿ ಮುಖ್ಯಮಂತ್ರಿಗಳು,
ಕೇಂದ್ರ ಸಂಸದೀಯ ಮಂಡಳಿ ಮತ್ತು ಚುನಾವಣಾ ಸಮಿತಿ ಸದಸ್ಯರಾದ ಶ್ರೀ @BSYBJP ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು.
ಭಗವಂತ ಇನ್ನೂ ಹೆಚ್ಚಿನ ಆಯುರಾರೋಗ್ಯ ದಯಪಾಲಿಸಲಿ ಎಂದು ಪ್ರಾರ್ಥಿಸುತ್ತೇನೆ. -
B.S.Yediyurappa
@BSYBJP
ಧನ್ಯವಾದಗಳು ಶ್ರೀ @JoshiPralhad ಅವರೇ!
Pralhad Joshi
@JoshiPralhad
ಕರ್ನಾಟಕದಲ್ಲಿ ಬಿಜೆಪಿ ಪಕ್ಷವನ್ನು ಬೇರುಮಟ್ಟದಿಂದ ಸಂಘಟನೆ ಮಾಡಿದ, ದಕ್ಷಿಣ ಭಾರತದಲ್ಲಿ ಪ್ರಪ್ರಥಮ ಬಾರಿಗೆ ಬಿಜೆಪಿ ಪಕ್ಷವನ್ನು ಅಧಿಕಾರಕ್ಕೆ ತಂದ, ರೈತನಾಯಕ, ಜನನಾಯಕ, ಮಾಜಿ ಮುಖ್ಯಮಂತ್ರಿ ಶ್ರೀ ಬಿ ಎಸ್ ಯಡಿಯೂರಪ್ಪನವರಿಗೆ ಹುಟ್ಟು ಹಬ್ಬದ ಶುಭಾಶಯಗಳು.
ದೇವರು ಅವರಿಗೆ ಹೆಚ್ಚಿನ ಆಯುಷ್ಯ, ಆರೋಗ್ಯ ಕರುಣಿಸಿ ಸಮಾಜದ ಮತ್ತು ಜನರ ಸರ್ವತೋಮುಖ ಬೆಳವಣಿಗೆಗೆ ಸೇವೆಗೈಯಲು ಇನ್ನು ಹೆಚ್ಚಿನ ಶಕ್ತಿ ನೀಡಲಿ ಎಂದು ಹಾರೈಸುತ್ತೇನೆ.
@BSYBJP -
B.S.Yediyurappa
@BSYBJP
ತಮ್ಮ ಹಾರೈಕೆಗಳಿಗೆ ಹೃತ್ಪೂರ್ವಕ ಧನ್ಯವಾದಗಳು ಶ್ರೀ @H_D_Devegowda ರವರೇ!🙏🏼
H D Devegowda
@H_D_Devegowda
ಬಿಜೆಪಿ ಪಕ್ಷದ ಹಿರಿಯ ಮುಖಂಡರು ಹಾಗು ಮಾಜಿ ಮುಖ್ಯಮಂತ್ರಿಗಳಾದ ಶ್ರೀ ಬಿ. ಎಸ್. ಯಡಿಯೂರಪ್ಪ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು.
ಭಗವಂತ ಅವರಿಗೆ ಹೆಚ್ಚಿನ ಆಯಸ್ಸು ಹಾಗೂ ಉತ್ತಮ ಆರೋಗ್ಯ ನೀಡಲಿ ಎಂದು ಹಾರೈಸುತ್ತೇನೆ.
@BSYBJP -
B.S.Yediyurappa
@BSYBJP
Thank you for your warm wishes.
Rajeev Chandrasekhar 🇮🇳
@RajeevRC_X
Wishing a very happy birthday to senior BJP leader and former Karnataka CM, Shri B.S. Yediyurappa Ji. 💐
ಬಿಜೆಪಿಯ ಹಿರಿಯ ನಾಯಕರು ಹಾಗೂ ಕರ್ನಾಟಕದ ಮಾಜಿ ಮುಖ್ಯಮಂತ್ರಿಗಳಾದ ಶ್ರೀ ಬಿ.ಎಸ್.ಯಡಿಯೂರಪ್ಪ ಅವರಿಗೆ ಜನ್ಮದಿನದ ಶುಭಾಶಯಗಳು. 💐
@BSYBJP -
B.S.Yediyurappa
@BSYBJP
Dhanyavaad Shri @ChouhanShivraj Ji!
Shivraj Singh Chouhan
@ChouhanShivraj
भारतीय जनता पार्टी के वरिष्ठ नेता, कर्नाटक के पूर्व मुख्यमंत्री श्री @BSYBJP जी को जन्मदिन की हार्दिक बधाई!
ईश्वर से आपके उत्तम स्वास्थ्य, दीर्घायु और यशस्वी जीवन की कामना करता हूँ। -
B.S.Yediyurappa
@BSYBJP
ಧನ್ಯವಾದಗಳು ಶ್ರೀ @BSBommai ಅವರೇ!
Basavaraj S Bommai
@BSBommai
ರಾಜ್ಯ ಕಂಡ ಧೀಮಂತ ರೈತ ನಾಯಕರು, ಹುಟ್ಟು ಹೋರಾಟಗಾರು, ನನ್ನ ನಾಯಕರು ಹಾಗೂ ಮಾಜಿ ಮುಖ್ಯಮಂತ್ರಿಗಳಾದ ಶ್ರೀ ಬಿ. ಎಸ್. ಯಡಿಯೂರಪ್ಪ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು.
ಭಗವಂತನ ಕೃಪಾಶೀರ್ವಾದ ತಮ್ಮ ಮೇಲೆ ಸದಾ ಇರಲಿ ಎಂದು ಪ್ರಾರ್ಥಿಸುತ್ತೇನೆ.
@BSYBJP @BJP4Karnataka -
B.S.Yediyurappa
@BSYBJP
ಧನ್ಯವಾದಗಳು!
Chalavadi Narayanaswamy
@NswamyChalavadi
ಹಿರಿಯ ನಾಯಕರು, ಮಾರ್ಗದರ್ಶಕರು, ಕರ್ನಾಟಕದ ಮಾಜಿ ಮುಖ್ಯಮಂತ್ರಿಗಳಾದ ಶ್ರೀ @BSYBJP ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು.
#happybirthdaybsy -
B.S.Yediyurappa
@BSYBJP
ಧನ್ಯವಾದಗಳು ಶ್ರೀ @hd_kumaraswamy ಅವರೇ!
ಹೆಚ್.ಡಿ.ಕುಮಾರಸ್ವಾಮಿ | HD Kumaraswamy
@hd_kumaraswamy
ಮಾಜಿ ಮುಖ್ಯಮಂತ್ರಿಗಳು, ಬಿಜೆಪಿ ಪಕ್ಷದ ಹಿರಿಯ ನಾಯಕರೂ ಆಗಿರುವ ಶ್ರೀ ಬಿ.ಎಸ್. ಯಡಿಯೂರಪ್ಪ (@BSYBJP) ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು.
ಭಗವಂತ ತಮಗೆ ಹೆಚ್ಚಿನ ಆಯುರಾರೋಗ್ಯ ಕರುಣಿಸಿ ಇನ್ನೂ ಸುದೀರ್ಘ ಕಾಲ ಜನಸೇವೆ ಮಾಡುವ ಚೈತನ್ಯ, ಶಕ್ತಿಯನ್ನು ದಯಪಾಲಿಸಲಿ ಎಂದು ಹಾರೈಸುತ್ತೇನೆ.
@JanataDal_S @BJP4Karnataka -
B.S.Yediyurappa
@BSYBJP
Thank you for your warm wishes Shri @nitin_gadkari Ji.
Nitin Gadkari
@nitin_gadkari
Extending my heartfelt birthday wishes to Former Chief Minister of Karnataka Shri @BSYBJP ji.💐 May this occasion bring joy and the year ahead be filled with health and prosperity.
-
B.S.Yediyurappa
@BSYBJP
ನಾಡಿನ ಸಮಸ್ತ ಜನತೆಗೆ ಮಹಾಶಿವರಾತ್ರಿ ಹಬ್ಬದ ಭಕ್ತಿಪೂರ್ವಕ ಶುಭಾಶಯಗಳು. ಈಶ್ವರನ ಕೃಪೆ ನಾಡಿನ ಮೇಲೆ, ಎಲ್ಲ ಭಕ್ತರ ಮೇಲೆ ಸದಾ ಇರಲಿ ಎಂದು ಪ್ರಾರ್ಥಿಸೋಣ.
#mahashivaratri2025 #ಶಿವರಾತ್ರಿ -
B.S.Yediyurappa
@BSYBJP
ಅಪ್ರತಿಮ ದೇಶಭಕ್ತ, ಸ್ವಾತಂತ್ರ್ಯ ವೀರ ವಿನಾಯಕ್ ದಾಮೋದರ್ ಸಾವರ್ಕರ್ ಅವರ ಪುಣ್ಯಸ್ಮರಣೆಯ ದಿನದಂದು, ಆ ಪುಣ್ಯಚೇತನಕ್ಕೆ ಅನಂತ ಪ್ರಣಾಮಗಳು.
-
B.S.Yediyurappa
@BSYBJP
ಸ್ವಾಭಿಮಾನಿ ಸಾಮ್ರಾಜ್ಯ ಕಟ್ಟಿದ ಹಿಂದೂ ಹೃದಯ ಸಾಮ್ರಾಟ್, ಛತ್ರಪತಿ ಶಿವಾಜಿ ಮಹಾರಾಜರ ಜಯಂತಿಯಂದು ಆ ಧೀರ ಚೇತನಕ್ಕೆ ಕೋಟಿ ಕೋಟಿ ನಮನಗಳು.
-
B.S.Yediyurappa
@BSYBJP
ಹಿರಿಯರು, ವಿಶ್ವ ಹಿಂದೂ ಪರಿಷತ್ತಿನ ಕರ್ನಾಟಕ ಉತ್ತರ ಪ್ರಾಂತ ಕಾರ್ಯಾಧ್ಯಕ್ಷರು, ರಾಷ್ಟ್ರೀಯ ಸ್ವಯಂಸೇವಕ ಸಂಘದ ಹುಬ್ಬಳ್ಳಿಯ ಸಂಘಚಾಲಕರಾಗಿದ್ದು, ಸದಾ ಸಕ್ರಿಯರಾಗಿರುತ್ತಿದ್ದ ಡಾ. ಗೋವಿಂದ ನರೇಗಲ್ಲ ಅವರು ವಿಧಿವಶರಾದ ಸುದ್ದಿ ತಿಳಿದು ಅತೀವ ದುಃಖವಾಗಿದೆ. ಆ ಹಿರಿಯ ಮಾರ್ಗದರ್ಶಕರ ಆತ್ಮಕ್ಕೆ ಚಿರಶಾಂತಿ ಪ್ರಾರ್ಥಿಸುತ್ತಾ, ಅವರ ಕುಟುಂಬ ಹಾಗೂ ಅಭಿಮಾನಿಗಳಲ್ಲಿ ಅತೀವ ಸಂತಾಪ ಸಲ್ಲಿಸುತ್ತೇನೆ. ಓಂ ಶಾಂತಿ🙏🏼
-
B.S.Yediyurappa
@BSYBJP
ಪಕ್ಷದ ಹಿರಿಯ ನಾಯಕರು, ಸರಳ, ಸಜ್ಜನಿಕೆಯ ಮುತ್ಸದ್ದಿ, ನನ್ನ ಆತ್ಮೀಯ ಒಡನಾಡಿಯಾಗಿದ್ದ ಡಾ|| ವಿ.ಎಸ್.ಆಚಾರ್ಯ ಅವರ ಪುಣ್ಯಸ್ಮರಣೆಯಂದು ಆ ಪುಣ್ಯಚೇತನಕ್ಕೆ ಅನಂತ ನಮನಗಳು.
-
B.S.Yediyurappa
@BSYBJP
Tributes to our esteemed leader and remarkable parliamentarian, Padma Vibhushan Smt. Sushma Swaraj Ji, on her birth anniversary.
-
B.S.Yediyurappa
@BSYBJP
ಅತ್ಯುತ್ತಮ ಸಂಘಟಕ, ರಾಷ್ಟ್ರೀಯವಾದಿ ನಾಯಕ, ಮಾನವತಾವಾದದ ಪ್ರತಿಪಾದಕ ಪಂಡಿತ್ ದೀನ್ ದಯಾಳ್ ಉಪಾಧ್ಯಾಯ್ ಅವರ ಪುಣ್ಯತಿಥಿಯಂದು ಆ ಮಹಾನ್ ಚೇತನಕ್ಕೆ ಅನಂತ ಪ್ರಣಾಮಗಳು.
#samarpandivas -
B.S.Yediyurappa
@BSYBJP
Congratulations to our National President Shri @JPNadda Ji on the historic victory in the Delhi Assembly elections. After 27 years, BJP returns to power - a remarkable feat under the leadership of PM Shri @narendramodi Ji & your guidance as our party president.
The win in Delhi reflects BJP’s deep connect with the people and its unmatched organisational strength. I congratulate you for galvanising tens of thousands of dedicated karyakartas, ensuring BJP remains a disciplined, mission-driven force. Their tireless efforts on the ground helped party’s message and policies to reach every household.
A proud moment for the party and the nation.
My letter to Shri J.P.Nadda Ji.
@AmitShah @BJP4India @BJP4Karnataka
B.S.Yediyurappa
@BSYBJP
ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಪಕ್ಷ ಸಾಧಿಸಿರುವ ಈ ಐತಿಹಾಸಿಕ ವಿಜಯಕ್ಕಾಗಿ ನಮ್ಮ ರಾಷ್ಟ್ರೀಯ ಅಧ್ಯಕ್ಷ ಶ್ರೀ @JPNadda ಜಿ ಅವರಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳು! ಪ್ರಧಾನಿ ಶ್ರೀ @narendramodi ಜಿ ಅವರ ನೇತೃತ್ವದಲ್ಲಿ ಮತ್ತು ಪಕ್ಷದ ಅಧ್ಯಕ್ಷರಾದ ನಿಮ್ಮ ಮಾರ್ಗದರ್ಶನದಲ್ಲಿ ಬಿಜೆಪಿ ದೆಹಲಿಯಲ್ಲಿ ಮತ್ತೆ ಅಧಿಕಾರದ ಚುಕ್ಕಾಣಿ ಹಿಡಿದಿದ್ದು, ಇದು ನಿಜಕ್ಕೂ ಐತಿಹಾಸಿಕ, ಗಮನಾರ್ಹ ಸಾಧನೆಯಾಗಿದೆ.
ಪಕ್ಷವು ಜನರೊಂದಿಗೆ ಹೊಂದಿರುವ ಆಳವಾದ ಸಂಪರ್ಕ ಮತ್ತು ಪಕ್ಷದ ಸರಿಸಾಟಿಯಿಲ್ಲದ ಸಂಘಟನಾ ಶಕ್ತಿಯನ್ನು ದೆಹಲಿಯಲ್ಲಿನ ಗೆಲುವು ಪ್ರತಿಬಿಂಬಿಸುತ್ತದೆ. ನಮ್ಮ ಲಕ್ಷಾಂತರ ಸಮರ್ಪಿತ ಕಾರ್ಯಕರ್ತರನ್ನು ಹುರಿದುಂಬಿಸಿ, ಪಕ್ಷವನ್ನು ಶಿಸ್ತುಬದ್ಧ, ಸೈದ್ಧಾಂತಿಕ ಶಕ್ತಿಯಾಗಿ ಮುನ್ನಡೆಸುತ್ತಿರುವುದಕ್ಕಾಗಿ ನಿಮಗೂ ವಿಶೇಷವಾಗಿ ನನ್ನ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ನಮ್ಮ ಕಾರ್ಯಕರ್ತರ ದಣಿವರಿಯದ ಪ್ರಯತ್ನಗಳಿಂದಾಗಿ, ಪಕ್ಷದ ಸಂದೇಶ, ನೀತಿ, ನಿಲುವುಗಳು, ಪ್ರತಿ ಮನೆಗೂ ತಲುಪಲು ಸಾಧ್ಯವಾಗಿದೆ.
ಇದು ನಿಜಕ್ಕೂ ಪಕ್ಷಕ್ಕೆ ಮತ್ತು ನಮ್ಮ ರಾಷ್ಟ್ರಕ್ಕೆ ಹೆಮ್ಮೆಯ ಕ್ಷಣ!
ಶ್ರೀ ಜೆ.ಪಿ.ನಡ್ಡಾ ಜಿ ಅವರಿಗೆ ನನ್ನ ಪತ್ರ.
@AmitShah @BJP4India @BJP4Karnataka -
B.S.Yediyurappa
@BSYBJP
Hearty Congratulations to Prime Minister Shri @narendramodi Ji on BJP’s historic victory in the Delhi Assembly elections after 27 years. This resounding win is a symbol of unwavering public trust in PM Modi Ji’s leadership and commitment to good governance and development. After reaffirming faith in the Lok Sabha elections, Delhi has once again stood firmly with BJP.
Such a victory is only possible with inspiring leadership and the tireless efforts of tens of thousands of dedicated karyakarthas who worked in mission mode to take PM Modi Ji and BJP’s vision to every voter.
The landmark victory in Delhi is a moment of immense pride for the party, the nation, and every Indian who believes in the power of New India under PM Modi Ji whose leadership continues to redefine governance, uplift the nation’s spirit, and strengthen India’s global standing.
BJP’s unstoppable momentum signals a bright future for Bharat.
My letter to PM Modi Ji.
@PMOIndia @JPNadda @AmitShah @BJP4India @BJP4Karnataka
B.S.Yediyurappa
@BSYBJP
27 ವರ್ಷಗಳ ನಂತರ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಐತಿಹಾಸಿಕ ಗೆಲುವು ಸಾಧಿಸಿದ್ದು, ಮೊದಲಿಗೆ ಹೆಮ್ಮೆಯ ಪ್ರಧಾನಿ ಶ್ರೀ @narendramodi ಜಿ ಅವರಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಈ ಅಸಾಧಾರಣ ಗೆಲುವು ಪ್ರಧಾನಿ ಮೋದಿಯವರ ನಾಯಕತ್ವ, ಉತ್ತಮ ಆಡಳಿತ ಮತ್ತು ಅಭಿವೃದ್ಧಿಗೆ ಅವರಿಗಿರುವ ಬದ್ಧತೆಯ ಮೇಲಿನ ಅಚಲ ಸಾರ್ವಜನಿಕ ವಿಶ್ವಾಸದ ಸಂಕೇತವಾಗಿದೆ. ಇತ್ತೀಚಿನ ಚುನಾವಣಾ ಫಲಿತಾಂಶಗಳಲ್ಲಿ ಇದು ಸ್ಪಷ್ಟವಾಗಿದ್ದು, ಮತ್ತೊಮ್ಮೆ ಈಗ ದೆಹಲಿ ಬಿಜೆಪಿಯೊಂದಿಗೆ ದೃಢವಾಗಿ ನಿಂತಿರುವುದು ಇದನ್ನು ಸಾಬೀತುಪಡಿಸಿದೆ.
ಪ್ರಧಾನಿ ಮೋದಿಯವರ ಪ್ರೇರಣಾದಾಯಕ ನಾಯಕತ್ವ ಮತ್ತು ಪಕ್ಷದ ಸಿದ್ದಾಂತ, ಅಭಿವೃದ್ಧಿ, ಸಾಧನೆಗಳು ಮತ್ತು ಬದ್ಧತೆಗಳನ್ನು ಪ್ರತಿಯೊಬ್ಬ ಮತದಾರರಿಗೂ ತಲುಪಿಸಲು ಹಗಲಿರುಳು ಸಮರೋಪಾದಿಯಲ್ಲಿ ಕೆಲಸ ಮಾಡಿದ ನಮ್ಮ ಲಕ್ಷಾಂತರ ಸಮರ್ಪಿತ ಕಾರ್ಯಕರ್ತರ ದಣಿವರಿಯದ ಪ್ರಯತ್ನಗಳಿಂದ ಈ ಅಭೂತಪೂರ್ವ ಗೆಲುವು ಸಾಧ್ಯವಾಗಿದೆ.
ದೆಹಲಿಯಲ್ಲಿ ಸಾಧಿಸಿರುವ ಈ ಪ್ರಮುಖ ಗೆಲುವು, ಪಕ್ಷ, ರಾಷ್ಟ್ರ ಮತ್ತು ಪ್ರಧಾನಿ ಮೋದಿಯವರ ನಾಯಕತ್ವದಲ್ಲಿ ನವಭಾರತ ನಿರ್ಮಾಣದ ನಿಟ್ಟಿನಲ್ಲಿ ಶ್ರಮಿಸುತ್ತಿರುವ ಪ್ರತಿಯೊಬ್ಬ ಭಾರತೀಯನಿಗೆ ಅಪಾರ ಹೆಮ್ಮೆಯ ಕ್ಷಣವಾಗಿದೆ. ಪಕ್ಷದ ಈ ಜನಸಮರ್ಥನೆಯ ವಿಜಯಯಾತ್ರೆ ಭಾರತದ ಉಜ್ವಲ ಭವಿಷ್ಯಕ್ಕೆ ದ್ಯೋತಕವಾಗಿದೆ.
ಪ್ರಧಾನಿ ಮೋದಿಜಿ ಅವರಿಗೆ ನಾನು ಬರೆದಿರುವ ಪತ್ರವನ್ನು ಲಗತ್ತಿಸಲಾಗಿದೆ.
@PMOIndia @AmitShah @JPNadda @BJP4India @BJP4Karnataka -
B.S.Yediyurappa
@BSYBJP
ವಿಕಸಿತ ಭಾರತ ನಿರ್ಮಾಣದ ನಿಟ್ಟಿನಲ್ಲಿ ಮತ್ತೊಂದು ಮೈಲಿಗಲ್ಲನ್ನು ಸ್ಥಾಪಿಸುವ ದೂರದೃಷ್ಟಿಯ ಬಜೆಟ್ ಅನ್ನು ಮಂಡಿಸಿದ್ದಕ್ಕಾಗಿ ನಾನು ಆದರಣೀಯ ಪ್ರಧಾನಿ ಶ್ರೀ ನರೇಂದ್ರ ಮೋದಿ ಜೀ ಮತ್ತು ವಿತ್ತ ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಪ್ರಮುಖವಾಗಿ ನಮ್ಮ ರೈತರು, ಮಧ್ಯಮ ವರ್ಗ, ಸಣ್ಣ ಮತ್ತು ಮಾಧ್ಯಮ ವಲಯದ ಉದ್ಯಮಗಳ ಸಬಲೀಕರಣದ ಸಾಕಾರದ ಗುರಿ ಸಾಧಿಸಲು ಈ ಬಜೆಟ್ ಉಪಯುಕ್ತವಾಗಲಿದೆ. ಪ್ರಗತಿನಿಷ್ಠ ಮಾರ್ಗಸೂಚಿ, ರಫ್ತಿಗೆ ಆದ್ಯತೆ, ಹೂಡಿಕೆ ಸ್ನೇಹಿ ಮತ್ತು ಸುಧಾರಣಾ ಕ್ರಮಗಳು, ಪರಿವರ್ತನೆಯ ನೀತಿಗಳ ಮೂಲಕ ಸಶಕ್ತ, ಸಮಗ್ರ ಅಭಿವೃದ್ಧಿಯನ್ನು ಬಜೆಟ್ 2025-26 ಖಾತರಿಪಡಿಸುತ್ತಿದೆ. ಇದು ಉದ್ಯಮಸ್ನೇಹಿ ಬಜೆಟ್ ಆಗಿದ್ದು, ಉದ್ಯೋಗ ಸೃಷ್ಟಿಗೆ ಹೆಚ್ಚಿನ ಪ್ರಾಮುಖ್ಯತೆ ಒದಗಿಸಿದೆ.
ವಿಶೇಷವಾಗಿ, ಪ್ರಧಾನಮಂತ್ರಿ ಧನ-ಧಾನ್ಯ ಕೃಷಿ ಯೋಜನೆ, ಕೃಷಿ ಜಿಲ್ಲೆಗಳ ಅಭಿವೃದ್ಧಿ ಕಾರ್ಯಕ್ರಮ, ಕಿಸಾನ್ ಕ್ರೆಡಿಟ್ ಕಾರ್ಡ್ ಮಿತಿಯನ್ನು 3 ಲಕ್ಷ ರೂ. ನಿಂದ 5 ಲಕ್ಷ ರೂ. ಗೆ ಹೆಚ್ಚಿಸಲಾಗಿರುವುದನ್ನು ಸ್ವಾಗತಿಸುತ್ತೇನೆ. ಜೊತೆಗೆ ಯುವಶಕ್ತಿ ಹಾಗೂ ಮಹಿಳಾ ಸಬಲೀಕರಣ, ಕೇಂದ್ರ-ರಾಜ್ಯ ಸಹಯೋಗಗಳಿಗೆ ಮತ್ತಷ್ಟು ಪ್ರಾಮುಖ್ಯತೆ ನೀಡಲಾಗಿದ್ದು, ನಗರಾಭಿವೃದ್ಧಿ ಮತ್ತು ಮೂಲಸೌಕರ್ಯಾಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗಿದೆ. 2025ರಲ್ಲಿ ಕ್ಷಯರೋಗ ನಿರ್ಮೂಲನೆಯ ಗುರಿ ಸೇರಿದಂತೆ ಆರೋಗ್ಯಸೇವಾ ವಲಯಕ್ಕೆ ಕಾಯಕಲ್ಪ ಒದಗಿಸಲಾಗಿದೆ. ಹೊಸ ಪದ್ಧತಿಯಡಿಯಲ್ಲಿ ಬಂಡವಾಳ ಲಾಭದಂತಹ ವಿಶೇಷ ಆದಾಯ ಹೊರತುಪಡಿಸಿ, 12 ಲಕ್ಷ ರೂ. ಆದಾಯದವರೆಗೆ ವೈಯಕ್ತಿಕ ಆದಾಯ ತೆರಿಗೆ ವಿನಾಯಿತಿಯ ಕ್ರಮ ಮಾಧ್ಯಮ ವರ್ಗಗಳಿಗೆ ಹೆಚ್ಚಿನ ಆರ್ಥಿಕ ಬಲವನ್ನು ನೀಡಲಿದೆ. ಒಟ್ಟಿನಲ್ಲಿ ಈ ಸಾಲಿನ ಬಜೆಟ್ ಸ್ವಾವಲಂಬನೆ, ಪ್ರಗತಿ ಮತ್ತು ಜಾಗತಿಕ ಆರ್ಥಿಕತೆಯ ಮುಂಚೂಣಿಯಲ್ಲಿ ಮುನ್ನಡೆಯಲು ಭಾರತವನ್ನು ಸಶಕ್ತಗೊಳಿಸಿದೆ.
#unionbudget2025 #unionbudget #budget2025 #viksitbharatbudget2025
@narendramodi @nsitharaman @BJP4Karnataka -
B.S.Yediyurappa
@BSYBJP
ತಮ್ಮ ಜೀವನವನ್ನೇ ತಮ್ಮ ಸಂದೇಶ ಎಂದು ಸಾರಿದ ಸತ್ಯ, ಅಹಿಂಸೆಗಳ ಸಾಕಾರಮೂರ್ತಿ, ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯವರ ಪುಣ್ಯತಿಥಿಯಂದು ಆ ಪುಣ್ಯಚೇತನಕ್ಕೆ ಅನಂತ ನಮನಗಳು.
#ಹುತಾತ್ಮರ_ದಿನ #martyrsday -
B.S.Yediyurappa
@BSYBJP
ಅಪ್ರತಿಮ ರಾಷ್ಟ್ರಪ್ರೇಮಿ, ದಿಟ್ಟ ಹೋರಾಟಗಾರ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನವರ ಪುಣ್ಯಸ್ಮರಣೆಯ ದಿನದಂದು ಆ ವೀರಚೇತನಕ್ಕೆ ಶ್ರದ್ಧಾಪೂರ್ವಕ ನಮನಗಳು.
-
B.S.Yediyurappa
@BSYBJP
ನಾಡಿನ ಸಮಸ್ತ ಜನತೆಗೆ 76ನೇ ಗಣರಾಜ್ಯೋತ್ಸವದ ಶುಭಾಶಯಗಳು.
Greetings to everyone on 76th Republic Day. -
B.S.Yediyurappa
@BSYBJP
ಈ ಸಾಲಿನ ಪದ್ಮ ಪ್ರಶಸ್ತಿಗಳಿಗೆ ಭಾಜನರಾಗಿರುವ ರಾಜ್ಯದ ಸಾಧಕರುಗಳಿಗೆ ಹೃತ್ಪೂರ್ವಕ ಅಭಿನಂದನೆಗಳು.
ಪದ್ಮವಿಭೂಷಣ ಪ್ರಶಸ್ತಿ ಭಾಜನರಾಗಿರುವ ಶ್ರೀ ಲಕ್ಷ್ಮೀನಾರಾಯಣ ಸುಬ್ರಮಣ್ಯಂ, ಪದ್ಮಭೂಷಣ ಪ್ರಶಸ್ತಿ ಪುರಸ್ಕೃತರಾಗಿರುವ ಶ್ರೀ ಎ.ಸೂರ್ಯ ಪ್ರಕಾಶ್, ಹಿರಿಯ ಕಲಾವಿದ ಶ್ರೀ ಅನಂತ್ ನಾಗ್, ಪದ್ಮಶ್ರೀ ಪ್ರಶಸ್ತಿ ಭಾಜನರಾಗಿರುವ ಶ್ರೀ ವೆಂಕಪ್ಪ ಅಂಬಾಜಿ ಸಗೆಟಕರ್, ಶ್ರೀಮತಿ ವಿಜಯಲಕ್ಷ್ಮಿ ದೇಶಮಾನೆ, ಶ್ರೀಮತಿ ಭೀಮವ್ವ ದೊಡ್ಡ ಬಾಳಪ್ಪ, ಶ್ರೀ ಹಾಸನ ರಘು, ಶ್ರೀ ಪ್ರಶಾಂತ್ ಪ್ರಕಾಶ್, ಶ್ರೀ ರಿಕಿ ಕೇಜ್ ರವರಿಗೆ ಹೆಮ್ಮೆಯ ಅಭಿನಂದನೆಗಳು. -
B.S.Yediyurappa
@BSYBJP
ಭಾರತೀಯರ ಪಾಲಿಗೆ ದೇಶಭಕ್ತಿಯ ನಿರಂತರ ಸ್ಫೂರ್ತಿಯ ಸೆಲೆಯಾಗಿರುವ ಅಪ್ರತಿಮ ಸ್ವಾತಂತ್ರ್ಯ ಸೇನಾನಿ ನೇತಾಜಿ ಸುಭಾಶ್ ಚಂದ್ರ ಬೋಸ್ ಅವರ ಜಯಂತಿಯಂದು ಆ ಮಹಾನ್ ಚೇತನಕ್ಕೆ ಅನಂತ ನಮನಗಳು.
#netaji #subhashchandrabose #parakramdiwas -
B.S.Yediyurappa
@BSYBJP
ತ್ರಿವಿಧ ದಾಸೋಹಿ, ಭಕ್ತರ ಪಾಲಿನ ’ನಡೆದಾಡುವ ದೇವರು’, ಸಿದ್ದಗಂಗಾ ಶ್ರೀಮಠದ ಪರಮಪೂಜ್ಯ ಶ್ರೀ ಶ್ರೀ ಡಾ.ಶಿವಕುಮಾರ ಮಹಾಸ್ವಾಮೀಜಿಗಳ ಪುಣ್ಯಸ್ಮರಣೆಯಂದು ಅವರ ಶ್ರೀಚರಣಗಳಿಗೆ ಭಕ್ತಿಪೂರ್ವಕ ಅನಂತ ಪ್ರಣಾಮಗಳು.
-
B.S.Yediyurappa
@BSYBJP
ನಾಡಿನ ಧಾರ್ಮಿಕ, ಆಧ್ಯಾತ್ಮಿಕ, ಶೈಕ್ಷಣಿಕ, ಮತ್ತು ಸಾಮಾಜಿಕ ಕ್ಷೇತ್ರಗಳಿಗೆ ಅಪಾರ ಕೊಡುಗೆ ನೀಡಿದ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನದ ಪೀಠಾಧ್ಯಕ್ಷರಾಗಿದ್ದ ಕೀರ್ತಿಶೇಷ, ಪದ್ಮಭೂಷಣ ಡಾ. ಶ್ರೀ ಬಾಲಗಂಗಾಧರನಾಥ ಮಹಾಸ್ವಾಮಿಗಳ ಜಯಂತಿಯಂದು ಅವರ ದಿವ್ಯಚರಣಗಳಿಗೆ ಶ್ರದ್ಧಾಪೂರ್ವಕ ನಮನಗಳು.
-
B.S.Yediyurappa
@BSYBJP
ಹಿರಿಯ ರಾಜಕಾರಣಿ, ಮಾಜಿ ಶಾಸಕರು, ಮಾಜಿ ಸಂಸದರಾದ ಶ್ರೀ ಎಂ.ಶ್ರೀನಿವಾಸ್ ರವರು ವಿಧಿವಶರಾದ ಸುದ್ದಿ ತಿಳಿದು ಅತೀವ ದುಃಖವಾಗಿದೆ. ಅವರ ಆತ್ಮಕ್ಕೆ ಸದ್ಗತಿಯನ್ನು ಪ್ರಾರ್ಥಿಸುತ್ತಾ, ಅವರ ಕುಟುಂಬ ಹಾಗೂ ಅಭಿಮಾನಿಗಳಿಗೆ ಹಿರಿಯರ ಅಗಲಿಕೆಯ ನೋವನ್ನು ಭರಿಸುವ ಶಕ್ತಿ ದೇವರು ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ. ಓಂ ಶಾಂತಿ🙏🏼
-
B.S.Yediyurappa
@BSYBJP
ಪರಮಪೂಜ್ಯ ಡಾ.ಪಂಡಿತಾರಾಧ್ಯ ಶಿವಾಚಾರ್ಯ ಶ್ರೀಗಳು, ಗೋಡೇಕೆರೆ ಶ್ರೀ ಮೃತ್ಯುಂಜಯ ದೇಶೀಕೇಂದ್ರ ಶ್ರೀಗಳು, ಡಾ. ಅಭಿನವ ಮಲ್ಲಿಕಾರ್ಜುನ ದೇಶಿಕೇಂದ್ರ ಶ್ರೀಗಳು ಸೇರಿದಂತೆ ಅನೇಕ ಶ್ರೀಚರಣರ ದಿವ್ಯಸಾನ್ನಿಧ್ಯದಲ್ಲಿ, ಬೆಂಗಳೂರಿನಲ್ಲಿ ನಡೆಯುತ್ತಿರುವ ಶ್ರೀ ಗುರು ಶಿವಯೋಗಿ ಸಿದ್ಧರಾಮೇಶ್ವರರ 852ನೇ ಜಯಂತಿ ಮಹೋತ್ಸವದ ಉದ್ಘಾಟನಾ ಸಮಾರಂಭದಲ್ಲಿ ಇಂದು ಪಾಲ್ಗೊಳ್ಳಲಾಯಿತು.
-
B.S.Yediyurappa
@BSYBJP
ಎಲ್ಲರಿಗೂ ಮಕರ ಸಂಕ್ರಾಂತಿ ಹಬ್ಬದ ಸಂಭ್ರಮದ ಶುಭಾಶಯಗಳು. ಈ ಉತ್ತರಾಯಣ ಸುಗ್ಗಿ ಕಾಲ ಎಲ್ಲರ ಬದುಕಿನಲ್ಲೂ ಸಂತಸ, ಸಮೃದ್ಧಿಗಳನ್ನು ಹೊತ್ತು ತರಲಿ ಎಂದು ಹಾರೈಸುತ್ತೇನೆ.
-
B.S.Yediyurappa
@BSYBJP
ಬೆಂಗಳೂರಿನಲ್ಲಿ ನಡೆದಿರುವ ಹಸುಗಳ ಕೆಚ್ಚಲು ಕತ್ತರಿಸಿರುವ ಅನಾಗರಿಕ ಕೃತ್ಯ ಖಂಡನೀಯ ಮಾತ್ರವಲ್ಲ, ನೀಚತನದ ಪರಮಾವಧಿ. ಗೋಮಾತೆಯನ್ನು ಪೂಜಿಸುವ ಕೋಟ್ಯಂತರ ಜನರ ಭಾವನೆಗಳಿಗೆ ಧಕ್ಕೆಯುಂಟಾಗುವುದೆಂದು ಗೊತ್ತಿದ್ದರೂ ದುರುಳರು ಇಂತಹ ದುಷ್ಕೃತ್ಯ ನಡೆಸುತ್ತಾರೆ ಎಂದರೆ ಅದು ರಾಜ್ಯದ ಕಾನೂನು ಸುವ್ಯವಸ್ಥೆಗೆ ಕನ್ನಡಿ ಹಿಡಿದಿದೆ ಎಂದೇ ಹೇಳಬೇಕು.
ರಾಜ್ಯ ಸರ್ಕಾರ ಕೂಡಲೇ ಇಂತಹ ಹೇಯ ಕೃತ್ಯ ಎಸಗಿರುವ ದುಷ್ಕರ್ಮಿಗಳನ್ನು ಬಂಧಿಸಿ, ಅವರ ವಿರುದ್ದ ಕಠಿಣ ಕ್ರಮ ತೆಗೆದುಗೊಳ್ಳಬೇಕು ಎಂದು ಆಗ್ರಹಿಸುತ್ತೇನೆ. ಇನ್ನೊಮ್ಮೆ ಯಾರೂ ಇಂತಹ ಅಮಾನವೀಯ ದುಷ್ಕೃತ್ಯ ನಡೆಸದಂತೆ ಎಚ್ಚರವಹಿಸಬೇಕಾಗಿದೆ.
@siddaramaiah @DrParameshwara -
B.S.Yediyurappa
@BSYBJP
ಅಸಾಮಾನ್ಯ ಆಧ್ಯಾತ್ಮಿಕ ಸಾಧಕ, ವಿಶ್ವಗುರು, ವೀರ ಸಂನ್ಯಾಸಿ ಸ್ವಾಮಿ ವಿವೇಕಾನಂದರ ಜಯಂತಿಯಂದು ಅವರ ಸಂಸ್ಮರಣೆಗಳ ಜೊತೆಗೆ ಎಲ್ಲರಿಗೂ ರಾಷ್ಟ್ರೀಯ ಯುವ ದಿನದ ಹಾರ್ದಿಕ ಶುಭಕಾಮನೆಗಳು.
#nationalyouthday #swamivivekananda -
B.S.Yediyurappa
@BSYBJP
ಪಕ್ಷದ ಸಂಘಟನೆ ಬಲವರ್ಧನೆ ನಿಟ್ಟಿನಲ್ಲಿ, ರಾಜ್ಯಾಧ್ಯಕ್ಷ ಶ್ರೀ @BYVijayendra, ಮಾಜಿ ಮುಖ್ಯಮಂತ್ರಿ ಶ್ರೀ @DVSadanandGowda, ಮತ್ತಿತರ ನಾಯಕರೊಂದಿಗೆ, ಬೆಂಗಳೂರಿನಲ್ಲಿ ಇಂದು ನಡೆದ ಮಾಜಿ ಶಾಸಕರುಗಳು, ಮುಖಂಡರು ಹಾಗೂ ಪ್ರಮುಖರ ವಿಶೇಷ ಸಭೆಯಲ್ಲಿ ಪಾಲ್ಗೊಳ್ಳಲಾಯಿತು. @BJP4Karnataka
-
B.S.Yediyurappa
@BSYBJP
ಈ ಪವಿತ್ರ ವೈಕುಂಠ ಏಕಾದಶಿಯು ನಾಡಿನ ಸಮಸ್ತ ಭಕ್ತ ಜನತೆಗೆ ಮಂಗಳವನ್ನುಂಟು ಮಾಡಲಿ, ದೇವರ ಆಶೀರ್ವಾದ ಎಲ್ಲರ ಮೇಲೂ ಸದಾ ಇರಲಿ ಎಂದು ಪ್ರಾರ್ಥಿಸುತ್ತೇನೆ.
-
B.S.Yediyurappa
@BSYBJP
ಪಕ್ಷದ ಸಕ್ರಿಯ ಮಹಿಳಾ ಮುಖಂಡರು, ವಿಧಾನ ಪರಿಷತ್ ಸದಸ್ಯರಾದ ಶ್ರೀಮತಿ ಭಾರತಿ ಶೆಟ್ಟಿ ಅವರ ಪತಿ ಶ್ರೀ ಸತೀಶ್ ಶೆಟ್ಟಿ ಅವರು ವಿಧಿವಶರಾದ ಸುದ್ದಿ ಅತೀವ ದುಃಖ ತಂದಿದೆ. ದೇವರು ಅವರ ಆತ್ಮಕ್ಕೆ ಸದ್ಗತಿ ಕರುಣಿಸಲಿ, ಕುಟುಂಬ ವರ್ಗದವರಿಗೆ ನೋವನ್ನು ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ. ಓಂ ಶಾಂತಿ 🙏
-
B.S.Yediyurappa
@BSYBJP
ಬಾಳೆಹೊನ್ನೂರು ರಂಭಾಪುರಿ ಪೀಠದ ವೀರಸಿಂಹಾಸನಾಧೀಶ್ವರ ಪರಮಪೂಜ್ಯ ಶ್ರೀ ಪ್ರಸನ್ನರೇಣುಕ ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರ ಜನ್ಮದಿನದಂದು ಅವರಿಗೆ ಭಕ್ತಿಪೂರ್ವಕ ಪ್ರಣಾಮಗಳು.
-
B.S.Yediyurappa
@BSYBJP
ಹಿರಿಯ ಸಾಹಿತಿ ಡಾ. ನಾ ಡಿಸೋಜ ದೈವಾಧೀನರಾದ ವಿಷಯ ತಿಳಿದು ಅತೀವ ದುಃಖವಾಗಿದೆ. ವಿಶೇಷವಾಗಿ ಮಲೆನಾಡಿನ ಸೊಬಗು, ಸಂಸ್ಕೃತಿಗಳಿಗೆ ಅಕ್ಷರ ರೂಪ ನೀಡುತ್ತಿದ್ದ ನಾ ಡಿಸೋಜ ಅವರ ನಿಧನದಿಂದ ಸಾಹಿತ್ಯ ಕ್ಷೇತ್ರಕ್ಕೆ ದೊಡ್ಡ ನಷ್ಟವುಂಟಾಗಿದೆ. ಅವರ ಆತ್ಮಕ್ಕೆ ಸದ್ಗತಿ ಪ್ರಾರ್ಥಿಸುತ್ತಾ, ಕುಟುಂಬದವರಲ್ಲಿ ತೀವ್ರ ಸಂತಾಪ ಸಲ್ಲಿಸುತ್ತೇನೆ.
-
B.S.Yediyurappa
@BSYBJP
ಸಂವಿಧಾನ ಶಿಲ್ಪಿ ಭಾರತರತ್ನ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ರವರ ನೇತೃತ್ವದಲ್ಲಿ ನಮ್ಮ ಸಂವಿಧಾನ ರಚನೆಯಾಗಿ 75 ವರ್ಷ ಕಳೆದ ಹಿನ್ನಲೆಯಲ್ಲಿ ಕರ್ನಾಟಕ ದಲಿತ ಹಿಂದುಳಿದ ಅಲ್ಪಸಂಖ್ಯಾತರ ಸಮಿತಿ ವತಿಯಿಂದ ಬೆಂಗಳೂರಿನಲ್ಲಿ ಆಯೋಜಿಸಲಾಗಿದ್ದ 'ಸಂವಿಧಾನ ದಿನಾಚರಣೆ'ಯಲ್ಲಿ ಇಂದು ಪಾಲ್ಗೊಳ್ಳಲಾಯಿತು.
-
B.S.Yediyurappa
@BSYBJP
ಸಂವಿಧಾನ ಶಿಲ್ಪಿ ಭಾರತರತ್ನ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ರವರ ನೇತೃತ್ವದಲ್ಲಿ ನಮ್ಮ ಸಂವಿಧಾನ ರಚನೆಯಾಗಿ 75 ವರ್ಷ ಕಳೆದ ಹಿನ್ನಲೆಯಲ್ಲಿ ಕರ್ನಾಟಕ ದಲಿತ ಹಿಂದುಳಿದ ಅಲ್ಪಸಂಖ್ಯಾತರ ಸಮಿತಿ ವತಿಯಿಂದ ಬೆಂಗಳೂರಿನಲ್ಲಿ ಆಯೋಜಿಸಲಾಗಿದ್ದ 'ಸಂವಿಧಾನ ದಿನಾಚರಣೆ'ಯಲ್ಲಿ ಇಂದು ಪಾಲ್ಗೊಳ್ಳಲಾಯಿತು.
-
B.S.Yediyurappa
@BSYBJP
Warm birthday greetings to our senior leader, former party national president and former Union Minister Padma Vibhushan Shri Murli Manohar Joshi Ji. Wishing you good health and a long life.
@drmmjoshibjp -
B.S.Yediyurappa
@BSYBJP
ಶ್ರೀ ಸಿದ್ಧಗಂಗಾ ತಾಂತ್ರಿಕ ವಿದ್ಯಾಲಯದ ನಿರ್ದೇಶಕರಾಗಿ ಸೇವೆ ಸಲ್ಲಿಸಿದ ಹಿರಿಯರಾದ ಡಾ ಎಂ.ಎನ್.ಚನ್ನಬಸಪ್ಪನವರು ವಿಧಿವಶರಾದ ಸುದ್ದಿ ತಿಳಿದು ಅತ್ಯಂತ ದುಖವಾಗಿದೆ. ಅವರ ಆತ್ಮಕ್ಕೆ ದೇವರು ಚಿರಶಾಂತಿ ಕರುಣಿಸಲಿ, ಅವರ ಕುಟುಂಬಸ್ಥರಿಗೆ, ಅಪಾರ ಶಿಷ್ಯ ವೃಂದಕ್ಕೆ ನೋವನ್ನು ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ. ಓಂ ಶಾಂತಿ 🙏🏼
-
B.S.Yediyurappa
@BSYBJP
ನಿವೃತ್ತ ಕೆ.ಎ.ಎಸ್ ಅಧಿಕಾರಿಗಳು, ಪಕ್ಷದ ಮುಖಂಡರು, ಶಿಕಾರಿಪುರದಲ್ಲಿ ಪಕ್ಷ ಸಂಘಟನೆಯಲ್ಲಿ ವಿಶೇಷವಾಗಿ ತೊಡಗಿಸಿಕೊಂಡಿದ್ದ ಶ್ರೀ ಎಚ್.ಟಿ.ಬಳಿಗಾರ್ ಅವರು ವಿಧಿವಶರಾದ ಸುದ್ದಿ ಅತೀವ ಆಘಾತವನ್ನುಂಟು ಮಾಡಿದೆ. ಅವರ ಆತ್ಮಕ್ಕೆ ಚಿರಶಾಂತಿ ಪ್ರಾರ್ಥಿಸುತ್ತಾ, ಕುಟುಂಬ ವರ್ಗದವರಲ್ಲಿ ತೀವ್ರ ಸಂತಾಪ ವ್ಯಕ್ತಪಡಿಸುತ್ತೇನೆ. ಓಂ ಶಾಂತಿ 🙏🏼
-
B.S.Yediyurappa
@BSYBJP
ಹಿರಿಯರು, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿಗಳು, ಆತ್ಮೀಯರಾದ ಪದ್ಮಭೂಷಣ ಡಾ. ಚಂದ್ರಶೇಖರ ಕಂಬಾರ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. ದೇವರ ಅನುಗ್ರಹ ಸದಾ ಇರಲಿ ಎಂದು ಹಾರೈಸುತ್ತೇನೆ.
-
B.S.Yediyurappa
@BSYBJP
ಅಸಂಖ್ಯಾತ ಭಕ್ತರಿಗೆ ಜ್ಞಾನ ದಾಸೋಹ ನೀಡಿದ ಆಧ್ಯಾತ್ಮ ಚಿಂತಕರು, ವಿಜಯಪುರದ ಜ್ಞಾನಯೋಗಾಶ್ರಮದ ಪರಮಪೂಜ್ಯ ಪದ್ಮಶ್ರೀ ಶ್ರೀ ಸಿದ್ದೇಶ್ವರ ಸ್ವಾಮೀಜಿಗಳ ಪುಣ್ಯಸ್ಮರಣೆಯಂದು ಆ ಸಾಧಕ ಚೇತನಕ್ಕೆ ಅನಂತ ನಮನಗಳು.
-
B.S.Yediyurappa
@BSYBJP
ಎಲ್ಲರಿಗೂ 2025ರ ಹೊಸ ವರ್ಷದ ಹೃತ್ಪೂರ್ವಕ ಶುಭಾಶಯಗಳು! ಈ ನೂತನ ವರ್ಷವು ನಿಮ್ಮೆಲ್ಲರ ಬದುಕಿನಲ್ಲಿ ಸಂತೋಷ, ಆರೋಗ್ಯ ಮತ್ತು ಯಶಸ್ಸನ್ನು ತರಲಿ. ಹೊಸ ಭರವಸೆ, ಹೊಸ ಹುಮ್ಮಸ್ಸಿನೊಂದಿಗೆ ಗುರಿಯತ್ತ ಮುನ್ನಡೆಯಿರಿ ಎಂದು ಹಾರೈಸುತ್ತೇನೆ.
#happynewyear2025. Wishing you all more happiness, good health, and success. -
B.S.Yediyurappa
@BSYBJP
ಶ್ರೀ ರಾಮಚಂದ್ರಾಪುರ ಮಠದ ಪರಮಪೂಜ್ಯ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ, ಹರಿಹರದ ಪಂಚಮಸಾಲಿ ಗುರುಪೀಠದ ಪರಮಪೂಜ್ಯ ಶ್ರೀ ವಚನಾನಂದ ಸ್ವಾಮೀಜಿ, ಶ್ರೀ ಕೂಡಲಿ ಶೃಂಗೇರಿ ಮಹಾಸಂಸ್ಥಾನದ ಪರಮಪೂಜ್ಯ ಶ್ರೀ ಅಭಿನವ ಶಂಕರ ಭಾರತೀ ಮಹಾಸ್ವಾಮಿಗಳು, ಅನ್ ಲೈನ್ ಮೂಲಕ ಆಶೀರ್ವಚನ ನೀಡಿದ ಶ್ರೀ ಕಂಚಿ ಕಾಮಕೋಟಿ ಪೀಠದ ಪರಮಪೂಜ್ಯ ಶ್ರೀ ವಿಜಯೇಂದ್ರ ಸರಸ್ವತಿ ಸ್ವಾಮೀಜಿಗಳ ದಿವ್ಯಸಾನ್ನಿಧ್ಯದಲ್ಲಿ, ಅತ್ಯಂತ ಸಂಭ್ರಮದಿಂದ ನಿನ್ನೆ ಬೆಂಗಳೂರಿನಲ್ಲಿ ನಡೆದ ತೃತೀಯ ವಿಶ್ವ ಹವ್ಯಕ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಳ್ಳಲಾಯಿತು.
ಮಾಜಿ ಮುಖ್ಯಮಂತ್ರಿಗಳು, ಕೇಂದ್ರ ಸಚಿವರಾದ ಶ್ರೀ @hd_kumaraswamy, ಸಂಸದರು, ಸಮ್ಮೇಳನದ ಗೌರವಾಧ್ಯಕ್ಷರೂ ಆದ ಶ್ರೀ @kageri250 ಸೇರಿದಂತೆ ಹಲವಾರು ಗಣ್ಯರು, ಹೆಚ್ಚಿನ ಸಂಖ್ಯೆಯಲ್ಲಿ ಹವ್ಯಕ ಸಮಾಜದ ಬಂಧುಗಳು ಉಪಸ್ಥಿತರಿದ್ದರು. -
B.S.Yediyurappa
@BSYBJP
ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡದ ಮೇರು ಸಾಹಿತಿ, ಕರ್ನಾಟಕ ರತ್ನ ಶ್ರೀ ಕುವೆಂಪು ಅವರ ಜಯಂತಿಯಂದು ಆ ವಿಶ್ವಚೇತನಕ್ಕೆ ಅನಂತ ಪ್ರಣಾಮಗಳು.
-
B.S.Yediyurappa
@BSYBJP
My heartfelt tributes to the former Union Minister, Padma Vibhushan, late Shri Arun Jaitley Ji, on his birth anniversary. I cherish the memories of our interactions, his brilliant intellect, and his gracious warmth.
-
B.S.Yediyurappa
@BSYBJP
Deeply saddened by the passing of former Prime Minister Dr. Manmohan Singh Ji. A visionary statesman, his unwavering integrity and remarkable contributions to India's economic progress will always be remembered. I fondly recall our interactions during my tenure as Chief Minister of Karnataka. My heartfelt condolences to his family and loved ones. May his soul rest in eternal peace. Om Shanti. 🙏🏼
-
B.S.Yediyurappa
@BSYBJP
ನಾಡಪ್ರಭು ಕೆಂಪೇಗೌಡ ಜನಪರ ವೇದಿಕೆ ವತಿಯಿಂದ ಮಾಜಿ ಪ್ರಧಾನ ಮಂತ್ರಿಗಳಾದ ಭಾರತ ರತ್ನ, ದಿವಂಗತ ಶ್ರೀ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮಶತಮಾನೋತ್ಸವದ ಪ್ರಯುಕ್ತ ಸುಶಾಸನ ದಿನಾಚರಣೆಯನ್ನು ಪಕ್ಷದ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಶ್ರೀ @blsanthosh ಜೀ ಉದ್ಘಾಟಿಸಿದ್ದು, ಸಮಾರಂಭದಲ್ಲಿ ಸನ್ಮಾನ್ಯ ಮಾಜಿ ಪ್ರಧಾನಿ ಶ್ರೀ @H_D_Devegowda ಅವರೊಂದಿಗೆ ಅಟಲ್ ಪುರಸ್ಕಾರ ಸ್ವೀಕರಿಸಲಾಯಿತು.
#goodgovernanceday #ataljanmshatabdi -
B.S.Yediyurappa
@BSYBJP
ಬೆಂಗಳೂರಿನಲ್ಲಿ ಪಕ್ಷದ ಕಚೇರಿಯಲ್ಲಿ ಇಂದು ಆಯೋಜಿಸಲಾಗಿದ್ದ ಹಿರಿಯ ನಾಯಕ, ಮಾಜಿ ಪ್ರಧಾನಿ, ಭಾರತರತ್ನ ಶ್ರೀ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮಶತಮಾನೋತ್ಸವ ಸಮಾರಂಭದಲ್ಲಿ ಇಂದು ಪಾಲ್ಗೊಂಡು, ನಮ್ಮ ಮೇರು ನಾಯಕನ ಸಂಸ್ಕರಣೆಯ ಪ್ರದರ್ಶಿನಿಯನ್ನು ಉದ್ಘಾಟಿಸಲಾಯಿತು. #atalbiharivajpayeejayanti
@BJP4Karnataka -
B.S.Yediyurappa
@BSYBJP
ದೇಶಕಂಡ ದೂರದೃಷ್ಟಿಯ ಅಸಾಮಾನ್ಯ ಜನನಾಯಕ, ಮುತ್ಸದ್ಧಿ, ಅದ್ವಿತೀಯ ಸಂಸದೀಯ ಪಟು, ಮಾಜಿ ಪ್ರಧಾನಿ, ನಮ್ಮ ಹೆಮ್ಮೆಯ ಭಾರತರತ್ನ ಸನ್ಮಾನ್ಯ ಶ್ರೀ ಅಟಲ್ ಬಿಹಾರಿ ವಾಜಪೇಯಿ ಅವರ ನೂರನೇ ಜಯಂತಿಯಂದು ಆ ಮಹಾನ್ ಚೇತನಕ್ಕೆ ಕೋಟಿ ಕೋಟಿ ಪ್ರಣಾಮಗಳು. ಅವರ ಮಾರ್ಗದರ್ಶನ, ಆದರ್ಶಗಳು, ಒಡನಾಟದ ನೆನಪುಗಳು ಸದಾ ಪ್ರೇರಣಾದಾಯಕ.
#atalbiharivajpayee #atalji100 #goodgovernanceday -
B.S.Yediyurappa
@BSYBJP
ನಾಡಿನ ಎಲ್ಲ ಕ್ರೈಸ್ತ ಸಮಾಜದ ಬಂಧುಗಳಿಗೆ ಕ್ರಿಸ್ಮಸ್ ಹಬ್ಬದ ಹಾರ್ದಿಕ ಶುಭಾಶಯಗಳು. ಈ ಕ್ರಿಸ್ಮಸ್ ಹಬ್ಬವು ನಿಮ್ಮೆಲ್ಲರ ಮನೆಗಳಲ್ಲಿ ಇನ್ನೂ ಹೆಚ್ಚಿನ ಸಂತೋಷ, ಶಾಂತಿ ಮತ್ತು ಸಮೃದ್ಧಿಗಳನ್ನು ತರಲಿ ಎಂದು ಹಾರೈಸುತ್ತೇನೆ.
Wishing you all a blessed Christmas. #merrychristmas -
B.S.Yediyurappa
@BSYBJP
ಮಾಜಿ ಪ್ರಧಾನಮಂತ್ರಿ ದಿವಂಗತ ಶ್ರೀ ಚೌಧರಿ ಚರಣ್ ಸಿಂಗ್ ಅವರ ಜನ್ಮದಿನದ ಸಂಸ್ಮರಣೆಗಳ ಜೊತೆಗೆ, ನಾಡಿನ ಎಲ್ಲ ನಮ್ಮ ಅನ್ನದಾತ ರೈತರಿಗೆ "ರಾಷ್ಟ್ರೀಯ ರೈತರ ದಿನ"ದ ಹೃತ್ಪೂರ್ವಕ ಶುಭಾಶಯಗಳು.
#kisandiwas #nationalfarmersday -
B.S.Yediyurappa
@BSYBJP
ಮಾಜಿ ಮುಖ್ಯಮಂತ್ರಿಗಳು, ಕೇಂದ್ರ ಸಚಿವರು, ಆತ್ಮೀಯರಾದ ಶ್ರೀ ಹೆಚ್.ಡಿ.ಕುಮಾರಸ್ವಾಮಿ ಅವರಿಗೆ ಜನ್ಮದಿನದ ಶುಭಾಶಯಗಳು. ದೇವರ ಅನುಗ್ರಹ ಸದಾ ತಮ್ಮ ಮೇಲಿರಲಿ ಎಂದು ಹಾರೈಸುತ್ತೇನೆ.
@hd_kumaraswamy -
B.S.Yediyurappa
@BSYBJP
ದೇಶ ರಕ್ಷಣೆಯ ಕಾಯಕದಲ್ಲಿ ನಿರತರಾಗಿರುವ ಭಾರತೀಯ ಸೇನಾ ಪಡೆಗಳ ನಮ್ಮ ಎಲ್ಲ ಯೋಧರ ಕರ್ತವ್ಯನಿಷ್ಠೆ, ಧೈರ್ಯ, ತ್ಯಾಗ, ಹುತಾತ್ಮ ಯೋಧರ ಬಲಿದಾನಗಳ ಸಂಸ್ಮರಣೆಗಳ ಜೊತೆಗೆ, ನಾಡಿನ ಸಮಸ್ತ ಜನತೆಗೆ ವಿಜಯ ದಿವಸದ ಹಾರ್ದಿಕ ಶುಭಾಶಯಗಳು.
#vijaydiwas2024 -
B.S.Yediyurappa
@BSYBJP
ತಬಲಾ ಮಾಂತ್ರಿಕ, ಪದ್ಮವಿಭೂಷಣ ಉಸ್ತಾದ್ ಜಾಕಿರ್ ಹುಸೇನ್ ಅವರ ನಿಧನದಿಂದ ಅತೀವ ದುಃಖವಾಗಿದೆ. ಅವರು ಭೌತಿಕವಾಗಿ ನಮ್ಮನ್ನು ಅಗಲಿದ್ದರೂ ಅವರ ದೈವಿಕ ಸಂಗೀತ ಸದಾ ಪ್ರತಿಧ್ವನಿಸುತ್ತಿರಲಿದೆ. ಅವರ ಕುಟುಂಬ ಮತ್ತು ಅಸಂಖ್ಯಾತ ಅಭಿಮಾನಿಗಳಲ್ಲಿ ಹೃತ್ಪೂರ್ವಕ ಸಂತಾಪ ವ್ಯಕ್ತಪಡಿಸುತ್ತೇನೆ. ದೇವರು ಅವರ ಆತ್ಮಕ್ಕೆ ಸದ್ಗತಿ ಕರುಣಿಸಲಿ. ಓಂ ಶಾಂತಿ 🙏🏼
-
B.S.Yediyurappa
@BSYBJP
ಹಿರಿಯ ಸ್ವಾತಂತ್ರ್ಯ ಸೇನಾನಿ, ಭಾರತ ದೇಶದ ಪ್ರಥಮ ಉಪಪ್ರಧಾನಮಂತ್ರಿ ಹಾಗೂ ಗೃಹ ಸಚಿವ, ಉಕ್ಕಿನ ಮನುಷ್ಯ, ಭಾರತರತ್ನ ಸರ್ದಾರ್ ವಲ್ಲಭಭಾಯ್ ಪಟೇಲ್ ಅವರ ಪುಣ್ಯತಿಥಿಯಂದು ಆ ಮಹಾನ್ ಚೇತನಕ್ಕೆ ಗೌರವಪೂರ್ವಕ ಪ್ರಣಾಮಗಳು.
#sardarvallabhbhaipatel -
B.S.Yediyurappa
@BSYBJP
ನಿನ್ನೆ ನಮ್ಮನ್ನಗಲಿದ ಹಿರಿಯ ನಾಯಕ, ಸಜ್ಜನ ರಾಜಕಾರಣಿ, ಮಾಜಿ ಮುಖ್ಯಮಂತ್ರಿ ಶ್ರೀ ಎಸ್.ಎಂ.ಕೃಷ್ಣ ಅವರ ಅಂತ್ಯಸಂಸ್ಕಾರ ನಡೆಯುತ್ತಿರುವ, ಅವರ ಹುಟ್ಟೂರಾದ ಮಂಡ್ಯದ ಸೋಮನಹಳ್ಳಿಗೆ ತೆರಳಿ, ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದು, ಗೌರವ ಸಲ್ಲಿಸಲಾಯಿತು.
-
B.S.Yediyurappa
@BSYBJP
ಇಂದು ವಿಧಿವಶರಾದ ಹಿರಿಯ ನಾಯಕರು, ಮಾಜಿ ಮುಖ್ಯಮಂತ್ರಿ ಸನ್ಮಾನ್ಯ ಶ್ರೀ ಎಸ್.ಎಂ ಕೃಷ್ಣ ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದು, ಶ್ರದ್ಧಾಂಜಲಿ ಸಲ್ಲಿಸಲಾಯಿತು.
-
B.S.Yediyurappa
@BSYBJP
Deeply saddened by the passing of veteran leader, former Chief and Union Minister, and dear friend, Shri S.M. Krishna. A true statesman and stalwart, his invaluable contributions to our nation and Karnataka will forever be remembered. I feel a sense of deep personal loss. My heartfelt condolences to his family and loved ones during this difficult time.
-
B.S.Yediyurappa
@BSYBJP
ಧೀಮಂತ ಮುತ್ಸದ್ಧಿ ರಾಜಕಾರಣಿ, ಕರ್ನಾಟಕದ ಮಾಜಿ ಮುಖ್ಯಮಂತ್ರಿಗಳು, ಮಾಜಿ ಕೇಂದ್ರ ವಿದೇಶಾಂಗ ಸಚಿವರು, ಪಕ್ಷದ ಹಿರಿಯ ನಾಯಕ, ಪದ್ಮವಿಭೂಷಣ ಶ್ರೀ ಎಸ್.ಎಂ.ಕೃಷ್ಣ ಅವರು ನಮ್ಮನ್ನು ಬಿಟ್ಟು ಅಗಲಿದ ಸುದ್ದಿ ತಿಳಿದು ಅತೀವ ಆಘಾವಾಗಿದೆ. ರಾಷ್ಟ್ರ, ರಾಜ್ಯದ ಅಭಿವೃದ್ಧಿಗೆ ಅಪಾರ ಕೊಡುಗೆ ನೀಡಿದ್ದ ಶ್ರೀ ಎಸ್.ಎಂ.ಕೃಷ್ಣ ಅವರ ನಿಧನದಿಂದ ನಾಡು ಒಬ್ಬ ಶ್ರೇಷ್ಠ ನಾಯಕನನ್ನು ಕಳೆದುಕೊಂಡಿದೆ. ಅವರ ಅಗಲಿಕೆಯಿಂದ ವೈಯಕ್ತಿಕವಾಗಿ ಒಬ್ಬ ಹಿರಿಯಣ್ಣನನ್ನು ಕಳೆದುಕೊಂಡ ನೋವು ನನಗಾಗಿದೆ.
ಶ್ರೀ ಎಸ್.ಎಂ.ಕೃಷ್ಣ ಅವರಿಗೆ ಅಶ್ರುಪೂರ್ಣ ಶ್ರದ್ಧಾಂಜಲಿ ಸಲ್ಲಿಸುತ್ತಾ, ಅಗಲಿದ ಆ ಹಿರಿಯ ಚೇತನಕ್ಕೆ ದೇವರು ಉತ್ತಮ ಸದ್ಗತಿಯನ್ನು ದಯಪಾಲಿಸಲಿ ಎಂದು ಪ್ರಾರ್ಥಿಸುತ್ತೇನೆ. ಅವರ ಕುಟುಂಬದ ಸದಸ್ಯರು, ಅಪಾರ ಅಭಿಮಾನಿಗಳಿಗೆ ಈ ನೋವನ್ನು ಭರಿಸುವ ಶಕ್ತಿ ನೀಡಲಿ ಎಂದು ಕೋರುತ್ತೇನೆ. ಓಂ ಶಾಂತಿ 🙏 -
B.S.Yediyurappa
@BSYBJP
ಸುತ್ತೂರು ಮಠದ ಪರಮಪೂಜ್ಯ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳು, ಸಿದ್ದಗಂಗಾ ಮಠದ ಪರಮಪೂಜ್ಯ ಶ್ರೀ ಸಿದ್ಧಲಿಂಗ ಮಹಾಸ್ವಾಮಿಗಳು ಮತ್ತಿತರ ಶ್ರೀಚರಣರ ದಿವ್ಯ ಸಾನ್ನಿಧ್ಯದಲ್ಲಿ, ಮೈಸೂರಿನ ಶ್ರೀ ಮಹಾಂತೇಶ್ವರ ಮಠದಲ್ಲಿ ನಡೆದ ಷಟ್ಸ್ಥಲ ಬ್ರಹ್ಮೋಪದೇಶಪೂರ್ವಕ ಪಟ್ಟಾಧಿಕಾರ ಮಹೋತ್ಸವ ಮತ್ತು ಶ್ರೀ ಮಹಾಂತೇಶ್ವರ ಮಂಗಳ ಮಂಟಪದ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಾಯಿತು.
-
B.S.Yediyurappa
@BSYBJP
ಪಕ್ಷದ ಸಂಘಟನಾ ಪರ್ವ ಹಾಗೂ ಕಾರ್ಯಚಟುವಟಿಕೆಗಳ ಕುರಿತು ಚರ್ಚಿಸಲು, ನಮ್ಮ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯ ಉಸ್ತುವಾರಿಗಳಾದ ಶ್ರೀ @AgrawalRMD ಅವರ ಉಪಸ್ಥಿತಿಯಲ್ಲಿ ಇಂದು ಬೆಂಗಳೂರಿನಲ್ಲಿ ನಡೆದ ರಾಜ್ಯ ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ಪಾಲ್ಗೊಳ್ಳಲಾಯಿತು.
@BJP4Karnataka -
B.S.Yediyurappa
@BSYBJP
ಸಮಾನತೆ, ಸಾಮಾಜಿಕ ನ್ಯಾಯಗಳ ಹರಿಕಾರ, ಸಂವಿಧಾನ ಶಿಲ್ಪಿ, ಭಾರತರತ್ನ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಮಹಾಪರಿನಿರ್ವಾಣ ದಿವಸದಂದು ಆ ದಿವ್ಯಚೇತನಕ್ಕೆ ಅನಂತ ನಮನಗಳು.
#mahaparinirvandiwas -
B.S.Yediyurappa
@BSYBJP
Hearty congratulations to Shri @Dev_Fadnavis Ji on being sworn in as the Chief Minister of Maharashtra and best wishes for fulfilling the aspirations of people of the state.
My best wishes to Shri @mieknathshinde ji and Shri @AjitPawarSpeaks ji on taking oath as Deputy Chief Ministers. -
B.S.Yediyurappa
@BSYBJP
ಪರಮಪೂಜ್ಯ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳ ಸಾನ್ನಿಧ್ಯದಲ್ಲಿ ತರೀಕೆರೆಯಲ್ಲಿ ಇಂದು ನಡೆದ ಸರ್ವಶರಣರ ಸಮ್ಮೇಳನದಲ್ಲಿ ಪಾಲ್ಗೊಂಡು, ನಂತರ ಮಾಚೇನಹಳ್ಳಿಯಲ್ಲಿ ನಡೆದ, ಪರಮಪೂಜ್ಯ ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಮಹಾಸ್ವಾಮಿಗಳಿಂದ ಪೂಜ್ಯ ಶ್ರೀ ಬಸವ ಮರುಳಸಿದ್ದ ಸ್ವಾಮಿಗಳ ಚಿನ್ಮಯಾನುಗ್ರಹ ದೀಕ್ಷಾ ಸಮಾರಂಭದಲ್ಲಿ ಭಾಗವಹಿಸಲಾಯಿತು
-
B.S.Yediyurappa
@BSYBJP
ರಾಜ್ಯದಲ್ಲಿ ಸಂಘಟನೆ ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ನಡೆಯುತ್ತಿರುವ ಸಂಘಟನಾ ಪರ್ವ ಸೇರಿದಂತೆ ಪಕ್ಷದ ಹಲವು ಕಾರ್ಯಚಟುವಟಿಕೆಗಳ ಕುರಿತಂತೆ ಬೆಂಗಳೂರಿನಲ್ಲಿ ಇಂದು ನಡೆದ ಕೋರ್ ಕಮಿಟಿ ಸಭೆಯಲ್ಲಿ ಚರ್ಚಿಸಲಾಯಿತು. ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಶ್ರೀ @tarunchughbjp, ರಾಜ್ಯಾಧ್ಯಕ್ಷ ಶ್ರೀ @BYVijayendra, ರಾಜ್ಯ ಸಹ-ಉಸ್ತುವಾರಿ ಶ್ರೀ @ReddySudhakar21, ವಿಪಕ್ಷ ನಾಯಕ ಶ್ರೀ @RAshokaBJP, ಮಾಜಿ ಮುಖ್ಯಮಂತ್ರಿ ಶ್ರೀ @DVSadanandGowda ಸೇರಿದಂತೆ ಹಿರಿಯ ನಾಯಕರು ಪಾಲ್ಗೊಂಡಿದ್ದರು. @BJP4Karnataka
-
B.S.Yediyurappa
@BSYBJP
ಕೊಟ್ಟೂರು ಹಿರೇಮಠದ ಪರಮಪೂಜ್ಯ ಶ್ರೀಮನ್ ನಿರಂಜನಸ್ವರೂಪಿ ಜಗದ್ಗುರು ಶ್ರೀ ಶಂಕರ ಮಹಾಸ್ವಾಮಿಗಳು ಲಿಂಗೈಕ್ಯರಾದ ಸುದ್ದಿ ಅತೀವ ನೋವನ್ನುಂಟು ಮಾಡಿದೆ. ಧರ್ಮಾಚರಣೆ, ತತ್ವೋಪದೇಶಗಳ ಮೂಲಕ ಆಶ್ರಮನಿಷ್ಠರಾಗಿ ಭಕ್ತರನ್ನು ಅನುಗ್ರಹಿಸುತ್ತಿದ್ದ ಪೂಜ್ಯ ಶ್ರೀಗಳ ಅಗಲಿಕೆ ಅಪಾರ ಭಕ್ತರ ಪಾಲಿಗೆ ದೊಡ್ಡ ಆಘಾತವಾಗಿದ್ದು, ಅವರೆಲ್ಲರಲ್ಲಿ ಸಂತಾಪ ಸೂಚಿಸುತ್ತಾ, ಪೂಜ್ಯರ ಆತ್ಮಕ್ಕೆ ಸದ್ಗತಿ ಪ್ರಾರ್ಥಿಸುತ್ತೇನೆ. ಓಂ ಶಾಂತಿ 🙏
-
B.S.Yediyurappa
@BSYBJP
ಆತ್ಮೀಯರು, ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಕಾರ್ಯವಾಹರಾದ ಆದರಣೀಯ ಶ್ರೀ ದತ್ತಾತ್ರೇಯ ಹೊಸಬಾಳೆ ಜೀ ಅವರಿಗೆ ಜನ್ಮದಿನದ ಶುಭಾಶಯಗಳು.
@DattaHosabale -
B.S.Yediyurappa
@BSYBJP
ಪಕ್ಷದ ಹಿರಿಯ ನಾಯಕರು, ಕೇಂದ್ರ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣೆ ಹಾಗೂ ಹೊಸ ಮತ್ತು ನವೀಕರಿಸಬಹುದಾದ ಇಂಧನ ಖಾತೆ ಸಚಿವರಾದ ಶ್ರೀ ಪ್ರಹ್ಲಾದ ಜೋಶಿ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು.
@JoshiPralhad -
B.S.Yediyurappa
@BSYBJP
ಸಮಸ್ತ ಭಾರತೀಯರಿಗೂ ಸಂವಿಧಾನ ದಿವಸದ ಹೃತ್ಪೂರ್ವಕ ಶುಭಾಶಯಗಳು. ನಮ್ಮ ಸಂವಿಧಾನದ ಆಶೋತ್ತರಗಳನ್ನು ಗೌರವಿಸೋಣ, ಸಶಕ್ತ, ವಿಕಸಿತ ಭಾರತ ನಿರ್ಮಿಸುವ ನಿಟ್ಟಿನಲ್ಲಿ ಒಂದಾಗಿ ಮುನ್ನಡೆಯೋಣ.
#constitutionday #samvidhandiwas -
B.S.Yediyurappa
@BSYBJP
ಮಾಜಿ ಸಚಿವರು, ಹಾನಗಲ್ ಕ್ಷೇತ್ರದ ಮಾಜಿ ಶಾಸಕರೂ ಆದ ಶ್ರೀ ಮನೋಹರ್ ತಹಶೀಲ್ದಾರ್ ಅವರು ವಿಧಿವಶರಾದ ಸುದ್ದಿ ಅತೀವ ದುಃಖವನ್ನು ಉಂಟುಮಾಡಿದೆ. ಅವರ ಆತ್ಮಕ್ಕೆ ಚಿರಶಾಂತಿಯನ್ನು ಪ್ರಾರ್ಥಿಸುತ್ತಾ, ಅವರ ಕುಟುಂಬದವರಿಗೆ, ಅಭಿಮಾನಿಗಳಿಗೆ ಅವರ ಅಗಲಿಕೆಯ ನೋವನ್ನು ಭರಿಸುವ ಶಕ್ತಿಯನ್ನು ದೇವರು ನೀಡಲಿ ಎಂದು ಕೋರುತ್ತೇನೆ. ಓಂ ಶಾಂತಿ🙏🏼
-
B.S.Yediyurappa
@BSYBJP
ಸಂಘಟನೆಯೇ ಪಕ್ಷದ ಶಕ್ತಿ, ಜನಸೇವೆಯೇ ಇದರ ಅಭಿವ್ಯಕ್ತಿ. ಈ ನಿಟ್ಟಿನಲ್ಲಿ ಇಂದು ಶಿಕಾರಿಪುರದಲ್ಲಿ ಪಕ್ಷದ ಸಂಘಟನಾಪರ್ವ ಸಮಾಲೋಚನಾ ಸಭೆ ಹಾಗೂ ಬೂತ್ ಮಟ್ಟದ ಕಾರ್ಯಕರ್ತರ ಬೃಹತ್ ಸಮಾವೇಶದಲ್ಲಿ ರಾಜ್ಯಾಧ್ಯಕ್ಷ ಶ್ರೀ @BYVijayendra, ಸಂಸದ ಶ್ರೀ @BYRBJP, ಇನ್ನಿತರ ಪ್ರಮುಖರು ಹಾಗೂ ಸಹಸ್ರಾರು ದೇವದುರ್ಲಭ ಕಾರ್ಯಕರ್ತರೊಂದಿಗೆ ಪಾಲ್ಗೊಳ್ಳಲಾಯಿತು. @BJP4Karnataka
-
B.S.Yediyurappa
@BSYBJP
ಸಮಾಜಕ್ಕೆ ಜ್ಞಾನದ ಬೆಳಕು ತೋರಿದ ದಾರ್ಶನಿಕ ಸಂತ, ದಾಸ ಶ್ರೇಷ್ಠ ಶ್ರೀ ಕನಕದಾಸರ ಸಂಸ್ಮರಣೆಗಳ ಜೊತೆಗೆ ಎಲ್ಲರಿಗೂ ಶ್ರೀ ಕನಕದಾಸ ಜಯಂತಿಯ ಶುಭಕಾಮನೆಗಳು.
-
B.S.Yediyurappa
@BSYBJP
ಸ್ವತಂತ್ರ ಭಾರತದ ಪ್ರಥಮ ಪ್ರಧಾನಿ ದಿ. ಶ್ರೀ ಜವಾಹರ್ ಲಾಲ್ ನೆಹರು ಅವರ ಜಯಂತಿಯಂದು ಅವರ ಸಂಸ್ಮರಣೆಗಳ ಜೊತೆಗೆ ಎಲ್ಲ ಮಕ್ಕಳಿಗೂ ಮಕ್ಕಳ ದಿನಾಚರಣೆಯ ಅಕ್ಕರೆಯ ಶುಭಾಶಯಗಳು.
-
B.S.Yediyurappa
@BSYBJP
ಶಿಗ್ಗಾಂವಿ, ಸಂಡೂರು ಮತ್ತು ಚನ್ನಪಟ್ಟಣದ ಎಲ್ಲ ಮತದಾರ ಬಂಧುಗಳಲ್ಲಿ ನನ್ನ ಸವಿನಯ ಕೋರಿಕೆಯೆಂದರೆ, ಇಂದು ನಡೆಯುತ್ತಿರುವ ಉಪಚುನಾವಣೆಯಲ್ಲಿ ತಪ್ಪದೇ ಮತ ಚಲಾಯಿಸಿ! ಮತದಾನ ನಿಮ್ಮ ಹಕ್ಕು, ಹಾಗೆಯೇ ಕರ್ತವ್ಯವೂ ಕೂಡ, ನಿಮ್ಮ ಮತವೇ ಕ್ಷೇತ್ರದ ಜನಾದೇಶ.
-
B.S.Yediyurappa
@BSYBJP
ಆತ್ಮೀಯ ಮಿತ್ರ, ಪಕ್ಷದ ಹಿರಿಯ ನಾಯಕ, ಮಾಜಿ ಕೇಂದ್ರ ಸಚಿವ ಶ್ರೀ ಅನಂತಕುಮಾರ್ ಅವರ ಪುಣ್ಯಸ್ಮರಣೆಯಂದು ಆ ಅದಮ್ಯ, ಸ್ನೇಹಮಯಿ ಚೇತನಕ್ಕೆ ನನ್ನ ಅನಂತ ಪ್ರಣಾಮಗಳು.
-
B.S.Yediyurappa
@BSYBJP
'ಯುಗದ ಕವಿ, ಜಗದ ಕವಿ’ ಎಂಬ ಕೀರ್ತಿಭಾಜನರಾದ ಕನ್ನಡ ಸಾರಸ್ವತ ಲೋಕದ ಅಗ್ರಮಾನ್ಯ ಸಾಧಕ, ರಾಷ್ಟ್ರಕವಿ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ, ಕರ್ನಾಟಕ ರತ್ನ, ಪದ್ಮವಿಭೂಷಣ ಶ್ರೀ ಕುವೆಂಪು ಅವರ ಪುಣ್ಯತಿಥಿಯಂದು ಆ ವಿಶ್ವಚೇತನಕ್ಕೆ ಅನಂತ ನಮನಗಳು.
-
B.S.Yediyurappa
@BSYBJP
ಎದುರಾಗಿರುವ ಮೂರೂ ಕ್ಷೇತ್ರದ ಉಪಚುನಾವಣೆಯಲ್ಲಿ ಪಕ್ಷದ ಪರವಾದ ವಾತಾವರಣವಿದ್ದು, ಜನರ ಭರವಸೆ ಎನ್.ಡಿ.ಎ ಮೈತ್ರಿಕೂಟದ ಮೇಲಿದೆ. ಇಂದು ಕೂಡ ಸಂಡೂರು ವಿಧಾನಸಭಾ ಕ್ಷೇತ್ರದ ತಾರಾನಗರ, ಬನ್ನಿಹಟ್ಟಿ, ತಾಳೂರು, ರಾಜಾಪುರ, ಅಂತಾಪುರ ಮೊದಲಾದ ಕಡೆ ಬೃಹತ್ ರೋಡ್ ಶೋ, ಸಭೆಗಳ ಮೂಲಕ ನಮ್ಮ ಅಭ್ಯರ್ಥಿ ಶ್ರೀ ಬಂಗಾರು ಹನುಮಂತು ಪರವಾಗಿ ಪ್ರಚಾರ ನಡೆಸಲಾಯಿತು. ಶ್ರೀ @sriramulubjp, ಶ್ರೀ @BABasavaraja, ಶ್ರೀ @GaliJanardhanar ಮತ್ತಿತರ ನಾಯಕರು ಉಪಸ್ಥಿತರಿದ್ದರು.
@BJP4Karnataka -
B.S.Yediyurappa
@BSYBJP
ಉಪಚುನಾವಣೆ ಪ್ರಯುಕ್ತ ನಿನ್ನೆ ಸಂಡೂರು ಕ್ಷೇತ್ರದ ಗೊಲ್ಲಲಿಂಗಮ್ಮನ ಹಳ್ಳಿ, ಬೊಮ್ಮಗಟ್ಟ, ಬಂಡ್ರಿ, ಯಶವಂತನಗರ ಸೇರಿದಂತೆ ಹಲವಾರು ಕಡೆ ಕೇಂದ್ರ ಸಚಿವ ಶ್ರೀ @JoshiPralhad, ಶ್ರೀ @NswamyChalavadi, ಶ್ರೀ @sriramulubjp, ಶ್ರೀ @GaliJanardhanar, ಶ್ರೀ @BABasavaraja ಮತ್ತಿತರ ನಾಯಕರೊಂದಿಗೆ ಪ್ರಚಾರ ನಡೆಸಲಾಯಿತು. ಎಲ್ಲೆಡೆ ಪಕ್ಷದ ಅಭ್ಯರ್ಥಿ ಶ್ರೀ ಬಂಗಾರು ಹನುಮಂತು ಪರವಾಗಿ ಅಭೂತಪೂರ್ವ ಜನಬೆಂಬಲ ವ್ಯಕ್ತವಾಗುತ್ತಿದೆ. @BJP4Karnataka
-
B.S.Yediyurappa
@BSYBJP
Warm birthday wishes to our beloved senior leader, Shri Lal Krishna Advani ji. Wishing you health and happiness.
-
B.S.Yediyurappa
@BSYBJP
ಚನ್ನಪಟ್ಟಣ ಉಪಚುನಾವಣಾ ಪ್ರಚಾರದ ಅಂಗವಾಗಿ ಇಂದು ಮಾಜಿ ಪ್ರಧಾನಿ ಶ್ರೀ @H_D_Devegowda, ಕೇಂದ್ರ ಸಚಿವ ಶ್ರೀ @hd_kumaraswamy, ಸಂಸದ ಶ್ರೀ @DrCNManjunath ರವರೊಂದಿಗೆ ಕ್ಷೇತ್ರದ ವ್ಯಾಪ್ತಿಯ ನಾಗವಾರ, ಬೇವೂರು ಗ್ರಾಮ ಪಂಚಾಯತಿ ಸೇರಿದಂತೆ ಹಲವಾರು ಕಡೆ ರೋಡ್ ಶೋ, ಸಭೆಗಳನ್ನು ನಡೆಸಿ, ಎನ್.ಡಿ.ಎ ಅಭ್ಯರ್ಥಿ ಶ್ರೀ @Nikhil_Kumar_k ಪರವಾಗಿ ಪ್ರಚಾರ ನಡೆಸಲಾಯಿತು.
@BJP4Karnataka @JanataDal_S -
B.S.Yediyurappa
@BSYBJP
ಸಮಸ್ತ ಕನ್ನಡಿಗರಿಗೆ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು! ಕನ್ನಡ, ಕನ್ನಡಿಗರು ಮತ್ತು ಕರ್ನಾಟಕದ ಹಿರಿಮೆ, ಗೌರವಗಳು ಸದಾ ಬೆಳಗುತ್ತಿರಲಿ.
-
B.S.Yediyurappa
@BSYBJP
Saddened by the passing of Shri TPG Nambiar, founder of the iconic BPL brand, who has been a close acquaintance for a long time. Shri Nambiar's enormous contributions and legacy will always be remembered. My heartfelt condolences to his loved ones.
-
B.S.Yediyurappa
@BSYBJP
ಎಲ್ಲರಿಗೂ ದೀಪಾವಳಿ ಹಬ್ಬದ ಶುಭಾಶಯಗಳು. ಈ ಬೆಳಕಿನ ಹಬ್ಬವು ಎಲ್ಲರ ದುಃಖ, ಸಂಕಷ್ಟಗಳ ಕತ್ತಲನ್ನು ಕಳೆದು, ಸಂತೋಷ, ಯಶಸ್ಸುಗಳ ಬೆಳಕನ್ನು ಹೊತ್ತು ತರಲಿ ಎಂದು ಹಾರೈಸುತ್ತೇನೆ.
-
B.S.Yediyurappa
@BSYBJP
ಹಿರಿಯ ಸ್ವಾತಂತ್ರ್ಯ ಹೋರಾಟಗಾರ, ಸ್ವತಂತ್ರ ಭಾರತದ ಏಕತೆ, ಅಖಂಡತೆಗಳ ರೂವಾರಿ, ಭಾರತರತ್ನ ಸರ್ದಾರ್ ವಲ್ಲಭಭಾಯ್ ಪಟೇಲ್ ಅವರ ಜಯಂತಿಯಂದು ಆ ಮಹಾನ್ ಚೇತನಕ್ಕೆ ಶ್ರದ್ಧಾಪೂರ್ವಕ ನಮನಗಳು.
#sardarvallabhbhaipatel #nationalunityday -
B.S.Yediyurappa
@BSYBJP
ಹಿರಿಯರು, ವಿಶ್ವ ಹಿಂದೂ ಪರಿಷತ್ ನ ಕ್ಷೇತ್ರೀಯ ಕಾರ್ಯದರ್ಶಿಗಳು ಹಾಗೂ ಕೇಂದ್ರ ಕಾರ್ಯಕಾರಿ ಸದಸ್ಯರಾಗಿದ್ದ ಶ್ರೀ ಬಿ.ಎನ್.ಮೂರ್ತಿ ರವರು ದೈವಾಧೀನರಾದ ವಿಷಯ ತಿಳಿದು ಅತೀವ ದುಃಖವಾಗಿದೆ. ಅಗಲಿದ ಹಿರಿಯರ ಆತ್ಮಕ್ಕೆ ಸದ್ಗತಿ ಪ್ರಾರ್ಥಿಸುತ್ತಾ, ಅವರ ಕುಟುಂಬ ಸದಸ್ಯರಲ್ಲಿ ಸಂತಾಪ ವ್ಯಕ್ತಪಡಿಸುತ್ತೇನೆ. ಓಂ ಶಾಂತಿ 🙏🏼
-
B.S.Yediyurappa
@BSYBJP
ಹಾಸನದಲ್ಲಿರುವ ಇತಿಹಾಸ ಪ್ರಸಿದ್ಧ ಶ್ರೀ ಹಾಸನಾಂಬೆ ದೇಗುಲಕ್ಕೆ ಇಂದು ಕುಟುಂಬ ಸದಸ್ಯರೊಂದಿಗೆ ಭೇಟಿ ನೀಡಿ ತಾಯಿಯ ದರ್ಶನ ಪಡೆದು, ವಿಶೇಷ ಪೂಜೆ, ಪ್ರಾರ್ಥನೆ ಸಲ್ಲಿಸಲಾಯಿತು.
-
B.S.Yediyurappa
@BSYBJP
ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಎನ್.ಡಿ.ಎ ಅಭ್ಯರ್ಥಿಯನ್ನು ಆಯ್ಕೆ ಮಾಡುವ ನಿಟ್ಟಿನಲ್ಲಿ ಇಂದು ಕೇಂದ್ರ ಸಚಿವ ಶ್ರೀ @hd_kumaraswamy, ವಿರೋಧ ಪಕ್ಷ ನಾಯಕ ಶ್ರೀ @RAshokaBJP ಸೇರಿದಂತೆ ಎರಡೂ ಮಿತ್ರ ಪಕ್ಷಗಳ ಪ್ರಮುಖ ನಾಯಕರೊಂದಿಗೆ ಸಮನ್ವಯ ಸಭೆ ನಡೆಸಲಾಯಿತು.
@BJP4Karnataka @JanataDal_S -
B.S.Yediyurappa
@BSYBJP
ಕನ್ನಡದ ಪ್ರಖ್ಯಾತ ಕಲಾವಿದ ಶ್ರೀ ಸುದೀಪ್ ಅವರ ತಾಯಿ ಶ್ರೀಮತಿ ಸರೋಜಾ ಅವರು ಇಂದು ನಿಧನರಾದ ಸುದ್ದಿ ತಿಳಿದು ಅತೀವ ದುಃಖವಾಗಿದೆ. ಸುದೀಪ್ ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿ ನನ್ನ ಸಂತಾಪಗಳನ್ನು ತಿಳಿಸಿದ್ದೇನೆ. ಮೃತರ ಆತ್ಮಕ್ಕೆ ಸದ್ಗತಿ ಕೋರುತ್ತಾ, ಅವರ ಕುಟುಂಬದ ಸದಸ್ಯರಿಗೆ, ಆಪ್ತೇಷ್ಟರಿಗೆ ಹಿರಿಯರ ಈ ಅಗಲಿಕೆಯ ನೋವನ್ನು ಭರಿಸುವ ಶಕ್ತಿಯನ್ನು ದೇವರು ನೀಡಲಿ ಎಂದು ಪ್ರಾರ್ಥಿಸುತ್ತೇನೆ. ಓಂ ಶಾಂತಿ 🙏🏼
-
B.S.Yediyurappa
@BSYBJP
ಆದಿಕಾವ್ಯ ರಾಮಾಯಣವನ್ನು ರಚಿಸಿ ಪ್ರಭು ಶ್ರೀ ರಾಮನ ಕಥೆಯನ್ನು ಜಗತ್ತಿಗೆ ತಿಳಿಸಿಕೊಟ್ಟ ಆದಿಕವಿ ಮಹರ್ಷಿ ಶ್ರೀ ವಾಲ್ಮೀಕಿ ಮಹಾಮುನಿಗಳಿಗೆ ಅನಂತ ಪ್ರಣಾಮಗಳು. ಎಲ್ಲರಿಗೂ ಶ್ರೀ ವಾಲ್ಮೀಕಿ ಜಯಂತಿಯ ಶುಭಾಶಯಗಳು.
-
B.S.Yediyurappa
@BSYBJP
ನಾಡಿನ ಸಮಸ್ತ ಜನತೆಗೆ ವಿಜಯದಶಮಿ ಹಬ್ಬದ ಹಾರ್ದಿಕ ಶುಭಾಶಯಗಳು. ನಾಡಿನ ಮೇಲೆ ನಾಡದೇವತೆ ಚಾಮುಂಡೇಶ್ವರಿ ದೇವಿಯ ಅನುಗ್ರಹ ಸದಾ ಇರಲಿ, ಜಗನ್ಮಾತೆ ಎಲ್ಲರಿಗೂ ಸಂತೋಷ, ಸಮೃದ್ಧಿ, ಆರೋಗ್ಯ ಮತ್ತು ವಿಜಯವನ್ನು ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ.
#vijayadashami #dasara #ನಾಡಹಬ್ಬ #ದಸರಾ -
B.S.Yediyurappa
@BSYBJP
ಮಾತೃಭೂಮಿಗೆ ಸಮರ್ಪಿತ ಧ್ಯೇಯದೊಂದಿಗೆ, ಸೇವೆ, ಸಂಘಟನೆ ಮತ್ತು ರಾಷ್ಟ್ರನಿರ್ಮಾಣದ ಮಹಾಕಾರ್ಯದಲ್ಲಿ ಬದ್ಧತೆಯಿಂದ ಕಾರ್ಯನಿರ್ವಹಿಸುತ್ತಿರುವ ಸಂಘದ ಎಲ್ಲ ಸ್ವಯಂಸೇವಕರಿಗೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಂಸ್ಥಾಪನಾ ದಿನದ ಹೃದಯಪೂರ್ವಕ ಶುಭಾಶಯಗಳು. #rssfoundationday
@RSSorg @sanghadasuddi -
B.S.Yediyurappa
@BSYBJP
Deeply saddened by the passing of Padma Vibhushan Shri Ratan Tata, a visionary industrialist and philanthropist who exemplified India’s entrepreneurial spirit with integrity and compassion. His vision, humility, and kindness not only shaped Indian industry but touched millions of lives. Shri Ratan Tata’s commitment to ethics, philanthropy, and nation-building will remain an inspiration for generations.
My heartfelt condolences to his family and all whose lives he enriched. Bharat has lost a true legend, but his legacy will endure. Om Shanti🙏 -
B.S.Yediyurappa
@BSYBJP
ನಾಡಿನ ಆಕರ್ಷಕ, ಹೆಮ್ಮೆಯ ಪ್ರವಾಸಿ ತಾಣ, ವಿಶ್ವವಿಖ್ಯಾತ ಜೋಗ ಜಲಪಾತಕ್ಕೆ, ಜಿಲ್ಲೆಯ ಸಂಸದ ಶ್ರೀ @BYRBJP ಅವರೊಂದಿಗೆ ಭೇಟಿ ನೀಡಿ, ಅಭಿವೃದ್ಧಿ ಕಾಮಗಾರಿಗಳ ಪರಿಶೀಲನೆ ನಡೆಸಲಾಯಿತು. ಜೋಗಕ್ಕೆ ಭೇಟಿ ನೀಡುವ ಪ್ರವಾಸಿಗರಿಗೆ ಇನ್ನೂ ಉತ್ತಮ ಸೌಕರ್ಯಗಳನ್ನು ಕಲ್ಪಿಸಿ, ಪ್ರವಾಸೋದ್ಯಮಕ್ಕೆ ಕಾಯಕಲ್ಪ ಒದಗಿಸುವ ನಿಟ್ಟಿನಲ್ಲಿ ಕಾಮಗಾರಿ ನಡೆದಿದೆ.
-
B.S.Yediyurappa
@BSYBJP
ಸ್ವಾತಂತ್ರ್ಯ ಹೋರಾಟಗಾರ, ಮಾಜಿ ಪ್ರಧಾನಿ, ಭಾರತರತ್ನ ಶ್ರೀ ಲಾಲ್ ಬಹದ್ದೂರ್ ಶಾಸ್ತ್ರೀಜಿ ಅವರ ಜಯಂತಿಯಂದು ಆ ಮಹಾನ್ ಚೇತನಕ್ಕೆ ಶ್ರದ್ಧಾಪೂರ್ವಕ ನಮನಗಳು.
-
B.S.Yediyurappa
@BSYBJP
ಸತ್ಯ, ಅಹಿಂಸೆಗಳ ಸಾಕಾರ ಮೂರ್ತಿ, 'ರಾಷ್ಟ್ರಪಿತ' ಮಹಾತ್ಮಾ ಗಾಂಧೀಜಿಯವರ ಜಯಂತಿಯಂದು ಆ ದಿವ್ಯ ಚೇತನಕ್ಕೆ ಅನಂತ ಪ್ರಣಾಮಗಳು.
-
B.S.Yediyurappa
@BSYBJP
ಹಿರಿಯರು, ಬೈಂದೂರಿನ ಮಾಜಿ ಶಾಸಕರೂ ಆದ ಶ್ರೀ ಕೆ.ಲಕ್ಷ್ಮೀನಾರಾಯಣ ಅವರು ವಿಧಿವಶರಾದ ಸುದ್ದಿ ಅತೀವ ದುಃಖವನ್ನು ಉಂಟುಮಾಡಿದೆ. ಅವರ ಆತ್ಮಕ್ಕೆ ಸದ್ಗತಿಯನ್ನು ಪ್ರಾರ್ಥಿಸುತ್ತೇನೆ. ಅವರ ಕುಟುಂಬದವರಿಗೆ, ಅಭಿಮಾನಿಗಳಿಗೆ ಅವರ ಅಗಲಿಕೆಯ ನೋವನ್ನು ಭರಿಸುವ ಶಕ್ತಿಯನ್ನು ದೇವರು ನೀಡಲಿ ಎಂದು ಕೋರುತ್ತೇನೆ. ಓಂ ಶಾಂತಿ
-
B.S.Yediyurappa
@BSYBJP
ಪ್ರಖರ ರಾಷ್ಟ್ರೀಯವಾದಿ ನಾಯಕ, ದಾರ್ಶನಿಕ, ಶ್ರೇಷ್ಠ ಸಂಘಟಕ, ಜನಸಂಘದ ಸಂಸ್ಥಾಪಕರಾದ ಪಂಡಿತ್ ದೀನದಯಾಳ್ ಉಪಾಧ್ಯಾಯ್ ಅವರ ಜಯಂತಿಯಂದು ಆ ಮಹಾನ್ ಚೇತನಕ್ಕೆ ಶ್ರದ್ಧಾಪೂರ್ವಕ ಪ್ರಣಾಮಗಳು.
-
B.S.Yediyurappa
@BSYBJP
ಬೆಂಗಳೂರಿನ ಪಕ್ಷದ ಕೇಂದ್ರ ಕಚೇರಿಯಲ್ಲಿ ಇಂದು ನಡೆಯುತ್ತಿರುವ ರಾಜ್ಯ ಕೋರ್ ಕಮಿಟಿ ಸಭೆಯಲ್ಲಿ ಪಾಲ್ಗೊಳ್ಳಲಾಯಿತು. ಪಕ್ಷದ ಸದಸ್ಯತ್ವ ಅಭಿಯಾನ, ಉಪಚುನಾವಣೆ ಸಿದ್ಧತೆ, ರಾಜ್ಯ ಸರ್ಕಾರದ ವಿರುದ್ಧದ ಹೋರಾಟ ಸೇರಿದಂತೆ ಹಲವಾರು ಮಹತ್ವದ ವಿಚಾರಗಳ ಕುರಿತು ಚರ್ಚೆ ನಡೆಸಲಾಯಿತು.
ರಾಜ್ಯಾಧ್ಯಕ್ಷ ಶ್ರೀ @BYVijayendra, ಕೇಂದ್ರ ಸಚಿವ ಶ್ರೀ @JoshiPralhad. ವಿರೋಧ ಪಕ್ಷದ ನಾಯಕ ಶ್ರೀ @RAshokaBJP, ನಿಕಟಪೂರ್ವ ರಾಜ್ಯಾಧ್ಯಕ್ಷ ಶ್ರೀ @nalinkateel ಸೇರಿದಂತೆ ಪ್ರಮುಖ ನಾಯಕರು ಉಪಸ್ಥಿತರಿದ್ದರು.
@BJP4Karnataka -
B.S.Yediyurappa
@BSYBJP
ಪಕ್ಷದ ಹಿರಿಯ ನಾಯಕ, ಮಾಜಿ ಕೇಂದ್ರ ಸಚಿವ, ಆತ್ಮೀಯ ಮಿತ್ರ ದಿವಂಗತ ಶ್ರೀ ಅನಂತಕುಮಾರ್ ಅವರ ಜನ್ಮದಿನದಂದು ಆ ಸ್ನೇಹಪೂರ್ಣ ಚೇತನಕ್ಕೆ ನನ್ನ ಆದರಪೂರ್ವಕ ನಮನಗಳು.
-
B.S.Yediyurappa
@BSYBJP
ಆದರಣೀಯ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರಿಗೆ ಜನ್ಮದಿನದ ಹೃತ್ಪೂರ್ವಕ ಶುಭಾಶಯಗಳು. ಇನ್ನೂ ಸುದೀರ್ಘ ಕಾಲ ತಮ್ಮ ಸಾರ್ಥಕ ದೇಶಸೇವೆ ನಡೆಯುತ್ತಿರುವಂತೆ ದೇವರ ಆಶೀರ್ವಾದವಿರಲಿ ಎಂದು ಹಾರೈಸುತ್ತೇನೆ.
#happybirthdaymodiji @PMOIndia @narendramodi -
B.S.Yediyurappa
@BSYBJP
ನಾಡಿನ ಸಮಸ್ತ ಜನತೆಗೆ ಶ್ರೀ ವಿಶ್ವಕರ್ಮ ಜಯಂತಿಯ ಹಾಗೂ ಈದ್ ಮಿಲಾದ್ ಹಬ್ಬದ ಶುಭಕಾಮನೆಗಳು. ಎಲ್ಲರಿಗೂ ಒಳಿತಾಗಲಿ, ನಾಡಿನಲ್ಲಿ ಶಾಂತಿ, ಸಮೃದ್ಧಿ ನೆಲೆಸಲಿ ಎಂದು ಪ್ರಾರ್ಥಿಸೋಣ.
-
B.S.Yediyurappa
@BSYBJP
ನಾಡಿನ ಸಾರ್ಥಕ ಸಾಧನೆಗಳ ಹರಿಕಾರ, ಭಾರತರತ್ನ ಸರ್ ಎಂ.ವಿಶ್ವೇಶ್ವರಯ್ಯನವರ ಜನ್ಮದಿನದಂದು ಆ ಯುಗಪುರುಷ ಚೇತನಕ್ಕೆ ಅನಂತ ಪ್ರಣಾಮಗಳು.
#engineersday -
B.S.Yediyurappa
@BSYBJP
ಆಯುಷ್ಮಾನ್ ಭಾರತ್ #pmjay ಯೋಜನೆ ಅಡಿಯಲ್ಲಿ, 70 ವರ್ಷ ಮತ್ತು ಮೇಲ್ಪಟ್ಟ ವಯಸ್ಸಿನ ಎಲ್ಲಾ ಹಿರಿಯ ನಾಗರಿಕರಿಗೆ 5 ಲಕ್ಷ ರೂ.ವರೆಗೆ ಉಚಿತ ಚಿಕಿತ್ಸಾ ಸೌಲಭ್ಯವನ್ನು ಒದಗಿಸುವ ಪ್ರಧಾನಿ ಶ್ರೀ @narendramodi ಜೀ ನೇತೃತ್ವದ ಕೇಂದ್ರ ಸಚಿವ ಸಂಪುಟದ ಐತಿಹಾಸಿಕ ನಿರ್ಧಾರ ಅತ್ಯಂತ ಸ್ವಾಗತಾರ್ಹ. ಆಮೂಲಕ ದೇಶದ ಎಲ್ಲ ಹಿರಿಯ ನಾಗರಿಕರಿಗೆ ಆರೋಗ್ಯ ರಕ್ಷಾಕವಚವನ್ನು ಒದಗಿಸುವ ತೀರ್ಮಾನ ತೆಗೆದುಕೊಂಡ ಸನ್ಮಾನ್ಯ ಪ್ರಧಾನಮಂತ್ರಿಗಳಿಗೆ ಕೃತಜ್ಞತಾಪೂರ್ವಕ ಅಭಿನಂದನೆಗಳು. #ayushmanbharatforseniors
@PMOIndia @JPNadda -
B.S.Yediyurappa
@BSYBJP
Birthday greetings to Aadaraniya Sarsanghachalak Shri Mohan Bhagwat Ji. I pray for your good health and a long life in service of Bharat.
@DrMohanBhagwat @RSSorg -
B.S.Yediyurappa
@BSYBJP
ಹಿರಿಯ ಪತ್ರಕರ್ತ ಶ್ರೀ ವಸಂತ ನಾಡಿಗೇರ ಅವರು ವಿಧಿವಶರಾದ ಸುದ್ದಿ ಅತ್ಯಂತ ದುಃಖವನ್ನು ಉಂಟುಮಾಡಿದೆ. ವಿಜಯ ಕರ್ನಾಟಕ, ಸಂಯುಕ್ತ ಕರ್ನಾಟಕ ಸೇರಿದಂತೆ ಹಲವು ಮಾಧ್ಯಮ ಸಂಸ್ಥೆಗಳಲ್ಲಿ ಅವರು ಅಪಾರ ಸೇವೆ ಸಲ್ಲಿಸಿದ್ದರು. ಅಗಲಿದ ಅವರ ಚೇತನಕ್ಕೆ ಚಿರಶಾಂತಿ ಪ್ರಾರ್ಥಿಸುತ್ತಾ ಅವರ ಕುಟುಂಬದವರಲ್ಲಿ ಸಂತಾಪಗಳನ್ನು ಸಲ್ಲಿಸುತ್ತೇನೆ. ಓಂ ಶಾಂತಿ 🙏🏼
-
B.S.Yediyurappa
@BSYBJP
ನಾಡಿನ ಸಮಸ್ತ ಭಕ್ತಜನತೆಗೆ ಗಣೇಶ ಹಬ್ಬದ ಶುಭಾಶಯಗಳು. ವಿನಾಯಕನ ಅನುಗ್ರಹ ನಾಡಿನ ಮೇಲೆ ಸದಾ ಇರಲಿ, ಎಲ್ಲರಿಗೂ ಸಂತೋಷ, ಸಂತೃಪ್ತಿ, ಆರೋಗ್ಯ ಭಾಗ್ಯಗಳನ್ನು ದೇವರು ನೀಡಲಿ ಎಂದು ಪ್ರಾರ್ಥಿಸುತ್ತೇನೆ.
-
B.S.Yediyurappa
@BSYBJP
ರಾಷ್ಟ್ರೀಯ ಸದಸ್ಯತ್ವ ಅಭಿಯಾನ-2024 ರ ಅಡಿಯಲ್ಲಿ ಮತ್ತೆ ಪಕ್ಷದ ಸದಸ್ಯತ್ವವನ್ನು ತೆಗೆದುಕೊಂಡಿದ್ದೇನೆ.
ಟೋಲ್-ಫ್ರೀ ಸಂಖ್ಯೆ 8800002024ಗೆ ಮಿಸ್ಡ್ ಕಾಲ್ ನೀಡುವ ಮೂಲಕ ಅಥವಾ #namoapp ಮೂಲಕ ಬಿಜೆಪಿ ಸದಸ್ಯರಾಗಿ, ನವಭಾರತ ನಿರ್ಮಾಣದ ಅಭಿಯಾನದಲ್ಲಿ ನಮ್ಮ ಜೊತೆಯಾಗಿ ಎಂದು ಪಕ್ಷದ ಎಲ್ಲ ಹಿತೈಷಿಗಳಲ್ಲಿ ಮತ್ತು ಬೆಂಬಲಿಗರಲ್ಲಿ ಕೋರುತ್ತೇನೆ. -
B.S.Yediyurappa
@BSYBJP
ಸರ್ವರಿಗೂ ಸ್ವರ್ಣಗೌರಿ ಹಬ್ಬದ ಹಾರ್ದಿಕ ಶುಭಾಶಯಗಳು. ಜಗನ್ಮಾತೆ, ಶಕ್ತಿದೇವತೆ ತಾಯಿ ಗೌರಿಯು ಎಲ್ಲರಿಗೂ ಸನ್ಮಂಗಳವನ್ನು ಅನುಗ್ರಹಿಸಲಿ ಎಂದು ಪ್ರಾರ್ಥಿಸುತ್ತೇನೆ.
-
B.S.Yediyurappa
@BSYBJP
ಮಾಜಿ ರಾಷ್ಟ್ರಪತಿ, ಭಾರತರತ್ನ ಡಾ. ಸರ್ವೆಪಲ್ಲಿ ರಾಧಾಕೃಷ್ಣನ್ ಅವರ ಜಯಂತಿಯಂದು ಆ ಹಿರಿಯ ಚೇತನಕ್ಕೆ ಶ್ರದ್ಧಾಪೂರ್ವಕ ನಮನಗಳು. ನಾಡಿನ ಎಲ್ಲ ಶಿಕ್ಷಕರಿಗೆ ಶಿಕ್ಷಕರ ದಿನದ ಹಾರ್ದಿಕ ಶುಭಾಶಯಗಳು.
#teachersday -
B.S.Yediyurappa
@BSYBJP
ಕುಟುಂಬದಲ್ಲಿ ಮತ್ತು ಸಮಾಜದಲ್ಲಿ ಹೆಣ್ಣುಮಗುವಿನ ಸ್ಥಾನ ಹೆಚ್ಚಿಸಲು ಹಾಗೂ ಬಡತನದ ರೇಖೆಗಿಂತ ಕೆಳಗಿರುವ ಕುಟುಂಬಗಳಲ್ಲಿ ಹೆಣ್ಣುಮಕ್ಕಳ ಜನನವನ್ನು ಉತ್ತೇಜಿಸಲು 2006-07ನೇ ಸಾಲಿನಲ್ಲಿ, ದೇಶದಲ್ಲೇ ಮೊದಲ ಬಾರಿಗೆ, ಹೆಣ್ಣು ಮಕ್ಕಳ ರಕ್ಷಣೆಗಾಗಿ "ಭಾಗ್ಯಲಕ್ಷ್ಮಿ” ಎಂಬ ಹೊಸ ಯೋಜನೆಯನ್ನು ಜಾರಿಗೆ ತಂದದ್ದು ನನ್ನ ರಾಜಕೀಯ ಜೀವನದ ಒಂದು ಸಂತೃಪ್ತಿಯ ಮೈಲಿಗಲ್ಲು.
ಈ ಮಹತ್ವದ, ದೂರದೃಷ್ಟಿ ಯೋಜನೆಯ ಆರಂಭಿಕ ವರ್ಷದಲ್ಲಿ ನೋಂದಾಯಿಸಿದ್ದ ಸುಮಾರು 2.30 ಲಕ್ಷ ಫಲಾನುಭವಿಗಳು ಶೀಘ್ರದಲ್ಲಿ ಪರಿಪಕ್ವ ಮೊತ್ತ ಪಡೆಯಲಿರುವುದು ಅತ್ಯಂತ ಸಂತಸದ ಸಂಗತಿ.
ಲಕ್ಷಾಂತರ ಬಡ ಹೆಣ್ಣುಮಕ್ಕಳ ಜೀವನವನ್ನು ಬೆಳಗುವ ಈ ಸಾರ್ಥಕ ಯೋಜನೆಯನ್ನು ರಾಜ್ಯ ಸರ್ಕಾರ ಮುಂದುವರಿಸಿಕೊಂಡು ಹೋಗಲಿ, ಬಡ ಹೆಣ್ಣುಮಕ್ಕಳ ಆತ್ಮಸ್ಥೈರ್ಯವನ್ನು ಹೆಚ್ಚಿಸುವ ತನ್ನ ಕರ್ತವ್ಯ ನಿರ್ವಹಿಸಲಿ ಎಂದು ಈ ಸಂದರ್ಭದಲ್ಲಿ ಒತ್ತಾಯಿಸುತ್ತೇನೆ.
#bhagyalakshmi #betibachaobetipadhao -
B.S.Yediyurappa
@BSYBJP
ಈಶ ಪ್ರತಿಷ್ಠಾನದ ಪೂಜ್ಯ ಸದ್ಗುರು ಶ್ರೀ ಜಗ್ಗಿ ವಾಸುದೇವ್ ಅವರಿಗೆ ಜನ್ಮದಿನದ ಶುಭಾಶಯಗಳು. ಸಮಾಜಕ್ಕೆ ತಮ್ಮ ಸೇವೆ ಹಾಗೂ ಮಾರ್ಗದರ್ಶನ ನಿರಂತರವಾಗಿರಲಿ ಎಂದು ಪ್ರಾರ್ಥಿಸುತ್ತೇನೆ.
@SadhguruJV @ishafoundation -
B.S.Yediyurappa
@BSYBJP
ಸುತ್ತೂರು ಮಹಾಸಂಸ್ಥಾನದ ಪೀಠಾಧಿಪತಿಗಳಾದ ಪರಮಪೂಜ್ಯ ಶ್ರೀ ಶಿವರಾತ್ರಿ ದೇಶೀಕೇಂದ್ರ ಮಹಾಸ್ವಾಮಿಗಳ ಜನ್ಮದಿನದಂದು ಅವರ ಶ್ರೀಚರಣಗಳಲ್ಲಿ ಭಕ್ತಿಪೂರ್ವಕ ಪ್ರಣಾಮಗಳು.
-
B.S.Yediyurappa
@BSYBJP
ಧರ್ಮವನ್ನು ಮತ್ತೆ ಸ್ಥಾಪಿಸಲು ಅವತಾರ ತಾಳಿದ ಶ್ರೀಕೃಷ್ಣ ಎಲ್ಲ ಭಕ್ತರ ಮನೆ ಮನಗಳಲ್ಲಿ ನಿರಂತರ ನೆಲೆಸಲಿ, ಧರ್ಮವನ್ನು ಸದಾ ಸಂರಕ್ಷಿಸಲಿ. ಸಮಸ್ತ ಭಕ್ತಜನತೆಗೆ ಶ್ರೀಕೃಷ್ಣ ಜನ್ಮಾಷ್ಟಮಿಯ ಭಕ್ತಿಪೂರ್ವಕ ಶುಭಾಶಯಗಳು.
-
B.S.Yediyurappa
@BSYBJP
My respectful tributes to Padma Vibhushan Shri Arun Jaitley Ji on his Punya Thithi. His remarkable service to the nation, enduring legacy as a parliamentarian and dedication to the party will always be remembered.
-
B.S.Yediyurappa
@BSYBJP
ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಗಳ ಉತ್ತರಾರಾಧನಾ ಮಹೋತ್ಸವದ ಸಂದರ್ಭದಲ್ಲಿ ಇಂದು ಬೆಂಗಳೂರಿನ ಶೇಷಾದ್ರಿಪುರಂನಲ್ಲಿರುವ ಶ್ರೀ ರಾಘವೇಂದ್ರ ಮಠಕ್ಕೆ ತೆರಳಿ ಶ್ರೀ ರಾಯರ ಬೃಂದಾವನದ ದರ್ಶನ ಪಡೆದು, ಪೂಜೆ ಸಲ್ಲಿಸಲಾಯಿತು.
-
B.S.Yediyurappa
@BSYBJP
ಕಲಿಯುಗದ ಕಾಮಧೇನು, ಕಲ್ಪವೃಕ್ಷ ಎಂದೇ ಭಕ್ತರಿಂದ ಆರಾಧಿಸಲ್ಪಡುವ ಮಂತ್ರಾಲಯದ ಶ್ರೀ ರಾಘವೇಂದ್ರ ಗುರುಸಾರ್ವಭೌಮರ 353ನೇ ಆರಾಧನಾ ಮಹೋತ್ಸವದಂದು ಗುರುಗಳ ಶ್ರೀಚರಣಗಳಿಗೆ ಭಕ್ತಿಪೂರ್ವಕ ಪ್ರಣಾಮಗಳು.
-
B.S.Yediyurappa
@BSYBJP
ಎಲ್ಲ ಸಹೋದರ ಸಹೋದರಿಯರಿಗೆ ರಕ್ಷಾಬಂಧನದ ಹಾರ್ದಿಕ ಶುಭಾಶಯಗಳು. ಪರಸ್ಪರ ಪ್ರೀತಿ, ವಾತ್ಸಲ್ಯ, ಸುರಕ್ಷತೆಯ ಶ್ರೀರಕ್ಷೆ ದೇವರು ಎಲ್ಲರಿಗೂ ದಯಪಾಲಿಸಲಿ ಎಂದು ಹಾರೈಸುತ್ತೇನೆ.
#rakshabandhan -
B.S.Yediyurappa
@BSYBJP
ಅತ್ಯುತ್ತಮ ನಟನೆಗಾಗಿ ರಾಷ್ಟ್ರೀಯ ಪ್ರಶಸ್ತಿ ಪಡೆದ @shetty_rishab ಸೇರಿದಂತೆ ಅತ್ಯುತ್ತಮ ಮನೋರಂಜನಾ ಚಲನಚಿತ್ರ ಪ್ರಶಸ್ತಿ ಗೆದ್ದ ಕಾಂತಾರ ಚಿತ್ರತಂಡಕ್ಕೆ ಹಾಗೂ ನಾಡಿನ ಎಲ್ಲ ಪ್ರಶಸ್ತಿ ವಿಜೇತ ಸಾಧಕರಿಗೆ ಅಭಿನಂದನೆಗಳು.
-
B.S.Yediyurappa
@BSYBJP
ಅಪ್ರತಿಮ ನಾಯಕ, ಮುತ್ಸದ್ಧಿ ನೇತಾರ, ಮಾಜಿ ಪ್ರಧಾನಮಂತ್ರಿ ಭಾರತರತ್ನ ಶ್ರೀ ಅಟಲ್ ಬಿಹಾರಿ ವಾಜಪೇಯಿ ಅವರ ಪುಣ್ಯತಿಥಿಯಂದು ಆ ಮಹಾನ್ ಚೇತನಕ್ಕೆ ಆದರಪೂರ್ವಕ ಪ್ರಣಾಮಗಳು.
#atalbiharivajpayee #sadaiva_atal -
B.S.Yediyurappa
@BSYBJP
ದಾರ್ಶನಿಕ ಸಂತ ಶ್ರೀ ರಾಮಕೃಷ್ಣ ಪರಮಹಂಸರ ಪುಣ್ಯಸ್ಮರಣೆಯಂದು ಆ ಸಾಧಕ ಗುರುಗಳನ್ನು ಸ್ಮರಿಸುತ್ತಾ, ಸರ್ವಧರ್ಮಗಳ ಏಕತೆ ಮತ್ತು ಭಕ್ತಿ ಮಾರ್ಗವನ್ನು ಬೋಧಿಸಿದ ಅವರ ಚಿಂತನೆಗಳು ನಮ್ಮನ್ನು ಸದಾ ಪ್ರೇರೇಪಿಸುತ್ತಿರಲಿ ಎಂದು ಪ್ರಾರ್ಥಿಸುತ್ತೇನೆ.
-
B.S.Yediyurappa
@BSYBJP
ಸಮಸ್ತ ಭಕ್ತ ಜನತೆಗೆ ವರಮಹಾಲಕ್ಷ್ಮಿ ಹಬ್ಬದ ಶುಭಾಶಯಗಳು. ಜಗನ್ಮಾತೆಯ ಅನುಗ್ರಹ ಎಲ್ಲರ ಮೇಲೂ ಸದಾ ಇರಲಿ ಎಂದು ಪ್ರಾರ್ಥಿಸುತ್ತೇನೆ.
-
B.S.Yediyurappa
@BSYBJP
ಎಲ್ಲರಿಗೂ 78ನೇ ಸ್ವಾತಂತ್ರ್ಯ ದಿನಾಚರಣೆಯ ಹೆಮ್ಮೆಯ ಶುಭಾಶಯಗಳು.
#independencedayindia #harghartiranga -
B.S.Yediyurappa
@BSYBJP
Live:- ಮೈಸೂರು ಚಲೋ ಪಾದಯಾತ್ರೆಯ ಸಮಾರೋಪ ಸಮಾವೇಶ. #mysuruchalo #bjpjdspadayatre #scamsarkara #ಮೈಸೂರುಚಲೋ #ಪಾದಯಾತ್ರೆ x.com/i/broadcasts/1OyJAZXMqlzxb
-
B.S.Yediyurappa
@BSYBJP
ರಾಜ್ಯ ಕಾಂಗ್ರೆಸ್ ಸರ್ಕಾರದ ದುರಾಡಳಿತ, ಭ್ರಷ್ಟಾಚಾರ, ಜನವಿರೋಧಿ ಧೋರಣೆಗಳ ವಿರುದ್ಧ ಜನಾಕ್ರೋಶ, ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳು ಆಯೋಜಿಸಿರುವ 'ಮೈಸೂರು ಚಲೋ' ಪಾದಯಾತ್ರೆಯಲ್ಲಿ ಹೆಜ್ಜೆ ಹೆಜ್ಜೆಗೂ ಪ್ರತಿಧ್ವನಿಸುತ್ತಿದೆ. ಪಾದಯಾತ್ರೆಗೆ ನಿರೀಕ್ಷೆಗೂ ಮೀರಿದ ಸ್ಪಂದನೆ, ಜನಬೆಂಬಲ ವ್ಯಕ್ತವಾಗುತ್ತಿದ್ದು, ರಾಜ್ಯ ಸರ್ಕಾರ ಜನರಿಗೆ ಉತ್ತರದಾಯಿ ಎನ್ನುವುದನ್ನು ನೆನಪಿಸುವ ಎಚ್ಚರಿಕೆ ಗಂಟೆ ಎಲ್ಲೆಡೆ ಮೊಳಗುತ್ತಿದೆ.
ನಿನ್ನೆ ಹಾಗೂ ಇಂದು ರಾಮನಗರ ಹಾಗೂ ಚೆನ್ನಪಟ್ಟಣಗಳಲ್ಲಿ ಕೇಂದ್ರ ಸಚಿವ, ಜೆಡಿಎಸ್ ರಾಜ್ಯಾಧ್ಯಕ್ಷ ಶ್ರೀ @hd_kumaraswamy, ಬಿಜೆಪಿ ರಾಜ್ಯಾಧ್ಯಕ್ಷ ಶ್ರೀ @BYVijayendra, ವಿಪಕ್ಷ ನಾಯಕ ಶ್ರೀ @RAshokaBJP ಮತ್ತು ಇನ್ನಿತರ ನಾಯಕರು ಹಾಗೂ ಉಭಯ ಪಕ್ಷಗಳ ಸಾವಿರಾರು ಕಾರ್ಯಕರ್ತರೊಂದಿಗೆ, ಹಗರಣಗಳ ಸರಮಾಲೆಯಲ್ಲಿ ಮುಳುಗಿ ಹೋಗಿರುವ ಕಾಂಗ್ರೆಸ್ ಸರ್ಕಾರದ ವಿರುದ್ಧ ಈ ಹೋರಾಟದ ನಡಿಗೆಯಲ್ಲಿ ಪಾಲ್ಗೊಳ್ಳಲಾಯಿತು.
@BJP4Karnataka @JanataDal_S
#mysuruchalo #bjpjdspadayatre #ಮೈಸೂರುಚಲೋ #ಪಾದಯಾತ್ರೆ -
B.S.Yediyurappa
@BSYBJP
ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದ ಈ ಭ್ರಷ್ಟ, ಜನವಿರೋಧಿ ಕಾಂಗ್ರೆಸ್ ಸರ್ಕಾರದ ದುರಾಡಳಿತ, ಮುಡಾ ಭೂಹಗರಣ, ಪರಿಶಿಷ್ಟ ಪಂಗಡಗಳ ಕಲ್ಯಾಣಕ್ಕೆ ಮೀಸಲಾದ ಹಣದ ದುರ್ಬಳಕೆಗಳ ವಿರುದ್ಧ, ಜನಾಕ್ರೋಶದ ಪ್ರತಿಧ್ವನಿಯಾಗಿ ಬಿಜೆಪಿ ಜೆಡಿಎಸ್ ಪಕ್ಷಗಳು ಆಯೋಜಿಸಿರುವ "ಮೈಸೂರು ಚಲೋ" ಪಾದಯಾತ್ರೆಗೆ, ಸಹಸ್ರಾರು ಸಹಸ್ರಾರು ಕಾರ್ಯಕರ್ತರ ಜಯಘೋಷಗಳ ನಡುವೆ, ಕೇಂದ್ರ ಸಚಿವ, ಜೆಡಿಎಸ್ ರಾಜ್ಯಾಧ್ಯಕ್ಷ ಶ್ರೀ @hd_kumaraswamy, ಬಿಜೆಪಿ ರಾಜ್ಯಾಧ್ಯಕ್ಷ ಶ್ರೀ @BYVijayendra, ರಾಜ್ಯ ಉಸ್ತುವಾರಿ ಶ್ರೀ @AgrawalRMD ರವರೊಂದಿಗೆ ಇಂದು ಚಾಲನೆ ನೀಡಲಾಯಿತು.
ಕೇಂದ್ರ ಸಚಿವರುಗಳಾದ ಶ್ರೀ @JoshiPralhad, ಶ್ರೀ @VSOMANNA_BJP, ಕು. @ShobhaBJP, ವಿಪಕ್ಷ ನಾಯಕ ಶ್ರೀ @RAshokaBJP, ಮಾಜಿ ಮುಖ್ಯಮಂತ್ರಿ, ಹಾಲಿ ಸಂಸದರಾದ ಶ್ರೀ @BSBommai, ಮಾಜಿ ಮುಖ್ಯಮಂತ್ರಿ ಶ್ರೀ @DVSadanandGowda, ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷರಾದ ಶ್ರೀ ಜಿ.ಟಿ.ದೇವೇಗೌಡರು, ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಶ್ರೀ ಸಿ.ಬಿ.ಸುರೇಶ್ ಬಾಬು, ಯುವ ಜನತಾದಳ ರಾಜ್ಯಾಧ್ಯಕ್ಷ ಶ್ರೀ @Nikhil_Kumar_k, ಉಭಯ ಪಕ್ಷಗಳ ಹಿರಿಯ ನಾಯಕರುಗಳು, ಜನಪ್ರತಿನಿಧಿಗಳು, ಮುಖಂಡರು, ಅತಿ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಪಾಲ್ಗೊಂಡಿದ್ದರು.
#mysorechalo #bjpjdspadayatre -
B.S.Yediyurappa
@BSYBJP
ಬೆಂಗಳೂರಿನಲ್ಲಿ ಇಂದು ನಡೆದ ಬಿಜೆಪಿ-ಜೆಡಿಎಸ್ ಪಕ್ಷಗಳ ಪ್ರಮುಖರ ಸಭೆಯಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರ, ದುರಾಡಳಿತದ ವಿರುದ್ಧ ಜನರ ಆಕ್ರೋಶಕ್ಕೆ ಧ್ವನಿಯಾಗುವ ನಿಟ್ಟಿನಲ್ಲಿ ಮುಂದಿನ ಕಾರ್ಯತಂತ್ರಗಳ ಬಗ್ಗೆ ಚರ್ಚಿಸಲಾಯಿತು.
ಪಕ್ಷದ ರಾಜ್ಯಾಧ್ಯಕ್ಷ ಶ್ರೀ @BYVijayendra, ಕೇಂದ್ರ ಸಚಿವರು ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಶ್ರೀ @hd_kumaraswamy, ಕೇಂದ್ರ ಸಚಿವ ಶ್ರೀ @JoshiPralhad, ವಿರೋಧ ಪಕ್ಷ ನಾಯಕ ಶ್ರೀ @RAshokaBJP, ಮಾಜಿ ಮುಖ್ಯಮಂತ್ರಿ ಶ್ರೀ @DVSadanandGowda ಸೇರಿದಂತೆ ಉಭಯ ಪಕ್ಷಗಳ ನಾಯಕರು ಉಪಸ್ಥಿತರಿದ್ದರು.
@BJP4Karnataka @JanataDal_S -
B.S.Yediyurappa
@BSYBJP
ರಾಜ್ಯಕ್ಕೆ ಆಗಮಿಸಿರುವ ಕೇಂದ್ರ ವಿತ್ತ ಸಚಿವರಾದ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರನ್ನು ಇಂದು ಸ್ವಗೃಹದಲ್ಲಿ ಭೇಟಿ ಮಾಡಿ, ಮಾತುಕತೆ ನಡೆಸಲಾಯಿತು.
@nsitharaman -
B.S.Yediyurappa
@BSYBJP
ಮೇಘಾಲಯ ರಾಜ್ಯದ ನೂತನ ರಾಜ್ಯಪಾಲರಾಗಿ ನೇಮಕಗೊಂಡಿರುವ ಮಾಜಿ ಸಂಸದರಾದ ಶ್ರೀ ಸಿ.ಎಚ್.ವಿಜಯಶಂಕರ್ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು.
-
B.S.Yediyurappa
@BSYBJP
On this #kargilvijaydiwas, let's honour and express gratitude to our soldiers and their families for their selfless dedication and service to our nation.
-
B.S.Yediyurappa
@BSYBJP
ಹೆಮ್ಮೆಯ ಪ್ರಧಾನಿ ಶ್ರೀ @narendramodi ಅವರ ನೇತೃತ್ವದ NDA ಸರ್ಕಾರದ 3ನೇ ಅಧಿಕಾರಾವಧಿಯ ಮೊದಲ ಬಜೆಟ್ ಅನ್ನು ವಿತ್ತ ಸಚಿವೆ ಶ್ರೀಮತಿ @nsitharaman ಅವರು ಇಂದು ಮಂಡಿಸಿದ್ದು, ವಿಕಸಿತ ಭಾರತ ನಿರ್ಮಾಣಕ್ಕೆ ಸುಭದ್ರ ಅಡಿಪಾಯ ಕಲ್ಪಿಸುವ, ದೇಶದ ಸಮಗ್ರ ಹಾಗೂ ಸರ್ವಾಂಗೀಣ ಅಭಿವೃದ್ಧಿಯ ವೇಗಕ್ಕೆ ಮತ್ತಷ್ಟು ಶಕ್ತಿ ತುಂಬುವ ಬಜೆಟ್ ಇದಾಗಿದೆ.
ಮುಂದಿನ 5 ವರ್ಷಗಳ ರಾಷ್ಟ್ರದ ಪ್ರಗತಿಗೆ ಈ ಬಜೆಟ್ ದಿಕ್ಸೂಚಿಯಾಗಿದ್ದು, ಕೃಷಿ, ಉದ್ಯೋಗ, ಕೌಶಲ್ಯಾಭಿವೃದ್ಧಿ, ಸಾಮಾಜಿಕ ನ್ಯಾಯ, ಉತ್ಪಾದನೆ, ಸೇವಾ ವಲಯ, ಮೂಲಸೌಕರ್ಯಾಭಿವೃದ್ಧಿಗೆ ವಿಶೇಷ ಆದ್ಯತೆ ನೀಡಿದೆ. ಕೃಷಿ ವಲಯದ ಉತ್ಪಾದಕತೆ ಹೆಚ್ಚಳಕ್ಕೆ ಮತ್ತಷ್ಟು ಅನುಕೂಲ ಕಲ್ಪಿಸಲು 1.52 ಲಕ್ಷ ಕೋಟಿ ರೂ. ಮೀಸಲಿಡಲಾಗಿದೆ. ಹಾಗೆಯೇ, ವೇತನ ಪಡೆಯುವ ಉದ್ಯೋಗಿಗಳಿಗೆ ನೆರವಾಗಲು ಹೊಸ ತೆರಿಗೆ ಪದ್ಧತಿಯಲ್ಲಿ, ಆದಾಯ ತೆರಿಗೆಯಲ್ಲಿ 17,500 ರೂ.ಗಳವರೆಗೆ ಉಳಿತಾಯವಾಗುವಂತೆ ಸುಧಾರಣೆ ತರಲಾಗಿದೆ. ದೇಶದ ಪ್ರತಿಯೊಬ್ಬ ನಾಗರಿಕನನ್ನು ಸಬಲೀಕರಣಗೊಳಿಸುವ ಮತ್ತು ಸಮೃದ್ಧ, ಸಶಕ್ತ ರಾಷ್ಟ್ರ ನಿರ್ಮಾಣದ ನಿಟ್ಟಿನಲ್ಲಿ ಸರ್ವಸ್ಪರ್ಶಿ, ಅಭಿವೃದ್ಧಿ ಪೂರಕ ಬಜೆಟ್ ಅನ್ನು ಮಾನ್ಯ ವಿತ್ತ ಸಚಿವರು ಮಂಡಿಸಿದ್ದಾರೆ.
#budgetforviksitbharat -
B.S.Yediyurappa
@BSYBJP
ವಿಧಾನ ಪರಿಷತ್ತಿನಲ್ಲಿ ವಿರೋಧ ಪಕ್ಷದ ನಾಯಕರಾಗಿ ನೇಮಕಗೊಂಡಿರುವ ನಮ್ಮ ಪಕ್ಷದ ನಾಯಕ, ನಮ್ಮ ಪರಿಶಿಷ್ಟ ಜಾತಿ ಬಂಧುಗಳ ಗಟ್ಟಿ ಧ್ವನಿಯಾಗಿ ಕಾರ್ಯನಿರ್ವಹಿಸುತ್ತಿರುವ ಶ್ರೀ ಛಲವಾದಿ ನಾರಾಯಣಸ್ವಾಮಿ ಅವರಿಗೆ ಹೃದಯಪೂರ್ವಕ ಅಭಿನಂದನೆಗಳು.
@NswamyChalavadi @BJP4Karnataka -
B.S.Yediyurappa
@BSYBJP
ಖ್ಯಾತ ವೈದ್ಯರು, ಪಕ್ಷದ ಹಿರಿಯ ಮುಖಂಡರು, ಯಾದಗಿರಿಯ ಮಾಜಿ ಶಾಸಕರೂ ಆಗಿದ್ದ ಡಾ.ವೀರಬಸವಂತ ರೆಡ್ಡಿ ಮುದ್ನಾಳ ಅವರು ವಿಧಿವಶರಾದ ಸುದ್ದಿ ತಿಳಿದು ಅತೀವ ದುಃಖವಾಗಿದೆ. ಜಿಲ್ಲೆಯಲ್ಲಿ ಪಕ್ಷ ಸಂಘಟನೆಗೆ ಅಪಾರ ಕೊಡುಗೆ ನೀಡಿದ್ದ ಅವರು ಅಜಾತಶತೃ ಎಂದೇ ಖ್ಯಾತರಾಗಿದ್ದರು. ಅವರ ಆತ್ಮಕ್ಕೆ ಚಿರಶಾಂತಿ ಕೋರುತ್ತಾ, ಅವರ ಕುಟುಂಬ ಹಾಗೂ ಅಭಿಮಾನಿಗಳಿಗೆ ಹಿರಿಯರ ಅಗಲಿಕೆಯ ನೋವನ್ನು ಭರಿಸುವ ಶಕ್ತಿ ದೇವರು ನೀಡಲಿ ಎಂದು ಪ್ರಾರ್ಥಿಸುತ್ತೇನೆ. ಓಂ ಶಾಂತಿ
-
B.S.Yediyurappa
@BSYBJP
ಶ್ರೀಮಠದ ಧರ್ಮ ಪ್ರಸಾರ, ತ್ರಿವಿಧ ದಾಸೋಹ, ಸಮಾಜ ಸೇವಾಕಾರ್ಯಗಳನ್ನು ಯಶಸ್ವಿಯಾಗಿ ಮನ್ನಡೆಸಿಕೊಂಡು ಹೋಗುತ್ತಿರುವ ಶ್ರೀ ಸಿದ್ದಗಂಗಾ ಮಠದ ಪೀಠಾಧ್ಯಕ್ಷರಾದ ಪರಮಪೂಜ್ಯ ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳಿಗೆ ಜನ್ಮದಿನದ ಭಕ್ತಿಪೂರ್ವಕ ಶುಭಾಶಯಗಳು. ಅವರ ಮಾರ್ಗದರ್ಶನ ಮತ್ತು ಆಶೀರ್ವಾದಗಳು ಭಕ್ತರ ಮೇಲೆ ಸದಾ ಇರಲಿ ಎಂದು ಪ್ರಾರ್ಥಿಸುತ್ತೇನೆ.
-
B.S.Yediyurappa
@BSYBJP
ಗುರುವಚನವಲ್ಲದೆ ಲಿಂಗವೆನಿಸದು
ಗುರುವಚನವಲ್ಲದೆ ನಿತ್ಯವೆಂದೆನಿಸದು
ಗುರುವಚನವಲ್ಲದೆ ನೇಮವೆಂದೆನಿಸದು
ತಲೆಯಿಲ್ಲದ ಅಟ್ಟಗೆ ಪಟ್ಟವ ಕಟ್ಟುವ ಉಭಯ ಭೃಷ್ಟರ
ಮೆಚ್ಚುವನೆ ನಮ್ಮ ಕೂಡಲ ಸಂಗಮದೇವ I
ನಾಡಿನ ಸಮಸ್ತ ಜನತೆಗೆ ಗುರುಪೂರ್ಣಿಮೆಯ ಶುಭಾಶಯಗಳು.
#gurupurnima -
B.S.Yediyurappa
@BSYBJP
ಅನ್ನದಾಸೋಹ, ಜ್ಞಾನದಾನ ಸೇರಿದಂತೆ ಹಲವಾರು ಸೇವಾಕಾರ್ಯಗಳು, ಧರ್ಮ, ಸಂಸ್ಕೃತಿಗಳ ಸಂರಕ್ಷಣೆಯ ಜೊತೆಗೆ ಆದರ್ಶಪ್ರಾಯವಾಗಿ ಸಮಾಜಕ್ಕೆ ಮಾರ್ಗದರ್ಶನ ನೀಡುತ್ತಿರುವ ಶ್ರೀ ಆದಿಚುಂಚನಗುರಿ ಮಠದ ಪೀಠಾಧ್ಯಕ್ಷರಾದ ಪರಮಪೂಜ್ಯ ಶ್ರೀ ಡಾ. ನಿರ್ಮಲಾನಂದನಾಥ ಮಹಾಸ್ವಾಮಿಗಳ ಜನ್ಮದಿನದಂದು ಅವರಿಗೆ ಭಕ್ತಿಪೂರ್ವಕ ಪ್ರಣಾಮಗಳು.
-
B.S.Yediyurappa
@BSYBJP
ಶ್ರೀ ಶಿವಶರಣ ಮಾದಾರ ಚನ್ನಯ್ಯ ಗುರು ಪೀಠದ ಪೀಠಾಧಿಪತಿಗಳಾದ ಪರಮಪೂಜ್ಯ ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿಗಳ ಜನ್ಮದಿನದಂದು ಅವರಿಗೆ ಭಕ್ತಿಪೂರ್ವಕ ಪ್ರಣಾಮಗಳು.
-
B.S.Yediyurappa
@BSYBJP
ಇನ್ನು ಮುಂದೆ ಪ್ರತಿ ವರ್ಷ ಜೂನ್ 25ರಂದು 'ಸಂವಿಧಾನ ಹತ್ಯಾ ದಿವಸ್' ಆಚರಿಸಲು ಕೇಂದ್ರ ಸರ್ಕಾರ ತೀರ್ಮಾನಿಸಿರುವುದು ಸಮುಚಿತ ಮತ್ತು ಸ್ವಾಗತಾರ್ಹ ನಿರ್ಧಾರವಾಗಿದೆ.
ಆ ಮೂಲಕ ಸ್ವತಂತ್ರ ಭಾರತದ ಇತಿಹಾಸದ ಅತ್ಯಂತ ಕರಾಳ ಅಧ್ಯಾಯ ಎನಿಸಿರುವ 1975ರ ತುರ್ತು ಪರಿಸ್ಥಿತಿ ಘೋಷಣೆ, ಅಂದಿನ ಪ್ರಧಾನಿ ಇಂದಿರಾ ಗಾಂಧಿಯವರ ಸರ್ವಾಧಿಕಾರಿ ಧೋರಣೆ, ನಮ್ಮ ಪ್ರಜಾಪ್ರಭುತ್ವದ ಮೇಲೆ ನಡೆದ ಕಠೋರ ಪ್ರಹಾರ, ಲಕ್ಷಾಂತರ ಅಮಾಯಕ ಜನರನ್ನು ಜೈಲಿಗಟ್ಟಿ ನಡೆಸಲಾದ ದೌರ್ಜನ್ಯಗಳ ಐತಿಹಾಸಿಕ ಪ್ರಮಾದದ ಎಚ್ಚರಿಕೆ ಗಂಟೆಯಾಗಿ ಆ ದಿನವನ್ನು ಆಚರಿಸಲಾಗುವುದು.
ಜನರ ಸಾಂವಿಧಾನಿಕ ಹಕ್ಕುಗಳಿಗೆ ಚ್ಯುತಿ ತಂದಿದ್ದಲ್ಲದೇ, ಮಾಧ್ಯಮಗಳ ಕತ್ತು ಹಿಸುಕಿ, ಸ್ವಾತಂತ್ರ್ಯವನ್ನೇ ಕಿತ್ತುಕೊಂಡ ಪ್ರಭುತ್ವದ ವಿರುದ್ಧ ಹೋರಾಡಿದವರ ತ್ಯಾಗ, ಬಲಿದಾನಗಳ ಸಂಸ್ಮರಣೆ ಕೂಡ ಮುಂದಿನ ಪೀಳಿಗೆಯ ಕರ್ತವ್ಯವಾಗಿದೆ. ಕಾಂಗ್ರೆಸ್ ಪಕ್ಷ ಈಗ ಯಾವುದೇ ಮುಖವಾಡ ಧರಿಸಲಿ, ತನ್ನ ಘೋರ ಪ್ರಮಾದವನ್ನು ಜನಮಾನಸದಿಂದ ಅಳಿಸಲಾಗದು.
#samvidhaanhatyadiwas
Amit Shah
@AmitShah
On June 25, 1975, the then PM Indira Gandhi, in a brazen display of a dictatorial mindset, strangled the soul of our democracy by imposing the Emergency on the nation. Lakhs of people were thrown behind bars for no fault of their own, and the voice of the media was silenced.
The Government of India has decided to observe the 25th of June every year as 'Samvidhaan Hatya Diwas.' This day will commemorate the massive contributions of all those who endured the inhuman pains of the 1975 Emergency.
#samvidhaanhatyadiwas -
B.S.Yediyurappa
@BSYBJP
ಖ್ಯಾತ ನಿರೂಪಕಿ, ಕಲಾವಿದೆ ಶ್ರೀಮತಿ ಅಪರ್ಣಾ ಅವರು ಅನಾರೋಗ್ಯದಿಂದಾಗಿ ಅಕಾಲಿಕ ನಿಧನ ಹೊಂದಿದ ಸುದ್ದಿ ಅತೀವ ಆಘಾತ ತಂದಿದೆ. ತಮ್ಮ ಸಹಜ ಕಲಾವಂತಿಕೆ, ವಿಶಿಷ್ಟ ನಿರೂಪಣೆಗಳಿಂದಾಗಿ ಜನಪ್ರಿಯತೆ ಗಳಿಸಿದ್ದ ಅಪರ್ಣಾ ಅವರ ಅಗಲಿಕೆಯಿಂದ ಕನ್ನಡ ಕಲಾ ಲೋಕ ಒಬ್ಬ ಪ್ರತಿಭಾನ್ವಿತ ಕಲಾವಿದೆಯನ್ನು ಕಳೆದುಕೊಂಡಿದೆ. ದೇವರು ಅವರ ಆತ್ಮಕ್ಕೆ ಸದ್ಗತಿ ಕರುಣಿಸಲಿ, ಅವರ ಕುಟುಂಬ, ಅಭಿಮಾನಿಗಳಿಗೆ ನೋವನ್ನು ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ.
-
B.S.Yediyurappa
@BSYBJP
Warm birthday wishes to Hon'ble Union Defence Minister Shri Rajnath Singh Ji. May you be blessed with a long and healthy life.
@rajnathsingh -
B.S.Yediyurappa
@BSYBJP
ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಹಿರಿಯ ಪತ್ರಕರ್ತ, ಸಂಪಾದಕರಾದ ಶ್ರೀ ವಿಶ್ವೇಶ್ವರ ಭಟ್ ಅವರನ್ನು ಇಂದು ಭೇಟಿ ಮಾಡಿ, ಶೀಘ್ರದಲ್ಲಿ ಪೂರ್ಣ ಗುಣಮುಖರಾಗಿ ಎಂದಿನಂತೆ ಕಾರ್ಯಪ್ರವೃತ್ತರಾಗಲಿ ಎಂದು ಹಾರೈಸಲಾಯಿತು.
@VishweshwarBhat -
B.S.Yediyurappa
@BSYBJP
ಆದರ್ಶ ರಾಜಕಾರಣಿ, ಜನಾನುರಾಗಿ ನಾಯಕ, ನನ್ನ ಆತ್ಮೀಯ ಮಿತ್ರ ದಿವಂಗತ ಡಾII ವಿ.ಎಸ್.ಆಚಾರ್ಯ ಅವರ ಜನ್ಮದಿನದಂದು ಆ ಹಿರಿಯ ಚೇತನಕ್ಕೆ ಶ್ರದ್ಧಾಪೂರ್ವಕ ಪ್ರಣಾಮಗಳು.
-
B.S.Yediyurappa
@BSYBJP
ಭಾರತದ ಏಕತೆ ಮತ್ತು ವಿಕಾಸಕ್ಕಾಗಿ ನಿರಂತರ ಶ್ರಮಿಸಿದ ದಾರ್ಶನಿಕ ನಾಯಕ, ಭಾರತೀಯ ಜನಸಂಘದ ಸಂಸ್ಥಾಪಕರಾದ ಡಾ. ಶ್ಯಾಮಾಪ್ರಸಾದ್ ಮುಖರ್ಜಿಯವರ ಜಯಂತಿಯಂದು ಆ ಮಹಾನ್ ಚೇತನಕ್ಕೆ ಅನಂತ ಪ್ರಣಾಮಗಳು.
#drsyamaprasadmookerjee -
B.S.Yediyurappa
@BSYBJP
ಸಂಘದ ಹಿರಿಯರು, ಸಂಸ್ಕೃತ ಭಾರತಿಯ ಅಖಿಲ ಭಾರತ ಮಹಾಮಂತ್ರಿ ಶ್ರೀ ಸತ್ಯನಾರಾಯಣರವರ ಮಾತೃಶ್ರೀರವರಾದ ಶ್ರೀಮತಿ ಮಂದಾಕಿನಿಯವರು ಇಂದು ದೈವಾಧೀನರಾದ ಸುದ್ದಿ ಅತ್ಯಂತ ದುಃಖ ತಂದಿದೆ. ಅಗಲಿದ ಆ ಹಿರಿಯ ಚೇತನಕ್ಕೆ ದೇವರು ಸದ್ಗತಿ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ, ಶೋಕತಪ್ತ ಕುಟುಂಬದವರಲ್ಲಿ ನನ್ನ ಸಂತಾಪಗಳು. ಓಂ ಶಾಂತಿ
-
B.S.Yediyurappa
@BSYBJP
ಸಂಘಟನೆ ಬಲವರ್ಧನೆ ನಿಟ್ಟಿನಲ್ಲಿ ಬೆಂಗಳೂರಿನಲ್ಲಿ ನಡೆಯುತ್ತಿರುವ ಪಕ್ಷದ ರಾಜ್ಯ ಕಾರ್ಯಕಾರಿಣಿ ವಿಶೇಷ ಸಭೆಯಲ್ಲಿ ಇಂದು ಪಾಲ್ಗೊಳ್ಳಲಾಯಿತು. ರಾಜ್ಯಾಧ್ಯಕ್ಷ ಶ್ರೀ @BYVijayendra, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಶ್ರೀ @AgrawalRMD, ವಿರೋಧ ಪಕ್ಷದ ನಾಯಕ ಶ್ರೀ @RAshokaBJP, ಪಕ್ಷದ ಹಿರಿಯ ನಾಯಕರುಗಳು, ಕೇಂದ್ರ ಸಚಿವರು, ಸಂಸದರು, ಶಾಸಕರು, ಪದಾಧಿಕಾರಿಗಳು, ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.
@BJP4Karnataka -
B.S.Yediyurappa
@BSYBJP
ಹಿರಿಯ ಕಾಂಗ್ರೆಸ್ ಧುರೀಣ, ಮಾಜಿ ಮುಖ್ಯಮಂತ್ರಿ, ಮಾಜಿ ಕೇಂದ್ರ ಸಚಿವ ಶ್ರೀ ಎಂ.ವೀರಪ್ಪ ಮೊಯ್ಲಿ ಅವರ ಪುತ್ರಿ ಹಂಸಾ ಮೊಯ್ಲಿ ಅವರು ಅಕಾಲಿಕವಾಗಿ ವಿಧಿವಶರಾದ ಸುದ್ದಿ ಅತೀವ ದುಃಖವನ್ನು ಉಂಟುಮಾಡಿದೆ. ಸಮಾಜ ಸೇವಕಿ, ಭರತನಾಟ್ಯ ಕಲಾವಿದೆಯಾಗಿದ್ದ ಆಕೆಯ ಅಗಲಿಕೆ, ಹೆತ್ತವರಿಗೆ, ಕುಟುಂಬ ಸದಸ್ಯರಿಗೆ ಅದೆಷ್ಟು ನೋವನ್ನು ತಂದಿದೆ ಎನ್ನುವುದನ್ನು ಊಹಿಸಲು ಸಾಧ್ಯವಿಲ್ಲ. ದೇವರು ಅಗಲಿದ ಚೇತನಕ್ಕೆ ಸದ್ಗತಿ ನೀಡಲಿ, ಕುಟುಂಬ ಸದಸ್ಯರಿಗೆ ಈ ದುಃಖವನ್ನು ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ. ಓಂ ಶಾಂತಿ.
@moilyv -
B.S.Yediyurappa
@BSYBJP
India won the #t20worldcup. Congratulations to #teamindia for the incredible win!
#cricketchampions #worldcup2024 -
B.S.Yediyurappa
@BSYBJP
ಹಾವೇರಿ ಬಳಿ ಇಂದು ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಶಿವಮೊಗ್ಗ ಜಿಲ್ಲೆಯ ಭದ್ರಾವತಿ ಮೂಲದ ಒಂದೇ ಕುಟುಂಬದ 13 ಮಂದಿ ಮೃತಪಟ್ಟ ಸುದ್ದಿ ಅತ್ಯಂತ ನೋವನ್ನುಂಟು ಮಾಡಿದೆ. ಗಾಯಗೊಂಡವರು ಪೂರ್ಣವಾಗಿ ಗುಣಮುಖರಾಗಲಿ, ಮೃತರ ಆತ್ಮಕ್ಕೆ ಶಾಂತಿ ಪ್ರಾರ್ಥಿಸುತ್ತಾ, ದುಃಖತಪ್ತ ಬಂಧು ವರ್ಗದವರಲ್ಲಿ ನನ್ನ ಸಂತಾಪಗಳನ್ನು ವ್ಯಕ್ತಪಡಿಸುತ್ತೇನೆ.
-
B.S.Yediyurappa
@BSYBJP
ಎಲ್ಲರಿಗೂ ನಾಡಪ್ರಭು ಕೆಂಪೇಗೌಡ ಜಯಂತಿಯ ಶುಭಾಶಯಗಳು. ದೂರದೃಷ್ಟಿಯ ಉತ್ತಮ ಆಡಳಿತದೊಂದಿಗೆ, ಭವಿಷ್ಯದ ಪೀಳಿಗೆಗಾಗಿ ಭದ್ರ ಬುನಾದಿ ಕಟ್ಟಿದ ಆದರ್ಶ ರಾಜ ಕೆಂಪೇಗೌಡರನ್ನು ನಾಡು ಎಂದೂ ಮರೆಯುವುದಿಲ್ಲ.
-
B.S.Yediyurappa
@BSYBJP
ಐವತ್ತು ವರ್ಷಗಳ ಹಿಂದೆ, 25 ಜೂನ್ 1975ರಂದು ಅಂದಿನ ಪ್ರಧಾನಿ ಶ್ರೀಮತಿ ಇಂದಿರಾ ಗಾಂಧಿಯವರು ಹೇರಿದ ತುರ್ತು ಪರಿಸ್ಥಿತಿ, ಭಾರತದ ಪ್ರಜಾಪ್ರಭುತ್ವದ ಅತ್ಯಂತ ಕರಾಳ ಅವಧಿ ಎನಿಸಿದೆ. ರಾಜಕೀಯ ಸ್ವಾರ್ಥಕ್ಕಾಗಿ, ನಮ್ಮ ಪವಿತ್ರ ಸಂವಿಧಾನವನ್ನು ಉಲ್ಲಂಘಿಸಿದ, ಕೋಟ್ಯಂತರ ಜನರ ಮೂಲಭೂತ ಹಕ್ಕನ್ನು, ಮಾಧ್ಯಮಗಳ ವಾಕ್ ಸ್ವಾತಂತ್ರ್ಯವನ್ನು ಕಸಿದುಕೊಂಡ ಕಾಂಗ್ರೆಸ್ ಪಕ್ಷ ಅಳಿಸಲಾಗದ ಪ್ರಮಾದ ಎಸಗಿತು. ದೇಶ ಇದನ್ನು ಎಂದಿಗೂ ಮರೆಯುವುದಿಲ್ಲ, ಕ್ಷಮಿಸುವುದಿಲ್ಲ.
#darkdaysofemergency -
B.S.Yediyurappa
@BSYBJP
ಭಾರತೀಯ ಜನಸಂಘದ ಸಂಸ್ಥಾಪಕ ಡಾ.ಶ್ಯಾಮಪ್ರಸಾದ್ ಮುಖರ್ಜಿಯವರ ಪುಣ್ಯತಿಥಿ, ಜನಸಂಘದ ಸ್ಥಾಪಕ ಸದಸ್ಯ ದಿವಂಗತ ಶ್ರೀ ಜಗನ್ನಾಥರಾವ್ ಜೋಶಿ ಅವರ ಜಯಂತಿಯ ದಿನವಾದ ಇಂದು ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದಲ್ಲಿ ಪಕ್ಷದ ಕಚೇರಿಯನ್ನು ಉದ್ಘಾಟಿಸಲಾಯಿತು.
@BJP4Karnataka -
B.S.Yediyurappa
@BSYBJP
ಬೆಂಗಳೂರಿನಲ್ಲಿ ಇಂದು ನಡೆದ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳ ನೂತನ ಕೇಂದ್ರ ಸಚಿವರು ಹಾಗೂ ಸಂಸದರ ಅಭಿನಂದನಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಾಯಿತು.
ರಾಜ್ಯಾಧ್ಯಕ್ಷ ಶ್ರೀ @BYVijayendra, ಕೇಂದ್ರ ಸಚಿವರುಗಳಾದ ಶ್ರೀ @hd_kumaraswamy, ಶ್ರೀ @JoshiPralhad, ಕು. @ShobhaBJP, ಶ್ರೀ @VSOMANNA_BJP, ಮಾಜಿ ಮುಖ್ಯಮಂತ್ರಿಗಳಾದ ಶ್ರೀ @DVSadanandGowda, ಪಕ್ಷದಿಂದ ಆಯ್ಕೆಯಾದ ಎಲ್ಲ ಸಂಸದರು, ಪ್ರಮುಖರು, ಪದಾಧಿಕಾರಿಗಳು, ಜೆಡಿಎಸ್ ಪಕ್ಷದ ಹಿರಿಯ ನಾಯಕರು, ಸಾವಿರಾರು ಸಂಖ್ಯೆಯಲ್ಲಿ ನೆರೆದಿದ್ದ ಎರಡೂ ಪಕ್ಷಗಳ ಕಾರ್ಯಕರ್ತರು ಉಪಸ್ಥಿತರಿದ್ದರು.
@BJP4Karnataka @JanataDal_S -
B.S.Yediyurappa
@BSYBJP
ಖ್ಯಾತ ಸಾಹಿತಿ ಡಾ.ಕಮಲಾ ಹಂಪನಾ ನಿಧನರಾದ ಸುದ್ದಿ ಅತೀವ ದುಃಖವನ್ನುಂಟು ಮಾಡಿದೆ. ನಾಡಿನ ಅಗ್ರಗಣ್ಯ ಮಹಿಳಾ ಸಾಹಿತಿ ಎನಿಸಿದ್ದ ನಾಡೋಜ ಕಮಲ ಹಂಪನಾ ಅವರ ಅಗಲಿಕೆಯಿಂದ ಕನ್ನಡ ಸಾರಸ್ವತ ಲೋಕ ಹಿರಿಯ ಲೇಖಕಿಯನ್ನು ಕಳೆದುಕೊಂಡಿದೆ. ಅವರ ಆತ್ಮಕ್ಕೆ ಸದ್ಗತಿ ಪ್ರಾರ್ಥಿಸುತ್ತೇನೆ, ಅವರ ಕುಟುಂಬದವರು, ಅಭಿಮಾನಿಗಳಲ್ಲಿ ಸಂತಾಪ ವ್ಯಕ್ತಪಡಿಸುತ್ತೇನೆ.
-
B.S.Yediyurappa
@BSYBJP
ಎಲ್ಲರಿಗೂ 10ನೇ ಅಂತಾರಾಷ್ಟ್ರೀಯ ಯೋಗ ದಿನದ ಶುಭಾಶಯಗಳು. ಒತ್ತಡದ ಬದುಕಿನಲ್ಲಿ ಯೋಗ ಆರೋಗ್ಯದ ಜೊತೆಗೆ ಭರವಸೆ, ಶಕ್ತಿ ಮತ್ತು ಆತ್ಮಸ್ಥೈರ್ಯವನ್ನು ನೀಡುತ್ತದೆ. ಪ್ರಾಚೀನ ಭಾರತೀಯರು ಮಾನವಕುಲಕ್ಕೆ ನೀಡಿರುವ ಅತ್ಯಮೂಲ್ಯ ಕೊಡುಗೆಗಳಲ್ಲಿ ಯೋಗವೂ ಒಂದಾಗಿದ್ದು, ಸಾರ್ಥಕ ಬದುಕಿಗೆ ಆಧಾರವಾಗಿದೆ.
#internationalyogaday -
B.S.Yediyurappa
@BSYBJP
ಮಾಜಿ ವಿಧಾನಪರಿಷತ್ ಸದಸ್ಯರು, ಸಂಘದ ನಿಷ್ಠಾವಂತ ಸ್ವಯಂಸೇವಕರು, ಪಕ್ಷದ ಉಪಾಧ್ಯಕ್ಷರೂ ಆಗಿ ಪಕ್ಷ ಸಂಘಟನೆಗಾಗಿ ನಿರಂತರ ಶ್ರಮಿಸಿದ್ದ ಸರಳ, ಸಜ್ಜನ, ಆತ್ಮೀಯರೂ ಆದ ಶ್ರೀ ಎಂ.ಬಿ.ಭಾನುಪ್ರಕಾಶ್ ಹಠಾತ್ ನಿಧನ ಹೊಂದಿದ ಸುದ್ದಿ ಅತೀವ ಆಘಾತವನ್ನು ತಂದಿದೆ. ತಮ್ಮ ಕೊನೆ ಉಸಿರಿರುವವರೆಗೂ ಪಕ್ಷಕ್ಕಾಗಿ ದುಡಿದ ಅವರ ಪರಿಶ್ರಮ, ಬದ್ಧತೆ ನಿಜಕ್ಕೂ ಸ್ತುತ್ಯರ್ಹ. ಅಂತಹ ನಿಷ್ಠಾವಂತ ಹಿರಿಯ ಮುಖಂಡರ ಅಗಲಿಕೆ ಪಕ್ಷಕ್ಕೆ ತುಂಬಲಾರದ ನಷ್ಟವನ್ನುಂಟು ಮಾಡಿದೆ. ಅಗಲಿದ ಆ ಹಿರಿಯ ಚೇತನಕ್ಕೆ ಭಗವಂತ ಸದ್ಗತಿಯನ್ನು ನೀಡಲಿ, ಅವರ ಕುಟುಂಬದವರಿಗೆ, ಆಪ್ತೇಷ್ಟರಿಗೆ ಮತ್ತು ಅಭಿಮಾನಿಗಳಿಗೆ ನೋವನ್ನು ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ. ಓಂ ಶಾಂತಿ
-
B.S.Yediyurappa
@BSYBJP
ಹಿರಿಯರು, ಜನಪ್ರಿಯ ಶಾಸಕರು ಮತ್ತು ಆತ್ಮೀಯರೂ ಆಗಿರುವ ಶ್ರೀ ಶಾಮನೂರು ಶಿವಶಂಕರಪ್ಪನವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. ದೇವರ ಅನುಗ್ರಹ ಸದಾ ಇರಲಿ ಎಂದು ಹಾರೈಸುತ್ತೇನೆ.
-
B.S.Yediyurappa
@BSYBJP
ಸಮಾಜನಿಷ್ಠ ಸಾಧಕ ಸಂತರು, ನಾಡಿನ ಆಧ್ಯಾತ್ಮಿಕ ರಾಯಭಾರಿಗಳು, ಸಿರಿಗೆರೆ ಬೃಹನ್ಮಠದ ತರಳುಬಾಳು ಜಗದ್ಗುರು ಪರಮಪೂಜ್ಯ ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿಗಳ ಜನ್ಮದಿನದಂದು ಶ್ರೀಚರಣರಿಗೆ ಭಕ್ತಿಪೂರ್ವಕ ಪ್ರಣಾಮಗಳು. ತಮ್ಮ ಆಶೀರ್ವಾದ, ಮಾರ್ಗದರ್ಶನಗಳು ಸಮಾಜದ ಮೇಲೆ ನಿರಂತರವಾಗಿರಲಿ ಎಂದು ಪ್ರಾರ್ಥಿಸುತ್ತೇನೆ.
-
B.S.Yediyurappa
@BSYBJP
ಆದರಣೀಯ ಪ್ರಧಾನಮಂತ್ರಿ ಶ್ರೀ @narendramodi ರವರ ನೇತೃತ್ವದ ಎನ್.ಡಿ.ಎ ಸರ್ಕಾರದ ನೂತನ ಸಚಿವ ಸಂಪುಟದ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸಿರುವ ಎಲ್ಲ ಸಂಸದರಿಗೂ ಅಭಿನಂದನೆಗಳು. ವಿಶೇಷವಾಗಿ, ಸಚಿವರಾಗಿ ಇಂದು ಪ್ರಮಾಣ ವಚನ ಸ್ವೀಕರಿಸಿದ ನಮ್ಮ ರಾಜ್ಯದವರಾದ ಶ್ರೀಮತಿ @nsitharaman, ಶ್ರೀ @JoshiPralhad, ಶ್ರೀ @hd_kumaraswamy, ಕು. @ShobhaBJP, ಮತ್ತು ಶ್ರೀ @VSOMANNA_BJP ಅವರಿಗೆ ಅಭಿನಂದನಾಪೂರ್ವಕ ಶುಭಹಾರೈಕೆಗಳು.
@BJP4Karnataka @JanataDal_S -
B.S.Yediyurappa
@BSYBJP
Hearty Congratulations to PM Shri @narendramodi Ji on taking oath as Prime Minister of India for a historic 3rd consecutive time.
#viksitbharat @PMOIndia
Narendra Modi
@narendramodi
Honoured to serve Bharat. Watch the oath-taking ceremony. x.com/i/broadcasts/1YpJkwgROzyJj
-
B.S.Yediyurappa reposted
Narendra Modi
@narendramodi
Addressing the NDA Parliamentary Party meeting.
x.com/i/broadcasts/1ypJdkEvNOjGW -
B.S.Yediyurappa
@BSYBJP
ಮೈಸೂರು ಜಿಲ್ಲೆಯ ಪಕ್ಷದ ಮುಖಂಡ, ಹಲವು ವರ್ಷಗಳ ಕಾಲ ನನ್ನ ಆಪ್ತ ಸಹಾಯಕರಾಗಿದ್ದ, ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿಯುೂ ಸೇವೆ ಸಲ್ಲಿಸಿದ್ದ ಶ್ರೀ ಕಾಪು ಸಿದ್ಧಲಿಂಗಸ್ವಾಮಿ ನಿಧನರಾದ ಸುದ್ದಿ ತಿಳಿದು ಅತೀವ ದುಃಖವಾಗಿದೆ. ದೇವರು ಅವರ ಆತ್ಮಕ್ಕೆ ಸದ್ಗತಿ ಕರುಣಿಸಲಿ, ಅವರ ಕುಟುಂಬದ ಸದಸ್ಯರಿಗೆ ನೋವನ್ನು ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ.
-
B.S.Yediyurappa
@BSYBJP
ಜೆಡಿಎಸ್ ಪಕ್ಷದ ವಿಜೇತ ಅಭ್ಯರ್ಥಿ ಶ್ರೀ ಎಂ.ಮಲ್ಲೇಶ್ ಬಾಬು ಮತ್ತು ಬೆಂಗಳೂರು ದಕ್ಷಿಣ ಕ್ಷೇತ್ರದ ವಿಜೇತ ಬಿಜೆಪಿ ಅಭ್ಯರ್ಥಿ ಶ್ರೀ ತೇಜಸ್ವಿ ಸೂರ್ಯ ರವರು ನನ್ನ ಸ್ವಗೃಹಕ್ಕೆ ಆಗಮಿಸಿದ ಸಂದರ್ಭದಲ್ಲಿ, ಅಭಿನಂದಿಸಿ, ಶುಭ ಹಾರೈಸಲಾಯಿತು.
@BJP4Karnataka @JanataDal_S @Tejasvi_Surya -
B.S.Yediyurappa
@BSYBJP
ನನ್ನನ್ನು ಭೇಟಿ ಮಾಡಲು ಸ್ವಗೃಹಕ್ಕೆ ಆಗಮಿಸಿದ ಪಕ್ಷದ ವಿಜೇತ ಅಭ್ಯರ್ಥಿಗಳಾದ ಶ್ರೀ ಗೋವಿಂದ ಕಾರಜೋಳ, ಡಾ|| ಸಿ.ಎನ್.ಮಂಜುನಾಥ್, ಕು. ಶೋಭಾ ಕರಂದ್ಲಾಜೆ, ಡಾ|| ಕೆ.ಸುಧಾಕರ್ ಅವರಿಗೆ ಅಭಿನಂದನೆಗಳನ್ನು ಸಲ್ಲಿಸಿ, ಶುಭ ಕೋರಲಾಯಿತು.
@BJP4Karnataka @GovindKarjol @DrCNManjunath @ShobhaBJP @DrSudhakar_ -
B.S.Yediyurappa
@BSYBJP
ಎಲ್ಲರಿಗೂ ವಿಶ್ವ ಪರಿಸರ ದಿನದ ಹಾರ್ದಿಕ ಶುಭಾಶಯಗಳು. ಪರಿಸರ ಸಂರಕ್ಷಣೆ ನಮ್ಮೆಲ್ಲರ ಕರ್ತವ್ಯ. ಕಾಡುಗಳನ್ನು ಬೆಳೆಸುವ ಮೂಲಕ, ನೀರಿನ ಮೂಲಗಳನ್ನು ಪುನರುಜ್ಜೀವನಗೊಳಿಸುವ ಮೂಲಕ ಮತ್ತು ಮಣ್ಣಿನ ಫಲವತ್ತತೆಯನ್ನು ಮರಳಿ ತರುವ ಮೂಲಕ ಪರಿಸರದ ಋಣ ತೀರಿಸಬೇಕಾಗಿದೆ. ಮುಂದಿನ ಪೀಳಿಗೆಗೆ ನಾವು ಉತ್ತರದಾಯಿಗಳಾಗಿದ್ದೇವೆ.
#worldenvironmentday -
B.S.Yediyurappa
@BSYBJP
ಹತ್ತು ವರ್ಷಗಳ ಆಡಳಿತದ ನಂತರ ಮತ್ತೊಮ್ಮೆ ದೇಶದ ಮತದಾರರು ಸತತ 3ನೇ ಬಾರಿಗೆ ಪ್ರಧಾನಿ ಶ್ರೀ @narendramodi ಜೀ ನೇತೃತ್ವದ ಎನ್.ಡಿ.ಎ ಸರ್ಕಾರಕ್ಕೆ ಜನಾದೇಶ ನೀಡಿದ್ದಾರೆ. ರಾಜ್ಯದಲ್ಲಿ ಕೂಡ ಎನ್.ಡಿ.ಎ ಮೈತ್ರಿಕೂಟಕ್ಕೆ 19 ಸ್ಥಾನಗಳನ್ನು ನೀಡಿ ಆಶೀರ್ವದಿಸಿದ ಮತದಾರರಿಗೆ ಪಕ್ಷದ ಪರವಾಗಿ ಧನ್ಯವಾದಗಳನ್ನು ಸಲ್ಲಿಸುತ್ತೇನೆ. ಗೆಲುವು ಸಾಧಿಸಿದ ಎಲ್ಲ ಎನ್.ಡಿ.ಎ ಅಭ್ಯರ್ಥಿಗಳಿಗೆ ಅಭಿನಂದನೆಗಳು. ಹಲವಾರು ಸವಾಲುಗಳು ಎದುರಾದರೂ, ಸ್ವಲ್ಪವೂ ಎದೆಗುಂದದೆ ಪಕ್ಷದ ಗೆಲುವಿಗಾಗಿ ಹಗಲಿರುಳೂ ದುಡಿದ ನಮ್ಮ ಕಾರ್ಯಕರ್ತ ಬಂಧುಗಳಿಗೆ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ.
ಈ ಬಾರಿ ಎನ್.ಡಿ.ಎ ಮೈತ್ರಿಕೂಟ ಸೇರಿ ನಮ್ಮ ಜೊತೆಗೂಡಿದ ಹಿರಿಯರು, ಮಾಜಿ ಪ್ರಧಾನಮಂತ್ರಿಗಳೂ ಆದ ಶ್ರೀ @H_D_Devegowda ಅವರಿಗೆ, ಮಾಜಿ ಮುಖ್ಯಮಂತ್ರಿ ಶ್ರೀ @hd_kumaraswamy ಅವರಿಗೆ, @JanataDal_S ಪಕ್ಷದ ಎಲ್ಲ ನಾಯಕರಿಗೆ ಹಾಗೂ ಕಾರ್ಯಕರ್ತರಿಗೂ ನನ್ನ ಕೃತಜ್ಞತೆಗಳು. ವಿಕಸಿತ ಭಾರತ ನಿರ್ಮಾಣದ ನಮ್ಮ ಗುರಿಯೆಡೆಗೆ ಅಭಿವೃದ್ಧಿಯ ಈ ಪಯಣ ಇನ್ನಷ್ಟು ವೇಗ, ಹೊಸ ಹುರುಪಿನಿಂದ ಮುಂದುವರಿಯಲಿದೆ. @BJP4Karnataka -
B.S.Yediyurappa
@BSYBJP
ಅನಾರೋಗ್ಯದಿಂದಾಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುವ ಹಿರಿಯ ನಾಯಕರೂ, ಆತ್ಮೀಯರೂ ಆದ ಶ್ರೀ ಶಾಮನೂರು ಶಿವಶಂಕರಪ್ಪನವರು ಶೀಘ್ರದಲ್ಲಿ ಪೂರ್ಣ ಗುಣಮುಖರಾಗಿ ಚೇತರಿಸಿಕೊಳ್ಳಲಿ ಎಂದು ಹಾರೈಸುತ್ತೇನೆ.
-
B.S.Yediyurappa
@BSYBJP
ಭಾರತಾಂಬೆಯ ಸ್ವಾತಂತ್ರ್ಯಕ್ಕಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟ ಸ್ವಾತಂತ್ರ್ಯವೀರ, ಅನುಪಮ ದೇಶಭಕ್ತ, ದಿವಂಗತ ವಿನಾಯಕ್ ದಾಮೋದರ್ ಸಾವರ್ಕರ್ ಅವರ ಜಯಂತಿಯಂದು ಆ ರಾಷ್ಟ್ರನಿಷ್ಠ ಚೇತನಕ್ಕೆ ಅನಂತ ಪ್ರಣಾಮಗಳು.
-
B.S.Yediyurappa
@BSYBJP
Warm birthday wishes to Union Minister of Road Transport and Highways Shri Nitin Gadkari Ji. I wish you good health and a long life.
@nitin_gadkari -
B.S.Yediyurappa
@BSYBJP
ನಾಡಿನ ಸಮಸ್ತ ಜನತೆಗೆ ಭಗವಾನ್ ಬುದ್ಧನ ಜಯಂತಿಯ ಶುಭಕಾಮನೆಗಳು. ಆದರ್ಶ, ಸಾರ್ಥಕ ಜೀವನಕ್ಕೆ ಬೆಳಕು ನೀಡುವ ಭಗವಾನ್ ಬುದ್ಧನ ಬೋಧನೆಗಳ ಅರಿವಿನ ಜೊತೆಗೆ ಎಲ್ಲರಿಗೂ ಬುದ್ಧನ ಅನುಗ್ರಹದ ಶ್ರೀರಕ್ಷೆ ಇರಲಿ ಎಂದು ಪ್ರಾರ್ಥಿಸುತ್ತೇನೆ.
-
B.S.Yediyurappa
@BSYBJP
ಬೆಂಗಳೂರಿನ ಪಕ್ಷದ ಕಚೇರಿಯಲ್ಲಿ ಇಂದು ನಡೆದ ರಾಜ್ಯ ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ಪಾಲ್ಗೊಳ್ಳಲಾಯಿತು. ರಾಜ್ಯಾಧ್ಯಕ್ಷ ಶ್ರೀ @BYVijayendra, ವಿರೋಧ ಪಕ್ಷದ ನಾಯಕ ಶ್ರೀ @RAshokaBJP, ಮಾಜಿ ಮುಖ್ಯಮಂತ್ರಿ ಶ್ರೀ @BSBommai, ಕೇಂದ್ರ ಸಚಿವ ಶ್ರೀ @JoshiPralhad ಸೇರಿದಂತೆ ಕೋರ್ ಕಮಿಟಿ ಸದಸ್ಯರು ಉಪಸ್ಥಿತರಿದ್ದರು.
@BJP4Karnataka -
B.S.Yediyurappa
@BSYBJP
ಹಿರಿಯ ಮುತ್ಸದ್ದಿ ನಾಯಕರು, ಮಾಜಿ ಪ್ರಧಾನಮಂತ್ರಿಗಳಾದ ಸನ್ಮಾನ್ಯ ಶ್ರೀ ಹೆಚ್.ಡಿ.ದೇವೇಗೌಡರವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. ದೇವರ ಆಶೀರ್ವಾದ ಸದಾ ತಮ್ಮ ಮೇಲಿರಲಿ ಎಂದು ಪ್ರಾರ್ಥಿಸುತ್ತೇನೆ.
@H_D_Devegowda -
B.S.Yediyurappa
@BSYBJP
Deeply saddened by the passing away of party senior leader, former Dy Chief Minister of Bihar Shri Sushil Kumar Modi Ji. My thoughts are with the family, friends and admirers during this difficult time. Praying for the Sadgati of the departed soul. Om Shanti🙏
-
B.S.Yediyurappa
@BSYBJP
ನಾಡಿನ ಎಲ್ಲ ಭಕ್ತಜನತೆಗೆ ಅದ್ವೈತ ಸಿದ್ಧಾಂತ ಪ್ರತಿಪಾದಕರಾದ ಶ್ರೀ ಶಂಕರಾಚಾರ್ಯರ ಜಯಂತಿಯ ಹಾಗೂ ವಿಶಿಷ್ಟಾದ್ವೈತ ಸಿದ್ಧಾಂತ ಪ್ರತಿಪಾದಕರಾದ ಶ್ರೀ ರಾಮಾನುಜಾಚಾರ್ಯರ ಜಯಂತಿಯ ಭಕ್ತಿ ಪೂರ್ವಕ ಶುಭಾಶಯಗಳು. ತತ್ವಜ್ಞಾನದ ಪ್ರಚಾರದ ಜೊತೆಗೆ ಸನಾತನ ಧರ್ಮ ಸಂರಕ್ಷಣೆಯಲ್ಲಿ ಪೂಜ್ಯ ಆಚಾರ್ಯರುಗಳ ಕೊಡುಗೆ ಮಹೋನ್ನತವಾದದ್ದು.
-
B.S.Yediyurappa
@BSYBJP
ಎಲ್ಲರಿಗೂ ವಿಶ್ವಗುರು ಅಣ್ಣ ಬಸವಣ್ಣನವರ ಜಯಂತಿಯ ಭಕ್ತಿಪೂರ್ವಕ ಶುಭಾಶಯಗಳು. 12ನೇ ಶತಮಾನದಲ್ಲಿಯೇ ಸಾಮಾಜಿಕ, ಧಾರ್ಮಿಕ ಹಾಗೂ ಕಾಯಕ ಕ್ರಾಂತಿಗೆ ನಾಂದಿ ಹಾಡಿದ ಯುಗಪುರುಷ, ಸಮಾಜ ಸುಧಾರಕ, ಶರಣ ಶ್ರೇಷ್ಠ ಬಸವಣ್ಣನವರು ತೋರಿದ ಬೆಳಕು ಇಂದಿಗೂ ಸಾಧಕರ ಸಾಧನೆಗೆ ದಾರಿದೀಪವಾಗಿದೆ.
-
B.S.Yediyurappa
@BSYBJP
ದಕ್ಷಿಣ ಕನ್ನಡ ಜಿಲ್ಲೆಯ ಪ್ರಭಾವಿ ನಾಯಕರಾಗಿ, ಐದು ಬಾರಿ ಬೆಳ್ತಂಗಡಿಯಿಂದ ಶಾಸಕರಾಗಿ ಆಯೆಯಾಗಿದ್ದ ಶ್ರೀ ಕೆ.ವಸಂತ ಬಂಗೇರ ವಿಧಿವಶರಾದ ಸುದ್ದಿ ತಿಳಿದು ಅತ್ಯಂತ ದುಃಖವಾಗಿದೆ. ಅನೇಕ ವರ್ಷಗಳ ಹಿಂದೆ ವಿಧಾನಸಭೆಯಲ್ಲಿ ನಾನು ಮತ್ತು ಶ್ರೀ ವಸಂತ ಬಂಗೇರ ಮಾತ್ರ ಪಕ್ಷದಿಂದ ಶಾಸಕರಾಗಿ ಗೆದ್ದ ಸಂದರ್ಭದ ಆ ಹೋರಾಟದ ದಿನಗಳನ್ನು ನಾನೆಂದಿಗೂ ಮರೆಯಲಾರೆ. ಆ ಹಿರಿಯ ಚೇತನಕ್ಕೆ ಸದ್ಗತಿ ಪ್ರಾರ್ಥಿಸುತ್ತಾ ಅವರ ಕುಟುಂಬದವರಲ್ಲಿ ನನ್ನ ತೀವ್ರ ಸಂತಾಪಗಳನ್ನು ಸಲ್ಲಿಸುತ್ತೇನೆ. ಓಂ ಶಾಂತಿ
-
B.S.Yediyurappa
@BSYBJP
ನನ್ನ ಆತ್ಮೀಯ ಮತದಾರ ಬಂಧುಗಳೇ, ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಜೆಗಳ ಬಹುದೊಡ್ಡ ಶಕ್ತಿ ಎಂದರೆ ಮತದಾನ. ಇದು ನಮ್ಮ ಹಕ್ಕೂ ಹೌದು, ಕರ್ತವ್ಯವೂ ಹೌದು. ಇಂದು ಮತದಾನ ನಡೆಯಲಿರುವ ಕ್ಷೇತ್ರಗಳ ಎಲ್ಲ ಮತದಾರರು ತಪ್ಪದೇ ಮತ ಚಲಾಯಿಸಿ. ಭವ್ಯ ಭಾರತದ ಬಲಿಷ್ಠ ಭವಿಷ್ಯಕ್ಕಾಗಿ ತಪ್ಪದೇ ಮತ ಚಲಾಯಿಸಿ, ಪ್ರಜಾಪ್ರಭುತ್ವದ ಈ ಸಂಭ್ರಮದ ಕರ್ತವ್ಯವನ್ನು ನಾವೆಲ್ಲರೂ ಹೆಮ್ಮೆಯಿಂದ ನಿರ್ವಹಿಸೋಣ.
-
B.S.Yediyurappa
@BSYBJP
ಇಡೀ ದೇಶದೆಲ್ಲೆಡೆ ಪ್ರಧಾನಿ ಶ್ರೀ @narendramodi ರವರಿಗೆ ಮತ್ತು ಎನ್.ಡಿ.ಎ ಮೈತ್ರಿಕೂಟಕ್ಕೆ ಅಭೂತಪೂರ್ವ ಜನಬೆಂಬಲ ವ್ಯಕ್ತವಾಗುತ್ತಿದ್ದು, ಈ ಬಾರಿ 400ಕ್ಕೂ ಅಧಿಕ ಸ್ಥಾನಗಳೊಂದಿಗೆ #ಮತ್ತೊಮ್ಮೆಮೋದಿಸರ್ಕಾರ ಕ್ಕೆ ಜನಾಶೀರ್ವಾದ ನಿಶ್ಚಿತ. ಇಂದು ಹಾವೇರಿ ಲೋಕಸಭಾ ಕ್ಷೇತ್ರದ ಗಜೇಂದ್ರಗಢದಲ್ಲಿ ಪಕ್ಷದ ಅಭ್ಯರ್ಥಿ, ಮಾಜಿ ಮುಖ್ಯಮಂತ್ರಿ ಶ್ರೀ @BSBommai ರವರ ಪರವಾಗಿ ಬೃಹತ್ ಸಾರ್ವಜನಿಕ ಸಭೆ ನಡೆಸಿ ಮತಯಾಚಿಸಲಾಯಿತು.
#phirekbaarmodisarkar2024 #abkibar400paar @BJP4Karnataka -
B.S.Yediyurappa
@BSYBJP
ಸಶಕ್ತ ಸಮಾಜ ನಿರ್ಮಾಣದಲ್ಲಿ ನಮ್ಮ ಎಲ್ಲ ಕಾಯಕ ಯೋಗಿಗಳ, ಶ್ರಮಜೀವಿಗಳ ಬದ್ಧತೆ, ಪರಿಶ್ರಮ, ದುಡಿಮೆ, ಕೊಡುಗೆಗಳನ್ನು ಗೌರವಿಸುವ ಜೊತೆಗೆ ನಮ್ಮ ಸಮಸ್ತ ಕಾರ್ಮಿಕರಿಗೆ 'ಅಂತಾರಾಷ್ಟ್ರೀಯ ಕಾರ್ಮಿಕರ ದಿನ'ದ ಶುಭಾಶಯಗಳು.
#laboursday #internationalworkersday -
B.S.Yediyurappa
@BSYBJP
ಹಿರಿಯ ಮುತ್ಸದ್ಧಿ ನಾಯಕರು, ಮಾಜಿ ಮುಖ್ಯಮಂತ್ರಿ ಪದ್ಮವಿಭೂಷಣ ಶ್ರೀ ಎಸ್.ಎಂ.ಕೃಷ್ಣ ಅವರಿಗೆ ಜನ್ಮದಿನದ ಹೃತ್ಪೂರ್ವಕ ಶುಭಕಾಮನೆಗಳು. ದೇವರ ಆಶೀರ್ವಾದ ಸದಾ ತಮ್ಮ ಮೇಲಿರಲಿ ಎಂದು ಹಾರೈಸುತ್ತೇನೆ.
-
B.S.Yediyurappa
@BSYBJP
ಹಿರಿಯ ನಾಯಕರು, ಚಾಮರಾಜನಗರ ಕ್ಷೇತ್ರದ ಸಂಸದರು, ಆತ್ಮೀಯರಾದ ಶ್ರೀ ವಿ.ಶ್ರೀನಿವಾಸ್ ಪ್ರಸಾದ್ ವಿಧಿವಶರಾದ ಸುದ್ದಿ ದಿಗ್ಭ್ರಮೆ ಮೂಡಿಸಿದೆ. ಕೆಲ ದಿನಗಳ ಹಿಂದೆಯಷ್ಟೇ ಅವರನ್ನು ಭೇಟಿಯಾಗಿದ್ದು, ಈಗ ಅವರು ನಮ್ಮೊಂದಿಗೆ ಇಲ್ಲ ಎನ್ನುವುದನ್ನು ನಂಬಲಾಗುತ್ತಿಲ್ಲ. ರಾಜ್ಯ ಹಾಗೂ ದೇಶದ ರಾಜಕೀಯದಲ್ಲಿ ತಮ್ಮದೇ ಛಾಪು ಮೂಡಿಸಿದ್ದ ಅವರು ಪ್ರಭಾವಿ ದಲಿತ ಮುಖಂಡರಾಗಿ ಗುರುತಿಸಿಕೊಂಡಿದ್ದರು. ಅವರ ನಿಧನದಿಂದ ನಾಡು ಒಬ್ಬ ಹಿರಿಯ ನೇತಾರರನ್ನು ಕಳೆದುಕೊಂಡಿದೆ. ಅವರ ಆತ್ಮಕ್ಕೆ ಸದ್ಗತಿ ಪ್ರಾರ್ಥಿಸುತ್ತಾ, ಅವರ ಕುಟುಂಬ, ಅಭಿಮಾನಿಗಳಿಗೆ ಅವರ ಅಗಲಿಕೆಯ ನೋವನ್ನು ಭರಿಸುವ ಶಕ್ತಿಯನ್ನು ದೇವರು ನೀಡಲಿ ಎಂದು ಪ್ರಾರ್ಥಿಸುತ್ತೇನೆ. ಓಂ ಶಾಂತಿ
-
B.S.Yediyurappa
@BSYBJP
ಜನತೆಯ ಆಶೋತ್ತರಗಳ ಸಾಕಾರ,
ಬರಲಿದೆ ಮತ್ತೊಮ್ಮೆ ಮೋದಿ ಸರ್ಕಾರ.
ರಾಜ್ಯದಲ್ಲಿ ಮುಂದಿನ ಹಂತದಲ್ಲಿ ಮತದಾನ ನಡೆಯುವ ವಿಜಯಪುರ ಲೋಕಸಭಾ ಕ್ಷೇತ್ರದ ನಮ್ಮ ಅಭ್ಯರ್ಥಿ ಶ್ರೀ @mpbijapur ಪರ ಇಂದು ಮುದ್ದೇಬಿಹಾಳದಲ್ಲಿ ಬಿರುಸಿನ ಪ್ರಚಾರ ಕೈಗೊಳ್ಳಲಾಯಿತು. ಭಾರಿ ಬಹಿರಂಗ ಸಭೆ ನಡೆಸಿ ಮತ್ತೊಮ್ಮೆ ಮೋದಿ ಸರ್ಕಾರ ರಚನೆಗೆ ಜನರ ಬೆಂಬಲ, ಆಶೀರ್ವಾದ ಕೋರಲಾಯಿತು.
#phirekbaarmodisarkar #abkibaar400paar @BJP4Karnataka -
B.S.Yediyurappa
@BSYBJP
ಭೀಕರ ಬರಗಾಲದ ಕರಿಛಾಯೆಯಲ್ಲಿ ಸಿಲುಕಿ ನರಳುತ್ತಿದ್ದ ನಮ್ಮ ಅನ್ನದಾತ ರೈತರ ನೆರವಿಗೆ ಧಾವಿಸದೆ, ರಾಜ್ಯ ಸರ್ಕಾರ ತನ್ನದೇ ಕೀಳು ರಾಜಕೀಯ ಮೇಲಾಟ, ಕೆಸರೆರಚಾಟದಲ್ಲಿ ನಿರತವಾಗಿತ್ತು. ಆದರೆ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದ್ದರೂ, ತಾಂತ್ರಿಕ ಅಡಚಣೆ ನಿವಾರಿಸಿ, ರಾಜ್ಯದ ಸಂಕಷ್ಟಕ್ಕೆ ಪರಿಹಾರ ಒದಗಿಸಲು ಕೇಂದ್ರ ಸರ್ಕಾರ 3,454 ಕೋಟಿ ರೂ. ಬರ ಪರಿಹಾರ ನೀಡಿದೆ. ಆ ಮೂಲಕ ರಾಜಕೀಯಕ್ಕಿಂತಲೂ ಜನಹಿತಕ್ಕೆ ಆದ್ಯತೆ ನೀಡಿ, ಕರ್ತವ್ಯಪ್ರಜ್ಞತೆ ಮೆರೆದಿದೆ. ಇದಕ್ಕಾಗಿ ಕರ್ನಾಟಕದ ಸಮಸ್ತ ಜನತೆಯ ಪರವಾಗಿ ಆದರಣೀಯ ಪ್ರಧಾನಮಂತ್ರಿ ಶ್ರೀ @narendramodi ರವರಿಗೆ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ.
-
B.S.Yediyurappa
@BSYBJP
ಆತ್ಮೀಯ ಸಾರ್ವಜನಿಕ ಬಂಧುಗಳೇ, ಕರ್ನಾಟಕ ಇಂದು ಮೊದಲನೇ ಹಂತದ ಮತದಾನ ಮಾಡಲಿದ್ದು, 14 ಲೋಕಸಭಾ ಕ್ಷೇತ್ರಗಳ ಮತದಾರರು ತಮ್ಮ ಪ್ರತಿನಿಧಿಗಳ ಆಯ್ಕೆಗೆ ಜನಾದೇಶ ನೀಡಲಿದ್ದಾರೆ. ಎಲ್ಲರೂ ತಪ್ಪದೇ ಮತದಾನ ಮಾಡಿ. ವಿಶೇಷವಾಗಿ ಮೊದಲ ಬಾರಿಗೆ ಮತದಾನ ಮಾಡುತ್ತಿರುವ ನಮ್ಮ ಯುವ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಮತ ಚಲಾಯಿಸಿ, ಪ್ರಜಾಪ್ರಭುತ್ವದ ಈ ಹಬ್ಬದಲ್ಲಿ ಎಲ್ಲರೂ ಪಾಲ್ಗೊಳ್ಳೋಣ.
-
B.S.Yediyurappa
@BSYBJP
ಬೀದರ್ ಲೋಕಸಭಾ ಕ್ಷೇತ್ರದ ವಿವಿಧ ಕಡೆಗಳಲ್ಲಿ ನಮ್ಮ ಅಭ್ಯರ್ಥಿ ಶ್ರೀ @bhagwantkhuba ರವರ ಪರವಾಗಿ ಬಿರುಸಿನ ಪ್ರಚಾರ ನಡೆಸಿದ್ದು, ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಬೃಹತ್ ಸಾರ್ವಜನಿಕ ಸಭೆಯಲ್ಲಿ ಇಂದು ಜನಾಶೀರ್ವಾದ ಕೋರಲಾಯಿತು. ಈ ಬಾರಿ ಮತ್ತೊಮ್ಮೆ ಪ್ರಧಾನಿ ಶ್ರೀ @narendramodi ರವರ ನೇತೃತ್ವದ ಎನ್.ಡಿ.ಎ ಸರ್ಕಾರಕ್ಕೆ ಪೂರ್ಣ ಬೆಂಬಲ ನೀಡಲು ಜನ ತೀರ್ಮಾನಿಸಿದ್ದಾರೆ.
#phirekbarmodisarkar #abkibar400par @BJP4Karnataka -
B.S.Yediyurappa
@BSYBJP
ವಿಕಸಿತ ಭಾರತಕ್ಕಾಗಿ ಮೊಳಗುತಿದೆ ಜನದನಿ,
ಮತ್ತೊಮ್ಮೆ ಮೋದಿ ಸರ್ಕಾರಕ್ಕೆ ವಿಜಯ ಸಂಕಲ್ಪದ ಮಾರ್ದನಿ.
ಬೀದರ್ ಲೋಕಸಭಾ ಕ್ಷೇತ್ರದ ಪಕ್ಷದ ಅಭ್ಯರ್ಥಿ ಶ್ರೀ @bhagwantkhuba ಅವರ ಪರವಾಗಿ ಇಂದು ಔರಾದ್ ನಲ್ಲಿ ಸಾರ್ವಜನಿಕ ಸಭೆ ನಡೆಸಿ ಪ್ರಚಾರ ಕೈಗೊಳ್ಳಲಾಯಿತು. ಭಾರಿ ಸಂಖ್ಯೆಯಲ್ಲಿ ನೆರೆದಿದ್ದ ಜನರ ಜೈಕಾರ, ಮತ್ತೊಮ್ಮೆ ಮೋದಿ ಸರ್ಕಾರ ರಚನೆಯ ಪ್ರತಿಧ್ವನಿ ಮೊಳಗಿಸಿದೆ.
#phirekbaarmodisarkar #abkibaar400paar @BJP4Karnataka -
B.S.Yediyurappa
@BSYBJP
ತುಮಕೂರು ಕ್ಷೇತ್ರದ ವ್ಯಾಪ್ತಿಯ ತಿಪಟೂರು ನಗರದ ವಿವಿಧ ಭಾಗಗಳಲ್ಲಿ ಇಂದು ರೋಡ್ ಶೋ ಮೂಲಕ ಪಕ್ಷದ ಅಭ್ಯರ್ಥಿ ಶ್ರೀ @VSOMANNA_BJP ಪರವಾಗಿ ಮತ ಪ್ರಚಾರ ನಡೆಸಲಾಯಿತು. ಪಕ್ಷ ಹಾಗೂ ಜೆಡಿಎಸ್ ಮುಖಂಡರು ಹಾಗೂ ಎರಡೂ ಪಕ್ಷದ ಸಾವಿರಾರು ಉತ್ಸಾಹಿ ಕಾರ್ಯಕರ್ತರು ಪಾಲ್ಗೊಂಡಿದ್ದರು.
#phirekbarmodisarkar #abkibaar400paar @BJP4Karnataka -
B.S.Yediyurappa
@BSYBJP
ವಿಶ್ವ ಮೆಚ್ಚಿದ ಅಪರೂಪದ ಅದ್ವಿತೀಯ ಕಲಾವಿದ, ಪದ್ಮಭೂಷಣ, ಕರ್ನಾಟಕ ರತ್ನ, ವರನಟ ದಿವಂಗತ ಡಾ|| ರಾಜ್ ಕುಮಾರ್ ಅವರ ಜನ್ಮದಿನದಂದು ಆ ಮಹಾನ್ ಕಲಾಚೇತನಕ್ಕೆ ನಮನಗಳು.
-
B.S.Yediyurappa
@BSYBJP
ಜನಾನುರಾಗವೇ ಗೆಲುವಿಗೆ ರಹದಾರಿ,
ನಮ್ಮ ಗುರಿಯೇ, ಈ ಬಾರಿ 400 ಮೀರಿ
ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ನಿನ್ನೆ ಹಿರಿಯ ನಾಯಕರು, ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ @AmitShah ಅವರೊಂದಿಗೆ ಬೃಹತ್ ರೋಡ್ ಶೋ ನಡೆಸಿ, ಪಕ್ಷದ ಅಭ್ಯರ್ಥಿ ಶ್ರೀ @Tejasvi_Surya ಪರ ಪ್ರಚಾರ ನಡೆಸಲಾಯಿತು.
#phirekbarmodisarkar #abkibaar400paar @BJP4Karnataka -
B.S.Yediyurappa
@BSYBJP
"ಶ್ರೀರಾಮ ದೂತಂ ಶಿರಸಾ ನಮಾಮಿ" - ಹನುಮ ಜಯಂತಿಯ ಪವಿತ್ರ ಸಂದರ್ಭದಲ್ಲಿ ನಮ್ಮ ಶಿಕಾರಿಪುರದ ಆರಾಧ್ಯದೈವ ಶ್ರೀ ಹುಚ್ಚರಾಯಸ್ವಾಮಿಯ ರಥೋತ್ಸವದಲ್ಲಿ ಕುಟುಂಬ ಸದಸ್ಯರು ಮತ್ತು ಸಾವಿರಾರು ಭಕ್ತರೊಂದಿಗೆ ಭಾಗವಹಿಸಲಾಯಿತು. ಶ್ರೀ ಆಂಜನೇಯನ ಕೃಪೆ ಈ ನಾಡಿನ ಮೇಲೆ ನಿರಂತರವಾಗಿರಲಿ ಎನ್ನುವುದೇ ಎಲ್ಲರ ಪ್ರಾರ್ಥನೆಯಾಗಿದೆ.
-
B.S.Yediyurappa
@BSYBJP
ಶ್ರೇಷ್ಠ ಸಾಧಕಿ, ತ್ಯಾಗಮೂರ್ತಿ ಶಿವಶರಣೆ ಅಕ್ಕಮಹಾದೇವಿಯವರ ಜಯಂತಿಯಂದು ಅವರಿಗೆ ಭಕ್ತಿಪೂರ್ವಕ ಪ್ರಣಾಮಗಳು. ಅವರ ವಚನಾಮೃತ ಸಾರ್ಥಕ ಜೀವನದ ದಾರಿದೀಪವಾಗಿದೆ.
-
B.S.Yediyurappa
@BSYBJP
ಸಮಸ್ತ ಭಕ್ತಜನತೆಗೆ ಹನುಮ ಜಯಂತಿಯ ಭಕ್ತಿಪೂರ್ವಕ ಶುಭಕಾಮನೆಗಳು. ನಾಡಿನ ಹಾಗೂ ಭಕ್ತ ಜನತೆಯ ರಕ್ಷಣೆಯ ಜೊತೆಗೆ ರಾಮಭಕ್ತ ಶ್ರೀ ಆಂಜನೇಯನು ಎಲ್ಲರಿಗೂ ಮಂಗಳವನ್ನು ಉಂಟುಮಾಡಲಿ ಎಂದು ಪ್ರಾರ್ಥಿಸುತ್ತೇನೆ.
-
B.S.Yediyurappa
@BSYBJP
'ರಾಜ್ಯದ ಜನತೆಯ ನಿರ್ಧಾರ, ಮತ್ತೊಮ್ಮೆ ಮೋದಿ ಸರ್ಕಾರ'
ಕಾಂಗ್ರೆಸ್ ವಿರುದ್ಧದ ಜನರ ಆಕ್ರೋಶದ ಧ್ವನಿ, ಶೀಘ್ರದಲ್ಲಿ ಎನ್.ಡಿ.ಎ ಪರ ಜನಾದೇಶವಾಗಿ ಹೊರಹೊಮ್ಮಲಿದೆ. ಮಾಜಿ ಪ್ರಧಾನಿ ಶ್ರೀ @H_D_Devegowda ರವರೊಂದಿಗೆ ಇಂದು ಹಾಸನ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬೃಹತ್ ಸಾರ್ವಜನಿಕ ಸಭೆ ನಡೆಸಿ, ಎನ್.ಡಿ.ಎ ಅಭ್ಯರ್ಥಿ ಶ್ರೀ @iPrajwalRevanna ನವರ ಪರವಾಗಿ ಮತಪ್ರಚಾರ ನಡೆಸಲಾಯಿತು.
#phiraekbaarmodisarkar #abkibaar400paar @BJP4Karnataka -
B.S.Yediyurappa
@BSYBJP
ನಾಡಿನ ಭದ್ರತೆ, ಪ್ರಗತಿ, ಸುಶಾಸನಗಳ ಸಾಕಾರ,
ಸಿಗಲಿದೆ ಜನಾದೇಶ, ಮತ್ತೊಮ್ಮೆ ಮೋದಿ ಸರ್ಕಾರ!
ಪಕ್ಷದ ಅಭ್ಯರ್ಥಿಗಳ ಪರ ಮತಯಾಚಿಸಲು ಇಂದು ಚಾಮರಾಜನಗರ ಕ್ಷೇತ್ರದ ಗುಂಡ್ಲುಪೇಟೆ ಮತ್ತು ಚಿತ್ರದುರ್ಗ ಕ್ಷೇತ್ರದ ಭರಮಸಾಗರದಲ್ಲಿ ಬೃಹತ್ ಸಾರ್ವಜನಿಕ ಸಭೆಗಳನ್ನು ನಡೆಸಿ ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರ ನಡೆಸಲಾಯಿತು.
#phirekbaarmodisarkar #abkibaar400paar
@BJP4Karnataka -
B.S.Yediyurappa
@BSYBJP
ಎಲ್ಲರಿಗೂ ಮಹಾವೀರ ಜಯಂತಿಯ ಭಕ್ತಿಪೂರ್ವಕ ಶುಭಾಶಯಗಳು. ಭಗವಾನ್ ಮಹಾವೀರರ ಸರ್ವಕಾಲಿಕ ಉಪದೇಶಗಳು ನಮ್ಮ ಜೀವನದಲ್ಲಿ ಸಹಾನುಭೂತಿ, ಅಹಿಂಸೆ ಮತ್ತು ಸುಜ್ಞಾನದ ಬೆಳಕನ್ನು ಬೆಳಗಿಸಲಿ, ಎಲ್ಲರಲ್ಲಿ ಸಾಮರಸ್ಯ ಮತ್ತು ಶಾಂತಿಯನ್ನು ಪ್ರೇರೇಪಿಸಲಿ ಎಂದು ಪ್ರಾರ್ಥಿಸುತ್ತೇನೆ.
#mahavirjayanti2024 -
B.S.Yediyurappa
@BSYBJP
ವಿಕಸಿತ ಭಾರತ ನಿರ್ಮಾಣದ ನಮ್ಮ ಬದ್ಧತೆಯಲ್ಲಿ ಬೆಂಗಳೂರು ಮತ್ತು ಕರ್ನಾಟಕದ ಸಂಪೂರ್ಣ ಅಭಿವೃದ್ದಿಯೂ ಸೇರಿದೆ. ಲೋಕಸಭಾ ಚುನಾವಣಾ ಪ್ರಚಾರದ ಅಂಗವಾಗಿ ಇಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ ಪಕ್ಷದ ಬೃಹತ್ ವಿಜಯ ಸಂಕಲ್ಪ ಸಮಾವೇಶದಲ್ಲಿ ಹೆಮ್ಮೆಯ ಪ್ರಧಾನಿ ಶ್ರೀ @narendramodi ರವರೊಂದಿಗೆ ಭಾಗವಹಿಸಲಾಯಿತು.
#phirekbaarmodisarkar #abkibar400par @BJP4Karnataka -
B.S.Yediyurappa
@BSYBJP
ಹೆಮ್ಮೆಯ ಪ್ರಧಾನಿ ಶ್ರೀ @narendramodi ಜೀ ರವರು ಮತ್ತೊಮ್ಮೆ ದೇಶದ ಸಾರಥ್ಯ ವಹಿಸಲಿ ಎಂಬ ಅಪೇಕ್ಷೆಯನ್ನು ವಿಶೇಷವಾಗಿ ಗಾನ ರೂಪದಲ್ಲಿ ವ್ಯಕ್ತಪಡಿಸಿರುವ ಶ್ರೀಮತಿ ಧೃತಿ, ಶ್ರೀಮತಿ ಆರ್ಯಾಂಬಾ ಮಹೇಶ್ ಕುಮಾರ್ ಮತ್ತು ಶ್ರೀಮತಿ ರೂಪಾ ವಿಜಯ್ ಕುಮಾರ್ ಅವರಿಗೆ ಮೆಚ್ಚುಗೆಯ ಅಭಿನಂದನೆಗಳು.
Prashant Makanur 🇮🇳
@PrashantMakanur
ಶ್ರೀ ವಿಜಯ ಭಾಸ್ಕರ್ ಅವರ ಕ್ಷಮೆ ಕೋರುತ್ತಾ, ದೇಶ ಕಂಡ ಅತ್ಯುತ್ತಮ ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು ಮತ್ತೊಮ್ಮೆ ಅಧಿಕಾರದ ಸಾರಥ್ಯ ವಹಿಸಲಿ ಎಂಬ ಕಳಕಳಿಯ ಪ್ರಾರ್ಥನಾ ಭಾವದಲ್ಲಿ ರಚಿತವಾದ, ಶ್ರೀಮತಿ ಧೃತಿ , ಬೆಂಗಳೂರು ಅವರ ' ಭಾರತ ಮಾತೆಯ ಹೆಮ್ಮೆಯ ಕುವರ ' ಶ್ರೀಮತಿ ಆರ್ಯಾಂಬಾ ಮಹೇಶ್ ಕುಮಾರ್ ಮತ್ತು ಶ್ರೀಮತಿ ರೂಪಾ ವಿಜಯ್ ಕುಮಾರ್ ಧ್ವನಿಯಲ್ಲಿ
(ಸಹಕಾರ. ಶ್ರೀ ಆದಿತ್ಯ ಭಟ್, ಕ್ಲೌನ್ ರೆಕಾರ್ಡಿಂಗ್ ಸ್ಟುಡಿಯೋ, ಬೆಂಗಳೂರು)This media couldn't be displayed. See it on the original post. -
B.S.Yediyurappa
@BSYBJP
"ಎಲ್ಲೆಡೆ ಪ್ರಧಾನಿ ಮೋದಿ ಪರ ಜನದನಿಯ ಜಯಘೋಷ,
ಮತ್ತೊಮ್ಮೆ ಬರಲಿದೆ ಮೋದಿ ಸರ್ಕಾರ, ಇದುವೇ ಜನಾದೇಶ"
ಶಿವಮೊಗ್ಗ ಲೋಕಸಭಾ ಕ್ಷೇತ್ರದ ಪಕ್ಷದ ಅಭ್ಯರ್ಥಿ ಶ್ರೀ @BYRBJP ಅವರ ನಾಮಪತ್ರ ಸಲ್ಲಿಕೆ ಕಾರ್ಯಕ್ರಮದಲ್ಲಿ ಇಂದು ಮಾಜಿ ಮುಖ್ಯಮಂತ್ರಿಗಳಾದ ಶ್ರೀ @hd_kumaraswamy, ಶ್ರೀ @BSBommai ರವರೊಂದಿಗೆ ಪಾಲ್ಗೊಳ್ಳಲಾಯಿತು. ಜೆಡಿಎಸ್ ಹಾಗೂ ಬಿಜೆಪಿ ಪಕ್ಷದ ಹಲವಾರು ಮುಖಂಡರು, ಸಾವಿರಾರು ಕಾರ್ಯಕರ್ತರ ಹುಮ್ಮಸ್ಸು, ಜೈಕಾರಗಳೊಂದಿಗೆ ನಡೆದ ಮೆರವಣಿಗೆ, ನಮ್ಮ ಕಾರ್ಯಕರ್ತರ ಉತ್ಸಾಹವನ್ನು ನೂರ್ಮಡಿಗೊಳಿಸಿದೆ.
#phirekbaarmodisarkar #abkibar400paar @BJP4Karnataka -
B.S.Yediyurappa
@BSYBJP
ಕೊಪ್ಪಳದಲ್ಲಿ ನಿನ್ನೆ ನಡೆದ ಬೃಹತ್ ವಿಜಯ ಸಂಕಲ್ಪ ಯಾತ್ರೆಯಲ್ಲಿ ಭಾಗವಹಿಸಿ, ನಮ್ಮ ಪಕ್ಷದ ಅಭ್ಯರ್ಥಿ ಡಾ.ಬಸವರಾಜ್ ಕ್ಯಾವಟರ ಪರ ಮತಯಾಚಿಸಲಾಯಿತು.
#phirekbaarmodisarkar #abkibar400par
@BJP4Karnataka -
B.S.Yediyurappa
@BSYBJP
ಪಕ್ಷದ ಸಾವಿರಾರು ದೇವದುರ್ಲಭ ಕಾರ್ಯಕರ್ತರ ಉತ್ಸಾಹ, ಜಯಘೋಷಗಳೊಂದಿಗೆ, ಬೃಹತ್ ಮೆರವಣಿಗೆ ಮೂಲಕ ಬೆಳಗಾವಿ ಲೋಕಸಭಾ ಕ್ಷೇತ್ರದ ಎನ್.ಡಿ.ಎ ಅಭ್ಯರ್ಥಿಯಾಗಿರುವ ಶ್ರೀ @JagadishShettar ರವರ ನಾಮಪತ್ರ ಸಲ್ಲಿಕೆ ಕಾರ್ಯಕ್ರಮದಲ್ಲಿ, ಗೋವಾ ಮುಖ್ಯಮಂತ್ರಿ ಶ್ರೀ @DrPramodPSawant ಅವರೊಂದಿಗೆ ಇಂದು ಪಾಲ್ಗೊಳ್ಳಲಾಯಿತು.
#phirekbaarmodisarkar #abkibar400par
@BJP4Karnataka -
B.S.Yediyurappa
@BSYBJP
ತಮ್ಮ ಅಪಾರ ಅಭಿಮಾನಿಗಳೊಂದಿಗೆ ಇಂದು ಪಕ್ಷಕ್ಕೆ ಸೇರ್ಪಡೆಗೊಂಡ ಜನಪ್ರಿಯ ನಾಯಕ, ಮಾಜಿ ಶಾಸಕರ, ದಲಿತ ಮುಖಂಡ ಶ್ರೀ ಅಖಂಡ ಶ್ರೀನಿವಾಸ ಮೂರ್ತಿ ಅವರನ್ನು ಬೆಂಗಳೂರಿನ ಪಕ್ಷದ ಕಚೇರಿಯಲ್ಲಿ ಸ್ವಾಗತಿಸಲಾಯಿತು. ರಾಜ್ಯ ಪ್ರಧಾನ ಕಾರ್ಯದರ್ಶಿ ಶ್ರೀ @karkalasunil, ಬೆಂಗಳೂರು ಉತ್ತರ ಕ್ಷೇತ್ರದ ಅಭ್ಯರ್ಥಿ ಕು. @ShobhaBJP ಮತ್ತಿತರ ಪ್ರಮುಖರು ಉಪಸ್ಥಿತರಿದ್ದರು.
@BJP4Karnataka -
B.S.Yediyurappa
@BSYBJP
"ಬಿಜೆಪಿ ಸಂಕಲ್ಪವೆ ಜನತೆಯ ಆಶೋತ್ತರಗಳ ಈಡೇರಿಕೆ,
ಒಂದೇ ಗುರಿ, ಪ್ರಗತಿಯೇ ದಾರಿ, ಮೋದಿ ಗ್ಯಾರಂಟಿಯೊಂದೇ ಆಯ್ಕೆ"
ನಿನ್ನೆ ಹಡಗಲಿಯಲ್ಲಿ ನಮ್ಮ ಬಳ್ಳಾರಿ ಲೋಕಸಭಾ ಅಭ್ಯರ್ಥಿ ಶ್ರೀ @sriramulubjp ಪರವಾಗಿ ಬೃಹತ್ ಸಾರ್ವಜನಿಕ ಸಭೆ ನಡೆಸಿ ಚುನಾವಣಾ ಪ್ರಚಾರ ನಡೆಸಲಾಯಿತು. ಎಲ್ಲೆಡೆ ಜನರ ಒಂದೇ ಜಯಘೋಷ, #ಮತ್ತೊಮ್ಮೆಮೋದಿಸರ್ಕಾರ.
#phirekbaarmodisarkar #abkibaar400par @BJP4Karnataka -
B.S.Yediyurappa
@BSYBJP
ನಾಡಿನ ಸಮಸ್ತ ಭಕ್ತ ಜನತೆಗೆ ಶ್ರೀರಾಮನವಮಿ ಹಬ್ಬದ ಹೃತ್ಪೂರ್ವಕ ಶುಭಾಶಯಗಳು. ಶ್ರೀರಾಮನ ಆದರ್ಶಗಳು ಸದಾ ನಮ್ಮ ಬಾಳನ್ನು ಬೆಳಗುತ್ತಿರಲಿ, ಎಲ್ಲರ ಸಂಕಷ್ಟಗಳನ್ನು ಪರಿಹರಿಸಿ, ನಾಡಿನಲ್ಲಿ ಸುಖ, ಶಾಂತಿ, ಸಮೃದ್ಧಿ, ನೆಮ್ಮದಿಗಳು ಸದಾ ನೆಲೆಸುವಂತೆ ಶ್ರೀರಾಮ ಅನುಗ್ರಹಿಸಲಿ ಎಂದು ಪ್ರಾರ್ಥಿಸುತ್ತೇನೆ.
-
B.S.Yediyurappa
@BSYBJP
ಲೋಕಸಭಾ ಚುನಾವಣೆ ಪ್ರಯುಕ್ತ ಇಂದು ಪಕ್ಷದ ಚಿತ್ರದುರ್ಗ ಕ್ಷೇತ್ರದ ಅಭ್ಯರ್ಥಿ ಶ್ರೀ @GovindKarjol ಅವರ ಪರವಾಗಿ ಪ್ರಚಾರ ಸಭೆ ನಡೆಸಲಾಯಿತು. ಇಡೀ ದೇಶದಲ್ಲಿ #ಮತ್ತೊಮ್ಮೆಮೋದಿಸರ್ಕಾರ ಕ್ಕೆ ಜನ ತೀರ್ಮಾನಿಸಿದ್ದು, ಈ ಬಾರಿ ರಾಜ್ಯದ ಎಲ್ಲ ಕ್ಷೇತ್ರಗಳಲ್ಲಿಯೂ ಕೂಡ ಎನ್.ಡಿ.ಎ ಅಭ್ಯರ್ಥಿಗಳು ಜಯಗಳಿಸಲಿದ್ದಾರೆ.
#phirekbaarmodisarkaar -
B.S.Yediyurappa
@BSYBJP
ಕನ್ನಡ ಚಿತ್ರರಂಗ ಕಂಡ ಖ್ಯಾತ ಕಲಾವಿದ, ಹಿರಿಯ ನಟ, ನಿರ್ದೇಶಕ, ನಿರ್ಮಾಪಕ ಶ್ರೀ ದ್ವಾರಕೀಶ್ ವಿಧಿವಶರಾದ ಸುದ್ದಿ ಅತ್ಯಂತ ಆಘಾತ ಉಂಟುಮಾಡಿದೆ. ನಾಡಿನ ದಿಗ್ಗಜ ಕಲಾವಿದರೊಂದಿಗೆ ನಟಿಸಿ, ಅವರ ಸಿನಿಮಾಗಳನ್ನು ನಿರ್ಮಿಸಿದ್ದ ದ್ವಾರಕೀಶ್ ಅವರ ನಿಧನದಿಂದ ಚಿತ್ರರಂಗ ಒಬ್ಬ ಸಾಧಕ ಕಲಾವಿದನನ್ನು ಕಳೆದುಕೊಂಡಿದೆ. ಅಗಲಿದ ಆ ಹಿರಿಯ ಕಲಾಚೇತನಕ್ಕೆ ಸದ್ಗತಿಯನ್ನು ಪ್ರಾರ್ಥಿಸುತ್ತೇನೆ. ಅವರ ಕುಟುಂಬದವರಿಗೆ, ಆಪ್ತೇಷ್ಟರಿಗೆ, ಅಪಾರ ಅಭಿಮಾನಿಗಳಿಗೆ ಈ ದುಃಖವನ್ನು ಭರಿಸುವ ಶಕ್ತಿಯನ್ನು ಆ ದೇವರು ದಯಪಾಲಿಸಲಿ ಎಂದು ಕೋರುತ್ತೇನೆ. ಓಂ ಶಾಂತಿ
-
B.S.Yediyurappa
@BSYBJP
ಜನರ ಆಶೀರ್ವಾದದಿಂದ ರಾಜ್ಯದ ಇಪ್ಪತ್ತೆಂಟು ಸ್ಥಾನಗಳೂ ಸೇರಿ ಈ ಬಾರಿ 400ಕ್ಕೂ ಅಧಿಕ ಸ್ಥಾನಗಳಲ್ಲಿ ಗೆಲ್ಲುವ ಗುರಿ ನಮ್ಮದು. ಈ ನಿಟ್ಟಿನಲ್ಲಿ ಇಂದು ದಾವಣಗೆರೆ ಕ್ಷೇತ್ರದಲ್ಲಿ ಪಕ್ಷದ ಅಭ್ಯರ್ಥಿ ಶ್ರೀಮತಿ ಗಾಯತ್ರಿ ಸಿದ್ದೇಶ್ವರ ಅವರ ಪರವಾಗಿ ಬೃಹತ್ ಸಾರ್ವಜನಿಕ ಸಭೆ ನಡೆಸಿ ಪ್ರಚಾರ ಕೈಗೊಳ್ಳಲಾಯಿತು.
#phirekbaarmodisarkar #abkibaar400paar @BJP4Karnataka -
B.S.Yediyurappa
@BSYBJP
ಸುಡುವ ಬಿಸಿಲನ್ನೂ ಲೆಕ್ಕಿಸದೆ ನೆರೆದಿದ್ದ ಜೆಡಿಎಸ್ ಹಾಗೂ ನಮ್ಮ ಪಕ್ಷದ ಸಾವಿರಾರು ಉತ್ಸಾಹಿ ಕಾರ್ಯಕರ್ತರ ಜಯಘೋಷಗಳೊಂದಿಗೆ ಇಂದು ಧಾರವಾಡ ಲೋಕಸಭಾ ಕ್ಷೇತ್ರದ ಪಕ್ಷದ ಅಭ್ಯರ್ಥಿ ಶ್ರೀ @JoshiPralhad ಅವರ ನಾಮಪತ್ರ ಸಲ್ಲಿಕೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಾಯಿತು. ಮಾಜಿ ಮುಖ್ಯಮಂತ್ರಿಗಳು, ಬೆಳಗಾವಿ ಕ್ಷೇತ್ರದ ಪಕ್ಷದ ಅಭ್ಯರ್ಥಿ ಶ್ರೀ @JagadishShettar , ಖ್ಯಾತ ಉದ್ಯಮಿ ಶ್ರೀ ವಿಜಯ ಸಂಕೇಶ್ವರ, ಶ್ರೀ @prabhakarbkore ಮತ್ತಿತರ ಮುಖಂಡರು ಉಪಸ್ಥಿತರಿದ್ದರು.
#phirekbaarmodisarkaar #abkibaar400paar @BJP4Karnataka -
B.S.Yediyurappa
@BSYBJP
ಮೈಸೂರು ಜಿಲ್ಲೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಇಂದು ಸುತ್ತೂರು ಮಹಾಸಂಸ್ಥಾನದ ಪೀಠಾಧಿಪತಿಗಳಾದ ಪರಮಪೂಜ್ಯ ಶ್ರೀ ಶಿವರಾತ್ರಿ ದೇಶೀಕೇಂದ್ರ ಮಹಾಸ್ವಾಮೀಜಿಗಳನ್ನು ಭೇಟಿ ಮಾಡಿ ಆಶೀರ್ವಾದ ಪಡೆಯಲಾಯಿತು.
-
B.S.Yediyurappa
@BSYBJP
"ದೇಶದ ಜನತೆಯ ಆಶೋತ್ತರಗಳ ಈಡೇರಿಕೆಯೇ ಪ್ರಧಾನಿ ಮೋದಿ ಜೀ ಅವರ ಗ್ಯಾರೆಂಟಿ."
ಇಂದು ಮೈಸೂರಿನಲ್ಲಿ ಪಕ್ಷದ ವತಿಯಿಂದ ಆಯೋಜಿಸಲಾಗಿದ್ದ ಬೃಹತ್ ವಿಜಯ ಸಂಕಲ್ಪ ಸಮಾವೇಶದಲ್ಲಿ ಹೆಮ್ಮೆಯ ಪ್ರಧಾನಿ ಶ್ರೀ @narendramodi ಜೀ, ಮಾಜಿ ಪ್ರಧಾನಿ ಶ್ರೀ @H_D_Devegowda ರವರೊಂದಿಗೆ ಪಾಲ್ಗೊಳ್ಳಲಾಯಿತು. ಮಾಜಿ ಮುಖ್ಯಮಂತ್ರಿ ಶ್ರೀ @hd_kumaraswamy, ವಿರೋಧ ಪಕ್ಷದ ನಾಯಕ ಶ್ರೀ @RAshokaBJP, ಎನ್.ಡಿ.ಎ ಅಭ್ಯರ್ಥಿಗಳು, ಸಂಸದರು, ಶಾಸಕರು, ಪ್ರಮುಖರು ಉಪಸ್ಥಿತರಿದ್ದರು.
#phirekbaarmodisarkar #abkibaar400paar -
B.S.Yediyurappa
@BSYBJP
ಹಿರಿಯ ನಾಯಕರು, ಸಂಸತ್ ಸದಸ್ಯರಾದ ಶ್ರೀ ವಿ.ಶ್ರೀನಿವಾಸ್ ಪ್ರಸಾದ್ ಅವರ ನಿವಾಸಕ್ಕೆ ತೆರಳಿ ಅವರೊಂದಿಗೆ ಮಾತುಕತೆ ನಡೆಸಲಾಯಿತು. ಇದಕ್ಕೂ ಮುನ್ನ, ಭಾರತರತ್ನ ಶ್ರೀ ಬಿ.ಆರ್.ಅಂಬೇಡ್ಕರ್ ಜಯಂತಿ ಪ್ರಯುಕ್ತ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು.
-
B.S.Yediyurappa
@BSYBJP
ವಿಧಾನ ಪರಿಷತ್ ಮಾಜಿ ಸದಸ್ಯರಾದ ಶ್ರೀಮತಿ ಸುನಂದಾ ಪಾಟೀಲ ಅವರು ವಿಧಿವಶರಾದ ಸುದ್ದಿ ಅತೀವ ದುಃಖ ತಂದಿದೆ. ಅಗಲಿದ ಚೇತನಕ್ಕೆ ಸದ್ಗತಿಯನ್ನು ಪ್ರಾರ್ಥಿಸುತ್ತಾ, ದುಃಖತಪ್ತ ಕುಟುಂಬದವರಲ್ಲಿ ತೀವ್ರ ಸಂತಾಪವನ್ನು ವ್ಯಕ್ತಪಡಿಸುತ್ತೇನೆ. ಓಂ ಶಾಂತಿ
-
B.S.Yediyurappa
@BSYBJP
ದೇಶದ ಪ್ರಗತಿ, ಸಮಾಜದಲ್ಲಿ ಸಮಾನತೆಯ ಸಾಕಾರಕ್ಕೆ ತಮ್ಮ ಜೀವನವನ್ನೇ ಮುಡಿಪಾಗಿಟ್ಟ ಮೇರು ನಾಯಕ, ಸಂವಿಧಾನಶಿಲ್ಪಿ ಭಾರತರತ್ನ ಡಾ. ಬಿ.ಆರ್.ಅಂಬೇಡ್ಕರ್ ಅವರ ಜಯಂತಿಯಂದು ಆ ಮಹಾನ್ ಚೇತನಕ್ಕ ಶ್ರದ್ಧಾಪೂರ್ವಕ ಪ್ರಣಾಮಗಳು.
-
B.S.Yediyurappa
@BSYBJP
ಅಸಾಧಾರಣ ಮೇಧಾವಿ, ಅದ್ವಿತೀಯ ಸಾಧಕ, ಭಾರತರತ್ನ ಸರ್ ಎಂ.ವಿಶ್ವೇಶ್ವರಯ್ಯನವರ ಪುಣ್ಯತಿಥಿಯಂದು ಆ ಪುಣ್ಯಚೇತನಕ್ಕೆ ಅನಂತ ಪ್ರಣಾಮಗಳು.
-
B.S.Yediyurappa
@BSYBJP
ಕನ್ನಡ ನಾಡಿನ ಅಸ್ಮಿತೆಯ ಪ್ರತೀಕದಂತೆ ಬೆಳೆದ ಸಾಧಕ ಕಲಾವಿದ, ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಪುರಸ್ಕೃತ, ಪದ್ಮಭೂಷಣ ಡಾ. ರಾಜಕುಮಾರ್ ಅವರ ಪುಣ್ಯತಿಥಿಯಂದು ಆ ಕಲಾಚೇತನಕ್ಕೆ ಅನಂತ ನಮನಗಳು.
-
B.S.Yediyurappa
@BSYBJP
ಮಾನ್ಯ ಪ್ರಧಾನಿ ಶ್ರೀ @narendramodi ರವರು ಹೇಳಿದಂತೆ, "ಈ ಬಾರಿ, 400 ಮೀರಿ" ಸ್ಥಾನಗಳಲ್ಲಿ ಎನ್.ಡಿ.ಎ ಅಭ್ಯರ್ಥಿಗಳು ಜನಾಶೀರ್ವಾದ ಪಡೆಯಲು ಅವಿರತ ಪ್ರಚಾರದಲ್ಲಿ ನಿರತರಾಗಿದ್ದಾರೆ. ಇಂದು ಪಕ್ಷದ ಉಡುಪಿ ಚಿಕ್ಕಮಗಳೂರು ಕ್ಷೇತ್ರದ ಅಭ್ಯರ್ಥಿ ಶ್ರೀ @KotasBJP ಮತ್ತು ತುಮಕೂರು ಕ್ಷೇತ್ರದ ಅಭ್ಯರ್ಥಿ ಶ್ರೀ @VSOMANNA_BJP ರವರ ಪರವಾಗಿ ಎರಡೂ ಕ್ಷೇತ್ರಗಳಲ್ಲಿ ಬಿರುಸಿನ ಪ್ರಚಾರ ನಡೆಸಲಾಯಿತು.
#phirekbaarmodisarkar #abkibaar400paar @BJP4Karnataka -
B.S.Yediyurappa
@BSYBJP
ಬೆಂಗಳೂರಿನ @BJP4Karnataka ಚುನಾವಣಾ ಕಚೇರಿಯಲ್ಲಿ ಇಂದು ಪತ್ರಿಕಾಗೋಷ್ಠಿ ನಡೆಸಲಾಯಿತು.
ಈ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ಗೆ ನೀಡುವ ಮತ, ಅರಾಜಕತೆ, ದೇಶದ ಆರ್ಥಿಕ ದಿವಾಳಿತನ, ಭ್ರಷ್ಟಾಚಾರಕ್ಕೆ ನೀಡುವ ಮತವಾಗುತ್ತದೆ. ಕಾಂಗ್ರೆಸ್ ಸುಳ್ಳು ಆಶ್ವಾಸನೆಯಿಂದ ರಾಜ್ಯದ ಅಭಿವೃದ್ದಿ ಕುಂಠಿತವಾಗಿದೆ. ದೇಶದ ವಿಭಜನೆಯ ಮಾತನ್ನಾಡುವ, ಭಾಷೆ, ಜಾತಿ, ಧರ್ಮದ ನೆಲೆಯಲ್ಲಿ ಜನರನ್ನು ಒಡೆಯುವ ಹುನ್ನಾರದ ಇಂಡಿ ಮೈತ್ರಿಕೂಟವನ್ನು ತಿರಸ್ಕರಿಸಿ.
ಸುರಕ್ಷಿತ, ವಿಕಸಿತ ಭಾರತ, ಸದೃಢ ಆರ್ಥಿಕತೆ, ಹೆಮ್ಮೆಯ ಪ್ರಧಾನಿ ಶ್ರೀ ಮೋದಿ ಜೀ ನಾಯಕತ್ವಕ್ಕಾಗಿ @BJP4India ಬೆಂಬಲಿಸಿ ಎಂದು ಮತದಾರರಲ್ಲಿ ಮನವಿ ಮಾಡಲಾಯಿತು.
#viksitbharat #phirekbaarmodisarkar #abkibaar400paar -
B.S.Yediyurappa
@BSYBJP
ಎಲ್ಲ ಮುಸ್ಲಿಂ ಬಾಂಧವರಿಗೆ ಪವಿತ್ರ ರಂಜಾನ್ ಹಬ್ಬದ ಶುಭಾಶಯಗಳು. ಈ ಈದ್-ಉಲ್-ಫಿತ್ರ್ ದಿನದಂದು ನಾಡಿನ ಪ್ರಗತಿ ಹಾಗೂ ಒಳಿತಿನ ಜೊತೆಗೆ, ಎಲ್ಲರ ಜೀವನದಲ್ಲಿ ಸಂತೋಷ, ಉತ್ತಮ ಆರೋಗ್ಯ, ಯಶಸ್ಸುಗಳನ್ನು ಆ ದೇವರು ಅನುಗ್ರಹಿಸಲಿ ಎಂದು ಪ್ರಾರ್ಥಿಸೋಣ.
#ramadan #ramzan2024 #eidulfitr2024 -
B.S.Yediyurappa
@BSYBJP
ಶ್ರೀಕ್ಷೇತ್ರ ಕಾಗಿನೆಲೆಯ ಕನಕ ಗುರುಪೀಠದ ಜಗದ್ಗುರು ಪರಮಪೂಜ್ಯ ಶ್ರೀ ನಿರಂಜನಾನಂದಪುರಿ ಸ್ವಾಮೀಜಿಗಳ ಜನ್ಮದಿನದಂದು, ಅವರಿಗೆ ಪ್ರಣಾಮಪೂರ್ವಕ ಶುಭಾಶಯಗಳು. ಇನ್ನೂ ಸುದೀರ್ಘ ಕಾಲ ಸಮಾಜಕ್ಕೆ ಪೂಜ್ಯ ಶ್ರೀಗಳ ಮಾರ್ಗದರ್ಶನ ಮತ್ತು ಆಶೀರ್ವಾದಗಳು ದೊರೆಯುತ್ತಿರಲಿ ಎಂದು ಪ್ರಾರ್ಥಿಸುತ್ತೇನೆ.
-
B.S.Yediyurappa
@BSYBJP
ಎಲ್ಲರಿಗೂ ಯುಗಾದಿ ಹಬ್ಬದ ಶುಭಾಶಯಗಳು. ಹೊಸ ಭರವಸೆಗಳ ಹೊಸ ಸಂವತ್ಸರವು ಎಲ್ಲರಿಗೂ ಮಂಗಳವನ್ನುಂಟು ಮಾಡಲಿ. ಸವಾಲು, ಸಂಕಷ್ಟಗಳ ಬೇವಿನ ಜೊತೆಗೆ ಯಶಸ್ಸು, ಸಂತಸಗಳ ಬೆಲ್ಲವನ್ನೂ ಕರುಣಿಸಲಿ.
-
B.S.Yediyurappa
@BSYBJP
ಹಿರಿಯರು, ಮಾಜಿ ಪ್ರಧಾನಿಗಳಾದ ಶ್ರೀ @H_D_Devegowda, ಮಾಜಿ ಮುಖ್ಯಮಂತ್ರಿ ಶ್ರೀ @hd_kumaraswamy, ವಿರೋಧಪಕ್ಷದ ನಾಯಕ ಶ್ರೀ @RAshokaBJP, ಪಕ್ಷದ ಅಭ್ಯರ್ಥಿ ಶ್ರೀ @VSOMANNA_BJP ಮತ್ತಿತರ ನಾಯಕರ ಉಪಸ್ಥಿತಿಯಲ್ಲಿ ಇಂದು ಬೆಂಗಳೂರಿನಲ್ಲಿ ಕಾಡುಗೊಲ್ಲ ಸಮಾಜದ ಮುಖಂಡರ ಸಭೆಯಲ್ಲಿ ಭಾಗವಹಿಸಲಾಯಿತು. ಕಾಡುಗೊಲ್ಲ ಸಮಾಜದ ಹಿತರಕ್ಷಣೆಗೆ ಪಕ್ಷವು ಬದ್ಧವಾಗಿದ್ದು, ಎಸ್.ಟಿ ಪಟ್ಟಿಗೆ ಸೇರಿಸುವುದೂ ಸೇರಿದಂತೆ ಸಮಾಜದ ಆಶೋತ್ತರಗಳ ಈಡೇರಿಕೆ ನಿಟ್ಟಿನಲ್ಲಿ ತೆಗೆದುಕೊಳ್ಳಬೇಕಾದ ಕ್ರಮಗಳ ಕುರಿತಂತೆ ಚರ್ಚಿಸಲಾಯಿತು.
#phirekbaarmodisarkaar #abkibar400par @BJP4Karnataka -
B.S.Yediyurappa
@BSYBJP
ಬೆಂಗಳೂರಿನಲ್ಲಿರುವ ಉಡುಪಿ, ಚಿಕ್ಕಮಗಳೂರು ಹಾಗೂ ಮಂಗಳೂರು ಜಿಲ್ಲೆಯ ಪಕ್ಷದ ಪ್ರಮುಖರು, ಅಭಿಮಾನಿಗಳು, ಕಾರ್ಯಕರ್ತರ ವತಿಯಿಂದ ಇಂದು ನಗರದಲ್ಲಿ ಹಮ್ಮಿಕೊಂಡಿದ್ದ ಸ್ನೇಹಮಿಲನ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಾಯಿತು. #ಮತ್ತೊಮ್ಮೆಮೋದಿಸರ್ಕಾರ ಸಾಕಾರಕ್ಕಾಗಿ, ಪಕ್ಷದ ಲೋಕಸಭಾ ಅಭ್ಯರ್ಥಿಗಳಾದ ಶ್ರೀ @KotasBJP, ಶ್ರೀ @CaptBrijesh ರವರ ಗೆಲುವಿಗಾಗಿ ಮತ್ತಷ್ಟು ಹುರುಪು, ಉತ್ಸಾಹದಿಂದ ಕೆಲಸ ಮಾಡುವ ನಿಟ್ಟಿನಲ್ಲಿ ಕಾರ್ಯಕ್ರಮ ಯಶಸ್ವಿಯಾಯಿತು. ಜಿಲ್ಲೆಯ ಶಾಸಕರು, ಮುಖಂಡರು ಉಪಸ್ಥಿತರಿದ್ದರು.
#phirekbaarmodisarkaar #abkibar400par @BJP4Karnataka -
B.S.Yediyurappa
@BSYBJP
'ದೇಶ ಮೊದಲು' - ಇದೇ ನಮ್ಮ ಸಿದ್ದಾಂತ, ದೇಶಸೇವೆಯೇ ಕಾಯಕ, ಸರ್ವರಿಗೂ ಸಮಪಾಲು, ಸಮಬಾಳು, ಸಾಮಾಜಿಕ ನ್ಯಾಯ, ಅಂತ್ಯೋದಯ, ನಮ್ಮ ಬದ್ಧತೆ. ಪಕ್ಷ ಸಂಘಟನೆಗಾಗಿ ಸಮರ್ಪಿತ ನಮ್ಮ ನಿಷ್ಠಾವಂತ ಕಾರ್ಯಕರ್ತರಿಗೆ, ಪಕ್ಷವನ್ನು ಸದಾ ಬೆಂಬಲಿಸಿ ಆಶೀರ್ವದಿಸುತ್ತಿರುವ ನಾಗರಿಕ ಬಂಧುಗಳಿಗೆ ಭಾರತೀಯ ಜನತಾ ಪಾರ್ಟಿಯ "ಸಂಸ್ಥಾಪನಾ ದಿನ"ದ ಹಾರ್ದಿಕ ಶುಭಾಶಯಗಳು. ವಿಕಸಿತ ಭಾರತಕ್ಕಾಗಿ ನಾವೆಲ್ಲರೂ ಒಂದಾಗಿ ಮುನ್ನಡೆಯೋಣ, ಸಂಘಟನೆಯನ್ನು ಮತ್ತಷ್ಟು ಬಲಪಡಿಸೋಣ.
#bjpfoundationday @BJP4India @BJP4Karnataka -
B.S.Yediyurappa
@BSYBJP
ದೇಶದ ಹಿತ, ದೇಶದ ಪ್ರಗತಿ, ದೇಶ ರಕ್ಷಣೆಗೆ ಸಮರ್ಪಿತ ಪಕ್ಷವೆಂದರೆ ಅದು ಬಿಜೆಪಿ ಮಾತ್ರ. ಪಕ್ಷದ ತತ್ವ, ಸಿದ್ದಾಂತಗಳು ಮತ್ತು ಪ್ರಧಾನಿ ಶ್ರೀ @narendramodi ರವರ ಬಲಿಷ್ಠ ನಾಯಕತ್ವ ಮೆಚ್ಚಿ ಇಂದು ಬಿಜೆಪಿಗೆ ಸೇರ್ಪಡೆಗೊಂಡ ಸಂಸದೆ ಶ್ರೀಮತಿ @sumalathaA, ಮಾಜಿ ಸಂಸತ್ ಸದಸ್ಯ ಶ್ರೀ ಶಿವರಾಮಗೌಡ, ಖ್ಯಾತ ಕ್ರೀಡಾಪಟು ಶ್ರೀ @doddaganesha ಸೇರಿದಂತೆ ಹಲವರನ್ನು ಚುನಾವಣಾ ಉಸ್ತುವಾರಿ ಶ್ರೀ @AgrawalRMD, ರಾಜ್ಯಾಧ್ಯಕ್ಷ ಶ್ರೀ @BYVijayendra, ವಿರೋಧಪಕ್ಷ ನಾಯಕ ಶ್ರೀ @RAshokaBJP, ಮಾಜಿ ಮುಖ್ಯಮಂತ್ರಿ ಶ್ರೀ @DVSadanandGowda ಮತ್ತಿತರ ಪ್ರಮುಖರ ಸಮಕ್ಷಮದಲ್ಲಿ ಪಕ್ಷಕ್ಕೆ ಸ್ವಾಗತಿಸಲಾಯಿತು.
#phirekbaarmodisarkar #abkibaar400paar
@BJP4Karnataka -
B.S.Yediyurappa
@BSYBJP
ವಿಕಸಿತ ಭಾರತ ಪರಿಕಲ್ಪನೆಯ ಸಾಕಾರ,
ಅದಕ್ಕೆಂದೇ ಮತ್ತೊಮ್ಮೆ ಮೋದಿ ಸರ್ಕಾರ!
ಇಡೀ ದೇಶದ ಜನತೆಯ ಹೆಬ್ಬಯಕೆಯೇ ಇದಾಗಿದ್ದು, ನಿನ್ನೆ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಎನ್.ಡಿ.ಎ ಅಭ್ಯರ್ಥಿ @DrCNManjunath ರವರು ನಾಮಪತ್ರ ಸಲ್ಲಿಸಿದ ನಂತರ, ಜನಸಮರ್ಥನೆಯ ಅಭಿವ್ಯಕ್ತಿಯಂತೆ ರಾಮನಗರದಲ್ಲಿ ನಡೆದ ಬೃಹತ್ ಸಾರ್ವಜನಿಕ ಸಭೆಯಲ್ಲೂ ಇದೇ ಭಾವನೆ ವ್ಯಕ್ತವಾಯಿತು.
ಗೋವಾ ಮುಖ್ಯಮಂತ್ರಿ ಶ್ರೀ @DrPramodPSawant, ಮಾಜಿ ಮುಖ್ಯಮಂತ್ರಿ ಶ್ರೀ @hd_kumaraswamy ಸೇರಿದಂತೆ ಹಲವಾರು ನಾಯಕರು, ಅತಿ ಹೆಚ್ಚಿನ ಸಂಖ್ಯೆಯಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಕಾರ್ಯಕರ್ತರು ಪಾಲ್ಗೊಂಡಿದ್ದರು.
#phirekbaarmodisarkar #abkibar400par
@BJP4Karnataka -
B.S.Yediyurappa
@BSYBJP
ಸಾವಿರಾರು ಕಾರ್ಯಕರ್ತರ ಜಯಘೋಷದೊಂದಿಗೆ ಬೃಹತ್ ಸಭೆ, ಮೆರವಣಿಗೆ ಮೂಲಕ ಮಂಡ್ಯ ಲೋಕಸಭಾ ಕ್ಷೇತ್ರದ ಎನ್.ಡಿ.ಎ ಅಭ್ಯರ್ಥಿಯಾಗಿ ಶ್ರೀ @hd_kumaraswamy ರವರ ನಾಮಪತ್ರ ಸಲ್ಲಿಕೆ ಕಾರ್ಯಕ್ರಮದಲ್ಲಿ ಇಂದು ಪಾಲ್ಗೊಳ್ಳಲಾಯಿತು. ಗೋವಾ ಮುಖ್ಯಮಂತ್ರಿ ಶ್ರೀ @DrPramodPSawant, ಮೈಸೂರು ಕೊಡಗು ಎನ್.ಡಿ.ಎ ಅಭ್ಯರ್ಥಿ ಶ್ರೀ @yaduveerwadiyar, ಮಾಜಿ ಸಚಿವ ಶ್ರೀ ಪುಟ್ಟರಾಜು ಉಪಸ್ಥಿತರಿದ್ದರು.
#phirekbaarmodisarkar #abkibar400par
@BJP4Karnataka -
B.S.Yediyurappa
@BSYBJP
"ದೇಶದ ಪ್ರಗತಿಗೆ ಒಂದೇ ಪರಿಹಾರ, ಮತ್ತೊಮ್ಮೆ ಮೋದಿ ಸರ್ಕಾರ" - ಇದೇ ಘೋಷಣೆ ರಾಜ್ಯದ ಎಲ್ಲ ಕ್ಷೇತ್ರಗಳಲ್ಲಿ ಮೊಳಗುತ್ತಿದ್ದು, ಇಂದು ಸಾವಿರಾರು ಕಾರ್ಯಕರ್ತರೊಂದಿಗೆ ಬೃಹತ್ ರೋಡ್ ಶೋ ನಲ್ಲಿ ತೆರಳಿ, ತುಮಕೂರು ಲೋಕಸಭಾ ಕ್ಷೇತ್ರದ ಪಕ್ಷದ ಅಭ್ಯರ್ಥಿ ಶ್ರೀ @VSOMANNA_BJP ರವರ ನಾಮಪತ್ರ ಸಲ್ಲಿಕೆ ಕಾರ್ಯಕ್ರಮದಲ್ಲಿ, ಮಾಜಿ ಮುಖ್ಯಮಂತ್ರಿ ಶ್ರೀ @hd_kumaraswamy, ವಿರೋಧ ಪಕ್ಷದ ನಾಯಕ ಶ್ರೀ @RAshokaBJP, ಸೇರಿದಂತೆ ಹಲವು ನಾಯಕರೊಂದಿಗೆ ಪಾಲ್ಗೊಳ್ಳಲಾಯಿತು.
#phirekbaarmodisarkar #abkibaar400paar
@BJP4Karnataka -
B.S.Yediyurappa
@BSYBJP
ಸ್ವದೇಶೀ ರಾಷ್ಟ್ರ ಸ್ಥಾಪಿಸಿದ ಅಪ್ರತಿಮ ಪರಾಕ್ರಮಿ, ವೀರ ಸಾಮ್ರಾಟ್ ಛತ್ರಪತಿ ಶಿವಾಜಿ ಮಹಾರಾಜರ ಪುಣ್ಯತಿಥಿಯಂದು ಅವರಿಗೆ ಕೋಟಿ ಕೋಟಿ ಪ್ರಣಾಮಗಳು.
-
B.S.Yediyurappa
@BSYBJP
ಬೆಂಗಳೂರಿನಲ್ಲಿ ಪಕ್ಷದ ವತಿಯಿಂದ ನಡೆದ ವಿಜಯ ಸಂಕಲ್ಪ ಸಮಾವೇಶ - ಶಕ್ತಿ ಕೇಂದ್ರ ಪ್ರಮುಖರ ಸಮ್ಮೇಳನದಲ್ಲಿ ನಮ್ಮ ಹಿರಿಯ ನಾಯಕರು, ಕೇಂದ್ರ ಗೃಹ ಸಚಿವರಾದ ಸನ್ಮಾನ್ಯ ಶ್ರೀ @AmitShah ರವರೊಂದಿಗೆ ಪಾಲ್ಗೊಳ್ಳಲಾಯಿತು. ರಾಜ್ಯಾಧ್ಯಕ್ಷ ಶ್ರೀ @BYVijayendra, ಕೇಂದ್ರ ಸಚಿವ ಶ್ರೀ @JoshiPralhad, ವಿರೋಧ ಪಕ್ಷದ ನಾಯಕ ಶ್ರೀ @RAshokaBJP ಸೇರಿದಂತೆ ಹಿರಿಯ ನಾಯಕರು, ಈ ಭಾಗದ ಐದು ಕ್ಷೇತ್ರಗಳ ಪಕ್ಷದ ಅಭ್ಯರ್ಥಿಗಳು, ಮುಖಂಡರು, ಪದಾಧಿಕಾರಿಗಳು ಮತ್ತು ಹೆಚ್ಚಿನ ಸಂಖ್ಯೆಯಲ್ಲಿ ನಮ್ಮ ಕಾರ್ಯಕರ್ತರು ಪಾಲ್ಗೊಂಡಿದ್ದರು.
'ಮತ್ತೊಮೆ ಮೋದಿ ಸರ್ಕಾರ'ದ ಜಯಘೋಷ ರಾಜ್ಯದ ಎಲ್ಲೆಡೆಯೂ ಪ್ರತಿಧ್ವನಿಸುತ್ತಿದ್ದು, ರಾಜ್ಯ ಹಾಗೂ ದೇಶದ ಸರ್ವತೋಮುಖ ಅಭಿವೃದ್ಧಿಗಾಗಿ ಈ ಬಾರಿ ರಾಜ್ಯದ ಎಲ್ಲಾ ಕ್ಷೇತ್ರಗಳಲ್ಲಿ ಬಿಜೆಪಿ ಜಯಭೇರಿ ಬಾರಿಸಲಿದೆ.
#bjpjodovscongresstodo #phirekbaarmodisarkar #abkibaar400paar @BJP4Karnataka -
B.S.Yediyurappa
@BSYBJP
ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಪಕ್ಷದ ಅಭ್ಯರ್ಥಿ ಶ್ರೀ @PCMohanMP ರವರ ನಾಮಪತ್ರ ಸಲ್ಲಿಕೆ ಕಾರ್ಯಕ್ರಮದಲ್ಲಿ ಇಂದು ಪಾಲ್ಗೊಳ್ಳಲಾಯಿತು. ಇದಕ್ಕೂ ಮುನ್ನ ಬಹಿರಂಗ ಸಭೆ, ಬೃಹತ್ ರೋಡ್ ಶೋ ಮೂಲಕ ಪಕ್ಷದ ಅಭ್ಯರ್ಥಿಯ ಪರವಾಗಿ ಪ್ರಚಾರ ನಡೆಸಲಾಯಿತು. ಮಾಜಿ ಮುಖ್ಯಮಂತ್ರಿ ಶ್ರೀ @DVSadanandGowda, ವಿರೋಧಪಕ್ಷದ ನಾಯಕ ಶ್ರೀ @RAshokaBJP, ಪಕ್ಷದ ಹಲವು ನಾಯಕರು, ಶಾಸಕರು, ಮುಖಂಡರು ಉಪಸ್ಥಿತರಿದ್ದರು.
#phirekbaarmodisarkar #abkibaar400paar #bjp4karnataka
@BJP4Karnataka -
B.S.Yediyurappa
@BSYBJP
ನಾಡು ಕಂಡ ಸಾಧಕ ಶರಣರು, ಸಾವಿರಾರು ಬಡಮಕ್ಕಳ ಬಾಳನ್ನು ಬೆಳಗಿದ ತ್ರಿವಿಧ ದಾಸೋಹಿ, ಪದ್ಮಭೂಷಣ, ಪರಮಪೂಜ್ಯ ಶ್ರೀ ಶ್ರೀ ಡಾ. ಶಿವಕುಮಾರ ಸ್ವಾಮಿಗಳ ಜಯಂತಿಯಂದು ಆ ದಿವ್ಯಚೇತನಕ್ಕೆ ಅನಂತ ಪ್ರಣಾಮಗಳು.
-
B.S.Yediyurappa
@BSYBJP
ನಮ್ಮ ಹಿರಿಯ ನಾಯಕರಾದ ಕೇಂದ್ರ ಗೃಹ ಸಚಿವ ಶ್ರೀ ಅಮಿತ್ ಶಾ ರವರ ಬಗ್ಗೆ ಯತೀಂದ್ರ ಸಿದ್ದರಾಮಯ್ಯನವರ ಹೇಳಿಕೆ ಖಂಡನಾರ್ಹ ಮಾತ್ರವಲ್ಲ, ತೀರಾ ಕೀಳು ಮಟ್ಟದ್ದಾಗಿದೆ. ಒಬ್ಬ ಮಾಜಿ ಶಾಸಕರಾಗಿ ಮತ್ತು ರಾಜ್ಯದ ಮುಖ್ಯಮಂತ್ರಿಗಳ ಮಗನಾಗಿ ಕನಿಷ್ಠ ಘನತೆಯನ್ನೂ ಕೂಡ ಅವರು ಮರೆತಂತಿದೆ.
ಮೈಸೂರು ಹಾಗೂ ಕರ್ನಾಟಕದ ಇನ್ನಿತರ ಭಾಗಗಳಲ್ಲಿ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲು ನಿಚ್ಚಳವಾಗಿದ್ದು, ಹತಾಶೆಯಿಂದ ಯತೀಂದ್ರ ಅವಹೇಳನಕಾರಿ ಪದ ಪ್ರಯೋಗಕ್ಕೆ ಮುಂದಾಗಿದ್ದಾರೆ. ದೇಶದ ಗೃಹ ಸಚಿವರ ಕುರಿತಾದ ಅವರ ಕೀಳು ಮಟ್ಟದ ಹೇಳಿಕೆಯನ್ನು ನಾನು ಬಲವಾಗಿ ಖಂಡಿಸುತ್ತೇನೆ. ಈ ಅವರು ಕೂಡಲೇ ಕ್ಷಮೆ ಕೇಳಬೇಕು. ಇನ್ನು ಮುಂದಾದರೂ ಸಾರ್ವಜನಿಕ ಜೀವನದಲ್ಲಿ ಸಭ್ಯತೆಯಿಂದ ವರ್ತಿಸುತ್ತಾರೆ ಎಂದು ನಿರೀಕ್ಷಿಸುತ್ತೇನೆ. -
B.S.Yediyurappa
@BSYBJP
ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ಪಕ್ಷದ ಸಂಘಟನೆ ಮತ್ತು ನಮ್ಮ ಕಾರ್ಯಕರ್ತರನ್ನು ಹುರಿದುಂಬಿಸುವ ಉದ್ದೇಶದಿಂದ, ಪಕ್ಷದ ಅಭ್ಯರ್ಥಿ ಶ್ರೀ ಜಗದೀಶ ಶೆಟ್ಟರ್ ಅವರೊಂದಿಗೆ ಇಂದು ಬೆಳಗಾವಿಗೆ ಭೇಟಿ ನೀಡಲಾಯಿತು. ಅತ್ಯಂತ ಪ್ರೀತಿ ಉತ್ಸಾಹಗಳಿಂದ ಸಾವಿರಾರು ಸಂಖ್ಯೆಯಲ್ಲಿ ನೆರೆದಿದ್ದ ನಮ್ಮ ಕಾರ್ಯಕರ್ತರೊಂದಿಗೆ ಬೈಕ್ ರ್ಯಾಲಿ ನಡೆಸಲಾಯಿತು. ಈ ಬಾರಿಯೂ ಬೆಳಗಾವಿಯಲ್ಲಿ ಬಿಜೆಪಿ ಗೆಲುವಿನ ಧ್ವಜ ಹಾರಾಡಲಿದೆ. ರಾಜ್ಯದ ಎಲ್ಲ ಕಡೆಯಲ್ಲಿಯೂ ಇದೇ ರೀತಿಯ ವಾತಾವರಣವಿದ್ದು, ಮತ್ತೊಮ್ಮೆ ಮೋದಿ ಸರ್ಕಾರ ಬರುವುದು ಸುನಿಶ್ಚಿತವಾಗಿದೆ.
#abkibaarphirmodisarkar @BJP4Karnataka @JagadishShettar -
B.S.Yediyurappa
@BSYBJP
ತಮ್ಮ ಕಲ್ಯಾಣ ರಾಜ್ಯ ಪ್ರಗತಿ ಪಕ್ಷವನ್ನು @BJP4Karnataka ದಲ್ಲಿ ವಿಲೀನಗೊಳಿಸಿ, ಇಂದು ಪಕ್ಷಕ್ಕೆ ಸೇರ್ಪಡೆಗೊಂಡ ಗಂಗಾವತಿ ಶಾಸಕ ಶ್ರೀ @GaliJanardhanar ಮತ್ತು ಎಲ್ಲ ಮುಖಂಡರನ್ನು ಆತ್ಮೀಯವಾಗಿ ಸ್ವಾಗತಿಸಲಾಯಿತು. ಇನ್ನೂ ಹೆಚ್ಚಿನ ರೀತಿಯಲ್ಲಿ ಯಶಸ್ವಿಯಾಗಿ ಪಕ್ಷ ಸಂಘಟನೆಯಲ್ಲಿ ತೊಡಗುವಂತೆ ಹಾರೈಸಲಾಯಿತು. ಪಕ್ಷದ ರಾಜ್ಯಾಧ್ಯಕ್ಷ ಶ್ರೀ @BYVijayendra, ಹಿರಿಯ ನಾಯಕ ಶ್ರೀ @sriramulubjp ಸೇರಿದಂತೆ ಹಲವಾರು ನಾಯಕರು ಉಪಸ್ಥಿತರಿದ್ದರು.
-
B.S.Yediyurappa
@BSYBJP
ಅನಾರೋಗ್ಯಕ್ಕೆ ಒಳಗಾಗಿ ಚಿಕಿತ್ಸೆ ಪಡೆಯುತ್ತಿರುವ ಆಧ್ಯಾತ್ಮ ಚಿಂತಕ ಶ್ರೀ @SadhguruJV ಅವರು ಶೀಘ್ರದಲ್ಲಿ ಗುಣಮುಖರಾಗಿ ಸಂಪೂರ್ಣ ಚೇತರಿಸಿಕೊಳ್ಳಲಿ, ಮತ್ತೆ ಎಂದಿನಂತೆ ತಮ್ಮ ಸಮಾಜಮುಖಿ ಕಾರ್ಯಚಟುವಟಿಕೆಗಳಲ್ಲಿ ತೊಡಗಿಕೊಳ್ಳಲಿ ಎಂದು ಹಾರೈಸುತ್ತೇನೆ.
@ishafoundation -
B.S.Yediyurappa
@BSYBJP
ಜನಸಂಘದ ಕಾಲದಿಂದಲೂ ಸಂಘಟನೆ ಮತ್ತು ಸಾರ್ವಜನಿಕ ಸೇವೆಯಲ್ಲಿ ಸಕ್ರಿಯರಾಗಿದ್ದ ಹಿರಿಯ ಮುಖಂಡರು, ನಿಷ್ಠಾವಂತ ಸ್ವಯಂಸೇವಕರು, ಆತ್ಮೀಯರಾದ ಶ್ರೀ ಮ.ಚಂದ್ರಹಾಸರವರು ವಿಧಿವಶರಾದ ಸುದ್ದಿ ಅತೀವ ನೋವನ್ನುಂಟು ಮಾಡಿದೆ. ಅವರ ಆತ್ಮಕ್ಕೆ ಸದ್ಗತಿ ಪ್ರಾರ್ಥಿಸುತ್ತೇನೆ. ಕುಟುಂಬದ ಸದಸ್ಯರಲ್ಲಿ, ಅವರ ಒಡನಾಡಿಗಳಲ್ಲಿ ತೀವ್ರ ಸಂತಾಪಗಳು. ಓಂ ಶಾಂತಿ
-
B.S.Yediyurappa reposted
Narendra Modi
@narendramodi
Phenomenal enthusiasm at the rally in Shivamogga. The support for @BJP4Karnataka is tremendous.
x.com/i/broadcasts/1gqxvQZQYvOJB -
B.S.Yediyurappa
@BSYBJP
ವರನಟ ಡಾ. ರಾಜ್ ಕುಮಾರ್ ಅವರ ವರಪುತ್ರ, ಅಭಿಮಾನಿಗಳ ಪಾಲಿನ ಆರಾಧ್ಯ ಕಲಾವಿದ, ಕರ್ನಾಟಕ ರತ್ನ, ದಿವಂಗತ ಡಾ. ಪುನೀತ್ ರಾಜ್ ಕುಮಾರ್ ಅವರ ಜನ್ಮದಿನದಂದು ಆ ಪ್ರೇರಣಾದಾಯಕ ಚೇತನಕ್ಕೆ ಅನಂತ ನಮನಗಳು.
#puneethrajkumar -
B.S.Yediyurappa reposted
Narendra Modi
@narendramodi
Wonderful to be in Karnataka. Speaking at a massive rally in Kalaburagi. Do watch.
x.com/i/broadcasts/1eaKbgRpOqeGX -
B.S.Yediyurappa
@BSYBJP
ಸಮಾಜಸೇವೆ, ಲೋಕೋಪಕಾರ, ಶಿಕ್ಷಣ, ಉದ್ಯಮಶೀಲತೆ, ಗ್ರಂಥ ಲೇಖನ ಮುಂತಾದ ಹಲವಾರು ಕ್ಷೇತ್ರಗಳಲ್ಲಿ ಅಪಾರ ಸಾಧನೆ ಮಾಡಿರುವ ನಮ್ಮೆಲ್ಲರ ಅಭಿಮಾನದ ಸಾಧಕಿ ಶ್ರೀಮತಿ @SmtSudhaMurty ಅವರು ರಾಜ್ಯಸಭೆಗೆ ನಾಮನಿರ್ದೇಶನ ಗೊಂಡಿರುವುದು ಅತ್ಯಂತ ಹೆಮ್ಮೆ, ಸಂತಸಗಳನ್ನು ತಂದಿದೆ. ಸರಳತೆ, ಸಜ್ಜನಿಕೆ ಮತ್ತು ಕ್ರಿಯಾಶೀಲ ವ್ಯಕ್ತಿತ್ವದ ಶ್ರೀಮತಿ ಸುಧಾಮೂರ್ತಿ ರವರಿಗೆ ಅಭಿನಂದನೆಗಳ ಜೊತೆಗೆ ರಾಜ್ಯಸಭೆಯಲ್ಲಿ ಕೂಡ ರಾಜ್ಯವನ್ನು ಸಮರ್ಥವಾಗಿ ಪ್ರತಿನಿಧಿಸುತ್ತಾರೆ ಎನ್ನುವ ವಿಶ್ವಾಸವನ್ನು ವ್ಯಕ್ತಪಡಿಸುತ್ತೇನೆ.
Narendra Modi
@narendramodi
I am delighted that the President of India has nominated @SmtSudhaMurty Ji to the Rajya Sabha. Sudha Ji's contributions to diverse fields including social work, philanthropy and education have been immense and inspiring. Her presence in the Rajya Sabha is a powerful testament to our 'Nari Shakti', exemplifying the strength and potential of women in shaping our nation's destiny. Wishing her a fruitful Parliamentary tenure.
-
B.S.Yediyurappa
@BSYBJP
ನಾಡಿನ ಎಲ್ಲ ಭಕ್ತಜನತೆಗೆ ಮಹಾಶಿವರಾತ್ರಿ ಹಬ್ಬದ ಭಕ್ತಿಪೂರ್ವಕ ಶುಭಾಶಯಗಳು. ಆ ಪರಶಿವನ ಅನುಗ್ರಹದ ಶ್ರೀರಕ್ಷೆ ಸದಾ ಇರಲಿ ಎಂದು ಪ್ರಾರ್ಥಿಸೋಣ.
#mahashivaratri2024 #ಶಿವರಾತ್ರಿ -
B.S.Yediyurappa
@BSYBJP
ಹೆಸರಾಂತ ಕಲಾವಿದ, ಪಕ್ಷದ ಮುಖಂಡ, ಕನ್ನಡದಲ್ಲಿ ಐಎಎಸ್ ಪರೀಕ್ಷೆ ಬರೆದು ಯಶಸ್ವಿಯಾಗಿದ್ದ ನಿವೃತ್ತ ಐಎಎಸ್ ಅಧಿಕಾರಿ ಕೆ.ಶಿವರಾಮ್ ಹೃದಯಾಘಾತದಿಂದ ನಿಧನರಾದ ಸುದ್ದಿ ಅತೀವ ಆಘಾತ ತಂದಿದೆ. ಅವರು ಅಸ್ವಸ್ಥರಾದ ವಿಷಯ ತಿಳಿದು ಇಂದು ಬೆಳಗ್ಗೆ ಆಸ್ಪತ್ರೆಗೆ ತೆರಳಿ ಅವರನ್ನು ನೋಡಿ, ಶೀಘ್ರದಲ್ಲಿ ಗುಣಮುಖರಾಗಲಿ ಎಂದು ಪ್ರಾರ್ಥಿಸಿದ್ದೆ. ಆದರೆ ವಿಧಿ ಅವರನ್ನು ಬೇಗ ಕರೆದುಕೊಂಡಿದೆ. ಅವರ ಆತ್ಮಕ್ಕೆ ಚಿರಶಾಂತಿ ಕೋರುತ್ತಾ, ಅವರ ಕುಟುಂಬದವರಲ್ಲಿ ಹಾಗು ಅಭಿಮಾನಿಗಳಲ್ಲಿ ನನ್ನ ಸಂತಾಪಗಳನ್ನು ಸಲ್ಲಿಸುತ್ತೇನೆ.
-
B.S.Yediyurappa
@BSYBJP
ರಾಜ್ಯಸಭಾ ಚುನಾವಣೆಯಲ್ಲಿ ಜಯಗಳಿಸಿದ ಪಕ್ಷದ ಅಭ್ಯರ್ಥಿ ಶ್ರೀ ನಾರಾಯಣಸಾ ಕೆ. ಭಾಂಡಗೆ ಅವರಿಗೆ ಹಾರ್ದಿಕ ಅಭಿನಂದನೆಗಳು.
@BJP4Karnataka -
B.S.Yediyurappa
@BSYBJP
ಧನ್ಯವಾದಗಳು ಶ್ರೀ @hd_kumaraswamy ಅವರೇ!
ಹೆಚ್.ಡಿ.ಕುಮಾರಸ್ವಾಮಿ | HD Kumaraswamy
@hd_kumaraswamy
ರಾಜ್ಯದ ಮಾಜಿ ಮುಖ್ಯಮಂತ್ರಿಗಳು, @BJP4Karnataka ಹಿರಿಯ ನೇತಾರರು ಆಗಿರುವ ಶ್ರೀ @BSYBJP ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು.
ಆ ಭಗವಂತ ಅವರಿಗೆ ಉತ್ತಮ ಆಯುರಾರೋಗ್ಯ ನೀಡಲಿ ಹಾಗೂ ಇನ್ನಷ್ಟು ದೀರ್ಘಕಾಲ ಜನತೆಯ ಸೇವೆ ಮಾಡುವ ಚೈತನ್ಯವನ್ನು ಕರುಣಿಸಲಿ ಎಂದು ಹಾರೈಸುತ್ತೇನೆ. -
B.S.Yediyurappa
@BSYBJP
ಧನ್ಯವಾದಗಳು ಶ್ರೀ @DVSadanandGowda ಅವರೇ!
Sadananda Gowda
@DVSadanandGowda
ರೈತ ಬಂಧು, ಮಾಜಿ ಮುಖ್ಯಮಂತ್ರಿಗಳು, ರಾಜ್ಯದ ಧೀಮಂತ ನಾಯಕರು ಆದ ಶ್ರೀ @BSYBJP ಅವರಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು. ಇಂದು ಬೆಳಿಗ್ಗೆ ಫೋನ್ ಕರೆ ಮಾಡಿ ಮಾನ್ಯರ ಆರೋಗ್ಯದ ಕುರಿತು ವಿಚಾರಿಸಿದ್ದು, ಶುಭವನ್ನು ಕೋರಿದ್ದೇನೆ.
-
B.S.Yediyurappa
@BSYBJP
Thank you for your wishes Shri @nitin_gadkari Ji.
Nitin Gadkari
@nitin_gadkari
#happybirthday Shri @BSYBJP ji. 💐
-
B.S.Yediyurappa
@BSYBJP
ಧನ್ಯವಾದಗಳು ಶ್ರೀ @JagadishShettar ಅವರೇ!
Jagadish Shettar
@JagadishShettar
ಭಾರತೀಯ ಜನತಾ ಪಕ್ಷದ ಹಿರಿಯ ನಾಯಕರು, ಮಾಜಿ ಮುಖ್ಯಮಂತ್ರಿಗಳು, ಬಿಜೆಪಿ ಸಂಸದೀಯ ಮಂಡಳಿ ಸದಸ್ಯರು ಆಗಿರುವ ಸನ್ಮಾನ್ಯ ಶ್ರೀ ಬಿ. ಎಸ್. ಯಡಿಯೂರಪ್ಪ ಅವರಿಗೆ ಜನ್ಮದಿನದ ಶುಭಾಶಯಗಳು.
@BSYBJP -
B.S.Yediyurappa
@BSYBJP
ಧನ್ಯವಾದಗಳು ಶ್ರೀ @BSBommai ರವರೇ!
Basavaraj S Bommai
@BSBommai
ಮಾಜಿ ಮುಖ್ಯಮಂತ್ರಿಗಳು, ರೈತ ನಾಯಕರು, ದಿಟ್ಟ ಧೀಮಂತ ನಾಯಕರು ಹಾಗೂ @BJP4India ರಾಷ್ಟ್ರೀಯ ಸಂಸದೀಯ ಮಂಡಳಿ ಸದಸ್ಯರಾದ ಸನ್ಮಾನ್ಯ ಶ್ರೀ ಬಿ. ಎಸ್. ಯಡಿಯೂರಪ್ಪ ರವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು.
ದೇವರು ಅವರಿಗೆ ಹೆಚ್ಚಿನ ಆಯಸ್ಸು ಹಾಗೂ ಉತ್ತಮ ಆರೋಗ್ಯ ನೀಡಲಿಯೆಂದು ಪ್ರಾರ್ಥಿಸುತ್ತೇನೆ.
@BSYBJP @BJP4Karnataka -
B.S.Yediyurappa
@BSYBJP
ಧನ್ಯವಾದಗಳು ಶ್ರೀ @JoshiPralhad ಅವರೇ!
Pralhad Joshi
@JoshiPralhad
ಕರ್ನಾಟಕದ ಮಾಜಿ ಮುಖ್ಯಮಂತ್ರಿಗಳಾದ ಶ್ರೀ ಬಿ.ಎಸ್.ಯಡಿಯೂರಪ್ಪನವರಿಗೆ ಜನ್ಮದಿನದ ಶುಭಾಶಯಗಳು. ದೇವರು ನಿಮಗೆ ಆಯುರಾರೋಗ್ಯ ಕರುಣಿಸಲಿ, ನಿಮ್ಮ ಮಾರ್ಗದರ್ಶನದಲ್ಲಿ ಪಕ್ಷವು ಮತ್ತಷ್ಟು ಏಳಿಗೆ ಕಾಣಲಿ ಎಂದು ಆಶಿಸುತ್ತೇನೆ.
@BSYBJP -
B.S.Yediyurappa
@BSYBJP
ತಮ್ಮ ಹಾರೈಕೆಗಳಿಗೆ ಹೃತ್ಪೂರ್ವಕ ಧನ್ಯವಾದಗಳು ಶ್ರೀ @H_D_Devegowda ಅವರೇ!
H D Devegowda
@H_D_Devegowda
ಮಾಜಿ ಮುಖ್ಯಮಂತ್ರಿಗಳು ಹಾಗೂ ಬಿಜೆಪಿ ಪಕ್ಷದ ಹಿರಿಯ ಮುಖಂಡರಾದ ಶ್ರೀ ಬಿ.ಎಸ್ ಯಡಿಯೂರಪ್ಪ ಅವರಿಗೆ ಜನ್ಮದಿನದ ಶುಭಾಶಯಗಳು.
ಭಗವಂತ ಅವರಿಗೆ ಹೆಚ್ಚಿನ ಆಯಸ್ಸು ಹಾಗೂ ಉತ್ತಮ ಆರೋಗ್ಯ ನೀಡಲಿಯೆಂದು ಹಾರೈಸುತ್ತೇನೆ.
@BSYBJP -
B.S.Yediyurappa
@BSYBJP
Thank you Shri @AmitShah Ji for your warm wishes.
Amit Shah
@AmitShah
Warm birthday wishes to Shri @BSYBJP Ji. Your hard work and dedication have played a crucial role in expanding the party's footprint. I pray to the Almighty for your long and healthy life.
ಶ್ರೀ ಬಿ ಎಸ್ ಯಡಿಯೂರಪ್ಪ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು. ನಿಮ್ಮ ಕಠಿಣ ಪರಿಶ್ರಮ ಮತ್ತು ಸಮರ್ಪಣಾ ಮನೋಭಾವ ಪಕ್ಷದ ಹೆಜ್ಜೆ ಗುರುತನ್ನು ವಿಸ್ತರಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸಿದೆ. ನಿಮ್ಮ ದೀರ್ಘ ಮತ್ತು ಆರೋಗ್ಯಕರ ಜೀವನಕ್ಕಾಗಿ ನಾನು ದೇವರಲ್ಲಿ ಪ್ರಾರ್ಥಿಸುತ್ತೇನೆ. -
B.S.Yediyurappa
@BSYBJP
ಸ್ವಾತಂತ್ರ್ಯವೀರ ಶ್ರೀ ವಿನಾಯಕ ದಾಮೋದರ್ ಸಾವರ್ಕರ್ ಅವರ ಪುಣ್ಯ ತಿಥಿಯಂದು ಆ ಮಹಾನ್ ಚೇತನಕ್ಕೆ ಅನಂತ ಪ್ರಣಾಮಗಳು. ಅವರ ದೇಶಭಕ್ತಿ, ಚಿಂತನೆಗಳು, ದೇಶದ ಸ್ವಾತಂತ್ರ್ಯಕ್ಕಾಗಿ ಅವರ ತ್ಯಾಗ, ಹೋರಾಟಗಳು ಅಜರಾಮರ.
-
B.S.Yediyurappa
@BSYBJP
Deeply saddened by the passing away of senior Supreme Court advocate Padma Vibhushan Shri Fali S Nariman. His legal acumen and advocacy played a critical role in securing Karnataka's river rights and ensuring a fair share for our state. My heartfelt condolences to his family.
-
B.S.Yediyurappa
@BSYBJP
ಅನ್ನ ದೇವರ ಮುಂದೆ | ಇನ್ನು ದೇವರು ಉಂಟೆ
ಅನ್ನವಿರುವನಕ ಪ್ರಾಣವು | ಜಗದೊಳಗನ್ನವೇ ದೈವ ಸರ್ವಜ್ಞ||
ಕನ್ನಡದ ತ್ರಿಪದಿ ಸಾಹಿತ್ಯದ ಸಂತ ಕವಿ, ಸರಳ ನುಡಿಗಳಲ್ಲಿ ಜೀವನಾದರ್ಶಗಳನ್ನು ಜಗತ್ತಿಗೆ ನೀಡಿದ ದಾರ್ಶನಿಕ, ಸರ್ವಜ್ಞ ಮಹಾಕವಿಯ ಜಯಂತಿಯಂದು ಅವರಿಗೆ ಶ್ರದ್ಧಾಪೂರ್ವಕ ನಮನಗಳು. -
B.S.Yediyurappa
@BSYBJP
ಭಾರತಮಾತೆಯ ವೀರ ಪರಾಕ್ರಮಿ ಪುತ್ರ, ಹಿಂದೂ ಹೃದಯ ಸಾಮ್ರಾಟ್, ಛತ್ರಪತಿ ಶಿವಾಜಿ ಮಹಾರಾಜರ ಜಯಂತಿಯಂದು ಆ ವೀರ ಚೇತನಕ್ಕೆ ಅನಂತ ಪ್ರಣಾಮಗಳು.
-
B.S.Yediyurappa
@BSYBJP
ವಿಕಸಿತ ಭಾರತ ನಿರ್ಮಾಣ ಹಾಗೂ ಪಕ್ಷ ಸಂಘಟನೆಯನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ದೆಹಲಿಯಲ್ಲಿ ನಡೆಯುತ್ತಿರುವ ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ಹೆಮ್ಮೆಯ ಪ್ರಧಾನಿ ಶ್ರೀ @narendramodi ಜೀ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಶ್ರೀ @JPNadda ಜೀ, ಗೃಹ ಸಚಿವ ಶ್ರೀ @AmitShah ಜೀ ಸೇರಿದಂತೆ ನಮ್ಮ ಎಲ್ಲಾ ಹಿರಿಯ ನಾಯಕರು, ಸಚಿವರು, ಪದಾಧಿಕಾರಿಗಳೊಂದಿಗೆ ಪಾಲ್ಗೊಳ್ಳಲಾಯಿತು.
#bjpnationalconvention2024 -
B.S.Yediyurappa reposted
Narendra Modi
@narendramodi
भाजपा कार्यकर्ताओं की निष्ठा और समर्पण से हमें जनता-जनार्दन का भरपूर आशीर्वाद मिल रहा है। 2024 में तीसरी बार सरकार बनाकर हम जनसेवा और राष्ट्र सेवा का अप्रतिम इतिहास रचने जा रहे हैं। नई दिल्ली में भाजपा राष्ट्रीय अधिवेशन को संबोधित कर रहा हूं। x.com/i/broadcasts/1BdGYrVXRPXJX
-
B.S.Yediyurappa
@BSYBJP
ದಾಖಲೆಯ 15ನೇ ಬಜೆಟ್ ಮಂಡಿಸಿದ ಸನ್ಮಾನ್ಯ ಮುಖ್ಯಮಂತ್ರಿ ಶ್ರೀ @siddaramaiah ರವರಿಂದ ಇಂತಹ ಕಳಪೆ ಬಜೆಟ್ ನಿರೀಕ್ಷಿಸಿರಲಿಲ್ಲ. ದೆಹಲಿಯಲ್ಲಿ ಕಾಂಗ್ರೆಸ್ ನಡೆಸಿದ ಪ್ರತಿಭಟನೆಯ ಮುಂದುವರಿದ ಭಾಗವಾಗಿ, ತಮ್ಮ ವೈಫಲ್ಯ ಮುಚ್ಚಿಕೊಳ್ಳಲು, ಕೇಂದ್ರ ಸರ್ಕಾರವನ್ನು ದೂರಲು ಈ ಬಜೆಟ್ ಮಂಡಿಸಿದಂತಿದೆ. ಗೊತ್ತುಗುರಿಯಿಲ್ಲದ, ರಾಜ್ಯದ ಅಭಿವೃದ್ಧಿಗೆ ಮಾರಕವಾಗಿರುವ ಈ ಬಜೆಟ್ ಬಗ್ಗೆ ನನ್ನ ಪತ್ರಿಕಾ ಹೇಳಿಕೆಯನ್ನು ತಮ್ಮೆಲ್ಲರೊಂದಿಗೆ ಈ ಮೂಲಕ ಹಂಚಿಕೊಳ್ಳುತ್ತಿದ್ದೇನೆ.
@BJP4Karnataka -
B.S.Yediyurappa
@BSYBJP
ಸರ್ವರಿಗೂ, ಮಾನವತಾವಾದಿ ದಾರ್ಶನಿಕ, ಸಮಾಜ ಪರಿವರ್ತನಾ ಯೋಗಿ, ಬಂಜಾರ ಸಮಾಜದ ಕುಲಗುರುಗಳಾದ ಸಂತ ಶ್ರೀ ಸೇವಾಲಾಲ್ ಮಹಾರಾಜರ ಜಯಂತಿಯ ಹಾರ್ದಿಕ ಶುಭಾಶಯಗಳು. ವಿಶೇಷವಾಗಿ ಬಂಜಾರ ಸಮುದಾಯದ ಶ್ರೇಯೋಭಿವೃದ್ಧಿಗೆ ಅಪಾರವಾಗಿ ಶ್ರಮಿಸಿದ್ದ ಸಂತ ಸೇವಾಲಾಲರ ಆದರ್ಶ ಅನುಕರಣೀಯ.
-
B.S.Yediyurappa
@BSYBJP
ಪಕ್ಷದ ಕಟ್ಟಾಳು, ಸರಳ ಸಜ್ಜನಿಕೆಯ ಮುತ್ಸದ್ದಿ ನಾಯಕ, ಆತ್ಮೀಯ ಒಡನಾಡಿಯಾಗಿದ್ದ ಶ್ರೀ ವಿ.ಎಸ್.ಆಚಾರ್ಯ ಅವರ ಪುಣ್ಯಸ್ಮರಣೆಯಂದು ಆ ಹಿರಿಯ ಚೇತನಕ್ಕೆ ಅನಂತ ಪ್ರಣಾಮಗಳು.
-
B.S.Yediyurappa
@BSYBJP
Remembering Padma Vibhushan Smt. Sushma Swaraj Ji on her birth anniversary. A distinguished parliamentarian and administrator, Sushma Ji will be remembered for her unwavering dedication to public service.
-
B.S.Yediyurappa
@BSYBJP
ಕರ್ನಾಟಕದಿಂದ ರಾಜ್ಯಸಭೆಗೆ ನಡೆಯಲಿರುವ ಚುನಾವಣೆಯಲ್ಲಿ ನಮ್ಮ ಪಕ್ಷದ ಅಭ್ಯರ್ಥಿಯಾಗಿ ಆಯ್ಕೆಯಾಗಿರುವ ಹಿರಿಯ ಕಾರ್ಯಕರ್ತ ಶ್ರೀ ನಾರಾಯಣಸಾ ಕೆ ಭಾಂಡಗೆ ಅವರಿಗೆ ಅಭಿನಂದನೆಗಳು ಹಾಗೂ ಸಂಸತ್ತಿನಲ್ಲಿ ಅವರ ಯಶಸ್ವಿ ಕಾರ್ಯನಿರ್ವಹಣೆಗೆ ನನ್ನ ಹಾರ್ದಿಕ ಶುಭಕಾಮನೆಗಳು.
@BJP4Karnataka -
B.S.Yediyurappa
@BSYBJP
ಪ್ರಖರ ರಾಷ್ಟ್ರೀಯವಾದಿ ಚಿಂತಕ, ಅಂತ್ಯೋದಯ, ಏಕಾತ್ಮ ಮಾನವತಾವಾದದ ಹರಿಕಾರ, ಪಂಡಿತ್ ದೀನ್ ದಯಾಳ್ ಉಪಾಧ್ಯಾಯರ ಪುಣ್ಯಸ್ಮರಣೆಯಂದು ಆ ಮಹಾನ್ ಚೇತನಕ್ಕೆ ಅನಂತ ಪ್ರಣಾಮಗಳು.
-
B.S.Yediyurappa
@BSYBJP
I heartily welcome Hon'ble Prime Minister Shri @narendramodi Ji's decision to bestow the nation's highest civilian award 'Bharat Ratna' posthumously on farmers leader and former PM Shri Chaudhary Charan Singh Ji, veteran statesman and former PM Shri P.V.Narasimha Rao garu and renowned agricultural scientist Dr. M.S.Swaminathan Ji.
Bharat Ratna is a befitting honour for the enduring legacies these stalwarts have left behind, contributing significantly to the nation's progress. -
B.S.Yediyurappa
@BSYBJP
ಪರಮಪೂಜ್ಯ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳ ದಿವ್ಯಸಾನ್ನಿಧ್ಯದಲ್ಲಿ ಶ್ರೀ ಮತ್ಸುತ್ತೂರು ಜಗದ್ಗುರು ಈ ವೀರಸಿಂಹಾಸನ ಮಹಾಸಂಸ್ಥಾನ ಸ್ಥಾಪನಾಚಾರ್ಯ ಆದಿ ಜಗದ್ಗುರು ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳವರ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡು, ಪೂಜ್ಯ ಶ್ರೀಗಳಿಂದ ಆಶೀರ್ವಾದ ಪಡೆಯಲಾಯಿತು.
-
B.S.Yediyurappa reposted
Nirmala Sitharaman Office
@nsitharamanoffc
I want to assure this House, whatever the Finance Commission has recommended, I follow it to the last word.
In 13th Finance Commission for period 2010-11 to 2014-15, Karnataka received Rs 61,691 crores.
In 14th Finance Commission for period 2015-16 to 2019-20, Karnataka received Rs 1,51,309 crores.
For current 15th Finance Commission from 2020-21 till 31st march 2026, in four years Karnataka has already received Rs 1,29,854 crores. It is estimated that at the end of the fifth year, Karnataka would’ve received Rs 1,74,339 crores. This is regards to tax devolution.
If you look at Grants-in Aid, in 10 years of UPA, Karnataka received Rs 60,779.84 crores. In 9 years of Modi Govt, Karnataka received Rs 2,08,832.02 crores. Over and above that, Additional Grants-in-Aid of Rs 18,005 crores has been budgeted this year for release for Karnataka. In our 10 years, Karnataka is getting Rs 2, 26,837 crores.
Karnataka has also received Rs 6,280 crores as 50-year Interest Free loan.
Where is Karnataka being denied money? Where is Karnataka receiving less money?
- Smt @nsitharaman in Lok Sabha.This media couldn't be displayed. See it on the original post. -
B.S.Yediyurappa
@BSYBJP
ಆರ್ಥಿಕವಾಗಿ ದುರ್ಬಲವಾಗಿರುವವರಿಗೆ ಮತ್ತಷ್ಟು ನೆರವು ನೀಡುವ ನಿಟ್ಟಿನಲ್ಲಿ, ಇಡೀ ದೇಶದಲ್ಲಿ ಒಂದೇ ಬ್ರ್ಯಾಂಡಿನಡಿಯಲ್ಲಿ ಅಗತ್ಯ ಆಹಾರ ಸಾಮಗ್ರಿಗಳನ್ನು ರಿಯಾಯತಿ ದರದಲ್ಲಿ ನೀಡುವ ಮಹತ್ವಾಕಾಂಕ್ಷಿ ಉಪಕ್ರಮವನ್ನು ಕೇಂದ್ರ ಸರ್ಕಾರ ಪ್ರಾರಂಭಿಸಿದ್ದು, ಅದರ ಅಂಗವಾಗಿ ಇಂದಿನಿಂದ ಕೆಜಿಗೆ 29 ರೂ.ಗೆ ದೊರೆಯುವ ʼಭಾರತ್ ಅಕ್ಕಿʼ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಜನಸಾಮಾನ್ಯರ ದೈನಂದಿನ ಜೀವನಮಟ್ಟ ಸುಧಾರಿಸುವ ನಿಟ್ಟಿನಲ್ಲಿ ಈ ಯೋಜನೆ ಪ್ರಾರಂಭಿಸಿದ ಹೆಮ್ಮೆಯ ಸನ್ಮಾನ್ಯ ಪ್ರಧಾನಮಂತ್ರಿ ಶ್ರೀ @narendramodi ರವರಿಗೆ ಹಾಗೂ ಕೇಂದ್ರ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಶ್ರೀ @PiyushGoyal ರವರಿಗೆ ಹೃತ್ಪೂರ್ವಕ ಅಭಿನಂದನೆಗಳು. -
B.S.Yediyurappa
@BSYBJP
ಸಂಘದ ಹಿರಿಯ ಸ್ವಯಂಸೇವಕರು, ಖ್ಯಾತ ಉದ್ಯಮಿ ಶ್ರೀ ಎಂ.ಸೋಮಶೇಖರ್ ಭಟ್ ವಿಧಿವಶರಾದ ಸುದ್ದಿ ಅತ್ಯಂತ ನೋವನ್ನು ತಂದಿದೆ. ಸಂಘಟನೆಯಲ್ಲಿ ಮಹತ್ವದ ಪಾತ್ರ ವಹಿಸಿದ್ದ ಅವರ ನಿಧನದಿಂದ ಪಕ್ಷ ಹಿರಿಯ ಮುಖಂಡರೊಬ್ಬರನ್ನು ಕಳೆದುಕೊಂಡಿದೆ. ಅವರ ಆತ್ಮಕ್ಕೆ ಸದ್ಗತಿ ಪ್ರಾರ್ಥಿಸುತ್ತಾ, ಅವರ ಕುಟುಂಬ ಹಾಗೂ ಅಭಿಮಾನಿಗಳಲ್ಲಿ ಸಂತಾಪ ಕೋರುತ್ತೇನೆ.
-
B.S.Yediyurappa
@BSYBJP
ಸಶಕ್ತ ರಾಷ್ಟ್ರ ನಿರ್ಮಾಣದ ನಿಟ್ಟಿನಲ್ಲಿ ತಮ್ಮ ಬದುಕನ್ನೇ ಮುಡಿಪಾಗಿಟ್ಟ, ದೇಶ ಕಂಡ ಮೇರು ನಾಯಕ ಸನ್ಮಾನ್ಯ ಶ್ರೀ ಎಲ್.ಕೆ.ಅಡ್ವಾಣಿ ಅವರಿಗೆ ಭಾರತರತ್ನ ಪ್ರಶಸ್ತಿಯ ಅರ್ಹ ಮನ್ನಣೆಯನ್ನು ಘೋಷಿಸಿರುವ ಕೇಂದ್ರದ ಎನ್.ಡಿ.ಎ ಸರ್ಕಾರ ಹಾಗೂ ಹೆಮ್ಮೆಯ ಪ್ರಧಾನಿ ಶ್ರೀ @narendramodi ರವರಿಗೆ ಹೃತ್ಪೂರ್ವಕ ಅಭಿನಂದನೆಗಳು.
#bharatratna #lkadvani
Narendra Modi
@narendramodi
I am very happy to share that Shri LK Advani Ji will be conferred the Bharat Ratna. I also spoke to him and congratulated him on being conferred this honour. One of the most respected statesmen of our times, his contribution to the development of India is monumental. His is a life that started from working at the grassroots to serving the nation as our Deputy Prime Minister. He distinguished himself as our Home Minister and I&B Minister as well. His Parliamentary interventions have always been exemplary, full of rich insights.
-
B.S.Yediyurappa
@BSYBJP
ಹಿರಿಯ ನೇತಾರ, ಧೀಮಂತ ನಾಯಕ ಆದರಣೀಯ ಶ್ರೀ ಲಾಲ್ ಕೃಷ್ಣ ಅಡ್ವಾಣಿ ಅವರಿಗೆ ಭಾರತರತ್ನ ಪ್ರಶಸ್ತಿಯಿಂದ ಗೌರವಿಸಲಾಗುತ್ತಿರುವುದು ಅತ್ಯಂತ ಹೆಮ್ಮೆಯ ಮತ್ತು ಅಭಿನಂದನೀಯ ಸಂಗತಿ. ದೇಶದ ಅಭಿವೃದ್ಧಿ ನಿಟ್ಟಿನಲ್ಲಿ ಅವರ ಪ್ರಯತ್ನ ಅಸಾಧಾರಣವಾದದ್ದು, ಹಲವಾರು ದಶಕಗಳ ಸಾರ್ವಜನಿಕ ಜೀವನದಲ್ಲಿ ಅವರ ನಾಯಕತ್ವ, ಸಂಸದರಾಗಿ, ಕೇಂದ್ರ ಸಚಿವರಾಗಿ, ಉಪಪ್ರಧಾನಿಗಳಾಗಿ ಅವರ ಕೊಡುಗೆಯನ್ನು ದೇಶ ಎಂದಿಗೂ ಮರೆಯಲಾಗದು.
ವೈಯಕ್ತಿಕವಾಗಿ ಕೂಡ, ಅವರೊಂದಿಗಿನ ಒಡನಾಟ, ಸಂಘಟನಾ ಕಾರ್ಯಗಳಲ್ಲಿ ಅವರ ಮಾರ್ಗದರ್ಶನಗಳನ್ನು ನಾನು ಎಂದಿಗೂ ಮರೆಯಲಾರೆ. ಆ ಮೇರು ನಾಯಕನಿಗೆ ದೇಶದ ಅತ್ಯುನ್ನತ ನಾಗರಿಕ ಗೌರವ ಸಲ್ಲಿಸಲಾಗುತ್ತಿರುವ ಈ ಸಾರ್ಥಕ ಸಂದರ್ಭದಲ್ಲಿ, ಪಕ್ಷದ ಕಾರ್ಯಕರ್ತರ ಹಾಗೂ ಅವರ ಅಭಿಮಾನಿಗಳ ಪರವಾಗಿ ಅವರಿಗೆ ಗೌರವಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಇನ್ನೂ ಸುದೀರ್ಘ ಕಾಲ ಆ ದೇವರು ಅವರಿಗೆ ಉತ್ತಮ ಆರೋಗ್ಯದೊಂದಿಗೆ ನಮಗೆ ಪ್ರೇರಣೆ ನೀಡುವ ಶಕ್ತಿಯನ್ನು ದಯಪಾಲಿಸಲಿ ಎಂದು ಕೋರುತ್ತೇನೆ. -
B.S.Yediyurappa
@BSYBJP
ಹೆಮ್ಮೆಯ ಪ್ರಧಾನಿ ಶ್ರೀ @narendramodi ರವರ ನವಭಾರತದ ಪರಿಕಲ್ಪನೆಯ ಸಾಕಾರದ ನಿಟ್ಟಿನಲ್ಲಿ, ದೇಶದ ಆರ್ಥಿಕತೆಯನ್ನು ಮತ್ತಷ್ಟು ಸದೃಢಗೊಳಿಸುವ, ರಾಷ್ಟ್ರದ 'ಪ್ರಗತಿನಿಷ್ಠ ಬಜೆಟ್' ಮಂಡಿಸಿರುವ ವಿತ್ತ ಸಚಿವೆ ಶ್ರೀಮತಿ @nsitharaman ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು.
ಚುನಾವಣಾಪೂರ್ವ ಜನಪ್ರಿಯ ಘೋಷಣೆಗಳ ಬಜೆಟ್ ಮಂಡಿಸದೆ, ಈ ಮಧ್ಯಂತರ ಬಜೆಟ್ ಮೂಲಕ ನಮ್ಮ ಯುವಜನತೆ, ರೈತರು, ಮಹಿಳೆಯರು ಹಾಗೂ ವಿಶೇಷವಾಗಿ ಹಿಂದುಳಿದ ಮತ್ತು ದುರ್ಬಲ ವರ್ಗದ ಜನರ ಜೀವನಮಟ್ಟ ಸುಧಾರಿಸುವ, ಹೊಸ ಭರವಸೆ, ಅವಕಾಶಗಳನ್ನು ಸೃಷ್ಟಿಸುವ ವಾಸ್ತವಿಕ ಆಯವ್ಯಯವನ್ನು ಕೇಂದ್ರ ವಿತ್ತ ಸಚಿವೆ ಮಂಡಿಸಿದ್ದಾರೆ.
ಮುಂದಿನ ದಿನಗಳಲ್ಲಿ ಸದೃಢ, ಸಶಕ್ತ, ವಿಕಸಿತ, ವಿಶ್ವಗುರು ಭಾರತ ನಿರ್ಮಾಣದ ನಿಟ್ಟಿನಲ್ಲಿ ಎನ್.ಡಿ.ಎ ಸರ್ಕಾರದ ಬದ್ಧತೆಯನ್ನು ಈ ಬಜೆಟ್ ಪುನರುಚ್ಚರಿಸಿದ್ದು, ದೇಶದ ಪ್ರಗತಿಗೆ ಪೂರಕವಾಗಿರುವ ಈ ಬಜೆಟ್ ಅನ್ನು ಸ್ವಾಗತಿಸುತ್ತೇನೆ.
#viksitbharatbudget #unionbudget2024
@BJP4Karnataka -
B.S.Yediyurappa
@BSYBJP
ಬದ್ಧತೆ, ಪ್ರಯತ್ನಗಳಿಂದ ಯಾವುದೇ ಸವಾಲುಗಳನ್ನಾದರೂ ಮೆಟ್ಟಿನಿಂತು ಸಾಧಿಸಬಹುದು ಎನ್ನುವುದಕ್ಕೆ ಸಾಕ್ಷಿಯಂತಿರುವ, ಈ ಸಾಲಿನ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಹಿರಿಯ ಶಿಕ್ಷಣತಜ್ಞ ಮತ್ತು ಆಡಳಿತಜ್ಞ ಶ್ರೀ ಎಂ.ಕೆ.ಶ್ರೀಧರ್ ಅವರ ನಿವಾಸಕ್ಕೆ ತೆರಳಿ ಅವರಿಗೆ ಅಭಿನಂದನೆಗಳನ್ನು ಸಲ್ಲಿಸಲಾಯಿತು.
-
B.S.Yediyurappa
@BSYBJP
ಧರ್ಮ, ಸಂಸ್ಕೃತಿ, ಪರಂಪರೆಯನ್ನು ಪ್ರಚುರಪಡಿಸಿದ ಜಗದ್ಗುರು ರೇಣುಕಾಚಾರ್ಯರ ತತ್ವ ಸಿದ್ಧಾಂತಗಳು ಸಾಧಕ ಜೀವನಕ್ಕೆ ನಿರಂತರ ಪ್ರೇರಣೆ ನೀಡುವಂಥದ್ದು. ಈ ನಿಟ್ಟಿನಲ್ಲಿ, ಶ್ರೀಶೈಲ ಪೀಠದ ಡಾ.ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಭಗವತ್ವಾದರು, ಶ್ರೀ ಕಾಶಿ ಪೀಠದ ಡಾ.ಚಂದ್ರಶೇಖರ ಶಿವಾಚಾರ್ಯ ಸ್ವಾಮಿಗಳು, ಯಡಿಯೂರು ಶ್ರೀ ರೇಣುಕಾ ಶಿವಾಚಾರ್ಯ ಸ್ವಾಮಿಗಳು ಸೇರಿದಂತೆ ಹಲವು ಸಂತರ ದಿವ್ಯ ಉಪಸ್ಥಿತಿಯಲ್ಲಿ, ಇಂದು ಬೆಂಗಳೂರಿನ ರಾಜಾಜಿನಗರದಲ್ಲಿ ಅದಿ ಜಗದ್ಗುರು ಶ್ರೀ ರೇಣುಕಾಚಾರ್ಯರ ಕಂಚಿನ ಪುತ್ಥಳಿಯನ್ನು ಲೋಕಾರ್ಪಣೆ ಮಾಡಲಾಯಿತು.
ಹಿರಿಯರಾದ ಶ್ರೀ ಶಾಮನೂರು ಶಿವಶಂಕರಪ್ಪ, ಸಚಿವ ಶ್ರೀ ಈಶ್ವರ್ ಖಂಡ್ರೆ, ಶಾಸಕ ಶ್ರೀ ಎಸ್.ಸುರೇಶ್ ಕುಮಾರ್, ಮುಖಂಡರಾದ ಬಿ.ಎಸ್.ಪರಮಶಿವಯ್ಯ ಸೇರಿದಂತೆ ಅನೇಕ ಗಣ್ಯರು ಸಮಾರಂಭದಲ್ಲಿ ಉಪಸ್ಥಿತರಿದ್ದರು. -
B.S.Yediyurappa
@BSYBJP
ಸತ್ಯ, ಅಹಿಂಸೆಗಳ ದಾರಿಯಲ್ಲಿ ನಡೆದು ಭಾರತದ ಸ್ವಾತಂತ್ರ್ಯ ಹೋರಾಟದ ನೇತೃತ್ವ ವಹಿಸಿದ್ದ ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ ಅವರ ಪುಣ್ಯಸ್ಮರಣೆಯಂದು ಆ ದಿವ್ಯಚೇತನಕ್ಕೆ ಶ್ರದ್ಧಾಪೂರ್ವಕ ನಮನಗಳು.
#ಸರ್ವೋದಯ_ದಿನ #ಹುತಾತ್ಮರ_ದಿನ #martyrsday -
B.S.Yediyurappa
@BSYBJP
ಪೂಜ್ಯ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳು, ಪೂಜ್ಯ ಶ್ರೀ ನಿರ್ಮಲಾನಂದನಾಥ ಮಹಾಸ್ವಾಮಿಗಳು, ಪೂಜ್ಯ ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳ ದಿವ್ಯಸಾನ್ನಿಧ್ಯದಲ್ಲಿ, ಶ್ರೀರಂಗಪಟ್ಟಣದ ಬಳಿ ಶ್ರೀ ಚಂದ್ರವನ ಆಶ್ರಮದಲ್ಲಿ ಇಂದು ನಡೆದ ಶ್ರೀ ಶಿವಯೋಗಿ ಮಹಾಸ್ವಾಮಿಗಳ 130ನೇ ಜಯಂತಿ ಹಾಗೂ ಪೂಜ್ಯ ಡಾ. ಶ್ರೀ ತ್ರಿನೇತ್ರ ಮಹಂತ ಶಿವಯೋಗಿ ಸ್ವಾಮಿಗಳ ಪಟ್ಟಾಭಿಷೇಕ ರಜತ ಮಹೋತ್ಸವದಲ್ಲಿ, ಮಾಜಿ ಪ್ರಧಾನಿ ಶ್ರೀ ಹೆಚ್.ಡಿ.ದೇವೇಗೌಡ ಅವರೊಂದಿಗೆ ಪಾಲ್ಗೊಳ್ಳಲಾಯಿತು.
-
B.S.Yediyurappa
@BSYBJP
ಈ ಸಾಲಿನ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿರುವ ನಮ್ಮ ರಾಜ್ಯದ ಗಿರಿಜನ ಕಲ್ಯಾಣ ಕಾರ್ಯಕರ್ತ ಸೋಮಣ್ಣ, ಡಾ. ಪ್ರೇಮಾ ಧನರಾಜ್, ಕ್ರೀಡಾಪಟು ರೋಹನ್ ಬೋಪಣ್ಣ, ಅನುಪಮಾ ಹೊಸಕೆರೆ, ಶ್ರೀಧರ್ ಮಾಕಂ ಕೃಷ್ಣಮೂರ್ತಿ, ಕೆ.ಎಸ್.ರಾಜಣ್ಣ, ಚಂದ್ರಶೇಖರ್, ಶನಿ ಸೋನಿ, ಪದ್ಮಭೂಷಣ ಪ್ರಶಸ್ತಿ ಪಡೆದ ಸೀತಾರಾಮ್ ಜಿಂದಾಲ್ ಸೇರಿದಂತೆ ಎಲ್ಲಾ ಸಾಧಕರಿಗೆ ಗೌರವಪೂರ್ವಕ ಅಭಿನಂದನೆಗಳು.
#padmaawards2024 #peoplespadma -
B.S.Yediyurappa
@BSYBJP
ಅಪ್ರತಿಮ ಸ್ವಾಭಿಮಾನಿ, ಕೆಚ್ಚೆದೆಯ ಸೇನಾನಿ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನವರ ಪುಣ್ಯಸ್ಮರಣೆಯಂದು ಆ ಮಹಾನ್ ಚೇತನಕ್ಕೆ ಅನಂತ ನಮನಗಳು.
-
B.S.Yediyurappa
@BSYBJP
ನಾಡಿನ ಸಮಸ್ತ ಜನತೆಗೆ 75ನೇ ಗಣರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು. ಜೈ ಹಿಂದ್!
Greetings to everyone on 75th Republic Day. Jai Hind! 🇮🇳
#republicday2024 -
B.S.Yediyurappa
@BSYBJP
ಇಂದು ನವದೆಹಲಿಯಲ್ಲಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಶ್ರೀ @JPNadda ಜೀ, ರಾಜ್ಯಾಧ್ಯಕ್ಷ ಶ್ರೀ @BYVijayendra ಅವರ ಸಮಕ್ಷಮದಲ್ಲಿ ಪಕ್ಷಕ್ಕೆ ಮರುಸೇರ್ಪಡೆಗೊಂಡ ಆತ್ಮೀಯರೂ, ಹಿರಿಯ ನಾಯಕರಾದ ಶ್ರೀ @JagadishShettar ಅವರಿಗೆ ಸ್ವಾಗತ ಕೋರಲಾಯಿತು.. ಈ ಸಂದರ್ಭದಲ್ಲಿ ಶ್ರೀ @byadavbjp, ಶ್ರೀ @Rajeev_GoI ಮತ್ತಿತರರು ಉಪಸ್ಥಿತರಿದ್ದರು.
-
B.S.Yediyurappa
@BSYBJP
ಬಡವರು ಹಾಗೂ ದೀನದಲಿತರ ಪರ ಹೋರಾಡಿದ ಹಿರಿಯ ಸಮಾಜವಾದಿ ನಾಯಕ ಶ್ರೀ ಕರ್ಪೂರಿ ಠಾಕೂರ್ ಅವರಿಗೆ ಮರಣೋತ್ತರವಾಗಿ, ದೇಶದ ಅತ್ಯುನ್ನತ ನಾಗರಿಕ ಗೌರವವಾಗಿರುವ ಭಾರತರತ್ನ ಪ್ರಶಸ್ತಿಯನ್ನು ಕೇಂದ್ರ ಸರ್ಕಾರ ಘೋಷಿಸಿದೆ. ಆಮೂಲಕ ಶ್ರೇಷ್ಠ ಸಾಧಕರಿಗೆ ಅರ್ಹ ಗೌರವ ಸಲ್ಲಿಸುವ ಜೊತೆಗೆ ಸಾಮಾಜಿಕ ನ್ಯಾಯದ ಸಾಕಾರಕ್ಕಾಗಿ ಮತ್ತಷ್ಟು ಸ್ಫೂರ್ತಿ ನೀಡಿದಂತಾಗಿದೆ.
Narendra Modi
@narendramodi
I am delighted that the Government of India has decided to confer the Bharat Ratna on the beacon of social justice, the great Jan Nayak Karpoori Thakur Ji and that too at a time when we are marking his birth centenary. This prestigious recognition is a testament to his enduring efforts as a champion for the marginalized and a stalwart of equality and empowerment.
His unwavering commitment to uplift the downtrodden and his visionary leadership have left an indelible mark on India's socio-political fabric. This award not only honours his remarkable contributions but also inspires us to continue his mission of creating a more just and equitable society. -
B.S.Yediyurappa
@BSYBJP
ಭಾರತಮಾತೆಯ ಹೆಮ್ಮೆಯ ಪುತ್ರ, ಸ್ವಾತಂತ್ರ್ಯ ಸೇನಾನಿ ನೇತಾಜಿ ಸುಭಾಶ್ ಚಂದ್ರ ಬೋಸ್ ಅವರ ಜಯಂತಿಯಂದು ಆ ಮಹಾನ್ ದೇಶಭಕ್ತ ಚೇತನಕ್ಕೆ ಗೌರವಪೂರ್ವಕ ನಮನಗಳು.
#netaji #subhashchandrabose #parakramdiwas -
B.S.Yediyurappa
@BSYBJP
ಬೆಂಗಳೂರಿನ ದೊಡ್ಡ ಬಾಣಸವಾಡಿಯ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ, ಅಯೋಧ್ಯೆಯಲ್ಲಿ ಇಂದು ನಡೆದ ಐತಿಹಾಸಿಕ ರಾಮಮಂದಿರ ಪ್ರಾಣಪ್ರತಿಷ್ಠಾ ಕಾರ್ಯಕ್ರಮವನ್ನು, ಪಕ್ಷದ ಹಲವು ಸಂಸದರು, ಮುಖಂಡರು, ಕಾರ್ಯಕರ್ತರು ಹಾಗೂ ಭಕ್ತಜನರೊಂದಿಗೆ ವೀಕ್ಷಿಸಲಾಯಿತು.
-
B.S.Yediyurappa
@BSYBJP
ಭಾರತೀಯರ ಆರಾಧ್ಯದೈವ ಮರ್ಯಾದಾ ಪುರುಷೋತ್ತಮ ಪ್ರಭು ಶ್ರೀರಾಮಚಂದ್ರ ಮತ್ತೆ ಅಯೋಧ್ಯೆಯ ರಾಮ ಜನ್ಮಭೂಮಿಯ ಪವಿತ್ರ ಸನ್ನಿಧಾನದಲ್ಲಿ, ಭವ್ಯ ಶ್ರೀರಾಮ ಮಂದಿರದಲ್ಲಿ ವಿರಾಜಮಾನನಾಗಿದ್ದಾನೆ. ಹೆಮ್ಮೆಯ ಪ್ರಧಾನಿ ಶ್ರೀ @narendramodi ಜೀ, ಸನ್ಮಾನ್ಯ ಸರಸಂಘಚಾಲಕ್ ಶ್ರೀ @DrMohanBhagwat ಜೀ, ಪೇಜಾವರ ಮಠಾಧೀಶರಾದ ಪರಮಪೂಜ್ಯ ಶ್ರೀ ವಿಶ್ವಪ್ರಸನ್ನ ತೀರ್ಥರು ಸೇರಿದಂತೆ ಹಲವಾರು ಸಾಧುಸಂತರ ಸಮಕ್ಷಮದಲ್ಲಿ ಶ್ರೀರಾಮ ಪ್ರತಿಷ್ಠಾಪನೆಯ ವಿಧಿವಿಧಾನಗಳನ್ನು ಇಂದು ನೆರವೇರಿಸಲಾಗಿದೆ.
ಕೋಟ್ಯಂತರ ಭಕ್ತರ ಶತ ಶತಮಾನಗಳ ತಪಸ್ಸು ಇಂದು ಸಾಕಾರಗೊಂಡಿದೆ. ಈ ಕ್ಷಣದ ಸಾರ್ಥಕ ಅನುಭೂತಿಯನ್ನು ಶಬ್ದಗಳಲ್ಲಿ ವರ್ಣಿಸಲಾಗದು. ಪ್ರಭು ಶ್ರೀರಾಮಲಲಾನ ಅನುಗ್ರಹ ಎಲ್ಲ ಭಕ್ತರ ಮೇಲೆ, ಭಾರತದೇಶದ ಮೇಲೆ ನಿರಂತರವಾಗಿರಲಿ ಎಂದು ಪ್ರಾರ್ಥಿಸುತ್ತೇನೆ. ಜೈ ಶ್ರೀರಾಮ್!
#ayodharammandir #rammandirpranpratishta
@ShriRamTeerth -
B.S.Yediyurappa
@BSYBJP
ಜೈ ಶ್ರೀರಾಮ್! ಕೋಟ್ಯಂತರ ಶ್ರದ್ಧಾಳು ಭಾರತೀಯರ ಶತಮಾನಗಳ ಕನಸು, ಹೋರಾಟ, ತಪಸ್ಸು, ಪ್ರಾರ್ಥನೆಗಳು ಸಾಕಾರಗೊಳ್ಳುವ ಐತಿಹಾಸಿಕ ಕ್ಷಣಕ್ಕೆ ನಾವೆಲ್ಲರೂ ಸಾಕ್ಷಿಗಳಾಗುತ್ತಿದ್ದೇವೆ. ಶ್ರೀರಾಮ ಜನ್ಮಭೂಮಿ, ರಾಮನಗರಿ ಅಯೋಧ್ಯೆಯಲ್ಲಿ ಭವ್ಯ ಶ್ರೀರಾಮ ಮಂದಿರವು ಇಂದು ಉದ್ಘಾಟನೆಗೊಳ್ಳುತ್ತಿದ್ದು, ಶ್ರೀರಾಮಲಲಾ ವಿಗ್ರಹದ ಪ್ರಾಣ ಪ್ರತಿಷ್ಠಾಪನೆಯು ಯಥಾವಿಧಿ ನೆರವೇರುತ್ತಿದೆ. ಭಕ್ತರ ಹೃದಯಸಿಂಹಾಸನದಲ್ಲಿ ವಿರಾಜಮಾನನಾಗಿರುವ ಪ್ರಭು ಶ್ರೀರಾಮನಲ್ಲಿ ಭಕ್ತರ ಭಕ್ತಿಯ ಅಭಿವ್ಯಕ್ತಿಯಾಗಿ, ಅಯೋಧ್ಯೆಯ ಭವ್ಯ ರಾಮಮಂದಿರದಲ್ಲಿ ಮರ್ಯಾದಾ ಪುರುಷೋತ್ತಮ ಪ್ರಭು ಶ್ರೀರಾಮಚಂದ್ರ ಮತ್ತೆ ಪ್ರತಿಷ್ಠಾಪನೆಗೊಳ್ಳುತ್ತಿದ್ದಾನೆ. ಲಕ್ಷಾಂತರ ಕರಸೇವಕರೊಂದಿಗೆ ರಾಮಜನ್ಮಭೂಮಿ ಹೋರಾಟದಲ್ಲಿ ಪಾಲ್ಗೊಂಡ ಸಾರ್ಥಕಬಾವದ ಜೊತೆಗೆ ನವಭಾರತದ ಈ ಐತಿಹಾಸಿಕ ಸಂದರ್ಭದಲ್ಲಿ, ಪ್ರಭು ಶ್ರೀರಾಮನಲ್ಲಿ ವಿಶೇಷ ಪ್ರಾರ್ಥನೆಗಳನ್ನು ಸಲ್ಲಿಸುತ್ತಾ, ಸಮಸ್ತ ಭಕ್ತಜನತೆಗೆ ಭಕ್ತಿಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತಿದ್ದೇನೆ. ಜೈ ಶ್ರೀರಾಮ್!
#ayodharammandir #rammandirpranpratishta
@ShriRamTeerth -
B.S.Yediyurappa
@BSYBJP
ರಾಮನಗರಿ ಅಯೋಧ್ಯೆಯ ಭವ್ಯ ಶ್ರೀ ರಾಮಮಂದಿರದಲ್ಲಿ ಪ್ರಭು ಶ್ರೀ ರಾಮಲಲಾ ಪ್ರಾಣಪ್ರತಿಷ್ಠಾಪನೆಯ ಸಂದರ್ಭದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ @BYVijayendra ಅವರು ಕರೆ ನೀಡಿರುವ 'ನನ್ನ ರಾಮ' ಭಕ್ತಿ ಸಮರ್ಪಣೆಯ ಅಭಿಯಾನದಲ್ಲಿ ನಾನೂ ಭಾಗವಹಿಸಿದ್ದೇನೆ.
ಹಾಗೆಯೇ @nsitharaman, @JoshiPralhad, @BSBommai, @DVSadanandGowda, @Rajeev_GoI, @ANarayana_swamy, @ShobhaBJP, @bhagwantkhuba ಸೇರಿದಂತೆ ಎಲ್ಲಾ ರಾಮಭಕ್ತರನ್ನು #nannarama ಅಭಿಯಾನದಲ್ಲಿ ಪಾಲ್ಗೊಳ್ಳುವಂತೆ ಆಹ್ವಾನಿಸುತ್ತಿದ್ದೇನೆ. -
B.S.Yediyurappa
@BSYBJP
ಸಾಧಕ ಶರಣಶ್ರೇಷ್ಠರು, ತ್ರಿವಿಧ ದಾಸೋಹಿ, ’ನಡೆದಾಡುವ ದೇವರು’, ಸಿದ್ದಗಂಗಾ ಶ್ರೀಮಠದ ಪರಮಪೂಜ್ಯ ಶ್ರೀ ಶ್ರೀ ಡಾ.ಶಿವಕುಮಾರ ಮಹಾಸ್ವಾಮೀಜಿಗಳ ಪುಣ್ಯಸ್ಮರಣೆಯಂದು ಅವರ ಶ್ರೀಚರಣಗಳಿಗೆ ಭಕ್ತಿಪೂರ್ವಕ ಕೋಟಿ ಕೋಟಿ ಪ್ರಣಾಮಗಳು.
-
B.S.Yediyurappa
@BSYBJP
ಬೆಂಗಳೂರಿನಲ್ಲಿ ಇಂದು ನಡೆದ ಪರಿಶಿಷ್ಟ ಪಂಗಡದ ಮಹಾ ಸಮಾವೇಶದಲ್ಲಿ, ಕೇಂದ್ರ ಸಚಿವ ಶ್ರೀ @JoshiPralhad, ರಾಜ್ಯಾಧ್ಯಕ್ಷ ಶ್ರೀ @BYVijayendra, ಮಾಜಿ ಮುಖ್ಯಮಂತ್ರಿ ಶ್ರೀ @BSBommai, ಹಿರಿಯ ನಾಯಕರುಗಳಾದ ಶ್ರೀ @GovindKarjol, ಶ್ರೀ @CTRavi_BJP, ಶ್ರೀ @sriramulubjp ಮತ್ತಿತರ ಮುಖಂಡರೊಂದಿಗೆ ಪಾಲ್ಗೊಳ್ಳಲಾಯಿತು. ಸರ್ವರಿಗೂ ಸಮಪಾಲು, ಸಮಬಾಳು, ಸಾಮಾಜಿಕ ನ್ಯಾಯದ ಬದ್ಧತೆಯೊಂದಿಗೆ, ಪರಿಶಿಷ್ಟ ಪಂಗಡದ ಬಂಧುಗಳೂ ಸೇರಿದಂತೆ ಎಲ್ಲ ಸಮುದಾಯಗಳ ಏಳಿಗೆಯೇ ಪಕ್ಷದ ಗುರಿಯಾಗಿದೆ.
@BJP4Karnataka -
B.S.Yediyurappa
@BSYBJP
ಸುಮಾರು 8 ಶತಮಾನಗಳ ಹಿಂದೆ ಶ್ರೀ ಮಧ್ವಾಚಾರ್ಯರು ಉಡುಪಿಯಲ್ಲಿ ಪ್ರತಿಷ್ಠಾಪಿಸಿದ ಶ್ರೀಕೃಷ್ಣನ ಪೂಜಾ ಕೈಂಕರ್ಯಗಳಿಗಾಗಿ ತಮ್ಮ ನಾಲ್ಕನೇ ಪರ್ಯಾಯ ನೆರವೇರಿಸುತ್ತಿರುವ ಉಡುಪಿ ಪುತ್ತಿಗೆ ಮಠದ ಪರಮಪೂಜ್ಯ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿಗಳಿಗೆ ನಾಡಿನ ಸಮಸ್ತ ಭಕ್ತಜನತೆಯ ಪರವಾಗಿ ಭಕ್ತಿಪೂರ್ವಕ ಪ್ರಣಾಮಗಳು. ಈ ವಿಶ್ವ ಗೀತಾ ಪರ್ಯಾಯ ಮಹೋತ್ಸವ, ಭಗವದ್ಗೀತೆಯ ಸಂದೇಶಗಳನ್ನು ಜನಮಾನಸಕ್ಕೆ ಮತ್ತಷ್ಟು ತಲುಪಿಸುವ ನಿಟ್ಟಿನಲ್ಲಿ ಯಶಸ್ವಿಯಾಗಲಿ, ಶ್ರೀಕೃಷ್ಣನ ರಕ್ಷೆ ನಾಡಿನ ಮೇಲೆ ಸದಾ ಇರಲಿ ಎಂದು ಪ್ರಾರ್ಥಿಸುತ್ತೇನೆ.
-
B.S.Yediyurappa
@BSYBJP
ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನದ ಪೀಠಾಧ್ಯಕ್ಷರಾಗಿ ನಾಡಿನ ಧಾರ್ಮಿಕ, ಆಧ್ಯಾತ್ಮಿಕ, ಶೈಕ್ಷಣಿಕ, ಸಾಮಾಜಿಕ ಕ್ಷೇತ್ರಗಳಲ್ಲಿ ತಮ್ಮ ಅಗಾಧ ಸಾಧನೆಗಳು ಹಾಗೂ ಸೇವೆಗಳಿಂದ ಆದರ್ಶಪ್ರಾಯರೆನಿಸಿದ ಕೀರ್ತಿಶೇಷ, ಪದ್ಮಭೂಷಣ ಡಾ. ಶ್ರೀ ಬಾಲಗಂಗಾಧರನಾಥ ಮಹಾಸ್ವಾಮಿಗಳ ಜಯಂತಿಯಂದು ಅವರ ದಿವ್ಯಚರಣಗಳಿಗೆ ಅನಂತ ಪ್ರಣಾಮಗಳು.
-
B.S.Yediyurappa
@BSYBJP
ಎಲ್ಲರಿಗೂ ಮಕರ ಸಂಕ್ರಾಂತಿ ಹಬ್ಬದ ಹಾರ್ದಿಕ ಶುಭಾಶಯಗಳು. ಈ ಉತ್ತರಾಯಣ ಪರ್ವಕಾಲವು ಎಲ್ಲರ ಬದುಕಿನಲ್ಲೂ ಸುಖ, ಶಾಂತಿ, ನೆಮ್ಮದಿ, ಸಮೃದ್ಧಿಗಳ ಹೊಂಬೆಳಕನ್ನು ಹರಡಲಿ ಎಂದು ಹಾರೈಸುತ್ತೇನೆ.
-
B.S.Yediyurappa
@BSYBJP
ವಿಶ್ವ ಕಂಡ ಶ್ರೇಷ್ಠ ಆಧ್ಯಾತ್ಮಿಕ ಸಾಧಕರಲ್ಲಿ ಅಗ್ರಗಣ್ಯರಾದ, ಭಾರತೀಯರಲ್ಲಿ ರಾಷ್ಟ್ರೀಯ ಪ್ರಜ್ಞೆಯನ್ನು ಜಾಗೃತಗೊಳಿಸಿದ ವೀರ ಸಂನ್ಯಾಸಿ ಸ್ವಾಮಿ ವಿವೇಕಾನಂದರ ಸಂಸ್ಮರಣೆಗಳ ಜೊತೆಗೆ ನಾಡಿನ ಸಮಸ್ತ ಜನತೆಗೆ, ವಿಶೇಷವಾಗಿ ನಮ್ಮ ಯುವಕ ಯುವತಿಯರಿಗೆ ರಾಷ್ಟ್ರೀಯ ಯುವ ದಿನದ ಶುಭಾಶಯಗಳು.
#nationalyouthday #swamivivekananda -
B.S.Yediyurappa
@BSYBJP
ಬೆಂಗಳೂರಿನಲ್ಲಿ ನಡೆಯುತ್ತಿರುವ ಪಕ್ಷದ ಚಿಂತನ ಮಂಥನ ಸಭೆಯಲ್ಲಿ ನಮ್ಮ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಶ್ರೀ @ArunSinghbjp, ಕೇಂದ್ರ ಸಚಿವ ಶ್ರೀ @JoshiPralhad, ರಾಜ್ಯಾಧ್ಯಕ್ಷ ಶ್ರೀ @BYVijayendra, ನಿಕಟಪೂರ್ವ ಮುಖ್ಯಮಂತ್ರಿ ಶ್ರೀ @BSBommai ಮತ್ತಿತರ ಹಿರಿಯ ನಾಯಕರೊಂದಿಗೆ ಪಾಲ್ಗೊಂಡು, ಪಕ್ಷ ಸಂಘಟನೆ ಸೇರಿದಂತೆ ಹಲವಾರು ವಿಷಯಗಳ ಕುರಿತು ಚರ್ಚಿಸಲಾಯಿತು.
@BJP4Karnataka -
B.S.Yediyurappa
@BSYBJP
ರಾಮ ನಗರಿ ಅಯೋಧ್ಯೆಯಲ್ಲಿ ನಡೆಯಲಿರುವ, ಕೋಟ್ಯಂತರ ಭಕ್ತರ ಆರಾಧ್ಯದೈವ, ಮರ್ಯಾದಾ ಪುರುಷೋತ್ತಮ ಪ್ರಭು ಶ್ರೀರಾಮನ ಪ್ರಾಣಪ್ರತಿಷ್ಠೆ ಕಾರ್ಯಕ್ರಮಕ್ಕೂ ಪೂರ್ವಭಾವಿಯಾಗಿ, ದೇಶದೆಲ್ಲೆಡೆ ಎಲ್ಲರ ಮನೆಮನೆಗಳಿಗೆ ಹೋಗಿ ರಾಮಮಂದಿರ ಮಂತ್ರಾಕ್ಷತೆ ನೀಡಲಾಗುತ್ತಿದ್ದು, ಅದರ ಅಂಗವಾಗಿ ಬೆಂಗಳೂರಿನಲ್ಲಿ ಇಂದು ನಿವೃತ್ತ ನ್ಯಾಯಮೂರ್ತಿ ಶ್ರೀ ಪತ್ರಿಬಸನಗೌಡರು ಸೇರಿದಂತೆ ಹಲವಾರು ಭಕ್ತರ ಮನೆಗಳಗೆ ತೆರಳಿ ಮಂತ್ರಾಕ್ಷತೆ ನೀಡಿ, ಪ್ರತಿಷ್ಠಾಪನೆಯ ಐತಿಹಾಸಿಕ ದಿನದಂದು ವಿಶೇಷ ಪೂಜೆ, ಆಚರಣೆಗಳನ್ನು ನಡೆಸುವಂತೆ ಕೋರಲಾಯಿತು.
-
B.S.Yediyurappa
@BSYBJP
ಶ್ರೀ ಜಗದ್ಗುರು ವಿಶ್ವಾರಾಧ್ಯ ಜನಕಲ್ಯಾಣ ಪ್ರತಿಷ್ಠಾನದ ವತಿಯಿಂದ ನಡೆದ ಪಂಚಾಚಾರ್ಯ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ, ಶ್ರೀಮತ್ ಕಾಶೀ ಜಗದ್ಗುರು ಪರಮಪೂಜ್ಯ ಶ್ರೀ ಡಾ.ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರ ದಿವ್ಯಸಾನ್ನಿಧ್ಯದಲ್ಲಿ, ಬಾಂಗ್ಲಾದೇಶದ ಜಂಗಮವಾಡಿ ಶಾಖಾ ಮಠದ ಬ್ರಹ್ಮಚಾರಿ ಪಂಕಜ್ ರಾಯ್ ರವರಿಗೆ ಪಂಚಾಚಾರ್ಯಶ್ರೀ ಪ್ರಶಸ್ತಿ ಪ್ರದಾನ ಮಾಡಲಾಯಿತು.
-
B.S.Yediyurappa
@BSYBJP
Warm birthday greetings to our senior leader and former Union Minister Padma Vibhushan Shri Murli Manohar Joshi ji. I wish you good health and a long life.
@drmmjoshibjp -
B.S.Yediyurappa
@BSYBJP
ರಾಮಾಯಣದಲ್ಲಿ ನಮ್ಮ ಕಿಷ್ಕಿಂಧೆಯ ಆಂಜನೇಯ ಅಯೋಧ್ಯೆಯಲ್ಲಿ ಶ್ರೀ ರಾಮಚಂದ್ರನ ಪಟ್ಟಾಭಿಷೇಕದಲ್ಲಿ ವಿಶೇಷ ಪಾತ್ರ ವಹಿಸಿದ್ದನ್ನು ನೆನಪಿಸುವಂತೆ ಈಗ ಮತ್ತೊಂದು ಸುಯೋಗ ಒದಗಿಬಂದಿದೆ. ಮೈಸೂರಿನ ಶಿಲ್ಪಿ ಶ್ರೀ ಅರುಣ್ ಯೋಗಿರಾಜ್ ಅವರು ಕೆತ್ತಿರುವ ಪ್ರಭು ಶ್ರೀರಾಮನ ವಿಗ್ರಹ ಅಯೋಧ್ಯೆಯ ಭವ್ಯ ಶ್ರೀರಾಮ ಮಂದಿರದಲ್ಲಿ ಪ್ರಾಣಪ್ರತಿಷ್ಠಾಪನೆಗೆ ಆಯ್ಕೆಯಾಗಿದ್ದು, ವಿಶೇಷವಾಗಿ ರಾಜ್ಯದ ಸಮಸ್ತ ಭಕ್ತ ಜನತೆಯ ಹೆಮ್ಮೆ, ಸಂತಸಗಳನ್ನು ದುಪ್ಪಟ್ಟುಗೊಳಿಸಿದೆ. ರಾಜ್ಯಕ್ಕೂ ರಾಮಮಂದಿರಕ್ಕೂ ಮತ್ತೊಂದು ವಿಶೇಷ ನಂಟನ್ನು ಸಾಧ್ಯವಾಗಿಸಿರುವ ಶಿಲ್ಪಿ ಶ್ರೀ @yogiraj_arun ಅವರಿಗೆ ಅಭಿಮಾನಪೂರ್ವಕ ಅಭಿನಂದನೆಗಳು.
-
B.S.Yediyurappa
@BSYBJP
ಈ ನೂತನ ವರ್ಷವು ಎಲ್ಲರಿಗೂ ಸಂತಸ, ಸಂಭ್ರಮ, ಉತ್ತಮ ಆರೋಗ್ಯ ಮತ್ತು ಹೊಸ ಭರವಸೆಗಳನ್ನು ಹೊತ್ತು ತರಲಿ, ಈ ವರ್ಷವು ಎಲ್ಲರ ಪಾಲಿಗೆ ಪ್ರಗತಿ ಮತ್ತು ಯಶಸ್ಸಿನಿಂದ ಕೂಡಿರಲಿ ಎಂದು ಹಾರೈಸುತ್ತೇನೆ. ಎಲ್ಲರಿಗೂ 2024ರ ಹೊಸ ವರ್ಷದ ಹಾರ್ದಿಕ ಶುಭಾಶಯಗಳು.
#happynewyear2024 -
B.S.Yediyurappa
@BSYBJP
ಕೋಟ್ಯಂತರ ಶ್ರದ್ಧಾಳು ಭಾರತೀಯರ ಪ್ರಾರ್ಥನೆಯ ಸಾಕಾರದ ಐತಿಹಾಸಿಕ ಕ್ಷಣ ಹತ್ತಿರವಾಗಿದೆ. ಅಯೋಧ್ಯೆಯಲ್ಲಿ ಭವ್ಯ ಶ್ರೀರಾಮ ಮಂದಿರದಲ್ಲಿ ಪ್ರಭು ಶ್ರೀರಾಮನ ಪ್ರತಿಷ್ಠಾಪನೆಗೆ ಪೂರ್ವಭಾವಿಯಾಗಿ ಇಂದು ಆದರಣೀಯ ಪ್ರಧಾನಿ ಶ್ರೀ @narendramodi ಅವರು ರಾಮನ ನಗರಿ ಅಯೋಧ್ಯೆಯಲ್ಲಿ ಮಹರ್ಷಿ ವಾಲ್ಮೀಕಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ, ನವೀಕೃತ ಅಯೋಧ್ಯಾ ಧಾಮ ರೈಲು ನಿಲ್ದಾಣ ಸೇರಿದಂತೆ 15,700 ಕೋಟಿ ರೂ.ಗಳಿಗೂ ಹೆಚ್ಚಿನ ಅಭಿವೃದ್ಧಿ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಿದ್ದಾರೆ. ಅಯೋಧ್ಯೆಯ ಆಧ್ಯಾತ್ಮಿಕ ಮಹತ್ವಕ್ಕೆ ಮನ್ನಣೆ ನೀಡುವ ಜೊತೆಗೆ ಭಕ್ತರು ಹಾಗೂ ಪ್ರವಾಸಿಗರಿಗೆ ವಿಶ್ವದರ್ಜೆಯ ಸಂಪರ್ಕ ಸೌಕರ್ಯ ಮತ್ತಿತರ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ಮಹತ್ತರ ಕಾರ್ಯಗಳಿಗೆ ಚಾಲನೆ ನೀಡಲಾಗುತ್ತಿದೆ.
-
B.S.Yediyurappa
@BSYBJP
ಶ್ರೀ ನಿಡುಮಾಮಿಡಿ ಮಹಾಸಂಸ್ಥಾನ ಮಠ, ಮಾನವಧರ್ಮ ಪೀಠದ ವತಿಯಿಂದ ಇಂದು ಬೆಂಗಳೂರಿನಲ್ಲಿ ಆಯೋಜಿಸಲಾಗಿದ್ದ ಶ್ರೀ ಜಚನಿಯವರ 115ನೇ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಾಯಿತು. ಆಧ್ಯಾತ್ಮಿಕ ಸೇವೆಯ ಜೊತೆಗೆ ಕನ್ನಡ ಸಾಹಿತ್ಯಕ್ಕೆ ಶ್ರೀ ಜ.ಚ.ನಿ ಎಂದೇ ಖ್ಯಾತರಾಗಿದ್ದ ಶ್ರೀ ಚನ್ನಬಸವರಾಜ ದೇಶಿಕೇಂದ್ರ ಶಿವಾಚಾರ್ಯ ಸ್ವಾಮಿಗಳ ಕೊಡುಗೆ ಅಗಾಧವಾದದ್ದು
-
B.S.Yediyurappa
@BSYBJP
ಕನ್ನಡ ಸಾರಸ್ವತ ಲೋಕದ ರಸಋಷಿ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಮೇರು ಸಾಹಿತಿ, ಕರ್ನಾಟಕ ರತ್ನ ದಿ. ಶ್ರೀ ಕುವೆಂಪುರವರ ಜನ್ಮದಿನದಂದು ಆ ಮಹಾನ್ ಚೇತನಕ್ಕೆ ಗೌರವಪೂರ್ವಕ ಪ್ರಣಾಮಗಳು.
-
B.S.Yediyurappa
@BSYBJP
My tributes to former Union Minister, Padma Vibhushan Late Shri Arun Jaitley ji on his birth anniversary. I have fond memories of our interactions and cherished his intellect and warm personality.
-
B.S.Yediyurappa
@BSYBJP
ಸಾಟಿಯಿಲ್ಲದ ಮೇರು ಸದೃಶ ವ್ಯಕ್ತಿತ್ವದ ಜನಾನುರಾಗಿ ನೇತಾರ, ಮಾಜಿ ಪ್ರಧಾನಿ, ಭಾರತರತ್ನ ದಿವಂಗತ ಶ್ರೀ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮದಿನದಂದು ಆ ಮಹಾನ್ ಚೇತನಕ್ಕೆ ಅನಂತ ಪ್ರಣಾಮಗಳು. ಆ ಮುತ್ಸದ್ದಿ ನಾಯಕನ ಮಾರ್ಗದರ್ಶನ, ಪ್ರಭಾವ, ಒಡನಾಟದ ನೆನಪುಗಳು ಅವಿಸ್ಮರಣೀಯ.
#atalbiharivajpayee #goodgovernanceday -
B.S.Yediyurappa
@BSYBJP
ನಾಡಿನ ಎಲ್ಲ ನಮ್ಮ ಕ್ರೈಸ್ತ ಬಂಧುಗಳಿಗೆ ಕ್ರಿಸ್ಮಸ್ ಹಬ್ಬದ ಶುಭಾಶಯಗಳು. ಈ ಕ್ರಿಸ್ಮಸ್ ಹಬ್ಬವು ಎಲ್ಲರಿಗೂ ಮಂಗಳವನ್ನು ಉಂಟುಮಾಡಲಿ ಎಂದು ಆಶಿಸುತ್ತೇನೆ.
Wishing you all a blessed Christmas. #merrychristmas -
B.S.Yediyurappa
@BSYBJP
ನಾಡಿನ ಸಮಸ್ತ ಭಕ್ತಜನತೆಗೆ ವೈಕುಂಠ ಏಕಾದಶಿಯ ಶುಭಾಶಯಗಳು. ದೇವರು ಎಲ್ಲರಿಗೂ ಮಂಗಳವನ್ನುಂಟು ಮಾಡಲಿ ಎಂದು ಪ್ರಾರ್ಥಿಸೋಣ.
-
B.S.Yediyurappa
@BSYBJP
ರಾಷ್ಟ್ರಕವಿ ಕುವೆಂಪುರವರು ಹೇಳಿದಂತೆ ನಮ್ಮ ಧರ್ಮ, ಕರ್ಮಗಳು ಅನ್ನದಾತ ರೈತರ ಹಿತರಕ್ಷಣೆಯನ್ನು ಆದ್ಯತೆಯನ್ನಾಗಿಸಿಕೊಂಡಾಗ ರಾಷ್ಟ್ರದ ಪ್ರಗತಿ ನಿಶ್ಚಿತ. ಮಾಜಿ ಪ್ರಧಾನಿ ದಿವಂಗತ ಶ್ರೀ ಚೌಧರಿ ಚರಣ್ ಸಿಂಗ್ ಅವರ ಜನ್ಮದಿನದಂದು ಅವರ ಸಂಸ್ಮರಣೆಗಳ ಜೊತೆಗೆ, ನಾಡಿನ ನಮ್ಮ ಸಮಸ್ತ ರೈತ ಬಂಧುಗಳಿಗೆ ರಾಷ್ಟ್ರೀಯ ರೈತರ ದಿನದ ಹಾರ್ದಿಕ ಶುಭಾಶಯಗಳು.
#kisandiwas #nationalfarmersday -
B.S.Yediyurappa
@BSYBJP
2023ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗೆ ಭಾಜನರಾದ ನಾಡಿನ ಹಿರಿಯ ಲೇಖಕರು, ಚಿಂತಕರು ಮತ್ತು ವಿದ್ವಾಂಸರಾದ ಶ್ರೀ ಲಕ್ಷ್ಮೀಶ ತೋಳ್ಪಾಡಿ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು.
-
B.S.Yediyurappa
@BSYBJP
Was a pleasure to have met former Slovenian Prime Minister Mr. Alojz Peterle and other delegates at my residence today.
-
B.S.Yediyurappa
@BSYBJP
ಮಾಜಿ ಮುಖ್ಯಮಂತ್ರಿಗಳು, ಜೆಡಿಎಸ್ ಪಕ್ಷದ ರಾಜ್ಯಾಧ್ಯಕ್ಷರಾದ ಶ್ರೀ ಹೆಚ್.ಡಿ.ಕುಮಾರಸ್ವಾಮಿ ಅವರಿಗೆ ಜನ್ಮದಿನದ ಶುಭಾಶಯಗಳು. ದೇವರ ಅನುಗ್ರಹ ಸದಾ ತಮ್ಮ ಮೇಲಿರಲಿ ಎಂದು ಹಾರೈಸುತ್ತೇನೆ.
@hd_kumaraswamy -
B.S.Yediyurappa
@BSYBJP
ಮಾತೃಭೂಮಿಯ ರಕ್ಷಣೆಯ ತಮ್ಮ ಕರ್ತವ್ಯ ನಿರ್ವಹಿಸುತ್ತಾ ಪ್ರಾಣತ್ಯಾಗ ಮಾಡಿದ ಎಲ್ಲ ನಮ್ಮ ಹುತಾತ್ಮ ಯೋಧರಿಗೆ ನಮಿಸುತ್ತಾ ಭಾರತೀಯ ಸೇನಾಪಡೆಗಳ ವೀರಯೋಧರು ಮತ್ತು ಅವರ ಕುಟುಂಬಗಳಿಗೆ ಹಾಗೂ ನಾಡಿನ ಸಮಸ್ತ ಜನತೆಗೆ ವಿಜಯ್ ದಿವಸದ ಶುಭಾಶಯಗಳು.
#vijaydiwas2023 -
B.S.Yediyurappa
@BSYBJP
ಉಕ್ಕಿನ ಮನುಷ್ಯ ಎಂದೇ ಖ್ಯಾತರಾಗಿದ್ದ ಹಿರಿಯ ಸ್ವಾತಂತ್ರ್ಯ ಸೇನಾನಿ, ರಾಷ್ಟ್ರದ ಪ್ರಥಮ ಉಪಪ್ರಧಾನಮಂತ್ರಿ ಹಾಗೂ ಗೃಹ ಸಚಿವ, ಭಾರತರತ್ನ ಸರ್ದಾರ್ ವಲ್ಲಭಭಾಯ್ ಪಟೇಲ್ ಅವರ ಪುಣ್ಯತಿಥಿಯಂದು ಆ ದಿವ್ಯಚೇತನಕ್ಕೆ ಅನಂತ ಪ್ರಣಾಮಗಳು.
#sardarvallabhbhaipatel -
B.S.Yediyurappa
@BSYBJP
ರಾಜ್ಯ ಕಾಂಗ್ರೆಸ್ ಸರ್ಕಾರದ ದುರಾಡಳಿತ, ವೈಫಲ್ಯ, ಅಭಿವೃದ್ಧಿ ವಿಮುಖ ನಡೆ, ಸುಳ್ಳು ಆಶ್ವಾಸನೆಗಳು, ಜನವಿರೋಧಿ, ರೈತ ವಿರೋಧಿ ಧೋರಣೆಗಳ ವಿರುದ್ಧ ಬೆಳಗಾವಿಯಲ್ಲಿ ಇಂದು ಪಕ್ಷದ ವತಿಯಿಂದ ನಡೆದ ಬೃಹತ್ ಹೋರಾಟ, ಪ್ರತಿಭಟನೆಯಲ್ಲಿ ಭಾಗವಹಿಸಲಾಯಿತು. ರಾಜ್ಯಾಧ್ಯಕ್ಷ ಶ್ರೀ @BYVijayendra, ವಿಪಕ್ಷ ನಾಯಕ ಶ್ರೀ @RAshokaBJP, ಮತ್ತಿತರ ನಾಯಕರು, ಮುಖಂಡರು, ಸಾವಿರಾರು ಸಂಖ್ಯೆಯಲ್ಲಿ ಕಾರ್ಯಕರ್ತರು, ಸಾರ್ವಜನಿಕರು ಪಾಲ್ಗೊಂಡಿದ್ದರು.
#janavirodhicongress #congressfailskarnataka -
B.S.Yediyurappa
@BSYBJP
Congratulations to the young leader and first-time MLA Shri Bhajanlal Sharma Ji on being elected as the new CM of Rajasthan! Best wishes in steering Rajasthan to progress and prosperity.
@BhajanlalBjp -
B.S.Yediyurappa
@BSYBJP
Congratulations to the newly elected Chief Minister of Madhya Pradesh Dr. Mohan Yadav Ji and my best wishes for a successful tenure in steering the state on the path of development and prosperity.
@DrMohanYadav51 -
B.S.Yediyurappa
@BSYBJP
Hearty Congratulations to the young tribal leader Shri Vishnu Deo Sai Ji on being elected as the Chief minister of Chhattisgarh. My best wishes for a fruitful tenure, and leading Chhattisgarh to new heights of progress and prosperity.
@vishnudsai -
B.S.Yediyurappa
@BSYBJP
ಜಮ್ಮು ಕಾಶ್ಮೀರಕ್ಕೆ ಸಂಬಂಧಿಸಿದಂತೆ 370ನೇ ವಿಧಿ ರದ್ದು ಮಾಡಿ ಆ ರಾಜ್ಯದಲ್ಲಿ ಶಾಂತಿ, ಸುವ್ಯವಸ್ಥೆ ಹಾಗೂ ಅಭಿವೃದ್ಧಿಗೆ ಹೊಸ ಮುನ್ನುಡಿ ಬರೆದಿದ್ದ ಪ್ರಧಾನಿ ಶ್ರೀ ನರೇಂದ್ರ ಮೋದಿ ಸರ್ಕಾರದ ನಿರ್ಧಾರವನ್ನು ಸರಿ ಎಂದು ಎತ್ತಿಹಿಡಿಯುವ ಮೂಲಕ ಮಾನ್ಯ ಸರ್ವೋಚ್ಛ ನ್ಯಾಯಾಲಯ ಇಂದು ಐತಿಹಾಸಿಕ ತೀರ್ಪು ನೀಡಿದೆ.
ಭಾರತದ ಏಕತೆ, ಅಖಂಡತೆಯನ್ನು ರಕ್ಷಿಸಿ, ಜಮ್ಮು ಕಾಶ್ಮೀರದ ಜನತೆಗೆ ನ್ಯಾಯ ಒದಗಿಸಲು ಮಾನ್ಯ ಪ್ರಧಾನಿ ಶ್ರೀ @narendramodi ಹಾಗೂ ಕೇಂದ್ರ ಗೃಹ ಸಚಿವರಾದ @AmitShah ಅವರು ಇಟ್ಟ ದಿಟ್ಟ ಹೆಜ್ಜೆಗೆ, ಮಾನ್ಯ ಸರ್ವೋಚ್ಚ ನ್ಯಾಯಾಲಯದ ತೀರ್ಪಿನ ಅನುಮೋದನೆಯ ಬಲವೂ ಸಿಕ್ಕಿದೆ. ದೇಶ ಮೊದಲು ಎನ್ನುವ ಪಕ್ಷದ ಧ್ಯೇಯವನ್ನು ಎತ್ತಿ ಹಿಡಿದ ನಮ್ಮ ಕೇಂದ್ರ ಸರ್ಕಾರಕ್ಕೆ ಹೆಮ್ಮೆಯ ಅಭಿನಂದನೆಗಳು.
#nayajammukashmir -
B.S.Yediyurappa
@BSYBJP
ಕನ್ನಡ ಚಿತ್ರರಂಗದ ಹಿರಿಯ ಕಲಾವಿದೆ ಲೀಲಾವತಿ ಅವರು ವಿಧಿವಶರಾದ ವಿಷಯ ತಿಳಿದು ಅತೀವ ದುಃಖವಾಗಿದೆ. ದಕ್ಷಿಣ ಭಾರತದ ಸುಮಾರು 600ಕ್ಕೂ ಅಧಿಕ ಚಿತ್ರಗಳಲ್ಲಿ ನಟಿಸಿ, ಚಿತ್ರರಂಗಕ್ಕೆ ಅಪಾರ ಸೇವೆ ಸಲ್ಲಿಸಿದ ಅವರ ಅಗಲಿಕೆಯಿಂದ ಕಲಾಪ್ರಪಂಚ ತನ್ನ ಮಾತೃಸದೃಶ ಕಲಾವಿದೆಯನ್ನು ಕಳೆದುಕೊಂಡಿದೆ. ಅವರ ಆತ್ಮಕ್ಕೆ ಚಿರಶಾಂತಿ ಕೋರುತ್ತಾ, ಅವರ ಕುಟುಂಬ ಹಾಗೂ ಅಭಿಮಾನಿ ವರ್ಗದವರಲ್ಲಿ ಸಂತಾಪಗಳನ್ನು ಸಲ್ಲಿಸುತ್ತೇನೆ. ಓಂ ಶಾಂತಿ
-
B.S.Yediyurappa
@BSYBJP
Pained to learn about the injury to Shri K.Chandrashekar Rao garu, the former Chief Minister of Telangana. My prayers for his swift and complete recovery.
-
B.S.Yediyurappa
@BSYBJP
ಸಂವಿಧಾನ ಶಿಲ್ಪಿ, ಭಾರತರತ್ನ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಮಹಾಪರಿನಿರ್ವಾಣ ದಿನದಂದು ಆ ಮಹಾನ್ ಚೇತನಕ್ಕೆ ಶ್ರದ್ಧಾಪೂರ್ವಕ ಅನಂತ ಪ್ರಣಾಮಗಳು.
#mahaparinirvandiwas -
B.S.Yediyurappa
@BSYBJP
Hearty congratulations to Prime Minister Shri @narendramodi Ji, our National President Shri @JPNadda Ji, Home Minister Shri @AmitShah Ji, our party leaders and dedicated karyakarthas for the resounding victories in Madhya Pradesh, Rajasthan and Chhattisgarh Assembly Elections. The people have once again shown their unwavering trust in PM Shri Narendra Modi Ji's leadership, rejecting the Congress decisively.
@BJP4India @BJP4Karnataka -
B.S.Yediyurappa
@BSYBJP
ಸಮಾಜಮುಖಿ ದಾರ್ಶನಿಕ, ಭಕ್ತಿಯಿಂದ ಭಗವಂತನನ್ನು ಒಲಿಸಿಕೊಂಡ ದಾಸಪಂಥದ ಶ್ರೇಷ್ಠ ಸಾಧಕ ಶ್ರೀ ಕನಕದಾಸರ ಜಯಂತಿಯಂದು ಆ ಮಹಾನ್ ತತ್ವಜ್ಞಾನಿಗೆ ಭಕ್ತಿಪೂರ್ವಕ ಅನಂತ ಪ್ರಣಾಮಗಳು.
-
B.S.Yediyurappa
@BSYBJP
ಉತ್ತರಕಾಶಿಯ ಸುರಂಗದಲ್ಲಿ ಸಿಲುಕಿದ್ದ ನಮ್ಮ 41 ಶ್ರಮಿಕ ಬಂಧುಗಳನ್ನು ಸುರಕ್ಷಿತವಾಗಿ ರಕ್ಷಿಸಲಾಗಿದ್ದು, ಇಡೀ ದೇಶಕ್ಕೆ ಸಮಾಧಾನ ತಂದಿದೆ. ದೀರ್ಘ ಕಾಲ ಸುರಂಗದಲ್ಲಿ ಸಿಲುಕಿದ್ದರೂ ಧೃತಿಗೆಡದ ಅವರ ಮನೋಸ್ಥೈರ್ಯಕ್ಕೆ, ಅವರ ಕುಟುಂಬದವರ ಪ್ರಾರ್ಥನೆ, ವಿಶ್ವಾಸಗಳಿಗೆ, ನೆರವು ನೀಡಲು ನಿರಂತರ ಪ್ರಯತ್ನಿಸಿದ ಎಲ್ಲರಿಗೂ ಇಡೀ ದೇಶ ಹೆಮ್ಮೆಯಿಂದ ಕೃತಜ್ಞತೆಗಳನ್ನು ಸಲ್ಲಿಸುತ್ತಿದೆ.
#uttarakhandtunnelrescue -
B.S.Yediyurappa
@BSYBJP
ಹಿರಿಯ ನಾಯಕರು, ಕೇಂದ್ರ ಸಂಸದೀಯ ವ್ಯವಹಾರಗಳು ಹಾಗೂ ಕಲ್ಲಿದ್ದಲು ಮತ್ತು ಗಣಿ ಖಾತೆ ಸಚಿವರಾದ ಶ್ರೀ ಪ್ರಹ್ಲಾದ ಜೋಶಿ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. ದೇವರ ಆಶೀರ್ವಾದ ಸದಾ ತಮ್ಮ ಮೇಲಿರಲಿ ಎಂದು ಹಾರೈಸುತ್ತೇನೆ.
@JoshiPralhad -
B.S.Yediyurappa
@BSYBJP
ನಾಡಿನ ಸಮಸ್ತ ಸಿಖ್ ಬಂಧುಗಳಿಗೂ ದಾರ್ಶನಿಕ ಶ್ರೇಷ್ಠ, ಧರ್ಮಗುರು ಶ್ರೀ ಗುರು ನಾನಕ್ ರವರ ಜಯಂತಿಯ ಹಾರ್ದಿಕ ಶುಭಾಶಯಗಳು. ಅವರ ಬೋಧನೆಗಳ ಬೆಳಕು ಎಲ್ಲರ ಬಾಳನ್ನು ಬೆಳಗಲಿ.
#gurunanakjayanti -
B.S.Yediyurappa
@BSYBJP
ಸರ್ವರಿಗೂ ಸಂವಿಧಾನ ದಿವಸದ ಶುಭಾಶಯಗಳು. ಅತ್ಯುತ್ತಮ ಸಂವಿಧಾನವನ್ನು ನಮಗೆ ನೀಡಿದ ಎಲ್ಲ ಮಹನೀಯರ ಸಂಸ್ಮರಣೆಗಳ ಜೊತೆಗೆ ಸಶಕ್ತ ರಾಷ್ಟ್ರ ನಿರ್ಮಾಣದ ನಿಟ್ಟಿನಲ್ಲಿ ನಮ್ಮ ಕರ್ತವ್ಯಗಳನ್ನು ಪ್ರಾಮಾಣಿಕವಾಗಿ ನಿರ್ವಹಿಸುವ ಸಂಕಲ್ಪ ನಮ್ಮದಾಗಿರಲಿ.
#constitutionday -
B.S.Yediyurappa
@BSYBJP
ರಾಷ್ಟ್ರಮಟ್ಟದಲ್ಲಿ ನಮ್ಮ ತುಳುನಾಡು ಕರಾವಳಿಯ ಸಂಸ್ಕೃತಿಯನ್ನು ಪ್ರತಿಬಿಂಬಿಸಲು ಬೆಂಗಳೂರಿನಲ್ಲಿ ಎರಡು ದಿನಗಳ ಕಾಲ ಆಯೋಜಿಸಲಾಗಿರುವ ನಾಡಿನ ಹೆಮ್ಮೆಯ ಜಾನಪದ ಕ್ರೀಡೆ 'ಕಂಬಳ ಉತ್ಸವ'ದಲ್ಲಿ ಇಂದು ಪಾಲ್ಗೊಳ್ಳಲಾಯಿತು.
-
B.S.Yediyurappa
@BSYBJP
At Hyderabad to campaign for our party’s candidates in the Telangana assembly elections. I urge the people of Hyderabad to place their trust in Prime Minister @narendramodi Ji and the state leaders of BJP whose commitment is towards the betterment of Telangana.
#bjp4saubhagyatelangana -
B.S.Yediyurappa
@BSYBJP
ಕರ್ನಾಟಕ ವಿಧಾನಸಭೆಯ ವಿರೋಧ ಪಕ್ಷದ ನಾಯಕರಾಗಿ ಆಯ್ಕೆಯಾದ ಮಾಜಿ ಉಪಮುಖ್ಯಮಂತ್ರಿ ಶ್ರೀ ಆರ್.ಅಶೋಕ ಅವರಿಗೆ ಅಭಿನಂದನೆಗಳು.
@RAshokaBJP -
B.S.Yediyurappa
@BSYBJP
Was an honour to host Union Finance Minister Smt Nirmala Sitharaman ji & National General Secretary Shri Dushyant Kumar Gautam ji at my residence.
@nsitharaman @dushyanttgautam @BJP4Karnataka @BYVijayendra @RajeshGaVee -
B.S.Yediyurappa
@BSYBJP
ದೇಶದ ಪ್ರಥಮ ಪ್ರಧಾನಿ ಪಂಡಿತ್ ಜವಾಹರ್ ಲಾಲ್ ನೆಹರು ಅವರ ಜಯಂತಿಯಂದು ಅವರಿಗೆ ಆದರಪೂರ್ವಕ ನಮನಗಳು. ನಾಡಿನ ಎಲ್ಲ ಮಕ್ಕಳಿಗೂ ಮಕ್ಕಳ ದಿನಾಚರಣೆಯ ಪ್ರೀತಿಪೂರ್ವಕ ಶುಭಾಶಯಗಳು.
-
B.S.Yediyurappa
@BSYBJP
ತಮ್ಮ ವ್ಯಕ್ತಿತ್ವ, ಸಾಧನೆ ಹಾಗೂ ಸೇವಾ ಕಾರ್ಯಗಳಿಂದ ಅಪಾರ ಜನಮನ್ನಣೆ ಗಳಿಸಿದ್ದ ಸ್ನೇಹಜೀವಿ, ಪಕ್ಷದ ಹಿರಿಯ ನಾಯಕ, ಆತ್ಮೀಯ ಸ್ನೇಹಿತ ಶ್ರೀ ಅನಂತಕುಮಾರ್ ಅವರ ಪುಣ್ಯಸ್ಮರಣೆಯಂದು ಅವರಿಗೆ ಅನಂತ ನಮನಗಳು.
-
B.S.Yediyurappa
@BSYBJP
ನಾಡಿನ ಸಮಸ್ತ ಜನತೆಗೆ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು. ಈ ಬೆಳಕಿನ ಹಬ್ಬವು ಎಲ್ಲರ ಜೀವನದಲ್ಲಿ ಸುಖ, ಸಂಭ್ರಮ, ಯಶಸ್ಸು ಮತ್ತು ಆರೋಗ್ಯದ ಬೆಳಕನ್ನು ಹೊತ್ತು ತರಲಿ ಎಂದು ಹಾರೈಸುತ್ತೇನೆ.
#deepavali2023 -
B.S.Yediyurappa
@BSYBJP
ವಿಶ್ವಮಾನವ ಸಂದೇಶ ಸಾರಿದ ರಾಷ್ಟ್ರಕವಿ, ಕರ್ನಾಟಕ ರತ್ನ ಕುವೆಂಪು ಅವರ ಪುಣ್ಯತಿಥಿಯಂದು ಆ ಮಹಾನ್ ಚೇತನಕ್ಕೆ ಅನಂತ ಪ್ರಣಾಮಗಳು.
-
B.S.Yediyurappa
@BSYBJP
ಮುಂಬರುವ ಲೋಕಸಭಾ ಚುನಾವಣೆಯಲ್ಲಿ ರಾಜ್ಯದಿಂದ ಅತಿ ಹೆಚ್ಚು ಸ್ಥಾನಗಳನ್ನು ಗೆಲ್ಲಿಸಿಕೊಡುವ ಮೂಲಕ ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರ ಕೈ ಬಲಪಡಿಸುವ ನಿಟ್ಟಿನಲ್ಲಿ ನಾನೂ ಸೇರಿದಂತೆ, ಹಿರಿಯ ನಾಯಕರಾದ ಸದಾನಂದಗೌಡರು, ಎಲ್ಲರೂ ಒಟ್ಟಾಗಿ ದುಡಿಯುತ್ತಿದ್ದೇವೆ. ಯುವಕರು ರಾಜಕೀಯದಲ್ಲಿ ಮುಂದೆ ಬರಬೇಕೆಂದು ಅವರು ಚುನಾವಣಾ ರಾಜಕೀಯದಿಂದ ನಿವೃತ್ತರಾಗಿದ್ದಾರೆಯೆ ವಿನಃ ಅವರಿಗೆ ಯಾರೂ ಒತ್ತಡ ಹೇರಿಲ್ಲ. ಇಂದು ನಾನು ಹೇಳಿರುವ ಹೇಳಿಕೆಯನ್ನು ಕೆಲ ಮಾಧ್ಯಮಗಳಲ್ಲಿ ತಪ್ಪಾಗಿ ಅರ್ಥೈಸಲಾಗಿದೆ. ಅವರು ನಿವೃತ್ತಿ ಘೋಷಿಸಿದರೂ ಸಕ್ರಿಯ ರಾಜಕಾರಣದಲ್ಲಿದ್ದು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಪಕ್ಷ 25ಕ್ಕೂ ಅಧಿಕ ಸ್ಥಾನ ಗೆಲ್ಲುವ ನಿಟ್ಟಿನಲ್ಲಿ ಶ್ರಮಿಸಲಿದ್ದಾರೆ. ಜನರ ಆಶಯದಂತೆ, ಶ್ರೀ ನರೇಂದ್ರ ಮೋದಿಯವರು ಮತ್ತೊಮ್ಮೆ ಪ್ರಧಾನಿಯಾಗುವ ನಿಟ್ಟಿನಲ್ಲಿ, ಪಕ್ಷ ಸಂಘಟನೆಯ ಕಾರ್ಯದಲ್ಲಿ ನಾವೆಲ್ಲರೂ ಒಂದಾಗಿ ಮುನ್ನಡೆಯುತ್ತಿದ್ದೇವೆ.
-
B.S.Yediyurappa
@BSYBJP
Warm birthday greetings to our veteran leader Adaraniya Shri Lal Krishna Advani Ji. My prayers for your good health and long life.
-
B.S.Yediyurappa
@BSYBJP
ಹಿರಿಯ ನಾಯಕ, ಮಾಜಿ ಸಚಿವ, ರಾಜಕೀಯ ಮುತ್ಸದ್ಧಿ ಶ್ರೀ ಡಿ.ಬಿ.ಚಂದ್ರೇಗೌಡ ಅವರು ವಿಧಿವಶರಾದ ಸುದ್ದಿ ತಿಳಿದು ಅತೀವ ದುಃಖವಾಗಿದೆ. ರಾಜಕೀಯ ಕ್ಷೇತ್ರದಲ್ಲಿ ತಮ್ಮದೇ ಛಾಪನ್ನು ಮೂಡಿಸಿದ್ದ ಅವರು ಶಾಸಕರಾಗಿ, ಸಂಸದರಾಗಿ, ರಾಜ್ಯಸಭಾ ಸದಸ್ಯರಾಗಿ, ಕಾನೂನು ಸಚಿವರಾಗಿ ಅಪಾರ ಸೇವೆ ಸಲ್ಲಿಸಿದ್ದರು. ಅವರ ಆತ್ಮಕ್ಕೆ ಸದ್ಗತಿ ಪ್ರಾರ್ಥಿಸುತ್ತಾ, ಅವರ ಕುಟುಂಬದವರಲ್ಲಿ, ಅಭಿಮಾನಿಗಳಲ್ಲಿ ತೀವ್ರ ಸಂತಾಪ ವ್ಯಕ್ತಪಡಿಸುತ್ತೇನೆ. ಓಂ ಶಾಂತಿ
-
B.S.Yediyurappa
@BSYBJP
ಹಿರಿಯರು, ಸಂಘಟನೆಯಲ್ಲಿ ಸದಾ ಸಕ್ರಿಯರಾಗಿ ತೊಡಗಿಸಿಕೊಂಡಿದ್ದ ಆತ್ಮೀಯರು, ರಾಜ್ಯ ಅಲ್ಪಸಂಖ್ಯಾತರ ಆಯೋಗದ ಮಾಜಿ ಅಧ್ಯಕ್ಷರಾಗಿದ್ದ ಶ್ರೀ ಖುಸ್ರೋ ಖುರೇಶಿರವರು ಇಂದು ದೈವಾಧೀನರಾದ ಸುದ್ದಿ ತಿಳಿದು ತೀವ್ರ ದುಃಖವಾಗಿದೆ. ವೈಯಕ್ತಿಕವಾಗಿ ಆತ್ಮೀಯ ಒಡನಾಡಿ ಒಬ್ಬರನ್ನು ಕಳೆದುಕೊಂಡಂತಾಗಿದೆ. ಅವರ ಆತ್ಮಕ್ಕೆ ಚಿರಶಾಂತಿಯನ್ನು ಪ್ರಾರ್ಥಿಸುತ್ತಾ, ಕುಟುಂಬದವರಲ್ಲಿ ಸಂತಾಪ ವ್ಯಕ್ತಪಡಿಸುತ್ತೇನೆ. ಓಂ ಶಾಂತಿ
-
B.S.Yediyurappa
@BSYBJP
ನಾಡಿನ ಏಕೀಕರಣಕ್ಕೆ ಹೋರಾಡಿದ ಎಲ್ಲ ಮಹನೀಯರ ಸಂಸ್ಮರಣೆಗಳ ಜೊತೆಗೆ ಕನ್ನಡ ಉಳಿಸುವ, ಬೆಳೆಸುವ ದೃಢಸಂಕಲ್ಪ ಸದಾ ನಮ್ಮದಾಗಿರಲಿ. ಸಮಸ್ತ ಕನ್ನಡಿಗರಿಗೆ ಕನ್ನಡ ರಾಜ್ಯೋತ್ಸವದ ಅಭಿಮಾನಪೂರ್ವಕ ಶುಭಾಶಯಗಳು.
#ಕನ್ನಡ_ರಾಜ್ಯೋತ್ಸವ #ಕರ್ನಾಟಕರಾಜ್ಯೋತ್ಸವ -
B.S.Yediyurappa
@BSYBJP
ಪ್ರಚಲಿತ ವಿದ್ಯಮಾನಗಳ ಕುರಿತಂತೆ ಪಕ್ಷದ ಕಚೇರಿಯಲ್ಲಿ ಇಂದು ಮುಖಂಡರೊಂದಿಗೆ ಸಭೆ ನಡೆಸಲಾಯಿತು. ರಾಜ್ಯದಲ್ಲಿ ತಾಂಡವವಾಡುತ್ತಿರುವ ಬರ ಪರಿಸ್ಥಿತಿ, ಅದರಿಂದ ರೈತರು ಸೇರಿದಂತೆ ಜನಸಾಮಾನ್ಯರು ಎದುರಿಸುತ್ತಿರುವ ಗಂಭೀರ ಪರಿಸ್ಥಿತಿಗಳ ಅಧ್ಯಯನಕ್ಕೆ ಪಕ್ಷದ ಸಂಸದರು, ಶಾಸಕರು, ಪರಿಷತ್ ಸದಸ್ಯರನ್ನೊಳಗೊಂಡ 17 ತಂಡ ರಚಿಸಲಾಗಿದ್ದು, ತಲಾ 2 ಜಿಲ್ಲೆಯಂತೆ, ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಪ್ರವಾಸ ಕೈಗೊಂಡು, ನವೆಂಬರ್ 10ರಂದು ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು.
-
B.S.Yediyurappa
@BSYBJP
ಹಿರಿಯ ಸ್ವಾತಂತ್ರ್ಯ ಹೋರಾಟಗಾರ, ಸ್ವತಂತ್ರ ಭಾರತದ ಏಕತೆ, ಅಖಂಡತೆಗಳ ರೂವಾರಿ, ಭಾರತರತ್ನ ಸರ್ದಾರ್ ವಲ್ಲಭಭಾಯ್ ಪಟೇಲ್ ಅವರ ಜಯಂತಿಯಂದು ಆ ಮಹಾನ್ ಚೇತನಕ್ಕೆ ಶ್ರದ್ಧಾಪೂರ್ವಕ ಪ್ರಣಾಮಗಳು. ನಾಡಿನ ಸಮಸ್ತ ಜನತೆಗೆ ರಾಷ್ಟ್ರೀಯ ಏಕತಾ ದಿನದ ಹಾರ್ದಿಕ ಶುಭಾಶಯಗಳು.
#sardarvallabhbhaipatel #nationalunityday -
B.S.Yediyurappa
@BSYBJP
ಆದಿಕಾವ್ಯ ರಾಮಾಯಣವನ್ನು ರಚಿಸಿ ಶ್ರೀರಾಮನ ಆದರ್ಶಗಳನ್ನು ಜಗತ್ತಿಗೆ ತಿಳಿಸಿಕೊಟ್ಟ ಮಹರ್ಷಿ ಶ್ರೀ ವಾಲ್ಮೀಕಿಗಳ ಜಯಂತಿಯಂದು ಆದಿಕವಿಗಳ ಚರಣಗಳಿಗೆ ಅನಂತ ಪ್ರಣಾಮಗಳು.
#valmikijayanti -
B.S.Yediyurappa
@BSYBJP
ಸಂಘದ ವಾರ್ಷಿಕ ವಿಜಯದಶಮಿ ಉತ್ಸವ ನಾಳೆ ಮಂಗಳವಾರ, ನಾಗಪುರದ ಸ್ಮೃತಿಮಂದಿರ ಮೈದಾನದಲ್ಲಿ, ಬೆಳಗ್ಗೆ 7.40ರಿಂದ ಪ್ರಾರಂಭಗೊಳ್ಳಲಿದೆ. ಈ ಬಾರಿ ಮುಖ್ಯ ಅತಿಥಿಯಾಗಿ ಪ್ರಖ್ಯಾತ ಗಾಯಕ ಪದ್ಮಶ್ರೀ ಶಂಕರ್ ಮಹಾದೇವನ್ ಭಾಗವಹಿಸುತ್ತಿದ್ದು, ಆದರಣೀಯ ಸರಸಂಘಚಾಲಕ್ ಡಾ. ಮೋಹನ್ ಭಾಗವತ್ ರವರಿಂದ ಬೌದ್ಧಿಕ್ ಇರಲಿದೆ.
@DrMohanBhagwat -
B.S.Yediyurappa
@BSYBJP
ನಾಡಿನ ಸಮಸ್ತ ಜನತೆಗೆ ಆಯುಧಪೂಜೆ ಹಾಗೂ ವಿಜಯದಶಮಿ ಹಬ್ಬದ ಹೃತ್ಪೂರ್ವಕ ಶುಭಕಾಮನೆಗಳು. ಆ ಜಗನ್ಮಾತೆಯ ಕೃಪೆಯಿಂದ ನಾಡಿನಲ್ಲಿ ಸುಖ, ಸಮೃದ್ಧಿ, ಸದ್ಭಾವಗಳು ಸದಾ ನೆಲಸಲಿ, ಎಲ್ಲರ ಮೇಲೂ ತಾಯಿ ಚಾಮುಂಡೇಶ್ವರಿಯ ಅಭಯ, ಆಶೀರ್ವಾದಗಳು ಸದಾ ಇರಲಿ ಎಂದು ಪ್ರಾರ್ಥಿಸುತ್ತೇನೆ.
#ನಾಡಹಬ್ಬ #ದಸರಾ #vijayadashami #dasara2023 -
B.S.Yediyurappa
@BSYBJP
ಆಧ್ಯಾತ್ಮಿಕ ಗುರು, ತಮಿಳುನಾಡಿನ ಮೇಲ್ಮರವತ್ತೂರಿನ ಓಂಶಕ್ತಿ, ಆದಿಪರಾಶಕ್ತಿ ದೇವಸ್ಥಾನದ ಸಂಸ್ಥಾಪಕ ಶ್ರೀ ಬಂಗಾರು ಅಡಿಗಳಾರ್ ರವರು ಇಹಲೋಕ ತ್ಯಜಿಸಿದ ವಿಷಯ ತಿಳಿದು ಅತ್ಯಂತ ದುಃಖವಾಗಿದೆ. ಅವರ ನಿರ್ಗಮನದಿಂದ ಜಗತ್ತು ಹಿರಿಯ ಅಧ್ಯಾತ್ಮಿಕ ಮಾರ್ಗದರ್ಶಿ ಚೇತನವನ್ನು ಕಳೆದುಕೊಂಡಿದೆ. ಅವರ ಆತ್ಮಕ್ಕೆ ಚಿರಶಾಂತಿ ಬೇಡುತ್ತಾ, ಅವರ ಅಸಂಖ್ಯಾತ ಭಕ್ತಾದಿಗಳಿಗೆ ಈ ಅಗಲಿಕೆಯ ನೋವನ್ನು ಭರಿಸುವ ಶಕ್ತಿ ನೀಡಲೆಂದು ದೇವರಲ್ಲಿ ಪ್ರಾರ್ಥಿಸುತ್ತೇನೆ. ಓಂ ಶಾಂತಿ
-
B.S.Yediyurappa
@BSYBJP
ಪರಮಪೂಜ್ಯ ಶ್ರೀ ವೀರಸೋಮೇಶ್ವರ ಶಿವಾಚಾರ್ಯ ಸ್ವಾಮಿಗಳ ದಿವ್ಯಸಾನ್ನಿಧ್ಯದಲ್ಲಿ ರಾಯಚೂರಿನ ಲಿಂಗಸುಗೂರಿನಲ್ಲಿ ರಂಭಾಪುರಿ ಪೀಠದ ಶರನ್ನವರಾತ್ರಿ ದಸರಾ ಧರ್ಮ ಸಮ್ಮೇಳನವನ್ನು ಉದ್ಘಾಟಿಸಲಾಯಿತು.
-
B.S.Yediyurappa
@BSYBJP
ಎಲ್ಲರಿಗೂ ನಾಡಹಬ್ಬ ದಸರಾ ಹಾಗೂ ನವರಾತ್ರಿಯ ಹಾರ್ದಿಕ ಶುಭಾಶಯಗಳು. ನಾಡದೇವತೆ ತಾಯಿ ಚಾಮುಂಡೇಶ್ವರಿ ಎಲ್ಲರಿಗೂ ಮಂಗಳವನ್ನು ಕರುಣಿಸಲಿ ಎಂದು ಪ್ರಾರ್ಥಿಸೋಣ.
#ನಾಡಹಬ್ಬ_ದಸರಾ #navaratri #dasara -
B.S.Yediyurappa
@BSYBJP
ದಿ ವೀಕ್, ಮಲಯಾಳ ಮನೋರಮಾ ಪತ್ರಿಕೆಗಳ ಮಾಜಿ ಸ್ಥಾನೀಯ ಸಂಪಾದಕ, ಹಿರಿಯ ಪತ್ರಕರ್ತ ಶ್ರೀ ಸಚ್ಚಿದಾನಂದ ಮೂರ್ತಿಯವರ ನಿಧನದಿಂದ ತೀವ್ರ ದುಃಖವಾಗಿದೆ. ಅವರ ಅಗಲಿಕೆಯಿಂದ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ವಿದ್ಯಮಾನಗಳ ಪರಿಣತ ಪತ್ರಕರ್ತರನ್ನು ನಾವು ಕಳೆದುಕೊಂಡಂತಾಗಿದೆ. ಅವರ ಆತ್ಮಕ್ಕೆ ಸದ್ಗತಿ ಕೋರುತ್ತಾ, ಅವರ ಕುಟುಂಬ ಸದಸ್ಯರಲ್ಲಿ ಸಾಂತ್ವನ ವ್ಯಕ್ತ ಪಡಿಸುತ್ತೇನೆ. ಓಂ ಶಾಂತಿ🙏
-
B.S.Yediyurappa
@BSYBJP
ತಮ್ಮ ಬಹುಮುಖಿ ಪ್ರತಿಭೆಯಿಂದ ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದ ಮೇರು ಸಾಹಿತಿ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ, ಪದ್ಮಭೂಷಣ ದಿವಂಗತ ಶ್ರೀ ಕೋಟ ಶಿವರಾಮ ಕಾರಂತರ ಜನ್ಮದಿನದಂದು ಆ ಮಹಾನ್ ಚೇತನಕ್ಕೆ ಶ್ರದ್ಧಾಪೂರ್ವಕ ನಮನಗಳು.
-
B.S.Yediyurappa
@BSYBJP
ನಾಡಿನ ವಿಶ್ವಾಸಸಾರ್ಹ ಪತ್ರಿಕೆಯಾಗಿ ಜನಪ್ರಿಯತೆ ಗಳಿಸಿರುವ @Vijaykarnataka ಯಶಸ್ವಿಯಾಗಿ 25 ವರ್ಷಗಳನ್ನು ಪೂರೈಸುತ್ತಿರುವುದು ಅತ್ಯಂತ ಸಂತಸದ ಸಂಗತಿ. ಪತ್ರಿಕೆಯ ಹಿಂದಿನ ಹಾಗೂ ಈಗಿನ ಸಂಪಾದಕರಿಗೂ, ವರದಿಗಾರರಿಗೂ, ಸಿಬ್ಬಂದಿ ವರ್ಗದವರಿಗೂ ಅಭಿನಂದನೆ ಸಲ್ಲಿಸುತ್ತಾ, ಈ ಯಶಸ್ವೀ ಪಯಣ ಸಾರ್ಥಕವಾಗಿ ಮುಂದುವರಿಯಲಿ ಎಂದು ಹಾರೈಸುತ್ತೇನೆ.
-
B.S.Yediyurappa
@BSYBJP
ಸತ್ಯ, ಶಾಂತಿ, ಅಹಿಂಸೆಯ ದಾರಿಯಲ್ಲಿ ನಡೆದು ಭಾರತದ ಸ್ವಾತಂತ್ರ್ಯ ಚಳವಳಿಯ ನೇತೃತ್ವ ವಹಿಸಿದ ಆದರ್ಶ ನೇತಾರ, ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ ಅವರ ಜಯಂತಿಯಂದು ಅವರಿಗೆ ಅನಂತ ಪ್ರಣಾಮಗಳು.
-
B.S.Yediyurappa
@BSYBJP
ಮಾಜಿ ಪ್ರಧಾನಮಂತ್ರಿ, ಭಾರತರತ್ನ ಶ್ರೀ ಲಾಲ್ ಬಹದ್ದೂರ್ ಶಾಸ್ತ್ರೀಜಿ ಅವರ ಜಯಂತಿಯಂದು ಅವರಿಗೆ ಆದರಪೂರ್ವಕ ನಮನಗಳು.
-
B.S.Yediyurappa
@BSYBJP
ಭಾರತದ ಹಸಿರು ಕ್ರಾಂತಿಯ ಹರಿಕಾರ, ಪ್ರಖ್ಯಾತ ಕೃಷಿ ವಿಜ್ಞಾನಿ, ಹಿರಿಯರಾದ ಪದ್ಮವಿಭೂಷಣ ಶ್ರೀ ಎಂ.ಎಸ್.ಸ್ವಾಮಿನಾಥನ್ ಅವರು ನಿಧನರಾದ ವಿಷಯ ತಿಳಿದು ತೀವ್ರ ದುಃಖವಾಗಿದೆ. ಅವರ ಸುದೀರ್ಘ ಅನುಭವ, ಸಾಧನೆಗಳು, ರೈತರ ಜೀವನದಲ್ಲಿ ಉಂಟುಮಾಡಿದ ಪರಿವರ್ತನೆ, ರಾಷ್ಟ್ರದ ಆರ್ಥಿಕ ಬೆಳವಣಿಗೆಗೆ ಅವರ ಕೊಡುಗೆ ಅಸಾಮಾನ್ಯವಾದದ್ದು. ಅಗಲಿದ ಆ ಹಿರಿಯ ಚೇತನಕ್ಕೆ ಸದ್ಗತಿ ಕೋರುತ್ತಾ, ಅವರ ಕುಟುಂಬ ಹಾಗೂ ಅಭಿಮಾನಿಗಳಿಗೆ ಈ ನೋವನ್ನು ಭರಿಸುವ ಶಕ್ತಿಯನ್ನು ದೇವರು ನೀಡಲಿ ಎಂದು ಪ್ರಾರ್ಥಿಸುತ್ತೇನೆ. ಓಂ ಶಾಂತಿ
-
B.S.Yediyurappa
@BSYBJP
ಕಾವೇರಿ ಪ್ರಾಧಿಕಾರದ ಆದೇಶ ಕರ್ನಾಟಕದ ಪಾಲಿಗೆ ಮರಣ ಶಾಸನವಾಗಿದೆ. ರಾಜ್ಯ ಸರ್ಕಾರ ತಮಿಳುನಾಡಿಗೆ ಮತ್ತೆ ನೀರು ಬಿಟ್ಟರೆ, ಕರ್ನಾಟಕದ ಸ್ವಾಭಿಮಾನಕ್ಕೆ ಧಕ್ಕೆಯಾದಂತೆಯೇ ಸರಿ. ಕಾವೇರಿ ನೀರಿನ ಕುರಿತಂತೆ ರಾಜ್ಯ ಸರ್ಕಾರದ ನಿರ್ಲಕ್ಷ್ಯತನದಿಂದ ಇಂದು ಇಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಬರದ ಮಧ್ಯೆ ತಮಿಳುನಾಡಿಗೆ ಈಗಾಗಲೇ ಹೆಚ್ಚಿನ ನೀರು ಬಿಟ್ಟು, ರಾಜ್ಯ ಸರ್ಕಾರ ನಾಡಿನ ಜನತೆಯ, ಅದರಲ್ಲೂ ವಿಶೇಷವಾಗಿ ರೈತರ ವಿಶ್ವಾಸ ಕಳೆದುಕೊಂಡಿದೆ. ರಾಜ್ಯ ಸರ್ಕಾರ ಜನರ ತಾಳ್ಮೆಯನ್ನು ಪರೀಕ್ಷಿಸುತ್ತಿರುವುದು ಸರಿಯಲ್ಲ.
-
B.S.Yediyurappa
@BSYBJP
ಹಿರಿಯ ರಾಜಕಾರಣಿ, ಮಾಜಿ ಮುಖ್ಯಮಂತ್ರಿ ದಿವಂಗತ ಶ್ರೀ ವೀರೇಂದ್ರ ಪಾಟೀಲ್ ಅವರ ಶ್ರೀಮತಿಯವರಾದ ಶಾರದಾ ಪಾಟೀಲ್ ರವರ ನಿಧನದ ಸುದ್ದಿ ತಿಳಿದು ಅತ್ಯಂತ ದುಃಖವಾಗಿದೆ. ಅಗಲಿದ ಆತ್ಮಕ್ಕೆ ಸದ್ಗತಿಯನ್ನು ಪ್ರಾರ್ಥಿಸುತ್ತಾ, ದುಃಖತಪ್ತ ಕುಟುಂಬದವರಲ್ಲಿ ತೀವ್ರ ಸಂತಾಪವನ್ನು ವ್ಯಕ್ತಪಡಿಸುತ್ತೇನೆ. ಓಂ ಶಾಂತಿ
-
B.S.Yediyurappa
@BSYBJP
ಅಂತ್ಯೋದಯ ಮತ್ತು ಪ್ರಖರ ರಾಷ್ಟ್ರೀಯವಾದಿ ಚಿಂತನೆಗಳ ಮೂಲಕ ಪಕ್ಷಕ್ಕೆ ಭದ್ರ ಸೈದ್ದಾಂತಿಕ ಅಡಿಪಾಯವನ್ನು ಹಾಕಿಕೊಟ್ಟ ಜನಸಂಘದ ಸಂಸ್ಥಾಪಕ ಪಂಡಿತ್ ದೀನದಯಾಳ್ ಉಪಾಧ್ಯಾಯ್ ಅವರ ಜಯಂತಿಯಂದು ಆ ಮಹಾನ್ ಚೇತನಕ್ಕೆ ಶ್ರದ್ಧಾಪೂರ್ವಕ ಪ್ರಣಾಮಗಳು.
-
B.S.Yediyurappa
@BSYBJP
NDA under the leadership of PM Shri @narendramodi Ji continues to grow bigger, stronger and as the most trusted political coalition across the country.
I warmly welcome the @JanataDal_S to the NDA family. Together we will build a stronger NDA and a New India.
@AmitShah @JPNadda -
B.S.Yediyurappa
@BSYBJP
ಅಕಾಲಿಕವಾಗಿ ನಮ್ಮೆಲ್ಲರನ್ನು ಅಗಲಿದ ಪಕ್ಷದ ಹಿರಿಯ ನೇತಾರ, ಮಾಜಿ ಸಚಿವ, ಆತ್ಮೀಯ ಮಿತ್ರ ಶ್ರೀ ಅನಂತಕುಮಾರ್ ಅವರ ಜನ್ಮದಿನದಂದು ಅವರಿಗೆ ನನ್ನ ನಮನಗಳು. ತಮ್ಮ ವ್ಯಕ್ತಿತ್ವ, ಸಂಘಟನೆ ಮತ್ತು ಸಾಧನೆಗಳಿಂದ ಮರೆಯಲಾಗದ ಛಾಪನ್ನು ಬಿಟ್ಟು ಹೋಗಿರುವ ಅನಂತಕುಮಾರ್ ಅವರ ನೆನಪುಗಳು ಅವಿಸ್ಮರಣೀಯ.
-
B.S.Yediyurappa
@BSYBJP
ದೇಶದ ಇತಿಹಾಸದಲ್ಲಿ ಸ್ತ್ರೀ ಸಮಾನತೆಯ ಕೂಗು ಮೊದಲು ಕೇಳಿ ಬಂದದ್ದು ನಮ್ಮ ಕರುನಾಡ ನೆಲದ ಅನುಭವ ಮಂಟಪದಲ್ಲಿ. 12ನೇ ಶತಮಾನದಲ್ಲಿ ಅಣ್ಣ ಬಸವಣ್ಣನವರು ಪ್ರತಿಪಾದಿಸಿದ ಮಹಿಳಾ ಹಕ್ಕುಗಳನ್ನು, ಈ ಶತಮಾನದಲ್ಲಿ ಸಾಕರಗೊಳಿಸುವ ನಿಟ್ಟಿನಲ್ಲಿ ದಿಟ್ಟ ಹೆಜ್ಜೆಯನ್ನಿಟ್ಟಿರುವ ಮಾನ್ಯ ಪ್ರಧಾನಿ ಶ್ರೀ @narendramodi ಜೀ ಅವರಿಗೆ ವಿಶೇಷ ಅಭಿನಂದನೆಗಳು.
#narishakti #womensreservationbill -
B.S.Yediyurappa
@BSYBJP
ಈ ನೆಲದ ಅದ್ವಿತೀಯ ಶಿಲ್ಪಕಲಾ ನೈಪುಣ್ಯ, ಸಾಂಸ್ಕೃತಿಕ ಶ್ರೀಮಂತಿಕೆ, ಆಧ್ಯಾತ್ಮಿಕ ಔನ್ನತ್ಯದ ಪರಂಪರೆಗೆ ಸಾಕ್ಷಿಯಾಗಿರುವ ನಮ್ಮ ರಾಜ್ಯದ ಹೊಯ್ಸಳ ದೇವಾಲಯಗಳು ಯುನೆಸ್ಕೋ ವಿಶ್ವ ಪಾರಂಪರಿಕ ತಾಣಗಳ ಪಟ್ಟಿಗೆ ಸೇರ್ಪಡೆಗೊಂಡಿರುವುದು ಹೆಮ್ಮೆ, ಅಭಿಮಾನದ ಸಂಗತಿ. ಈ ಜಾಗತಿಕ ಮನ್ನಣೆಯಿಂದ ನಮ್ಮ ರಾಜ್ಯದ ಹಿರಿಮೆ ವಿಶ್ವದಾದ್ಯಂತ ಮತ್ತಷ್ಟು ಪ್ರಖ್ಯಾತಿ ಪಡೆಯಲಿದೆ.
-
B.S.Yediyurappa
@BSYBJP
ಶ್ರೀ ವಿನಾಯಕ ಚತುರ್ಥಿಯ ಅಂಗವಾಗಿ ಇಂದು ಸ್ವಗೃಹದಲ್ಲಿ ಕುಟುಂಬ ಸದಸ್ಯರೊಂದಿಗೆ ದೇವರಿಗೆ ವಿಶೇಷ ಪೂಜೆ ಪ್ರಾರ್ಥನೆಗಳನ್ನು ಸಲ್ಲಿಸಲಾಯಿತು.
-
B.S.Yediyurappa
@BSYBJP
ನಾಡಿನ ಸಮಸ್ತ ಜನತೆಗೆ ಗೌರಿ ಹಾಗೂ ಗಣೇಶ ಹಬ್ಬದ ಶುಭಾಶಯಗಳು. ಎಲ್ಲ ವಿಘ್ನಗಳನ್ನು ಪರಿಹರಿಸಿ, ದೇವರು ಎಲ್ಲರಿಗೂ ಮಂಗಳವನ್ನು ಅನುಗ್ರಹಿಸಲಿ ಎಂದು ಪ್ರಾರ್ಥಿಸೋಣ.
-
B.S.Yediyurappa
@BSYBJP
ನಾಡಿನ ಸಮಸ್ತ ಜನತೆಗೆ ಹಾಗೂ ವಿಶೇಷವಾಗಿ ನಮ್ಮ ವಿಶ್ವಕರ್ಮ ಸಮಾಜದ ಬಂಧುಗಳಿಗೆ ವಿಶ್ವಶಿಲ್ಪಿ ಶ್ರೀ ವಿಶ್ವಕರ್ಮ ಜಯಂತಿಯ ಹಾರ್ದಿಕ ಶುಭಾಶಯಗಳು.
#vishwakarmajayanti -
B.S.Yediyurappa
@BSYBJP
My warm birthday wishes to our beloved Prime Minister Shri @narendramodi Ji. Your vision, dedication and leadership inspires the nation and the world. I pray for your good health and a long life in service of the nation and indeed the world.
-
B.S.Yediyurappa
@BSYBJP
Participated in party's Central Election Committee meeting held in New Delhi and chaired by the Hon'ble PM Shri @narendramodi Ji. Union Home Minister Shri @AmitShah Ji, party president Shri @JPNadda Ji and other members of the CEC were present.
@BJP4India -
B.S.Yediyurappa
@BSYBJP
Warm birthday greetings to Aadaraniya Sarsanghchalak Shri Mohan Bhagwat Ji. May you be blessed with a long, healthy life and continue to serve Bharat.
@DrMohanBhagwat @RSSorg -
B.S.Yediyurappa
@BSYBJP
ಹಿಂದೂ ಧರ್ಮದ ಅಸ್ತಿತ್ವ, ಮೂಲದ ಬಗ್ಗೆ ಹಿರಿಯ ಕಾಂಗ್ರೆಸ್ ನಾಯಕ, ಗೃಹ ಸಚಿವ @DrParameshwara ಅವರ ಉದ್ಧಟತನದ ಹೇಳಿಕೆ ಅತ್ಯಂತ ಖಂಡನೀಯ ಮಾತ್ರವಲ್ಲ, ಅವರ ಬೇಜವಾಬ್ದಾರಿತನಕ್ಕೆ ಹಿಡಿದ ಕನ್ನಡಿಯಾಗಿದೆ.
ರಾಷ್ಟ್ರಗೀತೆಯ ಅಂತ್ಯದಲ್ಲಿ 'ಜೈ ಹಿಂದ್' ಎನ್ನುವ ಜಯಘೋಷ, ನಮ್ಮ ತಾಯ್ನೆಲ, ಇಲ್ಲಿನ ಸಾವಿರಾರು ವರ್ಷಗಳ ಇತಿಹಾಸ, ಸಂಸ್ಕೃತಿ, ರಾಷ್ಟ್ರಧರ್ಮ, ಜೀವನ ಪದ್ಧತಿಯ ಸಂಕೇತವಾಗಿದೆ. ಕೇವಲ ರಾಜಕೀಯ ಲಾಭಕ್ಕಾಗಿ ಹೊಣೆಗೇಡಿತನದ ಮಾತುಗಳನ್ನಾಡಿ ಪರಮೇಶ್ವರ್ ಅವರು ತಮ್ಮ ಘನತೆಗೆ ತಾವೇ ಕುಂದು ತಂದುಕೊಂಡಿದ್ದಾರೆ.
ಕೋಟ್ಯಂತರ ಭಾರತೀಯರ ಭಾವನೆಗಳಿಗೆ ಘಾಸಿಯುಂಟು ಮಾಡುವ, ರಾಷ್ಟ್ರದ ಅಸ್ಮಿತೆಯಂತಹ ವಿಷಯಗಳ ಬಗ್ಗೆ ತಿಳಿದುಕೊಳ್ಳದೆ, ಹಗುರವಾಗಿ ಮಾತನಾಡುವುದು ಸರಿಯಲ್ಲ. -
B.S.Yediyurappa
@BSYBJP
ಸಮಸ್ತ ಭಕ್ತ ಜನತೆಗೆ ಶ್ರೀಕೃಷ್ಣ ಜನ್ಮಾಷ್ಟಮಿಯ ಶುಭಕಾಮನೆಗಳು. ಅಧರ್ಮವನ್ನು ಅಳಿಸಿ, ಧರ್ಮವನ್ನು ಉಳಿಸಿ, ಎಲ್ಲರಿಗೂ ಶ್ರೀಕೃಷ್ಣ ಸನ್ಮಂಗಳವನ್ನು ಕರುಣಿಸಲಿ ಎಂದು ಪ್ರಾರ್ಥಿಸೋಣ.
-
B.S.Yediyurappa
@BSYBJP
ಮಾಜಿ ರಾಷ್ಟ್ರಪತಿ ಭಾರತರತ್ನ ಡಾ|| ಸರ್ವೆಪಲ್ಲಿ ರಾಧಾಕೃಷ್ಣನ್ ಅವರ ಸಂಸ್ಮರಣೆಗಳ ಜೊತೆಗೆ, ನಾಡಿನ ಎಲ್ಲ ಶಿಕ್ಷಕರಿಗೆ ಶಿಕ್ಷಕರ ದಿನದ ಶುಭಾಶಯಗಳು.
#teachersday -
B.S.Yediyurappa
@BSYBJP
ಈಶ ಪ್ರತಿಷ್ಠಾನದ ಸದ್ಗುರು ಶ್ರೀ ಜಗ್ಗಿ ವಾಸುದೇವ್ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. ದೇವರ ಅನುಗ್ರಹ ಸದಾ ತಮ್ಮ ಮೇಲಿರಲಿ ಎಂದು ಪ್ರಾರ್ಥಿಸುತ್ತೇನೆ.
@SadhguruJV @ishafoundation -
B.S.Yediyurappa
@BSYBJP
ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಗಳ 352ನೇ ಆರಾಧನಾ ಮಹೋತ್ಸವದಂದು ಗುರುಸಾರ್ವಭೌಮರ ಚರಣಗಳಿಗೆ ಭಕ್ತಿಪೂರ್ವಕ ಪ್ರಣಾಮಗಳು.
-
B.S.Yediyurappa
@BSYBJP
ನನ್ನ ಜೀವನದ ಒಂದು ಅವಿಸ್ಮರಣೀಯ, ಸಾರ್ಥಕ ಸಂದರ್ಭ! ಶಿವಮೊಗ್ಗ ಜಿಲ್ಲೆಯ ಜನರ ಬಹುನಿರೀಕ್ಷಿತ ಕನಸು ನನಸಾಗಿದ್ದು, ಶಿವಮೊಗ್ಗ ವಿಮಾನ ನಿಲ್ದಾಣದಿಂದ ಅಧಿಕೃತವಾಗಿ ವಿಮಾನ ಹಾರಾಟ ಇಂದು ಆರಂಭವಾಗಿದೆ. ಇದರಿಂದ ಪ್ರವಾಸೋದ್ಯಮ, ಕೈಗಾರಿಕೋದ್ಯಮ ಸೇರಿದಂತೆ ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿ ಮತ್ತು ಮಲೆನಾಡು ಭಾಗದ ಜನರ ಪ್ರಯಾಣಕ್ಕೆ ಹೆಚ್ಚಿನ ಅನುಕೂಲವಾಗಲಿದೆ. ತಮ್ಮ ಭೂಮಿಯನ್ನು ಕೊಟ್ಟು ಈ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಪ್ರಮುಖ ಕಾರಣರಾಗಿರುವ ನಮ್ಮ ರೈತರಿಗೆ ನಾನು ಆಭಾರಿಯಾಗಿದ್ದೇನೆ. ಮೊದಲ ವಿಮಾನದಲ್ಲಿ ಸಚಿವರು, ಜನಪ್ರತಿನಿಧಿಗಳ ಜೊತೆಗೆ ನಮ್ಮ ಜಿಲ್ಲೆಯ ರೈತರೊಂದಿಗೆ ಪ್ರಯಾಣಿಸಿದ್ದು ಸಾರ್ಥಕ ಸಂತಸವನ್ನು ಉಂಟುಮಾಡಿದೆ.
2020ರ ಜೂನ್ 15ರಂದು ರಾಜ್ಯದ ಮುಖ್ಯಮಂತ್ರಿಯಾಗಿ ಶಿವಮೊಗ್ಗ ವಿಮಾನ ನಿಲ್ದಾಣ ಕಾಮಗಾರಿಗೆ ಶಂಕುಸ್ಥಾಪನೆ ಮಾಡಿದ್ದೆ. ಈ ವರ್ಷದ ಫೆಬ್ರವರಿ 27ರ ನನ್ನ ಜನ್ಮದಿನದಂದೇ ಸನ್ಮಾನ್ಯ ಪ್ರಧಾನಮಂತ್ರಿ ಶ್ರೀ @narendramodi ರವರು ಸುಸಜ್ಜಿತ ಶಿವಮೊಗ್ಗ ವಿಮಾನ ನಿಲ್ದಾಣವನ್ನು ಲೋಕಾರ್ಪಣೆಗೊಳಿಸಿದ್ದು, ಇಂದು ಅಧಿಕೃತವಾಗಿ ವಿಮಾನಯಾನ ಸೇವೆ ಪ್ರಾರಂಭಗೊಂಡಿದೆ. ಈ ಸಂದರ್ಭದಲ್ಲಿ ಸನ್ಮಾನ್ಯ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಜೀ ಹಾಗೂ ವಿಮಾನಯಾನದ ಸೇವೆ, ಸೌಲಭ್ಯಗಳ ಸಾಕಾರದ ನಿಟ್ಟಿನಲ್ಲಿ ಸಹಕರಿಸಿದ ಪ್ರತಿಯೊಬ್ಬರಿಗೂ ಜಿಲ್ಲೆಯ ಜನತೆಯ ಪರವಾಗಿ ನನ್ನ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ.
ಜನಪ್ರತಿನಿಧಿಯಾಗಿ ನಾಡಿಗೆ ಸೇವೆ ಸಲ್ಲಿಸಲು ಅವಕಾಶ ಮಾಡಿಕೊಟ್ಟ ಪಕ್ಷಕ್ಕೆ ಹಾಗೂ ನಾಡಿನ ಜನತೆಗೆ ನಾನು ಸದಾ ಋಣಿ. ಸರ್ವರಿಗೂ ಸಮಪಾಲು, ಸಮಬಾಳು, ಸಾಮಾಜಿಕ ನ್ಯಾಯ ಸಿಗಬೇಕು ಎಂದರೆ ಅದಕ್ಕೆ ಅಭಿವೃದ್ಧಿಯೊಂದೇ ದಾರಿ. ಈ ನಿಟ್ಟಿನಲ್ಲಿ ನಮ್ಮ ಪ್ರಾಮಾಣಿಕ ಪ್ರಯತ್ನ ಮುಂದುವರಿಯಲಿದೆ. -
B.S.Yediyurappa
@BSYBJP
ಸುತ್ತೂರು ಮಹಾಸಂಸ್ಥಾನದ ಪೀಠಾಧಿಪತಿಗಳಾದ ಪೂಜ್ಯ ಶ್ರೀ ಶಿವರಾತ್ರಿ ದೇಶೀಕೇಂದ್ರ ಮಹಾಸ್ವಾಮೀಜಿಗಳಿಗೆ ಜನ್ಮದಿನದ ಭಕ್ತಿಪೂರ್ವಕ ಶುಭಾಶಯಗಳು. ಪೂಜ್ಯ ಶ್ರೀಗಳ ಮಾರ್ಗದರ್ಶನ ಸಮಾಜಕ್ಕೆ ಸದಾ ಇರಲಿ ಎಂದು ಪ್ರಾರ್ಥಿಸುತ್ತೇನೆ.
-
B.S.Yediyurappa
@BSYBJP
ಕೇರಳದ ಸುಪ್ರಸಿದ್ಧ ಯಾತ್ರಾ ಕ್ಷೇತ್ರ ಗುರುವಾಯೂರಿನ ಶ್ರೀಕೃಷ್ಣ ದೇವಸ್ಥಾನಕ್ಕೆ ಇಂದು ಭೇಟಿ ನೀಡಿ ದೇವರಿಗೆ ವಿಶೇಷ ಪೂಜೆ, ಪ್ರಾರ್ಥನೆಗಳನ್ನು ಸಲ್ಲಿಸಲಾಯಿತು. ನಂತರ ಅಲ್ಲಿಯ ಆಡಳಿತ ಮಂಡಳಿಯ ಆಹ್ವಾನದ ಮೇರೆಗೆ ಶ್ರೀ ಮಹಾಗೋಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಾಯಿತು.
-
B.S.Yediyurappa
@BSYBJP
ಎಲ್ಲಾ ಸಹೋದರ ಸಹೋದರಿಯರಿಗೆ, ಭ್ರಾತೃತ್ವದ ಪವಿತ್ರ ಬಾಂಧವ್ಯವನ್ನು ಸಂಭ್ರಮಿಸುವ ರಕ್ಷಾಬಂಧನದ ಹಾರ್ದಿಕ ಶುಭಾಶಯಗಳು.
-
B.S.Yediyurappa
@BSYBJP
ಉಜ್ವಲಾ ಯೋಜನೆಯಡಿ, ಅಡುಗೆ ಅನಿಲದ ದರ ಕಡಿತಗೊಳಿಸಿ ಪ್ರತಿ ಸಿಲಿಂಡರ್ ಗೆ ಹೆಚ್ಚುವರಿ 200 ರೂ.ಗಳ ಸಬ್ಸಿಡಿ ಘೋಷಿಸಿರುವ ಕೇಂದ್ರ ಸಚಿವ ಸಂಪುಟದ ತೀರ್ಮಾನವನ್ನು ಸ್ವಾಗತಿಸುತ್ತೇನೆ. ದುರ್ಬಲ ಹಾಗೂ ಮಧ್ಯಮ ವರ್ಗದ ಜನರ ನೆರವಿಗಾಗಿ ನಿರಂತರ ಪ್ರಯತ್ನಶೀಲವಾಗಿರುವ ಪ್ರಧಾನಮಂತ್ರಿ ಶ್ರೀ @narendramodi ಸರ್ಕಾರ, ರಕ್ಷಾಬಂಧನದ ಈ ಸಂದರ್ಭದಲ್ಲಿ ನಮ್ಮ ಎಲ್ಲ ತಾಯಂದಿರು ಹಾಗೂ ಸಹೋದರಿಯರಿಗೆ ನೆರವಾಗಲು ತೆಗೆದುಕೊಂಡಿರುವ ಈ ಕ್ರಮ ಅಭಿನಂದನಾರ್ಹ.
-
B.S.Yediyurappa
@BSYBJP
ರಾಜ್ಯದ 120ಕ್ಕೂ ಹೆಚ್ಚು ತಾಲ್ಲೂಕುಗಳಲ್ಲಿ ಬರ ಪರಿಸ್ಥಿತಿ ಎದುರಾಗಿದ್ದು, ಬಹುತೇಕ ಅಣೆಕಟ್ಟುಗಳು ಬರಿದಾಗಿ ನಮ್ಮ ರೈತ ಸಮುದಾಯ ಒಣ ಬೇಸಾಯವನ್ನೂ ಮಾಡಲಾಗದೆ ಸಂಕಷ್ಟ ಎದುರಿಸುತ್ತಿದ್ದಾರೆ. ರಾಜ್ಯ ಸರ್ಕಾರ ಇನ್ನು ಕಾಲಹರಣ ಮಾಡದೆ, ಕೂಡಲೇ ಬರಪೀಡಿತ ಪ್ರದೇಶಗಳನ್ನು ಘೋಷಿಸಿ, ರೈತರಿಗೆ ಪರಿಹಾರ ನೀಡಬೇಕು, ಬರ ಪರಿಹಾರ ಕಾಮಗಾರಿಗಳನ್ನು ಕೈಗೊಳ್ಳಬೇಕು ಎಂದು ಒತ್ತಾಯಿಸುತ್ತೇನೆ.
-
B.S.Yediyurappa
@BSYBJP
ಎಲ್ಲರಿಗೂ ವರಮಹಾಲಕ್ಷ್ಮಿ ಹಬ್ಬದ ಶುಭಾಶಯಗಳು. ತಾಯಿ ಮಹಾಲಕ್ಷ್ಮಿಯು ಎಲ್ಲರಿಗೂ ಸುಖ, ಸಮೃದ್ಧಿ, ಐಶ್ವರ್ಯ, ಯಶಸ್ಸುಗಳನ್ನು ಕರುಣಿಸಲಿ, ಎಲ್ಲರ ನೋವು, ಸಂಕಷ್ಟಗಳನ್ನು ಪರಿಹರಿಸಲಿ ಎಂದು ಪ್ರಾರ್ಥಿಸುತ್ತೇನೆ.
-
B.S.Yediyurappa
@BSYBJP
My tributes to Padma Vibhushan Shri Arun Jaitley Ji on his punya thithi. Former Union Minister, outstanding orator, and a distinguished parliamentarian, Shri Jaitley Ji's contribution to the nation will always be remembered.
-
B.S.Yediyurappa
@BSYBJP
India creates history! Hearty congratulations to @isro & scientists on the successful soft landing of #chandrayaan3 mission on the surface of the moon. This historic achievement is a testimony of #newindia's potential and lead the world in science and technology.
#indiaonthemoon -
B.S.Yediyurappa
@BSYBJP
ನಮ್ಮ ರಾಜ್ಯದ ಕಾವೇರಿ, ಮೇಕೆದಾಟು, ಮಹದಾಯಿ ಜಲ ವಿವಾದಗಳ ಕುರಿತಂತೆ ಸನ್ಮಾನ್ಯ ಮುಖ್ಯಮಂತ್ರಿ ಶ್ರೀ @siddaramaiah ಅವರ ಅಧ್ಯಕ್ಷತೆಯಲ್ಲಿ ಇಂದು ನಡೆದ ಸರ್ವಪಕ್ಷ ಸಭೆಯಲ್ಲಿ ಪಾಲ್ಗೊಳ್ಳಲಾಯಿತು. ನಾಡಿನ ನೆಲ, ಜಲ, ಭಾಷೆ, ಸಂಸ್ಕೃತಿ ಇತ್ಯಾದಿಗಳ ವಿಷಯಗಳಲ್ಲಿ ರಾಜ್ಯದ ಹಿತಾಸಕ್ತಿ ಸಂರಕ್ಷಣೆಗೆ ನಮ್ಮ ಪಕ್ಷ ಬದ್ಧವಾಗಿದೆ.
-
B.S.Yediyurappa
@BSYBJP
Warm birthday wishes to Union Finance Minister Smt Nirmala Sitharaman ji. I pray for your long and healthy life.
@nsitharaman -
B.S.Yediyurappa
@BSYBJP
ವಿಶ್ವ ಕಂಡ ಮಹಾನ್ ನಾಯಕ, ಕವಿ ಹೃದಯದ ಮುತ್ಸದ್ಧಿ ರಾಜನೀತಿಜ್ಞ, ಮಾಜಿ ಪ್ರಧಾನಮಂತ್ರಿ ಭಾರತರತ್ನ ಶ್ರೀ ಅಟಲ್ ಬಿಹಾರಿ ವಾಜಪೇಯಿ ಅವರ ಪುಣ್ಯತಿಥಿಯಂದು ಅವರಿಗೆ ಶ್ರದ್ಧಾಪೂರ್ವಕ ನಮನಗಳು. ಅವರ ನಡೆ, ನುಡಿ, ಬದುಕು, ಸಾಧನೆಗಳೆಲ್ಲವೂ ಆದರ್ಶಪ್ರಾಯ.
#atalbiharivajpayee #sadaiva_atal -
B.S.Yediyurappa
@BSYBJP
ಸಾಧಕ ಸಂತ, ಆಧ್ಯಾತ್ಮಿಕ ಗುರು ಶ್ರೀ ರಾಮಕೃಷ್ಣ ಪರಮಹಂಸರ ಪುಣ್ಯತಿಥಿಯಂದು ಆ ದಿವ್ಯಚೇತನಕ್ಕೆ ಅನಂತ ಪ್ರಣಾಮಗಳು.
-
B.S.Yediyurappa
@BSYBJP
ಎಲ್ಲರಿಗೂ ಸ್ವಾತಂತ್ರ್ಯ ದಿನಾಚರಣೆಯ ಹಾರ್ದಿಕ ಶುಭಾಶಯಗಳು. ಜೈ ಹಿಂದ್!
#independencedayindia #harghartiranga -
B.S.Yediyurappa
@BSYBJP
ಕನ್ನಡ ಚಿತ್ರರಂಗದ ಖ್ಯಾತ ಕಲಾವಿದ ವಿಜಯ್ ರಾಘವೇಂದ್ರ ಅವರ ಪತ್ನಿ ಸ್ಪಂದನಾ ಅವರು ಅಕಾಲಿಕ ನಿಧನ ಹೊಂದಿದ ಸುದ್ದಿ ತೀವ್ರ ಆಘಾತವನ್ನುಂಟು ಮಾಡಿದೆ. ಅವರ ಆತ್ಮಕ್ಕೆ ಸದ್ಗತಿಯನ್ನು ಪ್ರಾರ್ಥಿಸುತ್ತೇನೆ. ದೇವರು ಅವರ ಕುಟುಂಬ ಹಾಗೂ ಆಪ್ತೇಷ್ಟರಿಗೆ ಈ ನೋವನ್ನು ಭರಿಸುವ ಶಕ್ತಿಯನ್ನು ನೀಡಲಿ ಎಂದು ಕೋರುತ್ತೇನೆ. ಓಂ ಶಾಂತಿ
-
B.S.Yediyurappa
@BSYBJP
ಸನ್ಮಾನ್ಯ ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯನವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. ದೇವರ ಅನುಗ್ರಹ ಸದಾ ಇರಲಿ ಎಂದು ಹಾರೈಸುತ್ತೇನೆ.
@siddaramaiah -
B.S.Yediyurappa
@BSYBJP
On this #kargilvijaydiwas, I salute and thank our soldiers for their selfless service and sacrifices to the nation.
-
B.S.Yediyurappa
@BSYBJP
ಇಂದು ವಿಧಿವಶರಾದ ಸಂಘದ ಹಿರಿಯ ಪ್ರಚಾರಕರು, ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ ಮಾಜಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿಗಳಾಗಿದ್ದ ಶ್ರೀ ಮದನ್ ದಾಸ್ ದೇವಿ ರವರ ಪಾರ್ಥಿವ ಶರೀರದ ದರ್ಶನ ಪಡೆದು ಅಂತಿಮ ನಮನ ಸಲ್ಲಿಸಲಾಯಿತು.
-
B.S.Yediyurappa
@BSYBJP
ಪರಮಪೂಜ್ಯ ಡಾ|| ಶ್ರೀ ಶ್ರೀ ಶಿವಕುಮಾರ ಸ್ವಾಮಿಗಳ ಉತ್ತರಾಧಿಕಾರಿಗಳು, ತ್ರಿವಿಧ ದಾಸೋಹ ಸೇರಿದಂತೆ ಶ್ರೀ ಸಿದ್ದಗಂಗಾ ಮಠದ ಸೇವಾಕಾರ್ಯಗಳನ್ನು ಆದರ್ಶ ರೀತಿಯಲ್ಲಿ ಮುಂದುವರಿಸುತ್ತಿರುವ ಶ್ರೀಮಠದ ಪೀಠಾಧ್ಯಕ್ಷರಾದ ಪರಮಪೂಜ್ಯ ಶ್ರೀ ಸಿದ್ದಲಿಂಗ ಶ್ರೀಗಳಿಗೆ ಜನ್ಮದಿನದ ಭಕ್ತಿಪೂರ್ವಕ ಶುಭಕಾಮನೆಗಳು.
-
B.S.Yediyurappa
@BSYBJP
ಘನತೆವೆತ್ತ ರಾಜ್ಯಪಾಲರಾದ ಶ್ರೀ ಥಾವರ್ ಚಂದ್ ಗೆಹ್ಲೋಟ್ ಜೀ ಮತ್ತು ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ ಇಂದು ನೀಡಿದ ಗೌರವ ಡಾಕ್ಟರೇಟ್ ಸನ್ಮಾನ, ವಿಶೇಷವಾಗಿ ನಮ್ಮ ಅನ್ನದಾತ ರೈತರ ಹಕ್ಕು ಹಾಗೂ ಹಿತರಕ್ಷಣೆ ನಿಟ್ಟಿನಲ್ಲಿ ನನ್ನ ಪ್ರಾಮಾಣಿಕ ಪ್ರಯತ್ನಗಳಿಗೆ ಸಂದ ಮನ್ನಣೆಯಾಗಿದೆ ಎಂದು ನಾನು ಭಾವಿಸುತ್ತೇನೆ. ನಮ್ಮ ರೈತರು ನೆಮ್ಮದಿಯಿಂದ ಬದುಕುವಂತಾಗುವ ನಿಟ್ಟಿನಲ್ಲಿ ಮತ್ತಷ್ಟು ಪ್ರಯತ್ನಿಸಲು ಈ ಗೌರವ ಪ್ರೇರಣೆ ನೀಡುತ್ತಿದೆ. ಈ ವಿಶಿಷ್ಟ ಗೌರವಕ್ಕಾಗಿ ಮತ್ತೊಮ್ಮೆ ಸನ್ಮಾನ್ಯ ರಾಜ್ಯಪಾಲರಿಗೆ ಮತ್ತು ಕೃಷಿ ವಿಶ್ವವಿದ್ಯಾಲಯಕ್ಕೆ ನನ್ನ ಹೃತ್ಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ.
@TCGEHLOT -
B.S.Yediyurappa
@BSYBJP
The man who rules millions of hearts with his enigmatic screen presence and unmatched style turns a year older today. Wishing Superstar #rajinikanth a very happy birthday. May you have many more birthdays to come! @superstarrajini
































































































































































































































































































































































































































































































































































































































































































































































































































































































































































































































































































































