ಇಂದು ಬೆಂಗಳೂರಿನ ಕುಮಾರಕೃಪಾ ರಸ್ತೆಯಲ್ಲಿರುವ ಮುಖ್ಯಮಂತ್ರಿಯವರ ನೂತನ ಅಧಿಕೃತ ನಿವಾಸ ‘ಗಂಗಾ’ಕ್ಕೆ ಭೇಟಿ ನೀಡಿ, ಮುಖ್ಯಮಂತ್ರಿಗಳಾದ ಶ್ರೀ ಡಿ.ಕೆ. ಶಿವಕುಮಾರ್ ಅವರಿಗೆ ಶುಭ ಹಾರೈಸಿದೆ.
ಈ ವೇಳೆ ಸಚಿವರಾದ ಸತೀಶ್ ಜಾರಕಿಹೊಳಿ, ಸಂತೋಷ್ ಲಾಡ್, ಟಿ.ರಘುಮೂರ್ತಿ, ಮಧು ಬಂಗಾರಪ್ಪ ಹಾಗೂ ಶಾಸಕರು, ವಿಧಾನ ಪರಿಷತ್ ಸದಸ್ಯರು ಜೊತೆಗಿದ್ದರು.
G. Parameshwara
Gangadharaiah Parameshwara (born 6 August 1951) is an Indian politician who is currently serving as the seventh Deputy Chief Minister of Karnataka, as well as the Revenue and Sports Minister of Karnataka. He is the longest-serving President of the Karnataka Pradesh Congress Committee, having served for two consecutive terms. More on Wikipedia
-
Dr. G Parameshwara
@DrParameshwara
-
Dr. G Parameshwara
@DrParameshwara
ಬುಧವಾರ ತುಮಕೂರು ಜಿಲ್ಲಾಡಳಿತ ಹಾಗೂ ತುಮಕೂರು ನಗರಾಭಿವೃದ್ಧಿ ಪ್ರಾಧಿಕಾರದ (ಟುಡಾ) ವತಿಯಿಂದ ಅಮಾನಿಕೆರೆ ಆವರಣದಲ್ಲಿ ಆಯೋಜಿಸಿದ್ದ 5ನೇ ಮಿನಿ ಕರ್ನಾಟಕ ಕ್ರೀಡಾಕೂಟ–2026ರಲ್ಲಿ ಭಾಗವಹಿಸಿ, ಕಯಾಕಿಂಗ್ ಮತ್ತು ಕನೋಯಿಂಗ್ ಸ್ಪರ್ಧೆಗಳಲ್ಲಿ ಬೆಳ್ಳಿ ಪದಕ ಗಳಿಸಿದ ಕ್ರೀಡಾಪಟುಗಳನ್ನು ಅಭಿನಂದಿಸಿ ಮಾತನಾಡಿದೆ.
ಈ ಕುರಿತಾದ ಪತ್ರಿಕಾ ವರದಿಗಳು ಹೀಗಿವೆ.. -
Dr. G Parameshwara
@DrParameshwara
ಇಂದು ವಿಧಾನಸೌಧದ ಸಮಿತಿ ಕೊಠಡಿಯಲ್ಲಿ ನನ್ನ ಅಧ್ಯಕ್ಷತೆಯಲ್ಲಿ ನಡೆದ ರಾಜ್ಯ ಅನುಸೂಚಿತ ಜಾತಿಗಳು ಹಾಗೂ ಅನುಸೂಚಿತ ಪಂಗಡಗಳ ಅಭಿವೃದ್ಧಿ ಪರಿಶೀಲನಾ ಸಭೆಯಲ್ಲಿ, ಸಮಾಜ ಕಲ್ಯಾಣ ಇಲಾಖೆಯ ಎಸ್ಸಿಎಸ್ಪಿ/ಟಿಎಸ್ಪಿ ಕಾರ್ಯಕ್ರಮಗಳ 2026-27ನೇ ಸಾಲಿನ ಕ್ರಿಯಾ ಯೋಜನೆ ಹಾಗೂ ಪರಿಶಿಷ್ಟ ಸಮುದಾಯಗಳ ಸಮಗ್ರ ಅಭಿವೃದ್ಧಿಗೆ ಸಂಬಂಧಿಸಿದ ವಿವಿಧ ವಿಷಯಗಳ ಕುರಿತು ಚರ್ಚಿಸಿದೆವು.
ಸಭೆಯಲ್ಲಿ ಸಮಾಜ ಕಲ್ಯಾಣ ಸಚಿವರಾದ ಕೆ.ಹೆಚ್. ಮುನಿಯಪ್ಪ, ಲೋಕೋಪಯೋಗಿ ಸಚಿವರಾದ ಸತೀಶ್ ಜಾರಕಿಹೊಳಿ, ಪರಿಶಿಷ್ಟ ಪಂಗಡಗಳ ಕಲ್ಯಾಣ ಸಚಿವರಾದ ಟಿ. ರಘುಮೂರ್ತಿ, ಸಕ್ಕರೆ ಮತ್ತು ಜವಳಿ ಸಚಿವರಾದ ರುದ್ರಪ್ಪ ಲಮಾಣಿ, ಕೃಷಿ ಸಚಿವರಾದ ನರೇಂದ್ರಸ್ವಾಮಿ, ಮುಜರಾಯಿ ಸಚಿವರಾದ ಕೆ.ಎಸ್. ಬಸವಂತಪ್ಪ, ಎಸ್ಸಿಎಸ್ಪಿ/ಟಿಎಸ್ಪಿ ನೋಡಲ್ ಏಜೆನ್ಸಿ ಸಲಹೆಗಾರರಾದ ಡಾ. ಇ. ವೆಂಕಟಯ್ಯ ಹಾಗೂ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
Today, I chaired a review meeting on the development of Scheduled Castes and Scheduled Tribes at the Committee Room in Vidhana Soudha.
We discussed the 2026–27 Action Plan for SCSP/TSP programmes of the Social Welfare Department, along with various issues concerning the comprehensive development of Scheduled communities.
Social Welfare Minister K.H. Muniyappa; Public Works Minister Satish Jarkiholi; Scheduled Tribes Welfare Minister T. Raghumurthy; Sugar and Textiles Minister Rudrappa Lamani; Agriculture Minister Narendraswamy; Muzrai Minister K.S. Basavanthappa; SCSP/TSP Nodal Agency Adviser Dr. E. Venkataiah, and senior officials from various departments were present. -
Dr. G Parameshwara
@DrParameshwara
ಪ್ರಸಕ್ತ ಹಲವು ವಿದ್ಯಮಾನಗಳ ಕುರಿತು ಮಾಧ್ಯಮ ಪ್ರತಿನಿಧಿಗಳೊಂದಿಗೆ ನನ್ನ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದೇನೆ.
ಈ ಕುರಿತಾದ ಪತ್ರಿಕಾ ವರದಿಗಳು..
I shared my views with media representatives on several current developments and issues.
Here are the media reports on the interaction. -
Dr. G Parameshwara
@DrParameshwara
Today, I participated in the National Integration Week programme organised at the Committee Room in Vidhana Soudha to mark the birth anniversary of former Prime Minister Smt. Indira Gandhi.
I paid floral tribute to her portrait and administered the National Integration Week pledge.
Labour Minister Shri Santosh Lad, along with officials and staff of the Secretariat, were present.
ಮಾಜಿ ಪ್ರಧಾನಮಂತ್ರಿ ಶ್ರೀಮತಿ ಇಂದಿರಾ ಗಾಂಧಿ ಅವರ ಜನ್ಮದಿನದ ಅಂಗವಾಗಿ ಇಂದು ವಿಧಾನಸೌಧದ ಸಮಿತಿ ಕೊಠಡಿಯಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಐಕ್ಯತಾ ಸಪ್ತಾಹ ಆಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ, ಇಂದಿರಾ ಗಾಂಧಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದ ಬಳಿಕ ರಾಷ್ಟ್ರೀಯ ಐಕ್ಯತಾ ಸಪ್ತಾಹದ ಪ್ರತಿಜ್ಞಾ ವಿಧಿಯನ್ನು ಬೋಧಿಸಿದೆ.
ಈ ಸಂದರ್ಭದಲ್ಲಿ ಕಾರ್ಮಿಕ ಸಚಿವರಾದ ಶ್ರೀ ಸಂತೋಷ್ ಲಾಡ್ ಮತ್ತು ಸಚಿವಾಲಯದ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು. -
Dr. G Parameshwara
@DrParameshwara
Smt. Indira Gandhi's life was closely woven into India's struggle for freedom and its journey as an independent nation. From organising the Vanar Sena as a young girl during the freedom movement to working closely with Pandit Jawaharlal Nehru during his years as Prime Minister, she grew up with a deep commitment to the country and its people.
As Prime Minister, she led India through some of its most defining moments. The nationalisation of banks, the strengthening of the Green Revolution, the historic victory in the 1971 war that led to the liberation of Bangladesh, and India's first nuclear test at Pokhran were among the major milestones of her leadership. Her decisions strengthened India's self-reliance and its standing in the world.
Indira ji also shaped the Congress party's political legacy in a remarkable way. Through her call of Garibi Hatao, she brought the struggles and aspirations of the poor to the centre of national politics. Her commitment to social justice, secularism and national unity continues to hold great significance for the Congress party and the values we stand for.
On her birth anniversary, I pay my heartfelt tributes to one of India's most courageous and influential leaders. Her determination, political conviction and lifelong dedication to the nation will always remain an inspiration to generations of Congress workers and fellow Indians.
#indiragandhi -
Dr. G Parameshwara
@DrParameshwara
ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಅಪ್ರತಿಮ ಶೌರ್ಯ, ಅದಮ್ಯ ಧೈರ್ಯ ಮತ್ತು ಅಚಲ ದೇಶಪ್ರೇಮದಿಂದ ಹೋರಾಡಿ, ಇತಿಹಾಸದಲ್ಲಿ ಅಜರಾಮರರಾದ ವೀರನಾರಿ ಝಾನ್ಸಿ ರಾಣಿ ಲಕ್ಷ್ಮೀಬಾಯಿ ಅವರ ಜಯಂತಿಯಂದು ಗೌರವಪೂರ್ವಕ ನಮನಗಳು.
ಪರಕೀಯರ ದಬ್ಬಾಳಿಕೆಗೆ ತಲೆಬಾಗದೆ, ಅನ್ಯಾಯದ ಮುಂದೆ ಮಂಡಿಯೂರದೆ, ಮಾತೃಭೂಮಿಯ ಸ್ವಾಭಿಮಾನ ಮತ್ತು ಸ್ವಾತಂತ್ರ್ಯದ ರಕ್ಷಣೆಗಾಗಿ ಖಡ್ಗ ಹಿಡಿದು ರಣರಂಗಕ್ಕಿಳಿದ ವೀರರಾಣಿ ಲಕ್ಷ್ಮೀಬಾಯಿ ಅವರು ಧೈರ್ಯ ಮತ್ತು ಸಾಹಸಕ್ಕೆ ಹೊಸ ಭಾಷ್ಯ ಬರೆದವರು. ಅವರ ಹೋರಾಟ ಕೇವಲ ಒಂದು ರಾಜ್ಯದ ರಕ್ಷಣೆಗಾಗಿ ನಡೆದ ಯುದ್ಧವಾಗಿರಲಿಲ್ಲ, ಸ್ವಾತಂತ್ರ್ಯ ಮತ್ತು ಸ್ವಾಭಿಮಾನಕ್ಕಾಗಿ ಮೊಳಗಿದ ರಣಕಹಳೆಯಾಗಿತ್ತು.
ಮಾತೃಭೂಮಿಯ ರಕ್ಷಣೆಗಾಗಿ ಕೊನೆಯುಸಿರಿನವರೆಗೂ ಹೋರಾಡಿದ ಝಾನ್ಸಿ ರಾಣಿ ಲಕ್ಷ್ಮೀಬಾಯಿ ಅವರ ತ್ಯಾಗ ಮತ್ತು ಬಲಿದಾನ ಭಾರತದ ಸ್ವಾತಂತ್ರ್ಯ ಹೋರಾಟದ ಇತಿಹಾಸದಲ್ಲಿ ಸದಾ ಅಮರ. ಅವರ ಧೈರ್ಯ, ದೇಶಪ್ರೇಮ ಮತ್ತು ಸ್ವಾಭಿಮಾನದ ಹೋರಾಟವು ಇಂದಿಗೂ ನಮಗೆ ಸ್ಫೂರ್ತಿಯಾಗಿದ್ದು, ಮುಂದಿನ ಪೀಳಿಗೆಗಳಿಗೂ ಮಾದರಿಯಾಗಿ ಉಳಿಯಲಿದೆ. -
Dr. G Parameshwara
@DrParameshwara
ತುಮಕೂರು ಜಿಲ್ಲಾಡಳಿತ ಹಾಗೂ ತುಮಕೂರು ನಗರಾಭಿವೃದ್ಧಿ ಪ್ರಾಧಿಕಾರದ (ಟುಡಾ) ವತಿಯಿಂದ ಅಮಾನಿಕೆರೆ ಆವರಣದಲ್ಲಿ ಆಯೋಜಿಸಿದ್ದ 5ನೇ ಮಿನಿ ಕರ್ನಾಟಕ ಕ್ರೀಡಾಕೂಟ–2026ರಲ್ಲಿ ಭಾಗವಹಿಸಿ, ಕಯಾಕಿಂಗ್ ಮತ್ತು ಕನೋಯಿಂಗ್ ಸ್ಪರ್ಧೆಗಳಲ್ಲಿ ಬೆಳ್ಳಿ ಪದಕ ಗಳಿಸಿದ ಕ್ರೀಡಾಪಟುಗಳನ್ನು ಅಭಿನಂದಿಸಿ ಮಾತನಾಡಿದೆ.
ಮಕ್ಕಳನ್ನು ದುಶ್ಚಟಗಳಿಂದ ದೂರವಿಟ್ಟು ಉತ್ತಮ ಭವಿಷ್ಯದತ್ತ ಮುನ್ನಡೆಸುವಲ್ಲಿ ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳು ಪ್ರಮುಖ ಪಾತ್ರ ವಹಿಸುತ್ತವೆ. ಈ ನಿಟ್ಟಿನಲ್ಲಿ ಪೋಷಕರು ತಮ್ಮ ಮಕ್ಕಳ ಆಸಕ್ತಿಗೆ ಅನುಗುಣವಾಗಿ ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸಲು ಪ್ರೋತ್ಸಾಹ ನೀಡಬೇಕು.
ತುಮಕೂರು ಜಿಲ್ಲೆಯಲ್ಲಿ ಕಯಾಕಿಂಗ್ ಮತ್ತು ಕನೋಯಿಂಗ್ ಕ್ರೀಡೆಗಳ ಬಗ್ಗೆ ಹೆಚ್ಚಿನ ಅರಿವು ಇರಲಿಲ್ಲ. ಜಿಲ್ಲಾಡಳಿತ, ಟುಡಾ ಹಾಗೂ ಕ್ರೀಡಾ ಇಲಾಖೆಯ ಆಸಕ್ತಿಯಿಂದಾಗಿ ಈ ಕ್ರೀಡೆಗಳಿಗೆ ಉತ್ತೇಜನ ನೀಡುವ ಪ್ರಯತ್ನ ಮಾಡಲಾಗಿದೆ. ಮಕ್ಕಳಿಗೆ ಸೂಕ್ತ ತರಬೇತಿ ಒದಗಿಸುವ ಉದ್ದೇಶದಿಂದ ರಾಜ್ಯ ಕಯಾಕಿಂಗ್ ಮತ್ತು ಕನೋಯಿಂಗ್ ಸಂಸ್ಥೆಯ ಸಹಕಾರ ಕೋರಲಾಗಿದೆ. ಈ ಕ್ರೀಡೆಗಳ ತರಬೇತಿ ಚಟುವಟಿಕೆಗಳನ್ನು ತುಮಕೂರಿಗೆ ಸ್ಥಳಾಂತರಿಸುವ ಚಿಂತನೆಯೂ ಇದೆ.
14 ವರ್ಷದೊಳಗಿನ ಮಕ್ಕಳು ಮಿನಿ ಒಲಿಂಪಿಕ್ಸ್ನ ಕಯಾಕಿಂಗ್ ಮತ್ತು ಕನೋಯಿಂಗ್ ಸ್ಪರ್ಧೆಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ. ಕೇವಲ ಎರಡು ಸೆಕೆಂಡ್ಗಳ ಅಂತರದಲ್ಲಿ ಚಿನ್ನದ ಪದಕ ಕೈತಪ್ಪಿದ್ದರೂ, ಬೆಳ್ಳಿ ಪದಕ ಗಳಿಸಿರುವುದು ಹೆಮ್ಮೆಯ ಸಂಗತಿ. ಮುಂದಿನ ದಿನಗಳಲ್ಲಿ ಮಕ್ಕಳಿಗೆ ಇನ್ನಷ್ಟು ಉತ್ತಮ ತರಬೇತಿ ನೀಡಿ, ರಾಜ್ಯ, ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಸ್ಪರ್ಧೆಗಳಿಗೆ ಸಜ್ಜುಗೊಳಿಸಬೇಕು.
ತುಮಕೂರಿನಲ್ಲಿ ಕ್ರೀಡಾ ಮೂಲಸೌಕರ್ಯ ಅಭಿವೃದ್ಧಿಗೆ ಆದ್ಯತೆ: ತುಮಕೂರಿನಲ್ಲಿ ಅಂತಾರಾಷ್ಟ್ರೀಯ ಮಹಿಳಾ ಟೆನಿಸ್ ಕ್ರೀಡಾಕೂಟವನ್ನು ಯಶಸ್ವಿಯಾಗಿ ಆಯೋಜಿಸಲಾಗಿದೆ. ಇದೇ ರೀತಿ ಕ್ರೀಡಾ ಕ್ಷೇತ್ರದಲ್ಲಿ ಹೆಚ್ಚಿನ ಅವಕಾಶಗಳನ್ನು ಕಲ್ಪಿಸುವ ಉದ್ದೇಶದಿಂದ ಒಲಿಂಪಿಕ್ ಮಟ್ಟದ ಈಜು ಸ್ಪರ್ಧೆಗಳಿಗೆ ಅಗತ್ಯವಿರುವ ಸೌಲಭ್ಯಗಳನ್ನು ಅಭಿವೃದ್ಧಿಪಡಿಸುವ ಚಿಂತನೆಯಿದೆ.
ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣ ನಿರ್ಮಾಣಕ್ಕಾಗಿ ಈಗಾಗಲೇ ಭೂಮಿ ಒದಗಿಸಲಾಗಿದೆ. ಕ್ರೀಡಾಂಗಣ ನಿರ್ಮಾಣವಾದ ನಂತರ ತುಮಕೂರಿನಲ್ಲಿಯೂ ಅಂತಾರಾಷ್ಟ್ರೀಯ ಮಟ್ಟದ ಕ್ರಿಕೆಟ್ ಪಂದ್ಯಾವಳಿಗಳನ್ನು ಆಯೋಜಿಸಲು ಅವಕಾಶ ದೊರೆಯಲಿದೆ. ಮಹಾತ್ಮ ಗಾಂಧಿ ಜಿಲ್ಲಾ ಕ್ರೀಡಾಂಗಣವು ಬೆಂಗಳೂರಿನ ಕಂಠೀರವ ಕ್ರೀಡಾಂಗಣದಷ್ಟೇ ಉತ್ತಮ ಗುಣಮಟ್ಟದ ಸೌಲಭ್ಯಗಳನ್ನು ಹೊಂದಿದೆ.
ಮಕ್ಕಳಲ್ಲಿ ಶಿಸ್ತು, ಆತ್ಮವಿಶ್ವಾಸ ಬೆಳೆಸಲು ಕ್ರೀಡೆ ಅಗತ್ಯ: ಇತ್ತೀಚಿನ ದಿನಗಳಲ್ಲಿ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು ದುಶ್ಚಟಗಳಿಗೆ ಬಲಿಯಾಗುತ್ತಿರುವುದು ಕಳವಳಕಾರಿ ಸಂಗತಿಯಾಗಿದೆ. ಮಕ್ಕಳನ್ನು ಇಂತಹ ದುಶ್ಚಟಗಳಿಂದ ದೂರವಿಡಲು ಕ್ರೀಡೆ, ಸಾಂಸ್ಕೃತಿಕ ಹಾಗೂ ಸೃಜನಾತ್ಮಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಂತೆ ಪ್ರೋತ್ಸಾಹಿಸಬೇಕು. ಕ್ರೀಡೆಯು ಮಕ್ಕಳಲ್ಲಿ ಶಿಸ್ತು, ಆತ್ಮವಿಶ್ವಾಸ, ನಾಯಕತ್ವದ ಗುಣಗಳು ಹಾಗೂ ತಂಡದ ಮನೋಭಾವವನ್ನು ಬೆಳೆಸುತ್ತದೆ. ಆದ್ದರಿಂದ ಪೋಷಕರು ತಮ್ಮ ಮಕ್ಕಳ ಆಸಕ್ತಿಗೆ ಅನುಗುಣವಾಗಿ ಕ್ರೀಡೆಗಳಲ್ಲಿ ಭಾಗವಹಿಸಲು ಉತ್ತೇಜನ ನೀಡಬೇಕು.
ತುಮಕೂರನ್ನು ಕ್ರೀಡಾ ಚಟುವಟಿಕೆಗಳ ಪ್ರಮುಖ ಕೇಂದ್ರವನ್ನಾಗಿ ರೂಪಿಸುವ ನಿಟ್ಟಿನಲ್ಲಿ ಅಗತ್ಯ ಮೂಲಸೌಕರ್ಯ ಹಾಗೂ ತರಬೇತಿ ಸೌಲಭ್ಯಗಳನ್ನು ಕಲ್ಪಿಸಲು ಸರ್ಕಾರ ಮತ್ತು ಜಿಲ್ಲಾಡಳಿತ ಬದ್ಧವಾಗಿವೆ.
Dr. G Parameshwara
@DrParameshwara
Today, I participated in the 5th Mini Karnataka Games–2026 at Amanikere in Tumakuru and congratulated the young athletes who won silver medals in kayaking and canoeing.
Sports and cultural activities can play a major role in keeping children away from harmful habits and helping them build discipline, confidence, leadership and team spirit. Parents should encourage children to take up sports based on their interests and give them the opportunity to grow through such activities.
We are working to strengthen kayaking and canoeing training in Tumakuru, with support from the State association, and to prepare young athletes for State, national and international competitions.
Tumakuru is also steadily emerging as a major sports centre. We have already hosted an international women’s tennis tournament, are exploring facilities for Olympic-level swimming, and have provided land for an international cricket stadium. The Mahatma Gandhi District Stadium too has strong sporting infrastructure.
Our aim is to create the right facilities, training ecosystem and opportunities so that Tumakuru becomes an important hub for sports and young talent. -
Dr. G Parameshwara
@DrParameshwara
Inaugurated the international conference on “Transdisciplinary Approaches to Modern Medicine: Bridging Clinical Practice, Research, Technology and Public Health,” organised by Sri Siddhartha Medical College in Tumakuru today.
From Ayurveda to Artificial Intelligence, India's remarkable healthcare journey spanning several millennia stands as a testament to our scientific capabilities and intellectual heritage. Having produced some of the finest medical professionals in the world, India must now aspire to lead the next frontier of medical research, scientific discovery and healthcare innovation.
Artificial intelligence, robotic surgery, advanced diagnostics, drug discovery and telemedicine present unprecedented opportunities to transform healthcare delivery. However, scientific disciplines and medical institutions must move beyond working in isolation and embrace interdisciplinary research and global academic collaboration.
I urged our younger generation of medical professionals to take up the unresolved scientific challenges associated with cancer, diabetes, cardiovascular diseases and other ailments. Their knowledge, innovative thinking and commitment to society can shape the future of medicine.
To strengthen the research culture at Sri Siddhartha institutions, I announced incentives of ₹25,000 for students publishing research papers in national journals and ₹50,000 in international journals, along with institutional sponsorship of travel and registration expenses for presenting research papers at national and international conferences.
I also assured students of our continued support in pursuing international academic opportunities and gaining global research exposure.
Our ambition must extend beyond producing competent doctors. We must nurture pioneering researchers, scientific innovators and compassionate medical professionals who will advance the frontiers of medical science and make quality healthcare more accessible to humanity.
Congratulations to the organising committee for creating this international platform for knowledge exchange, scientific collaboration and academic excellence.
The programme was attended by Dr. Vivek Jawali, Chairman of Fortis Hospital; Dr. K.B. Lingegowda, Vice-Chancellor of SAHE University; Dr. Ashok Mehta, Registrar; Dr. Praveen Kudva, Principal of Sri Siddhartha Dental College, and other dignitaries. -
Dr. G Parameshwara
@DrParameshwara
Today, I inaugurated the international conference on “Transdisciplinary Approaches to Modern Medicine: Bridging Clinical Practice, Research, Technology and Public Health”, organised by Sri Siddhartha Medical College at Dr. H.M. Gangadharaiah Memorial Hall, Agalakote, Tumakuru.
The conference brings together different disciplines to strengthen the connection between clinical practice, medical research, technology and public health, and to encourage a more integrated approach to modern healthcare.
Dr. Vivek Jawali, Chairman, Fortis Hospital; Dr. K.B. Lingegowda, Vice-Chancellor, SAHE University; Dr. Ashok Mehta, Registrar; Dr. Praveen Kudva, Principal, Sri Siddhartha Dental College, and other dignitaries were present. -
Dr. G Parameshwara
@DrParameshwara
ಶ್ರೀಮತಿ @SoniaGandhi ಅವರ ಆತ್ಮಕಥನ “Belonging: A Journey of Love” ಓದುವುದು ಅತೀವ ಭಾವನಾತ್ಮಕ ಅನುಭವ. ಜನಸೇವೆ, ದೇಶದ ಮೇಲಿನ ಪ್ರೀತಿ ಮತ್ತು ವೈಯಕ್ತಿಕ ಬದುಕಿನ ತ್ಯಾಗದ ಅರ್ಥವನ್ನು ಈ ಪುಸ್ತಕ ಬಹಳ ಸುಂದರವಾಗಿ ತೆರೆದಿಡುತ್ತದೆ. ರಾಜಕೀಯ ಸ್ಥಾನಮಾನಗಳಾಚೆಗೆ, ಬದುಕಿನಲ್ಲಿ ಅಪಾರ ಸಂತಸದ ಕ್ಷಣಗಳನ್ನೂ, ಮರೆಯಲಾಗದ ನೋವುಗಳನ್ನೂ ಎದುರಿಸಿ, ಎಲ್ಲವನ್ನೂ ಧೈರ್ಯದಿಂದ ಸ್ವೀಕರಿಸಿದ ಮಹಿಳೆಯೊಬ್ಬರ ಜೀವನದ ಕಥೆ ಇಲ್ಲಿದೆ.
1991ರಲ್ಲಿ ದುರಂತ ಸಂಭವಿಸಿದಾಗ, ಕುಟುಂಬದವರು ಸುರಕ್ಷಿತ ಜೀವನಕ್ಕಾಗಿ ಯುರೋಪ್ಗೆ ಹಿಂದಿರುಗುವಂತೆ ಒತ್ತಾಯಿಸಿದರೂ, ಸೋನಿಯಾ ಗಾಂಧಿ ಅವರು ಈ ಮಣ್ಣನ್ನು ಬಿಟ್ಟು ಹೋಗಲು ಒಪ್ಪಲಿಲ್ಲ. “ಇಲ್ಲ, ನಾಡಿಯಾ, ಇಲ್ಲ! ನಿನಗೆ ಇದು ಅರ್ಥವಾಗುವುದಿಲ್ಲ. ಇದೇ ನನ್ನ ಮನೆ, ಇದೇ ನನ್ನ ದೇಶ, ಇದೇ ನನ್ನ ಮಕ್ಕಳ ದೇಶ” ಎಂಬ ಅವರ ಮಾತುಗಳು ಈ ದೇಶದೊಂದಿಗಿನ ಅವರ ಭಾವನಾತ್ಮಕ ಸಂಬಂಧ ಎಷ್ಟು ಆಳವಾಗಿತ್ತು ಎಂಬುದನ್ನು ತೋರಿಸುತ್ತವೆ.
ಈ ಮಣ್ಣಿನೊಂದಿಗಿನ ಅವರ ಅಚಲವಾದ ಬದ್ಧತೆ ಮತ್ತು ದೃಢ ನಿಲುವು ಅವರ ಇಡೀ ಬದುಕಿನುದ್ದಕ್ಕೂ ಪ್ರತಿಬಿಂಬಿಸುತ್ತದೆ. ಬಳ್ಳಾರಿಯ ಜನರು ಅವರನ್ನು ತಮ್ಮ ಮನೆಯ ಸೊಸೆಯಂತೆ ಪ್ರೀತಿಯಿಂದ ಬರಮಾಡಿಕೊಂಡ ಕ್ಷಣದಿಂದ ಹಿಡಿದು, 2004ರ ಮೇ ತಿಂಗಳಲ್ಲಿ ಪ್ರಧಾನಮಂತ್ರಿ ಹುದ್ದೆಯನ್ನು ಸ್ವೀಕರಿಸದೆ ಹಿಂದೆ ಸರಿದ ಐತಿಹಾಸಿಕ ನಿರ್ಧಾರದವರೆಗೆ, ಸೋನಿಯಾ ಗಾಂಧಿ ಅವರ ಬದುಕಿನ ಪಯಣ ಹಲವು ಮಹತ್ವದ ಕ್ಷಣಗಳಿಗೆ ಸಾಕ್ಷಿಯಾಗಿದೆ. ಅಧಿಕಾರಕ್ಕಿಂತ ಮೌಲ್ಯಗಳಿಗೆ, ವೈಯಕ್ತಿಕ ಆಸೆಗಿಂತ ದೇಶದ ಹಿತಕ್ಕೆ ಆದ್ಯತೆ ನೀಡಿದ ಅವರ ನಿರ್ಧಾರಗಳು ಈ ಪುಸ್ತಕದಲ್ಲಿ ವಿಶೇಷವಾಗಿ ಗಮನ ಸೆಳೆಯುತ್ತವೆ.
ಕರ್ನಾಟಕ ಸೇರಿದಂತೆ ದೇಶದಾದ್ಯಂತ ಪಕ್ಷಕ್ಕಾಗಿ ದುಡಿಯುತ್ತಿರುವ ನಮ್ಮೆಲ್ಲರಿಗೂ ಅವರ ಬದುಕಿನ ಪಯಣ ಬಹುದೊಡ್ಡ ಸ್ಪೂರ್ತಿ. ನಿಜವಾದ ಶಕ್ತಿ ಅಧಿಕಾರದಲ್ಲಾಗಲಿ, ದೊಡ್ಡ ಮಾತುಗಳಲ್ಲಾಗಲಿ ಇರುವುದಿಲ್ಲ, ಅದು ನಮ್ಮ ನಡೆನುಡಿ, ತ್ಯಾಗ, ಘನತೆ ಮತ್ತು ಜನರೊಂದಿಗಿನ ಬಾಂಧವ್ಯದಲ್ಲಿ ಅಡಗಿರುತ್ತದೆ. ಅದರಲ್ಲೂ ಸಮಾಜದ ಕಟ್ಟಕಡೆಯ ವ್ಯಕ್ತಿಯೊಂದಿಗೆ ಬೆಸೆದುಕೊಂಡಿರುವ ಪ್ರೀತಿಯೇ ಸಾರ್ವಜನಿಕ ಬದುಕಿನ ನಿಜವಾದ ಅರ್ಥ ಎಂಬುದನ್ನು ಈ ಕೃತಿ ನೆನಪಿಸುತ್ತದೆ.
ಕೆಲವು ಪುಸ್ತಕಗಳು ಕೇವಲ ಓದಿನ ಅನುಭವವಾಗಿ ಉಳಿಯುವುದಿಲ್ಲ. ಅವು ನಮ್ಮ ಮನಸ್ಸಿನಲ್ಲಿ ಹಲವು ಆಲೋಚನೆಗಳನ್ನು ಬಿತ್ತುತ್ತವೆ. ಅಂತಹ ಭಾವನಾತ್ಮಕ ಮತ್ತು ಸ್ಫೂರ್ತಿದಾಯಕ ಕೃತಿ ಇದು. ಪ್ರತಿಯೊಬ್ಬ ಕಾರ್ಯಕರ್ತರೂ, ನಾಗರಿಕರೂ ಓದಿ ಮನನ ಮಾಡಿಕೊಳ್ಳಬೇಕಾದ ಪುಸ್ತಕ.
Dr. G Parameshwara
@DrParameshwara
Reading Smt. @SoniaGandhi ji’s memoir, "Belonging: A Journey of Love", is a deeply moving experience that touches the very core of what public service and personal devotion mean. Beyond political titles, this book reveals the silent strength of a woman who embraced our nation through profound joy and unimaginable sorrow.
When tragedy struck in 1991 and her family urged her to return to the safety of Europe, Sonia ji refused to abandon the soil of her home and her children. She declared: "No, Nadia, no! You cannot understand. This is my home. It is my country, my children’s country."
That quiet, unyielding commitment defines her entire life. Whether it was the warmth with which the people of Bellary embraced her as their own bahu, or her historic decision in May 2004 to renounce the Prime Ministership out of pure moral conviction, Sonia ji has consistently put the nation above self and values above power.
For all of us in Karnataka and across India who serve our party, her journey is a timeless reminder that true strength lies not in noise or office, but in dignity, sacrifice, and an abiding bond with the poorest citizen. A deeply emotional, inspiring read that every worker and citizen should hold close to their heart. -
Dr. G Parameshwara
@DrParameshwara
Reading Smt. @SoniaGandhi ji’s memoir, "Belonging: A Journey of Love", is a deeply moving experience that touches the very core of what public service and personal devotion mean. Beyond political titles, this book reveals the silent strength of a woman who embraced our nation through profound joy and unimaginable sorrow.
When tragedy struck in 1991 and her family urged her to return to the safety of Europe, Sonia ji refused to abandon the soil of her home and her children. She declared: "No, Nadia, no! You cannot understand. This is my home. It is my country, my children’s country."
That quiet, unyielding commitment defines her entire life. Whether it was the warmth with which the people of Bellary embraced her as their own bahu, or her historic decision in May 2004 to renounce the Prime Ministership out of pure moral conviction, Sonia ji has consistently put the nation above self and values above power.
For all of us in Karnataka and across India who serve our party, her journey is a timeless reminder that true strength lies not in noise or office, but in dignity, sacrifice, and an abiding bond with the poorest citizen. A deeply emotional, inspiring read that every worker and citizen should hold close to their heart. -
Dr. G Parameshwara
@DrParameshwara
ರೈತರ ಸಂಕಷ್ಟದಲ್ಲಿ ರಾಜಕೀಯ ಸಲ್ಲದು: ಕೇಂದ್ರ ಸರ್ಕಾರದಿಂದ ಪರಿಹಾರ ಪಡೆಯುವ ಸಂಬಂಧ ಈಗಾಗಲೇ ಮೂರು ಬಾರಿ ಮೆಮೊರಾಂಡಮ್ ಸಲ್ಲಿಸಿದ್ದೇವೆ. ಮನವಿ ಸಲ್ಲಿಸಿದ ಬಳಿಕ ಕೇಂದ್ರದ ಕೃಷಿ ಸಚಿವರು, ಗೃಹ ಸಚಿವರು ಹಾಗೂ ಪ್ರಧಾನಮಂತ್ರಿಗಳ ಕಚೇರಿಗೆ ಭೇಟಿ ಮಾಡಲು ಸಮಯಾವಕಾಶ ಕೋರಿದ್ದೇವೆ. ಖುದ್ದಾಗಿ ಭೇಟಿ ಮಾಡಿ ರಾಜ್ಯದ ಪರಿಸ್ಥಿತಿಯನ್ನು ವಿವರಿಸಿ, ರೈತರಿಗೆ ಪರಿಹಾರ ಒದಗಿಸುವಂತೆ ಮನವಿ ಮಾಡುವುದು ನಮ್ಮ ಉದ್ದೇಶವಾಗಿತ್ತು. ಆದರೆ, ಈವರೆಗೂ ಯಾರಿಂದಲೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.
ಕಳೆದ ಬಾರಿಯೂ ಕೇಂದ್ರ ಸರ್ಕಾರ ರಾಜ್ಯಕ್ಕೆ ಪರಿಹಾರ ನೀಡಿರಲಿಲ್ಲ. ಈ ಹಿನ್ನೆಲೆಯಲ್ಲಿ ನಾವು ಪ್ರತಿಭಟನೆ ನಡೆಸಿ, ಸುಪ್ರೀಂ ಕೋರ್ಟ್ ಮೊರೆ ಹೋದ ಬಳಿಕ ನ್ಯಾಯಾಲಯದ ನಿರ್ದೇಶನದ ಮೇರೆಗೆ ಪರಿಹಾರ ನೀಡಲಾಯಿತು. ಆದರೂ ಕೇವಲ ₹3,500 ಕೋಟಿ ಮಾತ್ರ ಬಿಡುಗಡೆ ಮಾಡಲಾಗಿತ್ತು. ಈ ಬಾರಿಯೂ ಅದೇ ಪರಿಸ್ಥಿತಿ ಮರುಕಳಿಸುವುದಿಲ್ಲ ಎಂಬ ವಿಶ್ವಾಸವಿದೆ. ಇದು ಕಾಂಗ್ರೆಸ್ ಪಕ್ಷದ ಸರ್ಕಾರ ಎಂಬ ಕಾರಣಕ್ಕೆ ಕೇಂದ್ರ ಸರ್ಕಾರ ಬೇರೆ ರೀತಿಯಲ್ಲಿ ಯೋಚಿಸಬಾರದು. ಜನರು ಸಂಕಷ್ಟದಲ್ಲಿದ್ದಾರೆ, ರೈತರು ತೊಂದರೆ ಅನುಭವಿಸುತ್ತಿದ್ದಾರೆ. ಎಲ್ಲ ರಾಜಕೀಯ ಪಕ್ಷಗಳಲ್ಲೂ ರೈತರಿದ್ದಾರೆ. ಹೀಗಾಗಿ ರೈತರ ಸಂಕಷ್ಟದ ವಿಚಾರದಲ್ಲಿ ರಾಜಕೀಯ ಮಾಡಬಾರದು.
ಕೇಂದ್ರ ಸರ್ಕಾರದಿಂದ ಪರಿಹಾರ ಪಡೆಯುವ ಸಂಬಂಧ ಸರ್ವಪಕ್ಷ ಸಭೆ ಕರೆದು, ಎಲ್ಲ ಪಕ್ಷಗಳ ನಾಯಕರನ್ನು ಒಳಗೊಂಡ ನಿಯೋಗವನ್ನು ದೆಹಲಿಗೆ ಕರೆದೊಯ್ಯಬೇಕು ಎಂದು ಮುಖ್ಯಮಂತ್ರಿಗಳು ಈಗಾಗಲೇ ಹೇಳಿದ್ದಾರೆ. ಪರಿಹಾರ ವಿಳಂಬವಾಗುತ್ತಿರುವ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ಮೊರೆ ಹೋಗುವ ಕುರಿತು ಸದ್ಯಕ್ಕೆ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಮುಂದಿನ ದಿನಗಳಲ್ಲಿ ಕೇಂದ್ರ ಸರ್ಕಾರ ಯಾವ ರೀತಿ ನಡೆದುಕೊಳ್ಳುತ್ತದೆ ಎಂಬುದನ್ನು ಗಮನಿಸಿ ತೀರ್ಮಾನಿಸಲಾಗುವುದು.
ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಪರಿಹಾರದ ವಿಚಾರದಲ್ಲಿ ರಾಜ್ಯ ಸರ್ಕಾರ ರಾಜಕೀಯ ಮಾಡುತ್ತಿದೆ ಎಂದು ಆರೋಪಿಸುತ್ತಿದ್ದಾರೆ. ಅವರೂ ಈ ಹಿಂದೆ ಮುಖ್ಯಮಂತ್ರಿಗಳಾಗಿದ್ದವರು. ರಾಜ್ಯ ಸರ್ಕಾರ ತನ್ನ ಪಾಲಿನ ಪರಿಹಾರವನ್ನು ನೀಡುತ್ತಿದೆ. ಎರಡು ಹಂತಗಳಲ್ಲಿ ತಲಾ ₹1,250 ಕೋಟಿ ಪರಿಹಾರ ನೀಡುವ ಕ್ರಮ ಕೈಗೊಳ್ಳಲಾಗಿದೆ. ಕೇಂದ್ರ ಸರ್ಕಾರದಿಂದ ನೆರವು ದೊರೆಯಬಹುದೆಂಬ ನಿರೀಕ್ಷೆಯೊಂದಿಗೆ ರಾಜ್ಯ ತನ್ನ ಪಾಲಿನ ಜವಾಬ್ದಾರಿಯನ್ನು ನಿರ್ವಹಿಸುತ್ತಿದೆ.
ಬಸವರಾಜ ಬೊಮ್ಮಾಯಿ ಅವರು ಸಂಸದರಾಗಿದ್ದು, ಎಚ್.ಡಿ. ಕುಮಾರಸ್ವಾಮಿ ಅವರು ಕೇಂದ್ರ ಸಂಪುಟ ಸಚಿವರಾಗಿದ್ದಾರೆ. ಅವರು ತಮ್ಮ ಪ್ರಭಾವ ಬಳಸಿ ರಾಜ್ಯದ ರೈತರಿಗೆ ಕೇಂದ್ರದಿಂದ ಪರಿಹಾರ ಕೊಡಿಸಲು ಪ್ರಯತ್ನಿಸಲಿ. ರಾಜ್ಯದ ರೈತರಿಗೆ ನೆರವು ದೊರಕಿಸಿಕೊಡುವ ಕೆಲಸ ಮಾಡಿದರೆ ಅವರನ್ನು ನಾವೇ ಅಭಿನಂದಿಸುತ್ತೇವೆ. ಅವರು ಕೇಂದ್ರದಿಂದ ರಾಜ್ಯಕ್ಕೆ ಪರಿಹಾರ ಕೊಡಿಸುವ ಪ್ರಯತ್ನ ಮಾಡಬೇಕು. ರಾಜ್ಯ ಸರ್ಕಾರ ಕೇವಲ ಪತ್ರ ಬರೆದು ಸುಮ್ಮನಾಗಿದೆ ಎಂಬ ಆರೋಪ ಮಾಡುವುದು ಸರಿಯಲ್ಲ. ಈಗಾಗಲೇ ಮೂರು ಬಾರಿ ಮನವಿ ಸಲ್ಲಿಸಿದ್ದೇವೆ. ಕೇಂದ್ರದ ಸಚಿವರು ಹಾಗೂ ಪ್ರಧಾನಮಂತ್ರಿಗಳ ಕಚೇರಿಯಿಂದ ಸಮಯಾವಕಾಶ ಪಡೆದು ಖುದ್ದಾಗಿ ಭೇಟಿ ಮಾಡಿ ಪರಿಸ್ಥಿತಿಯನ್ನು ವಿವರಿಸಿ ಪರಿಹಾರ ಕೋರಲು ಪ್ರಯತ್ನಿಸಿದ್ದೇವೆ. ಭೇಟಿಗೆ ಸಮಯಾವಕಾಶವನ್ನೇ ನೀಡದಿದ್ದಾಗ ರಾಜ್ಯ ಸರ್ಕಾರ ಹೇಗೆ ಮುಂದುವರಿಯಬೇಕು? ಅವಕಾಶ ನೀಡದಿರುವಾಗ ಸೂಕ್ತ ಅನುಸರಣೆ ಮಾಡಿಲ್ಲ ಎಂದು ಆರೋಪಿಸುವುದು ಸರಿಯಲ್ಲ.
ಗೈಡೆನ್ಸ್ ವ್ಯಾಲ್ಯೂ ಪರಿಷ್ಕರಣೆ: ರಾಜ್ಯದಲ್ಲಿ ಜೀವನ ವೆಚ್ಚ ಹೆಚ್ಚಾಗಿರುವುದರ ಜೊತೆಗೆ ಖಾಸಗಿ ಮಾರುಕಟ್ಟೆಯಲ್ಲಿ ಭೂಮಿಯ ಮೌಲ್ಯ ಗಣನೀಯವಾಗಿ ಏರಿಕೆಯಾಗಿದೆ. ಉದಾಹರಣೆಗೆ, ಸರ್ಕಾರದ ಮಾರ್ಗಸೂಚಿ ಮೌಲ್ಯದಲ್ಲಿ ಎಕರೆಗೆ ₹5 ಕೋಟಿ ಇದ್ದರೆ, ಖಾಸಗಿ ಮಾರುಕಟ್ಟೆಯಲ್ಲಿ ಅದರ ಮೌಲ್ಯ ₹20 ಕೋಟಿಯವರೆಗೂ ಇರಬಹುದು. ಇದರಿಂದ ಸರ್ಕಾರಕ್ಕೆ ಆದಾಯ ನಷ್ಟವಾಗುತ್ತಿದೆ. ಈ ಎಲ್ಲ ಅಂಶಗಳನ್ನು ಪರಿಗಣಿಸಿ ರಾಜ್ಯಾದ್ಯಂತ ಗೈಡೆನ್ಸ್ ಮೌಲ್ಯವನ್ನು ಅನುಪಾತದ ಆಧಾರದಲ್ಲಿ ಪರಿಷ್ಕರಿಸುವ ಕುರಿತು ವಿಶ್ಲೇಷಣೆ ನಡೆಸಲಾಗುತ್ತಿದೆ. ವಿಶ್ಲೇಷಣೆ ಪೂರ್ಣಗೊಂಡ ಬಳಿಕ ಯಾವ ಪ್ರದೇಶದಲ್ಲಿ ಎಷ್ಟು ಹೆಚ್ಚಳ ಮಾಡಬೇಕು ಎಂಬುದನ್ನು ಪ್ರದೇಶವಾರು ನಿರ್ಧರಿಸಲಾಗುವುದು. ಬೆಂಗಳೂರು ನಗರದಲ್ಲಿ ಬಿಬಿಎಂಪಿ ವ್ಯಾಪ್ತಿಯ ಪ್ರದೇಶಗಳಿಗೆ ಅನುಗುಣವಾಗಿ ಹಾಗೂ ಇತರ ಜಿಲ್ಲೆಗಳಲ್ಲಿ ತಾಲೂಕು ಅಥವಾ ಪಂಚಾಯಿತಿ ಮಟ್ಟದಲ್ಲಿ ಗೈಡೆನ್ಸ್ ಮೌಲ್ಯ ಪರಿಷ್ಕರಿಸುವ ಉದ್ದೇಶವಿದೆ.
ಸಿದ್ದರಾಮಯ್ಯ ಅವರಿಗೆ ಅಗೌರವ ತೋರುವ ಪ್ರಶ್ನೆಯೇ ಇಲ್ಲ: ಸೋನಿಯಾ ಗಾಂಧಿ ಅವರ "Belonging: A Journey of Love" ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಐದನೇ ಸಾಲಿನಲ್ಲಿ ಕೂರಿಸುವ ಮೂಲಕ ಅಗೌರವ ತೋರಲಾಗಿದೆ ಎಂಬ ಆರೋಪ ಸರಿಯಲ್ಲ. ಕಾರ್ಯಕ್ರಮದಲ್ಲಿ ಯಾರಿಗೂ ನಿರ್ದಿಷ್ಟ ಆಸನಗಳನ್ನು ಕಾಯ್ದಿರಿಸಿರಲಿಲ್ಲ. ಯಾರಾದರೂ ಬಂದು ಕುಳಿತುಕೊಳ್ಳಬಹುದಿತ್ತು. ಸಿದ್ದರಾಮಯ್ಯ ಅವರು ತಡವಾಗಿ ಆಗಮಿಸಿದ್ದರಿಂದ ಐದನೇ ಸಾಲಿನಲ್ಲಿ ಕುಳಿತುಕೊಳ್ಳುವಂತಾಗಿದೆ. ಅವರನ್ನು ಅವಮಾನಿಸುವ ಅಥವಾ ಕಡೆಗಣಿಸುವ ಉದ್ದೇಶ ಇರಲಿಲ್ಲ. ಸಿದ್ದರಾಮಯ್ಯ ಅವರು ರಾಜ್ಯದಲ್ಲಿ ಹಾಗೂ ಕಾಂಗ್ರೆಸ್ ಪಕ್ಷದಲ್ಲಿ ಅತ್ಯುನ್ನತ ಸ್ಥಾನಮಾನ ಹೊಂದಿರುವ ನಾಯಕರು. ಅವರನ್ನು ಅಗೌರವದಿಂದ ನಡೆಸಿಕೊಳ್ಳುವ ಪ್ರಶ್ನೆಯೇ ಇಲ್ಲ.
ಎಥೆನಾಲ್ ಮಿಶ್ರಣದ ಕುರಿತು ಆಹಾರ ಸಚಿವ ರಿಜ್ವಾನ್ ಅರ್ಷದ್ ಅವರ ಹೇಳಿಕೆಯನ್ನು ಕೇಂದ್ರ ಸಚಿವರು ಟೀಕಿಸಿರುವುದು ಸರಿಯಲ್ಲ. ಪ್ರಯೋಗಾಲಯದ ಫಲಿತಾಂಶಗಳು ವೈಜ್ಞಾನಿಕ ಮಾಹಿತಿಯನ್ನು ಆಧರಿಸಿರುತ್ತವೆ. ಅಂತಹ ವೈಜ್ಞಾನಿಕ ದತ್ತಾಂಶಗಳ ಆಧಾರದ ಮೇಲೆಯೇ ಆಹಾರ ಸಚಿವರು ಮಾತನಾಡಿದ್ದಾರೆ. ಇಂಧನದಲ್ಲಿ ಶೇ.20ರಿಂದ ಶೇ.30ರಷ್ಟು ಎಥೆನಾಲ್ ಮಿಶ್ರಣವಾಗುತ್ತಿರುವ ಕುರಿತು ಪ್ರಯೋಗಾಲಯದ ವರದಿಗಳು ಬಂದಿವೆ. ಈ ವರದಿಗಳ ಆಧಾರದ ಮೇಲೆ ಕರ್ನಾಟಕದ ಪರಿಸ್ಥಿತಿಯನ್ನು ಉಲ್ಲೇಖಿಸಿ ಅವರು ಮಾತನಾಡಿದ್ದಾರೆ. ಇಡೀ ದೇಶದಲ್ಲಿ ಇದೇ ರೀತಿ ನಡೆಯುತ್ತಿದೆ ಎಂದು ಅವರು ಹೇಳಿಲ್ಲ. ಕರ್ನಾಟಕದಲ್ಲಿ ಇಂತಹ ಪರಿಸ್ಥಿತಿ ಉಂಟಾಗಬಾರದು ಹಾಗೂ ಈ ಕುರಿತು ತೈಲ ಕಂಪನಿಗಳಿಗೆ ಸೂಕ್ತ ಸೂಚನೆ ನೀಡಬೇಕು ಎಂಬುದು ಅವರ ಹೇಳಿಕೆಯ ಉದ್ದೇಶವಾಗಿದೆ. ವೈಜ್ಞಾನಿಕ ವರದಿಗಳ ಆಧಾರದ ಮೇಲೆ ನೀಡಿರುವ ಹೇಳಿಕೆಯನ್ನು ಕೇಂದ್ರ ಸಚಿವರು ಈ ರೀತಿ ಟೀಕಿಸುವುದು ಸರಿಯಲ್ಲ.
ಬಿಬಿಎಂಪಿ ಹಾಗೂ ಜಿಬಿಎ ಚುನಾವಣೆ ಕುರಿತು: ಚುನಾವಣೆ ನಡೆಸುವ ಸಂಬಂಧ ಮತದಾರರ ಪಟ್ಟಿ ಸಿದ್ಧಪಡಿಸುವ ಪ್ರಕ್ರಿಯೆ ಪ್ರಸ್ತುತ ನಡೆಯುತ್ತಿದೆ. ಕರಡು ಮತದಾರರ ಪಟ್ಟಿಯನ್ನು ಪ್ರಕಟಿಸಲಾಗಿದ್ದು, ಸಾರ್ವಜನಿಕರಿಂದ ಆಕ್ಷೇಪಣೆಗಳನ್ನು ಆಹ್ವಾನಿಸಲಾಗಿದೆ. ಮತದಾರರ ಸೇರ್ಪಡೆ ಮತ್ತು ಕೈಬಿಡುವಿಕೆ ಸೇರಿದಂತೆ ಎಲ್ಲ ಪ್ರಕ್ರಿಯೆಗಳು ಪೂರ್ಣಗೊಂಡು ಅಂತಿಮ ಮತದಾರರ ಪಟ್ಟಿ ಸಿದ್ಧವಾದ ಬಳಿಕ ಚುನಾವಣೆ ನಡೆಸಲು ಸಾಧ್ಯವಾಗಲಿದೆ. ಇಲ್ಲವಾದಲ್ಲಿ 2011ರ ಜನಗಣತಿಯ ಆಧಾರದ ಮೇಲಾದರೂ ಚುನಾವಣೆ ನಡೆಸಲು ಅನುಮತಿ ನೀಡಬೇಕು. ಸದ್ಯ ಜನಗಣತಿ ಪ್ರಕ್ರಿಯೆ ಆರಂಭವಾಗುತ್ತಿದೆ. ಜನಗಣತಿ ಪೂರ್ಣಗೊಳ್ಳುವವರೆಗೆ ಕಾಯಬೇಕೇ ಅಥವಾ ಬೇರೆ ಯಾವುದಾದರೂ ಮಾನದಂಡದ ಆಧಾರದ ಮೇಲೆ ಚುನಾವಣೆ ನಡೆಸಬೇಕೇ ಎಂಬುದನ್ನು ನಿರ್ಧರಿಸಬೇಕು. ಚುನಾವಣೆ ಮುಂದೂಡಿಕೆಯಾಗುತ್ತಿರುವುದಕ್ಕೆ ಈ ಗೊಂದಲಗಳೇ ಕಾರಣವಾಗಿವೆ.
- ಇಂದು ನನ್ನ ನಿವಾಸದ ಬಳಿ ಮಾಧ್ಯಮದವರೊಂದಿಗೆ ಮಾತನಾಡಿದೆ.
Dr. G Parameshwara
@DrParameshwara
No Response from Centre on Drought Relief: Karnataka has already submitted three memorandums seeking drought relief and requested appointments with the Union Agriculture Minister, Union Home Minister and the Prime Minister’s Office to personally explain the situation. So far, we have received no response.
Last time too, Karnataka received relief only after we protested and approached the Supreme Court. I hope that situation is not repeated. Farmers’ distress should not become a matter of politics.
All Parties Must Stand with Farmers: The Chief Minister has proposed an all-party delegation to Delhi to press Karnataka’s case. Former Chief Minister Basavaraj Bommai and Union Minister H.D. Kumaraswamy should also use their positions to help secure relief from the Centre. If they succeed in bringing assistance to our farmers, we will welcome it.
The State Government is already doing its part by providing relief in two phases. We will continue to fulfil our responsibility while seeking the assistance due from the Centre.
Guidance Value Revision Under Study: Land values in the private market have risen sharply compared with Government guidance values, leading to revenue loss. We are therefore examining a region-wise revision of guidance values across Karnataka. Any revision will be based on a detailed assessment of local market conditions.
No Question of Disrespecting Siddaramaiah: There was no intention whatsoever to disrespect former Chief Minister Siddaramaiah at the launch of _Belonging: A Journey of Love_ . There were no reserved seats, and he happened to arrive late.
Siddaramaiah holds a very senior and respected position in Karnataka and in the Congress party. There is no question of treating him otherwise.
Ethanol Remarks Based on Lab Reports: The Food Minister’s remarks on ethanol blending were based on scientific laboratory reports indicating higher blending levels in certain samples in Karnataka. The intention was to ensure that such issues are addressed and that oil companies receive appropriate instructions.
Civic Polls Await Final Electoral Rolls: The process of preparing electoral rolls for Bengaluru civic elections is under way. Once additions, deletions and objections are completed and the final rolls are ready, elections can proceed. A decision may also be required on whether to rely on the 2011 Census or another appropriate basis.
Government Functioning Effectively Under D.K. Shivakumar: Chief Minister D.K. Shivakumar is leading the Government effectively. Siddaramaiah worked over the past three years to implement major manifesto commitments, and the present Government is focused on completing the remaining promises.
We have another year and a half to work for the people. Our focus is to govern effectively and work towards returning to power in 2028, rather than engage in unnecessary speculation about a third Chief Minister.
No Dissatisfaction Raised in CLP Meeting: If any MLA or Minister has concerns, the Congress Legislature Party meeting is the appropriate forum to raise them. At the recent meeting, no one expressed any dissatisfaction.
The focus should remain on governance and delivering on our commitments to the people. -
Dr. G Parameshwara
@DrParameshwara
Women's political representation must go beyond constitutional promises and translate into meaningful participation, equal opportunities and real decision-making power.
The early implementation of 33% women's reservation, without prolonged delays linked to delimitation, is essential. Equally important are stronger safeguards against online harassment and digital threats, institutional support, mentorship and greater opportunities for women to exercise leadership.
At the First Conference of Commonwealth Women Parliamentarians (CWP) India Region in Bengaluru, I emphasised that the strength of our democracy must also be measured by how effectively it enables women to lead and shape decisions.
From the right to vote to the right to lead, our commitment must be to turn the promise of equality into reality.
Dr. G Parameshwara
@DrParameshwara
ಮಹಿಳೆಯರ ರಾಜಕೀಯ ಪ್ರಾತಿನಿಧ್ಯವು ಕೇವಲ ಸಂವಿಧಾನದಲ್ಲಿ ನೀಡಿರುವ ಭರವಸೆಯಾಗಿ ಉಳಿಯಬಾರದು. ಆಡಳಿತದಲ್ಲಿ ಹಾಗೂ ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳುವ ಪ್ರಕ್ರಿಯೆಯಲ್ಲಿ ಮಹಿಳೆಯರಿಗೆ ನಿಜವಾದ ಪಾಲುದಾರಿಕೆ ದೊರೆಯಬೇಕು. ಮಹಿಳೆಯರು ತಮ್ಮ ನಾಯಕತ್ವದ ಸಾಮರ್ಥ್ಯವನ್ನು ಈಗಾಗಲೇ ಸಾಬೀತುಪಡಿಸಿದ್ದಾರೆ. ಆದರೆ ಅವರೊಂದಿಗೆ ಅಧಿಕಾರ ಹಂಚಿಕೊಳ್ಳಲು ನಮ್ಮ ವ್ಯವಸ್ಥೆಗಳು ಎಷ್ಟರಮಟ್ಟಿಗೆ ಸಿದ್ಧವಾಗಿವೆ ಎಂಬುದು ನಾವು ಕೇಳಿಕೊಳ್ಳಬೇಕಾದ ಪ್ರಶ್ನೆ.
ಸಂಸತ್ತು ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿಯನ್ನು ಆದಷ್ಟು ಶೀಘ್ರ ಜಾರಿಗೊಳಿಸಬೇಕು. ಕ್ಷೇತ್ರ ಪುನರ್ವಿಂಗಡಣೆಗೆ ಸಂಬಂಧಿಸಿದ ಭಿನ್ನಾಭಿಪ್ರಾಯಗಳು ಮಹಿಳಾ ಮೀಸಲಾತಿ ಜಾರಿಗೆ ಅಡ್ಡಿಯಾಗಬಾರದು. ಅಗತ್ಯವಿದ್ದರೆ, ಈ ಎರಡೂ ಪ್ರಕ್ರಿಯೆಗಳನ್ನು ಪ್ರತ್ಯೇಕಗೊಳಿಸಲು ಸಂವಿಧಾನಾತ್ಮಕ ಬದಲಾವಣೆಗಳ ಬಗ್ಗೆಯೂ ಚಿಂತನೆ ನಡೆಸಬೇಕು.
ಇದೇ ವೇಳೆ, ಮಹಿಳೆಯರು ಸಾರ್ವಜನಿಕ ಜೀವನದಲ್ಲಿ ಎದುರಿಸುತ್ತಿರುವ ಸವಾಲುಗಳನ್ನೂ ಗಂಭೀರವಾಗಿ ಪರಿಗಣಿಸಬೇಕು. ಆನ್ಲೈನ್ ನಿಂದನೆ, ಬೆದರಿಕೆ, ಡೀಪ್ಫೇಕ್ಗಳು ಹಾಗೂ ಸಂಘಟಿತ ಕಿರುಕುಳಗಳು ಮಹಿಳೆಯರನ್ನು ಸಾರ್ವಜನಿಕ ಚರ್ಚೆಗಳಿಂದ ದೂರವಿಡುವಂತಾಗಬಾರದು. ಅವರಿಗೆ ಡಿಜಿಟಲ್ ಸುರಕ್ಷತೆ, ಸಾಂಸ್ಥಿಕ ಬೆಂಬಲ, ಅನುಭವಿಗಳ ಮಾರ್ಗದರ್ಶನ, ಅಗತ್ಯ ಸೌಲಭ್ಯಗಳು ಹಾಗೂ ಪ್ರಮುಖ ನಿರ್ಧಾರಗಳನ್ನು ರೂಪಿಸುವಲ್ಲಿ ಹೆಚ್ಚಿನ ಅವಕಾಶಗಳು ದೊರೆಯಬೇಕು.
ಮಹಿಳೆಯರಿಗೆ ಕೇವಲ ರಾಜಕೀಯ ಪ್ರಾತಿನಿಧ್ಯ ನೀಡುವುದು ನಮ್ಮ ಗುರಿಯಾಗಬಾರದು. ಅವರು ಸಮಾನ ಅವಕಾಶಗಳೊಂದಿಗೆ ನಾಯಕತ್ವ ವಹಿಸುವ, ಅಧಿಕಾರ ಚಲಾಯಿಸುವ ಹಾಗೂ ಆಡಳಿತದಲ್ಲಿ ಸಕ್ರಿಯವಾಗಿ ಭಾಗವಹಿಸುವ ವಾತಾವರಣವನ್ನು ನಿರ್ಮಿಸಬೇಕು. ಮಹಿಳೆಯರಿಗೆ ರಾಜಕೀಯ ಪ್ರಾತಿನಿಧ್ಯ ನೀಡುವುದು ಪ್ರಜಾಪ್ರಭುತ್ವವು ಅವರಿಗೆ ಮಾಡುವ ಉಪಕಾರವಲ್ಲ. ಸಮಾನತೆಯ ಬಗ್ಗೆ ಪ್ರಜಾಪ್ರಭುತ್ವ ನೀಡಿರುವ ಭರವಸೆಯನ್ನು ಎಷ್ಟರಮಟ್ಟಿಗೆ ಈಡೇರಿಸಿದೆ ಎಂಬುದನ್ನು ಅಳೆಯುವ ಮಾನದಂಡವಾಗಿದೆ.
- ಬೆಂಗಳೂರಿನ ವಿಧಾನಸೌಧದಲ್ಲಿ ನಡೆದ ಕಾಮನ್ವೆಲ್ತ್ ಮಹಿಳಾ ಸಂಸದೀಯಪಟುಗಳ ಭಾರತ ಪ್ರಾದೇಶಿಕ ವಿಭಾಗದ ಪ್ರಥಮ ಸಮ್ಮೇಳನದಲ್ಲಿ ನಾನು ಮಾಡಿದ ಭಾಷಣದ ಪ್ರಮುಖಾಂಶ -
Dr. G Parameshwara
@DrParameshwara
Women's equal participation in political leadership is essential to a stronger and more inclusive democracy. Ensuring 33% reservation in legislatures, along with the institutional support and opportunities women need to exercise leadership, must remain a priority.
The First Conference of Commonwealth Women Parliamentarians (CWP) India Region at Vidhana Soudha, Bengaluru, provided an important platform for discussions on women's political representation, digital safety, mentorship and greater participation in democratic decision-making.
Glimpses from the conference, which reaffirmed our collective commitment to moving from the promise of equality to its realisation in political leadership and governance.This media couldn't be displayed. See it on the original post. -
Dr. G Parameshwara
@DrParameshwara
Addressed the inaugural session of the first Conference of Commonwealth Women Parliamentarians (CWP) India Region at Vidhana Soudha, Bengaluru, today.
This conference is not merely about women in politics. It is about equality, the credibility of our institutions and the future of democracy itself. The question is no longer whether women are capable of leadership. They have proved that beyond doubt. The question is whether our institutions are prepared to share power with them.
Karnataka has a centuries-old legacy of equality and inclusive participation, reflected in the 12th-century Anubhava Mantapa of Basavanna and Allama Prabhu. Our Constitution carried forward this democratic spirit by guaranteeing universal adult franchise from the very beginning of the Republic. Yet, the journey from the right to vote to the right to govern remains unfinished.
The Congress-led UPA Government introduced the Women's Reservation Bill in 2008, which was passed in the Rajya Sabha in 2010 under the leadership of Dr. Manmohan Singh and Smt. Sonia Gandhi. Shri Rahul Gandhi subsequently extended unconditional support for its passage and consistently advocated its early implementation.
While the 106th Constitutional Amendment of 2023 was an important milestone, the promised 33% reservation for women in Parliament and State Assemblies is yet to become a reality. Linking its implementation to the Census and delimitation process has only prolonged the uncertainty.
I appeal to Prime Minister Shri Narendra Modi and the Union Government to establish a clear, lawful and time-bound roadmap to implement women's reservation at the earliest possible elections. If necessary, Parliament must consider constitutional measures to separate its implementation from the wider disputes over delimitation, through political consensus.
I also emphasised that representation alone is not enough. Women entering public life must have the safety, institutional support, resources and authority to influence decisions.
Online abuse, threats, coordinated harassment and AI-generated deepfakes are increasingly being used to intimidate women in public life. I proposed a common framework for women legislators across the Commonwealth and India Region, including confidential cyberincident reporting, rapid-response assistance, digital and AI literacy, legislative training and cross-party mentorship.
Our legislatures must also provide better research support, safe working conditions, childcare facilities, effective anti-harassment mechanisms and greater opportunities for women to lead important committees. These measures are particularly necessary for women without political family backgrounds or substantial financial resources.
As we approach 100 years of India's independence in 2047, I envision an India where every girl, even in the smallest village, can aspire to lead her Gram Sabha, municipality, State Legislature, Parliament or the nation itself.
Women's representation is not a favour granted by democracy. It is a measure of whether democracy has fulfilled its promise.
Let us move from symbolic celebration to substantive power, from representation on paper to leadership in practice, and from the promise of equality to the lived experience of equality.
Dr. G Parameshwara
@DrParameshwara
ಇಂದು ಬೆಂಗಳೂರಿನ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ನಲ್ಲಿ ನಡೆದ ಕಾಮನ್ವೆಲ್ತ್ ಮಹಿಳಾ ಸಂಸದೀಯಪಟುಗಳ ಭಾರತ ಪ್ರಾದೇಶಿಕ ವಿಭಾಗದ ಪ್ರಥಮ ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದೆ.
ಮಹಿಳೆಯರ ರಾಜಕೀಯ ಪ್ರಾತಿನಿಧ್ಯವು ಕೇವಲ ಸಂವಿಧಾನದಲ್ಲಿ ನೀಡಿರುವ ಭರವಸೆಯಾಗಿ ಉಳಿಯಬಾರದು. ಆಡಳಿತದಲ್ಲಿ ಹಾಗೂ ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳುವ ಪ್ರಕ್ರಿಯೆಯಲ್ಲಿ ಮಹಿಳೆಯರಿಗೆ ನಿಜವಾದ ಪಾಲುದಾರಿಕೆ ದೊರೆಯಬೇಕು. ಮಹಿಳೆಯರಿಗೆ ನಾಯಕತ್ವ ವಹಿಸುವ ಸಾಮರ್ಥ್ಯವಿದೆಯೇ ಎಂಬುದು ಇಂದು ನಮ್ಮ ಮುಂದಿರುವ ಪ್ರಶ್ನೆಯಲ್ಲ. ಮಹಿಳೆಯರು ತಮ್ಮ ನಾಯಕತ್ವದ ಸಾಮರ್ಥ್ಯವನ್ನು ಈಗಾಗಲೇ ಸಾಬೀತುಪಡಿಸಿದ್ದಾರೆ. ಆದರೆ ಮಹಿಳೆಯರೊಂದಿಗೆ ಅಧಿಕಾರ ಹಂಚಿಕೊಳ್ಳುವ ಧೈರ್ಯವನ್ನು ನಮ್ಮ ಸಾಂಸ್ಥಿಕ ರಚನೆಗಳು ತೋರಿವೆಯೇ ಎಂಬುದು ನಾವು ಕೇಳಿಕೊಳ್ಳಬೇಕಾದ ಪ್ರಶ್ನೆ.
ಈ ಸಮ್ಮೇಳನವು ಕೇವಲ ರಾಜಕೀಯದಲ್ಲಿ ಮಹಿಳೆಯರ ಪಾತ್ರದ ಬಗ್ಗೆ ಚರ್ಚಿಸುವ ಕಾರ್ಯಕ್ರಮವಲ್ಲ. ಸಮಾನತೆ, ವಿಶ್ವಾಸಾರ್ಹತೆ ಹಾಗೂ ಪ್ರಜಾಪ್ರಭುತ್ವದ ಭವಿಷ್ಯದ ಬಗ್ಗೆ ಗಂಭೀರವಾಗಿ ಚಿಂತನೆ ನಡೆಸುವ ಮಹತ್ವದ ವೇದಿಕೆಯಾಗಿದೆ.
ಮಹಿಳೆಯರ ರಾಜಕೀಯ ಪ್ರಾತಿನಿಧ್ಯಕ್ಕಾಗಿ ನಡೆದ ಸುದೀರ್ಘ ಹೋರಾಟವನ್ನು ನಾವು ಸ್ಮರಿಸಬೇಕು. ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಪ್ರೊಗ್ರೆಸಿವ್ ಅಲಯನ್ಸ್ (ಯುಪಿಎ) ಸರ್ಕಾರವು 2008ರಲ್ಲಿ ಸಂವಿಧಾನದ 108ನೇ ತಿದ್ದುಪಡಿ ಮಸೂದೆಯನ್ನು ಮಂಡಿಸಿತ್ತು. ಅಂದಿನ ಪ್ರಧಾನಮಂತ್ರಿ ಡಾ. ಮನಮೋಹನ್ ಸಿಂಗ್ ಹಾಗೂ ಶ್ರೀಮತಿ ಸೋನಿಯಾ ಗಾಂಧಿ ಅವರ ನಾಯಕತ್ವದಲ್ಲಿ 2010ರ ಮಾರ್ಚ್ 9ರಂದು ರಾಜ್ಯಸಭೆಯಲ್ಲಿ ಈ ಮಸೂದೆ ಅಂಗೀಕಾರಗೊಂಡಿತ್ತು.
ಮಸೂದೆಯ ಪರವಾಗಿ 186 ಮತಗಳು ಹಾಗೂ ವಿರುದ್ಧವಾಗಿ ಕೇವಲ ಒಂದು ಮತ ಚಲಾವಣೆಯಾಗಿತ್ತು. ಆ ಮಸೂದೆ ಸಂಸತ್ತಿನ ಎರಡೂ ಸದನಗಳಲ್ಲಿ ಅಂಗೀಕಾರಗೊಳ್ಳಲು ಸಾಧ್ಯವಾಗದಿದ್ದರೂ, ಮಹಿಳಾ ಮೀಸಲಾತಿಗೆ ಸಂಸತ್ತಿನಲ್ಲಿ ಎಷ್ಟು ದೊಡ್ಡ ಮಟ್ಟದ ಬೆಂಬಲವಿದೆ ಎಂಬುದನ್ನು ಅಂದಿನ ಬೆಳವಣಿಗೆ ತೋರಿಸಿಕೊಟ್ಟಿತ್ತು.
2018ರ ಜುಲೈನಲ್ಲಿ ಶ್ರೀ ರಾಹುಲ್ ಗಾಂಧಿ ಅವರು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದು, ಮಹಿಳಾ ಮೀಸಲಾತಿ ಮಸೂದೆಯನ್ನು ಅಂಗೀಕರಿಸಲು ಕಾಂಗ್ರೆಸ್ ಪಕ್ಷವು ಯಾವುದೇ ಷರತ್ತುಗಳಿಲ್ಲದೆ ಬೆಂಬಲ ನೀಡುವುದಾಗಿ ತಿಳಿಸಿದ್ದರು. ಕ್ಷೇತ್ರ ಪುನರ್ವಿಂಗಡಣೆ ಪ್ರಕ್ರಿಯೆಯ ಕಾರಣದಿಂದ ಮಹಿಳಾ ಮೀಸಲಾತಿ ಜಾರಿಯಲ್ಲಿ ಅನಗತ್ಯ ವಿಳಂಬವಾಗಬಾರದು ಎಂದು ಕಾಂಗ್ರೆಸ್ ಪಕ್ಷವು ತನ್ನ 2024ರ ಚುನಾವಣಾ ಪ್ರಣಾಳಿಕೆಯಲ್ಲಿಯೂ ಒತ್ತಾಯಿಸಿತ್ತು.
2023ರಲ್ಲಿ ಸಂವಿಧಾನದ 106ನೇ ತಿದ್ದುಪಡಿಯ ಮೂಲಕ ಮಹಿಳಾ ಮೀಸಲಾತಿಗೆ ಸಂವಿಧಾನಾತ್ಮಕ ಮಾನ್ಯತೆ ನೀಡಿರುವುದನ್ನು ಸ್ವಾಗತಿಸುತ್ತೇನೆ. ಆದರೆ ಈ ಭರವಸೆ ಇನ್ನೂ ಸಂಸತ್ತು ಮತ್ತು ವಿಧಾನಸಭೆಗಳಲ್ಲಿ ಮಹಿಳೆಯರಿಗೆ ನಿಗದಿತ ಸ್ಥಾನಗಳನ್ನು ಕಲ್ಪಿಸುವ ಮೂಲಕ ಕಾರ್ಯರೂಪಕ್ಕೆ ಬಂದಿಲ್ಲ ಎಂಬುದು ಕಳವಳಕಾರಿ.
2026ರ ಏಪ್ರಿಲ್ನಲ್ಲಿ ಈ ಸಂವಿಧಾನ ತಿದ್ದುಪಡಿ ಅಧಿಕೃತವಾಗಿ ಜಾರಿಗೆ ಬಂದಿದ್ದರೂ, ಮಹಿಳಾ ಮೀಸಲಾತಿಯ ಅನುಷ್ಠಾನವನ್ನು ಜನಗಣತಿ ಹಾಗೂ ಅದರ ನಂತರ ನಡೆಯುವ ಕ್ಷೇತ್ರ ಪುನರ್ವಿಂಗಡಣೆ ಪ್ರಕ್ರಿಯೆಗೆ ಜೋಡಿಸಲಾಗಿದೆ. ಇದೇ ವೇಳೆ, ಕ್ಷೇತ್ರ ಪುನರ್ವಿಂಗಡಣೆ ಹಾಗೂ ಶಾಸನಸಭೆಗಳ ಸ್ಥಾನಗಳ ಸಂಖ್ಯೆಯನ್ನು ಹೆಚ್ಚಿಸುವುದಕ್ಕೆ ಸಂಬಂಧಿಸಿದ ಮತ್ತೊಂದು ಸಂವಿಧಾನ ತಿದ್ದುಪಡಿಯನ್ನು 2026ರ ಏಪ್ರಿಲ್ನಲ್ಲಿ ಸಂಸತ್ತಿನಲ್ಲಿ ಅಂಗೀಕರಿಸಲು ನಡೆದ ಪ್ರಯತ್ನವೂ ವಿಫಲವಾಗಿದೆ.
ಮಹಿಳೆಯರ ರಾಜಕೀಯ ಪ್ರಾತಿನಿಧ್ಯದ ವಿಚಾರವನ್ನು ಚುನಾವಣಾ ಕ್ಷೇತ್ರಗಳ ವ್ಯಾಪಕ ಪುನರ್ರಚನೆ ಹಾಗೂ ಅದರ ಸುತ್ತಲಿನ ಭಿನ್ನಾಭಿಪ್ರಾಯಗಳೊಂದಿಗೆ ಜೋಡಿಸಿರುವುದರಿಂದ ಅನುಷ್ಠಾನದಲ್ಲಿ ಎಂತಹ ಸಮಸ್ಯೆಗಳು ಎದುರಾಗುತ್ತಿವೆ ಎಂಬುದನ್ನು ಈ ಬೆಳವಣಿಗೆಗಳು ತೋರಿಸುತ್ತವೆ.
ಕೇಂದ್ರ ಸರ್ಕಾರ ಹಾಗೂ ಗೌರವಾನ್ವಿತ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಗೆ ನನ್ನ ಮನವಿ ಏನೆಂದರೆ, ಸಂಸತ್ತು ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಮೂರನೇ ಒಂದರಷ್ಟು ಸ್ಥಾನಗಳನ್ನು ಸಾಧ್ಯವಾದಷ್ಟು ಶೀಘ್ರ ನಡೆಯುವ ಚುನಾವಣೆಗಳಿಂದಲೇ ಕಲ್ಪಿಸಲು ಸ್ಪಷ್ಟವಾದ, ಕಾನೂನುಬದ್ಧವಾದ ಹಾಗೂ ನಿಗದಿತ ಕಾಲಮಿತಿಯ ಮಾರ್ಗವನ್ನು ರೂಪಿಸುವ ಬಗ್ಗೆ ದೇಶ ಒಮ್ಮತಕ್ಕೆ ಬರಬೇಕು. ಕ್ಷೇತ್ರ ಪುನರ್ವಿಂಗಡಣೆಗೆ ಸಂಬಂಧಿಸಿದ ವ್ಯಾಪಕ ಭಿನ್ನಾಭಿಪ್ರಾಯಗಳಿಂದ ಮಹಿಳಾ ಮೀಸಲಾತಿಯ ಅನುಷ್ಠಾನವನ್ನು ಪ್ರತ್ಯೇಕಗೊಳಿಸಲು ಅಗತ್ಯವಿರುವ ಸಂವಿಧಾನಾತ್ಮಕ ಬದಲಾವಣೆಗಳ ಬಗ್ಗೆ ಸಂಸತ್ತು ಒಮ್ಮತದ ಮೂಲಕ ಚಿಂತನೆ ನಡೆಸಬೇಕು.
ಸಂವಿಧಾನದಲ್ಲಿ ನೀಡಿರುವ ಭರವಸೆ ಕೇವಲ ಬರಹಕ್ಕೆ ಸೀಮಿತವಾಗಬಾರದು. ಮುಂದಿನ ಸಂಸತ್ತು ಮತ್ತು ವಿಧಾನಸಭೆಗಳಲ್ಲಿ ಆ ಭರವಸೆ ನಿಜವಾಗಿಯೂ ಜಾರಿಯಾಗಿರುವುದನ್ನು ದೇಶದ ಜನರು ನೋಡುವಂತಾಗಬೇಕು.
'ಭದ್ರ ಬುನಾದಿ, ಬಲಿಷ್ಠ ಧ್ವನಿ: ಎಲ್ಲರನ್ನೂ ಒಳಗೊಳ್ಳುವ ಸೈಬರ್ ಜಗತ್ತು ಮತ್ತು ನೂತನ ಮಹಿಳಾ ಶಾಸಕರಿಗೆ ಮಾರ್ಗದರ್ಶನದ ಹಾದಿಗಳು' ಎಂಬ ಸಮ್ಮೇಳನದ ವಿಷಯವು ಅತ್ಯಂತ ಮಹತ್ವದ್ದಾಗಿದೆ.
ಡಿಜಿಟಲ್ ವೇದಿಕೆಗಳಿಂದ ಮಹಿಳೆಯರಿಗೆ ನಾಗರಿಕರೊಂದಿಗೆ ನೇರವಾಗಿ ಸಂಪರ್ಕ ಸಾಧಿಸಲು, ಸಮುದಾಯಗಳನ್ನು ಸಂಘಟಿಸಲು ಹಾಗೂ ಸಾರ್ವಜನಿಕ ಚರ್ಚೆಗಳಲ್ಲಿ ಭಾಗವಹಿಸಲು ಹಿಂದೆಂದಿಗಿಂತಲೂ ಹೆಚ್ಚಿನ ಅವಕಾಶಗಳು ದೊರೆತಿವೆ. ಆದರೆ ಇದೇ ವೇದಿಕೆಗಳಲ್ಲಿ ಮಹಿಳಾ ನಾಯಕಿಯರು ಅವಹೇಳನಕಾರಿ ಟೀಕೆಗಳು, ಬೆದರಿಕೆಗಳು, ಸಂಘಟಿತ ಕಿರುಕುಳ, ತಿರುಚಿದ ಚಿತ್ರಗಳು ಹಾಗೂ ಡೀಪ್ಫೇಕ್ಗಳಂತಹ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಇಂತಹ ದಾಳಿಗಳನ್ನು ಕೇವಲ ಮಹಿಳೆಯರ ವೈಯಕ್ತಿಕ ಸುರಕ್ಷತೆಯ ಸಮಸ್ಯೆ ಎಂದು ನೋಡಬಾರದು. ಇವು ಪ್ರಜಾಪ್ರಭುತ್ವದಲ್ಲಿ ಮಹಿಳೆಯರ ಭಾಗವಹಿಸುವಿಕೆಗೂ ದೊಡ್ಡ ಬೆದರಿಕೆಯಾಗಿವೆ.
ಈ ಹಿನ್ನೆಲೆಯಲ್ಲಿ ಕಾಮನ್ವೆಲ್ತ್ ರಾಷ್ಟ್ರಗಳು ಹಾಗೂ ಅದರ ಭಾರತ ಪ್ರಾದೇಶಿಕ ವಿಭಾಗದ ಮಹಿಳಾ ಶಾಸಕರಿಗಾಗಿ ಸಾಮಾನ್ಯ ಸುರಕ್ಷತಾ ವ್ಯವಸ್ಥೆಯೊಂದನ್ನು ರೂಪಿಸುವ ಬಗ್ಗೆ ಸಮ್ಮೇಳನದಲ್ಲಿ ಚರ್ಚೆ ನಡೆಯಬೇಕು. ಸೈಬರ್ ದಾಳಿಗಳು ಹಾಗೂ ಕಿರುಕುಳದ ಘಟನೆಗಳ ಬಗ್ಗೆ ಗೌಪ್ಯವಾಗಿ ದೂರು ನೀಡುವ ವ್ಯವಸ್ಥೆ, ತುರ್ತು ಸಂದರ್ಭದಲ್ಲಿ ತ್ವರಿತ ನೆರವು, ಡಿಜಿಟಲ್ ಸುರಕ್ಷತೆ ಮತ್ತು ಕೃತಕ ಬುದ್ಧಿಮತ್ತೆಯ ಬಳಕೆಯ ಬಗ್ಗೆ ಅರಿವು, ಸಾರ್ವಜನಿಕ ಸಂವಹನ ಹಾಗೂ ಶಾಸನಸಭೆಯ ಕಾರ್ಯಕಲಾಪಗಳಿಗೆ ಸಂಬಂಧಿಸಿದ ಸಂಶೋಧನೆಯ ಬಗ್ಗೆ ಪ್ರಾಯೋಗಿಕ ತರಬೇತಿ ನೀಡುವ ವ್ಯವಸ್ಥೆಗಳನ್ನು ಇದರಲ್ಲಿ ಒಳಗೊಳ್ಳಬೇಕು.
ಮೊದಲ ಬಾರಿಗೆ ಆಯ್ಕೆಯಾಗುವ ಮಹಿಳಾ ಜನಪ್ರತಿನಿಧಿಗಳಿಗೆ ಅನುಭವ ಹೊಂದಿರುವ ಸಂಸದರು ಮತ್ತು ಶಾಸಕರಿಂದ ಮಾರ್ಗದರ್ಶನ ದೊರೆಯುವಂತೆ ಸ್ವತಂತ್ರವಾದ, ಪಕ್ಷಾತೀತ ಮಾರ್ಗದರ್ಶನ ಕಾರ್ಯಕ್ರಮಗಳನ್ನು ರೂಪಿಸಬೇಕು. ಇದರಿಂದ ಹೊಸದಾಗಿ ಆಯ್ಕೆಯಾಗುವ ಮಹಿಳಾ ಜನಪ್ರತಿನಿಧಿಗಳು ಆತ್ಮವಿಶ್ವಾಸ, ಅಗತ್ಯ ಜ್ಞಾನ ಹಾಗೂ ಶಾಸನಸಭೆಗಳ ಕಾರ್ಯನಿರ್ವಹಣೆಯ ಬಗ್ಗೆ ತಿಳಿವಳಿಕೆ ಪಡೆದುಕೊಂಡು ಸಮರ್ಥವಾಗಿ ನಾಯಕತ್ವ ವಹಿಸಲು ಸಾಧ್ಯವಾಗುತ್ತದೆ.
ಕೇವಲ ರಾಜಕೀಯ ಪ್ರಾತಿನಿಧ್ಯ ನೀಡುವುದರಿಂದ ಮಹಿಳಾ ಸಬಲೀಕರಣದ ಉದ್ದೇಶ ಈಡೇರುವುದಿಲ್ಲ. ವಿವಿಧ ಸಾಮಾಜಿಕ ಹಾಗೂ ಆರ್ಥಿಕ ಹಿನ್ನೆಲೆಯಿಂದ ಬರುವ ಮಹಿಳೆಯರು ಸಾರ್ವಜನಿಕ ಜೀವನದಲ್ಲಿ ಸಕ್ರಿಯವಾಗಿ ಮತ್ತು ಪರಿಣಾಮಕಾರಿಯಾಗಿ ಭಾಗವಹಿಸಲು ಅನುಕೂಲವಾಗುವಂತಹ ವಾತಾವರಣವನ್ನು ನಮ್ಮ ಶಾಸನಸಭೆಗಳು ನಿರ್ಮಿಸಬೇಕು.
ಮಹಿಳಾ ಜನಪ್ರತಿನಿಧಿಗಳಿಗೆ ಶಾಸನಸಭೆಯ ಕಾರ್ಯಕಲಾಪಗಳಿಗೆ ಸಂಬಂಧಿಸಿದ ವಿಶ್ವಾಸಾರ್ಹ ಸಂಶೋಧನಾ ನೆರವು, ಸುರಕ್ಷಿತ ಪ್ರಯಾಣ ಮತ್ತು ವಸತಿ ವ್ಯವಸ್ಥೆ, ಸಾಧ್ಯವಿರುವ ಕಡೆಗಳಲ್ಲಿ ಕುಟುಂಬದ ಜವಾಬ್ದಾರಿಗಳಿಗೂ ಅನುಕೂಲವಾಗುವಂತಹ ಸದನದ ಕಾರ್ಯವಿಧಾನಗಳು, ಮಕ್ಕಳ ಆರೈಕೆಗೆ ಸೂಕ್ತ ಸೌಲಭ್ಯಗಳು ಹಾಗೂ ಕಿರುಕುಳದ ವಿರುದ್ಧ ಪರಿಣಾಮಕಾರಿ ದೂರು ಮತ್ತು ಪರಿಹಾರ ವ್ಯವಸ್ಥೆಗಳನ್ನು ಕಲ್ಪಿಸಬೇಕು. ಇದರ ಜೊತೆಗೆ ಪ್ರಮುಖ ಶಾಸನಸಭಾ ಸಮಿತಿಗಳ ಅಧ್ಯಕ್ಷತೆಯನ್ನು ಮಹಿಳೆಯರಿಗೆ ವಹಿಸಲು ಹೆಚ್ಚಿನ ಅವಕಾಶಗಳನ್ನು ನೀಡಬೇಕು.
ವಿಶೇಷವಾಗಿ ರಾಜಕೀಯ ಹಿನ್ನೆಲೆಯ ಕುಟುಂಬಗಳಿಂದ ಬಾರದ ಹಾಗೂ ಹೆಚ್ಚಿನ ಆರ್ಥಿಕ ಸಂಪನ್ಮೂಲಗಳಿಲ್ಲದ ಮಹಿಳೆಯರು ಕೂಡ ರಾಜಕೀಯ ಪ್ರವೇಶಿಸಿ, ಇತರರಂತೆ ಸಮಾನ ಅವಕಾಶಗಳೊಂದಿಗೆ ನಾಯಕತ್ವ ವಹಿಸುವಂತಾಗಲು ಇಂತಹ ವ್ಯವಸ್ಥೆಗಳು ಅತ್ಯಂತ ಅಗತ್ಯವಾಗಿವೆ.
ಪ್ರಜಾಪ್ರಭುತ್ವದ ಚಿಂತನೆಗೆ ಕರ್ನಾಟಕ ನೀಡಿರುವ ಐತಿಹಾಸಿಕ ಕೊಡುಗೆಯನ್ನೂ ನಾವು ಸ್ಮರಿಸಬೇಕು. 12ನೇ ಶತಮಾನದಲ್ಲಿ ಬಸವಣ್ಣನವರು ಮತ್ತು ಅಲ್ಲಮಪ್ರಭುಗಳೊಂದಿಗೆ ಗುರುತಿಸಿಕೊಂಡಿರುವ ಅನುಭವ ಮಂಟಪದಲ್ಲಿ ಸಮಾನತೆ, ಕಾಯಕದ ಗೌರವ, ಎಲ್ಲರೂ ಜವಾಬ್ದಾರಿಗಳನ್ನು ಹಂಚಿಕೊಳ್ಳುವ ಮನೋಭಾವ ಹಾಗೂ ಸಾರ್ವಜನಿಕ ಚರ್ಚೆಗಳಲ್ಲಿ ಮಹಿಳೆಯರ ಭಾಗವಹಿಸುವಿಕೆಯಂತಹ ಮೌಲ್ಯಗಳಿಗೆ ಮಹತ್ವ ನೀಡಲಾಗಿತ್ತು. ಶರಣರು ಪ್ರತಿಪಾದಿಸಿದ ಎಲ್ಲರನ್ನೂ ಒಳಗೊಳ್ಳುವ ಚಿಂತನೆಗಳು ಇಂದಿನ ಪ್ರಜಾಪ್ರಭುತ್ವದ ಸಂಸ್ಥೆಗಳನ್ನು ಮತ್ತಷ್ಟು ಬಲಪಡಿಸಲು ನಮಗೆ ಮಹತ್ವದ ಪಾಠಗಳಾಗಿವೆ.
ಭಾರತದ ಸ್ವಾತಂತ್ರ್ಯ ಹೋರಾಟ ಹಾಗೂ ಸಂವಿಧಾನ ರಚನೆಯಲ್ಲಿ ಮಹಿಳೆಯರು ನೀಡಿರುವ ಕೊಡುಗೆ ಅಪಾರವಾಗಿದೆ. ಸರೋಜಿನಿ ನಾಯ್ಡು, ಕಸ್ತೂರಬಾ ಗಾಂಧಿ, ಅರುಣಾ ಆಸಫ್ ಅಲಿ, ಸುಚೇತಾ ಕೃಪಲಾನಿ, ಕಮಲಾದೇವಿ ಚಟ್ಟೋಪಾಧ್ಯಾಯ, ಹಂಸಾ ಮೆಹ್ತಾ, ದುರ್ಗಾಬಾಯಿ ದೇಶಮುಖ್ ಹಾಗೂ ರಾಜಕುಮಾರಿ ಅಮೃತ್ ಕೌರ್ ಅವರಂತಹ ಮಹಾನ್ ಮಹಿಳಾ ನಾಯಕಿಯರನ್ನು ಈ ಸಂದರ್ಭದಲ್ಲಿ ಗೌರವದಿಂದ ಸ್ಮರಿಸುತ್ತೇನೆ.
ನಮ್ಮ ದೇಶವು ಸಂವಿಧಾನಾತ್ಮಕ ಪ್ರಜಾಪ್ರಭುತ್ವವನ್ನು ಅಳವಡಿಸಿಕೊಂಡ ಆರಂಭದಿಂದಲೇ ಎಲ್ಲ ವಯಸ್ಕರಿಗೂ ಮತದಾನದ ಹಕ್ಕು ನೀಡಿರುವುದು ಸಮಾನತೆಯ ವಿಚಾರದಲ್ಲಿ ಕೈಗೊಂಡ ಅತ್ಯಂತ ಮಹತ್ವದ ನಿರ್ಧಾರವಾಗಿದೆ. ಆ ಸಮಯದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಹೊಂದಿದ್ದ ಹಲವು ಅಭಿವೃದ್ಧಿ ಹೊಂದಿದ ದೇಶಗಳಲ್ಲಿಯೂ ಮಹಿಳೆಯರಿಗೆ ಪುರುಷರಷ್ಟೇ ಸಮಾನವಾದ ಮತದಾನದ ಹಕ್ಕು ದೊರೆತಿರಲಿಲ್ಲ. ಅಂತಹ ಸಂದರ್ಭದಲ್ಲಿ ಭಾರತವು ಎಲ್ಲರಿಗೂ ಸಮಾನ ಮತದಾನದ ಹಕ್ಕು ನೀಡುವ ಮೂಲಕ ಸಮಾನತೆಯ ಬಗ್ಗೆ ತನ್ನ ಬದ್ಧತೆಯನ್ನು ತೋರಿಸಿತ್ತು.
ಆದರೆ ಮತದಾನದ ಹಕ್ಕು ಪಡೆದ ಮಹಿಳೆಯರು ಆಡಳಿತ ನಡೆಸುವ ಅಧಿಕಾರವನ್ನು ಸಮಾನವಾಗಿ ಪಡೆಯುವವರೆಗಿನ ನಮ್ಮ ಪ್ರಯಾಣ ಇನ್ನೂ ಪೂರ್ಣಗೊಂಡಿಲ್ಲ.
2047ರಲ್ಲಿ ಭಾರತವು ಸ್ವಾತಂತ್ರ್ಯದ ಶತಮಾನೋತ್ಸವ ಆಚರಿಸಲಿದ್ದು, ಗ್ರಾಮಸಭೆಗಳು ಮತ್ತು ನಗರ ಸ್ಥಳೀಯ ಸಂಸ್ಥೆಗಳಿಂದ ಹಿಡಿದು ರಾಜ್ಯ ವಿಧಾನಸಭೆಗಳು, ಸಂಸತ್ತು ಹಾಗೂ ಸರ್ಕಾರದ ಅತ್ಯುನ್ನತ ಹುದ್ದೆಗಳವರೆಗೆ ಪ್ರತಿಯೊಂದು ಹಂತದಲ್ಲಿಯೂ ಮಹಿಳೆಯರು ನಾಯಕತ್ವ ವಹಿಸುವ ಅವಕಾಶಗಳನ್ನು ಪಡೆಯುವಂತಾಗಬೇಕು. ಅಂತಹ ಪರಿಸ್ಥಿತಿಯನ್ನು ನಿರ್ಮಿಸಲು ನಾವು ಎಷ್ಟರಮಟ್ಟಿಗೆ ಯಶಸ್ವಿಯಾಗಿದ್ದೇವೆ ಎಂಬುದರ ಆಧಾರದಲ್ಲಿಯೇ ದೇಶದ ಪ್ರಜಾಪ್ರಭುತ್ವದ ಪ್ರಗತಿಯನ್ನು ಅಳೆಯಬೇಕು.
ದೇಶದ ಅತ್ಯಂತ ಸಣ್ಣ ಹಳ್ಳಿಗಳಲ್ಲಿ ಬೆಳೆಯುವ ಪ್ರತಿಯೊಬ್ಬ ಹೆಣ್ಣುಮಗುವೂ ಮಹಿಳೆಯರು ರಾಜಕೀಯ ಅಧಿಕಾರವನ್ನು ಚಲಾಯಿಸುವುದನ್ನು ನೋಡಬೇಕು. ತಾನೂ ಕೂಡ ಒಂದು ದಿನ ಅಂತಹ ಸ್ಥಾನಕ್ಕೆ ಏರಬಹುದು, ತನಗೂ ಅಂತಹ ಅವಕಾಶಗಳಿವೆ ಎಂಬ ವಿಶ್ವಾಸ ಆಕೆಯಲ್ಲಿ ಮೂಡುವಂತಹ ಭಾರತವನ್ನು ನಾವು ನಿರ್ಮಿಸಬೇಕು.
ಮಹಿಳೆಯರಿಗೆ ರಾಜಕೀಯ ಪ್ರಾತಿನಿಧ್ಯ ನೀಡುವುದು ಪ್ರಜಾಪ್ರಭುತ್ವವು ಅವರಿಗೆ ಮಾಡುವ ಉಪಕಾರವಲ್ಲ. ಬದಲಾಗಿ ಸಮಾನತೆಯ ಬಗ್ಗೆ ಪ್ರಜಾಪ್ರಭುತ್ವ ನೀಡಿರುವ ಭರವಸೆಯನ್ನು ಎಷ್ಟರಮಟ್ಟಿಗೆ ಈಡೇರಿಸಿದೆ ಎಂಬುದನ್ನು ಅಳೆಯುವ ಮಾನದಂಡವಾಗಿದೆ.
ಮಹಿಳೆಯರಿಗೆ ಕೇವಲ ಸಾಂಕೇತಿಕ ಗೌರವ ನೀಡುವುದನ್ನು ಮೀರಿ, ನಿಜವಾದ ರಾಜಕೀಯ ಅಧಿಕಾರ, ಶಾಸನಸಭೆಗಳ ಕಾರ್ಯಕಲಾಪಗಳಲ್ಲಿ ಅರ್ಥಪೂರ್ಣ ಭಾಗವಹಿಸುವಿಕೆ ಹಾಗೂ ಜೀವನದ ಪ್ರತಿಯೊಂದು ಹಂತದಲ್ಲಿಯೂ ಸಮಾನತೆಯನ್ನು ಅನುಭವಿಸುವ ಅವಕಾಶಗಳನ್ನು ಕಲ್ಪಿಸಬೇಕು. ಈ ನಿಟ್ಟಿನಲ್ಲಿ ಬೆಂಗಳೂರಿನಲ್ಲಿ ನಡೆಯುತ್ತಿರುವ ಈ ಸಮ್ಮೇಳನವು ದೇಶಕ್ಕೆ ಪ್ರಬಲ ಸಂದೇಶವನ್ನು ನೀಡಬೇಕು ಎಂದು ಕರೆ ನೀಡಿದೆ. -
Dr. G Parameshwara
@DrParameshwara
ಲೋಕಸಭೆಯ ವಿರೋಧ ಪಕ್ಷದ ನಾಯಕರಾದ ಶ್ರೀ @RahulGandhi ಅವರು ತಮ್ಮ ದೂರವಾಣಿ ಕರೆಗಳನ್ನು ಕದ್ದಾಲಿಕೆ ಮಾಡಲಾಗುತ್ತಿದೆ ಎಂಬ ಗಂಭೀರ ಆರೋಪ ಮಾಡಿ ನಾಲ್ಕು ದಿನಗಳು ಕಳೆದರೂ ಪ್ರಧಾನಮಂತ್ರಿಗಳಾಗಲಿ ಅಥವಾ ಕೇಂದ್ರ ಸರ್ಕಾರವಾಗಲಿ ಈ ಗಂಭೀರ ಆರೋಪಕ್ಕೆ ಸಂಬಂಧಿಸಿದಂತೆ ಸಮರ್ಪಕ ಸ್ಪಷ್ಟನೆ ನೀಡಿಲ್ಲ. ತಮ್ಮ ಸರ್ಕಾರದ ವಿರುದ್ಧದ ಈ ಗಂಭೀರ ಆರೋಪದ ಬಗ್ಗೆ ಬಿಜೆಪಿಯ ವಕ್ತಾರರು ವೈಯಕ್ತಿಕ ಟೀಕೆ ಮತ್ತು ರಾಜಕೀಯ ಪ್ರೇರಿತ ದಾಳಿಗಳಲ್ಲಿ ಮಗ್ನರಾಗಿದ್ದಾರೆ. ಆದರೆ ಇವು ಸರ್ಕಾರ ನೀಡಬೇಕಾದ ಸೂಕ್ತ ಉತ್ತರಕ್ಕೆ ಪರ್ಯಾಯವಾಗಲಾರವು.
ಲೋಕಸಭೆಯ ವಿರೋಧ ಪಕ್ಷದ ನಾಯಕರೊಬ್ಬರು ತಮ್ಮ ದೂರವಾಣಿ ಕದ್ದಾಲಿಕೆಯಾಗುತ್ತಿದೆ ಎಂದು ಆರೋಪಿಸಿದಾಗ, ಅದು ಕೇವಲ ಅವರ ವೈಯಕ್ತಿಕ ಗೌಪ್ಯತೆಯ ಪ್ರಶ್ನೆಯಾಗಿ ಉಳಿಯುವುದಿಲ್ಲ. ಬದಲಾಗಿ, ನಮ್ಮ ಪ್ರಜಾಪ್ರಭುತ್ವದ ಆರೋಗ್ಯ ಹಾಗೂ ಅಧಿಕಾರದಲ್ಲಿರುವವರ ಉತ್ತರದಾಯಿತ್ವದ ಕುರಿತು ಮೂಲಭೂತ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ.
@narendramodi ಅವರ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಶ್ರೀ ರಾಹುಲ್ ಗಾಂಧಿ ಅವರು ಮಾಡಿರುವ ಗಂಭೀರ ಆರೋಪಗಳನ್ನು ರಾಜಕೀಯ ದಾಳಿಗಳ ಮೂಲಕವಾಗಲಿ ಅಥವಾ ಅನುಕೂಲಕ್ಕೆ ತಕ್ಕಂತೆ ಮೌನ ವಹಿಸುವ ಮೂಲಕವಾಗಲಿ ತಳ್ಳಿಹಾಕಲು ಸಾಧ್ಯವಿಲ್ಲ. ಈ ಆರೋಪಗಳ ಕುರಿತು ಸ್ವತಂತ್ರ ತನಿಖೆ ನಡೆಯಬೇಕು ಮತ್ತು ಸರ್ಕಾರ ವಿಶ್ವಾಸಾರ್ಹ ಉತ್ತರಗಳನ್ನು ನೀಡಬೇಕು.
ಎಲ್ಲಕ್ಕಿಂತ ಮುಖ್ಯವಾಗಿ, ಕಳೆದ ಒಂದು ದಶಕದಲ್ಲಿ ದೇಶದಲ್ಲಿ ಗೂಢಚರ್ಯೆ, ಪತ್ರಿಕಾ ಸ್ವಾತಂತ್ರ್ಯ ಹಾಗೂ ಸ್ವಾಯತ್ತ ಸಂಸ್ಥೆಗಳ ಸ್ವತಂತ್ರ ಕಾರ್ಯನಿರ್ವಹಣೆಗೆ ಸಂಬಂಧಿಸಿದಂತೆ ಉದ್ಭವಿಸಿರುವ ಆತಂಕಕಾರಿ ವಿವಾದಗಳ ಹಿನ್ನೆಲೆಯಲ್ಲಿ ಈ ಆರೋಪಗಳನ್ನು ಪರಿಶೀಲಿಸಬೇಕಾಗಿದೆ.
ಪೆಗಾಸಸ್ ಗೂಢಚರ್ಯೆ ವಿವಾದದಲ್ಲಿ ವಿರೋಧ ಪಕ್ಷಗಳ ನಾಯಕರು, ಪತ್ರಕರ್ತರು ಹಾಗೂ ನಾಗರಿಕ ಸಮಾಜದ ಪ್ರತಿನಿಧಿಗಳ ಮೇಲೆ ಕಣ್ಗಾವಲು ಇರಿಸಲಾಗಿದೆ ಎಂಬ ಆರೋಪಗಳು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದವು. ಈ ಪ್ರಕರಣದ ತನಿಖೆಗಾಗಿ ಸುಪ್ರೀಂ ಕೋರ್ಟ್ ನೇಮಿಸಿದ್ದ ಸಮಿತಿಯು, ತನಿಖೆಗೆ ಕೇಂದ್ರ ಸರ್ಕಾರ ಸಮರ್ಪಕ ಸಹಕಾರ ನೀಡಿಲ್ಲ ಎಂದು ವರದಿ ಮಾಡಿತ್ತು.
2023ರಲ್ಲಿ ಹಲವು ವಿರೋಧ ಪಕ್ಷಗಳ ನಾಯಕರಿಗೆ, ಸರ್ಕಾರದ ಪ್ರಾಯೋಜಿತ ಗೂಢಚರ್ಯೆ ತಂತ್ರಾಂಶಗಳ ಮೂಲಕ ತಮ್ಮ ಸಂಪರ್ಕ ಸಾಧನಗಳ ಮೇಲೆ ದಾಳಿ ನಡೆಯುವ ಸಾಧ್ಯತೆಯಿದೆ ಎಂಬ ಎಚ್ಚರಿಕೆ ಸಂದೇಶಗಳು ಆ್ಯಪಲ್ ಸಂಸ್ಥೆಯಿಂದ ಬಂದಿದ್ದವು. ಇದೇ ವೇಳೆ, ಭಾರತೀಯ ಪತ್ರಕರ್ತರನ್ನು ಗುರಿಯಾಗಿಸಿಕೊಂಡು ಪೆಗಾಸಸ್ ಗೂಢಚರ್ಯೆ ತಂತ್ರಾಂಶದ ಮೂಲಕ ದಾಳಿ ನಡೆಸಿರುವ ಚಟುವಟಿಕೆಗಳನ್ನು ಆ್ಯಮ್ನೆಸ್ಟಿ ಇಂಟರ್ನ್ಯಾಷನಲ್ ಸಂಸ್ಥೆ ಗುರುತಿಸಿತ್ತು. ಆದರೆ ಈ ಎರಡೂ ಪ್ರಕರಣಗಳಲ್ಲಿ ದಾಳಿಗೆ ಆದೇಶ ನೀಡಿದವರು ಯಾರು ಎಂಬುದು ದೃಢಪಟ್ಟಿರಲಿಲ್ಲ. ಆದಾಗ್ಯೂ, ಇವು ಗಂಭೀರ ಪರಿಶೀಲನೆಗೆ ಒಳಪಡಬೇಕಾದ ವಿಚಾರಗಳಾಗಿವೆ.
ಈ ಆತಂಕಗಳಿಗೆ ಮತ್ತಷ್ಟು ಪುಷ್ಟಿ ನೀಡುವಂತೆ, ಬಿಜೆಪಿಯು ವಿರೋಧ ಪಕ್ಷಗಳ ನಾಯಕರ ದೂರವಾಣಿ ಕದ್ದಾಲಿಕೆ ನಡೆಸುವ ಮೊದಲು ತನ್ನದೇ ಪಕ್ಷದ ನಾಯಕರ ಮೇಲೆ ಈ ಪ್ರಯೋಗ ನಡೆಸಿತ್ತು ಎಂದು ಕರ್ನಾಟಕದ ಗೃಹ ಸಚಿವರಾದ ಶ್ರೀ ಪ್ರಿಯಾಂಕ್ ಖರ್ಗೆ ಅವರು ಇದೀಗ ಆರೋಪಿಸಿದ್ದಾರೆ. ಮುಖ್ಯಮಂತ್ರಿ ಶ್ರೀ ಡಿ.ಕೆ. ಶಿವಕುಮಾರ್ ಹಾಗೂ ತಮ್ಮನ್ನೂ ಒಳಗೊಂಡಂತೆ ವಿರೋಧ ಪಕ್ಷಗಳ ನಾಯಕರನ್ನು ಗುರಿಯಾಗಿಸಿಕೊಳ್ಳಲಾಗಿದೆ ಎಂದು ಅವರು ಹೇಳಿದ್ದಾರೆ. ಈ ಗಂಭೀರ ಆರೋಪಗಳ ಬಗ್ಗೆಯೂ ಸ್ವತಂತ್ರ ತನಿಖೆ ನಡೆಯಬೇಕಾಗಿದೆ.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಟೀಕಿಸುವ ಸಾಕ್ಷ್ಯಚಿತ್ರವನ್ನು ಬಿಬಿಸಿ ಪ್ರಸಾರ ಮಾಡಿದಾಗ, ಕೇಂದ್ರ ಸರ್ಕಾರ ಆ ಸಾಕ್ಷ್ಯಚಿತ್ರದ ವೀಕ್ಷಣೆಗೆ ನಿರ್ಬಂಧ ಹೇರಿತು. ನಂತರ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಬಿಬಿಸಿ ಕಚೇರಿಗಳಲ್ಲಿ ಶೋಧ ಕಾರ್ಯಾಚರಣೆ ನಡೆಸಿದರು.
ಮೀಡಿಯಾ ಒನ್ ಸುದ್ದಿವಾಹಿನಿಯ ಪ್ರಸಾರಕ್ಕೆ ನಿರ್ಬಂಧ ವಿಧಿಸಿದಾಗ, ಸುಪ್ರೀಂ ಕೋರ್ಟ್ ಮಧ್ಯಪ್ರವೇಶಿಸಿ ಪತ್ರಿಕಾ ಸ್ವಾತಂತ್ರ್ಯದ ಸಾಂವಿಧಾನಿಕ ಮಹತ್ವವನ್ನು ಪುನರುಚ್ಚರಿಸಿತು.
ರಾಜಕೀಯ ಪಕ್ಷಗಳಿಗೆ ಹರಿದುಬರುವ ದೇಣಿಗೆಗಳ ಮಾಹಿತಿಯನ್ನು ಸಾರ್ವಜನಿಕ ಪರಿಶೀಲನೆಯಿಂದ ಮರೆಮಾಚುತ್ತಿದ್ದ ಚುನಾವಣಾ ಬಾಂಡ್ ಯೋಜನೆಯನ್ನು ಸುಪ್ರೀಂ ಕೋರ್ಟ್ ಅಸಂವಿಧಾನಿಕ ಎಂದು ಘೋಷಿಸಿತು.
ಅದಾನಿ ಸಮೂಹವು ಎನ್ಡಿಟಿವಿ ಸುದ್ದಿಸಂಸ್ಥೆಯನ್ನು ಸ್ವಾಧೀನಪಡಿಸಿಕೊಂಡಾಗ, ಕಾರ್ಪೊರೇಟ್ ಸಂಸ್ಥೆಗಳ ಕೈಯಲ್ಲಿ ಮಾಧ್ಯಮಗಳ ಮಾಲೀಕತ್ವ ಕೇಂದ್ರೀಕರಣಗೊಳ್ಳುತ್ತಿರುವುದು ಹಾಗೂ ಪತ್ರಿಕೋದ್ಯಮದ ಸ್ವಾತಂತ್ರ್ಯಕ್ಕೆ ಎದುರಾಗಬಹುದಾದ ಅಪಾಯಗಳ ಕುರಿತು ಆತಂಕಗಳು ಮತ್ತಷ್ಟು ಹೆಚ್ಚಾದವು.
ಇವೆಲ್ಲವೂ ಪ್ರತ್ಯೇಕ ರಾಜಕೀಯ ವಿವಾದಗಳಷ್ಟೇ ಅಲ್ಲ. ಇವುಗಳನ್ನು ಒಟ್ಟಾಗಿ ಗಮನಿಸಿದಾಗ, ಪ್ರಭುತ್ವದ ಅಧಿಕಾರ, ಕಾರ್ಪೊರೇಟ್ ಪ್ರಭಾವ, ಸ್ವಾಯತ್ತ ಸಂಸ್ಥೆಗಳ ಸ್ವತಂತ್ರ ಕಾರ್ಯನಿರ್ವಹಣೆ ಹಾಗೂ ಭಾರತದ ನಾಗರಿಕರ ಮೂಲಭೂತ ಸ್ವಾತಂತ್ರ್ಯಗಳ ನಡುವಿನ ಸಂಬಂಧದ ಕುರಿತು ಗಂಭೀರ ಮತ್ತು ಆತಂಕಕಾರಿ ಪ್ರಶ್ನೆಗಳು ಉದ್ಭವಿಸುತ್ತವೆ.
ವಿರೋಧ ಪಕ್ಷಗಳು ದೇಶದ ಶತ್ರುಗಳಲ್ಲ, ಪತ್ರಕರ್ತರು ರಾಷ್ಟ್ರದ ವಿರೋಧಿಗಳಲ್ಲ. ಪ್ರಧಾನಮಂತ್ರಿಯನ್ನು ಪ್ರಶ್ನಿಸುವ ವ್ಯಕ್ತಿ ದೇಶವಿರೋಧಿ ಚಟುವಟಿಕೆಗಳಲ್ಲಿ ತೊಡಗಿದಂತಲ್ಲ ಎಂಬುದನ್ನು ಕೇಂದ್ರ ಸರ್ಕಾರ ಅರ್ಥಮಾಡಿಕೊಳ್ಳಬೇಕು.
ಶ್ರೀ ರಾಹುಲ್ ಗಾಂಧಿ ಅವರು ಸರ್ಕಾರವನ್ನು ಪ್ರಶ್ನಿಸಲು ತಾವು ಸದಾ ಸಿದ್ಧರಿದ್ದೇವೆ ಎಂಬುದನ್ನು ಹಲವು ಸಂದರ್ಭಗಳಲ್ಲಿ ಸಾಬೀತುಪಡಿಸಿದ್ದಾರೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಬಹಿರಂಗ ಚರ್ಚೆಗೆ ಮತ್ತೊಮ್ಮೆ ಸವಾಲು ಹಾಕಿರುವುದು ಇದಕ್ಕೆ ಇತ್ತೀಚಿನ ಉದಾಹರಣೆಯಾಗಿದೆ. ದೂರವಾಣಿ ಕದ್ದಾಲಿಕೆ, ಸರ್ಕಾರದ ಉತ್ತರದಾಯಿತ್ವ ಹಾಗೂ ಪ್ರಜಾಸತ್ತಾತ್ಮಕ ಸ್ವಾತಂತ್ರ್ಯಗಳಿಗೆ ಸಂಬಂಧಿಸಿದ ಗಂಭೀರ ಪ್ರಶ್ನೆಗಳಿಗೆ ಪ್ರಧಾನಮಂತ್ರಿಯವರು ಉತ್ತರಿಸಬೇಕು.
ತನ್ನ ಪ್ರಾಮಾಣಿಕತೆಯ ಬಗ್ಗೆ ವಿಶ್ವಾಸವಿರುವ ಸರ್ಕಾರವೆಂದೂ ತನ್ನನ್ನು ಪರಿಶೀಲನೆಗೆ ಒಡ್ಡಿಕೊಳ್ಳಲು ಹೆದರುವುದಿಲ್ಲ. ಪ್ರಧಾನಮಂತ್ರಿಗಳು ತಾವು ಸಮರ್ಥರಾಗಿದ್ದರೆ ಕಠಿಣ ಪ್ರಶ್ನೆಗಳಿಂದ ನುಣುಚಿಕೊಳ್ಳುವುದಿಲ್ಲ. ನೈಜ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಗೂಢಾಚರ್ಯೆಯ ಭಯ ಅಥವಾ ಸಾಂಸ್ಥಿಕ ಒತ್ತಡಗಳ ಮೂಲಕ ಭಿನ್ನಮತದ ಧ್ವನಿಯನ್ನು ಅಡಗಿಸಲು ಅವಕಾಶವಿರುವುದಿಲ್ಲ.
ಇತ್ತೀಚಿನ ದೂರವಾಣಿ ಕದ್ದಾಲಿಕೆ ಆರೋಪಗಳ ಕುರಿತು ಸ್ವತಂತ್ರ ತನಿಖೆ ನಡೆಸಲು ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳಬೇಕು. ಈ ಹಿಂದೆ ನಡೆದ ಕಣ್ಗಾವಲು ಮತ್ತು ಗೂಢಚರ್ಯೆ ಪ್ರಕರಣಗಳ ತನಿಖೆಗಳ ಪ್ರಸ್ತುತ ಸ್ಥಿತಿಗತಿಗಳನ್ನು ಸಾರ್ವಜನಿಕವಾಗಿ ಬಹಿರಂಗಪಡಿಸಬೇಕು. ಪತ್ರಕರ್ತರು, ರಾಜಕೀಯ ಪ್ರತಿನಿಧಿಗಳು ಹಾಗೂ ಸಾಮಾನ್ಯ ನಾಗರಿಕರ ಗೌಪ್ಯತೆ ಮತ್ತು ಸಾಂವಿಧಾನಿಕ ಹಕ್ಕುಗಳ ರಕ್ಷಣೆಗೆ ಇನ್ನಷ್ಟು ಬಲವಾದ ಸುರಕ್ಷತಾ ವ್ಯವಸ್ಥೆಗಳನ್ನು ರೂಪಿಸಬೇಕು ಎಂದು ನಾನು ಆಗ್ರಹಿಸುತ್ತೇನೆ.
ಪ್ರಧಾನಮಂತ್ರಿಯವರು ದೇಶದ ಜನತೆಗೆ ಉತ್ತರದಾಯಿಯೇ ಹೊರತು ಪ್ರಧಾನಿಯನ್ನು ಪ್ರಶ್ನಿಸಿದ್ದಕ್ಕಾಗಿ ಜನರು ಅವರಿಗೆ ಉತ್ತರ ನೀಡಬೇಕಾದ ಅಗತ್ಯವಿಲ್ಲ. -
Dr. G Parameshwara
@DrParameshwara
Four days have passed since Shri @RahulGandhi, the Leader of the Opposition in the Lok Sabha, made the serious allegation that his phone is being tapped. Yet, the Prime Minister and the Union Government have not offered a substantive explanation addressing this grave allegation. BJP spokespersons have resorted to personal attacks, but political attacks cannot substitute for credible answers.
When the Leader of the Opposition alleges that his phone is being tapped, it is not merely a question of his personal privacy. It raises a fundamental question about the health of our democracy and the accountability of those in power.
The serious allegations made by Shri Rahul Gandhi against the @narendramodi Government cannot be dismissed through political attacks or convenient silence. They demand an independent investigation and credible answers.
More importantly, these allegations must be examined against a deeply concerning pattern of controversies surrounding surveillance, press freedom and institutional independence over the past decade.
In the Pegasus controversy, allegations of surveillance against Opposition leaders, journalists and civil society members reached the Supreme Court. The Court-appointed committee subsequently reported that the Union Government had not cooperated with its inquiry.
In 2023, several Opposition leaders received Apple's warnings about possible state-sponsored spyware attacks. Amnesty International also identified Pegasus attack activity targeting Indian journalists. Neither finding established who ordered the attacks, but both demanded serious scrutiny.
Adding to these concerns, Karnataka Home Minister Shri Priyank Kharge has now alleged that the BJP first tested phone-tapping on its own leaders before targeting Opposition leaders, including Chief Minister Shri D.K. Shivakumar and himself. These serious allegations demand an independent investigation.
When the BBC aired a documentary critical of Prime Minister Modi, the Government blocked access to it, and Income Tax officials subsequently searched BBC offices.
When MediaOne faced broadcasting restrictions, the Supreme Court intervened and reaffirmed the constitutional importance of press freedom.
When the Electoral Bonds Scheme concealed political funding from public scrutiny, the Supreme Court declared it unconstitutional.
And when the Adani Group acquired NDTV, concerns about the concentration of corporate media ownership and the independence of journalism grew louder.
These are not isolated political controversies. Together, they raise disturbing questions about the relationship between state power, corporate influence, independent institutions and the fundamental freedoms of Indian citizens.
The BJP Government must understand that the Opposition is not an enemy of the nation. Journalists are not enemies of the state. And citizens who question their Prime Minister are not acting against India.
Shri Rahul Gandhi has repeatedly demonstrated his willingness to question the Government, including his renewed challenge to Prime Minister Modi for an open debate. The Prime Minister should respond to substantive questions on surveillance, accountability and democratic freedoms.
A confident Government does not fear scrutiny. A strong Prime Minister does not shy away from difficult questions. And a democracy worthy of its name does not allow the fear of surveillance or institutional pressure to silence dissent.
I call upon the Union Government to ensure an independent investigation into the latest allegations, disclose the status of earlier surveillance inquiries and strengthen protections for journalists, political representatives and ordinary citizens.
The Prime Minister is accountable to the people. The people are not accountable to the Prime Minister for questioning him. -
Dr. G Parameshwara
@DrParameshwara
Today, along with Lok Sabha Speaker Shri Om Birla and Chief Minister Shri D.K. Shivakumar, I inaugurated the first Conference of Commonwealth Women Parliamentarians (CWP) India Region at the Banquet Hall, Vidhana Soudha.
Rajya Sabha Deputy Chairman Shri Harivansh; Karnataka Legislative Assembly Speaker Shri G.S. Patil; CWP India Region Chairperson Dr. D. Purandeswari; Karnataka Legislative Council Chairman Shri Saleem Ahmed; Deputy Chairperson Dr. Umashree; Karnataka Legislative Assembly Deputy Speaker Shri Mankal Vaidya, and several other dignitaries were present.
ಇಂದು ವಿಧಾನಸಭೆಯ ಬ್ಯಾಂಕ್ವೆಟ್ ಹಾಲ್ನಲ್ಲಿ ನಡೆದ ಕಾಮನ್ವೆಲ್ತ್ ಮಹಿಳಾ ಸಂಸದೀಯಪಟುಗಳ ಭಾರತ ಪ್ರಾದೇಶಿಕ ವಿಭಾಗದ ಪ್ರಥಮ ಸಮ್ಮೇಳನವನ್ನು ಲೋಕಸಭಾಧ್ಯಕ್ಷರಾದ ಶ್ರೀ ಓಂ ಬಿರ್ಲಾ ಹಾಗೂ ಮುಖ್ಯಮಂತ್ರಿಗಳಾದ ಶ್ರೀ ಡಿ.ಕೆ. ಶಿವಕುಮಾರ್ ಅವರ ಜೊತೆಗೂಡಿ ಉದ್ಘಾಟಿಸಿದೆ.
ಈ ಸಂದರ್ಭದಲ್ಲಿ ರಾಜ್ಯಸಭೆಯ ಉಪಸಭಾಪತಿಗಳಾದ ಹರಿವಂಶ್, ಕರ್ನಾಟಕ ವಿಧಾನಸಭಾಧ್ಯಕ್ಷರಾದ ಜಿ.ಎಸ್. ಪಾಟೀಲ್, ಸಿಡಬ್ಲ್ಯೂಪಿ ಭಾರತ ವಿಭಾಗದ ಅಧ್ಯಕ್ಷರಾದ ಡಾ. ಡಿ. ಪುರಂದೇಶ್ವರಿ, ಕರ್ನಾಟಕ ವಿಧಾನಪರಿಷತ್ನ ಅಧ್ಯಕ್ಷರಾದ ಸಲೀಂ ಅಹ್ಮದ್, ಉಪಸಭಾಪತಿಗಳಾದ ಉಮಾಶ್ರೀ, ವಿಧಾನಸಭೆಯ ಉಪ ಸಭಾಪತಿಗಳಾದ ಮಂಕಾಳ ವೈದ್ಯ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು. -
Dr. G Parameshwara
@DrParameshwara
ಸೋಮವಾರ ರಾಷ್ಟ್ರೀಯ ಪತ್ರಿಕಾ ದಿನಾಚರಣೆಯ ಅಂಗವಾಗಿ ನಡೆದ "ಪತ್ರಿಕೋದ್ಯಮ: ಜನಪ್ರಿಯತೆಯೇ ಅಥವಾ ಜವಾಬ್ದಾರಿಯುತವೇ?" ವಿಷಯದ ಕುರಿತ ವಿಚಾರ ಸಂಕಿರಣ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದೆ.
ಈ ಕುರಿತಾದ ಪತ್ರಿಕಾ ವರದಿಗಳು ಹೀಗಿವೆ.. -
Dr. G Parameshwara
@DrParameshwara
Remembering Punjab Kesari Lala Lajpat Rai with deep respect and gratitude on his death anniversary.
His life was marked by extraordinary courage, deep love for the country and an unshakable commitment to India's freedom. He stood up to colonial oppression, even at great personal cost, and remained devoted to the nation until his last breath.
My heartfelt tributes to this great son of India, whose contribution to our freedom struggle will forever be remembered. -
Dr. G Parameshwara
@DrParameshwara
ಗೃಹ ಹಾಗೂ ಐಟಿ/ಬಿಟಿ ಸಚಿವರಾದ ಪ್ರಿಯಾಂಕ್ ಖರ್ಗೆ ಮತ್ತು ಶಾಸಕರಾದ ಶರತ್ ಬಚ್ಚೇಗೌಡ ಅವರು ಇಂದು ನನ್ನನ್ನು ಸದಾಶಿವನಗರದ ಗೃಹಕಚೇರಿಯಲ್ಲಿ ಭೇಟಿ ಮಾಡಿ, ನಾಳೆಯಿಂದ ಆರಂಭವಾಗಲಿರುವ ಬೆಂಗಳೂರು ಟೆಕ್ ಸಮ್ಮಿಟ್–2026 ಕಾರ್ಯಕ್ರಮಕ್ಕೆ ಆಗಮಿಸುವಂತೆ ಆತ್ಮೀಯವಾಗಿ ಆಹ್ವಾನಿಸಿದರು.
-
Dr. G Parameshwara
@DrParameshwara
ತುಮಕೂರು ಇನ್ನು ಸಣ್ಣ ನಗರವಾಗಿ ಉಳಿಯದೆ, ಕೈಗಾರಿಕೆ, ಶಿಕ್ಷಣ, ಆಧುನಿಕ ಮೂಲಸೌಕರ್ಯ ಹಾಗೂ ಸಾಂಸ್ಕೃತಿಕ ಹಿರಿಮೆಯೊಂದಿಗೆ ರಾಜ್ಯದ ಪ್ರಮುಖ ನಗರವಾಗಿ ಬೆಳೆಯಬೇಕು ಎಂಬುದು ನನ್ನ ಆಶಯವಾಗಿದೆ. ಈ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಹಲವು ಮಹತ್ವದ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗಿದ್ದು, ಅಭಿವೃದ್ಧಿಗೆ ಹೊಸ ಆಯಾಮ ನೀಡುವ ಪ್ರಯತ್ನಗಳು ಮುಂದುವರಿದಿವೆ.
ಪರಮಪೂಜ್ಯ ಶ್ರೀ ಶಿವಕುಮಾರ ಮಹಾಸ್ವಾಮೀಜಿಗಳ ಹೆಸರಿನ ವೃತ್ತದಲ್ಲಿ ₹7 ಕೋಟಿ ವೆಚ್ಚದಲ್ಲಿ ಅತ್ಯಾಧುನಿಕ ಬೃಹತ್ ಎಲ್ಇಡಿ ಪರದೆಯನ್ನು ನಿರ್ಮಿಸಲಾಗಿದೆ. ದೇಶದ ಜಿಲ್ಲಾ ಕೇಂದ್ರಗಳಲ್ಲೇ ವಿಶಿಷ್ಟವಾದ ಈ ವ್ಯವಸ್ಥೆಯು ನಗರದ ಸೌಂದರ್ಯವನ್ನು ಹೆಚ್ಚಿಸುವುದರ ಜೊತೆಗೆ ತುಮಕೂರನ್ನು ಮತ್ತಷ್ಟು ಆಧುನಿಕ ನಗರವನ್ನಾಗಿ ರೂಪಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗಿದೆ.
ಕೈಗಾರಿಕಾ ಕ್ಷೇತ್ರದಲ್ಲಿಯೂ ತುಮಕೂರು ಹೊಸ ಅವಕಾಶಗಳತ್ತ ಮುನ್ನಡೆಯುತ್ತಿದೆ. ವಸಂತನರಸಾಪುರದಲ್ಲಿ ಸುಮಾರು 20 ಸಾವಿರ ಎಕರೆ ಪ್ರದೇಶದಲ್ಲಿ ಏಷ್ಯಾದಲ್ಲೇ ಅತಿದೊಡ್ಡ ಕೈಗಾರಿಕಾ ಹಬ್ ನಿರ್ಮಿಸುವ ಪ್ರಯತ್ನ ನಡೆಯುತ್ತಿದೆ. ಈಗಾಗಲೇ 200ಕ್ಕೂ ಹೆಚ್ಚು ಕೈಗಾರಿಕೆಗಳು ಜಿಲ್ಲೆಗೆ ಬಂದಿದ್ದು, ಗ್ರೀನ್ ಹೈಡ್ರೋಜನ್ ಘಟಕ ಹಾಗೂ ಡೇಟಾ ಸೆಂಟರ್ ಸ್ಥಾಪನೆಗೆ ₹80 ಸಾವಿರ ಕೋಟಿ ಹೂಡಿಕೆಯ ಪ್ರಸ್ತಾವನೆ ಬಂದಿದೆ. ಇದರಿಂದ ಸುಮಾರು 30 ಸಾವಿರ ಉದ್ಯೋಗಾವಕಾಶಗಳು ಸೃಷ್ಟಿಯಾಗಲಿದೆ.
ಬೆಂಗಳೂರಿಗೆ ಸಮೀಪದಲ್ಲಿರುವ ತುಮಕೂರಿಗೆ ಅಪಾರ ಅಭಿವೃದ್ಧಿ ಅವಕಾಶಗಳಿವೆ. ಈಗಾಗಲೇ ಉತ್ತಮ ರಸ್ತೆ ಸಂಪರ್ಕದಿಂದ ಎರಡೂ ನಗರಗಳು ಹತ್ತಿರವಾಗಿದ್ದು, ಮುಂದಿನ ದಿನಗಳಲ್ಲಿ ಸಂಪರ್ಕ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸಿ, ಜಿಲ್ಲೆಯ ಯುವಜನರಿಗೆ ಶಿಕ್ಷಣ, ಕೈಗಾರಿಕೆ ಹಾಗೂ ಉದ್ಯೋಗ ಕ್ಷೇತ್ರಗಳಲ್ಲಿ ಹೆಚ್ಚಿನ ಅವಕಾಶಗಳನ್ನು ಕಲ್ಪಿಸುವುದು ನಮ್ಮ ಆಶಯವಾಗಿದೆ.
ಅಭಿವೃದ್ಧಿಯ ಜೊತೆಗೆ ತುಮಕೂರಿನ ಸಾಂಸ್ಕೃತಿಕ ಹಿರಿಮೆಯನ್ನು ಹೆಚ್ಚಿಸುವ ಪ್ರಯತ್ನಗಳೂ ಮುಂದುವರಿದಿವೆ. ಕಳೆದ ಮೂರು ವರ್ಷಗಳಿಂದ ಅದ್ಧೂರಿಯಾಗಿ ಆಯೋಜಿಸುತ್ತಿರುವ ತುಮಕೂರು ದಸರಾ, ಇಂದು ಲಕ್ಷಾಂತರ ಜನರನ್ನು ಆಕರ್ಷಿಸುವ ಬೃಹತ್ ಸಾಂಸ್ಕೃತಿಕ ಮಹೋತ್ಸವವಾಗಿ ಬೆಳೆದಿದೆ. ಈ ಬಾರಿ ಸುಮಾರು 20 ಲಕ್ಷ ಜನರು ದಸರಾ ಮಹೋತ್ಸವವನ್ನು ವೀಕ್ಷಿಸಿದ್ದಾರೆ ಎಂಬ ಅಂದಾಜಿದೆ.
ತುಮಕೂರು ಜಿಲ್ಲೆಯ ಜನರ ಸಹಕಾರ ಮತ್ತು ಆಶೀರ್ವಾದದೊಂದಿಗೆ ಈ ಅಭಿವೃದ್ಧಿಯ ಪ್ರಯತ್ನಗಳನ್ನು ಮತ್ತಷ್ಟು ಮುಂದುವರಿಸಿ, ನಮ್ಮ ಜಿಲ್ಲೆಗೆ ಉತ್ತಮ ಭವಿಷ್ಯವನ್ನು ರೂಪಿಸುವ ಸಂಕಲ್ಪ ನಮ್ಮದಾಗಿದೆ.
Dr. G Parameshwara
@DrParameshwara
My vision is for Tumakuru to grow into one of Karnataka’s leading cities, driven by industry, education, modern infrastructure and a strong cultural identity.
Several major initiatives are already taking shape. A ₹7 crore state-of-the-art LED display system has been developed at the circle named after Sri Shivakumara Mahaswamiji, adding a new digital landmark to the city.
Tumakuru is also emerging as a major industrial destination. At Vasanthanarasapura, efforts are under way to develop an industrial hub across nearly 20,000 acres. More than 200 industries have already come to the district, while investment proposals worth ₹80,000 crore have been received for a Green Hydrogen plant and a Data Centre, with the potential to create around 30,000 jobs.
With its proximity to Bengaluru and strong road connectivity, Tumakuru has enormous potential. Our focus is to strengthen connectivity further and create more opportunities for local youth in education, industry and employment.
Alongside development, we are also building Tumakuru’s cultural profile. Tumakuru Dasara, which we have celebrated on a grand scale over the past three years, has grown into a major cultural festival attracting lakhs of people. This year, an estimated 20 lakh people witnessed the celebrations.
With the support and blessings of the people of Tumakuru, we will continue working to build a stronger, more modern and prosperous future for our district. -
Dr. G Parameshwara
@DrParameshwara
ಜನರ ಸಂಕಷ್ಟಗಳಿಗೆ ಕಿವಿಯಾಗುವುದು, ಅವರ ನೋವು-ನಲಿವುಗಳಿಗೆ ಸ್ಪಂದಿಸುವುದು ಹಾಗೂ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವುದೇ ಜನಸೇವೆಯ ನಿಜವಾದ ಆಶಯ. ಈ ಉದ್ದೇಶದೊಂದಿಗೆ ಕೊರಟಗೆರೆಯಲ್ಲಿ ‘ಪ್ರಜಾ ಸೇವಾ ದಿನ’ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ನವೆಂಬರ್ 21ರಂದು ಕೊರಟಗೆರೆ ನಗರದ ಜೂನಿಯರ್ ಕಾಲೇಜು ಮೈದಾನದಲ್ಲಿ ನಡೆಯಲಿರುವ ಈ ಕಾರ್ಯಕ್ರಮವು ಸಾರ್ವಜನಿಕರು ತಮ್ಮ ಅಹವಾಲುಗಳನ್ನು ನೇರವಾಗಿ ಸಲ್ಲಿಸಲು ಹಾಗೂ ಸರ್ಕಾರದ ವಿವಿಧ ಸೇವೆಗಳ ಪ್ರಯೋಜನ ಪಡೆಯಲು ಸಹಕಾರಿಯಾಗಲಿದೆ.
ಜನರ ಮುಖದಲ್ಲಿ ನೆಮ್ಮದಿಯ ನಗು ಮೂಡಬೇಕು, ಪ್ರತಿಯೊಬ್ಬರಿಗೂ ನ್ಯಾಯಸಮ್ಮತ ಸ್ಪಂದನೆ ದೊರೆಯಬೇಕು ಎಂಬ ಕಾಳಜಿಯೊಂದಿಗೆ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಕೊರಟಗೆರೆಯ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಈ ಜನಸೇವೆಯ ಪ್ರಯತ್ನದ ಭಾಗವಾಗಬೇಕೆಂದು ಕೋರುತ್ತೇನೆ.
Listening to people’s concerns, responding to their difficulties and helping resolve their problems is the true spirit of public service. With this objective, 'Praja Seva Day' has been organised in Koratagere, Tumakuru.
The programme will be held on November 21 at Junior College Ground, Koratagere, providing an opportunity for the public to directly submit their grievances and access various Government services.
This initiative is aimed at ensuring that people receive a fair and timely response to their concerns and return with a sense of relief. I request the people of Koratagere to participate in large numbers and be part of this public-service initiative. -
Dr. G Parameshwara
@DrParameshwara
ತುಮಕೂರು ಜಿಲ್ಲೆಯ ಸಮಗ್ರ ಅಭಿವೃದ್ಧಿಯೇ ನನ್ನ ಪ್ರಮುಖ ಆದ್ಯತೆಯಾಗಿದೆ. ಶಿಕ್ಷಣ, ಕೈಗಾರಿಕೆ, ಸಾರಿಗೆ ಮತ್ತು ಮೂಲಸೌಕರ್ಯಗಳ ಅಭಿವೃದ್ಧಿಯ ಮೂಲಕ ಜಿಲ್ಲೆಯನ್ನು ಮತ್ತಷ್ಟು ಮುನ್ನಡೆಸಲು ನಿರಂತರವಾಗಿ ಶ್ರಮಿಸುತ್ತಿದ್ದೇನೆ.
ಬೆಂಗಳೂರಿಗೆ ಸಮೀಪದಲ್ಲಿರುವ ತುಮಕೂರಿಗೆ ಅಪಾರ ಅವಕಾಶಗಳಿವೆ. ಈ ಅನುಕೂಲವನ್ನು ಸದ್ಬಳಕೆ ಮಾಡಿಕೊಂಡು, ಬೆಂಗಳೂರಿನೊಂದಿಗಿನ ಸಂಪರ್ಕವನ್ನು ಮತ್ತಷ್ಟು ಬಲಪಡಿಸುವ ಮೂಲಕ ಹೆಚ್ಚಿನ ಬಂಡವಾಳ ಹೂಡಿಕೆಗಳನ್ನು ಆಕರ್ಷಿಸಬೇಕಿದೆ. ವಿಶೇಷವಾಗಿ ಜಿಲ್ಲೆಯ ಯುವಜನರಿಗೆ ಉದ್ಯೋಗಾವಕಾಶಗಳನ್ನು ಸೃಷ್ಟಿಸಿ, ಉತ್ತಮ ಭವಿಷ್ಯವನ್ನು ಕಲ್ಪಿಸುವುದು ನನ್ನ ಆಶಯವಾಗಿದೆ.
ತುಮಕೂರು ಇನ್ನು ಸಣ್ಣ ನಗರವಾಗಿ ಉಳಿಯದೆ, ಆಧುನಿಕ ಮೂಲಸೌಕರ್ಯಗಳೊಂದಿಗೆ ಅಭಿವೃದ್ಧಿ ಹೊಂದಿದ ಪ್ರಮುಖ ನಗರವಾಗಿ ಬೆಳೆಯಬೇಕು. ಈ ನಿಟ್ಟಿನಲ್ಲಿ ಜಿಲ್ಲೆಯ ಜನರ ಸಹಕಾರ ಮತ್ತು ಆಶೀರ್ವಾದದೊಂದಿಗೆ ನಮ್ಮ ಪ್ರಯತ್ನಗಳು ಮುಂದುವರಿಯಲಿವೆ.This media couldn't be displayed. See it on the original post. -
Dr. G Parameshwara
@DrParameshwara
ತುಮಕೂರಿನ ಸೌಂದರ್ಯಕ್ಕೆ ತಂತ್ರಜ್ಞಾನದ ಹೊಸ ಸ್ಪರ್ಶ!
ತುಮಕೂರಿನ ಪರಮಪೂಜ್ಯ ಶ್ರೀ ಶಿವಕುಮಾರ ಮಹಾಸ್ವಾಮೀಜಿಗಳ ಹೆಸರಿನ ವೃತ್ತದಲ್ಲಿ ಅತ್ಯಾಧುನಿಕ ಎಲೆಕ್ಟ್ರಾನಿಕ್ ಡಿಸ್ಪ್ಲೇ ವ್ಯವಸ್ಥೆಯನ್ನು ನಿರ್ಮಿಸುವ ಮೂಲಕ ನಗರದ ಸೌಂದರ್ಯಕ್ಕೆ ಹೊಸ ಮೆರುಗು ನೀಡಲಾಗಿದೆ.
ದೇಶದ ಯಾವುದೇ ಜಿಲ್ಲಾ ಕೇಂದ್ರದಲ್ಲಿ ಇಲ್ಲದಂತಹ ಬೃಹತ್ ಡಿಜಿಟಲ್ ಡಿಸ್ಪ್ಲೇ ವ್ಯವಸ್ಥೆಯೊಂದಿಗೆ ತುಮಕೂರು ಹೊಸ ಇತಿಹಾಸ ಸೃಷ್ಟಿಸಿದೆ. ಇದು ಕೇವಲ ತಂತ್ರಜ್ಞಾನದ ಅಳವಡಿಕೆಯಲ್ಲ, ಬದಲಾಗುತ್ತಿರುವ ತುಮಕೂರಿನ ಆಧುನಿಕ ಅಭಿವೃದ್ಧಿಯ ಪ್ರತೀಕವೂ ಹೌದು.
ಪೂಜ್ಯರ ಹೆಸರಿನ ವೃತ್ತಕ್ಕೆ ಹೊಸ ಕಳೆ ನೀಡಿರುವ ಈ ವಿನೂತನ ವ್ಯವಸ್ಥೆ ತುಮಕೂರಿನ ಜನತೆಗೆ ಹೆಮ್ಮೆಯ ಕೊಡುಗೆಯಾಗಿದೆ.This media couldn't be displayed. See it on the original post. -
Dr. G Parameshwara
@DrParameshwara
ಪತ್ರಿಕೋದ್ಯಮದಲ್ಲಿ ಜನಪ್ರಿಯತೆ ಎಷ್ಟು ಮುಖ್ಯವೋ, ಜವಾಬ್ದಾರಿಯೂ ಅಷ್ಟೇ ಮುಖ್ಯ. ಜನಪ್ರಿಯತೆಗಾಗಿ ಸತ್ಯವನ್ನು ಕಡೆಗಣಿಸುವಂತಾಗಬಾರದು. ಪತ್ರಕರ್ತರ ಬರಹದಲ್ಲಿ ಸತ್ಯನಿಷ್ಠೆ, ಸ್ವಂತಿಕೆ ಹಾಗೂ ಆಳವಾದ ವಿಶ್ಲೇಷಣೆ ಇರಬೇಕು. ಪತ್ರಿಕೋದ್ಯಮ ಸಮಾಜದ ಸಮಸ್ಯೆಗಳಿಗೆ ಧ್ವನಿಯಾಗುವುದರ ಜೊತೆಗೆ ದೇಶದ ಅಭಿವೃದ್ಧಿ ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳನ್ನು ಎತ್ತಿಹಿಡಿಯುವ ಜವಾಬ್ದಾರಿಯನ್ನು ನಿರ್ವಹಿಸಬೇಕು.
‘ಪತ್ರಿಕಾ ಸ್ವಾತಂತ್ರ್ಯದ ದುರುಪಯೋಗದಿಂದ ಅಪಾಯಗಳಿದ್ದರೂ, ನಿಯಂತ್ರಿತ ಅಥವಾ ನಿರ್ಬಂಧಿತ ಪತ್ರಿಕೆಗಳಿಗಿಂತ ಸಂಪೂರ್ಣ ಸ್ವತಂತ್ರ ಪತ್ರಿಕಾ ವ್ಯವಸ್ಥೆಯೇ ನನಗೆ ಹೆಚ್ಚು ಒಪ್ಪಿಗೆಯಾಗುತ್ತದೆ’ ಎಂಬ ನೆಹರು ಅವರ ಮಾತುಗಳು, ಪತ್ರಿಕಾ ಸ್ವಾತಂತ್ರ್ಯದ ಕುರಿತು ನೆಹರು ಅವರಿಗಿದ್ದ ದೂರದೃಷ್ಟಿಯನ್ನು ತಿಳಿಸುತ್ತದೆ.
ಪತ್ರಿಕೋದ್ಯಮವನ್ನು ಪ್ರಜಾಪ್ರಭುತ್ವದ ನಾಲ್ಕನೇ ಸ್ತಂಭವೆಂದು ಕರೆಯಲಾಗುತ್ತದೆ. ಈ ಸ್ತಂಭಕ್ಕೆ ಎಷ್ಟು ಸ್ವಾತಂತ್ರ್ಯ ಮತ್ತು ಶಕ್ತಿ ಇರಬೇಕು, ಅದು ಸಮಾಜಕ್ಕೆ, ದೇಶಕ್ಕೆ ಹಾಗೂ ಆಡಳಿತ ವ್ಯವಸ್ಥೆಗೆ ಯಾವ ರೀತಿಯಲ್ಲಿ ನೆರವಾಗಬೇಕು ಎಂಬುದನ್ನು ನೆಹರು ಅವರು ಆಳವಾಗಿ ಅರ್ಥೈಸಿಕೊಂಡಿದ್ದರು. ಪತ್ರಿಕಾ ಸ್ವಾತಂತ್ರ್ಯ ಎನ್ನುವುದು ಕೇವಲ ಘೋಷಣೆಯಲ್ಲ, ಅದು ಪ್ರಜಾಪ್ರಭುತ್ವದ ಪ್ರಕ್ರಿಯೆಯ ಅವಿಭಾಜ್ಯ ಅಂಗ ಎಂಬುದನ್ನು ಅವರು ಸ್ಪಷ್ಟಪಡಿಸಿದ್ದರು.
ಸ್ವತಂತ್ರ ಮತ್ತು ನಿರ್ಭೀತ ಪತ್ರಿಕೋದ್ಯಮವನ್ನು ಉಳಿಸಿ ಬೆಳೆಸುವ ಉದ್ದೇಶದಿಂದ 1966ರ ನವೆಂಬರ್ 16ರಂದು ಭಾರತೀಯ ಪತ್ರಿಕಾ ಮಂಡಳಿ ಕಾರ್ಯಾರಂಭ ಮಾಡಿತು. ಈ ಐತಿಹಾಸಿಕ ದಿನವನ್ನು ರಾಷ್ಟ್ರೀಯ ಪತ್ರಿಕಾ ದಿನವನ್ನಾಗಿ ಆಚರಿಸಲಾಗುತ್ತಿದೆ.
ಸ್ವಾತಂತ್ರ್ಯಪೂರ್ವ ಹಾಗೂ ಸ್ವಾತಂತ್ರ್ಯಾನಂತರದ ಪತ್ರಿಕೋದ್ಯಮದ ಪಯಣವನ್ನು ಅವಲೋಕಿಸುವ ಅಗತ್ಯವಿದೆ. ದೇಶದಲ್ಲಿ ಪತ್ರಿಕಾ ಸ್ವಾತಂತ್ರ್ಯಕ್ಕೆ ನೀಡಿರುವ ಮಹತ್ವವನ್ನು ಗಮನಿಸಿದಾಗ, ಈ ಸ್ವಾತಂತ್ರ್ಯವನ್ನು ರಾಷ್ಟ್ರ ನಿರ್ಮಾಣಕ್ಕೆ ಎಷ್ಟರಮಟ್ಟಿಗೆ ಬಳಸಿಕೊಳ್ಳಲಾಗಿದೆ ಎಂಬ ಪ್ರಶ್ನೆ ಉದ್ಭವಿಸುತ್ತದೆ.
ಪತ್ರಿಕಾ ಸ್ವಾತಂತ್ರ್ಯ ದೊರೆತಿದೆ ಎಂಬುದಷ್ಟೇ ಮುಖ್ಯವಲ್ಲ. ಆ ಸ್ವಾತಂತ್ರ್ಯದ ಮೂಲಕ ದೇಶದ ಬೆಳವಣಿಗೆಗೆ ಪತ್ರಿಕೋದ್ಯಮ ನೀಡಿರುವ ಕೊಡುಗೆ ಏನು ಎಂಬುದನ್ನೂ ಪರಿಶೀಲಿಸಬೇಕಿದೆ. ಸಮಾನತೆ, ಹಕ್ಕುಗಳು ಮತ್ತು ಅಭಿವೃದ್ಧಿಯ ಕುರಿತು ನಾವು ನಿರಂತರವಾಗಿ ಮಾತನಾಡುತ್ತೇವೆ. ಆದರೆ ಈ ಕ್ಷೇತ್ರಗಳಲ್ಲಿ ಸಮಾಜವನ್ನು ಬದಲಾಯಿಸಲು ಪತ್ರಿಕೆಗಳು ಎಷ್ಟರಮಟ್ಟಿಗೆ ಸಹಾಯ ಮಾಡಿವೆ ಎಂಬುದನ್ನು ವಿಶ್ಲೇಷಿಸಬೇಕು. ಅಗತ್ಯವಿರುವ ಕಡೆಗಳಲ್ಲಿ ನಮ್ಮ ಕಾರ್ಯವೈಖರಿಯನ್ನು ತಿದ್ದಿಕೊಳ್ಳುವ ಮನೋಭಾವವೂ ಇರಬೇಕು.
*ಪತ್ರಕರ್ತರ ಬರಹಕ್ಕೆ ಸಮಾಜವನ್ನು ಪ್ರಭಾವಿಸುವ ಶಕ್ತಿಯಿದೆ :* 1970ರ ದಶಕದಲ್ಲಿ ನಾನು ವಿದ್ಯಾರ್ಥಿಯಾಗಿದ್ದ ಸಂದರ್ಭದಲ್ಲಿ ಪ್ರಕಟವಾದ ಲೇಖನವೊಂದರ ಕಾರಣದಿಂದ ಪತ್ರಿಕೆಯೊಂದರ ಕಚೇರಿಗೆ ಬೆಂಕಿ ಹಚ್ಚಲಾಗಿದ್ದ ಘಟನೆ ನೆನಪಿದೆ.
ಒಂದು ಲೇಖನ ಸಮಾಜದಲ್ಲಿ ಎಂತಹ ಪ್ರತಿಕ್ರಿಯೆ ಉಂಟುಮಾಡಬಹುದು ಎಂಬುದಕ್ಕೆ ಈ ಘಟನೆ ಉದಾಹರಣೆಯಾಗಿದೆ. ಪತ್ರಕರ್ತರ ಬರಹಗಳು ಅತ್ಯಂತ ಶಕ್ತಿಯುತವಾಗಿರುತ್ತವೆ. ಅವುಗಳನ್ನು ಓದುಗರು ಸಕಾರಾತ್ಮಕವಾಗಿಯೂ ಸ್ವೀಕರಿಸಬಹುದು ಅಥವಾ ತಪ್ಪಾಗಿ ಅರ್ಥೈಸಿಕೊಂಡು ವಿನಾಶಕಾರಿ ಪ್ರತಿಕ್ರಿಯೆಯನ್ನೂ ವ್ಯಕ್ತಪಡಿಸಬಹುದು. ಹೀಗಾಗಿ ಯಾವುದೇ ಲೇಖನ ಬರೆಯುವಾಗ ಅದರ ಹಿಂದಿನ ಚಿಂತನೆ, ಉದ್ದೇಶ ಹಾಗೂ ಸಮಾಜದ ಮೇಲೆ ಉಂಟಾಗಬಹುದಾದ ಪರಿಣಾಮಗಳ ಕುರಿತು ಪತ್ರಕರ್ತರು ಗಂಭೀರವಾಗಿ ಯೋಚಿಸಬೇಕು.
ವರದಿಗಾರಿಕೆಗೆ ಸೀಮಿತವಾಗದೆ ವಿಶ್ಲೇಷಣಾತ್ಮಕ ದೃಷ್ಟಿಕೋನ ಬೆಳೆಸಿಕೊಳ್ಳಿ : ಇತ್ತೀಚಿನ ದಿನಗಳಲ್ಲಿ ಸ್ವಂತ ಚಿಂತನೆಯೊಂದಿಗೆ ಲೇಖನಗಳನ್ನು ಬರೆಯುವ ಪ್ರವೃತ್ತಿ ಕಡಿಮೆಯಾಗುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ತಂತ್ರಜ್ಞಾನದ ಪ್ರಗತಿಯಿಂದಾಗಿ ಕೀಬೋರ್ಡ್ ಮತ್ತು ಮೊಬೈಲ್ ಫೋನ್ಗಳ ಮೂಲಕವೇ ಬಹುತೇಕ ಪತ್ರಿಕಾ ಕೆಲಸಗಳು ನಡೆಯುತ್ತಿವೆ. ಆದರೆ ಈ ಬದಲಾವಣೆಗಳ ನಡುವೆ ಸ್ವಂತ ಬರವಣಿಗೆ, ಆಳವಾದ ಅಧ್ಯಯನ ಮತ್ತು ವಿಶ್ಲೇಷಣೆಗೆ ನೀಡುವ ಪ್ರಾಮುಖ್ಯತೆ ಕಡಿಮೆಯಾಗಬಾರದು.
ಪತ್ರಿಕೋದ್ಯಮದಲ್ಲಿ ‘ಕಾಪಿ ಆ್ಯಂಡ್ ಪೇಸ್ಟ್’ ಸಂಸ್ಕೃತಿ ಹೆಚ್ಚಾಗುತ್ತಿದೆ. ಮತ್ತೊಬ್ಬರ ಬರಹವನ್ನು ನಕಲು ಮಾಡುವುದರಿಂದ ಪತ್ರಕರ್ತರ ಸ್ವಂತಿಕೆ ಬೆಳೆಯುವುದಿಲ್ಲ. ಪತ್ರಕರ್ತರ ಪ್ರತಿಭೆ ಅವರ ಸ್ವಂತ ಚಿಂತನೆ, ವಿಷಯದ ಗ್ರಹಿಕೆ ಹಾಗೂ ವಿಶ್ಲೇಷಣಾ ಸಾಮರ್ಥ್ಯದಲ್ಲಿ ವ್ಯಕ್ತವಾಗಬೇಕು. ಸ್ವಂತಿಕೆ ಇಲ್ಲದೆ ಒಬ್ಬ ಯಶಸ್ವಿ ಪತ್ರಕರ್ತನಾಗಿ ರೂಪುಗೊಳ್ಳುವುದು ಕಷ್ಟ.
ಪತ್ರಕರ್ತರ ಕೆಲಸ ಕೇವಲ ಘಟನೆಯನ್ನು ವರದಿ ಮಾಡುವುದಕ್ಕೆ ಸೀಮಿತವಾಗಬಾರದು. ವಿಷಯವನ್ನು ಅರ್ಥೈಸಿಕೊಳ್ಳಬೇಕು, ಅಧ್ಯಯನ ಮಾಡಬೇಕು, ಅದರ ಹಿನ್ನೆಲೆಯನ್ನು ವಿಶ್ಲೇಷಿಸಬೇಕು. ತಾವು ಬರೆದ ಲೇಖನ ಸಮಾಜದ ಮೇಲೆ ಯಾವ ರೀತಿಯ ಪರಿಣಾಮ ಬೀರುತ್ತದೆ ಎಂಬುದನ್ನೂ ಗಮನಿಸಬೇಕು. ಪತ್ರಿಕೋದ್ಯಮವನ್ನು ವಿದ್ಯಾರ್ಥಿಗಳು ಎಷ್ಟು ಗಂಭೀರವಾಗಿ ಪರಿಗಣಿಸುತ್ತಿದ್ದಾರೆ ಹಾಗೂ ಅದಕ್ಕಾಗಿ ತಮ್ಮನ್ನು ಎಷ್ಟರಮಟ್ಟಿಗೆ ಸಿದ್ಧಪಡಿಸಿಕೊಳ್ಳುತ್ತಿದ್ದಾರೆ ಎಂಬುದು ಮುಖ್ಯ.
ಪಾಶ್ಚಿಮಾತ್ಯ ಮಾಧ್ಯಮಗಳಲ್ಲಿನ ವಿಶ್ಲೇಷಣಾತ್ಮಕ ಪತ್ರಿಕೋದ್ಯಮವನ್ನು ಗಮನಿಸಿದರೆ, ಅಲ್ಲಿನ ಪತ್ರಕರ್ತರು ವಿಷಯಗಳನ್ನು ಆಳವಾಗಿ ಅಧ್ಯಯನ ಮಾಡಿ ವಿಶ್ಲೇಷಿಸುವ ವಿಧಾನ ಮತ್ತು ನಮ್ಮ ಪತ್ರಿಕೋದ್ಯಮದ ಕಾರ್ಯವೈಖರಿಯನ್ನು ಹೋಲಿಸಿ ನೋಡಬೇಕಿದೆ. ಅನೇಕ ಸಂದರ್ಭಗಳಲ್ಲಿ ನಮ್ಮ ಪತ್ರಿಕೋದ್ಯಮ ಕೇವಲ ವರದಿ ಮಾಡುವುದಕ್ಕಷ್ಟೇ ಸೀಮಿತವಾಗುತ್ತಿರುವುದು ಕಂಡುಬರುತ್ತದೆ. ಈ ಪ್ರವೃತ್ತಿ ಬದಲಾಗಬೇಕು. ಪತ್ರಿಕೋದ್ಯಮ ವಿದ್ಯಾರ್ಥಿಗಳು ಮತ್ತು ಯುವ ಪತ್ರಕರ್ತರು ವಿಶ್ಲೇಷಣಾತ್ಮಕ ಮನೋಭಾವವನ್ನು ಬೆಳೆಸಿಕೊಳ್ಳಬೇಕು.
ಡಿಜಿಟಲ್ ಮಾಧ್ಯಮದ ಬೆಳವಣಿಗೆ ಪತ್ರಿಕೋದ್ಯಮದಲ್ಲಿ ಮಹತ್ವದ ಬದಲಾವಣೆ ತಂದಿದೆ. ಸುದ್ದಿಗಳನ್ನು ಅತ್ಯಂತ ವೇಗವಾಗಿ ವರದಿ ಮಾಡಲು ಹಾಗೂ ಮಾಹಿತಿಯನ್ನು ಕ್ಷಣಾರ್ಧದಲ್ಲಿ ಜನರಿಗೆ ತಲುಪಿಸಲು ಡಿಜಿಟಲ್ ತಂತ್ರಜ್ಞಾನ ನೆರವಾಗುತ್ತಿದೆ. ಆದರೆ ಅದೇ ತಂತ್ರಜ್ಞಾನ ಪತ್ರಿಕೋದ್ಯಮದ ಮೌಲ್ಯಗಳಿಗೆ ಧಕ್ಕೆ ತರುವ ಅಪಾಯವನ್ನೂ ಹೊಂದಿದೆ.
ಒಂದು ಕಡೆ ವೇಗವಾದ ವರದಿಗಾರಿಕೆ ಮತ್ತು ಮಾಹಿತಿ ಪ್ರಸರಣಕ್ಕೆ ಅನುಕೂಲ ಕಲ್ಪಿಸಿದರೆ, ಮತ್ತೊಂದು ಕಡೆ ಅದರ ಅಸಮರ್ಪಕ ಬಳಕೆಯಿಂದ ಪತ್ರಿಕೋದ್ಯಮದ ವಿಶ್ವಾಸಾರ್ಹತೆಗೆ ಧಕ್ಕೆಯಾಗಬಹುದು. ಹೀಗಾಗಿ ತಂತ್ರಜ್ಞಾನವನ್ನು ಬಳಸಿಕೊಳ್ಳುವಾಗ ಜವಾಬ್ದಾರಿ ಮತ್ತು ವಿವೇಚನೆ ಅತ್ಯಗತ್ಯ.
ಪತ್ರಿಕೋದ್ಯಮವನ್ನು ಕೇವಲ ಅನಿವಾರ್ಯತೆಯಿಂದ ಆಯ್ಕೆ ಮಾಡಿಕೊಂಡ ವೃತ್ತಿಯನ್ನಾಗಿ ನೋಡಬಾರದು. ಅದರ ಮಹತ್ವ ಮತ್ತು ಜವಾಬ್ದಾರಿಯನ್ನು ಅರಿತು ಕೆಲಸ ಮಾಡಬೇಕು. ಪತ್ರಕರ್ತರ ಪ್ರತಿಯೊಂದು ಲೇಖನದಲ್ಲಿಯೂ ಸತ್ಯನಿಷ್ಠೆ ಕಾಣಬೇಕು. ಆಗ ಮಾತ್ರ ಪತ್ರಿಕೋದ್ಯಮ ಸಮಾಜದ ನೈಜ ಪ್ರತಿಬಿಂಬವಾಗಲು ಸಾಧ್ಯ. ಸಮಾಜದ ಸಮಸ್ಯೆಗಳು, ಘಟನೆಗಳು ಹಾಗೂ ಜನರ ಬದುಕಿನ ವಾಸ್ತವಗಳನ್ನು ಪ್ರತಿಬಿಂಬಿಸುವುದೇ ಪತ್ರಿಕೋದ್ಯಮದ ಮುಖ್ಯ ಕರ್ತವ್ಯ.
ಜನಪ್ರಿಯತೆ ಮತ್ತು ಜವಾಬ್ದಾರಿ ಎರಡೂ ಮುಖ್ಯ : ‘ಪತ್ರಿಕೋದ್ಯಮ: ಜನಪ್ರಿಯತೆಯೇ ಅಥವಾ ಜವಾಬ್ದಾರಿಯುತವೇ?’ ಎಂಬ ವಿಚಾರ ಸಂಕಿರಣದ ವಿಷಯ ಅತ್ಯಂತ ಪ್ರಸ್ತುತವಾಗಿದೆ. ಪತ್ರಿಕೋದ್ಯಮದಲ್ಲಿ ಜನಪ್ರಿಯತೆ ಮತ್ತು ಜವಾಬ್ದಾರಿಯನ್ನು ಪ್ರತ್ಯೇಕವಾಗಿ ನೋಡಲು ಸಾಧ್ಯವಿಲ್ಲ. ಎರಡೂ ಪರಸ್ಪರ ಪೂರಕವಾಗಿದ್ದು, ಒಂದನ್ನು ಬಿಟ್ಟು ಮತ್ತೊಂದನ್ನು ಉಳಿಸಿಕೊಳ್ಳುವುದು ಕಷ್ಟ.
ಪ್ರಸ್ತುತ ಸಂದರ್ಭದಲ್ಲಿ ಪತ್ರಿಕೆಗಳನ್ನು ನಡೆಸುವುದು ಹಾಗೂ ಸುದ್ದಿವಾಹಿನಿಗಳನ್ನು ನಿರ್ವಹಿಸುವುದು ಸುಲಭದ ಕೆಲಸವಲ್ಲ. ಮಾಧ್ಯಮ ಸಂಸ್ಥೆಗಳ ಅಸ್ತಿತ್ವ ಮತ್ತು ನಿರ್ವಹಣೆಯ ದೃಷ್ಟಿಯಿಂದ ಜನಪ್ರಿಯತೆಯೂ ಮುಖ್ಯವಾಗುತ್ತದೆ. ಆದರೆ ಜನಪ್ರಿಯತೆ ಗಳಿಸುವ ಪ್ರಯತ್ನದಲ್ಲಿ ಜವಾಬ್ದಾರಿಯನ್ನು ಮರೆಯಬಾರದು. ಸುದ್ದಿ ಅಥವಾ ಲೇಖನ ಪ್ರಕಟಿಸುವಾಗ ಅದರ ಸತ್ಯಾಸತ್ಯತೆ ಹಾಗೂ ಪರಿಣಾಮಗಳನ್ನು ಎಚ್ಚರಿಕೆಯಿಂದ ಪರಿಶೀಲಿಸಬೇಕು.
ಒಬ್ಬ ವ್ಯಕ್ತಿ, ಅದರಲ್ಲೂ ರಾಜಕೀಯ ಕ್ಷೇತ್ರದಲ್ಲಿ ಕೆಲಸ ಮಾಡುವವರು, 40, 50 ವರ್ಷಗಳ ಕಾಲ ಸಮಾಜದ ವಿವಿಧ ಹಂತಗಳಲ್ಲಿ ಸೇವೆ ಸಲ್ಲಿಸಿ ತಮ್ಮದೇ ಆದ ವ್ಯಕ್ತಿತ್ವ, ಗೌರವ ಮತ್ತು ಜನಪ್ರಿಯತೆಯನ್ನು ಗಳಿಸಿಕೊಂಡಿರಬಹುದು. ಆದರೆ ಪತ್ರಕರ್ತರು ಪ್ರಕಟಿಸುವ ಒಂದೇ ಒಂದು ಲೇಖನ ಆ ವ್ಯಕ್ತಿಯ ದಶಕಗಳ ಸಾರ್ವಜನಿಕ ಬದುಕಿನಲ್ಲಿ ಗಳಿಸಿದ ಗೌರವ ಮತ್ತು ವ್ಯಕ್ತಿತ್ವಕ್ಕೆ ಧಕ್ಕೆ ತರಬಹುದು. ಹೀಗಾಗಿ ಲೇಖನ ಬರೆಯುವಾಗ ಅದರ ಪರಿಣಾಮಗಳ ಬಗ್ಗೆ ಆಳವಾಗಿ ಯೋಚಿಸುವುದು ಅತ್ಯಂತ ಮುಖ್ಯ.
ಪತ್ರಕರ್ತರು ಪ್ರತಿಯೊಂದು ವಿಷಯವನ್ನೂ ವಿಶ್ಲೇಷಣಾತ್ಮಕವಾಗಿ ನೋಡುವ ಸಾಮರ್ಥ್ಯ ಬೆಳೆಸಿಕೊಳ್ಳಬೇಕು. ಜನಪ್ರಿಯತೆ ಗಳಿಸುವುದು ಮುಖ್ಯವಾದರೂ, ಅದು ಜವಾಬ್ದಾರಿಯುತ ಪತ್ರಿಕೋದ್ಯಮದ ಚೌಕಟ್ಟಿನಲ್ಲಿಯೇ ಇರಬೇಕು. ಜನಪ್ರಿಯತೆ ಮತ್ತು ಜವಾಬ್ದಾರಿ ಎರಡರ ನಡುವೆ ಸಮತೋಲನ ಕಾಯ್ದುಕೊಳ್ಳುವುದು ಇಂದಿನ ಪತ್ರಿಕೋದ್ಯಮದ ಪ್ರಮುಖ ಅಗತ್ಯವಾಗಿದೆ.
- ರಾಷ್ಟ್ರೀಯ ಪತ್ರಿಕಾ ದಿನಾಚರಣೆಯ ಅಂಗವಾಗಿ ಕರ್ನಾಟಕ ಮಾಧ್ಯಮ ಅಕಾಡೆಮಿ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಯೋಗದಲ್ಲಿ ವಾರ್ತಾಭವನದ ಸುಲೋಚನಾ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ‘ಪತ್ರಿಕೋದ್ಯಮ: ಜನಪ್ರಿಯತೆಯೇ ಅಥವಾ ಜವಾಬ್ದಾರಿಯುತವೇ?’ ವಿಷಯದ ಕುರಿತ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದೆ.
Dr. G Parameshwara
@DrParameshwara
On the occasion of National Press Day, I inaugurated the seminar on “Journalism: People-Centric or Responsible?” organised by the Karnataka Media Academy and the Department of Information and Public Relations.
Press freedom is the lifeblood of democracy, but freedom must go hand in hand with responsibility. Journalism must never sacrifice truth, integrity and credibility in the pursuit of popularity.
The media has an important role in nation-building, strengthening democracy, creating awareness about citizens’ rights and giving voice to social concerns. Journalism must go beyond merely reporting events -- it should study issues deeply, understand their context and offer informed analysis.
A journalist’s writing carries enormous influence. A single article can help bring change in society, but it can also damage the reputation a person has built over decades of public life. That is why accuracy, judgement and responsibility are essential.
Technology and digital media have transformed journalism and made information faster and more accessible. But speed should never come at the cost of verification, originality or journalistic values. The growing “copy-and-paste” culture must give way to independent thinking, deeper study and analytical writing.
Popularity is necessary for the sustainability of media organisations, but responsibility cannot be compromised for popularity. Journalism earns public trust only when it remains truthful, fearless, analytical and accountable.
On National Press Day, I urge journalism students and young journalists in particular to cultivate original thought, analytical ability and a strong sense of responsibility towards society and democracy. -
Dr. G Parameshwara
@DrParameshwara
ರಾಷ್ಟ್ರೀಯ ಪತ್ರಿಕಾ ದಿನಾಚರಣೆಯ ಅಂಗವಾಗಿ ಇಂದು ಕರ್ನಾಟಕ ಮಾಧ್ಯಮ ಅಕಾಡೆಮಿ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಯೋಗದಲ್ಲಿ ವಾರ್ತಾಭವನದ ಸುಲೋಚನಾ ಸಭಾಂಗಣದಲ್ಲಿ ನಡೆದ "ಪತ್ರಿಕೋದ್ಯಮ: ಜನಪ್ರಿಯತೆಯೇ ಅಥವಾ ಜವಾಬ್ದಾರಿಯುತವೇ?" ವಿಷಯದ ಕುರಿತ ವಿಚಾರ ಸಂಕಿರಣ ಕಾರ್ಯಕ್ರಮವನ್ನು ಉದ್ಘಾಟಿಸಿದೆ.
ವಿಧಾನ ಪರಿಷತ್ ಸದಸ್ಯರಾದ ಡಾ. ಕೆ. ಗೋವಿಂದರಾಜು, ಸರ್ಕಾರದ ಮುಖ್ಯ ಕಾರ್ಯದರ್ಶಿಗಳಾದ ಶಾಲಿನಿ ರಜನೀಶ್, ಕರ್ನಾಟಕ ಮಾಧ್ಯಮ ಅಕಾಡೆಮಿ ಅಧ್ಯಕ್ಷರಾದ ಆಯೇಶಾ ಖಾನಂ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರು ಹಾಗೂ ಕರ್ನಾಟಕ ಮಾಧ್ಯಮ ಅಕಾಡೆಮಿ ಸದಸ್ಯರಾದ ಶಿವಾನಂದ್ ತಗಡೂರು, ಹಿರಿಯ ಪತ್ರಕರ್ತರು ಹಾಗೂ ಮಾಜಿ ಪ್ರಧಾನಮಂತ್ರಿ ಡಾ. ಮನಮೋಹನ್ ಸಿಂಗ್ ಅವರ ಮಾಜಿ ಸಂವಹನ ಸಲಹೆಗಾರರಾದ ಪಂಕಜ್ ಪಚೌರಿ, ವಿಜಯಕರ್ನಾಟಕ ದಿನಪತ್ರಿಕೆಯ ಮುಖ್ಯ ಸಂಪಾದಕರಾದ ಸುದರ್ಶನ್ ಚನ್ನಂಗಿಹಳ್ಳಿ, ಡೆಕ್ಕನ್ ಹೆರಾಲ್ಡ್ ಪತ್ರಿಕೆಯ ನಿವೃತ್ತ ಸಹ ಸಂಪಾದಕರಾದ ಎಸ್.ಆರ್.ರಾಮಕೃಷ್ಣ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
Dr. G Parameshwara
@DrParameshwara
On the occasion of National Press Day, I inaugurated a seminar on “Journalism: People-Centric or Responsible?”, organised jointly by the Karnataka Media Academy and the Department of Information and Public Relations at the Sulochana Hall, Vartha Bhavan, today.
MLC Dr. K. Govindaraju; Chief Secretary Shalini Rajneesh; Karnataka Media Academy Chairperson Ayesha Khanum; Karnataka Working Journalists’ Association President and Media Academy member Shivanand Tagadur; senior journalist and former Communications Adviser to former Prime Minister Dr. Manmohan Singh, Pankaj Pachauri; Vijaya Karnataka Editor-in-Chief Sudarshan Channangihalli; retired Deccan Herald Associate Editor S.R. Ramakrishna, and several others were present. -
Dr. G Parameshwara
@DrParameshwara
ವಿಕಾಸಸೌಧದ ಸಮ್ಮೇಳನ ಸಭಾಂಗಣದಲ್ಲಿ ಇಂದು ನಡೆದ ಕರ್ನಾಟಕ ವಿಧಾನ ಪರಿಷತ್ತಿಗೆ ಪದವೀಧರರ ಹಾಗೂ ಶಿಕ್ಷಕರ ಕ್ಷೇತ್ರಗಳಿಂದ ನೂತನವಾಗಿ ಚುನಾಯಿತರಾದ ಸದಸ್ಯರ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಪಾಲ್ಗೊಂಡು, ನೂತನ ಸದಸ್ಯರಿಗೆ ಅಭಿನಂದನೆ ಸಲ್ಲಿಸಿ ಶುಭ ಹಾರೈಸಿದೆ.
ಶಿಕ್ಷಕರು ಮತ್ತು ಪದವೀಧರರು ಸಮಾಜದ ಪ್ರಗತಿಯ ಪ್ರಮುಖ ಶಕ್ತಿಯಾಗಿದ್ದಾರೆ. ಅವರ ಆಶೋತ್ತರಗಳಿಗೆ ಧ್ವನಿಯಾಗಿ, ಶಿಕ್ಷಣ ಕ್ಷೇತ್ರದ ಅಭಿವೃದ್ಧಿ, ಶಿಕ್ಷಕರ ಸಮಸ್ಯೆಗಳಿಗೆ ಪರಿಹಾರ ಹಾಗೂ ಪದವೀಧರ ಯುವಜನರಿಗೆ ಉತ್ತಮ ಅವಕಾಶಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ನೂತನ ಸದಸ್ಯರು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲಿ. ವಿಧಾನ ಪರಿಷತ್ತಿನ ಘನತೆ ಹಾಗೂ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಎತ್ತಿಹಿಡಿಯುವ ಮೂಲಕ ರಾಜ್ಯದ ಶೈಕ್ಷಣಿಕ ಮತ್ತು ಸಾಮಾಜಿಕ ಅಭಿವೃದ್ಧಿಗೆ ಮಹತ್ವದ ಕೊಡುಗೆ ನೀಡಲಿ ಎಂದು ಆಶಿಸುತ್ತೇನೆ.
ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸಭಾಪತಿಗಳಾದ ಸಲೀಂ ಅಹ್ಮದ್, ಉಪಸಭಾಪತಿಗಳಾದ ಉಮಾಶ್ರೀ, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕರಾದ ಛಲವಾದಿ ನಾರಾಯಣಸ್ವಾಮಿ, ವಿಧಾನಸಭೆ ವಿರೋಧ ಪಕ್ಷದ ನಾಯಕರಾದ ಆರ್. ಅಶೋಕ್ ಹಾಗೂ ವಿಧಾನ ಪರಿಷತ್ ಸದಸ್ಯರಾದ ಎನ್. ರವಿಕುಮಾರ್ ಉಪಸ್ಥಿತರಿದ್ದರು. -
Dr. G Parameshwara
@DrParameshwara
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವರಾದ ಶ್ರೀ ಮಧು ಬಂಗಾರಪ್ಪ ಅವರು ಇಂದು ನನ್ನನ್ನು ಸೌಹಾರ್ದಯುತವಾಗಿ ಭೇಟಿ ಮಾಡಿ, ಮಾತುಕತೆ ನಡೆಸಿದರು.
-
Dr. G Parameshwara
@DrParameshwara
A free and fearless press is essential to a healthy democracy. Its responsibility goes beyond reporting events to questioning those in power, holding institutions accountable and giving voice to the unheard.
On National Press Day, I salute journalists and media professionals who uphold truth, integrity and the public's right to know.
A strong democracy needs a press that is free to question, without fear or favour. -
Dr. G Parameshwara
@DrParameshwara
ಇಂದು ನೆಲಮಂಗಲ ತಾಲ್ಲೂಕಿನ ಟಿ.ಬೇಗೂರಿನ ಡಾ. ಬಿ.ರಮಣರಾವ್ ಅವರ "ಹಳ್ಳಿ ಕ್ಲಿನಿಕ್" ನಲ್ಲಿ ನಡೆದ ಗಿನ್ನಿಸ್ ಬುಕ್ ರೆಕಾರ್ಡ್ ಆಫ್ ವರ್ಲ್ಡ್ ರೆಕಾರ್ಡ್ ಪ್ರಶಸ್ತಿ ಸ್ವೀಕಾರ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದೆ.
ವೈದ್ಯಕೀಯ ಸೇವೆಯ ಮೂಲಕ ವಿಶ್ವದ ಗಮನ ಸೆಳೆದಿರುವ ಡಾ. ರಮಣರಾವ್ ಅವರು ಸಮಾಜಕ್ಕೆ ಮಾದರಿಯಾಗಿದ್ದಾರೆ. ಕಳೆದ ಹಲವು ದಶಕಗಳಿಂದ ಗ್ರಾಮೀಣ ಪ್ರದೇಶದಲ್ಲಿ ಕ್ಲಿನಿಕ್ ಆರಂಭಿಸಿ, ಪ್ರತಿ ಭಾನುವಾರ ನಿರಂತರವಾಗಿ ಆರೋಗ್ಯ ಸೇವೆ ಸಲ್ಲಿಸುತ್ತಿರುವ ಅವರ ಕಾರ್ಯ ಶ್ಲಾಘನೀಯ.
ಡಾ. ರಮಣರಾವ್ ಅವರ ವೈದ್ಯಕೀಯ ಸೇವೆಯನ್ನು ಗುರುತಿಸಿ ಗಿನ್ನಿಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ಸಂಸ್ಥೆ ಗೌರವಿಸಿರುವುದು ಹೆಮ್ಮೆಯ ಸಂಗತಿ. 2,777 ಭಾನುವಾರ ಸುಮಾರು 33 ಲಕ್ಷಕ್ಕೂ ಅಧಿಕ ರೋಗಿಗಳಿಗೆ ಆರೋಗ್ಯ ತಪಾಸಣೆ ನಡೆಸಿ, ಚಿಕಿತ್ಸೆ ನೀಡಿರುವುದು ಸಾಮಾನ್ಯ ಸಾಧನೆಯಲ್ಲ. ಇಂತಹ ಅಪರೂಪದ ಸೇವಾ ಮನೋಭಾವ ಎಲ್ಲರಲ್ಲೂ ಮೂಡುವುದಿಲ್ಲ.
ಹಳ್ಳಿಗೆ ತೆರಳಿ ಅಲ್ಲಿನ ಜನರಿಗೆ ಆರೋಗ್ಯ ಸೇವೆ ನೀಡಬೇಕು ಎಂಬ ಸಂಕಲ್ಪದೊಂದಿಗೆ ಗ್ರಾಮೀಣ ಪ್ರದೇಶದಲ್ಲಿ ಕ್ಲಿನಿಕ್ ಆರಂಭಿಸಿ, ರಾಜ್ಯದ ವಿವಿಧ ಭಾಗಗಳಿಂದ ಆಗಮಿಸುವ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿರುವ ರಮಣರಾವ್ ಅವರ ಸೇವೆ ಅನನ್ಯವಾಗಿದೆ. ಅವರ ಈ ಮಹತ್ವದ ಸೇವೆಯನ್ನು ಗುರುತಿಸಿ ಭಾರತ ಸರ್ಕಾರ 2010ರಲ್ಲಿ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿರುವುದು ಹೆಮ್ಮೆಯ ವಿಚಾರ. ಇದೀಗ ಗಿನ್ನೆಸ್ ಸಂಸ್ಥೆಯೂ ಅವರ ಸೇವೆಯನ್ನು ಗುರುತಿಸಿರುವುದು ಮತ್ತಷ್ಟು ಸಂತಸ ತಂದಿದೆ.
1972ರಿಂದಲೂ ಅವರು ಸಲ್ಲಿಸುತ್ತಿರುವ ವೈದ್ಯಕೀಯ ಸೇವೆಯ ಮಾಹಿತಿಯನ್ನು ಪರಿಗಣಿಸಿ, ಗ್ರಾಮೀಣ ಪ್ರದೇಶದಲ್ಲಿ ಇಂತಹ ನಿರಂತರ ಸೇವೆ ಸಲ್ಲಿಸುತ್ತಿರುವ ವೈದ್ಯರ ಸಾಧನೆಯನ್ನು ವಿಶ್ವಮಟ್ಟದಲ್ಲಿ ಗುರುತಿಸಿರುವುದು ವಿಶೇಷವಾಗಿದೆ. ಈ ಸಾಧನೆಗೆ ಇನ್ನೂ ಹೆಚ್ಚಿನ ಪ್ರಶಸ್ತಿ ಹಾಗೂ ಗೌರವಗಳು ದೊರೆಯಬೇಕು.
ರಮಣರಾವ್ ಅವರ ಸೇವಾ ಕಾರ್ಯದಲ್ಲಿ ಭಾಗವಹಿಸುವ ಅವಕಾಶ ದೊರೆತಿರುವುದು ನನಗೆ ಸಂತಸ ತಂದಿದೆ. ಸೇವೆ ಸಲ್ಲಿಸಬೇಕು ಎಂಬ ಮನೋಭಾವವನ್ನು ಯಾರೂ ಬಲವಂತವಾಗಿ ಕಲಿಸಲು ಸಾಧ್ಯವಿಲ್ಲ. ಅದು ಪ್ರತಿಯೊಬ್ಬರ ಮನಸ್ಸಿನಿಂದಲೇ ಮೂಡಿಬರಬೇಕು. ದೇಶದಲ್ಲಿ ಲಕ್ಷಾಂತರ ವೈದ್ಯರಿದ್ದು, ಅವರೆಲ್ಲರೂ ರಮಣರಾವ್ ಅವರ ಸೇವಾ ಮನೋಭಾವವನ್ನು ಅಳವಡಿಸಿಕೊಂಡರೆ ಆರೋಗ್ಯ ಕ್ಷೇತ್ರದಲ್ಲಿ ಮಹತ್ತರ ಬದಲಾವಣೆ ತರಲು ಸಾಧ್ಯವಾಗುತ್ತದೆ.
ವೈದ್ಯಕೀಯ ಪದವಿ ಪಡೆಯುವ ಸಂದರ್ಭದಲ್ಲಿ ಪ್ರಾಮಾಣಿಕವಾಗಿ ಸೇವೆ ಸಲ್ಲಿಸುವುದಾಗಿ ವೈದ್ಯರು ಪ್ರಮಾಣ ಮಾಡುತ್ತಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಆರೋಗ್ಯ ಸೇವೆ ಹೆಚ್ಚು ವಾಣಿಜ್ಯೀಕರಣಗೊಳ್ಳುತ್ತಿರುವುದು ಕಳವಳಕಾರಿ ಸಂಗತಿಯಾಗಿದೆ. ಹಣ ನೀಡಿದರೆ ಮಾತ್ರ ಚಿಕಿತ್ಸೆ ದೊರೆಯುತ್ತದೆ ಎಂಬಂತಾಗಿದೆ. ಇಂತಹ ಸಂದರ್ಭದಲ್ಲಿ ಡಾ. ರಮಣರಾವ್ ಅವರ ನಿಸ್ವಾರ್ಥ ಸೇವೆ ವೈದ್ಯಕೀಯ ವೃತ್ತಿಯ ಮೂಲ ಆಶಯವನ್ನು ನೆನಪಿಸುತ್ತದೆ.
ರಾಜ್ಯದಲ್ಲಿ ಸುಮಾರು 6,000 ಆರೋಗ್ಯ ಕೇಂದ್ರಗಳಿದ್ದು, ಸಾವಿರಾರು ವೈದ್ಯರು ಪ್ರತಿನಿತ್ಯ ಸೇವೆ ಸಲ್ಲಿಸುತ್ತಿದ್ದಾರೆ. ಪ್ರತಿಯೊಬ್ಬ ವೈದ್ಯರೂ ರಮಣರಾವ್ ಅವರ ಸೇವಾ ಮನೋಭಾವವನ್ನು ಮೈಗೂಡಿಸಿಕೊಂಡರೆ ಲಕ್ಷಾಂತರ ಜನರಿಗೆ ಉತ್ತಮ ಆರೋಗ್ಯ ಸೇವೆ ಒದಗಿಸಲು ಸಾಧ್ಯವಾಗುತ್ತದೆ.
ನಾನೂ ಕೂಡ ಡಾ. ರಮಣರಾವ್ ಅವರ ಬಳಿ ಚಿಕಿತ್ಸೆ ಪಡೆಯುತ್ತೇನೆ. ರೋಗಿಗಳನ್ನು ಪ್ರೀತಿ, ಗೌರವ ಹಾಗೂ ಆತ್ಮೀಯತೆಯಿಂದ ಕಾಣುವ ಅವರ ಗುಣ ನಿಜಕ್ಕೂ ಅನುಕರಣೀಯ. ಇಂತಹ ಮಾನವೀಯ ಮೌಲ್ಯಗಳನ್ನು ಕೇವಲ ಮಾತುಗಳಲ್ಲಿ ಹೇಳಲು ಸಾಧ್ಯವಿಲ್ಲ; ಅವು ನಮ್ಮ ನಡವಳಿಕೆಯಲ್ಲಿ ಪ್ರತಿಬಿಂಬಿಸಬೇಕು.
ಡಾ. ರಮಣರಾವ್ ಅವರಿಗೆ ಭಗವಂತ ಇನ್ನೂ ಹೆಚ್ಚಿನ ಆರೋಗ್ಯ, ಆಯುಷ್ಯ ಹಾಗೂ ಶಕ್ತಿಯನ್ನು ಕರುಣಿಸಲಿ. ಅವರ ಸೇವಾ ಕಾರ್ಯ ಇನ್ನಷ್ಟು ವರ್ಷಗಳ ಕಾಲ ಮುಂದುವರಿಯಲಿ ಎಂದು ಹಾರೈಸುತ್ತೇನೆ.
ಕಾರ್ಯಕ್ರಮದಲ್ಲಿ ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಸಂಸ್ಥೆಯ ಪ್ರತಿನಿಧಿ ರಿಷಿನಾಥ್, ಡಾ. ಬಿ.ರಮಣರಾವ್, ಹೇಮ ರಮಣರಾವ್, ಡಾ. ಶರೀತ್ ಭೋಗರಾಜ್, ಡಾ. ಶಾಂತಿನಿ, ಡಾ.ಅಭಿಜಿತ್ ಭೋಗರಾಜ್, ಡಾ. ಜಾಹ್ನವಿ ಮುಂತಾದವರು ಉಪಸ್ಥಿತರಿದ್ದರು. -
Dr. G Parameshwara
@DrParameshwara
ರಾಜ್ಯ ಶಾಲಾ ಶಿಕ್ಷಣ ಇಲಾಖೆ ವತಿಯಿಂದ ಆಯೋಜಿಸಲಾಗಿದ್ದ ರಾಜ್ಯಮಟ್ಟದ U-14, U-17 ಹಾಗೂ U-19 ವಿಭಾಗಗಳ ರೈಫಲ್ ಶೂಟಿಂಗ್ ಸ್ಪರ್ಧೆಯಲ್ಲಿ ಅತ್ಯುತ್ತಮ ಸಾಧನೆಗೈದು, ರಾಷ್ಟ್ರಮಟ್ಟದ ಸ್ಪರ್ಧೆಗಳಿಗೆ ಆಯ್ಕೆಯಾಗಿರುವ ತುಮಕೂರು ಜಿಲ್ಲೆಯ ಯುವ ಕ್ರೀಡಾಪಟುಗಳನ್ನು ಅಭಿನಂದಿಸಿ ಗೌರವಿಸಿದೆ.
ಗೊಲ್ಲಹಳ್ಳಿಯ ನನ್ನ ನಿವಾಸದಲ್ಲಿ ಇಂದು ಕ್ರೀಡಾಪಟುಗಳಾದ ಚಿಂತನ್, ಸಮರ, ವನಿತಾ, ಲಾಸ್ಯ ಪ್ರಿಯ, ಜಿತೇಶ್ ಹಾಗೂ ಫನಾನ್ ಅವರನ್ನು ಅಭಿನಂದಿಸಿ, ಗೋವಾ ಹಾಗೂ ಇಂದೋರ್ನಲ್ಲಿ ನಡೆಯಲಿರುವ 70ನೇ ರಾಷ್ಟ್ರಮಟ್ಟದ ರೈಫಲ್ ಶೂಟಿಂಗ್ ಸ್ಪರ್ಧೆಗೆ ಆಯ್ಕೆಯಾಗಿರುವುದು ಜಿಲ್ಲೆಯ ಕ್ರೀಡಾ ಕ್ಷೇತ್ರಕ್ಕೆ ಹೆಮ್ಮೆಯ ಸಂಗತಿಯಾಗಿದೆ.
ಇದೇ ಸಂದರ್ಭದಲ್ಲಿ, 69ನೇ ರಾಷ್ಟ್ರಮಟ್ಟದ ಶೂಟಿಂಗ್ ಸ್ಪರ್ಧೆಯಲ್ಲಿ ಕಂಚಿನ ಪದಕ ಗೆದ್ದು, ತೆಲಂಗಾಣದಲ್ಲಿ ನಡೆಯಲಿರುವ 8ನೇ ಖೇಲೋ ಇಂಡಿಯಾ ಯೂತ್ ಗೇಮ್ಸ್ನಲ್ಲಿ ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಲು ಆಯ್ಕೆಯಾಗಿರುವ ಅದಿತಿ ಜಿ. ಅವರನ್ನು ಅಭಿನಂದಿಸಿ, ಶುಭ ಹಾರೈಸಿದೆ.
ಈ ಎಲ್ಲಾ ಕ್ರೀಡಾಪಟುಗಳು ತುಮಕೂರಿನ ವಿವೇಕಾನಂದ ರೈಫಲ್ ಶೂಟಿಂಗ್ ಸಂಸ್ಥೆಯಲ್ಲಿ ತರಬೇತಿ ಪಡೆದು ಈ ಮಹತ್ವದ ಸಾಧನೆ ಮಾಡಿದ್ದಾರೆ. ಕ್ರೀಡಾಪಟುಗಳ ನಿರಂತರ ಪರಿಶ್ರಮ, ಶಿಸ್ತು, ಸಮರ್ಪಣಾ ಮನೋಭಾವ ಹಾಗೂ ತರಬೇತುದಾರರ ಸೂಕ್ತ ಮಾರ್ಗದರ್ಶನ ಈ ಯಶಸ್ಸಿನ ಹಿಂದಿನ ಪ್ರಮುಖ ಶಕ್ತಿಗಳಾಗಿವೆ.
ಯುವ ಕ್ರೀಡಾಪಟುಗಳ ಸಾಧನೆ ತುಮಕೂರು ಜಿಲ್ಲೆಗೆ ಹೆಮ್ಮೆಯ ಸಂಗತಿಯಾಗಿದ್ದು, ಕ್ರೀಡಾ ಕ್ಷೇತ್ರದಲ್ಲಿ ಜಿಲ್ಲೆ ಮತ್ತಷ್ಟು ಎತ್ತರಕ್ಕೆ ಬೆಳೆಯುತ್ತಿರುವುದಕ್ಕೆ ಸಾಕ್ಷಿಯಾಗಿದೆ. ಮುಂದಿನ ರಾಷ್ಟ್ರಮಟ್ಟದ ಸ್ಪರ್ಧೆಗಳಲ್ಲಿಯೂ ಉತ್ತಮ ಪ್ರದರ್ಶನ ನೀಡಿ, ರಾಜ್ಯ ಹಾಗೂ ದೇಶಕ್ಕೆ ಕೀರ್ತಿ ತರಬೇಕು. ಕ್ರೀಡಾಪಟುಗಳ ಸಾಧನೆಗೆ ಅಗತ್ಯ ಪ್ರೋತ್ಸಾಹ ಮತ್ತು ಬೆಂಬಲ ಸದಾ ಇರಲಿದೆ. -
Dr. G Parameshwara
@DrParameshwara
I have written to Prime Minister Shri Narendra Modi, Union Home Minister Shri Amit Shah and Union Minister for Social Justice and Empowerment Dr. Virendra Kumar, urging them to include Karnataka’s legislation enhancing reservation for Scheduled Castes and Scheduled Tribes in the Ninth Schedule of the Constitution to ensure constitutional protection for the enhanced reservation.
The following are media reports on the matter.
ಕರ್ನಾಟಕದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಹೆಚ್ಚುವರಿ ಮೀಸಲಾತಿಗೆ ಸಂವಿಧಾನಾತ್ಮಕ ರಕ್ಷಣೆ ಒದಗಿಸುವ ನಿಟ್ಟಿನಲ್ಲಿ, ಮೀಸಲಾತಿ ಹೆಚ್ಚಳದ ಕಾಯ್ದೆಯನ್ನು ಸಂವಿಧಾನದ 9ನೇ ಅನುಸೂಚಿಗೆ ಸೇರಿಸುವಂತೆ ಕೋರಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಶ್ರೀ ಅಮಿತ್ ಶಾ ಹಾಗೂ ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವ ಡಾ. ವೀರೇಂದ್ರ ಕುಮಾರ್ ಅವರಿಗೆ ಪತ್ರ ಬರೆದಿದ್ದೇನೆ.
ಈ ಕುರಿತಾದ ಪತ್ರಿಕಾ ವರದಿಗಳು ಹೀಗಿವೆ.. -
Dr. G Parameshwara
@DrParameshwara
Inaugurated the magnificent ₹7 crore state-of-the-art LED digital display at Sri Shivakumara Mahaswamiji Circle, in the gracious presence of the revered Siddaganga Math seer.
Dedicated this landmark to the people of Tumakuru on Children’s Day, symbolising our vision for a modern, vibrant and progressive city.
With major industrial investments, emerging employment opportunities and growing connectivity with Bengaluru, Tumakuru is poised to become a major hub of growth and innovation.
My appreciation to the district administration and officials whose tireless efforts made this landmark project a reality. -
Dr. G Parameshwara
@DrParameshwara
ಪರಮಪೂಜ್ಯ ಶ್ರೀ ಶಿವಕುಮಾರ ಮಹಾಸ್ವಾಮೀಜಿಗಳ ಹೆಸರಿನ ವೃತ್ತದಲ್ಲಿ ವಿನೂತನ ಎಲೆಕ್ಟ್ರಾನಿಕ್ ಡಿಸ್ಪ್ಲೇ ವ್ಯವಸ್ಥೆಯನ್ನು ನಿರ್ಮಿಸಿರುವುದು ತುಮಕೂರು ನಗರದ ಜನತೆಗೆ ನೀಡಿರುವ ಕೊಡುಗೆಯಾಗಿದೆ. ಇಂತಹ ಬೃಹತ್ ಡಿಜಿಟಲ್ ಡಿಸ್ಪ್ಲೇ ವ್ಯವಸ್ಥೆ ದೇಶದ ಯಾವುದೇ ಜಿಲ್ಲಾ ಕೇಂದ್ರದಲ್ಲಿ ಇಲ್ಲ ಎಂಬುದು ಗಮನಾರ್ಹ. ಈ ಮೂಲಕ ತುಮಕೂರು ಹೊಸ ಇತಿಹಾಸ ಸೃಷ್ಟಿಸಿದೆ.
ವಿದೇಶಗಳೂ ಸೇರಿದಂತೆ ಅನೇಕ ರಾಷ್ಟ್ರಗಳ ನಗರಗಳಿಗೆ ಭೇಟಿ ನೀಡಿದಾಗ ಪ್ರತಿಯೊಂದು ನಗರದಲ್ಲಿಯೂ ಜನರನ್ನು ಆಕರ್ಷಿಸುವಂತಹ ಪ್ರಮುಖ ಕೇಂದ್ರವಿರುವುದನ್ನು ಗಮನಿಸಿದ್ದೇನೆ. ಆದರೆ, ತುಮಕೂರು ನಗರದಲ್ಲಿ ಅಂತಹ ಒಂದು ಆಕರ್ಷಣೆಯ ಕೇಂದ್ರ ಇರಬೇಕೆಂಬ ಆಶಯ ಬಹಳ ದಿನಗಳಿಂದ ಇತ್ತು. ಈ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗಳು ಹಾಗೂ ಮಹಾನಗರ ಪಾಲಿಕೆ ಆಯುಕ್ತರು ಡಿಜಿಟಲ್ ಡಿಸ್ಪ್ಲೇ ವ್ಯವಸ್ಥೆ ನಿರ್ಮಿಸುವ ಸಲಹೆ ನೀಡಿದರು. ಅದರಂತೆ ವೃತ್ತವನ್ನು ಪರಿಶೀಲಿಸಿ, ನಕ್ಷೆ ಸಿದ್ಧಪಡಿಸಿ ಯೋಜನೆ ರೂಪಿಸಲಾಯಿತು.
ಈ ಯೋಜನೆಯ ಅನುಷ್ಠಾನಕ್ಕೆ ಜಿಲ್ಲಾಧಿಕಾರಿಗಳು ಪ್ರತಿನಿತ್ಯ ಪರಿಶ್ರಮ ವಹಿಸಿದ್ದು, ಕಾಮಗಾರಿಯ ಪ್ರಗತಿಯ ಕುರಿತು ನಿರಂತರವಾಗಿ ಮಾಹಿತಿ ನೀಡುತ್ತಿದ್ದರು. ಮಹಾನಗರ ಪಾಲಿಕೆ ಆಯುಕ್ತರು ಹಾಗೂ ಅವರ ತಂಡದ ಅಧಿಕಾರಿಗಳು ರಾತ್ರಿ 3, 4 ಗಂಟೆಯವರೆಗೂ ಸ್ಥಳದಲ್ಲಿಯೇ ಇದ್ದು ಕೆಲಸ ನಿರ್ವಹಿಸಿದ್ದಾರೆ. ವಿಶೇಷವಾಗಿ ಆಯುಕ್ತರು ಬೆಳಗಿನ ಜಾವ 3 ಗಂಟೆಗೂ ಕಾಮಗಾರಿಯ ಛಾಯಾಚಿತ್ರಗಳನ್ನು ಕಳುಹಿಸುತ್ತಿದ್ದರು. ಅವರೆಲ್ಲರ ಪರಿಶ್ರಮದಿಂದ ಇಂದು ಯೋಜನೆ ಯಶಸ್ವಿಯಾಗಿ ಪೂರ್ಣಗೊಂಡಿದೆ.
ಕನ್ನಡ ರಾಜ್ಯೋತ್ಸವದ ದಿನವೇ ಯೋಜನೆಯನ್ನು ಉದ್ಘಾಟಿಸಲು ಉದ್ದೇಶಿಸಲಾಗಿತ್ತು. ಆದರೆ, ಡಿಜಿಟಲ್ ಡಿಸ್ಪ್ಲೇ ಬೋರ್ಡ್ಗಳು ದೆಹಲಿಯಿಂದ ಬರಬೇಕಿದ್ದುದರಿಂದ ಹಾಗೂ ಅವುಗಳ ಜೋಡಣೆ, ತಾಂತ್ರಿಕ ಪ್ರಕ್ರಿಯೆ ಮತ್ತು ಸಂಚಾರ ನಿರ್ವಹಣೆಯ ಸವಾಲುಗಳಿಂದಾಗಿ ವಿಳಂಬವಾಯಿತು. ಆದರೂ ಕಾಮಗಾರಿಯನ್ನು ಮತ್ತಷ್ಟು ಮುಂದೂಡದೆ ಶೀಘ್ರ ಪೂರ್ಣಗೊಳಿಸುವಂತೆ ಸೂಚಿಸಲಾಯಿತು. ಅಂತಿಮವಾಗಿ ನವೆಂಬರ್ 14ರ ಮಕ್ಕಳ ದಿನಾಚರಣೆಯಂದು ಮಕ್ಕಳಿಗೆ ಈ ವ್ಯವಸ್ಥೆಯನ್ನು ಸಮರ್ಪಿಸುವ ನಿರ್ಧಾರ ಕೈಗೊಳ್ಳಲಾಯಿತು. ತಾಂತ್ರಿಕ ದೋಷಗಳನ್ನು ಸರಿಪಡಿಸಿ ಇಂದು ತುಮಕೂರಿನ ನಾಗರಿಕರಿಗೆ ಅರ್ಪಿಸಲಾಗಿದೆ.
ಈ ಕಾರ್ಯಕ್ರಮಕ್ಕೆ ಪರಮಪೂಜ್ಯ ಸಿದ್ಧಗಂಗಾ ಮಠದ ಶ್ರೀಗಳವರು ಆಗಮಿಸಿರುವುದು ವಿಶೇಷ ಸಂತೋಷ ತಂದಿದೆ. ಸಿದ್ಧಗಂಗಾ ಮಠವು ನಮ್ಮ ಕುಟುಂಬಕ್ಕೆ ಅವಿನಾಭಾವ ಸಂಬಂಧ ಹೊಂದಿರುವ ಸಂಸ್ಥೆಯಾಗಿದೆ. ಬಾಲ್ಯದಲ್ಲಿ, ಸುಮಾರು 10-12 ವರ್ಷದವನಿದ್ದಾಗ, ಪರಮಪೂಜ್ಯ ಶ್ರೀ ಶಿವಕುಮಾರ ಮಹಾಸ್ವಾಮೀಜಿಗಳು ನಮ್ಮ ಊರಿಗೆ ಆಗಮಿಸಿ, ನಮ್ಮ ಶಾಲೆಯ ಕಾರ್ಯಕ್ರಮದಲ್ಲಿ ತಂದೆಯವರೊಂದಿಗೆ ನನಗೆ ಆಶೀರ್ವಾದ ಮಾಡಿದ್ದನ್ನು ಸ್ಮರಿಸಿಕೊಳ್ಳುತ್ತೇನೆ. ಅಂದಿನಿಂದ ನಮ್ಮ ಕುಟುಂಬ ಶ್ರೀಮಠದೊಂದಿಗೆ ಗೌರವ ಮತ್ತು ಭಕ್ತಿಯ ಸಂಬಂಧವನ್ನು ಹೊಂದಿದೆ. ಶ್ರೀಮಠದ ಆಶೀರ್ವಾದದಿಂದಲೇ ನಮ್ಮ ಕುಟುಂಬ ಹಾಗೂ ಶಿಕ್ಷಣ ಸಂಸ್ಥೆಗಳು ಬೆಳೆದಿವೆ. ನಮ್ಮ ಅಣ್ಣ ಡಾ. ಶಿವಪ್ರಸಾದ್ ಅವರು ಸಿದ್ಧಗಂಗಾ ಹೈಸ್ಕೂಲ್ನಲ್ಲಿ ವಿದ್ಯಾಭ್ಯಾಸ ಮಾಡಿದವರು. ಹೀಗಾಗಿ ಶ್ರೀಮಠದ ಬಗ್ಗೆ ನಮ್ಮ ಕುಟುಂಬಕ್ಕಿರುವ ಗೌರವ ಮತ್ತು ನಂಟಿನ ಕುರಿತು ಯಾವುದೇ ತಪ್ಪು ಕಲ್ಪನೆಗಳಿಗೆ ಅವಕಾಶವಿಲ್ಲ ಎಂಬುದನ್ನು ಸ್ಪಷ್ಟಪಡಿಸಲು ಬಯಸುತ್ತೇನೆ. ಶ್ರೀ ಶಿವಕುಮಾರ ಮಹಾಸ್ವಾಮೀಜಿಗಳ ವೃತ್ತದಲ್ಲಿ ಈ ಡಿಜಿಟಲ್ ಡಿಸ್ಪ್ಲೇ ವ್ಯವಸ್ಥೆ ನಿರ್ಮಿಸಿರುವುದು ಆ ವೃತ್ತಕ್ಕೂ, ಪೂಜ್ಯ ಸ್ವಾಮೀಜಿಗಳಿಗೂ ಸಲ್ಲಿಸಿದ ಗೌರವವೆಂದು ಭಾವಿಸುತ್ತೇನೆ.
ಈ ವ್ಯವಸ್ಥೆಯು ತುಮಕೂರು ನಗರದ ಆಕರ್ಷಣೆಯನ್ನು ಹೆಚ್ಚಿಸುವುದರ ಜೊತೆಗೆ ನಗರವನ್ನು ಮತ್ತಷ್ಟು ಸ್ಮಾರ್ಟ್ ಸಿಟಿಯನ್ನಾಗಿ ರೂಪಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗಿದೆ. ಈ ಮೂಲಕ ತುಮಕೂರು ರಾಜ್ಯದ ಇತರ ನಗರಗಳಿಗೂ ಮಾದರಿಯಾಗಲಿದೆ. ಪರಮಪೂಜ್ಯ ಶ್ರೀ ಶಿವಕುಮಾರ ಮಹಾಸ್ವಾಮೀಜಿಗಳ ಆಶೀರ್ವಾದದಿಂದ ಜಿಲ್ಲೆ ಮತ್ತಷ್ಟು ಅಭಿವೃದ್ಧಿ ಪಥದಲ್ಲಿ ಸಾಗಲಿ ಎಂದು ಹಾರೈಸುತ್ತೇನೆ.
ನಾನು ಗೃಹ ಸಚಿವನಾಗಿ ಕಾರ್ಯನಿರ್ವಹಿಸಿದ ಸಂದರ್ಭದಲ್ಲಿ ಪೊಲೀಸ್ ಇಲಾಖೆಯಲ್ಲಿ ಹಲವು ಬದಲಾವಣೆಗಳನ್ನು ತಂದಿದ್ದೇನೆ. ಪೊಲೀಸರ ಸಾಂಪ್ರದಾಯಿಕ ದೊಡ್ಡ ಗಾತ್ರದ ಕ್ಯಾಪ್ ಮಳೆಯಲ್ಲಿ ನೆನೆದಾಗ ಭಾರವಾಗುತ್ತಿತ್ತು ಎಂಬ ಸಿಬ್ಬಂದಿಯ ಮನವಿಯ ಮೇರೆಗೆ ಅದನ್ನು ಬದಲಾಯಿಸಿ, ಆಧುನಿಕ ಹಾಗೂ ಅನುಕೂಲಕರ ಕ್ಯಾಪ್ಗಳನ್ನು ಪರಿಚಯಿಸಲಾಗಿದೆ. ಇದರಿಂದ ಪೊಲೀಸರು ಹೆಚ್ಚು ಸ್ಮಾರ್ಟ್ ಆಗಿ ಕಾಣಿಸುತ್ತಿದ್ದಾರೆ. ಯಾವುದೇ ಇಲಾಖೆಯ ಜವಾಬ್ದಾರಿ ವಹಿಸಿಕೊಂಡಾಗಲೂ ಅಭಿವೃದ್ಧಿಯ ದೃಷ್ಟಿಯಿಂದ ಬದಲಾವಣೆಗಳನ್ನು ತರಲು ಪ್ರಯತ್ನಿಸಿದ್ದೇನೆ.
ತುಮಕೂರು ಜಿಲ್ಲೆಯ ಅಭಿವೃದ್ಧಿಗೆ ಸಂಬಂಧಿಸಿದಂತೆ ವಸಂತನರಸಾಪುರದಲ್ಲಿ ಸುಮಾರು 20 ಸಾವಿರ ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಂಡು ಏಷ್ಯಾ ಖಂಡದಲ್ಲೇ ಅತಿದೊಡ್ಡ ಕೈಗಾರಿಕಾ ಹಬ್ ನಿರ್ಮಿಸುವ ಪ್ರಯತ್ನ ನಡೆಯುತ್ತಿದೆ. ಈಗಾಗಲೇ 200ಕ್ಕೂ ಹೆಚ್ಚು ಕೈಗಾರಿಕೆಗಳು ಜಿಲ್ಲೆಗೆ ಬಂದಿವೆ. ಇತ್ತೀಚೆಗೆ ಗ್ರೀನ್ ಹೈಡ್ರೋಜನ್ ಘಟಕ ಹಾಗೂ ಡೇಟಾ ಸೆಂಟರ್ ಸ್ಥಾಪನೆಗೆ ಸಂಬಂಧಿಸಿದಂತೆ ಸುಮಾರು ₹80 ಸಾವಿರ ಕೋಟಿ ಹೂಡಿಕೆ ಮಾಡುವ ಪ್ರಸ್ತಾವನೆ ಬಂದಿದೆ. ತುಮಕೂರಿನಲ್ಲಿ ಸುಮಾರು ಒಂದು ಸಾವಿರ ಎಕರೆ ಭೂಮಿ ಒದಗಿಸಿದರೆ 30 ಸಾವಿರ ಜನರಿಗೆ ಉದ್ಯೋಗ ನೀಡುವ ಉದ್ದೇಶವನ್ನು ಹೂಡಿಕೆದಾರರು ಹೊಂದಿದ್ದಾರೆ. ಇಂತಹ ಕೈಗಾರಿಕಾ ಬೆಳವಣಿಗೆಗಳಿಂದ ತುಮಕೂರು ಜಿಲ್ಲೆಯ ಅಭಿವೃದ್ಧಿಗೆ ಹೊಸ ಅವಕಾಶಗಳು ಸೃಷ್ಟಿಯಾಗಲಿವೆ. (1/2)
Dr. G Parameshwara
@DrParameshwara
ತುಮಕೂರು ಇನ್ನು ಮುಂದೆ ಸಣ್ಣ ನಗರ ಎಂಬ ಭಾವನೆ ಯಾರಲ್ಲಿಯೂ ಇರಬಾರದು. ತುಮಕೂರು ಬೆಂಗಳೂರಿನ ಒಂದು ಭಾಗವಾಗಿ ಬೆಳೆಯುತ್ತಿದೆ. ಈಗಾಗಲೇ ರಸ್ತೆ ಸಂಪರ್ಕದ ಮೂಲಕ ಬೆಂಗಳೂರು ಮತ್ತು ತುಮಕೂರು ನಗರಗಳು ಹತ್ತಿರವಾಗಿವೆ. ಬೆಂಗಳೂರು ನಗರದಲ್ಲಿ ರಸ್ತೆ ಬದಿಯ ಒಂದು ಎಕರೆ ಜಮೀನು ಸಿಗುವುದೂ ಕಷ್ಟವಾಗಿದ್ದು, ಸಿಕ್ಕರೂ ₹5-10 ಕೋಟಿ ಬೆಲೆ ಇದೆ. ಮುಂದಿನ ದಿನಗಳಲ್ಲಿ ತುಮಕೂರು ಮತ್ತು ಬೆಂಗಳೂರು ನಡುವಿನ ಸಂಪರ್ಕ ಇನ್ನಷ್ಟು ಸುಧಾರಿಸಲಿದೆ. ಜಿಲ್ಲೆಯ ಯುವಜನರಿಗೆ, ಮಕ್ಕಳಿಗೆ ಕೈಗಾರಿಕೆ ಹಾಗೂ ಶಿಕ್ಷಣ ಕ್ಷೇತ್ರಗಳಲ್ಲಿ ಹೆಚ್ಚಿನ ಅವಕಾಶಗಳು ದೊರೆಯಬೇಕು ಎಂಬುದು ನಮ್ಮ ಆಶಯವಾಗಿದೆ.
ಜಿಲ್ಲಾಧಿಕಾರಿಗಳು ಯಾವುದೇ ಜವಾಬ್ದಾರಿ ನೀಡಿದರೂ ಪ್ರಾಮಾಣಿಕವಾಗಿ ತಮ್ಮ ಸಂಪೂರ್ಣ ಪ್ರಯತ್ನವನ್ನು ಮಾಡುತ್ತಾರೆ. ಅಂದು ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರನ್ನು ಮೂರು ಬಾರಿ ತುಮಕೂರಿಗೆ ಕರೆತಂದು, ಲಕ್ಷಾಂತರ ಜನರು ಭಾಗವಹಿಸಿದ ಬೃಹತ್ ಕಾರ್ಯಕ್ರಮಗಳನ್ನು ಆಯೋಜಿಸಿ, ಸರ್ಕಾರದ ವಿವಿಧ ಯೋಜನೆಗಳ ಲಕ್ಷಾಂತರ ಫಲಾನುಭವಿಗಳಿಗೆ ಸೌಲಭ್ಯ ತಲುಪಿಸುವಲ್ಲಿ ಜಿಲ್ಲಾಡಳಿತ ಯಶಸ್ವಿಯಾಗಿದೆ. ಈ ಕಾರ್ಯಕ್ರಮಗಳ ಬಗ್ಗೆ ಮುಖ್ಯಮಂತ್ರಿಗಳೂ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಜಿಲ್ಲಾಧಿಕಾರಿಗಳಿಗೆ ಅಭಿನಂದನೆ ಸಲ್ಲಿಸುತ್ತೇನೆ.
ಮಹಾನಗರ ಪಾಲಿಕೆ ಆಯುಕ್ತರು ತಮ್ಮ ತಂಡದ ಅಧಿಕಾರಿಗಳೊಂದಿಗೆ ಹಗಲಿರುಳು ಶ್ರಮಿಸಿ ಈ ಯೋಜನೆಯನ್ನು ಯಶಸ್ವಿಗೊಳಿಸಿದ್ದಾರೆ. ಬೆಳಗಿನ ಜಾವದವರೆಗೂ ಕಾಮಗಾರಿಯ ಮೇಲ್ವಿಚಾರಣೆ ನಡೆಸಿ, ನಿರಂತರವಾಗಿ ಪ್ರಗತಿಯ ಮಾಹಿತಿಯನ್ನು ಹಂಚಿಕೊಳ್ಳುತ್ತಿದ್ದರು. ಅವರ ಪರಿಶ್ರಮಕ್ಕೆ ವಿಶೇಷ ಅಭಿನಂದನೆಗಳು.
ತುಮಕೂರು ದಸರಾವನ್ನು ಮತ್ತಷ್ಟು ವಿಸ್ತೃತವಾಗಿ ಆಚರಿಸಬೇಕೆಂಬ ಉದ್ದೇಶದಿಂದ ಕಳೆದ ಮೂರು ವರ್ಷಗಳಿಂದ ಜಿಲ್ಲೆಯಲ್ಲಿ ದಸರಾ ಮಹೋತ್ಸವವನ್ನು ಆಯೋಜಿಸಲಾಗುತ್ತಿದೆ. ಹಿಂದೆ ಸ್ಥಳೀಯವಾಗಿ ಸಣ್ಣ ಪ್ರಮಾಣದಲ್ಲಿ ನಡೆಯುತ್ತಿದ್ದ ಊರ ಹಬ್ಬವನ್ನು ಎಲ್ಲರ ಸಹಕಾರದೊಂದಿಗೆ ವಿಸ್ತರಿಸಿ, ಸಾರ್ವಜನಿಕರು ಮತ್ತು ಅಧಿಕಾರಿಗಳನ್ನು ಒಳಗೊಂಡು ದೊಡ್ಡ ಮಟ್ಟದಲ್ಲಿ ಆಚರಿಸಲಾಗುತ್ತಿದೆ. ಈ ಬಾರಿಯ ತುಮಕೂರು ದಸರಾವನ್ನು ಒಂಬತ್ತು-ಹತ್ತು ದಿನಗಳ ಅವಧಿಯಲ್ಲಿ ಸುಮಾರು 20 ಲಕ್ಷ ಜನರು ವೀಕ್ಷಿಸಿದ್ದಾರೆ ಎಂಬ ಅಂದಾಜಿದೆ. ಈ ಯಶಸ್ಸಿಗೆ ಕೈಜೋಡಿಸಿದ ಸಾರ್ವಜನಿಕರು, ಅಧಿಕಾರಿಗಳು ಹಾಗೂ ಎಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತೇನೆ.
- ಇಂದು ತುಮಕೂರು ನಗರದ ಶ್ರೀ ಶಿವಕುಮಾರ ಮಹಾಸ್ವಾಮೀಜಿ ವೃತ್ತದಲ್ಲಿ ಅಂದಾಜು ₹7 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಿರುವ ಬೃಹತ್ ಎಲ್ಇಡಿ ಡಿಜಿಟಲ್ ಡಿಸ್ಪ್ಲೇ ವ್ಯವಸ್ಥೆಯನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದೆ. (2/2) -
Dr. G Parameshwara
@DrParameshwara
ತುಮಕೂರು ಮಹಾನಗರ ಪಾಲಿಕೆ, ತುಮಕೂರು ನಗರಾಭಿವೃದ್ಧಿ ಪ್ರಾಧಿಕಾರದ ವತಿಯಿಂದ ಶ್ರೀ ಶಿವಕುಮಾರ ಮಹಾಸ್ವಾಮೀಜಿ ವೃತ್ತದಲ್ಲಿ ಸುಮಾರು 7 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸಿರುವ ಬೃಹತ್ ಎಲ್ಇಡಿ ಪರದೆಯನ್ನು ಶ್ರೀ ಸಿದ್ಧಗಂಗಾ ಮಠದ ಪರಮಪೂಜ್ಯ ಶ್ರೀ ಸಿದ್ಧಲಿಂಗ ಸ್ವಾಮೀಜಿಯವರ ಜೊತೆಗೂಡಿ ಉದ್ಘಾಟಿಸಿದೆ.
ಕಾರ್ಯಕ್ರಮದಲ್ಲಿ ತುಮಕೂರು ನಗರ ಶಾಸಕರಾದ ಜಿ.ಬಿ.ಜ್ಯೋತಿಗಣೇಶ್, ಪಾವಗಡ ಶಾಸಕರಾದ ಹೆಚ್.ವಿ.ವೆಂಕಟೇಶ್, ಜಿಲ್ಲಾಧಿಕಾರಿಗಳಾದ ಶುಭ ಕಲ್ಯಾಣ್, ಅಪರ ಪೊಲೀಸ್ ವರಿಷ್ಠಾಧಿಕಾರಿಗಳಾದ ಗೋಪಾಲ್, ತುಮಕೂರು ಮಹಾನಗರ ಪಾಲಿಕೆ ಆಯುಕ್ತರಾದ ಶುಭ, ತುಮಕೂರು ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರಾದ ಉಮೇಶ್, ಜಿಲ್ಲಾ ಗ್ಯಾರಂಟಿ ಅನುಷ್ಟಾನ ಪ್ರಾಧಿಕಾರದ ಅಧ್ಯಕ್ಷರಾದ ಚಂದ್ರಶೇಖರ್ಗೌಡ ಅವರು ಸೇರಿದಂತೆ ಇತರರು ಉಪಸ್ಥಿತರಿದ್ದರು.
Dr. G Parameshwara
@DrParameshwara
I inaugurated the giant LED screen, developed at Sri Shivakumara Mahaswamiji Circle at a cost of approximately ₹7 crore by the Tumakuru City Corporation and Tumakuru Urban Development Authority, in the gracious presence of His Holiness Sri Siddalinga Swamiji of Siddaganga Math.
Tumakuru City MLA G.B. Jyothi Ganesh, Pavagada MLA H.V. Venkatesh, Deputy Commissioner Shubha Kalyan, Additional Superintendent of Police Gopal, Tumakuru City Corporation Commissioner Shubha, Tumakuru Urban Development Authority Commissioner Umesh, District Guarantee Implementation Authority Chairman Chandrashekhar Gowda, and other dignitaries were present on the occasion. -
Dr. G Parameshwara
@DrParameshwara
ಬ್ರಿಟಿಷರ ದಮನಕಾರಿ ನೀತಿಗಳ ವಿರುದ್ಧ ಹೋರಾಡಿ, ಆದಿವಾಸಿಗಳ ಹಕ್ಕುಗಳಿಗಾಗಿ ಸ್ವಾಭಿಮಾನದ ಧ್ವನಿ ಎತ್ತಿದ ಮಹಾನ್ ಸ್ವಾತಂತ್ರ್ಯ ಹೋರಾಟಗಾರ ಬಿರ್ಸಾ ಮುಂಡಾ ಅವರ ಜಯಂತಿಯಂದು ನನ್ನ ನಮನಗಳು.
ಬಿರ್ಸಾ ಮುಂಡಾ ಅವರು ಬ್ರಿಟಿಷರ ಆಳ್ವಿಕೆಯಲ್ಲಿ ಆದಿವಾಸಿ ಸಮುದಾಯಗಳು ಎದುರಿಸುತ್ತಿದ್ದ ಶೋಷಣೆ ಮತ್ತು ಅನ್ಯಾಯದ ವಿರುದ್ಧ ಸಿಡಿದೆದ್ದು, ಚಿಕ್ಕ ವಯಸ್ಸಿನಲ್ಲಿಯೇ ಆದಿವಾಸಿಗಳನ್ನು ಸಂಘಟಿಸಿ, ಅವರ ಭೂಮಿ, ಅರಣ್ಯ ಹಾಗೂ ಸಾಂಪ್ರದಾಯಿಕ ಹಕ್ಕುಗಳ ರಕ್ಷಣೆಗಾಗಿ ಹೋರಾಡಿದರು.
ಆದಿವಾಸಿ ಸಮುದಾಯಗಳು ತಮ್ಮ ಹಕ್ಕುಗಳನ್ನು ಕಾಪಾಡಿಕೊಂಡು, ಸ್ವಾಭಿಮಾನದಿಂದ ಬದುಕಬೇಕು ಎಂಬುದು ಅವರ ಹೋರಾಟದ ಆಶಯವಾಗಿತ್ತು. ಜನರಲ್ಲಿ ಒಗ್ಗಟ್ಟು ಮತ್ತು ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸಿದ ಬಿರ್ಸಾ ಮುಂಡಾ ಅವರು, ತಮ್ಮ ಹೋರಾಟದ ಮೂಲಕ ಸಾಮಾಜಿಕ ನ್ಯಾಯ ಮತ್ತು ಸಮಾನತೆಯ ಮಹತ್ವವನ್ನು ಸಾರಿದರು. ಅವರ ಧೈರ್ಯ ಮತ್ತು ನಾಯಕತ್ವ ದೇಶದ ಸ್ವಾತಂತ್ರ್ಯ ಹೋರಾಟದ ಇತಿಹಾಸದಲ್ಲಿ ಎಂದಿಗೂ ಅಜರಾಮರ. -
Dr. G Parameshwara
@DrParameshwara
ಭೂದಾನ ಚಳವಳಿಯ ಹರಿಕಾರ, ಮಹಾನ್ ಗಾಂಧಿವಾದಿ ನಾಯಕ ಆಚಾರ್ಯ ವಿನೋಬಾ ಭಾವೆ ಅವರ ಪುಣ್ಯಸ್ಮರಣೆಯಂದು ನನ್ನ ಗೌರವಪೂರ್ವಕ ನಮನಗಳು.
ಮಹಾತ್ಮ ಗಾಂಧೀಜಿಯವರ ಅಹಿಂಸೆ, ಸತ್ಯ ಮತ್ತು ಸರಳ ಬದುಕಿನ ಆದರ್ಶಗಳನ್ನು ಮೈಗೂಡಿಸಿಕೊಂಡಿದ್ದ ವಿನೋಬಾ ಭಾವೆ ಅವರು, ಸಮಾಜದಲ್ಲಿ ಸಮಾನತೆ ನೆಲೆಸಬೇಕು, ಬಡವರು ಮತ್ತು ಹಿಂದುಳಿದವರಿಗೂ ಗೌರವದಿಂದ ಬದುಕುವ ಅವಕಾಶ ಸಿಗಬೇಕು ಎಂಬ ಆಶಯದೊಂದಿಗೆ ತಮ್ಮ ಜೀವನವನ್ನು ಸಮಾಜಸೇವೆಗೆ ಮುಡಿಪಾಗಿಟ್ಟವರು.
ಭೂಮಿಯಿಲ್ಲದ ಬಡ ಕುಟುಂಬಗಳ ಸಂಕಷ್ಟವನ್ನು ಅರಿತಿದ್ದ ಅವರು, ಭೂದಾನ ಚಳವಳಿಯ ಮೂಲಕ ಭೂಮಾಲೀಕರು ಸ್ವಯಂಪ್ರೇರಣೆಯಿಂದ ಭೂಮಿಯನ್ನು ದಾನ ಮಾಡುವಂತೆ ಮನವೊಲಿಸಿದರು. ಆ ಮೂಲಕ ಸಾವಿರಾರು ಭೂಹೀನ ಕುಟುಂಬಗಳಿಗೆ ಭೂಮಿ ದೊರೆಯುವಂತೆ ಮಾಡಲು ಶ್ರಮಿಸಿದರು. ಬಡವರ ಬದುಕಿನಲ್ಲಿ ಬದಲಾವಣೆ ತರಲು ಅವರು ಕೈಗೊಂಡ ಈ ಶಾಂತಿಯುತ ಹೋರಾಟ ಭಾರತದ ಸಾಮಾಜಿಕ ಸುಧಾರಣೆಯ ಇತಿಹಾಸದಲ್ಲಿ ಮಹತ್ವದ ಸ್ಥಾನ ಪಡೆದಿದೆ.
ಸಮಾಜದ ಅಭಿವೃದ್ಧಿ ಎಂದರೆ ಎಲ್ಲರಿಗೂ ಬದುಕಲು ಸಮಾನ ಅವಕಾಶಗಳು ದೊರೆಯಬೇಕು. ಅದಕ್ಕಾಗಿ ಜಾತಿ, ವರ್ಗ ಮತ್ತು ಆರ್ಥಿಕ ಅಸಮಾನತೆಗಳನ್ನು ಮೀರಿ ಎಲ್ಲರೂ ಒಗ್ಗಟ್ಟಿನಿಂದ ಬದುಕುವ ಸಮಾಜವನ್ನು ಕಟ್ಟಲು ಅವರು ಶ್ರಮಿಸಿದರು. ಅವರ ಸರ್ವೋದಯದ ಚಿಂತನೆಗಳು ಇಂದಿಗೂ ಪ್ರಸ್ತುತವಾಗಿವೆ.
ವಿನೋಬಾ ಭಾವೆ ಅವರು ತೋರಿದ ಮಾನವೀಯತೆ, ಸಹಬಾಳ್ವೆ ಮತ್ತು ಸಾಮಾಜಿಕ ನ್ಯಾಯದ ಹಾದಿ ನಮಗೆ ಸದಾ ಮಾರ್ಗದರ್ಶಿಯಾಗಲಿ. ಸಮಾಜದ ಕಟ್ಟಕಡೆಯ ವ್ಯಕ್ತಿಗೂ ನ್ಯಾಯ, ಗೌರವ ಮತ್ತು ಬದುಕುವ ಅವಕಾಶಗಳು ದೊರೆಯುವಂತೆ ಶ್ರಮಿಸುವ ಮೂಲಕ ಅವರ ಆದರ್ಶಗಳನ್ನು ಮುಂದುವರಿಸೋಣ. -
Post not available here, view on X
Dr. G Parameshwara
@DrParameshwara
ತುಮಕೂರು ಇನ್ನು ಮುಂದೆ ಸಣ್ಣ ನಗರ ಎಂಬ ಭಾವನೆ ಯಾರಲ್ಲಿಯೂ ಇರಬಾರದು. ತುಮಕೂರು ಬೆಂಗಳೂರಿನ ಒಂದು ಭಾಗವಾಗಿ ಬೆಳೆಯುತ್ತಿದೆ. ಈಗಾಗಲೇ ರಸ್ತೆ ಸಂಪರ್ಕದ ಮೂಲಕ ಬೆಂಗಳೂರು ಮತ್ತು ತುಮಕೂರು ನಗರಗಳು ಹತ್ತಿರವಾಗಿವೆ. ಬೆಂಗಳೂರು ನಗರದಲ್ಲಿ ರಸ್ತೆ ಬದಿಯ ಒಂದು ಎಕರೆ ಜಮೀನು ಸಿಗುವುದೂ ಕಷ್ಟವಾಗಿದ್ದು, ಸಿಕ್ಕರೂ ₹5-10 ಕೋಟಿ ಬೆಲೆ ಇದೆ. ಮುಂದಿನ ದಿನಗಳಲ್ಲಿ ತುಮಕೂರು ಮತ್ತು ಬೆಂಗಳೂರು ನಡುವಿನ ಸಂಪರ್ಕ ಇನ್ನಷ್ಟು ಸುಧಾರಿಸಲಿದೆ. ಜಿಲ್ಲೆಯ ಯುವಜನರಿಗೆ, ಮಕ್ಕಳಿಗೆ ಕೈಗಾರಿಕೆ ಹಾಗೂ ಶಿಕ್ಷಣ ಕ್ಷೇತ್ರಗಳಲ್ಲಿ ಹೆಚ್ಚಿನ ಅವಕಾಶಗಳು ದೊರೆಯಬೇಕು ಎಂಬುದು ನಮ್ಮ ಆಶಯವಾಗಿದೆ.
ಜಿಲ್ಲಾಧಿಕಾರಿಗಳು ಯಾವುದೇ ಜವಾಬ್ದಾರಿ ನೀಡಿದರೂ ಪ್ರಾಮಾಣಿಕವಾಗಿ ತಮ್ಮ ಸಂಪೂರ್ಣ ಪ್ರಯತ್ನವನ್ನು ಮಾಡುತ್ತಾರೆ. ಅಂದು ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರನ್ನು ಮೂರು ಬಾರಿ ತುಮಕೂರಿಗೆ ಕರೆತಂದು, ಲಕ್ಷಾಂತರ ಜನರು ಭಾಗವಹಿಸಿದ ಬೃಹತ್ ಕಾರ್ಯಕ್ರಮಗಳನ್ನು ಆಯೋಜಿಸಿ, ಸರ್ಕಾರದ ವಿವಿಧ ಯೋಜನೆಗಳ ಲಕ್ಷಾಂತರ ಫಲಾನುಭವಿಗಳಿಗೆ ಸೌಲಭ್ಯ ತಲುಪಿಸುವಲ್ಲಿ ಜಿಲ್ಲಾಡಳಿತ ಯಶಸ್ವಿಯಾಗಿದೆ. ಈ ಕಾರ್ಯಕ್ರಮಗಳ ಬಗ್ಗೆ ಮುಖ್ಯಮಂತ್ರಿಗಳೂ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಜಿಲ್ಲಾಧಿಕಾರಿಗಳಿಗೆ ಅಭಿನಂದನೆ ಸಲ್ಲಿಸುತ್ತೇನೆ.
ಮಹಾನಗರ ಪಾಲಿಕೆ ಆಯುಕ್ತರು ತಮ್ಮ ತಂಡದ ಅಧಿಕಾರಿಗಳೊಂದಿಗೆ ಹಗಲಿರುಳು ಶ್ರಮಿಸಿ ಈ ಯೋಜನೆಯನ್ನು ಯಶಸ್ವಿಗೊಳಿಸಿದ್ದಾರೆ. ಬೆಳಗಿನ ಜಾವದವರೆಗೂ ಕಾಮಗಾರಿಯ ಮೇಲ್ವಿಚಾರಣೆ ನಡೆಸಿ, ನಿರಂತರವಾಗಿ ಪ್ರಗತಿಯ ಮಾಹಿತಿಯನ್ನು ಹಂಚಿಕೊಳ್ಳುತ್ತಿದ್ದರು. ಅವರ ಪರಿಶ್ರಮಕ್ಕೆ ವಿಶೇಷ ಅಭಿನಂದನೆಗಳು.
ತುಮಕೂರು ದಸರಾವನ್ನು ಮತ್ತಷ್ಟು ವಿಸ್ತೃತವಾಗಿ ಆಚರಿಸಬೇಕೆಂಬ ಉದ್ದೇಶದಿಂದ ಕಳೆದ ಮೂರು ವರ್ಷಗಳಿಂದ ಜಿಲ್ಲೆಯಲ್ಲಿ ದಸರಾ ಮಹೋತ್ಸವವನ್ನು ಆಯೋಜಿಸಲಾಗುತ್ತಿದೆ. ಹಿಂದೆ ಸ್ಥಳೀಯವಾಗಿ ಸಣ್ಣ ಪ್ರಮಾಣದಲ್ಲಿ ನಡೆಯುತ್ತಿದ್ದ ಊರ ಹಬ್ಬವನ್ನು ಎಲ್ಲರ ಸಹಕಾರದೊಂದಿಗೆ ವಿಸ್ತರಿಸಿ, ಸಾರ್ವಜನಿಕರು ಮತ್ತು ಅಧಿಕಾರಿಗಳನ್ನು ಒಳಗೊಂಡು ದೊಡ್ಡ ಮಟ್ಟದಲ್ಲಿ ಆಚರಿಸಲಾಗುತ್ತಿದೆ. ಈ ಬಾರಿಯ ತುಮಕೂರು ದಸರಾವನ್ನು ಒಂಬತ್ತು-ಹತ್ತು ದಿನಗಳ ಅವಧಿಯಲ್ಲಿ ಸುಮಾರು 20 ಲಕ್ಷ ಜನರು ವೀಕ್ಷಿಸಿದ್ದಾರೆ ಎಂಬ ಅಂದಾಜಿದೆ. ಈ ಯಶಸ್ಸಿಗೆ ಕೈಜೋಡಿಸಿದ ಸಾರ್ವಜನಿಕರು, ಅಧಿಕಾರಿಗಳು ಹಾಗೂ ಎಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತೇನೆ.
- ಇಂದು ತುಮಕೂರು ನಗರದ ಶ್ರೀ ಶಿವಕುಮಾರ ಮಹಾಸ್ವಾಮೀಜಿ ವೃತ್ತದಲ್ಲಿ ಅಂದಾಜು ₹7 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಿರುವ 'ತುಮಕೂರು ಸ್ಕ್ವೇರ್' ಬೃಹತ್ ಎಲ್ಇಡಿ ಡಿಜಿಟಲ್ ಡಿಸ್ಪ್ಲೇ ವ್ಯವಸ್ಥೆಯನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದೆ. (2/2) -
Post not available here, view on X
Dr. G Parameshwara
@DrParameshwara
I inaugurated the “Tumakuru Square” giant LED screen, developed at Sri Shivakumara Mahaswamiji Circle at a cost of approximately ₹7 crore by the Tumakuru City Corporation and Tumakuru Urban Development Authority, in the gracious presence of His Holiness Sri Siddalinga Swamiji of Siddaganga Math.
Tumakuru City MLA G.B. Jyothi Ganesh, Pavagada MLA H.V. Venkatesh, Deputy Commissioner Shubha Kalyan, Additional Superintendent of Police Gopal, Tumakuru City Corporation Commissioner Shubha, Tumakuru Urban Development Authority Commissioner Umesh, District Guarantee Implementation Authority Chairman Chandrashekhar Gowda, and other dignitaries were present on the occasion. -
Dr. G Parameshwara
@DrParameshwara
I have written to Prime Minister Shri @narendramodi, Union Home Minister Shri @AmitShah and Union Minister for Social Justice and Empowerment @Drvirendrakum13, seeking constitutional protection for Karnataka’s enhanced SC/ST reservation law through its inclusion in the Ninth Schedule.
Karnataka increased SC reservation from 15% to 17% and ST reservation from 3% to 7%, based on the recommendations of the Justice H.N. Nagamohan Das Commission. This is an important step towards ensuring better educational and employment opportunities for marginalised communities.
Tamil Nadu’s 69% reservation law was included in the Ninth Schedule in 1994. Karnataka’s request deserves the same serious consideration.
I have urged the Union Government to take timely action and find a lasting constitutional solution.
Lakhs of SC/ST students and job seekers are counting on this. Their future must not be left in uncertainty.
Dr. G Parameshwara
@DrParameshwara
ಕರ್ನಾಟಕದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಹೆಚ್ಚುವರಿ ಮೀಸಲಾತಿಗೆ ಸಂವಿಧಾನಾತ್ಮಕ ರಕ್ಷಣೆ ಒದಗಿಸುವ ನಿಟ್ಟಿನಲ್ಲಿ, ಮೀಸಲಾತಿ ಹೆಚ್ಚಳದ ಕಾಯ್ದೆಯನ್ನು ಸಂವಿಧಾನದ 9ನೇ ಅನುಸೂಚಿಗೆ ಸೇರಿಸುವಂತೆ ಕೋರಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಶ್ರೀ ಅಮಿತ್ ಶಾ ಹಾಗೂ ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವ ಡಾ. ವೀರೇಂದ್ರ ಕುಮಾರ್ ಅವರಿಗೆ ಪತ್ರ ಬರೆದಿದ್ದೇನೆ.
ನ್ಯಾಯಮೂರ್ತಿ ಎಚ್.ಎನ್. ನಾಗಮೋಹನ್ ದಾಸ್ ಆಯೋಗದ ಶಿಫಾರಸುಗಳ ಆಧಾರದ ಮೇಲೆ ಕರ್ನಾಟಕದಲ್ಲಿ ಪರಿಶಿಷ್ಟ ಜಾತಿಗಳ ಮೀಸಲಾತಿಯನ್ನು ಶೇ.15ರಿಂದ ಶೇ.17ಕ್ಕೆ ಹಾಗೂ ಪರಿಶಿಷ್ಟ ಪಂಗಡಗಳ ಮೀಸಲಾತಿಯನ್ನು ಶೇ.3ರಿಂದ ಶೇ.7ಕ್ಕೆ ಹೆಚ್ಚಿಸಲಾಗಿದೆ. ಹಿಂದುಳಿದ ಸಮುದಾಯಗಳಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಹೆಚ್ಚಿನ ಅವಕಾಶಗಳನ್ನು ಕಲ್ಪಿಸುವುದು ಇದರ ಪ್ರಮುಖ ಉದ್ದೇಶವಾಗಿದೆ.
1994ರಲ್ಲಿ ತಮಿಳುನಾಡಿನ ಶೇ.69ರ ಮೀಸಲಾತಿ ಕಾಯ್ದೆಯನ್ನು ಸಂವಿಧಾನದ 9ನೇ ಅನುಸೂಚಿಗೆ ಸೇರಿಸಲಾಗಿತ್ತು. ಕೇಂದ್ರ ಸರ್ಕಾರವು ಕರ್ನಾಟಕದ ಮನವಿಯನ್ನೂ ಅದೇ ರೀತಿಯಲ್ಲಿ ಗಂಭೀರವಾಗಿ ಪರಿಗಣಿಸಬೇಕಿದೆ.
ಈ ವಿಚಾರದಲ್ಲಿ ಕೇಂದ್ರ ಸರ್ಕಾರ ಸಕಾಲದಲ್ಲಿ ಕ್ರಮ ಕೈಗೊಂಡು, ಮೀಸಲಾತಿ ರಕ್ಷಣೆಗೆ ಶಾಶ್ವತ ಸಾಂವಿಧಾನಿಕ ಪರಿಹಾರ ಒದಗಿಸುವಂತೆ ಒತ್ತಾಯಿಸಿದ್ದೇನೆ.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಲಕ್ಷಾಂತರ ವಿದ್ಯಾರ್ಥಿಗಳು ಹಾಗೂ ಉದ್ಯೋಗಾಕಾಂಕ್ಷಿಗಳ ಭವಿಷ್ಯ ಈ ವಿಚಾರದ ಮೇಲೆ ಅವಲಂಬಿತವಾಗಿದೆ. ಅವರ ಭವಿಷ್ಯ ಅನಿಶ್ಚಿತತೆಯಲ್ಲಿ ಉಳಿಯಬಾರದು. -
Dr. G Parameshwara
@DrParameshwara
ಇಂದು ನನ್ನ ಗೃಹಕಚೇರಿಯಲ್ಲಿ ಸಾರ್ವಜನಿಕರನ್ನು ಭೇಟಿಯಾಗಿ, ಅವರ ಕುಂದುಕೊರತೆಗಳನ್ನು ಆಲಿಸಿದೆ.
ವಿವಿಧ ಸಮಸ್ಯೆಗಳು ಹಾಗೂ ಮನವಿಗಳೊಂದಿಗೆ ಆಗಮಿಸಿದ್ದ ಸಾರ್ವಜನಿಕರ ಅಹವಾಲುಗಳನ್ನು ಸ್ವೀಕರಿಸಿ, ಅವುಗಳಿಗೆ ಸೂಕ್ತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳುವ ಭರವಸೆ ನೀಡಿದೆ. -
Dr. G Parameshwara
@DrParameshwara
ರಾಜ್ಯಸಭಾ ಸದಸ್ಯರಾದ ಶ್ರೀ ಲೆಹರ್ ಸಿಂಗ್, ಮಾಜಿ ಸಂಸದರಾದ ಶ್ರೀ ಎಸ್.ಪಿ. ಮುದ್ದಹನುಮೇಗೌಡ ಅವರು ಇಂದು ನನ್ನ ಗೃಹಕಚೇರಿಯಲ್ಲಿ ಸೌಹಾರ್ದಯುತವಾಗಿ ಭೇಟಿಯಾದರು.
ಈ ಸಂದರ್ಭದಲ್ಲಿ ಉಭಯ ನಾಯಕರೊಂದಿಗೆ ಕುಶಲೋಪರಿ ವಿಚಾರಿಸಿ, ಮಾತುಕತೆ ನಡೆಸಿದೆ. -
Dr. G Parameshwara
@DrParameshwara
ದೋಹಾದಲ್ಲಿ ಇತ್ತೀಚೆಗೆ ನಡೆದ ಐಎಸ್ಎಸ್ಎಫ್ (ISSF) ವಿಶ್ವ ಶೂಟಿಂಗ್ ಚಾಂಪಿಯನ್ಶಿಪ್ನ 25 ಮೀಟರ್ ಪಿಸ್ತೂಲ್ ತಂಡ ವಿಭಾಗದಲ್ಲಿ ಚಿನ್ನದ ಪದಕ ಗೆದ್ದು ದೇಶಕ್ಕೆ ಕೀರ್ತಿ ತಂದ ಕ್ರೀಡಾಪಟು ದಿವ್ಯಾ ಟಿ.ಎಸ್. ಅವರನ್ನು ಇಂದು ನನ್ನ ಗೃಹಕಚೇರಿಯಲ್ಲಿ ಗೌರವಿಸಿ ಅಭಿನಂದಿಸಿದೆ.
ಅಂತಾರಾಷ್ಟ್ರೀಯ ಮಟ್ಟದ ಪ್ರತಿಷ್ಠಿತ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಗೆಲ್ಲುವುದು ಸುಲಭದ ಸಾಧನೆಯಲ್ಲ. ದಿವ್ಯಾ ಅವರು ತಮ್ಮ ನಿರಂತರ ಪರಿಶ್ರಮ, ಶಿಸ್ತು ಮತ್ತು ಆತ್ಮವಿಶ್ವಾಸದ ಮೂಲಕ ಈ ಸಾಧನೆ ಮಾಡಿದ್ದಾರೆ. ವಿಶ್ವಮಟ್ಟದ ಸ್ಪರ್ಧೆಯಲ್ಲಿ ಉತ್ತಮ ಪ್ರದರ್ಶನ ನೀಡಿ ದೇಶಕ್ಕೆ ಚಿನ್ನದ ಪದಕ ತಂದುಕೊಟ್ಟಿರುವುದು ಸಂತಸದ ಸಂಗತಿ. ಇದು ಕನ್ನಡಿಗರಿಗೆ ಹೆಮ್ಮೆ ತಂದುಕೊಟ್ಟಿದೆ.
ದಿವ್ಯಾ ಅವರ ಸಾಧನೆ ರಾಜ್ಯದ ಯುವ ಕ್ರೀಡಾಪಟುಗಳಿಗೆ, ವಿಶೇಷವಾಗಿ ಶೂಟಿಂಗ್ ಕ್ರೀಡೆಯಲ್ಲಿ ಆಸಕ್ತಿ ಹೊಂದಿರುವವರಿಗೆ ಸ್ಫೂರ್ತಿಯಾಗಲಿ. ಪ್ರತಿಭೆಯ ಜೊತೆಗೆ ನಿರಂತರ ಅಭ್ಯಾಸ, ಕಠಿಣ ಪರಿಶ್ರಮ ಮತ್ತು ಸಾಧಿಸುವ ಛಲವಿದ್ದರೆ ಅಂತಾರಾಷ್ಟ್ರೀಯ ಮಟ್ಟದಲ್ಲಿಯೂ ಯಶಸ್ಸು ಗಳಿಸಬಹುದು ಎಂಬುದನ್ನು ಅವರು ತೋರಿಸಿಕೊಟ್ಟಿದ್ದಾರೆ.
ಮುಂದಿನ ದಿನಗಳಲ್ಲಿಯೂ ದಿವ್ಯಾ ಅವರು ಇನ್ನಷ್ಟು ಉತ್ತಮ ಪ್ರದರ್ಶನ ನೀಡಿ, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚಿನ ಪದಕಗಳನ್ನು ಗೆಲ್ಲಲಿ. ಅವರ ಕ್ರೀಡಾ ಸಾಧನೆಯ ಪಯಣ ಹೀಗೆಯೇ ಮುಂದುವರಿಯಲಿ. ದೇಶ ಮತ್ತು ರಾಜ್ಯಕ್ಕೆ ಮತ್ತಷ್ಟು ಕೀರ್ತಿ ತರಲಿ ಎಂದು ಶುಭಹಾರೈಸಿದೆ.This media couldn't be displayed. See it on the original post. -
Dr. G Parameshwara
@DrParameshwara
I have written to Prime Minister Shri @narendramodi, Union Home Minister Shri @AmitShah and Union Minister for Social Justice and Empowerment @Drvirendrakum13 , urging their immediate intervention to include Karnataka’s SC/ST Reservation Act, 2022, in the Ninth Schedule of the Constitution.
Following the recent High Court judgment, it is essential to secure constitutional protection for the enhanced reservation of 17% for Scheduled Castes and 7% for Scheduled Tribes.
Tamil Nadu’s 69% reservation framework provides a clear precedent. Karnataka deserves equal consideration.
I have urged the Union Government to initiate the necessary constitutional amendment and take a time-bound decision to safeguard the rights and opportunities of our SC/ST communities.
ಕರ್ನಾಟಕದಲ್ಲಿ ಪರಿಶಿಷ್ಟ ಜಾತಿಗಳ ಮೀಸಲಾತಿಯನ್ನು ಶೇ.15ರಿಂದ ಶೇ.17ಕ್ಕೆ ಹಾಗೂ ಪರಿಶಿಷ್ಟ ಪಂಗಡಗಳ ಮೀಸಲಾತಿಯನ್ನು ಶೇ.3ರಿಂದ ಶೇ.7ಕ್ಕೆ ಹೆಚ್ಚಿಸುವ ಉದ್ದೇಶದಿಂದ ಜಾರಿಗೊಳಿಸಲಾದ ಕರ್ನಾಟಕ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ಶೈಕ್ಷಣಿಕ ಸಂಸ್ಥೆಗಳಲ್ಲಿ ಪ್ರವೇಶ ಹಾಗೂ ರಾಜ್ಯ ಸರ್ಕಾರಿ ಸೇವೆಗಳಲ್ಲಿ ನೇಮಕಾತಿ ಅಥವಾ ಹುದ್ದೆಗಳ ಮೀಸಲಾತಿ) ಕಾಯ್ದೆ, 2022 ಅನ್ನು ಸಂವಿಧಾನದ 9ನೇ ಅನುಸೂಚಿಗೆ ಸೇರಿಸುವಂತೆ ಕೋರಿ ಗೌರವಾನ್ವಿತ ಪ್ರಧಾನಮಂತ್ರಿಗಳಾದ ಶ್ರೀ ನರೇಂದ್ರ ಮೋದಿ, ಗೃಹ ಸಚಿವರಾದ ಶ್ರೀ ಅಮಿತ್ ಶಾ ಹಾಗೂ ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವರಾದ ಶ್ರೀ ಡಾ.ವೀರೇಂದ್ರ ಕುಮಾರ್ ಅವರಿಗೆ ಪತ್ರ ಬರೆದಿದ್ದೇನೆ.
ಸುಮಾರು ಏಳು ದಶಕಗಳಿಂದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೀಸಲಾತಿ ಪ್ರಮಾಣ ಬದಲಾಗದೆ ಉಳಿದಿತ್ತು. ಈ ಸಮುದಾಯಗಳ ಜನಸಂಖ್ಯೆಯ ಹೆಚ್ಚಳ, ಸಾಮಾಜಿಕ ಮತ್ತು ಶೈಕ್ಷಣಿಕ ಹಿಂದುಳಿದಿರುವಿಕೆ ಹಾಗೂ ನ್ಯಾಯಮೂರ್ತಿ ಎಚ್.ಎನ್. ನಾಗಮೋಹನ್ ದಾಸ್ ಆಯೋಗದ ಶಿಫಾರಸುಗಳನ್ನು ಆಧರಿಸಿ ಮೀಸಲಾತಿ ಪ್ರಮಾಣವನ್ನು ಹೆಚ್ಚಿಸಲಾಗಿತ್ತು. ಈ ಕಾಯ್ದೆಗೆ ಸಂವಿಧಾನಾತ್ಮಕ ರಕ್ಷಣೆ ಒದಗಿಸಲು 9ನೇ ಅನುಸೂಚಿಗೆ ಸೇರಿಸಬೇಕೆಂದೂ ಆಯೋಗ ಶಿಫಾರಸು ಮಾಡಿತ್ತು.
ಆದರೆ, ಒಟ್ಟು ಮೀಸಲಾತಿ ಶೇ.56ಕ್ಕೆ ಏರಿಕೆಯಾಗಿರುವುದು ಸಂವಿಧಾನಾತ್ಮಕವಾಗಿ ನಿಗದಿಪಡಿಸಲಾದ ಶೇ.50ರ ಮಿತಿಯನ್ನು ಮೀರುತ್ತದೆ ಎಂಬ ಕಾರಣಕ್ಕೆ ಕರ್ನಾಟಕ ಹೈಕೋರ್ಟ್ 2026ರ ಅಕ್ಟೋಬರ್ 12ರಂದು ಮೀಸಲಾತಿ ಹೆಚ್ಚಳದ ನಿಬಂಧನೆಗಳನ್ನು ರದ್ದುಗೊಳಿಸಿದೆ. ಈ ತೀರ್ಪಿನ ವಿರುದ್ಧ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್ನಲ್ಲಿ ಮೇಲ್ಮನವಿ ಸಲ್ಲಿಸಿದೆ.
1994ರಲ್ಲಿ ಸಂವಿಧಾನದ 76ನೇ ತಿದ್ದುಪಡಿಯ ಮೂಲಕ ತಮಿಳುನಾಡಿನ ಶೇ.69ರ ಮೀಸಲಾತಿ ಕಾಯ್ದೆಯನ್ನು 9ನೇ ಅನುಸೂಚಿಗೆ ಸೇರಿಸಲಾಗಿತ್ತು. ಅದೇ ಮಾದರಿಯಲ್ಲಿ ಕರ್ನಾಟಕದ ಶೇ.56ರ ಒಟ್ಟು ಮೀಸಲಾತಿಯ ಭಾಗವಾಗಿರುವ ಪರಿಶಿಷ್ಟ ಜಾತಿಗಳ ಶೇ.17 ಹಾಗೂ ಪರಿಶಿಷ್ಟ ಪಂಗಡಗಳ ಶೇ.7ರ ಮೀಸಲಾತಿಗೂ ಸಂವಿಧಾನಾತ್ಮಕ ರಕ್ಷಣೆ ಒದಗಿಸುವ ಕುರಿತು ಕೇಂದ್ರ ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು.
ಕರ್ನಾಟಕ ಸರ್ಕಾರವು 2023ರ ಮಾರ್ಚ್ 23ರಂದೇ ಈ ಸಂಬಂಧ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು. 2025ರ ಡಿಸೆಂಬರ್ 18ರಂದು ರಾಜ್ಯ ವಿಧಾನಸಭೆಯಲ್ಲಿಯೂ ನಿರ್ಣಯ ಅಂಗೀಕರಿಸಲಾಗಿತ್ತು. ನಿಕಟಪೂರ್ವ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯ ಅವರು 2026ರ ಏಪ್ರಿಲ್ 16ರಂದು ಪ್ರಧಾನಮಂತ್ರಿಗಳಿಗೆ ಪತ್ರ ಬರೆದು ಇದೇ ಬೇಡಿಕೆಯನ್ನು ಪುನರುಚ್ಚರಿಸಿದ್ದರು.
ಈ ಹಿನ್ನೆಲೆಯಲ್ಲಿ ಪ್ರಧಾನಮಂತ್ರಿಗಳ ವೈಯಕ್ತಿಕ ಮಧ್ಯಪ್ರವೇಶವನ್ನು ಕೋರಿ ಪತ್ರದಲ್ಲಿ ಪ್ರಮುಖವಾಗಿ ಈ ಕೆಳಗಿನ ಬೇಡಿಕೆಗಳನ್ನು ಮುಂದಿಟ್ಟಿದ್ದೇನೆ.
1. ಪರಿಶಿಷ್ಟ ಜಾತಿಗಳ ಮೀಸಲಾತಿಯನ್ನು ಶೇ.17ಕ್ಕೆ ಹಾಗೂ ಪರಿಶಿಷ್ಟ ಪಂಗಡಗಳ ಮೀಸಲಾತಿಯನ್ನು ಶೇ.7ಕ್ಕೆ ಹೆಚ್ಚಿಸುವ ಕರ್ನಾಟಕದ ಕಾಯ್ದೆಯನ್ನು ಸಂವಿಧಾನದ 9ನೇ ಅನುಸೂಚಿಗೆ ಸೇರಿಸಬೇಕು.
2. ಕಾಯ್ದೆಗೆ ಸಂವಿಧಾನಾತ್ಮಕ ರಕ್ಷಣೆ ಒದಗಿಸಲು ಅಗತ್ಯವಾದ ಸಂವಿಧಾನ ತಿದ್ದುಪಡಿ ಮಸೂದೆಯನ್ನು ಸಂಸತ್ತಿನಲ್ಲಿ ಮಂಡಿಸುವ ಪ್ರಕ್ರಿಯೆಯನ್ನು ಕೇಂದ್ರ ಸರ್ಕಾರ ತುರ್ತಾಗಿ ಆರಂಭಿಸಬೇಕು.
3. ರಾಷ್ಟ್ರೀಯ ಪರಿಶಿಷ್ಟ ಜಾತಿ ಆಯೋಗ ಹಾಗೂ ರಾಷ್ಟ್ರೀಯ ಪರಿಶಿಷ್ಟ ಪಂಗಡಗಳ ಆಯೋಗಗಳೊಂದಿಗೆ ಸಮಾಲೋಚನೆ ನಡೆಸಿ, ನ್ಯಾಯಾಲಯ ಗುರುತಿಸಿರುವ ಸಂವಿಧಾನಾತ್ಮಕ ಹಾಗೂ ಪ್ರಕ್ರಿಯಾತ್ಮಕ ಸಮಸ್ಯೆಗಳನ್ನು ಪರಿಹರಿಸಲು ಕ್ರಮ ಕೈಗೊಳ್ಳಬೇಕು.
4. ಕೇಂದ್ರ ಕಾನೂನು ಮತ್ತು ನ್ಯಾಯ ಸಚಿವಾಲಯ, ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ, ಬುಡಕಟ್ಟು ವ್ಯವಹಾರಗಳ ಸಚಿವಾಲಯ ಹಾಗೂ ಗೃಹ ಸಚಿವಾಲಯಗಳು ಸಮನ್ವಯದಿಂದ ಕಾರ್ಯನಿರ್ವಹಿಸಿ, ಕಾಲಮಿತಿಯೊಳಗೆ ಸೂಕ್ತ ಸಂವಿಧಾನಾತ್ಮಕ ಮತ್ತು ಶಾಸನಾತ್ಮಕ ಕ್ರಮಗಳನ್ನು ಕೈಗೊಳ್ಳಬೇಕು.
5. ದೇಶದ ಬದಲಾಗುತ್ತಿರುವ ಸಾಮಾಜಿಕ ವಾಸ್ತವಗಳು, ವಿವಿಧ ರಾಜ್ಯಗಳ ಅನುಭವಗಳು ಹಾಗೂ ಸಮಾನತೆ ಮತ್ತು ಸಾಮಾಜಿಕ ನ್ಯಾಯದ ಸಂವಿಧಾನಾತ್ಮಕ ತತ್ವಗಳನ್ನು ಪರಿಗಣಿಸಿ, ಶೇ.50ರ ಮೀಸಲಾತಿ ಮಿತಿಯ ಪ್ರಸ್ತುತತೆ ಮತ್ತು ಅನ್ವಯದ ಕುರಿತು ರಾಷ್ಟ್ರಮಟ್ಟದಲ್ಲಿ ವ್ಯಾಪಕ ಸಮಾಲೋಚನೆ ನಡೆಸಬೇಕು.
ತಮಿಳುನಾಡಿನ ಶೇ.69ರ ಮೀಸಲಾತಿಗೆ ಸಂವಿಧಾನಾತ್ಮಕ ರಕ್ಷಣೆ ಒದಗಿಸಿರುವಂತೆ, ಕರ್ನಾಟಕದ ಶೇ.56ರ ಒಟ್ಟು ಮೀಸಲಾತಿಯ ಭಾಗವಾಗಿರುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಶೇ.24ರ ಒಟ್ಟು ಮೀಸಲಾತಿಗೂ ಸಂವಿಧಾನಾತ್ಮಕ ರಕ್ಷಣೆ ದೊರೆಯಬೇಕೆಂಬುದು ನಮ್ಮ ಆಗ್ರಹವಾಗಿದೆ.
ಸಾಮಾಜಿಕ ನ್ಯಾಯದ ವಿಚಾರವು ರಾಜಕೀಯ ಪಕ್ಷಗಳು ಮತ್ತು ಸರ್ಕಾರಗಳ ನಡುವಿನ ಭಿನ್ನಾಭಿಪ್ರಾಯಗಳನ್ನು ಮೀರಿದ್ದಾಗಿದೆ. ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಆಶಯದಂತೆ ಐತಿಹಾಸಿಕವಾಗಿ ಅವಕಾಶವಂಚಿತರಾದ ಸಮುದಾಯಗಳಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ನ್ಯಾಯಯುತ ಅವಕಾಶಗಳನ್ನು ಕಲ್ಪಿಸುವುದು ನಮ್ಮೆಲ್ಲರ ಸಾಮೂಹಿಕ ಜವಾಬ್ದಾರಿಯಾಗಿದೆ.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಲಕ್ಷಾಂತರ ಜನರ ಭವಿಷ್ಯಕ್ಕೆ ಸಂಬಂಧಿಸಿದ ಈ ಮಹತ್ವದ ವಿಷಯವನ್ನು ರಾಷ್ಟ್ರೀಯ ಸಂವಿಧಾನಾತ್ಮಕ ಮಹತ್ವದ ವಿಚಾರವಾಗಿ ಪರಿಗಣಿಸಿ, ಕರ್ನಾಟಕದ ದೀರ್ಘಕಾಲದ ಪ್ರಸ್ತಾವನೆ ಕುರಿತು ಕೇಂದ್ರ ಸರ್ಕಾರ ಸಕಾರಾತ್ಮಕ ಹಾಗೂ ಕಾಲಮಿತಿಯೊಳಗಿನ ನಿರ್ಧಾರ ಕೈಗೊಂಡು ಅಗತ್ಯ ಶಾಸನಾತ್ಮಕ ಕ್ರಮಗಳನ್ನು ಜರುಗಿಸಬೇಕು ಎಂದು ಮನವಿ ಮಾಡಿದ್ದೇನೆ. -
Dr. G Parameshwara
@DrParameshwara
ಪರಿಸರ ಸಂರಕ್ಷಣೆಗಾಗಿ ತಮ್ಮ ಬದುಕನ್ನೇ ಮುಡಿಪಾಗಿಟ್ಟ ವೃಕ್ಷಮಾತೆ, ಪದ್ಮಶ್ರೀ ಪುರಸ್ಕೃತೆ ಸಾಲುಮರದ ತಿಮ್ಮಕ್ಕ ಅವರ ಪುಣ್ಯಸ್ಮರಣೆಯಂದು ನನ್ನ ಗೌರವಪೂರ್ವಕ ನಮನಗಳು.
ಯಾವುದೇ ಪ್ರತಿಫಲವನ್ನು ನಿರೀಕ್ಷಿಸದೆ ಮರಗಳನ್ನು ನೆಟ್ಟು, ಅವುಗಳನ್ನು ತಮ್ಮ ಮಕ್ಕಳಂತೆ ಪ್ರೀತಿಯಿಂದ ಪೋಷಿಸಿದ ತಿಮ್ಮಕ್ಕ ಅವರ ಬದುಕು ನಮ್ಮೆಲ್ಲರಿಗೂ ಮಾದರಿ.
ಮರಗಳನ್ನು ಬೆಳೆಸುವುದು ಕೇವಲ ಪರಿಸರ ಸಂರಕ್ಷಣೆಯ ಕೆಲಸವಲ್ಲ, ಮುಂದಿನ ಪೀಳಿಗೆಗೆ ನಾವು ನೀಡುವ ಅಮೂಲ್ಯ ಕೊಡುಗೆ ಎಂಬುದನ್ನು ತಿಮ್ಮಕ್ಕ ಅವರು ತಮ್ಮ ಬದುಕಿನದುದ್ದಕ್ಕೂ ತೋರಿಸಿಕೊಟ್ಟಿದ್ದಾರೆ. ಅವರ ಸೇವೆ ನಮಗೆ ಪ್ರಕೃತಿಯ ಮೇಲಿನ ಪ್ರೀತಿ, ಕಾಳಜಿ ಹಾಗೂ ಅದನ್ನು ಉಳಿಸಿಕೊಳ್ಳಬೇಕಾದ ಜವಾಬ್ದಾರಿಯನ್ನು ನೆನಪಿಸುತ್ತದೆ.
ತಿಮ್ಮಕ್ಕ ಅವರು ತೋರಿದ ಹಾದಿಯಲ್ಲಿ ನಾವೆಲ್ಲರೂ ಸಾಗೋಣ. ಹೆಚ್ಚೆಚ್ಚು ಗಿಡಮರಗಳನ್ನು ನೆಟ್ಟು, ಬೆಳೆಸಿ, ನಮ್ಮ ಸುತ್ತಮುತ್ತಲಿನ ಪರಿಸರವನ್ನು ಹಸಿರಾಗಿಸೋಣ. ಅದೇ ನಾವು ಅವರಿಗೆ ಸಲ್ಲಿಸುವ ನಿಜವಾದ ಗೌರವ. -
Dr. G Parameshwara
@DrParameshwara
ದೇಶದ ಪ್ರಥಮ ಪ್ರಧಾನಿ, ಆಧುನಿಕ ಭಾರತದ ನಿರ್ಮಾತೃ ಪಂಡಿತ್ ಜವಾಹರಲಾಲ್ ನೆಹರು ಅವರ ಜನ್ಮದಿನದಂದು ಅವರಿಗೆ ನನ್ನ ಗೌರವದ ನಮನಗಳು. ನಾಡಿನ ಸಮಸ್ತ ಮಕ್ಕಳಿಗೂ ಮಕ್ಕಳ ದಿನಾಚರಣೆಯ ಹಾರ್ದಿಕ ಶುಭಾಶಯಗಳು.
ಸ್ವಾತಂತ್ರ್ಯದ ನಂತರ ದೇಶವನ್ನು ಅಭಿವೃದ್ಧಿಯ ಹಾದಿಯಲ್ಲಿ ಮುನ್ನಡೆಸುವಲ್ಲಿ ನೆಹರು ಅವರ ಕೊಡುಗೆ ಅಪಾರ. ಶಿಕ್ಷಣ, ವಿಜ್ಞಾನ, ತಂತ್ರಜ್ಞಾನ, ಕೈಗಾರಿಕೆ ಸೇರಿದಂತೆ ಹಲವು ಕ್ಷೇತ್ರಗಳ ಅಭಿವೃದ್ಧಿಗೆ ಭದ್ರ ಬುನಾದಿ ಹಾಕಿದ ಅವರು, ಪ್ರಜಾಪ್ರಭುತ್ವ, ಜಾತ್ಯತೀತತೆ, ಸಮಾನತೆ ಮತ್ತು ವೈಜ್ಞಾನಿಕ ಮನೋಭಾವದಂತಹ ಮೌಲ್ಯಗಳಿಗೆ ಹೆಚ್ಚಿನ ಒತ್ತು ನೀಡಿದರು. ಆಧುನಿಕ ಭಾರತದ ನಿರ್ಮಾಣದಲ್ಲಿ ಅವರ ದೂರದೃಷ್ಟಿಯ ನಾಯಕತ್ವ ಮಹತ್ವದ ಪಾತ್ರ ವಹಿಸಿದೆ.
ಮಕ್ಕಳ ಬಗ್ಗೆ ಅಪಾರ ಪ್ರೀತಿ ಮತ್ತು ಕಾಳಜಿ ಹೊಂದಿದ್ದ ನೆಹರು ಅವರು, ಇಂದಿನ ಮಕ್ಕಳೇ ನಾಳಿನ ದೇಶದ ಭವಿಷ್ಯ ಎಂದು ಬಲವಾಗಿ ನಂಬಿದ್ದರು. ಪ್ರತಿಯೊಂದು ಮಗುವೂ ಉತ್ತಮ ಶಿಕ್ಷಣ ಪಡೆದು, ತನ್ನ ಆಸಕ್ತಿ ಮತ್ತು ಪ್ರತಿಭೆಗೆ ತಕ್ಕಂತೆ ಬೆಳೆಯಬೇಕು, ಸಮಾಜಕ್ಕೆ ಉತ್ತಮ ಕೊಡುಗೆ ನೀಡುವ ಪ್ರಜೆಯಾಗಿ ರೂಪುಗೊಳ್ಳಬೇಕು ಎಂಬುದು ಅವರ ಆಶಯವಾಗಿತ್ತು.
ಅದರಂತೆ, ಬಡತನ, ಜಾತಿ, ಧರ್ಮ ಅಥವಾ ಸಾಮಾಜಿಕ ಹಿನ್ನೆಲೆಯ ಕಾರಣದಿಂದ ಯಾವುದೇ ಮಗು ಶಿಕ್ಷಣ ಮತ್ತು ಅವಕಾಶಗಳಿಂದ ವಂಚಿತವಾಗಬಾರದು. ಪ್ರತಿಯೊಂದು ಮಗುವಿಗೂ ಗುಣಮಟ್ಟದ ಶಿಕ್ಷಣ, ಪೌಷ್ಟಿಕ ಆಹಾರ, ಉತ್ತಮ ಆರೋಗ್ಯ ಹಾಗೂ ಸುರಕ್ಷಿತ ವಾತಾವರಣ ದೊರೆಯಬೇಕು. ಮಕ್ಕಳ ಹಕ್ಕುಗಳನ್ನು ರಕ್ಷಿಸಿ, ಅವರ ಪ್ರತಿಭೆ ಮತ್ತು ಸಾಮರ್ಥ್ಯವನ್ನು ಬೆಳೆಸಲು ಅಗತ್ಯ ಅವಕಾಶಗಳನ್ನು ಕಲ್ಪಿಸುವುದು ಸೇರಿದಂತೆ ಎಲ್ಲ ಮಕ್ಕಳಿಗೂ ಸಮಾನ ಅವಕಾಶಗಳನ್ನು ಒದಗಿಸಲು ನಮ್ಮ ಸರ್ಕಾರ ಬದ್ಧವಾಗಿದೆ.
ಪ್ರತಿಯೊಂದು ಮಗುವಿನ ಬಾಲ್ಯವೂ ನಗು, ಸಂತಸ ಮತ್ತು ನೆಮ್ಮದಿಯಿಂದ ಕೂಡಿರಬೇಕು. ಅವರ ಕನಸುಗಳಿಗೆ ಬಡತನ ಅಡ್ಡಿಯಾಗಬಾರದು, ಪ್ರತಿಭೆಗೆ ಅವಕಾಶಗಳ ಕೊರತೆಯಾಗಬಾರದು. ಎಲ್ಲ ಮಕ್ಕಳಿಗೂ ಉತ್ತಮ ಶಿಕ್ಷಣ ಮತ್ತು ಸಮಾನ ಅವಕಾಶಗಳನ್ನು ಕಲ್ಪಿಸಿ, ಅವರು ಆತ್ಮವಿಶ್ವಾಸದಿಂದ ಬದುಕು ಕಟ್ಟಿಕೊಳ್ಳುವಂತಹ ಸಮಾಜವನ್ನು ನಿರ್ಮಿಸೋಣ. ಆ ಮೂಲಕ ನೆಹರು ಅವರ ಸಮಾನತೆ ಮತ್ತು ಪ್ರಗತಿಪರ ಭಾರತದ ಕನಸನ್ನು ಸಾಕಾರಗೊಳಿಸೋಣ.
#jawaharlalnehru -
Dr. G Parameshwara
@DrParameshwara
ಕರ್ನಾಟಕದ ಕೈಗಾರಿಕಾ ಅಭಿವೃದ್ಧಿ ಕೇವಲ ಬೆಂಗಳೂರಿಗೆ ಸೀಮಿತವಾಗದೆ, ರಾಜ್ಯದ ಪ್ರತಿಯೊಂದು ಪ್ರದೇಶಕ್ಕೂ ವಿಸ್ತರಿಸಬೇಕು. ಬಂಡವಾಳ ಹೂಡಿಕೆ, ಕೈಗಾರಿಕೆಗಳು ಹಾಗೂ ಉದ್ಯೋಗಾವಕಾಶಗಳು ಎರಡನೇ ಮತ್ತು ಮೂರನೇ ಹಂತದ ನಗರಗಳಿಗೂ ತಲುಪಬೇಕು ಎಂಬ ಉದ್ದೇಶದಿಂದ ನಮ್ಮ ಸರ್ಕಾರ ‘ಬಿಯಾಂಡ್ ಬೆಂಗಳೂರು’ ನೀತಿಯನ್ನು ರೂಪಿಸಿದೆ.
ಬೆಂಗಳೂರು ಇಂದು ಜಾಗತಿಕ ಮಟ್ಟದಲ್ಲಿ ತಂತ್ರಜ್ಞಾನ ಮತ್ತು ನಾವೀನ್ಯತೆಯ ಪ್ರಮುಖ ಕೇಂದ್ರವಾಗಿ ಬೆಳೆದಿದೆ. ಇದೇ ರೀತಿಯಲ್ಲಿ ರಾಜ್ಯದ ಇತರ ನಗರಗಳೂ ಕೈಗಾರಿಕಾ ಕ್ಷೇತ್ರದಲ್ಲಿ ಬೆಳೆಯಬೇಕು. ನಮ್ಮ ಯುವಜನರು ಉದ್ಯೋಗಕ್ಕಾಗಿ ತಮ್ಮ ಊರು, ಕುಟುಂಬವನ್ನು ಬಿಟ್ಟು ದೂರದ ನಗರಗಳಿಗೆ ಹೋಗುವ ಅನಿವಾರ್ಯತೆ ಇರಬಾರದು. ತಮ್ಮ ಪ್ರದೇಶದಲ್ಲಿಯೇ ಉತ್ತಮ ಉದ್ಯೋಗಗಳನ್ನು ಪಡೆದು, ಬದುಕು ಕಟ್ಟಿಕೊಳ್ಳುವಂತಹ ಅವಕಾಶಗಳು ಸೃಷ್ಟಿಯಾಗಬೇಕು ಎಂಬುದು ನಮ್ಮ ಆಶಯವಾಗಿದೆ.
ವಿಶೇಷವಾಗಿ ತುಮಕೂರು ಪ್ರಮುಖ ಕೈಗಾರಿಕಾ ಮತ್ತು ಉತ್ಪಾದನಾ ಕೇಂದ್ರವಾಗಿ ಬೆಳೆಯುವ ಅಪಾರ ಸಾಮರ್ಥ್ಯ ಹೊಂದಿದೆ. ಬೆಂಗಳೂರಿಗೆ ಸಾಮೀಪ್ಯ, ಉತ್ತಮ ರಸ್ತೆ ಸಂಪರ್ಕ, ಕೈಗಾರಿಕಾ ಪ್ರದೇಶಗಳು ಹಾಗೂ ಮೂಲಸೌಕರ್ಯಗಳ ಅನುಕೂಲವನ್ನು ಬಳಸಿಕೊಂಡು ತುಮಕೂರನ್ನು ಜಾಗತಿಕ ಉತ್ಪಾದನಾ ಕೇಂದ್ರವಾಗಿ ಅಭಿವೃದ್ಧಿಪಡಿಸಬೇಕಿದೆ. ಬೆಂಗಳೂರು ಹೊಸ ಆಲೋಚನೆಗಳು ಮತ್ತು ತಂತ್ರಜ್ಞಾನದ ಕೇಂದ್ರವಾಗಿದ್ದರೆ, ಆ ಆಲೋಚನೆಗಳನ್ನು ವಿಶ್ವ ಮಾರುಕಟ್ಟೆಗೆ ಅಗತ್ಯವಾದ ಉತ್ಪನ್ನಗಳನ್ನಾಗಿ ರೂಪಿಸುವ ಕೇಂದ್ರವಾಗಿ ತುಮಕೂರು ಬೆಳೆಯಬೇಕು ಎಂಬುದು ನನ್ನ ಕನಸಾಗಿದೆ.
ಕೈಗಾರಿಕೆಗಳ ಬೆಳವಣಿಗೆಯ ಜೊತೆಗೆ ಸ್ಥಳೀಯ ಉದ್ಯಮಗಳೂ ಅಭಿವೃದ್ಧಿಯಾಗಬೇಕು. ಹೊಸದಾಗಿ ಉದ್ಯಮ ಆರಂಭಿಸುವ ಯುವಜನರಿಗೆ ಪ್ರೋತ್ಸಾಹ ದೊರೆಯಬೇಕು. ಈಗಾಗಲೇ ಉದ್ಯಮಗಳನ್ನು ನಡೆಸುತ್ತಿರುವವರಿಗೆ ಹೆಚ್ಚಿನ ಅವಕಾಶಗಳು ಸಿಗಬೇಕು. ಮಹಿಳೆಯರು ಆರ್ಥಿಕವಾಗಿ ಸ್ವಾವಲಂಬಿಗಳಾಗಲು ಕೈಗಾರಿಕಾ ಅಭಿವೃದ್ಧಿ ನೆರವಾಗಬೇಕು. ಪ್ರತಿಯೊಂದು ಬೃಹತ್ ಹೂಡಿಕೆಯೂ ಸ್ಥಳೀಯ ಜನರ ಬದುಕಿನಲ್ಲಿ ಒಳ್ಳೆಯ ಬದಲಾವಣೆ ತರಬೇಕು.
ಹೂಡಿಕೆಯ ಯಶಸ್ಸನ್ನು ಕೇವಲ ಒಪ್ಪಂದಗಳ ಮೊತ್ತದಿಂದ ಅಳೆಯಬಾರದು. ಎಷ್ಟು ಕೈಗಾರಿಕೆಗಳು ಸ್ಥಾಪನೆಯಾದವು, ಎಷ್ಟು ಉದ್ಯೋಗಗಳು ಸೃಷ್ಟಿಯಾದವು, ಎಷ್ಟು ಕುಟುಂಬಗಳ ಬದುಕು ಸುಧಾರಿಸಿತು ಎಂಬುದು ಮುಖ್ಯ. ರಾಜ್ಯದ ಪ್ರತಿಯೊಂದು ಜಿಲ್ಲೆಯೂ ಅಭಿವೃದ್ಧಿಯ ಭಾಗವಾಗಬೇಕು, ಅದರ ಪ್ರಯೋಜನ ಸಾಮಾನ್ಯ ಜನರಿಗೂ ತಲುಪಬೇಕು ಎಂಬುದೇ ನಮ್ಮ ಸರ್ಕಾರದ ಗುರಿಯಾಗಿದೆ.
- ಗುರುವಾರ ಬೆಂಗಳೂರಿನ ಖಾಸಗಿ ಹೋಟೆಲ್ನಲ್ಲಿ ನಡೆದ ಇನ್ವೆಸ್ಟ್ ಕರ್ನಾಟಕ 'ಜಾಗತಿಕ ಹೂಡಿಕೆದಾರರ ಸಮಾವೇಶ 2027' ಪೂರ್ವಭಾವಿ ಸಮಾರಂಭದಲ್ಲಿನ ನನ್ನ ಭಾಷಣದ ಪ್ರಮುಖಾಂಶ
#investkarnataka
Dr. G Parameshwara
@DrParameshwara
Karnataka’s industrial growth must not remain concentrated in Bengaluru. Investment, industries and employment opportunities must expand across the State, especially to Tier-2 and Tier-3 cities. With this objective, our Government has introduced the ‘Beyond Bengaluru’ policy.
Bengaluru has emerged as a global hub for technology and innovation. Our vision is for other cities across Karnataka to grow as strong industrial centres as well. Young people should not have to leave their hometowns and families in search of jobs. They should have opportunities to build their careers and futures closer to home.
Tumakuru, in particular, has immense potential to emerge as a major industrial and manufacturing hub. With its proximity to Bengaluru, strong road connectivity, industrial areas and infrastructure, it can grow into a global manufacturing centre. If Bengaluru is the hub of ideas and technology, my dream is for Tumakuru to become a place where those ideas are transformed into products for global markets.
Industrial growth must also strengthen local enterprises. Young people starting businesses should be encouraged, existing entrepreneurs should find more opportunities, and women should benefit through greater economic empowerment. Every major investment must bring a positive change in the lives of local people.
The success of investment should not be measured merely by the value of agreements signed. What matters is how many industries are established, how many jobs are created and how many families see their lives improve.
Our goal is clear: every district of Karnataka must be part of the State’s growth story, and the benefits of industrial development must reach ordinary people.
- Key highlights from my address at the curtain raiser of Invest Karnataka – Global Investors Meet 2027, held in Bengaluru on Thursday. -
Dr. G Parameshwara
@DrParameshwara
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾದ ಶಿವರಾಜ್ ಎಸ್.ತಂಗಡಗಿ ದಂಪತಿಗಳು ನನ್ನ ನಿವಾಸಕ್ಕೆ ಆಗಮಿಸಿ, ಪುತ್ರನ ವಿವಾಹ ಮಹೋತ್ಸವದ ಆಮಂತ್ರಣ ಪತ್ರಿಕೆ ನೀಡಿ ಆತ್ಮೀಯವಾಗಿ ಆಹ್ವಾನಿಸಿದರು.
@sstangadagi -
Dr. G Parameshwara
@DrParameshwara
I was pleased to participate in the inauguration of the curtain-raiser event for Invest Karnataka – Global Investors Meet 2027, which marks another significant step towards positioning Karnataka as a global powerhouse of investment, innovation and industrial growth.
Karnataka has always been at the forefront of India's economic transformation. From pioneering public-sector industries to becoming a global leader in information technology, biotechnology, aerospace and advanced manufacturing, our State has consistently demonstrated how visionary leadership, progressive policies and the extraordinary capabilities of our people can shape the future of an economy.
As we unveil our vision for Invest Karnataka – Global Investors Meet 2027, I reaffirm our Government's determination to make Karnataka not merely India's preferred investment destination, but one of the world's most trusted destinations for innovation, manufacturing, enterprise and sustainable economic growth.
Our State's remarkable journey as an investment destination has been shaped by visionary leaders. I particularly recall the contribution of former Chief Minister Shri S. M. Krishna, who pioneered Karnataka's first Global Investors Meet in 2000, laying the foundation for a new era of global investment partnerships. His foresight in positioning Karnataka on the international investment map continues to inspire our efforts to take the State to greater heights. Our Government is determined to build upon this proud legacy and usher in the next generation of industrial development.
Our achievements demonstrate the confidence that investors have placed in Karnataka. Invest Karnataka 2025 secured investment commitments worth ₹10.27 lakh crore, with the potential to generate more than six lakh employment opportunities. These commitments reflect the strength of our policies, the quality of our human resources and the confidence of global and domestic investors in Karnataka's economic future.
This momentum is continuing. In September this year, our High-Level Clearance Committee approved investment proposals worth nearly ₹29,700 crore, with an estimated employment potential exceeding 66,000. This week, another 147 industrial projects involving investments of approximately ₹6,826 crore received approvals.
Significantly, 131 of these 147 projects are proposed outside Bengaluru Urban and Bengaluru Rural districts. To me, this represents something far more important than an investment statistic. It signals the beginning of a more balanced, inclusive and geographically diversified era of industrial growth.
Bengaluru has been Karnataka's greatest economic strength and one of India's most successful global success stories. Its entrepreneurs, engineers, educational institutions and industries have established an extraordinary international reputation.
We will continue to strengthen Bengaluru's position as a global technology and innovation capital. However, I firmly believe that Karnataka's economic future cannot be confined to the boundaries of Bengaluru alone.
Our next chapter must be defined by Beyond Bengaluru — taking investments, industries and quality employment opportunities to every region of Karnataka.
I want a young graduate from Kalaburagi, a skilled technician from Belagavi and a woman entrepreneur from Tumakuru to have the same opportunity to build a prosperous future as anyone in Bengaluru. Our ambition is to create multiple centres of economic growth where our young people can find meaningful employment and pursue their aspirations without having to migrate far from their homes. (1/2)
Dr. G Parameshwara
@DrParameshwara
In this transformation, I see tremendous potential for Tumakuru to emerge as Karnataka's premier 'Bengaluru Plus One' industrial destination.
With its strategic proximity to Bengaluru, connectivity through National Highway 48, access to the international airport and its position along the Chennai–Bengaluru Industrial Corridor, Tumakuru possesses all the advantages necessary to become a major manufacturing powerhouse.
The proposed industrial township spread across approximately 8,484 acres in phases, together with established industrial ecosystems at Vasanthanarasapura and the Machine Tool Park, provides a strong foundation for attracting investments in precision engineering, electronics, electric mobility, aerospace components, pharmaceuticals, logistics and food processing.
If Bengaluru represents the power of ideas and innovation, I envision Tumakuru becoming one of the great manufacturing centres where those ideas are transformed into products for the world.
Our Industrial Policy 2025–30, which targets investments of ₹7.5 lakh crore and the creation of 20 lakh jobs, reflects our commitment to translating this vision into tangible economic opportunities. We are focused on faster approvals, better infrastructure, industry–academia collaboration, emerging technologies, green manufacturing and creating an ecosystem where businesses can establish, expand and succeed with confidence.
But I want to emphasise one important principle: the true measure of an investment summit is not merely the value of agreements signed, but the factories established, the enterprises created, the jobs generated and the lives transformed.
Every major investment must contribute to the larger aspirations of our people. Industrial growth must create opportunities for our youth, strengthen local enterprises, empower women, support regional development and improve the standard of living of our citizens.
To investors across India and around the world, I extend an invitation to become partners in Karnataka's next chapter of growth. We offer not only an attractive investment destination but also a long-term partnership built on skilled talent, innovation, policy support and a shared commitment to prosperity.
I am confident that Invest Karnataka 2027 will mark another defining milestone in our State's industrial history, enabling Karnataka to strengthen its global leadership while bringing the benefits of economic progress to every district.
Our aspiration is that Karnataka must become a State where global investments create local opportunities, where innovation drives industrial prosperity and where economic growth transforms the lives of ordinary people.
Together, let us make Karnataka the place where the world's ambitions meet India's possibilities. (2/2) -
Dr. G Parameshwara
@DrParameshwara
ರಾಜ್ಯದ ಕೈಗಾರಿಕಾ ಅಭಿವೃದ್ಧಿಯನ್ನು ಬೆಂಗಳೂರಿಗೆ ಮಾತ್ರ ಸೀಮಿತಗೊಳಿಸದೆ, ಎರಡನೇ ಮತ್ತು ಮೂರನೇ ಹಂತದ ನಗರಗಳಿಗೂ ವಿಸ್ತರಿಸುವ ಉದ್ದೇಶದಿಂದ ನಮ್ಮ ಸರ್ಕಾರ 'ಬಿಯಾಂಡ್ ಬೆಂಗಳೂರು' ನೀತಿಯನ್ನು ರೂಪಿಸಿದೆ. ಈ ಮೂಲಕ ರಾಜ್ಯದ ವಿವಿಧ ನಗರಗಳಿಗೆ ಹೆಚ್ಚಿನ ಬಂಡವಾಳ ಹೂಡಿಕೆಯನ್ನು ಆಕರ್ಷಿಸಿ, ಸ್ಥಳೀಯ ಯುವಜನರಿಗೆ ಉದ್ಯೋಗಾವಕಾಶಗಳನ್ನು ಕಲ್ಪಿಸುವುದು ಹಾಗೂ ಸ್ಥಳೀಯ ಉದ್ಯಮಿಗಳಿಗೆ ಉತ್ತೇಜನ ನೀಡುವುದು ನಮ್ಮ ಪ್ರಮುಖ ಉದ್ದೇಶವಾಗಿದೆ.
ರಾಜ್ಯದ ಎರಡನೇ ಮತ್ತು ಮೂರನೇ ಹಂತದ ನಗರಗಳಿಗೂ ಕೈಗಾರಿಕೆಗಳು ಮತ್ತು ಬಂಡವಾಳ ಹೂಡಿಕೆಗಳು ತಲುಪಬೇಕು. ಆಯಾ ಪ್ರದೇಶಗಳಲ್ಲಿಯೇ ಯುವಜನರಿಗೆ ಉದ್ಯೋಗಾವಕಾಶಗಳು ದೊರೆಯಬೇಕು. ಯುವಕರು ಸ್ವಂತ ಉದ್ಯಮಗಳನ್ನು ಆರಂಭಿಸಲು ಪ್ರೋತ್ಸಾಹ ಸಿಗಬೇಕು. ಈಗಾಗಲೇ ಸ್ಥಳೀಯ ಮಟ್ಟದಲ್ಲಿ ಉದ್ಯಮಗಳನ್ನು ನಡೆಸುತ್ತಿರುವ ಉದ್ಯಮಿಗಳಿಗೂ ಉತ್ತೇಜನ ನೀಡಬೇಕು ಎಂಬ ಪರಿಕಲ್ಪನೆಯೊಂದಿಗೆ 'ಬಿಯಾಂಡ್ ಬೆಂಗಳೂರು' ನೀತಿಯನ್ನು ರೂಪಿಸಲಾಗಿದೆ.
2027ರ ಏಪ್ರಿಲ್ನಲ್ಲಿ ಜಾಗತಿಕ ಹೂಡಿಕೆದಾರರ ಸಮಾವೇಶ: 2027ರ ಏಪ್ರಿಲ್ ತಿಂಗಳಲ್ಲಿ ಜಾಗತಿಕ ಹೂಡಿಕೆದಾರರ ಸಮಾವೇಶವನ್ನು ಆಯೋಜಿಸಲಾಗುತ್ತಿದೆ. ಈ ಸಮಾವೇಶದಲ್ಲಿ ವಿಶ್ವದ ವಿವಿಧ ದೇಶಗಳಿಂದ ದೊಡ್ಡ ದೊಡ್ಡ ಕಂಪನಿಗಳು ಹಾಗೂ ಪ್ರಮುಖ ಹೂಡಿಕೆದಾರರು ಭಾಗವಹಿಸುವ ನಿರೀಕ್ಷೆಯಿದೆ. ಹೀಗಾಗಿ ಈ ಬಾರಿಯ ಸಮಾವೇಶದ ಮೂಲಕ ರಾಜ್ಯಕ್ಕೆ ಇನ್ನಷ್ಟು ಹೆಚ್ಚಿನ ಬಂಡವಾಳ ಹೂಡಿಕೆ ಹರಿದುಬರುವ ವಿಶ್ವಾಸವಿದೆ.
ಕಳೆದ ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ₹10 ಲಕ್ಷ ಕೋಟಿಗೂ ಹೆಚ್ಚಿನ ಮೊತ್ತದ ಹೂಡಿಕೆಗೆ ಸಂಬಂಧಿಸಿದ ಒಪ್ಪಂದಗಳು ನಡೆದಿದ್ದವು. ಅವುಗಳಲ್ಲಿ ಶೇ.70ಕ್ಕೂ ಹೆಚ್ಚಿನ ಹೂಡಿಕೆ ಕಾರ್ಯರೂಪಕ್ಕೆ ಬಂದಿದೆ. ಅದೇ ರೀತಿಯಲ್ಲಿ ಮುಂಬರುವ ಸಮಾವೇಶದಲ್ಲಿಯೂ ಹೆಚ್ಚಿನ ಬಂಡವಾಳ ಹೂಡಿಕೆಯನ್ನು ಆಕರ್ಷಿಸಿ, ಅವುಗಳನ್ನು ಅನುಷ್ಠಾನಕ್ಕೆ ತರುವ ವಿಶ್ವಾಸವಿದೆ.
- ಬೆಂಗಳೂರಿನ ಖಾಸಗಿ ಹೋಟೆಲ್ನಲ್ಲಿ ಆಯೋಜಿಸಲಾಗಿದ್ದ 'ಇನ್ವೆಸ್ಟ್ ಕರ್ನಾಟಕ – ಜಾಗತಿಕ ಹೂಡಿಕೆದಾರರ ಸಮಾವೇಶ 2027'ರ ಪೂರ್ವಭಾವಿ ಸಮಾರಂಭವನ್ನು ಉದ್ಘಾಟಿಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದೆ. -
Dr. G Parameshwara
@DrParameshwara
Today, along with Chief Minister Shri D.K. Shivakumar, I inaugurated the curtain raiser for Invest Karnataka – Global Investors Meet 2027, held at a private hotel in Bengaluru.
M.B. Patil, Minister for Large and Medium Industries and Infrastructure Development; Ministers K.H. Muniyappa, Priyank Kharge, Rudrappa Lamani, K.S. Basavanthappa, P.M. Narendraswamy and T. Raghumurthy, among others, were present.
ಬೆಂಗಳೂರಿನ ಖಾಸಗಿ ಹೋಟೆಲ್ನಲ್ಲಿ ನಡೆದ ಇನ್ವೆಸ್ಟ್ ಕರ್ನಾಟಕ 'ಜಾಗತಿಕ ಹೂಡಿಕೆದಾರರ ಸಮಾವೇಶ 2027' ಪೂರ್ವಭಾವಿ ಸಮಾರಂಭವನ್ನು ಮುಖ್ಯಮಂತ್ರಿ ಶ್ರೀ ಡಿ.ಕೆ.ಶಿವಕುಮಾರ್ ಅವರ ಜೊತೆಗೂಡಿ ಉದ್ಘಾಟಿಸಿದೆ.
ಈ ಸಂದರ್ಭದಲ್ಲಿ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲಸೌಕರ್ಯ ಅಭಿವೃದ್ಧಿ ಸಚಿವರಾದ ಎಂ.ಬಿ.ಪಾಟೀಲ, ಸಚಿವರಾದ ಕೆ.ಹೆಚ್.ಮುನಿಯಪ್ಪ, ಪ್ರಿಯಾಂಕ್ ಖರ್ಗೆ, ರುದ್ರಪ್ಪ ಲಮಾಣಿ, ಕೆ.ಎಸ್.ಬಸವಂತಪ್ಪ, ನರೇಂದ್ರ ಸ್ವಾಮಿ, ಟಿ.ರಘುಮೂರ್ತಿ ಮುಂತಾದವರು ಇದ್ದರು. -
Dr. G Parameshwara
@DrParameshwara
ಇಂದು ವಿಕಾಸಸೌಧದಲ್ಲಿ ಮುಖ್ಯಮಂತ್ರಿ ಶ್ರೀ ಡಿ.ಕೆ.ಶಿವಕುಮಾರ್ ಅವರ ಅಧ್ಯಕ್ಷತೆಯಲ್ಲಿ ನಡೆದ ರಾಜ್ಯ ಅನುಸೂಚಿತ ಜಾತಿಗಳು ಹಾಗೂ ಅನುಸೂಚಿತ ಪಂಗಡಗಳ ಅಭಿವೃದ್ಧಿ ಪರಿಷತ್ ಸಭೆಯಲ್ಲಿ ಪಾಲ್ಗೊಂಡು, ಎಸ್ಸಿಎಸ್ಪಿ / ಟಿಎಸ್ಪಿ ಕಾರ್ಯಕ್ರಮಗಳ 2026-27ನೇ ಸಾಲಿನ ಕ್ರಿಯಾ ಯೋಜನೆ ಬಗ್ಗೆ ಚರ್ಚಿಸಿದೆ.
ಸಭೆಯಲ್ಲಿ ಸಚಿವರಾದ ಕೆ.ಹೆಚ್.ಮುನಿಯಪ್ಪ, ಸತೀಶ್ ಜಾರಕಿಹೊಳಿ, ರುದ್ರಪ್ಪ ಲಮಾಣಿ, ನರೇಂದ್ರಸ್ವಾಮಿ, ಟಿ.ರಘುಮೂರ್ತಿ, ಕೆ.ಎಸ್.ಬಸವಂತಪ್ಪ, ಮುಖ್ಯಕಾರ್ಯದರ್ಶಿಗಳಾದ ಶಾಲಿನಿ ರಜನೀಶ್ ಸೇರಿದಂತೆ ಇತರರು ಉಪಸ್ಥಿತರಿದ್ದರು.
Today, I participated in the State Scheduled Castes and Scheduled Tribes Development Council meeting chaired by Chief Minister Shri D.K. Shivakumar at Vikasa Soudha and discussed the 2026–27 Action Plan for SCSP/TSP programmes.
Ministers K.H. Muniyappa, Satish Jarkiholi, Rudrappa Lamani, P.M. Narendraswamy, T. Raghumurthy and K.S. Basavanthappa, Chief Secretary Shalini Rajneesh, and others were present. -
Dr. G Parameshwara
@DrParameshwara
ಇಂದು ಬೆಂಗಳೂರಿನ ಖಾಸಗಿ ಹೋಟೆಲ್ನಲ್ಲಿ ಮುಖ್ಯಮಂತ್ರಿ ಶ್ರೀ ಡಿ.ಕೆ. ಶಿವಕುಮಾರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಸಮಗ್ರ ಅಭಿವೃದ್ಧಿ ಕಾರ್ಯಕ್ರಮಗಳ ಕುರಿತ ಸಮಾಲೋಚನಾ ಸಭೆಯಲ್ಲಿ ಪಾಲ್ಗೊಂಡು, ಶೋಷಿತ ವರ್ಗಗಳ ಸರ್ವತೋಮುಖ ಅಭಿವೃದ್ಧಿಯ ಬಗೆಗೆ ನನ್ನ ಅನಿಸಿಕೆ - ಅಭಿಪ್ರಾಯಗಳನ್ನು ಹಂಚಿಕೊಂಡೆ.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಸಬಲೀಕರಣಕ್ಕೆ ಹೆಚ್ಚಿನ ಒತ್ತು ನೀಡುವುದು, ಸಮುದಾಯಗಳ ಅಭಿವೃದ್ಧಿಗೆ ರೂಪಿಸಿರುವ ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವುದು ಹಾಗೂ ಅರ್ಹ ಫಲಾನುಭವಿಗಳಿಗೆ ಸರ್ಕಾರದ ಸೌಲಭ್ಯಗಳನ್ನು ತಲುಪಿಸುವ ಕುರಿತು ಚರ್ಚಿಸಿದೆ.
ಸಭೆಯಲ್ಲಿ ಕೆಪಿಸಿಸಿ ಅಧ್ಯಕ್ಷರಾದ ಬಿ.ಕೆ. ಹರಿಪ್ರಸಾದ್, ಸಚಿವರಾದ ಕೆ.ಹೆಚ್. ಮುನಿಯಪ್ಪ, ಸತೀಶ್ ಜಾರಕಿಹೊಳಿ, ಎಂ.ಬಿ. ಪಾಟೀಲ್, ರಾಮಲಿಂಗಾರೆಡ್ಡಿ, ಈಶ್ವರ್ ಖಂಡ್ರೆ, ಲಕ್ಷ್ಮಣ್ ಸವದಿ, ಚಲುವರಾಯಸ್ವಾಮಿ, ಕೃಷ್ಣ ಬೈರೇಗೌಡ, ಪ್ರಿಯಾಂಕ್ ಖರ್ಗೆ, ಯತೀಂದ್ರ ಸಿದ್ದರಾಮಯ್ಯ, ನರೇಂದ್ರಸ್ವಾಮಿ, ರಘುಮೂರ್ತಿ, ಬಸವಂತಪ್ಪ ಸೇರಿದಂತೆ ಶಾಸಕರು, ವಿಧಾನ ಪರಿಷತ್ ಸದಸ್ಯರು ಹಾಗೂ ಸಂಸದರು ಉಪಸ್ಥಿತರಿದ್ದರು.
Today, I participated in a consultative meeting on the comprehensive development programmes for Scheduled Castes and Scheduled Tribes, chaired by Chief Minister Shri D.K. Shivakumar at a private hotel in Bengaluru, and shared my views on the overall development of marginalised communities.
We discussed giving greater emphasis to the social, educational and economic empowerment of SC/ST communities, ensuring effective implementation of welfare and development schemes, and making sure Government benefits reach all eligible beneficiaries.
KPCC President B.K. Hariprasad; Ministers K.H. Muniyappa, Satish Jarkiholi, M.B. Patil, Ramalinga Reddy, Eshwar Khandre, Laxman Savadi, Chaluvarayaswamy, Krishna Byre Gowda, Priyank Kharge, Yathindra Siddaramaiah, Narendraswamy, Raghumurthy and Basavanthappa, along with MLAs, MLCs and MPs, were present. -
Dr. G Parameshwara
@DrParameshwara
Remembering Dr. Salim Ali, the Birdman of India, on his 130th birth anniversary.
His lifelong love for birds and nature opened our eyes to the beauty and richness of India's biodiversity. His remarkable work continues to inspire generations to appreciate, study and protect the natural world.
A heartfelt tribute to a man who taught us that every bird, every species and every part of nature deserves our care and protection. -
Dr. G Parameshwara
@DrParameshwara
Telangana Deputy Chief Minister Shri @Bhatti_Mallu met me today at a private hotel in Bengaluru and invited me to attend the ‘Bharat Summit 2026’, an international summit to be held in Hyderabad.
Ministers Shri K.H. Muniyappa, Shri K.S. Basavanthappa, and several others were present on the occasion.
ತೆಲಂಗಾಣದ ಉಪಮುಖ್ಯಮಂತ್ರಿಗಳಾದ ಶ್ರೀ ಭಟ್ಟಿ ವಿಕ್ರಮಾರ್ಕ ಮಲ್ಲು ಅವರು ಇಂದು ಬೆಂಗಳೂರಿನ ಖಾಸಗಿ ಹೋಟೆಲ್ನಲ್ಲಿ ನನ್ನನ್ನು ಭೇಟಿಯಾಗಿ, ಹೈದರಾಬಾದ್ನಲ್ಲಿ ನಡೆಯಲಿರುವ ‘ಭಾರತ್ ಸಮ್ಮಿಟ್ 2026’ ಅಂತಾರಾಷ್ಟ್ರೀಯ ಶೃಂಗಸಭೆಗೆ ಆಹ್ವಾನಿಸಿದರು.
ಈ ಸಂದರ್ಭದಲ್ಲಿ ಸಚಿವರಾದ ಶ್ರೀ ಕೆ.ಹೆಚ್. ಮುನಿಯಪ್ಪ, ಶ್ರೀ ಕೆ.ಎಸ್. ಬಸವಂತಪ್ಪ ಸೇರಿದಂತೆ ಹಲವರು ಉಪಸ್ಥಿತರಿದ್ದರು. -
Dr. G Parameshwara
@DrParameshwara
ಬರ ಪರಿಹಾರ ವಿತರಣೆಯ ಕುರಿತು ರೈತರು ಯಾವುದೇ ಆತಂಕ ಅಥವಾ ಗೊಂದಲಕ್ಕೆ ಒಳಗಾಗುವ ಅಗತ್ಯವಿಲ್ಲ. ಪರಿಹಾರ ವಿತರಣೆಯಲ್ಲಿನ ವ್ಯತ್ಯಾಸವನ್ನು ತಕ್ಷಣ ಸರಿಪಡಿಸಿ, ಎಲ್ಲ ಅರ್ಹ ರೈತ ಕುಟುಂಬಗಳಿಗೂ ಸರ್ಕಾರ ಘೋಷಿಸಿರುವ ₹5,000 ಪರಿಹಾರವನ್ನು ತಲುಪಿಸಲಾಗುವುದು.
ಈ ಕುರಿತಾಗಿ ನಿನ್ನೆ ಮಾಧ್ಯಮಕ್ಕೆ ನೀಡಿದ ಹೇಳಿಕೆ ಇಂದಿನ ಪತ್ರಿಕೆಗಳಲ್ಲಿ..
Farmers need not have any anxiety or confusion over the distribution of drought relief. Any discrepancies in payments will be corrected immediately, and every eligible farming family will receive the full ₹5,000 relief announced by our Government.
My statement to the media on this issue yesterday has been reported in today’s newspapers. -
Dr. G Parameshwara
@DrParameshwara
Our government is committed to ensuring fair compensation for farmers affected by drought. Farmers need not worry or be confused about relief disbursement. Every eligible farming family will receive a minimum of ₹5,000 in drought relief.
Farmers who received ₹2,500 in the first instalment will get the remaining ₹2,500, while those who received ₹2,000 will get the balance of ₹3,000 in the next instalment. I have directed officials to immediately rectify discrepancies and credit the pending amounts to eligible farmers' accounts.
Going beyond the Union Government's minimum SDRF/NDRF relief norms, our government is providing additional assistance to farmers. ₹5,000 is not the maximum limit. Eligible farmers may receive higher compensation based on the extent of crop damage, landholding size and applicable rules.
No eligible farmer will be denied relief for owning a smaller extent of land. We will ensure every rupee rightfully due to farmers reaches their accounts. Standing by farmers in difficult times is our duty, and we will not allow any injustice in drought relief distribution. -
Dr. G Parameshwara
@DrParameshwara
ಬರದಿಂದ ಬೆಳೆ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿರುವ ರೈತರಿಗೆ ನ್ಯಾಯಯುತ ಪರಿಹಾರ ಒದಗಿಸಲು ನಮ್ಮ ಸರ್ಕಾರ ಬದ್ಧವಾಗಿದೆ. ಪರಿಹಾರ ವಿತರಣೆಯ ಕುರಿತು ರೈತರು ಯಾವುದೇ ಆತಂಕ ಅಥವಾ ಗೊಂದಲಕ್ಕೆ ಒಳಗಾಗುವ ಅಗತ್ಯವಿಲ್ಲ. ಎಲ್ಲ ಅರ್ಹ ರೈತ ಕುಟುಂಬಗಳಿಗೂ ಕನಿಷ್ಠ ₹5,000 ಬರ ಪರಿಹಾರ ತಲುಪಿಸುವುದು ನಮ್ಮ ಬದ್ಧತೆಯಾಗಿದೆ.
ಮೊದಲ ಕಂತಿನಲ್ಲಿ ₹2,500 ಪಡೆದಿರುವ ರೈತರಿಗೆ ಬಾಕಿ ₹2,500 ಹಾಗೂ ₹2,000 ಪಡೆದಿರುವ ರೈತರಿಗೆ ಉಳಿದ ₹3,000 ಪರಿಹಾರವನ್ನು ಮುಂದಿನ ಕಂತಿನಲ್ಲಿ ಪಾವತಿಸಲಾಗುವುದು. ಪರಿಹಾರ ವಿತರಣೆಯಲ್ಲಿ ಕಂಡುಬಂದಿರುವ ವ್ಯತ್ಯಾಸಗಳನ್ನು ತಕ್ಷಣ ಸರಿಪಡಿಸಿ, ಬಾಕಿ ಮೊತ್ತವನ್ನು ಅರ್ಹ ರೈತರ ಖಾತೆಗಳಿಗೆ ಜಮೆ ಮಾಡಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ.
ಕೇಂದ್ರ ಸರ್ಕಾರದ SDRF/NDRF ಮಾರ್ಗಸೂಚಿಗಳಲ್ಲಿ ನಿಗದಿಪಡಿಸಿರುವ ಕನಿಷ್ಠ ಪರಿಹಾರದ ಮಾನದಂಡಗಳಿಗೆ ಸೀಮಿತವಾಗದೆ, ರೈತರ ಹಿತದೃಷ್ಟಿಯಿಂದ ರಾಜ್ಯ ಸರ್ಕಾರ ಹೆಚ್ಚುವರಿ ನೆರವು ಒದಗಿಸಲು ಮುಂದಾಗಿದೆ. ₹5,000 ಪರಿಹಾರವೇ ಗರಿಷ್ಠ ಮಿತಿಯಲ್ಲ. ಬೆಳೆಹಾನಿಯ ಪ್ರಮಾಣ, ಜಮೀನಿನ ವಿಸ್ತೀರ್ಣ ಹಾಗೂ ಅನ್ವಯವಾಗುವ ನಿಯಮಗಳ ಆಧಾರದ ಮೇಲೆ ಅರ್ಹ ರೈತರಿಗೆ ಹೆಚ್ಚಿನ ಪರಿಹಾರ ದೊರೆಯಲು ಅವಕಾಶವಿದೆ.
ಕಡಿಮೆ ಜಮೀನು ಹೊಂದಿದ್ದಾರೆ ಎಂಬ ಕಾರಣಕ್ಕೆ ಯಾವುದೇ ಅರ್ಹ ರೈತರು ಪರಿಹಾರದಿಂದ ವಂಚಿತರಾಗಬಾರದು. ರೈತರಿಗೆ ನ್ಯಾಯಯುತವಾಗಿ ದೊರೆಯಬೇಕಾದ ಪ್ರತಿಯೊಂದು ರೂಪಾಯಿಯೂ ಅವರ ಖಾತೆಗೆ ತಲುಪುವಂತೆ ನೋಡಿಕೊಳ್ಳುತ್ತೇವೆ. ರೈತರ ಸಂಕಷ್ಟಕ್ಕೆ ಸ್ಪಂದಿಸುವುದು ನಮ್ಮ ಕರ್ತವ್ಯ. ಪರಿಹಾರ ವಿತರಣೆಯಲ್ಲಿ ಯಾವುದೇ ಅರ್ಹ ರೈತರಿಗೆ ಅನ್ಯಾಯವಾಗಲು ಬಿಡುವುದಿಲ್ಲ. -
Dr. G Parameshwara
@DrParameshwara
A proud and golden moment for Karnataka!
Heartiest congratulations to Bengaluru's Divya Thadigol Subbaraju on being part of the Indian women's shooting team that clinched gold in the 25m Pistol event at the ISSF World Shooting Championships in Doha, Qatar.
Her remarkable achievement has brought immense pride to Karnataka and serves as an inspiration to young athletes across the state.
Wishing her continued success and many more laurels on the international stage! -
Dr. G Parameshwara
@DrParameshwara
ಇಂದು ಬೆಂಗಳೂರಿನ ಅರಮನೆ ಮೈದಾನದ ಚಾಮರವಜ್ರದಲ್ಲಿ ನಡೆದ ಮಾಜಿ ಸಚಿವರಾದ ದಿನೇಶ್ ಗುಂಡೂರಾವ್ ಅವರ ಸಹೋದರನ ಪುತ್ರಿಯ ವಿವಾಹ ಮಹೋತ್ಸವದಲ್ಲಿ ಪಾಲ್ಗೊಂಡು, ನೂತನ ವಧು-ವರರಿಗೆ ಶುಭ ಕೋರಿದೆ.
-
Dr. G Parameshwara
@DrParameshwara
ಎಲ್ಲ ಅರ್ಹ ರೈತ ಕುಟುಂಬಗಳಿಗೂ ಪರಿಹಾರ ತಲುಪಿಸುತ್ತೇವೆ : ರೈತರಿಗೆ ಬರ ಪರಿಹಾರ ವಿತರಣೆಯಲ್ಲಿನ ವ್ಯತ್ಯಾಸವನ್ನು ತಕ್ಷಣ ಸರಿಪಡಿಸಿ, ಎಲ್ಲ ಅರ್ಹ ರೈತ ಕುಟುಂಬಗಳಿಗೂ ಸರ್ಕಾರ ಘೋಷಿಸಿರುವ ಪರಿಹಾರವನ್ನು ತಲುಪಿಸಲಾಗುವುದು.
ಸದನದಲ್ಲಿ ಮುಖ್ಯಮಂತ್ರಿಗಳು ಮತ್ತು ನಾನು ಒಬ್ಬ ರೈತ ಕುಟುಂಬಕ್ಕೆ ₹2,500 ನೀಡುವುದಾಗಿ ಘೋಷಿಸಿದ್ದೆವು. ಈ ಘೋಷಣೆಯ ಕುರಿತು ಕೆಲವು ಟೀಕೆಗಳು ವ್ಯಕ್ತವಾದ ಹಿನ್ನೆಲೆಯಲ್ಲಿ ಸರ್ಕಾರ ಸ್ಪಷ್ಟೀಕರಣವನ್ನೂ ನೀಡಿತ್ತು. ಆರಂಭದಲ್ಲಿ ಮುಖ್ಯಮಂತ್ರಿಗಳು ಮಾತನಾಡುವಾಗ ಎಕರೆಗೆ ಎಂದಿದ್ದರು. ಆಗ ಉಂಟಾದ ಗೊಂದಲವನ್ನು ಪತ್ರಿಕಾಗೋಷ್ಠಿಯ ಅಂತ್ಯದಲ್ಲಿ ಸರಿಪಡಿಸಿದ್ದರು. ಆದರೆ, ಅಧಿಕಾರಿಗಳ ಹಂತದಲ್ಲಿ ಆದೇಶವನ್ನು ತಪ್ಪಾಗಿ ಅರ್ಥೈಸಿಕೊಂಡಿರುವುದರಿಂದ ಪರಿಹಾರ ವಿತರಣೆಯಲ್ಲಿ ವ್ಯತ್ಯಾಸ ಉಂಟಾಗಿದೆ.
ಕೆಲವು ರೈತರಿಗೆ ₹1,500, ಇನ್ನು ಕೆಲವರಿಗೆ ₹2,000 ಪಾವತಿಯಾಗಿರುವುದು ಗಮನಕ್ಕೆ ಬಂದಿದೆ. ಅಧಿಕಾರಿಗಳು ಡಿಬಿಟಿ ಮೂಲಕ ಹಣ ವರ್ಗಾವಣೆ ಮಾಡುವಾಗ ಪ್ರತಿ ಎಕರೆಗೆ ಲೆಕ್ಕ ಹಾಕಿದಂತೆ ಕಾಣುತ್ತಿದೆ. ಈ ಲೋಪವನ್ನು ಸರಿಪಡಿಸುವಂತೆ ಈಗಾಗಲೇ ಸೂಚನೆ ನೀಡಲಾಗಿದೆ. ಹಣಕಾಸಿನ ವಿಚಾರದಲ್ಲಿ ಯಾವುದೇ ಸಮಸ್ಯೆಯಿಲ್ಲ. ಸಂಬಂಧಪಟ್ಟ ಇಲಾಖೆಗೆ ಅಗತ್ಯ ಹಣವನ್ನು ಬಿಡುಗಡೆ ಮಾಡಲಾಗಿದೆ. ಎನ್ಡಿಆರ್ಎಫ್ ಮಾರ್ಗಸೂಚಿಗಳನ್ನು ತಪ್ಪಾಗಿ ಅರ್ಥೈಸಿಕೊಂಡಿರುವುದರಿಂದ ಈ ಗೊಂದಲ ಉಂಟಾಗಿದೆ. ಮಾರ್ಗಸೂಚಿಗಳ ಪ್ರಕಾರ ಪ್ರತಿ ಹೆಕ್ಟೇರ್ಗೆ ಕನಿಷ್ಠ ₹1,500 ನೀಡಬೇಕೆಂಬ ಲೆಕ್ಕಾಚಾರವನ್ನೂ ಸರಿಯಾಗಿ ಅನುಸರಿಸುವಂತೆ ಸೂಚಿಸಲಾಗಿದೆ.
ಸರ್ಕಾರ ಮೊದಲ ಹಂತದಲ್ಲಿ ಸುಮಾರು 50 ಲಕ್ಷ ರೈತ ಕುಟುಂಬಗಳಿಗೆ ತಲಾ ₹2,500 ನೀಡುವ ಉದ್ದೇಶದಿಂದ ₹1,250 ಕೋಟಿ ಅಂದಾಜು ಮಾಡಿದೆ. ಎರಡನೇ ಹಂತದಲ್ಲಿಯೂ ಅಷ್ಟೇ ಮೊತ್ತವನ್ನು ಒದಗಿಸುವ ಲೆಕ್ಕಾಚಾರವಿದ್ದು, ಒಟ್ಟಾರೆ ಒಂದು ರೈತ ಕುಟುಂಬಕ್ಕೆ ₹5,000 ಪರಿಹಾರ ನೀಡುವ ತೀರ್ಮಾನ ಕೈಗೊಳ್ಳಲಾಗಿದೆ. ಆದರೆ, ಎನ್ಡಿಆರ್ಎಫ್ ಮಾರ್ಗಸೂಚಿಗಳ ಪ್ರಕಾರ ಅರ್ಹತೆ ಹೊಂದಿರಬೇಕು. ಈ ಪ್ರಕ್ರಿಯೆಯಲ್ಲಿ ಕೆಲವರು ಅನರ್ಹರಾಗುವ ಸಾಧ್ಯತೆಯಿದೆ. ಅಂತಹವರ ಸಂಖ್ಯೆ ಬಹಳ ಕಡಿಮೆ ಇರಲಿದೆ. ಆದರೂ ಮೊದಲ ಹಂತದಲ್ಲಿ ಅಂದಾಜು ಮಾಡಿರುವ ₹1,250 ಕೋಟಿ ಮೊತ್ತವನ್ನು ಹಂಚಿಕೆ ಮಾಡಲಾಗುವುದು.
ಪರಿಹಾರ ವಿತರಣೆಯಲ್ಲಿ ಆಗಿರುವ ವ್ಯತ್ಯಾಸವನ್ನು ತಕ್ಷಣ ಸರಿಪಡಿಸಲಾಗುವುದು. ಹಣಕಾಸು ಇಲಾಖೆಯ ಅನುಮತಿ ದೊರೆತ ಕೂಡಲೇ ವ್ಯತ್ಯಾಸದ ಮೊತ್ತವನ್ನು ಪಾವತಿಸಲಾಗುವುದು. ಅಗತ್ಯವಿದ್ದರೆ ಈಗಾಗಲೇ ನೀಡಿರುವ ಮೊತ್ತದೊಂದಿಗೆ ಎರಡನೇ ಕಂತಿನ ಹಣವನ್ನು ಸೇರಿಸಿ ₹3,000 ಅಥವಾ ₹3,500 ರೂಪಾಯಿಗಳಾಗಿ ನೀಡುವ ಬಗ್ಗೆಯೂ ಪರಿಶೀಲಿಸಲಾಗುವುದು. ಹಣಕಾಸು ಇಲಾಖೆಯ ಅನುಮತಿ ದೊರೆತ ತಕ್ಷಣ ಕ್ರಮ ಕೈಗೊಳ್ಳಲಾಗುವುದು. ಯಾದಗಿರಿ ಜಿಲ್ಲೆಯಲ್ಲಿ ಪ್ರಾಯೋಗಿಕವಾಗಿ ಈ ಪ್ರಕ್ರಿಯೆ ಆರಂಭಿಸಲಾಗಿದ್ದು, ಇದೀಗ ಎಲ್ಲ ಜಿಲ್ಲೆಗಳಿಗೂ ವಿಸ್ತರಿಸಲಾಗುವುದು. ಮೊದಲ ಹಂತದ ಪರಿಹಾರ ಎಲ್ಲರಿಗೂ ತಲುಪಿದ ಬಳಿಕವೇ ನಮಗೆ ಸರಿಯಾದ ಚಿತ್ರಣ ಸಿಗುತ್ತದೆ. ಎರಡನೇ ಹಂತದ ₹2,500 ವಿತರಣೆ ಆಮೇಲೆ ಮಾಡಲಾಗುವುದು.
ಎನ್ಡಿಆರ್ಎಫ್ ಪರಿಹಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದಿಂದ ಈವರೆಗೆ ಸಮಯಾವಕಾಶ ದೊರೆತಿಲ್ಲ. ಈ ವಿಚಾರವಾಗಿ ಕೇಂದ್ರಕ್ಕೆ ಈಗಾಗಲೇ ಪತ್ರ ಬರೆದು ಎರಡು ವಾರಗಳಿಗೂ ಹೆಚ್ಚು ಸಮಯವಾಗಿದೆ. ಆದರೆ, ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಪ್ರಧಾನಮಂತ್ರಿಗಳ ಮೈಸೂರು ಪ್ರವಾಸದ ಸಂದರ್ಭದಲ್ಲಿ ಅವರನ್ನು ಭೇಟಿಯಾಗಿ ಸಮಯ ಕೇಳುವುದರಿಂದ ಪ್ರಯೋಜನವಿಲ್ಲ. ಅವರ ಕಾರ್ಯಕ್ರಮ ಈಗಾಗಲೇ ನಿಗದಿಯಾಗಿದ್ದು, ನಿಮಿಷದಿಂದ ನಿಮಿಷದವರೆಗೆ ವೇಳಾಪಟ್ಟಿ ಸಿದ್ಧವಾಗಿದೆ. ಆದ್ದರಿಂದ ಪ್ರತ್ಯೇಕವಾಗಿ ಸಮಯ ಕೇಳಲು ಪ್ರಯತ್ನಿಸುವುದಕ್ಕಿಂತ ಸೂಕ್ತ ಸಂದರ್ಭದಲ್ಲಿ ಭೇಟಿಗೆ ಅವಕಾಶ ಪಡೆಯುವುದು ಉತ್ತಮ. ಸಮಯ ನೀಡಿದ ತಕ್ಷಣ ಸರ್ವಪಕ್ಷ ನಿಯೋಗವನ್ನು ದೆಹಲಿಗೆ ಕರೆದೊಯ್ಯುವ ಬಗ್ಗೆ ತೀರ್ಮಾನಿಸಲಾಗುವುದು.
ಹಿಂದಿನ ವರ್ಷಗಳಿಗೆ ಹೋಲಿಸಿದರೆ ಪ್ರಸ್ತುತ ರೈತರ ಆತ್ಮಹತ್ಯೆ ಪ್ರಕರಣಗಳ ಸಂಖ್ಯೆ ಕಡಿಮೆಯಾಗಿದೆ. ನಾಲ್ಕೈದು ವರ್ಷಗಳ ಹಿಂದೆ ನೂರಾರು, ಸಾವಿರಾರು ಪ್ರಕರಣಗಳು ವರದಿಯಾಗುತ್ತಿದ್ದವು. ಕಳೆದ ವರ್ಷಕ್ಕೆ ಹೋಲಿಸಿದರೂ ಈ ವರ್ಷ ಪ್ರಕರಣಗಳು ಕಡಿಮೆಯಾಗಿವೆ.
ಮೈಕ್ರೋ ಫೈನಾನ್ಸ್ ಸಂಸ್ಥೆಗಳನ್ನು ನಿಯಂತ್ರಿಸಲು ಸರ್ಕಾರ ಕಾನೂನು ಜಾರಿಗೆ ತಂದಿದೆ. ಸಾಲ ವಸೂಲಾತಿ ಪ್ರಕ್ರಿಯೆಯಲ್ಲಿ ರೈತರಿಗೆ ತೊಂದರೆಯಾಗದಂತೆ ಆರು ತಿಂಗಳವರೆಗೆ ಮರುಪಾವತಿಯನ್ನು ಮುಂದೂಡುವ ನಿರ್ಧಾರವನ್ನೂ ಪ್ರಕಟಿಸಲಾಗಿದೆ. ಈ ಎರಡೂ ಕ್ರಮಗಳ ಸಂಯೋಜಿತ ಪರಿಣಾಮದಿಂದ ರೈತರು ಆತ್ಮಹತ್ಯೆಯಂತಹ ತೀವ್ರ ನಿರ್ಧಾರ ಕೈಗೊಳ್ಳುವ ಪರಿಸ್ಥಿತಿ ಕಡಿಮೆಯಾಗಲಿದೆ.
ಆದರೆ, ಖಾಸಗಿಯಾಗಿ ಕೈ ಸಾಲ ಪಡೆಯುವ ಸಂದರ್ಭಗಳಲ್ಲಿ ಯಾವುದೇ ಕಾನೂನುಬದ್ಧ ದಾಖಲೆ ಅಥವಾ ನಿಯಂತ್ರಣ ಇರುವುದಿಲ್ಲ. ಇಂತಹ ವ್ಯವಹಾರಗಳು ವ್ಯಕ್ತಿಗಳ ನಡುವೆಯೇ ನಡೆಯುವುದರಿಂದ ಸರ್ಕಾರಕ್ಕೂ ಮಾಹಿತಿ ಸಿಗುವುದಿಲ್ಲ. ಈ ಸಂದರ್ಭದಲ್ಲಿ ಸಾಲ ನೀಡಿದವರು ಕಿರುಕುಳ ನೀಡಿದರೆ ಅದನ್ನು ಸಹಿಸಿಕೊಳ್ಳಲಾಗದೆ ರೈತರು ಆತ್ಮಹತ್ಯೆ ಮಾಡಿಕೊಳ್ಳುವ ಘಟನೆಗಳು ನಡೆಯುತ್ತವೆ. ಇಂತಹ ಪ್ರಕರಣಗಳನ್ನೂ ತಡೆಗಟ್ಟುವ ಅಗತ್ಯವಿದೆ.
ಸಹಕಾರಿ ಬ್ಯಾಂಕ್ಗಳಿಂದ ರೈತರಿಗೆ ಸಾಲ ಮರುಪಾವತಿಗೆ ಸಂಬಂಧಿಸಿದಂತೆ ನೋಟಿಸ್ಗಳು ಬರುತ್ತಿರುವ ಬಗ್ಗೆ ಸರ್ಕಾರ ಈಗಾಗಲೇ ನಿರ್ದೇಶನ ನೀಡಿದೆ. ಸಹಕಾರ ಸಚಿವರು ಸರ್ಕಾರದ ತೀರ್ಮಾನದಂತೆ ಸಂಬಂಧಪಟ್ಟ ಬ್ಯಾಂಕ್ಗಳಿಗೆ ನಿರ್ದೇಶನ ನೀಡಲಿದ್ದಾರೆ.
ಬೆಲೆ ಏರಿಕೆಗೆ ಕೇಂದ್ರದ ಆರ್ಥಿಕ ನೀತಿಗಳೂ ಕಾರಣ: ಬೆಲೆ ಏರಿಕೆಯನ್ನು ಸಮರ್ಥಿಸಿಕೊಳ್ಳಲು ಸರ್ಕಾರ ಬಯಸುವುದಿಲ್ಲ. ಆದರೆ, ರಾಜ್ಯದ ಮೇಲೆ ಆರ್ಥಿಕ ಹೊರೆ ಬೀಳಲು ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಬರಬೇಕಾದ ನ್ಯಾಯಯುತ ಅನುದಾನ ಮತ್ತು ಹಣಕಾಸಿನ ಪಾಲು ಸಮರ್ಪಕವಾಗಿ ದೊರೆಯದಿರುವುದೂ ಒಂದು ಕಾರಣವಾಗಿದೆ. ಕೇಂದ್ರ ಸರ್ಕಾರ ರಾಜ್ಯಕ್ಕೆ ನೀಡಬೇಕಾದ ಹಣವನ್ನು ನೀಡಿದರೆ ರಾಜ್ಯದ ಮೇಲೆ ಹೆಚ್ಚಿನ ಹೊರೆ ಬೀಳುವುದಿಲ್ಲ. ಆಗ ಬೆಲೆ ಏರಿಕೆ ಮಾಡುವ ಅನಿವಾರ್ಯತೆಯೂ ಎದುರಾಗುವುದಿಲ್ಲ.
ರೈತರಿಗೆ ಡೀಸೆಲ್ ಸೇರಿದಂತೆ ಕೃಷಿಗೆ ಅಗತ್ಯವಾದ ವಸ್ತುಗಳ ಬೆಲೆ ಹೆಚ್ಚಳದಿಂದ ತೊಂದರೆಯಾಗುತ್ತಿದೆ. ಆಹಾರ ಪದಾರ್ಥಗಳ ಬೆಲೆಯೂ ಏರಿಕೆಯಾಗುತ್ತಿದೆ. ಹಾಲು ಉತ್ಪಾದಕರಿಗೆ ಸೂಕ್ತ ಬೆಲೆ ನೀಡುವುದು ಸರ್ಕಾರದ ಜವಾಬ್ದಾರಿಯಾಗಿದೆ. ಕರ್ನಾಟಕದಲ್ಲಿ ಈ ವರ್ಷ ಹಾಲಿನ ಉತ್ಪಾದನೆಯೂ ಕಡಿಮೆಯಾಗಿದೆ. ಇಂತಹ ಸಂದರ್ಭದಲ್ಲಿ ರೈತರ ಪರವಾಗಿ ನಿಲ್ಲುವುದು ಅಗತ್ಯವಾಗಿದೆ. ಹಾಲು ಉತ್ಪಾದಕರಿಗೆ ಹೆಚ್ಚಿನ ದರ ನೀಡದಿದ್ದರೆ ಅವರಿಗೆ ಮತ್ತಷ್ಟು ಆರ್ಥಿಕ ಸಂಕಷ್ಟ ಎದುರಾಗುತ್ತದೆ. ಹಾಗಾಗಿ ರೈತರಿಗೆ ನೆರವು ನೀಡುವ ಉದ್ದೇಶದಿಂದ ಸರ್ಕಾರ ಈ ನಿರ್ಧಾರ ಕೈಗೊಂಡಿದೆ.
ಬೆಲೆ ಏರಿಕೆಯಿಂದ ನಗರ ಪ್ರದೇಶದ ಗ್ರಾಹಕರು ಸೇರಿದಂತೆ ಸಾಮಾನ್ಯ ಜನರಿಗೂ ಸ್ವಲ್ಪ ಮಟ್ಟಿನ ಆರ್ಥಿಕ ಹೊರೆ ಬೀಳುತ್ತಿರುವುದನ್ನು ನಿರಾಕರಿಸುವುದಿಲ್ಲ. ಅದನ್ನು ಸಮರ್ಥಿಸಿಕೊಳ್ಳಲು ಹೋಗುವುದೂ ಇಲ್ಲ. ಕೇಂದ್ರ ಸರ್ಕಾರ ರಾಜ್ಯಕ್ಕೆ ಹೆಚ್ಚಿನ ಆರ್ಥಿಕ ನೆರವು ನೀಡಿದ್ದರೆ ಇಂತಹ ಪರಿಸ್ಥಿತಿ ಎದುರಾಗುತ್ತಿರಲಿಲ್ಲ. ಮೊಸರಿನ ಮೇಲೆ ಶೇ.5ರಷ್ಟು ಜಿಎಸ್ಟಿ ವಿಧಿಸಲಾಗುತ್ತಿದೆ. ಇಂತಹ ತೆರಿಗೆ ವಿಚಾರಗಳನ್ನೂ ನಿಯಂತ್ರಿಸುವ ಅಗತ್ಯವಿದೆ.
ಮೀಸಲಾತಿ ವಿಚಾರ; ಸುಪ್ರೀಂ ಕೋರ್ಟ್ನಲ್ಲಿ ಎಸ್ಎಲ್ಪಿ ಸಲ್ಲಿಕೆ : ರಾಜ್ಯದಲ್ಲಿ ಶೇ.56ರಷ್ಟು ಮೀಸಲಾತಿ ಕಲ್ಪಿಸುವ ಸಂಬಂಧ ಕೈಗೊಂಡಿದ್ದ ನಿರ್ಧಾರವನ್ನು ಹೈಕೋರ್ಟ್ ಶೇ.50ರ ಮಿತಿಗೆ ಸೀಮಿತಗೊಳಿಸಿ ರದ್ದುಗೊಳಿಸಿರುವ ಹಿನ್ನೆಲೆಯಲ್ಲಿ ಸರ್ಕಾರ ಸುಪ್ರೀಂ ಕೋರ್ಟ್ಗೆ ಮೇಲ್ಮನವಿ ಸಲ್ಲಿಸಲು ಈಗಾಗಲೇ ಸೂಚನೆ ನೀಡಿತ್ತು. ಅದರಂತೆ ವಿಶೇಷ ಮೇಲ್ಮನವಿ ಅರ್ಜಿ (ಎಸ್ಎಲ್ಪಿ) ಸಲ್ಲಿಸಲಾಗಿದೆ. ಸುಪ್ರೀಂ ಕೋರ್ಟ್ನಲ್ಲಿ ಯಾವ ತೀರ್ಮಾನ ಹೊರಬರುತ್ತದೆ ಎಂಬುದನ್ನು ಕಾದು ನೋಡಬೇಕಿದೆ. ಈ ವಿಚಾರವನ್ನು ಕೇಂದ್ರ ಸರ್ಕಾರದ ಗಮನಕ್ಕೂ ತರಲಾಗುವುದು.
ತಮಿಳುನಾಡಿನಲ್ಲಿ ಶೇ.69ರಷ್ಟು ಮೀಸಲಾತಿಯನ್ನು ಸಂವಿಧಾನದ ಒಂಬತ್ತನೇ ಅನುಸೂಚಿಗೆ ಸೇರಿಸುವ ಮೂಲಕ ರಕ್ಷಣೆ ಮಾಡಲಾಗಿದೆ. ಪಕ್ಕದ ರಾಜ್ಯದಲ್ಲಿ ಶೇ.69ರಷ್ಟು ಮೀಸಲಾತಿ ಜಾರಿಯಲ್ಲಿರುವಾಗ ಕರ್ನಾಟಕದಲ್ಲಿ ಅದೇ ರೀತಿಯ ಕ್ರಮಕ್ಕೆ ಅವಕಾಶ ನೀಡದಿರುವುದು ಯಾವ ನ್ಯಾಯ ಎಂಬ ಪ್ರಶ್ನೆಯೂ ಇದೆ.
ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ, ಬಸವರಾಜ ಬೊಮ್ಮಾಯಿ ಅವರು ಮೀಸಲಾತಿ ಹೆಚ್ಚಳದ ನಿರ್ಧಾರ ಕೈಗೊಂಡಾಗಲೇ ಅದನ್ನು ಸಂವಿಧಾನದ ಒಂಬತ್ತನೇ ಅನುಸೂಚಿಗೆ ಸೇರಿಸುವಂತೆ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ ಒತ್ತಡ ಹೇರಿದ್ದರೆ ಈಗಿನ ಸಮಸ್ಯೆ ಎದುರಾಗುತ್ತಿರಲಿಲ್ಲ. ಈಗಾಗಲೇ ನೇಮಕಾತಿ ಪ್ರಕ್ರಿಯೆಗಳಲ್ಲಿ ಸಾಕಷ್ಟು ಗೊಂದಲಗಳಿದ್ದು, ಮೀಸಲಾತಿ ವಿಚಾರವೂ ಹೆಚ್ಚುವರಿ ಗೊಂದಲಕ್ಕೆ ಕಾರಣವಾಗಿದೆ. ಆದ್ದರಿಂದ ಸುಪ್ರೀಂ ಕೋರ್ಟ್ನ ತೀರ್ಪಿಗಾಗಿ ಕಾಯಬೇಕಿದೆ.
- ಇಂದು ನನ್ನ ಗೃಹಕಚೇರಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದೆ.
Dr. G Parameshwara
@DrParameshwara
Relief for Every Eligible Farming Family: We had announced ₹2,500 as the first instalment of drought relief for each eligible farming family. It has come to our notice that, due to an incorrect interpretation of the guidelines at the officials’ level, some farmers have received only ₹1,500 or ₹2,000.
I have instructed officials to correct these discrepancies immediately. There is no shortage of funds. The required amount has already been provided, and the pending difference will be paid once the necessary financial approval is completed.
Our Government has estimated ₹1,250 crore for the first phase, covering around 50 lakh farming families. An equal amount will be provided in the second phase, taking the total relief to ₹5,000 per eligible farming family. No eligible farmer should be denied the assistance due to them.
Awaiting Centre’s Response on NDRF Relief: It has been more than two weeks since we sought an appointment with the Union Government regarding drought relief under the NDRF, but we are yet to receive a response. Once an appointment is granted, we will decide on taking an all-party delegation to Delhi and present Karnataka’s case directly.
Protecting Farmers from Debt Distress: The number of farmer suicides this year is lower compared with previous years. Our Government has enacted a law to regulate microfinance institutions and has also announced a six-month deferment of loan repayments to reduce pressure on farmers.
We have also issued directions regarding recovery notices from cooperative banks. At the same time, harassment linked to unregulated private hand loans remains an area that requires attention.
Politics Must Have Limits: Personal attacks and provocative actions have no place in politics. People have elected us to work for the State, and those holding public office have an even greater responsibility.
Political criticism is natural, but dragging personal controversies for months only lowers the quality of public discourse. Whether from our side or the Opposition, our words and conduct must remain responsible.
Price Rise and Karnataka’s Financial Share: We do not seek to justify the burden caused by price hikes. But Karnataka is also facing financial pressure because the State is not receiving the fair share of funds and grants due from the Centre.
If Karnataka received adequate financial support, the pressure on State finances would reduce and the need for some price revisions could also be avoided.
Farmers are already affected by higher diesel, agricultural input and food costs. At the same time, dairy farmers must receive a fair price for the milk they produce. Our decisions are aimed at protecting their livelihoods while balancing the interests of consumers.
Reservation - SLP Filed in Supreme Court: Our Government has filed a Special Leave Petition (SLP) before the Supreme Court challenging the decision limiting Karnataka’s reservation to 50%.
Tamil Nadu’s 69% reservation is protected under the Ninth Schedule of the Constitution. Karnataka too deserves a fair opportunity to protect the enhanced reservation provided to our communities.
We will pursue the matter before the Supreme Court and also take it up with the Union Government.
-- My remarks to the media near my residence today. -
Dr. G Parameshwara
@DrParameshwara
ಇಂದು ನನ್ನ ಗೃಹ ಕಚೇರಿಯಲ್ಲಿ ಸಾರ್ವಜನಿಕರ ಕುಂದು-ಕೊರತೆಗಳನ್ನು ಆಲಿಸಿದೆ.
ನಿಮ್ಮ ಅಹವಾಲು ನನಗೆ ತಲುಪಿದೆ. ಅದನ್ನು ಆದ್ಯತೆ ಮೇರೆಗೆ ಬಗೆಹರಿಸಿಕೊಡುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. -
Dr. G Parameshwara
@DrParameshwara
ಮಾಜಿ ಮುಖ್ಯಮಂತ್ರಿಗಳು ಹಾಗೂ ಸಂಸದರಾದ ಬಸವರಾಜ ಬೊಮ್ಮಾಯಿ ಅವರು ಇಂದು ನನ್ನನ್ನು ಭೇಟಿಯಾಗಿ ಪುತ್ರಿಯ ಮದುವೆ ಆಮಂತ್ರಣ ಪತ್ರಿಕೆ ನೀಡಿ ಆಹ್ವಾನಿಸಿದರು.
-
Dr. G Parameshwara
@DrParameshwara
ಮಾಜಿ ಸಚಿವರಾದ ಎನ್.ಎಸ್.ಬೋಸರಾಜು ಅವರು ಇಂದು ನನ್ನನ್ನು ಭೇಟಿಯಾಗಿ ಕುಶಲೋಪರಿ ವಿಚಾರಿಸಿ, ಮಾತುಕತೆ ನಡೆಸಿದರು.
-
Dr. G Parameshwara
@DrParameshwara
Education has the power to change not just individual lives, but the future of entire generations. It gives children the confidence to dream, the freedom to choose their path and the opportunity to build a better life.
On National Education Day, we remember Maulana Abul Kalam Azad, independent India's first Education Minister, whose vision laid a strong foundation for our nation's educational progress.
The most meaningful tribute to his legacy is to ensure that every child, regardless of their background or circumstances, has access to quality education and an equal opportunity to succeed. -
Dr. G Parameshwara
@DrParameshwara
ಕನ್ನಡ ಸಾಹಿತ್ಯ ಲೋಕಕ್ಕೆ ಅಪಾರ ಕೊಡುಗೆ ನೀಡಿ, ಕನ್ನಡದ ಕೀರ್ತಿಯನ್ನು ಜಗದಗಲ ಪಸರಿಸಿದ ರಾಷ್ಟ್ರಕವಿ ಕುವೆಂಪು ಅವರು ಕನ್ನಡಿಗರ ಹೆಮ್ಮೆಯ ಸಂಕೇತ. ಕನ್ನಡಕ್ಕೆ ಮೊಟ್ಟಮೊದಲ ಜ್ಞಾನಪೀಠ ಪ್ರಶಸ್ತಿಯ ಗೌರವ ತಂದುಕೊಟ್ಟ ಅವರ ಸಾಹಿತ್ಯ ಸಾಧನೆ ಅನನ್ಯ.
ವಿಶ್ವಮಾನವ ಸಂದೇಶದ ಮೂಲಕ ಮಾನವೀಯ ಮೌಲ್ಯಗಳನ್ನು ಸಾರಿದ ಕುವೆಂಪು ಅವರ ಚಿಂತನೆಗಳು ಸದಾ ನಮ್ಮೆಲ್ಲರಿಗೂ ದಾರಿದೀಪವಾಗಿರಲಿವೆ. ಅವರ ಪುಣ್ಯಸ್ಮರಣೆಯಂದು ಗೌರವಪೂರ್ವಕ ನಮನಗಳನ್ನು ಸಲ್ಲಿಸುತ್ತೇನೆ. -
Dr. G Parameshwara
@DrParameshwara
ವೀರವನಿತೆ ಒನಕೆ ಓಬವ್ವ ಅವರು ಒನಕೆಯನ್ನೇ ಅಸ್ತ್ರವಾಗಿಸಿಕೊಂಡು ಶತ್ರು ಸೈನ್ಯದ ವಿರುದ್ಧ ಹೋರಾಡಿದ ಪರಿ ಕನ್ನಡ ನಾಡಿನ ಇತಿಹಾಸದಲ್ಲಿ ಎಂದೆಂದಿಗೂ ಸ್ಮರಣೀಯ.
ಅಸಾಧಾರಣ ಸಮಯಪ್ರಜ್ಞೆ, ಎದೆಗಾರಿಕೆ ಮತ್ತು ಕರ್ತವ್ಯನಿಷ್ಠೆಯಿಂದ ನಾಡಿನ ರಕ್ಷಣೆಗೆ ನಿಂತ ಅವರ ಬದುಕು ಮಹಿಳಾ ಶಕ್ತಿಯ ಪ್ರತೀಕವಾಗಿದೆ.
ವೀರವನಿತೆ ಒನಕೆ ಓಬವ್ವ ಅವರ ಧೈರ್ಯ, ಸಾಹಸ ಮತ್ತು ನಾಡಪ್ರೇಮದ ಆದರ್ಶಗಳು ಮುಂದಿನ ಪೀಳಿಗೆಗೂ ಪ್ರೇರಣೆಯಾಗಿರಲಿ. ಅವರ ಜಯಂತಿಯಂದು ಗೌರವ ನಮನಗಳನ್ನು ಸಲ್ಲಿಸುತ್ತೇನೆ. -
Dr. G Parameshwara
@DrParameshwara
It is a matter of immense joy that the Indian women’s shooting team has won the gold medal in the 25-metre pistol event at the ISSF World Shooting Championships held in Doha.
It is a particularly proud moment for Karnataka that Divya Thadigol Subbaraju, Bengaluru’s very own shooting star, has been part of this historic achievement. The contributions of Esha Singh and Manu Bhaker to this remarkable victory are equally commendable.
My heartfelt congratulations to all three talented shooters for making India proud and raising the Tricolour high on the international stage.
It is a matter of great pride to see athletes from Karnataka demonstrating their talent and excellence on the global stage. May Divya’s remarkable achievement inspire young sportspersons across the state to dream big and strive for excellence. I wish her continued success and many more laurels in the years ahead.
ದೋಹಾದಲ್ಲಿ ನಡೆದ ISSF ವಿಶ್ವ ಶೂಟಿಂಗ್ ಚಾಂಪಿಯನ್ಶಿಪ್ನಲ್ಲಿ ಭಾರತದ ಮಹಿಳಾ ಶೂಟಿಂಗ್ ತಂಡ 25 ಮೀಟರ್ ಪಿಸ್ತೂಲ್ ವಿಭಾಗದಲ್ಲಿ ಚಿನ್ನದ ಪದಕ ಗೆದ್ದಿರುವುದು ಅತ್ಯಂತ ಸಂತಸ ತಂದಿದೆ.
ವಿಶೇಷವಾಗಿ, ಕರ್ನಾಟಕದ ಹೆಮ್ಮೆ ಬೆಂಗಳೂರಿನ ದಿವ್ಯಾ ಥಡಿಗೋಳ್ ಸುಬ್ಬರಾಜು ಅವರು ಈ ಐತಿಹಾಸಿಕ ಸಾಧನೆಯ ಭಾಗವಾಗಿರುವುದು ರಾಜ್ಯದ ಕ್ರೀಡಾ ಕ್ಷೇತ್ರಕ್ಕೆ ಹೆಮ್ಮೆಯ ಕ್ಷಣವಾಗಿದೆ. ಈ ಸಾಧನೆಯಲ್ಲಿ ದಿವ್ಯಾ ಅವರೊಂದಿಗೆ ಇಶಾ ಸಿಂಗ್ ಹಾಗೂ ಮನು ಭಾಕರ್ ಅವರ ಕೊಡುಗೆಯೂ ಶ್ಲಾಘನೀಯ.
ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಭಾರತದ ತ್ರಿವರ್ಣ ಧ್ವಜವನ್ನು ಎತ್ತಿಹಿಡಿದ ಮೂವರು ಪ್ರತಿಭಾವಂತ ಶೂಟರ್ಗಳಿಗೆ ಹೃತ್ಪೂರ್ವಕ ಅಭಿನಂದನೆಗಳು.
ಕರ್ನಾಟಕದ ಕ್ರೀಡಾಪಟುಗಳು ಜಾಗತಿಕ ಮಟ್ಟದಲ್ಲಿ ತಮ್ಮ ಪ್ರತಿಭೆ ಮತ್ತು ಸಾಮರ್ಥ್ಯವನ್ನು ಸಾಬೀತುಪಡಿಸುತ್ತಿರುವುದು ಹೆಮ್ಮೆಯ ಸಂಗತಿ. ದಿವ್ಯಾ ಅವರ ಈ ಸಾಧನೆ ರಾಜ್ಯದ ಯುವ ಕ್ರೀಡಾಪಟುಗಳಿಗೆ ಸ್ಫೂರ್ತಿಯಾಗಲಿ. ಮುಂದಿನ ದಿನಗಳಲ್ಲಿಯೂ ಇನ್ನಷ್ಟು ಸಾಧನೆಗಳು ಅವರದಾಗಲಿ ಎಂದು ಹಾರೈಸುತ್ತೇನೆ. -
Dr. G Parameshwara
@DrParameshwara
ನಮ್ಮ ಸರ್ಕಾರ ರೈತರ ಪರವಾಗಿ ದೃಢವಾಗಿ ನಿಂತಿದೆ. ಬರಗಾಲದಿಂದಾಗಿ ರೈತ ಸಮುದಾಯ ತೀವ್ರ ಸಂಕಷ್ಟಕ್ಕೆ ಸಿಲುಕಿರುವ ಈ ಸಂದರ್ಭದಲ್ಲಿ ಪರಿಹಾರ ಘೋಷಣೆ ಮಾಡುವುದಷ್ಟೇ ನಮ್ಮ ಜವಾಬ್ದಾರಿಯಲ್ಲ. ಅರ್ಹ ರೈತರೆಲ್ಲರಿಗೂ ನ್ಯಾಯಯುತವಾಗಿ, ಗೌರವಯುತವಾಗಿ ಮತ್ತು ಪಾರದರ್ಶಕವಾಗಿ ಪರಿಹಾರ ತಲುಪುವಂತೆ ನೋಡಿಕೊಳ್ಳುವುದು ನಮ್ಮ ಕರ್ತವ್ಯವಾಗಿದೆ. ಈ ಭರವಸೆಯನ್ನು ಕರ್ನಾಟಕದ ಎಲ್ಲ ರೈತರಿಗೂ ನಾನು ನೀಡುತ್ತಿದ್ದೇನೆ.
ಬರ ಪರಿಹಾರದ ಮೊದಲ ಕಂತಿನಲ್ಲಿ ಕೆಲವು ರೈತರಿಗೆ ₹2,500 ಬದಲಾಗಿ ₹2,000 ಜಮೆಯಾಗಿರುವ ಕುರಿತು ಆತಂಕ ಮತ್ತು ಗೊಂದಲ ವ್ಯಕ್ತವಾಗಿದೆ. ರೈತರ ಈ ಕಳವಳವನ್ನು ನಾನು ಅರ್ಥಮಾಡಿಕೊಂಡಿದ್ದೇನೆ. ಈ ವಿಷಯದ ಕುರಿತು ರಾಜ್ಯದ ಜನತೆಗೆ ವಾಸ್ತವಾಂಶಗಳನ್ನು ಸ್ಪಷ್ಟಪಡಿಸಲು ಬಯಸುತ್ತೇನೆ.
ಮೊದಲನೆಯದಾಗಿ, ಕೆಲವು ರೈತರ ಖಾತೆಗೆ ಜಮೆಯಾಗಿರುವ ₹2,000ವೇ ಅವರಿಗೆ ಸಿಗುವ ಅಂತಿಮ ಪರಿಹಾರವಲ್ಲ ಎಂಬುದನ್ನು ಸ್ಪಷ್ಟಪಡಿಸುತ್ತೇನೆ. ಬರಪೀಡಿತ ಅರ್ಹ ರೈತರೆಲ್ಲರಿಗೂ ಕನಿಷ್ಠ ₹5,000 ಪರಿಹಾರ ನೀಡಲು ನಮ್ಮ ಸರ್ಕಾರ ನಿರ್ಧರಿಸಿದೆ. ಈ ಭರವಸೆಯನ್ನು ನಾವು ಖಂಡಿತವಾಗಿಯೂ ಈಡೇರಿಸುತ್ತೇವೆ.
2026ರ ಅಕ್ಟೋಬರ್ 23ರಂದು ಹೊರಡಿಸಿದ ಸರ್ಕಾರಿ ಆದೇಶದ ಮೂಲಕ ಅರ್ಹ ರೈತರಿಗೆ ತಲಾ ₹2,500 ಮೊದಲ ಕಂತಿನ ಬೆಳೆಹಾನಿ ಪರಿಹಾರ ಬಿಡುಗಡೆ ಮಾಡಲು ರಾಜ್ಯ ಸರ್ಕಾರ ಅನುಮೋದನೆ ನೀಡಿತ್ತು. ಅದರಂತೆ, ನವೆಂಬರ್ 5ರಂದು ಯಾದಗಿರಿ ಜಿಲ್ಲೆಯ 1,06,462 ರೈತರಿಗೆ ₹17.43 ಕೋಟಿ ಬರ ಪರಿಹಾರ ವಿತರಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದೇವೆ.
ಇದಾದ ಬಳಿಕ, ವಿಶೇಷವಾಗಿ ಕಡಿಮೆ ಜಮೀನು ಹೊಂದಿರುವ ರೈತರು ವ್ಯಕ್ತಪಡಿಸಿದ ಆತಂಕ ಮತ್ತು ಅಹವಾಲುಗಳನ್ನು ನಾನು ಗಂಭೀರವಾಗಿ ಪರಿಗಣಿಸಿದ್ದೇನೆ. ಪರಿಹಾರ ಪಾವತಿಗೆ ಅನ್ವಯವಾಗುವ ನಿಯಮಗಳು ಹಾಗೂ ಮಾರ್ಗಸೂಚಿಗಳನ್ನು ಪರಿಶೀಲಿಸಿದ್ದೇನೆ.
ಕೇಂದ್ರ ಸರ್ಕಾರ ರೂಪಿಸಿರುವ ಪ್ರಸ್ತುತ ಎಸ್ಡಿಆರ್ಎಫ್/ಎನ್ಡಿಆರ್ಎಫ್ ಮಾರ್ಗಸೂಚಿಗಳ ಪ್ರಕಾರ, ಬೆಳೆಹಾನಿಗೆ ನೀಡುವ ಪರಿಹಾರವನ್ನು ಕೃಷಿ ಭೂಮಿಯ ವಿಸ್ತೀರ್ಣ ಮತ್ತು ಬೆಳೆಗಳ ವರ್ಗೀಕರಣದ ಆಧಾರದ ಮೇಲೆ ಲೆಕ್ಕಹಾಕಲಾಗುತ್ತದೆ. ಈ ಮಾರ್ಗಸೂಚಿಗಳಲ್ಲಿ ಮಳೆಯಾಶ್ರಿತ ಬೆಳೆಗಳಿಗೆ ಕನಿಷ್ಠ ₹1,500, ನೀರಾವರಿ ಬೆಳೆಗಳಿಗೆ ₹2,600 ಹಾಗೂ ಬಹುವಾರ್ಷಿಕ ಬೆಳೆಗಳಿಗೆ ₹3,200 ಪರಿಹಾರ ನಿಗದಿಪಡಿಸಲಾಗಿದೆ.
ಆದರೆ, ಈ ಕನಿಷ್ಠ ಮಾನದಂಡಗಳಿಗೆ ಸೀಮಿತವಾಗದೆ, ರೈತರ ಹಿತದೃಷ್ಟಿಯಿಂದ ಮತ್ತೊಂದು ಹೆಜ್ಜೆ ಮುಂದೆ ಹೋಗಲು ಮುಖ್ಯಮಂತ್ರಿಯವರು ಮತ್ತು ನಾನು ನಿರ್ಧರಿಸಿದ್ದೇವೆ.
ರೈತರು ಹೊಂದಿರುವ ಕೃಷಿ ಭೂಮಿಯ ವಿಸ್ತೀರ್ಣ ಎಷ್ಟೇ ಇರಲಿ, ಬರಪೀಡಿತ ಅರ್ಹ ರೈತರೆಲ್ಲರಿಗೂ ಕನಿಷ್ಠ ₹5,000 ಬೆಳೆಹಾನಿ ಪರಿಹಾರ ನೀಡಲು ನಮ್ಮ ಸರ್ಕಾರ ದೃಢನಿರ್ಧಾರ ಕೈಗೊಂಡಿದೆ.
ಅರ್ಧ ಎಕರೆ ಜಮೀನಿನಲ್ಲಿ ಕೃಷಿ ಮಾಡುವವರಿಗೂ, ಹಲವು ಎಕರೆ ಜಮೀನಿನಲ್ಲಿ ಕೃಷಿ ಮಾಡುವವರಿಗೂ ಬರಗಾಲದ ಸಂಕಷ್ಟ ಒಂದೇ. ಬೆಳೆ ನಷ್ಟದ ನೋವು, ಮುಂದಿನ ಬದುಕಿನ ಆತಂಕ ಮತ್ತು ಆರ್ಥಿಕ ತೊಂದರೆಗಳು ಎಲ್ಲರನ್ನೂ ಕಾಡುತ್ತವೆ. ಕೃಷಿ ಭೂಮಿಯ ವಿಸ್ತೀರ್ಣ ಕಡಿಮೆ ಇದೆ ಎಂಬ ಕಾರಣಕ್ಕೆ ರೈತರ ಬಗ್ಗೆ ಸರ್ಕಾರ ತೋರುವ ಕಾಳಜಿ ಕಡಿಮೆಯಾಗಬಾರದು.
ಈ ಹಿನ್ನೆಲೆಯಲ್ಲಿ, ಮೊದಲ ಕಂತಿನಲ್ಲಿ ₹2,000 ಪಡೆದಿರುವ ರೈತರಿಗೆ ಮುಂದಿನ ಕಂತಿನಲ್ಲಿ ಬಾಕಿ ₹3,000 ಪಾವತಿಸಲಾಗುವುದು. ಅದೇ ರೀತಿ, ಈಗಾಗಲೇ ₹2,500 ಪಡೆದಿರುವ ರೈತರಿಗೆ ಮತ್ತೊಂದು ₹2,500 ನೀಡಲಾಗುವುದು. ಈ ಮೂಲಕ ಅರ್ಹ ರೈತರೆಲ್ಲರಿಗೂ ತಲಾ ಕನಿಷ್ಠ ₹5,000 ಪರಿಹಾರ ತಲುಪುವುದನ್ನು ಖಚಿತಪಡಿಸಲಾಗುವುದು.
₹5,000 ಕನಿಷ್ಠ ಪರಿಹಾರ ಮೊತ್ತವಾಗಿದ್ದು, ಬೆಳೆಹಾನಿಯ ಪ್ರಮಾಣ, ಕೃಷಿ ಭೂಮಿಯ ವಿಸ್ತೀರ್ಣ ಹಾಗೂ ಅನ್ವಯವಾಗುವ ಮಾನದಂಡಗಳ ಆಧಾರದ ಮೇಲೆ ಅರ್ಹ ರೈತರಿಗೆ ₹5,000ದಿಂದ ₹60,000ದವರೆಗೆ ಹೆಚ್ಚಿನ ಬೆಳೆಹಾನಿ ಪರಿಹಾರ ನೀಡಲು ನಮ್ಮ ಸರ್ಕಾರ ಅವಕಾಶ ಕಲ್ಪಿಸಿದೆ.
ಪರಿಹಾರ ವಿತರಣೆ ಪ್ರಕ್ರಿಯೆಯಲ್ಲಿ ಸಂಪೂರ್ಣ ಪಾರದರ್ಶಕತೆ ಕಾಯ್ದುಕೊಳ್ಳಬೇಕು, ಬಾಕಿ ಕಂತುಗಳನ್ನು ಶೀಘ್ರವಾಗಿ ಬಿಡುಗಡೆ ಮಾಡಬೇಕು ಹಾಗೂ ಅರ್ಹ ರೈತರಲ್ಲಿ ಯಾರಿಗೂ ನ್ಯಾಯಯುತವಾಗಿ ದೊರೆಯಬೇಕಾದ ಪರಿಹಾರ ತಪ್ಪಿಹೋಗಬಾರದು ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದೇನೆ. (1/2)
Dr. G Parameshwara
@DrParameshwara
ಸರ್ಕಾರದ ನಿಯಮಗಳು ರೈತರ ನೆರವಿಗೆ ಬರಬೇಕೇ ಹೊರತು, ಅವರಿಗೆ ಪರಿಹಾರ ತಲುಪಿಸುವುದಕ್ಕೆ ಅಡ್ಡಿಯಾಗಬಾರದು. ಅಸ್ತಿತ್ವದಲ್ಲಿರುವ ಮಾರ್ಗಸೂಚಿಗಳು ರೈತರ ಸಂಕಷ್ಟಕ್ಕೆ ಸಮರ್ಪಕವಾಗಿ ಸ್ಪಂದಿಸಲು ಸಾಧ್ಯವಾಗದ ಸಂದರ್ಭಗಳಲ್ಲಿ, ರೈತರ ಹಿತ ಕಾಪಾಡಲು ಅಗತ್ಯ ನಿರ್ಧಾರಗಳನ್ನು ಕೈಗೊಳ್ಳಲು ನಮ್ಮ ಸರ್ಕಾರ ಹಿಂಜರಿಯುವುದಿಲ್ಲ.
ಈ ಸಂದರ್ಭದಲ್ಲಿ ರಾಜ್ಯದ ಎಲ್ಲ ರೈತರಿಗೂ ನನ್ನದೊಂದು ಮನವಿ ಇದೆ. ಬರ ಪರಿಹಾರದ ಕುರಿತು ಹರಡುತ್ತಿರುವ ವದಂತಿಗಳು, ತಪ್ಪು ಮಾಹಿತಿ ಹಾಗೂ ರಾಜಕೀಯ ಪ್ರೇರಿತ ಅಪಪ್ರಚಾರಗಳಿಗೆ ಕಿವಿಗೊಡಬೇಡಿ. ಅನಗತ್ಯ ಗೊಂದಲಗಳಿಗೆ ಒಳಗಾಗಬೇಡಿ.
ರೈತರ ಸಮಸ್ಯೆಗಳ ಕುರಿತು ನೈಜ ಕಾಳಜಿಯಿಂದ ಪ್ರಶ್ನೆಗಳನ್ನು ಎತ್ತುವುದಕ್ಕೂ, ಮೊದಲ ಕಂತಿನಲ್ಲಿ ನೀಡಿರುವ ಮಧ್ಯಂತರ ಪರಿಹಾರವನ್ನೇ ಅಂತಿಮ ಪರಿಹಾರವೆಂದು ಬಿಂಬಿಸಿ ಗೊಂದಲ ಸೃಷ್ಟಿಸುವುದಕ್ಕೂ ಬಹಳ ವ್ಯತ್ಯಾಸವಿದೆ. ವಿರೋಧ ಪಕ್ಷಗಳ ನಾಯಕರು ಈ ವಿಷಯದಲ್ಲಿ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು. ರೈತರ ಸಂಕಷ್ಟವನ್ನು ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳಬಾರದು ಎಂದು ಮನವಿ ಮಾಡುತ್ತೇನೆ.
ರೈತರ ಅಹವಾಲುಗಳನ್ನು ಆಲಿಸಲು ಅಥವಾ ಲೋಪದೋಷಗಳನ್ನು ಒಪ್ಪಿಕೊಳ್ಳಲು ಮುಖ್ಯಮಂತ್ರಿಯವರಾಗಲಿ, ನಾನಾಗಲಿ ಎಂದಿಗೂ ಹಿಂಜರಿಯುವುದಿಲ್ಲ. ಬದಲಾಗಿ, ರೈತರು ತಮ್ಮ ಸಮಸ್ಯೆಗಳನ್ನು ನಮ್ಮ ಗಮನಕ್ಕೆ ತರುವುದನ್ನು ನಾವು ಸ್ವಾಗತಿಸುತ್ತೇವೆ.
ಅರ್ಹ ರೈತರಲ್ಲಿ ಯಾರಿಗಾದರೂ ನಿಗದಿತ ಮೊತ್ತಕ್ಕಿಂತ ಕಡಿಮೆ ಪರಿಹಾರ ದೊರೆತಿದ್ದರೆ ಅಥವಾ ಮುಂದಿನ ಕಂತಿನ ಹಣ ಪಡೆಯುವಲ್ಲಿ ತೊಂದರೆ ಎದುರಾದರೆ, ಅಂತಹ ಪ್ರಕರಣಗಳನ್ನು ಪರಿಶೀಲಿಸಿ ಅನಗತ್ಯ ವಿಳಂಬವಿಲ್ಲದೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು.
ನಮ್ಮ ರೈತರಿಗೆ ಬೇಕಿರುವುದು ರಾಜಕೀಯ ಆರೋಪ-ಪ್ರತ್ಯಾರೋಪಗಳಲ್ಲ. ಸಕಾಲದಲ್ಲಿ ದೊರೆಯುವ ಪರಿಹಾರ, ಆರ್ಥಿಕ ಭದ್ರತೆ ಮತ್ತು ತಮ್ಮ ಕಷ್ಟಕಾಲದಲ್ಲಿ ಸರ್ಕಾರ ತಮ್ಮ ಬೆನ್ನಿಗೆ ನಿಂತಿದೆ ಎಂಬ ವಿಶ್ವಾಸ.
ಈ ಸಂಕಷ್ಟದ ಸಮಯದಲ್ಲಿ ಮುಖ್ಯಮಂತ್ರಿಯವರು ಮತ್ತು ನಾನು ಎಲ್ಲ ರೈತರ ಜೊತೆ ನಿಲ್ಲುತ್ತೇವೆ ಎಂಬ ಭರವಸೆ ನೀಡುತ್ತೇನೆ. ರೈತರ ಅಹವಾಲುಗಳನ್ನು ಆಲಿಸುತ್ತೇವೆ. ಲೋಪದೋಷಗಳು ಕಂಡುಬಂದಲ್ಲಿ ಅವುಗಳನ್ನು ಸರಿಪಡಿಸುತ್ತೇವೆ. ರೈತರಿಗಾಗಿ ಮೀಸಲಿಟ್ಟಿರುವ ಸೌಲಭ್ಯಗಳು ಅವರಿಗೇ ತಲುಪುವಂತೆ ನೋಡಿಕೊಳ್ಳುತ್ತೇವೆ.
ಬರಪೀಡಿತ ಅರ್ಹ ರೈತರೆಲ್ಲರಿಗೂ ಕನಿಷ್ಠ ₹5,000 ಪರಿಹಾರ, ಬಾಕಿ ಕಂತುಗಳ ಸಕಾಲಿಕ ಬಿಡುಗಡೆ ಹಾಗೂ ಕಡಿಮೆ ಜಮೀನು ಹೊಂದಿದ್ದಾರೆ ಎಂಬ ಒಂದೇ ಕಾರಣಕ್ಕೆ ಯಾರೂ ಪರಿಹಾರದಿಂದ ವಂಚಿತರಾಗದಂತೆ ನೋಡಿಕೊಳ್ಳುವುದು ನಮ್ಮ ಸರ್ಕಾರದ ದೃಢ ಬದ್ಧತೆಯಾಗಿದೆ.
ರೈತರಿಗೆ ಬೇಕಿರುವುದು ಪರಿಹಾರವೇ ಹೊರತು ವದಂತಿಗಳಲ್ಲ. ಅವರಲ್ಲಿ ಮೂಡಬೇಕಿರುವುದು ಭರವಸೆಯೇ ಹೊರತು ಗೊಂದಲವಲ್ಲ. ರೈತರಿಗೆ ದೊರೆಯಬೇಕಿರುವುದು ಗೌರವಯುತ ಬದುಕೇ ಹೊರತು ಅನಿಶ್ಚಿತತೆಯಲ್ಲ.
ಇದು ನಮ್ಮ ಸರ್ಕಾರದ ಸಂಕಲ್ಪ. ಈ ಸಂಕಲ್ಪವನ್ನು ನಾವು ಖಂಡಿತವಾಗಿಯೂ ಈಡೇರಿಸುತ್ತೇವೆ. (2/2) -
Dr. G Parameshwara
@DrParameshwara
I wish to reassure every farmer in Karnataka that our Government stands firmly with them. At a time when drought has caused immense hardship to our farming community, our responsibility is not merely to announce relief but to ensure that the assistance reaches every deserving farmer with dignity, fairness and transparency.
Certain concerns have been raised regarding the payment of ₹2,000 to some farmers instead of the expected ₹2,500 under the first instalment of drought relief. I understand these concerns and wish to place the facts before the people of Karnataka.
First, I want to make it absolutely clear that the ₹2,000 received by certain farmers is not their final assistance. The Government has decided to provide a minimum of ₹5,000 to every eligible drought-affected farmer, and this commitment will be honoured.
Through Government dated 23 October 2026, the State Government authorised the release of ₹2,500 per eligible farmer as the first instalment of input subsidy.
Accordingly, on 5 November 2026, we launched the distribution of ₹17.43 crore to 1,06,462 farmers in Yadgir district as part of the State's drought relief programme.
Subsequently, I reviewed the concerns of farmers, particularly those with smaller agricultural holdings, and examined the provisions governing the payment of assistance.
Under the prevailing Union Government drafted SDRF/NDRF guidelines, input subsidy for crop losses is calculated on the basis of the extent and category of agricultural land. The prescribed minimum assistance is ₹1,500 for rainfed crops, ₹2,600 for irrigated crops and ₹3,200 for perennial crops.
However, Hon. Chief Minister and myself have taken a conscious decision to go beyond these minimum norms and provide *₹5,000 as minimum crop-loss assistance to every eligible farmer,* irrespective of the size of their agricultural holding.
A farmer cultivating half an acre suffers from the same drought, the same uncertainty and the same financial distress as a farmer cultivating several acres. The size of a farmer's landholding should never determine the compassion of a Government.
I wish to clarify that farmers who received ₹2,000 in the first instalment will receive the remaining ₹3,000 in the subsequent instalment. Similarly, farmers who have received ₹2,500 will receive another ₹2,500, ensuring that the total assistance reaches ₹5,000.
Rs. 5,000 is the minimum assistance provided and the Government has provided for enhanced input subsidy ranging from ₹5,000 to ₹60,000 for eligible farmers, depending on the extent of crop loss and the applicable norms.
I have directed the officials concerned to ensure that the payment process is transparent, that the remaining instalments are released expeditiously and that no eligible farmer is deprived of the assistance due to them.
The Government guidelines must serve the interests of farmers, not become obstacles to delivering relief. Where existing norms are inadequate to address the hardship of farmers, our Government will take the necessary decisions to protect their interests. (1/2)
Dr. G Parameshwara
@DrParameshwara
I also appeal to our farmers not to be misled by rumours, misinformation or politically motivated attempts to create confusion over the relief payments.
There is a fundamental difference between raising genuine concerns about farmers' welfare and deliberately presenting an interim payment as the final assistance. I urge opposition leaders to act responsibly and not exploit the difficulties of farmers for political advantage.
The Hon. Chief Minister and I do not shy away from acknowledging grievances. On the contrary, we welcome them. If any eligible farmer has received less than the assistance due, or faces difficulties in receiving subsequent payments, the matter will be examined and corrective action taken without unnecessary delay.
Our farmers do not need political accusations. They need timely assistance, financial security and the confidence that their Government stands beside them.
I assure every farmer that the Hon. Chief Minister and I will stand with them through this difficult period. We will listen to their concerns, correct shortcomings wherever identified and ensure that the benefits intended for them reach them.
Our commitment is ₹5,000 minimum assistance to every eligible farmer, timely release of the remaining instalments and no exclusion merely because of a small landholding.
Farmers deserve relief, not rumours; reassurance, not confusion; and dignity, not uncertainty. That is the commitment of our Government, and we will fulfil it. (2/2) -
Dr. G Parameshwara
@DrParameshwara
On #worldscienceday for Peace and Development, we celebrate the power of science to transform lives and shape a better future.
Scientific progress is meaningful when it goes beyond laboratories and research institutions to address everyday challenges, improve livelihoods and create opportunities for all.
Let us continue to nurture scientific temper, encourage young innovators and ensure that the benefits of science reach every section of society. -
Dr. G Parameshwara
@DrParameshwara
ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವರಾದ @MBPatil ಅವರು ಇಂದು ನನ್ನನ್ನು ಭೇಟಿ ಮಾಡಿ ದೀಪಾವಳಿ ಹಬ್ಬದ ಶುಭಾಶಯ ಕೋರಿದರು.
-
Dr. G Parameshwara
@DrParameshwara
ನಾಡಿನ ಸಮಸ್ತ ಜನತೆಗೆ ಬಲಿಪಾಡ್ಯಮಿ ಹಬ್ಬದ ಹಾರ್ದಿಕ ಶುಭಾಶಯಗಳು.
ಸಮೃದ್ಧಿಯ ಸಂಕೇತವಾದ ಬಲಿಪಾಡ್ಯಮಿ ಹಬ್ಬವು ಪ್ರತಿಯೊಬ್ಬರ ಬದುಕಿನಲ್ಲೂ ಸುಖ, ಶಾಂತಿ, ನೆಮ್ಮದಿಯನ್ನು ತರಲಿ. ಪರಸ್ಪರ ಪ್ರೀತಿ, ವಿಶ್ವಾಸ ಮತ್ತು ಸಹಬಾಳ್ವೆಯ ಭಾವನೆಗಳು ಪ್ರತಿ ಕುಟುಂಬಗಳಲ್ಲಿ ಹಾಗೂ ಸಮಾಜದಲ್ಲಿ ಸದಾ ನೆಲೆಸಿರಲಿ.
ರಾಜನೀತಿ, ಧರ್ಮನಿಷ್ಠೆ ಮತ್ತು ಜನಕಲ್ಯಾಣದ ಸಂಕೇತವಾದ ಮಹಾಬಲಿ ಚಕ್ರವರ್ತಿಯ ಆದರ್ಶಗಳು ನಮ್ಮೆಲ್ಲರಿಗೂ ಪ್ರೇರಣೆಯಾಗಲಿ. ಸಮಾನತೆ, ಮಾನವೀಯತೆ ಮತ್ತು ಒಳಿತಿನ ಮೌಲ್ಯಗಳನ್ನು ಅಳವಡಿಸಿಕೊಂಡು ಎಲ್ಲರೂ ಸಂತೋಷದಿಂದ ಬಾಳುವ ಸುಂದರ ಸಮಾಜ ನಿರ್ಮಾಣವಾಗಲಿ ಎಂದು ಆಶಿಸುತ್ತೇನೆ.
ನಾಡಿನ ಪ್ರತಿಯೊಂದು ಮನೆ-ಮನಗಳಲ್ಲೂ ಸಂತೋಷದ ಬೆಳಕು ಬೆಳಗಲಿ.
ಮತ್ತೊಮ್ಮೆ ಎಲ್ಲರಿಗೂ ಬಲಿಪಾಡ್ಯಮಿಯ ಹೃತ್ಪೂರ್ವಕ ಶುಭಾಶಯಗಳು. -
Dr. G Parameshwara
@DrParameshwara
ಬರದ ಪರಿಣಾಮ ಬೆಳೆ ನಷ್ಟ ಅನುಭವಿಸಿರುವ ರೈತರ ಆರ್ಥಿಕ ಸಂಕಷ್ಟವನ್ನು ಮನಗಂಡು, ಅರ್ಹ ರೈತರಿಗೆ ತಲಾ ₹5,000 ಪರಿಹಾರ ನೀಡಲು ನಮ್ಮ ಸರ್ಕಾರ ನಿರ್ಧರಿಸಿದೆ. ಮೊದಲ ಕಂತಿನ ₹2,500 ಪರಿಹಾರವನ್ನು ನೇರವಾಗಿ ರೈತರ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡುವ ಪ್ರಕ್ರಿಯೆ ಕೈಗೊಳ್ಳಲಾಗಿದ್ದು, ಉಳಿದ ₹2,500 ಅನ್ನು ಎರಡನೇ ಕಂತಿನಲ್ಲಿ ಶೀಘ್ರವೇ ಬಿಡುಗಡೆ ಮಾಡಲು ಅಗತ್ಯ ಕ್ರಮ ವಹಿಸಲಾಗುತ್ತಿದೆ.
ಬೆಳೆ ಕಳೆದುಕೊಂಡ ರೈತರಿಗೆ ಪರಿಹಾರವೆಂದರೆ ಕೇವಲ ಆರ್ಥಿಕ ನೆರವಲ್ಲ, ಸಂಕಷ್ಟದ ಸಮಯದಲ್ಲಿ ಅವರೊಂದಿಗೆ ಸರ್ಕಾರ ನಿಂತಿದೆ ಎಂಬ ಭರವಸೆಯೂ ಹೌದು. ಅನ್ನದಾತರ ಶ್ರಮದಿಂದಲೇ ನಾಡು ಸಮೃದ್ಧವಾಗಿದ್ದು, ಅವರ ಹಿತವನ್ನು ಕಾಪಾಡುವುದು ನಮ್ಮ ಸರ್ಕಾರದ ಪ್ರಮುಖ ಆದ್ಯತೆಯಾಗಿದೆ.
ಈ ದೀಪಾವಳಿ ಪ್ರತಿಯೊಬ್ಬ ಅನ್ನದಾತನ ಬದುಕಿನಲ್ಲಿ ಹೊಸ ಆಶಾಕಿರಣ ಮೂಡಿಸಲಿ. ರೈತರ ಸಂಕಷ್ಟಕ್ಕೆ ಸ್ಪಂದಿಸಿ, ಅವರ ಬದುಕಿಗೆ ಆಸರೆಯಾಗುವ ನಿಟ್ಟಿನಲ್ಲಿ ನಮ್ಮ ಸರ್ಕಾರದ ಪ್ರಯತ್ನಗಳು ನಿರಂತರವಾಗಿ ಮುಂದುವರಿಯಲಿವೆ.
Understanding the financial hardship faced by farmers who have lost crops to drought, our Government has decided to provide ₹5,000 in relief to each eligible farmer.
The first instalment of ₹2,500 is being credited directly to farmers’ bank accounts, and steps are under way to release the remaining ₹2,500 shortly.
For a farmer who has lost a crop, relief is not just financial assistance -- it is also the assurance that the Government stands with them in a difficult time. Protecting the interests of our farmers remains a priority for us.
May this Deepavali bring renewed hope to every farming family. Our efforts to support farmers and strengthen their livelihoods will continue. -
Dr. G Parameshwara
@DrParameshwara
My heartfelt tributes to former President of India, Shri K. R. Narayanan, on his death anniversary.
Rising above poverty, caste discrimination and numerous social barriers to become India's first Dalit President, his extraordinary journey remains an enduring inspiration to generations.
A steadfast champion of social justice, equality and constitutional values, he dedicated his public life to upholding the dignity and rights of the marginalised.
His remarkable legacy continues to remind us of the transformative power of education and Dr. B. R. Ambedkar's vision of a just and inclusive India. -
Dr. G Parameshwara
@DrParameshwara
ಮಾಗಡಿ ತಾಲೂಕಿನ ತಿಪ್ಪಸಂದ್ರ ಹೋಬಳಿಯ ಮಕ್ಕಟ್ಟಮ್ಮ ದೇವಾಲಯಕ್ಕೆ ಭಾನುವಾರ ಭೇಟಿ ನೀಡಿ, ವಿಶೇಷ ಪೂಜೆ ಸಲ್ಲಿಸಿದ ಬಳಿಕ ನೂತನವಾಗಿ ನಿರ್ಮಿಸಿರುವ ಶುದ್ಧ ನೀರಿನ ಘಟಕವನ್ನು ಉದ್ಘಾಟಿಸಿದೆ.
ಈ ಕುರಿತಾದ ಪತ್ರಿಕಾ ವರದಿಗಳು ಹೀಗಿವೆ.. -
Dr. G Parameshwara
@DrParameshwara
ಇಂದು ಮಾಗಡಿ ತಾಲೂಕಿನ ಹೆಬ್ಬಳಲು ಗ್ರಾಮದ ಶ್ರೀ ಮುಳ್ಕಟ್ಟಮ್ಮ ದೇವಿಯ ದರ್ಶನ ಪಡೆದು, ವಿಶೇಷ ಪೂಜೆ ಸಲ್ಲಿಸಿ ನಾಡಿನ ಒಳಿತಿಗಾಗಿ ಪ್ರಾರ್ಥಿಸಿದೆ.
-
Dr. G Parameshwara
@DrParameshwara
ಸರ್ವರಿಗೂ ಬೆಳಕಿನ ಹಬ್ಬ ದೀಪಾವಳಿಯ ಹಾರ್ದಿಕ ಶುಭಾಶಯಗಳು.
ದೀಪಾವಳಿ ನಾಡಿನ ಪ್ರತಿಯೊಬ್ಬರ ಬದುಕಿನಲ್ಲೂ ಸಂತೋಷ, ನೆಮ್ಮದಿ ಮತ್ತು ಸಮೃದ್ಧಿಯ ಬೆಳಕನ್ನು ತರಲಿ.
ಪರಿಸರ ಸ್ನೇಹಿಯಾಗಿ ದೀಪಾವಳಿ ಆಚರಿಸುವ ಮೂಲಕ ಹಸಿರು ಪರಿಸರದ ಸಂರಕ್ಷಣೆಗೆ ನಾವೆಲ್ಲರೂ ಕೈಜೋಡಿಸೋಣ. ಮಣ್ಣಿನ ಹಣತೆಗಳ ಬೆಳಕಿನಲ್ಲಿ ಹಬ್ಬದ ಸಂಭ್ರಮವನ್ನು ಇಮ್ಮಡಿಗೊಳಿಸೋಣ.
#happydeepavali2026 -
Dr. G Parameshwara
@DrParameshwara
ಶಿವಕುಮಾರ ಸ್ವಾಮೀಜಿ ವೃತ್ತದ ಹೆಸರನ್ನು ಯಾವುದೇ ಕಾರಣಕ್ಕೂ ಬದಲಾಯಿಸುವುದಿಲ್ಲ. ಈ ಬಗ್ಗೆ ಈಗಾಗಲೇ ಹಲವು ಬಾರಿ ಸ್ಪಷ್ಟನೆ ನೀಡಿದ್ದು, ಭಕ್ತರು ಯಾವುದೇ ಆತಂಕ ಅಥವಾ ಗೊಂದಲಕ್ಕೆ ಒಳಗಾಗುವ ಅಗತ್ಯವಿಲ್ಲ.
ತುಮಕೂರಿನ ಶಿವಕುಮಾರ ಸ್ವಾಮೀಜಿ ವೃತ್ತದಲ್ಲಿ ಎಲ್ಇಡಿ ಪರದೆ ಅಳವಡಿಕೆ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ. ಸದ್ಯ ತಾಂತ್ರಿಕ ಪರೀಕ್ಷೆಗಳು ನಡೆಯುತ್ತಿದ್ದು, ಪರದೆಯಲ್ಲಿ ಕಂಡುಬಂದಿರುವ ಕೆಲವು ದೋಷಗಳನ್ನು ಸರಿಪಡಿಸಿ, ವ್ಯವಸ್ಥೆ ಸಂಪೂರ್ಣ ಸಿದ್ಧವಾದ ಬಳಿಕ ಉದ್ಘಾಟನೆಯ ದಿನಾಂಕ ನಿಗದಿಪಡಿಸಲಾಗುವುದು.
ಆಧುನಿಕ ತಂತ್ರಜ್ಞಾನ ಬೆಂಗಳೂರಿಗಷ್ಟೇ ಸೀಮಿತವಾಗದೆ, ತುಮಕೂರು ಸೇರಿದಂತೆ ಎರಡನೇ ಮತ್ತು ಮೂರನೇ ಹಂತದ ನಗರಗಳ ಜನರಿಗೂ ತಲುಪಬೇಕು. ವಿಶೇಷವಾಗಿ ಯುವಜನರಿಗೆ ಹೊಸ ತಂತ್ರಜ್ಞಾನದ ಪರಿಚಯವಾಗಬೇಕು ಎಂಬ ಉದ್ದೇಶದಿಂದ ಈ ವ್ಯವಸ್ಥೆಯನ್ನು ರೂಪಿಸಲಾಗುತ್ತಿದೆ.
ಇದರ ಮೂಲಕ ತುಮಕೂರಿನಲ್ಲಿ ಒಂದು ಪ್ರಮುಖ ಕೇಂದ್ರ ನಿರ್ಮಾಣವಾಗಲಿದೆ. ಎಲ್ಇಡಿ ಪರದೆಯನ್ನು ಜಾಹೀರಾತುಗಳಿಗೆ ಬಳಸಿಕೊಳ್ಳಬಹುದು. ಸರ್ಕಾರದ ಕಾರ್ಯಕ್ರಮಗಳ ಪ್ರಚಾರಕ್ಕೂ ಬಳಸಬಹುದು. ಖಾಸಗಿ ಸಂಸ್ಥೆಗಳು ಹಾಗೂ ವ್ಯಕ್ತಿಗಳು ಕೂಡ ತಮ್ಮ ಜಾಹೀರಾತು ಮತ್ತು ಕಾರ್ಯಕ್ರಮಗಳಿಗಾಗಿ ಬಳಸಿಕೊಳ್ಳಬಹುದು. ಇದಕ್ಕೆ ನಿಗದಿತ ಶುಲ್ಕ ಪಾವತಿಸಬೇಕಾಗುತ್ತದೆ. ಉಚಿತವಾಗಿ ಅವಕಾಶ ನೀಡುವುದಿಲ್ಲ. ಇದನ್ನು ಹೊರತುಪಡಿಸಿ ಇದರಲ್ಲಿ ಯಾವುದೇ ರಾಜಕೀಯ, ವ್ಯವಹಾರಿಕ ಅಥವಾ ಧಾರ್ಮಿಕ ಉದ್ದೇಶಗಳಿಲ್ಲ.
ವೃತ್ತದ ಹೆಸರು ಬದಲಾವಣೆಗೆ ಕಾನೂನುಬದ್ಧ ಪ್ರಕ್ರಿಯೆಗಳಿದ್ದು, ಮಹಾನಗರ ಪಾಲಿಕೆಯಿಂದ ಪ್ರಸ್ತಾವನೆ ಸಲ್ಲಿಕೆಯಾಗಬೇಕು, ಸರ್ಕಾರದ ಆದೇಶ ಹಾಗೂ ಸಚಿವ ಸಂಪುಟದ ಅನುಮೋದನೆ ಅಗತ್ಯವಿದೆ. ಇಂತಹ ಯಾವುದೇ ಪ್ರಕ್ರಿಯೆ ನಡೆದಿಲ್ಲ. ಯಾರೋ ಹೇಳಿದ ಮಾತ್ರಕ್ಕೆ ವೃತ್ತದ ಹೆಸರನ್ನು ಬದಲಾಯಿಸಲು ಸಾಧ್ಯವಿಲ್ಲ.This media couldn't be displayed. See it on the original post. -
Dr. G Parameshwara
@DrParameshwara
ಪ್ರಸಕ್ತ ಹಲವು ವಿದ್ಯಮಾನಗಳ ಕುರಿತು ಮಾಧ್ಯಮ ಪ್ರತಿನಿಧಿಗಳೊಂದಿಗೆ ನನ್ನ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದೇನೆ.
ಈ ಕುರಿತಾದ ಪತ್ರಿಕಾ ವರದಿಗಳು..
I shared my views with media representatives on several current developments and issues.
Here are the media reports on the interaction. -
Dr. G Parameshwara
@DrParameshwara
Heartiest congratulations to Shreya N. Gowda from Thimmapura village in Bhadravathi taluk, Shivamogga district, on securing the first rank in the women's category of the UPSC National Defence Academy (NDA) examination.
Shreya, who has aspired to join the Armed Forces since childhood, has achieved this remarkable distinction in her very first attempt. Her hard work and determination are commendable.
Her achievement is a proud moment for Karnataka and an inspiration to young women across the state who aspire to serve the nation in the Armed Forces.
I congratulate her family and teachers for their support and wish Shreya every success in her future endeavours. -
Dr. G Parameshwara
@DrParameshwara
ಹಾಲು ಉತ್ಪಾದಕರ ಆದಾಯವನ್ನು ಹೆಚ್ಚಿಸುವ ಸರ್ಕಾರದ ಪ್ರಯತ್ನದ ಬಗ್ಗೆ ಹೈನುಗಾರರೊಬ್ಬರು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
This media couldn't be displayed. See it on the original post. -
Dr. G Parameshwara
@DrParameshwara
On the birth anniversary of the great freedom fighter and social reformer Bipin Chandra Pal, I pay my humble tributes to his remarkable contributions to India's independence movement.
A prominent leader of the Swadeshi Movement, his courage, nationalist ideals and commitment to social reform hold an enduring place in our nation's history. -
Dr. G Parameshwara
@DrParameshwara
My humble tributes to Nobel laureate and renowned physicist Sir C. V. Raman on his birth anniversary.
His groundbreaking discovery of the Raman Effect revolutionised modern physics and earned India global recognition in scientific research.
His extraordinary legacy stands as a testament to India's scientific excellence and spirit of discovery. -
Dr. G Parameshwara
@DrParameshwara
ಸಿದ್ಧಗಂಗಾ ಮಠಕ್ಕೆ ನಮ್ಮ ಕುಟುಂಬ ಮೊದಲಿನಿಂದಲೂ ಬರುವ ಅಭ್ಯಾಸವಿದೆ. ಮನಸ್ಸಿಗೆ ಅನಿಸಿದಾಗಲೆಲ್ಲ ಮಠಕ್ಕೆ ಬಂದು ಸ್ವಾಮೀಜಿಗಳ ಆಶೀರ್ವಾದ ಪಡೆಯುತ್ತೇವೆ.
ನಮ್ಮ ತಂದೆಯವರು, ಅಣ್ಣನೂ ಮಠಕ್ಕೆ ಬರುತ್ತಿದ್ದರು. ನಮ್ಮ ಇಡೀ ಕುಟುಂಬ ಮಠದೊಂದಿಗೆ ನಿಕಟ ಸಂಬಂಧ ಹೊಂದಿದೆ. ನಮ್ಮ ತಂದೆಯವರ ಮೂಲ ಮಾಗಡಿ ತಾಲ್ಲೂಕು. ಶ್ರೀಗಳೂ ಮಾಗಡಿ ತಾಲ್ಲೂಕಿನವರಾಗಿರುವುದರಿಂದ ನಮಗೊಂದು ಒಳ್ಳೆಯ ನಂಟಿದೆ. ಆದರೆ ಅದೊಂದೇ ಕಾರಣವಲ್ಲ, ಮೊದಲಿನಿಂದಲೂ ನಮ್ಮ ಕುಟುಂಬ ಮಠದ ಭಕ್ತರಾಗಿ ನಡೆದುಕೊಳ್ಳುತ್ತಾ ಬಂದಿದೆ.
ತುಮಕೂರಿನ ಶಿವಕುಮಾರ ಸ್ವಾಮೀಜಿ ವೃತ್ತದಲ್ಲಿ ಎಲ್ಇಡಿ ಪರದೆ ಅಳವಡಿಕೆ ಕಾಮಗಾರಿ ಇನ್ನೂ ಪೂರ್ಣಗೊಳ್ಳಬೇಕಿದೆ. ಸದ್ಯಕ್ಕೆ ಕೆಲವು ತಾಂತ್ರಿಕ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ. ಪರದೆಯಲ್ಲಿ ಕೆಲವು ತೊಂದರೆಗಳು ಕಾಣಿಸಿಕೊಂಡಿದ್ದು, ಅವುಗಳನ್ನು ಸರಿಪಡಿಸಿ ವ್ಯವಸ್ಥೆ ಸಂಪೂರ್ಣವಾಗಿ ಸಿದ್ಧವಾದ ಬಳಿಕ ಉದ್ಘಾಟನೆಯ ದಿನಾಂಕ ನಿಗದಿಪಡಿಸಲಾಗುವುದು.
ಶಿವಕುಮಾರ ಸ್ವಾಮೀಜಿ ವೃತ್ತದ ಹೆಸರನ್ನು ಯಾವುದೇ ಕಾರಣಕ್ಕೂ ಬದಲಾಯಿಸುವುದಿಲ್ಲ. ಈ ವಿಚಾರದಲ್ಲಿ ಭಕ್ತರು ಯಾವುದೇ ಆತಂಕ ಅಥವಾ ಗೊಂದಲಕ್ಕೆ ಒಳಗಾಗುವ ಅಗತ್ಯವಿಲ್ಲ. ಈಗಾಗಲೇ ಹಲವು ಬಾರಿ ಈ ಬಗ್ಗೆ ಸ್ಪಷ್ಟನೆ ನೀಡಿದ್ದೇನೆ.
ಆಧುನಿಕ ತಂತ್ರಜ್ಞಾನವನ್ನು ನಮ್ಮ ಜನರಿಗೆ ಪರಿಚಯಿಸುವ ಉದ್ದೇಶದಿಂದ ಇಂತಹ ವ್ಯವಸ್ಥೆಯನ್ನು ರೂಪಿಸಲಾಗುತ್ತಿದೆ. ಬೆಂಗಳೂರಿನಲ್ಲಷ್ಟೇ ಇಂತಹ ತಂತ್ರಜ್ಞಾನ ಸೀಮಿತವಾಗದೆ, ತುಮಕೂರು ಸೇರಿದಂತೆ ಎರಡನೇ ಮತ್ತು ಮೂರನೇ ಹಂತದ ನಗರಗಳಲ್ಲಿಯೂ ಜನರು ಇಂತಹ ತಂತ್ರಜ್ಞಾನವನ್ನು ನೋಡುವಂತಾಗಬೇಕು. ನಮ್ಮ ಯುವಜನರಿಗೆ ಆಧುನಿಕ ತಂತ್ರಜ್ಞಾನದ ಪರಿಚಯವಾಗಬೇಕು ಎಂಬ ಉದ್ದೇಶವಿದೆ.
ಇದರ ಮೂಲಕ ತುಮಕೂರಿನಲ್ಲಿ ಒಂದು ಪ್ರಮುಖ ಕೇಂದ್ರ ನಿರ್ಮಾಣವಾಗಲಿದೆ. ಎಲ್ಇಡಿ ಪರದೆಯನ್ನು ಜಾಹೀರಾತುಗಳಿಗೆ ಬಳಸಿಕೊಳ್ಳಬಹುದು. ಸರ್ಕಾರದ ಕಾರ್ಯಕ್ರಮಗಳ ಪ್ರಚಾರಕ್ಕೂ ಬಳಸಬಹುದು. ಖಾಸಗಿ ಸಂಸ್ಥೆಗಳು ಹಾಗೂ ವ್ಯಕ್ತಿಗಳು ಕೂಡ ತಮ್ಮ ಜಾಹೀರಾತು ಮತ್ತು ಕಾರ್ಯಕ್ರಮಗಳಿಗಾಗಿ ಬಳಸಿಕೊಳ್ಳಬಹುದು. ಇದಕ್ಕೆ ನಿಗದಿತ ಶುಲ್ಕ ಪಾವತಿಸಬೇಕಾಗುತ್ತದೆ. ಉಚಿತವಾಗಿ ಅವಕಾಶ ನೀಡುವುದಿಲ್ಲ. ಇದನ್ನು ಹೊರತುಪಡಿಸಿ ಇದರಲ್ಲಿ ಯಾವುದೇ ರಾಜಕೀಯ, ವ್ಯವಹಾರಿಕ ಅಥವಾ ಧಾರ್ಮಿಕ ಉದ್ದೇಶಗಳಿಲ್ಲ.
ವೃತ್ತದ ಹೆಸರನ್ನು ಬದಲಾಯಿಸುವುದಕ್ಕೆ ಸಂಬಂಧಿಸಿದಂತೆ ಕಾನೂನುಬದ್ಧ ಪ್ರಕ್ರಿಯೆಗಳಿವೆ. ಸರ್ಕಾರದ ಆದೇಶವಾಗಬೇಕು, ಸಚಿವ ಸಂಪುಟದ ಮುಂದೆ ಪ್ರಸ್ತಾವನೆ ಹೋಗಿ ಅಲ್ಲಿ ನಿರ್ಧಾರವಾಗಬೇಕು. ಸ್ಥಳೀಯ ಸಂಸ್ಥೆಯಾದ ಮಹಾನಗರ ಪಾಲಿಕೆಯಿಂದ ಪ್ರಸ್ತಾವನೆ ಸಲ್ಲಿಕೆಯಾಗಬೇಕು. ಇಂತಹ ಯಾವುದೇ ಪ್ರಕ್ರಿಯೆ ನಡೆದಿಲ್ಲ. ಯಾರಾದರೂ ಸುಮ್ಮನೆ ಹೆಸರು ಬದಲಾಯಿಸಿ ಎಂದು ಹೇಳಿದಾಕ್ಷಣ ಹೆಸರು ಬದಲಾಯಿಸಲು ಸಾಧ್ಯವಿಲ್ಲ.
ಬರ ಪರಿಹಾರಕ್ಕಾಗಿ ಕೇಂದ್ರಕ್ಕೆ ₹22 ಸಾವಿರ ಕೋಟಿ ಮನವಿ: ರಾಜ್ಯ ಸರ್ಕಾರವು ಕೇಂದ್ರಕ್ಕೆ ಮೂರು ಬಾರಿ ಮೆಮೊರಾಂಡಮ್ ಅನ್ನು ಸಲ್ಲಿಸಿದೆ. ರಾಜ್ಯದಲ್ಲಿ ಬರದಿಂದ ಅಂದಾಜು ₹62,000 ಕೋಟಿ ನಷ್ಟವಾಗಿದೆ. ಎನ್ಡಿಆರ್ಎಫ್ ಮಾರ್ಗಸೂಚಿಗಳ ಪ್ರಕಾರ ₹22,000 ಕೋಟಿ ಪರಿಹಾರ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದೇವೆ. ಈ ಕುರಿತು ಚರ್ಚಿಸಲು ಸಮಯಾವಕಾಶ ನೀಡುವಂತೆ ನಾನು ಪತ್ರ ಬರೆದಿದ್ದೇನೆ. ಮುಖ್ಯಮಂತ್ರಿಗಳೂ ಪತ್ರ ಬರೆದಿದ್ದಾರೆ.
ಕೇಂದ್ರದೊಂದಿಗೆ ಚರ್ಚಿಸಲು ಸರ್ವಪಕ್ಷ ನಿಯೋಗ ತೆರಳಬೇಕು ಎಂಬುದು ಮುಖ್ಯಮಂತ್ರಿಗಳ ಆಶಯವಾಗಿದೆ. ಆದರೆ ವಿರೋಧ ಪಕ್ಷದವರು ನಾವು ಬರುವುದಿಲ್ಲ ಎಂಬುದೂ ಸೇರಿದಂತೆ ವಿವಿಧ ರೀತಿಯ ಹೇಳಿಕೆಗಳನ್ನು ನೀಡಿದ್ದಾರೆ. ಅವರು ಬಂದರೆ ಸಂತೋಷ. ಬರದಿದ್ದರೂ ರಾಜ್ಯ ಸರ್ಕಾರವಾಗಿ, ಆಡಳಿತ ಪಕ್ಷವಾಗಿ ಕೇಂದ್ರ ಸರ್ಕಾರದ ಮುಂದೆ ರಾಜ್ಯದ ಪರವಾಗಿ ಮನವಿ ಸಲ್ಲಿಸುವುದು ನಮ್ಮ ಕರ್ತವ್ಯವಾಗಿದೆ.
ಮುಖ್ಯಮಂತ್ರಿಗಳು, ನಾನು ಹಾಗೂ ಇತರ ಸಚಿವರು ಒಟ್ಟಾಗಿ ದೆಹಲಿಗೆ ತೆರಳಿ ಪ್ರಧಾನಮಂತ್ರಿಗಳು, ಕೇಂದ್ರ ಗೃಹ ಸಚಿವರು ಮತ್ತು ಕೃಷಿ ಸಚಿವರನ್ನು ಭೇಟಿಯಾಗಲಿದ್ದೇವೆ. ಇದಕ್ಕಾಗಿ ಸಮಯಾವಕಾಶ ಕೇಳಿದ್ದೇವೆ. ಕೇಂದ್ರ ಸರ್ಕಾರ ಸಮಯ ನೀಡಿದ ತಕ್ಷಣ ನಿಯೋಗ ತೆರಳಿ ರಾಜ್ಯದ ಬರ ಪರಿಸ್ಥಿತಿ ಹಾಗೂ ಪರಿಹಾರದ ಕುರಿತು ಚರ್ಚೆ ನಡೆಸುತ್ತೇವೆ.
ಬಸ್ ಪ್ರಯಾಣ ದರ ಏರಿಕೆ ಸರ್ಕಾರದ ನಿರ್ಧಾರ: ಸಾರಿಗೆ ಸಚಿವರು ಈಗಾಗಲೇ ಸರ್ಕಾರದ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ. ಯಾವ ಕಾರಣಕ್ಕಾಗಿ ಪ್ರಯಾಣ ದರ ಹೆಚ್ಚಳ ಮಾಡಲಾಗಿದೆ ಎಂಬುದನ್ನು ಅವರು ಸ್ಪಷ್ಟಪಡಿಸಿದ್ದಾರೆ. ಈ ವಿಚಾರದಲ್ಲಿ ಆಶ್ಚರ್ಯಕರ ಸಂಗತಿಯೆಂದರೆ, ನಮ್ಮ ರಾಜ್ಯದ ಕೆಲವು ಕೇಂದ್ರ ಸಚಿವರು ರಾಜ್ಯ ಸರ್ಕಾರ ಎರಡು ಅಥವಾ ಮೂರು ಬಾರಿ ಬಸ್ ಪ್ರಯಾಣ ದರ ಹೆಚ್ಚಿಸಿದೆ ಎಂದು ಟೀಕಿಸಿದ್ದಾರೆ. ಆದರೆ ಕೇಂದ್ರ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು 14 ಬಾರಿ ಹೆಚ್ಚಿಸಿದಾಗ ಇವರು ಏಕೆ ಮಾತನಾಡಲಿಲ್ಲ? ಆಗ ಯಾವುದೇ ಟೀಕೆಗಳು ವ್ಯಕ್ತವಾಗುವುದಿಲ್ಲವೇ?
ಡೀಸೆಲ್ ಮತ್ತು ಪೆಟ್ರೋಲ್ ಬೆಲೆಗಳನ್ನು ಕಡಿಮೆ ಮಾಡಿದರೆ ಅದರ ನೇರ ಪರಿಣಾಮ ಸಾರಿಗೆ ಇಲಾಖೆಯ ಮೇಲಿನ ಆರ್ಥಿಕ ಹೊರೆಯೂ ಕಡಿಮೆಯಾಗುತ್ತದೆ. ಬೆಲೆ ಇಳಿಕೆಯಾದಾಗ ನಾವು ಸಹಜವಾಗಿಯೇ ಪ್ರಯಾಣ ದರವನ್ನು ಕಡಿಮೆ ಮಾಡುವ ಬಗ್ಗೆ ಕ್ರಮ ಕೈಗೊಳ್ಳಬಹುದು. ಇಲ್ಲದಿದ್ದರೆ ಡೀಸೆಲ್ ಖರೀದಿಗೆ ಸರ್ಕಾರವೇ ಹೆಚ್ಚುವರಿ ಹಣ ಭರಿಸಬೇಕಾಗುತ್ತದೆ.
ಈಗಾಗಲೇ ಕೆಎಸ್ಆರ್ಟಿಸಿ, ಬಿಎಂಟಿಸಿ ಸೇರಿದಂತೆ ಹಲವು ಸಾರಿಗೆ ಸಂಸ್ಥೆಗಳು ನಷ್ಟದಲ್ಲಿವೆ. ಈ ಸಂಸ್ಥೆಗಳನ್ನು ನಿರ್ವಹಿಸುವುದರ ಜೊತೆಗೆ ಹೊಸ ಬಸ್ಗಳನ್ನು ಖರೀದಿಸಬೇಕು, ಸಿಬ್ಬಂದಿಗೆ ಹೆಚ್ಚಿನ ಭತ್ಯೆ ನೀಡಬೇಕು. ಇಂತಹ ಎಲ್ಲ ಜವಾಬ್ದಾರಿಗಳನ್ನೂ ಪರಿಗಣಿಸಬೇಕಾಗುತ್ತದೆ. ಈ ಎಲ್ಲ ಅಂಶಗಳನ್ನು ಗಮನದಲ್ಲಿಟ್ಟುಕೊಂಡೇ ಸರ್ಕಾರ ಪ್ರಯಾಣ ದರ ಹೆಚ್ಚಳದ ನಿರ್ಧಾರ ಕೈಗೊಂಡಿದೆ.
- ಇಂದು ತುಮಕೂರಿನ ಶ್ರೀ ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿ, ಶ್ರೀ ಸಿದ್ಧಲಿಂಗ ಸ್ವಾಮೀಜಿಗಳ ಆಶೀರ್ವಾದ ಪಡೆದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದೆ. -
Dr. G Parameshwara
@DrParameshwara
ಇಂದು ತುಮಕೂರಿನ ಶ್ರೀ ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿ, ಶ್ರೀ ಸಿದ್ಧಲಿಂಗ ಸ್ವಾಮೀಜಿಗಳ ಆಶೀರ್ವಾದ ಪಡೆದೆ.
-
Dr. G Parameshwara
@DrParameshwara
The Modi Government imposed E20 petrol on the people. Now, Karnataka's independent tests have found ethanol content as high as 31.2%, raising serious concerns over fuel standards, mileage, vehicle safety and consumer protection.
While motorists face additional costs and risks, the Centre has also restricted procurement of certain sugarcane-based ethanol products, even as Karnataka's farmers struggle with severe drought.
Where are the promised benefits for farmers? Who is protecting consumers?
PM @narendramodi and Union Minister @nitin_gadkari owe the people an explanation.
I demand an immediate investigation, strict action against those responsible, transparent disclosure of ethanol content and safeguards for motorists.
Farmers and consumers deserve fairness, transparency and accountability.
Dr. G Parameshwara
@DrParameshwara
ಪೆಟ್ರೋಲ್ನಲ್ಲಿ ಶೇ.20ರಷ್ಟು ಎಥೆನಾಲ್ (E20) ಮಿಶ್ರಣಗೊಳಿಸುವ ಮೂಲಕ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಎಥೆನಾಲ್ ಮಿಶ್ರಿತ ಪೆಟ್ರೋಲ್ ಖರೀದಿಯನ್ನು ಜನರಿಗೆ ಅನಿವಾರ್ಯವಾಗಿಸಿದೆ.
ಇದರಿಂದ ವಾಹನಗಳ ಮೈಲೇಜ್ ಕಡಿಮೆಯಾಗುವುದು ಹಾಗೂ ಎಥೆನಾಲ್ ಬಳಕೆಗೆ ಹೊಂದಿಕೆಯಾಗದ ಹಳೆಯ ವಾಹನಗಳಿಗೆ ಸಮಸ್ಯೆಯಾಗುವ ಆತಂಕಗಳಿದ್ದರೂ ಕೇಂದ್ರ ಸರ್ಕಾರ ತನ್ನ ನಿರ್ಧಾರವನ್ನು ಜನರ ಮೇಲೆ ಹೇರಿದೆ. ಇದೀಗ ಕರ್ನಾಟಕ ಸರ್ಕಾರ ನಡೆಸಿರುವ ಪರೀಕ್ಷೆಯಲ್ಲಿ ಬೆಳಕಿಗೆ ಬಂದಿರುವ ವಿಚಾರಗಳು ವಾಹನ ಸವಾರರ ಆತಂಕವನ್ನು ಮತ್ತಷ್ಟು ಹೆಚ್ಚಿಸಿವೆ.
ನಮ್ಮ ಸರ್ಕಾರವು ಸ್ವತಂತ್ರ ಪ್ರಯೋಗಾಲಯಗಳಲ್ಲಿ ನಡೆಸಿದ ಪರೀಕ್ಷೆಯಲ್ಲಿ ಪ್ರಮುಖ ತೈಲ ಕಂಪನಿಗಳು ಮಾರಾಟ ಮಾಡುತ್ತಿರುವ ಪೆಟ್ರೋಲ್ನಲ್ಲಿ ಶೇ.31.2ರವರೆಗೆ ಎಥೆನಾಲ್ ಮಿಶ್ರಣವಾಗಿರುವುದು ಪತ್ತೆಯಾಗಿದೆ. ರಾಜ್ಯದ ಏಳು ಜಿಲ್ಲೆಗಳ ಪೆಟ್ರೋಲ್ ಮಾದರಿಗಳಲ್ಲಿ ನಿಗದಿತ ಶೇ.20ರ ಮಿತಿಗಿಂತ ಹೆಚ್ಚಿನ ಎಥೆನಾಲ್ ಕಂಡುಬಂದಿದೆ.
E20 ಪೆಟ್ರೋಲ್ನಿಂದ ಕೆಲವು ವಾಹನಗಳ ಮೈಲೇಜ್ ಕಡಿಮೆಯಾಗಬಹುದು ಎಂದು ಕೇಂದ್ರ ಸರ್ಕಾರವೇ ಒಪ್ಪಿಕೊಂಡಿದೆ. ಹೀಗಿರುವಾಗ ಎಥೆನಾಲ್ ಪ್ರಮಾಣ ಶೇ.30 ದಾಟಿದರೆ ಏನಾಗಬಹುದು? ಹೆಚ್ಚುವರಿ ಇಂಧನ ವೆಚ್ಚ ಹಾಗೂ ವಾಹನಗಳಿಗೆ ಉಂಟಾಗುವ ತೊಂದರೆಯ ಹೊಣೆಯನ್ನು ಯಾರು ಹೊರಬೇಕು? ಕೇಂದ್ರದ ವೈಫಲ್ಯಕ್ಕೆ ಸಾಮಾನ್ಯ ವಾಹನ ಸವಾರರು ಬೆಲೆ ತೆರುವುದನ್ನು ಒಪ್ಪಲು ಸಾಧ್ಯವಿಲ್ಲ.
ಎಥೆನಾಲ್ ಮಿಶ್ರಣದಿಂದ ರೈತರಿಗೆ ಲಾಭವಾಗುತ್ತದೆ ಎನ್ನುವ ಕೇಂದ್ರ ಸರ್ಕಾರವೇ ಹೊಸ ಖರೀದಿ ಟೆಂಡರ್ನಲ್ಲಿ ಕಬ್ಬಿನ ರಸ, ಸಕ್ಕರೆ ಪಾಕ ಹಾಗೂ ಬಿ-ಹೆವಿ ಮೊಲಾಸಿಸ್ನಿಂದ ತಯಾರಿಸುವ ಎಥೆನಾಲ್ ಅನ್ನು ಹೊರಗಿಟ್ಟಿದೆ. ಇದು ಮೋದಿ ಸರ್ಕಾರದ ದ್ವಂದ್ವ ನಿಲುವಾಗಿದೆ.
ಕರ್ನಾಟಕದ ರೈತರು ತೀವ್ರ ಬರದಿಂದ ಸಂಕಷ್ಟದಲ್ಲಿರುವಾಗ ಕಬ್ಬಿನಿಂದ ತಯಾರಿಸುವ ಎಥೆನಾಲ್ಗೆ ಮಾರುಕಟ್ಟೆಯ ಅವಕಾಶವನ್ನು ಕೇಂದ್ರ ಸರ್ಕಾರ ಕಡಿಮೆ ಮಾಡುತ್ತಿದೆ. ಮತ್ತೊಂದೆಡೆ, ನಿಗದಿತ ಮಿತಿಗಿಂತ ಹೆಚ್ಚು ಎಥೆನಾಲ್ ಮಿಶ್ರಿತ ಪೆಟ್ರೋಲ್ ಮಾರಾಟವಾಗುತ್ತಿದೆ.
ಹಾಗಾದರೆ ರೈತರಿಗೆ ನೀಡಿದ್ದ ಲಾಭದ ಭರವಸೆ ಏನಾಯಿತು? ವಾಹನ ಸವಾರರ ಹಿತಾಸಕ್ತಿಗೆ ರಕ್ಷಣೆ ಎಲ್ಲಿದೆ? ಇದು ರೈತರು ಮತ್ತು ಗ್ರಾಹಕರು ಇಬ್ಬರನ್ನೂ ವಂಚಿಸುವ ಕೆಲಸವಲ್ಲವೇ?
ಕೇಂದ್ರ ಸರ್ಕಾರವೇ ಶೇ.20ರ ಮಿತಿ ನಿಗದಿಪಡಿಸಿರುವಾಗ ಶೇ.30ಕ್ಕಿಂತ ಹೆಚ್ಚು ಎಥೆನಾಲ್ ಇರುವ ಪೆಟ್ರೋಲ್ ಹೇಗೆ ಮಾರಾಟವಾಗುತ್ತಿದೆ? ತೈಲ ಕಂಪನಿಗಳ ಮೇಲೆ ನಿಗಾ ವಹಿಸುತ್ತಿರುವವರು ಯಾರು? ಇದರ ಹೊಣೆ ಯಾರು? ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ಜನತೆಗೆ ಉತ್ತರ ನೀಡಬೇಕು.
ಕರ್ನಾಟಕದ ಪರೀಕ್ಷಾ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಗುವುದು. ಈ ಬಗ್ಗೆ ತಕ್ಷಣ ಸಮಗ್ರ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಪ್ರತಿ ಪೆಟ್ರೋಲ್ ಬಂಕ್ನಲ್ಲಿಯೂ ಎಥೆನಾಲ್ ಮಿಶ್ರಣದ ಪ್ರಮಾಣವನ್ನು ಬಹಿರಂಗಪಡಿಸಬೇಕು. ಗ್ರಾಹಕರ ಹಿತಾಸಕ್ತಿ ಹಾಗೂ ವಾಹನಗಳ ಸುರಕ್ಷತೆಗೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಕೇಂದ್ರ ಸರ್ಕಾರವನ್ನು ಆಗ್ರಹಿಸುತ್ತೇನೆ. -
Dr. G Parameshwara
@DrParameshwara
Participated in the Freshers’ Day, White Coat Ceremony and Oath-Taking Programme for the 2026–27 academic year at Dr. H. M. Gangadharaiah Memorial Hall, Agalakote, Tumakuru, and welcomed the newly admitted students of Sri Siddhartha Medical College and Hospital, Sri Siddhartha Dental College, and Sri Siddhartha Institute of Medical Sciences and Research Centre, Nelamangala.
Quality education, not just the number of graduates, must remain our highest priority. Karnataka has emerged as one of India's leading destinations for medical education, producing nearly 15,000 doctors annually. However, our responsibility goes beyond increasing these numbers. Every medical graduate must be equipped with the knowledge, skills and competence to serve society with dedication.
On this occasion, I fondly remembered my father, Late Sri H. M. Gangadharaiah, who established Sri Siddhartha Education Society in 1959, guided by the principles of Lord Buddha. He firmly believed that education and healthcare were essential to improving people's lives. Today, our institutions have produced over 40,000 engineers and 10,000 doctors, carrying forward his vision of service to society.
As Chancellor of Sri Siddhartha Academy of Higher Education, I assured the students and their parents that our management and faculty remain committed to providing quality education, the best possible learning opportunities and a supportive academic environment. The trust placed in our institutions comes with an equal responsibility to nurture capable and compassionate professionals.
The white coat is not merely a symbol of entering the medical profession; it represents a commitment to responsibility, compassion and service to humanity. I congratulate all the freshers on choosing this noble profession and wish them a successful and fulfilling academic journey.
Mrs. Kannika Parameshwari, Dr. G. S. Anand, Vice-Chancellor Dr. K. B. Lingegowda, Registrar Dr. Ashok Mehta, Controller of Examinations Dr. Sunil, principals and other faculty members were present on the occasion.
Dr. G Parameshwara
@DrParameshwara
ತುಮಕೂರಿನ ಹೊರವಲಯದ ಅಗಳಕೋಟೆಯ ಡಾ.ಎಚ್.ಎಂ. ಗಂಗಾದರಯ್ಯ ಮೆಮೋರಿಯಲ್ ಹಾಲ್ನಲ್ಲಿ ಶ್ರೀ ಸಿದ್ಧಾರ್ಥ ಅಕಾಡೆಮಿ ಆಫ್ ಹೈಯರ್ ಎಜುಕೇಷನ್ ವಿಶ್ವವಿದ್ಯಾಲಯದ ವ್ಯಾಪ್ತಿಯ ಶ್ರೀ ಸಿದ್ಧಾರ್ಥ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ, ಡೆಂಟಲ್ ಕಾಲೇಜು ಹಾಗೂ ನೆಲಮಂಗಲದ ಶ್ರೀ ಸಿದ್ಧಾರ್ಥ ಇನ್ಸಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಆಂಡ್ ರಿಸರ್ಚ್ ಸೆಂಟರ್ನ 2026-27ನೇ ಶೈಕ್ಷಣಿಕ ವರ್ಷದ ವೈದ್ಯಕೀಯ ವಿದ್ಯಾರ್ಥಿಗಳ ʼವೈಟ್ ಕೋಟ್ ಧಾರಣೆ ಮತ್ತು ಪ್ರಮಾಣ ವಚನʼ ಕಾರ್ಯಕ್ರಮದಲ್ಲಿ ಪಾಲ್ಗೊಂಡೆ.
ಈ ವೇಳೆ ವೈದ್ಯಕೀಯ ವೃತ್ತಿಯನ್ನು ಆಯ್ಕೆ ಮಾಡಿಕೊಂಡಿರುವ ನೂತನ ವಿದ್ಯಾರ್ಥಿಗಳನ್ನು ಅಭಿನಂದಿಸಿ, ಶ್ರೀ ಸಿದ್ಧಾರ್ಥ ಶಿಕ್ಷಣ ಸಂಸ್ಥೆಯ ಕುಟುಂಬಕ್ಕೆ ಆತ್ಮೀಯವಾಗಿ ಸ್ವಾಗತಿಸಿ ನನ್ನ ಅನಿಸಿಕೆಗಳನ್ನು ಹಂಚಿಕೊಂಡೆ.
ವೈದ್ಯಕೀಯ ಶಿಕ್ಷಣ ಕ್ಷೇತ್ರದಲ್ಲಿ ಕರ್ನಾಟಕವು ದೇಶದ ಪ್ರಮುಖ ರಾಜ್ಯಗಳಲ್ಲಿ ಒಂದಾಗಿ ಬೆಳೆದಿದ್ದು, ಪ್ರತಿವರ್ಷ ಸುಮಾರು 15,000 ವೈದ್ಯರು ಹೊರಬರುತ್ತಿದ್ದಾರೆ. ಆದರೆ ವೈದ್ಯರ ಸಂಖ್ಯೆಯನ್ನು ಹೆಚ್ಚಿಸುವುದಷ್ಟೇ ನಮ್ಮ ಜವಾಬ್ದಾರಿಯಲ್ಲ. ಸಮಾಜಕ್ಕೆ ಉತ್ತಮ ಸೇವೆ ಸಲ್ಲಿಸಲು ಅಗತ್ಯವಾದ ಜ್ಞಾನ, ಕೌಶಲ್ಯ ಮತ್ತು ಸಾಮರ್ಥ್ಯವನ್ನು ಪ್ರತಿಯೊಬ್ಬ ವೈದ್ಯಕೀಯ ವಿದ್ಯಾರ್ಥಿಯೂ ಪಡೆಯುವಂತೆ ಮಾಡುವುದು ನಮ್ಮ ಕರ್ತವ್ಯವಾಗಿದೆ. ಆದ್ದರಿಂದ ವೈದ್ಯಕೀಯ ಶಿಕ್ಷಣ ಸಂಸ್ಥೆಗಳು ಗುಣಮಟ್ಟದ ಶಿಕ್ಷಣಕ್ಕೆ ಮೊದಲ ಆದ್ಯತೆ ನೀಡಬೇಕು.
ಈ ಸಂದರ್ಭದಲ್ಲಿ 1959ರಲ್ಲಿ ಶ್ರೀ ಸಿದ್ಧಾರ್ಥ ಶಿಕ್ಷಣ ಸಂಸ್ಥೆಯನ್ನು ಸ್ಥಾಪಿಸಿದ ನನ್ನ ತಂದೆಯವರಾದ ದಿವಂಗತ ಶ್ರೀ ಎಚ್. ಎಂ. ಗಂಗಾಧರಯ್ಯ ಅವರನ್ನು ಪ್ರೀತಿಯಿಂದ ಸ್ಮರಿಸಿದೆ. ಭಗವಾನ್ ಬುದ್ಧನ ತತ್ವಗಳಿಂದ ಪ್ರೇರಿತರಾಗಿದ್ದ ಅವರು, ಜನರ ಬದುಕನ್ನು ಸುಧಾರಿಸಲು ಶಿಕ್ಷಣ ಮತ್ತು ಆರೋಗ್ಯ ಅತ್ಯಂತ ಅಗತ್ಯವೆಂದು ನಂಬಿದ್ದರು. ಅವರ ಈ ಆಶಯದಂತೆ ಸ್ಥಾಪನೆಯಾದ ನಮ್ಮ ಶಿಕ್ಷಣ ಸಂಸ್ಥೆಗಳಲ್ಲಿ ಇದುವರೆಗೆ 40,000ಕ್ಕೂ ಹೆಚ್ಚು ಎಂಜಿನಿಯರ್ಗಳು ಹಾಗೂ 10,000ಕ್ಕೂ ಹೆಚ್ಚು ವೈದ್ಯರು ಶಿಕ್ಷಣ ಪಡೆದು ಹೊರಬಂದಿದ್ದಾರೆ. ಸಮಾಜಕ್ಕೆ ಸೇವೆ ಸಲ್ಲಿಸಬೇಕೆಂಬ ಅವರ ಕನಸನ್ನು ನಮ್ಮ ಸಂಸ್ಥೆಗಳು ಇಂದಿಗೂ ಮುಂದುವರಿಸಿಕೊಂಡು ಹೋಗುತ್ತಿವೆ.
ಶ್ರೀ ಸಿದ್ಧಾರ್ಥ ಉನ್ನತ ಶಿಕ್ಷಣ ಅಕಾಡೆಮಿಯ ಕುಲಾಧಿಪತಿಯಾಗಿ, ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ, ಉತ್ತಮ ಕಲಿಕಾ ಅವಕಾಶಗಳು ಹಾಗೂ ಪೂರಕ ಶೈಕ್ಷಣಿಕ ವಾತಾವರಣವನ್ನು ಒದಗಿಸಲು ನಮ್ಮ ಆಡಳಿತ ಮಂಡಳಿ ಮತ್ತು ಬೋಧಕ ಸಿಬ್ಬಂದಿ ಬದ್ಧರಾಗಿದ್ದಾರೆ ಎಂಬ ಭರವಸೆಯನ್ನು ವಿದ್ಯಾರ್ಥಿಗಳು ಹಾಗೂ ಪೋಷಕರಿಗೆ ನೀಡಿದೆ. ನಮ್ಮ ಶಿಕ್ಷಣ ಸಂಸ್ಥೆಗಳ ಮೇಲೆ ಅವರು ಇಟ್ಟಿರುವ ನಂಬಿಕೆಯನ್ನು ಉಳಿಸಿಕೊಳ್ಳುವುದು ನಮ್ಮ ಜವಾಬ್ದಾರಿಯಾಗಿದೆ. ಉತ್ತಮ ಜ್ಞಾನ ಮತ್ತು ಕೌಶಲ್ಯದ ಜೊತೆಗೆ ಮಾನವೀಯ ಕಾಳಜಿಯುಳ್ಳ ವೈದ್ಯರನ್ನು ರೂಪಿಸುವುದು ನಮ್ಮ ಉದ್ದೇಶವಾಗಿದೆ.
ವೈದ್ಯಕೀಯ ವಿದ್ಯಾರ್ಥಿಗಳು ಧರಿಸುವ ಬಿಳಿ ಕೋಟ್ ಕೇವಲ ವೈದ್ಯಕೀಯ ವೃತ್ತಿಗೆ ಕಾಲಿಡುತ್ತಿರುವ ಸಂಕೇತವಲ್ಲ. ಅದು ಜವಾಬ್ದಾರಿ, ಮಾನವೀಯತೆ ಹಾಗೂ ಸಮಾಜ ಸೇವೆಯ ಬದ್ಧತೆಯ ಸಂಕೇತವಾಗಿದೆ. ಇಂತಹ ಶ್ರೇಷ್ಠ ವೃತ್ತಿಯನ್ನು ಆಯ್ಕೆ ಮಾಡಿಕೊಂಡಿರುವ ಎಲ್ಲ ನೂತನ ವಿದ್ಯಾರ್ಥಿಗಳಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಅವರ ಶೈಕ್ಷಣಿಕ ಪಯಣ ಯಶಸ್ವಿಯಾಗಲಿ ಹಾಗೂ ಮುಂದಿನ ವೃತ್ತಿಜೀವನ ಉತ್ತಮವಾಗಿರಲಿ ಎಂದು ಹಾರೈಸುತ್ತೇನೆ.
ಈ ಸಂದರ್ಭದಲ್ಲಿ ಶ್ರೀ ಸಿದ್ಧಾರ್ಥ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿಯ ಟ್ರಸ್ಟಿಗಳಾದ ಶ್ರೀಮತಿ ಕನ್ನಿಕಾ ಪರಮೇಶ್ವರಿ, ಡಾ. ಜಿ. ಎಸ್. ಆನಂದ್, ಶ್ರೀ ಸಿದ್ಧಾರ್ಥ ಉನ್ನತ ಶಿಕ್ಷಣ ಅಕಾಡೆಮಿಯ ಉಪಕುಲಪತಿ ಡಾ. ಕೆ. ಬಿ. ಲಿಂಗೇಗೌಡ, ರಿಜಿಸ್ಟ್ರಾರ್ ಡಾ. ಅಶೋಕ್ ಮೆಹ್ತಾ, ಪರೀಕ್ಷಾಂಗ ನಿಯಂತ್ರಕರಾದ ಡಾ. ಸುನಿಲ್, ಪ್ರಾಂಶುಪಾಲರಾದ ಡಾ. ಎಂ. ಬಿ. ಸಾಣಿಕೊಪ್ಪ, ಡಾ. ದಿವಾಕರ್, ಡಾ. ಪ್ರವೀಣ್ ಬಿ. ಕುಡುವಾ, ಉಪಪ್ರಾಂಶುಪಾಲರಾದ ಡಾ. ಪ್ರಭಾಕರ್ ಸೇರಿದಂತೆ ಸಮೂಹ ಸಂಸ್ಥೆಗಳ ವಿವಿಧ ಪ್ರಾಂಶುಪಾಲರು ಉಪಸ್ಥಿತರಿದ್ದರು. -
Dr. G Parameshwara
@DrParameshwara
ಪೆಟ್ರೋಲ್ನಲ್ಲಿ ಶೇ.20ರಷ್ಟು ಎಥೆನಾಲ್ (E20) ಅನ್ನು ಮಿಶ್ರಣಗೊಳಿಸುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರವು ಎಥೆನಾಲ್ ಮಿಶ್ರಿತ ಪೆಟ್ರೋಲ್ ಖರೀದಿಯನ್ನು ಜನರಿಗೆ ಅನಿವಾರ್ಯವಾಗಿಸಿದೆ.
ಇದರಿಂದ ವಾಹನಗಳ ಮೈಲೇಜ್ ಕಡಿಮೆಯಾಗುವುದು ಹಾಗೂ ಬಹಳ ಮುಖ್ಯವಾಗಿ ಎಥೆನಾಲ್ ಇಂಧನ ಬಳಕೆಗೆ ಹೊಂದಿಕೆಯಾಗದ ಹಳೆಯ ವಾಹನಗಳಿಗೆ ಸಮಸ್ಯೆಯಾಗುವ ಬಗ್ಗೆ ಆತಂಕಗಳಿದ್ದರೂ ಕೇಂದ್ರ ಸರ್ಕಾರ ತನ್ನ ನಿರ್ಧಾರವನ್ನು ಜನರ ಮೇಲೆ ಒತ್ತಾಯಪೂರ್ವಕವಾಗಿ ಹೇರಿದೆ. ಇದೀಗ ಕರ್ನಾಟಕದಲ್ಲಿ ನಮ್ಮ ಸರ್ಕಾರ ನಡೆಸಿರುವ ಪರೀಕ್ಷೆಯಲ್ಲಿ ಬೆಳಕಿಗೆ ಬಂದಿರುವ ಕೆಲವು ವಿಚಾರಗಳು ವಾಹನ ಸವಾರರ ಆತಂಕವನ್ನು ಇನ್ನಷ್ಟು ಹೆಚ್ಚಿಸಿದೆ.
ನಮ್ಮ ಸರ್ಕಾರವು ಸ್ವತಂತ್ರ ಪ್ರಯೋಗಾಲಯಗಳಲ್ಲಿ ನಡೆಸಿದ ಪರೀಕ್ಷೆಯಲ್ಲಿ ಪ್ರಮುಖ ತೈಲ ಕಂಪನಿಗಳು ಮಾರಾಟ ಮಾಡುತ್ತಿರುವ ಪೆಟ್ರೋಲ್ನಲ್ಲಿ ಶೇ.31.2ರವರೆಗೆ ಎಥೆನಾಲ್ ಮಿಶ್ರಣವಾಗಿರುವುದು ಕಂಡುಬಂದಿದೆ. ರಾಜ್ಯದ ಏಳು ಜಿಲ್ಲೆಗಳಿಂದ ಸಂಗ್ರಹಿಸಿದ ಪೆಟ್ರೋಲ್ ಮಾದರಿಗಳಲ್ಲಿ ನಿಗದಿತ ಶೇ.20ರ ಮಿತಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಎಥೆನಾಲ್ ಇರುವುದು ಪತ್ತೆಯಾಗಿದೆ.
E20 ಪೆಟ್ರೋಲ್ ಬಳಕೆಯಿಂದ ಕೆಲವು ವಾಹನಗಳ ಮೈಲೇಜ್ ಕಡಿಮೆಯಾಗಬಹುದು ಎಂಬುದನ್ನು ಕೇಂದ್ರ ಸರ್ಕಾರವೇ ಒಪ್ಪಿಕೊಂಡಿದೆ. ಹೀಗಿರುವಾಗ ಪೆಟ್ರೋಲ್ನಲ್ಲಿ ಎಥೆನಾಲ್ ಪ್ರಮಾಣ ಶೇ.30ಕ್ಕಿಂತ ಹೆಚ್ಚಾದರೆ ಏನಾಗಬಹುದು? ಇದರಿಂದ ಹೆಚ್ಚಾಗುವ ಇಂಧನ ವೆಚ್ಚವನ್ನು ಯಾರು ಭರಿಸಬೇಕು? ವಾಹನಗಳ ಕಾರ್ಯಕ್ಷಮತೆಗೆ ತೊಂದರೆಯಾದರೆ ಅದರ ಹೊಣೆ ಯಾರು ಹೊರಬೇಕು? ಇಂತಹ ತಪ್ಪುಗಳಿಗೆ ಸಾಮಾನ್ಯ ವಾಹನ ಸವಾರರು ಬೆಲೆ ತೆರಬೇಕಾಗಿ ಬಂದಿರುವುದನ್ನು ಒಪ್ಪಲು ಸಾಧ್ಯವಿಲ್ಲ.
ಎಥೆನಾಲ್ ಮಿಶ್ರಣದಿಂದ ರೈತರಿಗೆ ಲಾಭವಾಗುತ್ತದೆ ಎಂದು ಹೇಳುವ ಕೇಂದ್ರ ಸರ್ಕಾರವೇ ಎಥೆನಾಲ್ ಖರೀದಿಗಾಗಿ ಹೊರಡಿಸಿರುವ ಹೊಸ ಟೆಂಡರ್ನಲ್ಲಿ ಕಬ್ಬಿನ ರಸ, ಸಕ್ಕರೆ ಪಾಕ (Sugar Syrup) ಹಾಗೂ ಬಿ-ಹೆವಿ ಮೊಲಾಸಿಸ್ನಿಂದ (B-heavy Molasses) ತಯಾರಿಸುವ ಎಥೆನಾಲ್ ಅನ್ನು ಹೊರಗಿಟ್ಟಿದೆ. ಇದು ಮೋದಿಯವರ ಸರ್ಕಾರದ ದ್ವಂದ್ವ ನಿಲುವು.
ಕರ್ನಾಟಕದ ರೈತರು ಈಗಾಗಲೇ ತೀವ್ರ ಬರದಿಂದ ಸಂಕಷ್ಟದಲ್ಲಿದ್ದಾರೆ. ಇಂತಹ ಸಂದರ್ಭದಲ್ಲಿ ಕಬ್ಬಿನಿಂದ ತಯಾರಿಸುವ ಎಥೆನಾಲ್ಗೆ ಇರುವ ಪ್ರಮುಖ ಮಾರುಕಟ್ಟೆಯ ಅವಕಾಶವನ್ನು ಕೇಂದ್ರ ಸರ್ಕಾರವೇ ಕಡಿತಗೊಳಿಸುತ್ತಿದೆ. ಮತ್ತೊಂದೆಡೆ, ನಿಗದಿಪಡಿಸಿದ ಶೇ.20ರ ಮಿತಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಎಥೆನಾಲ್ ಮಿಶ್ರಣವಾಗಿರುವ ಪೆಟ್ರೋಲ್ ಮಾರಾಟವಾಗಲು ಅವಕಾಶ ನೀಡಲಾಗುತ್ತಿದೆ.
ಹಾಗಾದರೆ ಎಥೆನಾಲ್ ಮಿಶ್ರಣದಿಂದ ರೈತರಿಗೆ ಲಾಭ ಆಗುತ್ತದೆ ಎಂದು ನೀಡಿದ್ದ ಭರವಸೆ ಏನಾಯಿತು? ವಾಹನ ಸವಾರರ ಹಿತಾಸಕ್ತಿಗೆ ರಕ್ಷಣೆ ಎಲ್ಲಿದೆ? ಇದು ರೈತರು ಮತ್ತು ಗ್ರಾಹಕರು ಇಬ್ಬರನ್ನೂ ವಂಚಿಸುವ ಕೆಲಸವಲ್ಲವೇ?
ಕೇಂದ್ರ ಸರ್ಕಾರವೇ ಪೆಟ್ರೋಲ್ನಲ್ಲಿ ಶೇ.20ರಷ್ಟು ಎಥೆನಾಲ್ ಮಿಶ್ರಣದ ಮಿತಿಯನ್ನು ನಿಗದಿಪಡಿಸಿರುವಾಗ, ಶೇ.30ಕ್ಕಿಂತ ಹೆಚ್ಚು ಎಥೆನಾಲ್ ಇರುವ ಪೆಟ್ರೋಲ್ ಜನರಿಗೆ ಹೇಗೆ ಮಾರಾಟವಾಗುತ್ತಿದೆ? ಈ ತೈಲ ಕಂಪನಿಗಳ ಮೇಲೆ ನಿಗಾ ವಹಿಸುತ್ತಿರುವವರು ಯಾರು? ಇದಕ್ಕೆ ಹೊಣೆ ಯಾರು? ಎನ್ನುವ ಬಗ್ಗೆ ಪ್ರಧಾನಮಂತ್ರಿ ಶ್ರೀ @narendramodi ಹಾಗೂ ಕೇಂದ್ರ ಸಚಿವರಾದ ಶ್ರೀ @nitin_gadkari ಅವರು ದೇಶದ ಜನತೆಗೆ ಉತ್ತರ ನೀಡಬೇಕು.
ಕರ್ನಾಟಕದಲ್ಲಿ ನಡೆಸಿರುವ ಪರೀಕ್ಷೆಯ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಗುವುದು. ಈ ಬಗ್ಗೆ ತಕ್ಷಣ ಸಮಗ್ರ ತನಿಖೆ ನಡೆಸಬೇಕು. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಪ್ರತಿಯೊಂದು ಪೆಟ್ರೋಲ್ ಬಂಕ್ನಲ್ಲಿಯೂ ಪೆಟ್ರೋಲ್ಗೆ ಎಷ್ಟು ಪ್ರಮಾಣದಲ್ಲಿ ಎಥೆನಾಲ್ ಮಿಶ್ರಣ ಮಾಡಲಾಗಿದೆ ಎಂಬ ಮಾಹಿತಿಯನ್ನು ಸಾರ್ವಜನಿಕರಿಗೆ ಸ್ಪಷ್ಟವಾಗಿ ತಿಳಿಸಬೇಕು. ಜೊತೆಗೆ ಗ್ರಾಹಕರ ಹಿತಾಸಕ್ತಿ ಕಾಪಾಡಲು ಹಾಗೂ ವಾಹನಗಳಿಗೆ ಯಾವುದೇ ತೊಂದರೆಯಾಗದಂತೆ ಅಗತ್ಯ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಕೇಂದ್ರ ಸರ್ಕಾರವನ್ನು ಆಗ್ರಹಿಸುತ್ತೇನೆ. -
Dr. G Parameshwara
@DrParameshwara
The Modi Government has already forced E20 petrol on the people, despite serious concerns over reduced mileage, additional fuel expenses and compatibility with older vehicles. Now, what we have uncovered in Karnataka is even more alarming.
Our Government's independent laboratory tests have found ethanol content as high as 31.2% in petrol sold by major oil companies, with samples from seven districts exceeding the prescribed 20% limit.
Even the Centre has acknowledged that E20 can reduce fuel efficiency in certain vehicles. What happens when the ethanol content goes beyond 30%? Who will bear the additional fuel costs and the risk to vehicle performance? Why should ordinary motorists pay the price for such failures?
And look at the Modi Government's double standards: It claims ethanol blending benefits farmers, yet it has now excluded ethanol made from sugarcane juice, sugar syrup and B-heavy molasses from its latest procurement tender. At a time when Karnataka's farmers are already suffering from severe drought, the Centre is restricting an important market for sugarcane-based ethanol while allowing petrol to be sold with ethanol levels far beyond the prescribed limit. Where is the promised benefit to farmers? Where is the protection for motorists? Is this not deceiving both farmers and consumers?
Prime Minister @narendramodi and Union Minister @nitin_gadkari owe the people an explanation.
When the Union Government itself has prescribed a 20% blending standard, how is petrol containing over 30% ethanol reaching consumers? Who is monitoring these oil companies? Where is the accountability?
We will place Karnataka's findings before the Union Government. I demand an immediate investigation, strict action against those responsible, transparent disclosure of ethanol content at every petrol pump and necessary safeguards for consumers. -
Dr. G Parameshwara
@DrParameshwara
ರಾಜ್ಯದಲ್ಲಿ ಬರದಿಂದ ಉಂಟಾಗಿರುವ ಬೆಳೆ ನಷ್ಟಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರಕ್ಕೆ ಈಗಾಗಲೇ ಮೂರು ಮೆಮೊರಾಂಡಮ್ಗಳನ್ನು ಸಲ್ಲಿಸಲಾಗಿದೆ. ಎನ್ಡಿಆರ್ಎಫ್ ಮಾರ್ಗಸೂಚಿಗಳ ಪ್ರಕಾರ ಸುಮಾರು ₹22,000 ಕೋಟಿ ಪರಿಹಾರ ನೀಡುವಂತೆ ಮನವಿ ಮಾಡಲಾಗಿದೆ. ಈ ಸಂಬಂಧ ಪ್ರಧಾನಮಂತ್ರಿ, ಕೇಂದ್ರ ಗೃಹ ಸಚಿವರು ಹಾಗೂ ಕೃಷಿ ಸಚಿವರನ್ನು ಖುದ್ದಾಗಿ ಭೇಟಿಯಾಗಿ ರಾಜ್ಯದ ಪರಿಸ್ಥಿತಿಯನ್ನು ವಿವರಿಸಲು ಸಮಯ ಕೋರಿ ಪತ್ರ ಬರೆಯಲಾಗಿದೆ.
ರಾಜ್ಯದಲ್ಲಿ ಬರದಿಂದ ಸುಮಾರು ₹62,000 ಕೋಟಿ ನಷ್ಟವಾಗಿದೆ. ಆದರೆ ಈ ಸಂಪೂರ್ಣ ಮೊತ್ತವನ್ನು ಕೇಂದ್ರದಿಂದ ಕೇಳಲು ಸಾಧ್ಯವಿಲ್ಲ. ಹೀಗಾಗಿ ಎನ್ಡಿಆರ್ಎಫ್ ಮಾರ್ಗಸೂಚಿಗಳ ಪ್ರಕಾರ ಲೆಕ್ಕಾಚಾರ ಮಾಡಿ ₹22,000 ಕೋಟಿ ಪರಿಹಾರಕ್ಕೆ ಮನವಿ ಸಲ್ಲಿಸಲಾಗಿದೆ. ಈ ಕುರಿತು ಅಧಿಕೃತ ಮೆಮೊರಾಂಡಮ್ಗಳನ್ನು ಈಗಾಗಲೇ ಕೇಂದ್ರಕ್ಕೆ ಕಳುಹಿಸಲಾಗಿದೆ.
ಇದೀಗ ಪ್ರಧಾನಮಂತ್ರಿ, ಕೇಂದ್ರ ಗೃಹ ಸಚಿವರು ಹಾಗೂ ಕೃಷಿ ಸಚಿವರನ್ನು ಖುದ್ದಾಗಿ ಭೇಟಿಯಾಗಿ ಮನವಿ ಸಲ್ಲಿಸಲು ಉದ್ದೇಶಿಸಲಾಗಿದೆ. ಭೇಟಿಗೆ ಸಮಯ ದೊರೆತರೆ ಸರ್ವಪಕ್ಷ ನಿಯೋಗದೊಂದಿಗೆ ತೆರಳಲಾಗುವುದು. ಸಮಯ ನೀಡದಿದ್ದರೆ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ನಾವೇ ತೆರಳಿ ಮನವಿ ಸಲ್ಲಿಸಲು ನಿರ್ಧರಿಸಿದ್ದೇವೆ.
ರಾಜ್ಯ ಸರ್ಕಾರ ಮೊದಲ ಹಂತದಲ್ಲಿ ರೈತರಿಗೆ ತಲಾ ₹2,500 ಪರಿಹಾರ ನೀಡಲು ನಿರ್ಧರಿಸಿದ್ದು, ಇದಕ್ಕಾಗಿ ₹1,250 ಕೋಟಿ ಬಿಡುಗಡೆ ಮಾಡಲಾಗಿದೆ. ಈ ಹಣವನ್ನು ನೇರ ನಗದು ವರ್ಗಾವಣೆ (ಡಿಬಿಟಿ) ಮೂಲಕ ರೈತರ ಬ್ಯಾಂಕ್ ಖಾತೆಗಳಿಗೆ ಜಮೆ ಮಾಡಲಾಗುತ್ತಿದೆ. ಈಗಾಗಲೇ ಯಾದಗಿರಿ ಜಿಲ್ಲೆಯಲ್ಲಿ ಮೂರು ಲಕ್ಷಕ್ಕೂ ಹೆಚ್ಚು ರೈತರಿಗೆ ಪರಿಹಾರ ತಲುಪಿರುವ ಮಾಹಿತಿ ಲಭ್ಯವಾಗಿದೆ. ಸರ್ಕಾರ ನಿಗದಿಪಡಿಸಿರುವ ಅರ್ಹತಾ ಮಾನದಂಡಗಳು ಮತ್ತು ಮಾರ್ಗಸೂಚಿಗಳ ಪ್ರಕಾರ ಅರ್ಹ ರೈತರಿಗೆ ಪರಿಹಾರ ನೀಡಲಾಗುವುದು.
₹2,500 ಪರಿಹಾರ ಸಾಕಾಗುವುದಿಲ್ಲ ಎಂದು ವಿರೋಧ ಪಕ್ಷಗಳು ಟೀಕಿಸಿದ್ದವು. ಕೇಂದ್ರ ಸರ್ಕಾರದ ಮಾರ್ಗಸೂಚಿಗಳ ಪ್ರಕಾರ ನೀಡಬೇಕಾದ ಪರಿಹಾರದ ಮೊತ್ತವನ್ನು ಹೆಚ್ಚಿಸಲಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯದ ರೈತರಿಗೆ ಇನ್ನಷ್ಟು ನೆರವು ನೀಡುವಂತೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಲಾಗಿತ್ತು.
ಅದರಂತೆ ಹೆಚ್ಚುವರಿಯಾಗಿ ₹2,500 ನೀಡಲು ಮುಖ್ಯಮಂತ್ರಿಗಳು ಒಪ್ಪಿಗೆ ನೀಡಿದ್ದಾರೆ. ಈ ಮೊತ್ತವನ್ನು ಮುಂದಿನ ಒಂದು ವಾರದಿಂದ 15 ದಿನಗಳೊಳಗೆ ಬಿಡುಗಡೆ ಮಾಡಲಾಗುವುದು. ಇದಕ್ಕಾಗಿ ಹೆಚ್ಚುವರಿಯಾಗಿ ₹1,250 ಕೋಟಿ ವೆಚ್ಚವಾಗಲಿದೆ. ಹೀಗಾಗಿ ರೈತರಿಗೆ ಒಟ್ಟು ತಲಾ ₹5,000 ಪರಿಹಾರ ಸಿಗಲಿದೆ.
ಬರ ಪರಿಸ್ಥಿತಿಯನ್ನು ಎದುರಿಸಲು ಪರಿಹಾರ ವಿತರಣೆಯ ಜೊತೆಗೆ ಕುಡಿಯುವ ನೀರಿನ ವ್ಯವಸ್ಥೆ ಹಾಗೂ ಅಗತ್ಯ ಕಾಮಗಾರಿಗಳಿಗೂ ಸರ್ಕಾರ ಆದ್ಯತೆ ನೀಡಿದೆ. ಕುಡಿಯುವ ನೀರಿನ ವ್ಯವಸ್ಥೆಗಾಗಿ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ₹1 ಕೋಟಿ ಹಾಗೂ ಜಿಲ್ಲೆಗಳಿಗೆ ತಲಾ ₹4ರಿಂದ ₹5 ಕೋಟಿ ಅನುದಾನ ಒದಗಿಸಲಾಗಿದೆ.
ಕೇಂದ್ರ ಸರ್ಕಾರದಿಂದ ಹೆಚ್ಚಿನ ಅನುದಾನ ದೊರೆತರೆ ರೈತರಿಗೆ ಮತ್ತಷ್ಟು ನೆರವು ನೀಡಲು ಹಾಗೂ ಕುಡಿಯುವ ನೀರು ಸೇರಿದಂತೆ ಅಗತ್ಯ ಕಾಮಗಾರಿಗಳನ್ನು ಕೈಗೊಳ್ಳಲು ಅನುಕೂಲವಾಗಲಿದೆ.This media couldn't be displayed. See it on the original post. -
Dr. G Parameshwara
@DrParameshwara
ವಿವಿಧ ಸಾಮಾಜಿಕ ಭದ್ರತಾ ಪಿಂಚಣಿಗಳು ಸ್ಥಗಿತಗೊಂಡಿರುವ ಸಂಬಂಧ ಈಗಾಗಲೇ ಎರಡು-ಮೂರು ಸಭೆಗಳನ್ನು ಮಾಡಿದ್ದೇನೆ. ಈ ಹಿಂದೆ ₹30,000 ಇದ್ದ ಆದಾಯದ ಮಿತಿಯನ್ನು ₹1.20 ಲಕ್ಷಕ್ಕೆ ಹೆಚ್ಚಿಸಲಾಗಿದೆ. ಹೀಗಾಗಿ ಆದಾಯದ ಕಾರಣದಿಂದ ಅರ್ಹರಿಗೆ ಸಮಸ್ಯೆಯಾಗುವುದಿಲ್ಲ.
ಇನ್ನೊಂದು ಪ್ರಮುಖ ಸಮಸ್ಯೆಯೆಂದರೆ ಅರ್ಹ ವಯಸ್ಸು ತಲುಪದವರು ಪಿಂಚಣಿಗಾಗಿ ಅರ್ಜಿ ಸಲ್ಲಿಸಿರುವುದು. 60 ವರ್ಷ ಮೇಲ್ಪಟ್ಟವರಿಗೆ ನೀಡಬೇಕಾದ ವೃದ್ಧಾಪ್ಯ ಪಿಂಚಣಿಗೆ 40, 30 ಹಾಗೂ 20 ವರ್ಷದವರೂ ಅರ್ಜಿ ಸಲ್ಲಿಸಿರುವ ಪ್ರಕರಣಗಳು ಗಮನಕ್ಕೆ ಬಂದಿವೆ. ಇಂತಹ ಸುಮಾರು 23 ಲಕ್ಷ ಅರ್ಜಿಗಳನ್ನು ಪರಿಶೀಲಿಸಿ ಅನರ್ಹ ಅರ್ಜಿಗಳನ್ನು ವಿಲೇವಾರಿ ಮಾಡುವ ಪ್ರಕ್ರಿಯೆ ನಡೆಯುತ್ತಿದೆ.
ಈ ಕಾರಣದಿಂದಾಗಿ ಮಧ್ಯಂತರದಲ್ಲಿ ಪಿಂಚಣಿ ವಿತರಣೆ ಪ್ರಕ್ರಿಯೆ ಕೆಲವು ದಿನಗಳ ಕಾಲ ಸ್ಥಗಿತಗೊಂಡಿತ್ತು. ಇದೀಗ ಮತ್ತೆ ಚಾಲನೆ ನೀಡಲಾಗಿದ್ದು, ಮುಂದಿನ ಒಂದು ವಾರದಿಂದ 15 ದಿನಗಳೊಳಗೆ ಸಮಸ್ಯೆ ಬಗೆಹರಿಯಲಿದೆ.This media couldn't be displayed. See it on the original post. -
Dr. G Parameshwara
@DrParameshwara
ಹಾಲು ಉತ್ಪಾದಕರ ಆದಾಯವನ್ನು ಹೆಚ್ಚಿಸುವ ಸರ್ಕಾರದ ಪ್ರಯತ್ನದ ಬಗ್ಗೆ ಹೈನುಗಾರರೊಬ್ಬರು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
This media couldn't be displayed. See it on the original post. -
Dr. G Parameshwara
@DrParameshwara
₹22,000 Crore Drought Relief Sought from Centre: Karnataka has suffered an estimated ₹62,000 crore loss due to drought. Based on NDRF guidelines, we have already submitted three memorandums to the Union Government seeking around ₹22,000 crore in relief. I have also sought appointments with the Prime Minister, Union Home Minister and Union Agriculture Minister to personally present Karnataka’s case. If time is granted, we intend to go with an all-party delegation.
₹5,000 Relief for Farmers: Our Government has already released ₹1,250 crore to provide ₹2,500 per farmer as the first instalment of drought relief through DBT. The Chief Minister has agreed to provide another ₹2,500, which will be released within the next one week to 15 days. This will take the total relief to ₹5,000 per farmer.
Along with financial assistance, we are also prioritising drinking water and essential drought-relief works. ₹1 crore has been provided to each Assembly constituency, while districts have received ₹4–5 crore for drinking water arrangements.
Revenue Position Reviewed: Every decision of the Government is taken after assessing both revenue and expenditure. This year, revenue from commercial taxes, excise, stamps and registration has improved compared to last year. While addressing the concerns of farmers, Government employees and other sections, we are working to ensure a fair balance within the State’s available resources.
Fuel Prices Impact Agriculture Too: Those criticising the State over transport fares and other price revisions should also question the impact of rising petrol and diesel prices. Fuel costs directly affect transport and agriculture, including tractor operations and other farm activities. These costs are interconnected and cannot be viewed in isolation.
Our Stand on SIR Is Clear: On SIR, our stand is clear. Serious questions have arisen over the deletion of around 1.08 crore voter names, including cases where people listed as deceased are reportedly alive and those shown as shifted do not appear on rolls at their new place of residence. The Congress has opposed this process at both the AICC and KPCC levels.
Pension Issues to Be Resolved Soon: Regarding social security pensions, we have already held several review meetings. The income eligibility limit has been increased from ₹30,000 to ₹1.20 lakh. Around 23 lakh applications are being scrutinised, including applications from those who do not meet the age criteria. Pension distribution has resumed, and the remaining issues will be resolved within the next one week to 15 days.
- My remarks to the media near my residence today. -
Dr. G Parameshwara
@DrParameshwara
₹22,000 ಕೋಟಿ ಪರಿಹಾರಕ್ಕೆ ಕೇಂದ್ರಕ್ಕೆ ಮನವಿ : ರಾಜ್ಯದಲ್ಲಿ ಬರದಿಂದ ಉಂಟಾಗಿರುವ ಬೆಳೆ ನಷ್ಟಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರಕ್ಕೆ ಈಗಾಗಲೇ 3 ಮೆಮೊರಾಂಡಮ್ಗಳನ್ನು ಸಲ್ಲಿಸಲಾಗಿದ್ದು, ಎನ್ಡಿಆರ್ಎಫ್ ಮಾರ್ಗಸೂಚಿಗಳ ಅನ್ವಯ ₹22,000 ಕೋಟಿ ಪರಿಹಾರ ನೀಡುವಂತೆ ಮನವಿ ಮಾಡಲಾಗಿದೆ. ಈ ಸಂಬಂಧ ಪ್ರಧಾನಮಂತ್ರಿ, ಕೇಂದ್ರ ಗೃಹ ಸಚಿವರು ಹಾಗೂ ಕೃಷಿ ಸಚಿವರನ್ನು ಖುದ್ದಾಗಿ ಭೇಟಿಯಾಗಿ ರಾಜ್ಯದ ಪರಿಸ್ಥಿತಿಯನ್ನು ವಿವರಿಸಲು ಸಮಯಾವಕಾಶ ಕೋರಿ ಪತ್ರ ಬರೆಯಲಾಗಿದೆ.
ರಾಜ್ಯದಲ್ಲಿ ಬರದಿಂದ ಉಂಟಾಗಿರುವ ಒಟ್ಟು ನಷ್ಟವನ್ನು ಅಂದಾಜಿಸಿದಾಗ ಸುಮಾರು ₹62,000 ಕೋಟಿಯಷ್ಟಾಗಿದೆ. ಆದರೆ ಸಂಪೂರ್ಣ ಮೊತ್ತವನ್ನು ಕೇಂದ್ರದಿಂದ ಕೇಳಲು ಸಾಧ್ಯವಿಲ್ಲ. ಎನ್ಡಿಆರ್ಎಫ್ ಮಾರ್ಗಸೂಚಿಗಳ ಆಧಾರದ ಮೇಲೆ ಲೆಕ್ಕಾಚಾರ ಮಾಡಿ ₹22,000 ಕೋಟಿ ಪರಿಹಾರಕ್ಕೆ ಮನವಿ ಸಲ್ಲಿಸಲಾಗಿದೆ. ಕೇಂದ್ರಕ್ಕೆ ಅಧಿಕೃತವಾಗಿ ಮೆಮೊರಾಂಡಮ್ಗಳನ್ನು ಈಗಾಗಲೇ ಕಳುಹಿಸಲಾಗಿದೆ. ಇದೀಗ ಪ್ರಧಾನಮಂತ್ರಿ, ಗೃಹ ಸಚಿವರು ಮತ್ತು ಕೃಷಿ ಸಚಿವರನ್ನು ಖುದ್ದಾಗಿ ಭೇಟಿ ಮಾಡಿ ಮನವಿ ಸಲ್ಲಿಸುವ ಉದ್ದೇಶವಿದೆ. ಸಮಯಾವಕಾಶ ದೊರೆತರೆ ಸರ್ವಪಕ್ಷ ನಿಯೋಗದೊಂದಿಗೆ ತೆರಳಲಾಗುವುದು. ಒಂದು ವೇಳೆ ಸಮಯ ನೀಡದಿದ್ದರೆ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ನಾವೇ ತೆರಳಿ ಮನವಿ ಸಲ್ಲಿಸಲು ನಿರ್ಧರಿಸಿದ್ದೇವೆ.
ರೈತರಿಗೆ ₹5,000 ಬರ ಪರಿಹಾರ :
ರಾಜ್ಯ ಸರ್ಕಾರ ಈಗಾಗಲೇ ಮೊದಲ ಹಂತದಲ್ಲಿ ರೈತರಿಗೆ ತಲಾ ₹2,500 ಪರಿಹಾರ ನೀಡಲು ನಿರ್ಧರಿಸಿದ್ದು, ಇದಕ್ಕಾಗಿ ₹1,250 ಕೋಟಿ ಬಿಡುಗಡೆ ಮಾಡಲಾಗಿದೆ. ಈ ಮೊತ್ತವನ್ನು ನೇರ ನಗದು ವರ್ಗಾವಣೆ (ಡಿಬಿಟಿ) ಮೂಲಕ ರೈತರ ಖಾತೆಗಳಿಗೆ ಜಮೆ ಮಾಡಲಾಗುತ್ತಿದೆ. ಈಗಾಗಲೇ ಯಾದಗಿರಿ ಜಿಲ್ಲೆಯಲ್ಲಿ ಮೂರು ಲಕ್ಷಕ್ಕೂ ಹೆಚ್ಚು ರೈತರಿಗೆ ಪರಿಹಾರ ತಲುಪಿರುವ ಮಾಹಿತಿ ಬಂದಿದೆ. ಸರ್ಕಾರ ನಿಗದಿಪಡಿಸಿರುವ ಅರ್ಹತಾ ಮಾನದಂಡಗಳು ಹಾಗೂ ಮಾರ್ಗಸೂಚಿಗಳ ಆಧಾರದ ಮೇಲೆ ಅರ್ಹ ರೈತರಿಗೆ ಪರಿಹಾರ ದೊರೆಯಲಿದೆ.
ವಿರೋಧ ಪಕ್ಷಗಳು ₹2,500 ಪರಿಹಾರ ಸಾಕಾಗುವುದಿಲ್ಲ ಎಂದು ಟೀಕಿಸಿದ್ದವು. ಕೇಂದ್ರ ಸರ್ಕಾರದ ಮಾರ್ಗಸೂಚಿಗಳ ಪ್ರಕಾರ ನೀಡಬೇಕಾದ ಪರಿಹಾರದ ಮೊತ್ತವನ್ನು ಹೆಚ್ಚಿಸಲಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯದ ರೈತರಿಗೆ ಮತ್ತಷ್ಟು ನೆರವು ನೀಡುವ ಉದ್ದೇಶದಿಂದ ಮುಖ್ಯಮಂತ್ರಿಗಳಿಗೆ ಮನವಿ ಮಾಡಲಾಗಿತ್ತು. ಅದರಂತೆ ಹೆಚ್ಚುವರಿಯಾಗಿ ₹2,500 ನೀಡಲು ಮುಖ್ಯಮಂತ್ರಿಗಳು ಸಮ್ಮತಿಸಿದ್ದು, ಮುಂದಿನ ಒಂದು ವಾರದಿಂದ 15 ದಿನಗಳೊಳಗೆ ಈ ಮೊತ್ತವನ್ನೂ ಬಿಡುಗಡೆ ಮಾಡಲಾಗುವುದು. ಇದಕ್ಕಾಗಿ ಹೆಚ್ಚುವರಿಯಾಗಿ ₹1,250 ಕೋಟಿ ವೆಚ್ಚವಾಗಲಿದೆ. ಹೀಗಾಗಿ ರೈತರಿಗೆ ಒಟ್ಟು ತಲಾ ₹5,000 ಪರಿಹಾರ ನೀಡಲಾಗುವುದು.
ಬರ ಪರಿಸ್ಥಿತಿಯನ್ನು ಎದುರಿಸಲು ಪರಿಹಾರ ವಿತರಣೆಯಷ್ಟೇ ಅಲ್ಲದೆ ಕುಡಿಯುವ ನೀರಿಗೆ, ಕಾಮಗಾರಿಗಳಿಗೂ ಸರ್ಕಾರ ಆದ್ಯತೆ ನೀಡಿದೆ. ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ತಲಾ ₹1 ಕೋಟಿ ಹಾಗೂ ಜಿಲ್ಲೆಗಳಿಗೆ ₹4ರಿಂದ ₹5 ಕೋಟಿ ಅನುದಾನವನ್ನು ಕುಡಿಯುವ ನೀರಿನ ವ್ಯವಸ್ಥೆಗಾಗಿ ಒದಗಿಸಲಾಗಿದೆ. ಕೇಂದ್ರದಿಂದ ಹೆಚ್ಚಿನ ಅನುದಾನ ದೊರೆತರೆ ರೈತರಿಗೆ ಮತ್ತಷ್ಟು ನೆರವು ನೀಡುವುದರ ಜೊತೆಗೆ ಕುಡಿಯುವ ನೀರು ಸೇರಿದಂತೆ ಅಗತ್ಯ ಕಾಮಗಾರಿಗಳನ್ನು ಕೈಗೊಳ್ಳಲು ಸಾಧ್ಯವಾಗಲಿದೆ. ಮುಖ್ಯಮಂತ್ರಿಗಳೂ ಪ್ರಧಾನಮಂತ್ರಿ ಕಚೇರಿ ಹಾಗೂ ಕೇಂದ್ರ ಗೃಹ ಸಚಿವರನ್ನು ಸಂಪರ್ಕಿಸಿ ಭೇಟಿಗೆ ಸಮಯಾವಕಾಶ ಪಡೆಯಲು ಪ್ರಯತ್ನಿಸುವುದಾಗಿ ತಿಳಿಸಿದ್ದಾರೆ. ಅವರು ದೆಹಲಿಗೆ ತೆರಳುತ್ತಿದ್ದು, ಈ ಸಂಬಂಧ ಮುಂದಿನ ಬೆಳವಣಿಗೆಗಳನ್ನು ನೋಡಬೇಕಿದೆ.
ಪ್ರಧಾನಮಂತ್ರಿಗಳ ರಾಜ್ಯ ಪ್ರವಾಸದ ಉದ್ದೇಶ ಬೇರೆ ಇದೆ. ರಾಜ್ಯದ ಸಮಸ್ಯೆಗಳ ಕುರಿತು ಚರ್ಚಿಸಲು ಈಗಾಗಲೇ ಸಮಯಾವಕಾಶ ಕೋರಲಾಗಿದೆ. ಪ್ರಧಾನಮಂತ್ರಿ ಕಚೇರಿಯಿಂದ ಅಧಿಕೃತವಾಗಿ ಸಮಯ ನೀಡುವ ನಿರೀಕ್ಷೆಯಿದೆ. ಸಮಯ ನೀಡಿದರೆ ದೆಹಲಿಗೆ ತೆರಳಿ ರಾಜ್ಯದ ಬರ ಪರಿಸ್ಥಿತಿ ಹಾಗೂ ಪರಿಹಾರದ ಅಗತ್ಯವನ್ನು ವಿವರಿಸಲಾಗುವುದು. ಒಂದು ವೇಳೆ ಮೈಸೂರಿನಲ್ಲೇ ಭೇಟಿಯಾಗುವಂತೆ ಸೂಚಿಸಿದರೆ ಅಲ್ಲಿಯೇ ಭೇಟಿ ಮಾಡಿ ಮನವಿ ಸಲ್ಲಿಸಲಾಗುವುದು.
ಆದಾಯದ ಸ್ಥಿತಿಗತಿಗಳನ್ನು ಪರಿಶೀಲಿಸಿಯೇ ಸರ್ಕಾರ ವಿವಿಧ ಕ್ರಮಗಳನ್ನು ಕೈಗೊಂಡಿದೆ :
ಸರ್ಕಾರ ಯಾವುದೇ ವೆಚ್ಚ ಮಾಡಿದರೂ ಅದು ಆರ್ಥಿಕ ಹೊರೆ ಎನಿಸಿಕೊಳ್ಳುತ್ತದೆ. ಆದರೆ ಆದಾಯ ಮತ್ತು ವೆಚ್ಚ ಎರಡನ್ನೂ ಗಮನದಲ್ಲಿಟ್ಟುಕೊಂಡು ನಿರ್ಧಾರ ಕೈಗೊಳ್ಳಬೇಕಾಗುತ್ತದೆ. ಈ ಬಾರಿ ಕಳೆದ ವರ್ಷಕ್ಕಿಂತ ಸರ್ಕಾರದ ಆದಾಯ ಉತ್ತಮವಾಗಿದೆ. ವಾಣಿಜ್ಯ ತೆರಿಗೆ, ಅಬಕಾರಿ ತೆರಿಗೆ, ಮುದ್ರಾಂಕ ಮತ್ತು ನೋಂದಣಿ ಇಲಾಖೆಗಳ ಮೂಲಕ ಉತ್ತಮ ಆದಾಯ ಬರುತ್ತಿದೆ. ಆದಾಯದ ಸ್ಥಿತಿಗತಿಗಳನ್ನು ಪರಿಶೀಲಿಸಿಯೇ ಸರ್ಕಾರ ವಿವಿಧ ಕ್ರಮಗಳನ್ನು ಕೈಗೊಂಡಿದೆ.
ಎಲ್ಲ ವರ್ಗದ ಜನರ ಹಿತವನ್ನು ಗಮನದಲ್ಲಿಟ್ಟುಕೊಂಡು ನಿರ್ಧಾರ: ಸರ್ಕಾರ ಎಲ್ಲ ವರ್ಗದ ಜನರ ಹಿತಾಸಕ್ತಿಯನ್ನು ಗಮನಿಸಬೇಕಾಗುತ್ತದೆ. ಕಬ್ಬು ಬೆಳೆಗಾರರ ಸಮಸ್ಯೆಗಳಿಗೆ ಪರಿಹಾರ ನೀಡಬೇಕು. ಬರದಿಂದಾಗಿ ಸುಮಾರು 50 ಲಕ್ಷ ರೈತರು 67 ಲಕ್ಷ ಎಕರೆ ಪ್ರದೇಶದಲ್ಲಿ ಬೆಳೆ ನಷ್ಟ ಅನುಭವಿಸಿದ್ದಾರೆ. ಅವರಿಗೆ ಪರಿಹಾರ ನೀಡಬೇಕಿದೆ. ಅದೇ ರೀತಿ ಲಕ್ಷಾಂತರ ಸರ್ಕಾರಿ ನೌಕರರಿಗೆ ತುಟ್ಟಿ ಭತ್ಯೆ ಸೇರಿದಂತೆ ವಿವಿಧ ಸೌಲಭ್ಯಗಳನ್ನು ನೀಡುವಾಗಲೂ ಆರ್ಥಿಕ ಲೆಕ್ಕಾಚಾರ ಮಾಡಬೇಕಾಗುತ್ತದೆ. ಸರ್ಕಾರದ ಆದಾಯ ಮತ್ತು ಲಭ್ಯವಿರುವ ಸಂಪನ್ಮೂಲಗಳನ್ನು ಗಮನದಲ್ಲಿಟ್ಟುಕೊಂಡು ಎಲ್ಲರಿಗೂ ನ್ಯಾಯ ಒದಗಿಸುವ ರೀತಿಯಲ್ಲಿ ನಿರ್ಧಾರಗಳನ್ನು ಕೈಗೊಳ್ಳಲಾಗುತ್ತಿದೆ.
ರಾಜ್ಯದಲ್ಲಿ ಸಾರಿಗೆ ದರ 3 ಬಾರಿ ಏರಿಕೆಯಾಗಿದೆ ಎಂದು ಟೀಕಿಸುವವರು ಕೇಂದ್ರ ಸರ್ಕಾರದ ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆಯನ್ನು ಏಕೆ ಪ್ರಶ್ನಿಸುತ್ತಿಲ್ಲ? ಕೇಂದ್ರ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಸುಮಾರು 14 ಬಾರಿ ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆಯಾಗಿದೆ. ಇದರ ಪರಿಣಾಮ ಸಾರಿಗೆ ವೆಚ್ಚದ ಮೇಲೂ ಬೀಳುತ್ತದೆ. ಕೃಷಿ ಚಟುವಟಿಕೆಗಳಿಗೆ ಟ್ರ್ಯಾಕ್ಟರ್ ಸೇರಿದಂತೆ ವಿವಿಧ ಕೆಲಸಗಳಿಗೆ ರೈತರು ಡೀಸೆಲ್ ಅವಲಂಬಿಸಿದ್ದಾರೆ. ಇಂಧನ ದರ ಏರಿಕೆಯಾದಾಗ ಕೃಷಿ ವೆಚ್ಚವೂ ಹೆಚ್ಚಾಗುತ್ತದೆ. ಹೀಗಾಗಿ ಇವೆಲ್ಲವೂ ಒಂದಕ್ಕೊಂದು ಸಂಬಂಧ ಹೊಂದಿರುವ ಸಂಚಿತ ಪರಿಣಾಮಗಳಾಗಿವೆ. ಈ ವಿಚಾರಗಳನ್ನು ಮರೆಮಾಚಿ ರಾಜ್ಯ ಸರ್ಕಾರವನ್ನು ಮಾತ್ರ ಟೀಕಿಸುವುದು ಅರ್ಥಹೀನ.
ಎಸ್ಐಆರ್ ಕುರಿತು ಪಕ್ಷದ ನಿಲುವು ಸ್ಪಷ್ಟ: ಕೆಲವು ಸಚಿವರು ತಮ್ಮ ಕ್ಷೇತ್ರಗಳಲ್ಲಿ ಎಸ್ಐಆರ್ನಿಂದ ಹೆಚ್ಚಿನ ಪರಿಣಾಮವಾಗಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ. ಆದರೆ ಅದರಿಂದ ರಾಜ್ಯಾದ್ಯಂತ ಪ್ರಕ್ರಿಯೆ ಸರಿಯಾಗಿದೆ ಎಂದರ್ಥವಲ್ಲ. ಕೆಲವು ಕ್ಷೇತ್ರಗಳಲ್ಲಿ ಸುಮಾರು ಎರಡು ಸಾವಿರ ಮತದಾರರ ಹೆಸರುಗಳು ಮಾತ್ರ ಬಿಟ್ಟುಹೋಗಿರಬಹುದು ಅಥವಾ ಸೇರ್ಪಡೆಯಾಗಿರಬಹುದು. ಆದರೆ ಒಟ್ಟಾರೆ ಚಿತ್ರಣವನ್ನು ಗಮನಿಸಿದರೆ ಗಂಭೀರ ಪ್ರಶ್ನೆಗಳು ಎದುರಾಗುತ್ತವೆ.
ಎಸ್ಐಆರ್ ಪ್ರಕ್ರಿಯೆಯಲ್ಲಿ ಸುಮಾರು ಒಂದು ಕೋಟಿ ಎಂಟು ಲಕ್ಷ ಮತದಾರರ ಹೆಸರುಗಳನ್ನು ತೆಗೆದುಹಾಕಲಾಗಿದೆ. ಈ ಪೈಕಿ 16 ಲಕ್ಷ ಮಂದಿ ಮೃತಪಟ್ಟಿದ್ದಾರೆ ಎಂದು ದಾಖಲಿಸಲಾಗಿದೆ. ಆದರೆ ಅವರಲ್ಲಿ ಕೆಲವರು ಜೀವಂತವಾಗಿದ್ದಾರೆ ಎಂಬ ದೂರುಗಳಿವೆ. ಇನ್ನು ಸುಮಾರು 65 ಲಕ್ಷ ಮಂದಿ ಸ್ಥಳಾಂತರಗೊಂಡಿದ್ದಾರೆ ಎಂದು ಹೇಳಲಾಗಿದೆ.
ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸ್ಥಳಾಂತರಗೊಂಡಿದ್ದರೆ, ಅವರ ಹೆಸರು ಹೊಸ ಸ್ಥಳದ ಮತದಾರರ ಪಟ್ಟಿಯಲ್ಲಿ ಇರಬೇಕಲ್ಲವೇ? ಉದಾಹರಣೆಗೆ ಬೆಂಗಳೂರಿನಿಂದ ಮೈಸೂರಿಗೆ ಸ್ಥಳಾಂತರಗೊಂಡಿದ್ದರೆ ಮೈಸೂರಿನ ಪಟ್ಟಿಯಲ್ಲಿ ಹೆಸರು ಇರಬೇಕು. ಆದರೆ ಅಲ್ಲಿ ಹೆಸರು ಇಲ್ಲದಿರುವುದು ಗಂಭೀರ ಪ್ರಶ್ನೆಯಾಗಿದೆ. ಇಂತಹ ಉದಾಹರಣೆಗಳ ಕಾರಣದಿಂದಲೇ ಎಸ್ಐಆರ್ ಪ್ರಕ್ರಿಯೆ ಸರಿಯಾಗಿಲ್ಲ ಎಂಬುದು ಕಾಂಗ್ರೆಸ್ನ ನಿಲುವಾಗಿದೆ.
ಪಿಂಚಣಿ ಸಮಸ್ಯೆ 15 ದಿನದೊಳಗೆ ಬಗೆಹರಿಸಲಾಗುವುದು:
ವಿವಿಧ ಸಾಮಾಜಿಕ ಭದ್ರತಾ ಪಿಂಚಣಿಗಳು ಸ್ಥಗಿತಗೊಂಡಿರುವ ಸಂಬಂಧ ಈಗಾಗಲೇ ಎರಡು-ಮೂರು ಸಭೆಗಳನ್ನು ನಡೆಸಲಾಗಿದೆ. ಈ ಹಿಂದೆ ₹30,000 ಇದ್ದ ಆದಾಯದ ಮಿತಿಯನ್ನು ₹1.20 ಲಕ್ಷಕ್ಕೆ ಹೆಚ್ಚಿಸಲಾಗಿದೆ. ಹೀಗಾಗಿ ಆದಾಯದ ಕಾರಣದಿಂದ ಅರ್ಹರಿಗೆ ಸಮಸ್ಯೆಯಾಗುವುದಿಲ್ಲ.
ಇನ್ನೊಂದು ಪ್ರಮುಖ ಸಮಸ್ಯೆಯೆಂದರೆ ಅರ್ಹ ವಯಸ್ಸು ತಲುಪದವರು ಪಿಂಚಣಿಗಾಗಿ ಅರ್ಜಿ ಸಲ್ಲಿಸಿರುವುದು. 60 ವರ್ಷ ಮೇಲ್ಪಟ್ಟವರಿಗೆ ನೀಡಬೇಕಾದ ವೃದ್ಧಾಪ್ಯ ಪಿಂಚಣಿಗೆ 40, 30 ಹಾಗೂ 20 ವರ್ಷದವರೂ ಅರ್ಜಿ ಸಲ್ಲಿಸಿರುವ ಪ್ರಕರಣಗಳು ಗಮನಕ್ಕೆ ಬಂದಿವೆ. ಇಂತಹ ಸುಮಾರು 23 ಲಕ್ಷ ಅರ್ಜಿಗಳನ್ನು ಪರಿಶೀಲಿಸಿ ಅನರ್ಹ ಅರ್ಜಿಗಳನ್ನು ವಿಲೇವಾರಿ ಮಾಡುವ ಪ್ರಕ್ರಿಯೆ ನಡೆಯುತ್ತಿದೆ. ಈ ಕಾರಣದಿಂದಾಗಿ ಮಧ್ಯಂತರದಲ್ಲಿ ಪಿಂಚಣಿ ವಿತರಣೆ ಪ್ರಕ್ರಿಯೆ ಕೆಲವು ದಿನಗಳ ಕಾಲ ಸ್ಥಗಿತಗೊಂಡಿತ್ತು. ಇದೀಗ ಮತ್ತೆ ಚಾಲನೆ ನೀಡಲಾಗಿದ್ದು, ಮುಂದಿನ ಒಂದು ವಾರದಿಂದ 15 ದಿನಗಳೊಳಗೆ ಸಮಸ್ಯೆ ಬಗೆಹರಿಯಲಿದೆ.
- ನನ್ನ ನಿವಾಸದ ಬಳಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದೆ. -
Dr. G Parameshwara
@DrParameshwara
ಕನ್ನಡದ ಖ್ಯಾತ ಭಾಷಾತಜ್ಞರು, ಹಿರಿಯ ಸಾಹಿತಿ, ವಿಮರ್ಶಕರು ಆದ ಶ್ರೀ ಕೆ.ವಿ. ನಾರಾಯಣ ಅವರ ನಿಧನದ ಸುದ್ದಿ ತಿಳಿದು ಅತೀವ ದುಃಖವಾಯಿತು.
ಕನ್ನಡ ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿಯ ಕುರಿತು ಆಳವಾದ ಅಧ್ಯಯನ, ವಿದ್ವತ್ಪೂರ್ಣ ಚಿಂತನೆ ಹಾಗೂ ನಿರಂತರ ಬರವಣಿಗೆಯ ಮೂಲಕ ಕನ್ನಡ ಸಾರಸ್ವತ ಲೋಕದಲ್ಲಿ ತಮ್ಮದೇ ಆದ ವಿಶಿಷ್ಟ ಛಾಪು ಮೂಡಿಸಿದ್ದ ಅವರು, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಅನೇಕ ಪುರಸ್ಕಾರಗಳಿಗೆ ಭಾಜನರಾಗಿರುವುದು ಅವರ ಪಾಂಡಿತ್ಯಪೂರ್ಣ ಸಾಹಿತ್ಯ ಸಾಧನೆಗೆ ಸಂದ ಗೌರವವಾಗಿದೆ.
ಕನ್ನಡ ಭಾಷೆ ಮತ್ತು ಸಾಹಿತ್ಯದ ಬೆಳವಣಿಗೆಗೆ ತಮ್ಮ ಬದುಕನ್ನೇ ಮುಡಿಪಾಗಿಟ್ಟಿದ್ದವರ ಅಗಲಿಕೆಯಿಂದ ಸಾರಸ್ವತ ಲೋಕವಿಂದು ಬಡವಾಗಿದೆ.
ಮೃತರ ಆತ್ಮಕ್ಕೆ ಭಗವಂತನು ಚಿರಶಾಂತಿಯನ್ನು ಕರುಣಿಸಲಿ. ಅವರ ಕುಟುಂಬ ವರ್ಗಕ್ಕೆ ಹಾಗೂ ಓದುಗರಿಗೆ ಅಗಲಿಕೆಯ ನೋವನ್ನು ಭರಿಸುವ ಶಕ್ತಿಯನ್ನು ನೀಡಲಿ ಎಂದು ಪ್ರಾರ್ಥಿಸುತ್ತೇನೆ. -
Dr. G Parameshwara
@DrParameshwara
ಇಂದು ನಡೆದ ಸಚಿವ ಸಂಪುಟ ಸಭೆಯ ಪ್ರಮುಖ ನಿರ್ಣಯಗಳು ಹೀಗಿವೆ..
#cabinetdecisions
Dr. G Parameshwara
@DrParameshwara
-
Dr. G Parameshwara
@DrParameshwara
Here are the key decisions taken at today’s Cabinet meeting..
#cabinetdecisions
Dr. G Parameshwara
@DrParameshwara
-
Dr. G Parameshwara
@DrParameshwara
ಸರ್ಕಾರಿ ನೌಕರರು ಹಾಗೂ ನಿವೃತ್ತ ನೌಕರರ ಆರ್ಥಿಕ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು, ಹೆಚ್ಚುತ್ತಿರುವ ಜೀವನ ನಿರ್ವಹಣಾ ವೆಚ್ಚಕ್ಕೆ ಅನುಗುಣವಾಗಿ ತುಟ್ಟಿಭತ್ಯೆ ಹೆಚ್ಚಿಸುವ ನಿರ್ಧಾರ ಕೈಗೊಳ್ಳಲಾಗಿದೆ.
2024ರ ಪರಿಷ್ಕೃತ ವೇತನ ಶ್ರೇಣಿಯಲ್ಲಿರುವ ರಾಜ್ಯ ಸರ್ಕಾರಿ ನೌಕರರ ತುಟ್ಟಿಭತ್ಯೆಯನ್ನು ಶೇ.15.75ರಿಂದ ಶೇ.18ಕ್ಕೆ ಹೆಚ್ಚಿಸಲಾಗಿದ್ದು, ಈ ಪರಿಷ್ಕರಣೆ 2026ರ ಜುಲೈ 1ರಿಂದ ಪೂರ್ವಾನ್ವಯವಾಗಲಿದೆ. ನಿವೃತ್ತ ನೌಕರರು ಹಾಗೂ ಕುಟುಂಬ ಪಿಂಚಣಿದಾರರ ತುಟ್ಟಿಭತ್ಯೆಯನ್ನೂ ಶೇ.18ಕ್ಕೆ ಹೆಚ್ಚಿಸಲಾಗಿದೆ.
ಸರ್ಕಾರಿ ವ್ಯವಸ್ಥೆಯ ಸುಗಮ ಕಾರ್ಯನಿರ್ವಹಣೆಯಲ್ಲಿ ನೌಕರರ ಪಾತ್ರ ಮಹತ್ವದ್ದು. ಅವರ ಸೇವೆಗೆ ಮನ್ನಣೆ ನೀಡುವ ಈ ನಿರ್ಧಾರವು ನೌಕರರು ಮತ್ತು ಪಿಂಚಣಿದಾರರ ಆರ್ಥಿಕ ನಿರ್ವಹಣೆಗೆ ನೆರವಾಗಲಿದೆ.
Keeping the financial interests of Government employees and pensioners in mind, and considering the rising cost of living, our Government has decided to increase the Dearness Allowance (DA).
For State Government employees under the 2024 revised pay scales, DA has been increased from 15.75% to 18%, with effect from July 1, 2026. The DA for retired employees and family pensioners has also been increased to 18%.
Government employees play a vital role in the smooth functioning of the administration. This decision recognises their service and will provide additional financial support to employees and pensioners. -
Dr. G Parameshwara
@DrParameshwara
ಬರದಿಂದ ಬೆಳೆ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿರುವ ಅನ್ನದಾತರ ಬದುಕಿಗೆ ಆಸರೆಯಾಗಲು ನಮ್ಮ ಸರ್ಕಾರ ಬದ್ಧವಾಗಿದೆ. ರೈತರ ಕಷ್ಟಕ್ಕೆ ಸ್ಪಂದಿಸಿ, ಎನ್ಡಿಆರ್ಎಫ್ ನಿಯಮಗಳ ಅನ್ವಯ ಗರಿಷ್ಠ ಎರಡು ಹೆಕ್ಟೇರ್ವರೆಗೆ ಪ್ರತಿ ರೈತರಿಗೆ ₹5,000 ಪರಿಹಾರ ನೀಡಲು ತೀರ್ಮಾನಿಸಲಾಗಿದೆ.
ಈ ನಿಟ್ಟಿನಲ್ಲಿ ಮೊದಲ ಕಂತಿನ ₹2,500 ಬಿಡುಗಡೆಗೆ ಕ್ರಮ ವಹಿಸಲಾಗಿದ್ದು, ಉಳಿದ ಮೊತ್ತವನ್ನು ಮುಂದಿನ ಮೂರು ವಾರದೊಳಗೆ ಬಿಡುಗಡೆ ಮಾಡಲಾಗುವುದು. ಕಷ್ಟದ ಸಮಯದಲ್ಲಿ ರೈತರ ಬೆನ್ನಿಗೆ ನಿಂತು, ಅವರ ಬದುಕಿಗೆ ಧೈರ್ಯ ಮತ್ತು ಭರವಸೆ ತುಂಬುವ ಕೆಲಸವನ್ನು ನಮ್ಮ ಸರ್ಕಾರ ಮುಂದುವರಿಸಲಿದೆ.
Our government is committed to supporting farmers who have suffered crop losses due to the drought. In accordance with NDRF norms, we have decided to provide ₹5,000 in relief to each eligible farmer for up to two hectares.
Steps have been taken to release ₹2,500 as the first instalment, with the remaining amount to be disbursed within three weeks. Our government will continue to stand firmly with farmers, offering support and reassurance during these difficult times. -
Dr. G Parameshwara
@DrParameshwara
Our Government has issued orders enhancing the Dearness Allowance (DA) for State Government employees and pensioners, reaffirming our commitment to their welfare and financial security.
The Dearness Allowance for State Government employees drawing salaries under the 2024 Revised Pay Scales has been increased from 15.75% to 18% of basic pay, with retrospective effect from July 1, 2026.
The same enhancement, from 15.75% to 18%, has also been extended to retired State Government employees and family pensioners, in accordance with the applicable rules.
Government employees are the backbone of our administration. Their dedication, professionalism and commitment are instrumental in translating our policies and programmes into meaningful outcomes for the people of Karnataka. Equally invaluable is the contribution of our retired employees, who have devoted decades of their lives to public service and the progress of our State.
At a time when the cost of living continues to rise, it is our responsibility to safeguard the financial well-being and dignity of those who serve and have served our State. This enhancement is a recognition of their contribution and a measure of our commitment to supporting them and their families.
Our Government remains steadfast in its commitment to honouring public service, protecting the interests of employees and pensioners, and ensuring that their contributions are recognised with the respect and consideration they deserve. -
Dr. G Parameshwara
@DrParameshwara
ರಾಜ್ಯ ಸರ್ಕಾರಿ ನೌಕರರು ಹಾಗೂ ನಿವೃತ್ತ ನೌಕರರ ತುಟ್ಟಿಭತ್ಯೆಯನ್ನು ಹೆಚ್ಚಿಸಿ ನಮ್ಮ ಸರ್ಕಾರ ಆದೇಶ ಹೊರಡಿಸಿದೆ. 2024ರ ಪರಿಷ್ಕೃತ ವೇತನ ಶ್ರೇಣಿಯಲ್ಲಿರುವ ರಾಜ್ಯ ಸರ್ಕಾರಿ ನೌಕರರ ತುಟ್ಟಿಭತ್ಯೆಯನ್ನು ಪ್ರಸ್ತುತ ಮೂಲ ವೇತನದ ಶೇ.15.75ರಿಂದ ಶೇ.18ಕ್ಕೆ ಹೆಚ್ಚಿಸಲು ತೀರ್ಮಾನಿಸಲಾಗಿದೆ. ಈ ಹೆಚ್ಚಳವು 2026ರ ಜುಲೈ 1ರಿಂದ ಪೂರ್ವಾನ್ವಯವಾಗುವಂತೆ ಜಾರಿಗೆ ಬರಲಿದ್ದು, ಸರ್ಕಾರಿ ನೌಕರರಿಗೆ ಇದರ ಪ್ರಯೋಜನ ದೊರೆಯಲಿದೆ.
ಇದರೊಂದಿಗೆ ರಾಜ್ಯ ಸರ್ಕಾರದ ನಿವೃತ್ತ ನೌಕರರು ಹಾಗೂ ಕುಟುಂಬ ಪಿಂಚಣಿದಾರರ ತುಟ್ಟಿಭತ್ಯೆಯನ್ನೂ ಶೇ.15.75ರಿಂದ ಶೇ.18ಕ್ಕೆ ಹೆಚ್ಚಿಸಲಾಗಿದೆ. ಪರಿಷ್ಕೃತ ತುಟ್ಟಿಭತ್ಯೆಯು ಸಂಬಂಧಪಟ್ಟ ನಿಯಮಗಳ ಅನ್ವಯ ಅರ್ಹ ನೌಕರರು ಮತ್ತು ಪಿಂಚಣಿದಾರರಿಗೆ ಅನ್ವಯವಾಗಲಿದೆ.
ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ನೌಕರರು ಸರ್ಕಾರದ ಯೋಜನೆಗಳು ಮತ್ತು ಕಾರ್ಯಕ್ರಮಗಳನ್ನು ಜನರಿಗೆ ತಲುಪಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ಅದೇ ರೀತಿ, ಹಲವು ವರ್ಷಗಳ ಕಾಲ ಸರ್ಕಾರಿ ಸೇವೆಯಲ್ಲಿ ದುಡಿದು ನಿವೃತ್ತರಾಗಿರುವ ನೌಕರರ ಕೊಡುಗೆಯೂ ಮಹತ್ವದ್ದಾಗಿದೆ.
ದೈನಂದಿನ ಜೀವನ ನಿರ್ವಹಣಾ ವೆಚ್ಚ ಹೆಚ್ಚುತ್ತಿರುವ ಸಂದರ್ಭದಲ್ಲಿ ನೌಕರರು ಹಾಗೂ ಪಿಂಚಣಿದಾರರ ಆರ್ಥಿಕ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಳ್ಳುವುದು ಸರ್ಕಾರದ ಜವಾಬ್ದಾರಿಯಾಗಿದೆ. ಈ ಹಿನ್ನೆಲೆಯಲ್ಲಿ ತುಟ್ಟಿಭತ್ಯೆ ಹೆಚ್ಚಳದ ನಿರ್ಧಾರ ಕೈಗೊಳ್ಳಲಾಗಿದ್ದು, ಸರ್ಕಾರಿ ನೌಕರರು, ನಿವೃತ್ತ ನೌಕರರು ಹಾಗೂ ಅವರ ಕುಟುಂಬಗಳಿಗೆ ಇದರಿಂದ ಅನುಕೂಲವಾಗಲಿದೆ.
ನೌಕರರ ಸೇವೆಯನ್ನು ಗೌರವಿಸುವುದರ ಜೊತೆಗೆ ಅವರ ಹಿತಾಸಕ್ತಿಗಳನ್ನು ಕಾಪಾಡಲು ನಮ್ಮ ಸರ್ಕಾರ ಬದ್ಧವಾಗಿದೆ. -
Dr. G Parameshwara
@DrParameshwara
Today, along with Chief Minister Shri D.K. Shivakumar, I launched the release of the first instalment of interim input subsidy for farmers who have suffered crop loss due to drought.
Our Government has decided to provide ₹5,000 per farmer, subject to a maximum of two hectares. Of this, ₹2,500 is being credited directly as the first instalment, while the second instalment will be released within the next three weeks.
Karnataka is facing a severe drought across 226 taluks. Crop damage has affected 57.93 lakh hectares, with the estimated economic loss placed at ₹62,481.88 crore.
Considering the scale of the crisis, we have sought ₹22,400.58 crore in drought-relief assistance from the Union Government under the NDRF. I have also written to Prime Minister Shri Narendra Modi, Union Home Minister Shri Amit Shah and Union Agriculture Minister Shri Shivraj Singh Chouhan, seeking appointments to personally present Karnataka’s case.
Once the Centre releases the assistance, the remaining relief due to eligible farmers under the revised norms will be paid in a single instalment.
The entire relief process has been made digital by integrating Parihara, Digital Crop Survey and FRUITS data. Farmers do not need to visit Government offices or submit fresh physical documents. The relief will be credited directly to eligible farmers’ Aadhaar-linked bank accounts through DBT.
Today, the distribution has begun in Yadgir district, covering 1,06,462 farmers, and the process of releasing assistance in the remaining districts is under way.
We understand the hardship of farmers who have lost their crops to drought. Supporting them is our Government’s priority, and we will continue every effort to ensure that the assistance due to them reaches their hands without delay. -
Dr. G Parameshwara
@DrParameshwara
2026ರ ಮುಂಗಾರು ಹಂಗಾಮಿನಲ್ಲಿ ತೀವ್ರ ಬರದಿಂದ ಬೆಳೆ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿರುವ ರೈತರಿಗೆ ತಕ್ಷಣದ ನೆರವು ಒದಗಿಸುವ ಉದ್ದೇಶದಿಂದ ಮೊದಲ ಕಂತಿನ ಮಧ್ಯಂತರ ಇನ್ಪುಟ್ ಸಬ್ಸಿಡಿ ಪರಿಹಾರ ₹2,500 ಅನ್ನು ಬಿಡುಗಡೆ ಮಾಡಿದ್ದೇವೆ.
ಬರದಿಂದ ಬೆಳೆ ಕಳೆದುಕೊಂಡಿರುವ ರೈತರಿಗೆ ನೆರವಾಗಲು ಎನ್ಡಿಆರ್ಎಫ್ ನಿಯಮಗಳಂತೆ ರಾಜ್ಯ ಸರ್ಕಾರವು ಪ್ರತಿ ರೈತರಿಗೆ ಗರಿಷ್ಠ ಎರಡು ಹೆಕ್ಟೇರ್ಗೆ ಮಿತಿಗೊಳಿಸಿ ₹5,000 ಪರಿಹಾರ ನೀಡಲು ತೀರ್ಮಾನಿಸಿದೆ. ಅದರಂತೆ ಮೊದಲ ಕಂತಿನಲ್ಲಿ ₹2,500 ಬಿಡುಗಡೆ ಮಾಡಲು ಕ್ರಮ ವಹಿಸಲಾಗಿದೆ. ಎರಡನೇ ಕಂತನ್ನು ಮುಂದಿನ ಮೂರು ವಾರದೊಳಗೆ ಬಿಡುಗಡೆ ಮಾಡಲಾಗುವುದು.
ಇದು ಮೊದಲ ಕಂತಿನ ಪರಿಹಾರವಷ್ಟೇ. ಕೇಂದ್ರ ಸರ್ಕಾರದಿಂದ ಎನ್ಡಿಆರ್ಎಫ್ (NDRF) ಅಡಿಯಲ್ಲಿ ಬರ ಪರಿಹಾರದ ಅನುದಾನ ಬಿಡುಗಡೆಯಾದ ತಕ್ಷಣವೇ ಪರಿಷ್ಕೃತ ಮಾನದಂಡಗಳ ಅನ್ವಯ ರೈತರಿಗೆ ಬಾಕಿ ಇರುವ ಪರಿಹಾರ ಮೊತ್ತವನ್ನು ವಿತರಿಸಲು ಕ್ರಮ ಕೈಗೊಳ್ಳುತ್ತೇವೆ. ಬರದಿಂದ ಸಂಕಷ್ಟದಲ್ಲಿರುವ ರೈತರಿಗೆ ಅಗತ್ಯ ನೆರವು ಒದಗಿಸುವುದು ನಮ್ಮ ಸರ್ಕಾರದ ಆದ್ಯತೆಯಾಗಿದೆ.
ರಾಜ್ಯದ 226 ತಾಲೂಕುಗಳಲ್ಲಿ ತೀವ್ರ ಬರ ಪರಿಸ್ಥಿತಿ :
2026ರ ಮುಂಗಾರು ಹಂಗಾಮಿನಲ್ಲಿ ಮಳೆಯ ತೀವ್ರ ಕೊರತೆಯಿಂದ ರಾಜ್ಯದ ಬಹುತೇಕ ಭಾಗಗಳಲ್ಲಿ ಬೆಳೆಗಳು ಹಾನಿಗೊಳಗಾಗಿವೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ಒಟ್ಟು 226 ತಾಲೂಕುಗಳನ್ನು ಬರಪೀಡಿತ ಪ್ರದೇಶಗಳೆಂದು ಅಧಿಕೃತವಾಗಿ ಘೋಷಿಸಿದೆ.
ಜೂನ್ 1ರಿಂದ ಸೆಪ್ಟೆಂಬರ್ 30ರವರೆಗಿನ ಅವಧಿಯಲ್ಲಿ ರಾಜ್ಯದಲ್ಲಿ ವಾಡಿಕೆಯಂತೆ 852 ಮಿ.ಮೀ. ಮಳೆಯಾಗಬೇಕಿದ್ದು, ಕೇವಲ 551 ಮಿ.ಮೀ. ಮಳೆಯಾಗಿದೆ. ಇದರಿಂದ ಶೇ.35ರಷ್ಟು ಮಳೆ ಕೊರತೆ ದಾಖಲಾಗಿದೆ. ದಕ್ಷಿಣ ಒಳನಾಡಿನಲ್ಲಿ ಶೇ.41, ಉತ್ತರ ಒಳನಾಡಿನಲ್ಲಿ ಶೇ.42, ಮಲೆನಾಡಿನಲ್ಲಿ ಶೇ.38 ಹಾಗೂ ಕರಾವಳಿ ಕರ್ನಾಟಕದಲ್ಲಿ ಶೇ.28ರಷ್ಟು ಮಳೆ ಕೊರತೆ ಕಂಡುಬಂದಿದೆ.
ರಾಜ್ಯದಲ್ಲಿ 84.10 ಲಕ್ಷ ಹೆಕ್ಟೇರ್ ಬಿತ್ತನೆ ಗುರಿಯ ಪೈಕಿ 69.57 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿತ್ತು. ಕಂದಾಯ, ಕೃಷಿ ಮತ್ತು ತೋಟಗಾರಿಕೆ ಇಲಾಖೆಗಳು ನಡೆಸಿದ ಜಂಟಿ ಬೆಳೆಹಾನಿ ಸಮೀಕ್ಷೆಯ ಪ್ರಕಾರ, ಇದರಲ್ಲಿ 57.93 ಲಕ್ಷ ಹೆಕ್ಟೇರ್ ಪ್ರದೇಶದ ಬೆಳೆಗಳು ಹಾನಿಗೊಳಗಾಗಿವೆ. ಇದು ಬಿತ್ತನೆಯಾದ ಒಟ್ಟು ಪ್ರದೇಶದ ಶೇ.83.26ರಷ್ಟಾಗಿದ್ದು, ಅಂದಾಜು ₹62,481.88 ಕೋಟಿ ಆರ್ಥಿಕ ನಷ್ಟ ಉಂಟಾಗಿದೆ.
ಕೇಂದ್ರ ಸರ್ಕಾರಕ್ಕೆ ₹22,400.58 ಕೋಟಿ ಪರಿಹಾರದ ಮನವಿ :
ರಾಜ್ಯದಲ್ಲಿ ಉಂಟಾಗಿರುವ ಬರ ಪರಿಸ್ಥಿತಿ ಹಾಗೂ ಬೆಳೆ ಹಾನಿಯ ಪ್ರಮಾಣವನ್ನು ವಿವರಿಸಿ, ಎನ್ಡಿಆರ್ಎಫ್ ಅಡಿಯಲ್ಲಿ ಒಟ್ಟು ₹22,400.58 ಕೋಟಿ ಆರ್ಥಿಕ ನೆರವು ನೀಡುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ.
ಈ ಮೊತ್ತದಲ್ಲಿ ಬೆಳೆಹಾನಿ ಇನ್ಪುಟ್ ಸಬ್ಸಿಡಿಗಾಗಿ ₹7,943.55 ಕೋಟಿ, ಕುಡಿಯುವ ನೀರಿನ ವ್ಯವಸ್ಥೆಗಾಗಿ ₹1,727 ಕೋಟಿ, ಜಾನುವಾರುಗಳ ರಕ್ಷಣೆಗಾಗಿ ₹583.04 ಕೋಟಿ ಹಾಗೂ 61.91 ಲಕ್ಷ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಅನುಗ್ರಹ ಪರಿಹಾರಕ್ಕಾಗಿ ₹12,146.99 ಕೋಟಿ ಸೇರಿದೆ.
ಬರ ಪರಿಹಾರಕ್ಕೆ ಸಂಬಂಧಿಸಿದ ಎನ್ಡಿಆರ್ಎಫ್ ಮಾನದಂಡಗಳನ್ನು ಮರುಪರಿಶೀಲಿಸಿ ಸಡಿಲಗೊಳಿಸಬೇಕು ಹಾಗೂ ರಾಜ್ಯಕ್ಕೆ ಅಗತ್ಯ ಅನುದಾನವನ್ನು ತುರ್ತಾಗಿ ಬಿಡುಗಡೆ ಮಾಡಬೇಕು ಎಂದು ಮುಖ್ಯಮಂತ್ರಿಗಳು ಮತ್ತು ನಾನು ಪ್ರಧಾನಿಗಳು, ಗೃಹ ಸಚಿವರು ಹಾಗೂ ಕೇಂದ್ರ ಸಚಿವರಿಗೆ ಐದಕ್ಕೂ ಹೆಚ್ಚು ಬಾರಿ ಪತ್ರ ಬರೆದು ಒತ್ತಾಯಿಸಿದ್ದೇವೆ. ಅಲ್ಲದೇ, ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಕೃಷಿ ಸಚಿವರು ಹಾಗೂ ಕೇಂದ್ರ ಗೃಹ ಸಚಿವರಿಗೆ ಪತ್ರ ಬರೆದು ಭೇಟಿಗಾಗಿ ಸಮಯ ಕೋರಿದ್ದೇನೆ.
ರಾಜ್ಯದ ರೈತರು ತೀವ್ರ ಸಂಕಷ್ಟದಲ್ಲಿರುವ ಸಂದರ್ಭದಲ್ಲಿ ಕೇಂದ್ರ ಸರ್ಕಾರವು ಬರ ಪರಿಹಾರದ ಅನುದಾನವನ್ನು ವಿಳಂಬ ಮಾಡದೆ ಬಿಡುಗಡೆ ಮಾಡಬೇಕು. ರೈತರು ಅನುಭವಿಸಿರುವ ನಷ್ಟದ ಪ್ರಮಾಣವನ್ನು ಪರಿಗಣಿಸಿ, ರಾಜ್ಯದ ಮನವಿಗೆ ಆದಷ್ಟು ಶೀಘ್ರವಾಗಿ ಸ್ಪಂದಿಸಬೇಕು ಎಂದು ಮನವಿ ಮಾಡಿದ್ದೇವೆ.
ಕೇಂದ್ರ ಸರ್ಕಾರದಿಂದ ಅನುದಾನ ಬಿಡುಗಡೆಯಾದ ಬಳಿಕ ಅರ್ಹ ರೈತರಿಗೆ ಈ ಪರಿಷ್ಕೃತ ದರಗಳ ಅನ್ವಯ ಬಾಕಿ ಉಳಿದಿರುವ ಪರಿಹಾರವನ್ನು ಒಂದೇ ಕಂತಿನಲ್ಲಿ ಪಾವತಿಸಲು ಕ್ರಮ ಕೈಗೊಳ್ಳಲಾಗುವುದು.
ಪರಿಹಾರಕ್ಕಾಗಿ ರೈತರು ಕಚೇರಿಗಳಿಗೆ ಅಲೆಯುವ ಅಗತ್ಯವಿಲ್ಲ :
ಪರಿಹಾರ ವಿತರಣೆಯಲ್ಲಿ ವಿಳಂಬ, ಅಕ್ರಮ ಹಾಗೂ ಅನಗತ್ಯ ತೊಂದರೆಗಳನ್ನು ತಪ್ಪಿಸಲು ಸಂಪೂರ್ಣ ಡಿಜಿಟಲ್ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಲಾಗಿದೆ. 'ಪರಿಹಾರ' ಪೋರ್ಟಲ್, ಡಿಜಿಟಲ್ ಬೆಳೆ ಸಮೀಕ್ಷೆ ಹಾಗೂ 'ಫ್ರೂಟ್ಸ್' (FRUITS) ದತ್ತಾಂಶಗಳನ್ನು ಸಂಯೋಜಿಸಿ ಅರ್ಹ ರೈತರ ವಿವರಗಳನ್ನು ಪರಿಶೀಲಿಸಲಾಗುತ್ತಿದೆ.
ಪರಿಹಾರ ಪಡೆಯಲು ರೈತರು ಯಾವುದೇ ಸರ್ಕಾರಿ ಕಚೇರಿಗಳಿಗೆ ಅಲೆಯುವ ಅಥವಾ ಹೊಸದಾಗಿ ಭೌತಿಕ ದಾಖಲೆಗಳನ್ನು ಸಲ್ಲಿಸುವ ಅಗತ್ಯವಿಲ್ಲ. ಅರ್ಹ ರೈತರ ಬ್ಯಾಂಕ್ ಖಾತೆಗಳಿಗೆ ಆಧಾರ್ ಆಧಾರಿತ ನೇರ ನಗದು ವರ್ಗಾವಣೆ (DBT) ಮೂಲಕ ಪರಿಹಾರದ ಹಣ ಜಮೆಯಾಗಲಿದೆ.
ಯಾದಗಿರಿ ಜಿಲ್ಲೆಯಲ್ಲಿ ಪರಿಹಾರ ವಿತರಣೆಗೆ ಚಾಲನೆ :
ಇಂದು ಯಾದಗಿರಿ ಜಿಲ್ಲೆಯ 1,06,462 ರೈತರಿಗೆ 2,500 ರೂ.ಗಳಂತೆ ಒಟ್ಟು 1,743.53 ಲಕ್ಷ ರೂ.ಗಳ ಇನ್ಪುಟ್ ಸಬ್ಸಿಡಿಯನ್ನು ವಿತರಿಸಲಾಗುತ್ತಿದೆ. ಯಾದಗಿರಿ ಜಿಲ್ಲೆಗೆ ಒಟ್ಟು ಅರ್ಹ ರೈತರಿಗೆ ಪಾವತಿಸಬೇಕಾಗಿರುವ ಇನ್ಪುಟ್ ಸಬ್ಸಿಡಿ ಮೊತ್ತವು ರೂ.16,830 ಲಕ್ಷಗಳಾಗಿರುತ್ತದೆ. ಉಳಿದ ಜಿಲ್ಲೆಗಳಿಗೆ ಪರಿಹಾರ ಬಿಡುಗಡೆ ಮಾಡುವ ಕಾರ್ಯ ಪ್ರಗತಿಯಲ್ಲಿದೆ.
ಇನ್ಪುಟ್ ಸಬ್ಸಿಡಿಯ ಜೊತೆಗೆ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆ ಹಾಗೂ ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆ (WBCIS) ಅಡಿಯಲ್ಲಿಯೂ ಅರ್ಹ ರೈತರಿಗೆ ವಿಮಾ ಪರಿಹಾರವನ್ನು ತ್ವರಿತವಾಗಿ ಒದಗಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.
ಬರದಿಂದ ಬೆಳೆ ಕಳೆದುಕೊಂಡಿರುವ ರೈತರ ಪರಿಸ್ಥಿತಿ ನಮಗೆ ತಿಳಿದಿದೆ. ಅವರಿಗೆ ಅಗತ್ಯ ನೆರವು ಒದಗಿಸುವ ಜವಾಬ್ದಾರಿಯಿಂದ ನಮ್ಮ ಸರ್ಕಾರ ಹಿಂದೆ ಸರಿಯುವುದಿಲ್ಲ. ಕೇಂದ್ರ ಸರ್ಕಾರದಿಂದ ಬರ ಪರಿಹಾರದ ಅನುದಾನ ಪಡೆಯಲು ನಮ್ಮ ಪ್ರಯತ್ನಗಳನ್ನು ಮುಂದುವರಿಸುವುದರ ಜೊತೆಗೆ, ರೈತರಿಗೆ ಸಲ್ಲಬೇಕಾದ ಪರಿಹಾರವನ್ನು ತಲುಪಿಸಲು ಕ್ರಮ ಕೈಗೊಳ್ಳುತ್ತೇವೆ. -
Dr. G Parameshwara
@DrParameshwara
ಇಂದು ವಿಧಾನಸೌಧದ ಸಮಿತಿ ಕೊಠಡಿಯಲ್ಲಿ ಬರದಿಂದ ಉಂಟಾದ ಬೆಳೆ ಹಾನಿಗೆ ಸಂಬಂಧಿಸಿದಂತೆ ರೈತರಿಗೆ ಮೊದಲ ಕಂತಿನ ಮಧ್ಯಂತರ ಇನ್ಪುಟ್ ಸಬ್ಸಿಡಿ ನೆರವು ಬಿಡುಗಡೆ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಶ್ರೀ ಡಿ.ಕೆ.ಶಿವಕುಮಾರ್ ಅವರ ಜೊತೆಗೂಡಿ ಚಾಲನೆ ನೀಡಿದೆ.
ಪ್ರತಿ ರೈತರಿಗೆ ಗರಿಷ್ಠ ಎರಡು ಹೆಕ್ಟೇರ್ ಮಿತಿಯೊಳಗೆ ಮೊದಲ ಹಂತದಲ್ಲಿ ₹5,000 ಪರಿಹಾರ ನೀಡಲು ತೀರ್ಮಾನಿಸಿದ್ದೇವೆ. ಅದರಂತೆ ಮೊದಲ ಕಂತಿನಲ್ಲಿ ₹2,500 ಬಿಡುಗಡೆ ಮಾಡಲಾಗುವುದು. ಎರಡನೇ ಕಂತನ್ನು ಮುಂದಿನ ಮೂರು ವಾರದೊಳಗೆ ಬಿಡುಗಡೆ ಮಾಡಲಾಗುವುದು.
ಕೇಂದ್ರ ಸರ್ಕಾರದಿಂದ ಬರ ಪರಿಹಾರದ ಅನುದಾನ ಬಿಡುಗಡೆಯಾದ ತಕ್ಷಣವೇ ರೈತರಿಗೆ ಬಾಕಿ ಇರುವ ಪರಿಹಾರದ ಮೊತ್ತವನ್ನು ವಿತರಿಸಲು ಕ್ರಮ ಕೈಗೊಳ್ಳುತ್ತೇವೆ.
ಬರದಿಂದ ಬೆಳೆ ಕಳೆದುಕೊಂಡು ಸಂಕಷ್ಟದಲ್ಲಿರುವ ರೈತರ ಪರಿಸ್ಥಿತಿ ನಮಗೆ ತಿಳಿದಿದೆ. ಅವರಿಗೆ ಅಗತ್ಯ ನೆರವು ಒದಗಿಸುವುದು ನಮ್ಮ ಸರ್ಕಾರದ ಆದ್ಯತೆಯಾಗಿದ್ದು, ರೈತರ ಹಿತ ಕಾಪಾಡುವ ನಿಟ್ಟಿನಲ್ಲಿ ಎಲ್ಲ ರೀತಿಯ ಪ್ರಯತ್ನಗಳನ್ನು ಮುಂದುವರಿಸುತ್ತೇವೆ.
ಈ ಸಂದರ್ಭದಲ್ಲಿ ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರರಾದ ಎಲ್.ಕೆ.ಅತೀಕ್, ಮುಖ್ಯಮಂತ್ರಿಗಳ ಅಪರ ಮುಖ್ಯ ಕಾರ್ಯದರ್ಶಿಗಳಾದ ತುಷಾರ್ ಗಿರಿನಾಥ್, ಸರ್ಕಾರದ ಮುಖ್ಯ ಕಾರ್ಯದರ್ಶಿಗಳಾದ ಡಾ.ಶಾಲಿನಿ ರಜನೀಶ್ ಸೇರಿದಂತೆ ಹಲವು ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
Today, along with Chief Minister Shri D.K. Shivakumar, I launched the release of the first instalment of interim input subsidy for farmers who have suffered crop loss due to drought, at the Committee Room in Vidhana Soudha.
We have decided to provide ₹5,000 per farmer in the first phase, subject to a maximum of two hectares. Of this, ₹2,500 will be released as the first instalment, while the second instalment will be released within the next three weeks.
Once the Union Government releases drought-relief assistance, steps will be taken to disburse the remaining amount due to farmers.
We understand the hardship faced by farmers who have lost their crops to drought. Providing them with the necessary support remains a priority for our Government, and we will continue every effort to safeguard their interests.
L.K. Atheeq, Economic Adviser to the Chief Minister; Tushar Girinath, Additional Chief Secretary to the Chief Minister; Dr. Shalini Rajneesh, Chief Secretary to the Government, and several senior officials were present. -
Dr. G Parameshwara
@DrParameshwara
ಇಂದು ವಿಧಾನಸೌಧದ ಕಾರ್ಯಾಲಯದಲ್ಲಿ ಕಂದಾಯ ಇಲಾಖೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಇಲಾಖೆಯ ಕಾರ್ಯಚಟುವಟಿಕೆಗಳ ಕುರಿತು ಚರ್ಚೆ ನಡೆಸಿದೆ.
ಕಂದಾಯ ಸೇವೆಗಳು ಸೇರಿದಂತೆ ಪ್ರಮುಖ ವಿಚಾರಗಳ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದು, ಮುಂದಿನ ಕ್ರಮಗಳ ಕುರಿತು ಸಮಾಲೋಚಿಸಿದೆ.
Today, I held a meeting with officials of the Revenue Department at my office in Vidhana Soudha and reviewed the Department’s functioning.
I received updates on key matters, including revenue services, and discussed the next course of action with the officials. -
Dr. G Parameshwara
@DrParameshwara
ರಾಜ್ಯದ ರೈತರ ಪರವಾಗಿ ಬರ ಪರಿಹಾರಕ್ಕಾಗಿ ಕೇಂದ್ರಕ್ಕೆ ಸಲ್ಲಿಸಿದ ಮನವಿಯನ್ನು ಭಿಕ್ಷೆಯೆಂದು ಕರೆದು ಅನ್ನದಾತರನ್ನು ಅವಮಾನ ಮಾಡಿದ ಆರ್. ಅಶೋಕ್ ಅವರ ಹೇಳಿಕೆಯ ಕುರಿತು ನನ್ನ ಪ್ರತಿಕ್ರಿಯೆ ಇಂದಿನ ಪತ್ರಿಕೆಗಳಲ್ಲಿ..
My response to R. Ashoka’s remark calling Karnataka’s request to the Centre for drought relief “begging”, thereby insulting the farmers on whose behalf the appeal was made, has been reported in today’s newspapers.
Here are the media reports. -
Dr. G Parameshwara
@DrParameshwara
ಕೊಪ್ಪಳ ಶಾಸಕರಾದ ರಾಘವೇಂದ್ರ ಹಿಟ್ನಾಳ್ ಅವರು ಇಂದು ವಿಧಾನಸೌಧದ ಕಾರ್ಯಾಲಯದಲ್ಲಿ ನನ್ನನ್ನು ಭೇಟಿ ಮಾಡಿ, ಅವರ ಸಹೋದರರಾದ ಸಂಸದ ರಾಜಶೇಖರ್ ಹಿಟ್ನಾಳ್ ಅವರ ಸುಪುತ್ರಿಯ ವಿವಾಹ ಮಹೋತ್ಸವದ ಆಮಂತ್ರಣ ಪತ್ರಿಕೆ ನೀಡಿ ಆಹ್ವಾನಿಸಿದರು.
-
Dr. G Parameshwara
@DrParameshwara
ಬರದ ಹೊಡೆತಕ್ಕೆ ಬೆಳೆ ಕಳೆದುಕೊಂಡು, ಜೀವನ ನಿರ್ವಹಣೆಯ ಸವಾಲುಗಳ ನಡುವೆ ದಿನದೂಡುತ್ತಿರುವ ರೈತ ಕುಟುಂಬಗಳ ನೋವು ನಮಗೆ ಅರ್ಥವಾಗುತ್ತದೆ. ಅನ್ನ ನೀಡುವ ಅನ್ನದಾತರು ಮತ್ತು ಹೈನುಗಾರರು ಸಂಕಷ್ಟದಲ್ಲಿರುವಾಗ ಅವರ ಕೈಹಿಡಿದು, ಕಷ್ಟದ ಸಮಯದಲ್ಲಿ ಧೈರ್ಯ ತುಂಬುವುದು ನಮ್ಮ ಜವಾಬ್ದಾರಿ.
ರೈತರ ಬದುಕು ಸುಧಾರಿಸಿದಾಗ ಮಾತ್ರ ನಾಡಿನ ಆರ್ಥಿಕತೆ ಮತ್ತು ಜನಜೀವನ ಸಮೃದ್ಧಿಯಾಗಲು ಸಾಧ್ಯ. ಹೈನುಗಾರಿಕೆಯನ್ನೇ ನಂಬಿ ಬದುಕುತ್ತಿರುವ ಕುಟುಂಬಗಳಿಗೆ ನೆರವಿನ ಹಸ್ತ ಚಾಚಿ, ಅವರ ದುಡಿಮೆಗೆ ಬೆಂಬಲವಾಗಿ ನಿಲ್ಲುವುದು ನಮ್ಮ ಕರ್ತವ್ಯ. ಅವರ ಸಂಕಷ್ಟಕ್ಕೆ ಸ್ಪಂದಿಸುವುದರ ಜೊತೆಗೆ ಬದುಕಿನಲ್ಲಿ ನೆಮ್ಮದಿ ಮತ್ತು ಭರವಸೆ ಮೂಡಿಸುವ ನಿಟ್ಟಿನಲ್ಲಿ ನಮ್ಮ ಸರ್ಕಾರ ಕೆಲಸ ಮಾಡಲಿದೆ.
We understand the hardship of farming families who have lost crops to drought and are struggling to sustain their livelihoods. When farmers and dairy families who feed our State are in distress, it is our responsibility to stand with them and give them strength.
Karnataka can prosper only when its farmers prosper. Our Government will continue to support families dependent on dairy farming, strengthen their livelihoods and help bring greater security and confidence to their lives. -
Dr. G Parameshwara
@DrParameshwara
ಹಾಲಿನ ದರ ಪರಿಷ್ಕರಣೆಯ ಮೂಲ ಉದ್ದೇಶ ಹೈನುಗಾರರ ಆದಾಯ ಹೆಚ್ಚಿಸುವುದು ಮತ್ತು ಹಾಲು ಉತ್ಪಾದಕರಿಗೆ ಆರ್ಥಿಕವಾಗಿ ಹೆಚ್ಚಿನ ನೆರವು ಒದಗಿಸುವುದಾಗಿದೆ. ಸುಮಾರು ₹700 ಕೋಟಿ ಪ್ರೋತ್ಸಾಹಧನವನ್ನು ಬಾಕಿ ಉಳಿಸಿದ್ದ ಹಿಂದಿನ ಬಿಜೆಪಿ ಸರ್ಕಾರದ ಅವಧಿಯ ಬಾಕಿಯನ್ನೂ ರೈತರಿಗೆ ತಲುಪಿಸುತ್ತಿರುವುದು ನಮ್ಮ ಸರ್ಕಾರ.
ಹೈನುಗಾರರಿಗೆ ಪ್ರತಿ ಲೀಟರ್ಗೆ ನೀಡುತ್ತಿದ್ದ ₹2ರ ಪ್ರೋತ್ಸಾಹಧನವನ್ನು ₹5ಕ್ಕೆ ಹೆಚ್ಚಿಸಿದ್ದು ನಮ್ಮ ಸರ್ಕಾರವೇ. ಪ್ರಸ್ತುತ ಹಾಲಿನ ದರ ಹೆಚ್ಚಳದ ₹8ರ ಪೈಕಿ ₹7 ನೇರವಾಗಿ ಹೈನುಗಾರರಿಗೆ ದೊರೆಯಲಿದ್ದು, ಉಳಿದ ₹1 ಹಾಲು ಒಕ್ಕೂಟಗಳ ನಿರ್ವಹಣೆಗೆ ಬಳಕೆಯಾಗಲಿದೆ.
ಹೈನುಗಾರಿಕೆ ಲಕ್ಷಾಂತರ ರೈತ ಕುಟುಂಬಗಳ ಜೀವನಾಧಾರ. ಅವರ ಬದುಕಿಗೆ ಆರ್ಥಿಕ ಭದ್ರತೆ ಒದಗಿಸುವುದು, ಹೈನುಗಾರಿಕೆಯನ್ನು ಸುಸ್ಥಿರವಾಗಿ ಮುಂದುವರಿಸಲು ನೆರವಾಗುವುದು ನಮ್ಮ ಸರ್ಕಾರದ ಆದ್ಯ ಕರ್ತವ್ಯ. ಪ್ರೋತ್ಸಾಹಧನ ಹೆಚ್ಚಳದಿಂದ ಹಿಡಿದು ಬಾಕಿ ಪಾವತಿಯವರೆಗೆ ಹೈನುಗಾರರ ಹಿತಕ್ಕಾಗಿ ಕೈಗೊಂಡಿರುವ ಕ್ರಮಗಳು ನಮ್ಮ ಬದ್ಧತೆಯನ್ನು ಪ್ರತಿಬಿಂಬಿಸುತ್ತವೆ.
ಹಾಲಿನ ದರ ಪರಿಷ್ಕರಣೆಯನ್ನು ಟೀಕಿಸುವ ವಿರೋಧ ಪಕ್ಷಗಳು, ಹೈನುಗಾರರಿಗಾಗಿ ತಮ್ಮ ಆಡಳಿತಾವಧಿಯಲ್ಲಿ ಕೈಗೊಂಡ ಕ್ರಮಗಳೇನು? ರೈತರಿಗೆ ನೆರವಾಗುವ ನಿರ್ಧಾರಗಳನ್ನು ರಾಜಕೀಯದ ದೃಷ್ಟಿಯಿಂದ ನೋಡುವ ಬದಲು, ಹೈನುಗಾರರ ಬದುಕಿನ ದೃಷ್ಟಿಯಿಂದ ನೋಡಲಿ. ಹೈನುಗಾರರ ಹಿತ ಕಾಯುವುದು ಮಾತಿನಲ್ಲಷ್ಟೇ ಅಲ್ಲ, ಕಾರ್ಯದಲ್ಲೂ ಸಾಬೀತಾಗಬೇಕು. ಅವರ ಬೆನ್ನಿಗೆ ನಿಲ್ಲುವುದು ನಮ್ಮ ಸರ್ಕಾರದ ಬದ್ಧತೆ.
The milk price revision is aimed at increasing dairy farmers’ income and strengthening their financial security.
Our Government is also clearing nearly ₹700 crore in pending incentives left unpaid during the previous BJP Government. We had earlier increased the incentive for dairy farmers from ₹2 to ₹5 per litre. Of the present ₹8 price increase, ₹7 will go directly to farmers, while ₹1 will support milk union operations.
Dairy farming sustains lakhs of rural families, and supporting their livelihoods remains our priority. From increasing incentives to clearing pending dues, our actions reflect that commitment.
Those criticising the revision should look at it from the perspective of dairy farmers’ livelihoods, not politics. Standing with farmers must be demonstrated through action. -
Dr. G Parameshwara
@DrParameshwara
ಇತರೆ ರಾಜ್ಯಗಳಲ್ಲಿ ಹೈನುಗಾರರಿಗೆ ಸಿಗುತ್ತಿರುವ ಮೊತ್ತಕ್ಕೆ ಹೋಲಿಸಿದರೆ, ಕರ್ನಾಟಕದಲ್ಲಿ ಹಾಲು ಉತ್ಪಾದಕರಿಗೆ ಹೆಚ್ಚಿನ ಬೆಲೆ ದೊರೆಯುತ್ತಿದೆ. ನಮ್ಮ ರಾಜ್ಯದಲ್ಲಿ ಹಾಲಿನ ದರ ಪರಿಷ್ಕರಿಸಿರುವುದು ಕೇವಲ ಬೆಲೆ ಹೆಚ್ಚಳಕ್ಕಾಗಲ್ಲ, ಬದಲಿಗೆ ರೈತರು, ಹೈನುಗಾರರು ಮತ್ತು ಗ್ರಾಹಕರು ಮೂವರ ಹಿತಾಸಕ್ತಿಯನ್ನೂ ಕಾಪಾಡುವ ಸಮತೋಲಿತ ನಿರ್ಧಾರವಾಗಿದೆ.
ನಮ್ಮ ರಾಜ್ಯದಲ್ಲಿ ನಂದಿನಿ ಹಾಲಿನ ದರ ₹54 ಇದ್ದು, ಹೈನುಗಾರರಿಗೆ ಪ್ರತಿ ಲೀಟರ್ಗೆ ₹48.20 ದೊರೆಯುತ್ತಿದೆ. ಆದರೆ ಗುಜರಾತ್ನಲ್ಲಿ ಹಾಲಿನ ದರ ₹57 ಇದ್ದರೂ, ಅಲ್ಲಿನ ರೈತರಿಗೆ ಪ್ರತಿ ಲೀಟರ್ಗೆ ದೊರೆಯುತ್ತಿರುವುದು ಕೇವಲ ₹39.13 ಮಾತ್ರ.
ಹಾಲಿನ ದರದ ಬಗ್ಗೆ ಪ್ರಶ್ನಿಸುವ ವಿರೋಧ ಪಕ್ಷಗಳು, ರೈತರಿಗೆ ಹೆಚ್ಚಿನ ಆದಾಯ ದೊರೆಯುವಂತೆ ಕೈಗೊಂಡಿರುವ ಕ್ರಮಗಳ ಬಗ್ಗೆಯೂ ಮಾತನಾಡಲಿ. ಹೈನುಗಾರರ ಬದುಕಿನ ಬಗ್ಗೆ ನಿಜವಾದ ಕಾಳಜಿ ಇದ್ದರೆ, ಅವರ ಹಿತಕ್ಕೆ ಪೂರಕವಾದ ನಿರ್ಧಾರಗಳಿಗೆ ಬೆಂಬಲ ನೀಡಲಿ.
Compared with several other States, dairy farmers in Karnataka receive a higher share from milk sales. The recent price revision is not just about increasing the retail price -- it is aimed at balancing the interests of farmers, dairy producers and consumers.
In Karnataka, Nandini milk is priced at ₹54 per litre, while dairy farmers receive ₹48.20. In Gujarat, milk is priced at ₹57, but farmers receive ₹39.13 per litre.
Those questioning the milk price revision should also acknowledge the steps being taken to improve farmers’ incomes. If there is genuine concern for dairy farmers, measures that strengthen their livelihoods deserve support. -
Dr. G Parameshwara
@DrParameshwara
ಹಾಲಿನ ದರ ಪರಿಷ್ಕರಣೆಯ ಬಳಿಕವೂ ಇತರೆ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಹಾಲಿನ ಬೆಲೆ ಕಡಿಮೆಯೇ ಇದೆ. ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿ ₹66, ಪಂಜಾಬ್ ಹಾಗೂ ಉತ್ತರ ಪ್ರದೇಶದಲ್ಲಿ ₹59, ಮಹಾರಾಷ್ಟ್ರ ಮತ್ತು ಮಧ್ಯಪ್ರದೇಶದಲ್ಲಿ ₹58 ಇದ್ದರೆ, ಕರ್ನಾಟಕದಲ್ಲಿ ₹54ಕ್ಕೆ ಹಾಲು ಲಭ್ಯವಿದೆ.
ಹಾಲಿನ ದರ ಪರಿಷ್ಕರಣೆಯ ನಮ್ಮ ಸರ್ಕಾರದ ಉದ್ದೇಶ ಗ್ರಾಹಕರಿಗೆ ಅನಗತ್ಯ ಹೊರೆ ನೀಡುವುದಲ್ಲ. ಹೈನುಗಾರಿಕೆಯನ್ನು ಅವಲಂಬಿಸಿರುವ ರೈತ ಕುಟುಂಬಗಳ ಆದಾಯಕ್ಕೆ ನೆರವಾಗುವುದು, ಹಾಲು ಉತ್ಪಾದಕರ ಹಿತಾಸಕ್ತಿ ಕಾಪಾಡುವುದು ಮತ್ತು ಈ ಕ್ಷೇತ್ರದ ಬೆಳವಣಿಗೆಗೆ ಬೆಂಬಲ ನೀಡುವುದಾಗಿದೆ.
ಗ್ರಾಹಕರ ಹಿತಾಸಕ್ತಿ ಕಾಪಾಡುತ್ತಲೇ ಹೈನುಗಾರರ ಆರ್ಥಿಕ ಹಿತವನ್ನು ರಕ್ಷಿಸುವುದು ನಮ್ಮ ಸರ್ಕಾರದ ಆದ್ಯತೆ. ವಿರೋಧ ಪಕ್ಷಗಳು ರಾಜಕೀಯ ಟೀಕೆಗಳನ್ನು ಬದಿಗಿಟ್ಟು, ಹೈನುಗಾರರ ಸಮಸ್ಯೆಗಳಿಗೆ ಸ್ಪಂದಿಸಲಿ. ಅವರ ಬದುಕಿಗೆ ನೆರವಾಗುವ ಸರ್ಕಾರದ ಕ್ರಮಗಳಿಗೆ ಕೈಜೋಡಿಸಲಿ.
Even after the milk price revision, Karnataka continues to have a lower milk price than several other States. Milk is priced at ₹66 in Andhra Pradesh and Telangana, ₹59 in Punjab and Uttar Pradesh, ₹58 in Maharashtra and Madhya Pradesh, compared to ₹54 in Karnataka.
The revision is not intended to place an unnecessary burden on consumers. It is aimed at supporting dairy farmers, improving their incomes and strengthening the dairy sector.
Our priority is to balance the interests of both consumers and dairy farmers. Rather than politicising the issue, the Opposition should recognise the challenges faced by milk producers and support measures that strengthen their livelihoods. -
Dr. G Parameshwara
@DrParameshwara
ಹಾಲಿನ ದರ ಪರಿಷ್ಕರಣೆಯ ಹಿಂದಿರುವುದು ಹೈನುಗಾರರ ಹಿತಕಾಪಾಡುವ ಮತ್ತು ಅವರ ಆದಾಯ ಹೆಚ್ಚಿಸುವ ಉದ್ದೇಶ. ಹೈನುಗಾರಿಕೆ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ರೈತ ಕುಟುಂಬಗಳಿಗೆ ಹೆಚ್ಚಿನ ಆದಾಯದ ಅವಕಾಶ ಕಲ್ಪಿಸಿ, ಅವರ ಬದುಕಿಗೆ ಆರ್ಥಿಕ ಭದ್ರತೆ ಒದಗಿಸುವುದು ನಮ್ಮ ಸರ್ಕಾರದ ಉದ್ದೇಶ.
ಹಾಲಿನ ದರ ಹೆಚ್ಚಳದ ₹8ರ ಪೈಕಿ ₹7 ನೇರವಾಗಿ ಹೈನುಗಾರರಿಗೆ ತಲುಪಲಿದೆ. ಇದುವರೆಗೆ ರೈತರಿಗೆ ಪ್ರತಿ ಲೀಟರ್ಗೆ ಸಿಗುತ್ತಿದ್ದ 36 ರೂಪಾಯಿ 20 ಪೈಸೆ ಖರೀದಿ ದರ ಈಗ 43 ರೂಪಾಯಿ 20 ಪೈಸೆಗೆ ಏರಿಕೆಯಾಗಿದೆ. ಸರ್ಕಾರದ ₹5 ಪ್ರೋತ್ಸಾಹಧನ ಸೇರಿ ಒಟ್ಟು 48 ರೂಪಾಯಿ 20 ಪೈಸೆ ದೊರೆಯಲಿದೆ. ಇದರಿಂದ ಹಾಲು ಉತ್ಪಾದಕರಿಗೆ ಹೆಚ್ಚಿನ ಆದಾಯ ದೊರೆಯುವ ಮೂಲಕ ಹೈನುಗಾರಿಕೆ ಮತ್ತಷ್ಟು ಲಾಭದಾಯಕವಾಗಲಿದೆ.
ಈ ನಿರ್ಧಾರದ ಹಿಂದಿರುವ ರೈತಪರ ಉದ್ದೇಶವನ್ನು ಅರ್ಥಮಾಡಿಕೊಳ್ಳದೆ ರಾಜಕೀಯ ಟೀಕೆ ಮಾಡುವ ವಿರೋಧ ಪಕ್ಷಗಳು, ಹೈನುಗಾರರ ಹಿತದ ಪರವಾಗಿ ನಿಲ್ಲಲಿ. ಹೈನುಗಾರರ ಬದುಕು ಹಸನಾಗಬೇಕು, ಅವರ ಕುಟುಂಬಗಳಲ್ಲಿ ಆರ್ಥಿಕ ನೆಮ್ಮದಿ ನೆಲೆಸಬೇಕು ಎಂಬುದು ನಮ್ಮ ಆಶಯ.
The milk price revision is aimed at protecting dairy farmers and improving their income, giving farming families greater financial security.
Of the ₹8 increase, ₹7 will go directly to dairy farmers. The procurement price has risen from ₹36.20 to ₹43.20 per litre, and with the Government’s ₹5 incentive, farmers will receive a total of ₹48.20 per litre.
Rather than politicising the decision, the focus should be on the welfare of dairy farmers. Our aim is to ensure better returns, stronger livelihoods and greater financial security for their families. -
Dr. G Parameshwara
@DrParameshwara
ಹಾಲು ಉತ್ಪಾದನೆಗೆ ತಗಲುವ ವೆಚ್ಚ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಮೇವು, ಪಶು ಆಹಾರ, ವೈದ್ಯಕೀಯ ಸೇವೆ ಮತ್ತು ಸಾಗಣೆ ವೆಚ್ಚದ ಏರಿಕೆಯ ಜೊತೆಗೆ ಬರದಿಂದ ಹಸಿರು ಮೇವಿನ ಕೊರತೆಯೂ ಹೈನುಗಾರರನ್ನು ಸಂಕಷ್ಟಕ್ಕೆ ದೂಡಿದೆ.
ಇಂತಹ ಸಂದರ್ಭದಲ್ಲಿ ಹೈನುಗಾರರ ನೆರವಿಗೆ ನಿಲ್ಲುವುದು ಸರ್ಕಾರದ ಕರ್ತವ್ಯ. ಹಾಲಿನ ದರ ಪರಿಷ್ಕರಣೆಯ ಮೂಲಕ ಹೆಚ್ಚುತ್ತಿರುವ ವೆಚ್ಚದ ನಡುವೆ ಹೈನುಗಾರರಿಗೆ ಸೂಕ್ತ ಬೆಲೆ ದೊರೆಯಲು ನೆರವಾಗುವುದು ನಮ್ಮ ಉದ್ದೇಶ.
ಈ ಎಲ್ಲ ಸವಾಲುಗಳ ನಡುವೆ ಹೈನುಗಾರಿಕೆ ನಡೆಸುತ್ತಿರುವ ರೈತರಿಗೆ ತಕ್ಕ ಪ್ರತಿಫಲ ದೊರೆಯಬೇಕು. ಹೆಚ್ಚುತ್ತಿರುವ ಉತ್ಪಾದನಾ ವೆಚ್ಚದ ಹೊರೆಯನ್ನು ತಗ್ಗಿಸಿ, ಹೈನುಗಾರರ ಆದಾಯಕ್ಕೆ ನೆರವಾಗುವ ಉದ್ದೇಶದಿಂದಲೇ ಹಾಲಿನ ದರ ಪರಿಷ್ಕರಣೆ ಮಾಡಲಾಗಿದೆ.
ರಾಜಕೀಯ ಟೀಕೆಗಳಿಗಿಂತ ರೈತರ ಬದುಕು ಮುಖ್ಯ. ಹೈನುಗಾರರ ಶ್ರಮಕ್ಕೆ ನ್ಯಾಯಯುತ ಮೌಲ್ಯ ದೊರೆಯಬೇಕು, ಅವರ ಕುಟುಂಬಗಳ ಆರ್ಥಿಕ ಭದ್ರತೆ ಬಲಗೊಳ್ಳಬೇಕು ಎಂಬುದು ನಮ್ಮ ಸರ್ಕಾರದ ಬದ್ಧತೆ.
The cost of milk production has risen sharply with higher expenses for fodder, cattle feed, veterinary care and transport, while drought has worsened the shortage of green fodder.
At a time like this, it is the Government’s responsibility to stand with dairy farmers. The milk price revision is aimed at ensuring they receive a fairer return and some relief from rising production costs.
For us, farmers’ livelihoods matter more than political criticism. Our commitment is to ensure that dairy farmers are fairly rewarded for their hard work and that their families have greater financial security. -
Dr. G Parameshwara
@DrParameshwara
The milk price revision is not about placing an unnecessary burden on consumers. It is about standing with our dairy farmers, whose costs have risen sharply due to higher prices of fodder, cattle feed, veterinary care, transport and the added impact of drought.
Of the ₹8 increase, ₹7 will go directly to dairy farmers. The procurement price has risen from ₹36.20 to ₹43.20 per litre, and with the State Government’s ₹5 incentive, farmers will now receive ₹48.20 per litre. The remaining ₹1 will support milk union operations.
At the same time, we have kept consumer interests in mind. Even after the revision, Nandini toned milk is priced at ₹54 per litre, lower than the prices of several major milk brands in other States.
Those criticising this decision should also remember that nearly ₹700 crore in milk incentives was left pending during the previous BJP Government. Our Government took steps to clear those dues and had earlier increased the incentive for dairy farmers from ₹2 to ₹5 per litre.
If the BJP is genuinely concerned about farmers, it should also raise with the Centre the issues of fertiliser supply, rising agricultural input costs and higher petrol and diesel prices, all of which directly affect farmers and dairy producers.
Lakhs of families depend on dairy farming for their livelihood. Ensuring that they receive a fair return, while keeping quality milk affordable for consumers, remains our priority.
We have built KMF not merely as a profit-making enterprise, but as a bridge between the progress of dairy farmers and the supply of quality milk to consumers. That commitment will continue. -
Dr. G Parameshwara
@DrParameshwara
ನಾಡಿನ ಹೈನುಗಾರರು ಇಂದು ಮೇವು, ಪಶು ಆಹಾರ, ವೈದ್ಯಕೀಯ ಚಿಕಿತ್ಸೆ ಹಾಗೂ ನಿರ್ವಹಣಾ ವೆಚ್ಚದ ಹೆಚ್ಚಳದಿಂದ ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ಇದರ ಜೊತೆಗೆ ಬರ ಪರಿಸ್ಥಿತಿಯೂ ಅವರ ಬದುಕನ್ನು ಮತ್ತಷ್ಟು ಸಂಕಷ್ಟಕ್ಕೆ ತಳ್ಳಿದೆ. ಇಂತಹ ಸಂದರ್ಭದಲ್ಲಿ ಹೈನುಗಾರರ ಕಷ್ಟಕ್ಕೆ ಸ್ಪಂದಿಸಿ, ಅವರಿಗೆ ಹೆಚ್ಚಿನ ಆದಾಯ ದೊರೆಯುವಂತೆ ಮಾಡುವ ಉದ್ದೇಶದಿಂದ ನಮ್ಮ ಸರ್ಕಾರ ಹಾಲಿನ ದರ ಪರಿಷ್ಕರಿಸಿದೆ. ಈ ವಾಸ್ತವವನ್ನು ಅರ್ಥಮಾಡಿಕೊಳ್ಳದೆ ಕೇವಲ ದರ ಏರಿಕೆಯನ್ನೇ ಮುಂದಿಟ್ಟುಕೊಂಡು ಬಿಜೆಪಿ ನಾಯಕರು ಟೀಕೆ ಮಾಡುತ್ತಿರುವುದು ಸರಿಯಲ್ಲ.
ಕೃಷಿಯ ಜೊತೆಗೆ ಹೈನುಗಾರಿಕೆಯನ್ನು ನಂಬಿಕೊಂಡು ನಮ್ಮ ನಾಡಿನ ಲಕ್ಷಾಂತರ ರೈತ ಕುಟುಂಬಗಳು ಬದುಕುತ್ತಿವೆ. ಆದರೆ ಮೇವು, ಪಶು ಆಹಾರ, ಪಶುಗಳ ವೈದ್ಯಕೀಯ ಚಿಕಿತ್ಸೆ ಮತ್ತು ನಿರ್ವಹಣಾ ವೆಚ್ಚ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಇದರ ಜೊತೆಗೆ ಬರದಿಂದ ಹಸಿರು ಮೇವು ಮತ್ತು ನೀರಿನ ಕೊರತೆ ಎದುರಾಗಿದೆ. ಪೆಟ್ರೋಲ್, ಡೀಸೆಲ್ ಹಾಗೂ ಸಾಗಣೆಯ ಖರ್ಚು ಹೆಚ್ಚಿರುವುದರಿಂದ ಹಾಲು ಮತ್ತು ಹಾಲಿನ ಉತ್ಪನ್ನಗಳ ಸಾಗಣೆಯೂ ದುಬಾರಿಯಾಗಿದೆ. ಇಷ್ಟೆಲ್ಲ ಖರ್ಚು ಮಾಡಿ ಹಾಲು ಉತ್ಪಾದಿಸುವ ರೈತರಿಗೆ ಅದಕ್ಕೆ ತಕ್ಕ ಆದಾಯ ಸಿಗದಿದ್ದರೆ ಹೈನುಗಾರಿಕೆಯನ್ನು ಮುಂದುವರಿಸುವುದಾದರೂ ಹೇಗೆ?
ಹೆಚ್ಚಳವಾದ ₹8ರಲ್ಲಿ ₹7 ನೇರವಾಗಿ ರೈತರಿಗೆ :
ಹಾಲು ಉತ್ಪಾದಕರು ಹಾಗೂ ಹಾಲು ಒಕ್ಕೂಟಗಳು ದರ ಪರಿಷ್ಕರಣೆಗೆ ಬೇಡಿಕೆ ಇಟ್ಟಿದ್ದವು. ಗ್ರಾಹಕರ ಮೇಲಿನ ಹೆಚ್ಚುವರಿ ಖರ್ಚನ್ನೂ ಪರಿಗಣಿಸಿ ರಾಜ್ಯ ಸರ್ಕಾರ ₹8 ಹೆಚ್ಚಳಕ್ಕೆ ನಿರ್ಧರಿಸಿದೆ. ಇದರಲ್ಲಿ ₹7 ನೇರವಾಗಿ ರೈತರಿಗೆ ದೊರೆಯಲಿದ್ದು, ಉಳಿದ ₹1 ಹಾಲು ಒಕ್ಕೂಟಗಳ ನಿರ್ವಹಣೆಗೆ ಬಳಕೆಯಾಗಲಿದೆ.
ಇದುವರೆಗೆ ರೈತರಿಗೆ ಪ್ರತಿ ಲೀಟರ್ಗೆ ಸಿಗುತ್ತಿದ್ದ 36 ರೂಪಾಯಿ 20 ಪೈಸೆ ಖರೀದಿ ದರ ಈಗ 43 ರೂಪಾಯಿ 20 ಪೈಸೆಗೆ ಏರಿಕೆಯಾಗಿದೆ. ಸರ್ಕಾರದ ₹5 ಪ್ರೋತ್ಸಾಹಧನ ಸೇರಿ ಒಟ್ಟು 48 ರೂಪಾಯಿ 20 ಪೈಸೆ ದೊರೆಯಲಿದೆ. ಹಾಲಿನ ದರ ಏರಿಕೆಯ ಬಗ್ಗೆ ಚರ್ಚಿಸುವಾಗ ಈ ಹಣ ಯಾರಿಗೆ ತಲುಪುತ್ತಿದೆ ಎಂಬುದನ್ನು ಗಮನಿಸುವುದು ಮುಖ್ಯ.
ಹಾಲು ಪ್ರತಿಯೊಂದು ಮನೆಯ ಅಗತ್ಯ ವಸ್ತು. ಆದ್ದರಿಂದ ಗ್ರಾಹಕರಿಗೆ ಆಗುವ ಹೆಚ್ಚುವರಿ ಖರ್ಚಿನ ಬಗ್ಗೆಯೂ ನಮಗೆ ಕಾಳಜಿಯಿದೆ. ಅದೇ ಸಮಯದಲ್ಲಿ ಹಾಲು ಉತ್ಪಾದಿಸುವ ರೈತರಿಗೆ ನ್ಯಾಯಯುತ ಆದಾಯ ಸಿಗುವಂತೆ ನೋಡಿಕೊಳ್ಳಬೇಕಿದೆ. ಈ ಎರಡೂ ವಿಚಾರಗಳನ್ನು ಗಮನದಲ್ಲಿಟ್ಟುಕೊಂಡೇ ಸರ್ಕಾರ ನಿರ್ಧಾರ ಕೈಗೊಂಡಿದೆ. ದರ ಹೆಚ್ಚಳದ ನಂತರವೂ ನಂದಿನಿ ಟೋನ್ಡ್ ಹಾಲಿನ ಬೆಲೆ ಪ್ರತಿ ಲೀಟರ್ಗೆ ₹54 ಆಗಿದ್ದು, ಹಲವು ರಾಜ್ಯಗಳ ಕೆಲವು ಪ್ರಮುಖ ಹಾಲಿನ ಬ್ರ್ಯಾಂಡ್ಗಳ ದರಕ್ಕಿಂತ ಕಡಿಮೆಯಿದೆ.
ಕರ್ನಾಟಕದಲ್ಲಿ ನಂದಿನಿ ಹಾಲಿನ ಬೆಲೆ ಪ್ರತಿ ಲೀಟರ್ಗೆ ₹54 ಇದ್ದರೆ, ಆಂಧ್ರಪ್ರದೇಶದಲ್ಲಿ ₹66, ತೆಲಂಗಾಣದಲ್ಲಿ ₹66, ಕೇರಳದಲ್ಲಿ ₹56, ಗುಜರಾತ್ನಲ್ಲಿ ₹57, ಮಧ್ಯಪ್ರದೇಶದಲ್ಲಿ ₹58, ಮಹಾರಾಷ್ಟ್ರದಲ್ಲಿ ₹58, ಪಂಜಾಬ್ನಲ್ಲಿ ₹59 ಹಾಗೂ ಉತ್ತರಪ್ರದೇಶದಲ್ಲಿ ₹59 ಇದೆ. ಈ ರಾಜ್ಯಗಳ ಪ್ರಮುಖ ಹಾಲಿನ ಬ್ರ್ಯಾಂಡ್ಗಳ ದರಕ್ಕೆ ಹೋಲಿಸಿದರೆ ಕರ್ನಾಟಕದಲ್ಲಿ ನಂದಿನಿ ಹಾಲು ಕಡಿಮೆ ಬೆಲೆಗೆ ದೊರೆಯುತ್ತಿದೆ. ಗ್ರಾಹಕರ ಹಿತವನ್ನು ಗಮನದಲ್ಲಿಟ್ಟುಕೊಂಡೇ ಹೈನುಗಾರರಿಗೆ ಹೆಚ್ಚಿನ ಆದಾಯ ಸಿಗುವಂತೆ ದರ ಪರಿಷ್ಕರಿಸಲಾಗಿದೆ.
ಪ್ರೋತ್ಸಾಹಧನ ಬಾಕಿ ಕುರಿತು ಬಿಜೆಪಿ ತನ್ನ ಆಡಳಿತದ ಲೆಕ್ಕವನ್ನೂ ನೀಡಲಿ :
ಹೈನುಗಾರರ ಹಿತದ ಬಗ್ಗೆ ಬಿಜೆಪಿ ನಾಯಕರು ಎತ್ತಿರುವ ಪ್ರಶ್ನೆಗಳ ಜೊತೆಗೆ, ತಮ್ಮ ಆಡಳಿತದ ಅವಧಿಯಲ್ಲಿ ಬಾಕಿ ಉಳಿದಿದ್ದ ಹಾಲಿನ ಪ್ರೋತ್ಸಾಹಧನದ ವಿಚಾರಕ್ಕೂ ಉತ್ತರ ನೀಡಬೇಕು. ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಸುಮಾರು ₹700 ಕೋಟಿ ಪ್ರೋತ್ಸಾಹಧನ ಬಾಕಿ ಉಳಿದಿತ್ತು. ರೈತರಿಗೆ ಸಕಾಲದಲ್ಲಿ ಸಿಗಬೇಕಾದ ಹಣ ಬಾಕಿ ಉಳಿದಾಗ ಅವರ ಜೀವನಕ್ಕೆ ಆಗುವ ತೊಂದರೆಯ ಅರಿವು ಅವರಿಗಿತ್ತೆ?
ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಬಾಕಿ ಪ್ರೋತ್ಸಾಹಧನ ಪಾವತಿಗೆ ಕ್ರಮ ಕೈಗೊಂಡಿದೆ. ಪ್ರೋತ್ಸಾಹಧನ ಪಾವತಿಯನ್ನು ಮುಂದುವರಿಸುವುದರ ಜೊತೆಗೆ ಈಗ ಹಾಲಿನ ಖರೀದಿ ದರವನ್ನೂ ಹೆಚ್ಚಿಸಲಾಗಿದೆ.
ಹಾಲು ಉತ್ಪಾದಕರಿಗೆ ಪ್ರತಿ ಲೀಟರ್ಗೆ ನೀಡುತ್ತಿದ್ದ ₹2 ಪ್ರೋತ್ಸಾಹಧನವನ್ನು ನಮ್ಮ ಸರ್ಕಾರ ಹಂತ ಹಂತವಾಗಿ ₹5ಕ್ಕೆ ಹೆಚ್ಚಿಸಿತ್ತು. ಆ ಪ್ರೋತ್ಸಾಹಧನವನ್ನು ಮುಂದುವರಿಸಲಾಗಿದೆ. ಈಗ ಖರೀದಿ ದರ ಹೆಚ್ಚಿಸಿರುವುದರಿಂದ ರೈತರಿಗೆ ಪ್ರತಿ ಲೀಟರ್ ಹಾಲಿಗೆ ಹೆಚ್ಚಿನ ಹಣ ದೊರೆಯಲಿದೆ. ಹೈನುಗಾರರಿಗೆ ಸಕಾಲದಲ್ಲಿ ಹಣ ಪಾವತಿಸುವುದು ಹಾಗೂ ಅವರ ಉದ್ಯಮಕ್ಕೆ ಸರಿಯಾದ ಆದಾಯ ಸಿಗುವಂತೆ ನೋಡಿಕೊಳ್ಳುವುದು ಸರ್ಕಾರದ ಜವಾಬ್ದಾರಿಗಳಾಗಿವೆ.
ಹಾಲಿನ ದರ ಏರಿಕೆಯನ್ನು ಮುಂದಿಟ್ಟುಕೊಂಡು ರಾಜ್ಯ ಸರ್ಕಾರವನ್ನು ಟೀಕಿಸುತ್ತಿರುವ ಬಿಜೆಪಿ ನಾಯಕರು, ರಸಗೊಬ್ಬರ ಪೂರೈಕೆಯಲ್ಲಿ ರೈತರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆಯೂ ಗಮನ ಹರಿಸಬೇಕು. ರಾಜ್ಯಕ್ಕೆ ಅಗತ್ಯವಿರುವ ರಸಗೊಬ್ಬರವನ್ನು ಸಕಾಲದಲ್ಲಿ ಪೂರೈಸುವಂತೆ ಕೇಂದ್ರ ಸರ್ಕಾರಕ್ಕೆ ಹಲವು ಬಾರಿ ಮನವಿ ಮಾಡಿದ್ದೇವೆ. ಈ ವಿಚಾರದಲ್ಲಿ ರಾಜ್ಯ ಸರ್ಕಾರ ವ್ಯಕ್ತಪಡಿಸಿರುವ ಆತಂಕಗಳಿಗೆ ಕೇಂದ್ರದಿಂದ ಸ್ಪಷ್ಟ ಪರಿಹಾರ ದೊರೆಯಬೇಕಿದೆ. ಕೇಂದ್ರದಲ್ಲಿ ತಮ್ಮದೇ ಪಕ್ಷದ ಸರ್ಕಾರವಿರುವುದರಿಂದ ರಸಗೊಬ್ಬರ ಪೂರೈಕೆಯ ಸಮಸ್ಯೆ ಬಗೆಹರಿಸಲು ಬಿಜೆಪಿ ನಾಯಕರು ಯಾವ ಕ್ರಮ ಕೈಗೊಂಡಿದ್ದಾರೆ ಎಂಬುದನ್ನೂ ಜನರಿಗೆ ತಿಳಿಸಬೇಕು.
ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆಯೂ ಹೈನುಗಾರರ ಮೇಲೆ ಪರಿಣಾಮ ಬೀರುತ್ತಿವೆ. ಹಾಲು ಮತ್ತು ಅದರ ಉತ್ಪನ್ನಗಳ ಸಾಗಾಟ ವೆಚ್ಚದಲ್ಲಿ ಗಣನೀಯ ಹೆಚ್ಚಳವಾಗಿದೆ. ಇದರ ಜೊತೆಗೆ ಪಶು ಆಹಾರದ ಬೆಲೆ, ಪಶುಗಳ ವೈದ್ಯಕೀಯ ಚಿಕಿತ್ಸೆ ಮತ್ತು ನಿರ್ವಹಣಾ ವೆಚ್ಚವೂ ಗಣನೀಯವಾಗಿ ಹೆಚ್ಚಾಗಿದೆ. ಜಾನುವಾರುಗಳನ್ನು ಸಾಕಿ ಸಲಹುವುದೇ ಹೈನುಗಾರರಿಗೆ ದುಬಾರಿಯಾಗಿದ್ದು, ಇಂತಹ ಪರಿಸ್ಥಿತಿಯಲ್ಲಿ ಹೈನುಗಾರಿಕೆಯನ್ನು ಮುಂದುವರಿಸುವುದೇ ರೈತರಿಗೆ ಸವಾಲಾಗಿ ಪರಿಣಮಿಸಿದೆ.
ಹಾಲಿನ ದರ ಏರಿಕೆಯನ್ನು ಪ್ರಶ್ನಿಸುವ ಬಿಜೆಪಿ ನಾಯಕರು, ರೈತರ ಉತ್ಪಾದನಾ ವೆಚ್ಚ ಕಡಿಮೆ ಮಾಡಲು ಕೇಂದ್ರ ಸರ್ಕಾರದ ಮುಂದೆ ಯಾವ ಬೇಡಿಕೆಗಳನ್ನು ಇಟ್ಟಿದ್ದಾರೆ ಎಂಬುದನ್ನೂ ಸ್ಪಷ್ಟಪಡಿಸಲಿ.
ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಸರ್ಕಾರವಿರುವುದರಿಂದ ಕರ್ನಾಟಕದ ಬಿಜೆಪಿ ನಾಯಕರು ಗೊಬ್ಬರ ಪೂರೈಕೆ, ಕೃಷಿ ವೆಚ್ಚ ಮತ್ತು ಪೆಟ್ರೋಲ್ - ಡೀಸೆಲ್ ಬೆಲೆ ಏರಿಕೆ ವಿಚಾರದಲ್ಲೂ ಕೇಂದ್ರದ ಗಮನ ಸೆಳೆಯಬೇಕು. ರಾಜ್ಯ ಸರ್ಕಾರದ ನಿರ್ಧಾರಗಳ ಕುರಿತು ಪ್ರಶ್ನೆ ಎತ್ತುವಂತೆಯೇ ಕೇಂದ್ರದ ವ್ಯಾಪ್ತಿಯಲ್ಲಿರುವ ರೈತರ ಸಮಸ್ಯೆಗಳ ಪರಿಹಾರಕ್ಕೂ ಪ್ರಯತ್ನಿಸಬೇಕು.
ವಿರೋಧ ಪಕ್ಷದ ನಾಯಕರಾದ @RAshokaBJP ಅವರು ಹಾಲಿನ ದರ ಹೆಚ್ಚಳವನ್ನು ಜನರ ಮೇಲಿನ ಹೊರೆ ಎಂದು ಟೀಕಿಸಿದ್ದಾರೆ. ಈ ವಿಚಾರದಲ್ಲಿ ಸರ್ಕಾರದ ನಿರ್ಧಾರ ಹಾಗೂ ಅದರ ಪರಿಣಾಮಗಳ ಕುರಿತು ಚರ್ಚೆ ನಡೆಯುವುದರಲ್ಲಿ ತಪ್ಪಿಲ್ಲ. ಆದರೆ ರೈತರಿಗೆ ಸಿಗುವ ಖರೀದಿ ದರ, ಈಗಾಗಲೇ ನೀಡುತ್ತಿರುವ ಪ್ರೋತ್ಸಾಹಧನ ಹಾಗೂ ಹೈನುಗಾರರ ಉತ್ಪಾದನಾ ವೆಚ್ಚ ಇವೆಲ್ಲವನ್ನೂ ಗಮನಿಸಿ ಮಾತನಾಡಬೇಕು.
ಬರದ ಹೊಡೆತಕ್ಕೆ ಬೆಳೆ ಕಳೆದುಕೊಂಡು ನಾಡಿನ ರೈತರು ಸಂಕಷ್ಟದಲ್ಲಿದ್ದಾರೆ. ಕೃಷಿಯ ಜೊತೆಗೆ ಹೈನುಗಾರಿಕೆಯನ್ನು ನಂಬಿ ಬದುಕುತ್ತಿರುವ ಕುಟುಂಬಗಳೂ ತೊಂದರೆ ಅನುಭವಿಸುತ್ತಿವೆ. ಅಮ್ಮನ ಋಣ, ಅನ್ನದ ಋಣ ತೀರಿಸಲಾಗದು ಎನ್ನುತ್ತಾರೆ. ನಮಗೆ ಅನ್ನ ನೀಡುವ ರೈತರು, ಪ್ರತಿದಿನ ನಮ್ಮ ಮನೆಗಳಿಗೆ ಹಾಲು ತಲುಪಿಸುವ ಹೈನುಗಾರರು ಕಷ್ಟದಲ್ಲಿರುವಾಗ ಅವರ ಕೈಹಿಡಿದು, ಧೈರ್ಯ ತುಂಬಿ, ಬದುಕಿಗೆ ಆಸರೆಯಾಗುವುದು ನಮ್ಮೆಲ್ಲರ ಕರ್ತವ್ಯವಾಗಿದೆ.
ಹೈನುಗಾರಿಕೆಯನ್ನು ನಂಬಿಕೊಂಡಿರುವ ಕುಟುಂಬಗಳು ನೆಮ್ಮದಿಯಿಂದ ಬದುಕಬೇಕು. ಅವರು ಕಷ್ಟಪಟ್ಟು ಮಾಡುವ ಕೆಲಸಕ್ಕೆ ತಕ್ಕ ಆದಾಯ ದೊರೆಯಬೇಕು. ಹಾಲಿನ ದರ ಪರಿಷ್ಕರಣೆಯ ಹಿಂದೆ ಇರುವ ಉದ್ದೇಶವೂ ಇದೇ ಆಗಿದೆ.
ಇಂದು ಇಡೀ ದೇಶದಲ್ಲಿ ಹಾಲು ಉತ್ಪಾದಕರಿಗೆ ಅತಿ ಹೆಚ್ಚಿನ ದರ ನೀಡಿ ಖರೀದಿ ಮಾಡುತ್ತಿರುವ ರಾಜ್ಯ ನಮ್ಮದು. ಇಷ್ಟು ಮಾತ್ರವಲ್ಲ, ಗ್ರಾಹಕರಿಗೆ ಅತಿ ಕಡಿಮೆ ಬೆಲೆಗೆ ಹಾಲು ಮಾರಾಟ ಮಾಡುತ್ತಿರುವ ರಾಜ್ಯವೆಂಬ ಹೆಗ್ಗಳಿಕೆ ಕೂಡ ನಮ್ಮದೇ. ಕೆಎಂಎಫ್ ಅನ್ನು ನಾವು ಒಂದು ಲಾಭದಾಯಕ ಉದ್ಯಮವಾಗಿ ನೋಡದೆ ಹೈನುಗಾರರ ಪ್ರಗತಿ ಮತ್ತು ಗ್ರಾಹಕರಿಗೆ ಗುಣಮಟ್ಟದ ಹಾಲನ್ನು ಖಾತ್ರಿಪಡಿಸುವ ಒಂದು ಸೇತುವೆಯಾಗಿ ಕಟ್ಟಿಬೆಳೆಸಿದ್ದೇವೆ. ಇದು ನಮ್ಮ ಬದ್ಧತೆಯಾಗಿದೆ. -
Dr. G Parameshwara
@DrParameshwara
I strongly condemn Leader of the Opposition @RAshokaBJP remarks describing Karnataka's efforts to secure drought relief from the Union Government as begging. Such statements are not merely an insult to our Government; they undermine the dignity of lakhs of farmers whose livelihoods have been devastated by one of the gravest droughts in Karnataka's history.
Our farmers are not beggars. They sustain the nation and have every right to demand its support. Without farmers, civilization itself collapses.
The National Disaster Response Fund (NDRF) and State Disaster Response Fund (SDRF) are established mechanisms under the Disaster Management Act, 2005, supported by successive Finance Commission recommendations. Their purpose is to assist States in responding to natural calamities.
If seeking assistance under these mechanisms amounts to begging, Mr. Ashoka must explain why Parliament established them in the first place. Are national institutions meant to serve citizens, or only the political interests of those governing Delhi?
Karnataka contributes to India's prosperity. Where is the Union's responsibility?
Karnataka is among the country's largest economic and tax contributors. Our industries, entrepreneurs, workers and farmers contribute enormously to India's development.
Karnataka contributes approximately ₹5 lakh crore annually to the Union Government through various taxes, cesses and surcharges. Yet, Karnataka receives merely 13 paise in tax devolution and grants for every rupee contributed. This raises a fundamental question of fiscal justice, when Karnataka contributes so substantially to the nation's prosperity, why should its farmers have to struggle for their rightful assistance during a calamity?
Under the Fourteenth Finance Commission, Karnataka's share in the States' divisible pool of central taxes was 4.713%. It fell to 3.647% under the Fifteenth Finance Commission, a reduction of nearly 23%. Although the Sixteenth Finance Commission has increased our share to 4.131%, it remains below the Fourteenth Finance Commission's allocation.
Karnataka has suffered cumulative financial losses exceeding ₹2.5 lakh crore due to successive fiscal injustices by the Union Government. After depriving Karnataka of its rightful financial resources, BJP leaders now have the audacity to ridicule the State for seeking drought relief for its farmers. Is this their idea of cooperative federalism? The Union cannot repeatedly deny Karnataka its legitimate fiscal share and then portray assistance during a calamity as charity.
Karnataka has already paid a heavy price for an inequitable fiscal framework. Must our farmers now pay another price because BJP leaders are unwilling to seek assistance from their own Union Government?
We believe in supporting less-developed States. That is the spirit of India. But national solidarity cannot be a one-way arrangement.
The Union cannot collect taxes from Karnataka as a national responsibility and then treat assistance during a national calamity as an act of charity. If Karnataka's prosperity belongs to India, Karnataka's distress must concern India equally.
India is a Union of States. The Union Government is not the master, and elected State Governments are not subordinate servants expected to plead for assistance. We Are Not Asking for Money from the BJP's Party Fund.
Our Government has acted. What has the BJP done?
Our Government has announced ₹1,250 crore as the first instalment of interim drought relief, providing for assistance of ₹2,500 per eligible farmer while pursuing additional Union assistance.
We have never claimed that ₹2,500 can compensate for an entire harvest. It cannot. That is precisely why we are seeking the full assistance admissible under the national disaster response framework. A responsible Government must provide immediate support while mobilising every available resource for recovery.
The devastation is unprecedented. Across 226 taluks, crops spread over 57.93 lakh hectares have suffered damage, with estimated economic losses of ₹62,481.88 crore.
Following the revised SDRF/NDRF norms notified on 26 October 2026, Karnataka's crop-input subsidy requirement has increased by ₹1,814.85 crore to ₹7,943.55 crore. Our cumulative requirement now stands at ₹22,400.58 crore.
These are not politically manufactured figures. They are assessments prepared through prescribed procedures. We are seeking assistance for farmers, drinking water, livestock protection and the survival of vulnerable rural households.
Mr. Ashoka must explain his hypocrisy
On 7 October 2026, Mr. Ashoka himself approached the Central drought assessment team and requested greater assistance for Karnataka.
When Mr. Ashoka seeks additional assistance, is it advocacy? When the elected State Government makes the same demand through official channels, does it suddenly become begging?
During the 2023–24 drought, Karnataka was compelled to approach the Supreme Court after seeking approximately ₹18,174 crore in relief. The Union subsequently released ₹3,454.22 crore, far below the amount requested.
Instead of questioning why Karnataka has repeatedly struggled to secure timely assistance, BJP leaders are questioning why we are asking for it. This is not political accountability. It is an abdication of responsibility towards Karnataka's farmers.
Our ambition must go beyond relief
I also believe India's disaster assistance framework requires fundamental reform. After five years, the revision in crop-input subsidy norms remains modest compared with rising cultivation costs.
A Viksit Bharat cannot be built upon an agricultural economy where one failed monsoon can destroy years of hard work, wipe out a family's savings and push another generation into debt.
We need realistic crop-loss assistance, climate-resilient agriculture, assured water security and a disaster response framework capable of protecting livelihoods, not merely providing temporary relief.
I appeal to Karnataka's BJP MPs, MLAs and leaders to criticise our Government, question our expenditure and demand accountability. But when Karnataka's farmers need assistance, stand with them.
If you believe ₹2,500 is inadequate, join us in demanding more, help us secure timely relief, and demonstrate that commitment before the Union Government.
We will continue to demand every legitimate rupee, pursue every institutional avenue and fight for a future where no farming family is abandoned during a calamity. Even If the Monsoon Abandons Our Farmers, Our Government Will Not.
Karnataka is not begging. Karnataka is asserting its rights. This is not a question of Congress versus BJP. It is a question of whether we have the courage and commitment to place the farmer above politics. Karnataka and Congress have made their choice. It is time for the BJP to make theirs.
R. Ashoka
@RAshokaBJP
ಪರಿಹಾರ ನೀಡಲು ಗತಿ ಇಲ್ಲ, ಭಿಕ್ಷೆ ಬೇಡಲು ನಾಚಿಕೆ ಇಲ್ಲ!
ಮುಖ್ಯಮಂತ್ರಿ @DKShivakumar ಅವರ ಸರ್ಕಾರ, 2,500 ರೂ. ಚಿಲ್ಲರೆ ಕಾಸಿನ ಪರಿಹಾರವನ್ನು ಘೋಷಣೆ ಮಾಡಿದರೂ, ಅದು ರೈತರ ಕೈ ಸೇರಿಲ್ಲ. ಗ್ಯಾರಂಟಿ ಸಮಿತಿ ರಚಿಸಿಕೊಂಡು, ಕಮಿಶನ್ ಹೊಡೆದುಕೊಂಡು ಬದುಕುವ ಕಾಂಗ್ರೆಸ್ನ ವಸೂಲಿ ವೀರ ನಾಯಕರಿಗೆ ರೈತರ ಕಷ್ಟ ಆಲಿಸಿ ಹೆಚ್ಚಿನ ಪರಿಹಾರ ನೀಡಲು ಮಾತ್ರ ಹಣವಿಲ್ಲ. ಇದರ ನಡುವೆ ಕಂದಾಯ ಸಚಿವ @DrParameshwara ಅವರು ಮಾತ್ರ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದು ಭಿಕ್ಷೆ ಬೇಡುತ್ತಿದ್ದಾರೆ.
ಮುಖ್ಯಮಂತ್ರಿಗಳೇ, 226 ತಾಲೂಕುಗಳಲ್ಲಿ ಬರಗಾಲವಿದ್ದು, 57.93 ಲಕ್ಷ ಹೆಕ್ಟೇರ್ ಬೆಳೆ ಹಾನಿಯಾಗಿದೆ. 62,481.88 ಕೋಟಿ ರೂ. ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ. ರೈತರು ಬರ ಪರಿಹಾರಕ್ಕಾಗಿ ಎದುರು ನೋಡುತ್ತಿದ್ದಾರೆ. ಇಂತಹ ಸಮಯದಲ್ಲಿ ಅಧಿಕ ಪರಿಹಾರವನ್ನು ವಿತರಿಸಬೇಕೆ ಹೊರತು ಕೇಂದ್ರ ಸರ್ಕಾರವನ್ನು ಕಾಯುತ್ತಾ ಕೂರಬಾರದು. ಕೇಂದ್ರ ಸರ್ಕಾರ ಎಲ್ಲ ರಾಜ್ಯಗಳಲ್ಲಿ ಅಧ್ಯಯನ ನಡೆಸಿ ಪರಿಹಾರ ವಿತರಣೆ ಮಾಡುವುದು ಕಾಲಕಾಲಕ್ಕೆ ನಡೆಯುವ ಪ್ರಕ್ರಿಯೆ. ರಾಜ್ಯ ಸರ್ಕಾರ ಹೆಚ್ಚಿನ ಪರಿಹಾರವನ್ನು ತನ್ನ ವತಿಯಿಂದ ವಿತರಿಸುವ ಪ್ರಕ್ರಿಯೆ ಮಾಡಬೇಕೇ ಹೊರತು ʼಬೇಡುವ ಪ್ರಕ್ರಿಯೆʼ ಮಾಡುತ್ತಾ ಕೂರಬಾರದು. ಬೇಡುವುದು ಬಿಡಿ, ನಿಮ್ಮ ಕಡೆಯಿಂದ ಕೊಡುವ ಕೆಲಸ ಮಾಡಿ. ಇಲ್ಲವಾದರೆ ನಮ್ಮ ಖಜಾನೆ ಖಾಲಿ ಎಂದು ಘೋಷಣೆ ಮಾಡಿ.
@INCKarnataka -
Dr. G Parameshwara
@DrParameshwara
ಬರ ಪರಿಹಾರ ಕೋರಿ ನಾನು ಕೇಂದ್ರ ಸರ್ಕಾರಕ್ಕೆ ಬರೆದಿರುವ ಪತ್ರಕ್ಕೆ ರಾಜ್ಯ ವಿಧಾನಸಭೆಯ ವಿರೋಧ ಪಕ್ಷದ ನಾಯಕ @RAshokaBJP ನೀಡಿರುವ ಪ್ರತಿಕ್ರಿಯೆ ಹಾಗೂ ಬಳಸಿರುವ ಪದಗಳು ಅಸಹ್ಯ ಹುಟ್ಟಿಸುವಂತಿವೆ. ಅವರ ಈ ಹೇಳಿಕೆಯನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ.
ಭಾರತವು ರಾಜ್ಯಗಳ ಒಕ್ಕೂಟ. ಇಲ್ಲಿ ಕೇಂದ್ರ ಸರ್ಕಾರ ಯಜಮಾನನೂ ಅಲ್ಲ, ರಾಜ್ಯಗಳು ಕೇಂದ್ರದ ಮುಂದೆ ಕೈಚಾಚಿ ನಿಲ್ಲುವ ಜೀತದಾಳುಗಳೂ ಅಲ್ಲ. ಜನರಿಂದ ಚುನಾಯಿತವಾದ ನಮ್ಮ ರಾಜ್ಯ ಸರ್ಕಾರವು ತನ್ನ ರೈತರ ಸಂಕಷ್ಟಕ್ಕೆ ಸ್ಪಂದಿಸಿ ಕೇಂದ್ರದಿಂದ ಬರ ಪರಿಹಾರ ಕೇಳುವುದು ನಮ್ಮ ನ್ಯಾಯಸಮ್ಮತ ಹಕ್ಕು. ಅದನ್ನು ಭಿಕ್ಷೆಗೆ ಹೋಲಿಸಿರುವುದು ಆರ್. ಅಶೋಕ್ ಅವರಿಗೆ ಒಕ್ಕೂಟ ವ್ಯವಸ್ಥೆಯ ಬಗ್ಗೆ ಎಳ್ಳಷ್ಟೂ ಸಾಮಾನ್ಯ ಜ್ಞಾನವಿಲ್ಲ ಎಂಬುದನ್ನು ತೋರಿಸುತ್ತದೆ. ಇಂತಹ ವ್ಯಕ್ತಿಯನ್ನು ವಿರೋಧ ಪಕ್ಷದ ನಾಯಕನ ಸ್ಥಾನದಲ್ಲಿ ಕೂರಿಸಿರುವುದು ಬಿಜೆಪಿಯ ಬೌದ್ಧಿಕ ದಿವಾಳಿತನಕ್ಕೆ ಸಾಕ್ಷಿಯಾಗಿದೆ.
ಕರ್ನಾಟಕದ ರೈತರು ಭಿಕ್ಷುಕರಲ್ಲ, ದೇಶಕ್ಕೆ ಅನ್ನ ನೀಡುವ ಅನ್ನದಾತರು. ದೇಶದ ಸಮೃದ್ಧಿಗೆ ಕರ್ನಾಟಕ ಕೊಡುಗೆ ನೀಡಿದಾಗ ಅದನ್ನು ಹೆಮ್ಮೆಯಿಂದ ಸ್ವೀಕರಿಸುವ ಕೇಂದ್ರ ಸರ್ಕಾರ, ವಿಪತ್ತಿನ ಸಂದರ್ಭದಲ್ಲಿ ನಮ್ಮ ರೈತರು ನೆರವು ಕೇಳಿದರೆ ಅದನ್ನು ಭಿಕ್ಷೆ ಎಂದು ಬಿಂಬಿಸುವುದು ಯಾವ ರೀತಿಯ ಸಹಕಾರಿ ಒಕ್ಕೂಟ ವ್ಯವಸ್ಥೆ?
ರೈತರ ಸಂಕಷ್ಟದಲ್ಲೂ ಬಿಜೆಪಿಗೆ ರಾಜಕೀಯವೇ ಮುಖ್ಯವೇ?
ರಾಜ್ಯದಲ್ಲಿ ಭೀಕರ ಬರ ಪರಿಸ್ಥಿತಿ ನಿರ್ಮಾಣವಾಗಿದೆ. ನೀರಿನ ಕೊರತೆಯಿಂದ ಕೃಷಿ ಚಟುವಟಿಕೆಗಳು ಸ್ಥಗಿತಗೊಂಡಿದ್ದು, ಗ್ರಾಮೀಣ ಜನರು ಕೂಲಿ ಕೆಲಸ ಅರಸಿ ಗುಳೆ ಹೋಗಬೇಕಾದ ಪರಿಸ್ಥಿತಿ ಎದುರಾಗಿದೆ. ಜಾನುವಾರುಗಳಿಗೆ ಮೇವು ಹಾಗೂ ಕುಡಿಯುವ ನೀರಿನ ಕೊರತೆಯೂ ತೀವ್ರವಾಗಿದೆ. ರೈತರು ಆತ್ಮಹತ್ಯೆಯಂತಹ ದುಡುಕಿನ ನಿರ್ಧಾರಗಳಿಗೆ ಮುಂದಾಗದಂತೆ ತಡೆಯಲು, ಜಾನುವಾರುಗಳ ಜೀವಹಾನಿ ತಪ್ಪಿಸಲು ನಮ್ಮ ಸರ್ಕಾರ ಸಮರೋಪಾದಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಆದರೆ ವಿರೋಧ ಪಕ್ಷದ ನಾಯಕರು ಜನರ ಸಂಕಷ್ಟಕ್ಕೂ ತಮಗೂ ಸಂಬಂಧವಿಲ್ಲವೆಂಬಂತೆ ಹೀನ ರಾಜಕೀಯ ಹೇಳಿಕೆಗಳನ್ನು ನೀಡುತ್ತಿರುವುದು ಅವರ ಜವಾಬ್ದಾರಿಯ ಕೊರತೆಯನ್ನು ತೋರಿಸುತ್ತದೆ.
ರಾಜ್ಯದ ಜನರು ಬಿಜೆಪಿಯವರನ್ನೂ ಶಾಸಕರಾಗಿ, ಸಂಸದರಾಗಿ ಆಯ್ಕೆ ಮಾಡಿದ್ದಾರೆ. ತಮ್ಮನ್ನು ಆಯ್ಕೆ ಮಾಡಿದ ಜನರು ಬರದಿಂದ ತತ್ತರಿಸಿರುವಾಗ ಅವರ ನೆರವಿಗೆ ನಿಲ್ಲಬೇಕಾದ ಹೊಣೆಗಾರಿಕೆ ಬಿಜೆಪಿ ಜನಪ್ರತಿನಿಧಿಗಳಿಗೆ ಇಲ್ಲವೇ? ಕೇಂದ್ರ ಸರ್ಕಾರವನ್ನು ಪರಿಹಾರಕ್ಕಾಗಿ ಒತ್ತಾಯಿಸಿದರೆ ಇವರಿಗೆ ಕೋಪವೇಕೆ?
ನಾವು ಕೇಳುತ್ತಿರುವುದು ಬಿಜೆಪಿ ಪಕ್ಷದ ನಿಧಿಯನ್ನಲ್ಲ. ಕರ್ನಾಟಕದ ಜನರು ಬೆವರು ಸುರಿಸಿ ಪಾವತಿಸಿರುವ ತೆರಿಗೆ ಹಣದಲ್ಲಿ ನ್ಯಾಯಯುತವಾಗಿ ದೊರೆಯಬೇಕಾದ ಪರಿಹಾರವನ್ನು. ಬರ ಪರಿಹಾರ ರಾಜ್ಯದ ಜನರ ಹಕ್ಕು. ಅದನ್ನು ನಿರಾಕರಿಸಲು ಆರ್. ಅಶೋಕ್ ಯಾರು?
ವಿಪತ್ತು ಪರಿಹಾರ ಕೇಂದ್ರದ ಔದಾರ್ಯವಲ್ಲ
ರಾಷ್ಟ್ರೀಯ ವಿಪತ್ತು ನಿರ್ವಹಣಾ ನಿಧಿ (NDRF) ಹಾಗೂ ರಾಜ್ಯ ವಿಪತ್ತು ನಿರ್ವಹಣಾ ನಿಧಿ (SDRF) ವಿಪತ್ತು ನಿರ್ವಹಣಾ ಕಾಯ್ದೆ–2005 ಮತ್ತು ಹಣಕಾಸು ಆಯೋಗಗಳ ಶಿಫಾರಸುಗಳ ಆಧಾರದ ಮೇಲೆ ಸ್ಥಾಪಿಸಲಾದ ವ್ಯವಸ್ಥೆಗಳಾಗಿವೆ. ನೈಸರ್ಗಿಕ ವಿಕೋಪದ ಸಂದರ್ಭದಲ್ಲಿ ರಾಜ್ಯಗಳಿಗೆ ನೆರವು ಒದಗಿಸುವುದೇ ಇವುಗಳ ಉದ್ದೇಶ. ಈ ವ್ಯವಸ್ಥೆಗಳಡಿ ನೆರವು ಕೇಳುವುದೇ ಭಿಕ್ಷೆಯಾದರೆ, ಸಂಸತ್ತು ಇವುಗಳನ್ನು ಏಕೆ ಸ್ಥಾಪಿಸಿತು ಎಂಬುದನ್ನು ಆರ್. ಅಶೋಕ್ ವಿವರಿಸಬೇಕು.
16ನೇ ಹಣಕಾಸು ಆಯೋಗವು 2026–31ರ ಅವಧಿಗೆ ರಾಜ್ಯಗಳ ವಿಪತ್ತು ನಿರ್ವಹಣೆ ಮತ್ತು ವಿಪತ್ತು ಪರಿಣಾಮ ತಗ್ಗಿಸುವ ನಿಧಿಗಳಿಗೆ ₹2,04,401 ಕೋಟಿ ಹಾಗೂ ರಾಷ್ಟ್ರೀಯ ವಿಪತ್ತು ನಿರ್ವಹಣಾ ನಿಧಿಗಳಿಗೆ ₹79,406 ಕೋಟಿ ಶಿಫಾರಸು ಮಾಡಿದೆ. ಕರ್ನಾಟಕದಂತಹ ರಾಜ್ಯಗಳ SDRFಗೆ ಕೇಂದ್ರ ಸರ್ಕಾರ ಶೇ.75ರಷ್ಟು ಹಾಗೂ ರಾಜ್ಯ ಸರ್ಕಾರ ಶೇ.25ರಷ್ಟು ಅನುದಾನ ಒದಗಿಸುತ್ತವೆ. ಇದು ಕೇಂದ್ರದ ದಾನವಲ್ಲ, ವಿಪತ್ತು ನಿರ್ವಹಣೆಗಾಗಿ ರೂಪಿಸಿರುವ ಸಾಂಸ್ಥಿಕ ವ್ಯವಸ್ಥೆ ಎಂಬುದನ್ನು ನಾನು ಸ್ಪಷ್ಟಪಡಿಸುತ್ತೇನೆ.
ಕರ್ನಾಟಕದ ತೆರಿಗೆ ಕೊಡುಗೆ ಅಪಾರ; ಮರಳಿ ಸಿಗುವುದು ಕೇವಲ 13 ಪೈಸೆ?
ವಿವಿಧ ತೆರಿಗೆಗಳು, ಸೆಸ್ಗಳು ಮತ್ತು ಹೆಚ್ಚುವರಿ ತೆರಿಗೆಗಳ ಮೂಲಕ ಕರ್ನಾಟಕವು ವಾರ್ಷಿಕವಾಗಿ ಸುಮಾರು ₹5 ಲಕ್ಷ ಕೋಟಿ ಕೇಂದ್ರಕ್ಕೆ ನೀಡುತ್ತಿದೆ. ಆದರೆ ಪ್ರತಿ ರೂಪಾಯಿ ಕೊಡುಗೆಗೆ ಪ್ರತಿಯಾಗಿ ತೆರಿಗೆ ಹಂಚಿಕೆ ಮತ್ತು ಅನುದಾನಗಳ ರೂಪದಲ್ಲಿ ಕೇವಲ 13 ಪೈಸೆ ಮಾತ್ರ ಮರಳಿ ಬರುತ್ತಿದೆ ಎಂಬುದು ನಮ್ಮ ವಾದವಾಗಿದೆ.
14ನೇ ಹಣಕಾಸು ಆಯೋಗದ ಅವಧಿಯಲ್ಲಿ ಕೇಂದ್ರ ತೆರಿಗೆ ಹಂಚಿಕೆಯಲ್ಲಿ ಕರ್ನಾಟಕದ ಪಾಲು ಶೇ.4.713ರಷ್ಟಿದ್ದು, 15ನೇ ಹಣಕಾಸು ಆಯೋಗದ ಅವಧಿಯಲ್ಲಿ ಶೇ.3.647ಕ್ಕೆ ಕುಸಿದಿತ್ತು. 16ನೇ ಹಣಕಾಸು ಆಯೋಗವು ಶೇ.4.131ಕ್ಕೆ ಹೆಚ್ಚಿಸಿದ್ದರೂ ಹಿಂದಿನ ಮಟ್ಟ ತಲುಪಿಲ್ಲ. ಕೇಂದ್ರದ ನಿರಂತರ ಹಣಕಾಸು ಅನ್ಯಾಯಗಳಿಂದ ಕರ್ನಾಟಕಕ್ಕೆ ₹2.5 ಲಕ್ಷ ಕೋಟಿಗೂ ಅಧಿಕ ನಷ್ಟವಾಗಿದೆ ಎಂಬುದು ನಮ್ಮ ಆರೋಪವಾಗಿದೆ.
ಹಿಂದುಳಿದ ರಾಜ್ಯಗಳಿಗೆ ನೆರವು ನೀಡುವುದನ್ನು ನಾವು ವಿರೋಧಿಸುವುದಿಲ್ಲ. ಆದರೆ ರಾಷ್ಟ್ರೀಯ ಐಕ್ಯತೆ ಏಕಮುಖವಾಗಿರಲು ಸಾಧ್ಯವಿಲ್ಲ. ಕರ್ನಾಟಕದ ತೆರಿಗೆ ಹಣ ದೇಶದ ಅಭಿವೃದ್ಧಿಗೆ ಬೇಕಾದರೆ, ಸಂಕಷ್ಟದಲ್ಲಿರುವ ಕರ್ನಾಟಕದ ರೈತರ ರಕ್ಷಣೆಯೂ ದೇಶದ ಜವಾಬ್ದಾರಿಯಾಗಬೇಕು.
₹1,250 ಕೋಟಿ ಮಧ್ಯಂತರ ಪರಿಹಾರ; ₹22,400 ಕೋಟಿ ನೆರವಿನ ಅಗತ್ಯ
ಕೇಂದ್ರದ ನೆರವಿಗೆ ಕಾಯದೆ ನಮ್ಮ ರಾಜ್ಯ ಸರ್ಕಾರ ಮೊದಲ ಕಂತಿನ ಮಧ್ಯಂತರ ಪರಿಹಾರವಾಗಿ ₹1,250 ಕೋಟಿ ಘೋಷಿಸಿದ್ದು, ಪ್ರತಿ ಅರ್ಹ ರೈತರಿಗೆ ₹2,500 ನೆರವು ಒದಗಿಸಲು ಕ್ರಮ ಕೈಗೊಂಡಿದ್ದೇವೆ. ಕುಡಿಯುವ ನೀರಿಗಾಗಿ ₹306 ಕೋಟಿ ವೆಚ್ಚ ಮಾಡಿದ್ದೇವೆ. ತುರ್ತು ಕ್ರಮಗಳಿಗೆ ಜಿಲ್ಲಾಧಿಕಾರಿಗಳ ಬಳಿ ₹329 ಕೋಟಿ ಹಾಗೂ ಮೇವು ನಿರ್ವಹಣೆಗೆ ₹25 ಕೋಟಿ ಒದಗಿಸಿದ್ದೇವೆ. ₹2,500 ನೀಡಿರುವುದರಿಂದಲೇ ರೈತನ ಸಂಪೂರ್ಣ ಬೆಳೆನಷ್ಟ ಭರಿಸಲಾಗುವುದಿಲ್ಲ ಎಂಬುದು ನಮಗೂ ಗೊತ್ತಿದೆ. ಅದಕ್ಕಾಗಿಯೇ ಕೇಂದ್ರದಿಂದ ಪೂರ್ಣ ಪ್ರಮಾಣದ ನೆರವು ಕೇಳುತ್ತಿದ್ದೇವೆ.
ರಾಜ್ಯದ 226 ಬರಪೀಡಿತ ತಾಲ್ಲೂಕುಗಳಲ್ಲಿ 57.93 ಲಕ್ಷ ಹೆಕ್ಟೇರ್ ಬೆಳೆ ಹಾನಿಗೊಳಗಾಗಿದ್ದು, ಅಂದಾಜು ₹62,481.88 ಕೋಟಿ ಆರ್ಥಿಕ ನಷ್ಟ ಸಂಭವಿಸಿದೆ. ಅಕ್ಟೋಬರ್ 26ರ ಪರಿಷ್ಕೃತ SDRF/NDRF ಮಾನದಂಡಗಳ ಪ್ರಕಾರ ಇನ್ಪುಟ್ ಸಬ್ಸಿಡಿ ಅಗತ್ಯ ₹7,943.55 ಕೋಟಿಗೆ ಏರಿದ್ದು, ಒಟ್ಟು ಸಂಚಿತ ಪರಿಹಾರದ ಅಗತ್ಯವು ₹22,400.58 ಕೋಟಿಯಾಗಿದೆ.
ಅಂದು ಪರಿಹಾರ ಕೇಳಿದ ಅಶೋಕ್ಗೆ ಇಂದು ಅದೇ ಬೇಡಿಕೆ ಭಿಕ್ಷೆಯೇ?
ಅಕ್ಟೋಬರ್ 7ರಂದು ಆರ್. ಅಶೋಕ್ ಅವರೇ ಕೇಂದ್ರ ಬರ ಅಧ್ಯಯನ ತಂಡವನ್ನು ಭೇಟಿ ಮಾಡಿ ಹೆಚ್ಚಿನ ಪರಿಹಾರ ಶಿಫಾರಸು ಮಾಡುವಂತೆ ಮನವಿ ಮಾಡಿದ್ದರು. ಆರ್. ಅಶೋಕ್ ಪರಿಹಾರ ಕೇಳಿದರೆ ಅದು ರೈತರ ಪರವಾದ ಹೋರಾಟ. ಚುನಾಯಿತವಾದ ನಮ್ಮ ರಾಜ್ಯ ಸರ್ಕಾರ ಅದೇ ಬೇಡಿಕೆಯನ್ನು ಮುಂದಿಟ್ಟರೆ ಅದು ಭಿಕ್ಷೆಯಾಗುತ್ತದೆಯೇ? ಬದಲಾಗಿರುವುದು ರೈತರ ಸಂಕಷ್ಟವಲ್ಲ, ಬಿಜೆಪಿಯ ರಾಜಕೀಯ ನಿಲುವು ಮಾತ್ರ.
2023–24ರ ಬರಗಾಲದಲ್ಲಿ ನಮ್ಮ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಖುದ್ದು ಭೇಟಿಯಾಗಿ ಪರಿಹಾರ ಕೋರಿದ್ದರು. ಕೇಂದ್ರ ಗೃಹ ಹಾಗೂ ಕೃಷಿ ಸಚಿವರಿಗೂ ನಾವು ಹಲವು ಬಾರಿ ಪತ್ರ ಬರೆದಿದ್ದೆವು. ಆದರೂ ಸಕಾಲದಲ್ಲಿ ನೆರವು ದೊರೆಯದೆ ನಾವು ಸುಪ್ರೀಂ ಕೋರ್ಟ್ ಮೊರೆ ಹೋಗಬೇಕಾಯಿತು. ಸುಮಾರು ₹18,174 ಕೋಟಿ ಕೋರಿದ್ದ ನಮ್ಮ ರಾಜ್ಯಕ್ಕೆ ನ್ಯಾಯಾಲಯದ ಮಧ್ಯಪ್ರವೇಶದ ಬಳಿಕ ₹3,454.22 ಕೋಟಿ ಬಿಡುಗಡೆಯಾಯಿತು.
ಕೇಂದ್ರದಲ್ಲಿರುವುದು ರಾಜ್ಯದ ನ್ಯಾಯಯುತ ಬೇಡಿಕೆಗಳಿಗೂ ಸ್ಪಂದಿಸದ ದಪ್ಪ ಚರ್ಮದ ಸರ್ಕಾರ ಎಂಬ ಕಾರಣಕ್ಕಾಗಿಯೇ ನಾವು ಮೇಲಿಂದ ಮೇಲೆ ಪತ್ರ ಬರೆಯುತ್ತಿದ್ದೇವೆ. ಇದು ನಾವು ಅನುಭವದಿಂದ ಕಲಿತ ಪಾಠ. ರೈತರ ಹಿತಕ್ಕಾಗಿ ಎಷ್ಟು ಬಾರಿ ಪತ್ರ ಬರೆಯಬೇಕಾದರೂ ಬರೆಯುತ್ತೇವೆ.
ರೈತರ ಭದ್ರತೆಯೇ ವಿಕಸಿತ ಭಾರತದ ಅಡಿಪಾಯ
ಹೆಚ್ಚುತ್ತಿರುವ ಕೃಷಿ ವೆಚ್ಚಕ್ಕೆ ಅನುಗುಣವಾಗಿ ವಿಪತ್ತು ಪರಿಹಾರ ಮಾನದಂಡಗಳನ್ನು ಪರಿಷ್ಕರಿಸಬೇಕು ಎಂಬುದು ನಮ್ಮ ಆಗ್ರಹವಾಗಿದೆ. ವೈಜ್ಞಾನಿಕ ಜಲ ನಿರ್ವಹಣೆ, ಹವಾಮಾನ ವೈಪರೀತ್ಯಗಳನ್ನು ಎದುರಿಸುವ ಕೃಷಿ ಪದ್ಧತಿ, ಪರಿಣಾಮಕಾರಿ ಬೆಳೆ ವಿಮೆ ಹಾಗೂ FRUITS ವ್ಯವಸ್ಥೆಯಂತಹ ರೈತರ ದತ್ತಾಂಶ ಆಧಾರಿತ ಪರಿಹಾರ ವಿತರಣೆಯನ್ನು ಬಲಪಡಿಸಬೇಕು ಎಂದು ನಾನು ಒತ್ತಾಯಿಸುತ್ತೇನೆ.
ಒಂದು ಮುಂಗಾರು ವೈಫಲ್ಯದಿಂದ ರೈತ ಕುಟುಂಬದ ವರ್ಷಗಳ ಪರಿಶ್ರಮ ನಾಶವಾಗಿ, ಮುಂದಿನ ಪೀಳಿಗೆಯೂ ಸಾಲದ ಸುಳಿಗೆ ಸಿಲುಕುವಂತಹ ಪರಿಸ್ಥಿತಿಯಲ್ಲಿ ವಿಕಸಿತ ಭಾರತದ ಕನಸು ನನಸಾಗದು.
ಕರ್ನಾಟಕದ ಬಿಜೆಪಿ ಸಂಸದರು ಹಾಗೂ ಶಾಸಕರು ಪಕ್ಷ ರಾಜಕಾರಣ ಮರೆತು ರೈತರ ಪರ ನಿಲ್ಲಬೇಕು ಎಂದು ನಾನು ಆಗ್ರಹಿಸುತ್ತೇನೆ. ₹2,500 ಪರಿಹಾರ ಕಡಿಮೆ ಎನಿಸಿದರೆ ಹೆಚ್ಚಿನ ನೆರವಿಗಾಗಿ ನಮ್ಮ ರಾಜ್ಯ ಸರ್ಕಾರದೊಂದಿಗೆ ಧ್ವನಿಗೂಡಿಸಬೇಕು.
ನಮ್ಮ ರೈತರು ಭಿಕ್ಷುಕರಲ್ಲ. ಅವರು ದೇಶದ ಅನ್ನದಾತರು. ಕರ್ನಾಟಕ ಭಿಕ್ಷೆ ಬೇಡುತ್ತಿಲ್ಲ, ತನ್ನ ಹಕ್ಕನ್ನು ಪ್ರತಿಪಾದಿಸುತ್ತಿದೆ. ರೈತರಿಗಾಗಿ ಕೇಂದ್ರದಿಂದ ನ್ಯಾಯಯುತವಾಗಿ ದೊರೆಯಬೇಕಾದ ಪ್ರತಿಯೊಂದು ರೂಪಾಯಿಯನ್ನೂ ಪಡೆಯಲು ನಾವು ಹೋರಾಡುತ್ತೇವೆ. ಮಳೆ ಕೈಕೊಟ್ಟರೂ ನಮ್ಮ ಸರ್ಕಾರ ರೈತರ ಕೈಬಿಡುವುದಿಲ್ಲ.
ಇದು ಕಾಂಗ್ರೆಸ್–ಬಿಜೆಪಿ ನಡುವಿನ ಸಂಘರ್ಷವಲ್ಲ. ಪಕ್ಷ ರಾಜಕಾರಣಕ್ಕಿಂತ ರೈತರ ಹಿತಾಸಕ್ತಿ ದೊಡ್ಡದು. ನಮ್ಮ ರಾಜ್ಯ ಸರ್ಕಾರ ರೈತರ ಹಿತವನ್ನು ಆಯ್ಕೆ ಮಾಡಿಕೊಂಡಿದೆ. ರಾಜ್ಯದ ಬಿಜೆಪಿ ನಾಯಕರು ರಾಜ್ಯದ ರೈತರ ಪರ ನಿಲ್ಲುತ್ತಾರೋ ಅಥವಾ ತಮ್ಮ ಪಕ್ಷದ ಪರ ನಿಲ್ಲುತ್ತಾರೋ ಎಂಬುದನ್ನು ಸ್ಪಷ್ಟಪಡಿಸಲಿ.
R. Ashoka
@RAshokaBJP
ಪರಿಹಾರ ನೀಡಲು ಗತಿ ಇಲ್ಲ, ಭಿಕ್ಷೆ ಬೇಡಲು ನಾಚಿಕೆ ಇಲ್ಲ!
ಮುಖ್ಯಮಂತ್ರಿ @DKShivakumar ಅವರ ಸರ್ಕಾರ, 2,500 ರೂ. ಚಿಲ್ಲರೆ ಕಾಸಿನ ಪರಿಹಾರವನ್ನು ಘೋಷಣೆ ಮಾಡಿದರೂ, ಅದು ರೈತರ ಕೈ ಸೇರಿಲ್ಲ. ಗ್ಯಾರಂಟಿ ಸಮಿತಿ ರಚಿಸಿಕೊಂಡು, ಕಮಿಶನ್ ಹೊಡೆದುಕೊಂಡು ಬದುಕುವ ಕಾಂಗ್ರೆಸ್ನ ವಸೂಲಿ ವೀರ ನಾಯಕರಿಗೆ ರೈತರ ಕಷ್ಟ ಆಲಿಸಿ ಹೆಚ್ಚಿನ ಪರಿಹಾರ ನೀಡಲು ಮಾತ್ರ ಹಣವಿಲ್ಲ. ಇದರ ನಡುವೆ ಕಂದಾಯ ಸಚಿವ @DrParameshwara ಅವರು ಮಾತ್ರ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದು ಭಿಕ್ಷೆ ಬೇಡುತ್ತಿದ್ದಾರೆ.
ಮುಖ್ಯಮಂತ್ರಿಗಳೇ, 226 ತಾಲೂಕುಗಳಲ್ಲಿ ಬರಗಾಲವಿದ್ದು, 57.93 ಲಕ್ಷ ಹೆಕ್ಟೇರ್ ಬೆಳೆ ಹಾನಿಯಾಗಿದೆ. 62,481.88 ಕೋಟಿ ರೂ. ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ. ರೈತರು ಬರ ಪರಿಹಾರಕ್ಕಾಗಿ ಎದುರು ನೋಡುತ್ತಿದ್ದಾರೆ. ಇಂತಹ ಸಮಯದಲ್ಲಿ ಅಧಿಕ ಪರಿಹಾರವನ್ನು ವಿತರಿಸಬೇಕೆ ಹೊರತು ಕೇಂದ್ರ ಸರ್ಕಾರವನ್ನು ಕಾಯುತ್ತಾ ಕೂರಬಾರದು. ಕೇಂದ್ರ ಸರ್ಕಾರ ಎಲ್ಲ ರಾಜ್ಯಗಳಲ್ಲಿ ಅಧ್ಯಯನ ನಡೆಸಿ ಪರಿಹಾರ ವಿತರಣೆ ಮಾಡುವುದು ಕಾಲಕಾಲಕ್ಕೆ ನಡೆಯುವ ಪ್ರಕ್ರಿಯೆ. ರಾಜ್ಯ ಸರ್ಕಾರ ಹೆಚ್ಚಿನ ಪರಿಹಾರವನ್ನು ತನ್ನ ವತಿಯಿಂದ ವಿತರಿಸುವ ಪ್ರಕ್ರಿಯೆ ಮಾಡಬೇಕೇ ಹೊರತು ʼಬೇಡುವ ಪ್ರಕ್ರಿಯೆʼ ಮಾಡುತ್ತಾ ಕೂರಬಾರದು. ಬೇಡುವುದು ಬಿಡಿ, ನಿಮ್ಮ ಕಡೆಯಿಂದ ಕೊಡುವ ಕೆಲಸ ಮಾಡಿ. ಇಲ್ಲವಾದರೆ ನಮ್ಮ ಖಜಾನೆ ಖಾಲಿ ಎಂದು ಘೋಷಣೆ ಮಾಡಿ.
@INCKarnataka -
Dr. G Parameshwara
@DrParameshwara
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವರಾದ ಶ್ರೀ ಅಮಿತ್ ಶಾ ಹಾಗೂ ಕೇಂದ್ರ ಕೃಷಿ ಸಚಿವರಾದ ಶ್ರೀ ಶಿವರಾಜ್ ಸಿಂಗ್ ಚೌಹಾಣ್ ಅವರಿಗೆ ಪ್ರತ್ಯೇಕ ಪತ್ರ ಬರೆದು, ಕರ್ನಾಟಕದಲ್ಲಿ ಉಂಟಾದ ಭೀಕರ ಬರದಿಂದಾಗಿ ಸಂಕಷ್ಟದಲ್ಲಿರುವ ರೈತರಿಗೆ ತುರ್ತು ಆರ್ಥಿಕ ನೆರವು ಒದಗಿಸುವಂತೆ ಕೋರಿದ್ದೇನೆ.
ಈ ಕುರಿತಾದ ಪತ್ರಿಕಾ ವರದಿಗಳು ಹೀಗಿವೆ..
Dr. G Parameshwara
@DrParameshwara
I have written separately to Prime Minister Shri Narendra Modi, Union Home Minister Shri Amit Shah and Union Agriculture Minister Shri Shivraj Singh Chouhan, seeking urgent financial assistance for farmers affected by the severe drought in Karnataka.
Here are the media reports on the letters. -
Dr. G Parameshwara
@DrParameshwara
ರಾಜ್ಯದಲ್ಲಿ ಉಂಟಾಗಿರುವ ಬರ ಪರಿಸ್ಥಿತಿಯಿಂದ ರೈತರು ಎದುರಿಸುತ್ತಿರುವ ಸಂಕಷ್ಟಕ್ಕೆ ಸ್ಪಂದಿಸುವ ನಿಟ್ಟಿನಲ್ಲಿ, ಎಸ್ಡಿಆರ್ಎಫ್/ ಎನ್ಡಿಆರ್ಎಫ್ ಪರಿಹಾರ ಮಾನದಂಡಗಳ ಪರಿಷ್ಕರಣೆಯನ್ವಯ ಒಟ್ಟು ₹22,400.58 ಕೋಟಿ ಬರ ಪರಿಹಾರ ಬಿಡುಗಡೆ ಮಾಡುವಂತೆ ಕೋರಿ ಪ್ರಧಾನಮಂತ್ರಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವರಾದ ಅಮಿತ್ ಶಾ ಮತ್ತು ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರಿಗೆ ಪತ್ರ ಬರೆದು ಮನವಿ ಮಾಡಿದ್ದೇನೆ.
ರಾಜ್ಯದ 226 ತಾಲ್ಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿದ್ದು, 57.93 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ. ಇದರಿಂದ ಅಂದಾಜು ₹62,481.88 ಕೋಟಿಯಷ್ಟು ಆರ್ಥಿಕ ನಷ್ಟ ಉಂಟಾಗಿದೆ. ಪರಿಷ್ಕೃತ ಮಾನದಂಡಗಳ ಅನ್ವಯ ಬೆಳೆ ಹಾನಿ ಇನ್ಪುಟ್ ಸಬ್ಸಿಡಿ ಪರಿಹಾರದ ಅಗತ್ಯವು ₹6,128.70 ಕೋಟಿಯಿಂದ ₹7,943.55 ಕೋಟಿಗೆ ಹೆಚ್ಚಳವಾಗಿದೆ. ಇದರಂತೆ ರಾಜ್ಯದ ಒಟ್ಟು ಬರ ಪರಿಹಾರದ ಬೇಡಿಕೆಯನ್ನು ₹20,585.73 ಕೋಟಿಯಿಂದ ₹22,400.58 ಕೋಟಿಗೆ ಪರಿಷ್ಕರಿಸಿ, ಹೆಚ್ಚುವರಿ ₹1,814.85 ಕೋಟಿ ನೆರವು ಸೇರಿದಂತೆ ಪರಿಹಾರ ಮೊತ್ತವನ್ನು ತ್ವರಿತವಾಗಿ ಬಿಡುಗಡೆ ಮಾಡುವಂತೆಯೂ ಕೋರಿದ್ದೇನೆ.
ಬರದ ಸಂಕಷ್ಟದಲ್ಲಿ ರೈತರ ಹಿತಕಾಪಾಡುವುದು ನಮ್ಮ ಸರ್ಕಾರದ ಆದ್ಯತೆ. ಬೆಳೆ ನಷ್ಟದಿಂದ ಕಂಗೆಟ್ಟಿರುವ ಅನ್ನದಾತರಿಗೆ ಸೂಕ್ತ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ರೈತರ ನೆರವಿಗೆ ಧಾವಿಸಲು ರಾಜ್ಯ ಸರ್ಕಾರ ಬದ್ಧವಾಗಿದ್ದು, ಕೇಂದ್ರದಿಂದಲೂ ನ್ಯಾಯಯುತ ಪರಿಹಾರ ದೊರೆಯುವ ವಿಶ್ವಾಸವಿದೆ.
Dr. G Parameshwara
@DrParameshwara
In response to the severe drought and the hardship faced by farmers across Karnataka, I have written to Prime Minister Narendra Modi, Union Home Minister Amit Shah and Union Agriculture Minister Shivraj Singh Chouhan, seeking the release of ₹22,400.58 crore in drought relief under the revised SDRF/NDRF norms.
A total of 226 taluks have been declared drought-affected, with crop loss across 57.93 lakh hectares and an estimated economic loss of ₹62,481.88 crore.
Under the revised norms, the requirement for crop-loss input subsidy has increased from ₹6,128.70 crore to ₹7,943.55 crore. Accordingly, Karnataka’s total drought-relief requirement has been revised from ₹20,585.73 crore to ₹22,400.58 crore, including an additional ₹1,814.85 crore. I have urged the Centre to release the assistance without delay.
Protecting the interests of farmers during this drought crisis remains our Government’s priority. We are taking all necessary measures to support those affected by crop loss and remain committed to standing with our farmers. We also expect the Union Government to provide Karnataka with the relief it is due. -
Dr. G Parameshwara
@DrParameshwara
ನನ್ನ ತವರು ಜಿಲ್ಲೆ ತುಮಕೂರಿನಲ್ಲಿ ಅಭಿವೃದ್ಧಿಯ ಮನ್ವಂತರ ಶುರುವಾಗಿದೆ.
ನಾನು ಪ್ರತಿನಿಧಿಸುತ್ತಿರುವ ಕೊರಟಗೆರೆ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ತುಂಬಾಡಿ ಗ್ರಾಮ ಪಂಚಾಯಿತಿಯು ಮೂರು ಬಾರಿ ಗಾಂಧಿಗ್ರಾಮ ಪುರಸ್ಕಾರಕ್ಕೆ ಭಾಜನವಾಗಿ, ಅಭಿವೃದ್ಧಿಯಲ್ಲಿ ತನ್ನದೇ ಆದ ಹೆಜ್ಜೆಗುರುತು ಮೂಡಿಸಿದೆ.
ನರೇಗಾ ಯೋಜನೆಯಡಿ ರಸ್ತೆ, ಚರಂಡಿ, ಆಟದ ಮೈದಾನ, ಶಾಲಾ ಕಾಂಪೌಂಡ್ ಹಾಗೂ ಶೌಚಾಲಯಗಳ ನಿರ್ಮಾಣದ ಜೊತೆಗೆ, ಮುಖ್ಯಮಂತ್ರಿ ಗ್ರಾಮ ವಿಕಾಸ ಯೋಜನೆಯಡಿ ₹1 ಕೋಟಿ ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ಜಲಜೀವನ್ ಮಿಷನ್ (ಜೆಜೆಎಂ) ಯೋಜನೆಯ ಕಾಮಗಾರಿಗಳೂ ಪೂರ್ಣಗೊಂಡಿವೆ. ಮೂಲಸೌಕರ್ಯಗಳ ಅಭಿವೃದ್ಧಿಯಲ್ಲಿ ತುಂಬಾಡಿ ಗ್ರಾಮ ಪಂಚಾಯಿತಿಯು ಮುಂಚೂಣಿಯಲ್ಲಿರುವುದು ಗ್ರಾಮೀಣ ಪ್ರಗತಿಗೆ ಹಿಡಿದ ಕೈಗನ್ನಡಿಯಾಗಿದೆ.
ಕೊರಟಗೆರೆ ತಾಲ್ಲೂಕಿನ ತುಂಬಾಡಿ ಗ್ರಾಮ ಪಂಚಾಯಿತಿಯು ರಾಜ್ಯದ ಇತರೆ ಗ್ರಾಮ ಪಂಚಾಯಿತಿಗಳಿಗೆ ಅನುಕರಣೀಯ ಮಾದರಿಯಾಗಿ ಪ್ರಗತಿ ಸಾಧಿಸಿರುವುದು ನನಗೆ ಹೆಮ್ಮೆ ತಂದಿದೆ.
A new chapter of development is unfolding in my home district of Tumakuru.
Thumbadi Gram Panchayat in my Koratagere Assembly constituency has earned the Gandhi Grama Award three times, setting a strong example in rural development.
Under MGNREGA, roads, drains, a playground, school compound walls and toilets have been developed. Various works worth ₹1 crore have also been taken up under the Mukhyamantri Grama Vikas Yojana, while Jal Jeevan Mission (JJM) works have been completed.
Thumbadi’s progress in strengthening basic infrastructure reflects what focused rural development can achieve. I am proud that a Gram Panchayat in Koratagere has emerged as a model for others across Karnataka. -
Dr. G Parameshwara
@DrParameshwara
I have written to Prime Minister Shri @narendramodi, Union Home Minister Shri @AmitShah and Union Agriculture Minister Shri @ChouhanShivraj, seeking urgent intervention and financial assistance for Karnataka's drought-affected farmers.
With 226 taluks affected, crop damage across 57.93 lakh hectares and estimated economic losses of ₹62,481.88 crore, our farmers are facing an unprecedented crisis.
Following the revision of SDRF/NDRF norms, Karnataka's drought-relief requirement has increased to ₹22,400.58 crore. However, the revised assistance norms remain inadequate when compared to the actual cost of cultivation and the magnitude of farmers' losses.
I have urged the Union Government to reconsider these norms, adopt updated agricultural records such as Karnataka's FRUITS database and ensure the early approval and release of the required assistance.
I have also sought appointments with Prime Minister Shri Narendra Modi, Union Home Minister Shri Amit Shah and Union Agriculture Minister Shri Shivraj Singh Chouhan to personally present Karnataka's case.
Our farmers deserve more than incremental relief. They need timely, meaningful support to rebuild their livelihoods. Protecting their future is a shared responsibility that must rise above political differences.
Dr. G Parameshwara
@DrParameshwara
ಕರ್ನಾಟಕದಲ್ಲಿ ಉಂಟಾದ ಭೀಕರ ಬರದಿಂದಾಗಿ ಸಂಕಷ್ಟದಲ್ಲಿರುವ ರೈತರಿಗೆ ತುರ್ತು ಆರ್ಥಿಕ ನೆರವು ಒದಗಿಸುವಂತೆ ಕೋರಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವರಾದ ಶ್ರೀ ಅಮಿತ್ ಶಾ ಹಾಗೂ ಕೇಂದ್ರ ಕೃಷಿ ಸಚಿವರಾದ ಶ್ರೀ ಶಿವರಾಜ್ ಸಿಂಗ್ ಚೌಹಾಣ್ ಅವರಿಗೆ ಪ್ರತ್ಯೇಕ ಪತ್ರ ಬರೆದಿದ್ದೇನೆ.
ರಾಜ್ಯದ 226 ತಾಲ್ಲೂಕುಗಳು ಬರ ಪೀಡಿತವಾಗಿದ್ದು, 57.93 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ. ಇದರಿಂದ ₹62,481.88 ಕೋಟಿ ಅಂದಾಜು ಆರ್ಥಿಕ ನಷ್ಟ ಉಂಟಾಗಿದ್ದು, ನಮ್ಮ ರೈತರು ಹಿಂದೆಂದೂ ಕಾಣದಂತಹ ಸಂಕಷ್ಟವನ್ನು ಎದುರಿಸುತ್ತಿದ್ದಾರೆ.
ಕೇಂದ್ರ ಸರ್ಕಾರವು SDRF/NDRF ಪರಿಹಾರ ಮಾನದಂಡಗಳನ್ನು ಪರಿಷ್ಕರಿಸಿರುವ ಹಿನ್ನೆಲೆಯಲ್ಲಿ ಕರ್ನಾಟಕದ ಒಟ್ಟು ಬರ ಪರಿಹಾರದ ಬೇಡಿಕೆಯು ₹22,400.58 ಕೋಟಿಗೆ ಹೆಚ್ಚಳವಾಗಿದೆ. ಆದರೆ ಪರಿಷ್ಕೃತ ಪರಿಹಾರ ಮಾನದಂಡಗಳು ರೈತರ ನೈಜ ಕೃಷಿ ವೆಚ್ಚ ಹಾಗೂ ಅವರು ಅನುಭವಿಸಿರುವ ನಷ್ಟಕ್ಕೆ ಹೋಲಿಸಿದರೆ ಸಾಕಾಗುವುದಿಲ್ಲ.
ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ಪರಿಹಾರ ಮಾನದಂಡಗಳನ್ನು ಮರುಪರಿಶೀಲಿಸಬೇಕು, ಹಳೆಯ ಕೃಷಿ ಗಣತಿಯ ಬದಲು ಕರ್ನಾಟಕದ FRUITS ದತ್ತಾಂಶವನ್ನು ಬಳಸಬೇಕು ಹಾಗೂ ರಾಜ್ಯಕ್ಕೆ ಅಗತ್ಯವಿರುವ ಪರಿಹಾರದ ಮೊತ್ತವನ್ನು ತ್ವರಿತವಾಗಿ ಅನುಮೋದಿಸಿ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದ್ದೇನೆ.
ರಾಜ್ಯದ ಬರ ಪರಿಸ್ಥಿತಿಯ ಗಂಭೀರತೆಯನ್ನು ಖುದ್ದಾಗಿ ವಿವರಿಸಲು ಹಾಗೂ ಪರಿಹಾರದ ಬೇಡಿಕೆಯನ್ನು ಸಲ್ಲಿಸಲು ಪ್ರಧಾನಿಗಳು, ಗೃಹ ಸಚಿವರು ಮತ್ತು ಕೃಷಿ ಸಚಿವರ ಭೇಟಿಗೆ ಸಮಯ ಕೋರಿದ್ದೇನೆ.
ನಮ್ಮ ರೈತರಿಗೆ ಕೇವಲ ಅಲ್ಪ ಪ್ರಮಾಣದ ಪರಿಹಾರದ ಹೆಚ್ಚಳ ಸಾಕಾಗುವುದಿಲ್ಲ. ಬೆಳೆ ನಷ್ಟದಿಂದ ಸಂಕಷ್ಟಕ್ಕೆ ಸಿಲುಕಿರುವ ರೈತರು ಮತ್ತೆ ಆರ್ಥಿಕವಾಗಿ ಚೇತರಿಸಿಕೊಂಡು, ತಮ್ಮ ಜೀವನೋಪಾಯವನ್ನು ಕಟ್ಟಿಕೊಳ್ಳಲು ಅಗತ್ಯವಾದ ನೆರವು ಸಕಾಲದಲ್ಲಿ ದೊರೆಯಬೇಕು. ರೈತರ ಹಿತಾಸಕ್ತಿಯ ವಿಚಾರದಲ್ಲಿ ರಾಜಕೀಯ ಭಿನ್ನಾಭಿಪ್ರಾಯಗಳಿಗೆ ಅವಕಾಶವಿಲ್ಲ. ಸಂಕಷ್ಟದಲ್ಲಿರುವ ರೈತರ ಬೆಂಬಲಕ್ಕೆ ನಿಲ್ಲುವುದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಜಂಟಿ ಜವಾಬ್ದಾರಿಯಾಗಿದೆ. -
Dr. G Parameshwara
@DrParameshwara
ಬರದಿಂದ ಬೆಳೆ ನಷ್ಟಕ್ಕೆ ತುತ್ತಾದ ಅರ್ಹ ರೈತರ ಖಾತೆಗಳಿಗೆ ₹2,500ರ ಮಧ್ಯಂತರ ಪರಿಹಾರದ ಹಣ ಇಂದಿನಿಂದ ಜಮೆಯಾಗಲಿದೆ.
ಬರದಿಂದಾಗಿ ರಾಜ್ಯದ ಲಕ್ಷಾಂತರ ರೈತ ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿವೆ. ಇಂತಹ ಕಠಿಣ ಸಂದರ್ಭದಲ್ಲಿ ರೈತರ ಬೆಂಬಲಕ್ಕೆ ನಿಲ್ಲುವುದು, ಅವರಲ್ಲಿ ಆತ್ಮವಿಶ್ವಾಸ ತುಂಬುವುದು ಹಾಗೂ ಸಾಧ್ಯವಿರುವ ಎಲ್ಲ ನೆರವು ಒದಗಿಸುವುದು ನಮ್ಮ ಸರ್ಕಾರದ ಆದ್ಯತೆಯಾಗಿದೆ.
ರೈತರ ಬದುಕಿನಲ್ಲಿ ಎದುರಾಗುವ ಸಂಕಷ್ಟದ ಸಮಯದಲ್ಲಿ ಅವರೊಂದಿಗೆ ನಿಂತು, ಕೃಷಿ ಕ್ಷೇತ್ರದ ಹಿತ ಕಾಪಾಡಲು ನಮ್ಮ ಸರ್ಕಾರ ಸದಾ ಬದ್ಧವಾಗಿದೆ.
Starting today, ₹2,500 in interim drought relief will be credited directly to the accounts of eligible farmers who have suffered crop loss.
Lakhs of farming families across Karnataka have been affected by the drought. At a time like this, our priority is to stand with farmers, reassure them and extend every possible support.
Our Government remains committed to supporting farmers through difficult times and safeguarding the interests of Karnataka’s agricultural community. -
Dr. G Parameshwara
@DrParameshwara
ಎರಡು ಸಾವಿರ ವರ್ಷಗಳ ಭವ್ಯ ಇತಿಹಾಸ, ಸಾವಿರಾರು ವರ್ಷಗಳ ಸಾಹಿತ್ಯ ಪರಂಪರೆ, ಶ್ರೀಮಂತ ಕಲೆ ಮತ್ತು ಸಂಸ್ಕೃತಿಯನ್ನು ತನ್ನ ಒಡಲಲ್ಲಿ ತುಂಬಿಕೊಂಡಿರುವ ಹೆಮ್ಮೆಯ ನಾಡು ನಮ್ಮ ಕರ್ನಾಟಕ.
ಪಂಪ, ರನ್ನರಿಂದ ಕುವೆಂಪು, ಬೇಂದ್ರೆಯವರೆಗೆ ಅನೇಕ ಮಹಾನ್ ಸಾಹಿತಿಗಳನ್ನು ಜಗತ್ತಿಗೆ ನೀಡಿದ ನೆಲವಿದು. ಜಗಜ್ಯೋತಿ ಬಸವಣ್ಣನ ಸಮಾನತೆಯ ಸಂದೇಶ, ಕನಕದಾಸರ ಸಾಮಾಜಿಕ ಕಳಕಳಿ ಹಾಗೂ ಕುವೆಂಪು ಅವರ ವಿಶ್ವಮಾನವ ತತ್ವಗಳು ನಮ್ಮ ನಾಡಿನ ಮಾನವೀಯ ಮೌಲ್ಯಗಳಿಗೆ ಸಾಕ್ಷಿಯಾಗಿವೆ.
ಕನ್ನಡ ನಮಗೆ ಕೇವಲ ಭಾಷೆಯಲ್ಲ. ಅದು ನಮ್ಮ ಭಾವನೆ, ನಮ್ಮ ಬದುಕು, ನಮ್ಮ ಅಸ್ಮಿತೆ. ಈ ಮಣ್ಣಿನ ಸಂಸ್ಕೃತಿ, ಪರಂಪರೆ ಮತ್ತು ಸೌಹಾರ್ದತೆಯನ್ನು ಕಾಪಾಡಿಕೊಂಡು, ಮುಂದಿನ ಪೀಳಿಗೆಗೆ ತಲುಪಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ.
ಕನ್ನಡಿಗರೆಂಬ ಹೆಮ್ಮೆ ಪ್ರತಿಯೊಬ್ಬರ ಹೃದಯದಲ್ಲೂ ಸದಾ ಜೀವಂತವಾಗಿರಲಿ. ಕನ್ನಡದ ಹಿರಿಮೆ ಜಗತ್ತಿನಾದ್ಯಂತ ಬೆಳಗಲಿ.
ಎಲ್ಲ ಕನ್ನಡಿಗರಿಗೂ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು.
ಜೈ ಕರ್ನಾಟಕ! ಜೈ ಕನ್ನಡಾಂಬೆ!
#kannadarajyotsavaThis media couldn't be displayed. See it on the original post. -
Dr. G Parameshwara
@DrParameshwara
ಬರ ಪರಿಹಾರ ವಿತರಣೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಹೊರಡಿಸಿರುವ ಮಾರ್ಗಸೂಚಿಗಳ ಬಗ್ಗೆ ವಿರೋಧ ಪಕ್ಷದ ನಾಯಕರಾದ ಶ್ರೀ @RAshokaBJP ಅವರು ಮಾಡಿರುವ ಆರೋಪಗಳು ಆಧಾರರಹಿತ ಮತ್ತು ತಪ್ಪುದಾರಿಗೆಳೆಯುವಂತಿವೆ.
ಸರ್ಕಾರಿ ಆದೇಶದಲ್ಲಿರುವ 17 ಅಂಶಗಳನ್ನು ರೈತರಿಗೆ ವಿಧಿಸಿರುವ 17 ಅಡ್ಡಿಗಳೆಂಬಂತೆ ವಿರೋಧ ಪಕ್ಷದವರು ಬಿಂಬಿಸುತ್ತಿದ್ದಾರೆ. ವಾಸ್ತವವಾಗಿ ಇವು ಅರ್ಹ ರೈತರಿಗೆ ಪರಿಹಾರ ತಲುಪಿಸುವುದು, ಒಂದೇ ವ್ಯಕ್ತಿಗೆ ಎರಡು ಬಾರಿ ಪರಿಹಾರ ಪಾವತಿಯಾಗದಂತೆ ನೋಡಿಕೊಳ್ಳುವುದು ಹಾಗೂ ಪರಿಹಾರ ವಿತರಣೆಯಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳುವುದಕ್ಕಾಗಿ ರೂಪಿಸಿರುವ ಆಡಳಿತಾತ್ಮಕ ಕ್ರಮಗಳಾಗಿವೆ.
ನಮ್ಮ ರೈತರಿಗೆ ನಾನು ಸ್ಪಷ್ಟವಾಗಿ ಹೇಳಬಯಸುವುದೇನೆಂದರೆ, ಬರ ಪರಿಹಾರ ಪಡೆಯಲು ನೀವು ಹೊಸದಾಗಿ ಅರ್ಜಿ ಸಲ್ಲಿಸಬೇಕಿಲ್ಲ. ದಾಖಲೆಗಳನ್ನು ಹಿಡಿದುಕೊಂಡು ಒಂದು ಸರ್ಕಾರಿ ಕಚೇರಿಯಿಂದ ಮತ್ತೊಂದು ಕಚೇರಿಗೆ ಅಲೆಯಬೇಕಿಲ್ಲ.
FRUITS, ಡಿಜಿಟಲ್ ಬೆಳೆ ಸಮೀಕ್ಷೆ, ಪರಿಹಾರ ಪೋರ್ಟಲ್ ಹಾಗೂ ಈಗಾಗಲೇ ಲಭ್ಯವಿರುವ ಕಂದಾಯ ದಾಖಲೆಗಳನ್ನು ಸಂಯೋಜಿಸಿ, ಅರ್ಹ ಫಲಾನುಭವಿಗಳನ್ನು ಡಿಜಿಟಲ್ ವ್ಯವಸ್ಥೆಯ ಮೂಲಕ ಗುರುತಿಸಿ, ಅವರ ಆಧಾರ್ ಜೋಡಣೆಯಾದ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಪರಿಹಾರ ಜಮಾ ಮಾಡುವ ವ್ಯವಸ್ಥೆ ಮಾಡಿದ್ದೇವೆ.
1.5 ಕೋಟಿಗೂ ಹೆಚ್ಚು ದಾಖಲೆಗಳನ್ನು ಪ್ರತ್ಯೇಕವಾಗಿ ಪರಿಶೀಲಿಸಿ ಪರಿಹಾರ ವಿತರಿಸಲು ಮುಂದಾಗಿದ್ದರೆ ಕನಿಷ್ಠ ಮೂರು ತಿಂಗಳು ಬೇಕಾಗುತ್ತಿತ್ತು. ಆದರೆ ನಮ್ಮ ಡಿಜಿಟಲ್ ವ್ಯವಸ್ಥೆಯಿಂದ ಅನಗತ್ಯ ದಾಖಲೆಗಳ ಪ್ರಕ್ರಿಯೆ ತಪ್ಪಲಿದೆ. ರೈತರ ಅರ್ಹತೆಯನ್ನು ಪರಿಶೀಲಿಸುವ ಜವಾಬ್ದಾರಿ ಅಧಿಕಾರಿಗಳದ್ದೇ ಆಗಿದೆ.
ಪರಿಹಾರಕ್ಕಾಗಿ ರೈತರು ಸರ್ಕಾರದ ಹಿಂದೆ ಅಲೆಯಬಾರದು. ಸರ್ಕಾರದ ವ್ಯವಸ್ಥೆಯೇ ರೈತರ ನೆರವಿಗೆ ಬರಬೇಕು ಎಂಬುದು ನಮ್ಮ ನಿಲುವು.
ಎರಡು ಹೆಕ್ಟೇರ್ ಮಿತಿಯ ಬಗ್ಗೆಯೂ ವಿರೋಧ ಪಕ್ಷದವರು ಪ್ರಶ್ನೆ ಎತ್ತಿದ್ದಾರೆ. ಈ ಮಿತಿ ಕೇಂದ್ರ ಸರ್ಕಾರದ SDRF/NDRF ನಿಯಮಗಳ ಪ್ರಕಾರ 2005ರಿಂದಲೇ ಜಾರಿಯಲ್ಲಿದೆ ಎಂಬುದನ್ನು ಸ್ಪಷ್ಟಪಡಿಸುತ್ತೇನೆ. ಗರಿಷ್ಠ ಎರಡು ಹೆಕ್ಟೇರ್ ಪ್ರದೇಶದ ಬೆಳೆಹಾನಿಗೆ ಪರಿಹಾರ ನೀಡಬಹುದು ಎಂಬುದು ಈ ನಿಯಮದ ಅರ್ಥವೇ ಹೊರತು, ಎರಡು ಹೆಕ್ಟೇರ್ಗಿಂತ ಹೆಚ್ಚು ಜಮೀನು ಹೊಂದಿರುವ ರೈತರಿಗೆ ಪರಿಹಾರ ಸಿಗುವುದಿಲ್ಲ ಎಂದಲ್ಲ.
ಕರ್ನಾಟಕ ತೀವ್ರ ಬರ ಪರಿಸ್ಥಿತಿಯನ್ನು ಎದುರಿಸುತ್ತಿದೆ. ರಾಜ್ಯದ 226 ತಾಲ್ಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿದ್ದು, 57.93 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆಹಾನಿಯಾಗಿದೆ. ಕೇಂದ್ರ ಸರ್ಕಾರದ ಆರ್ಥಿಕ ನೆರವಿಗೆ ಕಾಯದೆ, ನಮ್ಮ ಸರ್ಕಾರವು ಅರ್ಹ ರೈತರಿಗೆ ಗರಿಷ್ಠ ₹2,500 ಮಧ್ಯಂತರ ಪರಿಹಾರ ನೀಡಲು ₹1,250 ಕೋಟಿ ಮೀಸಲಿಟ್ಟಿದೆ. ಸೋಮವಾರದ ನಂತರ ಪರಿಹಾರ ವಿತರಣೆ ಆರಂಭವಾಗಲಿದೆ.
ಇದು ಪರಿಹಾರದ ಮೊದಲ ಕಂತು ಮಾತ್ರ. ಪರಿಷ್ಕೃತ ನಿಯಮಗಳ ಪ್ರಕಾರ ಮಳೆಯಾಶ್ರಿತ ಬೆಳೆಗಳಿಗೆ ಪ್ರತಿ ಹೆಕ್ಟೇರ್ಗೆ ₹11,000, ನೀರಾವರಿ ಬೆಳೆಗಳಿಗೆ ₹22,000 ಹಾಗೂ ಬಹುವಾರ್ಷಿಕ ಮತ್ತು ತೋಟಗಾರಿಕೆ ಬೆಳೆಗಳಿಗೆ ₹30,000 ಪರಿಹಾರ ನೀಡಲು ಅವಕಾಶವಿದೆ. ನಿಗದಿತ ಮಿತಿಯೊಳಗೆ ರೈತರಿಗೆ ಸಲ್ಲಬೇಕಾದ ಉಳಿದ ಪರಿಹಾರವನ್ನು ಕೇಂದ್ರದಿಂದ ಅಗತ್ಯ NDRF ಅನುದಾನ ಬಿಡುಗಡೆಯಾದ ಕೂಡಲೇ ವಿತರಿಸಲಾಗುವುದು.
ರಾಜ್ಯ ಸರ್ಕಾರ ರೈತರ ನೆರವಿಗೆ ಮುಂದಾಗಿದೆ. ಈಗ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವೂ ಅದೇ ರೀತಿ ಸ್ಪಂದಿಸಬೇಕಾಗಿದೆ. ರಾಜ್ಯ ಸರ್ಕಾರದ ವಿರುದ್ಧ ಆಧಾರರಹಿತ ಆರೋಪಗಳನ್ನು ಮಾಡುವ ಬದಲು, ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದಿಂದ ಬರ ಪರಿಹಾರದ ಅನುದಾನವನ್ನು ತಕ್ಷಣ ಬಿಡುಗಡೆ ಮಾಡಿಸಲು ವಿರೋಧ ಪಕ್ಷದವರು ತಮ್ಮ ಪ್ರಭಾವ ಬಳಸಲಿ ಎಂದು ಆಗ್ರಹಿಸುತ್ತೇನೆ.
2024ರಲ್ಲಿ ನಮ್ಮ ರೈತರಿಗೆ ಬರ ಪರಿಹಾರ ಕೊಡಿಸಲು ಕರ್ನಾಟಕ ಸರ್ಕಾರ ಸುಪ್ರೀಂ ಕೋರ್ಟ್ ಮೆಟ್ಟಿಲೇರಬೇಕಾಯಿತು. ಪ್ರತಿ ಬಾರಿ ಬರ ಬಂದಾಗಲೂ ಕರ್ನಾಟಕ ಸುಪ್ರೀಂ ಕೋರ್ಟ್ ಬಾಗಿಲು ತಟ್ಟಬೇಕೇ?
ವಿರೋಧ ಪಕ್ಷದವರು ರಾಜಕೀಯ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಕರ್ನಾಟಕದ ರೈತರ ಪರವಾಗಿ ನಿಲ್ಲಬೇಕು. ಕೇಂದ್ರ ಸರ್ಕಾರ ತನ್ನ ಜವಾಬ್ದಾರಿಯನ್ನು ನಿಭಾಯಿಸುವಂತೆ ಒತ್ತಾಯಿಸಬೇಕು. ಬರ ಪರಿಹಾರಕ್ಕಾಗಿ ರಾಜ್ಯ ಸರ್ಕಾರ ಮತ್ತೊಮ್ಮೆ ಕಾನೂನು ಹೋರಾಟ ನಡೆಸಬೇಕಾದ ಪರಿಸ್ಥಿತಿ ಬರದಂತೆ ನೋಡಿಕೊಳ್ಳಬೇಕು.
ಕರ್ನಾಟಕದ ರೈತರು ಯಾರ ಬಳಿಯೂ ದಾನ ಕೇಳುತ್ತಿಲ್ಲ. ಈಗಾಗಲೇ ಜಾರಿಯಲ್ಲಿರುವ ವಿಪತ್ತು ಪರಿಹಾರ ನಿಯಮಗಳ ಪ್ರಕಾರ ತಮಗೆ ನ್ಯಾಯಯುತವಾಗಿ ಸಲ್ಲಬೇಕಾದ ನೆರವನ್ನು ಸಕಾಲದಲ್ಲಿ ಕೇಳುತ್ತಿದ್ದಾರೆ.
ನಮ್ಮ ರೈತರ ಜೀವನೋಪಾಯವನ್ನು ರಕ್ಷಿಸಲು ಕೇವಲ ತಾತ್ಕಾಲಿಕ ಪರಿಹಾರ ನೀಡಿದರೆ ಸಾಲದು. ರೈತರ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸುವ ಆಡಳಿತ ವ್ಯವಸ್ಥೆ, ಬರವನ್ನು ಎದುರಿಸುವ ಸಾಮರ್ಥ್ಯವಿರುವ ಕೃಷಿ ಪದ್ಧತಿಗಳು ಹಾಗೂ ಸಂಕಷ್ಟದ ಸಮಯದಲ್ಲಿ ರೈತರಿಗೆ ನೆರವಾಗುವ ವಿಶ್ವಾಸಾರ್ಹ ವ್ಯವಸ್ಥೆಯನ್ನು ಕರ್ನಾಟಕದಲ್ಲಿ ನಿರ್ಮಿಸುವುದು ನಮ್ಮ ಗುರಿಯಾಗಿದೆ.
ಬರ ಎಂಬುದು ನೈಸರ್ಗಿಕ ವಿಕೋಪವಾಗಿರಬಹುದು. ಆದರೆ ಅದರ ನಂತರ ಉಂಟಾಗುವ ರೈತರ ಸಂಕಷ್ಟವು ಆಡಳಿತದ ನಿರ್ಲಕ್ಷ್ಯದಿಂದ ಮತ್ತಷ್ಟು ಹೆಚ್ಚಾಗಲು ಎಂದಿಗೂ ಅವಕಾಶ ನೀಡಬಾರದು.
ಪರಿಹಾರ ಘೋಷಿಸಿದ ಮಾತ್ರಕ್ಕೆ ಸರ್ಕಾರದ ಜವಾಬ್ದಾರಿ ಮುಗಿಯುವುದಿಲ್ಲ. ಆ ಪರಿಹಾರ ರೈತರ ಕೈ ಸೇರಿದಾಗಲೇ ನಮ್ಮ ಜವಾಬ್ದಾರಿ ಪೂರ್ಣಗೊಳ್ಳುತ್ತದೆ. ನಮ್ಮ ಸರ್ಕಾರದ ಕಾರ್ಯವೈಖರಿಯನ್ನು ಅಳೆಯಬೇಕಾದ ಮಾನದಂಡವೂ ಇದೇ ಆಗಿರಬೇಕು. ಆ ಬದ್ಧತೆಯನ್ನು ನಾವು ಖಂಡಿತವಾಗಿ ಉಳಿಸಿಕೊಳ್ಳುತ್ತೇವೆ. -
Dr. G Parameshwara
@DrParameshwara
The allegations made by Leader of the Opposition Shri @RAshokaBJP regarding the State Government's drought relief guidelines are baseless and misleading.
The Opposition has portrayed 17 provisions in a Government Order as 17 hurdles for farmers. In reality, these provisions are administrative safeguards to ensure that assistance reaches every eligible farmer, prevent duplicate payments and maintain transparency.
Let me categorically assure our farmers that You do not have to submit fresh applications or run from one government office to another to receive drought relief.
We have integrated the FRUITS database, Digital Crop Survey, Parihara portal and existing revenue records to digitally identify beneficiaries and transfer assistance directly into their Aadhaar-linked bank accounts.
Manually processing over 1.5 crore records would have taken at least three months. Our digital mechanism eliminates unnecessary paperwork and places the responsibility of verification on the administration, not the farmer.
Farmers should not have to chase the Government for assistance. The Government's systems must work for the farmer.
The Opposition has also questioned the two-hectare ceiling. Let me clarify that this ceiling is prescribed under the Union Government's SDRF/NDRF norms and has existed since 2005. It limits the area eligible for input subsidy; it does not disqualify farmers owning more than two hectares.
Karnataka is facing an unprecedented drought. We have declared 226 taluks drought-affected, with crop damage across 57.93 lakh hectares.
Without waiting for financial assistance from the Union Government, our Government has announced ₹1,250 crore towards interim relief of up to ₹2,500 per eligible affected farmer. Payments will commence after Monday.
This is only the first tranche. Under the revised norms, eligible farmers are entitled to input subsidy at ₹11,000 per hectare for rainfed crops, ₹22,000 for irrigated crops and ₹30,000 for perennial and plantation crops, subject to prescribed limits. The remaining admissible assistance will be released upon receipt of the requisite NDRF funds.
The State Government has demonstrated its willingness to act. The BJP-led Union Government must now respond with the same urgency.
Instead of making baseless allegations against the State Government, I urge the Opposition to use its influence with the BJP-led Union Government to secure the immediate release of drought relief funds.
In 2024, Karnataka was compelled to approach the Supreme Court to secure assistance for our farmers.
Must Karnataka knock on the doors of the Supreme Court every time a drought strikes?
The Opposition must rise above political differences, stand with Karnataka's farmers and ensure that the Union Government fulfils its responsibility without forcing the State into another legal battle.
Karnataka's farmers are not seeking charity. They are seeking timely assistance under the established disaster-relief framework.
Our vision is to build a Karnataka where farmers' livelihoods are protected not merely through temporary relief, but through responsive institutions, resilient agriculture and dependable support systems.
Drought may be a natural calamity, but the suffering that follows must never be compounded by administrative indifference.
Our responsibility is not fulfilled by announcing relief. It is fulfilled when assistance reaches the farmer.
That is the standard by which our Government must be judged, and that is the commitment we will honour. -
Dr. G Parameshwara
@DrParameshwara
In view of the extensive crop damage across Karnataka, the assessed input subsidy requirement under the revised SDRF/NDRF norms stands at ₹7,943.55 crore, compared to the earlier estimate of ₹6,128.70 crore. This represents an increase of ₹1,814.85 crore in the assessed relief requirement.
Under the revised norms, eligible farmers with crop damage of 33% or more qualify for input assistance at ₹11,000 per hectare for rainfed crops, ₹22,000 for irrigated crops and ₹30,000 for perennial and plantation crops, subject to applicable norms.
These figures reflect the substantial financial assistance required to help farmers recover from widespread crop losses. Our government has undertaken a detailed assessment of the damage and the corresponding relief requirements. We remain committed to securing adequate assistance for affected farmers and supporting them in rebuilding their agricultural livelihoods.
ರಾಜ್ಯದಾದ್ಯಂತ ಸಂಭವಿಸಿರುವ ವ್ಯಾಪಕ ಬೆಳೆ ಹಾನಿಯ ಹಿನ್ನೆಲೆಯಲ್ಲಿ, ಪರಿಷ್ಕೃತ ಎಸ್ಡಿಆರ್ಎಫ್/ ಎನ್ಡಿಆರ್ಎಫ್ ಮಾನದಂಡಗಳಡಿ ₹7,943.55 ಕೋಟಿ ಇನ್ಪುಟ್ ಸಬ್ಸಿಡಿ ಪರಿಹಾರ ಅಗತ್ಯವೆಂದು ಅಂದಾಜಿಸಲಾಗಿದೆ. ಈ ಹಿಂದೆ ಅಂದಾಜಿಸಲಾಗಿದ್ದ ₹6,128.70 ಕೋಟಿಗೆ ಹೋಲಿಸಿದರೆ, ಪರಿಹಾರದ ಅಗತ್ಯ ಮೊತ್ತದಲ್ಲಿ ₹1,814.85 ಕೋಟಿ ಹೆಚ್ಚಳವಾಗಿದೆ.
ಪರಿಷ್ಕೃತ ಮಾನದಂಡಗಳ ಪ್ರಕಾರ, ಶೇ.33 ಅಥವಾ ಅದಕ್ಕಿಂತ ಹೆಚ್ಚು ಬೆಳೆ ಹಾನಿಯಾದ ಅರ್ಹ ರೈತರಿಗೆ ಒಣಭೂಮಿ ಬೆಳೆಗಳಿಗೆ ಪ್ರತಿ ಹೆಕ್ಟೇರ್ಗೆ ₹11,000, ನೀರಾವರಿ ಬೆಳೆಗಳಿಗೆ ₹22,000 ಹಾಗೂ ದೀರ್ಘಕಾಲಿಕ ಮತ್ತು ತೋಟಗಾರಿಕೆ ಬೆಳೆಗಳಿಗೆ ₹30,000 ಪರಿಹಾರ ನಿಗದಿಪಡಿಸಲಾಗಿದೆ.
ರೈತರ ಬೆಳೆ ನಷ್ಟಕ್ಕೆ ಸೂಕ್ತ ಪರಿಹಾರ ಒದಗಿಸುವ ನಿಟ್ಟಿನಲ್ಲಿ ನಮ್ಮ ಸರ್ಕಾರ ಅಗತ್ಯ ಕ್ರಮಗಳನ್ನು ಕೈಗೊಂಡಿದೆ. ಸಂಕಷ್ಟದಲ್ಲಿರುವ ಅನ್ನದಾತರಿಗೆ ಸಕಾಲದಲ್ಲಿ ಸಮರ್ಪಕ ನೆರವು ದೊರಕಿಸಿಕೊಟ್ಟು, ಅವರ ಕೃಷಿ ಚಟುವಟಿಕೆಗಳು ಮತ್ತೆ ಸಹಜ ಸ್ಥಿತಿಗೆ ಮರಳಲು ಸರ್ಕಾರ ಬದ್ಧವಾಗಿದೆ. -
Dr. G Parameshwara
@DrParameshwara
The impact of drought in Karnataka extends well beyond traditional agricultural crops. The joint crop-loss survey has recorded damage to 4.01 lakh hectares of horticultural crops, affecting farmers cultivating vegetables, commercial crops and plantations.
Onion cultivation has been affected across 1.26 lakh hectares, followed by coconut across 0.87 lakh hectares. Red chilli and arecanut crops have also suffered damage across 0.42 lakh hectares each.
Horticulture and plantation crops are vital sources of income for many farming families. Damage to these crops can have serious financial consequences, particularly where farmers have invested heavily in cultivation and maintenance. Our government is committed to addressing the difficulties faced by horticulture farmers and ensuring that their losses receive due consideration in relief assessments and assistance.
ಬರದ ಪರಿಣಾಮವು ಕೃಷಿ ಬೆಳೆಗಳ ಜೊತೆಗೆ ತೋಟಗಾರಿಕೆ ಬೆಳೆಗಳ ಮೇಲೂ ತೀವ್ರವಾಗಿ ಬೀರಿದೆ. ಬರಪೀಡಿತ ತಾಲ್ಲೂಕುಗಳಲ್ಲಿ ನಡೆಸಿದ ಜಂಟಿ ಸಮೀಕ್ಷೆಯ ಪ್ರಕಾರ, 4.01 ಲಕ್ಷ ಹೆಕ್ಟೇರ್ ತೋಟಗಾರಿಕೆ ಬೆಳೆಗಳು ಹಾನಿಗೀಡಾಗಿವೆ. ಇದರಿಂದ ತರಕಾರಿ, ವಾಣಿಜ್ಯ ಹಾಗೂ ತೋಟಗಾರಿಕೆ ಬೆಳೆಗಳನ್ನು ಅವಲಂಬಿಸಿರುವ ರೈತರು ನಷ್ಟ ಅನುಭವಿಸುವಂತಾಗಿದೆ.
1.26 ಲಕ್ಷ ಹೆಕ್ಟೇರ್ ಪ್ರದೇಶದ ಈರುಳ್ಳಿ ಬೆಳೆ ಹಾನಿಗೀಡಾಗಿದ್ದು, 0.87 ಲಕ್ಷ ಹೆಕ್ಟೇರ್ ಪ್ರದೇಶದ ತೆಂಗಿನ ಬೆಳೆ ನಷ್ಟವಾಗಿದೆ. ಕೆಂಪು ಮೆಣಸಿನಕಾಯಿ ಹಾಗೂ ಅಡಿಕೆ ಬೆಳೆಗಳು ತಲಾ 0.42 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಹಾನಿಗೊಳಗಾಗಿವೆ.
ತೋಟಗಾರಿಕೆ ಹಾಗೂ ದೀರ್ಘಕಾಲಿಕ ಬೆಳೆಗಳು ಅನೇಕ ರೈತ ಕುಟುಂಬಗಳ ಪ್ರಮುಖ ಆದಾಯದ ಮೂಲಗಳಾಗಿವೆ. ಇಂತಹ ಬೆಳೆಗಳ ನಷ್ಟವು ರೈತರು ಮಾಡಿದ ಬಂಡವಾಳ ಹೂಡಿಕೆ ಹಾಗೂ ನಿರ್ವಹಣಾ ವೆಚ್ಚದ ಮೇಲೂ ಪರಿಣಾಮ ಬೀರುತ್ತದೆ. ತೋಟಗಾರಿಕೆ ಬೆಳೆಗಾರರ ಸಂಕಷ್ಟಕ್ಕೆ ಸ್ಪಂದಿಸಿ, ಬೆಳೆ ನಷ್ಟದ ಮೌಲ್ಯಮಾಪನದಲ್ಲಿ ಅವರ ನಷ್ಟವನ್ನೂ ಪರಿಗಣಿಸಿ, ಅಗತ್ಯ ಪರಿಹಾರ ಹಾಗೂ ನೆರವು ಒದಗಿಸಲು ನಮ್ಮ ಸರ್ಕಾರ ಬದ್ಧವಾಗಿದೆ. -
Dr. G Parameshwara
@DrParameshwara
The drought has dealt a severe blow to Karnataka's agricultural sector, damaging crops across 53.92 lakh hectares. Particularly concerning is that 40.65 lakh hectares of the affected agricultural area belong to small and marginal farmers, who are especially vulnerable to such losses.
Major crops, including maize, tur, cotton, ragi and sugarcane, have suffered extensive damage. Green gram, soybean and paddy are also among the affected crops, highlighting the widespread impact on both food production and commercial agriculture.
For farming households, crop failure means lost income and growing financial uncertainty. Our government recognises the hardships faced by farmers, particularly small and marginal cultivators, and remains committed to providing the support necessary to help them overcome these losses and restore their livelihoods.
ಬರದಿಂದಾಗಿ ಕರ್ನಾಟಕದಲ್ಲಿ 53.92 ಲಕ್ಷ ಹೆಕ್ಟೇರ್ ಕೃಷಿ ಬೆಳೆಗಳು ಹಾನಿಗೀಡಾಗಿವೆ. ಅದರಲ್ಲೂ ಹಾನಿಗೀಡಾದ ಕೃಷಿ ಪ್ರದೇಶದ 40.65 ಲಕ್ಷ ಹೆಕ್ಟೇರ್ ಭೂಮಿ ಸಣ್ಣ ಮತ್ತು ಅತಿಸಣ್ಣ ರೈತರಿಗೆ ಸೇರಿರುವುದು ತೀವ್ರ ಕಳವಳಕಾರಿ ಸಂಗತಿಯಾಗಿದೆ. ಇಂತಹ ನಷ್ಟಗಳು ರೈತರ ಬದುಕಿನ ಮೇಲೆ ತೀವ್ರ ಪರಿಣಾಮ ಬೀರುತ್ತವೆ.
ಮೆಕ್ಕೆಜೋಳ, ತೊಗರಿ, ಹತ್ತಿ, ರಾಗಿ ಹಾಗೂ ಕಬ್ಬು ಸೇರಿದಂತೆ ಪ್ರಮುಖ ಬೆಳೆಗಳಿಗೆ ವ್ಯಾಪಕ ಹಾನಿಯಾಗಿದೆ. ಹೆಸರು, ಸೋಯಾಬೀನ್ ಹಾಗೂ ಭತ್ತದ ಬೆಳೆಗಳೂ ಹಾನಿಗೀಡಾಗಿದ್ದು, ಆಹಾರ ಉತ್ಪಾದನೆ ಹಾಗೂ ವಾಣಿಜ್ಯ ಕೃಷಿ ಎರಡರ ಮೇಲೂ ಬರ ಗಂಭೀರ ಪರಿಣಾಮ ಬೀರಿದೆ.
ಬೆಳೆ ನಷ್ಟದಿಂದ ಸಂಕಷ್ಟಕ್ಕೆ ಸಿಲುಕಿರುವ ರೈತ ಕುಟುಂಬಗಳಿಗೆ ನೆರವಾಗಲು ನಮ್ಮ ಸರ್ಕಾರ ಬದ್ಧವಾಗಿದೆ. ವಿಶೇಷವಾಗಿ ಸಣ್ಣ ಮತ್ತು ಅತಿಸಣ್ಣ ರೈತರ ಸಂಕಷ್ಟಕ್ಕೆ ಸ್ಪಂದಿಸಿ, ಅವರ ಬದುಕು ಹಾಗೂ ಕೃಷಿ ಚಟುವಟಿಕೆಗಳು ಮತ್ತೆ ಚೇತರಿಸಿಕೊಳ್ಳಲು ಸಕಾಲದಲ್ಲಿ ಅಗತ್ಯ ನೆರವು ಒದಗಿಸಲಿದೆ. -
Dr. G Parameshwara
@DrParameshwara
Karnataka's farmers are facing a devastating agricultural crisis, with estimated crop losses amounting to ₹62,481.88 crore across 226 drought-affected taluks.
The joint crop-loss survey has recorded damage ranging from 33% to 100%, with a substantial portion of the affected area suffering losses exceeding 50%.
These figures represent more than an economic setback. They reflect the loss of farmers' hard work, investments and expected incomes, placing immense pressure on rural households.
Our government stands firmly with the farmers affected by this crisis. We are committed to ensuring that their losses are properly assessed and that they receive timely and adequate assistance to recover from this hardship and rebuild their livelihoods.
ಬರ ಘೋಷಿತ 226 ತಾಲ್ಲೂಕುಗಳಲ್ಲಿ ಅಂದಾಜು ₹62,481.88 ಕೋಟಿ ಮೌಲ್ಯದ ಬೆಳೆ ನಷ್ಟ ಉಂಟಾಗಿದ್ದು, ರಾಜ್ಯದ ರೈತರು ತೀವ್ರ ಕೃಷಿ ಸಂಕಷ್ಟ ಎದುರಿಸುತ್ತಿದ್ದಾರೆ.
ಕೃಷಿ ಮತ್ತು ತೋಟಗಾರಿಕೆ ಇಲಾಖೆಗಳ ಜಂಟಿ ಸಮೀಕ್ಷೆಯ ಪ್ರಕಾರ, ಶೇ.33ರಿಂದ ಶೇ.100ರವರೆಗೆ ಬೆಳೆ ಹಾನಿಯಾಗಿದ್ದು, ಹಾನಿಗೀಡಾದ ಬಹುಪಾಲು ಪ್ರದೇಶಗಳಲ್ಲಿ ಶೇ.50ಕ್ಕಿಂತ ಹೆಚ್ಚಿನ ನಷ್ಟ ಸಂಭವಿಸಿದೆ.
ಈ ಅಂಕಿಅಂಶಗಳು ಕೇವಲ ಆರ್ಥಿಕ ನಷ್ಟವನ್ನಷ್ಟೇ ಸೂಚಿಸದೆ, ರೈತರ ಕಠಿಣ ಪರಿಶ್ರಮ, ಕೈಲಿದ್ದ ಬಂಡವಾಳ ನಷ್ಟಗೊಂಡಿರುವುದನ್ನು, ಆದಾಯದ ನಿರೀಕ್ಷೆಯ ಭರವಸೆ ಭಂಗಗೊಂಡಿರುವುದನ್ನು ತೆರೆದಿಡುತ್ತದೆ. ಇದರಿಂದ ಗ್ರಾಮೀಣ ಕುಟುಂಬಗಳು ತೀವ್ರ ಆರ್ಥಿಕ ಹಾಗೂ ಮಾನಸಿಕ ಒತ್ತಡಕ್ಕೆ ಈಡಾಗಿವೆ.
ಇಂತಹ ಕಠಿಣ ಪರಿಸ್ಥಿತಿಯಲ್ಲಿ ನಮ್ಮ ಸರ್ಕಾರ ರೈತರ ಬೆನ್ನಿಗೆ ದೃಢವಾಗಿ ನಿಲ್ಲಲಿದೆ. ಬೆಳೆ ನಷ್ಟದ ಸಮರ್ಪಕ ಮೌಲ್ಯಮಾಪನ ನಡೆಸಿ, ಸಂಕಷ್ಟದಿಂದ ಚೇತರಿಸಿಕೊಂಡು ಮತ್ತೆ ಕೃಷಿ ಬದುಕು ಕಟ್ಟಿಕೊಳ್ಳಲು ರೈತರಿಗೆ ಸಕಾಲದಲ್ಲಿ ಸೂಕ್ತ ಹಾಗೂ ಸಮರ್ಪಕ ನೆರವು ಒದಗಿಸಲು ಬದ್ಧವಾಗಿದೆ. -
Dr. G Parameshwara
@DrParameshwara
The scale of crop damage across Karnataka is deeply concerning. A joint survey conducted by the Revenue, Agriculture and Horticulture Departments in 226 drought-affected taluks has revealed extensive losses to both agricultural and horticultural crops.
A total of 57.93 lakh hectares of crops have been affected, including 53.92 lakh hectares of agricultural crops and 4.01 lakh hectares of horticultural crops. These findings underline the severity of the agricultural crisis and the challenges confronting our farming communities.
Our farmers are the backbone of Karnataka's rural economy. Our government stands firmly with the affected farming communities and is committed to securing timely and adequate assistance to help them recover from these losses.
ಬರ ಪರಿಸ್ಥಿತಿಯಿಂದಾಗಿ ರಾಜ್ಯದಾದ್ಯಂತ ಹಾನಿಗೊಂಡಿರುವ ಬೆಳೆಯ ಪ್ರಮಾಣ ತೀವ್ರ ಕಳವಳಕಾರಿಯಾಗಿದೆ. 226 ಬರಪೀಡಿತ ತಾಲ್ಲೂಕುಗಳಲ್ಲಿ ಕಂದಾಯ, ಕೃಷಿ ಹಾಗೂ ತೋಟಗಾರಿಕೆ ಇಲಾಖೆಗಳು ಜಂಟಿಯಾಗಿ ನಡೆಸಿದ ಸಮೀಕ್ಷೆಯಲ್ಲಿ ಕೃಷಿ ಮತ್ತು ತೋಟಗಾರಿಕೆ ಬೆಳೆಗಳಿಗೆ ವ್ಯಾಪಕ ಹಾನಿಯಾಗಿರುವುದು ದೃಢಪಟ್ಟಿದೆ.
ಒಟ್ಟು 57.93 ಲಕ್ಷ ಹೆಕ್ಟೇರ್ ಪ್ರದೇಶದ ಬೆಳೆಗಳು ಹಾನಿಗೀಡಾಗಿದ್ದು, ಇದರಲ್ಲಿ 53.92 ಲಕ್ಷ ಹೆಕ್ಟೇರ್ ಕೃಷಿ ಬೆಳೆಗಳು ಹಾಗೂ 4.01 ಲಕ್ಷ ಹೆಕ್ಟೇರ್ ತೋಟಗಾರಿಕೆ ಬೆಳೆಗಳು ಸೇರಿವೆ. ಈ ಸಮೀಕ್ಷೆಯ ವರದಿಯು ಕೃಷಿ ಕ್ಷೇತ್ರ ಎದುರಿಸುತ್ತಿರುವ ಬಿಕ್ಕಟ್ಟಿನ ತೀವ್ರತೆ ಹಾಗೂ ರೈತ ಸಮುದಾಯದ ಸಂಕಷ್ಟವನ್ನು ಎತ್ತಿ ತೋರಿಸಿದೆ.
ನಾಡಿನ ಗ್ರಾಮೀಣ ಆರ್ಥಿಕತೆಯ ಬೆನ್ನೆಲುಬಾಗಿರುವ ಅನ್ನದಾತರ ಸಂಕಷ್ಟಕ್ಕೆ ಸ್ಪಂದಿಸಲು ನಮ್ಮ ಸರ್ಕಾರ ಬದ್ಧವಾಗಿದೆ. ಬೆಳೆ ನಷ್ಟದಿಂದ ಸಂಕಷ್ಟಕ್ಕೀಡಾಗಿರುವ ರೈತರು ಚೇತರಿಸಿಕೊಳ್ಳಲು ಅನುವಾಗುವಂತೆ ಸಕಾಲದಲ್ಲಿ ಸೂಕ್ತ ಹಾಗೂ ಸಮರ್ಪಕ ನೆರವು ಒದಗಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರವು ಅಗತ್ಯ ಕ್ರಮಗಳನ್ನು ಕೈಗೊಳ್ಳಲಿದೆ. -
Dr. G Parameshwara
@DrParameshwara
My heartfelt tributes to Bharat Ratna Sardar Vallabhbhai Patel, the Iron Man of India, on his 151st birth anniversary, observed as National Unity Day.
A towering freedom fighter, he led the Kheda and Bardoli Satyagrahas and stood alongside Mahatma Gandhi in India's struggle for independence.
As India's first Deputy Prime Minister and Home Minister, he played a historic role in integrating hundreds of princely states, laying the foundation for a strong and united India.
On National Unity Day, we honour his remarkable legacy and reaffirm our commitment to national unity, social harmony and the spirit of unity in diversity. -
Dr. G Parameshwara
@DrParameshwara
My heartfelt tributes to Bharat Ratna Smt. Indira Gandhi, India's Iron Lady and former Prime Minister, on her 42nd death anniversary.
From organising the Vanar Sena during the freedom struggle to working closely with Pandit Jawaharlal Nehru in the early years of independent India, her life was dedicated to the nation's progress.
As Prime Minister, she took bold decisions that transformed India. Bank nationalisation, land reforms, and her historic ‘Garibi Hatao’ campaign reflected her commitment to empowering the poor and marginalised.
Her decisive leadership during the 1971 Bangladesh Liberation War, uncompromising stand on national security and independent foreign policy established India as a nation that would never bow to foreign pressure or compromise its sovereignty.
A leader of extraordinary courage and conviction, she placed the nation's interests above everything else and remained steadfast in her service until her tragic assassination.
Her sacrifice, fearless leadership and commitment to a strong, self-reliant and inclusive India will continue to inspire generations. -
Dr. G Parameshwara
@DrParameshwara
ಉತ್ತರಾಖಂಡದಲ್ಲಿ ಸಂಭವಿಸಿದ ಹೆಲಿಕಾಪ್ಟರ್ ದುರಂತದಲ್ಲಿ ಕರ್ನಾಟಕ ಮೂಲದ ಅರುಣ್ ಸಾಳುಂಕೆ, ಪ್ರತಾಪ್, ಶಂಕರೇಗೌಡ, ಸುಧೀರ್ ಕೆ., ಎಚ್.ಎಸ್. ನಟರಾಜ್ ಹಾಗೂ ಪೈಲಟ್ ಕ್ಯಾಪ್ಟನ್ ಹಿಮಾಂಶು ಅವರು ಮೃತಪಟ್ಟಿರುವ ಸುದ್ದಿ ಕೇಳಿ ಅತೀವ ದುಃಖವಾಯಿತು.
ಭಗವಂತನು ಮೃತರ ಆತ್ಮಕ್ಕೆ ಶಾಂತಿಯನ್ನು ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ. ದುಃಖತಪ್ತ ಕುಟುಂಬಗಳ ಶೋಕದಲ್ಲಿ ನಾನೂ ಭಾಗಿ. ಅವರಿಗೆ ನನ್ನ ಸಾಂತ್ವನಗಳು.
ಮೃತರ ಪಾರ್ಥಿವ ಶರೀರವನ್ನು ರಾಜ್ಯಕ್ಕೆ ತರಲು ನಮ್ಮ ಸರ್ಕಾರವು ಉತ್ತರಾಖಂಡದ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿದೆ. ಮೃತರ ಕುಟುಂಬಗಳಿಗೆ ಎಲ್ಲ ರೀತಿಯ ನೆರವು ಒದಗಿಸಲಾಗುವುದು.
Deeply grieved by the tragic helicopter crash in Uttarakhand that claimed the lives of five Kannadigas - Prathap, Arun Salunke, Shankaregowda, Sudheer K. and H.S. Nataraj - and pilot Capt. Himanshu.
My heartfelt condolences to the bereaved families. May the departed souls rest in peace.
The Karnataka Government is coordinating with Uttarakhand authorities to bring back the mortal remains and extend all necessary assistance to the bereaved families. -
Dr. G Parameshwara
@DrParameshwara
ಪ್ರಸಕ್ತ ಸಾಲಿನ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾಗಿರುವ ಎಲ್ಲ ಸಾಧಕರಿಗೆ ಹೃತ್ಪೂರ್ವಕ ಅಭಿನಂದನೆಗಳು.
ಸಾಹಿತ್ಯ, ಸಂಗೀತ, ಕಲೆ, ಜಾನಪದ, ಕೃಷಿ, ಪರಿಸರ, ಸಮಾಜಸೇವೆ, ಮಾಧ್ಯಮ, ಶಿಕ್ಷಣ, ಕ್ರೀಡೆ, ವಿಜ್ಞಾನ ಮತ್ತು ತಂತ್ರಜ್ಞಾನ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ತಮ್ಮದೇ ಆದ ಛಾಪು ಮೂಡಿಸಿ, ಕನ್ನಡ ನಾಡು, ನುಡಿ ಮತ್ತು ಸಂಸ್ಕೃತಿಯ ಹಿರಿಮೆಯನ್ನು ಹೆಚ್ಚಿಸಿರುವ ಸಾಧಕರಿಗೆ ಈ ಗೌರವ ಸಂದಿರುವುದು ಸಂತಸದ ಸಂಗತಿ.
ನಿಮ್ಮೆಲ್ಲರ ಸಾಧನೆ ಹೀಗೆಯೇ ಮುಂದುವರಿಯಲಿ ಮತ್ತು ಮುಂದಿನ ಪೀಳಿಗೆಗೆ ಸ್ಫೂರ್ತಿಯಾಗಲಿ ಎಂದು ಹಾರೈಸುತ್ತೇನೆ.
Dr. G Parameshwara
@DrParameshwara
Warm congratulations to all the distinguished achievers selected for this year’s Karnataka Rajyotsava Awards.
From literature, music and the arts to agriculture, education, sports, science, technology, media and public service, each awardee has made a meaningful contribution in their field and added to the pride of Karnataka.
May this recognition inspire you to continue your remarkable work and encourage many more in the years ahead. -
Dr. G Parameshwara
@DrParameshwara
ಬದರಿನಾಥದಿಂದ ಡೆಹ್ರಾಡೂನ್ಗೆ ತೆರಳುತ್ತಿದ್ದ ಹೆಲಿಕಾಪ್ಟರ್ ಒಂದು ನಿಯಂತ್ರಣ ಕೇಂದ್ರದ ಸಂಪರ್ಕ ಕಳೆದುಕೊಂಡಿರುವ ವಿಚಾರ ನಮ್ಮ ಗಮನಕ್ಕೆ ಬಂದಿದೆ.
ಇದರಲ್ಲಿ ಐವರು ಕರ್ನಾಟಕದ ಪ್ರಯಾಣಿಕರು ಪ್ರಯಾಣಿಸುತ್ತಿರುವ ಬಗ್ಗೆಯೂ ಮಾಹಿತಿ ಇದ್ದು, ವಿಷಯ ತಿಳಿದ ತಕ್ಷಣವೇ ಚಮೋಲಿ ಜಿಲ್ಲೆಯ ಎಸ್.ಪಿ ಅವರನ್ನು ಸಂಪರ್ಕಿಸಿ, ಅದರಲ್ಲಿ ಪ್ರಯಾಣಿಸುತ್ತಿದ್ದವರ ಸುರಕ್ಷತೆಯ ಬಗ್ಗೆ ಮಾಹಿತಿ ಪಡೆಯಲಾಗಿದೆ.
ಸ್ಥಳೀಯ ಆಡಳಿತವು ಕಾಣೆಯಾಗಿರುವ ಹೆಲಿಕಾಪ್ಟರ್ ಅನ್ನು ಹುಡುಕುವ ಹಾಗೂ ಅದರಲ್ಲಿ ಪ್ರಯಾಣಿಸುತ್ತಿದ್ದವರನ್ನು ರಕ್ಷಿಸುವ ಕಾರ್ಯದಲ್ಲಿ ನಿರತವಾಗಿದೆ. ಯಾವುದೇ ದುರಂತ ಸಂಭವಿಸದೆ ಎಲ್ಲರೂ ಕ್ಷೇಮವಾಗಿ ಮರಳಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ.
Concerned to learn that a helicopter travelling from Badrinath to Dehradun has lost contact, with five passengers from Karnataka reportedly on board.
I immediately contacted the Chamoli district SP and sought an update on the safety of the passengers. The local administration is carrying out search and rescue efforts to locate the helicopter.
I sincerely pray that everyone on board is safe and returns unharmed. -
Dr. G Parameshwara
@DrParameshwara
ನಮ್ಮ ಸರ್ಕಾರದ ಮಹತ್ವಾಕಾಂಕ್ಷೆಯ ಗೃಹಲಕ್ಷ್ಮಿ ಯೋಜನೆಯು ಮಹಿಳೆಯರ ಆರ್ಥಿಕ ಸ್ವಾವಲಂಬನೆಗೆ ನೆರವಾಗುವುದರ ಜೊತೆಗೆ ಅವರ ಪ್ರತಿಭೆ ಮತ್ತು ಕನಸುಗಳ ಸಾಕಾರಕ್ಕೂ ಆಸರೆಯಾಗುತ್ತಿದೆ.
ಬಾಗಲಕೋಟೆ ಜಿಲ್ಲೆಯ ಬೀಳಗಿ ಪಟ್ಟಣದ ಸಿದ್ಧೇಶ್ವರ ನಗರದ ನೀಲಮ್ಮ ಶಂಕರ ಕೋಟಿ ಅವರು ಗೃಹಲಕ್ಷ್ಮಿ ಯೋಜನೆಯಡಿ ಪಡೆದ ಹಣದಲ್ಲಿ ₹35,000 ಉಳಿತಾಯ ಮಾಡಿ ತಮ್ಮದೇ ಕಥಾ ಸಂಕಲನವನ್ನು ಪ್ರಕಟಿಸುವ ಮೂಲಕ ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆಯ ಹೆಜ್ಜೆಯಿಟ್ಟಿದ್ದಾರೆ.
ಗೃಹಲಕ್ಷ್ಮಿ ಯೋಜನೆಯು ಕುಟುಂಬದ ಆರ್ಥಿಕ ಅಗತ್ಯಗಳನ್ನು ಪೂರೈಸುವುದಕ್ಕಷ್ಟೇ ಸೀಮಿತವಾಗದೆ, ಮಹಿಳೆಯರು ತಮ್ಮ ಆಸಕ್ತಿ, ಪ್ರತಿಭೆ ಮತ್ತು ಸೃಜನಶೀಲತೆಗೆ ಹೊಸ ಅವಕಾಶಗಳನ್ನು ಕಲ್ಪಿಸಿಕೊಳ್ಳಲು ನೆರವಾಗುತ್ತಿದೆ. ನೀಲಮ್ಮ ಅವರ ಸಾಧನೆ ಇದಕ್ಕೊಂದು ಉತ್ತಮ ನಿದರ್ಶನ.
ಮಹಿಳೆಯರ ಕೈಗೆ ಆರ್ಥಿಕ ಶಕ್ತಿ ನೀಡಿದರೆ, ಅದು ಅವರ ಆತ್ಮವಿಶ್ವಾಸವನ್ನು ಹೆಚ್ಚಿಸುವುದರ ಜೊತೆಗೆ ಹೊಸ ಸಾಧನೆಗಳಿಗೂ ದಾರಿಯಾಗುತ್ತದೆ ಎಂಬುದಕ್ಕೆ ಈ ಯಶೋಗಾಥೆಯೇ ಸಾಕ್ಷಿ. ಮಹಿಳೆಯರ ಸ್ವಾವಲಂಬನೆ ಮತ್ತು ಸಬಲೀಕರಣದ ಆಶಯದೊಂದಿಗೆ ನಮ್ಮ ಸರ್ಕಾರದ ಗೃಹಲಕ್ಷ್ಮಿ ಯೋಜನೆಯು ಯಶಸ್ವಿಯಾಗಿ ಮುನ್ನಡೆಯುತ್ತಿದೆ.
Our Government’s Gruha Lakshmi scheme is not only supporting women financially, but also helping them realise their dreams.
Neelamma Shankar Koti of Bilagi, Bagalkot district, saved ₹35,000 from Gruha Lakshmi assistance and used it to publish her own collection of short stories.
Her achievement shows how financial support can strengthen women’s confidence, creativity and independence. Gruha Lakshmi continues to empower women to turn their aspirations into achievements.
#gruhalakshmi -
Dr. G Parameshwara
@DrParameshwara
ಮುತ್ಸದ್ದಿ ರಾಜಕಾರಣಿ, ಮಾಜಿ ಸಚಿವರು ಹಾಗೂ ಕೆಎಲ್ಇ ಸಂಸ್ಥೆಯ ಮಾಜಿ ಅಧ್ಯಕ್ಷರಾಗಿದ್ದ ಶಿವಾನಂದ ಕೌಜಲಗಿ ಅವರ ನಿಧನದ ಸುದ್ದಿ ತಿಳಿದು ತೀವ್ರ ದುಃಖವಾಯಿತು.
ಶಾಸಕರಾಗಿ, ಸಚಿವರಾಗಿ ಹಾಗೂ ಸಂಸದರಾಗಿ ಜನಸೇವೆ ಸಲ್ಲಿಸಿದ್ದ ಅವರು, ಶಿಕ್ಷಣ ಮತ್ತು ಸಮಾಜಸೇವೆಯಲ್ಲಿ ತಮ್ಮದೇ ಆದ ಮಹತ್ವದ ಕೊಡುಗೆ ನೀಡಿದ್ದಾರೆ. ದೀರ್ಘಕಾಲದ ಸಾರ್ವಜನಿಕ ಜೀವನದಲ್ಲಿ ಅಪಾರ ಅನುಭವ, ಸೇವಾ ಬದ್ಧತೆ ಹಾಗೂ ದೂರದೃಷ್ಟಿಯಿಂದ ಗುರುತಿಸಿಕೊಂಡಿದ್ದ ಅವರ ಅಗಲಿಕೆ ರಾಜಕೀಯ ಮತ್ತು ಶೈಕ್ಷಣಿಕ ಕ್ಷೇತ್ರಕ್ಕೆ ತುಂಬಲಾರದ ನಷ್ಟ.
ಭಗವಂತನು ಶ್ರೀಯುತರ ಆತ್ಮಕ್ಕೆ ಚಿರಶಾಂತಿಯನ್ನು ಕರುಣಿಸಲಿ. ಅವರ ಕುಟುಂಬ ವರ್ಗಕ್ಕೆ, ಅಭಿಮಾನಿಗಳಿಗೆ ಈ ನೋವನ್ನು ಭರಿಸುವ ಶಕ್ತಿಯನ್ನು ನೀಡಲಿ ಎಂದು ಪ್ರಾರ್ಥಿಸುತ್ತೇನೆ. -
Dr. G Parameshwara
@DrParameshwara
ಕಳೆದೊಂದು ಶತಮಾನದಲ್ಲೇ ಕೇಳು ಕಂಡರಿಯದಂತಹ ಭೀಕರ ಬರ ರಾಜ್ಯವನ್ನು ಆವರಿಸಿದೆ. ಮಳೆಕೊರತೆಯಿಂದಾಗಿ ಜಲಮೂಲಗಳು ಬತ್ತಿ ಹೋಗಿ ಕೃಷಿ, ಕುಡಿಯುವ ನೀರು ಹಾಗೂ ಜಾನುವಾರಗಳ ಮೇವಿಗೂ ಸಂಕಷ್ಟ ಎದುರಾಗಿದೆ. ಇಂತಹ ಸಂಕಷ್ಟ ಪರಿಸ್ಥಿತಿಯಲ್ಲಿ ಕೇಂದ್ರದ ನೆರವಿಗಾಗಿ ಕಾಯದೆ ರಾಜ್ಯ ಸರ್ಕಾರವೇ ರೈತರ ನೆರವಿಗೆ ಧಾವಿಸಿದ್ದು, ಬೆಳೆಹಾನಿಯ ಮೊದಲ ಕಂತಿನ ಪರಿಹಾರವಾಗಿ ಪ್ರತಿ ರೈತನಿಗೆ ರೂ.2,500 ಬಿಡುಗಡೆಗೆ ಆದೇಶ ಹೊರಡಿಸಿದೆ.
ರಾಜ್ಯದ 226 ತಾಲ್ಲೂಕುಗಳನ್ನು ಈಗಾಗಲೇ ಬರಪೀಡಿತ ತಾಲ್ಲೂಕುಗಳು ಎಂದು ಘೋಷಣೆ ಮಾಡಲಾಗಿದ್ದು, ಇಲ್ಲಿನ 57.93 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆಹಾನಿ ಸಂಭವಿಸಿದೆ. ತೀವ್ರ ಬರದಿಂದಾಗಿ ಬಿತ್ತಿದ ಬೆಳೆ ನಷ್ಟಗೊಂಡು ಭವಿಷ್ಯದ ಬಗ್ಗೆ ಚಿಂತಿತರಾಗಿದ್ದ ಅನ್ನದಾತರ ಬದುಕಿನಲ್ಲಿ ನಮ್ಮ ಈ ನಿರ್ಧಾರವು ಭರವಸೆ ಮೂಡಿಸಿದೆ.
Karnataka is facing one of the most severe droughts witnessed in the past century. With rainfall failure drying up water sources, the State is facing serious challenges in agriculture, drinking water supply and fodder availability for livestock.
Without waiting for assistance from the Centre, our Government has stepped in to support farmers and has ordered the release of ₹2,500 per farmer as the first instalment of crop-loss relief.
A total of 226 taluks have already been declared drought-affected, with crop loss reported across 57.93 lakh hectares. For farmers who lost their sown crops to the severe drought and were anxious about the future, this decision has brought a measure of hope and reassurance. -
Dr. G Parameshwara
@DrParameshwara
ಬಾಲನಟನಾಗಿ ಕನ್ನಡ ಚಿತ್ರರಂಗ ಪ್ರವೇಶಿಸಿ ತಮ್ಮ ಅದ್ಭುತ ಅಭಿನಯದ ಮೂಲಕ ಕನ್ನಡಿಗರ ಮನಗೆದ್ದ ಡಾ. ಪುನೀತ್ ರಾಜ್ಕುಮಾರ್ ಅವರ ಪುಣ್ಯಸ್ಮರಣೆಯಂದು ಗೌರವಪೂರ್ವಕ ನಮನಗಳನ್ನು ಸಲ್ಲಿಸುತ್ತೇನೆ.
ತೆರೆಯ ಮೇಲೆ ತಮ್ಮ ಪ್ರತಿಭೆಯಿಂದ ಮನರಂಜಿಸಿದ ಅಪ್ಪು, ತೆರೆಯಾಚೆಗಿನ ಮಾನವೀಯ ಕಾಳಜಿ ಮತ್ತು ಉದಾರ ಸೇವೆಯ ಮೂಲಕ ಅನೇಕರ ಬದುಕಿನಲ್ಲಿ ಭರವಸೆಯ ಬೆಳಕಾದವರು. ಅವರ ಆದರ್ಶಗಳು ಸದಾ ಸ್ಮರಣೀಯ. -
Dr. G Parameshwara
@DrParameshwara
Deeply saddened by the tragic passing of Neeraj Yadav, a three-time Asian Para Games gold medallist.
An accomplished para-athlete who excelled in javelin and discus throw, his remarkable achievements brought immense pride to our nation.
My heartfelt condolences to his family, friends and the sporting fraternity. May his soul rest in peace.
Life's challenges can sometimes feel overwhelming, but no one should have to face them alone. Seeking help is a sign of strength, not weakness. Every life is precious, and every struggle deserves compassion and support. -
Dr. G Parameshwara
@DrParameshwara
During the inaugural ceremony of the badminton tournament organised by the Karnataka Badminton Association in Bengaluru today, I experienced a slight increase in my heart rate. As a precaution, I immediately went to the hospital and received the necessary medical care.
Out of concern for my health, Chief Minister Shri D.K. Shivakumar, former Chief Minister Shri Siddaramaiah, and many other well-wishers visited the hospital and enquired about my well-being. Many others also called to check on my health. I am grateful to everyone for your love, concern and good wishes.
There is no need for anyone to worry. By God’s grace, my condition is now stable.
I request the public not to come to the hospital to meet me, as I do not want other patients undergoing treatment here to be inconvenienced. -
Dr. G Parameshwara
@DrParameshwara
ಇಂದು ಕರ್ನಾಟಕ ಬ್ಯಾಡ್ಮಿಂಟನ್ ಅಸೋಸಿಯೇಷನ್ನವರು ಬೆಂಗಳೂರಿನಲ್ಲಿ ಆಯೋಜಿಸಿದ್ದ ಕ್ರೀಡಾಕೂಟದ ಉದ್ಘಾಟನಾ ಸಮಾರಂಭದ ವೇಳೆ ಹೃದಯಬಡಿತ ತುಸು ಹೆಚ್ಚಾದ ಕಾರಣ ತಕ್ಷಣವೇ ಆಸ್ಪತ್ರೆಗೆ ತೆರಳಿ ಅಗತ್ಯ ಚಿಕಿತ್ಸೆ ಪಡೆದಿದ್ದೇನೆ.
ನನ್ನ ಮೇಲಿನ ಕಾಳಜಿಯಿಂದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸೇರಿದಂತೆ ಬಹಳಷ್ಟು ಮಂದಿ ಹಿತೈಷಿಗಳು ಆಸ್ಪತ್ರೆಗೆ ಭೇಟಿ ನೀಡಿ, ಆರೋಗ್ಯ ವಿಚಾರಿಸಿದ್ದಾರೆ. ಇನ್ನು ಹಲವರು ದೂರವಾಣಿ ಕರೆ ಮಾಡಿ ಯೋಗಕ್ಷೇಮ ವಿಚಾರಿಸಿದ್ದಾರೆ. ತಮ್ಮೆಲ್ಲರ ಪ್ರೀತಿ - ಕಾಳಜಿಗೆ ಧನ್ಯವಾದಗಳು.
ಯಾರೂ ಆತಂಕ ಪಡುವ ಅಗತ್ಯವಿಲ್ಲ. ದೇವರ ದಯೆಯಿಂದ ನನ್ನ ಆರೋಗ್ಯವೀಗ ಸ್ಥಿರವಾಗಿದೆ. ಆಸ್ಪತ್ರೆಯಲ್ಲಿರುವ ಇತರೆ ರೋಗಿಗಳಿಗೆ ತೊಂದರೆಯಾಗಬಾರದು ಎಂಬ ಉದ್ದೇಶದಿಂದ ನನ್ನನ್ನು ಭೇಟಿ ಮಾಡಲು ದಯವಿಟ್ಟು ಆಸ್ಪತ್ರೆ ಬಳಿ ಬರಬೇಡಿ ಎಂದು ಸಾರ್ವಜನಿಕರಲ್ಲಿ ಮನವಿ ಮಾಡುತ್ತೇನೆ. -
Dr. G Parameshwara
@DrParameshwara
ಪ್ರಸಕ್ತ ಹಲವು ವಿದ್ಯಮಾನಗಳ ಕುರಿತು ಮಾಧ್ಯಮ ಪ್ರತಿನಿಧಿಗಳೊಂದಿಗೆ ನನ್ನ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದೇನೆ.
ಈ ಕುರಿತಾದ ಪತ್ರಿಕಾ ವರದಿಗಳು..
I shared my views with media representatives on several current developments and issues.
Here are the media reports on the interaction. -
Dr. G Parameshwara
@DrParameshwara
ಸೋಮವಾರ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿಯ ಅಂಗವಾಗಿ ಬೆಂಗಳೂರಿನ ಶಾಸಕರ ಭವನದ ಮುಂಭಾಗದಲ್ಲಿರುವ ಶ್ರೀ ಮಹರ್ಷಿ ವಾಲ್ಮೀಕಿ ತಪೋವನದಲ್ಲಿ ಮಹರ್ಷಿಗಳ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಗೌರವ ನಮನ ಸಲ್ಲಿಸಿದೆ.
ಬಳಿಕ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ನಲ್ಲಿ ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆ ವತಿಯಿಂದ ಆಯೋಜಿಸಲಾಗಿದ್ದ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಹಾಗೂ ಶ್ರೀ ಮಹರ್ಷಿ ವಾಲ್ಮೀಕಿ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ, ಮಾತನಾಡಿದೆ.
ಈ ಕುರಿತಾದ ಪತ್ರಿಕಾ ವರದಿಗಳು ಹೀಗಿವೆ..
Dr. G Parameshwara
@DrParameshwara
On Monday, on the occasion of Sri Maharshi Valmiki Jayanti, I paid floral tributes to Maharshi Valmiki by garlanding his statue at Sri Maharshi Valmiki Tapovana, in front of the Shasakara Bhavana in Bengaluru.
Later, I inaugurated and addressed the Sri Maharshi Valmiki Jayanti and Sri Maharshi Valmiki Award Ceremony, organised by the Department of Scheduled Tribes Welfare at the Banquet Hall, Vidhana Soudha.
Here are the media reports on the programmes. -
Dr. G Parameshwara
@DrParameshwara
My respectful tributes to former President of India, Shri K. R. Narayanan, on his birth anniversary.
Born into a humble Dalit family in Kerala, his remarkable journey from overcoming poverty and caste barriers to becoming a distinguished scholar at the London School of Economics stands as an inspiring example of perseverance and academic excellence.
Encouraged by Pandit Jawaharlal Nehru, he joined the Indian Foreign Service and went on to serve as India's Ambassador to several nations, including China and the United States. He later served as Vice-Chancellor of Jawaharlal Nehru University before entering politics through the Indian National Congress. Elected thrice to the Lok Sabha, he served as a Union Minister, Vice-President of India and eventually made history as the nation's first Dalit President.
A steadfast champion of social justice, equality and constitutional values, Shri Narayanan consistently upheld the dignity and rights of Dalits, Adivasis and marginalised communities. His extraordinary life and leadership remain a powerful reminder of the transformative strength of education, democracy and Dr. B. R. Ambedkar's vision of an inclusive and egalitarian India. -
Dr. G Parameshwara
@DrParameshwara
Today, I inaugurated the 'India International Challenge–2026' Badminton Tournament, organised by the Karnataka Badminton Association in Bengaluru, and extended my best wishes to all the participating players.
Hosting international sporting events of this kind not only inspires young athletes but also encourages them to showcase their talent at a higher level and strive for greater achievements.
Dr. K. Govindaraju, President of the Karnataka Olympic Association and Member of the Legislative Council; Kumar Bangarappa, President of the Karnataka Badminton Association; Muralidhar, Secretary; Guruprasad, Chairman of the Badminton Development Committee, and several others were present.
Dr. G Parameshwara
@DrParameshwara
ಇಂದು ಬೆಂಗಳೂರಿನಲ್ಲಿ ಕರ್ನಾಟಕ ಬ್ಯಾಡ್ಮಿಂಟನ್ ಅಸೋಸಿಯೇಷನ್ ವತಿಯಿಂದ ಆಯೋಜಿಸಿರುವ ‘ಇಂಡಿಯಾ ಇಂಟರ್ನ್ಯಾಷನಲ್ ಚಾಲೆಂಜ್–2026’ ಬ್ಯಾಡ್ಮಿಂಟನ್ ಕ್ರೀಡಾಕೂಟವನ್ನು ಉದ್ಘಾಟಿಸಿ, ಕ್ರೀಡಾಪಟುಗಳಿಗೆ ಶುಭ ಹಾರೈಸಿದೆ.
ಇಂತಹ ಅಂತಾರಾಷ್ಟ್ರೀಯ ಕ್ರೀಡಾಕೂಟಗಳ ಆಯೋಜನೆಯು ಯುವ ಕ್ರೀಡಾಪಟುಗಳಿಗೆ ಸ್ಫೂರ್ತಿ ನೀಡುವುದರ ಜೊತೆಗೆ, ತಮ್ಮ ಪ್ರತಿಭೆಯನ್ನು ಉನ್ನತ ಮಟ್ಟದಲ್ಲಿ ಪ್ರದರ್ಶಿಸಲು ಪ್ರೇರಣೆಯಾಗಲಿದೆ.
ಈ ಸಂದರ್ಭದಲ್ಲಿ ಕರ್ನಾಟಕ ಒಲಿಂಪಿಕ್ ಅಸೋಸಿಯೇಷನ್ ಅಧ್ಯಕ್ಷರು ಹಾಗೂ ವಿಧಾನ ಪರಿಷತ್ ಸದಸ್ಯರಾದ ಡಾ. ಕೆ. ಗೋವಿಂದರಾಜು, ಕರ್ನಾಟಕ ಬ್ಯಾಡ್ಮಿಂಟನ್ ಅಸೋಸಿಯೇಷನ್ ಅಧ್ಯಕ್ಷರಾದ ಕುಮಾರ್ ಬಂಗಾರಪ್ಪ, ಕಾರ್ಯದರ್ಶಿಗಳಾದ ಮುರಳೀಧರ್, ಬ್ಯಾಡ್ಮಿಂಟನ್ ಡೆವಲಪ್ಮೆಂಟ್ ಕಮಿಟಿ ಅಧ್ಯಕ್ಷರಾದ ಗುರುಪ್ರಸಾದ್ ಸೇರಿದಂತೆ ಹಲವರು ಉಪಸ್ಥಿತರಿದ್ದರು. -
Dr. G Parameshwara
@DrParameshwara
*Confident of Winning All Four MLC Seats: I am confident that the Congress will win all four MLC seats in today’s results. In the past, we have faced some setbacks in Graduates’ and Teachers’ constituencies, but this time our Government has addressed several of their concerns, and they have expressed support for us during our interactions.
*Government Committed to Resolving Sugarcane Growers’ Issues: On the issues raised by sugarcane growers, the Chief Minister has assured them that the Government will make every possible effort to resolve their concerns. Certain decisions also need to be taken by the Union Government, but the State will extend all possible support within its jurisdiction.
*All-Party Delegation for Drought Relief to Be Discussed with CM: Regarding an all-party delegation to the Centre seeking drought relief, I have not yet been able to discuss the matter with the Chief Minister as he was travelling. I will speak to him today or tomorrow and take the matter forward.
*Review of Input Subsidy Distribution: On the delay in input subsidy distribution, it has already been a week since orders were issued for its release. I will review the matter again today and discuss it with the officials concerned.
*Decision on KAS Examination Left to KEA: On the demand to postpone the KAS examination and first complete the recruitment process for the earlier 384 posts, the decision rests with the Karnataka Examinations Authority (KEA). KEA is an autonomous institution, and the Government should not interfere in its functioning. The Authority will decide the examination schedule.
- My remarks to the media near my residence today. -
Dr. G Parameshwara
@DrParameshwara
ಇಂದಿನ ಎಂಎಲ್ಸಿ ಚುನಾವಣೆಯ ಫಲಿತಾಂಶದಲ್ಲಿ ಕಾಂಗ್ರೆಸ್ ನಾಲ್ಕು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆ ಎಂಬ ವಿಶ್ವಾಸವಿದೆ.
ಸಾಮಾನ್ಯವಾಗಿ ಪದವೀಧರರ ಮತ್ತು ಶಿಕ್ಷಕರ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಸ್ವಲ್ಪ ಹಿನ್ನಡೆಯನ್ನು ಅನುಭವಿಸುತ್ತಿತ್ತು. ಆದರೆ, ಈ ಬಾರಿ ಪದವೀಧರರು ಹಾಗೂ ಶಿಕ್ಷಕರ ಹಲವು ಸಮಸ್ಯೆಗಳನ್ನು ಸರ್ಕಾರ ಬಗೆಹರಿಸಿದೆ. ಹೀಗಾಗಿ ಅವರು ಸರ್ಕಾರವನ್ನು ಬೆಂಬಲಿಸುವ ವಿಶ್ವಾಸವಿದೆ. ಸಭೆಗಳನ್ನು ನಡೆಸಿದ ಸಂದರ್ಭದಲ್ಲಿಯೂ ಸರ್ಕಾರವನ್ನು ಬೆಂಬಲಿಸುವುದಾಗಿ ಅವರು ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ನಾಲ್ಕು ಕ್ಷೇತ್ರಗಳಲ್ಲಿಯೂ ಕಾಂಗ್ರೆಸ್ ಗೆಲುವು ಸಾಧಿಸಲಿದೆ ಎಂಬ ವಿಶ್ವಾಸವಿದೆ.
*ಕಬ್ಬು ಬೆಳೆಗಾರರ ಸಮಸ್ಯೆ ಬಗೆಹರಿಸಲು ಸರ್ಕಾರ ಬದ್ಧ : ಮುಖ್ಯಮಂತ್ರಿಗಳು ನಿನ್ನೆ ಕಬ್ಬು ಬೆಳೆಗಾರರು ಮತ್ತು ಮಾಲೀಕರೊಂದಿಗೆ ನಡೆಸಿದ ಸಭೆ ನಡೆಸಿ, ಸಮಸ್ಯೆಗಳನ್ನು ಬಗೆಹರಿಸುವ ವಿಶ್ವಾಸವನ್ನು ಅವರಿಗೆ ನೀಡಿದ್ದಾರೆ. ಈ ವಿಚಾರದಲ್ಲಿ ಕೇಂದ್ರ ಸರ್ಕಾರ ಕೈಗೊಳ್ಳಬೇಕಾದ ನಿರ್ಧಾರಗಳೂ ಇವೆ. ಆದರೂ ರಾಜ್ಯ ಸರ್ಕಾರದ ವತಿಯಿಂದ ಏನೆಲ್ಲ ನೆರವು ನೀಡಲು ಸಾಧ್ಯವಿದೆಯೋ ಅದನ್ನು ಮಾಡುವುದಾಗಿ ಮುಖ್ಯಮಂತ್ರಿಗಳು ಭರವಸೆ ನೀಡಿದ್ದಾರೆ.
*ಕೇಂದ್ರಕ್ಕೆ ಸರ್ವಪಕ್ಷ ನಿಯೋಗ ಕರೆದೊಯ್ಯುವ ಕುರಿತು ಮುಖ್ಯಮಂತ್ರಿಗಳೊಂದಿಗೆ ಚರ್ಚೆ : ಮುಖ್ಯಮಂತ್ರಿಗಳು ಪ್ರವಾಸದಲ್ಲಿದ್ದ ಕಾರಣ ಈ ಕುರಿತು ಅವರೊಂದಿಗೆ ಮಾತನಾಡಲು ಸಾಧ್ಯವಾಗಿಲ್ಲ. ಇಂದು ಅಥವಾ ನಾಳೆ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸುತ್ತೇನೆ.
*ಇನ್ಪುಟ್ ಸಬ್ಸಿಡಿ ವಿತರಣೆ ಕುರಿತು ಪರಿಶೀಲನೆ : ಇನ್ಪುಟ್ ಸಬ್ಸಿಡಿ ಬಿಡುಗಡೆಗೆ ಸಂಬಂಧಿಸಿದಂತೆ ಈಗಾಗಲೇ ಆದೇಶ ನೀಡಿ ಒಂದು ವಾರ ಕಳೆದಿದೆ. ಈ ಕುರಿತು ಇಂದು ಮತ್ತೊಮ್ಮೆ ಪರಿಶೀಲನೆ ನಡೆಸಿ, ಸಂಬಂಧಪಟ್ಟವರೊಂದಿಗೆ ಚರ್ಚಿಸುತ್ತೇನೆ.
*ಕೆಎಎಸ್ ಪರೀಕ್ಷೆ ಮುಂದೂಡುವ ನಿರ್ಧಾರ ಕೆಇಎಗೆ ಬಿಟ್ಟದ್ದು: ಪರೀಕ್ಷೆಗಳನ್ನು ಯಾವಾಗ ನಡೆಸಬೇಕು ಎಂಬುದನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ನಿರ್ಧರಿಸುತ್ತದೆ.
ಕೆಇಎ ಸ್ವತಂತ್ರ ಸಂಸ್ಥೆಯಾಗಿದ್ದು, ಅದರ ಕಾರ್ಯಚಟುವಟಿಕೆಗಳಲ್ಲಿ ಸರ್ಕಾರ ಹಸ್ತಕ್ಷೇಪ ಮಾಡಬಾರದು. ಅದಕ್ಕಾಗಿಯೇ ಸಂಸ್ಥೆಗೆ ಸ್ವಾಯತ್ತ ಸ್ಥಾನಮಾನ ನೀಡಲಾಗಿದೆ. ಪರೀಕ್ಷೆಗಳನ್ನು ಯಾವಾಗ ನಡೆಸಬೇಕು ಎಂಬುದನ್ನು ಸಂಸ್ಥೆಯೇ ನಿರ್ಧರಿಸಲಿದೆ.
ಈ ಹಿಂದೆ ಪೊಲೀಸ್ ಇಲಾಖೆಯಲ್ಲಿ ನೇಮಕಾತಿ ಪ್ರಕ್ರಿಯೆ ನಡೆಸುವ ಸಂದರ್ಭದಲ್ಲಿಯೂ ಪರೀಕ್ಷೆಗಳನ್ನು ನಡೆಸಿಕೊಡುವಂತೆ ಸಂಬಂಧಪಟ್ಟ ಸಂಸ್ಥೆಗೆ ಅಭ್ಯರ್ಥಿಗಳ ಸಂಖ್ಯೆಯನ್ನು ತಿಳಿಸಿ ಮನವಿ ಮಾಡಲಾಗುತ್ತಿತ್ತು. ಆ ಪ್ರಕ್ರಿಯೆಯಲ್ಲಿಯೂ ಸರ್ಕಾರ ಹಸ್ತಕ್ಷೇಪ ಮಾಡುತ್ತಿರಲಿಲ್ಲ.
- ಇಂದು ನನ್ನ ನಿವಾಸದ ಬಳಿ ಮಾಧ್ಯಮದವರೊಂದಿಗೆ ಮಾತನಾಡಿದೆ. -
Dr. G Parameshwara
@DrParameshwara
ನಾನು ರಾಜಕೀಯಕ್ಕೆ ಬರಬೇಕೆಂದು ಮೊದಲಿನಿಂದಲೂ ನಿರ್ಧರಿಸಿದವನಲ್ಲ . ಸುಮಾರು 38-39 ವರ್ಷಗಳ ಹಿಂದೆ ರಾಜಕೀಯ ಪ್ರವೇಶಿಸುವ ಮುನ್ನ ವಿದೇಶದಲ್ಲಿ ವ್ಯಾಸಂಗ ಮಾಡುತ್ತಿದ್ದೆ. ಬಳಿಕ ಊರಿಗೆ ಮರಳಿದ ಸಂದರ್ಭದಲ್ಲಿ ತಂದೆಯವರು ಕುಟುಂಬದ ಜವಾಬ್ದಾರಿಗಳನ್ನು ವಹಿಸಿಕೊಂಡು ಸಂಸ್ಥೆಗಳನ್ನು ಮುಂದುವರಿಸುವಂತೆ ಸೂಚಿಸಿದ್ದರು. ಹಿರಿಯರ ಸಲಹೆ ಮತ್ತು ಮಾರ್ಗದರ್ಶನದ ಮೇರೆಗೆ ಊರಿನಲ್ಲಿಯೇ ಉಳಿದುಕೊಳ್ಳಬೇಕಾಯಿತು.
ನಂತರ ರಾಜಕೀಯ ಪ್ರವೇಶಿಸುವ ಸಂದರ್ಭ ಎದುರಾಗಿ, 1989ರಲ್ಲಿ ಮಧುಗಿರಿ ಕ್ಷೇತ್ರದಿಂದ ಶಾಸಕನಾಗಿ ಆಯ್ಕೆಯಾದೆ. ಅಲ್ಲಿಂದ ಇಲ್ಲಿಯವರೆಗೆ ಹಲವು ಬಾರಿ ಸಚಿವನಾಗಿ ವಿವಿಧ ಖಾತೆಗಳನ್ನು ಕಾರ್ಯನಿರ್ವಹಿಸಿದ್ದು, ಪ್ರಸ್ತುತ ಎರಡನೇ ಬಾರಿ ಉಪಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸುತ್ತಿದ್ದೇನೆ.
ನಾನು ಚಿಕ್ಕವನಿದ್ದಾಗ ತಂದೆಯವರು ಸಿದ್ಧಗಂಗಾ ಮಠಕ್ಕೆ ಕರೆದುಕೊಂಡು ಹೋಗಿ ಸ್ವಾಮೀಜಿಗಳವರ ಆಶೀರ್ವಾದ ಪಡೆಯುವಂತೆ ಮಾಡಿದ್ದರು. ಅಂದು ಪಡೆದ ಶ್ರೀಗಳ ಆಶೀರ್ವಾದವು ನನ್ನ ಜೀವನದ ಬೆಳವಣಿಗೆಗೆ ಪ್ರೇರಣೆಯಾಗಿದೆ. ಪೂಜ್ಯ ಶ್ರೀಗಳ ಆಶೀರ್ವಾದದಿಂದಲೇ ಇಂದು ರಾಜ್ಯದ ಉಪ ಮುಖ್ಯಮಂತ್ರಿಯಾಗಿ ಜನರ ಮುಂದೆ ನಿಲ್ಲಲು ಸಾಧ್ಯವಾಗಿದೆ.
ಅಧಿಕಾರ ಶಾಶ್ವತವಲ್ಲ. ಅಧಿಕಾರದಲ್ಲಿರುವ ಸಂದರ್ಭದಲ್ಲಿ ಜನರಿಗೆ ಮತ್ತು ನಾಡಿಗೆ ಸಾಧ್ಯವಾದಷ್ಟು ಉತ್ತಮ ಕೆಲಸಗಳನ್ನು ಮಾಡಬೇಕು. ತುಮಕೂರನ್ನು ರಾಜ್ಯದ ಪ್ರತಿಷ್ಠಿತ ಜಿಲ್ಲೆಗಳಲ್ಲಿ ಒಂದಾಗಿ ಬೆಳೆಸಬೇಕು ಎಂಬುದೇ ನನ್ನ ಆಶಯವಾಗಿದೆ.This media couldn't be displayed. See it on the original post. -
Dr. G Parameshwara
@DrParameshwara
ಕೊರಟಗೆರೆಯಲ್ಲಿ ಕ್ರೀಡಾ ಸೌಲಭ್ಯಗಳನ್ನು ವಿಸ್ತರಿಸುವ ನಿಟ್ಟಿನಲ್ಲಿ ಜೂನಿಯರ್ ಕಾಲೇಜು ಮೈದಾನವನ್ನು ಸುಸಜ್ಜಿತ ಕ್ರೀಡಾ ಸಂಕೀರ್ಣವಾಗಿ ರೂಪಿಸಲಾಗುತ್ತಿದೆ. ₹4.21 ಕೋಟಿ ವೆಚ್ಚದಲ್ಲಿ ಒಳಾಂಗಣ ಕ್ರೀಡಾಂಗಣವನ್ನು ಅಭಿವೃದ್ಧಿಪಡಿಸಲಾಗುತ್ತಿದ್ದು, ಕ್ರೀಡಾಪಟುಗಳಿಗೆ ಉತ್ತಮ ಅಭ್ಯಾಸದ ವಾತಾವರಣ ಕಲ್ಪಿಸುವ ಉದ್ದೇಶ ಹೊಂದಲಾಗಿದೆ.
ಒಳಾಂಗಣ ಕ್ರೀಡೆಗಳಿಗೆ ಉತ್ತೇಜನ ನೀಡುವ ಜೊತೆಗೆ, ಪ್ರತ್ಯೇಕ ಜಿಮ್, ಯೋಗಾಭ್ಯಾಸ ಕೊಠಡಿ, ಸ್ನಾನಗೃಹ, ಶೌಚಾಲಯ ಹಾಗೂ ಕ್ರೀಡಾಪಟುಗಳ ವಿಶ್ರಾಂತಿ ಗೃಹದಂತಹ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲಾಗುತ್ತಿದೆ. ಗ್ರಾಮೀಣ ಪ್ರತಿಭೆಗಳಿಗೆ ಸೂಕ್ತ ವೇದಿಕೆ ಒದಗಿಸಿ, ಕ್ರೀಡಾ ಕ್ಷೇತ್ರದಲ್ಲಿ ಬೆಳೆಯಲು ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ನಮ್ಮ ಸರ್ಕಾರ ಬದ್ಧವಾಗಿದೆ.
As part of efforts to expand sports facilities in Koratagere, the Junior College Grounds are being developed into a well-equipped sports complex. An indoor stadium is being developed at a cost of ₹4.21 crore, with the objective of providing athletes with a better training environment.
The facility will promote indoor sports and include a dedicated gym, yoga room, bathrooms, toilets and rest rooms for athletes.
Our Government is committed to creating better opportunities and facilities for rural sporting talent to grow and excel in the field of sports. -
Dr. G Parameshwara
@DrParameshwara
ಕೊರಟಗೆರೆಯಲ್ಲಿ ಕ್ರೀಡಾ ಮೂಲಸೌಕರ್ಯವನ್ನು ಅಭಿವೃದ್ಧಿಪಡಿಸಿ, ಕ್ರೀಡಾಪಟುಗಳಿಗೆ ಅಗತ್ಯ ಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಕ್ರೀಡಾಂಗಣವನ್ನು ರೂಪಿಸಲಾಗುತ್ತಿದೆ. ಜೂನಿಯರ್ ಕಾಲೇಜು ಮೈದಾನವು ಸುಸಜ್ಜಿತ ಕ್ರೀಡಾಂಗಣವಾಗಿ ರೂಪುಗೊಳ್ಳುತ್ತಿದ್ದು, ₹3 ಕೋಟಿ ವೆಚ್ಚದಲ್ಲಿ ಹೊರಾಂಗಣ ಕ್ರೀಡಾಂಗಣ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ.
ಪ್ರೇಕ್ಷಕರ ಗ್ಯಾಲರಿ, ಓಟದ ಟ್ರ್ಯಾಕ್, ವಿವಿಧ ಕ್ರೀಡೆಗಳಿಗೆ ಪ್ರತ್ಯೇಕ ಅಂಕಣಗಳು, ಬೆಳಕಿನ ವ್ಯವಸ್ಥೆ ಹಾಗೂ ಶೌಚಾಲಯ ಸೇರಿದಂತೆ ಹಲವು ಸೌಲಭ್ಯಗಳನ್ನು ಕಲ್ಪಿಸಲಾಗುತ್ತಿದೆ. ಅಲ್ಲದೆ, ₹60 ಲಕ್ಷ ವೆಚ್ಚದಲ್ಲಿ ಪಾರ್ಕ್, ವಾಕಿಂಗ್ ಟ್ರ್ಯಾಕ್ ಹಾಗೂ ವಿಶ್ರಾಂತಿ ಆಸನಗಳ ವ್ಯವಸ್ಥೆ ಮಾಡಲಾಗಿದೆ. ಗ್ರಾಮೀಣ ಪ್ರದೇಶದ ಕ್ರೀಡಾ ಪ್ರತಿಭೆಗಳಿಗೆ ಸೂಕ್ತ ವೇದಿಕೆ ಹಾಗೂ ಅಗತ್ಯ ಸೌಲಭ್ಯಗಳನ್ನು ಒದಗಿಸಿ, ಅವರು ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಲು ಪ್ರೋತ್ಸಾಹಿಸಲು ನಮ್ಮ ಸರ್ಕಾರ ಬದ್ಧವಾಗಿದೆ.
Sports infrastructure is being strengthened in Koratagere to provide athletes with better facilities and opportunities. The Junior College Grounds are being developed into a well-equipped sports stadium, with work on a ₹3 crore outdoor stadium currently underway.
The facility will include a spectator gallery, running track, dedicated courts for various sports, lighting and toilet facilities. In addition, a park, walking track and seating facilities have been developed at a cost of ₹60 lakh.
Our Government is committed to providing rural sporting talent with the right platform and facilities to help them excel in the field of sports. -
Dr. G Parameshwara
@DrParameshwara
ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿಯ ಅಂಗವಾಗಿ ಇಂದು ಬೆಂಗಳೂರಿನ ಶಾಸಕರ ಭವನದ ಮುಂಭಾಗದಲ್ಲಿರುವ ಶ್ರೀ ಮಹರ್ಷಿ ವಾಲ್ಮೀಕಿ ತಪೋವನದಲ್ಲಿ ಮಹರ್ಷಿಗಳ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಗೌರವ ನಮನ ಸಲ್ಲಿಸಿದೆ.
ಬಳಿಕ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ನಲ್ಲಿ ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆ ವತಿಯಿಂದ ಆಯೋಜಿಸಲಾಗಿದ್ದ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಹಾಗೂ ಶ್ರೀ ಮಹರ್ಷಿ ವಾಲ್ಮೀಕಿ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿದೆ.This media couldn't be displayed. See it on the original post. -
Dr. G Parameshwara
@DrParameshwara
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೀಸಲಾತಿ ಪ್ರಮಾಣ ಹೆಚ್ಚಳವನ್ನು ರದ್ದುಗೊಳಿಸಿರುವ ಹೈಕೋರ್ಟ್ ತೀರ್ಪಿನ ವಿರುದ್ಧ ಸುಪ್ರೀಂ ಕೋರ್ಟ್ನಲ್ಲಿ ವಿಶೇಷ ಅನುಮತಿ ಅರ್ಜಿ (ಎಸ್ಎಲ್ಪಿ) ಸಲ್ಲಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಸಂವಿಧಾನಬದ್ಧ ಹಕ್ಕುಗಳ ರಕ್ಷಣೆಗೆ ಸರ್ಕಾರ ಬದ್ಧವಾಗಿದ್ದು, ಈ ವಿಚಾರದಲ್ಲಿ ಯಾವುದೇ ಕಾರಣಕ್ಕೂ ರಾಜಿಯಾಗುವುದಿಲ್ಲ.
ಹೈಕೋರ್ಟ್ ತೀರ್ಪಿನ ಕುರಿತು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಸುದೀರ್ಘ ಚರ್ಚೆ ನಡೆಸಲಾಗಿದೆ. ಈ ತೀರ್ಪಿನ ವಿರುದ್ಧ ಸುಪ್ರೀಂ ಕೋರ್ಟ್ಗೆ ಮೇಲ್ಮನವಿ ಸಲ್ಲಿಸಲೇಬೇಕು ಎಂಬ ನಿರ್ಧಾರಕ್ಕೆ ಬರಲಾಗಿದೆ.
ಮುಂದೆ ಇದನ್ನು ಹೇಗೆ ಸಂವಿಧಾನದ ಒಂಬತ್ತನೇ ಶೆಡ್ಯೂಲ್ (9th Schedule) ಅಡಿಯಲ್ಲಿ ತಂದು ಶಾಶ್ವತ ರಕ್ಷಣೆ ಒದಗಿಸಬೇಕು ಅನ್ನೋದರ ಬಗ್ಗೆ ಕಾನೂನು ತಜ್ಞರ ಜೊತೆ ಚರ್ಚೆ ಮಾಡಿ ಸೂಕ್ತ ಕ್ರಮ ಕೈಗೊಳ್ಳುತ್ತೇವೆ. ಮೀಸಲಾತಿ ಹೆಚ್ಚಳಕ್ಕೆ ಶಾಶ್ವತ ರಕ್ಷಣೆ ಒದಗಿಸುವ ನಿಟ್ಟಿನಲ್ಲಿ ಸಂವಿಧಾನದ ಒಂಬತ್ತನೇ ಅನುಸೂಚಿಗೆ ಸೇರಿಸುವ ಕುರಿತು ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಲಾಗುವುದು.
*ಪರಿಶಿಷ್ಟ ಜಾತಿ, ಪಂಗಡಗಳ ಅಭಿವೃದ್ಧಿಗೆ ಸರ್ಕಾರ ಬದ್ಧ:
ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಯಲ್ಲಿ ಅನೇಕ ಗೊಂದಲಗಳಿರುವುದು ನಿಜ. ಈ ಹಿಂದೆ ಹೆಚ್. ಆಂಜನೇಯ ಅವರು ಸಚಿವರಾಗಿದ್ದ ಸಂದರ್ಭದಲ್ಲಿ ಸಮುದಾಯದ ಅಭಿವೃದ್ಧಿ ಕಾರ್ಯಗಳಿಗೆ ಮುಕ್ತವಾಗಿ ಅನುದಾನ ನೀಡುತ್ತಿದ್ದರು. ಸ್ವಾಮೀಜಿಯವರು ₹5 ಕೋಟಿ ಅನುದಾನ ಕೇಳಿದಾಗ ಅದನ್ನು ಮಂಜೂರು ಮಾಡಿದ್ದರು. ಈಗ ಎಲ್ಲ ಇಲಾಖೆಗಳಲ್ಲಿಯೂ ಶೇ.17ರಷ್ಟು ಅನುದಾನವನ್ನು ಪರಿಶಿಷ್ಟ ಸಮುದಾಯಗಳ ಅಭಿವೃದ್ಧಿಗೆ ಮೀಸಲಿಡಬೇಕೆಂಬ ನಿಯಮವಿದೆ.
ಈ ಅನುದಾನವನ್ನು ಸಮುದಾಯಗಳ ಅಭಿವೃದ್ಧಿಗೆ ಬಳಸಲಾಗಿದೆ. ಗಂಗಾಕಲ್ಯಾಣ ಯೋಜನೆಯಡಿ ಸಾವಿರಾರು ಫಲಾನುಭವಿಗಳಿಗೆ ಕೊಳವೆಬಾವಿ ಸೌಲಭ್ಯ, ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಹಾಗೂ 162 ವಿದ್ಯಾರ್ಥಿಗಳಿಗೆ ವಿದೇಶದಲ್ಲಿ ಉನ್ನತ ವ್ಯಾಸಂಗಕ್ಕೆ ಅವಕಾಶ ಕಲ್ಪಿಸಲಾಗಿದೆ. ಈ ರೀತಿಯ ಅನೇಕ ಅಭಿವೃದ್ಧಿ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲಾಗಿದೆ.
ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ರಾಜಕೀಯ ಕಾರಣಗಳಿಗಾಗಿ ಗೊಂದಲ ಸೃಷ್ಟಿಸಲಾಯಿತು. ಇದರಿಂದ ಯಾರಿಗೂ ತೊಂದರೆಯಾಗಿಲ್ಲ. ಆ ಸಂದರ್ಭದಲ್ಲಿ ನಾನೇ ಗೃಹ ಸಚಿವನಾಗಿದ್ದೆ. ಆರೋಪಕ್ಕೆ ಸಂಬಂಧಿಸಿದಂತೆ ಉಲ್ಲೇಖಿಸಲಾಗಿದ್ದ ಎಲ್ಲ ಹಣವೂ ವಾಪಸ್ ಬಂದಿದೆ.
ರಾಜ್ಯದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಭಿವೃದ್ಧಿಗೆ ಸರ್ಕಾರ ಸಂಪೂರ್ಣ ಬದ್ಧವಾಗಿದೆ. ಈಗಾಗಲೇ ಜಾರಿಯಲ್ಲಿರುವ ಎಲ್ಲ ಯೋಜನೆಗಳನ್ನು ಮುಂದುವರಿಸುವುದಾಗಿ ಮುಖ್ಯಮಂತ್ರಿಗಳು ತಿಳಿಸಿದ್ದಾರೆ.
ನಾವು ಪ್ರತಿನಿಧಿಸುವ ಸಮುದಾಯಗಳು ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಏಳಿಗೆ ಹೊಂದದಿದ್ದರೆ ಜನಪ್ರತಿನಿಧಿಗಳಾಗಿರುವ ನಮಗೆ ಯಾವುದೇ ಅರ್ಹತೆ ಇರುವುದಿಲ್ಲ. ಆದ್ದರಿಂದ ಸಮುದಾಯಗಳ ಸರ್ವಾಂಗೀಣ ಅಭಿವೃದ್ಧಿಗೆ ಆದ್ಯತೆ ನೀಡುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ.
ರಾಜ್ಯದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಹೆಚ್ಚಿಸಲಾಗಿತ್ತು. ಆದರೆ, ಹೈಕೋರ್ಟ್ ಮೀಸಲಾತಿ ಪ್ರಮಾಣವನ್ನು ಶೇ.56ರಿಂದ ಶೇ.50ಕ್ಕೆ ಇಳಿಸಿರುವುದು ಆಶ್ಚರ್ಯ ತಂದಿದೆ. ನ್ಯಾಯಾಧೀಶರನ್ನು ದೂಷಿಸುವ ಉದ್ದೇಶ ನಮಗಿಲ್ಲ. ಆದರೆ, ಜನಸಂಖ್ಯೆಯ ಆಧಾರದಲ್ಲಿ ಹೆಚ್ಚಿಸಲಾಗಿದ್ದ ಮೀಸಲಾತಿಯನ್ನು ಯಾವ ಕಾರಣಕ್ಕಾಗಿ ರದ್ದುಗೊಳಿಸಲಾಗಿದೆ ಎಂಬುದು ಅರ್ಥವಾಗುತ್ತಿಲ್ಲ.
2011ರ ಜನಗಣತಿ ಆಧಾರದಲ್ಲಿ ಪರಿಶಿಷ್ಟ ಜಾತಿಯವರು ಶೇ.17 ಮತ್ತು ಪರಿಶಿಷ್ಟ ಪಂಗಡದವರು ಶೇ.7ರಷ್ಟಿದ್ದಾರೆ. ಒಟ್ಟಾರೆ ಈ ಸಮುದಾಯಗಳ ಜನಸಂಖ್ಯೆ ಸುಮಾರು ಶೇ.24.1ರಷ್ಟಿದೆ. ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ನೀಡಬೇಕೆಂಬ ಉದ್ದೇಶದಿಂದಲೇ ಮೀಸಲಾತಿ ಪ್ರಮಾಣವನ್ನು ಹೆಚ್ಚಿಸಲಾಗಿತ್ತು.
ತಮಿಳುನಾಡಿನಲ್ಲಿ ಶೇ.69ರಷ್ಟು ಮೀಸಲಾತಿ ವ್ಯವಸ್ಥೆಯನ್ನು ಸಂವಿಧಾನದ ಒಂಬತ್ತನೇ ಅನುಸೂಚಿಗೆ ಸೇರಿಸಲಾಗಿದೆ. ಕೇಂದ್ರ ಸರ್ಕಾರ ಆರ್ಥಿಕವಾಗಿ ದುರ್ಬಲ ವರ್ಗದವರಿಗೆ (ಇಡಬ್ಲ್ಯೂಎಸ್) ಶೇ.10ರಷ್ಟು ಮೀಸಲಾತಿ ಕಲ್ಪಿಸಿದೆ. ಆದರೆ, ಕರ್ನಾಟಕದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಜನಸಂಖ್ಯೆ ಆಧಾರದಲ್ಲಿ ಮೀಸಲಾತಿಯನ್ನು ಶೇ.6ರಷ್ಟು ಹೆಚ್ಚಿಸಿದಾಗ ಅದನ್ನು ರದ್ದುಗೊಳಿಸಿರುವುದು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಇದರ ಅರ್ಥವೇನು?
ಮೀಸಲಾತಿಗಾಗಿ ಸ್ವಾಮೀಜಿ ಅವರು 258 ಕಿಲೋಮೀಟರ್ ಪಾದಯಾತ್ರೆ ನಡೆಸಿದ್ದರು ಅಂದು ಎಚ್.ಡಿ. ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದು, ನಾನು ಉಪ ಮುಖ್ಯಮಂತ್ರಿಯಾಗಿದ್ದೆ. ಸ್ವಾಮೀಜಿಯವರು ಸಾವಿರಾರು ಅನುಯಾಯಿಗಳೊಂದಿಗೆ ಪಾದಯಾತ್ರೆ ನಡೆಸಿ ಬೆಂಗಳೂರಿನ ಫ್ರೀಡಂ ಪಾರ್ಕ್ಗೆ ಆಗಮಿಸಿದ್ದರು. ಮಳೆಯ ನಡುವೆಯೂ ಪಾದಯಾತ್ರೆ ನಡೆದಿತ್ತು. ಸ್ವಾಮೀಜಿಯವರು ತಮ್ಮ ಬೇಡಿಕೆಗಳನ್ನು ಸರ್ಕಾರದ ಗಮನಕ್ಕೆ ತರಲು ಆಗಮಿಸಿದ್ದರು.
ಆ ಸಂದರ್ಭದಲ್ಲಿ ರಾಷ್ಟ್ರೀಯ ಹಣಕಾಸು ಆಯೋಗದ ಸಭೆ ನಡೆಯುತ್ತಿತ್ತು. ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ನಾನು ಸಭೆಯಲ್ಲಿ ಭಾಗವಹಿಸಿದ್ದೆವು. ಸ್ವಾಮೀಜಿಯವರನ್ನು ಭೇಟಿ ಮಾಡಿ ಮನವಿ ಸ್ವೀಕರಿಸುವಂತೆ ಮುಖ್ಯಮಂತ್ರಿಗಳು ನನಗೆ ಸೂಚಿಸಿದ್ದರು. ಅದರಂತೆ ನಾನು ತೆರಳಿ ಸ್ವಾಮೀಜಿಯವರನ್ನು ಭೇಟಿ ಮಾಡಿದ್ದೆ. ಸುಮಾರು 15 ಶಾಸಕರು ಕೂಡ ಈ ಸಂದರ್ಭದಲ್ಲಿ ಆಗಮಿಸಿದ್ದರು.
ಪರಿಶಿಷ್ಟ ಪಂಗಡಗಳ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿಯನ್ನು ಶೇ.7ಕ್ಕೆ ಹೆಚ್ಚಿಸಬೇಕು ಎಂಬುದು ಸ್ವಾಮೀಜಿಯವರ ಪ್ರಮುಖ ಬೇಡಿಕೆಯಾಗಿತ್ತು. ಇದರೊಂದಿಗೆ ಸಮುದಾಯದ ಇತರ ಸಮಸ್ಯೆಗಳನ್ನೂ ಒಳಗೊಂಡ ಮನವಿಯನ್ನು ಸಲ್ಲಿಸಿದ್ದರು. ಸರ್ಕಾರದ ಪರವಾಗಿ ಶೇ.7ರಷ್ಟು ಮೀಸಲಾತಿ ಕಲ್ಪಿಸಿಯೇ ತೀರುತ್ತೇವೆ ಎಂದು ಅಂದು ಭರವಸೆ ನೀಡಿದ್ದೆ. ಆದರೆ, ಕಾರಣಾಂತರಗಳಿಂದ ನಮ್ಮ ಸರ್ಕಾರ ಅಧಿಕಾರ ಕಳೆದುಕೊಂಡಿತು.
ನಂತರ ಅಧಿಕಾರಕ್ಕೆ ಬಂದ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ 2022ರ ಅಕ್ಟೋಬರ್ನಲ್ಲಿ ಪರಿಶಿಷ್ಟ ಪಂಗಡಗಳ ಮೀಸಲಾತಿಯನ್ನು ಶೇ.7ಕ್ಕೆ ಹೆಚ್ಚಿಸಿತ್ತು. ಪರಿಶಿಷ್ಟ ಜಾತಿಗಳ ಮೀಸಲಾತಿ ಪ್ರಮಾಣದಲ್ಲಿಯೂ ಶೇ.3ರಷ್ಟು ಹೆಚ್ಚಳ ಮಾಡಿತ್ತು. ಆ ಮೂಲಕ ಒಟ್ಟಾರೆ ಮೀಸಲಾತಿ ಪ್ರಮಾಣವನ್ನು ಶೇ.56ಕ್ಕೆ ಏರಿಸುವ ಸಂಬಂಧ ಆದೇಶ ಹೊರಡಿಸಿತ್ತು.
ಅಂದು ರಾಜ್ಯದಲ್ಲಿಯೂ ಬಿಜೆಪಿ ಸರ್ಕಾರವಿತ್ತು. ಕೇಂದ್ರದಲ್ಲಿಯೂ ಬಿಜೆಪಿ ನೇತೃತ್ವದ ಸರ್ಕಾರವೇ ಅಧಿಕಾರದಲ್ಲಿತ್ತು. ಆ ಸಂದರ್ಭದಲ್ಲಿ ರಾಜ್ಯ ಸರ್ಕಾರ ಸರ್ವಪಕ್ಷಗಳ ನಿಯೋಗವನ್ನು ಕೇಂದ್ರ ಸರ್ಕಾರದ ಬಳಿಗೆ ಕರೆದೊಯ್ದು, ಮೀಸಲಾತಿ ಹೆಚ್ಚಳದ ನಿರ್ಧಾರವನ್ನು ಸಂವಿಧಾನದ ಒಂಬತ್ತನೇ ಅನುಸೂಚಿಗೆ ಸೇರಿಸುವಂತೆ ಒತ್ತಾಯಿಸಬೇಕಿತ್ತು. ಹಾಗೆ ಮಾಡಿದ್ದರೆ ಬಹುಶಃ ಇಂದಿನ ಸಮಸ್ಯೆ ಎದುರಾಗುತ್ತಿರಲಿಲ್ಲ.
ಈ ವಿಚಾರದಲ್ಲಿ ಹಿಂದಿನ ಸರ್ಕಾರವನ್ನು ದೂಷಿಸಲು ಹೋಗುವುದಿಲ್ಲ. ಆದರೆ, ಅಂದು ಮೀಸಲಾತಿ ಹೆಚ್ಚಳಕ್ಕೆ ಅಗತ್ಯವಾದ ರಕ್ಷಣೆ ಒದಗಿಸುವ ಪ್ರಯತ್ನ ಮಾಡಲಿಲ್ಲ ಎಂಬುದನ್ನು ಹೇಳಬೇಕಾಗಿದೆ.
ಸಿದ್ದರಾಮಯ್ಯ ಅವರ ನೇತೃತ್ವದ ಸರ್ಕಾರ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಭಿವೃದ್ಧಿಗೆ ಹಲವು ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಿದೆ. ಮೀಸಲಾತಿ ಪ್ರಮಾಣವನ್ನು ಶೇ.50ರಿಂದ ಶೇ.56ಕ್ಕೆ ಹೆಚ್ಚಿಸಿರುವ ನಿರ್ಧಾರದ ಅನ್ವಯ ನೇಮಕಾತಿ ಮತ್ತು ಶೈಕ್ಷಣಿಕ ಪ್ರವೇಶ ಪ್ರಕ್ರಿಯೆಗಳನ್ನು ನಡೆಸಿಕೊಂಡು ಬರಲಾಗಿದೆ. ಇಂತಹ ಸಂದರ್ಭದಲ್ಲಿ ಹೈಕೋರ್ಟ್ ತೀರ್ಪಿನಿಂದ ಗೊಂದಲ ಉಂಟಾಗಿದೆ.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಜನರಿಗೆ ಸಂವಿಧಾನಬದ್ಧವಾಗಿ ದೊರೆಯಬೇಕಾದ ನ್ಯಾಯಯುತ ಹಕ್ಕುಗಳನ್ನು ರಕ್ಷಿಸುವುದು ಸರ್ಕಾರದ ಮೊದಲ ಆದ್ಯತೆಯಾಗಿದೆ. ಮೀಸಲಾತಿಯ ರಕ್ಷಣೆಗೆ ಅಗತ್ಯವಿರುವ ಎಲ್ಲ ಕಾನೂನು ಕ್ರಮಗಳನ್ನು ಕೈಗೊಳ್ಳಲಾಗುವುದು.
*ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಜನರು ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು:
ಸ್ವಾತಂತ್ರ್ಯ ಬಂದು 78 ವರ್ಷಗಳಾದರೂ ಪರಿಶಿಷ್ಟ ಪಂಗಡಗಳ ಶೈಕ್ಷಣಿಕ ಸ್ಥಿತಿಯಲ್ಲಿ ನಿರೀಕ್ಷಿತ ಮಟ್ಟದ ಪ್ರಗತಿ ಸಾಧಿಸಲು ಸಾಧ್ಯವಾಗಿಲ್ಲ. ಪರಿಶಿಷ್ಟ ಪಂಗಡಗಳಲ್ಲಿ ಸಾಕ್ಷರತಾ ಪ್ರಮಾಣ ಶೇ.49ರಷ್ಟಿದ್ದು, ಮಹಿಳೆಯರ ಸಾಕ್ಷರತಾ ಪ್ರಮಾಣ ಶೇ.38ರಷ್ಟಿದೆ. ದೇಶದ ಒಟ್ಟಾರೆ ಸಾಕ್ಷರತೆ ಶೇ.80ರ ಮಟ್ಟ ತಲುಪಿರುವ ಸಂದರ್ಭದಲ್ಲಿ ಪರಿಶಿಷ್ಟ ಸಮುದಾಯಗಳು ಇನ್ನೂ ಶೇ.50ರ ಮಟ್ಟವನ್ನೂ ತಲುಪದಿರುವುದು ಗಂಭೀರವಾಗಿ ಪರಿಗಣಿಸಬೇಕಾದ ವಿಚಾರವಾಗಿದೆ.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಜನರು ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ಶೈಕ್ಷಣಿಕವಾಗಿ ಮುಂದುವರಿದಾಗ ಮಾತ್ರ ಉದ್ಯೋಗಾವಕಾಶಗಳನ್ನು ಪಡೆದು ಆರ್ಥಿಕವಾಗಿ ಸಬಲರಾಗಲು ಸಾಧ್ಯವಾಗುತ್ತದೆ. ಶಿಕ್ಷಣವೇ ಸಮುದಾಯಗಳ ಪ್ರಗತಿಗೆ ಪ್ರಮುಖ ಸಾಧನವಾಗಿದೆ.
*ಸಂವಿಧಾನ ಮತ್ತು ಮೀಸಲಾತಿಯಿಂದ ಶೋಷಿತ ಸಮುದಾಯಗಳಿಗೆ ಸಮಾನತೆಯ ಅವಕಾಶ:
ಬಾಬಾಸಾಹೇಬ್ ಡಾ. ಬಿ.ಆರ್. ಅಂಬೇಡ್ಕರ್ ಅವರು ಸಂವಿಧಾನದ ಮೂಲಕ ಸಮಾನತೆಯ ಹಕ್ಕುಗಳನ್ನು ಕಲ್ಪಿಸದಿದ್ದರೆ, ದೇಶದ ಶೋಷಿತ ಸಮುದಾಯಗಳ ಪರಿಸ್ಥಿತಿ ಹೇಗಿರುತ್ತಿತ್ತು ಎಂಬುದನ್ನು ಪ್ರತಿಯೊಬ್ಬರೂ ಯೋಚಿಸಬೇಕಾಗಿದೆ.
ಶತಮಾನಗಳಿಂದ ಶಿಕ್ಷಣ, ಸಾಮಾಜಿಕ ಅವಕಾಶಗಳು ಹಾಗೂ ಸಾಮಾನ್ಯ ಜೀವನದ ಹಕ್ಕುಗಳಿಂದಲೂ ವಂಚಿತರಾಗಿದ್ದ ಸಮುದಾಯಗಳಿಗೆ ಸಂವಿಧಾನವು ಸಮಾನತೆಯ ಅವಕಾಶ ಕಲ್ಪಿಸಿದೆ. ಬಾಬಾಸಾಹೇಬ್ ಅಂಬೇಡ್ಕರ್ ಅವರು ಶೈಕ್ಷಣಿಕ, ಸಾಮಾಜಿಕ, ಔದ್ಯೋಗಿಕ ಮತ್ತು ರಾಜಕೀಯ ಕ್ಷೇತ್ರಗಳಲ್ಲಿ ಸಮಾನವಾಗಿ ಬದುಕುವ ಅವಕಾಶವನ್ನು ಒದಗಿಸಿದ್ದಾರೆ.
ಮೀಸಲಾತಿಯ ಪರಿಣಾಮವಾಗಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಪ್ರತಿನಿಧಿಗಳು ಸಂಸತ್ತು, ವಿಧಾನಸಭೆ ಹಾಗೂ ವಿಧಾನ ಪರಿಷತ್ಗಳಿಗೆ ಆಯ್ಕೆಯಾಗಲು ಸಾಧ್ಯವಾಗಿದೆ. ಮಾಜಿ ಸಂಸದ ವಿ.ಎಸ್. ಉಗ್ರಪ್ಪ, ಹಿರಿಯ ನಾಯಕ ಕೆ.ಹೆಚ್. ಮುನಿಯಪ್ಪ ಸೇರಿದಂತೆ ಅನೇಕರು ಸಂಸತ್ತಿನಲ್ಲಿ ಸಮುದಾಯಗಳ ಪರವಾಗಿ ಧ್ವನಿ ಎತ್ತಲು ಸಾಧ್ಯವಾಗಿರುವುದು ಮೀಸಲಾತಿಯಿಂದಲೇ. ಇಂದು ನಮ್ಮಂತಹ ಅನೇಕರು ಶಾಸಕರು ಹಾಗೂ ಸಚಿವರಾಗಿರುವುದಕ್ಕೂ ಮೀಸಲಾತಿ ಕಲ್ಪಿಸಿರುವ ಅವಕಾಶವೇ ಕಾರಣ.
ಶೋಷಿತ ಸಮುದಾಯಗಳಿಗೆ ರಾಜಕೀಯ ಪ್ರಾತಿನಿಧ್ಯ ದೊರೆಯದಿದ್ದರೆ ಅವರ ಸಮಸ್ಯೆಗಳು ಮತ್ತು ಬೇಡಿಕೆಗಳನ್ನು ಶಾಸನಸಭೆಗಳಲ್ಲಿ ಸಮರ್ಥವಾಗಿ ಪ್ರಸ್ತಾಪಿಸುವುದು ಕಷ್ಟವಾಗುತ್ತಿತ್ತು. ಸಾಮಾಜಿಕ ಅಸಮಾನತೆಯಿಂದ ಹೊರಬರಲು ಶಿಕ್ಷಣ ಮತ್ತು ಮೀಸಲಾತಿ ಎರಡೂ ಅತ್ಯಂತ ಅಗತ್ಯವಾಗಿವೆ.
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ಸಮುದಾಯಗಳು ಈ ದೇಶದ ಮೂಲ ನಿವಾಸಿಗಳು ಎಂದು ಮಾಜಿ ಸಂಸದ ಉಗ್ರಪ್ಪ ಅವರು ಪ್ರಸ್ತಾಪಿಸಿರುವ ವಿಚಾರಕ್ಕೆ ನಾನು ಸಹಮತ ಹೊಂದಿದ್ದೇನೆ.
ಆರ್ಯರ ಆಗಮನಕ್ಕೂ ಮುನ್ನ ದೇಶದಲ್ಲಿ ಬುಡಕಟ್ಟು ಸಮುದಾಯಗಳು ಹಾಗೂ ಇಂದು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಹಿಂದುಳಿದ ಸಮುದಾಯಗಳೆಂದು ಗುರುತಿಸಲ್ಪಡುವ ಜನರು ನೆಲೆಸಿದ್ದರು. ಸಮಾಜವನ್ನು ಜಾತಿಗಳ ಆಧಾರದಲ್ಲಿ ವರ್ಗೀಕರಿಸಿ ಮೇಲು-ಕೀಳು ಎಂಬ ಭೇದಭಾವ ಸೃಷ್ಟಿಸಿದ ಶ್ರೇಣೀಕೃತ ವ್ಯವಸ್ಥೆ ಸಾವಿರಾರು ವರ್ಷಗಳಿಂದ ಮುಂದುವರಿದಿದೆ. ಈ ವ್ಯವಸ್ಥೆಯಿಂದ ಶೋಷಣೆ ಮತ್ತು ಅಸಮಾನತೆ ಉಂಟಾಗಿದೆ. 21ನೇ ಶತಮಾನದಲ್ಲಿಯೂ ಸಮಾಜದಲ್ಲಿ ಇಂತಹ ಅಸಮಾನತೆಗಳು ಮುಂದುವರಿದಿರುವುದು ವಿಷಾದನೀಯ.
ಇಂತಹ ಶ್ರೇಣೀಕೃತ ವ್ಯವಸ್ಥೆ ಇಲ್ಲದಿದ್ದರೆ ಎಲ್ಲರೂ ಸಮಾನತೆಯಿಂದ ಬದುಕುವ ಸಮಾಜ ನಿರ್ಮಾಣವಾಗುತ್ತಿತ್ತು. ಸಮಾಜದಲ್ಲಿ ಸಮಾನತೆ, ಮಾನವೀಯತೆ ಮತ್ತು ಪರಸ್ಪರ ಗೌರವದ ಮೌಲ್ಯಗಳು ನೆಲೆಗೊಳ್ಳಬೇಕು.
*ವಾಲ್ಮೀಕಿ ಮಹರ್ಷಿಗಳ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು:*
ರಾಮಾಯಣ ಮತ್ತು ಮಹಾಭಾರತ ಮಹಾಕಾವ್ಯಗಳು ಭಾರತದ ಸಾಂಸ್ಕೃತಿಕ ಹಾಗೂ ಧಾರ್ಮಿಕ ಇತಿಹಾಸಕ್ಕೆ ಭದ್ರ ಅಡಿಪಾಯ ಹಾಕಿವೆ. ಮಹರ್ಷಿ ವಾಲ್ಮೀಕಿ ಅವರು ಭಾರತೀಯ ಸಂಸ್ಕೃತಿ ಮತ್ತು ಸಾಹಿತ್ಯಕ್ಕೆ ನೀಡಿರುವ ಕೊಡುಗೆ ಅಪಾರವಾಗಿದೆ.
ಸತ್ಯ, ಧರ್ಮ, ನ್ಯಾಯ ಮತ್ತು ನೀತಿಯ ಆಧಾರದಲ್ಲಿ ಜೀವನ ನಡೆಸಬೇಕು ಎಂಬ ಸಂದೇಶ ಈ ಮಹಾಕಾವ್ಯಗಳಲ್ಲಿದೆ. ಶ್ರೀರಾಮನ 14 ವರ್ಷಗಳ ವನವಾಸ, ಸೀತೆಯನ್ನು ಕಾಡಿಗೆ ಕಳುಹಿಸಿದ ಪ್ರಸಂಗ ಸೇರಿದಂತೆ ರಾಮಾಯಣದಲ್ಲಿನ ಘಟನೆಗಳು ಕೇವಲ ಕಥೆಗಳಲ್ಲ. ಅವು ಇಂದಿಗೂ ಸಮಾಜಕ್ಕೆ ಜೀವನಮೌಲ್ಯಗಳನ್ನು ನೆನಪಿಸುವ ಉದಾಹರಣೆಗಳಾಗಿ ಉಳಿದಿವೆ.
ರಾಮಾಯಣ ಮತ್ತು ಮಹಾಭಾರತ ಮಹಾಕಾವ್ಯಗಳು ಭಾರತದ ಗಡಿಗಳನ್ನು ಮೀರಿ ವಿಶ್ವದಾದ್ಯಂತ ಅಧ್ಯಯನಕ್ಕೆ ಒಳಪಟ್ಟಿವೆ. ವಿಶ್ವದ ಪ್ರತಿಷ್ಠಿತ ಗ್ರಂಥಾಲಯಗಳಲ್ಲಿಯೂ ಈ ಕೃತಿಗಳು ಲಭ್ಯವಿದ್ದು, ಪಾಶ್ಚಿಮಾತ್ಯ ದೇಶಗಳ ವಿದ್ವಾಂಸರು ಕೂಡ ಇವುಗಳ ಅಧ್ಯಯನಕ್ಕಾಗಿ ಭಾರತದ ವಿಶ್ವವಿದ್ಯಾಲಯಗಳಿಗೆ ಆಗಮಿಸುತ್ತಾರೆ.
ಮಾಹಿತಿ ತಂತ್ರಜ್ಞಾನ ಮುಂದುವರಿದಿರುವ ಇಂದಿನ ಕಾಲದಲ್ಲಿ ಈ ಮಹಾಕಾವ್ಯಗಳ ವಿಷಯಗಳನ್ನು ಕ್ಷಣಾರ್ಧದಲ್ಲಿ ಪಡೆಯಲು ಸಾಧ್ಯವಿದೆ. ಆದರೆ, ಅವುಗಳಲ್ಲಿರುವ ಸತ್ಯ, ಧರ್ಮ, ನ್ಯಾಯ, ನೀತಿ ಮತ್ತು ಮಾನವೀಯ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದು ಬಹಳ ಮುಖ್ಯವಾಗಿದೆ.
ಮಹರ್ಷಿ ವಾಲ್ಮೀಕಿ ಅವರನ್ನು ಸ್ಮರಿಸುವುದರ ಜೊತೆಗೆ ಅವರ ಆದರ್ಶಗಳನ್ನು ಪಾಲಿಸುವುದು ಪ್ರತಿಯೊಬ್ಬ ಭಾರತೀಯನ ಕರ್ತವ್ಯವಾಗಿದೆ. ಮಹರ್ಷಿ ಆದರ್ಶಗಳು ಮುಂದಿನ ಪೀಳಿಗೆಗೆ ಪರಿಚಯವಾಗುವಂತಹ ಕೆಲಸವನ್ನು ನಾವು ಮಾಡಬೇಕು.
ಸ್ಚಾಮೀಜಿಯವರು ನೀಡಿರುವ ಮನವಿಯ ಬೇಡಿಕೆಗಳನ್ನು ಮುಖ್ಯಮಂತ್ರಿಗಳ ಗಮನಕ್ಕೆ ತಂದು ಈಡೇರಿಸಲಾಗುವುದು.
Dr. G Parameshwara
@DrParameshwara
Today, at the Sri Maharshi Valmiki Jayanti and Sri Maharshi Valmiki Award Ceremony at Vidhana Soudha, I reiterated that there will be no compromise in protecting the constitutional rights of Scheduled Castes and Scheduled Tribes.
Our Government has decided to file a Special Leave Petition (SLP) before the Supreme Court against the High Court judgment striking down the enhanced SC-ST reservation. We will also consult legal experts and urge the Union Government to bring the enhanced reservation under the Ninth Schedule of the Constitution to provide it permanent protection.
Reservation in Karnataka was increased from 50% to 56% in proportion to the population of SC-ST communities. Based on the 2011 Census, Scheduled Castes constitute 17% and Scheduled Tribes 7% of the population. When Tamil Nadu’s 69% reservation has constitutional protection under the Ninth Schedule and the Centre has provided 10% EWS reservation, the enhanced reservation for SC-ST communities in Karnataka also deserves lasting protection.
I recalled the 258-km padayatra undertaken by the Swamiji demanding 7% reservation for Scheduled Tribes. I had assured the community then that the demand would be fulfilled. The subsequent Government increased ST reservation to 7% and SC reservation by 3%, taking the total to 56%. However, the enhanced reservation should also have been taken to the Centre for protection under the Ninth Schedule.
Our Government remains fully committed to the development of SC-ST communities. Thousands of beneficiaries have received support under the Ganga Kalyana Scheme, scholarships are being provided, and 162 students have been supported for higher education abroad. Existing welfare programmes will continue.
At the same time, education must remain our highest priority. Even 78 years after Independence, Scheduled Tribe literacy stands at around 49%, with women’s literacy at 38%. Educational progress is essential to secure employment, economic empowerment and social advancement.
Babasaheb Dr. B.R. Ambedkar, through the Constitution and reservation, opened the doors of equality, education, employment and political representation to communities that had been denied these opportunities for generations. We will not allow those constitutional safeguards to be weakened. Education and reservation remain essential instruments for overcoming social inequality.
On Maharshi Valmiki Jayanti, we must go beyond remembering the Maharshi and strive to practise the values of truth, dharma, justice, morality and humanity reflected in his teachings and in the Ramayana. It is equally our responsibility to introduce these ideals to future generations.
I also assured that the demands submitted by the Swamiji will be brought to the attention of the Chief Minister and pursued appropriately. -
Dr. G Parameshwara
@DrParameshwara
ಸ್ವಂತ ನಿವೇಶನ ಹೊಂದುವ ಪ್ರತಿಯೊಂದು ಕುಟುಂಬದ ಕನಸನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ನಮ್ಮ ಸರ್ಕಾರ ಕಾರ್ಯೋನ್ಮುಖವಾಗಿದೆ. ರಾಜ್ಯಾದ್ಯಂತ ವಸತಿ ರಹಿತ ಬಡವರಿಗೆ 15 ಲಕ್ಷ ನಿವೇಶನಗಳನ್ನು ಹಂಚುವ ಗುರಿ ಹೊಂದಿದ್ದು, ಮೊದಲ ಹಂತದಲ್ಲಿ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಕನಿಷ್ಠ 2,000 ನಿವೇಶನಗಳನ್ನು ವಿತರಿಸಲು ಉದ್ದೇಶಿಸಲಾಗಿದೆ.
ಸರ್ಕಾರಿ ಭೂಮಿಯನ್ನು ಗುರುತಿಸಿ, ಅನಧಿಕೃತ ಒತ್ತುವರಿಯನ್ನು ತೆರವುಗೊಳಿಸುವ ಮೂಲಕ ಅರ್ಹ ಬಡವರಿಗೆ 30×40 ಅಡಿ ಅಳತೆಯ ನಿವೇಶನಗಳನ್ನು ಒದಗಿಸಲು ಸರ್ಕಾರ ಮುಂದಾಗಿದೆ. ಬಡವರ ಸ್ವಂತ ಸೂರಿನ ಕನಸನ್ನು ನನಸಾಗಿಸುವ ನಿಟ್ಟಿನಲ್ಲಿ ನಮ್ಮ ಸರ್ಕಾರ ಬದ್ಧವಾಗಿದೆ.
Our Government is working to fulfil the dream of every family to own a residential site.
We have set a target of allotting 15 lakh housing sites to homeless poor families across the State, with at least 2,000 sites in each Assembly constituency proposed in the first phase.
By identifying government land and clearing unauthorised encroachments, the Government plans to provide eligible poor families with 30×40 ft residential sites.
We remain committed to helping poor families realise their dream of having a place of their own. -
Dr. G Parameshwara
@DrParameshwara
ಇಂದು ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ನಲ್ಲಿ ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆ ವತಿಯಿಂದ ಆಯೋಜಿಸಲಾಗಿದ್ದ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಹಾಗೂ ಶ್ರೀ ಮಹರ್ಷಿ ವಾಲ್ಮೀಕಿ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ, ಮಹರ್ಷಿ ವಾಲ್ಮೀಕಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದೆ.
ಕಾರ್ಯಕ್ರಮದಲ್ಲಿ ದಾವಣಗೆರೆ ಜಿಲ್ಲೆ ರಾಜನಹಳ್ಳಿಯ ಶ್ರೀ ಮಹರ್ಷಿ ವಾಲ್ಮೀಕಿ ಗುರುಪೀಠದ ಶ್ರೀ ಡಾ. ಪ್ರಸನ್ನಾನಂದಪುರಿ ಮಹಾಸ್ವಾಮೀಜಿ ಅವರು ದಿವ್ಯ ಸಾನಿಧ್ಯ ವಹಿಸಿದ್ದರು.
ಸಚಿವರಾದ ಕೆ.ಹೆಚ್. ಮುನಿಯಪ್ಪ, ಟಿ. ರಘುಮೂರ್ತಿ, ರಿಜ್ವಾನ್ ಅರ್ಷದ್, ಶಾಸಕರಾದ ಬಿ. ದೇವೇಂದ್ರಪ್ಪ, ರಾಜಾ ವೇಣುಗೋಪಾಲ್ ನಾಯಕ್, ಮಾಜಿ ಸಚಿವರಾದ ಹೆಚ್. ಆಂಜನೇಯ, ಮಾಜಿ ಸಂಸದರಾದ ವಿ.ಎಸ್. ಉಗ್ರಪ್ಪ, ಸರ್ಕಾರದ ಮುಖ್ಯ ಕಾರ್ಯದರ್ಶಿಗಳಾದ ಶಾಲಿನಿ ರಜನೀಶ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
Dr. G Parameshwara
@DrParameshwara
Today, I inaugurated the Sri Maharshi Valmiki Jayanti and Sri Maharshi Valmiki Award Ceremony, organised by the Department of Scheduled Tribes Welfare at the Banquet Hall, Vidhana Soudha, and paid floral tributes to Maharshi Valmiki.
Sri Dr. Prasannanandapuri Mahaswamiji of Sri Maharshi Valmiki Gurupeetha, Rajanahalli, Davanagere district, graced the occasion with his divine presence.
Ministers K.H. Muniyappa, T. Raghumurthy and Rizwan Arshad; MLAs B. Devendrappa and Raja Venugopal Nayak; former Minister H. Anjaneya; former MP V.S. Ugrappa; Chief Secretary Shalini Rajneesh, and several others were present. -
Dr. G Parameshwara
@DrParameshwara
ಇಂದು ಬೆಂಗಳೂರಿನ ಶಾಸಕರ ಭವನದ ಮುಂಭಾಗದಲ್ಲಿರುವ ಶ್ರೀ ಮಹರ್ಷಿ ವಾಲ್ಮೀಕಿ ತಪೋವನದಲ್ಲಿ ಮಹರ್ಷಿ ವಾಲ್ಮೀಕಿ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಗೌರವ ನಮನ ಸಲ್ಲಿಸಿದೆ.
ಈ ಸಂದರ್ಭದಲ್ಲಿ ದಾವಣಗೆರೆ ಜಿಲ್ಲೆ ರಾಜನಹಳ್ಳಿಯ ಶ್ರೀ ಮಹರ್ಷಿ ವಾಲ್ಮೀಕಿ ಗುರುಪೀಠದ ಶ್ರೀ ಡಾ. ಪ್ರಸನ್ನಾನಂದಪುರಿ ಮಹಾಸ್ವಾಮೀಜಿ, ಪರಿಶಿಷ್ಟ ಪಂಗಡಗಳ ಇಲಾಖೆ ಸಚಿವರಾದ ಟಿ. ರಘುಮೂರ್ತಿ, ಸರ್ಕಾರದ ಮುಖ್ಯ ಕಾರ್ಯದರ್ಶಿಗಳಾದ ಶಾಲಿನಿ ರಜನೀಶ್, ಶಾಸಕರಾದ ಬಿ. ದೇವೇಂದ್ರಪ್ಪ, ರಾಜಾ ವೇಣುಗೋಪಾಲ್ ನಾಯಕ್, ಮಾಜಿ ಸಚಿವರಾದ ಹೆಚ್. ಆಂಜನೇಯ ಉಪಸ್ಥಿತರಿದ್ದರು.
Today, I paid floral tributes to Maharshi Valmiki by garlanding his statue at Sri Maharshi Valmiki Tapovana, in front of the Shasakara Bhavana in Bengaluru.
Sri Dr. Prasannanandapuri Mahaswamiji of Sri Maharshi Valmiki Gurupeetha, Rajanahalli, Davanagere district; T. Raghumurthy, Minister for Scheduled Tribes Welfare; Shalini Rajneesh, Chief Secretary to the Government; MLAs B. Devendrappa and Raja Venugopal Nayak; former Minister H. Anjaneya, and others were present. -
Dr. G Parameshwara
@DrParameshwara
ಭಾನುವಾರ ತುಮಕೂರಿನ ಆರ್.ಟಿ.ಪಿ. ಕನ್ವೆನ್ಷನ್ ಹಾಲ್ನಲ್ಲಿ ನಡೆದ 'ಧಾನ್ಯ ವ್ಯಾಪಾರಿಗಳ ಸಂಘದ ಶತಮಾನೋತ್ಸವ' ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದೆ.
ಈ ಕುರಿತಾದ ಪತ್ರಿಕಾ ವರದಿಗಳು ಹೀಗಿವೆ.. -
Dr. G Parameshwara
@DrParameshwara
*Employment for Qualified Kannadigas in Industries: Industries setting up operations in Karnataka receive several facilities from the Government, including land, electricity and water. In return, they have a responsibility to provide suitable employment opportunities to qualified local Kannadigas.
This is not a new policy. Our stand has always been clear - we are not asking industries to employ those without the required qualifications. Kannadigas with the necessary education and skills must be given jobs that match their merit and capabilities, rather than being confined only to attendant or lower-level posts.
*No Question of Siddaramaiah Being Isolated: There is no question of him being isolated. All our MLAs are with Siddaramaiah, D.K. Shivakumar and the Congress party. On matters currently under investigation, it is appropriate to wait for the inquiry to be completed and the facts to emerge.
*I Don’t Pressure, I Issue Orders: I also clarified that I have not said I would “pressure” the Government regarding the ₹2,500 assistance to farmers. I do not pressure the Government - I issue orders, and the necessary directions have already been given.
*Maharshi Valmiki Jayanti: On the occasion of Maharshi Valmiki Jayanti, I extend my warm greetings to everyone across the State.
- My remarks to the media near my residence today. -
Dr. G Parameshwara
@DrParameshwara
ರಾಜ್ಯದಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸುವ ಉದ್ಯಮಿಗಳು ಅರ್ಹ ಸ್ಥಳೀಯ ಕನ್ನಡಿಗರಿಗೆ ಉದ್ಯೋಗಾವಕಾಶಗಳನ್ನು ಕಲ್ಪಿಸಬೇಕು. ಕೈಗಾರಿಕೆಗಳಿಗೆ ಭೂಮಿ, ವಿದ್ಯುತ್, ನೀರು ಸೇರಿದಂತೆ ಅಗತ್ಯ ಸೌಲಭ್ಯಗಳನ್ನು ಸರ್ಕಾರ ಒದಗಿಸುತ್ತಿದ್ದು, ಅದಕ್ಕೆ ಅನುಗುಣವಾಗಿ ಅರ್ಹ ಕನ್ನಡಿಗರಿಗೆ ಉದ್ಯೋಗ ನೀಡುವ ಬದ್ಧತೆಯನ್ನು ಕೈಗಾರಿಕೆಗಳು ಪಾಲಿಸಬೇಕು.
ಕೈಗಾರಿಕೆಗಳಲ್ಲಿ ಸ್ಥಳೀಯರಿಗೆ ಉದ್ಯೋಗ ನೀಡಬೇಕೆಂಬುದು ಹೊಸ ವಿಚಾರವಲ್ಲ. ಮೊದಲಿನಿಂದಲೂ ಈ ನೀತಿ ಜಾರಿಯಲ್ಲಿದ್ದು, ಅದನ್ನು ಎಲ್ಲ ಕೈಗಾರಿಕೆಗಳು ಪಾಲಿಸಬೇಕು.
ಕೈಗಾರಿಕೆಗಳ ಸ್ಥಾಪನೆಗೆ ಸರ್ಕಾರ ಭೂಮಿ, ವಿದ್ಯುತ್, ನೀರು ಸೇರಿದಂತೆ ಹಲವು ಸೌಲಭ್ಯಗಳನ್ನು ಒದಗಿಸುತ್ತದೆ. ಹೀಗಿರುವಾಗ ಸ್ಥಳೀಯರಿಗೆ ಉದ್ಯೋಗ ನೀಡುವುದು ಕೈಗಾರಿಕೆಗಳ ಜವಾಬ್ದಾರಿಯಾಗಿದೆ. ಅರ್ಹತೆ ಇಲ್ಲದವರಿಗೆ ಉದ್ಯೋಗ ನೀಡಬೇಕೆಂದು ಸರ್ಕಾರ ಹೇಳುತ್ತಿಲ್ಲ. ಅಗತ್ಯ ವಿದ್ಯಾರ್ಹತೆ ಮತ್ತು ಕೌಶಲ ಹೊಂದಿರುವ ಕನ್ನಡಿಗರಿಗೆ ಅವರ ಅರ್ಹತೆಗೆ ತಕ್ಕಂತೆ ಉದ್ಯೋಗಾವಕಾಶಗಳನ್ನು ನೀಡಬೇಕು ಎಂಬುದು ಸರ್ಕಾರದ ನಿಲುವಾಗಿದೆ.
ಕೆಲವು ಕೈಗಾರಿಕೆಗಳಲ್ಲಿ ಸ್ಥಳೀಯರಿಗೆ ಅಟೆಂಡರ್ ಹಾಗೂ ಕೆಳಹಂತದ ಹುದ್ದೆಗಳನ್ನು ಮಾತ್ರ ನೀಡಲಾಗುತ್ತಿದೆ. ಈ ಪ್ರವೃತ್ತಿ ಸರಿಯಲ್ಲ. ಅರ್ಹತೆ ಹೊಂದಿರುವ ಕನ್ನಡಿಗರಿಗೆ ಅವರ ವಿದ್ಯಾರ್ಹತೆ ಮತ್ತು ಕೌಶಲಕ್ಕೆ ಅನುಗುಣವಾಗಿ ಸೂಕ್ತ ಹುದ್ದೆಗಳನ್ನು ನೀಡಬೇಕು. ಈ ವಿಚಾರದಲ್ಲಿ ಮುಖ್ಯಮಂತ್ರಿಯವರು ಸರ್ಕಾರದ ಹಿಂದಿನ ಬದ್ಧತೆಯನ್ನೇ ಪುನರುಚ್ಚರಿಸಿದ್ದಾರೆ.
*ಸಿದ್ದರಾಮಯ್ಯ ಅವರೊಂದಿಗೆ ಎಲ್ಲ ಶಾಸಕರೂ ಇದ್ದಾರೆ*
ಸಿದ್ದರಾಮಯ್ಯ ಅವರು ಒಂಟಿಯಾಗುವ ಪ್ರಶ್ನೆಯೇ ಇಲ್ಲ. ನಮ್ಮ ಎಲ್ಲ ಶಾಸಕರು ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಹಾಗೂ ಕಾಂಗ್ರೆಸ್ ಪಕ್ಷದೊಂದಿಗೆ ಇದ್ದಾರೆ. ಯಾರೂ ಒಂಟಿಯಾಗಿಲ್ಲ.
ಸಾರ್ವಜನಿಕ ಬದುಕಿನಲ್ಲಿ ನಡೆಯಬಾರದಂತಹ ಘಟನೆಗಳನ್ನು ಎಲ್ಲರೂ ಖಂಡಿಸಬೇಕು. ಈ ವಿಚಾರದಲ್ಲಿ ನಾವೆಲ್ಲರೂ ಖಂಡಿಸಿದ್ದೇವೆ. ಸಿದ್ದರಾಮಯ್ಯ ಅವರು ಒಂಟಿಯಾಗಲು ಸಾಧ್ಯವಿಲ್ಲ.
ಪ್ರತಿ ರೈತರಿಗೆ ₹2,500 ರೂಪಾಯಿ ನೀಡುವ ವಿಚಾರದಲ್ಲಿ ಸರ್ಕಾರವನ್ನು ಒತ್ತಾಯಿಸುವುದಾಗಿ ನಾನು ಎಲ್ಲಿಯೂ ಹೇಳಿಲ್ಲ. ನಾನು ಒತ್ತಾಯ ಮಾಡುವವನಲ್ಲ, ಆದೇಶ ನೀಡುವವನು. ಈ ವಿಚಾರದಲ್ಲಿ ಈಗಾಗಲೇ ಆದೇಶ ನೀಡಿದ್ದೇನೆ.
- ಇಂದು ನನ್ನ ನಿವಾಸದ ಬಳಿ ಮಾಧ್ಯಮದವರೊಂದಿಗೆ ಮಾತನಾಡಿದೆ. -
Dr. G Parameshwara
@DrParameshwara
ಕನ್ನಡ ಸಾಹಿತ್ಯ ಲೋಕದ ವರಕವಿ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಾದ ದ.ರಾ. ಬೇಂದ್ರೆಯವರು ತಮ್ಮ ಕಾವ್ಯಗಳ ಮೂಲಕ ಕನ್ನಡ ನಾಡು, ನುಡಿ, ಪ್ರಕೃತಿ ಹಾಗೂ ಮಾನವೀಯ ಭಾವನೆಗಳಿಗೆ ಜೀವ ತುಂಬಿದ ಸಾಧಕರು.
ಕನ್ನಡ ಕಾವ್ಯಲೋಕಕ್ಕೆ ಅಮೂಲ್ಯ ಕೊಡುಗೆ ನೀಡಿದ ದ.ರಾ. ಬೇಂದ್ರೆಯವರ ಪುಣ್ಯಸ್ಮರಣೆಯಂದು ಗೌರವಪೂರ್ವಕವಾಗಿ ಸ್ಮರಿಸಿ ನಮನಗಳನ್ನು ಸಲ್ಲಿಸುತ್ತೇನೆ. -
Dr. G Parameshwara
@DrParameshwara
ಪ್ರಗತಿಪರ ಚಿಂತನೆ, ಜನಪರ ಕಾಳಜಿ ಹಾಗೂ ಜನಪರ ಆಡಳಿತದ ಮೂಲಕ ಜನಮಾನಸದಲ್ಲಿ ನೆಲೆನಿಂತವರು ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪನವರು.
ಸಮಾಜವಾದಿ ಮೌಲ್ಯಗಳಿಗೆ ಬದ್ಧರಾಗಿದ್ದ ಎಸ್. ಬಂಗಾರಪ್ಪನವರ ಜನ್ಮದಿನದ ಸಂದರ್ಭದಲ್ಲಿ ಅವರನ್ನು ಸ್ಮರಿಸಿ ನಮಿಸುತ್ತೇನೆ.
ನಮ್ಮ ಸರ್ಕಾರದ ಜನಕಲ್ಯಾಣ ಕಾರ್ಯಗಳಿಗೆ ಬಂಗಾರಪ್ಪನವರ ಆದರ್ಶಗಳು ಸದಾ ಪ್ರೇರಣೆಯಾಗಿರಲಿವೆ. -
Dr. G Parameshwara
@DrParameshwara
ಆದಿಕವಿ ಮಹರ್ಷಿ ವಾಲ್ಮೀಕಿಯವರು ತಮ್ಮ ಮಹಾಕಾವ್ಯ ರಾಮಾಯಣದ ಮೂಲಕ ಜಗತ್ತಿಗೆ ಸತ್ಯ, ಧರ್ಮ, ನ್ಯಾಯ ಹಾಗೂ ಮಾನವೀಯತೆಯ ಮೌಲ್ಯಗಳನ್ನು ಸಾರಿದ್ದಾರೆ.
ಮಹರ್ಷಿ ವಾಲ್ಮೀಕಿಯವರ ಜಯಂತಿಯಂದು ಗೌರವಪೂರ್ವಕ ನಮನಗಳನ್ನು ಸಲ್ಲಿಸುತ್ತೇನೆ. -
Dr. G Parameshwara
@DrParameshwara
ಇಂದು ಬೆಂಗಳೂರಿನ ಶ್ರೀ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಫಿಬಾ ಏಷ್ಯಾ ಮಹಿಳಾ ಬಾಸ್ಕೆಟ್ಬಾಲ್ ಲೀಗ್ ಟೂರ್ನಿಯ ಫೈನಲ್ ಪಂದ್ಯವನ್ನು ವೀಕ್ಷಿಸಿದೆ.
ಬಳಿಕ ಟೂರ್ನಿಯಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದ ಜಪಾನ್ನ ಡೆನ್ಸೊ ಐರಿಸ್ ತಂಡ ಹಾಗೂ ರನ್ನರ್ ಅಪ್ ಸ್ಥಾನ ಪಡೆದ ಚೀನಾದ ಸಿಚುವಾನ್ ಯುಯಾಂದ ಮೀಲೆ ತಂಡಕ್ಕೆ ಟ್ರೋಫಿ ವಿತರಿಸಿ ಅಭಿನಂದಿಸಿದೆ.
ಕ್ರೀಡೆಯಲ್ಲಿ ಸೋಲು-ಗೆಲುವು ಸಹಜ. ಆದರೆ, ಸ್ಪರ್ಧೆಯಲ್ಲಿ ಭಾಗವಹಿಸುವುದು, ತಮ್ಮ ಪ್ರತಿಭೆಯನ್ನು ಪ್ರದರ್ಶಿಸುವುದು ಹಾಗೂ ಕ್ರೀಡಾ ಸ್ಫೂರ್ತಿಯಿಂದ ಹೋರಾಡುವುದು ಅತ್ಯಂತ ಮುಖ್ಯ. ಎಲ್ಲಾ ತಂಡಗಳ ಕ್ರೀಡಾ ಬದ್ಧತೆ ಮತ್ತು ಪರಿಶ್ರಮ ಶ್ಲಾಘನೀಯ. ಮುಂದಿನ ದಿನಗಳಲ್ಲಿಯೂ ಇನ್ನಷ್ಟು ಯಶಸ್ಸು ನಿಮ್ಮದಾಗಲಿ ಎಂದು ಹಾರೈಸುತ್ತೇನೆ.
ಈ ಸಂದರ್ಭದಲ್ಲಿ ಫಿಬಾ ಏಷ್ಯಾ ಅಧ್ಯಕ್ಷರು ಹಾಗೂ ವಿಧಾನ ಪರಿಷತ್ ಸದಸ್ಯರಾದ ಡಾ. ಕೆ. ಗೋವಿಂದರಾಜು, ವಿಧಾನ ಪರಿಷತ್ ಸಭಾಪತಿಗಳಾದ ಸಲೀಂ ಅಹ್ಮದ್, ತಮಿಳುನಾಡಿನ ಕ್ರೀಡಾ ಸಚಿವರು ಹಾಗೂ ಭಾರತೀಯ ಬಾಸ್ಕೆಟ್ಬಾಲ್ ಸಂಸ್ಥೆಯ ಅಧ್ಯಕ್ಷರಾದ ಆಧವ್ ಅರ್ಜುನ್, ಕರ್ನಾಟಕ ಬಾಸ್ಕೆಟ್ಬಾಲ್ ಅಸೋಸಿಯೇಷನ್ ಅಧ್ಯಕ್ಷರಾದ ಬಿ. ದಯಾನಂದ ಹಾಗೂ ನಟಿ ರಮ್ಯಾ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
Dr. G Parameshwara
@DrParameshwara
It was a pleasure to witness the final of the FIBA Asia Women’s Basketball League 2026 at the Sree Kanteerava Indoor Stadium in Bengaluru today.
Congratulations to Japan’s Denso Iris on winning the championship and to China’s Sichuan Yuanda Meile for finishing as runners-up. I had the honour of presenting the trophies to both teams.
Sport is not just about winning or losing; it is about the spirit of competition, dedication, and the determination to give your best. Every team that took part deserves appreciation for their efforts and sporting spirit. Wishing all the players and teams many more achievements in the years ahead.
FIBA Asia President and MLC Dr. K. Govindaraju, Legislative Council Chairman Saleem Ahmed, Tamil Nadu Sports Minister and Basketball Federation of India President Aadhav Arjuna, Karnataka Basketball Association President B. Dayananda, actress Ramya, and other dignitaries were present on the occasion. -
Dr. G Parameshwara
@DrParameshwara
ಇಂದು ಮಧುಗಿರಿ ತಾಲ್ಲೂಕಿನ ತಿಪ್ಪಾಪುರ ತಾಂಡಾದಲ್ಲಿ ನಡೆದ ತುಮಕೂರು ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರು ಹಾಗೂ ಬಂಜಾರ ಸಮುದಾಯದ ಹಿರಿಯ ನಾಯಕರಾಗಿದ್ದ ಕಾಂಗ್ರೆಸ್ ಮುಖಂಡ ದೇನಾ ನಾಯ್ಕ್ ಅವರ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ಮೃತರ ಆತ್ಮಕ್ಕೆ ಶಾಂತಿ ಕೋರಿ ಶ್ರದ್ಧಾಂಜಲಿ ಸಲ್ಲಿಸಿದೆ.
ದೇನಾ ನಾಯ್ಕ್ ನಿಧನದಿಂದ ಅವರ ಕುಟುಂಬದವರಷ್ಟೇ ನಾನು ಸಹ ದುಃಖಿ. -
Dr. G Parameshwara
@DrParameshwara
ಇಂದು ಕೊರಟಗೆರೆಯಲ್ಲಿ ಮಾಜಿ ಶಾಸಕರಾದ ಸುಧಾಕರ್ ಲಾಲ್ ಅವರ ಸಹೋದರ ಮೋಹನ್ ಲಾಲ್ ಅವರ ಪಾರ್ಥಿವ ಶರೀರದ ದರ್ಶನ ಪಡೆದು, ಅಂತಿಮ ನಮನ ಸಲ್ಲಿಸಿದೆ.
ಭಗವಂತನು ಶ್ರೀಯುತರ ಅಗಲಿಕೆಯ ದುಃಖವನ್ನು ಭರಿಸುವ ಶಕ್ತಿಯನ್ನು ಕುಟುಂಬದವರಿಗೆ ಕರುಣಿಸಲಿ ಹಾಗೂ ಮೃತರ ಆತ್ಮಕ್ಕೆ ಶಾಂತಿ ದೊರೆಯಲಿ ಎಂದು ಪ್ರಾರ್ಥಿಸುತ್ತೇನೆ. -
Dr. G Parameshwara
@DrParameshwara
A century of service is not merely a milestone in the history of an institution; it is a testament to the values of integrity, collective responsibility and an enduring commitment to society.
It was a pleasure to inaugurate the Centenary Celebrations of the Grain Merchants' Association in Tumakuru and release the commemorative publication, Siridhanya Sampada.
Established in 1926, the Association has been an integral part of Tumakuru's commercial and social evolution. From providing food grains and feeding the underprivileged during the severe drought of 1965–66 to supporting the establishment of an engineering college by Siddaganga Mutt and contributing during the Kargil War, its legacy extends far beyond commerce. It exemplifies how enterprise and social responsibility must progress together.
Traders have played an indispensable role in India's journey towards food security, connecting the produce of our hardworking farmers with millions of households. A strong agricultural economy requires both prosperous farmers and a fair, transparent trading ecosystem. Our Agricultural Produce Market Committees (APMCs) remain vital to safeguarding this balance.
Karnataka's economic strength has been built upon generations of entrepreneurship, institutional credibility and progressive governance. As the country's second-largest contributor to GST collections, our state continues to demonstrate its economic dynamism. Our industrial policy places particular emphasis on MSMEs, recognising that a thriving ecosystem of smaller enterprises is fundamental to the success of larger industries.
From manufacturing and electronics to emerging technologies and Artificial Intelligence, Karnataka is shaping India's economic future. With approximately 600 AI startups and a significant concentration of the country's AI enterprises, we are determined to translate technological leadership into wider economic opportunities.
My vision is to transform Tumakuru into one of Karnataka's most prestigious districts and a major engine of industrial growth, educational excellence and employment generation.
Towards this objective, we are pursuing an ambitious industrial development plan spanning approximately 20,000 acres, with the potential to establish Tumakuru as one of Asia's prominent industrial hubs.
The growing investor interest is encouraging. Proposals under consideration include an investment of approximately ₹80,000 crore for green hydrogen and data centre facilities, Toyota's exploration of industrial opportunities, and the development of a Japanese Township for which 500 acres have already been provided.
These investments represent more than industrial infrastructure. They hold the promise of employment for our youth, new opportunities for local enterprises and greater economic prosperity for thousands of families.
Equally important is our commitment to improving connectivity. The proposed Bengaluru–Tumakuru Metro Rail connection has been a long-standing aspiration. With the feasibility study completed and the Detailed Project Report prepared, efforts are progressing towards the next stage of inviting Expressions of Interest.
I firmly believe that better connectivity will bring Bengaluru and Tumakuru closer, unlock new economic possibilities and accelerate the region's transformation.
Education must remain at the heart of this progress. I have always believed that establishing more educational institutions is not merely about expanding infrastructure, but about opening doors of opportunity for more young people. This conviction guided my efforts to facilitate the establishment of Sridevi Engineering College during my tenure as Higher Education Minister. (1/2)
Dr. G Parameshwara
@DrParameshwara
On a personal note, Tumakuru and Siddaganga Mutt occupy a special place in my life. As a child, my father took me to seek the blessings of His Holiness Sri Shivakumara Swamiji. Those blessings have remained a profound source of strength and inspiration throughout my journey, from my early years in agriculture and academia to entering public life in 1989 and having the privilege of serving Karnataka in various capacities.
Public office is temporary, but the institutions we build, the opportunities we create and the lives we improve must endure for generations.
That conviction continues to guide my commitment to Tumakuru and Karnataka.
As the Grain Merchants' Association enters its second century, I congratulate its president, office-bearers, members and generations of traders who have sustained its remarkable legacy. I assure the Association of my continued cooperation and every possible support from the government.
May its next hundred years be defined by even greater contributions to commerce, education, social welfare and the prosperity of our people.
Together, let us build a Tumakuru that honours its rich legacy while confidently embracing the opportunities of the future. (2/2) -
Dr. G Parameshwara
@DrParameshwara
ಒಂದು ಸಂಸ್ಥೆ ಶತಮಾನ ಕಾಲ ನಿರಂತರವಾಗಿ ಕಾರ್ಯನಿರ್ವಹಿಸಿ ಸಮಾಜಮುಖಿ ಚಟುವಟಿಕೆಗಳ ಮೂಲಕ ಜನರ ವಿಶ್ವಾಸ ಗಳಿಸುವುದು ಸಾಮಾನ್ಯ ಸಂಗತಿಯಲ್ಲ. 1926ರಲ್ಲಿ ಪ್ರಾರಂಭವಾದ ಧಾನ್ಯ ವ್ಯಾಪಾರಿಗಳ ಸಂಘವು ನೂರು ವರ್ಷಗಳ ಸಾರ್ಥಕ ಸೇವೆಯನ್ನು ಸಲ್ಲಿಸಿರುವುದು ಹೆಮ್ಮೆಯ ಸಂಗತಿ. ಸಂಘದ ಹಿಂದಿನ ಸಾಧನೆಗಳನ್ನು ಸ್ಮರಿಸುವುದರ ಜೊತೆಗೆ, ಮುಂದಿನ ದಿನಗಳಲ್ಲಿ ಇನ್ನಷ್ಟು ಜನಪರ ಕಾರ್ಯಗಳನ್ನು ಕೈಗೊಳ್ಳಲು ಈ ಶತಮಾನೋತ್ಸವ ಪ್ರೇರಣೆಯಾಗಲಿ.
ತುಮಕೂರು ಹಲವು ದಶಕಗಳಿಂದ ಪ್ರಮುಖ ವ್ಯಾಪಾರ ಕೇಂದ್ರವಾಗಿ ಗುರುತಿಸಿಕೊಂಡಿದೆ. ಇಲ್ಲಿನ ವರ್ತಕರು ನಗರದ ಭವಿಷ್ಯವನ್ನು ರೂಪಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ. ತಾವು ಚಿಕ್ಕವರಿದ್ದಾಗ ಮಂಡಿಪೇಟೆಯಲ್ಲಿ ನಡೆಯುತ್ತಿದ್ದ ವ್ಯಾಪಾರ ಚಟುವಟಿಕೆಗಳು ಹಾಗೂ ಅಲ್ಲಿನ ವರ್ತಕರು ತೆಗೆದುಕೊಳ್ಳುತ್ತಿದ್ದ ನಿರ್ಧಾರಗಳು ತುಮಕೂರಿನ ಬೆಳವಣಿಗೆಗೆ ಪೂರಕವಾಗಿದ್ದವು.
1965-66ರ ಅವಧಿಯಲ್ಲಿ ದೇಶ ತೀವ್ರ ಬರಗಾಲವನ್ನು ಎದುರಿಸಿದಾಗ ಧಾನ್ಯ ವ್ಯಾಪಾರಿಗಳ ಸಂಘವು ಬಡವರಿಗೆ ನೆರವಾಗಲು ಮುಂದಾಗಿತ್ತು. ಆಹಾರ ಧಾನ್ಯಗಳನ್ನು ಸಂಗ್ರಹಿಸಿ, ಅವುಗಳನ್ನು ಬಡವರಿಗೆ ವಿತರಿಸುವುದು ಹಾಗೂ ಅನ್ನದಾನದ ಮೂಲಕ ಹಸಿದವರಿಗೆ ನೆರವಾಗುವಂತಹ ಮಾನವೀಯ ಕಾರ್ಯಗಳನ್ನು ಸಂಘ ಕೈಗೊಂಡಿತ್ತು. ಸಂಕಷ್ಟದ ಸಂದರ್ಭಗಳಲ್ಲಿ ಸಮಾಜದ ನೆರವಿಗೆ ಧಾವಿಸುವ ಸಂಘದ ಈ ಸೇವೆ ಶ್ಲಾಘನೀಯವಾಗಿದೆ.
ಸಿದ್ಧಗಂಗಾ ಮಠದ ಪೂಜ್ಯ ಶ್ರೀಗಳು ಇಂಜಿನಿಯರಿಂಗ್ ಕಾಲೇಜು ಪ್ರಾರಂಭಿಸುವ ಸಂದರ್ಭದಲ್ಲಿ ಧಾನ್ಯ ವ್ಯಾಪಾರಿಗಳ ಸಂಘವು ಮಹತ್ವದ ಸಹಕಾರ ನೀಡಿತ್ತು. ವ್ಯಾಪಾರದಿಂದ ನಾಲ್ಕಾಣೆಯಂತೆ ಹಣ ಸಂಗ್ರಹಿಸಿ, ಅಂದಿನ ಕಾಲದಲ್ಲಿ ಸುಮಾರು ಎರಡು ಲಕ್ಷ ರೂಪಾಯಿಗಳನ್ನು ನೀಡುವ ಮೂಲಕ ಇಂಜಿನಿಯರಿಂಗ್ ಕಾಲೇಜಿನ ಸ್ಥಾಪನೆಗೆ ನೆರವಾಗಿತ್ತು. ಅಂದಿನ ಎರಡು ಲಕ್ಷ ರೂಪಾಯಿಗಳ ಕೊಡುಗೆ ಇಂದಿನ ಮೌಲ್ಯದಲ್ಲಿ ಬಹಳ ದೊಡ್ಡ ಮೊತ್ತಕ್ಕೆ ಸಮಾನವಾಗಿದೆ.
ಕೇವಲ ಇಂಜಿನಿಯರಿಂಗ್ ಕಾಲೇಜನ್ನು ಸ್ಥಾಪಿಸುವುದಷ್ಟೇ ಮುಖ್ಯವಲ್ಲ, ವಿದ್ಯಾರ್ಥಿಗಳಿಗೆ ಗುಣಮಟ್ಟದ ತಾಂತ್ರಿಕ ಶಿಕ್ಷಣ ದೊರೆಯಬೇಕು ಎಂಬ ದೂರದೃಷ್ಟಿಯೊಂದಿಗೆ ಪೂಜ್ಯ ಶ್ರೀಗಳು ಈ ಸಂಸ್ಥೆಯನ್ನು ಸ್ಥಾಪಿಸಿದರು. ಅಂತಹ ಮಹತ್ವದ ಕಾರ್ಯಕ್ಕೆ ವರ್ತಕರು ಕೈಜೋಡಿಸಿರುವುದು ಸ್ಮರಣೀಯವಾಗಿದೆ. ಇದೇ ರೀತಿ ಕಾರ್ಗಿಲ್ ಯುದ್ಧದ ಸಂದರ್ಭದಲ್ಲಿಯೂ ಸಂಘವು ನೆರವು ನೀಡಿತ್ತು. ಜನಪರ ಕಾರ್ಯಗಳ ಮೂಲಕ ಧಾನ್ಯ ವ್ಯಾಪಾರಿಗಳ ಸಂಘವು ರಾಜ್ಯದ ಇತರ ಸಂಘ-ಸಂಸ್ಥೆಗಳಿಗೆ ಮಾದರಿಯಾಗಿದೆ.
*ಆಹಾರ ಭದ್ರತೆಯಲ್ಲಿ ವರ್ತಕರ ಕೊಡುಗೆ ಮಹತ್ವದ್ದು*
1960, 1970 ಮತ್ತು 1980ರ ದಶಕಗಳವರೆಗೂ ದೇಶದ ಬಹುಸಂಖ್ಯಾತ ಜನರಿಗೆ ದಿನಕ್ಕೆ ಎರಡು ಹೊತ್ತು ಊಟ ದೊರೆಯುವುದೂ ಕಷ್ಟವಾಗಿತ್ತು. 1965ರಿಂದ 1985ರ ಅವಧಿಯಲ್ಲಿ ದೇಶವು ಆಹಾರ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸುವತ್ತ ಮುನ್ನಡೆಯಿತು. ರೈತರು ಬೆಳೆದ ಧಾನ್ಯಗಳು ಜನಸಾಮಾನ್ಯರಿಗೆ ತಲುಪುವಂತೆ ಮಾಡುವಲ್ಲಿ ವರ್ತಕರ ಸೇವೆ ಅತ್ಯಂತ ಮುಖ್ಯವಾಗಿದೆ. ದೇಶದ ಅಭಿವೃದ್ಧಿ, ರಾಜ್ಯದ ಪ್ರಗತಿ ಹಾಗೂ ಜಿಲ್ಲೆಯ ಬೆಳವಣಿಗೆಯಲ್ಲಿ ಧಾನ್ಯ ವ್ಯಾಪಾರಿಗಳ ಪಾತ್ರವನ್ನು ಕಡೆಗಣಿಸಲು ಸಾಧ್ಯವಿಲ್ಲ.
ಕೃಷಿ ಉತ್ಪನ್ನಗಳ ಮಾರಾಟದಲ್ಲಿ ರೈತರಿಗೆ ನ್ಯಾಯಯುತ ಬೆಲೆ ದೊರೆಯಬೇಕು ಹಾಗೂ ವ್ಯಾಪಾರಿಗಳಿಗೂ ನ್ಯಾಯಯುತ ವ್ಯಾಪಾರಕ್ಕೆ ಅವಕಾಶ ಇರಬೇಕು ಎಂಬ ಉದ್ದೇಶದಿಂದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳ (ಎಪಿಎಂಸಿ) ವ್ಯವಸ್ಥೆಯನ್ನು ರೂಪಿಸಲಾಯಿತು. ರೈತರು ಬೆಳೆದ ಧಾನ್ಯ ಮತ್ತು ಇತರ ಕೃಷಿ ಉತ್ಪನ್ನಗಳನ್ನು ಮಾರುಕಟ್ಟೆಗೆ ತಂದು ಮಾರಾಟ ಮಾಡುವಾಗ ಅವರ ಹಿತಾಸಕ್ತಿಗಳನ್ನು ರಕ್ಷಿಸುವುದರ ಜೊತೆಗೆ ವ್ಯಾಪಾರಿಗಳ ಹಿತವನ್ನೂ ಸಮತೋಲನಗೊಳಿಸುವುದು ಈ ವ್ಯವಸ್ಥೆಯ ಉದ್ದೇಶವಾಗಿದೆ.
ರಾಜ್ಯದಲ್ಲಿ ಹಲವು ಎಪಿಎಂಸಿಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿವೆ. ಕೆಲವು ಮಾರುಕಟ್ಟೆಗಳು ಲಾಭದಲ್ಲಿದ್ದರೆ, ಇನ್ನು ಕೆಲವು ಸವಾಲುಗಳನ್ನು ಎದುರಿಸುತ್ತಿವೆ. ಆದಾಗ್ಯೂ, ರೈತರು ಮತ್ತು ವರ್ತಕರ ನಡುವೆ ಸಮತೋಲನ ಕಾಯ್ದುಕೊಳ್ಳುವಲ್ಲಿ ಎಪಿಎಂಸಿಗಳು ಪ್ರಮುಖ ಪಾತ್ರ ವಹಿಸುತ್ತಿವೆ.
ತುಮಕೂರಿನ ಎಪಿಎಂಸಿಯೂ ಆರೋಗ್ಯಕರವಾಗಿ ಕಾರ್ಯನಿರ್ವಹಿಸುತ್ತಿದೆ. ಮಂಡಿಪೇಟೆಯಲ್ಲಿನ ಸಾಂಪ್ರದಾಯಿಕ ವ್ಯಾಪಾರ ಚಟುವಟಿಕೆಗಳು ಮುಂದುವರಿದಿರುವುದರ ಜೊತೆಗೆ ಎಪಿಎಂಸಿಯೂ ಕಾರ್ಯನಿರ್ವಹಿಸುತ್ತಿದ್ದು, ಎರಡೂ ವ್ಯವಸ್ಥೆಗಳು ಸಮತೋಲನದಿಂದ ಸಾಗುತ್ತಿರುವುದು ತುಮಕೂರಿನ ವಿಶೇಷತೆಯಾಗಿದೆ.
ಕರ್ನಾಟಕವು ದೇಶದ ಪ್ರಮುಖ ಪ್ರಗತಿಪರ ರಾಜ್ಯಗಳಲ್ಲಿ ಒಂದಾಗಿದ್ದು, ವಿವಿಧ ಕ್ಷೇತ್ರಗಳಲ್ಲಿ ವೇಗವಾಗಿ ಅಭಿವೃದ್ಧಿ ಹೊಂದುತ್ತಿದೆ. ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ಸಂಗ್ರಹದಲ್ಲಿ ಕರ್ನಾಟಕ ದೇಶದಲ್ಲಿ ಎರಡನೇ ಸ್ಥಾನದಲ್ಲಿದೆ. ರಾಜ್ಯದಲ್ಲಿ ವ್ಯಾಪಾರ ಮತ್ತು ಕೈಗಾರಿಕಾ ಚಟುವಟಿಕೆಗಳು ದೊಡ್ಡ ಪ್ರಮಾಣದಲ್ಲಿ ನಡೆಯುತ್ತಿರುವುದಕ್ಕೆ ಇದು ಒಂದು ಸೂಚಕವಾಗಿದೆ.
ರಾಜ್ಯವು ಕೈಗಾರಿಕೆ, ಉತ್ಪಾದನೆ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಅಭಿವೃದ್ಧಿಯತ್ತ ಸಾಗುತ್ತಿದೆ. ಕರ್ನಾಟಕದ ಆಡಳಿತ ವ್ಯವಸ್ಥೆಯು ಹಲವು ದಶಕಗಳಿಂದ ದೇಶದ ಗಮನ ಸೆಳೆಯುವ ರೀತಿಯಲ್ಲಿ ಕಾರ್ಯನಿರ್ವಹಿಸಿದೆ. ವೀರೇಂದ್ರ ಪಾಟೀಲ, ರಾಮಕೃಷ್ಣ ಹೆಗಡೆ, ಎಸ್.ಎಂ. ಕೃಷ್ಣ ಸೇರಿದಂತೆ ವಿವಿಧ ಅವಧಿಗಳಲ್ಲಿ ಆಡಳಿತ ನಡೆಸಿದ ಮುಖ್ಯಮಂತ್ರಿಗಳು ರಾಜ್ಯದ ಅಭಿವೃದ್ಧಿಗೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಪಕ್ಷಾತೀತವಾಗಿ ಕರ್ನಾಟಕದ ಆಡಳಿತ ಪರಂಪರೆಯನ್ನು ಗಮನಿಸಿದಾಗ, ರಾಜ್ಯವು ಅಭಿವೃದ್ಧಿಯ ವಿಚಾರದಲ್ಲಿ ಸದಾ ಮುಂಚೂಣಿಯಲ್ಲಿರುವುದನ್ನು ಕಾಣಬಹುದು.
ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು (ಎಂಎಸ್ಎಂಇ) ಬಲಿಷ್ಠವಾಗಿ ಬೆಳೆದಾಗ ದೊಡ್ಡ ಕೈಗಾರಿಕೆಗಳ ಬೆಳವಣಿಗೆಗೂ ಅನುಕೂಲವಾಗುತ್ತದೆ. ಈ ಹಿನ್ನೆಲೆಯಲ್ಲಿ ರಾಜ್ಯದ ಕೈಗಾರಿಕಾ ನೀತಿಯಲ್ಲಿ ಎಂಎಸ್ಎಂಇಗಳಿಗೆ ವಿಶೇಷ ಆದ್ಯತೆ ನೀಡಲಾಗಿದೆ. ತುಮಕೂರು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳನ್ನು ಉತ್ತೇಜಿಸುವ ಪ್ರಯತ್ನಗಳು ನಡೆಯುತ್ತಿವೆ. (1/3)
Dr. G Parameshwara
@DrParameshwara
ಎಲೆಕ್ಟ್ರಾನಿಕ್ಸ್, ಕಂಪ್ಯೂಟರ್ ತಂತ್ರಜ್ಞಾನ ಮತ್ತು ಕೃತಕ ಬುದ್ಧಿಮತ್ತೆ (ಎಐ) ಕ್ಷೇತ್ರಗಳಲ್ಲಿ ಕರ್ನಾಟಕ ವೇಗವಾಗಿ ಮುನ್ನಡೆಯುತ್ತಿದೆ. ದೇಶದ ಎಐ ಸಂಸ್ಥೆಗಳ ಪೈಕಿ ಸುಮಾರು ಶೇ.60ರಷ್ಟು ಸಂಸ್ಥೆಗಳು ಕರ್ನಾಟಕದಲ್ಲಿವೆ. ರಾಜ್ಯದಲ್ಲಿ ಸುಮಾರು 600 ಎಐ ಸ್ಟಾರ್ಟ್ಅಪ್ಗಳು ಆರಂಭವಾಗಿರುವುದು ತಂತ್ರಜ್ಞಾನ ಕ್ಷೇತ್ರದಲ್ಲಿನ ಬೆಳವಣಿಗೆಗೆ ಸಾಕ್ಷಿಯಾಗಿದೆ.
ಈ ಪ್ರಗತಿಯ ಹಿಂದೆ ವ್ಯಾಪಾರ ವಲಯದಲ್ಲಿರುವ ಪ್ರಾಮಾಣಿಕತೆ ಮತ್ತು ವಿಶ್ವಾಸಾರ್ಹತೆಯೂ ಪ್ರಮುಖ ಪಾತ್ರ ವಹಿಸುತ್ತವೆ. ರೈತರು ತಮ್ಮ ಉತ್ಪನ್ನಗಳನ್ನು ಮಾರಾಟಕ್ಕೆ ತಂದಾಗ ಅವರಿಗೆ ನ್ಯಾಯಯುತ ವ್ಯವಹಾರ ದೊರೆಯುವುದು ಅತ್ಯಗತ್ಯ. ತುಮಕೂರಿನ ಧಾನ್ಯ ವ್ಯಾಪಾರಿಗಳ ಸಂಘವು ಈ ಮೌಲ್ಯಗಳನ್ನು ಪಾಲಿಸಿಕೊಂಡು ಬಂದಿರುವುದರಿಂದ ಸಂಘಕ್ಕೆ ಗೌರವ ಮತ್ತು ವಿಶ್ವಾಸಾರ್ಹತೆ ದೊರೆತಿದೆ.
ನಾನು ರಾಜಕೀಯಕ್ಕೆ ಬರಬೇಕೆಂದು ಮೊದಲಿನಿಂದಲೂ ನಿರ್ಧರಿಸಿದವನಲ್ಲ . ಸುಮಾರು 38-39 ವರ್ಷಗಳ ಹಿಂದೆ ರಾಜಕೀಯ ಪ್ರವೇಶಿಸುವ ಮೊದಲು ಕೃಷಿ ಕ್ಷೇತ್ರದಲ್ಲಿ ತೊಡಗಿಸಿಕೊಂಡು ವಿದೇಶದಲ್ಲಿಯೂ ಕೆಲಸ ಮಾಡಿದ್ದೆ. ಬಳಿಕ ಊರಿಗೆ ಮರಳಿದ ಸಂದರ್ಭದಲ್ಲಿ ತಂದೆಯವರು ಕುಟುಂಬದ ಜವಾಬ್ದಾರಿಗಳನ್ನು ವಹಿಸಿಕೊಂಡು ಸಂಸ್ಥೆಗಳನ್ನು ಮುಂದುವರಿಸುವಂತೆ ಸೂಚಿಸಿದ್ದರು. ಹಿರಿಯರ ಸಲಹೆ ಮತ್ತು ಮಾರ್ಗದರ್ಶನದ ಮೇರೆಗೆ ಊರಿನಲ್ಲಿಯೇ ಉಳಿದುಕೊಳ್ಳಬೇಕಾಯಿತು.
ನಂತರ ರಾಜಕೀಯ ಪ್ರವೇಶಿಸುವ ಸಂದರ್ಭ ಎದುರಾಗಿ, 1989ರಲ್ಲಿ ಮಧುಗಿರಿ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾದೆ. ಅಲ್ಲಿಂದ ಇಲ್ಲಿಯವರೆಗೆ ಹಲವು ಬಾರಿ ಸಚಿವರಾಗಿ ವಿವಿಧ ಖಾತೆಗಳನ್ನು ಕಾರ್ಯನಿರ್ವಹಿಸಿದ್ದು, ಪ್ರಸ್ತುತ ಎರಡನೇ ಬಾರಿ ಉಪಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸುತ್ತಿದ್ದೇನೆ.
ನಾನು ಚಿಕ್ಕವನಿದ್ದಾಗ ತಂದೆಯವರು ಸಿದ್ಧಗಂಗಾ ಮಠಕ್ಕೆ ಕರೆದುಕೊಂಡು ಹೋಗಿ ಪರಮಪೂಜ್ಯ ಶ್ರೀ ಶಿವಕುಮಾರ ಸ್ವಾಮೀಜಿಗಳವರ ಆಶೀರ್ವಾದ ಪಡೆಯುವಂತೆ ಮಾಡಿದ್ದರು. ಅಂದು ಪಡೆದ ಶ್ರೀಗಳ ಆಶೀರ್ವಾದವು ನನ್ನ ಜೀವನದ ಬೆಳವಣಿಗೆಗೆ ಪ್ರೇರಣೆಯಾಗಿದೆ. ಪೂಜ್ಯ ಶ್ರೀಗಳ ಆಶೀರ್ವಾದದಿಂದಲೇ ಇಂದು ರಾಜ್ಯದ ಉಪ ಮುಖ್ಯಮಂತ್ರಿಯಾಗಿ ಜನರ ಮುಂದೆ ನಿಲ್ಲಲು ಸಾಧ್ಯವಾಗಿದೆ.
ಅಧಿಕಾರ ಶಾಶ್ವತವಲ್ಲ. ಅಧಿಕಾರದಲ್ಲಿರುವ ಸಂದರ್ಭದಲ್ಲಿ ಜನರಿಗೆ ಮತ್ತು ನಾಡಿಗೆ ಸಾಧ್ಯವಾದಷ್ಟು ಉತ್ತಮ ಕೆಲಸಗಳನ್ನು ಮಾಡಬೇಕು. ತುಮಕೂರನ್ನು ರಾಜ್ಯದ ಪ್ರತಿಷ್ಠಿತ ಜಿಲ್ಲೆಗಳಲ್ಲಿ ಒಂದಾಗಿ ಬೆಳೆಸಬೇಕು ಎಂಬುದು ನನ್ನ ಆಶಯವಾಗಿದೆ.
ತುಮಕೂರಿನಲ್ಲಿ ಈಗಾಗಲೇ ಇಂಜಿನಿಯರಿಂಗ್ ಕಾಲೇಜುಗಳಿರುವುದರಿಂದ ಮತ್ತೊಂದು ಕಾಲೇಜು ನೀಡುವುದರಿಂದ ಇತರ ಸಂಸ್ಥೆಗಳಿಗೆ ಸ್ಪರ್ಧೆ ಎದುರಾಗಬಹುದು ಎಂಬ ಅಭಿಪ್ರಾಯ ವ್ಯಕ್ತವಾಗಿತ್ತು. ಆದರೆ, ಮತ್ತೊಂದು ಕಾಲೇಜು ಸ್ಥಾಪನೆಯಾದರೆ ಹೆಚ್ಚುವರಿಯಾಗಿ 500 ವಿದ್ಯಾರ್ಥಿಗಳಿಗೆ ಶಿಕ್ಷಣ ಪಡೆಯುವ ಅವಕಾಶ ದೊರೆಯುತ್ತದೆ. ಶಿಕ್ಷಣ ಸಂಸ್ಥೆಗಳ ಸಂಖ್ಯೆಯನ್ನು ಹೆಚ್ಚಿಸುವುದರಿಂದ ವಿದ್ಯಾರ್ಥಿಗಳಿಗೆ ಹೆಚ್ಚಿನ ಅವಕಾಶಗಳು ಲಭ್ಯವಾಗುತ್ತವೆ ಎಂಬ ದೃಷ್ಟಿಕೋನವನ್ನು ಹೊಂದಿದ್ದೆ.
ಈ ನಿಟ್ಟಿನಲ್ಲಿ ಜೆ.ಎಸ್. ಬಸವರಾಜು ಅವರ ಸಹಕಾರದೊಂದಿಗೆ ಪ್ರಯತ್ನಗಳನ್ನು ಕೈಗೊಂಡು, ಅಂದಿನ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರು ಕಾಲೇಜನ್ನು ಉದ್ಘಾಟಿಸಿದ್ದರು.
*20,000 ಎಕರೆ ಪ್ರದೇಶದಲ್ಲಿ ಕೈಗಾರಿಕಾ ಅಭಿವೃದ್ಧಿಯ ಮಹತ್ವಾಕಾಂಕ್ಷಿ ಯೋಜನೆ*
ತುಮಕೂರನ್ನು ಪ್ರಮುಖ ಕೈಗಾರಿಕಾ ಕೇಂದ್ರವನ್ನಾಗಿ ಅಭಿವೃದ್ಧಿಪಡಿಸುವ ಉದ್ದೇಶದಿಂದ ಸುಮಾರು 20,000 ಎಕರೆ ಪ್ರದೇಶದಲ್ಲಿ ಕೈಗಾರಿಕಾ ಹಬ್ ಅಭಿವೃದ್ಧಿಪಡಿಸುವ ಯೋಜನೆ ರೂಪಿಸಲಾಗಿದೆ. ಇದು ಏಷ್ಯಾದ ಪ್ರಮುಖ ಕೈಗಾರಿಕಾ ಕೇಂದ್ರಗಳಲ್ಲಿ ಒಂದಾಗುವ ಸಾಮರ್ಥ್ಯ ಹೊಂದಿದೆ. ಈ ಯೋಜನೆಯಡಿ ಇನ್ನಷ್ಟು ದೊಡ್ಡ ಕೈಗಾರಿಕೆಗಳು ಸ್ಥಾಪನೆಯಾಗಲು ಕಾಲಾವಕಾಶ ಬೇಕಾಗಿದ್ದು, ಅಗತ್ಯ ಮೂಲಸೌಕರ್ಯ ಮತ್ತು ಸಂಪರ್ಕ ವ್ಯವಸ್ಥೆಗಳನ್ನು ಅಭಿವೃದ್ಧಿಪಡಿಸುವುದು ಮುಖ್ಯವಾಗಿದೆ.
ಈಗಾಗಲೇ ಹಲವು ಕೈಗಾರಿಕೋದ್ಯಮಿಗಳು ತುಮಕೂರಿನಲ್ಲಿ ಹೂಡಿಕೆ ಮಾಡಲು ಆಸಕ್ತಿ ತೋರಿಸುತ್ತಿದ್ದಾರೆ. ಕೆಲವರು 500ರಿಂದ 1,000 ಎಕರೆವರೆಗೆ ಭೂಮಿ ಒದಗಿಸುವಂತೆ ಬೇಡಿಕೆ ಇಟ್ಟಿದ್ದಾರೆ. ಇತ್ತೀಚೆಗೆ ಉದ್ಯಮಿಯೊಬ್ಬರು ಗ್ರೀನ್ ಹೈಡ್ರೋಜನ್ ಘಟಕ ಹಾಗೂ ಡೇಟಾ ಸೆಂಟರ್ ಸ್ಥಾಪಿಸಲು ಸುಮಾರು ₹80,000 ಕೋಟಿ ಹೂಡಿಕೆ ಮಾಡುವ ಉದ್ದೇಶದೊಂದಿಗೆ 2,000 ಎಕರೆ ಭೂಮಿ ಒದಗಿಸುವಂತೆ ಪ್ರಸ್ತಾಪಿಸಿದ್ದಾರೆ.
ಟೊಯೋಟಾ ಕಂಪನಿಯ ಪ್ರತಿನಿಧಿಗಳು ತುಮಕೂರಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಸುಮಾರು 300 ಎಕರೆ ಭೂಮಿಯ ಅಗತ್ಯವನ್ನು ವ್ಯಕ್ತಪಡಿಸಿದ್ದಾರೆ. ಜಪಾನೀಸ್ ಟೌನ್ಶಿಪ್ ಸ್ಥಾಪನೆಗಾಗಿ ಈಗಾಗಲೇ 500 ಎಕರೆ ಭೂಮಿಯನ್ನು ಒದಗಿಸಲಾಗಿದೆ. ಈ ಯೋಜನೆಗಳೂ ಮುಂದಿನ ದಿನಗಳಲ್ಲಿ ಕಾರ್ಯರೂಪಕ್ಕೆ ಬರಲಿವೆ.
ಈ ಕೈಗಾರಿಕೆಗಳು ಸ್ಥಾಪನೆಯಾದರೆ ಉದ್ಯೋಗಾವಕಾಶಗಳು ಹೆಚ್ಚುವುದರ ಜೊತೆಗೆ ತುಮಕೂರಿನ ಆರ್ಥಿಕ ಬೆಳವಣಿಗೆಗೂ ದೊಡ್ಡ ಉತ್ತೇಜನ ದೊರೆಯಲಿದೆ. ನಾನು ಸಚಿವನಾಗಿ ಕಾರ್ಯನಿರ್ವಹಿಸುವ ಅವಧಿಯಲ್ಲಿ ತುಮಕೂರಿನ ಅಭಿವೃದ್ಧಿಗೆ ಸಾಧ್ಯವಾದಷ್ಟು ಕೊಡುಗೆ ನೀಡಬೇಕು ಎಂಬ ಉದ್ದೇಶದಿಂದ ನಿರಂತರವಾಗಿ ಪ್ರಯತ್ನಿಸುತ್ತಿದ್ದೇನೆ. (2/3)
Dr. G Parameshwara
@DrParameshwara
*ತುಮಕೂರಿಗೆ ಮೆಟ್ರೋ ರೈಲು ಸಂಪರ್ಕ ಕಲ್ಪಿಸುವ ಪ್ರಯತ್ನ*
ತುಮಕೂರಿಗೆ ಮೆಟ್ರೋ ರೈಲು ಸಂಪರ್ಕ ಕಲ್ಪಿಸುವುದು ತಮ್ಮ ಪ್ರಮುಖ ಆಶಯಗಳಲ್ಲಿ ಒಂದಾಗಿದೆ. ಕಳೆದ ಐದಾರು ವರ್ಷಗಳಿಂದ ಈ ಉದ್ದೇಶಕ್ಕಾಗಿ ಪ್ರಯತ್ನಗಳನ್ನು ನಡೆಸಲಾಗುತ್ತಿದೆ. ಯೋಜನೆಯ ವಿವರವಾದ ಕಾರ್ಯಸಾಧ್ಯತಾ ಅಧ್ಯಯನ (Detailed Feasibility Study) ಪೂರ್ಣಗೊಳಿಸಿ, ವಿವರವಾದ ಯೋಜನಾ ವರದಿ (DPR) ಸಿದ್ಧಪಡಿಸಲಾಗಿದೆ. ಇದೀಗ ಆಸಕ್ತ ಸಂಸ್ಥೆಗಳಿಂದ ಅಭಿವ್ಯಕ್ತಿ ಆಸಕ್ತಿ (Expression of Interest – EOI) ಆಹ್ವಾನಿಸುವ ಹಂತಕ್ಕೆ ಸಿದ್ಧತೆ ನಡೆದಿದೆ.
ತುಮಕೂರಿಗೆ ಮೆಟ್ರೋ ರೈಲು ಸಂಪರ್ಕ ಕಲ್ಪಿಸುವ ಯೋಜನೆ ಸಾಕಾರಗೊಂಡರೆ ಬೆಂಗಳೂರು ಮತ್ತು ತುಮಕೂರು ನಗರಗಳ ನಡುವಿನ ಸಂಪರ್ಕ ಹಾಗೂ ಅಭಿವೃದ್ಧಿಗೆ ಹೊಸ ಆಯಾಮ ದೊರೆಯಲಿದೆ. ಇದರಿಂದ ಎರಡೂ ನಗರಗಳು ಇನ್ನಷ್ಟು ಹತ್ತಿರವಾಗಲಿದ್ದು, ತುಮಕೂರಿನ ಬೆಳವಣಿಗೆಗೆ ದೊಡ್ಡ ಅವಕಾಶಗಳು ಸೃಷ್ಟಿಯಾಗಲಿವೆ.
ಈ ಯೋಜನೆ ಸಾಕಾರಗೊಳ್ಳಲು ತಮ್ಮ ಅವಧಿಯಲ್ಲಿ ಪ್ರಯತ್ನ ಮುಂದುವರಿಯಲಿದ್ದು, ಮುಂದಿನ ದಿನಗಳಲ್ಲಿಯೂ ತುಮಕೂರಿನ ಅಭಿವೃದ್ಧಿಗೆ ವರ್ತಕರ ಸಂಘದ ಸಹಕಾರ ಮತ್ತು ಮಾರ್ಗದರ್ಶನ ಅಗತ್ಯವಾಗಿದೆ.
ಧಾನ್ಯ ವ್ಯಾಪಾರಿಗಳ ಸಂಘವು ಮುಂದಿನ ದಿನಗಳಲ್ಲಿಯೂ ಇನ್ನಷ್ಟು ಉಜ್ವಲವಾಗಿ ಬೆಳೆಯಲಿ.
ಸಂಘಕ್ಕೆ ಅಥವಾ ವ್ಯಾಪಾರಿಗಳ ಸಮುದಾಯಕ್ಕೆ ಸರ್ಕಾರದ ವತಿಯಿಂದ ಅಗತ್ಯವಿರುವ ಸಹಾಯ ಮತ್ತು ಸಹಕಾರ ನೀಡಲು ಅವಕಾಶವಿದ್ದಲ್ಲಿ, ನನ್ನಿಂದ ಸಾಧ್ಯವಾದ ಎಲ್ಲ ನೆರವನ್ನು ಒದಗಿಸಲು ಸಿದ್ಧರಿದ್ದೇವೆ.
ನೂರು ವರ್ಷಗಳ ಕಾಲ ಒಂದು ಸಂಘ ನಿರಂತರವಾಗಿ ಕಾರ್ಯನಿರ್ವಹಿಸುವುದು ಸಾಮಾನ್ಯ ಸಾಧನೆಯಲ್ಲ. ಈ ಸಂದರ್ಭದಲ್ಲಿ ಸಾಧನೆಗೆ ಕಾರಣರಾದ ಸಂಘದ ಎಲ್ಲಾ ಸದಸ್ಯರು, ಪದಾಧಿಕಾರಿಗಳು ಹಾಗೂ ಅಧ್ಯಕ್ಷರು ಅಭಿನಂದನೆಗಳು.
- ತುಮಕೂರಿನ ಆರ್.ಟಿ.ಸಿ. ಕನ್ವೆನ್ಷನ್ ಹಾಲ್ನಲ್ಲಿ ನಡೆದ ಧಾನ್ಯ ವ್ಯಾಪಾರಿಗಳ ಸಂಘದ ಶತಮಾನೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದೆ. (3/3) -
Dr. G Parameshwara
@DrParameshwara
ತುಮಕೂರಿನ ಆರ್.ಟಿ.ಪಿ. ಕನ್ವೆನ್ಷನ್ ಹಾಲ್ನಲ್ಲಿ ನಡೆದ *'ಧಾನ್ಯ ವ್ಯಾಪಾರಿಗಳ ಸಂಘದ ಶತಮಾನೋತ್ಸವ'* ಕಾರ್ಯಕ್ರಮವನ್ನು ಉದ್ಘಾಟಿಸಿ, 'ಸಿರಿಧಾನ್ಯ ಸಂಪದ' ಶತಮಾನೋತ್ಸವ ಸ್ಮರಣ ಸಂಚಿಕೆಯನ್ನು ಬಿಡುಗಡೆ ಮಾಡಿದೆ.
ಶ್ರೀ ಸಿದ್ಧಗಂಗಾ ಮಠದ ಪರಮಪೂಜ್ಯ ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳು, ಎನ್.ಆರ್.ಪುರ ಸಿಂಹನಗದ್ದೆ ಬಸ್ತಿಮಠ್ ಪರಮಪೂಜ್ಯ ಸ್ವಸ್ತಿಶ್ರೀ ಶ್ರೀ ಲಕ್ಷ್ಮೀಸೇನ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮಿಗಳು, ಶಾಸಕರಾದ ಜಿ.ಬಿ.ಜ್ಯೋತಿಗಣೇಶ್, ಧಾನ್ಯ ವ್ಯಾಪಾರಿಗಳ ಸಂಘದ ಅಧ್ಯಕ್ಷರಾದ ಬಿ.ಎಲ್.ಚಂದ್ರಕೀರ್ತಿ, ಉಪಾಧ್ಯಕ್ಷರಾದ ಸಿ.ಎಸ್.ನಂಜುಂಡಪ್ಪ, ಟಿಜಿಎಂಸಿ ಬ್ಯಾಂಕ್ನ ಅಧ್ಯಕ್ಷರಾದ ಹೆಚ್.ಎಂ.ದಿವ್ಯಾನಂದಮೂರ್ತಿ ಸೇರಿದಂತೆ ಇತರರು ಉಪಸ್ಥಿತರಿದ್ದರು.
Dr. G Parameshwara
@DrParameshwara
Inaugurated the Centenary Celebrations of the Grain Merchants’ Association at RTP Convention Hall in Tumakuru and released ‘Siridhanya Sampada’, the centenary commemorative publication.
The event was graced by His Holiness Sri Siddalinga Mahaswamiji of Siddaganga Math, His Holiness Swastishri Sri Lakshmisena Bhattaraka Pattacharyavarya Mahaswamiji of Simhanagadde Bastimath, N.R. Pura, MLA Sri G.B. Jyothi Ganesh, Grain Merchants’ Association President Sri B.L. Chandrakeerthi, Vice President Sri C.S. Nanjundappa, TGMC Bank Chairman Sri H.M. Divyanandamurthy, and other dignitaries. -
Dr. G Parameshwara
@DrParameshwara
Speaking to the media in Bengaluru, I addressed several important issues concerning the drought situation in Karnataka, farmers' welfare, electoral processes, political developments and the functioning of our government.
On Drought Relief and Farmers' Welfare
Karnataka is facing a severe drought, with crop losses reaching up to 80% in certain regions. Our farmers are going through an extremely difficult period, and ensuring timely relief must be our foremost priority.
The State Government has announced ₹1,250 crore in relief, and the process of releasing compensation is underway. As Revenue Minister, I am personally pursuing the matter with the Finance Department to expedite disbursement.
The Union Government must also fulfil its responsibility, particularly in extending assistance under the NDRF. I urge all Union Ministers and MPs from Karnataka, including Shri H.D. Kumaraswamy, to rise above political differences and work collectively for our farmers.
We are also seeking an appointment with the Union Government for an all-party delegation.
Farmers should not become victims of political disagreements or administrative delays. Their welfare must take precedence over everything else.
On the Election Commission's Directions in Tumakuru
Regarding permission for the proposed route march in Tumakuru, I had suggested that permission could be granted, considering that a similar programme had been permitted previously without any complaints or disturbances.
However, the Election Commission has communicated that permission cannot be granted while the Model Code of Conduct is in force.
The district administration is bound by the Commission's directions, and these must be respected. My suggestion was made in good faith, without any intention of creating a controversy.
On Opinion Polls and the Next Assembly Elections
Elections are ultimately decided by the people, not by opinion polls conducted years in advance.
Political circumstances, public sentiment and electoral trends evolve over time. While surveys may provide an indication of the prevailing mood, they cannot determine the outcome of a future election.
We will take every assessment constructively, work harder, strengthen our connection with the people and continue striving to earn their trust and confidence.
On the Political Affairs Committee
The Political Affairs Committee is intended to strengthen collective consultation and decision-making within the party and government.
It is neither an alternative power centre nor a mechanism to interfere in day-to-day administration.
Healthy discussions, diverse perspectives and collective deliberation are essential to any democratic organisation. The Chief Minister will continue to exercise his authority, taking appropriate decisions after considering the views expressed and consulting the party leadership wherever necessary.
On the Sting Operation Controversy
It is unfortunate that the continuing controversy surrounding the sting operation is receiving greater public attention than the government's developmental initiatives and the pressing issues affecting our people.
Any allegations must be investigated fairly, and those found responsible must face appropriate action. There can be no compromise on accountability.
At the same time, public discourse must not become permanently consumed by a single controversy. The concerns of farmers, development priorities and the everyday challenges faced by citizens deserve equal, if not greater, attention.
There is no immediate need for the Congress High Command to intervene. The Chief Minister and the party leadership are capable of discussing the matter and resolving it responsibly at the state level, without causing embarrassment to the government or the party.
Our responsibility is to remain focused on governance, protect the interests of the people and uphold the principles of accountability, collective leadership and democratic functioning. -
Dr. G Parameshwara
@DrParameshwara
ರಾಜ್ಯದಲ್ಲಿ ತೀವ್ರ ಬರ ಪರಿಸ್ಥಿತಿ ಎದುರಾಗಿದ್ದು, ಕೆಲವು ಪ್ರದೇಶಗಳಲ್ಲಿ ಶೇ. 80ರಷ್ಟು ಬೆಳೆ ನಷ್ಟವಾಗಿದೆ. ಮುಂದಿನ ದಿನಗಳಲ್ಲಿ ಆಹಾರ ಧಾನ್ಯಗಳ ಉತ್ಪಾದನೆಯ ಮೇಲೂ ಇದರ ಪರಿಣಾಮ ಉಂಟಾಗುವ ಸಾಧ್ಯತೆಯಿದೆ. ಸದ್ಯಕ್ಕೆ ರಾಜ್ಯದಲ್ಲಿ ಆಹಾರ ಧಾನ್ಯಗಳ ದಾಸ್ತಾನು ಲಭ್ಯವಿದ್ದು, ಮುಂದಿನ ದಿನಗಳಲ್ಲಿ ಉತ್ಪಾದನೆಯಲ್ಲಿ ಕೊರತೆ ಎದುರಾದರೆ ಅದರ ಪರಿಣಾಮಗಳ ಬಗ್ಗೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳಬೇಕಾಗುತ್ತದೆ. ಕೇಂದ್ರ ಸರ್ಕಾರದಲ್ಲಿರುವ ರಾಜ್ಯದ ಸಂಸದರು ಮತ್ತು ಸಚಿವರು ಪಕ್ಷಭೇದ ಮರೆತು ಬರ ಪರಿಸ್ಥಿತಿಯನ್ನು ಎದುರಿಸಲು ನೆರವಾಗಬೇಕು.
ಪರಿಹಾರ ಬಿಡುಗಡೆಗೆ ಸಂಬಂಧಿಸಿದಂತೆ ಆದೇಶ ಹೊರಡಿಸಲಾಗಿದೆ. ನಿಗದಿತ ಮಾನದಂಡಗಳ ಪ್ರಕಾರ ಪ್ರಕ್ರಿಯೆ ನಡೆಯುತ್ತಿದ್ದು, ಹಣ ಬಿಡುಗಡೆಯಾದ ಕೂಡಲೇ ಜಿಲ್ಲಾಧಿಕಾರಿಗಳ ಮೂಲಕ ರೈತರಿಗೆ ತಲುಪಿಸಲಾಗುವುದು.
ಪರಿಹಾರ ಬಿಡುಗಡೆ ವಿಳಂಬವಾಗದಂತೆ ತಾವು ಕೂಡ ಕಂದಾಯ ಸಚಿವನಾಗಿ ಹಣಕಾಸು ಇಲಾಖೆಗೆ ಒತ್ತಾಯಿಸುತ್ತಿದ್ದೇನೆ. ಹಣಕಾಸು ಇಲಾಖೆಯಿಂದ ಅನುಮೋದನೆ ದೊರೆತಿದ್ದು, ಶೀಘ್ರ ಹಣ ಬಿಡುಗಡೆಯಾಗಬೇಕು ಎಂದು ಒತ್ತಾಯಿಸಲಾಗುವುದು. ಸರ್ವಪಕ್ಷದ ನಿಯೋಗದ ಪ್ರಸ್ತಾವನೆಯನ್ನು ಕೈಬಿಟ್ಟಿಲ್ಲ. ಈ ಸಂಬಂಧ ಕೇಂದ್ರದವರ ಬಳಿ ಸಮಯ ಕೇಳುತ್ತಿದ್ದೇವೆ ಆದರೆ, ಇನ್ನೂ ಸಮಯ ನೀಡಿಲ್ಲ.
ರಾಜ್ಯ ಸರ್ಕಾರ ತನ್ನ ಪಾಲಿನ ಜವಾಬ್ದಾರಿಯನ್ನು ನಿರ್ವಹಿಸಿದೆ. ಕೇಂದ್ರ ಸರ್ಕಾರವೂ ತನ್ನ ಪಾಲಿನ ಜವಾಬ್ದಾರಿಯನ್ನು ನಿರ್ವಹಿಸಬೇಕು. ರಾಜ್ಯ ಸರ್ಕಾರ ₹1,250 ಕೋಟಿ ಘೋಷಿಸಿರುವುದಾದರೂ ಯಾವ ವ್ಯವಸ್ಥೆಯಡಿ ಘೋಷಿಸಿದೆ ಎಂಬುದನ್ನು ಗಮನಿಸಬೇಕು. ಕೇಂದ್ರ ಸರ್ಕಾರ ಎನ್ಡಿಆರ್ಎಫ್ ಅಡಿಯಲ್ಲಿ ಪರಿಹಾರ ನೀಡದಿರುವುದರ ಬಗ್ಗೆಯೂ ಪ್ರಶ್ನೆಗಳಿವೆ. ಪರಸ್ಪರ ಆರೋಪ-ಪ್ರತ್ಯಾರೋಪ ಮಾಡುತ್ತಾ ಕುಳಿತರೆ ಸಂಕಷ್ಟ ಅನುಭವಿಸುವುದು ರೈತರು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತಮ್ಮ ತಮ್ಮ ಜವಾಬ್ದಾರಿಗಳ ಬಗ್ಗೆ ಚರ್ಚಿಸುತ್ತಾ ಕಾಲ ಕಳೆಯುವ ಬದಲು ರೈತರ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು.
ಬರ ಪರಿಸ್ಥಿತಿಯ ಪರಿಣಾಮವಾಗಿ ಮುಂದಿನ ದಿನಗಳಲ್ಲಿ ಆಹಾರ ಧಾನ್ಯಗಳ ಉತ್ಪಾದನೆ ನಿರೀಕ್ಷಿತ ಮಟ್ಟದಲ್ಲಿ ಆಗದಿದ್ದರೆ ಅದರ ಪರಿಣಾಮ ಸಹಜವಾಗಿಯೇ ಎದುರಾಗುತ್ತದೆ. ಸದ್ಯಕ್ಕೆ ರಾಜ್ಯದಲ್ಲಿ ಆಹಾರ ಧಾನ್ಯಗಳ ದಾಸ್ತಾನು ಲಭ್ಯವಿದೆ. ಆದರೆ, ಉತ್ಪಾದನೆಯಲ್ಲಿ ಕೊರತೆ ಎದುರಾದರೆ ಆಹಾರ ಧಾನ್ಯಗಳ ಲಭ್ಯತೆ ಕುರಿತು ಚರ್ಚಿಸಿ ಅಗತ್ಯ ಕ್ರಮ ಕೈಗೊಳ್ಳಬೇಕು. ಕೇಂದ್ರ ಸರ್ಕಾರದಲ್ಲಿ ಸಚಿವರಾಗಿರುವ ಎಚ್.ಡಿ. ಕುಮಾರಸ್ವಾಮಿ ಸೇರಿದಂತೆ ರಾಜ್ಯದ ಸಂಸದರು ಹಾಗೂ ಸಚಿವರು ಬರ ಪರಿಸ್ಥಿತಿಯನ್ನು ಎದುರಿಸಲು ನೆರವಾಗಬೇಕು. ಒಬ್ಬರನ್ನೇ ಹೊಣೆಗಾರರನ್ನಾಗಿ ಮಾಡದೆ, ಕೇಂದ್ರದಲ್ಲಿ ಜವಾಬ್ದಾರಿ ಹೊಂದಿರುವ ಎಲ್ಲರೂ ಒಟ್ಟಾಗಿ ಈ ಬಗ್ಗೆ ಚಿಂತಿಸಬೇಕು.
*ಶಿಕ್ಷಕರ ಕ್ಷೇತ್ರದ ಚುನಾವಣೆ: ಚುನಾವಣಾ ಆಯೋಗದ ಸೂಚನೆ ಪಾಲನೆ :
ತುಮಕೂರಿನಲ್ಲಿ ಕಳೆದ ಬಾರಿ ಸಂಬಂಧಪಟ್ಟ ಕಾರ್ಯಕ್ರಮಕ್ಕೆ ಅನುಮತಿ ನೀಡಲಾಗಿತ್ತು. ಈ ಬಾರಿಯೂ ಅರ್ಜಿ ಸಲ್ಲಿಸಿದರೆ ಅನುಮತಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೆ. ಪಥ ಸಂಚಲನ ಕಾರ್ಯಕ್ರಮವು ಕೇವಲ ಒಂದು ಗಂಟೆ ನಡೆಯಲಿದೆ ಎಂದು ತಿಳಿಸಲಾಗಿತ್ತು. ಈ ಹಿಂದೆ ಯಾವುದೇ ದೂರುಗಳು ಬಂದಿರದ ಹಿನ್ನೆಲೆಯಲ್ಲಿ ಅನುಮತಿ ನೀಡಬಹುದು ಎಂದು ಹೇಳಿದ್ದೆ.
ಕಳೆದ ಬಾರಿ ನಾನೇ ಗೃಹ ಸಚಿವರಾಗಿದ್ದ ಸಂದರ್ಭದಲ್ಲಿ ಯಾವುದೇ ತೊಂದರೆ ಇರಲಿಲ್ಲ ಮತ್ತು ಅನುಮತಿ ನೀಡಲಾಗಿತ್ತು. ಈ ಬಾರಿಯೂ ಅರ್ಜಿ ಸಲ್ಲಿಸಿದರೆ ಅನುಮತಿ ನೀಡುವಂತೆ ಹೇಳಿದ್ದೆ. ಆದರೆ, ಚುನಾವಣಾ ಆಯೋಗವು ಮಾದರಿ ನೀತಿ ಸಂಹಿತೆ ಜಾರಿಯಲ್ಲಿರುವ ಕಾರಣ ಅನುಮತಿ ನೀಡಬಾರದು ಎಂದು ಪತ್ರ ಬರೆದಿರುವುದಾಗಿ ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ. ಚುನಾವಣಾ ಆಯೋಗದ ಸೂಚನೆಯನ್ನು ಮೀರಿ ಜಿಲ್ಲಾ ಆಡಳಿತ ಅನುಮತಿ ನೀಡಲು ಸಾಧ್ಯವಿಲ್ಲ. ಆಯೋಗದ ನಿರ್ದೇಶನ ಉಲ್ಲಂಘಿಸಿ ಅನುಮತಿ ನೀಡಿದರೆ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವ ಸಾಧ್ಯತೆಯಿದೆ. ತಾವು ಅನುಮತಿ ನೀಡುವಂತೆ ಮಾತ್ರ ಹೇಳಿದ್ದೆನೇ ಹೊರತು ಯಾವುದೇ ವಿವಾದ ಸೃಷ್ಟಿಸುವ ಉದ್ದೇಶ ಇರಲಿಲ್ಲ.
*ಸಮೀಕ್ಷೆಗಳ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುವುದಿಲ್ಲ:
ಚುನಾವಣೆಗೆ ಇನ್ನೂ ಸಾಕಷ್ಟು ಸಮಯವಿದೆ. ಈಗಿನ ಟ್ರೆಂಡ್ಗಳನ್ನು ಆಧರಿಸಿ ಚುನಾವಣೆಯ ಫಲಿತಾಂಶವನ್ನು ನಿರ್ಧರಿಸಲು ಸಾಧ್ಯವಿಲ್ಲ. ಚುನಾವಣೆ ನಡೆಯುವ ಸಂದರ್ಭದಲ್ಲಿ ಜನರ ಮನಸ್ಥಿತಿ ಮತ್ತು ರಾಜಕೀಯ ಪರಿಸ್ಥಿತಿ ಹೇಗಿರುತ್ತದೆ ಎಂಬುದು ಮುಖ್ಯವಾಗುತ್ತದೆ.
ಸಮೀಕ್ಷೆಗಳ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುವುದಿಲ್ಲ. ಇಂತಹ ಸಮೀಕ್ಷೆಗಳಿಂದ ನಮಗೆ ನಮ್ಮ ಸ್ಥಿತಿಗತಿ ತಿಳಿಯುತ್ತದೆ. ಇದನ್ನು ಸವಾಲಾಗಿ ಸ್ವೀಕರಿಸಿ ಇನ್ನಷ್ಟು ಶ್ರಮವಹಿಸಿ ಕೆಲಸ ಮಾಡುತ್ತೇವೆ. ಜನರ ಪ್ರೀತಿ ಮತ್ತು ವಿಶ್ವಾಸ ಗಳಿಸಲು ಹೆಚ್ಚಿನ ಪ್ರಯತ್ನ ಮಾಡುತ್ತೇವೆ.
*ರೈತರ ಪರಿಹಾರ ಬಿಡುಗಡೆಗೆ ಹಣಕಾಸು ಇಲಾಖೆಗೆ ಒತ್ತಾಯ :
ಪರಿಹಾರ ಬಿಡುಗಡೆಗೆ ಆದೇಶ ಹೊರಡಿಸಲಾಗಿದೆ. ನಿಗದಿತ ಮಾನದಂಡಗಳ ಪ್ರಕಾರ ಪ್ರಕ್ರಿಯೆ ನಡೆಯುತ್ತಿದೆ. ತಾವು ಕಂದಾಯ ಸಚಿವರಾಗಿಯೂ ಹಣವನ್ನು ಶೀಘ್ರ ಬಿಡುಗಡೆ ಮಾಡುವಂತೆ ಒತ್ತಾಯಿಸುತ್ತಿದ್ದೇನೆ. ಹಣಕಾಸು ಇಲಾಖೆಗೆ ತ್ವರಿತವಾಗಿ ಹಣ ಬಿಡುಗಡೆ ಮಾಡುವಂತೆ ಹೇಳಲಾಗುವುದು. ಹಣ ಬಿಡುಗಡೆಯಾದ ಬಳಿಕ ಜಿಲ್ಲಾಧಿಕಾರಿಗಳ ಮೂಲಕ ರೈತರಿಗೆ ತಲುಪಿಸಲಾಗುವುದು. -
Dr. G Parameshwara
@DrParameshwara
ಕಲ್ಪತರು ನಾಡಿನ ಐತಿಹಾಸಿಕ ದಸರಾ ಮಹೋತ್ಸವ ಈ ಬಾರಿ ಹಿಂದೆಂದಿಗಿಂತಲೂ ಅದ್ದೂರಿಯಾಗಿ, ಅರ್ಥಪೂರ್ಣವಾಗಿ ನೆರವೇರಿದೆ. ಅಕ್ಟೋಬರ್ 11ರಿಂದ 21ರವರೆಗೆ ನಡೆದ ನವರಾತ್ರಿ ಉತ್ಸವದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು, ಕಲಾ ಪ್ರದರ್ಶನಗಳು, ಧಾರ್ಮಿಕ ಆಚರಣೆಗಳು ಹಾಗೂ ವೈಭವದ ಜಂಬೂಸವಾರಿ ಮೆರವಣಿಗೆ ಜನಮನ ಸೂರೆಗೊಂಡಿವೆ.
ಸಿನಿ ತಾರೆಯರಾದ ರಮೇಶ್ ಅರವಿಂದ್, ರಚಿತಾ ರಾಮ್ ಉಪಸ್ಥಿತಿ ಸಾಂಸ್ಕೃತಿಕ ಕಾರ್ಯಕ್ರಮದ ಮೆರುಗು ಹೆಚ್ಚಿಸಿದರೆ, ಯುವ ಗಾಯಕರಾದ ಸಂಜಿತ್ ಹೆಗ್ಡೆ, ಚಂದನ್ ಶೆಟ್ಟಿ ನೆರೆದಿದ್ದ ಯವಜನರನ್ನು ಸಂಗೀತ ಸಾಗರದಲ್ಲಿ ಮಿಂದೇಳುವಂತೆ ಮಾಡಿದರು. ಜನಮನ ಗೆದ್ದ ಪ್ರೇಮದ ಊರಲಿ ಚಿತ್ರತಂಡದ ಕಲಾವಿದರನ್ನು ಕಂಡು ಜನರು ಸಂತಸ ವ್ಯಕ್ತಪಡಿಸಿದರು. ನಗರದ ಸ್ವಚ್ಛತೆಗಾಗಿ ಶ್ರಮಿಸುವ ಪೌರಕಾರ್ಮಿಕರನ್ನು ಸನ್ಮಾನಿಸಿದ್ದು ವಿಶೇಷವಾಗಿತ್ತು.
ವಿಜಯದಶಮಿಯಂದು ನಾಡದೇವತೆ ಚಾಮುಂಡೇಶ್ವರಿ ತಾಯಿಗೆ ಪುಷ್ಪಾರ್ಚನೆ ಸಲ್ಲಿಸಿ ಜಂಬೂಸವಾರಿ ಮೆರವಣಿಗೆಗೆ ಚಾಲನೆ ನೀಡಲಾಯಿತು. ಅಂಬಾರಿ ಹೊತ್ತ ಆನೆ ಲಕ್ಷ್ಮಣ, 50ಕ್ಕೂ ಹೆಚ್ಚು ಗ್ರಾಮ ದೇವತೆಗಳು ಹಾಗೂ 25 ಜನಪದ ಕಲಾತಂಡಗಳೊಂದಿಗೆ ಸಾಗಿದ ಭವ್ಯ ಮೆರವಣಿಗೆಯಲ್ಲಿ ಜನರೊಂದಿಗೆ ಹೆಜ್ಜೆ ಹಾಕಿದ್ದು ಅವಿಸ್ಮರಣೀಯ ಅನುಭವ.
ನಮ್ಮ ನಾಡಿನ ಶ್ರೀಮಂತ ಇತಿಹಾಸ, ಸಂಸ್ಕೃತಿ, ಕಲೆ ಹಾಗೂ ಪರಂಪರೆಯನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಉದ್ದೇಶದೊಂದಿಗೆ ಆಯೋಜಿಸಿದ್ದ ಈ ದಸರಾ ಮಹೋತ್ಸವವನ್ನು ಯಶಸ್ವಿಗೊಳಿಸಿದ ಜಿಲ್ಲಾಡಳಿತ, ಪೊಲೀಸ್ ಇಲಾಖೆ, ಅಧಿಕಾರಿಗಳು, ಸಿಬ್ಬಂದಿ ವರ್ಗ, ಪೌರಕಾರ್ಮಿಕರು, ಕಲಾವಿದರು, ಸಂಘ-ಸಂಸ್ಥೆಗಳು, ಸ್ವಯಂಸೇವಕರು, ಮಾಧ್ಯಮ ಮಿತ್ರರು ಹಾಗೂ ವಿಶೇಷವಾಗಿ ತುಮಕೂರಿನ ಜನತೆಗೆ ಮತ್ತು ಸಹಕರಿಸಿದ ಪ್ರತಿಯೊಬ್ಬರಿಗೂ ನನ್ನ ಹೃದಯಾಂತರಾಳದ ಕೃತಜ್ಞತೆಗಳು.
ತುಮಕೂರು ದಸರಾ ವೈಭವವನ್ನು ನೀವು ಕಣ್ತುಂಬಿಕೊಳ್ಳಿ..
#tumakurudasara2026This media couldn't be displayed. See it on the original post. -
Dr. G Parameshwara
@DrParameshwara
Heartiest congratulations to Team India on concluding the Asian Para Games 2026 in Aichi-Nagoya, Japan, with a record-breaking haul of 114 medals, including 30 Gold, 35 Silver and 49 Bronze, securing fourth place in the overall medal standings.
This remarkable achievement marks India's best-ever performance at the Asian Para Games. Our para-athletes have demonstrated exceptional talent, determination and sporting excellence, setting new benchmarks and bringing immense pride to the nation.
It is especially heartening to see Karnataka's athletes contribute 8 medals to this historic tally. Congratulations to gold medallist Soumya, silver medallists Radha Venkatesh and Sharath Makanahalli, and bronze medallists Niranjan Mukundan, Pallavi Kaluvehalli, Suhas L. Yathiraj, Swatik Patil and Tejas Nandakumar.
Our Government remains firmly committed to encouraging and supporting Karnataka's athletes, providing them with the opportunities and resources needed to excel on the global stage.
Congratulations once again to every athlete, coach and support staff member who contributed to this memorable campaign. May this success inspire many more sporting achievements in the years ahead!
ಜಪಾನ್ನ ಐಚಿ–ನಗೋಯಾದಲ್ಲಿ ನಡೆದ ಏಷ್ಯನ್ ಪ್ಯಾರಾ ಗೇಮ್ಸ್ 2026ರಲ್ಲಿ 30 ಚಿನ್ನ, 35 ಬೆಳ್ಳಿ ಹಾಗೂ 49 ಕಂಚು ಸೇರಿದಂತೆ ಒಟ್ಟು 114 ಪದಕಗಳನ್ನು ಗೆದ್ದು, ಪದಕ ಪಟ್ಟಿಯಲ್ಲಿ ನಾಲ್ಕನೇ ಸ್ಥಾನ ಪಡೆದು ದಾಖಲೆ ನಿರ್ಮಿಸಿದ ಭಾರತೀಯ ತಂಡಕ್ಕೆ ಹೃತ್ಪೂರ್ವಕ ಅಭಿನಂದನೆಗಳು.
ಭಾರತದ ಈ ಸಾಧನೆ ಏಷ್ಯನ್ ಪ್ಯಾರಾ ಗೇಮ್ಸ್ ಇತಿಹಾಸದಲ್ಲಿ ಅತ್ಯುತ್ತಮ ಪ್ರದರ್ಶನವಾಗಿದೆ. ನಮ್ಮ ಪ್ಯಾರಾ ಕ್ರೀಡಾಪಟುಗಳು ತಮ್ಮ ಅಸಾಧಾರಣ ಪ್ರತಿಭೆ, ದೃಢಸಂಕಲ್ಪ ಹಾಗೂ ಕ್ರೀಡಾ ಬದ್ಧತೆಯ ಮೂಲಕ ಹೊಸ ಮೈಲಿಗಲ್ಲು ಸ್ಥಾಪಿಸಿ, ದೇಶದ ಹೆಮ್ಮೆಯನ್ನು ಹೆಚ್ಚಿಸಿದ್ದಾರೆ.
ಈ ಐತಿಹಾಸಿಕ ಸಾಧನೆಗೆ ಕರ್ನಾಟಕದ ಕ್ರೀಡಾಪಟುಗಳು 8 ಪದಕಗಳನ್ನು ಕೊಡುಗೆಯಾಗಿ ನೀಡಿರುವುದು ಸಂತಸದ ಸಂಗತಿ. ಚಿನ್ನದ ಪದಕ ವಿಜೇತೆ ಸೌಮ್ಯ, ಬೆಳ್ಳಿ ಪದಕ ವಿಜೇತರಾದ ರಾಧಾ ವೆಂಕಟೇಶ್ ಮತ್ತು ಶರತ್ ಮಾಕನಹಳ್ಳಿ ಹಾಗೂ ಕಂಚಿನ ಪದಕ ವಿಜೇತರಾದ ನಿರಂಜನ್ ಮುಕುಂದನ್, ಪಲ್ಲವಿ ಕಾಲುವೆಹಳ್ಳಿ, ಸುಹಾಸ್ ಎಲ್. ಯತಿರಾಜ್, ಸ್ವಾತಿಕ್ ಪಾಟೀಲ್ ಮತ್ತು ತೇಜಸ್ ನಂದಕುಮಾರ್ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು.
ಕರ್ನಾಟಕದ ಕ್ರೀಡಾಪಟುಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಅತ್ಯುತ್ತಮ ಸಾಧನೆ ಮಾಡಲು ಅಗತ್ಯ ನೆರವು ಹಾಗೂ ಪ್ರೋತ್ಸಾಹ ಒದಗಿಸುವ ಮೂಲಕ ಅವರನ್ನು ಬೆಂಬಲಿಸಲು ನಮ್ಮ ಸರ್ಕಾರ ಸದಾ ಬದ್ಧವಾಗಿದೆ.
ಈ ಸಾಧನೆಗೆ ಕೊಡುಗೆ ನೀಡಿದ ಪ್ರತಿಯೊಬ್ಬ ಕ್ರೀಡಾಪಟು, ತರಬೇತುದಾರ ಹಾಗೂ ಸಹಾಯಕ ಸಿಬ್ಬಂದಿಗೆ ಮತ್ತೊಮ್ಮೆ ಅಭಿನಂದನೆಗಳು. ಈ ಯಶಸ್ಸು ಮುಂದಿನ ದಿನಗಳಲ್ಲಿ ಇನ್ನಷ್ಟು ಕ್ರೀಡಾ ಸಾಧನೆಗಳಿಗೆ ಸ್ಫೂರ್ತಿಯಾಗಲಿ ಎಂದು ಆಶಿಸುತ್ತೇನೆ. -
Dr. G Parameshwara
@DrParameshwara
ಮನೋರಂಜನೆಗಾಗಿ ಬಳಸುವ ಮಾಂಜಾ ದಾರ ಅಮಾಯಕರ ಜೀವ ಬಲಿಪಡೆಯುತ್ತಿರುವ ಹಿನ್ನೆಲೆಯಲ್ಲಿ ಮಾಂಜಾ ದಾರಕ್ಕೆ ಮೂಗುದಾರ ಹಾಕಬೇಕೆಂಬ ನಿರ್ಧಾರಕ್ಕೆ ನಾವು ಬಂದಿದ್ದೇವೆ.
ಈ ಕುರಿತಾದ ನನ್ನ ಹೇಳಿಕೆ ಇಂದಿನ ಪತ್ರಿಕೆಗಳಲ್ಲಿ..
In view of the threat posed to innocent lives by dangerous manja threads used for recreation, we have decided to take stringent measures to curb their use.
My statement on this issue, as reported in today's newspapers... -
Dr. G Parameshwara
@DrParameshwara
On World Polio Day, let us reaffirm our commitment to protecting every child from polio through timely vaccination and greater public awareness.
India's journey towards becoming polio-free stands as a remarkable achievement in public health, made possible through sustained immunisation efforts and the dedication of healthcare workers.
Let us continue to strengthen our vaccination programmes, ensure that no child is left behind, and work together towards a healthier, polio-free future for generations to come.
#worldpolioday -
Dr. G Parameshwara
@DrParameshwara
Remembering Captain Lakshmi Sahgal on her birth anniversary.
A revolutionary who commanded the Rani of Jhansi Regiment of Netaji Subhas Chandra Bose’s Indian National Army (INA) and served as Minister of Women’s Affairs in the Azad Hind Government, she played a significant role in India’s freedom struggle.
Her service continued long after Independence. From treating the poor in Kanpur to providing medical relief to refugees during the Bangladesh Liberation War and victims of the Bhopal gas tragedy, she stood by those in need.
A founding member of the All India Democratic Women’s Association and a Padma Vibhushan recipient, she championed women’s rights and social equality while continuing her medical practice until her final days in 2012.
Tributes to a remarkable freedom fighter whose lifelong commitment to the nation and its people remains an inspiration. -
Dr. G Parameshwara
@DrParameshwara
ಏಷ್ಯಾ ಮಹಿಳಾ ಬಾಸ್ಕೆಟ್ಬಾಲ್ ಲೀಗ್ 2026 ಕ್ರೀಡಾಕೂಟದಲ್ಲಿ ಭಾಗವಹಿಸುತ್ತಿರುವ ಎಲ್ಲಾ ದೇಶಗಳ ತಂಡದ ಆಟಗಾರರಿಗಾಗಿ ಇಂದು ಬೆಂಗಳೂರಿನ ಖಾಸಗಿ ಹೋಟೆಲ್ನಲ್ಲಿ ಏರ್ಪಡಿಸಲಾಗಿದ್ದ ಔತಣಕೂಟದಲ್ಲಿ ಮುಖ್ಯಮಂತ್ರಿ ಶ್ರೀ ಡಿ.ಕೆ.ಶಿವಕುಮಾರ್ ಅವರೊಂದಿಗೆ ಭಾಗವಹಿಸಿ, ಕ್ರೀಡಾಪಟುಗಳಿಗೆ ಶುಭ ಹಾರೈಸಿದೆ.
ಈ ಸಂದರ್ಭದಲ್ಲಿ ಬೃಹತ್ ಕೈಗಾರಿಕೆ ಸಚಿವರಾದ ಎಂ.ಬಿ.ಪಾಟೀಲ್, ಫಿಬಾ ಏಷ್ಯಾ ಅಧ್ಯಕ್ಷರು ಹಾಗೂ ವಿಧಾನ ಪರಿಷತ್ ಸದಸ್ಯರಾದ ಡಾ. ಕೆ.ಗೋವಿಂದರಾಜು, ಕರ್ನಾಟಕ ರಾಜ್ಯ ಬಾಸ್ಕೆಟ್ಬಾಲ್ ಸಂಸ್ಥೆಯ ಅಧ್ಯಕ್ಷರಾದ ಬಿ.ದಯಾನಂದ್ ಅವರು ಇದ್ದರು.
Dr. G Parameshwara
@DrParameshwara
Participated in a dinner hosted in Bengaluru in honour of players representing various countries at the Asia Women’s Basketball League 2026, and extended my best wishes to all the athletes.
Chief Minister Shri D.K. Shivakumar, Minister for Large and Medium Industries Shri M.B. Patil, FIBA Asia President and Member of the Legislative Council Dr. K. Govindaraju, and Karnataka State Basketball Association President Shri B. Dayanand were also present on the occasion. -
Dr. G Parameshwara
@DrParameshwara
ಸೌದಿ ಅರೇಬಿಯಾದಲ್ಲಿ ಪ್ರಸ್ತುತ ಉಂಟಾಗಿರುವ ಪರಿಸ್ಥಿತಿ ಹಾಗೂ ಅಂತಾರಾಷ್ಟ್ರೀಯ ವಿಮಾನಗಳ ಹಾರಾಟದಲ್ಲಿ ವ್ಯತ್ಯಯ ಉಂಟಾಗಿರುವ ಹಿನ್ನೆಲೆಯಲ್ಲಿ, ಅಲ್ಲಿ ನೆಲೆಸಿರುವ ಕನ್ನಡಿಗರು, ವಿಮಾನಗಳ ಹಾರಾಟ ರದ್ದಾಗಿರುವ ಕಾರಣದಿಂದ ಸಂಕಷ್ಟಕ್ಕೆ ಸಿಲುಕಿರುವ ಕರ್ನಾಟಕ ಮೂಲದ ಪ್ರಯಾಣಿಕರು ಹಾಗೂ ರಾಜ್ಯದಿಂದ ಸೌದಿ ಅರೇಬಿಯಾಕ್ಕೆ ಪ್ರಯಾಣಿಸಲು ಉದ್ದೇಶಿಸಿರುವವರ ಸುರಕ್ಷತೆಯ ಬಗ್ಗೆ ನಮ್ಮ ಸರ್ಕಾರ ವಿಶೇಷ ಗಮನಹರಿಸಿದೆ.
ವಿಮಾನಗಳ ಹಾರಾಟದಲ್ಲಿ ವ್ಯತ್ಯಯ ಉಂಟಾಗಿರುವ ಕಾರಣ ಕರ್ನಾಟಕದಿಂದ ಉಮ್ರಾ ಯಾತ್ರೆಗೆ ತೆರಳಿರುವ ಸುಮಾರು 600 ಯಾತ್ರಾರ್ಥಿಗಳು ಸೌದಿ ಅರೇಬಿಯಾದಲ್ಲಿ ಸಿಲುಕಿಕೊಂಡಿದ್ದಾರೆ. ಅವರ ಸುರಕ್ಷತೆಗಾಗಿ ಮತ್ತು ಅವರಿಗೆ ಅಗತ್ಯ ನೆರವನ್ನು ಒದಗಿಸುವ ಸಂಬಂಧ ರಿಯಾದ್ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಹಾಗೂ ಜೆಡ್ಡಾದಲ್ಲಿರುವ ಭಾರತೀಯ ಕಾನ್ಸುಲೇಟ್ನೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇವೆ.
ವಿಶೇಷವಾಗಿ ವಿಮಾನ ಸಂಚಾರದಲ್ಲಿನ ವ್ಯತ್ಯಯದಿಂದ ತೊಂದರೆ ಅನುಭವಿಸುತ್ತಿರುವ ಉಮ್ರಾ ಯಾತ್ರಾರ್ಥಿಗಳಿಗೆ ಅಗತ್ಯ ನೆರವು ಒದಗಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಸೌದಿ ಅರೇಬಿಯಾದಲ್ಲಿ ಸಿಲುಕಿರುವ ಕನ್ನಡಿಗರಿಗೆ ನೆರವು ಒದಗಿಸಲು ಹಾಗೂ ಪ್ರಯಾಣದ ವ್ಯವಸ್ಥೆಗಳು ಲಭ್ಯವಾದ ತಕ್ಷಣ ಅವರನ್ನು ಸುರಕ್ಷಿತವಾಗಿ ತಾಯ್ನಾಡಿಗೆ ಕರೆತರಲು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಲಾಗುತ್ತಿದೆ.
ಅಲ್ಪಸಂಖ್ಯಾತರ ಕಲ್ಯಾಣ, ಹಜ್ ಮತ್ತು ವಕ್ಫ್ ಇಲಾಖೆ ಹಾಗೂ ಕಂದಾಯ ಇಲಾಖೆಯ ರಾಜ್ಯ ತುರ್ತು ಕಾರ್ಯಾಚರಣೆ ಕೇಂದ್ರವು (SEOC) ವಿದೇಶಾಂಗ ಸಚಿವಾಲಯದೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಸಂಕಷ್ಟದಲ್ಲಿರುವ ಕನ್ನಡಿಗರಿಗೆ ಅಗತ್ಯ ನೆರವು ಒದಗಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಜೊತೆಗೆ ಹಜ್ ಇಲಾಖೆ ಹಾಗೂ SEOC ಮೂಲಕ ವಿಶೇಷ ಸಹಾಯವಾಣಿ ಸಂಖ್ಯೆಗಳನ್ನು ಸಕ್ರಿಯಗೊಳಿಸಿದೆ.
ಪ್ರಸಕ್ತ ಉದ್ಭವಿಸಿರುವ ಸನ್ನಿವೇಶದ ಹಿನ್ನೆಲೆಯಲ್ಲಿ ಸೌದಿ ಅರೇಬಿಯಾದಲ್ಲಿರುವ ಕನ್ನಡಿಗರು ಆತಂಕಕ್ಕೆ ಒಳಗಾಗದೆ, ಜಾಗರೂಕರಾಗಿರಬೇಕು. ಅಲ್ಲಿನ ಸ್ಥಳೀಯ ಆಡಳಿತ ಹಾಗೂ ಭಾರತೀಯ ರಾಯಭಾರ ಕಚೇರಿ ಹೊರಡಿಸುವ ಸುರಕ್ಷತಾ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಯಾವುದೇ ವೈಮಾನಿಕ ದಾಳಿ ಸಂಭವಿಸಿದಲ್ಲಿ ಮನೆಯೊಳಗೆ ಅಥವಾ ಸುರಕ್ಷಿತ ಕಟ್ಟಡದೊಳಗೆ ಉಳಿಯಿರಿ. ಅಲ್ಲದೆ, ಭದ್ರತೆಗೆ ಸಂಬಂಧಿಸಿದ ಘಟನೆಗಳ ಛಾಯಾಚಿತ್ರ ಅಥವಾ ವಿಡಿಯೋಗಳನ್ನು ಸೆರೆಹಿಡಿಯುವುದು ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವುದರಿಂದ ದೂರವಿರಿ. ಇಂತಹ ಚಟುವಟಿಕೆಗಳು ಸ್ಥಳೀಯ ಕಾನೂನುಗಳ ಉಲ್ಲಂಘನೆಯಾಗುವ ಸಾಧ್ಯತೆಯಿದೆ.
ಕರ್ನಾಟಕದಿಂದ ಸೌದಿ ಅರೇಬಿಯಾಕ್ಕೆ, ವಿಶೇಷವಾಗಿ ಉಮ್ರಾ ಯಾತ್ರೆಗೆ ತೆರಳಲು ಉದ್ದೇಶಿಸಿರುವವರು ಪ್ರಸ್ತುತ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಹೆಚ್ಚಿನ ಎಚ್ಚರಿಕೆ ವಹಿಸಬೇಕು. ಭಾರತೀಯ ರಾಯಭಾರ ಕಚೇರಿ ಹೊರಡಿಸುವ ಸಲಹೆ ಮತ್ತು ಸೂಚನೆಗಳನ್ನು ಗಮನಿಸುತ್ತಿರಬೇಕು. ತಮ್ಮ ವಿಮಾನಯಾನ ಸಂಸ್ಥೆಗಳು ಹಾಗೂ ಪ್ರವಾಸ ಆಯೋಜಕರಿಂದ ವಿಮಾನಗಳ ವೇಳಾಪಟ್ಟಿಯನ್ನು ಖಚಿತಪಡಿಸಿಕೊಂಡು ಪ್ರಯಾಣದ ವ್ಯವಸ್ಥೆ ಮಾಡಿಕೊಳ್ಳಬೇಕು. ಪ್ರಯಾಣಿಸುವ ಸಂದರ್ಭದಲ್ಲಿ ವಿಮಾನಗಳ ಹಠಾತ್ ರದ್ದತಿ, ವಿಳಂಬ ಅಥವಾ ಅನಿವಾರ್ಯವಾಗಿ ಹೆಚ್ಚಿನ ದಿನಗಳ ಕಾಲ ಅಲ್ಲಿಯೇ ಉಳಿಯಬೇಕಾಗುವ ಸಾಧ್ಯತೆಗಳನ್ನೂ ಸಹ ಗಮನದಲ್ಲಿರಿಸಿಕೊಳ್ಳುವಂತೆ ಮನವಿ ಮಾಡುತ್ತೇನೆ.
24×7 ತುರ್ತು ಸಹಾಯವಾಣಿ ಸಂಖ್ಯೆಗಳು
ಕರ್ನಾಟಕ ಹಜ್ ಇಲಾಖೆ
9483503132 | 7899707775
ರಾಜ್ಯ ತುರ್ತು ಕಾರ್ಯಾಚರಣೆ ಕೇಂದ್ರ (SEOC)
1070 | 080-22253707
ಭಾರತೀಯ ರಾಯಭಾರ ಕಚೇರಿ, ರಿಯಾದ್
ದೂರವಾಣಿ:
+966 554412016 / +966 542126784
ವಾಟ್ಸಾಪ್ (ಸಂದೇಶಗಳಿಗೆ ಮಾತ್ರ):
+966 536216082
ಭಾರತೀಯ ಕಾನ್ಸುಲೇಟ್, ಜೆಡ್ಡಾ
ದೂರವಾಣಿ:
+966 122614093 / +966 556122301
ವಾಟ್ಸಾಪ್ (ಸಂದೇಶಗಳಿಗೆ ಮಾತ್ರ):
+966 536209704
ಟೋಲ್ ಫ್ರೀ (ಸೌದಿ ಅರೇಬಿಯಾದೊಳಗೆ):
8002471234
ಸೌದಿ ಅರೇಬಿಯಾದಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಕನ್ನಡಿಗರು ಹಾಗೂ ಅವರ ಕುಟುಂಬದವರು ಅಗತ್ಯ ನೆರವು ಪಡೆಯಲು ಮೇಲಿನ ಸಹಾಯವಾಣಿ ಸಂಖ್ಯೆಗಳನ್ನು ಸಂಪರ್ಕಿಸಬಹುದು.
ಪ್ರತಿಯೊಬ್ಬ ಕನ್ನಡಿಗರ ಸುರಕ್ಷತೆಯು ನಮ್ಮ ಸರ್ಕಾರದ ಪ್ರಮುಖ ಆದ್ಯತೆಯಾಗಿದೆ. ಸೌದಿ ಅರೇಬಿಯಾದಲ್ಲಿರುವ ಕನ್ನಡಿಗರಿಗೆ ಅಗತ್ಯವಿರುವ ಎಲ್ಲ ರೀತಿಯ ನೆರವು ಒದಗಿಸಲು ಭಾರತೀಯ ರಾಯಭಾರ ಕಚೇರಿ, ವಿದೇಶಾಂಗ ಸಚಿವಾಲಯ ಹಾಗೂ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ನಮ್ಮ ಸರ್ಕಾರ ನಿರಂತರ ಸಮನ್ವಯ ಸಾಧಿಸುತ್ತಿದೆ. -
Dr. G Parameshwara
@DrParameshwara
In view of the prevailing situation in Saudi Arabia and disruptions to international flight operations, our Government is closely monitoring the safety and well-being of Kannadigas residing in Saudi Arabia, those stranded due to flight cancellations, and those planning to travel there from Karnataka.
Nearly 600 Umrah pilgrims from Karnataka are currently stranded in Saudi Arabia due to flight disruptions. We are in constant touch with the Indian Embassy in Riyadh and the Consulate General of India in Jeddah to ensure their safety and extend necessary assistance.
The Embassy and Consulate are coordinating with airlines and tour operators to facilitate the early return of affected pilgrims. Our Minority Welfare, Haj and Waqf Department and the State Emergency Operations Centre (SEOC), under the Revenue Department, are coordinating assistance with the Ministry of External Affairs. We have also activated dedicated helplines through the Haj Department and SEOC to assist stranded Kannadigas and their families.
I urge all Kannadigas currently in Saudi Arabia to remain calm, stay vigilant and strictly follow the safety advisories issued by local authorities and the Indian Embassy. In the event of an aerial attack, remain indoors and avoid photographing, recording or sharing videos of security incidents, as this may violate local laws.
Kannadigas planning to travel to Saudi Arabia, particularly for Umrah, are advised to exercise caution, stay updated on official advisories and verify flight schedules with their airlines and tour operators before proceeding to the airport.
24×7 EMERGENCY HELPLINES
Karnataka Haj Department
9483503132 | 7899707775
State Emergency Operations Centre (SEOC)
1070 | 080-22253707
Indian Embassy, Riyadh
Telephone: +966 554412016 / +966 542126784
WhatsApp: +966 536216082 (Messages only)
Indian Consulate, Jeddah
Telephone: +966 122614093 / +966 556122301
WhatsApp: +966 536209704 (Messages only)
Toll-Free (within Saudi Arabia): 8002471234
Kannadigas facing difficulties and their families are requested to contact these helplines for necessary assistance.
The safety of every Kannadiga remains our foremost priority. Our Government will continue coordinating with the Indian Embassy and concerned authorities to ensure all possible assistance to our people in Saudi Arabia. -
Dr. G Parameshwara
@DrParameshwara
ಇಂದು ಸಿಎಂ ಗೃಹಕಚೇರಿ ಕೃಷ್ಣಾದಲ್ಲಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಪುರಸ್ಕೃತರನ್ನು ಆಯ್ಕೆ ಮಾಡುವ ಕುರಿತಂತೆ ನಡೆದ ಸಲಹಾ ಸಮಿತಿ ಸಭೆಯಲ್ಲಿ ಮುಖ್ಯಮಂತ್ರಿ ಶ್ರೀ ಡಿ.ಕೆ.ಶಿವಕುಮಾರ್ ಅವರೊಂದಿಗೆ ಪಾಲ್ಗೊಂಡು, ಅರ್ಹ ಸಾಧಕರನ್ನು ಗುರುತಿಸುವ ನಿಟ್ಟಿನಲ್ಲಿ ಸಲಹೆ ಸೂಚನೆಗಳನ್ನು ನೀಡಿದೆ.
ಸಭೆಯಲ್ಲಿ ಇಂಧನ ಸಚಿವರಾದ ಕೆ.ಜೆ.ಜಾರ್ಜ್, ಕನ್ನಡ ಮತ್ತು ಸಂಸ್ಕತಿ ಇಲಾಖೆ ಸಚಿವರಾದ ಶಿವರಾಜ್ ಎಸ್.ತಂಗಡಗಿ, ಬೃಹತ್ ಕೈಗಾರಿಕೆ ಸಚಿವರಾದ ಎಂ.ಬಿ.ಪಾಟೀಲ್, ಸಲಹಾ ಸಮಿತಿ ಸದಸ್ಯರಾದ ಜಯಮಾಲಾ, ಎಸ್. ನಾರಾಯಣ್, ಸಾಧುಕೋಕಿಲ, ಪುರುಷೋತ್ತಮ ಬಿಳಿಮಲೆ, ನಾಗರಾಜ್ ಮೂರ್ತಿ, ಡಾ. ರುದ್ರಪ್ರಸಾದ್, ಮುಕುಂದ್ ರಾಜ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರ್ಯದರ್ಶಿಗಳಾದ ಮಂಜುಶ್ರೀ, ನಿರ್ದೇಶಕರಾದ ವಸುಂಧರಾ ಸೇರಿದಂತೆ ಇತರರು ಉಪಸ್ಥಿತರಿದ್ದರು. -
Dr. G Parameshwara
@DrParameshwara
ನಾಡಿನ ಸಂಸ್ಕೃತಿ, ಸಂಪ್ರದಾಯ ಮತ್ತು ಪರಂಪರೆಯ ಸೊಬಗನ್ನು ಅದ್ಭುತವಾಗಿ ಅನಾವರಣಗೊಳಿಸಿದ ತುಮಕೂರು ದಸರಾ ಜಂಬೂಸವಾರಿ ಮೆರವಣಿಗೆ ಈ ಬಾರಿಯ ಉತ್ಸವದ ಪ್ರಮುಖ ಆಕರ್ಷಣೆಯಾಗಿತ್ತು.
ಪೊಲೀಸ್ ಇಲಾಖೆಯ ಅಶ್ವದಳ, ಜಾನಪದ ಕಲಾತಂಡಗಳು, ಆಕರ್ಷಕ ಹಳ್ಳಿಕಾರ್ ತಳಿಯ ಎತ್ತುಗಳು, ವೈವಿಧ್ಯಮಯ ಸಾಂಸ್ಕೃತಿಕ ಕಲಾ ತಂಡಗಳ ಮನಮೋಹಕ ಪ್ರದರ್ಶನಗಳು, ಸಾರೋಟಿನಲ್ಲಿ ಸಾಗಿದ 50ಕ್ಕೂ ಹೆಚ್ಚು ಗ್ರಾಮ ದೇವತೆಗಳು ಹಾಗೂ ಗಜಗಾಂಭೀರ್ಯದಿಂದ ಅಂಬಾರಿಯಲ್ಲಿ ವಿರಾಜಮಾನರಾಗಿದ್ದ ಶ್ರೀ ಚಾಮುಂಡೇಶ್ವರಿ ದೇವಿಯ ದಿವ್ಯ ಮೆರವಣಿಗೆ ಭಕ್ತರ ಕಣ್ಮನ ಸೆಳೆಯಿತು.
ತುಮಕೂರು ದಸರಾ ಜಂಬೂಸವಾರಿ ವೈಭವವನ್ನು ನೀವು ಮತ್ತೊಮ್ಮೆ ಕಣ್ತುಂಬಿಕೊಳ್ಳಿ.
#tumakurudasara2026This media couldn't be displayed. See it on the original post. -
Dr. G Parameshwara
@DrParameshwara
ಅಪಾಯಕಾರಿ ಮಾಂಜಾ ದಾರದಿಂದ ಅಮಾಯಕರು ಪ್ರಾಣ ಕಳೆದುಕೊಳ್ಳುತ್ತಿರುವುದು ಸಮಾಜದ ಪ್ರತಿಯೊಬ್ಬರೂ ಗಂಭೀರವಾಗಿ ಪರಿಗಣಿಸಬೇಕಾದ ವಿಷಯ. ಸಾರ್ವಜನಿಕರ ಜೀವಕ್ಕೆ ಅಪಾಯ ಉಂಟುಮಾಡುವ ಇಂತಹ ಪ್ರವೃತ್ತಿಗೆ ಕಡಿವಾಣ ಹಾಕುವುದು ಹಾಗೂ ಸುರಕ್ಷಿತ ವಾತಾವರಣ ನಿರ್ಮಿಸುವುದು ನಮ್ಮೆಲ್ಲರ ಸಾಮೂಹಿಕ ಜವಾಬ್ದಾರಿಯಾಗಿದೆ.
ಅಪಾಯಕಾರಿ ಮಾಂಜಾ ದಾರದ ನಿಷೇಧದ ಕಟ್ಟುನಿಟ್ಟಿನ ಅನುಷ್ಠಾನ ಹಾಗೂ ಅಗತ್ಯ ಕಾನೂನು ಕ್ರಮಗಳ ಮೂಲಕ ಸಾರ್ವಜನಿಕರ ಸುರಕ್ಷತೆಯನ್ನು ಖಚಿತಪಡಿಸಲು ನಮ್ಮ ಸರ್ಕಾರ ಬದ್ಧವಾಗಿದೆ.
The loss of innocent lives due to dangerous manja string is a serious concern that every member of society must recognise. Curbing such practices that endanger public safety and creating a safer environment is a collective responsibility.
Our Government is committed to ensuring public safety through the strict enforcement of the ban on dangerous manja string and necessary legal action against violations. -
Dr. G Parameshwara
@DrParameshwara
ತಮ್ಮ ಕ್ಷಣಿಕ ಮೋಜು ಮತ್ತೊಬ್ಬರ ಜೀವಕ್ಕೆ ಕುತ್ತು ತರಬಹುದು ಎಂಬ ಅರಿವಿದ್ದೂ ಅಪಾಯಕಾರಿ ಮಾಂಜಾ ದಾರವನ್ನು ಬಳಸುವುದು ಕ್ಷಮಿಸಲಾಗದ ಕೃತ್ಯ. ಇಂತಹ ನಿರ್ಲಕ್ಷ್ಯದಿಂದ ಜೀವಹಾನಿ ಸಂಭವಿಸಿದರೆ, ಅದಕ್ಕೆ ಕಾರಣರಾದವರು ಕಾನೂನಿನ ಪ್ರಕಾರ ಹೊಣೆಗಾರರಾಗಬೇಕಾಗುತ್ತದೆ. ಸಾರ್ವಜನಿಕರ ಸುರಕ್ಷತೆಯನ್ನು ಕಡೆಗಣಿಸಿ, ಉದ್ದೇಶಪೂರ್ವಕವಾಗಿ ಅಪಾಯ ಸೃಷ್ಟಿಸುವ ಪ್ರವೃತ್ತಿಯನ್ನು ಯಾವುದೇ ಕಾರಣಕ್ಕೂ ಸಹಿಸಲು ಸಾಧ್ಯವಿಲ್ಲ.
ಮನೋರಂಜನೆಗಾಗಿ ಮತ್ತೊಬ್ಬರ ಜೀವದೊಂದಿಗೆ ಆಟವಾಡಲು ಯಾರಿಗೂ ಹಕ್ಕಿಲ್ಲ. ಸಾರ್ವಜನಿಕರ ಸುರಕ್ಷತೆ ಮತ್ತು ಅಮೂಲ್ಯ ಜೀವಗಳ ರಕ್ಷಣೆ ನಮ್ಮ ಸರ್ಕಾರದ ಸಂಕಲ್ಪ.
Using dangerous manja string despite knowing that momentary entertainment could put another person’s life at risk is inexcusable. If such negligence causes harm, those responsible must be held accountable under the law. Deliberately creating danger and disregarding public safety cannot be tolerated under any circumstances.
No one has the right to endanger another person’s life for entertainment. Protecting public safety and precious lives remains our Government’s firm commitment. -
Dr. G Parameshwara
@DrParameshwara
ಮಾಂಜಾ ದಾರದಿಂದ ಅಮಾಯಕರು ಪ್ರಾಣ ಕಳೆದುಕೊಳ್ಳುತ್ತಿರುವ ದುರಂತಗಳು ಮರುಕಳಿಸುತ್ತಿದ್ದರೂ, ಅದರ ಅಪಾಯವನ್ನು ಅರಿತುಕೊಂಡೇ ಕೆಲವರು ಇಂತಹ ದಾರಗಳನ್ನು ಬಳಸುತ್ತಿರುವುದು ಕಳವಳಕಾರಿ. ಕ್ಷಣಿಕ ಮನೋರಂಜನೆಗಾಗಿ ಮತ್ತೊಬ್ಬರ ಜೀವಕ್ಕೆ ಕುತ್ತು ತರುವ ಮನಸ್ಥಿತಿ ಬದಲಾಗಬೇಕು. ನಮ್ಮ ಹವ್ಯಾಸ ಮತ್ತೊಬ್ಬರ ಕುಟುಂಬದ ಬದುಕಿನಲ್ಲಿ ಶಾಶ್ವತ ನೋವನ್ನು ತುಂಬಬಾರದು ಎಂಬ ಕನಿಷ್ಠ ಮಾನವೀಯ ಪ್ರಜ್ಞೆ ಪ್ರತಿಯೊಬ್ಬರಲ್ಲೂ ಇರಬೇಕು.
ಮಾನವ ಜೀವದ ರಕ್ಷಣೆ ಕೇವಲ ಸರ್ಕಾರದ ಜವಾಬ್ದಾರಿಯಷ್ಟೇ ಅಲ್ಲ, ಅದು ಪ್ರತಿಯೊಬ್ಬ ನಾಗರಿಕನ ನೈತಿಕ ಹೊಣೆಗಾರಿಕೆಯೂ ಹೌದು.
Despite repeated tragedies in which innocent people have lost their lives to manja string, it is deeply concerning that some continue to use it despite being aware of the danger. The mindset of putting another person’s life at risk for momentary entertainment must change. At the very least, every individual must have the humanity to ensure that their pastime does not leave another family with lifelong grief.
Protecting human life is not only the responsibility of the Government; it is also the moral responsibility of every citizen. -
Dr. G Parameshwara
@DrParameshwara
ಕೆಲವರ ಕ್ಷಣಿಕ ಮನೋರಂಜನೆಗಾಗಿ ಅಮಾಯಕ ವಾಹನ ಸವಾರರು ಪ್ರಾಣ ಕಳೆದುಕೊಳ್ಳುವ ದುರಂತಗಳನ್ನು ಯಾವುದೇ ಕಾರಣಕ್ಕೂ ಸಹಿಸಲು ಸಾಧ್ಯವಿಲ್ಲ. ಗಾಳಿಪಟ ಹಾರಿಸುವ ಹವ್ಯಾಸ ಮತ್ತೊಬ್ಬರ ಜೀವಕ್ಕೆ ಕಂಟಕವಾಗಬಾರದು. ಸಾರ್ವಜನಿಕರ ಸುರಕ್ಷತೆಗೆ ಅಪಾಯಕಾರಿಯಾಗಿರುವ ಮಾಂಜಾ ದಾರದ ಬಳಕೆ ಮತ್ತು ಮಾರಾಟಕ್ಕೆ ಸಂಪೂರ್ಣ ಕಡಿವಾಣ ಹಾಕುವುದು ಅಗತ್ಯ.
ಮನೋರಂಜನೆಗಿಂತ ಮಾನವ ಜೀವದ ಮೌಲ್ಯ ದೊಡ್ಡದು. ಸಾರ್ವಜನಿಕರ ಸುರಕ್ಷತೆಗೆ ನಮ್ಮ ಸರ್ಕಾರ ಬದ್ಧವಾಗಿದೆ.
Tragic incidents in which innocent motorists lose their lives for someone else’s momentary entertainment cannot be tolerated under any circumstances. Kite flying should never become a threat to another person’s life. The use and sale of dangerous manja string, which poses a serious risk to public safety, must be completely curbed.
Human life is more valuable than entertainment. Our Government is committed to protecting public safety. -
Dr. G Parameshwara
@DrParameshwara
ಅಪಾಯಕಾರಿ ಮಾಂಜಾ ದಾರದ ಬಳಕೆ ಮತ್ತು ಮಾರಾಟಕ್ಕೆ ಸಂಪೂರ್ಣ ಕಡಿವಾಣ ಹಾಕುವುದು ಅತ್ಯಗತ್ಯ. ಇಂತಹ ದಾರದಿಂದ ಅಮೂಲ್ಯ ಜೀವಗಳು ಬಲಿಯಾಗುತ್ತಿರುವುದು ತೀವ್ರ ಕಳವಳಕಾರಿ ಸಂಗತಿ.
ರಾಜ್ಯದಲ್ಲಿ ಈಗಾಗಲೇ ಜಾರಿಯಲ್ಲಿರುವ ಮಾಂಜಾ ದಾರದ ಮಾರಾಟ ಮತ್ತು ಬಳಕೆಯ ಮೇಲಿನ ನಿಷೇಧವನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ನಮ್ಮ ಸರ್ಕಾರ ಬದ್ಧವಾಗಿದೆ. ಅಗತ್ಯವಿದ್ದಲ್ಲಿ ನಿಯಮಗಳನ್ನು ಮತ್ತಷ್ಟು ಬಿಗಿಗೊಳಿಸಿ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಕುರಿತು ಸಂಬಂಧಪಟ್ಟ ಇಲಾಖೆಯೊಂದಿಗೆ ಚರ್ಚಿಸಿ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು.
It is essential to completely curb the sale and use of dangerous manja string. The fact that such strings continue to claim precious lives is a matter of serious concern.
Our Government is committed to ensuring more effective enforcement of the existing ban on the sale and use of manja string across the State. If necessary, the rules will be further tightened, and appropriate decisions will be taken in consultation with the concerned department to ensure strict action against violators. -
Dr. G Parameshwara
@DrParameshwara
ಮಾಂಜಾ ದಾರದ ಬಳಕೆ ಜೀವಕ್ಕೆ ಅತ್ಯಂತ ಅಪಾಯಕಾರಿ. ಗಾಳಿಪಟ ಹಾರಿಸಲು ಬಳಸುವ ಈ ದಾರವು ಸಾರ್ವಜನಿಕರ ಸುರಕ್ಷತೆಗೆ ಸವಾಲಾಗಿ ಪರಿಣಮಿಸಿದ್ದು, ಅರೆ ಕ್ಷಣದ ನಿರ್ಲಕ್ಷ್ಯವು ಅಮೂಲ್ಯ ಜೀವಗಳನ್ನು ಬಲಿ ಪಡೆಯುವ ಅಪಾಯವಿದೆ. ಇಂತಹ ದಾರದ ಬಳಕೆ ಮತ್ತು ಮಾರಾಟಕ್ಕೆ ಸಂಪೂರ್ಣ ಕಡಿವಾಣ ಹಾಕುವುದು ಅತ್ಯಗತ್ಯ.
ಹುಬ್ಬಳ್ಳಿಯಲ್ಲಿ ಮಾಂಜಾ ದಾರ ಕುತ್ತಿಗೆಗೆ ಸಿಲುಕಿ ವಿದ್ಯಾ ಮಂಜುನಾಥ ಗೌಡರ ಅವರು ಪ್ರಾಣ ಕಳೆದುಕೊಂಡಿರುವುದು ಅತ್ಯಂತ ದುಃಖದ ಸಂಗತಿ. ಇಂತಹ ದುರಂತಗಳು ಮರುಕಳಿಸದಂತೆ ತಡೆಯಲು ನಮ್ಮ ಸರ್ಕಾರ ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ್ದು, ಮಾಂಜಾ ದಾರದ ಬಳಕೆ ಮತ್ತು ಮಾರಾಟದ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಬದ್ಧವಾಗಿದೆ.
The use of manja string is extremely dangerous to human life. Used for kite flying, these strings have become a serious threat to public safety, where even a moment of negligence can put precious lives at risk. It is therefore essential to completely curb their sale and use.
The tragic death of Vidya Manjunath Gowdar in Hubballi, after a manja string got entangled around her neck, is deeply distressing. Our Government has taken this incident seriously and is committed to taking strict action against the sale and use of dangerous manja string to prevent such tragedies from recurring. -
Dr. G Parameshwara
@DrParameshwara
Congratulations to our very own Tejas Nandakumar on winning the bronze medal in the Men's 100m Backstroke (S7) event at the Asian Para Games 2026 in Japan.
Tejas clocked an impressive 1:18.58 in the final to secure a podium finish, adding another medal to India's tally. His performance on the international stage is a testament to his hard work and dedication.
Our Government remains committed to encouraging and supporting Karnataka's athletes in their pursuit of excellence on the global stage. Wishing him greater achievements in the years ahead.
ಜಪಾನ್ನಲ್ಲಿ ನಡೆಯುತ್ತಿರುವ ಏಷ್ಯನ್ ಪ್ಯಾರಾ ಗೇಮ್ಸ್–2026ರ ಪುರುಷರ 100 ಮೀಟರ್ ಬ್ಯಾಕ್ಸ್ಟ್ರೋಕ್ (S7) ಈಜು ಸ್ಪರ್ಧೆಯಲ್ಲಿ ಕಂಚಿನ ಪದಕ ಗೆದ್ದು ಭಾರತದ ಪದಕ ಪಟ್ಟಿಗೆ ಮತ್ತೊಂದು ಗರಿ ಮೂಡಿಸಿರುವ ತೇಜಸ್ ನಂದಕುಮಾರ್ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು.
ಫೈನಲ್ ಸ್ಪರ್ಧೆಯಲ್ಲಿ 1 ನಿಮಿಷ 18.58 ಸೆಕೆಂಡ್ಗಳಲ್ಲಿ ಗುರಿ ತಲುಪಿ ಸಾಧನೆ ಮೆರೆದಿರುವ ತೇಜಸ್ ಅವರ ಪರಿಶ್ರಮ, ಛಲ ಮತ್ತು ಕ್ರೀಡೆಯ ಬಗೆಗಿನ ಒಲವು ಮೆಚ್ಚುವಂತಹದ್ದು. ಅಂತಾರಾಷ್ಟ್ರೀಯ ವೇದಿಕೆಯಲ್ಲಿ ತಮ್ಮ ಪ್ರತಿಭೆಯನ್ನು ಸಾಬೀತುಪಡಿಸಿರುವ ಅವರ ಸಾಧನೆ, ಹಲವು ಯುವ ಕ್ರೀಡಾಪಟುಗಳಿಗೆ ಆತ್ಮವಿಶ್ವಾಸದಿಂದ ಮುನ್ನಡೆಯಲು ಪ್ರೇರಣೆಯಾಗಲಿದೆ.
ಕರ್ನಾಟಕದ ಕ್ರೀಡಾ ಪ್ರತಿಭೆಗಳಿಗೆ ಸೂಕ್ತ ಅವಕಾಶ, ಪ್ರೋತ್ಸಾಹ ಹಾಗೂ ಅಗತ್ಯ ಬೆಂಬಲ ಒದಗಿಸಿ, ಜಾಗತಿಕ ಮಟ್ಟದಲ್ಲಿ ಅವರು ಮತ್ತಷ್ಟು ಎತ್ತರದ ಸಾಧನೆ ಮಾಡಲು ನೆರವಾಗಲು ನಮ್ಮ ಸರ್ಕಾರ ಬದ್ಧವಾಗಿದೆ. ತೇಜಸ್ ಅವರ ಕ್ರೀಡಾ ಬದುಕಿನಲ್ಲಿ ಇನ್ನಷ್ಟು ಯಶಸ್ಸು ಒಲಿಯಲಿ, ಮುಂಬರುವ ವರ್ಷಗಳಲ್ಲಿ ಹಲವು ಸಾಧನೆಗಳು ಅವರದಾಗಲಿ ಎಂದು ಹಾರೈಸುತ್ತೇನೆ. -
Dr. G Parameshwara
@DrParameshwara
Heartiest congratulations to IAS officer and two-time Paralympic silver medallist Suhas L. Yathiraj on winning the bronze medal in the Men's Singles SL4 Para Badminton event at the Asian Para Games 2026 in Japan.
A former Asian Para Games gold medallist, Suhas has once again made Karnataka and the nation proud. His remarkable achievements in international badminton, alongside his responsibilities as an IAS officer, are truly inspiring.
Our Government remains committed to encouraging and supporting Karnataka's athletes in their pursuit of excellence on the global stage. Wishing him continued success and many more medals.
ಜಪಾನ್ನಲ್ಲಿ ನಡೆಯುತ್ತಿರುವ ಏಷ್ಯನ್ ಪ್ಯಾರಾ ಗೇಮ್ಸ್–2026ರ ಪುರುಷರ ಸಿಂಗಲ್ಸ್ ಪ್ಯಾರಾ ಬ್ಯಾಡ್ಮಿಂಟನ್ (SL4 ) ವಿಭಾಗದಲ್ಲಿ ಕಂಚಿನ ಪದಕ ಗೆದ್ದಿರುವ ಐಎಎಸ್ ಅಧಿಕಾರಿ ವಿಜೇತ ಸುಹಾಸ್ ಎಲ್. ಯತಿರಾಜ್ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು. ಸುಹಾಸ್ ಅವರು ಪ್ಯಾರಾಲಿಂಪಿಕ್ಸ್ನಲ್ಲಿ ಎರಡು ಬಾರಿ ಬೆಳ್ಳಿ ಪದಕ ಗೆದ್ದು ಸಾಧನೆ ಮೆರೆದಿರುವವರು.
ಈ ಹಿಂದೆ ಏಷ್ಯನ್ ಪ್ಯಾರಾ ಗೇಮ್ಸ್ನಲ್ಲಿ ಚಿನ್ನದ ಪದಕ ಗೆದ್ದಿದ್ದ ಸುಹಾಸ್ ಅವರು ಮತ್ತೊಮ್ಮೆ ತಮ್ಮ ಅಮೋಘ ಕ್ರೀಡಾ ಸಾಮರ್ಥ್ಯವನ್ನು ಸಾಬೀತುಪಡಿಸಿ, ಕರ್ನಾಟಕ ಹಾಗೂ ದೇಶಕ್ಕೆ ಕೀರ್ತಿ ತಂದಿದ್ದಾರೆ. ಆಡಳಿತಾತ್ಮಕ ಜವಾಬ್ದಾರಿಗಳೊಂದಿಗೆ ಅಂತಾರಾಷ್ಟ್ರೀಯ ಬ್ಯಾಡ್ಮಿಂಟನ್ ಕ್ಷೇತ್ರದಲ್ಲಿಯೂ ಸಾಧನೆಯ ಹಾದಿಯಲ್ಲಿ ಮುನ್ನಡೆಯುತ್ತಿರುವ ಅವರ ಜೀವನ ಪಯಣ ಅನೇಕರಿಗೆ ಸ್ಫೂರ್ತಿದಾಯಕವಾಗಿದೆ.
ಜಾಗತಿಕ ಕ್ರೀಡಾ ವೇದಿಕೆಯಲ್ಲಿ ಕರ್ನಾಟಕದ ಕ್ರೀಡಾಪಟುಗಳು ಮತ್ತಷ್ಟು ಯಶಸ್ಸು ಸಾಧಿಸಲು ಅಗತ್ಯ ಪ್ರೋತ್ಸಾಹ ಮತ್ತು ಬೆಂಬಲ ನೀಡಲು ನಮ್ಮ ಸರ್ಕಾರ ಬದ್ಧವಾಗಿದೆ. ಸುಹಾಸ್ ಅವರ ಸಾಧನೆಯ ಪಯಣ ಹೀಗೆಯೇ ಮುಂದುವರಿಯಲಿ, ಮುಂಬರುವ ದಿನಗಳಲ್ಲಿ ಇನ್ನಷ್ಟು ಪದಕಗಳು ಅವರ ಮುಡಿಗೇರಲಿ ಎಂದು ಹಾರೈಸುತ್ತೇನೆ. -
Dr. G Parameshwara
@DrParameshwara
Congratulations to our very own Swatik Patil on winning the bronze medal in the Men's 100m Breaststroke (SB9) event at the Asian Para Games 2026 in Japan.
Hailing from Mutaga village in Belagavi district, Swatik clocked an impressive 1:13.77 in the final to secure the bronze medal, bringing glory to Karnataka and the nation.
Our Government remains committed to encouraging and supporting Karnataka's athletes in their pursuit of excellence on the global stage. Wishing him many more achievements ahead.
ಜಪಾನ್ನಲ್ಲಿ ನಡೆಯುತ್ತಿರುವ ಏಷ್ಯನ್ ಪ್ಯಾರಾ ಗೇಮ್ಸ್–2026ರ ಪುರುಷರ 100 ಮೀಟರ್ ಬ್ರೆಸ್ಟ್ಸ್ಟ್ರೋಕ್ (SB9) ಈಜು ಸ್ಪರ್ಧೆಯಲ್ಲಿ ಕಂಚಿನ ಪದಕ ಗೆದ್ದಿರುವ ನಮ್ಮ ಹೆಮ್ಮೆಯ ಸ್ವಾತಿಕ್ ಪಾಟೀಲ್ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು.
ಬೆಳಗಾವಿ ಜಿಲ್ಲೆಯ ಮುತಗಾ ಗ್ರಾಮದ ಸ್ವಾತಿಕ್ ಅವರು ಫೈನಲ್ ಸ್ಪರ್ಧೆಯಲ್ಲಿ 1 ನಿಮಿಷ 13.77 ಸೆಕೆಂಡ್ಗಳಲ್ಲಿ ಗುರಿ ತಲುಪಿ ಪದಕ ಜಯಿಸಿರುವುದು ಕರ್ನಾಟಕ ಹಾಗೂ ದೇಶಕ್ಕೆ ಹೆಮ್ಮೆಯ ಕ್ಷಣವಾಗಿದೆ. ಅವರ ಕಠಿಣ ಪರಿಶ್ರಮ, ಆತ್ಮವಿಶ್ವಾಸ ಮತ್ತು ಕ್ರೀಡಾ ಬದ್ಧತೆ ಸಾಧನೆಯ ಹಾದಿಯಲ್ಲಿ ಮುನ್ನಡೆಯುತ್ತಿರುವ ಯುವ ಪ್ರತಿಭೆಗಳಿಗೆ ಪ್ರೇರಣೆಯಾಗಿದೆ.
ಅಂತಾರಾಷ್ಟ್ರೀಯ ಕ್ರೀಡಾ ವೇದಿಕೆಯಲ್ಲಿ ಕರ್ನಾಟಕದ ಕ್ರೀಡಾಪಟುಗಳು ಮತ್ತಷ್ಟು ಎತ್ತರದ ಸಾಧನೆಗಳನ್ನು ಮಾಡಲು ಅಗತ್ಯ ಪ್ರೋತ್ಸಾಹ ಮತ್ತು ಬೆಂಬಲ ನೀಡಲು ನಮ್ಮ ಸರ್ಕಾರ ಬದ್ಧವಾಗಿದೆ. ಸ್ವಾತಿಕ್ ಅವರ ಕ್ರೀಡಾ ಪಯಣ ಇನ್ನಷ್ಟು ಯಶಸ್ಸಿನಿಂದ ಕೂಡಿರಲಿ, ಮುಂಬರುವ ದಿನಗಳಲ್ಲಿ ಹಲವು ಸಾಧನೆಗಳು ಅವರದಾಗಲಿ ಎಂದು ಹಾರೈಸುತ್ತೇನೆ. -
Dr. G Parameshwara
@DrParameshwara
ನಾಡಿನ ಕಲೆ, ಸಂಸ್ಕೃತಿ, ಪರಂಪರೆ ಹಾಗೂ ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಸಾರುವ ತುಮಕೂರು ದಸರಾ 2026 ಅತ್ಯಂತ ಯಶಸ್ವಿಯಾಗಿ ಸಂಪನ್ನಗೊಂಡಿದೆ.
10 ದಿನಗಳ ಕಾಲ ನಡೆದ ವಿಶೇಷ ಪೂಜೆಗಳು, ಹೋಮ-ಹವನಗಳು, ವಿವಿಧ ಧಾರ್ಮಿಕ ವಿಧಿವಿಧಾನಗಳು, ವರ್ಣರಂಜಿತ ಸಾಂಸ್ಕೃತಿಕ ಕಾರ್ಯಕ್ರಮಗಳು, ಜಾನಪದ ಕಲಾ ಪ್ರದರ್ಶನಗಳು, ಸಂಗೀತ-ನೃತ್ಯ ವೈಭವ, ಮಹಿಳಾ ದಸರಾ, ಕವಿಗೋಷ್ಠಿಗಳು, ಕ್ರೀಡಾ ಸ್ಪರ್ಧೆಗಳು, ವೈಭವೋಪೇತ ಜಂಬೂಸವಾರಿ, ಆಕರ್ಷಕ ಮೆರವಣಿಗೆಗಳು, ಫಲಪುಷ್ಪ ಪ್ರದರ್ಶನ, ವಿದ್ಯುತ್ ದೀಪಾಲಂಕಾರ ಹಾಗೂ ಲಕ್ಷಾಂತರ ಜನರ ಉತ್ಸಾಹಭರಿತ ಪಾಲ್ಗೊಳ್ಳುವಿಕೆಯಿಂದ ಈ ಬಾರಿಯ ತುಮಕೂರು ದಸರಾ ಭಕ್ತಿ, ಸಂಭ್ರಮ ಮತ್ತು ಸಾಂಸ್ಕೃತಿಕ ವೈಭವದ ಅಪೂರ್ವ ಸಂಗಮವಾಗಿ ಜನಮನದಲ್ಲಿ ಅಚ್ಚಳಿಯದ ನೆನಪುಗಳನ್ನು ಮೂಡಿಸಿದೆ.
ತುಮಕೂರಿನ ಸಾಂಸ್ಕೃತಿಕ ಹಿರಿಮೆಗೆ ಹೊಸ ಮೆರುಗು ನೀಡಿದ ಈ ಐತಿಹಾಸಿಕ ದಸರಾ ಮಹೋತ್ಸವದ ಸ್ಮರಣೀಯ ಕ್ಷಣಗಳನ್ನು ನೀವೂ ಕಣ್ತುಂಬಿಕೊಳ್ಳಿ.
#tumakurudasara2026This media couldn't be displayed. See it on the original post. -
Dr. G Parameshwara
@DrParameshwara
Heartiest congratulations to Sharath Makanahalli Shankappa on winning a Silver Medal in Athletics at the Asian Para Games 2026, being held in Aichi-Nagoya, Japan, and bringing pride to Karnataka on the international sporting stage.
Athletes like Sharath, who overcome challenges and rise to remarkable heights through determination and perseverance, are a source of inspiration to young sporting talent.
Our Government is committed to providing every possible encouragement and support to help Karnataka’s athletes excel at the global level. We will continue to stand by our sportspersons and strengthen their journey towards achieving their dreams.
Wishing Sharath continued success in the journey ahead and many more medals and achievements in the future.
ಜಪಾನ್ನ ಐಚಿ–ನಗೋಯಾದಲ್ಲಿ ನಡೆಯುತ್ತಿರುವ ಏಷ್ಯನ್ ಪ್ಯಾರಾ ಗೇಮ್ಸ್–2026ರ ಅಥ್ಲೆಟಿಕ್ಸ್ ವಿಭಾಗದಲ್ಲಿ ಬೆಳ್ಳಿ ಪದಕ ಗೆದ್ದು, ಅಂತಾರಾಷ್ಟ್ರೀಯ ಕ್ರೀಡಾ ವೇದಿಕೆಯಲ್ಲಿ ಕರ್ನಾಟಕಕ್ಕೆ ಹೆಮ್ಮೆ ತಂದಿರುವ ಶರತ್ ಮಾಕನಹಳ್ಳಿ ಶಂಕಪ್ಪ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು.
ಸವಾಲುಗಳನ್ನು ಮೆಟ್ಟಿ ನಿಂತು, ದೃಢಸಂಕಲ್ಪ ಮತ್ತು ಸತತ ಪರಿಶ್ರಮದ ಮೂಲಕ ಗಮನಾರ್ಹ ಸಾಧನೆಯ ಎತ್ತರಕ್ಕೇರಿರುವ ಶರತ್ ಅವರಂತಹ ಕ್ರೀಡಾಪಟುಗಳು ಯುವ ಕ್ರೀಡಾ ಪ್ರತಿಭೆಗಳಿಗೆ ಸ್ಫೂರ್ತಿಯ ಚಿಲುಮೆಯಾಗಿದ್ದಾರೆ.
ಜಾಗತಿಕ ಮಟ್ಟದಲ್ಲಿ ಕರ್ನಾಟಕದ ಕ್ರೀಡಾಪಟುಗಳು ಮತ್ತಷ್ಟು ಸಾಧನೆಗಳನ್ನು ಮಾಡಲು ಅಗತ್ಯವಿರುವ ಎಲ್ಲ ರೀತಿಯ ಪ್ರೋತ್ಸಾಹ ಮತ್ತು ಬೆಂಬಲ ನೀಡಲು ನಮ್ಮ ಸರ್ಕಾರ ಬದ್ಧವಾಗಿದೆ. ಕ್ರೀಡಾಪಟುಗಳ ಕನಸುಗಳು ನನಸಾಗುವ ದಾರಿಯಲ್ಲಿ ಅವರ ಬೆನ್ನಿಗೆ ನಿಂತು, ಸಾಧನೆಯ ಪಯಣಕ್ಕೆ ಮತ್ತಷ್ಟು ಬಲ ತುಂಬಲು ಸರ್ಕಾರ ಸದಾ ಸಿದ್ಧವಿದೆ.
ಶರತ್ ಅವರ ಮುಂದಿನ ಸಾಧನೆಯ ಪಯಣ ಯಶಸ್ಸಿನಿಂದ ಕೂಡಿರಲಿ, ಇನ್ನಷ್ಟು ಪದಕಗಳು ಹಾಗೂ ಪ್ರಶಸ್ತಿಗಳು ಅವರ ಮುಡಿಗೇರಲಿ ಎಂದು ಹಾರೈಸುತ್ತೇನೆ. -
Dr. G Parameshwara
@DrParameshwara
The tragic death of Vidya Manjunath Gowdar of Hubballi, who lost her life after a sharp manja thread became entangled around her neck while she was travelling on a scooter, is deeply distressing and utterly unacceptable. An innocent life has been lost, a family has been devastated, and yet another preventable tragedy has exposed the deadly consequences of reckless disregard for public safety.
No moment of entertainment is worth a human life. No celebration can justify leaving a family in lifelong grief.
Our government has taken this incident with the utmost seriousness. Despite the existing ban on dangerous manja threads, their continued sale and use remain a grave concern. I will hold discussions with the ministers concerned and senior officials to strengthen enforcement, review existing legal provisions, and, if necessary, tighten regulations to ensure stringent action against violators.
This is not merely a matter of law enforcement. It is a question of humanity, conscience, and collective responsibility.
We have witnessed far too many innocent lives being lost to these deadly threads. Those who continue to use them despite knowing the risks must ask themselves whether a few moments of amusement are worth another person's life.
Knowingly putting innocent lives at risk is not simply negligence. It can amount to a criminal offence, and those responsible must face the consequences under the law.
Kite flying should remain a source of joy, not become a dangerous competition that puts unsuspecting citizens in harm's way. Turning recreation into reckless contests or gambling, where public safety is compromised, cannot be tolerated.
Behind every such tragedy is a family whose world has been shattered. No apology, no compensation, and no punishment can restore the life that has been lost. Our responsibility is to ensure that such tragedies are prevented.
The government will act firmly to enforce the ban and hold violators accountable. But laws alone cannot protect lives without the cooperation and conscience of society. I appeal to every citizen to reject the use of dangerous manja threads and place the safety of others above personal amusement.
Human life is sacred. It cannot be the price of someone's entertainment.
Our government remains resolute in its commitment to protecting innocent lives, strengthening enforcement, and ensuring that those who recklessly endanger public safety are held accountable.
Let us act before another innocent life is lost, before another family is shattered, and before another preventable tragedy becomes a permanent sorrow. -
Dr. G Parameshwara
@DrParameshwara
ಸ್ಕೂಟಿಯಲ್ಲಿ ತೆರಳುತ್ತಿದ್ದ ಹುಬ್ಬಳ್ಳಿಯ ವಿದ್ಯಾ ಮಂಜುನಾಥ ಗೌಡರ್ ಅವರ ಕುತ್ತಿಗೆಗೆ ಮಾಂಜಾ ದಾರ ಸಿಲುಕಿ, ತೀವ್ರ ರಕ್ತಸ್ರಾವದಿಂದ ಮೃತಪಟ್ಟಿರುವ ದಾರುಣ ಘಟನೆಯನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿದ್ದೇವೆ. ಅಮಾಯಕ ಜೀವವೊಂದನ್ನು ಬಲಿಪಡೆದ ಈ ಘಟನೆ ತೀವ್ರ ನೋವು ಮತ್ತು ಕಳವಳವನ್ನುಂಟು ಮಾಡಿದೆ. ಇಂತಹ ಅಪಾಯಕಾರಿ ಪ್ರವೃತ್ತಿಗೆ ಸಕಾಲದಲ್ಲಿ ಕಡಿವಾಣ ಹಾಕದಿದ್ದರೆ ಮುಂದಿನ ದಿನಗಳಲ್ಲಿ ಮತ್ತಷ್ಟು ಅಮೂಲ್ಯ ಜೀವಗಳನ್ನು ಕಳೆದುಕೊಳ್ಳಬೇಕಾದ ಆತಂಕವಿದೆ.
ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಈಗಾಗಲೇ ಜಾರಿಯಲ್ಲಿರುವ ಅಪಾಯಕಾರಿ ಮಾಂಜಾ ದಾರದ ಮಾರಾಟ ಮತ್ತು ಬಳಕೆಯ ಮೇಲಿನ ನಿಷೇಧವನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ನಮ್ಮ ಸರ್ಕಾರ ಬದ್ಧವಾಗಿದೆ.
ನಿಷೇಧದ ಹೊರತಾಗಿಯೂ ಇಂತಹ ದಾರಗಳ ಮಾರಾಟ ಮತ್ತು ಬಳಕೆ ಮುಂದುವರಿಯುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿ, ಸಂಬಂಧಪಟ್ಟ ಇಲಾಖೆಗಳ ಸಚಿವರು ಹಾಗೂ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಲಾಗುವುದು. ಪ್ರಸ್ತುತ ಜಾರಿಯಿರುವ ಕಾನೂನಿನ ಅವಕಾಶಗಳನ್ನು ಸಮರ್ಪಕವಾಗಿ ಬಳಸಿಕೊಳ್ಳುವುದರ ಜೊತೆಗೆ, ಅಗತ್ಯವಿದ್ದಲ್ಲಿ ನಿಯಮಗಳನ್ನು ಮತ್ತಷ್ಟು ಬಿಗಿಗೊಳಿಸಿ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಸೂಕ್ತ ತೀರ್ಮಾನ ಮಾಡಲಾಗುವುದು.
ಕೆಲವರ ಕ್ಷಣಿಕ ಮನೋರಂಜನೆ ಅಥವಾ ಮೋಜಿಗಾಗಿ ಅಮಾಯಕರು ಪ್ರಾಣ ಕಳೆದುಕೊಳ್ಳುವುದನ್ನು ಯಾವುದೇ ಕಾರಣಕ್ಕೂ ಸಹಿಸಲು ಸಾಧ್ಯವಿಲ್ಲ. ಗಾಳಿಪಟ ಹಾರಿಸುವ ಹವ್ಯಾಸ ಮತ್ತೊಬ್ಬರ ಬದುಕನ್ನೇ ಕಸಿದುಕೊಳ್ಳುವ ಅಪಾಯಕಾರಿ ಚಟುವಟಿಕೆಯಾಗಿ ಪರಿಣಮಿಸುವುದನ್ನು ತಡೆಯಲೇಬೇಕಿದೆ.
ಇದು ಕೇವಲ ಕಾನೂನು ಮತ್ತು ನಿಯಮಗಳ ಪ್ರಶ್ನೆಯಲ್ಲ. ಸಮಾಜದ ಮಾನವೀಯತೆ ಹಾಗೂ ನೈತಿಕ ಹೊಣೆಗಾರಿಕೆಯ ಪ್ರಶ್ನೆಯೂ ಹೌದು. ಕಳೆದ ಕೆಲವು ವರ್ಷಗಳಿಂದ ಮಾಂಜಾ ದಾರ ಕುತ್ತಿಗೆಗೆ ಸಿಲುಕಿ ಅಮಾಯಕರು ಪ್ರಾಣ ಕಳೆದುಕೊಳ್ಳುತ್ತಿರುವ ಘಟನೆಗಳು ಮರುಕಳಿಸುತ್ತಿದ್ದರೂ, ಅದರ ಅಪಾಯವನ್ನು ಅರಿತೂ ಇಂತಹ ದಾರಗಳನ್ನು ಬಳಸುತ್ತಿರುವವರು ತಮ್ಮೊಳಗಿನ ಮಾನವೀಯತೆಯನ್ನು ಒಮ್ಮೆ ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ.
ನಮ್ಮ ಮೋಜು ಮತ್ತೊಬ್ಬರ ಜೀವಕ್ಕೆ ಕುತ್ತು ತರಬಹುದು ಎಂಬ ಅರಿವಿದ್ದೂ ಅದನ್ನು ಮುಂದುವರಿಸುವುದು ಕೇವಲ ನಿರ್ಲಕ್ಷ್ಯವಲ್ಲ, ಅದು ಅಪರಾಧ ಕೃತ್ಯವಾಗುತ್ತದೆ. ಇದರಿಂದ ಜೀವಹಾನಿ ಸಂಭವಿಸಿದರೆ, ಅದಕ್ಕೆ ಕಾರಣರಾದವರು ಕಾನೂನಿನ ಪ್ರಕಾರ ಹೊಣೆಗಾರರಾಗಬೇಕಾಗುತ್ತದೆ. ಉದ್ದೇಶಪೂರ್ವಕವಾಗಿ ಅಪಾಯ ಸೃಷ್ಟಿಸುವ ಅಥವಾ ಇತರರ ಸುರಕ್ಷತೆಯನ್ನು ಕಡೆಗಣಿಸುವ ಪ್ರವೃತ್ತಿಯನ್ನು ಯಾವುದೇ ಕಾರಣಕ್ಕೂ ಸಮರ್ಥಿಸಲು ಸಾಧ್ಯವಿಲ್ಲ.
ಗಾಳಿಪಟ ಹಾರಿಸುವುದು ಮನೋರಂಜನೆಯಾಗಿರಬೇಕೇ ಹೊರತು ಮತ್ತೊಬ್ಬರ ಜೀವಕ್ಕೆ ಅಪಾಯ ತಂದೊಡ್ಡುವ ಸ್ಪರ್ಧೆಯಾಗಬಾರದು. ಮನೋರಂಜನೆಯ ಹೆಸರಿನಲ್ಲಿ ಅಪಾಯಕಾರಿ ಮಾಂಜಾ ದಾರಗಳನ್ನು ಬಳಸುವುದಾಗಲಿ, ಗಾಳಿಪಟ ಹಾರಿಸುವುದನ್ನು ಜೂಜಾಟ ಅಥವಾ ಅಪಾಯಕಾರಿ ಸ್ಪರ್ಧೆಯಾಗಿ ಪರಿವರ್ತಿಸುವುದಾಗಲಿ ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಇಂತಹ ಕೃತ್ಯಗಳಿಂದ ಸಾರ್ವಜನಿಕರ ಜೀವಕ್ಕೆ ಅಪಾಯ ಉಂಟಾದರೆ, ತಪ್ಪಿತಸ್ಥರು ಕಾನೂನು ಕ್ರಮವನ್ನು ಎದುರಿಸಲು ಸಿದ್ಧರಾಗಬೇಕು.
ಮನುಷ್ಯನ ಜೀವಕ್ಕಿಂತ ದೊಡ್ಡ ಮನೋರಂಜನೆ ಯಾವುದೂ ಇಲ್ಲ. ಕೆಲವರ ಮೋಜಿಗಾಗಿ ಅಮಾಯಕರ ಜೀವ ಬಲಿಯಾಗುವುದನ್ನು ತಡೆಯುವುದು ಸರ್ಕಾರದ ಜವಾಬ್ದಾರಿಯಷ್ಟೇ ಅಲ್ಲ, ಪ್ರತಿಯೊಬ್ಬ ನಾಗರಿಕನ ಸಾಮಾಜಿಕ ಹೊಣೆಗಾರಿಕೆಯೂ ಆಗಿದೆ. ಈ ನಿಟ್ಟಿನಲ್ಲಿ ಸಾರ್ವಜನಿಕರ ಸುರಕ್ಷತೆಗೆ ಆದ್ಯತೆ ನೀಡಿ, ಅಪಾಯಕಾರಿ ಮಾಂಜಾ ದಾರದ ಬಳಕೆಗೆ ಪರಿಣಾಮಕಾರಿ ಕಡಿವಾಣ ಹಾಕಲು ನಮ್ಮ ಸರ್ಕಾರ ದೃಢಸಂಕಲ್ಪ ಮಾಡಿದೆ. -
Dr. G Parameshwara
@DrParameshwara
ಬ್ರಿಟಿಷರ ವಿರುದ್ಧ ಹೋರಾಡಿದ ವೀರ ವನಿತೆ ಕಿತ್ತೂರು ರಾಣಿ ಚೆನ್ನಮ್ಮನವರು ಕನ್ನಡ ನಾಡಿನ ಸ್ವಾಭಿಮಾನದ ಪ್ರತೀಕ. ಅವರ ಅಪ್ರತಿಮ ಧೈರ್ಯ, ದೇಶಪ್ರೇಮ ಹಾಗೂ ಹೋರಾಟದ ಛಲ ಇಂದಿಗೂ ಪ್ರತಿಯೊಬ್ಬರಿಗೂ ಪ್ರೇರಣೆಯಾಗಿದೆ.
ಕೆಚ್ಚೆದೆಯ ಹೋರಾಟಗಾರ್ತಿ ಕಿತ್ತೂರು ರಾಣಿ ಚೆನ್ನಮ್ಮನವರ ಜಯಂತಿಯಂದು ಅವರಿಗೆ ಗೌರವಪೂರ್ವಕ ನಮನಗಳನ್ನು ಸಲ್ಲಿಸುತ್ತೇನೆ. -
Dr. G Parameshwara
@DrParameshwara
ಕರ್ನಾಟಕ ವಿಧಾನ ಪರಿಷತ್ನ ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರಗಳಿಗೆ ಶುಕ್ರವಾರ ನಡೆಯುವ ಚುನಾವಣೆಯಲ್ಲಿ ನಿಮ್ಮ ಮೊದಲ ಪ್ರಾಶಸ್ತ್ಯದ ಮತಗಳನ್ನು ಕಾಂಗ್ರೆಸ್ ಅಭ್ಯರ್ಥಿಗಳಿಗೆ ನೀಡಿ, ಅವರನ್ನು ಗೆಲ್ಲಿಸಿಕೊಡಬೇಕೆಂದು ಮನವಿ ಮಾಡುತ್ತಿದ್ದೇನೆ.
ಶಿಕ್ಷಕರು ಹಾಗೂ ಪದವೀಧರರ ಸಮಸ್ಯೆಗಳಿಗೆ ಸ್ಪಂದಿಸುವ, ಅವರ ಹಕ್ಕುಗಳು ಮತ್ತು ಆಶಯಗಳ ಪರ ಧ್ವನಿಯಾಗುವ ಕಾಳಜಿ ಹಾಗೂ ಬದ್ಧತೆಯೊಂದಿಗೆ ಚುನಾವಣಾ ಕಣದಲ್ಲಿರುವ ನಮ್ಮ ಅಭ್ಯರ್ಥಿಗಳಾದ ಮೋಹನ್ ಲಿಂಬಿಕಾಯಿ, ಶಶಿ ಹುಲಿಕುಂಟೆಮಠ, ಪುಟ್ಟಣ್ಣ ಹಾಗೂ ಶರಣಪ್ಪ ಮಟ್ಟೂರ ಈ ಎಲ್ಲರೂ ನಾಳೆಯ ಚುನಾವಣೆಯಲ್ಲಿ ಗೆಲುವು ಸಾಧಿಸಿ, ನಮ್ಮ ಸರ್ಕಾರಕ್ಕೆ ಬಲತುಂಬುತ್ತಾರೆಂಬ ವಿಶ್ವಾಸವಿದೆ.
ಮತದಾನವು ಬೆಳಗ್ಗೆ 8ರಿಂದ ಸಂಜೆ 4ರವರೆಗೆ ನಡೆಯಲಿದ್ದು, ಎಲ್ಲ ಅರ್ಹ ಮತದಾರರು ತಪ್ಪದೇ ಮತದಾನದಲ್ಲಿ ಪಾಲ್ಗೊಂಡು ನಮ್ಮ ಪಕ್ಷದ ಅಭ್ಯರ್ಥಿಗಳನ್ನು ಬೆಂಬಲಿಸಬೇಕೆಂದು ಕೋರುತ್ತೇನೆ.
Please cast your first-preference votes for Congress candidates in Friday’s elections to the Graduates’ and Teachers’ Constituencies of the Karnataka Legislative Council and ensure their victory.
Our candidates — Mohan Limbikai, Shashi Hulikuntmath, Puttanna and Sharanappa Mattur — are contesting the elections with a deep sense of concern and commitment to addressing the issues faced by teachers and graduates and championing their rights and aspirations. I am confident that all four candidates will emerge victorious in tomorrow’s elections and strengthen our government.
Polling will take place from 8 AM to 4 PM. I urge all eligible voters to exercise their franchise without fail and extend their support to our party’s candidates. -
Dr. G Parameshwara
@DrParameshwara
ರಾಜ್ಯದಲ್ಲಿ ತೀವ್ರ ಬರದಿಂದ ಸಂಕಷ್ಟಕ್ಕೆ ಸಿಲುಕಿರುವ ರೈತರು, ಗ್ರಾಮೀಣ ಕುಟುಂಬಗಳು ಹಾಗೂ ದುರ್ಬಲ ವರ್ಗದವರಿಗೆ ಅಗತ್ಯ ನೆರವು ಒದಗಿಸುವಂತೆ ಕೋರಿ ಪ್ರಧಾನಮಂತ್ರಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರಿಗೆ ಪತ್ರ ಬರೆದು ಮನವಿ ಮಾಡಿದ್ದೇನೆ.
ರಾಜ್ಯದ 226 ತಾಲ್ಲೂಕುಗಳು ಬರಪೀಡಿತ ಎಂದು ಘೋಷಿಸಲ್ಪಟ್ಟಿದ್ದು, 57.93 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ. ಕೃಷಿ ವೆಚ್ಚದ ಆಧಾರದ ಮೇಲೆ ಅಂದಾಜಿಸಿರುವ ಒಟ್ಟು ಆರ್ಥಿಕ ನಷ್ಟ ₹62,481.88 ಕೋಟಿಯಷ್ಟಿದೆ. ಈ ಹಿನ್ನೆಲೆಯಲ್ಲಿ ಬೆಳೆ ಹಾನಿ ಪರಿಹಾರ, ಸಣ್ಣ ಮತ್ತು ಅತಿಸಣ್ಣ ರೈತರ ಜೀವನೋಪಾಯ, ಕುಡಿಯುವ ನೀರಿನ ಪೂರೈಕೆ ಹಾಗೂ ಜಾನುವಾರುಗಳ ಸಂರಕ್ಷಣೆಗಾಗಿ ₹20,585.73 ಕೋಟಿ ಕೇಂದ್ರದ ನೆರವು ಬಿಡುಗಡೆ ಮಾಡುವಂತೆ ಮನವಿ ಮಾಡಿದ್ದೇನೆ. ಜೊತೆಗೆ, ಬೇಸಿಗೆ ರಜೆಯಲ್ಲೂ ಮಕ್ಕಳಿಗೆ ಪೌಷ್ಟಿಕ ಆಹಾರ ಒದಗಿಸಲು ಪಿಎಂ ಪೋಷಣ್ ಯೋಜನೆಯಡಿ ಹಾಗೂ ದುರ್ಬಲ ವರ್ಗದವರ ಪೋಷಕಾಂಶಗಳ ಅಗತ್ಯಗಳಿಗಾಗಿ ಆರ್ಥಿಕ ನೆರವು ನೀಡುವಂತೆಯೂ ಕೋರಿದ್ದೇನೆ.
ಬರದ ಸಂಕಷ್ಟದಲ್ಲಿ ರೈತರು, ಮಕ್ಕಳು ಹಾಗೂ ದುರ್ಬಲ ವರ್ಗದವರ ಹಿತ ಕಾಪಾಡುವುದು ನಮ್ಮ ಸರ್ಕಾರದ ಆದ್ಯತೆ. ಸಂಕಷ್ಟಕ್ಕೀಡಾದ ಜನರಿಗೆ ಅಗತ್ಯ ನೆರವು ತಲುಪಿಸಲು ಮತ್ತು ಅವರ ಬದುಕಿಗೆ ಭದ್ರತೆ ಒದಗಿಸಲು ನಮ್ಮ ಸರ್ಕಾರ ಬದ್ಧವಾಗಿದೆ. ಕೇಂದ್ರ ಸರ್ಕಾರ ತ್ವರಿತವಾಗಿ ಸ್ಪಂದಿಸಿ ಅಗತ್ಯ ಪರಿಹಾರ ಬಿಡುಗಡೆ ಮಾಡಲಿದೆ ಎಂಬ ನಿರೀಕ್ಷೆಯೊಂದಿಗೆ, ಜನರ ಹಿತಕ್ಕಾಗಿ ನಮ್ಮ ಪ್ರಯತ್ನಗಳನ್ನು ನಿರಂತರವಾಗಿ ಮುಂದುವರಿಸುತ್ತೇವೆ.
Dr. G Parameshwara
@DrParameshwara
I have written to Prime Minister Narendra Modi, Union Home Minister Amit Shah and Union Agriculture Minister Shivraj Singh Chouhan, seeking necessary assistance for farmers, rural families and vulnerable sections affected by the severe drought in Karnataka.
A total of 226 taluks have been declared drought-affected, with crop damage reported across 57.93 lakh hectares. The total economic loss, estimated on the basis of agricultural input costs, stands at ₹62,481.88 crore.
In this backdrop, I have sought ₹20,585.73 crore in Central assistance towards crop loss relief, livelihood support for small and marginal farmers, drinking water supply and livestock protection. I have also requested financial assistance under the PM POSHAN Scheme to provide nutritious meals to children even during the summer vacation, as well as support to meet the nutritional needs of vulnerable sections.
Protecting the interests of farmers, children and vulnerable communities during this drought crisis remains a priority for our Government. We are committed to ensuring that necessary relief reaches those affected and that their livelihoods are safeguarded.
We hope the Union Government will respond promptly and release the required assistance. Our efforts to secure relief and support for the people of Karnataka will continue. -
Dr. G Parameshwara
@DrParameshwara
Tumakuru Dasara 2026, celebrating the art, culture and traditions of our land, has concluded on a grand and successful note.
The love, enthusiasm and participation shown by people over these ten days have been truly memorable. Families across all age groups came together and celebrated Tumakuru Dasara as their own festival, making the occasion even more special.
My heartfelt gratitude to the District Administration, Police Department, officers, staff, civic workers, artists, organisations, volunteers, media friends and everyone whose hard work and cooperation ensured the smooth conduct of this grand celebration.
A special thanks to the people of Tumakuru. A festival truly becomes a people’s celebration only through their love and participation, and Tumakuru Dasara has reflected that spirit beautifully.
The pride of this success and the memories of this celebration belong to all of us.
With your continued support and blessings, let us make Tumakuru Dasara even grander next year and carry the glory of our art, culture and traditions to greater heights. ❤️ -
Dr. G Parameshwara
@DrParameshwara
ನಾಡಿನ ಕಲೆ, ಸಂಸ್ಕೃತಿ, ಪರಂಪರೆ ಹಾಗೂ ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಸಾರುವ ತುಮಕೂರು ದಸರಾ 2026 ಅತ್ಯಂತ ಅದ್ದೂರಿಯಾಗಿ, ಯಶಸ್ವಿಯಾಗಿ ಸಂಪನ್ನಗೊಂಡಿದೆ.
ಹತ್ತು ದಿನಗಳ ಕಾಲ ನಡೆದ ಈ ದಸರಾ ಮಹೋತ್ಸವಕ್ಕೆ ಜನರು ತೋರಿದ ಪ್ರೀತಿ, ನೀಡಿದ ಸಹಕಾರ ಮತ್ತು ಉತ್ಸಾಹ ನಿಜಕ್ಕೂ ಅವಿಸ್ಮರಣೀಯ. ಮಕ್ಕಳು, ಹಿರಿಯರು, ಮಹಿಳೆಯರು, ಯುವಕರು ಹೀಗೆ ಎಲ್ಲ ವಯೋಮಾನದವರು ಕುಟುಂಬ ಸಮೇತರಾಗಿ ಬಂದು ಸಂಭ್ರಮಿಸಿದ್ದು, ತುಮಕೂರು ದಸರಾವನ್ನು ತಮ್ಮ ಮನೆಯ ಹಬ್ಬದಂತೆ ಆಚರಿಸಿದ್ದು ನನಗೆ ಅಪಾರ ಸಂತೋಷ ತಂದಿದೆ.
ಈ ಬೃಹತ್ ಮಹೋತ್ಸವದ ಯಶಸ್ಸಿನ ಹಿಂದೆ ಅಸಂಖ್ಯಾತ ಜನರ ಪರಿಶ್ರಮ, ಸಹಕಾರ ಮತ್ತು ಸಮರ್ಪಣಾಭಾವವಿದೆ. ಕಾರ್ಯಕ್ರಮಗಳ ಸಿದ್ಧತೆಯಿಂದ ಹಿಡಿದು, ಜನರ ಸುರಕ್ಷತೆ, ಸ್ವಚ್ಛತೆ, ವ್ಯವಸ್ಥೆ, ಸಾಂಸ್ಕೃತಿಕ ಕಾರ್ಯಕ್ರಮಗಳ ಆಯೋಜನೆಯವರೆಗೆ ಪ್ರತಿಯೊಂದು ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ ಜಿಲ್ಲಾಡಳಿತ, ಪೊಲೀಸ್ ಇಲಾಖೆ, ಅಧಿಕಾರಿಗಳು, ಸಿಬ್ಬಂದಿ ವರ್ಗ, ಪೌರಕಾರ್ಮಿಕರು, ಕಲಾವಿದರು, ಸಂಘ-ಸಂಸ್ಥೆಗಳು, ಸ್ವಯಂಸೇವಕರು, ಮಾಧ್ಯಮ ಮಿತ್ರರು ಹಾಗೂ ಸಹಕರಿಸಿದ ಪ್ರತಿಯೊಬ್ಬರಿಗೂ ನನ್ನ ಹೃದಯಾಂತರಾಳದ ಕೃತಜ್ಞತೆಗಳು.
ವಿಶೇಷವಾಗಿ ತುಮಕೂರಿನ ಜನತೆಗೆ ಎಷ್ಟು ಧನ್ಯವಾದಗಳನ್ನು ಹೇಳಿದರೂ ಕಡಿಮೆಯೇ. ಒಂದು ಕಾರ್ಯಕ್ರಮವನ್ನು ಆಯೋಜಿಸಬಹುದು. ಆದರೆ ಅದನ್ನು ಇಡೀ ಜನತೆಯ ಹಬ್ಬವನ್ನಾಗಿ ಮಾಡುವುದು ಜನರ ಪ್ರೀತಿ ಮತ್ತು ಸಹಭಾಗಿತ್ವದಿಂದ ಮಾತ್ರ ಸಾಧ್ಯ. ತುಮಕೂರು ದಸರಾ ಅದಕ್ಕೆ ಸಾಕ್ಷಿಯಾಗಿದೆ.
ಈ ಯಶಸ್ಸಿನ ಹೆಮ್ಮೆ ನಮ್ಮೆಲ್ಲರದ್ದು. ಈ ಸಂಭ್ರಮದ ನೆನಪುಗಳು ನಮ್ಮೆಲ್ಲರದ್ದು.
ನಿಮ್ಮೆಲ್ಲರ ಪ್ರೀತಿ, ಸಹಕಾರ ಮತ್ತು ಆಶೀರ್ವಾದದೊಂದಿಗೆ ಮುಂದಿನ ವರ್ಷ ತುಮಕೂರು ದಸರಾವನ್ನು ಇನ್ನಷ್ಟು ಅದ್ದೂರಿಯಾಗಿ, ಮತ್ತಷ್ಟು ವಿಜೃಂಭಣೆಯಿಂದ ಆಚರಿಸೋಣ. ನಮ್ಮ ನಾಡಿನ ಕಲೆ, ಸಂಸ್ಕೃತಿ ಮತ್ತು ಪರಂಪರೆಯ ವೈಭವವನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯೋಣ ❤️ -
Dr. G Parameshwara
@DrParameshwara
ಜಪಾನ್ನ ಐಚಿ–ನಗೋಯಾದಲ್ಲಿ ನಡೆಯುತ್ತಿರುವ ಏಷ್ಯನ್ ಪ್ಯಾರಾ ಗೇಮ್ಸ್–2026ರ ವನಿತೆಯರ ವೀಲ್ಚೇರ್ ಬ್ಯಾಡ್ಮಿಂಟನ್ ವಿಭಾಗದಲ್ಲಿ ಕಂಚಿನ ಪದಕ ಗೆದ್ದು, ಜಾಗತಿಕ ಕ್ರೀಡಾ ರಂಗದಲ್ಲಿ ಕರ್ನಾಟಕದ ಹಿರಿಮೆಯನ್ನು ಹೆಚ್ಚಿಸಿರುವ ಪಲ್ಲವಿ ಕಾಲುವೆಹಳ್ಳಿ ಮಂಜುನಾಥ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು.
ದೈಹಿಕ ನ್ಯೂನತೆಗಳನ್ನು ಮೀರಿ ಸಾಧನೆಯ ಶಿಖರವೇರಬೇಕೆಂಬ ಅವರ ಅಚಲ ಸಂಕಲ್ಪ ಇಂದು ನಾಡಿಗೆ ಹೆಮ್ಮೆ ತಂದಿದೆ.
ಕ್ರೀಡಾಪಟುಗಳ ಪ್ರತಿಭೆಗೆ ಸೂಕ್ತ ಪ್ರೋತ್ಸಾಹ ಮತ್ತು ಬೆಂಬಲ ನೀಡುವ ಮೂಲಕ ಅವರ ಕನಸುಗಳು ನನಸಾಗಲು ನೆರವಾಗಲು ನಮ್ಮ ಸರ್ಕಾರ ಬದ್ಧವಾಗಿದೆ. ಪಲ್ಲವಿ ಅವರ ಸಾಧನೆಯ ಪಯಣ ಇನ್ನಷ್ಟು ಯಶಸ್ಸಿನೊಂದಿಗೆ ಮುಂದುವರಿಯಲಿ, ಮುಂಬರುವ ಸ್ಪರ್ಧೆಗಳಲ್ಲಿ ಮತ್ತಷ್ಟು ಪದಕಗಳು ಅವರದಾಗಲಿ ಎಂದು ಹಾರೈಸುತ್ತೇನೆ.
Heartiest congratulations to Pallavi Kaluvehalli Manjunath on winning a Bronze Medal in Women’s Wheelchair Badminton at the Asian Para Games 2026, being held in Aichi-Nagoya, Japan, and bringing pride to Karnataka on the global sporting stage.
Her unwavering determination to overcome physical challenges and rise to greater heights has made the entire State proud.
Our Government is committed to supporting and encouraging sportspersons so that their talent is nurtured and their dreams can become reality. Wishing Pallavi continued success in her sporting journey and many more medals in the competitions ahead. -
Dr. G Parameshwara
@DrParameshwara
ಜಪಾನ್ನ ಐಚಿ–ನಗೋಯಾದಲ್ಲಿ ನಡೆಯುತ್ತಿರುವ ಏಷ್ಯನ್ ಪ್ಯಾರಾ ಗೇಮ್ಸ್–2026ರ ಅಥ್ಲೆಟಿಕ್ಸ್ ವಿಭಾಗದಲ್ಲಿ ಕಂಚಿನ ಪದಕ ಗೆದ್ದು, ಅಂತಾರಾಷ್ಟ್ರೀಯ ಕ್ರೀಡಾ ವೇದಿಕೆಯಲ್ಲಿ ಕರ್ನಾಟಕದ ಕೀರ್ತಿಯನ್ನು ಹೆಚ್ಚಿಸಿರುವ ಶರತ್ ಮಾಕನಹಳ್ಳಿ ಶಂಕಪ್ಪ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು.
ಸವಾಲುಗಳನ್ನು ಮೆಟ್ಟಿ ನಿಂತು ಸಾಧನೆಯ ಶಿಖರವೇರಿದ ಶರತ್ ಅವರಂತಹ ಕ್ರೀಡಾಪಟುಗಳು ಯುವ ಪ್ರತಿಭೆಗಳಿಗೆ ಸ್ಫೂರ್ತಿಯ ಸೆಲೆಯಾಗಿದ್ದಾರೆ. ವಿಶ್ವಮಟ್ಟದ ಕ್ರೀಡಾ ಕ್ಷೇತ್ರದಲ್ಲಿ ಕರ್ನಾಟಕದ ಪ್ರತಿಭೆಗಳು ಇನ್ನಷ್ಟು ಸಾಧನೆ ಮಾಡಲು ಅಗತ್ಯವಿರುವ ಎಲ್ಲ ರೀತಿಯ ಪ್ರೋತ್ಸಾಹ ಮತ್ತು ಬೆಂಬಲ ನೀಡಲು ನಮ್ಮ ಸರ್ಕಾರ ಬದ್ಧವಾಗಿದೆ. ಕ್ರೀಡಾಪಟುಗಳ ಕನಸುಗಳಿಗೆ ಬಲ ತುಂಬಿ, ಅವರ ಯಶಸ್ಸಿನ ಪಯಣದಲ್ಲಿ ಸರ್ಕಾರ ಸದಾ ಜೊತೆಗಿರಲಿದೆ.
ನಿಮ್ಮ ಸಾಧನೆಯ ಪಯಣ ಇನ್ನಷ್ಟು ಯಶಸ್ಸಿನೊಂದಿಗೆ ಮುಂದುವರಿಯಲಿ, ಮತ್ತಷ್ಟು ಪದಕಗಳು ನಿಮ್ಮದಾಗಲಿ ಎಂದು ಹಾರೈಸುತ್ತೇನೆ.
Heartiest congratulations to Sharath Makanahalli Shankappa on winning a Bronze Medal in Athletics at the Asian Para Games 2026, being held in Aichi-Nagoya, Japan, and bringing pride to Karnataka on the international sporting stage.
Athletes like Sharath, who overcome challenges and rise to remarkable heights through determination and perseverance, are a source of inspiration to young sporting talent.
Our Government is committed to providing every possible encouragement and support to help Karnataka’s athletes excel at the global level. We will continue to stand by our sportspersons and strengthen their journey towards achieving their dreams.
Wishing Sharath continued success in the journey ahead and many more medals and achievements in the future. -
Dr. G Parameshwara
@DrParameshwara
ತುಮಕೂರು ಜಿಲ್ಲೆಯ ಕಲಾ ಪ್ರತಿಭೆ, ಸಾಂಸ್ಕೃತಿಕ ವೈವಿಧ್ಯತೆ ಹಾಗೂ ಒಗ್ಗಟ್ಟಿಗೆ ಸಾಕ್ಷಿಯಾಗಿ, ನಕ್ಷೆಯಾಕಾರದ ಮಾನವ ವಿನ್ಯಾಸದಲ್ಲಿ ಸಾಮೂಹಿಕ ನೃತ್ಯ ಮತ್ತು ಗಾಯನ ಪ್ರದರ್ಶಿಸುವ ಮೂಲಕ ಇಂಡಿಯನ್ ಬುಕ್ ಆಫ್ ರೆಕಾರ್ಡ್ಸ್ನಲ್ಲಿ ಸ್ಥಾನ ಪಡೆದಿರುವುದು ಹೆಮ್ಮೆಯ ಸಂಗತಿ.
ಜಿಲ್ಲಾಡಳಿತದ ಸಹಯೋಗದೊಂದಿಗೆ ಮಹಾತ್ಮ ಗಾಂಧಿ ಕ್ರೀಡಾಂಗಣದಲ್ಲಿ ಕಲಾಲಯ ಸಾಂಸ್ಕೃತಿಕ ಮತ್ತು ಚಾರಿಟಬಲ್ ಟ್ರಸ್ಟ್ ಆಯೋಜಿಸಿದ ಈ ವಿಶಿಷ್ಟ ಕಾರ್ಯಕ್ರಮವು ಕಲಾವಿದರ ಪ್ರತಿಭೆ, ಶಿಸ್ತು ಮತ್ತು ಸಂಘಟಿತ ಪ್ರಯತ್ನದ ಅದ್ಭುತ ಅನಾವರಣವಾಗಿದೆ.ಕಲಾವಿದರ ಸಂಘಟಿತ ಪ್ರಯತ್ನ ಮತ್ತು ಜಿಲ್ಲಾಡಳಿತದ ಸಹಕಾರದಿಂದ ಸಾಧಿಸಿರುವ ಈ ದಾಖಲೆ ಜಿಲ್ಲೆಯ ಸಾಂಸ್ಕೃತಿಕ ಇತಿಹಾಸದಲ್ಲಿ ಮತ್ತೊಂದು ಹೆಮ್ಮೆಯ ಮೈಲಿಗಲ್ಲಾಗಿದೆ.
ಈ ಐತಿಹಾಸಿಕ ಸಾಧನೆಗೆ ಶ್ರಮಿಸಿದ ಎಲ್ಲ ಕಲಾವಿದರು, ಸಂಘಟಕರು ಹಾಗೂ ಜಿಲ್ಲಾಡಳಿತದ ತಂಡಕ್ಕೆ ನನ್ನ ಅಭಿನಂದನೆಗಳು. ತುಮಕೂರಿನ ಕಲಾ ವೈಭವ ಮತ್ತಷ್ಟು ಎತ್ತರಕ್ಕೇರಲಿ, ನಮ್ಮ ನಾಡಿನ ಸಾಂಸ್ಕೃತಿಕ ಪರಂಪರೆ ಮುಂದಿನ ಪೀಳಿಗೆಗೂ ಸ್ಫೂರ್ತಿಯಾಗಲಿ.
It is a matter of pride that Tumakuru district has earned a place in the Indian Book of Records through a unique mass dance and singing performance presented in a human formation shaped like a map, showcasing the district’s artistic talent, cultural diversity and spirit of unity.
Organised by the Kalalaya Cultural and Charitable Trust at Mahatma Gandhi Stadium, with the support of the District Administration, the programme was a remarkable display of the artists’ talent, discipline and coordinated effort. This achievement marks another proud milestone in the cultural history of Tumakuru.
My heartfelt congratulations to all the artists, organisers and members of the District Administration who contributed to this historic achievement. May Tumakuru’s artistic excellence continue to reach greater heights and inspire future generations to cherish and carry forward our rich cultural heritage. -
Dr. G Parameshwara
@DrParameshwara
I have written to Hon’ble Prime Minister Shri @narendramodi Narendra Modi, Union Home Minister Shri @AmitShah and Union Agriculture Minister Shri @ChouhanShivraj , seeking their urgent intervention for the approval and release of ₹20,585.73 crore in NDRF assistance to drought-affected Karnataka.
With a 35% rainfall deficit, 226 taluks declared drought-affected and crop damage across 57.93 lakh hectares, Karnataka has suffered estimated agricultural losses of ₹62,481.88 crore. Lakhs of farming families are facing severe financial distress.
Our Government has sought ₹6,128.70 crore towards crop loss input subsidy, ₹12,146.99 crore in relief for 61.91 lakh small and marginal farmers, ₹1,727 crore for drinking water supply and ₹583.04 crore for livestock protection, including cattle camps and fodder banks.
I have also urged the Centre to adopt Karnataka's updated FRUITS database instead of relying on outdated Agricultural Census 2015–16 data, which could result in a shortfall of approximately ₹1,669.50 crore in relief assessment. Additional assistance has also been sought under PM POSHAN and supplementary nutrition programmes, along with a revision of existing input subsidy norms to reflect rising cultivation costs.
Following the visit of the Inter-Ministerial Central Team (IMCT), the Centre must expedite the appraisal of Karnataka's drought memorandum, facilitate the submission of recommendations to the High Level Committee and ensure the earliest release of financial assistance.
The welfare of our farmers must transcend political and administrative boundaries. In the spirit of cooperative federalism, the Union and State Governments must act together to protect their livelihoods.
The strength of our nation rests on the strength of those who cultivate its land. Our farmers deserve timely support, dignity and the assurance that we stand firmly with them in this difficult hour.Post not available here, view on X
Dr. G Parameshwara
@DrParameshwara
Dr. G Parameshwara
@DrParameshwara
-
Dr. G Parameshwara
@DrParameshwara
A delegation led by H.E. Xu Feihong, Ambassador of China to India, called on me at Vidhana Soudha today and held discussions.
The meeting was attended by L.K. Ateeq, Economic Adviser to the Chief Minister; Rajender Kumar Kataria, Additional Chief Secretary, Revenue and Home Departments; Selvakumar, Principal Secretary, Commerce and Industries Department; Manjula, Secretary, IT-BT Department; and Nakul, Secretary to the Chief Minister.
ಚೀನಾ ರಾಯಭಾರಿ ಶ್ರೀ ಕ್ಷ್ಯೂ ಫಿಯಾಂಗ್ (Xu Feihong) ಅವರ ನೇತೃತ್ವದ ನಿಯೋಗದವರು ಇಂದು ನನ್ನನ್ನು ವಿಧಾನಸೌಧದಲ್ಲಿ ಭೇಟಿ ಮಾಡಿ ಸಮಾಲೋಚನೆ ನಡೆಸಿದರು.
ಸಭೆಯಲ್ಲಿ ಮುಖ್ಯಮಂತ್ರಿಯವರ ಆರ್ಥಿಕ ಸಲಹೆಗಾರರಾದ ಎಲ್.ಕೆ.ಅತೀಕ್ , ಕಂದಾಯ ಹಾಗೂ ಗೃಹ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗಳಾದ ರಾಜೇಂದರ್ ಕುಮಾರ್ ಕಟಾರಿಯಾ, ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಾದ ಸೆಲ್ವಕುಮಾರ್, ಐಟಿಬಿಟಿ ಇಲಾಖೆಯ ಕಾರ್ಯದರ್ಶಿಗಳಾದ ಮಂಜುಳಾ, ಮುಖ್ಯಮಂತ್ರಿಯವರ ಕಾರ್ಯದರ್ಶಿಗಳಾದ ನಕುಲ್ ಇದ್ದರು. -
Dr. G Parameshwara
@DrParameshwara
ನಾಡಿನ ಸಾಂಸ್ಕೃತಿಕ ವೈಭವವನ್ನು ಅನಾವರಣಗೊಳಿಸಿದ ತುಮಕೂರು ದಸರಾ ಮಹೋತ್ಸವ ಅತ್ಯಂತ ಅದ್ದೂರಿಯಾಗಿ, ಸಂಭ್ರಮ ಸಡಗರದಿಂದ ಯಶಸ್ವಿಯಾಗಿ ನೆರವೇರಿದೆ.
ಹತ್ತು ದಿನಗಳ ಕಾಲ ನಡೆದ ತುಮಕೂರು ದಸರಾ ಮಹೋತ್ಸವದಲ್ಲಿ ನಾಡಿನ ಕಲೆ, ಸಾಹಿತ್ಯ, ಸಂಸ್ಕೃತಿ, ಪರಂಪರೆ ಮತ್ತು ಜನಪದ ಸೊಗಡು ಮೇಳೈಸಿದ್ದು, ಲಕ್ಷಾಂತರ ಜನರ ಭಾಗವಹಿಸುವಿಕೆ ಉತ್ಸವದ ವೈಭವವನ್ನು ಮತ್ತಷ್ಟು ಹೆಚ್ಚಿಸಿತು. ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು, ಕಲಾವಿದರ ಪ್ರತಿಭಾ ಪ್ರದರ್ಶನ ಹಾಗೂ ಜನರ ಉತ್ಸಾಹ ತುಮಕೂರು ದಸರಾವನ್ನು ಸ್ಮರಣೀಯವಾಗಿಸಿವೆ.
ತುಮಕೂರು ದಸರಾ ನಮ್ಮ ನಾಡಿನ ಸಾಂಸ್ಕೃತಿಕ ಶ್ರೀಮಂತಿಕೆಯ ಪ್ರತಿಬಿಂಬ ಮಾತ್ರವಲ್ಲ, ಜನರ ಒಗ್ಗಟ್ಟು, ಸಹಭಾಗಿತ್ವ ಮತ್ತು ಸಾಮೂಹಿಕ ಪರಿಶ್ರಮದ ಹೆಮ್ಮೆಯ ಪ್ರತೀಕವೂ ಹೌದು. ಈ ಸಂಭ್ರಮದ ನೆನಪುಗಳು ಸದಾ ಹಸಿರಾಗಿರಲಿ. ತುಮಕೂರು ದಸರಾ ಮುಂದಿನ ವರ್ಷಗಳಲ್ಲಿ ಮತ್ತಷ್ಟು ವೈಭವದಿಂದ ನಡೆಯುವಂತಾಗಲಿ. -
Dr. G Parameshwara
@DrParameshwara
ಬರದಿಂದ ಸಂಕಷ್ಟಕ್ಕೆ ಸಿಲುಕಿರುವ ರಾಜ್ಯದ ಜನರಿಗೆ ಕೇಂದ್ರ ಸರ್ಕಾರದಿಂದ ಪರಿಹಾರ ದೊರಕಿಸಿಕೊಡುವುದು ನಮ್ಮ ಆದ್ಯತೆಯಾಗಿದೆ. ಇದಕ್ಕಾಗಿ ಸರ್ವಪಕ್ಷ ನಿಯೋಗವನ್ನು ದೆಹಲಿಗೆ ಕರೆದೊಯ್ಯಲು ನಿರ್ಧರಿಸಿದ್ದೇವೆ. ರಾಜ್ಯದ ಹಿತಾಸಕ್ತಿಗೆ ಸಂಬಂಧಿಸಿದ ವಿಚಾರದಲ್ಲಿ ಸಣ್ಣಪುಟ್ಟ ರಾಜಕೀಯ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ವಿಪಕ್ಷಗಳು ನಮ್ಮೊಂದಿಗೆ ಸಹಕರಿಸಬೇಕು.
ಪ್ರಧಾನಮಂತ್ರಿಗಳು, ಕೇಂದ್ರ ಗೃಹ ಸಚಿವರು ಹಾಗೂ ಕೇಂದ್ರ ಕೃಷಿ ಸಚಿವರ ಭೇಟಿಗೆ ಮೊದಲು ಸಮಯಾವಕಾಶ ಪಡೆಯಬೇಕಾಗುತ್ತದೆ. ಅವರ ಭೇಟಿಗೆ ಅವಕಾಶ ದೊರೆತ ನಂತರವೇ ಸರ್ವಪಕ್ಷ ನಿಯೋಗವನ್ನು ಕರೆದೊಯ್ಯಲು ದಿನಾಂಕ ನಿಗದಿಪಡಿಸಬಹುದು. ಏಕಾಏಕಿ ದಿನಾಂಕ ನಿಗದಿಪಡಿಸಿ ನಿಯೋಗವನ್ನು ದೆಹಲಿಗೆ ಕರೆದೊಯ್ಯುವುದು ಸಾಧ್ಯವಿಲ್ಲ. ಈ ಹಿಂದೆ ಸರ್ಕಾರ ನಡೆಸಿರುವ ಬಿಜೆಪಿಯವರಿಗೆ ಈ ಆಡಳಿತಾತ್ಮಕ ಪ್ರಕ್ರಿಯೆಗಳು ತಿಳಿದಿಲ್ಲವೇ?
ಈ ಹಿಂದೆ ನಾನು ರೇಷ್ಮೆ ಸಚಿವನಾಗಿದ್ದ ಸಂದರ್ಭದಲ್ಲಿ ರೇಷ್ಮೆ ಉದ್ಯಮಕ್ಕೆ ಸಂಬಂಧಿಸಿದ ಸಮಸ್ಯೆಗಳ ಕುರಿತು ನಿಯೋಗವನ್ನು ದೆಹಲಿಗೆ ಕರೆದೊಯ್ದಿದ್ದೆ. ಆಗ ಪ್ರಧಾನಮಂತ್ರಿಗಳ ಭೇಟಿಗೆ ಮೊದಲೇ ಸಮಯಾವಕಾಶ ಕೋರಿದ್ದರೂ ಅವಕಾಶ ದೊರೆತಿರಲಿಲ್ಲ. ನಿಯೋಗ ದೆಹಲಿಗೆ ತೆರಳಿದ ನಂತರ, ಭೇಟಿಗೆ ಸಮಯ ನಿಗದಿಯಾಗದೆ ನಮ್ಮನ್ನು ಏಕೆ ಕರೆದುಕೊಂಡು ಬಂದಿದ್ದೀರಿ ಎಂದು ನಿಯೋಗದ ಸದಸ್ಯರು ಪ್ರಶ್ನಿಸಿದ್ದರು.
ಆ ಸಂದರ್ಭದಲ್ಲಿ ಪಿ.ವಿ. ನರಸಿಂಹರಾವ್ ಅವರು ಪ್ರಧಾನಮಂತ್ರಿಯಾಗಿದ್ದರು. ವಿರೋಧ ಪಕ್ಷದವರು ಈ ವಿಚಾರವನ್ನು ಸಮಸ್ಯೆಯನ್ನಾಗಿ ಮಾಡುತ್ತಿದ್ದಾರೆ ಎಂದು ಮನವರಿಕೆ ಮಾಡಿ, ಭೇಟಿಗೆ ಅವಕಾಶ ನೀಡುವಂತೆ ಮನವಿ ಮಾಡಿದ್ದೆವು. ಬಳಿಕ ಪ್ರಧಾನಮಂತ್ರಿಗಳು ತಕ್ಷಣವೇ ಭೇಟಿಗೆ ಅವಕಾಶ ನೀಡಿದರು. ಅದರಂತೆ ನಿಯೋಗವನ್ನು ಕರೆದೊಯ್ದು ಅವರನ್ನು ಭೇಟಿ ಮಾಡಿದ್ದೆವು.
ರಾಜ್ಯದ ಹಿತಾಸಕ್ತಿಗೆ ಸಂಬಂಧಿಸಿದ ವಿಚಾರಗಳಲ್ಲಿ ಸಣ್ಣಪುಟ್ಟ ರಾಜಕೀಯ ಭಿನ್ನಾಭಿಪ್ರಾಯಗಳನ್ನು ಬದಿಗಿಡಬೇಕು. ಬರದಿಂದ ಸಂಕಷ್ಟಕ್ಕೆ ಸಿಲುಕಿರುವ ರಾಜ್ಯದ ಜನರಿಗೆ ಪರಿಹಾರ ದೊರಕಿಸಿಕೊಡುವುದು ನಮ್ಮೆಲ್ಲರ ಆದ್ಯತೆಯಾಗಬೇಕು. ಕೇಂದ್ರ ಸರ್ಕಾರದಿಂದ ಬರ ಪರಿಹಾರ ಪಡೆಯುವುದೇ ಈ ಸರ್ವಪಕ್ಷ ನಿಯೋಗದ ಪ್ರಮುಖ ಉದ್ದೇಶ. ಅದನ್ನು ಬಿಟ್ಟು ಸಣ್ಣಪುಟ್ಟ ವಿಚಾರಗಳನ್ನು ಮುಂದಿಟ್ಟುಕೊಂಡು ರಾಜಕೀಯ ಮಾಡುವುದು ಸರಿಯಲ್ಲ.
ರಾಜ್ಯದ ಹಿತಾಸಕ್ತಿಯನ್ನು ಎಲ್ಲಕ್ಕಿಂತ ಮುಖ್ಯವಾಗಿ ಪರಿಗಣಿಸಬೇಕು. ಬರ ಪರಿಹಾರದಂತಹ ಗಂಭೀರ ವಿಚಾರದಲ್ಲಿ ರಾಜಕೀಯಕ್ಕಿಂತ ಜನರ ಸಂಕಷ್ಟಕ್ಕೆ ಸ್ಪಂದಿಸುವುದು ಮುಖ್ಯ.
*ರಾಜ್ಯದಲ್ಲಿ ಬರದಿಂದ ಸುಮಾರು ₹62 ಸಾವಿರ ಕೋಟಿ ನಷ್ಟ :
ರಾಜ್ಯದಲ್ಲಿ ಉಂಟಾಗಿರುವ ಬರ ಪರಿಸ್ಥಿತಿಯಿಂದ ಸುಮಾರು ₹62 ಸಾವಿರ ಕೋಟಿ ನಷ್ಟವಾಗಿದೆ. ಈ ನಷ್ಟಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದಿಂದ ಎಷ್ಟು ಪರಿಹಾರವನ್ನು ಕೋರಬೇಕು ಎಂಬ ಲೆಕ್ಕಾಚಾರವನ್ನು ಅಧಿಕಾರಿಗಳು ನಡೆಸುತ್ತಿದ್ದಾರೆ.
ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯಾ ನಿಧಿ (NDRF) ಮಾರ್ಗಸೂಚಿಗಳ ಅನ್ವಯವೇ ಪರಿಹಾರದ ಮೊತ್ತವನ್ನು ನಿರ್ಧರಿಸಬೇಕಾಗುತ್ತದೆ. ರಾಜ್ಯದಲ್ಲಿ ₹62 ಸಾವಿರ ಕೋಟಿ ನಷ್ಟವಾಗಿದೆ ಎಂಬ ಕಾರಣಕ್ಕೆ ಅಷ್ಟು ಮೊತ್ತವನ್ನೇ ಪರಿಹಾರವಾಗಿ ಕೇಳಲು ಸಾಧ್ಯವಿಲ್ಲ. ಕೇಂದ್ರ ಸರ್ಕಾರ ನಿಗದಿಪಡಿಸಿರುವ ಮಾರ್ಗಸೂಚಿಗಳ ಪ್ರಕಾರ ಅರ್ಹ ಪರಿಹಾರದ ಮೊತ್ತವನ್ನು ಲೆಕ್ಕಹಾಕಿ ಮನವಿ ಸಲ್ಲಿಸಲಾಗುವುದು.
ದಸರಾ ಉತ್ಸವ ಮುಕ್ತಾಯಗೊಂಡಿರುವುದರಿಂದ ಮುಂದಿನ ಆಡಳಿತಾತ್ಮಕ ಪ್ರಕ್ರಿಯೆಗಳನ್ನು ಕೈಗೊಳ್ಳಲಾಗುವುದು. ಸರ್ವಪಕ್ಷ ಸಭೆಯನ್ನು ಕರೆದು ಎಲ್ಲ ಪಕ್ಷಗಳ ನಾಯಕರೊಂದಿಗೆ ಮತ್ತೊಂದು ಸುತ್ತಿನ ಚರ್ಚೆ ನಡೆಸಲಾಗುವುದು. ಬಳಿಕ ಕೇಂದ್ರದ ನಾಯಕರ ಭೇಟಿಗೆ ಸಮಯ ನಿಗದಿಪಡಿಸಿಕೊಂಡು ನಿಯೋಗವನ್ನು ಕರೆದೊಯ್ಯಲಾಗುವುದು.
ಬಿಜೆಪಿ ಸೇರಿದಂತೆ ವಿರೋಧ ಪಕ್ಷಗಳ ನಾಯಕರನ್ನು ನಿಯೋಗದಲ್ಲಿ ಭಾಗವಹಿಸುವಂತೆ ಮತ್ತೊಮ್ಮೆ ಮನವಿ ಮಾಡಿಕೊಳ್ಳಲಾಗುವುದು. ಅವರು ಬಂದರೆ ಸಂತೋಷ. ಬರದಿದ್ದರೆ ಏನು ಮಾಡಲು ಸಾಧ್ಯ? ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ನಾವು ಜನರ ಹಿತದೃಷ್ಟಿಯಿಂದ ಕೇಂದ್ರ ಸರ್ಕಾರದ ಬಳಿಗೆ ತೆರಳಿ ಪರಿಹಾರವನ್ನು ಕೇಳಲೇಬೇಕು. ಅದು ನಮ್ಮ ಜವಾಬ್ದಾರಿಯಾಗಿದೆ.
*ಮೈಸೂರು ದಸರಾ ವೇಳೆ ನಡೆದ ಸಣ್ಣಪುಟ್ಟ ಘಟನೆಗಳಿಗೆ ಜಾತಿ ಬಣ್ಣ ಹಚ್ಚುವುದು ಕೀಳುಮಟ್ಟದ ಆಲೋಚನೆ :
ಮೈಸೂರು ದಸರಾ ಸಂದರ್ಭದಲ್ಲಿ ಮುಖ್ಯಮಂತ್ರಿಗಳ ಶಿಷ್ಟಾಚಾರ ಪಾಲಿಸುವ ವೇಳೆ ನಡೆದ ಘಟನೆಗಳಿಗೆ ಜಾತಿ ಬಣ್ಣ ಹಚ್ಚುವುದು ಕೀಳುಮಟ್ಟದ ಆಲೋಚನೆಯಾಗಿದೆ. ಇಂತಹ ವಿಚಾರಗಳನ್ನು ರಾಜಕೀಯಕ್ಕೆ ಬಳಸಿಕೊಳ್ಳುವುದು ಸರಿಯಲ್ಲ.
ಮುಖ್ಯಮಂತ್ರಿಗಳಿಗೆ ಅವರದೇ ಆದ ಶಿಷ್ಟಾಚಾರವಿರುತ್ತದೆ. ಅದನ್ನು ಪೊಲೀಸರು ಕಟ್ಟುನಿಟ್ಟಾಗಿ ಪಾಲಿಸಬೇಕಾಗುತ್ತದೆ. ವಿಶೇಷವಾಗಿ ಅಪಾರ ಜನಸಂದಣಿ ಇರುವ ಸಂದರ್ಭಗಳಲ್ಲಿ ಭದ್ರತೆ ಮತ್ತು ಶಿಷ್ಟಾಚಾರದ ನಿಯಮಗಳನ್ನು ಹೆಚ್ಚು ಕಟ್ಟುನಿಟ್ಟಾಗಿ ಅನುಸರಿಸಲಾಗುತ್ತದೆ. ಮುಖ್ಯಮಂತ್ರಿಗಳನ್ನು ಹೊರತುಪಡಿಸಿ ಬೇರೆ ಯಾರನ್ನೂ ಒಳಗೆ ಬಿಡಬಾರದು ಎಂಬ ಸೂಚನೆ ಪೊಲೀಸರಿಗೆ ಇದ್ದಿರಬಹುದು. ಈ ಬಗ್ಗೆ ನನಗೆ ನಿಖರ ಮಾಹಿತಿ ಇಲ್ಲ. ಆದರೆ, ಮೇಲಧಿಕಾರಿಗಳಿಂದ ಬಂದ ಸೂಚನೆಗಳನ್ನು ಪೊಲೀಸರು ಪಾಲಿಸಿರುವುದರಲ್ಲಿ ತಪ್ಪೇನಿದೆ?
ಮುಖ್ಯಮಂತ್ರಿಗಳು ಮುಂದೆ ಸಾಗುತ್ತಿದ್ದ ಸಂದರ್ಭದಲ್ಲಿ ಸಚಿವರನ್ನು ಪೊಲೀಸರು ತಡೆದಿದ್ದರೂ, ನಂತರ ಮುಖ್ಯಮಂತ್ರಿಗಳೇ ಹಿಂದಿರುಗಿ ಅವರನ್ನು ಕರೆದುಕೊಂಡು ಹೋಗಿದ್ದಾರೆ. ಪೊಲೀಸರು ತಮ್ಮ ಕರ್ತವ್ಯವನ್ನು ನಿರ್ವಹಿಸಿದ್ದಾರೆ. ಈ ವಿಚಾರದಲ್ಲಿ ಅನಗತ್ಯ ವಿವಾದ ಸೃಷ್ಟಿಸುವುದು ಸರಿಯಲ್ಲ.
ಈ ಘಟನೆಯನ್ನು ಮುಂದಿಟ್ಟುಕೊಂಡು 'ದಲಿತ ಸಚಿವರು' ಎಂಬ ಪದವನ್ನು ಪದೇಪದೆ ಬಳಸುತ್ತಿರುವುದು ಯಾಕೆ? ಸಚಿವರು ಎಂದು ಕರೆದರೆ ಸಾಕಲ್ಲವೇ? ಪ್ರತಿಯೊಬ್ಬರನ್ನೂ ಅವರ ಜಾತಿಯ ಹೆಸರಿನಿಂದಲೇ ಗುರುತಿಸಬೇಕೇ? ಬೇರೆ ಸಚಿವರನ್ನು ಅವರ ಜಾತಿಯ ಹೆಸರಿನಿಂದ ಕರೆಯಲಾಗುತ್ತದೆಯೇ?
ಲಕ್ಷಾಂತರ ಜನರು ಸೇರುವ ದೊಡ್ಡ ಕಾರ್ಯಕ್ರಮಗಳಲ್ಲಿ ಸಣ್ಣಪುಟ್ಟ ಘಟನೆಗಳು ನಡೆಯುವ ಸಾಧ್ಯತೆಯಿರುತ್ತದೆ. ಎಷ್ಟೇ ಮುನ್ನೆಚ್ಚರಿಕೆ ವಹಿಸಿದರೂ ಕೆಲವರಿಗೆ ಪ್ರವೇಶಪತ್ರ ತಲುಪದೇ ಇರಬಹುದು. ಪ್ರಮುಖ ವ್ಯಕ್ತಿಗಳಿಗೆ ಪಾಸ್ ನೀಡುವ ವಿಚಾರದಲ್ಲಿ ಸಂವಹನದ ಕೊರತೆ ಅಥವಾ ಗಮನಕ್ಕೆ ಬಾರದ ತಪ್ಪುಗಳು ಸಂಭವಿಸಬಹುದು. ಇಂತಹ ಲೋಪಗಳು ನಡೆದಿಲ್ಲ ಎಂದು ನಾನು ಹೇಳುವುದಿಲ್ಲ. ಆದರೆ, ಅವುಗಳನ್ನೇ ದೊಡ್ಡ ವಿವಾದವನ್ನಾಗಿ ಮಾಡುವುದು ಸರಿಯಲ್ಲ.
ನನಗೆ ದೊರೆತ ಮಾಹಿತಿಯ ಪ್ರಕಾರ, ಹತ್ತು ದಿನಗಳ ದಸರಾ ಉತ್ಸವದ ಅವಧಿಯಲ್ಲಿ ಸುಮಾರು 15ರಿಂದ 20 ಲಕ್ಷಕ್ಕೂ ಹೆಚ್ಚು ಜನರು ಭಾಗವಹಿಸಿದ್ದಾರೆ. ಇಷ್ಟೊಂದು ದೊಡ್ಡ ಸಂಖ್ಯೆಯ ಜನರನ್ನು ಪೊಲೀಸ್ ಇಲಾಖೆ ಮತ್ತು ಜಿಲ್ಲಾಡಳಿತ ಸಮರ್ಥವಾಗಿ ನಿರ್ವಹಿಸಿವೆ. ದಸರಾ ವೀಕ್ಷಿಸಲು ಬಂದ ಜನರು ಸುರಕ್ಷಿತವಾಗಿ ತಮ್ಮ ಮನೆಗಳಿಗೆ ಮರಳಿದ್ದಾರೆ. ಈ ಸಾಧನೆಯನ್ನು ನಾವು ಮೆಚ್ಚಬೇಕಲ್ಲವೇ.
ತುಮಕೂರು ದಸರಾ ಉತ್ಸವದಲ್ಲಿಯೂ ನಿರೀಕ್ಷೆಗೂ ಮೀರಿ ಲಕ್ಷಾಂತರ ಜನರು ಭಾಗವಹಿಸಿದ್ದರು. ಇಂತಹ ಬೃಹತ್ ಕಾರ್ಯಕ್ರಮಗಳನ್ನು ಆಯೋಜಿಸಿ ಜನಸಂದಣಿಯನ್ನು ನಿರ್ವಹಿಸುವುದು ಸುಲಭದ ಕೆಲಸವಲ್ಲ. ದೊಡ್ಡ ಕಾರ್ಯಕ್ರಮಗಳಲ್ಲಿ ಸಂಭವಿಸುವ ಸಣ್ಣಪುಟ್ಟ ಘಟನೆಗಳನ್ನು ಮುಂದಿಟ್ಟುಕೊಂಡು ಒಟ್ಟಾರೆ ವ್ಯವಸ್ಥೆಯನ್ನು ದೂಷಿಸುವುದು ಸರಿಯಲ್ಲ.
- ಇಂದು ನನ್ನ ನಿವಾಸದ ಬಳಿ ಮಾಧ್ಯಮದವರೊಂದಿಗೆ ಮಾತನಾಡಿದೆ. -
Dr. G Parameshwara
@DrParameshwara
ತುಮಕೂರು ದಸರಾ ಮಹೋತ್ಸವದ ಸಂದರ್ಭದಲ್ಲಿ ನಗರದ ಸ್ವಚ್ಛತೆಗಾಗಿ ಶ್ರಮಿಸಿದ ಪೌರಕಾರ್ಮಿಕರನ್ನು ಆತ್ಮೀಯವಾಗಿ ಭೇಟಿಯಾಗಿ, ಅವರ ಯೋಗಕ್ಷೇಮ ವಿಚಾರಿಸಿ, ಅವರ ನಿಸ್ವಾರ್ಥ ಸೇವೆಗೆ ಗೌರವ ಸಲ್ಲಿಸಿದ್ದು, ನನಗೆ ಅತ್ಯಂತ ಸಂತಸ ತಂದಿದೆ.
ಲಕ್ಷಾಂತರ ಜನರು ಭಾಗವಹಿಸುವ ದಸರಾ ಉತ್ಸವದ ಯಶಸ್ಸಿನ ಹಿಂದೆ ಪೌರಕಾರ್ಮಿಕರ ಅವಿರತ ಪರಿಶ್ರಮವಿದೆ. ಹಬ್ಬದ ಸಂಭ್ರಮ ಎಲ್ಲರ ಕಣ್ಣಿಗೆ ಕಾಣುತ್ತದೆ. ಆದರೆ, ಆ ಸಂಭ್ರಮದ ಹಿಂದಿರುವ ಶ್ರಮವನ್ನೂ ನಾವು ಗುರುತಿಸಬೇಕು.
ಪೌರಕಾರ್ಮಿಕರು ಗೌರವಕ್ಕೆ ಪಾತ್ರರಾಗಬೇಕಾದವರು ಮಾತ್ರವಲ್ಲ, ಗೌರವಯುತ ಬದುಕಿನ ಹಕ್ಕುದಾರರು. ಕಾಯಕದಲ್ಲಿ ಮೇಲು-ಕೀಳೆಂಬುದಿಲ್ಲ. ದುಡಿಮೆಯಲ್ಲಿ ಭೇದಭಾವವಿಲ್ಲ. ಪ್ರತಿಯೊಬ್ಬ ಶ್ರಮಜೀವಿಯ ಸ್ವಾಭಿಮಾನವನ್ನು ಎತ್ತಿಹಿಡಿಯುವುದೇ ಬಸವಣ್ಣನವರ ಕಾಯಕ ತತ್ವಕ್ಕೆ ನಾವು ಸಲ್ಲಿಸುವ ನಿಜವಾದ ಗೌರವ.
ಶ್ರಮಕ್ಕೆ ಗೌರವ, ಕೆಲಸಕ್ಕೆ ಘನತೆ, ದುಡಿಯುವ ಪ್ರತಿಯೊಬ್ಬರಿಗೂ ಸ್ವಾಭಿಮಾನದ ಬದುಕು ಕಲ್ಪಿಸುವುದೇ ನಮ್ಮ ಬದ್ಧತೆ. -
Dr. G Parameshwara
@DrParameshwara
ಇಂದು ತುಮಕೂರು ದಸರಾ ಉತ್ಸವದ ಶ್ರೀ ಚಾಮುಂಡೇಶ್ವರಿ ದೇವಿಯ ಅದ್ಧೂರಿ ಜಂಬೂಸವಾರಿ ಮೆರವಣಿಗೆ ಬಳಿಕ ಪದವಿಪೂರ್ವ ಕಾಲೇಜು ಆವರಣದಲ್ಲಿನ ತ್ರಿವಿಧ ದಾಸೋಹಿ ಡಾ. ಶಿವಕುಮಾರ ಸ್ವಾಮೀಜಿಗಳವರ ಧಾರ್ಮಿಕ ಮಹಾಮಂಟಪದ ಮುಂಭಾಗದಲ್ಲಿ ಶಮಿ ಪೂಜೆ ನೆರವೇರಿಸಿ, ಮಹಾಮಂಗಳಾರತಿ ಸಲ್ಲಿಸಿದೆ.
Dr. G Parameshwara
@DrParameshwara
-
Dr. G Parameshwara
@DrParameshwara
On the occasion of Vijayadashami, as part of the 3rd edition of Tumakuru Dasara Festival–2026 organised by the Tumakuru District Administration, I offered prayers to the Nandi Dhwaja at Dr. Balagangadharanatha Swamiji Circle and paid floral tribute to Goddess Chamundeshwari, whose idol was majestically seated in the Ambari atop the elephant.
The grand Tumakuru Dasara Jamboo Savari procession, reflecting the rich culture, traditions and heritage of our land, was held with great festive spirit across the city. The procession featured the Police Mounted Unit, folk art troupes, magnificent Hallikar breed bullocks, and several cultural teams. More than 50 village deities were carried in ceremonial chariots, while the majestic procession of Goddess Chamundeshwari in the Ambari drew the devotion and admiration of the gathering.
The celebration, bringing together the grandeur of our heritage, devotion and cultural traditions, added a special splendour to this year’s Tumakuru Dasara Festival.
T.B. Jayachandra, Special Representative of the Government of Karnataka in Delhi; G.B. Jyothiganesh, MLA, Tumakuru City; former Minister Sogadu Shivanna; Deputy Commissioner Shubha Kalyan; Zilla Panchayat CEO Ashwija; Superintendent of Police Ashok K.V.; District President of the Guarantee Schemes Implementation Committee Chandrashekhar Gowda, and several others were present.
Dr. G Parameshwara
@DrParameshwara
-
Dr. G Parameshwara
@DrParameshwara
ತುಮಕೂರು ಜಿಲ್ಲಾಡಳಿತದ ವತಿಯಿಂದ ಆಯೋಜಿಸಿರುವ 3ನೇ ವರ್ಷದ ‘ತುಮಕೂರು ದಸರಾ ಉತ್ಸವ–2026’ರ ವಿಜಯದಶಮಿ ದಿನವಾದ ಇಂದು ನಗರದ ಡಾ. ಬಾಲಗಂಗಾಧರನಾಥ ಸ್ವಾಮೀಜಿ ವೃತ್ತದಲ್ಲಿ ನಂದಿ ಧ್ವಜಕ್ಕೆ ಪೂಜೆ ಸಲ್ಲಿಸಿ, ಆನೆ ಮೇಲಿನ ಅಂಬಾರಿಯಲ್ಲಿ ವಿರಾಜಮಾನರಾಗಿದ್ದ ಶ್ರೀ ಚಾಮುಂಡೇಶ್ವರಿ ದೇವಿಯ ಮೂರ್ತಿಗೆ ಪುಷ್ಪಾರ್ಚನೆ ಸಲ್ಲಿಸುವ ಮೂಲಕ ಭಕ್ತಿ ನಮನ ಸಲ್ಲಿಸಿದೆ.
ನಾಡಿನ ಸಂಸ್ಕೃತಿ, ಸಂಪ್ರದಾಯ ಹಾಗೂ ಪರಂಪರೆಯ ವೈಭವವನ್ನು ಸಾರುವ ತುಮಕೂರು ದಸರಾ ಜಂಬೂಸವಾರಿ ಮೆರವಣಿಗೆ ನಗರದಲ್ಲಿ ಸಂಭ್ರಮದಿಂದ ನೆರವೇರಿತು. ಪೊಲೀಸ್ ಇಲಾಖೆಯ ಅಶ್ವದಳ, ಜಾನಪದ ಕಲಾತಂಡಗಳು, ಆಕರ್ಷಣೀಯ ಹಳ್ಳಿಕಾರ್ ತಳಿಯ ಎತ್ತುಗಳು ಹಾಗೂ ವಿವಿಧ ಸಾಂಸ್ಕೃತಿಕ ಕಲಾತಂಡಗಳ ಮೆರುಗಿನೊಂದಿಗೆ, ಸಾರೋಟಿನಲ್ಲಿ ಸಾಗಿದ 50ಕ್ಕೂ ಹೆಚ್ಚು ಗ್ರಾಮ ದೇವತೆಗಳು ಮತ್ತು ಗಜಗಾಂಭೀರ್ಯದಿಂದ ಅಂಬಾರಿಯಲ್ಲಿ ವಿರಾಜಮಾನರಾಗಿದ್ದ ಶ್ರೀ ಚಾಮುಂಡೇಶ್ವರಿ ದೇವಿಯ ಮೆರವಣಿಗೆ ಭಕ್ತಿಭಾವದೊಂದಿಗೆ ಜನಮನ ಸೆಳೆಯಿತು. ನಾಡಿನ ಪರಂಪರೆಯ ವೈಭವ, ಭಕ್ತಿ ಮತ್ತು ಸಾಂಸ್ಕೃತಿಕ ಸೊಬಗು ಮೇಳೈಸಿದ ಈ ಸಂಭ್ರಮ ತುಮಕೂರು ದಸರಾ ಉತ್ಸವಕ್ಕೆ ವಿಶೇಷ ಮೆರುಗು ನೀಡಿತು.
ಈ ಸಂದರ್ಭದಲ್ಲಿ ಕರ್ನಾಟಕ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿಗಳಾದ ಟಿ.ಬಿ. ಜಯಚಂದ್ರ, ತುಮಕೂರು ನಗರ ಶಾಸಕರಾದ ಜಿ.ಬಿ. ಜ್ಯೋತಿಗಣೇಶ್, ಮಾಜಿ ಸಚಿವರಾದ ಸೊಗಡು ಶಿವಣ್ಣ, ಜಿಲ್ಲಾಧಿಕಾರಿಗಳಾದ ಶುಭ ಕಲ್ಯಾಣ್, ಜಿಲ್ಲಾ ಪಂಚಾಯತ್ ಸಿಇಒ ಅಶ್ವಿಜ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಅಶೋಕ್ ಕೆ.ವಿ., ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಜಿಲ್ಲಾಧ್ಯಕ್ಷರಾದ ಚಂದ್ರಶೇಖರ್ ಗೌಡ ಸೇರಿದಂತೆ ಹಲವರು ಉಪಸ್ಥಿತರಿದ್ದರು.
Dr. G Parameshwara
@DrParameshwara
-
Dr. G Parameshwara
@DrParameshwara
The courage of our police personnel, their unwavering commitment to duty and their selfless service to society deserve our deepest respect and gratitude.
On Police Commemoration Day, I bow in heartfelt tribute to the brave men and women who laid down their lives in the line of duty. Their sacrifice will forever remain etched in our hearts, and their legacy of service will continue to inspire generations.
We remember their courage, honour their sacrifice and stand in solidarity with their families. -
Dr. G Parameshwara
@DrParameshwara
ನಾಡಬಾಂಧವರಿಗೆ ವಿಜಯ ದಶಮಿಯ ಹಾರ್ದಿಕ ಶುಭಾಶಯಗಳು.
ಕೆಡುಕಿನ ವಿರುದ್ಧ ಒಳಿತಿನ ವಿಜಯವನ್ನು ಸಾರುವ ವಿಜಯದಶಮಿಯು, ಅನ್ಯಾಯದ ವಿರುದ್ಧ ಹೋರಾಡುವ ಮನೋಬಲವನ್ನು ನಮ್ಮೆಲ್ಲರಲ್ಲಿ ಬೆಳೆಸಲಿ.
ತಾಯಿ ಚಾಮುಂಡೇಶ್ವರಿಯ ಆಶೀರ್ವಾದ ಎಲ್ಲರ ಬದುಕಿನಲ್ಲಿ ಸುಖ, ಶಾಂತಿ ಮತ್ತು ಸಮೃದ್ಧಿ ತರಲಿ ಎಂದು ಪ್ರಾರ್ಥಿಸುತ್ತೇನೆ. -
Dr. G Parameshwara
@DrParameshwara
ತುಮಕೂರು ದಸರಾ ಉತ್ಸವದ ಅಂಗವಾಗಿ ಅಕ್ಟೋಬರ್ 18ರಂದು ನಗರದ ಮಹಾತ್ಮ ಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಪಂಜಿನ ಕವಾಯತನ್ನು ಯಶಸ್ವಿಯಾಗಿ ನಡೆಸಿಕೊಟ್ಟ 256 ವಿದ್ಯಾರ್ಥಿಗಳು ಹಾಗೂ ತುಮಕೂರು ಜಿಲ್ಲಾ ಪೊಲೀಸ್ ಸಶಸ್ತ್ರ ಮೀಸಲು ಪಡೆಯ ಅಧಿಕಾರಿ ಮತ್ತು ಸಿಬ್ಬಂದಿ ವರ್ಗದವರನ್ನು ಇಂದು ನಗರದ ಪದವಿಪೂರ್ವ ಕಾಲೇಜು ಆವರಣದಲ್ಲಿರುವ ಅಮರಶಿಲ್ಪಿ ಜಕಣಾಚಾರಿ ಸಾಂಸ್ಕೃತಿಕ ವೈಭವ ಮಹಾವೇದಿಕೆಯಲ್ಲಿ ಪದಕ ಹಾಗೂ ಪ್ರಶಂಸನಾ ಪತ್ರ ನೀಡಿ ಗೌರವಿಸಿ, ಅಭಿನಂದಿಸಿದೆ.
-
Dr. G Parameshwara
@DrParameshwara
ತುಮಕೂರು ದಸರಾ ಉತ್ಸವದ ಸಾಂಸ್ಕೃತಿಕ ಕಾರ್ಯಕ್ರಮಗಳು ಆರಂಭವಾಗುವ ಮುನ್ನ ಪದವಿಪೂರ್ವ ಕಾಲೇಜು ಆವರಣದಲ್ಲಿರುವ ಅಮರಶಿಲ್ಪಿ ಜಕಣಾಚಾರಿ ಮಹಾವೇದಿಕೆಯ ಬಳಿ ನಗರದ ಪೌರಕಾರ್ಮಿಕರನ್ನು ಖುದ್ದಾಗಿ ಭೇಟಿಯಾಗಿ, ಮಾತನಾಡಿಸಿದೆ. ಬಳಿಕ ಅವರನ್ನು ವೇದಿಕೆಗೆ ಆಹ್ವಾನಿಸಿ, ಅವರ ನಿಸ್ವಾರ್ಥ ಸೇವೆಯನ್ನು ಗುರುತಿಸಿ ಗೌರವಿಸಿದೆ.
ನಾವು ಹಬ್ಬದ ಸಂಭ್ರಮದಲ್ಲಿ ತೊಡಗಿರುವಾಗ, ನಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಡಲು ನಿತ್ಯವೂ ಶ್ರಮಿಸುವವರು ಪೌರಕಾರ್ಮಿಕರು. ಅವರ ಶ್ರಮದ ಹಿಂದೆ ಅನೇಕ ಬದುಕಿನ ಕಥೆಗಳಿವೆ, ಸವಾಲುಗಳಿವೆ, ನೋವುಗಳ ನಡುವೆಯೂ ಕರ್ತವ್ಯವನ್ನು ನಿರಂತರವಾಗಿ ನಿಭಾಯಿಸುವ ಜವಾಬ್ದಾರಿಯಿದೆ. ನಗರದ ಸ್ವಚ್ಛತೆ ಕೇವಲ ಅವರ ಕರ್ತವ್ಯವಲ್ಲ. ಅದು ನಮ್ಮೆಲ್ಲರ ಆರೋಗ್ಯ ಮತ್ತು ನೆಮ್ಮದಿಗೆ ಅವರು ನೀಡುವ ಅಮೂಲ್ಯ ಕೊಡುಗೆ.
ಹಬ್ಬದ ಬೆಳಕು ಎಲ್ಲರ ಬದುಕಿನಲ್ಲೂ ಸಂತೋಷವನ್ನು ತುಂಬುವ ಈ ಸಂದರ್ಭದಲ್ಲಿ, ಆ ಬೆಳಕಿನ ಹಿಂದೆ ಮೌನವಾಗಿ ಶ್ರಮಿಸುವ ಕೈಗಳನ್ನು ನೆನಪಿಸಿಕೊಳ್ಳುವುದು ನಮ್ಮ ಕರ್ತವ್ಯ. ಅವರ ಶ್ರಮಕ್ಕೆ ಗೌರವ, ಅವರ ಬದುಕಿಗೆ ಘನತೆ ಮತ್ತು ಅವರ ಸೇವೆಗೆ ಕೃತಜ್ಞತೆ ಸಲ್ಲಿಸುವುದೇ ನಿಜವಾದ ಮಾನವೀಯತೆ.
ಪೌರಕಾರ್ಮಿಕರ ಶ್ರಮಕ್ಕೆ ನಮ್ಮ ಗೌರವ ಸದಾ ಇರಲಿ.
ಅವರ ಬದುಕಿನಲ್ಲೂ ಸಂತೋಷದ ಬೆಳಕು ಅರಳಲಿ. -
Dr. G Parameshwara
@DrParameshwara
Proud to see Indian para-athletes shining on the international stage! 🇮🇳🥉
Congratulations to Niranjan Mukundan on winning the Bronze Medal in the Men’s 200m Individual Medley (SM7) at the 5th Asian Para Games 2026 in Aichi-Nagoya, Japan.
As Minister for Youth Empowerment and Sports, it is heartening to witness our athletes overcome challenges and achieve sporting excellence. May this accomplishment inspire many more to pursue their dreams and bring laurels to our nation.
Wishing Niranjan many more milestones and continued success! 🇮🇳 -
Dr. G Parameshwara
@DrParameshwara
ಕ್ಯಾನ್ಸರ್ ರೋಗಿಗಳ ಚಿಕಿತ್ಸಾ ವೆಚ್ಚದ ಹೊರೆಯನ್ನು ತಗ್ಗಿಸುವ ನಿಟ್ಟಿನಲ್ಲಿ ಔಷಧಗಳ ವ್ಯಾಪಾರ ಲಾಭಾಂಶವನ್ನು ಶೇ. 30ಕ್ಕೆ ಸೀಮಿತಗೊಳಿಸಿರುವುದು ಮಹತ್ವದ ಕ್ರಮವಾಗಿದೆ. ಇದರಿಂದ ರೋಗಿಗಳು ಮತ್ತು ಅವರ ಕುಟುಂಬಗಳಿಗೆ ಆರ್ಥಿಕ ಹೊರೆ ತಗ್ಗಲಿದ್ದು ವಾರ್ಷಿಕವಾಗಿ ಸುಮಾರು ₹2,500 ಕೋಟಿ ಉಳಿತಾಯವಾಗುವ ನಿರೀಕ್ಷೆಯಿದೆ.
ಕ್ಯಾನ್ಸರ್ನಂತಹ ಗಂಭೀರ ಕಾಯಿಲೆಗಳ ಚಿಕಿತ್ಸೆಯಿಂದ ಕುಟುಂಬಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕದಂತೆ ನೆರವಾಗುವುದು ಹಾಗೂ ಗುಣಮಟ್ಟದ ಆರೋಗ್ಯ ಸೇವೆ ಜನಸಾಮಾನ್ಯರಿಗೂ ತಲುಪುವಂತೆ ಮಾಡುವುದು ನಮ್ಮ ಸರ್ಕಾರದ ಆಶಯವಾಗಿದೆ. ಈ ನಿಟ್ಟಿನಲ್ಲಿ ನಮ್ಮ ಸರ್ಕಾರ ಬದ್ಧವಾಗಿದೆ.
Capping the trade margin on cancer medicines at 30% is an important step towards reducing the cost of treatment for cancer patients. The measure is expected to ease the financial burden on patients and their families, with estimated annual savings of around ₹2,500 crore.
Our Government is committed to ensuring that families are not pushed into financial distress because of the cost of treating serious illnesses like cancer, and that quality healthcare remains accessible to all. -
Dr. G Parameshwara
@DrParameshwara
ಇಂದು ತುಮಕೂರಿನ ಗೊಲ್ಲಳ್ಳಿಯ ನಿವಾಸದಲ್ಲಿ ಕುಟುಂಬಸ್ಥರೊಂದಿಗೆ ಆಯುಧ ಪೂಜೆಯನ್ನು ಆಚರಿಸಿ, ಪೂಜ್ಯ ತಂದೆ-ತಾಯಿ ಮತ್ತು ಸಹೋದರನ ಸಮಾಧಿಗೆ ಪೂಜೆ ಸಲ್ಲಿಸಿದೆ. ಬಳಿಕ ವಾಹನಗಳಿಗೂ ಪೂಜೆ ಸಲ್ಲಿಸಲಾಯಿತು.
ನಮ್ಮ ನಾಡಿನ ಸಂಸ್ಕೃತಿ, ಸಂಪ್ರದಾಯ ಮತ್ತು ಪರಂಪರೆಯನ್ನು ಸಾರುವ ಇಂತಹ ಶುಭ ಆಚರಣೆಗಳು ಕುಟುಂಬದ ಬಾಂಧವ್ಯವನ್ನು ಮತ್ತಷ್ಟು ಗಟ್ಟಿಗೊಳಿಸುವುದರ ಜೊತೆಗೆ, ನಮ್ಮ ಸಂಸ್ಕೃತಿಯ ಮೌಲ್ಯಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಮಹತ್ವದ ಸಂದರ್ಭಗಳಾಗಿವೆ. -
Dr. G Parameshwara
@DrParameshwara
ತುಮಕೂರು ಜಿಲ್ಲಾಡಳಿತದ ವತಿಯಿಂದ ನಗರದ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಆಯೋಜಿಸಿರುವ ತುಮಕೂರು ದಸರಾ ಉತ್ಸವದ ಆಯುಧ ಪೂಜೆಯ ಶುಭ ಸಂದರ್ಭದಲ್ಲಿ ಶ್ರೀ ಚಾಮುಂಡೇಶ್ವರಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿ, ನಾಡಿನ ಸುಭಿಕ್ಷೆ, ರೈತರ ಬದುಕಿನಲ್ಲಿ ಸಮೃದ್ಧಿ ಹಾಗೂ ರಾಜ್ಯದ ಜನತೆಗೆ ಸುಖ-ಶಾಂತಿ ಕರುಣಿಸುವಂತೆ ಪ್ರಾರ್ಥಿಸಿದೆ.
Dr. G Parameshwara
@DrParameshwara
-
Dr. G Parameshwara
@DrParameshwara
ರಾಜ್ಯದಲ್ಲಿ ದಿನದಿಂದ ದಿನಕ್ಕೆ ಬರ ಪರಿಸ್ಥಿತಿ ಗಂಭೀರವಾಗುತ್ತಿದ್ದು, ಕುಡಿಯುವ ನೀರು ಜಾನುವಾರುಗಳಿಗೆ ಮೇವು, ಜನರಿಗೆ ಉದ್ಯೋಗ ಸೇರಿದಂತೆ ಜನಜೀವನಕ್ಕೆ ಸಮಸ್ಯೆ ಆಗದಂತೆ ನಮ್ಮ ಸರ್ಕಾರ ಅನೇಕ ಕ್ರಮಗಳನ್ನು ಕೈಗೊಂಡಿದೆ.
ಇನ್ನೊಂದೆರಡು ದಿನದಲ್ಲಿ ಮೂರನೇ ಮೆಮೊರಾಂಡಮ್ ಸಿದ್ಧವಾಗಲಿದ್ದು, ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಿದ್ದೇವೆ. ಈ ಕುರಿತು ನಿನ್ನೆ ಮಾಧ್ಯಮಕ್ಕೆ ನೀಡಿದ ಹೇಳಿಕೆಗಳು ಇಂದಿನ ಪತ್ರಿಕೆಗಳಲ್ಲಿ.. -
Dr. G Parameshwara
@DrParameshwara
ನಾಡಿನ ಸಮಸ್ತ ಜನತೆಗೆ ಮಹಾನವಮಿ ಮತ್ತು ಆಯುಧ ಪೂಜೆಯ ಶುಭಾಶಯಗಳು.
ನಿಮ್ಮೆಲ್ಲರ ಸಕಲ ಇಷ್ಟಾರ್ಥಗಳು ಈಡೇರಲಿ, ತಾಯಿ ಚಾಮುಂಡೇಶ್ವರಿಯ ಕೃಪೆಯಿಂದ ನಾಡಿನಲ್ಲಿ ಶಾಂತಿ, ಸೌಹಾರ್ದತೆ ಮತ್ತು ಸಮೃದ್ಧಿ ನೆಲೆಸಲಿ ಎಂದು ಪ್ರಾರ್ಥಿಸುತ್ತೇನೆ. -
Dr. G Parameshwara
@DrParameshwara
A proud moment for Karnataka as Radha Venkatesh clinches the Silver Medal in the women's 1500m T12/T13 event at the Asian Para Games 2026 in Japan, clocking an impressive 5:30.90.
Having previously won medals at the 2018 Asian Para Games, Radha continues to bring pride to Karnataka and India through her exceptional sporting achievements.
She is also among the 11 accomplished sportspersons appointed by the Karnataka Government in recognition of their sporting excellence and currently serves as a Labour Officer in the State Labour Department. Her appointment reflects our government's commitment to recognising medal-winning athletes and providing them with career opportunities through special recruitment provisions.
I commend Radha for her remarkable determination and perseverance, and appreciate the invaluable support of her guide runner, Govind Solanki.
May she continue to scale greater heights and bring more laurels to our state and nation! -
Dr. G Parameshwara
@DrParameshwara
Heartiest congratulations to Soumya on winning Gold for India at the Asian Para Games 2026 in Japan!
Clocking an impressive 5:12.39 in the women's 1500m T12/T13 event, the 16-year-old athlete from Chamarajanagar has brought immense pride to Karnataka and the nation.
Having lost both her parents, Soumya's journey from the Deepa Academy School for the Blind to the top of the Asian podium is a remarkable story of courage, determination and perseverance. Her extraordinary achievement is an inspiration to aspiring athletes across the country.
I also congratulate her guide runner Bharath Kumar and the Indian Athletic Academy coaches Vikram, Roshan, Bharath and Yogesh, whose dedicated guidance and support contributed to this historic victory.
Our government remains committed to recognising sporting excellence, nurturing young talent and providing athletes with opportunities to build a secure and promising future.
Wishing Soumya many more milestones and greater success in the years ahead! -
Dr. G Parameshwara
@DrParameshwara
ತುಮಕೂರು ದಸರಾ ಮಹೋತ್ಸವದ ಅಂಗವಾಗಿ ನಾಡಿನ ಧಾರ್ಮಿಕ ಪರಂಪರೆ, ಸಾಂಸ್ಕೃತಿಕ ವೈಭವ ಮತ್ತು ಉತ್ಸವದ ಸಂಭ್ರಮವನ್ನು ಜನರಿಗೆ ತಲುಪಿಸುವ ಉದ್ದೇಶದಿಂದ ಅಕ್ಟೋಬರ್ 21ರಂದು ವೈಭವಯುತ ಅಂಬಾರಿ ಮೆರವಣಿಗೆ (ಜಂಬೂಸವಾರಿ), ಪುಷ್ಪಾರ್ಚನೆ ಹಾಗೂ ಗ್ರಾಮ ದೇವತೆಗಳ ಆರಾಧನೆ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
ಸಂಜೆ 4 ಗಂಟೆಗೆ ತುಮಕೂರಿನ ಬಿ.ಜಿ.ಎಸ್ ವೃತ್ತದಲ್ಲಿ ಶಮಿಪೂಜೆ ಹಾಗೂ ಧಾರ್ಮಿಕ ದಸರಾ ಮಹೋತ್ಸವದ ಸಮಾರೋಪ ನಡೆಯಲಿದೆ.
ಜೊತೆಗೆ ಸಂಜೆ 6:15 ಗಂಟೆಗೆ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ನಡೆಯಲಿರುವ 3ಡಿ ಪ್ರೊಜೆಕ್ಟರ್ ಶೋ, ವಿ. ಹರಿಕೃಷ್ಣ ಮತ್ತು ತಂಡದವರ ಸಂಗೀತ ರಸಸಂಜೆ, ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಹಸಿರು ಸಿಡಿಮದ್ದುಗಳ ಬಾಣ-ಬಿರುಸು ಪ್ರದರ್ಶನ ಜನರ ಸಂಭ್ರಮವನ್ನು ಇಮ್ಮಡಿಗೊಳಿಸಲಿವೆ. ನಾಡಿನ ಕಲೆ, ಸಂಸ್ಕೃತಿ ಮತ್ತು ಪರಂಪರೆಯ ವೈಭವವನ್ನು ಸಾರುವ ಈ ಮಹೋತ್ಸವದ ಸಮಾರೋಪವು ತುಮಕೂರಿನ ಜನತೆಯ ಪಾಲಿಗೆ ಸ್ಮರಣೀಯವಾಗಲಿದೆ.
As part of the Tumakuru Dasara Festival, a series of programmes including the grand Ambari Procession (Jamboo Savari), floral offerings and worship of village deities will be held on October 21, celebrating the State’s religious traditions, cultural heritage and festive spirit.
At 4:00 PM, Shami Puja and the closing ceremony of the religious Dasara festivities will be held at B.G.S. Circle, Tumakuru.
The celebrations will continue at 6:15 PM at the Government Pre-University College Grounds with a 3D Projection Show, a musical evening by V. Harikrishna & Team, various cultural performances, and a spectacular green fireworks display.
Bringing together the richness of our art, culture and traditions, the grand finale of Tumakuru Dasara will be a memorable celebration for the people of Tumakuru. -
Dr. G Parameshwara
@DrParameshwara
ತುಮಕೂರು ದಸರಾ ಮಹೋತ್ಸವದ ಅಂಗವಾಗಿ ನಾಡಿನ ಧಾರ್ಮಿಕ ಪರಂಪರೆ, ಕ್ರೀಡೆ ಮತ್ತು ಸಾಂಸ್ಕೃತಿಕ ವೈಭವವನ್ನು ಒಂದೆಡೆ ಬೆಸೆಯುವ ಉದ್ದೇಶದಿಂದ ಅಕ್ಟೋಬರ್ 20ರಂದು ತುಮಕೂರಿನ ಮಹಾತ್ಮ ಗಾಂಧಿ ಕ್ರೀಡಾಂಗಣದಲ್ಲಿ ವಿವಿಧ ಧಾರ್ಮಿಕ ಆಚರಣೆಗಳು, ಕ್ರೀಡಾಕೂಟಗಳು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
ಚಾಮುಂಡೇಶ್ವರಿ ವಿಶೇಷ ಅಲಂಕಾರ ಮತ್ತು ಧಾರ್ಮಿಕ ಆಚರಣೆಗಳೊಂದಿಗೆ ಆರಂಭವಾಗುವ ಕಾರ್ಯಕ್ರಮಗಳು, ನಾಡಕುಸ್ತಿ, ಕಬಡ್ಡಿ ಸೇರಿದಂತೆ ವಿವಿಧ ಕ್ರೀಡೆಗಳ ಮೂಲಕ ಕ್ರೀಡಾಸಕ್ತರಲ್ಲಿ ಉತ್ಸಾಹ ತುಂಬಲಿವೆ. ಸಂಜೆ ಪ್ರಭಾತ್ ಕಲಾವಿದರ ನೃತ್ಯ ರೂಪಕ ಕಲಾಪ್ರೇಮಿಗಳಿಗೆ ಮನರಂಜನೆಯ ರಸದೌತಣ ನೀಡಲಿದೆ. ಭಕ್ತಿ, ಕ್ರೀಡೆ ಮತ್ತು ಕಲೆಯ ಸೊಬಗನ್ನು ಸಂಭ್ರಮಿಸುವ ಈ ಮಹೋತ್ಸವವು ಸಂಭ್ರಮಿಸಲಿದೆ.
As part of the Tumakuru Dasara Festival, a series of religious rituals, sporting events and cultural programmes will be held at Mahatma Gandhi Stadium, Tumakuru, on October 20, bringing together the State’s religious traditions, sporting spirit and cultural heritage.
The celebrations will begin with special decoration and religious rituals for Goddess Chamundeshwari, followed by sporting events including traditional wrestling and kabaddi. In the evening, a dance drama by Prabhat Artists will offer a special cultural experience for art lovers.
Let us come together to celebrate the spirit of devotion, sport and culture at Tumakuru Dasara. -
Dr. G Parameshwara
@DrParameshwara
ತುಮಕೂರು ದಸರಾ ಮಹೋತ್ಸವದ ಅಂಗವಾಗಿ ಭಕ್ತಿ, ಸಂಗೀತ ಮತ್ತು ಸಾಂಸ್ಕೃತಿಕ ವೈಭವವನ್ನು ಮೇಳೈಸಿ, ನಗರದ ಜನರಿಗೆ ಸಂಭ್ರಮದ ಸುಂದರ ಕ್ಷಣಗಳನ್ನು ಉಣಬಡಿಸುವ ಉದ್ದೇಶದಿಂದ ಇಂದು ದೇವಿಶಕ್ತಿ ಪ್ರದರ್ಶನ ಹಾಗೂ ಚಂದನ್ ಶೆಟ್ಟಿ ಮತ್ತು ತಂಡದವರ ವಿಶೇಷ ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿದೆ.
ಶ್ರೀಮತಿ ವೀಣಾ ವಿದ್ಯಾಮೂರ್ತಿ ಮತ್ತು ತಂಡದವರ ದೇವಿಶಕ್ತಿ ಪ್ರದರ್ಶನವು ಭಕ್ತಿಭಾವವನ್ನು ಮೂಡಿಸಲಿದ್ದು, ಚಂದನ್ ಶೆಟ್ಟಿ ಮತ್ತು ತಂಡದವರ ಸಂಗೀತ ಕಾರ್ಯಕ್ರಮವು ಯುವಜನರು ಸೇರಿದಂತೆ ಸಂಗೀತಾಸಕ್ತರಿಗೆ ಮನರಂಜನೆಯ ರಸದೌತಣ ನೀಡಲಿದೆ. ನಾಡಿನ ಕಲೆ ಮತ್ತು ಸಂಸ್ಕೃತಿಯ ಸೊಬಗನ್ನು ಸವಿಯುತ್ತಾ, ತುಮಕೂರು ದಸರಾ ಮಹೋತ್ಸವದ ಸಂಭ್ರಮವನ್ನು ಮತ್ತಷ್ಟು ಹೆಚ್ಚಿಸೋಣ.
As part of the Tumakuru Dasara Festival, a special Devishakti performance and a musical programme by Chandan Shetty & Team have been organised today to bring together devotion, music and cultural celebration for the people of Tumakuru.
The Devishakti performance by Smt. Veena Vidyamurthy & Team will create a devotional atmosphere, while Chandan Shetty & Team will present a vibrant musical evening for youth and music lovers.
Let us come together to celebrate the richness of our art and culture and make the Tumakuru Dasara festivities even more memorable. -
Dr. G Parameshwara
@DrParameshwara
ನಾಡಿನ ಸಂಸ್ಕೃತಿ ಮತ್ತು ಪರಂಪರೆಯ ವೈಭವ ಸಾರುವ ತುಮಕೂರು ದಸರಾ ಮೆರವಣಿಗೆಯಲ್ಲಿ ಪಾಲ್ಗೊಳ್ಳಲು ಆಗಮಿಸಿರುವ ಆನೆಗಳ ಮಾವುತರು ಹಾಗೂ ಅವರ ಕುಟುಂಬಸ್ಥರೊಂದಿಗೆ ಆತ್ಮೀಯವಾಗಿ ಸಮಯ ಕಳೆದೆ.
ಜಿಲ್ಲಾಡಳಿತದ ವತಿಯಿಂದ ನಗರದ ಅಮಾನಿಕೆರೆ ಆವರಣದಲ್ಲಿರುವ ಗಾಜಿನ ಮನೆಯಲ್ಲಿ ಮಾವುತರು ಹಾಗೂ ಅವರ ಕುಟುಂಬಸ್ಥರಿಗಾಗಿ ಏರ್ಪಡಿಸಿದ್ದ ಭೋಜನಕೂಟದಲ್ಲಿ ಪಾಲ್ಗೊಂಡು, ಅವರೊಂದಿಗೆ ಕುಳಿತು ಊಟ ಸವಿದೆ. -
Dr. G Parameshwara
@DrParameshwara
The drought situation remains extremely serious across large parts of the State. Food production has been severely affected, fodder availability for livestock has declined, and drinking water shortages are becoming increasingly acute. Our Government is taking all necessary measures to address the crisis while continuing efforts to secure drought-relief assistance from the Union Government.
I have visited several drought-affected areas, including parts of North Karnataka, reviewed the ground situation and interacted directly with farmers. Although some areas have received rainfall recently, the severity of the drought has not reduced across much of the State.
The drought has caused an estimated 82% loss in food production, raising concerns over foodgrain availability. Drinking water is already being supplied in several places through tankers and hired private borewells. However, if the water sources themselves dry up, even tanker supply will become difficult, which is a matter of serious concern.
Drought-affected areas and losses are being assessed in accordance with the guidelines prescribed by the Union Government. Based on this, relief is sought under NDRF norms. Work on the third memorandum seeking drought relief is underway and is expected to be completed within the next two days for submission to the Centre.
The Chief Minister will take a final decision on whether the memorandum will be submitted by the Chief Minister, myself or a delegation. An all-party delegation had earlier been proposed, but since Opposition parties have expressed differing views on participation, the next course of action will be decided after discussion.
The Centre must release the necessary drought-relief funds so that further assistance can be provided to affected farmers and others. At the same time, we are not waiting for Central assistance. The State Government is already using its own resources for drought relief and drinking water supply, with Deputy Commissioners and Zilla Panchayat CEOs managing the situation at the district level.
So far, the Centre has not released even a single rupee for works under the VB-G RAM G scheme. Despite this, the State Government is funding and continuing these works from its own resources.
We are also spending around ₹1,250 crore to provide ₹2,500 each to farmers as relief. Despite the significant financial burden, our priority remains to stand with farmers and the public and ensure that necessary support reaches them during this difficult period.
- My remarks to the media near my residence today. -
Dr. G Parameshwara
@DrParameshwara
ರಾಜ್ಯದ ಬಹುತೇಕ ಭಾಗಗಳಲ್ಲಿ ಬರದ ಪರಿಣಾಮ ಅತ್ಯಂತ ಗಂಭೀರವಾಗಿದ್ದು, ಆಹಾರ ಉತ್ಪಾದನೆ ಕುಂಠಿತಗೊಂಡಿರುವುದರ ಜೊತೆಗೆ ಜಾನುವಾರುಗಳಿಗೆ ಮೇವಿನ ಕೊರತೆ ಹಾಗೂ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ಈ ಸಂಕಷ್ಟವನ್ನು ನಿಭಾಯಿಸಲು ರಾಜ್ಯ ಸರ್ಕಾರ ಅಗತ್ಯ ಕ್ರಮಗಳನ್ನು ಕೈಗೊಂಡಿದ್ದು, ಕೇಂದ್ರ ಸರ್ಕಾರದಿಂದ ಬರ ಪರಿಹಾರದ ಅನುದಾನ ಪಡೆಯಲು ನಿರಂತರ ಪ್ರಯತ್ನ ನಡೆಸಲಾಗುತ್ತಿದೆ.
ಉತ್ತರ ಕರ್ನಾಟಕ ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಗೆ ಭೇಟಿ ನೀಡಿ ಬರ ಪರಿಸ್ಥಿತಿಯನ್ನು ಪರಿಶೀಲಿಸಿದ್ದು, ರೈತರೊಂದಿಗೂ ಚರ್ಚೆ ನಡೆಸಲಾಗಿದೆ. ಇತ್ತೀಚೆಗೆ ಕೆಲವು ಪ್ರದೇಶಗಳಲ್ಲಿ ಮಳೆಯಾಗಿದ್ದರೂ ರಾಜ್ಯದ ಬಹುತೇಕ ಭಾಗಗಳಲ್ಲಿ ಬರದ ತೀವ್ರತೆ ಕಡಿಮೆಯಾಗಿಲ್ಲ.
ರಾಜ್ಯದಲ್ಲಿ ಬರದ ಪರಿಣಾಮ ಆಹಾರ ಉತ್ಪಾದನೆಗೆ ತೀವ್ರ ಹೊಡೆತ ಬಿದ್ದಿದ್ದು, ಶೇ.82ರಷ್ಟು ನಷ್ಟ ಸಂಭವಿಸಿದೆ. ಇದರ ಪರಿಣಾಮವಾಗಿ ಜನರಿಗೆ ಆಹಾರ ಧಾನ್ಯಗಳ ಕೊರತೆ ಎದುರಾಗುವ ಆತಂಕವಿದ್ದು, ಜಾನುವಾರುಗಳಿಗೆ ಅಗತ್ಯವಾದ ಮೇವಿನ ಲಭ್ಯತೆಯೂ ಕಡಿಮೆಯಾಗಿದೆ. ಇದರೊಂದಿಗೆ ಕುಡಿಯುವ ನೀರಿನ ಸಮಸ್ಯೆಯೂ ಗಂಭೀರ ಸ್ವರೂಪ ಪಡೆದುಕೊಂಡಿದೆ.
ಈಗಾಗಲೇ ಹಲವೆಡೆ ಟ್ಯಾಂಕರ್ಗಳು ಮತ್ತು ಖಾಸಗಿ ಕೊಳವೆಬಾವಿಗಳ ಮೂಲಕ ಕುಡಿಯುವ ನೀರು ಪೂರೈಸಲಾಗುತ್ತಿದೆ. ಆದರೆ ನೀರಿನ ಮೂಲಗಳೇ ಬತ್ತಿಹೋದರೆ ಟ್ಯಾಂಕರ್ಗಳಿಗೆ ನೀರು ತುಂಬಿಸಿ ಪೂರೈಸುವುದೂ ಕಷ್ಟವಾಗಲಿದೆ. ಪರಿಸ್ಥಿತಿ ಆ ಹಂತಕ್ಕೆ ತಲುಪುತ್ತಿರುವುದು ಆತಂಕಕಾರಿ ಸಂಗತಿಯಾಗಿದೆ.
*ಕೇಂದ್ರಕ್ಕೆ ಮೂರನೇ ಮನವಿ ಪತ್ರ ಸಲ್ಲಿಸಲು ಸಿದ್ಧತೆ : ಕೇಂದ್ರ ಸರ್ಕಾರ ನಿಗದಿಪಡಿಸಿರುವ ಮಾರ್ಗಸೂಚಿಗಳ ಪ್ರಕಾರ ಬರಪೀಡಿತ ಪ್ರದೇಶಗಳನ್ನು ಘೋಷಿಸಿ, ಬೆಳೆ ಹಾಗೂ ಇತರ ನಷ್ಟಗಳ ಅಂದಾಜು ಸಿದ್ಧಪಡಿಸಲಾಗುತ್ತದೆ. ಅದರ ಆಧಾರದಲ್ಲಿ ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯಾ ನಿಧಿ (NDRF) ಮಾರ್ಗಸೂಚಿಗಳ ಅನ್ವಯ ಕೇಂದ್ರ ಸರ್ಕಾರದಿಂದ ಪರಿಹಾರದ ಅನುದಾನ ಕೋರಲಾಗುತ್ತದೆ.
ಈಗಾಗಲೇ ಬರ ಪರಿಹಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ಗಮನ ಸೆಳೆಯಲಾಗಿದ್ದು, ಮೂರನೇ ಮನವಿ ಪತ್ರವನ್ನು ಸಿದ್ಧಪಡಿಸುವ ಕಾರ್ಯ ನಡೆಯುತ್ತಿದೆ. ಇನ್ನೊಂದು ಎರಡು ದಿನಗಳಲ್ಲಿ ಅದು ಸಿದ್ಧವಾಗಲಿದ್ದು, ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಗುವುದು.
ಮನವಿ ಪತ್ರ ಸಲ್ಲಿಸಲು ಮುಖ್ಯಮಂತ್ರಿಗಳು, ನಾನು ಅಥವಾ ನಿಯೋಗ ತೆರಳುವ ಬಗ್ಗೆ ಮುಖ್ಯಮಂತ್ರಿಗಳೇ ಅಂತಿಮ ನಿರ್ಧಾರ ಕೈಗೊಳ್ಳಲಿದ್ದಾರೆ. ಈ ಹಿಂದೆ ಸರ್ವಪಕ್ಷ ನಿಯೋಗವನ್ನು ಕೇಂದ್ರ ಸರ್ಕಾರದ ಬಳಿ ಕರೆದೊಯ್ಯುವ ಪ್ರಸ್ತಾಪವನ್ನು ಮುಖ್ಯಮಂತ್ರಿಗಳು ಮಾಡಿದ್ದರು. ಆದರೆ ವಿರೋಧ ಪಕ್ಷದವರು ನಿಯೋಗದಲ್ಲಿ ಭಾಗವಹಿಸುವ ಕುರಿತು ಭಿನ್ನ ನಿಲುವು ವ್ಯಕ್ತಪಡಿಸಿರುವುದರಿಂದ ಮುಂದಿನ ಕ್ರಮದ ಬಗ್ಗೆ ಚರ್ಚಿಸಿ ತೀರ್ಮಾನಿಸಲಾಗುವುದು.
ಕೇಂದ್ರ ಸರ್ಕಾರದಿಂದ ಪರಿಹಾರದ ಹಣ ಬಿಡುಗಡೆಯಾದರೆ ಸಂಕಷ್ಟದಲ್ಲಿರುವ ರೈತರು ಹಾಗೂ ಇತರ ಸಂತ್ರಸ್ತರಿಗೆ ನೆರವು ಒದಗಿಸಲು ಅನುಕೂಲವಾಗಲಿದೆ. ಹೀಗಾಗಿ ಕೇಂದ್ರ ಸರ್ಕಾರ ಅಗತ್ಯ ಅನುದಾನವನ್ನು ಬಿಡುಗಡೆ ಮಾಡಬೇಕಾಗಿದೆ.
ಕೇಂದ್ರ ಸರ್ಕಾರದ ಅನುದಾನಕ್ಕಾಗಿ ಕಾಯದೆ ರಾಜ್ಯ ಸರ್ಕಾರ ತನ್ನ ಸಂಪನ್ಮೂಲಗಳಿಂದಲೇ ಬರ ಪರಿಹಾರ ಹಾಗೂ ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ಕ್ರಮ ಕೈಗೊಳ್ಳುತ್ತಿದೆ. ಕುಡಿಯುವ ನೀರಿನ ಪೂರೈಕೆಗೆ ಈಗಾಗಲೇ ಅನುದಾನ ಒದಗಿಸಲಾಗಿದ್ದು, ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಪರಿಸ್ಥಿತಿಯನ್ನು ನಿರ್ವಹಿಸುತ್ತಿದ್ದಾರೆ. ಅಗತ್ಯವಿರುವ ಕಡೆ ಟ್ಯಾಂಕರ್ಗಳು ಹಾಗೂ ಖಾಸಗಿ ಕೊಳವೆಬಾವಿಗಳ ಮೂಲಕ ನೀರು ಪೂರೈಸಲಾಗುತ್ತಿದೆ.
ವಿಬಿ ಜಿ ರಾಮ್ ಜಿ ಯೋಜನೆಯಡಿ ಕಾಮಗಾರಿಗಳಿಗೆ ಕೇಂದ್ರ ಸರ್ಕಾರದಿಂದ ಇದುವರೆಗೆ ಒಂದು ಪೈಸೆಯೂ ಅನುದಾನ ಬಂದಿಲ್ಲ. ಆದರೂ ರಾಜ್ಯ ಸರ್ಕಾರವೇ ತನ್ನ ಸಂಪನ್ಮೂಲಗಳಿಂದ ಹಣ ಒದಗಿಸಿ ಕಾಮಗಾರಿಗಳನ್ನು ಮುಂದುವರಿಸುತ್ತಿದೆ.
ರೈತರಿಗೆ ತಲಾ ₹2,500 ನೀಡುವುದಕ್ಕಾಗಿಯೇ ರಾಜ್ಯ ಸರ್ಕಾರಕ್ಕೆ ಸುಮಾರು ₹1,250 ಕೋಟಿ ವೆಚ್ಚವಾಗುತ್ತಿದ್ದು, ಈ ಮೊತ್ತವನ್ನು ರಾಜ್ಯ ಸರ್ಕಾರವೇ ಭರಿಸುತ್ತಿದೆ. ಇಷ್ಟೊಂದು ಆರ್ಥಿಕ ಹೊರೆಯ ನಡುವೆಯೂ ಜನರು ಹಾಗೂ ರೈತರ ಸಂಕಷ್ಟಕ್ಕೆ ಸ್ಪಂದಿಸುವ ಕೆಲಸ ಮಾಡಲಾಗುತ್ತಿದೆ.
- ಇಂದು ನನ್ನ ನಿವಾಸದ ಬಳಿ ಮಾಧ್ಯಮದವರೊಂದಿಗೆ ಮಾತನಾಡಿದೆ. -
Dr. G Parameshwara
@DrParameshwara
ದಸರಾ ಹಬ್ಬದ ಈ ಶುಭ ಸಂದರ್ಭದಲ್ಲಿ ಇಂದು ವಿಧಾನಸೌಧದಲ್ಲಿರುವ ನನ್ನ ಕಾರ್ಯಾಲಯದಲ್ಲಿ ಸಾಂಪ್ರದಾಯಿಕವಾಗಿ ಆಯುಧ ಪೂಜೆಯನ್ನು ನೆರವೇರಿಸಿದೆ.
ನಾಡಿನಲ್ಲಿ ಸುಖ, ಶಾಂತಿ, ಸಮೃದ್ಧಿ ನೆಲೆಸಲಿ. ಪ್ರಸ್ತುತ ಎದುರಾಗಿರುವ ಬರದ ಸಂಕಷ್ಟ ದೂರವಾಗಿ, ರಾಜ್ಯದೆಲ್ಲೆಡೆ ಉತ್ತಮ ಮಳೆ-ಬೆಳೆಯೊಂದಿಗೆ ರೈತರ ಬದುಕಿನಲ್ಲಿ ಹೊಸ ಬೆಳಕು ಮೂಡಲಿ. ನಾಡಿನ ಜನರ ಕಷ್ಟಕಾರ್ಪಣ್ಯಗಳು ನಿವಾರಣೆಯಾಗಿ, ಎಲ್ಲರ ಬದುಕಿನಲ್ಲೂ ನೆಮ್ಮದಿ ಹಾಗೂ ಸಂತಸ ನೆಲೆಸಲಿ ಎಂದು ಪ್ರಾರ್ಥಿಸಿದೆ. -
Dr. G Parameshwara
@DrParameshwara
ತುಮಕೂರಿನಲ್ಲಿ ದಸರಾ ಸಂಭ್ರಮ ಕಳೆಗಟ್ಟಿದೆ!
ನಾಡಿನ ಕಲೆ, ಸಂಸ್ಕೃತಿ, ಸಂಪ್ರದಾಯ ಮತ್ತು ಜನಪದ ಸೊಗಡನ್ನು ಮೇಳೈಸಿರುವ ತುಮಕೂರು ದಸರಾ ಉತ್ಸವ–2026 ಜನಮನ ಸೆಳೆಯುತ್ತಿದೆ.
ಈ ಸಂಭ್ರಮದ ಮುಂದುವರಿದ ಭಾಗವಾಗಿ ಅಕ್ಟೋಬರ್ 19, 20 ಮತ್ತು 21ರಂದು ಧಾರ್ಮಿಕ ಆಚರಣೆಗಳು, ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.
ಸಾಂಸ್ಕೃತಿಕ ಪರಂಪರೆಯ ಸೊಬಗನ್ನು ಕಣ್ತುಂಬಿಕೊಳ್ಳಲು, ನಾಡಿನ ಕಲಾವಿದರ ಪ್ರತಿಭೆಯನ್ನು ಪ್ರೋತ್ಸಾಹಿಸಲು ತುಮಕೂರಿನ ಜನತೆ ಮತ್ತು ನಾಡಿನ ಸಮಸ್ತ ನಾಗರಿಕರು ಕುಟುಂಬ ಸಮೇತರಾಗಿ ಆಗಮಿಸಬೇಕೆಂದು ಆತ್ಮೀಯವಾಗಿ ಆಹ್ವಾನಿಸುತ್ತೇನೆ.
ಬನ್ನಿ, ನಾವೆಲ್ಲರೂ ತುಮಕೂರು ದಸರಾವನ್ನು ಜೊತೆಯಾಗಿ ಸಂಭ್ರಮಿಸೋಣ!
#tumakurudasara2026 -
Dr. G Parameshwara
@DrParameshwara
ತುಮಕೂರು ದಸರಾ ಉತ್ಸವದ ಸಂಭ್ರಮಕ್ಕೆ ಭವ್ಯ ಮೆರುಗು ನೀಡಿ, ದೇಶಭಕ್ತಿಯ ಕಿಚ್ಚು ಹೊತ್ತಿಸಿ, ಮೈಮನಗಳಲ್ಲಿ ರೋಮಾಂಚನ ಮೂಡಿಸಿದ ಅದ್ಭುತ ಕ್ಷಣಗಳಿಗೆ ಇಂದು ಸಾಕ್ಷಿಯಾದೆ.
ಸಂಜೆ ಮಹಾತ್ಮ ಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ‘ಪಂಜಿನ ಕವಾಯತು’ ವೀಕ್ಷಿಸಿದ್ದು ಅವಿಸ್ಮರಣೀಯ ಅನುಭವ. ಕತ್ತಲನ್ನು ಸೀಳಿ ಬೆಳಗಿದ ನೂರಾರು ಪಂಜುಗಳ ಜ್ಯೋತಿ, ದೇಶಭಕ್ತಿಯ ಭಾವವನ್ನು ಮೊಳಗಿಸಿದ ಪೊಲೀಸ್ ಬ್ಯಾಂಡ್ನ ಸಂಗೀತ, ಶಿಸ್ತಿನ ಹೆಜ್ಜೆಗಳೊಂದಿಗೆ ಮೈದಾನದಲ್ಲಿ ಮೂಡಿಬಂದ ಆಕರ್ಷಕ ಅಕ್ಷರಾಕೃತಿಗಳು ನೋಡುಗರ ಮೈನವಿರೇಳಿಸುವಂತೆ ಮಾಡಿದವು.
ಜಿಲ್ಲೆಯ ಎನ್ಸಿಸಿ, ಎನ್ಎಸ್ಎಸ್, ಸ್ಕೌಟ್ಸ್ ಮತ್ತು ಗೈಡ್ಸ್ ಸೇರಿದಂತೆ 250ಕ್ಕೂ ಹೆಚ್ಚು ವಿದ್ಯಾರ್ಥಿಗಳು ಕೈಯಲ್ಲಿ ಪಂಜು ಹಿಡಿದು ಹೆಜ್ಜೆ ಹಾಕಿದ ದೃಶ್ಯ ಮೈನವಿರೇಳಿಸುವಂತಿತ್ತು. ನೂರಾರು ಜ್ಯೋತಿಗಳು ಒಂದಾಗಿ ಬೆಳಗಿದಾಗ ಮೂಡಿದ ಆ ದೃಶ್ಯ ಕಣ್ಣಿಗೆ ಹಬ್ಬವಾಗಿದ್ದಷ್ಟೇ ಅಲ್ಲ, ಹೃದಯದಲ್ಲಿ ಹೆಮ್ಮೆ ಮತ್ತು ಅಭಿಮಾನವನ್ನು ತುಂಬಿತು.
#tumakuru #dasara #nammatumakuru
Dr. G Parameshwara
@DrParameshwara
-
Dr. G Parameshwara
@DrParameshwara
ಶಿಕ್ಷಣ ತಜ್ಞರು, ತುಮಕೂರಿನ ವಿದ್ಯಾವಾಹಿನಿ ಶಿಕ್ಷಣ ಸಂಸ್ಥೆಯ ನಿರ್ಮಾತೃಗಳು ಹಾಗೂ ನನ್ನ ಆತ್ಮೀಯ ಒಡನಾಡಿ ಕೆ.ಬಿ. ಜಯಣ್ಣ ಅವರ ನಿಧನದ ಸುದ್ದಿ ತಿಳಿದು ತೀವ್ರ ದುಃಖವಾಯಿತು.
ಶಿಕ್ಷಣ ಸಂಸ್ಥೆಗಳ ಮೂಲಕ ಅಕ್ಷರ-ಜ್ಞಾನವನ್ನು ನೀಡಿ, ಸಾವಿರಾರು ವಿದ್ಯಾರ್ಥಿಗಳ ಬದುಕನ್ನು ಉಜ್ವಲವಾಗಿಸಿದ ಸಮಾಜಮುಖಿ ಜೀವವನ್ನು ನಾವಿಂದು ಕಳೆದುಕೊಂಡಿದ್ದೇವೆ.
ನನ್ನ ಮೇಲಿನ ಪ್ರೀತಿ - ವಿಶ್ವಾಸದಿಂದ ನನಗಾಗಿ ಮೊಟ್ಟಮೊದಲ ಅಭಿಮಾನಿ ಬಳಗವೊಂದನ್ನು ಕಟ್ಟಿ, ನನ್ನೆಲ್ಲಾ ಜನಪರವಾದ ಕಾರ್ಯಗಳಿಗೆ ಬೆಂಬಲವಾಗಿ ನಿಂತು ಪ್ರೋತ್ಸಾಹ ನೀಡುತ್ತಿದ್ದ ಅವರ ವ್ಯಕ್ತಿತ್ವ ಬೆಲೆಕಟ್ಟಲಾಗದಂತದ್ದು. ಜಯಣ್ಣ ತಮ್ಮ ಸಜ್ಜನಿಕೆ - ಸೇವೆಯ ಮೂಲಕ ನಮ್ಮ ನಡುವೆ ಸದಾ ಜೀವಂತ.
ಭಗವಂತನು ಶ್ರೀಯುತರ ಆತ್ಮಕ್ಕೆ ಚಿರಶಾಂತಿಯನ್ನು ಕರುಣಿಸಲಿ. ಅವರ ಅಗಲಿಕೆಯ ನೋವನ್ನು ಭರಿಸುವ ಶಕ್ತಿಯನ್ನು ಕುಟುಂಬಸ್ಥರಿಗೆ ನೀಡಲಿ ಎಂದು ಪ್ರಾರ್ಥಿಸುತ್ತೇನೆ. -
Dr. G Parameshwara
@DrParameshwara
ಪರಿಶಿಷ್ಟ ಜಾತಿ ಮತ್ತು ಪಂಗಡದ ಹಿಂಬಾಕಿ ಹುದ್ದೆಗಳ ಭರ್ತಿ ಪರಾಮರ್ಶಿಸಲು ನನ್ನ ಅಧ್ಯಕ್ಷತೆಯಲ್ಲಿ ರಚಿಸಲಾದ ಸಚಿವ ಸಂಪುಟ ಉಪ ಸಮಿತಿಯು ಗುರುವಾರ ಸಭೆ ಸೇರಿ ಮಹತ್ವದ ನಿರ್ಧಾರಗಳನ್ನು ಕೈಗೊಂಡಿದೆ.
ಹಿಂಬಾಕಿ ಹುದ್ದೆಗಳ ನೇಮಕಾತಿ ಪ್ರಕ್ರಿಯೆಗೆ ತಕ್ಷಣವೇ ಚಾಲನೆ ನೀಡಿ, ಒಂದೂವರೆ ವರ್ಷದೊಳಗೆ ಎಲ್ಲಾ ಹುದ್ದೆಗಳನ್ನು ಭರ್ತಿ ಮಾಡಲು ಕ್ರಮ ಕೈಗೊಳ್ಳಲಾಗುವುದು. ಈ ನೇಮಕಾತಿಗಾಗಿ ಇಡೀ ರಾಜ್ಯಕ್ಕೆ ಪ್ರತ್ಯೇಕ ಅಧಿಸೂಚನೆ ಹೊರಡಿಸಲಾಗುವುದು. ನೇಮಕಾತಿ ಪ್ರಕ್ರಿಯೆಯಲ್ಲಿ ಅಭ್ಯರ್ಥಿಗಳ ಅಂಕ ಮತ್ತು ವಯೋಮಾನ ಪರಿಗಣಿಸಲು ನಿರ್ಧರಿಸಲಾಗಿದೆ. ಹಿಂಬಾಕಿ ಹುದ್ದೆಗಳ ಭರ್ತಿಯಲ್ಲಿ ನಿರ್ಲಕ್ಷ್ಯ ವಹಿಸುವ ಸಂಸ್ಥೆಗಳ ಅನುದಾನ ಸ್ಥಗಿತಗೊಳಿಸುವ ಕ್ರಮಕ್ಕೂ ಸೂಚಿಸಲಾಗಿದೆ.
ಹಿಂಬಾಕಿ ಹುದ್ದೆಗಳ ಭರ್ತಿ ಪ್ರಕ್ರಿಯೆಯನ್ನು ಸುಗಮಗೊಳಿಸಿ, ಅರ್ಹರಿಗೆ ಉದ್ಯೋಗಾವಕಾಶ ಕಲ್ಪಿಸುವ ನಮ್ಮ ಈ ನಿರ್ಣಯವು ಸಾಮಾಜಿಕ ನ್ಯಾಯದ ಅನುಷ್ಠಾನದಲ್ಲಿ ಮಹತ್ವದ ಮೈಲುಗಲ್ಲಾಗಲಿದೆ.
The Cabinet Sub-Committee constituted under my chairmanship to review the filling of SC-ST backlog vacancies met on Thursday and took several important decisions.
The recruitment process will be initiated immediately, with steps to fill all backlog vacancies within 18 months. A separate statewide notification will be issued for these posts, and it has been decided to consider candidates’ marks and age during the recruitment process. Directions have also been issued to withhold grants to institutions that neglect the filling of backlog vacancies.
By streamlining the recruitment process and creating employment opportunities for eligible candidates, this decision will mark an important milestone in advancing social justice. -
Dr. G Parameshwara
@DrParameshwara
ಪರಿಶಿಷ್ಟ ಜಾತಿ ಮತ್ತು ಪಂಗಡದ ಹಿಂಬಾಕಿ ಹುದ್ದೆಗಳ ಭರ್ತಿ ಪರಾಮರ್ಶಿಸಲು ನನ್ನ ಅಧ್ಯಕ್ಷತೆಯಲ್ಲಿ ರಚಿಸಲಾದ ಸಚಿವ ಸಂಪುಟ ಉಪ ಸಮಿತಿಯು ಗುರುವಾರ ಸಭೆ ಸೇರಿ ಮಹತ್ವದ ನಿರ್ಧಾರಗಳನ್ನು ಕೈಗೊಂಡಿದೆ.
ಬ್ಯಾಕ್ಲಾಗ್ ಹುದ್ದೆಗಳ ಭರ್ತಿಗಾಗಿ ಇಡೀ ರಾಜ್ಯಕ್ಕೆ ಪ್ರತ್ಯೇಕ ಅಧಿಸೂಚನೆ ಹೊರಡಿಸಲು ನಿರ್ದೇಶನ ನೀಡಿದ್ದು, ಈ ಹುದ್ದೆಗಳನ್ನು ಪ್ರಸ್ತುತ ನಡೆಯುತ್ತಿರುವ ನೇಮಕಾತಿ ಪ್ರಕ್ರಿಯೆಯೊಂದಿಗೆ ವಿಲೀನಗೊಳಿಸದಂತೆ ಸೂಚಿಸಲಾಗಿದೆ. ಅಧಿಸೂಚನೆ ಹೊರಡಿಸಿದ ಬಳಿಕ ಜಿಲ್ಲಾವಾರು ಹುದ್ದೆಗಳ ಹಂಚಿಕೆ ಕುರಿತು ನಿರ್ಧಾರ ಕೈಗೊಳ್ಳಲಾಗುವುದು.
ಹಿಂಬಾಕಿ ಹುದ್ದೆಗಳ ಭರ್ತಿ ಪ್ರಕ್ರಿಯೆಯನ್ನು ಸುಗಮಗೊಳಿಸಿ, ಅರ್ಹರಿಗೆ ಉದ್ಯೋಗಾವಕಾಶ ಕಲ್ಪಿಸುವ ನಮ್ಮ ಈ ನಿರ್ಣಯವು ಸಾಮಾಜಿಕ ನ್ಯಾಯದ ಅನುಷ್ಠಾನದಲ್ಲಿ ಮಹತ್ವದ ಮೈಲುಗಲ್ಲಾಗಲಿದೆ.
The Cabinet Sub-Committee constituted under my chairmanship to review the filling of SC-ST backlog vacancies met on Thursday and took several important decisions.
Directions have been issued to release a separate statewide notification for these backlog posts and to ensure that they are not merged with the ongoing recruitment process. The district-wise allocation of posts will be decided after the notification is issued.
By streamlining the process of filling backlog vacancies and creating employment opportunities for eligible candidates, this decision will mark an important milestone in advancing social justice. -
Dr. G Parameshwara
@DrParameshwara
ಇಂದು ತುಮಕೂರು ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಆಗ್ನೇಯ ಪದವೀಧರರ ಕ್ಷೇತ್ರದ ಚುನಾವಣಾ ಪ್ರಚಾರ ಸಭೆ ನಡೆಸಿ, ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಶಶಿ ಹುಲಿಕುಂಟೆ ಮಠ್ ಅವರ ಗೆಲುವಿಗೆ ಅನುಸರಿಸಬೇಕಾದ ಕಾರ್ಯತಂತ್ರಗಳ ಕುರಿತು ಪಕ್ಷದ ಮುಖಂಡರೊಂದಿಗೆ ಚರ್ಚಿಸಿದೆ.
ವಿಧಾನ ಪರಿಷತ್ ಚುನಾವಣೆಯಲ್ಲಿ ಸ್ಪರ್ಧಿಸುವ ಅವಕಾಶ ಎಲ್ಲರಿಗೂ ಸುಲಭವಾಗಿ ದೊರೆಯುವುದಿಲ್ಲ. ಇಂತಹ ಅವಕಾಶ ಪಡೆದಿರುವ ಶಶಿ ಹುಲಿಕುಂಟೆ ಮಠ್ ಅವರು ಮತದಾರರ ನೋಂದಣಿ ಕಾರ್ಯದಲ್ಲಿ ತೋರಿರುವ ಪರಿಶ್ರಮ ಅಭಿನಂದನಾರ್ಹ. ತುಮಕೂರು ಜಿಲ್ಲೆಯೊಂದರಲ್ಲೇ ಸುಮಾರು 49 ಸಾವಿರ ಮತದಾರರನ್ನು ನೋಂದಾಯಿಸಿರುವುದು ಅವರ ಸಂಘಟನಾ ಸಾಮರ್ಥ್ಯಕ್ಕೆ ಸಾಕ್ಷಿಯಾಗಿದೆ.
ಈ ಬಾರಿ ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಸಾಕಷ್ಟು ಪರಿಶೀಲನೆ ಮತ್ತು ಲೆಕ್ಕಾಚಾರದ ನಂತರ ಆಯ್ಕೆ ಮಾಡಲಾಗಿದೆ. ಶಶಿ ಹುಲಿಕುಂಟೆ ಮಠ್ ಅವರು ಚುನಾವಣೆಯಲ್ಲಿ ಗೆಲುವು ಸಾಧಿಸಿ, ಸಮಾಜದ ಕಷ್ಟ ಸುಖಗಳಿಗೆ ಹೆಗಲಾಗುತ್ತಾರೆ ಎನ್ನುವ ವಿಶ್ವಾಸವಿದೆ.
ಸಭೆಯಲ್ಲಿ ಮಾಜಿ ಸಚಿವರು ಹಾಗೂ ಮಧುಗಿರಿ ಶಾಸಕರಾದ ಕೆ.ಎನ್. ರಾಜಣ್ಣ, ಪಾವಗಡ ಶಾಸಕರಾದ ಹೆಚ್.ವಿ. ವೆಂಕಟೇಶ್, ವಿಧಾನ ಪರಿಷತ್ ಸದಸ್ಯರಾದ ರಮೇಶ್ ಬಾಬು, ತುಮಕೂರು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಚಂದ್ರಶೇಖರ್ ಗೌಡ, ಮಾಜಿ ಸಂಸದರಾದ ಎಸ್.ಪಿ. ಮುದ್ದಹನುಮೇಗೌಡ, ಮಾಜಿ ಶಾಸಕರಾದ ಗಂಗ ಹನುಮಯ್ಯ, ಶಫಿ ಅಹ್ಮದ್, ರಫೀಕ್ ಅಹ್ಮದ್, ಗೌರಿಶಂಕರ್ ಹಾಗೂ ಕಾಂಗ್ರೆಸ್ ಮುಖಂಡರಾದ ಷಣ್ಮುಖಪ್ಪ, ರಾಮಕೃಷ್ಣ ಸೇರಿದಂತೆ ಹಲವರು ಉಪಸ್ಥಿತರಿದ್ದರು. -
Dr. G Parameshwara
@DrParameshwara
ಉತ್ತರ ಕರ್ನಾಟಕದ ವಿಜಯನಗರ, ಬಳ್ಳಾರಿ, ರಾಯಚೂರು ಹಾಗೂ ಕೊಪ್ಪಳ ಜಿಲ್ಲೆಗಳಿಗೆ ಖುದ್ದಾಗಿ ಭೇಟಿ ನೀಡಿ, ಬರದ ವಾಸ್ತವ ಪರಿಸ್ಥಿತಿಯನ್ನು ಪರಿಶೀಲಿಸಿದ್ದೇನೆ. ರೈತರ ಅಹವಾಲುಗಳನ್ನು ಆಲಿಸಿ, ಬೆಳೆ ನಷ್ಟವನ್ನು ಅವಲೋಕಿಸಿ, ಪರಿಹಾರ ಕಾರ್ಯಗಳನ್ನು ಚುರುಕುಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ.
ವಿಜಯನಗರ ಜಿಲ್ಲೆಯಲ್ಲಿ ಶೇ.57ರಷ್ಟು ಮಳೆ ಕೊರತೆಯಾಗಿದ್ದು, ಎಲ್ಲ 6 ತಾಲ್ಲೂಕುಗಳು ಬರಪೀಡಿತವಾಗಿವೆ. 3.45 ಲಕ್ಷಕ್ಕೂ ಹೆಚ್ಚು ರೈತರು ಬೆಳೆ ಹಾನಿಗೆ ತುತ್ತಾಗಿದ್ದಾರೆ. ಬೆಳೆವಿಮೆಗೆ ನೋಂದಾಯಿಸಿಕೊಂಡಿರುವ 1.65 ಲಕ್ಷಕ್ಕೂ ಹೆಚ್ಚು ರೈತರಿಗೆ ಪರಿಹಾರ ತ್ವರಿತವಾಗಿ ತಲುಪಿಸಲು ಹಾಗೂ FRUITS ಪೋರ್ಟಲ್ನಲ್ಲಿ ಬಾಕಿ ಇರುವ ರೈತರ ಮಾಹಿತಿ ದಾಖಲಿಸಲು ಸೂಚಿಸಿದ್ದೇನೆ. ನೀರಿನ ಸಮಸ್ಯೆಯಿರುವ 38 ಗ್ರಾಮಗಳಿಗೆ ಪೂರೈಕೆಗಾಗಿ 46 ಖಾಸಗಿ ಕೊಳವೆಬಾವಿಗಳನ್ನು ಬಾಡಿಗೆಗೆ ಪಡೆಯಲಾಗಿದೆ. ಉದ್ಯೋಗ ಖಾತರಿಯಡಿ 27.74 ಲಕ್ಷ ಮಾನವ ದಿನಗಳನ್ನು ಸೃಜಿಸಲಾಗಿದೆ.
ಬಳ್ಳಾರಿ ಜಿಲ್ಲೆಯಲ್ಲಿ ಶೇ.49ರಷ್ಟು ಮಳೆ ಕೊರತೆಯಾಗಿದ್ದು, ಎಲ್ಲ 5 ತಾಲ್ಲೂಕುಗಳು ಬರಪೀಡಿತವಾಗಿವೆ. ಕುಡಿಯುವ ನೀರಿನ ಸಮಸ್ಯೆಯಿರುವ 10 ಹಳ್ಳಿಗಳಿಗೆ ಖಾಸಗಿ ಕೊಳವೆಬಾವಿಗಳ ಮೂಲಕ ನೀರು ಪೂರೈಸಲಾಗುತ್ತಿದೆ. ಉದ್ಯೋಗ ಖಾತರಿಯಡಿ ₹22.16 ಕೋಟಿ ವೆಚ್ಚದಲ್ಲಿ 9.28 ಲಕ್ಷ ಮಾನವ ದಿನಗಳನ್ನು ಸೃಜಿಸಲಾಗಿದೆ.
ರಾಯಚೂರು ಜಿಲ್ಲೆಯಲ್ಲಿ ಶೇ.49ರಷ್ಟು ಮಳೆ ಕೊರತೆಯಾಗಿದ್ದು, 30 ಹಳ್ಳಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. 35 ಖಾಸಗಿ ಕೊಳವೆಬಾವಿಗಳನ್ನು ಬಾಡಿಗೆಗೆ ಪಡೆದು, ತುರ್ತು ನೀರು ಪೂರೈಕೆಗಾಗಿ 320 ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಉದ್ಯೋಗ ಖಾತರಿಯಡಿ 19.54 ಲಕ್ಷ ಮಾನವ ದಿನಗಳನ್ನು ಸೃಜಿಸಲಾಗಿದೆ. ಕೃಷಿ ಹೊಂಡ ಹಾಗೂ ಕೆರೆ ಅಭಿವೃದ್ಧಿಯ 4,929 ಕಾಮಗಾರಿಗಳನ್ನು ತ್ವರಿತವಾಗಿ ಅನುಷ್ಠಾನಗೊಳಿಸಲು ನಿರ್ದೇಶಿಸಿದ್ದೇನೆ.
ಕೊಪ್ಪಳ ಜಿಲ್ಲೆಯಲ್ಲಿ ಶೇ.45ರಷ್ಟು ಮಳೆ ಕೊರತೆಯಾಗಿದ್ದು, ಎಲ್ಲ 7 ತಾಲ್ಲೂಕುಗಳು ಬರಪೀಡಿತವಾಗಿವೆ. ಬೇಸಿಗೆಯಲ್ಲಿ 109 ಗ್ರಾಮ ಪಂಚಾಯಿತಿ ವ್ಯಾಪ್ತಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗುವ ಸಾಧ್ಯತೆಯಿರುವುದರಿಂದ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲು ಸೂಚಿಸಿದ್ದೇನೆ. ಈಗಾಗಲೇ 55 ಖಾಸಗಿ ಕೊಳವೆಬಾವಿಗಳನ್ನು ಬಾಡಿಗೆಗೆ ಪಡೆಯಲಾಗಿದೆ. 15,838 ಮೇವಿನ ಬೀಜದ ಕಿಟ್ಗಳ ವಿತರಣೆ ಕೈಗೊಳ್ಳಲಾಗಿದ್ದು, ಅಗತ್ಯವಿದ್ದರೆ ಗೋಶಾಲೆ ಹಾಗೂ ಮೇವಿನ ಬ್ಯಾಂಕ್ಗಳನ್ನು ತೆರೆಯಲು ನಿರ್ದೇಶಿಸಿದ್ದೇನೆ. ಉದ್ಯೋಗ ಖಾತರಿಯಡಿ 12.69 ಲಕ್ಷ ಮಾನವ ದಿನಗಳನ್ನು ಸೃಜಿಸಲಾಗಿದ್ದು, ಕಳೆದ ವರ್ಷಕ್ಕಿಂತ ಶೇ.211ರಷ್ಟು ಪ್ರಗತಿ ಸಾಧಿಸಲಾಗಿದೆ.
ಬರದಿಂದ ಸಂಕಷ್ಟದಲ್ಲಿರುವ ರೈತರಿಗೆ ತಕ್ಷಣದ ನೆರವು ಒದಗಿಸಲು ಮೊದಲ ಹಂತದಲ್ಲಿ ಅರ್ಹ ರೈತರಿಗೆ ತಲಾ ₹2,500ರಂತೆ ಪರಿಹಾರ ನೀಡಲು ನಮ್ಮ ಸರ್ಕಾರ ₹1,250 ಕೋಟಿ ಬಿಡುಗಡೆ ಮಾಡಿದೆ. ಜಾನುವಾರುಗಳಿಗೆ ಮೇವು ಒದಗಿಸಲು ₹25 ಕೋಟಿ ಬಿಡುಗಡೆ ಮಾಡಲಾಗಿದ್ದು, ಮುಂದಿನ ಹಂತದಲ್ಲಿ ಇನ್ನೂ ₹33 ಕೋಟಿ ಒದಗಿಸಲು ಉದ್ದೇಶಿಸಲಾಗಿದೆ.
ಸಣ್ಣ ಮತ್ತು ಅತಿಸಣ್ಣ ರೈತರ ನೆರವಿಗೆ ನೇಗಿಲ ಯೋಗಿ ಹಾಗೂ ರೈತ ಮಿತ್ರ ಯೋಜನೆಗಳ ಮೂಲಕ ಕ್ರಮ ಕೈಗೊಳ್ಳಲಾಗುತ್ತಿದೆ. ಕುಡಿಯುವ ನೀರು, ಮೇವು, ಬೆಳೆ ಪರಿಹಾರ ಹಾಗೂ ಗ್ರಾಮೀಣ ಉದ್ಯೋಗಕ್ಕೆ ಆದ್ಯತೆ ನೀಡಿ, ಜನರು ಗುಳೆ ಹೋಗುವ ಪರಿಸ್ಥಿತಿ ಉಂಟಾಗದಂತೆ ಸ್ಥಳೀಯವಾಗಿ ಉದ್ಯೋಗಾವಕಾಶಗಳನ್ನು ಹೆಚ್ಚಿಸಲು ಸೂಚಿಸಿದ್ದೇನೆ.
ಬರದ ಸಂಕಷ್ಟದಲ್ಲಿ ರೈತರು ಒಂಟಿಯಲ್ಲ. ರೈತರು, ಕೃಷಿ ಕಾರ್ಮಿಕರು ಹಾಗೂ ಜಾನುವಾರುಗಳ ರಕ್ಷಣೆ ನಮ್ಮ ಸರ್ಕಾರದ ಆದ್ಯತೆಯಾಗಿದೆ. ಪರಿಹಾರ ಕಾರ್ಯಗಳು ವಿಳಂಬವಿಲ್ಲದೆ ಅರ್ಹ ಫಲಾನುಭವಿಗಳಿಗೆ ತಲುಪುವಂತೆ ಹಾಗೂ ಕುಡಿಯುವ ನೀರು ಮತ್ತು ಮೇವಿನ ಕೊರತೆ ಉಂಟಾಗದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ನಿರ್ದೇಶಿಸಿದ್ದೇನೆ.This media couldn't be displayed. See it on the original post. -
Dr. G Parameshwara
@DrParameshwara
We have accelerated our Government’s ambitious Bhu Suraksha project to ensure the safe preservation of revenue records and make them easily accessible to the public.
Under the project, records that require permanent preservation, as well as those to be retained for up to 30 years, are being digitised using modern technology. The objective is to protect vulnerable land, survey and registration records, prevent the creation of fake documents, and make land records more easily accessible to citizens.
So far, over 102 crore pages have been scanned across the State, and we aim to complete the scanning of the remaining 47.82 crore pages by the end of December.
Digitisation has already been completed in 6 Deputy Commissioner offices, 8 Assistant Commissioner offices and 155 taluk offices. Work is being expedited in the remaining offices to ensure completion within the stipulated timeframe.
I congratulate every officer and staff member of the Department who is contributing to this massive exercise.
Our Government is committed to completing the digitisation of revenue records on schedule, ensuring their safe preservation and easy public access.
#bhusuraksha -
Dr. G Parameshwara
@DrParameshwara
ಕಂದಾಯ ದಾಖಲೆಗಳ ಸುರಕ್ಷಿತ ಸಂರಕ್ಷಣೆ ಮತ್ತು ಸಾರ್ವಜನಿಕರಿಗೆ ಅವುಗಳ ಸುಲಭ ಲಭ್ಯತೆಯನ್ನು ಖಚಿತಪಡಿಸುವ ನಿಟ್ಟಿನಲ್ಲಿ ನಮ್ಮ ಸರ್ಕಾರದ ಮಹತ್ವಾಕಾಂಕ್ಷೆಯ ‘ಭೂ ಸುರಕ್ಷಾ’ ಯೋಜನೆಗೆ ವೇಗ ನೀಡಿದ್ದೇವೆ.
ಕಂದಾಯ ಇಲಾಖೆಯಲ್ಲಿ ಖಾಯಂ ಆಗಿ ಸಂರಕ್ಷಿಸಬೇಕಾದ ಹಾಗೂ 30 ವರ್ಷಗಳವರೆಗೆ ಕಾಪಾಡಬೇಕಾದ ದಾಖಲೆಗಳನ್ನು ಆಧುನಿಕ ತಂತ್ರಜ್ಞಾನದ ಮೂಲಕ ಡಿಜಿಟಲೀಕರಣಗೊಳಿಸಿ, ಶಾಶ್ವತವಾಗಿ ಸಂರಕ್ಷಿಸುವ ಬೃಹತ್ ಕಾರ್ಯವನ್ನು ಕೈಗೆತ್ತಿಕೊಂಡಿದ್ದೇವೆ. ಇದರಿಂದ ಭೂ ದಾಖಲೆ, ಸರ್ವೆ, ನೋಂದಣಿ ಸೇರಿದಂತೆ ಸಂಪೂರ್ಣ ಹಾಳಾಗುವ ದಾಖಲೆಗಳನ್ನು ಸಂರಕ್ಷಿಸುವುದು ಹಾಗೂ ನಕಲಿ ದಾಖಲೆಗಳ ಸೃಷ್ಟಿಯನ್ನು ತಡೆಗಟ್ಟುವುದರ ಜೊತೆಗೆ, ಸಾರ್ವಜನಿಕರಿಗೆ ಭೂ ದಾಖಲೆಗಳನ್ನು ಸುಲಭವಾಗಿ ಲಭ್ಯವಾಗುವಂತೆ ಮಾಡುವುದು ನಮ್ಮ ಉದ್ದೇಶವಾಗಿದೆ.
ಈ ಯೋಜನೆಯಡಿ ರಾಜ್ಯಾದ್ಯಂತ ಈಗಾಗಲೇ 102 ಕೋಟಿಗೂ ಅಧಿಕ ದಾಖಲೆ ಪುಟಗಳ ಸ್ಕ್ಯಾನಿಂಗ್ ಪೂರ್ಣಗೊಂಡಿದ್ದು, ಬಾಕಿ ಇರುವ 47.82 ಕೋಟಿ ಪುಟಗಳ ಸ್ಕ್ಯಾನಿಂಗ್ ಕಾರ್ಯವನ್ನು ಡಿಸೆಂಬರ್ ಅಂತ್ಯದೊಳಗೆ ಪೂರ್ಣಗೊಳಿಸುವ ಗುರಿ ಹೊಂದಿದ್ದೇವೆ.
ರಾಜ್ಯದ 6 ಜಿಲ್ಲಾಧಿಕಾರಿ ಕಚೇರಿಗಳು, 8 ಉಪವಿಭಾಗಾಧಿಕಾರಿ ಕಚೇರಿಗಳು ಹಾಗೂ 155 ತಾಲ್ಲೂಕು ಕಚೇರಿಗಳಲ್ಲಿ ಡಿಜಿಟಲೀಕರಣ ಪ್ರಕ್ರಿಯೆ ಪೂರ್ಣಗೊಂಡಿದೆ. ಬಾಕಿ ಉಳಿದ ಕಚೇರಿಗಳಲ್ಲಿಯೂ ಡಿಜಿಟಲೀಕರಣ ಕಾರ್ಯವನ್ನು ಚುರುಕುಗೊಳಿಸಿ, ನಿಗದಿತ ಅವಧಿಯೊಳಗೆ ಪೂರ್ಣಗೊಳಿಸಲು ಕ್ರಮ ಕೈಗೊಳ್ಳುತ್ತಿದ್ದೇವೆ.
ಈ ಬೃಹತ್ ಕಾರ್ಯವನ್ನು ಯಶಸ್ವಿಗೊಳಿಸಲು ಶ್ರಮಿಸುತ್ತಿರುವ ಇಲಾಖೆಯ ಪ್ರತಿಯೊಬ್ಬ ಅಧಿಕಾರಿ ಹಾಗೂ ಸಿಬ್ಬಂದಿಗೂ ನನ್ನ ಅಭಿನಂದನೆಗಳು.
ಕಂದಾಯ ದಾಖಲೆಗಳ ಡಿಜಿಟಲೀಕರಣವನ್ನು ನಿಗದಿತ ಅವಧಿಯೊಳಗೆ ಪೂರ್ಣಗೊಳಿಸಿ, ಅವುಗಳ ಸುರಕ್ಷಿತ ಸಂರಕ್ಷಣೆ ಹಾಗೂ ಸಾರ್ವಜನಿಕರಿಗೆ ಸುಲಭ ಲಭ್ಯತೆಯನ್ನು ಖಚಿತಪಡಿಸಲು ನಮ್ಮ ಸರ್ಕಾರ ಬದ್ಧವಾಗಿದೆ.
#bhusuraksha -
Dr. G Parameshwara
@DrParameshwara
ಬರ ಪರಿಸ್ಥಿತಿ ಪರಿಶೀಲನೆಗಾಗಿ ಕೊಪ್ಪಳ ಜಿಲ್ಲೆಗೆ ಭೇಟಿ ನೀಡಿ, ಸ್ಥಳೀಯರೊಂದಿಗೆ ಚರ್ಚಿಸಿ ಪರಿಸ್ಥಿತಿಯನ್ನು ಅವಲೋಕಿಸಿದ್ದೇನೆ. ಜಿಲ್ಲೆಯ ಜನರಿಗೆ ಅಗತ್ಯ ನೆರವು ಕಲ್ಪಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ.
ಜಿಲ್ಲೆಯಲ್ಲಿ ಶೇ.45ರಷ್ಟು ಮಳೆಯಾಗಿದ್ದು, 3,02,664 ಹೆಕ್ಟೇರ್ ಪ್ರದೇಶದಲ್ಲಿ ಕೃಷಿ ಮತ್ತು ತೋಟಗಾರಿಕಾ ಬೆಳೆಗಳು ಹಾನಿಗೀಡಾಗಿವೆ. ಜಿಲ್ಲೆಯ ಎಲ್ಲ 7 ತಾಲ್ಲೂಕುಗಳನ್ನು ಬರಪೀಡಿತವೆಂದು ಘೋಷಿಸಲಾಗಿದೆ.
ಜಿಲ್ಲೆಯ 1,56,013 ರೈತರು ಬೆಳೆವಿಮೆಗೆ ನೋಂದಾಯಿಸಿಕೊಂಡಿದ್ದಾರೆ. ಸಂಕಷ್ಟದಲ್ಲಿರುವ ರೈತರಿಗೆ ₹2,500 ಪರಿಹಾರ ನೀಡಲಾಗುತ್ತಿದ್ದು, ಸಣ್ಣ ಮತ್ತು ಅತಿಸಣ್ಣ ರೈತರ ಉಳುಮೆ ವೆಚ್ಚವನ್ನು ನೇಗಿಲ ಯೋಗಿ ಯೋಜನೆಯಡಿ ಸರ್ಕಾರವೇ ಭರಿಸುತ್ತಿದೆ.
ಬೇಸಿಗೆಯಲ್ಲಿ 109 ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗುವ ಸಾಧ್ಯತೆಯಿದ್ದು, ಈಗಾಗಲೇ 55 ಖಾಸಗಿ ಕೊಳವೆಬಾವಿಗಳನ್ನು ಬಾಡಿಗೆಗೆ ಪಡೆಯಲಾಗಿದೆ. ಟಾಸ್ಕ್ಫೋರ್ಸ್ನಡಿ ಅನುಮೋದಿತ 358 ಕಾಮಗಾರಿಗಳ ಪೈಕಿ ಪ್ರಗತಿಯಲ್ಲಿರುವ 91 ಕಾಮಗಾರಿಗಳನ್ನು ಶೀಘ್ರ ಪೂರ್ಣಗೊಳಿಸಲು ಸೂಚಿಸಿದ್ದೇನೆ.
ಜಿಲ್ಲೆಯಲ್ಲಿ 31 ವಾರಗಳಿಗೆ ಸಾಕಾಗುವಷ್ಟು 4.53 ಲಕ್ಷ ಟನ್ ಮೇವು ಲಭ್ಯವಿದ್ದು, 15,838 ಮೇವಿನ ಬೀಜದ ಕಿಟ್ಗಳ ವಿತರಣೆ ಪ್ರಗತಿಯಲ್ಲಿದೆ. ಅಗತ್ಯವಿದ್ದರೆ ಗೋಶಾಲೆ ಹಾಗೂ ಮೇವು ಬ್ಯಾಂಕ್ಗಳನ್ನು ತೆರೆಯುವಂತೆ ಸೂಚಿಸಿದ್ದೇನೆ.
ವಲಸೆ ತಡೆಗಟ್ಟಲು ವಿಬಿ ಜಿ ರಾಮ್ ಜಿ ಯೋಜನೆಯಡಿ ಕಾಮಗಾರಿಗಳನ್ನು ಕೈಗೊಂಡು 12.69 ಲಕ್ಷ ಮಾನವ ದಿನಗಳನ್ನು ಸೃಜಿಸಲಾಗಿದೆ. ಜಿಲ್ಲೆಯ 2.64 ಲಕ್ಷ ಕೃಷಿ ಸಾಲದ ಖಾತೆಗಳಲ್ಲಿ ₹4,299.24 ಕೋಟಿ ಸಾಲ ಮರುಪಾವತಿ ಬಾಕಿಯಿದೆ. ಬರದ ತೀವ್ರತೆಗೆ ಅನುಗುಣವಾಗಿ ಮೊರಟೋರಿಯಂ ಅವಧಿಯನ್ನು 12 ತಿಂಗಳು ಹಾಗೂ ಸಾಲ ಮರುಪಾವತಿ ಅವಧಿಯನ್ನು 36ರಿಂದ 60 ತಿಂಗಳವರೆಗೆ ವಿಸ್ತರಿಸುವ ಸೌಲಭ್ಯವನ್ನು ಬ್ಯಾಂಕ್ಗಳ ಸಮನ್ವಯದೊಂದಿಗೆ ಕಟ್ಟುನಿಟ್ಟಾಗಿ ಜಾರಿಗೊಳಿಸಲು ನಿರ್ದೇಶಿಸಿದ್ದೇನೆ.
ಬರ ಪರಿಸ್ಥಿತಿಯಿಂದ ರೈತರು ಹಾಗೂ ಗ್ರಾಮೀಣ ಜನರ ಜೀವನೋಪಾಯಕ್ಕೆ ಧಕ್ಕೆಯಾಗದಂತೆ ನೋಡಿಕೊಳ್ಳುವುದು ನಮ್ಮ ಜವಾಬ್ದಾರಿಯಾಗಿದೆ. ಕುಡಿಯುವ ನೀರು, ಮೇವು, ಉದ್ಯೋಗ ಹಾಗೂ ರೈತರ ಪರಿಹಾರಕ್ಕೆ ಮೊದಲ ಆದ್ಯತೆ ನೀಡಿ, ಸಂಕಷ್ಟದಲ್ಲಿರುವ ಜನರೊಂದಿಗೆ ನಮ್ಮ ಸರ್ಕಾರ ಸದಾ ನಿಲ್ಲಲಿದೆ.This media couldn't be displayed. See it on the original post. -
Dr. G Parameshwara
@DrParameshwara
ಲೋಕಭವನದಲ್ಲಿ ಇಂದು ನಡೆದ ಕರ್ನಾಟಕದ ನೂತನ ರಾಜ್ಯಪಾಲರಾಗಿ ಅಧಿಕಾರ ಸ್ವೀಕರಿಸಿದ ಗೌರವಾನ್ವಿತ ಡಾ. ಸುಧಾ ಯಾದವ್ ಅವರ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ನಾನು ಭಾಗಿಯಾದೆ.
Today, I attended the swearing-in ceremony of Hon’ble Dr. Sudha Yadav as the new Governor of Karnataka, held at Lok Bhavan. -
Dr. G Parameshwara
@DrParameshwara
I warmly welcomed Dr. Sudha Yadav, the newly appointed Governor of Karnataka, at Kempegowda International Airport in Bengaluru.
Social Welfare Minister K.H. Muniyappa, Chief Secretary to the Government of Karnataka Shalini Rajneesh, Director General of Police Dr. M.A. Saleem, Bengaluru City Police Commissioner Seemant Kumar Singh, and Bengaluru Rural Deputy Commissioner Dr. K.N. Anuradha were present on the occasion.
ಕರ್ನಾಟಕದ ನೂತನ ರಾಜ್ಯಪಾಲರಾಗಿ ನೇಮಕಗೊಂಡಿರುವ ಡಾ. ಸುಧಾ ಯಾದವ್ ಅವರನ್ನು ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಆತ್ಮೀಯವಾಗಿ ಸ್ವಾಗತಿಸಿದೆ.
ಈ ಸಂದರ್ಭದಲ್ಲಿ ಸಮಾಜ ಕಲ್ಯಾಣ ಸಚಿವರಾದ ಕೆ.ಹೆಚ್.ಮುನಿಯಪ್ಪ, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಾದ ಶಾಲಿನಿ ರಜನೀಶ್, ರಾಜ್ಯ ಪೊಲೀಸ್ ಮಹಾನಿರ್ದೇಶಕರಾದ ಡಾ. ಎಂ.ಎ. ಸಲೀಂ, ಬೆಂಗಳೂರು ನಗರ ಪೊಲೀಸ್ ಆಯುಕ್ತರಾದ ಸೀಮಾಂತ್ ಕುಮಾರ್ ಸಿಂಗ್, ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿಗಳಾದ ಡಾ.ಕೆ.ಎನ್.ಅನುರಾಧ ಅವರು ಇದ್ದರು. -
Dr. G Parameshwara
@DrParameshwara
ಇಂದು ವಿಕಾಸಸೌಧದಲ್ಲಿ ನಡೆದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಹಿಂಬಾಕಿ (ಬ್ಯಾಕ್ಲಾಗ್) ಹುದ್ದೆಗಳ ಭರ್ತಿಗೆ ಸಂಬಂಧಿಸಿದಂತೆ ಪರಿಶೀಲನೆ ನಡೆಸಲು ರಚಿಸಲಾಗಿರುವ ಸಚಿವ ಸಂಪುಟ ಉಪಸಮಿತಿ ಸಭೆಯ ಅಧ್ಯಕ್ಷತೆಯನ್ನು ವಹಿಸಿ, ಬ್ಯಾಕ್ಲಾಗ್ ಹುದ್ದೆಗಳ ಭರ್ತಿಗೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಚರ್ಚಿಸಿದೆ.
ಸಭೆಯಲ್ಲಿ ಸಚಿವರಾದ ಕೆ.ಎಚ್. ಮುನಿಯಪ್ಪ, ಟಿ. ರಘುಮೂರ್ತಿ, ಸತೀಶ್ ಜಾರಕಿಹೊಳಿ, ಬಸವಂತಪ್ಪ ಹಾಗೂ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
Chaired a meeting of the Cabinet Sub-Committee at Vikas Soudha to review the filling of backlog vacancies reserved for Scheduled Castes and Scheduled Tribes. The meeting focused on measures to expedite recruitment and fill the pending vacancies.
Ministers K.H. Muniyappa, T. Raghumurthy, Satish Jarkiholi and Basavanthappa, along with senior officials, attended the meeting. -
Dr. G Parameshwara
@DrParameshwara
ಎಸ್ಸಿ, ಎಸ್ಟಿ ಮೀಸಲಾತಿ ಹೆಚ್ಚಳವನ್ನು ರದ್ದುಗೊಳಿಸಿರುವ ಹೈಕೋರ್ಟ್ ತೀರ್ಪಿನ ವಿರುದ್ಧ ಸುಪ್ರೀಂ ಕೋರ್ಟ್ನಲ್ಲಿ ವಿಶೇಷ ಅನುಮತಿ ಅರ್ಜಿ (ಎಸ್ಎಲ್ಪಿ) ಸಲ್ಲಿಸಲು ನಿರ್ಧರಿಸಲಾಗಿದೆ.
ಎಸ್ಸಿ, ಎಸ್ಟಿ ಸಮುದಾಯಗಳ ಮೀಸಲಾತಿ ಹೆಚ್ಚಳಕ್ಕೆ ಕಾನೂನಾತ್ಮಕ ರಕ್ಷಣೆ ಒದಗಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲು ನಮ್ಮ ಸರ್ಕಾರ ಬದ್ಧವಾಗಿದ್ದು, ಸಂವಿಧಾನದ 9ನೇ ಅನುಸೂಚಿಗೆ ಸೇರ್ಪಡೆ ಸೇರಿದಂತೆ ಮುಂದಿನ ಕಾನೂನಾತ್ಮಕ ಹಾಗೂ ಆಡಳಿತಾತ್ಮಕ ಕ್ರಮಗಳ ಕುರಿತು ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು.
Our government has decided to file a Special Leave Petition (SLP) before the Supreme Court challenging the High Court’s verdict quashing the increase in reservation for Scheduled Castes (SCs) and Scheduled Tribes (STs).
Our government remains committed to taking all necessary measures to provide legal protection to the enhanced reservation for SC and ST communities. Further legal and administrative steps, including the inclusion of the reservation provisions in the Ninth Schedule of the Constitution, will be discussed and decided upon. -
Dr. G Parameshwara
@DrParameshwara
ರಾಜ್ಯದಲ್ಲಿ ಹೊಸದಾಗಿ 9 ತಾಲ್ಲೂಕುಗಳನ್ನು ಬರಪೀಡಿತ ಪ್ರದೇಶಗಳೆಂದು ಘೋಷಿಸಲಾಗಿದ್ದು, ಇದರೊಂದಿಗೆ ಒಟ್ಟು 226 ತಾಲ್ಲೂಕುಗಳನ್ನು ಬರಪೀಡಿತ ಪ್ರದೇಶಗಳೆಂದು ಗುರುತಿಸಲಾಗಿದೆ. ಬರದಿಂದ ಉಂಟಾಗಿರುವ ನಷ್ಟದ ಕುರಿತು ಅಂತಿಮ ಮನವಿಪತ್ರ (ಮೆಮೊರಾಂಡಮ್) ಸಿದ್ಧಪಡಿಸಲಾಗುತ್ತಿದ್ದು, ಮುಂದಿನ ಒಂದೆರಡು ದಿನಗಳಲ್ಲಿ ಪೂರ್ಣಗೊಳ್ಳಲಿದೆ.
ಈ ಹಿಂದೆ 217 ತಾಲ್ಲೂಕುಗಳನ್ನು ಬರಪೀಡಿತವೆಂದು ಘೋಷಿಸಲಾಗಿತ್ತು. ಇದೀಗ ಮತ್ತೆ ಒಂಬತ್ತು ತಾಲ್ಲೂಕುಗಳನ್ನು ಸೇರ್ಪಡೆಗೊಳಿಸಿರುವುದರಿಂದ ಒಟ್ಟು ಸಂಖ್ಯೆ 226ಕ್ಕೆ ಏರಿಕೆಯಾಗಿದೆ.
ಉಳಿದ ತಾಲ್ಲೂಕುಗಳಲ್ಲಿ ಬರ ಪರಿಸ್ಥಿತಿಯನ್ನು ಪರಿಶೀಲಿಸಲಾಗುತ್ತಿದ್ದು, ಟ್ರಿಗರ್-1 ಮಾನದಂಡಗಳಡಿ ಅರ್ಹತೆ ಪಡೆದ ತಾಲ್ಲೂಕುಗಳನ್ನು ಗ್ರೌಂಡ್ ಟ್ರೂಥಿಂಗ್ ಪ್ರಕ್ರಿಯೆಗೆ ಒಳಪಡಿಸಲಾಗುವುದು. ಈ ಪ್ರಕ್ರಿಯೆಯಲ್ಲಿ ಅರ್ಹತೆ ಕಂಡುಬಂದರೆ ಮತ್ತಷ್ಟು ತಾಲ್ಲೂಕುಗಳನ್ನು ಬರಪೀಡಿತ ಪಟ್ಟಿಗೆ ಸೇರಿಸುವ ಬಗ್ಗೆ ಕ್ರಮ ಕೈಗೊಳ್ಳಲಾಗುವುದು. ಇಲ್ಲವಾದಲ್ಲಿ ಪ್ರಸ್ತುತ ಘೋಷಿಸಿರುವ 226 ತಾಲ್ಲೂಕುಗಳ ಪಟ್ಟಿಯೇ ಅಂತಿಮವಾಗಲಿದೆ.
ಬರದಿಂದ ಉಂಟಾಗಿರುವ ನಷ್ಟದ ಕುರಿತು ಅಂತಿಮ ಮನವಿಪತ್ರವನ್ನು ಸಿದ್ಧಪಡಿಸಲಾಗುತ್ತಿದ್ದು, ಮುಂದಿನ ಒಂದೆರಡು ದಿನಗಳಲ್ಲಿ ಪೂರ್ಣಗೊಳ್ಳಲಿದೆ. ಮನವಿಪತ್ರ ಸಲ್ಲಿಸುವ ಸಂದರ್ಭದಲ್ಲಿ ಸರ್ವಪಕ್ಷ ನಿಯೋಗವನ್ನು ಕೇಂದ್ರಕ್ಕೆ ಕರೆದೊಯ್ಯಬೇಕೆಂದು ಮಾನ್ಯ ಮುಖ್ಯಮಂತ್ರಿಗಳು ಸೂಚಿಸಿದ್ದಾರೆ.
ಸರ್ವಪಕ್ಷ ನಿಯೋಗದಲ್ಲಿ ಭಾಗವಹಿಸುವುದಿಲ್ಲ ಎಂದು ವಿರೋಧ ಪಕ್ಷದವರು ಈಗಾಗಲೇ ತಮ್ಮ ನಿಲುವನ್ನು ವ್ಯಕ್ತಪಡಿಸಿದ್ದಾರೆ. ಆದಾಗ್ಯೂ, ಮತ್ತೊಮ್ಮೆ ಅವರನ್ನು ಸಂಪರ್ಕಿಸಿ ನಿಯೋಗದಲ್ಲಿ ಭಾಗವಹಿಸುವಂತೆ ಮನವಿ ಮಾಡಲಾಗುವುದು. ಅವರು ಭಾಗವಹಿಸಿದರೆ ಉತ್ತಮ. ಇಲ್ಲವಾದಲ್ಲಿ ಮುಖ್ಯಮಂತ್ರಿಗಳು, ನಾನು ಮತ್ತು ಕೆಲವು ಸಚಿವರೊಂದಿಗೆ ಕೇಂದ್ರಕ್ಕೆ ತೆರಳಿ, ಸಂಬಂಧಪಟ್ಟ ಕೇಂದ್ರ ಸಚಿವರು ಮತ್ತು ಪ್ರಧಾನಮಂತ್ರಿಯವರ ಭೇಟಿಗೆ ಸಮಯ ಕೋರಲಿದ್ದೇವೆ. ಅವರನ್ನು ಭೇಟಿ ಮಾಡಿ ರಾಜ್ಯದ ಬರ ಪರಿಸ್ಥಿತಿ ಹಾಗೂ ಪರಿಹಾರದ ಅಗತ್ಯವನ್ನು ವಿವರಿಸಿ ಅಂತಿಮ ಮನವಿಪತ್ರ ಸಲ್ಲಿಸಲಾಗುವುದು.
ರಾಜ್ಯದಲ್ಲಿ ಬರದಿಂದ ಉಂಟಾಗಿರುವ ನಷ್ಟದ ಕುರಿತು ಈಗಾಗಲೇ ಸುಮಾರು ₹46,000 ಕೋಟಿಯಷ್ಟು ಅಂದಾಜು ಮಾಡಲಾಗಿದೆ. ಅಂತಿಮ ಲೆಕ್ಕಾಚಾರದಲ್ಲಿ ನಷ್ಟದ ಪ್ರಮಾಣ ₹60,000 ಕೋಟಿಯಿಂದ ₹70,000 ಕೋಟಿಯವರೆಗೆ ತಲುಪಬಹುದು ಎಂಬ ಪ್ರಾಥಮಿಕ ಅಂದಾಜುಗಳಿವೆ.
ಆದರೆ, ಒಟ್ಟು ನಷ್ಟದ ಮೊತ್ತವನ್ನೇ ಕೇಂದ್ರ ಸರ್ಕಾರದಿಂದ ಪರಿಹಾರವಾಗಿ ಕೇಳಲು ಸಾಧ್ಯವಿಲ್ಲ. ಎನ್ಡಿಆರ್ಎಫ್ ಮಾರ್ಗಸೂಚಿಗಳ ಪ್ರಕಾರ ಪರಿಹಾರಕ್ಕೆ ಅರ್ಹವಾಗುವ ನಷ್ಟವನ್ನು ಪ್ರತ್ಯೇಕವಾಗಿ ಲೆಕ್ಕಾಚಾರ ಮಾಡಬೇಕಾಗುತ್ತದೆ.
ಕಳೆದ ವರ್ಷ ಸುಮಾರು ₹49,000 ಕೋಟಿಯಷ್ಟು ನಷ್ಟ ಸಂಭವಿಸಿದ್ದರೂ, ಎನ್ಡಿಆರ್ಎಫ್ ಮಾರ್ಗಸೂಚಿಗಳ ಪ್ರಕಾರ ಸುಮಾರು ₹18,000 ಕೋಟಿ ಪರಿಹಾರವನ್ನು ಕೇಂದ್ರ ಸರ್ಕಾರದಿಂದ ಕೋರಲಾಗಿತ್ತು. ಅದೇ ರೀತಿ ಈ ಬಾರಿಯೂ ₹60,000 ಕೋಟಿಯಷ್ಟು ನಷ್ಟ ಸಂಭವಿಸಿದರೆ, ಮಾರ್ಗಸೂಚಿಗಳ ಪ್ರಕಾರ ಅಂದಾಜು ₹18,000 ಕೋಟಿಯಿಂದ ₹20,000 ಕೋಟಿಯವರೆಗೆ ಪರಿಹಾರ ಕೋರಬೇಕಾಗಬಹುದು.
ಇವು ಪ್ರಾಥಮಿಕ ಅಂದಾಜುಗಳಾಗಿದ್ದು, ಅಂತಿಮ ಅಂಕಿಅಂಶಗಳಲ್ಲ. ನಷ್ಟದ ಸಂಪೂರ್ಣ ವಿವರಗಳು ಹಾಗೂ ಎನ್ಡಿಆರ್ಎಫ್ ಮಾರ್ಗಸೂಚಿಗಳ ಪ್ರಕಾರ ಲೆಕ್ಕಾಚಾರ ಪೂರ್ಣಗೊಂಡ ಬಳಿಕವೇ ಕೇಂದ್ರದಿಂದ ಕೋರಬೇಕಾದ ಪರಿಹಾರದ ಮೊತ್ತವನ್ನು ಅಂತಿಮಗೊಳಿಸಲಾಗುವುದು.
*ಎಸ್ಸಿ, ಎಸ್ಟಿ ಮೀಸಲಾತಿ ಹೆಚ್ಚಳ ರದ್ದು ಪಡಿಸಿರುವ ಹೈಕೋರ್ಟ್ ತೀರ್ಪಿನ ವಿರುದ್ಧ ಸುಪ್ರೀಂನಲ್ಲಿ ಮೇಲ್ಮನವಿ:
ಎಸ್ಸಿ, ಎಸ್ಟಿ ಮೀಸಲಾತಿ ಬಗ್ಗೆ ಹೈಕೋರ್ಟ್ ತೀರ್ಪಿಗೆ ಸಂಬಂಧಪಟ್ಟ ಪ್ರಕರಣದಲ್ಲಿ ಮೇಲ್ಮನವಿ ಸಲ್ಲಿಸಲು ನಿರ್ಧರಿಸಲಾಗಿದ್ದು, ಸುಪ್ರೀಂ ಕೋರ್ಟ್ನಲ್ಲಿ ವಿಶೇಷ ಅನುಮತಿ ಅರ್ಜಿ (ಎಸ್ಎಲ್ಪಿ) ಸಲ್ಲಿಸುವ ಕುರಿತು ತೀರ್ಮಾನ ಕೈಗೊಳ್ಳಲಾಗಿದೆ.
ಮುಂದಿನ ಕಾನೂನಾತ್ಮಕ ಹಾಗೂ ಆಡಳಿತಾತ್ಮಕ ಕ್ರಮಗಳ ಬಗ್ಗೆ ರಾಜಕೀಯ ವ್ಯವಹಾರಗಳ ಸಮಿತಿಯಲ್ಲಿ ಚರ್ಚಿಸಲಾಗುವುದು. ವಿಶೇಷವಾಗಿ 9ನೇ ಅನುಸೂಚಿಗೆ ಸೇರಿಸುವ ಸಾಧ್ಯತೆ ಸೇರಿದಂತೆ ಮುಂದಿನ ಕ್ರಮಗಳ ಕುರಿತು ಸಮಿತಿಯಲ್ಲಿ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು.
- ಸಚಿವ ಸಂಪುಟ ಸಭೆಯ ಬಳಿಕ ವಿಧಾನಸೌಧದ ಮುಂಭಾಗದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದೆ. -
Dr. G Parameshwara
@DrParameshwara
ಬರ ಪರಿಸ್ಥಿತಿ ಎದುರಾದ ದಿನದಿಂದ ರಾಜ್ಯದ ವಿವಿಧ ಜಿಲ್ಲೆಗಳಿಗೆ ಭೇಟಿ ನೀಡಿ, ಸಂಕಷ್ಟಕ್ಕೀಡಾಗಿರುವ ರೈತರು ಹಾಗೂ ಗ್ರಾಮೀಣ ಜನರ ಸಮಸ್ಯೆಗಳನ್ನು ಆಲಿಸಿ, ಅಗತ್ಯ ಪರಿಹಾರ ಕ್ರಮಗಳನ್ನು ಕೈಗೊಳ್ಳಲು ಆದ್ಯತೆ ನೀಡುತ್ತಿದ್ದೇವೆ.
ಈ ಹಿನ್ನೆಲೆಯಲ್ಲಿ ವಿಜಯನಗರ ಜಿಲ್ಲೆಯ ಬರಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ, ರೈತರೊಂದಿಗೆ ಚರ್ಚಿಸಿ, ಬರದಿಂದ ಜನಜೀವನದ ಮೇಲೆ ಉಂಟಾಗಿರುವ ಪರಿಣಾಮಗಳನ್ನು ಪರಿಶೀಲಿಸಿದ್ದೇನೆ. ಸಂಕಷ್ಟದಲ್ಲಿರುವ ಜನರಿಗೆ ಅಗತ್ಯ ನೆರವು ತ್ವರಿತವಾಗಿ ತಲುಪಿಸುವಂತೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದೇನೆ.
ಜಿಲ್ಲೆಯಲ್ಲಿ ಶೇ.57ರಷ್ಟು ಮಳೆ ಕೊರತೆಯಾಗಿದ್ದು, ಹೊಸಪೇಟೆ, ಹಡಗಲಿ ಹಾಗೂ ಹಗರಿಬೊಮ್ಮನಹಳ್ಳಿ ತಾಲ್ಲೂಕುಗಳು ತೀವ್ರ ಹಾನಿಗೊಳಗಾಗಿವೆ. 2,71,094 ಹೆಕ್ಟೇರ್ ಪ್ರದೇಶದಲ್ಲಿ ವಿವಿಧ ಕೃಷಿ ಬೆಳೆಗಳು ಹಾಗೂ 6,123 ಹೆಕ್ಟೇರ್ ಪ್ರದೇಶದಲ್ಲಿ ಈರುಳ್ಳಿ, ಟೊಮೆಟೊ ಮತ್ತು ಮೆಣಸಿನಕಾಯಿ ಬೆಳೆಗಳು ಹಾನಿಗೊಳಗಾಗಿವೆ. 32 ಗ್ರಾಮಗಳಲ್ಲಿ ಗ್ರೌಂಡ್ ಟ್ರೂಥಿಂಗ್ ಪೂರ್ಣಗೊಳಿಸಿ, ಜಿಲ್ಲೆಯ ಎಲ್ಲ 6 ತಾಲ್ಲೂಕುಗಳನ್ನು ಬರಪೀಡಿತವೆಂದು ಘೋಷಿಸಲಾಗಿದೆ.
ಜಿಲ್ಲೆಯಲ್ಲಿ 3,45,287 ರೈತರು ಬೆಳೆಹಾನಿಗೆ ಒಳಗಾಗಿದ್ದು, 1,65,359 ರೈತರು ಬೆಳೆ ವಿಮೆಗೆ ನೋಂದಾಯಿಸಿಕೊಂಡಿದ್ದಾರೆ. ಒಟ್ಟು 4,38,405 ಕೃಷಿ ಪ್ಲಾಟ್ಗಳ ಪೈಕಿ 3,31,587 ಪ್ಲಾಟ್ಗಳನ್ನು FRUITS ಪೋರ್ಟಲ್ಗೆ ಸೇರ್ಪಡೆ ಮಾಡಲಾಗಿದೆ. ಉಳಿದ ಮಾಹಿತಿಯನ್ನು ತಕ್ಷಣ ನವೀಕರಿಸಿ ರೈತರಿಗೆ ನೆರವು ತಲುಪಿಸುವಂತೆ ಸೂಚಿಸಿದ್ದೇನೆ.
ಬರದಿಂದ ಸಂಕಷ್ಟಕ್ಕೀಡಾಗಿರುವ ರೈತರಿಗೆ ರಾಜ್ಯ ಸರ್ಕಾರದಿಂದ ತಲಾ ₹2,500 ಪರಿಹಾರ ಒದಗಿಸಲಾಗುತ್ತಿದೆ. ಸಣ್ಣ, ಅತಿಸಣ್ಣ ರೈತರ ಹಿತ ಕಾಯುವ ದೃಷ್ಟಿಯಿಂದ ನೇಗಿಲ ಯೋಗಿ ಯೋಜನೆಯನ್ನು ಪರಿಚಯಿಸಿ ಉಳುಮೆಯ ವೆಚ್ಚವನ್ನು ಸರ್ಕಾರವೇ ಭರಿಸುತ್ತಿದೆ.
ಜಿಲ್ಲೆಯ 38 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಗುರುತಿಸಲಾಗಿದ್ದು, ನೀರು ಪೂರೈಕೆಗಾಗಿ 46 ಖಾಸಗಿ ಕೊಳವೆಬಾವಿಗಳನ್ನು ಬಾಡಿಗೆಗೆ ಪಡೆಯಲಾಗಿದೆ. ಕುಡಿಯುವ ನೀರಿನ ನಿರ್ವಹಣೆಗೆ ಟಾಸ್ಕ್ಫೋರ್ಸ್ ಅಡಿಯಲ್ಲಿ ₹4 ಕೋಟಿ ಬಿಡುಗಡೆ ಮಾಡಲಾಗಿದೆ. ₹2.86 ಕೋಟಿ ವೆಚ್ಚದಲ್ಲಿ ಕೈಗೆತ್ತಿಕೊಂಡಿರುವ 106 ಕಾಮಗಾರಿಗಳ ಪೈಕಿ 80 ಪೂರ್ಣಗೊಂಡಿದ್ದು, ಪ್ರಗತಿಯಲ್ಲಿರುವ ಕಾಮಗಾರಿಗಳನ್ನು ಶೀಘ್ರ ಪೂರ್ಣಗೊಳಿಸಲು ಸೂಚಿಸಿದ್ದೇನೆ. ಎರಡನೇ ಕಂತಿನಲ್ಲಿ ಕ್ಷೇತ್ರವಾರು ₹5 ಕೋಟಿ ಒದಗಿಸಲಾಗಿದೆ.
ಜಿಲ್ಲೆಯಲ್ಲಿ ಮುಂದಿನ 41 ವಾರಗಳಿಗೆ ಸಾಕಾಗುವಷ್ಟು 6,24,204 ಟನ್ ಮೇವು ಲಭ್ಯವಿದೆ. ಮಾರುಕಟ್ಟೆಯಲ್ಲಿ ಪ್ರತಿ ಟನ್ ಮೇವಿನ ದರ 10 ರಿಂದ 12 ಸಾವಿರ ಇದ್ದು, ರೈತರಿಗೆ ಹೊರೆಯಾಗದಂತೆ ₹7,000 ದರ ನಿಗದಿಪಡಿಸಲಾಗಿದೆ. ನೀರಾವರಿ ಸೌಲಭ್ಯವಿರುವ ರೈತರಿಗೆ 16,623 ಮೇವಿನ ಬೀಜದ ಕಿಟ್ಗಳನ್ನು ವಿತರಿಸಲಾಗಿದ್ದು, 1,400 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯ ಮೂಲಕ ಸುಮಾರು 45,000 ಟನ್ ಹಸಿರು ಮೇವು ಉತ್ಪಾದನೆಯ ನಿರೀಕ್ಷೆಯಿದೆ.
ಬರದಿಂದ ಗ್ರಾಮೀಣ ಜನರು ಉದ್ಯೋಗಕ್ಕಾಗಿ ಗುಳೆ ಹೋಗುವುದನ್ನು ತಡೆಯಲು ನರೇಗಾ ಯೋಜನೆಯಡಿ 27.74 ಲಕ್ಷ ಮಾನವ ದಿನಗಳ ಉದ್ಯೋಗ ಸೃಜಿಸಲಾಗಿದ್ದು, ಜಿಲ್ಲೆಯ 3.4 ಲಕ್ಷ ಜನರಿಗೆ ಸ್ಥಳೀಯವಾಗಿಯೇ ಉದ್ಯೋಗಾವಕಾಶ ಕಲ್ಪಿಸಲಾಗಿದೆ. ಬರಪೀಡಿತ ಪ್ರದೇಶಗಳಲ್ಲಿ ಸಾಂಕ್ರಾಮಿಕ ರೋಗಗಳು ಹರಡದಂತೆ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲು ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದೇನೆ.
ಬರ ಪರಿಸ್ಥಿತಿಯಿಂದ ರೈತರು ಹಾಗೂ ಗ್ರಾಮೀಣ ಜನರ ಜೀವನೋಪಾಯಕ್ಕೆ ಧಕ್ಕೆಯಾಗದಂತೆ ನೋಡಿಕೊಳ್ಳುವುದು ನಮ್ಮ ಜವಾಬ್ದಾರಿಯಾಗಿದೆ. ಕುಡಿಯುವ ನೀರು, ಮೇವು, ಉದ್ಯೋಗ ಹಾಗೂ ರೈತರ ಪರಿಹಾರಕ್ಕೆ ಮೊದಲ ಆದ್ಯತೆ ನೀಡಿ, ಸಂಕಷ್ಟದಲ್ಲಿರುವ ಜನರೊಂದಿಗೆ ನಮ್ಮ ಸರ್ಕಾರ ಸದಾ ನಿಲ್ಲಲಿದೆ.This media couldn't be displayed. See it on the original post. -
Dr. G Parameshwara
@DrParameshwara
Remembering Bharat Ratna Dr. A.P.J. Abdul Kalam on his 95th birth anniversary.
A visionary scientist, inspiring teacher and beloved People's President, Dr. Kalam dedicated his life to India's progress and the empowerment of its youth.
From advancing India's scientific achievements to igniting dreams in young minds, his journey exemplified humility, dedication and service to the nation. His enduring belief in education, innovation and the potential of young people continues to inspire generations to dream big and build a stronger, brighter India.
Heartfelt tributes to this extraordinary son of India whose ideals and legacy will forever inspire us.
#abdulkalam -
Dr. G Parameshwara
@DrParameshwara
ಬರದಿಂದ ಸಂಕಷ್ಟಕ್ಕೀಡಾಗಿರುವ ರೈತರ ಹಿತ ಕಾಪಾಡುವುದು, ಜನರಿಗೆ ಕುಡಿಯುವ ನೀರು, ಜಾನುವಾರುಗಳಿಗೆ ಮೇವು ಹಾಗೂ ಗ್ರಾಮೀಣ ಜನರಿಗೆ ಉದ್ಯೋಗದ ಭದ್ರತೆ ಒದಗಿಸುವುದು ನಮ್ಮ ಸರ್ಕಾರದ ಮೊದಲ ಆದ್ಯತೆಯಾಗಿದೆ.
ಈ ಹಿನ್ನೆಲೆಯಲ್ಲಿ ರಾಯಚೂರು ಜಿಲ್ಲೆಯ ಬರಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ, ಬರ ಪರಿಸ್ಥಿತಿ ಹಾಗೂ ಜನಜೀವನದ ಮೇಲಿನ ಪರಿಣಾಮಗಳನ್ನು ಪರಿಶೀಲಿಸಿದ್ದೇನೆ. ಅಗತ್ಯ ಪರಿಹಾರ ಕ್ರಮಗಳನ್ನು ತ್ವರಿತವಾಗಿ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದೇನೆ.
ಜಿಲ್ಲೆಯಲ್ಲಿ ಶೇ.49ರಷ್ಟು ಮಳೆಯಾಗಿದ್ದು, 2,81,345 ಹೆಕ್ಟೇರ್ ಪ್ರದೇಶದಲ್ಲಿ ಕೃಷಿ ಮತ್ತು ತೋಟಗಾರಿಕಾ ಬೆಳೆಗಳು ಹಾನಿಗೊಳಗಾಗಿವೆ. ಜಿಲ್ಲೆಯ ಎಲ್ಲ 7 ತಾಲ್ಲೂಕುಗಳನ್ನು ಬರಪೀಡಿತವೆಂದು ಘೋಷಿಸಲಾಗಿದೆ.
ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿ 1,32,860 ರೈತರು ನೋಂದಾಯಿಸಿಕೊಂಡಿದ್ದು, ಹತ್ತಿ ಮತ್ತು ಸೂರ್ಯಕಾಂತಿ ಬೆಳೆಗಳಿಗೆ ಸಂಬಂಧಿಸಿದಂತೆ Mid-Season Adversity ಅಡಿಯಲ್ಲಿ 53,988 ಅರ್ಜಿಗಳ ಮೂಲಕ ₹43.36 ಕೋಟಿ ವಿಮಾ ಕ್ಲೇಮ್ ಮಾಡಲಾಗಿದೆ. ವಿಮಾ ಕಂಪನಿಗಳೊಂದಿಗೆ ಸಮನ್ವಯ ಸಾಧಿಸಿ, ರೈತರಿಗೆ ವಿಮಾ ಹಣ ಶೀಘ್ರವಾಗಿ ತಲುಪಿಸಲು ಸೂಚಿಸಿದ್ದೇನೆ.
ಸಂಕಷ್ಟದಲ್ಲಿರುವ ರೈತರಿಗೆ ರಾಜ್ಯ ಸರ್ಕಾರದಿಂದ ತಲಾ ₹2,500 ಪರಿಹಾರ ಒದಗಿಸಲಾಗುತ್ತಿದೆ. ಸಣ್ಣ, ಅತಿಸಣ್ಣ ರೈತರ ಹಿತ ಕಾಯುವ ದೃಷ್ಟಿಯಿಂದ ನೇಗಿಲ ಯೋಗಿ ಯೋಜನೆಯನ್ನು ಪರಿಚಯಿಸಿ ಉಳುಮೆಯ ವೆಚ್ಚವನ್ನು ಸರ್ಕಾರವೇ ಭರಿಸುತ್ತಿದೆ.
ಜಿಲ್ಲೆಯ 30 ಗ್ರಾಮಗಳು ಹಾಗೂ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಗುರುತಿಸಲಾಗಿದ್ದು, ನೀರು ಪೂರೈಕೆಗಾಗಿ 35 ಖಾಸಗಿ ಕೊಳವೆಬಾವಿಗಳನ್ನು ಬಾಡಿಗೆಗೆ ಪಡೆಯಲಾಗಿದೆ. ತುರ್ತು ನೀರು ಪೂರೈಕೆಗಾಗಿ 320 ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದ್ದು, ಖಾಸಗಿ ಕೊಳವೆಬಾವಿಗಳ ಬಾಕಿ ಬಿಲ್ಗಳನ್ನು ತಕ್ಷಣ ಪಾವತಿಸಲು ಸೂಚಿಸಿದ್ದೇನೆ.
ಜಿಲ್ಲೆಯಲ್ಲಿ ಪ್ರಸ್ತುತ 31 ವಾರಗಳಿಗೆ ಸಾಕಾಗುವಷ್ಟು 5.70 ಲಕ್ಷ ಟನ್ ಮೇವು ಲಭ್ಯವಿದೆ. ಬೇಡಿಕೆಯಿರುವ 49,000 ಮೇವಿನ ಬೀಜದ ಕಿಟ್ಗಳ ಪೈಕಿ 16,644 ಕಿಟ್ಗಳನ್ನು ವಿತರಿಸಲಾಗಿದ್ದು, ಉಳಿದ ಕಿಟ್ಗಳ ವಿತರಣೆಯನ್ನು ಚುರುಕುಗೊಳಿಸಲು ನಿರ್ದೇಶನ ನೀಡಿದ್ದೇನೆ.
ಬರದ ಹಿನ್ನೆಲೆಯಲ್ಲಿ ಗ್ರಾಮೀಣ ಜನರ ವಲಸೆ ತಡೆಯಲು ವಿಬಿ ಜಿ ರಾಮ್ ಜಿ ಯೋಜನೆಯಡಿ 19.54 ಲಕ್ಷ ಮಾನವ ದಿನಗಳ ಉದ್ಯೋಗ ಸೃಜಿಸಿ, 4.82 ಲಕ್ಷ ಜನರಿಗೆ ಸ್ಥಳೀಯವಾಗಿ ಉದ್ಯೋಗಾವಕಾಶ ಕಲ್ಪಿಸಲಾಗಿದೆ. ಕಾರ್ಮಿಕರಿಗೆ ಬಾಕಿ ಇರುವ ₹12.73 ಕೋಟಿ ಕೂಲಿ ಮೊತ್ತವನ್ನು ತಕ್ಷಣ ಪಾವತಿಸಲು ಸೂಚಿಸಿದ್ದೇನೆ.
ಜಿಲ್ಲೆಯಲ್ಲಿ ಸಿಡಿಲು ಬಡಿದು ಮೃತಪಟ್ಟ ನಾಲ್ವರ ಕುಟುಂಬಗಳಿಗೆ ತಲಾ ₹20 ಲಕ್ಷ ಪರಿಹಾರ ನೀಡಲಾಗಿದೆ. 104 ಜಾನುವಾರುಗಳ ಪ್ರಾಣಹಾನಿಗೆ ₹11.13 ಲಕ್ಷ ಹಾಗೂ 48 ಮನೆಗಳ ಹಾನಿಗೂ ಪರಿಹಾರ ವಿತರಿಸಲಾಗಿದೆ. ತಹಶೀಲ್ದಾರ್ ಮತ್ತು ಜಿಲ್ಲಾಧಿಕಾರಿಗಳ ಪಿ.ಡಿ. ಖಾತೆಗಳಲ್ಲಿ ₹251.56 ಲಕ್ಷ ಲಭ್ಯವಿದ್ದು, ಅಗತ್ಯ ಪರಿಹಾರ ಕ್ರಮಗಳಿಗೆ ಬಳಸಲು ಸೂಚಿಸಿದ್ದೇನೆ.
ಬರ ಪರಿಸ್ಥಿತಿಯಿಂದ ರೈತರು ಹಾಗೂ ಗ್ರಾಮೀಣ ಜನರ ಜೀವನೋಪಾಯಕ್ಕೆ ತೊಂದರೆಯಾಗದಂತೆ ನೋಡಿಕೊಳ್ಳಲು, ಕುಡಿಯುವ ನೀರು, ಮೇವು, ಉದ್ಯೋಗ ಮತ್ತು ಪರಿಹಾರ ಕ್ರಮಗಳಿಗೆ ಆದ್ಯತೆ ನೀಡಿದ್ದೇವೆ. ಸಂಕಷ್ಟದಲ್ಲಿರುವ ಪ್ರತಿಯೊಬ್ಬರಿಗೂ ಅಗತ್ಯ ನೆರವು ತಲುಪಿಸುವ ನಿಟ್ಟಿನಲ್ಲಿ ನಮ್ಮ ಸರ್ಕಾರ ಬದ್ಧತೆಯಿಂದ ಕಾರ್ಯನಿರ್ವಹಿಸುತ್ತಿದೆ.This media couldn't be displayed. See it on the original post. -
Dr. G Parameshwara
@DrParameshwara
ತುಮಕೂರು ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರು ಹಾಗೂ ಕಾಂಗ್ರೆಸ್ ಪಕ್ಷದ ಮುಖಂಡರಾದ ಶ್ರೀ ದೇನಾ ನಾಯ್ಕ ಅವರ ಅಗಲಿಕೆ ದುಃಖವುಂಟುಮಾಡಿದೆ. ಅವರ ನಿಧನದ ಸುದ್ದಿ ಕೇಳಿ ಇಂದು ತುಮಕೂರಿನಲ್ಲಿರುವ ಅವರ ನಿವಾಸಕ್ಕೆ ತೆರಳಿ ಪಾರ್ಥಿವ ಶರೀರದ ದರ್ಶನ ಪಡೆದು, ಅಂತಿಮ ನಮನ ಸಲ್ಲಿಸಿದೆ. ಬಳಿಕ ಅವರ ಕುಟುಂಬಸ್ಥರನ್ನು ಭೇಟಿಯಾಗಿ ಸಾಂತ್ವನ ಹೇಳಿದೆ.
ದೇನಾ ನಾಯ್ಕ ಅವರ ಅಗಲಿಕೆಯ ದುಃಖವನ್ನು ಭರಿಸುವ ಶಕ್ತಿಯನ್ನು ಭಗವಂತನು ಕುಟುಂಬಸ್ಥರಿಗೆ ಕರುಣಿಸಲಿ. ಅಗಲಿದ ಅವರ ಆತ್ಮಕ್ಕೆ ಚಿರಶಾಂತಿ ದೊರೆಯಲಿ ಎಂದು ಪ್ರಾರ್ಥಿಸುತ್ತೇನೆ. -
Dr. G Parameshwara
@DrParameshwara
ಬರ ಪರಿಸ್ಥಿತಿಯ ಸಮಗ್ರ ಪರಿಶೀಲನೆ ನಡೆಸಿ, ಅರ್ಹ ತಾಲ್ಲೂಕುಗಳನ್ನು ಬರಪೀಡಿತ ಪಟ್ಟಿಗೆ ಸೇರ್ಪಡೆಗೊಳಿಸಲಾಗುತ್ತಿದೆ. ಹೊಸದಾಗಿ 9 ತಾಲ್ಲೂಕುಗಳನ್ನು ಬರಪೀಡಿತ ಎಂದು ಘೋಷಿಸಿದ್ದು, ಒಟ್ಟು ತಾಲ್ಲೂಕುಗಳ ಸಂಖ್ಯೆ 226ಕ್ಕೆ ಏರಿಕೆಯಾಗಿದೆ.
ಇತರೆ ತಾಲ್ಲೂಕುಗಳಲ್ಲಿ ಟ್ರಿಗರ್-1 ಮಾನದಂಡಗಳ ಪರಿಶೀಲನೆ ನಡೆಯುತ್ತಿದ್ದು, ಅರ್ಹತೆ ಪಡೆದ ತಾಲ್ಲೂಕುಗಳಲ್ಲಿ ಗ್ರೌಂಡ್ ಟ್ರೂಥಿಂಗ್ ಪ್ರಕ್ರಿಯೆ ಕೈಗೊಳ್ಳಲಾಗುವುದು.
ರೈತರಿಗೆ ಅಗತ್ಯ ನೆರವು ಒದಗಿಸುವ ನಿಟ್ಟಿನಲ್ಲಿ ಬರಪೀಡಿತ ತಾಲ್ಲೂಕುಗಳ ಗುರುತಿಸುವಿಕೆ ಹಾಗೂ ಪರಿಹಾರ ಕ್ರಮಗಳಿಗೆ ನಮ್ಮ ಸರ್ಕಾರ ಬದ್ಧವಾಗಿದೆ.
A comprehensive review of the drought situation is being carried out, and eligible taluks are being added to the drought-affected list.
9 more taluks have been declared drought-affected, taking the total number in the State to 226.
Assessment under the Trigger-1 criteria is underway in other taluks, and those that qualify will be taken up for ground truthing.
Our Government remains committed to identifying drought-affected taluks and ensuring necessary relief reaches farmers. -
Dr. G Parameshwara
@DrParameshwara
ಇಂದು ಬೆಂಗಳೂರಿನಲ್ಲಿರುವ ಇಸ್ರೋದ ಕೇಂದ್ರ ಕಚೇರಿ ‘ಅಂತರಿಕ್ಷ ಭವನ’ದಲ್ಲಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೋ) ಅಧ್ಯಕ್ಷರಾದ ಡಾ. ವಿ. ನಾರಾಯಣನ್ ಅವರನ್ನು ಸೌಹಾರ್ದಯುತವಾಗಿ ಭೇಟಿ ಮಾಡಿ ಮಾತುಕತೆ ನಡೆಸಿದೆ.
Today, I had a cordial meeting and discussion with Dr. V. Narayanan, Chairman of the Indian Space Research Organisation (ISRO), at ISRO Headquarters, Antariksh Bhavan, Bengaluru. -
Dr. G Parameshwara
@DrParameshwara
ರಾಜ್ಯದಲ್ಲಿ ಬರ ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸಲು ಹಾಗೂ ಸಂಕಷ್ಟದಲ್ಲಿರುವ ರೈತರ ಹಿತ ಕಾಪಾಡಲು ನಮ್ಮ ಸರ್ಕಾರ ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿದೆ.
ಈಗಾಗಲೇ 217 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಿದ್ದೆವು. ಇದೀಗ ವೈಜ್ಞಾನಿಕ ಮೌಲ್ಯಮಾಪನ ಹಾಗೂ ಸ್ಥಳ ಪರಿಶೀಲನೆಯ ಆಧಾರದಲ್ಲಿ ಹೊಸದಾಗಿ 9 ತಾಲ್ಲೂಕುಗಳನ್ನು ಬರಪೀಡಿತವೆಂದು ಘೋಷಿಸಿ ಆದೇಶ ಹೊರಡಿಸಿದ್ದೇವೆ. ಇದರೊಂದಿಗೆ ರಾಜ್ಯದಲ್ಲಿ ಬರಪೀಡಿತ ತಾಲ್ಲೂಕುಗಳ ಸಂಖ್ಯೆ 226ಕ್ಕೆ ಏರಿಕೆಯಾಗಿದೆ.
ಹೊಸದಾಗಿ ಘೋಷಿಸಲಾದ ತಾಲ್ಲೂಕುಗಳಲ್ಲಿ ಹಾಸನ ಜಿಲ್ಲೆಯ ಸಕಲೇಶಪುರ ತೀವ್ರ ಬರಪೀಡಿತವಾಗಿದ್ದು, ಬೆಳಗಾವಿ ಜಿಲ್ಲೆಯ ಖಾನಾಪುರ, ಶಿವಮೊಗ್ಗ ಜಿಲ್ಲೆಯ ಹೊಸನಗರ ಮತ್ತು ಸಾಗರ, ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು, ಮೂಡುಬಿದಿರೆ ಮತ್ತು ಮೂಲ್ಕಿ, ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ಮತ್ತು ದಾಂಡೇಲಿ ಸೇರಿದಂತೆ 8 ತಾಲ್ಲೂಕುಗಳು ಮಧ್ಯಮ ಬರಪೀಡಿತವಾಗಿವೆ.
ಇನ್ನುಳಿದ ತಾಲೂಕುಗಳಲ್ಲೂ ಬರ ಪರಿಸ್ಥಿತಿಯ ಮೇಲ್ವಿಚಾರಣೆ ಮುಂದುವರಿಯಲಿದ್ದು, ಮಾನದಂಡಗಳಿಗೆ ಒಳಪಟ್ಟಲ್ಲಿ ಮುಂದಿನ ಹಂತದಲ್ಲಿ ಹೆಚ್ಚುವರಿ ತಾಲೂಕುಗಳನ್ನು ಬರಪೀಡಿತ ಪಟ್ಟಿಗೆ ಸೇರಿಸಲಾಗುವುದು.
ಬರದಿಂದ ರೈತರ ಜೀವನೋಪಾಯಕ್ಕೆ ತೊಂದರೆಯಾಗದಂತೆ ನೋಡಿಕೊಳ್ಳುವುದು, ಬೆಳೆಹಾನಿಗೆ ಸೂಕ್ತ ಪರಿಹಾರ ಒದಗಿಸುವುದು ಹಾಗೂ ಗ್ರಾಮೀಣ ಜನರ ಹಿತ ಕಾಯುವುದು ನಮ್ಮ ಸರ್ಕಾರದ ಆದ್ಯತೆಯಾಗಿದೆ.
Our Government is taking necessary measures to effectively manage the drought situation across the State and protect the interests of farmers facing distress.
We had already declared 217 taluks drought-affected. Based on scientific assessment and field verification, 9 more taluks have now been declared drought-affected, taking the total to 226.
Among the newly declared taluks, Sakleshpur in Hassan district has been classified as severely drought-affected, while Khanapur in Belagavi, Hosanagara and Sagara in Shivamogga, Puttur, Moodbidri and Mulki in Dakshina Kannada, and Joida and Dandeli in Uttara Kannada have been classified as moderately drought-affected.
Monitoring will continue in the remaining taluks, and those meeting the prescribed criteria will be added to the drought-affected list in the next phase.
Protecting farmers’ livelihoods, providing appropriate relief for crop loss and safeguarding rural communities remain priorities for our Government. -
Dr. G Parameshwara
@DrParameshwara
ವಿಧಾನಸೌಧದಲ್ಲಿ ಇಂದು ಝೆಕ್ ಗಣರಾಜ್ಯದ ಉಪ ಪ್ರಧಾನಮಂತ್ರಿ ಶ್ರೀ ಕಾರೆಲ್ ಹಾವ್ಲಿಕ್ ಅವರ ನೇತೃತ್ವದ ನಿಯೋಗದವರೊಂದಿಗೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಜೊತೆಗೂಡಿ ಸಮಾಲೋಚನೆ ನಡೆಸಿದೆ.
ಕರ್ನಾಟಕ ಮತ್ತು ಝೆಕ್ ಗಣರಾಜ್ಯದ ನಡುವಿನ ಪರಸ್ಪರ ಸಹಕಾರ ಹಾಗೂ ಬಾಂಧವ್ಯವನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಈ ಭೇಟಿ ಮಹತ್ವದ್ದಾಗಿದೆ.
ಸಚಿವರಾದ ಎಂ.ಬಿ. ಪಾಟೀಲ್, ಸಂಸದರು ಹಾಗೂ ಮುಖ್ಯಮಂತ್ರಿಗಳ ಮುಖ್ಯ ಸಲಹೆಗಾರರಾದ ಡಾ. ಜಿ.ಸಿ. ಚಂದ್ರಶೇಖರ್, ಝೆಕ್ ಗಣರಾಜ್ಯದ ವಿದೇಶಾಂಗ ಸಚಿವೆ ಮರಿಯಾ ಚಟರ್ಡೋವ ಸೇರಿದಂತೆ ನಿಯೋಗದ ಪ್ರತಿನಿಧಿಗಳಾದ ಮಾರೆಟ್ ಲಿಬ್ರರ್ಕಿ, ಕ್ಯಾತರಿನ ಗಜುರ್ನೋವಾ, ರಿಚರ್ಡ್ ಲಾವರ್ಟಿ, ಮಿರೋಸ್ಲಾವ್ ಒಕ್ರೂಲಿ, ಕ್ಯಾತರಿನ ಪೀಟರ್ಸನ್, ಕ್ಯಾತರಿನ ವವ್ಕೊವಾ, ಜನ್ ರಾಫಾಜ್, ಗುನ್ನತ್ ಚೌಧರಿ, ರಾಜ್ಯದ ಅಪರ ಮುಖ್ಯ ಕಾರ್ಯದರ್ಶಿ ತುಷಾರ್ ಗಿರಿನಾಥ್ ಹಾಗೂ ಇತರರು ಉಪಸ್ಥಿತರಿದ್ದರು.
Today at Vidhana Soudha, along with Chief Minister D.K. Shivakumar, I held discussions with a delegation led by Czech Republic Deputy Prime Minister Karel Havlíček.
The meeting was significant in further strengthening cooperation and ties between Karnataka and the Czech Republic.
Minister M.B. Patil, MP and Chief Minister’s Chief Advisor Dr. G.C. Chandrashekhar, Czech Foreign Minister Marie Chatardová, delegation members Marek Libřický, Kateřina Gajurnová, Richard Hlavatý, Miroslav Okrouhlý, Kateřina Petersen, Kateřina Vovková, Jan Rafaj and Gunnat Choudhary, Additional Chief Secretary Tushar Girinath, and others were present. -
Dr. G Parameshwara
@DrParameshwara
The final memorandum on the losses caused by drought across the State is being prepared and is likely to be completed within another week.
Today, nine more taluks are being declared drought-affected, taking the total number to 226. Ground truthing has been completed in these taluks. In a few remaining taluks, assessment under the Trigger-1 criteria is underway, and those that qualify will be taken up for ground truthing.
The final memorandum will provide a clearer estimate of the overall drought loss. Based on this assessment, the relief amount to be sought will be calculated in accordance with NDRF guidelines.
Last year, Karnataka sought around ₹18,000 crore in drought relief. This year, losses have affected almost the entire State, with 226 taluks already being declared drought-affected. If additional taluks qualify, the total loss will increase further, and the amount of relief sought from the Centre is also likely to be higher.
The State Government has requested the Centre to relax the NDRF guidelines for drought relief. Chief Minister D.K. Shivakumar and I have written to the Centre in this regard. I have received a response from the Union Agriculture Minister stating that the matter will be examined. Apart from this, no further response has been received from the Centre.
Once the final memorandum is ready, a decision will be taken on a delegation comprising the Chief Minister, myself and others visiting Delhi. The delegation will personally submit the memorandum to the Union Government, place the details of Karnataka’s drought losses before it and seek appropriate relief.
*SC-ST Reservation: Cabinet to Discuss High Court Verdict:
The High Court verdict concerning SC-ST reservation will be placed before tomorrow’s Cabinet meeting for discussion.
The Cabinet will consider whether the State Government should file an appeal before the Supreme Court or request the Government of India to include the reservation law in the Ninth Schedule of the Constitution. Further action will be taken based on the Cabinet’s decision.
- My remarks to the media near my residence today. -
Dr. G Parameshwara
@DrParameshwara
ರಾಜ್ಯದಲ್ಲಿ ಬರದಿಂದ ಉಂಟಾಗಿರುವ ನಷ್ಟದ ಕುರಿತು ಅಂತಿಮ ಮೆಮೊರಾಂಡಮ್ ಸಿದ್ಧಪಡಿಸಲಾಗುತ್ತಿದ್ದು, ಬಹುಶಃ ಇನ್ನೊಂದು ವಾರದಲ್ಲಿ ಈ ಪ್ರಕ್ರಿಯೆ ಪೂರ್ಣಗೊಳ್ಳಲಿದೆ.
ಇಂದು ಮತ್ತೆ 9 ತಾಲೂಕುಗಳನ್ನು ಬರಪೀಡಿತ ತಾಲೂಕುಗಳೆಂದು ಘೋಷಿಸಲಾಗುತ್ತಿದ್ದು, ಈ ಮೂಲಕ ಬರಪೀಡಿತ ತಾಲೂಕುಗಳ ಸಂಖ್ಯೆ 226ಕ್ಕೆ ಏರಿಕೆಯಾಗಲಿದೆ. ಈ ತಾಲೂಕುಗಳಲ್ಲಿ ಗ್ರೌಂಡ್ ಟ್ರೂಥಿಂಗ್ ಪ್ರಕ್ರಿಯೆ ಪೂರ್ಣಗೊಂಡಿದೆ. ಇನ್ನುಳಿದ ಕೆಲವು ತಾಲೂಕುಗಳಲ್ಲಿ ಟ್ರಿಗರ್-1 ಮಾನದಂಡಗಳ ಪರಿಶೀಲನೆ ನಡೆಯುತ್ತಿದೆ. ಅವುಗಳು ಅರ್ಹತೆ ಪಡೆದರೆ ಗ್ರೌಂಡ್ ಟ್ರೂಥಿಂಗ್ಗೆ ಕಳುಹಿಸಲಾಗುವುದು.
ರಾಜ್ಯದಲ್ಲಿ ಬರದಿಂದ ಉಂಟಾಗಿರುವ ಒಟ್ಟು ನಷ್ಟದ ಅಂದಾಜು ಅಂತಿಮ ಮೆಮೊರಾಂಡಮ್ ಸಿದ್ಧಪಡಿಸುವ ಸಂದರ್ಭದಲ್ಲಿ ಸ್ಪಷ್ಟವಾಗಲಿದೆ. ಅದರ ಪ್ರಮಾಣಕ್ಕೆ ಅನುಗುಣವಾಗಿ ಎನ್ಡಿಆರ್ಎಫ್ (NDRF) ಮಾರ್ಗಸೂಚಿಗಳ ಪ್ರಕಾರ ಪರಿಹಾರದ ಮೊತ್ತವನ್ನು ಲೆಕ್ಕಹಾಕಲಾಗುವುದು. ಕಳೆದ ವರ್ಷ ಸುಮಾರು ₹18,000 ಕೋಟಿ ಪರಿಹಾರ ಕೋರಲಾಗಿತ್ತು. ಈ ಬಾರಿ ಇಡೀ ರಾಜ್ಯದಲ್ಲಿ ನಷ್ಟ ಸಂಭವಿಸಿದ್ದು, ಈಗಾಗಲೇ 226 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸುವ ಹಂತ ತಲುಪಿದ್ದೇವೆ. ಇನ್ನಷ್ಟು ತಾಲೂಕುಗಳು ಅರ್ಹತೆ ಪಡೆದರೆ ನಷ್ಟದ ಪ್ರಮಾಣ ಮತ್ತಷ್ಟು ಹೆಚ್ಚಾಗಲಿದೆ. ಹೀಗಾಗಿ, ಈ ಬಾರಿ ಕೇಂದ್ರದಿಂದ ಕೋರಲಾಗುವ ಪರಿಹಾರದ ಮೊತ್ತವೂ ಹೆಚ್ಚಾಗುವ ಸಾಧ್ಯತೆಯಿದೆ.
ಬರ ಪರಿಹಾರಕ್ಕೆ ಸಂಬಂಧಿಸಿದಂತೆ ಎನ್ಡಿಆರ್ಎಫ್ ಮಾರ್ಗಸೂಚಿಗಳನ್ನು ಸಡಿಲಗೊಳಿಸುವಂತೆ ರಾಜ್ಯ ಸರ್ಕಾರ ಕೇಂದ್ರಕ್ಕೆ ಮನವಿ ಸಲ್ಲಿಸಿದೆ. ಈ ಕುರಿತು ನಾನು ಮತ್ತು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಪತ್ರ ಬರೆದಿದ್ದೇವೆ. ಇದಕ್ಕೆ ಸಂಬಂಧಿಸಿದಂತೆ ನನಗೆ ಕೇಂದ್ರ ಕೃಷಿ ಸಚಿವರಿಂದ ಪತ್ರ ಬಂದಿದ್ದು, ವಿಷಯವನ್ನು ಪರಿಶೀಲಿಸುವುದಾಗಿ ತಿಳಿಸಿದ್ದಾರೆ. ಇದನ್ನು ಹೊರತುಪಡಿಸಿ ಕೇಂದ್ರದಿಂದ ಬೇರೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.
ಅಂತಿಮ ಮೆಮೊರಾಂಡಮ್ ಸಿದ್ಧವಾದ ಬಳಿಕ ಮುಖ್ಯಮಂತ್ರಿ, ನಾನು ಹಾಗೂ ಇತರರನ್ನು ಒಳಗೊಂಡ ನಿಯೋಗ ದೆಹಲಿ ಭೇಟಿಯ ಕುರಿತು ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು. ನಿಯೋಗವು ಖುದ್ದಾಗಿ ದೆಹಲಿಗೆ ತೆರಳಿ ಕೇಂದ್ರ ಸರ್ಕಾರಕ್ಕೆ ಮೆಮೊರಾಂಡಮ್ ಸಲ್ಲಿಸಲಿದೆ. ನಷ್ಟದ ವಿವರವನ್ನು ಪ್ರಸ್ತಾಪಿಸಿ ಪರಿಹಾರಕ್ಕೆ ಕೋರಲಾಗುವುದು.
*ಎಸ್ಸಿ-ಎಸ್ಟಿ ಮೀಸಲಾತಿ ಕುರಿತ ಹೈಕೋರ್ಟ್ ತೀರ್ಪಿನ ಬಗ್ಗೆ ಸಚಿವ ಸಂಪುಟದಲ್ಲಿ ಚರ್ಚಿಸಿ ಮುಂದಿನ ತೀರ್ಮಾನ*
ಎಸ್ಸಿ-ಎಸ್ಟಿ ಮೀಸಲಾತಿಗೆ ಸಂಬಂಧಿಸಿದಂತೆ ಹೈಕೋರ್ಟ್ ತೀರ್ಪು ವಿಚಾರವಾಗಿ ನಾಳೆ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಪ್ರಸ್ತಾಪಿಸಿ ಚರ್ಚಿಸಲಾಗುವುದು.
ಈ ವಿಚಾರದಲ್ಲಿ ಸುಪ್ರೀಂ ಕೋರ್ಟ್ಗೆ ಮೇಲ್ಮನವಿ ಸಲ್ಲಿಸಬೇಕೇ ಅಥವಾ ಒಂಬತ್ತನೇ ಶೆಡ್ಯೂಲ್ಗೆ ಸೇರಿಸುವಂತೆ ಭಾರತ ಸರ್ಕಾರಕ್ಕೆ ಮನವಿ ಸಲ್ಲಿಸಬೇಕೇ ಎಂಬುದರ ಕುರಿತು ಸಂಪುಟದಲ್ಲಿ ಚರ್ಚಿಸಿ ತೀರ್ಮಾನ ಕೈಗೊಳ್ಳಬೇಕಿದೆ. ಸಚಿವ ಸಂಪುಟದ ನಿರ್ಧಾರದ ಬಳಿಕ ಮುಂದಿನ ಕ್ರಮಗಳನ್ನು ಕೈಗೊಳ್ಳಲಾಗುವುದು.
• ಇಂದು ನನ್ನ ನಿವಾಸದ ಬಳಿ ಮಾಧ್ಯಮದವರೊಂದಿಗೆ ಮಾತನಾಡಿದೆ. -
Dr. G Parameshwara
@DrParameshwara
ದಲಿತ ಸಮರ ಸೇನೆ ಕರ್ನಾಟಕ ಹಾಗೂ ಸ್ಲಂ ಜನರ ಕ್ರಿಯಾ ವೇದಿಕೆ ಬೆಂಗಳೂರು ಪರವಾಗಿ ಅನೇಕರು ನನ್ನನ್ನು ಭೇಟಿಯಾಗಿ ರಾಯಚೂರು ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ವಾಸಿಸುತ್ತಿರುವ ನಿವೇಶನ ಹಾಗೂ ವಸತಿ ರಹಿತ ಸ್ಲಂ ಮತ್ತು ವಿಶೇಷ ವರ್ಗ, ವಿಶೇಷ ಪ್ರವರ್ಗ, ವಿಶೇಷ ವೃತ್ತಿಪರ ಗುಂಪುಗಳಿಗೆ ಸರ್ಕಾರ ಹೊರಡಿಸಿರುವ ಸುತ್ತೋಲೆಯಂತೆ ವಸತಿ ನಿವೇಶನ ಹಾಗೂ ಮೂಲಭೂತ ಸೌಕರ್ಯಗಳನ್ನು ಒದಗಿಸುವಂತೆ ಮನವಿ ಮಾಡಿದರು.
-
Dr. G Parameshwara
@DrParameshwara
ಮೀಸಲಾತಿ ಹೆಚ್ಚಳಕ್ಕೆ ಸಾಂವಿಧಾನಿಕ ರಕ್ಷಣೆ ಒದಗಿಸುವುದು ಮತ್ತು ಸಾಮಾಜಿಕ ನ್ಯಾಯವನ್ನು ಎತ್ತಿಹಿಡಿಯುವುದು ಇಂದಿನ ಅಗತ್ಯವಾಗಿದೆ. ಕರ್ನಾಟಕದ ಮೀಸಲಾತಿ ಕಾಯ್ದೆಯನ್ನು ಒಂಬತ್ತನೇ ಅನುಸೂಚಿಗೆ ಸೇರಿಸುವುದು, ಶೇ. 50ರ ಮಿತಿಯನ್ನು ಮರುಪರಿಶೀಲಿಸುವುದು ಹಾಗೂ ಸಮಾನ ಅವಕಾಶಗಳನ್ನು ಖಚಿತಪಡಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ತ್ವರಿತ ಕ್ರಮ ಕೈಗೊಳ್ಳಬೇಕು.
ಮೀಸಲಾತಿ ರಾಜಕೀಯ ಘೋಷಣೆಯಾಗದೆ, ಅವಕಾಶವಂಚಿತ ಸಮುದಾಯಗಳ ಬದುಕಿನಲ್ಲಿ ನೈಜ ಬದಲಾವಣೆ ತರಬೇಕು. ಮುಂದಿನ ತಲೆಮಾರುಗಳು ಹೆಚ್ಚಿನ ಅವಕಾಶಗಳೊಂದಿಗೆ ಉತ್ತಮ ಭವಿಷ್ಯ ಹೊಂದುವಂತಾಗಲು ಸಾಮಾಜಿಕ ನ್ಯಾಯಕ್ಕೆ ಶಾಶ್ವತ ಸಾಂವಿಧಾನಿಕ ರಕ್ಷಣೆ ದೊರೆಯಬೇಕು.
Providing constitutional protection to enhanced reservation and upholding social justice is the need of the hour. The Union Government must act swiftly to include Karnataka’s reservation law in the Ninth Schedule of the Constitution, revisit the 50% ceiling, and ensure equal opportunities.
Reservation must not remain a political announcement; it must bring real change to communities that have long been denied opportunities. Permanent constitutional safeguards are essential to ensure that future generations have greater opportunities and a better future. -
Dr. G Parameshwara
@DrParameshwara
ಕರ್ನಾಟಕದ ಮೀಸಲಾತಿ ಹೆಚ್ಚಳಕ್ಕೆ ಸಾಂವಿಧಾನಿಕ ರಕ್ಷಣೆ ಒದಗಿಸುವ ವಿಚಾರದಲ್ಲಿ ಕೇಂದ್ರ ಸರ್ಕಾರದ ವಿಳಂಬ ಧೋರಣೆ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ರಾಜ್ಯದ ಮೀಸಲಾತಿ ಕಾಯ್ದೆಯನ್ನು ಸಂವಿಧಾನದ ಒಂಬತ್ತನೇ ಅನುಸೂಚಿಗೆ ಸೇರಿಸುವ ಪ್ರಸ್ತಾವನೆಯ ಕುರಿತು ಕೇಂದ್ರ ಸರ್ಕಾರ ತನ್ನ ನಿಲುವನ್ನು ಸ್ಪಷ್ಟಪಡಿಸಿ, ಅಗತ್ಯ ಕ್ರಮಗಳನ್ನು ತ್ವರಿತವಾಗಿ ಕೈಗೊಳ್ಳಬೇಕು.
ಮೀಸಲಾತಿ ರಾಜಕೀಯ ಘೋಷಣೆಯಲ್ಲ; ತಲೆಮಾರುಗಳಿಂದ ಅವಕಾಶವಂಚಿತರಾಗಿರುವ ಸಮುದಾಯಗಳಿಗೆ ಸಾಮಾಜಿಕ ನ್ಯಾಯ ಮತ್ತು ಸಮಾನ ಅವಕಾಶ ಕಲ್ಪಿಸುವ ಸಾಂವಿಧಾನಿಕ ಸಾಧನವಾಗಿದೆ. ಕರ್ನಾಟಕದ ಮೀಸಲಾತಿ ಕಾಯ್ದೆಗೆ ಶಾಶ್ವತ ಸಾಂವಿಧಾನಿಕ ರಕ್ಷಣೆ ಒದಗಿಸುವುದರ ಜೊತೆಗೆ, ಶೇ. 50ರ ಮಿತಿಯನ್ನು ಮರುಪರಿಶೀಲಿಸುವ ಮೂಲಕ ಮೀಸಲಾತಿಯ ಉದ್ದೇಶವನ್ನು ಪರಿಣಾಮಕಾರಿಯಾಗಿ ಸಾಕಾರಗೊಳಿಸಬೇಕಿದೆ.
The Union Government’s delay in providing constitutional protection to Karnataka’s enhanced reservation raises several questions. It must clarify its position on the proposal to include the State’s reservation law in the Ninth Schedule of the Constitution and take the necessary steps without further delay.
Reservation is not a political announcement; it is a constitutional instrument to ensure social justice and equal opportunity for communities that have been denied opportunities for generations.
Along with providing permanent constitutional protection to Karnataka’s reservation law, the 50% ceiling also needs to be revisited so that the purpose of reservation can be realised effectively. -
Dr. G Parameshwara
@DrParameshwara
ಮೀಸಲಾತಿ ಹೆಚ್ಚಳದ ಕಾಯ್ದೆಯನ್ನು ಹೈಕೋರ್ಟ್ ರದ್ದುಗೊಳಿಸಿರುವುದು ರಾಜ್ಯದ ಸಾಮಾಜಿಕ ನ್ಯಾಯ, ಶಿಕ್ಷಣ ಮತ್ತು ಸರ್ಕಾರಿ ಉದ್ಯೋಗಗಳಲ್ಲಿನ ಸಮಾನ ಅವಕಾಶಗಳ ಕುರಿತು ಕಳವಳ ಮೂಡಿಸಿದೆ.
ಒಟ್ಟು ಮೀಸಲಾತಿ ಪ್ರಮಾಣ ಶೇ. 56ಕ್ಕೆ ಏರಿಕೆಯಾಗುವ ಮೂಲಕ ಶೇ. 50ರ ಮಿತಿಯನ್ನು ಮೀರುವ ಸಾಧ್ಯತೆ ತಿಳಿದಿದ್ದರೂ, ಅಗತ್ಯವಾದ ಸಾಂವಿಧಾನಿಕ ರಕ್ಷಣೆಯ ಚೌಕಟ್ಟನ್ನು ರೂಪಿಸದೆ ಚುನಾವಣೆಗೆ ಮುನ್ನ ಕಾಯ್ದೆ ಜಾರಿಗೊಳಿಸಿದ್ದ ಹಿಂದಿನ ಬಿಜೆಪಿ ಸರ್ಕಾರದ ಕ್ರಮ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಮೀಸಲಾತಿ ಹೆಚ್ಚಳವು ಕೇವಲ ಘೋಷಣೆಗೆ ಸೀಮಿತವಾಗದೆ, ಕಾನೂನಿನ ದೃಷ್ಟಿಯಿಂದ ಸುಸ್ಥಿರವಾಗಿರಬೇಕು. ಸಾಮಾಜಿಕ ನ್ಯಾಯ ಮತ್ತು ಅವಕಾಶವಂಚಿತ ಸಮುದಾಯಗಳ ಹಕ್ಕುಗಳನ್ನು ರಕ್ಷಿಸಲು ಶಾಶ್ವತ ಸಾಂವಿಧಾನಿಕ ಪರಿಹಾರ ಕಲ್ಪಿಸುವುದು ಅತ್ಯಗತ್ಯ.
The High Court’s decision to strike down the law enhancing reservation has raised concerns over social justice and equal opportunities in education and Government employment.
Even though aware that the increase would have taken total reservation to 56%, beyond the 50% ceiling, the previous BJP Government enacted the law before the elections without first creating the necessary framework for constitutional protection, raising several questions.
An increase in reservation must not remain merely an announcement; it must also be legally sustainable. A permanent constitutional solution is essential to protect social justice and the rights of communities that have historically been denied opportunities. -
Dr. G Parameshwara
@DrParameshwara
To strengthen disaster early warning systems, we must effectively use Artificial Intelligence (AI), satellite imagery, geospatial information and scientific forecasting.
Information from scientific institutions, including the Karnataka State Natural Disaster Monitoring Centre, must reach district administrations, Gram Panchayats and every vulnerable family in time.
Issuing a warning alone is not enough. We need systems that can determine which areas are at risk, when action is required, and whose protection must be prioritised based on that warning.
(From my address on the occasion of International Day for Disaster Risk Reduction)
ವಿಪತ್ತು ಮುನ್ನೆಚ್ಚರಿಕೆ ವ್ಯವಸ್ಥೆಯನ್ನು ಬಲಪಡಿಸಲು ಕೃತಕ ಬುದ್ಧಿಮತ್ತೆ (AI), ಉಪಗ್ರಹ ಚಿತ್ರಣ, ಭೌಗೋಳಿಕ ಮಾಹಿತಿ ಮತ್ತು ವೈಜ್ಞಾನಿಕ ಮುನ್ಸೂಚನೆಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಬೇಕು. ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ನಿರ್ವಹಣಾ ಕೇಂದ್ರವೂ ಸೇರಿದಂತೆ ವೈಜ್ಞಾನಿಕ ಸಂಸ್ಥೆಗಳ ಮಾಹಿತಿಯನ್ನು ಜಿಲ್ಲಾಡಳಿತ, ಗ್ರಾಮ ಪಂಚಾಯಿತಿಗಳು ಮತ್ತು ಅಪಾಯಕ್ಕೆ ಒಳಗಾಗುವ ಪ್ರತಿಯೊಂದು ಕುಟುಂಬಕ್ಕೂ ಸಕಾಲದಲ್ಲಿ ತಲುಪಿಸುವ ವ್ಯವಸ್ಥೆ ರೂಪಿಸಬೇಕು.
ಕೇವಲ ವಿಪತ್ತಿನ ಎಚ್ಚರಿಕೆ ನೀಡುವುದು ಸಾಕಾಗುವುದಿಲ್ಲ. ಆ ಎಚ್ಚರಿಕೆಯ ಆಧಾರದಲ್ಲಿ ಯಾವ ಪ್ರದೇಶದಲ್ಲಿ, ಯಾವ ಸಮಯದಲ್ಲಿ, ಯಾರ ರಕ್ಷಣೆಗೆ ಆದ್ಯತೆ ನೀಡಬೇಕು ಎಂಬುದನ್ನು ನಿರ್ಧರಿಸುವ ವ್ಯವಸ್ಥೆ ಅಗತ್ಯ.
(ಅಂತಾರಾಷ್ಟ್ರೀಯ ವಿಪತ್ತು ಅಪಾಯ ಕಡಿತ ದಿನದ ಅಂಗವಾಗಿ ನಾನು ಮಾಡಿದ ಭಾಷಣದಿಂದ) -
Dr. G Parameshwara
@DrParameshwara
Disaster management must not be limited to rescue operations and relief after a disaster. We must identify risks in advance and strengthen systems that protect people’s lives and livelihoods before disaster strikes.
Development should not be measured only by economic growth, investment and infrastructure. People’s safety and protection of livelihoods must also be key measures of development. A single flood, drought or landslide can wipe out years of a family’s hard work in moments.
That is why prevention and preparedness must receive greater priority than post-disaster relief.
(From my address on the occasion of International Day for Disaster Risk Reduction)
ವಿಪತ್ತು ಸಂಭವಿಸಿದ ನಂತರ ರಕ್ಷಣಾ ಕಾರ್ಯಾಚರಣೆ ಮತ್ತು ಪರಿಹಾರ ವಿತರಣೆಗೆ ಸೀಮಿತವಾಗದೆ, ವಿಪತ್ತು ಸಂಭವಿಸುವ ಮೊದಲೇ ಅಪಾಯಗಳನ್ನು ಗುರುತಿಸಿ, ಜನರ ಜೀವ ಹಾಗೂ ಜೀವನೋಪಾಯವನ್ನು ರಕ್ಷಿಸುವ ವ್ಯವಸ್ಥೆಯನ್ನು ಬಲಪಡಿಸಬೇಕು.
ರಾಜ್ಯದ ಅಭಿವೃದ್ಧಿಯನ್ನು ಕೇವಲ ಆರ್ಥಿಕ ಪ್ರಗತಿ, ಬಂಡವಾಳ ಹೂಡಿಕೆ ಮತ್ತು ಮೂಲಸೌಕರ್ಯ ನಿರ್ಮಾಣದಿಂದ ಅಳೆಯಬಾರದು. ಜನರ ಸುರಕ್ಷತೆ ಮತ್ತು ಜೀವನೋಪಾಯದ ರಕ್ಷಣೆಯೂ ಅಭಿವೃದ್ಧಿಯ ಪ್ರಮುಖ ಮಾನದಂಡವಾಗಬೇಕು.
ಒಂದು ಪ್ರವಾಹ, ಬರ ಅಥವಾ ಭೂಕುಸಿತವು ಕುಟುಂಬವೊಂದರ ಹಲವು ವರ್ಷಗಳ ಪರಿಶ್ರಮವನ್ನು ಕ್ಷಣಾರ್ಧದಲ್ಲಿ ನಾಶಪಡಿಸಬಹುದು. ಆದ್ದರಿಂದ ವಿಪತ್ತು ನಿರ್ವಹಣೆಯಲ್ಲಿ ಪರಿಹಾರಕ್ಕಿಂತ ಮುನ್ನೆಚ್ಚರಿಕೆ ಮತ್ತು ಪೂರ್ವ ಸಿದ್ಧತೆಗೆ ಹೆಚ್ಚಿನ ಆದ್ಯತೆ ನೀಡಬೇಕು.
(ಅಂತಾರಾಷ್ಟ್ರೀಯ ವಿಪತ್ತು ಅಪಾಯ ಕಡಿತ ದಿನದ ಅಂಗವಾಗಿ ನಾನು ಮಾಡಿದ ಭಾಷಣದಿಂದ) -
Dr. G Parameshwara
@DrParameshwara
Natural disasters cannot be prevented entirely, but the damage and hardship they cause can be reduced. Preparedness, scientific planning and public awareness are essential to achieve this.
In this regard, our goal is to make Karnataka a national model in disaster risk reduction by 2030.
(From my address on the occasion of International Day for Disaster Risk Reduction)
ಪ್ರಕೃತಿ ವಿಕೋಪಗಳನ್ನು ಸಂಪೂರ್ಣವಾಗಿ ತಡೆಯಲು ಸಾಧ್ಯವಿಲ್ಲ. ಆದರೆ ಅವುಗಳಿಂದ ಉಂಟಾಗುವ ಕಷ್ಟನಷ್ಟಗಳನ್ನು ಕಡಿಮೆ ಮಾಡಬಹುದು. ಇದಕ್ಕಾಗಿ ಮುನ್ನೆಚ್ಚರಿಕೆ, ವೈಜ್ಞಾನಿಕ ಯೋಜನೆ, ಜನಜಾಗೃತಿ ಅತ್ಯಗತ್ಯ.
ಈ ನಿಟ್ಟಿನಲ್ಲಿ 2030ರ ವೇಳೆಗೆ ಕರ್ನಾಟಕವನ್ನು ವಿಪತ್ತಿನಿಂದ ಸಂಭವಿಸಬಹುದಾದ ಅಪಾಯವನ್ನು ಕಡಿಮೆಗೊಳಿಸುವ ನಿಟ್ಟಿನಲ್ಲಿ ದೇಶಕ್ಕೆ ಮಾದರಿ ರಾಜ್ಯವನ್ನಾಗಿಸುವುದು ನಮ್ಮ ಗುರಿ.
(ಅಂತಾರಾಷ್ಟ್ರೀಯ ವಿಪತ್ತು ಅಪಾಯ ಕಡಿತ ದಿನದ ಅಂಗವಾಗಿ ನಾನು ಮಾಡಿದ ಭಾಷಣದಿಂದ) -
Dr. G Parameshwara
@DrParameshwara
I inaugurated and addressed the first meeting of the State Platform for Disaster Risk Reduction at Vikasa Soudha, Bengaluru, on the occasion of the International Day for Disaster Risk Reduction.
Karnataka must move from responding to disasters to preventing them, with the goal of becoming a national leader in disaster preparedness and resilience by 2030. Development must be measured not only by economic growth and infrastructure, but also by the safety of our people and protection of their livelihoods.
Droughts, floods, landslides and coastal hazards, along with growing urban vulnerabilities, demand climate-resilient development. Disaster risk assessment must become part of infrastructure planning, while the Revenue Department, district administrations and all other departments must work together on year-round preparedness.
Technology must play a central role. Scientific forecasting, AI, satellite imagery, predictive analytics and vulnerability mapping should strengthen early warning systems, ensuring timely information reaches every Gram Panchayat and vulnerable household. In line with the UN's Early Warnings for All initiative, warnings must translate into timely action on the ground.
With the theme 'Resilience Starts at Home', our focus must be on community awareness, local preparedness plans, safe shelters, evacuation routes and volunteer networks, with special attention to farmers, daily-wage workers, children, senior citizens, persons with disabilities and other vulnerable groups.
Disaster management must protect livelihoods as much as infrastructure, ensure faster relief and recovery assistance, and maintain essential services such as healthcare, education, drinking water, electricity, transport and communication during emergencies.
The Karnataka State Disaster Risk Reduction Roadmap 2025–2030 must translate into measurable results through clear departmental responsibilities, time-bound implementation, annual progress reports and technology-based monitoring.
Our commitment is to build a Karnataka where every district is prepared, every community is protected, and preventable disasters do not become human tragedies.
Dr. G Parameshwara
@DrParameshwara
ಅಂತಾರಾಷ್ಟ್ರೀಯ ವಿಪತ್ತು ಅಪಾಯ ಕಡಿತ ದಿನದ ಅಂಗವಾಗಿ ಬೆಂಗಳೂರಿನ ವಿಕಾಸಸೌಧದಲ್ಲಿ ಆಯೋಜಿಸಿದ್ದ ‘ವಿಪತ್ತಿನಿಂದ ಉಂಟಾಗಬಹುದಾದ ಅಪಾಯ ತಗ್ಗಿಸುವ ರಾಜ್ಯ ವೇದಿಕೆಯ ಮೊದಲ ಸಭೆʼಯನ್ನು ಉದ್ಘಾಟಿಸಿ ಮಾತನಾಡಿದೆ.
ಪ್ರಕೃತಿ ವಿಕೋಪಗಳನ್ನು ಸಂಪೂರ್ಣವಾಗಿ ತಡೆಯಲು ಸಾಧ್ಯವಿಲ್ಲ. ಆದರೆ ಅವುಗಳಿಂದ ಉಂಟಾಗುವ ಕಷ್ಟನಷ್ಟಗಳನ್ನು ಕಡಿಮೆ ಮಾಡಬಹುದು. ಇದಕ್ಕಾಗಿ ಮುನ್ನೆಚ್ಚರಿಕೆ, ವೈಜ್ಞಾನಿಕ ಯೋಜನೆ, ಜನಜಾಗೃತಿ ಅತ್ಯಗತ್ಯ. ಈ ನಿಟ್ಟಿನಲ್ಲಿ 2030ರ ವೇಳೆಗೆ ಕರ್ನಾಟಕವನ್ನು ವಿಪತ್ತಿನಿಂದ ಸಂಭವಿಸಬಹುದಾದ ಅಪಾಯವನ್ನು ಕಡಿಮೆಗೊಳಿಸುವ ನಿಟ್ಟಿನಲ್ಲಿ ದೇಶಕ್ಕೆ ಮಾದರಿ ರಾಜ್ಯವನ್ನಾಗಿಸುವುದು ನಮ್ಮ ಗುರಿ.
ವಿಪತ್ತು ಸಂಭವಿಸಿದ ನಂತರ ರಕ್ಷಣಾ ಕಾರ್ಯಾಚರಣೆ ಮತ್ತು ಪರಿಹಾರ ವಿತರಣೆಗೆ ಸೀಮಿತವಾಗದೆ, ವಿಪತ್ತು ಸಂಭವಿಸುವ ಮೊದಲೇ ಅಪಾಯಗಳನ್ನು ಗುರುತಿಸಿ, ಜನರ ಜೀವ ಹಾಗೂ ಜೀವನೋಪಾಯವನ್ನು ರಕ್ಷಿಸುವ ವ್ಯವಸ್ಥೆಯನ್ನು ಬಲಪಡಿಸಬೇಕು.
ರಾಜ್ಯದ ಅಭಿವೃದ್ಧಿಯನ್ನು ಕೇವಲ ಆರ್ಥಿಕ ಪ್ರಗತಿ, ಬಂಡವಾಳ ಹೂಡಿಕೆ ಮತ್ತು ಮೂಲಸೌಕರ್ಯ ನಿರ್ಮಾಣದಿಂದ ಅಳೆಯಬಾರದು. ಜನರ ಸುರಕ್ಷತೆ ಮತ್ತು ಜೀವನೋಪಾಯದ ರಕ್ಷಣೆಯೂ ಅಭಿವೃದ್ಧಿಯ ಪ್ರಮುಖ ಮಾನದಂಡವಾಗಬೇಕು. ಒಂದು ಪ್ರವಾಹ, ಬರ ಅಥವಾ ಭೂಕುಸಿತವು ಕುಟುಂಬವೊಂದರ ಹಲವು ವರ್ಷಗಳ ಪರಿಶ್ರಮವನ್ನು ಕ್ಷಣಾರ್ಧದಲ್ಲಿ ನಾಶಪಡಿಸಬಹುದು. ಆದ್ದರಿಂದ ವಿಪತ್ತು ನಿರ್ವಹಣೆಯಲ್ಲಿ ಪರಿಹಾರಕ್ಕಿಂತ ಮುನ್ನೆಚ್ಚರಿಕೆ ಮತ್ತು ಪೂರ್ವ ಸಿದ್ಧತೆಗೆ ಹೆಚ್ಚಿನ ಆದ್ಯತೆ ನೀಡಬೇಕು.
ಕರ್ನಾಟಕದಲ್ಲಿ ಒಂದೆಡೆ ಬರಗಾಲ, ಮತ್ತೊಂದೆಡೆ ಅತಿವೃಷ್ಟಿ, ಪ್ರವಾಹ, ಭೂಕುಸಿತ ಹಾಗೂ ಕರಾವಳಿ ಪ್ರದೇಶಗಳ ನೈಸರ್ಗಿಕ ಅಪಾಯಗಳು ಎದುರಾಗುತ್ತಿವೆ. ನಗರೀಕರಣ, ನೈಸರ್ಗಿಕ ನೀರು ಹರಿವಿನ ಮಾರ್ಗಗಳ ಮೇಲಿನ ಒತ್ತಡ ಮತ್ತು ಹವಾಮಾನ ಬದಲಾವಣೆ ಈ ಸವಾಲುಗಳನ್ನು ಮತ್ತಷ್ಟು ಹೆಚ್ಚಿಸುತ್ತಿವೆ. ಹೀಗಾಗಿ ಪ್ರಮುಖ ಮೂಲಸೌಕರ್ಯ ಯೋಜನೆಗಳನ್ನು ರೂಪಿಸುವಾಗಲೇ ಭವಿಷ್ಯದ ವಿಪತ್ತು ಅಪಾಯಗಳ ಮೌಲ್ಯಮಾಪನ ನಡೆಸುವ ವ್ಯವಸ್ಥೆ ಬರಬೇಕು.
*ವೈಜ್ಞಾನಿಕ ತಂತ್ರಜ್ಞಾನಕ್ಕೆ ಒತ್ತು:*
ವಿಪತ್ತು ಮುನ್ನೆಚ್ಚರಿಕೆ ವ್ಯವಸ್ಥೆಯನ್ನು ಬಲಪಡಿಸಲು ಕೃತಕ ಬುದ್ಧಿಮತ್ತೆ (AI), ಉಪಗ್ರಹ ಚಿತ್ರಣ, ಭೌಗೋಳಿಕ ಮಾಹಿತಿ ಮತ್ತು ವೈಜ್ಞಾನಿಕ ಮುನ್ಸೂಚನೆಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಬೇಕು. ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ನಿರ್ವಹಣಾ ಕೇಂದ್ರವೂ ಸೇರಿದಂತೆ ವೈಜ್ಞಾನಿಕ ಸಂಸ್ಥೆಗಳ ಮಾಹಿತಿಯನ್ನು ಜಿಲ್ಲಾಡಳಿತ, ಗ್ರಾಮ ಪಂಚಾಯಿತಿಗಳು ಮತ್ತು ಅಪಾಯಕ್ಕೆ ಒಳಗಾಗುವ ಪ್ರತಿಯೊಂದು ಕುಟುಂಬಕ್ಕೂ ಸಕಾಲದಲ್ಲಿ ತಲುಪಿಸುವ ವ್ಯವಸ್ಥೆ ರೂಪಿಸಬೇಕು.
ಕೇವಲ ವಿಪತ್ತಿನ ಎಚ್ಚರಿಕೆ ನೀಡುವುದು ಸಾಕಾಗುವುದಿಲ್ಲ. ಆ ಎಚ್ಚರಿಕೆಯ ಆಧಾರದಲ್ಲಿ ಯಾವ ಪ್ರದೇಶದಲ್ಲಿ, ಯಾವ ಸಮಯದಲ್ಲಿ, ಯಾರ ರಕ್ಷಣೆಗೆ ಆದ್ಯತೆ ನೀಡಬೇಕು ಎಂಬುದನ್ನು ನಿರ್ಧರಿಸುವ ವ್ಯವಸ್ಥೆ ಅಗತ್ಯ.
*ಗ್ರಾಮಮಟ್ಟದಿಂದಲೇ ವಿಪತ್ತು ನಿರ್ವಹಣೆಗೆ ಸಿದ್ಧತೆ:*
ಪ್ರತಿಯೊಂದು ಜಿಲ್ಲೆಯಲ್ಲೂ ಪ್ರಾಕೃತಿಕ ವಿಕೋಪಗಳಿಂದ ಅಪಾಯಕ್ಕೆ ಒಳಗಾಗುವ ಪ್ರದೇಶಗಳನ್ನು, ಶಿಥಿಲಾವಸ್ಥೆಯಲ್ಲಿರುವ ಮನೆಗಳನ್ನು, ಸುರಕ್ಷಿತ ಆಶ್ರಯ ತಾಣಗಳನ್ನು ಮತ್ತು ಸ್ಥಳಾಂತರ ಮಾರ್ಗಗಳನ್ನು ಮೊದಲೇ ಗುರುತಿಸಬೇಕು. ಗ್ರಾಮ ಪಂಚಾಯಿತಿಗಳು, ನಗರ ಸ್ಥಳೀಯ ಸಂಸ್ಥೆಗಳು ಹಾಗೂ ಜಿಲ್ಲಾಡಳಿತಗಳು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು. ಕುಡಿಯುವ ನೀರು, ವಿದ್ಯುತ್, ಆರೋಗ್ಯ, ಸಾರಿಗೆ ಮತ್ತು ಸಂಪರ್ಕ ಸೇವೆಗಳು ವಿಪತ್ತಿನ ಸಂದರ್ಭದಲ್ಲಿಯೂ ಮುಂದುವರಿಯುವಂತೆ ಯೋಜನೆ ರೂಪಿಸಬೇಕು.
ರೈತರು, ಕೃಷಿ ಕಾರ್ಮಿಕರು, ಮೀನುಗಾರರು, ಸಣ್ಣ ವ್ಯಾಪಾರಿಗಳು ಮತ್ತು ದಿನಗೂಲಿ ಕಾರ್ಮಿಕರ ಜೀವನೋಪಾಯದ ರಕ್ಷಣೆಗೆ ವಿಶೇಷ ಗಮನ ನೀಡಬೇಕು. ಮಕ್ಕಳು, ಹಿರಿಯ ನಾಗರಿಕರು, ಅಂಗವಿಕಲರು ಹಾಗೂ ಆರ್ಥಿಕವಾಗಿ ದುರ್ಬಲ ಕುಟುಂಬಗಳಿಗೆ ಮುನ್ನೆಚ್ಚರಿಕೆ ಮತ್ತು ರಕ್ಷಣಾ ವ್ಯವಸ್ಥೆಗಳು ಸುಲಭವಾಗಿ ಲಭ್ಯವಾಗಬೇಕು.
*2030ರ ಮಾರ್ಗಸೂಚಿ ಪರಿಣಾಮಕಾರಿಯಾಗಿ ಜಾರಿಯಾಗಲಿ:*
ಕರ್ನಾಟಕ ರಾಜ್ಯ ವಿಪತ್ತು ಅಪಾಯ ತಗ್ಗಿಸುವಿಕೆ ಮಾರ್ಗಸೂಚಿ 2025–2030 ಅನ್ನು ಕಾಲಮಿತಿಯೊಳಗೆ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಬೇಕು. ಇಲಾಖಾವಾರು ಜವಾಬ್ದಾರಿಗಳನ್ನು ನಿಗದಿಪಡಿಸಿ, ಪ್ರಗತಿಯನ್ನು ನಿಯಮಿತವಾಗಿ ಪರಿಶೀಲಿಸಬೇಕು. ವಾರ್ಷಿಕ ಪ್ರಗತಿ ವರದಿ ಮತ್ತು ತಂತ್ರಜ್ಞಾನ ಆಧಾರಿತ ಮೇಲ್ವಿಚಾರಣೆ ನಡೆಸಬೇಕು.
ಸಭೆಯಲ್ಲಿ ರಾಜ್ಯ ವಿಪತ್ತು ನಿರ್ವಹಣಾ ಇಲಾಖೆಯ ಕಾರ್ಯದರ್ಶಿ ಮನೋಜ್ ಕುಮಾರ್ ಮೀನಾ, ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣೆ ಪ್ರಾಧಿಕಾರದ ಆಯುಕ್ತೆ ಹೊನ್ನಾಂಬ, ಯೂನಿಸೆಫ್ ಡಿಆರ್ಆರ್ ಅಧಿಕಾರಿ ಡಾ. ಮಹೇಂದ್ರ ರಾಜಾರಾಮ್, ಕರ್ನಾಟಕ ರಾಜ್ಯ ನೈಸರ್ಗಿಕ ವಿಪತ್ತು ನಿಗಾ ಕೇಂದ್ರದ ನಿರ್ದೇಶಕರಾದ ಎಂ.ಎಸ್.ದಿವಾಕರ್ ಅವರು ಉಪಸ್ಥಿತರಿದ್ದರು. -
Dr. G Parameshwara
@DrParameshwara
Speaking to the media in Bengaluru today, I reiterated that reservation is fundamentally about social justice, equality and opportunities for historically deprived communities, as envisioned by Dr. B.R. Ambedkar.
The High Court verdict on enhancing SC reservation from 15% to 17% and ST reservation from 3% to 7%, taking overall reservation to 56%, requires careful consideration. In my view, Karnataka's social circumstances deserved examination as an exceptional case, just as Tamil Nadu has 69% reservation.
Our Government has consistently defended the enhanced reservation. We will discuss the verdict in the Cabinet, consult the Advocate General and Law Department, and examine all constitutional and legal options, including an appeal before the Supreme Court.
The implications for existing appointments, educational admissions, future recruitments and internal reservation must also be carefully assessed. Courts function independently, and our responsibility is to pursue the available legal remedies while protecting social justice.
Regarding the incident involving Chief Minister Shri D.K. Shivakumar during the Delhi protest, I explained that crowd control and security arrangements can be challenging, particularly when personnel are tasked with protecting leaders such as Shri Rahul Gandhi.
I also raised serious concerns about the Election Commission's functioning and the ongoing electoral roll revision. Reports that around 1.08 crore voters have been identified under various categories, including nearly 65 lakh marked as shifted, demand clear explanations. Where have these voters shifted, and how will their voting rights be protected?
The alleged misuse of Form 7 applications, including objections involving 300–400 names and allegations of selective targeting of particular communities, also requires investigation and transparency. Our questions are directed at the Election Commission's procedures, not the judiciary. Constitutional institutions must function independently and impartially, safeguarding every citizen's democratic rights.
On disaster management, I emphasised the need to move beyond relief and rehabilitation towards prevention, public awareness and advance preparedness. These priorities will be discussed at the national-level seminar, with the objective of reducing risks and protecting lives before disasters strike. -
Dr. G Parameshwara
@DrParameshwara
ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ಮೀಸಲಾತಿ ಹೆಚ್ಚಳಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ನೀಡಿರುವ ತೀರ್ಪಿನ ಕುರಿತು ಸಚಿವ ಸಂಪುಟದಲ್ಲಿ ಸಮಗ್ರವಾಗಿ ಚರ್ಚಿಸಿ, ಸುಪ್ರೀಂ ಕೋರ್ಟ್ಗೆ ಮೇಲ್ಮನವಿ ಸಲ್ಲಿಸುವುದು ಸೇರಿದಂತೆ ಮುಂದಿನ ಕಾನೂನಾತ್ಮಕ ಕ್ರಮಗಳ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು.
ಹಿಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸರ್ಕಾರವು ಮೀಸಲಾತಿಯ ಶೇ.50ರ ಮಿತಿಯನ್ನು ಮೀರಿ, ಒಟ್ಟು ಮೀಸಲಾತಿಯನ್ನು ಶೇ.56ಕ್ಕೆ ಹೆಚ್ಚಿಸುವ ತೀರ್ಮಾನ ಕೈಗೊಂಡಿತ್ತು. ಪರಿಶಿಷ್ಟ ಜಾತಿಯ ಮೀಸಲಾತಿಯನ್ನು ಶೇ.15ರಿಂದ ಶೇ.17ಕ್ಕೆ ಹಾಗೂ ಪರಿಶಿಷ್ಟ ಪಂಗಡಗಳ ಮೀಸಲಾತಿಯನ್ನು ಶೇ.3ರಿಂದ ಶೇ.7ಕ್ಕೆ ಹೆಚ್ಚಿಸಲಾಗಿತ್ತು.
ಹಿಂದಿನ ಸರ್ಕಾರವು ಈ ಸಂಬಂಧ ಆದೇಶ ಹೊರಡಿಸಿ ಕ್ರಮಗಳನ್ನು ಕೈಗೊಂಡಿತ್ತು. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರವೂ ಅನೇಕ ನೇಮಕಾತಿ ಪ್ರಕ್ರಿಯೆಗಳಲ್ಲಿ ಈ ಮೀಸಲಾತಿ ಪ್ರಮಾಣವನ್ನು ಅನುಸರಿಸಿದೆ. ಮೀಸಲಾತಿ ಹೆಚ್ಚಳವನ್ನು ಪ್ರಶ್ನಿಸಿ ವಿವಿಧ ವ್ಯಕ್ತಿಗಳು ನ್ಯಾಯಾಲಯದ ಮೊರೆ ಹೋದ ಸಂದರ್ಭದಲ್ಲಿ ರಾಜ್ಯ ಸರ್ಕಾರವೂ ತನ್ನ ನಿಲುವನ್ನು ಮಂಡಿಸಿ, ಮೀಸಲಾತಿ ಹೆಚ್ಚಳವನ್ನು ಎತ್ತಿಹಿಡಿಯುವಂತೆ ನ್ಯಾಯಾಲಯದಲ್ಲಿ ಮನವಿ ಸಲ್ಲಿಸಿತ್ತು.
ಮೀಸಲಾತಿಯನ್ನು ಯಾವ ಉದ್ದೇಶಕ್ಕಾಗಿ ಜಾರಿಗೆ ತರಲಾಗಿದೆ ಎಂಬುದನ್ನು ಮೂಲಭೂತವಾಗಿ ಅರ್ಥಮಾಡಿಕೊಳ್ಳಬೇಕಿದೆ. ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರು ಮೀಸಲಾತಿಯನ್ನು ಕೇವಲ ಆಡಳಿತಾತ್ಮಕ ಆದೇಶಗಳ ಮೂಲಕ ಜಾರಿಗೊಳಿಸದೆ, ಸಂವಿಧಾನದಲ್ಲಿಯೇ ಅವಕಾಶ ಕಲ್ಪಿಸಿರುವುದರ ಹಿಂದೆ ಮಹತ್ವದ ಸಾಮಾಜಿಕ ಉದ್ದೇಶವಿದೆ.
ಸಾವಿರಾರು ವರ್ಷಗಳಿಂದ ಸಾಮಾಜಿಕ, ಶೈಕ್ಷಣಿಕ ಹಾಗೂ ಉದ್ಯೋಗ ಕ್ಷೇತ್ರಗಳಲ್ಲಿ ಅವಕಾಶಗಳಿಂದ ವಂಚಿತರಾದ ಸಮುದಾಯಗಳಿಗೆ ನ್ಯಾಯ ಒದಗಿಸುವುದು ಮೀಸಲಾತಿಯ ಮೂಲ ಉದ್ದೇಶವಾಗಿದೆ. ಸಮಾಜದ ಎಲ್ಲ ವರ್ಗಗಳಿಗೂ ಸಮಾನ ಅವಕಾಶಗಳು ದೊರೆಯಬೇಕು. ಹಿಂದುಳಿದ ಹಾಗೂ ಅವಕಾಶವಂಚಿತ ಸಮುದಾಯಗಳೂ ಸಮಾಜದ ಮುಖ್ಯವಾಹಿನಿಗೆ ಬಂದು ಅಭಿವೃದ್ಧಿ ಹೊಂದಬೇಕು ಎಂಬ ಉದ್ದೇಶದಿಂದ ಸಂವಿಧಾನದಲ್ಲಿ ಮೀಸಲಾತಿಗೆ ಅವಕಾಶ ಕಲ್ಪಿಸಲಾಗಿದೆ.
ಸಮಾಜದಲ್ಲಿ ಸಮಾನತೆಯನ್ನು ಸ್ಥಾಪಿಸುವುದೇ ಸಂವಿಧಾನದ ಆಶಯವಾಗಿದೆ. ಮೀಸಲಾತಿಗೆ ಸಂಬಂಧಿಸಿದ ಯಾವುದೇ ತೀರ್ಮಾನ ಕೈಗೊಳ್ಳುವಾಗ ಅದರ ಹಿಂದಿರುವ ಸಾಮಾಜಿಕ ನ್ಯಾಯದ ಉದ್ದೇಶ ಹಾಗೂ ಸಮುದಾಯಗಳ ಪರಿಸ್ಥಿತಿಯನ್ನು ಪರಿಗಣಿಸುವುದು ಮುಖ್ಯ.
ತಮಿಳುನಾಡಿನಲ್ಲಿ ಶೇ.69ರಷ್ಟು ಮೀಸಲಾತಿಗೆ ಸಂವಿಧಾನ ತಿದ್ದುಪಡಿಯ ಮೂಲಕ ಅವಕಾಶ ಕಲ್ಪಿಸಲಾಗಿದೆ. ಆ ರಾಜ್ಯಕ್ಕೆ ಅಂತಹ ಅವಕಾಶ ದೊರೆತಿರುವಾಗ, ಕರ್ನಾಟಕದಲ್ಲಿ ಶೇ.50ರ ಮಿತಿಗಿಂತ ಹೆಚ್ಚುವರಿಯಾಗಿ ಶೇ.6ರಷ್ಟು ಮೀಸಲಾತಿ ಕಲ್ಪಿಸಿರುವುದನ್ನೂ ಅದರ ಸಾಮಾಜಿಕ ಹಿನ್ನೆಲೆಯ ಆಧಾರದಲ್ಲಿ ವಿಶೇಷ ಪ್ರಕರಣವಾಗಿ ಪರಿಗಣಿಸಬಹುದಿತ್ತು ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯ.
ಮೀಸಲಾತಿ ಹೆಚ್ಚಳದ ಹಿಂದಿರುವ ಸಾಮಾಜಿಕ ಉದ್ದೇಶ ಹಾಗೂ ಅವಕಾಶವಂಚಿತ ಸಮುದಾಯಗಳ ಹಿತಾಸಕ್ತಿಯನ್ನು ಪರಿಗಣಿಸಿ ನ್ಯಾಯಾಲಯವು ಅಸಾಧಾರಣ ಸಂದರ್ಭದ ಆಧಾರದಲ್ಲಿ ತೀರ್ಮಾನ ಕೈಗೊಳ್ಳಬಹುದಿತ್ತು. ಈ ಹಿನ್ನೆಲೆಯಲ್ಲಿ ಮೀಸಲಾತಿ ಹೆಚ್ಚಳವನ್ನು ತಿರಸ್ಕರಿಸಿರುವುದು ಸಮಂಜಸವಲ್ಲ.
ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್ಗೆ ಮೇಲ್ಮನವಿ ಸಲ್ಲಿಸಿರುವ ಕುರಿತು ಸಚಿವ ಸಂಪುಟದಲ್ಲಿ ಚರ್ಚಿಸಿ ತೀರ್ಮಾನ ಕೈಗೊಳ್ಳಲಿದೆ.
ಸುಪ್ರೀಂ ಕೋರ್ಟ್ಗೆ ಮೇಲ್ಮನವಿ ಸಲ್ಲಿಸಬೇಕೇ ಅಥವಾ ಸಂವಿಧಾನದ ಚೌಕಟ್ಟಿನಲ್ಲಿ ಬೇರೆ ಯಾವ ಕಾನೂನಾತ್ಮಕ ಕ್ರಮಗಳನ್ನು ಕೈಗೊಳ್ಳಬಹುದು ಎಂಬುದನ್ನು ಸಚಿವ ಸಂಪುಟದಲ್ಲಿ ಚರ್ಚಿಸಲಾಗುವುದು. ಮುಖ್ಯಮಂತ್ರಿಗಳು ಹಾಗೂ ಸಚಿವ ಸಂಪುಟವು ಎಲ್ಲ ಸಾಧಕ-ಬಾಧಕಗಳನ್ನು ಪರಿಗಣಿಸಿ ಮುಂದಿನ ತೀರ್ಮಾನ ಕೈಗೊಳ್ಳಲಿದೆ.
ನ್ಯಾಯಾಧೀಶರು ಕಾನೂನಿನ ಪ್ರಕಾರ ತಮ್ಮ ತೀರ್ಮಾನಗಳನ್ನು ಕೈಗೊಳ್ಳುತ್ತಾರೆ. ಸರ್ಕಾರವು ನ್ಯಾಯಾಧೀಶರ ಮೇಲೆ ಪ್ರಭಾವ ಬೀರಿ ನಿರ್ದಿಷ್ಟ ತೀರ್ಪು ನೀಡುವಂತೆ ಹೇಳಲು ಸಾಧ್ಯವಿಲ್ಲ. ನ್ಯಾಯಾಲಯದ ತೀರ್ಪನ್ನು ಕಾನೂನಿನ ಚೌಕಟ್ಟಿನಲ್ಲಿ ಮೇಲ್ಮಟ್ಟದ ನ್ಯಾಯಾಲಯದಲ್ಲಿ ಪ್ರಶ್ನಿಸಲು ಅವಕಾಶವಿದೆ. ಆ ಅವಕಾಶವನ್ನು ಬಳಸಿಕೊಳ್ಳುವ ಕುರಿತು ಸಚಿವ ಸಂಪುಟ ತೀರ್ಮಾನಿಸಲಿದೆ.
ಶೇ.56ರಷ್ಟು ಮೀಸಲಾತಿಯ ಆಧಾರದಲ್ಲಿ ಈಗಾಗಲೇ ನಡೆದಿರುವ ಶೈಕ್ಷಣಿಕ ಪ್ರವೇಶಾತಿ ಹಾಗೂ ಸರ್ಕಾರಿ ನೇಮಕಾತಿಗಳ ಮೇಲೆ ಹೈಕೋರ್ಟ್ ತೀರ್ಪು ಯಾವ ರೀತಿಯ ಪರಿಣಾಮ ಬೀರಲಿದೆ ಎಂಬುದನ್ನು ಪರಿಶೀಲಿಸಬೇಕಿದೆ.
ಈಗಾಗಲೇ ನಡೆದಿರುವ ನೇಮಕಾತಿಗಳ ಪರಿಸ್ಥಿತಿ ಏನಾಗುತ್ತದೆ? ನ್ಯಾಯಾಲಯದ ಆದೇಶವು ಹಿಂದಿನ ದಿನಾಂಕದಿಂದ ಅನ್ವಯವಾಗುತ್ತದೆಯೇ ಅಥವಾ ಮುಂದಿನ ಪ್ರಕ್ರಿಯೆಗಳಿಗೆ ಮಾತ್ರ ಅನ್ವಯವಾಗುತ್ತದೆಯೇ? ಇಂತಹ ಎಲ್ಲ ಕಾನೂನಾತ್ಮಕ ಪ್ರಶ್ನೆಗಳು ಹಾಗೂ ಅವುಗಳಿಂದ ಉಂಟಾಗಬಹುದಾದ ಪರಿಣಾಮಗಳನ್ನು ಸಮಗ್ರವಾಗಿ ಚರ್ಚಿಸಬೇಕಿದೆ.
ಈ ಕುರಿತು ಅಡ್ವೊಕೇಟ್ ಜನರಲ್ ಹಾಗೂ ಕಾನೂನು ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸಿ, ಕಾನೂನಿನ ಪ್ರಕಾರ ಯಾವ ಕ್ರಮಗಳು ಸಾಧ್ಯ ಎಂಬುದನ್ನು ಪರಿಶೀಲಿಸಿದ ನಂತರವೇ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು.
ಈಗ ಒಟ್ಟು ಮೀಸಲಾತಿ ಪ್ರಮಾಣವನ್ನು ಕಡಿತಗೊಳಿಸಬೇಕಾದ ಪರಿಸ್ಥಿತಿ ಎದುರಾದರೆ ಒಳಮೀಸಲಾತಿ ಪ್ರಮಾಣಗಳನ್ನೂ ಅನುಪಾತದ ಆಧಾರದಲ್ಲಿ ಪರಿಷ್ಕರಿಸುವ ಸಾಧ್ಯತೆ ಇದೆ. ಗಣಿತದ ದೃಷ್ಟಿಯಿಂದ ಅಂತಹ ಪರಿಷ್ಕರಣೆ ಮಾಡುವುದು ಕಷ್ಟದ ವಿಚಾರವಲ್ಲ. ಆದರೆ ಇದರಿಂದ ವಿವಿಧ ಸಮುದಾಯಗಳಿಗೆ ದೊರೆಯಬೇಕಾದ ಅವಕಾಶಗಳು ಕಡಿಮೆಯಾಗುವ ಸಾಧ್ಯತೆಯೇ ಹೆಚ್ಚು ಆತಂಕಕಾರಿ ವಿಷಯವಾಗಿದೆ.
ಹೈಕೋರ್ಟ್ ತೀರ್ಪಿನಿಂದ ಉದ್ಯೋಗಾಕಾಂಕ್ಷಿಗಳು ಹಾಗೂ ಮುಂದಿನ ನೇಮಕಾತಿ ಪ್ರಕ್ರಿಯೆಗಳ ಮೇಲೆ ಉಂಟಾಗಬಹುದಾದ ಪರಿಣಾಮಗಳನ್ನೂ ಪರಿಶೀಲಿಸಬೇಕಿದೆ. ಸಂವಿಧಾನದ ಚೌಕಟ್ಟಿನೊಳಗೆ ಕಾನೂನಾತ್ಮಕವಾಗಿ ಸಾಧ್ಯವಿರುವ ಕ್ರಮಗಳನ್ನು ಕೈಗೊಳ್ಳಲು ಸರ್ಕಾರ ಚರ್ಚಿಸಲಿದೆ.
*ಚುನಾವಣಾ ಆಯೋಗದ ನಿಷ್ಪಕ್ಷಪಾತ ಕಾರ್ಯನಿರ್ವಹಣೆ ಅಗತ್ಯ:*
ದೇಶದ ವಿವಿಧ ಭಾಗಗಳಿಂದ ಜನರು ದೆಹಲಿಗೆ ತೆರಳಿ ಪ್ರತಿಭಟನೆ ನಡೆಸುತ್ತಿರುವುದು ಯಾವುದೇ ಕಾರಣವಿಲ್ಲದೆ ಅಲ್ಲ. ಸಂವಿಧಾನಾತ್ಮಕವಾಗಿ ನಡೆಯಬೇಕಾದ ಕಾರ್ಯಗಳು ಸರಿಯಾಗಿ ನಡೆಯುತ್ತಿಲ್ಲ ಎಂಬ ಆತಂಕದಿಂದ ಪ್ರತಿಭಟನೆ ಮಾಡಲಾಗುತ್ತಿದೆ. ಚುನಾವಣಾ ಆಯೋಗವು ಸ್ವತಂತ್ರ ಹಾಗೂ ನಿಷ್ಪಕ್ಷಪಾತ ಸಂಸ್ಥೆಯಾಗಿ ಕಾರ್ಯನಿರ್ವಹಿಸಬೇಕು. ಯಾವುದೇ ವ್ಯಕ್ತಿ ಅಥವಾ ಪಕ್ಷದ ಪ್ರಭಾವಕ್ಕೆ ಒಳಗಾಗಿ ತೀರ್ಮಾನ ಕೈಗೊಳ್ಳಬಾರದು.
ಚುನಾವಣಾ ಪ್ರಕ್ರಿಯೆಯ ವಿಶ್ವಾಸಾರ್ಹತೆ ಮತ್ತು ಮತದಾರರ ಹಕ್ಕುಗಳ ರಕ್ಷಣೆ ಅತ್ಯಂತ ಮುಖ್ಯವಾಗಿದೆ. ಮತದಾರರ ಪಟ್ಟಿಯ ಪರಿಷ್ಕರಣೆ ಹಾಗೂ ಹೆಸರುಗಳನ್ನು ಗುರುತಿಸುವ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಇರಬೇಕು.
ರಾಜ್ಯದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆಯ ಸಂದರ್ಭದಲ್ಲಿ ಸುಮಾರು 1.08 ಕೋಟಿ ಜನರ ಹೆಸರುಗಳನ್ನು ವಿವಿಧ ಕಾರಣಗಳ ಅಡಿಯಲ್ಲಿ ಗುರುತಿಸಲಾಗಿದೆ. ಇದಕ್ಕೆ ಚುನಾವಣಾ ಆಯೋಗ ಸ್ಪಷ್ಟನೆ ನೀಡಬೇಕಿದೆ.
ಸುಮಾರು 65 ಲಕ್ಷ ಜನರನ್ನು ಸ್ಥಳಾಂತರಗೊಂಡವರು ಎಂದು ಗುರುತಿಸಲಾಗಿದೆ. ಇಷ್ಟು ದೊಡ್ಡ ಸಂಖ್ಯೆಯಲ್ಲಿ ಜನರು ಸ್ಥಳಾಂತರಗೊಂಡಿದ್ದಾರೆ ಎಂದಾದರೆ ಅವರು ಬೇರೆಡೆ ನೆಲೆಸಿರಬೇಕು. ಆದರೆ, ಒಂದು ಕಡೆ ಸ್ಥಳಾಂತರಗೊಂಡಿದ್ದಾರೆ ಎಂದು ಹೇಳಿ, ಇನ್ನೊಂದು ಕಡೆ ಅವರ ಹೆಸರುಗಳೇ ಇಲ್ಲದಿದ್ದರೆ ಅವರ ಮತದಾನದ ಹಕ್ಕು ಏನಾಗುತ್ತದೆ?
ಸುಮಾರು ಶೇ.11ರಷ್ಟು ಜನಸಂಖ್ಯೆಯನ್ನು ಸ್ಥಳಾಂತರಗೊಂಡವರು ಎಂದು ಗುರುತಿಸಿರುವುದರ ಬಗ್ಗೆ ಸಮರ್ಪಕ ವಿವರಣೆ ನೀಡಬೇಕಿದೆ. ಮತದಾರರ ಹೆಸರುಗಳು ಮತ್ತು ಮತದಾನದ ಹಕ್ಕುಗಳ ವಿಚಾರದಲ್ಲಿ ಯಾವುದೇ ಗೊಂದಲ ಉಂಟಾಗದಂತೆ ನೋಡಿಕೊಳ್ಳುವುದು ಚುನಾವಣಾ ಆಯೋಗದ ಜವಾಬ್ದಾರಿಯಾಗಿದೆ.
*ಫಾರಂ–7 ಅರ್ಜಿಗಳ ದುರ್ಬಳಕೆ ಕುರಿತು ಪ್ರತಿಕ್ರಿಯೆ:
ಮತದಾರರ ಮಾಹಿತಿಯ ಬಳಕೆ, ಫಾರಂ–7 ಅರ್ಜಿಗಳ ಸಲ್ಲಿಕೆ ಹಾಗೂ ಆಕ್ಷೇಪಣೆಗಳ ಪರಿಶೀಲನಾ ಪ್ರಕ್ರಿಯೆಯ ಬಗ್ಗೆ ಚುನಾವಣಾ ಆಯೋಗ ಸೂಕ್ತ ಸ್ಪಷ್ಟನೆ ನೀಡಬೇಕು.
ಒಬ್ಬ ವ್ಯಕ್ತಿಯಿಂದ 30 ರಿಂದ 50 ಹೆಸರುಗಳವರೆಗೆ ಆಕ್ಷೇಪಣೆ ಸಲ್ಲಿಸುವ ಅವಕಾಶವಿರುವ ಸಂದರ್ಭದಲ್ಲಿ, 300 ರಿಂದ 400 ಹೆಸರುಗಳನ್ನು ಒಳಗೊಂಡ ಅರ್ಜಿಗಳು ಸಲ್ಲಿಕೆಯಾಗಿದೆ. ಅದರಲ್ಲಿಯೂ ಒಂದೇ ಸಮುದಾಯದ ಹೆಸರುಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಸೇರಿಸಿ ಅರ್ಜಿ ಸಲ್ಲಿಸಲಾಗುತ್ತಿದೆ ಎಂಬ ವಿಚಾರ ಆತಂಕಕಾರಿ.
50 ಹೆಸರುಗಳಿಗೆ ಅವಕಾಶವಿರುವಾಗ 300ರಿಂದ 400 ಹೆಸರುಗಳನ್ನು ಸೇರಿಸಿ ಅರ್ಜಿಗಳನ್ನು ಸಲ್ಲಿಸುವುದರ ಹಿಂದಿನ ಉದ್ದೇಶವೇನು? ಒಂದೇ ಸಮುದಾಯದ ಹೆಸರುಗಳನ್ನು ಗುರುತಿಸಿ ಸಲ್ಲಿಸಲಾಗುತ್ತಿದೆ ಎಂಬ ಆರೋಪಗಳಿವೆ. ಈ ಅರ್ಜಿಗಳು ಬೇರೆಡೆ ಮುದ್ರಣಗೊಂಡು ಬರುತ್ತಿರುವುದು ಹೇಗೆ? ಮತದಾರರ ಮಾಹಿತಿಯನ್ನು ಯಾರು ಪಡೆದುಕೊಂಡಿದ್ದಾರೆ? ಯಾರು ಮುದ್ರಿಸಿ ಕಳುಹಿಸುತ್ತಿದ್ದಾರೆ ಎಂಬುದಕ್ಕೆ ಉತ್ತರ ಸಿಗಬೇಕು.
ಮತದಾರರ ಮಾಹಿತಿ ಸಾರ್ವಜನಿಕವಾಗಿ ವೆಬ್ಸೈಟ್ನಲ್ಲಿ ಲಭ್ಯವಿದೆ ಎಂಬ ಬಿಜೆಪಿ ನಾಯಕರ ವಾದ. ಆದರೆ, ಮಾಹಿತಿ ಲಭ್ಯವಿದೆ ಎಂಬ ಕಾರಣಕ್ಕೆ ಒಂದೇ ಸಮುದಾಯದ ನೂರಾರು ಹೆಸರುಗಳನ್ನು ಒಟ್ಟುಗೂಡಿಸಿ ಆಕ್ಷೇಪಣೆ ಸಲ್ಲಿಸುವುದನ್ನು ಸಮರ್ಥಿಸಲಾಗುವುದಿಲ್ಲ.
ಚುನಾವಣಾ ಆಯೋಗದ ಕ್ರಮಗಳು ಸಂವಿಧಾನಾತ್ಮಕ ಮೌಲ್ಯಗಳು ಹಾಗೂ ಮತದಾರರ ಹಕ್ಕುಗಳಿಗೆ ಅನುಗುಣವಾಗಿರಬೇಕು ಎಂಬುದೇ ನಮ್ಮ ನಿಲುವಾಗಿದೆ.
*ವಿಪತ್ತು ನಿರ್ವಹಣೆಯಲ್ಲಿ ಮುನ್ನೆಚ್ಚರಿಕೆಗೆ ಆದ್ಯತೆ:*
ವಿಪತ್ತು ಸಂಭವಿಸುವುದಕ್ಕೂ ಮೊದಲೇ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವ ಅಗತ್ಯದ ಬಗ್ಗೆ ರಾಷ್ಟ್ರೀಯ ಮಟ್ಟದ ವಿಚಾರಸಂಕಿರಣ ಆಯೋಜಿಸಲಾಗಿದೆ.
ಸಾಮಾನ್ಯವಾಗಿ ವಿಪತ್ತು ಸಂಭವಿಸಿದ ನಂತರ ಪರಿಹಾರ ಕಾರ್ಯಗಳು, ಅಗತ್ಯ ನೆರವು ಹಾಗೂ ಪುನರ್ವಸತಿ ಕ್ರಮಗಳನ್ನು ಕೈಗೊಳ್ಳುತ್ತೇವೆ. ಆದರೆ ವಿಪತ್ತು ಸಂಭವಿಸುವುದಕ್ಕೂ ಮೊದಲೇ ಏಕೆ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬಾರದು? ಸಾರ್ವಜನಿಕರಿಗೆ ಅಗತ್ಯ ಮಾಹಿತಿ ನೀಡಿ, ಸಂಭವನೀಯ ಅಪಾಯಗಳನ್ನು ಎದುರಿಸಲು ಮೊದಲೇ ಸಿದ್ಧತೆ ಮಾಡಿಕೊಳ್ಳಬಾರದೆ ಎಂಬುದರ ಬಗ್ಗೆ ಚರ್ಚಿಸಬೇಕಿದೆ.
ವಿಪತ್ತು ನಿರ್ವಹಣೆಯಲ್ಲಿ ಮುನ್ನೆಚ್ಚರಿಕೆ, ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದು ಹಾಗೂ ಅಗತ್ಯ ಸಿದ್ಧತೆಗಳನ್ನು ಮೊದಲೇ ಕೈಗೊಳ್ಳುವುದಕ್ಕೆ ಹೆಚ್ಚಿನ ಮಹತ್ವ ನೀಡಬೇಕಿದೆ. ಈ ಸಂಬಂಧ ರಾಷ್ಟ್ರೀಯ ಮಟ್ಟದ ವಿಚಾರಸಂಕಿರಣದಲ್ಲಿ ವಿವಿಧ ಅಂಶಗಳ ಕುರಿತು ಚರ್ಚಿಸಲಾಗುವುದು.
- ಇಂದು ನನ್ನ ನಿವಾಸದ ಬಳಿ ಮಾಧ್ಯಮದವರೊಂದಿಗೆ ಮಾತನಾಡಿದೆ. -
Dr. G Parameshwara
@DrParameshwara
ವೀರ ಮದಕರಿ ನಾಯಕರು ಶೌರ್ಯ, ಸಾಹಸ ಹಾಗೂ ಜನಪರ ಕಾರ್ಯಗಳ ಮೂಲಕ ಚಿತ್ರದುರ್ಗ ಸಂಸ್ಥಾನದ ಕೀರ್ತಿಯನ್ನು ಹೆಚ್ಚಿಸಿದವರು.
ಸ್ವಾಭಿಮಾನ ಮತ್ತು ಪರಾಕ್ರಮದ ಪ್ರತೀಕವಾಗಿದ್ದ ವೀರ ಮದಕರಿ ನಾಯಕರ ಜಯಂತಿಯಂದು ಅವರಿಗೆ ಗೌರವ ನಮನಗಳನ್ನು ಸಲ್ಲಿಸುತ್ತೇನೆ. -
Dr. G Parameshwara
@DrParameshwara
ಅಕ್ಟೋಬರ್ 20ರಿಂದ 25ರವರೆಗೆ ಬೆಂಗಳೂರಿನ ಶ್ರೀ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಪ್ರತಿಷ್ಠಿತ ಫಿಬಾ ಮಹಿಳಾ ಬಾಸ್ಕೆಟ್ಬಾಲ್ ಲೀಗ್ ಏಷ್ಯಾ–2026 ಅಂತಾರಾಷ್ಟ್ರೀಯ ಪಂದ್ಯಾವಳಿ ನಡೆಯಲಿದ್ದು, ಈ ಬಗ್ಗೆ ಸೋಮವಾರ ಬೆಂಗಳೂರಿನ ಕರ್ನಾಟಕ ಒಲಿಂಪಿಕ್ ಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ನೀಡಿದೆ.
ಈ ಕುರಿತಾದ ಪತ್ರಿಕಾ ವರದಿಗಳು ಹೀಗಿವೆ..
Dr. G Parameshwara
@DrParameshwara
The prestigious FIBA Women’s Basketball League Asia 2026 will be held at Sri Kanteerava Indoor Stadium, Bengaluru, from October 20 to 25.
On Monday, I addressed a press conference at the Karnataka Olympic Bhavan in Bengaluru and shared details about the upcoming international tournament.
Here are the media reports on the press conference. -
Dr. G Parameshwara
@DrParameshwara
Heartiest congratulations to Dr. Sudha Yadav on being appointed as the Governor of Karnataka. I extend my best wishes for a successful tenure and look forward to working together in the spirit of constitutional responsibility, mutual respect and cooperative federalism for the progress and welfare of Karnataka.
The dignity of constitutional institutions and the spirit of cooperation between the State Government and Governor's office must always remain paramount. -
Dr. G Parameshwara
@DrParameshwara
ರಾಜ್ಯದ ಶೈಕ್ಷಣಿಕ ಸಂಸ್ಥೆಗಳಲ್ಲಿನ ಪ್ರವೇಶಾತಿ ಹಾಗೂ ಸರ್ಕಾರಿ ಉದ್ಯೋಗಳ ನೇಮಕಾತಿಯಲ್ಲಿ ಪರಿಶಿಷ್ಟ ಜಾತಿಯ ಮೀಸಲಾತಿಯನ್ನು ಶೇ. 15 ರಿಂದ ಶೇ. 17 ಕ್ಕೆ ಮತ್ತು ಪರಿಶಿಷ್ಟ ಪಂಗಡದ ಮೀಸಲಾತಿಯನ್ನು ಶೇ. 3 ರಿಂದ ಶೇ. 7 ಕ್ಕೆ ಹೆಚ್ಚಿಸಿರುವುದನ್ನು ಹೈಕೋರ್ಟ್ ರದ್ದುಗೊಳಿಸಿರುವುದು ಕಳವಳಕಾರಿ ವಿಚಾರವಾಗಿದೆ. ಈ ತೀರ್ಪು ಮುಂಬರುವ ದಿನಗಳಲ್ಲಿ ರಾಜ್ಯದ ಸಾಮಾಜಿಕ ನ್ಯಾಯ, ಶಿಕ್ಷಣದ ಅವಕಾಶಗಳು ಮತ್ತು ಸರ್ಕಾರಿ ಉದ್ಯೋಗಗಳ ಮೇಲೆ ಪರಿಣಾಮ ಬೀರುವ ಸಂಭವ ಹೆಚ್ಚಿದೆ.
ನಾವು ನ್ಯಾಯಾಂಗದ ಬಗ್ಗೆ ಗೌರವ ಹೊಂದಿದ್ದೇವೆ. ನ್ಯಾಯಾಂಗವು ಕಾರ್ಯನಿರ್ವಹಿಸುವ ಸಾಂವಿಧಾನಿಕ ವ್ಯವಸ್ಥೆಯ ಬಗ್ಗೆಯೂ ನಮಗೆ ಸಂಪೂರ್ಣ ಗೌರವವಿದೆ. ಆದರೆ, ಈ ತೀರ್ಪು ಹಿಂದಿನ ಬಿಜೆಪಿ ಸರ್ಕಾರದ ಬೇಜವಾಬ್ದಾರಿತನ ಹಾಗೂ ಕೇಂದ್ರದಲ್ಲಿರುವ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ನಿರಂತರ ನಿರ್ಲಕ್ಷ್ಯವನ್ನು ಎತ್ತಿ ತೋರಿಸುತ್ತಿದೆ.
ಹಿಂದಿನ ಬಿಜೆಪಿ ಸರ್ಕಾರವು ಮೀಸಲಾತಿ ಹೆಚ್ಚಳದ ಕಾಯ್ದೆಯನ್ನು ಜಾರಿಗೊಳಿಸುವ ಮುನ್ನ ಸೂಕ್ತ ಸಾಂವಿಧಾನಿಕ ತಳಹದಿಯನ್ನು ಹಾಕದೆ 2023ರ ವಿಧಾನಸಭಾ ಚುನಾವಣೆಗೆ ಮುನ್ನ ಏಕಾಏಕಿ ಜಾರಿಗೊಳಿಸಿದ್ದೇಕೆ? ಎಂಬ ಪ್ರಶ್ನೆ ಉದ್ಭವಿಸಿದೆ.
2022ರ ಅಕ್ಟೋಬರ್ನಲ್ಲಿಯೇ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೀಸಲಾತಿ ಹೆಚ್ಚಳದಿಂದ ಕರ್ನಾಟಕದಲ್ಲಿ ಒಟ್ಟು ಮೀಸಲಾತಿ ಪ್ರಮಾಣ ಶೇ. 56ಕ್ಕೆ ಏರಿಕೆಯಾಗಲಿದ್ದು, ಅದು ಆಗಿನ ಶೇ. 50ರ ಮಿತಿಯನ್ನು ಮೀರುತ್ತದೆ ಎಂಬ ಅರಿವು ಅಂದಿನ ಬಿಜೆಪಿ ಸರ್ಕಾರಕ್ಕಿತ್ತು. ಈ ಹೆಚ್ಚಳಕ್ಕೆ ಸಾಂವಿಧಾನಿಕ ರಕ್ಷಣೆ ಒದಗಿಸಲು ಕಾಯ್ದೆಯನ್ನು ಸಂವಿಧಾನದ ಒಂಬತ್ತನೇ ಅನುಸೂಚಿಗೆ ಸೇರಿಸುವ ಅಗತ್ಯವಿದೆ ಎಂಬುದನ್ನು ಬಿಜೆಪಿ ನಾಯಕರು ಸಾರ್ವಜನಿಕವಾಗಿಯೇ ಒಪ್ಪಿಕೊಂಡಿದ್ದರು. ಆದರೆ, ಅಗತ್ಯವಾದ ಸಾಂವಿಧಾನಿಕ ಚೌಕಟ್ಟನ್ನು ಒದಗಿಸದೆ ವಿಧಾನಸಭಾ ಚುನಾವಣೆಗೆ ಕೆಲವೇ ತಿಂಗಳುಗಳಿರುವಾಗ ಮೀಸಲಾತಿ ಹೆಚ್ಚಳದ ಕಾಯ್ದೆಯನ್ನು ಜಾರಿಗೊಳಿಸಲಾಯಿತು.
ಚುನಾವಣೆಗೆ ಮುನ್ನ ಮೀಸಲಾತಿ ಹೆಚ್ಚಳವನ್ನು ಘೋಷಿಸುವುದಕ್ಕೆ ಬಿಜೆಪಿ ಸರ್ಕಾರ ನೀಡಿದ್ದ ಆದ್ಯತೆ ಸಾಂವಿಧಾನಿಕ ತಳಹದಿ ರೂಪಿಸುವಲ್ಲಿ ಏಕೆ ಇರಲಿಲ್ಲ ಎಂಬ ಪ್ರಶ್ನೆ ಸಹಜವಾಗಿಯೇ ಮೂಡುತ್ತದೆ.
ಲಕ್ಷಾಂತರ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಜನರ ಆಶಯಗಳನ್ನು ಚುನಾವಣಾ ರಾಜಕೀಯದ ಅನುಕೂಲಕ್ಕೆ ತಕ್ಕಂತೆ ಪರಿಗಣಿಸಲು ಸಾಧ್ಯವಿಲ್ಲ. ಮೀಸಲಾತಿ ಎಂಬುದು ಯಾವುದೇ ಸರ್ಕಾರ ನೀಡುವ ರಾಜಕೀಯ ಕೊಡುಗೆಯಲ್ಲ. ತಲೆಮಾರುಗಳಿಂದ ಈ ಸಮುದಾಯಗಳು ಎದುರಿಸುತ್ತಿರುವ ತಾರತಮ್ಯ, ಅವಕಾಶಗಳ ನಿರಾಕರಣೆ ಮತ್ತು ಸಾಮಾಜಿಕ ಬಹಿಷ್ಕಾರವನ್ನು ನಿವಾರಿಸಿ, ಸಮಾನ ಅವಕಾಶಗಳನ್ನು ಕಲ್ಪಿಸುವ ಸಾಂವಿಧಾನಿಕ ನ್ಯಾಯದ ಸಾಧನವಾಗಿದೆ.
ಕಾಂಗ್ರೆಸ್ ಪಕ್ಷವು ಮೀಸಲಾತಿ ಹೆಚ್ಚಳಕ್ಕೆ ಶಾಶ್ವತವಾದ ಸಾಂವಿಧಾನಿಕ ಪರಿಹಾರ ಕಲ್ಪಿಸುವ ನಿಲುವನ್ನು ನಿರಂತರವಾಗಿ ಪ್ರತಿಪಾದಿಸುತ್ತಾ ಬಂದಿದೆ. ಕರ್ನಾಟಕದ ಹೆಚ್ಚುವರಿ ಮೀಸಲಾತಿ ಕಾಯ್ದೆಯನ್ನು ಸಂವಿಧಾನದ ಒಂಬತ್ತನೇ ಅನುಸೂಚಿಗೆ ಸೇರಿಸುವುದು ಹಾಗೂ ಜನಸಂಖ್ಯೆ, ಸಾಮಾಜಿಕ ಹಿಂದುಳಿದಿರುವಿಕೆ ಮತ್ತು ಸೂಕ್ತ ಪ್ರಾತಿನಿಧ್ಯದ ಕೊರತೆಯನ್ನು ಆಧರಿಸಿದ ಮೀಸಲಾತಿ ನೀತಿಗಳಿಗೆ ಅವಕಾಶ ಕಲ್ಪಿಸಲು ಶೇ. 50ರ ಮಿತಿಯನ್ನು ಮರುಪರಿಶೀಲಿಸುವುದು ಈ ನಿಟ್ಟಿನಲ್ಲಿ ಅತ್ಯಂತ ಅಗತ್ಯವಾಗಿದೆ.
ಕರ್ನಾಟಕದ ಮೀಸಲಾತಿ ಕಾಯ್ದೆಯನ್ನು ಒಂಬತ್ತನೇ ಅನುಸೂಚಿಗೆ ಸೇರಿಸುವ ಪ್ರಸ್ತಾವನೆಯನ್ನು ಹೈಕೋರ್ಟ್ನಲ್ಲಿ ವಿಚಾರಣೆಯಲ್ಲಿರುವ ಕಾರಣಕ್ಕೆ ಮುಂದೂಡಲಾಗಿದೆ ಎಂಬುದನ್ನು 2026ರ ಜುಲೈ 25ರಂದು ಕೇಂದ್ರ ಸರ್ಕಾರವು ಸಂಸತ್ತಿನಲ್ಲಿ ನೀಡಿದ ಉತ್ತರವೇ ಸಾರಿ ಹೇಳಿದೆ.
ಈ ವಿಚಾರದಲ್ಲಿ ಕೇಂದ್ರ ಸರ್ಕಾರ ಎಷ್ಟು ಜಾವಾಬ್ದಾರಿಯುತವಾಗಿ ನಡೆದುಕೊಂಡಿದೆ ಎಂಬುದು ಸ್ಪಷ್ಟವಾಗುತ್ತದೆ. ಮೀಸಲಾತಿ ಹೆಚ್ಚಳಕ್ಕೆ ಸಂಬಂಧಿಸಿ ಸಾಂವಿಧಾನಿಕ ಚೌಕಟ್ಟನ್ನು ರೂಪಿಸುವಾಗ ನ್ಯಾಯಾಲಯದಲ್ಲಿ ಪ್ರಕರಣ ಬಾಕಿಯಿದೆ ಎಂಬ ಕಾರಣವನ್ನು ಮುಂದಿಟ್ಟುಕೊಂಡು ಅನಿರ್ದಿಷ್ಟ ಕಾಲದವರೆಗೆ ಮುಂದೂಡುವುದು ಸರಿಯಲ್ಲ. ಈ ವಿಚಾರವಾಗಿ ಕೇಂದ್ರ ಸರ್ಕಾರ ತನ್ನ ನಿಲುವೇನು ಎಂಬುದನ್ನು ಬಹಿರಂಗಪಡಿಸಬೇಕು. ತನ್ನದೇ ಸರ್ಕಾರ ಕರ್ನಾಟಕದಲ್ಲಿ ಜಾರಿ ಮಾಡಿರುವ ಮೀಸಲಾತಿ ಹೆಚ್ಚಳದ ಪರವಾಗಿದ್ದರೆ ಅದು ಮುಂದುವರಿಯಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕು.
ಆದ್ದರಿಂದ, ಮೀಸಲಾತಿಯ ಶೇ. 50ರ ಮಿತಿಯನ್ನು ಸಮಗ್ರವಾಗಿ ಮರುಪರಿಶೀಲಿಸಲು, ಸೂಕ್ತ ಸಾಂವಿಧಾನಿಕ ಮತ್ತು ಶಾಸನಾತ್ಮಕ ಕ್ರಮಗಳನ್ನು ಕೈಗೊಳ್ಳಲು ಹಾಗೂ ಕರ್ನಾಟಕದ ಮೀಸಲಾತಿ ಕಾಯ್ದೆಯನ್ನು ಒಂಬತ್ತನೇ ಅನುಸೂಚಿಗೆ ಸೇರಿಸುವ ಪ್ರಸ್ತಾವನೆಯನ್ನು ತುರ್ತಾಗಿ ಪರಿಶೀಲಿಸಲು ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಸರ್ಕಾರವನ್ನು ಆಗ್ರಹಿಸುತ್ತಿದ್ದೇನೆ.
ಪ್ರಚಾರದ ದೃಷ್ಟಿಯಿಂದ ಮೀಸಲಾತಿ ಒದಗಿಸುವುದರಲ್ಲಿ ಅರ್ಥವಿಲ್ಲ. ಅದಕ್ಕೆ ಕಾನೂನಿನ ದೃಷ್ಟಿಯಿಂದ ಸುಸ್ಥಿರವಾದ, ಸಾಮಾಜಿಕವಾಗಿ ಅರ್ಥಪೂರ್ಣವಾದ ಮತ್ತು ಪರಿಣಾಮಕಾರಿಯಾದ ಚೌಕಟ್ಟು ಇರಬೇಕು ಎಂಬುದು ನಮ್ಮ ಬೇಡಿಕೆಯಾಗಿದೆ.
ಕರ್ನಾಟಕ ಸರ್ಕಾರವು ಗೌರವಾನ್ವಿತ ಸುಪ್ರೀಂ ಕೋರ್ಟ್ನಲ್ಲಿ ಮೇಲ್ಮನವಿ ಸಲ್ಲಿಸುವುದು ಸೇರಿದಂತೆ ಲಭ್ಯವಿರುವ ಎಲ್ಲ ಕಾನೂನು ಆಯ್ಕೆಗಳನ್ನು ಪರಿಶೀಲಿಸಲಿದೆ. ಇದೇ ಸಂದರ್ಭದಲ್ಲಿ, ಚಾಲ್ತಿಯಲ್ಲಿರುವ ನೇಮಕಾತಿ ಪ್ರಕ್ರಿಯೆಗಳು ಮತ್ತು ಶೈಕ್ಷಣಿಕ ಅವಕಾಶಗಳಿಗೆ ಕಾನೂನಿನ ಚೌಕಟ್ಟಿನಲ್ಲಿ ರಕ್ಷಣೆ ಒದಗಿಸುವ ನಿಟ್ಟಿನಲ್ಲಿಯೂ ಅಗತ್ಯ ಕ್ರಮಗಳನ್ನು ಕೈಗೊಳ್ಳಲಿದೆ.
ಶಿಕ್ಷಣ, ಪ್ರಾತಿನಿಧ್ಯ ಮತ್ತು ಸಮಾನ ಅವಕಾಶಗಳು ಸಾಮಾಜಿಕ ಪ್ರಗತಿಯ ಮೂಲಾಧಾರಗಳೆಂದು ನಾನು ನಿರಂತರವಾಗಿ ಪ್ರತಿಪಾದಿಸುತ್ತಾ ಬಂದಿದ್ದೇನೆ. ಮೀಸಲಾತಿಯ ಉದ್ದೇಶ ಕೇವಲ ಕೆಲವು ಸ್ಥಾನಗಳು ಅಥವಾ ಉದ್ಯೋಗಗಳನ್ನು ಹಂಚಿಕೆ ಮಾಡುವುದಕ್ಕೆ ಸೀಮಿತವಾಗಿಲ್ಲ. ಶತಮಾನಗಳ ಕಾಲ ಅವಕಾಶಗಳಿಂದ ವಂಚಿತವಾಗಿರುವ ಸಮುದಾಯಗಳು ದೇಶದ ಆರ್ಥಿಕ, ಆಡಳಿತಾತ್ಮಕ, ಶೈಕ್ಷಣಿಕ ಮತ್ತು ಬೌದ್ಧಿಕ ಕ್ಷೇತ್ರಗಳಲ್ಲಿ ಸಂಪೂರ್ಣವಾಗಿ ಪಾಲ್ಗೊಳ್ಳಲು ಸಾಧ್ಯವಾಗುವಂತೆ ಮಾಡುವುದು ಅದರ ನಿಜವಾದ ಆಶಯವಾಗಿದೆ. (1/2)
Dr. G Parameshwara
@DrParameshwara
ಮುಂದಿನ ತಲೆಮಾರಿನ ದಲಿತ ಮತ್ತು ಆದಿವಾಸಿ ಮಕ್ಕಳು ತಮ್ಮ ಹಕ್ಕುಗಳಿಗಾಗಿ, ಮೀಸಲಾತಿಗಾಗಿ ನಿರಂತರವಾಗಿ ನ್ಯಾಯಾಲಯದಲ್ಲಿ ಹೋರಾಡುತ್ತ ಅನಿಶ್ಚಿತತೆಯಲ್ಲಿ ಬದುಕುವಂತಾಗಬಾರದು. ಬದಲಿಗೆ, ಅವರು ಹಿಂದಿನ ಪೀಳಿಗೆಗಿಂತ ಹೆಚ್ಚಿನ ಅವಕಾಶಗಳು ಮತ್ತು ಉತ್ತಮ ಭವಿಷ್ಯವನ್ನು ಹೊಂದುವಂತಾಗಬೇಕು.
ಮೀಸಲಾತಿಯ ಉದ್ದೇಶವಾದ ಸಾಮಾಜಿಕ ನ್ಯಾಯ ಮತ್ತು ಸಮಾನ ಅವಕಾಶಗಳನ್ನು ಉಳಿಸಿಕೊಂಡು, ಇಂದಿನ ಸಾಮಾಜಿಕ ಪರಿಸ್ಥಿತಿಗಳು, ಹಿಂದುಳಿದ ಸಮುದಾಯಗಳ ಅಗತ್ಯಗಳು ಮತ್ತು ವಾಸ್ತವಿಕ ಸಮಸ್ಯೆಗಳನ್ನು ಗಮನದಲ್ಲಿಟ್ಟುಕೊಂಡು ಮೀಸಲಾತಿ ನೀತಿಗಳನ್ನು ರೂಪಿಸಬೇಕು. ಈ ನಿಟ್ಟಿನಲ್ಲಿ ದೇಶದಲ್ಲಿ ಮುಕ್ತ ಹಾಗೂ ಗಂಭೀರ ಚರ್ಚೆ ನಡೆಯಬೇಕಿದೆ. ಅದಕ್ಕೆ ಇದು ಸೂಕ್ತ ಸಮಯವಾಗಿದೆ.
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಇತರ ಹಿಂದುಳಿದ ಮತ್ತು ಅವಕಾಶವಂಚಿತ ಸಮುದಾಯಗಳ ಹಕ್ಕುಗಳು ಹಾಗೂ ಆಶಯಗಳನ್ನು ರಕ್ಷಿಸುವುದರ ಜೊತೆಗೆ, ಮೀಸಲಾತಿ ಹೆಚ್ಚಳವನ್ನು ಸಾಂವಿಧಾನಿಕವಾಗಿ ಸುಸ್ಥಿರವಾದ ರೀತಿಯಲ್ಲಿ ಜಾರಿಗೊಳಿಸಲು ಕಾಂಗ್ರೆಸ್ ಪಕ್ಷ ಬದ್ಧವಾಗಿದೆ.
ಸಾಮಾಜಿಕ ನ್ಯಾಯವು ಕಾಯ್ದೆಯ ಘೋಷಣೆಯೊಂದಿಗೆ ಅಂತ್ಯಗೊಳ್ಳಬಾರದು. ಅದಕ್ಕೆ ಸಾಂವಿಧಾನಿಕ ರಕ್ಷಣೆ ದೊರೆಯಬೇಕು, ಸಾರ್ವಜನಿಕ ನೀತಿಗಳ ಮೂಲಕ ಪರಿಣಾಮಕಾರಿಯಾಗಿ ಅನುಷ್ಠಾನಗೊಳ್ಳಬೇಕು ಮತ್ತು ಜನರ ಬದುಕಿನಲ್ಲಿ ನೈಜ ಅವಕಾಶಗಳ ರೂಪದಲ್ಲಿ ಕಾಣಿಸಿಕೊಳ್ಳಬೇಕು.
ಇದು ನಮ್ಮೆಲ್ಲರ ಸಾಮೂಹಿಕ ಜವಾಬ್ದಾರಿಯಾಗಿದೆ. (2/2)
@BJP4India I @BJP4Karnataka I @BSBommai I @INCIndia I @INCKarnataka -
Dr. G Parameshwara
@DrParameshwara
The Karnataka High Court's judgment striking down the enhancement of reservation for Scheduled Castes from 15% to 17% and Scheduled Tribes from 3% to 7% is a serious development with far-reaching implications for social justice, educational opportunities and public employment in Karnataka.
We respect the judiciary and the constitutional framework within which it operates. At the same time, this judgment raises fundamental questions about the political responsibility of the previous BJP government and the continued inaction of the BJP-led Union Government.
The central question is simple, Why did the BJP enact a reservation law before the 2023 Assembly elections without first securing the constitutional protection it knew was necessary?
In October 2022, the then BJP government was fully aware that enhancing SC/ST reservation would increase the total reservation in Karnataka to 56%, exceeding the prevailing 50% ceiling. Its own leadership publicly acknowledged the need to seek protection under the Ninth Schedule of the Constitution.
Yet, the legislation was enacted just months before the Assembly elections without that protection having been secured.
This sequence of events raises a legitimate question: Was the BJP more interested in announcing enhanced reservation before the elections than in ensuring that the benefits would withstand constitutional scrutiny?
The aspirations of millions of Scheduled Caste and Scheduled Tribe citizens cannot be treated as a matter of electoral convenience. Reservation is not a political favour bestowed by any government. It is an instrument of constitutional justice, intended to address generations of exclusion, discrimination and unequal access to opportunity.
The Congress has consistently advocated a durable constitutional solution, including the inclusion of Karnataka's enhanced reservation legislation in the Ninth Schedule and a reconsideration of the 50% ceiling to enable reservation policies informed by population, social disadvantage and inadequate representation.
The Union Government's response in Parliament on July 25, 2026, confirmed that Karnataka's proposal for Ninth Schedule inclusion had been deferred because the matter was pending before the High Court.
This makes the responsibility of the Union Government especially important today. It cannot merely cite judicial proceedings indefinitely while avoiding a substantive decision on the constitutional framework necessary to protect enhanced reservation.
We therefore call upon the Prime Minister and the Union Government to initiate a comprehensive review of the 50% reservation ceiling, pursue appropriate constitutional and legislative measures, and examine Karnataka's request for Ninth Schedule inclusion without further delay.
Our demand is not for reservation as a symbolic announcement. Our demand is for reservation that is legally sustainable, socially meaningful and effectively implemented.
The Government of Karnataka will examine all available legal remedies, including an appeal before the Hon'ble Supreme Court, while ensuring that ongoing recruitment and educational opportunities are protected in accordance with the law.
As someone who has consistently advocated education, representation and equal opportunity as foundations of social progress, I firmly believe that the purpose of reservation extends beyond the allocation of seats and jobs. It is about enabling historically excluded communities to participate fully in the economic, administrative, educational and intellectual life of our nation.
The next generation of Dalit and Adivasi children must inherit greater opportunities, not prolonged legal uncertainty.
This is also an opportunity for India to begin a serious national conversation about the future of affirmative action. Our constitutional commitment to substantive equality must be translated into policies that respond to contemporary social realities and withstand judicial scrutiny. (1/2)
Dr. G Parameshwara
@DrParameshwara
The Congress remains committed to pursuing the enhanced reservation through constitutionally sustainable means and protecting the rights and aspirations of Scheduled Castes, Scheduled Tribes and other disadvantaged communities.
Social justice must not end with the announcement of a law. It must be secured through constitutional protection, implemented through public policy and experienced as real opportunity in people's lives.
That must be our collective responsibility. (2/2)
@BJP4India I @BJP4Karnataka I @narendramodi I @BSBommai I @INCIndia I @INCKarnataka -
Dr. G Parameshwara
@DrParameshwara
Bengaluru is all set to welcome Asia’s finest women’s basketball clubs for the FIBA Women’s Basketball League Asia 2026, from October 20 to 25 at Sree Kanteerava Indoor Stadium.
Six champion teams from Japan, China, South Korea, Chinese Taipei, the Philippines and India, represented by Indian Railways, will compete for continental honours.
Hosting this prestigious championship is a proud moment for Karnataka and an opportunity to inspire our young athletes, especially women, to pursue basketball at the highest level.
Our government remains committed to promoting international sporting events and making Bengaluru a major basketball hub.
Dr. G Parameshwara
@DrParameshwara
ಅಕ್ಟೋಬರ್ 20ರಿಂದ 25ರವರೆಗೆ ಬೆಂಗಳೂರಿನ ಶ್ರೀ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯಲಿರುವ FIBA ಮಹಿಳಾ ಬಾಸ್ಕೆಟ್ಬಾಲ್ ಲೀಗ್ ಏಷ್ಯಾ 2026 ಪಂದ್ಯಗಳಿಗೆ ಬೆಂಗಳೂರು ಸಜ್ಜಾಗಿದೆ. ಏಷ್ಯಾದ ಪ್ರಮುಖ ಮಹಿಳಾ ಬಾಸ್ಕೆಟ್ಬಾಲ್ ತಂಡಗಳು ಪಾಲ್ಗೊಳ್ಳಲಿರುವ ಈ ಪ್ರತಿಷ್ಠಿತ ಕ್ರೀಡಾಕೂಟದ ಆತಿಥ್ಯವನ್ನು ಕರ್ನಾಟಕ ವಹಿಸುತ್ತಿರುವುದು ನಮಗೆ ಹೆಮ್ಮೆಯ ಸಂಗತಿಯಾಗಿದೆ.
ಜಪಾನ್, ಚೀನಾ, ದಕ್ಷಿಣ ಕೊರಿಯಾ, ಚೈನೀಸ್ ತೈಪೆ, ಫಿಲಿಪ್ಪೀನ್ಸ್ ಹಾಗೂ ಭಾರತ ತಂಡಗಳು ಏಷ್ಯನ್ ಚಾಂಪಿಯನ್ ಪಟ್ಟ ಧರಿಸಲು ಸೆಣಸಲಿವೆ. ಭಾರತವನ್ನು ಭಾರತೀಯ ರೈಲ್ವೇ ತಂಡ ಪ್ರತಿನಿಧಿಸುತ್ತಿದ್ದು, ಒಟ್ಟು ಆರು ಚಾಂಪಿಯನ್ ತಂಡಗಳ ಹಣಾಹಣಿಯನ್ನು ಕಣ್ತುಂಬಿಕೊಳ್ಳುವ ಭಾಗ್ಯ ನಮ್ಮದಾಗಿದೆ.
ಈ ಪ್ರತಿಷ್ಠಿತ ಪಂದ್ಯವು ವಿಶೇಷವಾಗಿ ಮಹಿಳಾ ಕ್ರೀಡಾಪಟುಗಳಿಗೆ ಸ್ಫೂರ್ತಿಯಾಗುವುದರ ಜೊತೆಗೆ, ಯುವ ಪ್ರತಿಭೆಗಳು ಬಾಸ್ಕೆಟ್ಬಾಲ್ ಕ್ಷೇತ್ರದಲ್ಲಿ ಉನ್ನತ ಸಾಧನೆ ಮಾಡಲು ಪ್ರೇರಣೆ ನೀಡಲಿದೆ.
ಅಂತಾರಾಷ್ಟ್ರೀಯ ಕ್ರೀಡಾಕೂಟಗಳಿಗೆ ಉತ್ತೇಜನ ನೀಡುವ ಮೂಲಕ ಬೆಂಗಳೂರನ್ನು ಪ್ರಮುಖ ಬಾಸ್ಕೆಟ್ಬಾಲ್ ಕೇಂದ್ರವನ್ನಾಗಿ ಬೆಳೆಸಲು ಹಾಗೂ ರಾಜ್ಯದಲ್ಲಿ ಕ್ರೀಡಾ ಸಂಸ್ಕೃತಿಯನ್ನು ಬಲಪಡಿಸಲು ನಮ್ಮ ಸರ್ಕಾರ ಬದ್ಧವಾಗಿದೆ. -
Dr. G Parameshwara
@DrParameshwara
ರಾಜ್ಯದ ಕ್ರೀಡಾಪಟುಗಳಿಗೆ ಗುಣಮಟ್ಟದ ತರಬೇತಿ ಸೌಲಭ್ಯಗಳನ್ನು ಒದಗಿಸಿ, ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಲು ಪ್ರೋತ್ಸಾಹಿಸುವ ಉದ್ದೇಶದಿಂದ ಕ್ರೀಡಾ ಮೂಲಸೌಕರ್ಯ ಅಭಿವೃದ್ಧಿಗೆ ಆದ್ಯತೆ ನೀಡಲಾಗಿದೆ.
ಇದರ ಭಾಗವಾಗಿ ರಾಜ್ಯದ 14 ಜಿಲ್ಲೆಗಳಲ್ಲಿ ಸಿಂಥೆಟಿಕ್ ಟ್ರ್ಯಾಕ್ಗಳನ್ನು ನಿರ್ಮಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಇದರಿಂದ ಕ್ರೀಡಾಪಟುಗಳಿಗೆ ತಮ್ಮದೇ ಜಿಲ್ಲೆಗಳಲ್ಲಿ ಉತ್ತಮ ತರಬೇತಿ ಪಡೆಯಲು ಹಾಗೂ ಕ್ರೀಡಾ ಸಾಮರ್ಥ್ಯವನ್ನು ಮತ್ತಷ್ಟು ಹೆಚ್ಚಿಸಿಕೊಳ್ಳಲು ಅವಕಾಶ ದೊರೆಯಲಿದೆ.
ಕ್ರೀಡಾ ಪ್ರತಿಭೆಗಳಿಗೆ ಸೂಕ್ತ ವೇದಿಕೆ, ಗುಣಮಟ್ಟದ ಮೂಲಸೌಕರ್ಯ ಮತ್ತು ತರಬೇತಿ ಸೌಲಭ್ಯಗಳನ್ನು ಒದಗಿಸುವ ಮೂಲಕ ರಾಜ್ಯದ ಕ್ರೀಡಾ ಕ್ಷೇತ್ರವನ್ನು ಮತ್ತಷ್ಟು ಬಲಪಡಿಸಲು ನಮ್ಮ ಸರ್ಕಾರ ಬದ್ಧವಾಗಿದೆ.
Our government is prioritising the development of sports infrastructure to provide athletes across Karnataka with quality training facilities and encourage them to excel at national and international levels.
As part of this initiative, steps are being taken to construct synthetic tracks in 14 districts across the state. This will enable athletes to access quality training facilities in their own districts and further enhance their sporting abilities.
Our government is committed to strengthening Karnataka’s sporting ecosystem by providing emerging talent with the right platform, quality infrastructure and training facilities to achieve their full potential. -
Dr. G Parameshwara
@DrParameshwara
ತುಮಕೂರು ದಸರಾ ಮಹೋತ್ಸವದ ಸಂಭ್ರಮವನ್ನು ಮತ್ತಷ್ಟು ಹೆಚ್ಚಿಸಿ, ಸಂಗೀತದ ಮೂಲಕ ಜನಮನದಲ್ಲಿ ಸಂತಸ ತುಂಬುವ ಉದ್ದೇಶದಿಂದ ಅಕ್ಟೋಬರ್ 16ರಂದು ‘ಸೌತ್ ಮೀಲ್’ ಸಂಗೀತ ತಂಡದ ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿದೆ.
ಸಂಗೀತದ ಲಯ, ಹಾಡುಗಳ ಮಾಧುರ್ಯವು ಕೇಳುಗರನ್ನು ಮುದಗೊಳಿಸಲಿವೆ. ಕಲಾಸಕ್ತರು, ಸಂಗೀತಪ್ರೇಮಿಗಳು, ಸಮಸ್ತ ನಾಗರಿಕರು ಗಾಯನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ದಸರೆಯ ಸಂಭ್ರಮವನ್ನು ಸ್ಮರಣೀಯವಾಗಿಸಿ.
As part of the Tumakuru Dasara Mahotsava, a special performance by the ‘South Meal’ musical band will be held on October 16, adding to the festive spirit and spreading joy through music.
The rhythmic beats and melodious tunes will captivate audiences. Art and music enthusiasts, along with all citizens, are invited to be part of the musical evening and make the Dasara celebrations memorable. -
Dr. G Parameshwara
@DrParameshwara
ತುಮಕೂರು ದಸರಾ ಮಹೋತ್ಸವದ ಅಂಗವಾಗಿ ಸಂಗೀತದ ಸೊಬಗನ್ನು ಹೆಚ್ಚಿಸಿ, ನಗರದ ಜನರಿಗೆ ಮನರಂಜನೆಯ ಸುಂದರ ಕ್ಷಣಗಳನ್ನು ಉಣಬಡಿಸುವ ಉದ್ದೇಶದಿಂದ ಅಕ್ಟೋಬರ್ 14ರಂದು ‘ಆಲ್ ಓಕೆ’ ತಂಡದ ವಿಶೇಷ ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿದೆ.
ಯುವಜನರು ಸೇರಿದಂತೆ ಸಂಗೀತಾಸಕ್ತರು ತಮ್ಮ ನೆಚ್ಚಿನ ಹಾಡುಗಳೊಂದಿಗೆ ಸಂಭ್ರಮಿಸಲು, ಹಬ್ಬದ ಸಡಗರವನ್ನು ಮತ್ತಷ್ಟು ಆನಂದಿಸಲು ಈ ಕಾರ್ಯಕ್ರಮ ವೇದಿಕೆಯಾಗಲಿದೆ. ಸುಮಧುರ ಸಂಗೀತವು ಎಲ್ಲೆಡೆ ಅನುರಣಿಸಲಿದೆ.
As part of the Tumakuru Dasara Mahotsava, a special musical performance by the ‘All OK’ team will be held on October 14, adding to the musical charm and entertainment of the festivities.
The programme will provide a platform for music lovers, especially the youth, to celebrate to their favourite songs and enjoy the festive spirit. Melodious music will resonate across the city, adding to the joy of the celebrations. -
Dr. G Parameshwara
@DrParameshwara
ತುಮಕೂರು ದಸರಾ ಮಹೋತ್ಸವದ ಅಂಗವಾಗಿ ನಗರದ ಜನರಿಗೆ ಸಂಗೀತದ ರಸದೌತಣ ಉಣಬಡಿಸಿ, ಹಬ್ಬದ ಸಂಭ್ರಮವನ್ನು ಮತ್ತಷ್ಟು ಹೆಚ್ಚಿಸುವ ಉದ್ದೇಶದಿಂದ ಅಕ್ಟೋಬರ್ 12ರಂದು ‘ಟು ಐಡ್ ವಿಜಾರ್ಡ್’ ತಂಡದ ವಿಶೇಷ ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿದೆ.
ಸಂಗೀತದ ಮೂಲಕ ಜನರಲ್ಲಿ ಸಂತಸ ಮೂಡಿಸುವುದರ ಜೊತೆಗೆ, ದಸರಾ ಮಹೋತ್ಸವವನ್ನು ಎಲ್ಲ ವಯೋಮಾನದವರಿಗೂ ಆನಂದದಾಯಕವಾಗಿಸಲು ಈ ಕಾರ್ಯಕ್ರಮ ವೇದಿಕೆಯಾಗಲಿದೆ.
As part of the Tumakuru Dasara Mahotsava, a special musical performance by the ‘Two Eyed Wizard’ band will be held on October 12, offering the people of the city a musical treat.
The programme aims to spread joy through music and make the Dasara celebrations enjoyable for people of all age groups.
Bringing people together through culture and creating moments of musical delight, this performance will further enhance the charm of the Tumakuru Dasara. -
Dr. G Parameshwara
@DrParameshwara
ಅಕ್ಟೋಬರ್ 20ರಿಂದ 25ರವರೆಗೆ ಬೆಂಗಳೂರಿನ ಶ್ರೀ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯಲಿರುವ ಪ್ರತಿಷ್ಠಿತ ‘ಫಿಬಾ ಮಹಿಳಾ ಬಾಸ್ಕೆಟ್ಬಾಲ್ ಲೀಗ್ ಏಷ್ಯಾ–2026’ ಅಂತಾರಾಷ್ಟ್ರೀಯ ಚಾಂಪಿಯನ್ಶಿಪ್ನ ಪೂರ್ವಸಿದ್ಧತೆಗಳನ್ನು ಇಂದು ಪರಿಶೀಲಿಸಿದೆ.
ರಾಜ್ಯ ಸರ್ಕಾರದ ಬೆಂಬಲದೊಂದಿಗೆ ಭಾರತೀಯ ಬಾಸ್ಕೆಟ್ಬಾಲ್ ಒಕ್ಕೂಟ ಹಾಗೂ ಕರ್ನಾಟಕ ರಾಜ್ಯ ಬಾಸ್ಕೆಟ್ಬಾಲ್ ಸಂಸ್ಥೆಯ ಸಹಯೋಗದಲ್ಲಿ ಆಯೋಜಿಸಲಾಗುತ್ತಿರುವ ಈ ಪಂದ್ಯಾವಳಿಯಲ್ಲಿ ಏಷ್ಯಾದ ಆರು ಪ್ರಮುಖ ಮಹಿಳಾ ಬಾಸ್ಕೆಟ್ಬಾಲ್ ಕ್ಲಬ್ ತಂಡಗಳು ಭಾಗವಹಿಸಲಿವೆ.
ಪಂದ್ಯಾವಳಿಯ ಸುಗಮ ಆಯೋಜನೆಗೆ ಅಗತ್ಯವಿರುವ ಮೂಲಸೌಕರ್ಯ ಹಾಗೂ ಇತರ ಸಿದ್ಧತೆಗಳನ್ನು ಪರಿಶೀಲಿಸಿ, ಅಂತಾರಾಷ್ಟ್ರೀಯ ಮಟ್ಟದ ಈ ಕ್ರೀಡಾಕೂಟವನ್ನು ಯಶಸ್ವಿಯಾಗಿ ನಡೆಸಲು ಎಲ್ಲ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಸಂಬಂಧಪಟ್ಟವರಿಗೆ ಸೂಚಿಸಿದೆ.
ಈ ಸಂದರ್ಭದಲ್ಲಿ ಫಿಬಾ ಏಷ್ಯಾ ಅಧ್ಯಕ್ಷರು, ಕರ್ನಾಟಕ ರಾಜ್ಯ ಬಾಸ್ಕೆಟ್ಬಾಲ್ ಸಂಸ್ಥೆಯ ಕಾರ್ಯದರ್ಶಿಗಳು ಹಾಗೂ ವಿಧಾನ ಪರಿಷತ್ ಸದಸ್ಯರಾದ ಡಾ. ಕೆ. ಗೋವಿಂದರಾಜು, ಕರ್ನಾಟಕ ರಾಜ್ಯ ಬಾಸ್ಕೆಟ್ಬಾಲ್ ಸಂಸ್ಥೆಯ ಅಧ್ಯಕ್ಷರಾದ ಬಿ. ದಯಾನಂದ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಾದ ನವೀನ್ ರಾಜ್ ಸಿಂಗ್, ಆಯುಕ್ತರಾದ ಎಂ.ಎನ್. ಅನುಚೇತ್ ಉಪಸ್ಥಿತರಿದ್ದರು.
Today, I reviewed the preparations for the prestigious FIBA Women’s Basketball League Asia 2026, to be held at Sri Kanteerava Indoor Stadium, Bengaluru, from October 20 to 25.
The international championship, being organised with the support of the State Government in association with the Basketball Federation of India and the Karnataka State Basketball Association, will feature six leading women’s basketball club teams from Asia.
I reviewed the infrastructure and other arrangements required for the smooth conduct of the tournament and directed the concerned officials to ensure that all necessary measures are taken to organise this international sporting event successfully.
FIBA Asia President, Karnataka State Basketball Association Secretary and MLC Dr. K. Govindaraj, KSBA President B. Dayanand, Principal Secretary, Youth Empowerment and Sports Naveen Raj Singh, and Commissioner M.N. Anucheth were present. -
Dr. G Parameshwara
@DrParameshwara
Bengaluru is all set to host the FIBA Women’s Basketball League Asia 2026 from October 20 to 25 at Sree Kanteerava Indoor Stadium.
Addressing a press conference at Karnataka Olympic Bhavan in Bengaluru today, I shared details of this prestigious championship, which will bring together six leading women’s basketball clubs from China, Japan, South Korea, Chinese Taipei, the Philippines and India, represented by our national champions, Indian Railways.
Organised by the Karnataka State Basketball Association under the aegis of the Basketball Federation of India, with support from FIBA and the Karnataka Government, the tournament will feature top international talent. Each team will have two overseas players, and I also highlighted the expected participation of NBA players. Two matches will be held daily at 4 PM and 7 PM.
This championship is a great opportunity for our young basketball players to watch international talent, learn from their skills and gain inspiration. It will also give Indian Railways valuable exposure against Asia’s best clubs and encourage more young women to pursue basketball.
I sincerely thank FIBA Asia President Dr. K. Govindaraj for bringing this championship to Bengaluru. Our Chief Minister Shri D.K. Shivakumar has extended his support to the tournament, and our government will continue to encourage such international sporting events.
We are committed to making Bengaluru a national and international basketball hub, strengthening the sporting ecosystem and creating greater opportunities for our athletes.
Dr. G Parameshwara
@DrParameshwara
ಬೆಂಗಳೂರಿನ ಕರ್ನಾಟಕ ಒಲಿಂಪಿಕ್ ಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದೆ.
ಬೆಂಗಳೂರನ್ನು ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಪ್ರಮುಖ ಬಾಸ್ಕೆಟ್ಬಾಲ್ ಕ್ರೀಡಾ ಕೇಂದ್ರವನ್ನಾಗಿ ಅಭಿವೃದ್ಧಿಪಡಿಸುವುದು ನಮ್ಮ ಸರ್ಕಾರದ ಗುರಿಯಾಗಿದೆ. ಕ್ರೀಡೆಯ ಬೆಳವಣಿಗೆಗೆ ಹಾಗೂ ಕ್ರೀಡಾಪಟುಗಳಿಗೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲು ನಮ್ಮ ಸರ್ಕಾರ ಬದ್ಧವಾಗಿದೆ.
ಅಕ್ಟೋಬರ್ 20ರಿಂದ 25ರವರೆಗೆ ಬೆಂಗಳೂರಿನ ಶ್ರೀ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಪ್ರತಿಷ್ಠಿತ ‘ಫಿಬಾ ಮಹಿಳಾ ಬಾಸ್ಕೆಟ್ಬಾಲ್ ಲೀಗ್ ಏಷ್ಯಾ–2026’ ಅಂತಾರಾಷ್ಟ್ರೀಯ ಪಂದ್ಯಾವಳಿ ನಡೆಯಲಿದೆ. ಕರ್ನಾಟಕ ರಾಜ್ಯ ಬಾಸ್ಕೆಟ್ಬಾಲ್ ಸಂಸ್ಥೆಯು (KSBA), ಭಾರತೀಯ ಬಾಸ್ಕೆಟ್ಬಾಲ್ ಒಕ್ಕೂಟದ (BFI) ಆಶ್ರಯದಲ್ಲಿ, ನಮ್ಮ ಸರ್ಕಾರದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಅಂತಾರಾಷ್ಟ್ರೀಯ ಬಾಸ್ಕೆಟ್ಬಾಲ್ ಒಕ್ಕೂಟದ (FIBA) ಬೆಂಬಲದೊಂದಿಗೆ ಈ ಪಂದ್ಯಾವಳಿಯನ್ನು ಆಯೋಜಿಸಲಾಗಿದೆ.
ಜಪಾನ್ನ ಡೆನ್ಸೊ ಐರಿಸ್, ದಕ್ಷಿಣ ಕೊರಿಯಾದ ಚಿಯಾಂಗ್ಜು ಕೆಬಿ ಸ್ಟಾರ್ಸ್, ಚೀನಾದ ಸಿಚುವಾನ್ ಯುವಾಂಡಾ ಮೈಲೆ, ಫಿಲಿಪ್ಪೀನ್ಸ್ನ ಅಕಾರಿ ಸ್ಪಾರ್ಕ್ಸ್, ಚೈನೀಸ್ ತೈಪೆಯ ಕ್ಯಾಥೆ ಲೈಫ್ ಟೈಗರ್ಸ್ ಹಾಗೂ ಭಾರತದ ರಾಷ್ಟ್ರೀಯ ಚಾಂಪಿಯನ್ ಭಾರತೀಯ ರೈಲ್ವೇಸ್ ಸೇರಿದಂತೆ ಏಷ್ಯಾದ ಆರು ಪ್ರಮುಖ ಮಹಿಳಾ ಬಾಸ್ಕೆಟ್ಬಾಲ್ ಕ್ಲಬ್ ತಂಡಗಳು ಭಾಗವಹಿಸಲಿವೆ.
ಅಂತಾರಾಷ್ಟ್ರೀಯ ಮಟ್ಟದ ಅನುಭವಿ ಆಟಗಾರ್ತಿಯರ ಕೌಶಲ್ಯ ಮತ್ತು ಆಟದ ತಂತ್ರಗಳನ್ನು ನೇರವಾಗಿ ವೀಕ್ಷಿಸಲು ನಮ್ಮ ಯುವ ಕ್ರೀಡಾಪಟುಗಳಿಗೆ, ವಿಶೇಷವಾಗಿ ಮಹಿಳೆಯರಿಗೆ ಇದೊಂದು ಅಪೂರ್ವ ಅವಕಾಶವಾಗಿದೆ. ಭಾರತೀಯ ರೈಲ್ವೇಸ್ ತಂಡಕ್ಕೂ ಏಷ್ಯಾದ ಬಲಿಷ್ಠ ಕ್ಲಬ್ ತಂಡಗಳ ವಿರುದ್ಧ ಸ್ಪರ್ಧಿಸಿ ಅಂತಾರಾಷ್ಟ್ರೀಯ ಅನುಭವ ಪಡೆಯಲು ಅವಕಾಶ ದೊರೆತಿದೆ.
ಬೆಂಗಳೂರಿನಲ್ಲಿ ಈ ಹಿಂದೆಯೂ ಹಲವು ಬಾಸ್ಕೆಟ್ಬಾಲ್ ಪಂದ್ಯಾವಳಿಗಳನ್ನು ಆಯೋಜಿಸಲಾಗಿದ್ದು, ಈ ಪ್ರತಿಷ್ಠಿತ ಚಾಂಪಿಯನ್ಶಿಪ್ ನಗರದ ಕ್ರೀಡಾ ಹಿರಿಮೆಯನ್ನು ಮತ್ತಷ್ಟು ಹೆಚ್ಚಿಸಲಿದೆ. ಮಹಿಳಾ ಬಾಸ್ಕೆಟ್ಬಾಲ್ಗೆ ಹೆಚ್ಚಿನ ಉತ್ತೇಜನ ನೀಡುವುದರ ಜೊತೆಗೆ ಯುವತಿಯರು ಕ್ರೀಡೆಯಲ್ಲಿ ಸಾಧನೆ ಮಾಡಲು ಸ್ಫೂರ್ತಿಯಾಗಲಿದೆ.
ಈ ಅಂತಾರಾಷ್ಟ್ರೀಯ ಪಂದ್ಯಾವಳಿಯನ್ನು ಬೆಂಗಳೂರಿಗೆ ತರುವಲ್ಲಿ ವಿಶೇಷ ಪ್ರಯತ್ನ ನಡೆಸಿದ ಫಿಬಾ ಏಷ್ಯಾ ಅಧ್ಯಕ್ಷರಾದ ಡಾ. ಕೆ. ಗೋವಿಂದರಾಜು ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ.
ಮುಖ್ಯಮಂತ್ರಿಗಳು ಈ ಪಂದ್ಯಾವಳಿಯ ಆಯೋಜನೆಗೆ ಬೆಂಬಲ ನೀಡಿದ್ದು, ಮುಂದಿನ ದಿನಗಳಲ್ಲಿಯೂ ಇಂತಹ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಕ್ರೀಡಾಕೂಟಗಳಿಗೆ ನಮ್ಮ ಸರ್ಕಾರ ಅಗತ್ಯ ಸಹಕಾರ ನೀಡಲಿದೆ.
ರಾಜ್ಯದಲ್ಲಿ ಕ್ರೀಡಾ ಮೂಲಸೌಕರ್ಯ ಅಭಿವೃದ್ಧಿಗೆ ವಿಶೇಷ ಆದ್ಯತೆ ನೀಡಲಾಗಿದ್ದು, ಈಗಾಗಲೇ ಸುಮಾರು 14 ಜಿಲ್ಲೆಗಳಲ್ಲಿ ಸಿಂಥೆಟಿಕ್ ಟ್ರ್ಯಾಕ್ಗಳನ್ನು ನಿರ್ಮಿಸಲಾಗಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಜಿಲ್ಲೆಗಳಿಗೆ ಈ ಸೌಲಭ್ಯ ವಿಸ್ತರಿಸುವುದರ ಜೊತೆಗೆ ಕ್ರೀಡಾಪಟುಗಳಿಗೆ ಅಗತ್ಯ ತರಬೇತಿ, ಸೌಲಭ್ಯ ಹಾಗೂ ವೈಯಕ್ತಿಕ ಪ್ರೋತ್ಸಾಹ ಒದಗಿಸಲು ಕ್ರಮ ಕೈಗೊಳ್ಳಲಾಗುವುದು.
ಏಷ್ಯನ್ ಗೇಮ್ಸ್ನಲ್ಲಿ ಪದಕಗಳನ್ನು ಗಳಿಸಿ ದೇಶಕ್ಕೆ ಕೀರ್ತಿ ತಂದ 85 ಕ್ರೀಡಾಪಟುಗಳು ಹಾಗೂ ಕರ್ನಾಟಕದ ಎಂಟು ಪದಕ ವಿಜೇತರ ಸಾಧನೆಯನ್ನು ಅಭಿನಂದಿಸುತ್ತೇನೆ.
ಆರು ದಿನಗಳ ಕಾಲ ನಡೆಯಲಿರುವ ಈ ಅಂತಾರಾಷ್ಟ್ರೀಯ ಪಂದ್ಯಾವಳಿಗೆ ಆಗಮಿಸುತ್ತಿರುವ ಎಲ್ಲ ತಂಡಗಳನ್ನು ಕರ್ನಾಟಕಕ್ಕೆ ಆತ್ಮೀಯವಾಗಿ ಸ್ವಾಗತಿಸುತ್ತೇನೆ. ಪಂದ್ಯಾವಳಿಯ ಯಶಸ್ಸಿಗೆ ಮಾಧ್ಯಮಗಳು ಹಾಗೂ ಕ್ರೀಡಾಭಿಮಾನಿಗಳ ಸಹಕಾರ ಅತ್ಯಂತ ಮುಖ್ಯವಾಗಿದೆ.
ಈ ಸಂದರ್ಭದಲ್ಲಿ ಫಿಬಾ ಏಷ್ಯಾ ಅಧ್ಯಕ್ಷರು ಹಾಗೂ ವಿಧಾನ ಪರಿಷತ್ ಸದಸ್ಯರಾದ ಡಾ. ಕೆ. ಗೋವಿಂದರಾಜು, ಕರ್ನಾಟಕ ರಾಜ್ಯ ಬಾಸ್ಕೆಟ್ಬಾಲ್ ಸಂಸ್ಥೆಯ ಅಧ್ಯಕ್ಷರಾದ ಬಿ. ದಯಾನಂದ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ನವೀನ್ ರಾಜ್ ಸಿಂಗ್, ಆಯುಕ್ತರಾದ ಎಂ.ಎನ್. ಅನುಚೇತ್ ಉಪಸ್ಥಿತರಿದ್ದರು. -
Dr. G Parameshwara
@DrParameshwara
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರು, ಆತ್ಮೀಯರು ಆದ ಶ್ರೀ @utkhader ಅವರಿಗೆ ಜನ್ಮದಿನದ ಶುಭಾಶಯಗಳು.
ಜನಸೇವೆಯ ನಿಮ್ಮ ಆಶಯಕ್ಕೆ ಭಗವಂತನು ದೀರ್ಘಾಯುಷ್ಯ, ಆರೋಗ್ಯವನ್ನು ಕೊಟ್ಟು ಬಲ ತುಂಬಲಿ ಎಂದು ಹಾರೈಸುತ್ತೇನೆ. -
Dr. G Parameshwara
@DrParameshwara
ಬರದಿಂದ ಸಂಕಷ್ಟಕ್ಕೀಡಾಗಿರುವ ರೈತರ ಹಿತ ಕಾಪಾಡುವುದು, ಕುಡಿಯುವ ನೀರು, ಉದ್ಯೋಗ, ಜಾನುವಾರುಗಳಿಗೆ ಮೇವು ಒದಗಿಸುವುದು ನಮ್ಮ ಸರ್ಕಾರದ ಮೊದಲ ಆದ್ಯತೆಯಾಗಿದೆ.
ಈ ಹಿನ್ನೆಲೆಯಲ್ಲಿ ಬಳ್ಳಾರಿ ಜಿಲ್ಲೆಯ ಬರಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ, ಬೆಳೆಹಾನಿ ಪರಿಶೀಲಿಸಿ, ರೈತರ ಸಮಸ್ಯೆಗಳನ್ನು ಆಲಿಸಿದ್ದೇನೆ.
ಜಿಲ್ಲೆಯಲ್ಲಿ ಶೇ.49ರಷ್ಟು ಮಳೆ ಕೊರತೆಯಾಗಿದ್ದು, 67,236 ಹೆಕ್ಟೇರ್ ಪ್ರದೇಶದಲ್ಲಿ ವಿವಿಧ ಬೆಳೆಗಳು ಹಾಗೂ 4,520 ಹೆಕ್ಟೇರ್ ಪ್ರದೇಶದಲ್ಲಿ ತೋಟಗಾರಿಕಾ ಬೆಳೆಗಳು ಹಾನಿಗೊಳಗಾಗಿವೆ. ಜಿಲ್ಲೆಯ ಐದೂ ತಾಲ್ಲೂಕುಗಳನ್ನು ಬರಪೀಡಿತವೆಂದು ಘೋಷಿಸಲಾಗಿದ್ದು, ರೈತರಿಗೆ ತಲಾ ₹2,500 ಪರಿಹಾರ ಒದಗಿಸಲಾಗುತ್ತಿದೆ. ಸಣ್ಣ ಮತ್ತು ಅತಿಸಣ್ಣ ರೈತರಿಗಾಗಿ 'ನೇಗಿಲ ಯೋಗಿ' ಯೋಜನೆಯನ್ನೂ ಜಾರಿಗೊಳಿಸಲಾಗಿದೆ.
10 ಹಳ್ಳಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿದ್ದು, ನೀರು ಪೂರೈಕೆಗೆ ಈಗಾಗಲೇ 5 ಖಾಸಗಿ ಕೊಳವೆ ಬಾವಿಗಳನ್ನು ಬಾಡಿಗೆಗೆ ಪಡೆಯಲಾಗಿದೆ. ಜಿಲ್ಲೆಯಲ್ಲಿ 24 ವಾರಗಳಿಗೆ ಸಾಕಾಗುವಷ್ಟು ಮೇವು ಲಭ್ಯವಿದ್ದು, ಮೇವಿನ ಬೀಜದ ಕಿಟ್ಗಳ ವಿತರಣೆಯನ್ನು ಚುರುಕುಗೊಳಿಸಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ.
ಗ್ರಾಮೀಣ ಜನರ ವಲಸೆ ತಡೆಯಲು ₹22.16 ಕೋಟಿ ವೆಚ್ಚದಲ್ಲಿ 9.28 ಲಕ್ಷ ಮಾನವ ದಿನಗಳ ಉದ್ಯೋಗ ಸೃಜಿಸಲಾಗಿದ್ದು, 2.74 ಲಕ್ಷ ಜನರಿಗೆ ಸ್ಥಳೀಯವಾಗಿ ಉದ್ಯೋಗಾವಕಾಶ ಕಲ್ಪಿಸಲಾಗಿದೆ. ಸಾಂಕ್ರಾಮಿಕ ರೋಗಗಳ ನಿಯಂತ್ರಣಕ್ಕೂ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲು ನಿರ್ದೇಶನ ನೀಡಿದ್ದೇನೆ.
ಬರ ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸಿ, ಸಂಕಷ್ಟದಲ್ಲಿರುವ ರೈತರು ಹಾಗೂ ಗ್ರಾಮೀಣ ಜನರ ಹಿತ ಕಾಯಲು ನಮ್ಮ ಸರ್ಕಾರ ಬದ್ಧವಾಗಿದೆ.This media couldn't be displayed. See it on the original post. -
Dr. G Parameshwara
@DrParameshwara
It was an honour to inaugurate Tumakuru Dasara Mahotsava on Sunday at the Amarashilpi Jakanachari Cultural Vaibhava Grand Stage on the Government Pre-University College grounds in Tumakuru. The celebrations were formally inaugurated with the beating of the Nagari drum.
Later in the day, I visited Mysuru to inaugurate the state-level Dasara Sports Meet, ‘CM Cup–2026’, organised as part of the Mysuru Dasara celebrations. I extended my best wishes to all the participating athletes.
Here are some newspaper reports covering both events.
ಭಾನುವಾರ ತುಮಕೂರು ನಗರದ ಸರ್ಕಾರಿ ಪದವಿಪೂರ್ವ ಕಾಲೇಜು ಮೈದಾನದ ಅಮರಶಿಲ್ಪಿ ಜಕಣಾಚಾರಿ ಸಾಂಸ್ಕೃತಿಕ ವೈಭವ ಮಹಾವೇದಿಕೆಯಲ್ಲಿ ಅಕ್ಟೋಬರ್ 11ರಿಂದ 21ರವರೆಗೆ ಆಯೋಜಿಸಿರುವ ತುಮಕೂರು ದಸರಾ ಮಹೋತ್ಸವಕ್ಕೆ ನಗಾರಿ ಬಾರಿಸುವ ಮೂಲಕ ವಿದ್ಯುಕ್ತವಾಗಿ ಚಾಲನೆ ನೀಡಿದೆ.
ಬಳಿಕ ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಅಂಗವಾಗಿ ಮೈಸೂರಿನಲ್ಲಿ ಆಯೋಜಿಸಿರುವ ರಾಜ್ಯಮಟ್ಟದ ದಸರಾ ಕ್ರೀಡಾಕೂಟ ‘ಸಿಎಂ ಕಪ್–2026’ ಅನ್ನು ಉದ್ಘಾಟಿಸಿ, ಕ್ರೀಡಾಪಟುಗಳಿಗೆ ಶುಭ ಹಾರೈಸಿದೆ.
ಈ ಎರಡೂ ಕಾರ್ಯಕ್ರಮಗಳ ಕುರಿತು ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾಗಿರುವ ವರದಿಗಳು ಹೀಗಿವೆ.. -
Dr. G Parameshwara
@DrParameshwara
ಭಾನುವಾರ ತುಮಕೂರು ನಗರದ ಸರ್ಕಾರಿ ಪದವಿಪೂರ್ವ ಕಾಲೇಜು ಮೈದಾನದ ಅಮರಶಿಲ್ಪಿ ಜಕಣಾಚಾರಿ ಸಾಂಸ್ಕೃತಿಕ ವೈಭವ ಮಹಾವೇದಿಕೆಯಲ್ಲಿ ಅಕ್ಟೋಬರ್ 11ರಿಂದ 21ರವರೆಗೆ ಆಯೋಜಿಸಿರುವ ತುಮಕೂರು ದಸರಾ ಮಹೋತ್ಸವಕ್ಕೆ ನಗಾರಿ ಬಾರಿಸುವ ಮೂಲಕ ವಿದ್ಯುಕ್ತವಾಗಿ ಚಾಲನೆ ನೀಡಿದೆ.
ಬಳಿಕ ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಅಂಗವಾಗಿ ಮೈಸೂರಿನಲ್ಲಿ ಆಯೋಜಿಸಿರುವ ರಾಜ್ಯಮಟ್ಟದ ದಸರಾ ಕ್ರೀಡಾಕೂಟ ‘ಸಿಎಂ ಕಪ್–2026’ ಅನ್ನು ಉದ್ಘಾಟಿಸಿ, ಕ್ರೀಡಾಪಟುಗಳಿಗೆ ಶುಭ ಹಾರೈಸಿದೆ.
ಈ ಎರಡೂ ಕಾರ್ಯಕ್ರಮಗಳ ಕುರಿತು ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾಗಿರುವ ವರದಿಗಳು ಹೀಗಿವೆ..
It was an honour to inaugurate Tumakuru Dasara Mahotsava on Sunday at the Amarashilpi Jakanachari Cultural Vaibhava Grand Stage on the Government Pre-University College grounds in Tumakuru. The celebrations were formally inaugurated with the beating of the Nagari drum.
Later in the day, I visited Mysuru to inaugurate the state-level Dasara Sports Meet, ‘CM Cup–2026’, organised as part of the Mysuru Dasara celebrations. I extended my best wishes to all the participating athletes.
Here are some newspaper reports covering both events. -
Dr. G Parameshwara
@DrParameshwara
ಸಾಮಾಜಿಕ ಸಮಾನತೆ, ಜಾತಿ ತಾರತಮ್ಯದ ನಿರ್ಮೂಲನೆ ಹಾಗೂ ಶೋಷಿತರ ಹಕ್ಕುಗಳಿಗಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟ ಸಮಾಜವಾದಿ ನಾಯಕ ರಾಮ್ ಮನೋಹರ ಲೋಹಿಯಾ ಅವರ ವಿಚಾರಧಾರೆಗಳು ಇಂದಿಗೂ ಪ್ರಸ್ತುತವಾಗಿವೆ.
ರಾಮ್ ಮನೋಹರ ಲೋಹಿಯಾ ಅವರ ಪುಣ್ಯಸ್ಮರಣೆಯಂದು ಗೌರವಪೂರ್ವಕ ನಮನಗಳನ್ನು ಸಲ್ಲಿಸುತ್ತೇನೆ. ಪ್ರಜಾಪ್ರಭುತ್ವದ ಮೌಲ್ಯಗಳು, ಸಾಮಾಜಿಕ ನ್ಯಾಯ ಹಾಗೂ ಸಮಾನತೆಯ ಸಮಾಜ ನಿರ್ಮಾಣಕ್ಕಾಗಿ ಅವರು ನಡೆಸಿದ ಹೋರಾಟ ಸದಾ ಸ್ಮರಣೀಯ. -
Dr. G Parameshwara
@DrParameshwara
Tomorrow's march to the Supreme Court, led by Shri @RahulGandhi , is a collective stand for our Constitution, democracy and the sanctity of every vote.
We stand united in demanding an end to alleged electoral irregularities, a halt to SIR and accountability from the Election Commission.
Peaceful voices cannot be silenced.
#chalodilli
Rahul Gandhi
@RahulGandhi
Yesterday, the nation's young came out in Delhi to peacefully protest. They came with love in their hearts, not hatred or anger. They were beaten, both by cops and BJP goons.
This is not the India we want.
Tomorrow, we will march to the Supreme Court as Indians, united beyond party, gender, caste, community and state.
Youth, all opposition parties, civil society groups, all those who believe in democracy and stand by the Constitution of India, will walk with us.
We will submit a memorandum to the Chief Justice on behalf of the nation, demanding an end to vote chori, halting of SIR and the resignation of Gyanesh Kumar.
Narendra Modi, Amit Shah, Ajit Doval and Mohan Bhagwat cannot silence India's voice. These cowards cannot intimidate us. They will have to step aside.
We will march together, with love, brotherhood and patriotism.
Daro mat.
Tomorrow, all of India will march to the Supreme Court.
कल दिल्ली में देश का युवा शांतिपूर्ण विरोध के लिए सड़कों पर उतरा। उनके दिलों में नफ़रत या गुस्सा नहीं, मोहब्बत थी। लेकिन उन्हें पुलिस और BJP के गुंडों, दोनों ने पीटा।
ऐसा भारत हम नहीं चाहते।
कल, सोमवार 12 अक्टूबर को, हम भारतीय होने के नाते सुप्रीम कोर्ट तक मार्च करेंगे। पार्टी, महिला-पुरुष, जाति, समुदाय और राज्य की हर दीवार से ऊपर उठकर, हम सब एक साथ चलेंगे।
देश का युवा, तमाम विपक्षी दल, सिविल सोसाइटी और लोकतंत्र में विश्वास रखने वाले, भारत के संविधान के साथ खड़े सभी लोग हमारे साथ चलेंगे।
हम देश की ओर से मुख्य न्यायाधीश को एक ज्ञापन सौंपेंगे। हमारी माँग है - वोट चोरी बंद हो, SIR पर रोक लगे और ज्ञानेश कुमार इस्तीफ़ा दें।
नरेंद्र मोदी, अमित शाह, अजित डोभाल और मोहन भागवत भारत की आवाज़ को दबा नहीं सकते। ये कायर हमें डरा नहीं सकते। इन्हें पीछे हटना ही होगा।
हम सब साथ चलेंगे - मोहब्बत, भाईचारे और देशभक्ति के साथ।
डरो मत।
कल पूरा भारत सुप्रीम कोर्ट तक मार्च करेगा।
#chalodilliThis media couldn't be displayed. See it on the original post. -
Dr. G Parameshwara
@DrParameshwara
ನಾಡಹಬ್ಬ ಮೈಸೂರು ದಸರಾ ಪ್ರಯುಕ್ತ ಆಯೋಜಿಸಿರುವ ದಸರಾ ಕ್ರೀಡಾಕೂಟಕ್ಕೆ ರಾಜ್ಯಮಟ್ಟದ ಮಾನ್ಯತೆ ನೀಡಿದ್ದೇವೆ.
ಕೆಲವು ಕ್ರೀಡೆಗಳನ್ನು ಪ್ರಸ್ತುತ ಕ್ರೀಡಾಕೂಟದಿಂದ ಹೊರಗಿಟ್ಟಿರುವ ವಿಚಾರ ನನ್ನ ಗಮನಕ್ಕೂ ಬಂದಿದೆ. ಈ ಬಗ್ಗೆ ಪರಿಶೀಲನೆ ನಡೆಸಲಾಗುವುದು.
*ಚುನಾವಣಾ ಆಯೋಗದ ಅಧಿಕಾರಿಗಳು ತಪ್ಪು ಮಾಡಿದರೂ ಕ್ರಮವಾಗಬೇಕು : ಚುನಾವಣಾ ಆಯೋಗದ ಅಧಿಕಾರಿಗಳು ಚುನಾವಣಾ ಆಯೋಗದ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಾರೆ. ಆಡಳಿತ ವ್ಯವಸ್ಥೆಯ ದೃಷ್ಟಿಯಿಂದ ಜಿಲ್ಲಾಧಿಕಾರಿಗಳೂ ಸೇರಿದಂತೆ ಇತರ ಅಧಿಕಾರಿಗಳು ಅವರ ಕಾರ್ಯವ್ಯಾಪ್ತಿಗೆ ಒಳಪಡುತ್ತಾರೆ. ಇಂತಹ ಅಧಿಕಾರಿಗಳು ನಮ್ಮ ಮಾತನ್ನೂ ಕೇಳುವುದಿಲ್ಲ.
ಚುನಾವಣಾ ಅಧಿಕಾರಿಗಳು ತಪ್ಪು ಮಾಡಿದರೆ ಅವರ ವಿರುದ್ಧವೂ ಕ್ರಮ ಕೈಗೊಳ್ಳಬೇಕು. ಅವರು ನಮ್ಮ ರಾಜ್ಯದವರಾಗಿರಲಿ ಅಥವಾ ಬೇರೆ ರಾಜ್ಯದವರಾಗಿರಲಿ, ತಪ್ಪು ಮಾಡಿದವರ ವಿರುದ್ಧ ಕಾನೂನುಬದ್ಧ ಕ್ರಮ ಜರುಗಿಸಬೇಕು.
ರಾಜ್ಯದಲ್ಲಿ ಈಗಾಗಲೇ 217 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿದ್ದು, 177 ತಾಲೂಕುಗಳ ವರದಿ ಸಲ್ಲಿಸಲಾಗಿದೆ. ಇನ್ನೂ 23 ತಾಲೂಕುಗಳ ಪೈಕಿ 9 ತಾಲೂಕುಗಳಲ್ಲಿ ಗ್ರೌಂಡ್ ಟ್ರೂಥಿಂಗ್ ನಡೆಯುತ್ತಿದೆ. ಒಟ್ಟು 240 ತಾಲೂಕುಗಳ ಪೈಕಿ ಬಹುತೇಕ ಎಲ್ಲಾ ತಾಲೂಕುಗಳು ಬರಪೀಡಿತವಾಗುವ ಸಾಧ್ಯತೆಯಿದೆ. ಈಗಾಗಲೇ ಎರಡು ಮನವಿಗಳ ಮೂಲಕ ₹46,000 ಕೋಟಿ ನಷ್ಟದ ವರದಿ ಸಲ್ಲಿಸಿದ್ದು, ಅಂತಿಮವಾಗಿ ₹60–65 ಸಾವಿರ ಕೋಟಿ ನಷ್ಟವಾಗುವ ಅಂದಾಜಿದೆ.
ಕೇಂದ್ರದಿಂದ ಸುಮಾರು ₹8,000 ಕೋಟಿ ನೆರವು ಕೋರಿದ್ದು, ಅಂತಿಮವಾಗಿ ₹18–20 ಸಾವಿರ ಕೋಟಿ ಪರಿಹಾರಕ್ಕೆ ಮನವಿ ಸಲ್ಲಿಸಲಾಗುವುದು. NDRF ನಿಯಮಾವಳಿಗಳಡಿ ಕೇಂದ್ರದ ನೆರವಿಗಾಗಿ ಕಾಯುತ್ತಿದ್ದೇವೆ.
ರಾಜ್ಯ ಸರ್ಕಾರದಿಂದ ಕುಡಿಯುವ ನೀರು, ಜಾನುವಾರುಗಳಿಗೆ ಮೇವು, ಕೂಲಿ ಸೇರಿದಂತೆ ಬರ ನಿರ್ವಹಣಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ರೈತ ಕುಟುಂಬಗಳಿಗೆ ತಲಾ ₹2,500ರಂತೆ ₹1,250 ಕೋಟಿ ನೆರವು ನೀಡಲಾಗುತ್ತಿದ್ದು, ಸುಮಾರು 50 ಲಕ್ಷ ಕುಟುಂಬಗಳಿಗೆ ನೆರವು ತಲುಪಿಸುವ ಅಂದಾಜಿದೆ. ರಾಜ್ಯದ ಪ್ರಯತ್ನಗಳಿಗೆ ಕೇಂದ್ರವೂ ಸೂಕ್ತ ನೆರವು ನೀಡಬೇಕು.
- ಮೈಸೂರಿನ ಚಾಮುಂಡಿ ವಿಹಾರ ಒಳಾಂಗಣ ಕ್ರೀಡಾಂಗಣದಲ್ಲಿ ರಾಜ್ಯಮಟ್ಟದ ದಸರಾ ಕ್ರೀಡಾಕೂಟ 'ಸಿಎಂ ಕಪ್–2026' ಚಾಲನೆ ನೀಡಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದೆ. -
Dr. G Parameshwara
@DrParameshwara
Today, I inaugurated the State-Level Dasara Sports Meet – CM Cup 2026 at the Chamundi Vihar Indoor Stadium in Mysuru. With athletes from across Karnataka competing in 26 sporting disciplines, the Dasara Sports Meet continues a historic tradition of nurturing sporting talent.
This event has a special place in my own life. I too began my sporting journey through the Mysuru Dasara Sports Meet, which gave me the opportunity to compete at the university level and later at national and international levels. Sport teaches discipline, confidence and the strength to learn from both victory and defeat.
Our Government is taking concrete steps to secure the future of sportspersons. During my tenure as Home Minister, 3% reservation was provided for accomplished sportspersons in Police Department recruitment. Building on this, we have now introduced 2% reservation for sportspersons in recruitment across Government departments, giving sporting achievers greater employment security.
We have also substantially enhanced prize money for international medallists to ₹1 crore for Gold, ₹75 lakh for Silver and ₹50 lakh for Bronze, recognising the years of hard work and sacrifice behind every achievement. We will also take steps to extend appropriate incentives to Commonwealth Games medallists on the lines of Asian Games medallists.
Along with financial and employment support, we are strengthening sports infrastructure. Synthetic tracks have already been developed in 14 districts, and our effort is to expand quality training facilities across Karnataka so that athletes can prepare for international competitions within the State itself.
Winning a medal is a proud achievement, but participating and competing at this level is itself something to be proud of. I wish every athlete participating in the 2026 Dasara Sports Meet greater success in the years ahead.
On the occasion, I also felicitated Asian Games medallist Pranavi Urs and Commonwealth Games medallist Shilpa K.S. and congratulated them on their achievements. -
Dr. G Parameshwara
@DrParameshwara
ನೂರಾರು ವರ್ಷಗಳ ಇತಿಹಾಸ ಹೊಂದಿರುವ ಮೈಸೂರು ದಸರಾ ಕ್ರೀಡಾಕೂಟ ನಮ್ಮ ನಾಡಿನ ಕ್ರೀಡಾ ಪರಂಪರೆಯ ಪ್ರತೀಕ. ವಿಜಯನಗರ ಸಾಮ್ರಾಜ್ಯದ ಕಾಲದಿಂದಲೂ ಕ್ರೀಡೆಗಳಿಗೆ ಪ್ರೋತ್ಸಾಹ ನೀಡುವ ಸಂಪ್ರದಾಯ ಬೆಳೆದುಬಂದಿದ್ದು, ಈ ಬಾರಿಯ 'ದಸರಾ ಕ್ರೀಡಾಕೂಟ ಸಿಎಂ ಕಪ್–2026'ರಲ್ಲಿ 26 ಕ್ರೀಡಾ ವಿಭಾಗಗಳಲ್ಲಿ ರಾಜ್ಯದ ವಿವಿಧ ಜಿಲ್ಲೆಗಳ ಕ್ರೀಡಾಪಟುಗಳು ಭಾಗವಹಿಸಿರುವುದು ಸಂತಸದ ಸಂಗತಿ.
ನಾನೂ ದಸರಾ ಕ್ರೀಡಾಕೂಟದ ಮೂಲಕ ರೂಪುಗೊಂಡ ಕ್ರೀಡಾಪಟು. ಈ ಕ್ರೀಡಾಕೂಟದಲ್ಲಿ ಭಾಗವಹಿಸಿ ವಿಶ್ವವಿದ್ಯಾಲಯ ಮಟ್ಟದ ಸ್ಪರ್ಧೆಗಳಲ್ಲಿ ಪಾಲ್ಗೊಂಡು, ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಟ್ಟಕ್ಕೆ ತಲುಪುವ ಅವಕಾಶ ಪಡೆದಿದ್ದೆ.
ಕ್ರೀಡೆ ಶಿಸ್ತು, ಆತ್ಮವಿಶ್ವಾಸ, ಪರಿಶ್ರಮ ಮತ್ತು ಸೋಲನ್ನು ಸವಾಲಾಗಿ ಸ್ವೀಕರಿಸುವ ಮನೋಭಾವವನ್ನು ಬೆಳೆಸುತ್ತದೆ. ಪದಕ ಗೆಲ್ಲುವುದಷ್ಟೇ ಅಲ್ಲ, ಕ್ರೀಡಾಕೂಟದಲ್ಲಿ ಭಾಗವಹಿಸುವುದೂ ಹೆಮ್ಮೆಯ ಸಂಗತಿ.
ಕ್ರೀಡಾಪಟುಗಳಿಗೆ ಉದ್ಯೋಗ ಭದ್ರತೆ ಕಲ್ಪಿಸುವ ನಿಟ್ಟಿನಲ್ಲಿ ನಮ್ಮ ಸರ್ಕಾರ ಎಲ್ಲಾ ಇಲಾಖೆಗಳ ನೇಮಕಾತಿಗಳಲ್ಲಿ ಶೇ. 2ರಷ್ಟು ಉದ್ಯೋಗ ಮೀಸಲಾತಿ ಕಲ್ಪಿಸುವ ಆದೇಶ ಹೊರಡಿಸಿದೆ.
ನಾನು ಗೃಹ ಸಚಿವನಾಗಿದ್ದಾಗ ಪೊಲೀಸ್ ಇಲಾಖೆ ನೇಮಕಾತಿಯಲ್ಲಿ ಶೇ. 3ರಷ್ಟು ಮೀಸಲಾತಿ ನೀಡಲಾಗಿತ್ತು. ಕರ್ನಾಟಕ ಒಲಿಂಪಿಕ್ಸ್ ಸಂಸ್ಥೆಯ ಅಧ್ಯಕ್ಷರಾದ ವಿಧಾನ ಪರಿಷತ್ ಸದಸ್ಯ ಗೋವಿಂದರಾಜ್ ಅವರ ಸಲಹೆ ಹಾಗೂ ಪ್ರಯತ್ನಗಳೂ ಈ ನಿಟ್ಟಿನಲ್ಲಿ ಮಹತ್ವದ ಪಾತ್ರ ವಹಿಸಿವೆ.
ಅಂತಾರಾಷ್ಟ್ರೀಯ ಪದಕ ವಿಜೇತರಿಗೆ ಪ್ರೋತ್ಸಾಹಧನ ಹೆಚ್ಚಿಸಿದ್ದು, ಚಿನ್ನಕ್ಕೆ ₹1 ಕೋಟಿ, ಬೆಳ್ಳಿಗೆ ₹75 ಲಕ್ಷ ಹಾಗೂ ಕಂಚಿಗೆ ₹50 ಲಕ್ಷ ನೀಡಲಾಗುತ್ತಿದೆ. ಕಾಮನ್ವೆಲ್ತ್ ಗೇಮ್ಸ್ ಪದಕ ವಿಜೇತರಿಗೂ ಸೂಕ್ತ ಪ್ರೋತ್ಸಾಹ ನೀಡಲು ಕ್ರಮ ಕೈಗೊಳ್ಳಲಾಗುವುದು.
ಈಗಾಗಲೇ 14 ಜಿಲ್ಲೆಗಳಲ್ಲಿ ಸಿಂಥೆಟಿಕ್ ಟ್ರ್ಯಾಕ್ಗಳನ್ನು ನಿರ್ಮಿಸಿದ್ದು, ಮುಂದಿನ ದಿನಗಳಲ್ಲಿ ಎಲ್ಲಾ ಜಿಲ್ಲೆಗಳಿಗೂ ವಿಸ್ತರಿಸಲು ಸರ್ಕಾರ ಬದ್ಧವಾಗಿದೆ.
ಕ್ರೀಡಾಪಟುಗಳ ಪರಿಶ್ರಮಕ್ಕೆ ಗೌರವ, ಸಾಧನೆಗೆ ಪ್ರೋತ್ಸಾಹ, ಭವಿಷ್ಯಕ್ಕೆ ಉದ್ಯೋಗ ಭದ್ರತೆ ಹಾಗೂ ಅಂತಾರಾಷ್ಟ್ರೀಯ ಮಟ್ಟದ ತರಬೇತಿಗೆ ಅಗತ್ಯ ಮೂಲಸೌಕರ್ಯ ಒದಗಿಸುವ ಮೂಲಕ ಕರ್ನಾಟಕವನ್ನು ಕ್ರೀಡಾ ಕ್ಷೇತ್ರದಲ್ಲಿ ಮತ್ತಷ್ಟು ಮುಂಚೂಣಿಗೆ ತರಲು ನಮ್ಮ ಸರ್ಕಾರ ಬದ್ಧವಾಗಿದೆ.
ಮೈಸೂರು ದಸರಾ ಕ್ರೀಡಾಕೂಟದಲ್ಲಿ ಭಾಗವಹಿಸಿರುವ ಎಲ್ಲ ಕ್ರೀಡಾಪಟುಗಳಿಗೂ ಶುಭವಾಗಲಿ. ನಿಮ್ಮ ಪರಿಶ್ರಮ ಸಾಧನೆಯ ಶಿಖರಕ್ಕೇರಲಿ. -
Dr. G Parameshwara
@DrParameshwara
I inaugurated the State-Level Dasara Sports Meet – CM Cup 2026, organised by the Department of Youth Empowerment and Sports and the Karnataka Sports Authority at the Chamundi Vihar Indoor Stadium in Mysuru as part of the Dasara celebrations.
On the occasion, I felicitated Asian Games golf medallist Pranavi Urs and Commonwealth Games medallist Shilpa K.S., and congratulated them on their achievements.
Minister C. Puttarangashetty, Jungle Lodges and Resorts Chairman Anil Kumar C., MLAs Tanveer Sait and D. Ravishankar, Karnataka Olympic Association President and MLC Dr. K. Govindaraju, Principal Secretary, Youth Empowerment and Sports Naveen Raj Singh, and Commissioner for Youth Empowerment and Sports M.N. Anucheth were present.
Dr. G Parameshwara
@DrParameshwara
-
Dr. G Parameshwara
@DrParameshwara
ಮೈಸೂರಿನ ಚಾಮುಂಡಿ ವಿಹಾರ ಒಳಾಂಗಣ ಕ್ರೀಡಾಂಗಣದಲ್ಲಿ ನಾಡಹಬ್ಬ ದಸರಾ ಪ್ರಯುಕ್ತ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಕರ್ನಾಟಕ ಕ್ರೀಡಾ ಪ್ರಾಧಿಕಾರದ ವತಿಯಿಂದ ಆಯೋಜಿಸಿದ್ದ "ರಾಜ್ಯ ಮಟ್ಟದ ದಸರಾ ಕ್ರೀಡಾಕೂಟ ಸಿಎಂ ಕಪ್ 2026"ಕ್ಕೆ ಚಾಲನೆ ನೀಡಿದೆ.
ಈ ವೇಳೆ ಏಷ್ಯಾನ್ ಗೇಮ್ಸ್ನಲ್ಲಿ ಪದಕ ವಿಜೇತರಾದ ಗಾಲ್ಫ್ ಕ್ರೀಡಾಪಟು ಪ್ರಣವಿ ಅರಸ್, ಕಾಮನ್ವೆಲ್ತ್ ಗೇಮ್ಸ್ ಪದಕ ವಿಜೇತರಾದ ಶಿಲ್ಪಾ ಕೆ.ಎಸ್ ಅವರನ್ನು ಗೌರವಿಸಿ, ಅಭಿನಂದಿಸಿದೆ.
ಕಾರ್ಯಕ್ರಮದಲ್ಲಿ ಸಚಿವರಾದ ಸಿ. ಪುಟ್ಟರಂಗ ಶೆಟ್ಟಿ, ಅರಣ್ಯ ವಸತಿ ಮತ್ತು ವಿಹಾರ ಧಾಮಗಳ ಅಧ್ಯಕ್ಷರಾದ ಅನಿಲ್ ಕುಮಾರ್ ಸಿ, ಶಾಸಕರಾದ ತನ್ವೀರ್ ಸೇಠ್, ಡಿ.ರವಿಶಂಕರ್, ಕರ್ನಾಟಕ ಒಲಂಪಿಕ್ ಸಂಸ್ಥೆಯ ಅಧ್ಯಕ್ಷರು ಹಾಗೂ ವಿಧಾನ ಪರಿಷತ್ ಸದಸ್ಯರಾದ ಡಾ. ಕೆ.ಗೋವಿಂದರಾಜು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಾದ ನವೀನ್ ರಾಜ್ ಸಿಂಗ್, ಯುವ ಸಬಲೀಕರಣ ಮತ್ತು ಕ್ರೀಡಾ ಆಯುಕ್ತರಾದ ಎಂ.ಎನ್.ಅನುಚೇತ್ ಉಪಸ್ಥಿತರಿದ್ದರು.
Dr. G Parameshwara
@DrParameshwara
-
Dr. G Parameshwara
@DrParameshwara
ತುಮಕೂರು ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದ ಅಮರಶಿಲ್ಪಿ ಜಕಣಾಚಾರಿ ಸಾಂಸ್ಕೃತಿಕ ವೈಭವ ಮಹಾವೇದಿಕೆಯಲ್ಲಿ ಜಿಲ್ಲಾಡಳಿತದ ವತಿಯಿಂದ ಅಕ್ಟೋಬರ್ 11 ರಿಂದ 21ರವರೆಗೆ ಹಮ್ಮಿಕೊಂಡಿರುವ ತುಮಕೂರು ದಸರಾ ಉತ್ಸವಕ್ಕೆ ಇಂದು ನಗಾರಿ ಬಾರಿಸುವ ಮೂಲಕ ವಿದ್ಯುಕ್ತವಾಗಿ ಚಾಲನೆ ನೀಡಿ ಮಾತನಾಡಿದೆ.
ಕಳೆದೆರಡು ವರ್ಷಗಳಿಂದ ಆಚರಿಸಿಕೊಂಡು ಬರುತ್ತಿರುವ ತುಮಕೂರು ದಸರಾ ಉತ್ಸವದ ಯಶಸ್ಸಿಗೆ ಕಾರಣರಾದ ಜಿಲ್ಲೆಯ ಜನತೆ, ಜನಪ್ರತಿನಿಧಿಗಳು, ಜಿಲ್ಲಾಡಳಿತಕ್ಕೆ ನಾನು ಆಭಾರಿಯಾಗಿದ್ದೇನೆ. ಜಿಲ್ಲಾಡಳಿತದೊಂದಿಗೆ ಜೊತೆ-ಜೊತೆಯಾಗಿ ಪೊಲೀಸ್ ಇಲಾಖೆ, ಜಿಲ್ಲಾ ಪಂಚಾಯತಿ, ಪಾಲಿಕೆ ಸೇರಿದಂತೆ ಎಲ್ಲ ಇಲಾಖಾಧಿಕಾರಿಗಳ ಶ್ರಮ ಶ್ಲಾಘನೀಯ.
ನಾಡಿನಲ್ಲಿ ಉದ್ಭವವಾಗಿರುವ ಅನಾವೃಷ್ಠಿಯನ್ನು ಹೋಗಲಾಡಿಸಲು ದೇವಿಯ ಅನುಗ್ರಹ ನಮಗೆ ಅಗತ್ಯವಿದೆ. ನಾಡಿನ ಮಳೆ-ಬೆಳೆ ಪರಿಸ್ಥಿತಿ ಉತ್ತಮವಾಗಲೆಂದು ಈ ನವರಾತ್ರಿ ಸಂದರ್ಭದಲ್ಲಿ ದೇವಿಯನ್ನು ಪೂಜಿಸುವುದನ್ನು ಹಿರಿಯರು ನಮಗೆ ಬಳುವಳಿಯಾಗಿ ಬಿಟ್ಟು ಹೋಗಿದ್ದಾರೆ. ಹಿರಿಯರ ಪರಂಪರೆಯನ್ನು ಮುಂದಿನ ಪೀಳಿಗೆಗೂ ಕೊಂಡೊಯ್ಯುವುದೇ ನಮ್ಮ ಪ್ರಯತ್ನವಾಗಿದೆ.
ಮೈಸೂರು ದಸರಾ ಉತ್ಸವದ ಸಂಭ್ರಮವನ್ನು ವೀಕ್ಷಿಸಲು ಸಾಧ್ಯವಾಗದವರು ತುಮಕೂರಿನಲ್ಲಿ ಕಣ್ತುಂಬಿಕೊಳ್ಳಲಿ ಎಂಬ ಉದ್ದೇಶದಿಂದ ದಸರಾ ಆಚರಣೆಯನ್ನು ಜಿಲ್ಲೆಯಲ್ಲಿ ಆಚರಿಸಲು ಪ್ರಾರಂಭಿಸಿದ್ದು.
ದೇವಿಯ ಆಶೀರ್ವಾದದಿಂದ ಜನಸಮುದಾಯ ಶಾಂತಿ ಹಾಗೂ ಸಹಬಾಳ್ವೆಯಿಂದ ಬಾಳಬೇಕೆಂಬ ಉದ್ದೇಶದಿಂದ ದಸರಾ ಉತ್ಸವವನ್ನು ಆಚರಣೆ ಮಾಡಲಾಗುತ್ತಿದೆ. ಸಾಹಿತಿ ಬೆಳ್ಳಾವಿ ನರಹರಿಶಾಸ್ತ್ರಿ, ನಾಟಕರತ್ನ ಡಾ. ಗುಬ್ಬಿ ವೀರಣ್ಣ, ಅಮರಶಿಲ್ಪಿ ಜಕಣಾಚಾರಿ ಸೇರಿದಂತೆ ಜಿಲ್ಲೆಯ ಹಲವಾರು ಸಾಹಿತಿಗಳು, ಕಲಾವಿದರು ಶ್ರೀಮಂತಗೊಳಿಸಿರುವ ಸಾಹಿತ್ಯ-ಕಲೆ-ಸಂಸ್ಕೃತಿಯನ್ನು ಇಂದಿನ ಯುವಕರು ಉತ್ಸವದಲ್ಲಿ ಪಾಲ್ಗೊಂಡು ತಿಳಿದುಕೊಳ್ಳಬೇಕು. ಜಿಲ್ಲೆಯ ಮಕ್ಕಳ ಉತ್ತಮ ಭವಿಷ್ಯಕ್ಕಾಗಿ ಕೈಗಾರಿಕಾ ಕ್ಷೇತ್ರದಲ್ಲಿ ತುಮಕೂರನ್ನು ಅಗ್ರಸ್ಥಾನಕ್ಕೆ ತರುವ ಆಶಯ ಹೊಂದಲಾಗಿದೆ.
ಜಿಲ್ಲೆಯ ಜನತೆ ದಸರಾ ಉತ್ಸವದ ಪ್ರಯುಕ್ತ ನಗರದ ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ಭವ್ಯವಾಗಿ ನಿರ್ಮಿಸಿರುವ ಶ್ರೀ ಶ್ರೀ ಶ್ರೀ ಡಾ. ಶಿವಕುಮಾರ ಮಹಾಸ್ವಾಮೀಜಿ ಧಾರ್ಮಿಕ ಮಹಾಮಂಟಪದಲ್ಲಿ ಪ್ರತಿಷ್ಠಾಪಿಸಿರುವ ಶ್ರೀ ಚಾಮುಂಡೇಶ್ವರಿ ದೇವಿಯ ದರ್ಶನ ಪಡೆದು ತಾಯಿಯ ಅನುಗ್ರಹಕ್ಕೆ ಪಾತ್ರರಾಗಬೇಕು. -
Dr. G Parameshwara
@DrParameshwara
ಜಿಲ್ಲೆಯ ಜನರು ತುಮಕೂರು ದಸರಾ ಮಹೋತ್ಸವದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಪ್ರಯೋಜನ ಪಡೆದುಕೊಳ್ಳಬೇಕು. ಜಿಲ್ಲೆಯ ಜನರೆಲ್ಲರೂ ಒಟ್ಟಾಗಿ ಆಚರಿಸುವ ಹಬ್ಬವಾಗಿ ತುಮಕೂರು ದಸರಾ ರೂಪುಗೊಳ್ಳಬೇಕು ಎಂಬುದು ನಮ್ಮ ಆಶಯವಾಗಿದೆ.
*ಮೈಸೂರು ದಸರಾ ನಾಡಿನ ಹೆಮ್ಮೆಯ ಐತಿಹಾಸಿಕ ಪರಂಪರೆ : ಮೈಸೂರು ದಸರಾ ನಮ್ಮ ರಾಜ್ಯದ ಅತ್ಯಂತ ಮಹತ್ವದ ಐತಿಹಾಸಿಕ ಪರಂಪರೆಯಾಗಿದೆ. ಹಿಂದಿನ ಕಾಲದಲ್ಲಿ ಮಹಾರಾಜರು ನಡೆಸಿಕೊಂಡು ಬಂದಿದ್ದು, ಅವರ ನಂತರ ಸರ್ಕಾರವು ಅದನ್ನು ಮುನ್ನಡೆಸಿಕೊಂಡು ಬಂದಿದೆ. ಪ್ರತಿವರ್ಷ ತಾಯಿ ಚಾಮುಂಡೇಶ್ವರಿಯನ್ನು ಆರಾಧಿಸಿ, ಪೂಜೆ ಸಲ್ಲಿಸಿ, ನಾಡಿನ ಪ್ರತಿಯೊಬ್ಬ ನಾಗರಿಕನಿಗೂ ಶಾಂತಿ ಮತ್ತು ನೆಮ್ಮದಿ ದೊರೆಯಲಿ ಎಂದು ಪ್ರಾರ್ಥಿಸಲಾಗುತ್ತದೆ.
ದಸರಾ ಕೇವಲ ಉತ್ಸವವಲ್ಲ. ನಮ್ಮ ಸಂಸ್ಕೃತಿ ಮತ್ತು ಪರಂಪರೆಯನ್ನು ಸಂರಕ್ಷಿಸಿ ಮುಂದಿನ ಪೀಳಿಗೆಗೆ ಪರಿಚಯಿಸುವ ಮಹತ್ವದ ಸಂದೇಶವನ್ನು ಸಾರುವ ನಾಡಹಬ್ಬವಾಗಿದೆ. ಮೈಸೂರಿನಲ್ಲಿ ಎಂದಿನಂತೆ ವಿಜೃಂಭಣೆಯಿಂದ ತಾಯಿ ಚಾಮುಂಡೇಶ್ವರಿಯ ಆರಾಧನೆಯೊಂದಿಗೆ ದಸರಾ ಮಹೋತ್ಸವಕ್ಕೆ ಚಾಲನೆ ನೀಡಲಾಗಿದೆ.
*ಸಂಸ್ಕೃತಿ ಮತ್ತು ಪರಂಪರೆಯ ಸಂರಕ್ಷಣೆ ದಸರಾ ಉತ್ಸವದ ಆಶಯ : ನಾಡಿನ ಸಾಂಸ್ಕೃತಿಕ ಪರಂಪರೆಯನ್ನು ಉಳಿಸಿ ಬೆಳೆಸುವುದು ಹಾಗೂ ಮುಂದಿನ ಪೀಳಿಗೆಗೆ ಅದರ ಮಹತ್ವವನ್ನು ತಿಳಿಸುವುದು ದಸರಾ ಆಚರಣೆಯ ಪ್ರಮುಖ ಉದ್ದೇಶವಾಗಿದೆ. ಧಾರ್ಮಿಕ ನಂಬಿಕೆಗಳು, ಸಂಪ್ರದಾಯಗಳು ಮತ್ತು ಸಾಂಸ್ಕೃತಿಕ ಮೌಲ್ಯಗಳು ಮುಂದಿನ ಪೀಳಿಗೆಗೂ ಮುಂದುವರಿಯಬೇಕು ಎಂಬ ಸಂದೇಶವನ್ನು ಈ ನಾಡಹಬ್ಬ ಸಾರುತ್ತದೆ.
*ಜನರ ಅನುಕೂಲಕ್ಕಾಗಿ ತುಮಕೂರಿನಲ್ಲಿಯೂ ದಸರಾ ಆಚರಣೆ :* ತುಮಕೂರು ಜಿಲ್ಲೆಯ ಅನೇಕ ಜನರಿಗೆ ಮೈಸೂರಿಗೆ ತೆರಳಿ ದಸರಾ ಮಹೋತ್ಸವದಲ್ಲಿ ಭಾಗವಹಿಸುವುದು ಕಷ್ಟವಾಗುವುದನ್ನು ಗಮನಿಸಿ, ಸ್ಥಳೀಯವಾಗಿಯೇ ದಸರಾ ಆಚರಿಸುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಆರಂಭಿಸಲಾಯಿತು. ಕಳೆದ ಎರಡು ವರ್ಷಗಳಿಂದ ತುಮಕೂರು ದಸರಾಕ್ಕೆ ಉತ್ತಮ ಸ್ಪಂದನೆ ದೊರೆತಿದ್ದು, ಈ ವರ್ಷ ಮೂರನೇ ಬಾರಿಗೆ ಮಹೋತ್ಸವವನ್ನು ಆಯೋಜಿಸಲಾಗಿದೆ.
ತುಮಕೂರು ಜಿಲ್ಲೆಯ ಜನರು ಈ ಮಹೋತ್ಸವದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಪ್ರಯೋಜನ ಪಡೆದುಕೊಳ್ಳಬೇಕು. ಜಿಲ್ಲೆಯ ಜನರೆಲ್ಲರೂ ಒಟ್ಟಾಗಿ ಆಚರಿಸುವ ಹಬ್ಬವಾಗಿ ತುಮಕೂರು ದಸರಾ ರೂಪುಗೊಳ್ಳಬೇಕು ಎಂಬುದು ನಮ್ಮ ಆಶಯವಾಗಿದೆ.
*ಹೆಲಿರೈಡ್ ಸೇರಿದಂತೆ ಹಲವು ಆಕರ್ಷಣೆಗಳೊಂದಿಗೆ ತುಮಕೂರು ದಸರಾ :* ದಸರಾ ಮಹೋತ್ಸವದ ಅಂಗವಾಗಿ ವಿವಿಧ ಚಟುವಟಿಕೆಗಳನ್ನು ಆಯೋಜಿಸಲಾಗಿದೆ. ಕಳೆದ ವರ್ಷದಂತೆ ಈ ಬಾರಿಯೂ ಹೆಲಿಕಾಪ್ಟರ್ ರೈಡ್ ವ್ಯವಸ್ಥೆ ಮಾಡಲಾಗಿದೆ. ಪೂಜ್ಯ ಸ್ವಾಮೀಜಿಗಳು ಹೆಲಿರೈಡ್ನಲ್ಲಿ ಪಾಲ್ಗೊಂಡು ಒಂದು ಸುತ್ತು ಪ್ರಯಾಣಿಸಿರುವುದು ಸಂತೋಷದ ಸಂಗತಿಯಾಗಿದೆ.
ಬೆಳಗ್ಗೆಯಿಂದಲೇ ಹೋಮ, ಹವನ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಿ, ತಾಯಿಗೆ ಪೂಜೆ ಸಲ್ಲಿಸಲಾಗಿದೆ. ಧಾರ್ಮಿಕ ವಿಧಿವಿಧಾನಗಳನ್ನು ಸಂಪ್ರದಾಯಬದ್ಧವಾಗಿ ನೆರವೇರಿಸಿ ಮಹೋತ್ಸವಕ್ಕೆ ಚಾಲನೆ ನೀಡಲಾಗಿದೆ. ಈ ದಸರಾ ಎಲ್ಲರ ಹಬ್ಬವಾಗಲಿ ಹಾಗೂ ಜನರ ಪಾಲ್ಗೊಳ್ಳುವಿಕೆಯಿಂದ ಯಶಸ್ವಿಯಾಗಲಿ.
ರಾಜ್ಯದಲ್ಲಿ ಬರಗಾಲದ ಪರಿಸ್ಥಿತಿ ದೂರವಾಗಿ ರೈತರಿಗೆ ಒಳ್ಳೆಯ ಕಾಲ ಬರಬೇಕು. ಕೃಷಿ ಚಟುವಟಿಕೆಗಳು ಉತ್ತಮವಾಗಿ ನಡೆದು ನಾಡಿನಲ್ಲಿ ಸುಭೀಕ್ಷತೆ ನೆಲೆಸಬೇಕು ಎಂದು ತಾಯಿಯಲ್ಲಿ ಪ್ರಾರ್ಥಿಸಿದ್ದೇನೆ. ತಾಯಿ ನಮ್ಮ ಪ್ರಾರ್ಥನೆಯನ್ನು ಆಲಿಸಿ ಆಶೀರ್ವದಿಸುತ್ತಾಳೆ ಎಂಬ ವಿಶ್ವಾಸವಿದೆ.
- ತುಮಕೂರು ವಿಶ್ವವಿದ್ಯಾಲಯದ ಆವರಣದಲ್ಲಿ ತುಮಕೂರು ದಸರಾ ಮಹೋತ್ಸವದ ಅಂಗವಾಗಿ ಹೆಲಿರೈಡ್ಗೆ ಚಾಲನೆ ನೀಡಿದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದೆ. -
Dr. G Parameshwara
@DrParameshwara
ತುಮಕೂರು ಜಿಲ್ಲಾಡಳಿತದ ವತಿಯಿಂದ ನಗರದ ಪದವಿಪೂರ್ವ ಕಾಲೇಜು ಆವರಣದಲ್ಲಿ ಹಮ್ಮಿಕೊಂಡಿರುವ 3ನೇ ವರ್ಷದ 'ತುಮಕೂರು ದಸರಾ 2026' ಮಹೋತ್ಸವಕ್ಕೆ ವಿವಿಧ ಮಠಾಧೀಶರುಗಳ ದಿವ್ಯ ಸಾನಿಧ್ಯದಲ್ಲಿ ನಂದಿ ಧ್ವಜಕ್ಕೆ ಪೂಜೆ ಸಲ್ಲಿಸಿ ಧ್ವಜಾರೋಹಣ ನೆರವೇರಿಸುವ ಮೂಲಕ ಚಾಲನೆ ನೀಡಲಾಯಿತು.
ತ್ರಿವಿಧ ದಾಸೋಹಿ ಶ್ರೀ ಶಿವಕುಮಾರ ಮಹಾಸ್ವಾಮೀಜಿಯವರ ಧಾರ್ಮಿಕ ಮಹಾ ಮಂಟಪದಲ್ಲಿ ಪ್ರತಿಷ್ಠಾಪಿಸಿರುವ ಶ್ರೀ ಶೈಲಪುತ್ರಿ ದೇವಿಗೆ ಹೋಮ ಹವನ, ಪೂರ್ಣಾಹುತಿ ಹಾಗೂ ವಿವಿಧ ವಿಶೇಷ ಪೂಜೆ ಸಲ್ಲಿಸಲಾಯಿತು. ಬಳಿಕ ಮುಖ್ಯವೇದಿಕೆಯಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಉದ್ಘಾಟಿಸಲಾಯಿತು.
ತುಮಕೂರು ದಸರಾ ಜಿಲ್ಲೆಯ ಧಾರ್ಮಿಕ ಪರಂಪರೆ, ಸಂಸ್ಕೃತಿ ಹಾಗೂ ಕಲಾ ವೈಭವವನ್ನು ಸಾರುವ ಉತ್ಸವವಾಗಿದ್ದು, ಜನರಲ್ಲಿ ಭಕ್ತಿ ಭಾವದೊಂದಿಗೆ ಸಾಂಸ್ಕೃತಿಕ ಅಭಿಮಾನವನ್ನು ಹೆಚ್ಚಿಸಲಿ ಎಂದು ಆಶಿಸುತ್ತೇನೆ.
ಸಿದ್ದಗಂಗಾ ಮಠದ ಪೀಠಾಧ್ಯಕ್ಷರಾದ ಶ್ರೀ ಸಿದ್ಧಲಿಂಗ ಸ್ವಾಮೀಜಿ, ಕೊರಟಗೆರೆಯ ನರಸಿಂಹಗಿರಿ ಕ್ಷೇತ್ರದ ಎಲೆರಾಂಪುರದ ಶ್ರೀ ಡಾ. ಹನುಮಂತನಾಥ ಸ್ವಾಮೀಜಿ, ಸಿದ್ಧಬೆಟ್ಟದ ಶ್ರೀ ಬಾಳೆಹೊನ್ನೂರು ಖಾಸಾ ಮಠದ ಷ.ಬ್ರ.ವೀರಭದ್ರ ಶಿವಾಚಾರ್ಯ ಸ್ವಾಮೀಜಿ, ಬೆಳ್ಳಾವಿಯ ಖಾರದ ವೀರಬಸವ ಸ್ವಾಮೀಜಿರವರು ದಿವ್ಯ ಸಾನಿಧ್ಯ ವಹಿಸಿದ್ದರು.
ರಾಜ್ಯ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿಗಳಾದ ಟಿ.ಬಿ.ಜಯಚಂದ್ರ, ಶಾಸಕರಾದ ಜಿ.ಬಿ.ಜ್ಯೋತಿ ಗಣೇಶ, ಹೆಚ್.ವಿ.ವೆಂಕಟೇಶ್, ವಿಧಾನ ಪರಿಷತ್ ಸದಸ್ಯರಾದ ಡಿ.ಟಿ.ಶ್ರೀನಿವಾಸ್, ಜಿಲ್ಲಾಧಿಕಾರಿಗಳಾದ ಶುಭ ಕಲ್ಯಾಣ್, ಜಿಲ್ಲಾ ಪಂಚಾಯತ್ ಸಿಇಒ ಅಶ್ವಿಜಾ, ಮಹಾನಗರ ಪಾಲಿಕೆ ಆಯುಕ್ತೆ ಶುಭ, ಪೊಲೀಸ್ ಅಧೀಕ್ಷಕರಾದ ಅಶೋಕ್ ಕೆ.ವಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
Dr. G Parameshwara
@DrParameshwara
-
Post not available here, view on X
Dr. G Parameshwara
@DrParameshwara
-
Dr. G Parameshwara
@DrParameshwara
ಬೆಳಗಾವಿಯಲ್ಲಿ ದುರ್ಗಾ ಮಾತಾ ದೌಡ ದೇವಿ ಮೆರವಣಿಗೆ ವೇಳೆ ಸಂಭವಿಸಿದ ಅಪಘಾತದಲ್ಲಿ ಮೂವರು ಭಕ್ತರು ಮೃತಪಟ್ಟಿದ್ದು, 10ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿರುವ ಸುದ್ದಿ ತಿಳಿದು ಆಘಾತವಾಯಿತು.
ಸಂಭ್ರಮದ ನಡುವೆ ಸಂಭವಿಸಿದ ಈ ದುರಂತ ಅತ್ಯಂತ ನೋವಿನ ಸಂಗತಿ. ಮೃತರ ಆತ್ಮಕ್ಕೆ ಶಾಂತಿ ದೊರಕಲಿ. ದುಃಖತಪ್ತ ಕುಟುಂಬಗಳಿಗೆ ಈ ನೋವನ್ನು ಭರಿಸುವ ಶಕ್ತಿ ಸಿಗಲಿ ಹಾಗೂ ಗಾಯಾಳುಗಳು ಶೀಘ್ರ ಗುಣಮುಖರಾಗಲಿ ಎಂದು ಹಾರೈಸುತ್ತೇನೆ. -
Dr. G Parameshwara
@DrParameshwara
ಇಂದಿನಿಂದ ತುಮಕೂರು ದಸರಾ ಆರಂಭವಾಗಿದ್ದು, ನಿನ್ನೆ ತುಮಕೂರಿನ ಪದವಿಪೂರ್ವ ಕಾಲೇಜು ಆವರಣದಲ್ಲಿ ದಸರಾ ಮಹೋತ್ಸವದ ಪೂರ್ವಸಿದ್ಧತೆಗಳನ್ನು ಪರಿಶೀಲಿಸಿ, ಮಾಧ್ಯಮದವರೊಂದಿಗೆ ಮಾತನಾಡಿದ್ದೆ.
ದೈನಂದಿನ ನಡೆಯುವ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು, ಈ ಬಾರಿಯ ದಸರಾ ವಿಶೇಷತೆಗಳ ಬಗ್ಗೆ ವಿವರಿಸಿದ್ದೆ.
ಈ ಕುರಿತಾದ ಮಾಧ್ಯಮ ವರದಿಗಳು ಹೀಗಿವೆ.. -
Dr. G Parameshwara
@DrParameshwara
ಸ್ವಾತಂತ್ರ್ಯ ಹೋರಾಟಗಾರರು, ಜನಾನುರಾಗಿ ನಾಯಕರಾದ ಜಯಪ್ರಕಾಶ್ ನಾರಾಯಣ ಅವರ ಜನ್ಮದಿನದಂದು ಗೌರವ ನಮನಗಳನ್ನು ಸಲ್ಲಿಸುತ್ತೇನೆ.
ಜನಪರ ಆಡಳಿತದ ಬಗೆಗಿನ ಅವರ ಬದ್ಧತೆ ಹಾಗೂ ಸಾಮಾಜಿಕ ಪರಿವರ್ತನೆಯ ಕನಸುಗಳು ಸದಾ ಸ್ಮರಣೀಯ. ಅವರ ವಿಚಾರಧಾರೆಗಳು ಮುಂದಿನ ಪೀಳಿಗೆಗೆ ದಾರಿದೀಪವಾಗಲಿ. -
Dr. G Parameshwara
@DrParameshwara
Every girl child deserves a childhood filled with love, care and encouragement, and a future where her dreams are never limited by her circumstances. When we give our daughters the freedom to learn, grow and pursue their aspirations, we build a stronger and more equal society.
On International Day of the Girl Child, we reaffirm our commitment to ensuring that every girl has access to quality education, safety, dignity and equal opportunities.
Our government remains dedicated to empowering girls and young women through inclusive policies and initiatives that help them realise their full potential. -
Dr. G Parameshwara
@DrParameshwara
ತುಮಕೂರು ದಸರಾ ಮಹೋತ್ಸವದ ಹಿನ್ನೆಲೆಯಲ್ಲಿ ನಗರದ ಪ್ರಮುಖ ರಸ್ತೆಗಳು ಹಾಗೂ ಸ್ಥಳಗಳಲ್ಲಿ ವಿಶೇಷ ದೀಪಾಲಂಕಾರ ಮಾಡಲಾಗಿದೆ. ನಗರದ ಸೌಂದರ್ಯವನ್ನು ಹೆಚ್ಚಿಸಿರುವ ಈ ದೀಪಾಲಂಕಾರವನ್ನು ಸಾರ್ವಜನಿಕರು ಸುಲಭವಾಗಿ ವೀಕ್ಷಿಸಿ ಆನಂದಿಸಲು ಈ ಬಾರಿ ಎರಡು ಉಚಿತ ಅಂಬಾರಿ ಬಸ್ಗಳ ವ್ಯವಸ್ಥೆ ಮಾಡಲಾಗಿದೆ.
ಪ್ರತಿದಿನ ಸಂಜೆ ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಲಿರುವ ಈ ಬಸ್ಗಳಲ್ಲಿ ಸಾರ್ವಜನಿಕರು ಉಚಿತವಾಗಿ ಪ್ರಯಾಣಿಸಿ ದಸರಾ ದೀಪಾಲಂಕಾರದ ವೈಭವವನ್ನು ಕಣ್ತುಂಬಿಕೊಳ್ಳಬಹುದು. ಕಳೆದ ವರ್ಷ ಒಂದು ಅಂಬಾರಿ ಬಸ್ ವ್ಯವಸ್ಥೆ ಮಾಡಲಾಗಿದ್ದು, ಈ ಬಾರಿ ಎರಡು ಬಸ್ಗಳ ಮೂಲಕ ಹೆಚ್ಚಿನ ಜನರಿಗೆ ನಗರ ದರ್ಶನದ ಅವಕಾಶ ಕಲ್ಪಿಸಲಾಗಿದೆ.
ದಸರಾ ಸಂಭ್ರಮವನ್ನು ಜನಸಾಮಾನ್ಯರೂ ಸಂತಸದಿಂದ ಅನುಭವಿಸಲು ಅನುಕೂಲ ಕಲ್ಪಿಸುವುದು ಈ ವ್ಯವಸ್ಥೆಯ ಉದ್ದೇಶವಾಗಿದೆ.
Special illuminations have added a festive charm to Tumakuru, lighting up major roads and prominent locations across the city for Dasara.
Adding to the celebrations, two Ambari buses will offer free evening rides along key routes, giving residents and visitors an opportunity to enjoy the city’s illuminated streets. The service, which featured one bus last year, has been expanded to two this year, allowing more people to experience the spectacle.
The initiative brings the festive spirit of Tumakuru Dasara closer to the public, making the city’s illuminations accessible to everyone.
#tumakurudasara -
Dr. G Parameshwara
@DrParameshwara
ತುಮಕೂರಿನ ಅಮಾನಿಕೆರೆಯಲ್ಲಿ ಸಾರ್ವಜನಿಕರ ಮನರಂಜನೆಗಾಗಿ ಶಾಶ್ವತ ಸಂಗೀತ ಕಾರಂಜಿಯನ್ನು ನಿರ್ಮಿಸಲಾಗಿದೆ. ಬೆಳಕು, ಸಂಗೀತ ಹಾಗೂ ನೀರಿನ ಚಿಮ್ಮುವಿಕೆಯ ಸುಂದರ ಸಮ್ಮಿಲನದೊಂದಿಗೆ ಮೂಡಿಬರುವ ಈ ಕಾರಂಜಿ ನಗರದ ಮತ್ತೊಂದು ಆಕರ್ಷಣೆಯಾಗಲಿದೆ.
ಇದು ದಸರಾ ಉತ್ಸವದ ಹತ್ತು ದಿನಗಳಿಗೆ ಮಾತ್ರ ಸೀಮಿತವಾಗದೆ, ವಾರಾಂತ್ಯಗಳಲ್ಲಿಯೂ ಸಾರ್ವಜನಿಕರು ಹಾಗೂ ಪ್ರವಾಸಿಗರು ವೀಕ್ಷಿಸಿ ಆನಂದಿಸಲು ಅನುಕೂಲವಾಗುವಂತೆ ರೂಪಿಸಲಾಗಿದೆ.
A permanent musical fountain has been developed at Amanikere in Tumakuru for public recreation. Bringing together a beautiful blend of lights, music and dancing water jets, the fountain is set to become another major attraction in the city.
The facility is not limited to the ten-day Dasara celebrations. It has been designed to offer residents and tourists an enjoyable experience on weekends throughout the year. -
Dr. G Parameshwara
@DrParameshwara
ತುಮಕೂರಿನ ಶ್ರೀಮಂತ ರಂಗಭೂಮಿ ಪರಂಪರೆಯನ್ನು ಉಳಿಸಿ ಬೆಳೆಸುವ ಹಾಗೂ ನಾಟಕ ಕಲೆಯನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಉದ್ದೇಶದಿಂದ ದಸರಾ ಮಹೋತ್ಸವದ ಅಂಗವಾಗಿ ರಂಗ ದಸರಾ ಆಯೋಜಿಸಲಾಗಿದೆ.
ಗುಬ್ಬಿ ವೀರಣ್ಣ ಕಲಾಮಂದಿರದಲ್ಲಿ ಪ್ರತಿದಿನ ಎರಡು ನಾಟಕಗಳ ಪ್ರದರ್ಶನ ನಡೆಯಲಿದ್ದು, ಸ್ಥಳೀಯ ನಾಟಕ ಕಲಾವಿದರಿಗೆ ತಮ್ಮ ಪ್ರತಿಭೆ ಪ್ರದರ್ಶಿಸಲು ಸೂಕ್ತ ವೇದಿಕೆ ಕಲ್ಪಿಸಲು ಆದ್ಯತೆ ನೀಡಲಾಗಿದೆ.
ಕನ್ನಡ ರಂಗಭೂಮಿಯ ಸೊಗಡು, ಕಲಾವಿದರ ಪ್ರತಿಭೆ ಹಾಗೂ ನಾಟಕಗಳ ವೈವಿಧ್ಯವನ್ನು ಜನರಿಗೆ ಪರಿಚಯಿಸುವ ಮೂಲಕ ತುಮಕೂರಿನ ಸಾಂಸ್ಕೃತಿಕ ಪರಂಪರೆಗೆ ಮತ್ತಷ್ಟು ಮೆರುಗು ನೀಡುವುದು ಈ ರಂಗ ದಸರಾದ ಆಶಯವಾಗಿದೆ.
Ranga Dasara is being organised as part of the Dasara festival to preserve and promote Tumakuru’s rich theatre heritage and introduce the art of drama to future generations.
Two plays will be staged every day at Gubbi Veeranna Kalakshetra, with a focus on providing local theatre artists a platform to showcase their talent.
Ranga Dasara aims to enrich Tumakuru’s cultural heritage by bringing the vibrancy of Kannada theatre, the talent of artists and the diversity of theatrical performances to the public. -
Dr. G Parameshwara
@DrParameshwara
ಅಕ್ಟೋಬರ್ 11ರಿಂದ ನಡೆಯಲಿರುವ ತುಮಕೂರು ದಸರಾ ಮಹೋತ್ಸವದಲ್ಲಿ ಸಾರ್ವಜನಿಕರಿಗೆ ವಿಶೇಷ ಆಕರ್ಷಣೆಗಳು ಕಾಯುತ್ತಿವೆ. ಸಾಮಾನ್ಯ ಜನರಿಗೂ ಹೆಲಿಕಾಪ್ಟರ್ ಪ್ರಯಾಣದ ರೋಮಾಂಚಕ ಅನುಭವವನ್ನು ಪಡೆಯಲು ಹೆಲಿಕಾಪ್ಟರ್ ರೈಡ್ ವ್ಯವಸ್ಥೆ ಕಲ್ಪಿಸಲಾಗಿದೆ.
ಇದರೊಂದಿಗೆ, ಸಾರ್ವಜನಿಕರಿಗಾಗಿ ಆಹಾರ ಮೇಳವನ್ನೂ ಆಯೋಜಿಸಲಾಗಿದ್ದು, ವೈವಿಧ್ಯಮಯ ಆಹಾರಗಳನ್ನು ಸವಿಯುವ ಅವಕಾಶ ದೊರೆಯಲಿದೆ.
ಮನರಂಜನೆ, ಹೊಸ ಅನುಭವಗಳು ಹಾಗೂ ಆಹಾರ ವೈವಿಧ್ಯದೊಂದಿಗೆ ತುಮಕೂರು ದಸರಾ ಮಹೋತ್ಸವವು ಎಲ್ಲ ವಯೋಮಾನದ ಜನರಿಗೂ ಸಂಭ್ರಮದ ವೇದಿಕೆಯಾಗಲಿದೆ.
Tumakuru Dasara festival, beginning on October 11, has exciting attractions in store for the public. Helicopter rides have been arranged to give people the thrilling experience of flying in a helicopter.
A food festival will also be organised, offering visitors an opportunity to savour a wide variety of cuisines.
With entertainment, unique experiences and diverse culinary delights, Tumakuru Dasara promises a festive experience for people of all age groups. -
Dr. G Parameshwara
@DrParameshwara
ತುಮಕೂರು ದಸರಾ ಮಹೋತ್ಸವದ ಫಲಪುಷ್ಪ ಪ್ರದರ್ಶನದಲ್ಲಿ ಐತಿಹಾಸಿಕ ಸ್ಮಾರಕಗಳ ಕಲಾಕೃತಿಗಳು ಹಾಗೂ ಆಕರ್ಷಕ ಪುಷ್ಪಾಲಂಕಾರಗಳು ವಿಶೇಷ ಮೆರುಗು ನೀಡಲಿವೆ.
ಇಂಡಿಯಾ ಗೇಟ್, ತುಮಕೂರು ಟೌನ್ಹಾಲ್ ಹಾಗೂ ಹಂಪಿಯ ಪ್ರಸಿದ್ಧ ಕಲ್ಲಿನ ರಥಗಳ ಹೂವಿನ ಕಲಾಕೃತಿಗಳು ನೋಡುಗರ ಗಮನ ಸೆಳೆಯಲಿವೆ. ಇದರೊಂದಿಗೆ, ಭವಿಷ್ಯದ ತುಮಕೂರು ಮೆಟ್ರೋ ಹಾಗೂ ಅಂತಾರಾಷ್ಟ್ರೀಯ ಕ್ರೀಡಾಂಗಣದ ಪರಿಕಲ್ಪನೆಗಳು ಸುಂದರ ಪುಷ್ಪಾಲಂಕಾರದ ಮೂಲಕ ಅನಾವರಣಗೊಳ್ಳಲಿವೆ.
ಇತಿಹಾಸದ ವೈಭವ, ಪ್ರಕೃತಿಯ ಸೌಂದರ್ಯ ಹಾಗೂ ಅಭಿವೃದ್ಧಿಯ ಕನಸುಗಳನ್ನು ಒಂದೆಡೆ ಬೆಸೆಯುವ ಈ ಫಲಪುಷ್ಪ ಪ್ರದರ್ಶನವು ತುಮಕೂರು ದಸರಾ ಸಂಭ್ರಮಕ್ಕೆ ಮತ್ತಷ್ಟು ಕಳೆ ತುಂಬಲಿದೆ.
The flower show at the Tumakuru Dasara festival will feature artistic floral replicas of historic monuments and spectacular floral decorations.
Floral installations of India Gate, Tumakuru Town Hall and Hampi’s iconic Stone Chariot will be major attractions. Adding to the splendour, conceptual models of a future Tumakuru Metro and an international sports stadium will also be showcased through beautiful floral arrangements.
The exhibition will add colour and splendour to the Tumakuru Dasara celebrations. -
Dr. G Parameshwara
@DrParameshwara
ತುಮಕೂರು ದಸರಾ ಮಹೋತ್ಸವದ ಅಂಗವಾಗಿ ಅಕ್ಟೋಬರ್ 11ರಂದು ವಿಶೇಷ ವಸ್ತುಪ್ರದರ್ಶನಕ್ಕೆ ಚಾಲನೆ ದೊರೆಯಲಿದೆ.
ಯುವಜನರಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನದ ಕುರಿತು ಆಸಕ್ತಿ ಮೂಡಿಸುವ ಉದ್ದೇಶದಿಂದ ಇಸ್ರೋ ವತಿಯಿಂದ ಬಾಹ್ಯಾಕಾಶ ತಂತ್ರಜ್ಞಾನದ ಪ್ರದರ್ಶನ ಹಾಗೂ ಎಚ್ಎಎಲ್ ವತಿಯಿಂದ ವೈಮಾನಿಕ ತಂತ್ರಜ್ಞಾನದ ಪರಿಚಯ ಏರ್ಪಡಿಸಲಾಗಿದೆ.
ವಿಜ್ಞಾನ, ತಂತ್ರಜ್ಞಾನ ಮತ್ತು ನಾವೀನ್ಯತೆಯ ಲೋಕವನ್ನು ಪರಿಚಯಿಸುವ ಈ ವಸ್ತುಪ್ರದರ್ಶನವು ವಿದ್ಯಾರ್ಥಿಗಳು ಹಾಗೂ ಯುವಜನರಿಗೆ ಹೊಸ ವಿಷಯಗಳನ್ನು ತಿಳಿಯಲು ಮತ್ತು ಜ್ಞಾನವನ್ನು ವಿಸ್ತರಿಸಿಕೊಳ್ಳಲು ಉತ್ತಮ ಅವಕಾಶವಾಗಲಿದೆ.
A special exhibition will be inaugurated on October 11 as part of the Tumakuru Dasara festival.
With the aim of fostering an interest in science and technology among young people, ISRO will showcase space technology, while HAL will provide an introduction to aviation technology.
Offering a glimpse into the world of science, technology and innovation, this exhibition will provide students and young people with an excellent opportunity to explore new subjects and expand their knowledge. -
Dr. G Parameshwara
@DrParameshwara
ನಾಡಿನ ಸಾಂಸ್ಕೃತಿಕ ಪರಂಪರೆ ಮತ್ತು ಧಾರ್ಮಿಕ ವೈಭವವನ್ನು ಪ್ರತಿಬಿಂಬಿಸುವ ತುಮಕೂರು ದಸರಾ ಮಹೋತ್ಸವವು ಅಕ್ಟೋಬರ್ 11ರಿಂದ 21ರವರೆಗೆ ಅದ್ಧೂರಿಯಾಗಿ ನಡೆಯಲಿದೆ.
ಅಕ್ಟೋಬರ್ 11ರಂದು ಬೆಳಿಗ್ಗೆ 8.30ಕ್ಕೆ ವಿವಿಧ ಮಠಾಧೀಶರ ದಿವ್ಯ ಸಾನ್ನಿಧ್ಯದಲ್ಲಿ ಮಹೋತ್ಸವಕ್ಕೆ ಚಾಲನೆ ದೊರೆಯಲಿದೆ.
ಸಾಂಸ್ಕೃತಿಕ ವೈವಿಧ್ಯ, ಸಂಪ್ರದಾಯಗಳ ಸೊಗಡು ಹಾಗೂ ಭಕ್ತಿಭಾವದ ಸಮ್ಮಿಲನದೊಂದಿಗೆ ತುಮಕೂರು ದಸರಾ ಜನಮನದಲ್ಲಿ ಸಂಭ್ರಮ ಮೂಡಿಸಲಿದೆ. ನಾಡಿನ ಶ್ರೀಮಂತ ಪರಂಪರೆಯನ್ನು ಸಂಭ್ರಮದಿಂದ ಆಚರಿಸುವ ಈ ಉತ್ಸವ ಎಲ್ಲರಲ್ಲೂ ಸೌಹಾರ್ದ, ಸಂತಸ ಮತ್ತು ಒಗ್ಗಟ್ಟಿನ ಭಾವ ಬೆಸೆಯಲಿದೆ.
Tumakuru Dasara festival, reflecting the region’s rich cultural heritage and religious grandeur, will be celebrated in a grand manner from October 11 to 21.
The festivities will commence at 8:30 AM on October 11 in the divine presence of various seers and heads of religious institutions.
A confluence of cultural diversity, traditional splendour and devotion, Tumakuru Dasara will fill hearts with joy and festive spirit. Celebrating the region’s rich heritage, this festival will foster harmony, happiness and unity among all. -
Dr. G Parameshwara
@DrParameshwara
ತುಮಕೂರು ದಸರಾ ಮಹೋತ್ಸವದ ಸಂಭ್ರಮಕ್ಕೆ ಮತ್ತಷ್ಟು ಮೆರುಗು ನೀಡುವ ನಿಟ್ಟಿನಲ್ಲಿ ಇಂದು ನಗರದ ಬಿಜಿಎಸ್ ವೃತ್ತದ ಬಳಿ ವಿದ್ಯುತ್ ದೀಪಾಲಂಕಾರಕ್ಕೆ ಹಾಗೂ ದಸರಾ ವೈಭವವನ್ನು ಸಾರ್ವಜನಿಕರು ಕಣ್ತುಂಬಿಕೊಳ್ಳಲು ವ್ಯವಸ್ಥೆ ಮಾಡಿರುವ ವಿಶೇಷ ಅಂಬಾರಿ ಬಸ್ಗಳ ಸಂಚಾರಕ್ಕೆ ಚಾಲನೆ ನೀಡಿದೆ.
ಬಳಿಕ ಅಮಾನಿಕೆರೆಯಲ್ಲಿ ನೂತನವಾಗಿ ನಿರ್ಮಿಸಿರುವ ಆಕರ್ಷಕ ಸಂಗೀತ ಕಾರಂಜಿಯನ್ನು ಉದ್ಘಾಟಿಸಿದೆ. ದಸರಾ ಉತ್ಸವದ ನಂತರವೂ ಸಾರ್ವಜನಿಕರು ಹಾಗೂ ಪ್ರವಾಸಿಗರಿಗೆ ಮನರಂಜನೆಯ ತಾಣವಾಗಿ ಉಳಿಯುವಂತೆ ಈ ಶಾಶ್ವತ ಸೌಲಭ್ಯವನ್ನು ಕಲ್ಪಿಸಲಾಗಿದೆ.
ಈ ಸಂದರ್ಭದಲ್ಲಿ ತುಮಕೂರು ನಗರ ಶಾಸಕರಾದ ಜಿ.ಬಿ. ಜ್ಯೋತಿ ಗಣೇಶ್, ಜಿಲ್ಲಾಧಿಕಾರಿಗಳಾದ ಶುಭ ಕಲ್ಯಾಣ್, ಜಿಲ್ಲಾ ಪಂಚಾಯತ್ ಸಿಇಒ ಬಿ.ವಿ. ಅಶ್ವಿಜ, ಮಹಾನಗರ ಪಾಲಿಕೆ ಆಯುಕ್ತರಾದ ಶುಭ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
Dr. G Parameshwara
@DrParameshwara
-
Dr. G Parameshwara
@DrParameshwara
ತುಮಕೂರಿನ ಸಾಂಸ್ಕೃತಿಕ ಪರಂಪರೆ, ಕಲೆ, ಸಾಹಿತ್ಯ, ರಂಗಭೂಮಿ ಹಾಗೂ ಐತಿಹಾಸಿಕ ಹಿರಿಮೆಯನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಉದ್ದೇಶದಿಂದ ಅಕ್ಟೋಬರ್ 11ರಿಂದ ತುಮಕೂರು ದಸರಾ ಮಹೋತ್ಸವವನ್ನು ಆಯೋಜಿಸಲಾಗಿದ್ದು, ಅಕ್ಟೋಬರ್ 21ರಂದು ಸಮಾರೋಪಗೊಳ್ಳಲಿದೆ.
ಕಳೆದ ಎರಡು ವರ್ಷಗಳಿಂದ ತುಮಕೂರು ದಸರಾವನ್ನು ಯಶಸ್ವಿಯಾಗಿ ಆಯೋಜಿಸಲಾಗುತ್ತಿದೆ. ಕಲೆ, ಸಾಹಿತ್ಯ, ಕ್ರೀಡೆ ಮತ್ತು ರಂಗಭೂಮಿಯಲ್ಲಿ ತುಮಕೂರು ಜಿಲ್ಲೆಗೆ ವಿಶಿಷ್ಟ ಸ್ಥಾನವಿದೆ. ಜಿಲ್ಲೆಯ ಸಾಂಸ್ಕೃತಿಕ ಹಿರಿಮೆಯನ್ನು ಉಳಿಸಿ ಬೆಳೆಸುವುದರೊಂದಿಗೆ ಯುವಜನತೆಯಲ್ಲಿ ತಮ್ಮ ಜಿಲ್ಲೆಯ ಇತಿಹಾಸ ಮತ್ತು ಪರಂಪರೆಯ ಬಗ್ಗೆ ಹೆಮ್ಮೆ ಮೂಡಿಸುವುದು ಈ ಉತ್ಸವದ ಪ್ರಮುಖ ಉದ್ದೇಶವಾಗಿದೆ.
ಕೇವಲ ಎರಡು ವರ್ಷಗಳಲ್ಲಿ ತುಮಕೂರು ದಸರಾ ಜನಪ್ರಿಯತೆ ಗಳಿಸಿದ್ದು, ಮೈಸೂರಿಗೆ ತೆರಳುವ ಬದಲು ತುಮಕೂರಿನಲ್ಲಿಯೇ ದಸರಾ ಆಚರಿಸುವ ಬಗ್ಗೆ ಜನರು ಮಾತನಾಡುವಂತಾಗಿದೆ. ಜನಪ್ರತಿನಿಧಿಗಳು, ಶಾಸಕರು, ಸಂಸದರು, ವಿಧಾನ ಪರಿಷತ್ ಸದಸ್ಯರು, ಸಂಘಸಂಸ್ಥೆಗಳು ಮತ್ತು ಸಾರ್ವಜನಿಕರ ಸಹಕಾರದಿಂದ ಉತ್ಸವ ಯಶಸ್ವಿಯಾಗಿ ನಡೆಯುತ್ತಿದೆ. ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು, ಮಹಾನಗರ ಪಾಲಿಕೆ ಆಯುಕ್ತರು, ಅಪರ ಜಿಲ್ಲಾಧಿಕಾರಿಗಳು ಸೇರಿದಂತೆ ಎಲ್ಲ ಇಲಾಖೆಗಳ ಅಧಿಕಾರಿಗಳು ಶ್ರಮಿಸುತ್ತಿದ್ದಾರೆ. ದಸರಾ ಕೇವಲ ಸರ್ಕಾರಿ ಕಾರ್ಯಕ್ರಮವಾಗದೆ ಜನರ ಹಬ್ಬವಾಗಬೇಕು ಎಂಬುದು ನಮ್ಮ ಆಶಯವಾಗಿದೆ.
ಜಿಲ್ಲೆಯಲ್ಲಿ ಬರ ಪರಿಸ್ಥಿತಿ ಇರುವುದರಿಂದ ಈ ಬಾರಿ ದಸರಾ ಆಚರಿಸಬೇಕೇ ಅಥವಾ ಬೇಡವೇ ಎಂಬ ಬಗ್ಗೆ ಚರ್ಚೆ ನಡೆದಿತ್ತು. ಆದರೆ, ಬರದ ಸಂದರ್ಭದಲ್ಲಿಯೂ ಸಂಸ್ಕೃತಿ ಮತ್ತು ಸಂಪ್ರದಾಯಗಳನ್ನು ಮರೆಯಬಾರದು. ಇಂತಹ ಉತ್ಸವಗಳು ಜನರಲ್ಲಿ ಉತ್ಸಾಹ ಮೂಡಿಸುವುದರ ಜೊತೆಗೆ ಯುವಜನರಲ್ಲಿ ಸಾಂಸ್ಕೃತಿಕ ಆಸಕ್ತಿ ಬೆಳೆಸುತ್ತವೆ ಎಂಬ ಅಭಿಪ್ರಾಯ ಸಾರ್ವಜನಿಕರಿಂದ ವ್ಯಕ್ತವಾಯಿತು. ಈ ಹಿನ್ನೆಲೆಯಲ್ಲಿ ಅನಗತ್ಯ ವೆಚ್ಚಗಳಿಗೆ ಅವಕಾಶ ನೀಡದೆ, ಲಭ್ಯವಿರುವ ಸಂಪನ್ಮೂಲಗಳ ಇತಿಮಿತಿಯೊಳಗೆ ಅರ್ಥಪೂರ್ಣವಾಗಿ ದಸರಾ ಮಹೋತ್ಸವವನ್ನು ಆಯೋಜಿಸಲಾಗುತ್ತಿದೆ.
ಅಕ್ಟೋಬರ್ 11ರಂದು ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಚಾಲನೆ :
ಅಕ್ಟೋಬರ್ 11ರಂದು (ನಾಳೆ) ಬೆಳಗ್ಗೆ 8.30ಕ್ಕೆ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ದಸರಾ ಮಹೋತ್ಸವಕ್ಕೆ ಅಧಿಕೃತ ಚಾಲನೆ ದೊರೆಯಲಿದೆ. ಪರಮಪೂಜ್ಯ ಸಿದ್ಧಗಂಗಾ ಶ್ರೀಗಳು, ಹನುಮಂತನಾಥ ಸ್ವಾಮೀಜಿಗಳು, ಸಿದ್ಧರಬೆಟ್ಟದ ಸ್ವಾಮೀಜಿಗಳು ಹಾಗೂ ಕಾರದ ವೀರಬಸವ ಸ್ವಾಮೀಜಿಗಳು ಸೇರಿದಂತೆ ವಿವಿಧ ಮಠಾಧೀಶರನ್ನು ಆಹ್ವಾನಿಸಲಾಗಿದೆ. ಜಿಲ್ಲೆಯ ಶಾಸಕರು, ಸಂಸದರು ಹಾಗೂ ಇತರ ಜನಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ಎಲ್ಲರೂ ಜೊತೆಯಾಗಿ ದಸರಾ ಉದ್ಘಾಟಿಸುತ್ತೇವೆ.
ಮಠಾಧೀಶರ ಸಾನ್ನಿಧ್ಯದಲ್ಲಿ ಜಿಲ್ಲೆಯ ದಸರಾ ಧ್ವಜ ಹಾಗೂ ಕನ್ನಡ ನಾಡಿನ ಧ್ವಜಾರೋಹಣ ನೆರವೇರಲಿದೆ. ನಂತರ ಚಾಮುಂಡೇಶ್ವರಿ ದೇವಿ, ದುರ್ಗಾದೇವಿ ಹಾಗೂ ಶಕ್ತಿದೇವತೆಯ ಪೂಜೆ, ಹೋಮ-ಹವನ ಸೇರಿದಂತೆ ವಿವಿಧ ಧಾರ್ಮಿಕ ವಿಧಿವಿಧಾನಗಳು ಮಧ್ಯಾಹ್ನದವರೆಗೆ ನಡೆಯಲಿವೆ. ಇದಕ್ಕಾಗಿ ತಾತ್ಕಾಲಿಕವಾಗಿ ನಿರ್ಮಿಸಿರುವ ಧಾರ್ಮಿಕ ಮಂಟಪವನ್ನು ದೇವಸ್ಥಾನದ ವಾತಾವರಣ ಮೂಡುವಂತೆ ಸಿದ್ಧಪಡಿಸಲಾಗಿದೆ.
ಧಾರ್ಮಿಕ ಕಾರ್ಯಕ್ರಮಗಳ ನಂತರ ವಿಶೇಷ ವಸ್ತುಪ್ರದರ್ಶನಕ್ಕೆ ಚಾಲನೆ ನೀಡಲಾಗುವುದು. ವಿದ್ಯಾರ್ಥಿಗಳು, ಮಕ್ಕಳು ಹಾಗೂ ಯುವಜನರಿಗೆ ವಿಜ್ಞಾನ ಮತ್ತು ತಂತ್ರಜ್ಞಾನದ ಬಗ್ಗೆ ಪ್ರಾಯೋಗಿಕ ಮಾಹಿತಿ ಒದಗಿಸುವ ಉದ್ದೇಶದಿಂದ ಈ ಪ್ರದರ್ಶನ ಆಯೋಜಿಸಲಾಗಿದೆ.
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಉಪಗ್ರಹಗಳು, ಅವುಗಳ ಕಾರ್ಯವಿಧಾನ ಹಾಗೂ ಬಾಹ್ಯಾಕಾಶ ತಂತ್ರಜ್ಞಾನದ ಕುರಿತು ಪ್ರದರ್ಶನದ ಮೂಲಕ ಮಾಹಿತಿ ನೀಡಲಿದೆ. ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್ಎಎಲ್) ಸಂಸ್ಥೆಯು ಹೆಲಿಕಾಪ್ಟರ್ಗಳ ರಚನೆ, ಕಾರ್ಯವಿಧಾನ ಹಾಗೂ ವೈಮಾನಿಕ ತಂತ್ರಜ್ಞಾನದ ಕುರಿತು ಪರಿಚಯಿಸಲಿದೆ. ಬೆಂಗಳೂರಿನ ಜೊತೆಗೆ ತುಮಕೂರು ಜಿಲ್ಲೆಯ ಗುಬ್ಬಿ ಸಮೀಪದ ನಿಟ್ಟೂರು ಭಾಗದಲ್ಲಿಯೂ ಎಚ್ಎಎಲ್ ಘಟಕ ಸ್ಥಾಪನೆಯಾಗಿರುವುದು ಜಿಲ್ಲೆಗೆ ಹೆಮ್ಮೆಯ ಸಂಗತಿಯಾಗಿದೆ. ವಿವಿಧ ಸರ್ಕಾರಿ ಇಲಾಖೆಗಳೂ ತಮ್ಮ ಕಾರ್ಯಚಟುವಟಿಕೆಗಳ ಕುರಿತು ಪ್ರದರ್ಶನಗಳನ್ನು ಏರ್ಪಡಿಸಲಿವೆ.
ಫಲಪುಷ್ಪ ಪ್ರದರ್ಶನದಲ್ಲಿ ಐತಿಹಾಸಿಕ ಸ್ಮಾರಕಗಳ ಕಲಾಕೃತಿಗಳು :
ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾಗಿ ವಿಶೇಷ ಫಲಪುಷ್ಪ ಪ್ರದರ್ಶನ ಆಯೋಜಿಸಲಾಗುತ್ತಿದೆ. ಹೂವುಗಳಿಂದ ಇಂಡಿಯಾ ಗೇಟ್, 1914ರಲ್ಲಿ ನಿರ್ಮಾಣಗೊಂಡ ತುಮಕೂರಿನ ಐತಿಹಾಸಿಕ ಟೌನ್ಹಾಲ್ ಹಾಗೂ ಹಂಪಿಯ ಕಲ್ಲಿನ ರಥದ ಮಾದರಿಗಳನ್ನು ನಿರ್ಮಿಸಲಾಗುತ್ತಿದೆ. ಇದರ ಜೊತೆಗೆ ತುಮಕೂರಿಗೆ ಮೆಟ್ರೋ ರೈಲು ಸಂಪರ್ಕ ಕಲ್ಪಿಸುವ ಆಶಯ ಹಾಗೂ ಜಿಲ್ಲೆಯಲ್ಲಿ ನಿರ್ಮಿಸಲು ಉದ್ದೇಶಿಸಿರುವ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದ ಪರಿಕಲ್ಪನೆಯನ್ನು ಪುಷ್ಪ ಕಲಾಕೃತಿಗಳ ಮೂಲಕ ಪ್ರದರ್ಶಿಸಲಾಗುವುದು. ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣಕ್ಕಾಗಿ ಈಗಾಗಲೇ ಜಾಗ ಒದಗಿಸಲಾಗಿದೆ.
ಸಾರ್ವಜನಿಕರಿಗೆ ಹೆಲಿಕಾಪ್ಟರ್ ರೈಡ್ :
ಕಳೆದ ವರ್ಷದ ದಸರಾ ಮಹೋತ್ಸವದಲ್ಲಿ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ಪಡೆದಿದ್ದ ಹೆಲಿಕಾಪ್ಟರ್ ರೈಡ್ ಸೌಲಭ್ಯವನ್ನು ಈ ಬಾರಿಯೂ ಕಲ್ಪಿಸಲಾಗುತ್ತಿದೆ. ಅಕ್ಟೋಬರ್ 11ರಿಂದ ಹೆಲಿಕಾಪ್ಟರ್ ರೈಡ್ ಆರಂಭವಾಗಲಿದೆ.
ಸಾಮಾನ್ಯ ಜನರು, ವಿಶೇಷವಾಗಿ ಇಂತಹ ಅನುಭವ ಪಡೆಯಲು ಅವಕಾಶವಿಲ್ಲದವರು ಹೆಲಿಕಾಪ್ಟರ್ ಪ್ರಯಾಣದ ಅನುಭವ ಪಡೆಯಬೇಕು ಎಂಬ ಉದ್ದೇಶದಿಂದ ಈ ವ್ಯವಸ್ಥೆಯನ್ನು ಮುಂದುವರಿಸಲಾಗುತ್ತಿದೆ.
ರಂಗ ದಸರಾಕ್ಕೆ ವಿಶೇಷ ಆದ್ಯತೆ :
ತುಮಕೂರು ಜಿಲ್ಲೆಯ ರಂಗಭೂಮಿ ಪರಂಪರೆಯನ್ನು ಉಳಿಸಿ ಬೆಳೆಸುವ ಉದ್ದೇಶದಿಂದ ಈ ವರ್ಷವೂ 'ರಂಗ ದಸರಾ' ಆಯೋಜಿಸಲಾಗಿದೆ. ಗುಬ್ಬಿ ವೀರಣ್ಣ ಅವರ ಚೆನ್ನಬಸವೇಶ್ವರ ಕೃಪಾಪೋಷಿತ ನಾಟಕ ಮಂಡಳಿಯ ಮೂಲಕ ಕನ್ನಡ ರಂಗಭೂಮಿಗೆ ಅಪಾರ ಕೊಡುಗೆ ದೊರೆತಿದೆ. ನಟಸಾರ್ವಭೌಮ ಡಾ. ರಾಜ್ಕುಮಾರ್ ಸೇರಿದಂತೆ ಅನೇಕ ಕಲಾವಿದರು ಈ ರಂಗಭೂಮಿ ಪರಂಪರೆಯ ಮೂಲಕ ಬೆಳಕಿಗೆ ಬಂದಿದ್ದಾರೆ.
ಈ ಪರಂಪರೆಯನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಉದ್ದೇಶದಿಂದ ಗುಬ್ಬಿ ವೀರಣ್ಣ ಕಲಾಮಂದಿರದಲ್ಲಿ ಪ್ರತಿದಿನ ಎರಡು ನಾಟಕಗಳ ಪ್ರದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. (1/2)
Dr. G Parameshwara
@DrParameshwara
ಸಂಗೀತ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು :
ಅಕ್ಟೋಬರ್ 11ರಂದು ಸಂಜೆ 'ಶಿವಲೀಲಾ' ಸಾಂಸ್ಕೃತಿಕ ಕಾರ್ಯಕ್ರಮದ ಮೂಲಕ ಕನ್ನಡ ನಾಡಿನ ಇತಿಹಾಸವನ್ನು ಆಧರಿಸಿದ ಸುಮಾರು ಎರಡು ಗಂಟೆಗಳ ನಾಟಕ ಪ್ರದರ್ಶನ ನಡೆಯಲಿದೆ. ಸಂಜೆ 6ರಿಂದ 7 ಗಂಟೆಯ ಅವಧಿಯಲ್ಲಿ ಕಾರ್ಯಕ್ರಮ ಆರಂಭವಾಗುವ ನಿರೀಕ್ಷೆಯಿದೆ.
ಯುವಜನರಿಗಾಗಿ ರಾತ್ರಿ ಸುಮಾರು 8 ಗಂಟೆಗೆ 'ಕ್ರಿಪ್ಟೋಸ್' ಸಂಗೀತ ತಂಡದಿಂದ ಆಧುನಿಕ ಸಂಗೀತ ಕಾರ್ಯಕ್ರಮ ನಡೆಯಲಿದೆ. ಅಕ್ಟೋಬರ್ 12ರಂದು ರಾತ್ರಿ 8 ಗಂಟೆಗೆ 'ಟು ಐಡ್ ವಿಜಾರ್ಡ್' ಬ್ಯಾಂಡ್ ತಂಡದ ಕಾರ್ಯಕ್ರಮ, ಅಕ್ಟೋಬರ್ 14ರಂದು 'ಆಲ್ ಓಕೆ' ತಂಡದ ಸಂಗೀತ ಕಾರ್ಯಕ್ರಮ ಹಾಗೂ ಅಕ್ಟೋಬರ್ 16ರಂದು 'ಸೌತ್ ಮೀಲ್' ಸಂಗೀತ ತಂಡದ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
ಮಕ್ಕಳ ದಸರಾ – ಪ್ರತಿಭೆಗಳ ಅನಾವರಣ:
ಅಕ್ಟೋಬರ್ 15ರಂದು ವಿಶೇಷವಾಗಿ 'ಮಕ್ಕಳ ದಸರಾ' ಆಯೋಜಿಸಲಾಗುತ್ತಿದೆ. ಮಕ್ಕಳಲ್ಲಿರುವ ಕಲೆ, ಸಾಹಿತ್ಯ, ಸೃಜನಶೀಲತೆ ಹಾಗೂ ವಿವಿಧ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಉದ್ದೇಶದಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಮಕ್ಕಳಿಗೆ ಸೂಕ್ತ ವೇದಿಕೆ ಮತ್ತು ಪ್ರೋತ್ಸಾಹ ದೊರೆತರೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಲು ಸಾಧ್ಯವಾಗುತ್ತದೆ. ಅವರ ಆಸಕ್ತಿ ಮತ್ತು ಪ್ರತಿಭೆಗಳನ್ನು ಬೆಳೆಸಲು ಮಕ್ಕಳ ದಸರಾ ಉತ್ತಮ ಅವಕಾಶವಾಗಲಿದೆ.
ಅಕ್ಟೋಬರ್ 17ರಂದು ಮಹಿಳಾ ಬೈಕ್ ರೈಡ್, ರಂಗೋಲಿ ಸ್ಪರ್ಧೆ ಮತ್ತು ಕವಿಗೋಷ್ಠಿ
ಅಕ್ಟೋಬರ್ 17ರಂದು ಮಹಿಳೆಯರಿಗಾಗಿ ವಿಶೇಷ ಬೈಕ್ ರೈಡ್ ಆಯೋಜಿಸಲಾಗಿದೆ. ಕಳೆದ ವರ್ಷದಂತೆ ಈ ಬಾರಿಯೂ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ನಿರೀಕ್ಷೆಯಿದೆ.
ಮಹಿಳೆಯರು, ತಾಯಂದಿರು ಹಾಗೂ ಸಹೋದರಿಯರಿಗಾಗಿ ರಂಗೋಲಿ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ಕಳೆದ ವರ್ಷ ನಗರದ ರಸ್ತೆಯಲ್ಲಿ ದೊಡ್ಡ ಪ್ರಮಾಣದಲ್ಲಿ ರಂಗೋಲಿ ರಚಿಸಿ ಮಹಿಳೆಯರು ದಸರಾ ಸಂಭ್ರಮದಲ್ಲಿ ಭಾಗವಹಿಸಿದ್ದರು. ಈ ವರ್ಷವೂ ಅವರಿಗೆ ಅವಕಾಶ ಕಲ್ಪಿಸಲಾಗಿದೆ.
ಜಿಲ್ಲೆಯ ಹಿರಿಯ ಹಾಗೂ ಯುವ ಸಾಹಿತಿಗಳು, ಕವಿಗಳು ಮತ್ತು ಸಾಹಿತ್ಯಾಸಕ್ತರಿಗೆ ವೇದಿಕೆ ಒದಗಿಸುವ ಉದ್ದೇಶದಿಂದ ವಿಶೇಷ ಕವಿಗೋಷ್ಠಿಯನ್ನೂ ಆಯೋಜಿಸಲಾಗಿದೆ. ತುಮಕೂರಿನ ಸಾಹಿತ್ಯ ಪರಂಪರೆಗೆ ಗೌರವ ಸಲ್ಲಿಸುವ ಪ್ರಮುಖ ಕಾರ್ಯಕ್ರಮಗಳಲ್ಲಿ ಇದೂ ಒಂದಾಗಿದೆ. ಸಂಜೆಗೆ ದಾಂಡೀಯ ನೃತ್ಯವನ್ನು ಏರ್ಪಾಟು ಮಾಡಲಾಗಿದೆ.
ಅಕ್ಟೋಬರ್ 18ರಂದು ಪಂಜಿನ ಕವಾಯತು ಇರಲಿದೆ. ಇಲ್ಲಿಯ ವಿಶೇಷತೆ ಏನೆಂದರೆ ಶಾಲಾ - ಕಾಲೇಜು ಮಕ್ಕಳಿಗೆ ಅವಕಾಶ ನೀಡುತ್ತಿದ್ದೇವೆ. ಒಂದು ತಿಂಗಳಿಂದ ತಯಾರು ನಡೆಯುತ್ತಿದೆ. ಆಮೇಲೆ ಎಂ.ಜಿ.ಸ್ಟೇಡಿಯಂನಲ್ಲಿ ʼಸೌತ್ ಗರಾಜ್ʼ ಬ್ಯಾಂಡ್ ಇರಲಿದೆ. ಪೂಜಾ ರಂಜಿತ್ ತಂಡದಿಂದ ಡ್ಯಾನ್ಸ್ ಇರಲಿದೆ. ಕಾರು ರ್ಯಾಲಿಯನ್ನು ಕೂಡ ಆಯೋಜಿಸಿದ್ದೇವೆ.
ಅಕ್ಟೋಬರ್ 19ರಂದು ನಟಿ ರಚಿತಾ ರಾಮ್ ಅವರು ಮುಖ್ಯ ಅತಿಥಿಯಾಗಿ ಆಗಮಿಸಲಿದ್ದಾರೆ. ಅವತ್ತು ರ್ಯಾಪರ್ ಚಂದನ್ ಶೆಟ್ಟಿ ಅವರು ಆಗಮಿಸಲಿದ್ದು, ಅವರದ್ದು ಕೂಡ ಎರಡು ಗಂಟೆಗಳ ಕಾರ್ಯಕ್ರಮವಿರುತ್ತದೆ.
ಅಕ್ಟೋಬರ್ 20ರಂದು ಬೆಳಗ್ಗೆ ಕುಸ್ತಿ ಏರ್ಪಾಟು ಮಾಡಿದ್ದೇವೆ. ಆಮೇಲೆ ದಸರಾ ಕ್ರೀಡಾಕೂಟ ನಡೆಯಲಿದೆ. ಸಂಜೆ ರಮೇಶ್ ಅರವಿಂದ್ ಬರುತ್ತಾರೆ. ಸಂಚಿತ್ ಹೆಗ್ಡೆ ಅವರಿಂದ ಸಂಗೀತ ಕಾರ್ಯಕ್ರಮ ಇರಲಿದೆ. ಪ್ರಭಾತ್ ಕಲಾವಿದರಿಂದ ʼಕನ್ನಡದ ಗತವೈಭವʼ ಡ್ರಾಮಾ ಇರಲಿದೆ. ತುಮಕೂರು ಗತವೈಭವವೂ ಸೇರಿದೆ.
ಅಕ್ಟೋಬರ್ 21ರಂದು ಮಧ್ಯಾಹ್ನ 1 ಗಂಟೆ ಸುಮಾರಿಗೆ ಟೌನ್ಹಾಲ್ ಸರ್ಕಲ್ನಲ್ಲಿ ತಾಯಿ ಚಾಮುಂಡೇಶ್ವರಿಗೆ ಹೂವು ಹಾಕುವ ಮೂಲಕ ಮೆರವಣಿಗೆ ಪ್ರಾರಂಭ ಮಾಡುತ್ತೇವೆ. ಈ ಬಾರಿ 3 ಆನೆಗಳು ಇರುತ್ತವೆ. 70 ಗ್ರಾಮ ದೇವತೆಗಳು ಇರುತ್ತವೆ. ಪೊಲೀಸರು, 33 ಕಲಾತಂಡದವರು, ಜನಸಮುದಾಯ ಭಾಗವಹಿಸುತ್ತಾರೆ. ಮೆರವಣಿಗೆ ನಂತರ ಶಮಿ ಪೂಜೆ ಇರಲಿದೆ. ಅದಾಗಿ ಸಂಜೆ ಹರಿಕೃಷ್ಣ ಅವರ ತಂಡದಿಂದ ಸಂಗೀತ ಕಾರ್ಯಕ್ರಮ ಇರಲಿದೆ. ಜೊತೆಗೆ ಹತ್ತು ದಿನವೂ ದೇವತೆಗಳಿಗೆ ಪೂಜೆ ಇರಲಿದೆ. ಆಹಾರ ಮೇಳವು ಇರಲಿದೆ.
ಅಮಾನಿಕೆರೆಯಲ್ಲಿ ಶಾಶ್ವತ ಸಂಗೀತ ಕಾರಂಜಿ:
ತುಮಕೂರಿನ ಅಮಾನಿಕೆರೆಯಲ್ಲಿ ಸಾರ್ವಜನಿಕರ ಮನರಂಜನೆಗಾಗಿ ಶಾಶ್ವತ ಸಂಗೀತ ಕಾರಂಜಿಯನ್ನು ನಿರ್ಮಿಸಲಾಗಿದೆ. ಇದು ದಸರಾ ಉತ್ಸವದ ಹತ್ತು ದಿನಗಳಿಗೆ ಮಾತ್ರ ಸೀಮಿತವಾಗದೆ, ವಾರಾಂತ್ಯದಲ್ಲಿ ಸಾರ್ವಜನಿಕರು ಹಾಗೂ ಪ್ರವಾಸಿಗರು ವೀಕ್ಷಿಸಲು ಅನುಕೂಲವಾಗುವಂತೆ ರೂಪಿಸಲಾಗಿದೆ. ನಗರದ ಜನರು ಕುಟುಂಬ ಮತ್ತು ಮಕ್ಕಳೊಂದಿಗೆ ಸಂಜೆ ವೇಳೆ ಸಮಯ ಕಳೆಯಲು ಹಾಗೂ ಮನರಂಜನೆ ಪಡೆಯಲು ಇದೊಂದು ಉತ್ತಮ ಸ್ಥಳವಾಗಲಿದೆ.
ನಗರ ದರ್ಶನಕ್ಕೆ ಎರಡು ಉಚಿತ ಅಂಬಾರಿ ಬಸ್ಗಳು:
ದಸರಾ ಹಿನ್ನೆಲೆಯಲ್ಲಿ ತುಮಕೂರು ನಗರದ ಪ್ರಮುಖ ರಸ್ತೆಗಳು ಮತ್ತು ಸ್ಥಳಗಳಲ್ಲಿ ವಿಶೇಷ ದೀಪಾಲಂಕಾರ ಮಾಡಲಾಗಿದೆ. ಸಾರ್ವಜನಿಕರಿಗೆ ನಗರದ ದೀಪಾಲಂಕಾರವನ್ನು ವೀಕ್ಷಿಸಲು ಕಳೆದ ವರ್ಷ ಒಂದು ಉಚಿತ ಅಂಬಾರಿ ಬಸ್ ವ್ಯವಸ್ಥೆ ಮಾಡಲಾಗಿತ್ತು. ಈ ಬಾರಿ ಸಾರ್ವಜನಿಕರ ಅನುಕೂಲಕ್ಕಾಗಿ ಎರಡು ಅಂಬಾರಿ ಬಸ್ಗಳನ್ನು ಒದಗಿಸಲಾಗುತ್ತಿದ್ದು, ಪ್ರತಿದಿನ ಸಂಜೆ ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಲಿವೆ. ಸಾರ್ವಜನಿಕರು ಉಚಿತವಾಗಿ ಬಸ್ಗಳಲ್ಲಿ ಪ್ರಯಾಣಿಸಿ ದಸರಾ ದೀಪಾಲಂಕಾರವನ್ನು ವೀಕ್ಷಿಸಬಹುದು.
ಅಮಾನಿಕೆರೆಯ ಸಂಗೀತ ಕಾರಂಜಿ, ಅಂಬಾರಿ ಬಸ್ ಸಂಚಾರ ಹಾಗೂ ನಗರದ ದೀಪಾಲಂಕಾರದ ಉದ್ಘಾಟನೆಗೆ ಸಂಬಂಧಿಸಿದ ಕಾರ್ಯಕ್ರಮಗಳಲ್ಲಿ ಕೆಲಸವನ್ನು ಇಂದು ರಾತ್ರಿಯೇ ನಡೆಸಲು ಉದ್ದೇಶಿಸಲಾಗಿದೆ. ಅಕ್ಟೋಬರ್ 11ರಂದು ಮೈಸೂರಿನಲ್ಲಿ ನಡೆಯುವ ದಸರಾ ಕಾರ್ಯಕ್ರಮ ಹಾಗೂ ದಸರಾ ಕ್ರೀಡಾಕೂಟದ ಉದ್ಘಾಟನೆಯಲ್ಲಿ ಭಾಗವಹಿಸಬೇಕಿರುವ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.
ಈ ದಸರಾ ಮಹೋತ್ಸವವು ತುಮಕೂರು ಜಿಲ್ಲೆಯ ಜನರಲ್ಲಿ ಹೊಸ ಉತ್ಸಾಹ, ಸಾಂಸ್ಕೃತಿಕ ಅಭಿಮಾನ ಹಾಗೂ ಒಗ್ಗಟ್ಟನ್ನು ಮೂಡಿಸಲಿ. ಜಿಲ್ಲೆಯ ಸಮಸ್ತ ಜನತೆಗೆ ತುಮಕೂರು ದಸರಾ ಮಹೋತ್ಸವದ ಹಾರ್ದಿಕ ಶುಭಾಶಯಗಳು. ಎಲ್ಲರೂ ಕೂಡ ದಸರಾ ಮಹೋತ್ಸವದಲ್ಲಿ ಭಾಗವಹಿಸಬೇಕು ಎಂದು ವಿನಂತಿ ಮಾಡುತ್ತೇನೆ.
- ತುಮಕೂರಿನ ಪದವಿಪೂರ್ವ ಕಾಲೇಜು ಆವರಣದಲ್ಲಿ ದಸರಾ ಮಹೋತ್ಸವದ ಪೂರ್ವಸಿದ್ಧತೆಗಳನ್ನು ಪರಿಶೀಲಿಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದೆ. -
Dr. G Parameshwara
@DrParameshwara
ಕಂದಾಯ ಇಲಾಖೆಯಲ್ಲಿ ಬಹುಕಾಲದಿಂದ ಬಾಕಿ ಉಳಿದಿದ್ದ ಬಡ್ತಿ ಪ್ರಕ್ರಿಯೆಗೆ ವೇಗ ನೀಡಿ, ತಹಶೀಲ್ದಾರ್ ಗ್ರೇಡ್-1 ವೃಂದದ 63 ಅಧಿಕಾರಿಗಳಿಗೆ ಕರ್ನಾಟಕ ಆಡಳಿತ ಸೇವೆಯ (KAS) ಕಿರಿಯ ಶ್ರೇಣಿ ವೃಂದಕ್ಕೆ ಪದೋನ್ನತಿ ನೀಡಲಾಗಿದೆ.
ಅಧಿಕಾರಿಗಳ ಸೇವಾನುಭವ ಮತ್ತು ಕಾರ್ಯದಕ್ಷತೆಗೆ ಸೂಕ್ತ ಮನ್ನಣೆ ನೀಡುವುದರೊಂದಿಗೆ, ಆಡಳಿತ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸುವುದು ನಮ್ಮ ಸರ್ಕಾರದ ಆದ್ಯತೆಯಾಗಿದೆ. ಬಡ್ತಿ ಪ್ರಕ್ರಿಯೆಯನ್ನು ಸುಗಮಗೊಳಿಸುವ ಮೂಲಕ ಅಧಿಕಾರಿಗಳ ವೃತ್ತಿಪರ ಬೆಳವಣಿಗೆಗೆ ಉತ್ತೇಜನ ನೀಡಲು ಹಾಗೂ ಸಾರ್ವಜನಿಕ ಸೇವೆಯ ಗುಣಮಟ್ಟವನ್ನು ಹೆಚ್ಚಿಸಲು ನಾವು ಬದ್ಧರಾಗಿದ್ದೇವೆ.
The long-pending promotion process in the Revenue Department has been expedited, and 63 Tahsildar Grade-I officers have been promoted to the Junior Scale cadre of the Karnataka Administrative Service (KAS).
Recognising the service, experience and efficiency of officers while strengthening the administrative system remains a priority for our Government. By streamlining the promotion process, we are committed to encouraging professional growth and improving the quality of public service. -
Dr. G Parameshwara
@DrParameshwara
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ, ದೇವನಹಳ್ಳಿ, ದೊಡ್ಡಬಳ್ಳಾಪುರ ಹಾಗೂ ನೆಲಮಂಗಲ ತಾಲ್ಲೂಕುಗಳು ಬರಪೀಡಿತವಾಗಿರುವ ಹಿನ್ನೆಲೆಯಲ್ಲಿ, ಬರ ನಿರ್ವಹಣೆಗೆ ಸರ್ಕಾರ ಅಗತ್ಯ ಕ್ರಮಗಳನ್ನು ಕೈಗೊಂಡಿದೆ.
ಜಿಲ್ಲಾಧಿಕಾರಿಗಳ ವಿಪತ್ತು ನಿರ್ವಹಣೆಯ ಪಿ.ಡಿ. ಖಾತೆಯಲ್ಲಿ ₹9 ಕೋಟಿ ಅನುದಾನ ಲಭ್ಯವಿದ್ದು, ಎಸ್ಡಿಆರ್ಎಫ್ ಅನುದಾನದಡಿ ಕುಡಿಯುವ ನೀರಿನ ಪೂರೈಕೆ ಹಾಗೂ ತುರ್ತು ಪರಿಹಾರ ಕಾರ್ಯಗಳಿಗೆ ಆದ್ಯತೆ ನೀಡಲು ಸೂಚಿಸಲಾಗಿದೆ.
ಬರ ಪರಿಸ್ಥಿತಿಯಲ್ಲಿ ಜನರು ಹಾಗೂ ರೈತರು ಸಂಕಷ್ಟಕ್ಕೆ ಸಿಲುಕದಂತೆ ಅಗತ್ಯ ನೆರವು ಒದಗಿಸಲು ಸರ್ಕಾರ ಬದ್ಧವಾಗಿದೆ. ಲಭ್ಯವಿರುವ ಅನುದಾನವನ್ನು ಸಮರ್ಪಕವಾಗಿ ಬಳಸಿಕೊಂಡು, ಜನರ ಅಗತ್ಯಗಳಿಗೆ ತ್ವರಿತವಾಗಿ ಸ್ಪಂದಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ.
With Hoskote, Devanahalli, Doddaballapur and Nelamangala taluks in Bengaluru Rural district declared drought-affected, the Government has initiated necessary drought-management measures.
₹9 crore is available in the Deputy Commissioner’s Disaster Management PD account, with directions to prioritise drinking water supply and emergency relief works under SDRF norms.
Officials have been instructed to utilise the available funds effectively and respond swiftly to people’s needs. Our Government remains committed to ensuring that farmers and the public receive timely support during the drought. -
Dr. G Parameshwara
@DrParameshwara
ರಾಜ್ಯ ಅಭಿವೃದ್ಧಿಯಾಗಬೇಕಾದರೆ ಪ್ರತಿ ಹಳ್ಳಿ, ಪ್ರತಿ ಗ್ರಾಮವೂ ಪ್ರಗತಿ ಕಾಣಬೇಕು. ಈ ನಿಟ್ಟಿನಲ್ಲಿ ನನ್ನೂರು, ನನ್ನ ಗ್ರಾಮ, ನನ್ನ ಜಿಲ್ಲೆ, ನನ್ನ ರಾಜ್ಯದ ಸಮಗ್ರ ಬದಲಾವಣೆಯ ಚಿತ್ರಣವನ್ನು ಮುಂದಿಟ್ಟುಕೊಂಡು ಕೆಲಸ ಮಾಡುತ್ತಿದ್ದೇನೆ.
ಇಂದು ನಾನು ಪ್ರತಿನಿಧಿಸುತ್ತಿರುವ ಕೊರಟಗೆರೆ ವಿಧಾನಸಭಾ ಕ್ಷೇತ್ರ ಮೂಲಸೌಕರ್ಯ, ಶಿಕ್ಷಣ, ಕ್ರೀಡೆ, ಆರೋಗ್ಯ, ಶುಚಿತ್ವ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲೂ ಮುಂಚೂಣಿಯಲ್ಲಿರುವುದು ನೋಡುವಾಗ ಖುಷಿಯಾಗುತ್ತದೆ. ಕೊರಟಗೆರೆ ಪುಟ್ಟ ಊರು. ಆದರೆ ಇಲ್ಲಾಗುತ್ತಿರುವ ಅಭಿವೃದ್ಧಿಗಳು ಬಹು ದೊಡ್ಡವು. ಅದು ಎಷ್ಟರಮಟ್ಟಿಗೆ ಎಂಬುದು ನನ್ನೂರಿನ ಜನರ ಮೊಗದಲ್ಲಿ ಮೂಡುತ್ತಿರುವ ಮಂದಹಾಸವೇ ಸಾಬೀತುಪಡಿಸುತ್ತಿದೆ.
ನನ್ನನ್ನು ಹರಸಿ - ಹಾರೈಸಿದ ನನ್ನೂರಿನ ಜನ ನಾನು ಮಾಡಿದ ಕೆಲಸಕ್ಕೆ ಪ್ರಶಂಸೆಯ ಮಹಾಪೂರಣವನ್ನೇ ಅರ್ಪಿಸುತ್ತಿರುವುದನ್ನು ನೋಡುವಾಗ ನಿಜಕ್ಕೂ ನನ್ನ ಸಾರ್ವಜನಿಕ ಜೀವನ ಸಾರ್ಥಕ ಎನಿಸುತ್ತದೆ.
ನಾನು ನಿಮ್ಮವನು, ನಿಮ್ಮ ಮನೆಮಗ. ನಿಮಗೆ ನೆಮ್ಮದಿ, ಸಂತೋಷದ ಜೀವನವನ್ನು ಕಲ್ಪಿಸಿಕೊಡುವುದು ನನ್ನ ಜವಾಬ್ದಾರಿ ಮತ್ತು ಕರ್ತವ್ಯ. ಅದಕ್ಕಾಗಿಯೇ ನನ್ನ ರಾಜಕೀಯ ಜೀವನ ಮೀಸಲು.This media couldn't be displayed. See it on the original post. -
Dr. G Parameshwara
@DrParameshwara
ದೇವನಹಳ್ಳಿ ತಹಶೀಲ್ದಾರ್ ಕಚೇರಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಸರ್ಕಾರಿ ಭೂಮಿಗಳ ಒತ್ತುವರಿ ಹಾಗೂ ಭೂದಾಖಲೆಗಳ ನಿರ್ವಹಣೆ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಿ, ಅಗತ್ಯ ನಿರ್ದೇಶನಗಳನ್ನು ನೀಡಿದೆ.
ಸರ್ಕಾರಿ ಗೋಮಾಳ ಭೂಮಿಯನ್ನು ಒತ್ತುವರಿ ಮಾಡಿಕೊಂಡಿರುವವರು ಎಷ್ಟೇ ಪ್ರಭಾವಿಗಳಾಗಿದ್ದರೂ, ಅವರ ವಿರುದ್ಧ ಕಾನೂನುಬದ್ಧ ಕ್ರಮ ಕೈಗೊಳ್ಳಬೇಕು. ನಕಲಿ ಭೂದಾಖಲೆಗಳ ಸೃಷ್ಟಿ ಹಾಗೂ ಅಕ್ರಮ ಖಾತೆ ಬದಲಾವಣೆ ಪ್ರಕರಣಗಳು ಕಂಡುಬಂದಲ್ಲಿ ಯಾವುದೇ ಮುಲಾಜಿಲ್ಲದೆ ಕಠಿಣ ಕ್ರಮ ಜರುಗಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದೆ.
ಸರ್ಕಾರಿ ಭೂಮಿಯನ್ನು ಸಂರಕ್ಷಿಸುವುದು, ಅಕ್ರಮಗಳಿಗೆ ಕಡಿವಾಣ ಹಾಕುವುದು ಹಾಗೂ ಸಾರ್ವಜನಿಕ ಆಸ್ತಿಯನ್ನು ದುರುಪಯೋಗವಾಗದಂತೆ ಕಾಪಾಡುವುದು ನಮ್ಮ ಜವಾಬ್ದಾರಿಯಾಗಿದೆ. ಈ ನಿಟ್ಟಿನಲ್ಲಿ ಪಾರದರ್ಶಕ ಆಡಳಿತಕ್ಕೆ ಆದ್ಯತೆ ನೀಡಿ, ತಪ್ಪಿತಸ್ಥರ ವಿರುದ್ಧ ಕಾನೂನುಬದ್ಧ ಕ್ರಮ ಕೈಗೊಳ್ಳಲು ನಮ್ಮ ಸರ್ಕಾರ ಬದ್ಧವಾಗಿದೆ.
During my visit to the Devanahalli Tahsildar Office, I reviewed issues relating to encroachment of Government land and maintenance of land records, and issued necessary directions to officials.
I have made it clear that legal action must be taken against anyone who has encroached upon Government gomal land, regardless of how influential they may be. Officials have also been directed to take strict action, without exception, wherever fake land records or illegal khata transfers are detected.
Protecting Government land, preventing irregularities and safeguarding public assets from misuse are our responsibilities. Our Government will protect public land, prevent illegal practices and ensure strict action against those responsible. -
Dr. G Parameshwara
@DrParameshwara
ಶುಕ್ರವಾರ ದೇವನಹಳ್ಳಿ ತಹಶೀಲ್ದಾರ್ ಕಚೇರಿಗೆ ದಿಢೀರ್ ಭೇಟಿ ನೀಡಿ, ವಿವಿಧ ವಿಭಾಗಗಳ ಕಾರ್ಯನಿರ್ವಹಣೆ, ಅರ್ಜಿಗಳ ವಿಲೇವಾರಿ, ಕಂದಾಯ ದಾಖಲೆಗಳ ನಿರ್ವಹಣೆ ಹಾಗೂ ಸಾರ್ವಜನಿಕರಿಗೆ ಒದಗಿಸುತ್ತಿರುವ ಸೇವೆಗಳನ್ನು ಪರಿಶೀಲಿಸಿದೆ.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಸಾರ್ವಜನಿಕರ ಕೆಲಸಗಳು ತಾಲೂಕು ಕಚೇರಿಗಳಲ್ಲಿ ಯಾವುದೇ ವಿಳಂಬವಿಲ್ಲದೆ ನಡೆಯಬೇಕು. ಕಂದಾಯ ದಾಖಲೆಗಳ ನಿರ್ವಹಣೆ, ಭೂಮಿಗೆ ಸಂಬಂಧಿಸಿದ ಅರ್ಜಿಗಳ ವಿಲೇವಾರಿ ಹಾಗೂ ಸಾರ್ವಜನಿಕ ಸೇವೆಗಳಲ್ಲಿ ಅಧಿಕಾರಿಗಳು ನಿರ್ಲಕ್ಷ್ಯ ವಹಿಸುವುದನ್ನು ಸಹಿಸುವುದಿಲ್ಲ. ಸಾಮಾನ್ಯ ಜನರಿಗೆ ಸರಳ ಮತ್ತು ಸುಗಮ ಆಡಳಿತ ಒದಗಿಸುವುದು ಸರ್ಕಾರದ ಉದ್ದೇಶವಾಗಿದ್ದು, ಕರ್ತವ್ಯಲೋಪ ಎಸಗುವ ಅಧಿಕಾರಿಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದೆ.
ಈ ಕುರಿತಾದ ಪತ್ರಿಕಾ ವರದಿಗಳು ಹೀಗಿವೆ..
On Friday, I made a surprise visit to the Devanahalli Tahsildar Office and reviewed the functioning of various sections, disposal of applications, maintenance of revenue records and the services being provided to the public.
Later, speaking to the media, I made it clear that people’s work at taluk offices must be completed without delay. Negligence in maintaining revenue records, disposing of land-related applications or delivering public services will not be tolerated.
Our Government’s objective is to provide simple and accessible administration to the public, and strict action will be taken against officials found guilty of dereliction of duty.
Here are the media reports on the visit. -
Dr. G Parameshwara
@DrParameshwara
ಕನ್ನಡ ಸಾಹಿತ್ಯ ಲೋಕದ ದಿಗ್ಗಜ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ. ಶಿವರಾಮ ಕಾರಂತ ಅವರ ಜನ್ಮದಿನದಂದು ಗೌರವ ನಮನಗಳನ್ನು ಸಲ್ಲಿಸುತ್ತೇನೆ.
ಸಾಹಿತ್ಯ, ಕಲೆ, ರಂಗಭೂಮಿ ಮತ್ತು ಯಕ್ಷಗಾನ ಕ್ಷೇತ್ರಗಳಿಗೆ ಅಮೂಲ್ಯ ಕೊಡುಗೆ ನೀಡಿದ ಶ್ರೀಯುತರ ಬಹುಮುಖ ಪ್ರತಿಭೆ ಕನ್ನಡ ನಾಡಿನ ಹೆಮ್ಮೆ. ಅವರ ಸಾಹಿತ್ಯಿಕ ಚಿಂತನೆಗಳು ಹಾಗೂ ಸಾಂಸ್ಕೃತಿಕ ಸೇವೆ ಸದಾ ಸ್ಮರಣೀಯ. -
Dr. G Parameshwara
@DrParameshwara
ನನ್ನ ಮತ ಕ್ಷೇತ್ರದ ಹೊಳವನಹಳ್ಳಿಯ ಕಾಂಗ್ರೆಸ್ ಮುಖಂಡರಾದ ಉಮೇಶ್ ಕುಮಾರ್ (ಗೋಟು) ಅವರ ನಿಧನದ ಸುದ್ದಿ ತಿಳಿದು ದುಃಖವಾಯಿತು.
ಸಾಮಾಜಿಕ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದ ಅವರ ಅಗಲಿಕೆ ನೋವು ತಂದಿದೆ. ಭಗವಂತನು ಮೃತರ ಆತ್ಮಕ್ಕೆ ಚಿರಶಾಂತಿ ಕರುಣಿಸಲಿ. ಅವರ ಕುಟುಂಬ ವರ್ಗಕ್ಕೆ, ಬಂಧುಗಳಿಗೆ ಈ ದುಃಖವನ್ನು ಭರಿಸುವ ಶಕ್ತಿಯನ್ನು ನೀಡಲಿ ಎಂದು ಪ್ರಾರ್ಥಿಸುತ್ತೇನೆ. -
Dr. G Parameshwara
@DrParameshwara
We have expedited the long-pending promotion process in the Revenue Department and promoted 63 officers from the Tahsildar Grade-I cadre to the Junior Scale cadre of the Karnataka Administrative Service (KAS). Through this decision, we have responded to the long-standing demand of these officers and accorded due recognition to their service and experience.
The experience and efficiency of officers are crucial in discharging responsibilities related to land records, revenue services, and addressing public grievances. I expect the promoted officers to utilise their enhanced responsibilities to strengthen people-centric governance and provide the public with more transparent, effective, and timely services.
When officers who discharge their duties with honesty, dedication, and efficiency receive due recognition, it serves as an inspiration to others. I hope this decision motivates more officers to earn the trust of the people and make public service the foremost objective of their duties.
I extend my heartfelt gratitude to everyone who contributed to making this important decision a reality.
Our government, which is committed to people-centric governance, continues to work towards strengthening the administrative system while duly recognising the service and contributions of its officers. I firmly believe that efficient, responsive, and citizen-friendly governance can be achieved only when the professional growth of officers and the goal of delivering better public services go hand in hand.
Guided by this belief, we have recognised and encouraged officers and employees at all levels of our department by granting them promotions. We have now also extended promotions to those officers whose promotions had remained pending.
I hope that the promoted officers will address people's grievances with even greater dedication and commitment, ensure the efficient delivery of government programmes to the public, and work towards fulfilling the ideals enshrined in our Constitution. -
Dr. G Parameshwara
@DrParameshwara
ಕಂದಾಯ ಇಲಾಖೆಯಲ್ಲಿ ಬಹುಕಾಲದಿಂದ ಬಾಕಿ ಉಳಿದಿದ್ದ ಬಡ್ತಿ ಪ್ರಕ್ರಿಯೆಗೆ ವೇಗ ನೀಡಿ, ತಹಶೀಲ್ದಾರ್ ಗ್ರೇಡ್-1 ವೃಂದದ 63 ಅಧಿಕಾರಿಗಳಿಗೆ ಕರ್ನಾಟಕ ಆಡಳಿತ ಸೇವೆಯ (KAS) ಕಿರಿಯ ಶ್ರೇಣಿ ವೃಂದಕ್ಕೆ ಪದೋನ್ನತಿ ನೀದಿದ್ದೇವೆ. ಈ ಮೂಲಕ ಅಧಿಕಾರಿಗಳ ಬಹುಕಾಲದ ಬೇಡಿಕೆಗೆ ಸ್ಪಂದಿಸಿ, ಅವರ ಸೇವೆ ಮತ್ತು ಅನುಭವಕ್ಕೆ ಸೂಕ್ತ ಮನ್ನಣೆ ನೀಡಿದ್ದೇವೆ.
ಭೂ ದಾಖಲೆಗಳು, ಕಂದಾಯ ಸೇವೆಗಳು ಹಾಗೂ ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸುವಂತಹ ಜವಾಬ್ದಾರಿಗಳ ನಿರ್ವಹಣೆಯಲ್ಲಿ ಅಧಿಕಾರಿಗಳ ಅನುಭವ ಮತ್ತು ದಕ್ಷತೆ ಮಹತ್ವದ್ದು. ಬಡ್ತಿಯೊಂದಿಗೆ ದೊರೆಯುವ ಹೆಚ್ಚಿನ ಜವಾಬ್ದಾರಿಯನ್ನು ಅಧಿಕಾರಿಗಳು ಜನಪರ ಆಡಳಿತಕ್ಕೆ ಪೂರಕವಾಗಿ ಬಳಸಿಕೊಂಡು, ಸಾರ್ವಜನಿಕರಿಗೆ ಮತ್ತಷ್ಟು ಪಾರದರ್ಶಕ, ಪರಿಣಾಮಕಾರಿ ಮತ್ತು ಸಕಾಲಿಕ ಸೇವೆ ಒದಗಿಸಲಿದ್ದಾರೆ ಎಂಬ ನಿರೀಕ್ಷೆ ನನ್ನದು.
ಪ್ರಾಮಾಣಿಕತೆ, ಬದ್ಧತೆ ಮತ್ತು ದಕ್ಷತೆಯಿಂದ ಕಾರ್ಯನಿರ್ವಹಿಸುವ ಅಧಿಕಾರಿಗಳಿಗೆ ಸೂಕ್ತ ಮನ್ನಣೆ ದೊರೆತಾಗ, ಅದು ಇತರ ಅಧಿಕಾರಿಗಳಿಗೂ ಪ್ರೇರಣೆಯಾಗುತ್ತದೆ. ಇದೇ ಸ್ಫೂರ್ತಿಯೊಂದಿಗೆ ಇನ್ನಷ್ಟು ಅಧಿಕಾರಿಗಳು ಜನರ ವಿಶ್ವಾಸಕ್ಕೆ ಪಾತ್ರರಾಗುವಂತೆ ಹಾಗೂ ಜನಸೇವೆಯನ್ನು ತಮ್ಮ ಕರ್ತವ್ಯದ ಪ್ರಮುಖ ಧ್ಯೇಯವನ್ನಾಗಿಸಿಕೊಳ್ಳುವಂತೆ ಈ ನಿರ್ಧಾರ ಪ್ರೇರೇಪಿಸಲಿ.
ಈ ಮಹತ್ವದ ನಿರ್ಧಾರ ಸಾಕಾರಗೊಳ್ಳಲು ಸಹಕಾರ ನೀಡಿದ ಎಲ್ಲರಿಗೂ ನನ್ನ ಹೃತ್ಪೂರ್ವಕ ಧನ್ಯವಾದಗಳು.
ಜನಪರ ಆಡಳಿತಕ್ಕೆ ಬದ್ಧವಾಗಿರುವ ನಮ್ಮ ಸರ್ಕಾರವು ಅಧಿಕಾರಿಗಳ ಸೇವೆ ಮತ್ತು ಕೊಡುಗೆಗೆ ಸೂಕ್ತ ಗೌರವ ನೀಡುವುದರೊಂದಿಗೆ, ಆಡಳಿತ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದೆ. ಅಧಿಕಾರಿಗಳ ವೃತ್ತಿಪರ ಬೆಳವಣಿಗೆ ಹಾಗೂ ಜನರಿಗೆ ಉತ್ತಮ ಸೇವೆ ಒದಗಿಸುವ ಗುರಿ, ಇವೆರಡೂ ಜೊತೆಯಾಗಿ ಸಾಗಿದಾಗ ಮಾತ್ರ ಸಮರ್ಥ, ಸ್ಪಂದನಾಶೀಲ ಮತ್ತು ಜನಸ್ನೇಹಿ ಆಡಳಿತವನ್ನು ಕಟ್ಟಲು ಸಾಧ್ಯ ಎಂಬುದು ನನ್ನ ನಂಬಿಕೆ.
ಈ ನಂಬಿಕೆಯೊಂದಿಗೆ ನಾವು ನಮ್ಮ ಇಲಾಖೆಯ ಎಲ್ಲ ಹಂತದ ಅಧಿಕಾರಿ, ನೌಕರರಿಗೆ ಪದೋನ್ನತಿಯನ್ನು ನೀಡಿ ಬೆನ್ನು ತಟ್ಟಿದ್ದೇವೆ. ಬಾಕಿ ಉಳಿದಿದ್ದ ಅಧಿಕಾರಿಗಳಿಗೂ ಈಗ ಪದೋನ್ನತಿ ನೀಡಿದ್ದೇವೆ.
ಪದೋನ್ನತಿ ಪಡೆದ ಅಧಿಕಾರಿಗಳು ಜನರ ಸಮಸ್ಯೆಗಳನ್ನು ಇನ್ನಷ್ಟು ಶ್ರದ್ಧೆ, ಬದ್ಧತೆಗಳಿಂದ ಪರಿಹರಿಸಲಿ, ಸರ್ಕಾರದ ಕಾರ್ಯಕ್ರಮಗಳನ್ನು ದಕ್ಷತೆಯಿಂದ ಜನರಿಗೆ ಮುಟ್ಟಿಸಲಿ. ಸಂವಿಧಾನದ ಆಶಯಗಳನ್ನು ಈಡೇರಿಸಲಿ ಎಂದು ಆಶಿಸುತ್ತೇನೆ. -
Dr. G Parameshwara
@DrParameshwara
ಇಂದು ದೇವನಹಳ್ಳಿ ತಹಶೀಲ್ದಾರ್ ಕಚೇರಿಗೆ ಭೇಟಿ ನೀಡಿ, ವಿವಿಧ ವಿಭಾಗಗಳ ಕಾರ್ಯನಿರ್ವಹಣೆ, ಸಾರ್ವಜನಿಕರ ಅರ್ಜಿಗಳ ವಿಲೇವಾರಿ, ಕಂದಾಯ ದಾಖಲೆಗಳ ನಿರ್ವಹಣೆ ಹಾಗೂ ಜನರಿಗೆ ಒದಗಿಸುತ್ತಿರುವ ಸೇವೆಗಳನ್ನು ಪರಿಶೀಲಿಸಿದೆ.
ಬೆಂಗಳೂರು ನಗರದ ಗಡಿಯಿಂದ 18 ಕಿ.ಮೀ. ವ್ಯಾಪ್ತಿಯಲ್ಲಿ ಭೂ ಮಂಜೂರಾತಿ ನಿಷೇಧ ನಿಯಮ ಜಾರಿಗೆ ಬರುವುದಕ್ಕೂ ಮುನ್ನ ಸಲ್ಲಿಕೆಯಾಗಿರುವ ಬಗರ್ ಹುಕುಂ ಅರ್ಜಿಗಳ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಿ ಮಾಹಿತಿ ಪಡೆಯಲಾಗಿದೆ. ಈ ಅರ್ಜಿಗಳನ್ನು ಪರಿಗಣಿಸುವ ಕುರಿತು ಸಮಗ್ರವಾಗಿ ಚರ್ಚಿಸಿ, ನಿಯಮಗಳು ಹಾಗೂ ಅರ್ಹತೆಯ ಮಾನದಂಡಗಳ ಆಧಾರದಲ್ಲಿ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು.
ಸಾರ್ವಜನಿಕರ ಅರ್ಜಿಗಳನ್ನು ನಿಯಮಾನುಸಾರ ಪರಿಶೀಲಿಸಿ, ಜನರ ಸಮಸ್ಯೆಗಳಿಗೆ ಸ್ಪಂದಿಸುವುದು ಹಾಗೂ ಕಂದಾಯ ಇಲಾಖೆಯ ಸೇವೆಗಳನ್ನು ಜನಸ್ನೇಹಿಯಾಗಿ ಒದಗಿಸುವುದು ನಮ್ಮ ಆದ್ಯತೆಯಾಗಿದೆ.
Today, I visited the Devanahalli Tahsildar Office and reviewed the functioning of various sections, disposal of public applications, maintenance of revenue records and the services being provided to citizens.
I also discussed with officials the Bagair Hukum applications submitted before the ban on land grants within 18 km of Bengaluru city limits came into force. A considered decision will be taken after examining the applicable rules and eligibility criteria.
Our priority is to ensure that public applications are examined as per rules, grievances are addressed promptly, and Revenue Department services are delivered in a simple and people-friendly manner. -
Dr. G Parameshwara
@DrParameshwara
ಜನರ ಸಮಸ್ಯೆಗಳಿಗೆ ತ್ವರಿತವಾಗಿ ಸ್ಪಂದಿಸಿ, ಸರ್ಕಾರಿ ಸೇವೆಗಳನ್ನು ಜನಸಾಮಾನ್ಯರಿಗೆ ಸುಲಭವಾಗಿ ತಲುಪಿಸುವುದು ನಮ್ಮ ಸರ್ಕಾರದ ಆದ್ಯತೆಯಾಗಿದೆ. ಪ್ರಜಾಸೇವಾ ಇಲಾಖೆಯ ಮೂಲಕ ದೇವನಹಳ್ಳಿ ತಾಲ್ಲೂಕಿನ ಜನರಿಂದ 300ಕ್ಕೂ ಹೆಚ್ಚು ಅರ್ಜಿಗಳನ್ನು ಸ್ವೀಕರಿಸಲಾಗಿದ್ದು, ಅವುಗಳಲ್ಲಿ ಶೇ.60ರಿಂದ 70ರಷ್ಟು ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದೆ.
ಸಾರ್ವಜನಿಕರ ಕುಂದುಕೊರತೆಗಳಿಗೆ ಸ್ಪಂದಿಸಿ, ಬಾಕಿ ಇರುವ ಅರ್ಜಿಗಳನ್ನು ಕಾಲಮಿತಿಯೊಳಗೆ ವಿಲೇವಾರಿ ಮಾಡುವ ಮೂಲಕ ಜನರಿಗೆ ನ್ಯಾಯ ಒದಗಿಸುವುದು ನಮ್ಮ ಜವಾಬ್ದಾರಿಯಾಗಿದೆ. ಜನರ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವ ಜನಸ್ನೇಹಿ ಆಡಳಿತಕ್ಕೆ ನಮ್ಮ ಸರ್ಕಾರ ಬದ್ಧವಾಗಿದೆ.
Our Government’s priority is to respond quickly to people’s concerns and make public services easily accessible.
Through the Prajaseva Department, more than 300 applications have been received in Devanahalli taluk, of which 60–70% have already been disposed of.
We are committed to resolving pending applications within a reasonable timeframe and delivering responsive, people-friendly administration. -
Dr. G Parameshwara
@DrParameshwara
ಇಂದು ದೇವನಹಳ್ಳಿ ತಹಶೀಲ್ದಾರ್ ಕಚೇರಿಗೆ ದಿಢೀರ್ ಭೇಟಿ ನೀಡಿ, ವಿವಿಧ ವಿಭಾಗಗಳ ಕಾರ್ಯನಿರ್ವಹಣೆ, ಅರ್ಜಿಗಳ ವಿಲೇವಾರಿ, ಕಂದಾಯ ದಾಖಲೆಗಳ ನಿರ್ವಹಣೆ ಹಾಗೂ ಸಾರ್ವಜನಿಕರಿಗೆ ಒದಗಿಸುತ್ತಿರುವ ಸೇವೆಗಳನ್ನು ಪರಿಶೀಲಿಸಿದೆ.
ಸಾರ್ವಜನಿಕರು ತಮ್ಮ ಕೆಲಸಗಳಿಗಾಗಿ ತಾಲೂಕು ಕಚೇರಿಗೆ ಬಂದಾಗ ಯಾವ ರೀತಿಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ, ಅಧಿಕಾರಿಗಳು ಆ ಸಮಸ್ಯೆಗಳಿಗೆ ಹೇಗೆ ಸ್ಪಂದಿಸುತ್ತಿದ್ದಾರೆ ಹಾಗೂ ಅರ್ಜಿಗಳ ವಿಲೇವಾರಿ ಯಾವ ಹಂತದಲ್ಲಿದೆ ಎಂಬುದನ್ನು ಖುದ್ದಾಗಿ ತಿಳಿದುಕೊಳ್ಳುವ ಉದ್ದೇಶದಿಂದ ಅನಿರೀಕ್ಷಿತ ಭೇಟಿ ನೀಡಿದೆ.This media couldn't be displayed. See it on the original post. -
Dr. G Parameshwara
@DrParameshwara
ರಾಯಚೂರು ಮತ್ತು ಕೊಪ್ಪಳ ಜಿಲ್ಲೆಗಳ ಬರಪೀಡಿತ ಪ್ರದೇಶಗಳ ಪರಿಶೀಲನೆ ಸಂದರ್ಭದಲ್ಲಿ, ಬರದಿಂದಾಗಿ ಜನರು ಉದ್ಯೋಗ ಅರಸಿ ಗುಳೆ ಹೋಗುವುದನ್ನು ತಡೆಯಲು ವಿಬಿ ಜಿ ರಾಮ್ ಜಿ ಯೋಜನೆಯಡಿ ಸ್ಥಳೀಯವಾಗಿಯೇ ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಅಗತ್ಯಕ್ಕೆ ಒತ್ತು ನೀಡಿದೆ. ಈ ನಿಟ್ಟಿನಲ್ಲಿ ಕೊಪ್ಪಳ ಜಿಲ್ಲೆಯಲ್ಲಿ 12.69 ಲಕ್ಷ ಹಾಗೂ ರಾಯಚೂರು ಜಿಲ್ಲೆಯಲ್ಲಿ 19.54 ಲಕ್ಷ ಮಾನವ ದಿನಗಳ ಉದ್ಯೋಗ ಸೃಷ್ಟಿಸಲಾಗಿದೆ.
ಗ್ರಾಮೀಣ ಜನರಿಗೆ ತಮ್ಮ ಊರಿನಲ್ಲೇ ಉದ್ಯೋಗ ದೊರೆಯುವಂತೆ ಮಾಡುವ ಮೂಲಕ ಜೀವನೋಪಾಯಕ್ಕೆ ನೆರವಾಗುವುದು ಹಾಗೂ ಬರದ ಸಂಕಷ್ಟದಲ್ಲಿ ಕುಟುಂಬಗಳಿಗೆ ಆರ್ಥಿಕ ಆಸರೆಯಾಗುವುದು ಸರ್ಕಾರದ ಆದ್ಯತೆಯಾಗಿದೆ.
During my visit to drought-affected areas in Raichur and Koppal districts, I stressed the need to create local employment opportunities under the VB-G RAM G scheme to prevent people from migrating in search of work due to the drought.
So far, 12.69 lakh person-days of employment have been generated in Koppal district and 19.54 lakh person-days in Raichur district.
Providing rural families with employment within their own villages, supporting their livelihoods and ensuring financial security during the drought remain priorities for our Government. -
Dr. G Parameshwara
@DrParameshwara
ರಾಯಚೂರು ಮತ್ತು ಕೊಪ್ಪಳ ಜಿಲ್ಲೆಗಳ ಬರಪೀಡಿತ ತಾಲ್ಲೂಕುಗಳಿಗೆ ಭೇಟಿ ನೀಡಿ, ಬರ ಪರಿಸ್ಥಿತಿಯನ್ನು ಪರಿಶೀಲಿಸಿದೆ. ಈ ಸಂದರ್ಭದಲ್ಲಿ ರಾಯಚೂರು ಜಿಲ್ಲೆಯಲ್ಲಿ ಶೇ.49ರಷ್ಟು ಮಳೆ ಕೊರತೆಯಿಂದಾಗಿ 2.81 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿರುವುದು ಗಮನಕ್ಕೆ ಬಂದಿದೆ. ರೈತರಿಗೆ ಅಗತ್ಯ ಪರಿಹಾರ ಒದಗಿಸಲು ₹277 ಕೋಟಿ ಅನುದಾನದ ಅಗತ್ಯವಿದೆ.
ಬರದಿಂದ ಸಂಕಷ್ಟಕ್ಕೀಡಾಗಿರುವ ರೈತರ ಸಮಸ್ಯೆಗಳನ್ನು ಅರಿತು, ಬೆಳೆ ಹಾನಿಯ ವಾಸ್ತವಿಕ ಸ್ಥಿತಿಯನ್ನು ಪರಿಶೀಲಿಸಿ ಅಗತ್ಯ ಪರಿಹಾರ ಕ್ರಮಗಳನ್ನು ಕೈಗೊಳ್ಳುವುದು ಸರ್ಕಾರದ ಆದ್ಯತೆಯಾಗಿದೆ. ರೈತರ ಬದುಕಿಗೆ ಭದ್ರತೆ ಒದಗಿಸಿ, ಕೃಷಿ ಚಟುವಟಿಕೆಗಳಿಗೆ ಅಗತ್ಯ ಬೆಂಬಲ ನೀಡಲು ಸರ್ಕಾರ ಬದ್ಧವಾಗಿದೆ.
I visited drought-affected taluks in Raichur and Koppal districts and reviewed the ground situation.
In Raichur district, a 49% rainfall deficit has resulted in crop damage across 2.81 lakh hectares. An estimated ₹277 crore is required to provide necessary relief to affected farmers.
Understanding the problems faced by farmers, assessing the actual extent of crop damage and ensuring timely relief remain our Government’s priorities. We are committed to safeguarding farmers’ livelihoods and providing the support needed for agricultural activities. -
Dr. G Parameshwara
@DrParameshwara
ರಾಯಚೂರು ಮತ್ತು ಕೊಪ್ಪಳ ಜಿಲ್ಲೆಗಳ ಬರಪೀಡಿತ ತಾಲ್ಲೂಕುಗಳಿಗೆ ಭೇಟಿ ನೀಡಿ, ಬರ ಪರಿಸ್ಥಿತಿಯನ್ನು ಪರಿಶೀಲಿಸಿದೆ. ಈ ಸಂದರ್ಭದಲ್ಲಿ ಕೊಪ್ಪಳ ಜಿಲ್ಲೆಯಲ್ಲಿ ಶೇ.45ರಷ್ಟು ಮಳೆ ಕೊರತೆಯಿಂದಾಗಿ 3.02 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿರುವುದು ಗಮನಕ್ಕೆ ಬಂದಿದೆ. ಇದರಿಂದ ಅಂದಾಜು ₹2,174.55 ಕೋಟಿ ನಷ್ಟ ಉಂಟಾಗಿದ್ದು, ರೈತರಿಗೆ ಅಗತ್ಯ ಪರಿಹಾರ ಒದಗಿಸಲು ₹289.45 ಕೋಟಿ ಅನುದಾನದ ಅಗತ್ಯವಿದೆ.
ಬರದಿಂದ ಸಂಕಷ್ಟಕ್ಕೀಡಾಗಿರುವ ರೈತರ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸಿ, ಬೆಳೆ ಹಾನಿಯ ವಾಸ್ತವಿಕ ಸ್ಥಿತಿಗೆ ಅನುಗುಣವಾಗಿ ಅಗತ್ಯ ಪರಿಹಾರ ಕ್ರಮಗಳನ್ನು ಕೈಗೊಳ್ಳುವುದು ಸರ್ಕಾರದ ಆದ್ಯತೆಯಾಗಿದೆ. ರೈತರ ಬದುಕಿಗೆ ಭದ್ರತೆ ಒದಗಿಸಿ, ಕೃಷಿ ಚಟುವಟಿಕೆಗಳಿಗೆ ಅಗತ್ಯ ಬೆಂಬಲ ನೀಡಲು ನಮ್ಮ ಸರ್ಕಾರ ಬದ್ಧವಾಗಿದೆ.
I visited drought-affected taluks in Raichur and Koppal districts and reviewed the ground situation.
In Koppal district, a 45% rainfall deficit has resulted in crop damage across 3.02 lakh hectares, causing an estimated loss of ₹2,174.55 crore. An estimated ₹289.45 crore is required to provide necessary relief to affected farmers.
Our Government’s priority is to take necessary relief measures based on the actual extent of crop damage and address the difficulties faced by farmers. We remain committed to safeguarding farmers’ livelihoods and providing the support required for agricultural activities. -
Dr. G Parameshwara
@DrParameshwara
Today, I made a surprise visit to the Devanahalli Tahsildar Office to personally understand how public applications are being handled, whether people are receiving services on time, and how revenue records are being maintained.
I inspected all sections of the office and found certain deficiencies. In particular, negligence in the maintenance of records and data in the record room came to my notice, following which the concerned official has been suspended. Revenue records are directly connected to people’s property and legal rights, and even the loss or damage of a single original document can cause serious hardship. Officials have therefore been directed to ensure systematic preservation, safety and proper management of all records.
Several grievances relating to Bagair Hukum applications were also brought to my notice, particularly applications affected by the 18-km radius rule. The Government will examine how applications submitted before the rule came into force can be considered. Applications under Forms 52 and 53 and other pending cases will also be examined in accordance with law and relevant court directions. Officials have been instructed to expedite pending phodi and durasti works and ensure that people are not made to suffer unnecessarily because cases are pending before courts.
I also reviewed the Prajaseve programme in Devanahalli taluk. More than 300 applications have been received, of which around 60–70% have been disposed of. The remaining cases will be reviewed and taken to their logical conclusion. Whether it is phodi-durasti, Bagair Hukum, khata transfer or any other Revenue Department service, ordinary citizens should not be forced to make repeated visits to Government offices. There can be no preferential treatment for the influential while common people are made to wait.
At the same time, applications must be supported by genuine documents. Fake land records, impersonation, illegal khata transfers or misuse of records will not be tolerated. I have discussed these issues with the Deputy Commissioner, Assistant Commissioner and Tahsildar, and technology must be used more effectively to prevent such irregularities. Suspicious pending cases will be examined and action will be taken wherever violations are found.
Complaints have also been received regarding encroachment of Government gomal land, including by influential persons and builders. I have made it clear that anyone who has encroached upon Government land must face action as per law, regardless of their influence. Officials who facilitate such encroachments or illegally allow Government land to be alienated will also be held accountable. The issue of amendments relating to Sections 79A and 79B of the Land Reforms Act is presently under discussion within the Government.
I also inspected the Devanahalli Sub-Registrar Office, where inadequate space is affecting proper maintenance of records. The Deputy Commissioner has already identified land for a new building, and steps will be taken to begin construction at the earliest. In the new facility, priority must be given to the safe and systematic preservation of original property records.
On the drought situation, four taluks of Bengaluru Rural district - Hoskote, Devanahalli, Doddaballapur and Nelamangala - have been declared drought-affected. The district administration has been directed to prioritise drinking water, relief for farmers and other emergency works. The Government has already provided ₹1 crore to each Assembly constituency for drinking water, while districts have been provided ₹4–5 crore depending on requirement. In addition, ₹9 crore is currently available in the Bengaluru Rural Deputy Commissioner’s disaster-management PD account for relief works under SDRF norms. Additional funds will be provided if required.
The State Government has also decided to provide ₹2,500 each as the first instalment of input subsidy to around 50 lakh eligible farmers, involving a total outlay of ₹1,250 crore, without waiting for Central assistance. A detailed memorandum seeking drought relief under NDRF norms has already been submitted to the Union Government. We also intend to take an all-party delegation to Delhi to place Karnataka’s drought situation before the Union Home Minister, Agriculture Minister and the Prime Minister and seek the State’s rightful assistance.
Our objective is to ensure that people are not made to run from office to office for legitimate work. There should be no unnecessary delay, discrimination or irregularity in administration. Revenue records must remain secure, eligible people must receive Government benefits on time, and officials must remain accountable to the public.
Such surprise inspections will continue to assess whether Government services are actually reaching people as intended. Along with supporting farmers and the public affected by drought, our Government remains committed to transparent, simple and people-friendly administration. -
Dr. G Parameshwara
@DrParameshwara
ಇಂದು ದೇವನಹಳ್ಳಿ ತಹಶೀಲ್ದಾರ್ ಕಚೇರಿಗೆ ದಿಢೀರ್ ಭೇಟಿ ನೀಡಿ, ವಿವಿಧ ವಿಭಾಗಗಳ ಕಾರ್ಯನಿರ್ವಹಣೆ, ಸಾರ್ವಜನಿಕರ ಅರ್ಜಿಗಳ ವಿಲೇವಾರಿ, ಕಂದಾಯ ದಾಖಲೆಗಳ ನಿರ್ವಹಣೆ ಹಾಗೂ ಸಾರ್ವಜನಿಕರಿಗೆ ಒದಗಿಸುತ್ತಿರುವ ಸೇವೆಗಳನ್ನು ಪರಿಶೀಲಿಸಿ, ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದೆ.
ಸಾರ್ವಜನಿಕರ ಕೆಲಸಗಳು ತಾಲೂಕು ಕಚೇರಿಗಳಲ್ಲಿ ಯಾವುದೇ ವಿಳಂಬವಿಲ್ಲದೆ ನಡೆಯಬೇಕು. ಕಂದಾಯ ದಾಖಲೆಗಳ ನಿರ್ವಹಣೆ, ಭೂಮಿಗೆ ಸಂಬಂಧಿಸಿದ ಅರ್ಜಿಗಳ ವಿಲೇವಾರಿ ಹಾಗೂ ಸಾರ್ವಜನಿಕ ಸೇವೆಗಳಲ್ಲಿ ಅಧಿಕಾರಿಗಳು ನಿರ್ಲಕ್ಷ್ಯ ವಹಿಸುವುದನ್ನು ಸಹಿಸುವುದಿಲ್ಲ. ಸಾಮಾನ್ಯ ಜನರಿಗೆ ಸರಳ ಮತ್ತು ಸುಗಮ ಆಡಳಿತ ಒದಗಿಸುವುದು ಸರ್ಕಾರದ ಉದ್ದೇಶವಾಗಿದ್ದು, ಕರ್ತವ್ಯಲೋಪ ಎಸಗುವ ಅಧಿಕಾರಿಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು.
ಸಾರ್ವಜನಿಕರು ತಮ್ಮ ಕೆಲಸಗಳಿಗಾಗಿ ತಾಲೂಕು ಕಚೇರಿಗೆ ಬಂದಾಗ ಯಾವ ರೀತಿಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ, ಅಧಿಕಾರಿಗಳು ಆ ಸಮಸ್ಯೆಗಳಿಗೆ ಹೇಗೆ ಸ್ಪಂದಿಸುತ್ತಿದ್ದಾರೆ ಹಾಗೂ ಅರ್ಜಿಗಳ ವಿಲೇವಾರಿ ಯಾವ ಹಂತದಲ್ಲಿದೆ ಎಂಬುದನ್ನು ಖುದ್ದಾಗಿ ತಿಳಿದುಕೊಳ್ಳುವ ಉದ್ದೇಶದಿಂದ ಅನಿರೀಕ್ಷಿತ ಭೇಟಿ ನೀಡಿದ್ದೇನೆ.
ದೇವನಹಳ್ಳಿ ತಹಶೀಲ್ದಾರ್ ಕಚೇರಿಯ ಎಲ್ಲ ವಿಭಾಗಗಳಿಗೆ ಭೇಟಿ ನೀಡಿ ಕಾರ್ಯನಿರ್ವಹಣೆಯನ್ನು ಪರಿಶೀಲಿಸಿದ್ದೇನೆ. ಈ ವೇಳೆ ಕೆಲವು ನ್ಯೂನತೆಗಳು ಕಂಡುಬಂದಿದ್ದು, ಅವುಗಳನ್ನು ಸರಿಪಡಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದ್ದೇನೆ.
ವಿಶೇಷವಾಗಿ ದಾಖಲೆಗಳ ಕೊಠಡಿಯಲ್ಲಿ (ರೆಕಾರ್ಡ್ ರೂಮ್) ಕಂದಾಯ ದಾಖಲೆಗಳನ್ನು ಸಮರ್ಪಕವಾಗಿ ನಿರ್ವಹಿಸದಿರುವುದು ಹಾಗೂ ದತ್ತಾಂಶಗಳ ನಿರ್ವಹಣೆಯಲ್ಲಿ ನಿರ್ಲಕ್ಷ್ಯ ವಹಿಸಿರುವುದು ಗಮನಕ್ಕೆ ಬಂದಿದೆ. ಈ ಹಿನ್ನೆಲೆಯಲ್ಲಿ ಕರ್ತವ್ಯವನ್ನು ಸಮರ್ಪಕವಾಗಿ ನಿರ್ವಹಿಸದ ಸಂಬಂಧಪಟ್ಟ ಅಧಿಕಾರಿಯನ್ನು ಅಮಾನತುಗೊಳಿಸಲಾಗಿದೆ.
ಕಂದಾಯ ದಾಖಲೆಗಳು ಜನಸಾಮಾನ್ಯರ ಆಸ್ತಿ ಮತ್ತು ಹಕ್ಕುಗಳಿಗೆ ಸಂಬಂಧಿಸಿದ ಅತ್ಯಂತ ಮಹತ್ವದ ದಾಖಲೆಗಳಾಗಿವೆ. ಒಂದು ಮೂಲ ದಾಖಲೆ ಹಾಳಾದರೂ ಅದರಿಂದ ಸಂಬಂಧಪಟ್ಟ ಕುಟುಂಬಗಳಿಗೆ ತೀವ್ರ ತೊಂದರೆಯಾಗಬಹುದು. ಸ್ವಾತಂತ್ರ್ಯಪೂರ್ವ ಕಾಲದ ಮೂಲ ದಾಖಲೆಗಳೂ ಕಂದಾಯ ಇಲಾಖೆಯಲ್ಲಿದ್ದು, ಅವುಗಳನ್ನು ಅತ್ಯಂತ ಜಾಗರೂಕತೆಯಿಂದ ಸಂರಕ್ಷಿಸಬೇಕು.
ದಾಖಲೆಗಳ ಕೊಠಡಿಯಲ್ಲಿರುವ ಎಲ್ಲ ದಾಖಲೆಗಳನ್ನು ವ್ಯವಸ್ಥಿತವಾಗಿ ನಿರ್ವಹಿಸಬೇಕು. ಅವುಗಳ ಸುರಕ್ಷತೆ, ಸಂರಕ್ಷಣೆ ಹಾಗೂ ದತ್ತಾಂಶ ನಿರ್ವಹಣೆಗೆ ಹೆಚ್ಚಿನ ಆದ್ಯತೆ ನೀಡುವಂತೆ ತಹಶೀಲ್ದಾರ್ ಹಾಗೂ ಭೂದಾಖಲೆಗಳ ಇಲಾಖೆಯ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದೇನೆ.
*ಬಗರ್ ಹುಕುಂ ಅರ್ಜಿಗಳ ವಿಲೇವಾರಿ ಹಾಗೂ ಪೋಡಿ ದುರಸ್ತಿ ಕಾರ್ಯ ಚುರುಕುಗೊಳಿಸಲು ಕ್ರಮ*
ಬಗರ್ ಹುಕುಂ ಜಮೀನುಗಳಿಗೆ ಸಂಬಂಧಿಸಿದ ಅರ್ಜಿಗಳ ವಿಲೇವಾರಿಯಲ್ಲಿ ಉಂಟಾಗಿರುವ ಸಮಸ್ಯೆಗಳ ಕುರಿತು ಸಾರ್ವಜನಿಕರು ನನ್ನ ಗಮನಕ್ಕೆ ತಂದಿದ್ದಾರೆ. ವಿಶೇಷವಾಗಿ 18 ಕಿಲೋಮೀಟರ್ ವ್ಯಾಪ್ತಿಯ ನಿಯಮದಿಂದ ಕೆಲವು ಅರ್ಜಿಗಳು ತಿರಸ್ಕೃತವಾಗಿರುವುದು ಅಥವಾ ವಿಲೇವಾರಿಯಾಗದೆ ಉಳಿದಿರುವ ಕುರಿತು ಅಹವಾಲು ಸಲ್ಲಿಸಲಾಗಿದೆ.
18 ಕಿಲೋಮೀಟರ್ ವ್ಯಾಪ್ತಿಯ ನಿಯಮ ಜಾರಿಗೆ ಬರುವುದಕ್ಕೂ ಮುನ್ನ ಸಲ್ಲಿಕೆಯಾಗಿರುವ ಅರ್ಜಿಗಳನ್ನು ಪರಿಗಣಿಸುವ ಕುರಿತು ಸರ್ಕಾರದ ಮಟ್ಟದಲ್ಲಿ ಚರ್ಚಿಸಿ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು.
ಬಗರ್ ಹುಕುಂ ಜಮೀನುಗಳಿಗೆ ಸಂಬಂಧಿಸಿದ ನಮೂನೆ 52 ಮತ್ತು 53ರ ಅರ್ಜಿಗಳು ಸೇರಿದಂತೆ ನಿಯಮ ಜಾರಿಯಾದ ನಂತರ ಸಲ್ಲಿಕೆಯಾದ ಅರ್ಜಿಗಳನ್ನು ಪರಿಶೀಲಿಸಲಾಗುವುದು. ನ್ಯಾಯಾಲಯಗಳಿಂದ ಯಾವುದಾದರೂ ನಿರ್ದೇಶನಗಳು ಬಂದಿದ್ದರೆ ಅವುಗಳನ್ನು ಗಮನದಲ್ಲಿಟ್ಟುಕೊಂಡು ಕಾನೂನಿನ ಅನ್ವಯ ತೀರ್ಮಾನ ಕೈಗೊಳ್ಳಲಾಗುವುದು.
ಅದೇ ರೀತಿ ಪೋಡಿ ಹಾಗೂ ದುರಸ್ತಿ ಕಾರ್ಯಗಳಲ್ಲಿ ವಿಳಂಬವಾಗುತ್ತಿರುವುದು ಗಮನಕ್ಕೆ ಬಂದಿದೆ. ಬಾಕಿ ಇರುವ ಪೋಡಿ ದುರಸ್ತಿ ಪ್ರಕರಣಗಳನ್ನು ತ್ವರಿತವಾಗಿ ವಿಲೇವಾರಿ ಮಾಡುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ.
ನ್ಯಾಯಾಲಯಗಳಲ್ಲಿ ಬಾಕಿ ಇರುವ ಪ್ರಕರಣಗಳನ್ನು ಪ್ರತ್ಯೇಕವಾಗಿ ನಿರ್ವಹಿಸಬೇಕು. ನ್ಯಾಯಾಲಯದ ಆದೇಶಗಳು ಮತ್ತು ನಿರ್ದೇಶನಗಳಿಗೆ ಅನುಗುಣವಾಗಿ ಕ್ರಮ ಕೈಗೊಳ್ಳಬೇಕು. ಅಗತ್ಯವಿರುವ ಪ್ರಕರಣಗಳಲ್ಲಿ ಮೇಲ್ಮನವಿ ಸಲ್ಲಿಸುವ ಕುರಿತು ಸರ್ಕಾರದ ಗಮನಕ್ಕೆ ತಂದು ತೀರ್ಮಾನ ಕೈಗೊಳ್ಳಬಹುದು. ನ್ಯಾಯಾಲಯದ ಪ್ರಕರಣಗಳ ನೆಪದಲ್ಲಿ ಸಾರ್ವಜನಿಕರಿಗೆ ಅನಗತ್ಯ ತೊಂದರೆಯಾಗದಂತೆ ನೋಡಿಕೊಳ್ಳಲು ತಹಶೀಲ್ದಾರ್ ಹಾಗೂ ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ನೀಡಿದ್ದೇನೆ.
ಸರ್ಕಾರ ಸಾರ್ವಜನಿಕರ ಸಮಸ್ಯೆಗಳನ್ನು ಪರಿಹರಿಸುವ ಉದ್ದೇಶದಿಂದ ಪ್ರಜಾಸೇವೆ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಿದೆ. ಈ ಕಾರ್ಯಕ್ರಮದಡಿ ದೇವನಹಳ್ಳಿ ತಾಲೂಕಿನಲ್ಲಿ ಸ್ವೀಕರಿಸಿರುವ ಅರ್ಜಿಗಳು ಹಾಗೂ ಅವುಗಳ ವಿಲೇವಾರಿ ಸ್ಥಿತಿಯನ್ನೂ ಪರಿಶೀಲಿಸಿದ್ದೇನೆ.
ಪ್ರಜಾಸೇವೆ ಕಾರ್ಯಕ್ರಮದಡಿ 300ಕ್ಕೂ ಹೆಚ್ಚು ಅರ್ಜಿಗಳು ಸ್ವೀಕೃತವಾಗಿದ್ದು, ಅವುಗಳಲ್ಲಿ ಸುಮಾರು ಶೇ.60ರಿಂದ 70ರಷ್ಟು ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದೆ. ವಿಲೇವಾರಿಗೆ ಸಾಧ್ಯವಾಗದ ಕೆಲವು ಪ್ರಕರಣಗಳು ಬಾಕಿ ಉಳಿದಿವೆ. ಈ ಕುರಿತು ಸಂಪೂರ್ಣ ದಾಖಲೆಗಳನ್ನು ಪಡೆದು ಪರಿಶೀಲಿಸಿದ್ದೇನೆ.
ಸಾರ್ವಜನಿಕರು ಪೋಡಿ ದುರಸ್ತಿ, ಬಗರ್ ಹುಕುಂ, ಖಾತೆ ಬದಲಾವಣೆ ಅಥವಾ ಕಂದಾಯ ಇಲಾಖೆಗೆ ಸಂಬಂಧಿಸಿದ ಯಾವುದೇ ಕೆಲಸಕ್ಕಾಗಿ ಕಚೇರಿಗೆ ಬಂದಾಗ ಅವರ ಅರ್ಜಿಗಳನ್ನು ಸಮರ್ಪಕವಾಗಿ ಪರಿಶೀಲಿಸಿ ತ್ವರಿತವಾಗಿ ವಿಲೇವಾರಿ ಮಾಡಬೇಕು. ಪ್ರಭಾವಿಗಳು ಅಥವಾ ಆರ್ಥಿಕವಾಗಿ ಅನುಕೂಲಸ್ಥರ ಕೆಲಸಗಳನ್ನು ಆದ್ಯತೆಯ ಮೇರೆಗೆ ಮಾಡಿ, ಸಾಮಾನ್ಯ ಜನರ ಕೆಲಸಗಳನ್ನು ಅನಗತ್ಯವಾಗಿ ಅಲೆದಾಡಿಸುವ ಪ್ರವೃತ್ತಿಯನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ. ಇಂತಹ ತಾರತಮ್ಯ ಅಥವಾ ಕರ್ತವ್ಯಲೋಪ ಗಮನಕ್ಕೆ ಬಂದರೆ ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳಲಾಗುವುದು.
ಸಾರ್ವಜನಿಕರು ಕೂಡ ತಮ್ಮ ಕೆಲಸಗಳಿಗೆ ಸಂಬಂಧಿಸಿದಂತೆ ಸರಿಯಾದ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬೇಕು. ಅನಗತ್ಯ ಅರ್ಜಿಗಳು, ಮತ್ತೊಬ್ಬರ ಜಮೀನಿಗೆ ಸಂಬಂಧಿಸಿದಂತೆ ಅಕ್ರಮವಾಗಿ ಖಾತೆ ಬದಲಾವಣೆ ಮಾಡಿಸುವ ಪ್ರಯತ್ನ ಹಾಗೂ ಸುಳ್ಳು ದಾಖಲೆಗಳ ಆಧಾರದಲ್ಲಿ ಅರ್ಜಿ ಸಲ್ಲಿಸುವಂತಹ ಚಟುವಟಿಕೆಗಳಿಗೆ ಅವಕಾಶ ನೀಡುವುದಿಲ್ಲ.
ಪ್ರಸ್ತುತ ಅಥವಾ ಮುಂದಿನ ದಿನಗಳಲ್ಲಿ ನಕಲಿ ದಾಖಲೆಗಳ ಸೃಷ್ಟಿ, ಮತ್ತೊಬ್ಬರ ಹೆಸರಿನಲ್ಲಿ ವಂಚನೆ (Impersonation) ಅಥವಾ ಅಕ್ರಮ ಖಾತೆ ಬದಲಾವಣೆ ನಡೆಯುವುದನ್ನು ತಡೆಯಲು ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗುವುದು.
ಈ ಕುರಿತು ಜಿಲ್ಲಾಧಿಕಾರಿ, ಉಪವಿಭಾಗಾಧಿಕಾರಿ ಹಾಗೂ ತಹಶೀಲ್ದಾರ್ ಅವರೊಂದಿಗೆ ಚರ್ಚಿಸಲಾಗಿದೆ. ತಂತ್ರಜ್ಞಾನದ ಬಳಕೆಯಿಂದ ಇಂತಹ ಅಕ್ರಮಗಳನ್ನು ತಡೆಯಲು ಹೆಚ್ಚಿನ ಅವಕಾಶವಿದ್ದು, ಯಾವುದೇ ರೀತಿಯ ನಕಲಿ ದಾಖಲೆಗಳ ಸೃಷ್ಟಿಗೆ ಅವಕಾಶ ನೀಡಬಾರದು ಎಂದು ಸೂಚಿಸಲಾಗಿದೆ. ಬಾಕಿ ಇರುವ ಅನುಮಾನಾಸ್ಪದ ಪ್ರಕರಣಗಳನ್ನು ಪರಿಶೀಲಿಸಿ, ಅಕ್ರಮ ಕಂಡುಬಂದರೆ ಕ್ರಮ ಕೈಗೊಳ್ಳಲಾಗುವುದು.
ಬಿಲ್ಡರ್ಗಳು ಸೇರಿದಂತೆ ಪ್ರಭಾವಿ ವ್ಯಕ್ತಿಗಳು ಸರ್ಕಾರಿ ಗೋಮಾಳ ಜಮೀನುಗಳನ್ನು ಒತ್ತುವರಿ ಮಾಡಿಕೊಂಡಿರುವ ಕುರಿತು ದೂರುಗಳು ಕೇಳಿಬಂದಿವೆ. ಇಂತಹ ಸಮಸ್ಯೆಗಳು ಬೆಂಗಳೂರು ಸುತ್ತಮುತ್ತ ಮಾತ್ರವಲ್ಲದೆ ತುಮಕೂರು, ಮೈಸೂರು, ಬೆಳಗಾವಿ ಸೇರಿದಂತೆ ಬೆಳೆಯುತ್ತಿರುವ ನಗರ ಪ್ರದೇಶಗಳಲ್ಲಿಯೂ ಕಂಡುಬರುತ್ತಿವೆ.
ಸರ್ಕಾರಿ ಜಮೀನುಗಳನ್ನು ಒತ್ತುವರಿ ಮಾಡಿರುವವರು ಎಷ್ಟೇ ಪ್ರಭಾವಿಗಳಾಗಿದ್ದರೂ ನಿಯಮಾನುಸಾರ ತೆರವುಗೊಳಿಸಬೇಕು ಎಂದು ಈಗಾಗಲೇ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದೇನೆ.
ನಿರ್ದಿಷ್ಟ ಒತ್ತುವರಿ ಪ್ರಕರಣಗಳನ್ನು ಗಮನಕ್ಕೆ ತಂದರೆ ಅವುಗಳನ್ನು ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು. ಸರ್ಕಾರಿ ಜಮೀನನ್ನು ಅಕ್ರಮವಾಗಿ ಬಿಟ್ಟುಕೊಡುವುದು ಅಥವಾ ಒತ್ತುವರಿಗೆ ಸಹಕರಿಸುವ ಅಧಿಕಾರಿಗಳ ವಿರುದ್ಧವೂ ಕ್ರಮ ಜರುಗಿಸಲಾಗುವುದು.
ದೇವನಹಳ್ಳಿಯ ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ಸ್ಥಳಾವಕಾಶದ ಕೊರತೆ ಇರುವುದನ್ನು ಪರಿಶೀಲಿಸಲಾಗಿದೆ. ಪ್ರಸ್ತುತ ಕಚೇರಿ ಕಾರ್ಯನಿರ್ವಹಿಸುತ್ತಿರುವ ಕಟ್ಟಡದಲ್ಲಿ ಸ್ಥಳದ ಅಭಾವದಿಂದ ದಾಖಲೆಗಳನ್ನು ಸಮರ್ಪಕವಾಗಿ ನಿರ್ವಹಿಸಲು ತೊಂದರೆಯಾಗುತ್ತಿದೆ.
ಈ ಹಿನ್ನೆಲೆಯಲ್ಲಿ ಉಪ ನೋಂದಣಾಧಿಕಾರಿ ಕಚೇರಿಗೆ ಹೊಸ ಕಟ್ಟಡ ನಿರ್ಮಿಸಲು ಜಿಲ್ಲಾಧಿಕಾರಿಗಳು ಈಗಾಗಲೇ ಸೂಕ್ತ ಜಾಗ ಗುರುತಿಸಿದ್ದಾರೆ. ಹೊಸ ಕಟ್ಟಡ ನಿರ್ಮಾಣ ಕಾಮಗಾರಿಯನ್ನು ಆದಷ್ಟು ಶೀಘ್ರವಾಗಿ ಆರಂಭಿಸಲು ಕ್ರಮ ಕೈಗೊಳ್ಳಲಾಗುವುದು.
ಉಪ ನೋಂದಣಾಧಿಕಾರಿಯ ಕೊಠಡಿ ಅಥವಾ ಕಚೇರಿಯ ಇತರ ಸೌಲಭ್ಯಗಳಿಗಿಂತ ಸಾರ್ವಜನಿಕರ ಆಸ್ತಿ ಹಕ್ಕುಗಳಿಗೆ ಸಂಬಂಧಿಸಿದ ಮೂಲ ದಾಖಲೆಗಳ ಸುರಕ್ಷತೆ ಅತ್ಯಂತ ಮುಖ್ಯವಾಗಿದೆ. ಹೊಸ ಕಟ್ಟಡದಲ್ಲಿ ದಾಖಲೆಗಳನ್ನು ವ್ಯವಸ್ಥಿತವಾಗಿ ಸಂಗ್ರಹಿಸಿ ನಿರ್ವಹಿಸಲು ಅಗತ್ಯ ವ್ಯವಸ್ಥೆ ಕಲ್ಪಿಸಬೇಕು ಎಂದು ಸೂಚಿಸಲಾಗಿದೆ. ಕಂದಾಯ ಇಲಾಖೆ ಮತ್ತು ನೋಂದಣಿ ಇಲಾಖೆಯ ದಾಖಲೆಗಳ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಲಾಗುವುದು.
*ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನಾಲ್ಕು ತಾಲೂಕುಗಳು ಬರಪೀಡಿತ; ಕುಡಿಯುವ ನೀರಿಗೆ ಅಗತ್ಯ ಅನುದಾನ*
ರಾಜ್ಯದಲ್ಲಿ ತೀವ್ರ ಮಳೆ ಕೊರತೆ ಉಂಟಾಗಿದ್ದು, ರೈತರು ಸಂಕಷ್ಟದಲ್ಲಿದ್ದಾರೆ. ಒಟ್ಟಾರೆ ಮಳೆಯ ಪ್ರಮಾಣ ನಿರೀಕ್ಷಿತ ಮಟ್ಟಕ್ಕಿಂತ ಕಡಿಮೆಯಾಗಿದ್ದು, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ, ದೇವನಹಳ್ಳಿ, ದೊಡ್ಡಬಳ್ಳಾಪುರ ಹಾಗೂ ನೆಲಮಂಗಲ ತಾಲೂಕುಗಳನ್ನು ಈಗಾಗಲೇ ಬರಪೀಡಿತವೆಂದು ಘೋಷಿಸಲಾಗಿದೆ.
ಈ ನಾಲ್ಕೂ ತಾಲೂಕುಗಳು ಬರಪೀಡಿತವೆಂದು ಘೋಷಣೆಯಾಗಿರುವುದರಿಂದ ಸರ್ಕಾರದ ನಿಯಮಗಳ ಪ್ರಕಾರ ಬರ ಪರಿಹಾರ ಹಾಗೂ ಇತರ ನೆರವು ಪಡೆಯಲು ಅರ್ಹವಾಗಿವೆ. ಜನರಿಗೆ ಕುಡಿಯುವ ನೀರು, ರೈತರಿಗೆ ಅಗತ್ಯ ಪರಿಹಾರ ಮತ್ತು ತುರ್ತು ಕಾಮಗಾರಿಗಳನ್ನು ಕೈಗೊಳ್ಳಲು ಜಿಲ್ಲಾಡಳಿತ ಕ್ರಮವಹಿಸಬೇಕು.
ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಈಗಾಗಲೇ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ₹1 ಕೋಟಿ ಅನುದಾನ ಒದಗಿಸಿದೆ. ಜಿಲ್ಲೆಗಳಿಗೂ ಅಗತ್ಯಕ್ಕೆ ಅನುಗುಣವಾಗಿ ₹4ರಿಂದ ₹5 ಕೋಟಿ ಅನುದಾನ ನೀಡಲಾಗಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿಗಳ ವಿಪತ್ತು ನಿರ್ವಹಣೆಯ ಪಿ.ಡಿ. ಖಾತೆಯಲ್ಲಿ ಪ್ರಸ್ತುತ ₹9 ಕೋಟಿ ಅನುದಾನ ಲಭ್ಯವಿದೆ. ಈ ಅನುದಾನವನ್ನು ಬರಪೀಡಿತವೆಂದು ಘೋಷಿಸಿರುವ ನಾಲ್ಕು ತಾಲೂಕುಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆ, ಅಗತ್ಯ ಕಾಮಗಾರಿಗಳು ಹಾಗೂ ತುರ್ತು ಪರಿಹಾರ ಕಾರ್ಯಗಳಿಗೆ ಎಸ್ಡಿಆರ್ಎಫ್ ನಿಯಮಗಳ ಅನ್ವಯ ಬಳಸಿಕೊಳ್ಳಲು ಅವಕಾಶವಿದೆ. ಲಭ್ಯವಿರುವ ಹಣವನ್ನು ಸಮರ್ಪಕವಾಗಿ ಬಳಸಿಕೊಂಡು ಜನರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಬೇಕು. ಅಗತ್ಯವಿದ್ದರೆ ಸರ್ಕಾರದಿಂದ ಹೆಚ್ಚುವರಿ ಅನುದಾನ ಒದಗಿಸಲಾಗುವುದು.
ರಾಜ್ಯದ ವಿವಿಧ ಜಿಲ್ಲೆಗಳ ಬರಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ರೈತರ ಸಮಸ್ಯೆಗಳನ್ನು ಖುದ್ದಾಗಿ ಆಲಿಸಿದ್ದೇನೆ. ಮಳೆ ಕೊರತೆಯಿಂದ ಬೆಳೆ ನಷ್ಟವಾಗಿರುವುದರ ಜೊತೆಗೆ ಕುಡಿಯುವ ನೀರು ಹಾಗೂ ಕೂಲಿ ಕೆಲಸದ ಕೊರತೆಯಿಂದಲೂ ರೈತರು ಮತ್ತು ಕಾರ್ಮಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇಂತಹ ಸಂದರ್ಭದಲ್ಲಿ ಅವರ ನೆರವಿಗೆ ನಿಲ್ಲಲು ಸರ್ಕಾರ ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿದೆ.
*ಸಾರ್ವಜನಿಕರಿಗೆ ಸರಳ ಆಡಳಿತ ಒದಗಿಸುವುದು ಸರ್ಕಾರದ ಉದ್ದೇಶ; ಕರ್ತವ್ಯಲೋಪ ಎಸಗುವವರ ವಿರುದ್ಧ ಕ್ರಮ*
ಕಂದಾಯ ಇಲಾಖೆಯ ಕಚೇರಿಗಳಿಗೆ ಬರುವ ಜನರು ತಮ್ಮ ಕೆಲಸಗಳಿಗಾಗಿ ಪದೇಪದೇ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಬಾರದು. ಅರ್ಜಿಗಳನ್ನು ಸಮರ್ಪಕವಾಗಿ ಪರಿಶೀಲಿಸಿ, ನಿಯಮಾನುಸಾರ ವಿಲೇವಾರಿ ಮಾಡುವ ಮೂಲಕ ಸಾರ್ವಜನಿಕರಿಗೆ ಸಮಯಕ್ಕೆ ಸರಿಯಾಗಿ ಸೇವೆ ಒದಗಿಸುವುದು ನಮ್ಮ ಜವಾಬ್ದಾರಿ.
ತಾಲೂಕು ಕಚೇರಿಗಳಲ್ಲಿ ದಾಖಲೆಗಳ ನಿರ್ವಹಣೆ, ಬಗರ್ ಹುಕುಂ ಅರ್ಜಿಗಳ ವಿಲೇವಾರಿ, ಪೋಡಿ ದುರಸ್ತಿ, ಖಾತೆ ಬದಲಾವಣೆ, ನ್ಯಾಯಾಲಯದ ಪ್ರಕರಣಗಳು ಹಾಗೂ ಸಾರ್ವಜನಿಕರ ಇತರ ಅಹವಾಲುಗಳನ್ನು ಆದ್ಯತೆಯ ಮೇರೆಗೆ ಬಗೆಹರಿಸಬೇಕು. ಆಡಳಿತದಲ್ಲಿ ಯಾವುದೇ ರೀತಿಯ ತಾರತಮ್ಯ, ಅನಗತ್ಯ ವಿಳಂಬ ಅಥವಾ ಅಕ್ರಮಗಳಿಗೆ ಅವಕಾಶ ನೀಡಬಾರದು ಎಂದು ಅಧಿಕಾರಿಗಳಿಗೆ ಸೂಚಿಸಿದ್ದೇನೆ.
ಅಧಿಕಾರಿಗಳು ಸಾರ್ವಜನಿಕರ ಸಮಸ್ಯೆಗಳನ್ನು ಅರಿತು ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕು. ನಕಲಿ ದಾಖಲೆಗಳ ಸೃಷ್ಟಿ, ಸರ್ಕಾರಿ ಜಮೀನುಗಳ ಒತ್ತುವರಿ, ದಾಖಲೆಗಳ ದುರುಪಯೋಗ ಹಾಗೂ ಪ್ರಭಾವಿಗಳ ಪರವಾಗಿ ಕೆಲಸ ಮಾಡುವ ಪ್ರವೃತ್ತಿ ಕಂಡುಬಂದರೆ ಸಂಬಂಧಿಸಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು.
ಸಾರ್ವಜನಿಕರ ಕೆಲಸಗಳು ಸುಗಮವಾಗಿ ನಡೆಯುತ್ತಿವೆಯೇ ಎಂಬುದನ್ನು ಪರಿಶೀಲಿಸಲು ಮುಂದೆಯೂ ಇಂತಹ ಅನಿರೀಕ್ಷಿತ ಭೇಟಿಗಳ ಮೂಲಕ ಆಡಳಿತ ವ್ಯವಸ್ಥೆಯ ಕಾರ್ಯನಿರ್ವಹಣೆಯನ್ನು ಅವಲೋಕಿಸಲಾಗುವುದು. ಸರ್ಕಾರಿ ಸೇವೆಗಳು ಜನರಿಗೆ ಸಮರ್ಪಕವಾಗಿ ತಲುಪಲು ಸಾರ್ವಜನಿಕರ ಸಹಕಾರವೂ ಅಗತ್ಯವಾಗಿದೆ.
ಸಾರ್ವಜನಿಕರ ಕೆಲಸಗಳಿಗೆ ಅನಗತ್ಯ ವಿಳಂಬವಾಗಬಾರದು. ಕಂದಾಯ ಇಲಾಖೆಯ ದಾಖಲೆಗಳು ಸುರಕ್ಷಿತವಾಗಿರಬೇಕು. ಅರ್ಹ ಜನರಿಗೆ ಸರ್ಕಾರದ ಸೌಲಭ್ಯಗಳು ಸಕಾಲದಲ್ಲಿ ದೊರೆಯಬೇಕು. ಬರದಿಂದ ಸಂಕಷ್ಟದಲ್ಲಿರುವ ರೈತರು ಮತ್ತು ಜನಸಾಮಾನ್ಯರಿಗೆ ಅಗತ್ಯ ನೆರವು ಒದಗಿಸುವುದರ ಜೊತೆಗೆ ಪಾರದರ್ಶಕ, ಸರಳ ಹಾಗೂ ಜನಸ್ನೇಹಿ ಆಡಳಿತ ನೀಡಲು ಸರ್ಕಾರ ಬದ್ಧವಾಗಿದೆ. -
Dr. G Parameshwara
@DrParameshwara
ಬರ ಪರಿಸ್ಥಿತಿಯಲ್ಲಿ ರೈತರ ಬೆಳೆಗಳಿಗೆ ಆರ್ಥಿಕ ರಕ್ಷಣೆ ಒದಗಿಸುವ ನಿಟ್ಟಿನಲ್ಲಿ ಬೆಳೆ ವಿಮೆ ನೋಂದಣಿಗೆ ಆದ್ಯತೆ ನೀಡಲಾಗಿದೆ.
ಕೊಪ್ಪಳ ಜಿಲ್ಲೆಯ 1.56 ಲಕ್ಷ ರೈತರು ಮತ್ತು ರಾಯಚೂರು ಜಿಲ್ಲೆಯ 1.32 ಲಕ್ಷ ರೈತರು ಬೆಳೆ ವಿಮೆಗೆ ನೋಂದಾಯಿಸಿಕೊಂಡಿದ್ದು, ಸಂಕಷ್ಟದ ಸಂದರ್ಭದಲ್ಲಿ ರೈತರಿಗೆ ನೆರವಾಗಲು ಸರ್ಕಾರ ಬದ್ಧವಾಗಿದೆ.
ರೈತರ ಶ್ರಮಕ್ಕೆ ರಕ್ಷಣೆ, ಕೃಷಿಗೆ ಭದ್ರತೆ ಒದಗಿಸುವುದು ನಮ್ಮ ಸರ್ಕಾರದ ಸಂಕಲ್ಪ.
Priority has been given to crop insurance enrolment to provide financial protection to farmers against crop losses during the drought.
1.56 lakh farmers in Koppal district and 1.32 lakh farmers in Raichur district have enrolled for crop insurance. Our Government remains committed to supporting farmers during times of distress.
Protecting farmers’ hard work and providing security to agriculture remains our commitment. -
Dr. G Parameshwara
@DrParameshwara
ಗುರುವಾರ ಕೊಪ್ಪಳ ಹಾಗೂ ರಾಯಚೂರು ಜಿಲ್ಲೆಗಳ ವಿವಿಧ ಬರಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ, ಬೆಳೆ ಹಾನಿ ಮತ್ತು ಬರ ಪರಿಸ್ಥಿತಿಯನ್ನು ಖುದ್ದಾಗಿ ಪರಿಶೀಲಿಸಿದೆ.
ಬೆಳೆ ನಷ್ಟದಿಂದ ಸಂಕಷ್ಟಕ್ಕೆ ಸಿಲುಕಿರುವ ರೈತರ ಜಮೀನುಗಳಿಗೆ ತೆರಳಿ, ಅವರೊಂದಿಗೆ ನೇರವಾಗಿ ಸಂವಾದ ನಡೆಸಿ, ಸಮಸ್ಯೆಗಳು ಹಾಗೂ ಅಹವಾಲುಗಳನ್ನು ಆಲಿಸಿದೆ. ಮಳೆ ಕೊರತೆಯಿಂದ ಉಂಟಾಗಿರುವ ಬೆಳೆ ಹಾನಿ, ರೈತರು ಎದುರಿಸುತ್ತಿರುವ ಆರ್ಥಿಕ ಸಂಕಷ್ಟ, ಕುಡಿಯುವ ನೀರು, ಜಾನುವಾರುಗಳಿಗೆ ಮೇವು ಹಾಗೂ ಕೃಷಿ ಪಂಪ್ಸೆಟ್ಗಳಿಗೆ ವಿದ್ಯುತ್ ಪೂರೈಕೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಗಮನಿಸಿದೆ.
ಬಳಿಕ ಕೊಪ್ಪಳ ಜಿಲ್ಲಾಧಿಕಾರಿಗಳ ಕಾರ್ಯಾಲಯದಲ್ಲಿ ಉಭಯ ಜಿಲ್ಲೆಗಳ ಬರ ಪರಿಸ್ಥಿತಿ ಹಾಗೂ ಬರ ನಿರ್ವಹಣೆಗೆ ಕೈಗೊಂಡಿರುವ ಕ್ರಮಗಳ ಕುರಿತು ಪ್ರಗತಿ ಪರಿಶೀಲನಾ ಸಭೆ ನಡೆಸಿದೆ. ಕ್ಷೇತ್ರ ಭೇಟಿಯ ವೇಳೆ ರೈತರು ಮತ್ತು ಸಾರ್ವಜನಿಕರು ಗಮನಕ್ಕೆ ತಂದ ಸಮಸ್ಯೆಗಳ ಕುರಿತು ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಚರ್ಚಿಸಿ, ಅಗತ್ಯ ಪರಿಹಾರ ಕ್ರಮಗಳನ್ನು ತ್ವರಿತವಾಗಿ ಕೈಗೊಳ್ಳುವಂತೆ ನಿರ್ದೇಶನ ನೀಡಿದೆ.
ಬರ ನಿರ್ವಹಣೆಯಲ್ಲಿ ಯಾವುದೇ ವಿಳಂಬ ಅಥವಾ ನಿರ್ಲಕ್ಷ್ಯಕ್ಕೆ ಅವಕಾಶ ನೀಡದೆ, ರೈತರು, ಕೂಲಿ ಕಾರ್ಮಿಕರು ಹಾಗೂ ಜನಸಾಮಾನ್ಯರಿಗೆ ಅಗತ್ಯ ನೆರವು ಸಕಾಲದಲ್ಲಿ ತಲುಪಿಸುವಂತೆ ಅಧಿಕಾರಿಗಳಿಗೆ ಸೂಚಿಸಿದೆ.
ಈ ಕುರಿತಾದ ಪತ್ರಿಕಾ ವರದಿಗಳು ಹೀಗಿವೆ..
On Thursday, I visited several drought-affected areas in Koppal and Raichur districts and personally inspected crop damage and the ground situation.
I visited the fields of farmers affected by crop loss, interacted with them directly and heard their concerns. I reviewed issues arising from deficient rainfall, including crop damage, financial distress, drinking water, fodder for livestock and power supply to agricultural pump sets.
Later, at the Koppal Deputy Commissioner’s Office, I chaired a progress review meeting on the drought situation in both districts and the measures being taken for drought management. I discussed the issues raised by farmers and the public during my field visits with officials of various departments and directed them to take necessary relief measures without delay.
Officials were instructed to ensure there is no delay or negligence in drought management and that timely assistance reaches farmers, workers and the public.
Here are the media reports on the visit and review meeting. -
Dr. G Parameshwara
@DrParameshwara
ಗುರುವಾರ ಕೊಪ್ಪಳ ಹಾಗೂ ರಾಯಚೂರು ಜಿಲ್ಲೆಗಳ ವಿವಿಧ ಬರಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ, ಬೆಳೆ ಹಾನಿ ಮತ್ತು ಬರ ಪರಿಸ್ಥಿತಿಯನ್ನು ಖುದ್ದಾಗಿ ಪರಿಶೀಲಿಸಿದೆ.
ಬೆಳೆ ನಷ್ಟದಿಂದ ಸಂಕಷ್ಟಕ್ಕೆ ಸಿಲುಕಿರುವ ರೈತರ ಜಮೀನುಗಳಿಗೆ ತೆರಳಿ, ಅವರೊಂದಿಗೆ ನೇರವಾಗಿ ಸಂವಾದ ನಡೆಸಿ, ಸಮಸ್ಯೆಗಳು ಹಾಗೂ ಅಹವಾಲುಗಳನ್ನು ಆಲಿಸಿದೆ. ಮಳೆ ಕೊರತೆಯಿಂದ ಉಂಟಾಗಿರುವ ಬೆಳೆ ಹಾನಿ, ರೈತರು ಎದುರಿಸುತ್ತಿರುವ ಆರ್ಥಿಕ ಸಂಕಷ್ಟ, ಕುಡಿಯುವ ನೀರು, ಜಾನುವಾರುಗಳಿಗೆ ಮೇವು ಹಾಗೂ ಕೃಷಿ ಪಂಪ್ಸೆಟ್ಗಳಿಗೆ ವಿದ್ಯುತ್ ಪೂರೈಕೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಗಮನಿಸಿದೆ.
ಬಳಿಕ ಕೊಪ್ಪಳ ಜಿಲ್ಲಾಧಿಕಾರಿಗಳ ಕಾರ್ಯಾಲಯದಲ್ಲಿ ಉಭಯ ಜಿಲ್ಲೆಗಳ ಬರ ಪರಿಸ್ಥಿತಿ ಹಾಗೂ ಬರ ನಿರ್ವಹಣೆಗೆ ಕೈಗೊಂಡಿರುವ ಕ್ರಮಗಳ ಕುರಿತು ಪ್ರಗತಿ ಪರಿಶೀಲನಾ ಸಭೆ ನಡೆಸಿದೆ. ಕ್ಷೇತ್ರ ಭೇಟಿಯ ವೇಳೆ ರೈತರು ಮತ್ತು ಸಾರ್ವಜನಿಕರು ಗಮನಕ್ಕೆ ತಂದ ಸಮಸ್ಯೆಗಳ ಕುರಿತು ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಚರ್ಚಿಸಿ, ಅಗತ್ಯ ಪರಿಹಾರ ಕ್ರಮಗಳನ್ನು ತ್ವರಿತವಾಗಿ ಕೈಗೊಳ್ಳುವಂತೆ ನಿರ್ದೇಶನ ನೀಡಿದೆ.
ಬರ ನಿರ್ವಹಣೆಯಲ್ಲಿ ಯಾವುದೇ ವಿಳಂಬ ಅಥವಾ ನಿರ್ಲಕ್ಷ್ಯಕ್ಕೆ ಅವಕಾಶ ನೀಡದೆ, ರೈತರು, ಕೂಲಿ ಕಾರ್ಮಿಕರು ಹಾಗೂ ಜನಸಾಮಾನ್ಯರಿಗೆ ಅಗತ್ಯ ನೆರವು ಸಕಾಲದಲ್ಲಿ ತಲುಪಿಸುವಂತೆ ಅಧಿಕಾರಿಗಳಿಗೆ ಸೂಚಿಸಿದೆ.
ಈ ಕುರಿತಾದ ಪತ್ರಿಕಾ ವರದಿಗಳು ಹೀಗಿವೆ..
On Thursday, I visited several drought-affected areas in Koppal and Raichur districts and personally inspected crop damage and the ground situation.
I visited the fields of farmers affected by crop loss, interacted with them directly and heard their concerns. I reviewed issues arising from deficient rainfall, including crop damage, financial distress, drinking water, fodder for livestock and power supply to agricultural pump sets.
Later, at the Koppal Deputy Commissioner’s Office, I chaired a progress review meeting on the drought situation in both districts and the measures being taken for drought management. I discussed the issues raised by farmers and the public during my field visits with officials of various departments and directed them to take necessary relief measures without delay.
Officials were instructed to ensure there is no delay or negligence in drought management and that timely assistance reaches farmers, workers and the public.
Here are the media reports on the visit and review meeting. -
Dr. G Parameshwara
@DrParameshwara
ಗುರುವಾರ ಕೊಪ್ಪಳ ಹಾಗೂ ರಾಯಚೂರು ಜಿಲ್ಲೆಗಳ ವಿವಿಧ ಬರಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ, ಬೆಳೆ ಹಾನಿ ಮತ್ತು ಬರ ಪರಿಸ್ಥಿತಿಯನ್ನು ಖುದ್ದಾಗಿ ಪರಿಶೀಲಿಸಿದೆ.
ಬೆಳೆ ನಷ್ಟದಿಂದ ಸಂಕಷ್ಟಕ್ಕೆ ಸಿಲುಕಿರುವ ರೈತರ ಜಮೀನುಗಳಿಗೆ ತೆರಳಿ, ಅವರೊಂದಿಗೆ ನೇರವಾಗಿ ಸಂವಾದ ನಡೆಸಿ, ಸಮಸ್ಯೆಗಳು ಹಾಗೂ ಅಹವಾಲುಗಳನ್ನು ಆಲಿಸಿದೆ. ಮಳೆ ಕೊರತೆಯಿಂದ ಉಂಟಾಗಿರುವ ಬೆಳೆ ಹಾನಿ, ರೈತರು ಎದುರಿಸುತ್ತಿರುವ ಆರ್ಥಿಕ ಸಂಕಷ್ಟ, ಕುಡಿಯುವ ನೀರು, ಜಾನುವಾರುಗಳಿಗೆ ಮೇವು ಹಾಗೂ ಕೃಷಿ ಪಂಪ್ಸೆಟ್ಗಳಿಗೆ ವಿದ್ಯುತ್ ಪೂರೈಕೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಗಮನಿಸಿದೆ.
ಬಳಿಕ ಕೊಪ್ಪಳ ಜಿಲ್ಲಾಧಿಕಾರಿಗಳ ಕಾರ್ಯಾಲಯದಲ್ಲಿ ಉಭಯ ಜಿಲ್ಲೆಗಳ ಬರ ಪರಿಸ್ಥಿತಿ ಹಾಗೂ ಬರ ನಿರ್ವಹಣೆಗೆ ಕೈಗೊಂಡಿರುವ ಕ್ರಮಗಳ ಕುರಿತು ಪ್ರಗತಿ ಪರಿಶೀಲನಾ ಸಭೆ ನಡೆಸಿದೆ. ಕ್ಷೇತ್ರ ಭೇಟಿಯ ವೇಳೆ ರೈತರು ಮತ್ತು ಸಾರ್ವಜನಿಕರು ಗಮನಕ್ಕೆ ತಂದ ಸಮಸ್ಯೆಗಳ ಕುರಿತು ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಚರ್ಚಿಸಿ, ಅಗತ್ಯ ಪರಿಹಾರ ಕ್ರಮಗಳನ್ನು ತ್ವರಿತವಾಗಿ ಕೈಗೊಳ್ಳುವಂತೆ ನಿರ್ದೇಶನ ನೀಡಿದೆ.
ಬರ ನಿರ್ವಹಣೆಯಲ್ಲಿ ಯಾವುದೇ ವಿಳಂಬ ಅಥವಾ ನಿರ್ಲಕ್ಷ್ಯಕ್ಕೆ ಅವಕಾಶ ನೀಡದೆ, ರೈತರು, ಕೂಲಿ ಕಾರ್ಮಿಕರು ಹಾಗೂ ಜನಸಾಮಾನ್ಯರಿಗೆ ಅಗತ್ಯ ನೆರವು ಸಕಾಲದಲ್ಲಿ ತಲುಪಿಸುವಂತೆ ಅಧಿಕಾರಿಗಳಿಗೆ ಸೂಚಿಸಿದೆ.
ಈ ಕುರಿತಾದ ಪತ್ರಿಕಾ ವರದಿಗಳು ಹೀಗಿವೆ..
On Thursday, I visited several drought-affected areas in Koppal and Raichur districts and personally inspected crop damage and the ground situation.
I visited the fields of farmers affected by crop loss, interacted with them directly and heard their concerns. I reviewed issues arising from deficient rainfall, including crop damage, financial distress, drinking water, fodder for livestock and power supply to agricultural pump sets.
Later, at the Koppal Deputy Commissioner’s Office, I chaired a progress review meeting on the drought situation in both districts and the measures being taken for drought management. I discussed the issues raised by farmers and the public during my field visits with officials of various departments and directed them to take necessary relief measures without delay.
Officials were instructed to ensure there is no delay or negligence in drought management and that timely assistance reaches farmers, workers and the public.
Here are the media reports on the visit and review meeting. -
Dr. G Parameshwara
@DrParameshwara
ಮಾಜಿ ಸಚಿವರು, ಗಾಂಧಿನಗರ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಆತ್ಮೀಯರು ಆದ ಶ್ರೀ @dineshgrao ಅವರಿಗೆ ಜನ್ಮದಿನದ ಶುಭಾಶಯಗಳು.
ಭಗವಂತನು ತಮಗೆ ದೀರ್ಘ ಆಯುಷ್ಯ, ಉತ್ತಮ ಆರೋಗ್ಯವನ್ನು ಕರುಣಿಸುವುದರ ಜೊತೆಗೆ ಜನಸೇವೆ ಮಾಡಲು ಹೆಚ್ಚು ಶಕ್ತಿಯನ್ನು ನೀಡಲಿ ಎಂದು ಹಾರೈಸುತ್ತೇನೆ. -
Dr. G Parameshwara
@DrParameshwara
ರಾಯಚೂರು ಜಿಲ್ಲಾ ಪ್ರವಾಸದ ಸಂದರ್ಭದಲ್ಲಿ ಸಿಂಧನೂರು ತಾಲ್ಲೂಕಿನ ರೈತರ ಕೃಷಿ ಚಟುವಟಿಕೆಗಳಿಗೆ ಅಗತ್ಯವಿರುವ ವಿದ್ಯುತ್ ಪೂರೈಕೆ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಿ, ಸ್ಥಳದಲ್ಲೇ ಸ್ಪಷ್ಟ ನಿರ್ದೇಶನ ನೀಡಿದೆ.
ಕೃಷಿ ಪಂಪ್ಸೆಟ್ಗಳಿಗೆ 6 ಗಂಟೆ ನಿರಂತರ ವಿದ್ಯುತ್ ಪೂರೈಕೆ ಮಾಡುವುದರ ಜೊತೆಗೆ, ಸಾಧ್ಯವಾದಷ್ಟು ಹಗಲಿನ ವೇಳೆಯಲ್ಲಿಯೇ ಸಮರ್ಪಕ ವೋಲ್ಟೇಜ್ನೊಂದಿಗೆ ವಿದ್ಯುತ್ ಸರಬರಾಜು ಮಾಡುವಂತೆ ಸೂಚಿಸಿದೆ.
ರೈತರ ಕೃಷಿ ಚಟುವಟಿಕೆಗಳಿಗೆ ಯಾವುದೇ ಅಡಚಣೆಯಾಗದಂತೆ ಅಗತ್ಯ ಕ್ರಮ ಕೈಗೊಳ್ಳಲು ಸರ್ಕಾರ ಸದಾ ಸಿದ್ಧವಿದ್ದು, ರೈತರೊಂದಿಗೆ ಸದಾ ಜೊತೆಯಾಗಿ ನಿಲ್ಲಲಿದೆ.
During my visit to Raichur district, I discussed the power supply required for agricultural activities in Sindhanur taluk with officials and issued clear directions on the spot.
I instructed that agricultural pump sets be provided 6 hours of uninterrupted power supply and, as far as possible, electricity should be supplied during the daytime with adequate voltage.
Our Government will take all necessary steps to ensure that farmers’ agricultural activities are not disrupted and will continue to stand with them. -
Dr. G Parameshwara
@DrParameshwara
ಬಳ್ಳಾರಿ ಜಿಲ್ಲೆಯಲ್ಲಿ 2.74 ಲಕ್ಷ ಸಕ್ರಿಯ ಕಾರ್ಮಿಕರಿಗೆ 9.28 ಲಕ್ಷ ಮಾನವ ದಿನಗಳ ಉದ್ಯೋಗ ಸೃಷ್ಟಿಸಲಾಗಿದ್ದು, ಇದಕ್ಕಾಗಿ ₹22.16 ಕೋಟಿ ವೆಚ್ಚ ಮಾಡಲಾಗಿದೆ.
ಸ್ಥಳೀಯ ಮಟ್ಟದಲ್ಲೇ ಪ್ರತಿಯೊಬ್ಬರಿಗೂ ಉದ್ಯೋಗಾವಕಾಶ ದೊರೆಯುವಂತೆ ಕ್ರಮ ವಹಿಸುವುದರ ಜೊತೆಗೆ, ಕಾರ್ಮಿಕರ ದುಡಿಮೆಯ ಕೂಲಿ ಪಾವತಿಯಲ್ಲಿ ಒಂದು ದಿನವೂ ವಿಳಂಬವಾಗದಂತೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು.
ಸ್ಥಳೀಯ ಮಟ್ಟದಲ್ಲೇ ಪ್ರತಿಯೊಬ್ಬರಿಗೂ ಉದ್ಯೋಗ ದೊರಕಿಸಲು ಹಾಗೂ ದುಡಿಮೆಗೆ ತಕ್ಕ ಕೂಲಿಯನ್ನು ಸಮಯಕ್ಕೆ ಸರಿಯಾಗಿ ತಲುಪಿಸಲು ಸರ್ಕಾರ ಬದ್ಧವಾಗಿದ್ದು, ಕಾರ್ಮಿಕರ ಜೊತೆ ಸದಾ ನಿಲ್ಲಲಿದೆ.
In Ballari district, 9.28 lakh person-days of employment have been generated for 2.74 lakh active workers, with an expenditure of ₹22.16 crore.
Necessary steps will be taken to ensure that employment opportunities are available locally and that workers receive their wages without delay.
Our Government remains committed to providing local employment and ensuring timely payment for work done. -
Dr. G Parameshwara
@DrParameshwara
ವಿಜಯನಗರ ಜಿಲ್ಲೆಯಲ್ಲಿ ಜನರಿಗೆ ಸಮರ್ಪಕ ಕುಡಿಯುವ ನೀರು ಒದಗಿಸುವ ನಿಟ್ಟಿನಲ್ಲಿ ಸರ್ಕಾರ ಅಗತ್ಯ ಕಾಮಗಾರಿಗಳಿಗೆ ಆದ್ಯತೆ ನೀಡಿ ವೇಗವಾಗಿ ಅನುಷ್ಠಾನಗೊಳಿಸುತ್ತಿದೆ.
₹4 ಕೋಟಿ ಅನುದಾನದಲ್ಲಿ 106 ಕುಡಿಯುವ ನೀರಿನ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದ್ದು, ₹2.86 ಕೋಟಿ ವೆಚ್ಚದಲ್ಲಿ 80 ಕಾಮಗಾರಿಗಳು ಈಗಾಗಲೇ ಪೂರ್ಣಗೊಂಡಿವೆ. ಉಳಿದ 25 ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಲು ಒತ್ತು ನೀಡಲಾಗುತ್ತಿದೆ.
ಪ್ರತಿಯೊಂದು ಗ್ರಾಮಕ್ಕೂ ಸಮರ್ಪಕ ಕುಡಿಯುವ ನೀರು ತಲುಪಿಸುವ ಸಂಕಲ್ಪದೊಂದಿಗೆ ಸರ್ಕಾರ ಜನರೊಂದಿಗೆ ಸದಾ ಜೊತೆಯಾಗಿ ನಿಲ್ಲಲಿದೆ.
The Government is giving priority to drinking water works across Vijayanagara district to ensure adequate supply to people.
With an allocation of ₹4 crore, 106 drinking water works have been taken up. Of these, 80 works have already been completed at a cost of ₹2.86 crore, while priority is being given to the early completion of the remaining 25 works.
Our Government remains committed to ensuring adequate drinking water reaches every village. -
Dr. G Parameshwara
@DrParameshwara
ವಿಜಯನಗರ ಜಿಲ್ಲೆಯಲ್ಲಿ ಬೆಳೆ ಹಾನಿಯಿಂದ ಸಂಕಷ್ಟಕ್ಕೊಳಗಾದ ರೈತರಿಗೆ ತ್ವರಿತವಾಗಿ ಪರಿಹಾರ ಹಾಗೂ ಅಗತ್ಯ ನೆರವು ತಲುಪಿಸಲು ಸರ್ಕಾರ ಕ್ರಮ ಕೈಗೊಳ್ಳುತ್ತಿದೆ.
ಜಿಲ್ಲೆಯಲ್ಲಿ ಒಟ್ಟು 3,45,287 ರೈತರು ಬೆಳೆ ಹಾನಿಗೊಳಗಾಗಿದ್ದು, ಇವರಲ್ಲಿ 95,450 ಅತಿ ಸಣ್ಣ ರೈತರು, 56,183 ಸಣ್ಣ ರೈತರು ಹಾಗೂ 2,16,514 ಇತರ ರೈತರು ಇದ್ದಾರೆ. ಒಟ್ಟು 4,38,405 ಕೃಷಿ ಪ್ಲಾಟ್ಗಳ ಪೈಕಿ 3,31,587 ಪ್ಲಾಟ್ಗಳು FRUITSಗೆ ಸೇರ್ಪಡೆಯಾಗಿದ್ದು, ಅರ್ಹ ರೈತರಿಗೆ ನೆರವು ತ್ವರಿತವಾಗಿ ತಲುಪಿಸಲು ವ್ಯವಸ್ಥೆ ಮಾಡಲಾಗುತ್ತಿದೆ.
ರೈತರ ಸಂಕಷ್ಟದ ಸಮಯದಲ್ಲಿ ಸರ್ಕಾರ ಅವರ ಬೆನ್ನಿಗೆ ನಿಲ್ಲಲಿದೆ.
The Government is taking steps to ensure swift relief and necessary support for farmers affected by crop loss across Vijayanagara district.
A total of 3,45,287 farmers have been affected, including 95,450 marginal farmers, 56,183 small farmers and 2,16,514 other farmers. Of the district’s 4,38,405 agricultural plots, 3,31,587 have been integrated with FRUITS, helping enable faster delivery of assistance to eligible farmers.
The Government will continue to stand with farmers through this difficult period. -
Dr. G Parameshwara
@DrParameshwara
ಬರ ಪರಿಸ್ಥಿತಿಯಿಂದ ಉಂಟಾಗಬಹುದಾದ ಮೇವು ಕೊರತೆಯನ್ನು ನಿವಾರಿಸಿ, ರೈತರ ಜಾನುವಾರುಗಳ ಪಾಲನೆಗೆ ಅಗತ್ಯ ಬೆಂಬಲ ಒದಗಿಸಲು ಸರ್ಕಾರ ಕ್ರಮ ಕೈಗೊಂಡಿದೆ.
ನೀರಾವರಿ ಸೌಲಭ್ಯವಿರುವ ರೈತರಿಗೆ 16,623 ಮೇವಿನ ಬೀಜದ ಕಿಟ್ಗಳನ್ನು ವಿತರಿಸಲಾಗಿದ್ದು, ಸುಮಾರು 1,400 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಕೈಗೊಳ್ಳಲಾಗಿದೆ. ಇದರಿಂದ ಅಂದಾಜು 45,000 ಟನ್ ಹಸಿರು ಮೇವು ಉತ್ಪಾದನೆಯ ನಿರೀಕ್ಷೆ ಇದೆ.
ರೈತರ ಸಂಕಷ್ಟದ ಸಂದರ್ಭದಲ್ಲಿ ಜಾನುವಾರುಗಳ ರಕ್ಷಣೆಗೆ ಅಗತ್ಯ ನೆರವು ನೀಡಲು ಸರ್ಕಾರ ಸದಾ ಸಿದ್ಧವಿದೆ.
The Government has taken measures to address possible fodder shortages caused by the drought and support farmers in caring for their livestock.
16,623 fodder seed kits have been distributed to farmers with irrigation facilities, and sowing has been taken up across around 1,400 hectares. This is expected to produce nearly 45,000 tonnes of green fodder.
The Government remains ready to provide all necessary support to protect livestock during this difficult period. -
Dr. G Parameshwara
@DrParameshwara
ವಿಜಯನಗರ ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿರುವ ಗ್ರಾಮಗಳಿಗೆ ತಕ್ಷಣದ ಪರಿಹಾರ ಒದಗಿಸಲು ಸರ್ಕಾರ ಆದ್ಯತೆಯೊಂದಿಗೆ ಕ್ರಮ ಕೈಗೊಳ್ಳುತ್ತಿದೆ. ಅಗತ್ಯವಿರುವ ಕಡೆ ಪರ್ಯಾಯ ವ್ಯವಸ್ಥೆ ಕಲ್ಪಿಸಿ ಜನರಿಗೆ ನೀರಿನ ಲಭ್ಯತೆ ಖಚಿತಪಡಿಸಲಾಗುತ್ತಿದೆ.
38 ಹಳ್ಳಿಗಳಲ್ಲಿ ನೀರಿನ ಸಮಸ್ಯೆ ಗುರುತಿಸಲಾಗಿದ್ದು, 46 ಖಾಸಗಿ ಬೋರ್ವೆಲ್ಗಳನ್ನು ಬಾಡಿಗೆ ಪಡೆದು ನೀರು ಪೂರೈಸಲಾಗುತ್ತಿದೆ. ಹರಪನಹಳ್ಳಿಯಲ್ಲಿ 25 ಖಾಸಗಿ ಬೋರ್ವೆಲ್ಗಳ ಮೂಲಕ ನೀರು ಒದಗಿಸಲಾಗುತ್ತಿದ್ದು, ಕೂಡ್ಲಿಗಿ ತಾಲ್ಲೂಕಿನ ಅಡವಿ ಸುರವನಹಳ್ಳಿಗೆ ಟ್ಯಾಂಕರ್ ಮೂಲಕ ನೀರು ಪೂರೈಸಲಾಗುತ್ತಿದೆ.
ಜನರಿಗೆ ಕುಡಿಯುವ ನೀರಿನ ಕೊರತೆ ಉಂಟಾಗದಂತೆ ಸರ್ಕಾರ ಸದಾ ಸಿದ್ಧವಿದ್ದು, ಅಗತ್ಯ ಸಂದರ್ಭದಲ್ಲಿ ತ್ವರಿತವಾಗಿ ಸ್ಪಂದಿಸಲಿದೆ.
The Government is taking priority measures to provide immediate relief to villages facing drinking water shortages in Vijayanagara district, with alternative arrangements being made wherever necessary.
Drinking water issues have been identified in 38 villages. Water is being supplied through 46 hired private borewells, including 25 in Harapanahalli, while Adavi Suravanahalli in Kudligi taluk is being supplied through tankers.
The Government is prepared to respond swiftly wherever drinking water shortages arise and ensure uninterrupted access for people. -
Dr. G Parameshwara
@DrParameshwara
ನಿನ್ನೆ ಮತ್ತು ಇಂದು ಬಳ್ಳಾರಿ, ವಿಜಯನಗರ, ಕೊಪ್ಪಳ ಹಾಗೂ ರಾಯಚೂರು ಜಿಲ್ಲೆಗಳ ವಿವಿಧ ಬರಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ, ಬೆಳೆ ಹಾನಿ ಮತ್ತು ಬರ ಪರಿಸ್ಥಿತಿಯನ್ನು ಖುದ್ದಾಗಿ ಪರಿಶೀಲಿಸಿದ್ದೇನೆ.
ಬೆಳೆ ನಷ್ಟದಿಂದ ಸಂಕಷ್ಟಕ್ಕೆ ಸಿಲುಕಿರುವ ರೈತರ ಜಮೀನುಗಳಿಗೆ ತೆರಳಿ, ಅವರೊಂದಿಗೆ ನೇರವಾಗಿ ಸಂವಾದ ನಡೆಸಿ ಸಮಸ್ಯೆಗಳು ಹಾಗೂ ಅಹವಾಲುಗಳನ್ನು ಆಲಿಸಿದ್ದೇನೆ. ಮಳೆ ಕೊರತೆಯಿಂದ ಬೆಳೆಗಳು ನಾಶವಾಗಿರುವುದು, ರೈತರು ಎದುರಿಸುತ್ತಿರುವ ಆರ್ಥಿಕ ಸಂಕಷ್ಟ, ಕುಡಿಯುವ ನೀರು, ಜಾನುವಾರುಗಳಿಗೆ ಮೇವು ಹಾಗೂ ಕೃಷಿ ಪಂಪ್ಸೆಟ್ಗಳಿಗೆ ವಿದ್ಯುತ್ ಪೂರೈಕೆಯ ಸಮಸ್ಯೆಗಳನ್ನು ಗಮನಿಸಿದ್ದೇನೆ.
ಈ ಭೇಟಿಗಳಲ್ಲಿ ರೈತರು ಮತ್ತು ಸಾರ್ವಜನಿಕರು ಗಮನಕ್ಕೆ ತಂದಿರುವ ಸಮಸ್ಯೆಗಳ ಕುರಿತು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿ, ಅಗತ್ಯ ಪರಿಹಾರ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಿದ್ದೇನೆ. ಬರ ನಿರ್ವಹಣೆಯಲ್ಲಿ ಯಾವುದೇ ವಿಳಂಬವಾಗದಂತೆ ನೋಡಿಕೊಳ್ಳಲು ಹಾಗೂ ಜನರಿಗೆ ಅಗತ್ಯ ನೆರವು ತಲುಪಿಸಲು ನಿರ್ದೇಶನ ನೀಡಿದ್ದೇನೆ.
ಬರದಿಂದ ಸಂಕಷ್ಟದಲ್ಲಿರುವ ರೈತರು, ಕೂಲಿ ಕಾರ್ಮಿಕರು ಹಾಗೂ ಬಡವರ ಬದುಕು ಮತ್ತು ಜೀವನೋಪಾಯವನ್ನು ರಕ್ಷಿಸುವುದು ನಮ್ಮ ಸರ್ಕಾರದ ಆದ್ಯತೆಯಾಗಿದೆ. ಯಾವುದೇ ಕಾರಣಕ್ಕೂ ರೈತ ಸಮುದಾಯವನ್ನು ಸಂಕಷ್ಟದಲ್ಲಿ ಕೈಬಿಡುವುದಿಲ್ಲ.This media couldn't be displayed. See it on the original post. -
Dr. G Parameshwara
@DrParameshwara
ಇಂದು ಕೊಪ್ಪಳ ಜಿಲ್ಲಾಧಿಕಾರಿಗಳ ಕಾರ್ಯಾಲಯದಲ್ಲಿ ಕೊಪ್ಪಳ ಮತ್ತು ರಾಯಚೂರು ಜಿಲ್ಲೆಗಳ ಬರ ಪರಿಸ್ಥಿತಿ ಹಾಗೂ ಬರ ನಿರ್ವಹಣೆಗೆ ಕೈಗೊಂಡಿರುವ ಕ್ರಮಗಳ ಕುರಿತು ಪ್ರಗತಿ ಪರಿಶೀಲನಾ ಸಭೆ ನಡೆಸಿ, ವಿವಿಧ ಇಲಾಖೆಗಳ ಅಧಿಕಾರಿಗಳಿಂದ ಮಾಹಿತಿ ಪಡೆದು ಅಗತ್ಯ ನಿರ್ದೇಶನಗಳನ್ನು ನೀಡಿದೆ.
ಈಗಾಗಲೇ ಬೆಂಗಳೂರು, ಬೆಳಗಾವಿ ಮತ್ತು ಕಲಬುರಗಿ ಕಂದಾಯ ವಿಭಾಗಗಳು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಬರ ಪರಿಸ್ಥಿತಿಯನ್ನು ಪರಿಶೀಲಿಸಿದ್ದೇನೆ. ಕೊಪ್ಪಳ ಜಿಲ್ಲೆಯ ವಣಬಳ್ಳಾರಿ, ಗುನ್ನಾಳ, ನಂದಾಪುರ ಹಾಗೂ ರಾಯಚೂರು ಜಿಲ್ಲೆಯ ಉಮಲೂಟಿ, ಕಲಮಂಗಿ, ತೊಡಗಿ ಗ್ರಾಮಗಳಲ್ಲಿಯೂ ಬೆಳೆ ಹಾನಿಯನ್ನು ಖುದ್ದಾಗಿ ಪರಿಶೀಲಿಸಿ, ರೈತರ ಸಮಸ್ಯೆಗಳನ್ನು ಆಲಿಸಿದ್ದೇನೆ.
ಕೊಪ್ಪಳ ಜಿಲ್ಲೆಯ ಎಲ್ಲ 7 ತಾಲೂಕುಗಳು ಬರಪೀಡಿತವಾಗಿದ್ದು, ಶೇ.45ರಷ್ಟು ಮಳೆ ಕೊರತೆಯಾಗಿದೆ. 3.02 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿದ್ದು, ಅಂದಾಜು ₹2,174.55 ಕೋಟಿ ನಷ್ಟ ಸಂಭವಿಸಿದೆ. ರಾಯಚೂರು ಜಿಲ್ಲೆಯಲ್ಲಿ ಶೇ.49ರಷ್ಟು ಮಳೆ ಕೊರತೆಯಾಗಿದ್ದು, 2.81 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ. ಬೆಳೆ ಪರಿಹಾರಕ್ಕಾಗಿ ಕೊಪ್ಪಳ ಜಿಲ್ಲೆಯಿಂದ ₹289.45 ಕೋಟಿ ಹಾಗೂ ರಾಯಚೂರು ಜಿಲ್ಲೆಯಿಂದ ₹277 ಕೋಟಿ ಅನುದಾನದ ಅಗತ್ಯವಿರುವ ಕುರಿತು ವರದಿ ಸಲ್ಲಿಸಲಾಗಿದೆ.
ಕೇಂದ್ರ ಸರ್ಕಾರದಿಂದ ಎನ್ಡಿಆರ್ಎಫ್ ಅಡಿಯಲ್ಲಿ ಇನ್ನೂ ಪರಿಹಾರ ಬಿಡುಗಡೆಯಾಗದಿದ್ದರೂ, ನಮ್ಮ ಸರ್ಕಾರ ಎಸ್ಡಿಆರ್ಎಫ್ ಮೂಲಕ ಪ್ರತಿಯೊಬ್ಬ ಅರ್ಹ ರೈತನಿಗೆ ₹2,500 ಪರಿಹಾರ ನೀಡುತ್ತಿದೆ.
ಎರಡೂ ಜಿಲ್ಲೆಗಳಲ್ಲಿ ಬೆಳೆ ವಿಮೆಗೆ ನೋಂದಾಯಿಸಿರುವ ರೈತರಿಗೆ ಸಕಾಲದಲ್ಲಿ ವಿಮಾ ಪರಿಹಾರ ತಲುಪಿಸಬೇಕು. ಕೊಪ್ಪಳ ಜಿಲ್ಲೆಯಲ್ಲಿ 1.56 ಲಕ್ಷ ಹಾಗೂ ರಾಯಚೂರು ಜಿಲ್ಲೆಯಲ್ಲಿ 1.32 ಲಕ್ಷ ರೈತರು ನೋಂದಾಯಿಸಿಕೊಂಡಿದ್ದಾರೆ. ವಿಮಾ ಕಂಪನಿಗಳೊಂದಿಗೆ ಸಮನ್ವಯ ಸಾಧಿಸಿ ಬಾಕಿ ಪರಿಹಾರವನ್ನು ತ್ವರಿತವಾಗಿ ಒದಗಿಸಬೇಕು.
ವಿಮೆ ಹಣ ಕೊಡಿಸುವ ನೆಪದಲ್ಲಿ ರೈತರಿಂದ ಹಣ ವಸೂಲಿ ಮಾಡುವ ಮಧ್ಯವರ್ತಿಗಳನ್ನು ಗುರುತಿಸಿ ಎಫ್ಐಆರ್ ದಾಖಲಿಸಬೇಕು. ರೈತರ ಸಾಲ ಮರುಪಾವತಿ ಅವಧಿ ವಿಸ್ತರಣೆ ಸೌಲಭ್ಯಗಳನ್ನು ಸಮರ್ಪಕವಾಗಿ ಜಾರಿಗೊಳಿಸುವುದರ ಜೊತೆಗೆ, ಕಿರುಸಾಲ ಸಂಸ್ಥೆಗಳಿಂದ ಬಲವಂತದ ವಸೂಲಿ ಅಥವಾ ಕಿರುಕುಳ ನಡೆದರೆ ಕಠಿಣ ಕ್ರಮ ಕೈಗೊಳ್ಳಬೇಕು.
ಡಿಸೆಂಬರ್ ನಂತರ ಕುಡಿಯುವ ನೀರು ಹಾಗೂ ಜಾನುವಾರುಗಳಿಗೆ ಮೇವಿನ ಸಮಸ್ಯೆ ಎದುರಾಗುವ ಸಾಧ್ಯತೆಯಿರುವುದರಿಂದ ಎರಡೂ ಜಿಲ್ಲೆಗಳ ಅಧಿಕಾರಿಗಳು ಮುಂಚಿತವಾಗಿ ಕ್ರಿಯಾಯೋಜನೆ ರೂಪಿಸಬೇಕು. ಕುಡಿಯುವ ನೀರಿಗಾಗಿ ಈಗಾಗಲೇ ಒದಗಿಸಿರುವ ಅನುದಾನವನ್ನು ಸಮರ್ಪಕವಾಗಿ ಬಳಸಿಕೊಂಡು, ಮತ್ತೊಂದು ಹಂತದಲ್ಲಿ ಜಿಲ್ಲೆಗಳಿಗೆ ತಲಾ ₹1 ಕೋಟಿ ಹೆಚ್ಚುವರಿ ಅನುದಾನ ಒದಗಿಸುವ ಕುರಿತು ಚಿಂತನೆ ನಡೆಸಿದ್ದೇವೆ.
ಕೊಪ್ಪಳ ಜಿಲ್ಲೆಯ 109 ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ನೀರಿನ ಸಮಸ್ಯೆ ಎದುರಾಗುವ ಸಾಧ್ಯತೆಯಿದ್ದು, ರಾಯಚೂರಿನ 30 ಗ್ರಾಮಗಳಲ್ಲಿ ಈಗಾಗಲೇ ಸಮಸ್ಯೆ ಕಾಣಿಸಿಕೊಂಡಿದೆ. ಜಲಾಶಯಗಳ ನೀರನ್ನು ಎಚ್ಚರಿಕೆಯಿಂದ ಬಳಸಿಕೊಂಡು, ಖಾಸಗಿ ಕೊಳವೆಬಾವಿಗಳು, ಅಗತ್ಯ ಕಾಮಗಾರಿಗಳು ಹಾಗೂ ತುರ್ತು ಸಂದರ್ಭಗಳಲ್ಲಿ ಟ್ಯಾಂಕರ್ ಮೂಲಕ ಸಮರ್ಪಕ ನೀರು ಪೂರೈಸಬೇಕು. ರಾಯಚೂರು ನಗರದ ಹಳೆಯ ಕುಡಿಯುವ ನೀರಿನ ಪೈಪ್ಲೈನ್ ಬದಲಾವಣೆ ಕಾಮಗಾರಿಯನ್ನೂ ತ್ವರಿತವಾಗಿ ಪೂರ್ಣಗೊಳಿಸಬೇಕು.
ಕೊಪ್ಪಳ ಜಿಲ್ಲೆಯಲ್ಲಿ 4.53 ಲಕ್ಷ ಟನ್ ಹಾಗೂ ರಾಯಚೂರು ಜಿಲ್ಲೆಯಲ್ಲಿ 5.70 ಲಕ್ಷ ಟನ್ ಮೇವು ಲಭ್ಯವಿರುವುದಾಗಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಮೇವಿನ ದಾಸ್ತಾನನ್ನು ಖುದ್ದಾಗಿ ಪರಿಶೀಲಿಸಿ, ಅರ್ಹ ರೈತರಿಗೆ ಮೇವಿನ ಬೀಜದ ಮಿನಿಕಿಟ್ಗಳನ್ನು ವಿತರಿಸಬೇಕು. ಅಗತ್ಯವಿದ್ದರೆ ಮೇವು ಬ್ಯಾಂಕ್ಗಳು ಹಾಗೂ ಗೋಶಾಲೆಗಳ ವ್ಯವಸ್ಥೆ ಮಾಡಬೇಕು. ಜಾನುವಾರುಗಳಿಗೆ ಕುಡಿಯುವ ನೀರು, ಆರೋಗ್ಯ ತಪಾಸಣೆ, ಔಷಧಿ ಮತ್ತು ಲಸಿಕೆಗಳ ಕೊರತೆಯಾಗದಂತೆ ಕ್ರಮ ಕೈಗೊಳ್ಳಬೇಕು.
ಬರದಿಂದ ಜನರು ಉದ್ಯೋಗ ಅರಸಿ ಗುಳೆ ಹೋಗುವುದನ್ನು ತಪ್ಪಿಸಲು ಸ್ಥಳೀಯವಾಗಿ ಉದ್ಯೋಗ ಕಲ್ಪಿಸುವುದು ಅತ್ಯಗತ್ಯ. ಕೊಪ್ಪಳ ಜಿಲ್ಲೆಯಲ್ಲಿ 12.69 ಲಕ್ಷ ಹಾಗೂ ರಾಯಚೂರು ಜಿಲ್ಲೆಯಲ್ಲಿ 19.54 ಲಕ್ಷ ಮಾನವ ದಿನಗಳ ಉದ್ಯೋಗ ಸೃಜಿಸಲಾಗಿದೆ. ರಾಯಚೂರಿನಲ್ಲಿ ಬಾಕಿಯಿರುವ ₹12.73 ಕೋಟಿ ಕೂಲಿ ಹಣವನ್ನು ತಕ್ಷಣ ಪಾವತಿಸಬೇಕು.
ವಿಬಿ–ಜಿ ರಾಮ್ ಜಿ ಯೋಜನೆ ಸೇರಿದಂತೆ ಲಭ್ಯವಿರುವ ಉದ್ಯೋಗ ಯೋಜನೆಗಳನ್ನು ಬಳಸಿಕೊಂಡು ಕೃಷಿ ಹೊಂಡ, ಕೆರೆ ಅಭಿವೃದ್ಧಿ ಹಾಗೂ ಇತರ ಕಾಮಗಾರಿಗಳ ಮೂಲಕ ಉದ್ಯೋಗ ಒದಗಿಸಿ, ಕಾರ್ಮಿಕರಿಗೆ ವಾರದೊಳಗೆ ಕೂಲಿ ಪಾವತಿಯಾಗುವಂತೆ ಕ್ರಮ ಕೈಗೊಳ್ಳಬೇಕು.
ರೈತರ ಆರ್ಥಿಕ ಸ್ವಾವಲಂಬನೆಗಾಗಿ 'ನೇಗಿಲ ಯೋಗಿ' ಯೋಜನೆಯಡಿ ಮೂರು ಎಕರೆಗಿಂತ ಕಡಿಮೆ ಜಮೀನು ಹೊಂದಿರುವ ಅರ್ಹ ರೈತರಿಗೆ ವಾರ್ಷಿಕ ಗರಿಷ್ಠ ₹4,500 ಪ್ರೋತ್ಸಾಹ ಧನವನ್ನು ಡಿಬಿಟಿ ಮೂಲಕ ನೀಡಲು ಉದ್ದೇಶಿಸಲಾಗಿದೆ.
ಕೃಷಿ ಯಂತ್ರೋಪಕರಣಗಳಿಗೆ ಸಬ್ಸಿಡಿ, ತಾಂತ್ರಿಕ ನೆರವು ಹಾಗೂ 'ರೈತ ಮಿತ್ರ' ಕಾರ್ಯಕ್ರಮದ ಮೂಲಕ ರೈತರ ಹೊಲಗಳಿಗೆ ತೆರಳಿ ಮಾರ್ಗದರ್ಶನ ನೀಡುವ ವ್ಯವಸ್ಥೆ ರೂಪಿಸಲಾಗುತ್ತಿದೆ. ಹಿಂಗಾರು ಹಾಗೂ ಮರುಬಿತ್ತನೆಗೆ ಅಗತ್ಯ ಬೀಜ, ರಸಗೊಬ್ಬರಗಳ ದಾಸ್ತಾನು ಸಿದ್ಧವಾಗಿರಬೇಕು. ರೈತರಿಗೆ ಕಡಿಮೆ ನೀರಿನಲ್ಲಿ ಬೆಳೆಯುವ ಬೆಳೆಗಳನ್ನು ಪ್ರೋತ್ಸಾಹಿಸಬೇಕು.
ರಾಯಚೂರು ಜಿಲ್ಲೆಯಲ್ಲಿ ರೈತರ ಆತ್ಮಹತ್ಯೆಗೆ ಸಂಬಂಧಿಸಿದ ಬಾಕಿ ಪರಿಹಾರ ಪ್ರಕರಣಗಳು, ಸಿಡಿಲು, ಜಾನುವಾರುಗಳ ಪ್ರಾಣಹಾನಿ, ಮನೆ ಹಾನಿ, ಹಾವು ಕಡಿತ ಹಾಗೂ ಬಣವೆ ನಷ್ಟದ ಪ್ರಕರಣಗಳನ್ನು ತ್ವರಿತವಾಗಿ ಇತ್ಯರ್ಥಪಡಿಸಬೇಕು. ಕೃಷಿ ಪಂಪ್ಸೆಟ್ಗಳಿಗೆ ಸಮರ್ಪಕ ವಿದ್ಯುತ್ ಪೂರೈಕೆ ಮಾಡುವಲ್ಲಿ ಯಾವುದೇ ನೆಪ ಹೇಳದೆ ತಾಂತ್ರಿಕ ಸಮಸ್ಯೆಗಳನ್ನು ಬಗೆಹರಿಸಬೇಕು.
ಮಳೆ ಕೊರತೆ ಮತ್ತು ಹೆಚ್ಚುತ್ತಿರುವ ಉಷ್ಣಾಂಶದಿಂದ ಸಾರ್ವಜನಿಕರ ಆರೋಗ್ಯದ ಮೇಲೂ ಪರಿಣಾಮ ಬೀರುವ ಸಾಧ್ಯತೆಯಿದೆ. ಕುಡಿಯುವ ನೀರು ಹಾಗೂ ಟ್ಯಾಂಕರ್ ನೀರಿನ ಗುಣಮಟ್ಟವನ್ನು ಪರೀಕ್ಷಿಸಬೇಕು. ಡೆಂಘಿ, ಚಿಕೂನ್ಗುನ್ಯಾ ಸೇರಿದಂತೆ ಸಾಂಕ್ರಾಮಿಕ ರೋಗಗಳ ನಿಯಂತ್ರಣಕ್ಕೆ ಆರೋಗ್ಯ ಇಲಾಖೆ ಮುನ್ನೆಚ್ಚರಿಕೆ ವಹಿಸಬೇಕು.
ಎಲ್ ನಿನೊ ಪರಿಣಾಮ, ಹಠಾತ್ ಮಳೆ, ಪ್ರವಾಹ ಹಾಗೂ ಸಿಡಿಲಿನಂತಹ ಸಂಭವನೀಯ ಅಪಾಯಗಳನ್ನು ಗಮನದಲ್ಲಿಟ್ಟುಕೊಂಡು ಮಳೆಮಾಪನ ಕೇಂದ್ರಗಳ ಕಾರ್ಯನಿರ್ವಹಣೆ ಹಾಗೂ ವಿಪತ್ತು ನಿರ್ವಹಣೆಯ ಸಿದ್ಧತೆಗಳನ್ನು ಪರಿಶೀಲಿಸಬೇಕು.
ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತ್ ಸಿಇಒಗಳು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಕಚೇರಿಗಳಿಗೆ ಸೀಮಿತವಾಗದೆ ನಿಯಮಿತವಾಗಿ ಕ್ಷೇತ್ರ ಭೇಟಿ ನಡೆಸಿ ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕು. ತಾಲೂಕು ಉಸ್ತುವಾರಿ ಅಧಿಕಾರಿಗಳ ಸೇವೆಯನ್ನು ಬಳಸಿಕೊಂಡು, ಟಾಸ್ಕ್ಫೋರ್ಸ್ ಹಾಗೂ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆಗಳನ್ನು ನಡೆಸಬೇಕು. ವಾರಕ್ಕೊಮ್ಮೆ ಇಲಾಖಾವಾರು ಪ್ರಗತಿ ವರದಿ ಪಡೆದು ಜಿಲ್ಲಾ ಉಸ್ತುವಾರಿ ಸಚಿವರಿಗೆ ಮಾಹಿತಿ ನೀಡಬೇಕು. ಕರ್ತವ್ಯದಲ್ಲಿ ನಿರ್ಲಕ್ಷ್ಯ ವಹಿಸುವ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಶಿಫಾರಸು ಮಾಡಲು ಹಿಂದೆಮುಂದೆ ನೋಡುವುದಿಲ್ಲ.
ಬರದ ಈ ಸಂಕಷ್ಟದ ಸಂದರ್ಭದಲ್ಲಿ ರೈತರು, ಕೂಲಿ ಕಾರ್ಮಿಕರು, ಬಡವರು ಹಾಗೂ ಜನಸಾಮಾನ್ಯರ ಬದುಕು ಮತ್ತು ಜೀವನೋಪಾಯವನ್ನು ರಕ್ಷಿಸಲು ಲಭ್ಯವಿರುವ ಎಲ್ಲ ಸಂಪನ್ಮೂಲಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು. -
Dr. G Parameshwara
@DrParameshwara
ಮತದಾನದ ಹಕ್ಕು ನಮ್ಮ ಗಣರಾಜ್ಯ ವ್ಯವಸ್ಥೆಯ ಅಡಿಪಾಯ. ಈ ಹಕ್ಕಿಗೆ ಧಕ್ಕೆ ಎದುರಾದಾಗ, ನಮ್ಮ ಸಂವಿಧಾನದ ಆತ್ಮಕ್ಕೇ ಅಪಾಯ ಎದುರಾದಂತೆ.
ದೆಹಲಿಯ ಜಂತರ್ ಮಂತರ್ ಮತ್ತು ರಾಜ್ಘಾಟ್ನಲ್ಲಿ ನಡೆಯುತ್ತಿರುವ ಪ್ರತಿಭಟನೆಗಳು ನಮ್ಮ ಪ್ರಜಾಸತ್ತಾತ್ಮಕ ಸಂಸ್ಥೆಗಳ ಸ್ವಾಯತ್ತತೆ ಹಾಗೂ ಮುಖ್ಯ ಚುನಾವಣಾ ಆಯುಕ್ತರಾದ ಶ್ರೀ ಜ್ಞಾನೇಶ್ ಕುಮಾರ್ ಅವರ ಕಾರ್ಯನಿರ್ವಹಣೆಯ ಬಗ್ಗೆ ದೇಶಾದ್ಯಂತ ಹೆಚ್ಚುತ್ತಿರುವ ಆತಂಕ ಮತ್ತು ಕಳವಳದ ಅಭಿವ್ಯಕ್ತಿಯಾಗಿವೆ.
ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (Special Intensive Revision – SIR) ಪ್ರಕ್ರಿಯೆಯ ಸುತ್ತ ಗಂಭೀರ ಆರೋಪಗಳು ಕೇಳಿಬರುತ್ತಿವೆ, ಈ ಬಗ್ಗೆ ಚುನಾವಣಾ ಆಯೋಗದ ಇಬ್ಬರು ಆಯುಕ್ತರು ಆಕ್ಷೇಪ ವ್ಯಕ್ತಪಡಿಸಿದ್ದರೆಂದು ಪತ್ರಿಕೆಯೊಂದು ತನಿಖಾ ವರದಿಯನ್ನು ಪ್ರಕಟಿಸಿತ್ತು ಹಾಗೂ ಲಕ್ಷಾಂತರ ಮತದಾರರ ಹೆಸರುಗಳನ್ನು ಪಟ್ಟಿಯಿಂದ ತೆಗೆದುಹಾಕಿರುವ ಕುರಿತು ದೇಶದ ಜನರಲ್ಲಿ ಪ್ರಶ್ನೆಗಳಿದ್ದು, ಈ ಬಗ್ಗೆ ಸ್ವತಂತ್ರ ಹಾಗೂ ಪಾರದರ್ಶಕ ತನಿಖೆ ನಡೆಯಬೇಕಿದೆ.
ಚುನಾವಣಾ ಆಯೋಗವು ಕೇಂದ್ರದಲ್ಲಿ ಅಧಿಕಾರದಲ್ಲಿರುವ ಸರ್ಕಾರದ ಅಧೀನ ಸಂಸ್ಥೆಯಲ್ಲ. ಅದು ಸಂವಿಧಾನದ 324ನೇ ವಿಧಿಯಡಿ ನಮ್ಮ ಚುನಾವಣಾ ಪ್ರಕ್ರಿಯೆಯ ಪಾವಿತ್ರ್ಯತೆ, ನ್ಯಾಯಸಮ್ಮತತೆ ಮತ್ತು ವಿಶ್ವಾಸಾರ್ಹತೆಯನ್ನು ಕಾಪಾಡುವ ಮಹತ್ವದ ಜವಾಬ್ದಾರಿ ಹೊಂದಿರುವ ಸ್ವಾಯತ್ತ ಸಾಂವಿಧಾನಿಕ ಸಂಸ್ಥೆಯಾಗಿದೆ.
ಅನಿಯಂತ್ರಿತ ಹಾಗೂ ಏಕಪಕ್ಷೀಯ ಕಾರ್ಯವಿಧಾನಗಳ ಮೂಲಕ ಅರ್ಹ ಮತದಾರರನ್ನು ಮತದಾನದ ಹಕ್ಕಿನಿಂದ ವಂಚಿತರನ್ನಾಗಿಸಿದರೆ, ಸಾಂಸ್ಥಿಕ ಹೊಣೆಗಾರಿಕೆಯಿಲ್ಲದೆ ಚುನಾವಣೆಗೆ ಸಂಬಂಧಿಸಿದ ನಿರ್ಧಾರಗಳನ್ನು ಕೈಗೊಂಡರೆ ಅಥವಾ ಅಧಿಕಾರದಲ್ಲಿರುವವರಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಸಾಂವಿಧಾನಿಕ ವ್ಯವಸ್ಥೆಯನ್ನು ದುರ್ಬಳಕೆ ಮಾಡಿಕೊಂಡರೆ, ಅದರ ಪರಿಣಾಮಗಳು ಕೇವಲ ಒಂದು ಚುನಾವಣೆಗೆ ಸೀಮಿತವಾಗಿರುವುದಿಲ್ಲ. ಅವು ರಾಜಕೀಯ ಸಮಾನತೆ, ಪ್ರಜೆಗಳ ಸಾರ್ವಭೌಮತ್ವ ಹಾಗೂ ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಗಳನ್ನು ನಡೆಸಬೇಕೆಂಬ ಸಂವಿಧಾನದ ಮೂಲ ಆಶಯಗಳಿಗೇ ಧಕ್ಕೆ ಉಂಟುಮಾಡುತ್ತವೆ.
ಸಾಂವಿಧಾನಿಕ ಸಂಸ್ಥೆಗಳ ಕಾರ್ಯನಿರ್ವಹಣೆಯಲ್ಲಿ ರಾಜಕೀಯ ಹಸ್ತಕ್ಷೇಪ ನಡೆಯುತ್ತಿದೆ ಎಂಬ ಗಂಭೀರ ವಿಚಾರಗಳ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರ ಉತ್ತರ ನೀಡಲೇಬೇಕು. ಮೋದಿಯವರ ಸರ್ಕಾರ ಸಂಸತ್ತಿನಲ್ಲಿ ಎಷ್ಟೇ ದೊಡ್ಡ ಬಹುಮತ ಹೊಂದಿದ್ದರೂ, ಸಂವಿಧಾನಿಕವಾದ ಸ್ವಾಯತ್ತ ಸಂಸ್ಥೆಗಳ ಮೇಲೆ ಅಧಿಕಾರ ಚಲಾಯಿಸುವಂತಿಲ್ಲ. ಇದನ್ನು ಕೇಂದ್ರ ಮರೆತಂತಿದೆ.
ಶ್ರೀ @RahulGandhi ಅವರು, ಶ್ರೀ @kharge ಅವರು, ಶ್ರೀಮತಿ @priyankagandhi ಅವರು ಹಾಗೂ ಈ ಹೋರಾಟದಲ್ಲಿ ಭಾಗಿಯಾಗಿರುವ ಎಲ್ಲ ನಾಯಕರು ಮತ್ತು ನಾಗರಿಕರು, ನಮ್ಮ ಚುನಾವಣಾ ವ್ಯವಸ್ಥೆಯಲ್ಲಿ ಹೊಣೆಗಾರಿಕೆ, ಪಾರದರ್ಶಕತೆ ಮತ್ತು ಸಾರ್ವಜನಿಕ ವಿಶ್ವಾಸವನ್ನು ಮರುಸ್ಥಾಪಿಸಬೇಕೆಂದು ಒತ್ತಾಯಿಸುತ್ತಿದ್ದಾರೆ. ಈ ಹೋರಾಟದಲ್ಲಿ ಅವರಿಗೆ ನನ್ನ ಸಂಪೂರ್ಣ ಬೆಂಬಲ ನೀಡುತ್ತಿದ್ದೇನೆ.
ಶಾಂತಿಯುತ ಪ್ರತಿಭಟನೆಗಳನ್ನು ಹತ್ತಿಕ್ಕುವುದರಿಂದ ಅಥವಾ ರಾಜಕೀಯ ವಾಗ್ದಾಳಿಯಿಂದ ಜ್ಞಾನೇಶ್ ಕುಮಾರ್ ಅವರ ವಿರುದ್ಧ ಕೇಳಿಬಂದಿರುವ ಆರೋಪಗಳನ್ನು ಮುಚ್ಚಿಹಾಕಲು ಸಾಧ್ಯವಿಲ್ಲ. ಅವರ ವಿರುದ್ಧ ಪಾರದರ್ಶಕ, ಸ್ವತಂತ್ರ ಹಾಗೂ ನ್ಯಾಯಯುತ ತನಿಖೆಯಾಗಬೇಕು. ಈ ಮೂಲಕ ಅವರ ಮೇಲಿನ ಆರೋಪಕ್ಕೆ ಉತ್ತರ ಸಿಗಬೇಕು. ಇದು ನನ್ನ ಒತ್ತಾಯವೂ ಆಗಿದೆ.
ಪ್ರಜಾಪ್ರಭುತ್ವವೆಂದರೆ ಕೇವಲ ಕಾಲಕಾಲಕ್ಕೆ ಚುನಾವಣೆಗಳನ್ನು ನಡೆಸುವುದಷ್ಟೇ ಅಲ್ಲ. ಪ್ರತಿಯೊಬ್ಬ ಅರ್ಹ ವ್ಯಕ್ತಿಗೂ ಸ್ವತಂತ್ರವಾಗಿ ಮತ ಚಲಾಯಿಸುವ ಅವಕಾಶವಿರಬೇಕು. ಪ್ರತಿಯೊಂದು ಮತವೂ ನ್ಯಾಯಸಮ್ಮತವಾಗಿ ಎಣಿಕೆಯಾಗಬೇಕು. ಈ ಪ್ರಕ್ರಿಯೆಯನ್ನು ರಕ್ಷಿಸುವ ಜವಾಬ್ದಾರಿ ಹೊತ್ತಿರುವ ಪ್ರತಿಯೊಂದು ಸಂಸ್ಥೆಯೂ ಯಾವುದೇ ರಾಜಕೀಯ ಒತ್ತಡಕ್ಕೆ ಮಣಿಯದೆ ಸ್ವತಂತ್ರವಾಗಿ ಕಾರ್ಯನಿರ್ವಹಿಸಬೇಕು. ಇಂತಹ ವ್ಯವಸ್ಥೆ ಇದ್ದಾಗ ಮಾತ್ರ ಪ್ರಜಾಪ್ರಭುತ್ವ ನಿಜವಾದ ಅರ್ಥದಲ್ಲಿ ಜೀವಂತವಾಗಿರುತ್ತದೆ.
ನಮ್ಮ ಗಣರಾಜ್ಯದ ಭವಿಷ್ಯದ ಬಗ್ಗೆ ಕಾಳಜಿ ಹೊಂದಿರುವ ಪ್ರತಿಯೊಬ್ಬ ನಾಗರಿಕರೂ ಪ್ರಜಾಸತ್ತಾತ್ಮಕ ಚರ್ಚೆಗಳಲ್ಲಿ ಶಾಂತಿಯುತವಾಗಿ ಭಾಗವಹಿಸಬೇಕು. ಮಾಧ್ಯಮಗಳು ಹಾಗೂ ಸಾಮಾಜಿಕ ಜಾಲತಾಣಗಳ ಮೂಲಕ ನ್ಯಾಯಸಮ್ಮತ ಪ್ರಶ್ನೆಗಳನ್ನು ಎತ್ತಬೇಕು. ಸಂವಿಧಾನ ನೀಡಿರುವ ಸ್ವಾತಂತ್ರ್ಯ ಮತ್ತು ಹಕ್ಕುಗಳನ್ನು ಜವಾಬ್ದಾರಿಯುತವಾಗಿ ಚಲಾಯಿಸಬೇಕು ಎಂದು ನಾನು ಮನವಿ ಮಾಡುತ್ತೇನೆ.
ಇದು ಯಾವುದೇ ಒಂದು ರಾಜಕೀಯ ಪಕ್ಷಕ್ಕೆ ಅಥವಾ ಸಿದ್ಧಾಂತಕ್ಕೆ ಸೀಮಿತವಾದ ಪ್ರಶ್ನೆಯಲ್ಲ. ಜಾತಿ, ಧರ್ಮ, ಪ್ರದೇಶ ಅಥವಾ ರಾಜಕೀಯ ನಿಲುವುಗಳ ಭೇದವಿಲ್ಲದೆ ಪ್ರತಿಯೊಬ್ಬ ಭಾರತೀಯರನ್ನೂ ಕಾಡಬೇಕಾದ, ಪ್ರತಿ ಭಾರತೀಯರಿಗೂ ಸಂಬಂಧಿಸಿದ ಅತ್ಯಂತ ಮಹತ್ವದ ವಿಷಯವಾಗಿದೆ.
ಸಂವಿಧಾನವು ಜನತೆಗೆ ಸೇರಿದ್ದು. ಮತದಾನದ ಹಕ್ಕು ಜನತೆಗೆ ಸೇರಿದ್ದು. ನಮ್ಮ ದೇಶದ ಸಾಂವಿಧಾನಿಕ ಸಂಸ್ಥೆಗಳು ಸಂವಿಧಾನಕ್ಕೆ ಉತ್ತರದಾಯಿಗಳಾಗಿರಬೇಕೇ ಹೊರತು, ಅಧಿಕಾರದಲ್ಲಿರುವವರ ರಾಜಕೀಯ ಹಿತಾಸಕ್ತಿಗಳಿಗೆ ಅಡಿಯಾಳಾಗಿರಬಾರದು.
ಜೈ ಹಿಂದ್! ಜೈ ಸಂವಿಧಾನ್! -
Dr. G Parameshwara
@DrParameshwara
The right to vote is the foundation of our Republic. When that right is threatened, the very soul of our Constitution is at stake.
The protests unfolding at Jantar Mantar, and Rajghat are an expression of growing national concern over the independence of our democratic institutions and the conduct of Chief Election Commissioner Shri Gyanesh Kumar.
The serious allegations surrounding the Special Intensive Revision of electoral rolls, the reported objections raised by fellow Election Commissioners, and the questions over the deletion of millions of voter names demand a transparent, independent and credible investigation.
The Election Commission is not an extension of the ruling government. It is a constitutional institution entrusted under Article 324 with safeguarding the integrity of our elections.
If legitimate voters are excluded through arbitrary procedures, if electoral decisions are taken without institutional accountability, or if the constitutional machinery is used to favour those in power, the consequences extend far beyond one election. They strike at the principles of political equality, popular sovereignty and the constitutional mandate of free and fair elections.
The BJP-led Union Government (@BJP4India) must answer the serious concerns about political interference in constitutional institutions. No government, regardless of its parliamentary majority, can claim ownership over institutions that belong to the people of India.
I stand in solidarity with Shri @RahulGandhi ji, Shri @kharge ji, Smt. @priyankagandhi ji and the leaders and citizens demanding answers, accountability and the restoration of public confidence in our electoral system.
The questions raised against Shri Gyanesh Kumar cannot be brushed aside through political rhetoric or restrictions on peaceful protest. They deserve independent scrutiny, institutional transparency and due constitutional process.
Democracy cannot survive merely through the ritual of holding elections. It survives when every eligible citizen can vote freely, every vote is counted fairly, and every institution entrusted with protecting that process acts independently.
I urge every citizen concerned about the future of our Republic to participate peacefully in democratic discourse, raise legitimate questions through the media and social media, and exercise their constitutional freedoms responsibly.
This is a question that concerns every Indian, irrespective of party, ideology, caste, religion or region.
The Constitution belongs to the people. The vote belongs to the people. And the institutions of our Republic must remain accountable to the Constitution, never to the political interests of those in power.
Jai Hind! Jai Samvidhan!
@INCIndia -
Dr. G Parameshwara
@DrParameshwara
ಇಂದು ಕೊಪ್ಪಳ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಕೊಪ್ಪಳ ಮತ್ತು ರಾಯಚೂರು ಜಿಲ್ಲೆಗಳ ಬರ ಪರಿಸ್ಥಿತಿ ಹಾಗೂ ಬರ ನಿರ್ವಹಣೆಗೆ ಕೈಗೊಂಡಿರುವ ಕ್ರಮಗಳ ಕುರಿತು ಪರಿಶೀಲನಾ ಸಭೆ ನಡೆಸಿದೆ.
ಎರಡೂ ಜಿಲ್ಲೆಗಳಲ್ಲಿ ಕುಡಿಯುವ ನೀರಿನ ಲಭ್ಯತೆ, ಜಾನುವಾರುಗಳಿಗೆ ಮೇವಿನ ವ್ಯವಸ್ಥೆ, ಜನರು ಉದ್ಯೋಗ ಅರಸಿ ಗುಳೆ ಹೋಗುವುದನ್ನು ತಪ್ಪಿಸಲು ಸ್ಥಳೀಯವಾಗಿ ಉದ್ಯೋಗಾವಕಾಶ ಕಲ್ಪಿಸುವುದು ಹಾಗೂ ಬೆಳೆ ನಷ್ಟದಿಂದ ಸಂಕಷ್ಟದಲ್ಲಿರುವ ರೈತರಿಗೆ ಅಗತ್ಯ ನೆರವು ಒದಗಿಸುವ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದು, ಸೂಕ್ತ ನಿರ್ದೇಶನಗಳನ್ನು ನೀಡಿದೆ.
ಬರ ಪರಿಸ್ಥಿತಿಯಿಂದ ಜನಸಾಮಾನ್ಯರು ಹಾಗೂ ರೈತರು ಮತ್ತಷ್ಟು ಸಂಕಷ್ಟಕ್ಕೆ ಸಿಲುಕದಂತೆ ಮುನ್ನೆಚ್ಚರಿಕೆ ವಹಿಸಿ, ಅಗತ್ಯ ಪರಿಹಾರ ಕ್ರಮಗಳನ್ನು ತ್ವರಿತವಾಗಿ ಕೈಗೊಳ್ಳುವಂತೆ ಸೂಚಿಸಿದೆ.
ಸಭೆಯಲ್ಲಿ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರಾದ ಶಿವರಾಜ್ ತಂಗಡಗಿ, ಶಾಸಕರಾದ ರಾಘವೇಂದ್ರ ಹಿಟ್ನಾಳ್, ಕೊಪ್ಪಳ ಜಿಲ್ಲಾಧಿಕಾರಿಗಳಾದ ಸುರೇಶ್ ಹಿಟ್ನಾಳ್, ರಾಯಚೂರು ಜಿಲ್ಲಾಧಿಕಾರಿಗಳಾದ ಪೂವಿತಾ, ಕೊಪ್ಪಳ ಜಿಲ್ಲಾ ಪಂಚಾಯತ್ ಸಿಇಒ ವರ್ಣೀತ್ ನೇಗಿ ಹಾಗೂ ರಾಯಚೂರು ಜಿಲ್ಲಾ ಪಂಚಾಯತ್ ಸಿಇಒ ಈಶ್ವರ್ ಕುಮಾರ್ ಕಾಂದೂ ಉಪಸ್ಥಿತರಿದ್ದರು.
Today, I chaired a review meeting at the Koppal Deputy Commissioner’s Office on the drought situation in Koppal and Raichur districts and the measures being taken for drought management.
I reviewed the availability of drinking water, fodder for livestock, local employment to prevent distress migration, and support for farmers affected by crop loss, and issued necessary directions to the officials.
Officials were instructed to take precautionary measures and ensure that relief measures are implemented without delay, so that farmers and the public do not face further hardship due to the drought.
Koppal District In-charge Minister Shivaraj Tangadagi, MLA Raghavendra Hitnal, Koppal Deputy Commissioner Suresh Itnal, Raichur Deputy Commissioner Poovitha, Koppal Zilla Panchayat CEO Varneeth Negi, and Raichur Zilla Panchayat CEO Ishwar Kumar Kandoo were present. -
Dr. G Parameshwara
@DrParameshwara
ಬುಧವಾರ ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ಬಂಡ್ರಿ ಗ್ರಾಮದಲ್ಲಿ ಮೆಕ್ಕೆಜೋಳ ಬೆಳೆದ ಜಮೀನಿಗೆ ಭೇಟಿ ನೀಡಿ, ಬರ ಪರಿಸ್ಥಿತಿ ಹಾಗೂ ಬೆಳೆ ಹಾನಿಯನ್ನು ಪರಿಶೀಲಿಸಿದೆ. ಬಳಿಕ ರೈತರೊಂದಿಗೆ ಸಂವಾದ ನಡೆಸಿ, ಬೆಳೆ ನಷ್ಟದಿಂದ ಎದುರಿಸುತ್ತಿರುವ ಸಂಕಷ್ಟಗಳು ಹಾಗೂ ಸಮಸ್ಯೆಗಳನ್ನು ಆಲಿಸಿದೆ.
ಮಳೆ ಕೊರತೆಯಿಂದ ಬೆಳೆ ಕಳೆದುಕೊಂಡಿರುವ ರೈತರಿಗೆ ಅಗತ್ಯ ಪರಿಹಾರ ಒದಗಿಸುವುದು, ಕುಡಿಯುವ ನೀರು, ಜಾನುವಾರುಗಳಿಗೆ ಮೇವು ಸೇರಿದಂತೆ ಮೂಲಸೌಕರ್ಯಗಳ ಕೊರತೆಯಾಗದಂತೆ ಕ್ರಮ ಕೈಗೊಳ್ಳುವುದು ನಮ್ಮ ಸರ್ಕಾರದ ಮೊದಲ ಆದ್ಯತೆ.
ರೈತರ ಸಂಕಷ್ಟಕ್ಕೆ ಸ್ಪಂದಿಸಿ, ಅವರ ಬದುಕು ಮತ್ತು ಜೀವನೋಪಾಯವನ್ನು ರಕ್ಷಿಸಲು ಅಗತ್ಯವಿರುವ ಎಲ್ಲ ಕ್ರಮಗಳನ್ನು ಕೈಗೊಳ್ಳುತ್ತೇವೆ ಎಂದು ಭರವಸೆ ನೀಡಿದೆ.This media couldn't be displayed. See it on the original post. -
Dr. G Parameshwara
@DrParameshwara
ವಿಜಯನಗರ ಜಿಲ್ಲೆಯಲ್ಲಿ 1,65,359 ರೈತರು ಬೆಳೆ ವಿಮೆಗೆ ನೋಂದಾಯಿಸಿಕೊಂಡಿದ್ದಾರೆ. ಅರ್ಹ ರೈತರಿಗೆ ವಿಮಾ ಪರಿಹಾರದ ಮೊತ್ತವು ಯಾವುದೇ ವಿಳಂಬವಿಲ್ಲದೆ ಶೀಘ್ರವಾಗಿ ಮತ್ತು ನೇರವಾಗಿ ತಲುಪುವಂತೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು.
ರೈತರ ಸಂಕಷ್ಟದ ಸಂದರ್ಭದಲ್ಲಿ ಅವರಿಗೆ ದೊರೆಯಬೇಕಾದ ನೆರವು ತ್ವರಿತವಾಗಿ ತಲುಪಿಸುವುದು ಸರ್ಕಾರದ ಆದ್ಯತೆಯಾಗಿದ್ದು, ರೈತರ ಹಿತ ಕಾಪಾಡಲು ಸರ್ಕಾರ ಸದಾ ಅವರೊಂದಿಗಿರಲಿದೆ.
In Vijayanagara district, 1,65,359 farmers have enrolled for crop insurance. Necessary steps will be taken to ensure that eligible farmers receive their insurance compensation quickly, directly and without delay.
Ensuring timely support to farmers during this difficult period remains a priority for our Government. We will continue to stand with them and protect their interests. -
Dr. G Parameshwara
@DrParameshwara
ಬಹುಗ್ರಾಮ ಕುಡಿಯುವ ನೀರಿನ ಯೋಜನೆಯ ಕಾಮಗಾರಿಗೆ ವೇಗ ನೀಡಲಾಗಿದ್ದು, ಮಾರ್ಚ್ ವೇಳೆಗೆ ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ. ಈ ಯೋಜನೆಯಿಂದ ಹಲವು ಗ್ರಾಮಗಳ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ದೊರೆಯಲಿದೆ.
60 ಹಳ್ಳಿಗಳಿಗೆ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸುವುದರ ಜೊತೆಗೆ, 5 ತಾಲ್ಲೂಕುಗಳಿಗೆ ಶಾಶ್ವತ ನೀರಿನ ವ್ಯವಸ್ಥೆ ಒದಗಲಿದೆ. ಪಾವಗಡವರೆಗೆ ನೀರು ತಲುಪಿಸಲು ₹2,640 ಕೋಟಿ ವೆಚ್ಚ ಮಾಡಲಾಗಿದೆ.
ಕುಡಿಯುವ ನೀರು ಪ್ರತಿಯೊಂದು ಕುಟುಂಬದ ಮೂಲಭೂತ ಹಕ್ಕು. ಜನರ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಸರ್ಕಾರ ಸದಾ ಸಿದ್ಧವಾಗಿದ್ದು, ಈ ಯೋಜನೆಯ ಅನುಷ್ಠಾನದಲ್ಲಿ ಜನರೊಂದಿಗೆ ಸದಾ ಜೊತೆಯಾಗಿ ನಿಲ್ಲಲಿದೆ.
Work on the multi-village drinking water project has been accelerated, with completion targeted by March. The project aims to provide a long-term solution to drinking water shortages across several villages.
It will provide drinking water to 60 villages and a permanent water supply system to 5 taluks. Around ₹2,640 crore has been spent to take water up to Pavagada.
Access to drinking water is a basic necessity. Our Government remains committed to providing a lasting solution to water shortages and ensuring the project is completed effectively. -
Dr. G Parameshwara
@DrParameshwara
Today, I visited the farm of Nagamma Sharanegowda at Kalamangi village in Sindhanur taluk of Raichur district and inspected crops damaged by the drought. I later interacted with farmers, heard their concerns and spoke to the media.
Our Government is committed to supporting farmers, the poor and labourers affected by the drought. We have already sought crop-loss relief from the Centre and are awaiting a positive response. Though no relief funds have been released by the Centre so far, we have not made farmers wait. As the first instalment, we have provided ₹2,500 each at a total cost of ₹1,250 crore. Under Central norms, crop losses above 33% are eligible for ₹8,500 per hectare in relief, and we will also release the next instalment.
Priority has been given to drinking water, fodder for livestock and essential drought-relief works. Deputy Commissioners have been instructed to utilise the ₹329 crore available with them to respond to these urgent needs.
Despite the drought, we continue to implement our Guarantee schemes, with an annual outlay of around ₹52,000 crore, without interruption. Anna Bhagya, in particular, is providing vital support to poor families during this difficult period. Allegations that the Government has no funds or is bankrupt are far from the truth. Protecting the interests of farmers and the poor remains our responsibility.
During discussions on farmers’ electricity concerns, it was brought to our notice that technical problems are arising in some places because more agricultural pump sets are connected to transformers than their capacity permits. Officials have been instructed to replace damaged transformers and resolve power-supply issues. Farmers are currently being provided six hours of electricity, compared with seven hours earlier, and steps are being taken to ensure the power they need.
Deficient rainfall has affected hydropower generation of around 7,500 MW. The State has nearly 36.5 lakh agricultural pump sets, all of which require electricity, while Karnataka’s overall power demand has risen to around 20,000 MW. We are taking the necessary steps to secure additional power and meet this demand.
Electricity generated in Raichur cannot be restricted to that district alone; power must be supplied across the State. Officials have been directed to promptly resolve any technical issues relating to coal supply or generation at the Raichur Thermal Power Station. There is no shortage of funds for purchasing electricity, and payments to suppliers are being made within the timelines prescribed in the respective agreements.
No matter how severe the drought becomes, we will not abandon the farming community in this crisis. We will continue every necessary measure -- crop-loss relief, drinking water, fodder, electricity supply and Guarantee scheme support -- to protect the lives and livelihoods of farmers and poor families. -
Dr. G Parameshwara
@DrParameshwara
ಇಂದು ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಕಲಮಂಗಿ ಗ್ರಾಮದಲ್ಲಿ ರೈತ ಮಹಿಳೆ ನಾಗಮ್ಮ ಶರಣೇಗೌಡ ಅವರ ಜಮೀನಿಗೆ ಭೇಟಿ ನೀಡಿ, ಬರದಿಂದ ಹಾನಿಗೊಳಗಾದ ಬೆಳೆಗಳನ್ನು ಪರಿಶೀಲಿಸಿದೆ. ಬಳಿಕ ರೈತರೊಂದಿಗೆ ಸಂವಾದ ನಡೆಸಿ, ಅವರ ಸಮಸ್ಯೆಗಳನ್ನು ಆಲಿಸಿ, ಸುದ್ದಿಗಾರರೊಂದಿಗೆ ಮಾತನಾಡಿದೆ.
ಬರದಿಂದ ಸಂಕಷ್ಟದಲ್ಲಿರುವ ರೈತರು, ಬಡವರು ಹಾಗೂ ಕೂಲಿ ಕಾರ್ಮಿಕರ ನೆರವಿಗೆ ನಮ್ಮ ಸರ್ಕಾರ ಬದ್ಧವಾಗಿದೆ. ಬೆಳೆ ಹಾನಿಗೆ ಪರಿಹಾರ ಕೋರಿ ಕೇಂದ್ರ ಸರ್ಕಾರಕ್ಕೆ ಈಗಾಗಲೇ ಮನವಿ ಸಲ್ಲಿಸಿದ್ದು, ಸಕಾರಾತ್ಮಕ ಸ್ಪಂದನೆಯ ನಿರೀಕ್ಷೆಯಲ್ಲಿದ್ದೇವೆ.
ಕೇಂದ್ರದಿಂದ ಈವರೆಗೆ ಪರಿಹಾರ ಧನ ಬಿಡುಗಡೆಯಾಗದಿದ್ದರೂ, ರೈತರನ್ನು ಕಾಯಿಸದೆ ಮೊದಲ ಕಂತಿನಲ್ಲಿ ₹1,250 ಕೋಟಿ ವೆಚ್ಚದಲ್ಲಿ ತಲಾ ₹2,500 ಪರಿಹಾರ ನೀಡಿದ್ದೇವೆ. ಶೇ.33ಕ್ಕಿಂತ ಹೆಚ್ಚಿನ ಬೆಳೆ ನಷ್ಟಕ್ಕೆ ಪ್ರತಿ ಹೆಕ್ಟೇರ್ಗೆ ₹8,500 ಪರಿಹಾರ ನೀಡುವ ಕೇಂದ್ರದ ಮಾನದಂಡವಿದ್ದು, ಮುಂದಿನ ಕಂತಿನ ಪರಿಹಾರವನ್ನೂ ಬಿಡುಗಡೆ ಮಾಡುತ್ತೇವೆ.
ಕುಡಿಯುವ ನೀರು, ಜಾನುವಾರುಗಳಿಗೆ ಮೇವು ಹಾಗೂ ಅಗತ್ಯ ಬರ ಪರಿಹಾರ ಕಾಮಗಾರಿಗಳಿಗೆ ಆದ್ಯತೆ ನೀಡಲಾಗಿದೆ. ಜಿಲ್ಲಾಧಿಕಾರಿಗಳ ಬಳಿ ಲಭ್ಯವಿರುವ ₹329 ಕೋಟಿ ಅನುದಾನವನ್ನು ಈ ಉದ್ದೇಶಗಳಿಗೆ ಬಳಸಿಕೊಂಡು ಜನರ ಸಂಕಷ್ಟಕ್ಕೆ ಸ್ಪಂದಿಸುವಂತೆ ಸೂಚಿಸಿದ್ದೇನೆ.
ಬರ ಪರಿಸ್ಥಿತಿಯ ನಡುವೆಯೂ ವಾರ್ಷಿಕ ₹52,000 ಕೋಟಿ ವೆಚ್ಚದ ಗ್ಯಾರಂಟಿ ಯೋಜನೆಗಳನ್ನು ಯಾವುದೇ ಅಡೆತಡೆಯಿಲ್ಲದೆ ಮುಂದುವರಿಸಿದ್ದೇವೆ. ವಿಶೇಷವಾಗಿ ಅನ್ನಭಾಗ್ಯ ಯೋಜನೆ ಇಂತಹ ಸಂಕಷ್ಟದ ಸಂದರ್ಭದಲ್ಲಿ ಬಡ ಕುಟುಂಬಗಳಿಗೆ ಆಸರೆಯಾಗಿದೆ. ಸರ್ಕಾರದ ಬಳಿ ಹಣವಿಲ್ಲ, ದಿವಾಳಿಯಾಗಿದೆ ಎಂಬ ವಿಪಕ್ಷಗಳ ಆರೋಪ ಸತ್ಯಕ್ಕೆ ದೂರವಾದದ್ದು. ರೈತರು ಹಾಗೂ ಬಡವರ ಹಿತ ಕಾಪಾಡುವುದು ನಮ್ಮ ಜವಾಬ್ದಾರಿಯಾಗಿದೆ.
ರೈತರ ವಿದ್ಯುತ್ ಸಮಸ್ಯೆಗಳ ಕುರಿತು ಚರ್ಚಿಸಿದಾಗ, ಕೆಲವೆಡೆ ವಿದ್ಯುತ್ ಪರಿವರ್ತಕಗಳ ಸಾಮರ್ಥ್ಯಕ್ಕಿಂತ ಹೆಚ್ಚಿನ ಕೃಷಿ ಪಂಪ್ಸೆಟ್ಗಳನ್ನು ಸಂಪರ್ಕಿಸಿರುವುದರಿಂದ ತಾಂತ್ರಿಕ ತೊಂದರೆಗಳು ಉಂಟಾಗುತ್ತಿರುವುದು ಗಮನಕ್ಕೆ ಬಂದಿದೆ.
ಹಾನಿಗೊಳಗಾದ ಪರಿವರ್ತಕಗಳ ಬದಲಾವಣೆ ಹಾಗೂ ವಿದ್ಯುತ್ ಪೂರೈಕೆಯ ಸಮಸ್ಯೆಗಳನ್ನು ಪರಿಹರಿಸಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಈ ಹಿಂದೆ ನೀಡುತ್ತಿದ್ದ ಏಳು ಗಂಟೆಗಳ ಬದಲಾಗಿ ಪ್ರಸ್ತುತ ಆರು ಗಂಟೆಗಳ ಕಾಲ ವಿದ್ಯುತ್ ಪೂರೈಸಲಾಗುತ್ತಿದ್ದು, ರೈತರಿಗೆ ಅಗತ್ಯ ವಿದ್ಯುತ್ ಒದಗಿಸಲು ಕ್ರಮ ಕೈಗೊಳ್ಳಲಾಗುತ್ತಿದೆ.
ಮಳೆ ಕೊರತೆಯಿಂದ ಸುಮಾರು 7,500 ಮೆಗಾವಾಟ್ ಸಾಮರ್ಥ್ಯದ ಜಲವಿದ್ಯುತ್ ಉತ್ಪಾದನೆಗೆ ಹಿನ್ನಡೆಯಾಗಿದೆ. ರಾಜ್ಯದಲ್ಲಿ ಸುಮಾರು 36.5 ಲಕ್ಷ ಕೃಷಿ ಪಂಪ್ಸೆಟ್ಗಳಿದ್ದು, ಇವೆಲ್ಲಕ್ಕೂ ವಿದ್ಯುತ್ ಒದಗಿಸುವ ಜವಾಬ್ದಾರಿ ನಮ್ಮ ಮೇಲಿದೆ. ರಾಜ್ಯದ ವಿದ್ಯುತ್ ಬೇಡಿಕೆ ಸುಮಾರು 20,000 ಮೆಗಾವಾಟ್ಗೆ ಏರಿಕೆಯಾಗಿರುವ ಹಿನ್ನೆಲೆಯಲ್ಲಿ ಅಗತ್ಯ ವಿದ್ಯುತ್ ಪಡೆದುಕೊಂಡು ಬೇಡಿಕೆ ಪೂರೈಸಲು ಕ್ರಮ ಕೈಗೊಳ್ಳುತ್ತಿದ್ದೇವೆ.
ರಾಯಚೂರಿನಲ್ಲಿ ಉತ್ಪಾದನೆಯಾಗುವ ವಿದ್ಯುತ್ ಅನ್ನು ಆ ಜಿಲ್ಲೆಗೆ ಮಾತ್ರ ಸೀಮಿತಗೊಳಿಸಲು ಸಾಧ್ಯವಿಲ್ಲ. ರಾಜ್ಯದ ಎಲ್ಲ ಭಾಗಗಳಿಗೂ ವಿದ್ಯುತ್ ಪೂರೈಸಬೇಕಿದೆ. ರಾಯಚೂರು ಶಾಖೋತ್ಪನ್ನ ವಿದ್ಯುತ್ ಸ್ಥಾವರದ ಕಲ್ಲಿದ್ದಲು ಹಾಗೂ ಉತ್ಪಾದನೆಗೆ ಸಂಬಂಧಿಸಿ ತಾಂತ್ರಿಕ ಸಮಸ್ಯೆಗಳಿದ್ದರೆ ತ್ವರಿತವಾಗಿ ಬಗೆಹರಿಸಲು ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದೇನೆ. ವಿದ್ಯುತ್ ಖರೀದಿಗೆ ಹಣದ ಕೊರತೆಯಿಲ್ಲ. ಪೂರೈಕೆದಾರರೊಂದಿಗೆ ಮಾಡಿಕೊಂಡಿರುವ ಒಪ್ಪಂದಗಳ ಪ್ರಕಾರ ನಿಗದಿತ ಅವಧಿಯಲ್ಲಿ ಹಣ ಪಾವತಿಸಲಾಗುತ್ತಿದೆ.
ಬರ ಎಷ್ಟೇ ತೀವ್ರವಾಗಿದ್ದರೂ ರೈತ ಸಮುದಾಯವನ್ನು ಸಂಕಷ್ಟದಲ್ಲಿ ಕೈಬಿಡುವುದಿಲ್ಲ. ಬೆಳೆ ಪರಿಹಾರ, ಕುಡಿಯುವ ನೀರು, ಮೇವು, ವಿದ್ಯುತ್ ಪೂರೈಕೆ ಹಾಗೂ ಗ್ಯಾರಂಟಿ ಯೋಜನೆಗಳ ಮೂಲಕ ರೈತರು ಮತ್ತು ಬಡವರ ಬದುಕಿಗೆ ಆಸರೆಯಾಗಲು ಅಗತ್ಯವಿರುವ ಎಲ್ಲ ಕ್ರಮಗಳನ್ನು ಮುಂದುವರಿಸುತ್ತೇವೆ. -
Dr. G Parameshwara
@DrParameshwara
ಬರದಿಂದಾಗಿ ಕೊಪ್ಪಳದ ರೈತರು, ಜನಸಾಮಾನ್ಯರು ನಮ್ಮ ಸರ್ಕಾರದ ನೆರವನ್ನು ಎದುರು ನೋಡುತ್ತಿದ್ದಾರೆ. ಅವರ ಕಷ್ಟ ನಷ್ಟವನ್ನು ಆಲಿಸಿ, ನಮ್ಮಿಂದ ಸಾಧ್ಯವಾಗುವ ಎಲ್ಲಾ ರೀತಿಯ ನೆರವನ್ನು ಒದಗಿಸಿ, ಜನರ ಬದುಕನ್ನು ಸಹಜ ಸ್ಥಿತಿಗೆ ತರಬೇಕೆಂದು ನಿಶ್ಚಯಿಸಿಕೊಂಡು ಇಂದು ಕೊಪ್ಪಳಕ್ಕೆ ಬಂದಿಳಿದೆ, ಈ ಸಂದರ್ಭದಲ್ಲಿ ಸ್ಥಳೀಯ ಜನರು ತೋರಿದ ಪ್ರೀತಿ, ಕೋರಿದ ಅಕ್ಕರೆಯ ಸ್ವಾಗತ ನನ್ನ ಸಂಕಲ್ಪಕ್ಕೆ ಮತ್ತಷ್ಟು ಬಲ ತುಂಬಿದೆ.
ಶತಮಾನಗಳಲ್ಲೇ ಕಂಡುಕೇಳರಿಯದಂತ ಬರವು ನಾಡನ್ನು ಆವರಿಸಿರುವ ಈ ಹೊತ್ತಿನಲ್ಲಿ ಕೊಪ್ಪಳದ ಜನರ ಜೊತೆ ನಾನು ಮತ್ತು ನಮ್ಮ ಸರ್ಕಾರವಿದೆ ಎನ್ನುವ ಮಾತನ್ನು ಕೊಪ್ಪಳದ ಜನತೆಗೆ ಹೇಳಲು ಬಯಸುತ್ತೇನೆ.This media couldn't be displayed. See it on the original post. -
Dr. G Parameshwara
@DrParameshwara
Today, I visited the farm of Nagamma Sharanegowda at Kalamangi village in Sindhanur taluk of Raichur district and inspected crops damaged by the drought. I later interacted with farmers and listened to the problems they are facing.
Of the State’s 240 taluks, 217 have already been declared drought-affected, while the process of declaring around 10 more taluks is underway. In my 40 years of public life, I have not seen a drought of this severity. During the past two days of visits, I have seen crop losses of up to 98% in several places. Farmers who borrowed money for cultivation are now in deep distress after losing their crops.
Since June, we have been holding meetings with officials and taking advance measures to manage the drought effectively. This is a crisis affecting farmers across political lines, and the Centre, the State and all political parties must respond together.
For immediate relief, we have taken steps to provide ₹2,500 as the first instalment of crop compensation from an allocation of ₹1,250 crore. Further relief will also be provided. At the same time, the Government continues to implement ₹52,000 crore worth of Guarantee schemes annually and provide ₹22,000 crore in electricity subsidy for farmers. Despite financial constraints, we are prepared to extend further support to farmers, even if it requires additional borrowing.
We have provided ₹306 crore for drinking water and ₹25 crore for fodder banks and fodder kits. Necessary funds have been provided to every Assembly constituency, while resources from the Kalyana Karnataka Region Development Board are also being utilised. To prevent distress migration, officials have been directed to create local employment under employment guarantee works and ensure timely payment of wages.
Officials have also been instructed to provide six hours of uninterrupted power supply to agricultural pump sets, preferably during the daytime and with adequate voltage, and to resolve technical issues without delay. Public grievances raised during the visit were taken up on the spot and necessary action initiated.
Protecting the lives and livelihoods of farmers, labourers and the poor is our Government’s first priority. No matter how severe the drought, we will not leave our farmers to face this crisis alone. -
Dr. G Parameshwara
@DrParameshwara
ಇಂದು ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಕಲಮಂಗಿ ಗ್ರಾಮದಲ್ಲಿ ರೈತ ಮಹಿಳೆ ನಾಗಮ್ಮ ಶರಣೇಗೌಡ ಅವರ ಜಮೀನಿಗೆ ಭೇಟಿ ನೀಡಿ, ಬರದಿಂದ ಹಾನಿಗೊಳಗಾದ ಬೆಳೆಗಳನ್ನು ಪರಿಶೀಲಿಸಿದೆ. ಬಳಿಕ ರೈತರೊಂದಿಗೆ ಸಂವಾದ ನಡೆಸಿ, ಅವರ ಸಮಸ್ಯೆಗಳನ್ನು ಆಲಿಸಿದೆ.
ರಾಜ್ಯದ 240 ತಾಲೂಕುಗಳ ಪೈಕಿ 217 ತಾಲೂಕುಗಳನ್ನು ಬರಪೀಡಿತವೆಂದು ಘೋಷಿಸಲಾಗಿದ್ದು, ಇನ್ನೂ ಸುಮಾರು 10 ತಾಲೂಕುಗಳನ್ನು ಘೋಷಿಸುವ ಪ್ರಕ್ರಿಯೆ ನಡೆಯುತ್ತಿದೆ. ಕಳೆದ 40 ವರ್ಷಗಳ ಸಾರ್ವಜನಿಕ ಜೀವನದಲ್ಲಿ ಇಂತಹ ಭೀಕರ ಬರವನ್ನು ಕಂಡಿಲ್ಲ. ಕಳೆದ ಎರಡು ದಿನಗಳ ಪ್ರವಾಸದಲ್ಲಿ ಹಲವು ಕಡೆ ಶೇ.98ರಷ್ಟು ಬೆಳೆ ಹಾನಿಯಾಗಿರುವುದನ್ನು ಗಮನಿಸಿದ್ದೇನೆ. ಸಾಲ ಮಾಡಿ ಬಿತ್ತನೆ ಮಾಡಿದ ರೈತರು ಬೆಳೆ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಬರ ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸಲು ಜೂನ್ ತಿಂಗಳಿನಿಂದಲೇ ಅಧಿಕಾರಿಗಳ ಸಭೆಗಳನ್ನು ನಡೆಸಿ, ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಇದು ಪಕ್ಷಾತೀತವಾಗಿ ಎಲ್ಲ ರೈತರನ್ನೂ ಬಾಧಿಸಿರುವ ಸಮಸ್ಯೆಯಾಗಿದ್ದು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹಾಗೂ ಎಲ್ಲ ರಾಜಕೀಯ ಪಕ್ಷಗಳು ಒಗ್ಗಟ್ಟಿನಿಂದ ಸ್ಪಂದಿಸಬೇಕಿದೆ.
ರೈತರ ತಕ್ಷಣದ ನೆರವಿಗಾಗಿ ₹1,250 ಕೋಟಿ ಮೊತ್ತದಲ್ಲಿ ಮೊದಲ ಕಂತಿನ ₹2,500 ಬೆಳೆ ಪರಿಹಾರ ನೀಡಲು ಕ್ರಮ ಕೈಗೊಂಡಿದ್ದೇವೆ. ಮುಂದಿನ ಕಂತಿನ ಪರಿಹಾರವನ್ನೂ ಒದಗಿಸಲಾಗುವುದು. ವಾರ್ಷಿಕ ₹52,000 ಕೋಟಿ ಮೊತ್ತದ ಗ್ಯಾರಂಟಿ ಯೋಜನೆಗಳು ಹಾಗೂ ₹22,000 ಕೋಟಿ ರೈತರ ವಿದ್ಯುತ್ ಸಬ್ಸಿಡಿಯನ್ನು ಮುಂದುವರಿಸಲಾಗಿದೆ. ಆರ್ಥಿಕ ಇತಿಮಿತಿಗಳ ನಡುವೆಯೂ ಅಗತ್ಯವಿದ್ದರೆ ಸಾಲ ಮಾಡಿಯಾದರೂ ರೈತರ ನೆರವಿಗೆ ನಿಲ್ಲುತ್ತೇವೆ.
ಕುಡಿಯುವ ನೀರಿಗಾಗಿ ₹306 ಕೋಟಿ ಹಾಗೂ ಮೇವು ಬ್ಯಾಂಕ್ ಮತ್ತು ಮೇವು ಕಿಟ್ಗಳಿಗಾಗಿ ₹25 ಕೋಟಿ ಒದಗಿಸಲಾಗಿದೆ. ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ಅಗತ್ಯ ಅನುದಾನ ನೀಡಲಾಗಿದ್ದು, ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಅನುದಾನವನ್ನೂ ಬಳಸಿಕೊಳ್ಳಲಾಗುತ್ತಿದೆ. ಬರದಿಂದ ಜನರು ಗುಳೆ ಹೋಗದಂತೆ ಸ್ಥಳೀಯವಾಗಿ ಉದ್ಯೋಗ ಖಾತ್ರಿ ಕಾಮಗಾರಿಗಳನ್ನು ಒದಗಿಸಿ, ಕೂಲಿ ಹಣವನ್ನು ಸಕಾಲದಲ್ಲಿ ಪಾವತಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ.
ಕೃಷಿ ಪಂಪ್ಸೆಟ್ಗಳಿಗೆ ಸಾಧ್ಯವಾದಷ್ಟು ಹಗಲಿನ ವೇಳೆಯಲ್ಲಿಯೇ ಸಮರ್ಪಕ ವೋಲ್ಟೇಜ್ನೊಂದಿಗೆ ಆರು ಗಂಟೆಗಳ ಕಾಲ ನಿರಂತರ ವಿದ್ಯುತ್ ಪೂರೈಸಲು ಹಾಗೂ ತಾಂತ್ರಿಕ ಸಮಸ್ಯೆಗಳನ್ನು ತ್ವರಿತವಾಗಿ ಪರಿಹರಿಸಲು ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದೇನೆ. ಸಾರ್ವಜನಿಕರ ಅಹವಾಲುಗಳಿಗೆ ಸ್ಥಳದಲ್ಲಿಯೇ ಸ್ಪಂದಿಸಿ, ಅಗತ್ಯ ಕ್ರಮ ಕೈಗೊಳ್ಳಲಾಗಿದೆ.
ರೈತರು, ಕೂಲಿ ಕಾರ್ಮಿಕರು ಹಾಗೂ ಬಡವರ ಬದುಕು ಮತ್ತು ಜೀವನೋಪಾಯವನ್ನು ರಕ್ಷಿಸುವುದು ನಮ್ಮ ಸರ್ಕಾರದ ಮೊದಲ ಆದ್ಯತೆಯಾಗಿದೆ. ಬರ ಎಷ್ಟೇ ತೀವ್ರವಾಗಿದ್ದರೂ ನಮ್ಮ ರೈತರನ್ನು ಯಾವುದೇ ಕಾರಣಕ್ಕೂ ಸಂಕಷ್ಟದಲ್ಲಿ ಕೈಬಿಡುವುದಿಲ್ಲ. -
Dr. G Parameshwara
@DrParameshwara
ಬಳ್ಳಾರಿ ಜಿಲ್ಲೆಯ ಗ್ರಾಮೀಣ ಭಾಗಗಳಲ್ಲಿ ಉದ್ಯೋಗಾವಕಾಶಗಳನ್ನು ಹೆಚ್ಚಿಸುವ ಮೂಲಕ ವಲಸೆ ತಡೆಯಲು ಸರ್ಕಾರ ಆದ್ಯತೆ ನೀಡುತ್ತಿದೆ. ಸ್ಥಳೀಯವಾಗಿಯೇ ಕೆಲಸ ದೊರೆಯುವಂತೆ ಉದ್ಯೋಗ ಸೃಷ್ಟಿಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.
ಬಂಡ್ರಿ ಗ್ರಾಮದಲ್ಲಿ 277 ಮಾನವ ದಿನಗಳ ಉದ್ಯೋಗ ಸೃಷ್ಟಿಸಲಾಗಿದ್ದು, ಜಿಲ್ಲೆಯಾದ್ಯಂತ 21 ಸಾವಿರ ಮಾನವ ದಿನಗಳ ಕೆಲಸ ಕಲ್ಪಿಸಲಾಗಿದೆ. ಜನರು ಉದ್ಯೋಗಕ್ಕಾಗಿ ವಲಸೆ ಹೋಗುವ ಪರಿಸ್ಥಿತಿ ಕಡಿಮೆಯಾಗಬೇಕು ಎಂಬುದು ಸರ್ಕಾರದ ಬದ್ಧತೆ.
The Government is creating more local employment opportunities in rural Ballari to prevent distress migration.
277 person-days have been generated in Bandri village, and 21,000 person-days across the district.
Our priority is to ensure people can find work within their own villages. -
Dr. G Parameshwara
@DrParameshwara
ರೈತರ ಸಂಕಷ್ಟದ ಜೊತೆಗೆ ಜಾನುವಾರುಗಳ ಹಸಿವು–ಬಾಯಾರಿಕೆಯ ಬಗ್ಗೆಯೂ ಸರ್ಕಾರ ವಿಶೇಷ ಗಮನ ಹರಿಸಿದೆ. ಮೇವು ಕೊರತೆಯಾಗದಂತೆ ಆರಂಭಿಕವಾಗಿ ₹25 ಕೋಟಿ ಬಿಡುಗಡೆ ಮಾಡಲಾಗಿದ್ದು, ಮುಂದಿನ ಹಂತದಲ್ಲಿ ₹33 ಕೋಟಿ ಹೆಚ್ಚುವರಿ ಅನುದಾನ ಒದಗಿಸಲಾಗುವುದು.
ನೀರಿನ ವ್ಯವಸ್ಥೆ ಇರುವ ರೈತರಿಗೆ ಮೇವು ಬೆಳೆಯಲು ಬೀಜದ ಕಿಟ್ಗಳನ್ನು ವಿತರಿಸಲಾಗುತ್ತಿದೆ. ಸಂಡೂರು ತಾಲೂಕಿನಲ್ಲಿ ಈಗಾಗಲೇ ಸುಮಾರು 2,725 ಮೇವು ಕಿಟ್ಗಳನ್ನು ನೀಡಲಾಗಿದೆ.
ಮಾತು ಬಾರದ ಜೀವಿಗಳ ಹಿತವನ್ನು ಕಾಪಾಡುವುದೂ ಸಹ ಸರ್ಕಾರದ ಆದ್ಯತೆಯಾಗಿದೆ.
Along with addressing the hardships faced by farmers, the Government is also giving special attention to the food and water needs of livestock. An initial ₹25 crore has been released to prevent fodder shortages, with an additional ₹33 crore to be provided in the next phase.
Farmers with access to water are being provided fodder seed kits to grow feed for their livestock. Around 2,725 fodder kits have already been distributed in Sandur taluk.
Protecting the welfare of innocent animals is also a priority for our Government. -
Dr. G Parameshwara
@DrParameshwara
ಇಂದು ರಾಯಚೂರು ಜಿಲ್ಲೆಯ ಮಸ್ಕಿ ವಿಧಾನಸಭಾ ಕ್ಷೇತ್ರದ ಉಮಲೂಟಿ ಗ್ರಾಮದಲ್ಲಿ ರೈತ ಹನುಮಪ್ಪ ಅವರ ಜಮೀನಿಗೆ ಹಾಗೂ ಕಲಮಂಗಿ ಗ್ರಾಮದಲ್ಲಿ ರೈತ ಮಹಿಳೆ ನಾಗಮ್ಮ ಶರಣೇಗೌಡ ಅವರ ಜಮೀನಿಗೆ ಭೇಟಿ ನೀಡಿ, ಬರದಿಂದ ಹಾನಿಗೊಳಗಾದ ಬೆಳೆಗಳನ್ನು ಖುದ್ದಾಗಿ ಪರಿಶೀಲಿಸಿದೆ.
ಮಳೆ ಕೊರತೆಯಿಂದ ಬೆಳೆಗಳು ನಾಶವಾಗಿರುವುದನ್ನು ವೀಕ್ಷಿಸಿ, ರೈತರು ಎದುರಿಸುತ್ತಿರುವ ಸಂಕಷ್ಟ ಹಾಗೂ ಬೆಳೆ ನಷ್ಟದ ಕುರಿತು ಅವರೊಂದಿಗೆ ಮಾತುಕತೆ ನಡೆಸಿ, ಅಹವಾಲುಗಳನ್ನು ಆಲಿಸಿದೆ.
ಬರದ ಸಂಕಷ್ಟದಲ್ಲಿರುವ ರೈತರ ಹಿತ ಕಾಪಾಡಲು ಹಾಗೂ ಅವರಿಗೆ ಅಗತ್ಯ ನೆರವು ಒದಗಿಸಲು ನಮ್ಮ ಸರ್ಕಾರ ಬದ್ಧವಾಗಿದೆ.
Today, I visited the farms of Hanumappa in Umalooti village and farmer Nagamma Sharanegowda in Kalamangi village of Maski Assembly Constituency in Raichur district, and personally inspected crops damaged by the drought.
I observed the crop losses caused by deficient rainfall and spoke directly with the farmers about the difficulties they are facing and the extent of the damage.
Our Government is committed to protecting the interests of farmers affected by drought and providing them with the necessary support. -
Dr. G Parameshwara
@DrParameshwara
The drought situation in the State is becoming increasingly severe, with crops completely destroyed in many areas and farmers facing immense hardship. Protecting farmers is our Government’s first priority. If necessary, we are prepared even to borrow funds to support them.
Of the State’s 240 taluks, 217 have already been declared drought-affected. The drought is particularly severe in several North Karnataka districts, including Ballari, Vijayanagara, Koppal, Raichur and Vijayapura, compared with the Mysuru region.
During recent inspections in Vijayapura and Ballari districts, it was found that 98% of crops in Vijayanagara district had been destroyed. Even the remaining 2% is unlikely to result in a viable harvest. The State is facing an extremely difficult situation.
Farmers often cultivate two or three acres with the hope of sustaining their families and borrow money for cultivation - not only from banks, but also through private loans and from acquaintances. When the entire crop is destroyed, they are left unsure not only about how to repay their debts, but even about what to do next. When we listen directly to farmers, we understand the depth of their distress.
Our Government is prioritising drinking water supply, assistance to farmers and generation of wage employment as part of drought management.
People are migrating from villages in search of work because of the drought. Recently, I came across a Lambani Tanda where residents were on the verge of leaving the entire settlement. I directed officials to provide them work under the rural employment guarantee scheme.
If employment is available within rural areas, migration can be prevented. We can survive only if our farmers survive. Without farmers, neither society nor Government can sustain itself.
*₹8,500 Relief under Central Norms; ₹2,500 Released by the State as First Instalment*
Under the Union Government’s NDRF norms, farmers are entitled to a total relief amount of ₹8,500, comprising both the Central and State shares.
However, since Central assistance has not yet been released, we decided that farmers should not be made to wait. The State Government has therefore provided ₹2,500 each from its own share as the first instalment.
Around 50 lakh farmers across the State are to receive this assistance. The Government has already spent ₹1,250 crore to provide ₹2,500 to each farmer.
We acknowledge that ₹2,500 is not enough to compensate farmers for their losses. But when assistance has to reach 50 lakh farmers, the overall expenditure involved must also be considered. Releasing this first instalment is part of the Government’s responsibility.
The State has already submitted to the Centre an assessment of around ₹46,000 crore in crop losses, based on losses in 177 taluks.
If the drought continues, the extent of losses may increase further. Under the present assessment and NDRF guidelines, we have requested around ₹10,000 crore to ₹12,000 crore in relief from the Centre.
The Union Government has sent three teams to Karnataka, which have visited different areas and assessed the drought situation. Relief is expected to be released based on the reports submitted by these teams.
It has been decided to take a delegation comprising the Chief Minister, myself and Opposition leaders to the Centre to press for drought relief. However, BJP and JDS leaders have stated that they will not participate in the delegation.
During the previous drought, Karnataka suffered losses of around ₹49,000 crore and sought ₹18,000 crore in relief under Central guidelines. However, the Centre released only around ₹3,450 crore.
The State Government subsequently went to Delhi to protest and approached the court. After the Supreme Court intervened, relief was released by the Centre.
This time too, the final loss estimate could increase. If the total loss reaches around ₹60,000 crore by the time the final memorandum is submitted, the State may seek around ₹18,000 crore to ₹20,000 crore in relief.
We will have to see how much assistance the Centre ultimately provides. Karnataka’s MPs should put pressure on the Centre irrespective of party affiliation. This is not the time for politics; this is the time to stand with farmers.
*Steps to Ensure Early Payment of Crop Insurance*
The Government is taking steps to ensure that farmers who have lost their crops receive crop insurance payments at the earliest.
Measures are also being taken regarding the premium share payable by farmers. Our objective is to ensure that all eligible farmers receive their insurance compensation without delay. The State has already provided ₹2,500 as the first instalment of relief. Once Central assistance is received, further relief will be provided.
Groundwater levels have fallen sharply in several parts of the State. In some places, water is unavailable even after drilling to a depth of 500 feet. In my own region, there are areas where even drilling to a depth of 1,800 feet has not yielded water.
Drinking water shortages, crop losses and lack of employment have pushed farmers into severe distress. Under the leadership of the Chief Minister, our Government will continue to stand with them.
Instead of assessing the drought while sitting in Bengaluru, we are travelling to different districts and directly understanding farmers’ problems.
We have reviewed the situation in regions including Kalaburagi, Belagavi and Chitradurga. I have also personally visited several districts, gone to farmers’ fields and spoken with them directly to understand their difficulties. We will provide every possible assistance within the Government’s capacity.
*Five-Year Period for Repayment of Farmers’ Loans*
Measures have already been initiated to provide farmers affected by drought with a five-year period for repayment of loans. A 60-month moratorium has been provided on loan repayment, during which farmers need not repay their loans. Banks have also been informed that the Government will address related responsibilities, including the issue of interest on these loans.
Farmers are also receiving support through diesel subsidy, electricity subsidy and the Government’s Guarantee schemes. Taken together, these forms of assistance amount to around ₹1 lakh per month for farmers.
If the assistance currently being provided is insufficient, further measures will be taken. Under no circumstances will we abandon farmers. If necessary, the Government is prepared even to borrow funds to provide relief. Protecting farmers’ livelihoods is our responsibility.
*Centre to Be Requested to Provide Support Price for Maize*
Maize is cultivated extensively across several districts of North Karnataka, and farmers are now facing difficulties due to low prices and reduced yields. The Union Government will be requested to take steps to address this issue.
The Centre also has a responsibility in determining Minimum Support Prices (MSP) for crops. Since both the Central and State Governments are part of the federal system, both must discharge their responsibilities in addressing farmers’ problems. The Union Government should extend the necessary support on the issue of remunerative prices.
*Any Disruption in Bus Services Due to Diesel Shortage Will Be Rectified Immediately*
The reported disruption in bus services due to diesel shortage may be a temporary issue, and it will be rectified immediately.
Running a Government requires providing funds to different departments, mobilising revenue and managing all schemes and programmes.
Revenue is mobilised through various sources, including Excise, Registration and Commercial Taxes, and Government finances are managed accordingly. If there is a temporary delay in any one area, it will be addressed. The Government has not stopped any scheme.
If the Guarantee schemes had created a financial crisis, the Government could have stopped at least one of them. However, the Government has spent around ₹52,000 crore on the Guarantee schemes over the past three years and continues to implement them.
Siddaramaiah has presented around 16 Budgets and has maintained fiscal discipline over the years. The Karnataka Government too is functioning with fiscal discipline.
Compared with the situation in several other States, Karnataka’s financial management is sound. Therefore, the allegation that the Guarantee schemes alone have caused financial difficulties is not correct.
*No Compromise on Supporting Farmers*
Even amid the drought, the Government will not step back from supporting farmers. We are working to protect them through crop-loss compensation, crop insurance, extension of the loan repayment period, support relating to interest payments and other assistance.
The Union Government too must discharge its responsibility in addressing farmers’ distress. The State Government has already released the first instalment of relief. In the coming days, we will work to secure assistance from the Centre and provide further relief to farmers. During drought management, farmers’ livelihoods must take precedence over politics.
- My remarks to the media after visiting and inspecting farmland at Gunnal village in Yelburga taluk today. -
Dr. G Parameshwara
@DrParameshwara
ರಾಜ್ಯದಲ್ಲಿ ಬರ ಪರಿಸ್ಥಿತಿ ದಿನದಿಂದ ದಿನಕ್ಕೆ ಗಂಭೀರವಾಗುತ್ತಿದ್ದು, ರೈತರು ಬೆಳೆದ ಬೆಳೆ ಸಂಪೂರ್ಣ ನಾಶವಾಗಿ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ರೈತರನ್ನು ಉಳಿಸಿಕೊಳ್ಳುವುದು ಸರ್ಕಾರದ ಮೊದಲ ಆದ್ಯತೆಯಾಗಿದ್ದು, ಅಗತ್ಯ ಬಿದ್ದರೆ ಸಾಲ ತಗೊಂಡಾದರೂ ರೈತರಿಗೆ ನೆರವು ನೀಡುತ್ತೇವೆ.
ರಾಜ್ಯದ 240 ತಾಲೂಕುಗಳ ಪೈಕಿ ಈಗಾಗಲೇ 217 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿದೆ. ಉತ್ತರ ಕರ್ನಾಟಕದ ಬಳ್ಳಾರಿ, ವಿಜಯನಗರ, ಕೊಪ್ಪಳ, ರಾಯಚೂರು, ವಿಜಯಪುರ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಬರದ ತೀವ್ರತೆ ಮೈಸೂರು ಭಾಗಕ್ಕಿಂತ ಹೆಚ್ಚಾಗಿದೆ. ಇತ್ತೀಚೆಗೆ ವಿಜಯಪುರ ಮತ್ತು ಬಳ್ಳಾರಿ ಜಿಲ್ಲೆಗಳ ಬರ ಪರಿಸ್ಥಿತಿ ಪರಿಶೀಲಿಸಿದ ಸಂದರ್ಭದಲ್ಲಿ ವಿಜಯನಗರ ಜಿಲ್ಲೆಯಲ್ಲಿ ಶೇ.98ರಷ್ಟು ಬೆಳೆ ನಾಶವಾಗಿರುವುದು ಕಂಡುಬಂದಿದೆ. ಉಳಿದ ಶೇ.2ರಷ್ಟು ಬೆಳೆಯೂ ರೈತರ ಕೈಗೆ ಸಿಗುವ ಪರಿಸ್ಥಿತಿಯಲ್ಲಿಲ್ಲ. ರಾಜ್ಯವು ಅತ್ಯಂತ ಕೆಟ್ಟ ಪರಿಸ್ಥಿತಿಯನ್ನು ಎದುರಿಸುತ್ತಿದೆ.
ರೈತರು 2 ಅಥವಾ 3 ಎಕರೆ ಜಮೀನಿನಲ್ಲಿ ಬೆಳೆ ಬೆಳೆದು ಬದುಕು ಕಟ್ಟಿಕೊಳ್ಳುವ ಆಸೆಯಿಂದ ಸಾಲ ಮಾಡುತ್ತಾರೆ. ಬ್ಯಾಂಕ್ಗಳಿಂದ ಮಾತ್ರವಲ್ಲದೆ, ಕೈಸಾಲ ಮತ್ತು ಪರಿಚಯಸ್ಥರಿಂದಲೂ ಹಣ ಪಡೆದು ಕೃಷಿ ಮಾಡುತ್ತಾರೆ. ಆದರೆ, ಬೆಳೆ ಸಂಪೂರ್ಣ ನಾಶವಾದಾಗ ಸಾಲ ತೀರಿಸುವುದಿರಲಿ, ಮುಂದೇನು ಮಾಡಬೇಕು ಎಂಬುದೇ ಅವರಿಗೆ ತಿಳಿಯದಂತಾಗುತ್ತದೆ. ರೈತರು ತಲೆ ಮೇಲೆ ಕೈಹೊತ್ತು ಕುಳಿತುಕೊಳ್ಳುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ರೈತರ ಅಹವಾಲು ಆಲಿಸಿದಾಗ ಅವರ ನೋವು ಅರ್ಥವಾಗುತ್ತದೆ.
ನಮ್ಮ ಸರ್ಕಾರ ಬರ ನಿರ್ವಹಣೆಯಲ್ಲಿ ಕುಡಿಯುವ ನೀರಿನ ಪೂರೈಕೆ, ರೈತರಿಗೆ ನೆರವು ಮತ್ತು ಕೂಲಿ ಕೆಲಸ ಒದಗಿಸುವುದಕ್ಕೆ ಆದ್ಯತೆ ನೀಡುತ್ತಿದೆ. ಬರದಿಂದಾಗಿ ಜನರು ಊರು ಬಿಟ್ಟು ಗುಳೆ ಹೋಗುತ್ತಿದ್ದಾರೆ. ಇತ್ತೀಚೆಗೆ ಒಂದು ಲಂಬಾಣಿ ತಾಂಡಾದ ಜನರು ಇಡೀ ಊರನ್ನೇ ತೊರೆದು ಹೋಗುವ ಸ್ಥಿತಿಯಲ್ಲಿರುವುದನ್ನು ಗಮನಿಸಿ, ಅವರಿಗೆ ಉದ್ಯೋಗ ಖಾತರಿ ಯೋಜನೆಯಡಿ ಕೆಲಸ ನೀಡುವಂತೆ ಸೂಚಿಸಿದ್ದೇನೆ. ಗ್ರಾಮೀಣ ಪ್ರದೇಶದಲ್ಲೇ ಕೆಲಸ ದೊರೆತರೆ ಜನರು ಗುಳೆ ಹೋಗುವುದನ್ನು ತಡೆಯಬಹುದು. ರೈತರನ್ನು ಉಳಿಸಿಕೊಂಡರೆ ಮಾತ್ರ ನಾವು ಉಳಿಯಲು ಸಾಧ್ಯ. ರೈತರೇ ಇಲ್ಲದಿದ್ದರೆ ಸಮಾಜ ಮತ್ತು ಸರ್ಕಾರ ಉಳಿಯಲು ಸಾಧ್ಯವಿಲ್ಲ.
*ಕೇಂದ್ರದ ಮಾನದಂಡದ ಪ್ರಕಾರ ₹8,500 ಪರಿಹಾರ ಸಿಗಬೇಕು; ರಾಜ್ಯದಿಂದ ಮೊದಲ ಕಂತಿನಲ್ಲಿ ₹2,500 ಬಿಡುಗಡೆ*
ಕೇಂದ್ರ ಸರ್ಕಾರದ ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ನಿಧಿ (NDRF) ಮಾನದಂಡದ ಪ್ರಕಾರ ರೈತರಿಗೆ ಒಟ್ಟು ₹8,500 ಪರಿಹಾರ ದೊರೆಯಬೇಕಿದೆ. ಇದರಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಪಾಲು ಸೇರಿರುತ್ತದೆ. ಆದರೆ ಕೇಂದ್ರದಿಂದ ಇನ್ನೂ ಪರಿಹಾರ ಬಿಡುಗಡೆಯಾಗದ ಕಾರಣ ರೈತರು ಕಾಯುವ ಸ್ಥಿತಿಯಲ್ಲಿರಬಾರದು ಎಂದು ರಾಜ್ಯ ಸರ್ಕಾರ ತನ್ನ ಪಾಲಿನಿಂದ ಮೊದಲ ಕಂತಿನಲ್ಲಿ ತಲಾ ₹2,500 ನೀಡಿದೆ.
ರಾಜ್ಯದ ಸುಮಾರು 50 ಲಕ್ಷ ರೈತರಿಗೆ ಪರಿಹಾರ ನೀಡಬೇಕಿದೆ. ಪ್ರತಿ ರೈತರಿಗೆ ₹2,500 ನೀಡಲು ಸರ್ಕಾರ ಈಗಾಗಲೇ ₹1,250 ಕೋಟಿ ವೆಚ್ಚ ಮಾಡಿದೆ. ಈ ಮೊತ್ತ ರೈತರ ಸಂಕಷ್ಟಕ್ಕೆ ಸಾಕಾಗುವುದಿಲ್ಲ ಎಂಬುದನ್ನು ಒಪ್ಪಿಕೊಳ್ಳುತ್ತೇವೆ. ಆದರೆ, 50 ಲಕ್ಷ ರೈತರಿಗೆ ನೆರವು ನೀಡುವಾಗ ಒಟ್ಟಾರೆ ಆಗುವ ವೆಚ್ಚವನ್ನು ಗಮನಿಸಬೇಕು. ಮೊದಲ ಕಂತಿನ ಹಣವನ್ನು ಬಿಡುಗಡೆ ಮಾಡಿರುವುದು ಸರ್ಕಾರದ ಜವಾಬ್ದಾರಿಯ ಭಾಗವಾಗಿದೆ.
ರಾಜ್ಯದಲ್ಲಿ ಇದುವರೆಗೆ ಸುಮಾರು ₹46,000 ಕೋಟಿ ಬೆಳೆ ನಷ್ಟ ಸಂಭವಿಸಿರುವ ಬಗ್ಗೆ ಕೇಂದ್ರಕ್ಕೆ ಮನವಿ ಸಲ್ಲಿಸಲಾಗಿದೆ. 177 ತಾಲೂಕುಗಳ ನಷ್ಟದ ವಿವರಗಳನ್ನು ಆಧರಿಸಿ ಈ ಅಂದಾಜು ಮಾಡಲಾಗಿದೆ. ಬರದ ಪರಿಸ್ಥಿತಿ ಮುಂದುವರಿದರೆ ನಷ್ಟದ ಪ್ರಮಾಣ ಇನ್ನಷ್ಟು ಹೆಚ್ಚಾಗಬಹುದು. ಪ್ರಸ್ತುತ ಲೆಕ್ಕಾಚಾರದ ಪ್ರಕಾರ NDRF ಮಾರ್ಗಸೂಚಿಗಳ ಅಡಿಯಲ್ಲಿ ಸುಮಾರು ₹10,000ರಿಂದ ₹12,000 ಕೋಟಿ ಪರಿಹಾರ ದೊರೆಯಬೇಕೆಂದು ಕೇಂದ್ರಕ್ಕೆ ಮನವಿ ಮಾಡಲಾಗಿದೆ.
ಕೇಂದ್ರ ಸರ್ಕಾರ ಮೂರು ತಂಡಗಳನ್ನು ರಾಜ್ಯಕ್ಕೆ ಕಳುಹಿಸಿದ್ದು, ಅವು ವಿವಿಧ ಪ್ರದೇಶಗಳಿಗೆ ಭೇಟಿ ನೀಡಿ ಬರ ಪರಿಸ್ಥಿತಿಯನ್ನು ಪರಿಶೀಲಿಸಿವೆ. ಈ ತಂಡಗಳು ಸಲ್ಲಿಸುವ ವರದಿಯ ಆಧಾರದ ಮೇಲೆ ಕೇಂದ್ರ ಸರ್ಕಾರ ಪರಿಹಾರ ಬಿಡುಗಡೆ ಮಾಡಬೇಕಿದೆ. ಮುಖ್ಯಮಂತ್ರಿ, ತಾವು ಹಾಗೂ ವಿರೋಧ ಪಕ್ಷದ ನಾಯಕರನ್ನು ಒಳಗೊಂಡ ನಿಯೋಗವನ್ನು ಕೇಂದ್ರಕ್ಕೆ ಕರೆದೊಯ್ದು ಪರಿಹಾರಕ್ಕೆ ಒತ್ತಾಯಿಸಲು ನಿರ್ಧರಿಸಲಾಗಿದೆ. ಆದರೆ ಬಿಜೆಪಿ ಮತ್ತು ಜನತಾದಳದ ನಾಯಕರು ನಿಯೋಗದಲ್ಲಿ ಭಾಗವಹಿಸುವುದಿಲ್ಲ ಎಂದು ತಿಳಿಸಿದ್ದಾರೆ.
ಕಳೆದ ಬಾರಿ ರಾಜ್ಯದಲ್ಲಿ ಸುಮಾರು ₹49,000 ಕೋಟಿ ನಷ್ಟ ಸಂಭವಿಸಿದಾಗ, ಕೇಂದ್ರದ ಮಾರ್ಗಸೂಚಿಗಳ ಪ್ರಕಾರ ₹18,000 ಕೋಟಿ ಪರಿಹಾರ ಕೇಳಲಾಗಿತ್ತು. ಆದರೆ ಕೇಂದ್ರ ಸರ್ಕಾರ ಕೇವಲ ₹3,450 ಕೋಟಿ ನೀಡಿತ್ತು. ರಾಜ್ಯ ಸರ್ಕಾರ ದೆಹಲಿಗೆ ತೆರಳಿ ಪ್ರತಿಭಟನೆ ನಡೆಸಿ, ನ್ಯಾಯಾಲಯದ ಮೊರೆ ಹೋದ ನಂತರ ಸುಪ್ರೀಂ ಕೋರ್ಟ್ ಮಧ್ಯಪ್ರವೇಶಿಸಿತ್ತು. ಆ ಬಳಿಕ ಕೇಂದ್ರದಿಂದ ಪರಿಹಾರ ಬಿಡುಗಡೆಯಾಗಿತ್ತು.
ಈ ಬಾರಿಯೂ ಅಂತಿಮ ನಷ್ಟದ ಅಂದಾಜು ಹೆಚ್ಚಾಗುವ ಸಾಧ್ಯತೆ ಇದೆ. ಅಂತಿಮ ಮನವಿ ಸಲ್ಲಿಸುವ ವೇಳೆಗೆ ನಷ್ಟವು ₹60,000 ಕೋಟಿಯವರೆಗೆ ತಲುಪಿದರೆ, ಸುಮಾರು ₹18,000ರಿಂದ ₹20,000 ಕೋಟಿ ಪರಿಹಾರ ಕೇಳುವ ಸಾಧ್ಯತೆಯಿದೆ. ಕೇಂದ್ರ ಸರ್ಕಾರ ಎಷ್ಟು ನೆರವು ನೀಡುತ್ತದೆ ಎಂಬುದನ್ನು ಕಾದು ನೋಡಬೇಕಿದೆ. ರಾಜ್ಯದ ಸಂಸದರು ಪಕ್ಷಾತೀತವಾಗಿ ಕೇಂದ್ರದ ಮೇಲೆ ಒತ್ತಡ ಹೇರಬೇಕು. ಇದು ರಾಜಕೀಯ ಮಾಡುವ ಸಮಯವಲ್ಲ, ರೈತರ ಜೊತೆ ನಿಲ್ಲಬೇಕಾದ ಸಮಯ.
*ಬೆಳೆ ವಿಮೆ ತ್ವರಿತ ಪಾವತಿಗೆ ಕ್ರಮ*
ಬರದಿಂದ ಬೆಳೆ ಕಳೆದುಕೊಂಡಿರುವ ರೈತರಿಗೆ ಬೆಳೆ ವಿಮೆಯ ಹಣವನ್ನು ಶೀಘ್ರವಾಗಿ ತಲುಪಿಸಲು ಸರ್ಕಾರ ಕ್ರಮ ಕೈಗೊಳ್ಳುತ್ತಿದೆ.
ಬೆಳೆ ವಿಮೆಗೆ ರೈತರು ಪಾವತಿಸಬೇಕಾದ ಪಾಲನ್ನು ಸರ್ಕಾರವೇ ಭರಿಸುವ ಬಗ್ಗೆಯೂ ಕ್ರಮ ಕೈಗೊಳ್ಳಲಾಗುತ್ತಿದೆ. ಅರ್ಹ ರೈತರಿಗೆ ವಿಮಾ ಪರಿಹಾರ ತ್ವರಿತವಾಗಿ ದೊರೆಯಬೇಕು ಎಂಬುದು ಸರ್ಕಾರದ ಉದ್ದೇಶವಾಗಿದೆ. ಈಗಾಗಲೇ ₹2,500 ಮೊದಲ ಕಂತಿನ ಪರಿಹಾರ ನೀಡಲಾಗಿದ್ದು, ಕೇಂದ್ರ ಸರ್ಕಾರದ ನೆರವು ದೊರೆತ ನಂತರ ಇನ್ನಷ್ಟು ಪರಿಹಾರ ನೀಡಲಾಗುವುದು.
ರಾಜ್ಯದ ಹಲವು ಭಾಗಗಳಲ್ಲಿ ಅಂತರ್ಜಲ ಮಟ್ಟ ತೀವ್ರವಾಗಿ ಕುಸಿದಿದೆ. ಕೆಲವು ಪ್ರದೇಶಗಳಲ್ಲಿ 500 ಅಡಿ ಆಳಕ್ಕೆ ಕೊರೆದರೂ ನೀರು ಸಿಗುತ್ತಿಲ್ಲ. ತಮ್ಮ ಭಾಗದಲ್ಲಿ 1,800 ಅಡಿ ಆಳಕ್ಕೆ ಕೊರೆದರೂ ನೀರು ದೊರೆಯದ ಪರಿಸ್ಥಿತಿಯಿದೆ. ಕುಡಿಯುವ ನೀರಿನ ಸಮಸ್ಯೆ, ಬೆಳೆ ನಷ್ಟ ಮತ್ತು ಉದ್ಯೋಗದ ಕೊರತೆ ರೈತರ ಬದುಕನ್ನು ಸಂಕಷ್ಟಕ್ಕೆ ದೂಡಿವೆ. ಸರ್ಕಾರವು ಮುಖ್ಯಮಂತ್ರಿಗಳ ನೇತೃತ್ವದಲ್ಲಿ ರೈತರ ಜೊತೆ ನಿಲ್ಲಲಿದೆ ಎಂಬ ಭರವಸೆಯನ್ನು ನೀಡುತ್ತಿದ್ದೇವೆ.
ಬರ ಪರಿಸ್ಥಿತಿಯನ್ನು ಬೆಂಗಳೂರಿನಲ್ಲಿ ಕುಳಿತು ಪರಿಶೀಲಿಸುವ ಬದಲು, ನಾವೇ ವಿವಿಧ ಜಿಲ್ಲೆಗಳಿಗೆ ತೆರಳಿ ರೈತರ ಸಮಸ್ಯೆಗಳನ್ನು ಅರಿಯುತ್ತಿದ್ದೇವೆ. ಕಲಬುರಗಿ, ಬೆಳಗಾವಿ ಮತ್ತು ಚಿತ್ರದುರ್ಗ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಪರಿಶೀಲನೆ ನಡೆಸಿದ್ದೇವೆ. ನಾನು ಕೂಡ ಹಲವು ಜಿಲ್ಲೆಗಳಿಗೆ ವೈಯಕ್ತಿಕವಾಗಿ ಭೇಟಿ ನೀಡಿ, ಹೊಲಗಳಿಗೆ ತೆರಳಿ ರೈತರೊಂದಿಗೆ ಮಾತನಾಡಿ ಅವರ ಕಷ್ಟಗಳನ್ನು ಅರ್ಥಮಾಡಿಕೊಂಡಿದ್ದೇನೆ. ಸರ್ಕಾರದಿಂದ ಸಾಧ್ಯವಿರುವ ಎಲ್ಲ ನೆರವನ್ನು ನೀಡಲಾಗುವುದು.
*ಸಾಲ ಮರುಪಾವತಿಗೆ ಐದು ವರ್ಷಗಳ ಕಾಲಾವಕಾಶ*
ಬರದಿಂದ ಸಂಕಷ್ಟಕ್ಕೆ ಸಿಲುಕಿರುವ ರೈತರ ಸಾಲ ಮರುಪಾವತಿಗೆ ಐದು ವರ್ಷಗಳ ಕಾಲಾವಕಾಶ ನೀಡುವ ಕುರಿತು ಈಗಾಗಲೇ ಕ್ರಮ ಕೈಗೊಳ್ಳಲಾಗಿದೆ. ಸಾಲದ ಮರುಪಾವತಿಯನ್ನು 60 ತಿಂಗಳು ಮುಂದೂಡುವ ಮೊರಟೋರಿಯಂ ಅವಧಿ ಕಲ್ಪಿಸಲಾಗಿದ್ದು, ಈ ಅವಧಿಯಲ್ಲಿ ರೈತರು ಸಾಲ ಮರುಪಾವತಿ ಮಾಡದಿದ್ದರೂ ಪರವಾಗಿಲ್ಲ. ಸಾಲದ ಮೇಲಿನ ಬಡ್ಡಿ ಸೇರಿದಂತೆ ಸಂಬಂಧಿತ ಜವಾಬ್ದಾರಿಗಳನ್ನು ಸರ್ಕಾರವೇ ನೋಡಿಕೊಳ್ಳಲಿದೆ ಎಂದು ಬ್ಯಾಂಕ್ಗಳಿಗೆ ತಿಳಿಸಲಾಗಿದೆ.
ರೈತರಿಗೆ ಡೀಸೆಲ್ ಸಬ್ಸಿಡಿ, ವಿದ್ಯುತ್ ಸಬ್ಸಿಡಿ ಹಾಗೂ ಸರ್ಕಾರದ ಗ್ಯಾರಂಟಿ ಯೋಜನೆಗಳ ಮೂಲಕವೂ ನೆರವು ದೊರೆಯುತ್ತಿದೆ. ಈ ಎಲ್ಲ ನೆರವುಗಳನ್ನು ಒಟ್ಟಾಗಿ ಪರಿಗಣಿಸಿದರೆ ರೈತರಿಗೆ ಪ್ರತಿ ತಿಂಗಳು ಸುಮಾರು ₹1 ಲಕ್ಷದಷ್ಟು ಸಹಾಯವಾಗುತ್ತಿದೆ.
ರೈತರಿಗೆ ನೀಡುತ್ತಿರುವ ನೆರವು ಸಾಕಾಗದಿದ್ದರೆ ಇನ್ನಷ್ಟು ಕ್ರಮಗಳನ್ನು ಕೈಗೊಳ್ಳಲಾಗುವುದು. ಯಾವುದೇ ಕಾರಣಕ್ಕೂ ರೈತರನ್ನು ಕೈಬಿಡುವುದಿಲ್ಲ. ಅಗತ್ಯವಿದ್ದರೆ ಸಾಲ ಪಡೆದು ಪರಿಹಾರ ನೀಡುವುದಕ್ಕೂ ಸರ್ಕಾರ ಸಿದ್ಧವಿದೆ. ರೈತರ ಬದುಕು ಉಳಿಸುವುದು ಸರ್ಕಾರದ ಕರ್ತವ್ಯ.
*ಮೆಕ್ಕೆಜೋಳಕ್ಕೆ ಬೆಂಬಲ ಬೆಲೆ ನೀಡಲು ಕೇಂದ್ರಕ್ಕೆ ಮನವಿ*
ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಮೆಕ್ಕೆಜೋಳವನ್ನು ಹೆಚ್ಚಿನ ಪ್ರಮಾಣದಲ್ಲಿ ಬೆಳೆಯಲಾಗಿದ್ದು, ಈಗ ಬೆಲೆಯ ಕೊರತೆ ಮತ್ತು ಇಳುವರಿ ಕುಸಿತದಿಂದ ರೈತರು ಸಂಕಷ್ಟ ಎದುರಿಸುತ್ತಿದ್ದಾರೆ. ಈ ಸಮಸ್ಯೆಗೆ ಪರಿಹಾರ ಕಲ್ಪಿಸುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು.
ಪ್ರತಿ ಬೆಳೆಗೆ ಕನಿಷ್ಠ ಬೆಂಬಲ ಬೆಲೆ (MSP) ನಿಗದಿಪಡಿಸುವ ಜವಾಬ್ದಾರಿ ಕೇಂದ್ರ ಸರ್ಕಾರಕ್ಕೂ ಇದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಒಕ್ಕೂಟ ವ್ಯವಸ್ಥೆಯ ಭಾಗವಾಗಿರುವುದರಿಂದ ರೈತರ ಸಮಸ್ಯೆಗಳನ್ನು ಪರಿಹರಿಸಲು ಎರಡೂ ಸರ್ಕಾರಗಳು ತಮ್ಮ ಜವಾಬ್ದಾರಿಯನ್ನು ನಿರ್ವಹಿಸಬೇಕು. ಬೆಂಬಲ ಬೆಲೆಯ ವಿಚಾರದಲ್ಲಿ ಕೇಂದ್ರ ಸರ್ಕಾರ ಅಗತ್ಯ ನೆರವು ನೀಡಬೇಕು.
*ಡೀಸೆಲ್ ಕೊರತೆಯಿಂದ ಬಸ್ ಸಂಚಾರ ಸ್ಥಗಿತವಾದರೆ ತಕ್ಷಣ ಸರಿಪಡಿಸುತ್ತೇವೆ*
ಇದು ತಾತ್ಕಾಲಿಕ ಸಮಸ್ಯೆಯಾಗಿರಬಹುದು. ಅದನ್ನು ತಕ್ಷಣ ಸರಿಪಡಿಸಲಾಗುವುದು.
ಸರ್ಕಾರ ನಡೆಸುವಾಗ ವಿವಿಧ ಇಲಾಖೆಗಳಿಗೆ ಹಣ ಒದಗಿಸುವುದು, ಆದಾಯ ಸಂಗ್ರಹಿಸುವುದು ಮತ್ತು ಎಲ್ಲ ಯೋಜನೆಗಳನ್ನು ನಿರ್ವಹಿಸುವುದು ಅಗತ್ಯ. ಅಬಕಾರಿ, ನೋಂದಣಿ ಮತ್ತು ವಾಣಿಜ್ಯ ತೆರಿಗೆ ಸೇರಿದಂತೆ ವಿವಿಧ ಮೂಲಗಳಿಂದ ಆದಾಯ ಸಂಗ್ರಹಿಸಿ ಸರ್ಕಾರ ಹಣಕಾಸು ನಿರ್ವಹಣೆ ಮಾಡುತ್ತದೆ. ಯಾವುದಾದರೂ ಒಂದು ಕ್ಷೇತ್ರದಲ್ಲಿ ತಾತ್ಕಾಲಿಕ ವಿಳಂಬ ಉಂಟಾದರೆ ಅದನ್ನು ಸರಿಪಡಿಸಲಾಗುವುದು. ಸರ್ಕಾರ ಯಾವುದೇ ಯೋಜನೆಯನ್ನು ನಿಲ್ಲಿಸಿಲ್ಲ.
ಗ್ಯಾರಂಟಿಗಳಿಂದ ಆರ್ಥಿಕ ಸಮಸ್ಯೆ ಉಂಟಾಗಿದ್ದರೆ ಸರ್ಕಾರ ಯಾವುದಾದರೂ ಒಂದು ಯೋಜನೆಯನ್ನು ನಿಲ್ಲಿಸಬಹುದಿತ್ತು. ಆದರೆ ಸರ್ಕಾರ ಕಳೆದ ಮೂರು ವರ್ಷಗಳಲ್ಲಿ ₹52,000 ಕೋಟಿ ಗ್ಯಾರಂಟಿ ಯೋಜನೆಗಳಿಗೆ ವೆಚ್ಚ ಮಾಡಿದ್ದು, ಈಗಲೂ ಯೋಜನೆಗಳನ್ನು ಮುಂದುವರಿಸುತ್ತಿದೆ.
ಸಿದ್ದರಾಮಯ್ಯ ಅವರು ಸುಮಾರು 16 ಬಜೆಟ್ಗಳನ್ನು ಮಂಡಿಸಿದ್ದು, ರಾಜ್ಯದಲ್ಲಿ ಹಣಕಾಸಿನ ಶಿಸ್ತನ್ನು ಕಾಪಾಡಿಕೊಂಡು ಬಂದಿದ್ದಾರೆ. ಕರ್ನಾಟಕ ಸರ್ಕಾರವೂ ಹಣಕಾಸಿನ ಶಿಸ್ತಿನೊಂದಿಗೆ ಆಡಳಿತ ನಡೆಸುತ್ತಿದೆ. ಇತರ ರಾಜ್ಯಗಳ ಪರಿಸ್ಥಿತಿಗೆ ಹೋಲಿಸಿದರೆ ರಾಜ್ಯದಲ್ಲಿ ಹಣಕಾಸಿನ ನಿರ್ವಹಣೆ ಸಮರ್ಪಕವಾಗಿದೆ. ಆದ್ದರಿಂದ ಗ್ಯಾರಂಟಿ ಯೋಜನೆಗಳಿಂದಲೇ ಆರ್ಥಿಕ ತೊಂದರೆ ಉಂಟಾಗಿದೆ ಎಂಬ ಆರೋಪ ಸರಿಯಲ್ಲ.
*ರೈತರ ನೆರವಿನ ವಿಚಾರದಲ್ಲಿ ಯಾವುದೇ ರಾಜಿ ಇಲ್ಲ*
ಬರ ಪರಿಸ್ಥಿತಿಯ ನಡುವೆಯೂ ರೈತರಿಗೆ ನೆರವು ನೀಡುವುದರಲ್ಲಿ ಸರ್ಕಾರ ಹಿಂದೆ ಸರಿಯುವುದಿಲ್ಲ. ಬೆಳೆ ಪರಿಹಾರ, ವಿಮೆ, ಸಾಲ ಮರುಪಾವತಿಗೆ ಕಾಲಾವಕಾಶ, ಬಡ್ಡಿ ಪಾವತಿ ಹಾಗೂ ಇತರ ಸೌಲಭ್ಯಗಳ ಮೂಲಕ ರೈತರನ್ನು ಉಳಿಸಿಕೊಳ್ಳಲು ಪ್ರಯತ್ನಿಸಲಾಗುತ್ತಿದೆ.
ರೈತರ ಸಂಕಷ್ಟವನ್ನು ನಿವಾರಿಸಲು ಕೇಂದ್ರ ಸರ್ಕಾರವೂ ತನ್ನ ಜವಾಬ್ದಾರಿಯನ್ನು ನಿರ್ವಹಿಸಬೇಕು. ರಾಜ್ಯ ಸರ್ಕಾರ ಈಗಾಗಲೇ ಮೊದಲ ಕಂತಿನ ಪರಿಹಾರ ನೀಡಿದೆ. ಮುಂದಿನ ದಿನಗಳಲ್ಲಿ ಕೇಂದ್ರದಿಂದ ನೆರವು ಪಡೆದು ರೈತರಿಗೆ ಹೆಚ್ಚಿನ ಪರಿಹಾರ ನೀಡಲು ಪ್ರಯತ್ನಿಸಲಾಗುವುದು. ಬರ ನಿರ್ವಹಣೆಯ ಸಂದರ್ಭದಲ್ಲಿ ರಾಜಕೀಯಕ್ಕಿಂತ ರೈತರ ಬದುಕು ಮುಖ್ಯವಾಗಬೇಕು.
- ಇಂದು ಯಲಬುರ್ಗಾ ತಾಲೂಕಿನ ಗುನ್ನಾಳ ಗ್ರಾಮದ ಜಮೀನಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದೆ. -
Dr. G Parameshwara
@DrParameshwara
ಬುಧವಾರ ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳ ವಿವಿಧ ಬರಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ, ನೆಲಮಟ್ಟದ ಪರಿಸ್ಥಿತಿಯನ್ನು ಖುದ್ದು ಪರಿಶೀಲಿಸಿದೆ. ಮಳೆ ಕೊರತೆಯಿಂದ ಹಾನಿಗೊಳಗಾದ ತೊಗರಿ, ಮೆಕ್ಕೆಜೋಳ ಸೇರಿದಂತೆ ವಿವಿಧ ಕೃಷಿ ಬೆಳೆಗಳ ಸ್ಥಿತಿಯನ್ನು ವೀಕ್ಷಿಸಿದೆ. ರೈತರೊಂದಿಗೆ ನೇರವಾಗಿ ಮಾತನಾಡಿ, ಬೆಳೆ ನಷ್ಟ, ಕುಡಿಯುವ ನೀರು, ಜಾನುವಾರುಗಳಿಗೆ ಮೇವು, ಉದ್ಯೋಗ ಮತ್ತು ವಲಸೆ ಸೇರಿದಂತೆ ಅವರು ಎದುರಿಸುತ್ತಿರುವ ಸಮಸ್ಯೆಗಳನ್ನು ಆಲಿಸಿದೆ.
ಬಳಿಕ ವಿಜಯನಗರ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳ ಬರ ಪರಿಸ್ಥಿತಿ ಹಾಗೂ ನಿರ್ವಹಣಾ ಕ್ರಮಗಳ ಕುರಿತು ಅಧಿಕಾರಿಗಳೊಂದಿಗೆ ಪರಿಶೀಲನಾ ಸಭೆ ನಡೆಸಿ, ಕುಡಿಯುವ ನೀರು, ಮೇವು, ಉದ್ಯೋಗ ಹಾಗೂ ಇತರೆ ತುರ್ತು ಅಗತ್ಯಗಳಲ್ಲಿ ಯಾವುದೇ ವಿಳಂಬವಾಗದಂತೆ ಅಗತ್ಯ ಸಲಹೆ ಮತ್ತು ಸೂಚನೆಗಳನ್ನು ನೀಡಿದೆ.
ಈ ಕುರಿತಾದ ಪತ್ರಿಕಾ ವರದಿಗಳು ಹೀಗಿವೆ..
On Wednesday, I visited drought-affected areas in Ballari and Vijayanagara districts and reviewed the ground situation. I inspected crops damaged by inadequate rainfall and spoke directly with farmers about crop loss, drinking water, fodder, employment and migration.
Later, at the Vijayanagara Deputy Commissioner’s office, I reviewed drought management measures with officials and directed them to ensure there is no delay in addressing drinking water, fodder, employment and other urgent needs.
Here are the media reports on the visit and review meeting. -
Dr. G Parameshwara
@DrParameshwara
ಬುಧವಾರ ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳ ವಿವಿಧ ಬರಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ, ನೆಲಮಟ್ಟದ ಪರಿಸ್ಥಿತಿಯನ್ನು ಖುದ್ದು ಪರಿಶೀಲಿಸಿದೆ. ಮಳೆ ಕೊರತೆಯಿಂದ ಹಾನಿಗೊಳಗಾದ ತೊಗರಿ, ಮೆಕ್ಕೆಜೋಳ ಸೇರಿದಂತೆ ವಿವಿಧ ಕೃಷಿ ಬೆಳೆಗಳ ಸ್ಥಿತಿಯನ್ನು ವೀಕ್ಷಿಸಿದೆ. ರೈತರೊಂದಿಗೆ ನೇರವಾಗಿ ಮಾತನಾಡಿ, ಬೆಳೆ ನಷ್ಟ, ಕುಡಿಯುವ ನೀರು, ಜಾನುವಾರುಗಳಿಗೆ ಮೇವು, ಉದ್ಯೋಗ ಮತ್ತು ವಲಸೆ ಸೇರಿದಂತೆ ಅವರು ಎದುರಿಸುತ್ತಿರುವ ಸಮಸ್ಯೆಗಳನ್ನು ಆಲಿಸಿದೆ.
ಬಳಿಕ ವಿಜಯನಗರ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳ ಬರ ಪರಿಸ್ಥಿತಿ ಹಾಗೂ ನಿರ್ವಹಣಾ ಕ್ರಮಗಳ ಕುರಿತು ಅಧಿಕಾರಿಗಳೊಂದಿಗೆ ಪರಿಶೀಲನಾ ಸಭೆ ನಡೆಸಿ, ಕುಡಿಯುವ ನೀರು, ಮೇವು, ಉದ್ಯೋಗ ಹಾಗೂ ಇತರೆ ತುರ್ತು ಅಗತ್ಯಗಳಲ್ಲಿ ಯಾವುದೇ ವಿಳಂಬವಾಗದಂತೆ ಅಗತ್ಯ ಸಲಹೆ ಮತ್ತು ಸೂಚನೆಗಳನ್ನು ನೀಡಿದೆ.
ಈ ಕುರಿತಾದ ಪತ್ರಿಕಾ ವರದಿಗಳು ಹೀಗಿವೆ..
On Wednesday, I visited drought-affected areas in Ballari and Vijayanagara districts and reviewed the ground situation. I inspected crops damaged by inadequate rainfall and spoke directly with farmers about crop loss, drinking water, fodder, employment and migration.
Later, at the Vijayanagara Deputy Commissioner’s office, I reviewed drought management measures with officials and directed them to ensure there is no delay in addressing drinking water, fodder, employment and other urgent needs.
Here are the media reports on the visit and review meeting. -
Dr. G Parameshwara
@DrParameshwara
ಬುಧವಾರ ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳ ವಿವಿಧ ಬರಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ, ನೆಲಮಟ್ಟದ ಪರಿಸ್ಥಿತಿಯನ್ನು ಖುದ್ದು ಪರಿಶೀಲಿಸಿದೆ. ಮಳೆ ಕೊರತೆಯಿಂದ ಹಾನಿಗೊಳಗಾದ ತೊಗರಿ, ಮೆಕ್ಕೆಜೋಳ ಸೇರಿದಂತೆ ವಿವಿಧ ಕೃಷಿ ಬೆಳೆಗಳ ಸ್ಥಿತಿಯನ್ನು ವೀಕ್ಷಿಸಿದೆ. ರೈತರೊಂದಿಗೆ ನೇರವಾಗಿ ಮಾತನಾಡಿ, ಬೆಳೆ ನಷ್ಟ, ಕುಡಿಯುವ ನೀರು, ಜಾನುವಾರುಗಳಿಗೆ ಮೇವು, ಉದ್ಯೋಗ ಮತ್ತು ವಲಸೆ ಸೇರಿದಂತೆ ಅವರು ಎದುರಿಸುತ್ತಿರುವ ಸಮಸ್ಯೆಗಳನ್ನು ಆಲಿಸಿದೆ.
ಬಳಿಕ ವಿಜಯನಗರ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳ ಬರ ಪರಿಸ್ಥಿತಿ ಹಾಗೂ ನಿರ್ವಹಣಾ ಕ್ರಮಗಳ ಕುರಿತು ಅಧಿಕಾರಿಗಳೊಂದಿಗೆ ಪರಿಶೀಲನಾ ಸಭೆ ನಡೆಸಿ, ಕುಡಿಯುವ ನೀರು, ಮೇವು, ಉದ್ಯೋಗ ಹಾಗೂ ಇತರೆ ತುರ್ತು ಅಗತ್ಯಗಳಲ್ಲಿ ಯಾವುದೇ ವಿಳಂಬವಾಗದಂತೆ ಅಗತ್ಯ ಸಲಹೆ ಮತ್ತು ಸೂಚನೆಗಳನ್ನು ನೀಡಿದೆ.
ಈ ಕುರಿತಾದ ಪತ್ರಿಕಾ ವರದಿಗಳು ಹೀಗಿವೆ..
On Wednesday, I visited drought-affected areas in Ballari and Vijayanagara districts and reviewed the ground situation. I inspected crops damaged by inadequate rainfall and spoke directly with farmers about crop loss, drinking water, fodder, employment and migration.
Later, at the Vijayanagara Deputy Commissioner’s office, I reviewed drought management measures with officials and directed them to ensure there is no delay in addressing drinking water, fodder, employment and other urgent needs.
Here are the media reports on the visit and review meeting. -
Dr. G Parameshwara
@DrParameshwara
ಇಂದು ಕೊಪ್ಪಳ ತಾಲೂಕಿನ ವಣಬಳ್ಳಾರಿ, ಯಲಬುರ್ಗಾ ತಾಲೂಕಿನ ಗುನ್ನಾಳ ಹಾಗೂ ಕುಷ್ಟಗಿ ತಾಲೂಕಿನ ನಂದಾಪುರ ಗ್ರಾಮಗಳ ಬರಪೀಡಿತ ಜಮೀನುಗಳಿಗೆ ಭೇಟಿ ನೀಡಿ, ಬೆಳೆ ಹಾನಿಯನ್ನು ಪರಿಶೀಲಿಸಿದೆ.
ಮಳೆ ಕೊರತೆಯಿಂದಾಗಿ ಮೆಕ್ಕೆಜೋಳ, ಹುರಳಿ ಹಾಗೂ ತೊಗರಿ ಬೆಳೆಗಳಲ್ಲಿ ಕಾಳು ಕಟ್ಟದೆ, ರೈತರು ನಷ್ಟ ಅನುಭವಿಸಿರುವುದನ್ನು ಖುದ್ದಾಗಿ ವೀಕ್ಷಿಸಿದೆ. ಈ ಸಂದರ್ಭದಲ್ಲಿ ಬೆಳೆ ನಷ್ಟದ ಪ್ರಮಾಣ ಹಾಗೂ ಬರ ಪರಿಸ್ಥಿತಿಯ ಕುರಿತು ಸಂಬಂಧಿಸಿದ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡೆ.
ಬರದಿಂದ ಸಂಕಷ್ಟಕ್ಕೆ ಸಿಲುಕಿರುವ ರೈತರ ಪರಿಸ್ಥಿತಿಯನ್ನು ಅರಿತು, ಅವರಿಗೆ ಅಗತ್ಯ ನೆರವು ಒದಗಿಸುವುದು ನಮ್ಮ ಸರ್ಕಾರದ ಆದ್ಯತೆಯಾಗಿದೆ.
Dr. G Parameshwara
@DrParameshwara
Today, I visited drought-affected farmlands in Vanaballari village of Koppal taluk, Gunnal village of Yelburga taluk and Nandapur village of Kushtagi taluk, and inspected the crop damage.
I personally observed that maize, horse gram and tur crops had failed to form grains due to inadequate rainfall, causing losses to farmers. I also obtained information from the concerned officials on the extent of crop damage and the prevailing drought situation.
Supporting farmers affected by drought remains a priority for our Government.
Dr. G Parameshwara
@DrParameshwara
-
Post not available here, view on XPost not available here, view on X
Dr. G Parameshwara
@DrParameshwara
-
Dr. G Parameshwara
@DrParameshwara
ಬೆಳೆ ನಷ್ಟದಿಂದ ಸಂಕಷ್ಟದಲ್ಲಿರುವ ರೈತರಿಗೆ ತಕ್ಷಣದ ಆರ್ಥಿಕ ನೆರವು ತಲುಪಿಸುವ ಉದ್ದೇಶದಿಂದ ಸರ್ಕಾರ ಮೊದಲ ಕಂತಾಗಿ ತಲಾ ₹2,500 ಪರಿಹಾರ ನೀಡಲು ನಿರ್ಧರಿಸಿದೆ. ಸುಮಾರು 50 ಲಕ್ಷ ರೈತರಿಗೆ ಈ ನೆರವು ತಲುಪಲಿದ್ದು, ಇದಕ್ಕಾಗಿ ₹1,250 ಕೋಟಿ ಬಿಡುಗಡೆ ಮಾಡಲಾಗಿದೆ.
₹2,500 ನೆರವು ಸಂಪೂರ್ಣ ನಷ್ಟಕ್ಕೆ ಪರಿಹಾರವಲ್ಲ ಎಂಬುದು ಸರ್ಕಾರಕ್ಕೂ ತಿಳಿದಿದೆ. ಆದರೆ ಯಾವುದೇ ಅರ್ಹ ರೈತ ನೆರವಿನಿಂದ ವಂಚಿತರಾಗಬಾರದು ಎಂಬ ಉದ್ದೇಶದಿಂದ ಎಲ್ಲರಿಗೂ ಸಮಾನವಾಗಿ ಮೊದಲ ಹಂತದ ನೆರವು ನೀಡಲಾಗುತ್ತಿದೆ.
ರೈತರ ಸಂಕಷ್ಟದ ಸಂದರ್ಭದಲ್ಲಿ ಅಗತ್ಯ ನೆರವು ಒದಗಿಸಲು ಸರ್ಕಾರ ಸದಾ ಬದ್ಧವಾಗಿದೆ. ಅವರ ಬದುಕಿಗೆ ಭರವಸೆಯಾಗಿ ಸರ್ಕಾರ ಸದಾ ಬೆನ್ನಿಗೆ ನಿಲ್ಲಲಿದೆ.
To provide immediate financial support to farmers facing distress due to crop loss, the Government has decided to provide ₹2,500 each as the first instalment of relief. Around 50 lakh farmers will receive this assistance, for which ₹1,250 crore has been released.
The Government is aware that ₹2,500 cannot compensate for the full extent of the loss. However, to ensure that no eligible farmer is left out, the first phase of assistance is being provided uniformly to all eligible farmers.
The Government remains committed to supporting farmers through this difficult period and will continue to stand by them with the assistance they need. -
Dr. G Parameshwara
@DrParameshwara
ಬೆಳೆ ಹಾನಿಯ ಜೊತೆಗೆ ರಾಜ್ಯದ ಹಲವು ಭಾಗಗಳಲ್ಲಿ ಕುಡಿಯುವ ನೀರಿನ ಸಮಸ್ಯೆಯೂ ಗಂಭೀರವಾಗುತ್ತಿದೆ. ಬೋರ್ವೆಲ್ಗಳು ಒಣಗುತ್ತಿದ್ದು, ಕೆರೆಗಳಲ್ಲಿನ ನೀರಿನ ಮಟ್ಟವೂ ಕುಸಿಯುತ್ತಿದೆ. ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರಿಗೆ ತೊಂದರೆಯಾಗದಂತೆ ಸರ್ಕಾರ ತಕ್ಷಣದ ಕ್ರಮ ಕೈಗೊಂಡಿದೆ.
ನೀರು ಲಭ್ಯವಿರುವ ಕಡೆ ಹೊಸ ಬೋರ್ವೆಲ್ಗಳ ಕೊರೆತ ಹಾಗೂ ದೂರದ ಜಲಮೂಲಗಳಿಂದ ಪೈಪ್ಲೈನ್ ಮೂಲಕ ನೀರು ಪೂರೈಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಕುಡಿಯುವ ನೀರಿನ ವ್ಯವಸ್ಥೆಗಾಗಿ ₹306 ಕೋಟಿ ಅನುದಾನ ಒದಗಿಸಲಾಗಿದ್ದು, ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ತಲಾ ₹1 ಕೋಟಿ ಮೀಸಲಿಡಲಾಗಿದೆ. ಅಗತ್ಯವಿದ್ದಲ್ಲಿ ಹೆಚ್ಚುವರಿಯಾಗಿ ₹1 ಕೋಟಿಯನ್ನೂ ನೀಡಲಾಗುವುದು.
ಜಿಲ್ಲಾಮಟ್ಟದ ತುರ್ತು ಕ್ರಮಗಳಿಗಾಗಿ ತಲಾ ₹5 ಕೋಟಿ ಆರಂಭಿಕ ಅನುದಾನ ನೀಡಲಾಗಿದೆ. ರಾಜ್ಯಾದ್ಯಂತ ಜಿಲ್ಲಾಧಿಕಾರಿಗಳ ಬಳಿ ತಕ್ಷಣದ ಬಳಕೆಗೆ ₹329 ಕೋಟಿ ಅನುದಾನವಿದ್ದು, ಬಳ್ಳಾರಿ ಜಿಲ್ಲಾಧಿಕಾರಿಗಳ ಬಳಿ ಸುಮಾರು ₹7 ಕೋಟಿ ಇದೆ. ಯಾವುದೇ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾದರೆ, ತಕ್ಷಣ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ.
ಕುಡಿಯುವ ನೀರಿನ ಸಮಸ್ಯೆ ಎದುರಾದ ಯಾವುದೇ ಪ್ರದೇಶಕ್ಕೂ ತ್ವರಿತವಾಗಿ ಸ್ಪಂದಿಸಲು ಸರ್ಕಾರ ಸಿದ್ಧವಿದೆ. ಅಗತ್ಯಕ್ಕೆ ತಕ್ಕಂತೆ ನೆರವು ಹೆಚ್ಚಿಸಿ, ಸರ್ಕಾರ ನಿರಂತರವಾಗಿ ಜನರ ಜೊತೆಗಿರಲಿದೆ.
Along with crop losses, drinking water shortages are becoming a serious concern in several parts of the State. Borewells are drying up and water levels in tanks are falling. The Government has initiated immediate measures to ensure that rural areas do not face drinking water shortages.
Officials have been directed to drill new borewells wherever water is available and supply water through pipelines from distant water sources. A total of ₹306 crore has been allocated for drinking water arrangements, with ₹1 crore earmarked for each Assembly constituency. An additional ₹1 crore will be provided wherever required.
An initial ₹5 crore per district has been provided for emergency measures. Across the State, Deputy Commissioners have ₹329 crore available for immediate use, including around ₹7 crore with the Ballari Deputy Commissioner. Officials have been instructed to act immediately if any village faces a drinking water shortage.
The Government is prepared to respond swiftly wherever drinking water problems arise. Support will be enhanced according to need, and we will continue to stand with the people throughout this difficult period. -
Dr. G Parameshwara
@DrParameshwara
From guarding our skies in the most difficult conditions to standing by the nation in moments of crisis, the Indian Air Force has always represented courage in action and service before self.
On #indianairforceday, I pay tribute to generations of Air Warriors whose commitment has strengthened India’s security and inspired the nation.
My respects to all serving personnel, veterans and their families.
Jai Hind! 🇮🇳 -
Dr. G Parameshwara
@DrParameshwara
ಇಂದು ಕೊಪ್ಪಳ ಜಿಲ್ಲಾ ಪ್ರವಾಸದ ಸಂದರ್ಭದಲ್ಲಿ ಮಾಜಿ ಸಂಸದರು ಹಾಗೂ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರಾದ ಶ್ರೀ ಎಚ್.ಜಿ. ರಾಮುಲು ಅವರ ನಿವಾಸಕ್ಕೆ ಭೇಟಿ ನೀಡಿ, ಅವರೊಂದಿಗೆ ಆತ್ಮೀಯವಾಗಿ ಮಾತುಕತೆ ನಡೆಸಿ, ಕುಶಲೋಪರಿ ವಿಚಾರಿಸಿದೆ.
ಈ ಸಂದರ್ಭದಲ್ಲಿ ಶಾಸಕರಾದ ರಾಘವೇಂದ್ರ ಹಿಟ್ನಾಳ್, ಗವಿಯಪ್ಪ ಹಾಗೂ ಸ್ಥಳೀಯ ಕಾಂಗ್ರೆಸ್ ಮುಖಂಡರು ಉಪಸ್ಥಿತರಿದ್ದರು. -
Dr. G Parameshwara
@DrParameshwara
Deeply saddened to hear about the passing of veteran actor Nana Patekar.
A powerhouse of talent, his remarkable performances, distinctive dialogue delivery and immense contribution to Indian cinema have left an indelible mark on generations of audiences.
My heartfelt condolences to his family, friends and countless admirers. May his soul rest in peace. -
Dr. G Parameshwara
@DrParameshwara
ಬಳ್ಳಾರಿ ಜಿಲ್ಲೆಯಲ್ಲಿ ಸರಾಸರಿ ಶೇ.49 ಮಳೆ ಕೊರತೆಯಾಗಿದ್ದು, ಸಂಡೂರು ತಾಲೂಕಿನಲ್ಲಿ ಶೇ.68 ಮತ್ತು ಕಂಪ್ಲಿಯಲ್ಲಿ ಶೇ.65 ಮಳೆ ಕೊರತೆಯಾಗಿದೆ. ಜಿಲ್ಲೆಯ ಎಲ್ಲಾ ಐದು ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿದೆ.
ಬಳ್ಳಾರಿ ಜಿಲ್ಲೆಯಲ್ಲಿ 1,34,809 ಹೆಕ್ಟೇರ್ ಗುರಿ ಪ್ರದೇಶದ ಪೈಕಿ ಶೇ.84.50ರಷ್ಟು ಬಿತ್ತನೆಯಾಗಿದ್ದರೂ, 67,236 ಹೆಕ್ಟೇರ್ ಪ್ರದೇಶದಲ್ಲಿ ಹತ್ತಿ, ಮೆಕ್ಕೆಜೋಳ, ಭತ್ತ, ತೊಗರಿ ಮತ್ತು ಸೂರ್ಯಕಾಂತಿ ಬೆಳೆಗಳು ನಾಶವಾಗಿವೆ. ತೋಟಗಾರಿಕೆ ಇಲಾಖೆಯಡಿ 4,520 ಹೆಕ್ಟೇರ್ ಪ್ರದೇಶದಲ್ಲಿ ಈರುಳ್ಳಿ ಮತ್ತು ಮೆಣಸಿನಕಾಯಿ ಹಾನಿಯಾಗಿದೆ. ಸಮೀಕ್ಷೆಯ ಪ್ರಕಾರ ಶೇ.96.87 ಪ್ಲಾಟ್ಗಳಲ್ಲಿ ಶೇ.50ಕ್ಕಿಂತ ಹೆಚ್ಚು ಬೆಳೆ ಹಾನಿಯಾಗಿದೆ.
ಜಿಲ್ಲೆಯಲ್ಲಿ 26,513 ಹೆಕ್ಟೇರ್ ಹತ್ತಿ ಹಾನಿಯಾಗಿದ್ದು, ರೈತರಿಗೆ ಸುಮಾರು ₹237 ಕೋಟಿ ನಷ್ಟವಾಗಿದೆ. 15,766 ಹೆಕ್ಟೇರ್ ಮೆಕ್ಕೆಜೋಳ ಹಾಗೂ 9,941 ಹೆಕ್ಟೇರ್ ಭತ್ತ ಬೆಳೆ ಹಾನಿಯಾಗಿದೆ. ಸಿರುಗುಪ್ಪದಲ್ಲಿ 3,780 ಹೆಕ್ಟೇರ್ ಮೆಣಸಿನಕಾಯಿ, ಕಂಪ್ಲಿಯಲ್ಲಿ 497 ಹೆಕ್ಟೇರ್ ಹಾಗೂ ಸಂಡೂರಿನಲ್ಲಿ 150 ಹೆಕ್ಟೇರ್ ಈರುಳ್ಳಿ ಬೆಳೆ ನಷ್ಟವಾಗಿದೆ.
ಕೃಷಿ ವಿಶ್ವವಿದ್ಯಾಲಯದ ವಿಜ್ಞಾನಿಗಳ ವರದಿಯ ಪ್ರಕಾರ ಮಣ್ಣಿನ ತೇವಾಂಶದ ತೀವ್ರ ಕೊರತೆ, ಹೂ ಉದುರುವಿಕೆ ಹಾಗೂ ಪರಾಗಾಣು ಬರಡಾಗಿರುವುದರಿಂದ ಇಳುವರಿಯಲ್ಲಿ ಶೇ.85ರಿಂದ 90ರವರೆಗೆ ಕುಸಿತವಾಗಿದೆ. ಇಂತಹ ರೈತರಿಗೆ ಸರ್ಕಾರದ ಪರಿಹಾರ ತುರ್ತಾಗಿ ತಲುಪಬೇಕು.
ಬಳ್ಳಾರಿ ಜಿಲ್ಲೆಯಲ್ಲಿ 10 ಹಳ್ಳಿಗಳನ್ನು ಕುಡಿಯುವ ನೀರಿನ ಸಮಸ್ಯಾತ್ಮಕ ಹಳ್ಳಿಗಳೆಂದು ಗುರುತಿಸಲಾಗಿದ್ದು, ಈಗಾಗಲೇ ಐದು ಖಾಸಗಿ ಬೋರ್ವೆಲ್ಗಳನ್ನು ಬಾಡಿಗೆಗೆ ಪಡೆಯಲಾಗಿದೆ. ಬಳ್ಳಾರಿ ತಾಲೂಕಿನಲ್ಲಿ 2 ಹಾಗೂ ಸಂಡೂರಿನಲ್ಲಿ 3 ಬೋರ್ವೆಲ್ಗಳನ್ನು ಬಳಸಲಾಗುತ್ತಿದೆ.
ಬಡನಹಟ್ಟಿ, ಹಳೇ ವಡ್ಡಿನಕಟ್ಟೆ, ಹೆಚ್.ಕೆ. ಹಳ್ಳಿ, ಬಂಡ್ರಿ ಹಾಗೂ ಚೋರ್ನೂರು ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿದ್ದು, ಅಧಿಕಾರಿಗಳು ಖುದ್ದು ಭೇಟಿ ನೀಡಿ ನೀರು ಸಮರ್ಪಕವಾಗಿ ಪೂರೈಕೆಯಾಗುತ್ತಿರುವುದನ್ನು ಖಚಿತಪಡಿಸಿಕೊಳ್ಳಬೇಕು. ಮುಂದಿನ ದಿನಗಳಲ್ಲಿ ಪರಿಸ್ಥಿತಿ ಉಲ್ಬಣಗೊಳ್ಳದಂತೆ ಮುಂಚಿತ ಕ್ರಿಯಾಯೋಜನೆ ಸಿದ್ಧವಾಗಿರಬೇಕು.
ಬಳ್ಳಾರಿ ಜಿಲ್ಲೆಯಲ್ಲಿ 24 ವಾರಗಳಿಗೆ ಆಗುವಷ್ಟು ಮೇವು ಲಭ್ಯವಿದೆ. ಜಿಲ್ಲೆಗೆ 8,805 ಮೇವಿನ ಬೀಜದ ಕಿಟ್ಗಳನ್ನು ಪೂರೈಸಿದ್ದರೂ ಕೇವಲ 1,149 ಕಿಟ್ಗಳನ್ನು ಮಾತ್ರ ವಿತರಿಸಲಾಗಿದೆ. ಈ ಪ್ರಮಾಣ ಅತ್ಯಂತ ಕಡಿಮೆ. ಇಂದಿನಿಂದಲೇ ವಿತರಣೆಯನ್ನು ಚುರುಕುಗೊಳಿಸಬೇಕು. ಇಲ್ಲವಾದಲ್ಲಿ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕಾಗುತ್ತದೆ.
ಬಳ್ಳಾರಿಯಲ್ಲಿ 2.74 ಲಕ್ಷ ಸಕ್ರಿಯ ಕಾರ್ಮಿಕರಿದ್ದು, 9.28 ಲಕ್ಷ ಮಾನವ ದಿನಗಳನ್ನು ಸೃಷ್ಟಿಸಲಾಗಿದೆ. ಇದಕ್ಕಾಗಿ ₹22.16 ಕೋಟಿ ವೆಚ್ಚ ಮಾಡಲಾಗಿದೆ. ಸ್ಥಳೀಯ ಮಟ್ಟದಲ್ಲಿ ಪ್ರತಿಯೊಬ್ಬರಿಗೂ ಉದ್ಯೋಗ ದೊರೆಯಬೇಕು ಹಾಗೂ ಕೂಲಿ ಪಾವತಿಯಲ್ಲಿ ಒಂದು ದಿನವೂ ವಿಳಂಬವಾಗಬಾರದು.
ರಾಜ್ಯದ ಬರ ಪರಿಸ್ಥಿತಿ ದಿನೇ ದಿನೇ ಗಂಭೀರವಾಗುತ್ತಿದ್ದು, ಹಿಂಗಾರಿನಲ್ಲೂ ವಾಡಿಕೆಗಿಂತ ಕಡಿಮೆ ಮಳೆಯಾಗುವ ಮುನ್ಸೂಚನೆ ಇದೆ. ಮೇವಿನ ಕಿಟ್ ವಿತರಣೆಗಾಗಿ ಪಶುಸಂಗೋಪನಾ ಇಲಾಖೆಗೆ ಈಗಾಗಲೇ ₹25 ಕೋಟಿ ಬಿಡುಗಡೆ ಮಾಡಲಾಗಿದೆ.
NDRF ಅಡಿಯಲ್ಲಿ ಕೇಂದ್ರ ಸರ್ಕಾರದಿಂದ ಇನ್ನೂ ರೈತರಿಗೆ ಪರಿಹಾರ ಬಿಡುಗಡೆಯಾಗದ ಹಿನ್ನೆಲೆಯಲ್ಲಿ, ರಾಜ್ಯ ಸರ್ಕಾರ ತನ್ನ SDRF ನಿಧಿಯಿಂದ ಪ್ರತಿಯೊಬ್ಬ ಅರ್ಹ ರೈತನಿಗೆ ₹2,500 ಪರಿಹಾರ ನೀಡುತ್ತಿದೆ.
ಬರದ ಸಂಕಷ್ಟದ ಸಂದರ್ಭದಲ್ಲಿ ರೈತರ ಬದುಕಿಗೆ ಆರ್ಥಿಕ ಸ್ಥಿರತೆ ಮತ್ತು ಸ್ವಾವಲಂಬನೆ ತರಲು ‘ನೇಗಿಲ ಯೋಗಿ’ ಯೋಜನೆಯನ್ನು ಜಾರಿಗೆ ತರಲಾಗುತ್ತಿದೆ. ಕೃಷಿ ಚಟುವಟಿಕೆಗಳಿಗೆ ತಾಂತ್ರಿಕ ಮತ್ತು ಆರ್ಥಿಕ ಬೆಂಬಲ ಒದಗಿಸುವುದು, ಸಬ್ಸಿಡಿ ದರದಲ್ಲಿ ಕೃಷಿ ಯಂತ್ರೋಪಕರಣ ಅಥವಾ ನೇರ ಆರ್ಥಿಕ ನೆರವು ನೀಡುವುದು ಯೋಜನೆಯ ಉದ್ದೇಶವಾಗಿದೆ.
ಮೂರು ಎಕರೆಗಿಂತ ಕಡಿಮೆ ಹಿಡುವಳಿ ಹೊಂದಿರುವ ರೈತರಿಗೆ ಒಂದು ವರ್ಷದಲ್ಲಿ ಪ್ರತಿ ಎಕರೆಯಲ್ಲಿ ಗರಿಷ್ಠ ಮೂರು ಚಟುವಟಿಕೆಗಳಿಗೆ ಪ್ರತಿ ಚಟುವಟಿಕೆಗೆ ₹500ರಂತೆ, ಮೂರು ಎಕರೆಗೆ ಗರಿಷ್ಠ ₹4,500 ಪ್ರೋತ್ಸಾಹಧನವನ್ನು DBT ಮೂಲಕ ನೀಡುವ ಉದ್ದೇಶವಿದೆ. ಇದಕ್ಕಾಗಿ ಪ್ರತ್ಯೇಕ ಮೊಬೈಲ್ ಆಪ್ ಮತ್ತು ವೆಬ್ ಪೋರ್ಟಲ್ ಅಭಿವೃದ್ಧಿಪಡಿಸಲಾಗುತ್ತಿದೆ.
ಇದರ ಜೊತೆಗೆ ರೈತರಿಗೆ ಹವಾಮಾನ ಮತ್ತು ಮಾರುಕಟ್ಟೆ ಆಧಾರಿತ ಕೃಷಿ ಪದ್ಧತಿಗಳ ಪರಿಚಯ, ಸರ್ಕಾರದ ಸೌಲಭ್ಯಗಳನ್ನು ನೇರವಾಗಿ ತಲುಪಿಸುವುದು ಹಾಗೂ ಅಧಿಕಾರಿಗಳು ಕಚೇರಿಗೆ ಸೀಮಿತವಾಗದೆ ಹೊಲ-ಗದ್ದೆಗಳಿಗೆ ತೆರಳಿ ಸ್ಪಂದಿಸುವ ಉದ್ದೇಶದಿಂದ ‘ರೈತ ಮಿತ್ರ’ ಕಾರ್ಯಕ್ರಮವನ್ನು ಜಾರಿಗೆ ತರಲಾಗುತ್ತಿದೆ.
ಕುಡಿಯುವ ನೀರು, ಆಹಾರ, ಉದ್ಯೋಗ, ಆರೋಗ್ಯ, ಜಾನುವಾರುಗಳಿಗೆ ನೀರು ಮತ್ತು ಮೇವು ಸೇರಿದಂತೆ ಜನರ ಮೂಲಭೂತ ಅಗತ್ಯಗಳನ್ನು ನೋಡಿಕೊಳ್ಳುವುದು ಸರ್ಕಾರದ ಹೊಣೆ. ಕಂದಾಯ ಇಲಾಖೆ ಇತರೆ ಸಂಬಂಧಪಟ್ಟ ಇಲಾಖೆಗಳೊಂದಿಗೆ ಸಮನ್ವಯ ಮಾಡಿಕೊಂಡು ಸಮಸ್ಯೆ ಉಂಟಾಗದಂತೆ ಕ್ರಮ ಕೈಗೊಳ್ಳಬೇಕು.
ಜಲಾಶಯಗಳಲ್ಲಿರುವ ನೀರನ್ನು ಅತ್ಯಂತ ಮಿತವಾಗಿ ಮತ್ತು ಜವಾಬ್ದಾರಿಯಿಂದ ಬಳಸಬೇಕು. ಯಾವುದೇ ಗ್ರಾಮ ಅಥವಾ ನಗರ ಪ್ರದೇಶದಲ್ಲಿ ಕುಡಿಯುವ ನೀರಿನ ಕೊರತೆ ಉಂಟಾಗಬಾರದು. ನೀರಿನ ಕೊರತೆಯ ಸಂದರ್ಭದಲ್ಲಿ ಜನರು ನೀರನ್ನು ದೀರ್ಘಕಾಲ ಶೇಖರಿಸಿಡುವ ಸಾಧ್ಯತೆ ಹೆಚ್ಚಿರುವುದರಿಂದ ಡೆಂಗ್ಯೂ ಮತ್ತು ಚಿಕೂನ್ಗುನ್ಯಾ ಹರಡುವ ಅಪಾಯವಿದೆ. ವಿಜಯನಗರ ಜಿಲ್ಲೆಯಲ್ಲಿ 2026ರ ಜನವರಿಯಿಂದ ಈವರೆಗೆ 30 ಡೆಂಗ್ಯೂ ಮತ್ತು ಏಳು ಚಿಕೂನ್ಗುನ್ಯಾ ಪ್ರಕರಣಗಳು ದಾಖಲಾಗಿರುವ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಜನರಿಗೆ ಸೂಕ್ತ ಜಾಗೃತಿ ಮೂಡಿಸಬೇಕು.
ಟಾಸ್ಕ್ಫೋರ್ಸ್ ಮತ್ತು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆಗಳನ್ನು ನಿಯಮಿತವಾಗಿ ನಡೆಸಬೇಕು. ಬರಗಾಲದ ವರ್ಷಗಳಲ್ಲಿ ಕಲುಷಿತ ನೀರಿನಿಂದ ಸಮಸ್ಯೆ ಎದುರಿಸುವವರ ಸಂಖ್ಯೆ ಹೆಚ್ಚಾಗುವುದರಿಂದ ನೀರಿನ ಗುಣಮಟ್ಟದ ಮೇಲೂ ಹೆಚ್ಚಿನ ನಿಗಾ ಇರಬೇಕು.
ಎಲ್ನಿನೊ ಇರುವ ವರ್ಷಗಳಲ್ಲಿ ಕೆಲವೊಮ್ಮೆ ಹಠಾತ್ ಮಳೆ, ಪ್ರವಾಹ ಹಾಗೂ ಸಿಡಿಲಿನ ಸಂಭವ ಹೆಚ್ಚಾಗಬಹುದು. ಹವಾಮಾನ ಮುನ್ಸೂಚನೆ ಆಧರಿಸಿ ಜಿಲ್ಲಾಡಳಿತ ಮುಂಚಿತ ಕ್ರಮ ಕೈಗೊಳ್ಳಬೇಕು.
ಬಿತ್ತನೆ ಬೀಜ ಮತ್ತು ಗೊಬ್ಬರದ ಕೊರತೆ ಉಂಟಾಗದಂತೆ ದಾಸ್ತಾನು ಇಟ್ಟುಕೊಳ್ಳಬೇಕು. ಬರದಿಂದ ಬೆಳೆ ಒಣಗಿದ ನಂತರ ಹಠಾತ್ ಮಳೆ ಬಂದರೆ ಮತ್ತೆ ಬಿತ್ತನೆಗೆ ಬೀಜ ಮತ್ತು ಗೊಬ್ಬರದ ಬೇಡಿಕೆ ಏಕಾಏಕಿ ಹೆಚ್ಚಬಹುದು. ಅದಕ್ಕೆ ಕೃಷಿ ಇಲಾಖೆ ಈಗಿನಿಂದಲೇ ಸಿದ್ಧತೆ ಮಾಡಿಕೊಳ್ಳಬೇಕು.
ಜಾನುವಾರುಗಳಿಗೆ ಮೇವು ಲಭ್ಯವಿದೆಯೇ ಎಂಬುದನ್ನು ಕೇವಲ ವರದಿಗಳ ಆಧಾರದಲ್ಲಿ ನಿರ್ಧರಿಸದೆ, ಜಿಲ್ಲಾಧಿಕಾರಿಗಳು ಮತ್ತು ಸಿಇಒಗಳು ತಮ್ಮ ತಂಡಗಳ ಮೂಲಕ ಖುದ್ದು ಪರಿಶೀಲಿಸಿ ಖಚಿತಪಡಿಸಿಕೊಳ್ಳಬೇಕು. ನೀರಿನ ಮೂಲ ಹೊಂದಿರುವ ರೈತರಿಗೆ ಮೇವು ಬೆಳೆಯಲು ಉತ್ತೇಜನ ನೀಡಿ, ಮೇವಿನ ಬೀಜದ ಕಿಟ್ಗಳನ್ನು ವಿತರಿಸಬೇಕು.
ರೇನ್ಗೇಜ್ ಕೇಂದ್ರಗಳು ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿವೆಯೇ ಎಂಬುದನ್ನೂ ಪರಿಶೀಲಿಸಬೇಕು. ಯಾವುದೇ ಜನವಸತಿ ಪ್ರದೇಶಕ್ಕೂ ಕುಡಿಯುವ ನೀರಿನ ತೊಂದರೆ ಆಗಬಾರದು. ಟ್ಯಾಂಕರ್ ಮೂಲಕ ನೀರು ಪೂರೈಸುವ ಸಂದರ್ಭಗಳಲ್ಲಿ ನೀರು ಹೆಚ್ಚು ಕಾಲ ಸಂಗ್ರಹವಾಗುವುದರಿಂದ ಡೆಂಗ್ಯೂ ಅಪಾಯ ಹೆಚ್ಚಾಗದಂತೆ ಮುನ್ನೆಚ್ಚರಿಕೆ ವಹಿಸಬೇಕು.
ಕಡಿಮೆ ನೀರಿನಲ್ಲಿ ಬೆಳೆಯಬಹುದಾದ ಬೆಳೆಗಳನ್ನು ಆಯ್ಕೆ ಮಾಡಿಕೊಳ್ಳುವಂತೆ ರೈತರ ಮನವೊಲಿಸಬೇಕು. ಕುಡಿಯುವ ನೀರಿಗಾಗಿ ಜಿಲ್ಲೆಗಳಿಗೆ ನೀಡಿರುವ ತುರ್ತು ₹5 ಕೋಟಿ ಅನುದಾನವನ್ನು ವಿವೇಚನೆಯಿಂದ ಬಳಸಬೇಕು.
ನೀರಿನ ಸಮಸ್ಯೆ ಎದುರಾದರೆ ಮೊದಲಿಗೆ ಲಭ್ಯ ಜಲಾಶಯದ ನೀರನ್ನು ಜವಾಬ್ದಾರಿಯಿಂದ ಬಳಸುವುದು, ಬಳಿಕ ಖಾಸಗಿ ಬೋರ್ವೆಲ್ಗಳನ್ನು ಬಾಡಿಗೆಗೆ ಪಡೆಯುವುದು, ಅಗತ್ಯವಿದ್ದರೆ ಬೋರ್ವೆಲ್ಗಳನ್ನು ಆಳಗೊಳಿಸುವುದು, ಹೊಸ ಬೋರ್ವೆಲ್ ಕೊರೆಯುವುದನ್ನು ಕೊನೆಯ ಆದ್ಯತೆಯಾಗಿ ಪರಿಗಣಿಸುವುದು ಹಾಗೂ ಅನಿವಾರ್ಯ ಸಂದರ್ಭಗಳಲ್ಲಿ ಟ್ಯಾಂಕರ್ ಮೂಲಕ ನೀರು ಪೂರೈಸುವುದು ಎಂಬ ಕ್ರಮದಲ್ಲಿ ಕಾರ್ಯನಿರ್ವಹಿಸಬೇಕು.
ರಾಜ್ಯದ ಪ್ರತಿ ತಾಲೂಕಿಗೂ ಹಿರಿಯ ಕೆಎಎಸ್ ಅಧಿಕಾರಿಗಳನ್ನು ತಾಲೂಕು ಉಸ್ತುವಾರಿ ಅಧಿಕಾರಿಗಳಾಗಿ ನೇಮಕ ಮಾಡಲಾಗಿದ್ದು, ಅವರ ಸೇವೆಯನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು. ಮುಖ್ಯ ಕಾರ್ಯದರ್ಶಿಯವರು ಈ ಕುರಿತು ನಿಗಾ ವಹಿಸಬೇಕು.
ಎಲ್ಲಾ ಜಿಲ್ಲಾಧಿಕಾರಿಗಳ ವಿಪತ್ತು ಪರಿಹಾರ PD ಖಾತೆಯಲ್ಲಿ ಸಾಕಷ್ಟು ಹಣ ಲಭ್ಯವಿದ್ದು, ಸರ್ಕಾರದ ಮಾರ್ಗಸೂಚಿಯಂತೆ ಕುಡಿಯುವ ನೀರು ಹಾಗೂ ಇತರೆ ತುರ್ತು ಪರಿಹಾರ ಕಾರ್ಯಗಳಿಗೆ ಅದನ್ನು ತಕ್ಷಣ ಬಳಸಬೇಕು. ಅನುದಾನ ಬಂದಿಲ್ಲ ಎಂಬ ನೆಪವೊಡ್ಡಿ ಯಾವುದೇ ಪರಿಹಾರ ಕಾರ್ಯ ವಿಳಂಬ ಮಾಡಬಾರದು. (2/2) -
Dr. G Parameshwara
@DrParameshwara
ಇಂದು ವಿಜಯನಗರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳ ಬರ ಪರಿಸ್ಥಿತಿ ಕುರಿತು ಪರಿಶೀಲನಾ ಸಭೆ ನಡೆಸಿ, ಜಿಲ್ಲೆಯಲ್ಲಿನ ಕುಡಿಯುವ ನೀರು, ಮೇವು, ಉದ್ಯೋಗ ಸೃಷ್ಟಿ ಸೇರಿದಂತೆ ಬರ ನಿರ್ವಹಣೆಗೆ ಕೈಗೊಂಡಿರುವ ಕ್ರಮಗಳನ್ನು ಪರಿಶೀಲಿಸಿ, ಅಧಿಕಾರಿಗಳಿಗೆ ಅಗತ್ಯ ನಿರ್ದೇಶನಗಳನ್ನು ನೀಡಿದೆ.
ರಾಜ್ಯದ ಬರ ಪರಿಸ್ಥಿತಿ ಅತ್ಯಂತ ಗಂಭೀರವಾಗಿದ್ದು, ರೈತರು ಮತ್ತು ಸಾರ್ವಜನಿಕರು ತೀವ್ರ ಸಂಕಷ್ಟದಲ್ಲಿದ್ದಾರೆ. ಬರ ನಿರ್ವಹಣೆಯನ್ನು ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಯಾವುದೇ ಕಾರಣಕ್ಕೂ ಹಗುರವಾಗಿ ಪರಿಗಣಿಸಬಾರದು. ಜನರು ಮತ್ತು ಜಾನುವಾರುಗಳಿಗೆ ಕುಡಿಯುವ ನೀರು, ಮೇವು, ಉದ್ಯೋಗ ಹಾಗೂ ಅಗತ್ಯ ಪರಿಹಾರ ಒದಗಿಸುವ ಕೆಲಸವನ್ನು ಅತ್ಯಂತ ಆದ್ಯತೆಯಿಂದ ಕೈಗೊಳ್ಳಬೇಕು.
ರಾಜ್ಯದ ಬರ ಪರಿಸ್ಥಿತಿ ಕುರಿತು ಈಗಾಗಲೇ ಬೆಂಗಳೂರು, ಬೆಳಗಾವಿ ಮತ್ತು ಕಲಬುರಗಿ ಕಂದಾಯ ವಿಭಾಗಗಳಲ್ಲಿ ಪರಿಶೀಲನಾ ಸಭೆಗಳನ್ನು ನಡೆಸಲಾಗಿದೆ. ನಾನು ಬೆಳಗಾವಿ ವಿಭಾಗದ ಜೊತೆಗೆ ಚಿತ್ರದುರ್ಗ, ತುಮಕೂರು, ಚಿಕ್ಕಬಳ್ಳಾಪುರ, ಕೋಲಾರ, ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗಳಲ್ಲಿ ಸ್ಥಳ ಪರಿಶೀಲನೆ ನಡೆಸಿದ್ದೇನೆ.
ಕೇಂದ್ರ ಸರ್ಕಾರದ ಬರ ನಿರ್ವಹಣೆ ಕೈಪಿಡಿ–2020ರ ಮಾನದಂಡದ ಪ್ರಕಾರ ಮಳೆ ಕೊರತೆ ಮತ್ತು ಅಂತರ್ಜಲ ಮಟ್ಟದ ಕುಸಿತ ಆಧರಿಸಿ ರಾಜ್ಯದಲ್ಲಿ ಹಂತ ಹಂತವಾಗಿ ಬರ ಘೋಷಣೆ ಮಾಡಲಾಗಿದೆ. ಮೊದಲ ಹಂತದಲ್ಲಿ 101, ಎರಡನೇ ಹಂತದಲ್ಲಿ 23, ಮೂರನೇ ಹಂತದಲ್ಲಿ 53 ಮತ್ತು ನಾಲ್ಕನೇ ಹಂತದಲ್ಲಿ 40 ತಾಲೂಕುಗಳು ಸೇರಿ ಒಟ್ಟು 240 ತಾಲೂಕುಗಳ ಪೈಕಿ 217 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿದೆ.
ವಿಜಯನಗರದಲ್ಲಿ ಶೇ.57 ಮಳೆ ಕೊರತೆ: ವಿಜಯನಗರ ಜಿಲ್ಲೆಯಲ್ಲಿ ಒಟ್ಟಾರೆ ಶೇ.57ರಷ್ಟು ಮಳೆ ಕೊರತೆಯಾಗಿದೆ. ಹೊಸಪೇಟೆಯಲ್ಲಿ ಶೇ.63, ಹರಪನಹಳ್ಳಿಯಲ್ಲಿ ಶೇ.62, ಹಡಗಲಿಯಲ್ಲಿ ಶೇ.59 ಹಾಗೂ ಹಗರಿಬೊಮ್ಮನಹಳ್ಳಿಯಲ್ಲಿ ಶೇ.57ರಷ್ಟು ಮಳೆ ಕೊರತೆ ದಾಖಲಾಗಿದೆ. ಜಿಲ್ಲೆಯ ಎಲ್ಲಾ 6 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿದೆ.
ಕೃಷಿ ಇಲಾಖೆಯ ವರದಿಯಂತೆ ವಿಜಯನಗರ ಜಿಲ್ಲೆಯಲ್ಲಿ ಸುಮಾರು 2,71,094 ಹೆಕ್ಟೇರ್ ಪ್ರದೇಶದಲ್ಲಿ ಮೆಕ್ಕೆಜೋಳ, ರಾಗಿ, ಜೋಳ, ಶೇಂಗಾ, ಸಜ್ಜೆ, ತೊಗರಿ ಮತ್ತು ಸೂರ್ಯಕಾಂತಿ ಬೆಳೆಗಳು ನಾಶವಾಗಿವೆ. ತೋಟಗಾರಿಕೆ ಇಲಾಖೆಯಡಿ 6,123 ಹೆಕ್ಟೇರ್ ಪ್ರದೇಶದಲ್ಲಿ ಈರುಳ್ಳಿ, ಮೆಣಸಿನಕಾಯಿ ಹಾಗೂ ಟೊಮೆಟೊ ಬೆಳೆ ನಷ್ಟವಾಗಿದ್ದು, 37 ಹಳ್ಳಿಗಳಲ್ಲಿ ಗ್ರೌಂಡ್ ಟ್ರೂಥಿಂಗ್ ಸಮೀಕ್ಷೆಯೂ ನಡೆಸಲಾಗಿದೆ.
ಬೆಳೆ ಹಾನಿಯಲ್ಲಿ ಮೆಕ್ಕೆಜೋಳವೇ ಅತಿ ಹೆಚ್ಚು ಹಾನಿಗೊಳಗಾಗಿದ್ದು, 1,55,011 ಹೆಕ್ಟೇರ್ ಪ್ರದೇಶದಲ್ಲಿ ಮೆಕ್ಕೆಜೋಳ ನಾಶವಾಗಿದೆ. 16,958 ಹೆಕ್ಟೇರ್ ರಾಗಿ, 5,944 ಹೆಕ್ಟೇರ್ ಜೋಳ ಹಾಗೂ 2,883 ಹೆಕ್ಟೇರ್ ತೊಗರಿ ಬೆಳೆ ಹಾನಿಯಾಗಿದೆ. ತೋಟಗಾರಿಕೆ ಬೆಳೆಗಳಲ್ಲಿ ಈರುಳ್ಳಿ ಮತ್ತು ಮೆಣಸಿನಕಾಯಿ ಪ್ರಮುಖವಾಗಿ ಹಾನಿಗೊಳಗಾಗಿವೆ. ಇಂತಹ ರೈತರನ್ನು ಗುರುತಿಸಿ ಮುಂದಿನ ಹಂಗಾಮಿಗೆ ಪರ್ಯಾಯ ಬೆಳೆಗಳ ಕುರಿತು ಸೂಕ್ತ ಮಾರ್ಗದರ್ಶನ ನೀಡಬೇಕು.
ವಿಜಯನಗರ ಜಿಲ್ಲೆಯಲ್ಲಿ ಬೆಳೆ ವಿಮೆಗೆ 1,65,359 ರೈತರು ನೋಂದಾಯಿಸಿಕೊಂಡಿದ್ದು, ವಿಮಾ ಪರಿಹಾರದ ಹಣ ಅರ್ಹ ರೈತರಿಗೆ ಶೀಘ್ರ ಮತ್ತು ನೇರವಾಗಿ ತಲುಪುವಂತೆ ಕ್ರಮ ಕೈಗೊಳ್ಳಬೇಕು.
ಜಿಲ್ಲೆಯಲ್ಲಿ ಒಟ್ಟು 3,45,287 ರೈತರು ಬೆಳೆ ಹಾನಿಗೆ ತುತ್ತಾಗಿದ್ದಾರೆ. ಇವರಲ್ಲಿ 95,450 ಅತಿ ಸಣ್ಣ ರೈತರು, 56,183 ಸಣ್ಣ ರೈತರು ಹಾಗೂ 2,16,514 ಇತರ ರೈತರಿದ್ದಾರೆ. ಜಿಲ್ಲೆಯ 4,38,405 ಕೃಷಿ ಪ್ಲಾಟ್ಗಳ ಪೈಕಿ 3,31,587 ಪ್ಲಾಟ್ಗಳನ್ನು ಮಾತ್ರ FRUITS ಪೋರ್ಟಲ್ಗೆ ಸೇರ್ಪಡೆ ಮಾಡಲಾಗಿದ್ದು, ಉಳಿದ ರೈತರ ವಿವರಗಳನ್ನು ತಕ್ಷಣ ಅಪ್ಡೇಟ್ ಮಾಡಬೇಕು.
ವಿಜಯನಗರ ಜಿಲ್ಲೆಯ 38 ಹಳ್ಳಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಗುರುತಿಸಲಾಗಿದ್ದು, 46 ಖಾಸಗಿ ಬೋರ್ವೆಲ್ಗಳನ್ನು ಬಾಡಿಗೆಗೆ ಪಡೆಯಲಾಗಿದೆ. ಹರಪನಹಳ್ಳಿಯಲ್ಲಿ 25 ಖಾಸಗಿ ಬೋರ್ವೆಲ್ಗಳನ್ನು ಬಳಸಲಾಗುತ್ತಿದ್ದು, ಕೂಡ್ಲಿಗಿ ತಾಲೂಕಿನ ಅಡವಿ ಸುರವನಹಳ್ಳಿಯಲ್ಲಿ ಟ್ಯಾಂಕರ್ ಮೂಲಕ ನೀರು ಪೂರೈಸಲಾಗುತ್ತಿದೆ.
ಕುಡಿಯುವ ನೀರಿನ ನಿರ್ವಹಣೆಗಾಗಿ ಟಾಸ್ಕ್ಫೋರ್ಸ್ ಅಡಿಯಲ್ಲಿ ಈಗಾಗಲೇ ₹4 ಕೋಟಿ ಬಿಡುಗಡೆ ಮಾಡಲಾಗಿದ್ದು, ಎರಡನೇ ಕಂತಿನಲ್ಲಿ ಕ್ಷೇತ್ರವಾರು ₹5 ಕೋಟಿ ನೀಡಲಾಗಿದೆ. ಜನರು ಮತ್ತು ಜಾನುವಾರುಗಳಿಗೆ ಯಾವುದೇ ಕಾರಣಕ್ಕೂ ಕುಡಿಯುವ ನೀರಿನ ಸಮಸ್ಯೆ ಉಂಟಾಗಬಾರದು.
₹4 ಕೋಟಿ ಅನುದಾನದಲ್ಲಿ 106 ಕುಡಿಯುವ ನೀರಿನ ಕಾಮಗಾರಿಗಳನ್ನು ಕೈಗೆತ್ತಿಕೊಂಡಿದ್ದು, 80 ಕಾಮಗಾರಿಗಳು ಮಾತ್ರ ಪೂರ್ಣಗೊಂಡಿವೆ. ₹2.86 ಕೋಟಿ ವೆಚ್ಚವಾಗಿದ್ದು, ಉಳಿದ 25 ಕಾಮಗಾರಿಗಳನ್ನು ಆದ್ಯತೆಯ ಮೇರೆಗೆ ತ್ವರಿತವಾಗಿ ಪೂರ್ಣಗೊಳಿಸಬೇಕು.
ಜಿಲ್ಲೆಯಲ್ಲಿ ಅಂತರ್ಜಲ ಮಟ್ಟ ತೀವ್ರವಾಗಿ ಕುಸಿದಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ ಹಡಗಲಿಯಲ್ಲಿ 11.70 ಮೀಟರ್, ಹರಪನಹಳ್ಳಿಯಲ್ಲಿ 9.67 ಮೀಟರ್ ಹಾಗೂ ಹಗರಿಬೊಮ್ಮನಹಳ್ಳಿಯಲ್ಲಿ 9.48 ಮೀಟರ್ ಕುಸಿತ ಕಂಡಿದೆ. ಮುಂದಿನ ಬೇಸಿಗೆಯ ಹೊತ್ತಿಗೆ ಸಮಸ್ಯೆ ಮತ್ತಷ್ಟು ಗಂಭೀರವಾಗುವ ಸಾಧ್ಯತೆ ಇರುವುದರಿಂದ ಈಗಿನಿಂದಲೇ ಸಿದ್ಧತೆ ಮಾಡಿಕೊಳ್ಳಬೇಕು.
ಮಾರುಕಟ್ಟೆಯಲ್ಲಿ ಜೋಳದ ದಂಟು, ಮೆಕ್ಕೆಜೋಳ, ರಾಗಿ ಮತ್ತು ಭತ್ತದ ಹುಲ್ಲಿಗೆ ಪ್ರತಿ ಟನ್ಗೆ ₹10,000ರಿಂದ ₹12,000ವರೆಗೆ ದರವಿದ್ದು, ಸರ್ಕಾರದ ಪರಿಷ್ಕೃತ ದರ ₹7,000 ನಿಗದಿಯಾಗಿದೆ. ನೀರಾವರಿ ಸೌಲಭ್ಯ ಇರುವ ರೈತರಿಗೆ ನೀಡಲಾಗಿರುವ 5 ಕೆ.ಜಿ.ಯ 16,623 ಮೇವಿನ ಬೀಜದ ಕಿಟ್ಗಳಿಂದ ಸುಮಾರು 1,400 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಆಗಲಿದ್ದು, ಸುಮಾರು 45,000 ಟನ್ ಹಸಿರು ಮೇವು ಉತ್ಪಾದನೆಯ ನಿರೀಕ್ಷೆ ಇದೆ. ಇಂತಹ ಕ್ರಮಗಳನ್ನು ಇನ್ನಷ್ಟು ಪ್ರೋತ್ಸಾಹಿಸಬೇಕು.
*ಗುಳೆ ತಡೆಯಲು ನರೇಗಾ ಕಾಮಗಾರಿಗಳನ್ನು ಹೆಚ್ಚಿಸಿ : ಬರಗಾಲದ ಸಂದರ್ಭದಲ್ಲಿ ಜನರು ಉದ್ಯೋಗಕ್ಕಾಗಿ ಗುಳೆ ಹೋಗುವುದನ್ನು ತಡೆಯಲು ನರೇಗಾ ಕಾಮಗಾರಿಗಳು ಅತ್ಯಂತ ಮುಖ್ಯ.
ವಿಜಯನಗರ ಜಿಲ್ಲೆಯಲ್ಲಿ 3.4 ಲಕ್ಷ ಸಕ್ರಿಯ ನರೇಗಾ ಕಾರ್ಮಿಕರಿದ್ದು, ಇಲ್ಲಿಯವರೆಗೆ 27.74 ಲಕ್ಷ ಮಾನವ ದಿನಗಳನ್ನು ಸೃಷ್ಟಿಸಲಾಗಿದೆ. ಹಡಗಲಿ ತಾಲೂಕಿನಲ್ಲಿ ಶೇ.100.04 ಗುರಿ ಸಾಧನೆಯಾಗಿದ್ದರೆ, ಕೂಡ್ಲಿಗಿ ತಾಲೂಕಿನಲ್ಲಿ ಕೇವಲ ಶೇ.24.07 ಪ್ರಗತಿ ಇದೆ. ಕೂಡ್ಲಿಗಿಯಲ್ಲಿ ತಕ್ಷಣ ಕಾಮಗಾರಿಗಳನ್ನು ಹೆಚ್ಚಿಸಿ ಸ್ಥಳೀಯವಾಗಿ ಪ್ರತಿಯೊಬ್ಬರಿಗೂ ಉದ್ಯೋಗ ದೊರೆಯುವಂತೆ ಕ್ರಮ ಕೈಗೊಳ್ಳಬೇಕು. (1/2) -
Dr. G Parameshwara
@DrParameshwara
ಇಂದು ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳ ವಿವಿಧ ಬರಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ, ನೆಲಮಟ್ಟದ ಪರಿಸ್ಥಿತಿಯನ್ನು ಖುದ್ದು ಪರಿಶೀಲಿಸಿದೆ.
ಬಳ್ಳಾರಿ ತಾಲೂಕಿನ ಹಲಕುಂದಿ, ಬಿ.ಬೆಳಕಲ್, ಸಂಡೂರು ತಾಲೂಕಿನ ಬಂಡ್ರಿ ಗ್ರಾಮ ಹಾಗೂ ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಪೋತಲ್ಕಟೆ, ತಲೆಬಸಾಪುರ ತಾಂಡಾ, ಕೂಡ್ಲಿಗಿ ತಾಲೂಕಿನ ಶಿವಪುರ ಗ್ರಾಮದ ಜಮೀನುಗಳಿಗೆ ಭೇಟಿ ನೀಡಿ, ಮಳೆ ಕೊರತೆಯಿಂದ ಹಾನಿಗೊಳಗಾದ ತೊಗರಿ, ಮೆಕ್ಕೆಜೋಳ ಸೇರಿದಂತೆ ವಿವಿಧ ಕೃಷಿ ಬೆಳೆಗಳ ಸ್ಥಿತಿಯನ್ನು ವೀಕ್ಷಿಸಿದೆ.
ರೈತರೊಂದಿಗೆ ನೇರವಾಗಿ ಮಾತನಾಡಿ, ಬೆಳೆ ನಷ್ಟ, ಕುಡಿಯುವ ನೀರು, ಜಾನುವಾರುಗಳಿಗೆ ಮೇವು, ಉದ್ಯೋಗ ಮತ್ತು ವಲಸೆ ಸೇರಿದಂತೆ ಅವರು ಎದುರಿಸುತ್ತಿರುವ ಸಮಸ್ಯೆಗಳನ್ನು ಆಲಿಸಿದೆ. ವಿಬಿ-ಜಿ ರಾಮ್ ಜಿ ಯೋಜನೆಯಡಿ ಸ್ಥಳೀಯರಿಗೆ ಉದ್ಯೋಗ ಕಲ್ಪಿಸಿರುವ ಕಾಮಗಾರಿ ಸ್ಥಳಗಳಿಗೂ ಭೇಟಿ ನೀಡಿ, ಯೋಜನೆಯ ಅನುಷ್ಠಾನ ಮತ್ತು ಉದ್ಯೋಗಾವಕಾಶಗಳ ಕುರಿತು ಮಾಹಿತಿ ಪಡೆದುಕೊಂಡೆ.
ಬಳಿಕ ವಿಜಯನಗರ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳ ಬರ ಪರಿಸ್ಥಿತಿ ಹಾಗೂ ನಿರ್ವಹಣಾ ಕ್ರಮಗಳ ಕುರಿತು ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನಾ ಸಭೆ ನಡೆಸಿದೆ. ಕುಡಿಯುವ ನೀರು, ಮೇವು, ಬೆಳೆ ಪರಿಹಾರ, ಉದ್ಯೋಗ ಹಾಗೂ ಇತರೆ ತುರ್ತು ಅಗತ್ಯಗಳಲ್ಲಿ ಯಾವುದೇ ವಿಳಂಬವಾಗದಂತೆ ಅಗತ್ಯ ಸಲಹೆ ಮತ್ತು ಸೂಚನೆಗಳನ್ನು ನೀಡಿದೆ.
ಈ ಸಂದರ್ಭದಲ್ಲಿ ವಿಜಯನಗರ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ಎಸ್. ಬಸವಂತಪ್ಪ, ವಿಜಯನಗರ ಜಿಲ್ಲಾಧಿಕಾರಿಗಳಾದ ಕವಿತಾ ಮನ್ನೀಕೇರಿ, ಜಿಲ್ಲಾ ಪಂಚಾಯತ್ ಸಿಇಒ ಗರಿಮಾ ಪನ್ವಾರ್, ಬಳ್ಳಾರಿ ಜಿಲ್ಲಾಧಿಕಾರಿಗಳಾದ ಕೆ. ನಾಗೇಂದ್ರ ಪ್ರಸಾದ್, ಬಳ್ಳಾರಿ ಜಿಲ್ಲಾ ಪಂಚಾಯತ್ ಸಿಇಒ ಮುಹಮ್ಮದ್ ಹ್ಯಾರಿಸ್ ಸುಮೈರ್, ವಿಜಯನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಜಾಹ್ನವಿ ಹಾಗೂ ಕೃಷಿ ಮತ್ತು ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು. -
Dr. G Parameshwara
@DrParameshwara
ಇಂದು ವಿಜಯನಗರ ಜಿಲ್ಲಾಧಿಕಾರಿಗಳ ಕಾರ್ಯಾಲಯದ ಮುಂಭಾಗದಲ್ಲಿ ಸಾರ್ವಜನಿಕರಿಂದ ಅಹವಾಲುಗಳನ್ನು ಸ್ವೀಕರಿಸಿ, ಅವರ ಕುಂದು-ಕೊರತೆಗಳನ್ನು ಆಲಿಸಿದೆ.
ಜನರು ತಮ್ಮ ಸಮಸ್ಯೆಗಳನ್ನು ನೇರವಾಗಿ ಹೇಳಿಕೊಳ್ಳಲು ಅವಕಾಶ ದೊರಕಬೇಕು. ಅಷ್ಟೇ ಅಲ್ಲ, ಅವುಗಳಿಗೆ ಸಾಧ್ಯವಾದಷ್ಟು ಶೀಘ್ರವಾಗಿ ಪರಿಹಾರವೂ ಸಿಗಬೇಕು ಎಂಬುದು ನಮ್ಮ ಸರ್ಕಾರದ ನಿಲುವು.
ಸ್ವೀಕರಿಸಿದ ಅಹವಾಲುಗಳನ್ನು ಪರಿಶೀಲಿಸಿ, ಸಂಬಂಧಿಸಿದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಒದಗಿಸುವಂತೆ ಅಧಿಕಾರಿಗಳಿಗೆ ಅಗತ್ಯ ಸೂಚನೆಗಳನ್ನು ನೀಡಿದೆ. -
Dr. G Parameshwara
@DrParameshwara
ಹೊಸಪೇಟೆ ತಾಲೂಕಿನ ತಲೆಬಸಾಪುರ ತಾಂಡಕ್ಕೆ ಭೇಟಿ ನೀಡಿ, ವಿಬಿ ಜಿ ರಾಮ್ ಜಿ ಯೋಜನೆಯಡಿ ಸ್ಥಳೀಯರಿಗೆ ಉದ್ಯೋಗ ಕಲ್ಪಿಸಿರುವ ಕಾಮಗಾರಿ ಸ್ಥಳಗಳನ್ನು ವೀಕ್ಷಿಸಿದೆ. ಬಳಿಕ ಕಾರ್ಮಿಕರು ಹಾಗೂ ಅಧಿಕಾರಿಗಳೊಂದಿಗೆ ಮಾತನಾಡಿ, ಸ್ಥಳೀಯವಾಗಿ ಉದ್ಯೋಗ ಸೃಷ್ಟಿಸುವುದು ಮತ್ತು ಕೂಲಿ ಹಣವನ್ನು ಸಕಾಲದಲ್ಲಿ ಪಾವತಿಸುವಂತೆ ಸೂಚಿಸಿದೆ.
ಬರದ ಪರಿಸ್ಥಿತಿಯಲ್ಲಿ ಗ್ರಾಮೀಣ ಜನರು ಉದ್ಯೋಗ ಅರಸಿ ಊರು ತೊರೆದು ಗುಳೆ ಹೋಗುವ ಸ್ಥಿತಿ ನಿರ್ಮಾಣವಾಗಬಾರದು. ಸ್ಥಳೀಯವಾಗಿಯೇ ಉದ್ಯೋಗ ಕಲ್ಪಿಸಿ, ಕೂಲಿ ಹಣವನ್ನು ಕಾಲಮಿತಿಯಲ್ಲಿ ಪಾವತಿಸುವ ವ್ಯವಸ್ಥೆ ಮಾಡಬೇಕು.
ಬರದ ಹೊತ್ತಿನಲ್ಲಿ ನೀರು, ಮೇವು, ಕೆಲಸಕ್ಕೆ ಆದ್ಯತೆ : ಗ್ರಾಮಗಳಲ್ಲಿ ಕುಡಿಯುವ ನೀರಿನ ತೊಂದರೆ ಉಂಟಾಗದಂತೆ ತಕ್ಷಣ ಕ್ರಮ ಕೈಗೊಳ್ಳಬೇಕು. ಜಾನುವಾರುಗಳಿಗೆ ಮೇವು ಕೊರತೆಯಾಗದಂತೆ ಅಗತ್ಯವಿದ್ದಲ್ಲಿ ಮೇವು ತರಿಸುವುದು, ಮೇವು ಬ್ಯಾಂಕ್ಗಳನ್ನು ಸ್ಥಾಪಿಸುವುದು ಸೇರಿದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು.
ಕಬ್ಬು ಕಡಿಯಲು, ಕಾಫಿ ತೋಟಕ್ಕೆ ಗುಳೆ ಹೋಗಬೇಡಿ: ಬರದ ಹಿನ್ನೆಲೆಯಲ್ಲಿ ಸ್ಥಳೀಯರಿಗೆ ಉದ್ಯೋಗ ಸಿಗದಿದ್ದರೆ ಜನರು ಕಬ್ಬು ಕಡಿಯಲು, ಕಾಫಿ ತೋಟಗಳಲ್ಲಿ ಅಥವಾ ಇತರೆ ಕಡೆ ಕೂಲಿ ಅರಸಿ ಊರು ಬಿಟ್ಟು ಹೋಗುವ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಅಂತಹ ಸ್ಥಿತಿ ಬರಬಾರದು ಎಂಬುದು ನಮ್ಮ ಸರ್ಕಾರದ ಉದ್ದೇಶ.
ನೀವು ಊರು ಬಿಟ್ಟು ಹೋಗಬೇಡಿ. ಇಲ್ಲೇ ಕೆಲಸ ಕೊಡುತ್ತೇವೆ. ಮಳೆ ಇಲ್ಲದ ಕಾರಣಕ್ಕೆ ಕೆಲಸ ಇಲ್ಲದಂತಾಗಬಾರದು. ಸರ್ಕಾರದ ಯೋಜನೆಯ ಉದ್ದೇಶವೇ ಕಾರ್ಮಿಕರಿಗೆ ಇಲ್ಲಿಯೇ ಉದ್ಯೋಗ ಕಲ್ಪಿಸುವುದು.
ಲಂಬಾಣಿ ಸಮುದಾಯದವರು ಊರು ಬಿಟ್ಟು ಹೋಗಬಾರದು. ಊರಲ್ಲೇ ಉಳಿದು ಕೆಲಸ ಮಾಡುವಂತೆ ಅಗತ್ಯ ಉದ್ಯೋಗ ಸೃಷ್ಟಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದೆ.
ಕೂಲಿ ಹಣ ವಾರ ವಾರ ಕೊಡಬೇಕು : ಕಾಮಗಾರಿ ಸ್ಥಳದಲ್ಲಿ ಕಾರ್ಮಿಕರೊಂದಿಗೆ ಮಾತನಾಡಿದಾಗ ಮೂರು ನಾಲ್ಕು ವಾರಗಳಿಂದ, ಕೆಲವರಿಗೆ ತಿಂಗಳಿನಿಂದ ಕೂಲಿ ಹಣ ಪಾವತಿಯಾಗದಿರುವುದು ನನ್ನ ಗಮನಕ್ಕೆ ಬಂದಿದೆ.
ಜನರು ಕೆಲಸ ಮಾಡಿದ ಮೇಲೆ ಹಣಕ್ಕಾಗಿ ತಿಂಗಳುಗಳ ಕಾಲ ಕಾಯಬೇಕಾದರೆ ಅವರು ಊಟ ಮಾಡುವುದು ಹೇಗೆ? ಕುಟುಂಬ ನಡೆಸುವುದು ಹೇಗೆ? ಹಣ ಸಿಗದಿದ್ದರೆ ಸಹಜವಾಗಿಯೇ ಬೇರೆ ಊರಿಗೆ ಕೂಲಿ ಹುಡುಕಿಕೊಂಡು ಹೋಗುತ್ತಾರೆ. ಅದು ಆಗಬಾರದು.
ಬಾಕಿ ಇರುವ ಕೂಲಿ ಹಣವನ್ನು ಅಧಿಕಾರಿಗಳಿಗೆ ತಕ್ಷಣ ಬಿಡುಗಡೆ ಮಾಡಬೇಕು. ವಾರವಾರ ಕೂಲಿ ಹಣ ಕೊಡಬೇಕು. ಕಾರ್ಮಿಕರು ಮಾಡಿದ ಕೆಲಸಕ್ಕೆ ಸರಿಯಾದ ಸಮಯಕ್ಕೆ ಹಣ ಕೊಡಬೇಕು. ಹಣ ಕೊಡದಿದ್ದರೆ ಅಧಿಕಾರಿಗಳು ತಕ್ಷಣ ಕ್ರಮ ಕೈಗೊಳ್ಳಿ.
ಕೂಲಿ ಪಾವತಿಯಲ್ಲಿ ವಿಳಂಬಕ್ಕೆ ಕಾರಣವೇನು ಎಂಬುದನ್ನು ತಕ್ಷಣ ಪರಿಶೀಲಿಸಿ, ಬಾಕಿ ಹಣ ಬಿಡುಗಡೆ ಮಾಡಬೇಕು. ಯೋಜನೆಯ ಅನುಷ್ಠಾನ ಕೇವಲ ದಾಖಲೆಗಳಲ್ಲಿ ಉಳಿಯಬಾರದು.
ಬರದ ಸಮಯದಲ್ಲಿ ಜನರಿಗೆ ಕೆಲಸ ನೀಡುವುದೇ ನಮ್ಮ ಸರ್ಕಾರದ ಆದ್ಯತೆ. ಆದರೆ, ಕೆಲಸ ಮಾಡಿದವರಿಗೆ ಕೂಲಿ ನೀಡುವುದು ತಡವಾದರೆ ಯೋಜನೆಯ ಮೂಲ ಉದ್ದೇಶಕ್ಕೆ ಧಕ್ಕೆಯಾಗುತ್ತದೆ. ಆದ್ದರಿಂದ ಕೂಲಿ ಪಾವತಿಯನ್ನು ಅಧಿಕಾರಿಗಳು ನಿರಂತರವಾಗಿ ಮಾನಿಟರ್ ಮಾಡಬೇಕು.
ಗ್ಯಾರಂಟಿ ಯೋಜನೆಗಳ ಸೌಲಭ್ಯ ಎಲ್ಲ ಅರ್ಹರಿಗೂ ತಲುಪಬೇಕು: ಗೃಹಲಕ್ಷ್ಮಿ ಯೋಜನೆಯಡಿ ₹2,000 ಹಣ ಬಾರದ ಮಹಿಳೆಯರ ವಿವರಗಳನ್ನು ಪರಿಶೀಲಿಸಿ, ತಾಂತ್ರಿಕ ಅಥವಾ ದಾಖಲೆ ಸಮಸ್ಯೆಗಳಿಂದ ಹಣ ಸ್ಥಗಿತಗೊಂಡಿದ್ದರೆ ಅವುಗಳನ್ನು ಸರಿಪಡಿಸಿ ಅರ್ಹ ಫಲಾನುಭವಿಗಳಿಗೆ ಸೌಲಭ್ಯ ತಲುಪಿಸಬೇಕು.
ಮೃತಪಟ್ಟವರ ಹೆಸರು, ಒಂದೇ ಫಲಾನುಭವಿಯ ಹೆಸರಿನಲ್ಲಿ ಎರಡು ಬಾರಿ ದಾಖಲಾಗಿರುವುದು ಸೇರಿದಂತೆ ಕೆಲವು ದೋಷಗಳನ್ನು ಸರಿಪಡಿಸುವ ಪ್ರಕ್ರಿಯೆಯಿಂದ ಕೆಲವೆಡೆ ವಿಳಂಬವಾಗಿದೆ. ಅನ್ನಭಾಗ್ಯ ಯೋಜನೆಯಲ್ಲಿ ಅಕ್ಕಿ ನೀಡಲಾಗುತ್ತಿದ್ದು, ಅರ್ಹರಿಗೆ ಸರ್ಕಾರದ ಯಾವುದೇ ಸೌಲಭ್ಯ ತಪ್ಪದಂತೆ ಕ್ರಮ ಕೈಗೊಳ್ಳಲಾಗುವುದು. -
Dr. G Parameshwara
@DrParameshwara
ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ಬಂಡ್ರಿ ಗ್ರಾಮದಲ್ಲಿ ಮೆಕ್ಕೆಜೋಳ ಬೆಳೆ ಜಮೀನಿಗೆ ಭೇಟಿ ನೀಡಿ ಬರ ಪರಿಸ್ಥಿತಿ, ಬೆಳೆ ನಷ್ಟ ಪರಿಶೀಲಿಸಿದ ಬಳಿಕ ರೈತರೊಂದಿಗೆ ಸಂವಾದ ನಡೆಸಿದೆ.
ಈ ವೇಳೆ ರೈತರಾದ ನಾಗರಾಜ, ಈಶ್ವರಪ್ಪ ಮತ್ತು ಮೈಲೇಶ ಮಾತನಾಡಿ, ವಲಸೆ ತಡೆಯಲು ನರೇಗಾ ನಿಯಮ ಸಡಿಲಿಸುವಂತೆ, ಸಾಲ ಮತ್ತು ಬಡ್ಡಿ ವಸೂಲಿ ಮಾಡದಂತೆ ಸರ್ಕಾರ ಬ್ಯಾಂಕ್ಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡುವಂತೆ, ಕುಡಿಯುವ ನೀರಿನ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸುವಂತೆ, ಜಾನುವಾರುಗಳಿಗೆ ಮೇವು, ಶಾಶ್ವತ ನೀರಾವರಿ ಯೋಜನೆ ರೂಪಿಸುವಂತೆ ಹಾಗೂ ಬರಕ್ಕೆ ಶಾಶ್ವತ ಪರಿಹಾರ ನೀಡುವ ಯೋಜನೆಗಳನ್ನು ಅನುಷ್ಠಾನಕ್ಕೆ ತರುವಂತೆ ನನ್ನಲ್ಲಿ ಮನವಿ ಮಾಡಿದರು.
ಬಳಿಕ ನಾನು ಮಾತನಾಡಿ, ಬರ ನಿರ್ವಹಣೆಗೆ ಸರ್ಕಾರ ಈವರೆಗೆ ಕೈಗೊಂಡಿರುವ ಮತ್ತು ಮುಂದೆ ಕೈಗೊಳ್ಳಲಿರುವ ಕ್ರಮಗಳ ಬಗ್ಗೆ ವಿವರಿಸಿದೆ.
ರೈತರೊಂದಿಗೆ ನಾನಿದ್ದೇನೆ, ನಮ್ಮ ಸರ್ಕಾರವಿದೆ :
ರಾಜ್ಯದಲ್ಲಿ ಈ ವರ್ಷ ಭೀಕರ ಬರ ಪರಿಸ್ಥಿತಿ ನಿರ್ಮಾಣವಾಗಿದ್ದು, ರೈತರು ಮತ್ತು ಜಾನುವಾರುಗಳನ್ನು ಈ ಸಂಕಷ್ಟದಿಂದ ಪಾರು ಮಾಡುವುದು ಸರ್ಕಾರದ ಮೊದಲ ಆದ್ಯತೆಯಾಗಿದೆ. ಯಾವುದೇ ಕಾರಣಕ್ಕೂ ರೈತರು, ಬಡವರು ಮತ್ತು ಗ್ರಾಮೀಣ ಜನರನ್ನು ಸರ್ಕಾರ ಕೈಬಿಡುವುದಿಲ್ಲ.
ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳ ವಿವಿಧ ತಾಲೂಕುಗಳಿಗೆ ಭೇಟಿ ನೀಡಲಾಗುತ್ತಿದ್ದು, ಮುಂದಿನ ಹಂತದಲ್ಲಿ ರಾಯಚೂರು ಮತ್ತು ಕೊಪ್ಪಳ ಜಿಲ್ಲೆಗಳಿಗೂ ತೆರಳಿ ಒಟ್ಟಾರೆ ಸುಮಾರು 10ರಿಂದ 15 ತಾಲೂಕುಗಳ ಬರ ಪರಿಸ್ಥಿತಿಯನ್ನು ಖುದ್ದಾಗಿ ಪರಿಶೀಲಿಸಲಾಗುವುದು. ರಾಜ್ಯದ ಅಧಿಕಾರಿಗಳ ಜೊತೆಗೆ ಕೇಂದ್ರ ಸರ್ಕಾರದಿಂದ ದೆಹಲಿಯಿಂದ ಬಂದ ತಂಡಗಳೂ ಈ ಭಾಗಗಳಿಗೆ ಭೇಟಿ ನೀಡಿ ಬರದ ತೀವ್ರತೆಯನ್ನು ಪರಿಶೀಲಿಸಿವೆ.
ಏಪ್ರಿಲ್ ಮತ್ತು ಮೇ ತಿಂಗಳಲ್ಲಿಯೇ ಈ ವರ್ಷ ಮಳೆ ಸರಿಯಾಗಿ ಬರುವುದಿಲ್ಲ, ಬರ ಪರಿಸ್ಥಿತಿ ಎದುರಾಗಬಹುದು ಎಂಬ ಮಾಹಿತಿಗಳು ಸರ್ಕಾರಕ್ಕೆ ಲಭ್ಯವಾಗಿದ್ದವು. ಜೂನ್ ವೇಳೆಗೆ ಪರಿಸ್ಥಿತಿಯ ಗಂಭೀರತೆ ಇನ್ನಷ್ಟು ಸ್ಪಷ್ಟವಾಯಿತು. ಮುಖ್ಯಮಂತ್ರಿಗಳೊಂದಿಗೆ ಕಲಬುರಗಿಯಲ್ಲಿ ಸಭೆ ನಡೆಸಿ ಆ ವಿಭಾಗದ ಏಳು–ಎಂಟು ಜಿಲ್ಲೆಗಳ ಪರಿಸ್ಥಿತಿಯನ್ನು ಪರಿಶೀಲಿಸಿದ್ದೇನೆ. ಬಳಿಕ ಬೆಳಗಾವಿಗೆ ತೆರಳಿ ಅಲ್ಲಿನ ಏಳು–ಎಂಟು ಜಿಲ್ಲೆಗಳ ಪರಿಸ್ಥಿತಿಯನ್ನೂ ಅಧಿಕಾರಿಗಳು ಮತ್ತು ರೈತರೊಂದಿಗೆ ಚರ್ಚಿಸಿದ್ದೇನೆ.
ಬೆಂಗಳೂರು ವಿಭಾಗಕ್ಕೆ ಸಂಬಂಧಿಸಿದಂತೆ ಚಿತ್ರದುರ್ಗದಲ್ಲಿ ಸಭೆ ನಡೆಸಿದ್ದೇನೆ. ಇದಲ್ಲದೆ ಮುಖ್ಯಮಂತ್ರಿಗಳು ಮತ್ತು ನಾನು ಪ್ರತ್ಯೇಕವಾಗಿ ವಿವಿಧ ಜಿಲ್ಲೆಗಳಿಗೆ ಭೇಟಿ ನೀಡಿ ವಾಸ್ತವ ಪರಿಸ್ಥಿತಿಯನ್ನು ಪರಿಶೀಲಿಸಿದ್ದೇವೆ.
ಈ ವರ್ಷ ರಾಜ್ಯದಲ್ಲಿ ಬೆಳೆ ಸಿಗುವುದೇ ಕಷ್ಟ ಎಂಬುದು ಬಹಳ ಬೇಗ ನಮಗೆ ಅರ್ಥವಾಯಿತು. ರಾಗಿ, ಜೋಳ, ಸೂರ್ಯಕಾಂತಿ ಸೇರಿದಂತೆ ಯಾವ ಬೆಳೆಯೂ ರೈತನ ಕೈಗೆ ಸರಿಯಾಗಿ ಸಿಗದ ಪರಿಸ್ಥಿತಿ ನಿರ್ಮಾಣವಾಗಿದೆ.
ರೈತನಿಗೆ ಬೆಳೆ ಸಿಗದಿದ್ದರೆ ಆಹಾರ ಪೂರೈಕೆಯ ಮೇಲೆಯೂ ಪರಿಣಾಮ ಬೀರುತ್ತದೆ. ಮುಂದಿನ ಎರಡು–ಮೂರು ತಿಂಗಳಲ್ಲಿ ಅಕ್ಕಿ, ರಾಗಿ ಸೇರಿದಂತೆ ಅಗತ್ಯ ಧಾನ್ಯಗಳನ್ನು ಬೇರೆ ರಾಜ್ಯಗಳಿಂದ ತರಬೇಕಾದ ಪರಿಸ್ಥಿತಿಯೂ ಎದುರಾಗಬಹುದು. ಅನ್ನಭಾಗ್ಯ ಸೇರಿದಂತೆ ಸಾರ್ವಜನಿಕ ವಿತರಣೆ ವ್ಯವಸ್ಥೆಗೆ ಅಗತ್ಯವಿರುವ ಧಾನ್ಯಗಳ ಪೂರೈಕೆಯನ್ನೂ ಸರ್ಕಾರ ಖಚಿತಪಡಿಸಬೇಕಾಗಿದೆ.
ಬೆಳೆ ಹಾನಿಯ ಜೊತೆಗೆ ಕುಡಿಯುವ ನೀರಿನ ಸಮಸ್ಯೆಯೂ ರಾಜ್ಯದ ಹಲವೆಡೆ ಗಂಭೀರವಾಗುತ್ತಿದೆ. ಬೋರ್ವೆಲ್ಗಳು ಒಣಗುತ್ತಿವೆ, ಕೆರೆಗಳಲ್ಲಿ ನೀರು ಬತ್ತುತ್ತಿದೆ. ಹಳ್ಳಿಗಳಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗದಂತೆ ತಕ್ಷಣದ ಕ್ರಮ ಕೈಗೊಳ್ಳಲಾಗಿದೆ.
ನೀರು ಲಭ್ಯವಿರುವ ಕಡೆ ಹೊಸ ಬೋರ್ವೆಲ್ಗಳನ್ನು ಕೊರೆಸುವುದು, ದೂರದ ಕೆರೆ ಅಥವಾ ಜಲಮೂಲಗಳಿಂದ ಪೈಪ್ ಮೂಲಕ ನೀರು ಪೂರೈಸುವುದು ಸೇರಿದಂತೆ ಅಗತ್ಯ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಈ ಕುರಿತು ಕೇವಲ ಆದೇಶ ನೀಡದೆ, ಕುಡಿಯುವ ನೀರಿನ ವ್ಯವಸ್ಥೆಗಾಗಿ ₹306 ಕೋಟಿ ಅನುದಾನ ಒದಗಿಸಲಾಗಿದೆ. ಪ್ರತಿ ವಿಧಾನಸಭಾ ಕ್ಷೇತ್ರಕ್ಕೂ ತಲಾ ₹1 ಕೋಟಿ ನೀಡಲಾಗಿದ್ದು, ಅಗತ್ಯವಿದ್ದಲ್ಲಿ ಇನ್ನೂ ₹1 ಕೋಟಿ ನೀಡಲಾಗುವುದು.
ಜಿಲ್ಲಾ ಮಟ್ಟದಲ್ಲಿ ತುರ್ತು ಕ್ರಮ ಕೈಗೊಳ್ಳಲು ಪ್ರಾರಂಭಿಕವಾಗಿ ತಲಾ ₹5 ಕೋಟಿ ನೀಡಲಾಗಿದೆ. ಜಿಲ್ಲಾಧಿಕಾರಿಗಳ ಬಳಿ ತಕ್ಷಣ ಬಳಸಲು ರಾಜ್ಯಾದ್ಯಂತ ಒಟ್ಟು ₹329 ಕೋಟಿ ಅನುದಾನ ಲಭ್ಯವಿದ್ದು, ಬಳ್ಳಾರಿ ಜಿಲ್ಲಾಧಿಕಾರಿಗಳ ಬಳಿ ಸುಮಾರು ₹7 ಕೋಟಿ ಹಣ ಲಭ್ಯವಿದೆ.
ಯಾವುದೇ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾದರೆ ಜಿಲ್ಲಾಧಿಕಾರಿಗಳು ಸರ್ಕಾರದ ಮುಂದಿನ ಅನುಮತಿಗಾಗಿ ಕಾಯದೆ ಲಭ್ಯವಿರುವ ಅನುದಾನವನ್ನು ಬಳಸಿಕೊಂಡು ತಕ್ಷಣ ಕ್ರಮ ಕೈಗೊಳ್ಳಬೇಕು. ಬಳ್ಳಾರಿ ಜಿಲ್ಲೆಗೆ ಕುಡಿಯುವ ನೀರು ಹಾಗೂ ತುರ್ತು ಬರ ನಿರ್ವಹಣೆಗೆ ಈಗಾಗಲೇ ಅನುದಾನ ಒದಗಿಸಲಾಗಿದ್ದು, ಪರಿಸ್ಥಿತಿಗೆ ಅನುಗುಣವಾಗಿ ಇದನ್ನು ಮತ್ತಷ್ಟು ಹೆಚ್ಚಿಸಲಾಗುವುದು.
50 ಲಕ್ಷ ರೈತರಿಗೆ ₹2,500ರಂತೆ ₹1,250 ಕೋಟಿ :
ಬೆಳೆ ಕಳೆದುಕೊಂಡ ರೈತರಿಗೆ ತಕ್ಷಣ ಸ್ವಲ್ಪವಾದರೂ ಆರ್ಥಿಕ ನೆರವು ದೊರಕಬೇಕು ಎಂಬ ಉದ್ದೇಶದಿಂದ ಮೊದಲ ಕಂತಾಗಿ ತಲಾ ₹2,500 ನೀಡಲು ಸರ್ಕಾರ ನಿರ್ಧರಿಸಿದೆ. ಸುಮಾರು 50 ಲಕ್ಷ ರೈತರಿಗೆ ಈ ನೆರವು ನೀಡಬೇಕಾಗಿದ್ದು, ಇದಕ್ಕಾಗಿ ₹1,250 ಕೋಟಿ ಬಿಡುಗಡೆ ಮಾಡಲಾಗಿದೆ. ಸಂಬಂಧಿಸಿದ ಕಡತಗಳಿಗೆ ಅನುಮೋದನೆ ದೊರೆತಿದ್ದು, ಜಿಲ್ಲಾಧಿಕಾರಿಗಳ ಮೂಲಕ ರೈತರ ಖಾತೆಗಳಿಗೆ ನೇರವಾಗಿ ಹಣ ವರ್ಗಾವಣೆ ಮಾಡುವ ಪ್ರಕ್ರಿಯೆ ಆರಂಭವಾಗಲಿದೆ.
ಒಬ್ಬ ರೈತನಿಗೆ ₹2,500 ಸಾಕಾಗುವುದಿಲ್ಲ ಎಂಬುದು ನಮಗೂ ಗೊತ್ತಿದೆ. ಆದರೆ ರಾಜ್ಯದ ಎಲ್ಲ ಅರ್ಹ ರೈತರಿಗೂ ಒಂದೇ ರೀತಿಯಾಗಿ ನೆರವು ತಲುಪಬೇಕು. ಯಾರಿಗೋ ಕೊಟ್ಟು, ಮತ್ತೊಬ್ಬರನ್ನು ಬಿಟ್ಟುಬಿಡಲು ಸಾಧ್ಯವಿಲ್ಲ. ಆದ್ದರಿಂದ ಮೊದಲ ಹಂತದಲ್ಲಿ ಈ ನೆರವು ನೀಡುತ್ತಿದ್ದೇವೆ.
ಕೇಂದ್ರ ಸರ್ಕಾರದ ನಿಯಮದ ಪ್ರಕಾರ ರೈತರಿಗೆ ಪ್ರತಿ ಹೆಕ್ಟೇರ್ಗೆ ಸುಮಾರು ₹8,500 ಪರಿಹಾರದ ವ್ಯವಸ್ಥೆ ಇದೆ. ಕೇಂದ್ರದ ಪಾಲಿನ ನೆರವಿಗಾಗಿ ಕಾಯುತ್ತಾ ಕುಳಿತುಕೊಳ್ಳದೆ ರಾಜ್ಯ ಸರ್ಕಾರ ತನ್ನಿಂದ ಸಾಧ್ಯವಾದಷ್ಟು ಮೊದಲ ಕಂತಿನ ನೆರವು ನೀಡಿದೆ.
ಬೆಳೆ ವಿಮೆ ರೈತರಿಗೆ ಸಿಗಲೇಬೇಕು; ಕೊಡದಿದ್ದರೆ ಕಂಪನಿಗಳ ವಿರುದ್ಧ ಕ್ರಮ :
ರೈತರು ಕಟ್ಟಿರುವ ವಿಮೆಗೆ ಅನುಗುಣವಾಗಿ ಪರಿಹಾರ ಹಣ ಸಿಗಲೇಬೇಕು. ವಿಮಾ ಕಂಪನಿಗಳು ರೈತರಿಗೆ ಕೊಡಬೇಕಾದ ಹಣವನ್ನು ನೀಡದಿದ್ದರೆ ಅವುಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು.
ಸಂಡೂರು ತಾಲೂಕಿನಲ್ಲಿ ಸುಮಾರು 8,931 ರೈತರು ಬೆಳೆ ವಿಮೆಗೆ ನೋಂದಣಿ ಮಾಡಿಕೊಂಡಿದ್ದಾರೆ. ಅವರು ವಿಮೆ ಮಾಡಿಸಿರುವ ಬೆಳೆ, ಬೆಳೆ ಹಾನಿಯ ಪ್ರಮಾಣ ಮತ್ತು ವಿಮಾ ಮೊತ್ತದ ಆಧಾರದ ಮೇಲೆ ಅವರಿಗೆ ಬರಬೇಕಾದ ಪರಿಹಾರವನ್ನು ಅಧಿಕಾರಿಗಳು ಲೆಕ್ಕ ಹಾಕಬೇಕು.
ಮೆಕ್ಕೆಜೋಳ ಸೇರಿದಂತೆ ಬೆಳೆ ಹಾನಿಗೆ ಸಂಬಂಧಿಸಿದಂತೆ 5,305 ರೈತರಿಗೆ ಸುಮಾರು ₹1.5 ಕೋಟಿ ಮುಂಗಡ ವಿಮಾ ಪರಿಹಾರ ಈಗಾಗಲೇ ಬಂದಿದೆ. ಬಾಕಿ ಇರುವ ರೈತರಿಗೂ ನ್ಯಾಯಯುತ ವಿಮಾ ಮೊತ್ತ ದೊರಕುವಂತೆ ಸರ್ಕಾರ ಕ್ರಮ ವಹಿಸಲಿದೆ. ರೈತರಿಗೆ ಬರಬೇಕಾದ ವಿಮಾ ಹಣವನ್ನು ಕೊಡಿಸಿಯೇ ತೀರುತ್ತೇವೆ. ವಿಮಾ ಕಂಪನಿಗಳು ತಪ್ಪಿಸಿಕೊಂಡರೆ ಅವರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ.
ಸುಮಾರು ₹60 ಸಾವಿರ ಕೋಟಿ ನಷ್ಟ; ಕೇಂದ್ರದಿಂದ ₹8–10 ಸಾವಿರ ಕೋಟಿ ನೆರವಿಗೆ ಮನವಿ :
ರಾಜ್ಯದಲ್ಲಿ ಈಗಾಗಲೇ 217 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿದ್ದು, ಒಟ್ಟಾರೆ ನಷ್ಟ ಸುಮಾರು ₹60 ಸಾವಿರ ಕೋಟಿವರೆಗೆ ತಲುಪಿದೆ. ಮೊದಲ ಮೆಮೊರಾಂಡಮ್ನಲ್ಲಿ ಸುಮಾರು 117 ತಾಲೂಕುಗಳ ಪರಿಸ್ಥಿತಿಯನ್ನು ಒಳಗೊಂಡು ಸುಮಾರು ₹40 ಸಾವಿರ ಕೋಟಿ ನಷ್ಟದ ವಿವರವನ್ನು ಕೇಂದ್ರಕ್ಕೆ ಸಲ್ಲಿಸಲಾಗಿತ್ತು. ನಂತರ ಇನ್ನಷ್ಟು ತಾಲೂಕುಗಳ ನಷ್ಟವನ್ನು ಸೇರಿಸಿ ಒಟ್ಟಾರೆ ಸುಮಾರು ₹60 ಸಾವಿರ ಕೋಟಿ ನಷ್ಟ ಅಂದಾಜಿಸಲಾಗಿದೆ.
ಆದರೆ ರಾಜ್ಯ ಸರ್ಕಾರ ₹60 ಸಾವಿರ ಕೋಟಿಯನ್ನೇ ಪರಿಹಾರವಾಗಿ ಕೇಳುತ್ತಿಲ್ಲ. ಕೇಂದ್ರ ಸರ್ಕಾರ ನಿಗದಿಪಡಿಸಿರುವ NDRF ಮಾರ್ಗಸೂಚಿ ಮತ್ತು ಲೆಕ್ಕಾಚಾರದ ಪ್ರಕಾರವೇ ನೆರವು ಕೇಳಲಾಗಿದೆ. ಆ ಲೆಕ್ಕಾಚಾರದಲ್ಲಿ ಸುಮಾರು ₹8 ಸಾವಿರ ಕೋಟಿ ಪರಿಹಾರಕ್ಕೆ ಅರ್ಹತೆ ಬರುತ್ತಿದ್ದು, ಸುಮಾರು ₹8–10 ಸಾವಿರ ಕೋಟಿ ನೆರವು ನೀಡುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲಾಗಿದೆ.
ಕೇಂದ್ರದಿಂದ ಬಂದ ತಂಡ ರಾಜ್ಯದ ಬರ ಪರಿಸ್ಥಿತಿಯನ್ನು ಪರಿಶೀಲಿಸಿದ್ದು, ಇಲ್ಲಿ ನಿಜವಾಗಿಯೂ ಗಂಭೀರ ಬರ ಇದೆ ಎಂಬುದನ್ನು ತಂಡವೂ ಅರಿತುಕೊಂಡಿದೆ. ತಂಡವು ವರದಿ ಸಲ್ಲಿಸಿದ ಬಳಿಕ ಕೇಂದ್ರ ಗೃಹ ಸಚಿವಾಲಯದ ಮಟ್ಟದಲ್ಲಿ ಪರಿಹಾರ ನಿರ್ಧಾರವಾಗಲಿದೆ.
ಹಿಂದಿನ ಬರದ ಸಂದರ್ಭದಲ್ಲಿ ರಾಜ್ಯ ಸರ್ಕಾರ ನೆರವು ಕೇಳಿದ್ದರೂ ಆರಂಭದಲ್ಲಿ ಹಣ ಬಿಡುಗಡೆಯಾಗಿರಲಿಲ್ಲ. ನಂತರ ನ್ಯಾಯಾಲಯದ ಸೂಚನೆಯ ಬಳಿಕ ಸುಮಾರು ₹3,500 ಕೋಟಿ ಬಿಡುಗಡೆಯಾಯಿತು. ಈ ಬಾರಿ ಕೇಂದ್ರ ತಂಡವೇ ಪರಿಸ್ಥಿತಿಯನ್ನು ಕಣ್ಣಾರೆ ನೋಡಿರುವುದರಿಂದ ರಾಜ್ಯಕ್ಕೆ ನ್ಯಾಯಯುತ ನೆರವು ದೊರೆಯಲಿದೆ ಎಂಬ ನಂಬಿಕೆ ಇದೆ.
ಕೇಂದ್ರದ ಬಳಿ ಸರ್ವಪಕ್ಷ ನಿಯೋಗ ಕರೆದೊಯ್ಯಲು ತೀರ್ಮಾನ :
ಕೇಂದ್ರದಿಂದ ಬರ ಪರಿಹಾರ ಪಡೆಯಲು ಬಿಜೆಪಿ, ಜೆಡಿಎಸ್ ಸೇರಿದಂತೆ ಎಲ್ಲ ಪಕ್ಷಗಳ ಪ್ರತಿನಿಧಿಗಳನ್ನು ಒಳಗೊಂಡ ಸರ್ವಪಕ್ಷ ನಿಯೋಗವನ್ನು ದೆಹಲಿಗೆ ಕರೆದೊಯ್ಯುವ ಬಗ್ಗೆ ಮುಖ್ಯಮಂತ್ರಿಗಳು ತೀರ್ಮಾನಿಸಿದ್ದಾರೆ. ಎಲ್ಲ ಪಕ್ಷದವರನ್ನೂ ಕರೆದುಕೊಂಡು ಹೋಗಿ ಕೇಂದ್ರ ಸರ್ಕಾರದ ಮುಂದೆ ರಾಜ್ಯದ ಪರಿಸ್ಥಿತಿಯನ್ನು ವಿವರಿಸಿ, ನ್ಯಾಯಯುತವಾದ ಹಣ ಬಿಡುಗಡೆ ಮಾಡುವಂತೆ ಒತ್ತಾಯಿಸಲಾಗುವುದು.
ಇಂತಹ ಸಂಕಷ್ಟದ ಸಮಯದಲ್ಲಿ ಕೇಂದ್ರದ ನೆರವು ಕೇಳುವುದು ನಮ್ಮ ಹಕ್ಕು. ಕೇಂದ್ರ ಕೊಡಬೇಕಾದ ನ್ಯಾಯಯುತ ಪಾಲನ್ನು ಕೊಡಬೇಕು. ಅವರು ಎಷ್ಟು ಕೊಡುತ್ತಾರೆ ಎಂಬುದು ಅವರ ನಿರ್ಧಾರ. ಆದರೆ ನಾವು ಕೇಳಬೇಕಾದುದನ್ನು ಕೇಳುತ್ತೇವೆ. ಅದೇ ವೇಳೆ ನಮ್ಮ ಬಳಿ ಇರುವ ಹಣದಲ್ಲಿ ಸಾಧ್ಯವಾದಷ್ಟು ಗರಿಷ್ಠ ನೆರವನ್ನು ರೈತರಿಗೆ ನೀಡುತ್ತೇವೆ.
ಜಾನುವಾರುಗಳಿಗೆ ಮೇವು; ₹25 ಕೋಟಿ ಬಿಡುಗಡೆ, ಇನ್ನೂ ₹33 ಕೋಟಿ :
ರೈತರಷ್ಟೇ ಅಲ್ಲದೆ ಜಾನುವಾರುಗಳ ಪರಿಸ್ಥಿತಿಯನ್ನೂ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ನಮಗೆ ಹಸಿವಾಗಿದೆ, ಬಾಯಾರಿಕೆಯಾಗಿದೆ ಎಂದು ಮನುಷ್ಯ ಮಾತಾಡಬಹುದು. ಆದರೆ ಜಾನುವಾರುಗಳು ತಮ್ಮ ಕಷ್ಟವನ್ನು ಹೇಳಿಕೊಳ್ಳಲು ಸಾಧ್ಯವಿಲ್ಲ. ಅವುಗಳಿಗೆ ಹುಲ್ಲು ಮತ್ತು ನೀರು ದೊರಕದ ಪರಿಸ್ಥಿತಿ ಬರಬಾರದು. ಮೇವು ಸಮಸ್ಯೆ ಎದುರಾಗದಂತೆ ಆರಂಭಿಕವಾಗಿ ₹25 ಕೋಟಿ ಬಿಡುಗಡೆ ಮಾಡಲಾಗಿದೆ. ಮುಂದಿನ ಹಂತದಲ್ಲಿ ಇನ್ನೂ ₹33 ಕೋಟಿ ಒದಗಿಸಲಾಗುವುದು.
ನೀರಿನ ವ್ಯವಸ್ಥೆ ಇರುವ ರೈತರಿಗೆ ಮೇವು ಬೆಳೆಯಲು ಬೀಜದ ಕಿಟ್ಗಳನ್ನು ನೀಡಲಾಗುತ್ತಿದೆ. ಸಂಡೂರು ತಾಲೂಕಿನಲ್ಲಿ ಮಾತ್ರ ಸುಮಾರು 2,725 ಮೇವು ಕಿಟ್ಗಳನ್ನು ವಿತರಿಸಲಾಗಿದೆ. ರೈತರು ತಮ್ಮ ಜಾನುವಾರುಗಳಿಗೆ ಬೇಕಾದ ಮೇವನ್ನು ತಾವೇ ಬೆಳೆದುಕೊಳ್ಳಬಹುದು. ಹೆಚ್ಚುವರಿ ಮೇವು ಉತ್ಪಾದನೆಯಾದರೆ ಅದನ್ನು ಸರ್ಕಾರ ಖರೀದಿಸಲು ಸಿದ್ಧವಿದೆ. ಉಚಿತವಾಗಿ ನೀಡುವ ಅಗತ್ಯವಿಲ್ಲ, ಸರ್ಕಾರ ಹಣ ನೀಡಿ ಖರೀದಿಸಲಿದೆ.
ರಾಜ್ಯದ ಕೆಲವು ಭಾಗಗಳಲ್ಲಿ ಈಗಾಗಲೇ ಮೇವು ಕಿಟ್ಗಳನ್ನು ನೀಡಿದ್ದು, ಎರಡು–ಮೂರು ತಿಂಗಳಲ್ಲಿ ಉತ್ತಮ ಪ್ರಮಾಣದ ಮೇವು ಬೆಳೆದಿದೆ. ಪರಿಸ್ಥಿತಿ ಇನ್ನಷ್ಟು ಗಂಭೀರವಾದರೆ ಜಿಲ್ಲಾಧಿಕಾರಿಗಳು, ಸಿಇಒಗಳು ಮತ್ತು ಕೃಷಿ ಇಲಾಖೆ ಅಧಿಕಾರಿಗಳ ವರದಿ ಆಧರಿಸಿ ಮೇವು ಬ್ಯಾಂಕ್ಗಳನ್ನು ಆರಂಭಿಸಲಾಗುವುದು.
ಅಗತ್ಯವಾದರೆ ಆಂಧ್ರಪ್ರದೇಶ, ತಮಿಳುನಾಡು ಅಥವಾ ರಾಜ್ಯದ ಗಂಗಾವತಿ, ಸಿಂಧನೂರು ಸೇರಿದಂತೆ ಭತ್ತ ಬೆಳೆಯುವ ಪ್ರದೇಶಗಳಿಂದ ಮೇವು ತರಿಸಿ ಪೂರೈಸಲಾಗುವುದು. ಮೇವು ಬ್ಯಾಂಕ್ಗಳ ಜೊತೆಗೆ ಅಗತ್ಯವಿರುವ ಕಡೆ ಗೋಶಾಲೆಗಳನ್ನು ತೆರೆಯಲಾಗುವುದು. ನಮ್ಮ ಜಾನುವಾರುಗಳನ್ನು ಸಾಯಲು ಬಿಡುವುದಿಲ್ಲ. ಮೇವು ಇಲ್ಲದೆ ಅವುಗಳನ್ನು ಕಸಾಯಿಖಾನೆಗೆ ಕಳುಹಿಸುವ ಪರಿಸ್ಥಿತಿಗೂ ಅವಕಾಶ ನೀಡುವುದಿಲ್ಲ.
ವಲಸೆ ತಡೆಯಲು ಗ್ರಾಮದಲ್ಲೇ ಹೆಚ್ಚಿನ ಉದ್ಯೋಗ:
ಬರದ ಕಾರಣ ಗ್ರಾಮಗಳಿಂದ ಯುವಕರು ಮತ್ತು ಮಧ್ಯವಯಸ್ಕರು ಕೂಲಿ ಅರಸಿ ಹೊರರಾಜ್ಯ, ಹೊರಜಿಲ್ಲೆಗಳಿಗೆ ಗುಳೆ ಹೋಗುತ್ತಿರುವ ಬಗ್ಗೆ ರೈತರು ವ್ಯಕ್ತಪಡಿಸಿದ ಆತಂಕವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ.
ವಯಸ್ಸಾದವರನ್ನು ಊರಲ್ಲೇ ಬಿಟ್ಟು ಯುವಕರು ಕಾಫಿ ತೋಟ, ಗೋವಾ ಅಥವಾ ಇತರ ಕಡೆಗಳಿಗೆ ಕೆಲಸಕ್ಕೆ ಹೋಗುವ ಸ್ಥಿತಿ ಬರಬಾರದು. ಈ ವರ್ಷ ಮಲೆನಾಡು ಪ್ರದೇಶಗಳಲ್ಲಿಯೂ ಮಳೆ ಕೊರತೆಯಿರುವುದರಿಂದ ಅಲ್ಲಿ ಸಹ ಉದ್ಯೋಗದ ಪರಿಸ್ಥಿತಿ ಉತ್ತಮವಾಗಿಲ್ಲ. ಗ್ರಾಮೀಣ ಉದ್ಯೋಗ ಯೋಜನೆಯಡಿ ಹೆಚ್ಚು ಮಾನವ ದಿನಗಳನ್ನು ಸೃಷ್ಟಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ.
ಬಂಡ್ರಿ ಗ್ರಾಮದಲ್ಲಿ ಈಗಾಗಲೇ 277 ಮಾನವ ದಿನಗಳು ಸೃಷ್ಟಿಯಾಗಿದ್ದು, ಜಿಲ್ಲೆಯಲ್ಲಿ ಒಟ್ಟಾರೆ ಸುಮಾರು 21 ಸಾವಿರ ಮಾನವ ದಿನಗಳ ಕೆಲಸ ನೀಡಲಾಗಿದೆ. ಇದನ್ನು ಇನ್ನಷ್ಟು ಹೆಚ್ಚಿಸಲಾಗುವುದು. ಜನರು ಉದ್ಯೋಗಕ್ಕಾಗಿ ಊರು ಬಿಟ್ಟು ಹೋಗದಂತೆ ಸ್ಥಳೀಯವಾಗಿಯೇ ಸಾಧ್ಯವಾದಷ್ಟು ಕೆಲಸ ಒದಗಿಸುವುದು ಸರ್ಕಾರದ ಉದ್ದೇಶ.
ಕೇಂದ್ರದಿಂದ ಗ್ರಾಮೀಣ ಉದ್ಯೋಗ ಯೋಜನೆಯಡಿ ಹಣ ಬಿಡುಗಡೆ ಆಗದಿದ್ದರೂ, ಪರಿಸ್ಥಿತಿಯ ಗಂಭೀರತೆಯನ್ನು ಪರಿಗಣಿಸಿ ರಾಜ್ಯ ಸರ್ಕಾರವೇ ಹಣಕಾಸಿನ ವ್ಯವಸ್ಥೆ ಮಾಡಿಕೊಂಡು ಜನರಿಗೆ ಕೆಲಸ ನೀಡುತ್ತಿದೆ. ಬರ ಪರಿಸ್ಥಿತಿಯ ಹಿನ್ನೆಲೆಯಲ್ಲಿ ರೈತರ ಬ್ಯಾಂಕ್ ಸಾಲದ ವಸೂಲಿಯನ್ನೂ ಮುಂದೂಡುವಂತೆ ಕ್ರಮ ಕೈಗೊಳ್ಳಲಾಗಿದೆ. ರೈತರಿಂದ ಸಾಲ ವಾಪಸ್ ಕೇಳದಂತೆ 60 ತಿಂಗಳು, ಅಂದರೆ ಐದು ವರ್ಷಗಳ ಮೊರಟೋರಿಯಂ ಅವಧಿ ನೀಡುವಂತೆ ಸೂಚಿಸಲಾಗಿದೆ.
ಈ ಅವಧಿಯಲ್ಲಿ ಬ್ಯಾಂಕ್ಗಳು ರೈತರಿಗೆ ತೊಂದರೆ ಕೊಡಬಾರದು. ಬಡ್ಡಿಯ ವಿಚಾರವನ್ನೂ ಸರ್ಕಾರ ಪರಿಶೀಲಿಸುತ್ತದೆ. ರೈತರು ಈಗ ಸಾಲ ಕಟ್ಟುವ ಒತ್ತಡಕ್ಕೆ ಒಳಗಾಗಬಾರದು.
ಮೈಕ್ರೋಫೈನಾನ್ಸ್ ಕಿರುಕುಳ ನೀಡಿದರೆ ಎಫ್ಐಆರ್ :
ಖಾಸಗಿ ಮೈಕ್ರೋಫೈನಾನ್ಸ್ ಸಂಸ್ಥೆಗಳು ರೈತರ ಮನೆಗಳಿಗೆ ಹೋಗಿ ಸಾಲ ವಸೂಲಿಗಾಗಿ ಕಿರುಕುಳ ನೀಡುವಂತಿಲ್ಲ.
ಯಾವುದೇ ಮೈಕ್ರೋಫೈನಾನ್ಸ್ ಸಂಸ್ಥೆ ರೈತರಿಗೆ ಬೆದರಿಕೆ ಹಾಕುವುದು, ಮನೆಗೆ ನುಗ್ಗುವುದು ಅಥವಾ ಕಿರುಕುಳ ನೀಡುವುದು ಕಂಡುಬಂದರೆ ರೈತರು ತಕ್ಷಣ ಜಿಲ್ಲಾಧಿಕಾರಿಗಳಿಗೆ ಮಾಹಿತಿ ನೀಡಬೇಕು. ಈ ವಿಚಾರವನ್ನು ಕೃಷಿ ಇಲಾಖೆ ಅಧಿಕಾರಿಗಳು ನಿರಂತರವಾಗಿ ಮಾನಿಟರ್ ಮಾಡಬೇಕು. ಯಾವ ಮೈಕ್ರೋಫೈನಾನ್ಸ್ ಸಂಸ್ಥೆಯವರಾದರೂ ರೈತರಿಗೆ ಕಿರುಕುಳ ನೀಡಿದರೆ ತಕ್ಷಣ ಅವರ ವಿರುದ್ಧ ಎಫ್ಐಆರ್ ದಾಖಲಿಸಿ ಕ್ರಮ ಕೈಗೊಳ್ಳಬೇಕು.
60 ಹಳ್ಳಿಗಳಿಗೆ ಬಹುಗ್ರಾಮ ಕುಡಿಯುವ ನೀರಿನ ಯೋಜನೆ :
ಸಂಬಂಧಿತ ಯೋಜನೆಯ ಕಾಮಗಾರಿ ಮಾರ್ಚ್ ವೇಳೆಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ. ಈ ಯೋಜನೆಯಿಂದ ಸುಮಾರು 60 ಹಳ್ಳಿಗಳಿಗೆ ಕುಡಿಯುವ ನೀರು ದೊರೆಯಲಿದೆ.
ಐದು ತಾಲೂಕುಗಳಿಗೆ ಶಾಶ್ವತ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸುವ ಉದ್ದೇಶದಿಂದ ಪಾವಗಡವರೆಗೆ ನೀರು ತಲುಪಿಸುವ ಯೋಜನೆಗೆ ಸುಮಾರು ₹2,640 ಕೋಟಿ ವೆಚ್ಚ ಮಾಡಲಾಗಿದೆ. ಈಗಾಗಲೇ ಪಾವಗಡ ಭಾಗದ ಹಲವು ಹಳ್ಳಿಗಳಿಗೆ ನೀರು ದೊರೆಯುತ್ತಿದೆ. ಇದೇ ರೀತಿಯಲ್ಲಿ ಉಳಿದ ಭಾಗಗಳಿಗೂ ಯೋಜನೆಯ ಪ್ರಯೋಜನ ತಲುಪಲಿದೆ.
ಬೇರೆ ತಾಲೂಕಿಗೆ ನೀರು ಬಂದಿದೆ, ನಮಗೆ ಬಂದಿಲ್ಲ ಎಂಬ ಆತಂಕ ಬೇಡ. ಯೋಜನೆಯ ವ್ಯಾಪ್ತಿಯಲ್ಲಿರುವ ಎಲ್ಲ ತಾಲೂಕು ಮತ್ತು ಹಳ್ಳಿಗಳಿಗೆ ನೀರು ತಲುಪಿಸುವ ಕೆಲಸ ನಡೆಯುತ್ತಿದೆ.
ಯಾವುದೇ ಕಾರಣಕ್ಕೂ ರೈತರನ್ನೂ, ಬಡವರನ್ನೂ ಕೈಬಿಡುವುದಿಲ್ಲ:
ಬರದ ಪರಿಣಾಮ ಮುಂದಿನ ಮೇ–ಜೂನ್ ತಿಂಗಳವರೆಗೂ ಮುಂದುವರಿಯುವ ಸಾಧ್ಯತೆಯನ್ನು ಗಮನದಲ್ಲಿಟ್ಟುಕೊಂಡು ಸರ್ಕಾರ ದೀರ್ಘಾವಧಿಯ ಸಿದ್ಧತೆ ಮಾಡಿಕೊಳ್ಳುತ್ತಿದೆ. ಮಧ್ಯೆ ತುಂತುರು ಮಳೆ ಬಂದರೂ ಕೆರೆ-ಕಟ್ಟೆಗಳಿಗೆ ನೀರು ತುಂಬುವಷ್ಟು ಮಳೆ ಆಗದಿದ್ದರೆ ಕುಡಿಯುವ ನೀರು, ಮೇವು ಮತ್ತು ಉದ್ಯೋಗದ ಸಮಸ್ಯೆಗಳು ಮುಂದುವರಿಯಬಹುದು.
ನಮ್ಮದೇ ಹಣಕಾಸಿನ ಕಷ್ಟಗಳು ಇದ್ದರೂ ರೈತನ ನೆರವಿಗೆ ಬರಬೇಕು. ರೈತನನ್ನು ಉಳಿಸಬೇಕು, ಜಾನುವಾರುಗಳನ್ನು ಉಳಿಸಬೇಕು. ಅದನ್ನು ಮಾಡದೆ ಇದ್ದರೆ ಮುಂದಿನ ಗತಿ ಏನು?
ರಾಜ್ಯದ ಎಲ್ಲ ಭಾಗಗಳಿಗೆ ಭೇಟಿ ನೀಡಿ ಪರಿಸ್ಥಿತಿಯನ್ನು ಕಣ್ಣಾರೆ ನೋಡುವುದರ ಜೊತೆಗೆ, “ಸರ್ಕಾರ ನಿಮ್ಮ ಜೊತೆ ಇದೆ” ಎಂಬ ವಿಶ್ವಾಸವನ್ನು ರೈತರಿಗೆ ನೀಡುವುದು ಈ ಪ್ರವಾಸದ ಉದ್ದೇಶ.
ಯಾವುದೇ ಕಾರಣಕ್ಕೂ ರೈತರನ್ನು, ಬಡವರನ್ನು, ಗ್ರಾಮೀಣ ಪ್ರದೇಶದ ಜನರನ್ನು ಸರ್ಕಾರ ಬಿಟ್ಟುಕೊಡುವುದಿಲ್ಲ. ಸರ್ಕಾರ ನಿಮ್ಮ ಪರವಾಗಿ ಇದೆ. ನಿಮ್ಮ ಕಷ್ಟಕ್ಕೆ ಸ್ಪಂದಿಸಿ ಅಗತ್ಯ ನೆರವು ನೀಡುತ್ತದೆ. -
Dr. G Parameshwara
@DrParameshwara
What happened near Delhi's Jantar Mantar today is deeply concerning. The detention and manhandling of the Leader of Opposition Shri @RahulGandhi , Smt. @priyankagandhi and other Opposition leaders, including women leaders, does not reflect the democratic spirit in which political dissent must be handled.
Our concerns over SIR, electoral rolls and the allegations surrounding “vote chori” require a transparent and credible response from the Election Commission. The @narendramodi Government cannot answer legitimate democratic questions through police action and intimidation. Elected representatives must be allowed to raise these issues peacefully and seek answers through democratic means.
Our Constitution protects the right to question and the right to protest. I strongly condemn the police action and stand with Shri Rahul Gandhi, Smt. Priyanka Gandhi and all our Opposition leaders in seeking answers to our concerns. We will not relent in the face of such threats and intimidation. We will pursue this until justice is delivered and the precious voting rights of our people are protected.
@INCIndia -
Dr. G Parameshwara
@DrParameshwara
ಬರ ಪರಿಸ್ಥಿತಿಯಿಂದ ಸಂಕಷ್ಟದಲ್ಲಿರುವ ರೈತರಿಗೆ ಸಾಲದ ಒತ್ತಡ ಮತ್ತಷ್ಟು ಹೆಚ್ಚಾಗಬಾರದು ಎಂಬ ಉದ್ದೇಶದಿಂದ ಸರ್ಕಾರ ಅಗತ್ಯ ಕ್ರಮ ಕೈಗೊಂಡಿದೆ.
ರೈತರ ಸಾಲ ವಸೂಲಿಯನ್ನು ಮುಂದೂಡಲು ಬ್ಯಾಂಕ್ಗಳಿಗೆ ಸೂಚನೆ ನೀಡಲಾಗಿದ್ದು, ಸಾಲ ಮರುಹೊಂದಿಕೆ ಹಾಗೂ ಮರುಹಣಕಾಸಿಗೂ ಕ್ರಮ ಕೈಗೊಳ್ಳಲಾಗುತ್ತಿದೆ. ರಾಷ್ಟ್ರೀಕೃತ ಬ್ಯಾಂಕ್ಗಳು ಹಾಗೂ ಖಾಸಗಿ ಹಣಕಾಸು ಸಂಸ್ಥೆಗಳಿಗೂ ಈ ಕುರಿತು ಸೂಚನೆ ನೀಡಲಾಗುತ್ತಿದೆ.
ರೈತರ ಕಷ್ಟದ ಸಮಯದಲ್ಲಿ ಸಾಲದ ನೋಟಿಸ್ಗಳಿಂದ ಆತಂಕಕ್ಕೆ ಒಳಗಾಗಬೇಕಿಲ್ಲ. ಸರ್ಕಾರ ರೈತರ ಹಿತ ಕಾಪಾಡಲು ಅಗತ್ಯ ಕ್ರಮ ಕೈಗೊಳ್ಳಲಿದೆ.
To ensure that farmers already facing hardship due to drought are not burdened further by loan pressure, the Government has taken necessary measures.
Banks have been directed to defer recovery of farmers’ loans, while steps are also being taken for loan restructuring and refinancing. Similar instructions are being issued to nationalised banks and private financial institutions.
Farmers need not be anxious over loan recovery notices during this difficult period. The Government will take all necessary steps to protect their interests. -
Dr. G Parameshwara
@DrParameshwara
ರಾಜ್ಯದ ಬರ ಪರಿಸ್ಥಿತಿಯನ್ನು ಸರ್ಕಾರ ನಿರಂತರವಾಗಿ ಪರಿಶೀಲಿಸುತ್ತಿದ್ದು, ರೈತರ ಸಂಕಷ್ಟಕ್ಕೆ ತ್ವರಿತವಾಗಿ ಸ್ಪಂದಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿದೆ.
217 ತಾಲೂಕುಗಳನ್ನು ಈಗಾಗಲೇ ಬರಪೀಡಿತ ಎಂದು ಘೋಷಿಸಲಾಗಿದೆ. ಇನ್ನೂ 23 ತಾಲೂಕುಗಳಲ್ಲಿ ಗ್ರೌಂಡ್ ಟ್ರೂಥಿಂಗ್ ಪ್ರಕ್ರಿಯೆ ನಡೆಯುತ್ತಿದೆ. ಪರಿಶೀಲನೆಯ ಬಳಿಕ 10ರಿಂದ 15 ತಾಲೂಕುಗಳು ಬರಪೀಡಿತ ಪಟ್ಟಿಗೆ ಸೇರುವ ಸಾಧ್ಯತೆ ಇದೆ.
ರೈತರ ಸಂಕಷ್ಟಕ್ಕೆ ಸ್ಪಂದಿಸಿ, ಅವರ ಬದುಕಿಗೆ ಅಗತ್ಯ ನೆರವು ಒದಗಿಸಲು ಸರ್ಕಾರ ಸದಾ ಬದ್ಧವಾಗಿದೆ.
The Government is continuously reviewing the drought situation across the State and taking necessary measures to respond swiftly to the difficulties faced by farmers.
217 taluks have already been declared drought-affected, while ground truthing is underway in another 23 taluks. Following the assessment, 10 to 15 more taluks are likely to be added to the drought-affected list.
Our Government remains committed to standing by farmers and providing them with the support they need during this difficult period. -
Dr. G Parameshwara
@DrParameshwara
ಬರ ಪರಿಸ್ಥಿತಿಯಿಂದ ರಾಜ್ಯದಲ್ಲಿ ಶೇ.90ರಷ್ಟು ಬೆಳೆಹಾನಿಯಾಗಿರುವ ಸಂದರ್ಭದಲ್ಲಿ, ರೈತರ ಸಂಕಷ್ಟಕ್ಕೆ ಸರ್ಕಾರ ನೆರವಿನ ಹಸ್ತ ಚಾಚಿದೆ.
ಕೇಂದ್ರದ ಮಾರ್ಗಸೂಚಿಯಂತೆ ಹೆಕ್ಟೇರ್ಗೆ ₹8,500 ಪರಿಹಾರ ನಿಗದಿಯಾಗಿದ್ದರೂ, ಕೇಂದ್ರದಿಂದ ಈವರೆಗೆ ಹಣ ಬಿಡುಗಡೆಯಾಗಿಲ್ಲ. ಆದರೂ ನೆರವಿಗಾಗಿ ಕಾಯದೆ ರಾಜ್ಯ ಸರ್ಕಾರ ತನ್ನ ಪಾಲಿನಿಂದ ಹೆಕ್ಟೇರ್ಗೆ ಮೊದಲ ಕಂತಾಗಿ ₹2,500 ಪರಿಹಾರ ನೀಡಲು ಕ್ರಮ ಕೈಗೊಂಡಿದೆ.
ರೈತರ ಸಂಕಷ್ಟದ ಸಮಯದಲ್ಲಿ ಅವರ ಬದುಕಿಗೆ ಧೈರ್ಯ ತುಂಬಿ, ಅವರ ಬೆನ್ನಿಗೆ ನಿಲ್ಲುವುದು ಸರ್ಕಾರದ ಬದ್ಧತೆ.
With nearly 90% crop damage across the State due to the drought, the Government has stepped in to support farmers facing severe distress.
While relief of ₹8,500 per hectare is prescribed under Union Government guidelines, no funds have been released by the Centre so far. Without waiting for Central assistance, the State Government has initiated steps to provide ₹2,500 per hectare as the first instalment of relief from its own share.
Standing by farmers, giving them confidence in this difficult time and supporting their livelihoods remains our Government’s commitment. -
Dr. G Parameshwara
@DrParameshwara
ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಬರಪೀಡಿತ ಪೋತಲ್ಕಟ್ಟೆ ಗ್ರಾಮಕ್ಕೆ ಇಂದು ಭೇಟಿ ನೀಡಿ, ಮಳೆ ಕೊರತೆಯಿಂದ ಹಾನಿಗೊಳಗಾದ ಮೆಕ್ಕೆಜೋಳ ಬೆಳೆಗಳನ್ನು ಖುದ್ದು ಪರಿಶೀಲಿಸಿದೆ.
ಬರದಿಂದ ಬೆಳೆ ಕಳೆದುಕೊಂಡಿರುವ ರೈತರ ಪರಿಸ್ಥಿತಿಯನ್ನು ಸ್ಥಳದಲ್ಲೇ ಅವಲೋಕಿಸಿ, ಬೆಳೆ ಹಾನಿ ಹಾಗೂ ಅವರು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಮಾಹಿತಿ ಪಡೆದುಕೊಂಡೆ. ರೈತರ ಸಂಕಷ್ಟಕ್ಕೆ ಸ್ಪಂದಿಸಿ ಅಗತ್ಯ ನೆರವು ಒದಗಿಸುವ ನಿಟ್ಟಿನಲ್ಲಿ ಸರ್ಕಾರ ಎಲ್ಲ ಕ್ರಮಗಳನ್ನು ಕೈಗೊಳ್ಳುತ್ತಿದೆ.
ಬಳಿಕ ತಲೆಬಸಾಪುರ ತಾಂಡಕ್ಕೆ ಭೇಟಿ ನೀಡಿ, ವಿಬಿ-ಜಿ ರಾಮ್ ಜಿ ಯೋಜನೆಯಡಿ ಸ್ಥಳೀಯರಿಗೆ ಉದ್ಯೋಗ ಕಲ್ಪಿಸಿರುವ ಕಾಮಗಾರಿ ಸ್ಥಳಗಳನ್ನು ವೀಕ್ಷಿಸಿದೆ. ಬರದ ಸಂದರ್ಭದಲ್ಲಿ ಗ್ರಾಮೀಣ ಜನರು ಉದ್ಯೋಗ ಅರಸಿ ವಲಸೆ ಹೋಗದಂತೆ ಸ್ಥಳೀಯವಾಗಿಯೇ ಹೆಚ್ಚು ಉದ್ಯೋಗಾವಕಾಶಗಳನ್ನು ಸೃಷ್ಟಿಸುವುದು ನಮ್ಮ ಆದ್ಯತೆಯಾಗಿದೆ. ಯೋಜನೆಯ ಅನುಷ್ಠಾನ, ನಡೆಯುತ್ತಿರುವ ಕಾಮಗಾರಿಗಳು ಹಾಗೂ ಜನರಿಗೆ ದೊರೆಯುತ್ತಿರುವ ಉದ್ಯೋಗದ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡೆ.
ಈ ಸಂದರ್ಭದಲ್ಲಿ ಸಚಿವರಾದ ಕೆ.ಎಸ್. ಬಸವಂತಪ್ಪ, ಡಾ. ಎನ್.ಟಿ. ಶ್ರೀನಿವಾಸ್ ಹಾಗೂ ಅಧಿಕಾರಿಗಳು ಜೊತೆಗಿದ್ದರು.
Dr. G Parameshwara
@DrParameshwara
Today, I visited drought-affected Pothalakatte village in Hosapete taluk of Vijayanagara district and personally inspected maize crops damaged due to the lack of rainfall.
I assessed the condition of farmers who have lost their crops to the drought and gathered information about the extent of crop damage and the difficulties they are facing. The Government is taking all necessary measures to respond to farmers’ distress and provide the support they need.
Later, I visited Talebasapura Tanda and inspected works being carried out under the VB-G RAM G scheme, where employment has been provided to local residents. During drought, our priority is to create more employment opportunities locally so that rural families are not forced to migrate in search of work.
I also reviewed the implementation of the scheme, the ongoing works and the employment being generated for local people.
Ministers K.S. Basavanthappa, Dr. N.T. Srinivas and officials accompanied me during the visit. -
Dr. G Parameshwara
@DrParameshwara
ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ಬರಪೀಡಿತ ಬಂಡ್ರಿ ಗ್ರಾಮದಲ್ಲಿ ಮೆಕ್ಕೆಜೋಳ ಬಿತ್ತನೆ ಮಾಡಿರುವ ಜಮೀನಿಗೆ ಇಂದು ಭೇಟಿ ನೀಡಿ, ಬೆಳೆ ಪರಿಸ್ಥಿತಿಯನ್ನು ಖುದ್ದು ಪರಿಶೀಲಿಸಿದೆ.
ಮಳೆ ಕೊರತೆಯಿಂದ ಮೆಕ್ಕೆಜೋಳ ಬೆಳೆ ಒಣಗಿ ಹಾನಿಗೀಡಾಗಿರುವುದನ್ನು ಗಮನಿಸಿದೆ. ಬಳಿಕ ಜಮೀನಿನಲ್ಲೇ ರೈತರೊಂದಿಗೆ ಸಂವಾದ ನಡೆಸಿ, ಕುಡಿಯುವ ನೀರಿನ ಸಮಸ್ಯೆ, ಜಾನುವಾರುಗಳಿಗೆ ಮೇವು, ಉದ್ಯೋಗ, ವಲಸೆ, ಬೆಳೆ ನಷ್ಟ ಸೇರಿದಂತೆ ಅವರು ಎದುರಿಸುತ್ತಿರುವ ಸಮಸ್ಯೆಯನ್ನು ಆಲಿಸಿದೆ.
ರೈತರು ಹೇಳಿದ ಪ್ರತಿಯೊಂದು ಸಮಸ್ಯೆಯನ್ನೂ ಸರ್ಕಾರ ಗಂಭೀರವಾಗಿ ಪರಿಗಣಿಸಿ, ಅವರಿಗೆ ಅಗತ್ಯ ನೆರವು ಮತ್ತು ಪರಿಹಾರ ಕಲ್ಪಿಸಲು ಬದ್ಧವಿದೆ. -
Dr. G Parameshwara
@DrParameshwara
ಬಳ್ಳಾರಿ ತಾಲೂಕಿನ ಬಿ. ಬೆಳಗಲ್ ಗ್ರಾಮಕ್ಕೆ ಭೇಟಿ ನೀಡಿ, ಮಳೆ ಕೊರತೆಯಿಂದ ಹಾನಿಗೀಡಾಗಿರುವ ತೊಗರಿ ಹಾಗೂ ಸಜ್ಜೆ ಬೆಳೆಗಳ ಜಮೀನು ಪರಿಶೀಲಿಸಿದೆ.
ಈ ವೇಳೆ ಮಳೆಯ ಅಭಾವದಿಂದ ತೊಗರಿ ಬೆಳೆ ನಿರೀಕ್ಷಿತ ಪ್ರಮಾಣದಲ್ಲಿ ಬೆಳವಣಿಗೆಯಾಗದೆ ಕುಂಠಿತಗೊಂಡಿರುವುದು ಹಾಗೂ ಸಜ್ಜೆ ಬೆಳೆ ಸಂಪೂರ್ಣ ಒಣಗಿ ಹೋಗಿರುವುದು ಕಂಡುಬಂತು.
ರೈತರಾದ ಮಲ್ಲಿಕಾರ್ಜುನಗೌಡ ಹಾಗೂ ತಿಪ್ಪೇರುದ್ರಪ್ಪ ಅವರೊಂದಿಗೆ ನೇರವಾಗಿ ಮಾತಿಗಿಳಿದು ಬೆಳೆ ನಷ್ಟ ಹಾಗೂ ಅವರು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಮಾಹಿತಿ ಪಡೆದುಕೊಂಡೆ.
ಬರ ಪರಿಸ್ಥಿತಿಯಿಂದ ರೈತರು ಅನುಭವಿಸುತ್ತಿರುವ ಸಂಕಷ್ಟವನ್ನು ನಮ್ಮ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಬೆಳೆ ಹಾನಿಯ ಮೌಲ್ಯಮಾಪನದ ಆಧಾರದ ಮೇಲೆ ಅಗತ್ಯ ಪರಿಹಾರ ನೀಡಲು ಕ್ರಮ ವಹಿಸಲಾಗುವುದು ಎಂದು ಈ ವೇಳೆ ರೈತರಿಗೆ ಭರವಸೆಯನ್ನಿತ್ತೆ.
Dr. G Parameshwara
@DrParameshwara
I visited B. Belagal village in Ballari taluk and inspected tur and pearl millet fields affected by the lack of rainfall.
During the visit, I observed that the tur crop had suffered stunted growth due to inadequate rains, while the pearl millet crop had completely dried up.
I spoke directly with farmers Mallikarjunagowda and Tipperudrappa and learnt about the crop losses and the difficulties they are facing.
Our Government is taking the hardship caused by the drought seriously. I assured the farmers that necessary relief measures will be taken based on the assessment of crop damage. -
Dr. G Parameshwara
@DrParameshwara
According to the available data, Karnataka is facing one of its most severe droughts in nearly 75 years, with around 90% of crops across the State affected. Protecting farmers who have lost their crops and are facing severe hardship is our Government’s first priority, and we will take every necessary measure to support them.
Of the State’s nearly 240 taluks, the impact of drought is visible in almost all areas except a few taluks in the coastal region. 217 taluks have already been declared drought-affected, while ground truthing is underway in another 23 taluks. Of these, around 10 to 15 taluks are likely to be added to the drought-affected list.
Farmers across Karnataka are going through an extremely difficult period. In several places, farmers initially sowed tur, which was damaged due to lack of rain. When some rainfall was received later, they sowed alternative crops such as jowar, but those crops too have failed. As a result, many farmers have been left without any harvest.
Nearly 90% of crops in Karnataka have been affected. The distress is not limited to rain-fed areas; irrigated regions too are facing difficulties. Rainfall in parts of Maharashtra brought some inflows into the Almatti and Narayanpur reservoirs, while the KRS, Harangi and Kabini regions also received some rain. At the same time, a portion of the available water had to be released to Tamil Nadu.
The drought situation is particularly severe in Ballari, Vijayanagara and surrounding areas. The Union Government teams that visited the State have also inspected the serious conditions in this region.
The drought has affected not only crops but also drinking water availability. Several villages are facing shortages, and the Government has initiated precautionary measures to prevent the situation from worsening.
Funds have been released for urgent drought-relief works, including drinking water supply. Deputy Commissioners have been instructed to utilise the funds available with them as required and extend assistance to farmers and the public.
The Government must stand by farmers and the people. We have already taken several measures to provide as much support as possible.
First Instalment of Relief Without Waiting for Central Assistance :
Under Union Government guidelines, relief of ₹8,500 per hectare is provided. However, no funds have yet been released by the Centre. Without waiting for Central assistance, the State Government has taken steps to provide farmers with ₹2,500 as the first instalment of relief from its own resources.
A Government Order has already been issued, and Deputy Commissioners will be instructed to release the amount immediately. Further assistance will also be provided to farmers in the coming days.
We will not simply sit and blame the Centre for not releasing even a single rupee. We will provide whatever support is possible from our side. We will not abandon farmers in this time of distress.
Farm families are also benefiting from electricity subsidies and the Government’s guarantee schemes. Through various Government schemes and programmes, a family receives benefits worth at least ₹60,000 to ₹70,000. More importantly, farmers’ livelihoods must be protected, and we will provide the support necessary to do so.
The State Government has already submitted two memoranda to the Centre regarding the drought situation. The total loss in the 177 taluks covered by these memoranda has been estimated at around ₹46,000 crore.
However, the entire amount of the loss cannot be claimed as relief from the Union Government. Based on the NDRF guidelines prescribed by the Centre, Karnataka has sought approximately ₹11,000 crore to ₹11,500 crore in assistance.
We have assessed the loss at ₹46,000 crore, but we can seek only the amount permitted under the Union Government’s guidelines. Accordingly, we have requested around ₹11,000 crore in relief.
The Centre has already sent teams to Karnataka, which have visited drought-affected areas and conducted inspections. We will have to see how much assistance is sanctioned after the teams submit their reports.
There is no requirement for the Central teams to visit every single location. They carry out sample inspections in selected areas.
The Union Government also has access to satellite-based data on crop and drought conditions. Three Central teams visited Karnataka, and the State Government briefed them on districts facing varying levels of drought severity.
During the 2023 drought, Karnataka suffered losses of around ₹49,000 crore. Although the State Government sought nearly ₹18,000 crore in assistance, no funds were initially released by the Centre. Subsequently, after the State Government approached the court, around ₹3,500 crore was released following the court’s directions.
Loan Recovery Deferred; Farmers Need Not Worry About Notices
The Government has also taken measures regarding recovery of farmers’ loans in view of the drought. Banks have been directed to defer loan recovery and take steps towards restructuring and refinancing loans.
Farmers need not be anxious about notices being issued by banks. The Government has already directed that loan recovery be deferred, and instructions are also being issued to private financial institutions and nationalised banks.
At present, the Government is taking several measures, including providing immediate financial assistance and postponing loan recovery. The situation will continue to be reviewed, and further support will be provided in the coming days.
Financial pressure is natural whenever a major programme or initiative is implemented. Despite spending around ₹52,000 crore annually on the guarantee schemes, the Government has not stopped them.
Based on the availability of funds, we will prioritise what needs to be done first and what can be taken up later. Right now, the farmer is our first priority. Road works and other projects can be taken up later if necessary. Protecting the farmer comes first.
Government work has not stopped anywhere. District administrations are carrying out their responsibilities, while the Government is monitoring the situation at the State level. Even if there is a gap of one or two months, or a few months, in the district in-charge arrangement, administrative work does not come to a halt. Necessary measures will be taken shortly.
- My remarks to the media after visiting a tur field in drought-affected Halakundi village of Ballari taluk and inspecting the crop situation. -
Dr. G Parameshwara
@DrParameshwara
ಲಭ್ಯವಿರುವ ಅಂಕಿ ಅಂಶಗಳ ಪ್ರಕಾರ ಸುಮಾರು 75 ವರ್ಷಗಳ ಬಳಿಕ ಕರ್ನಾಟಕ ಇಂತಹ ಭೀಕರ ಬರ ಪರಿಸ್ಥಿತಿಯನ್ನು ಎದುರಿಸುತ್ತಿದ್ದು, ರಾಜ್ಯದ ಶೇ.90ರಷ್ಟು ಬೆಳೆ ಹಾನಿಯಾಗಿದೆ. ಬೆಳೆ ಕಳೆದುಕೊಂಡು ಸಂಕಷ್ಟದಲ್ಲಿರುವ ರೈತರನ್ನು ಉಳಿಸುವುದೇ ಸರ್ಕಾರದ ಮೊದಲ ಆದ್ಯತೆಯಾಗಿದ್ದು, ಅವರ ನೆರವಿಗೆ ಅಗತ್ಯವಿರುವ ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗುವುದು.
ರಾಜ್ಯದ ಸುಮಾರು 240 ತಾಲೂಕುಗಳ ಪೈಕಿ ಕರಾವಳಿ ಭಾಗದ ಕೆಲವೇ ತಾಲೂಕುಗಳನ್ನು ಹೊರತುಪಡಿಸಿ ಬಹುತೇಕ ಎಲ್ಲ ತಾಲೂಕುಗಳಲ್ಲಿಯೂ ಬರದ ಪರಿಣಾಮ ಗೋಚರಿಸುತ್ತಿದೆ. ಈಗಾಗಲೇ 217 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿದ್ದು, ಇನ್ನೂ 23 ತಾಲೂಕುಗಳಲ್ಲಿ ಗ್ರೌಂಡ್ ಟ್ರೂಥಿಂಗ್ ನಡೆಯುತ್ತಿದೆ. ಅವುಗಳಲ್ಲಿ ಸುಮಾರು 10ರಿಂದ 15 ತಾಲೂಕುಗಳು ಬರಪೀಡಿತ ಪ್ರದೇಶಗಳ ಪಟ್ಟಿಗೆ ಸೇರುವ ಸಾಧ್ಯತೆಯಿದೆ.
ರಾಜ್ಯದ ರೈತರು ಅತ್ಯಂತ ಕಷ್ಟದ ಪರಿಸ್ಥಿತಿಯಲ್ಲಿದ್ದಾರೆ. ಹಲವೆಡೆ ರೈತರು ಮೊದಲು ತೊಗರಿ ಬಿತ್ತಿದ್ದು, ಅದು ಮಳೆಯ ಕೊರತೆಯಿಂದ ಹಾನಿಗೊಳಗಾದ ಬಳಿಕ ಸ್ವಲ್ಪ ಮಳೆ ಬಂದಾಗ ಮತ್ತೆ ಜೋಳ ಸೇರಿದಂತೆ ಪರ್ಯಾಯ ಬೆಳೆ ಬಿತ್ತಿದ್ದಾರೆ. ಆದರೆ ಆ ಬೆಳೆಯೂ ಉಳಿದಿಲ್ಲ. ಪರಿಣಾಮ ರೈತನ ಕೈಗೆ ಯಾವುದೇ ಬೆಳೆ ಸಿಗದ ಪರಿಸ್ಥಿತಿ ನಿರ್ಮಾಣವಾಗಿದೆ.
ಕರ್ನಾಟಕದಲ್ಲಿ ಸುಮಾರು ಶೇ.90ರಷ್ಟು ಬೆಳೆ ಹಾನಿಯಾಗಿದೆ. ಮಳೆಯಾಶ್ರಿತ ಪ್ರದೇಶಗಳಷ್ಟೇ ಅಲ್ಲದೆ ನೀರಾವರಿ ಪ್ರದೇಶಗಳಲ್ಲಿಯೂ ಸಂಕಷ್ಟವಿದೆ. ಮಹಾರಾಷ್ಟ್ರ ಭಾಗದಲ್ಲಿ ಮಳೆಯಾದ ಪರಿಣಾಮ ಆಲಮಟ್ಟಿ ಮತ್ತು ನಾರಾಯಣಪುರ ಜಲಾಶಯಗಳಿಗೆ ಸ್ವಲ್ಪ ನೀರು ಬಂದಿದೆ. ಅದೇ ರೀತಿ ಕೆಆರ್ಎಸ್, ಹಾರಂಗಿ ಹಾಗೂ ಕಬಿನಿ ಭಾಗಗಳಲ್ಲಿಯೂ ಒಂದಿಷ್ಟು ಮಳೆಯಾಗಿದೆ. ಲಭ್ಯವಿದ್ದ ನೀರಿನ ಒಂದು ಭಾಗವನ್ನು ತಮಿಳುನಾಡಿಗೆ ಬಿಡಬೇಕಾದ ಪರಿಸ್ಥಿತಿಯೂ ಎದುರಾಗಿದೆ.
ಬಳ್ಳಾರಿ, ವಿಜಯನಗರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬರದ ಪರಿಣಾಮ ಹೆಚ್ಚು ತೀವ್ರವಾಗಿದೆ. ಕೇಂದ್ರ ಸರ್ಕಾರದ ತಂಡ ರಾಜ್ಯಕ್ಕೆ ಭೇಟಿ ನೀಡಿದಾಗಲೂ ಈ ಭಾಗದ ಗಂಭೀರ ಪರಿಸ್ಥಿತಿಯನ್ನು ಪರಿಶೀಲಿಸಿದೆ.
ಬರದಿಂದ ಬೆಳೆ ಮಾತ್ರವಲ್ಲದೆ ಕುಡಿಯುವ ನೀರಿನ ಸಮಸ್ಯೆಯೂ ತೀವ್ರವಾಗುತ್ತಿದೆ. ಹಲವು ಗ್ರಾಮಗಳಲ್ಲಿ ಕುಡಿಯುವ ನೀರಿನ ಕೊರತೆ ಎದುರಾಗಿದ್ದು, ಪರಿಸ್ಥಿತಿ ಮತ್ತಷ್ಟು ಹದಗೆಡದಂತೆ ಸರ್ಕಾರ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದೆ.
ಕುಡಿಯುವ ನೀರು ಸೇರಿದಂತೆ ತುರ್ತು ಬರ ಪರಿಹಾರ ಕಾಮಗಾರಿಗಳಿಗಾಗಿ ಹಣ ಬಿಡುಗಡೆ ಮಾಡಲಾಗಿದೆ. ಜಿಲ್ಲಾಧಿಕಾರಿಗಳ ಬಳಿ ಲಭ್ಯವಿರುವ ಅನುದಾನವನ್ನು ಅಗತ್ಯಕ್ಕೆ ಅನುಗುಣವಾಗಿ ಬಳಸಿಕೊಂಡು ರೈತರು ಮತ್ತು ಸಾರ್ವಜನಿಕರ ನೆರವಿಗೆ ಬರಬೇಕೆಂದು ಸೂಚಿಸಲಾಗಿದೆ.
ಸರ್ಕಾರ ರೈತರ ಹಾಗೂ ಜನರ ನೆರವಿಗೆ ಬರಬೇಕು. ನಮಗೆ ಎಷ್ಟು ಸಾಧ್ಯವೋ ಅಷ್ಟು ನೆರವು ನೀಡಲು ಈಗಾಗಲೇ ಹಲವು ಕ್ರಮಗಳನ್ನು ಕೈಗೊಂಡಿದ್ದೇವೆ.
*ಕೇಂದ್ರದ ಪಾಲು ಇನ್ನೂ ಬಂದಿಲ್ಲ; ಮೊದಲ ಕಂತಿನ ಪರಿಹಾರ ಬಿಡುಗಡೆಗೆ ಕ್ರಮ*
ಕೇಂದ್ರ ಸರ್ಕಾರದ ಮಾರ್ಗಸೂಚಿಯಲ್ಲಿ ಒಂದು ಹೆಕ್ಟೇರ್ಗೆ ₹8,500 ಪರಿಹಾರ ನೀಡುವ ವ್ಯವಸ್ಥೆ ಇದೆ. ಆದರೆ ಕೇಂದ್ರದಿಂದ ಇದುವರೆಗೆ ಯಾವುದೇ ಹಣ ಬಿಡುಗಡೆಯಾಗಿಲ್ಲ. ಆದರೂ ಕೇಂದ್ರದ ಹಣಕ್ಕಾಗಿ ಕಾಯದೆ ರಾಜ್ಯ ಸರ್ಕಾರ ತನ್ನ ಪಾಲಿನಿಂದ ರೈತರಿಗೆ ಮೊದಲ ಕಂತಾಗಿ ₹2,500 ನೀಡಲು ಕ್ರಮ ಕೈಗೊಂಡಿದೆ.
ಈ ಕುರಿತು ಸರ್ಕಾರದ ಆದೇಶ ಈಗಾಗಲೇ ಹೊರಬಂದಿದ್ದು, ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿ ತಕ್ಷಣ ಹಣ ಬಿಡುಗಡೆ ಮಾಡಲಾಗುವುದು. ಮುಂದಿನ ದಿನಗಳಲ್ಲಿ ರೈತರಿಗೆ ಇನ್ನಷ್ಟು ನೆರವು ನೀಡಲಾಗುವುದು.
ಕೇಂದ್ರದಿಂದ ಒಂದು ಪೈಸೆಯೂ ಬಂದಿಲ್ಲ ಎಂದು ಅವರನ್ನು ದೂಷಿಸುತ್ತಾ ಕುಳಿತುಕೊಳ್ಳುವುದಿಲ್ಲ. ನಮ್ಮಿಂದ ಸಾಧ್ಯವಾದ ನೆರವನ್ನು ನಾವು ನೀಡುತ್ತೇವೆ. ರೈತನನ್ನು ಸಂಕಷ್ಟದಲ್ಲಿ ಕೈಬಿಡುವುದಿಲ್ಲ.
ವಿದ್ಯುತ್ ಸಬ್ಸಿಡಿ ಮತ್ತು ಸರ್ಕಾರದ ಗ್ಯಾರಂಟಿ ಯೋಜನೆಗಳ ಪ್ರಯೋಜನವೂ ರೈತ ಕುಟುಂಬಗಳಿಗೆ ದೊರೆಯುತ್ತಿದೆ. ಸರ್ಕಾರದ ವಿವಿಧ ಯೋಜನೆಗಳು ಮತ್ತು ಕಾರ್ಯಕ್ರಮಗಳಿಂದ ಒಂದು ಕುಟುಂಬಕ್ಕೆ ಕನಿಷ್ಠ ₹60,000ರಿಂದ ₹70,000ವರೆಗೆ ಪ್ರಯೋಜನ ದೊರೆಯುವ ರೀತಿಯಲ್ಲಿ ವ್ಯವಸ್ಥೆ ಮಾಡಲಾಗಿದೆ. ಅದಕ್ಕಿಂತಲೂ ಮುಖ್ಯವಾಗಿ ರೈತನ ಬದುಕು ಉಳಿಯಬೇಕು. ಅದಕ್ಕೆ ಅಗತ್ಯವಿರುವ ನೆರವು ನೀಡಲಾಗುವುದು.
ಬರ ಪರಿಸ್ಥಿತಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಈಗಾಗಲೇ ಕೇಂದ್ರಕ್ಕೆ ಎರಡು ಮೆಮೊರಾಂಡಮ್ಗಳನ್ನು ಸಲ್ಲಿಸಿದೆ. ಅವುಗಳಲ್ಲಿ 177 ತಾಲೂಕುಗಳಿಗೆ ಸಂಬಂಧಿಸಿದಂತೆ ಒಟ್ಟು ಸುಮಾರು ₹46,000 ಕೋಟಿ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ.
ಆದರೆ ನಷ್ಟದ ಸಂಪೂರ್ಣ ಮೊತ್ತವನ್ನು ಕೇಂದ್ರ ಸರ್ಕಾರದಿಂದ ಪರಿಹಾರವಾಗಿ ಪಡೆಯಲು ಸಾಧ್ಯವಿಲ್ಲ. ಕೇಂದ್ರ ಸರ್ಕಾರ ನಿಗದಿಪಡಿಸಿರುವ ಎನ್ಡಿಆರ್ಎಫ್ (NDRF) ಮಾರ್ಗಸೂಚಿಗಳ ಪ್ರಕಾರ ಲೆಕ್ಕಾಚಾರ ಮಾಡಿ ಸುಮಾರು ₹11,000ರಿಂದ ₹11,500 ಕೋಟಿ ನೆರವು ಕೋರಲಾಗಿದೆ.
ನಾವು ₹46,000 ಕೋಟಿ ನಷ್ಟವಾಗಿದೆ ಎಂದು ಹೇಳಿದ್ದೇವೆ. ಆದರೆ ಕೇಂದ್ರದ ಮಾರ್ಗಸೂಚಿಗಳ ಪ್ರಕಾರ ಎಷ್ಟು ಕೇಳಲು ಅವಕಾಶವಿದೆಯೋ ಅಷ್ಟನ್ನೇ ಕೇಳಬೇಕು. ಅದಕ್ಕಾಗಿ ಸುಮಾರು ₹11,000 ಕೋಟಿ ಪರಿಹಾರಕ್ಕೆ ಮನವಿ ಮಾಡಿದ್ದೇವೆ.
ಕೇಂದ್ರ ಸರ್ಕಾರ ಈಗಾಗಲೇ ತಂಡಗಳನ್ನು ರಾಜ್ಯಕ್ಕೆ ಕಳುಹಿಸಿದ್ದು, ಅವು ಬರಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿವೆ. ತಂಡಗಳು ಕೇಂದ್ರಕ್ಕೆ ವರದಿ ಸಲ್ಲಿಸಿದ ಬಳಿಕ ಎಷ್ಟು ಅನುದಾನ ನೀಡಲಾಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ.
ಕೇಂದ್ರ ತಂಡಗಳು ಪ್ರತಿಯೊಂದು ಸ್ಥಳಕ್ಕೂ ತಂಡ ತೆರಳಬೇಕೆಂಬ ನಿಯಮವಿಲ್ಲ. ತಂಡಗಳು ಆಯ್ದ ಪ್ರದೇಶಗಳಲ್ಲಿ ಮಾದರಿ ಪರಿಶೀಲನೆ ನಡೆಸುತ್ತವೆ.
ಕೇಂದ್ರ ಸರ್ಕಾರದ ಬಳಿಯೂ ಉಪಗ್ರಹ ಆಧಾರಿತ ದತ್ತಾಂಶವಿದ್ದು, ಬೆಳೆ ಹಾಗೂ ಬರ ಪರಿಸ್ಥಿತಿಯ ಮಾಹಿತಿಯನ್ನು ಸಂಗ್ರಹಿಸಲಾಗುತ್ತದೆ. ರಾಜ್ಯಕ್ಕೆ ಮೂರು ಕೇಂದ್ರ ತಂಡಗಳು ಬಂದಿದ್ದು, ಬರ ಹೆಚ್ಚು ಮತ್ತು ಕಡಿಮೆ ಇರುವ ಜಿಲ್ಲೆಗಳ ಕುರಿತು ರಾಜ್ಯ ಸರ್ಕಾರವೇ ಅವರಿಗೆ ಮಾಹಿತಿ ನೀಡಿದೆ.
2023ರ ಬರ ಸಂದರ್ಭದಲ್ಲಿ ಸುಮಾರು ₹49,000 ಕೋಟಿ ನಷ್ಟವಾಗಿತ್ತು. ರಾಜ್ಯ ಸರ್ಕಾರ ಸುಮಾರು ₹18,000 ಕೋಟಿ ನೆರವು ಕೋರಿದ್ದರೂ ಆರಂಭದಲ್ಲಿ ಕೇಂದ್ರದಿಂದ ಯಾವುದೇ ಹಣ ಬಿಡುಗಡೆಯಾಗಿರಲಿಲ್ಲ. ಬಳಿಕ ರಾಜ್ಯ ಸರ್ಕಾರ ನ್ಯಾಯಾಲಯದ ಮೊರೆ ಹೋದ ನಂತರ ನ್ಯಾಯಾಲಯದ ನಿರ್ದೇಶನದ ಮೇರೆಗೆ ಸುಮಾರು ₹3,500 ಕೋಟಿ ಬಿಡುಗಡೆಯಾಯಿತು.
*ರೈತರ ಸಾಲ ವಸೂಲಿ ಮುಂದೂಡಿಕೆ; ನೋಟಿಸ್ಗೆ ಆತಂಕಪಡಬೇಕಿಲ್ಲ*
ಬರ ಪರಿಸ್ಥಿತಿಯ ಹಿನ್ನೆಲೆಯಲ್ಲಿ ರೈತರ ಸಾಲ ವಸೂಲಿ ವಿಚಾರದಲ್ಲಿಯೂ ಸರ್ಕಾರ ಕ್ರಮ ಕೈಗೊಂಡಿದೆ. ಸಾಲ ವಸೂಲಿಯನ್ನು ಮುಂದೂಡುವಂತೆ ಬ್ಯಾಂಕ್ಗಳಿಗೆ ಸೂಚನೆ ನೀಡಲಾಗಿದ್ದು, ಸಾಲಗಳನ್ನು ಮರುಹೊಂದಿಕೆ ಮತ್ತು ಮರುಹಣಕಾಸು ಮಾಡುವ ಕ್ರಮಕ್ಕೆ ಸೂಚಿಸಲಾಗಿದೆ.
ಬ್ಯಾಂಕ್ಗಳು ನೋಟಿಸ್ ನೀಡುತ್ತಿರುವ ಬಗ್ಗೆ ರೈತರು ಆತಂಕಪಡಬೇಕಿಲ್ಲ. ಸಾಲ ವಸೂಲಿಯನ್ನು ಮುಂದೂಡಲು ಸರ್ಕಾರ ಈಗಾಗಲೇ ಸೂಚನೆ ನೀಡಿದೆ. ಖಾಸಗಿ ಹಣಕಾಸು ಸಂಸ್ಥೆಗಳು ಹಾಗೂ ರಾಷ್ಟ್ರೀಕೃತ ಬ್ಯಾಂಕ್ಗಳಿಗೂ ಈ ಸಂಬಂಧ ಸೂಚನೆ ನೀಡಲಾಗುತ್ತಿದೆ.
ಪ್ರಸ್ತುತ ರೈತರಿಗೆ ತಕ್ಷಣದ ಆರ್ಥಿಕ ನೆರವು ನೀಡುವುದು ಹಾಗೂ ಸಾಲ ವಸೂಲಿಯನ್ನು ಮುಂದೂಡುವುದು ಸೇರಿದಂತೆ ಹಲವು ಕ್ರಮಗಳನ್ನು ಸರ್ಕಾರ ಕೈಗೊಂಡಿದೆ. ಮುಂದಿನ ದಿನಗಳಲ್ಲಿ ಪರಿಸ್ಥಿತಿಯನ್ನು ಪರಿಶೀಲಿಸಿ ಇನ್ನಷ್ಟು ನೆರವು ನೀಡಲಾಗುವುದು.
ಯಾವುದೇ ದೊಡ್ಡ ಯೋಜನೆ ಅಥವಾ ಕಾರ್ಯಕ್ರಮ ಜಾರಿಗೆ ತಂದಾಗ ಹಣಕಾಸಿನ ಹೊರೆ ಸಹಜ. ಸರ್ಕಾರ ಗ್ಯಾರಂಟಿ ಯೋಜನೆಗಳಿಗೆ ಪ್ರತಿವರ್ಷ ಸುಮಾರು ₹52,000 ಕೋಟಿ ವೆಚ್ಚ ಮಾಡುತ್ತಿದ್ದರೂ ಅವುಗಳನ್ನು ನಿಲ್ಲಿಸಿಲ್ಲ.
ಹಣಕಾಸಿನ ಲಭ್ಯತೆಯನ್ನು ನೋಡಿಕೊಂಡು ಯಾವ ಕೆಲಸವನ್ನು ಮೊದಲು ಮಾಡಬೇಕು, ಯಾವುದನ್ನು ನಂತರ ಮಾಡಬೇಕು ಎಂಬುದನ್ನು ಆದ್ಯತೆ ಮೇರೆಗೆ ನಿರ್ಧರಿಸುತ್ತೇವೆ. ಈಗ ನಮಗೆ ರೈತನೇ ಮೊದಲ ಆದ್ಯತೆ. ರಸ್ತೆ ಕಾಮಗಾರಿ ಸೇರಿದಂತೆ ಉಳಿದ ಕೆಲಸಗಳು ನಂತರವಾದರೂ ಆಗಬಹುದು. ರೈತನನ್ನು ಉಳಿಸುವುದು ಮೊದಲ ಕೆಲಸ.
ಸರ್ಕಾರದ ಕೆಲಸ ಎಲ್ಲಿಯೂ ನಿಂತಿಲ್ಲ. ಜಿಲ್ಲಾಡಳಿತ ತನ್ನ ಕೆಲಸ ಮಾಡುತ್ತಿದೆ ಹಾಗೂ ಸರ್ಕಾರ ಕೇಂದ್ರ ಮಟ್ಟದಿಂದ ಪರಿಸ್ಥಿತಿಯನ್ನು ಮಾನಿಟರ್ ಮಾಡುತ್ತಿದೆ. ಜಿಲ್ಲಾ ಉಸ್ತುವಾರಿ ವ್ಯವಸ್ಥೆಯಲ್ಲಿ ಒಂದೆರಡು ತಿಂಗಳು ಅಥವಾ ಕೆಲವು ತಿಂಗಳು ಅಂತರ ಉಂಟಾದರೂ ಆಡಳಿತದ ಕೆಲಸ ನಿಲ್ಲುವುದಿಲ್ಲ. ಅಗತ್ಯ ಕ್ರಮಗಳನ್ನು ಶೀಘ್ರ ಕೈಗೊಳ್ಳಲಾಗುವುದು.
- ಬಳ್ಳಾರಿ ತಾಲೂಕಿನ ಬರಪೀಡಿತ ಹಲಕುಂದಿ ಗ್ರಾಮದಲ್ಲಿ ತೊಗರಿ ಬಿತ್ತನೆ ಮಾಡಿರುವ ಜಮೀನಿಗೆ ಭೇಟಿ ನೀಡಿ ಬೆಳೆ ಪರಿಸ್ಥಿತಿಯನ್ನು ಪರಿಶೀಲಿಸಿದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದೆ. -
Dr. G Parameshwara
@DrParameshwara
ಬಳ್ಳಾರಿ ತಾಲೂಕಿನ ಬರಪೀಡಿತ ಹಲಕುಂದಿ ಗ್ರಾಮದ ತೊಗರಿ ಬಿತ್ತನೆ ಮಾಡಿರುವ ಜಮೀನಿಗೆ ಇಂದು ಭೇಟಿ ನೀಡಿ, ಬೆಳೆ ಪರಿಸ್ಥಿತಿಯನ್ನು ಪರಿಶೀಲಿಸಿದೆ.
ಈ ವೇಳೆ ಮಳೆ ಕೊರತೆಯಿಂದ ತೊಗರಿ ಬೆಳೆ ಸಂಪೂರ್ಣ ಒಣಗಿ ಹಾನಿಗೀಡಾಗಿರುವುದು ಕಂಡುಬಂತು. ರೈತರೊಂದಿಗೆ ನೇರವಾಗಿ ಮಾತನಾಡಿ, ಬೆಳೆ ನಷ್ಟ ಹಾಗೂ ಅವರು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಮಾಹಿತಿ ಪಡೆದುಕೊಂಡೆ.
ರೈತ ದುರ್ಗಣ್ಣ ಅವರು, ಒಂದು ಎಕರೆ ತೊಗರಿ ಬೆಳೆಯಲು ಸುಮಾರು ₹15 ಸಾವಿರ ವೆಚ್ಚವಾಗಿದ್ದು, ಉತ್ತಮ ಮಳೆಯಾಗಿದ್ದರೆ 5 ರಿಂದ 6 ಕ್ವಿಂಟಾಲ್ವರೆಗೆ ಇಳುವರಿ ನಿರೀಕ್ಷಿಸಿದ್ದೆ. ಆದರೆ ಮಳೆ ಕೈಕೊಟ್ಟ ಪರಿಣಾಮ ಯಾವುದೇ ಇಳುವರಿ ಬಾರದಂತಾಗಿದೆ. ಸರ್ಕಾರ ರೈತರ ಬೆಳೆ ನಷ್ಟವನ್ನು ಪರಿಗಣಿಸಿ, ಸೂಕ್ತ ಪರಿಹಾರ ಒದಗಿಸಬೇಕು ಎಂದು ಮನವಿ ಮಾಡಿದರು.
ಮಳೆ ಕೊರತೆಯಿಂದಾಗಿ ಬೆಳೆ ನಷ್ಟದ ನೋವಿನಲ್ಲಿರುವ ನಿಮ್ಮ ಜೊತೆ ಸರ್ಕಾರ ನಿಲ್ಲುವುದಾಗಿ ಮತ್ತು ಮೌಲ್ಯಮಾಪನದ ಆಧಾರದ ಮೇಲೆ ಸೂಕ್ತ ಪರಿಹಾರವನ್ನು ಒದಗಿಸಲು ಕ್ರಮ ಕೈಗೊಳ್ಳುವುದಾಗಿ ಈ ಸಂದರ್ಭದಲ್ಲಿ ರೈತರಿಗೆ ಭರವಸೆ ತುಂಬಿದೆ.
ಸಮಯ, ಸಂದರ್ಭ ಯಾವುದೇ ಇರಲಿ. ಅನ್ನದಾತರ ಜೊತೆ ನಾನಿದ್ದೇನೆ. ನಮ್ಮ ಸರ್ಕಾರವಿದೆ.
Dr. G Parameshwara
@DrParameshwara
Today, I visited a tur dal field in drought-affected Halakundi village of Ballari taluk and inspected the crop condition.
The crop had completely dried up due to the lack of rainfall. I spoke directly with the farmers and learnt about the extent of crop loss and the difficulties they are facing.
Farmer Durganna said he had spent around ₹15,000 per acre on tur cultivation and had expected a yield of 5–6 quintals with adequate rainfall. But with the rains failing, he has been left without any yield. He appealed to the Government to take the crop loss into account and provide appropriate relief.
I assured the farmers that the Government stands with them in this difficult time and that steps will be taken to provide suitable relief based on the assessment of crop losses.
Whatever the time, whatever the circumstances, I stand with our farmers. Our Government stands with them. -
Dr. G Parameshwara
@DrParameshwara
ಬಳ್ಳಾರಿ ಜಿಲ್ಲೆಗೆ ಇಂದು ಬಂದಿಳಿದಾಗ ನನ್ನನ್ನು ಪ್ರೀತಿಯಿಂದ ಬರಮಾಡಿಕೊಳ್ಳಲು ಸೇರಿದ್ದ ಜನರು, ಅವರ ಕೈಯಲ್ಲಿದ್ದ ನನ್ನ ಭಾವಚಿತ್ರಗಳು, ಮುಖದಲ್ಲಿದ್ದ ಆತ್ಮೀಯತೆ ಕಂಡು ನನ್ನ ಹುಟ್ಟೂರಿಗೆ ಬಂದಷ್ಟು ಖುಷಿಯಾಯಿತು.
ಭೀಕರ ಬರದಿಂದಾಗಿ ಇಲ್ಲಿನ ರೈತರು ಸಂಕಷ್ಟದಲ್ಲಿದ್ದಾರೆ, ಅವರ ಕಷ್ಟ ನಷ್ಟವನ್ನು ಆಲಿಸಿ, ನ್ಯಾಯಯುತ ಪರಿಹಾರ ಒದಗಿಸಬೇಕು ಎಂಬ ಸಂಕಲ್ಪದೊಂದಿಗೆ ಬಂದಿದ್ದೇನೆ. ನಾವು ಎಂದಿಗೂ ಅನ್ನದಾತರ ಕೈ ಬಿಡುವವರಲ್ಲ. -
Dr. G Parameshwara
@DrParameshwara
ಮಂಗಳವಾರ ವಿಧಾನಸೌಧದಲ್ಲಿ ಏಷ್ಯನ್ ಗೇಮ್ಸ್-2026ರಲ್ಲಿ ಪದಕ ಗೆದ್ದು ದೇಶ ಹಾಗೂ ರಾಜ್ಯಕ್ಕೆ ಕೀರ್ತಿ ತಂದ ಕರ್ನಾಟಕದ ಕ್ರೀಡಾಪಟುಗಳನ್ನು ಸನ್ಮಾನಿಸಿ ಅಭಿನಂದಿಸಲಾಯಿತು.
ಏಷ್ಯನ್ ಗೇಮ್ಸ್ನಲ್ಲಿ ರಾಜ್ಯದ ಕ್ರೀಡಾಪಟುಗಳು ತೋರಿದ ಸಾಧನೆಯನ್ನು ಗೌರವಿಸುವುದರ ಜೊತೆಗೆ, ಕರ್ನಾಟಕದ ಕ್ರೀಡಾ ಪ್ರತಿಭೆಗಳಿಗೆ ಹೆಚ್ಚಿನ ಆರ್ಥಿಕ ಪ್ರೋತ್ಸಾಹ, ಉದ್ಯೋಗ ಭದ್ರತೆ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಸ್ಪರ್ಧೆಗಳಿಗೆ ಅಗತ್ಯ ನೆರವು ಕಲ್ಪಿಸುವ ಉದ್ದೇಶದಿಂದ ಹಲವು ಮಹತ್ವದ ಕ್ರಮಗಳನ್ನು ಕೈಗೊಂಡಿದ್ದೇವೆ.
ಈ ಕುರಿತಾದ ಮಾಹಿತಿ ಇಂದಿನ ಪತ್ರಿಕೆಗಳಲ್ಲಿ..
We felicitated and congratulated Karnataka’s Asian Games 2026 medallists at Vidhana Soudha on Tuesday for bringing pride to the State and the country.
Along with honouring their achievements, we have taken several key measures to provide Karnataka’s sporting talent with enhanced financial incentives, greater employment security and stronger support for international competition.
Here are today’s newspaper reports on these initiatives. -
Dr. G Parameshwara
@DrParameshwara
ಸಚಿವ ಸಂಪುಟದ ಸಹದ್ಯೋಗಿಗಳು, ಆತ್ಮೀಯರು ಆದ ಶ್ರೀ @MBPatil ಅವರಿಗೆ ಜನ್ಮದಿನದ ಶುಭಾಶಯಗಳು.
ಭಗವಂತನು ತಮಗೆ ಉತ್ತಮ ಆಯುರಾರೋಗ್ಯವನ್ನು ಕರುಣಿಸಲಿ, ಜನಸೇವೆಗೆ ಮತ್ತಷ್ಟು ಶಕ್ತಿ ತುಂಬಲಿ ಎಂದು ಹಾರೈಸುತ್ತೇನೆ. -
Dr. G Parameshwara
@DrParameshwara
ಏಷ್ಯನ್ ಗೇಮ್ಸ್-2026ರಲ್ಲಿ ಪದಕ ಗೆದ್ದು ದೇಶ ಹಾಗೂ ರಾಜ್ಯಕ್ಕೆ ಕೀರ್ತಿ ತಂದ ಕರ್ನಾಟಕದ ಕ್ರೀಡಾಪಟುಗಳನ್ನು ಸನ್ಮಾನಿಸಿ ಅಭಿನಂದಿಸಿದ ಕ್ಷಣ
ಅವರ ಪರಿಶ್ರಮ, ಶಿಸ್ತು ಮತ್ತು ಅಚಲ ಸಂಕಲ್ಪವೇ ಈ ಸಾಧನೆಯ ಹಿಂದೆ ಇರುವ ನಿಜವಾದ ಶಕ್ತಿ. ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಕರ್ನಾಟಕದ ಕೀರ್ತಿ ಪತಾಕೆಯನ್ನು ಎತ್ತಿಹಿಡಿದ ನಮ್ಮ ಹೆಮ್ಮೆಯ ಕನ್ನಡದ ಕಣ್ಮಣಿಗಳ ಸಾಧನೆ ಮುಂದಿನ ಪೀಳಿಗೆಗೆ ಪ್ರೇರಣೆಯಾಗಲಿ.This media couldn't be displayed. See it on the original post. -
Dr. G Parameshwara
@DrParameshwara
Today, along with Chief Minister D.K. Shivakumar and AICC General Secretary Randeep Singh Surjewala, I participated in a meeting held through video conference at the Chief Minister’s Home Office, ‘Krishna’, regarding the Special Intensive Revision (SIR) of electoral rolls.
During the meeting, I shared suggestions and inputs on the course of action against the irregularities and injustices being carried out by the Election Commission of India in the name of SIR.
Former Chief Minister Siddaramaiah, Ministers S S Mallikarjun, Zameer Ahmed, H C Balakrishna, Puttarangashetty and T Raghumurthy, KPCC Campaign Committee Chairman Vinay Kumar Sorake, along with serving and former Congress MPs, Ministers and MLAs, participated in the meeting.
ಇಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೆವಾಲ ಅವರೊಂದಿಗೆ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (SIR)ಗೆ ಸಂಬಂಧಿಸಿದಂತೆ ಸಿಎಂ ಗೃಹ ಕಚೇರಿ ‘ಕೃಷ್ಣಾ’ದಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆದ ಸಭೆಯಲ್ಲಿ ಭಾಗವಹಿಸಿ, ಎಸ್ಐಆರ್ ಹೆಸರಿನಲ್ಲಿ ಕೇಂದ್ರ ಚುನಾವಣಾ ಆಯೋಗವು ನಡೆಸುತ್ತಿರುವ ಅಕ್ರಮ ಅನ್ಯಾಯಗಳ ವಿರುದ್ಧದ ಹೋರಾಟಕ್ಕೆ ಸಂಬಂಧಿಸಿದಂತೆ ಸಲಹೆ ಸೂಚನೆಗಳನ್ನು ನೀಡಿದೆ.
ಈ ಸಂದರ್ಭದಲ್ಲಿ ನಿಕಟಪೂರ್ವ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವರಾದ ಎಸ್.ಎಸ್. ಮಲ್ಲಿಕಾರ್ಜುನ, ಜಮೀರ್ ಅಹ್ಮದ್, ಬಾಲಕೃಷ್ಣ, ಪುಟ್ಟರಂಗ ಶೆಟ್ಟಿ, ಟಿ. ರಘುಮೂರ್ತಿ, ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ವಿನಯ್ ಕುಮಾರ್ ಸೊರಕೆ ಸೇರಿದಂತೆ ಕಾಂಗ್ರೆಸ್ನ ಹಾಲಿ ಹಾಗೂ ಮಾಜಿ ಸಂಸದರು, ಸಚಿವರು ಮತ್ತು ಶಾಸಕರು ಭಾಗವಹಿಸಿದ್ದರು. -
Dr. G Parameshwara
@DrParameshwara
ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಸಾಧನೆ ತೋರಿದ ಪ್ರತಿಭೆಗಳಿಗೆ ಉದ್ಯೋಗದಲ್ಲೂ ಅವಕಾಶ ಸಿಗಬೇಕು ಎಂಬ ಆಶಯದೊಂದಿಗೆ ನಮ್ಮ ಸರ್ಕಾರ ಮಹತ್ವದ ಹೆಜ್ಜೆ ಇರಿಸಿದೆ.
ಸಾಧಕ ಕ್ರೀಡಾಪಟುಗಳಿಗೆ ರಾಜ್ಯ ಸರ್ಕಾರದ ಗ್ರೂಪ್–ಎ, ಗ್ರೂಪ್–ಬಿ, ಗ್ರೂಪ್–ಸಿ ಹಾಗೂ ಗ್ರೂಪ್–ಡಿ ಹುದ್ದೆಗಳ ನೇರ ನೇಮಕಾತಿಯಲ್ಲಿ ಶೇ.2ರಷ್ಟು ಮೀಸಲಾತಿ ಜಾರಿಗೊಳಿಸಿದ್ದೇವೆ.
ಪದಕ ಗೆದ್ದು ನಾಡಿನ ಕೀರ್ತಿ ಹೆಚ್ಚಿಸಿದ ಸಾಧಕ ಕ್ರೀಡಾಪಟುಗಳಿಗೆ ಮನ್ನಣೆ ನೀಡಲು ಮತ್ತು ಸಾಧನೆಗೆ ಗೌರವ ನೀಡುವುದರ ಜೊತೆಗೆ ಅವರ ಭವಿಷ್ಯಕ್ಕೆ ಹೊಸ ಅವಕಾಶಗಳನ್ನು ಕಲ್ಪಿಸುವುದು ನಮ್ಮ ಉದ್ದೇಶ.
Our Government is standing behind the Olympic dreams of athletes who have brought pride to Karnataka by winning medals at the Asian Games and Commonwealth Games.
M.R. Poovamma, Sneha S.S., Shreyanka Patil and Shilpa K.S. have been included under the 2026–27 Olympics Scheme. Each athlete will receive a cash incentive of ₹10 lakh towards Olympic preparation.
Our aim is to provide Karnataka’s sporting talent with the support they need to reach greater heights on the global stage. We will continue to stand behind their dreams and support their journey towards the goal of winning an Olympic medal. -
Dr. G Parameshwara
@DrParameshwara
ಏಷ್ಯನ್ ಗೇಮ್ಸ್ ಹಾಗೂ ಕಾಮನ್ವೆಲ್ತ್ ಗೇಮ್ಸ್ನಲ್ಲಿ ಪದಕ ಗೆದ್ದು ನಾಡಿನ ಕೀರ್ತಿ ಹೆಚ್ಚಿಸಿದ ಕ್ರೀಡಾಪಟುಗಳ ಒಲಿಂಪಿಕ್ಸ್ ಕನಸಿಗೆ ಸರ್ಕಾರ ಬೆಂಬಲವಾಗಿ ನಿಂತಿದೆ.
ಎಂ.ಆರ್. ಪೂವಮ್ಮ, ಸ್ನೇಹಾ ಎಸ್.ಎಸ್, ಶ್ರೇಯಾಂಕ ಪಾಟೀಲ್ ಹಾಗೂ ಶಿಲ್ಪಾ ಕೆ.ಎಸ್. ಅವರನ್ನು 2026–27ನೇ ಸಾಲಿನ ಒಲಿಂಪಿಕ್ಸ್ ಯೋಜನೆಗೆ ಸೇರ್ಪಡೆ ಮಾಡಲಾಗಿದೆ. ಒಲಿಂಪಿಕ್ಸ್ ತಯಾರಿಗಾಗಿ ಪ್ರತಿಯೊಬ್ಬರಿಗೂ ತಲಾ ₹10 ಲಕ್ಷ ನಗದು ಪ್ರೋತ್ಸಾಹಧನ ನೀಡಲಾಗುವುದು.
ನಾಡಿನ ಪ್ರತಿಭೆಗಳು ವಿಶ್ವದ ಕ್ರೀಡಾ ವೇದಿಕೆಯಲ್ಲಿ ಮತ್ತಷ್ಟು ಎತ್ತರಕ್ಕೆ ಏರಲು ಅಗತ್ಯವಾದ ಬೆಂಬಲ ನೀಡುವುದು ನಮ್ಮ ಆಶಯ. ಅವರ ಕನಸುಗಳಿಗೆ ಬೆನ್ನೆಲುಬಾಗಿ, ಒಲಿಂಪಿಕ್ಸ್ ಪದಕದ ಗುರಿಯತ್ತ ಹೆಜ್ಜೆ ಹಾಕಲು ಸರ್ಕಾರ ಸದಾ ಜೊತೆಯಿರಲಿದೆ.
Our Government is standing behind the Olympic dreams of athletes who have brought pride to Karnataka by winning medals at the Asian Games and Commonwealth Games.
M.R. Poovamma, Sneha S.S., Shreyanka Patil and Shilpa K.S. have been included under the 2026–27 Olympics Scheme. Each athlete will receive a cash incentive of ₹10 lakh towards Olympic preparation.
Our aim is to provide Karnataka’s sporting talent with the support they need to reach greater heights on the global stage. We will continue to stand behind their dreams and support their journey towards the goal of winning an Olympic medal. -
Dr. G Parameshwara
@DrParameshwara
ಕ್ರೀಡೆಯಲ್ಲಿ ಗೆದ್ದ ಪದಕಕ್ಕೆ ಕೇವಲ ಗೌರವವಲ್ಲ, ಭವಿಷ್ಯ ಕಟ್ಟಿಕೊಳ್ಳುವ ಅವಕಾಶವೂ ಸಿಗಬೇಕು ಎಂಬ ಆಶಯದೊಂದಿಗೆ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ.
ಏಷ್ಯನ್ ಗೇಮ್ಸ್ ಹಾಗೂ ಕಾಮನ್ವೆಲ್ತ್ ಗೇಮ್ಸ್ನಲ್ಲಿ ಪದಕ ಗೆದ್ದ ಕ್ರೀಡಾಪಟುಗಳಿಗೆ ನೇರವಾಗಿ ಗುಂಪು–ಬಿ ಹುದ್ದೆಗೆ ನೇಮಕಾತಿ ಪಡೆಯುವ ಅವಕಾಶ ಕಲ್ಪಿಸಲಾಗಿದೆ. ರಾಜ್ಯ ಮುಖ್ಯ ಕಾರ್ಯದರ್ಶಿಯವರ ಅಧ್ಯಕ್ಷತೆಯ ಆಯ್ಕೆ ಸಮಿತಿಯ ಮೂಲಕ ಆಸಕ್ತರನ್ನು ನೇರವಾಗಿ ನೇಮಕ ಮಾಡಲಾಗುವುದು.
ನಾಡಿನ ಹೆಮ್ಮೆ ಹೆಚ್ಚಿಸಿದ ಕ್ರೀಡಾ ಸಾಧಕರಿಗೆ ಗೌರವದ ಜೊತೆಗೆ ಉತ್ತಮ ಭವಿಷ್ಯ ಕಲ್ಪಿಸುವುದು ನಮ್ಮ ಸರ್ಕಾರದ ಸಂಕಲ್ಪ.
A medal in sports should bring not only recognition, but also an opportunity to build a secure future. With this objective, our Government has taken an important step.
Asian Games and Commonwealth Games medallists will now be eligible for direct recruitment to Group-B posts. Interested and eligible sportspersons will be considered for direct appointment through a selection committee headed by the Chief Secretary of Karnataka.
Our Government is committed to ensuring that athletes who make Karnataka proud receive not only the recognition they deserve, but also opportunities for a better and more secure future. -
Dr. G Parameshwara
@DrParameshwara
ಕ್ರೀಡಾಪಟುಗಳ ಪರಿಶ್ರಮ, ಪ್ರತಿಭೆ ಮತ್ತು ಸಾಧನೆಗೆ ಗೌರವ ನೀಡುವುದು ನಮ್ಮ ಸರ್ಕಾರದ ಬದ್ಧತೆ.
ಏಷ್ಯನ್ ಗೇಮ್ಸ್ನಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿದ ಎಲ್ಲಾ 20 ಕ್ರೀಡಾಪಟುಗಳಿಗೆ ಇದೇ ಮೊದಲ ಬಾರಿಗೆ ತಲಾ ₹5 ಲಕ್ಷ ನಗದು ಪ್ರೋತ್ಸಾಹಧನ ನೀಡುವ ಮೂಲಕ, ಕ್ರೀಡಾ ಸಾಧಕರಿಗೆ ಸರ್ಕಾರದ ಬೆಂಬಲವನ್ನು ಹೆಚ್ಚಿಸಿದ್ದೇವೆ.
ನಾಡಿನ ಕೀರ್ತಿ ಹೆಚ್ಚಿಸಿದ ನಮ್ಮ ಕ್ರೀಡಾ ಪ್ರತಿಭೆಗಳ ಬೆನ್ನಿಗೆ ಸರ್ಕಾರ ಸದಾ ನಿಲ್ಲಲಿದೆ.
Recognising the hard work, talent and achievements of our sportspersons is a commitment of our Government.
For the first time, all 20 athletes who represented Karnataka at the Asian Games will receive a cash incentive of ₹5 lakh each, further strengthening the Government’s support for sporting talent.
Our Government will always stand behind the athletes who bring pride to Karnataka and support them in reaching greater heights. -
Dr. G Parameshwara
@DrParameshwara
Along with recognising the achievements of Karnataka’s athletes at the Asian Games, we have taken several important measures to provide greater financial incentives, employment security and support for competing at the international level.
*Enhanced Cash Awards for Asian Games Medallists:
The cash awards for Asian Games medallists have been significantly increased. Earlier, gold medallists received ₹35 lakh, silver medallists ₹25 lakh and bronze medallists ₹15 lakh. Under the revised structure, the cash awards have been increased to ₹1 crore for Gold, ₹75 lakh for Silver and ₹50 lakh for Bronze.
This time, eight medallists will receive these enhanced cash awards. In addition, each of them will receive a further ₹5 lakh participation incentive for competing in the Asian Games 2026, over and above the cash award for winning a medal.
The awards have been enhanced to give our athletes the recognition they deserve and to inspire the next generation of sportspersons.
*₹5 Lakh Each for 20 Karnataka Athletes Who Participated in the Asian Games:
For the first time, all 20 Karnataka athletes who qualified for and competed in the Asian Games 2026 have been sanctioned a cash incentive of ₹5 lakh each.
Qualifying to compete at the international level is itself a significant achievement. This decision has therefore been taken to encourage not only medal winners, but every athlete from Karnataka who participated in the Games.
*Direct Recruitment to Group-B Posts for Medallists:
Asian Games and Commonwealth Games medallists have been provided an opportunity for direct recruitment to Group-B posts in the State Government.
Eligible and interested medallists can be directly recruited through a selection committee headed by the Chief Secretary of Karnataka.
The objective is to provide a secure future through Government service to athletes who bring pride to Karnataka and the country through their sporting achievements.
*₹10 Lakh Each under ‘Guri: Olympics’ Scheme:
Under the ‘Guri: Olympics’ scheme, introduced to increase Karnataka’s participation and performance at the Olympics, four selected Asian Games and Commonwealth Games medallists — M.R. Poovamma, Sneha S.S., Shreyanka Patil and Shilpa K.S. — have been included for 2026–27.
Each of these athletes will receive a ₹10 lakh cash incentive during the current year towards Olympic preparation, training and other requirements.
The scheme aims to provide Karnataka’s talented athletes with quality training and necessary financial assistance to prepare them to win more medals at global sporting events, including the Olympics.
*2% Reservation for Sporting Achievers in Government Recruitment:
To provide employment security to accomplished sportspersons, the State Government has introduced 2% reservation in direct recruitment.
A notification in this regard was issued on 03-10-2026, providing 2% reservation for sporting achievers in direct recruitment to Group-A, Group-B, Group-C and Group-D posts across all levels of the State Government.
Sportspersons should not have to worry about employment after achieving success in sports. This measure is intended not only to recognise their achievements, but also to provide greater security for their future.
Our Government is committed to making Karnataka one of the country’s leading sporting States by identifying talent and supporting athletes with financial assistance, quality training, preparation for international competitions and employment opportunities. -
Dr. G Parameshwara
@DrParameshwara
ಏಷ್ಯನ್ ಗೇಮ್ಸ್ನಲ್ಲಿ ರಾಜ್ಯದ ಕ್ರೀಡಾಪಟುಗಳು ತೋರಿದ ಸಾಧನೆಯನ್ನು ಗೌರವಿಸುವುದರ ಜೊತೆಗೆ, ಕರ್ನಾಟಕದ ಕ್ರೀಡಾ ಪ್ರತಿಭೆಗಳಿಗೆ ಹೆಚ್ಚಿನ ಆರ್ಥಿಕ ಪ್ರೋತ್ಸಾಹ, ಉದ್ಯೋಗ ಭದ್ರತೆ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಸ್ಪರ್ಧೆಗಳಿಗೆ ಅಗತ್ಯ ನೆರವು ಕಲ್ಪಿಸುವ ಉದ್ದೇಶದಿಂದ ಹಲವು ಮಹತ್ವದ ಕ್ರಮಗಳನ್ನು ಕೈಗೊಂಡಿದ್ದೇವೆ.
*ಏಷ್ಯನ್ ಗೇಮ್ಸ್ ಪದಕ ವಿಜೇತರ ನಗದು ಪುರಸ್ಕಾರ ಹೆಚ್ಚಳ :
ಏಷ್ಯನ್ ಗೇಮ್ಸ್ ಪದಕ ವಿಜೇತರಿಗೆ ನೀಡಲಾಗುತ್ತಿದ್ದ ನಗದು ಪುರಸ್ಕಾರದ ಮೊತ್ತವನ್ನು ಪರಿಷ್ಕರಿಸಿ ಗಣನೀಯವಾಗಿ ಹೆಚ್ಚಿಸಲಾಗಿದೆ. ಈ ಹಿಂದೆ ಚಿನ್ನದ ಪದಕ ವಿಜೇತರಿಗೆ ₹35 ಲಕ್ಷ, ಬೆಳ್ಳಿ ಪದಕ ವಿಜೇತರಿಗೆ ₹25 ಲಕ್ಷ ಹಾಗೂ ಕಂಚಿನ ಪದಕ ವಿಜೇತರಿಗೆ ₹15 ಲಕ್ಷ ನಗದು ಪುರಸ್ಕಾರ ನೀಡಲಾಗುತ್ತಿತ್ತು.
ಪರಿಷ್ಕೃತ ಮೊತ್ತದ ಪ್ರಕಾರ, ಚಿನ್ನದ ಪದಕ ವಿಜೇತರಿಗೆ ₹1 ಕೋಟಿ, ಬೆಳ್ಳಿ ಪದಕ ವಿಜೇತರಿಗೆ ₹75 ಲಕ್ಷ ಮತ್ತು ಕಂಚಿನ ಪದಕ ಗೆದ್ದರೆ ₹50 ಲಕ್ಷ ನಗದು ಪುರಸ್ಕಾರ ನೀಡಲಾಗುವುದು.
ಈ ಬಾರಿ ಎಂಟು ಮಂದಿಗೆ ಈ ನಗದು ಪುರಸ್ಕಾರ ಸಿಗಲಿದ್ದು, ಜೊತೆಗೆ ಈ ಎಂಟು ಪದಕ ವಿಜೇತರಿಗೆ ಏಷ್ಯನ್ ಗೇಮ್ಸ್-2026ರಲ್ಲಿ ಭಾಗವಹಿಸಿದ್ದಕ್ಕಾಗಿ, ಪದಕ ಸಾಧನೆಗೆ ನೀಡಲಾಗುವ ನಗದು ಪುರಸ್ಕಾರದ ಹೆಚ್ಚುವರಿಯಾಗಿ ತಲಾ ₹5 ಲಕ್ಷ ಪ್ರೋತ್ಸಾಹಧನ ನೀಡಲಾಗುವುದು.
ಕ್ರೀಡಾಪಟುಗಳ ಸಾಧನೆಗೆ ತಕ್ಕ ಗೌರವ ನೀಡುವ ಹಾಗೂ ಮುಂದಿನ ಕ್ರೀಡಾಪಟುಗಳಿಗೆ ಇನ್ನಷ್ಟು ಪ್ರೇರಣೆ ನೀಡುವ ಉದ್ದೇಶದಿಂದ ನಗದು ಪುರಸ್ಕಾರದ ಮೊತ್ತವನ್ನು ಹೆಚ್ಚಿಸಲಾಗಿದೆ.
*ಏಷ್ಯನ್ ಗೇಮ್ಸ್ನಲ್ಲಿ ಭಾಗವಹಿಸಿದ 20 ಕ್ರೀಡಾಪಟುಗಳಿಗೆ ತಲಾ ₹5 ಲಕ್ಷ :
ಏಷ್ಯನ್ ಗೇಮ್ಸ್-2026ರಲ್ಲಿ ಭಾಗವಹಿಸಲು ಅರ್ಹತೆ ಪಡೆದು ಕ್ರೀಡಾಕೂಟದಲ್ಲಿ ಸ್ಪರ್ಧಿಸಿದ್ದ ಕರ್ನಾಟಕದ 20 ಕ್ರೀಡಾಪಟುಗಳಿಗೆ ಇದೇ ಮೊದಲ ಬಾರಿಗೆ ತಲಾ ₹5 ಲಕ್ಷ ನಗದು ಪ್ರೋತ್ಸಾಹಧನ ಮಂಜೂರು ಮಾಡಲಾಗಿದೆ.
ರಾಜ್ಯದ ಕ್ರೀಡಾಪಟುಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧಿಸಲು ಅರ್ಹತೆ ಪಡೆಯುವುದೇ ಮಹತ್ವದ ಸಾಧನೆಯಾಗಿದ್ದು, ಪದಕ ಗಳಿಸಿದವರ ಜೊತೆಗೆ ಕ್ರೀಡಾಕೂಟದಲ್ಲಿ ರಾಜ್ಯವನ್ನು ಪ್ರತಿನಿಧಿಸಿದ ಎಲ್ಲ ಕ್ರೀಡಾಪಟುಗಳನ್ನೂ ಪ್ರೋತ್ಸಾಹಿಸುವ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ.
*ಪದಕ ವಿಜೇತರಿಗೆ ಗ್ರೂಪ್-ಬಿ ಹುದ್ದೆಗಳಿಗೆ ನೇರ ನೇಮಕಾತಿ :
ಏಷ್ಯನ್ ಗೇಮ್ಸ್ ಮತ್ತು ಕಾಮನ್ವೆಲ್ತ್ ಗೇಮ್ಸ್ ಪದಕ ವಿಜೇತರಿಗೆ ರಾಜ್ಯ ಸರ್ಕಾರದ ಗ್ರೂಪ್-ಬಿ ಹುದ್ದೆಗಳಿಗೆ ನೇರ ನೇಮಕಾತಿ ಅವಕಾಶ ಕಲ್ಪಿಸಲಾಗಿದೆ. ಅರ್ಹ ಹಾಗೂ ಆಸಕ್ತ ಪದಕ ವಿಜೇತ ಕ್ರೀಡಾಪಟುಗಳನ್ನು ರಾಜ್ಯದ ಮುಖ್ಯ ಕಾರ್ಯದರ್ಶಿಯವರ ಅಧ್ಯಕ್ಷತೆಯ ಆಯ್ಕೆ ಸಮಿತಿಯ ಮೂಲಕ ನೇರ ನೇಮಕಾತಿ ಮಾಡಲು ಅವಕಾಶ ನೀಡಲಾಗಿದೆ.
ಕ್ರೀಡಾ ಕ್ಷೇತ್ರದಲ್ಲಿ ರಾಜ್ಯಕ್ಕೆ ಹಾಗೂ ದೇಶಕ್ಕೆ ಕೀರ್ತಿ ತರುವ ಸಾಧಕರಿಗೆ ಸರ್ಕಾರಿ ಸೇವೆಯಲ್ಲಿ ಅವಕಾಶ ನೀಡುವ ಮೂಲಕ ಅವರ ಭವಿಷ್ಯಕ್ಕೆ ಭದ್ರತೆ ಒದಗಿಸುವುದು ಸರ್ಕಾರದ ಉದ್ದೇಶವಾಗಿದೆ.
*‘ಗುರಿ: ಒಲಿಂಪಿಕ್ಸ್’ ಯೋಜನೆಯಡಿ ತಲಾ ₹10 ಲಕ್ಷ ಪ್ರೋತ್ಸಾಹಧನ :
ಒಲಿಂಪಿಕ್ಸ್ನಲ್ಲಿ ಕರ್ನಾಟಕದ ಕ್ರೀಡಾಪಟುಗಳ ಭಾಗವಹಿಸುವಿಕೆ ಮತ್ತು ಸಾಧನೆಯನ್ನು ಹೆಚ್ಚಿಸುವ ಉದ್ದೇಶದಿಂದ ಜಾರಿಗೊಳಿಸಿರುವ ‘ಗುರಿ: ಒಲಿಂಪಿಕ್ಸ್’ ಯೋಜನೆಯಡಿ 2026-27ನೇ ಸಾಲಿಗೆ ಏಷ್ಯನ್ ಗೇಮ್ಸ್ ಹಾಗೂ ಕಾಮನ್ವೆಲ್ತ್ ಗೇಮ್ಸ್ ಪದಕ ವಿಜೇತರ ಪೈಕಿ ಆಯ್ದ ನಾಲ್ವರು ಕ್ರೀಡಾಪಟುಗಳನ್ನು (ಎಂ.ಆರ್.ಪೂವಮ್ಮ, ಸ್ನೇಹಾ ಎಸ್.ಎಸ್., ಶ್ರೇಯಾಂಕ ಪಾಟೀಲ್, ಶಿಲ್ಪಾ ಕೆ.ಎಸ್) ಸೇರ್ಪಡೆ ಮಾಡಲಾಗಿದೆ.
ಈ ಕ್ರೀಡಾಪಟುಗಳಿಗೆ ಒಲಿಂಪಿಕ್ಸ್ ಸಿದ್ಧತೆ, ತರಬೇತಿ ಹಾಗೂ ಇತರೆ ಅಗತ್ಯಗಳಿಗೆ ಪ್ರಸಕ್ತ ಸಾಲಿನಲ್ಲಿ ತಲಾ ₹10 ಲಕ್ಷ ನಗದು ಪ್ರೋತ್ಸಾಹಧನ ನೀಡಲಾಗುವುದು.
ರಾಜ್ಯದ ಪ್ರತಿಭಾವಂತ ಕ್ರೀಡಾಪಟುಗಳಿಗೆ ಉತ್ತಮ ತರಬೇತಿ ಹಾಗೂ ಅಗತ್ಯ ಆರ್ಥಿಕ ನೆರವು ಒದಗಿಸುವ ಮೂಲಕ ಒಲಿಂಪಿಕ್ಸ್ ಸೇರಿದಂತೆ ಜಾಗತಿಕ ಕ್ರೀಡಾಕೂಟಗಳಲ್ಲಿ ಹೆಚ್ಚಿನ ಪದಕಗಳನ್ನು ಗೆಲ್ಲುವಂತೆ ಸಜ್ಜುಗೊಳಿಸುವುದು ಯೋಜನೆಯ ಪ್ರಮುಖ ಉದ್ದೇಶವಾಗಿದೆ.
*ಸಾಧಕ ಕ್ರೀಡಾಪಟುಗಳಿಗೆ ಸರ್ಕಾರಿ ನೇಮಕಾತಿಯಲ್ಲಿ 2% ಮೀಸಲಾತಿ :
ಸಾಧಕ ಕ್ರೀಡಾಪಟುಗಳ ಭವಿಷ್ಯಕ್ಕೆ ಉದ್ಯೋಗ ಭದ್ರತೆ ಕಲ್ಪಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರದ ನೇರ ನೇಮಕಾತಿಗಳಲ್ಲಿ ಕ್ರೀಡಾಪಟುಗಳಿಗೆ 2% ಮೀಸಲಾತಿ ನೀಡಲಾಗಿದೆ.
ಈ ಕುರಿತು 03-10-2026ರಂದು ಅಧಿಸೂಚನೆ ಹೊರಡಿಸಲಾಗಿದ್ದು, ರಾಜ್ಯ ಸರ್ಕಾರದ ಎಲ್ಲ ಹಂತದ ಗ್ರೂಪ್-ಎ, ಗ್ರೂಪ್-ಬಿ, ಗ್ರೂಪ್-ಸಿ ಮತ್ತು ಗ್ರೂಪ್-ಡಿ ಹುದ್ದೆಗಳ ನೇರ ನೇಮಕಾತಿಯಲ್ಲಿ ಸಾಧಕ ಕ್ರೀಡಾಪಟುಗಳಿಗೆ 2% ಮೀಸಲಾತಿ ಕಲ್ಪಿಸಲಾಗಿದೆ.
ಕ್ರೀಡಾಪಟುಗಳು ತಮ್ಮ ಸಾಧನೆಯ ನಂತರ ಉದ್ಯೋಗದ ಬಗ್ಗೆ ಆತಂಕಪಡಬೇಕಾದ ಪರಿಸ್ಥಿತಿ ಇರಬಾರದು. ಕ್ರೀಡಾ ಸಾಧನೆಗೆ ಗೌರವ ನೀಡುವುದರ ಜೊತೆಗೆ ಅವರ ಮುಂದಿನ ಬದುಕಿಗೂ ಭದ್ರತೆ ನೀಡಬೇಕು ಎಂಬ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ.
ಕ್ರೀಡಾ ಕ್ಷೇತ್ರದಲ್ಲಿ ಪ್ರತಿಭೆಗಳನ್ನು ಗುರುತಿಸಿ, ಅವರಿಗೆ ಆರ್ಥಿಕ ನೆರವು, ಉತ್ತಮ ತರಬೇತಿ, ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಕೂಟಕ್ಕೆ ಸಿದ್ಧತೆ ಹಾಗೂ ಉದ್ಯೋಗಾವಕಾಶಗಳನ್ನು ಒದಗಿಸುವ ಮೂಲಕ ಕರ್ನಾಟಕವನ್ನು ದೇಶದ ಪ್ರಮುಖ ಕ್ರೀಡಾ ರಾಜ್ಯವನ್ನಾಗಿ ರೂಪಿಸುವ ನಿಟ್ಟಿನಲ್ಲಿ ಸರ್ಕಾರ ಬದ್ಧವಾಗಿದೆ. -
Dr. G Parameshwara
@DrParameshwara
ಇಂದು ವಿಧಾನಸೌಧದಲ್ಲಿ ಏಷ್ಯನ್ ಗೇಮ್ಸ್-2026ರಲ್ಲಿ ಪದಕ ಗೆದ್ದು ದೇಶ ಹಾಗೂ ರಾಜ್ಯಕ್ಕೆ ಕೀರ್ತಿ ತಂದ ಕರ್ನಾಟಕದ ಕ್ರೀಡಾಪಟುಗಳನ್ನು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಜೊತೆಗೂಡಿ ಸನ್ಮಾನಿಸಿ ಅಭಿನಂದಿಸಿದೆ.
ಅಂತಾರಾಷ್ಟ್ರೀಯ ಕ್ರೀಡಾಕೂಟದಲ್ಲಿ ರಾಜ್ಯದ ಕೀರ್ತಿ ಪತಾಕೆಯನ್ನು ಎತ್ತಿಹಿಡಿದ ನಮ್ಮ ಹೆಮ್ಮೆಯ ಕ್ರೀಡಾಪಟುಗಳ ಪರಿಶ್ರಮ, ಶಿಸ್ತು ಮತ್ತು ಸಾಧನೆ ಮುಂದಿನ ಪೀಳಿಗೆಯ ಕ್ರೀಡಾಪಟುಗಳಿಗೆ ಇನ್ನಷ್ಟು ಪ್ರೇರಣೆಯಾಗಲಿ ಎಂದು ಶುಭಹಾರೈಸಿದೆ.
ರಾಜ್ಯದ ಕ್ರೀಡಾ ಪ್ರತಿಭೆಗಳು ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಇನ್ನಷ್ಟು ಸಾಧನೆ ಮಾಡಲು ಅಗತ್ಯವಾದ ಪ್ರೋತ್ಸಾಹ, ಉತ್ತಮ ತರಬೇತಿ ಮತ್ತು ಎಲ್ಲ ರೀತಿಯ ಬೆಂಬಲ ನೀಡಲು ನಮ್ಮ ಸರ್ಕಾರ ಬದ್ಧವಾಗಿದೆ.
ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯರು ಹಾಗೂ ಕರ್ನಾಟಕ ಒಲಿಂಪಿಕ್ ಅಸೋಸಿಯೇಶನ್ ಅಧ್ಯಕ್ಷರಾದ ಡಾ. ಕೆ. ಗೋವಿಂದರಾಜ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಕಾರ್ಯದರ್ಶಿಗಳಾದ ನವೀನ್ ರಾಜ್ ಸಿಂಗ್, ಇಲಾಖೆಯ ಆಯುಕ್ತರಾದ ಎಂ.ಎನ್. ಅನುಚೇತ್ ಉಪಸ್ಥಿತರಿದ್ದರು.
Today at Vidhana Soudha, along with Chief Minister D.K. Shivakumar, I felicitated and congratulated Karnataka athletes who won medals at the Asian Games 2026, bringing pride to both the State and the country.
The dedication, discipline and remarkable achievements of our athletes who have raised Karnataka’s flag high on the international sporting stage are truly commendable. I wished them continued success and expressed hope that their achievements will inspire the next generation of sportspersons.
Our Government is committed to providing Karnataka’s sporting talent with the encouragement, quality training and all necessary support to achieve greater success at the national and international levels.
On the occasion, Dr. K. Govindaraj, Member of the Legislative Council and President of the Karnataka Olympic Association; Naveen Raj Singh, Secretary, Department of Youth Empowerment and Sports; and M.N. Anucheth, Commissioner of the Department, were present.
Dr. G Parameshwara
@DrParameshwara
-
Dr. G Parameshwara
@DrParameshwara
ಕ್ರೀಡಾಪಟುಗಳ ಕನಸುಗಳಿಗೆ ಬೆಂಬಲವಾಗಿ ನಿಲ್ಲುವುದು, ಅವರ ಸಾಧನೆಗೆ ತಕ್ಕ ಗೌರವ ನೀಡುವುದು ನಮ್ಮ ಸರ್ಕಾರದ ಆದ್ಯತೆ.
ರಾಜ್ಯದ ಕ್ರೀಡಾ ಪ್ರತಿಭೆಗಳಿಗೆ ಇನ್ನಷ್ಟು ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಏಷ್ಯನ್ ಗೇಮ್ಸ್ ಪದಕ ವಿಜೇತರಿಗೆ ನೀಡಲಾಗುತ್ತಿದ್ದ ನಗದು ಪುರಸ್ಕಾರದ ಮೊತ್ತವನ್ನು ಗಣನೀಯವಾಗಿ ಹೆಚ್ಚಿಸಿದ್ದೇವೆ.
ಈ ಹಿಂದೆ ಚಿನ್ನದ ಪದಕ ವಿಜೇತರಿಗೆ ₹35 ಲಕ್ಷ, ಬೆಳ್ಳಿ ಪದಕ ವಿಜೇತರಿಗೆ ₹25 ಲಕ್ಷ ಹಾಗೂ ಕಂಚಿನ ಪದಕ ವಿಜೇತರಿಗೆ ₹15 ಲಕ್ಷ ನಗದು ಪುರಸ್ಕಾರ ನೀಡಲಾಗುತ್ತಿತ್ತು. ಪರಿಷ್ಕೃತ ಮೊತ್ತದ ಪ್ರಕಾರ, ಚಿನ್ನದ ಪದಕ ವಿಜೇತರಿಗೆ ₹1 ಕೋಟಿ, ಬೆಳ್ಳಿ ಪದಕ ವಿಜೇತರಿಗೆ ₹75 ಲಕ್ಷ ಮತ್ತು ಕಂಚಿನ ಪದಕ ಗೆದ್ದರೆ ₹50 ಲಕ್ಷ ನಗದು ಪುರಸ್ಕಾರ ನೀಡಲಾಗುವುದು.
ಈ ಬಾರಿ ಎಂಟು ಮಂದಿಗೆ ಈ ನಗದು ಪುರಸ್ಕಾರ ಸಿಗಲಿದ್ದು, ಜೊತೆಗೆ ಏಷ್ಯನ್ ಗೇಮ್ಸ್-2026ರಲ್ಲಿ ಭಾಗವಹಿಸಿದ್ದಕ್ಕಾಗಿ, ಪದಕ ಗೆದ್ದಿದ್ದಕ್ಕೆ ನೀಡಲಾಗುವ ನಗದು ಪುರಸ್ಕಾರದ ಹೆಚ್ಚುವರಿಯಾಗಿ ತಲಾ ₹5 ಲಕ್ಷ ಪ್ರೋತ್ಸಾಹಧನ ನೀಡಲಾಗುವುದು.
ಕ್ರೀಡಾಪಟುಗಳ ಸಾಧನೆಗೆ ತಕ್ಕ ಗೌರವ ಹಾಗೂ ಮುಂದಿನ ಕ್ರೀಡಾಪಟುಗಳಿಗೆ ಇನ್ನಷ್ಟು ಪ್ರೇರಣೆ ನೀಡುವ ಉದ್ದೇಶದಿಂದ ನಗದು ಪುರಸ್ಕಾರದ ಮೊತ್ತವನ್ನು ಹೆಚ್ಚಿಸಿದ್ದೇವೆ.
Supporting the dreams of our athletes and giving their achievements the recognition they deserve is a priority for our Government.
To further encourage Karnataka’s sporting talent, we have significantly enhanced the cash awards for Asian Games medallists.
Earlier, gold medallists received ₹35 lakh, silver medallists ₹25 lakh and bronze medallists ₹15 lakh. Under the revised structure, the awards have been increased to ₹1 crore for Gold, ₹75 lakh for Silver and ₹50 lakh for Bronze.
This time, eight medallists will receive the enhanced cash awards. In addition, each of them will receive a further ₹5 lakh participation incentive for competing in the Asian Games 2026, over and above the medal award.
The enhanced awards are intended to give our athletes the recognition they deserve and inspire the next generation to aim higher. -
Dr. G Parameshwara
@DrParameshwara
ಸೋಮವಾರ ತುಮಕೂರಿನ ಮಹಾತ್ಮ ಗಾಂಧಿ ಜಿಲ್ಲಾ ಕ್ರೀಡಾಂಗಣದ ಸಭಾಂಗಣದಲ್ಲಿ ಜಿಲ್ಲೆಯಲ್ಲಿ ಬರ ಪರಿಸ್ಥಿತಿ ಮತ್ತು ನಿರ್ವಹಣೆ ಕುರಿತು ಪ್ರಗತಿ ಪರಿಶೀಲನಾ ಸಭೆ ನಡೆಸಿ, ಕುಡಿಯುವ ನೀರು, ಮೇವು, ಉದ್ಯೋಗ ಸೃಷ್ಟಿ ಸೇರಿದಂತೆ ಬರ ನಿರ್ವಹಣೆಗೆ ಕೈಗೊಂಡಿರುವ ಕ್ರಮಗಳನ್ನು ಪರಿಶೀಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದೆ.
ಈ ಕುರಿತಾದ ಪತ್ರಿಕಾ ವರದಿಗಳು ಹೀಗಿವೆ..
On Monday, I chaired a progress review meeting at the Mahatma Gandhi District Stadium in Tumakuru on the drought situation and management in the district, and reviewed measures relating to drinking water, fodder, employment generation and other drought-management efforts.
I later spoke to the media on the measures being taken to address the situation.
Here are the media reports on the matter. -
Dr. G Parameshwara
@DrParameshwara
ಕ್ರೀಡಾ ಸಾಧಕರಿಗೆ ಸರ್ಕಾರಿ ಉದ್ಯೋಗಗಳಲ್ಲಿ ಹೆಚ್ಚಿನ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ನಮ್ಮ ಸರ್ಕಾರ ಮಹತ್ವದ ಹೆಜ್ಜೆ ಇರಿಸಿದ್ದು, ಕರ್ನಾಟಕ ಸಿವಿಲ್ ಸೇವೆಗಳ ಎಲ್ಲಾ ನೇರ ನೇಮಕಾತಿಗಳಲ್ಲಿ ಕ್ರೀಡಾ ಸಾಧಕರಿಗೆ ಶೇ.2ರಷ್ಟು ಮೀಸಲಾತಿ ಕಲ್ಪಿಸಿ ಅಧಿಕೃತ ಅಧಿಸೂಚನೆ ಹೊರಡಿಸಿದ್ದೇವೆ.
ಈ ಕುರಿತಾದ ಪತ್ರಿಕಾ ವರದಿಗಳು ಹೀಗಿವೆ..
In a major step to create more opportunities for sporting achievers in Government service, our Government has issued an official notification providing 2% reservation for sportspersons in all direct recruitments under the Karnataka Civil Services.
Here are the media reports on the matter. -
Dr. G Parameshwara
@DrParameshwara
ರಾಜ್ಯದಲ್ಲಿ ತೀವ್ರ ಬರ ಪರಿಸ್ಥಿತಿ ನಿರ್ಮಾಣವಾಗಿರುವ ಹಿನ್ನೆಲೆಯಲ್ಲಿ ರೈತರ ಹಿತಾಸಕ್ತಿಯನ್ನು ಪರಿಗಣಿಸಿ, ಭೂಮಾಪನ ಕಂದಾಯ ವ್ಯವಸ್ಥೆ ಮತ್ತು ಭೂದಾಖಲೆಗಳ ಇಲಾಖೆಯ ಮೋಜಿಣಿ ವ್ಯವಸ್ಥೆಯಡಿ ಸಾರ್ವಜನಿಕರಿಂದ ಸ್ವೀಕರಿಸಲಾಗುವ ವಿವಿಧ ಅಳತೆ ಅರ್ಜಿಗಳ ಪರಿಷ್ಕೃತ ಶುಲ್ಕವನ್ನು ತಾತ್ಕಾಲಿಕವಾಗಿ ತಡೆಹಿಡಿಯುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದ್ದೇನೆ.
ಈ ಕುರಿತಾದ ಪತ್ರಿಕಾ ವರದಿಗಳು ಹೀಗಿವೆ..
In view of the severe drought situation in the State and keeping farmers’ interests in mind, I have directed the concerned officials to temporarily put on hold the revised fees for various survey applications under the Mojini system of the Department of Survey, Settlement and Land Records.
Here are the media reports on the matter. -
Dr. G Parameshwara
@DrParameshwara
In view of the severe drought situation in the State and keeping farmers’ interests in mind, I have directed the concerned officials to temporarily put on hold the revised fees for various survey applications under the Mojini system of the Department of Survey, Settlement and Land Records.
As per Government Order No. KAM 170 SSC 2026, dated 19-09-2026, revised fees for various survey applications under the Mojini system, along with the service charges of licensed surveyors, were to come into effect from 01-10-2026. However, with farmers already facing financial hardship due to the severe drought, we have decided that the revised charges should not place any additional burden on them.
Until further orders, the fee structure that was in force prior to 01-10-2026 will continue to apply to Mojini services.
During a crisis such as drought, protecting farmers’ interests is our Government’s first priority. Revenue Department services should not add to the financial pressures they are already facing, and therefore the revised fees have been temporarily withheld.
The drought situation and the financial condition of farmers will continue to be reviewed. Once conditions improve, an appropriate decision on fee revision will be taken. All decisions of the Revenue Department will continue to prioritise farmers’ interests and public convenience. -
Dr. G Parameshwara
@DrParameshwara
ರಾಜ್ಯದಲ್ಲಿ ತೀವ್ರ ಬರ ಪರಿಸ್ಥಿತಿ ನಿರ್ಮಾಣವಾಗಿರುವ ಹಿನ್ನೆಲೆಯಲ್ಲಿ ರೈತರ ಹಿತಾಸಕ್ತಿಯನ್ನು ಪರಿಗಣಿಸಿ, ಭೂಮಾಪನ ಕಂದಾಯ ವ್ಯವಸ್ಥೆ ಮತ್ತು ಭೂದಾಖಲೆಗಳ ಇಲಾಖೆಯ ಮೋಜಿಣಿ ವ್ಯವಸ್ಥೆಯಡಿ ಸಾರ್ವಜನಿಕರಿಂದ ಸ್ವೀಕರಿಸಲಾಗುವ ವಿವಿಧ ಅಳತೆ ಅರ್ಜಿಗಳ ಪರಿಷ್ಕೃತ ಶುಲ್ಕವನ್ನು ತಾತ್ಕಾಲಿಕವಾಗಿ ತಡೆಹಿಡಿಯುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದ್ದೇನೆ.
ಸರ್ಕಾರದ ಆದೇಶ ಸಂಖ್ಯೆ ಕಂಇ 170 ಎಸ್ಎಸ್ಸಿ 2026, ಬೆಂಗಳೂರು, ದಿನಾಂಕ 19-09-2026ರ ಅನ್ವಯ, ಮೋಜಿಣಿ ವ್ಯವಸ್ಥೆಯಡಿ ಸ್ವೀಕರಿಸಲಾಗುವ ವಿವಿಧ ರೀತಿಯ ಅಳತೆ ಅರ್ಜಿಗಳ ಶುಲ್ಕ ಹಾಗೂ ಪರವಾನಗಿ ಪಡೆದ ಭೂಮಾಪಕರ ಸೇವಾ ಶುಲ್ಕವನ್ನು ಪರಿಷ್ಕರಿಸಿ, 01-10-2026ರಿಂದ ಜಾರಿಗೆ ಬರುವಂತೆ ಆದೇಶಿಸಲಾಗಿತ್ತು. ಆದರೆ, ಪ್ರಸ್ತುತ ರಾಜ್ಯದ ವಿವಿಧ ಭಾಗಗಳಲ್ಲಿ ತೀವ್ರ ಬರ ಪರಿಸ್ಥಿತಿ ಇರುವುದರಿಂದ ರೈತರು ಈಗಾಗಲೇ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ಭೂಮಾಪನ ಮತ್ತು ಕಂದಾಯ ಸೇವೆಗಳ ಶುಲ್ಕ ಹೆಚ್ಚಳದಿಂದ ರೈತರ ಮೇಲೆ ಹೆಚ್ಚುವರಿ ಆರ್ಥಿಕ ಹೊರೆ ಬೀಳಬಾರದು ಎಂಬ ಉದ್ದೇಶದಿಂದ ಪರಿಷ್ಕೃತ ಶುಲ್ಕವನ್ನು ತಾತ್ಕಾಲಿಕವಾಗಿ ತಡೆಹಿಡಿಯುವ ನಿರ್ಧಾರ ಕೈಗೊಳ್ಳಲಾಗಿದೆ.
ಮುಂದಿನ ಆದೇಶ ಹೊರಡಿಸುವವರೆಗೆ ಮೋಜಿಣಿ ಸೇವೆಗಳಿಗೆ ಸಂಬಂಧಿಸಿದಂತೆ 01-10-2026ಕ್ಕೂ ಮೊದಲು ಚಾಲ್ತಿಯಲ್ಲಿದ್ದ ಶುಲ್ಕವೇ ಅನ್ವಯವಾಗಲಿದೆ.
ಬರದಂತಹ ಸಂಕಷ್ಟದ ಸಂದರ್ಭದಲ್ಲಿ ರೈತರ ಹಿತಾಸಕ್ತಿಯೇ ಸರ್ಕಾರದ ಮೊದಲ ಆದ್ಯತೆ. ಈಗಾಗಲೇ ಹಲವು ರೀತಿಯ ಆರ್ಥಿಕ ಒತ್ತಡ ಎದುರಿಸುತ್ತಿರುವ ರೈತರ ಮೇಲೆ ಕಂದಾಯ ಇಲಾಖೆಯ ಸೇವೆಗಳ ಮೂಲಕ ಹೆಚ್ಚುವರಿ ಹೊರೆ ಬೀಳಬಾರದು. ಅದಕ್ಕಾಗಿ ಪರಿಷ್ಕೃತ ಶುಲ್ಕವನ್ನು ತಾತ್ಕಾಲಿಕವಾಗಿ ತಡೆಹಿಡಿಯಲಾಗಿದೆ.
ರಾಜ್ಯದ ಬರ ಪರಿಸ್ಥಿತಿ ಹಾಗೂ ರೈತರ ಆರ್ಥಿಕ ಸ್ಥಿತಿಯನ್ನು ಮುಂದಿನ ದಿನಗಳಲ್ಲಿ ನಿರಂತರವಾಗಿ ಅವಲೋಕಿಸಲಾಗುವುದು. ಪರಿಸ್ಥಿತಿ ಸುಧಾರಿಸಿದ ಬಳಿಕ ಸೂಕ್ತ ಸಮಯದಲ್ಲಿ ಶುಲ್ಕ ಪರಿಷ್ಕರಣೆಗೆ ಸಂಬಂಧಿಸಿದಂತೆ ಮರು ಆದೇಶ ಹೊರಡಿಸಲಾಗುವುದು. ರೈತರ ಹಿತಾಸಕ್ತಿ ಮತ್ತು ಸಾರ್ವಜನಿಕ ಅನುಕೂಲತೆಯನ್ನು ಗಮನದಲ್ಲಿಟ್ಟುಕೊಂಡೇ ಕಂದಾಯ ಇಲಾಖೆಯ ಎಲ್ಲಾ ನಿರ್ಧಾರಗಳನ್ನು ಕೈಗೊಳ್ಳಲಾಗುವುದು. -
Dr. G Parameshwara
@DrParameshwara
Today, I chaired a progress review meeting on the drought situation and management in Tumakuru district at the Mahatma Gandhi District Stadium conference hall and reviewed measures relating to drinking water, fodder, employment generation and other drought-management efforts.
I later spoke to the media:
*Ground Reality of Drought Explained to the Central Team: Although some parts of the State have received light rainfall, there has been no significant improvement in the drought situation. The State Government had declared 101 taluks drought-affected in the first phase and submitted a memorandum to the Union Government. Following the State’s request, the Centre has sent three teams, which are inspecting drought conditions in various districts from October 3 to 6.
The Chief Minister, Deputy Chief Minister, Chief Secretary and senior officials of various departments have briefed the Central teams comprehensively on Karnataka’s drought situation. At the district level, Deputy Commissioners, Zilla Panchayat CEOs and officials of the concerned departments have explained local conditions. The teams have also been taken directly to severely affected areas to witness the ground reality.
In Tumakuru district too, the Central team has visited three to four taluks, where the district administration and concerned officials have explained the impact of the drought.
At present, around 217 taluks in the State have been declared drought-affected. A memorandum relating to 177 taluks has been submitted to the Centre, with losses in these areas estimated at around ₹46,000 crore.
Under the NDRF guidelines, the State has currently sought around ₹10,000–₹11,000 crore in relief from the Union Government. Once the complete loss assessment is available, the State’s relief requirement may increase further.
We have sought assistance strictly in accordance with the Union Government’s guidelines. We are confident that the Central team will understand the ground reality and submit an appropriate report, based on which Karnataka will receive the relief it needs.
Last time, the State Government had to approach the Supreme Court to secure drought relief. We hope such a situation will not arise this time.
*Tumakuru City May Have Water Only Until January; Contingency Plan Ordered: Officials are being continuously instructed on drought management in Tumakuru district. Although the Model Code of Conduct is in force, there is no restriction on holding meetings or taking necessary measures relating to drought management. It was in this context that today’s meeting was held.
The Hemavathi River is the main source of drinking water for Tumakuru city and some parts of the district. Water has already been released from Hemavathi for the second time. However, considering the present availability, drinking water supply to Tumakuru city may be possible only until January.
If there is rainfall in the coming months and inflow into the Hemavathi reservoir improves, the situation may ease. But if there is no rain after January, we could face a serious problem and may have to depend on borewells. Tumakuru city has more than 800 borewells, but the water available from them will not be sufficient to meet the daily needs of the entire city.
Apart from Hemavathi, there is no major alternative source capable of supplying water to Tumakuru city on a large scale. Therefore, officials have been instructed to prepare a contingency plan from now itself for the situation that may arise after January. They have also been asked to assess whether additional borewells are required and what other alternative water sources can be utilised.
*Use Water Judiciously; Situation May Remain Challenging Until May: Rather than framing rigid rules for water use, the Government’s first priority is to ensure that people’s basic drinking water needs are met.
People across the State must use water very carefully. Unnecessary use of water, including for washing vehicles, should be reduced as much as possible. The public should also cooperate with the Government by conserving water in daily household use.
According to information from the Meteorological Department, the possibility of adequate rainfall remains low for the next several months, and the situation could become more serious. It is therefore essential to use the available water resources with utmost care.
Drought management is not the responsibility of the Government alone. Public cooperation is equally important, and everyone must give priority to water conservation and judicious use.
*Fodder Available for 33 Weeks: Livestock are a major asset for farmers, and protecting them is a key priority for the Government. Fodder seed kits were distributed to farmers around two months ago, and the fodder grown from them is now reaching the stage where it can be used. Fodder crops, including jowar, have grown to around three to four feet and will support farmers in the coming days.
The State Government has already provided ₹125 crore for the purchase and supply of fodder. Additional funds will be released if required. Officials are also exploring the possibility of sourcing fodder from other areas and States if local shortages arise.
Tumakuru district currently has enough fodder for around 33 weeks, while Pavagada has sufficient fodder for around 15 weeks. Any shortage there will be addressed through alternative crops and other sources.
Farmers in the Tiptur region have sought the establishment of a fodder bank. The Government respects their demand. There is no immediate need to open one at present, but the Government is prepared to establish fodder banks and cattle shelters as soon as the need arises.
The situation may change within the next one or two weeks, and the Government will take immediate action based on the requirement at that time. Every effort will be made to ensure that farmers do not face difficulties.
Since Tamil Nadu, Andhra Pradesh, Telangana and most other southern States are also facing drought conditions, officials are in contact with areas where fodder may still be available so that it can be sourced if required.
*Employment Generation to Be Increased to Prevent Migration: Drought relief cannot be managed through financial assistance alone. Officials have been instructed to take up local works and generate employment so that people in rural areas are not forced to migrate in search of work.
Under the VB-G RAM G programme, around 4.5 lakh to 5 lakh person-days of employment have already been generated. Officials have been directed to further increase these works and provide employment and income to rural communities.
The State Government is already providing ₹2,500 assistance per farmer. Until assistance from the Centre arrives, the State is standing by farmers with its own resources. The repayment period for farmers’ loans has also been extended up to 60 months.
The State Government has already enacted a law to take action if microfinance institutions harass farmers or members of the public. Every possible protection will be provided to farmers during the drought.
*Efforts to Take an All-Party Delegation to the Centre: The Chief Minister and I are continuously reviewing the drought situation. We will also continue personally visiting districts to assess conditions on the ground. In the next phase, I will undertake a three-day tour of drought-affected districts in North Karnataka, including Ballari, Bagalkote, Koppal, Raichur and Vijayapura.
Karnataka is facing a drought of a severity not seen before. The Government, Opposition and the public must face this crisis together.
The Government has decided to take an all-party delegation to Delhi to place Karnataka’s demands before the Union Government. Although there are reports that Opposition leaders may not participate, efforts will be made once again to persuade them to join.
Drought is not an issue concerning any one political party; it affects the entire State. The Opposition should therefore cooperate. Even if they choose not to participate, a State Government delegation will meet the Prime Minister, Union Home Minister and Union Agriculture Minister, explain Karnataka’s situation and seek relief.
*Yettinahole Project: Inclusion of Kora Hobli Under Existing Allocation to Be Examined: Farmers from Kora Hobli have demanded that Yettinahole water be released to Embathahalli Lake. There is no question of blaming anyone at this stage. The matter has already been discussed with the project’s Chief Engineer.
Further action will depend on the quantity of water available from Yettinahole. The Chief Engineer has been instructed to review the plan and examine whether Kora Hobli can be accommodated within the water allocation already made to Koratagere. Efforts will also be made at the Government level.
Regarding the trial release of water under the Yettinahole project, some works in the Hassan region are still pending. Approval from the Union Government has been obtained for the issue concerning the Forest Department, while efforts are underway to resolve matters relating to some farmers.
Once the works are completed, water will be released on a trial basis. However, this will only be water stored for testing purposes. There is no continuous source of water available until the next monsoon.
*Upper Bhadra Water Will Reach Sira; Process Will Take Time: Large irrigation projects involve technical and administrative processes and therefore require time.
It took decades of struggle and procedural work for Upper Bhadra water to reach the Chitradurga and Hiriyur regions. Similarly, bringing water to Sira may also take some time. However, I am confident that Upper Bhadra water will reach the Sira region. -
Dr. G Parameshwara
@DrParameshwara
ಇಂದು ತುಮಕೂರಿನ ಮಹಾತ್ಮ ಗಾಂಧಿ ಜಿಲ್ಲಾ ಕ್ರೀಡಾಂಗಣದ ಸಭಾಂಗಣದಲ್ಲಿ ಜಿಲ್ಲೆಯಲ್ಲಿ ಬರ ಪರಿಸ್ಥಿತಿ ಮತ್ತು ನಿರ್ವಹಣೆ ಕುರಿತು ಪ್ರಗತಿ ಪರಿಶೀಲನಾ ಸಭೆ ನಡೆಸಿ, ಕುಡಿಯುವ ನೀರು, ಮೇವು, ಉದ್ಯೋಗ ಸೃಷ್ಟಿ ಸೇರಿದಂತೆ ಬರ ನಿರ್ವಹಣೆಗೆ ಕೈಗೊಂಡಿರುವ ಕ್ರಮಗಳನ್ನು ಪರಿಶೀಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದೆ.
*ಕೇಂದ್ರ ತಂಡಕ್ಕೆ ಬರದ ವಾಸ್ತವ ಸ್ಥಿತಿ ಮನವರಿಕೆ : ರಾಜ್ಯದಲ್ಲಿ ಅಲ್ಲಲ್ಲಿ ಅಲ್ಪ ಪ್ರಮಾಣದ ಮಳೆಯಾಗುತ್ತಿದ್ದರೂ ಬರ ಪರಿಸ್ಥಿತಿಯಲ್ಲಿ ಯಾವುದೇ ಗಮನಾರ್ಹ ಸುಧಾರಣೆ ಕಂಡುಬಂದಿಲ್ಲ. ರಾಜ್ಯ ಸರ್ಕಾರ ಮೊದಲ ಹಂತದಲ್ಲಿ 101 ತಾಲ್ಲೂಕುಗಳನ್ನು ಬರಪೀಡಿತ ಎಂದು ಘೋಷಿಸಿ ಕೇಂದ್ರ ಸರ್ಕಾರಕ್ಕೆ ಮೆಮೊರಾಂಡಮ್ ಸಲ್ಲಿಸಿತ್ತು. ರಾಜ್ಯದ ಮನವಿಯ ಮೇರೆಗೆ ಕೇಂದ್ರ ಸರ್ಕಾರ ಮೂರು ತಂಡಗಳನ್ನು ಕಳುಹಿಸಿದ್ದು, ಅಕ್ಟೋಬರ್ 3ರಿಂದ 6ರವರೆಗೆ ವಿವಿಧ ಜಿಲ್ಲೆಗಳಲ್ಲಿ ಬರ ಪರಿಸ್ಥಿತಿಯನ್ನು ಪರಿಶೀಲಿಸುತ್ತಿವೆ.
ರಾಜ್ಯಕ್ಕೆ ಆಗಮಿಸಿರುವ ಕೇಂದ್ರದ ತಂಡಗಳಿಗೆ ಮುಖ್ಯಮಂತ್ರಿಗಳು, ಉಪಮುಖ್ಯಮಂತ್ರಿಗಳು, ಮುಖ್ಯ ಕಾರ್ಯದರ್ಶಿ ಹಾಗೂ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳು ರಾಜ್ಯದ ಬರ ಪರಿಸ್ಥಿತಿ ಕುರಿತು ಸಮಗ್ರ ಮಾಹಿತಿ ನೀಡಿದ್ದಾರೆ. ಜಿಲ್ಲೆಗಳಲ್ಲಿ ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಹಾಗೂ ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳು ತಂಡಗಳಿಗೆ ಸ್ಥಳೀಯ ಪರಿಸ್ಥಿತಿ ವಿವರಿಸಿದ್ದಾರೆ. ಬರದಿಂದ ತೀವ್ರವಾಗಿ ಬಾಧಿತವಾದ ಪ್ರದೇಶಗಳಿಗೆ ತಂಡಗಳನ್ನು ನೇರವಾಗಿ ಕರೆದೊಯ್ದು ವಾಸ್ತವ ಸ್ಥಿತಿಯನ್ನು ತೋರಿಸಲಾಗಿದೆ.
ತುಮಕೂರು ಜಿಲ್ಲೆಯಲ್ಲಿಯೂ ಕೇಂದ್ರ ತಂಡ ಮೂರ್ನಾಲ್ಕು ತಾಲ್ಲೂಕುಗಳಿಗೆ ಭೇಟಿ ನೀಡಿದ್ದು, ಜಿಲ್ಲಾಡಳಿತ ಮತ್ತು ಸಂಬಂಧಪಟ್ಟ ಅಧಿಕಾರಿಗಳು ಬರದ ಪರಿಣಾಮಗಳ ಕುರಿತು ಮಾಹಿತಿ ನೀಡಿದ್ದಾರೆ.
ರಾಜ್ಯದಲ್ಲಿ ಪ್ರಸ್ತುತ ಸುಮಾರು 217 ತಾಲ್ಲೂಕುಗಳನ್ನು ಬರಪೀಡಿತ ಪ್ರದೇಶಗಳೆಂದು ಘೋಷಿಸಲಾಗಿದೆ. 177 ತಾಲ್ಲೂಕುಗಳಿಗೆ ಸಂಬಂಧಿಸಿದಂತೆ ಕೇಂದ್ರಕ್ಕೆ ಮೆಮೊರಾಂಡಮ್ ಸಲ್ಲಿಸಲಾಗಿದ್ದು, ಈ ಪ್ರದೇಶಗಳಲ್ಲಿ ಸುಮಾರು ₹46 ಸಾವಿರ ಕೋಟಿ ನಷ್ಟ ಉಂಟಾಗಿದೆ.
ಎನ್ಡಿಆರ್ಎಫ್ ಮಾರ್ಗಸೂಚಿಗಳಡಿ ಸದ್ಯ ಸುಮಾರು ₹10 ಸಾವಿರದಿಂದ ₹11 ಸಾವಿರ ಕೋಟಿ ಪರಿಹಾರವನ್ನು ಕೇಂದ್ರ ಸರ್ಕಾರದಿಂದ ಕೋರಲಾಗಿದೆ. ಸಂಪೂರ್ಣ ನಷ್ಟದ ಮಾಹಿತಿ ಲಭ್ಯವಾದ ಬಳಿಕ ರಾಜ್ಯದ ಬೇಡಿಕೆಯ ಪ್ರಮಾಣವೂ ಹೆಚ್ಚಾಗಲಿದೆ.
ಕೇಂದ್ರ ಸರ್ಕಾರದ ಮಾರ್ಗಸೂಚಿಗಳ ಪ್ರಕಾರವೇ ನೆರವು ನೀಡುವಂತೆ ರಾಜ್ಯ ಮನವಿ ಮಾಡಿದೆ. ಕೇಂದ್ರ ತಂಡ ರಾಜ್ಯದ ವಾಸ್ತವ ಪರಿಸ್ಥಿತಿಯನ್ನು ಅರ್ಥಮಾಡಿಕೊಂಡು ಕೇಂದ್ರಕ್ಕೆ ಸೂಕ್ತ ವರದಿ ನೀಡಲಿದೆ ಎಂಬ ವಿಶ್ವಾಸವಿದೆ. ಅದರ ಆಧಾರದ ಮೇಲೆ ಕರ್ನಾಟಕಕ್ಕೆ ಅಗತ್ಯ ಪರಿಹಾರ ದೊರೆಯಲಿದೆ ಎಂಬ ನಿರೀಕ್ಷೆಯೂ ಇದೆ.
ಕಳೆದ ಬಾರಿ ಪರಿಹಾರಕ್ಕಾಗಿ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್ ಮೊರೆ ಹೋಗಿ ನಿರ್ದೇಶನ ಪಡೆಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು. ಈ ಬಾರಿ ಅಂತಹ ಪರಿಸ್ಥಿತಿ ಎದುರಾಗುವುದಿಲ್ಲ ಎಂಬ ವಿಶ್ವಾಸವಿದೆ.
*ತುಮಕೂರು ನಗರಕ್ಕೆ ಜನವರಿವರೆಗೆ ಮಾತ್ರ ನೀರು; ತುರ್ತು ಪರ್ಯಾಯ ವ್ಯವಸ್ಥೆಗೆ ಸೂಚನೆ : ತುಮಕೂರು ಜಿಲ್ಲೆಯಲ್ಲಿ ಬರ ನಿರ್ವಹಣೆ ಕುರಿತು ನಿರಂತರವಾಗಿ ಅಧಿಕಾರಿಗಳಿಗೆ ಸೂಚನೆಗಳನ್ನು ನೀಡಲಾಗುತ್ತಿದೆ. ಮಾದರಿ ನೀತಿ ಸಂಹಿತೆ ಜಾರಿಯಲ್ಲಿದ್ದರೂ ಬರ ನಿರ್ವಹಣೆಗೆ ಸಂಬಂಧಿಸಿದ ಸಭೆ ನಡೆಸಲು ಅಥವಾ ಅಗತ್ಯ ಕ್ರಮ ಕೈಗೊಳ್ಳಲು ಯಾವುದೇ ಅಡಚಣೆ ಇಲ್ಲ. ಇದೇ ಹಿನ್ನೆಲೆಯಲ್ಲಿ ಇಂದು ಅಧಿಕಾರಿಗಳ ಸಭೆ ನಡೆಸಲಾಗಿದೆ.
ತುಮಕೂರು ನಗರ ಮತ್ತು ಜಿಲ್ಲೆಯ ಕೆಲವು ಪ್ರದೇಶಗಳಿಗೆ ಕುಡಿಯುವ ನೀರಿನ ಪ್ರಮುಖ ಮೂಲ ಹೇಮಾವತಿ ನದಿಯಾಗಿದೆ. ಈಗಾಗಲೇ ಎರಡನೇ ಬಾರಿಗೆ ಹೇಮಾವತಿಯಿಂದ ನೀರು ಹರಿಸಲಾಗಿದೆ. ಆದರೆ ಪ್ರಸ್ತುತ ಲಭ್ಯವಿರುವ ನೀರಿನ ಪ್ರಮಾಣವನ್ನು ಗಮನಿಸಿದರೆ ತುಮಕೂರು ನಗರಕ್ಕೆ ಜನವರಿವರೆಗೆ ಮಾತ್ರ ಕುಡಿಯುವ ನೀರು ಪೂರೈಸಲು ಸಾಧ್ಯವಾಗಬಹುದು.
ಮುಂದಿನ ದಿನಗಳಲ್ಲಿ ಮಳೆಯಾಗಿ ಹೇಮಾವತಿ ಜಲಾಶಯಕ್ಕೆ ಒಳಹರಿವು ಬಂದರೆ ಪರಿಸ್ಥಿತಿ ಸುಧಾರಿಸಬಹುದು. ಆದರೆ ಜನವರಿ ನಂತರವೂ ಮಳೆಯಾಗದಿದ್ದರೆ ಗಂಭೀರ ಸಮಸ್ಯೆ ಎದುರಾಗಲಿದೆ. ಆಗ ಕೊಳವೆಬಾವಿಗಳ ಮೇಲೆ ಅವಲಂಬಿಸಬೇಕಾಗುತ್ತದೆ. ತುಮಕೂರು ನಗರದಲ್ಲಿ 800ಕ್ಕೂ ಹೆಚ್ಚು ಕೊಳವೆಬಾವಿಗಳಿದ್ದರೂ, ಅವುಗಳಿಂದ ದೊರೆಯುವ ನೀರು ಇಡೀ ನಗರದ ಪ್ರತಿದಿನದ ಅಗತ್ಯ ಪೂರೈಸಲು ಸಾಕಾಗುವುದಿಲ್ಲ.
ಹೇಮಾವತಿಯನ್ನು ಹೊರತುಪಡಿಸಿ ತುಮಕೂರು ನಗರಕ್ಕೆ ದೊಡ್ಡ ಪ್ರಮಾಣದಲ್ಲಿ ನೀರು ಒದಗಿಸಬಹುದಾದ ಪರ್ಯಾಯ ಮೂಲ ಲಭ್ಯವಿಲ್ಲ. ಹೀಗಾಗಿ ಜನವರಿ ನಂತರ ಎದುರಾಗಬಹುದಾದ ಪರಿಸ್ಥಿತಿಗೆ ಈಗಿನಿಂದಲೇ ಕಂಟಿಂಜೆನ್ಸಿ ಪ್ಲಾನ್ ಸಿದ್ಧಪಡಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಹೆಚ್ಚುವರಿ ಕೊಳವೆಬಾವಿಗಳ ಅಗತ್ಯವಿದೆಯೇ, ಬೇರೆ ಯಾವ ಪರ್ಯಾಯ ನೀರಿನ ಮೂಲಗಳನ್ನು ಬಳಸಬಹುದು ಎಂಬುದನ್ನು ಪರಿಶೀಲಿಸಲು ತಿಳಿಸಿದ್ದೇನೆ.
*ನೀರನ್ನು ಮಿತವಾಗಿ ಬಳಸಿ; ಮೇ ತಿಂಗಳವರೆಗೆ ಪರಿಸ್ಥಿತಿ ಸವಾಲಿನದ್ದಾಗಬಹುದು : ನೀರಿನ ಬಳಕೆಗೆ ಕಟ್ಟುನಿಟ್ಟಿನ ಮಾರ್ಗಸೂಚಿ ರೂಪಿಸುವುದಕ್ಕಿಂತ ಜನರ ಮೂಲಭೂತ ಕುಡಿಯುವ ನೀರಿನ ಅಗತ್ಯವನ್ನು ಪೂರೈಸುವುದು ಸರ್ಕಾರದ ಮೊದಲ ಆದ್ಯತೆ.
ರಾಜ್ಯದ ಜನರು ನೀರನ್ನು ಅತ್ಯಂತ ಮಿತವಾಗಿ ಬಳಸಬೇಕು. ವಾಹನಗಳನ್ನು ತೊಳೆಯಲು, ಅನಗತ್ಯವಾಗಿ ಹೆಚ್ಚಿನ ನೀರು ಬಳಸಲು ಸಾಧ್ಯವಾದಷ್ಟು ಕಡಿವಾಣ ಹಾಕಬೇಕು. ಮನೆಯ ದಿನನಿತ್ಯದ ಬಳಕೆಯಲ್ಲಿಯೂ ನೀರನ್ನು ಉಳಿತಾಯ ಮಾಡುವ ಮೂಲಕ ಜನರು ಸರ್ಕಾರದೊಂದಿಗೆ ಸಹಕರಿಸಬೇಕು.
ಹವಾಮಾನ ಇಲಾಖೆಯ ಮಾಹಿತಿಯ ಪ್ರಕಾರ ಮುಂದಿನ ಹಲವು ತಿಂಗಳುಗಳವರೆಗೆ ಸಮರ್ಪಕ ಮಳೆಯ ಸಾಧ್ಯತೆ ಕಡಿಮೆ ಇರುವ ಹಿನ್ನೆಲೆಯಲ್ಲಿ ಪರಿಸ್ಥಿತಿ ಇನ್ನಷ್ಟು ಗಂಭೀರವಾಗಬಹುದು. ಈ ಕಾರಣದಿಂದ ಈಗಿರುವ ನೀರಿನ ಸಂಪನ್ಮೂಲವನ್ನು ಅತ್ಯಂತ ಜಾಗರೂಕತೆಯಿಂದ ಬಳಸುವುದು ಅನಿವಾರ್ಯ.
ಬರ ನಿರ್ವಹಣೆ ಕೇವಲ ಸರ್ಕಾರದ ಜವಾಬ್ದಾರಿ ಮಾತ್ರವಲ್ಲ, ಸಾರ್ವಜನಿಕರ ಸಹಕಾರವೂ ಅಷ್ಟೇ ಮುಖ್ಯ. ಪ್ರತಿಯೊಬ್ಬರೂ ತಮ್ಮ ಮಟ್ಟದಲ್ಲಿ ನೀರಿನ ಸಂರಕ್ಷಣೆ ಮತ್ತು ಮಿತ ಬಳಕೆಗೆ ಆದ್ಯತೆ ನೀಡಬೇಕು.
*33 ವಾರಗಳಿಗೆ ಸಾಕಾಗುವ ಮೇವು ಲಭ್ಯ: ಜಾನುವಾರುಗಳು ರೈತರ ಆಸ್ತಿಯಾಗಿದ್ದು, ಅವುಗಳನ್ನು ರಕ್ಷಿಸುವುದು ಸರ್ಕಾರದ ಪ್ರಮುಖ ಆದ್ಯತೆ. ಎರಡು ತಿಂಗಳ ಹಿಂದೆಯೇ ರೈತರಿಗೆ ಮೇವು ಬೀಜದ ಕಿಟ್ಗಳನ್ನು ವಿತರಿಸಲಾಗಿದ್ದು, ಈಗ ಅವುಗಳಿಂದ ಬೆಳೆದ ಮೇವು ಬಳಕೆಗೆ ಬರುವ ಹಂತದಲ್ಲಿದೆ. ಜೋಳ ಸೇರಿದಂತೆ ಮೇವು ಬೆಳೆಗಳು ಮೂರು-ನಾಲ್ಕು ಅಡಿಯಷ್ಟು ಬೆಳೆದಿದ್ದು, ಮುಂದಿನ ದಿನಗಳಲ್ಲಿ ಅವು ರೈತರಿಗೆ ನೆರವಾಗಲಿವೆ.
ರಾಜ್ಯ ಸರ್ಕಾರ ಮೇವು ಖರೀದಿ ಮತ್ತು ಪೂರೈಕೆಗಾಗಿ ಈಗಾಗಲೇ ₹125 ಕೋಟಿ ಒದಗಿಸಿದೆ. ಅಗತ್ಯವಿದ್ದರೆ ಇನ್ನಷ್ಟು ಅನುದಾನ ಬಿಡುಗಡೆ ಮಾಡಲಾಗುವುದು. ಸ್ಥಳೀಯವಾಗಿ ಮೇವು ಕೊರತೆಯಾದಲ್ಲಿ ಲಭ್ಯವಿರುವ ಇತರೆ ಪ್ರದೇಶಗಳು ಹಾಗೂ ರಾಜ್ಯಗಳಿಂದ ಮೇವು ತರಿಸುವ ಸಾಧ್ಯತೆಯನ್ನೂ ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ.
ತುಮಕೂರು ಜಿಲ್ಲೆಯಲ್ಲಿ ಪ್ರಸ್ತುತ ಸುಮಾರು 33 ವಾರಗಳಿಗೆ ಸಾಕಾಗುವಷ್ಟು ಮೇವು ಲಭ್ಯವಿದೆ. ಪಾವಗಡದಲ್ಲಿ ಸುಮಾರು 15 ವಾರಗಳಿಗೆ ಸಾಕಾಗುವಷ್ಟು ಮೇವು ಇದೆ. ಅಲ್ಲಿ ಪರ್ಯಾಯ ಬೆಳೆ ಹಾಗೂ ಇತರೆ ಮೂಲಗಳ ಮೂಲಕ ಕೊರತೆಯನ್ನು ಸರಿದೂಗಿಸಲಾಗುವುದು.
ತಿಪಟೂರು ಭಾಗದ ರೈತರು ಮೇವು ಬ್ಯಾಂಕ್ ಸ್ಥಾಪಿಸುವಂತೆ ಬೇಡಿಕೆ ಇಟ್ಟಿದ್ದಾರೆ. ರೈತರ ಬೇಡಿಕೆಗಳಿಗೆ ಸರ್ಕಾರ ಗೌರವ ನೀಡುತ್ತದೆ. ಸದ್ಯ ತಕ್ಷಣವೇ ಮೇವು ಬ್ಯಾಂಕ್ ಆರಂಭಿಸಬೇಕಾದ ಪರಿಸ್ಥಿತಿ ಬಂದಿಲ್ಲ. ಆದರೆ ಅಗತ್ಯ ಉಂಟಾದ ತಕ್ಷಣವೇ ಮೇವು ಬ್ಯಾಂಕ್ ಹಾಗೂ ಗೋಶಾಲೆಗಳನ್ನು ಆರಂಭಿಸಲು ಸರ್ಕಾರ ಸಿದ್ಧವಾಗಿದೆ.
ಮುಂದಿನ ಒಂದು ಅಥವಾ ಎರಡು ವಾರಗಳಲ್ಲಿ ಪರಿಸ್ಥಿತಿ ಬದಲಾಗಬಹುದು. ಆಗಿನ ಅಗತ್ಯತೆ ಆಧರಿಸಿ ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಲಿದೆ. ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಲಾಗುವುದು.
ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ ಸೇರಿದಂತೆ ದಕ್ಷಿಣ ಭಾರತದ ಬಹುತೇಕ ರಾಜ್ಯಗಳಲ್ಲಿಯೂ ಬರ ಪರಿಸ್ಥಿತಿ ಇರುವುದರಿಂದ ಎಲ್ಲೆಲ್ಲಿ ಮೇವು ಲಭ್ಯವಿದೆಯೋ ಅಲ್ಲಿಂದ ತರಿಸುವ ಕುರಿತು ಅಧಿಕಾರಿಗಳು ಸಂಪರ್ಕದಲ್ಲಿದ್ದಾರೆ.
*ವಲಸೆ ತಡೆಯಲು ಉದ್ಯೋಗ ಸೃಷ್ಟಿ ಹೆಚ್ಚಿಸಲು ಸೂಚನೆ : ಬರ ಪರಿಹಾರವನ್ನು ಕೇವಲ ಹಣಕಾಸಿನ ನೆರವಿನಿಂದ ಮಾತ್ರ ನಿಭಾಯಿಸಲು ಸಾಧ್ಯವಿಲ್ಲ. ಬರದಿಂದಾಗಿ ಗ್ರಾಮೀಣ ಭಾಗದ ಜನರು ಉದ್ಯೋಗಕ್ಕಾಗಿ ಊರು ತೊರೆಯದಂತೆ ಸ್ಥಳೀಯವಾಗಿಯೇ ಕಾಮಗಾರಿಗಳನ್ನು ಕೈಗೊಂಡು ಉದ್ಯೋಗ ಒದಗಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಲಾಗಿದೆ.
ವಿಬಿ-ಜಿ ರಾಮ್ ಜಿ (VB-G RAM G) ಕಾರ್ಯಕ್ರಮದಡಿ ಈಗಾಗಲೇ ಸುಮಾರು ನಾಲ್ಕೂವರೆ ಲಕ್ಷದಿಂದ ಐದು ಲಕ್ಷ ಮಾನವ ದಿನಗಳಷ್ಟು ಉದ್ಯೋಗ ಸೃಷ್ಟಿಸಲಾಗಿದೆ. ಈ ಕಾಮಗಾರಿಗಳನ್ನು ಮತ್ತಷ್ಟು ಹೆಚ್ಚಿಸಿ ಗ್ರಾಮೀಣ ಜನರಿಗೆ ಉದ್ಯೋಗ ಮತ್ತು ಆದಾಯ ಒದಗಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ.
ರೈತರ ನೆರವಿಗಾಗಿ ರಾಜ್ಯ ಸರ್ಕಾರ ಈಗಾಗಲೇ ಪ್ರತಿ ರೈತರಿಗೆ ₹2,500 ನೆರವು ನೀಡುತ್ತಿದೆ. ಕೇಂದ್ರದ ನೆರವು ಬರುವವರೆಗೂ ರಾಜ್ಯ ತನ್ನ ಮಟ್ಟದಲ್ಲಿ ರೈತರ ನೆರವಿಗೆ ನಿಂತಿದೆ. ರೈತರ ಸಾಲ ಮರುಪಾವತಿ ಅವಧಿಯನ್ನು 60 ತಿಂಗಳವರೆಗೆ ಮುಂದೂಡಲಾಗಿದೆ.
ಮೈಕ್ರೋ ಫೈನಾನ್ಸ್ ಸಂಸ್ಥೆಗಳು ರೈತರು ಅಥವಾ ಸಾರ್ವಜನಿಕರಿಗೆ ಕಿರುಕುಳ ನೀಡಿದರೆ ಕ್ರಮ ಕೈಗೊಳ್ಳಲು ರಾಜ್ಯ ಸರ್ಕಾರ ಈಗಾಗಲೇ ಕಾನೂನು ರೂಪಿಸಿದೆ. ಬರ ಪರಿಸ್ಥಿತಿಯಲ್ಲಿ ರೈತರಿಗೆ ಸಾಧ್ಯವಾದ ಎಲ್ಲ ರೀತಿಯ ರಕ್ಷಣೆ ನೀಡಲಾಗುವುದು.
*ಕೇಂದ್ರಕ್ಕೆ ಸರ್ವಪಕ್ಷ ನಿಯೋಗ ಕರೆದೊಯ್ಯಲು ಪ್ರಯತ್ನ: ಮುಖ್ಯಮಂತ್ರಿಗಳು ಮತ್ತು ನಾನು ಬರ ಪರಿಸ್ಥಿತಿ ಕುರಿತು ನಿರಂತರವಾಗಿ ಸಭೆಗಳನ್ನು ನಡೆಸುತ್ತಿದ್ದೇವೆ. ರಾಜ್ಯದ ವಿವಿಧ ಜಿಲ್ಲೆಗಳಿಗೆ ಖುದ್ದಾಗಿ ಭೇಟಿ ನೀಡಿ ಪರಿಸ್ಥಿತಿ ಪರಿಶೀಲಿಸುವ ಕಾರ್ಯವೂ ಮುಂದುವರಿಯಲಿದೆ. ಮುಂದಿನ ಹಂತದಲ್ಲಿ ಬಳ್ಳಾರಿ, ಬಾಗಲಕೋಟೆ, ಕೊಪ್ಪಳ, ರಾಯಚೂರು, ವಿಜಯಪುರ ಸೇರಿದಂತೆ ಉತ್ತರ ಕರ್ನಾಟಕದ ಬರಪೀಡಿತ ಜಿಲ್ಲೆಗಳಿಗೆ ಮೂರು ದಿನಗಳ ಪ್ರವಾಸ ಕೈಗೊಂಡು ಪರಿಸ್ಥಿತಿ ಅವಲೋಕಿಸಲಾಗುವುದು.
ರಾಜ್ಯದಲ್ಲಿ ಹಿಂದೆಂದೂ ಕಾಣದಂತಹ ತೀವ್ರ ಬರ ಪರಿಸ್ಥಿತಿ ಎದುರಾಗಿದೆ. ಇದನ್ನು ಸರ್ಕಾರ, ಪ್ರತಿಪಕ್ಷ ಮತ್ತು ಸಾರ್ವಜನಿಕರು ಒಟ್ಟಾಗಿ ಎದುರಿಸಬೇಕಾಗಿದೆ.
ಕೇಂದ್ರ ಸರ್ಕಾರದ ಮುಂದೆ ರಾಜ್ಯದ ಬೇಡಿಕೆಗಳನ್ನು ಮಂಡಿಸಲು ಸರ್ವಪಕ್ಷ ನಿಯೋಗವನ್ನು ದೆಹಲಿಗೆ ಕರೆದೊಯ್ಯಲು ಸರ್ಕಾರ ನಿರ್ಧರಿಸಿದೆ. ಪ್ರತಿಪಕ್ಷದವರು ನಿಯೋಗದಲ್ಲಿ ಭಾಗವಹಿಸುವುದಿಲ್ಲ ಎಂಬ ಮಾತುಗಳು ಕೇಳಿಬಂದಿದ್ದರೂ ಅವರನ್ನು ಮತ್ತೊಮ್ಮೆ ಮನವೊಲಿಸಲು ಪ್ರಯತ್ನಿಸಲಾಗುವುದು.
ಬರ ಯಾವುದೇ ಒಂದು ಪಕ್ಷಕ್ಕೆ ಸಂಬಂಧಿಸಿದ ವಿಷಯವಲ್ಲ. ಇದು ರಾಜ್ಯದ ಎಲ್ಲ ಜನರ ಸಮಸ್ಯೆ. ಹೀಗಾಗಿ ಪ್ರತಿಪಕ್ಷದವರೂ ಸಹಕರಿಸಬೇಕು. ಅವರು ಬರದಿದ್ದರೂ ರಾಜ್ಯ ಸರ್ಕಾರದ ನಿಯೋಗ ಪ್ರಧಾನಮಂತ್ರಿ, ಕೇಂದ್ರ ಗೃಹ ಸಚಿವರು ಹಾಗೂ ಕೇಂದ್ರ ಕೃಷಿ ಸಚಿವರನ್ನು ಭೇಟಿ ಮಾಡಿ ಕರ್ನಾಟಕದ ಪರಿಸ್ಥಿತಿಯನ್ನು ವಿವರಿಸಿ ಪರಿಹಾರಕ್ಕೆ ಮನವಿ ಮಾಡಲಿದೆ.
*ಎತ್ತಿನಹೊಳೆ ಯೋಜನೆ: ಕೋರಾ ಹೋಬಳಿಯನ್ನು ಹಂಚಿಕೆಯೊಳಗೆ ಸೇರಿಸಲು ಪರಿಶೀಲನೆ*
ಕೋರಾ ಹೋಬಳಿಯ ರೈತರು ಎಂಬತ್ತಹಳ್ಳಿ ಕೆರೆಗೆ ಎತ್ತಿನಹೊಳೆ ಯೋಜನೆಯ ನೀರು ಹರಿಸುವಂತೆ ಒತ್ತಾಯಿಸುತ್ತಿದ್ದಾರೆ. ಈ ಹಂತದಲ್ಲಿ ಯಾರನ್ನೂ ದೂಷಿಸುವ ಪ್ರಶ್ನೆ ಇಲ್ಲ. ಯೋಜನೆಯ ಮುಖ್ಯ ಎಂಜಿನಿಯರ್ ಅವರೊಂದಿಗೆ ಈಗಾಗಲೇ ಚರ್ಚಿಸಲಾಗಿದೆ.
ಎತ್ತಿನಹೊಳೆಯಿಂದ ಎಷ್ಟು ಪ್ರಮಾಣದ ನೀರು ಲಭ್ಯವಾಗಲಿದೆ ಎಂಬುದನ್ನು ಆಧರಿಸಿ ಕ್ರಮ ಕೈಗೊಳ್ಳಬೇಕಿದೆ. ಕೊರಟಗೆರೆಗೆ ಈಗಾಗಲೇ ನೀಡಿರುವ ನೀರಿನ ಹಂಚಿಕೆಯೊಳಗೆ ಹೊಂದಾಣಿಕೆ ಮಾಡಿಕೊಂಡು ಕೋರಾ ಹೋಬಳಿಯನ್ನೂ ಸೇರಿಸುವಂತೆ ಯೋಜನೆಯನ್ನು ಮರುಪರಿಶೀಲಿಸಲು ಮುಖ್ಯ ಎಂಜಿನಿಯರ್ಗೆ ಸೂಚಿಸಲಾಗಿದೆ. ಸರ್ಕಾರದ ಹಂತದಲ್ಲಿಯೂ ಇದಕ್ಕಾಗಿ ಪ್ರಯತ್ನಿಸಲಾಗುವುದು.
ಎತ್ತಿನಹೊಳೆ ಯೋಜನೆಯ ಪ್ರಾಯೋಗಿಕ ನೀರು ಹರಿಸುವ ಪ್ರಕ್ರಿಯೆಗೆ ಸಂಬಂಧಿಸಿದಂತೆ ಹಾಸನ ಭಾಗದಲ್ಲಿ ಕೆಲವು ಕಾಮಗಾರಿಗಳು ಇನ್ನೂ ಪೂರ್ಣಗೊಳ್ಳಬೇಕಿವೆ. ಅರಣ್ಯ ಇಲಾಖೆಗೆ ಸಂಬಂಧಿಸಿದ ಸಮಸ್ಯೆಗೆ ಕೇಂದ್ರ ಸರ್ಕಾರದಿಂದ ಅನುಮತಿ ದೊರೆತಿದ್ದು, ಕೆಲವು ರೈತರಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸುವ ಕೆಲಸ ನಡೆಯುತ್ತಿದೆ.
ಕಾಮಗಾರಿ ಪೂರ್ಣಗೊಂಡ ಬಳಿಕ ಪ್ರಯೋಗಾರ್ಥವಾಗಿ ನೀರು ಹರಿಸಲಾಗುವುದು. ಆದರೆ ಅದು ಪರೀಕ್ಷೆಗಾಗಿ ಸಂಗ್ರಹಿಸಿರುವ ನೀರು ಮಾತ್ರ. ಮುಂದಿನ ಮಳೆಗಾಲ ಬರುವವರೆಗೆ ನಿರಂತರವಾಗಿ ನೀರು ಲಭ್ಯವಾಗುವ ಮೂಲವಿಲ್ಲ.
*ಅಪ್ಪರ್ ಭದ್ರಾ ನೀರು ಸಿರಾಗೆ ಬರಲಿದೆ; ಪ್ರಕ್ರಿಯೆಗೆ ಸಮಯ ಬೇಕು :* ದೊಡ್ಡ ನೀರಾವರಿ ಯೋಜನೆಗಳ ಅನುಷ್ಠಾನಕ್ಕೆ ತಾಂತ್ರಿಕ ಮತ್ತು ಆಡಳಿತಾತ್ಮಕ ಪ್ರಕ್ರಿಯೆಗಳು ಇರುವುದರಿಂದ ಸಮಯ ಬೇಕಾಗುತ್ತದೆ.
ಚಿತ್ರದುರ್ಗ ಮತ್ತು ಹಿರಿಯೂರು ಭಾಗಕ್ಕೆ ಅಪ್ಪರ್ ಭದ್ರಾ ನೀರು ತಲುಪಲು ದಶಕಗಳ ಕಾಲ ಹೋರಾಟ ಮತ್ತು ಪ್ರಕ್ರಿಯೆ ನಡೆದಿವೆ. ಅದೇ ರೀತಿ ಸಿರಾ ಭಾಗಕ್ಕೂ ನೀರು ತಲುಪಿಸುವ ಪ್ರಕ್ರಿಯೆಗೆ ಸ್ವಲ್ಪ ಸಮಯ ಬೇಕಾಗಬಹುದು. ಆದರೆ ಸಿರಾ ಭಾಗಕ್ಕೆ ಅಪ್ಪರ್ ಭದ್ರಾ ನೀರು ಬರಲಿದೆ ಎಂಬ ವಿಶ್ವಾಸವಿದೆ. -
Dr. G Parameshwara
@DrParameshwara
Karnataka’s sportspersons continue to bring pride to the State on national and international platforms. Recognising their talent, encouraging achievement and ensuring a secure future beyond their sporting careers remain key priorities for our Government.
In a major step to expand opportunities for sportspersons in Government service, we have issued an official notification providing 2% reservation for sportspersons in all direct recruitments under the Karnataka Civil Services.
The 2% reservation will apply across the General, Scheduled Caste and Scheduled Tribe categories, as well as each category under the Other Backward Classes.
Sportspersons who have lived in Karnataka for at least 10 years and represented the State at the national or international level will be eligible. Bonus marks will also be awarded based on achievements in 34 notified sports, including the Olympics and Asian Games.
Our support will not end with a medal. The Government will stand with sportspersons at every stage of their journey -- providing opportunities for talent, recognition for achievement and security for the future. -
Dr. G Parameshwara
@DrParameshwara
ಕರ್ನಾಟಕದ ಕ್ರೀಡಾಪಟುಗಳು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ರಾಜ್ಯದ ಕೀರ್ತಿಯನ್ನು ನಿರಂತರವಾಗಿ ಹೆಚ್ಚಿಸುತ್ತಿದ್ದಾರೆ. ಅವರ ಪ್ರತಿಭೆಯನ್ನು ಗುರುತಿಸಿ, ಸಾಧನೆಗೆ ಪ್ರೋತ್ಸಾಹ ನೀಡುವುದು ಹಾಗೂ ಕ್ರೀಡಾ ಬದುಕಿನ ನಂತರವೂ ಭದ್ರ ಭವಿಷ್ಯ ಕಲ್ಪಿಸುವುದು ನಮ್ಮ ಪ್ರಮುಖ ಆದ್ಯತೆಯಾಗಿದೆ.
ಕ್ರೀಡಾ ಸಾಧಕರಿಗೆ ಸರ್ಕಾರಿ ಉದ್ಯೋಗಗಳಲ್ಲಿ ಹೆಚ್ಚಿನ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ನಮ್ಮ ಸರ್ಕಾರ ಮಹತ್ವದ ಹೆಜ್ಜೆ ಇರಿಸಿದ್ದು, ಕರ್ನಾಟಕ ಸಿವಿಲ್ ಸೇವೆಗಳ ಎಲ್ಲಾ ನೇರ ನೇಮಕಾತಿಗಳಲ್ಲಿ ಕ್ರೀಡಾ ಸಾಧಕರಿಗೆ ಶೇ.2ರಷ್ಟು ಮೀಸಲಾತಿ ಕಲ್ಪಿಸಿ ಅಧಿಕೃತ ಅಧಿಸೂಚನೆ ಹೊರಡಿಸಿದ್ದೇವೆ.
ಸಾಮಾನ್ಯ ವರ್ಗ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಇತರೆ ಹಿಂದುಳಿದ ವರ್ಗಗಳ ಪ್ರತಿಯೊಂದು ಪ್ರವರ್ಗ ಒಳಗೊಂಡಂತೆ ಶೇ.2ರಷ್ಟು ಮೀಸಲಾತಿ ಅನ್ವಯವಾಗಲಿದೆ.
ಕರ್ನಾಟಕದಲ್ಲಿ ಕನಿಷ್ಠ 10 ವರ್ಷ ವಾಸವಿದ್ದು, ರಾಷ್ಟ್ರೀಯ ಅಥವಾ ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಕೂಟಗಳಲ್ಲಿ ರಾಜ್ಯವನ್ನು ಪ್ರತಿನಿಧಿಸಿದ ಕ್ರೀಡಾಪಟುಗಳು ಇದರ ಪ್ರಯೋಜನ ಪಡೆಯಲಿದ್ದಾರೆ. ಒಲಿಂಪಿಕ್ಸ್, ಏಷ್ಯನ್ ಗೇಮ್ಸ್ ಸೇರಿದಂತೆ ಅಧಿಸೂಚಿತ 34 ಕ್ರೀಡೆಗಳಲ್ಲಿನ ಸಾಧನೆಗೆ ಅನುಗುಣವಾಗಿ ಕೃಪಾಂಕದ ಸೌಲಭ್ಯವೂ ಇರಲಿದೆ.
ಕ್ರೀಡಾಪಟುಗಳು ಪದಕ ಗೆಲ್ಲುವ ಕ್ಷಣದಲ್ಲಿ ಮಾತ್ರವಲ್ಲ, ಅವರ ಕ್ರೀಡಾ ಪಯಣದ ಪ್ರತಿಯೊಂದು ಹಂತದಲ್ಲೂ ಸರ್ಕಾರ ಅವರ ಜೊತೆಗೆ ನಿಲ್ಲಲಿದೆ. ಪ್ರತಿಭೆಗೆ ಅವಕಾಶ, ಸಾಧನೆಗೆ ಗೌರವ ಮತ್ತು ಭವಿಷ್ಯಕ್ಕೆ ಭದ್ರತೆ ನೀಡುವುದು ನಮ್ಮ ಕರ್ತವ್ಯ. -
Dr. G Parameshwara
@DrParameshwara
ಜಪಾನ್ನ ಐಚಿ - ನಗೋಯಾದಲ್ಲಿ ನಡೆದ ಏಷ್ಯನ್ ಗೇಮ್ಸ್–2026ರಲ್ಲಿ 207 ಭಾರತೀಯ ಕ್ರೀಡಾಳುಗಳ ಅಮೋಘ ಪ್ರದರ್ಶನದ ಫಲವಾಗಿ ಭಾರತ ಒಟ್ಟು 85 ಪದಕಗಳನ್ನು ತನ್ನದಾಗಿಸಿಕೊಂಡಿದೆ. 21 ಚಿನ್ನ, 27 ಬೆಳ್ಳಿ ಹಾಗೂ 37 ಕಂಚಿನ ಪದಕಗಳೊಂದಿಗೆ ಭಾರತೀಯ ಕ್ರೀಡಾ ಕ್ಷೇತ್ರದ ಹಿರಿಮೆ ಮತ್ತಷ್ಟು ಎತ್ತರಕ್ಕೇರಿದೆ.
ಪರಿಶ್ರಮ, ಶಿಸ್ತು ಮತ್ತು ಛಲದೊಂದಿಗೆ ಕ್ರೀಡಾಂಗಣದಲ್ಲಿ ಶ್ರೇಷ್ಠ ಸಾಧನೆ ಮೆರೆದು ದೇಶದ ಕೀರ್ತಿಗೆ ಹೊಸ ಗರಿ ಮೂಡಿಸಿದ ಎಲ್ಲ ಕ್ರೀಡಾಪಟುಗಳಿಗೆ ಹೃತ್ಪೂರ್ವಕ ಅಭಿನಂದನೆಗಳು.
ನಿಮ್ಮ ಈ ಗೆಲುವು ದೇಶದ ಯುವ ಕ್ರೀಡಾ ಪ್ರತಿಭೆಗಳಿಗೆ ಸ್ಫೂರ್ತಿಯಾಗಲಿ.
Karnataka’s athletes delivered an outstanding performance at the Asian Games 2026 in Aichi-Nagoya, Japan, making the State proud on the international stage.
Our Government is committed to providing every possible opportunity, encouragement and support to help Karnataka’s sportspersons achieve greater heights. We will continue to stand with them throughout their journey and back their aspirations.
Heartiest congratulations to all the athletes who have brought glory to both India and Karnataka. May your success inspire many more young talents across the State. -
Dr. G Parameshwara
@DrParameshwara
ಜಪಾನ್ನ ಐಚಿ–ನಗೋಯಾದಲ್ಲಿ ನಡೆದ ಏಷ್ಯನ್ ಗೇಮ್ಸ್–2026ರಲ್ಲಿ ಕರ್ನಾಟಕದ ಕ್ರೀಡಾಪಟುಗಳು ಅತ್ಯುತ್ತಮ ಪ್ರದರ್ಶನ ನೀಡಿ, ಅಂತರರಾಷ್ಟ್ರೀಯ ಕ್ರೀಡಾ ವೇದಿಕೆಯಲ್ಲಿ ನಾಡಿನ ಹಿರಿಮೆಯನ್ನು ಎತ್ತಿಹಿಡಿದ್ದಾರೆ. ಅವರ ಅದ್ಭುತ ಸಾಧನೆ ಕರ್ನಾಟಕದ ಕ್ರೀಡಾ ಕ್ಷೇತ್ರಕ್ಕೆ ಮತ್ತಷ್ಟು ಮೆರುಗು ತಂದಿದೆ.
ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ಕರ್ನಾಟಕದ ಪ್ರತಿಭೆಗಳು ಇನ್ನಷ್ಟು ಎತ್ತರಕ್ಕೆ ಬೆಳೆಯಲು ಅಗತ್ಯವಿರುವ ಎಲ್ಲ ರೀತಿಯ ಪ್ರೋತ್ಸಾಹ ಮತ್ತು ಬೆಂಬಲವನ್ನು ನೀಡಲು ನಮ್ಮ ಸರ್ಕಾರ ಬದ್ಧವಾಗಿದೆ. ಕ್ರೀಡಾಪಟುಗಳ ಕನಸುಗಳಿಗೆ ಬಲ ತುಂಬಿ, ಅವರ ಸಾಧನೆಯ ಪಯಣದಲ್ಲಿ ಸರ್ಕಾರ ಸದಾ ಜೊತೆಗಿರಲಿದೆ.
ದೇಶದ ಕೀರ್ತಿಯೊಂದಿಗೆ ಕರ್ನಾಟಕದ ಹಿರಿಮೆಯನ್ನೂ ವಿಶ್ವಮಟ್ಟದಲ್ಲಿ ಬೆಳಗಿಸುತ್ತಿರುವ ಎಲ್ಲ ಕ್ರೀಡಾಪಟುಗಳಿಗೆ ಹೃತ್ಪೂರ್ವಕ ಅಭಿನಂದನೆಗಳು. ನಿಮ್ಮ ಯಶಸ್ಸಿನ ಹಾದಿಯಲ್ಲಿ ಇನ್ನಷ್ಟು ಯುವ ಪ್ರತಿಭೆಗಳು ಮುನ್ನಡೆಯಲಿ.
Karnataka’s athletes delivered an outstanding performance at the Asian Games 2026 in Aichi-Nagoya, Japan, making the State proud on the international stage.
Our Government is committed to providing every possible opportunity, encouragement and support to help Karnataka’s sportspersons achieve greater heights. We will continue to stand with them throughout their journey and back their aspirations.
Heartiest congratulations to all the athletes who have brought glory to both India and Karnataka. May your success inspire many more young talents across the State. -
Dr. G Parameshwara
@DrParameshwara
The cash awards being given to Karnataka’s sportspersons are being reviewed in comparison with other States, and I have already discussed the matter with the Chief Minister. The revised award amount will be announced tomorrow.
We had tried to contact and congratulate Poovamma while she was in Japan, but could not reach her then. Within a couple of hours of her return to India, I personally spoke to her. I have also spoken to several other athletes.
Tomorrow, the Chief Minister and I will announce the cash awards to be given by the Government. We have reviewed information shared by sportspersons that some other States offer higher awards, and I have already discussed the need to revise Karnataka’s award amounts with the Chief Minister.
*Central Drought Teams Assessing the State: The Central team has been divided into three groups and sent to different parts of Karnataka. From October 3 to 6, they are visiting various districts, with each team covering three to four districts.
They are assessing the situation in the 101 taluks declared drought-affected in the first phase. The Chief Minister and I received the Central team and briefed them on Karnataka’s drought situation. We also requested them to visit the 77 taluks declared drought-affected in the second phase. Accordingly, they are covering almost all districts.
At several places, the Central team has directly interacted with farmers and visited agricultural fields to assess the actual situation. They have seen on the ground the same conditions identified through the State Government’s ground-truthing exercise.
During their district visits, the respective Deputy Commissioners and Zilla Panchayat CEOs have also briefed them on the situation.
The Central team’s assessment is expected to conclude today or tomorrow. It will then submit its report to the Union Government, based on which a decision will be taken on the relief sought by the State.
*₹46,000 Crore Loss: Losses of around ₹46,000 crore have already been estimated across 177 taluks. We have sought around ₹10,000–₹11,000 crore in relief and have placed this request before the Central team as well.
When the final memorandum is submitted to the Centre, the Chief Minister and I are considering taking a delegation to seek the relief due to Karnataka.
Responding to questions on the increase in charges for certain Revenue Department services, I said some fees have been revised marginally in view of the rising cost of living.
When the State faces a shortfall in funds due from the Union Government, it becomes necessary to strengthen our own revenue sources. Therefore, some service charges have been increased marginally.
*Review of Sections 79A and 79B of the Land Reforms Act: These provisions were removed earlier for various reasons. We have now received several representations seeking a review, and the matter is under examination.
After the review, we will discuss it with the Chief Minister. If Cabinet consideration is required, the matter will be placed before the Cabinet.
*Drought May Impact GST Collection: Karnataka has consistently ranked second in the country in GST collection. Collections are being carried out in accordance with Union Government rules, and the State’s position has been presented at every GST Council meeting.
The Chief Minister had deputed Krishna Byre Gowda to represent Karnataka at GST Council meetings and present the State’s concerns.
The State is now facing drought and crop losses, which will have an impact across sectors. Financial experts have already indicated that GST collections may decline as a result.
We will have to assess the impact in the coming days. The Government has maintained the necessary buffer and is also examining measures to strengthen GST collections.
Karnataka is facing an unprecedented drought, and its impact will certainly be felt across sectors, including GST.
*Form 7 Misuse — Complaint Submitted with Evidence: They will do their job, and we will do ours. We have submitted a complaint with evidence. We caught the alleged misuse of Form 7 red-handed and placed the evidence before the Election Commission.
How many Form 7 applications can one individual submit? Is there no limit? How can a single person submit 100, 200 or even 400 applications?
People from one particular community are allegedly being identified, forms are being printed elsewhere, and voter details are being filled in and submitted. Who provided this data? Where did it come from? Who printed these forms? These are serious questions, and such misuse is against the law.
We have submitted all this to the Election Commission with evidence. The Commission has said notices will be issued to those concerned, seven days will be given for a response, and an FIR will then be registered. They must follow through on this, and FIRs should be registered against the persons we have identified.
– My remarks to the media near the west entrance of Vidhana Soudha. -
Dr. G Parameshwara
@DrParameshwara
ರಾಜ್ಯದ ಕ್ರೀಡಾಪಟುಗಳಿಗೆ ನೀಡಲಾಗುತ್ತಿರುವ ಬಹುಮಾನ ಮೊತ್ತವನ್ನು ಇತರೆ ರಾಜ್ಯಗಳಿಗೆ ಹೋಲಿಕೆ ಮಾಡಿ ಮರುಪರಿಶೀಲಿಸಲಾಗುತ್ತಿದ್ದು, ಈ ಕುರಿತು ಈಗಾಗಲೇ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಲಾಗಿದೆ. ಕ್ರೀಡಾಪಟುಗಳಿಗೆ ಎಷ್ಟು ಬಹುಮಾನ ಮೊತ್ತ ನೀಡಬೇಕು ಎಂಬುದನ್ನು ನಾಳೆ ಘೋಷಿಸಲಾಗುವುದು.
ಪೂವಮ್ಮ ಅವರು ಜಪಾನ್ನಲ್ಲಿದ್ದಾಗಲೇ ಅವರನ್ನು ಸಂಪರ್ಕಿಸಿ ಅಭಿನಂದಿಸಲು ಪ್ರಯತ್ನಿಸಿದ್ದೆವು. ಆದರೆ ಆಗ ಸಂಪರ್ಕ ಸಾಧ್ಯವಾಗಿರಲಿಲ್ಲ. ಅವರು ಭಾರತಕ್ಕೆ ಬಂದ ಒಂದೆರಡು ಗಂಟೆಯಲ್ಲೇ ನಾನು ಅವರನ್ನು ಸಂಪರ್ಕಿಸಿ ಮಾತನಾಡಿದ್ದೇನೆ. ಪೂವಮ್ಮ ಅವರಷ್ಟೇ ಅಲ್ಲ, ಬೇರೆ ಬೇರೆ ಅಥ್ಲೀಟ್ಗಳೊಂದಿಗೂ ಮಾತನಾಡಿದ್ದೇನೆ.
ನಾಳೆ ಮುಖ್ಯಮಂತ್ರಿಗಳು ಹಾಗೂ ನಾನು ಸರ್ಕಾರದ ವತಿಯಿಂದ ಕ್ರೀಡಾಪಟುಗಳಿಗೆ ನೀಡಬೇಕಾದ ಬಹುಮಾನ ಮೊತ್ತದ ಕುರಿತು ಘೋಷಣೆ ಮಾಡುತ್ತೇವೆ. ಬೇರೆ ರಾಜ್ಯಗಳಲ್ಲಿ ಹೆಚ್ಚಿನ ಮೊತ್ತ ನೀಡಲಾಗುತ್ತಿದೆ ಎಂದು ಕ್ರೀಡಾಪಟುಗಳು ಹೇಳಿರುವ ಮಾಹಿತಿಯನ್ನೂ ತರಿಸಿಕೊಂಡಿದ್ದೇವೆ. ಅದನ್ನೆಲ್ಲ ಪರಿಶೀಲಿಸಿದ್ದೇವೆ. ನಮ್ಮಲ್ಲಿಯೂ ಬಹುಮಾನ ಮೊತ್ತವನ್ನು ಪುನರ್ ಪರಿಶೀಲಿಸಬೇಕು ಎಂಬ ಬಗ್ಗೆ ಈಗಾಗಲೇ ಮುಖ್ಯಮಂತ್ರಿಗಳೊಂದಿಗೆ ಮಾತನಾಡಿದ್ದೇನೆ. ಎಷ್ಟು ಮಾಡಬೇಕು ಎಂಬುದನ್ನು ನಾಳೆ ಘೋಷಿಸಲಾಗುವುದು.
*ಕೇಂದ್ರದ ಬರ ಅಧ್ಯಯನ ತಂಡದಿಂದ ರಾಜ್ಯಾದ್ಯಂತ ಪರಿಶೀಲನೆ : ಕೇಂದ್ರದ ತಂಡವನ್ನು ಮೂರು ತಂಡಗಳಾಗಿ ವಿಂಗಡಿಸಿ ರಾಜ್ಯದ ವಿವಿಧ ಭಾಗಗಳಿಗೆ ಕಳುಹಿಸಲಾಗಿದೆ. ಅಕ್ಟೋಬರ್ 3ರಿಂದ 6ರವರೆಗೆ ತಂಡಗಳು ರಾಜ್ಯದ ವಿವಿಧ ಜಿಲ್ಲೆಗಳಿಗೆ ಭೇಟಿ ನೀಡುತ್ತಿವೆ.
ಪ್ರತಿಯೊಂದು ತಂಡವೂ ಮೂರರಿಂದ ನಾಲ್ಕು ಜಿಲ್ಲೆಗಳಿಗೆ ಭೇಟಿ ನೀಡುತ್ತಿದೆ. ನಾವು ಮೊದಲನೇ ಪಟ್ಟಿಯಲ್ಲಿ ಬರಪೀಡಿತ ಎಂದು ಘೋಷಿಸಿದ್ದ 101 ತಾಲೂಕುಗಳ ಪರಿಸ್ಥಿತಿಯನ್ನು ಅವರು ಪರಿಶೀಲಿಸುತ್ತಿದ್ದಾರೆ.
ಮುಖ್ಯಮಂತ್ರಿಗಳು ಮತ್ತು ನಾನು ಕೇಂದ್ರದ ತಂಡವನ್ನು ಬರಮಾಡಿಕೊಂಡು ರಾಜ್ಯದ ಬರ ಪರಿಸ್ಥಿತಿಯ ಕುರಿತು ಅವರಿಗೆ ಬ್ರೀಫ್ ಮಾಡಿದ್ದೇವೆ. ಎರಡನೇ ಹಂತದಲ್ಲಿ ಘೋಷಿಸಿರುವ ಉಳಿದ 77 ತಾಲೂಕುಗಳಿಗೂ ಭೇಟಿ ನೀಡಿ ಪರಿಶೀಲನೆ ನಡೆಸುವಂತೆ ಮನವಿ ಮಾಡಿದ್ದೇವೆ. ಆ ಆಧಾರದ ಮೇಲೆ ಅವರು ಹೆಚ್ಚು ಕಡಿಮೆ ಎಲ್ಲಾ ಜಿಲ್ಲೆಗಳಿಗೆ ಭೇಟಿ ನೀಡುತ್ತಿದ್ದಾರೆ.
ಕೆಲವು ಕಡೆ ಕೇಂದ್ರ ತಂಡದ ಸದಸ್ಯರು ರೈತರೊಂದಿಗೆ ನೇರವಾಗಿ ಮಾತನಾಡಿದ್ದಾರೆ. ಕೃಷಿ ಜಮೀನುಗಳಿಗೆ ತೆರಳಿ ವಾಸ್ತವ ಪರಿಸ್ಥಿತಿಯನ್ನು ಪರಿಶೀಲಿಸಿದ್ದಾರೆ. ರಾಜ್ಯ ಸರ್ಕಾರ ನಡೆಸಿರುವ ಗ್ರೌಂಡ್ ಟ್ರೂಥಿಂಗ್ನಲ್ಲಿ ಕಂಡುಬಂದ ಪರಿಸ್ಥಿತಿಯನ್ನು ಅವರೂ ಸ್ಥಳದಲ್ಲಿಯೇ ನೋಡಿದ್ದಾರೆ.
ಜಿಲ್ಲೆಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಆಯಾ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಕೇಂದ್ರ ತಂಡಕ್ಕೆ ಪರಿಸ್ಥಿತಿಯನ್ನು ವಿವರಿಸಿದ್ದಾರೆ.
ಕೇಂದ್ರ ತಂಡದ ಪರಿಶೀಲನೆ ಇಂದು ಅಥವಾ ನಾಳೆ ಮುಗಿಯಲಿದೆ. ಬಳಿಕ ಅವರು ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸುತ್ತಾರೆ. ಆ ವರದಿಯನ್ನು ಆಧರಿಸಿ ನಾವು ಕೇಳಿರುವ ಪರಿಹಾರದ ಕುರಿತು ಕೇಂದ್ರ ಸರ್ಕಾರ ತೀರ್ಮಾನ ಮಾಡಲಿದೆ.
*₹46 ಸಾವಿರ ಕೋಟಿ ನಷ್ಟ : ರಾಜ್ಯದ 177 ತಾಲೂಕುಗಳಲ್ಲಿ ಈಗಾಗಲೇ ಸುಮಾರು ₹46 ಸಾವಿರ ಕೋಟಿ ನಷ್ಟ ಸಂಭವಿಸಿದೆ. ಇದರಲ್ಲಿ ಸುಮಾರು ₹10 ಸಾವಿರದಿಂದ ₹11 ಸಾವಿರ ಕೋಟಿ ಪರಿಹಾರ ನೀಡುವಂತೆ ನಾವು ಮನವಿ ಮಾಡಿದ್ದೇವೆ. ಕೇಂದ್ರ ತಂಡದವರಿಗೂ ಈ ಕುರಿತು ಮನವಿ ಮಾಡಿದ್ದೇವೆ.
ಕೇಂದ್ರಕ್ಕೆ ಅಂತಿಮವಾಗಿ ಮೆಮೊರಾಂಡಮ್ ಸಲ್ಲಿಸುವ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ಮತ್ತು ನಾನು ಒಂದು ನಿಯೋಗದೊಂದಿಗೆ ತೆರಳಬೇಕು ಎಂಬ ಯೋಚನೆ ಮಾಡಿದ್ದೇವೆ. ನಿಯೋಗ ತೆರಳಿದಾಗಲೂ ಪರಿಹಾರ ನೀಡುವಂತೆ ಕೇಂದ್ರ ಸರ್ಕಾರವನ್ನು ಕೇಳುತ್ತೇವೆ.
ಕಂದಾಯ ಇಲಾಖೆಯ ವಿವಿಧ ಸೇವೆಗಳ ಶುಲ್ಕಗಳು ಏಕಾಏಕಿ ಹೆಚ್ಚಳವಾಗಿರುವ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿ, ಜೀವನ ವೆಚ್ಚ ಹೆಚ್ಚುತ್ತಿರುವ ಸಂದರ್ಭದಲ್ಲಿ ಕೆಲವು ಶುಲ್ಕಗಳನ್ನು ಸ್ವಲ್ಪ ಪ್ರಮಾಣದಲ್ಲಿ ಹೆಚ್ಚಿಸಲಾಗಿದೆ.
ಈಗ ಕಾಸ್ಟ್ ಆಫ್ ಲಿವಿಂಗ್ ಹೆಚ್ಚುತ್ತಿದೆ. ಪ್ರತಿಯೊಂದರ ಬೆಲೆ ಹೆಚ್ಚಾಗುತ್ತಿರುವಾಗ ಸ್ವಾಭಾವಿಕವಾಗಿ ಕೆಲವು ಸೇವೆಗಳ ಶುಲ್ಕವನ್ನೂ ಸ್ವಲ್ಪ ಹೆಚ್ಚಿಸುವ ಕೆಲಸ ಮಾಡಿದ್ದಾರೆ. ಇದು ಸಹಜವಾಗಿ ಆಗುವಂತಹದ್ದು.
ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಬರಬೇಕಾದ ಹಣದಲ್ಲಿ ಕೊರತೆಯಾಗುವ ಸಂದರ್ಭದಲ್ಲಿ ರಾಜ್ಯ ಸರ್ಕಾರ ತನ್ನದೇ ಆದ ಆದಾಯ ಮೂಲಗಳನ್ನು ಹೆಚ್ಚಿಸಿಕೊಳ್ಳುವುದು ಅಗತ್ಯವಾಗುತ್ತದೆ. ಆದ್ದರಿಂದ ಕೆಲವು ಶುಲ್ಕಗಳನ್ನು ಮಾರ್ಜಿನಲ್ ಆಗಿ ಹೆಚ್ಚಿಸಲಾಗಿದೆ.
*ಭೂ ಸುಧಾರಣಾ ಕಾಯ್ದೆಯ 79ಎ, 79ಬಿ ಮರುಪರಿಶೀಲನೆ ಕುರಿತು ಚರ್ಚೆ : ಅನೇಕ ಕಾರಣಗಳಿಂದ ಹಿಂದೆ 79ಎ, 79ಬಿ ಕಲಂಗಳನ್ನು ಕೈಬಿಡಲಾಗಿತ್ತು. ಈಗ ಅವುಗಳನ್ನು ಪುನರ್ ಪರಿಶೀಲಿಸಬೇಕು ಎಂದು ಸಾಕಷ್ಟು ಮನವಿಗಳು ಬಂದಿವೆ. ಅದನ್ನು ಪರಿಶೀಲಿಸುತ್ತಿದ್ದೇವೆ.
ಪರಿಶೀಲನೆ ನಂತರ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸುತ್ತೇವೆ. ಸಚಿವ ಸಂಪುಟಕ್ಕೆ ತೆಗೆದುಕೊಂಡು ಹೋಗುವ ಅಗತ್ಯ ಬಿದ್ದರೆ, ಅದನ್ನು ಸಚಿವ ಸಂಪುಟದ ಮುಂದೆ ತೆಗೆದುಕೊಂಡು ಹೋಗುತ್ತೇವೆ.
*ಬರದ ಪರಿಣಾಮ ಜಿಎಸ್ಟಿ ಸಂಗ್ರಹದ ಮೇಲೂ ಬೀಳುವ ಸಾಧ್ಯತೆ: ಕರ್ನಾಟಕವು ನಿರಂತರವಾಗಿ ಜಿಎಸ್ಟಿ ಸಂಗ್ರಹದಲ್ಲಿ ದೇಶದಲ್ಲೇ ಎರಡನೇ ಸ್ಥಾನದಲ್ಲಿದೆ. ಯಾವುದೇ ರೀತಿಯ ಕೊರತೆ ಅಥವಾ ತಪ್ಪು ಆಗದಂತೆ ಕೇಂದ್ರ ಸರ್ಕಾರದ ನಿಯಮಗಳ ಪ್ರಕಾರ ಜಿಎಸ್ಟಿ ಸಂಗ್ರಹ ಮಾಡಲಾಗುತ್ತಿದೆ. ಪ್ರತಿಯೊಂದು ಜಿಎಸ್ಟಿ ಕೌನ್ಸಿಲ್ ಸಭೆಯಲ್ಲಿಯೂ ರಾಜ್ಯದ ವಾದವನ್ನು ಮಂಡಿಸಿದ್ದೇವೆ.
ಮುಖ್ಯಮಂತ್ರಿಗಳು ಕೃಷ್ಣ ಬೈರೇಗೌಡ ಅವರನ್ನು ಜಿಎಸ್ಟಿ ಕೌನ್ಸಿಲ್ ಸಭೆಗಳಿಗೆ ಡೆಪ್ಯುಟ್ ಮಾಡುತ್ತಿದ್ದರು. ಅವರು ರಾಜ್ಯದ ಪರವಾಗಿ ಏನೆಲ್ಲ ಹೇಳಬೇಕೋ ಅದನ್ನು ಮಂಡಿಸುತ್ತಿದ್ದರು.
ಇಂದು ರಾಜ್ಯದಲ್ಲಿ ಬರ ಇದೆ. ನಮಗೆ ಬೆಳೆ ನಷ್ಟವಾಗಿದೆ. ಇದರ ಪರಿಣಾಮ ಪ್ರತಿಯೊಂದು ಕ್ಷೇತ್ರದ ಮೇಲೂ ಬೀಳುತ್ತದೆ. ಸ್ವಾಭಾವಿಕವಾಗಿ ಜಿಎಸ್ಟಿ ಸಂಗ್ರಹವೂ ಕಡಿಮೆಯಾಗುವ ಸಾಧ್ಯತೆ ಇದೆ ಎಂದು ಹಣಕಾಸು ತಜ್ಞರು ಈಗಾಗಲೇ ಹೇಳುತ್ತಿದ್ದಾರೆ.
ಮುಂದಿನ ದಿನಗಳಲ್ಲಿ ಅದು ಯಾವ ರೀತಿಯಲ್ಲಿ ಪರಿಣಾಮ ಬೀರುತ್ತದೆ ಎಂಬುದನ್ನು ನೋಡಬೇಕಿದೆ. ಅದಕ್ಕಾಗಿ ಅಗತ್ಯವಾದ ಬಫರ್ ಅನ್ನೂ ನಾವು ಇಟ್ಟುಕೊಂಡಿದ್ದೇವೆ. ಜಿಎಸ್ಟಿ ಸಂಗ್ರಹವನ್ನು ಹೆಚ್ಚಿಸಲು ಯಾವ ರೀತಿಯ ಪ್ರಯತ್ನಗಳನ್ನು ಮಾಡಬೇಕು ಎಂಬುದನ್ನೂ ನೋಡುತ್ತಿದ್ದೇವೆ.
ರಾಜ್ಯ ಹಿಂದೆಂದೂ ನೋಡದಂತಹ ಬರವನ್ನು ಎದುರಿಸುತ್ತಿದೆ. ಅದರ ಪರಿಣಾಮ ಖಂಡಿತವಾಗಿ ಎಲ್ಲ ಕ್ಷೇತ್ರಗಳ ಮೇಲೂ ಬೀಳುತ್ತದೆ. ಜಿಎಸ್ಟಿ ಮೇಲೂ ಪರಿಣಾಮ ಬೀಳುತ್ತದೆ.
*ಫಾರಂ-7 ದುರುಪಯೋಗ, ಸಾಕ್ಷ್ಯ ಸಹಿತ ದೂರು : ಅವರು ಅವರ ಕೆಲಸ ಮಾಡುತ್ತಾರೆ, ನಾವು ನಮ್ಮ ಕೆಲಸ ಮಾಡುತ್ತೇವೆ. ನಾವು ಸಾಕ್ಷ್ಯ ಸಹಿತ ದೂರು ನೀಡಿದ್ದೇವೆ. ಫಾರಂ ನಂಬರ್ 7 ಅನ್ನು ದುರುಪಯೋಗ ಮಾಡಿಕೊಳ್ಳುತ್ತಾ ಇದ್ದದ್ದನ್ನ ರೆಡ್ ಹ್ಯಾಂಡ್ ಆಗಿ ನಾವು ಹಿಡ್ಕೊಂಡು ಅದನ್ನ ಕೊಟ್ಟಿದ್ದೇವೆ. ಒಬ್ಬ ವ್ಯಕ್ತಿ ಎಷ್ಟು ಫಾರಂ ನಂಬರ್ 7 ಸಲ್ಲಿಸಬಹುದು? ಅದಕ್ಕೆ ಇತಿಮಿತಿ ಇಲ್ಲವೇ? ಒಬ್ಬರೇ 100, 200, 400 ಅರ್ಜಿಗಳನ್ನು ಸಲ್ಲಿಸಿದರೆ ಅದು ಯಾವ ರೀತಿ ಸಾಧ್ಯ?.
ಒಂದೇ ಒಂದು ಸಮುದಾಯದವರನ್ನು ಗುರುತಿಸಿಕೊಂಡು, ಫಾರಂಗಳನ್ನು ಎಲ್ಲಿಯೋ ಮುದ್ರಿಸಿ ತರಲಾಗುತ್ತಿದೆ. ಅವರ ಡೇಟಾವನ್ನು ಅವರಿಗೆ ಯಾರು ಕೊಟ್ಟರು? ಆ ಡೇಟಾ ಎಲ್ಲಿಂದ ಸಿಕ್ಕಿತು? ಮುದ್ರಿತ ಫಾರಂಗಳ ಮೇಲೆ ಅವರ ಹೆಸರು ಮತ್ತು ಮತದಾರರ ಗುರುತಿನ ಚೀಟಿ ವಿವರಗಳನ್ನು ಬರೆದು ಸಲ್ಲಿಸಲಾಗುತ್ತಿದೆ. ಇದು ಕಾನೂನಿಗೆ ವಿರುದ್ಧವಾದದ್ದು.
ಈ ಎಲ್ಲವನ್ನೂ ನಾವು ಸಾಕ್ಷ್ಯ ಸಹಿತ ಚುನಾವಣಾ ಆಯೋಗಕ್ಕೆ ನೀಡಿದ್ದೇವೆ. ಚುನಾವಣಾ ಆಯೋಗವು ಸಂಬಂಧಪಟ್ಟವರಿಗೆ ನೋಟಿಸ್ ನೀಡಿ ಏಳು ದಿನಗಳ ಸಮಯ ಕೊಟ್ಟು, ನಂತರ ಎಫ್ಐಆರ್ ದಾಖಲಿಸುವುದಾಗಿ ಹೇಳಿದೆ. ಅದನ್ನು ಅವರು ಮಾಡಬೇಕು. ನಾವು ಗುರುತಿಸಿ ನೀಡಿರುವ ವ್ಯಕ್ತಿಗಳ ವಿರುದ್ಧ ಎಫ್ಐಆರ್ ದಾಖಲಿಸಬೇಕು.
- ವಿಧಾನಸೌಧದ ಪಶ್ಚಿಮ ದ್ವಾರದ ಬಳಿ ಮಾಧ್ಯಮದವರೊಂದಿಗೆ ಮಾತನಾಡಿದೆ. -
Dr. G Parameshwara
@DrParameshwara
Delighted to inaugurate the 2nd Asian Masters Swimming Championships 2026 in Bengaluru, bringing together nearly 1,800 athletes from across India and several Asian countries.
I congratulate all our Indian athletes who have brought laurels to the nation by winning medals at the Asian Games. Their achievements are a matter of immense pride for all of us. I also commend the coaches, trainers and support staff whose dedication and hard work have contributed to these accomplishments.
Karnataka's athletes have also made significant contributions to the medal tally. Recognising the dedication and achievements of our sportspersons, our Government has enhanced the cash awards for medal winners. We remain committed to encouraging sporting talent and recognising excellence in sports.
I congratulate the Karnataka Swimming Association, which has won the national swimming championships 33 times, for taking up the responsibility of hosting this prestigious international event. I also thank the Swimming Federation of India for giving Karnataka this opportunity.
Sports are not merely about winning medals. They teach us discipline, determination, resilience and, above all, the ability to accept both victory and defeat with equal grace. Every victory brings pride, and every defeat offers a lesson that helps us grow stronger.
I extend my best wishes to all the athletes participating in the championship. May this event celebrate sporting excellence, friendship and the true spirit of sportsmanship.
The event was attended by Dr. K. Govindaraj, MLC and President of the Karnataka Olympic Association; Gopal Hosur, President of the Karnataka Swimming Association; Monal Choksi, Secretary General of the Swimming Federation of India; senior sports officials, international participants, athletes and other dignitaries. -
Dr. G Parameshwara
@DrParameshwara
ಬೆಂಗಳೂರಿನಲ್ಲಿ ಭಾರತ ಸೇರಿದಂತೆ ಏಷ್ಯಾದ ವಿವಿಧ ದೇಶಗಳಿಂದ ಆಗಮಿಸಿರುವ ಸುಮಾರು 1,800 ಕ್ರೀಡಾಪಟುಗಳನ್ನು ಒಂದೇ ವೇದಿಕೆಗೆ ತಂದಿರುವ 2ನೇ ಏಷ್ಯನ್ ಮಾಸ್ಟರ್ಸ್ ಸ್ವಿಮ್ಮಿಂಗ್ ಚಾಂಪಿಯನ್ಶಿಪ್ 2026 ಅನ್ನು ಉದ್ಘಾಟಿಸಿರುವುದು ಸಂತಸ ತಂದಿದೆ.
ಏಷ್ಯನ್ ಗೇಮ್ಸ್ನಲ್ಲಿ ಪದಕಗಳನ್ನು ಗೆದ್ದು ದೇಶಕ್ಕೆ ಕೀರ್ತಿ ತಂದಿರುವ ನಮ್ಮ ಭಾರತೀಯ ಕ್ರೀಡಾಪಟುಗಳೆಲ್ಲರಿಗೂ ಹೃತ್ಪೂರ್ವಕ ಅಭಿನಂದನೆಗಳು. ಅವರ ಸಾಧನೆ ನಮ್ಮೆಲ್ಲರಿಗೂ ಹೆಮ್ಮೆ ತಂದಿದೆ.
ಈ ಸಾಧನೆಯ ಹಿಂದೆ ಶ್ರಮಿಸಿರುವ ಕೋಚ್ಗಳು, ತರಬೇತುದಾರರು ಹಾಗೂ ವ್ಯವಸ್ಥಾಪಕರ ಸಮರ್ಪಣೆ ಮತ್ತು ಪರಿಶ್ರಮವನ್ನೂ ಅಭಿನಂದಿಸುತ್ತೇನೆ.
ದೇಶದ ಒಟ್ಟು ಪದಕ ಗಳಿಕೆಗೆ ಕರ್ನಾಟಕದ ಕ್ರೀಡಾಪಟುಗಳೂ ಮಹತ್ವದ ಕೊಡುಗೆ ನೀಡಿದ್ದಾರೆ. ನಮ್ಮ ಕ್ರೀಡಾಪಟುಗಳ ಪರಿಶ್ರಮ ಮತ್ತು ಸಾಧನೆಯನ್ನು ಗುರುತಿಸಿ, ಪದಕ ವಿಜೇತರಿಗೆ ನೀಡುವ ನಗದು ಬಹುಮಾನವನ್ನು ನಮ್ಮ ಸರ್ಕಾರ ಹೆಚ್ಚಿಸಿದೆ. ಕ್ರೀಡಾ ಪ್ರತಿಭೆಯನ್ನು ಪ್ರೋತ್ಸಾಹಿಸುವುದು ಹಾಗೂ ಕ್ರೀಡಾ ಕ್ಷೇತ್ರದ ಶ್ರೇಷ್ಠ ಸಾಧನೆಗಳನ್ನು ಗೌರವಿಸುವುದು ನಮ್ಮ ಸರ್ಕಾರದ ಬದ್ಧತೆಯಾಗಿದೆ.
ರಾಷ್ಟ್ರೀಯ ಈಜು ಚಾಂಪಿಯನ್ಶಿಪ್ ಅನ್ನು 33 ಬಾರಿ ಗೆದ್ದಿರುವ ಕರ್ನಾಟಕ ಸ್ವಿಮ್ಮಿಂಗ್ ಅಸೋಸಿಯೇಷನ್ ಈ ಪ್ರತಿಷ್ಠಿತ ಅಂತಾರಾಷ್ಟ್ರೀಯ ಕ್ರೀಡಾಕೂಟದ ಆತಿಥ್ಯ ವಹಿಸಿರುವುದಕ್ಕೆ ಅಭಿನಂದಿಸುತ್ತೇನೆ. ಕರ್ನಾಟಕಕ್ಕೆ ಈ ಅವಕಾಶ ನೀಡಿದ ಸ್ವಿಮ್ಮಿಂಗ್ ಫೆಡರೇಷನ್ ಆಫ್ ಇಂಡಿಯಾಗೂ ಕೃತಜ್ಞತೆ ಸಲ್ಲಿಸುತ್ತೇನೆ.
ಕ್ರೀಡೆ ಎಂದರೆ ಕೇವಲ ಪದಕ ಗೆಲ್ಲುವುದಷ್ಟೇ ಅಲ್ಲ. ಶಿಸ್ತು, ದೃಢಸಂಕಲ್ಪ ಹಾಗೂ ಎಲ್ಲಕ್ಕಿಂತ ಮುಖ್ಯವಾಗಿ ಗೆಲುವು ಮತ್ತು ಸೋಲನ್ನು ಸಮಾನವಾಗಿ ಸ್ವೀಕರಿಸುವ ಗುಣವನ್ನು ಕಲಿಸುತ್ತದೆ. ಪ್ರತಿಯೊಂದು ಗೆಲುವು ಹೆಮ್ಮೆ ತರುತ್ತದೆ, ಪ್ರತಿಯೊಂದು ಸೋಲು ನಮ್ಮನ್ನು ಇನ್ನಷ್ಟು ಬಲಿಷ್ಠರನ್ನಾಗಿಸುವ ಪಾಠವನ್ನು ಕಲಿಸುತ್ತದೆ.
ಚಾಂಪಿಯನ್ಶಿಪ್ನಲ್ಲಿ ಭಾಗವಹಿಸುತ್ತಿರುವ ಎಲ್ಲ ಕ್ರೀಡಾಪಟುಗಳಿಗೂ ನನ್ನ ಹೃತ್ಪೂರ್ವಕ ಶುಭಾಶಯಗಳು. ಈ ಕ್ರೀಡಾಕೂಟವು ಶ್ರೇಷ್ಠ ಕ್ರೀಡಾ ಸಾಧನೆ ಮತ್ತು ನಿಜವಾದ ಕ್ರೀಡಾಸ್ಫೂರ್ತಿಯ ಸಂಭ್ರಮವಾಗಲಿ ಎಂದು ಹಾರೈಸುತ್ತೇನೆ.
ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯರು ಹಾಗೂ ಕರ್ನಾಟಕ ಒಲಿಂಪಿಕ್ ಅಸೋಸಿಯೇಷನ್ ಅಧ್ಯಕ್ಷರಾದ ಡಾ. ಕೆ. ಗೋವಿಂದರಾಜ್, ಕರ್ನಾಟಕ ಸ್ವಿಮ್ಮಿಂಗ್ ಅಸೋಸಿಯೇಷನ್ ಅಧ್ಯಕ್ಷ ಗೋಪಾಲ್ ಹೊಸೂರ್, ಸ್ವಿಮ್ಮಿಂಗ್ ಫೆಡರೇಷನ್ ಆಫ್ ಇಂಡಿಯಾ ಪ್ರಧಾನ ಕಾರ್ಯದರ್ಶಿ ಮೋನಲ್ ಚೋಕ್ಸಿ, ಹಿರಿಯ ಕ್ರೀಡಾ ಅಧಿಕಾರಿಗಳು, ಅಂತಾರಾಷ್ಟ್ರೀಯ ಸ್ಪರ್ಧಾಳುಗಳು, ಕ್ರೀಡಾಪಟುಗಳು ಹಾಗೂ ಗಣ್ಯರು ಉಪಸ್ಥಿತರಿದ್ದರು. -
Dr. G Parameshwara
@DrParameshwara
ಮಳೆ ಕೊರತೆ ಮತ್ತು ಬರದ ನೈಜ ಪರಿಸ್ಥಿತಿ ಪರಿಶೀಲಿಸಲು ರಾಜ್ಯಕ್ಕೆ ಆಗಮಿಸಿರುವ ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಸಚಿವಾಲಯದ ಜಂಟಿ ಕಾರ್ಯದರ್ಶಿ ಅಜಿತ್ ಕುಮಾರ್ ಸಾಹು ನೇತೃತ್ವದ ಅಂತರ್-ಸಚಿವಾಲಯದ ಕೇಂದ್ರ ತಂಡದೊಂದಿಗೆ (IMCT) ನಿನ್ನೆ ಸಭೆ ನಡೆಯಿತು.
ರಾಜ್ಯದಲ್ಲಿನ ಮಳೆ ಕೊರತೆ, ಬೆಳೆ ನಷ್ಟ, ಕುಡಿಯುವ ನೀರಿನ ಸಮಸ್ಯೆ, ಜಲಾಶಯ ಮತ್ತು ಕೆರೆಗಳಲ್ಲಿನ ನೀರಿನ ಲಭ್ಯತೆ, ಮುಂದಿನ ದಿನಗಳಿಗೆ ಮೇವು ಸಂಗ್ರಹ, ಜನರ ಗುಳೆ ತಡೆಗೆ ಕೈಗೊಂಡಿರುವ ಕ್ರಮಗಳು, ರೈತರ ಬೆಳೆ ವಿಮೆ ನೋಂದಣಿ, ಇನ್ಪುಟ್ ಸಬ್ಸಿಡಿ ಹಾಗೂ ಬರ ಪರಿಹಾರಕ್ಕೆ ರಾಜ್ಯ ಸಲ್ಲಿಸಿರುವ ಮನವಿಗಳ ಕುರಿತು ಕೇಂದ್ರದ ಬರ ಅಧ್ಯಯನ ತಂಡಕ್ಕೆ ಸಮಗ್ರವಾಗಿ ವಿವರಿಸಲಾಗಿದೆ.
ಈ ಕುರಿತಾದ ಪತ್ರಿಕಾ ವರದಿಗಳು ಹೀಗಿವೆ..
Yesterday, a meeting was held with the Inter-Ministerial Central Team (IMCT), led by Ajit Kumar Sahu, Joint Secretary in the Union Ministry of Agriculture and Farmers Welfare, which is visiting the State to assess the ground reality of rainfall deficiency and drought conditions.
The Central team was given a comprehensive briefing on the rainfall deficit across the State, crop losses, drinking water shortages, water availability in reservoirs and tanks, fodder stocks for the coming months, measures taken to prevent distress migration, crop insurance enrolment of farmers, input subsidy, and the memoranda submitted by the State seeking drought relief.
The related press reports are as follows: -
Dr. G Parameshwara
@DrParameshwara
The Hallikar community is one of the smaller communities in the State with a relatively low population and, in my view, has remained neglected. There is a need to ensure appropriate recognition and status for the community. I fully support the demand to include the Hallikar community under an appropriate category of the Backward Classes, and I will discuss the matter with Chief Minister D.K. Shivakumar.
We have seen that smaller communities often face neglect in one form or another. Several communities in the State have remained deprived of adequate opportunities. Commissions such as the Chinnaswamy Commission, Venkataswamy Commission and Kantharaj Commission were constituted to study the conditions of such communities and to identify those that had been neglected, so that governments could take appropriate measures for their upliftment. Despite these efforts, many communities continue to remain backward.
In my view, the Hallikar community is one such neglected community and needs to be accorded appropriate status. I fully support its inclusion under the Backward Classes. I will discuss this with Chief Minister D.K. Shivakumar. Once the Chief Minister takes up an issue seriously, the work is as good as done. I will make a sincere effort to secure his approval.
The Constitution envisages a life of dignity and self-respect for every individual. This is what Babasaheb Dr. B.R. Ambedkar enshrined in the Constitution. I will make efforts to ensure that the Hallikar community is included in whichever category of the Backward Classes it is found eligible for.
Nearly 2,500 students are being honoured with merit awards to encourage them in their educational journey. K.M. Nagaraj is providing around ₹2 crore in the form of these awards. What greater example can there be of concern and commitment towards society?
Such initiatives show us what social responsibility in public life truly means. Some people build convention halls or undertake other service activities in the names of their parents. K.M. Nagaraj, however, has chosen social commitment itself as the focus of his service.
He has identified education as a field through which society can benefit and meaningful social change can be brought about. No one would have questioned K.M. Nagaraj even if he had not taken up this initiative to encourage students. Yet, with the intention of educating at least a few people and enabling them to contribute to society, he has organised such programmes. This is truly commendable.
In 2010, Sonia Gandhi appointed me as KPCC President. At that time, I went to K.M. Nagaraj’s residence to seek his blessings. He advised me to travel across the entire State, visit every constituency and strengthen the party organisation. He also assured me of all possible support.
For my first State-wide tour, he arranged a bus equipped with all the necessary facilities for party leaders. He also offered valuable suggestions on party organisation. Such advice and guidance helped me significantly in my political journey and in achieving success in politics.
Education is a vast and important field. Education and agriculture have played a major role in strengthening India. Before Independence, literacy in the country was only around 12 per cent. Today, more than 80 per cent of the population is literate.
Educated graduates have played a major role in nation-building. It is not easy for any country in the world to produce such a large number of educated professionals. Even the United States does not produce 15 lakh engineers and one lakh doctors. This is the transformation brought about by the education sector.
There are two important things we need in life. We must adopt human values in our lives. We must understand how our parents have raised us and carry forward the values, discipline and cultural upbringing they have given us.
It is equally important to understand what kind of education will benefit both ourselves and society. Students must choose their courses with this understanding. You must become part of the transformation taking place in the country and contribute to national development. I hope the awards being given by the Foundation will support your further education.
*Education must keep pace with technological changes, including AI: Artificial Intelligence is developing at a very rapid pace. Today, information required for decision-making can be accessed within moments.
In the field of genetic engineering, scientists had advanced to a stage where creating another human being had become a subject of scientific discussion. However, in European countries, the Church had intervened and suggested that such developments should remain confined to research and not be taken further. In a similar manner, Artificial Intelligence has now emerged as a powerful technology capable of performing a wide range of tasks within moments.
AI offers enormous opportunities for transformation in different fields. In the coming days, the education we receive must benefit not only ourselves but also society. We need an education system that preserves Indian culture while also taking us forward towards modernity.
India is developing at a very rapid pace, and students must move forward along with this growth. I hope the encouragement being extended to you today will contribute to your future education and achievements.
— My remarks at the Merit Awards and Scholarship Distribution Ceremony organised by the R.M.R. Hallikar Foundation Trust for meritorious students of the Hallikar community who passed and secured high marks in the SSLC and PUC examinations for the academic year 2025–26. -
Dr. G Parameshwara
@DrParameshwara
ಹಳ್ಳಿಕಾರ್ ಸಮುದಾಯವು ರಾಜ್ಯದಲ್ಲಿ ಅತ್ಯಂತ ಕಡಿಮೆ ಜನಸಂಖ್ಯೆ ಹೊಂದಿರುವ ಸಣ್ಣ ಸಮುದಾಯಗಳಲ್ಲಿ ಒಂದಾಗಿದ್ದು, ನನ್ನ ದೃಷ್ಟಿಯಲ್ಲಿ ನಿರ್ಲಕ್ಷ್ಯಕ್ಕೆ ಒಳಗಾಗಿರುವ ಸಮುದಾಯವಾಗಿದೆ. ಈ ಸಮುದಾಯಕ್ಕೆ ಸೂಕ್ತ ಸ್ಥಾನಮಾನ ಕಲ್ಪಿಸುವ ಅಗತ್ಯವಿದೆ. ಹಿಂದುಳಿದ ವರ್ಗದ ಸೂಕ್ತ ಪ್ರವರ್ಗಕ್ಕೆ ಸೇರಿಸುವ ವಿಚಾರದಲ್ಲಿ ನನ್ನ ಸಂಪೂರ್ಣ ಸಹಮತಿ ಇದ್ದು, ಈ ಕುರಿತು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರೊಂದಿಗೆ ಚರ್ಚಿಸುತ್ತೇನೆ.
ಸಣ್ಣ ಸಮುದಾಯಗಳು ಒಂದಲ್ಲೊಂದು ರೀತಿಯಲ್ಲಿ ನಿರ್ಲಕ್ಷ್ಯಕ್ಕೆ ಒಳಗಾಗಿರುವುದನ್ನು ನಾವು ನೋಡಿದ್ದೇವೆ. ರಾಜ್ಯದಲ್ಲಿ ಅನೇಕ ಸಮುದಾಯಗಳು ನಿರ್ಲಕ್ಷ್ಯಕ್ಕೆ ಒಳಗಾಗಿವೆ. ಇಂತಹ ಸಮುದಾಯಗಳ ಸ್ಥಿತಿಗತಿಗಳನ್ನು ಅಧ್ಯಯನ ಮಾಡಲು ಚಿನ್ನಸ್ವಾಮಿ ಆಯೋಗ, ವೆಂಕಟಸ್ವಾಮಿ ಆಯೋಗ ಮತ್ತು ಕಾಂತರಾಜ್ ಆಯೋಗಗಳನ್ನು ರಚಿಸಲಾಗಿತ್ತು. ಯಾವ ಸಮುದಾಯಗಳು ನಿರ್ಲಕ್ಷ್ಯಕ್ಕೆ ಒಳಗಾಗಿವೆ ಎಂಬುದನ್ನು ಗುರುತಿಸಿ, ಅವುಗಳಿಗೆ ಉತ್ತೇಜನ ನೀಡುವ ರೀತಿಯಲ್ಲಿ ಸರ್ಕಾರಗಳು ಕ್ರಮ ತೆಗೆದುಕೊಳ್ಳಬೇಕು ಎಂಬ ಉದ್ದೇಶದಿಂದ ಈ ಆಯೋಗಗಳನ್ನು ರಚಿಸಲಾಗಿತ್ತು. ಆದರೂ ಬಹಳಷ್ಟು ಸಮುದಾಯಗಳು ಇನ್ನೂ ಹಿಂದುಳಿದಿವೆ.
ಹಳ್ಳಿಕಾರ್ ಸಮುದಾಯವು ನನ್ನ ದೃಷ್ಟಿಯಲ್ಲಿ ನಿರ್ಲಕ್ಷ್ಯಕ್ಕೆ ಒಳಗಾಗಿರುವ ಸಮುದಾಯವಾಗಿದೆ. ಈ ಸಮುದಾಯಕ್ಕೆ ಸೂಕ್ತ ಸ್ಥಾನಮಾನ ಕಲ್ಪಿಸಬೇಕಿದೆ. ಹಳ್ಳಿಕಾರ್ ಸಮುದಾಯವನ್ನು ಹಿಂದುಳಿದ ವರ್ಗದ ಪ್ರವರ್ಗಕ್ಕೆ ಸೇರಿಸುವ ವಿಚಾರದಲ್ಲಿ ನಾನು ಸಂಪೂರ್ಣ ಸಹಮತಿ ವ್ಯಕ್ತಪಡಿಸುತ್ತೇನೆ. ಈ ಕುರಿತು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರೊಂದಿಗೆ ಚರ್ಚಿಸುತ್ತೇನೆ. ಮುಖ್ಯಮಂತ್ರಿ ಅವರು ಮನಸ್ಸಿಗೆ ತೆಗೆದುಕೊಂಡರೆ ಕೆಲಸ ಆದಂತೆಯೇ. ಅವರು ಒಪ್ಪುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ.
ಸಂವಿಧಾನದ ಆಶಯದಂತೆ ಪ್ರತಿಯೊಬ್ಬರಿಗೂ ಸ್ವಾಭಿಮಾನದ ಬದುಕು ದೊರೆಯಬೇಕು. ಅದನ್ನೇ ಬಾಬಾ ಸಾಹೇಬ್ ಡಾ. ಬಿ.ಆರ್. ಅಂಬೇಡ್ಕರ್ ಅವರು ಸಂವಿಧಾನದಲ್ಲಿ ಪ್ರತಿಪಾದಿಸಿದ್ದಾರೆ. ಹಳ್ಳಿಕಾರ್ ಸಮುದಾಯವು ಹಿಂದುಳಿದ ವರ್ಗದ ಯಾವ ಪ್ರವರ್ಗಕ್ಕೆ ಸೇರಲು ಅರ್ಹವಾಗಿದೆಯೋ, ಆ ಪ್ರವರ್ಗಕ್ಕೆ ಸೇರಿಸುವ ನಿಟ್ಟಿನಲ್ಲಿ ಪ್ರಯತ್ನ ಮಾಡುತ್ತೇನೆ.
ಸುಮಾರು 2,500 ವಿದ್ಯಾರ್ಥಿಗಳನ್ನು ಉತ್ತೇಜಿಸುವ ಉದ್ದೇಶದಿಂದ ಪ್ರತಿಭಾ ಪುರಸ್ಕಾರ ನೀಡಲಾಗುತ್ತಿದೆ. ಸುಮಾರು ₹2 ಕೋಟಿ ಹಣವನ್ನು ಕೆ.ಎಂ. ನಾಗರಾಜ ಅವರು ಪುರಸ್ಕಾರದ ರೂಪದಲ್ಲಿ ನೀಡುತ್ತಿದ್ದಾರೆ. ಇದಕ್ಕಿಂತ ಸಮಾಜದ ಮೇಲಿನ ಕಳಕಳಿಯನ್ನು ಇನ್ನೆಲ್ಲಿ ನೋಡಲು ಸಾಧ್ಯ.
ಸಾರ್ವಜನಿಕ ಬದುಕಿನಲ್ಲಿ ಸಮಾಜದ ಮೇಲಿನ ಕಳಕಳಿಯನ್ನು ಹೇಗೆ ಅರ್ಥ ಮಾಡಿಕೊಳ್ಳಬೇಕು ಎಂಬುದಕ್ಕೆ ಇಂತಹ ಕಾರ್ಯಗಳು ಉದಾಹರಣೆಯಾಗುತ್ತವೆ. ಕೆಲವರು ತಮ್ಮ ತಂದೆ-ತಾಯಿ ಹೆಸರಿನಲ್ಲಿ ಕಲ್ಯಾಣ ಮಂಟಪಗಳನ್ನು ನಿರ್ಮಿಸುತ್ತಾರೆ, ಇತರ ಸೇವಾ ಕಾರ್ಯಗಳನ್ನು ಮಾಡುತ್ತಾರೆ. ಆದರೆ ಕೆ.ಎಂ. ನಾಗರಾಜ ಅವರು ಸಮಾಜದ ಮೇಲಿನ ಕಳಕಳಿಯನ್ನೇ ತಮ್ಮ ಸೇವೆಯ ಕ್ಷೇತ್ರವಾಗಿ ಆಯ್ಕೆ ಮಾಡಿಕೊಂಡಿದ್ದಾರೆ.
ಯಾವ ಕ್ಷೇತ್ರದ ಮೂಲಕ ಸಮಾಜಕ್ಕೆ ಹೆಚ್ಚು ಒಳಿತಾಗುತ್ತದೆ, ಯಾವ ಕ್ಷೇತ್ರದ ಮೂಲಕ ಸಾಮಾಜಿಕ ಬದಲಾವಣೆ ತರಲು ಸಾಧ್ಯವಾಗುತ್ತದೆ ಎಂಬುದನ್ನು ಅರಿತು ಅವರು ಶಿಕ್ಷಣ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡಿದ್ದಾರೆ. ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ ಈ ಕೆಲಸವನ್ನು ಕೆ.ಎಂ. ನಾಗರಾಜ ಅವರು ಮಾಡದೇ ಇದ್ದಿದ್ದರೆ ಯಾರೂ ಅವರನ್ನು ಪ್ರಶ್ನಿಸುತ್ತಿರಲಿಲ್ಲ. ಆದರೆ ನಾಲ್ಕು ಜನರನ್ನು ವಿದ್ಯಾವಂತರನ್ನಾಗಿ ಮಾಡಿ ಸಮಾಜಕ್ಕೆ ಕೊಡುಗೆ ನೀಡಬೇಕು ಎಂಬ ಉದ್ದೇಶದಿಂದ ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವುದು ಶ್ಲಾಘನೀಯ ಕಾರ್ಯವಾಗಿದೆ.
2010ರಲ್ಲಿ ಸೋನಿಯಾ ಗಾಂಧಿಯವರು ನನ್ನನ್ನು ಕೆಪಿಸಿಸಿ ಅಧ್ಯಕ್ಷನನ್ನಾಗಿ ನೇಮಕ ಮಾಡಿದರು. ಆ ಸಂದರ್ಭದಲ್ಲಿ ಕೆ.ಎಂ. ನಾಗರಾಜ ಅವರ ಆಶೀರ್ವಾದ ಪಡೆಯಲು ಅವರ ಮನೆಗೆ ಹೋಗಿದ್ದೆ. ಇಡೀ ರಾಜ್ಯ ಪ್ರವಾಸ ಮಾಡಬೇಕು, ಪ್ರತಿಯೊಂದು ಕ್ಷೇತ್ರಕ್ಕೂ ತೆರಳಿ ಪಕ್ಷ ಸಂಘಟನೆ ಮಾಡಬೇಕು, ನನ್ನಿಂದ ನಿಮಗೆ ಎಲ್ಲ ರೀತಿಯ ಸಹಕಾರ ನೀಡುತ್ತೇನೆ ಎಂದು ಅವರು ತಿಳಿಸಿದ್ದರು.
ನನ್ನ ಮೊದಲ ರಾಜ್ಯ ಪ್ರವಾಸಕ್ಕಾಗಿ ಪಕ್ಷದ ನಾಯಕರಿಗೆ ಅಗತ್ಯವಿರುವ ಎಲ್ಲ ರೀತಿಯ ಸೌಕರ್ಯಗಳಿದ್ದ ಬಸ್ ವ್ಯವಸ್ಥೆಯನ್ನು ಅವರು ಮಾಡಿಕೊಟ್ಟಿದ್ದರು. ಪಕ್ಷ ಸಂಘಟನೆಯ ಕುರಿತು ಸಲಹೆಗಳನ್ನು ನೀಡಿದ್ದರು. ರಾಜಕಾರಣದಲ್ಲಿ ನಾನು ಯಶಸ್ವಿಯಾಗಲು ಅಂತಹ ಸಲಹೆ-ಸೂಚನೆಗಳು ಸಹಾಯವಾಗಿವೆ.
ಶಿಕ್ಷಣ ಬಹಳ ದೊಡ್ಡ ಕ್ಷೇತ್ರವಾಗಿದೆ. ಶಿಕ್ಷಣ ಮತ್ತು ಕೃಷಿ ಕ್ಷೇತ್ರಗಳು ಭಾರತವನ್ನು ಬಲಿಷ್ಠಗೊಳಿಸಿವೆ. ಸ್ವಾತಂತ್ರ್ಯಪೂರ್ವದಲ್ಲಿ ದೇಶದಲ್ಲಿ ಶೇ.12ರಷ್ಟು ಮಾತ್ರ ಅಕ್ಷರಸ್ಥರಿದ್ದರು. ಇಂದು ಭಾರತದಲ್ಲಿ ಶೇ.80ಕ್ಕಿಂತ ಹೆಚ್ಚು ಜನ ಅಕ್ಷರಸ್ಥರಾಗಿದ್ದಾರೆ.
ಶಿಕ್ಷಣ ಪಡೆದ ಪದವೀಧರರು ದೇಶವನ್ನು ಕಟ್ಟುವ ಕೆಲಸ ಮಾಡಿದ್ದಾರೆ. ಪ್ರಪಂಚದ ಯಾವುದೇ ದೇಶದಲ್ಲಿ ಇಷ್ಟೊಂದು ಸಂಖ್ಯೆಯಲ್ಲಿ ವಿದ್ಯಾವಂತರನ್ನು ಸೃಷ್ಟಿಸುವುದು ಸುಲಭವಲ್ಲ. ಅಮೆರಿಕ ಕೂಡ 15 ಲಕ್ಷ ಎಂಜಿನಿಯರ್ಗಳು ಮತ್ತು ಒಂದು ಲಕ್ಷ ವೈದ್ಯರನ್ನು ಉತ್ಪಾದಿಸುವುದಿಲ್ಲ. ಶಿಕ್ಷಣ ಕ್ಷೇತ್ರ ತಂದಿರುವ ಬದಲಾವಣೆಯ ಪರಿಣಾಮವೇ ಇದು.
ನಮಗೆ ಎರಡು ಪ್ರಮುಖ ವಿಚಾರಗಳು ಅಗತ್ಯವಾಗಿವೆ. ಮಾನವತ್ವದ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ನಮ್ಮ ತಂದೆ-ತಾಯಿ ನಮ್ಮನ್ನು ಯಾವ ರೀತಿಯಲ್ಲಿ ಬೆಳೆಸಿದ್ದಾರೆ ಎಂಬುದನ್ನು ಅರಿತು, ಅವರು ನೀಡಿರುವ ಸಂಸ್ಕಾರ ಮತ್ತು ಮೌಲ್ಯಗಳನ್ನು ನಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು.
ಯಾವ ಶಿಕ್ಷಣ ಪಡೆದರೆ ನನಗೂ ಮತ್ತು ಸಮಾಜಕ್ಕೂ ಉಪಯೋಗವಾಗುತ್ತದೆ ಎಂಬುದು ಬಹಳ ಮುಖ್ಯ. ಇದನ್ನು ಅರಿತು ವಿದ್ಯಾರ್ಥಿಗಳು ತಮ್ಮ ಕೋರ್ಸ್ಗಳನ್ನು ಆಯ್ಕೆ ಮಾಡಿಕೊಳ್ಳಬೇಕು. ದೇಶದಲ್ಲಿ ನಡೆಯುತ್ತಿರುವ ಬದಲಾವಣೆಯ ಭಾಗವಾಗಬೇಕು. ದೇಶದ ಅಭಿವೃದ್ಧಿಯಲ್ಲಿ ನಿಮ್ಮ ಪಾಲು ಇರಬೇಕು. ಫೌಂಡೇಷನ್ ವತಿಯಿಂದ ನೀಡಲಾಗುತ್ತಿರುವ ಈ ಪುರಸ್ಕಾರ ನಿಮ್ಮ ಮುಂದಿನ ಕಲಿಕೆಗೆ ಸಹಾಯವಾಗಲಿ.
*ಎಐ ಸೇರಿದಂತೆ ತಂತ್ರಜ್ಞಾನ ಬದಲಾವಣೆಗೆ ತಕ್ಕ ಶಿಕ್ಷಣ ಅಗತ್ಯ : ಆರ್ಟಿಫಿಶಿಯಲ್ ಇಂಟಲಿಜೆನ್ಸ್ ತಂತ್ರಜ್ಞಾನ ಬಹಳ ವೇಗವಾಗಿ ಅಭಿವೃದ್ಧಿಯಾಗುತ್ತಿದೆ. ಕ್ಷಣಾರ್ಧದಲ್ಲಿ ತೀರ್ಮಾನ ಕೈಗೊಳ್ಳಲು ಅಗತ್ಯವಾದ ಮಾಹಿತಿಯನ್ನೂ ಪಡೆಯುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಜೆನೆಟಿಕ್ ಎಂಜಿನಿಯರಿಂಗ್ ಕ್ಷೇತ್ರದಲ್ಲಿ ಮತ್ತೊಬ್ಬ ವ್ಯಕ್ತಿಯನ್ನು ಸೃಷ್ಟಿಸುವ ಮಟ್ಟಿಗೆ ವಿಜ್ಞಾನಿಗಳು ಮುಂದುವರಿದಿದ್ದರು. ಆದರೆ ಅದನ್ನು ಮುಂದುವರಿಸುವ ಬದಲು ಸಂಶೋಧನೆಯ ಮಟ್ಟಕ್ಕೆ ಸೀಮಿತಗೊಳಿಸಬೇಕು ಎಂದು ಯೂರೋಪ್ ದೇಶಗಳಲ್ಲಿ ಚರ್ಚ್ ಸೂಚಿಸಿತ್ತು. ಅದೇ ರೀತಿಯಲ್ಲಿ ಇಂದು ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಬಂದಿದೆ. ಇದರ ಮೂಲಕ ಏನು ಬೇಕಾದರೂ ಕ್ಷಣಾರ್ಧದಲ್ಲಿ ಮಾಡುವಂತಹ ತಂತ್ರಜ್ಞಾನ ಅಭಿವೃದ್ಧಿಯಾಗಿದೆ.
ಎಐ ಆವಿಷ್ಕಾರದಲ್ಲಿ ಎಲ್ಲ ರೀತಿಯ ಬದಲಾವಣೆಗಳನ್ನು ಕೈಗೊಳ್ಳುವ ಅವಕಾಶಗಳಿವೆ. ಮುಂದಿನ ದಿನಗಳಲ್ಲಿ ನಾವು ಪಡೆಯುವ ಶಿಕ್ಷಣ ನಮಗೂ ಮತ್ತು ಸಮಾಜಕ್ಕೂ ಉಪಯೋಗವಾಗುವಂತಿರಬೇಕು. ಭಾರತೀಯ ಸಂಸ್ಕೃತಿಯನ್ನು ಉಳಿಸಿಕೊಂಡೇ ಆಧುನಿಕತೆಯತ್ತ ಕೊಂಡೊಯ್ಯುವ ಶಿಕ್ಷಣ ನಮಗೆ ಬೇಕಾಗಿದೆ.
ಭಾರತ ಅತ್ಯಂತ ವೇಗವಾಗಿ ಬೆಳೆಯುತ್ತಿದೆ. ಆ ಬೆಳವಣಿಗೆಯ ಜೊತೆಗೆ ವಿದ್ಯಾರ್ಥಿಗಳೂ ಸಾಗಬೇಕು. ನಿಮಗೆ ನೀಡಲಾಗುತ್ತಿರುವ ಈ ಉತ್ತೇಜನ ನಿಮ್ಮ ಭವಿಷ್ಯದ ಶಿಕ್ಷಣ ಮತ್ತು ಸಾಧನೆಗೆ ಉಪಯೋಗವಾಗಲಿ.
- ಆರ್.ಎಂ.ಆರ್. ಹಳ್ಳಿಕಾರ್ ಫೌಂಡೇಷನ್ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ 2025-26ನೇ ಸಾಲಿನ ಎಸ್ಎಸ್ಎಲ್ಸಿ ಹಾಗೂ ಪಿಯುಸಿ ಪರೀಕ್ಷೆಗಳಲ್ಲಿ ಉತ್ತೀರ್ಣರಾದ ಮತ್ತು ಅತ್ಯಧಿಕ ಅಂಕಗಳಿಸಿದ ಹಳ್ಳಿಕಾರ್ ಸಮುದಾಯದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ವಿದ್ಯಾರ್ಥಿವೇತನ ವಿತರಣಾ ಸಮಾರಂಭದಲ್ಲಿ ನನ್ನ ಮಾತುಗಳು -
Dr. G Parameshwara
@DrParameshwara
ಹಲವಾರು ಸದಭಿರುಚಿಯ ಸಿನಿಮಾಗಳನ್ನು ಭಾರತೀಯ ಚಿತ್ರರಂಗಕ್ಕೆ ನೀಡಿದ ಖ್ಯಾತ ನಿರ್ದೇಶಕ ಸಿಂಗೀತಂ ಶ್ರೀನಿವಾಸರಾವ್ ಅವರ ನಿಧನದ ಸುದ್ದಿ ಅತ್ಯಂತ ನೋವುಂಟು ಮಾಡಿದೆ.
ಡಾ. ರಾಜ್ಕುಮಾರ್ ಅವರ ಅಭಿನಯದ ‘ಹಾಲು ಜೇನು’, ‘ಚಲಿಸುವ ಮೋಡಗಳು’, ‘ಭಾಗ್ಯದ ಲಕ್ಷ್ಮಿ ಬಾರಮ್ಮ’ ಸೇರಿದಂತೆ ಹಲವು ಜನಪ್ರಿಯ ಚಿತ್ರಗಳನ್ನು ನಿರ್ದೇಶಿಸುವ ಮೂಲಕ ಕನ್ನಡ ಚಿತ್ರರಂಗದಲ್ಲಿಯೂ ಅವರು ಅಚ್ಚಳಿಯದ ಛಾಪು ಮೂಡಿಸಿದ್ದರು. ಕನ್ನಡ ಚಿತ್ರರಂಗದೊಂದಿಗೆ ಅವರು ಹೊಂದಿದ್ದ ಆತ್ಮೀಯ ನಂಟು ಮತ್ತು ನೀಡಿದ ಕೊಡುಗೆ ಸದಾ ಸ್ಮರಣೀಯ.
ಭಾರತೀಯ ಚಿತ್ರರಂಗದಲ್ಲಿ ದಶಕಗಳ ಕಾಲ ತಮ್ಮ ಸೃಜನಶೀಲತೆ, ವಿಭಿನ್ನ ಪ್ರಯೋಗಗಳು ಮತ್ತು ವಿಶಿಷ್ಟ ಕಥನಶೈಲಿಯಿಂದ ಗುರುತಿಸಿಕೊಂಡ ಸಿಂಗೀತಂ ಶ್ರೀನಿವಾಸರಾವ್ ಅವರ ಅಗಲಿಕೆಯಿಂದ ಬಣ್ಣದಲೋಕ ಬಡವಾಗಿದೆ.
ಭಗವಂತನು ಶ್ರೀಯುತರ ಆತ್ಮಕ್ಕೆ ಚಿರಶಾಂತಿ ಕರುಣಿಸಲಿ, ಅವರ ಕುಟುಂಬದವರಿಗೆ ಮತ್ತು ಅಭಿಮಾನಿಗಳ ವರ್ಗಕ್ಕೆ ಈ ಅಗಲಿಕೆಯ ನೋವನ್ನು ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ. -
Dr. G Parameshwara
@DrParameshwara
ಇಂದು ಮೈಸೂರು ರಸ್ತೆಯ ಪೂರ್ಣಿಮಾ ಪ್ಯಾಲೇಸ್ ಕನ್ವೆನ್ಷನ್ ಹಾಲ್ನಲ್ಲಿ ಆರ್.ಎಂ.ಆರ್. ಹಳ್ಳಿಕಾರ್ ಫೌಂಡೇಷನ್ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ 2025-26ನೇ ಸಾಲಿನ ಎಸ್ಎಸ್ಎಲ್ಸಿ ಹಾಗೂ ಪಿಯುಸಿ ಪರೀಕ್ಷೆಗಳಲ್ಲಿ ಅತ್ಯಧಿಕ ಅಂಕ ಗಳಿಸಿದ ಹಳ್ಳಿಕಾರ್ ಸಮುದಾಯದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ವಿದ್ಯಾರ್ಥಿವೇತನ ವಿತರಣಾ ಸಮಾರಂಭವನ್ನು ಉದ್ಘಾಟಿಸಿದೆ.
ಸಚಿವರಾದ ರಾಮಲಿಂಗಾರೆಡ್ಡಿ, ಹೆಚ್.ಸಿ. ಬಾಲಕೃಷ್ಣ, ಟಿ. ರಘುಮೂರ್ತಿ, ರಾಜ್ಯ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿಗಳಾದ ಟಿ.ಬಿ. ಜಯಚಂದ್ರ, ವಿಧಾನ ಪರಿಷತ್ ಸದಸ್ಯರಾದ ಸಿ. ಪುಟ್ಟಣ್ಣ, ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷರಾದ ಹೆಚ್.ಎಂ. ರೇವಣ್ಣ, ಆರ್.ಎಂ.ಆರ್. ಹಳ್ಳಿಕಾರ್ ಫೌಂಡೇಷನ್ ಟ್ರಸ್ಟ್ ಅಧ್ಯಕ್ಷರಾದ ಕೆ.ಎಂ. ನಾಗರಾಜ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
Today, I inaugurated the Merit Awards and Scholarship Distribution Ceremony organised by the R.M.R. Hallikar Foundation Trust at Poornima Palace Convention Hall on Mysuru Road, honouring meritorious students from the Hallikar community who secured the highest marks in the SSLC and PUC examinations for the academic year 2025–26.
Ministers Ramalinga Reddy, H.C. Balakrishna and T. Raghumurthy, Special Representative of the Government of Karnataka in Delhi T.B. Jayachandra, Member of the Legislative Council C. Puttanna, Chairman of the State Guarantee Schemes Implementation Authority H.M. Revanna, R.M.R. Hallikar Foundation Trust President K.M. Nagaraj, and several others were present on the occasion. -
Dr. G Parameshwara
@DrParameshwara
ʼಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡುʼ ಗೀತೆಯ ರಚನಕಾರ, ಖ್ಯಾತ ಕವಿ ಹಾಗೂ ನಾಟಕಕಾರ ಹುಯಿಲಗೋಳ ನಾರಾಯಣರಾವ್ ಅವರ ಜನ್ಮದಿನದಂದು ಗೌರವ ನಮನಗಳನ್ನು ಸಲ್ಲಿಸುತ್ತೇನೆ.
ಕನ್ನಡ ನಾಡು-ನುಡಿಯ ಅಭಿಮಾನವನ್ನು ಸಾರುವ ಅವರ ಸಾಹಿತ್ಯಿಕ ಕೊಡುಗೆ ಸದಾ ಸ್ಮರಣೀಯ. -
Dr. G Parameshwara
@DrParameshwara
Met AICC President Shri @kharge at his residence in Sadashivanagar for a cordial interaction and discussion on various matters, including the development of the state and the organisational growth of the party.
Member of Parliament Shri Radhakrishna Doddamani was also present on this occasion.
ಎಐಸಿಸಿ ಅಧ್ಯಕ್ಷರಾದ ಶ್ರೀ ಮಲ್ಲಿಕಾರ್ಜುನ ಖರ್ಗೆ ಅವರನ್ನು ಸದಾಶಿವನಗರದ ನಿವಾಸದಲ್ಲಿ ಸೌಹಾರ್ದಯುತವಾಗಿ ಭೇಟಿ ಮಾಡಿ, ರಾಜ್ಯದ ಅಭಿವೃದ್ಧಿ ಹಾಗೂ ಪಕ್ಷದ ಸಂಘಟನಾತ್ಮಕ ಬೆಳವಣಿಗೆ ಸೇರಿದಂತೆ ವಿವಿಧ ವಿಚಾರಗಳ ಕುರಿತು ಮಾತುಕತೆ ನಡೆಸಿದೆ.
ಈ ಸಂದರ್ಭದಲ್ಲಿ ಸಂಸದರಾದ ಶ್ರೀ ರಾಧಾಕೃಷ್ಣ ದೊಡ್ಡಮನಿ ಅವರು ಉಪಸ್ಥಿತರಿದ್ದರು. -
Dr. G Parameshwara
@DrParameshwara
A golden Day 15 for India at the Asian Games 2026, with nine medals including five Golds!
A historic performance from Kumkum Mohod, who won Gold in the women’s individual recurve archery event, becoming the first Indian to claim an individual recurve Gold at the Asian Games and securing an LA 2028 Olympic quota.
An immensely proud moment for Karnataka as Mysuru’s Pranavi Urs scripted history by becoming the first Indian woman to win individual Golf Gold at the Asian Games. Bengaluru’s Aditi Ashok joined Pranavi and Diksha Dagar to secure Silver in the women’s team event.
Heartiest congratulations to the Indian men’s cricket team on defending their Asian Games title with a memorable Gold against Pakistan.
Congratulations to Aman Sehrawat on a brilliant Gold in the men’s freestyle 57kg wrestling event, overcoming the reigning world champion in a hard-fought final.
Another golden finish came from the Indian men’s hockey team, which defeated Malaysia to successfully defend its Asian Games crown and secure qualification for the Los Angeles 2028 Olympics.
Congratulations also to Antim Panghal on Silver in the women’s 53kg wrestling event, Neeraj Chauhan on Bronze in men’s individual recurve archery, and Deepak Punia on Bronze in men’s freestyle 97kg wrestling.
A remarkable day for Indian sport. Congratulations to all our medal winners, coaches and support teams for making the nation proud!
#asiangames2026 #teamindia -
Dr. G Parameshwara
@DrParameshwara
ರಾಜ್ಯದಲ್ಲಿ ತೀವ್ರ ಮಳೆ ಕೊರತೆಯ ನಡುವೆಯೂ ಜನರಿಗೆ ಕುಡಿಯುವ ನೀರಿನ ತೊಂದರೆಯಾಗದಂತೆ ನಮ್ಮ ಸರ್ಕಾರ ಅಗತ್ಯ ಮುನ್ನೆಚ್ಚರಿಕಾ ಮತ್ತು ಪೂರಕ ಕ್ರಮಗಳನ್ನು ಕೈಗೊಂಡಿದೆ. ಟ್ಯಾಂಕರ್ ಮೂಲಕ ನೀರು ಪೂರೈಕೆ, ಖಾಸಗಿ ಕೊಳವೆಬಾವಿಗಳ ಬಳಕೆ, ಹೊಸ ಕೊಳವೆಬಾವಿಗಳ ಕೊರೆತ, ಪೈಪ್ಲೈನ್ ವಿಸ್ತರಣೆ ಸೇರಿದಂತೆ ಹಲವು ಕ್ರಮಗಳನ್ನು ತೆಗೆದುಕೊಂಡಿದೆ.
ಪ್ರಸ್ತುತ ರಾಜ್ಯದ 111 ತಾಲ್ಲೂಕುಗಳ 531 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿದ್ದು, ಅಗತ್ಯವಿರುವ ಕಡೆ ಟ್ಯಾಂಕರ್ಗಳ ಮೂಲಕ ನೀರು ಪೂರೈಸಲಾಗುತ್ತಿದೆ. ಖಾಸಗಿ ಕೊಳವೆಬಾವಿಗಳನ್ನು ಬಾಡಿಗೆಗೆ ಪಡೆದು ನೀರು ಸರಬರಾಜು ಮಾಡಲಾಗುತ್ತಿದೆ. ನಗರ ಪ್ರದೇಶಗಳಲ್ಲಿಯೂ 15 ನಗರ ಸ್ಥಳೀಯ ಸಂಸ್ಥೆಗಳ ಸುಮಾರು 81 ವಾರ್ಡ್ಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿದ್ದು, ಪೂರೈಕೆಗೆ ಅಗತ್ಯ ವ್ಯವಸ್ಥೆ ಕಲ್ಪಿಸಲಾಗಿದೆ.
ಕುಡಿಯುವ ನೀರಿನ ಉದ್ದೇಶಕ್ಕಾಗಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಮೂಲಕ ಜಿಲ್ಲಾಧಿಕಾರಿಗಳಿಗೆ ಒಟ್ಟು ₹117 ಕೋಟಿ ಬಿಡುಗಡೆ ಮಾಡಲಾಗಿದೆ. ಸಣ್ಣ ಜಿಲ್ಲೆಗಳಿಗೆ ತಲಾ ₹3 ಕೋಟಿ ಹಾಗೂ ದೊಡ್ಡ ಜಿಲ್ಲೆಗಳಿಗೆ ತಲಾ ₹5ರಿಂದ ₹6 ಕೋಟಿವರೆಗೆ ಅನುದಾನ ನೀಡಲಾಗಿದೆ.
ಪರಿಸ್ಥಿತಿ ಉಲ್ಬಣಿಸಿದ ಬಳಿಕ ರಾಜ್ಯದ ಗ್ರಾಮೀಣ ಕ್ಷೇತ್ರಗಳ ಶಾಸಕರಿಗೆ ಪಕ್ಷಾತೀತವಾಗಿ ತಲಾ ₹1 ಕೋಟಿ ರೂಪಾಯಿಯಂತೆ ಒಟ್ಟು ₹189 ಕೋಟಿ ಬಿಡುಗಡೆ ಮಾಡಲಾಗಿದೆ. ಈ ಅನುದಾನವನ್ನು ಬಳಸಿ ಹಲವು ಕಡೆ ಕ್ರಿಯಾ ಯೋಜನೆಗಳನ್ನು ಸಿದ್ಧಪಡಿಸಿ ಹೊಸ ಕೊಳವೆಬಾವಿಗಳನ್ನು ಕೊರೆಸಲಾಗಿದೆ. ಪೈಪ್ಡ್ ವಾಟರ್ ಸಪ್ಲೈ, ಪೈಪ್ಲೈನ್ ವಿಸ್ತರಣೆ ಹಾಗೂ ಹೈಡ್ರೋಫ್ರ್ಯಾಕ್ಚರ್ ಕಾಮಗಾರಿಗಳನ್ನೂ ಕೈಗೊಳ್ಳಲಾಗಿದೆ.
ಅಗತ್ಯವಿರುವ ಕಡೆ SDRF ನಿಧಿಯನ್ನು ಬಳಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ. ಜಿಲ್ಲಾಧಿಕಾರಿಗಳ PD ಖಾತೆಗಳಲ್ಲಿ ಲಭ್ಯವಿರುವ ಸುಮಾರು ₹420 ಕೋಟಿ ಹಣವನ್ನೂ ಕುಡಿಯುವ ನೀರಿನ ಪೂರೈಕೆ ಹಾಗೂ ಜಾನುವಾರುಗಳಿಗೆ ಮೇವಿನ ಅಗತ್ಯಕ್ಕಾಗಿ ಬಳಸುವಂತೆ ನಿರ್ದೇಶಿಸಲಾಗಿದೆ.
ಕುಡಿಯುವ ನೀರು ಮತ್ತು ಜಾನುವಾರುಗಳ ಮೇವಿನ ವಿಷಯದಲ್ಲಿ ಯಾವುದೇ ಕೊರತೆ ಉಂಟಾಗದಂತೆ ಪರಿಸ್ಥಿತಿಯನ್ನು ನಿರಂತರವಾಗಿ ಗಮನಿಸಿ, ಅಗತ್ಯವಿರುವ ಪ್ರತಿಯೊಂದು ಕ್ರಮವನ್ನೂ ಕೈಗೊಳ್ಳುತ್ತಿದ್ದೇವೆ.This media couldn't be displayed. See it on the original post. -
Dr. G Parameshwara
@DrParameshwara
ಫಾರಂ–7 ಅರ್ಜಿಗಳ ಸಲ್ಲಿಕೆ, ಅವುಗಳ ಸಿದ್ಧತೆ ಹಾಗೂ ಅರ್ಜಿಗಳ ಹಿಂದಿರುವ ಪ್ರಕ್ರಿಯೆ ಕುರಿತು ಹಲವು ಪ್ರಶ್ನೆಗಳು ಮೂಡಿವೆ. ಈ ಎಲ್ಲ ಅಂಶಗಳ ಬಗ್ಗೆ ಸಮಗ್ರ ಹಾಗೂ ನಿಷ್ಪಕ್ಷಪಾತ ತನಿಖೆ ನಡೆಯಬೇಕಿದೆ.
ಆರೋಪಗಳಿಗೆ ಸಂಬಂಧಿಸಿದ ಅಗತ್ಯ ದಾಖಲೆಗಳು ಮತ್ತು ಪುರಾವೆಗಳನ್ನು ಸಂಬಂಧಪಟ್ಟ ತನಿಖಾ ಸಂಸ್ಥೆಗಳ ಮುಂದೆ ಸಲ್ಲಿಸಲು ನಾವು ಸಿದ್ಧರಿದ್ದೇವೆ. ಯಾರ ಮೇಲೂ ಪೂರ್ವಾಗ್ರಹದ ಆರೋಪವಲ್ಲ. ತನಿಖೆ ನಡೆಯಲಿ, ಸತ್ಯಾಸತ್ಯತೆ ಬಹಿರಂಗವಾಗಲಿ.
Several questions have arisen over the submission and preparation of Form 7 applications and the process behind them. All these aspects must be examined through a comprehensive and impartial investigation.
We are ready to submit the necessary documents and evidence related to the allegations before the appropriate investigating agencies.
This is not about prejudging anyone. Let there be an investigation, and let the facts come out. -
Dr. G Parameshwara
@DrParameshwara
ಫಾರಂ–7 ಅರ್ಜಿಗಳ ಮೂಲಕ ಅರ್ಹ ಮತದಾರರ ಹೆಸರುಗಳನ್ನು ಅಳಿಸಿರುವ ಆರೋಪದ ಕುರಿತು ಮುಖ್ಯ ಚುನಾವಣಾಧಿಕಾರಿಗಳ ಕಚೇರಿಗೆ ತೆರಳಿ ಮೆಮೊರಾಂಡಂ ಸಲ್ಲಿಸಿ, ಈ ಬಗ್ಗೆ ಸ್ಪಷ್ಟವಾದ ಉತ್ತರ ನೀಡುವಂತೆ ಮನವಿ ಮಾಡಿದ್ದೇವೆ.
ಅರ್ಜಿಗಳ ಸಲ್ಲಿಕೆ ಹಾಗೂ ಮತದಾರರ ಪಟ್ಟಿಯಲ್ಲಿನ ಬದಲಾವಣೆಗಳ ಕುರಿತು ಸಮಗ್ರ ಪರಿಶೀಲನೆ ನಡೆಸುವಂತೆ ಆಗ್ರಹಿಸಿದ್ದೇವೆ. ಜೊತೆಗೆ, ಆರೋಪಗಳಿಗೆ ಸಂಬಂಧಿಸಿದಂತೆ ಎಫ್ಐಆರ್ ದಾಖಲಿಸಿ ಸೂಕ್ತ ತನಿಖೆ ನಡೆಸುವಂತೆಯೂ ಚುನಾವಣಾ ಆಯೋಗವನ್ನು ಕೋರಿದ್ದೇವೆ.
ಮತದಾರರ ಹಕ್ಕುಗಳ ರಕ್ಷಣೆಯಲ್ಲಿ ಯಾವುದೇ ಲೋಪಕ್ಕೆ ಅವಕಾಶವಿರಬಾರದು, ಸತ್ಯಾಸತ್ಯತೆ ತನಿಖೆಯಿಂದ ಹೊರಬರಬೇಕು.
We submitted a memorandum at the Chief Electoral Officer’s office over allegations that eligible voters’ names were deleted through Form 7 applications, and sought a clear response on the matter.
We also called for a comprehensive examination of the applications and the changes made to the electoral rolls, and requested the Election Commission to register an FIR and conduct a proper investigation into the allegations.
There must be no lapse when it comes to protecting voters’ rights. The truth must come out through a fair investigation. -
Dr. G Parameshwara
@DrParameshwara
ಮತದಾರರ ಪಟ್ಟಿಯಿಂದ ಅರ್ಹ ಮತದಾರರ ಹೆಸರುಗಳನ್ನು ಅಳಿಸಿರುವ ಆರೋಪಗಳು ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿವೆ. ಫಾರಂ–7 ಅರ್ಜಿಗಳ ಮೂಲಕ ನಡೆದಿರುವ ಪ್ರಕ್ರಿಯೆಯಲ್ಲಿ ನಿಜವಾಗಿಯೂ ಏನಾಗಿದೆ ಎಂಬುದು ಸಮಗ್ರ ಪರಿಶೀಲನೆಯಿಂದ ಹೊರಬರಬೇಕು.
ಮತದಾರರ ಹಕ್ಕುಗಳು ಮತ್ತು ಚುನಾವಣಾ ಪ್ರಕ್ರಿಯೆಯ ಪಾರದರ್ಶಕತೆಯನ್ನು ಕಾಪಾಡುವುದು ಅತ್ಯಂತ ಅಗತ್ಯ. ಆರೋಪಗಳ ಸತ್ಯಾಸತ್ಯತೆ ತನಿಖೆಯಿಂದ ಬಹಿರಂಗವಾಗಲಿ. ತಪ್ಪು ನಡೆದಿದ್ದರೆ ಹೊಣೆಗಾರರು ಯಾರೆಂಬುದೂ ಸ್ಪಷ್ಟವಾಗಲಿ.
Allegations that eligible voters’ names were deleted from the electoral rolls raise serious questions. A thorough examination must establish what actually happened through the Form 7 process.
Protecting voters’ rights and the transparency of the electoral process is essential. Let an impartial investigation establish the facts and, if wrongdoing occurred, identify those responsible. -
Dr. G Parameshwara
@DrParameshwara
ಮತದಾರರ ಪಟ್ಟಿಯಲ್ಲಿನ ಹೆಸರುಗಳ ಅಳಿಸುವಿಕೆ ಕುರಿತು ಕೇಳಿಬರುತ್ತಿರುವ ಆರೋಪಗಳ ನಡುವೆ, ಫಾರಂ–7 ಅರ್ಜಿಗಳ ಸಾಮೂಹಿಕ ಸಲ್ಲಿಕೆ ಹಲವು ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಒಂದೇ ರೀತಿಯ ಅರ್ಜಿಗಳು ದೊಡ್ಡ ಸಂಖ್ಯೆಯಲ್ಲಿ ಒಂದೇ ಕಡೆ ಸಂಗ್ರಹವಾಗಿ ಸಲ್ಲಿಕೆಯಾಗಿದ್ದರೆ, ಅವುಗಳ ಮೂಲವೇನು? ಮತದಾರರ ವಿವರಗಳು ಹೇಗೆ ಲಭ್ಯವಾದವು? ಅರ್ಜಿಗಳನ್ನು ಸಿದ್ಧಪಡಿಸಿ ಮುದ್ರಿಸಿದವರು ಯಾರು? ಈ ಎಲ್ಲ ಪ್ರಶ್ನೆಗಳಿಗೆ ಸ್ಪಷ್ಟವಾದ ಉತ್ತರ ಸಿಗಬೇಕು.
ಮತದಾರರ ಹಕ್ಕುಗಳ ವಿಚಾರದಲ್ಲಿ ಯಾವುದೇ ಅನುಮಾನಕ್ಕೂ ಅವಕಾಶ ಇರಬಾರದು. ಈ ಆರೋಪಗಳ ಕುರಿತು ಸಮಗ್ರ ಪರಿಶೀಲನೆ ಹಾಗೂ ಪಾರದರ್ಶಕ ತನಿಖೆ ನಡೆದು, ಸತ್ಯಾಸತ್ಯತೆ ಜನರ ಮುಂದೆ ಬಹಿರಂಗವಾಗಬೇಕು.
Amid allegations of voter names being deleted from electoral rolls, the mass submission of Form 7 applications raises serious questions.
If identical applications were collected and submitted in large numbers from a single source, where did they originate? How were voters’ details obtained? Who prepared and printed these applications? These questions need clear answers.
There can be no room for doubt when it comes to voters’ rights. The allegations must be thoroughly examined through a transparent investigation, and the truth must be brought before the people. -
Dr. G Parameshwara
@DrParameshwara
2026ರ ನೈಋತ್ಯ ಮುಂಗಾರು ಅವಧಿಯಲ್ಲಿ ಕರ್ನಾಟಕವು ಶೇ.35ರಷ್ಟು ಮಳೆಯ ಕೊರತೆ ಎದುರಿಸಿದ್ದು, ಕೇವಲ 551 ಮಿ.ಮೀ. ಮಳೆ ದಾಖಲಾಗಿದೆ. ಇದು 1956ರ ನಂತರದ ಎರಡನೇ ಅತಿ ಕಡಿಮೆ ನೈಋತ್ಯ ಮುಂಗಾರು ಮಳೆಯಾಗಿದೆ. ರಾಜ್ಯದ 31 ಜಿಲ್ಲೆಗಳ ಪೈಕಿ 30 ಜಿಲ್ಲೆಗಳಲ್ಲಿ ಹಾಗೂ 240 ತಾಲ್ಲೂಕುಗಳ ಪೈಕಿ 209 ತಾಲ್ಲೂಕುಗಳಲ್ಲಿ ಮಳೆಯ ಕೊರತೆ ದಾಖಲಾಗಿದ್ದು, ಇದರ ಪರಿಣಾಮ ಬರ ಪರಿಸ್ಥಿತಿ ಉಂಟಾಗಿದೆ.
ನೆಲಮಟ್ಟದ ವಾಸ್ತವ ಪರಿಸ್ಥಿತಿಯನ್ನು ಅರಿಯಲು ನಾನು ಸ್ವತಃ ಸಾಕಷ್ಟು ಜಿಲ್ಲೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದೇನೆ. ತಮ್ಮ ಜವಾಬ್ದಾರಿಯಲ್ಲಿರುವ ಪ್ರತಿಯೊಂದು ಜಿಲ್ಲೆ ಹಾಗೂ ತಾಲೂಕಿಗೆ ಭೇಟಿ ನೀಡಿ ವರದಿ ಸಲ್ಲಿಸುವಂತೆ ಎಲ್ಲಾ ಜಿಲ್ಲಾ ಉಸ್ತುವಾರಿ ಸಚಿವರಿಗೂ ಸೂಚಿಸಲಾಗಿತ್ತು. ಈ ನೆಲಮಟ್ಟದ ವರದಿಗಳು ಹಾಗೂ ವೈಜ್ಞಾನಿಕ ಮಾನದಂಡಗಳ ಆಧಾರದ ಮೇಲೆ ರಾಜ್ಯ ಸರ್ಕಾರವು ಬರ ಪರಿಸ್ಥಿತಿಯ ಸಮಗ್ರ ಮೌಲ್ಯಮಾಪನ ನಡೆಸಿದೆ.
During the 2026 Southwest Monsoon, Karnataka recorded a 35% rainfall deficit, receiving just 551 mm of rain -- the second-lowest since 1956. Rainfall deficit affected 30 of 31 districts and 209 of 240 taluks, leading to widespread drought conditions.
I personally visited several districts to assess the ground reality, while District In-charge Ministers were directed to inspect their respective districts and taluks and submit reports.
Based on these field reports and scientific criteria, the State Government has carried out a comprehensive drought assessment. -
Dr. G Parameshwara
@DrParameshwara
ಬರಗಾಲದ ಸಂದರ್ಭದಲ್ಲಿ ಕುಡಿಯುವ ನೀರಿನ ಲಭ್ಯತೆ ಪ್ರಮುಖ ಸವಾಲಾಗಿದೆ. ಮುಂಬರುವ ತಿಂಗಳುಗಳಲ್ಲಿ ಪರಿಸ್ಥಿತಿ ಮತ್ತಷ್ಟು ಗಂಭೀರವಾಗುವ ಸಾಧ್ಯತೆಯನ್ನು ಗಮನದಲ್ಲಿಟ್ಟುಕೊಂಡು ನಮ್ಮ ಸರ್ಕಾರ ಮುಂಜಾಗರೂಕತಾ ಕ್ರಮಗಳನ್ನು ಕೈಗೊಂಡಿದೆ.
ಪ್ರಸ್ತುತ 227 ಟ್ಯಾಂಕರ್ಗಳು ಹಾಗೂ 720 ಬಾಡಿಗೆ ಕೊಳವೆಬಾವಿಗಳ ಮೂಲಕ 861 ಗ್ರಾಮೀಣ ಪ್ರದೇಶಗಳಿಗೆ ಕುಡಿಯುವ ನೀರು ಪೂರೈಸಲಾಗುತ್ತಿದೆ. ಮುಂಬರುವ ತಿಂಗಳಲ್ಲಿ 2,300ಕ್ಕೂ ಹೆಚ್ಚು ಗ್ರಾಮ ಪಂಚಾಯಿತಿಗಳಲ್ಲಿ ನೀರಿನ ಸಮಸ್ಯೆ ಎದುರಾಗುವ ಸಾಧ್ಯತೆಯಿದ್ದು, ಇದಕ್ಕಾಗಿ ತುರ್ತು ಕಾರ್ಯಯೋಜನೆಗಳನ್ನು ಸಿದ್ಧಪಡಿಸಲಾಗಿದೆ.
ಕುಡಿಯುವ ನೀರಿನ ಪೂರೈಕೆಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಮೂಲಕ ರಾಜ್ಯದ ನಿಧಿಯಿಂದ ₹306 ಕೋಟಿ ಬಿಡುಗಡೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಕುಡಿಯುವ ನೀರು ಹಾಗೂ ಒಟ್ಟಾರೆ ನೀರಿನ ಲಭ್ಯತೆಯ ಸವಾಲುಗಳನ್ನು ಎದುರಿಸಲು ಕೇಂದ್ರ ಸರ್ಕಾರದ ಹೆಚ್ಚಿನ ನೆರವು ಅಗತ್ಯವಿದೆ.
Drinking water availability remains a major challenge amid the drought, and our Government has taken precautionary measures for the coming months.
Currently, 861 rural areas are being supplied water through 227 tankers and 720 hired borewells. With over 2,300 Gram Panchayats likely to face shortages, emergency action plans are in place.
The State has released ₹306 crore through the Rural Development and Panchayat Raj Department for drinking water supply. Greater support from the Union Government will be needed to meet the growing water challenge. -
Dr. G Parameshwara
@DrParameshwara
ಬರ ಸಂಕಷ್ಟದಿಂದ ಬಾಧಿತ ರೈತರಿಗೆ ತಕ್ಷಣದ ನೆರವು ಒದಗಿಸಲು ನಮ್ಮ ಸರ್ಕಾರ ಹಲವು ಕ್ರಮಗಳನ್ನು ಕೈಗೊಂಡಿದೆ.
ಬಾಧಿತ ರೈತರಿಗೆ ತಲಾ ₹2,500 ಇನ್ಪುಟ್ ಸಬ್ಸಿಡಿ ನೀಡುವ ನಿರ್ಧಾರ ಕೈಗೊಂಡಿದ್ದು, ಇದರ ಜಾರಿಗೆ ಅಗತ್ಯ ಆದೇಶಗಳನ್ನು ಹೊರಡಿಸಲಾಗಿದೆ. ಬರದ ಪರಿಣಾಮ ತಗ್ಗಿಸಲು ಬೆಳೆ ರಕ್ಷಣೆ, ಮೇವಿನ ಲಭ್ಯತೆ, ಜಾನುವಾರುಗಳ ರಕ್ಷಣೆ ಹಾಗೂ ಗ್ರಾಮೀಣ ಉದ್ಯೋಗಕ್ಕೆ ಸಂಬಂಧಿಸಿದ ಕ್ರಮಗಳನ್ನು ಕೈಗೊಳ್ಳಲಾಗಿದೆ.
ಈ ವರ್ಷ 'ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ'ಯ (PMFBY) ಅಡಿಯಲ್ಲಿ 37.50 ಲಕ್ಷ ರೈತರ ನೋಂದಣಿ ಮಾಡಲಾಗಿದೆ. ಅರ್ಹ ರೈತರ ಬೆಳೆ ವಿಮೆ ಪರಿಹಾರ ಅರ್ಜಿಗಳನ್ನು ವಿಳಂಬವಿಲ್ಲದೆ ಮೌಲ್ಯಮಾಪನ ಮಾಡಿ ವಿಲೇವಾರಿ ಮಾಡುವಂತೆ ಕೇಂದ್ರಕ್ಕೆ ಮನವಿ ಮಾಡಲಾಗಿದೆ.
Our Government has taken several measures to provide immediate relief to farmers affected by drought.
We have decided to provide an input subsidy of ₹2,500 per affected farmer, and the necessary orders have been issued. Measures are also being taken for crop protection, fodder availability, livestock protection and rural employment to reduce the impact of the drought.
This year, 37.50 lakh farmers have been enrolled under the Pradhan Mantri Fasal Bima Yojana (PMFBY). We have also requested the Centre to ensure that eligible crop insurance claims are assessed and settled without delay. -
Dr. G Parameshwara
@DrParameshwara
ಬರ ಪರಿಹಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರಕ್ಕೆ ಈಗಾಗಲೇ 2 ಮೆಮೊರಾಂಡಂಗಳನ್ನು ಸಲ್ಲಿಸಲಾಗಿದ್ದು, 177 ತಾಲ್ಲೂಕುಗಳ ಸುಮಾರು ₹46,000 ಕೋಟಿ ನಷ್ಟದ ಅಂದಾಜು ನೀಡಲಾಗಿದೆ.
ಕೇಂದ್ರದ ಬರ ಅಧ್ಯಯನ ತಂಡಗಳ ಪರಿಶೀಲನೆ ಹಾಗೂ ಉಳಿದ ತಾಲ್ಲೂಕುಗಳ ನಷ್ಟದ ಅಂದಾಜು ಪೂರ್ಣಗೊಂಡ ಬಳಿಕ, 217 ತಾಲ್ಲೂಕುಗಳ ಸಮಗ್ರ ಪರಿಸ್ಥಿತಿಯನ್ನು ಒಳಗೊಂಡ ಮೂರನೇ ಹಾಗೂ ಅಂತಿಮ ಮೆಮೊರಾಂಡಂ ಕೇಂದ್ರಕ್ಕೆ ಸಲ್ಲಿಸಿ, ಸಮಗ್ರ ನಷ್ಟದ ಆಧಾರದಲ್ಲಿ ರಾಜ್ಯಕ್ಕೆ ದೊರೆಯಬೇಕಾದ ಬರ ಪರಿಹಾರಕ್ಕಾಗಿ ಮನವಿ ಮಾಡಲಾಗುವುದು.
Two drought relief memoranda have already been submitted to the Union Government, estimating losses of around ₹46,000 crore across 177 taluks.
After the Central drought assessment teams complete their field inspections and the remaining taluks are assessed, a third and final memorandum covering all 217 taluks will be submitted to the Centre.
Based on the comprehensive loss assessment, Karnataka will seek the drought relief due to the State. -
Dr. G Parameshwara
@DrParameshwara
ರಾಜ್ಯದಲ್ಲಿ ಬರ ಪರಿಸ್ಥಿತಿಯಿಂದ ಉಂಟಾಗಿರುವ ಬೆಳೆ ನಷ್ಟದ ಸಮಗ್ರ ಅಂದಾಜು ನಡೆಸಲಾಗುತ್ತಿದೆ.
ಈವರೆಗೆ 217 ತಾಲ್ಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿದ್ದು, 177 ತಾಲ್ಲೂಕುಗಳಲ್ಲಿ ₹46,000 ಕೋಟಿ ನಷ್ಟದ ಅಂದಾಜು ಮಾಡಲಾಗಿದೆ. ಉಳಿದ 40 ತಾಲ್ಲೂಕುಗಳಲ್ಲೂ ನಷ್ಟದ ಅಂದಾಜು ಪ್ರಗತಿಯಲ್ಲಿದೆ. ಒಟ್ಟಾರೆ ಬರ ನಷ್ಟ ₹50,000–₹60,000 ಕೋಟಿ ತಲುಪುವ ಸಾಧ್ಯತೆಯಿದೆ.
ಸಮಗ್ರ ನಷ್ಟದ ಅಂದಾಜು ಪೂರ್ಣಗೊಂಡ ಬಳಿಕ, ಕೇಂದ್ರದ ಮಾರ್ಗಸೂಚಿಗಳಂತೆ ಬರ ಪರಿಹಾರಕ್ಕಾಗಿ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು. ಬರದಿಂದ ಸಂಕಷ್ಟಕ್ಕೊಳಗಾದ ರೈತರಿಗೆ ಅಗತ್ಯ ಪರಿಹಾರ ದೊರಕಿಸಲು ರಾಜ್ಯ ಸರ್ಕಾರ ತನ್ನ ಪ್ರಯತ್ನವನ್ನು ಮುಂದುವರಿಸಲಿದೆ.
A comprehensive assessment of drought-related crop losses is underway across the State.
Of the 217 drought-affected taluks, losses in 177 taluks are estimated at around ₹46,000 crore, while assessment is underway in the remaining 40 taluks. Total losses may reach ₹50,000–₹60,000 crore.
Once the assessment is complete, the State will seek relief from the Union Government as per the prescribed guidelines and continue working to ensure support reaches drought-affected farmers. -
Dr. G Parameshwara
@DrParameshwara
ಜಪಾನ್ನ ಐಚಿ–ನಗೋಯಾದಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್–2026ರ ಮಹಿಳಾ ಗಾಲ್ಫ್ ತಂಡದ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಗೆದ್ದು, ಅಮೋಘ ಪ್ರದರ್ಶನ ನೀಡಿದ ಅದಿತಿ ಅಶೋಕ್ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು.
ನಿಮ್ಮ ಮುಂದಿನ ಕ್ರೀಡಾ ಪಯಣ ಇನ್ನಷ್ಟು ಯಶಸ್ಸಿನಿಂದ ಕೂಡಿರಲಿ. ಕ್ರೀಡಾ ಪ್ರತಿಭೆಗಳ ಕನಸುಗಳಿಗೆ ಬೆಂಬಲವಾಗಿ ಸರ್ಕಾರ ಸದಾ ನಿಮ್ಮ ಜೊತೆಗಿರಲಿದೆ.
Heartiest congratulations to Aditi Ashok on winning silver in the women’s golf team event at the Asian Games 2026 in Aichi-Nagoya, Japan.
A brilliant performance and another proud moment for Karnataka.
Wishing her even greater success in the journey ahead. Our Government will continue to support our sportspersons in pursuing their dreams and achieving greater heights. -
Dr. G Parameshwara
@DrParameshwara
ಜಪಾನ್ನ ಐಚಿ–ನಗೋಯಾದಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್–2026ರಲ್ಲಿ ಗಾಲ್ಪ್ ಕ್ರೀಡೆಯಲ್ಲಿ ಐತಿಹಾಸಿಕ ಸಾಧನೆಗೈದು ಕರ್ನಾಟಕದ ಕೀರ್ತಿಯನ್ನು ಹೆಚ್ಚಿಸಿರುವ ಕನ್ನಡತಿ ಪ್ರಣವಿ ಅರಸ್ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು.
ವೈಯಕ್ತಿಕ ಸ್ಪರ್ಧೆಯಲ್ಲಿ ಚಿನ್ನದ ಪದಕ ಹಾಗೂ ತಂಡದ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಗೆಲ್ಲುವ ಮೂಲಕ ತಮ್ಮ ಅವಿರತ ಪರಿಶ್ರಮ ಹಾಗೂ ಕೌಶಲ್ಯವನ್ನು ಜಗತ್ತಿಗೆ ಸಾಬೀತುಪಡಿಸಿದ್ದಾರೆ.
ನಿಮ್ಮ ಈ ಸಾಧನೆ ಕರ್ನಾಟಕದ ಯುವ ಕ್ರೀಡಾ ಪ್ರತಿಭೆಗಳಿಗೆ ಸ್ಫೂರ್ತಿಯಾಗಲಿ. ಕ್ರೀಡಾಪಟುಗಳ ಕನಸು ಹಾಗೂ ಸಾಧನೆಗೆ ನಮ್ಮ ಸರ್ಕಾರ ಸದಾ ಬೆಂಬಲವಾಗಿ ನಿಲ್ಲಲಿದೆ.
Heartiest congratulations to Pranavi Urs on a historic performance at the Asian Games 2026 in Aichi-Nagoya, Japan.
Winning gold in the individual golf event and silver in the team event is a remarkable achievement that has made Karnataka proud.
May her success inspire young sportspersons across the State. Our Government will continue to support Karnataka’s athletes in their pursuit of greater heights. -
Dr. G Parameshwara
@DrParameshwara
ರಾಜ್ಯದಲ್ಲಿ ಈ ಬಾರಿ ಮುಂಗಾರು ಮಳೆ ಕೊರತೆಯಾಗುವ ಸಾಧ್ಯತೆ ಇದೆ ಎಂಬ ಹವಾಮಾನ ಇಲಾಖೆಯ ಮುನ್ಸೂಚನೆ ಬಂದ ಮೂರೇ ದಿನಗಳಲ್ಲಿ ನಮ್ಮ ಸರ್ಕಾರ ಉನ್ನತ ಮಟ್ಟದ ಸಭೆ ನಡೆಸಿ ಬರ ಪರಿಸ್ಥಿತಿಯನ್ನು ಎದುರಿಸಲು ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಆರಂಭಿಸಿತ್ತು.
ಏಪ್ರಿಲ್ 16ರಂದು ಅಂದಿನ ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಸಂಬಂಧಪಟ್ಟ ಇಲಾಖೆಗಳ ಸಚಿವರು, ಹಿರಿಯ ಅಧಿಕಾರಿಗಳು, ಎಲ್ಲ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಮಳೆ ಕೊರತೆಯನ್ನು ಗಂಭೀರವಾಗಿ ಪರಿಗಣಿಸಿ, ಸಮನ್ವಯದಿಂದ ಕಾರ್ಯನಿರ್ವಹಿಸುವಂತೆ ಸ್ಪಷ್ಟ ಸೂಚನೆ ನೀಡಲಾಗಿತ್ತು.
ನಂತರ ಮುಖ್ಯಮಂತ್ರಿ ಶ್ರೀ ಡಿ.ಕೆ. ಶಿವಕುಮಾರ್ ಅವರು ಜಿಲ್ಲಾ ಉಸ್ತುವಾರಿ ಸಚಿವರು ತಮ್ಮ ಜಿಲ್ಲೆಗಳಿಗೆ ಭೇಟಿ ನೀಡಿ ಬರ ಪರಿಸ್ಥಿತಿಯನ್ನು ಪರಿಶೀಲಿಸಿ ವರದಿ ಸಲ್ಲಿಸುವಂತೆ ನಿರ್ದೇಶಿಸಿದರು. ಮುಖ್ಯಮಂತ್ರಿ ಹಾಗೂ ನಾನು ಸಹ ಸ್ಥಳೀಯ ಉಸ್ತುವಾರಿ ಸಚಿವರು ಮತ್ತು ಶಾಸಕರೊಂದಿಗೆ ಬರಪೀಡಿತ ಜಿಲ್ಲೆಗಳಿಗೆ ಭೇಟಿ ನೀಡಿ ವಾಸ್ತವ ಪರಿಸ್ಥಿತಿಯನ್ನು ಪರಿಶೀಲಿಸಿದ್ದೇವೆ. ವೀಡಿಯೊ ಕಾನ್ಫರೆನ್ಸ್ ಮೂಲಕ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯತ್ ಸಿಇಒಗಳಿಗೆ ನಿರಂತರವಾಗಿ ಅಗತ್ಯ ನಿರ್ದೇಶನಗಳನ್ನು ನೀಡಲಾಗಿದೆ.
ಈವರೆಗೆ ಬರಪೀಡಿತ ಜಿಲ್ಲೆಗಳಲ್ಲಿ 270 ಸಭೆಗಳು ಹಾಗೂ 832 ಟಾಸ್ಕ್ಫೋರ್ಸ್ ಸಭೆಗಳು ನಡೆದಿವೆ. ಮುಖ್ಯಮಂತ್ರಿಗಳು 8 ಸಭೆಗಳನ್ನು ನಡೆಸಿದ್ದು, ಕಂದಾಯ ಸಚಿವನಾಗಿ ನಾನು 9 ಸಭೆಗಳನ್ನು ನಡೆಸಿದ್ದೇನೆ. ವಿಭಾಗೀಯ ಆಯುಕ್ತರು 10 ಸಭೆಗಳನ್ನು ನಡೆಸಿದ್ದಾರೆ.
ಬರ ಪರಿಸ್ಥಿತಿಯನ್ನು ನಿಭಾಯಿಸುವುದು ಮತ್ತು ಸಂಕಷ್ಟದಲ್ಲಿರುವ ರೈತರಿಗೆ ನೆರವಾಗುವುದು ನಮ್ಮ ಸರ್ಕಾರದ ಅತ್ಯಂತ ಆದ್ಯತೆಯ ವಿಷಯವಾಗಿದೆ. ಮುನ್ಸೂಚನೆ ಬಂದ ದಿನದಿಂದಲೇ ನಾವು ಸಮರೋಪಾದಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಪರಿಸ್ಥಿತಿಯ ಪ್ರತಿಯೊಂದು ಹಂತವನ್ನೂ ನಿರಂತರವಾಗಿ ಮೇಲ್ವಿಚಾರಣೆ ಮಾಡುತ್ತಿದ್ದೇವೆ.This media couldn't be displayed. See it on the original post. -
Dr. G Parameshwara
@DrParameshwara
*Ground Reality of Karnataka’s Drought Explained to the Central Team: A team led by Union Government Joint Secretary Ajit Kumar Sahu is in Karnataka to assess the actual drought situation. Officials have been divided into three teams to inspect conditions across North Karnataka, Central Karnataka and other parts of the State.
The Central drought assessment team has been comprehensively briefed on the rainfall deficit, crop losses, drinking water situation, water availability in reservoirs and lakes, fodder availability for the coming months, measures to prevent distress migration, crop insurance enrolment, input subsidy and the State’s requests for drought relief.
The State Government has already submitted its first and second drought memoranda to the Centre and explained the severity of the situation, including crop losses, rainfall deficit, fodder availability and drinking water concerns.
*₹46,000 Crore Loss in the First Two Phases: When the first memorandum was submitted, losses were estimated at around ₹18,000 crore. Under the Union Government’s prescribed guidelines, Karnataka was eligible to seek around ₹3,700 crore in relief, and we accordingly submitted our request.
In the second phase, losses in the 77 drought-affected taluks were estimated at around ₹27,000 crore, for which approximately ₹3,500 crore in relief was sought. Together, the first two phases account for around ₹46,000 crore in losses, while nearly ₹7,500 crore in relief has been sought as per Central guidelines.
The team has also been briefed on the extent of the rainfall deficit, crop losses, fodder availability, management of drinking water shortages, measures taken to prevent distress migration and the steps required in the coming days.
Around 39 lakh farmers have enrolled for crop insurance in the State, the highest enrolment so far. The team has also been informed about the process of ensuring crop insurance benefits and providing input subsidy to drought-affected farmers.
The State Government has not made any assessment beyond the Union Government’s drought manual or guidelines. Crop losses have been assessed and relief sought strictly within those prescribed norms. We have therefore requested the Central team to visit the affected areas, assess the ground reality and make a fair evaluation based on the actual situation.
The Central team will visit different parts of Karnataka over the next four days and directly assess the drought conditions before arriving at its evaluation.
Information on water availability in the State’s reservoirs has also been shared with the team. Water has not been released from reservoirs for crops in order to safeguard drinking water supplies. The team has been briefed on water shortages in lakes, reservoir storage levels and the need to carefully manage available water in the coming months.
In view of the drought, works generating around 1.27 lakh person-days of employment have already been undertaken. Detailed information has also been provided on measures taken to protect livelihoods in drought-affected areas.
The Central team will take the recent rainfall into account. However, it will have no significant impact on the crop losses already suffered. The State has already witnessed around 82% crop loss. Rainfall over the past two or three days will not benefit crops that have already been damaged, nor has it been sufficient to resolve drinking water concerns. Apart from helping some grass grow in a few places, the recent rainfall offers little benefit.
The rainfall deficit during June, July, August and September and the resulting crop losses are what matter in the drought assessment. A few days of rainfall now cannot reverse the impact of several months of drought, and this too has been explained to the Central team.
*Ground Truthing in the Remaining 23 Taluks: So far, 217 taluks have been declared drought-affected. Ground truthing will also be carried out in the remaining 23 taluks, and those meeting the criteria prescribed under the Union Government’s drought declaration guidelines will be declared drought-affected.
Today, virtually the entire State is under the shadow of drought. The Central team has assured us of a fair assessment. Our request is simple: we are not asking for anything more than what is due, but Karnataka should not receive anything less either. Assess the actual situation fairly and provide the relief legally due to the State under the prescribed guidelines.
*Relief Sought Strictly as per Central Guidelines: We are confident of receiving fair relief because the State Government has not sought anything beyond the guidelines prescribed by the Centre.
Had we sought funds beyond those norms, there could have been grounds for rejection. But we have assessed the losses and sought relief strictly in accordance with the Union Government’s own guidelines.
The State Government will not presume in advance that the Centre will deny relief. We must fulfil our responsibility. We have declared drought and submitted our memoranda by following the guidelines laid down by the Union Government. We will neither assume that relief will be denied nor prejudge the Centre’s decision. We are asking only for the relief that Karnataka is legally entitled to under the prescribed norms.
Last time, when Karnataka did not receive the drought relief due to it, the State Government had to approach the Supreme Court for the relief within the legal framework. This time, we are hopeful that such a situation will not arise and that the Union Government will provide Karnataka the relief it is entitled to.
At the beginning of the meeting, Chief Minister Shri D.K. Shivakumar explained the seriousness of Karnataka’s drought situation to the Central team and also sought a fair assessment based on the actual conditions in the State.
We are not asking for any additional or special assistance. Our only request is that Karnataka’s situation be assessed fairly and that the State receive what is due under the rules.
– My remarks to the media after the meeting with the high-level Central team visiting Karnataka to assess the rainfall deficit and drought situation. -
Dr. G Parameshwara
@DrParameshwara
*ರಾಜ್ಯದ ಬರ ಪರಿಸ್ಥಿತಿಯ ನೈಜ ಚಿತ್ರಣ ಕೇಂದ್ರ ತಂಡಕ್ಕೆ ಮನವರಿಕೆ: ಕೇಂದ್ರ ಸರ್ಕಾರದ ಜಂಟಿ ಕಾರ್ಯದರ್ಶಿ ಅಜಿತ್ ಕುಮಾರ್ ಸಾಹೂ ಅವರ ನೇತೃತ್ವದ ತಂಡ ರಾಜ್ಯದ ಬರ ಪರಿಸ್ಥಿತಿಯ ವಾಸ್ತವ ಸ್ಥಿತಿಯನ್ನು ಪರಿಶೀಲಿಸಲು ಕರ್ನಾಟಕಕ್ಕೆ ಆಗಮಿಸಿದ್ದು, ಅಧಿಕಾರಿಗಳನ್ನು ಮೂರು ತಂಡಗಳಾಗಿ ವಿಂಗಡಿಸಿ ಉತ್ತರ ಕರ್ನಾಟಕ, ಮಧ್ಯ ಕರ್ನಾಟಕ ಹಾಗೂ ರಾಜ್ಯದ ಇತರ ಭಾಗಗಳಲ್ಲಿ ಪರಿಶೀಲನೆ ನಡೆಸಲಾಗುತ್ತಿದೆ.
ರಾಜ್ಯದಲ್ಲಿನ ಮಳೆ ಕೊರತೆ, ಬೆಳೆ ನಷ್ಟ, ಕುಡಿಯುವ ನೀರಿನ ಸಮಸ್ಯೆ, ಜಲಾಶಯ ಮತ್ತು ಕೆರೆಗಳಲ್ಲಿನ ನೀರಿನ ಲಭ್ಯತೆ, ಮುಂದಿನ ದಿನಗಳಿಗೆ ಮೇವು ಸಂಗ್ರಹ, ಜನರ ಗುಳೆ ತಡೆಗೆ ಕೈಗೊಂಡಿರುವ ಕ್ರಮಗಳು, ರೈತರ ಬೆಳೆ ವಿಮೆ ನೋಂದಣಿ, ಇನ್ಪುಟ್ ಸಬ್ಸಿಡಿ ಹಾಗೂ ಬರ ಪರಿಹಾರಕ್ಕೆ ರಾಜ್ಯ ಸಲ್ಲಿಸಿರುವ ಮನವಿಗಳ ಕುರಿತು ಕೇಂದ್ರದ ಬರ ಅಧ್ಯಯನ ತಂಡಕ್ಕೆ ಸಮಗ್ರವಾಗಿ ವಿವರಿಸಲಾಗಿದೆ.
ರಾಜ್ಯ ಸರ್ಕಾರ ಈಗಾಗಲೇ ಕೇಂದ್ರಕ್ಕೆ ಮೊದಲ ಹಾಗೂ ಎರಡನೇ ಹಂತದ ಬರ ಮೆಮೊರಾಂಡಮ್ಗಳನ್ನು ಸಲ್ಲಿಸಿದ್ದು, ರಾಜ್ಯದಲ್ಲಿ ಉಂಟಾಗಿರುವ ಬೆಳೆ ನಷ್ಟ, ಮಳೆ ಕೊರತೆ, ಮೇವು ಮತ್ತು ಕುಡಿಯುವ ನೀರಿನ ಪರಿಸ್ಥಿತಿ ಸೇರಿದಂತೆ ಬರದ ಗಂಭೀರತೆಯನ್ನು ಕೇಂದ್ರ ತಂಡಕ್ಕೆ ತಿಳಿಸಿದ್ದೇವೆ.
*ಮೊದಲ ಹಾಗೂ ಎರಡನೇ ಹಂತ ಸೇರಿ ₹46,000 ಕೋಟಿ ನಷ್ಟ : ಮೊದಲ ಮೆಮೊರಾಂಡಮ್ ಸಲ್ಲಿಸಿದ ಸಂದರ್ಭದಲ್ಲಿ ರಾಜ್ಯದಲ್ಲಿ ಸುಮಾರು ₹18,000 ಕೋಟಿ ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿತ್ತು. ಕೇಂದ್ರ ಸರ್ಕಾರ ನಿಗದಿಪಡಿಸಿರುವ ಮಾರ್ಗಸೂಚಿಗಳ ಅನ್ವಯ ರಾಜ್ಯವು ಪರಿಹಾರವಾಗಿ ಕೇಳಲು ಅರ್ಹವಾಗಿರುವ ಮೊತ್ತ ಸುಮಾರು ₹3,700 ಕೋಟಿ. ಅದರಂತೆ ನಾವು ಮನವಿ ಮಾಡಿದ್ದೇವೆ.
ಎರಡನೇ ಹಂತದಲ್ಲಿ ಬರಪೀಡಿತವೆಂದು ಘೋಷಿಸಲಾಗಿರುವ 77 ತಾಲೂಕುಗಳಲ್ಲಿ ಸುಮಾರು ₹27,000 ಕೋಟಿ ನಷ್ಟವಾಗಿದೆ ಎಂದು ಅಂದಾಜಿಸಲಾಗಿದ್ದು, ಈ ಹಂತಕ್ಕೆ ಸುಮಾರು ₹3,500 ಕೋಟಿ ಪರಿಹಾರ ಕೋರಲಾಗಿದೆ. ಎರಡೂ ಹಂತಗಳನ್ನು ಸೇರಿಸಿದರೆ ರಾಜ್ಯದಲ್ಲಿ ಸುಮಾರು ₹46,000 ಕೋಟಿ ನಷ್ಟವಾಗಿದ್ದು, ಕೇಂದ್ರ ಸರ್ಕಾರದ ಮಾರ್ಗಸೂಚಿಗಳ ಪ್ರಕಾರ ಒಟ್ಟಾರೆಯಾಗಿ ಸುಮಾರು ₹7,500 ಕೋಟಿ ಪರಿಹಾರಕ್ಕೆ ಮನವಿ ಸಲ್ಲಿಸಲಾಗಿದೆ.
ರಾಜ್ಯದಲ್ಲಿ ಮಳೆಯ ಪ್ರಮಾಣ ಎಷ್ಟು ಕಡಿಮೆಯಾಗಿದೆ, ಬೆಳೆ ನಷ್ಟದ ಪ್ರಮಾಣ ಎಷ್ಟಿದೆ, ಮುಂದಿನ ದಿನಗಳಿಗೆ ಎಷ್ಟು ಮೇವು ಲಭ್ಯವಿದೆ, ಕುಡಿಯುವ ನೀರಿನ ಸಮಸ್ಯೆಯನ್ನು ಹೇಗೆ ನಿಭಾಯಿಸಲಾಗುತ್ತಿದೆ, ಬರದಿಂದಾಗಿ ಜನರು ಗುಳೆ ಹೋಗುವುದನ್ನು ತಡೆಯಲು ಯಾವ ಕ್ರಮಗಳನ್ನು ಕೈಗೊಳ್ಳಲಾಗಿದೆ ಮತ್ತು ಮುಂದಿನ ದಿನಗಳಲ್ಲಿ ಕೈಗೊಳ್ಳಬೇಕಾದ ಕ್ರಮಗಳೇನು ಎಂಬ ಎಲ್ಲ ಮಾಹಿತಿಯನ್ನು ಕೇಂದ್ರ ತಂಡಕ್ಕೆ ವಿವರಿಸಲಾಗಿದೆ.
ರಾಜ್ಯದಲ್ಲಿ ಸುಮಾರು 39 ಲಕ್ಷ ರೈತರು ಬೆಳೆ ವಿಮೆಗೆ ನೋಂದಣಿ ಮಾಡಿಕೊಂಡಿದ್ದು, ಇದು ಇದುವರೆಗಿನ ಅತ್ಯಧಿಕ ನೋಂದಣಿಯಾಗಿದೆ. ಈ ರೈತರಿಗೆ ಬೆಳೆ ವಿಮೆ ದೊರಕಿಸುವ ಪ್ರಕ್ರಿಯೆ, ಬರದಿಂದ ಸಂಕಷ್ಟಕ್ಕೆ ಒಳಗಾಗಿರುವ ರೈತರಿಗೆ ಇನ್ಪುಟ್ ಸಬ್ಸಿಡಿ ನೀಡುವುದು ಸೇರಿದಂತೆ ಹಲವು ವಿಷಯಗಳನ್ನು ಕೇಂದ್ರ ತಂಡದ ಗಮನಕ್ಕೆ ತರಲಾಗಿದೆ.
ರಾಜ್ಯ ಸರ್ಕಾರ ಯಾವುದೇ ಅಂದಾಜನ್ನೂ ಕೇಂದ್ರ ಸರ್ಕಾರದ ಬರ ಕೈಪಿಡಿ ಅಥವಾ ಮಾರ್ಗಸೂಚಿಗಳನ್ನು ಮೀರಿ ಮಾಡಿಲ್ಲ. ಕೇಂದ್ರದ ಮಾರ್ಗಸೂಚಿಗಳ ವ್ಯಾಪ್ತಿಯಲ್ಲಿಯೇ ಬೆಳೆ ನಷ್ಟದ ಅಂದಾಜು ಮಾಡಿದ್ದೇವೆ ಮತ್ತು ಪರಿಹಾರದ ಮೊತ್ತವನ್ನೂ ಕೇಳಿದ್ದೇವೆ. ಹೀಗಾಗಿ ಕೇಂದ್ರ ತಂಡ ಸ್ಥಳಕ್ಕೆ ತೆರಳಿ ಪರಿಸ್ಥಿತಿಯನ್ನು ಕಣ್ಣಾರೆ ನೋಡಿ, ನೈಜ ಸ್ಥಿತಿಯನ್ನು ಆಧರಿಸಿ ನ್ಯಾಯಯುತವಾಗಿ ಮೌಲ್ಯಮಾಪನ ಮಾಡಬೇಕು ಎಂದು ಮನವಿ ಮಾಡಿದ್ದೇವೆ.
ಕೇಂದ್ರ ತಂಡವು ಇಂದಿನಿಂದ ನಾಲ್ಕು ದಿನಗಳ ಕಾಲ ರಾಜ್ಯದ ವಿವಿಧ ಭಾಗಗಳಿಗೆ ಭೇಟಿ ನೀಡಿ ಬರದ ಸ್ಥಿತಿಯನ್ನು ನೇರವಾಗಿ ಪರಿಶೀಲಿಸಲಿದೆ. ನಂತರ ವಾಸ್ತವ ಪರಿಸ್ಥಿತಿಯನ್ನು ಆಧರಿಸಿ ಮೌಲ್ಯಮಾಪನ ನಡೆಸಲಿದೆ.
ರಾಜ್ಯದ ಜಲಾಶಯಗಳಲ್ಲಿ ಲಭ್ಯವಿರುವ ನೀರಿನ ಪ್ರಮಾಣದ ಮಾಹಿತಿಯನ್ನೂ ಕೇಂದ್ರ ತಂಡಕ್ಕೆ ನೀಡಲಾಗಿದೆ. ಕುಡಿಯುವ ನೀರಿಗೆ ತೊಂದರೆಯಾಗಬಾರದು ಎಂಬ ಕಾರಣಕ್ಕೆ ಜಲಾಶಯಗಳಿಂದ ಬೆಳೆಗಳಿಗೆ ನೀರು ಹರಿಸಿಲ್ಲ. ಕೆರೆಗಳಲ್ಲಿ ನೀರಿನ ಕೊರತೆ, ಜಲಾಶಯಗಳಲ್ಲಿ ಇರುವ ನೀರಿನ ಪ್ರಮಾಣ ಹಾಗೂ ಲಭ್ಯವಿರುವ ನೀರನ್ನು ಮುಂದಿನ ದಿನಗಳಲ್ಲಿ ಯಾವ ರೀತಿಯಲ್ಲಿ ಸಮರ್ಪಕವಾಗಿ ಬಳಸಬೇಕು ಎಂಬ ಕುರಿತು ತಂಡಕ್ಕೆ ವಿವರಿಸಲಾಗಿದೆ.
ಬರ ಪರಿಸ್ಥಿತಿ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಈಗಾಗಲೇ ಸುಮಾರು 1.27 ಲಕ್ಷ ಮಾನವ ದಿನಗಳ ಉದ್ಯೋಗ ಸೃಷ್ಟಿಸುವ ಕೆಲಸಗಳನ್ನು ಕೈಗೊಳ್ಳಲಾಗಿದೆ. ಬರಪೀಡಿತ ಪ್ರದೇಶಗಳಲ್ಲಿ ಜನರ ಜೀವನೋಪಾಯ ರಕ್ಷಿಸಲು ಕೈಗೊಂಡಿರುವ ಕ್ರಮಗಳ ಬಗ್ಗೆಯೂ ಕೇಂದ್ರ ತಂಡಕ್ಕೆ ವಿವರವಾದ ಮಾಹಿತಿ ನೀಡಲಾಗಿದೆ.
ಇತ್ತೀಚಿನ ಮಳೆಯನ್ನೂ ಕೇಂದ್ರ ತಂಡ ಪರಿಗಣಿಸಲಿದೆ. ಆದರೆ ಈಗಾಗಲೇ ಸಂಭವಿಸಿರುವ ಬೆಳೆ ನಷ್ಟದ ಮೇಲೆ ಈ ಮಳೆಯಿಂದ ಯಾವುದೇ ಮಹತ್ವದ ಪರಿಣಾಮ ಉಂಟಾಗುವುದಿಲ್ಲ. ರಾಜ್ಯದಲ್ಲಿ ಈಗಾಗಲೇ ಶೇ.82ರಷ್ಟು ಬೆಳೆ ನಷ್ಟವಾಗಿದೆ. ಕಳೆದ ಎರಡು ಮೂರು ದಿನಗಳಿಂದ ಸುರಿದಿರುವ ಮಳೆಯಿಂದ ಈಗಾಗಲೇ ಹಾನಿಯಾಗಿರುವ ಬೆಳೆಗಳಿಗೆ ಯಾವುದೇ ಅನುಕೂಲವಾಗುವುದಿಲ್ಲ. ಕುಡಿಯುವ ನೀರಿನ ಸಮಸ್ಯೆಯನ್ನೂ ಪರಿಹರಿಸುವಷ್ಟು ಪ್ರಮಾಣದಲ್ಲಿ ಮಳೆಯಾಗಿಲ್ಲ. ಅಲ್ಲಲ್ಲಿ ಸ್ವಲ್ಪ ಹುಲ್ಲು ಬೆಳೆಯಲು ನೆರವಾಗಬಹುದು ಎಂಬುದನ್ನು ಹೊರತುಪಡಿಸಿದರೆ ಹೆಚ್ಚಿನ ಪ್ರಯೋಜನವಿಲ್ಲ.
ಜೂನ್, ಜುಲೈ, ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳುಗಳಲ್ಲಿನ ಮಳೆ ಕೊರತೆ ಹಾಗೂ ಅದರ ಪರಿಣಾಮವಾಗಿ ಉಂಟಾದ ಬೆಳೆ ನಷ್ಟವೇ ಬರ ಮೌಲ್ಯಮಾಪನದಲ್ಲಿ ಮುಖ್ಯವಾಗುತ್ತದೆ. ಈಗ ಒಂದೆರಡು ದಿನ ಮಳೆಯಾಗಿದೆ ಎಂಬ ಕಾರಣಕ್ಕೆ ಕಳೆದ ಹಲವು ತಿಂಗಳ ಬರದ ಪರಿಣಾಮ ಬದಲಾಗುವುದಿಲ್ಲ. ಈ ವಿಷಯವನ್ನೂ ಕೇಂದ್ರ ತಂಡಕ್ಕೆ ವಿವರಿಸಲಾಗಿದೆ.
*ಉಳಿದ 23 ತಾಲೂಕುಗಳಲ್ಲೂ ಗ್ರೌಂಡ್ ಟ್ರೂಥಿಂಗ್ : ರಾಜ್ಯದಲ್ಲಿ ಈಗಾಗಲೇ 217 ತಾಲೂಕುಗಳನ್ನು ಬರಪೀಡಿತ ಪ್ರದೇಶಗಳೆಂದು ಘೋಷಿಸಲಾಗಿದೆ. ಉಳಿದಿರುವ 23 ತಾಲೂಕುಗಳಲ್ಲಿಯೂ ಗ್ರೌಂಡ್ ಟ್ರೂಥಿಂಗ್ ನಡೆಸಲಾಗುವುದು. ಕೇಂದ್ರ ಸರ್ಕಾರದ ಬರ ಘೋಷಣೆ ಮಾರ್ಗಸೂಚಿಗಳ ಮಾನದಂಡಗಳಿಗೆ ಒಳಪಡುವ ತಾಲೂಕುಗಳನ್ನು ಬರಪೀಡಿತ ತಾಲೂಕುಗಳೆಂದು ಘೋಷಿಸಲಾಗುವುದು.
ಒಟ್ಟಾರೆಯಾಗಿ ಇಡೀ ರಾಜ್ಯ ಇಂದು ಬರದ ಛಾಯೆಯಲ್ಲಿದೆ. ಕೇಂದ್ರ ತಂಡವು ರಾಜ್ಯದ ಪರಿಸ್ಥಿತಿಯನ್ನು ನ್ಯಾಯಯುತವಾಗಿ ಮೌಲ್ಯಮಾಪನ ಮಾಡುವುದಾಗಿ ತಿಳಿಸಿದೆ. ನಾವು ಕೂಡ ಅವರಿಗೆ ಒಂದೇ ಮಾತನ್ನು ಹೇಳಿದ್ದೇವೆ. ನಮಗೆ ಹೆಚ್ಚಾಗಿ ಏನನ್ನೂ ನೀಡಬೇಕಿಲ್ಲ, ಕಡಿಮೆಯೂ ಮಾಡಬೇಡಿ. ರಾಜ್ಯದ ನೈಜ ಪರಿಸ್ಥಿತಿಯನ್ನು ನೋಡಿ ನ್ಯಾಯಯುತವಾಗಿ ಮೌಲ್ಯಮಾಪನ ಮಾಡಿ, ನಮಗೆ ಕಾನೂನು ಮತ್ತು ಮಾರ್ಗಸೂಚಿಗಳ ಪ್ರಕಾರ ಸಿಗಬೇಕಾದ ಪರಿಹಾರವನ್ನು ನೀಡಿ ಎಂದು ಮನವಿ ಮಾಡಿದ್ದೇವೆ.
*ಕೇಂದ್ರದ ಮಾರ್ಗಸೂಚಿಗಳನ್ನೇ ಪಾಲಿಸಿ ಪರಿಹಾರ ಕೋರಿದ್ದೇವೆ : ರಾಜ್ಯ ಸರ್ಕಾರ ಕೇಂದ್ರದ ಮಾರ್ಗಸೂಚಿಗಳನ್ನು ಮೀರಿ ಯಾವುದೇ ಪರಿಹಾರ ಕೇಳಿಲ್ಲವಾದ್ದರಿಂದ ನ್ಯಾಯಯುತ ಪರಿಹಾರ ದೊರೆಯುವ ವಿಶ್ವಾಸವಿದೆ.
ಕೇಂದ್ರದ ಮಾರ್ಗಸೂಚಿಗಳನ್ನು ಮೀರಿ ನಾವು ಹೆಚ್ಚುವರಿ ಹಣ ಕೇಳಿದ್ದರೆ ಅದನ್ನು ತಿರಸ್ಕರಿಸುವ ಸಾಧ್ಯತೆ ಇರುತ್ತಿತ್ತು. ಆದರೆ ನಾವು ಅವರು ನಿಗದಿಪಡಿಸಿರುವ ಮಾರ್ಗಸೂಚಿಗಳ ಪ್ರಕಾರವೇ ನಷ್ಟದ ಅಂದಾಜು ಮಾಡಿ ಪರಿಹಾರ ಕೇಳಿದ್ದೇವೆ.
ಕೇಂದ್ರ ಸರ್ಕಾರ ಪರಿಹಾರ ನೀಡುವುದಿಲ್ಲ ಎಂದು ರಾಜ್ಯ ಸರ್ಕಾರ ಮೊದಲೇ ಊಹೆ ಮಾಡಿಕೊಳ್ಳುವುದಿಲ್ಲ. ನಮ್ಮ ಕರ್ತವ್ಯವನ್ನು ನಾವು ಮಾಡಬೇಕು. ಕೇಂದ್ರ ಸರ್ಕಾರವೇ ನೀಡಿರುವ ಮಾರ್ಗಸೂಚಿಗಳನ್ನು ಪಾಲಿಸಿ ಬರ ಘೋಷಿಸಿದ್ದೇವೆ ಮತ್ತು ಮೆಮೊರಾಂಡಮ್ ಸಲ್ಲಿಸಿದ್ದೇವೆ. ಅವರು ಪರಿಹಾರ ನೀಡುವುದಿಲ್ಲ ಎಂದು ಮೊದಲೇ ಊಹಿಸುವುದಾಗಲಿ, ಅವರ ತೀರ್ಮಾನವನ್ನು ಮುಂಚಿತವಾಗಿಯೇ ನಿರ್ಧರಿಸುವುದಾಗಲಿ ಮಾಡುವುದಿಲ್ಲ. ರಾಜ್ಯಕ್ಕೆ ಕಾನೂನುಬದ್ಧವಾಗಿ ಮತ್ತು ಮಾರ್ಗಸೂಚಿಗಳ ಪ್ರಕಾರ ಸಿಗಬೇಕಾದ ಪರಿಹಾರವನ್ನು ನೀಡಬೇಕು ಎಂದು ಕೇಳುತ್ತೇವೆ.
ಹಿಂದಿನ ಬಾರಿ ರಾಜ್ಯಕ್ಕೆ ಸಿಗಬೇಕಾದ ಬರ ಪರಿಹಾರ ದೊರೆಯದ ಹಿನ್ನೆಲೆಯಲ್ಲಿ ಕಾನೂನಿನ ಚೌಕಟ್ಟಿನೊಳಗೆ ಪರಿಹಾರ ಪಡೆಯಲು ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್ ಮೊರೆ ಹೋಗಬೇಕಾಯಿತು. ಆದರೆ ಈ ಬಾರಿ ಆ ಹಂತಕ್ಕೆ ಹೋಗುವ ಪರಿಸ್ಥಿತಿ ಬರುವುದಿಲ್ಲ ಮತ್ತು ಕೇಂದ್ರ ಸರ್ಕಾರ ರಾಜ್ಯಕ್ಕೆ ಸಿಗಬೇಕಾದ ಪರಿಹಾರವನ್ನು ನೀಡಲಿದೆ ಎಂಬ ವಿಶ್ವಾಸವಿದೆ.
ಸಭೆಯ ಆರಂಭದಲ್ಲಿಯೇ ಮುಖ್ಯಮಂತ್ರಿ ಶ್ರೀ ಡಿ.ಕೆ. ಶಿವಕುಮಾರ್ ಅವರು ರಾಜ್ಯದಲ್ಲಿನ ಬರ ಪರಿಸ್ಥಿತಿಯ ಗಂಭೀರತೆಯನ್ನು ಕೇಂದ್ರ ತಂಡಕ್ಕೆ ವಿವರಿಸಿದ್ದಾರೆ. ರಾಜ್ಯದ ನೈಜ ಪರಿಸ್ಥಿತಿಯನ್ನು ನ್ಯಾಯಯುತವಾಗಿ ಮೌಲ್ಯಮಾಪನ ಮಾಡಿ ಪರಿಹಾರ ಒದಗಿಸುವಂತೆ ಅವರು ಕೂಡ ಮನವಿ ಮಾಡಿದ್ದಾರೆ.
ನಮಗೆ ಯಾವುದೇ ಹೆಚ್ಚುವರಿ ಅಥವಾ ವಿಶೇಷ ನೆರವು ಬೇಕು ಎಂದು ಕೇಳುತ್ತಿಲ್ಲ. ನಿಯಮಗಳ ಪ್ರಕಾರ ನಮಗೆ ಏನು ಸಿಗಬೇಕೋ ಅದನ್ನು ನ್ಯಾಯಯುತವಾಗಿ ಮೌಲ್ಯಮಾಪನ ಮಾಡಿ ನೀಡಿ ಎಂಬುದಷ್ಟೇ ನಮ್ಮ ಮನವಿ.
• ರಾಜ್ಯದಲ್ಲಿ ಮಳೆ ಕೊರತೆ ಹಾಗೂ ಬರದ ನೈಜ ಪರಿಸ್ಥಿತಿಯನ್ನು ಪರಿಶೀಲಿಸಲು ಆಗಮಿಸಿರುವ ಕೇಂದ್ರ ಸರ್ಕಾರದ ಉನ್ನತ ಮಟ್ಟದ ಅಧಿಕಾರಿಗಳ ತಂಡದೊಂದಿಗೆ ನಡೆದ ಸಭೆಯ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದೆ. -
Dr. G Parameshwara
@DrParameshwara
My remarks at the meeting with the Inter-Ministerial Central Team (IMCT), led by Shri Ajit Kumar Sahu, Joint Secretary, Union Ministry of Agriculture & Farmers Welfare, which is visiting Karnataka to assess the ground reality of the rainfall deficit and drought situation:
Karnataka is facing one of the most severe droughts witnessed in recent decades, with a serious impact on agriculture, horticulture, drinking water and the livelihoods of rural communities.
This is one of the most severe drought situations we have seen in our time. In many places, crops germinated and dried up after producing barely two leaves. When some rainfall occurred, farmers sowed again, but the second sowing also failed. If you visit the fields today, you will find that in many places, practically no crop remains.
The Chief Ministers — Shri Siddaramaiah and Shri D.K. Shivakumar — and the State Government have repeatedly written to the Prime Minister, the Union Home Minister and the Union Agriculture Minister seeking the Centre’s intervention and drought relief. I too have written to the concerned Union Ministers. However, not a single response has been received so far. We request you to kindly look into this matter and help us take the relief process forward.
The present drought is unprecedented in both its severity and geographical spread. Karnataka has now declared 217 of its 240 taluks drought-affected, covering almost the entire State. In the 177 taluks assessed so far, crop losses have been reported across approximately 47.09 lakh hectares, with the estimated economic loss reaching ₹46,324.50 crore.
The State submitted its first memorandum seeking ₹3,705.30 crore under the NDRF for 101 drought-affected taluks. A supplementary memorandum submitted on October 1 sought a further ₹3,437.34 crore for an additional 76 taluks. Together, Karnataka has sought ₹7,142.64 crore in assistance for the 177 taluks assessed under the first two memorandums.
The State Government has strictly followed the criteria prescribed in the Union Government’s Manual for Drought Management while assessing and declaring drought-affected areas.
Even during the special session, several legislators demanded that their taluks be declared drought-affected. However, we made it clear that no declaration could be made outside the Union Government’s guidelines. We have strictly followed the Drought Management Manual and every prescribed criterion.
The Central team now has an opportunity to personally witness the situation in the affected districts.
We are not asking for anything extra. Our only request is for a fair assessment. Please examine the ground reality and help ensure that Karnataka receives the assistance that is genuinely due to the State.
The drought has been caused by a persistent and widespread rainfall deficit throughout the monsoon season. Thirty of Karnataka’s 31 districts have recorded deficient rainfall, while rainfall deficit has been reported in 209 of the State’s 240 taluks.
To understand the situation on the ground, the Chief Minister, District In-charge Ministers and I have visited drought-affected areas. I have personally visited around 10 to 15 districts. All District In-charge Ministers were instructed to visit every district and taluk under their responsibility and submit reports. The State Government’s assessment has been based on these ground-level reports as well as scientific criteria.
*Drinking Water Is a Major Concern: One of the biggest challenges arising from the drought is the drinking water situation, which could worsen further during the coming summer. The State Government has already initiated drought-management measures and released funds for drinking water.
*Water Supply and Other Emergency Measures: At present, drinking water is being supplied to 861 rural areas through 227 tankers and 720 hired borewells. The State Government estimates that more than 2,300 Gram Panchayats may face drinking water shortages in the coming months, and contingency action plans have been prepared accordingly.
To ensure drinking water supply in rainfall-deficient areas, the State Government has released ₹306 crore from its own resources through the Rural Development and Panchayat Raj Department.
However, releasing funds alone cannot resolve the problem. The availability of drinking water and water resources in general will remain major challenges. We will require greater support from the Centre in the coming months to manage the situation.
*₹2,500 Immediate Assistance to Affected Farmers: The State Government has already announced an immediate input subsidy of ₹2,500 per affected farmer, and orders have been issued to implement the decision.
Measures have also been taken for crop protection, fodder availability, livestock protection and rural employment to mitigate the impact of the drought.
This year, Karnataka has registered a record 37.50 lakh farmers under the Pradhan Mantri Fasal Bima Yojana (PMFBY). We have requested that eligible crop insurance claims be assessed and settled without delay.
*Include All Affected Taluks in the Final Assessment: In the final assessment, we request that the team consider not only the 177 taluks covered under the first two memorandums, but also the additional 40 taluks subsequently declared drought-affected, along with any further crop damage identified during the final assessment.
Once the complete assessment is concluded, the State Government estimates that the total crop area affected by drought could reach around 55 lakh hectares.
We also request that the State’s demand for an early revision of the existing input subsidy norms be considered so that the compensation provided to farmers reflects the current cost of agricultural inputs.
The Central team should also intervene to ensure the timely payment of crop insurance compensation and that banks provide loan restructuring and other financial support to drought-affected farmers in accordance with RBI guidelines.
The State Government has taken every possible measure within its capacity. We now look forward to timely support from the Union Government.
The team will be able to personally witness the severity of the drought during its field visits. Karnataka has complied with every criterion prescribed by the Union Government.
Our request is simple: assess the situation fairly and help ensure timely assistance to protect our farmers and address the drinking water crisis. -
Dr. G Parameshwara
@DrParameshwara
ಮಳೆ ಕೊರತೆ ಮತ್ತು ಬರದ ನೈಜ ಪರಿಸ್ಥಿತಿ ಪರಿಶೀಲಿಸಲು ರಾಜ್ಯಕ್ಕೆ ಆಗಮಿಸಿರುವ ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಸಚಿವಾಲಯದ ಜಂಟಿ ಕಾರ್ಯದರ್ಶಿ ಅಜಿತ್ ಕುಮಾರ್ ಸಾಹು ನೇತೃತ್ವದ ಅಂತರ್-ಸಚಿವಾಲಯದ ಕೇಂದ್ರ ತಂಡದೊಂದಿಗೆ (IMCT) ನಡೆದ ಸಭೆಯಲ್ಲಿ ನನ್ನ ಮಾತುಗಳು..
ಇತ್ತೀಚಿನ ದಶಕಗಳಲ್ಲಿ ರಾಜ್ಯವು ಕಂಡ ಅತ್ಯಂತ ತೀವ್ರ ಬರಗಾಲದ ಪರಿಸ್ಥಿತಿಯನ್ನು ಎದುರಿಸುತ್ತಿದೆ. ಇದರಿಂದ ಕೃಷಿ, ತೋಟಗಾರಿಕೆ, ಕುಡಿಯುವ ನೀರು ಹಾಗೂ ಗ್ರಾಮೀಣ ಜನರ ಜೀವನೋಪಾಯದ ಮೇಲೆ ತೀವ್ರ ಪರಿಣಾಮ ಬೀರಿದೆ.
ಇದು ನಮ್ಮ ಕಾಲದಲ್ಲಿ ನಾವು ಕಂಡ ಅತ್ಯಂತ ತೀವ್ರವಾದ ಬರಗಾಲಗಳಲ್ಲಿ ಒಂದಾಗಿದೆ. ಅನೇಕ ಕಡೆಗಳಲ್ಲಿ ಬೆಳೆಗಳು ಮೊಳಕೆಯೊಡೆದು, ಕೇವಲ ಎರಡು ಎಲೆಗಳು ಬಂದ ನಂತರ ಒಣಗಿಹೋಗಿವೆ. ಮಳೆಯಾದಾಗ ರೈತರು ಮತ್ತೆ ಬಿತ್ತನೆ ಮಾಡಿದರು, ಆದರೆ ಎರಡನೇ ಬಾರಿ ಬಿತ್ತಿದ ಬೆಳೆಯೂ ಒಣಗಿಹೋಯಿತು. ಇಂದು ನೀವು ಹೊಲಗಳಿಗೆ ಭೇಟಿ ನೀಡಿದರೆ, ಹಲವು ಕಡೆಗಳಲ್ಲಿ ಬೆಳೆಯೇ ಉಳಿದಿಲ್ಲದಿರುವುದನ್ನು ಕಾಣಬಹುದು.
ಬರಗಾಲದ ಪರಿಸ್ಥಿತಿಯ ಕುರಿತು ಕೇಂದ್ರ ಸರ್ಕಾರದ ಮಧ್ಯಪ್ರವೇಶ ಮತ್ತು ಪರಿಹಾರ ಕೋರಿ ಪ್ರಧಾನಿ, ಕೇಂದ್ರ ಗೃಹ ಸಚಿವರು ಮತ್ತು ಕೇಂದ್ರ ಕೃಷಿ ಸಚಿವರಿಗೆ ಸತತವಾಗಿ ಮುಖ್ಯಮಂತ್ರಿಗಳು (ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್) ಹಾಗೂ ರಾಜ್ಯ ಸರ್ಕಾರವು ಹಲವು ಬಾರಿ ಪತ್ರ ಬರೆದಿದೆ. ಸಂಬಂಧಪಟ್ಟ ಕೇಂದ್ರ ಸಚಿವರಿಗೂ ನಾನು ಪತ್ರ ಬರೆದಿದ್ದೇನೆ. ಆದರೆ ಇಲ್ಲಿಯವರೆಗೆ ಒಂದೇ ಒಂದು ಪ್ರತಿಕ್ರಿಯೆಯೂ ಬಂದಿಲ್ಲ. ದಯವಿಟ್ಟು ಈ ವಿಷಯವನ್ನು ಪರಿಶೀಲಿಸಿ, ಪರಿಹಾರ ಕಾರ್ಯವನ್ನು ಮುಂದುವರಿಸಲು ನಮಗೆ ಸಹಾಯ ಮಾಡಿ ಎಂದು ನಾವು ಕೋರುತ್ತೇವೆ.
ಎಂದೂ ಕಂಡುಬಂದಿರದಷ್ಟು ತೀವ್ರತೆ ಮತ್ತು ವ್ಯಾಪ್ತಿಯನ್ನು ಪ್ರಸ್ತುತ ಬರಗಾಲ ಹೊಂದಿದೆ. ರಾಜ್ಯವು ಈಗ ತನ್ನ 240 ತಾಲೂಕುಗಳ ಪೈಕಿ 217 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಿದೆ. ಇದು ಬಹುತೇಕ ಇಡೀ ರಾಜ್ಯವನ್ನೇ ಒಳಗೊಂಡಿದೆ. ಪ್ರಸ್ತುತ ಮೌಲ್ಯಮಾಪನ ಮಾಡಲಾದ 177 ತಾಲೂಕುಗಳಲ್ಲಿ, ಸುಮಾರು 47.09 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ನಷ್ಟವಾಗಿದೆ ಎಂದು ವರದಿಯಾಗಿದೆ ಮತ್ತು ಅಂದಾಜು ಆರ್ಥಿಕ ನಷ್ಟವು ₹46,324.50 ಕೋಟಿಯಷ್ಟಿದೆ.
ರಾಜ್ಯವು 101 ಬರಪೀಡಿತ ತಾಲೂಕುಗಳಿಗೆ ಎನ್ಡಿಆರ್ಎಫ್ (NDRF) ಅಡಿಯಲ್ಲಿ ₹3,705.30 ಕೋಟಿ ನೆರವು ಕೋರಿ ತನ್ನ ಮೊದಲ ಮನವಿಯನ್ನು ಸಲ್ಲಿಸಿತ್ತು. ಅಕ್ಟೋಬರ್ 1 ರಂದು ಸಲ್ಲಿಸಲಾದ ಪೂರಕ ಮನವಿಯು ಹೆಚ್ಚುವರಿ 76 ತಾಲೂಕುಗಳಿಗೆ ಇನ್ನೂ ₹3,437.34 ಕೋಟಿ ನೆರವನ್ನು ಕೋರಿತ್ತು. ಒಟ್ಟಾರೆಯಾಗಿ, ಎರಡು ಮನವಿಗಳ ಅಡಿಯಲ್ಲಿ ಮೌಲ್ಯಮಾಪನ ಮಾಡಲಾದ 177 ತಾಲೂಕುಗಳಿಗೆ ಕರ್ನಾಟಕವು ₹7,142.64 ಕೋಟಿ ನೆರವನ್ನು ಕೋರಿದೆ.
ಬರಪೀಡಿತ ಪ್ರದೇಶಗಳನ್ನು ಮೌಲ್ಯಮಾಪನ ಮಾಡುವಾಗ ಮತ್ತು ಘೋಷಿಸುವಾಗ ರಾಜ್ಯ ಸರ್ಕಾರವು ಕೇಂದ್ರ ಸರ್ಕಾರದ 'ಬರ ನಿರ್ವಹಣಾ ಕೈಪಿಡಿ'ಯಲ್ಲಿ (Manual for Drought Management) ಸೂಚಿಸಲಾದ ಮಾನದಂಡಗಳನ್ನು ಕಟ್ಟುನಿಟ್ಟಾಗಿ ಪಾಲಿಸಿದೆ.
ವಿಶೇಷ ಅಧಿವೇಶನದ ಸಂದರ್ಭದಲ್ಲೂ, ಅನೇಕ ಶಾಸಕರು ತಮ್ಮ ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸುವಂತೆ ಒತ್ತಾಯಿಸಿದ್ದರು. ಆದರೆ ಕೇಂದ್ರ ಸರ್ಕಾರದ ಮಾರ್ಗಸೂಚಿಗಳನ್ನು ಅನುಸರಿಸದೆ ಘೋಷಿಸುವಂತಿಲ್ಲ ಎಂದು ನಾವು ಸ್ಪಷ್ಟಪಡಿಸಿದ್ದೇವೆ. ನಾವು ಬರ ನಿರ್ವಹಣಾ ಕೈಪಿಡಿ ಮತ್ತು ಎಲ್ಲಾ ನಿಗದಿತ ಮಾನದಂಡಗಳನ್ನು ಕಟ್ಟುನಿಟ್ಟಾಗಿ ಪಾಲಿಸಿದ್ದೇವೆ.
ಬಾಧಿತ ಜಿಲ್ಲೆಗಳಲ್ಲಿನ ಪರಿಸ್ಥಿತಿಯನ್ನು ನೇರವಾಗಿ ವೀಕ್ಷಿಸಲು ಕೇಂದ್ರ ತಂಡಕ್ಕೆ ಈಗ ಅವಕಾಶವಿದೆ.
ನಾವು ಹೆಚ್ಚುವರಿಯಾಗಿ ಏನನ್ನೂ ಕೇಳುತ್ತಿಲ್ಲ. ನ್ಯಾಯಯುತವಾದ ಮೌಲ್ಯಮಾಪನ ಮಾಡಬೇಕೆಂಬುದು ನಮ್ಮ ಏಕೈಕ ಮನವಿ. ದಯವಿಟ್ಟು ವಾಸ್ತವ ಪರಿಸ್ಥಿತಿಯನ್ನು ಗಮನಿಸಿ ಮತ್ತು ರಾಜ್ಯಕ್ಕೆ ನಿಜವಾಗಿಯೂ ಸಲ್ಲಬೇಕಾದ ನೆರವನ್ನು ಪಡೆಯಲು ನಮಗೆ ಸಹಾಯ ಮಾಡಿ.
ಮುಂಗಾರು ಹಂಗಾಮಿನಾದ್ಯಂತ ನಿರಂತರ ಮತ್ತು ವ್ಯಾಪಕ ಮಳೆಯ ಕೊರತೆಯಿಂದಾಗಿ ಈ ಬರಗಾಲ ಉಂಟಾಗಿದೆ. ರಾಜ್ಯದ 31 ಜಿಲ್ಲೆಗಳ ಪೈಕಿ 30 ಜಿಲ್ಲೆಗಳಲ್ಲಿ ಮಳೆಯ ಕೊರತೆ ಕಂಡುಬಂದಿದೆ ಮತ್ತು 240 ತಾಲೂಕುಗಳ ಪೈಕಿ 209 ತಾಲೂಕುಗಳಲ್ಲಿ ಮಳೆಯ ಕೊರತೆ ದಾಖಲಾಗಿದೆ.
ನೆಲಮಟ್ಟದ ವಾಸ್ತವ ಪರಿಸ್ಥಿತಿಯನ್ನು ಅರಿಯಲು ನಾನು, ಮುಖ್ಯಮಂತ್ರಿಗಳು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಬರಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ್ದೇವೆ. ನಾನು ಸ್ವತಃ ಸುಮಾರು 10 ರಿಂದ 15 ಜಿಲ್ಲೆಗಳಿಗೆ ಭೇಟಿ ನೀಡಿದ್ದೇನೆ. ತಮ್ಮ ಜವಾಬ್ದಾರಿಯಲ್ಲಿರುವ ಪ್ರತಿಯೊಂದು ಜಿಲ್ಲೆ ಮತ್ತು ತಾಲೂಕಿಗೆ ಭೇಟಿ ನೀಡಿ ವರದಿ ಸಲ್ಲಿಸುವಂತೆ ಎಲ್ಲಾ ಜಿಲ್ಲಾ ಉಸ್ತುವಾರಿ ಸಚಿವರಿಗೂ ಸೂಚನೆ ನೀಡಲಾಗಿತ್ತು. ಈ ನೆಲಮಟ್ಟದ ವರದಿಗಳು ಮತ್ತು ವೈಜ್ಞಾನಿಕ ಮಾನದಂಡಗಳ ಆಧಾರದ ಮೇಲೆ ರಾಜ್ಯ ಸರ್ಕಾರವು ಮೌಲ್ಯಮಾಪನವನ್ನು ನಡೆಸಿದೆ.
*ಕುಡಿಯುವ ನೀರು ಪ್ರಮುಖ ಆತಂಕದ ವಿಷಯ : ಬರಗಾಲದಿಂದ ಉಂಟಾಗಿರುವ ಅತಿದೊಡ್ಡ ಸವಾಲುಗಳಲ್ಲಿ ಕುಡಿಯುವ ನೀರಿನ ಸಮಸ್ಯೆಯೂ ಒಂದಾಗಿದೆ. ಮುಂಬರುವ ಬೇಸಿಗೆಯಲ್ಲಿ ಪರಿಸ್ಥಿತಿ ಇನ್ನಷ್ಟು ಹದಗೆಡಬಹುದು. ರಾಜ್ಯ ಸರ್ಕಾರವು ಈಗಾಗಲೇ ಬರ ನಿರ್ವಹಣಾ ಕ್ರಮಗಳನ್ನು ಕೈಗೊಂಡಿದ್ದು, ಕುಡಿಯುವ ನೀರಿಗಾಗಿ ಅನುದಾನವನ್ನೂ ಬಿಡುಗಡೆ ಮಾಡಿದೆ.
*ನೀರು ಸರಬರಾಜು ಮತ್ತು ಇತರ ತುರ್ತು ಕ್ರಮಗಳು : ಪ್ರಸ್ತುತ, 227 ಟ್ಯಾಂಕರ್ಗಳು ಮತ್ತು ಬಾಡಿಗೆಗೆ ಪಡೆದ 720 ಕೊಳವೆಬಾವಿಗಳ ಮೂಲಕ 861 ಗ್ರಾಮೀಣ ಪ್ರದೇಶಗಳಿಗೆ ಕುಡಿಯುವ ನೀರನ್ನು ಪೂರೈಸಲಾಗುತ್ತಿದೆ. ಮುಂಬರುವ ತಿಂಗಳುಗಳಲ್ಲಿ 2,300ಕ್ಕೂ ಹೆಚ್ಚು ಗ್ರಾಮ ಪಂಚಾಯಿತಿಗಳು ಕುಡಿಯುವ ನೀರಿನ ಸಮಸ್ಯೆಯನ್ನು ಎದುರಿಸಬಹುದು ಎಂದು ರಾಜ್ಯ ಸರ್ಕಾರ ಅಂದಾಜಿಸಿದ್ದು, ಇದಕ್ಕಾಗಿ ತುರ್ತು ಕಾರ್ಯಯೋಜನೆಗಳನ್ನು ಸಿದ್ಧಪಡಿಸಲಾಗಿದೆ.
ಮಳೆ ಕೊರತೆಯಿಂದ ಬಾಧಿತವಾದ ಪ್ರದೇಶಗಳಲ್ಲಿ ಕುಡಿಯುವ ನೀರಿನ ಪೂರೈಕೆಯನ್ನು ದೃಢಪಡಿಸಿಕೊಳ್ಳಲು, ರಾಜ್ಯ ಸರ್ಕಾರವು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಮೂಲಕ ತನ್ನ ನಿಧಿಯಿಂದ ₹306 ಕೋಟಿಗಳನ್ನು ಬಿಡುಗಡೆ ಮಾಡಿದೆ. ಕೇವಲ ಹಣ ಬಿಡುಗಡೆಯಿಂದ ಈ ಸಮಸ್ಯೆಯನ್ನು ಬಗೆಹರಿಸಲು ಸಾಧ್ಯವಿಲ್ಲ. ಕುಡಿಯುವ ನೀರು ಮತ್ತು ನೀರಿನ ಒಟ್ಟಾರೆ ಲಭ್ಯತೆಯು ಪ್ರಮುಖ ಸವಾಲುಗಳಾಗಲಿವೆ. ಮುಂಬರುವ ತಿಂಗಳುಗಳಲ್ಲಿ ಪರಿಸ್ಥಿತಿಯನ್ನು ನಿಭಾಯಿಸಲು ನಮಗೆ ಕೇಂದ್ರದಿಂದ ಹೆಚ್ಚಿನ ಬೆಂಬಲದ ಅಗತ್ಯವಿರುತ್ತದೆ.
*ಬಾಧಿತ ರೈತರಿಗೆ ₹2,500 ತಕ್ಷಣದ ನೆರವು : ಬಾಧಿತ ರೈತರಿಗೆ ತಲಾ ₹2,500 ರಷ್ಟು ತಕ್ಷಣದ ಇನ್ಪುಟ್ ಸಬ್ಸಿಡಿಯನ್ನು ರಾಜ್ಯ ಸರ್ಕಾರ ಈಗಾಗಲೇ ಘೋಷಿಸಿದೆ ಮತ್ತು ಈ ನಿರ್ಧಾರವನ್ನು ಜಾರಿಗೆ ತರಲು ಆದೇಶಗಳನ್ನು ಹೊರಡಿಸಲಾಗಿದೆ. ಬರದ ಪರಿಣಾಮವನ್ನು ತಗ್ಗಿಸಲು ಬೆಳೆ ರಕ್ಷಣೆ, ಮೇವಿನ ಲಭ್ಯತೆ, ಜಾನುವಾರುಗಳ ರಕ್ಷಣೆ ಮತ್ತು ಗ್ರಾಮೀಣ ಉದ್ಯೋಗಕ್ಕೆ ಸಂಬಂಧಿಸಿದ ಕ್ರಮಗಳನ್ನು ಸರ್ಕಾರ ಕೈಗೊಂಡಿದೆ.
ಈ ವರ್ಷ ರಾಜ್ಯವು 'ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ'ಯ (PMFBY) ಅಡಿಯಲ್ಲಿ ದಾಖಲೆಯ 37.50 ಲಕ್ಷ ರೈತರನ್ನು ನೋಂದಾಯಿಸಿದೆ ಮತ್ತು ಅರ್ಹ ಬೆಳೆ ವಿಮೆ ಪರಿಹಾರದ ಕೋರಿಕೆಗಳನ್ನು ವಿಳಂಬವಿಲ್ಲದೆ ಮೌಲ್ಯಮಾಪನ ಮಾಡಿ ವಿಲೇವಾರಿ ಮಾಡುವಂತೆ ಕೋರಿದೆ.
*ಅಂತಿಮ ಮೌಲ್ಯಮಾಪನದಲ್ಲಿ ಬಾಧಿತ ಎಲ್ಲಾ ತಾಲೂಕುಗಳನ್ನು ಸೇರಿಸಿ : ತಮ್ಮ ಅಂತಿಮ ಮೌಲ್ಯಮಾಪನದಲ್ಲಿ ಕೇವಲ ಮೊದಲ ಎರಡು ಮನವಿಗಳಲ್ಲಿ ಒಳಗೊಂಡಿರುವ 177 ತಾಲೂಕುಗಳನ್ನಷ್ಟೇ ಅಲ್ಲದೆ, ನಂತರ ಬರಪೀಡಿತವೆಂದು ಘೋಷಿಸಲಾದ ಹೆಚ್ಚುವರಿ 40 ತಾಲೂಕುಗಳು ಹಾಗೂ ಅಂತಿಮ ಮೌಲ್ಯಮಾಪನದ ವೇಳೆ ಗುರುತಿಸಲಾಗುವ ಹೆಚ್ಚುವರಿ ಬೆಳೆ ಹಾನಿಯನ್ನೂ ಪರಿಗಣನೆಗೆ ತೆಗೆದುಕೊಳ್ಳಬೇಕು.
ಸಂಪೂರ್ಣ ಮೌಲ್ಯಮಾಪನ ಪೂರ್ಣಗೊಂಡ ನಂತರ, ಬರದಿಂದ ಬಾಧಿತವಾದ ಒಟ್ಟು ಬೆಳೆ ಪ್ರದೇಶವು ಸುಮಾರು 55 ಲಕ್ಷ ಹೆಕ್ಟೇರ್ಗಳಷ್ಟಾಗಬಹುದು ಎಂದು ರಾಜ್ಯ ಸರ್ಕಾರ ಅಂದಾಜಿಸಿದೆ.
ರೈತರಿಗೆ ನೀಡಲಾಗುವ ಪರಿಹಾರವು ಕೃಷಿ ಪರಿಕರಗಳ ಪ್ರಸ್ತುತ ವೆಚ್ಚಕ್ಕೆ ಅನುಗುಣವಾಗಿರುವಂತೆ ನೋಡಿಕೊಳ್ಳಲು, ಅಸ್ತಿತ್ವದಲ್ಲಿರುವ ಇನ್ಪುಟ್ ಸಬ್ಸಿಡಿ ಮಾನದಂಡಗಳನ್ನು ಶೀಘ್ರವಾಗಿ ಪರಿಷ್ಕರಿಸಬೇಕೆಂಬ ರಾಜ್ಯದ ಬೇಡಿಕೆಗೆ ಸ್ಪಂದಿಸಬೇಕು. ಬೆಳೆ ವಿಮೆ ಪರಿಹಾರದ ಮೊತ್ತವನ್ನು ಸಕಾಲದಲ್ಲಿ ಪಾವತಿಸಲು ಹಾಗೂ ಆರ್ಬಿಐ (RBI) ಮಾರ್ಗಸೂಚಿಗಳನ್ವಯ ಬರಪೀಡಿತ ರೈತರಿಗೆ ಸಾಲ ಮರುಹೊಂದಾಣಿಕೆ ಮತ್ತು ಇತರೆ ಆರ್ಥಿಕ ನೆರವನ್ನು ಬ್ಯಾಂಕುಗಳು ಒದಗಿಸುವುದನ್ನು ದೃಢಪಡಿಸಿಕೊಳ್ಳಲು ಕೇಂದ್ರ ತಂಡವು ಮಧ್ಯಪ್ರವೇಶಿಸಬೇಕು.
ರಾಜ್ಯ ಸರ್ಕಾರವು ಸಾಧ್ಯವಿರುವ ಎಲ್ಲ ಕ್ರಮಗಳನ್ನೂ ಕೈಗೊಂಡಿದೆ. ಈಗ ಕೇಂದ್ರ ಸರ್ಕಾರದಿಂದ ಸಕಾಲಿಕ ಬೆಂಬಲವನ್ನು ನಿರೀಕ್ಷಿಸುತ್ತಿದೆ.
ಬರದ ತೀವ್ರತೆಯನ್ನು ತಂಡವು ಸ್ಥಳದಲ್ಲೇ ಖುದ್ದಾಗಿ ವೀಕ್ಷಿಸಬಹುದಾಗಿದೆ. ಕೇಂದ್ರ ಸರ್ಕಾರವು ನಿಗದಿಪಡಿಸಿದ ಪ್ರತಿಯೊಂದು ಮಾನದಂಡವನ್ನೂ ಕರ್ನಾಟಕ ಪಾಲಿಸಿದೆ. ನ್ಯಾಯಯುತವಾದ ಮೌಲ್ಯಮಾಪನ ಮಾಡಿ, ರೈತರನ್ನು ರಕ್ಷಿಸಲು ಹಾಗೂ ಕುಡಿಯುವ ನೀರಿನ ಸಮಸ್ಯೆಯನ್ನು ಬಗೆಹರಿಸಲು ನಮಗೆ ಸಕಾಲದಲ್ಲಿ ನೆರವು ಸಿಗುವಂತೆ ಮಾಡಿ ಎಂಬುದು ನಮ್ಮ ಮನವಿ. -
Dr. G Parameshwara
@DrParameshwara
Leader of Opposition Shri @RahulGandhi has launched Satyagraha, an initiative to bring together people’s movements from across the country and provide a platform for their issues to be heard.
The platform covers movements related to land, women’s rights, Dalit and OBC rights, education, examinations and other public concerns.
More details: rahulgandhi.in/satyagraha
Rahul Gandhi
@RahulGandhi
Across the country, people are fighting for their rights - and too often, fighting alone.
Gen Z, students, farmers, Adivasis, Dalits, women - every struggle has its own story. But a lone voice is often easier to silence.
‘Satyagraha’ is an initiative to bring these voices together on one map.
Bapu taught us that truth is our greatest weapon. But an even greater weapon is standing together with the truth.
If you too are fighting against any injustice, share your story. It will take just two minutes.
Your story will find a place on the Satyagraha map. You’ll see who else, like you, is fighting their own battle.
And I will do whatever I can - in Parliament, on the streets, through letters, wherever I am needed - to stand with you. As the Leader of the Opposition, that is my responsibility.
Tell me the story of your Satyagraha here:
👉 rahulgandhi.in/satyagrahaThis media couldn't be displayed. See it on the original post. -
Dr. G Parameshwara
@DrParameshwara
ಇಂದು ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಶ್ರೀ ಡಿ.ಕೆ. ಶಿವಕುಮಾರ್ ಅವರ ನೇತೃತ್ವದಲ್ಲಿ ನಡೆದ ಮಳೆ ಕೊರತೆ ಮತ್ತು ಬರದ ನೈಜ ಪರಿಸ್ಥಿತಿ ಪರಿಶೀಲಿಸಲು ಆಗಮಿಸಿರುವ ಕೇಂದ್ರ ಸರ್ಕಾರದ ಉನ್ನತ ಮಟ್ಟದ ಅಧಿಕಾರಿಗಳ ತಂಡದೊಂದಿಗಿನ ಸಭೆಯಲ್ಲಿ ಭಾಗವಹಿಸಿದೆ.
ಮಳೆ ಕೊರತೆಯಿಂದ ಉಂಟಾಗಿರುವ ಬೆಳೆ ನಷ್ಟ, ಕುಡಿಯುವ ನೀರು ಮತ್ತು ಜಾನುವಾರುಗಳಿಗೆ ಮೇವಿನ ಸಮಸ್ಯೆ ಸೇರಿದಂತೆ ಬರಪೀಡಿತ ತಾಲೂಕುಗಳ ವಸ್ತುಸ್ಥಿತಿಯ ಚಿತ್ರಣವನ್ನು ಕೇಂದ್ರ ಬರ ಅಧ್ಯಯನ ತಂಡಕ್ಕೆ ಸುದೀರ್ಘವಾಗಿ ವಿವರಿಸಿದೆ.
ಸಭೆಯಲ್ಲಿ ಕೇಂದ್ರ ಬರ ಅಧ್ಯಯನ ತಂಡದ ಮುಖ್ಯಸ್ಥರಾದ ಅಜೀತ್ ಕುಮಾರ್ ಸಾಹು ಹಾಗೂ ತಂಡದ ಸದಸ್ಯರು, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಾದ ಶಾಲಿನಿ ರಜನೀಶ್, ಅಪರ ಮುಖ್ಯ ಕಾರ್ಯದರ್ಶಿಗಳಾದ ಗೌರವ್ ಗುಪ್ತಾ, ತುಷಾರ್ ಗಿರಿನಾಥ್, ರಾಜ್ಯ ವಿಪತ್ತು ನಿರ್ವಹಣಾ ಇಲಾಖೆಯ ಕಾರ್ಯದರ್ಶಿ ಮನೋಜ್ ಕುಮಾರ್ ಮೀನಾ, ರಾಜ್ಯ ವಿಪತ್ತು ನಿರ್ವಹಣಾ ಇಲಾಖೆಯ ಆಯುಕ್ತೆ ಹೊನ್ನಾಂಬ ಸೇರಿದಂತೆ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.
Today, I attended a meeting at the Chief Minister’s Home Office, Krishna, chaired by Chief Minister Shri D.K. Shivakumar, with the high-level Central team visiting Karnataka to assess the rainfall deficit and drought conditions on the ground.
I briefed the Central drought assessment team in detail on the situation in drought-affected taluks, including crop losses caused by deficient rainfall, drinking water concerns and fodder shortages for livestock.
The meeting was attended by Ajit Kumar Sahu, head of the Central drought assessment team, and its members; State Chief Secretary Shalini Rajneesh; Additional Chief Secretaries Gaurav Gupta and Tushar Girinath; State Disaster Management Department Secretary Manoj Kumar Meena; Commissioner Honnamba; and other senior officials. -
Dr. G Parameshwara
@DrParameshwara
The estimated crop loss caused by the drought in Karnataka could reach ₹50,000–60,000 crore, and the State will seek relief in accordance with the Union Government’s guidelines.
A total of 217 taluks have been declared drought-affected. Losses in 177 taluks have already been assessed at around ₹46,000 crore, as stated in the second memorandum submitted to the Centre. Assessment is also underway in the additional 40 taluks declared drought-affected on October 1. Once losses across all these taluks are consolidated, the total could be between ₹50,000 crore and ₹60,000 crore. We will seek the relief due to Karnataka under the prescribed Central guidelines.
Ground truthing will also be carried out in another 22 taluks that have not yet been declared drought-affected. The assessment may identify one, two or three more taluks as drought-hit. Some coastal taluks may not fall into that category. Further action will be based on the ground reality after verification.
The recent rainfall will not adversely affect the drought assessment. It may provide some relief in terms of drinking water availability, but it will not significantly benefit crops already damaged. The Central teams will be briefed on the rainfall and drought conditions during May, June, July, August and September, which are also reflected in the memorandum. The drought situation will not be assessed solely on the basis of the recent rainfall.
Three Central teams comprising Joint Secretaries and officials from the Union Agriculture Ministry, Environment Ministry and other departments are visiting Karnataka. They will travel to three regions of the State to assess the actual rainfall deficit and crop losses. After today’s briefing, the teams will proceed with their field inspections. Separate teams have already begun assessments in some areas.
Two memoranda on drought relief have already been submitted to the Centre. The second memorandum estimated losses of around ₹46,000 crore across 177 taluks. After the Central teams complete their assessment and the remaining taluks are evaluated, a third and final memorandum covering all 217 taluks will be submitted.
*We Went to Submit a Memorandum to the Election Commission:* We had gone to the office of the Chief Electoral Officer to submit a memorandum to the Election Commission regarding allegations that eligible voters’ names were being deleted through Form 7 applications. Since we did not receive a proper response, we remained there until an answer was given. We are the Government; why would we go there to stage a protest? Neither the Chief Minister nor any Minister had gone there to protest. We have that basic sense.
FIRs have already been registered in several places in connection with Form 7 applications. In some cases, applications were allegedly collected in bulk, signed and submitted as bundles, and cases have been registered against those involved. We have asked the Election Commission to register an FIR in this case as well. The Commission has informed us in writing that it will issue a seven-day notice and then register an FIR. Further action will have to follow accordingly. Once an FIR is registered, the case will move to the next stage.
This appears to be a serious irregularity. Where were these Form 7 applications printed? They appear to have been centrally printed with complete voter details, after which only the applicant’s name and EPIC number were filled in and signed. In some bundles, applications concerning 50–60 voters from the same community were reportedly submitted together, raising several questions. How did those submitting the applications obtain all this information? Who printed the forms, and where? These circumstances raise suspicions that there may be more behind the process.
The necessary evidence will be submitted to the appropriate investigating agencies at the right time. We have raised the allegations now, and the relevant documents will be provided to the agencies concerned.
*Let the Allegations Be Investigated: Anyone can offer their own interpretation, but if something wrong has happened, it must be called out. The Opposition is making different statements in an attempt to dismiss the issue. We have not targeted any political party in our allegations. In Belagavi, there are instances where some individuals admitted that a mistake had occurred and withdrew their applications in writing.
It is not correct to claim that those who withdrew their applications did so under threat. They are not children; they were aware of what they were doing when they submitted the applications. The Opposition is now making such statements to defend itself.
The truth in this matter must come out. We have no objection to an investigation. If an inquiry establishes that no wrongdoing took place and everything was proper, we are prepared to accept that. But our allegation is that irregularities occurred, and we will provide the evidence we have. Let the competent authorities examine it. The facts will emerge after a proper investigation.
– My responses to questions from the media near my residence today. -
Dr. G Parameshwara
@DrParameshwara
*ಚುನಾವಣಾ ಆಯೋಗಕ್ಕೆ ಮೆಮೊರಾಂಡಂ ಸಲ್ಲಿಸಲು ತೆರಳಿದ್ದೆವು : ಫಾರಂ–7 ಮೂಲಕ ಅರ್ಹ ಮತದಾರರ ಹೆಸರುಗಳನ್ನು ತೆಗೆದುಹಾಕಿರುವ ಆರೋಪದ ಹಿನ್ನೆಲೆಯಲ್ಲಿ ಮುಖ್ಯ ಚುನಾವಣಾಧಿಕಾರಿಗಳ ಕಚೇರಿಗೆ ತೆರಳಿ ಚುನಾವಣಾ ಆಯೋಗಕ್ಕೆ ಮೆಮೊರಾಂಡಂ ಸಲ್ಲಿಸಲು ಹೋಗಿದ್ದೆವು. ಅವರು ನಮಗೆ ಸರಿಯಾಗಿ ಉತ್ತರ ನೀಡದ ಹಿನ್ನೆಲೆಯಲ್ಲಿ ಉತ್ತರ ನೀಡುವವರೆಗೂ ಅಲ್ಲಿಯೇ ಕುಳಿತುಕೊಂಡಿದ್ದೆವು. ಸರ್ಕಾರ ನಡೆಸುವವರು ನಾವು. ನಾವೇನಕ್ಕೆ ಪ್ರತಿಭಟನೆ ನಡೆಸುವುದಕ್ಕೆ ಹೋಗುತ್ತೇವೆ. ಮುಖ್ಯಮಂತ್ರಿಗಳಾಗಲಿ, ಸಚಿವರಾಗಲಿ ಯಾರೂ ಪ್ರತಿಭಟನೆ ಮಾಡಲು ಹೋಗಿರಲಿಲ್ಲ. ಈ ಕನಿಷ್ಠ ಪ್ರಜ್ಞೆ ನಮಗಿದೆ.
ಫಾರಂ–7 ಅರ್ಜಿಗಳ ವಿಚಾರವಾಗಿ ಈಗಾಗಲೇ ಹಲವು ಕಡೆ ಎಫ್ಐಆರ್ಗಳು ದಾಖಲಾಗಿವೆ. ಫಾರಂ–7 ಅರ್ಜಿಗಳನ್ನು ಒಟ್ಟಾಗಿ ಸಂಗ್ರಹಿಸಿ, ಸಹಿ ಮಾಡಿ ಬಂಡಲ್ಗಳ ರೂಪದಲ್ಲಿ ಸಲ್ಲಿಸಿರುವವರ ವಿರುದ್ಧ ಕೆಲವು ಕಡೆ ಪ್ರಕರಣಗಳು ದಾಖಲಾಗಿವೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್ಐಆರ್ ದಾಖಲಿಸುವಂತೆ ಚುನಾವಣಾ ಆಯೋಗವನ್ನು ಕೋರಿದ್ದೇವೆ. ಏಳು ದಿನಗಳ ಕಾಲ ನೋಟಿಸ್ ನೀಡಿ ಕಾಯ್ದು, ನಂತರ ಎಫ್ಐಆರ್ ದಾಖಲಿಸುವುದಾಗಿ ಚುನಾವಣಾ ಆಯೋಗವು ಪತ್ರದ ಮೂಲಕ ತಿಳಿಸಿದೆ. ಅದರಂತೆ ಮುಂದಿನ ಕ್ರಮ ಕೈಗೊಳ್ಳಬೇಕಿದೆ. ಎಫ್ಐಆರ್ ದಾಖಲಾದ ನಂತರ ಪ್ರಕರಣದಲ್ಲಿ ಬೇರೆ ರೀತಿಯ ಬೆಳವಣಿಗೆಗಳು ನಡೆಯಲಿವೆ.
ಇದು ದೊಡ್ಡ ರೀತಿಯ ಹಗರಣ. ಫಾರಂ –7 ಅರ್ಜಿಗಳು ಎಲ್ಲಿ ಮುದ್ರಣವಾಗಿವೆ? ಎಲ್ಲೋ ಒಂದು ಕಡೆ ಕೇಂದ್ರೀಕೃತವಾಗಿ ಮುದ್ರಣ ಮಾಡಿ, ಸಂಪೂರ್ಣ ಮಾಹಿತಿಯನ್ನು ಪ್ರಿಂಟ್ ಮಾಡಲಾಗಿದೆ. ನಂತರ ಅರ್ಜಿ ಸಲ್ಲಿಸುವವರ ಹೆಸರು ಮತ್ತು ಎಪಿಕ್ (EPIC) ಸಂಖ್ಯೆಯನ್ನು ಮಾತ್ರ ನಮೂದಿಸಿ ಸಹಿ ಮಾಡಲಾಗಿದೆ. ಒಂದೊಂದು ಬಂಡಲ್ನಲ್ಲಿ ಒಂದೇ ಸಮುದಾಯದ 50ರಿಂದ 60 ಜನರ ಅರ್ಜಿಗಳನ್ನು ಒಟ್ಟಾಗಿ ಸಲ್ಲಿಸಿರುವುದು ಹಲವು ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ. ಇವರಿಗೆ ಈ ಎಲ್ಲ ಮಾಹಿತಿ ಹೇಗೆ ತಿಳಿಯಿತು? ಅರ್ಜಿಗಳನ್ನು ಮುದ್ರಿಸಿದವರು ಯಾರು? ಎಲ್ಲಿ ಮುದ್ರಿಸಲಾಗಿದೆ? ಇದರ ಹಿಂದೆ ಹಲವು ಸಂಗತಿಗಳು ನಡೆಯುತ್ತಿವೆ ಎಂಬ ಅನುಮಾನವಿದೆ.
ಅಗತ್ಯವಿರುವ ಪುರಾವೆಗಳನ್ನು ಸಂಬಂಧಪಟ್ಟ ತನಿಖಾ ಸಂಸ್ಥೆಗಳ ಮುಂದೆ ಸೂಕ್ತ ಸಮಯದಲ್ಲಿ ಸಲ್ಲಿಸಲಾಗುವುದು. ಈಗ ಆರೋಪದ ಬಗ್ಗೆ ಪ್ರಸ್ತಾಪಿಸಿದ್ದೇವೆ. ಅಗತ್ಯವಿರುವ ದಾಖಲೆಗಳನ್ನು ಸಂಬಂಧಪಟ್ಟ ಏಜೆನ್ಸಿಗಳ ಮುಂದೆ ನೀಡುತ್ತೇವೆ.
*ಆರೋಪಗಳ ಕುರಿತು ತನಿಖೆ ನಡೆಯಲಿ : ಯಾರು ಬೇಕಾದರೂ ಏನು ಬೇಕಾದರೂ ವ್ಯಾಖ್ಯಾನ ಮಾಡಬಹುದು. ಆದರೆ ತಪ್ಪು ನಡೆದಿದ್ದರೆ ಅದನ್ನು ತಪ್ಪು ಎಂದು ಹೇಳಲೇಬೇಕು. ಈ ವಿಚಾರವನ್ನು ಮುಚ್ಚಿಹಾಕಲು ವಿರೋಧ ಪಕ್ಷದವರು ಬೇರೆ ರೀತಿಯ ಹೇಳಿಕೆಗಳನ್ನು ನೀಡುತ್ತಿದ್ದಾರೆ. ನಾವು ಯಾವುದೇ ಪಕ್ಷದವರನ್ನು ಗುರಿಯಾಗಿಸಿಕೊಂಡು ಆರೋಪ ಮಾಡಿಲ್ಲ. ಬೆಳಗಾವಿಯಲ್ಲಿ ಕೆಲವರು ತಪ್ಪಾಗಿದೆ ಎಂದು ಒಪ್ಪಿಕೊಂಡು, ಲಿಖಿತವಾಗಿ ಹಿಂಪಡೆದಿರುವ ಉದಾಹರಣೆಯೂ ಇದೆ.
ಅರ್ಜಿಗಳನ್ನು ಸಲ್ಲಿಸಿದವರು ಬೆದರಿಕೆಗೆ ಒಳಗಾಗಿ ಹಿಂಪಡೆದಿದ್ದಾರೆ ಎನ್ನುವುದು ಸರಿಯಲ್ಲ. ಅರ್ಜಿ ಹಿಂಪಡೆದವರು ಚಿಕ್ಕ ಮಕ್ಕಳಲ್ಲ. ಅರ್ಜಿ ಸಲ್ಲಿಸುವಾಗ ಅವರಿಗೆ ಪ್ರಜ್ಞೆ ಇತ್ತು ಅಲ್ವಾ? ಈಗ ವಿರೋಧ ಪಕ್ಷದವರು ತಮ್ಮನ್ನು ರಕ್ಷಿಸಿಕೊಳ್ಳಲು ಇಂತಹ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಈ ಪ್ರಕರಣದ ಸತ್ಯಾಸತ್ಯತೆ ಹೊರಬರಬೇಕು. ತನಿಖೆ ನಡೆಸುವುದಕ್ಕೆ ನಮ್ಮ ಯಾವುದೇ ತಕರಾರಿಲ್ಲ. ತನಿಖೆ ನಡೆಸಿ, ಯಾವುದೇ ತಪ್ಪು ನಡೆದಿಲ್ಲ ಮತ್ತು ಎಲ್ಲವೂ ಸರಿಯಾಗಿದೆ ಎಂದು ಸಾಬೀತಾದರೆ ಅದನ್ನು ಒಪ್ಪಿಕೊಳ್ಳಲು ಸಿದ್ಧರಿದ್ದೇವೆ. ಆದರೆ ತಪ್ಪಾಗಿದೆ ಎಂಬುದು ನಮ್ಮ ಆರೋಪವಾಗಿದ್ದು, ಅದಕ್ಕೆ ಸಂಬಂಧಿಸಿದ ಪುರಾವೆಗಳನ್ನು ಒದಗಿಸುತ್ತೇವೆ. ಸಂಬಂಧಪಟ್ಟ ಅಧಿಕಾರಿಗಳು ಪರಿಶೀಲನೆ ನಡೆಸಲಿ. ತನಿಖೆಯ ನಂತರ ಸತ್ಯಾಂಶ ಹೊರಬರಲಿದೆ.
- ಇಂದು ನನ್ನ ನಿವಾಸದ ಬಳಿ ಮಾಧ್ಯಮದವರ ಪ್ರಶ್ನೆಗಳಿಗೆ ಉತ್ತರಿಸಿದೆ. (2/2) -
Dr. G Parameshwara
@DrParameshwara
ರಾಜ್ಯದಲ್ಲಿ ಬರ ಪರಿಸ್ಥಿತಿಯಿಂದ ಉಂಟಾಗಿರುವ ಬೆಳೆ ನಷ್ಟದ ಅಂದಾಜು 50 ರಿಂದ 60 ಸಾವಿರ ಕೋಟಿವರೆಗೆ ತಲುಪುವ ಸಾಧ್ಯತೆಯಿದ್ದು, ಕೇಂದ್ರ ಸರ್ಕಾರದ ಮಾರ್ಗಸೂಚಿಗಳ ಪ್ರಕಾರ ಬರ ಪರಿಹಾರಕ್ಕೆ ಮನವಿ ಸಲ್ಲಿಸಲಾಗುವುದು.
ರಾಜ್ಯದಲ್ಲಿ ಒಟ್ಟು 217 ತಾಲೂಕುಗಳನ್ನು ಬರಪೀಡಿತ ಪ್ರದೇಶಗಳೆಂದು ಘೋಷಿಸಲಾಗಿದೆ. ಈ ಪೈಕಿ 177 ತಾಲೂಕುಗಳಲ್ಲಿ ಉಂಟಾಗಿರುವ ನಷ್ಟದ ಅಂದಾಜು ಮಾಡಲಾಗಿದ್ದು, ಸುಮಾರು ₹46,000 ಕೋಟಿ ನಷ್ಟವಾಗಿದೆ ಎಂದು ಕೇಂದ್ರಕ್ಕೆ ಸಲ್ಲಿಸಿರುವ ಎರಡನೇ ಮೆಮೊರಾಂಡಂನಲ್ಲಿ ತಿಳಿಸಲಾಗಿದೆ. ಅಕ್ಟೋಬರ್ 1ರಂದು ಘೋಷಿಸಲಾದ ಇನ್ನೂ 40 ತಾಲೂಕುಗಳಲ್ಲಿನ ನಷ್ಟದ ಅಂದಾಜು ಪ್ರಕ್ರಿಯೆಯೂ ನಡೆಯುತ್ತಿದೆ. ಈ ಎಲ್ಲ ತಾಲೂಕುಗಳ ನಷ್ಟದ ಅಂದಾಜನ್ನು ಒಟ್ಟುಗೂಡಿಸಿದಾಗ ₹50 ಸಾವಿರ ಕೋಟಿಯಿಂದ ₹60 ಸಾವಿರ ಕೋಟಿ ರೂಪಾಯಿಗಳವರೆಗೆ ನಷ್ಟವಾಗುವ ಸಾಧ್ಯತೆಯಿದೆ. ಕೇಂದ್ರ ಸರ್ಕಾರದ ಮಾರ್ಗಸೂಚಿಗಳ ಪ್ರಕಾರ ರಾಜ್ಯಕ್ಕೆ ಬರಬೇಕಾದ ಪರಿಹಾರವನ್ನು ಕೋರಲಾಗುವುದು.
ಇನ್ನೂ ಘೋಷಣೆಯಾಗದ 22 ತಾಲೂಕುಗಳಲ್ಲಿಯೂ ಗ್ರೌಂಡ್ ಟ್ರೂಥಿಂಗ್ ನಡೆಸಲಾಗುವುದು. ಪರಿಶೀಲನೆಯ ವೇಳೆ ಒಂದೆರಡು ಅಥವಾ ಮೂರು ತಾಲೂಕುಗಳು ಬರಪೀಡಿತ ಎಂದು ಕಂಡುಬರಬಹುದು. ಕರಾವಳಿ ಭಾಗದ ಕೆಲವು ತಾಲೂಕುಗಳಲ್ಲಿ ಅಂತಹ ಪರಿಸ್ಥಿತಿ ಇಲ್ಲ. ಪರಿಶೀಲನೆಯ ನಂತರ ವಾಸ್ತವ ಸ್ಥಿತಿಯನ್ನು ಆಧರಿಸಿ ಕ್ರಮ ಕೈಗೊಳ್ಳಲಾಗುವುದು.
ಇತ್ತೀಚೆಗೆ ಸುರಿದ ಮಳೆಯಿಂದ ಬರ ಪರಿಹಾರದ ಪರಿಶೀಲನೆಗೆ ಯಾವುದೇ ನಕಾರಾತ್ಮಕ ಪರಿಣಾಮ ಉಂಟಾಗುವುದಿಲ್ಲ. ಈ ಮಳೆಯಿಂದ ಕುಡಿಯುವ ನೀರಿನ ಲಭ್ಯತೆಗೆ ಸ್ವಲ್ಪ ಅನುಕೂಲವಾಗಬಹುದೇ ಹೊರತು ಬೆಳೆಗಳಿಗೆ ಹೆಚ್ಚಿನ ಪ್ರಯೋಜನವಾಗುವುದಿಲ್ಲ. ಕೇಂದ್ರದ ತಂಡಗಳಿಗೆ ಮೇ, ಜೂನ್, ಜುಲೈ, ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳುಗಳಲ್ಲಿನ ಮಳೆ ಹಾಗೂ ಬರ ಪರಿಸ್ಥಿತಿಯನ್ನು ವಿವರಿಸಲಾಗುವುದು. ಈ ಅವಧಿಯ ಪರಿಸ್ಥಿತಿಯನ್ನೇ ಮೆಮೊರಾಂಡಂನಲ್ಲಿ ದಾಖಲಿಸಲಾಗಿದೆ. ಇತ್ತೀಚಿನ ಮಳೆಯನ್ನು ಮಾತ್ರ ಆಧರಿಸಿ ಬರ ಪರಿಸ್ಥಿತಿಯನ್ನು ನಿರ್ಧರಿಸುವುದಿಲ್ಲ.
ಕೇಂದ್ರ ಸರ್ಕಾರದಿಂದ ಕೃಷಿ ಸಚಿವಾಲಯ, ಪರಿಸರ ಸಚಿವಾಲಯ ಸೇರಿದಂತೆ ವಿವಿಧ ಸಚಿವಾಲಯಗಳ ಜಂಟಿ ಕಾರ್ಯದರ್ಶಿಗಳು ಹಾಗೂ ಅಧಿಕಾರಿಗಳನ್ನು ಒಳಗೊಂಡ ಮೂರು ತಂಡಗಳು ರಾಜ್ಯಕ್ಕೆ ಆಗಮಿಸುತ್ತಿವೆ. ಈ ತಂಡಗಳು ರಾಜ್ಯದ ಮೂರು ಕಡೆಗಳಿಗೆ ತೆರಳಿ ಮಳೆ ಮತ್ತು ಬೆಳೆ ನಷ್ಟದ ವಾಸ್ತವ ಸ್ಥಿತಿಯನ್ನು ಪರಿಶೀಲಿಸಲಿವೆ. ಇಂದು ನಾವು ಬ್ರೀಫಿಂಗ್ ಮಾಡಿದ ಬಳಿಕ ತಂಡಗಳು ತಮ್ಮ ಪರಿಶೀಲನೆಗೆ ತೆರಳಲಿವೆ. ಈಗಾಗಲೇ ಕೆಲವು ಕಡೆಗಳಲ್ಲಿ ಪ್ರತ್ಯೇಕ ತಂಡಗಳು ಪರಿಶೀಲನೆ ಆರಂಭಿಸಿವೆ.
ಬರ ಪರಿಹಾರಕ್ಕೆ ಸಂಬಂಧಿಸಿದಂತೆ ಕೇಂದ್ರಕ್ಕೆ ಈಗಾಗಲೇ ಎರಡು ಮೆಮೊರಾಂಡಂಗಳನ್ನು ಸಲ್ಲಿಸಲಾಗಿದೆ. ಎರಡನೇ ಮೆಮೊರಾಂಡಂನಲ್ಲಿ 177 ತಾಲೂಕುಗಳ ಸುಮಾರು ₹46,000 ಕೋಟಿ ನಷ್ಟದ ಅಂದಾಜನ್ನು ನೀಡಲಾಗಿದೆ. ಕೇಂದ್ರದ ತಂಡಗಳ ಪರಿಶೀಲನೆ ಹಾಗೂ ಉಳಿದ ತಾಲೂಕುಗಳ ನಷ್ಟದ ಅಂದಾಜು ಪೂರ್ಣಗೊಂಡ ಬಳಿಕ ಒಟ್ಟು 217 ತಾಲೂಕುಗಳ ಪರಿಸ್ಥಿತಿಯನ್ನು ಒಳಗೊಂಡ ಮೂರನೇ ಹಾಗೂ ಅಂತಿಮ ಮೆಮೊರಾಂಡಂ ಸಲ್ಲಿಸಲಾಗುವುದು. (1/2) -
Dr. G Parameshwara
@DrParameshwara
An extraordinary Day 14 for India at the Asian Games 2026, with 10 medals including six Golds!
A historic triumph for Ankita Bhakat, Kirti Sharma & Kumkum Mohod, who defeated the formidable South Korean team to win India’s first-ever Asian Games Gold in the women’s recurve team event.
Heartiest congratulations to our boxing champions Lovlina Borgohain, Parveen Hooda and Ankush Panghal on striking Gold in the women’s 75kg, women’s 65kg and men’s 80kg events respectively. Lovlina’s triumph makes her only the second Indian woman boxer after Mary Kom to win Asian Games Gold.
A brilliant campaign from Sujeet Kalkal, who conquered the men’s freestyle 65kg category to bring home another Gold for India.
And what a moment for Indian women’s hockey! Forty-four years after their previous Asian Games title, our women are champions again, winning Gold and securing qualification for the Los Angeles 2028 Olympics.
Congratulations to Kumkum Mohod & Dhiraj Bommadevara on Silver in the mixed recurve team event, and to Dhiraj Bommadevara, Neeraj Chauhan & Yashdeep Bhoge on Silver in the men’s recurve team event.
Congratulations also to Nethra Kumanan on Bronze in the women’s dinghy and to the Indian men’s Sepaktakraw quadrant team on their Bronze medal.
A special mention to Harshita Tomar & Shital Verma, whose women’s skiff performance from yesterday was later upgraded to Bronze, adding another medal to India’s sailing campaign.
Congratulations to every athlete, coach and member of the support teams. Keep making India proud!
#asiangames2026 #teamindia -
Dr. G Parameshwara
@DrParameshwara
ಬರದ ಹೊಡೆತದಿಂದ ಸಂಕಷ್ಟಕ್ಕೀಡಾಗಿರುವ ರೈತರ ಹಿತ ಕಾಯಲು ನಮ್ಮ ಸರ್ಕಾರ ಸದಾ ಬದ್ಧವಾಗಿದೆ. ರೈತರ ಬದುಕು, ಬೆಳೆ ಮತ್ತು ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ರಾಜ್ಯದ ಬರ ಪರಿಸ್ಥಿತಿಯನ್ನು ನಿರಂತರವಾಗಿ ಪರಿಶೀಲಿಸುತ್ತಾ, ಅಗತ್ಯ ಕ್ರಮಗಳನ್ನು ಹಂತ ಹಂತವಾಗಿ ಕೈಗೊಳ್ಳುತ್ತಿದ್ದೇವೆ.
ಈಗಾಗಲೇ 177 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿದ್ದು, ಇದೀಗ ಮತ್ತೆ 40 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿದೆ. ಇವುಗಳಲ್ಲಿ 24 ತಾಲೂಕುಗಳು ತೀವ್ರ ಬರಪೀಡಿತ ಹಾಗೂ 16 ತಾಲೂಕುಗಳು ಮಧ್ಯಮ ಬರಪೀಡಿತವಾಗಿವೆ. ಇದರೊಂದಿಗೆ ರಾಜ್ಯದಲ್ಲಿ ಬರಪೀಡಿತ ತಾಲೂಕುಗಳ ಸಂಖ್ಯೆ 217ಕ್ಕೆ ಏರಿಕೆಯಾಗಿದೆ.
ರೈತರ ಸಂಕಷ್ಟದ ಸಂದರ್ಭದಲ್ಲಿ ನೆರವಿನ ಹಸ್ತ ಚಾಚಿ, ಅವರ ಬದುಕಿಗೆ ಭರವಸೆಯಾಗಿ ನಮ್ಮ ಸರ್ಕಾರ ಸದಾ ಬೆನ್ನಿಗೆ ನಿಲ್ಲಲಿದೆ.
Our Government remains firmly committed to protecting the interests of farmers affected by drought. Keeping their livelihoods, crops and future in mind, we are continuously assessing the drought situation and taking necessary measures in phases.
So far, 177 taluks had been declared drought-affected. We have now declared another 40 taluks drought-affected -- 24 severely affected and 16 moderately affected -- taking the total number to 217 taluks.
In this time of hardship, our Government will continue to stand by farmers, extend the necessary support and give them confidence for the future. -
Dr. G Parameshwara reposted
Dr. G Parameshwara
@DrParameshwara
ಅಹಿಂಸೆಯ ಎದುರು ಬಂದೂಕಿನ ನಳಿಕೆಗಳೂ ಮೌನವಾಗಿ ಶರಣಾಗುತ್ತವೆ ಎಂಬುದನ್ನು ಜಗತ್ತಿಗೆ ಸಾಧಿಸಿ ತೋರಿಸಿದವರು ಮಹಾತ್ಮ ಗಾಂಧಿ.
ತಾನು ಉರಿದು ಜಗತ್ತಿಗೆ ಬೆಳಕು ನೀಡಿದ ದೀಪದಂತೆ, ಸತ್ಯ, ಧರ್ಮ ಮತ್ತು ಅಹಿಂಸೆಯ ಮಾರ್ಗದಲ್ಲಿ ಬದುಕಿ, ಕೋಟ್ಯಂತರ ಜನರ ಬದುಕಿಗೆ ದಾರಿದೀಪವಾದ ಮಹಾಚೇತನ ಗಾಂಧಿ.
ಸತ್ಯಾಗ್ರಹ ಮತ್ತು ಅಹಿಂಸೆಯ ಅಸ್ತ್ರಗಳ ಮೂಲಕ ಸ್ವಾತಂತ್ರ್ಯ ಹೋರಾಟಕ್ಕೆ ಹೊಸ ದಿಕ್ಕು ನೀಡಿ, ಕೋಟ್ಯಂತರ ಭಾರತೀಯರ ಬಂಧಮುಕ್ತ ಬದುಕಿನ ಕನಸನ್ನು ನನಸಾಗಿಸಿದ ಮಹಾತ್ಮರ ಜನ್ಮದಿನವಿಂದು.
ಗಾಂಧೀಜಿ ಕೇವಲ ಸ್ವಾತಂತ್ರ್ಯ ಹೋರಾಟದ ನಾಯಕರಾಗಿರಲಿಲ್ಲ. ಸಮಾಜದ ಕಷ್ಟ-ನಷ್ಟಗಳಿಗೆ ಸ್ಪಂದಿಸಿದ, ಅಸಮಾನತೆ ಮತ್ತು ಅನ್ಯಾಯದ ವಿರುದ್ಧ ಧ್ವನಿ ಎತ್ತಿದ, ಕೋಮುವಾದ, ಜಾತಿವಾದ ಮತ್ತು ಮೂಢನಂಬಿಕೆಗಳಿಂದ ನರಳುತ್ತಿದ್ದ ಸಮಾಜದಲ್ಲಿ ಸಹೋದರತ್ವ, ಸಮಾನತೆ ಹಾಗೂ ವೈಚಾರಿಕತೆಯ ಬೆಳಕು ಹರಿಸಲು ನಿರಂತರವಾಗಿ ಶ್ರಮಿಸಿದ ಮಹಾನ್ ಮಾನವತಾವಾದಿ.
ಅವರ ಚಿಂತನೆಗಳು ಒಂದು ಕಾಲಘಟ್ಟಕ್ಕೆ ಸೀಮಿತವಲ್ಲ. ಶತಮಾನಗಳು ಉರುಳಿದರೂ, ತಲೆಮಾರುಗಳು ಬದಲಾದರೂ ಸತ್ಯ, ಅಹಿಂಸೆ, ಸಮಾನತೆ ಮತ್ತು ಮಾನವೀಯತೆಯ ಗಾಂಧಿ ಮಾರ್ಗ ಸದಾ ಪ್ರಸ್ತುತ. ಇದೇ ಮೌಲ್ಯಗಳು ನಮ್ಮ ದೇಶದ ಪ್ರಜಾಸತ್ತಾತ್ಮಕ ಅಸ್ಮಿತೆಯನ್ನು ಬಲಪಡಿಸುವ ಶಕ್ತಿಯಾಗಿವೆ.
ಮಹಾತ್ಮ ಗಾಂಧೀಜಿಯವರ ಆದರ್ಶಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡು, ಸತ್ಯ ಮತ್ತು ಅಹಿಂಸೆಯ ಹಾದಿಯಲ್ಲಿ ಮುನ್ನಡೆಯುವ ಸಂಕಲ್ಪ ಮಾಡೋಣ.
ಸಮಸ್ತ ಭಾರತೀಯರಿಗೂ ಗಾಂಧಿ ಜಯಂತಿಯ ಹಾರ್ದಿಕ ಶುಭಾಶಯಗಳು.
#gandhijayantiThis media couldn't be displayed. See it on the original post. -
Dr. G Parameshwara
@DrParameshwara
ಇಂದಿನ ಸಮಾಜಕ್ಕೆ ಅತ್ಯಂತ ಅಗತ್ಯವಾಗಿರುವುದು ಸ್ನೇಹ, ಸೌಹಾರ್ದತೆ ಮತ್ತು ಐಕ್ಯತೆ. ಭಿನ್ನತೆಗಳು ನಮ್ಮನ್ನು ಬೇರ್ಪಡಿಸುವ ಗೋಡೆಗಳಾಗದೆ, ವೈವಿಧ್ಯತೆಯ ಸೌಂದರ್ಯವನ್ನು ಸಾರುವ ಸೇತುವೆಗಳಾಗಬೇಕು. ಭಿನ್ನಾಭಿಪ್ರಾಯಗಳ ನಡುವೆಯೂ ಒಂದಾಗಿ ಬದುಕುವ ಮನೋಭಾವವೇ ಬಲಿಷ್ಠ ಭಾರತದ ಅಡಿಪಾಯ.
ಮಹಾತ್ಮ ಗಾಂಧೀಜಿಯವರ ಬದುಕು ಮತ್ತು ಹೋರಾಟ ನಮಗೆ ಇದೇ ಮಾನವೀಯ ಸಂದೇಶವನ್ನು ಸಾರುತ್ತದೆ. ಸತ್ಯ, ಅಹಿಂಸೆ, ಸಹಬಾಳ್ವೆ ಮತ್ತು ಸಾಮಾಜಿಕ ಸಾಮರಸ್ಯದ ಮೌಲ್ಯಗಳನ್ನು ಜೀವನದುದ್ದಕ್ಕೂ ಪ್ರತಿಪಾದಿಸಿದ ಗಾಂಧೀಜಿಯವರ ಆಶಯಗಳನ್ನು ಹೊಸ ಪೀಳಿಗೆಗೆ ತಲುಪಿಸುವುದು ನಮ್ಮೆಲ್ಲರ ಜವಾಬ್ದಾರಿ.
ಇದೇ ಆಶಯದೊಂದಿಗೆ ನಮ್ಮ ಸರ್ಕಾರ ಮುನ್ನಡೆಯುತ್ತಿದ್ದು, ರಾಜ್ಯಾದ್ಯಂತ 10,000 ಭಾರತ್ ಜೋಡೋ ಯುವ ಸಂಘಗಳನ್ನು ಸ್ಥಾಪಿಸುತ್ತಿದ್ದೇವೆ. ಕ್ರೀಡೆ, ಸಂಸ್ಕೃತಿ, ವೈಜ್ಞಾನಿಕ ಮನೋಭಾವ, ನಾಯಕತ್ವದ ಗುಣಗಳು ಮತ್ತು ಸಾಮಾಜಿಕ ಸಾಮರಸ್ಯವನ್ನು ಬೆಳೆಸುವ ಮೂಲಕ ಯುವಕರನ್ನು ಒಂದೇ ವೇದಿಕೆಯಡಿ ಒಗ್ಗೂಡಿಸುವುದು ಇದರ ಪ್ರಮುಖ ಉದ್ದೇಶ.
ಯುವಜನರ ಪ್ರತಿಭೆ ಮತ್ತು ಸಾಮರ್ಥ್ಯಕ್ಕೆ ಸೂಕ್ತ ಅವಕಾಶಗಳನ್ನು ಕಲ್ಪಿಸುವುದರ ಜೊತೆಗೆ, ಸಮಾಜದ ಬಗ್ಗೆ ಕಾಳಜಿ, ಜವಾಬ್ದಾರಿ ಮತ್ತು ಸೇವಾ ಮನೋಭಾವವನ್ನು ಬೆಳೆಸುವುದೂ ನಮ್ಮ ಗುರಿಯಾಗಿದೆ. ಗ್ರಾಮದಿಂದ ನಗರವರೆಗೆ ಯುವಕರನ್ನು ಒಗ್ಗೂಡಿಸಿ, ಅವರ ಶಕ್ತಿ ಮತ್ತು ಸೃಜನಶೀಲತೆಯನ್ನು ಸಮಾಜದ ಒಳಿತಿಗೆ ಹಾಗೂ ಸಾಮರಸ್ಯದ ಸಮಾಜ ನಿರ್ಮಾಣಕ್ಕೆ ಬಳಸುವ ಸಂಕಲ್ಪ ನಮ್ಮದು.
ಗಾಂಧೀಜಿ ಬಯಸಿದ್ದು ಕೇವಲ ಸ್ವತಂತ್ರ ಭಾರತವನ್ನಲ್ಲ, ಪರಸ್ಪರ ಗೌರವಿಸುವ, ಒಬ್ಬರ ನೋವಿಗೆ ಮತ್ತೊಬ್ಬರು ಸ್ಪಂದಿಸುವ, ಎಲ್ಲರನ್ನೂ ಒಳಗೊಳ್ಳುವ ಮತ್ತು ಸಾಮಾಜಿಕ ಹೊಣೆಗಾರಿಕೆಯಿಂದ ಕೂಡಿದ ಸಮಷ್ಟಿ ಭಾರತವನ್ನು. ಆ ಮಹಾನ್ ಆಶಯವನ್ನು ಹೊಸ ಪೀಳಿಗೆಯ ಮನಸ್ಸುಗಳಲ್ಲಿ ಬಿತ್ತಿ, ಅವರ ಕೈಗಳಲ್ಲಿ ಜೀವಂತವಾಗಿಡುವುದು ನಮ್ಮ ಹೊಣೆಗಾರಿಕೆ.
What society needs most today is friendship, harmony and unity. Differences should not divide us; they should reflect the strength and beauty of our diversity. The ability to live together despite differences is the foundation of a strong India.
Mahatma Gandhi’s life and struggle carried this message through the values of truth, non-violence, coexistence and social harmony. It is our responsibility to carry these ideals to the younger generation.
Guided by this vision, our Government is establishing 10,000 Bharat Jodo Yuva Sanghas across Karnataka to bring young people together through sports, culture, scientific temper, leadership and social harmony.
Our aim is not only to create opportunities for youth, but also to nurture social responsibility, compassion and a spirit of service, and channel their talent and creativity towards building a more harmonious society.
Gandhiji envisioned not merely an independent India, but an inclusive India built on mutual respect, empathy and social responsibility. Keeping that vision alive in the minds and actions of the new generation is our shared responsibility.
#gandhijayanti -
Dr. G Parameshwara
@DrParameshwara
“ಗ್ರಾಮಗಳ ಅಭಿವೃದ್ಧಿಯಲ್ಲೇ ದೇಶದ ಅಭಿವೃದ್ಧಿ" ಇದು ಗಾಂಧಿಯವರು ಕಂಡ ನವ ಭಾರತದ ಕನಸು. ಗ್ರಾಮಗಳು ಸ್ವಾವಲಂಬಿ, ಸಬಲ ಹಾಗೂ ಅಭಿವೃದ್ಧಿಶೀಲವಾಗದೆ ದೇಶದ ಸಮಗ್ರ ಪ್ರಗತಿ ಸಾಧ್ಯವಿಲ್ಲ ಎಂಬುದು ಮಹಾತ್ಮ ಗಾಂಧೀಜಿಯವರ ಗ್ರಾಮ ಸ್ವರಾಜ್ಯದ ಪರಿಕಲ್ಪನೆಯ ಮೂಲ ಆಶಯವಾಗಿತ್ತು.
ಗ್ರಾಮದ ಜನರಿಗೆ ತಮ್ಮ ಹಕ್ಕು, ಭೂಮಿ ಹಾಗೂ ಆಡಳಿತದಲ್ಲಿ ಸೂಕ್ತ ಮಾನ್ಯತೆ ಮತ್ತು ಭದ್ರತೆ ದೊರೆಯಬೇಕು ಎಂಬುದನ್ನು ಅವರು ಬಲವಾಗಿ ಪ್ರತಿಪಾದಿಸಿದ್ದರು. ಅದೇ ಗ್ರಾಮ ಸ್ವರಾಜ್ಯದ ಆಶಯವನ್ನು ಆಡಳಿತದಲ್ಲಿ ಸಾಕಾರಗೊಳಿಸುವ ನಿಟ್ಟಿನಲ್ಲಿ, ರಾಜ್ಯದ 10,896 ಗ್ರಾಮಗಳನ್ನು ಕಂದಾಯ ಗ್ರಾಮಗಳಾಗಿ ಘೋಷಿಸುವ ಪ್ರಕ್ರಿಯೆಗೆ ನಮ್ಮ ಸರ್ಕಾರ ವೇಗ ನೀಡಿದೆ.
ಒಂದು ಗ್ರಾಮಕ್ಕೆ ಕಂದಾಯ ಗ್ರಾಮದ ಅಧಿಕೃತ ಮಾನ್ಯತೆ ದೊರೆಯುವುದು ಕೇವಲ ದಾಖಲೆಗಳಲ್ಲಿನ ಬದಲಾವಣೆಯಲ್ಲ, ಅದು ಅಲ್ಲಿನ ಜನರ ಹಕ್ಕುಗಳಿಗೆ ಮಾನ್ಯತೆ, ಅವರ ಆಸ್ತಿಗೆ ಭದ್ರತೆ ಹಾಗೂ ಅಭಿವೃದ್ಧಿಗೆ ಹೊಸ ಅವಕಾಶಗಳನ್ನು ಕಲ್ಪಿಸುವ ಮಹತ್ವದ ಹೆಜ್ಜೆಯಾಗಿದೆ.
ಗ್ರಾಮಗಳು ಸಬಲವಾದಾಗ ಮಾತ್ರ ರಾಜ್ಯವೂ, ದೇಶವೂ ಸಬಲವಾಗುತ್ತದೆ. ಗಾಂಧೀಜಿಯವರ ಗ್ರಾಮ ಸ್ವರಾಜ್ಯದ ಕನಸನ್ನು ಆಡಳಿತದ ಮೂಲಕ ಜೀವಂತವಾಗಿರಿಸಿಕೊಂಡು, ಗ್ರಾಮೀಣ ಜನರ ಬದುಕಿನಲ್ಲಿ ಅರ್ಥಪೂರ್ಣ ಬದಲಾವಣೆ ತರುವ ನಮ್ಮ ಪ್ರಯತ್ನಗಳು ನಿರಂತರವಾಗಿ ಮುಂದುವರಿಯಲಿವೆ.
“The nation develops when its villages develop”. This was at the heart of Mahatma Gandhi’s vision of a new India. His idea of Gram Swaraj was rooted in the belief that villages must be self-reliant, empowered and progressive for the country to prosper.
Gandhiji strongly believed that rural people must have secure rights over their land and proper recognition in governance. Guided by that vision, our Government has accelerated the process of declaring 10,896 villages as Revenue Villages.
Official recognition as a Revenue Village is not merely a change in records. It strengthens people’s rights, provides greater security over property and opens new opportunities for development.
When villages become stronger, the State and the nation become stronger. We will continue working to bring Gandhiji’s vision of Gram Swaraj into governance and create meaningful change in rural lives.
#gandhijayanti -
Dr. G Parameshwara
@DrParameshwara
ಮಹಾತ್ಮ ಗಾಂಧೀಜಿ ಅವರು ನನ್ನ ಸಾರ್ವಜನಿಕ ಬದುಕಿನಲ್ಲಿ ಬಹಳ ಪ್ರಭಾವ ಬೀರಿದ ವ್ಯಕ್ತಿ. ಅವರ ಸರಳತೆ, ಜನರ ಮೇಲಿನ ಕಾಳಜಿ, ಅನ್ಯಾಯದ ವಿರುದ್ಧದ ಹೋರಾಟ ಮತ್ತು ಎಲ್ಲರನ್ನು ಒಟ್ಟಾಗಿ ಕೊಂಡೊಯ್ಯುವ ಮನೋಭಾವ ನನಗೆ ಸದಾ ಪ್ರೇರಣೆ ನೀಡುತ್ತದೆ. ಜನರ ನಡುವೆ ನಿಂತು, ಅವರ ನೋವು–ನಲಿವುಗಳನ್ನು ಅರಿತು ಕೆಲಸ ಮಾಡಬೇಕೆಂಬ ಅವರ ಬದುಕಿನ ಸಂದೇಶ ನನ್ನ ಸಾರ್ವಜನಿಕ ಜೀವನದ ನಡೆಗೆ ದಿಕ್ಕು ತೋರಿಸಿದೆ.
ಸಮಾನತೆ ಎಂಬುದು ಭಾಷಣಕ್ಕೆ ಸೀಮಿತವಾಗದೇ, ಅದು ಸಮಾಜದ ಕೊನೆಯ ವ್ಯಕ್ತಿಯ ಬದುಕಿನಲ್ಲೂ ಕಾಣಬೇಕು ಎಂಬುದು ಗಾಂಧೀಜಿಯ ಆಶಯವಾಗಿತ್ತು. ಅಸ್ಪೃಶ್ಯತೆ ಮತ್ತು ಅನ್ಯಾಯದ ವಿರುದ್ಧ ಅವರು ನಡೆಸಿದ ಹೋರಾಟ ಸಮ ಸಮಾಜದ ನಿರ್ಮಾಣಕ್ಕೆ ಸ್ಪಷ್ಟ ದಿಕ್ಕು ತೋರಿಸುತ್ತದೆ. ಅವಕಾಶ, ಗೌರವ ಮತ್ತು ನ್ಯಾಯ ಎಲ್ಲರಿಗೂ ಸಮಾನವಾಗಿ ಸಿಗಬೇಕು ಎಂಬ ಅವರ ನಿಲುವು ಇಂದಿಗೂ ಅಷ್ಟೇ ಪ್ರಸ್ತುತವಾಗಿದೆ.
ಈ ಚಿಂತನೆಯೇ ನನ್ನ ಸಾರ್ವಜನಿಕ ಬದುಕಿನೊಂದಿಗೂ ಬೆಸೆದುಕೊಂಡಿದೆ. ಅಧಿಕಾರಕ್ಕಿಂತ ಜನಸೇವೆ ದೊಡ್ಡದು, ಹುದ್ದೆಗಿಂತ ಜನರ ಪ್ರೀತಿ- ವಿಶ್ವಾಸ ದೊಡ್ಡದು ಎಂದು ನಾನು ನಂಬಿದ್ದೇನೆ. ಜನರ ಸಮಸ್ಯೆ ಕೇಳುವುದು, ಸಂಕಷ್ಟದ ಸಮಯದಲ್ಲಿ ಅವರ ಜೊತೆ ನಿಲ್ಲುವುದು, ಶಿಕ್ಷಣ ಮತ್ತು ಅವಕಾಶ ಎಲ್ಲರಿಗೂ ತಲುಪುವಂತೆ ಮಾಡುವುದು ನನ್ನ ಕರ್ತವ್ಯದ ಜೊತೆಗೆ ಜವಾಬ್ದಾರಿ ಎಂದು ಭಾವಿಸಿದ್ದೇನೆ.
ಗಾಂಧೀಜಿಯ ಚಿಂತನೆಗಳನ್ನು ನಾವು ಕೇವಲ ಸ್ಮರಿಸುವುದಲ್ಲ, ಅವುಗಳನ್ನು ನಮ್ಮ ನಡೆ, ನುಡಿ, ಆಡಳಿತದಲ್ಲಿ ಜೀವಂತವಾಗಿಡಬೇಕು. ಸರಳತೆ, ಸೌಹಾರ್ದತೆ, ಸಾಮಾಜಿಕ ನ್ಯಾಯ ಮತ್ತು ಮಾನವೀಯತೆ ನಮ್ಮ ಸಾರ್ವಜನಿಕ ಬದುಕಿನ ಮೌಲ್ಯಗಳಾಗಬೇಕು. ಅದುವೇ ಗಾಂಧೀಜಿಗೆ ಸಲ್ಲಿಸುವ ನಿಜವಾದ ಗೌರವ. ಅದುವೇ ನಾವು ಮುಂದುವರಿಸಬೇಕಾದ ಗಾಂಧಿ ಮಾರ್ಗ.
#gandhijayanti -
Dr. G Parameshwara
@DrParameshwara
ಯುವಕರು ದೇಶ ನಿರ್ಮಾಣದಲ್ಲಿ ತೊಡಗಿಸಿಕೊಳ್ಳಬೇಕು. ಯುವಶಕ್ತಿ ಕೇವಲ ವೈಯಕ್ತಿಕ ಸಾಧನೆಗೆ ಸೀಮಿತವಾಗದೇ, ದೇಶದ ಅಭಿವೃದ್ಧಿ ಮತ್ತು ಸಮಾಜದ ಒಳಿತಿಗೆ ಬಳಕೆಯಾಗಬೇಕು ಎಂಬುದು ಮಹಾತ್ಮ ಗಾಂಧೀಜಿಯವರ ಆಶಯವಾಗಿತ್ತು.
ಯುವಕರ ಪ್ರತಿಭೆಗೆ ಸರಿಯಾದ ಅವಕಾಶ ಮತ್ತು ಪ್ರೋತ್ಸಾಹ ನೀಡಿದಾಗ ಮಾತ್ರ ಅವರು ಸಾಧನೆ ಮಾಡುವುದರ ಜೊತೆಗೆ ಸದೃಢ ದೇಶ ಕಟ್ಟಬಹುದು ಎಂಬುದನ್ನು ಅವರು ಬಲವಾಗಿ ನಂಬಿದ್ದರು.
ಇದೇ ಚಿಂತನೆಯನ್ನಿಟ್ಟುಕೊಂಡು ನಮ್ಮ ಸರ್ಕಾರ ಮುನ್ನಡೆಯುತ್ತಿದ್ದು, ಅಂತಾರಾಷ್ಟ್ರೀಯ ಮಟ್ಟದಲ್ಲಿ ಪದಕ ಗೆಲ್ಲುವ ರಾಜ್ಯದ ಕ್ರೀಡಾಪಟುಗಳಿಗೆ ಸರ್ಕಾರಿ ಉದ್ಯೋಗ ಮತ್ತು ಪ್ರೋತ್ಸಾಹಧನದ ಮೂಲಕ ಬೆಂಬಲ ನೀಡುತ್ತಿದ್ದೇವೆ.
ಕ್ರೀಡಾ ಸಾಧನೆಗೆ ಗೌರವ, ಪ್ರತಿಭೆಗೆ ಪ್ರೋತ್ಸಾಹ ಹಾಗೂ ಭವಿಷ್ಯ ಕಟ್ಟಿಕೊಳ್ಳಲು ಉದ್ಯೋಗ ನೀಡುವುದು ನಮ್ಮ ಸರ್ಕಾರದ ಬದ್ಧತೆ.
Mahatma Gandhi believed that youth must play an active role in nation-building. Their energy should not be limited to personal achievement, but channelled towards the progress of the country and the welfare of society.
Guided by this vision, our Government is supporting Karnataka’s international medal-winning sportspersons through Government jobs and financial incentives.
Recognising sporting excellence, encouraging talent and providing career security are central to our commitment to the youth.
#gandhijayanti -
Dr. G Parameshwara
@DrParameshwara
ಒಂದು ಕುಟುಂಬಕ್ಕೆ ಭೂಮಿ ಎಂದರೆ ಕೇವಲ ಆಸ್ತಿ ಅಲ್ಲ. ಅದು ಬದುಕಿನ ಭದ್ರತೆ ಮತ್ತು ಭವಿಷ್ಯದ ನೆಲೆ. ಅದನ್ನು ಸರಿಯಾದ ದಾಖಲೆಗಳ ಮೂಲಕ ಖಚಿತಪಡಿಸಿಕೊಳ್ಳುವ ದೃಷ್ಟಿಯಿಂದ ನಮ್ಮ ಸರ್ಕಾರ ಭೂದಾಖಲೆಗಳ ಡಿಜಿಟಲೀಕರಣಕ್ಕೆ ವೇಗ ನೀಡುತ್ತಿದೆ.
ಒಟ್ಟು 2,05,175 ಹಕ್ಕುಪತ್ರಗಳಲ್ಲಿ 1,55,575 ಹಕ್ಕುಪತ್ರಗಳ ನೋಂದಣಿ ಪೂರ್ಣಗೊಂಡಿದ್ದು, 10 ಜಿಲ್ಲೆಗಳಲ್ಲಿ ಭೂದಾಖಲೆಗಳ ಡಿಜಿಟಲೀಕರಣವೂ ಮುಕ್ತಾಯವಾಗಿದೆ. ಇದರಿಂದ ದಾಖಲೆಗಳ ಪರಿಶೀಲನೆ ಮತ್ತು ಸಂರಕ್ಷಣೆ ಇನ್ನಷ್ಟು ಸುಗಮವಾಗಲಿದೆ.
ಜನರು ತಮ್ಮ ಭೂದಾಖಲೆಗಳಿಗಾಗಿ ಕಚೇರಿಯಿಂದ ಕಚೇರಿಗೆ ಅಲೆದಾಡಬಾರದು. ಜೊತೆಗೆ ಸರಳ, ಪಾರದರ್ಶಕ ಮತ್ತು ವಿಶ್ವಾಸಾರ್ಹ ವ್ಯವಸ್ಥೆಯನ್ನು ರೂಪಿಸಿ ಕೊಡುವುದು ನಮ್ಮ ಜವಾಬ್ದಾರಿ.
ಗಾಂಧೀಜಿಯ ಜನಕಾಳಜಿಯ ಆಶಯವನ್ನು ಆಡಳಿತದಲ್ಲಿ ಜೀವಂತವಾಗಿರಿಸಿಕೊಂಡು ಜನರ ಬದುಕಿನಲ್ಲಿ ಅರ್ಥಪೂರ್ಣ ಬದಲಾವಣೆ ತರುವ ನಿಟ್ಟಿನಲ್ಲಿ ನಮ್ಮ ಕೆಲಸಗಳು ಮುಂದುವರಿಯಲಿದೆ.
For a family, land is not merely an asset. It is a source of security and a foundation for the future. To strengthen that security through proper records, our Government is accelerating the digitisation of land records.
Of the 2,05,175 title deeds, 1,55,575 have been registered, while digitisation of land records has been completed in 10 districts. This will make verification and preservation of records easier and more reliable.
People should not have to run from one office to another for their land records. It is our responsibility to build a system that is simple, transparent and trustworthy.
Keeping Gandhiji’s people-centric ideals alive in governance, we will continue working to bring meaningful change to people’s lives.
#gandhijayanti -
Dr. G Parameshwara
@DrParameshwara
ಮಹಾತ್ಮ ಗಾಂಧೀಜಿ ಅವರು ನನ್ನ ಸಾರ್ವಜನಿಕ ಬದುಕಿನಲ್ಲಿ ಬಹಳ ಪ್ರಭಾವ ಬೀರಿದ ವ್ಯಕ್ತಿ. ಅವರ ಸರಳತೆ, ಜನರ ಮೇಲಿನ ಕಾಳಜಿ, ಅನ್ಯಾಯದ ವಿರುದ್ಧದ ಹೋರಾಟ ಮತ್ತು ಎಲ್ಲರನ್ನು ಒಟ್ಟಾಗಿ ಕೊಂಡೊಯ್ಯುವ ಮನೋಭಾವ ನನಗೆ ಸದಾ ಪ್ರೇರಣೆ ನೀಡುತ್ತದೆ. ಜನರ ನಡುವೆ ನಿಂತು, ಅವರ ನೋವು–ನಲಿವುಗಳನ್ನು ಅರಿತು ಕೆಲಸ ಮಾಡಬೇಕೆಂಬ ಅವರ ಬದುಕಿನ ಸಂದೇಶ ನನ್ನ ಸಾರ್ವಜನಿಕ ಜೀವನದ ನಡೆಗೆ ದಿಕ್ಕು ತೋರಿಸಿದೆ.
ಸಮಾನತೆ ಎಂಬುದು ಭಾಷಣಕ್ಕೆ ಸೀಮಿತವಾಗದೇ, ಅದು ಸಮಾಜದ ಕೊನೆಯ ವ್ಯಕ್ತಿಯ ಬದುಕಿನಲ್ಲೂ ಕಾಣಬೇಕು ಎಂಬುದು ಗಾಂಧೀಜಿಯ ಆಶಯವಾಗಿತ್ತು. ಅಸ್ಪೃಶ್ಯತೆ ಮತ್ತು ಅನ್ಯಾಯದ ವಿರುದ್ಧ ಅವರು ನಡೆಸಿದ ಹೋರಾಟ ಸಮ ಸಮಾಜದ ನಿರ್ಮಾಣಕ್ಕೆ ಸ್ಪಷ್ಟ ದಿಕ್ಕು ತೋರಿಸುತ್ತದೆ. ಅವಕಾಶ, ಗೌರವ ಮತ್ತು ನ್ಯಾಯ ಎಲ್ಲರಿಗೂ ಸಮಾನವಾಗಿ ಸಿಗಬೇಕು ಎಂಬ ಅವರ ನಿಲುವು ಇಂದಿಗೂ ಅಷ್ಟೇ ಪ್ರಸ್ತುತವಾಗಿದೆ.
ಈ ಚಿಂತನೆಯೇ ನನ್ನ ಸಾರ್ವಜನಿಕ ಬದುಕಿನೊಂದಿಗೂ ಬೆಸೆದುಕೊಂಡಿದೆ. ಅಧಿಕಾರಕ್ಕಿಂತ ಜನಸೇವೆ ದೊಡ್ಡದು, ಹುದ್ದೆಗಿಂತ ಜನರ ಪ್ರೀತಿ- ವಿಶ್ವಾಸ ದೊಡ್ಡದು ಎಂದು ನಾನು ನಂಬಿದ್ದೇನೆ. ಜನರ ಸಮಸ್ಯೆ ಕೇಳುವುದು, ಸಂಕಷ್ಟದ ಸಮಯದಲ್ಲಿ ಅವರ ಜೊತೆ ನಿಲ್ಲುವುದು, ಶಿಕ್ಷಣ ಮತ್ತು ಅವಕಾಶ ಎಲ್ಲರಿಗೂ ತಲುಪುವಂತೆ ಮಾಡುವುದು ನನ್ನ ಕರ್ತವ್ಯದ ಜೊತೆಗೆ ಜವಾಬ್ದಾರಿ ಎಂದು ಭಾವಿಸಿದ್ದೇನೆ.
ಗಾಂಧೀಜಿಯ ಚಿಂತನೆಗಳನ್ನು ನಾವು ಕೇವಲ ಸ್ಮರಿಸುವುದಲ್ಲ, ಅವುಗಳನ್ನು ನಮ್ಮ ನಡೆ, ನುಡಿ, ಆಡಳಿತದಲ್ಲಿ ಜೀವಂತವಾಗಿಡಬೇಕು. ಸರಳತೆ, ಸೌಹಾರ್ದತೆ, ಸಾಮಾಜಿಕ ನ್ಯಾಯ ಮತ್ತು ಮಾನವೀಯತೆ ನಮ್ಮ ಸಾರ್ವಜನಿಕ ಬದುಕಿನ ಮೌಲ್ಯಗಳಾಗಬೇಕು. ಅದುವೇ ಗಾಂಧೀಜಿಗೆ ಸಲ್ಲಿಸುವ ನಿಜವಾದ ಗೌರವ. ಅದುವೇ ನಾವು ಮುಂದುವರಿಸಬೇಕಾದ ಗಾಂಧಿ ಮಾರ್ಗ.
#gandhijayanti -
Dr. G Parameshwara
@DrParameshwara
ಯುವಕರು ದೇಶ ನಿರ್ಮಾಣದಲ್ಲಿ ತೊಡಗಿಸಿಕೊಳ್ಳಬೇಕು. ಯುವಶಕ್ತಿ ಕೇವಲ ವೈಯಕ್ತಿಕ ಸಾಧನೆಗೆ ಸೀಮಿತವಾಗದೇ, ದೇಶದ ಅಭಿವೃದ್ಧಿ ಮತ್ತು ಸಮಾಜದ ಒಳಿತಿಗೆ ಬಳಕೆಯಾಗಬೇಕು ಎಂಬುದು ಮಹಾತ್ಮ ಗಾಂಧೀಜಿಯವರ ಆಶಯವಾಗಿತ್ತು.
ಯುವಕರ ಪ್ರತಿಭೆಗೆ ಸರಿಯಾದ ಅವಕಾಶ ಮತ್ತು ಪ್ರೋತ್ಸಾಹ ನೀಡಿದಾಗ ಮಾತ್ರ ಅವರು ಸಾಧನೆ ಮಾಡುವುದರ ಜೊತೆಗೆ ಸದೃಢ ದೇಶ ಕಟ್ಟಬಹುದು ಎಂಬುದನ್ನು ಅವರು ಬಲವಾಗಿ ನಂಬಿದ್ದರು.
ಇದೇ ಚಿಂತನೆಯನ್ನಿಟ್ಟುಕೊಂಡು ನಮ್ಮ ಸರ್ಕಾರ ಮುನ್ನಡೆಯುತ್ತಿದ್ದು, ಕ್ರೀಡೆಯಲ್ಲಿ ಸಾಧನೆ ಮಾಡುತ್ತಿರುವ ವಿದ್ಯಾರ್ಥಿಗಳು ಶಿಕ್ಷಣದಿಂದ ಹಿಂದೆ ಸರಿಯಬಾರದು ಎಂಬ ಕಾಳಜಿಯಿಂದ ರಾಜ್ಯ, ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದ ಕ್ರೀಡಾಪಟು ವಿದ್ಯಾರ್ಥಿಗಳಿಗೆ ಹಾಜರಾತಿಯಲ್ಲಿ ವಿಶೇಷ ವಿನಾಯಿತಿ ನೀಡಿದ್ದೇವೆ.
ಕ್ರೀಡೆ ಮತ್ತು ಶಿಕ್ಷಣದ ನಡುವೆ ಯಾವುದಾದರೂ ಒಂದನ್ನು ಆಯ್ಕೆ ಮಾಡಿಕೊಳ್ಳುವ ಅನಿವಾರ್ಯತೆ ವಿದ್ಯಾರ್ಥಿಗಳಿಗೆ ಎದುರಾಗಬಾರದು. ಅವರ ಸಾಧನೆಗೆ ಶಿಕ್ಷಣ ಬೆಂಬಲವಾಗಬೇಕೆ ಹೊರತು ಅಡ್ಡಿಯಾಗಬಾರದು ಎಂಬುದು ನಮ್ಮ ಉದ್ದೇಶ.
Mahatma Gandhi believed that youth must play an active role in nation-building, and that their energy should contribute not only to personal achievement but also to the progress of the country and society.
Guided by this vision, our Government has introduced special attendance exemptions for student-athletes participating at the State, national and international levels, so that sporting excellence does not come at the cost of education.
Students should never be forced to choose between sports and education. Our aim is to ensure that education supports their achievements rather than becoming an obstacle to them. -
Dr. G Parameshwara
@DrParameshwara
ಪ್ರತಿಯೊಂದು ಕುಟುಂಬಕ್ಕೂ ಗೌರವದಿಂದ ಬದುಕಲು ಸ್ವಂತದ್ದೊಂದು ಸೂರು ಇರಬೇಕು ಎಂಬುದು ಗಾಂಧೀಜಿಯವರ ಜನಪರ ಚಿಂತನೆಯ ಭಾಗವಾಗಿತ್ತು.
ಅದೇ ಆಶಯದೊಂದಿಗೆ ಬಡ ಮತ್ತು ನಿವೇಶನರಹಿತ ಕುಟುಂಬಗಳ ಸ್ವಂತ ಸೂರಿನ ಕನಸನ್ನು ನನಸಾಗಿಸಲು ನಮ್ಮ ಸರ್ಕಾರ ಮುಂದಡಿಯಿಟ್ಟಿದ್ದು, ಪ್ರತಿ ಜಿಲ್ಲೆಯಲ್ಲಿ 50,000 ನಿವೇಶನಗಳನ್ನು ಹಂಚಿಕೆ ಮಾಡುವ ತೀರ್ಮಾನ ಕೈಗೊಂಡಿದ್ದೇವೆ. ಈ ಮೂಲಕ ಸ್ವಂತ ನೆಲೆಯಿಲ್ಲದ ಕುಟುಂಬಗಳಿಗೆ ಭದ್ರತೆ ಕಲ್ಪಿಸುತ್ತಿದ್ದೇವೆ.
ನಿವೇಶನ ಎಂದರೆ ಕೇವಲ ಒಂದು ಖಾಲಿ ಜಾಗವಲ್ಲ, ಬದಲಿಗೆ ಒಂದು ಕುಟುಂಬದ ಭವಿಷ್ಯಕ್ಕೆ ಭರವಸೆ ಮತ್ತು ಮಕ್ಕಳಿಗೆ ಸುರಕ್ಷತೆಯನ್ನು ಕಲ್ಪಿಸಿಕೊಡುವ ನೆಲೆಯಾಗಿದೆ.
ಗಾಂಧೀಜಿಯ ಜನಕಾಳಜಿಯ ಆಶಯವನ್ನು ಆಡಳಿತದಲ್ಲಿ ಜೀವಂತವಾಗಿರಿಸಿಕೊಂಡು ಜನರ ಬದುಕಿನಲ್ಲಿ ಅರ್ಥಪೂರ್ಣ ಬದಲಾವಣೆ ತರುವ ನಿಟ್ಟಿನಲ್ಲಿ ನಮ್ಮ ಕೆಲಸಗಳು ಮುಂದುವರಿಯಲಿದೆ.
Gandhiji believed that every family should have a home of its own and the dignity of a secure life.
Guided by that vision, our Government has decided to allot 50,000 housing sites in every district to help poor and landless families realise the dream of owning a home and build a secure future.
A housing site is not merely a piece of land. It is a foundation for a family’s future and a source of security for their children.
We will continue to keep Gandhiji’s people-centric ideals alive in governance and work towards bringing meaningful change to people’s lives.
#gandhijayanti -
Dr. G Parameshwara
@DrParameshwara
ಮಹಾತ್ಮ ಗಾಂಧೀಜಿ ಅವರು ನನ್ನ ಸಾರ್ವಜನಿಕ ಬದುಕಿನಲ್ಲಿ ಬಹಳ ಪ್ರಭಾವ ಬೀರಿದ ವ್ಯಕ್ತಿ. ಅವರ ಸರಳತೆ, ಜನರ ಮೇಲಿನ ಕಾಳಜಿ, ಅನ್ಯಾಯದ ವಿರುದ್ಧದ ಹೋರಾಟ ಮತ್ತು ಎಲ್ಲರನ್ನು ಒಟ್ಟಾಗಿ ಕೊಂಡೊಯ್ಯುವ ಮನೋಭಾವ ನನಗೆ ಸದಾ ಪ್ರೇರಣೆ ನೀಡುತ್ತದೆ. ಜನರ ನಡುವೆ ನಿಂತು, ಅವರ ನೋವು–ನಲಿವುಗಳನ್ನು ಅರಿತು ಕೆಲಸ ಮಾಡಬೇಕೆಂಬ ಅವರ ಬದುಕಿನ ಸಂದೇಶ ನನ್ನ ಸಾರ್ವಜನಿಕ ಜೀವನದ ನಡೆಗೆ ದಿಕ್ಕು ತೋರಿಸಿದೆ.
ಸಮಾನತೆ ಎಂಬುದು ಭಾಷಣಕ್ಕೆ ಸೀಮಿತವಾಗದೇ, ಅದು ಸಮಾಜದ ಕೊನೆಯ ವ್ಯಕ್ತಿಯ ಬದುಕಿನಲ್ಲೂ ಕಾಣಬೇಕು ಎಂಬುದು ಗಾಂಧೀಜಿಯ ಆಶಯವಾಗಿತ್ತು. ಅಸ್ಪೃಶ್ಯತೆ ಮತ್ತು ಅನ್ಯಾಯದ ವಿರುದ್ಧ ಅವರು ನಡೆಸಿದ ಹೋರಾಟ ಸಮ ಸಮಾಜದ ನಿರ್ಮಾಣಕ್ಕೆ ಸ್ಪಷ್ಟ ದಿಕ್ಕು ತೋರಿಸುತ್ತದೆ. ಅವಕಾಶ, ಗೌರವ ಮತ್ತು ನ್ಯಾಯ ಎಲ್ಲರಿಗೂ ಸಮಾನವಾಗಿ ಸಿಗಬೇಕು ಎಂಬ ಅವರ ನಿಲುವು ಇಂದಿಗೂ ಅಷ್ಟೇ ಪ್ರಸ್ತುತವಾಗಿದೆ.
ಈ ಚಿಂತನೆಯೇ ನನ್ನ ಸಾರ್ವಜನಿಕ ಬದುಕಿನೊಂದಿಗೂ ಬೆಸೆದುಕೊಂಡಿದೆ. ಅಧಿಕಾರಕ್ಕಿಂತ ಜನಸೇವೆ ದೊಡ್ಡದು, ಹುದ್ದೆಗಿಂತ ಜನರ ಪ್ರೀತಿ- ವಿಶ್ವಾಸ ದೊಡ್ಡದು ಎಂದು ನಾನು ನಂಬಿದ್ದೇನೆ. ಜನರ ಸಮಸ್ಯೆ ಕೇಳುವುದು, ಸಂಕಷ್ಟದ ಸಮಯದಲ್ಲಿ ಅವರ ಜೊತೆ ನಿಲ್ಲುವುದು, ಶಿಕ್ಷಣ ಮತ್ತು ಅವಕಾಶ ಎಲ್ಲರಿಗೂ ತಲುಪುವಂತೆ ಮಾಡುವುದು ನನ್ನ ಕರ್ತವ್ಯದ ಜೊತೆಗೆ ಜವಾಬ್ದಾರಿ ಎಂದು ಭಾವಿಸಿದ್ದೇನೆ.
ಗಾಂಧೀಜಿಯ ಚಿಂತನೆಗಳನ್ನು ನಾವು ಕೇವಲ ಸ್ಮರಿಸುವುದಲ್ಲ, ಅವುಗಳನ್ನು ನಮ್ಮ ನಡೆ, ನುಡಿ, ಆಡಳಿತದಲ್ಲಿ ಜೀವಂತವಾಗಿಡಬೇಕು. ಸರಳತೆ, ಸೌಹಾರ್ದತೆ, ಸಾಮಾಜಿಕ ನ್ಯಾಯ ಮತ್ತು ಮಾನವೀಯತೆ ನಮ್ಮ ಸಾರ್ವಜನಿಕ ಬದುಕಿನ ಮೌಲ್ಯಗಳಾಗಬೇಕು. ಅದುವೇ ಗಾಂಧೀಜಿಗೆ ಸಲ್ಲಿಸುವ ನಿಜವಾದ ಗೌರವ. ಅದುವೇ ನಾವು ಮುಂದುವರಿಸಬೇಕಾದ ಗಾಂಧಿ ಮಾರ್ಗ.
#gandhijayanti -
Dr. G Parameshwara
@DrParameshwara
ಯುವಕರು ದೇಶ ನಿರ್ಮಾಣದಲ್ಲಿ ತೊಡಗಿಸಿಕೊಳ್ಳಬೇಕು. ಯುವಶಕ್ತಿ ಕೇವಲ ವೈಯಕ್ತಿಕ ಸಾಧನೆಗೆ ಸೀಮಿತವಾಗದೇ, ದೇಶದ ಅಭಿವೃದ್ಧಿ ಮತ್ತು ಸಮಾಜದ ಒಳಿತಿಗೆ ಬಳಕೆಯಾಗಬೇಕು ಎಂಬುದು ಮಹಾತ್ಮ ಗಾಂಧೀಜಿಯವರ ಆಶಯವಾಗಿತ್ತು.
ಯುವಕರ ಪ್ರತಿಭೆಗೆ ಸರಿಯಾದ ಅವಕಾಶ ಮತ್ತು ಪ್ರೋತ್ಸಾಹ ನೀಡಿದಾಗ ಮಾತ್ರ ಅವರು ಸಾಧನೆ ಮಾಡುವುದರ ಜೊತೆಗೆ ಸದೃಢ ದೇಶ ಕಟ್ಟಬಹುದು ಎಂಬುದನ್ನು ಅವರು ಬಲವಾಗಿ ನಂಬಿದ್ದರು.
ಅದೇ ಆಶಯದೊಂದಿಗೆ ಗ್ರಾಮೀಣ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಕಬಡ್ಡಿ, ಅಥ್ಲೆಟಿಕ್ಸ್ ಹಾಗೂ ಸಾಂಪ್ರದಾಯಿಕ ಗ್ರಾಮೀಣ ಕ್ರೀಡೆಗಳನ್ನು ಒಳಗೊಂಡ ದಸರಾ ಕ್ರೀಡಾಕೂಟವನ್ನು ತಾಲೂಕು ಮಟ್ಟದಿಂದಲೇ ಆಯೋಜಿಸಲು ತೀರ್ಮಾನಿಸಿದ್ದೇವೆ.
ಅವಕಾಶದ ಕೊರತೆಯಿಂದ ಯಾವುದೇ ಪ್ರತಿಭೆ ಹಿಂದುಳಿಯಬಾರದು ಮತ್ತು ಅವರ ಸಾಮರ್ಥ್ಯಕ್ಕೆ ಸರಿಯಾದ ವೇದಿಕೆ ಸಿಗಬೇಕು ಎಂಬುದು ನಮ್ಮ ಉದ್ದೇಶ.
Mahatma Gandhi believed that youth must play an active role in nation-building, and that their energy should contribute not only to personal achievement but also to the progress of the country and society.
Guided by this vision, we have decided to organise Dasara sports competitions from the taluk level, featuring kabaddi, athletics and traditional rural sports, to encourage and nurture rural talent.
Our aim is to ensure that no talent is held back for lack of opportunity, and that every young sportsperson gets the right platform to realise their potential.
#gandhijayanti -
Dr. G Parameshwara
@DrParameshwara
ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸರ್ಕಾರದ ನೆರವು, ಸೌಲಭ್ಯಗಳು ತಲುಪಬೇಕು ಎಂಬುದು ಗಾಂಧೀಜಿಯವರ ಆಶಯವಾಗಿತ್ತು. ಅದೇ ದಾರಿಯಲ್ಲಿ ನಮ್ಮ ಸರ್ಕಾರ ನಡೆಯುತ್ತಿದ್ದು, ಸಮರ್ಪಕ ಆಡಳಿತ ನೀಡುವ ಮೂಲಕ ಸರ್ಕಾರಿ ಸೌಲಭ್ಯಗಳು ಅರ್ಹರ ಮನೆಬಾಗಿಲಿಗೆ ತಲುಪುವಂತೆ ನೋಡುಕೊಳ್ಳುತ್ತಿದ್ದೇವೆ.
ಈ ಕಾಳಜಿಯಿಂದಲೇ ಸಾಮಾಜಿಕ ಭದ್ರತಾ ಪಿಂಚಣಿಗೆ ನಿಗದಿಯಾಗಿದ್ದ ಗರಿಷ್ಠ ಆದಾಯ ಮಿತಿಯನ್ನು ₹32,000 ದಿಂದ ₹1.20 ಲಕ್ಷಕ್ಕೆ ಹೆಚ್ಚಿಸಿದ್ದೇವೆ. ಇದರಿಂದಾಗಿ ಆದಾಯ ಮಿತಿಯಿಂದಾಗಿ ಇದುವರೆಗೆ ಸೌಲಭ್ಯದಿಂದ ಹೊರಗುಳಿದಿದ್ದ ಅರ್ಹರಿಗೆ ಮತ್ತೆ ಪಿಂಚಣಿಯ ಹಕ್ಕು ದೊರೆಯಲಿದೆ.
ಸೌಲಭ್ಯವನ್ನು ಅರ್ಹರ ಕೈಗೆ ತಲುಪಿಸುವುದಷ್ಟೇ ಅಲ್ಲ, ವ್ಯವಸ್ಥೆಯಲ್ಲಿ ಪಾರದರ್ಶಕತೆ ಕಾಪಾಡುವುದು ಕೂಡ ಅಷ್ಟೇ ಮುಖ್ಯ. ಜನರ ಬದುಕಿಗೆ ನೇರವಾಗಿ ನೆರವಾಗುವ ಪ್ರತಿಯೊಂದು ನಿರ್ಧಾರದಲ್ಲೂ ಸಾಮಾಜಿಕ ನ್ಯಾಯ ಮತ್ತು ಜನಹಿತಕ್ಕೆ ಆದ್ಯತೆ ನೀಡುವುದು ನಮ್ಮ ಬದ್ಧತೆ.
ಗಾಂಧೀಜಿಯ ಸಮಾನತೆ ಮತ್ತು ಜನಕಾಳಜಿಯ ಆಶಯವನ್ನು ಆಡಳಿತದಲ್ಲಿ ಜೀವಂತವಾಗಿರಿಸಿಕೊಂಡೇ ನಮ್ಮ ನಡೆ ಮುಂದುವರಿಯಲಿದೆ.
Gandhiji envisioned a system where Government support and welfare reach even the last person in society. Our Government is walking that path by ensuring, through effective governance, that public benefits reach the doorsteps of those who are eligible.
With this concern, we have raised the maximum income limit for social security pensions from ₹32,000 to ₹1.20 lakh. This will enable eligible beneficiaries who were earlier excluded due to the income ceiling to regain access to their pension benefits.
Ensuring that benefits reach the eligible is important, but so is maintaining transparency in the system. Our commitment is to place social justice and public welfare at the heart of every decision that directly impacts people’s lives.
We will continue to carry forward Gandhiji’s ideals of equality and concern for the people through our governance. -
Dr. G Parameshwara
@DrParameshwara
ಮಹಾತ್ಮ ಗಾಂಧೀಜಿ ಅವರು ನನ್ನ ಸಾರ್ವಜನಿಕ ಬದುಕಿನಲ್ಲಿ ಬಹಳ ಪ್ರಭಾವ ಬೀರಿದ ವ್ಯಕ್ತಿ. ಅವರ ಸರಳತೆ, ಜನರ ಮೇಲಿನ ಕಾಳಜಿ, ಅನ್ಯಾಯದ ವಿರುದ್ಧದ ಹೋರಾಟ ಮತ್ತು ಎಲ್ಲರನ್ನು ಒಟ್ಟಾಗಿ ಕೊಂಡೊಯ್ಯುವ ಮನೋಭಾವ ನನಗೆ ಸದಾ ಪ್ರೇರಣೆ ನೀಡುತ್ತದೆ. ಜನರ ನಡುವೆ ನಿಂತು, ಅವರ ನೋವು–ನಲಿವುಗಳನ್ನು ಅರಿತು ಕೆಲಸ ಮಾಡಬೇಕೆಂಬ ಅವರ ಬದುಕಿನ ಸಂದೇಶ ನನ್ನ ಸಾರ್ವಜನಿಕ ಜೀವನದ ನಡೆಗೆ ದಿಕ್ಕು ತೋರಿಸಿದೆ.
ಸಮಾನತೆ ಎಂಬುದು ಭಾಷಣಕ್ಕೆ ಸೀಮಿತವಾಗದೇ, ಅದು ಸಮಾಜದ ಕೊನೆಯ ವ್ಯಕ್ತಿಯ ಬದುಕಿನಲ್ಲೂ ಕಾಣಬೇಕು ಎಂಬುದು ಗಾಂಧೀಜಿಯ ಆಶಯವಾಗಿತ್ತು. ಅಸ್ಪೃಶ್ಯತೆ ಮತ್ತು ಅನ್ಯಾಯದ ವಿರುದ್ಧ ಅವರು ನಡೆಸಿದ ಹೋರಾಟ ಸಮ ಸಮಾಜದ ನಿರ್ಮಾಣಕ್ಕೆ ಸ್ಪಷ್ಟ ದಿಕ್ಕು ತೋರಿಸುತ್ತದೆ. ಅವಕಾಶ, ಗೌರವ ಮತ್ತು ನ್ಯಾಯ ಎಲ್ಲರಿಗೂ ಸಮಾನವಾಗಿ ಸಿಗಬೇಕು ಎಂಬ ಅವರ ನಿಲುವು ಇಂದಿಗೂ ಅಷ್ಟೇ ಪ್ರಸ್ತುತವಾಗಿದೆ.
ಈ ಚಿಂತನೆಯೇ ನನ್ನ ಸಾರ್ವಜನಿಕ ಬದುಕಿನೊಂದಿಗೂ ಬೆಸೆದುಕೊಂಡಿದೆ. ಅಧಿಕಾರಕ್ಕಿಂತ ಜನಸೇವೆ ದೊಡ್ಡದು, ಹುದ್ದೆಗಿಂತ ಜನರ ಪ್ರೀತಿ- ವಿಶ್ವಾಸ ದೊಡ್ಡದು ಎಂದು ನಾನು ನಂಬಿದ್ದೇನೆ. ಜನರ ಸಮಸ್ಯೆ ಕೇಳುವುದು, ಸಂಕಷ್ಟದ ಸಮಯದಲ್ಲಿ ಅವರ ಜೊತೆ ನಿಲ್ಲುವುದು, ಶಿಕ್ಷಣ ಮತ್ತು ಅವಕಾಶ ಎಲ್ಲರಿಗೂ ತಲುಪುವಂತೆ ಮಾಡುವುದು ನನ್ನ ಕರ್ತವ್ಯದ ಜೊತೆಗೆ ಜವಾಬ್ದಾರಿ ಎಂದು ಭಾವಿಸಿದ್ದೇನೆ.
ಗಾಂಧೀಜಿಯ ಚಿಂತನೆಗಳನ್ನು ನಾವು ಕೇವಲ ಸ್ಮರಿಸುವುದಲ್ಲ, ಅವುಗಳನ್ನು ನಮ್ಮ ನಡೆ, ನುಡಿಯನ್ನು ಆಡಳಿತದಲ್ಲಿ ಜೀವಂತವಾಗಿಡಬೇಕು. ಸರಳತೆ, ಸೌಹಾರ್ದತೆ, ಸಾಮಾಜಿಕ ನ್ಯಾಯ ಮತ್ತು ಮಾನವೀಯತೆ ನಮ್ಮ ಸಾರ್ವಜನಿಕ ಬದುಕಿನ ಮೌಲ್ಯಗಳಾಗಬೇಕು. ಅದುವೇ ಗಾಂಧೀಜಿಗೆ ಸಲ್ಲಿಸುವ ನಿಜವಾದ ಗೌರವ. ಅದುವೇ ನಾವು ಮುಂದುವರಿಸಬೇಕಾದ ಗಾಂಧಿ ಮಾರ್ಗ.
#gandhijayanti -
Dr. G Parameshwara
@DrParameshwara
ರಾಜ್ಯದಲ್ಲಿ ಬರ ಪರಿಸ್ಥಿತಿ ಮತ್ತಷ್ಟು ಭೀಕರವಾಗುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಸಚಿವರಾದ ಅಮಿತ್ ಶಾ ಹಾಗೂ ಕೇಂದ್ರ ಕೃಷಿ ಸಚಿವರಾದ ಶಿವರಾಜ್ ಸಿಂಗ್ ಚೌಹಾಣ್ ಅವರಿಗೆ ಪ್ರತ್ಯೇಕವಾಗಿ ಪತ್ರ ಬರೆದು, ಕರ್ನಾಟಕಕ್ಕೆ ತುರ್ತು ನೆರವು ಒದಗಿಸುವಂತೆ ಕೋರಿದ್ದೇನೆ.
ಈ ಕುರಿತಾದ ಪತ್ರಿಕಾ ವರದಿಗಳು ಹೀಗಿವೆ..
With the drought situation in Karnataka worsening, I have written separately to Union Home Minister Amit Shah and Union Agriculture Minister Shivraj Singh Chouhan, seeking urgent assistance for the State.
Here are the media reports on the matter. -
Dr. G Parameshwara
@DrParameshwara
With the drought situation in Karnataka worsening, I have written separately to Union Home Minister Amit Shah and Union Agriculture Minister Shivraj Singh Chouhan, seeking urgent assistance for the State.
Here are the media reports on the matter.
ರಾಜ್ಯದಲ್ಲಿ ಬರ ಪರಿಸ್ಥಿತಿ ಮತ್ತಷ್ಟು ಭೀಕರವಾಗುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಸಚಿವರಾದ ಅಮಿತ್ ಶಾ ಹಾಗೂ ಕೇಂದ್ರ ಕೃಷಿ ಸಚಿವರಾದ ಶಿವರಾಜ್ ಸಿಂಗ್ ಚೌಹಾಣ್ ಅವರಿಗೆ ಪ್ರತ್ಯೇಕವಾಗಿ ಪತ್ರ ಬರೆದು, ಕರ್ನಾಟಕಕ್ಕೆ ತುರ್ತು ನೆರವು ಒದಗಿಸುವಂತೆ ಕೋರಿದ್ದೇನೆ.
ಈ ಕುರಿತಾದ ಪತ್ರಿಕಾ ವರದಿಗಳು ಹೀಗಿವೆ.. -
Dr. G Parameshwara
@DrParameshwara
Deeply moved by the courage and presence of mind shown by Captain Smit Machchhar, who, despite being seriously injured during a mid-air crisis on a flydubai flight carrying 174 passengers, continued to put the safety of those on board before his own.
What stands out is not just his bravery, but his extraordinary sense of duty in a moment of unimaginable danger. To remain composed, think of others and act decisively while fighting for your own life is truly remarkable.
Captain Smit, your courage has earned the admiration of an entire nation. India is proud of you. I salute your bravery and selflessness, and wish you a speedy and complete recovery. -
Dr. G Parameshwara
@DrParameshwara
He showed India that leadership does not have to be loud to be strong.
With simplicity in life, firmness in purpose and the timeless call of “Jai Jawan, Jai Kisan”, he placed the soldier and the farmer at the heart of the nation.
On Lal Bahadur Shastri Jayanti, we pay heartfelt tribute to a statesman whose quiet strength continues to command respect across generations. -
Dr. G Parameshwara
@DrParameshwara
ಅಹಿಂಸೆಯ ಎದುರು ಬಂದೂಕಿನ ನಳಿಕೆಗಳೂ ಮೌನವಾಗಿ ಶರಣಾಗುತ್ತವೆ ಎಂಬುದನ್ನು ಜಗತ್ತಿಗೆ ಸಾಧಿಸಿ ತೋರಿಸಿದವರು ಮಹಾತ್ಮ ಗಾಂಧಿ.
ತಾನು ಉರಿದು ಜಗತ್ತಿಗೆ ಬೆಳಕು ನೀಡಿದ ದೀಪದಂತೆ, ಸತ್ಯ, ಧರ್ಮ ಮತ್ತು ಅಹಿಂಸೆಯ ಮಾರ್ಗದಲ್ಲಿ ಬದುಕಿ, ಕೋಟ್ಯಂತರ ಜನರ ಬದುಕಿಗೆ ದಾರಿದೀಪವಾದ ಮಹಾಚೇತನ ಗಾಂಧಿ.
ಸತ್ಯಾಗ್ರಹ ಮತ್ತು ಅಹಿಂಸೆಯ ಅಸ್ತ್ರಗಳ ಮೂಲಕ ಸ್ವಾತಂತ್ರ್ಯ ಹೋರಾಟಕ್ಕೆ ಹೊಸ ದಿಕ್ಕು ನೀಡಿ, ಕೋಟ್ಯಂತರ ಭಾರತೀಯರ ಬಂಧಮುಕ್ತ ಬದುಕಿನ ಕನಸನ್ನು ನನಸಾಗಿಸಿದ ಮಹಾತ್ಮರ ಜನ್ಮದಿನವಿಂದು.
ಗಾಂಧೀಜಿ ಕೇವಲ ಸ್ವಾತಂತ್ರ್ಯ ಹೋರಾಟದ ನಾಯಕರಾಗಿರಲಿಲ್ಲ. ಸಮಾಜದ ಕಷ್ಟ-ನಷ್ಟಗಳಿಗೆ ಸ್ಪಂದಿಸಿದ, ಅಸಮಾನತೆ ಮತ್ತು ಅನ್ಯಾಯದ ವಿರುದ್ಧ ಧ್ವನಿ ಎತ್ತಿದ, ಕೋಮುವಾದ, ಜಾತಿವಾದ ಮತ್ತು ಮೂಢನಂಬಿಕೆಗಳಿಂದ ನರಳುತ್ತಿದ್ದ ಸಮಾಜದಲ್ಲಿ ಸಹೋದರತ್ವ, ಸಮಾನತೆ ಹಾಗೂ ವೈಚಾರಿಕತೆಯ ಬೆಳಕು ಹರಿಸಲು ನಿರಂತರವಾಗಿ ಶ್ರಮಿಸಿದ ಮಹಾನ್ ಮಾನವತಾವಾದಿ.
ಅವರ ಚಿಂತನೆಗಳು ಒಂದು ಕಾಲಘಟ್ಟಕ್ಕೆ ಸೀಮಿತವಲ್ಲ. ಶತಮಾನಗಳು ಉರುಳಿದರೂ, ತಲೆಮಾರುಗಳು ಬದಲಾದರೂ ಸತ್ಯ, ಅಹಿಂಸೆ, ಸಮಾನತೆ ಮತ್ತು ಮಾನವೀಯತೆಯ ಗಾಂಧಿ ಮಾರ್ಗ ಸದಾ ಪ್ರಸ್ತುತ. ಇದೇ ಮೌಲ್ಯಗಳು ನಮ್ಮ ದೇಶದ ಪ್ರಜಾಸತ್ತಾತ್ಮಕ ಅಸ್ಮಿತೆಯನ್ನು ಬಲಪಡಿಸುವ ಶಕ್ತಿಯಾಗಿವೆ.
ಮಹಾತ್ಮ ಗಾಂಧೀಜಿಯವರ ಆದರ್ಶಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡು, ಸತ್ಯ ಮತ್ತು ಅಹಿಂಸೆಯ ಹಾದಿಯಲ್ಲಿ ಮುನ್ನಡೆಯುವ ಸಂಕಲ್ಪ ಮಾಡೋಣ.
ಸಮಸ್ತ ಭಾರತೀಯರಿಗೂ ಗಾಂಧಿ ಜಯಂತಿಯ ಹಾರ್ದಿಕ ಶುಭಾಶಯಗಳು.
#gandhijayantiThis media couldn't be displayed. See it on the original post. -
Dr. G Parameshwara
@DrParameshwara
ರಾಜ್ಯದ ಬರ ಪರಿಸ್ಥಿತಿಯನ್ನು ನಿರಂತರವಾಗಿ ಮೌಲ್ಯಮಾಪನ ನಡೆಸಲಾಗುತ್ತಿದ್ದು, ರೈತರ ಸಂಕಷ್ಟಕ್ಕೆ ತ್ವರಿತವಾಗಿ ಸ್ಪಂದಿಸುವ ನಿಟ್ಟಿನಲ್ಲಿ ಹಂತ ಹಂತವಾಗಿ ಕ್ರಮ ಕೈಗೊಳ್ಳುತ್ತಿದ್ದೇವೆ.
ಈವರೆಗೆ 177 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಿದ್ದೆವು. ಇದೀಗ ಮತ್ತೆ 40 ತಾಲೂಕುಗಳನ್ನು ʼಬರಪೀಡಿತʼ ಎಂದು ಘೋಷಿಸಿ ಆದೇಶಿಸಿದ್ದೇವೆ. ಈ ಪೈಕಿ 24 ತಾಲೂಕುಗಳು ತೀವ್ರ ಬರಪೀಡಿತ ಹಾಗೂ 16 ತಾಲೂಕುಗಳು ಮಧ್ಯಮ ಬರಪೀಡಿತವಾಗಿದ್ದು, ಇದರೊಂದಿಗೆ ರಾಜ್ಯದಲ್ಲಿ ಬರಪೀಡಿತ ಎಂದು ಘೋಷಿಸಲಾದ ತಾಲೂಕುಗಳ ಸಂಖ್ಯೆ 217ಕ್ಕೆ ಏರಿಕೆಯಾಗಿದೆ.
ಮುಂಗಾರು ಹಂಗಾಮು ಮುಗಿಯುವವರೆಗೂ ಬರ ಪರಿಸ್ಥಿತಿಯ ಮೇಲ್ವಿಚಾರಣೆ ಮುಂದುವರಿಯಲಿದ್ದು, ಅಗತ್ಯ ಕಂಡುಬಂದಲ್ಲಿ ಮುಂದಿನ ಹಂತದಲ್ಲಿಯೂ ಹೆಚ್ಚುವರಿ ತಾಲೂಕುಗಳನ್ನು ಗ್ರೌಂಡ್ ಟ್ರೂಥಿಂಗ್ಗೆ ಸೇರಿಸಲಾಗುವುದು.
ರೈತರ ಸಂಕಷ್ಟಕ್ಕೆ ಸ್ಪಂದಿಸುವುದು ಸರ್ಕಾರದ ಮೊದಲ ಆದ್ಯತೆ. ಬೆಳೆ ಹಾನಿಯ ನೈಜ ಚಿತ್ರಣ ಆಧರಿಸಿ, ನಿಯಮಾನುಸಾರ ಅಗತ್ಯ ನೆರವು ತಲುಪಿಸಲು ನಾವು ಬದ್ಧರಿದ್ದೇವೆ.
The drought situation across the State is being continuously assessed, and we are taking phased measures to respond swiftly to farmers’ distress.
So far, 177 taluks had been declared drought-affected. We have now issued orders declaring 40 more taluks as drought-affected — 24 severely drought-affected and 16 moderately drought-affected. With this, the total number of drought-affected taluks in the State has risen to 217.
Monitoring of the drought situation will continue until the end of the monsoon season. If required, additional taluks will be taken up for ground truthing in the next phase.
Responding to farmers’ distress remains the Government’s top priority. Based on the actual extent of crop loss, we are committed to ensuring that the necessary relief reaches farmers in accordance with the prescribed norms. -
Dr. G Parameshwara
@DrParameshwara
ರೈತರಿಗೆ ನೀಡಲಾಗುವ ಇನ್ಪುಟ್ ಸಬ್ಸಿಡಿಯ ಮಾನದಂಡಗಳು ಸಮರ್ಪಕವಾಗಿಲ್ಲ. ಬೆಳೆಹಾನಿಯಿಂದ ರೈತರು ಅನುಭವಿಸುವ ನಷ್ಟಕ್ಕೆ ತಕ್ಕ ಪರಿಹಾರ ದೊರೆಯಬೇಕಿದೆ.
ಈ ಹಿನ್ನೆಲೆಯಲ್ಲಿ SDRF ಮತ್ತು NDRF ಅಡಿಯಲ್ಲಿ ನೀಡಲಾಗುವ ನೆರವಿನ ಮಾನದಂಡಗಳನ್ನು, ವಿಶೇಷವಾಗಿ ರೈತರ ಇನ್ಪುಟ್ ಸಬ್ಸಿಡಿ ಮಾನದಂಡಗಳನ್ನು ಶೀಘ್ರ ಪರಿಷ್ಕರಿಸುವಂತೆ ಕೇಂದ್ರ ಗೃಹ ಸಚಿವರಾದ ಅಮಿತ್ ಶಾ ಅವರಿಗೆ ಮನವಿ ಮಾಡಲಾಗಿದೆ.
ರೈತರ ಸಮಸ್ಯೆಗೆ ಸ್ಪಂದಿಸುವಂತಹ ಪರಿಹಾರ ವ್ಯವಸ್ಥೆ ರೂಪುಗೊಳ್ಳಬೇಕು. ನಮ್ಮ ಸರ್ಕಾರವು ಈ ಕುರಿತು ತನ್ನ ವಿವರವಾದ ಅಭಿಪ್ರಾಯ ಹಾಗೂ ಸಮರ್ಥನೆಗಳನ್ನು ಕೇಂದ್ರಕ್ಕೆ ಈಗಾಗಲೇ ಸಲ್ಲಿಸಿದ್ದು, ಮಾನದಂಡಗಳ ಪರಿಷ್ಕರಣೆಗೆ ಆದ್ಯತೆ ನೀಡುವಂತೆ ಒತ್ತಾಯಿಸಲಾಗಿದೆ.
The current input subsidy norms for farmers are inadequate and do not reflect the actual losses caused by crop damage.
In this context, I have requested Union Home Minister Amit Shah to urgently revise the relief norms under the SDRF and NDRF, particularly the input subsidy norms for farmers, so that compensation is more aligned with the losses they suffer.
The relief framework must respond meaningfully to farmers’ distress. Our Government has already submitted its detailed views and justification to the Centre and has pressed for priority revision of the existing norms. -
Dr. G Parameshwara
@DrParameshwara
ತೀವ್ರ ಬರದಿಂದ ಸಂಕಷ್ಟಕ್ಕೆ ಸಿಲುಕಿರುವ ರಾಜ್ಯದ ರೈತರು ಮತ್ತು ಜನರಿಗೆ ಸಕಾಲದಲ್ಲಿ ನೆರವಾಗುವಂತೆ ಆಗ್ರಹಿಸಿ ಕೇಂದ್ರ ಕೃಷಿ ಸಚಿವರಾದ ಶಿವರಾಜ್ ಸಿಂಗ್ ಚೌಹಾಣ್ ಅವರನ್ನು ಪತ್ರದ ಮೂಲಕ ಒತ್ತಾಯಿಸಿದ್ದೇನೆ. ಪತ್ರದಲ್ಲಿ ಕೇಂದ್ರದ ಮೌಲ್ಯಮಾಪನ ಪ್ರಕ್ರಿಯೆಯನ್ನು ತ್ವರಿತಗೊಳಿಸಿ, ರಾಜ್ಯಕ್ಕೆ ಅಗತ್ಯವಿರುವ ಪರಿಹಾರ ನೆರವನ್ನು ಶೀಘ್ರ ಬಿಡುಗಡೆ ಮಾಡುವಂತೆ ಮನವಿ ಮಾಡಿದ್ದೇನೆ.
ಬರದ ಸಂಕಷ್ಟದಲ್ಲಿ ಜನರನ್ನು ಒಂಟಿಯಾಗಲು ನಮ್ಮ ಸರ್ಕಾರ ಎಂದಿಗೂ ಬಿಡುವುದಿಲ್ಲ. ರೈತರ ನೋವಿಗೆ ಸ್ಪಂದಿಸಿ, ಅಗತ್ಯ ನೆರವು ತಲುಪಿಸುವ ಪ್ರತಿಯೊಂದು ಹೆಜ್ಜೆಯಲ್ಲೂ ನಮ್ಮ ಸರ್ಕಾರ ರಾಜ್ಯದ ಜನರ ಜೊತೆಗಿದೆ. ಕಷ್ಟದ ಸಮಯದಲ್ಲಿ ಜನರ ಕೈ ಹಿಡಿಯುವುದು ನಮ್ಮ ಸರ್ಕಾರದ ಬದ್ಧತೆ.
I have written to Union Agriculture Minister Shivraj Singh Chouhan, pressing for timely assistance to Karnataka’s farmers and people who are facing severe hardship due to the drought. In my letter, I have sought an expedited Central assessment process and the early release of the relief assistance due to the State.
Our Government will never leave people to face the drought crisis alone. We stand with Karnataka’s farmers and people at every step, responding to their distress and ensuring that the necessary support reaches them.
Standing by people in difficult times is our Government’s commitment. -
Dr. G Parameshwara
@DrParameshwara
Another strong day for India at the Asian Games 2026, with five medals added to the national tally on Day 13!
Heartiest congratulations to Manu Francis & Prince Noble on winning Silver in the men’s skiff sailing event -- India’s first sailing medal of these Games.
A historic Silver for Nitesh Siwach in the men’s 97kg Greco-Roman wrestling event. His remarkable run made him the first Indian Greco-Roman wrestler in 64 years to reach an Asian Games final.
Congratulations to Ganesh Thirumuru on Bronze in the men’s individual compound archery event, adding a second medal to his campaign after the men’s team Gold.
A proud Karnataka connection as Kodagu-rooted Joshna Chinappa, along with Anahat Singh, Tanvi Khanna and Shameena Riaz, secured Bronze in the women’s squash team event.
Congratulations also to Abhay Singh, Veer Chotrani, Velavan Senthilkumar and Suraj Kumar Chand on winning Bronze in the men’s squash team event.
Congratulations to all our medal winners, coaches and support teams. Keep making India proud!
#asiangames2026 #teamindia -
Dr. G Parameshwara
@DrParameshwara
ಕೇಂದ್ರದಿಂದ ರಾಜ್ಯಕ್ಕೆ ಆಗಮಿಸುತ್ತಿರುವ ಬರ ಅಧ್ಯಯನ ತಂಡಕ್ಕೆ ರಾಜ್ಯದ ಬರ ಪರಿಸ್ಥಿತಿಯ ಸಮಗ್ರ ಚಿತ್ರಣವನ್ನು ನೀಡಲಾಗುವುದು.
ಕಳೆದ ಜೂನ್ನಿಂದ ಈವರೆಗೆ ರಾಜ್ಯದಲ್ಲಿ ಉಂಟಾಗಿರುವ ಮಳೆ ಕೊರತೆ, ಬೆಳೆ ಹಾನಿ ಹಾಗೂ ರೈತರು ಎದುರಿಸುತ್ತಿರುವ ಸಂಕಷ್ಟಗಳ ಕುರಿತು ವಾಸ್ತವಾಂಶಗಳೊಂದಿಗೆ ಮಾಹಿತಿ ಒದಗಿಸಲಾಗುವುದು.
ಕಳೆದ ಒಂದೆರಡು ದಿನಗಳಿಂದ ರಾಜ್ಯದ ಕೆಲವೆಡೆ ಮಳೆಯಾಗಿದ್ದರೂ, ಈಗಾಗಲೇ ಉಂಟಾಗಿರುವ ಬೆಳೆ ಹಾನಿಯನ್ನು ಸರಿಪಡಿಸುವಷ್ಟು ಈ ಮಳೆ ರೈತರಿಗೆ ಪ್ರಯೋಜನವಾಗುವುದಿಲ್ಲ. ಬರದಿಂದ ಸಂಕಷ್ಟಕ್ಕೊಳಗಾಗಿರುವ ಅನ್ನದಾತರ ಪರಿಸ್ಥಿತಿಯನ್ನು ಕೇಂದ್ರ ಅಧ್ಯಯನ ತಂಡದ ಗಮನಕ್ಕೆ ಸಮಗ್ರವಾಗಿ ತರಲಾಗುವುದು.
ರೈತರ ಹಿತಾಸಕ್ತಿ ಮತ್ತು ರಾಜ್ಯದ ಹಕ್ಕಿನ ಪರಿಹಾರಕ್ಕಾಗಿ ಕೇಂದ್ರದ ಮುಂದೆ ವಾಸ್ತವ ಪರಿಸ್ಥಿತಿಯನ್ನು ಸ್ಪಷ್ಟವಾಗಿ ಮಂಡಿಸಲಾಗುವುದು.
The Central drought assessment team visiting Karnataka will be given a comprehensive picture of the State’s drought situation.
We will present factual details on the rainfall deficit since June, crop losses and the hardships faced by farmers across the State.
Although some parts of Karnataka have received rain over the past couple of days, it is not sufficient to offset the crop damage already caused. The situation faced by drought-affected farmers will be placed before the Central team in full.
We will clearly present the ground reality before the Union Government and seek the relief due to Karnataka in the interest of our farmers. -
Dr. G Parameshwara
@DrParameshwara
ಎಸ್ಐಆರ್ ಪ್ರಕ್ರಿಯೆಯಲ್ಲಿ ಫಾರಂ-7 ದುರ್ಬಳಕೆ ಮಾಡಿಕೊಂಡು ಅರ್ಹ ಮತದಾರರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕುತ್ತಿರುವ ಪ್ರಕರಣದಲ್ಲಿ ತಪ್ಪಿತಸ್ಥರ ವಿರುದ್ಧ ಎಫ್ಐಆರ್ ದಾಖಲಿಸಿ, ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಗಾಂಧಿನಗರದ ಮುಖ್ಯ ಚುನಾವಣಾಧಿಕಾರಿಗಳ ಕಚೇರಿ ಆವರಣದಲ್ಲಿ ನಡೆದ ಧರಣಿಯಲ್ಲಿ ಪಾಲ್ಗೊಂಡೆ.
ಪ್ರಜಾಪ್ರಭುತ್ವದ ಅಡಿಪಾಯವಾಗಿರುವ ಮತದಾನದ ಹಕ್ಕನ್ನು ರಕ್ಷಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಅರ್ಹ ಮತದಾರರಿಗೆ ಅನ್ಯಾಯವಾಗದಂತೆ ನೋಡಿಕೊಳ್ಳುವುದು ಹಾಗೂ ಮತದಾರರ ಪಟ್ಟಿಯಲ್ಲಿ ಪಾರದರ್ಶಕತೆ ಮತ್ತು ನ್ಯಾಯಸಮ್ಮತತೆಯನ್ನು ಕಾಪಾಡುವುದು ಚುನಾವಣಾ ಆಯೋಗದ ಕರ್ತವ್ಯ.
ಇದು ಪ್ರಜಾಪ್ರಭುತ್ವವನ್ನು ಉಳಿಸುವ ಹೋರಾಟ. ಇದಕ್ಕೆ ದೇಶವನ್ನು ಪ್ರೀತಿಸುವ ಪ್ರತಿಯೊಬ್ಬರೂ ಪಕ್ಷಾತೀತವಾಗಿ ಬೆಂಬಲಕ್ಕೆ ನಿಲ್ಲಬೇಕು.
I participated in the protest held on the premises of the Chief Electoral Officer’s office in Gandhinagar, demanding the registration of an FIR and legal action against those responsible for misusing Form 7 during the SIR process to remove eligible voters from the electoral rolls.
Protecting the right to vote, the foundation of democracy, is our collective responsibility. It is the duty of the Election Commission to ensure that no eligible voter is denied their right and that the electoral rolls remain transparent and fair.
This is a fight to protect democracy. Everyone who values the country must stand in support of it, beyond party lines. -
Dr. G Parameshwara
@DrParameshwara
ರಾಜ್ಯದಲ್ಲಿ ಬರ ಪರಿಸ್ಥಿತಿ ಮತ್ತಷ್ಟು ಭೀಕರವಾಗುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಸಚಿವರಾದ ಶ್ರೀ @AmitShah ಹಾಗೂ ಕೇಂದ್ರ ಕೃಷಿ ಸಚಿವರಾದ ಶ್ರೀ @ChouhanShivraj ಅವರಿಗೆ ಪ್ರತ್ಯೇಕವಾಗಿ ಪತ್ರ ಬರೆದು, ಕರ್ನಾಟಕಕ್ಕೆ ತುರ್ತು ನೆರವು ಒದಗಿಸುವಂತೆ ಕೋರಿದ್ದೇನೆ.
ರಾಜ್ಯ ಸರ್ಕಾರವು ಈಗಾಗಲೇ 101 ಬರಪೀಡಿತ ತಾಲ್ಲೂಕುಗಳಿಗೆ ₹3,705.30 ಕೋಟಿ ಹಣಕಾಸು ನೆರವು ಕೋರಿ ಖಾರಿಫ್–2026 ಬರ ಪರಿಹಾರ ಮೆಮೊರಾಂಡಮ್ ಅನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಿದೆ. ಮುಂದಿನ ವೈಜ್ಞಾನಿಕ ಮೌಲ್ಯಮಾಪನದ ಬಳಿಕ ಹೆಚ್ಚುವರಿಯಾಗಿ 76 ತಾಲ್ಲೂಕುಗಳನ್ನು ಎರಡನೇ ಹಂತದಲ್ಲಿ ಬರಪೀಡಿತವೆಂದು ಘೋಷಿಸಲಾಗಿದ್ದು, ಇದರೊಂದಿಗೆ ರಾಜ್ಯದಲ್ಲಿ ಬರಪೀಡಿತ ತಾಲ್ಲೂಕುಗಳ ಸಂಖ್ಯೆ 177ಕ್ಕೆ ಏರಿಕೆಯಾಗಿದೆ. ಇನ್ನೂ 40 ತಾಲ್ಲೂಕುಗಳಲ್ಲಿ ಗ್ರೌಂಡ್ ಟ್ರೂಥಿಂಗ್ ನಡೆಯುತ್ತಿದೆ. ನಿರಂತರ ಮೌಲ್ಯಮಾಪನದ ಆಧಾರದ ಮೇಲೆ ಮುಂಗಾರು ಅಂತ್ಯದ ವೇಳೆಗೆ ಬರಪೀಡಿತ ತಾಲ್ಲೂಕುಗಳ ಸಂಖ್ಯೆ 220 ದಾಟುವ ಸಾಧ್ಯತೆ ಇದೆ.
ಹೊಸದಾಗಿ ಘೋಷಿಸಲಾದ 76 ಬರಪೀಡಿತ ತಾಲ್ಲೂಕುಗಳಲ್ಲಿ ನಡೆಸಿದ ಬೆಳೆಹಾನಿ ಮೌಲ್ಯಮಾಪನದಲ್ಲಿ 26.08 ಲಕ್ಷ ಹೆಕ್ಟೇರ್ ಕೃಷಿ ಬೆಳೆ ಹಾಗೂ 1.49 ಲಕ್ಷ ಹೆಕ್ಟೇರ್ ತೋಟಗಾರಿಕಾ ಬೆಳೆ ಹಾನಿಯಾಗಿರುವುದು ಕಂಡುಬಂದಿದೆ. ಹಾನಿಯ ಪ್ರಮಾಣ ಶೇ.33ರಿಂದ ಶೇ.100ರವರೆಗೆ ಇದ್ದು, ಈ ಬರಪೀಡಿತ ಪ್ರದೇಶಗಳಲ್ಲಿ ಬಹುಪಾಲು ಶೇ.50ಕ್ಕಿಂತ ಹೆಚ್ಚು ಬೆಳೆಹಾನಿ ದಾಖಲಾಗಿದೆ.
ಒಟ್ಟಾರೆ 27.57 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆಹಾನಿ ದಾಖಲಾಗಿದ್ದು, ಬೆಳೆ ಬೆಳೆಯುವ ವೆಚ್ಚದ ಆಧಾರದ ಮೇಲೆ ₹27,576.2 ಕೋಟಿ ನಷ್ಟ ಅಂದಾಜಿಸಲಾಗಿದೆ. ಪ್ರಸ್ತುತ SDRF ಮಾನದಂಡಗಳ ಪ್ರಕಾರ ಇನ್ಪುಟ್ ಸಬ್ಸಿಡಿಗೆ ₹2,981.34 ಕೋಟಿ ಅಗತ್ಯವಿದೆ ಎಂದು ಅಂದಾಜಿಸಲಾಗಿದೆ.
ಒಟ್ಟಾರೆ 177 ಬರಪೀಡಿತ ತಾಲ್ಲೂಕುಗಳಲ್ಲಿ ಸುಮಾರು 47.09 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆಹಾನಿಯಾಗಿದ್ದು, ಆರ್ಥಿಕ ನಷ್ಟ ₹46,324.5 ಕೋಟಿಗೆ ತಲುಪಿದೆ. ನಿರಂತರ ಮೌಲ್ಯಮಾಪನದ ಪ್ರಕಾರ 2026ರ ಖಾರಿಫ್ ಅವಧಿಯಲ್ಲಿ ಒಟ್ಟಾರೆ ಬೆಳೆಹಾನಿ 55 ಲಕ್ಷ ಹೆಕ್ಟೇರ್ಗಿಂತ ಹೆಚ್ಚಾಗುವ ಸಾಧ್ಯತೆ ಇದೆ.
ಈ ಎರಡು ಹಂತಗಳ ಬರ ಘೋಷಣೆಯ ಮೂಲಕ ಎನ್ಡಿಆರ್ಎಫ್ ನಿಯಮಗಳಡಿ ₹7142.64 ಕೋಟಿಗಳನ್ನು ಕೊಡಬೇಕೆಂದು ಮನವಿ ಸಲ್ಲಿಸಲಾಗಿದೆ. ಇದರಲ್ಲಿ ₹4998.6 ಕೋಟಿಗಳು ಇನ್ಪುಟ್ ಸಬ್ಸಿಡಿಗಾಗಿ ಮತ್ತು ₹2144.04 ಕೋಟಿಗಳನ್ನು ಮೇವು ಮತ್ತು ಕುಡಿಯುವ ನೀರು ಮುಂತಾದವುಗಳಿಗಾಗಿ ಕೇಳಲಾಗಿದೆ.
ರೈತರಿಗೆ ನೀಡಲಾಗುವ ಪರಿಹಾರವು ಇಂದಿನ ಕೃಷಿ ವೆಚ್ಚ ಹಾಗೂ ಅವರು ಅನುಭವಿಸಿರುವ ನೈಜ ನಷ್ಟಕ್ಕೆ ಅನುಗುಣವಾಗಿರಬೇಕು. ಈ ಹಿನ್ನೆಲೆಯಲ್ಲಿ, ವಿಶೇಷವಾಗಿ ರೈತರಿಗೆ ನೀಡುವ ಇನ್ಪುಟ್ ಸಬ್ಸಿಡಿ ಸೇರಿದಂತೆ SDRF/NDRF ಪರಿಹಾರ ಮಾನದಂಡಗಳನ್ನು ಪರಿಷ್ಕರಿಸುವಂತೆ ಕೇಂದ್ರ ಗೃಹ ಸಚಿವರಿಗೆ ಮನವಿ ಮಾಡಿದ್ದೇನೆ.
ಅದೇ ರೀತಿ, ಕೇಂದ್ರದ ಬರ ಮೌಲ್ಯಮಾಪನ ಪ್ರಕ್ರಿಯೆಯನ್ನು ತ್ವರಿತಗೊಳಿಸಿ, ಕರ್ನಾಟಕಕ್ಕೆ ಅಗತ್ಯ ನೆರವನ್ನು ಶೀಘ್ರ ಬಿಡುಗಡೆ ಮಾಡುವಂತೆ ಕೇಂದ್ರ ಕೃಷಿ ಸಚಿವರನ್ನು ಕೋರಿದ್ದೇನೆ.
ನಮ್ಮ ರೈತರಿಗೆ ಈ ಸಂಕಷ್ಟದ ಸಮಯದಲ್ಲಿ ಸಮಯೋಚಿತ ಹಾಗೂ ಸಮರ್ಪಕ ನೆರವು ಅಗತ್ಯವಾಗಿದೆ. ರೈತರ ಜೊತೆ ನಿಲ್ಲಲು ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಸಮನ್ವಯದಿಂದ ಕಾರ್ಯನಿರ್ವಹಿಸಬೇಕಿದೆ. -
Dr. G Parameshwara
@DrParameshwara
With the drought situation in Karnataka worsening further, I have written separately to Union Home Minister Shri @AmitShah and Union Agriculture Minister Shri @ChouhanShivraj , seeking urgent assistance for the State.
The State Government has already submitted the Kharif–2026 Drought Relief Memorandum, seeking ₹3,705.30 crore in financial assistance for the first 101 drought-affected taluks. Following further scientific assessment, another 76 taluks have been declared drought-affected in the second phase, taking the total to 177 taluks. Ground truthing is underway in another 40 taluks, and based on continuous assessment, the number of drought-affected taluks may cross 220 by the end of the monsoon season.
Crop-loss assessment in the newly declared 76 drought-affected taluks has recorded damage to 26.08 lakh hectares of agricultural crops and 1.49 lakh hectares of horticultural crops. The extent of damage ranges from 33% to 100%, with most of these drought-affected areas recording crop losses of more than 50%.
Overall, crop damage has been recorded across 27.57 lakh hectares, with losses estimated at ₹27,576.2 crore based on the cost of cultivation. Under the existing SDRF norms, the requirement for input subsidy is estimated at ₹2,981.34 crore.
Across the 177 drought-affected taluks, crop losses have affected around 47.09 lakh hectares, with the economic loss reaching ₹46,324.5 crore. Based on the ongoing assessment, the total crop loss during Kharif–2026 may exceed 55 lakh hectares.
For the two phases of drought declaration, the State has sought ₹7,142.64 crore under NDRF norms. This includes ₹4,998.6 crore for input subsidy and ₹2,144.04 crore for measures such as fodder and drinking water.
Relief to farmers must reflect the present cost of cultivation and the actual losses they have suffered. I have therefore urged the Union Home Minister to revise the SDRF/NDRF relief norms, particularly the input subsidy provided to farmers.
I have also requested the Union Agriculture Minister to expedite the Central drought assessment process and ensure that the required assistance is released to Karnataka at the earliest.
Our farmers need timely and adequate support during this difficult period. The State and Union Governments must work in coordination to stand by them. -
Dr. G Parameshwara
@DrParameshwara
ಇಂದು ನನ್ನ ಅಧ್ಯಕ್ಷತೆಯಲ್ಲಿ ರಾಜ್ಯದಲ್ಲಿನ ಬರ ಪರಿಸ್ಥಿತಿ ಮತ್ತು ಇತರೆ ನೈಸರ್ಗಿಕ ವಿಕೋಪಗಳಿಂದ ಉದ್ಭವಿಸಬಹುದಾದ ಪರಿಸ್ಥಿತಿಯನ್ನು ಪರಾಮರ್ಶಿಸಲು ಹಾಗೂ ಸಮರ್ಥ ನಿರ್ವಹಣೆಗಾಗಿ ಮಾರ್ಗದರ್ಶನ ನೀಡಲು ರಚಿಸಲಾಗಿರುವ ಸಚಿವ ಸಂಪುಟ ಉಪಸಮಿತಿ ಸಭೆಯು ವಿಧಾನಸೌಧದಲ್ಲಿ ನಡೆಯಿತು.
ಸಚಿವರಾದ ಈಶ್ವರ ಖಂಡ್ರೆ, ಲಕ್ಷ್ಮಣ ಸವದಿ, ನರೇಂದ್ರ ಸ್ವಾಮಿ, ಪುಟ್ಟರಂಗ ಶೆಟ್ಟಿ ಹಾಗೂ ಹಿರಿಯ ಅಧಿಕಾರಿಗಳಾದ ಮನೋಜ್ ಕುಮಾರ್ ಮೀನಾ, ಹೊನ್ನಾಂಬ, ರಾಕೇಶ್ ಕುಮಾರ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. -
Dr. G Parameshwara
@DrParameshwara
Several confusions continue to emerge in the ongoing SIR process in the State, and the Congress party has already registered its objections over issues concerning the electoral rolls.
For the past several days, new concerns have surfaced almost every day. There was confusion over ASDDO, even living voters were reportedly listed as deceased, and there have also been issues in the issuance of notices. Now, concerns have arisen that anyone can submit a Form 7 application to the Election Commission seeking the deletion of another voter’s name from the electoral roll.
Our party has already submitted a complaint opposing this process being carried out across the country. We will decide our next course of action based on further developments.
The Congress Working Committee (CWC) has already discussed the issue in Delhi, and the party has demanded the removal of the Election Commissioner. We will proceed in accordance with the directions of our party leadership. During my visit to Delhi, I also met senior party leaders and discussed several developments concerning the State.
A date is yet to be fixed for the State’s all-party delegation to meet the Prime Minister and explain Karnataka’s drought situation. The Chief Minister is awaiting a response from the Prime Minister’s Office. Once a date is confirmed, we will take the delegation to Delhi and present the State’s situation before the Prime Minister.
The Central drought assessment team visiting Karnataka will be provided complete information on the rainfall deficit and crop losses recorded in the State since June. Although some parts of Karnataka have received rain over the past one or two days, the team will be informed that it has brought little benefit to farmers.
During my Delhi visit, I also met Shri V. Somanna, MP from Tumakuru and Union Minister, and discussed the ongoing Tumakuru–Rayadurg–Davanagere railway works, including obstacles affecting progress at certain locations.
– My remarks to the media near my residence. -
Dr. G Parameshwara
@DrParameshwara
ರಾಜ್ಯದಲ್ಲಿ ನಡೆಯುತ್ತಿರುವ ಎಸ್ಐಆರ್ ಪ್ರಕ್ರಿಯೆಯಲ್ಲಿ ಹಲವು ಗೊಂದಲಗಳು ಸೃಷ್ಟಿಯಾಗುತ್ತಿದ್ದು, ಮತದಾರರ ಪಟ್ಟಿಗೆ ಸಂಬಂಧಿಸಿದ ಸಮಸ್ಯೆಗಳ ಬಗ್ಗೆ ಕಾಂಗ್ರೆಸ್ ಪಕ್ಷ ಈಗಾಗಲೇ ತನ್ನ ಆಕ್ಷೇಪವನ್ನು ದಾಖಲಿಸಿದೆ.
ಹಲವು ದಿನಗಳಿಂದ ಎಸ್ಐಆರ್ ವಿಚಾರಕ್ಕೆ ಸಂಬಂಧಿಸಿ ದಿನಕ್ಕೊಂದು ಗೊಂದಲಗಳು ಸೃಷ್ಟಿಯಾಗುತ್ತಲೇ ಇವೆ. ಎಎಸ್ ಡಿಡಿಓ ವಿಚಾರದಲ್ಲೂ ಗೊಂದಲ ಉಂಟಾಯ್ತು. ಬದುಕಿರುವವರನ್ನು ಕೂಡ ಮೃತರ ಪಟ್ಟಿಗೆ ಸೇರಿಸಲಾಗಿತ್ತು. ಮತದಾರರಿಗೆ ನೋಟೀಸ್ ನೀಡುವುದರಲ್ಲೂ ಗೊಂದಲಗಳಾಗಿವೆ. ಈಗ ಮುಂದುವರಿದು ಯಾರು ಬೇಕಾದರೂ ಚುನಾವಣಾ ಆಯೋಗಕ್ಕೆ ಫಾರ್ಮ್ 7 ಅರ್ಜಿಯನ್ನು ಸಲ್ಲಿಸಿ ಬೇರೋಬ್ಬ ಮತದಾರರನ್ನು ಮತಪಟ್ಟಿಯಿಂದ ಅಳಿಸಿಹಾಕಬಹುದು ಎಂಬಂತಾಗಿದೆ. ಹೀಗಾಗಿ ದೇಶ್ಯಾದ್ಯಂತ ನಡೆಯುತ್ತಿರುವ ಈ ಪ್ರಕ್ರಿಯೆಯನ್ನು ವಿರೋಧಿಸಿ ನಮ್ಮ ಪಕ್ಷದ ವತಿಯಿಂದ ಈಗಾಗಲೇ ದೂರನ್ನು ಸಲ್ಲಿಕೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಯಾವ ರೀತಿಯ ಬೆಳವಣಿಗೆಗಳಾಗುತ್ತವೆ ಎಂಬುದರ ಆಧಾರದ ಮೇಲೆ ನಾವು ನಿರ್ಧಾರಗಳನ್ನು ಕೈಗೊಳ್ಳುತ್ತೇವೆ.
ಈ ಕುರಿತಾಗಿ ದೆಹಲಿಯಲ್ಲಿ ಈಗಾಗಲೇ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ ಸಭೆ ನಡೆಸಲಾಗಿದೆ. ಚುನಾವಣಾ ಆಯುಕ್ತರನ್ನು ವಜಾಗೊಳಿಸುವಂತೆ ಪಕ್ಷ ಆಗ್ರಹಿಸಿದೆ. ನಮ್ಮ ವರಿಷ್ಠರ ಸೂಚನೆಯಂತೆ ಮುಂದಿನ ನಡೆಗಳನ್ನು ನಿರ್ಧರಿಸುತ್ತೇವೆ. ನಾನು ಕೂಡ ದೆಹಲಿ ಪ್ರವಾಸದ ವೇಳೆ ಪಕ್ಷದ ವರಿಷ್ಠರನ್ನು ಭೇಟಿಯಾಗಿ ರಾಜ್ಯದ ಅನೇಕ ವಿದ್ಯಾಮಾನಗಳ ಬಗ್ಗೆ ಚರ್ಚಿಸಿದ್ದೇನೆ.
ರಾಜ್ಯದಲ್ಲಿನ ಬರ ಪರಿಸ್ಥಿತಿಯ ಬಗ್ಗೆ ಕೇಂದ್ರಕ್ಕೆ ಮನವರಿಕೆ ಮಾಡಿಕೊಡಲು ರಾಜ್ಯದ ಸರ್ವಪಕ್ಷ ನಿಯೋಗ ಪ್ರಧಾನಿಗಳನ್ನು ಭೇಟಿಯಾಗಲು ಇನ್ನೂ ದಿನಾಂಕ ನಿಗದಿಯಾಗಿಲ್ಲ. ಈ ಕುರಿತಾಗಿ ಮುಖ್ಯಮಂತ್ರಿಗಳು ಪ್ರಧಾನಿಗಳ ಕಛೇರಿಯಿಂದ ಪ್ರತಿಕ್ರಿಯೆಯ ನಿರೀಕ್ಷೆಯಲ್ಲಿದ್ದಾರೆ. ದಿನಾಂಕ ನಿಗದಿಯಾದ ಕೂಡಲೇ ಸರ್ವಪಕ್ಷ ನಿಯೋಗವನ್ನು ಕೊಂಡೊಯ್ದು ರಾಜ್ಯದ ಸ್ಥಿತಿಗತಿಯನ್ನು ಪ್ರಧಾನಿಗಳಿಗೆ ಮನನ ಮಾಡಿಕೊಡಲಿದ್ದೇವೆ.
ಕೇಂದ್ರದಿಂದ ರಾಜ್ಯಕ್ಕೆ ಬರುತ್ತಿರುವ ಬರ ಅಧ್ಯಯನ ತಂಡಕ್ಕೆ ಕಳೆದ ಜೂನ್ನಿಂದ ಈವರೆಗೆ ರಾಜ್ಯದಲ್ಲಿ ಉಂಟಾಗಿರುವ ಮಳೆ ಕೊರತೆ ಹಾಗೂ ಬೆಳೆ ಹಾನಿಯ ಬಗ್ಗೆ ಮಾಹಿತಿಯನ್ನು ಒದಗಿಸಲಾಗುವುದು. ಕಳೆದ ಒಂದೆರೆಡು ದಿನಗಳಿಂದ ರಾಜ್ಯದ ಕೆಲವೆಡೆಗಳಲ್ಲಿ ಮಳೆ ಸುರಿಯುತ್ತಿದೆಯಾದರೂ ಇದರಿಂದ ರೈತರಿಗೆ ಹೆಚ್ಚಿನ ಪ್ರಯೋಜನವಿಲ್ಲ ಎಂಬುದನ್ನು ತಿಳಿಸಲಾಗುವುದು.
ತುಮಕೂರು ಲೋಕಸಭಾ ಕ್ಷೇತ್ರದ ಸಂಸದರು ಹಾಗೂ ಕೇಂದ್ರ ಸಚಿವರೂ ಆಗಿರುವ ಶ್ರೀ. ವಿ. ಸೋಮಣ್ಣ ಅವರನ್ನು ದೆಹಲಿಯಲ್ಲಿ ಭೇಟಿಯಾಗಿ ತುಮಕೂರಿನಿಂದ ರಾಯದುರ್ಗ ಮತ್ತು ದಾವಣೆಗೆರೆಗೆ ಮಾರ್ಗವಾಗಿ ಚಾಲ್ತಿಯಲ್ಲಿರುವ ರೈಲ್ವೇ ಕಾಮಗಾರಿ ಮತ್ತು ಕೆಲವೆಡೆಗಳಲ್ಲಿ ಉಂಟಾಗಿರುವ ಅಡಚಣೆಗಳ ಬಗ್ಗೆ ಚರ್ಚೆ ನಡೆಸಿದ್ದೇನೆ.
- ನನ್ನ ನಿವಾಸದ ಬಳಿ ಮಾಧ್ಯಮದವರ ಜೊತೆ ಮಾತನಾಡಿದೆ. -
Dr. G Parameshwara
@DrParameshwara
ವಿಶ್ವವಿಖ್ಯಾತ ಮೈಸೂರು ದಸರಾ–2026 ಮಹೋತ್ಸವಕ್ಕೆ ಆಗಮಿಸುವಂತೆ ಆಹ್ವಾನಿಸಲು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಯತೀಂದ್ರ ಸಿದ್ದರಾಮಯ್ಯ ಹಾಗೂ ಜಿಲ್ಲಾಡಳಿತದ ನಿಯೋಗದವರು ಇಂದು ನನ್ನ ನಿವಾಸಕ್ಕೆ ಭೇಟಿ ನೀಡಿ ಆಮಂತ್ರಣ ಪತ್ರಿಕೆ ಕೈಗಿತ್ತು ಆಹ್ವಾನಿಸಿದರು.
ನಾಡಿನ ಭವ್ಯ ಪರಂಪರೆ, ಸಂಸ್ಕೃತಿ ಮತ್ತು ಸಂಪ್ರದಾಯಗಳನ್ನು ಜಗದೆದುರು ತೆರೆದಿಡುವ ನಾಡಹಬ್ಬ ದಸರಾ ಯಾವುದೇ ವಿಘ್ನಗಳಿಲ್ಲದೆ ಅತ್ಯಂತ ಯಶಸ್ವಿಯಾಗಿ ನೆರವೇರಲಿ ಎಂದು ಶುಭ ಕೋರಿ, ಮೈಸೂರು ದಸರಾ ಉತ್ಸವದ ಆಹ್ವಾನವನ್ನು ಅತ್ಯಂತ ಪ್ರೀತಿಯಿಂದ ಸ್ವೀಕರಿಸಿ, ಸಂತೋಷದಿಂದ ಪಾಲ್ಗೊಳ್ಳುವುದಾಗಿ ತಿಳಿಸಿದೆ.
ಈ ಸಂದರ್ಭದಲ್ಲಿ ಮೈಸೂರು ಜಿಲ್ಲಾಧಿಕಾರಿಗಳಾದ ಲಕ್ಷ್ಮೀಕಾಂತ ರೆಡ್ಡಿ, ಜಿಲ್ಲಾ ಪಂಚಾಯತ್ ಸಿಇಒ ಎಸ್. ಯುಕೇಶ್ ಕುಮಾರ್, ಮೈಸೂರು ನಗರ ಪೊಲೀಸ್ ಕಮಿಷನರ್ ಸೀಮಾ ಲಾಟ್ಕರ್ ಹಾಗೂ ಚಾಮುಂಡೇಶ್ವರಿ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿಗಳಾದ ರೂಪಾ ಉಪಸ್ಥಿತರಿದ್ದರು.
It was a pleasure to receive the formal invitation to the world-renowned Mysuru Dasara–2026 celebrations from Dr. Yathindra Siddaramaiah, Mysuru District In-charge Minister, and a delegation of the district administration, who visited my residence today.
I warmly accepted the invitation and conveyed my best wishes for the Nada Habba, a celebration that brings Karnataka’s rich heritage, culture and traditions before the world. I wished for the festivities to be conducted in a grand, joyful and successful manner, and expressed my happiness at being part of the celebrations.
Mysuru Deputy Commissioner Lakshmikanth Reddy, Zilla Panchayat CEO S. Yukesh Kumar, Mysuru City Police Commissioner Seema Latkar, and Chamundeshwari Development Authority Secretary Roopa were present on the occasion. -
Dr. G Parameshwara
@DrParameshwara
I met AICC General Secretary Shri @kcvenugopalmp at his residence in New Delhi and held detailed discussions on several important matters concerning the State’s development initiatives and the organisational growth of the party.
During the meeting, we discussed measures to ensure the effective implementation of government programmes and further strengthen the party organisation. I also sought his valuable suggestions and guidance on the way forward and future organisational activities.
ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಕೆ.ಸಿ. ವೇಣುಗೋಪಾಲ್ ಅವರನ್ನು ನವದೆಹಲಿಯ ನಿವಾಸದಲ್ಲಿ ಭೇಟಿಯಾಗಿ, ರಾಜ್ಯದ ಅಭಿವೃದ್ಧಿ ಯೋಜನೆಗಳು ಹಾಗೂ ಪಕ್ಷದ ಸಂಘಟನಾತ್ಮಕ ಬೆಳವಣಿಗೆಗೆ ಸಂಬಂಧಿಸಿದಂತೆ ಹಲವು ಮಹತ್ವದ ವಿಚಾರಗಳ ಕುರಿತು ಸುದೀರ್ಘವಾಗಿ ಚರ್ಚೆ ನಡೆಸಿದೆ.
ಈ ಸಂದರ್ಭದಲ್ಲಿ ಸರ್ಕಾರದ ಕಾರ್ಯಕ್ರಮಗಳ ಪರಿಣಾಮಕಾರಿ ಅನುಷ್ಠಾನ ಹಾಗೂ ಪಕ್ಷದ ಸಂಘಟನೆಯನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಚರ್ಚಿಸಿ, ಮುಂದಿನ ಕಾರ್ಯಚಟುವಟಿಕೆಗಳ ಬಗ್ಗೆ ಅವರಿಂದ ಅಗತ್ಯ ಸಲಹೆ ಹಾಗೂ ಮಾರ್ಗದರ್ಶನ ಪಡೆದೆ. -
Dr. G Parameshwara
@DrParameshwara
ಮಾಜಿ ಮುಖ್ಯಮಂತ್ರಿ ಹಾಗೂ ಜನಾನುರಾಗಿ ನಾಯಕರಾದ ಜೆ.ಎಚ್. ಪಟೇಲ್ ಅವರ ಜನ್ಮದಿನದಂದು ಗೌರವ ನಮನಗಳನ್ನು ಸಲ್ಲಿಸುತ್ತೇನೆ.
ಆಡಳಿತದಲ್ಲಿ ಹೊಸ ಚಿಂತನೆ ಹಾಗೂ ಜನಪರ ಕಾಳಜಿಗೆ ಆದ್ಯತೆ ನೀಡಿದ ಅವರ ಸಾರ್ವಜನಿಕ ಬದುಕು ಸದಾ ಸ್ಮರಣೀಯ. ನಾಡಿನ ಹಿತಕ್ಕಾಗಿ ಅವರು ತೋರಿದ ಬದ್ಧತೆ ಮುಂದಿನ ಪೀಳಿಗೆಗಳಿಗೂ ಸ್ಫೂರ್ತಿಯಾಗಲಿ. -
Dr. G Parameshwara
@DrParameshwara
A golden Day 12 for India at the Asian Games 2026, with seven medals including four Golds!
A remarkable clean sweep in compound archery began with Jyothi Surekha Vennam, Chikitha Taniparthi and Prithika Pradeep winning Gold in the women’s team event, with their performance also equalling the world record.
Chikitha Taniparthi & Sahil Jadhav followed it up with Gold in the compound mixed team event, securing India a quota for the Los Angeles 2028 Olympics.
The golden run continued as Kushal Dalal, Sahil Jadhav and Ganesh Thirumuru edged China in a thrilling final to win the men’s compound team title, completing India’s sweep of all three compound team Golds.
In shooting, Neeru Dhanda & Kynan Chenai clinched Gold in the mixed trap team event with a new Games record. It was another outstanding performance from Neeru, adding a second Gold to her remarkable campaign.
Congratulations also to Priya Ghanghas on Bronze in the women’s 60kg boxing event, Kapil Pokhariya on Bronze in the men’s 90kg category, and Sunil Kumar on Bronze in the men’s Greco-Roman 87kg wrestling event -- his second successive Asian Games Bronze.
A day of outstanding skill, composure and sporting excellence. Congratulations to all our medal winners, coaches and support teams. Keep making India proud!
#asiangames2026 #teamindia -
Dr. G Parameshwara
@DrParameshwara
Called on Shri @RahulGandhi Ji, Leader of the Opposition in the Lok Sabha, at his 10 Janpath residence in New Delhi, and held discussions with him.
We discussed Karnataka’s current political developments, welfare programmes and development priorities. I also sought his guidance on making Government services more effective and accessible to the people.
I assured him that our Government will continue to uphold the Congress party’s core values of equality, social justice, secularism and the welfare of vulnerable sections.
ಲೋಕಸಭೆಯ ವಿರೋಧ ಪಕ್ಷದ ನಾಯಕರಾದ ಶ್ರೀ ರಾಹುಲ್ ಗಾಂಧಿ ಜೀ ಅವರನ್ನು ನವದೆಹಲಿಯ 10 ಜನಪಥ್ ನಿವಾಸದಲ್ಲಿ ಭೇಟಿಯಾಗಿ, ಮಾತುಕತೆ ನಡೆಸಲಾಯಿತು.
ರಾಜ್ಯದ ಪ್ರಸ್ತುತ ರಾಜಕೀಯ ವಿದ್ಯಮಾನಗಳು, ಕಲ್ಯಾಣ ಕಾರ್ಯಕ್ರಮಗಳು ಹಾಗೂ ರಾಜ್ಯದ ಅಭಿವೃದ್ಧಿಗೆ ಸಂಬಂಧಿಸಿದ ಹಲವು ವಿಚಾರಗಳ ಕುರಿತು ಚರ್ಚೆ ನಡೆಸಿ, ಮತ್ತಷ್ಟು ಪರಿಣಾಮಕಾರಿಯಾಗಿ ಸರ್ಕಾರದ ಸೇವೆಯನ್ನು ಜನರಿಗೆ ತಲುಪಿಸುವ ನಿಟ್ಟಿನಲ್ಲಿ ಅವರ ಸಲಹೆಗಳನ್ನು ಪಡೆದುಕೊಂಡೆ.
ಕಾಂಗ್ರೆಸ್ ಪಕ್ಷದ ಸಿದ್ಧಾಂತಗಳಾದ ಸಮಾನತೆ, ಸಾಮಾಜಿಕ ನ್ಯಾಯ, ಜಾತ್ಯತೀತತೆ ಹಾಗೂ ದುರ್ಬಲ ಜನರ ಕಲ್ಯಾಣ ಮುಂತಾದ ವಿಚಾರಗಳ ಜಾರಿಯಲ್ಲಿ ನಮ್ಮ ಸರ್ಕಾರವು ಇನ್ನಷ್ಟು ದೃಢವಾಗಿ ಮುಂದುವರೆಯಲಿದೆ ಎಂಬುದನ್ನು ಅವರಿಗೆ ಖಾತ್ರಿಪಡಿಸಿದ್ದೇನೆ. -
Dr. G Parameshwara
@DrParameshwara
ರಾಜ್ಯ ಅಭಿವೃದ್ಧಿಯಾಗಬೇಕಾದರೆ ಪ್ರತಿ ಹಳ್ಳಿ, ಪ್ರತಿ ಗ್ರಾಮವೂ ಪ್ರಗತಿ ಕಾಣಬೇಕು. ಈ ನಿಟ್ಟಿನಲ್ಲಿ ನನ್ನೂರು, ನನ್ನ ಗ್ರಾಮ, ನನ್ನ ಜಿಲ್ಲೆ, ನನ್ನ ರಾಜ್ಯದ ಸಮಗ್ರ ಬದಲಾವಣೆಯ ಚಿತ್ರಣವನ್ನು ಮುಂದಿಟ್ಟುಕೊಂಡು ಕೆಲಸ ಮಾಡುತ್ತಿದ್ದೇನೆ.
ಇಂದು ನಾನು ಪ್ರತಿನಿಧಿಸುತ್ತಿರುವ ಕೊರಟಗೆರೆ ವಿಧಾನಸಭಾ ಕ್ಷೇತ್ರ ಮೂಲಸೌಕರ್ಯ, ಶಿಕ್ಷಣ, ಕ್ರೀಡೆ, ಆರೋಗ್ಯ, ಶುಚಿತ್ವ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲೂ ಮುಂಚೂಣಿಯಲ್ಲಿರುವುದು ನೋಡುವಾಗ ಖುಷಿಯಾಗುತ್ತದೆ. ಕೊರಟಗೆರೆ ಪುಟ್ಟ ಊರು. ಆದರೆ ಇಲ್ಲಾಗುತ್ತಿರುವ ಅಭಿವೃದ್ಧಿಗಳು ಬಹು ದೊಡ್ಡವು. ಅದು ಎಷ್ಟರಮಟ್ಟಿಗೆ ಎಂಬುದು ನನ್ನೂರಿನ ಜನರ ಮೊಗದಲ್ಲಿ ಮೂಡುತ್ತಿರುವ ಮಂದಹಾಸವೇ ಸಾಬೀತುಪಡಿಸುತ್ತಿದೆ.
ನನ್ನನ್ನು ಹರಸಿ - ಹಾರೈಸಿದ ನನ್ನೂರಿನ ಜನ ನಾನು ಮಾಡಿದ ಕೆಲಸಕ್ಕೆ ಪ್ರಶಂಸೆಯ ಮಹಾಪೂರಣವನ್ನೇ ಅರ್ಪಿಸುತ್ತಿರುವುದನ್ನು ನೋಡುವಾಗ ನಿಜಕ್ಕೂ ನನ್ನ ಸಾರ್ವಜನಿಕ ಜೀವನ ಸಾರ್ಥಕ ಎನಿಸುತ್ತದೆ.
ನಾನು ನಿಮ್ಮವನು, ನಿಮ್ಮ ಮನೆಮಗ. ನಿಮಗೆ ನೆಮ್ಮದಿ, ಸಂತೋಷದ ಜೀವನವನ್ನು ಕಲ್ಪಿಸಿಕೊಡುವುದು ನನ್ನ ಜವಾಬ್ದಾರಿ ಮತ್ತು ಕರ್ತವ್ಯ. ಅದಕ್ಕಾಗಿಯೇ ನನ್ನ ರಾಜಕೀಯ ಜೀವನ ಮೀಸಲು.This media couldn't be displayed. See it on the original post. -
Dr. G Parameshwara
@DrParameshwara
ಬರದಿಂದ ಬೆಳೆ ಕಳೆದುಕೊಂಡು ಸಂಕಷ್ಟದಲ್ಲಿರುವ ರೈತರಿಗೆ ತಕ್ಷಣ ನೆರವಾಗುವ ಉದ್ದೇಶದಿಂದ, NDRF ಅನುದಾನವನ್ನು ನಿರೀಕ್ಷಿಸುತ್ತಿರುವ ನಡುವೆಯೇ ನಮ್ಮ ಸರ್ಕಾರವು ಪ್ರತಿ ರೈತನಿಗೆ ₹2,500 ಇನ್ಪುಟ್ ಸಬ್ಸಿಡಿ ನೀಡಲು ತೀರ್ಮಾನಿಸಿದೆ. ಇದಕ್ಕಾಗಿ ₹1,250 ಕೋಟಿ ವೆಚ್ಚವಾಗಲಿದ್ದು, ಅಂದಾಜು 45–50 ಲಕ್ಷ ರೈತರಿಗೆ ಇದರ ಪ್ರಯೋಜನ ದೊರೆಯಲಿದೆ.
ಈಗಾಗಲೇ 101 ತಾಲೂಕುಗಳಲ್ಲಿ ಸುಮಾರು ₹18,000 ಕೋಟಿ ನಷ್ಟ ಅಂದಾಜಿಸಲಾಗಿದ್ದು, ₹3,800 ಕೋಟಿ ಪರಿಹಾರ ನೀಡುವಂತೆ ಕೇಂದ್ರಕ್ಕೆ ಮನವಿ ಮಾಡಲಾಗಿದೆ. ಇನ್ನಷ್ಟು ಬರ ಘೋಷಿತ ತಾಲೂಕುಗಳಲ್ಲಾದ ನಷ್ಟದ ವಿವರಗಳನ್ನು ಸಂಗ್ರಹಿಸಿ ಕೇಂದ್ರಕ್ಕೆ ಮೆಮೊರಾಂಡಮ್ ಸಲ್ಲಿಸಲಿದ್ದೇವೆ.
ಬರದ ಸಂಕಷ್ಟದಲ್ಲಿ ರೈತರು ಒಬ್ಬಂಟಿಯಲ್ಲ. ಪರಿಹಾರದಿಂದ ಹಿಡಿದು ನೀರು, ಮೇವು ಮತ್ತು ಆರ್ಥಿಕ ನೆರವು ಸೇರಿದಂತರ ಪ್ರತಿಯೊಂದು ಹಂತದಲ್ಲೂ ರೈತರ ಜೊತೆ ನಿಲ್ಲುವುದು ನಮ್ಮ ಸರ್ಕಾರದ ಬದ್ಧತೆ.This media couldn't be displayed. See it on the original post. -
Dr. G Parameshwara
@DrParameshwara
ಕೇಂದ್ರ ಸಚಿವರಾದ ಶ್ರೀ ವಿ. ಸೋಮಣ್ಣ ಅವರನ್ನು ನವದೆಹಲಿಯಲ್ಲಿ ಭೇಟಿ ಮಾಡಿ, ತುಮಕೂರು ಜಿಲ್ಲೆಯ ಅಭಿವೃದ್ಧಿಗೆ ಸಂಬಂಧಿಸಿದ ವಿವಿಧ ವಿಚಾರಗಳ ಕುರಿತು ಮಹತ್ವದ ಚರ್ಚೆ ನಡೆಸಿದೆ.
ಜಿಲ್ಲೆಯಲ್ಲಿ ಕೈಗೊಳ್ಳಲಾಗುತ್ತಿರುವ ಹಾಗೂ ಪ್ರಸ್ತಾವಿತ ವಿವಿಧ ಅಭಿವೃದ್ಧಿ ಯೋಜನೆಗಳು, ಕಾಮಗಾರಿಗಳ ಪ್ರಗತಿ ಮತ್ತು ಮುಂದಿನ ಹಂತದ ಕ್ರಮಗಳ ಕುರಿತು ಸಮಾಲೋಚನೆ ನಡೆಸಿದೆ.
ತುಮಕೂರು ಜಿಲ್ಲೆಯ ಅಭಿವೃದ್ಧಿಗೆ ಸಂಬಂಧಿಸಿದಂತೆ ನಡೆದ ಈ ಭೇಟಿ ಫಲಪ್ರದವಾಗಿದ್ದು, ಜಿಲ್ಲೆಯ ಪ್ರಗತಿಗೆ ಮತ್ತಷ್ಟು ವೇಗ ನೀಡುವ ನಿಟ್ಟಿನಲ್ಲಿ ಮಹತ್ವದ ಚರ್ಚೆ ನಡೆಯಿತು.
I met Union Minister Shri V. Somanna in New Delhi and held important discussions on various matters concerning the development of Tumakuru district.
We discussed the progress of various ongoing and proposed development projects and works in the district, along with the necessary steps to be taken in the next phase.
The meeting was fruitful, with significant discussions aimed at further accelerating the development and progress of Tumakuru district. -
Dr. G Parameshwara
@DrParameshwara
A memorable Day 11 for India at the Asian Games 2026, with eight medals including two Golds!
Heartiest congratulations to Neeru Dhanda on a historic Gold in the women’s individual trap event -- India’s first individual Gold of these Games. Neeru also joined Manisha Keer and Aashima Ahlawat to win Silver in the women’s trap team event.
A particularly proud moment for Karnataka as M.R. Poovamma, alongside Kiran Pahal, Prachi Chaudhary and Vithya Ramraj, raced to Gold in the women’s 4x400m relay -- India’s first athletics Gold at these Games. For Poovamma, it adds another proud chapter after her Silver in the mixed 4x400m relay earlier in the Games.
Congratulations to Gulveer Singh on Bronze in the men’s 5000m, completing a remarkable three-medal haul at this edition, and to Pooja Singh on Bronze in the women’s high jump, ending India’s 24-year wait for a medal in the event.
Congratulations also to Narender Berwal on Bronze in men’s +90kg boxing, the mixed 4x100m relay team of Gurindervir Singh, Animesh Kujur, Sneha Sathyanarayana and Harita Bhadra, and the men’s 4x400m relay team of Dharmveer Choudhary, Manu T.S., Jay Kumar and Vishal T.K. on their Bronze medals.
Congratulations to all our athletes, coaches and support teams. Keep making India proud!
#asiangames2026 #teamindia -
Dr. G Parameshwara
@DrParameshwara
ಜಪಾನ್ನ ಐಚಿ–ನಗೋಯಾದಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್–2026ರ 4×400 ಮೀ. ಮಹಿಳಾ ರಿಲೇಯಲ್ಲಿ ಚಿನ್ನದ ಪದಕ ಗೆದ್ದು ದೇಶದ ಹಾಗೂ ಕರ್ನಾಟಕದ ಕೀರ್ತಿ ಹೆಚ್ಚಿಸಿದ ಕನ್ನಡತಿ ಪೂವಮ್ಮ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು.
ನಿಮ್ಮ ಈ ಸಾಧನೆ ಕನ್ನಡ ನಾಡಿನ ಕ್ರೀಡಾ ಹಿರಿಮೆಗೆ ಮತ್ತೊಂದು ಗರಿ ಮೂಡಿಸಿದೆ. ನಿಮ್ಮ ಪರಿಶ್ರಮಕ್ಕೆ ದೊರೆತ ಈ ಚಿನ್ನದ ಗೌರವ, ರಾಜ್ಯದ ಕ್ರೀಡಾ ಕ್ಷೇತ್ರದಲ್ಲಿ ಮರೆಯಲಾಗದ ಮತ್ತೊಂದು ಹೆಮ್ಮೆಯ ಮೈಲಿಗಲ್ಲಾಗಿದೆ. ನಿಮ್ಮ ಯಶಸ್ಸು ಹೊಸ ತಲೆಮಾರಿನ ಕ್ರೀಡಾ ಪ್ರತಿಭೆಗಳಿಗೆ ದಾರಿ ತೋರಿಸಲಿ.
ಕನಸುಗಳನ್ನು ಬೆನ್ನತ್ತುವ ನಮ್ಮ ಕ್ರೀಡಾಪಟುಗಳಿಗೆ ಅಗತ್ಯವಾದ ಪ್ರೋತ್ಸಾಹ, ಅವಕಾಶ ಮತ್ತು ಬೆಂಬಲ ಒದಗಿಸಲು ನಮ್ಮ ಸರ್ಕಾರ ಸದಾ ಅವರೊಂದಿಗೆ ನಿಲ್ಲಲಿದೆ.
Heartiest congratulations to M.R. Poovamma for bringing pride to India and Karnataka by winning gold in the women’s 4×400m relay at the Asian Games 2026 in Aichi-Nagoya, Japan.
This gold is a proud milestone for Karnataka’s sporting legacy and an inspiration to young athletes across the State.
Our Government will continue to support our sportspersons with the opportunities, encouragement and backing they need to achieve greater heights. -
Dr. G Parameshwara
@DrParameshwara
ಯುವಜನತೆ ಕೇವಲ ದೇಶದ ಭವಿಷ್ಯವಲ್ಲ, ನವ ಭಾರತದ ನಿರ್ಮಾಣದ ಆಶಾಕಿರಣವೂ ಹೌದು. ಯುವಕರಿಗೆ ಕೇವಲ ಸಂಸ್ಕೃತಿ ಮತ್ತು ಸಂಸ್ಕಾರದ ಪಾಠ ಹೇಳುವುದಷ್ಟೇ ಸಾಕಾಗುವುದಿಲ್ಲ, ಅವರ ಕನಸುಗಳಿಗೆ ರೆಕ್ಕೆ ನೀಡುವ ಉತ್ತಮ ಶಿಕ್ಷಣ, ಉದ್ಯೋಗಾವಕಾಶ ಹಾಗೂ ಆಧುನಿಕ ಜಗತ್ತಿಗೆ ಅಗತ್ಯವಾದ ಕೌಶಲ್ಯಗಳನ್ನು ಒದಗಿಸುವುದು ನಮ್ಮ ಹೊಣೆಗಾರಿಕೆ.
ಸಂಸ್ಕಾರವನ್ನು ಉಳಿಸಿಕೊಂಡೇ ಜ್ಞಾನ, ಕೌಶಲ್ಯ ಮತ್ತು ಅವಕಾಶಗಳೊಂದಿಗೆ ಯುವಜನತೆ ಮುನ್ನಡೆಯಬೇಕು. ಯುವ ಮನಸ್ಸುಗಳಲ್ಲಿರುವ ಪ್ರತಿಭೆ ಮತ್ತು ಹೊಸ ಆಲೋಚನೆಗಳಿಗೆ ಸೂಕ್ತ ವೇದಿಕೆ ದೊರೆತಾಗ, ಕರ್ನಾಟಕದ ಭವಿಷ್ಯ ಇನ್ನಷ್ಟು ಉಜ್ವಲವಾಗಲಿದೆ.
Young people are not only the future of the country, but also the hope of a new India. It is not enough to teach them culture and values; we must also provide quality education, employment opportunities and the skills needed for the modern world.
Our youth must move forward with knowledge, skills and opportunity while staying rooted in values. When their talent and ideas get the right platform, Karnataka’s future will shine even brighter. -
Dr. G Parameshwara
@DrParameshwara
ಆಧುನಿಕತೆಯ ವೇಗದಲ್ಲಿ ನಮ್ಮ ಯುವಜನತೆ ಮುನ್ನಡೆಯುತ್ತಿರುವಾಗ, ನಮ್ಮ ಸಂಸ್ಕೃತಿ ಮತ್ತು ಸಂಸ್ಕಾರದ ಬೇರುಗಳು ಗಟ್ಟಿಯಾಗಿರಬೇಕು. ಇಂದಿನ ಜೆನ್ ಜಿ ಪೀಳಿಗೆಗೆ ಮೌಲ್ಯಗಳ ಮಹತ್ವವನ್ನು ತಿಳಿಸಿಕೊಡುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ.
ಹಿಂದೆ ಪಠ್ಯಪುಸ್ತಕಗಳ ಮೂಲಕ ಮಕ್ಕಳಲ್ಲಿ ಮೌಲ್ಯ, ಮಾನವೀಯತೆ ಮತ್ತು ನೈತಿಕತೆಯ ಬೀಜ ಬಿತ್ತಲಾಗುತ್ತಿತ್ತು. ಇಂದು ಬದಲಾಗುತ್ತಿರುವ ಶಿಕ್ಷಣ ವ್ಯವಸ್ಥೆಯಲ್ಲಿ ಅಂತಹ ಮೌಲ್ಯಾಧಾರಿತ ಶಿಕ್ಷಣಕ್ಕೆ ಮತ್ತಷ್ಟು ಒತ್ತು ನೀಡುವ ಅಗತ್ಯವಿದೆ.
ಆಧುನಿಕ ಜ್ಞಾನ ನಮ್ಮ ಯುವಜನತೆಗೆ ರೆಕ್ಕೆಗಳಾದರೆ, ಸಂಸ್ಕಾರ ಮತ್ತು ಮೌಲ್ಯಗಳು ಅವರಿಗೆ ದಿಕ್ಕು ತೋರಿಸುವ ದಿಕ್ಸೂಚಿಯಾಗಬೇಕು.
As our youth move forward in a rapidly modernising world, they must remain firmly rooted in our culture and values. It is our collective responsibility to help today’s Gen Z understand the importance of these values.
Earlier, textbooks helped nurture values, humanity and ethics in children. In today’s changing education system, there is a greater need to strengthen such value-based education.
If modern knowledge gives our youth wings, culture and values must be the compass that guides them. -
Dr. G Parameshwara
@DrParameshwara
A beating heart carries our hopes, our love, our dreams and every precious moment of life.
On #worldheartday, let us remind ourselves to care for the heart that carries us through it all. Staying active, eating healthy, avoiding tobacco, managing stress and going for regular health check-ups can make a meaningful difference.
Let us spread awareness about heart health and encourage our loved ones to make choices that keep their hearts strong and healthy.
Because every heartbeat matters. -
Dr. G Parameshwara
@DrParameshwara
My remarks at the 'Samskruti Sangama–2026’ Lifetime Achievement Awards ceremony, organised by the Dr C. Somasekhara–Smt N. Sarvamangala Sahitya Seva Pratishthana at Gandhi Bhavan, Bengaluru:
Achievement is the result of hard work, discipline and foresight. Those who have excelled in their respective fields and contributed to society serve as role models for the next generation.
In my view, achievement is built on hard work, discipline and foresight. A person succeeds in his or her chosen field by imbibing these qualities. All those receiving awards today are role models for us.
Indian culture holds a unique place in the world. India has a rich cultural tradition that is rarely seen in any other nation or society. The efforts of Dr C. Somasekhara in organising such programmes with the objective of preserving and nurturing this culture are truly commendable.
Since 2015, several achievers have been identified and honoured with awards. This is an important initiative. I do not believe there is any selfish motive behind it. Many people take up different activities after retirement, but the field that Somasekhara has chosen after retirement reflects his foresight.
Nearly 60 per cent of India’s population is young, with a large proportion below the age of 40. Merely lecturing young people about our culture and values may not appeal to them. They also need good education, employment opportunities and the skills required to live and succeed in the modern world.
There is a need to strengthen respect for culture and values among today’s Gen Z generation. It is our responsibility to make them understand the importance of our culture and values. In today’s changing world, value-based education such as ‘Moral Science’, which was once part of textbooks, is gradually disappearing.
We need culture and values even more than AI. If we forget our culture and values, and fail to give them the necessary encouragement in society, we must reflect on what kind of India we will see in the future.
India, which has one of the world’s richest cultural traditions, must seriously think about what it will pass on to the next generation and what values it will hand down to them.
If achievers in the fields of literature, art and culture are not recognised through awards, their contributions and the importance of these fields may not receive adequate public attention. In this regard, the work being done by Somasekhara in identifying and honouring achievers is commendable.
Society and the country are constantly changing. Amid these changes, India continues to protect itself by preserving its culture, traditions and values.
Recognising achievers in the fields of literature, art and culture is also a responsibility of the government. The number of Kannada Rajyotsava awards has now crossed the hundred mark. Eminent personalities who have rendered exceptional service in various fields are being identified and honoured with Kannada Rajyotsava awards. -
Dr. G Parameshwara
@DrParameshwara
ಡಾ. ಸಿ. ಸೋಮಶೇಖರ–ಶ್ರೀಮತಿ ಎನ್. ಸರ್ವಮಂಗಳ ಸಾಹಿತ್ಯ ಸೇವಾ ಪ್ರತಿಷ್ಠಾನದ ವತಿಯಿಂದ ಬೆಂಗಳೂರಿನ ಗಾಂಧಿ ಭವನದಲ್ಲಿ ಆಯೋಜಿಸಿದ್ದ ‘ಸಂಸ್ಕೃತಿ ಸಂಗಮ–2026’ ಜೀವಮಾನ ಸಾಧನೆ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ನನ್ನ ಮಾತುಗಳು :
ಸಾಧನೆ ಎನ್ನುವುದು ಪರಿಶ್ರಮ, ಶಿಸ್ತು ಮತ್ತು ದೂರದೃಷ್ಟಿಯ ಫಲವಾಗಿದ್ದು, ತಮ್ಮ ತಮ್ಮ ಕ್ಷೇತ್ರಗಳಲ್ಲಿ ಸಾಧನೆ ಮಾಡಿ ಸಮಾಜಕ್ಕೆ ಕೊಡುಗೆ ನೀಡಿರುವ ಸಾಧಕರು ಮುಂದಿನ ಪೀಳಿಗೆಗೆ ಆದರ್ಶವಾಗಿದ್ದಾರೆ.
ನನ್ನ ದೃಷ್ಟಿಯಲ್ಲಿ ಸಾಧನೆ ಎಂದರೆ ಪರಿಶ್ರಮ, ಶಿಸ್ತು ಮತ್ತು ದೂರದೃಷ್ಟಿ. ಈ ಗುಣಗಳನ್ನು ಮೈಗೂಡಿಸಿಕೊಂಡು ವ್ಯಕ್ತಿ ತನ್ನ ಕ್ಷೇತ್ರದಲ್ಲಿ ಸಾಧನೆ ಮಾಡುತ್ತಾನೆ. ಇಂದು ಪ್ರಶಸ್ತಿ ಸ್ವೀಕರಿಸಿರುವ ಎಲ್ಲ ಸಾಧಕರು ನಮಗೆ ಆದರ್ಶವಾಗಿದ್ದಾರೆ.
ಭಾರತದ ಸಂಸ್ಕೃತಿಗೆ ವಿಶ್ವದಲ್ಲಿಯೇ ವಿಶಿಷ್ಟ ಸ್ಥಾನವಿದೆ. ಬೇರೆ ಯಾವುದೇ ರಾಷ್ಟ್ರ ಅಥವಾ ಸಮಾಜದಲ್ಲಿ ಕಾಣಸಿಗದಂತಹ ಶ್ರೇಷ್ಠ ಸಾಂಸ್ಕೃತಿಕ ಪರಂಪರೆ ಭಾರತಕ್ಕಿದೆ. ಈ ಸಂಸ್ಕೃತಿಯನ್ನು ಉಳಿಸಿ, ಬೆಳೆಸುವ ಉದ್ದೇಶದಿಂದ ಇಂತಹ ಕಾರ್ಯಕ್ರಮವನ್ನು ಆಯೋಜಿಸಿರುವ ಡಾ. ಸಿ. ಸೋಮಶೇಖರ ಅವರ ಕಾರ್ಯ ಅಭಿನಂದನೀಯ.
2015ರಿಂದ ಈವರೆಗೆ ಹಲವಾರು ಸಾಧಕರನ್ನು ಗುರುತಿಸಿ ಪ್ರಶಸ್ತಿಗಳನ್ನು ನೀಡುತ್ತಾ ಬಂದಿರುವುದು ಮಹತ್ವದ ಕೆಲಸವಾಗಿದೆ. ಇದರ ಹಿಂದೆ ಯಾವುದೇ ಸ್ವಾರ್ಥದ ಉದ್ದೇಶವಿದೆ ಎಂದು ನನಗೆ ಅನ್ನಿಸುವುದಿಲ್ಲ. ಬಹಳಷ್ಟು ಜನರು ನಿವೃತ್ತಿಯ ನಂತರ ಬೇರೆ ಬೇರೆ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುತ್ತಾರೆ. ಆದರೆ, ಸೋಮಶೇಖರ ಅವರು ನಿವೃತ್ತಿಯ ನಂತರ ಆಯ್ಕೆ ಮಾಡಿಕೊಂಡಿರುವ ಕ್ಷೇತ್ರ ಅವರ ದೂರದೃಷ್ಟಿಯನ್ನು ತೋರಿಸುತ್ತದೆ.
ಭಾರತದಲ್ಲಿ ಶೇ.60ರಷ್ಟು ಯುವಜನರಿದ್ದು, 40 ವರ್ಷ ವಯಸ್ಸಿನೊಳಗಿನ ಯುವಕರ ಸಂಖ್ಯೆ ಹೆಚ್ಚಿನ ಪ್ರಮಾಣದಲ್ಲಿದೆ. ಇಂದಿನ ಯುವಜನರಿಗೆ ನಮ್ಮ ಸಂಸ್ಕೃತಿ ಮತ್ತು ಸಂಸ್ಕಾರದ ಬಗ್ಗೆ ಕೇವಲ ಪಾಠ ಮಾಡಲು ಹೋದರೆ ಅದು ಅವರಿಗೆ ಅಷ್ಟಾಗಿ ಪ್ರಿಯವಾಗುವುದಿಲ್ಲ. ಅವರಿಗೆ ಉತ್ತಮ ಶಿಕ್ಷಣ, ಉದ್ಯೋಗ ಮತ್ತು ಆಧುನಿಕ ಜಗತ್ತಿನಲ್ಲಿ ಬದುಕಲು ಅಗತ್ಯವಾದ ಕೌಶಲ್ಯಗಳೂ ಬೇಕಾಗಿವೆ.
ಇಂದಿನ ಜೆನ್ ಜಿ ಪೀಳಿಗೆಯಲ್ಲಿ ಸಂಸ್ಕೃತಿ ಮತ್ತು ಸಂಸ್ಕಾರದ ಬಗ್ಗೆ ಗೌರವವನ್ನು ಇನ್ನಷ್ಟು ಬೆಳೆಸುವ ಅಗತ್ಯವಿದೆ. ಅವರಿಗೆ ನಮ್ಮ ಸಂಸ್ಕೃತಿ ಮತ್ತು ಸಂಸ್ಕಾರದ ಮಹತ್ವವನ್ನು ತಿಳಿಸಿಕೊಡುವ ಜವಾಬ್ದಾರಿ ನಮ್ಮ ಮೇಲಿದೆ. ಬದಲಾದ ಆಧುನಿಕ ಜಗತ್ತಿನಲ್ಲಿ ಪಠ್ಯಪುಸ್ತಕಗಳಲ್ಲಿ ಹಿಂದೆ ಇದ್ದ ‘ಮೋರಲ್ ಸೈನ್ಸ್’ನಂತಹ ಮೌಲ್ಯಾಧಾರಿತ ಶಿಕ್ಷಣ ಕಾಣೆಯಾಗುತ್ತಿದೆ.
ನಮಗೆ ಎಐಗಿಂತಲೂ ಸಂಸ್ಕೃತಿ ಮತ್ತು ಸಂಸ್ಕಾರದ ಅಗತ್ಯ ಹೆಚ್ಚಿದೆ. ನಮ್ಮ ಸಂಸ್ಕೃತಿ ಮತ್ತು ಸಂಸ್ಕಾರವನ್ನು ನಾವು ಮರೆತುಬಿಟ್ಟರೆ, ಸಮಾಜದಲ್ಲಿ ಅದಕ್ಕೆ ಅಗತ್ಯವಾದ ಪ್ರೋತ್ಸಾಹ ನೀಡದೆ ಹೋದರೆ ಮುಂದಿನ ದಿನಗಳಲ್ಲಿ ನಾವು ಎಂತಹ ಭಾರತವನ್ನು ನೋಡಬೇಕಾಗುತ್ತದೆ ಎಂಬುದರ ಬಗ್ಗೆ ಯೋಚಿಸಬೇಕು.
ವಿಶ್ವದಲ್ಲಿಯೇ ಶ್ರೇಷ್ಠ ಸಂಸ್ಕೃತಿಯನ್ನು ಹೊಂದಿರುವ ಭಾರತವು ತನ್ನ ಮುಂದಿನ ಪೀಳಿಗೆಗೆ ಏನು ಹೇಳಲಿದೆ, ಯಾವ ಮೌಲ್ಯಗಳನ್ನು ಹಸ್ತಾಂತರಿಸಲಿದೆ ಎಂಬುದರ ಕುರಿತು ನಾವು ಗಂಭೀರವಾಗಿ ಚಿಂತಿಸಬೇಕಾಗಿದೆ.
ಸಾಹಿತ್ಯ, ಕಲೆ ಮತ್ತು ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರನ್ನು ಪ್ರಶಸ್ತಿಗಳ ಮೂಲಕ ಗುರುತಿಸದೆ ಹೋದರೆ, ಅವರ ಸಾಧನೆ ಹಾಗೂ ಆ ಕ್ಷೇತ್ರಗಳ ಮಹತ್ವ ಸಮಾಜಕ್ಕೆ ಸಮರ್ಪಕವಾಗಿ ಪರಿಚಯವಾಗುವುದಿಲ್ಲ. ಈ ನಿಟ್ಟಿನಲ್ಲಿ ಸಾಧಕರನ್ನು ಗುರುತಿಸಿ ಗೌರವಿಸುವ ಕೆಲಸವನ್ನು ಸೋಮಶೇಖರ ಅವರು ಮಾಡುತ್ತಿರುವುದು ಶ್ಲಾಘನೀಯ.
ಸಮಾಜ ಮತ್ತು ದೇಶ ನಿರಂತರವಾಗಿ ಬದಲಾಗುತ್ತಿದೆ. ಈ ಬದಲಾವಣೆಗಳ ನಡುವೆಯೂ ಭಾರತ ತನ್ನ ಸಂಸ್ಕೃತಿ, ಪರಂಪರೆ ಮತ್ತು ಮೌಲ್ಯಗಳನ್ನು ಉಳಿಸಿಕೊಂಡು ತನ್ನನ್ನು ತಾನು ರಕ್ಷಿಸಿಕೊಳ್ಳುತ್ತಿದೆ.
ಸಾಹಿತ್ಯ, ಕಲೆ ಮತ್ತು ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರನ್ನು ಗುರುತಿಸುವುದು ಸರ್ಕಾರದ ಜವಾಬ್ದಾರಿಯೂ ಆಗಿದೆ. ಕನ್ನಡ ರಾಜ್ಯೋತ್ಸವ ಪ್ರಶಸ್ತಿಗಳ ಸಂಖ್ಯೆಯೂ ಈಗ ನೂರರ ಗಡಿ ದಾಟಿದೆ. ವಿವಿಧ ಕ್ಷೇತ್ರಗಳಲ್ಲಿ ಅಪಾರ ಸೇವೆ ಸಲ್ಲಿಸಿರುವ ಇಂತಹ ದಿಗ್ಗಜರನ್ನು ಗುರುತಿಸಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗುತ್ತಿದೆ. -
Dr. G Parameshwara
@DrParameshwara
Another medal-rich day for India at the Asian Games 2026, with eight podium finishes on Day 10!
Heartiest congratulations to Esha Singh on winning Silver in the women’s 25m pistol after a closely fought final.
A superb day for Indian athletics saw Gulveer Singh claim Silver in the men’s 1500m -- his second Silver of these Games -- while Murali Sreeshankar secured Silver in the men’s long jump.
Congratulations to Yashvir Singh on a personal-best throw of 85.72m to win Silver in the men’s javelin, with Rohit Yadav adding Bronze to complete a memorable double podium for India.
A historic performance from Vithya Ramraj, who won Bronze in the women’s 400m hurdles while breaking P.T. Usha’s 42-year-old national record with a timing of 54.75 seconds.
Congratulations also to Parul Chaudhary on Bronze in the women’s 5000m, adding a second medal to her campaign, and to Pincky Balhara on winning Bronze in the women’s 78kg Kurash event.
Congratulations to all our medal winners, coaches and support teams. Keep making India proud!
#asiangames2026 #teamindia -
Dr. G Parameshwara
@DrParameshwara
ಡಾ. ಸಿ. ಸೋಮಶೇಖರ–ಶ್ರೀಮತಿ ಎನ್. ಸರ್ವಮಂಗಳ ಸಾಹಿತ್ಯ ಸೇವಾ ಪ್ರತಿಷ್ಠಾನದ ವತಿಯಿಂದ ಇಂದು ಬೆಂಗಳೂರಿನ ಗಾಂಧಿ ಭವನದಲ್ಲಿ ಆಯೋಜಿಸಿದ್ದ ‘ಸಂಸ್ಕೃತಿ ಸಂಗಮ–2026’ ಜೀವಮಾನ ಸಾಧನೆ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿದೆ.
ಹಿರಿಯ ಜಾನಪದ ಗಾಯಕ ಡಾ. ಅಪ್ಪಗೆರೆ ತಿಮ್ಮರಾಜು, ವಚನ ಸಾಹಿತಿ ಡಾ. ಎಂ.ಎಸ್. ಆಶಾದೇವಿ, ದಾಸ ಸಾಹಿತ್ಯ ಕ್ಷೇತ್ರದ ಸಾಧನೆಗಾಗಿ ಡಾ. ಹೆಚ್.ಎನ್. ಮುರಳೀಧರ್, ಸಂಗೀತ ಕ್ಷೇತ್ರದಲ್ಲಿ ವಿಶಿಷ್ಟ ಸೇವೆ ಸಲ್ಲಿಸುತ್ತಿರುವ ಗದಗಿನ ಶ್ರೀ ವೀರೇಶ್ವರ ಪುಣ್ಯಾಶ್ರಮ ಹಾಗೂ ಹಿರಿಯ ರಂಗಕರ್ಮಿ ಡಾ. ಕೆ.ವಿ. ನಾಗರಾಜಮೂರ್ತಿ ಅವರಿಗೆ ಸಂಸ್ಕೃತಿ ಸಂಗಮ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಿ, ಅಭಿನಂದಿಸಿದೆ.
ಸಾಹಿತ್ಯ, ಸಂಗೀತ, ಜಾನಪದ, ದಾಸ ಸಾಹಿತ್ಯ ಮತ್ತು ರಂಗಭೂಮಿ ನಮ್ಮ ನಾಡಿನ ಸಾಂಸ್ಕೃತಿಕ ಶ್ರೀಮಂತಿಕೆಯ ಜೀವಾಳ. ತಮ್ಮ ಬದುಕನ್ನೇ ಈ ಕ್ಷೇತ್ರಗಳ ಸೇವೆಗೆ ಮುಡಿಪಾಗಿಟ್ಟು, ಕನ್ನಡದ ಸಾಂಸ್ಕೃತಿಕ ಪರಂಪರೆಯನ್ನು ಶ್ರೀಮಂತಗೊಳಿಸಿರುವ ಹಿರಿಯ ಸಾಧಕರನ್ನು ಗುರುತಿಸಿ ಗೌರವಿಸುವುದು ಅತ್ಯಂತ ಅರ್ಥಪೂರ್ಣ ಕಾರ್ಯ.
ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಪರಮಪೂಜ್ಯ ಶ್ರೀ ಡಾ. ನಿರ್ಮಲಾನಂದನಾಥ ಮಹಾಸ್ವಾಮೀಜಿ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ್ದರು. ಸರ್ವೋಚ್ಛ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿಗಳಾದ ಡಾ. ಶಿವರಾಜ್ ವಿ.ಪಾಟೀಲ್, ನಿವೃತ್ತ ಪೊಲೀಸ್ ಮಹಾನಿರ್ದೇಶಕರಾದ ಶಂಕರ್ ಬಿದರಿ, ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಅಧ್ಯಕ್ಷರಾದ ಡಾ. ವೂಡೇ ಪಿ.ಕೃಷ್ಣ, ಪ್ರತಿಷ್ಠಾನದ ಅಧ್ಯಕ್ಷರಾದ ಡಾ. ಸಿ.ಸೋಮಶೇಖರ್ ಉಪಸ್ಥಿತರಿದ್ದರು.
Today, I inaugurated the ‘Samskruthi Sangama–2026’ Lifetime Achievement Awards Ceremony organised by the Dr. C. Somashekar–Smt. N. Sarvamangala Sahitya Seva Pratishthana at Gandhi Bhavan in Bengaluru.
I had the honour of presenting the Samskruthi Sangama Awards to veteran folk singer Dr. Appagere Thimmaraju, Vachana scholar Dr. M.S. Ashadevi, Dr. H.N. Muralidhar for his contribution to Dasa Sahitya, Shri Veereshwara Punyashrama of Gadag for its distinguished service in the field of music, and veteran theatre personality Dr. K.V. Nagarajamurthy. I congratulated and honoured them for their remarkable contributions.
Literature, music, folk traditions, Dasa Sahitya and theatre are at the heart of Karnataka’s rich cultural heritage. Recognising and honouring veteran achievers who have dedicated their lives to these fields and enriched Kannada’s cultural legacy is truly meaningful.
Pontiff of Sri Adichunchanagiri Mahasamsthana Math, Sri Dr. Nirmalanandanatha Mahaswamiji graced the occasion with his divine presence. Retired Supreme Court Judge Dr. Shivaraj V. Patil, former Director General of Police Shankar Bidari, Karnataka Gandhi Smaraka Nidhi President Dr. Wooday P. Krishna, and Pratishthana President Dr. C. Somashekar were also present. -
Dr. G Parameshwara
@DrParameshwara
ಬರ ಯಾವುದೇ ಒಂದು ಪಕ್ಷಕ್ಕೆ ಸೀಮಿತವಾದ ಸಮಸ್ಯೆಯಲ್ಲ. ಇದು ಕರ್ನಾಟಕದ ಜನರು ಹಾಗೂ ರೈತರ ಬದುಕಿಗೆ ಸಂಬಂಧಿಸಿದ ಸಂಕಷ್ಟ. ಪ್ರಕೃತಿ ವಿಕೋಪಕ್ಕೆ ಪಕ್ಷಭೇದವಿಲ್ಲ. ಆದ್ದರಿಂದ ರಾಜ್ಯದ ಹಿತಾಸಕ್ತಿಗಾಗಿ ಎಲ್ಲರೂ ಒಗ್ಗಟ್ಟಾಗಿ ನಿಲ್ಲಬೇಕಿದೆ.
ಕೇಂದ್ರ ಸರ್ಕಾರದ ಮುಂದೆ ರಾಜ್ಯಕ್ಕಾಗಿರುವ ನಷ್ಟ ಹಾಗೂ ಅಗತ್ಯವಿರುವ ಪರಿಹಾರದ ಕುರಿತು ಸರ್ವಪಕ್ಷ ನಿಯೋಗದ ಮೂಲಕ ಒಗ್ಗಟ್ಟಿನ ಮನವಿ ಸಲ್ಲಿಸಿದರೆ, ರಾಜ್ಯದ ಬೇಡಿಕೆಯನ್ನು ಪರಿಣಾಮಕಾರಿಯಾಗಿ ಮಂಡಿಸಲು ಸಾಧ್ಯವಾಗಲಿದೆ. ಈ ಉದ್ದೇಶದಿಂದಲೇ ಮುಖ್ಯಮಂತ್ರಿ ಅವರು ಸರ್ವಪಕ್ಷ ನಿಯೋಗ ಕರೆದೊಯ್ಯಲು ಮುಂದಾಗಿದ್ದಾರೆ.
ನಾಡಿನ ಜನರ ಹಿತದೃಷ್ಟಿಯಿಂದ ರಾಜ್ಯದ ಬಿಜೆಪಿಯ ನಾಯಕರು ಸಹ ನಿಯೋಗದೊಂದಿಗೆ ಬಂದು, ಕೇಂದ್ರ ಸರ್ಕಾರಕ್ಕೆ ರಾಜ್ಯದ ವಾಸ್ತವ ಪರಿಸ್ಥಿತಿಯನ್ನು ಮನವರಿಕೆ ಮಾಡಿಕೊಡಬೇಕು ಎಂಬುದು ನಮ್ಮ ಮನವಿ. ಬಿಜೆಪಿ ನಾಯಕರು ಭಾಗವಹಿಸದಿದ್ದರೂ, ರಾಜ್ಯದ ಹಿತಾಸಕ್ತಿಗಾಗಿ ಕೇಂದ್ರದ ಮುಂದೆ ಪರಿಹಾರದ ಬೇಡಿಕೆಯನ್ನು ಮಂಡಿಸುವ ಜವಾಬ್ದಾರಿಯಿಂದ ನಮ್ಮ ಸರ್ಕಾರ ಹಿಂದೆ ಸರಿಯುವುದಿಲ್ಲ.
Drought is not an issue confined to any one political party. It is a crisis affecting the lives of Karnataka’s people and farmers. Natural disasters do not distinguish between parties, and therefore we must stand united in the interest of the State.
An all-party delegation presenting Karnataka’s losses and relief requirements before the Union Government will help put forward the State’s case more effectively. It is with this objective that the Chief Minister has proposed taking an all-party delegation to Delhi.
In the interest of Karnataka’s people, we appeal to the State BJP leaders to join the delegation and help convey the ground reality to the Union Government. Even if they choose not to participate, our Government will not step back from its responsibility of seeking the relief Karnataka needs. -
Dr. G Parameshwara
@DrParameshwara
Heartiest congratulations to the athletes from Karnataka who have brought pride to the State while adding to the nation’s glory by winning medals at the 20th Asian Games being held in Aichi-Nagoya, Japan.
It gives me immense happiness to see Karnataka’s young talent Ayush Shetty, a member of the Indian men’s badminton team, win a bronze medal. Ayush has already proven his talent on the international stage at a young age, and I wish him even greater success and many more achievements in the years ahead.
The achievement of M.R. Poovamma, the proud Kannadiga who was part of the Indian team that won silver in the 4×400 metres mixed relay, is equally special. Her experience, discipline and long-standing commitment to Indian athletics continue to inspire young sportspersons.
The Indian women’s cricket team winning India’s first gold medal at the Asian Games is a moment of celebration for the entire country. Special congratulations to Karnataka’s Shreyanka Patil, who was part of this historic success. This victory is yet another testament to the confidence and ability of our women athletes.
The achievement of Tilottama Sen, a member of the Indian team that won silver in the women’s 50-metre rifle shooting event, is another proud moment for Karnataka. Winning an international medal in a sport that demands immense concentration and dedication is truly commendable.
The achievements of Ayush Shetty, M.R. Poovamma, Shreyanka Patil and Tilottama Sen will inspire thousands of young athletes across Karnataka. They have once again shown that, with the right opportunities and encouragement, our children can excel on the world stage.
Behind every medal lie years of hard work, sacrifice, discipline and continuous practice. The support of families, guidance from coaches and encouragement received at different stages are also an integral part of every sporting achievement. Recognising that effort with the honour and support it deserves is both the duty and responsibility of the Government.
Karnataka has no shortage of sporting talent. It has repeatedly been proven that, with the right opportunities, quality coaching, good infrastructure and necessary financial support, our children can excel on any international platform.
Rather than recognising athletes only after they win medals, our Government is giving greater priority to identifying talent at an early stage and providing appropriate training and encouragement. Our objective is to ensure continuous access to good coaches, scientific training and the sporting facilities athletes need.
Sporting opportunities should not be confined to urban areas. Talented children from rural regions and ordinary families must also receive equal opportunities. The Sports Department is therefore working to identify talent from every corner of the State and provide them with proper training and platforms to compete.
The support system for athletes performing at the national and international levels is being further strengthened through incentives, financial assistance, training and employment opportunities. Young people choosing sport as a career must have confidence and financial security. We are working to create an environment in which they can continue their sporting journey without uncertainty.
Karnataka athletes participating in the Olympics, Commonwealth Games, Asian Games and Asian Para Games are being provided a special incentive of ₹5 lakh each. Medal winners are further honoured with an additional cash award of ₹15 lakh.
Young people who excel in sports must have the confidence and security to choose sport itself as a career. Already, 13 athletes who have won medals in international competitions have been appointed to Group ‘A’ and Group ‘B’ government posts through special recruitment. In addition, the reservation for sportspersons in the State Police Department has been increased from 2% to 3%.
To ensure that students interested in sports are not forced to choose between education and sport, those participating in State and national-level competitions have been granted 15% attendance exemption, while those participating in international-level competitions receive 25% attendance exemption. This enables them to pursue their education smoothly alongside their sporting ambitions.
Strong infrastructure is equally important for sporting excellence. In this direction, 32 stadiums across the State are being developed at a cost of ₹36 crore. A decision has also been taken to systematically organise Dasara sports competitions from the taluk level, covering kabaddi, athletics and rural sports, thereby creating greater opportunities for rural talent.
Through these measures, greater emphasis is being placed on strengthening Karnataka’s sporting infrastructure, identifying and nurturing talent, and preparing young athletes for national and international competitions. Our goal is to make Karnataka one of the country’s leading States in sports as well.
Once again, heartiest congratulations to Ayush Shetty, M.R. Poovamma, Shreyanka Patil and Tilottama Sen, the medal winners at the Asian Games 2026. Your achievements have made Kannadigas proud. I wish you even greater success in your sporting journeys ahead. The State Government will always stand behind you and provide the necessary support and encouragement.
With the Asian Games set to continue for a few more days, I wish many more athletes from India and Karnataka participating across various disciplines the very best. May they win more medals and further enhance the pride of both the country and the State. -
Dr. G Parameshwara
@DrParameshwara
ಜಪಾನ್ನ ಐಚಿ–ನಗೋಯಾದಲ್ಲಿ ನಡೆಯುತ್ತಿರುವ 2026ರ ಏಷ್ಯನ್ ಗೇಮ್ಸ್ನಲ್ಲಿ ಭಾರತಕ್ಕೆ ಮೊದಲ ಚಿನ್ನದ ಪದಕ ತಂದುಕೊಟ್ಟ ಮಹಿಳಾ ಕ್ರಿಕೆಟ್ ತಂಡದ ಭಾಗವಾಗಿರುವ ಹೆಮ್ಮೆಯ ಕನ್ನಡತಿ ಶ್ರೇಯಾಂಕಾ ಪಾಟೀಲ್ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು.
ಅಂತಾರಾಷ್ಟ್ರೀಯ ಕ್ರೀಡಾ ವೇದಿಕೆಯಲ್ಲಿ ತಮ್ಮ ಅದ್ಭುತ ಪ್ರತಿಭೆ ಹಾಗೂ ಪರಿಶ್ರಮದ ಮೂಲಕ ದೇಶಕ್ಕೆ ಚಿನ್ನದ ಪದಕ ತಂದುಕೊಟ್ಟಿರುವುದು ಪ್ರತಿಯೊಬ್ಬ ಕನ್ನಡಿಗನಿಗೂ ಹೆಮ್ಮೆಯ ಕ್ಷಣ.
ನಿಮ್ಮ ಪರಿಶ್ರಮ, ಆತ್ಮವಿಶ್ವಾಸ ಮತ್ತು ಈ ಅಮೋಘ ಸಾಧನೆ ರಾಜ್ಯದ ಯುವ ಕ್ರೀಡಾಪಟುಗಳಿಗೆ ಸ್ಫೂರ್ತಿಯಾಗಲಿ. ಮುಂದಿನ ಕ್ರೀಡಾ ಪಯಣದಲ್ಲಿ ಇನ್ನಷ್ಟು ಯಶಸ್ಸು ಹಾಗೂ ಗೌರವಗಳು ನಿಮ್ಮನ್ನು ಹರಸಿ ಬರಲಿ ಎಂದು ಹಾರೈಸುತ್ತೇನೆ.
Heartiest congratulations to Shreyanka Patil, the proud Kannadiga who was part of the Indian women’s cricket team that won India’s first gold medal at the 2026 Asian Games in Aichi-Nagoya, Japan.
Winning gold for the country through her outstanding talent and hard work on the international stage is a proud moment for every Kannadiga.
May your dedication, confidence and remarkable achievement inspire young sportspersons across Karnataka. I wish you many more successes and honours in your sporting journey ahead. -
Dr. G Parameshwara
@DrParameshwara
ಜಪಾನ್ನ ಐಚಿ-ನಗೋಯಾದಲ್ಲಿ ನಡೆಯುತ್ತಿರುವ 2026ರ ಏಷ್ಯನ್ ಗೇಮ್ಸ್ನಲ್ಲಿ 4×400 ಮೀಟರ್ ಮಿಶ್ರ ರಿಲೇ ತಂಡದ ಭಾಗವಾಗಿ ಬೆಳ್ಳಿ ಪದಕ ಗೆದ್ದು ನಾಡಿನ ಕೀರ್ತಿ ಹೆಚ್ಚಿಸಿರುವ ಕನ್ನಡತಿ ಪೂವಮ್ಮ ಅವರಿಗೆ ಅಭಿನಂದನೆಗಳು.
ನಿಮ್ಮ ಈ ಅಮೋಘ ಸಾಧನೆ ನಾಡಿನ ಹೆಮ್ಮೆಯನ್ನು ಹೆಚ್ಚಿಸುವುದರ ಜೊತೆಗೆ, ಕ್ರೀಡಾ ಕ್ಷೇತ್ರದಲ್ಲಿ ಹೊಸ ಕನಸು ಕಾಣುವ ಯುವ ಪ್ರತಿಭೆಗಳಿಗೆ ಹೊಸ ಚೈತನ್ಯ ತುಂಬಲಿ. ಕ್ರೀಡಾ ಪಯಣದ ಪ್ರತಿಯೊಂದು ಹೆಜ್ಜೆಯಲ್ಲೂ ನಮ್ಮ ಸರ್ಕಾರ ನಿಮ್ಮೊಂದಿಗೆ ನಿಲ್ಲಲಿದೆ.
ಮುಂದಿನ ದಿನಗಳಲ್ಲಿ ಇನ್ನಷ್ಟು ಪದಕಗಳನ್ನು ಗೆದ್ದು ಕರ್ನಾಟಕದ ಕೀರ್ತಿಯನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯಿರಿ ಎಂದು ಹಾರೈಸುತ್ತೇನೆ.
Heartiest congratulations to Poovamma, the proud Kannadiga athlete who has brought glory to Karnataka by winning a silver medal as part of the 4×400m mixed relay team at the 2026 Asian Games in Aichi-Nagoya, Japan.
May this remarkable achievement add to Karnataka’s pride and inspire a new generation of young sporting talent. Our Government will stand with you at every step of your sporting journey.
I wish you many more medals and greater success in the years ahead, taking Karnataka’s name to even greater heights. -
Dr. G Parameshwara
@DrParameshwara
ಜಪಾನ್ನ ಐಚಿ-ನಗೋಯಾದಲ್ಲಿ ನಡೆಯುತ್ತಿರುವ 2026ರ ಏಷ್ಯನ್ ಗೇಮ್ಸ್ನಲ್ಲಿ ಬ್ಯಾಡ್ಮಿಂಟನ್ ತಂಡದಲ್ಲಿ ಭಾಗಿಯಾಗಿ ಕಂಚಿನ ಪದಕ ಗೆದ್ದು ಕರ್ನಾಟಕದ ಕೀರ್ತಿ ಹೆಚ್ಚಿಸಿದ ಆಯುಷ್ ಶೆಟ್ಟಿ ಅವರಿಗೆ ಅಭಿನಂದನೆಗಳು.
ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಕನ್ನಡದ ಕ್ರೀಡಾ ಪ್ರತಿಭೆಯ ಛಾಪು ಮೂಡಿಸಿರುವ ನಿಮ್ಮ ಈ ಸಾಧನೆ ಕ್ರೀಡಾ ಕ್ಷೇತ್ರದಲ್ಲಿ ಕನಸು ಕಾಣುವ ಅಸಂಖ್ಯಾತ ಯುವಕರಿಗೆ ಸ್ಫೂರ್ತಿಯಾಗಲಿ. ಮುಂದಿನ ದಿನಗಳಲ್ಲಿ ಇನ್ನಷ್ಟು ಪದಕಗಳು ನಿಮ್ಮದಾಗಲಿ ಎಂದು ಹಾರೈಸುತ್ತೇನೆ.
ನಿಮ್ಮ ಪರಿಶ್ರಮ, ಪ್ರತಿಭೆ ಮತ್ತು ಗೆಲುವಿನ ಹಾದಿಗೆ ನಮ್ಮ ಸರ್ಕಾರ ಸದಾ ಬೆನ್ನೆಲುಬಾಗಿ ನಿಲ್ಲಲಿದೆ. ನಿಮ್ಮ ಕನಸುಗಳಿಗೆ ರೆಕ್ಕೆ ನೀಡಿ, ಇನ್ನಷ್ಟು ಎತ್ತರಕ್ಕೆ ಹಾರಲು ಅಗತ್ಯವಿರುವ ಎಲ್ಲ ರೀತಿಯ ಪ್ರೋತ್ಸಾಹ ಮತ್ತು ಬೆಂಬಲ ನೀಡಲಿದೆ.
Congratulations to Ayush Shetty for bringing pride to Karnataka by winning a bronze medal as part of the badminton team at the 2026 Asian Games in Aichi-Nagoya, Japan.
Your achievement has showcased Karnataka’s sporting talent on the international stage and will inspire countless young people who dream of making their mark in sports. I wish you many more medals and greater success in the years ahead.
Our Government will always stand behind your hard work, talent and journey towards excellence. We remain committed to giving wings to your dreams and providing every possible encouragement and support to help you reach even greater heights. -
Dr. G Parameshwara
@DrParameshwara
ಜಪಾನ್ನ ಐಚಿ–ನಗೋಯಾದಲ್ಲಿ ನಡೆಯುತ್ತಿರುವ 2026ರ ಏಷ್ಯನ್ ಗೇಮ್ಸ್ನಲ್ಲಿ ವನಿತೆಯರ 50 ಮೀ. ರೈಫಲ್ ಶೂಟಿಂಗ್ ವಿಭಾಗದಲ್ಲಿ ಬೆಳ್ಳಿ ಪದಕ ಮುಡಿಗೇರಿಸಿಕೊಂಡಿರುವ ಕರ್ನಾಟಕದ ಹೆಮ್ಮೆಯ ಕ್ರೀಡಾಪಟು ತಿಲೋತ್ತಮಾ ಸೇನ್ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು.
ನಿಮ್ಮ ಈ ಸಾಧನೆಯ ಹಿಂದೆ ಇರುವ ಪರಿಶ್ರಮ, ಶಿಸ್ತು, ಏಕಾಗ್ರತೆ ಮತ್ತು ನಿರಂತರ ಅಭ್ಯಾಸ ಯುವ ಕ್ರೀಡಾಪಟುಗಳಿಗೆ ಸ್ಫೂರ್ತಿಯಾಗಲಿ.
ಮುಂದಿನ ಕ್ರೀಡಾ ಪಯಣದಲ್ಲಿ ಇನ್ನಷ್ಟು ಎತ್ತರದ ಸಾಧನೆಗಳು ನಿಮ್ಮದಾಗಲಿ. ಕರ್ನಾಟಕದ ಕೀರ್ತಿಯನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯುವ ಅವಕಾಶಗಳು ಲಭ್ಯವಾಗಲಿ ಎಂದು ಹಾರೈಸುತ್ತೇನೆ.
Heartiest congratulations to Tilottama Sen, Karnataka’s proud sportsperson, on winning a silver medal in the women’s 50m rifle shooting event at the 2026 Asian Games in Aichi-Nagoya, Japan.
May the hard work, discipline, focus and consistent practice behind this achievement inspire young athletes across the State.
I wish you even greater success in your sporting journey ahead and many more opportunities to take Karnataka’s pride to greater heights. -
Dr. G Parameshwara
@DrParameshwara
ಜಪಾನ್ನ ಐಚಿ–ನಗೋಯಾದಲ್ಲಿ ನಡೆಯುತ್ತಿರುವ 20ನೇ ಏಷ್ಯನ್ ಗೇಮ್ಸ್ನಲ್ಲಿ ಪದಕಗಳನ್ನು ಗೆದ್ದು ದೇಶದ ಕೀರ್ತಿಯನ್ನು ಹೆಚ್ಚಿಸುವುದರ ಜೊತೆಗೆ ಕರ್ನಾಟಕಕ್ಕೂ ಹೆಮ್ಮೆ ತಂದಿರುವ ನಮ್ಮ ರಾಜ್ಯದ ಕ್ರೀಡಾಪಟುಗಳಿಗೆ ಹೃತ್ಪೂರ್ವಕ ಅಭಿನಂದನೆಗಳು.
ಬ್ಯಾಡ್ಮಿಂಟನ್ನಲ್ಲಿ ಕಂಚಿನ ಪದಕ ಗೆದ್ದ ಭಾರತೀಯ ಪುರುಷರ ತಂಡದ ಸದಸ್ಯ, ಕರ್ನಾಟಕದ ಯುವ ಪ್ರತಿಭೆ ಆಯುಷ್ ಶೆಟ್ಟಿ ಅವರ ಸಾಧನೆ ಅತ್ಯಂತ ಸಂತೋಷ ತಂದಿದೆ. ಚಿಕ್ಕ ವಯಸ್ಸಿನಲ್ಲೇ ಅಂತಾರಾಷ್ಟ್ರೀಯ ವೇದಿಕೆಯಲ್ಲಿ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿರುವ ಆಯುಷ್, ಮುಂದಿನ ದಿನಗಳಲ್ಲಿ ಇನ್ನಷ್ಟು ಉನ್ನತ ಸಾಧನೆಗಳನ್ನು ಮಾಡಿ ದೇಶಕ್ಕೆ ಕೀರ್ತಿ ತರಲಿ ಎಂದು ಹಾರೈಸುತ್ತೇನೆ.
4×400 ಮೀಟರ್ ಮಿಶ್ರ ರಿಲೇಯಲ್ಲಿ ಬೆಳ್ಳಿ ಪದಕ ಗೆದ್ದ ಭಾರತೀಯ ತಂಡದ ಭಾಗವಾಗಿರುವ ಕನ್ನಡತಿ ಎಂ.ಆರ್. ಪೂವಮ್ಮ ಅವರ ಸಾಧನೆ ವಿಶೇಷವಾದದ್ದು. ಹಲವು ವರ್ಷಗಳಿಂದ ಭಾರತೀಯ ಅಥ್ಲೆಟಿಕ್ಸ್ನಲ್ಲಿ ನಿರಂತರವಾಗಿ ಸಾಧನೆ ಮಾಡುತ್ತಾ ಬಂದಿರುವ ಅವರ ಅನುಭವ, ಶಿಸ್ತು ಮತ್ತು ಕ್ರೀಡೆಯ ಮೇಲಿನ ಬದ್ಧತೆ ಯುವ ಕ್ರೀಡಾಪಟುಗಳಿಗೆ ಪ್ರೇರಣೆಯಾಗಿದೆ.
ಏಷ್ಯನ್ ಗೇಮ್ಸ್ನಲ್ಲಿ ಭಾರತಕ್ಕೆ ಮೊದಲ ಚಿನ್ನದ ಪದಕ ತಂದುಕೊಟ್ಟ ಮಹಿಳಾ ಕ್ರಿಕೆಟ್ ತಂಡದ ಸಾಧನೆ ದೇಶವೇ ಸಂಭ್ರಮಿಸುವಂತಹದ್ದು. ಈ ಯಶಸ್ಸಿನ ಭಾಗವಾಗಿರುವ ಕರ್ನಾಟಕದ ಹೆಮ್ಮೆಯ ಶ್ರೇಯಾಂಕಾ ಪಾಟೀಲ್ ಅವರಿಗೆ ವಿಶೇಷ ಅಭಿನಂದನೆಗಳು. ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಈ ಗೆಲುವು ಮಹಿಳಾ ಕ್ರೀಡಾಪಟುಗಳ ಸಾಮರ್ಥ್ಯ ಮತ್ತು ಆತ್ಮವಿಶ್ವಾಸಕ್ಕೆ ಮತ್ತೊಂದು ಉತ್ತಮ ನಿದರ್ಶನವಾಗಿದೆ.
ವನಿತೆಯರ 50 ಮೀಟರ್ ರೈಫಲ್ ಶೂಟಿಂಗ್ನಲ್ಲಿ ಬೆಳ್ಳಿ ಪದಕ ಗೆದ್ದ ಭಾರತೀಯ ತಂಡದ ಸದಸ್ಯೆ ತಿಲೋತ್ತಮಾ ಸೇನ್ ಅವರ ಸಾಧನೆಯೂ ಕರ್ನಾಟಕಕ್ಕೆ ಮತ್ತೊಂದು ಹೆಮ್ಮೆಯ ಕ್ಷಣ. ಶೂಟಿಂಗ್ನಂತಹ ಏಕಾಗ್ರತೆ ಮತ್ತು ಶ್ರದ್ಧೆ ಅಗತ್ಯವಿರುವ ಕ್ರೀಡೆಯಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪದಕ ಗೆಲ್ಲುವುದು ನಿಜಕ್ಕೂ ಶ್ಲಾಘನೀಯ.
ಆಯುಷ್ ಶೆಟ್ಟಿ, ಎಂ.ಆರ್. ಪೂವಮ್ಮ, ಶ್ರೇಯಾಂಕಾ ಪಾಟೀಲ್ ಮತ್ತು ತಿಲೋತ್ತಮಾ ಸೇನ್ ಅವರ ಸಾಧನೆ ಕರ್ನಾಟಕದ ಸಾವಿರಾರು ಯುವ ಕ್ರೀಡಾಪಟುಗಳಿಗೆ ಸಾಧನೆಯ ಛಲ ತುಂಬಿದೆ. ನಮ್ಮ ರಾಜ್ಯದ ಮಕ್ಕಳು ಸರಿಯಾದ ಅವಕಾಶ ಮತ್ತು ಪ್ರೋತ್ಸಾಹ ದೊರೆತರೆ ವಿಶ್ವಮಟ್ಟದಲ್ಲಿ ಸಾಧನೆ ಮಾಡಬಲ್ಲರು ಎಂಬುದನ್ನು ಇವರು ಮತ್ತೊಮ್ಮೆ ತೋರಿಸಿಕೊಟ್ಟಿದ್ದಾರೆ.
ಕ್ರೀಡಾಪಟುಗಳು ಪದಕ ಪಡೆಯುವ ಹಂತಕ್ಕೆ ತಲುಪುದರ ಹಿಂದೆ ಹಲವು ವರ್ಷಗಳ ಕಠಿಣ ಪರಿಶ್ರಮ, ತ್ಯಾಗ, ಶಿಸ್ತು ಮತ್ತು ನಿರಂತರ ಅಭ್ಯಾಸ ಇರುತ್ತದೆ. ಅವರ ಕುಟುಂಬದ ಬೆಂಬಲ, ತರಬೇತುದಾರರ ಮಾರ್ಗದರ್ಶನ ಮತ್ತು ಹಲವು ಹಂತಗಳಲ್ಲಿ ದೊರೆಯುವ ಪ್ರೋತ್ಸಾಹ ಕೂಡ ಸಾಧನೆಯ ಭಾಗವಾಗಿರುತ್ತದೆ. ಈ ಪರಿಶ್ರಮಕ್ಕೆ ತಕ್ಕ ಗೌರವ ಮತ್ತು ಬೆಂಬಲ ನೀಡುವುದು ಸರ್ಕಾರದ ಕರ್ತವ್ಯ ಮತ್ತು ಜವಾಬ್ದಾರಿಯೂ ಹೌದು.
ಕರ್ನಾಟಕದಲ್ಲಿ ಕ್ರೀಡಾ ಪ್ರತಿಭೆಗೆ ಕೊರತೆಯಿಲ್ಲ. ಸರಿಯಾದ ಅವಕಾಶ, ಉತ್ತಮ ತರಬೇತಿ, ಗುಣಮಟ್ಟದ ಮೂಲಸೌಕರ್ಯ ಮತ್ತು ಅಗತ್ಯ ಆರ್ಥಿಕ ಬೆಂಬಲ ದೊರೆತರೆ ನಮ್ಮ ಮಕ್ಕಳು ಯಾವುದೇ ಅಂತಾರಾಷ್ಟ್ರೀಯ ವೇದಿಕೆಯಲ್ಲೂ ಸಾಧನೆ ಮಾಡಬಲ್ಲರು ಎಂಬುದು ಹಲವು ಬಾರಿ ಸಾಬೀತಾಗಿದೆ.
ಕ್ರೀಡಾಪಟುಗಳು ಪದಕ ಗೆದ್ದ ನಂತರ ಮಾತ್ರ ಅವರನ್ನು ಗುರುತಿಸುವುದಕ್ಕಿಂತ, ಆರಂಭಿಕ ಹಂತದಲ್ಲೇ ಗುರುತಿಸಿ, ಅವರಿಗೆ ಸೂಕ್ತ ತರಬೇತಿ ಮತ್ತು ಅಗತ್ಯ ಪ್ರೋತ್ಸಾಹ ನೀಡಲು ನಮ್ಮ ಸರ್ಕಾರ ಹೆಚ್ಚಿನ ಆದ್ಯತೆ ನೀಡುತ್ತಿದೆ. ಉತ್ತಮ ತರಬೇತುದಾರರು, ವೈಜ್ಞಾನಿಕ ತರಬೇತಿ, ಅಗತ್ಯ ಕ್ರೀಡಾ ಸೌಲಭ್ಯಗಳು ಕ್ರೀಡಾಪಟುಗಳಿಗೆ ನಿರಂತರವಾಗಿ ಲಭ್ಯವಾಗಬೇಕು ಎಂಬುದು ನಮ್ಮ ಉದ್ದೇಶ.
ಕ್ರೀಡಾ ಅವಕಾಶಗಳು ನಗರ ಪ್ರದೇಶಗಳಿಗೆ ಮಾತ್ರ ಸೀಮಿತವಾಗಬಾರದು. ಗ್ರಾಮೀಣ ಪ್ರದೇಶ ಹಾಗೂ ಸಾಮಾನ್ಯ ಕುಟುಂಬಗಳಿಂದ ಬರುವ ಪ್ರತಿಭಾವಂತ ಮಕ್ಕಳಿಗೂ ಸಮಾನವಾಗಿ ಅವಕಾಶಗಳು ದೊರೆಯಬೇಕು. ಆ ನಿಟ್ಟಿನಲ್ಲಿ ರಾಜ್ಯದ ಮೂಲೆಮೂಲೆಗಳಲ್ಲಿರುವ ಪ್ರತಿಭೆಗಳನ್ನು ಗುರುತಿಸಿ, ಅವರಿಗೆ ಸೂಕ್ತ ತರಬೇತಿ ಮತ್ತು ವೇದಿಕೆ ಕಲ್ಪಿಸುವ ನಿಟ್ಟಿನಲ್ಲಿ ಕ್ರೀಡಾ ಇಲಾಖೆ ಕೆಲಸ ಮಾಡುತ್ತಿದೆ.
ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡುವ ಕ್ರೀಡಾಪಟುಗಳಿಗೆ ಪ್ರೋತ್ಸಾಹಧನ, ಆರ್ಥಿಕ ನೆರವು, ತರಬೇತಿ ಮತ್ತು ಉದ್ಯೋಗಾವಕಾಶಗಳ ಮೂಲಕ ಬೆಂಬಲ ನೀಡುವ ವ್ಯವಸ್ಥೆಯನ್ನು ಇನ್ನಷ್ಟು ಬಲಪಡಿಸಲಾಗುತ್ತಿದೆ. ಕ್ರೀಡೆಯನ್ನು ವೃತ್ತಿಯಾಗಿ ಆಯ್ಕೆ ಮಾಡಿಕೊಳ್ಳುವ ಯುವಕರಿಗೆ ಭರವಸೆ ಮತ್ತು ಆರ್ಥಿಕ ಭದ್ರತೆ ದೊರೆಯಬೇಕು. ಅವರು ತಮ್ಮ ಕ್ರೀಡಾ ಪಯಣವನ್ನು ಯಾವುದೇ ಆತಂಕವಿಲ್ಲದೆ ಮುಂದುವರಿಸುವಂತಹ ವಾತಾವರಣ ನಿರ್ಮಿಸಿಕೊಡುತ್ತಿದ್ದೇವೆ.
ಒಲಿಂಪಿಕ್ಸ್, ಕಾಮನ್ವೆಲ್ತ್ ಗೇಮ್ಸ್, ಏಷ್ಯನ್ ಗೇಮ್ಸ್ ಹಾಗೂ ಏಷ್ಯನ್ ಪ್ಯಾರಾ ಗೇಮ್ಸ್ಗಳಲ್ಲಿ ಭಾಗವಹಿಸುವ ಕರ್ನಾಟಕದ ಕ್ರೀಡಾಪಟುಗಳಿಗೆ ತಲಾ ₹5 ಲಕ್ಷ ವಿಶೇಷ ಪ್ರೋತ್ಸಾಹಧನ ನೀಡಲಾಗುತ್ತಿದೆ. ಪದಕ ವಿಜೇತರಿಗೆ ಹೆಚ್ಚುವರಿಯಾಗಿ ₹15 ಲಕ್ಷ ನಗದು ಬಹುಮಾನ ನೀಡುವ ಮೂಲಕ ಅವರ ಸಾಧನೆಯನ್ನು ಗೌರವಿಸಲಾಗುತ್ತಿದೆ.
ಕ್ರೀಡೆಯಲ್ಲಿ ಸಾಧನೆ ಮಾಡುವ ಯುವಜನರಿಗೆ ಕ್ರೀಡೆಯನ್ನೇ ವೃತ್ತಿಯಾಗಿ ಆಯ್ಕೆ ಮಾಡಿಕೊಳ್ಳುವ ಧೈರ್ಯ ಮತ್ತು ಭದ್ರತೆ ದೊರೆಯಬೇಕು. ಈಗಾಗಲೇ ಅಂತಾರಾಷ್ಟ್ರೀಯ ಕ್ರೀಡೆಗಳಲ್ಲಿ ಪದಕ ಗೆದ್ದ 13 ಕ್ರೀಡಾಪಟುಗಳನ್ನು ವಿಶೇಷ ನೇಮಕಾತಿಯ ಮೂಲಕ ‘ಎ’ ಮತ್ತು ‘ಬಿ’ ಗುಂಪಿನ ಸರ್ಕಾರಿ ಹುದ್ದೆಗಳಿಗೆ ನೇಮಕ ಮಾಡಲಾಗಿದೆ. ಜೊತೆಗೆ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಕ್ರೀಡಾಪಟುಗಳ ಮೀಸಲಾತಿಯನ್ನು 2%ರಿಂದ 3%ಕ್ಕೆ ಹೆಚ್ಚಿಸಲಾಗಿದೆ.
ಕ್ರೀಡಾ ಆಸಕ್ತಿ ಹೊಂದಿರುವ ಮಕ್ಕಳು ಶಿಕ್ಷಣ ಮತ್ತು ಕ್ರೀಡೆ ನಡುವೆ ಯಾವುದಾದರೊಂದನ್ನು ಆಯ್ಕೆ ಮಾಡಿಕೊಳ್ಳುವ ಪರಿಸ್ಥಿತಿ ಬರಬಾರದು ಎಂಬ ಉದ್ದೇಶದಿಂದ ರಾಜ್ಯ ಹಾಗೂ ರಾಷ್ಟ್ರೀಯ ಮಟ್ಟದ ಕ್ರೀಡಾಕೂಟಗಳಲ್ಲಿ ಭಾಗವಹಿಸುವ ವಿದ್ಯಾರ್ಥಿಗಳಿಗೆ ಶೇ.15ರಷ್ಟು ಮತ್ತು ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಕೂಟಗಳಲ್ಲಿ ಭಾಗವಹಿಸುವವರಿಗೆ ಶೇ.25ರಷ್ಟು ಹಾಜರಾತಿ ವಿನಾಯಿತಿ ನೀಡಲಾಗಿದೆ. ಈ ಮೂಲಕ ಕ್ರೀಡಾ ಸಾಧನೆಯ ಜೊತೆಗೆ ಅವರ ಶೈಕ್ಷಣಿಕ ಬದುಕು ಸುಗಮವಾಗಿ ಮುಂದುವರಿಯುವಂತೆ ಅವಕಾಶ ಕಲ್ಪಿಸಲಾಗಿದೆ.
ಕ್ರೀಡಾ ಸಾಧನೆಗೆ ಉತ್ತಮ ಮೂಲಸೌಕರ್ಯವೂ ಮುಖ್ಯವಾಗಿದ್ದು, ಈ ನಿಟ್ಟಿನಲ್ಲಿ ರಾಜ್ಯಾದ್ಯಂತ ₹36 ಕೋಟಿ ವೆಚ್ಚದಲ್ಲಿ 32 ಕ್ರೀಡಾಂಗಣಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಕಬಡ್ಡಿ, ಅಥ್ಲೆಟಿಕ್ಸ್ ಹಾಗೂ ಗ್ರಾಮೀಣ ಕ್ರೀಡೆಗಳನ್ನು ಒಳಗೊಂಡ ದಸರಾ ಕ್ರೀಡಾಕೂಟವನ್ನು ತಾಲ್ಲೂಕು ಮಟ್ಟದಿಂದಲೇ ವ್ಯವಸ್ಥಿತವಾಗಿ ಆಯೋಜಿಸುವ ತೀರ್ಮಾನ ಕೈಗೊಳ್ಳಲಾಗಿದ್ದು, ಆ ಮೂಲಕ ಗ್ರಾಮೀಣ ಪ್ರತಿಭೆಗಳಿಗೆ ಹೆಚ್ಚಿನ ಅವಕಾಶ ಕಲ್ಪಿಸಲಾಗುತ್ತಿದೆ.
ಆ ಮೂಲಕ ರಾಜ್ಯದ ಕ್ರೀಡಾ ಮೂಲಸೌಕರ್ಯವನ್ನು ಇನ್ನಷ್ಟು ಬಲಪಡಿಸುವುದು, ಪ್ರತಿಭೆಗಳನ್ನು ಗುರುತಿಸಿ ಅವರನ್ನು ಪ್ರೋತ್ಸಾಹಿಸುವುದು ಮತ್ತು ಯುವ ಕ್ರೀಡಾಪಟುಗಳನ್ನು ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಸ್ಪರ್ಧೆಗಳಿಗೆ ಸಜ್ಜುಗೊಳಿಸುವುದಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಕರ್ನಾಟಕವನ್ನು ಕ್ರೀಡಾ ಕ್ಷೇತ್ರದಲ್ಲಿಯೂ ದೇಶದ ಮುಂಚೂಣಿ ರಾಜ್ಯವನ್ನಾಗಿ ರೂಪಿಸುವುದು ನಮ್ಮ ಗುರಿ.
ಏಷ್ಯನ್ ಗೇಮ್ಸ್ - 2026ರಲ್ಲಿ ಪದಕ ವಿಜೇತರಾದ ಆಯುಷ್ ಶೆಟ್ಟಿ, ಎಂ.ಆರ್. ಪೂವಮ್ಮ, ಶ್ರೇಯಾಂಕಾ ಪಾಟೀಲ್ ಮತ್ತು ತಿಲೋತ್ತಮಾ ಸೇನ್ ಅವರಿಗೆ ಮತ್ತೊಮ್ಮೆ ಹೃತ್ಪೂರ್ವಕ ಅಭಿನಂದನೆಗಳು. ನಿಮ್ಮ ಸಾಧನೆ ಕನ್ನಡಿಗರಿಗೆ ಹೆಮ್ಮೆ ತಂದಿದೆ. ನಿಮ್ಮ ಮುಂದಿನ ಕ್ರೀಡಾ ಪಯಣ ಇನ್ನಷ್ಟು ಯಶಸ್ಸಿನಿಂದ ಕೂಡಿರಲಿ. ರಾಜ್ಯ ಸರ್ಕಾರ ಸದಾ ನಿಮ್ಮ ಬೆನ್ನಿಗೆ ನಿಂತು ಅಗತ್ಯ ಸಹಕಾರ ಮತ್ತು ಪ್ರೋತ್ಸಾಹ ನೀಡಲಿದೆ.
ಏಷ್ಯನ್ ಗೇಮ್ಸ್ ಇನ್ನೂ ಕೆಲವು ದಿನಗಳ ಕಾಲ ನಡೆಯಲಿದ್ದು, ವಿವಿಧ ಕ್ರೀಡೆಗಳಲ್ಲಿ ಭಾಗವಹಿಸುತ್ತಿರುವ ಭಾರತದ ಹಾಗೂ ಕರ್ನಾಟಕದ ಇನ್ನಷ್ಟು ಕ್ರೀಡಾಪಟುಗಳು ಪದಕಗಳನ್ನು ಗೆದ್ದು ದೇಶ ಮತ್ತು ರಾಜ್ಯದ ಕೀರ್ತಿಯನ್ನು ಹೆಚ್ಚಿಸಲಿ ಎಂದು ಹಾರೈಸುತ್ತೇನೆ. -
Dr. G Parameshwara
@DrParameshwara
ಅರ್ಹ ಫಲಾನುಭವಿಗಳಿಗೆ ನಿಗದಿಯಾದ ಸವಲತ್ತು ಯಾವುದೇ ಕಾರಣಕ್ಕೂ ಅವರ ಕೈತಪ್ಪಬಾರದು ಎಂಬ ಕಾಳಜಿಯಿಂದ ಪಿಂಚಣಿ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆ ಮಾಡಲಾಗಿದೆ. ಈ ಹಿಂದೆ ₹32 ಸಾವಿರ ಇದ್ದ ಆದಾಯ ಮಿತಿಯನ್ನು ₹1.20 ಲಕ್ಷಕ್ಕೆ ಹೆಚ್ಚಿಸುವ ಮೂಲಕ, ಆದಾಯ ಮಿತಿಯಿಂದ ಹೊರಗುಳಿದಿದ್ದ ಅರ್ಹರಿಗೆ ಮತ್ತೆ ಪಿಂಚಣಿ ಸೌಲಭ್ಯ ದೊರೆಯುವ ಅವಕಾಶ ಕಲ್ಪಿಸಲಾಗಿದೆ.
ಸೂಕ್ತ ದಾಖಲೆಗಳಿಲ್ಲದ ಹಾಗೂ ವಯೋಮಿತಿ ಪೂರೈಸದ ಅರ್ಜಿಗಳನ್ನು ಪರಿಶೀಲಿಸಿ ಅನರ್ಹರನ್ನು ಹೊರಗಿಡುವ ಮೂಲಕ ವ್ಯವಸ್ಥೆಯನ್ನು ಮತ್ತಷ್ಟು ಶುದ್ಧೀಕರಿಸಲಾಗುವುದು.
ಜನರ ಬದುಕಿಗೆ ನೆರವಾಗುವ ಪ್ರತಿಯೊಂದು ನಿರ್ಧಾರದಲ್ಲೂ ಸಾಮಾಜಿಕ ನ್ಯಾಯ ಮತ್ತು ಜನಹಿತಕ್ಕೆ ಆದ್ಯತೆ ನೀಡುವುದು ನಮ್ಮ ಸರ್ಕಾರದ ಬದ್ಧತೆ. ಅರ್ಹರಿಗೆ ಸೌಲಭ್ಯ ತಲುಪಿಸುವುದರ ಜೊತೆಗೆ ವ್ಯವಸ್ಥೆಯ ಪಾರದರ್ಶಕತೆ ಕಾಪಾಡಿಕೊಂಡು, ಜನರ ವಿಶ್ವಾಸಕ್ಕೆ ಮತ್ತಷ್ಟು ಬಲ ತುಂಬುವ ನಿಟ್ಟಿನಲ್ಲಿ ನಮ್ಮ ಕಾರ್ಯ ಮುಂದುವರಿಯಲಿದೆ.
With the concern that no eligible beneficiary should lose a benefit meant for them, an important change has been made to the pension system. The income ceiling has been raised from ₹32,000 to ₹1.20 lakh, enabling eligible beneficiaries who were earlier excluded due to the income limit to receive pension benefits again.
At the same time, applications without proper documents and those that do not meet the age criteria will be scrutinised, and ineligible cases will be removed to further streamline the system.
Our Government remains committed to placing social justice and public welfare at the centre of every decision that affects people’s lives. Along with ensuring that benefits reach the eligible, we will continue to strengthen transparency in the system and reinforce public trust. -
Dr. G Parameshwara
@DrParameshwara
ಬರ ಪರಿಸ್ಥಿತಿಯಿಂದ ರಾಜ್ಯ ಎದುರಿಸುತ್ತಿರುವ ಸಂಕಷ್ಟಕ್ಕೆ ಸೂಕ್ತ ಪರಿಹಾರ ದೊರಕಿಸುವ ನಿಟ್ಟಿನಲ್ಲಿ ನಮ್ಮ ಸರ್ಕಾರ ನಿರಂತರವಾಗಿ ಕಾರ್ಯನಿರ್ವಹಿಸುತ್ತಿದೆ.
ಪ್ರಸ್ತುತ ನಡೆಯುತ್ತಿರುವ ಗ್ರೌಂಡ್ ಟ್ರೂಥಿಂಗ್ ಪ್ರಕ್ರಿಯೆ ಪೂರ್ಣಗೊಂಡ ಬಳಿಕ, ರಾಜ್ಯದ ನಷ್ಟ ಹಾಗೂ ಅಗತ್ಯವಿರುವ ಪರಿಹಾರದ ಸಮಗ್ರ ಮಾಹಿತಿಯನ್ನು ಒಳಗೊಂಡ ಅಂತಿಮ ಮೆಮೊರಾಂಡಂ ಸಿದ್ಧಪಡಿಸಲಾಗುವುದು.
ಸೆಪ್ಟೆಂಬರ್ 30ಕ್ಕೆ ಮುಂಗಾರು ಅವಧಿ ಮುಕ್ತಾಯವಾದ ನಂತರ, ಅಕ್ಟೋಬರ್ ಮೊದಲ ವಾರದಲ್ಲೇ ಅಂತಿಮ ಮೆಮೊರಾಂಡಂ ಅನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಿ, ರಾಜ್ಯಕ್ಕೆ ಅಗತ್ಯವಿರುವ ಪರಿಹಾರವನ್ನು ಒದಗಿಸುವಂತೆ ಮನವಿ ಮಾಡಲಾಗುವುದು.
ರೈತರ ಸಂಕಷ್ಟಕ್ಕೆ ಸ್ಪಂದಿಸುವುದು ನಮ್ಮ ಜವಾಬ್ದಾರಿ. ರಾಜ್ಯದ ಹಿತಾಸಕ್ತಿಗಾಗಿ ಅಗತ್ಯವಿರುವ ಎಲ್ಲ ಕ್ರಮಗಳನ್ನು ರಾಜ್ಯ ಸರ್ಕಾರ ಕೈಗೊಳ್ಳಲಿದೆ.
Our Government is continuously working to secure appropriate relief for the hardship Karnataka is facing due to the drought.
Once the ongoing ground truthing is completed, a final memorandum will be prepared with comprehensive details of the State’s losses and the relief required.
After the monsoon period ends on September 30, the final memorandum will be submitted to the Union Government in the first week of October, seeking the relief Karnataka needs.
Responding to farmers’ distress is our responsibility. The State Government will take every necessary step to protect Karnataka’s interests. -
Dr. G Parameshwara
@DrParameshwara
ರಾಜ್ಯ ಅಭಿವೃದ್ಧಿಯಾಗಬೇಕಾದರೆ ಪ್ರತಿ ಹಳ್ಳಿ, ಪ್ರತಿ ಗ್ರಾಮವೂ ಪ್ರಗತಿ ಕಾಣಬೇಕು. ಈ ನಿಟ್ಟಿನಲ್ಲಿ ನನ್ನೂರು, ನನ್ನ ಗ್ರಾಮ, ನನ್ನ ಜಿಲ್ಲೆ, ನನ್ನ ರಾಜ್ಯದ ಸಮಗ್ರ ಬದಲಾವಣೆಯ ಚಿತ್ರಣವನ್ನು ಮುಂದಿಟ್ಟುಕೊಂಡು ಕೆಲಸ ಮಾಡುತ್ತಿದ್ದೇನೆ.
ಇಂದು ನಾನು ಪ್ರತಿನಿಧಿಸುತ್ತಿರುವ ಕೊರಟಗೆರೆ ವಿಧಾನಸಭಾ ಕ್ಷೇತ್ರ ಮೂಲಸೌಕರ್ಯ, ಶಿಕ್ಷಣ, ಕ್ರೀಡೆ, ಆರೋಗ್ಯ, ಶುಚಿತ್ವ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲೂ ಮುಂಚೂಣಿಯಲ್ಲಿರುವುದು ನೋಡುವಾಗ ಖುಷಿಯಾಗುತ್ತದೆ. ಕೊರಟಗೆರೆ ಪುಟ್ಟ ಊರು. ಆದರೆ ಇಲ್ಲಾಗುತ್ತಿರುವ ಅಭಿವೃದ್ಧಿಗಳು ಬಹು ದೊಡ್ಡವು. ಅದು ಎಷ್ಟರಮಟ್ಟಿಗೆ ಎಂಬುದು ನನ್ನೂರಿನ ಜನರ ಮೊಗದಲ್ಲಿ ಮೂಡುತ್ತಿರುವ ಮಂದಹಾಸವೇ ಸಾಬೀತುಪಡಿಸುತ್ತಿದೆ.
ನನ್ನನ್ನು ಹರಸಿ - ಹಾರೈಸಿದ ನನ್ನೂರಿನ ಜನ ನಾನು ಮಾಡಿದ ಕೆಲಸಕ್ಕೆ ಪ್ರಶಂಸೆಯ ಮಹಾಪೂರಣವನ್ನೇ ಅರ್ಪಿಸುತ್ತಿರುವುದನ್ನು ನೋಡುವಾಗ ನಿಜಕ್ಕೂ ನನ್ನ ಸಾರ್ವಜನಿಕ ಜೀವನ ಸಾರ್ಥಕ ಎನಿಸುತ್ತದೆ.
ನಾನು ನಿಮ್ಮವನು, ನಿಮ್ಮ ಮನೆಮಗ. ನಿಮಗೆ ನೆಮ್ಮದಿ, ಸಂತೋಷದ ಜೀವನವನ್ನು ಕಲ್ಪಿಸಿಕೊಡುವುದು ನನ್ನ ಜವಾಬ್ದಾರಿ ಮತ್ತು ಕರ್ತವ್ಯ. ಅದಕ್ಕಾಗಿಯೇ ನನ್ನ ರಾಜಕೀಯ ಜೀವನ ಮೀಸಲು.This media couldn't be displayed. See it on the original post. -
Dr. G Parameshwara
@DrParameshwara
Remembering Dr. M. S. Swaminathan with deep respect and gratitude.
His extraordinary contribution to Indian agriculture gave strength to our farmers, greater food security to the nation, and hope to generations. Beyond his scientific achievements, his enduring concern for farmers and sustainable agriculture remains his greatest legacy.
Humble tributes to the Father of India’s Green Revolution on his death anniversary. -
Dr. G Parameshwara
@DrParameshwara
Following the State Government’s request, 3 teams from the Union Government will visit Karnataka to assess the drought situation. One team will cover the Tumakuru, Chitradurga and Davanagere region, another will visit districts in North Karnataka, while the third will assess the Mysuru region, including Mandya, Mysuru and Chamarajanagar.
The Central teams will visit drought-affected areas and submit their reports. The State Government has already submitted a memorandum to the Centre, based on which the teams will carry out their assessment.
The teams are likely to collect information on all taluks declared drought-affected in the State. They will personally visit some taluks, interact with DCs and local officials, and examine whether there is any difference between the findings in the State Government’s report and the ground realities observed during their field visits.
The Central teams have their own guidelines. The State Government also followed the same guidelines while declaring drought-affected taluks.
Taluks have been declared drought-affected strictly on the basis of the prescribed criteria. Those that did not fall within the guidelines were not declared drought-affected. Therefore, there is unlikely to be any major difference between the State’s report and the findings of the Central teams.
Further ground truthing is currently underway. The monsoon period ends on September 30, and we intend to submit the final memorandum in the first week of October. A comprehensive report detailing the State’s losses and the relief required will be placed before the Centre.
Drought is not an issue confined to any political party. Natural disasters do not distinguish between parties. The Chief Minister has proposed taking an all-party delegation so that we can jointly represent Karnataka before the Union Government and seek greater assistance.
The BJP is in power at the Centre. If its leaders join us, it will help strengthen Karnataka’s case before the Union Government. However, even if they do not participate, the State Government will fulfil its responsibility of taking the State’s concerns to the Centre.
Drought is not a party issue; it concerns the interests of the people of Karnataka. Everyone must share responsibility. When we approach the Centre, BJP leaders too should join us.
A situation should not arise where Karnataka is once again forced to approach the Supreme Court, as it did last year. My appeal is that the Centre and the authorities concerned should not allow such a situation to arise.
We were aware from the beginning that implementing the guarantee schemes would require substantial funds.
When the manifesto was prepared, the expenditure was initially estimated at around ₹40,000–45,000 crore. The actual expenditure later rose to over ₹50,000 crore. Even so, the decision to implement the guarantees was taken consciously.
No one can deny that there is pressure on the State’s finances. However, the Government has managed this financial commitment for the past three years and has the capacity to continue managing it over the next two years as well.
The Chief Minister has gone to Delhi to attend a Working Committee meeting. He will also meet party leaders and some Union Ministers.
He may meet the Union Home Minister regarding drought relief and disaster management, and may also meet Union Ministers handling irrigation and forests to explain Karnataka’s requirements.
*Re-inclusion of Pension Beneficiaries:* The income ceiling, which was earlier ₹32,000, has now been increased to ₹1.20 lakh.
Around 23 lakh people had earlier lost their pensions. With the income ceiling now increased, eligible beneficiaries will once again receive pensions. At the same time, applications of those who have not submitted the required certificates or do not meet the age criteria will be scrutinised, and ineligible beneficiaries will be removed to streamline the system.
– My remarks to the media near my residence today. -
Dr. G Parameshwara
@DrParameshwara
ರಾಜ್ಯ ಸರ್ಕಾರದ ಮನವಿ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ಮೂರು ತಂಡಗಳು ಕರ್ನಾಟಕಕ್ಕೆ ಆಗಮಿಸಿ ಬರ ಪರಿಸ್ಥಿತಿಯ ಕುರಿತು ಅಧ್ಯಯನ ನಡೆಸಲಿವೆ. ತುಮಕೂರು, ಚಿತ್ರದುರ್ಗ, ದಾವಣಗೆರೆ ಭಾಗದಲ್ಲಿ ಒಂದು ತಂಡ, ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಮತ್ತೊಂದು ತಂಡ ಹಾಗೂ ಮಂಡ್ಯ, ಮೈಸೂರು, ಚಾಮರಾಜನಗರ ಸೇರಿದಂತೆ ಮೈಸೂರು ಭಾಗದಲ್ಲಿ ಮೂರನೇ ತಂಡ ಅಧ್ಯಯನ ನಡೆಸಲಿದೆ.
ಕೇಂದ್ರದ ತಂಡಗಳು ಬರಪೀಡಿತ ಪ್ರದೇಶಗಳಲ್ಲಿ ಅಧ್ಯಯನ ನಡೆಸಿ ತಮ್ಮ ವರದಿಯನ್ನು ಸಲ್ಲಿಸಲಿವೆ. ರಾಜ್ಯ ಸರ್ಕಾರ ಈಗಾಗಲೇ ಕೇಂದ್ರಕ್ಕೆ ಮೆಮೊರಾಂಡಂ ಸಲ್ಲಿಸಿದ್ದು, ಅದರ ಆಧಾರದ ಮೇಲೆಯೇ ಕೇಂದ್ರದ ತಂಡಗಳು ಪರಿಶೀಲನೆ ನಡೆಸಲಿವೆ.
ರಾಜ್ಯದಲ್ಲಿ ಬರ ಎಂದು ಘೋಷಿಸಲಾಗಿರುವ ಎಲ್ಲ ತಾಲೂಕುಗಳ ಬಗ್ಗೆಯೂ ಕೇಂದ್ರದ ತಂಡಗಳು ಮಾಹಿತಿಯನ್ನು ಸಂಗ್ರಹಿಸುವ ಸಾಧ್ಯತೆಯಿದೆ. ಕೆಲವು ತಾಲೂಕುಗಳಿಗೆ ತಂಡಗಳು ಖುದ್ದಾಗಿ ಭೇಟಿ ನೀಡಿ ಜಿಲ್ಲಾಧಿಕಾರಿಗಳು ಹಾಗೂ ಸ್ಥಳೀಯ ಅಧಿಕಾರಿಗಳೊಂದಿಗೆ ಚರ್ಚಿಸಿ ಮಾಹಿತಿ ಪಡೆದುಕೊಳ್ಳಲಿವೆ. ರಾಜ್ಯ ಸರ್ಕಾರ ಸಲ್ಲಿಸಿರುವ ವರದಿಯಲ್ಲಿನ ಅಂಶಗಳು ಹಾಗೂ ಕೇಂದ್ರದ ತಂಡಗಳು ಸ್ಥಳದಲ್ಲೇ ನಡೆಸುವ ಪರಿಶೀಲನೆಯಲ್ಲಿನ ವಾಸ್ತವಾಂಶಗಳ ನಡುವೆ ಯಾವುದೇ ವ್ಯತ್ಯಾಸವಿದೆಯೇ ಎಂಬುದನ್ನೂ ಅವರು ಪರಿಶೀಲಿಸಲಿದ್ದಾರೆ.
ಕೇಂದ್ರದ ತಂಡಗಳಿಗೆ ತಮ್ಮದೇ ಆದ ಮಾರ್ಗಸೂಚಿಗಳಿವೆ. ರಾಜ್ಯ ಸರ್ಕಾರವೂ ಬರ ತಾಲೂಕುಗಳನ್ನು ಘೋಷಿಸುವ ಸಂದರ್ಭದಲ್ಲಿ ಇದೇ ಮಾರ್ಗಸೂಚಿಗಳನ್ನು ಅನುಸರಿಸಿದೆ.
ಮಾರ್ಗಸೂಚಿಗಳಲ್ಲಿರುವ ಮಾನದಂಡಗಳನ್ನು ಆಧರಿಸಿಯೇ ಬರಪೀಡಿತ ತಾಲೂಕುಗಳನ್ನು ಘೋಷಿಸಲಾಗಿದೆ. ಮಾರ್ಗಸೂಚಿಗಳ ವ್ಯಾಪ್ತಿಗೆ ಬರದ ತಾಲೂಕುಗಳನ್ನು ಬರಪೀಡಿತ ತಾಲೂಕುಗಳೆಂದು ಘೋಷಿಸಿಲ್ಲ. ಹೀಗಾಗಿ ಕೇಂದ್ರದ ತಂಡಗಳು ಪರಿಶೀಲನೆ ನಡೆಸಿದಾಗ ರಾಜ್ಯ ಸರ್ಕಾರದ ವರದಿ ಹಾಗೂ ಅವರ ಪರಿಶೀಲನೆಯ ನಡುವೆ ಹೆಚ್ಚಿನ ವ್ಯತ್ಯಾಸ ಕಂಡುಬರುವ ಸಾಧ್ಯತೆ ಇಲ್ಲ.
ಸದ್ಯ ಇನ್ನಷ್ಟು ಗ್ರೌಂಡ್ ಟ್ರೂಥಿಂಗ್ ನಡೆಯುತ್ತಿದೆ. ಸೆಪ್ಟೆಂಬರ್ 30ಕ್ಕೆ ಮುಂಗಾರು ಅವಧಿ ಮುಕ್ತಾಯವಾಗಲಿದ್ದು, ಅದರ ನಂತರ ಅಕ್ಟೋಬರ್ ಮೊದಲ ವಾರದಲ್ಲೇ ಅಂತಿಮ ಮೆಮೊರಾಂಡಂ ಸಲ್ಲಿಸಲು ಉದ್ದೇಶಿಸಲಾಗಿದೆ. ರಾಜ್ಯದ ನಷ್ಟ ಹಾಗೂ ಅಗತ್ಯವಿರುವ ಪರಿಹಾರದ ಕುರಿತು ಸಮಗ್ರ ಮಾಹಿತಿಯನ್ನು ಒಳಗೊಂಡ ವರದಿಯನ್ನು ಕೇಂದ್ರದ ಮುಂದೆ ಮಂಡಿಸಲಾಗುವುದು.
ಬರ ಯಾವುದೇ ಪಕ್ಷಕ್ಕೆ ಸೀಮಿತವಾದ ಸಮಸ್ಯೆಯಲ್ಲ. ಪ್ರಕೃತಿ ವಿಕೋಪಕ್ಕೆ ಪಕ್ಷದ ಬೇಧವಿಲ್ಲ. ಕೇಂದ್ರ ಸರ್ಕಾರದ ಮುಂದೆ ಎಲ್ಲರೂ ಒಟ್ಟಾಗಿ ರಾಜ್ಯದ ಪರವಾಗಿ ಮನವಿ ಸಲ್ಲಿಸಿದರೆ ಹೆಚ್ಚಿನ ನೆರವು ಪಡೆಯಲು ಅನುಕೂಲವಾಗಲಿದೆ ಎಂಬ ಉದ್ದೇಶದಿಂದಲೇ ಮುಖ್ಯಮಂತ್ರಿ ಸರ್ವಪಕ್ಷ ನಿಯೋಗ ಕರೆದೊಯ್ಯುವುದಾಗಿ ಹೇಳಿದ್ದಾರೆ.
ಬಿಜೆಪಿ ಪಕ್ಷವೇ ಕೇಂದ್ರದಲ್ಲಿ ಅಧಿಕಾರದಲ್ಲಿದೆ. ಅವರು ನಮ್ಮೊಂದಿಗೆ ಬಂದರೆ ಕೇಂದ್ರ ಸರ್ಕಾರವನ್ನು ಮನವರಿಕೆ ಮಾಡಿಕೊಡಲು ಇನ್ನಷ್ಟು ಸಹಕಾರಿಯಾಗುತ್ತದೆ ಎಂಬುದು ರಾಜ್ಯ ಸರ್ಕಾರದ ಉದ್ದೇಶ. ಆದರೆ, ಅವರು ಬರದಿದ್ದರೂ ಆಡಳಿತ ಪಕ್ಷವಾಗಿ ರಾಜ್ಯದ ಹಿತಾಸಕ್ತಿಗಾಗಿ ಕೇಂದ್ರ ಸರ್ಕಾರದ ಗಮನಕ್ಕೆ ವಿಷಯವನ್ನು ತರುವ ಜವಾಬ್ದಾರಿಯನ್ನು ರಾಜ್ಯ ಸರ್ಕಾರ ನಿರ್ವಹಿಸಲಿದೆ.
ಬರ ಯಾವುದೇ ಪಕ್ಷದ ಸಮಸ್ಯೆಯಲ್ಲ. ಇದು ಕರ್ನಾಟಕದ ಜನರ ಹಿತಾಸಕ್ತಿಗೆ ಸಂಬಂಧಿಸಿದ ವಿಷಯ. ಆದ್ದರಿಂದ ಎಲ್ಲರೂ ತಮ್ಮ ಜವಾಬ್ದಾರಿಯನ್ನು ಹಂಚಿಕೊಳ್ಳಬೇಕು. ಕೇಂದ್ರಕ್ಕೆ ಮನವಿ ಸಲ್ಲಿಸುವ ಸಂದರ್ಭದಲ್ಲಿ ಬಿಜೆಪಿಯವರೂ ನಮ್ಮೊಂದಿಗೆ ಬರಬೇಕು.
ಕೇಂದ್ರ ಸರ್ಕಾರ ಪರಿಹಾರ ನೀಡುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದರೆ, ಕಳೆದ ವರ್ಷ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ರೀತಿಯಲ್ಲಿ ಮತ್ತೆ ನ್ಯಾಯಾಲಯದ ಮೊರೆ ಹೋಗುವ ಪರಿಸ್ಥಿತಿ ನಿರ್ಮಾಣವಾಗಬಾರದು. ಕೇಂದ್ರ ಸರ್ಕಾರ ಹಾಗೂ ಸಂಬಂಧಪಟ್ಟವರು ಅಂತಹ ಅವಕಾಶವನ್ನು ನೀಡಬಾರದು ಎಂಬುದು ನನ್ನ ಮನವಿ.
ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರುವ ಸಂದರ್ಭದಲ್ಲಿ ಅವುಗಳಿಗೆ ಹೆಚ್ಚಿನ ಹಣ ಅಗತ್ಯವಾಗುತ್ತದೆ ಎಂಬುದು ಸರ್ಕಾರಕ್ಕೆ ಮೊದಲಿನಿಂದಲೂ ತಿಳಿದಿತ್ತು.
ಪ್ರಣಾಳಿಕೆ ಸಿದ್ಧಪಡಿಸುವಾಗಲೇ ಯೋಜನೆಗಳಿಗೆ ಎಷ್ಟು ಹಣ ಬೇಕಾಗಬಹುದು ಎಂಬುದರ ಕುರಿತು ಅಂದಾಜು ಮಾಡಲಾಗಿತ್ತು. ಆರಂಭದಲ್ಲಿ ಸುಮಾರು ₹40ರಿಂದ ₹45 ಸಾವಿರ ಕೋಟಿ ವೆಚ್ಚವಾಗಬಹುದು ಎಂಬ ಅಂದಾಜಿತ್ತು. ನಂತರ ವಾಸ್ತವಿಕ ವೆಚ್ಚ ಸುಮಾರು ₹50 ಸಾವಿರ ಕೋಟಿಗೂ ಹೆಚ್ಚಾಗಿದೆ. ಆದರೂ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸುವ ನಿರ್ಧಾರವನ್ನು ಪ್ರಜ್ಞಾಪೂರ್ವಕವಾಗಿಯೇ ಕೈಗೊಳ್ಳಲಾಗಿದೆ.
ಹಣಕಾಸಿನ ಮೇಲೆ ಒತ್ತಡ ಇರುವುದನ್ನು ಯಾರೂ ಮುಚ್ಚಿಡಲು ಸಾಧ್ಯವಿಲ್ಲ. ಆದರೆ, ಕಳೆದ ಮೂರು ವರ್ಷಗಳಿಂದ ಸರ್ಕಾರ ಈ ಹಣಕಾಸಿನ ಬದ್ಧತೆಯನ್ನು ನಿರ್ವಹಿಸಿಕೊಂಡು ಬಂದಿದೆ. ಮುಂದಿನ ಎರಡು ವರ್ಷಗಳಲ್ಲೂ ಅದನ್ನು ನಿರ್ವಹಿಸುವ ಸಾಮರ್ಥ್ಯ ಸರ್ಕಾರಕ್ಕಿದೆ.
ಮುಖ್ಯಮಂತ್ರಿ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಭಾಗವಹಿಸಲು ದೆಹಲಿಗೆ ತೆರಳಿದ್ದು, ಪಕ್ಷದ ನಾಯಕರನ್ನು ಭೇಟಿಯಾಗುವುದರ ಜೊತೆಗೆ ಕೇಂದ್ರದ ಕೆಲವು ಸಚಿವರನ್ನೂ ಭೇಟಿಯಾಗಲಿದ್ದಾರೆ.
ಬರ ಪರಿಹಾರ ಹಾಗೂ ವಿಪತ್ತು ನಿರ್ವಹಣೆಯ ವಿಚಾರವಾಗಿ ಕೇಂದ್ರ ಗೃಹ ಸಚಿವರನ್ನು ಭೇಟಿ ಮಾಡುವ ಸಾಧ್ಯತೆಯಿದೆ. ಇದರ ಜೊತೆಗೆ ನೀರಾವರಿ, ಅರಣ್ಯ ಸೇರಿದಂತೆ ವಿವಿಧ ಇಲಾಖೆಗಳ ಕೇಂದ್ರ ಸಚಿವರನ್ನು ಭೇಟಿ ಮಾಡಿ ರಾಜ್ಯದ ಅಗತ್ಯಗಳನ್ನು ವಿವರಿಸುವ ಸಾಧ್ಯತೆಯಿದೆ.
*ಪಿಂಚಣಿ ಫಲಾನುಭವಿಗಳ ಮರು ಸೇರ್ಪಡೆ:* ಈ ಹಿಂದೆ ₹32 ಸಾವಿರ ಇದ್ದ ಆದಾಯದ ಮೇಲಿನ ಮಿತಿಯನ್ನು ಈಗ ₹1.20 ಲಕ್ಷಕ್ಕೆ ಹೆಚ್ಚಿಸಲಾಗಿದೆ.
ಹಿಂದೆ ಸುಮಾರು 23 ಲಕ್ಷ ಜನರ ಪಿಂಚಣಿ ರದ್ದಾಗಿತ್ತು. ಈಗ ಆದಾಯದ ಮಿತಿಯನ್ನು ಹೆಚ್ಚಿಸಿರುವುದರಿಂದ ಅರ್ಹ ಫಲಾನುಭವಿಗಳಿಗೆ ಮತ್ತೆ ಪಿಂಚಣಿ ದೊರೆಯಲಿದೆ. ಅದೇ ಸಂದರ್ಭದಲ್ಲಿ ಸೂಕ್ತ ಪ್ರಮಾಣಪತ್ರ ಸಲ್ಲಿಸದವರು ಹಾಗೂ ವಯೋಮಿತಿ ಪೂರೈಸದವರ ಅರ್ಜಿಗಳನ್ನು ಪರಿಶೀಲಿಸಿ ಅನರ್ಹರನ್ನು ಹೊರಗಿಡುವ ಮೂಲಕ ವ್ಯವಸ್ಥೆಯಲ್ಲಿ ಶುದ್ಧೀಕರಣ ಮಾಡಲಾಗುವುದು.
- ಇಂದು ನನ್ನ ನಿವಾಸದ ಬಳಿ ಮಾಧ್ಯಮದವರೊಂದಿಗೆ ಮಾತನಾಡಿದೆ. -
Dr. G Parameshwara
@DrParameshwara
ದೇಶದ ಸ್ವಾತಂತ್ರ್ಯಕ್ಕಾಗಿ ತಮ್ಮ ಬದುಕನ್ನೇ ಮುಡಿಪಾಗಿಟ್ಟು, ಬ್ರಿಟಿಷರ ದೌರ್ಜನ್ಯಕ್ಕೆ ಎದೆಗುಂದದೆ ಸೆಡ್ಡು ಹೊಡೆದವರು ಕ್ರಾಂತಿಕಾರಿ ಭಗತ್ ಸಿಂಗ್.
ಯುವಜನರಲ್ಲಿ ರಾಷ್ಟ್ರಪ್ರೇಮದ ಕಿಚ್ಚು ಹೊತ್ತಿಸಿದ ಅವರ ಸಾಹಸ, ತ್ಯಾಗ ಮತ್ತು ಆದರ್ಶಗಳು ಭಾರತದ ಇತಿಹಾಸದಲ್ಲಿ ಅಚ್ಚಳಿಯದೆ ಉಳಿದಿವೆ. ಭಗತ್ ಸಿಂಗ್ ಅವರ ಜನ್ಮದಿನದಂದು ಗೌರವ ನಮನವನ್ನು ಸಲ್ಲಿಸುತ್ತೇನೆ.
ದೇಶಭಕ್ತಿಯ ಉತ್ಸಾಹಕ್ಕೆ ಹೊಸ ಆಯಾಮ ನೀಡಿದ ಅವರ ಜೀವನ ಯುವ ಪೀಳಿಗೆಗೆ ಸದಾ ಪ್ರೇರಣೆಯಾಗಿರಲಿ -
Dr. G Parameshwara
@DrParameshwara
A strong Day 9 for India at the Asian Games 2026, with our athletes adding seven medals to the national tally!
Heartiest congratulations to Anahat Singh and Abhay Singh on winning Silver in the women’s and men’s singles squash events respectively.
Congratulations to Ancy Sojan on a brilliant Silver in the women’s long jump, missing Gold by just 2 cm, and to Sarvesh Kushare on his Silver in the men’s high jump.
Commendations to Harita Bhadra on winning Bronze in the women’s 200m after a thrilling photo finish, and to Tejaswin Shankar on securing Bronze in the gruelling decathlon.
Congratulations also to Parul Chaudhary, who won Bronze in the women’s 3000m steeplechase with a new national record, adding another remarkable achievement to her Asian Games journey.
Congratulations to all our medal winners, coaches and support teams. Wishing Team India continued success in the days ahead!
#asiangames2026 #teamindia -
Dr. G Parameshwara
@DrParameshwara
Some leaders become a part of history; their contributions remain a part of the journey of a state.
On the birth anniversary of Shri R. Gundu Rao, we remember his leadership, public service and contribution to Karnataka with deep respect.
Humble tributes to a leader remembered with respect. -
Dr. G Parameshwara
@DrParameshwara
Travel is more than discovering new places; it is about understanding people, cultures and stories that shape our world.
On World Tourism Day, we celebrate the spirit of exploration and the immense potential of tourism to create livelihoods, strengthen local economies and bring communities closer.
Karnataka, with its magnificent heritage, diverse landscapes, vibrant traditions and warm hospitality, has so much to offer the world. Let us continue to promote responsible and sustainable tourism while preserving the treasures that make our state truly special.
Happy World Tourism Day! -
Dr. G Parameshwara
@DrParameshwara
ಸಾಮಾಜಿಕ ಪಿಡುಗು, ಮೂಢನಂಬಿಕೆ ಹಾಗೂ ಅಸಮಾನತೆಗಳ ವಿರುದ್ಧ ಧ್ವನಿ ಎತ್ತಿ, ಸುಧಾರಣೆಯ ಹೊಸ ಚಿಂತನೆಗೆ ಮುನ್ನುಡಿ ಬರೆದವರು ರಾಜಾರಾಮ್ ಮೋಹನ್ ರಾಯ್.
ತಮ್ಮ ದೂರದೃಷ್ಟಿಯಿಂದ ಸಮಾಜದಲ್ಲಿ ಪರಿವರ್ತನೆಯ ದೀಪ ಹೊತ್ತಿಸಿದ ಅವರಿಗೆ ಪುಣ್ಯಸ್ಮರಣೆಯಂದು ಗೌರವ ನಮನಗಳನ್ನು ಸಲ್ಲಿಸುತ್ತೇನೆ. -
Dr. G Parameshwara
@DrParameshwara
A golden Day 8 for India at the Asian Games 2026, with our athletes adding seven medals to the national tally!
Heartiest congratulations to our women’s and men’s kabaddi teams on completing a memorable golden double, defeating Iran in both finals and successfully defending their Asian Games titles.
Congratulations to Sawan Barwal on a historic Silver in the men’s marathon, ending India’s 44-year wait for a medal in the event and setting a new national record in the process.
A proud moment for Karnataka as Bengaluru’s Tilottama Sen, alongside Ashi Chouksey and Vidarsa Vinod, won Silver in the women’s 50m Rifle 3 Positions team event.
Congratulations to Tajinderpal Singh Toor on winning Silver in the men’s shot put, securing his third successive Asian Games medal.
Another proud Karnataka connection as Kodagu-rooted Joshna Chinappa, alongside Velavan Senthilkumar, won Bronze in mixed doubles squash. Congratulations also to Prachi Chaudhary on a fine Bronze-medal performance in the women’s 400m.
From historic milestones to team triumphs, another memorable day for Indian sport.
Congratulations to all our athletes, coaches and support teams. Keep making India proud!
#asiangames2026 #teamindia -
Dr. G Parameshwara
@DrParameshwara
The purpose of technological progress is not simply to hand over more work to machines. It must strengthen people’s capabilities, improve the quality of work, create more opportunities and help raise the standard of living of every Indian.
India has already demonstrated its capabilities in areas such as space technology and digital public infrastructure. Our scientists and engineers have shown that they can achieve at the highest global level.
India must now move beyond being a country that mainly supplies technological talent to the world. We must create new technologies here, build companies that can compete globally and move to the forefront of innovation.
We should not merely use the technologies of the future; we must develop the ability to create them. Our goal must be to use technology to make every Indian more productive, more capable and more prosperous.
— From my address at the 26th Annual Convocation of Visvesvaraya Technological University in Belagavi today.
ತಂತ್ರಜ್ಞಾನ ಬೆಳೆಯುವುದರ ಉದ್ದೇಶ ಕೇವಲ ಕೆಲಸಗಳನ್ನು ಯಂತ್ರಗಳಿಗೆ ಒಪ್ಪಿಸುವುದಲ್ಲ. ಅದು ಜನರ ಸಾಮರ್ಥ್ಯ ಹೆಚ್ಚಿಸಬೇಕು, ಕೆಲಸದ ಗುಣಮಟ್ಟ ಉತ್ತಮಗೊಳಿಸಬೇಕು, ಹೆಚ್ಚು ಅವಕಾಶಗಳನ್ನು ಸೃಷ್ಟಿಸಬೇಕು. ಪ್ರತಿಯೊಬ್ಬ ಭಾರತೀಯನ ಬದುಕಿನ ಮಟ್ಟವನ್ನು ಮೇಲಕ್ಕೆತ್ತಲು ನೆರವಾಗಬೇಕು.
ಬಾಹ್ಯಾಕಾಶ ತಂತ್ರಜ್ಞಾನ ಮತ್ತು ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ ಕ್ಷೇತ್ರಗಳಲ್ಲಿ ಭಾರತ ಈಗಾಗಲೇ ತನ್ನ ಸಾಮರ್ಥ್ಯವನ್ನು ತೋರಿಸಿದೆ. ನಮ್ಮ ವಿಜ್ಞಾನಿಗಳು ಮತ್ತು ಇಂಜಿನಿಯರ್ಗಳು ವಿಶ್ವಮಟ್ಟದಲ್ಲಿ ಸಾಧನೆ ಮಾಡಬಲ್ಲರು ಎಂಬುದನ್ನು ದೇಶ ಸಾಬೀತುಪಡಿಸಿದೆ.
ಇನ್ನು ಭಾರತವು ಕೇವಲ ವಿಶ್ವಕ್ಕೆ ತಾಂತ್ರಿಕ ಪ್ರತಿಭೆಯನ್ನು ಒದಗಿಸುವ ರಾಷ್ಟ್ರವಾಗಿಯೇ ಉಳಿಯಬಾರದು. ಹೊಸ ತಂತ್ರಜ್ಞಾನಗಳನ್ನು ನಮ್ಮಲ್ಲೇ ಸೃಷ್ಟಿಸುವ, ಜಾಗತಿಕ ಮಟ್ಟದಲ್ಲಿ ಸ್ಪರ್ಧಿಸಬಲ್ಲ ಕಂಪನಿಗಳನ್ನು ಕಟ್ಟುವ ಮತ್ತು ನಾವೀನ್ಯತೆಯಲ್ಲಿ ಮುನ್ನಡೆ ಸಾಧಿಸುವ ದಿಕ್ಕಿನಲ್ಲಿ ಸಾಗಬೇಕು.
ಭವಿಷ್ಯದ ತಂತ್ರಜ್ಞಾನಗಳನ್ನು ಕೇವಲ ಬಳಸುವುದಲ್ಲ, ಅವುಗಳನ್ನು ಸೃಷ್ಟಿಸುವ ಸಾಮರ್ಥ್ಯವನ್ನು ಬೆಳೆಸಿಕೊಳ್ಳಬೇಕು. ಪ್ರತಿಯೊಬ್ಬ ಭಾರತೀಯನನ್ನೂ ಹೆಚ್ಚು ಉತ್ಪಾದನಾಶೀಲನನ್ನಾಗಿಸಲು, ಸಾಮರ್ಥ್ಯಶಾಲಿ, ಅಭಿವೃದ್ಧಿಶೀಲನನ್ನಾಗಿ ಮಾಡಲು ತಂತ್ರಜ್ಞಾನವನ್ನು ಬಳಸುವುದು ನಮ್ಮ ಗುರಿಯಾಗಬೇಕು.
- ಇಂದು ಬೆಳಗಾವಿಯಲ್ಲಿ ನಡೆದ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ 26ನೇ ವಾರ್ಷಿಕ ಘಟಿಕೋತ್ಸವದಲ್ಲಿ ನನ್ನ ಮಾತು -
Dr. G Parameshwara
@DrParameshwara
Technology is advancing at an extraordinary pace. New innovations are reshaping the way we live, work, learn and build industries. At such a time, India cannot remain merely a user of technologies created elsewhere.
Our young people must develop the ability to think differently, experiment boldly and create technologies here that the world needs. India has no shortage of talent. The need now is to channel that talent into breakthrough innovation, research and the creation of globally competitive institutions and companies.
India must move beyond being a provider of technological talent to the world and emerge as one of the leading nations creating the technologies of the future.
— From my address at the 26th Annual Convocation of Visvesvaraya Technological University in Belagavi today.
ಇಂದು ತಂತ್ರಜ್ಞಾನ ತುಂಬಾ ವೇಗವಾಗಿ ಬೆಳೆಯುತ್ತಿದೆ. ಹೊಸಹೊಸ ಆವಿಷ್ಕಾರಗಳು ನಮ್ಮ ಬದುಕು, ಉದ್ಯೋಗ, ಕೈಗಾರಿಕೆ ಮತ್ತು ಶಿಕ್ಷಣದ ಮೇಲೆಯೇ ದೊಡ್ಡ ಪರಿಣಾಮ ಬೀರುತ್ತಿವೆ. ಇಂತಹ ಸಂದರ್ಭದಲ್ಲಿ ನಾವು ಕೇವಲ ಇತರರು ಸೃಷ್ಟಿಸಿದ ತಂತ್ರಜ್ಞಾನಗಳನ್ನು ಬಳಸುವವರಾಗಿ ಉಳಿಯಬಾರದು.
ನಮ್ಮ ಯುವಕರು ಹೊಸದನ್ನು ಯೋಚಿಸುವ, ಪ್ರಯೋಗ ಮಾಡುವ ಮತ್ತು ಜಗತ್ತಿಗೆ ಬೇಕಾದ ತಂತ್ರಜ್ಞಾನಗಳನ್ನು ಇಲ್ಲಿಯೇ ಸೃಷ್ಟಿಸುವ ಸಾಮರ್ಥ್ಯ ಬೆಳೆಸಿಕೊಳ್ಳಬೇಕು. ಭಾರತದಲ್ಲಿ ಪ್ರತಿಭೆಗೆ ಕೊರತೆಯಿಲ್ಲ, ಈಗ ಆ ಪ್ರತಿಭೆಯನ್ನು ದೊಡ್ಡ ಆವಿಷ್ಕಾರಗಳು, ಸಂಶೋಧನೆ ಮತ್ತು ಜಾಗತಿಕ ಮಟ್ಟದ ಸಂಸ್ಥೆಗಳ ನಿರ್ಮಾಣಕ್ಕೆ ಬಳಸಬೇಕಾಗಿದೆ.
ಭಾರತವು ಕೇವಲ ತಾಂತ್ರಿಕ ಪ್ರತಿಭೆಯನ್ನು ವಿಶ್ವಕ್ಕೆ ಒದಗಿಸುವ ರಾಷ್ಟ್ರವಾಗಿರದೆ, ತಂತ್ರಜ್ಞಾನವನ್ನು ಸೃಷ್ಟಿಸುವ ವಿಶ್ವದ ಪ್ರಮುಖ ರಾಷ್ಟ್ರಗಳಲ್ಲಿ ಒಂದಾಗಿ ಹೊರಹೊಮ್ಮಬೇಕು.
- ಇಂದು ಬೆಳಗಾವಿಯಲ್ಲಿ ನಡೆದ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ 26ನೇ ವಾರ್ಷಿಕ ಘಟಿಕೋತ್ಸವದಲ್ಲಿ ನನ್ನ ಮಾತು -
Dr. G Parameshwara
@DrParameshwara
AI, AGI and other emerging technologies are changing the way we work and live. In such an age, what matters increasingly is knowing what to ask, what to build, what to trust, and what purpose technology must ultimately serve.
Young engineers must not remain mere users of technology; they must become its creators and shapers. Innovation must improve people’s lives, solve real problems in society and expand opportunities for everyone.
The future may belong to technology, but the responsibility of deciding its direction must remain ours. I hope our young people emerge as a generation that leads technology with knowledge, wisdom and humanity.
— From my address at the 26th Annual Convocation of Visvesvaraya Technological University in Belagavi today.
AI ಮತ್ತು AGI ಸೇರಿದಂತೆ ಹೊಸ ತಂತ್ರಜ್ಞಾನಗಳು ನಮ್ಮ ಕೆಲಸ ಮಾಡುವ ವಿಧಾನವನ್ನೇ ಬದಲಿಸುತ್ತಿವೆ. ಇಂತಹ ಯುಗದಲ್ಲಿ ಏನು ಕೇಳಬೇಕು, ಯಾವುದನ್ನು ನಿರ್ಮಿಸಬೇಕು, ಯಾವುದನ್ನು ನಂಬಬೇಕು ಮತ್ತು ತಂತ್ರಜ್ಞಾನವು ಅಂತಿಮವಾಗಿ ಯಾವ ಉದ್ದೇಶವನ್ನು ಪೂರೈಸಬೇಕು ಎಂಬುದನ್ನು ಅರಿತುಕೊಳ್ಳುವುದು ಹೆಚ್ಚು ಮುಖ್ಯವಾಗುತ್ತದೆ.
ಯುವ ಇಂಜಿನಿಯರ್ಗಳು ತಂತ್ರಜ್ಞಾನವನ್ನು ಬಳಸುವವರಾಗಿಯಷ್ಟೇ ಉಳಿಯದೆ, ಅದನ್ನು ರೂಪಿಸುವವರಾಗಬೇಕು. ಹೊಸ ಆವಿಷ್ಕಾರಗಳು ಜನರ ಬದುಕನ್ನು ಸುಧಾರಿಸಬೇಕು, ಸಮಾಜದ ಸಮಸ್ಯೆಗಳಿಗೆ ಪರಿಹಾರ ಕೊಡಬೇಕು ಮತ್ತು ಎಲ್ಲರಿಗೂ ಅವಕಾಶಗಳನ್ನು ಹೆಚ್ಚಿಸಬೇಕು.
ಮುಂದಿನ ಕಾಲ ತಂತ್ರಜ್ಞಾನದ್ದಾಗಿರಬಹುದು, ಆದರೆ ಅದರ ದಿಕ್ಕನ್ನು ನಿರ್ಧರಿಸುವ ಜವಾಬ್ದಾರಿ ನಮ್ಮದೇ ಆಗಿರಬೇಕು. ಜ್ಞಾನ, ವಿವೇಕ ಮತ್ತು ಮಾನವೀಯತೆಯೊಂದಿಗೆ ತಂತ್ರಜ್ಞಾನವನ್ನು ಮುನ್ನಡೆಸುವವರಾಗಿ ನಮ್ಮ ಯುವಕರು ಹೊರಹೊಮ್ಮಲಿ ಎಂಬುದು ನನ್ನ ಆಶಯ.
- ಇಂದು ಬೆಳಗಾವಿಯಲ್ಲಿ ನಡೆದ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ 26ನೇ ವಾರ್ಷಿಕ ಘಟಿಕೋತ್ಸವದಲ್ಲಿ ನನ್ನ ಮಾತು -
Dr. G Parameshwara
@DrParameshwara
ಮೂವರು ಚುನಾವಣಾ ಆಯುಕ್ತರ ಪೈಕಿ ಇಬ್ಬರು ನಮೂನೆ–6ರಲ್ಲಿ ಬದಲಾವಣೆ ತರಲು ಸಾಧ್ಯವಿಲ್ಲ ಎಂದು ಆಕ್ಷೇಪಿಸಿದ್ದರೂ, ಬದಲಾವಣೆ ಮಾಡಲಾಗಿದೆ ಎಂಬ ವರದಿಗಳು ಹೊರಬಂದಿವೆ.
ಹಾಗಾದರೆ, ಇಬ್ಬರು ಆಯುಕ್ತರ ಆಕ್ಷೇಪವನ್ನು ಬದಿಗೊತ್ತಿ ಈ ಬದಲಾವಣೆ ಮಾಡಿದ್ದು ಯಾರಿಗಾಗಿ? ಯಾರ ಅನುಕೂಲಕ್ಕಾಗಿ?
ಹೊಸ ಮತದಾರರ ಸೇರ್ಪಡೆ, ಹೆಸರುಗಳ ಅಳಿಸುವಿಕೆ ಮತ್ತು ಮರುಸೇರ್ಪಡೆ ಇವೆಲ್ಲವೂ ಮತದಾರರ ಹಕ್ಕಿಗೆ ನೇರವಾಗಿ ಸಂಬಂಧಿಸಿದ ಪ್ರಕ್ರಿಯೆಗಳು. ಕಾನೂನಿನ ನಿಯಮಗಳನ್ನೇ ಬದಿಗೊತ್ತಿ ಮತದಾರರ ಪಟ್ಟಿಯಲ್ಲಿ ಬದಲಾವಣೆ ಮಾಡುವಂತಿದ್ದರೆ, ಚುನಾವಣಾ ವ್ಯವಸ್ಥೆಯ ಪಾರದರ್ಶಕತೆ ಮತ್ತು ವಿಶ್ವಾಸಾರ್ಹತೆಯ ಪ್ರಶ್ನೆಗೆ ಉತ್ತರಿಸುವವರು ಯಾರು?
ನಮೂನೆ–6ರ ಬದಲಾವಣೆಗಳ ಕುರಿತು ಸ್ವತಂತ್ರ ತನಿಖೆಯಾಗಲೇಬೇಕು. ಸತ್ಯಾಸತ್ಯತೆ ಈ ದೇಶದ ಮುಂದೆ ಬಯಲಾಗಲೇಬೇಕು.
Reports have emerged that two of the three Election Commissioners objected to changes in Form 6, yet the changes were still carried out.
If the objections of two Commissioners were set aside, who were these changes made for, and whose interests did they serve?
The addition of new voters, deletion of names and restoration of names are all directly linked to citizens’ voting rights. If electoral rolls can be altered by setting aside legal safeguards, who will answer for the transparency and credibility of the electoral process?
The changes made to Form 6 must be independently investigated, and the truth must be brought before the country. -
Dr. G Parameshwara
@DrParameshwara
ಭಾರತದ ಚುನಾವಣಾ ವ್ಯವಸ್ಥೆಯ ವಿಶ್ವಾಸಾರ್ಹತೆಯ ಕುರಿತು ಗಂಭೀರ ಪ್ರಶ್ನೆಗಳು ಎದ್ದಿರುವ ಸಂದರ್ಭದಲ್ಲಿ, ಮುಖ್ಯ ಚುನಾವಣಾ ಆಯುಕ್ತರಾದ ಜ್ಞಾನೇಶ್ ಕುಮಾರ್ ಅವರ ಕಾರ್ಯವೈಖರಿ ತೀವ್ರ ಪರಿಶೀಲನೆಗೆ ಒಳಪಡಬೇಕಿದೆ.
SIR ಪ್ರಕ್ರಿಯೆ, ಮತದಾರರ ಹೆಸರುಗಳ ಸೇರ್ಪಡೆ–ಅಳಿಸುವಿಕೆ, Form-6 ಬದಲಾವಣೆ ಹಾಗೂ ಚುನಾವಣಾ ವ್ಯವಸ್ಥೆಯ ನಿರ್ವಹಣೆ ಕುರಿತು ಆಯೋಗದೊಳಗೇ ಆಕ್ಷೇಪಗಳು ದಾಖಲಾಗಿರುವುದು ಕಳವಳಕಾರಿ ಬೆಳವಣಿಗೆಯಾಗಿದೆ.
ಇಂತಹ ಗಂಭೀರ ಪ್ರಶ್ನೆಗಳು ಎದ್ದಿರುವ ಸಂದರ್ಭದಲ್ಲಿ ಜ್ಞಾನೇಶ್ ಕುಮಾರ್ ಅವರು ಮುಖ್ಯ ಚುನಾವಣಾ ಆಯುಕ್ತರ ಹುದ್ದೆಯಲ್ಲಿ ಮುಂದುವರಿಯುವ ನೈತಿಕತೆ ಮತ್ತು ವಿಶ್ವಾಸಾರ್ಹತೆಯ ಕುರಿತು ದೇಶದ ಮುಂದೆ ಸ್ಪಷ್ಟ ಉತ್ತರ ನೀಡಬೇಕು. ಮಾತ್ರವಲ್ಲ ಅವರನ್ನು ಹುದ್ದೆಯಿಂದ ಈ ಕೂಡಲೇ ವಜಾಗೊಳಿಸಬೇಕು.
ಅವರ ನೇತೃತ್ವದಲ್ಲಿ ನಡೆದಿರುವ ನಿರ್ಧಾರಗಳು ಮತ್ತು SIRಗೆ ಸಂಬಂಧಿಸಿದ ವಿವಾದಗಳ ಕುರಿತು ಸ್ವತಂತ್ರ, ನಿಷ್ಪಕ್ಷಪಾತ ಹಾಗೂ ಪಾರದರ್ಶಕ ತನಿಖೆ ನಡೆಯಬೇಕು.
ಮತದಾರರ ಹಕ್ಕು, ಚುನಾವಣೆಯ ಪಾರದರ್ಶಕತೆ ಮತ್ತು ಪ್ರಜಾಪ್ರಭುತ್ವದ ವಿಶ್ವಾಸಾರ್ಹತೆಯ ವಿಚಾರದಲ್ಲಿ ಯಾವುದೇ ರಾಜಿ ಸಲ್ಲದು.
At a time when serious questions are being raised about the credibility of India’s electoral system, the functioning of Chief Election Commissioner Gyanesh Kumar warrants close scrutiny.
It is deeply concerning that objections have reportedly been recorded within the Commission itself over the SIR process, inclusion and deletion of voters’ names, changes to Form 6, and the administration of the electoral system.
With such serious questions before the country, Gyanesh Kumar must clearly answer concerns over the credibility and propriety of his continuance as Chief Election Commissioner. He should also be removed from office immediately.
There must be an independent, impartial and transparent investigation into decisions taken under his leadership and the controversies surrounding SIR.
There can be no compromise on voters’ rights, electoral transparency or the credibility of our democracy. -
Dr. G Parameshwara
@DrParameshwara
ಮತದಾರರ ಪಟ್ಟಿಯ ಪರಿಷ್ಕರಣೆ ಪಾರದರ್ಶಕವಾಗಿರಬೇಕು. ಅರ್ಹ ಮತದಾರರ ಹೆಸರುಗಳನ್ನು ಯಾವುದೇ ಗೊಂದಲ, ತಾಂತ್ರಿಕ ದೋಷ ಅಥವಾ ಮ್ಯಾಪಿಂಗ್ ಸಮಸ್ಯೆಯಿಂದ ಕೈಬಿಡದಂತೆ ಚುನಾವಣಾ ಆಯೋಗ ಖಚಿತಪಡಿಸಬೇಕು.
ಕರ್ನಾಟಕದ ಕರಡು ಮತದಾರರ ಪಟ್ಟಿಯಿಂದ 1.08 ಕೋಟಿ ಮತದಾರರನ್ನು ASDDO ವರ್ಗಗಳಲ್ಲಿ ಹೊರಗಿಡಲಾಗಿದ್ದು, 43.8 ಲಕ್ಷಕ್ಕೂ ಹೆಚ್ಚು ಮತದಾರರಿಗೆ ‘logical discrepancies’ ಅಥವಾ ಮ್ಯಾಪಿಂಗ್ ಸಮಸ್ಯೆಗಳ ಕುರಿತು ನೋಟಿಸ್ ನೀಡುವ ಪ್ರಕ್ರಿಯೆ ನಡೆದಿದೆ.
SIR ಕುರಿತು ಉಂಟಾಗಿರುವ ಪ್ರತಿಯೊಂದು ಗೊಂದಲಕ್ಕೂ ಚುನಾವಣಾ ಆಯೋಗ ಸ್ಪಷ್ಟ ಉತ್ತರ ನೀಡಬೇಕು. ಮತದಾನದ ಹಕ್ಕು ಪ್ರಜಾಪ್ರಭುತ್ವದ ಜೀವಾಳ. ಅರ್ಹ ಮತದಾರರ ಹಕ್ಕನ್ನು ರಕ್ಷಿಸುವುದು ಚುನಾವಣಾ ಆಯೋಗದ ಜವಾಬ್ದಾರಿ.
The revision of electoral rolls must be transparent, and the Election Commission must ensure that no eligible voter is left out due to confusion, technical errors or mapping issues.
In Karnataka’s draft electoral rolls, 1.08 crore voters have been excluded under ASDDO categories, while over 43.8 lakh voters face notices over ‘logical discrepancies’ or mapping issues.
The Election Commission must provide clear answers to every concern surrounding SIR. The right to vote is the lifeblood of democracy, and protecting the rights of every eligible voter is the Commission’s responsibility. -
Dr. G Parameshwara
@DrParameshwara
ಭಾರತೀಯ ಚುನಾವಣಾ ಆಯೋಗವು ಮುಖ್ಯ ಚುನಾವಣಾ ಆಯುಕ್ತ ಸೇರಿ ಮೂವರು ಆಯುಕ್ತರನ್ನು ಹೊಂದಿದೆ. ಇದು ಸಾಂವಿಧಾನಿಕ ಸಂಸ್ಥೆ. ಮೂವರು ಆಯುಕ್ತರೂ ಒಂದೇ ಶ್ರೇಣಿಯವರು. ಮುಖ್ಯ ಚುನಾವಣಾ ಆಯುಕ್ತರು ಯಾವುದೇ ನಿರ್ಧಾರವನ್ನು ಏಕಾಂಗಿಯಾಗಿ ತೆಗೆದುಕೊಳ್ಳಲು ಸಾಧ್ಯವಿಲ್ಲ. ಆಯೋಗದ ಎಲ್ಲ ನಿರ್ಧಾರಗಳು ಸಾಧ್ಯವಾದಷ್ಟು ಮಟ್ಟಿಗೆ ಒಮ್ಮತದಿಂದ ಕೂಡಿರಬೇಕು. ಒಂದು ವೇಳೆ, ಮುಖ್ಯ ಆಯುಕ್ತರು ಹಾಗೂ ಇತರ ಆಯುಕ್ತರ ನಡುವೆ ಯಾವುದೇ ವಿಚಾರಕ್ಕೆ ಭಿನ್ನ ಅಭಿಪ್ರಾಯಗಳು ಬಂದರೆ, ಬಹುಮತದ ಅಭಿಪ್ರಾಯದ ಅನುಸಾರ ತೀರ್ಮಾನ ತೆಗೆದುಕೊಳ್ಳಬೇಕು.
ಆದರೆ ಆಯೋಗದ ಹಲವು ಪ್ರಮುಖ ನಿರ್ಧಾರಗಳಿಗೆ ಬಹುಮತವಿರಲಿಲ್ಲ ಎಂಬುದು ಪ್ರಕಟಿತ ವರದಿಗಳಿಂದ ಸಾಬೀತಾಗಿದೆ. ಹಾಗಾಗಿ ಇದುವರೆಗೆ ನಡೆದ ಚುನಾವಣೆಗಳು ಎಷ್ಟು ವಿಶ್ವಾಸಾರ್ಹ ಎಂಬ ಗಂಭೀರ ಪ್ರಶ್ನೆಗಳು ಹುಟ್ಟಿಕೊಂಡಿವೆ. ತಕ್ಷಣ ಮುಖ್ಯ ಚು. ಆಯುಕ್ತ ಜ್ಞಾನೇಶ್ ಕುಮಾರ್ ಅವರನ್ನು ವಜಾ ಮಾಡಬೇಕು. ಈ ಕುರಿತು ನಿಷ್ಪಕ್ಷವಾಗಿ ತನಿಖೆ ನಡೆಸಬೇಕು.
The Election Commission of India is a constitutional body comprising three Commissioners, including the Chief Election Commissioner, all of equal rank. The CEC cannot take decisions unilaterally. Decisions should, as far as possible, be by consensus; where differences arise, the majority view must prevail.
Published reports indicate that several key decisions of the Commission lacked majority support, raising serious questions about the credibility of the electoral processes conducted so far.
Chief Election Commissioner Gyanesh Kumar should be removed immediately, and the matter should be subjected to an independent and impartial investigation. -
Dr. G Parameshwara
@DrParameshwara
ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್ಐಆರ್) ಪ್ರಕ್ರಿಯೆ ಮತದಾರರ ಹಕ್ಕನ್ನು ಕಾಪಾಡುವ ನಿಟ್ಟಿನಲ್ಲಿರಬೇಕು, ಆದರೆ ಚುನಾವಣಾ ಆಯೋಗದ ಕಾರ್ಯವೈಖರಿ ಬಗೆಗಿನ ಇತ್ತೀಚಿನ ವರದಿಗಳು ಆತಂಕವನ್ನು ಮೂಡಿಸುತ್ತಿವೆ. ಎಸ್ಐಆರ್ ಹೆಸರಿನಲ್ಲಿ ಪ್ರಜಾಪ್ರಭುತ್ವದ ಅಡಿಪಾಯಕ್ಕೆ ಧಕ್ಕೆ ತರಲು ಪ್ರಯತ್ನಿಸಲಾಗುತ್ತಿದೆಯೇ ಎಂಬ ಗಂಭೀರ ಪ್ರಶ್ನೆಗೆ ಕಾರಣವಾಗಿದೆ.
10 ತಿಂಗಳಲ್ಲಿ ಇಬ್ಬರು ಚುನಾವಣಾ ಆಯುಕ್ತರಿಂದ ಕನಿಷ್ಠ 14 ಬಾರಿ ಲಿಖಿತ ಆಕ್ಷೇಪ ದಾಖಲಾಗಿರುವ ಬಗ್ಗೆ ವರದಿ ಪ್ರಕಟಗೊಂಡಿದ್ದು, ಚು. ಆಯೋಗದ ವಿಶ್ವಾಸಾರ್ಹತೆ ಬಗ್ಗೆ ಶಂಕೆ ವ್ಯಕ್ತವಾಗುವಂತಿದೆ. ಮತದಾರರ ಹೆಸರು ಸೇರ್ಪಡೆ, ಅಳಿಸುವಿಕೆ, ಮರುಸ್ಥಾಪನೆ ಹಾಗೂ ಮತದಾರರ ದತ್ತಾಂಶ ನಿರ್ವಹಣೆಯಂತಹ ಪ್ರಮುಖ ನಿರ್ಧಾರಗಳಿಗೆ ಚು. ಆಯೋಗದಲ್ಲಿ ಬಹುಮತವಿರಲಿಲ್ಲ ಎಂಬ ಆಘಾತಕಾರಿ ವಿಚಾರ ಬಯಲಾಗಿದೆ.
ಎಸ್ಐಆರ್ ಪ್ರಕ್ರಿಯೆ ಭಾರತೀಯ ನಾಗರಿಕರಿಗೆ ಮತದಾನದ ಹಕ್ಕನ್ನು ನೀಡುವ ಪ್ರಕ್ರಿಯೆಯಾಗಬೇಕು. ನಾಗರಿಕರ ಮತದಾನದ ಹಕ್ಕನ್ನೇ ಮೊಟಕುಗೊಳಿಸುವ ಪ್ರಯತ್ನವಾಗಬಾರದು.
The Special Intensive Revision (SIR) of electoral rolls should be a process that protects voters’ rights. However, recent reports on the functioning of the Election Commission have raised serious concerns and questions over whether, in the name of SIR, the foundations of democracy are being undermined.
Reports indicate that two Election Commissioners recorded at least 14 written objections within 10 months, raising questions about the credibility of the Commission’s functioning. It has also been reported that key decisions relating to the inclusion, deletion and restoration of voters’ names, as well as the management of electoral data, did not have majority support within the Commission.
The SIR process should strengthen the voting rights of Indian citizens -- not become a means to restrict them. -
Dr. G Parameshwara
@DrParameshwara
Drought relief measures will begin immediately. The Agriculture, Revenue, and Rural Development and Panchayat Raj (RDPR) Departments are jointly preparing the framework for relief operations and have been instructed to begin work without delay.
Assistance is currently being provided as the first instalment of drought relief. This is not the final relief package. The first instalment is being released to ensure immediate support reaches farmers and drought-affected areas.
The State Government has already submitted a request to the Union Government for the first instalment of relief. Based on the 101 drought-affected taluks, losses are estimated at around ₹18,000 crore, and we have sought approximately ₹3,500 crore in assistance in the first phase. The amount to be released is for the Union Government to decide.
Further memoranda relating to the second and third phases of drought relief will be submitted shortly. An additional 77-point report is already ready for submission, while another 50-point report will be prepared in the next phase. These will be consolidated to comprehensively present the State’s losses and relief requirements before the Union Government.
Under the leadership of Chief Minister D.K. Shivakumar, we are making efforts to take an all-party delegation of the State’s key leaders to Delhi. We will meet the Prime Minister and the Union Home Minister and seek additional relief. Since disaster management falls under the Union Home Ministry, we will also explain the State’s situation to the Home Minister. Further relief measures will depend on the assistance received from the Centre.
Continuous pressure to relax NDRF guidelines: The State Government has consistently urged the Centre to revise the National Disaster Response Fund (NDRF) guidelines. Around 10–11 letters have already been written in this regard. Former Chief Minister Siddaramaiah, present Chief Minister D.K. Shivakumar, Minister Krishna Byre Gowda, and I have all written to the Union Government seeking changes to the guidelines.
The Centre may be reluctant to revise the existing guidelines because doing so could allow States to declare drought over a wider area, seek greater relief, and require the Union Government to release more funds. However, as farmers and people in drought-affected areas need immediate assistance, we will continue to press the Centre on this issue.
– My remarks to the media after attending the 26th Annual Convocation of Visvesvaraya Technological University in Belagavi. -
Dr. G Parameshwara
@DrParameshwara
ಬರ ಪರಿಹಾರ ಕಾರ್ಯವನ್ನು ತಕ್ಷಣದಿಂದಲೇ ಆರಂಭಿಸಲಾಗುವುದು. ಕೃಷಿ, ಕಂದಾಯ ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಗಳು (ಆರ್ಡಿಪಿಆರ್) ಜಂಟಿಯಾಗಿ ಪರಿಹಾರ ಕಾರ್ಯಗಳ ರೂಪುರೇಷೆ ಸಿದ್ಧಪಡಿಸುತ್ತಿದ್ದು, ತಕ್ಷಣದಿಂದಲೇ ಕಾರ್ಯಾರಂಭಿಸಲು ಸೂಚಿಸಲಾಗಿದೆ.
ಬರ ಪರಿಹಾರದ ಮೊದಲ ಕಂತಿನ ರೂಪದಲ್ಲಿ ಸದ್ಯಕ್ಕೆ ನೆರವು ನೀಡಲಾಗುತ್ತಿದೆ. ಇದು ಅಂತಿಮ ಪರಿಹಾರವಲ್ಲ. ತಕ್ಷಣವೇ ರೈತರಿಗೆ ಹಾಗೂ ಬರಪೀಡಿತ ಪ್ರದೇಶಗಳಿಗೆ ಯಾವುದಾದರೂ ಪರಿಹಾರ ಒದಗಿಸಬೇಕು ಎಂಬ ಉದ್ದೇಶದಿಂದ ಮೊದಲ ಕಂತನ್ನು ನೀಡಲಾಗುತ್ತಿದೆ.
ಕೇಂದ್ರ ಸರ್ಕಾರಕ್ಕೆ ಈಗಾಗಲೇ ಮೊದಲ ಕಂತಿನ ಪರಿಹಾರಕ್ಕಾಗಿ ಮನವಿ ಸಲ್ಲಿಸಲಾಗಿದೆ. 101 ಬರಪೀಡಿತ ತಾಲೂಕುಗಳನ್ನು ಆಧರಿಸಿ ಸುಮಾರು ₹18 ಸಾವಿರ ಕೋಟಿ ನಷ್ಟವಾಗಿದ್ದು, ಮೊದಲ ಹಂತದಲ್ಲಿ ಸುಮಾರು ₹3,500 ಕೋಟಿ ನೆರವು ನೀಡುವಂತೆ ಕೇಂದ್ರಕ್ಕೆ ಮನವಿ ಮಾಡಲಾಗಿದೆ. ಕೇಂದ್ರ ಸರ್ಕಾರ ಎಷ್ಟು ನೆರವು ನೀಡುತ್ತದೆ ಎಂಬುದು ಅವರ ನಿರ್ಧಾರಕ್ಕೆ ಬಿಟ್ಟ ವಿಚಾರ.
ಇದೇ ವೇಳೆ ಎರಡನೇ ಹಾಗೂ ಮೂರನೇ ಹಂತದ ಪರಿಹಾರಕ್ಕೆ ಸಂಬಂಧಿಸಿದಂತೆ ಮತ್ತಷ್ಟು ಮನವಿಪತ್ರಗಳನ್ನು ಕೂಡಲೇ ಸಲ್ಲಿಸಲಾಗುವುದು. ಈಗಾಗಲೇ ಹೆಚ್ಚುವರಿಯಾಗಿ 77 ಅಂಶಗಳ ವರದಿ ಸಿದ್ಧವಾಗಿದ್ದು, ಅದನ್ನೂ ಕೇಂದ್ರಕ್ಕೆ ಸಲ್ಲಿಸಲಾಗುವುದು. ಮುಂದಿನ ಹಂತದಲ್ಲಿ ಮತ್ತೊಂದು 50 ಅಂಶಗಳ ವರದಿ ಸಿದ್ಧವಾಗಲಿದ್ದು, ಇವೆಲ್ಲವನ್ನೂ ಒಟ್ಟುಗೂಡಿಸಿ ಕೇಂದ್ರದ ಮುಂದೆ ರಾಜ್ಯದ ನಷ್ಟ ಹಾಗೂ ಪರಿಹಾರದ ಅಗತ್ಯವನ್ನು ಸಮಗ್ರವಾಗಿ ಮಂಡಿಸಲಾಗುವುದು.
ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ನೇತೃತ್ವದಲ್ಲಿ ರಾಜ್ಯದ ಪ್ರಮುಖ ನಾಯಕರು ಕೇಂದ್ರಕ್ಕೆ ಸರ್ವಪಕ್ಷ ನಿಯೋಗ ಕರೆದೊಯ್ಯಲು ಪ್ರಯತ್ನಿಸುತ್ತಿದ್ದೇವೆ. ಪ್ರಧಾನಮಂತ್ರಿ ಹಾಗೂ ಕೇಂದ್ರ ಗೃಹ ಸಚಿವರನ್ನು ಭೇಟಿ ಮಾಡಿ ಹೆಚ್ಚಿನ ಪರಿಹಾರಕ್ಕೆ ಮನವಿ ಮಾಡಲಾಗುವುದು. ವಿಪತ್ತು ನಿರ್ವಹಣೆಯ ಜವಾಬ್ದಾರಿ ಕೇಂದ್ರ ಗೃಹ ಸಚಿವಾಲಯದ ವ್ಯಾಪ್ತಿಯಲ್ಲಿರುವುದರಿಂದ ಅವರನ್ನೂ ಭೇಟಿ ಮಾಡಿ ರಾಜ್ಯದ ಪರಿಸ್ಥಿತಿಯನ್ನು ವಿವರಿಸಲಾಗುವುದು. ಕೇಂದ್ರದಿಂದ ಎಷ್ಟು ನೆರವು ದೊರೆಯುತ್ತದೆ ಎಂಬುದರ ಮೇಲೆ ಮುಂದಿನ ಪರಿಹಾರ ಕ್ರಮಗಳು ಅವಲಂಬಿತವಾಗಿರುತ್ತವೆ.
*ಎನ್ಡಿಆರ್ಎಫ್ ಮಾರ್ಗಸೂಚಿ ಸಡಿಲಿಕೆಗೆ ನಿರಂತರ ಒತ್ತಡ : ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿ (ಎನ್ಡಿಆರ್ಎಫ್) ಮಾರ್ಗಸೂಚಿಗಳನ್ನು ಬದಲಾಯಿಸಬೇಕು ಎಂಬ ಬೇಡಿಕೆಯನ್ನು ರಾಜ್ಯ ಸರ್ಕಾರ ನಿರಂತರವಾಗಿ ಕೇಂದ್ರದ ಮುಂದೆ ಇಡುತ್ತಿದೆ. ಈ ಸಂಬಂಧ ಈಗಾಗಲೇ ಸುಮಾರು 10ರಿಂದ 11 ಪತ್ರಗಳನ್ನು ಕೇಂದ್ರ ಸರ್ಕಾರಕ್ಕೆ ಬರೆಯಲಾಗಿದೆ. ಈ ಹಿಂದೆ ಮುಖ್ಯಮಂತ್ರಿಯಾಗಿದ್ದ ವೇಳೆ ಸಿದ್ದರಾಮಯ್ಯನವರು, ಈಗಿನ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಚಿವರಾದ ಕೃಷ್ಣ ಬೈರೇಗೌಡ ಹಾಗೂ ನಾನು ಕೂಡ ಮಾರ್ಗಸೂಚಿಗಳನ್ನು ಬದಲಾಯಿಸುವಂತೆ ಕೇಂದ್ರಕ್ಕೆ ಪತ್ರ ಬರೆದಿದ್ದೇನೆ.
ಪ್ರಸ್ತುತ ಇರುವ ಮಾರ್ಗಸೂಚಿಗಳನ್ನು ಬದಲಾಯಿಸಿದರೆ ರಾಜ್ಯಗಳು ಹೆಚ್ಚಿನ ಪ್ರಮಾಣದಲ್ಲಿ ಬರವನ್ನು ಘೋಷಿಸಿ ಪರಿಹಾರ ಕೇಳಬಹುದು ಹಾಗೂ ಕೇಂದ್ರ ಸರ್ಕಾರ ಹೆಚ್ಚಿನ ಹಣವನ್ನು ನೀಡಬೇಕಾಗುತ್ತದೆ ಎಂಬ ಕಾರಣದಿಂದ ಕೇಂದ್ರ ಸರ್ಕಾರ ಮಾರ್ಗಸೂಚಿ ಬದಲಾವಣೆಗೆ ಹಿಂದೇಟು ಹಾಕುತ್ತಿರಬಹುದು. ಆದರೆ, ರಾಜ್ಯದ ರೈತರು ಹಾಗೂ ಬರಪೀಡಿತ ಜನರಿಗೆ ತಕ್ಷಣ ಪರಿಹಾರ ದೊರೆಯಬೇಕಿರುವುದರಿಂದ ಕೇಂದ್ರದ ಮೇಲೆ ಒತ್ತಡ ಹೇರುತ್ತಿದ್ದೇವೆ.
- ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ 26ನೇ ವಾರ್ಷಿಕ ಘಟಿಕೋತ್ಸವ ಸಮಾರಂಭದಲ್ಲಿ ಭಾಗವಹಿಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದೆ. -
Dr. G Parameshwara
@DrParameshwara
ಬರದಿಂದ ಸಂಕಷ್ಟಕ್ಕೊಳಗಾಗಿರುವ ರೈತರಿಗೆ ತಕ್ಷಣದ ನೆರವು ನೀಡುವ ಉದ್ದೇಶದಿಂದ ಮೊದಲ ಹಂತದಲ್ಲಿ ಪ್ರತಿ ರೈತರಿಗೆ ₹2,500ರಂತೆ ಇನ್ಪುಟ್ ಸಬ್ಸಿಡಿ ನೀಡಲು ನಿರ್ಧರಿಸಿದ್ದೇವೆ. ಸುಮಾರು 45ರಿಂದ 50 ಲಕ್ಷ ರೈತರಿಗೆ ಈ ನೆರವು ತಲುಪಲಿದ್ದು, ಸರ್ಕಾರದ ಬೊಕ್ಕಸಕ್ಕೆ ಸುಮಾರು ₹1,250 ಕೋಟಿ ವೆಚ್ಚವಾಗಲಿದೆ.
ಕೇಂದ್ರದಿಂದ ಎನ್ಡಿಆರ್ಎಫ್ ನೆರವು ನಿರೀಕ್ಷಿಸುತ್ತಿದ್ದರೂ, ರೈತರ ಸಂಕಷ್ಟವನ್ನು ಗಮನದಲ್ಲಿಟ್ಟುಕೊಂಡು ನಮ್ಮ ಸರ್ಕಾರ ತಕ್ಷಣವೇ ನೆರವು ನೀಡುತ್ತಿದೆ.
ಈ ಕುರಿತಾಗಿ ನಿನ್ನೆ ಮಾಧ್ಯಮಕ್ಕೆ ನೀಡಿದ ಹೇಳಿಕೆ ಇಂದಿನ ಪತ್ರಿಕೆಗಳಲ್ಲಿ..
To provide immediate relief to farmers affected by drought, we have decided to provide an input subsidy of ₹2,500 per farmer in the first phase. The assistance will benefit around 45–50 lakh farmers and will cost the State exchequer approximately ₹1,250 crore.
While NDRF assistance from the Union Government is awaited, our Government is extending immediate support, keeping in mind the hardship faced by farmers.
Today’s newspaper coverage of my remarks to the media yesterday on this issue. -
Dr. G Parameshwara
@DrParameshwara
ಕೊರಟಗೆರೆ ತಾಲ್ಲೂಕಿನ ಜನರಿಗೆ ಗುಣಮಟ್ಟದ ಹಾಗೂ ಸುಧಾರಿತ ಆರೋಗ್ಯ ಸೇವೆಗಳನ್ನು ಸ್ಥಳೀಯವಾಗಿಯೇ ಒದಗಿಸುವ ನಿಟ್ಟಿನಲ್ಲಿ ₹40 ಕೋಟಿ ವೆಚ್ಚದಲ್ಲಿ ಹೈ-ಟೆಕ್ ಆಸ್ಪತ್ರೆ ನಿರ್ಮಾಣವಾಗಲಿದೆ.
4.05 ಎಕರೆ ಪ್ರದೇಶದಲ್ಲಿ ನಿರ್ಮಾಣಗೊಳ್ಳಲಿರುವ ಈ ಆಸ್ಪತ್ರೆಯಲ್ಲಿ ಸಿಬ್ಬಂದಿಗೆ ವಸತಿಗೃಹ ವ್ಯವಸ್ಥೆಯನ್ನೂ ಕಲ್ಪಿಸಲಾಗುತ್ತಿದೆ. ಜಿಲ್ಲಾ ಹಂತದಲ್ಲಿ ದೊರೆಯುವ ಹಲವು ಆರೋಗ್ಯ ಸೇವೆಗಳು ತಾಲ್ಲೂಕು ಮಟ್ಟದಲ್ಲೇ ಲಭ್ಯವಾಗುವಂತೆ ಆಸ್ಪತ್ರೆಯನ್ನು ಆಧುನಿಕ ಮಾದರಿಯಲ್ಲಿ ರೂಪಿಸಲಾಗುತ್ತಿದೆ.
ನೂತನ ಆಸ್ಪತ್ರೆಯೊಂದಿಗೆ ನರ್ಸಿಂಗ್ ಕಾಲೇಜು ಸ್ಥಾಪನೆಗೆ ಚಿಂತನೆ ನಡೆಸಲಾಗುತ್ತಿದೆ. ಈಗಿನ ಆಸ್ಪತ್ರೆಯನ್ನು ತಾಯಿ–ಮಕ್ಕಳ ಆಸ್ಪತ್ರೆಯಾಗಿ ಮೇಲ್ದರ್ಜೆಗೇರಿಸುವ ಯೋಜನೆಯನ್ನು ಹಾಕಿಕೊಂಡಿದ್ದೇವೆ. ಹಾಗೆಯೇ ಹೊಳವನಹಳ್ಳಿ, ಚಿಕ್ಕಸಾಗ್ಗೆರೆ, ಬುಕ್ಕಾಪಟ್ಟಣ, ಅಕ್ಕಿರಾಂಪುರಗಳಲ್ಲಿ ಸುಸಜ್ಜಿತ ಆಸ್ಪತ್ರೆಗಳ ನಿರ್ಮಾಣವಾಗಿದ್ದು, ಆ ಮೂಲಕ ಕೊರಟಗೆರೆ ತಾಲ್ಲೂಕಿನ ಆರೋಗ್ಯ ಸೇವಾ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸಲಾಗುತ್ತಿದೆ.
ತೋವಿನಕೆರೆಯ ಹೈಟೆಕ್ ಆಸ್ಪತ್ರೆಯೂ ಉದ್ಘಾಟನೆಗೆ ಸಿದ್ಧವಾಗುತ್ತಿದ್ದು, ತಾಲ್ಲೂಕಿನ ಜನರಿಗೆ ಗುಣಮಟ್ಟದ ಆರೋಗ್ಯ ಸೇವೆಗಳನ್ನು ಸ್ಥಳೀಯವಾಗಿಯೇ ಒದಗಿಸುವ ನಮ್ಮ ಸಂಕಲ್ಪಕ್ಕೆ ಇದು ಮತ್ತೊಂದು ಹೆಜ್ಜೆಯಾಗಿದೆ.
A ₹40 crore hi-tech hospital will be built in Koratagere taluk to provide quality and advanced healthcare services locally.
The hospital will come up on 4.05 acres and will include residential quarters for staff. It is being designed to make several services currently available at the district level accessible at the taluk level itself.
Along with the new hospital, a Nursing College is also being considered. We have also planned to upgrade the existing hospital into a Mother and Child Hospital. Well-equipped hospitals have been built at Holavanahalli, Chikkasaggere, Bukkapatna and Akkirampura, further strengthening Koratagere’s healthcare network.
The hi-tech hospital at Tovinakere is also getting ready for inauguration, marking another step in our resolve to provide quality healthcare closer to the people of Koratagere. -
Dr. G Parameshwara
@DrParameshwara
ಇಂದು ಬೆಳಗಾವಿಯಲ್ಲಿ ನಡೆದ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ 26ನೇ ವಾರ್ಷಿಕ ಘಟಿಕೋತ್ಸವದಲ್ಲಿ ಪದವಿ ಪಡೆದ ಯುವ ಇಂಜಿನಿಯರ್ಗಳೊಂದಿಗೆ ಭವಿಷ್ಯದ ತಂತ್ರಜ್ಞಾನ ಜಗತ್ತು ಮತ್ತು ಅವರ ಮುಂದಿರುವ ಜವಾಬ್ದಾರಿಗಳ ಕುರಿತು ಮಾತನಾಡಿದೆ.
ಕೃತಕ ಬುದ್ಧಿಮತ್ತೆ, ರೋಬೋಟಿಕ್ಸ್, ಕ್ವಾಂಟಮ್ ಕಂಪ್ಯೂಟಿಂಗ್, ಜೈವಿಕ ತಂತ್ರಜ್ಞಾನ, ಶುದ್ಧ ಇಂಧನ ಹಾಗೂ ಬಾಹ್ಯಾಕಾಶ ತಂತ್ರಜ್ಞಾನಗಳು ವೇಗವಾಗಿ ಬೆಳೆಯುತ್ತಿದ್ದು, ನಮ್ಮ ಬದುಕು, ಉದ್ಯೋಗ ಮತ್ತು ಕೈಗಾರಿಕಾ ವ್ಯವಸ್ಥೆಯನ್ನೇ ಬದಲಾಯಿಸುತ್ತಿವೆ. ಇಂತಹ ಸಂದರ್ಭದಲ್ಲಿ ಎಐ ಕಲಿಕೆ ಇಂಜಿನಿಯರ್ಗಳಿಗೆ ಆಯ್ಕೆಯ ವಿಷಯವಾಗಿ ಉಳಿದಿಲ್ಲ. ಅದನ್ನು ಬಳಸುವುದರ ಜೊತೆಗೆ, ಅದರ ಸಾಮರ್ಥ್ಯವನ್ನು ಅರ್ಥಮಾಡಿಕೊಳ್ಳುವ, ಪ್ರಶ್ನಿಸುವ, ಹೊಸದನ್ನು ನಿರ್ಮಿಸುವ ಹಾಗೂ ಜವಾಬ್ದಾರಿಯಿಂದ ಬಳಸುವ ಮನೋಭಾವ ಬೆಳೆಸಿಕೊಳ್ಳಬೇಕು.
ಮುಂದಿನ ದಿನಗಳಲ್ಲಿ ಯಂತ್ರಕ್ಕೆ ಎಷ್ಟು ಗೊತ್ತಿದೆ ಎನ್ನುವುದಕ್ಕಿಂತ, ನಾವು ಸರಿಯಾದ ಪ್ರಶ್ನೆ ಕೇಳಬಲ್ಲೆವೇ, ಹೊಸ ಪರಿಹಾರಗಳನ್ನು ರೂಪಿಸಬಲ್ಲೆವೇ ಮತ್ತು ತಂತ್ರಜ್ಞಾನವನ್ನು ಮಾನವ ಹಿತಕ್ಕಾಗಿ ಬಳಸಬಲ್ಲೆವೇ ಎಂಬುದೇ ಮುಖ್ಯವಾಗಲಿದೆ. ಯಂತ್ರ ನಮ್ಮನ್ನು ಮುನ್ನಡೆಸುವಂತಾಗಬಾರದು, ಯಂತ್ರವನ್ನು ಯಾವ ದಿಕ್ಕಿಗೆ ಕೊಂಡೊಯ್ಯಬೇಕು ಎಂಬ ನಿರ್ಧಾರ ನಮ್ಮ ಕೈಯಲ್ಲಿರಬೇಕು.
ಎಐಯ ಪ್ರಯೋಜನ ಕೇವಲ ತಂತ್ರಜ್ಞಾನ ಕಂಪನಿಗಳೊಳಗೆ ಸೀಮಿತವಾಗಬಾರದು. ಅದು ರೈತನ ಹೊಲಕ್ಕೆ, ಸಣ್ಣ ಕೈಗಾರಿಕೆಗೆ, ಆಸ್ಪತ್ರೆಗೆ, ನಿರ್ಮಾಣ ಕ್ಷೇತ್ರಕ್ಕೆ ಮತ್ತು ಸರ್ಕಾರಿ ವ್ಯವಸ್ಥೆಗೂ ತಲುಪಬೇಕು. ಕರ್ನಾಟಕದ ಯಾವುದೋ ಒಂದು ಗ್ರಾಮದಲ್ಲಿ, ಹೊಲದಲ್ಲಿ ಅಥವಾ ಸಣ್ಣ ಕಾರ್ಖಾನೆಯಲ್ಲಿ ಭಾರತದ ಮುಂದಿನ ದೊಡ್ಡ ಆವಿಷ್ಕಾರ ಹುಟ್ಟಿಬಹುದು.
ಬಾಹ್ಯಾಕಾಶ ಹಾಗೂ ಡಿಜಿಟಲ್ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಭಾರತ ತನ್ನ ಸಾಮರ್ಥ್ಯವನ್ನು ಈಗಾಗಲೇ ತೋರಿಸಿದೆ. ಇನ್ನು ವಿಶ್ವಕ್ಕೆ ಪ್ರತಿಭೆಯನ್ನು ಒದಗಿಸುವ ದೇಶವಾಗಿಯಷ್ಟೇ ಉಳಿಯದೆ, ಹೊಸ ತಂತ್ರಜ್ಞಾನಗಳನ್ನು ಸೃಷ್ಟಿಸುವ ಮತ್ತು ಜಾಗತಿಕ ಮಟ್ಟದ ಸಂಸ್ಥೆಗಳನ್ನು ಕಟ್ಟುವ ದೇಶವಾಗಬೇಕು. ಕರ್ನಾಟಕವೂ ಭಾರತದ ತಂತ್ರಜ್ಞಾನ ರಾಜಧಾನಿ ಎಂಬ ಹೆಗ್ಗಳಿಕೆಯನ್ನು ಮೀರಿ, ವಿಶ್ವದ ಪ್ರಮುಖ ನಾವೀನ್ಯತಾ ಕೇಂದ್ರಗಳಲ್ಲಿ ಒಂದಾಗಿ ಬೆಳೆಯಬೇಕು.
ಆದರೆ ಯಾವುದೇ ತಂತ್ರಜ್ಞಾನದ ಅಂತಿಮ ಗುರಿ ಮನುಷ್ಯನ ಬದುಕನ್ನು ಉತ್ತಮಗೊಳಿಸುವುದೇ ಆಗಿರಬೇಕು. ರೈತ, ಕಾರ್ಮಿಕ, ನೇಕಾರ, ವಿಶೇಷಚೇತನರು ಹಾಗೂ ಗ್ರಾಮೀಣ ಮಕ್ಕಳಿಗೂ ತಂತ್ರಜ್ಞಾನದ ಫಲ ತಲುಪಬೇಕು. ತಂತ್ರಜ್ಞಾನ ಅಸಮಾನತೆಯನ್ನು ಕಡಿಮೆ ಮಾಡಬೇಕು, ಮತ್ತಷ್ಟು ಹೆಚ್ಚಿಸಬಾರದು.
ಪದವಿ ಪಡೆಯುತ್ತಿರುವ ವಿದ್ಯಾರ್ಥಿಗಳು ತಮ್ಮ ವೃತ್ತಿಜೀವನದಲ್ಲಿ ಐದು ತತ್ವಗಳನ್ನು ಅಳವಡಿಸಿಕೊಳ್ಳಿ. ಕಲಿಕೆಯನ್ನು ಎಂದಿಗೂ ನಿಲ್ಲಿಸದಿರಿ; ಆವಿಷ್ಕಾರ ಮಾಡುವ ಧೈರ್ಯ ಬೆಳೆಸಿಕೊಳ್ಳಿ; ಪ್ರಾಮಾಣಿಕರಾಗಿರಿ; ಸಹಾನುಭೂತಿಯುಳ್ಳವರಾಗಿರಿ ಹಾಗೂ ಜ್ಞಾನಕ್ಕೆ ಸಮಾಜ ಮತ್ತು ರಾಷ್ಟ್ರವನ್ನು ಕಟ್ಟುವ ಜವಾಬ್ದಾರಿಯಿದೆ ಎಂಬುದನ್ನು ಮರೆಯದಿರಿ.
ಇಂದು ನಿಮ್ಮ ಕೈಗೆ ಪದವಿ ಬಂದಿದೆ. ನಾಳೆಯಿಂದ ನಿಮ್ಮ ಜವಾಬ್ದಾರಿ ಆರಂಭವಾಗುತ್ತದೆ. ಭಾರತದ ಭವಿಷ್ಯವನ್ನು ಇನ್ನಷ್ಟು ಶ್ರೇಷ್ಠಗೊಳಿಸುವ ಅವಕಾಶ ನಿಮ್ಮ ಮುಂದಿದೆ. -
Dr. G Parameshwara
@DrParameshwara
At the 26th Annual Convocation of Visvesvaraya Technological University (VTU) in Belagavi today, I spoke to our graduating engineers about the extraordinary technological transformation their generation is stepping into.
Artificial Intelligence (AI), robotics, quantum computing, biotechnology, clean energy and space technology are rapidly reshaping industries, employment and society. Learning AI can no longer be optional. Engineers must learn not merely to use intelligent systems, but to build them, question them and apply them responsibly.
In the age of AI and AGI, your advantage will not come from knowing what the machine already knows, but from knowing what to ask, what to build, what to trust and what purpose technology must ultimately serve. Engineers must learn to control the machine, not be controlled by it.
The AI revolution must also move beyond technology companies. It must reach our farms, factories, hospitals, construction sites and public institutions. The next great Indian innovation could emerge from a farm in Karnataka, a textile unit, a small factory, a hospital or a village. Our challenge is not simply to automate, but to make every Indian more productive, capable and prosperous.
India has demonstrated its technological capabilities through achievements in space and digital public infrastructure. We must now move from being a provider of technological talent to becoming a creator of technologies and globally competitive companies. India should not only use the technologies of the future; we must invent them.
Karnataka has a strong foundation for this transformation. STPI-registered units in the State recorded nearly ₹4.59 lakh crore in software exports in 2024–25, accounting for roughly 43% of such exports nationally. We are home to around 550 GCCs and nearly 18,000 startups. Karnataka must now aspire not merely to remain India’s technology capital, but to become one of the world’s great centres of innovation.
But technology must always serve humanity. Innovation without inclusion can deepen inequality, and AI without responsibility can create new risks. Inspired by Dr. B.R. Ambedkar’s vision of education as an instrument of emancipation, I urged our young engineers to remember the farmer, cobbler, pourakarmika, weaver, worker, persons with disabilities, the elderly and children in remote villages while designing solutions. Technology must reduce inequality, not reinforce it.
I asked the graduating students to carry five principles with them: never stop learning, have the courage to innovate, protect integrity, remain compassionate and remember that knowledge carries a responsibility towards society and the nation.
VTU too must continue modernising its curriculum, strengthening research and industry collaboration, encouraging entrepreneurship and preparing students for technologies that may not even have existed when their courses began. A great university must produce not only graduates, but ideas, discoveries, entrepreneurs, leaders and responsible citizens.
To every graduate: today you receive your degree; tomorrow begins your responsibility. India has given your generation an extraordinary platform. Your generation now has the opportunity to give India an extraordinary future. -
Dr. G Parameshwara
@DrParameshwara
ಇಂದು ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಜ್ಞಾನ ಸಂಗಮ ಕ್ಯಾಂಪಸ್ನಲ್ಲಿ ಆಯೋಜಿಸಿದ್ದ 26ನೇ ವಾರ್ಷಿಕ ಘಟಿಕೋತ್ಸವ ಹಾಗೂ ಪದವಿ ಪ್ರದಾನ ಸಮಾರಂಭದಲ್ಲಿ ಗೌರವಾನ್ವಿತ ರಾಜ್ಯಪಾಲರಾದ ಥಾವರ್ಚಂದ್ ಗೆಹ್ಲೋಟ್ ಅವರೊಂದಿಗೆ ಭಾಗವಹಿಸಿದೆ.
ಸಿಎಂಆರ್ ಜ್ಞಾನಧಾರ ಟ್ರಸ್ಟ್ನ ಅಧ್ಯಕ್ಷರಾದ ಡಾ. ಸಬಿತಾ ರಾಮಮೂರ್ತಿ, ಆರ್.ವಿ. ಶಿಕ್ಷಣ ಸಮಿತಿ ಟ್ರಸ್ಟ್ನ ಅಧ್ಯಕ್ಷರಾದ ಡಾ. ಎಂ.ಪಿ. ಶ್ಯಾಮ್ ಹಾಗೂ ಎಐಸಿಟಿಇ ಮಾಜಿ ಅಧ್ಯಕ್ಷರಾದ ಪ್ರೊ. ಟಿ.ಜಿ. ಸೀತಾರಾಂ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಿ ಅಭಿನಂದಿಸಲಾಯಿತು.
ಈ ಸಂದರ್ಭದಲ್ಲಿ ಉನ್ನತ ಶಿಕ್ಷಣ ಸಚಿವರಾದ ಬಸವರಾಜ ರಾಯರೆಡ್ಡಿ, ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ. ಎಸ್. ವಿದ್ಯಾಶಂಕರ್, ಕುಲಸಚಿವರಾದ ಪ್ರೊ. ಪ್ರಸಾದ ಬಿ. ರಾಂಪುರೆ, ಪ್ರೊ. ಯು.ಜೆ. ಉಜ್ವಲ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
Today, I participated in the 26th Annual Convocation and Degree Award Ceremony of Visvesvaraya Technological University (VTU) at its Jnana Sangama campus in Belagavi, along with Hon’ble Governor Shri Thaawarchand Gehlot.
Honorary doctorates were conferred on Dr. Sabitha Ramamurthy, Chairperson of CMR Jnanadhara Trust; Dr. M.P. Shyam, President of the R.V. Educational Institutions Trust; and Prof. T.G. Sitharam, former Chairman of AICTE. I congratulated all three on receiving the honour.
Higher Education Minister Basavaraj Rayareddi, VTU Vice-Chancellor Prof. S. Vidyashankar, Registrar Prof. Prasad B. Rampure, Prof. U.J. Ujwal, and many others were present. -
Dr. G Parameshwara
@DrParameshwara
ಇಂದು ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ 26ನೇ ಘಟಿಕೋತ್ಸವ ಸಮಾರಂಭಕ್ಕೆ ಆಗಮಿಸಿದ ಗೌರವಾನ್ವಿತ ರಾಜ್ಯಪಾಲರಾದ ಥಾವರ್ಚಂದ್ ಗೆಹ್ಲೋಟ್ ಅವರನ್ನು ವಿಟಿಯು ಕ್ಯಾಂಪಸ್ನಲ್ಲಿ ಆತ್ಮೀಯವಾಗಿ ಸ್ವಾಗತಿಸಿದೆ.
ಈ ಸಂದರ್ಭದಲ್ಲಿ ಉನ್ನತ ಶಿಕ್ಷಣ ಸಚಿವರಾದ ಬಸವರಾಜ ರಾಯರೆಡ್ಡಿ, ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ. ಎಸ್. ವಿದ್ಯಾಶಂಕರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.
Today, I warmly welcomed Hon’ble Governor Thaawarchand Gehlot at the VTU campus upon his arrival for the 26th Convocation of Visvesvaraya Technological University, Belagavi.
Higher Education Minister Shri Basavaraj Rayareddi, VTU Vice-Chancellor Prof. S. Vidyashankar, and others were present on the occasion. -
Dr. G Parameshwara
@DrParameshwara
Remembering former Prime Minister Dr. Manmohan Singh on his birth anniversary with profound respect.
Few public lives have combined scholarship, simplicity and service as seamlessly as his. From helping shape a defining phase of India’s economic reforms to leading the country as Prime Minister for a decade, Dr. Singh carried every responsibility with characteristic humility, dignity and quiet resolve.
He believed in the power of knowledge, institutions and democratic values, and remained deeply committed to the idea of an India that moves forward while taking everyone along.
His was a life of substance over spectacle, and service above self.
My heartfelt tributes to Dr. Manmohan Singh. His contribution to India and the grace with which he served the nation will always be remembered. -
Dr. G Parameshwara
@DrParameshwara
ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಘಟಿಕೋತ್ಸವ ಸಮಾರಂಭದಲ್ಲಿ ಭಾಗವಹಿಸಲು ಬೆಳಗಾವಿಗೆ ಆಗಮಿಸಿದ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳ ಕಾರ್ಯಾಲಯಕ್ಕೆ ಭೇಟಿ ನೀಡಿ, ಜಿಲ್ಲೆಯ ಬರ ಪರಿಸ್ಥಿತಿ ನಿರ್ವಹಣೆ ಕುರಿತು ಪ್ರಗತಿ ಪರಿಶೀಲನಾ ಸಭೆ ನಡೆಸಿದೆ.
ಕುಡಿಯುವ ನೀರು, ಮೇವು, ಉದ್ಯೋಗ ಸೃಷ್ಟಿ ಸೇರಿದಂತೆ ಬರ ನಿರ್ವಹಣೆಗೆ ಸಂಬಂಧಿಸಿದ ಕ್ರಮಗಳ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದು, ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಪರಿಣಾಮಕಾರಿಯಾಗಿ ಕೈಗೊಳ್ಳುವಂತೆ ಸೂಚನೆ ನೀಡಿದೆ.
ಸಭೆಯಲ್ಲಿ ಸ್ಥಳೀಯ ಶಾಸಕರಾದ ಅಶೋಕ್ ಎಂ. ಪಟ್ಟಣ, ರಾಜು ಆಸೀಫ್ ಸೇಠ್, ಬೆಳಗಾವಿ ಜಿಲ್ಲಾಧಿಕಾರಿಗಳಾದ ಮೊಹಮ್ಮದ್ ರೋಷನ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ರಾಹುಲ್ ಶಿಂಧೆ, ಬೆಳಗಾವಿ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷರಾದ ವಿನಯ ನಾವಲಗಟ್ಟಿ ಇದ್ದರು. -
Dr. G Parameshwara
@DrParameshwara
ಆರ್ಥಿಕ ಇಲಾಖೆಯು ಹಣಕಾಸಿನ ಶಿಸ್ತು ಕಾಪಾಡುವ ನಿಟ್ಟಿನಲ್ಲಿ ಸರ್ಕಾರಕ್ಕೆ ಸಲಹೆ ಮತ್ತು ಎಚ್ಚರಿಕೆಗಳನ್ನು ನೀಡುವುದು ಸಹಜ ಪ್ರಕ್ರಿಯೆಯಾಗಿದ್ದು, ಅದನ್ನೇ ಬಳಸಿಕೊಂಡು ರಾಜ್ಯ ಸರ್ಕಾರ ದಿವಾಳಿಯಾಗಿದೆ ಅಥವಾ ಖಜಾನೆ ಖಾಲಿಯಾಗಿದೆ ಎಂದು ಬಿಂಬಿಸುತ್ತಿರುವುದು ವಿಪಕ್ಷಗಳ ರಾಜಕೀಯ ಅಪಪ್ರಚಾರವಷ್ಟೇ ಸೀಮಿತವಾಗಲಿದೆ.
ಯಾವುದೇ ಸರ್ಕಾರ ಅಧಿಕಾರದಲ್ಲಿದ್ದರೂ ಆರ್ಥಿಕ ಇಲಾಖೆ ಇಂತಹ ಎಚ್ಚರಿಕೆ ಮತ್ತು ಸಲಹೆಗಳನ್ನು ನೀಡುತ್ತದೆ. ಬಜೆಟ್ನಲ್ಲಿ ಅನುದಾನ ನಿಗದಿಪಡಿಸದೆ ಹೆಚ್ಚುವರಿ ಹಣ ಖರ್ಚು ಮಾಡಿದರೆ, ಅದಕ್ಕೆ ಹಣವನ್ನು ಎಲ್ಲಿಂದ ಹೊಂದಿಸಬೇಕು ಎಂಬ ಪ್ರಶ್ನೆಯನ್ನು ಆರ್ಥಿಕ ಇಲಾಖೆಯು ಮುಂದಿಡುತ್ತದೆ. ಎರಡೂ ಸದನಗಳು ಅನುಮೋದಿಸಿರುವ ಬಜೆಟ್ ಮತ್ತು ಹಣಕಾಸು ಮಸೂದೆಯ ವ್ಯಾಪ್ತಿಯನ್ನು ಮೀರಿ ಖರ್ಚು ಮಾಡಲು ಅವಕಾಶವಿರುವುದಿಲ್ಲ. ಹೆಚ್ಚುವರಿ ವೆಚ್ಚದ ಅಗತ್ಯವಿದ್ದರೆ ಪೂರಕ ಬಜೆಟ್ ಮಂಡಿಸಿ ಸದನದ ಅನುಮೋದನೆ ಪಡೆದು ಖರ್ಚು ಮಾಡಬೇಕು. ಇದು ಸರ್ಕಾರಕ್ಕೆ ಇರಬೇಕಾದ ಕನಿಷ್ಠ ಹಣಕಾಸಿನ ಪ್ರಜ್ಞೆಯಾಗಿದೆ.
ಕೆಲವೊಮ್ಮೆ ಸರ್ಕಾರಗಳು ಬಜೆಟ್ ವ್ಯಾಪ್ತಿಯನ್ನು ಮೀರಿ ಹೊಸ ಕಾರ್ಯಕ್ರಮಗಳು ಅಥವಾ ಯೋಜನೆಗಳನ್ನು ಘೋಷಿಸಲು ಮುಂದಾದಾಗ ಆರ್ಥಿಕ ಇಲಾಖೆ ಎಚ್ಚರಿಕೆ ನೀಡುತ್ತದೆ. ಈಗ ಚರ್ಚೆಯಾಗುತ್ತಿರುವ ಸಲಹೆಯೂ ಅದೇ ರೀತಿಯದ್ದಾಗಿದೆ. ಇದನ್ನು ಆಧರಿಸಿ ‘ಸರ್ಕಾರ ದಿವಾಳಿಯಾಗಿದೆ, ಸರ್ಕಾರದ ಬಳಿ ಹಣವಿಲ್ಲ’ಎಂದು ವಿಪಕ್ಷಗಳು ಹೇಳುತ್ತಿರುವ ಮಾತಿನಲ್ಲಿ ಹುರುಳಿಲ್ಲ.
ಈ ರೀತಿಯ ಸಲಹೆಯನ್ನು ನಮ್ಮ ಸರ್ಕಾರಕ್ಕೆ ಮಾತ್ರ ನೀಡಲಾಗಿಲ್ಲ. 2020ರ ಜನವರಿಯಲ್ಲಿ ರಾಜ್ಯದ ಸ್ವಂತ ಆದಾಯ ಸಂಗ್ರಹ ಗುರಿಯು ಸುಮಾರು ಶೇ.70ರ ಮಟ್ಟಕ್ಕೆ ಕುಸಿದಿತ್ತು, ಕೇಂದ್ರದ ತೆರಿಗೆ ವರ್ಗಾವಣೆ ಸುಧಾರಿಸದಿದ್ದರೆ ರಾಜ್ಯ ಗಂಭೀರ ಹಣಕಾಸಿನ ಸಂಕಷ್ಟ ಎದುರಿಸಬಹುದು ಎಂದು ಅಂದಿನ ಸಿಎಂ ಯಡಿಯೂರಪ್ಪನವರ ನೇತೃತ್ವದ ಬಿಜೆಪಿ ಸರ್ಕಾರಕ್ಕೂ ಆರ್ಥಿಕ ಇಲಾಖೆ ಎಚ್ಚರಿಸಿತ್ತು.
2022ರ ಫೆಬ್ರವರಿಯಲ್ಲಿ ಬಸವರಾಜ ಬೊಮ್ಮಾಯಿ ಅವರ ಸರ್ಕಾರದ ಅವಧಿಯಲ್ಲಿ ಹೆಚ್ಚುತ್ತಿರುವ ಬದ್ಧತಾ ಖರ್ಚು ಮತ್ತು ಸೀಮಿತ ಆದಾಯದ ಆಯ್ಕೆಗಳಿಂದಾಗಿ ಆದಾಯ ಮಿಗತೆ ಬಜೆಟ್ ಮಂಡಿಸುವುದು ಕಷ್ಟವಾಗಬಹುದು ಎಂದು ಆರ್ಥಿಕ ಇಲಾಖೆ ಎಚ್ಚರಿಸಿತ್ತು. 2023ರ ಫೆಬ್ರವರಿಯಲ್ಲಿ ಚುನಾವಣೆ ಸಮೀಪಿಸುತ್ತಿದ್ದ ಸಂದರ್ಭದಲ್ಲಿ ಏಳನೇ ವೇತನ ಆಯೋಗವನ್ನು ಜಾರಿಗೊಳಿಸಲು ಸರ್ಕಾರ ಮುಂದಾದಾಗಲೂ ಆರ್ಥಿಕ ಇಲಾಖೆ ಎಚ್ಚರಿಕೆ ನೀಡಿತ್ತು. ತಕ್ಷಣ ಜಾರಿಗೊಳಿಸಿದರೆ ಮುಂದಿನ ಹಣಕಾಸು ವರ್ಷಕ್ಕೆ ಹೊರೆ ವರ್ಗಾವಣೆಯಾಗಬಹುದು, FRBM ಮಿತಿಯ ಮೇಲೆ ಪರಿಣಾಮ ಬೀರಬಹುದು ಹಾಗೂ ಗಣನೀಯ ಪ್ರಮಾಣದ ಹೆಚ್ಚುವರಿ ಸಾಲದ ಅಗತ್ಯ ಎದುರಾಗಬಹುದು ಎಂದು ಮೊದಲೇ ತಿಳಿಸಿತ್ತು.
ಆರ್ಥಿಕ ಇಲಾಖೆ ಹೀಗೆ ಸಲಹೆ ನೀಡಿತ್ತು ಎಂದ ಮಾತ್ರಕ್ಕೆ ಬಸವರಾಜ ಬೊಮ್ಮಾಯಿ ನೇತೃತ್ವದ ಅಂದಿನ ಬಿಜೆಪಿ ಸರ್ಕಾರ ದಿವಾಳಿಯಾಗಿತ್ತು ಎಂದರ್ಥವೇ? ಇದು ಸಹಜ ಕಾರ್ಯವಿಧಾನ ಎಂಬುದು ತಿಳಿದಿದ್ದರೂ ಬಿಜೆಪಿಗರು ಈ ವಿಚಾರದಲ್ಲಿ ರಾಜಕೀಯ ಮಾಡುತ್ತಿರುವುದು ವಿಪರ್ಯಾಸ.This media couldn't be displayed. See it on the original post. -
Dr. G Parameshwara
@DrParameshwara
A rewarding Day 7 for India at the Asian Games 2026, with our athletes adding six medals to the national tally!
Heartiest congratulations to Suruchi Singh & Kamaljeet on striking Gold in the 10m Air Pistol Mixed Team event -- India’s first shooting Gold of these Games.
Congratulations to Aishwary Pratap Singh Tomar, Rudrankksh Patil & Niraj Kumar on their Silver in the men’s 50m Rifle 3 Positions team event.
A superb run by Gulveer Singh earned India Silver in the men’s 10,000m, making him the first Indian to win two Asian Games medals in the event.
Congratulations to Manush Shah & Diya Chitale on their Bronze in mixed doubles table tennis, and to Manpreet Kaur on winning Bronze in the women’s shot put.
And a historic achievement by Baranica Elangovan, who won Bronze in the women’s pole vault -- India’s first-ever Asian Games medal in the event.
Congratulations to every medal winner, their coaches and support teams. Keep making India proud!
#asiangames2026 #teamindia -
Dr. G Parameshwara
@DrParameshwara
2023-24ರ ಬರದಲ್ಲಿ ರಾಜ್ಯಕ್ಕೆ ಸುಮಾರು ₹39,000 ಕೋಟಿ ನಷ್ಟವಾಗಿತ್ತು. NDRF ಮಾರ್ಗಸೂಚಿಗಳಂತೆ ನಷ್ಟದ ಅಂದಾಜು ಮಾಡಿ ₹18,000 ಕೋಟಿ ಪರಿಹಾರವನ್ನು ಕೇಂದ್ರಕ್ಕೆ ಕೇಳಿದ್ದೆವು. ಆದರೆ ಆರಂಭದಲ್ಲಿ ಕೇಂದ್ರದಿಂದ ಯಾವುದೇ NDRF ಪರಿಹಾರ ದೊರೆಯಲಿಲ್ಲ. ರಾಜ್ಯ ಸರ್ಕಾರವು ನಿರಂತರವಾಗಿ ಒತ್ತಾಯಿಸಿ, ದೆಹಲಿಯಲ್ಲಿ ಪ್ರತಿಭಟನೆ ನಡೆಸಿ, ಕೊನೆಗೆ ನ್ಯಾಯಾಲಯದ ಮೊರೆ ಹೋಗಿದ್ದರಿಂದ ಕೊನೆಗೆ ಅಲ್ಪ ಪರಿಹಾರ ಬಿಡುಗಡೆಯಾಯಿತು.
2019-20ರಲ್ಲಿಯೂ ಸುಮಾರು ₹35,000 ಕೋಟಿ ನಷ್ಟಕ್ಕೆ ಕೇವಲ ₹1,652 ಕೋಟಿ ಪರಿಹಾರ ದೊರೆತಿತ್ತು. ಇದು ಅತ್ಯಂತ ಕನಿಷ್ಠ ಮೊತ್ತವಾಗಿತ್ತು. ಒಕ್ಕೂಟ ಸರ್ಕಾರವು ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಬರಪೂರ ಪರಿಹಾರ ಒದಗಿಸಿದೆ. ಆದರೆ ಕರ್ನಾಟಕದ ವಿಚಾರದಲ್ಲಿ ನಿರಂತರವಾಗಿ ಮಲತಾಯಿ ಧೋರಣೆ ಅನುಸರಿಸುತ್ತಿದೆ. ಈ ಬಾರಿಯೂ ಅಂತಹ ತಾರತಮ್ಯ ಎಸಗದೆ ಕನ್ನಡಿಗರಿಗೆ ನ್ಯಾಯಯುತವಾಗಿ ಬರಬೇಕಿರುವ ಪರಿಹಾರವನ್ನು ಕೂಡಲೇ ಬಿಡುಗಡೆ ಮಾಡಬೇಕು.
ಬರಪರಿಹಾರ ಪಡೆಯುವುದು ಕನ್ನಡಿಗರ ಹಕ್ಕು.
During the 2023–24 drought, Karnataka suffered losses of around ₹39,000 crore. Based on NDRF guidelines, the State assessed the eligible loss and sought ₹18,000 crore in relief from the Union Government. However, no NDRF relief was initially provided. The State Government repeatedly pressed its demand, protested in Delhi and ultimately approached the court, after which only limited relief was released.
In 2019–20 too, against losses of around ₹35,000 crore, Karnataka received only ₹1,652 crore in relief -- an extremely inadequate amount.
The Union Government has provided substantial drought relief to BJP-ruled States, but Karnataka has repeatedly faced discriminatory treatment. This time, such discrimination must not be repeated. The relief legitimately due to Karnataka must be released without delay.
Drought relief is the right of Kannadigas. -
Dr. G Parameshwara
@DrParameshwara
ಈ ವರ್ಷ ಬರ ಪರಿಸ್ಥಿತಿಯಿಂದ ರಾಜ್ಯಕ್ಕೆ ಅಂದಾಜು ₹40,000 ಕೋಟಿ ನಷ್ಟ ಉಂಟಾಗುವ ಸಾಧ್ಯತೆಯಿದೆ. ಮೊದಲ ಹಂತದಲ್ಲಿ ಘೋಷಿಸಲಾದ 101 ಬರಪೀಡಿತ ತಾಲ್ಲೂಕುಗಳಿಗೆ ಪರಿಹಾರ ಒದಗಿಸಲು ₹3,800 ಕೋಟಿ ನೆರವನ್ನು ನೀಡುವಂತೆ ಕೇಂದ್ರ ಸರ್ಕಾರಕ್ಕೆ ಈಗಾಗಲೇ ಮನವಿ ಮಾಡಲಾಗಿದೆ.
ಕನ್ನಡಿಗರ ಪರಿಸ್ಥಿತಿಯನ್ನು ಅರ್ಥೈಸಿಕೊಂಡು ಅಗತ್ಯ ನೆರವನ್ನು ಕೇಂದ್ರ ಸರ್ಕಾರ ಒದಗಿಸುತ್ತದೆ ಎಂಬ ಭರವಸೆಯಿದೆ. ಹಿಂದಿನ ವರ್ಷಗಳಲ್ಲಿ ಬರ ಪರಿಹಾರ ಬಿಡುಗಡೆಗೆ ಎಸಗಿದ ತಾರತಮ್ಯದಂತೆ ಪ್ರಸಕ್ತ ವರ್ಷದಲ್ಲೂ ಮುಂದುವರಿಯಬಾರದು. ಸುಪ್ರೀಂ ಕೋರ್ಟ್ನ ಮಧ್ಯಸ್ಥಿಕೆಯಿಂದ ನೆರವು ಬಿಡುಗಡೆ ಮಾಡುವಂತಹ ಪರಿಸ್ಥಿತಿ ಬಾರದಿರಲಿ ಎಂಬುದು ನಮ್ಮ ಆಶಯವಾಗಿದೆ.
ನ್ಯಾಯಯುತ ಬರಪರಿಹಾರ ಪಡೆಯುವುದು ಕನ್ನಡಿಗರ ಹಕ್ಕು.
This year’s drought is estimated to cause losses of around ₹40,000 crore to Karnataka. The State has already sought ₹3,800 crore from the Union Government to provide relief to the 101 taluks declared drought-hit in the first phase.
We hope the Union Government will understand Karnataka’s situation and extend the necessary assistance. The discrimination seen in drought relief in previous years should not be repeated this time.
It is our hope that Karnataka will not once again have to seek Supreme Court intervention for the release of relief funds.
Fair drought relief is the right of Kannadigas. -
Dr. G Parameshwara
@DrParameshwara
ರಾಜ್ಯದಲ್ಲಿ ಬರ ಪರಿಸ್ಥಿತಿ ಗಂಭೀರವಾಗಿದ್ದು, ರೈತರು ಹಾಗೂ ಗ್ರಾಮೀಣ ಜನರ ಸಂಕಷ್ಟಕ್ಕೆ ಸ್ಪಂದಿಸಲು ನಮ್ಮ ಸರ್ಕಾರ ಅಗತ್ಯ ಕ್ರಮಗಳನ್ನು ಕೈಗೊಂಡಿದೆ.
ರಾಜ್ಯದಲ್ಲಿ ಈಗಾಗಲೇ 177 ತಾಲ್ಲೂಕುಗಳನ್ನು ಬರಪೀಡಿತ ಎಂದು ಹಂತವಾರು ಘೋಷಿಸಲಾಗಿದೆ. ಮೊದಲ ಹಂತದಲ್ಲಿ 101, ಎರಡನೇ ಹಂತದಲ್ಲಿ 23 ಹಾಗೂ ಮೂರನೇ ಹಂತದಲ್ಲಿ 53 ತಾಲ್ಲೂಕುಗಳು ಬರಪೀಡಿತ ಎಂದು ಘೋಷಣೆಯಾಗಿವೆ. ಮುಂದಿನ ಹಂತದಲ್ಲಿ ಒಟ್ಟು 220 ತಾಲ್ಲೂಕುಗಳು ಬರಪೀಡಿತ ಎಂದು ಘೋಷಣೆಯಾಗುವ ಸಾಧ್ಯತೆ ಇದ್ದು, ಬರದಿಂದ ಸಂಕಷ್ಟಕ್ಕೊಳಗಾಗಿರುವ ರೈತರು ಮತ್ತು ಜನರ ನೆರವಿಗೆ ಸರ್ಕಾರ ಬದ್ಧವಾಗಿದೆ.
The drought situation in the State remains serious, and our Government has taken necessary measures to support farmers and rural communities in distress.
So far, 177 taluks have been declared drought-hit in phases - 101 in the first phase, 23 in the second and 53 in the third.
In the next phase, the total number of drought-hit taluks may rise to around 220. Our Government remains committed to extending necessary support to farmers and people affected by the drought. -
Dr. G Parameshwara
@DrParameshwara
ಬರ ಪರಿಸ್ಥಿತಿಯಿಂದ ಗ್ರಾಮೀಣ ಪ್ರದೇಶದ ಕಾರ್ಮಿಕರು ಉದ್ಯೋಗಕ್ಕಾಗಿ ಗುಳೆ ಹೋಗುವುದನ್ನು ತಪ್ಪಿಸಲು ವಿಬಿ-ಜಿ ರಾಮ್ ಜಿ ಯೋಜನೆಯಡಿ 136 ಲಕ್ಷ ಮಾನವ ದಿನಗಳ ಉದ್ಯೋಗ ಸೃಷ್ಟಿಸಲು ಕ್ರಮ ಕೈಗೊಳ್ಳಲಾಗಿದೆ. ಇದಕ್ಕಾಗಿ ಸಪ್ಲಿಮೆಂಟರಿ ಬಜೆಟ್ನಲ್ಲಿ ₹2,280 ಕೋಟಿ ಮೀಸಲಿಡಲಾಗಿದೆ.
ಬರದ ಸಂಕಷ್ಟದ ಸಮಯದಲ್ಲಿ ಜನರಿಗೆ ನೆರವು ನೀಡುವುದಷ್ಟೇ ಅಲ್ಲ, ಅವರ ಕೈಗೆ ಕೆಲಸ ನೀಡಿ, ಕುಟುಂಬದ ಬದುಕಿಗೆ ಆಸರೆ ಒದಗಿಸುವುದು ನಮ್ಮ ಸರ್ಕಾರದ ಸಂಕಲ್ಪ. ಗ್ರಾಮೀಣ ಪ್ರದೇಶಗಳಲ್ಲೇ ಉದ್ಯೋಗದ ಅವಕಾಶಗಳನ್ನು ಹೆಚ್ಚಿಸುವುದು ನಮ್ಮ ಆದ್ಯತೆಯಾಗಿದೆ.
To prevent rural workers from migrating in search of jobs during the drought, steps have been taken to generate 136 lakh person-days of employment under the VB-G RAM G Scheme. For this, ₹2,280 crore has been allocated in the Supplementary Budget.
During drought, our Government’s aim is not only to provide relief, but also to create employment and support families’ livelihoods. Expanding job opportunities within rural areas remains our priority. -
Dr. G Parameshwara
@DrParameshwara
ಕುಡಿಯುವ ನೀರಿನ ಸಮಸ್ಯೆ ಎದುರಾಗದಂತೆ ನಮ್ಮ ಸರ್ಕಾರ ಮುನ್ನೆಚ್ಚರಿಕೆಯೊಂದಿಗೆ ಅಗತ್ಯ ಅನುದಾನವನ್ನು ಬಿಡುಗಡೆ ಮಾಡಿ, ತ್ವರಿತ ಕ್ರಮ ಕೈಗೊಳ್ಳುತ್ತಿದೆ.
ಮುಖ್ಯಮಂತ್ರಿಗಳ ಸೂಚನೆಯಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಮೂಲಕ ಜಿಲ್ಲಾಧಿಕಾರಿಗಳಿಗೆ ಕುಡಿಯುವ ನೀರಿನ ಉದ್ದೇಶಕ್ಕಾಗಿ ಅನುದಾನ ಬಿಡುಗಡೆ ಮಾಡಲಾಗಿದೆ. ಸಣ್ಣ ಜಿಲ್ಲೆಗಳಿಗೆ ₹3 ಕೋಟಿ, ದೊಡ್ಡ ಜಿಲ್ಲೆಗಳಿಗೆ ₹5 ರಿಂದ 6 ಕೋಟಿ ಸೇರಿದಂತೆ ಸರಾಸರಿ ₹5 ಕೋಟಿಯಷ್ಟು ಅನುದಾನ ನೀಡಲಾಗಿದೆ.
ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಯಾವುದೇ ಪಕ್ಷಪಾತವಿಲ್ಲದೆ ಪ್ರತಿಯೊಬ್ಬ ಶಾಸಕರಿಗೂ ₹1 ಕೋಟಿ ಅನುದಾನ ನೀಡಲಾಗಿದೆ. ಆ ಹಣವನ್ನು ಈಗ ಬಳಸಲಾಗುತ್ತಿದೆ. ಈಗಾಗಲೇ ಹಲವು ಕಡೆಗಳಲ್ಲಿ ಕ್ರಿಯಾ ಯೋಜನೆ ರೂಪಿಸಿ ಕೊಳವೆಬಾವಿ ಕೊರೆಸುವುದು, ಪೈಪ್ಡ್ ವಾಟರ್ ಸಪ್ಲೈ, ಪೈಪ್ಲೈನ್ ವಿಸ್ತರಣೆ ಹಾಗೂ ಹೈಡ್ರೋಫ್ರ್ಯಾಕ್ಚರ್ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ.
ಜನರಿಗೆ ಕುಡಿಯುವ ನೀರು ಒದಗಿಸುವುದು ಸರ್ಕಾರದ ಜವಾಬ್ದಾರಿ. ಬರದ ಸಂಕಷ್ಟದಲ್ಲೂ ಪ್ರತಿಯೊಂದು ಪ್ರದೇಶದ ಅಗತ್ಯಕ್ಕೆ ಅನುಗುಣವಾಗಿ ತಕ್ಷಣ ಸ್ಪಂದಿಸುತ್ತಿದ್ದೇವೆ.
Our Government is taking precautionary measures and releasing the necessary funds to ensure that people do not face drinking water shortages.
As directed by the Chief Minister, funds have been released to Deputy Commissioners through the Rural Development and Panchayat Raj Department exclusively for drinking water. Smaller districts have received ₹3 crore, while larger districts have been provided ₹5–6 crore, with an average allocation of around ₹5 crore.
With drinking water needs increasing, ₹1 crore has also been provided to every MLA without any discrimination. These funds are being used for measures such as drilling borewells, piped water supply, pipeline extensions and hydro-fracturing works.
Providing drinking water is the Government’s responsibility. Even amid drought, we are responding swiftly to the needs of every region. -
Dr. G Parameshwara
@DrParameshwara
ಜಾನುವಾರುಗಳು ರೈತರ ಆಸ್ತಿ. ಬರ ಪರಿಸ್ಥಿತಿಯಲ್ಲಿ ಅವುಗಳಿಗೆ ಮೇವು ಮತ್ತು ನೀರಿನ ಕೊರತೆಯಾಗದಂತೆ ನಮ್ಮ ಸರ್ಕಾರ ಆದ್ಯತೆಯಿಂದ ಕ್ರಮ ಕೈಗೊಳ್ಳುತ್ತಿದೆ.
ಮೇವಿನ ಕಿಟ್ಗಳ ವಿತರಣೆಗೆ ಈಗಾಗಲೇ ₹25 ಕೋಟಿ ಬಿಡುಗಡೆ ಮಾಡಲಾಗಿದ್ದು, ಇನ್ನೂ 3ರಿಂದ 4 ಲಕ್ಷ ಮೇವಿನ ಕಿಟ್ಗಳನ್ನು ವಿತರಿಸಲು ಕ್ರಮ ಕೈಗೊಳ್ಳಲಾಗಿದೆ. ಕೆಎಂಎಫ್ ಮೂಲಕವೂ ಪ್ರತಿ ಜಿಲ್ಲೆಯಲ್ಲಿ 4ರಿಂದ 5 ಲಕ್ಷ ಮೇವಿನ ಕಿಟ್ಗಳ ವಿತರಣೆಗೆ ವ್ಯವಸ್ಥೆ ಮಾಡಲಾಗಿದೆ.
ಜಾನುವಾರುಗಳಿಗೆ ಮೇವು ಕೊರತೆಯಾಗದಂತೆ ಅಗತ್ಯವಿರುವ ಕಡೆ ಮೇವು ಬೆಳೆಯಲು ರೈತರಿಗೆ ಕಿಟ್ಗಳನ್ನು ಒದಗಿಸಲಾಗುತ್ತಿದೆ. ಪರಿಸ್ಥಿತಿ ಮತ್ತಷ್ಟು ಗಂಭೀರವಾದರೆ ಗೋಶಾಲೆ ಹಾಗೂ ಮೇವು ಬ್ಯಾಂಕ್ಗಳನ್ನು ಆರಂಭಿಸಲು ಜಿಲ್ಲಾಧಿಕಾರಿಗಳಿಗೆ ಈಗಾಗಲೇ ಸೂಚನೆ ನೀಡಲಾಗಿದೆ.
ಬರ ಸಂಕಷ್ಟದಲ್ಲಿ ರೈತರ ಜೊತೆಗೆ, ಅವರ ಜಾನುವಾರುಗಳ ರಕ್ಷಣೆಯೂ ಸರ್ಕಾರದ ಆದ್ಯತೆಯಾಗಿದೆ.
Livestock are an important asset for farmers. During the drought, our Government is giving priority to ensuring that they do not face shortages of fodder or water.
₹25 crore has already been released for fodder kit distribution, and steps are being taken to distribute another 3–4 lakh fodder kits. Arrangements have also been made through KMF to distribute 4–5 lakh fodder kits in each district.
Farmers are being provided kits to grow fodder wherever required. If the situation worsens, Deputy Commissioners have already been instructed to open cattle shelters and fodder banks.
During the drought, protecting both farmers and their livestock remains a priority for our Government. -
Dr. G Parameshwara
@DrParameshwara
ಬೆಳೆ ನಷ್ಟದ ಅನಿಶ್ಚಿತತೆಯ ನಡುವೆ ರೈತರಿಗೆ ಬೆಳೆ ವಿಮೆ ಒಂದು ಪ್ರಮುಖ ಭದ್ರತೆಯಾಗಿದೆ. ರೈತರ ಈ ಅಗತ್ಯವನ್ನು ಮನಗಂಡು, ಬೆಳೆ ವಿಮೆ ವ್ಯಾಪ್ತಿಯನ್ನು ವಿಸ್ತರಿಸುವ ನಿಟ್ಟಿನಲ್ಲಿ ಸರ್ಕಾರ ನಿರಂತರವಾಗಿ ಕ್ರಮ ಕೈಗೊಂಡಿದೆ.
2020–21ರಲ್ಲಿ 15 ಲಕ್ಷ, 2021–22ರಲ್ಲಿ 15 ಲಕ್ಷ, 2024–25ರಲ್ಲಿ 34 ಲಕ್ಷ ರೈತರು ನೋಂದಾಯಿಸಿಕೊಂಡಿದ್ದರೆ, 2026–27ರಲ್ಲಿ ಈ ಸಂಖ್ಯೆ 49 ಲಕ್ಷಕ್ಕೆ ಏರಿಕೆಯಾಗಿದೆ.
ಇದು ಕೇವಲ ನೋಂದಣಿಯ ಸಂಖ್ಯೆಯಲ್ಲ; ಬದಲಿಗೆ ಬೆಳೆ ವಿಮೆಯತ್ತ ರೈತರ ಹೆಚ್ಚುತ್ತಿರುವ ಆಸಕ್ತಿ ಹಾಗೂ ಕೃಷಿಯಲ್ಲಿನ ಅನಿಶ್ಚಿತತೆಯ ನಡುವೆ ಭದ್ರತೆಯ ಅಗತ್ಯವನ್ನು ತೋರಿಸುತ್ತದೆ. ರೈತನ ಬೆವರಿನ ಶ್ರಮಕ್ಕೆ ಭದ್ರತೆ ನೀಡುವ ನಿಟ್ಟಿನಲ್ಲಿ, ಪ್ರತಿಯೊಂದು ಹೆಜ್ಜೆಯಲ್ಲೂ ಸರ್ಕಾರ ರೈತರ ಜೊತೆಗಿರಲಿದೆ.
Amid the uncertainty of crop loss, crop insurance remains an important safety net for farmers. Recognising this need, the Government has continuously worked to expand crop insurance coverage.
While 15 lakh farmers enrolled in 2020–21, 15 lakh in 2021–22 and 34 lakh in 2024–25, the number has risen to a record 49 lakh farmers in 2026–27.
This is not just a rise in enrolment; it reflects farmers’ growing reliance on crop insurance and the need for greater security amid agricultural uncertainty.
Our Government will continue to stand with farmers at every step and protect the value of their hard work. -
Dr. G Parameshwara
@DrParameshwara
ಮಳೆ ಕೊರತೆಯ ಪರಿಣಾಮ ಅನ್ನದಾತನ ಬದುಕಿಗೆ ಹೊರೆಯಾಗದಂತೆ ಸರ್ಕಾರ ಮುನ್ನೆಚ್ಚರಿಕೆಯ ಹೆಜ್ಜೆಗಳನ್ನು ಇಡುತ್ತಿದೆ. ಜಿಲ್ಲೆಗಳಲ್ಲಿನ ಪರಿಸ್ಥಿತಿಯನ್ನು ನಿರಂತರವಾಗಿ ಅವಲೋಕಿಸಿ, ಅಗತ್ಯವಿರುವ ಕಡೆ ತ್ವರಿತವಾಗಿ ಸ್ಪಂದಿಸಲಾಗುತ್ತಿದೆ.
ವಿಜಯನಗರದಲ್ಲಿ ಶೇ.63ರಷ್ಟು ಮಳೆ ಕೊರತೆ ದಾಖಲಾಗಿದ್ದು, ಇದು ರಾಜ್ಯದಲ್ಲೇ ಅತ್ಯಧಿಕವಾಗಿದೆ. ಬಳ್ಳಾರಿ ಶೇ.58, ಚಿಕ್ಕಬಳ್ಳಾಪುರ ಮತ್ತು ಕೊಪ್ಪಳ ಶೇ.52, ಕಲಬುರಗಿ ಶೇ.51, ಹಾವೇರಿ ಶೇ.49, ಗದಗ ಮತ್ತು ತುಮಕೂರು ಶೇ.45, ದಾವಣಗೆರೆ ಶೇ.44 ಹಾಗೂ ಬೀದರ್ನಲ್ಲಿ ಶೇ.40ರಷ್ಟು ಕೊರತೆ ಕಂಡುಬಂದಿದೆ. ಎಲ್ಲಾ ಜಿಲ್ಲೆಗಳಲ್ಲೂ ಮಳೆ ಕೊರತೆ ಶೇ.35ಕ್ಕಿಂತ ಹೆಚ್ಚಿದೆ.
ಬರ ಪರಿಸ್ಥಿತಿಯಿಂದ ಕಂಗಾಲಾಗಿರುವ ರೈತರ ಬದುಕಿನಲ್ಲಿ ಭರವಸೆ ಮೂಡಿಸುವ ನಿಟ್ಟಿನಲ್ಲಿ ಸರ್ಕಾರ ನಿರಂತರವಾಗಿ ಕಾರ್ಯನಿರ್ವಹಿಸಲಿದೆ.
The Government is taking precautionary measures to ensure that rainfall deficiency does not become an added burden on farmers. The situation across districts is being continuously monitored, with swift action wherever required.
Vijayanagara has recorded the highest rainfall deficit in the State at 63%, followed by Ballari at 58%, Chikkaballapur and Koppal at 52%, Kalaburagi at 51%, Haveri at 49%, Gadag and Tumakuru at 45%, Davanagere at 44%, and Bidar at 40%. Rainfall deficit in all these districts is above 35%.
Our Government will continue working to bring relief and confidence to farmers facing the hardship of drought. -
Dr. G Parameshwara
@DrParameshwara
ರಾಜ್ಯದಲ್ಲಿ ಮಳೆ ಕೊರತೆಯನ್ನು ಸಮರ್ಪಕವಾಗಿ ನಿಭಾಯಿಸುವ ನಿಟ್ಟಿನಲ್ಲಿ ನಮ್ಮ ಸರ್ಕಾರದಿಂದ ಅನೇಕ ಮುಂಜಾಗ್ರತೆ ಕ್ರಮಗಳನ್ನು ಕೈಗೊಳ್ಳಲಾಗಿತ್ತು. ಬಳಿಕ ಪರಿಸ್ಥಿತಿಯನ್ನು ಹಂತ-ಹಂತವಾಗಿ ಪರಿಶೀಲಿಸುತ್ತ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.
ಸಚಿವರು ಬಾಧಿತ ಸ್ಥಳಗಳಿಗೆ ಭೇಟಿ ನೀಡಿ ಖುದ್ದಾಗಿ ಪರಿಸ್ಥಿತಿಯನ್ನು ಅರಿತುಕೊಳ್ಳುವುದರಿಂದ ಹಿಡಿದು, ಅಧಿಕಾರಿಗಳು ನಿರಂತರವಾಗಿ ನಿಗಾವಹಿಸುವುದರಿಂದ ಹಾಗೂ ಜಿಲ್ಲೆಯಿಂದ ರಾಜ್ಯಮಟ್ಟದವರೆಗೆ ನಡೆಯುತ್ತಿರುವ ಸಮಾಲೋಚನೆಗಳ ಮೂಲಕ ಅಗತ್ಯ ಕ್ರಮಗಳಿಗೆ ವೇಗ ನೀಡಲಾಗುತ್ತಿದೆ.
ಟಾಸ್ಕ್ಫೋರ್ಸ್ ಸಭೆಗಳಲ್ಲಿಯೂ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಪರಿಶೀಲಿಸಿ, ಅಗತ್ಯ ನೆರವು ತಲುಪಿಸುವ ಬಗ್ಗೆ ತೀರ್ಮಾನಗಳನ್ನು ಕೈಗೊಳ್ಳಲಾಗುತ್ತಿದೆ.
ಬರದ ಸಂಕಷ್ಟದಲ್ಲಿ ಜನರ ಬದುಕಿಗೆ ಧೈರ್ಯ ತುಂಬಿ, ಅಗತ್ಯ ನೆರವು ತಲುಪಿಸುವ ಹೊಣೆಗಾರಿಕೆಯನ್ನು ಸರ್ಕಾರ ಸಮರ್ಥವಾಗಿ ನಿಭಾಯಿಸುತ್ತಿದೆ.
Our Government took several precautionary measures to manage the rainfall deficit effectively and has continued to review the situation in phases, taking necessary action as conditions evolve.
From Ministers personally visiting affected areas to assess the situation, to continuous monitoring by officials and consultations from the district to the State level, necessary measures are being expedited. Task force meetings are also closely reviewing the situation and taking decisions to ensure required assistance reaches affected areas.
Our Government is effectively fulfilling its responsibility to stand by people during the drought and ensure timely support reaches them. -
Dr. G Parameshwara
@DrParameshwara
ಬರ ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸಿ, ಜನರು ಹಾಗೂ ರೈತರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಸರ್ಕಾರ ನಿರಂತರವಾಗಿ ಕಾರ್ಯನಿರ್ವಹಿಸುತ್ತಿದೆ.
ಇಲ್ಲಿಯವರೆಗೆ ಜಿಲ್ಲಾಮಟ್ಟದಲ್ಲಿ 270 ಸಭೆಗಳು, ಟಾಸ್ಕ್ಫೋರ್ಸ್ನಿಂದ 832 ಸಭೆಗಳು, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ನೇತೃತ್ವದಲ್ಲಿ 8 ಸಭೆಗಳು, ನನ್ನ ನೇತೃತ್ವದಲ್ಲಿ 9 ಸಭೆಗಳು ಹಾಗೂ ವಿಭಾಗೀಯ ಆಯುಕ್ತರಿಂದ 10 ಸಭೆಗಳು ನಡೆದಿವೆ. ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳೊಂದಿಗೆ ವೀಡಿಯೊ ಕಾನ್ಫರೆನ್ಸ್ ಮೂಲಕ ಸಭೆ ನಡೆಸಿ, ಬರ ನಿರ್ವಹಣೆ, ಕುಡಿಯುವ ನೀರು ಹಾಗೂ ಜನರ ಅಗತ್ಯಗಳಿಗೆ ತಕ್ಷಣ ಸ್ಪಂದಿಸುವಂತೆ ಅಗತ್ಯ ನಿರ್ದೇಶನಗಳನ್ನು ನೀಡಲಾಗಿದೆ.
ಸಂಕಷ್ಟದ ಸಮಯದಲ್ಲಿ ಜನರ ಜೊತೆ ನಿಂತು, ಅಗತ್ಯ ನೆರವು ತಲುಪಿಸುವುದು ನಮ್ಮ ಬದ್ಧತೆ.
The Government is continuously working to manage the drought effectively and ensure that people and farmers do not face hardship.
So far, 270 district-level meetings, 832 task force meetings, 8 meetings chaired by Chief Minister D.K. Shivakumar, 9 meetings under my leadership, and 10 meetings by Divisional Commissioners have been held. Video conferences have also been conducted with Deputy Commissioners and Zilla Panchayat CEOs, with necessary directions to respond immediately to drought management, drinking water needs and other public requirements.
Our commitment is to stand with people in difficult times and ensure timely assistance reaches them. -
Dr. G Parameshwara
@DrParameshwara
ಮಳೆಯ ಕೊರತೆ ರೈತನ ಹೊಲದ ಮೇಲಷ್ಟೇ ಅಲ್ಲ, ಅವರ ಕುಟುಂಬದ ಬದುಕಿನ ಮೇಲೂ ಪರಿಣಾಮ ಬೀರುತ್ತದೆ. ಜೂನ್ನಿಂದ ಸೆಪ್ಟೆಂಬರ್ವರೆಗೆ ರಾಜ್ಯದಲ್ಲಿ ವಾಡಿಕೆ ಮಳೆಯ ಪ್ರಮಾಣ 809 ಮಿ.ಮೀ. ಇದ್ದರೆ, ಈ ಅವಧಿಯಲ್ಲಿ 524 ಮಿ.ಮೀ. ಮಳೆಯಷ್ಟೇ ದಾಖಲಾಗಿದೆ. ಅಂದರೆ ಶೇ.36ರಷ್ಟು ಮಳೆ ಕೊರತೆ ಉಂಟಾಗಿದೆ.
ಮಳೆಯ ಕೊರತೆ ಕೃಷಿ ಚಟುವಟಿಕೆಗಳಿಗೆ ಸವಾಲು ತಂದಿರುವ ಸಂದರ್ಭದಲ್ಲಿ, ರೈತರು ಹಾಗೂ ಜನಸಾಮಾನ್ಯರ ಹಿತ ಕಾಪಾಡಲು ಸರ್ಕಾರ ಅಗತ್ಯ ಮುನ್ನೆಚ್ಚರಿಕೆ ಮತ್ತು ಪರಿಹಾರ ಕ್ರಮಗಳನ್ನು ಕೈಗೊಳ್ಳುತ್ತಿದೆ.
ಬರದ ಕಷ್ಟದಲ್ಲಿ ರೈತರು ಒಂಟಿಯಾಗದಂತೆ, ಸರ್ಕಾರ ನೆರವಿನ ಹಸ್ತದೊಂದಿಗೆ ಸದಾ ಜೊತೆಗಿರಲಿದೆ.
Rainfall shortage affects not only a farmer’s field, but the livelihood of the entire family. From June to September, against the normal rainfall of 809 mm, the State received only 524 mm, resulting in a 36% rainfall deficit.
As this deficit has affected agricultural activity, the Government is taking necessary precautionary and relief measures to protect the interests of farmers and the public.
Through the hardship of drought, farmers will not be left to face the crisis alone. Our Government will continue to stand by them with necessary support. -
Dr. G Parameshwara
@DrParameshwara
ಈ ಬಾರಿ ಮುಂಗಾರು ಆರಂಭದಿಂದಲೇ ಮಳೆ ಪ್ರಮಾಣದಲ್ಲಿ ಏರಿಳಿತ ಕಂಡುಬಂದಿದ್ದು, ವಾಡಿಕೆಗಿಂತ ಕಡಿಮೆ ಮಳೆಯಾಗಿದೆ. ಕೃಷಿ ಚಟುವಟಿಕೆಗಳ ಮೇಲೂ ಪರಿಣಾಮ ಬೀರಿದೆ.
ಜೂನ್ನಲ್ಲಿ ಶೇ.42, ಜುಲೈನಲ್ಲಿ ಶೇ.29, ಆಗಸ್ಟ್ನಲ್ಲಿ ಶೇ.23 ಹಾಗೂ ಸೆಪ್ಟೆಂಬರ್ನಲ್ಲಿ ಶೇ.61ರಷ್ಟು ಮಳೆ ಕೊರತೆ ದಾಖಲಾಗಿದೆ. ಅದರಲ್ಲೂ ಸೆಪ್ಟೆಂಬರ್ನ ಮಳೆ ಕೊರತೆ ಪರಿಸ್ಥಿತಿಯ ಗಂಭೀರತೆಯನ್ನು ಮತ್ತಷ್ಟು ಹೆಚ್ಚಿಸಿದೆ.
ಮಳೆ ಕೊರತೆಯಿಂದ ಸಂಕಷ್ಟದಲ್ಲಿರುವ ರೈತರಿಗೆ ನೆರವಾಗುವ ದೃಷ್ಟಿಯಿಂದ ಸರ್ಕಾರವು ಸರ್ವಸನ್ನದ್ಧವಾಗಿ ಕೆಲಸ ಮಾಡುತ್ತಿದೆ. ಪರಿಹಾರ ಕ್ರಮಗಳನ್ನು ಸಮರೋಪಾದಿಯಲ್ಲಿ ನಡೆಸುತ್ತಿದೆ. ರೈತರ ಹಿತವೇ ನಮ್ಮ ಸರ್ಕಾರದ ಮೊದಲ ಆದ್ಯತೆಯಾಗಿದೆ.
This monsoon season has seen significant fluctuations in rainfall, with overall rainfall remaining below normal and affecting agricultural activity across the State.
Rainfall deficit stood at 42% in June, 29% in July, 23% in August and 61% in September. The sharp deficit in September has further intensified the situation.
Our Government is fully prepared to support farmers affected by the rainfall shortage and is carrying out relief measures on a war footing. Protecting farmers’ interests remains our Government’s foremost priority. -
Dr. G Parameshwara
@DrParameshwara
ಬರದಿಂದ ಸಂಕಷ್ಟಕ್ಕೀಡಾಗಿರುವ ಸುಮಾರು 40 ರಿಂದ 50 ಲಕ್ಷ ರೈತರಿಗೆ ತಲಾ ₹2,500 ಇನ್ಪುಟ್ ಸಬ್ಸಿಡಿ ನೀಡಲು ನಮ್ಮ ಸರ್ಕಾರ ನಿರ್ಧರಿಸಿದೆ. ಕೇಂದ್ರ ಸರ್ಕಾರದ ನೆರವನ್ನು ನಿರೀಕ್ಷಿಸುತ್ತ ಕುಳಿತರೆ ಈಗಾಗಲೇ ಸಂಕಷ್ಟದಲ್ಲಿರುವ ರೈತರು ಮತ್ತಷ್ಟು ಕಷ್ಟಗಳಿಗೆ ಒಳಗಾಗುತ್ತಾರೆ ಎಂಬ ಕಾರಣಕ್ಕೆ ನಮ್ಮ ಸರ್ಕಾರವೇ ನೆರವಿಗೆ ಧಾವಿಸಿದೆ.
ಎನ್ಡಿಆರ್ಎಫ್ ನೆರವಿನ ನಿರೀಕ್ಷೆಯಲ್ಲಿ ರಾಜ್ಯದ ಬೊಕ್ಕಸದಿಂದಲೇ ₹1,250 ಕೋಟಿ ಹಣವನ್ನು ವಿನಿಯೋಗಿಸುತ್ತಿದ್ದೇವೆ. ರಾಜ್ಯದ ಸಂಪನ್ಮೂಲಗಳಿಂದಲೇ ತಕ್ಷಣದ ಪರಿಹಾರ ಒದಗಿಸುವ ಮೂಲಕ ರೈತಪರ ಮತ್ತು ಮಾನವೀಯ ಆಡಳಿತಕ್ಕೆ ಸರ್ಕಾರ ಬದ್ಧವಾಗಿದೆ.
ಅನ್ನದಾತರ ಜೊತೆ ನಮ್ಮ ಸರ್ಕಾರವಿದೆ. ಸಂಕಷ್ಟದ ಸಮಯದಲ್ಲಿ ಅವರ ಕೈ ಎಂದೂ ಬಿಡೆವು...
Our Government has decided to provide an input subsidy of ₹2,500 each to around 40–50 lakh farmers affected by drought. Waiting for assistance from the Union Government would only add to the hardship of farmers already in distress, which is why our Government has stepped in with immediate support.
While awaiting NDRF assistance, we are providing ₹1,250 crore from the State exchequer. By extending immediate relief from the State’s own resources, our Government remains committed to farmer-friendly and humane governance.
Our Government stands with the farmers. We will never leave their side in times of distress. -
Dr. G Parameshwara
@DrParameshwara
ವಿಶ್ವವಿಖ್ಯಾತ ಮೈಸೂರು ದಸರಾ ನಮ್ಮ ನಾಡಿನ ಇತಿಹಾಸ, ಸಂಸ್ಕೃತಿ, ಕಲೆ, ಸಾಹಿತ್ಯ ಮತ್ತು ಜನಪದ ಪರಂಪರೆಯನ್ನು ಪ್ರತಿಬಿಂಬಿಸುವ ಮಹೋತ್ಸವವಾಗಿದೆ. ನಾಡಿನ ವೈವಿಧ್ಯತೆ ಮತ್ತು ಸಾಮರಸ್ಯವನ್ನು ಒಂದೇ ವೇದಿಕೆಯಲ್ಲಿ ಸಂಭ್ರಮಿಸುವ ಅಪೂರ್ವ ಹಬ್ಬವೂ ಹೌದು.
ಈ ಬಾರಿಯ ದಸರಾ ಹಬ್ಬವನ್ನು ಕೊಪ್ಪಳ ಗವಿಮಠದ ಪರಮಪೂಜ್ಯ ಶ್ರೀ ಅಭಿನವ ಗವಿಸಿದ್ಧೇಶ್ವರ ಮಹಾಸ್ವಾಮೀಜಿಗಳು ಉದ್ಘಾಟಿಸಲಿರುವುದು ಸಂತಸದ ಸಂಗತಿ. ಅವರ ದಿವ್ಯ ಸಾನ್ನಿಧ್ಯದಲ್ಲಿ ನಾಡಹಬ್ಬದ ಗೌರವ ಮತ್ತು ಪಾವಿತ್ರ್ಯ ಮತ್ತಷ್ಟು ಹೆಚ್ಚಲಿದೆ. ಭಕ್ತಿ, ಸಂತಸ ಮತ್ತು ಸಂಭ್ರಮದ ವಾತಾವರಣ ಮೂಡಲಿದೆ.
The world-renowned Mysuru Dasara is a grand celebration that reflects the history, culture, art, literature and folk traditions of our land. It is also a unique festival that brings together Karnataka’s diversity and harmony on one platform.
It is a matter of great joy that this year’s Dasara will be inaugurated by Sri Abhinava Gavisiddeshwara Mahaswamiji of Koppal Gavi Matha. His divine presence will further enhance the dignity and sanctity of our Nada Habba, creating an atmosphere of devotion, joy and celebration.
#mysurudasara2026 -
Dr. G Parameshwara
@DrParameshwara
ಇಂದು ನನಗೆ ಸಿಕ್ಕಿರುವ ಅಧಿಕಾರ, ಹುದ್ದೆ ಎಲ್ಲವೂ ಕನ್ನಡ ಜನತೆಯ ಪ್ರೀತಿ ಮತ್ತು ಆಶೀರ್ವಾದದ ಸಂಕೇತ.
ನೀವು ನೀಡಿರುವ ಜವಾಬ್ದಾರಿಯನ್ನು ನಾನು ಸಮರ್ಥವಾಗಿ ನಿಭಾಯಿಸಿದ್ದೇನೆ ಎನ್ನುವ ಸಂತೃಪ್ತಿ ನನಗಿದೆ. ಅದನ್ನು ನಿಮ್ಮ ಮಾತುಗಳಲ್ಲಿ ಕೇಳುವಾಗ ಮತ್ತಷ್ಟು ಖುಷಿಯಾಗುತ್ತದೆ.
ಈ ಪ್ರೀತಿ - ವಿಶ್ವಾಸಕ್ಕೆ ಧನ್ಯವಾದಗಳು.This media couldn't be displayed. See it on the original post. -
Dr. G Parameshwara
@DrParameshwara
My response on behalf of the Government to the discussion on the drought situation in the Legislature, as covered in today’s newspapers.
ಬರ ಪರಿಸ್ಥಿತಿ ಕುರಿತ ಚರ್ಚೆಗೆ ವಿಧಾನಮಂಡಲದಲ್ಲಿ ಸರ್ಕಾರದ ಪರವಾಗಿ ನಾನು ನೀಡಿದ ಉತ್ತರ ಇಂದಿನ ಪತ್ರಿಕೆಗಳಲ್ಲಿ.. -
Dr. G Parameshwara
@DrParameshwara
ಬರ ಪರಿಸ್ಥಿತಿ ಕುರಿತ ಚರ್ಚೆಗೆ ವಿಧಾನಮಂಡಲದಲ್ಲಿ ಸರ್ಕಾರದ ಪರವಾಗಿ ನಾನು ನೀಡಿದ ಉತ್ತರ ಇಂದಿನ ಪತ್ರಿಕೆಗಳಲ್ಲಿ..
My response on behalf of the Government to the discussion on the drought situation in the Legislature, as covered in today’s newspapers. -
Dr. G Parameshwara
@DrParameshwara
ಬರ ಪರಿಸ್ಥಿತಿ ಕುರಿತ ಚರ್ಚೆಗೆ ವಿಧಾನಮಂಡಲದಲ್ಲಿ ಸರ್ಕಾರದ ಪರವಾಗಿ ನಾನು ನೀಡಿದ ಉತ್ತರ ಇಂದಿನ ಪತ್ರಿಕೆಗಳಲ್ಲಿ..
My response on behalf of the Government to the discussion on the drought situation in the Legislature, as covered in today’s newspapers. -
Dr. G Parameshwara
@DrParameshwara
ರೈತರು ಬೆಳೆದ ಬೆಳೆ, ಅವರ ಬದುಕು ಮತ್ತು ಆರ್ಥಿಕ ಭದ್ರತೆಗೆ ಬೆಂಬಲವಾಗಿ ನಿಲ್ಲುವ ನಿಟ್ಟಿನಲ್ಲಿ ನಮ್ಮ ಸರ್ಕಾರ ಹಲವು ಪರಿಣಾಮಕಾರಿ ಕ್ರಮಗಳನ್ನು ಜಾರಿಗೊಳಿಸುತ್ತಿದೆ. ಸಂಕಷ್ಟದ ಸಂದರ್ಭದಲ್ಲಿ ರೈತರಿಗೆ ಅಗತ್ಯ ರಕ್ಷಣೆ ಹಾಗೂ ನೆರವು ತಲುಪಿಸುವುದು ನಮ್ಮ ಆದ್ಯತೆಯಾಗಿದೆ.
ದಾಖಲೆ ಪ್ರಮಾಣದಲ್ಲಿ ಬೆಳೆ ವಿಮೆ ಮಾಡಿಸುವ ಮೂಲಕ ರೈತರ ಬೆಳೆಗಳಿಗೆ ವಿಮಾ ಭದ್ರತೆ ಕಲ್ಪಿಸಲಾಗಿದ್ದು, ಬೆಳೆ ನಷ್ಟದ ಸಂದರ್ಭದಲ್ಲಿ ರೈತರಿಗೆ ಆರ್ಥಿಕ ನೆರವು ದೊರೆಯುವಂತೆ ಕ್ರಮ ಕೈಗೊಳ್ಳಲಾಗಿದೆ.
ಜೊತೆಗೆ ಮೈಕ್ರೋಫೈನಾನ್ಸ್ ಸಂಸ್ಥೆಗಳ ಕಿರುಕುಳಕ್ಕೆ ಕಡಿವಾಣ ಹಾಕಲು ಕಾನೂನು ಕ್ರಮಗಳನ್ನು ಮತ್ತಷ್ಟು ಬಿಗಿಗೊಳಿಸಲಾಗಿದ್ದು, ರೈತರು ಹಾಗೂ ಸಾಲಗಾರರನ್ನು ಅನಗತ್ಯ ಒತ್ತಡದಿಂದ ರಕ್ಷಿಸಲು ಸರ್ಕಾರ ಬದ್ಧವಾಗಿದೆ. ರೈತರೊಂದಿಗೆ ಸರ್ಕಾರ ಸದಾ ನಿಂತಿದ್ದು, ಅವರ ಸಂಕಷ್ಟಕ್ಕೆ ಪರಿಹಾರ ಒದಗಿಸುವ ಕಾರ್ಯ ಮುಂದುವರಿಯಲಿದೆ.
Our Government is implementing several measures to protect farmers’ crops, livelihoods and financial security, while ensuring timely support during distress.
Farmers have been provided record-level crop insurance coverage, helping ensure financial assistance in the event of crop loss.
At the same time, legal measures have been strengthened to curb harassment by microfinance institutions and protect farmers and borrowers from undue pressure.
Our Government will continue to stand with farmers and respond to their difficulties with necessary support. -
Dr. G Parameshwara
@DrParameshwara
ಬರ ಪರಿಸ್ಥಿತಿಯಿಂದ ರೈತರು ಹಾಗೂ ಗ್ರಾಮೀಣ ಜನರು ಎದುರಿಸುತ್ತಿರುವ ಸಂಕಷ್ಟಕ್ಕೆ ಸ್ಪಂದಿಸಿ, ಅವರ ಬದುಕಿಗೆ ಅಗತ್ಯವಾದ ನೆರವು ಒದಗಿಸುವ ನಿಟ್ಟಿನಲ್ಲಿ ನಮ್ಮ ಸರ್ಕಾರ ಹಲವು ಕ್ರಮಗಳನ್ನು ಕೈಗೊಂಡಿದೆ.
ಗ್ರಾಮೀಣ ಭಾಗದಲ್ಲಿ ಉದ್ಯೋಗಾವಕಾಶಗಳನ್ನು ಹೆಚ್ಚಿಸುವ ಮೂಲಕ ವಲಸೆ ತಡೆಯಲು ಗ್ರಾಮೀಣ ಉದ್ಯೋಗಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಜಾನುವಾರುಗಳ ಮೇವಿನ ಕೊರತೆಯಾಗದಂತೆ ಮೇವಿನ ಪೂರೈಕೆಗೆ ಆದ್ಯತೆ ನೀಡಿದ್ದು, ರೈತರ ಸಂಕಷ್ಟಕ್ಕೆ ನೆರವಾಗಲು ವಿಶೇಷ ಪ್ಯಾಕೇಜ್ ಘೋಷಿಸುವ ಕ್ರಮವೂ ಕೈಗೊಳ್ಳಲಾಗುತ್ತಿದೆ.
ಇದರ ಜೊತೆಗೆ, ಕೃಷಿ ಚಟುವಟಿಕೆಗಳಿಗೆ ಅಗತ್ಯವಾದ ವಿದ್ಯುತ್ ಪೂರೈಕೆಗೆ ಆದ್ಯತೆ ನೀಡಿ ರೈತರ ಪಂಪ್ಸೆಟ್ಗಳಿಗೆ 5–7 ಗಂಟೆಗಳ ವಿದ್ಯುತ್ ಒದಗಿಸಲಾಗುತ್ತಿದೆ. ರೈತರ ಬದುಕು, ಜಾನುವಾರುಗಳ ಸಂರಕ್ಷಣೆ ಹಾಗೂ ಗ್ರಾಮೀಣ ಆರ್ಥಿಕತೆಯ ಬಲವರ್ಧನೆಗೆ ನಮ್ಮ ಸರ್ಕಾರದ ನೆರವು ನಿರಂತರವಾಗಿರಲಿದೆ.
Our Government is taking multiple measures to support farmers and rural communities affected by drought.
Greater emphasis is being placed on rural employment to prevent migration, while priority is being given to fodder supply for livestock. Steps are also being taken to announce a special package for farmers facing distress.
Alongside this, farmers’ pump sets are being provided 5–7 hours of power supply to support agricultural activity.
Our Government’s support will continue to focus on farmers’ livelihoods, livestock protection and strengthening the rural economy. -
Dr. G Parameshwara
@DrParameshwara
ಬರ ಪರಿಸ್ಥಿತಿಯಿಂದ ರೈತರು ಹಾಗೂ ಗ್ರಾಮೀಣ ಜನರು ಎದುರಿಸುತ್ತಿರುವ ಸಂಕಷ್ಟಕ್ಕೆ ಸ್ಪಂದಿಸಿ, ಅವರ ಬದುಕಿಗೆ ಅಗತ್ಯವಾದ ನೆರವು ಒದಗಿಸುವ ನಿಟ್ಟಿನಲ್ಲಿ ನಮ್ಮ ಸರ್ಕಾರ ಹಲವು ಕ್ರಮಗಳನ್ನು ಕೈಗೊಂಡಿದೆ.
ಮಳೆ ಆಧಾರಿತ ಕೃಷಿಯನ್ನು ಮತ್ತಷ್ಟು ಬಲಪಡಿಸಲು ಪ್ರತ್ಯೇಕ ನೀತಿ ಅನುಷ್ಠಾನ, ರೈತರು ಬೆಳೆಯುವ ಉತ್ಪನ್ನಗಳಿಗೆ ಉತ್ತಮ ಮಾರುಕಟ್ಟೆ ಕಲ್ಪಿಸುವ ಉದ್ದೇಶದಿಂದ ರಫ್ತಿಗೆ ಆದ್ಯತೆ, ತೀವ್ರ ಹಾಗೂ ಮಧ್ಯಮ ಬರದ ಪರಿಸ್ಥಿತಿಗೆ ಅನುಗುಣವಾಗಿ ಸಾಲ ಮರುಪಾವತಿ ಅವಧಿ ವಿಸ್ತರಣೆ ಸೇರಿದಂತೆ ಅಗತ್ಯ ಕ್ರಮಗಳನ್ನು ಜಾರಿಗೊಳಿಸಲಾಗುತ್ತಿದೆ.
ಅದೇ ರೀತಿ, ರಾಜ್ಯದ ಯಾವುದೇ ಭಾಗದಲ್ಲಿ ಕುಡಿಯುವ ನೀರಿನ ಕೊರತೆ ಉಂಟಾಗದಂತೆ ಅಗತ್ಯ ಮುನ್ನೆಚ್ಚರಿಕೆ ಹಾಗೂ ಪೂರೈಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ. ರೈತರ ಹಿತಾಸಕ್ತಿ ಮತ್ತು ಗ್ರಾಮೀಣ ಜನರ ಬದುಕಿನ ಭದ್ರತೆಗೆ ನಮ್ಮ ಸರ್ಕಾರ ಸದಾ ಆದ್ಯತೆ ನೀಡಲಿದೆ.
Our Government has taken several measures to support farmers and rural communities affected by drought.
These include a separate policy for rainfed agriculture, promoting exports to secure better markets for farmers’ produce, and extending loan repayment periods based on drought severity.
Necessary measures are also being taken to prevent drinking water shortages across the State.
Our Government will continue to prioritise farmers’ interests and the security of rural livelihoods. -
Dr. G Parameshwara
@DrParameshwara
I have called for an independent inquiry into the functioning of the Election Commission and the removal of Chief Election Commissioner Gyanesh Kumar, as serious questions remain over decisions taken under his leadership.
In a three-member constitutional body, the majority view cannot be bypassed. I also raised concerns over changes to Form 6 and the manner in which key decisions are being taken.
Today’s media coverage of my remarks on the issue.
ಭಾರತೀಯ ಚುನಾವಣಾ ಆಯೋಗದ ಕಾರ್ಯವೈಖರಿಯ ಕುರಿತು ನನ್ನ ಪ್ರತಿಕ್ರಿಯೆ ಇಂದಿನ ಪತ್ರಿಕೆಗಳಲ್ಲಿ.. -
Dr. G Parameshwara
@DrParameshwara
To provide immediate relief to drought-affected farmers, the State Government has decided to give an input subsidy of ₹2,500 to each farmer in the first phase. Around 45–50 lakh farmers will benefit, at a cost of nearly ₹1,250 crore to the State exchequer. While NDRF assistance from the Union Government is awaited, our Government is extending immediate support considering farmers’ distress.
The State Government is already providing several forms of assistance to farmers, including around ₹22,000 crore in power subsidy for free electricity to agricultural pump sets. The ₹1,250 crore first-phase assistance is not a small amount. Further measures will be taken based on the relief received from the Union Government.
The State’s total drought loss is likely to exceed ₹40,000 crore. The first memorandum has already been submitted to the Union Government, and further memoranda will follow. After preparing the final loss estimate, we will submit the relief amount required under NDRF guidelines.
Further relief measures will depend on the assistance extended by the Union Government. At this stage, no commitment can be made on a revised relief amount.
The Union Government has written to the State about sending a team, including an IAS officer, to assess the drought. The visit date is yet to be fixed. Once the Central team assesses the drought and losses as per its guidelines, there will be greater clarity on further relief.
On taking an all-party delegation to Delhi for drought relief, the Chief Minister and I have already clarified in the Legislative Assembly that an all-party meeting will be held, everyone will be taken into confidence, and the delegation will visit Delhi.
We will meet the Prime Minister, Union Home Minister and Union Agriculture Minister to explain Karnataka’s drought situation and farmers’ distress. If Opposition members are willing, the Government is ready to take them along. The date of the Delhi visit is yet to be fixed.
*On the protest seeking higher honorarium for persons with disabilities in Ramanagara: The concerned department should prepare a proposal and place it before the Cabinet. The Chief Minister is also the Finance Minister. If the proposal is discussed with him and brought before the Cabinet, we will all extend our cooperation.
- My remarks to the media near my residence today. -
Dr. G Parameshwara
@DrParameshwara
ಬರದಿಂದ ಸಂಕಷ್ಟಕ್ಕೊಳಗಾಗಿರುವ ರೈತರಿಗೆ ತಕ್ಷಣದ ನೆರವು ನೀಡುವ ಉದ್ದೇಶದಿಂದ ರಾಜ್ಯ ಸರ್ಕಾರ ಮೊದಲ ಹಂತದಲ್ಲಿ ಪ್ರತಿ ರೈತರಿಗೆ ₹2,500ರಂತೆ ಇನ್ಪುಟ್ ಸಬ್ಸಿಡಿ ನೀಡಲು ನಿರ್ಧರಿಸಿದೆ. ಸುಮಾರು 45ರಿಂದ 50 ಲಕ್ಷ ರೈತರಿಗೆ ಈ ನೆರವು ತಲುಪಲಿದ್ದು, ರಾಜ್ಯ ಸರ್ಕಾರದ ಬೊಕ್ಕಸಕ್ಕೆ ಸುಮಾರು ₹1,250 ಕೋಟಿ ವೆಚ್ಚವಾಗಲಿದೆ. ಕೇಂದ್ರದಿಂದ ಎನ್ಡಿಆರ್ಎಫ್ ನೆರವು ನಿರೀಕ್ಷಿಸುತ್ತಿದ್ದರೂ, ರೈತರ ಸಂಕಷ್ಟವನ್ನು ಗಮನದಲ್ಲಿಟ್ಟುಕೊಂಡು ನಮ್ಮ ಸರ್ಕಾರ ತಕ್ಷಣವೇ ನೆರವು ನೀಡುತ್ತಿದೆ.
ರಾಜ್ಯ ಸರ್ಕಾರ ರೈತರಿಗೆ ಈಗಾಗಲೇ ಹಲವು ರೀತಿಯ ನೆರವು ನೀಡುತ್ತಿದೆ. ಕೃಷಿ ಪಂಪ್ಸೆಟ್ಗಳಿಗೆ ಉಚಿತ ವಿದ್ಯುತ್ ನೀಡಲು ಸುಮಾರು ₹22,000 ಕೋಟಿ ವಿದ್ಯುತ್ ಸಬ್ಸಿಡಿ ನೀಡಲಾಗುತ್ತಿದೆ. ₹1,250 ಕೋಟಿ ಮೊದಲ ಹಂತದ ನೆರವು ಸಣ್ಣ ಮೊತ್ತವಲ್ಲ. ಮುಂದಿನ ದಿನಗಳಲ್ಲಿ ಕೇಂದ್ರ ಸರ್ಕಾರದಿಂದ ದೊರೆಯುವ ಪರಿಹಾರದ ಆಧಾರದ ಮೇಲೆ ಮುಂದಿನ ಕ್ರಮಗಳನ್ನು ಕೈಗೊಳ್ಳಲಾಗುವುದು.
ಬರದಿಂದ ರಾಜ್ಯದಲ್ಲಿ ಉಂಟಾಗಿರುವ ಒಟ್ಟು ನಷ್ಟದ ಪ್ರಮಾಣ ₹40,000 ಕೋಟಿಗೂ ಅಧಿಕವಾಗುವ ಸಾಧ್ಯತೆಯಿದೆ. ಈಗಾಗಲೇ ಮೊದಲ ಹಂತದ ಮೆಮೊರಾಂಡಂ ಅನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಗಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಮೆಮೊರಾಂಡಂಗಳನ್ನು ಸಲ್ಲಿಸಲಾಗುವುದು. ಅಂತಿಮವಾಗಿ ಸಂಪೂರ್ಣ ನಷ್ಟದ ಅಂದಾಜು ಸಿದ್ಧಪಡಿಸಿ, ಎನ್ಡಿಆರ್ಎಫ್ ಮಾರ್ಗಸೂಚಿಗಳನ್ವಯ ರಾಜ್ಯಕ್ಕೆ ಎಷ್ಟು ಪರಿಹಾರ ಬೇಕು ಎಂಬುದನ್ನು ಕೇಂದ್ರಕ್ಕೆ ಸಲ್ಲಿಸಲಾಗುವುದು.
ಕೇಂದ್ರ ಸರ್ಕಾರ ರಾಜ್ಯಕ್ಕೆ ನೆರವು ನೀಡುವ ರೀತಿಯ ಆಧಾರದ ಮೇಲೆ ಮುಂದಿನ ಪರಿಹಾರ ಕ್ರಮಗಳನ್ನು ನಿರ್ಧರಿಸಲಾಗುವುದು. ಈ ಹಂತದಲ್ಲಿ ಪರಿಷ್ಕೃತ ಪರಿಹಾರ ಮೊತ್ತದ ಕುರಿತು ಯಾವುದೇ ಬದ್ಧತೆ ನೀಡಲು ಸಾಧ್ಯವಿಲ್ಲ.
ಕೇಂದ್ರ ಸರ್ಕಾರ ಈಗಾಗಲೇ ಬರ ಪರಿಸ್ಥಿತಿಯ ಅಧ್ಯಯನಕ್ಕಾಗಿ ಐಎಎಸ್ ಅಧಿಕಾರಿಯೊಬ್ಬರನ್ನು ಒಳಗೊಂಡ ತಂಡವನ್ನು ಕಳುಹಿಸುವ ಕುರಿತು ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದೆ. ತಂಡದ ಭೇಟಿ ದಿನಾಂಕ ಇನ್ನೂ ನಿಗದಿಯಾಗಿಲ್ಲ. ಕೇಂದ್ರದ ತಂಡ ರಾಜ್ಯಕ್ಕೆ ಆಗಮಿಸಿ, ತನ್ನ ಮಾರ್ಗಸೂಚಿಗಳ ಪ್ರಕಾರ ಬರ ಪರಿಸ್ಥಿತಿ ಹಾಗೂ ನಷ್ಟವನ್ನು ಮೌಲ್ಯಮಾಪನ ಮಾಡಿದ ಬಳಿಕ ಮುಂದಿನ ಪರಿಹಾರದ ಪ್ರಮಾಣ ಸ್ಪಷ್ಟವಾಗಲಿದೆ.
ಬರ ಪರಿಹಾರಕ್ಕೆ ಸಂಬಂಧಿಸಿದಂತೆ ಸರ್ವಪಕ್ಷ ನಿಯೋಗವನ್ನು ದೆಹಲಿಗೆ ಕರೆದೊಯ್ಯುವ ಕುರಿತು ಈಗಾಗಲೇ ವಿಧಾನಸಭೆಯಲ್ಲಿ ಮುಖ್ಯಮಂತ್ರಿಗಳು ಹಾಗೂ ತಾವು ಸ್ಪಷ್ಟಪಡಿಸಿದ್ದೇವೆ. ಸರ್ವಪಕ್ಷ ಸಭೆ ನಡೆಸಿ, ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ನಿಯೋಗವನ್ನು ದೆಹಲಿಗೆ ಕರೆದೊಯ್ಯಲಾಗುವುದು.
ಪ್ರಧಾನಮಂತ್ರಿ, ಕೇಂದ್ರ ಗೃಹ ಸಚಿವರು ಹಾಗೂ ಕೇಂದ್ರ ಕೃಷಿ ಸಚಿವರನ್ನು ಭೇಟಿ ಮಾಡಿ ಕರ್ನಾಟಕದ ಬರ ಪರಿಸ್ಥಿತಿ ಹಾಗೂ ರೈತರ ಸಂಕಷ್ಟವನ್ನು ಮನವರಿಕೆ ಮಾಡಿಕೊಡಲಾಗುವುದು. ವಿರೋಧ ಪಕ್ಷದವರು ಬರಲು ಸಿದ್ಧರಿದ್ದರೆ, ಅವರನ್ನು ಸಹ ಜೊತೆಯಲ್ಲಿ ಕರೆದೊಯ್ಯಲು ಸರ್ಕಾರ ಸಿದ್ಧವಾಗಿದೆ. ನಿಯೋಗದ ದೆಹಲಿ ಭೇಟಿಯ ದಿನಾಂಕ ಇನ್ನೂ ನಿಗದಿಯಾಗಿಲ್ಲ.
*ವಿಶೇಷಚೇತನರ ಗೌರವಧನ ಹೆಚ್ಚಳಕ್ಕೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿರುವ ಕುರಿತು ಪ್ರತಿಕ್ರಿಯೆ: ರಾಮನಗರದಲ್ಲಿ ವಿಶೇಷಚೇತನರು ಗೌರವಧನ ಹೆಚ್ಚಳಕ್ಕೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿರುವ ಕುರಿತು ಪ್ರತಿಕ್ರಿಯಿಸಿದ ಅವರು, ಸಂಬಂಧಪಟ್ಟ ಇಲಾಖೆ ಈ ಕುರಿತು ಪ್ರಸ್ತಾವನೆ ಸಿದ್ಧಪಡಿಸಿ ಸಚಿವ ಸಂಪುಟದ ಮುಂದೆ ತರಬೇಕು. ಮುಖ್ಯಮಂತ್ರಿಗಳು ಹಣಕಾಸು ಸಚಿವರು. ಅವರೊಂದಿಗೆ ಚರ್ಚಿಸಿ ಪ್ರಸ್ತಾವನೆ ಸಚಿವ ಸಂಪುಟಕ್ಕೆ ಬಂದಲ್ಲಿ, ಎಲ್ಲರೂ ಸಹಕರಿಸುತ್ತೇವೆ.
- ಇಂದು ನನ್ನ ನಿವಾಸದ ಬಳಿ ಮಾಧ್ಯಮದವರೊಂದಿಗೆ ಮಾತನಾಡಿದೆ. -
Dr. G Parameshwara
@DrParameshwara
ಬರದಿಂದ ಸಂಕಷ್ಟಕ್ಕೀಡಾಗಿರುವ ರೈತರ ನೆರವಿಗೆ ರಾಜ್ಯ ಸರ್ಕಾರವು ಶೀಘ್ರ ಧಾವಿಸಿದೆ. ಎನ್ಡಿಆರ್ಎಫ್ ಅನುದಾನಕ್ಕಾಗಿ ಕಾಯದೆ, ರಾಜ್ಯದ ಪ್ರತಿ ರೈತರಿಗೆ ₹2,500 ನೇರ ಬರ ಪರಿಹಾರ ನೀಡಲು ನಮ್ಮ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ.
ಅಂದಾಜು 45–50 ಲಕ್ಷ ರೈತರಿಗೆ ನೆರವು ನೀಡಲಾಗುತ್ತಿದ್ದು, ಇದಕ್ಕಾಗಿ ಸರ್ಕಾರದ ಬೊಕ್ಕಸದಿಂದ ₹1,250 ಕೋಟಿ ಒದಗಿಸಲಾಗುತ್ತಿದೆ.
ರೈತರ ಕಷ್ಟಕ್ಕೆ ಪರಿಹಾರ ನೀಡುವಲ್ಲಿ ವಿಳಂಬವಿಲ್ಲದೆ, ಸಂಕಷ್ಟದ ಸಮಯದಲ್ಲಿ ರೈತರ ಕೈಹಿಡಿಯುವುದೇ ನಮ್ಮ ಸರ್ಕಾರದ ಬದ್ಧತೆ.
The State Government has moved swiftly to support farmers affected by drought. Without waiting for NDRF assistance, our Government has decided to provide ₹2,500 in direct drought relief to every farmer.
Around 45–50 lakh farmers are expected to benefit, with ₹1,250 crore being provided from the State exchequer.
Our commitment is clear: no delay in supporting farmers in distress and standing by them in difficult times. -
Dr. G Parameshwara
@DrParameshwara
ಬರದಿಂದ ಸಂಕಷ್ಟದಲ್ಲಿರುವ ರೈತರಿಗೆ ತಕ್ಷಣ ನೆರವು ತಲುಪಿಸುವ ಉದ್ದೇಶದಿಂದ NDRF ಅನುದಾನವನ್ನು ನಿರೀಕ್ಷಿಸಿಕೊಂಡು, ರಾಜ್ಯ ಸರ್ಕಾರದಿಂದ ಪ್ರತಿ ರೈತನಿಗೆ ₹2,500 ಇನ್ಪುಟ್ ಸಬ್ಸಿಡಿ ನೀಡಲು ತೀರ್ಮಾನಿಸಲಾಗಿದೆ.
ಪ್ರತಿ ರೈತನಿಗೆ ₹2,500 ಇನ್ಪುಟ್ ಸಬ್ಸಿಡಿ ನೀಡುವುದರಿಂದ ರಾಜ್ಯದ ಬೊಕ್ಕಸಕ್ಕೆ ಸುಮಾರು ₹1,250 ಕೋಟಿ ವೆಚ್ಚವಾಗಲಿದೆ. ಮೊದಲ ಹಂತದಲ್ಲಿಯೇ ಈ ಮೊತ್ತವನ್ನು ರೈತರಿಗೆ ನೀಡಲಾಗುವುದು. ಅಂದಾಜು 45ರಿಂದ 50 ಲಕ್ಷ ರೈತರಿಗೆ ಇದರ ಪ್ರಯೋಜನ ದೊರೆಯಲಿದ್ದು, ಇದನ್ನು ತಕ್ಷಣ ಜಾರಿಗೆ ತರಲಾಗುವುದು.
ಇಂದು ರೈತ ಕಷ್ಟದಲ್ಲಿದ್ದಾನೆ. ಹೀಗಾಗಿ NDRF ಅನುದಾನವನ್ನು ನಿರೀಕ್ಷಿಸಿಕೊಂಡು ರಾಜ್ಯ ಸರ್ಕಾರದಿಂದ ಪ್ರತಿ ರೈತನಿಗೆ ₹2,500 ಇನ್ಪುಟ್ ಸಬ್ಸಿಡಿ ನೀಡಲು ತೀರ್ಮಾನಿಸಿದ್ದೇವೆ. ₹1,250 ಕೋಟಿ ಮೊತ್ತವನ್ನು ಮೊದಲ ಹಂತದಲ್ಲಿಯೇ ನಮ್ಮ ರೈತರಿಗೆ ನೀಡಲಿದ್ದೇವೆ. ಇದು ಸಣ್ಣ ಮೊತ್ತವಲ್ಲ. ಅಂದಾಜು 45ರಿಂದ 50 ಲಕ್ಷ ರೈತರಿಗೆ ಇದರ ಪ್ರಯೋಜನ ದೊರೆಯಲಿದೆ. ಈ ನೆರವನ್ನು ನೀಡಲಾಗುವುದು. ಇದರ ಜೊತೆಗೆ ಬೇರೆ ಎಲ್ಲ ರೀತಿಯಲ್ಲಿಯೂ ರೈತರಿಗೆ ಸರ್ಕಾರ ಸಹಾಯಹಸ್ತ ನೀಡಲಿದ್ದೇವೆ.
*ಕೇಂದ್ರ ಸರ್ಕಾರ ತಕ್ಷಣ ರಾಜ್ಯದ ನೆರವಿಗೆ ಧಾವಿಸಲಿ : ಕರ್ನಾಟಕ ಮಾತ್ರವಲ್ಲದೆ ಸುಮಾರು 17–18 ರಾಜ್ಯಗಳು ಇಂದು ಬರ ಪರಿಸ್ಥಿತಿಯಲ್ಲಿವೆ ಎಂಬುದನ್ನು ಅಂಕಿ-ಅಂಶಗಳ ಸಹಿತ ವಿವರಿಸಿದ್ದೇನೆ. ಬೇರೆ ರಾಜ್ಯಗಳಲ್ಲಿ ಎಷ್ಟು ಪ್ರಮಾಣದ ಬರ ಪರಿಸ್ಥಿತಿ ಇದೆ ಎಂಬುದನ್ನೂ ಸುಮಾರು 17 ರಾಜ್ಯಗಳ ಅಂಕಿ-ಅಂಶಗಳ ಮೂಲಕ ತಿಳಿಸಿದ್ದೇನೆ. ಹೀಗಾಗಿ, ಈ ಸದನ ಕೂಡ ಒಪ್ಪಿದರೆ, ಇದನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸಬೇಕು ಎಂದು ಮಾನ್ಯ ಪ್ರಧಾನಮಂತ್ರಿಗಳಿಗೆ ಮನವಿ ಮಾಡಬೇಕು.
ಈವರೆಗೆ ಕೇಂದ್ರ ಸರ್ಕಾರದಿಂದ ಯಾವುದೇ ಪ್ರಕ್ರಿಯೆ ನಡೆದಿಲ್ಲ. ನಮ್ಮ ಪತ್ರಗಳಿಗೂ ಉತ್ತರ ಬಂದಿಲ್ಲ. ಕೇಂದ್ರ ಸರ್ಕಾರದ ತಂಡವನ್ನು ತಕ್ಷಣ ರಾಜ್ಯಕ್ಕೆ ಕಳುಹಿಸಬೇಕು.
ನಾವು ಈಗ 100–101 ತಾಲೂಕುಗಳಿಗೆ ಸಂಬಂಧಿಸಿದಂತೆ ₹18,000 ಕೋಟಿ ನಷ್ಟವನ್ನು ಅಂದಾಜಿಸಿದ್ದೇವೆ. ₹3,800 ಕೋಟಿ ಪರಿಹಾರವನ್ನು ಕೇಳಿದ್ದೇವೆ. ಇನ್ನೂ ಸುಮಾರು 120 ತಾಲೂಕುಗಳು ಬರಪೀಡಿತ ಪ್ರದೇಶಗಳೆಂದು ಘೋಷಣೆಯಾಗಲಿವೆ. ಅವುಗಳನ್ನೂ ಸೇರಿಸಿ ಮತ್ತೊಂದು ಮೆಮೊರಾಂಡಮ್ ಸಲ್ಲಿಸುತ್ತೇವೆ.
ಇವೆಲ್ಲವನ್ನೂ ಒಟ್ಟುಗೂಡಿಸಿದರೆ ಸುಮಾರು ₹40,000 ಕೋಟಿ ನಷ್ಟವಾಗುವ ಸಾಧ್ಯತೆ ಇದೆ ಎಂದು ನನಗೆ ಅನಿಸುತ್ತದೆ. NDRF ಮಾರ್ಗಸೂಚಿಗಳ ಪ್ರಕಾರ ಇದರಲ್ಲಿ ಎಷ್ಟು ಪರಿಹಾರಕ್ಕೆ ಅರ್ಹವಾಗುತ್ತದೆ ಎಂಬುದನ್ನು ಲೆಕ್ಕ ಹಾಕಬೇಕು. ಅದು ₹15,000 ಕೋಟಿ ಆಗುತ್ತದೆಯೇ ಎಂಬುದನ್ನು ನೋಡಬೇಕು. ಕಳೆದ ಬಾರಿ ₹18,000 ಕೋಟಿ ಆಗಿತ್ತು. ಈ ವರ್ಷವೂ ಎಷ್ಟು ಸಾವಿರ ಕೋಟಿ ಆಗುತ್ತದೆ ಎಂಬುದನ್ನು ಲೆಕ್ಕ ಹಾಕಿ ಆ ಮೊತ್ತವನ್ನು ಕೇಳುತ್ತೇವೆ. ಆ ಹಣವನ್ನು ಆದಷ್ಟು ಶೀಘ್ರವಾಗಿ ನಮಗೆ ನೀಡಬೇಕು.
ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿ ರೈತರಿಗೆ ದೊರೆತಿರುವ ಬೆಳೆ ವಿಮೆ ಪರಿಹಾರವನ್ನು ಗಮನಿಸಿದರೆ, 2020-21ರಲ್ಲಿ ₹700 ಕೋಟಿ, 2021-22ರಲ್ಲಿ ₹881 ಕೋಟಿ, 2022-23ರಲ್ಲಿ ₹1,090 ರಿಂದ ₹1,092 ಕೋಟಿ ಹಾಗೂ 2023-24ರಲ್ಲಿ ₹1,600 ಕೋಟಿ ಬಂದಿದೆ.
2023-24ರಲ್ಲಿ ಬೆಳೆ ವಿಮೆಯಡಿ ₹1,600 ಕೋಟಿ ಈಗಾಗಲೇ ನಮ್ಮ ರೈತರಿಗೆ ವಿತರಣೆಯಾಗಿದೆ. ಇದು ದಾಖಲೆ ಪ್ರಮಾಣ. ಇಲ್ಲಿಯವರೆಗೆ ಈ ಪ್ರಮಾಣದಲ್ಲಿ ನಮ್ಮ ರೈತರಿಗೆ ಬೆಳೆ ವಿಮೆ ಪರಿಹಾರ ಸಿಕ್ಕಿರಲಿಲ್ಲ. ನಮ್ಮ ಕೃಷಿ ಸಚಿವರು ಬಹಳ ಮುತುವರ್ಜಿಯಿಂದ ಈ ಬೆಳೆ ವಿಮೆಯನ್ನು ರೈತರಿಗೆ ತಲುಪಿಸುವ ಕೆಲಸ ಮಾಡಿದ್ದಾರೆ. ಅದಕ್ಕಾಗಿ ಅವರಿಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ. ಇನ್ನು SDRFನಿಂದಲೂ ನಮಗೆ ಎಷ್ಟು ಬಂದಿದೆ, ಏನು ಬಂದಿದೆ ಎಂಬುದು ಎಲ್ಲರಿಗೂ ಗೊತ್ತಿದೆ.
ಕುಡಿಯುವ ನೀರಿಗೆ ಎಲ್ಲಿಯಾದರೂ ತೊಂದರೆಯಾದರೆ ಖಾಸಗಿ ಕೊಳವೆಬಾವಿಗಳನ್ನು ವಶಕ್ಕೆ ಪಡೆದುಕೊಳ್ಳಿ, ಅದಕ್ಕೆ ಬಾಡಿಗೆ ಪಾವತಿಸಿ ನೀರು ಸರಬರಾಜು ಮಾಡಿ ಎಂದು ಸ್ಪಷ್ಟ ನಿರ್ದೇಶನ ನೀಡಿದ್ದೇವೆ. ಟ್ಯಾಂಕರ್ಗಳ ಮೂಲಕವೂ ನೀರು ಸರಬರಾಜು ಮಾಡುವಂತೆ ತಿಳಿಸಿದ್ದೇವೆ. ಮೇವಿನ ಅಭಾವ ಎದುರಾದಾಗ ಮೇವಿನ ಕಿಟ್ಗಳನ್ನು ನೀಡಿ ಮೇವು ಬೆಳೆಯಲು ಪ್ರೋತ್ಸಾಹಿಸಿದ್ದೇವೆ. ಇಂದು ಗೋಶಾಲೆಗಳನ್ನು ತೆರೆದು ಜಾನುವಾರುಗಳಿಗೆ ರಕ್ಷಣೆ ನೀಡುವ ಕೆಲಸವನ್ನೂ ನಮ್ಮ ಸರ್ಕಾರ ಮಾಡಿದೆ. ಆದ್ದರಿಂದ ಈ ಬರಗಾಲದ ಸಂದರ್ಭದಲ್ಲಿ ನಮ್ಮ ಸರ್ಕಾರ ರೈತರ ಜೊತೆ, ಬಡವರ ಜೊತೆ ಮತ್ತು ಗ್ರಾಮೀಣ ಜನರ ಜೊತೆ ಭದ್ರವಾಗಿ ನಿಂತಿದೆ.
ರೈತರ ಸಾಲ ಮರುಪಾವತಿಗೆ ಸಂಬಂಧಿಸಿದಂತೆ ಮೊರಟೋರಿಯಂ ಅವಧಿಯನ್ನು 12 ತಿಂಗಳಿಗೆ ಹಾಗೂ ಸಾಲ ಮರುಪಾವತಿ ಅವಧಿಯನ್ನು 36 ತಿಂಗಳಿಂದ 60 ತಿಂಗಳವರೆಗೆ ವಿಸ್ತರಿಸಲಾಗಿದೆ.
ಮೈಕ್ರೋ ಫೈನಾನ್ಸ್ ಸಂಸ್ಥೆಗಳಿಂದ ಯಾರಾದರೂ ರೈತರಿಗೆ ಕಿರುಕುಳ ನೀಡಿದರೆ ಅಥವಾ ತೊಂದರೆ ಮಾಡಿದರೆ ಅವರ ವಿರುದ್ಧ ಈಗಾಗಲೇ ಇರುವ ಕಠಿಣ ಕಾನೂನಿನ ಪ್ರಕಾರ ಕ್ರಮ ಕೈಗೊಳ್ಳುತ್ತೇವೆ. ಕೆಲವು ಕಡೆ ರೈತರಿಗೆ ತೊಂದರೆ ಮಾಡಲಾಗುತ್ತಿದೆ ಎಂಬ ವರದಿಗಳು ಈಗಾಗಲೇ ಬರುತ್ತಿವೆ. ಹೀಗಾಗಿ ಯಾರಾದರೂ ರೈತರಿಗೆ ಕಿರುಕುಳ ನೀಡಿದರೆ ಅವರ ವಿರುದ್ಧ ಕಾನೂನಿನ ಪ್ರಕಾರ ಕ್ರಮ ತೆಗೆದುಕೊಳ್ಳುತ್ತೇವೆ. -
Dr. G Parameshwara
@DrParameshwara
ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳು ತೀವ್ರ ಬರ ಪರಿಸ್ಥಿತಿಯನ್ನು ಎದುರಿಸುತ್ತಿದ್ದು, ಬರ ಪರಿಸ್ಥಿತಿಯನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಣೆ ಮಾಡಬೇಕು.
ಮನುಷ್ಯನ ಪ್ರಾಣ ಎಷ್ಟು ಮುಖ್ಯವೋ, ಬಹುಶಃ ಅದಕ್ಕಿಂತ ಒಂದು ಹೆಜ್ಜೆ ಹೆಚ್ಚು ಜಾನುವಾರುಗಳ ಬಗ್ಗೆ ನಾವು ಗಮನ ಹರಿಸಬೇಕಾಗಿದೆ. ಜಾನುವಾರುಗಳು ನಮ್ಮ ಆಸ್ತಿ. ಇಂತಹ ಬರಗಾಲದಲ್ಲಿ ಅವುಗಳಿಗೆ ಮೇವು ಹೇಗೆ ಒದಗಿಸಬೇಕು ಎಂಬುದು ಬಹಳ ಮುಖ್ಯ.
ಶೇ.82ರಷ್ಟು ಬೆಳೆ ವೈಫಲ್ಯವಾಗಿದೆ. ಎಲ್ಲಿ ನೋಡಿದರೂ ಬೆಳೆ ಇಲ್ಲ. ಯಾವ ಜಿಲ್ಲೆ, ಯಾವ ತಾಲೂಕಿಗೆ ಹೋದರೂ ಬೆಳೆ ಇಲ್ಲದ ಪರಿಸ್ಥಿತಿಯಿದೆ. ಪ್ರಸ್ತುತ ನಮ್ಮ ಬಳಿ ಕೇವಲ 33 ವಾರಗಳಿಗೆ ಸಾಕಾಗುವಷ್ಟು ಮೇವು ಲಭ್ಯವಿದೆ. ಹೀಗಾಗಿ ತಕ್ಷಣವೇ ಮೇವಿನ ಕಿಟ್ಗಳನ್ನು ವಿತರಿಸಲು ಕ್ರಮ ಕೈಗೊಂಡಿದ್ದೇವೆ. ಎಲ್ಲೆಲ್ಲಿ ಕೊಳವೆಬಾವಿಗಳಿವೆ, ಎಲ್ಲೆಲ್ಲಿ ನೀರಿನ ಮೂಲಗಳಿವೆಯೋ ಅಲ್ಲಿ ಮೇವು ಬೆಳೆಯುವಂತೆ ರೈತರಿಗೆ ತಿಳಿಸಿ ಮೇವಿನ ಕಿಟ್ಗಳನ್ನು ನೀಡಿದ್ದೇವೆ.
ಈಗಾಗಲೇ ಪಶುಸಂಗೋಪನಾ ಇಲಾಖೆಗೆ ₹25 ಕೋಟಿ ಬಿಡುಗಡೆ ಮಾಡಿದ್ದೇವೆ. ಇಲಾಖೆ ಟೆಂಡರ್ ಪ್ರಕ್ರಿಯೆ ನಡೆಸಿ ಲಕ್ಷಾಂತರ ಕಿಟ್ಗಳನ್ನು ಈಗಾಗಲೇ ಬಿಡುಗಡೆ ಮಾಡಿದೆ. ಇನ್ನೂ 3ರಿಂದ 4 ಲಕ್ಷ ಕಿಟ್ಗಳನ್ನು ನೀಡುತ್ತಿದ್ದೇವೆ. ಇದಷ್ಟೇ ಅಲ್ಲ, ಕೆಎಂಎಫ್ಗೂ ಈ ಸಂಬಂಧ ಮನವರಿಕೆ ಮಾಡಿಕೊಟ್ಟಿದ್ದೇವೆ. ಹಾಲು ಪೂರೈಸುವ ರೈತರು ಕೆಎಂಎಫ್ಗೆ ಸೇರಿದವರೇ ಆಗಿರುವುದರಿಂದ ಅವರಿಗಾಗಿ ಹಣ ಖರ್ಚು ಮಾಡುವುದರಲ್ಲಿ ತಪ್ಪಿಲ್ಲ ಎಂದು ತಿಳಿಸಿದ್ದೇವೆ. ಅದರಂತೆ ಕೆಎಂಎಫ್ ಮೂಲಕವೂ ಒಂದೊಂದು ಜಿಲ್ಲೆಯಲ್ಲಿ 4 ಲಕ್ಷ, 5 ಲಕ್ಷ ಕಿಟ್ಗಳನ್ನು ನೀಡುವ ವ್ಯವಸ್ಥೆ ಮಾಡಿದ್ದೇವೆ.
ಈಗಾಗಲೇ ಅನೇಕ ಕಡೆಗಳಲ್ಲಿ ರೈತರು ಮೇವು ಬೆಳೆಯಲು ಆರಂಭಿಸಿದ್ದಾರೆ. ಜೋಳ ಸೇರಿದಂತೆ ವಿವಿಧ ಮೇವಿನ ತಳಿಗಳನ್ನು ಬೆಳೆಯುವ ಕೆಲಸ ಪ್ರಾರಂಭವಾಗಿದೆ. ಇದು ಮುಂದಿನ ದಿನಗಳಲ್ಲಿ ಸಹಾಯವಾಗಲಿದೆ. ಮೇವಿಗೆ ತೊಂದರೆಯಾಗದಂತೆ ಹಾಗೂ ಜಾನುವಾರುಗಳಿಗೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳುತ್ತಿದ್ದೇವೆ.
ಒಂದು ವೇಳೆ ಪರಿಸ್ಥಿತಿ ಇನ್ನಷ್ಟು ಭೀಕರವಾಗಿ ವಿಕೋಪಕ್ಕೆ ಹೋದರೆ ಗೋಶಾಲೆಗಳನ್ನು ತೆರೆಯಲು ಮತ್ತು ಮೇವು ಬ್ಯಾಂಕ್ಗಳನ್ನು ಸ್ಥಾಪಿಸಲು ಈಗಾಗಲೇ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದೇವೆ. ಎಲ್ಲೆಲ್ಲಿ ಅಗತ್ಯವಿದೆಯೋ ಅಲ್ಲಿ ತಕ್ಷಣ ಸ್ಪಂದಿಸುವಂತೆ ಅವರಿಗೆ ಸೂಚನೆ ನೀಡಲಾಗಿದೆ. ಇದಕ್ಕಾಗಿ ಮತ್ತೆ ಪ್ರತ್ಯೇಕವಾಗಿ ಹಣ ಕೇಳುವ ಅಗತ್ಯವಿಲ್ಲ. ಜಿಲ್ಲಾಧಿಕಾರಿಗಳ ಬಳಿಯೇ ಹಣವಿದೆ. ಪಿಡಿ ಖಾತೆಗಳಲ್ಲಿ ಹಣವಿದ್ದು, ಅದನ್ನು ಖರ್ಚು ಮಾಡಿ ಈ ಕೆಲಸಗಳನ್ನು ಕೈಗೊಳ್ಳುವಂತೆ ಈಗಾಗಲೇ ಸೂಚಿಸಿದ್ದೇವೆ.
ಜನರು ಗುಳೆ ಹೋಗುತ್ತಿದ್ದಾರೆ ಎಂಬ ವಿಚಾರವನ್ನೂ ಪ್ರಸ್ತಾಪಿಸಲಾಗಿದೆ. ಗುರುಮಠಕಲ್ ಶಾಸಕರು ಈ ಬಗ್ಗೆ ಮಾತನಾಡಿದ್ದಾರೆ. ಅವರು ರೈಲ್ವೆ ನಿಲ್ದಾಣಕ್ಕೆ ಹೋಗಿ ಯಾರು ಯಾರು ಟಿಕೆಟ್ ಪಡೆದುಕೊಂಡಿದ್ದಾರೆ ಎಂಬ ಮಾಹಿತಿಯನ್ನೂ ಸಂಗ್ರಹಿಸಿದ್ದಾರೆ. ನೂರಾರು ಜನ ರೈಲಿನಲ್ಲಿ ಬೆಂಗಳೂರಿಗೆ, ಮುಂಬೈಗೆ ಹೋಗುತ್ತಿದ್ದಾರೆ ಎಂಬ ಅಂಕಿ-ಅಂಶಗಳನ್ನು ಅವರು ಸಂಗ್ರಹಿಸಿದ್ದಾರೆ.
ನನಗೂ ಬಾಗಲಕೋಟೆ, ವಿಜಯಪುರ ಸೇರಿದಂತೆ ವಿವಿಧ ಕಡೆಗಳಿಂದ ಜನರು ಗುಳೆ ಹೋಗುತ್ತಿರುವ ಮಾಹಿತಿ ಬಂದಿದೆ. ಜನರು ಮುಂಬೈಗೆ ಹೋಗುತ್ತಿದ್ದಾರೆ. ಮೊದಲು ಕಾಫಿ ತೋಟಗಳಿಗೆ ಕೆಲಸಕ್ಕಾಗಿ ಬರುತ್ತಿದ್ದರು. ಆದರೆ ಈಗ ಕಾಫಿ ತೋಟಗಳಿರುವ ಪ್ರದೇಶಗಳಲ್ಲಿಯೂ ಮಳೆಯಿಲ್ಲ. ಮಡಿಕೇರಿಯಲ್ಲಿಯೂ ಮಳೆಯಿಲ್ಲ. ಕಾಫಿ ತೋಟಗಳು ಒಣಗುತ್ತಿವೆ. ಸಕಲೇಶಪುರದವರಿಗೂ ಈ ಪರಿಸ್ಥಿತಿ ಗೊತ್ತಿದೆ.
ನರೇಗಾದಿಂದ ಮಹಾತ್ಮ ಗಾಂಧೀಜಿ ಅವರ ಹೆಸರನ್ನು ತೆಗೆದುಹಾಕಿದ್ದೀರಿ ಎಂದು ನಾವು ವಿರೋಧಿಸಿದ್ದು ನಿಜ. ಆದರೆ ಇಂದಿನ ಪರಿಸ್ಥಿತಿ ಹೇಗಿದೆ? ಮಹಾತ್ಮ ಗಾಂಧೀಜಿ ಅವರ ಹೆಸರನ್ನು ತೆಗೆದಿದ್ದೀರಿ ಎಂದು ನಾವೂ ನೀವೂ ಜಗಳ ಮಾಡಿಕೊಂಡು ಕುಳಿತರೆ ಅಲ್ಲಿರುವ ಜನರ ಪರಿಸ್ಥಿತಿ ಏನಾಗಬೇಕು? ಜನರು ಗುಳೆ ಹೋಗುವುದನ್ನು ತಡೆಯಬೇಕಲ್ಲವೇ? ಆ ಕಾರಣಕ್ಕಾಗಿ ವಿಬಿ ಜಿ ರಾಮ್ ಜಿ ಕಾರ್ಯಕ್ರಮವನ್ನು ಪ್ರಾರಂಭಿಸುವಂತೆ ಸೂಚನೆ ನೀಡಿದ್ದೇವೆ.
ಎಲ್ಲಿಯೂ ಕೆಲಸ ಮಾಡಿಲ್ಲ, ಏನೂ ಆಗಿಲ್ಲ ಎಂದು ಹೇಳಲಾಗಿದೆ. ಆದರೆ ನಾನು ಸ್ವತಃ ಅನೇಕ ಕಡೆಗಳಿಗೆ ಹೋಗಿದ್ದೇನೆ. ಕೆರೆಗಳಲ್ಲಿ ನಡೆಯುತ್ತಿರುವ ಕೆಲಸಗಳನ್ನು ಖುದ್ದಾಗಿ ಪರಿಶೀಲಿಸಿದ್ದೇನೆ. ಅನೇಕ ಕಡೆಗಳಲ್ಲಿ ಕೆಲಸ ನಡೆಯುತ್ತಿದೆ.
ಈವರೆಗೆ ನನ್ನ ಬಳಿ ಇರುವ ಮಾಹಿತಿಯ ಪ್ರಕಾರ, ಸುಮಾರು 136 ಲಕ್ಷ ಮಾನವ ದಿನಗಳನ್ನು ಸೃಜಿಸಲಾಗಿದೆ. ಕೆಲಸ ನಡೆಯುತ್ತಿದೆ. ಅದನ್ನು ಇನ್ನೂ ಮುಂದುವರಿಸುವಂತೆ ಸೂಚಿಸಿದ್ದೇವೆ. ಹಣ ನೀಡುತ್ತೇವೆ, ಎಷ್ಟೇ ಅಗತ್ಯವಿದ್ದರೂ ಹಣ ನೀಡುತ್ತೇವೆ, ಕೇಂದ್ರ ಸರ್ಕಾರವೂ ಹಣ ನೀಡುತ್ತದೆ ಎಂದು ತಿಳಿಸಿ ಕೆಲಸ ಮುಂದುವರಿಸಲು ಸೂಚಿಸಿದ್ದೇವೆ.
ಸುನೀಲ್ ಅವರು ಸಪ್ಲಿಮೆಂಟರಿ ಬಜೆಟ್ನಲ್ಲಿ ಹಣವನ್ನೇ ಇಟ್ಟಿಲ್ಲ ಎಂದು ಹೇಳಿದ್ದಾರೆ. ಆದರೆ ಇದು ಸಪ್ಲಿಮೆಂಟರಿ ಬಜೆಟ್. VB G RAM Gಗೆ ಸಪ್ಲಿಮೆಂಟರಿ ಬಜೆಟ್ನಲ್ಲಿ ₹2,280 ಕೋಟಿ ಇಟ್ಟಿದ್ದೇವೆ.
VB G RAM G ಬಗ್ಗೆ ಬೇಕಾದರೆ ಇನ್ನೂ ವಿವರವಾಗಿ ಮಾತನಾಡಬಹುದು. ಈ VB G RAM G ಯೋಜನೆಯಲ್ಲಿ ಮೊದಲು 90:10 ಇದ್ದ ಅನುದಾನ ಹಂಚಿಕೆ ಈಗ 60:40 ಆಗಿದೆ. ಇದಕ್ಕಾಗಿ ಭಾರತ ಸರ್ಕಾರಕ್ಕೆ ಧನ್ಯವಾದ ಹೇಳಬೇಕು. ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿಯೂ ಇದರಿಂದ ತೊಂದರೆ ಉಂಟಾಗಿದೆ. ಆದರೆ ಇಂದು ಕರ್ನಾಟಕಕ್ಕೆ ಕೇಂದ್ರ ಸರ್ಕಾರದಿಂದ ಯಾವ ಯಾವ ರೀತಿಯಲ್ಲಿ ತೊಂದರೆಯಾಗಿದೆ ಎಂಬುದನ್ನೂ ಹೇಳಬೇಕಾಗುತ್ತದೆ.
2023-24ರಲ್ಲಿ ಬರಗಾಲ ಬಂದಿತ್ತು. ಆಗ 223 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿತ್ತು. ಸುಮಾರು ₹39,000 ಕೋಟಿ ನಷ್ಟವಾಗಿದೆ ಎಂದು ಅಂದಾಜಿಸಲಾಗಿತ್ತು. ಆದರೆ NDRF ಮಾರ್ಗಸೂಚಿಗಳ ಪ್ರಕಾರ ಅಷ್ಟು ಮೊತ್ತವನ್ನು ಕೇಳಲು ಸಾಧ್ಯವಿರಲಿಲ್ಲ. ನಷ್ಟದ ಅಂದಾಜನ್ನು NDRF ಮಾರ್ಗಸೂಚಿಗಳಿಗೆ ಅನುಗುಣವಾಗಿ ಲೆಕ್ಕ ಹಾಕಿದ ನಂತರ ಅದು ಸುಮಾರು ₹18,000 ಕೋಟಿಗೆ ಬಂತು. ನಾವು ₹18,000 ಕೋಟಿ ಕೇಳಿದ್ದೆವು. ನಿಮ್ಮದೇ ಮಾರ್ಗಸೂಚಿಗಳ ಪ್ರಕಾರ ಈ ಮೊತ್ತ ಬಂದಿದೆ, ಕನಿಷ್ಠ ಇಷ್ಟಾದರೂ ನೀಡಿ ಎಂದು ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದೇವೆ. ಆದರೆ ಒಂದು ಪೈಸೆಯನ್ನೂ ನೀಡಲಿಲ್ಲ.
ಇದಕ್ಕೆ ವಿರುದ್ಧವಾಗಿ, NDRF ಮಾರ್ಗಸೂಚಿಗಳನ್ನು ಪಾಲನೆ ಮಾಡಿದ ಏಕೈಕ ರಾಜ್ಯ ಕರ್ನಾಟಕವಾಗಿತ್ತು. ಉಳಿದ ರಾಜ್ಯಗಳು ನಮ್ಮನ್ನು ಅನುಸರಿಸಬೇಕು ಎಂದು ಕರ್ನಾಟಕವು NDRF ಮಾರ್ಗಸೂಚಿಗಳನ್ನು ಸಂಪೂರ್ಣವಾಗಿ ಪಾಲಿಸಿರುವುದನ್ನು ಉಲ್ಲೇಖಿಸಲಾಯಿತು. ಆದರೆ ಹಣ ನೀಡಲಿಲ್ಲ.
ನಾವು ದೆಹಲಿಗೆ ಹೋಗಿ ಹಣ ನೀಡುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಿದ್ದೇವೆ. ಒಂದು ರಾಜ್ಯದ ಮುಖ್ಯಮಂತ್ರಿ, ಸಚಿವ ಸಂಪುಟದ ಸದಸ್ಯರು ಮತ್ತು ಶಾಸಕರು ದೆಹಲಿಗೆ ಹೋದರೂ ನಮಗೆ ಭೇಟಿಗೆ ಅವಕಾಶ ನೀಡಲಿಲ್ಲ. ನಾವು ಹೊರಗಡೆ ಪ್ರತಿಭಟನೆ ನಡೆಸಿ ಹಿಂದಿರುಗಿದ್ದೇವೆ. ಅದರಿಂದಲೂ ಪ್ರಯೋಜನವಾಗಲಿಲ್ಲ.
ಕೊನೆಗೆ ನಾವು ನ್ಯಾಯಾಲಯದ ಮೊರೆ ಹೋಗಬೇಕಾಯಿತು. ಸುಪ್ರೀಂ ಕೋರ್ಟ್ಗೆ ಹೋಗಿ, ಬರಗಾಲದ ಸಂದರ್ಭದಲ್ಲಿ ನಮಗೆ ನೀಡಬೇಕಾದ ಹಣವನ್ನು ನೀಡಿ, ಇದು ನಮ್ಮ ಹಕ್ಕು ಎಂದು ಕೇಳಬೇಕಾಯಿತು. ನಾವು NDRF ಮಾರ್ಗಸೂಚಿಗಳನ್ನು ಸಂಪೂರ್ಣವಾಗಿ ಪಾಲಿಸಿದ್ದೆವು. ಒಂದು ವೇಳೆ ಮಾರ್ಗಸೂಚಿಗಳನ್ನು ಪಾಲಿಸದೇ ಇದ್ದಿದ್ದರೆ ನಮಗೆ ಹಣ ಸಿಗುತ್ತಿರಲಿಲ್ಲ ಮತ್ತು ಅಲ್ಲಿಯೇ ತಿರಸ್ಕಾರವಾಗುತ್ತಿತ್ತು. ಆದರೆ ಎಲ್ಲ ಮಾರ್ಗಸೂಚಿಗಳನ್ನು ಪಾಲಿಸಿದ್ದರಿಂದ ಕೊನೆಗೆ ನಮಗೆ ₹3,400 ಕೋಟಿ ಹಣ ದೊರೆಯಿತು. ಅಂತಿಮವಾಗಿ ಭಾರತ ಸರ್ಕಾರ ಆ ಹಣವನ್ನು ನೀಡಿತು.
ಈಗ 16ನೇ ಹಣಕಾಸಿನ ಹಿನ್ನೆಲೆಯಲ್ಲಿ, ಕಳೆದ ಐದು ವರ್ಷಗಳಲ್ಲಿ ಯಾವ ಯಾವ ರಾಜ್ಯಗಳಿಗೆ ಎಷ್ಟು ಹಣ ನೀಡಲಾಗಿದೆ ಎಂಬುದನ್ನೂ ಗಮನಿಸಬೇಕು. ಮಹಾರಾಷ್ಟ್ರಕ್ಕೆ ₹39,492 ಕೋಟಿ ನೀಡಲಾಗಿದೆ. ಮಧ್ಯಪ್ರದೇಶಕ್ಕೆ ₹15,596 ಕೋಟಿ ನೀಡಲಾಗಿದೆ. ಬಿಹಾರಕ್ಕೆ ₹18,153 ಕೋಟಿ ಹಣ ಕೊಟ್ಟಿದ್ದಾರೆ. ರಾಜಸ್ಥಾನಕ್ಕೆ ₹12,281 ಕೋಟಿ ನೀಡಲಾಗಿದೆ. ಪಶ್ಚಿಮ ಬಂಗಾಳಕ್ಕೆ ₹9,158 ಕೋಟಿ ಹಾಗೂ ಕರ್ನಾಟಕಕ್ಕೆ ₹8,559 ಕೋಟಿ ಕೊಟ್ಟಿದ್ದಾರೆ.
ಮಹಾರಾಷ್ಟ್ರಕ್ಕೆ ಹೆಚ್ಚು ಕೊಟ್ಟು, ಕರ್ನಾಟಕಕ್ಕೆ ಯಾಕೆ ಕಡಿಮೆ ಕೊಡಬೇಕು? ಏನಿದು ತಾರತಮ್ಯ? ನಾವು ನಿಯಮಿತವಾಗಿ ತೆರಿಗೆಗಳನ್ನು ಕಟ್ಟುತ್ತೇವೆ. ಮಾರ್ಗದರ್ಶನಗಳನ್ನು ಪಾಲಿಸುತ್ತೇವೆ. ನಮಗೆ ಯಾಕೆ ಈ ಶಿಕ್ಷೆ? ಇದರಲ್ಲಿ ಕಾಂಗ್ರೆಸ್, ಬಿಜೆಪಿ ಎಂಬುದಿಲ್ಲ. ಇದು ರಾಜ್ಯದ ಹಿತದ ವಿಷಯ. ರಾಜ್ಯದ ಪಾಲನ್ನು ಕೊಡಿ ಎಂದಷ್ಟೇ ನಾವು ಕೇಳುತ್ತಿದ್ದೇವೆ.
ಹಿಂದಿನ ಮನಮೋಹನ್ ಸಿಂಗ್ ಅವರ ಸರ್ಕಾರ, ಈಗಿನ ನರೇಂದ್ರ ಮೋದಿ ಅವರ ಸರ್ಕಾರ ನೀಡಿರುವ ಹಣಕಾಸನ್ನು ಹೋಲಿಕೆ ಮಾಡಲು ನಮ್ಮ ತಕರಾರು ಇಲ್ಲ. ಆದರೆ ಆಗಿನ ಬಜೆಟ್ ಗಾತ್ರಕ್ಕೂ ಈಗಿನ ಬಜೆಟ್ ಗಾತ್ರಕ್ಕೂ ಹೋಲಿಕೆ ಮಾಡಬೇಕಲ್ಲವೇ?
ಬರಪೀಡಿತ ಪ್ರದೇಶ ಎಂದು ಘೋಷಣೆ ಮಾಡಲು ಒಂದಷ್ಟು ನಿಯಮ-ಮಾನದಂಡಗಳಿವೆ. 2023ರಲ್ಲಿ ಬರ ಬಂದಾಗ ಈ ನಿಯಮಗಳನ್ನು ಅನುಸರಿಸಲು ನಮಗೆ ಬಹಳ ಕಷ್ಟವಾಯಿತು. ಆದರೂ ಅದನ್ನು ಅನುಸರಿಸಿದ್ದೆವು. ನಂತರ ನಾವು ಕೇಂದ್ರ ಸರ್ಕಾರಕ್ಕೆ ಬರದ ಮಾನದಂಡಗಳಲ್ಲಿ ಕೆಲವು ಸಡಿಲಿಕೆ ಮತ್ತು ಬದಲಾವಣೆ ಮಾಡುವಂತೆ ಮನವಿ ಮಾಡಿದೆವು. ನಾವು ಸುಮಾರು 10 ಪತ್ರಗಳನ್ನು ಬರೆದಿದ್ದೇವೆ. ಹಿಂದಿನ ಮುಖ್ಯಮಂತ್ರಿಗಳು ಪತ್ರ ಬರೆದಿದ್ದಾರೆ, ಕಂದಾಯ ಸಚಿವರು ಪತ್ರ ಬರೆದಿದ್ದಾರೆ, ಈಗಿನ ಮುಖ್ಯಮಂತ್ರಿಗಳು ಹಾಗೂ ನಾನು ಪತ್ರ ಬರೆದಿದ್ದೇನೆ. ಈ ಯಾವುದಕ್ಕೂ ನಮಗೆ ಸಹಕಾರ ಸಿಗಲಿಲ್ಲ.
ಈ ಮಾನದಂಡಗಳಲ್ಲಿ ಮೊದಲನೆಯದು ಮಳೆಯ ಪ್ರಮಾಣದ ಬಗ್ಗೆ. ಎರಡನೆಯದು ಅಲ್ಲಿನ ಬೆಳೆ, ಬಿತ್ತನೆ ಪ್ರಮಾಣ, ಉಪಗ್ರಹದ ದತ್ತಾಂಶ, ಮಣ್ಣಿನ ತೇವಾಂಶ ಹಾಗೂ ನೀರಿನ ಸಂಗ್ರಹಣೆ ಸ್ಥಿತಿ. ಇದಾದ ನಂತರ ಗ್ರೌಂಡ್ ಟ್ರೂಥಿಂಗ್ ಮಾಡಬೇಕು. ಇವೆಲ್ಲವನ್ನೂ ಮಾಡಲೇಬೇಕು.
ಆದರೆ ಇದರ ನಡುವೆ ಕೆಲವು ಕಡೆ ಮುಷ್ಕರ, ಪ್ರತಿಭಟನೆಗಳು ನಡೆದವು. ನಾನು ಯಾವುದೇ ಅಧಿಕಾರಿಗೆ ಈ ತಾಲೂಕನ್ನು ಮಾಡಿ, ಈ ತಾಲೂಕನ್ನು ಮಾಡಬೇಡಿ ಎಂದು ಒಂದು ಬಾರಿ ಹೇಳಿಲ್ಲ. ಅವರ ಕೆಲಸದಲ್ಲಿ ಮಧ್ಯಪ್ರವೇಶ ಮಾಡಿಲ್ಲ.
ಇಲ್ಲಿಯವರೆಗೆ 177 ತಾಲೂಕುಗಳನ್ನು ಬರಪೀಡಿತ ಎಂದು ಘೋಷಣೆ ಮಾಡಿದ್ದೇವೆ. ಇನ್ನೂ 50 ತಾಲೂಕುಗಳು ಈ ಮಾನದಂಡಗಳ ಅಡಿ ಬರಲಿದ್ದು, ಒಟ್ಟು 220 ತಾಲೂಕುಗಳು ಬರಪೀಡಿತ ಎಂದು ಘೋಷಣೆಯಾಗುವ ಸಾಧ್ಯತೆಗಳಿವೆ. ಗ್ರೌಂಡ್ ಟ್ರೂಥಿಂಗ್ ಮಾಡದೆ, ಮಾನದಂಡಗಳನ್ನು ಪೂರೈಸದೆ ಯಾವುದೇ ತಾಲೂಕನ್ನು ಬರಪೀಡಿತ ಎಂದು ಘೋಷಣೆ ಮಾಡಿಲ್ಲ. ಮೊದಲ ಸುತ್ತಿನಲ್ಲಿ ಗದಗ, ರೋಣ, ಮುಖ್ಯಮಂತ್ರಿಗಳ ಕ್ಷೇತ್ರ ಕೂಡ ಆಗಿರಲಿಲ್ಲ.
ಈ ಬಾರಿ 84.14 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಆಗಬೇಕಿತ್ತು. ಆದರೆ 68.67 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಆಗಿದೆ. ಗುಂಡ್ಲುಪೇಟೆ, ನಂಜನಗೂಡು, ಹನೂರು, ಹಿರಿಯೂರು ಹೀಗೆ ಎಲ್ಲ ಕಡೆ ಹೋಗಿದ್ದೆವು. ಅಲ್ಲಿ ಎಲ್ಲ ಕಡೆ ಬಿತ್ತನೆ ನಷ್ಟವಾಗಿದೆ. ತೋಟಗಾರಿಕೆಯಲ್ಲಿ 4.36 ಲಕ್ಷ ಹೆಕ್ಟೇರ್ನಲ್ಲಿ ಬಿತ್ತನೆ ಆಗಬೇಕಿತ್ತು. ಆದರೆ 3.78 ಲಕ್ಷ ಹೆಕ್ಟೇರ್ನಲ್ಲಿ ಆಗಿದೆ. ಇಂದು ಕುಡಿಯುವ ನೀರು, ಮೇವು, ಕೃಷಿ ಹೀಗೆ ಎಲ್ಲ ಕಡೆಗಳಲ್ಲಿ ನಮಗೆ ತೊಂದರೆ ಆಗಿದೆ.
2019-20ರಲ್ಲಿ 206 ತಾಲೂಕುಗಳಲ್ಲಿ ಬರ ಬಂತು. ಆಗ ₹35,000 ಕೋಟಿ ಅಂದಾಜು ನಷ್ಟವಾಗಿತ್ತು. ಕರ್ನಾಟಕವು ಕೇಂದ್ರ ಸರ್ಕಾರವನ್ನು ಕೇಳಿದ್ದು ₹3,891 ಕೋಟಿ. ಆದರೆ ಕೇಂದ್ರ ಕೊಟ್ಟಿದ್ದು ₹1,652 ಕೋಟಿ ಮಾತ್ರ. 2020-21ರಲ್ಲಿ 104 ತಾಲೂಕುಗಳಲ್ಲಿ ಪ್ರವಾಹ ಬಂತು. ₹24,764 ಕೋಟಿ ನಷ್ಟವಾಯಿತು. ಕೇಂದ್ರವನ್ನು ಕೇಳಿದ್ದು ₹2,122 ಕೋಟಿ. ಆದರೆ ಕೇಂದ್ರ ಸರ್ಕಾರ ಕೊಟ್ಟಿದ್ದು ₹492 ಕೋಟಿ. 2023-24ರಲ್ಲಿ ಏನಾಯಿತು ಎಂದು ಸದನದ ಗಮನಕ್ಕೆ ತಂದಿದ್ದೇನೆ. ಇಂದು ನಾವು ಚರ್ಚೆ ಮಾಡುತ್ತಿರುವುದು ಒಂದು ಐತಿಹಾಸಿಕ ವಿಚಾರ. ಇಂತಹ ಪರಿಸ್ಥಿತಿ ಯಾವತ್ತಿಗೂ ರಾಜ್ಯಕ್ಕೆ ಬರಬಾರದು ಎಂದು ಆಶಿಸುತ್ತೇನೆ.
*ಬೆಳೆ ವಿಮೆಗೆ ದಾಖಲೆಯ 49 ಲಕ್ಷ ರೈತರ ನೋಂದಣಿ :* ಇನ್ನೊಂದು ಬೆಳೆ ವಿಮೆಯ ವಿಚಾರವನ್ನು ಸುನೀಲ್ ಅವರು ಪ್ರಸ್ತಾಪಿಸಿದ್ದಾರೆ. ಬೆಳೆ ವಿಮೆಗೆ ಇತಿಹಾಸದಲ್ಲೇ ಇಷ್ಟು ದೊಡ್ಡ ಪ್ರಮಾಣದಲ್ಲಿ ನಮ್ಮ ರೈತರು ನೋಂದಣಿ ಮಾಡಿಕೊಂಡಿರಲಿಲ್ಲ. ಈ ವರ್ಷ 49 ಲಕ್ಷ ರೈತರು ಬೆಳೆ ವಿಮೆಗೆ ನೋಂದಣಿ ಮಾಡಿಕೊಂಡಿದ್ದಾರೆ. ಇದು ಈವರೆಗಿನ ಅತ್ಯಧಿಕ ನೋಂದಣಿಯಾಗಿದೆ. ಅವರಿಗೆಲ್ಲ ಪರಿಹಾರ ಸಿಗುತ್ತದೆ ಎನ್ನುವ ವಿಶ್ವಾಸ ನನಗಿದೆ.
2020-21ರಲ್ಲಿ ತೋಟಗಾರಿಕೆ ಮತ್ತು ಕೃಷಿ ಎರಡೂ ಸೇರಿ 15 ಲಕ್ಷ ರೈತರು ಬೆಳೆ ವಿಮೆ ಮಾಡಿಸಿದ್ದರು. 2021-22ರಲ್ಲಿಯೂ 15 ಲಕ್ಷ ರೈತರು ವಿಮೆ ಮಾಡಿಸಿದ್ದರು. 2024-25ರಲ್ಲಿ ಈ ಸಂಖ್ಯೆ 34 ಲಕ್ಷಕ್ಕೆ ಏರಿಕೆಯಾಗಿತ್ತು. 2026-27ರಲ್ಲಿ 49 ಲಕ್ಷ ರೈತರು ಬೆಳೆ ವಿಮೆಗೆ ನೋಂದಣಿ ಮಾಡಿಕೊಂಡಿದ್ದು, ಇದು ಈವರೆಗಿನ ಅತ್ಯಧಿಕ ಪ್ರಮಾಣವಾಗಿದೆ.
ಬೆಳೆ ನಷ್ಟವಾದ ಸಂದರ್ಭದಲ್ಲಿ ಒಂದಿಷ್ಟಾದರೂ ಪರಿಹಾರ, ತಮ್ಮ ಬೆಳೆಗಳಿಗೆ ಒಂದಿಷ್ಟಾದರೂ ಹಣ ಸಿಗಬಹುದು ಎಂಬ ನಿರೀಕ್ಷೆಯಿಂದ ಇಷ್ಟು ದೊಡ್ಡ ಸಂಖ್ಯೆಯಲ್ಲಿ ರೈತರು ಇಂದು ಬೆಳೆ ವಿಮೆಗೆ ನೋಂದಣಿ ಮಾಡಿಕೊಂಡಿದ್ದಾರೆ. ಈ ಎಲ್ಲ ರೈತರಿಗೂ ಪರಿಹಾರ ಸಿಗುತ್ತದೆ ಎಂಬ ವಿಶ್ವಾಸ ನನಗಿದೆ.
ಇಂದು ವಿದ್ಯುತ್ ಶಕ್ತಿ ಬಗ್ಗೆ ಬಹಳಷ್ಟು ಮಂದಿ ಮಾತನಾಡಿದ್ದಾರೆ. ಇಂದು 30% ಬೇಡಿಕೆ ಹೆಚ್ಚಾಗಿದೆ. 19-09-2026ರ ಹೊತ್ತಿಗೆ ರಾಜ್ಯದಲ್ಲಿ 20,000 ಮೆಗಾವ್ಯಾಟ್ ವಿದ್ಯುತ್ ಬೇಡಿಕೆ ನಿರ್ಮಾಣವಾಗಿದೆ. ಆದರೂ ನಾವು ರೈತರಿಗೆ 6 ತಾಸು ಮೂರು ಫೇಸ್ ವಿದ್ಯುತ್ ಪೂರೈಕೆ ಮಾಡುತ್ತಿದ್ದೇವೆ.
16ನೇ ಹಣಕಾಸು ಆಯೋಗದ ಪ್ರಕಾರ ನಮಗೆ SDRFನಲ್ಲಿ ₹929 ಕೋಟಿ ಹಣ ಬರಬೇಕಿತ್ತು. ಆದರೆ ನಮಗೆ ಬಂದಿದ್ದು ₹464 ಕೋಟಿ ಹಣ. ಇದು ಬರ ಪರಿಹಾರದ ಹಣವಲ್ಲ.
ನಮ್ಮ ರಾಜ್ಯದ ಹಣಕಾಸನ್ನು ಅತ್ಯಂತ ಸಮರ್ಥವಾಗಿ ನಿಭಾಯಿಸುತ್ತಿದ್ದೇವೆ. ನಮ್ಮ ಆರ್ಥಿಕತೆ ಸದೃಢವಾಗಿರುವ ಕಾರಣಕ್ಕಾಗಿಯೇ ರಾಜ್ಯವು ವಿದೇಶಿ ಬಂಡವಾಳ ಹೂಡಿಕೆಯಲ್ಲಿ ದೇಶದಲ್ಲೇ ದ್ವಿತೀಯ ಸ್ಥಾನದಲ್ಲಿದೆ.
ನಮ್ಮ ಆಡಳಿತದಲ್ಲಿ ರಾಜ್ಯದ ಹಿತ ಮತ್ತು ಜನರಿಗೆ ಸಮಸ್ಯೆ ಆಗಬಾರದು ಎಂಬುದನ್ನು ಮುಖ್ಯವಾಗಿಟ್ಟುಕೊಂಡಿದ್ದೇವೆ. ನಮ್ಮ ಭರವಸೆಗಳಲ್ಲಿ 250 ಭರವಸೆಗಳನ್ನು ಈಡೇರಿಸಿದ್ದೇವೆ. ಕೆಲವು ಭರವಸೆಗಳನ್ನು ಈಡೇರಿಸಲಾಗುತ್ತಿದೆ.
ಬರ ಪರಿಸ್ಥಿತಿಯನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಣೆ ಮಾಡಬೇಕು.
- ವಿಧಾನಸಭೆಯಲ್ಲಿ ಬರ ಪರಿಸ್ಥಿತಿ ಕುರಿತ ಚರ್ಚೆಗೆ ಸರ್ಕಾರದ ಪರವಾಗಿ ನನ್ನ ಉತ್ತರ (4/4) -
Dr. G Parameshwara
@DrParameshwara
ರಾಜ್ಯದಲ್ಲಿ ತೀವ್ರ ಮಳೆ ಕೊರತೆಯ ನಡುವೆಯೂ ಜನರಿಗೆ ಕುಡಿಯುವ ನೀರಿಗೆ ತೊಂದರೆಯಾಗದಂತೆ ಸರ್ಕಾರ ಎಲ್ಲ ಅಗತ್ಯ ಕ್ರಮಗಳನ್ನು ಕೈಗೊಂಡಿದ್ದು, ಟ್ಯಾಂಕರ್ ಮೂಲಕ ನೀರು ಪೂರೈಕೆ, ಖಾಸಗಿ ಕೊಳವೆಬಾವಿಗಳ ಬಳಕೆ, ಹೊಸ ಕೊಳವೆಬಾವಿಗಳ ಕೊರೆತ ಸೇರಿದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.
ರಾಜ್ಯದಲ್ಲಿ ಒಟ್ಟಾರೆ ಶೇ.36ರಷ್ಟು ಮಳೆ ಕೊರತೆ: ಜೂನ್ನಿಂದ ಇಲ್ಲಿಯವರೆಗಿನ ಮಳೆಯ ಪ್ರಮಾಣವನ್ನು ಗಮನಿಸಿದರೆ, ಜೂನ್ ತಿಂಗಳಲ್ಲಿ ಸಾಮಾನ್ಯವಾಗಿ 199 ಮಿ.ಮೀ. ಮಳೆಯಾಗಬೇಕಿತ್ತು. ಆದರೆ ಕೇವಲ 116 ಮಿ.ಮೀ. ಮಳೆಯಾಗಿದೆ. ಅದೂ ಅಲ್ಲಲ್ಲಿ ಚದುರಿದಂತೆ ಮಳೆಯಾಗಿದೆಯೇ ಹೊರತು ಎಲ್ಲೆಡೆ ಸಮರ್ಪಕವಾಗಿ ಮಳೆಯಾಗಿಲ್ಲ. ಜೂನ್ ತಿಂಗಳಲ್ಲಿ ರಾಜ್ಯದ ಒಟ್ಟಾರೆ ಮಳೆ ಕೊರತೆ ಶೇ.42ರಷ್ಟಿದೆ. ಪ್ರದೇಶವಾರು ನೋಡಿದರೆ, ದಕ್ಷಿಣ ಒಳನಾಡು ಕರ್ನಾಟಕದಲ್ಲಿ ಶೇ.5, ಉತ್ತರ ಒಳನಾಡು ಕರ್ನಾಟಕದಲ್ಲಿ ಶೇ.28, ಮಲೆನಾಡಿನಲ್ಲಿ ಶೇ.58 ಹಾಗೂ ಕರಾವಳಿ ಭಾಗದಲ್ಲಿ ಶೇ.49ರಷ್ಟು ವ್ಯತ್ಯಾಸವಿದೆ. ರಾಜ್ಯದ ಒಟ್ಟಾರೆ ಸರಾಸರಿ ಶೇ.42ರಷ್ಟಿದೆ.
ಜುಲೈನಲ್ಲಿ ಸ್ವಲ್ಪ ಉತ್ತಮ ಮಳೆಯಾಗಿದೆ. ರಾಜ್ಯದಲ್ಲಿ ಸಾಮಾನ್ಯವಾಗಿ 271 ಮಿ.ಮೀ. ಮಳೆಯಾಗಬೇಕಿದ್ದು, 192 ಮಿ.ಮೀ. ಮಳೆಯಾಗಿದೆ. ಮಳೆ ಕೊರತೆ ಶೇ.29ರಷ್ಟಿದೆ. ಅಂದರೆ ಜೂನ್ನ ಶೇ.42ರಿಂದ ಜುಲೈನಲ್ಲಿ ಶೇ.29ಕ್ಕೆ ಸುಧಾರಿಸಿದೆ. ಆಗಸ್ಟ್ನಲ್ಲಿ ಮಳೆ ಕೊರತೆ ಶೇ.23ರಷ್ಟಿದೆ. ಸಾಮಾನ್ಯವಾಗಿ 222 ಮಿ.ಮೀ. ಮಳೆಯಾಗಬೇಕಿದ್ದು, 169 ಮಿ.ಮೀ. ಮಳೆಯಾಗಿದೆ. ಸೆಪ್ಟೆಂಬರ್ 23ರವರೆಗೆ ಸಾಮಾನ್ಯವಾಗಿ 119 ಮಿ.ಮೀ. ಮಳೆಯಾಗಬೇಕಿತ್ತು. ಆದರೆ ಕೇವಲ 47 ಮಿ.ಮೀ. ಮಳೆಯಾಗಿದ್ದು, ಶೇ.61ರಷ್ಟು ವ್ಯತ್ಯಾಸವಿದೆ. ಒಟ್ಟಾರೆಯಾಗಿ ಸಾಮಾನ್ಯವಾಗಿ 809 ಮಿ.ಮೀ. ಮಳೆಯಾಗಬೇಕಿದ್ದ ಕಡೆ ನಮಗೆ ಕೇವಲ 524 ಮಿ.ಮೀ. ಮಳೆಯಾಗಿದೆ. ಒಟ್ಟಾರೆ ಮಳೆ ಕೊರತೆ ಶೇ.36ರಷ್ಟಿದೆ.
ಮಳೆಯ ಕೊರತೆಯ ಪ್ರಮಾಣವನ್ನು ವರ್ಗೀಕರಿಸಲಾಗಿದೆ. ಹೆಚ್ಚುವರಿ ಮಳೆಯಾಗಿರುವ ಪರಿಸ್ಥಿತಿಯೇ ಇಲ್ಲ. 174 ತಾಲೂಕುಗಳು ಒಂದು ವರ್ಗೀಕರಣದಲ್ಲಿವೆ. ಮಳೆಯೇ ಆಗದ ಪ್ರದೇಶಗಳನ್ನೂ ಪ್ರತ್ಯೇಕವಾಗಿ ಗುರುತಿಸಲಾಗಿದೆ. ಒಟ್ಟಾರೆ 222 ತಾಲೂಕುಗಳಲ್ಲಿ ಇಂದು ಮಳೆಯ ಕೊರತೆಯನ್ನು ಕಾಣುತ್ತಿದ್ದೇವೆ.
ಬರದ ಬಗ್ಗೆ ಸರ್ಕಾರ ಒಂದೇ ಒಂದು ಸಭೆಯನ್ನೂ ಮಾಡಿಲ್ಲ, ಬರ ಪರಿಸ್ಥಿತಿಯ ಬಗ್ಗೆ ಗಮನವನ್ನೇ ಹರಿಸಿಲ್ಲ, ಸಚಿವರೆಲ್ಲ ಬೇರೆ ಬೇರೆ ಕಡೆ ಇದ್ದರು ಎಂಬ ಆರೋಪಗಳನ್ನು ಮಾಡಲಾಗಿದೆ. ಆದರೆ ವಾಸ್ತವದ ಅಂಕಿ-ಅಂಶಗಳನ್ನು ನೋಡಿದರೆ ಪರಿಸ್ಥಿತಿ ಬೇರೆಯೇ ಇದೆ.
ಜಿಲ್ಲಾಮಟ್ಟದಲ್ಲಿ ಸುಮಾರು 270 ಸಭೆಗಳನ್ನು ನಡೆಸಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವರಿಗೆ ಸಚಿವ ಸಂಪುಟ ಸಭೆಯಲ್ಲಿಯೇ ಮುಖ್ಯಮಂತ್ರಿಗಳು ಕಟ್ಟುನಿಟ್ಟಿನ ಜವಾಬ್ದಾರಿ ನೀಡಿದ್ದರು. ಎಲ್ಲ ಜಿಲ್ಲಾ ಉಸ್ತುವಾರಿ ಸಚಿವರು ತಮ್ಮ ಜಿಲ್ಲೆಗಳಿಗೆ ತೆರಳಿ ಬರ ಪರಿಸ್ಥಿತಿಯನ್ನು ಪರಿಶೀಲಿಸಬೇಕು ಹಾಗೂ ಕೇವಲ ಭೇಟಿ ನೀಡಿ ಬರುವುದಲ್ಲ, ಕಂದಾಯ ಸಚಿವರಿಗೆ ವರದಿಯನ್ನೂ ಸಲ್ಲಿಸಬೇಕು ಎಂದು ಸೂಚಿಸಿದ್ದರು.
ಜಿಲ್ಲಾ ಉಸ್ತುವಾರಿ ಸಚಿವರು 84 ಸಭೆಗಳನ್ನು ನಡೆಸಿದ್ದಾರೆ. ಟಾಸ್ಕ್ಫೋರ್ಸ್ ಸಭೆಗಳನ್ನೇ ನಡೆಸಿಲ್ಲ ಎಂಬ ಆರೋಪವನ್ನೂ ಮಾಡಲಾಗಿದೆ. ಆದರೆ ಒಟ್ಟು 832 ಟಾಸ್ಕ್ಫೋರ್ಸ್ ಸಭೆಗಳನ್ನು ನಡೆಸಲಾಗಿದೆ. ಒಟ್ಟಾರೆಯಾಗಿ ಅಧಿಕೃತ ಹಂತದಲ್ಲಿ 1,160 ಸಭೆಗಳು ನಡೆದಿವೆ. ಇದರ ಜೊತೆಗೆ ಮುಖ್ಯಮಂತ್ರಿಗಳು 8 ಸಭೆಗಳನ್ನು ನಡೆಸಿದ್ದಾರೆ. ನಾನು 9 ಸಭೆಗಳನ್ನು ನಡೆಸಿದ್ದೇನೆ. ವಿಭಾಗೀಯ ಆಯುಕ್ತರು 10 ಸಭೆಗಳನ್ನು ನಡೆಸಿದ್ದಾರೆ. ನಮ್ಮ ಹಂತದಲ್ಲಿ ಒಟ್ಟು 25 ಸಭೆಗಳು ನಡೆದಿವೆ.
ಸಚಿವರು ಜಿಲ್ಲೆಗಳಿಗೆ ಹೋಗಿಲ್ಲ, ಯಾರೂ ಸಭೆ ನಡೆಸಿಲ್ಲ ಎಂಬ ಆರೋಪವೂ ಮಾಡಲಾಗಿದೆ. ಆದರೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು 25-07-2026ರಂದು ಚಿತ್ರದುರ್ಗದಲ್ಲಿ, 01-09-2026ರಂದು ಗದಗದಲ್ಲಿ, 04-09-2026ರಂದು ಬಾಗಲಕೋಟೆಯಲ್ಲಿ, 07-07-2026ರಂದು ಬೆಂಗಳೂರು ವಿಭಾಗದಲ್ಲಿ ಹಾಗೂ 25-07-2026ರಂದು ಕಲಬುರಗಿ ವಿಭಾಗದಲ್ಲಿ ಬರ ಪರಿಸ್ಥಿತಿಗೆ ಸಂಬಂಧಿಸಿದ ಸಭೆಗಳನ್ನು ನಡೆಸಿದ್ದಾರೆ. ಮುಖ್ಯಮಂತ್ರಿಗಳು ಹೆಲಿಕಾಪ್ಟರ್ನಲ್ಲಿ ಹೋದರೋ, ವಿಮಾನದಲ್ಲಿ ಹೋದರೋ ಎಂಬುದು ಅಪ್ರಸ್ತುತ. ಅವರು ಬರ ಪರಿಸ್ಥಿತಿಗೆ ಸಂಬಂಧಿಸಿದ ಸಭೆ ನಡೆಸಿದ್ದಾರೆಯೇ ಎಂಬುದು ಪ್ರಸ್ತುತ. ಬರದ ಕುರಿತು ಸಭೆಗಳನ್ನು ನಡೆಸಲಾಗಿದೆ ಎಂಬುದೇ ಮುಖ್ಯ.
*ಹಲವು ರಾಜ್ಯಗಳಲ್ಲಿಯೂ ತೀವ್ರ ಮಳೆ ಕೊರತೆ : ನಮ್ಮ ರಾಜ್ಯದಲ್ಲಿ ಮಾತ್ರ ಈ ಪರಿಸ್ಥಿತಿ ಇದೆ, ಬೇರೆ ರಾಜ್ಯಗಳೆಲ್ಲ ಚೆನ್ನಾಗಿವೆ ಎಂದು ನಾವು ಭಾವಿಸುವಂತಿಲ್ಲ. ಕರ್ನಾಟಕದಲ್ಲಿ ಮಳೆ ಕೊರತೆ ಶೇ.-36ರಷ್ಟಿದ್ದರೆ, ಆಂಧ್ರಪ್ರದೇಶದಲ್ಲಿ ಶೇ.-43, ತೆಲಂಗಾಣದಲ್ಲಿ ಶೇ.-21, ತಮಿಳುನಾಡಿನಲ್ಲಿ ಶೇ.-22, ಕೇರಳದಲ್ಲಿ ಶೇ.-22, ರಾಜಸ್ಥಾನದಲ್ಲಿ ಶೇ.-21, ಪಂಜಾಬ್ನಲ್ಲಿ ಶೇ.-39, ಹರಿಯಾಣದಲ್ಲಿ ಶೇ.-22, ಬಿಹಾರದಲ್ಲಿ ಶೇ.-36, ಅಸ್ಸಾಂನಲ್ಲಿ ಶೇ.-28, ಅರುಣಾಚಲ ಪ್ರದೇಶದಲ್ಲಿ ಶೇ.-41, ಮಹಾರಾಷ್ಟ್ರದಲ್ಲಿ ಶೇ.-17 ಹಾಗೂ ಗೋವಾದಲ್ಲಿ ಶೇ.-35ರಷ್ಟು ಮಳೆ ಕೊರತೆಯಿದೆ. ಹೀಗೆ ಇನ್ನೂ ಅನೇಕ ರಾಜ್ಯಗಳು ಇದೇ ಪರಿಸ್ಥಿತಿಯನ್ನು ಎದುರಿಸುತ್ತಿವೆ. ಆದ್ದರಿಂದ ನಮಗೆ ಮಾತ್ರ ತೊಂದರೆಯಾಗಿದೆ, ಬೇರೆ ರಾಜ್ಯಗಳಿಗೆ ಆಗಿಲ್ಲ ಎನ್ನುವಂತಿಲ್ಲ.
ರಾಜ್ಯದ ಜಿಲ್ಲೆಗಳ ಪರಿಸ್ಥಿತಿಯನ್ನು ನೋಡಿದರೆ, ಬಳ್ಳಾರಿಯಲ್ಲಿ ಶೇ.-58, ಬೀದರ್ನಲ್ಲಿ ಶೇ.-40, ಚಿಕ್ಕಬಳ್ಳಾಪುರದಲ್ಲಿ ಶೇ.-52, ದಾವಣಗೆರೆಯಲ್ಲಿ ಶೇ.-44, ಗದಗದಲ್ಲಿ ಶೇ.-45, ಕಲಬುರಗಿಯಲ್ಲಿ ಶೇ.-51, ಹಾವೇರಿಯಲ್ಲಿ ಶೇ.-49, ಕೊಪ್ಪಳದಲ್ಲಿ ಶೇ.-52 ಹಾಗೂ ತುಮಕೂರಿನಲ್ಲಿ ಶೇ.-45ರಷ್ಟು ಮಳೆ ಕೊರತೆಯಿದೆ. ವಿಜಯನಗರದಲ್ಲಿ ಶೇ.-63ರಷ್ಟು ಮಳೆ ಕೊರತೆಯಿದ್ದು, ಇದು ಅತ್ಯಧಿಕವಾಗಿದೆ. ಇದೇ ರೀತಿಯಲ್ಲಿ ಎಲ್ಲವೂ ಶೇ.-35ಕ್ಕಿಂತ ಹೆಚ್ಚಿವೆ; ಯಾವುದೂ ಕಡಿಮೆಯಿಲ್ಲ.
ಇಷ್ಟೊಂದು ಭೀಕರವಾದ ಬರಗಾಲ ಬಂದಾಗ ರಾಜ್ಯ ಸರ್ಕಾರ ಏನು ಮಾಡಬಹುದು? ಜಿಲ್ಲೆಗಳಿಗೆ ಪ್ರವಾಸ ಮಾಡಬೇಕು, ಸಭೆಗಳನ್ನು ನಡೆಸಬೇಕು ಮತ್ತು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು. ಕುಡಿಯುವ ನೀರಿಗೆ ಪ್ರಾಮುಖ್ಯತೆ ನೀಡಬೇಕು. ಈ ಸಂಬಂಧವೂ ಕೆಲವು ಮಾಹಿತಿಯನ್ನು ಸದನದ ಗಮನಕ್ಕೆ ತರಲು ಬಯಸುತ್ತೇನೆ.
ನಮ್ಮಲ್ಲಿ 14 ಜಲಾಶಯಗಳಿವೆ. ನವೆಂಬರ್ 17ರ ಮಾಹಿತಿಯಂತೆ ಈ 14 ಜಲಾಶಯಗಳಲ್ಲಿ ಒಟ್ಟು 649 ಟಿಎಂಸಿ ನೀರು, ಅಂದರೆ ಶೇ.72ರಷ್ಟು ನೀರು ಸಂಗ್ರಹವಾಗಿತ್ತು. ಹಿಂದಿನ ವರ್ಷ ಇದೇ ಸಂದರ್ಭದಲ್ಲಿ ಶೇ.93ರಷ್ಟು ನೀರು ಸಂಗ್ರಹವಾಗಿತ್ತು. ಈ ಬಾರಿ ಅದು ಶೇ.72ರಷ್ಟಿದೆ. ಈಗಾಗಲೇ ಕಾರಣಾಂತರಗಳಿಂದ ತಮಿಳುನಾಡಿಗೆ ನೀರು ಬಿಡಬೇಕಾಗಿದೆ. ಸುಪ್ರೀಂ ಕೋರ್ಟ್ ತೀರ್ಪಿನ ಹಿನ್ನೆಲೆಯಲ್ಲಿ ನೀರು ಬಿಟ್ಟಿದ್ದೇವೆ. ಇದರಿಂದ ಶೇ.72ರಷ್ಟಿದ್ದ ನೀರಿನ ಪ್ರಮಾಣವೂ ಕಡಿಮೆಯಾಗಿ ಈಗ ಬಹುತೇಕ ಶೇ.50ರ ಮಟ್ಟಕ್ಕೆ ಬಂದಿದೆ.
ಗ್ರಾಮೀಣ ಪ್ರದೇಶದಲ್ಲಿ, ಇಂದಿನ ಮಾಹಿತಿಯಂತೆ 111 ತಾಲೂಕುಗಳ 531 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆಯಾಗಿದೆ. ಹಾಗೆಂದು ನಾವು ಸುಮ್ಮನೆ ಕುಳಿತಿಲ್ಲ. ಟ್ಯಾಂಕರ್ಗಳ ಮೂಲಕ ನೀರು ಪೂರೈಸುತ್ತಿದ್ದೇವೆ. ಖಾಸಗಿ ಕೊಳವೆಬಾವಿಗಳಿಂದ ನೀರು ಪಡೆದು ಸರಬರಾಜು ಮಾಡುತ್ತಿದ್ದೇವೆ. ಎಲ್ಲೆಲ್ಲಿ ನೀರಿನ ಮೂಲಗಳು ಲಭ್ಯವಿವೆಯೋ ಅವುಗಳ ಸಹಾಯವನ್ನೂ ಪಡೆದು ನೀರು ಪೂರೈಸುತ್ತಿದ್ದೇವೆ. ನಗರ ಪ್ರದೇಶದಲ್ಲಿಯೂ 15 ನಗರ ಸ್ಥಳೀಯ ಸಂಸ್ಥೆಗಳ ಸುಮಾರು 81 ವಾರ್ಡ್ಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿದ್ದು, ಈಗಾಗಲೇ ಅಗತ್ಯ ಕ್ರಮಗಳನ್ನು ಕೈಗೊಂಡಿದ್ದೇವೆ.
16-04-2026ರಂದು ಮುಖ್ಯಮಂತ್ರಿಗಳು ಸಭೆ ನಡೆಸಿ ಸೂಚನೆ ನೀಡಿದ್ದಷ್ಟೇ ಅಲ್ಲ, ಜಿಲ್ಲಾಧಿಕಾರಿಗಳಿಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಮೂಲಕ ಹಣ ಬಿಡುಗಡೆ ಮಾಡಲಾಗಿದೆ. ಕೆಲವು ಸಣ್ಣ ಜಿಲ್ಲೆಗಳಿಗೆ ₹3 ಕೋಟಿ, ದೊಡ್ಡ ಜಿಲ್ಲೆಗಳಿಗೆ ₹5 ಕೋಟಿ, ₹6 ಕೋಟಿ ಹೀಗೆ ಸರಾಸರಿ ₹5 ಕೋಟಿಯಷ್ಟು ಹಣವನ್ನು ಬಿಡುಗಡೆ ಮಾಡಲಾಗಿದೆ. ಈ ಹಣವನ್ನು ಕುಡಿಯುವ ನೀರಿನ ಉದ್ದೇಶಕ್ಕೆ ಮಾತ್ರ ಬಳಸುವಂತೆ ಸೂಚಿಸಲಾಗಿದೆ.
ನಂತರ ವಿಭಾಗಮಟ್ಟದ ಸಭೆಗಳನ್ನು ನಡೆಸುವ ಸಂದರ್ಭದಲ್ಲಿ ಬೆಳಗಾವಿಯಲ್ಲಿ ಮತ್ತೊಂದು ಘೋಷಣೆ ಮಾಡಿದೆವು. ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಪ್ರತಿಯೊಬ್ಬ ಶಾಸಕರಿಗೂ ₹1 ಕೋಟಿ ನೀಡುವುದಾಗಿ ತಿಳಿಸಿ, ₹1 ಕೋಟಿ ಹಣ ಬಿಡುಗಡೆ ಮಾಡಲಾಯಿತು.
ಇದರಲ್ಲಿ ಕಾಂಗ್ರೆಸ್ ಶಾಸಕರಿಗೆ ಮಾತ್ರ ಹಣ ನೀಡಿ ಉಳಿದವರಿಗೆ ನೀಡಿಲ್ಲ ಎನ್ನುವಂತಹದ್ದೇನೂ ಇಲ್ಲ. ಎಲ್ಲ ಶಾಸಕರಿಗೂ ₹1 ಕೋಟಿ ಬಂದಿದೆ. ಈಗ ಆ ಹಣವನ್ನು ಬಳಸಲಾಗುತ್ತಿದೆ. ಬಹುತೇಕ ಕಡೆಗಳಲ್ಲಿ ಕ್ರಿಯಾ ಯೋಜನೆಗಳನ್ನು ಸಿದ್ಧಪಡಿಸಿ ಕೊಳವೆಬಾವಿಗಳನ್ನು ಕೊರೆಸಲಾಗಿದೆ. ಪೈಪ್ಡ್ ವಾಟರ್ ಸಪ್ಲೈ, ಪೈಪ್ಲೈನ್ಗಳ ವಿಸ್ತರಣೆ ಹಾಗೂ ಹೈಡ್ರೋಫ್ರ್ಯಾಕ್ಚರ್ ಕೆಲಸಗಳನ್ನು ಕೈಗೊಳ್ಳಲಾಗಿದೆ.
ಪ್ರಸ್ತುತ ಕುಡಿಯುವ ನೀರಿನ ಸಮಸ್ಯೆಯಿಂದ ಎಲ್ಲಿಯೂ ಹಾಹಾಕಾರ ಉಂಟಾಗದಂತೆ ನೋಡಿಕೊಂಡಿದ್ದೇವೆ. ಸರ್ಕಾರ ಏನೂ ಮಾಡಿಲ್ಲ ಎಂಬ ಮಾಹಿತಿ ಸರಿಯಲ್ಲ. ₹117 ಕೋಟಿ ನೀಡಿರುವುದರ ಜೊತೆಗೆ ಶಾಸಕರಿಗೆ ₹189 ಕೋಟಿ ಬಿಡುಗಡೆ ಮಾಡಿದ್ದೇವೆ. ಅಷ್ಟೇ ಅಲ್ಲ, ಈವರೆಗೆ 177 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಿದ್ದೇವೆ.
ಜಿಲ್ಲಾಧಿಕಾರಿಗಳಿಗೆ, “ನಿಮ್ಮ ಬಳಿ SDRFನಲ್ಲಿ ಹಣವಿದೆ, ಅಗತ್ಯವಿರುವ ಕಡೆ ಖರ್ಚು ಮಾಡಿ” ಎಂದು ಸೂಚಿಸಿದ್ದೇವೆ. ಜಿಲ್ಲಾಧಿಕಾರಿಗಳ PD ಖಾತೆಗಳಲ್ಲಿ ಸುಮಾರು ₹420 ಕೋಟಿ ಹಣವಿದೆ. ಆ ಹಣವನ್ನು ಕುಡಿಯುವ ನೀರು ಅಥವಾ ಜಾನುವಾರುಗಳಿಗೆ ಮೇವಿನ ಅಗತ್ಯಕ್ಕಾಗಿ ಖರ್ಚು ಮಾಡುವಂತೆ ಸೂಚನೆ ನೀಡಿದ್ದೇವೆ. ಈಗಾಗಲೇ ಬಹಳಷ್ಟು ಕಡೆಗಳಲ್ಲಿ ಈ ಕೆಲಸ ನಡೆಯುತ್ತಿದೆ. ಕುಡಿಯುವ ನೀರಿನ ವಿಚಾರದಲ್ಲಿ ಇಂದಿನವರೆಗೂ ಸಮಸ್ಯೆ ಇರುವ ಕಡೆ ತಕ್ಷಣವೇ ಸ್ಪಂದಿಸುತ್ತಿದ್ದೇವೆ.
ತುಮಕೂರು ಮಹಾನಗರ ಪಾಲಿಕೆಯಲ್ಲಿ ಮೂರು ದಿನಗಳಿಂದ ಸಮಸ್ಯೆಯಿದ್ದು, ಮೂರು ದಿನಗಳಿಂದ ನೀರು ಸರಬರಾಜಾಗಿಲ್ಲ ಎಂಬ ವಿಚಾರವನ್ನು ಶಾಸಕ ಜ್ಯೋತಿಗಣೇಶ್ ಅವರು ಗಮನಕ್ಕೆ ತಂದಿದ್ದಾರೆ. ಅಲ್ಲಿ ಮುಷ್ಕರದ ಕಾರಣದಿಂದ ನೀರು ಸರಬರಾಜು ಕಡಿಮೆಯಾಗಿದ್ದು, ಈಗಾಗಲೇ ಪರ್ಯಾಯ ವ್ಯವಸ್ಥೆ ಮಾಡಲಾಗಿದೆ.
ನೀರಿಗೆ ಸಮಸ್ಯೆ ಇಲ್ಲ. ಸಾಮಾನ್ಯ ಅಥವಾ ಆಡಳಿತಾತ್ಮಕ ಸಮಸ್ಯೆಗಳು ಎದುರಾದರೆ ಅವುಗಳನ್ನು ಪ್ರತ್ಯೇಕವಾಗಿ ಪರಿಹರಿಸಬೇಕು. ಆಡಳಿತಾತ್ಮಕ ಸಮಸ್ಯೆಗೆ ಬೇರೆ ರೀತಿಯ ಪರಿಹಾರ ಬೇಕಾಗುತ್ತದೆ.
- ವಿಧಾನಸಭೆಯಲ್ಲಿ ಬರ ಪರಿಸ್ಥಿತಿ ಕುರಿತ ಚರ್ಚೆಗೆ ಸರ್ಕಾರದ ಪರವಾಗಿ ನನ್ನ ಉತ್ತರ (3/4) -
Dr. G Parameshwara
@DrParameshwara
ಭಾರತೀಯ ಹವಾಮಾನ ಇಲಾಖೆಯ ಮುನ್ಸೂಚನೆ ಬಂದ ಕೇವಲ ಮೂರು ದಿನಗಳಲ್ಲಿ ರಾಜ್ಯ ಸರ್ಕಾರ ಉನ್ನತ ಮಟ್ಟದ ಸಭೆ ನಡೆಸಿ ಬರ ಪರಿಸ್ಥಿತಿ ಎದುರಿಸಲು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದ್ದು, ಜಿಲ್ಲಾಮಟ್ಟದಿಂದ ರಾಜ್ಯಮಟ್ಟದವರೆಗೆ ನಿರಂತರ ಸಭೆ, ಕ್ಷೇತ್ರ ಪರಿಶೀಲನೆ, ಟಾಸ್ಕ್ಫೋರ್ಸ್ ಸಭೆ ಹಾಗೂ ಅಧಿಕಾರಿಗಳೊಂದಿಗೆ ಸಮನ್ವಯದ ಮೂಲಕ ಬರ ಪರಿಸ್ಥಿತಿಯನ್ನು ನಿರ್ವಹಿಸಲಾಗುತ್ತಿದೆ.
2026ರ ಏಪ್ರಿಲ್ 13ರಂದು ಭಾರತೀಯ ಹವಾಮಾನ ಇಲಾಖೆಯಿಂದ ರಾಜ್ಯ ಸರ್ಕಾರಕ್ಕೆ ಪತ್ರ ಬಂದಿತ್ತು. ನೈರುತ್ಯ ಮುಂಗಾರಿನಲ್ಲಿ ವಾಡಿಕೆಗಿಂತ ಸುಮಾರು ಶೇ.5ರಷ್ಟು ಮಳೆ ಕಡಿಮೆಯಾಗುವ ಸಾಧ್ಯತೆ ಇದ್ದು, ಬರ ಪರಿಸ್ಥಿತಿ ಎದುರಾಗುವ ಸಾಧ್ಯತೆ ಇರುವುದರಿಂದ ಎಚ್ಚರಿಕೆ ವಹಿಸುವಂತೆ ತಿಳಿಸಲಾಗಿತ್ತು. ಆ ವರದಿಯನ್ನು ಸರ್ಕಾರ ನಿರ್ಲಕ್ಷಿಸಿಲ್ಲ. ಏಪ್ರಿಲ್ 13ರಂದು ಪತ್ರ ಬಂದ ಕೇವಲ ಮೂರು ದಿನಗಳ ನಂತರ, ಏಪ್ರಿಲ್ 16ರಂದು ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎಲ್ಲ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಸಭೆ ಕರೆದಿದ್ದರು.
ಆ ಸಭೆಯಲ್ಲಿ ಈಗಿನ ಮುಖ್ಯಮಂತ್ರಿ ಮತ್ತು ಅಂದಿನ ಉಪಮುಖ್ಯಮಂತ್ರಿ, ಕಂದಾಯ ಸಚಿವರು, ಕೃಷಿ ಸಚಿವರು, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರು ಸೇರಿದಂತೆ ಹಲವು ಸಚಿವರು, ಇಲಾಖೆಗಳ ಕಾರ್ಯದರ್ಶಿಗಳು ಹಾಗೂ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.
ಸಭೆಯಲ್ಲಿ ಅಂದಿನ ಕಂದಾಯ ಸಚಿವರು, ಏಪ್ರಿಲ್ 13ರಂದು ಭಾರತೀಯ ಹವಾಮಾನ ಇಲಾಖೆ ನೀಡಿದ ವರದಿಯಲ್ಲಿ ಈ ವರ್ಷದ ಮುಂಗಾರಿನಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗುವ ಸಾಧ್ಯತೆಯನ್ನು ತಿಳಿಸಲಾಗಿದೆ ಎಂಬುದನ್ನು ಗಮನಕ್ಕೆ ತಂದಿದ್ದರು. 5-6 ಜಿಲ್ಲೆಗಳನ್ನು ಹೊರತುಪಡಿಸಿ ಉಳಿದ ಜಿಲ್ಲೆಗಳಲ್ಲಿ ಮಳೆಯ ಅಭಾವ ಎದುರಾಗುವ ಸಾಧ್ಯತೆ ಇದೆ. ಆಗಸ್ಟ್ನಲ್ಲಿ ವಾಡಿಕೆಗಿಂತ ಉತ್ತಮ ಮಳೆಯಾಗುವ ಸಾಧ್ಯತೆ ಇದ್ದರೂ, ಮುಂದಿನ ಅವಧಿಯಲ್ಲಿ ಮಳೆ ಕೊರತೆ ಹೆಚ್ಚಾಗುವ ಸಂಭವವಿರುವುದರಿಂದ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು ಎಂದು ಚರ್ಚೆ ಆರಂಭಿಸಿದ್ದರು.
ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಭೆಯ ಪ್ರಾಸ್ತಾವಿಕ ಮಾತಿನಲ್ಲಿಯೇ ಭಾರತೀಯ ಹವಾಮಾನ ಇಲಾಖೆಯ ಮುಂಗಾರು ವರದಿಯನ್ನು ಉಲ್ಲೇಖಿಸಿದ್ದರು. ವಾಡಿಕೆಗಿಂತ ಅಂದಾಜು ಶೇ.5ರಷ್ಟು ಮಳೆ ಕಡಿಮೆಯಾಗುವ ಸಾಧ್ಯತೆಯಿದೆ ಎಂದು ವರದಿ ತಿಳಿಸಿರುವುದರಿಂದ, ಈಗಾಗಲೇ ಕೆಲವು ಗ್ರಾಮ ಮತ್ತು ವಾರ್ಡ್ಗಳಲ್ಲಿ ಟ್ಯಾಂಕರ್ ಮೂಲಕ ಕುಡಿಯುವ ನೀರು ಪೂರೈಸುತ್ತಿರುವ ಮಾಹಿತಿಯನ್ನೂ ಪರಿಗಣಿಸಿ, ಯಾವುದೇ ಜಿಲ್ಲೆಯಲ್ಲಿ ಕುಡಿಯುವ ನೀರಿನ ಅಭಾವ ಉಂಟಾಗದಂತೆ ಜಿಲ್ಲಾಧಿಕಾರಿಗಳು ಜವಾಬ್ದಾರಿ ವಹಿಸಬೇಕು ಎಂದು ಸೂಚಿಸಿದ್ದರು.
ಈ ವಿಷಯದಲ್ಲಿ ನಿರ್ಲಕ್ಷ್ಯ ತೋರಿದರೆ ಸಂಬಂಧಪಟ್ಟ ಜಿಲ್ಲಾಧಿಕಾರಿಗಳ ವಿರುದ್ಧ ಸರ್ಕಾರ ಕಠಿಣ ಕ್ರಮ ಕೈಗೊಳ್ಳಲಿದೆ ಎಂದೂ ತಿಳಿಸಲಾಗಿತ್ತು. ನಗರಾಭಿವೃದ್ಧಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ನೀರಾವರಿ ಹಾಗೂ ಕಂದಾಯ ಇಲಾಖೆಗಳು ಪರಸ್ಪರ ಸಮನ್ವಯದಿಂದ ಕಾರ್ಯನಿರ್ವಹಿಸಬೇಕು ಹಾಗೂ ಹವಾಮಾನ ಇಲಾಖೆ ನೀಡಿರುವ ಮುನ್ಸೂಚನೆಯನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಸೂಚಿಸಲಾಗಿತ್ತು.
ಹವಾಮಾನ ಇಲಾಖೆಯ ಎಚ್ಚರಿಕೆ ಬಂದ ಕೇವಲ ಮೂರು ದಿನಗಳಲ್ಲಿ ರಾಜ್ಯದ ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತ್ ಸಿಇಒಗಳು ಮತ್ತು ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳ ಸಭೆ ನಡೆಸಿ ಈ ಎಲ್ಲ ಸೂಚನೆಗಳನ್ನು ನೀಡಲಾಗಿದೆ. ಹೀಗಿರುವಾಗ ಸರ್ಕಾರ ಎಚ್ಚರಿಕೆಯನ್ನು ನಿರ್ಲಕ್ಷಿಸಿದೆ ಅಥವಾ ಯಾವುದೇ ಕ್ರಮ ಕೈಗೊಂಡಿಲ್ಲ ಎನ್ನುವುದು ಸರಿಯಲ್ಲ.
ಬರದ ಬಗ್ಗೆ ಸರ್ಕಾರ ಒಂದು ಸಭೆಯನ್ನೂ ಮಾಡಿಲ್ಲ, ಗಮನ ಹರಿಸಿಲ್ಲ ಎಂಬ ಆರೋಪವೂ ಮಾಡಲಾಗಿದೆ. ಆದರೆ ವಾಸ್ತವವಾಗಿ ಬರ ಪರಿಸ್ಥಿತಿಯನ್ನು ಎದುರಿಸಲು ಸರ್ಕಾರ ನಿರಂತರವಾಗಿ ಸಭೆ, ಪರಿಶೀಲನೆ ಮತ್ತು ಮೇಲ್ವಿಚಾರಣೆ ನಡೆಸಿದೆ.
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಸಚಿವ ಸಂಪುಟ ಸಭೆಯಲ್ಲಿ ಎಲ್ಲ ಜಿಲ್ಲಾ ಉಸ್ತುವಾರಿ ಸಚಿವರು ತಮ್ಮ ಜಿಲ್ಲೆಗಳಿಗೆ ಭೇಟಿ ನೀಡಿ ಬರ ಪರಿಸ್ಥಿತಿಯನ್ನು ಪರಿಶೀಲಿಸಿ, ಕಂದಾಯ ಸಚಿವರಿಗೆ ವರದಿ ಸಲ್ಲಿಸುವಂತೆ ಸೂಚಿಸಿದ್ದರು.
ರಾಜ್ಯದ ಜಿಲ್ಲೆಗಳಲ್ಲಿ 270 ಸಭೆಗಳನ್ನು ನಡೆಸಲಾಗಿದೆ. ಇದಲ್ಲದೆ 832 ಟಾಸ್ಕ್ಫೋರ್ಸ್ ಸಭೆಗಳು ನಡೆದಿವೆ. ಮುಖ್ಯಮಂತ್ರಿಗಳು ಸ್ವತಃ 8 ಸಭೆಗಳನ್ನು, ನಾನು ಕಂದಾಯ ಸಚಿವನಾಗಿ 9 ಸಭೆಗಳನ್ನು ಹಾಗೂ ವಿಭಾಗೀಯ ಆಯುಕ್ತರು 10 ಸಭೆಗಳನ್ನು ನಡೆಸಿದ್ದಾರೆ.
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಚಿತ್ರದುರ್ಗ, ಗದಗ, ಬಾಗಲಕೋಟೆ, ಕಲಬುರಗಿ, ಬೆಳಗಾವಿ ಮತ್ತು ಬೀದರ್ ಜಿಲ್ಲೆಗಳಿಗೆ ಖುದ್ದು ಭೇಟಿ ನೀಡಿ ಬರ ಪರಿಸ್ಥಿತಿಯನ್ನು ಪರಿಶೀಲಿಸಿದ್ದಾರೆ. ಕೋಲಾರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ಚಾಮರಾಜನಗರ, ಮೈಸೂರು, ಬೆಳಗಾವಿ ವಿಭಾಗ ಮತ್ತು ಕಲಬುರಗಿ ವಿಭಾಗದಲ್ಲಿಯೂ ಬರ ಪರಿಸ್ಥಿತಿಯ ಪರಿಶೀಲನೆ ನಡೆಸಲಾಗಿದೆ.
ವೀಡಿಯೊ ಕಾನ್ಫರೆನ್ಸ್ ಮೂಲಕ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಅಗತ್ಯ ನಿರ್ದೇಶನಗಳನ್ನು ನೀಡಲಾಗಿದೆ. ಎಲ್ಲ ಸಚಿವರು ತಮ್ಮ ವ್ಯಾಪ್ತಿಯಲ್ಲಿ ಬರ ಪರಿಸ್ಥಿತಿಯನ್ನು ಪರಿಶೀಲಿಸಿ ನನಗೆ ವರದಿ ಸಲ್ಲಿಸಿದ್ದಾರೆ. ಆ ಎಲ್ಲ ವರದಿಗಳನ್ನು ನಾನು ಮುಖ್ಯಮಂತ್ರಿಗಳಿಗೆ ಸಲ್ಲಿಸಿದ್ದೇನೆ.
ಹವಾಮಾನ ಇಲಾಖೆಯ ಮುನ್ಸೂಚನೆ ಬಂದಾಗಿನಿಂದಲೇ ಸರ್ಕಾರ ಪರಿಸ್ಥಿತಿಯನ್ನು ಗಂಭೀರವಾಗಿ ಪರಿಗಣಿಸಿ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದೆ. ಜಿಲ್ಲಾಮಟ್ಟದಿಂದ ರಾಜ್ಯಮಟ್ಟದವರೆಗೆ ನಿರಂತರ ಸಭೆಗಳು, ಕ್ಷೇತ್ರ ಪರಿಶೀಲನೆ, ಟಾಸ್ಕ್ಫೋರ್ಸ್ ಸಭೆಗಳು ಹಾಗೂ ಅಧಿಕಾರಿಗಳೊಂದಿಗೆ ಸಮನ್ವಯದ ಮೂಲಕ ಬರ ಪರಿಸ್ಥಿತಿಯನ್ನು ನಿರ್ವಹಿಸುವ ಕೆಲಸ ಮಾಡಲಾಗಿದೆ.
- ವಿಧಾನಸಭೆಯಲ್ಲಿ ಬರ ಪರಿಸ್ಥಿತಿ ಕುರಿತ ಚರ್ಚೆಗೆ ಸರ್ಕಾರದ ಪರವಾಗಿ ನನ್ನ ಉತ್ತರ (2/4) -
Dr. G Parameshwara
@DrParameshwara
ಆರ್ಥಿಕ ಇಲಾಖೆಯು ಹಣಕಾಸಿನ ಶಿಸ್ತು ಕಾಪಾಡುವ ನಿಟ್ಟಿನಲ್ಲಿ ಸರ್ಕಾರಕ್ಕೆ ಸಲಹೆ ಮತ್ತು ಎಚ್ಚರಿಕೆಗಳನ್ನು ನೀಡುವುದು ಸಹಜ ಪ್ರಕ್ರಿಯೆಯಾಗಿದ್ದು, ಅದನ್ನೇ ಮುಂದಿಟ್ಟುಕೊಂಡು ರಾಜ್ಯ ಸರ್ಕಾರ ದಿವಾಳಿಯಾಗಿದೆ ಅಥವಾ ಸರ್ಕಾರದಲ್ಲಿ ಹಣವಿಲ್ಲ ಎಂದು ಹೇಳುವುದು ಸರಿಯಲ್ಲ.
ವಿರೋಧ ಪಕ್ಷದ ನಾಯಕರು ತಮ್ಮ ಮಾತಿನ ಆರಂಭದಲ್ಲಿ ಹಣಕಾಸಿನ ವಿಚಾರವನ್ನು ಪ್ರಸ್ತಾಪಿಸಿ, ರಾಜ್ಯ ಸರ್ಕಾರ ದಿವಾಳಿಯಾಗಿದೆ, ಸರ್ಕಾರದಲ್ಲಿ ಹಣವಿಲ್ಲ ಹಾಗೂ ಬರ ನಿರ್ವಹಣೆಗೂ ಹಣವಿಲ್ಲ ಎಂಬ ರೀತಿಯಲ್ಲಿ ಮಾತನಾಡಿದ್ದಾರೆ. ಇದಕ್ಕೆ ಆರ್ಥಿಕ ಇಲಾಖೆಯ ಸಲಹೆಯನ್ನು ಆಧಾರವಾಗಿಟ್ಟುಕೊಂಡಿದ್ದಾರೆ. ಆದರೆ ಸರ್ಕಾರ ಆರ್ಥಿಕವಾಗಿ ಎಡವದಂತೆ ನೋಡಿಕೊಳ್ಳುವುದು, ಯಾವುದೇ ರೀತಿಯ ತಪ್ಪುಗಳಾಗದಂತೆ ಎಚ್ಚರಿಸುವುದು ಹಾಗೂ ಹಣಕಾಸಿನ ಶಿಸ್ತನ್ನು ಕಾಪಾಡಿಕೊಳ್ಳಲು ಸಲಹೆ ನೀಡುವುದು ಆರ್ಥಿಕ ಇಲಾಖೆಯ ಜವಾಬ್ದಾರಿಯಾಗಿದೆ.
ಯಾವುದೇ ಸರ್ಕಾರ ಅಧಿಕಾರದಲ್ಲಿದ್ದರೂ ಆರ್ಥಿಕ ಇಲಾಖೆ ಇಂತಹ ಎಚ್ಚರಿಕೆ ಮತ್ತು ಸಲಹೆಗಳನ್ನು ನೀಡುತ್ತದೆ. ಬಜೆಟ್ನಲ್ಲಿ ಅನುದಾನ ನಿಗದಿಪಡಿಸದೆ ಹೆಚ್ಚುವರಿ ಹಣ ಖರ್ಚು ಮಾಡಿದರೆ, ಅದಕ್ಕೆ ಹಣವನ್ನು ಎಲ್ಲಿಂದ ಹೊಂದಿಸಬೇಕು ಎಂಬ ಪ್ರಶ್ನೆಯನ್ನು ಆರ್ಥಿಕ ಇಲಾಖೆ ಮುಂದಿಡುತ್ತದೆ. ಎರಡೂ ಸದನಗಳು ಅನುಮೋದಿಸಿರುವ ಬಜೆಟ್ ಮತ್ತು ಹಣಕಾಸು ಮಸೂದೆಯ ವ್ಯಾಪ್ತಿಯನ್ನು ಮೀರಿ ಖರ್ಚು ಮಾಡಲು ಅವಕಾಶವಿರುವುದಿಲ್ಲ. ಹೆಚ್ಚುವರಿ ವೆಚ್ಚದ ಅಗತ್ಯವಿದ್ದರೆ ಪೂರಕ ಬಜೆಟ್ ಮಂಡಿಸಿ ಸದನದ ಅನುಮೋದನೆ ಪಡೆದು ಖರ್ಚು ಮಾಡಬೇಕು. ಇದು ಸರ್ಕಾರಕ್ಕೆ ಇರಬೇಕಾದ ಕನಿಷ್ಠ ಹಣಕಾಸಿನ ಪ್ರಜ್ಞೆಯಾಗಿದೆ.
ಕೆಲವೊಮ್ಮೆ ಸರ್ಕಾರಗಳು ಬಜೆಟ್ ವ್ಯಾಪ್ತಿಯನ್ನು ಮೀರಿ ಹೊಸ ಕಾರ್ಯಕ್ರಮಗಳು ಅಥವಾ ಯೋಜನೆಗಳನ್ನು ಘೋಷಿಸಲು ಮುಂದಾದಾಗ ಆರ್ಥಿಕ ಇಲಾಖೆ ಎಚ್ಚರಿಕೆ ನೀಡುತ್ತದೆ. ಈಗ ಚರ್ಚೆಯಾಗುತ್ತಿರುವ ಸಲಹೆಯೂ ಅದೇ ರೀತಿಯದ್ದಾಗಿದೆ. ಇದನ್ನು ಆಧರಿಸಿ ‘ಸರ್ಕಾರ ದಿವಾಳಿಯಾಗಿದೆ, ಹಣವಿಲ್ಲ’ ಎಂದು ಹೇಳುವುದು ಸರಿಯಲ್ಲ.
ಪ್ರಸ್ತಾವಿತ ಯೋಜನೆಯನ್ನು 2026-27 ಮತ್ತು 2027-28ನೇ ಸಾಲಿನಲ್ಲಿ ಎರಡು ವರ್ಷಗಳಲ್ಲಿ ಅನುಷ್ಠಾನಗೊಳಿಸಲು ಯೋಜಿಸಲಾಗಿದ್ದು, ಬಜೆಟ್ನಲ್ಲಿ ಅನುದಾನ ನಿಗದಿಯಾಗದೆ ಹಾಗೂ ಹಣ ಮೀಸಲಿಡದೆ ₹1,000 ಕೋಟಿ ಅಗತ್ಯವಿರುವ ಯೋಜನೆಯನ್ನು ಆರಂಭಿಸುವುದರಿಂದ ನಗದು ಹರಿವು ಮತ್ತು ಹಣಕಾಸು ನಿರ್ವಹಣೆಗೆ ಸಮಸ್ಯೆಯಾಗಬಹುದು ಎಂದು ಆರ್ಥಿಕ ಇಲಾಖೆ ತನ್ನ ಸಲಹೆಯಲ್ಲಿ ತಿಳಿಸಿದೆ.
2026-27ನೇ ಸಾಲಿನಲ್ಲಿ ವಿತ್ತೀಯ ಕೊರತೆ ಶೇ.2.95ರಷ್ಟಿದ್ದು, FRBM ಅಡಿ ಅನುಮತಿಸಲಾದ ಮಿತಿ ಶೇ.3ರಷ್ಟಿದೆ. ಆದಾಯ ಕೊರತೆ ₹22,957 ಕೋಟಿಯಷ್ಟಿದೆ. GSDPಗೆ ಒಟ್ಟು ಹೊಣೆಗಾರಿಕೆ ಶೇ.24.94ರಷ್ಟಿದ್ದು, ಅದು ಶೇ.25ರ ಮಿತಿಯ ಸಮೀಪದಲ್ಲಿದೆ. ಹೀಗಾಗಿ ನಿಗದಿತ ಹಣಕಾಸಿನ ಮಿತಿಯನ್ನು ಮೀರದಂತೆ ಎಚ್ಚರಿಸುವುದು ಆರ್ಥಿಕ ಇಲಾಖೆಯ ಕರ್ತವ್ಯ.
ಹೊಸ ಯೋಜನೆಗಳಿಗೆ ಹೆಚ್ಚುವರಿ ಸಂಪನ್ಮೂಲ ಕ್ರೋಢೀಕರಣ ಅಥವಾ ಈಗಾಗಲೇ ಅನುಮೋದಿಸಿರುವ ಅನುದಾನಗಳ ಮರುಹಂಚಿಕೆ ಅಂತಿಮಗೊಳ್ಳುವವರೆಗೆ ಹಣಕಾಸು ಒದಗಿಸುವುದು ಕಷ್ಟವಾಗಬಹುದು. ಹೊಸ ಯೋಜನೆಗಳಿಗೆ ಅಗತ್ಯವಿರುವ ಸಂಪನ್ಮೂಲಗಳನ್ನು ಅಂತಿಮಗೊಳಿಸುವವರೆಗೆ ಸ್ವಲ್ಪ ಸಮಯ ಕಾಯುವುದು ಸೂಕ್ತ ಎಂದು ಆರ್ಥಿಕ ಇಲಾಖೆ ತಿಳಿಸಿದೆ. ಇದು ಆರ್ಥಿಕ ಸಲಹೆಯೇ ಹೊರತು ಸರ್ಕಾರದಲ್ಲಿ ಹಣವಿಲ್ಲ ಎಂಬ ಹೇಳಿಕೆಯಲ್ಲ.
ಈ ರೀತಿಯ ಸಲಹೆಯನ್ನು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಸರ್ಕಾರಕ್ಕೆ ಮಾತ್ರ ನೀಡಲಾಗಿದೆ ಎಂಬುದು ಸರಿಯಲ್ಲ. ಹಿಂದಿನ ಸರ್ಕಾರಗಳಿಗೂ ಆರ್ಥಿಕ ಇಲಾಖೆ ಇದೇ ರೀತಿಯ ಎಚ್ಚರಿಕೆಗಳನ್ನು ನೀಡಿದೆ.
2022ರ ಫೆಬ್ರವರಿಯಲ್ಲಿ ಬಸವರಾಜ ಬೊಮ್ಮಾಯಿ ಅವರ ಸರ್ಕಾರದ ಅವಧಿಯಲ್ಲಿ ಹೆಚ್ಚುತ್ತಿರುವ ಬದ್ಧತಾ ಖರ್ಚು ಮತ್ತು ಸೀಮಿತ ಆದಾಯದ ಆಯ್ಕೆಗಳಿಂದಾಗಿ ಆದಾಯ ಮಿಗತೆ ಬಜೆಟ್ ಮಂಡಿಸುವುದು ಕಷ್ಟವಾಗಬಹುದು ಎಂದು ಆರ್ಥಿಕ ಇಲಾಖೆ ಎಚ್ಚರಿಸಿತ್ತು.
2023ರ ಫೆಬ್ರವರಿಯಲ್ಲಿ ಚುನಾವಣೆ ಸಮೀಪಿಸುತ್ತಿದ್ದ ಸಂದರ್ಭದಲ್ಲಿ ಏಳನೇ ವೇತನ ಆಯೋಗವನ್ನು ಜಾರಿಗೊಳಿಸಲು ಸರ್ಕಾರ ಮುಂದಾದಾಗಲೂ ಆರ್ಥಿಕ ಇಲಾಖೆ ಎಚ್ಚರಿಕೆ ನೀಡಿತ್ತು. ಅದನ್ನು ತಕ್ಷಣ ಜಾರಿಗೊಳಿಸಿದರೆ ಮುಂದಿನ ಹಣಕಾಸು ವರ್ಷಕ್ಕೆ ಹೊರೆ ವರ್ಗಾವಣೆಯಾಗಬಹುದು, FRBM ಮಿತಿಯ ಮೇಲೆ ಪರಿಣಾಮ ಬೀರಬಹುದು ಹಾಗೂ ಗಣನೀಯ ಪ್ರಮಾಣದ ಹೆಚ್ಚುವರಿ ಸಾಲದ ಅಗತ್ಯ ಎದುರಾಗಬಹುದು ಎಂದು ತಿಳಿಸಿತ್ತು.
ಅದು ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರದ ಅವಧಿಯಲ್ಲಿ ನೀಡಲಾಗಿದ್ದ ಸಲಹೆ. ಹಾಗೆಂದು ಆ ಸರ್ಕಾರ ದಿವಾಳಿಯಾಗಿತ್ತು ಎಂದು ಹೇಳಲು ಸಾಧ್ಯವೇ? ಆರ್ಥಿಕ ಇಲಾಖೆ ಇಂತಹ ಸಲಹೆ ನೀಡುವುದು ಅದರ ಸಹಜ ಕಾರ್ಯವಿಧಾನ.
ಯಡಿಯೂರಪ್ಪ ಅವರ ಸರ್ಕಾರದ ಅವಧಿಯಲ್ಲಿಯೂ ಆರ್ಥಿಕ ಇಲಾಖೆ ಸಲಹೆ ನೀಡಿತ್ತು. 2020ರ ಜನವರಿಯಲ್ಲಿ ರಾಜ್ಯದ ಸ್ವಂತ ಆದಾಯ ಸಂಗ್ರಹ ಗುರಿಯ ಸುಮಾರು ಶೇ.70ರ ಮಟ್ಟಕ್ಕೆ ಕುಸಿದಿದ್ದು, ಕೇಂದ್ರದ ತೆರಿಗೆ ವರ್ಗಾವಣೆ ಸುಧಾರಿಸದಿದ್ದರೆ ರಾಜ್ಯ ಗಂಭೀರ ಹಣಕಾಸಿನ ಸಂಕಷ್ಟ ಎದುರಿಸಬಹುದು ಎಂದು ಎಚ್ಚರಿಸಲಾಗಿತ್ತು. ಅದು ಕೋವಿಡ್ ಸಂದರ್ಭವೂ ಆಗಿರಬಹುದು. ಪರಿಸ್ಥಿತಿಯನ್ನು ಸರ್ಕಾರದ ಗಮನಕ್ಕೆ ತರುವುದು ಆರ್ಥಿಕ ಇಲಾಖೆಯ ಕರ್ತವ್ಯವಾಗಿದೆ.
ಹೀಗಾಗಿ, ಆರ್ಥಿಕ ಇಲಾಖೆಯ ಸಲಹೆಯನ್ನು ಮುಂದಿಟ್ಟುಕೊಂಡು ‘ರಾಜ್ಯ ಸರ್ಕಾರ ದಿವಾಳಿಯಾಗಿದೆ’ ಅಥವಾ ‘ಸರ್ಕಾರದ ಹಣಕಾಸಿನ ಸ್ಥಿತಿ ಚೆನ್ನಾಗಿಲ್ಲ’ ಎಂದು ಹೇಳುವುದು ಸತ್ಯಕ್ಕೆ ದೂರವಾದ ಮಾತು.
- ವಿಧಾನಸಭೆಯಲ್ಲಿ ಬರ ಪರಿಸ್ಥಿತಿ ಕುರಿತ ಚರ್ಚೆಗೆ ಸರ್ಕಾರದ ಪರವಾಗಿ ಉತ್ತರಿಸುವ ವೇಳೆ ಸರ್ಕಾರ ದಿವಾಳಿಯಾಗಿದೆ ಎಂಬ ವಿರೋಧ ಪಕ್ಷದವರ ಸುಳ್ಳಾರೋಪದ ಬಗ್ಗೆ ಪ್ರತಿಕ್ರಿಯಿಸಿ ಮಾತನಾಡಿದೆ. (1/4) -
Dr. G Parameshwara
@DrParameshwara
ರಾಜ್ಯದಲ್ಲಿ ಬರ ಪರಿಸ್ಥಿತಿಯ ವೈಜ್ಞಾನಿಕ ಮೌಲ್ಯಮಾಪನವನ್ನು ನಮ್ಮ ಸರ್ಕಾರ ನಿರಂತರವಾಗಿ ನಡೆಸುತ್ತಿದೆ. ಈವರೆಗೆ 177 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿದ್ದು, 5ನೇ ಹಂತದಲ್ಲಿ 10 ಜಿಲ್ಲೆಗಳ 29 ತಾಲೂಕುಗಳು ಗ್ರೌಂಡ್ ಟ್ರೂಥಿಂಗ್ಗೆ (ವಸ್ತುಸ್ಥಿತಿ ಅಧ್ಯಯನ) ಅರ್ಹತೆ ಪಡೆದಿವೆ.
ಮಳೆ ಪ್ರಮಾಣ, ಮಣ್ಣಿನ ತೇವಾಂಶ, ಬೆಳೆ ಸ್ಥಿತಿ ಸೇರಿದಂತೆ ವಿವಿಧ ವೈಜ್ಞಾನಿಕ ಮಾನದಂಡಗಳ ಆಧಾರದ ಮೇಲೆ ಈ ತಾಲೂಕುಗಳಲ್ಲಿ ಸ್ಥಳ ಪರಿಶೀಲನೆ ನಡೆಸಲಾಗುವುದು. ಪಾರದರ್ಶಕ ಸಮೀಕ್ಷೆ ಮತ್ತು ನಿಖರ ವರದಿಯ ಆಧಾರದಲ್ಲಿ ಮುಂದಿನ ಕ್ರಮ ಕೈಗೊಳ್ಳಲಾಗುವುದು.
ಬರ ಪರಿಸ್ಥಿತಿಯ ನೈಜ ಸ್ಥಿತಿಯನ್ನು ವೈಜ್ಞಾನಿಕವಾಗಿ ಗುರುತಿಸಿ, ಅಗತ್ಯವಿರುವ ಕಡೆ ಸರ್ಕಾರದಿಂದ ಸೂಕ್ತ ಕ್ರಮ ಕೈಗೊಳ್ಳುವುದು ನಮ್ಮ ಬದ್ಧತೆಯಾಗಿದೆ.
Our Government is continuously carrying out a scientific assessment of the drought situation across the State. So far, 177 taluks have been declared drought-hit, and in the fifth phase, 29 taluks across 10 districts have qualified for ground truthing.
Field inspections will be conducted in these taluks based on scientific parameters such as rainfall, soil moisture and crop conditions. Further action will be taken based on a transparent survey and accurate assessment report.
Our commitment is to identify the actual drought conditions scientifically and take appropriate measures wherever necessary. -
Dr. G Parameshwara
@DrParameshwara
India’s medal march continues at the Asian Games 2026, with five podium finishes today!
Heartiest congratulations to Naorem Roshibina Devi on winning Silver in the women’s 60kg Wushu event.
A particularly proud moment for Karnataka as M.R. Poovamma, alongside Manu T.S., Vishal T.K. and Vithya Ramraj, powered India to Silver in the mixed 4x400m relay. Poovamma’s continued excellence on the international stage is an inspiration to athletes across Karnataka.
Congratulations to Satnam Singh & Salman Khan on their Bronze in the men’s double sculls. From Salman once driving an Uber in Delhi to support his family, to Satnam growing up in a farming family in Punjab -- their journeys make this medal all the more inspiring.
Congratulations also to Anant Jeet Singh Naruka & Parinaaz Dhaliwal on winning Bronze in mixed team skeet.
And congratulations to Seema Kumari on her Bronze in the women’s 10,000m, ending India’s 16-year wait for an Asian Games medal in the event -- a remarkable achievement in a fiercely contested race.
Congratulations to all our medal winners, coaches and support teams. Wishing Team India many more successes in the days ahead!
#asiangames2026 #teamindia -
Dr. G Parameshwara
@DrParameshwara
ಕಂದಾಯ ದಾಖಲೆಗಳ ಡಿಜಿಟಲೀಕರಣ: ಕರ್ನಾಟಕದ ಅಮೋಘ ಸಾಧನೆ! 100 ಕೋಟಿ ಪುಟಗಳ ವಿಕ್ರಮ!!
ಇಂದು ಭೂ-ಸುರಕ್ಷಾ ಯೋಜನೆಯಡಿ 100 ಕೋಟಿ ಪುಟಗಳ ಡಿಜಿಟಲೀಕರಣ ಪೂರ್ಣಗೊಂಡಿದೆ. ರಾಜ್ಯದಾದ್ಯಂತ ಕಂದಾಯ ಇಲಾಖೆಯ ವಿವಿಧ ಕಚೇರಿಗಳಲ್ಲಿದ್ದ ಒಟ್ಟು 1,00,10,19,893 ಪುಟಗಳ ದಾಖಲೆಗಳನ್ನು ಡಿಜಿಟಲೀಕರಿಸಲಾಗಿದೆ.
ಇದರೊಂದಿಗೆ 150 ತಾಲ್ಲೂಕು ಕಚೇರಿಗಳು, 6 ಸಹಾಯಕ ಆಯುಕ್ತರ ಕಚೇರಿಗಳು ಹಾಗೂ 3 ಜಿಲ್ಲಾಧಿಕಾರಿಗಳ ಕಚೇರಿಗಳ ಡಿಜಿಟಲೀಕರಣ ಕಾರ್ಯ ಪೂರ್ಣಗೊಂಡಿದೆ. ಆರ್ಸಿ, ಡಿಸಿ, ಎಸಿ ಹಾಗೂ ತಾಲ್ಲೂಕು ಕಚೇರಿಗಳಲ್ಲಿರುವ ಹಳೆಯ ಕಂದಾಯ ದಾಖಲೆಗಳನ್ನು ಡಿಜಿಟಲ್ ವ್ಯವಸ್ಥೆಯಡಿ ತರಲಾಗುತ್ತಿದೆ.
ಭೂ-ಸುರಕ್ಷಾ ಕೇವಲ ದಾಖಲೆಗಳನ್ನು ಸ್ಕ್ಯಾನ್ ಮಾಡುವ ಕಾರ್ಯವಲ್ಲ. ದಶಕಗಳಷ್ಟು ಹಳೆಯ ಕಂದಾಯ ದಾಖಲೆಗಳನ್ನು ಸ್ಕ್ಯಾನ್, ಇಂಡೆಕ್ಸ್, ಕ್ಯಾಟಲಾಗ್ ಮಾಡಿ ಸುರಕ್ಷಿತವಾಗಿ ಸಂರಕ್ಷಿಸುವ ಮೂಲಕ ದಾಖಲೆಗಳ ನಷ್ಟ, ಹಾನಿ ಹಾಗೂ ದುರ್ಬಳಕೆಯನ್ನು ತಡೆಯಲಾಗುತ್ತಿದೆ. ನಾಗರಿಕರಿಗೆ ಅಗತ್ಯ ದಾಖಲೆಗಳನ್ನು ತ್ವರಿತವಾಗಿ, ಸುಲಭವಾಗಿ ಮತ್ತು ಪಾರದರ್ಶಕವಾಗಿ ಪಡೆಯುವ ವ್ಯವಸ್ಥೆಯನ್ನೂ ರೂಪಿಸಲಾಗುತ್ತಿದೆ.
100 ಕೋಟಿ ಪುಟಗಳು ಹಾಗೂ 150 ತಾಲ್ಲೂಕುಗಳ ಡಿಜಿಟಲೀಕರಣ ಪೂರ್ಣಗೊಂಡಿರುವುದು ಆಧುನಿಕ, ಪಾರದರ್ಶಕ ಮತ್ತು ನಾಗರಿಕ ಸ್ನೇಹಿ ಕಂದಾಯ ಆಡಳಿತದತ್ತ ಕರ್ನಾಟಕದ ಇರಿಸಿರುವ ಬೃಹತ್ ಹೆಜ್ಜೆಯಾಗಿದೆ.
ಈ ಬೃಹತ್ ಕಾರ್ಯವನ್ನು ಯಶಸ್ವಿಗೊಳಿಸಲು ಶ್ರಮಿಸುತ್ತಿರುವ ಪ್ರತಿಯೊಬ್ಬ ಅಧಿಕಾರಿ ಹಾಗೂ ಸಿಬ್ಬಂದಿಗೂ ನನ್ನ ಅಭಿನಂದನೆಗಳು.
ಕಂದಾಯ ದಾಖಲೆಗಳ ಸಂಪೂರ್ಣ ಡಿಜಿಟಲೀಕರಣ ಮತ್ತು ಸುರಕ್ಷಿತ ಸಂರಕ್ಷಣೆಯ ಗುರಿ ಸಾಧಿಸುವವರೆಗೆ ಭೂ-ಸುರಕ್ಷಾ ಕಾರ್ಯವನ್ನು ಇನ್ನಷ್ಟು ವೇಗವಾಗಿ ಮುಂದುವರಿಸಲಾಗುವುದು. -
Dr. G Parameshwara
@DrParameshwara
A major milestone for Karnataka’s Revenue Department!
As of today, we have crossed 100 crore digitised pages under Bhu-Suraksha, with a total of 1,00,10,19,893 pages digitised from Revenue Department offices across the State.
We have also completed digitisation work in 150 Taluk offices, 6 Assistant Commissioner offices and 3 Deputy Commissioner offices, covering legacy records held across RC, DC, AC and Taluk offices.
Bhu-Suraksha is more than a digitisation exercise. By scanning, indexing, cataloguing and securely preserving decades-old revenue records, we are protecting important documents from loss, deterioration and manipulation, while making them easier and faster for citizens to access.
Crossing 100 crore pages and 150 Taluks is an important milestone in our journey towards a more transparent, accessible and citizen-friendly Revenue administration.
My appreciation to every officer and staff member who has contributed to this massive exercise. We will continue the work until our Revenue records across Karnataka are securely preserved and easily accessible to our people. -
Dr. G Parameshwara
@DrParameshwara
ರಾಜ್ಯದಲ್ಲಿ ಬರ ಪರಿಸ್ಥಿತಿಯ ವೈಜ್ಞಾನಿಕ ಮೌಲ್ಯಮಾಪನ ನಿರಂತರವಾಗಿ ನಡೆಯುತ್ತಿದ್ದು, ಈವರೆಗೆ 177 ತಾಲೂಕುಗಳನ್ನು ‘ಬರಪೀಡಿತ’ ಎಂದು ಘೋಷಿಸಲಾಗಿದೆ.
ಇದರ ಮುಂದುವರಿದ ಭಾಗವಾಗಿ, ಮಳೆ ಪ್ರಮಾಣ, ಮಣ್ಣಿನ ತೇವಾಂಶ, ಬೆಳೆ ಸ್ಥಿತಿ ಸೇರಿದಂತೆ ವಿವಿಧ ವೈಜ್ಞಾನಿಕ ಮಾನದಂಡಗಳನ್ನು ಆಧರಿಸಿ 5ನೇ ಹಂತದಲ್ಲಿ 10 ಜಿಲ್ಲೆಗಳ 29 ತಾಲೂಕುಗಳು Step-3: Ground Truthingಗೆ ಅರ್ಹತೆ ಪಡೆದಿವೆ.
ಈ ತಾಲೂಕುಗಳಲ್ಲಿ ವೈಜ್ಞಾನಿಕ ಪರಿಶೀಲನೆ ನಡೆಸಿ, ಪಾರದರ್ಶಕ ಸಮೀಕ್ಷೆ ಹಾಗೂ ನಿಖರ ವರದಿಯ ಆಧಾರದಲ್ಲಿ ಮುಂದಿನ ಕ್ರಮ ಕೈಗೊಳ್ಳಲಾಗುವುದು.
The drought situation in the State continues to be assessed scientifically, and 177 taluks have so far been declared drought-hit.
As part of the ongoing assessment, 29 taluks across 10 districts have qualified for Step-3: Ground Truthing in the fifth phase, based on scientific parameters such as rainfall, soil moisture and crop conditions.
Ground-level verification will now be carried out in these taluks. Further action will be taken based on a transparent survey and accurate assessment report. -
Dr. G Parameshwara
@DrParameshwara
ಭಾರತೀಯ ಚುನಾವಣಾ ಆಯೋಗದ ಕಾರ್ಯವೈಖರಿ ಮತ್ತು ಅದು ತೆಗೆದುಕೊಂಡಿರುವ ಕೆಲವು ನಿರ್ಧಾರಗಳ ಕುರಿತು ಇಬ್ಬರು ಚುನಾವಣಾ ಆಯುಕ್ತರು ಹಲವು ಬಾರಿ ಆಕ್ಷೇಪ ವ್ಯಕ್ತಪಡಿಸಿರುವ ಬಗ್ಗೆ ಪ್ರಕಟಗೊಂಡಿರುವ ವರದಿಗಳು ಇಡೀ ದೇಶವಾಸಿಗಳಲ್ಲಿ ಆತಂಕ ಮೂಡಿಸುವಂತಿದೆ. ಮೂವರು ಸದಸ್ಯರಿರುವ ಸಂವಿಧಾನಾತ್ಮಕ ಸಂಸ್ಥೆಯು ಏಕವ್ಯಕ್ತಿಯ ಪಾರುಪತ್ಯಕ್ಕೆ ಸೀಮಿತವಾಗಿದೆಯೇ ಎಂಬ ಗಂಭೀರ ಪ್ರಶ್ನೆಯನ್ನು ಇದು ಹುಟ್ಟುಹಾಕಿದೆ. ಭಾರತೀಯ ಚುನಾವಣಾ ಆಯೋಗವು ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರೊಬ್ಬರದ್ದೇ ಸಂಸ್ಥೆಯಾಗಿ ಮಾರ್ಪಟ್ಟಿದೆಯೇ ಎಂಬ ಅನುಮಾನ ಸಹ ಕಾಡುತ್ತಿದೆ.
ಭಾರತೀಯ ಚುನಾವಣಾ ಆಯೋಗದಲ್ಲಿ ಮೂವರು ಆಯುಕ್ತರಿದ್ದಾರೆ. ಕಾನೂನಿನ ಪ್ರಕಾರ, ಸಾಧ್ಯವಾದಷ್ಟು ನಿರ್ಧಾರಗಳು ಸರ್ವಾನುಮತದಿಂದ ತೆಗೆದುಕೊಳ್ಳಬೇಕು. ಭಿನ್ನಾಭಿಪ್ರಾಯ ಉಂಟಾದಲ್ಲಿ, ಬಹುಮತದ ನಿರ್ಧಾರವೇ ಅಂತಿಮವಾಗಬೇಕು. ಆದರೆ, ಇಬ್ಬರು ಚುನಾವಣಾ ಆಯುಕ್ತರಾದ ಸುಖ್ಬೀರ್ ಸಿಂಗ್ ಸಂಧು ಮತ್ತು ವಿವೇಕ್ ಜೋಶಿ ಅವರು ಕಳೆದ 10 ತಿಂಗಳಲ್ಲಿ ಕನಿಷ್ಠ 14 ಬಾರಿ ಲಿಖಿತವಾಗಿ ಆಕ್ಷೇಪ ದಾಖಲು ಮಾಡಿರುವುದಾಗಿ ಹಾಗೂ ಈ ಇಬ್ಬರ ವಿರೋಧದ ಹೊರತಾಗಿಯೂ ಕೆಲವು ಪ್ರಮುಖ ವಿಚಾರಗಳಲ್ಲಿ ಮುಖ್ಯ ಆಯುಕ್ತ ಜ್ಞಾನೇಶ್ ಕುಮಾರ್ ಅವರು ಏಕಪಕ್ಷೀಯವಾಗಿ ನಿರ್ಧಾರ ಕೈಗೊಂಡಿದ್ದಾರೆ ಎಂದು ಆಕ್ಷೇಪ ವ್ಯಕ್ತಪಡಿಸಿರುವುದಾಗಿ ಪತ್ರಿಕೆಯೊಂದರ ತನಿಖಾ ವರದಿ ಮೂಲಕ ಬಹಿರಂಗಗೊಂಡಿದೆ. ಚುನಾವಣಾ ಆಯೋಗದ ಅನುಮೋದನೆ ಇಲ್ಲದೆಯೇ ಆಯೋಗದ ಹೆಸರಿನಲ್ಲಿ ಪತ್ರಗಳು, ಆದೇಶಗಳನ್ನು ಪ್ರಕಟಿಸಿರುವ ಬಗ್ಗೆಯೂ ಆಕ್ಷೇಪ ವ್ಯಕ್ತವಾಗಿದೆ.
ಅವರ ಆಕ್ಷೇಪಣೆಗಳು ಸಾಮಾನ್ಯ ಆಡಳಿತಾತ್ಮಕ ವಿಷಯಗಳಿಗೆ ಸೀಮಿತವಾಗಿಲ್ಲ. ಹೊಸ ಮತದಾರರ ಸೇರ್ಪಡೆ, ಮತದಾರರ ಪಟ್ಟಿಯಲ್ಲಿನ ಹೆಸರುಗಳ ಅಳಿಸುವಿಕೆ ಮತ್ತು ಮರುಸೇರ್ಪಡೆ, ಎಸ್ಐಆರ್ ಪ್ರಕ್ರಿಯೆಗಳ ಕುರಿತಾದ ಗಂಭೀರ ವಿಚಾರಗಳಾಗಿವೆ. ಅರ್ಜಿ ನಮೂನೆ-6ರ ಬದಲಾವಣೆ ಅನಧಿಕೃತ ಮತ್ತು ಕಾನೂನು ಬಾಹಿರ. ರಾಜ್ಯ ಮಟ್ಟದಲ್ಲಿನ ಶಾಸನಬದ್ಧ ಅಧಿಕಾರಿಗಳ ಅಧಿಕಾರವನ್ನು ಬದಿಗೊತ್ತಿ ಮತದಾರರ ಪಟ್ಟಿಯ ದತ್ತಾಂಶಗಳನ್ನು (ಡೇಟಾಬೇಸ್) ಕೇಂದ್ರೀಕರಣ ಮಾಡಲಾಗುತ್ತಿದೆ ಎಂಬ ಗಂಭೀರ ಆರೋಪಗಳು ಸಹ ಇದರಲ್ಲಿ ಸೇರಿವೆ.
ಕಾಂಗ್ರೆಸ್ ಪಕ್ಷ ಮತ್ತು ವಿಶೇಷವಾಗಿ ವಿರೋಧ ಪಕ್ಷದ ನಾಯಕ ಶ್ರೀ ರಾಹುಲ್ ಗಾಂಧಿ ಅವರು ನಮ್ಮ ಚುನಾವಣಾ ಪ್ರಕ್ರಿಯೆಯ ಸಮಗ್ರತೆ ಕುರಿತು ನಿರಂತರವಾಗಿ ಪ್ರಶ್ನೆಗಳನ್ನು ಎತ್ತುತ್ತಿದ್ದಾರೆ. ಮಹಾರಾಷ್ಟ್ರದ ಮತದಾರರ ಪಟ್ಟಿಗಳಲ್ಲಿನ ಅಸಾಮಾನ್ಯ ಬದಲಾವಣೆಗಳು ಮತ್ತು ಮತದಾನದ ಪ್ರಮಾಣದ ಅಂಕಿಅಂಶಗಳ ಕುರಿತಾದ ಪ್ರಶ್ನೆಗಳಿಂದ ಹಿಡಿದು, ಕರ್ನಾಟಕದ ಮಹದೇವಪುರ ಮತ್ತು ಆಳಂದ ಹಾಗೂ ಹರಿಯಾಣದಲ್ಲಿನ ನಕಲಿ ಮತದಾನದ ಕುರಿತು ಆತಂಕ ವ್ಯಕ್ತಪಡಿಸಿದ್ದರು. ಮತದಾನ ಪ್ರಕ್ರಿಯೆಯನ್ನು ಪಾರದರ್ಶಕತೆ ಮತ್ತು ಹೊಣೆಗಾರಿಕೆಯಿಂದ ನಡೆಸಬೇಕು ಎಂದು ಚುನಾವಣಾ ಆಯೋಗವನ್ನು ಅವರು ನಿರಂತರವಾಗಿ ಒತ್ತಾಯಿಸುತ್ತಾ ಬಂದಿದ್ದಾರೆ.
ಈಗ ಚುನಾವಣಾ ಆಯೋಗದೊಳಗಿನಿಂದಲೇ ಹೊರಬರುತ್ತಿರುವ ವಿಚಾರಗಳು ಅತ್ಯಂತ ಗಂಭೀರ ಸ್ವರೂಪದ್ದಾಗಿವೆ. ಚುನಾವಣಾ ಆಯೋಗದ ಕಾರ್ಯವೈಖರಿಯ ಬಗ್ಗೆ ಹೊರಗಿನ ವ್ಯಕ್ತಿಗಳು ಈ ವರೆಗೆ ಎತ್ತುತ್ತಿದ್ದ ಪ್ರಶ್ನೆಗಳು ಈಗ ಆಯೋಗದೊಳಗೇ ದಾಖಲಾಗಿರುವ ಆಕ್ಷೇಪಣೆಗಳ ರೂಪದಲ್ಲಿ ಪ್ರತಿಧ್ವನಿಸುತ್ತಿವೆ.
ಈ ಹಿನ್ನೆಲೆಯಲ್ಲಿ, ಕರ್ನಾಟಕ ಸೇರಿದಂತೆ ದೇಶಾದ್ಯಂತ SIR ಅನ್ನು ನಡೆಸುತ್ತಿರುವ ವಿಧಾನವೂ ಈ ಆತಂಕಕ್ಕೆ ಇನ್ನಷ್ಟು ಇಂಬು ನೀಡಿದೆ. ಕರ್ನಾಟಕದಲ್ಲಿ, ASDDO ವರ್ಗಗಳ ಅಡಿಯಲ್ಲಿ ಸುಮಾರು 1.08 ಕೋಟಿ ಮತದಾರರನ್ನು ಕರಡು ಮತದಾರರ ಪಟ್ಟಿಯಿಂದ ಹೊರಗಿಡಲಾಗಿದೆ. ಇದರಲ್ಲಿ ಬೆಂಗಳೂರಿನಲ್ಲೇ 46.88 ಲಕ್ಷ ಮತದಾರರು ಸೇರಿದ್ದಾರೆ. ಇದಲ್ಲದೆ, “ತಾರ್ಕಿಕ ವ್ಯತ್ಯಾಸಗಳು” (logical discrepancies) ಅಥವಾ “ಮ್ಯಾಪಿಂಗ್” ಕೊರತೆಯ ಕಾರಣದಿಂದ 43.8 ಲಕ್ಷ ಮತದಾರರಿಗೆ ನೋಟಿಸ್ಗಳನ್ನು ನೀಡಲಾಗಿದೆ.
ಮುಖ್ಯ ಚುನಾವಣಾ ಆಯುಕ್ತರು ಸಮಾನರಲ್ಲಿ ಮೊದಲಿಗರು (first among equals), ಆದರೆ ಚುನಾವಣಾ ಆಯೋಗಕ್ಕಿಂತ ಮೇಲಿನವರಲ್ಲ. ಚುನಾವಣಾ ಪ್ರಕ್ರಿಯೆಯ ಮೇಲೆ ಪರಿಣಾಮ ಬೀರುವಂತಹ ನಿರ್ಧಾರಗಳನ್ನು ಇತರ ಇಬ್ಬರು ಆಯುಕ್ತರ ಅಭಿಪ್ರಾಯವನ್ನು (ಬಹುಮತದ ನಿರ್ಧಾರವನ್ನು) ಬದಿಗೊತ್ತಿ ತೆಗೆದುಕೊಳ್ಳಲಾಗಿದ್ದರೆ, ಅದು ಕಾನೂನಿನಲ್ಲಿ ಹೇಳಲಾಗಿರುವ ಸಾಮೂಹಿಕ ನಿರ್ಧಾರ ಕೈಗೊಳ್ಳುವಿಕೆಯ ಮೂಲ ತತ್ವಕ್ಕೆ ವಿರುದ್ಧವಾದುದ್ದು. ಹಾಗೆಯೇ ಈ ಕುರಿತು ಸ್ವತಂತ್ರ ಪರಿಶೀಲನೆ ನಡೆಯಬೇಕೆಂಬ ಅಗತ್ಯವನ್ನು ಸಹ ಒತ್ತಿಹೇಳುತ್ತದೆ.
ಇದರಿಂದ ಚುನಾವಣಾ ಆಯೋಗದ ವಿಶ್ವಾಸಾರ್ಹತೆ ಮತ್ತು ಭಾರತದ ಪ್ರಜಾಪ್ರಭುತ್ವ ಪ್ರಕ್ರಿಯೆಯ ಮೇಲೆ ಜನರು ಇಟ್ಟಿರುವ ನಂಬಿಕೆಗೆ ಅಪಾರ ಹಾನಿಯಾಗಿದೆ. ಆ ನಂಬಿಕೆಯನ್ನು ಪುನರ್ ಸ್ಥಾಪಿಸುವ ಕಾರ್ಯ ಈಗಲೇ ಆರಂಭವಾಗಬೇಕು.
ಮುಖ್ಯ ಚುನಾವಣಾ ಆಯುಕ್ತರಾದ ಜ್ಞಾನೇಶ್ ಕುಮಾರ್ ಅವರ ಕಾರ್ಯವೈಖರಿಯನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ. ಅವರ ನೇತೃತ್ವದಲ್ಲಿ ತೆಗೆದುಕೊಳ್ಳಲಾದ ನಿರ್ಧಾರಗಳ ಕುರಿತು ಇಂತಹ ಗಂಭೀರ ಪ್ರಶ್ನೆಗಳು ಉದ್ಭವವಾಗಿರುವ ಸಂದರ್ಭದಲ್ಲಿ, ಅವರು ತಮ್ಮ ಹುದ್ದೆಯಲ್ಲಿ ಮುಂದುವರಿಯುವ ನೈತಿಕತೆಯನ್ನು ಕಳೆದುಕೊಂಡಿದ್ದಾರೆ ಎನ್ನುವುದು ನನ್ನ ಭಾವನೆ.
ಈ ಕೂಡಲೇ ಜ್ಞಾನೇಶ್ ಕುಮಾರ್ ಅವರನ್ನು ಮುಖ್ಯ ಚುನಾವಣಾ ಆಯುಕ್ತರ ಹುದ್ದೆಯಿಂದ ವಜಾಗೊಳಿಸಬೇಕು ಮತ್ತು ಈ ವಿಚಾರವನ್ನು ಸ್ವತಂತ್ರ ಹಾಗೂ ನಿಷ್ಪಕ್ಷಪಾತ ತನಿಖೆಗೆ ಒಳಪಡಿಸಬೇಕು ಎಂದು ಒತ್ತಾಯಿಸುತ್ತೇನೆ.
ದೇಶದ ಚುನಾವಣಾ ವ್ಯವಸ್ಥೆಯ ವಿಶ್ವಾಸಾರ್ಹತೆ ಮತ್ತು ನಮ್ಮ ಪ್ರಜಾಪ್ರಭುತ್ವದ ಮೇಲಿರುವ ನಂಬಿಕೆಯ ವಿಚಾರಗಳಲ್ಲಿ ರಾಜಿಯಾಗಬಾರದು. -
Dr. G Parameshwara
@DrParameshwara
The latest revelations coming out of the Election Commission of India (ECI) are deeply alarming. They point to an even more disturbing question: has a three-member constitutional body been reduced to the will of one individual - Chief Election Commissioner Gyanesh Kumar?
The ECI has three Commissioners. Under the law, its decisions should, as far as possible, be unanimous. Where there is disagreement, the majority must prevail. Yet the majority two of the three Election Commissioners -- Sukhbir Singh Sandhu and Vivek Joshi -- reportedly recorded objections at least 14 times in 10 months to decisions and communications they said were issued without their knowledge or approval.
Their objections were not about routine administrative issues. They concerned new voter registration, deletion and restoration of names, SIR, changes to Form 6 that were described on record as “unauthorised and illegal”, and the centralisation of control over the electoral-roll database by sidestepping the authority of statutory officials at the state level.
The Congress Party, and especially Leader of Opposition Shri Rahul Gandhi, has consistently raised serious questions about the integrity of our electoral process. From unusual changes in Maharashtra’s electoral rolls and questions over turnout data, to Mahadevapura and Aland in Karnataka, and concerns over duplicate voters in Haryana, he has repeatedly demanded greater transparency and accountability from the ECI.
The revelations now emerging from within the Commission itself make those concerns even more serious. Questions that were raised from outside the ECI are now being echoed by objections recorded from within it.
Against this backdrop, the manner in which SIR is being conducted across the country, including Karnataka, adds to the concern. In Karnataka, around 1.08 crore voters were left out of the draft rolls under ASDDO categories, including 46.88 lakh in Bengaluru, while 43.8 lakh voters faced notices over “logical discrepancies” or lack of "mapping".
The Chief Election Commissioner is first among equals, not above the Commission. If decisions affecting our electoral process were taken by bypassing the other two Commissioners -- who together constitute the majority -- it strikes at the very principle of collective decision-making laid down by law and demands independent scrutiny.
The damage done to the credibility of the Election Commission, and consequently to public faith in India’s democratic process, has been immense. Restoring that trust must begin now.
I strongly condemn the manner in which CEC Gyanesh Kumar has functioned in the face of these serious revelations. He has no moral right to continue in office while such grave questions remain over decisions taken under his leadership.
Gyanesh Kumar must be removed from the post of Chief Election Commissioner, and the entire matter must be subjected to an independent and impartial investigation.
The credibility of India’s elections and the faith of every voter in our democracy demand nothing less. -
Dr. G Parameshwara
@DrParameshwara
Five more medals for India on Day 5 at the Asian Games 2026!
Heartiest congratulations to Mirabai Chanu on winning Silver in the women’s 49kg weightlifting event.
Congratulations to our skeet shooters Raiza Dhillon, Maheshwari Chauhan and Parinaaz Dhaliwal, and Anant Jeet Singh Naruka, Mairaj Ahmad Khan and Bhavtegh Singh Gill, on winning Bronze in the women’s and men’s team events respectively.
Congratulations also to Jay Meena, who scripted history by winning Bronze in men’s singles soft tennis --India’s first-ever Asian Games medal in the sport -- and to the Indian men’s badminton team on securing Bronze.
A fine day for Indian sport across disciplines, with every medal reflecting immense hard work, discipline and determination.
Congratulations to all our athletes, coaches and support teams. May the medals keep coming!
#asiangames2026 #teamindia -
Dr. G Parameshwara
@DrParameshwara
ಇಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ ಅರಣ್ಯ ಸಚಿವರಾದ ರಾಮಲಿಂಗಾರೆಡ್ಡಿ ಅವರ ಸುಪುತ್ರ ರಾಜ್ ರೆಡ್ಡಿ ಅವರ ವಿವಾಹ ಆರತಕ್ಷತೆ ಸಮಾರಂಭದಲ್ಲಿ ಪಾಲ್ಗೊಂಡು, ನವದಂಪತಿಗೆ ಶುಭ ಹಾರೈಸಿದೆ.
-
Dr. G Parameshwara
@DrParameshwara
The State Government is continuously taking measures to provide necessary relief to farmers and people affected by the severe drought. To address the situation effectively, the Union Government must relax the existing drought declaration norms and extend the required financial assistance.
The State Government has already written to the Union Government seeking relaxation of the NDRF norms and has placed the ground realities of the drought before the Centre, seeking greater support for distressed farmers.
During the severe drought in 2023, then Chief Minister Siddaramaiah had written several times to Prime Minister Narendra Modi seeking drought relief and relaxation of the existing norms, as they did not fully reflect Karnataka’s actual drought conditions.
The present State Government, including Chief Minister D.K. Shivakumar, has also written to the Union Government. As Revenue Minister, I have raised the issue with the Centre, and the Chief Secretary has also written seeking action. The Union Government must give special consideration to Karnataka’s situation and relax the NDRF norms.
Drought should not be assessed only on overall rainfall deficiency. Factors such as the amount and timing of rainfall, impact on crops, soil moisture and local ground conditions must also be considered. In view of the 2026 drought, the State Government has already urged the Centre to review the existing criteria.
The State Government remains committed to addressing the drought and supporting farmers and the public. The Union Government must also consider Karnataka’s ground realities and extend the necessary assistance. -
Dr. G Parameshwara
@DrParameshwara
ರಾಜ್ಯದಲ್ಲಿ ತೀವ್ರ ಬರ ಪರಿಸ್ಥಿತಿ ಎದುರಾಗಿರುವ ಹಿನ್ನೆಲೆಯಲ್ಲಿ ರೈತರು ಹಾಗೂ ಜನರಿಗೆ ಅಗತ್ಯ ನೆರವು ಒದಗಿಸಲು ರಾಜ್ಯ ಸರ್ಕಾರ ನಿರಂತರವಾಗಿ ಕ್ರಮ ಕೈಗೊಳ್ಳುತ್ತಿದೆ. ಬರ ಪರಿಸ್ಥಿತಿಯನ್ನು ಪರಿಣಾಮಕಾರಿಯಾಗಿ ಎದುರಿಸಲು ಕೇಂದ್ರ ಸರ್ಕಾರವು ಬರ ಘೋಷಣೆಗಿರುವ ನಿಯಮಗಳನ್ನು ಸಡಿಲಿಸಿ ಅಗತ್ಯ ಆರ್ಥಿಕ ನೆರವು ನೀಡಬೇಕು.
ಕೇಂದ್ರ ಸರ್ಕಾರದ ಎನ್ಡಿಆರ್ಎಫ್ ನಿಯಮಗಳನ್ನು ಸಡಿಲಿಸುವಂತೆ ಕೋರಿ ರಾಜ್ಯ ಸರ್ಕಾರದಿಂದ ಈಗಾಗಲೇ ಪತ್ರಗಳನ್ನು ಕೇಂದ್ರ ಸರ್ಕಾರಕ್ಕೆ ಬರೆಯಲಾಗಿದೆ. ಬರ ಪರಿಸ್ಥಿತಿಯ ವಾಸ್ತವಾಂಶಗಳನ್ನು ಕೇಂದ್ರದ ಗಮನಕ್ಕೆ ತಂದು, ಸಂಕಷ್ಟದಲ್ಲಿರುವ ರೈತರಿಗೆ ಹೆಚ್ಚಿನ ನೆರವು ದೊರೆಯುವಂತೆ ಮನವಿ ಮಾಡಲಾಗಿದೆ.
2023ರಲ್ಲಿ ರಾಜ್ಯದಲ್ಲಿ ತೀವ್ರ ಬರ ಪರಿಸ್ಥಿತಿ ಎದುರಾದ ಸಂದರ್ಭದಲ್ಲಿ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಹಲವು ಬಾರಿ ಪತ್ರ ಬರೆದು, ಬರ ಪರಿಹಾರಕ್ಕೆ ಅಗತ್ಯ ನೆರವು ನೀಡುವಂತೆ ಹಾಗೂ ಕೇಂದ್ರ ಸರ್ಕಾರದ ಪ್ರಸ್ತುತ ನಿಯಮಗಳು ರಾಜ್ಯದ ವಾಸ್ತವಿಕ ಬರ ಪರಿಸ್ಥಿತಿಯನ್ನು ಸಂಪೂರ್ಣವಾಗಿ ಪ್ರತಿಬಿಂಬಿಸುವುದಿಲ್ಲ ಎಂಬ ಹಿನ್ನೆಲೆಯಲ್ಲಿ ನಿಯಮಗಳನ್ನು ಸಡಿಲಿಸುವಂತೆಯೂ ಮನವಿ ಮಾಡಿದ್ದರು.
ಪ್ರಸ್ತುತ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸೇರಿದಂತೆ ರಾಜ್ಯ ಸರ್ಕಾರದ ವತಿಯಿಂದ ಕೇಂದ್ರ ಸರ್ಕಾರಕ್ಕೆ ಪತ್ರಗಳನ್ನು ಬರೆಯಲಾಗಿದೆ. ಕಂದಾಯ ಸಚಿವನಾಗಿ ಈ ಕುರಿತು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದು, ಮುಖ್ಯ ಕಾರ್ಯದರ್ಶಿಗಳೂ ಪತ್ರ ಬರೆದಿದ್ದಾರೆ. ಕೇಂದ್ರ ಸರ್ಕಾರ ರಾಜ್ಯದ ಪರಿಸ್ಥಿತಿಯನ್ನು ವಿಶೇಷವಾಗಿ ಪರಿಗಣಿಸಿ ಎನ್ಡಿಆರ್ಎಫ್ ನಿಯಮಗಳನ್ನು ಸಡಿಲಿಸಬೇಕು.
ಬರ ಪರಿಸ್ಥಿತಿಯನ್ನು ಕೇವಲ ಸಾಮಾನ್ಯ ಮಳೆಯ ಕೊರತೆಯ ಆಧಾರದ ಮೇಲೆ ಅಳೆಯದೆ, ಮಳೆಯ ಪ್ರಮಾಣ, ಮಳೆ ಬಿದ್ದ ಸಮಯ, ಬೆಳೆಗಳ ಮೇಲಾದ ಪರಿಣಾಮ, ಮಣ್ಣಿನ ತೇವಾಂಶ ಸೇರಿದಂತೆ ಸ್ಥಳೀಯ ವಾಸ್ತವಾಂಶಗಳನ್ನು ಪರಿಗಣಿಸಬೇಕು ಎಂಬುದು ರಾಜ್ಯದ ಪ್ರಮುಖ ಬೇಡಿಕೆಯಾಗಿದೆ. 2026ರ ಬರ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಕೇಂದ್ರದ ಮಾನದಂಡಗಳನ್ನು ಮರುಪರಿಶೀಲಿಸುವಂತೆ ರಾಜ್ಯ ಸರ್ಕಾರ ಈಗಾಗಲೇ ಮನವಿ ಮಾಡಿದೆ.
ರಾಜ್ಯದಲ್ಲಿ ಬರ ಪರಿಸ್ಥಿತಿಯನ್ನು ಎದುರಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದ್ದು, ರೈತರು ಹಾಗೂ ಜನರ ಸಂಕಷ್ಟಕ್ಕೆ ಸ್ಪಂದಿಸಲು ಸರ್ಕಾರ ಬದ್ಧವಾಗಿದೆ. ಕೇಂದ್ರ ಸರ್ಕಾರವೂ ರಾಜ್ಯದ ವಾಸ್ತವ ಪರಿಸ್ಥಿತಿಯನ್ನು ಪರಿಗಣಿಸಿ ಅಗತ್ಯ ನೆರವು ನೀಡಬೇಕು. -
Dr. G Parameshwara
@DrParameshwara
ಭಾರತೀಯ ಚಿತ್ರರಂಗದ ಅತ್ಯುನ್ನತ ಗೌರವವಾದ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಗೆ ಭಾಜನರಾಗಿರುವ ಕನ್ನಡದ ಹಿರಿಯ ನಟ ಅನಂತ್ ನಾಗ್ ಅವರಿಗೆ ಅಭಿನಂದನೆಗಳು.
ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಯು ಚಿತ್ರರಂಗದ ಅತ್ಯುನ್ನತ ಪ್ರಶಸ್ತಿಯಾಗಿದೆ. ಚಿತ್ರರಂಗದಲ್ಲಿ ಕೆಲಸ ಮಾಡಿದ ಎಲ್ಲರಿಗೂ ಸುಲಭವಾಗಿ ದೊರೆಯುವ ಪ್ರಶಸ್ತಿ ಇದಲ್ಲ. ಅಂತಹ ಪ್ರತಿಷ್ಠಿತ ಪ್ರಶಸ್ತಿಯನ್ನು ಅನಂತ್ ನಾಗ್ ಅವರು ಪಡೆದಿರುವುದು ಮಹತ್ವದ ಸಂಗತಿ. ರಾಷ್ಟ್ರ ಮಟ್ಟದಲ್ಲಿ ಕಲಾವಿದರ ಸಾಧನೆ ಮತ್ತು ವ್ಯಕ್ತಿತ್ವವನ್ನು ಗುರುತಿಸಿ ಗೌರವಿಸುವುದು ಇಡೀ ಚಿತ್ರರಂಗ ಹಾಗೂ ಕಲಾ ಕ್ಷೇತ್ರಕ್ಕೆ ಆಧುನಿಕ ಜಗತ್ತಿನಲ್ಲಿ ಮತ್ತಷ್ಟು ಉತ್ತೇಜನ ನೀಡುತ್ತದೆ.
1970ರ ದಶಕದಲ್ಲಿ ರಂಗಭೂಮಿಯಿಂದ ತಮ್ಮ ಕಲಾ ಪಯಣ ಆರಂಭಿಸಿದ ಅನಂತ್ ನಾಗ್ ಅವರು ಅದರ ಜೊತೆಜೊತೆಯಲ್ಲಿಯೇ ಕಿರುತೆರೆಗೂ ಕಾಲಿಟ್ಟರು. 70ಕ್ಕೂ ಹೆಚ್ಚು ನಾಟಕಗಳಲ್ಲಿ ಅಭಿನಯಿಸಿರುವ ಅವರು, ಚಿತ್ರರಂಗಕ್ಕೆ ಪ್ರವೇಶಿಸಿದ ಸಂದರ್ಭದಲ್ಲಿ ತಮ್ಮ ಸಹೋದರ ಶಂಕರ್ ನಾಗ್ ಅವರೊಂದಿಗೆ ಕನ್ನಡ ಚಿತ್ರರಂಗದಲ್ಲಿ ಹೊಸ ರೀತಿಯ ಅಲೆಯೊಂದನ್ನು ಹುಟ್ಟುಹಾಕಿದರು.
ಡಾ. ರಾಜ್ಕುಮಾರ್ ಮತ್ತು ವಿಷ್ಣುವರ್ಧನ್ ಅವರಂತಹ ಮೇರು ನಟರು ಕನ್ನಡ ಚಿತ್ರರಂಗದಲ್ಲಿ ಮಿಂಚುತ್ತಿದ್ದ ಕಾಲಘಟ್ಟದಲ್ಲಿಯೇ ಅನಂತ್ ನಾಗ್ ಅವರು ವಿಭಿನ್ನ ರೀತಿಯ ಚಿತ್ರಗಳ ಮೂಲಕ ತಮ್ಮದೇ ಆದ ಹೊಸ ಹಾದಿಯನ್ನು ರೂಪಿಸಿಕೊಂಡರು. 1970ರ ದಶಕದಲ್ಲಿ ಕನ್ನಡ ಚಿತ್ರರಂಗದಲ್ಲಿ ಆರಂಭವಾದ ಈ ಹೊಸ ಅಲೆಯ ನಾಯಕತ್ವ ವಹಿಸಿದವರಲ್ಲಿ ಅನಂತ್ ನಾಗ್ ಪ್ರಮುಖರು.
ಅನಂತ್ ನಾಗ್ ಅವರು ಕಲಾ ಕ್ಷೇತ್ರಕ್ಕೆ ಮಾತ್ರ ಸೀಮಿತವಾಗದೆ ರಾಜಕೀಯ ಕ್ಷೇತ್ರದಲ್ಲಿಯೂ ಸೇವೆ ಸಲ್ಲಿಸಿದ್ದಾರೆ. 1989-94ರ ಅವಧಿಯಲ್ಲಿ ಅವರನ್ನು ವಿಧಾನ ಪರಿಷತ್ತಿನ ನಾಮನಿರ್ದೇಶಿತ ಸದಸ್ಯರನ್ನಾಗಿ ಮಾಡಲಾಯಿತು. ನಂತರ 1994ರಲ್ಲಿ ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಗೆಲುವು ಸಾಧಿಸಿ ಶಾಸಕರಾದ ಅವರು, ರಾಜ್ಯ ಸರ್ಕಾರದಲ್ಲಿ ಸಚಿವರಾಗಿಯೂ ಕಾರ್ಯನಿರ್ವಹಿಸಿದರು.
ರಾಜಕೀಯ ಕ್ಷೇತ್ರದಲ್ಲಿ ಅನಂತ್ ನಾಗ್ ಅವರ ಪಯಣ ಅಲ್ಪಾವಧಿಯದ್ದಾಗಿತ್ತು. ನಂತರ ಸಕ್ರಿಯ ರಾಜಕಾರಣದಿಂದ ದೂರ ಸರಿದು ಮತ್ತೆ ಚಲನಚಿತ್ರ ಕ್ಷೇತ್ರದತ್ತ ಮುಖ ಮಾಡಿ ತಮ್ಮ ಕಲಾ ಪಯಣವನ್ನು ಮುಂದುವರಿಸಿದರು.
ಅನಂತ್ ನಾಗ್ ಅವರು 5 ಬಾರಿ ಚಲನಚಿತ್ರ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಒಂದು ಬಾರಿ ಪ್ರಶಸ್ತಿ ಪಡೆಯುವುದೇ ಅತ್ಯಂತ ಕಠಿಣವಾಗಿರುವಾಗ ಐದು ಬಾರಿ ಪ್ರಶಸ್ತಿಗೆ ಭಾಜನರಾಗಿರುವುದು ಅವರ ಕಲಾ ಪ್ರತಿಭೆಗೆ ಸಾಕ್ಷಿ. ನಂತರದ ವರ್ಷಗಳಲ್ಲಿ ಜೀವನವನ್ನು ಸರಳವಾಗಿ ಸ್ವೀಕರಿಸಿ ಚಲನಚಿತ್ರಗಳಲ್ಲಿ ಅಭಿನಯಿಸುವುದನ್ನೂ ಕಡಿಮೆ ಮಾಡಿಕೊಂಡರು. ಆದರೆ ಅದಕ್ಕೂ ಮೊದಲು 300ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ಅಭಿನಯಿಸುವ ಮೂಲಕ ಚಿತ್ರರಂಗಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಯಾವುದೇ ಒಬ್ಬ ನಟನ ದೃಷ್ಟಿಯಿಂದ ಇದು ಆ ಕ್ಷೇತ್ರಕ್ಕೆ ನೀಡಿದ ಅತ್ಯಂತ ಮಹತ್ವದ ಕೊಡುಗೆಗಳಲ್ಲಿ ಒಂದಾಗಿದೆ.
ಕನ್ನಡ ಚಿತ್ರರಂಗದಿಂದ ಮೊದಲ ಬಾರಿಗೆ ಮೇರುನಟ ಡಾ. ರಾಜ್ಕುಮಾರ್ ಅವರಿಗೆ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಸಂದಿತ್ತು. ಸುಮಾರು 30 ವರ್ಷಗಳ ನಂತರ ಇದೀಗ ಅನಂತ್ ನಾಗ್ ಅವರ ಪ್ರತಿಭೆ ಮತ್ತು ಚಿತ್ರರಂಗಕ್ಕೆ ನೀಡಿದ ಕೊಡುಗೆಯನ್ನು ಗುರುತಿಸಿ ಈ ಪ್ರತಿಷ್ಠಿತ ಪ್ರಶಸ್ತಿ ನೀಡಲಾಗಿದೆ. ಇದು ಅವರಲ್ಲಿರುವ ಅಪ್ರತಿಮ ಪ್ರತಿಭೆಗೆ ಸಂದ ಗೌರವ.
ಭಟ್ಕಳದಲ್ಲಿ ಹುಟ್ಟಿ, ಬೆಂಗಳೂರಿಗೆ ಬಂದು, ಕನ್ನಡದ ಜೊತೆಗೆ ಹಲವು ಭಾಷೆಗಳ ಚಲನಚಿತ್ರಗಳಲ್ಲಿ ಅಭಿನಯಿಸಿರುವ ಅನಂತ್ ನಾಗ್ ಅವರು ತಮ್ಮ ಕಲೆಯ ಮೂಲಕ ಚಿತ್ರರಂಗಕ್ಕೆ ಗೌರವ ತಂದುಕೊಟ್ಟಿದ್ದಾರೆ. ಅನಂತ್ ನಾಗ್ ಅವರ ಪ್ರತಿಭೆಯನ್ನು ಗುರುತಿಸಿ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ನೀಡಿರುವುದು ಇಡೀ ಕರ್ನಾಟಕಕ್ಕೆ ಗೌರವ ತಂದಿದೆ. ರಾಜ್ಯ ಸರ್ಕಾರದ ಪರವಾಗಿ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. -
Dr. G Parameshwara
@DrParameshwara
ಮೈಸೂರು ಸಂಸ್ಥಾನದ ಕೊನೆಯ ಮಹಾರಾಜರಾಗಿ ಹಾಗೂ ರಾಜ್ಯದ ಮೊದಲ ರಾಜ್ಯಪಾಲರಾಗಿ ಸೇವೆ ಸಲ್ಲಿಸಿದ ಜಯಚಾಮರಾಜ ಒಡೆಯರ್ ಅವರ ಪುಣ್ಯಸ್ಮರಣೆಯಂದು ಗೌರವ ನಮನಗಳನ್ನು ಸಲ್ಲಿಸುತ್ತೇನೆ.
ನಾಡಿನ ಸಂಸ್ಕೃತಿ, ಕಲೆ, ಸಂಗೀತ ಹಾಗೂ ಶಿಕ್ಷಣ ಕ್ಷೇತ್ರಗಳ ಬೆಳವಣಿಗೆಗೆ ಅವರು ನೀಡಿದ ಕೊಡುಗೆಗಳನ್ನು ಸದಾ ಸ್ಮರಿಸೋಣ. -
Dr. G Parameshwara
@DrParameshwara
ಸ್ವಚ್ಛ ಹಾಗೂ ಸುಂದರ ನಗರಗಳ ನಿರ್ಮಾಣದಲ್ಲಿ ಪೌರ ಕಾರ್ಮಿಕರ ಪಾತ್ರ ಮಹತ್ವದ್ದು. ಪ್ರತಿದಿನ ತಮ್ಮ ಕರ್ತವ್ಯವನ್ನು ನಿಷ್ಠೆಯಿಂದ ನಿರ್ವಹಿಸಿ, ಸಾರ್ವಜನಿಕ ಆರೋಗ್ಯ ಮತ್ತು ಪರಿಸರದ ಕಾಳಜಿಗೆ ತಮ್ಮದೇ ಆದ ಕೊಡುಗೆ ನೀಡುತ್ತಿರುವ ಅವರ ಸೇವೆ ಅಭಿನಂದನೀಯ.
ಸ್ವಚ್ಚ ನಗರ - ಸ್ವಸ್ಥ ಸಮಾಜಕ್ಕಾಗಿ ಶ್ರಮಿಸುತ್ತಿರುವ ಎಲ್ಲ ಪೌರ ಕಾರ್ಮಿಕರಿಗೂ ಪೌರ ಕಾರ್ಮಿಕರ ದಿನದ ಶುಭಾಶಯಗಳು. -
Dr. G Parameshwara
@DrParameshwara
ಇಂದು ಬೆಂಗಳೂರಿನ ಖಾಸಗಿ ಹೋಟೆಲ್ನಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಪಾಲ್ಗೊಂಡು, ವಿವಿಧ ವಿಷಯಗಳ ಕುರಿತು ಚರ್ಚಿಸಲಾಯಿತು.
ನಿಕಟಪೂರ್ವ ಮುಖ್ಯಮಂತ್ರಿಗಳು ಹಾಗೂ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ ಸದಸ್ಯರಾದ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷರಾದ ಬಿ.ಕೆ. ಹರಿಪ್ರಸಾದ್, ಸಚಿವರಾದ ಕೆ.ಹೆಚ್. ಮುನಿಯಪ್ಪ, ಕೆ.ಜೆ. ಜಾರ್ಜ್, ಎಂ.ಬಿ. ಪಾಟೀಲ್, ಸತೀಶ್ ಜಾರಕಿಹೊಳಿ, ಮಾಜಿ ಸಚಿವರಾದ ಹೆಚ್.ಕೆ. ಪಾಟೀಲ್ ಸೇರಿದಂತೆ ವಿಧಾನಸಭೆ ಹಾಗೂ ವಿಧಾನ ಪರಿಷತ್ ಸದಸ್ಯರು ಉಪಸ್ಥಿತರಿದ್ದರು. -
Dr. G Parameshwara
@DrParameshwara
ʼಪಶ್ಚಿಮಘಟ್ಟʼ ನಮ್ಮ ಅಮೂಲ್ಯ ನೈಸರ್ಗಿಕ ಸಂಪತ್ತು. ಅದರ ಸಂರಕ್ಷಣೆ ಎಷ್ಟು ಮುಖ್ಯವೋ, ಅಲ್ಲಿಯೇ ಬದುಕು ಕಟ್ಟಿಕೊಂಡಿರುವ ರೈತರು, ಆದಿವಾಸಿಗಳು ಹಾಗೂ ಸ್ಥಳೀಯ ಜನರ ಹಕ್ಕನ್ನು ಸಂರಕ್ಷಿಸುವುದು, ಅವರ ಜೀವನೋಪಾಯ ಮತ್ತು ಭವಿಷ್ಯವನ್ನು ಕಾಪಾಡುವುದು ಅಷ್ಟೇ ಮುಖ್ಯ.
ಕಸ್ತೂರಿ ರಂಗನ್ ವರದಿಯನ್ನು ಯಥಾವತ್ತಾಗಿ ಜಾರಿಗೊಳಿಸುವುದರಿಂದ ಮಲೆನಾಡು ಮತ್ತು ಕರಾವಳಿಗರ ಜೀವನ ನಿರ್ವಹಣೆಯ ಮೇಲೆ ಉಂಟಾಗಬಹುದಾದ ಪರಿಣಾಮಗಳನ್ನು ಗಂಭೀರವಾಗಿ ಪರಿಗಣಿಸಿ, ವರದಿಯ ಯಥಾವತ್ತು ಜಾರಿಗೆ ಸಮ್ಮತಿ ಇಲ್ಲ ಎಂಬ ನಿರ್ಣಯವನ್ನು ಸದನದಲ್ಲಿ ಸರ್ವಾನುಮತದಿಂದ ಕೈಗೊಂಡಿದ್ದೇವೆ.
ಪರಿಸರ ಸಂರಕ್ಷಣೆಯ ಹೆಸರಿನಲ್ಲಿ ಜನರ ಬದುಕು ಸಂಕಷ್ಟಕ್ಕೆ ಸಿಲುಕಬಾರದು. ಅದೇ ರೀತಿ ಅಭಿವೃದ್ಧಿಯ ಹೆಸರಿನಲ್ಲಿ ನಮ್ಮ ಪಶ್ಚಿಮಘಟ್ಟದ ಪರಿಸರಕ್ಕೂ ಧಕ್ಕೆಯಾಗಬಾರದು. ಪರಿಸರ ಸಂರಕ್ಷಣೆ ಮತ್ತು ಜನರ ಹಿತಾಸಕ್ತಿ ಎರಡರ ನಡುವೆ ಸಮತೋಲನ ಸಾಧಿಸುವುದು ನಮ್ಮ ಸರ್ಕಾರದ ನಿಲುವಾಗಿದೆ.
ರಾಜ್ಯದ ನೆಲ, ಜಲ, ಪರಿಸರದ ಜೊತೆಗೆ ಅಲ್ಲಿನ ಜನರ ಬದುಕು ಮತ್ತು ಹಕ್ಕುಗಳನ್ನು ಕಾಪಾಡಲು ನಾವು ಬದ್ಧರಿದ್ದೇವೆ.
The Western Ghats are one of our most precious natural assets. Protecting them is vital, but equally important is safeguarding the rights, livelihoods and future of the farmers, tribal communities and local people who have lived there for generations.
Considering the serious impact that implementing the Kasturirangan Report in its present form could have on the lives of people in Malnad and the coastal region, the House has unanimously resolved not to accept its implementation as is.
Environmental protection should not come at the cost of people’s lives. At the same time, development should not damage the ecology of the Western Ghats. Our Government’s stand is to maintain a balance between environmental conservation and people’s interests.
We remain committed to protecting Karnataka’s land, water, environment, and the rights and livelihoods of its people. -
Dr. G Parameshwara
@DrParameshwara
Heartiest congratulations to the Indian Women’s Cricket Team on winning India’s first gold medal of the Asian Games 2026, defeating Sri Lanka by a commanding 147 runs in the final.
From a powerful batting performance led by Smriti Mandhana, Shafali Verma and Richa Ghosh, to a disciplined bowling display, this was a complete team effort worthy of the gold medal.
It is also a proud moment for Karnataka to see Shreyanka Patil as part of this gold-winning Indian team.
Congratulations to every player, coach and member of the support staff on this outstanding achievement.
#asiangames2026 -
Dr. G Parameshwara
@DrParameshwara
ರಾಜ್ಯದಲ್ಲಿ ಮುಂಗಾರು ಮಳೆಯ ಕೊರತೆಯಿಂದ ಉಂಟಾಗಿರುವ ಬರ ಪರಿಸ್ಥಿತಿಯನ್ನು ನಿರಂತರವಾಗಿ ವೈಜ್ಞಾನಿಕವಾಗಿ ಮೌಲ್ಯಮಾಪನ ನಡೆಸಲಾಗುತ್ತಿದ್ದು, ರೈತರ ಸಂಕಷ್ಟಕ್ಕೆ ತ್ವರಿತವಾಗಿ ಸ್ಪಂದಿಸುವ ನಿಟ್ಟಿನಲ್ಲಿ ಹಂತ ಹಂತವಾಗಿ ಕ್ರಮ ಕೈಗೊಳ್ಳುತ್ತಿದ್ದೇವೆ.
ಮೊದಲ ಹಂತದಲ್ಲಿ 101 ಹಾಗೂ ಎರಡನೇ ಹಂತದಲ್ಲಿ 23 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಿದ್ದೆವು. ಇದೀಗ ಮತ್ತೆ 53 ತಾಲೂಕುಗಳನ್ನು ಬರಪೀಡಿತ ಪ್ರದೇಶ ಎಂದು ಘೋಷಿಸಿ ಆದೇಶ ಹೊರಡಿಸಿದ್ದೇವೆ. ಈ ಪೈಕಿ 51 ತಾಲೂಕುಗಳು ತೀವ್ರ ಹಾಗೂ 2 ತಾಲೂಕುಗಳು ಸಾಧಾರಣ ಬರಪೀಡಿತವಾಗಿದ್ದು, ಇದರೊಂದಿಗೆ ರಾಜ್ಯದಲ್ಲಿ ಬರಪೀಡಿತ ಎಂದು ಘೋಷಿಸಲಾದ ತಾಲೂಕುಗಳ ಸಂಖ್ಯೆ 177ಕ್ಕೆ ಏರಿಕೆಯಾಗಿದೆ.
ಇದರ ಜೊತೆಗೆ, ಮಳೆ ಪ್ರಮಾಣ, ಮಣ್ಣಿನ ತೇವಾಂಶ, ಬೆಳೆ ಸ್ಥಿತಿ ಸೇರಿದಂತೆ ವಿವಿಧ ವೈಜ್ಞಾನಿಕ ಮಾನದಂಡಗಳ ಆಧಾರದ ಮೇಲೆ 4ನೇ ಹಂತದಲ್ಲಿ 7 ಜಿಲ್ಲೆಗಳ 11 ತಾಲೂಕುಗಳು Step-3: Ground Truthingಗೆ ಅರ್ಹತೆ ಪಡೆದಿವೆ. ವೈಜ್ಞಾನಿಕ ಪರಿಶೀಲನೆ, ಪಾರದರ್ಶಕ ಸಮೀಕ್ಷೆ ಮತ್ತು ನಿಖರ ವರದಿಯ ಆಧಾರದಲ್ಲಿ ಮುಂದಿನ ಕ್ರಮಗಳನ್ನು ಕೈಗೊಳ್ಳಲಾಗುವುದು.
ಮುಂಗಾರು ಹಂಗಾಮು ಮುಗಿಯುವವರೆಗೂ ಬರ ಪರಿಸ್ಥಿತಿಯ ಮೇಲ್ವಿಚಾರಣೆ ಮುಂದುವರಿಯಲಿದ್ದು, ಅಗತ್ಯ ಕಂಡುಬಂದಲ್ಲಿ ಮುಂದಿನ ಹಂತದಲ್ಲಿಯೂ ಹೆಚ್ಚುವರಿ ತಾಲೂಕುಗಳನ್ನು ಗ್ರೌಂಡ್ ಟ್ರೂಥಿಂಗ್ಗೆ ಸೇರಿಸಲಾಗುವುದು.
ಬೆಳೆ ಹಾನಿಯ ನೈಜ ಚಿತ್ರಣ ಆಧರಿಸಿ, ಬರದಿಂದ ಸಂಕಷ್ಟಕ್ಕೆ ಸಿಲುಕಿರುವ ರೈತರಿಗೆ ನಿಯಮಾನುಸಾರ ಅಗತ್ಯ ನೆರವು ತಲುಪಿಸಲು ನಾವು ಬದ್ಧರಿದ್ದೇವೆ.
The drought situation caused by deficient monsoon rainfall is being continuously assessed on a scientific basis, with phased measures being taken to ensure a swift response to farmers’ distress.
In the first phase, 101 taluks were declared drought-hit, followed by 23 taluks in the second phase. We have now issued orders declaring another 53 taluks drought-hit. Of these, 51 are severely drought-hit and 2 are moderately drought-hit, taking the total number of drought-hit taluks in the State to 177.
In addition, based on various scientific parameters, including rainfall, soil moisture and crop conditions, 11 taluks across 7 districts have qualified for Step-3: Ground Truthing under the 4th phase of drought assessment. Further action will be taken based on scientific verification, transparent field assessment and accurate reporting.
Monitoring will continue until the end of the monsoon season, and additional taluks will be taken up for ground truthing in the next phase wherever required.
We are committed to ensuring that farmers affected by drought receive the necessary relief as per norms, based on the actual extent of crop damage. -
Dr. G Parameshwara
@DrParameshwara
ಬರ ಪರಿಸ್ಥಿತಿಯಿಂದ ಸಂಕಷ್ಟಕ್ಕೊಳಗಾದ ಜನರಿಗೆ ಅಗತ್ಯ ನೆರವು ತ್ವರಿತವಾಗಿ ತಲುಪಿಸುವ ನಿಟ್ಟಿನಲ್ಲಿ ಸರ್ಕಾರ ಕ್ರಮ ಕೈಗೊಂಡಿದೆ.
ಜಿಲ್ಲಾಧಿಕಾರಿಗಳ ಬಳಿ ಲಭ್ಯವಿರುವ ₹320 ಕೋಟಿ ಎಸ್ಡಿಆರ್ಎಫ್ ಹಣವನ್ನು ಬರ ಘೋಷಣೆಯ ಹಿನ್ನೆಲೆಯಲ್ಲಿ ಬಳಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. 16ನೇ ಹಣಕಾಸು ಆಯೋಗದ ಶಿಫಾರಸಿನಂತೆ ಕೇಂದ್ರದಿಂದ ಈ ವರ್ಷ ₹929.25 ಕೋಟಿ ಬರಬೇಕಿದ್ದು, ಈಗಾಗಲೇ ₹464.62 ಕೋಟಿ ಮೊದಲ ಕಂತು ಬಿಡುಗಡೆಯಾಗಿದೆ. ರಾಜ್ಯದ ಪಾಲು ಸೇರಿಸಿ ಜಿಲ್ಲಾಧಿಕಾರಿಗಳಿಗೆ ಕೂಡಲೇ ಬಿಡುಗಡೆ ಮಾಡಲಾಗುವುದು.
ಬರ ಸಂಕಷ್ಟಕ್ಕೆ ರಾಜ್ಯ ಸರ್ಕಾರದ ನಿರಂತರ ಸ್ಪಂದನೆ
The Government is taking swift measures to ensure that necessary relief reaches people affected by the drought without delay.
₹320 crore in SDRF funds currently available with Deputy Commissioners has been permitted for use in view of the drought declaration. As recommended by the 16th Finance Commission, Karnataka is due to receive ₹929.25 crore from the Union Government this year, of which the first instalment of ₹464.62 crore has already been released. The State’s share will be added and the funds will be released to Deputy Commissioners immediately.
The State Government continues to respond swiftly to drought distress. -
Dr. G Parameshwara
@DrParameshwara
ಬರದ ಸಂಕಷ್ಟಕ್ಕೆ ತಕ್ಕಂತೆ ನಿಯಮಗಳೂ ಬದಲಾಗಬೇಕು. ರೈತರಿಗೆ ಸಕಾಲದಲ್ಲಿ ಹಾಗೂ ಸಮಾನ ಪರಿಹಾರ ದೊರೆಯುವ ಉದ್ದೇಶದಿಂದ ಬರ ಕೈಪಿಡಿ-2020 ಮತ್ತು NDRF ನಿಯಮಗಳಲ್ಲಿ ಅಗತ್ಯ ಬದಲಾವಣೆ ತರಲು ರಾಜ್ಯ ಸರ್ಕಾರದ ಪರವಾಗಿ ಮನವಿ ಮಾಡಿದ್ದೇನೆ.
FRUITS ದತ್ತಾಂಶ ಪರಿಗಣನೆ, ಬೆಳೆ ನಷ್ಟ ಪರಿಹಾರ ಮಾನದಂಡಗಳ ಏಕರೂಪತೆ, ಬಿತ್ತನೆ ಅವಧಿಯ ಮಳೆ ಕೊರತೆ ಹಾಗೂ ಕಡಿಮೆ ಅವಧಿಯ ಒಣಹವೆಯ ಪರಿಗಣನೆ ಸೇರಿದಂತೆ ಬರದ ಪರಿಸ್ಥಿತಿ ಉಲ್ಬಣಗೊಳ್ಳುವವರೆಗೆ ಕಾಯದೆ, ಆರಂಭದಲ್ಲಿಯೇ ಬರ ಘೋಷಿಸಿ ರೈತರಿಗೆ ಸಕಾಲದಲ್ಲಿ ನೆರವು ಒದಗಿಸುವ ವ್ಯವಸ್ಥೆ ರೂಪುಗೊಳ್ಳಬೇಕು ಎಂಬುದೂ ನಮ್ಮ ಪ್ರಮುಖ ಆಗ್ರಹವಾಗಿದೆ. ರೈತರ ಹಿತ ಕಾಪಾಡಲು ಅಗತ್ಯವಿರುವ ಎಲ್ಲ ಕ್ರಮಗಳನ್ನು ನಮ್ಮ ಸರ್ಕಾರ ನಿರಂತರವಾಗಿ ಕೈಗೊಳ್ಳಲಿದೆ.
Drought rules must evolve with the severity of the crisis. To ensure farmers receive timely and equitable relief, I have urged necessary amendments to the Drought Manual 2020 and NDRF norms on behalf of the State Government.
Our key demands include considering FRUITS data, standardising crop-loss relief norms, factoring in rainfall deficiency during the sowing period and recognising shorter dry spells.
The system should also allow drought to be declared at an early stage, rather than waiting for conditions to worsen, so that farmers can receive timely assistance.
Our Government will continue to take every necessary step to safeguard farmers’ interests. -
Dr. G Parameshwara
@DrParameshwara
ರಾಜ್ಯದ ಜನರ ದಾಹ ನೀಗಿಸುವುದು ನಮ್ಮ ಸರ್ಕಾರದ ಮೊದಲ ಆದ್ಯತೆ. ಬರ ಪರಿಸ್ಥಿತಿಯ ನಡುವೆಯೂ ರಾಜ್ಯದ ಯಾವುದೇ ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗದಂತೆ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.
ಈ ಪೈಕಿ ಏಪ್ರಿಲ್–ಮೇ ಅವಧಿಯಲ್ಲಿ ಜಿಲ್ಲೆಗಳಿಗೆ ₹117 ಕೋಟಿ ಹಾಗೂ ಗ್ರಾಮೀಣ ಪ್ರದೇಶಗಳ ಕುಡಿಯುವ ನೀರಿನ ವ್ಯವಸ್ಥೆಗೆ ₹189 ಕೋಟಿ ಅನುದಾನ ನೀಡಿದ್ದು, ಒಟ್ಟಾರೆ ₹306 ಕೋಟಿ ಅನುದಾನವನ್ನು ಒದಗಿಸಲಾಗಿದೆ.
ನೀರಿನ ಕೊರತೆಯಿಂದ ಯಾವುದೇ ಕುಟುಂಬ ಸಂಕಷ್ಟಕ್ಕೆ ಸಿಲುಕಬಾರದು ಎಂಬ ಉದ್ದೇಶದಿಂದ, ಅಗತ್ಯವಿರುವ ಕಡೆಗಳಲ್ಲಿ ತಕ್ಷಣದ ನೀರು ಪೂರೈಕೆ ಹಾಗೂ ಪರ್ಯಾಯ ವ್ಯವಸ್ಥೆಗಳನ್ನು ಕಲ್ಪಿಸಲಾಗುತ್ತಿದೆ.ಜನರ ಬದುಕಿಗೆ ಅತ್ಯಗತ್ಯವಾದ ಕುಡಿಯುವ ನೀರಿನ ಪೂರೈಕೆಗೆ ನಮ್ಮ ಸರ್ಕಾರ ಸದಾ ಬದ್ಧವಾಗಿದೆ.
Ensuring drinking water for the people of the State is our Government’s first priority. Even amid drought, necessary precautionary measures are being taken to prevent drinking water shortages in any part of Karnataka.
For this, ₹117 crore has been provided to districts for April–May, along with ₹189 crore for drinking water arrangements in rural areas, taking the total allocation to ₹306 crore.
To ensure that no family suffers due to water scarcity, immediate supply and alternative arrangements are being made wherever required. Our Government remains committed to ensuring access to this essential need - safe drinking water for every family. -
Dr. G Parameshwara
@DrParameshwara
A proud beginning for India at the Asian Games 2026!
Congratulations to Elavenil Valarivan, Sonam Maskar and Vidarsa Vinod on the women’s 10m Air Rifle team silver, with Elavenil adding another silver in the individual event.
Congratulations also to Himanshu Dhillon, Rudrankksh Patil and Parth Mane on their men’s 10m Air Rifle team silver. Himanshu went on to win individual silver, while Rudrankksh secured bronze.
And congratulations to Suchika Tariyal, who created history by winning India’s first-ever Asian Games medal in MMA, a bronze in the women’s Traditional 60kg event.
Six medals, each earned through immense discipline and determination. May this be the beginning of many more proud moments for India at Aichi-Nagoya.
#asiangames2026 -
Dr. G Parameshwara
@DrParameshwara
ಕುಡಿಯುವ ನೀರು ಪ್ರತಿಯೊಬ್ಬರ ಮೂಲಭೂತ ಹಕ್ಕು. ಜನರ ದೈನಂದಿನ ಬದುಕಿಗೆ ಅಗತ್ಯವಾದ ನೀರಿನ ಪೂರೈಕೆಯಲ್ಲಿ ಯಾವುದೇ ಕೊರತೆ ಉಂಟಾಗದಂತೆ ನಮ್ಮ ಸರ್ಕಾರ ನಿರಂತರವಾಗಿ ಕ್ರಮ ಕೈಗೊಳ್ಳುತ್ತಿದೆ.
ಬರ ಪರಿಸ್ಥಿತಿಯಿಂದ ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ಎದುರಾಗಿರುವ ಕುಡಿಯುವ ನೀರಿನ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ, ಅಗತ್ಯವಿರುವ ಕಡೆಗಳಲ್ಲಿ ಟ್ಯಾಂಕರ್ಗಳು ಹಾಗೂ ಖಾಸಗಿ ಕೊಳವೆಬಾವಿಗಳ ಮೂಲಕ ನೀರು ಪೂರೈಸಲಾಗುತ್ತಿದೆ.
ಬರದ ಸಂಕಷ್ಟದ ನಡುವೆಯೂ ಯಾವುದೇ ಕುಟುಂಬ ಕುಡಿಯುವ ನೀರಿಗಾಗಿ ಪರದಾಡಬಾರದು ಎಂಬುದು ನಮ್ಮ ಸರ್ಕಾರದ ಬದ್ಧತೆ. ಜನರ ಬದುಕಿಗೆ ಅತ್ಯಗತ್ಯವಾದ ನೀರಿನ ಪೂರೈಕೆಗೆ ಮೊದಲ ಆದ್ಯತೆ ನೀಡಿ, ಪರಿಸ್ಥಿತಿಗೆ ಅನುಗುಣವಾಗಿ ಅಗತ್ಯ ಕ್ರಮಗಳನ್ನು ಮುಂದುವರಿಸಲಾಗುವುದು.
Access to drinking water is a basic right. Our Government is taking continuous measures to ensure there is no shortage in the supply of water essential to people’s daily lives.
The drinking water shortage caused by drought in both rural and urban areas is being addressed seriously, with water supplied through tankers and private borewells wherever required.
Even amid drought, no family should have to struggle for drinking water. Ensuring uninterrupted water supply remains our priority, and necessary measures will continue based on the situation. -
Dr. G Parameshwara
@DrParameshwara
ಕೇಂದ್ರ ಸರ್ಕಾರವು 2020ರಲ್ಲಿ ರೂಪಿಸಿರುವ ಬರ ಘೋಷಣೆಯ ಮಾರ್ಗಸೂಚಿಗಳ ಪ್ರಕಾರವೇ ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಬೇಕಾಗುತ್ತದೆ.
ಆ ಮಾನದಂಡಗಳನ್ನು ಅನುಸರಿಸಿ ಮೊದಲ ಹಂತದಲ್ಲಿ 101 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿತ್ತು. ನಿರಂತರ ಪರಿಶೀಲನೆಯ ಬಳಿಕ ಮತ್ತೂ 23 ತಾಲೂಕುಗಳನ್ನು ಸೇರ್ಪಡೆ ಮಾಡಲಾಗಿದ್ದು, ಇದೀಗ ಮತ್ತೆ 53 ತಾಲೂಕುಗಳನ್ನು ಪಟ್ಟಿಗೆ ಸೇರಿಸಲಾಗುತ್ತಿದೆ. ಇದರೊಂದಿಗೆ ಒಟ್ಟು 177 ತಾಲೂಕುಗಳು ಬರಪೀಡಿತ ಪ್ರದೇಶಗಳಾಗಿ ಘೋಷಣೆಯಾಗಲಿವೆ.
ಇಷ್ಟಕ್ಕೇ ಪ್ರಕ್ರಿಯೆ ಮುಗಿಯುವುದಿಲ್ಲ. ನೆಲಮಟ್ಟದ ಪರಿಸ್ಥಿತಿ, ಮಳೆ ಕೊರತೆ, ಬೆಳೆ ಹಾನಿ ಸೇರಿದಂತೆ ನಿಗದಿತ ಮಾನದಂಡಗಳ ಆಧಾರದಲ್ಲಿ ನಿರಂತರ ಮೌಲ್ಯಮಾಪನ ನಡೆಸಲಾಗುವುದು. ಮುಂದಿನ ಹಂತದಲ್ಲಿ ಮತ್ತಷ್ಟು ತಾಲೂಕುಗಳು ಪಟ್ಟಿಗೆ ಸೇರ್ಪಡೆಯಾಗುವ ಸಾಧ್ಯತೆಯಿದ್ದು, ಬರಪೀಡಿತ ತಾಲೂಕುಗಳ ಸಂಖ್ಯೆ ಸುಮಾರು 200ರ ವರೆಗೆ ತಲುಪಬಹುದು.This media couldn't be displayed. See it on the original post. -
Dr. G Parameshwara
@DrParameshwara
ಬರ ಪರಿಸ್ಥಿತಿಯ ತೀವ್ರತೆಯನ್ನು ಗಮನದಲ್ಲಿಟ್ಟುಕೊಂಡು ರಾಜ್ಯ ಸರ್ಕಾರವು ಹಂತ ಹಂತವಾಗಿ ತಾಲೂಕುಗಳ ಪರಿಶೀಲನೆ ನಡೆಸಿ, ತ್ವರಿತವಾಗಿ ಬರಪೀಡಿತ ತಾಲೂಕುಗಳನ್ನು ಘೋಷಿಸುವ ಮೂಲಕ ನಿರಂತರವಾಗಿ ಸ್ಪಂದಿಸುತ್ತಿದೆ.
ಮೊದಲ ಎರಡು ಹಂತಗಳಲ್ಲಿ ಪರಿಶೀಲಿಸಲಾದ 126 ತಾಲೂಕುಗಳ ಪೈಕಿ 124 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿದೆ. ಮೂರನೇ ಹಂತದ ಘೋಷಣೆ ತಯಾರಿಯಲ್ಲಿದ್ದು, 17 ಜಿಲ್ಲೆಗಳ 53 ತಾಲೂಕುಗಳನ್ನು ಬರ ಪಟ್ಟಿಗೆ ಸೇರಿಸಲಾಗುತ್ತಿದೆ.
ಬರ ಸಂಕಷ್ಟಕ್ಕೆ ನಮ್ಮ ಸರ್ಕಾರದ ನಿರಂತರ ಸ್ಪಂದನೆ
Considering the severity of the drought, the State Government is continuously responding by assessing taluks in phases and swiftly declaring those affected by drought.
In the first two phases, 124 of the 126 taluks assessed were declared drought-hit. The third-phase declaration is now being prepared, with 53 taluks across 17 districts being added to the drought-hit list.
The State Government continues to respond swiftly to drought distress. -
Dr. G Parameshwara
@DrParameshwara
The Kasturirangan Report and the severe drought situation in Karnataka require a comprehensive, bipartisan discussion in the Legislature and a consensus that protects the State’s interests.
On the 7th draft of the Kasturirangan Report, the State Government must submit its views to the Union Government within the stipulated time. Rather than sending only the Government’s position, the issue has been taken up in the House so that ruling and Opposition members can discuss it openly and arrive at a common stand in Karnataka’s interest.
*Severe Drought Situation Across the State: The drought situation this year is extremely serious and is not limited to a few taluks. Severe rainfall deficiency across large parts of the State has badly affected agriculture and farmers’ livelihoods. The Government is comparing the current situation with previous severe drought years and closely assessing its intensity. El Niño, linked to higher surface temperatures in the Pacific Ocean, has also contributed to the rainfall deficit this year.
Against the normal rainfall of around 852 mm, the State has received only 642 mm. From June to September 26, severe rainfall deficiency has been recorded across different regions.
The State’s average rainfall deficit stands at 36% -- 46% in South Interior Karnataka, 44% in North Interior Karnataka, 38% in Malnad and 28% in the coastal region.
Farmers began sowing when the rains initially arrived, but the rains failed soon after, causing germinated crops to dry up. In several areas, farmers sowed a second time after rainfall resumed, but those crops too suffered damage, leaving farmers in distress.
*177 Taluks Declared Drought-Hit: As per the Union Government’s 2020 drought declaration guidelines, taluks must be declared drought-hit only after meeting the prescribed criteria. Accordingly, 101 taluks were declared drought-hit in the first phase, followed by another 23 taluks after further assessment. Now, 53 more taluks are being added, taking the total to 177 drought-hit taluks.
The process will continue. Ground conditions, rainfall deficiency, crop loss and other prescribed parameters will be assessed continuously. More taluks may be added in the next phase, and the total could reach around 200 depending on the situation.
Since the Union Government has framed the criteria for drought declaration and relief, the State Government must act within those guidelines. Declaring all taluks drought-hit at once, without meeting the prescribed norms, could create hurdles in securing drought relief from the Centre.
We are following the rules framed by the Union Government, and Karnataka must receive the relief due to it under those same rules. At the same time, the State Government will continue to assess the situation and ensure relief reaches farmers.
Both the Kasturirangan Report and the drought situation concern Karnataka’s larger interests. The ruling and Opposition parties must therefore rise above political differences, discuss these issues comprehensively and present a united position before the Union Government in the interest of the State. -
Dr. G Parameshwara
@DrParameshwara
ಕಸ್ತೂರಿ ರಂಗನ್ ವರದಿ ಹಾಗೂ ರಾಜ್ಯದಲ್ಲಿ ಉಂಟಾಗಿರುವ ಗಂಭೀರ ಬರ ಪರಿಸ್ಥಿತಿಯ ಕುರಿತು ವಿಧಾನಮಂಡಲದಲ್ಲಿ ಪಕ್ಷಾತೀತವಾಗಿ ಸಮಗ್ರ ಚರ್ಚೆ ನಡೆಸಿ, ರಾಜ್ಯದ ಹಿತಾಸಕ್ತಿಗೆ ಪೂರಕವಾದ ಒಮ್ಮತದ ನಿರ್ಣಯ ಕೈಗೊಳ್ಳಬೇಕಿದೆ.
ಕಸ್ತೂರಿ ರಂಗನ್ ವರದಿಯ 7ನೇ ಕರಡು ಪ್ರತಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರವು ನಿಗದಿತ ಅವಧಿಯೊಳಗೆ ತನ್ನ ಅಭಿಪ್ರಾಯವನ್ನು ಕೇಂದ್ರ ಸರ್ಕಾರಕ್ಕೆ ತಿಳಿಸಬೇಕಿದೆ. ಸರ್ಕಾರದ ಅಭಿಪ್ರಾಯವನ್ನಷ್ಟೇ ಏಕಪಕ್ಷೀಯವಾಗಿ ಸಲ್ಲಿಸುವ ಬದಲು, ಸದನದಲ್ಲಿ ಆಡಳಿತ ಮತ್ತು ವಿರೋಧ ಪಕ್ಷಗಳ ಸದಸ್ಯರು ಮುಕ್ತವಾಗಿ ಚರ್ಚಿಸಿ, ರಾಜ್ಯದ ಹಿತದೃಷ್ಟಿಯಿಂದ ಒಮ್ಮತದ ನಿಲುವನ್ನು ಕೇಂದ್ರಕ್ಕೆ ತಿಳಿಸುವುದು ಸೂಕ್ತ ಎಂಬ ಉದ್ದೇಶದಿಂದ ಈ ವಿಷಯವನ್ನು ಚರ್ಚೆಗೆ ತೆಗೆದುಕೊಳ್ಳಲಾಗಿದೆ.
ರಾಜ್ಯಾದ್ಯಂತ ಗಂಭೀರ ಬರ ಪರಿಸ್ಥಿತಿ : ರಾಜ್ಯದಲ್ಲಿ ಈ ಬಾರಿ ಬರ ಪರಿಸ್ಥಿತಿ ಅತ್ಯಂತ ಗಂಭೀರವಾಗಿದೆ. ಇದು ಕೆಲವೇ ತಾಲೂಕುಗಳಿಗೆ ಸೀಮಿತವಾಗಿಲ್ಲ. ರಾಜ್ಯದ ಬಹುತೇಕ ಭಾಗಗಳಲ್ಲಿ ಮಳೆಯ ತೀವ್ರ ಕೊರತೆ ಕಂಡುಬಂದಿದ್ದು, ಕೃಷಿ ಚಟುವಟಿಕೆ ಮತ್ತು ರೈತರ ಬದುಕಿನ ಮೇಲೆ ಗಂಭೀರ ಪರಿಣಾಮ ಬೀರಿದೆ.
ಹಿಂದಿನ ತೀವ್ರ ಬರ ಪರಿಸ್ಥಿತಿಗಳೊಂದಿಗೆ ಈ ವರ್ಷದ ಅಂಕಿ-ಅಂಶಗಳನ್ನು ಹೋಲಿಕೆ ಮಾಡಲಾಗುತ್ತಿದ್ದು, ಪ್ರಸ್ತುತ ಪರಿಸ್ಥಿತಿಯ ತೀವ್ರತೆಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಪೆಸಿಫಿಕ್ ಸಾಗರದ ಮೇಲ್ಮೈ ನೀರಿನ ತಾಪಮಾನ ಹೆಚ್ಚಳದಿಂದ ಉಂಟಾಗುವ ಎಲ್ ನಿನೋ ಪ್ರಕ್ರಿಯೆಯೂ ಮಳೆ ಕೊರತೆಗೆ ಕಾರಣವಾಗಿದ್ದು, ಈ ಬಾರಿ ಅದರ ತೀವ್ರತೆ ಹೆಚ್ಚಿದೆ.
ರಾಜ್ಯದಲ್ಲಿ ವಾಡಿಕೆಯಂತೆ ಸುಮಾರು 852 ಮಿ.ಮೀ. ಮಳೆಯಾಗಬೇಕಿತ್ತು, ಆದರೆ 642 ಮಿ.ಮೀ. ಮಳೆಯಷ್ಟೇ ದಾಖಲಾಗಿದೆ. ಜೂನ್ನಿಂದ ಸೆಪ್ಟೆಂಬರ್ 26ರ ವರೆಗಿನ ಅವಧಿಯಲ್ಲಿ ವಿವಿಧ ಪ್ರದೇಶಗಳಲ್ಲಿ ತೀವ್ರ ಮಳೆ ಕೊರತೆ ಉಂಟಾಗಿದೆ.
ರಾಜ್ಯದ ಸರಾಸರಿ ಮಳೆ ಕೊರತೆ ಶೇ.36ರಷ್ಟಿದ್ದು, ದಕ್ಷಿಣ ಒಳನಾಡಿನಲ್ಲಿ ಶೇ.46, ಉತ್ತರ ಒಳನಾಡಿನಲ್ಲಿ ಶೇ.44, ಮಲೆನಾಡಿನಲ್ಲಿ ಶೇ.38 ಹಾಗೂ ಕರಾವಳಿ ಭಾಗದಲ್ಲಿ ಶೇ.28ರಷ್ಟು ಮಳೆ ಕೊರತೆ ದಾಖಲಾಗಿದೆ.
ಮಳೆ ಆರಂಭವಾದ ಸಂದರ್ಭದಲ್ಲಿ ರೈತರು ಬಿತ್ತನೆ ಕೈಗೊಂಡಿದ್ದರು. ಆದರೆ ಕೆಲವೇ ದಿನಗಳಲ್ಲಿ ಮಳೆ ಕೈಕೊಟ್ಟ ಪರಿಣಾಮ ಮೊಳಕೆಯೊಡೆದ ಬೆಳೆಗಳು ಒಣಗಿವೆ. ನಂತರ ಮಳೆಯಾದಾಗ ಎರಡನೇ ಬಾರಿ ಬಿತ್ತನೆ ಮಾಡಿದ ಬೆಳೆಗಳಿಗೂ ಹಾನಿಯಾಗಿದೆ. ಹಲವು ಪ್ರದೇಶಗಳಲ್ಲಿ ಬೆಳೆ ಹಾನಿ ತೀವ್ರವಾಗಿದ್ದು, ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.
177 ತಾಲೂಕುಗಳು ಬರಪೀಡಿತ ಪಟ್ಟಿಗೆ : ಕೇಂದ್ರ ಸರ್ಕಾರವು 2020ರಲ್ಲಿ ರೂಪಿಸಿರುವ ಬರ ಘೋಷಣೆಯ ಮಾರ್ಗಸೂಚಿಗಳ ಪ್ರಕಾರವೇ ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಬೇಕಾಗುತ್ತದೆ. ಆ ಮಾನದಂಡಗಳನ್ನು ಅನುಸರಿಸಿ ಮೊದಲ ಹಂತದಲ್ಲಿ 101 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿತ್ತು. ನಿರಂತರ ಪರಿಶೀಲನೆಯ ಬಳಿಕ ಮತ್ತೂ 23 ತಾಲೂಕುಗಳನ್ನು ಸೇರ್ಪಡೆ ಮಾಡಲಾಗಿದ್ದು, ಇದೀಗ ಮತ್ತೆ 53 ತಾಲೂಕುಗಳನ್ನು ಪಟ್ಟಿಗೆ ಸೇರಿಸಲಾಗುತ್ತಿದೆ. ಇದರೊಂದಿಗೆ ಒಟ್ಟು 177 ತಾಲೂಕುಗಳು ಬರಪೀಡಿತ ಪ್ರದೇಶಗಳಾಗಿ ಘೋಷಣೆಯಾಗಲಿವೆ.
ಇಷ್ಟಕ್ಕೇ ಪ್ರಕ್ರಿಯೆ ಮುಗಿಯುವುದಿಲ್ಲ. ನೆಲಮಟ್ಟದ ಪರಿಸ್ಥಿತಿ, ಮಳೆ ಕೊರತೆ, ಬೆಳೆ ಹಾನಿ ಸೇರಿದಂತೆ ನಿಗದಿತ ಮಾನದಂಡಗಳ ಆಧಾರದಲ್ಲಿ ನಿರಂತರ ಮೌಲ್ಯಮಾಪನ ನಡೆಸಲಾಗುವುದು. ಮುಂದಿನ ಹಂತದಲ್ಲಿ ಮತ್ತಷ್ಟು ತಾಲೂಕುಗಳು ಪಟ್ಟಿಗೆ ಸೇರ್ಪಡೆಯಾಗುವ ಸಾಧ್ಯತೆಯಿದ್ದು, ಬರಪೀಡಿತ ತಾಲೂಕುಗಳ ಸಂಖ್ಯೆ ಸುಮಾರು 200ರವರೆಗೆ ತಲುಪಬಹುದು.
ಕೇಂದ್ರ ಸರ್ಕಾರವೇ ಬರ ಘೋಷಣೆ ಮತ್ತು ಪರಿಹಾರಕ್ಕೆ ಸಂಬಂಧಿಸಿದ ಮಾನದಂಡಗಳನ್ನು ರೂಪಿಸಿರುವುದರಿಂದ, ರಾಜ್ಯ ಸರ್ಕಾರವು ಆ ನಿಯಮಗಳ ಚೌಕಟ್ಟಿನಲ್ಲಿಯೇ ಕ್ರಮ ಕೈಗೊಳ್ಳಬೇಕಾಗಿದೆ. ಮಾನದಂಡಗಳನ್ನು ಮೀರಿ ರಾಜ್ಯದ ಎಲ್ಲ ತಾಲೂಕುಗಳನ್ನು ಏಕಾಏಕಿ ಬರಪೀಡಿತ ಎಂದು ಘೋಷಿಸಿದರೆ ಕೇಂದ್ರದಿಂದ ಪರಿಹಾರ ಪಡೆಯುವ ಪ್ರಕ್ರಿಯೆಗೆ ತೊಡಕು ಉಂಟಾಗಬಹುದು.
ಕೇಂದ್ರ ಸರ್ಕಾರ ರೂಪಿಸಿರುವ ನಿಯಮಗಳ ಪ್ರಕಾರವೇ ನಾವು ನಡೆದುಕೊಳ್ಳುತ್ತಿದ್ದೇವೆ. ಆ ನಿಯಮಗಳಡಿ ರಾಜ್ಯಕ್ಕೆ ದೊರೆಯಬೇಕಾದ ಬರ ಪರಿಹಾರವನ್ನು ಕೇಂದ್ರ ಸರ್ಕಾರ ನೀಡಬೇಕು. ಅದೇ ವೇಳೆ ರಾಜ್ಯ ಸರ್ಕಾರವೂ ತನ್ನ ಜವಾಬ್ದಾರಿಯಿಂದ ಹಿಂದೆ ಸರಿಯದೆ, ಪರಿಸ್ಥಿತಿಯನ್ನು ನಿರಂತರವಾಗಿ ಪರಿಶೀಲಿಸಿ ರೈತರಿಗೆ ಪರಿಹಾರ ತಲುಪಿಸುವ ಕೆಲಸ ಮಾಡಲಿದೆ.
ಕಸ್ತೂರಿ ರಂಗನ್ ವರದಿ ಮತ್ತು ಬರಗಾಲ ಎರಡೂ ರಾಜ್ಯದ ಹಿತಾಸಕ್ತಿಗೆ ಸಂಬಂಧಿಸಿದ ಮಹತ್ವದ ವಿಷಯಗಳಾಗಿವೆ. ಹೀಗಾಗಿ ಆಡಳಿತ ಮತ್ತು ವಿರೋಧ ಪಕ್ಷಗಳು ಪಕ್ಷಭೇದ ಮರೆತು ಸದನದಲ್ಲಿ ಸಮಗ್ರವಾಗಿ ಚರ್ಚಿಸಿ, ರಾಜ್ಯದ ಹಿತಾಸಕ್ತಿಯನ್ನು ಕಾಪಾಡುವ ನಿಟ್ಟಿನಲ್ಲಿ ಒಗ್ಗಟ್ಟಿನ ನಿಲುವನ್ನು ಕೇಂದ್ರ ಸರ್ಕಾರದ ಮುಂದೆ ಮಂಡಿಸಬೇಕಿದೆ. -
Dr. G Parameshwara
@DrParameshwara
ಸಚಿವ ಸಂಪುಟದ ಸಹದ್ಯೋಗಿಗಳು, ಆತ್ಮೀಯರು ಆದ ಶ್ರೀ ಎಸ್.ಎಸ್.ಮಲ್ಲಿಕಾರ್ಜುನ ಅವರಿಗೆ ಜನ್ಮದಿನದ ಶುಭಾಶಯಗಳು.
ಭಗವಂತನು ತಮಗೆ ಉತ್ತಮ ಆಯುರಾರೋಗ್ಯವನ್ನು ಕರುಣಿಸಲಿ, ಜನಸೇವೆಗೆ ಮತ್ತಷ್ಟು ಶಕ್ತಿ ತುಂಬಲಿ ಎಂದು ಹಾರೈಸುತ್ತೇನೆ.
@SS_Mallikarjun_ -
Dr. G Parameshwara
@DrParameshwara
ಆರ್ಯ ವೈಶ್ಯ ಸಮುದಾಯದವರಿಗೆ ಸ್ವಯಂ ಉದ್ಯೋಗದ ಮೂಲಕ ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಲು ನೆರವಾಗುವ ಉದ್ದೇಶದಿಂದ ‘ಆಹಾರ ವಾಹಿನಿ’ ಯೋಜನೆ ಜಾರಿಗೊಳಿಸಲಾಗಿದೆ.
ಈ ಯೋಜನೆಯಡಿ ವಾಣಿಜ್ಯ ವಾಹನ ಖರೀದಿಸಲು ₹1 ಲಕ್ಷದವರೆಗೆ ಸಹಾಯಧನ ನೀಡಲಾಗುತ್ತಿದ್ದು, ಈಗಾಗಲೇ ಹೊಂದಿರುವ ವಾಹನವನ್ನು ಫುಡ್ ಟ್ರಕ್ ಆಗಿ ಪರಿವರ್ತಿಸಿಕೊಳ್ಳಲು ₹2 ಲಕ್ಷದವರೆಗೆ ಸಹಾಯಧನ ನೀಡಲಾಗುತ್ತಿದೆ.
ಸ್ವಂತ ಉದ್ಯೋಗ ಆರಂಭಿಸಿ, ಆರ್ಥಿಕವಾಗಿ ಸ್ವಾವಲಂಬಿಯಾಗಲು ಆರ್ಯ ವೈಶ್ಯ ಸಮುದಾಯದವರಿಗೆ ಈ ಯೋಜನೆ ನೆರವಾಗಲಿದೆ.This media couldn't be displayed. See it on the original post. -
Dr. G Parameshwara
@DrParameshwara
ತಲೆತಲಾಂತರಗಳಿಂದ ಮಲೆನಾಡಿನ ನೆಲದಲ್ಲಿ ಬದುಕು ಕಟ್ಟಿಕೊಂಡಿರುವ ಜನರ ಜೀವನದ ಮೇಲೆ ಪರಿಣಾಮ ಬೀರುವ ಯಾವುದೇ ನಿರ್ಧಾರವೂ ನೆಲದ ವಾಸ್ತವಾಂಶವನ್ನು ಆಧರಿಸಿರಬೇಕು.
ಪಶ್ಚಿಮ ಘಟ್ಟಗಳು ಸೇರಿದಂತೆ ನಮ್ಮ ದೇಶದ ಪರ್ವತ ಶ್ರೇಣಿಗಳ ಉಳಿವು ನಮ್ಮ ಭವಿಷ್ಯದ ಉಳಿವಿನೊಂದಿಗೆ ಬೆಸೆದುಕೊಂಡಿದೆ. ಅದೇ ಸಂದರ್ಭದಲ್ಲಿ, ತಲೆತಲಾಂತರಗಳಿಂದ ಈ ಪರಿಸರದೊಂದಿಗೆ ಬದುಕು ಕಟ್ಟಿಕೊಂಡಿರುವ ಜನರ ಹಿತ ಮತ್ತು ಭವಿಷ್ಯವನ್ನೂ ರಕ್ಷಿಸಬೇಕಿದೆ. ಪರಿಸರವನ್ನು ಉಳಿಸುವುದರ ಜೊತೆಗೆ, ಪರಿಸರದೊಂದಿಗೆ ಬದುಕುತ್ತಿರುವ ಜನರ ಬದುಕನ್ನೂ ಉಳಿಸುವುದು ನಮ್ಮ ಜವಾಬ್ದಾರಿ.
Any decision affecting the lives of people who have lived in Malnad for generations must be based on ground realities.
Protecting the Western Ghats and other mountain ranges is vital to our future. At the same time, we must safeguard the lives, livelihoods and future of communities that have lived in harmony with these ecosystems for generations.
Protecting the environment and protecting the people who depend on it must go hand in hand. -
Dr. G Parameshwara
@DrParameshwara
ಪಶ್ಚಿಮ ಘಟ್ಟಗಳ ಪರಿಸರ ಸಂರಕ್ಷಣೆಯ ಜೊತೆಗೆ, ಅಲ್ಲಿನ ಜನರ ಬದುಕು ಮತ್ತು ಹಕ್ಕುಗಳನ್ನು ರಕ್ಷಿಸುವುದು ಸರ್ಕಾರದ ಜವಾಬ್ದಾರಿ.
ಡಾ. ಕಸ್ತೂರಿ ರಂಗನ್ ಅವರ ವರದಿಯಲ್ಲಿ 20,668 ಚ.ಕಿಮೀ ಪ್ರದೇಶ ಗುರುತಿಸಲಾಗಿದೆ. ತಾಂತ್ರಿಕ ಲೋಪ-ದೋಷಗಳನ್ನು ಸರಿಪಡಿಸಿದರೆ ಇದು 19,252.16 ಚ.ಕಿಮೀ ಆಗುತ್ತದೆ. ರಾಜ್ಯದಲ್ಲಿ ಈಗಾಗಲೇ ರಾಷ್ಟ್ರೀಯ ಉದ್ಯಾನವನ, ವನ್ಯಜೀವಿ ಅಭಯಾರಣ್ಯ, ಮೀಸಲು ಅರಣ್ಯ ಸೇರಿದಂತೆ 16,114.08 ಚ.ಕಿಮೀ ಪ್ರದೇಶ ಪರಿಸರ ಸೂಕ್ಷ್ಮ ಪ್ರದೇಶದ ವ್ಯಾಪ್ತಿಯಲ್ಲಿದೆ.
ಹೀಗಾಗಿ ಉಳಿದ 3,108.08 ಚ.ಕಿಮೀ ಪ್ರದೇಶದ ಕುರಿತು ನೆಲದ ವಾಸ್ತವತೆಯನ್ನು ಆಧರಿಸಿ ಸೂಕ್ತ ತೀರ್ಮಾನ ಕೈಗೊಳ್ಳಬೇಕಿದೆ. ಇದಕ್ಕಾಗಿ ಗ್ರಾಮವಾರು ಪರಿಶೀಲನೆ ನಡೆಸಿ, ಸರ್ವೇ ನಂಬರ್ವಾರು ನಕ್ಷೆಗಳನ್ನು ಸಿದ್ಧಪಡಿಸಿ ಕೇಂದ್ರ ಸರ್ಕಾರಕ್ಕೆ ಸಲ್ಲಿಸುವ ಅಗತ್ಯವಿದೆ.
ಪಶ್ಚಿಮ ಘಟ್ಟಗಳ ಪರಿಸರವನ್ನು ಉಳಿಸುವುದರ ಜೊತೆಗೆ, ಸಾವಿರಾರು ವರ್ಷಗಳಿಂದ ಈ ನೆಲದಲ್ಲಿ ಬದುಕು ಕಟ್ಟಿಕೊಂಡಿರುವ ಜನರ ಬದುಕು, ಜೀವನೋಪಾಯ ಮತ್ತು ಭವಿಷ್ಯವನ್ನೂ ರಕ್ಷಿಸಬೇಕಿದೆ. ಪರಿಸರ ಸಂರಕ್ಷಣೆ ಮತ್ತು ಜನರ ಹಕ್ಕುಗಳ ನಡುವೆ ಸಮತೋಲನ ಸಾಧಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ.
Protecting the environment of the Western Ghats, while safeguarding the lives and rights of the people who live there, is the Government’s responsibility.
Dr. Kasturirangan’s report identifies 20,668 sq. km. After correcting technical discrepancies, the area comes to 19,252.16 sq. km. Of this, 16,114.08 sq. km is already covered by ecologically sensitive areas such as national parks, wildlife sanctuaries and reserve forests.
Therefore, an appropriate decision on the remaining 3,108.08 sq. km must be based on ground realities. This requires village-wise verification and preparation of survey number-wise maps for submission to the Union Government.
Along with conserving the Western Ghats, we must also protect the lives, livelihoods and future of communities that have lived on this land for generations.
Balancing environmental protection with people’s rights is a responsibility we all share. -
Dr. G Parameshwara
@DrParameshwara
ಪಶ್ಚಿಮ ಘಟ್ಟಗಳ ಭವಿಷ್ಯವನ್ನು ನಿರ್ಧರಿಸುವ ವರದಿ ಸಿದ್ಧಪಡಿಸುವಾಗ, ಆ ನೆಲದ ಜನರ ಧ್ವನಿಗೆ ಎಷ್ಟು ಅವಕಾಶ ನೀಡಲಾಯಿತು ಎಂಬ ಪ್ರಶ್ನೆ ಮುಖ್ಯ.
ಕಸ್ತೂರಿ ರಂಗನ್ ಸಮಿತಿಯಲ್ಲಿ ಪಶ್ಚಿಮ ಘಟ್ಟಗಳ ಪ್ರತಿನಿಧಿಗಳು ಯಾರಿದ್ದರು? ಅಲ್ಲಿನ ಸಣ್ಣ ರೈತರು, ಆದಿವಾಸಿಗಳು ಹಾಗೂ ಸ್ಥಳೀಯ ಸಮುದಾಯಗಳೊಂದಿಗೆ ಸಮರ್ಪಕ ಸಮಾಲೋಚನೆ ನಡೆಸದೆ ಸಿದ್ಧಪಡಿಸಲಾದ ವರದಿ, ನೆಲದ ವಾಸ್ತವತೆಗಳನ್ನು ಹೇಗೆ ಪ್ರತಿಬಿಂಬಿಸುತ್ತದೆ ಎಂಬುದನ್ನು ಪ್ರಶ್ನಿಸಬೇಕಿದೆ.
ಪರಿಸರ ಸಂರಕ್ಷಣೆ ಅತ್ಯಗತ್ಯ. ಅದೇ ಸಂದರ್ಭದಲ್ಲಿ ಪಶ್ಚಿಮ ಘಟ್ಟಗಳ ಪರಿಸರವನ್ನು ಅವಲಂಬಿಸಿರುವ ಜನರ ಜೀವನೋಪಾಯ, ಹಕ್ಕುಗಳು ಮತ್ತು ಅಭಿವೃದ್ಧಿಯ ಅಗತ್ಯಗಳಿಗೂ ಸಮಾನ ಮಹತ್ವ ನೀಡಬೇಕು.
ಪಶ್ಚಿಮ ಘಟ್ಟಗಳ ಕುರಿತು ಯಾವುದೇ ನಿರ್ಧಾರವಾಗಲಿ, ಅಲ್ಲಿನ ಜನರ ಧ್ವನಿಯನ್ನು ಆಲಿಸಿ, ನೆಲದ ವಾಸ್ತವತೆಗಳನ್ನು ಪರಿಗಣಿಸಿ, ಪರಿಸರ ಸಂರಕ್ಷಣೆ ಮತ್ತು ಜನರ ಬದುಕಿನ ನಡುವೆ ಸಮತೋಲನ ಸಾಧಿಸುವಂತಿರಬೇಕು.
When preparing a report that will shape the future of the Western Ghats, an important question is how much space was given to the voices of the people who live there.
Who represented the Western Ghats on the Kasturirangan Committee? A report prepared without adequate consultation with small farmers, tribal communities and local residents must be questioned on how well it reflects ground realities.
Environmental protection is essential. At the same time, equal importance must be given to the livelihoods, rights and development needs of communities that depend on the Western Ghats.
Any decision concerning the Western Ghats must listen to local voices, reflect ground realities and strike a balance between environmental protection and people’s lives. -
Dr. G Parameshwara
@DrParameshwara
ಪಶ್ಚಿಮ ಘಟ್ಟಗಳು ಕೇವಲ ಪರಿಸರ ಸಂರಕ್ಷಣೆಯ ಪ್ರದೇಶವಲ್ಲ; ಅದು ಸಾವಿರಾರು ಕುಟುಂಬಗಳ ಬದುಕು, ಜೀವನೋಪಾಯ ಮತ್ತು ಭವಿಷ್ಯವನ್ನು ಹೊತ್ತಿರುವ ನೆಲ.
ವಾಸ್ತವಿಕ ನೆಲಗಟ್ಟನ್ನು ಪರಿಗಣಿಸದೆ ಕಸ್ತೂರಿ ರಂಗನ್ ವರದಿಯನ್ನು ಜಾರಿಗೊಳಿಸುವುದರಿಂದ ಪಶ್ಚಿಮ ಘಟ್ಟಗಳ ಗ್ರಾಮೀಣ ಜನರ ಹಕ್ಕುಗಳು ಮತ್ತು ಮೂಲಭೂತ ಸೌಲಭ್ಯಗಳ ಮೇಲೆ ಪರಿಣಾಮ ಬೀರುವ ಆತಂಕವಿದೆ. ಅಭಿವೃದ್ಧಿ ಮತ್ತು ಪರಿಸರ ಸಂರಕ್ಷಣೆ ಎರಡನ್ನೂ ಸಮತೋಲನದಿಂದ ಕಾಪಾಡುವಂತಹ ಕಾರ್ಯಸಾಧ್ಯ ಪರಿಹಾರವೇ ಅಗತ್ಯ.
ಪಶ್ಚಿಮ ಘಟ್ಟವನ್ನು ಮ್ಯೂಸಿಯಂ ಮಾಡುವುದಲ್ಲ, ಅಲ್ಲಿನ ಪರಿಸರವನ್ನು ಉಳಿಸುತ್ತಲೇ ಅಲ್ಲಿನ ಜನರ ಬದುಕು, ಹಕ್ಕುಗಳು ಮತ್ತು ಭವಿಷ್ಯವನ್ನು ರಕ್ಷಿಸುವುದು ನಮ್ಮ ಸರ್ಕಾರದ ಆದ್ಯತೆಯಾಗಿದೆ.
The Western Ghats are not merely an area for environmental conservation; they are home to thousands of families whose lives, livelihoods and future are rooted there.
Implementing the Kasturirangan Report without considering ground realities could affect the rights and basic amenities of rural communities in the Western Ghats. What is needed is a practical solution that balances development with environmental protection.
Our priority is not to turn the Western Ghats into a museum, but to protect the environment while safeguarding the lives, rights and future of the people who live there. -
Dr. G Parameshwara
@DrParameshwara
ಕಸ್ತೂರಿ ರಂಗನ್ ವರದಿಯಲ್ಲಿ ಅಕ್ಕಪಕ್ಕದಲ್ಲಿರುವ ಗ್ರಾಮಗಳಲ್ಲೇ ಒಂದನ್ನು ಸೇರಿಸಿ, ಮತ್ತೊಂದನ್ನು ಕೈಬಿಟ್ಟಿರುವ ವ್ಯತ್ಯಾಸ ಕಂಡುಬರುತ್ತದೆ. ಒಂದೇ ರೀತಿಯ ಭೌಗೋಳಿಕ ಪರಿಸ್ಥಿತಿಯಲ್ಲಿರುವ ಗ್ರಾಮಗಳಿಗೆ ಇಂತಹ ವಿಭಿನ್ನ ಮಾನದಂಡ ಏಕೆ?
ಮಲೆನಾಡಿನ ವಾಸ್ತವ ಪರಿಸ್ಥಿತಿಯನ್ನು ಪರಿಗಣಿಸದೆ ಕೇವಲ ನಕ್ಷೆ ಅಥವಾ ಉಪಗ್ರಹ ಚಿತ್ರಗಳ ಆಧಾರದ ಮೇಲೆ ನಿರ್ಧಾರ ಕೈಗೊಳ್ಳುವುದು ಸರಿಯೇ? ಭೌತಿಕ ಸರ್ವೆ ಮೂಲಕ ಸ್ಥಳೀಯ ವಾಸ್ತವಾಂಶವನ್ನು ಪರಿಶೀಲಿಸಿ, ನ್ಯಾಯಸಮ್ಮತ ನಿರ್ಧಾರ ಕೈಗೊಳ್ಳಬೇಕಿದೆ.
The Kasturirangan Report shows inconsistencies where, among neighbouring villages, one has been included while another has been left out. Why should villages with similar geographical conditions be subjected to different criteria?
Can decisions affecting Malnad be based only on maps or satellite imagery without considering the realities on the ground? A physical survey is essential to verify local conditions and ensure a fair and well-founded decision. -
Dr. G Parameshwara
@DrParameshwara
ಮಲೆನಾಡಿನ ಪ್ರತಿಯೊಂದು ಬೆಟ್ಟ, ಕಾಡು, ನೆಲದೊಂದಿಗೆ ಅಲ್ಲಿನ ಜನರ ಬದುಕಿನ ನಂಟಿದೆ. ಪಶ್ಚಿಮ ಘಟ್ಟಗಳ ಪರಿಸರ ನಮ್ಮ ಅಮೂಲ್ಯ ಸಂಪತ್ತು. ಅದನ್ನು ಉಳಿಸುವುದು ಎಷ್ಟು ಮುಖ್ಯವೋ, ಅದೇ ಪರಿಸರದೊಂದಿಗೆ ತಲೆತಲಾಂತರಗಳಿಂದ ಬದುಕುತ್ತಿರುವ ಮಲೆನಾಡಿನ ಜನರ ಹಿತವನ್ನು ಕಾಪಾಡುವುದೂ ಅಷ್ಟೇ ಮುಖ್ಯ.
ರಾಜ್ಯವು ಕಸ್ತೂರಿ ರಂಗನ್ ವರದಿಯನ್ನು ತಿರಸ್ಕರಿಸಿಕೊಂಡು ಬಂದಿರುವ ನಡುವೆಯೂ ಕೇಂದ್ರ ಸರ್ಕಾರ ಅಧಿಸೂಚನೆಗಳನ್ನು ಹೊರಡಿಸುತ್ತಿರುವ ಹಿನ್ನೆಲೆಯಲ್ಲಿ, ಈ ವಿಚಾರವನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುವುದು ಅಗತ್ಯವಾಗಿದೆ.
ಕಸ್ತೂರಿ ರಂಗನ್ ವರದಿ ಸ್ಯಾಟ್ಲೈಟ್ ಚಿತ್ರಗಳ ಆಧಾರದ ಮೇಲೆ ಸಿದ್ಧಪಡಿಸಲಾಗಿದೆ. ಆದರೆ ಮಲೆನಾಡಿನ ವಾಸ್ತವ ಪರಿಸ್ಥಿತಿ ಮತ್ತು ಸ್ಥಳೀಯ ಜನರ ಬದುಕನ್ನು ಸಮಗ್ರವಾಗಿ ಅರಿಯಲು ಭೌತಿಕ ಸರ್ವೆ ಅಗತ್ಯವಾಗಿದ್ದು, ನೆಲದ ವಾಸ್ತವಾಂಶವನ್ನು ಪರಿಶೀಲಿಸಿಯೇ ಮುಂದಿನ ನಿರ್ಧಾರ ಕೈಗೊಳ್ಳಲಿ.
Every hill, forest and stretch of land in Malnad is closely tied to the lives of its people. Protecting the Western Ghats is vital, but so is safeguarding the interests of communities that have lived there for generations.
Karnataka has consistently rejected the Kasturirangan Report, yet the Union Government continues to issue notifications based on it. This issue must now be brought to a logical conclusion.
The report was prepared largely using satellite imagery. But understanding Malnad’s actual conditions and people’s lives requires a physical survey. Any further decision should be based on ground realities. -
Dr. G Parameshwara
@DrParameshwara
ಕಸ್ತೂರಿ ರಂಗನ್ ವರದಿ ಹಾಗೂ ರಾಜ್ಯದಲ್ಲಿ ತಲೆದೋರಿರುವ ಭೀಕರ ಬರ ಪರಿಸ್ಥಿತಿಗೆ ಸಂಬಂಧಿಸಿದ ಮಹತ್ವದ ವಿಚಾರಗಳ ಕುರಿತು ವಿಸ್ತೃತವಾಗಿ ಚರ್ಚಿಸಿ, ರಾಜ್ಯದ ಹಿತಾಸಕ್ತಿಗೆ ಪೂರಕವಾದ ನಿರ್ಣಯಗಳಿಗೆ ಬರಬೇಕೆಂಬ ಉದ್ದೇಶದಿಂದ ಈ ಅಧಿವೇಶನವನ್ನು ಕರೆಯಲಾಗಿದೆ.
ಕಸ್ತೂರಿ ರಂಗನ್ ವರದಿ ಪಶ್ಚಿಮ ಘಟ್ಟ ಪ್ರದೇಶದ ಪರಿಸರ ಸಂರಕ್ಷಣೆಯ ಜೊತೆಗೆ ಅಲ್ಲಿನ ಜನರ ಜೀವನ, ಕೃಷಿ, ತೋಟಗಾರಿಕೆ, ಮೂಲಸೌಕರ್ಯ ಹಾಗೂ ಅಭಿವೃದ್ಧಿಗೆ ನೇರವಾಗಿ ಸಂಬಂಧಿಸಿದ ವಿಷಯವಾಗಿದೆ. ಮತ್ತೊಂದೆಡೆ, ಮಳೆಯ ಕೊರತೆಯಿಂದ ರಾಜ್ಯದ ಅನೇಕ ತಾಲೂಕುಗಳಲ್ಲಿ ಬರ ಪರಿಸ್ಥಿತಿ ಉಂಟಾಗಿದ್ದು, ರೈತರು ಮತ್ತು ಗ್ರಾಮೀಣ ಜನರು ಸಂಕಷ್ಟ ಎದುರಿಸುತ್ತಿದ್ದಾರೆ. ಕುಡಿಯುವ ನೀರು, ಜಾನುವಾರುಗಳಿಗೆ ಮೇವು, ಕೃಷಿ ಚಟುವಟಿಕೆಗಳು ಹಾಗೂ ಉದ್ಯೋಗ ಸೇರಿದಂತೆ ಹಲವು ವಿಷಯಗಳ ಕುರಿತು ಸದನದಲ್ಲಿ ಸಮಗ್ರ ಚರ್ಚೆ ನಡೆಯಬೇಕಾಗಿದೆ.
ಇಂತಹ ಮಹತ್ವದ ವಿಷಯಗಳನ್ನು ಮುಂದಿಟ್ಟುಕೊಂಡು ಕರೆಯಲಾದ ವಿಶೇಷ ಅಧಿವೇಶನದಲ್ಲಿ ಪ್ರತಿಯೊಂದು ಪಕ್ಷವೂ ತನ್ನ ಅಭಿಪ್ರಾಯ, ಸಲಹೆ ಹಾಗೂ ಆಕ್ಷೇಪಗಳನ್ನು ಸದನದ ಮುಂದೆ ಮಂಡಿಸುವ ಅವಕಾಶವಿದೆ. ಆದರೆ ಚರ್ಚೆಯ ಬದಲು ನಿರಂತರ ಗದ್ದಲ ಮತ್ತು ಕಲಾಪಕ್ಕೆ ಅಡ್ಡಿಪಡಿಸುವ ಪರಿಸ್ಥಿತಿ ಉಂಟಾದರೆ, ರಾಜ್ಯದ ಜನತೆಗೆ ಸಂಬಂಧಿಸಿದ ಗಂಭೀರ ವಿಚಾರಗಳ ಚರ್ಚೆಯೇ ಹಿಂದೆ ಸರಿಯುತ್ತದೆ.
ರಾಜ್ಯದ ಜನರ ಬದುಕು ಮತ್ತು ಭವಿಷ್ಯಕ್ಕೆ ಸಂಬಂಧಿಸಿದ ವಿಷಯಗಳ ಬಗ್ಗೆ ಸದನದಲ್ಲಿ ಅರ್ಥಪೂರ್ಣ ಚರ್ಚೆ ನಡೆಯಬೇಕು. ಭಿನ್ನಾಭಿಪ್ರಾಯಗಳಿದ್ದರೆ ಅವುಗಳನ್ನು ಸದನದಲ್ಲಿ ಮಂಡಿಸಿ, ರಾಜ್ಯದ ಹಿತಾಸಕ್ತಿಗೆ ಪೂರಕವಾಗುವ ರೀತಿಯಲ್ಲಿ ಪರಿಹಾರ ಹುಡುಕುವುದು ನಮ್ಮೆಲ್ಲರ ಜವಾಬ್ದಾರಿ.
ಸುಖಾಸುಮ್ಮನೆ ಗದ್ದಲ ಮಾಡಿ ಕಲಾಪಕ್ಕೆ ಅಡ್ಡಿಪಡಿಸುವ ಬದಲು, ರಾಜ್ಯದ ಜನರ ಹಿತಾಸಕ್ತಿಯ ವಿಚಾರಗಳ ಚರ್ಚೆಯಲ್ಲಿ ವಿಪಕ್ಷಗಳು ಆಸಕ್ತಿ ವಹಿಸಿ. -
Dr. G Parameshwara
@DrParameshwara
ರಾಜ್ಯದಲ್ಲಿ ಬರಪೀಡಿತ ತಾಲೂಕುಗಳನ್ನು ಒಂದೇ ಹಂತದಲ್ಲಿ ಘೋಷಿಸುವುದಿಲ್ಲ. ನಿಗದಿತ ಮಾನದಂಡಗಳ ಅನ್ವಯ ತಾಲೂಕುಗಳನ್ನು ಹಂತ ಹಂತವಾಗಿ ಪರಿಶೀಲಿಸಿ, ಗ್ರೌಂಡ್ ಟ್ರೂಥಿಂಗ್ ನಡೆಸಿದ ಬಳಿಕ ಬರಪೀಡಿತ ಎಂದು ಘೋಷಿಸಲಾಗುತ್ತದೆ.
ಮೊದಲ ಹಂತದಲ್ಲಿ 101 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿದ್ದು, ಬಳಿಕ ಇನ್ನೂ 24 ತಾಲೂಕುಗಳನ್ನು ಪಟ್ಟಿಗೆ ಸೇರಿಸಲಾಗಿದೆ. ಮುಂದಿನ ಮೂರು-ನಾಲ್ಕು ದಿನಗಳಲ್ಲಿ ಮತ್ತಷ್ಟು 52 ತಾಲೂಕುಗಳನ್ನು ಘೋಷಿಸಲಾಗುವುದು. ನಂತರ ಸುಮಾರು 50 ತಾಲೂಕುಗಳಲ್ಲಿ ಗ್ರೌಂಡ್ ಟ್ರೂಥಿಂಗ್ ನಡೆಸಿ ಅಲ್ಲಿನ ಪರಿಸ್ಥಿತಿಯನ್ನು ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು.
ಪ್ರಸ್ತುತ ಲಭ್ಯವಿರುವ ಮಾಹಿತಿಯ ಪ್ರಕಾರ ರಾಜ್ಯದ 200ಕ್ಕೂ ಹೆಚ್ಚು ತಾಲೂಕುಗಳು ಬರಪೀಡಿತ ಪಟ್ಟಿಗೆ ಸೇರುವ ಸಾಧ್ಯತೆಯಿದೆ.
ಈ ಕುರಿತು ನಿನ್ನೆ ಮಾಧ್ಯಮಗಳಿಗೆ ವಿವರಿಸಿದ್ದೆ. ಈ ಸಂಬಂಧ ಪ್ರಕಟವಾದ ಕೆಲವು ಪತ್ರಿಕಾ ವರದಿಗಳು ಇಲ್ಲಿವೆ.
Drought-hit taluks in the State are not declared all at once. Taluks are assessed in phases based on prescribed criteria, and are declared drought-hit only after ground truthing.
In the first phase, 101 taluks were declared drought-hit, followed by another 24 taluks. A further 52 taluks are expected to be declared over the next three to four days. After that, ground truthing will be conducted in around 50 more taluks to assess the situation and take necessary action.
Based on the information currently available, more than 200 taluks in the State may eventually be included in the drought-hit list.
I explained this to the media yesterday. Here are some of the press reports published on the issue. -
Dr. G Parameshwara
@DrParameshwara
ಭಾನುವಾರ ದಾವಣಗೆರೆ ಜಿಲ್ಲಾ ಛಲವಾದಿ ಮಹಾಸಭಾ ವತಿಯಿಂದ ಬಾಪೂಜಿ ಇಂಜಿನಿಯರಿಂಗ್ ಕಾಲೇಜಿನ ಎಸ್.ಎಸ್. ಮಲ್ಲಿಕಾರ್ಜುನ ಸಾಂಸ್ಕೃತಿಕ ಭವನದಲ್ಲಿ ಆಯೋಜಿಸಿದ್ದ 2025-26ನೇ ಸಾಲಿನ ಪ್ರತಿಭಾವಂತ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಉದ್ಘಾಟಿಸಿದೆ.
ಉತ್ತಮ ಅಂಕ ಗಳಿಸಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಸನ್ಮಾನಿಸಿ, ಅವರ ಪರಿಶ್ರಮ ಮತ್ತು ಸಾಧನೆಯನ್ನು ಅಭಿನಂದಿಸಿದೆ.
ಈ ಕುರಿತಾದ ಪತ್ರಿಕಾ ವರದಿಗಳು ಹೀಗಿವೆ..
On Sunday, I inaugurated the 'Pratibha Puraskara' Programme for meritorious students of the 2025–26 academic year, organised by the Davanagere District Chalavadi Mahasabha at the S.S. Mallikarjun Cultural Hall of Bapuji Institute of Engineering and Technology.
I felicitated the students who achieved excellent marks and congratulated them on their hard work and accomplishments.
Media reports on the programme are as follows: -
Dr. G Parameshwara
@DrParameshwara
ವಿಧಾನ ಪರಿಷತ್ ಅಧಿವೇಶನದಲ್ಲಿ ಕಸ್ತೂರಿ ರಂಗನ್ ವರದಿಯ ಕುರಿತ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದೆ.
ಕಸ್ತೂರಿ ರಂಗನ್ ವರದಿಯನ್ನು ರಾಜ್ಯವು ತಿರಸ್ಕರಿಸಿಕೊಂಡು ಬಂದಿರುವ ನಡುವೆಯೂ ಕೇಂದ್ರವು ಅಧಿಸೂಚನೆಗಳನ್ನು ಹೊರಡಿಸುತ್ತಿರುವುದರಿಂದ ಈ ವಿಷಯವನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುವುದು ಅಗತ್ಯವಾಗಿದೆ.
ನಾವೆಲ್ಲರೂ ಏಕ ಕಾಲಕ್ಕೆ ಪರಿಸರವನ್ನು ಉಳಿಸುವ ಮೂಲಕ ಪಶ್ಚಿಮ ಘಟ್ಟಗಳಲ್ಲಿ ವಾಸಿಸುತ್ತಿರುವ ಜನರು ಹಾಗೂ ಭವಿಷ್ಯದ ಪೀಳಿಗೆಗಳ ಹಿತರಕ್ಷಣೆಯನ್ನೂ ಮಾಡಬೇಕಿದೆ. ಪಶ್ಚಿಮ ಘಟ್ಟಗಳು, ಪೂರ್ವ ಘಟ್ಟಗಳು, ಅರಾವಳಿ, ವಿಂಧ್ಯ ಮತ್ತು ಹಿಮಾಲಯ ಮುಂತಾದ ಪರ್ವತ ಶ್ರೇಣಿಗಳ ಉಳಿವು ನಮ್ಮ ಉಳಿವೂ ಆಗಿದೆ. ಅದರ ಜೊತೆಯಲ್ಲಿಯೇ ಅಲ್ಲಿ ತಲೆ ತಲೆಮಾರುಗಳಿಂದ ವಾಸಿಸುತ್ತಿರುವ ಜನರ ಬದುಕಿನ ರಕ್ಷಣೆಯೂ ಆಗಬೇಕಾಗಿದೆ.
ಪರಿಸರ ಉಳಿದರೆ ಮಾತ್ರ ಅಲ್ಲಿನ ಜನರ ಬದುಕೂ ಉಳಿಯುತ್ತದೆ. ಈ ವಿಚಾರಗಳನ್ನು ಗಮನದಲ್ಲಿಟ್ಟುಕೊಂಡು ನಾವು ಮುಂದಕ್ಕೆ ಸಾಗಬೇಕಾಗಿದೆ. ಈ ಎಲ್ಲ ಹಿನ್ನೆಲೆಯಲ್ಲಿ ಸದನವೂ ಚರ್ಚೆ ನಡೆಸಿ ಸಲಹೆಗಳನ್ನು ನೀಡಿದಲ್ಲಿ ಮುಂದಿನ ನಿರ್ಣಯಗಳನ್ನು ಕೈಗೊಳ್ಳಲು ಅನುಕೂಲವಾಗುತ್ತದೆ.
ವಿಧಾನ ಪರಿಷತ್ನಲ್ಲಿ ಕಸ್ತೂರಿ ರಂಗನ್ ವರದಿಯ ಸಾಧಕಬಾಧಕಗಳ ಚರ್ಚಿಸಿ, ವಸ್ತುನಿಷ್ಠ ನಿಲುವು ತೆಗೆದುಕೊಳ್ಳಬೇಕಾದ ಅಗತ್ಯವನ್ನು ಸದನಕ್ಕೆ ಮನವರಿಕೆ ಮಾಡಿಕೊಟ್ಟೆ.
ಕೇಂದ್ರ ಸರ್ಕಾರದ ಅಧೀನದಲ್ಲಿರುವ ಪರಿಸರ ಮತ್ತು ಅರಣ್ಯ ಇಲಾಖೆಯು ಪರಿಸರ (ರಕ್ಷಣೆ) ಕಾಯ್ದೆ, 1986ರ ಅಡಿಯಲ್ಲಿ ಪಶ್ಚಿಮ ಘಟ್ಟಗಳ ಪ್ರದೇಶದ ಪರಿಸರ ಸೂಕ್ಷ್ಮ ವಲಯಗಳನ್ನು ಗುರುತಿಸಿ, ಅದರ ಸಂರಕ್ಷಣೆ, ರಕ್ಷಣೆ ಮತ್ತು ಪುನರುಜೀವನಕ್ಕಾಗಿ ತೆಗೆದುಕೊಳ್ಳಬೇಕಾದ ಕ್ರಮಗಳನ್ನು ಸೂಚಿಸಲು 2010 ರಲ್ಲಿ ಪ್ರೊ|| ಮಾಧವ್ ಗಾಡ್ಗೀಳ್ ರವರ ನೇತೃತ್ವದಲ್ಲಿ “ಪಶ್ಚಿಮ ಘಟ್ಟಗಳ ಪರಿಸರ ತಜ್ಞರ ಸಮಿತಿ” (WGEEP)ಯನ್ನು ರಚಿಸಿತ್ತು. ಸದರಿ ಸಮಿತಿಯು ಅಧ್ಯಯನ ನಡೆಸಿ ದಿನಾಂಕ: 30.08.2011ರಂದು ತನ್ನ ವರದಿಯನ್ನು ಸಲ್ಲಿಸಿದೆ.
ಪ್ರೊ|| ಮಾಧವ್ ಗಾಡ್ಗೀಳ್ ಸಮಿತಿಯ ವರದಿಯಲ್ಲಿ ಒಟ್ಟು 1,29,037 ಚದರ ಕಿ.ಮೀ. ವ್ಯಾಪ್ತಿಯ ಪಶ್ಚಿಮ ಘಟ್ಟಗಳ ಪ್ರದೇಶವನ್ನು ಗುರುತಿಸಿ ಮೂರು ಪರಿಸರ ಸೂಕ್ಷ್ಮ ವಲಯಗಳಾಗಿ (ESZ-1, ESZ - 2, & ESZ-3) ವರ್ಗೀಕರಿಸಿ, ಈ ವಿಶಾಲವಾದ ಪ್ರದೇಶಗಳನ್ನು ಸಂರಕ್ಷಿಸುವ ಕುರಿತು ಹಲವು ಶಿಫಾರಸ್ಸುಗಳನ್ನು ನೀಡಲಾಗಿಗಿದೆ. ಆದರೆ, ಪಶ್ಚಿಮ ಘಟ್ಟಗಳ ವ್ಯಾಪ್ತಿಯ ರಾಜ್ಯ ಸರ್ಕಾರಗಳು ಮತ್ತು ಆ ಭಾಗಗಳ ಜನ-ಜನಪ್ರತಿನಿಧಿಗಳು ಮಾಧವ ಗಾಡ್ಗೀಳ್ ಸಮಿತಿಯ ವರದಿಯ ಕುರಿತು ವಿರೋಧಗಳನ್ನು ವ್ಯಕ್ತಪಡಿಸಿದ ಕಾರಣದಿಂದ ರಾಜ್ಯಗಳ ಅಭಿಪ್ರಾಯಗಳನ್ನು ಆಲಿಸಿ, ಗಾಡ್ಗೀಳ್ ಸಮಿತಿಯ ವರದಿಯನ್ನು ಸಮಗ್ರವಾಗಿ ಪರಿಶೀಲಿಸಿ ವರದಿ ಸಲ್ಲಿಸಲು ಕೇಂದ್ರ ಸರ್ಕಾರವು ಡಾ| ಕೆ. ಕಸ್ತೂರಿರಂಗನ್ ರವರ ಅಧ್ಯಕ್ಷತೆಯಲ್ಲಿ 2012ರ ಆಗಸ್ಟ್ ತಿಂಗಳಲ್ಲಿ ಉನ್ನತ ಮಟ್ಟದ ಕಾರ್ಯಪಡೆಯನ್ನು [ High level working group] ರಚಿಸಿತು.
ಡಾ. ಕಸ್ತೂರಿ ರಂಗನ್ ಅವರ ಅಧ್ಯಕ್ಷತೆಯ 11 ಜನರ ಈ ಕಾರ್ಯಪಡೆಯು (Working Group) ಗುಜರಾತಿನ ತಪತಿ ನದಿಯಿಂದ ತಮಿಳುನಾಡಿನ ಕನ್ಯಾಕುಮಾರಿಯವರೆಗೆ ಸುಮಾರು 1,500 ಕಿ.ಮೀ ಉದ್ದವನ್ನು ಒಳಗೊಂಡ ಪಶ್ಚಿಮ ಘಟ್ಟಗಳ ಭೂ ಪ್ರದೇಶಗಳನ್ನು ಅಧ್ಯಯನ ಮಾಡಿ "Report of the High level Working Group on Western Ghats" ಎಂಬ ಹೆಸರಿನಲ್ಲಿ ದಿನಾಂಕ 15-4-2013 ರಂದು ಸಲ್ಲಿಸಿದೆ. ಆ ವರದಿಯಲ್ಲಿ "We the Members of the High level Working Group constituted to study the preservation of ecology. environmental integrity and holistic development of the Western Ghats in view of their rich and unique biodiversity after due deliberation have adopted the report for submission" ಎಂದು ಹೇಳಲಾಗಿದೆ.
ಈ ಕಾರ್ಯಪಡೆಯು 15.04.2013 ರಂದು ತನ್ನ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಿದ್ದು, ಸದರಿ ವರದಿಯಲ್ಲಿ ಭಾರತದ ಆರು ರಾಜ್ಯಗಳ ಅಂದಾಜು 59,940 ಚದರ ಕಿ.ಮೀ. ಪ್ರದೇಶವನ್ನು ಪರಿಸರ ಸೂಕ್ಷ್ಮ ಪ್ರದೇಶ (Eco-Sensitive Area) ಗಳೆಂದು ವಿಭಾಗಿಸಿ ಶಿಫಾರಸ್ಸು ಮಾಡಿತ್ತು.
ಆದರೆ, ಕೇರಳ ಸರ್ಕಾರವು ಆ ವೇಳೆಗೆ ವಿಸ್ತ್ರತ ಅಧ್ಯಯನ ನಡೆಸಿ ಪರಿಸರ ಸೂಕ್ಷ್ಮ ಪ್ರದೇಶವೆಂದು 9,993.7 ಚದರ ಕಿ.ಮೀಗಳನ್ನು ಗುರುತಿಸಿತ್ತು. ಹಾಗಾಗಿ ಕಸ್ತೂರಿ ರಂಗನ್ ವರದಿಯು ಗುರ್ತಿಸಿದ್ದ 13,108 ಚದರ ಕಿ.ಮೀ.ಗಳಿಗೆ ಬದಲಾಗಿ 9,993.7 ಚ.ಕಿ.ಮೀಗಳನ್ನ ಕರಡು ಅಧಿಸೂಚನೆಗಳಲ್ಲಿ ಪ್ರಸ್ತಾಪಿಸಲಾಗುತ್ತಿದೆ. ಆದ್ದರಿಂದಲೇ 59,940 ಚ. ಕಿಮೀಗಳ ಬದಲಿಗೆ 56,825.7 ಕಿಮೀ ಪ್ರದೇಶವನ್ನು ಉಳಿಸಿಕೊಳ್ಳಲಾಗಿದೆ.
ರಾಜ್ಯದಲ್ಲಿ ಕಸ್ತೂರಿ ರಂಗನ್ ಅವರ ವರದಿಯಲ್ಲಿ 1,576 ಗ್ರಾಮಗಳೆಂದು ತಿಳಿಸಲಾಗಿತ್ತು. ಕೇಂದ್ರ ಸರ್ಕಾರದ ಇತ್ತೀಚಿನ ಕರಡು ಅಧಿಸೂಚನೆಯಲ್ಲಿ 1,449 ಗ್ರಾಮಗಳೆಂದು ಪ್ರಸ್ತಾಪಿಸಲಾಗಿದೆ. ಮಾಧವ್ ಗಾಡ್ಲೀಳ್ ಅವರ ಆಯೋಗವು ಇಡೀ ಪಶ್ಚಿಮ ಘಟ್ಟವನ್ನು ಮೂರು ಹಂತದ ಪರಿಸರ ಸೂಕ್ಷ್ಮ ವಲಯ ( ESZ 1,2,3] ಎಂದು ಗುರ್ತಿಸಿ ವಿಭಾಗಿಸಿತ್ತು. 1.29 ಲಕ್ಷ ಚದರ ಕಿ. ಮೀಗಳಷ್ಟು ಪ್ರದೇಶವನ್ನು ಗಾಡ್ಲೀಳ್ ಅವರು ಗುರ್ತಿಸಿದ್ದರು. ಆದರೆ, ಡಾ. ಕಸ್ತೂರಿ ರಂಗನ್ ಅವರ ಕಾರ್ಯಪಡೆಯು ಅದನ್ನು 56,825.7 ಚ. ಕಿ.ಮೀಗೆ ಇಳಿಸಿತು.
ಈ 56,825.7 ಕಿ.ಮೀ.ಗಳಲ್ಲಿ ಕರ್ನಾಟಕವೊಂದರಲ್ಲಿ 20,668 ಚದರ ಕಿ.ಮೀ ಪ್ರದೇಶವನ್ನು ಪರಿಸರ ಸೂಕ್ಷ್ಮ ಪ್ರದೇಶವೆಂದು ಗುರ್ತಿಸಲಾಗಿರುತ್ತದೆ. ಈ ಪ್ರದೇಶವು ರಾಜ್ಯದ 10 ಜಿಲ್ಲೆಗಳ 33 ತಾಲ್ಲೂಕುಗಳ 1,576 ಗ್ರಾಮಗಳೆಂದು ಗುರುತಿಸಲಾಗಿತ್ತು. ಬೆಳಗಾವಿ, ಉತ್ತರ ಕನ್ನಡ, ಶಿವಮೊಗ್ಗ, ಉಡುಪಿ, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಹಾಸನ, ಕೊಡಗು, ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗಳು ಈ ಪಟ್ಟಿಯಲ್ಲಿವೆ..
ಈ ವರದಿಯನುಸಾರ ಗ್ರಾಮವನ್ನು ಒಂದು ಸಣ್ಣ ಘಟಕವಾಗಿ ಪರಿಸರ ಸೂಕ್ಷ್ಮ ಪ್ರದೇಶದ ನಿರ್ಧರಣೆಗೆ ಪರಿಗಣಿಸಲಾಗಿದ್ದು, ಒಂದು ಗ್ರಾಮದ 1/5 ನೇ ಭಾಗ ಅಥವಾ ಅದಕ್ಕಿಂತ ಹೆಚ್ಚಿನ ಭೂ ಪ್ರದೇಶವು ಪಶ್ಚಿಮ ಘಟ್ಟದ ವ್ಯಾಪ್ತಿಯ ಪ್ರದೇಶಗಳ ವ್ಯಾಪ್ತಿಗೆ ಒಳಪಟ್ಟರೆ, ಅಂತಹ ಗ್ರಾಮವನ್ನು ಸಂಪೂರ್ಣವಾಗಿ ಪರಿಸರ ಸೂಕ್ಷ್ಮ ಪ್ರದೇಶವೆಂದು ನಿಗದಿ ಪಡಿಸಲಾಗಿದೆ.
ಸದರಿ ವರದಿಯಲ್ಲಿ 2 ಭಾಗಗಳಾಗಿ ವಿಂಗಡಣೆ ಮಾಡಲಾಗಿದ್ದು, ಅವುಗಳಲ್ಲಿ ಮೊದಲನೆಯದು ಪರಿಸರಕ್ಕೆ ಹಾನಿಕಾರಕವಾದ ಚಟುವಟಿಕೆಗಳನ್ನು ನಿರ್ಬಂಧಿಸುವುದು. & ಎರಡನೇಯದಾಗಿ ನಿರ್ಬಂಧದಿಂದ ಕಷ್ಟಕ್ಕೊಳಗಾಗುವ ಸ್ಥಳಗಳ ಬದಲಿಗೆ ಪ್ರೋತ್ಸಾಹಕಗಳನ್ನು ನೀಡುವ ವಿಚಾರಗಳು ಅದರಲ್ಲಿ ಅಡಕವಾಗಿವೆ.
ಡಾ.ಕಸ್ತೂರಿ ರಂಗನ್ ಅವರ ಕಾರ್ಯಪಡೆಯ ಶಿಫಾರಸುಗಳನ್ನು ಕೇಂದ್ರ ಸರ್ಕಾರವು 2014ರ ಆಗಸ್ಟ್ 27ರಂದು ಸುಪ್ರೀಂಕೋರ್ಟಿಗೆ ಅಫಿಡವಿಟ್ ಮೂಲಕ ಸಲ್ಲಿಸಿದೆ. ಆ ಅಫಿಡವಿಟ್ನಲ್ಲಿ ಕೇಂದ್ರ ಸರ್ಕಾರವು ಪ್ರೊ. ಮಾಧವ್ ಗಾಡ್ಗೀಳ್ ವರದಿಯನ್ನು ತಿರಸ್ಕರಿಸಿ ಡಾ. ಕಸ್ತೂರಿ ರಂಗನ್ ಅವರ ನೇತೃತ್ವದ ಕಾರ್ಯಪಡೆಯು ಸಲ್ಲಿಸಿರುವ ವರದಿಯನ್ನು ಒಪ್ಪಿಕೊಳ್ಳುವುದಾಗಿ ಹೇಳಿದೆ. ಪಶ್ಚಿಮ ಘಟ್ಟಗಳ ಶೇ.37 ರಷ್ಟು ಪ್ರದೇಶವನ್ನು ಪರಿಸರ ಸೂಕ್ಷ್ಮ ಪ್ರದೇಶ ಎಂದು ಪರಿಗಣಿಸಿ ಡಾ. ಕಸ್ತೂರಿ ರಂಗನ್ ಸಮಿತಿ ನೀಡಿದ್ದ ಶಿಫಾರಸ್ಸಿನಂತೆ ಮುಂದಿನ ಪ್ರಕ್ರಿಯೆ ನಡೆಸುವುದಾಗಿ ಅಫಿಡವಿಟ್ ನಲ್ಲಿ ಹೇಳಿತ್ತು.
ಸದರಿ ಕಾರ್ಯಪಡೆಯ ವರದಿಯನ್ನಾಧರಿಸಿ, ಪಶ್ಚಿಮ ಘಟ್ಟಗಳ ಸಂರಕ್ಷಣೆಯ ಕುರಿತು ಕೇಂದ್ರದ ಪರಿಸರ ಮತ್ತು ಅರಣ್ಯ ಇಲಾಖೆಯು ಪಶ್ಚಿಮ ಘಟ್ಟ ಪ್ರದೇಶ ಪರಿಸರ ಸೂಕ್ಷ್ಮ ವಲಯ ಎಂದು ಘೋಷಿಸುವ ಸಂಬಂಧ ಈ ಮೊದಲು ಆರು ಕರಡು ಅಧಿಸೂಚನೆಗಳನ್ನು ಹೊರಡಿಸಿದೆ. ಆದರೆ, ಈ ಭಾಗದ ಜನರು ಹಾಗೂ ಜನಪ್ರತಿನಿಧಿಗಳ ವಿರೋಧದಿಂದಾಗಿ ಮೊದಲ 6 ಕರಡು ಅಧಿಸೂಚನೆಗಳು ಅಂತಿಮಗೊಳ್ಳಲಿಲ್ಲ. ಆನಂತರ ದಿನಾಂಕ: 31.07.2024 ರಂದು ಕೇಂದ್ರ ಸರ್ಕಾರವು 6ನೇ ಕರಡು ಅಧಿಸೂಚನೆಯನ್ನು ಹೊರಡಿಸಿದೆ.
ಕಸ್ತೂರಿ ರಂಗನ್ ಅವರ ಕಾರ್ಯಪಡೆಯ ವರದಿಯು ಈ ಕೆಳಕಂಡ ಚಟುವಟಿಕೆಗಳ ಹೊಸ ಸ್ಥಾಪನೆಗಳು ಹಾಗೂ ವಿಸ್ತರಣೆಯನ್ನು ನಿರ್ಬಂಧಿಸುತ್ತದೆ.
ಗಣಿಗಾರಿಕೆ, ಕಲ್ಲುಗಣಿಗಾರಿಕೆ, ಮರಳು ಗಣಿಗಾರಿಕೆಗಳನ್ನು ಸಂಪೂರ್ಣ ನಿಷೇಧಿಸಬೇಕು. (ಅಸ್ತಿತ್ವದಲ್ಲಿರುವ ಗುತ್ತಿಗೆಗಳು 5 ವರ್ಷದೊಳಗೆ ಸ್ಥಗಿತಗೊಳ್ಳಬೇಕು).
ಉಷ್ಣ ವಿದ್ಯುತ್ ಸ್ಥಾವರಗಳು:– ಹೊಸ ಸ್ಥಾವರಗಳು ಹಾಗೂ ವಿಸ್ತರಣೆಗೆ ನಿರ್ಬಂಧ ವಿಧಿಸಬೇಕು.
ಕೈಗಾರಿಕೆಗಳು–ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯು ನಿರ್ದಿಷ್ಟಪಡಿಸಿದ ಎಲ್ಲಾ ಹೊಸ ‘ಕೆಂಪು’ ಕೈಗಾರಿಕೆಗಳ ಸ್ಥಾಪನೆಗೆ ಮತ್ತು ವಿಸ್ತರಣೆಗೆ ನಿಷೇಧ. ಆಸ್ಪತ್ರೆಗಳು ಸೇರಿದಂತೆ ಅಸ್ತಿತ್ವದಲ್ಲಿರುವ ಅಂತಹ ಕೆಂಪು ವರ್ಗದ ಕೈಗಾರಿಕೆಗಳು ನಿಯಮಾನುಸಾರ ಮುಂದುವರಿಯಬಹುದಾಗಿರುತ್ತದೆ.
20,000 ಚದರ ಮೀಟರ್ ಮತ್ತು ಅದಕ್ಕಿಂತಲೂ ಹೆಚ್ಚಿನ ವಿಸ್ತೀರ್ಣವುಳ್ಳ ಕಟ್ಟಡ ಮತ್ತು ನಿರ್ಮಾಣ ಯೋಜನೆಗಳು, 50 ಹೆಕ್ಟೇರ್ ಮತ್ತು ಅದಕ್ಕಿಂತ ಹೆಚ್ಚಿನ ಅಥವಾ 1,50,000 ಚ.ಮೀ ಮತ್ತು ಅದಕ್ಕಿಂತ ಹೆಚ್ಚಿನ ವಿಸ್ತೀರ್ಣದ ನಿರ್ಮಾಣ, ಟೌನ್ ಶಿಪ್ (ಪಟ್ಟಣಗಳು) ಮತ್ತು ಪ್ರದೇಶಾಭಿವೃದ್ಧಿ ಯೋಜನೆಗಳ ಹೊಸ ಪ್ರಸ್ತಾವನೆ ಹಾಗೂ ವಿಸ್ತರಣೆಗೆ ನಿರ್ಬಂಧ.
ಜಲವಿದ್ಯುತ್ (ಹೈಡ್ರೋ) ಯೋಜನೆಗಳು: ಹೊಸ ಜಲವಿದ್ಯುತ್ ಯೋಜನೆಗಳಿಗೆ ಅಧಿಸೂಚನೆ, 2006ಕ್ಕೆ ಒಳಪಟ್ಟು ಷರತ್ತು ಬದ್ಧ ಅನುಮತಿ. (ಒಂದು ಯೋಜನೆ ಮತ್ತು ಇನ್ನೊಂದರ ನಡುವಿನ ಕನಿಷ್ಠ ಅಂತರ ಮೂರು ಕಿ.ಮೀ. ಇರಬೇಕು).
ಈ ಅಂಶಗಳಲ್ಲಿ ಬಹಳ ವ್ಯತ್ಯಾಸವಿಲ್ಲದ ಕರಡು ಅಧಿಸೂಚನೆಗಳನ್ನು ಹೊರಡಿಸಲಾಗಿತ್ತು.
ಡಾ. ಕಸ್ತೂರಿ ರಂಗನ್ ಅವರ ನೇತೃತ್ವದ ಕಾರ್ಯಪಡೆಯು ಸಲ್ಲಿಸಿರುವ ವರದಿಯು ರಾಜ್ಯದ ಪಶ್ಚಿಮ ಘಟ್ಟಗಳ ಜನರ ಬದುಕಿನ ಮೇಲೆ ದುಷ್ಪರಿಣಾಮ ಬೀರುತ್ತದೆ ಎಂಬ ಕಾರಣದಿಂದ ಜನರು ಹಾಗೂ ಜನಪ್ರತಿನಿಧಿಗಳ ಭಾವನೆಗಳನ್ನು ಪರಿಗಣಿಸಿದ ನಮ್ಮ ಸರ್ಕಾರವು 2014ರಿಂದಲೇ ನಿರಂತರವಾಗಿ ಪ್ರತಿಭಟಿಸಿಕೊಂಡು ಬಂದಿದೆ.
ರಾಜ್ಯ ಸರ್ಕಾರವು 2014ರಲ್ಲೇ ಸಂಪುಟ ಉಪ ಸಮಿತಿಯನ್ನು ರಚಿಸಿ ಪಶ್ಚಿಮ ಘಟ್ಟಗಳ ಜಿಲ್ಲೆಗಳಿಗೆ ಭೇಟಿ ಮಾಡಿ ವರದಿ ಸಲ್ಲಿಸಲು ತಿಳಿಸಿತ್ತು. ಅದರಂತೆ ಉಪ ಸಮಿತಿಯು 2015ರ ಜನವರಿ ಮತ್ತು ಫೆಬ್ರವರಿ ತಿಂಗಳುಗಳಲ್ಲಿ ವ್ಯಾಪಕ ಪ್ರವಾಸ ಮಾಡಿ ಸಾರ್ವಜನಿಕ ಸಭೆಗಳನ್ನು ನಡೆಸಿ ಅಭಿಪ್ರಾಯಗಳನ್ನು ಸಂಗ್ರಹಿಸಿ ವರದಿ ಸಲ್ಲಿಸಿತ್ತು. ರಾಜ್ಯ ಸರ್ಕಾರವು ಅದನ್ನು ಅಂಗೀಕರಿಸಿ ಕೇಂದ್ರಕ್ಕೆ ವರದಿಯ ಕುರಿತು ತಿಳಿಸಿತ್ತು. ಆನಂತರ ಪ್ರತಿ ಕರಡು ಅಧಿಸೂಚನೆಗಳನ್ನು ಹೊರಡಿಸಿದಾಗಲೂ ರಾಜ್ಯ ಸರ್ಕಾರವು ತನ್ನ ಪ್ರತಿಭಟನೆಗಳನ್ನು ದಾಖಲಿಸುತ್ತಲೇ ಬಂದಿದೆ.
ರಾಜ್ಯವು ಈಗಾಗಲೇ ಪರಿಸರ ಸಂರಕ್ಷಣೆ ಹಾಗೂ ಅಭಿವೃದ್ಧಿ ಎರಡನ್ನೂ ಸಮತೋಲನಗೊಳಿಸಿ ಪಶ್ಚಿಮ ಘಟ್ಟಗಳ ಹೆಚ್ಚಿನ ಪ್ರದೇಶವನ್ನು ಅರಣ್ಯಗಳು, ಅಭಯಾರಣ್ಯಗಳು, ರಾಷ್ಟ್ರೀಯ ಉದ್ಯಾನವನಗಳು ಹಾಗೂ ಪರಿಸರ ಸೂಕ್ಷ್ಮ ವಲಯಗಳು ಎಂದು ಗುರುತಿಸಿ ಕಟ್ಟುನಿಟ್ಟಾಗಿ ಸಂರಕ್ಷಣೆಯ ಕ್ರಮಗಳನ್ನು ಕೈಗೊಂಡಿರುವ ಹಿನ್ನೆಲೆಯಲ್ಲಿ ಮತ್ತೆ ಹೆಚ್ಚುವರಿಯಾಗಿ ಪರಿಸರ ಸೂಕ್ಷ್ಮ ಪ್ರದೇಶವೆಂದು ಘೋಷಿಸಿ ಇನ್ನೂ ಹೆಚ್ಚಿನ ನಿರ್ಬಂಧಗಳನ್ನು ಹೇರಿದರೆ ಆ ಭಾಗದ ಅಭಿವೃದ್ಧಿ ಕುಂಠಿತವಾಗುತ್ತದೆ. ಹೀಗಾಗಿ ಡಾ. ಕಸ್ತೂರಿ ರಂಗನ್ ವರದಿಯನ್ನು ಕರ್ನಾಟಕವು ಒಪ್ಪುವುದಿಲ್ಲವೆಂದು ರಾಜ್ಯ ಸರ್ಕಾರ ಪದೇ ಪದೇ ತಿರಸ್ಕರಿಸುತ್ತಲೇ ಬಂದಿದೆ.
ಕೇಂದ್ರ ಸರ್ಕಾರಕ್ಕೆ ಹಿಂದಿನ ನಮ್ಮ ಸರ್ಕಾರವು 5-5-2014, 24-4-2015, 20-10-2015, 27-2-2016, 22-4-2017, 27-7-2017 ರ ದಿನಾಂಕಗಳಂದು ಪತ್ರಗಳನ್ನು ಬರೆದು, ಅಧ್ಯಯನಗಳನ್ನು ಮಾಡಿ ವರದಿಗಳನ್ನು ಸಿದ್ಧಪಡಿಸಿ ಅವುಗಳನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಿ ಕಸ್ತೂರಿ ರಂಗನ್ ವರದಿಯನ್ನು ಒಪ್ಪಲಾಗುವುದಿಲ್ಲವೆಂದು ತಿಳಿಸಿತ್ತು. ಆ ನಂತರದ ಸಮಿತಿಗಳು ಕೂಡ ಕಾಲ ಕಾಲಕ್ಕೆ ಕರಡು ಅಧಿಸೂಚನೆಗಳನ್ನು ತಿರಸ್ಕರಿಸುವುದಾಗಿ ಸಚಿವ ಸಂಪುಟಗಳಲ್ಲಿ ಚರ್ಚಿಸಿ ನಿರ್ಣಯಗಳನ್ನು ಕೈಗೊಂಡಿವೆ.
ಈ ನಡುವೆ ದಿನಾಂಕ 18-4-2022ರಂದು ಕೇಂದ್ರ ಸರ್ಕಾರವು ಶ್ರೀ. ಸಂಜಯ್ ಕುಮಾರ್ ಅವರ ನೇತೃತ್ವದ ಸಮಿತಿಯೊಂದನ್ನು ರಚಿಸಿದೆ. ಸದರಿ ಸಮಿತಿಯು 2022ರ ಮೇ ತಿಂಗಳಲ್ಲಿ ರಾಜ್ಯಕ್ಕೂ ಭೇಟಿ ನೀಡಿ ಪರಿಶೀಲಿಸಿದೆ. ಆ ಸಮಿತಿಗೂ ಸಹ ಕಸ್ತೂರಿ ರಂಗನ್ ವರದಿ ಅವೈಜ್ಞಾನಿಕವಾದ ಕಾರಣ ತಿರಸ್ಕರಿಸುವುದಾಗಿ ತಿಳಿಸಲಾಗಿದೆ.
ಶ್ರೀ. ಸಂಜಯ್ ಕುಮಾರ್ ಅವರ ಸಮಿತಿಯ ಪರಿಶೀಲನಾ ಕಾರ್ಯ ಮುಂದುವರೆಯುತ್ತಿರುವಾಗಲೇ ಕೇಂದ್ರ ಸರ್ಕಾರವು 5, 6 ಮತ್ತು 7ನೇ ಕರಡು ಅಧಿಸೂಚನೆಗಳನ್ನು ಹೊರಡಿಸಿದೆ. ಪದೇ ಪದೇ ಅಧಿಸೂಚನೆಗಳನ್ನು ಹೊರಡಿಸುವುದರಿಂದ ಜನರ ಆತಂಕಗಳು ಹೆಚ್ಚಾಗುತ್ತಿವೆ.
ಆದರೆ, ಇದಕ್ಕೆ ಕೇಂದ್ರ ಸರ್ಕಾರವು ಹೇಳುವ ಉತ್ತರವೇ ಬೇರೆ. ಸಾಮಾನ್ಯವಾಗಿ ಪರಿಸರ ಸೂಕ್ಷ್ಮ ವಲಯಗಳಿಗೆ ಸಂಬಂಧಿಸಿದ ಕಾನೂನುಗಳು 725 ದಿನಗಳವರೆಗೆ ಮಾತ್ರ ಜೀವಂತವಾಗಿರುತ್ತದೆ. ಆದಾದ ನಂತರ ಪ್ರಕ್ರಿಯೆಯನ್ನು ಕಾನೂನಾತ್ಮಕವಾಗಿ ಜೀವಂತವಾಗಿಡಲು ಹಾಗೆ ಮಾಡಬೇಕಾಗುತ್ತದೆ ಎಂದು ಹೇಳುತ್ತಿದೆ. ಸಂಜಯ್ ಕುಮಾರ್ ಅವರ ಸಮಿತಿಯ ಅವಧಿ ಜುಲೈ-2027 ರ ವರೆಗೆ ಇದೆ. ಸದರಿ ಸಮಿತಿಯು ಉಪಗ್ರಹ ಆಧಾರಿತ ಸರ್ವೇಗಳ ಜೊತೆಗೆ ಭೌತಿಕ ಪರಿಶೀಲನೆಯನ್ನೂ ಮಾಡುತ್ತಿದೆ. ಕಾಡುಗಳ ನಡುವೆ ಇರುವ ಜನವಸತಿ ಪ್ರದೇಶಗಳು, ತೋಟಗಳು ಹಾಗೂ ಕೃಷಿ ಭೂಮಿಗಳ ಕುರಿತು ತೆಗೆದುಕೊಳ್ಳಬೇಕಾದ ನಿರ್ಧಾರಗಳ ಕುರಿತು ಚರ್ಚೆಗಳನ್ನು ನಡೆಸುತ್ತಿದೆ. ಹಾಗಾಗಿ ಈ ಸಮಿತಿಯ ಅವಧಿಯನ್ನೂ ವಿಸ್ತರಿಸಲಾಗಿದೆ.
ನಮ್ಮ ಸರ್ಕಾರವು ದಿನಾಂಕ 31-7-2024 ರಂದು ಹೊರಡಿಸಿದ ಕರಡು ಅಧಿಸೂಚನೆಯನ್ನು ತಿರಸ್ಕರಿಸುವುದಾಗಿ ಸಚಿವ ಸಂಪುಟವು ದಿನಾಂಕ 6-9-2024ರಂದು ತೀರ್ಮಾನ ಕೈಗೊಂಡಿದೆ. ಮತ್ತೊಮ್ಮೆ ನಮ್ಮ ಸರ್ಕಾರವು ಸಚಿವ ಸಂಪುಟದ ಉಪ ಸಮಿತಿಯನ್ನು ರಚಿಸಿತ್ತು. ಈ ಸಮಿತಿಯು ಪಶ್ಚಿಮ ಘಟ್ಟ ವ್ಯಾಪ್ತಿಯ 39 ತಾಲ್ಲೂಕುಗಳ ಜನಪ್ರತಿನಿಧಿಗಳೊಂದಿಗೆ ಸಭೆಗಳನ್ನು ನಡೆಸಿ ಅಭಿಪ್ರಾಯವನ್ನು ಸಂಗ್ರಹಿಸಿರುತ್ತದೆ. ಬಹುಪಾಲು ಜನರ ಅಭಿಪ್ರಾಯ ಕರಡು ಅಧಿಸೂಚನೆಯನ್ನು ವಿರೋಧಿಸುವುದು ಮತ್ತು ಕಸ್ತೂರಿ ರಂಗನ್ ಅವರ ವರದಿಯನ್ನು ತಿರಸ್ಕರಿಸಬೇಕು ಎಂಬುದೇ ಆಗಿತ್ತು. ಅದರಂತೆ ಸರ್ಕಾರವು ತಿರಸ್ಕರಿಸಿಕೊಂಡೇ ಬಂದಿದೆ. ಕೇಂದ್ರವು ಅಧಿಸೂಚನೆಗಳನ್ನು ಹೊರಡಿಸುವುದು ಮತ್ತು ರಾಜ್ಯವು ಅದನ್ನು ತಿರಸ್ಕರಿಸುವುದೂ ನಡೆಯುತ್ತಲೇ ಇದೆ.
ಇದನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಬೇಕಾಗಿದೆ. ಮಲೆನಾಡಿನ ಜನರ ಸಾಮಾನ್ಯ ಅಭಿಪ್ರಾಯ, ಕಸ್ತೂರಿ ರಂಗನ್ ಅವರು ಸ್ಯಾಟಲೈಟ್ ಚಿತ್ರಗಳನ್ನಾಧರಿಸಿ ವರದಿ ಸಿದ್ಧಪಡಿಸಿದ್ದಾರೆ. ಅದಕ್ಕೆ ವಾಸ್ತವಿಕ ನೆಲಗಟ್ಟಿಲ್ಲ. ಭೌತಿಕ ಸರ್ವೆ ಮಾಡಿದಾಗ ಮಾತ್ರ ವಾಸ್ತವಾಂಶ ತಿಳಿಯುತ್ತದೆ. ಹಾಗಾಗಿ ಕಸ್ತೂರಿ ರಂಗನ್ ಅವರ ವರದಿ ತಿರಸ್ಕರಿಸಬೇಕು ಎಂಬುದಾಗಿದೆ.
ಕಸ್ತೂರಿ ರಂಗನ್ ಅವರು ಅಕ್ಕ ಪಕ್ಕದ ಊರುಗಳಲ್ಲೇ ಒಂದು ಊರನ್ನು ಸೇರಿಸಿಕೊಂಡು ಮತ್ತೊಂದು ಊರನ್ನು ಕೈ ಬಿಟ್ಟಿದ್ದಾರೆ. ಪಶ್ಚಿಮ ಘಟ್ಟಗಳ ಗ್ರಾಮಗಳನ್ನು ಮ್ಯೂಸಿಯಂ ಮಾಡಲು ಹೊರಟಿದ್ದಾರೆ, ಅಭಿವೃದ್ದಿಯನ್ನು ನಿರಾಕರಿಸುವ ಮೂಲಕ ತಮ್ಮ ಮೂಲಭೂತ ಹಕ್ಕುಗಳನ್ನೂ ನಿರಾಕರಿಸಿದ್ದಾರೆ ಎಂಬುದು ಆ ಭಾಗದ ಜನರ ಅಭಿಪ್ರಾಯವಾಗಿದೆ.
ಕಸ್ತೂರಿ ರಂಗನ್ ಅವರ ಸಮಿತಿಯಲ್ಲಿ ಕರ್ನಾಟಕದ ಪಶ್ಚಿಮ ಘಟ್ಟಗಳನ್ನು ಪ್ರತಿನಿಧಿಸುವ ಪ್ರತಿನಿಧಿಗಳು ಯಾರಿದ್ದರು? ಕಸ್ತೂರಿ ರಂಗನ್ ಕಾರ್ಯಪಡೆಯು ಸಣ್ಣ ರೈತರರು ಹಾಗೂ ಆದಿವಾಸಿಗಳ ಜೊತೆ ಮಾತುಕತೆಯನ್ನ್ನೇ ನಡೆಸದೆ ಈ ವರದಿಯನ್ನು ಸಿದ್ಧಪಡಿಸಿದ್ದಾರೆ ಎಂಬುದೂ ಕೂಡ ವಾಸ್ತವ ಸಂಗತಿಯಾಗಿದೆ.
ಈಗ ಸರ್ಕಾರದ ಮುಂದೆ ಇರುವ ಸಾಧ್ಯತೆಗಳು ಹೀಗಿವೆ. ಡಾ. ಕಸ್ತೂರಿ ರಂಗನ್ ಅವರ ವರದಿಯಲ್ಲಿ 20,668 ಚ.ಕಿಮೀ ಪ್ರದೇಶ ಗುರುತಿಸಿದೆ. ಅದರಲ್ಲಿನ ತಾಂತ್ರಿಕ ಲೋಪ ದೋಷಗಳನ್ನು ಸರಿಪಡಿಸಿದರೆ 19,252.16 ಚ. ಕಿಮೀ ಆಗುತ್ತದೆ. ರಾಜ್ಯದಲ್ಲಿ ಈಗಾಗಲೇ ರಾಷ್ಟ್ರೀಯ ಉದ್ಯಾನವನ, ವೈಲ್ಡ್ ಲೈಫ್ ಸ್ಯಾಂಕ್ಚುರಿ, ಮೀಸಲು ಅರಣ್ಯ ಮುಂತಾದವುಗಳ ಹೆಸರಿನಲ್ಲಿ 16,114.08 ಚ.ಕಿಮೀ ಪ್ರದೇಶವು ಪರಿಸರ ಸೂಕ್ಷ್ಮ ಪ್ರದೇಶವೇ ಆಗಿದೆ. ಹಾಗಾಗಿ 3,108.08 ಚ.ಕಿಮೀಗಳ ಕುರಿತು ತೀರ್ಮಾನಗಳನ್ನು ತೆಗೆದುಕೊಳ್ಳಬೇಕಾಗಿದೆ. ಇದನ್ನು ಅರಿತುಕೊಳ್ಳಲು ಗ್ರಾಮವಾರು ಪರಿಶೀಲನೆ ನಡೆಸಿ ಸರ್ವೇ ನಂಬರ್ವಾರು ನಕ್ಷೆಗಳನ್ನು ಸಿದ್ಧಪಡಿಸಿ ಕೇಂದ್ರ ಸರ್ಕಾರಕ್ಕೆ ಸಲ್ಲಿಸಬೇಕಾಗಿದೆ. ಏಕೆಂದರೆ ಪಶ್ಚಿಮ ಘಟ್ಟಗಳ ಜೊತೆಗೆ ಸಾವಿರಾರು ವರ್ಷಗಳಿಂದ ವಾಸಿಸಿಕೊಂಡು ಬಂದ ಜನರ ಬದುಕನ್ನೂ ರಕ್ಷಿಸಬೇಕಾಗಿರುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ.
ನಾವೆಲ್ಲರೂ ಏಕ ಕಾಲಕ್ಕೆ ಪರಿಸರವನ್ನು ಉಳಿಸುವ ಮೂಲಕ ಪಶ್ಚಿಮ ಘಟ್ಟಗಳಲ್ಲಿ ವಾಸಿಸುತ್ತಿರುವ ಜನರು ಹಾಗೂ ಭವಿಷ್ಯದ ಪೀಳಿಗೆಗಳ ಹಿತರಕ್ಷಣೆಯನ್ನೂ ಮಾಡಬೇಕಿದೆ. ಪಶ್ಚಿಮ ಘಟ್ಟಗಳು, ಪೂರ್ವ ಘಟ್ಟಗಳು, ಅರಾವಳಿ, ವಿಂಧ್ಯ ಮತ್ತು ಹಿಮಾಲಯ ಮುಂತಾದ ಪರ್ವತ ಶ್ರೇಣಿಗಳ ಉಳಿವು ನಮ್ಮ ಉಳಿವೂ ಆಗಿದೆ. ಅದರ ಜೊತೆಯಲ್ಲಿಯೇ ಅಲ್ಲಿ ತಲೆ ತಲೆಮಾರುಗಳಿಂದ ವಾಸಿಸುತ್ತಿರುವ ಜನರ ಬದುಕಿನ ರಕ್ಷಣೆಯೂ ಆಗಬೇಕಾಗಿದೆ. ಪರಿಸರ ಉಳಿದರೆ ಮಾತ್ರ ಅಲ್ಲಿನ ಜನರ ಬದುಕೂ ಉಳಿಯುತ್ತದೆ. ಈ ವಿಚಾರಗಳನ್ನು ಗಮನದಲ್ಲಿಟ್ಟುಕೊಂಡು ನಾವು ಮುಂದಕ್ಕೆ ಸಾಗಬೇಕಾಗಿದೆ. ಈ ಎಲ್ಲ ಹಿನ್ನೆಲೆಯಲ್ಲಿ ಸದನವೂ ಚರ್ಚೆ ನಡೆಸಿ ಸಲಹೆಗಳನ್ನು ನೀಡಿದಲ್ಲಿ ಮುಂದಿನ ನಿರ್ಣಯಗಳನ್ನು ಕೈಗೊಳ್ಳಲು ಅನುಕೂಲವಾಗುತ್ತದೆ. -
Dr. G Parameshwara
@DrParameshwara
Education has the power to transform not only an individual’s life, but society and the nation as a whole. Children from communities that were once deprived of education are today securing 98% and even 100% marks. This is proof that, when given opportunities, we are second to none.
The ideals of Bhagavan Buddha, Basaveshwara and Babasaheb Dr. B.R. Ambedkar are neither confined to one community nor limited to India. Their thoughts and principles, rooted in equality, humanity and social justice, serve as a guiding light for humanity as a whole.
A system that perpetuates inequality and treats people as inferior through social classification cannot build a just society. Dr. Ambedkar himself experienced humiliation and social discrimination in his life. Yet, instead of harbouring hatred towards anyone, he worked to uplift those who were rejected, oppressed and trapped by social barriers.
There was a time when education itself was denied to certain communities. People were subjected to severe punishment even for listening to Sanskrit, education remained far beyond their reach, and they were forbidden from pursuing it. Children from such backgrounds are today excelling academically, securing 98% and even 100% marks. The reason is opportunity. With the right opportunities and encouragement, they can achieve even greater heights. It is our responsibility as a society to identify and honour such talented students.
Change is impossible without education: Until people become educated, economic, social and educational transformation is not possible. Education gives an individual confidence, dignity and recognition in society.
On this occasion, I cited my own life and that of Dr. H.C. Mahadevappa as examples. Both of us were able to earn recognition in society through education. Therefore, if educated members of the community and officers serving in government each take responsibility for supporting at least one student and help shape their education and future, there can be no greater service.
For young people, quality education, employment and a successful future are more important than discussions around caste, religion or divisions. It is our collective responsibility to build a better future for the next generation. If we fall behind even during this period of transformation, future generations will not forgive us.
As Social Welfare Minister, Dr. H.C. Mahadevappa has implemented several initiatives, including the construction of hostels, scholarships for students pursuing higher education abroad, and assistance for pilot training. Along with these, the initiative to take the Preamble of the Constitution to schools and households is particularly significant.
Through the Constitution, the ideals of Babasaheb Dr. B.R. Ambedkar—equality, justice and fraternity—have been introduced to society. Even if this brings about a change in the thinking of a section of society, it would be a significant achievement.
We must remain united like brothers. We should share the opportunities available to us fairly and move forward together. In the modern world, divisions benefit no one.
Students from the community must study well and bring pride to their parents and society. Whether they become doctors, engineers or pursue any other profession, they must strive to succeed in life.
The Davanagere District Chalavadi Mahasabha has been doing commendable work over the past three years by identifying and encouraging talented students. Such merit felicitation programmes should be continued every year. We will always stand with you.
It is my responsibility to be the voice of oppressed communities: Since 1952, the State has witnessed several elections and many leaders have occupied high offices, including that of Chief Minister. I became Deputy Chief Minister in 2018. Our community had to wait that long to receive high-level political representation such as the post of Deputy Chief Minister.
We often speak about the need for oppressed communities to progress and about encouraging them. But why did it take so many years for a person from this community to become Deputy Chief Minister? We need to reflect on this. Oppressed communities must receive adequate opportunities in the State’s political and administrative systems.
Was there anyone more capable than Basavalingappa? Who was more intellectually accomplished than K.H. Ranganath? Which portfolio did Mallikarjun Kharge not handle? Were there any allegations against him? For whatever reason, I became Deputy Chief Minister. The Congress party has once again entrusted me with the responsibility of serving as Deputy Chief Minister.
I hold the responsible position of Deputy Chief Minister. I am in this position to raise my voice for the oppressed communities of this State, for those who have suffered, those who have been subjected to discrimination and those who have been neglected by society.
— Spoke after inaugurating the Merit Felicitation Programme organised today by the Davanagere District Chalavadi Mahasabha at the S.S. Mallikarjun Cultural Hall, Bapuji Engineering College, to honour meritorious students who secured the highest marks during the 2025-26 academic year. -
Dr. G Parameshwara
@DrParameshwara
ಶಿಕ್ಷಣವು ವ್ಯಕ್ತಿಯ ಜೀವನವನ್ನಷ್ಟೇ ಅಲ್ಲ, ಇಡೀ ಸಮಾಜ ಮತ್ತು ದೇಶವನ್ನೇ ಪರಿವರ್ತಿಸುವ ಶಕ್ತಿಯಾಗಿದೆ. ಹಿಂದೆ ಶಿಕ್ಷಣದಿಂದ ವಂಚಿತರಾಗಿದ್ದ ಸಮುದಾಯಗಳ ಮಕ್ಕಳು ಇಂದು ಶೇ.98, ಶೇ.100ರಷ್ಟು ಅಂಕ ಗಳಿಸುತ್ತಿರುವುದು ಅವಕಾಶ ದೊರೆತರೆ ನಾವು ಯಾರಿಗಿಂತಲೂ ಕಡಿಮೆ ಇಲ್ಲ ಎಂಬುದಕ್ಕೆ ಸಾಕ್ಷಿಯಾಗಿದೆ.
ಭಗವಾನ್ ಬುದ್ಧ, ಬಸವೇಶ್ವರರು ಹಾಗೂ ಬಾಬಾಸಾಹೇಬ್ ಡಾ. ಬಿ.ಆರ್. ಅಂಬೇಡ್ಕರ್ ಅವರ ಆದರ್ಶಗಳು ಒಂದು ಸಮುದಾಯಕ್ಕಾಗಲಿ, ಭಾರತಕ್ಕಾಗಲಿ ಸೀಮಿತವಾದವುಗಳಲ್ಲ. ಸಮಾನತೆ, ಮಾನವೀಯತೆ ಮತ್ತು ಸಾಮಾಜಿಕ ನ್ಯಾಯವನ್ನು ಪ್ರತಿಪಾದಿಸುವ ಈ ಚಿಂತನೆಗಳು ಇಡೀ ಮಾನವ ಸಮಾಜಕ್ಕೆ ದಾರಿದೀಪವಾಗಿವೆ.
ಅಸಮಾನತೆಯನ್ನು ಪ್ರತಿಪಾದಿಸುವ, ವರ್ಗೀಕರಣದ ಮೂಲಕ ಮನುಷ್ಯರನ್ನು ಕೀಳಾಗಿ ಕಾಣುವ ವ್ಯವಸ್ಥೆ ಉತ್ತಮ ಸಮಾಜವನ್ನು ನಿರ್ಮಿಸಲು ಸಾಧ್ಯವಿಲ್ಲ. ಡಾ. ಅಂಬೇಡ್ಕರ್ ಅವರು ತಮ್ಮ ಜೀವನದಲ್ಲೇ ಅವಮಾನ ಮತ್ತು ಸಾಮಾಜಿಕ ತಿರಸ್ಕಾರವನ್ನು ಅನುಭವಿಸಿದ್ದರು. ಆದರೆ ಅದರಿಂದ ಯಾರನ್ನೂ ದ್ವೇಷಿಸದೆ, ತಿರಸ್ಕಾರಕ್ಕೊಳಗಾದ ಹಾಗೂ ಸಂಕೋಲೆಯಲ್ಲಿ ಸಿಲುಕಿದ್ದ ಜನರನ್ನು ಸಾಮಾಜಿಕವಾಗಿ ಮೇಲಕ್ಕೆತ್ತುವ ಕೆಲಸವನ್ನು ಮಾಡಿದರು.
ಒಂದು ಕಾಲದಲ್ಲಿ ಕೆಲವು ಸಮುದಾಯಗಳಿಗೆ ಶಿಕ್ಷಣವೇ ನಿಷಿದ್ಧವಾಗಿತ್ತು. ಸಂಸ್ಕೃತ ಕೇಳಿದರೆ, ಅವರ ಕಿವಿಗೆ ಸೀಸ ಬಿಡುತ್ತಿದ್ದರು, ಶಿಕ್ಷಣ ಎಂಬುದು ಮೈಲಿಗಟ್ಟಲೆ ದೂರ ಇತ್ತು. ಶಿಕ್ಷಣ ಕಲಿಯಬಾರದು ಎಂದು ಕಟ್ಟಪ್ಪಣೆ ಮಾಡಲಾಗಿತ್ತು. ಅಂತಹ ಹಿನ್ನೆಲೆಯಿಂದ ಬಂದ ಮಕ್ಕಳು ಇಂದು ಅತಿ ಹೆಚ್ಚು ಅಂಕ ಪಡೆದು ಸಾಧನೆ ಮಾಡುತ್ತಿದ್ದಾರೆ. ಶೇ. 98, ಶೇ 100ರಷ್ಟು ಅಂಕ ಪಡೆಯುತ್ತಿದ್ದಾರೆ. ಇದಕ್ಕೆ ಕಾರಣ ಅವಕಾಶ. ಉತ್ತಮ ಅವಕಾಶ ಮತ್ತು ಪ್ರೋತ್ಸಾಹ ದೊರೆತರೆ ಇನ್ನಷ್ಟು ಸಾಧನೆ ಮಾಡಲು ಸಾಧ್ಯ. ಅಂತಹ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ ಪುರಸ್ಕರಿಸುವುದು ಸಮಾಜದ ಜವಾಬ್ದಾರಿಯಾಗಿದೆ.
ಶಿಕ್ಷಣವಿಲ್ಲದೆ ಬದಲಾವಣೆ ಸಾಧ್ಯವಿಲ್ಲ : ನೀವು ವಿದ್ಯಾವಂತರಾಗುವವರೆಗೆ ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕ ಬದಲಾವಣೆ ಸಾಧ್ಯವಿಲ್ಲ. ಶಿಕ್ಷಣವೇ ವ್ಯಕ್ತಿಗೆ ಆತ್ಮವಿಶ್ವಾಸ, ಗೌರವ ಮತ್ತು ಸಮಾಜದಲ್ಲಿ ಸ್ಥಾನಮಾನ ನೀಡುತ್ತದೆ.
ನನ್ನ ಹಾಗೂ ಡಾ. ಹೆಚ್.ಸಿ. ಮಹದೇವಪ್ಪ ಅವರ ಜೀವನವನ್ನೇ ಈ ವೇಳೆ ಉದಾಹರಿಸಿದೆ. ನಮ್ಮಿಬ್ಬರಿಗೂ ಶಿಕ್ಷಣದ ಮೂಲಕವೇ ಸಮಾಜದಲ್ಲಿ ಗುರುತಿಸಿಕೊಳ್ಳಲು ಸಾಧ್ಯವಾಯಿತು. ಆದ್ದರಿಂದ ಸಮುದಾಯದಲ್ಲಿ ವಿದ್ಯಾವಂತರಾಗಿರುವವರು ಹಾಗೂ ಸರ್ಕಾರಿ ಸೇವೆಯಲ್ಲಿ ಇರುವ ಅಧಿಕಾರಿಗಳು ತಲಾ ಒಬ್ಬ ವಿದ್ಯಾರ್ಥಿಯನ್ನು ದತ್ತು ಪಡೆದು ಅವರ ಶಿಕ್ಷಣ ಮತ್ತು ಭವಿಷ್ಯ ರೂಪಿಸಲು ನೆರವಾದರೆ ಅದಕ್ಕಿಂತ ದೊಡ್ಡ ಸೇವೆ ಇನ್ನೊಂದಿಲ್ಲ.
ಯುವಜನತೆಗೆ ಜಾತಿ, ಧರ್ಮ ಅಥವಾ ವಿಭಜನೆಯ ಚರ್ಚೆಗಳಿಗಿಂತ ಗುಣಮಟ್ಟದ ಶಿಕ್ಷಣ, ಉದ್ಯೋಗ ಮತ್ತು ಯಶಸ್ವಿ ಜೀವನ ಮುಖ್ಯವಾಗಿದೆ. ಹೊಸ ಪೀಳಿಗೆಗೆ ಭವಿಷ್ಯ ಕಟ್ಟಿಕೊಡುವುದು ನಮ್ಮೆಲ್ಲರ ಹೊಣೆಗಾರಿಕೆಯಾಗಿದೆ. ಬದಲಾವಣೆಯ ಈ ಕಾಲಘಟ್ಟದಲ್ಲೂ ನಾವು ಹಿಂದೆ ಉಳಿದರೆ ಮುಂದಿನ ಪೀಳಿಗೆ ನಮ್ಮನ್ನು ಕ್ಷಮಿಸುವುದಿಲ್ಲ.
ಸಮಾಜ ಕಲ್ಯಾಣ ಸಚಿವರಾಗಿ ಡಾ. ಹೆಚ್.ಸಿ. ಮಹದೇವಪ್ಪ ಅವರು ಹಾಸ್ಟೆಲ್ಗಳ ನಿರ್ಮಾಣ, ವಿದೇಶದಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ, ಪೈಲಟ್ ತರಬೇತಿಗೆ ನೆರವು ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಜಾರಿಗೊಳಿಸಿದ್ದಾರೆ. ಇವೆಲ್ಲದರ ಜೊತೆಗೆ ಸಂವಿಧಾನದ ಪೂರ್ವಪೀಠಿಕೆಯನ್ನು ಶಾಲೆಗಳು ಹಾಗೂ ಮನೆಮನೆಗೆ ತಲುಪಿಸುವ ಕಾರ್ಯ ಅತ್ಯಂತ ಮಹತ್ವದ್ದು.
ಸಂವಿಧಾನದ ಮೂಲಕ ಬಾಬಾಸಾಹೇಬ್ ಅಂಬೇಡ್ಕರ್ ಅವರ ಸಮಾನತೆ, ನ್ಯಾಯ ಮತ್ತು ಸಹೋದರತ್ವದ ಆಶಯಗಳನ್ನು ಸಮಾಜಕ್ಕೆ ಪರಿಚಯಿಸುವ ಕೆಲಸ ನಡೆದಿದೆ. ಇದರಿಂದ ಸಮಾಜದ ಒಂದು ಭಾಗದಲ್ಲಾದರೂ ಚಿಂತನೆಯ ಬದಲಾವಣೆ ಉಂಟಾದರೆ ಅದೇ ದೊಡ್ಡ ಸಾಧನೆ.
ನಾವೆಲ್ಲ ಅಣ್ಣತಮ್ಮಂದಿರಂತೆ ಒಗ್ಗಟ್ಟಿನಿಂದ ಇರಬೇಕು. ನಮಗೆ ದೊರೆಯುವ ಅವಕಾಶಗಳನ್ನು ನ್ಯಾಯಯುತವಾಗಿ ಹಂಚಿಕೊಂಡು ಮುಂದೆ ಸಾಗಬೇಕು. ಆಧುನಿಕ ಜಗತ್ತಿನಲ್ಲಿ ವಿಭಜನೆಯಿಂದ ಯಾರಿಗೂ ಲಾಭವಿಲ್ಲ.
ಸಮುದಾಯದ ವಿದ್ಯಾರ್ಥಿಗಳು ಚೆನ್ನಾಗಿ ಓದಿ, ಹೆತ್ತವರಿಗೆ ಮತ್ತು ಸಮಾಜಕ್ಕೆ ಕೀರ್ತಿ ತರಬೇಕು. ವೈದ್ಯರು, ಇಂಜಿನಿಯರ್ಗಳು ಅಥವಾ ಬೇರೆ ಯಾವ ಕ್ಷೇತ್ರದಲ್ಲೇ ಮುಂದುವರಿದರೂ ಜೀವನದಲ್ಲಿ ಯಶಸ್ಸು ಸಾಧಿಸಬೇಕು.
ದಾವಣಗೆರೆ ಜಿಲ್ಲಾ ಛಲವಾದಿ ಮಹಾಸಭಾ ಕಳೆದ ಮೂರು ವರ್ಷಗಳಿಂದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಉತ್ತಮ ಕಾರ್ಯ ಮಾಡುತ್ತಿದೆ. ಇಂತಹ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಪ್ರತಿವರ್ಷ ಮುಂದುವರಿಸಬೇಕು. ನಿಮ್ಮೊಂದಿಗೆ ನಾವು ಸದಾ ಇರುತ್ತೇವೆ.
ಶೋಷಿತ ಸಮುದಾಯಗಳ ಪರ ಧ್ವನಿ ಎತ್ತುವುದು ನನ್ನ ಜವಾಬ್ದಾರಿ : 1952ರಿಂದ ರಾಜ್ಯದಲ್ಲಿ ಹಲವು ಚುನಾವಣೆಗಳು ನಡೆದಿವೆ, ಅನೇಕ ನಾಯಕರು ಮುಖ್ಯಮಂತ್ರಿ ಸೇರಿದಂತೆ ಉನ್ನತ ಹುದ್ದೆಗಳನ್ನು ಅಲಂಕರಿಸಿದ್ದಾರೆ. ನಾನು ಉಪ ಮುಖ್ಯಮಂತ್ರಿಯಾಗಿದ್ದು 2018ರಲ್ಲಿ. ನಮ್ಮ ಸಮುದಾಯಕ್ಕೆ ಉಪಮುಖ್ಯಮಂತ್ರಿ ಹುದ್ದೆಯಂತಹ ಉನ್ನತ ರಾಜಕೀಯ ಪ್ರಾತಿನಿಧ್ಯ ದೊರಕಲು ಅಷ್ಟು ವರ್ಷ ಕಾಯಬೇಕಾಯಿತು.
ಸಮಾಜದ ವ್ಯವಸ್ಥೆ ಹೇಗಿದೆ ಎಂದರೆ, ಶೋಷಿತ ಸಮುದಾಯ ಮುಂದೆ ಬರಬೇಕು. ಆ ಸಮುದಾಯಕ್ಕೆ ಉತ್ತೇಜನ ಕೊಡಬೇಕು ಎಂದು ಭಾಷಣಗಳನ್ನು ಮಾಡುತ್ತೇವೆ. ಆದರೆ, ಆ ಸಮುದಾಯಕ್ಕೆ ಡಿಸಿಎಂ ಕೊಡೋದಿಕ್ಕೆ ಇಷ್ಟು ವರ್ಷ ಆಯ್ತು? ಯೋಚನೆ ಮಾಡಿ. ರಾಜ್ಯದ ರಾಜಕೀಯ ಮತ್ತು ಆಡಳಿತ ವ್ಯವಸ್ಥೆಯಲ್ಲಿ ಶೋಷಿತ ಸಮುದಾಯಗಳಿಗೆ ಸಮರ್ಪಕ ಅವಕಾಶ ದೊರೆಯುವ ಅಗತ್ಯವಿದೆ.
ಬಸವಲಿಂಗಪ್ಪ ಅವರಿಗಿಂತ ಸಾಮರ್ಥ್ಯ ಇರುವವರಿದ್ದಾರ?, ಕೆ.ಹೆಚ್.ರಂಗನಾಥ್ ಅವರಿಗಿಂತ ಬುದ್ಧಿವಂತರು ಯಾರು ಇದ್ದಾರೆ?, ಮಲ್ಲಿಕಾರ್ಜುನ ಖರ್ಗೆ ಅವರು ಯಾವ ಖಾತೆಯನ್ನು ನಿಭಾಯಿಸಲಿಲ್ಲ ಹೇಳಿ. ಅವರ ಮೇಲೆ ಯಾವುದಾದರು ಆಪಾದನೆ ಇತ್ತೇ? ನನಗೆ ಯಾವುದೋ ಕಾರಣಕ್ಕೆ ಡಿಸಿಎಂ ಆಯ್ತು. ಕಾಂಗ್ರೆಸ್ ಪಕ್ಷ ನನ್ನನ್ನು ಮತ್ತೇ ಉಪಮುಖ್ಯಮಂತ್ರಿಯನ್ನಾಗಿ ಮಾಡಿದೆ.
ನಾನು ಉಪಮುಖ್ಯಮಂತ್ರಿಯಾಗಿ ಜವಾಬ್ದಾರಿಯುತ ಸ್ಥಾನದಲ್ಲಿದ್ದೇನೆ. ಈ ರಾಜ್ಯದ ಶೋಷಿತ ಸಮುದಾಯಗಳು, ನೊಂದವರು, ತುಳಿತಕ್ಕೊಳಗಾದವರು ಹಾಗೂ ಸಮಾಜದಲ್ಲಿ ನಿರ್ಲಕ್ಷ್ಯಕ್ಕೊಳಗಾದವರ ಪರವಾಗಿ ಧ್ವನಿ ಎತ್ತಲು ನಾನು ಈ ಸ್ಥಾನದಲ್ಲಿದ್ದೇನೆ.
- ಇಂದು ದಾವಣಗೆರೆ ಜಿಲ್ಲಾ ಛಲವಾದಿ ಮಹಾಸಭಾ ವತಿಯಿಂದ ಬಾಪೂಜಿ ಇಂಜಿನಿಯರಿಂಗ್ ಕಾಲೇಜಿನ ಎಸ್.ಎಸ್. ಮಲ್ಲಿಕಾರ್ಜುನ ಸಾಂಸ್ಕೃತಿಕ ಭವನದಲ್ಲಿ ಆಯೋಜಿಸಿದ್ದ 2025-26ನೇ ಸಾಲಿನಲ್ಲಿ ಅತಿಹೆಚ್ಚು ಅಂಕ ಗಳಿಸಿದ ಪ್ರತಿಭಾವಂತ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಬಳಿಕ ಮಾತನಾಡಿದೆ. -
Dr. G Parameshwara
@DrParameshwara
ಇಂದು ದಾವಣಗೆರೆ ಜಿಲ್ಲಾ ಛಲವಾದಿ ಮಹಾಸಭಾ ವತಿಯಿಂದ ಬಾಪೂಜಿ ಇಂಜಿನಿಯರಿಂಗ್ ಕಾಲೇಜಿನ ಎಸ್.ಎಸ್. ಮಲ್ಲಿಕಾರ್ಜುನ ಸಾಂಸ್ಕೃತಿಕ ಭವನದಲ್ಲಿ ಆಯೋಜಿಸಿದ್ದ 2025-26ನೇ ಸಾಲಿನಲ್ಲಿ ಅತಿಹೆಚ್ಚು ಅಂಕ ಗಳಿಸಿದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಉದ್ಘಾಟಿಸಿದೆ.
ವಿದ್ಯಾರ್ಥಿಗಳ ಸಾಧನೆಯನ್ನು ಗುರುತಿಸಿ ಪ್ರೋತ್ಸಾಹಿಸುವ ಇಂತಹ ಕಾರ್ಯಕ್ರಮಗಳು ಅವರ ಮುಂದಿನ ಶೈಕ್ಷಣಿಕ ಪಯಣಕ್ಕೆ ಮತ್ತಷ್ಟು ಆತ್ಮವಿಶ್ವಾಸ ತುಂಬುತ್ತವೆ. ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಅಭಿನಂದಿಸಿ, ಶಿಕ್ಷಣದ ಮೂಲಕ ಸಮಾಜದ ಪ್ರಗತಿಗೆ ಕೊಡುಗೆ ನೀಡುವ ಪ್ರತಿಭಾವಂತ ಯುವಜನತೆ ಇನ್ನಷ್ಟು ಎತ್ತರಕ್ಕೆ ಬೆಳೆಯಲಿ ಎಂದು ಹಾರೈಸಿದೆ.
ಮೈಸೂರಿನ ಉರಿಲಿಂಗ ಪೆದ್ದಿ ಮಠದ ಶ್ರೀ ಜ್ಞಾನಪ್ರಕಾಶ ಸ್ವಾಮೀಜಿ, ದಾವಣಗೆರೆ ವಿರಕ್ತಮಠದ ಡಾ. ಬಸವಪ್ರಭು ಮಹಾಸ್ವಾಮೀಜಿ ಅವರು ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ್ದರು.
ಸಚಿವರಾದ ಕೆ.ಎಸ್.ಬಸವಂತಪ್ಪ, ಮಾಜಿ ಸಚಿವರು ಹಾಗೂ ಶಾಸಕರಾದ ಡಾ. ಹೆಚ್.ಸಿ.ಮಹದೇವಪ್ಪ, ಸಂಸದರಾದ ಡಾ.ಪ್ರಭಾ ಮಲ್ಲಿಕಾರ್ಜುನ, ಶಾಸಕರಾದ ಪ್ರಸಾದ್ ಅಬ್ಬಯ್ಯ, ಬಿ.ಪಿ.ಹರೀಶ್, ಸಮರ್ಥ ಶಾಮನೂರು, ವಿಧಾನ ಪರಿಷತ್ ಸದಸ್ಯರಾದ ಎಫ್.ಹೆಚ್.ಜಕ್ಕಪ್ಪನವರ್, ಡಾ. ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಸಿ.ನರೇಂದ್ರ, ದಾವಣಗೆರೆ ಜಿಲ್ಲಾ ಛಲವಾದಿ ಮಹಾಸಭಾ ಅಧ್ಯಕ್ಷರಾದ ಎನ್.ರುದ್ರಮುನಿ ಮುಂತಾದವರು ಇದ್ದರು.
Today, I inaugurated the merit felicitation programme organised by the Davanagere District Chalavadi Mahasabha at the S.S. Mallikarjun Cultural Hall, Bapuji Engineering College, to honour meritorious students who secured the highest marks during the 2025-26 academic year.
Such programmes that recognise and encourage students’ achievements help instil greater confidence in them as they continue their academic journey. I congratulated the high-achieving students and wished them greater success in the future, contributing to the progress of society through education.
Sri Jnanaprakasha Swamiji of Urilinga Peddi Mutt, Mysuru, and Dr. Basavaprabhu Mahaswamiji of Virakta Mutt, Davanagere, graced the programme with their divine presence.
Minister K.S. Basavanthappa, former Minister and MLA Dr. H.C. Mahadevappa, MP Dr. Prabha Mallikarjun, MLAs Prasad Abbayya, B.P. Harish and Samarth Shamanur, MLC F.H. Jakkappanavar, Dr. B.R. Ambedkar Development Corporation Chairman C. Narendra, Davanagere District Chalavadi Mahasabha President N. Rudramuni and several others were present. -
Dr. G Parameshwara
@DrParameshwara
Drought-affected taluks in the State will not be declared all at once. Taluks that meet the prescribed criteria will be assessed in phases and declared drought-affected after ground-truthing.
In the first phase, 101 taluks were declared drought-affected, following which another 24 taluks were added. Another 52 taluks will be declared in the next three to four days. In the subsequent phase, ground-truthing will be carried out in around 50 more taluks and further action will be taken based on the assessment.
Based on the data currently available, more than 200 taluks across the State are likely to be included in the drought-affected list. The situation will continue to be reviewed until the end of the monsoon season. Taluks such as Jagaluru, which have not yet been included, may also be declared drought-affected in the coming phases if they meet the prescribed criteria. Therefore, there is no need for anyone to be anxious if their taluk has not yet been included in the list.
Discussion on drought during Special Session: A three-day Special Session has been convened to discuss the drought situation and the Kasturirangan Report. The losses caused by drought, assistance to farmers and the relief to be sought from the Union Government will be discussed in the House, and the views of the Opposition will also be taken into consideration.
Discussions will also be held on submitting a request to the Union Government for drought relief and waiver of farmers’ loans. The intention is to take the Opposition into confidence and place the State’s demands before the Union Government.
Estimated loss of ₹18,000 crore in 101 taluks: An estimated loss of around ₹18,000 crore has been reported in the 101 taluks declared drought-affected in the first phase, and around ₹3,500 crore has been sought from the Union Government as relief. This was part of the first memorandum. Second and third memoranda will also be submitted incorporating the losses in taluks declared drought-affected in the subsequent phases.
Last year, the State had suffered losses estimated at around ₹39,000 crore and had sought ₹18,000 crore in relief. However, only around ₹3,400 crore was received.
Considering the severe distress faced by farmers, the Union Government should take a decision to support farmers across the country. Former Prime Minister Dr. Manmohan Singh had earlier taken a decision to waive farmers’ loans amounting to ₹72,000 crore across the country. This time too, we will urge the Centre to waive farmers’ loans.
Centre adopting a step-motherly attitude: The State is not receiving its due share, and funds under various schemes are not being released adequately by the Union Government. Karnataka is yet to receive around ₹17,000 crore under the Jal Jeevan Mission. It is clearly evident that the Union Government is adopting a step-motherly attitude towards the State.
— Spoke to media representatives in Davanagere today. -
Dr. G Parameshwara
@DrParameshwara
ರಾಜ್ಯದಲ್ಲಿ ಬರಪೀಡಿತ ತಾಲೂಕುಗಳನ್ನು ಒಂದೇ ಹಂತದಲ್ಲಿ ಘೋಷಿಸುವುದಿಲ್ಲ. ನಿಗದಿತ ಮಾನದಂಡಗಳಿಗೆ ಅರ್ಹವಾಗುವ ತಾಲೂಕುಗಳನ್ನು ಹಂತ ಹಂತವಾಗಿ ಪರಿಶೀಲಿಸಿ, ಗ್ರೌಂಡ್ ಟ್ರೂಥಿಂಗ್ ನಡೆಸಿದ ಬಳಿಕ ಘೋಷಿಸಲಾಗುವುದು.
ಮೊದಲ ಹಂತದಲ್ಲಿ 101 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿದ್ದು, ಬಳಿಕ 24 ತಾಲೂಕುಗಳನ್ನು ಸೇರಿಸಲಾಗಿದೆ. ಇನ್ನೂ 52 ತಾಲೂಕುಗಳನ್ನು ಮುಂದಿನ ಮೂರು-ನಾಲ್ಕು ದಿನಗಳಲ್ಲಿ ಘೋಷಿಸುತ್ತೇವೆ. ಮುಂದಿನ ಹಂತದಲ್ಲಿ ಸುಮಾರು 50 ತಾಲೂಕುಗಳಲ್ಲಿ ಗ್ರೌಂಡ್ ಟ್ರೂಥಿಂಗ್ ನಡೆಸಿ ಪರಿಸ್ಥಿತಿಯನ್ನು ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು.
ಪ್ರಸ್ತುತ ಲಭ್ಯವಿರುವ ಮಾಹಿತಿಯ ಆಧಾರದಲ್ಲಿ ರಾಜ್ಯದ 200ಕ್ಕೂ ಹೆಚ್ಚು ತಾಲೂಕುಗಳು ಬರಪೀಡಿತ ಪಟ್ಟಿಗೆ ಸೇರುವ ಸಾಧ್ಯತೆಯಿದೆ. ಮುಂಗಾರು ಅವಧಿ ಪೂರ್ಣಗೊಳ್ಳುವವರೆಗೂ ಪರಿಸ್ಥಿತಿಯನ್ನು ನಿರಂತರವಾಗಿ ಪರಿಶೀಲಿಸಲಾಗುವುದು. ಜಗಳೂರು ಸೇರಿದಂತೆ ಈಗ ಪಟ್ಟಿಯಲ್ಲಿ ಇಲ್ಲದ ತಾಲೂಕುಗಳೂ ಮುಂದಿನ ಹಂತಗಳಲ್ಲಿ ಅರ್ಹತೆ ಪಡೆದಲ್ಲಿ ಘೋಷಣೆಯಾಗಲಿವೆ. ಹೀಗಾಗಿ ತಮ್ಮ ತಾಲೂಕು ಇನ್ನೂ ಪಟ್ಟಿಗೆ ಸೇರಿಲ್ಲ ಎಂಬ ಆತಂಕ ಯಾರಿಗೂ ಬೇಡ.
*ಬರ ಕುರಿತು ವಿಶೇಷ ಅಧಿವೇಶನದಲ್ಲಿ ಚರ್ಚೆ : ಬರ ಪರಿಸ್ಥಿತಿ ಹಾಗೂ ಕಸ್ತೂರಿ ರಂಗನ್ ವರದಿ ಕುರಿತು ಚರ್ಚಿಸಲು ಮೂರು ದಿನಗಳ ವಿಶೇಷ ಅಧಿವೇಶನವನ್ನು ಕರೆಯಲಾಗಿದೆ. ಬರದಿಂದ ಉಂಟಾಗಿರುವ ನಷ್ಟ, ರೈತರಿಗೆ ನೆರವು ಹಾಗೂ ಕೇಂದ್ರ ಸರ್ಕಾರದಿಂದ ದೊರೆಯಬೇಕಾದ ಪರಿಹಾರದ ಕುರಿತು ಸದನದಲ್ಲಿ ವಿಪಕ್ಷಗಳ ಅಭಿಪ್ರಾಯ ಪಡೆಯಲಾಗುವುದು.
ಬರ ಪರಿಹಾರ ಮತ್ತು ರೈತರ ಸಾಲಮನ್ನಾ ವಿಚಾರವಾಗಿ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸುವ ಕುರಿತು ಚರ್ಚಿಸಲಾಗುವುದು. ವಿರೋಧ ಪಕ್ಷಗಳನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಕೇಂದ್ರ ಸರ್ಕಾರದ ಮುಂದೆ ರಾಜ್ಯದ ಬೇಡಿಕೆಗಳನ್ನು ಮಂಡಿಸುವ ಉದ್ದೇಶವಿದೆ.
*101 ತಾಲೂಕುಗಳಲ್ಲಿ ₹18,000 ಕೋಟಿ ನಷ್ಟದ ಅಂದಾಜು : ಮೊದಲ ಹಂತದಲ್ಲಿ ಘೋಷಿಸಲಾದ 101 ತಾಲೂಕುಗಳಲ್ಲಿ ಸುಮಾರು ₹18,000 ಕೋಟಿ ನಷ್ಟ ಸಂಭವಿಸಿರುವುದಾಗಿ ಅಂದಾಜಿಸಲಾಗಿದ್ದು, ಕೇಂದ್ರ ಸರ್ಕಾರದಿಂದ ಸುಮಾರು ₹3,500 ಕೋಟಿ ಪರಿಹಾರ ಕೋರಲಾಗಿದೆ. ಇದು ಮೊದಲ ಮೆಮೊರಾಂಡಂ ಆಗಿದ್ದು, ಮುಂದಿನ ಹಂತಗಳಲ್ಲಿ ಘೋಷಣೆಯಾಗುವ ತಾಲೂಕುಗಳ ನಷ್ಟದ ವಿವರಗಳನ್ನು ಒಳಗೊಂಡ ಎರಡನೇ ಹಾಗೂ ಮೂರನೇ ಮೆಮೊರಾಂಡಂಗಳನ್ನು ಸಹ ಸಲ್ಲಿಸಲಾಗುವುದು.
ಕಳೆದ ವರ್ಷ ರಾಜ್ಯದಲ್ಲಿ ಸುಮಾರು ₹39,000 ಕೋಟಿ ನಷ್ಟವಾಗಿದ್ದು, ₹18,000 ಕೋಟಿ ಪರಿಹಾರ ಕೋರಲಾಗಿತ್ತು. ಆದರೆ ಸುಮಾರು ₹3,400 ಕೋಟಿ ಮಾತ್ರ ದೊರೆತಿತ್ತು.
ರೈತರು ತೀವ್ರ ಸಂಕಷ್ಟದಲ್ಲಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ದೇಶದ ರೈತರ ನೆರವಿಗೆ ಬರುವಂತಹ ನಿರ್ಧಾರ ಕೈಗೊಳ್ಳಬೇಕು. ಹಿಂದೆ ಡಾ. ಮನಮೋಹನ್ ಸಿಂಗ್ ಅವರು ದೇಶದ ರೈತರ 72 ಸಾವಿರ ಕೋಟಿ ರೂಪಾಯಿ ಸಾಲವನ್ನು ಮನ್ನಾ ಮಾಡುವ ತೀರ್ಮಾನ ಕೈಗೊಂಡಿದ್ದರು. ಈ ಬಾರಿಯೂ ರೈತರ ಸಾಲಮನ್ನಾ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲಾಗುವುದು.
*ಕೇಂದ್ರದಿಂದ ಮಲತಾಯಿ ಧೋರಣೆ : ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಬರಬೇಕಾದ ಪಾಲು ಹಾಗೂ ವಿವಿಧ ಯೋಜನೆಗಳ ಅನುದಾನಗಳು ಸಮರ್ಪಕವಾಗಿ ಬಿಡುಗಡೆಯಾಗುತ್ತಿಲ್ಲ. ಜಲಜೀವನ್ ಮಿಷನ್ ಯೋಜನೆಗೆ ಇನ್ನೂ ₹17 ಸಾವಿರ ಕೋಟಿ ಬರಬೇಕು. ಕೇಂದ್ರ ಸರ್ಕಾರ ಮಲತಾಯಿ ಧೋರಣೆ ತೋರುತ್ತಿದೆ ಎಂಬುದು ಸ್ಪಷ್ಟವಾಗಿ ಕಾಣುತ್ತಿದೆ.
- ಇಂದು ದಾವಣಗೆರೆಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದೆ. -
Dr. G Parameshwara
@DrParameshwara
ಇಂದು ದಾವಣಗೆರೆ ಜಿಲ್ಲಾ ಪ್ರವಾಸದ ವೇಳೆ ಕಾಂಗ್ರೆಸ್ನ ಹಿರಿಯ ನಾಯಕರು ಹಾಗೂ ಅಖಿಲ ಭಾರತ ವೀರಶೈವ-ಲಿಂಗಾಯತ ಮಹಾಸಭಾ ರಾಷ್ಟ್ರೀಯ ಅಧ್ಯಕ್ಷರಾಗಿದ್ದ ದಿ. ಶಾಮನೂರು ಶಿವಶಂಕರಪ್ಪ ಅವರ ನಿವಾಸಕ್ಕೆ ಸೌಹಾರ್ದಯುತವಾಗಿ ಭೇಟಿ ನೀಡಿ, ಅವರ ಕುಟುಂಬದವರೊಂದಿಗೆ ಮಾತುಕತೆ ನಡೆಸಿದೆ.
ಈ ಸಂದರ್ಭದಲ್ಲಿ ಸಂಸದರಾದ ಡಾ. ಪ್ರಭಾ ಮಲ್ಲಿಕಾರ್ಜುನ ಹಾಗೂ ಶಾಸಕರಾದ ಸಮರ್ಥ ಶಾಮನೂರು ಅವರು, ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕನ್ನು ಬರಪೀಡಿತ ತಾಲೂಕುಗಳ ಪಟ್ಟಿಗೆ ಸೇರ್ಪಡೆಗೊಳಿಸುವಂತೆ ಮನವಿ ಸಲ್ಲಿಸಿದರು. ಸಚಿವರಾದ ಕೆ.ಎಸ್. ಬಸವಂತಪ್ಪ, ಜಿಲ್ಲಾಧಿಕಾರಿಗಳಾದ ಡಾ. ಜಿ.ಎಂ. ಗಂಗಾಧರಸ್ವಾಮಿ ಹಾಗೂ ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು.
During my visit to Davanagere district today, I paid a cordial visit to the residence of late Shamanur Shivashankarappa, senior Congress leader and former National President of the Akhila Bharatha Veerashaiva-Lingayat Mahasabha, and interacted with his family members.
On the occasion, MP Dr. Prabha Mallikarjun and MLA Samarth Shamanur submitted a representation seeking the inclusion of Jagaluru taluk in Davanagere district in the list of drought-affected taluks. Minister K.S. Basavanthappa, Deputy Commissioner Dr. G.M. Gangadharaswamy and local leaders were also present. -
Dr. G Parameshwara
@DrParameshwara
ಇಂದು ದಾವಣಗೆರೆ ಜಿಲ್ಲಾ ಪ್ರವಾಸದ ವೇಳೆ ಸರ್ಕಿಟ್ ಹೌಸ್ನಲ್ಲಿ ಪೊಲೀಸ್ ಪಡೆಯಿಂದ ಗೌರವ ರಕ್ಷೆ ಸ್ವೀಕರಿಸಿದೆ. ಬಳಿಕ ಭಾರತರತ್ನ, ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಪುತ್ಥಳಿಗೆ ಪುಷ್ಪಾರ್ಚನೆ ಸಲ್ಲಿಸಿ ಗೌರವ ನಮನ ಸಲ್ಲಿಸಿದೆ.
ಈ ಸಂದರ್ಭದಲ್ಲಿ ಸಚಿವರಾದ ಕೆ.ಎಸ್. ಬಸವಂತಪ್ಪ, ಶಾಸಕರಾದ ಸಮರ್ಥ ಶಾಮನೂರು, ಜಿಲ್ಲಾಧಿಕಾರಿಗಳಾದ ಡಾ. ಜಿ.ಎಂ. ಗಂಗಾಧರಸ್ವಾಮಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಡಾ. ಹೆಚ್.ಟಿ. ಶೇಖರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
During my visit to Davanagere district today, I received the Guard of Honour from the police personnel at the Circuit House. Later, I paid floral tributes to Bharat Ratna and the architect of the Constitution, Dr. B.R. Ambedkar.
Minister K.S. Basavanthappa, MLA Samarth Shamanur, Deputy Commissioner Dr. G.M. Gangadharaswamy, Superintendent of Police Dr. H.T. Shekhar and several others were present on the occasion. -
Dr. G Parameshwara
@DrParameshwara
ಶನಿವಾರ ತುಮಕೂರು ಜಿಲ್ಲಾಡಳಿತ ಹಾಗೂ ಪ್ರಜಾಸೇವಾ ಇಲಾಖೆಯ ವತಿಯಿಂದ ಕುಣಿಗಲ್ ತಾಲ್ಲೂಕಿನ ಹುಲಿಯೂರುದುರ್ಗದ ಎಸ್ಎಲ್ವಿ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ಪ್ರಜಾಸೇವಾ ಆಂದೋಲನ ಸಭೆಗೆ ಚಾಲನೆ ನೀಡಿ, ಸಾರ್ವಜನಿಕರಿಂದ ಅಹವಾಲುಗಳನ್ನು ಸ್ವೀಕರಿಸಿ ಆ ಬಳಿಕ ಮಾತನಾಡಿದೆ.
ಈ ಕುರಿತಾದ ಪತ್ರಿಕಾ ವರದಿಗಳು ಹೀಗಿವೆ.. -
Dr. G Parameshwara
@DrParameshwara
ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನಲ್ಲಿ ಕ್ರೀಡಾಂಗಣ ಸೇರಿದಂತೆ ಹಲವು ಅಭಿವೃದ್ಧಿ ಕಾಮಗಾರಿಗಳು ಪ್ರಗತಿಯಲ್ಲಿವೆ. ಇದರೊಂದಿಗೆ ಯುವಜನರಿಗೆ ಗುಣಮಟ್ಟದ ಉನ್ನತ ಶಿಕ್ಷಣದ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಇಂಜಿನಿಯರಿಂಗ್ ಕಾಲೇಜು ಕೂಡ ಕುಣಿಗಲ್ಗೆ ಮಂಜೂರಾಗಿದೆ.
ಮುಂದಿನ ವರ್ಷದಿಂದ ಇಂಜಿನಿಯರಿಂಗ್ ಕಾಲೇಜು ಆರಂಭವಾಗಲಿದ್ದು, ಕುಣಿಗಲ್ ಭಾಗದ ವಿದ್ಯಾರ್ಥಿಗಳಿಗೆ ಸ್ಥಳೀಯವಾಗಿಯೇ ತಾಂತ್ರಿಕ ಶಿಕ್ಷಣ ಪಡೆಯುವ ಅವಕಾಶ ದೊರೆಯಲಿದೆ.
ಕ್ರೀಡೆ, ಶಿಕ್ಷಣ ಹಾಗೂ ಮೂಲಸೌಕರ್ಯಕ್ಕೆ ಆದ್ಯತೆ ನೀಡುವ ಮೂಲಕ ಕುಣಿಗಲ್ನ ಸಮಗ್ರ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದೆ.
Several development works, including a stadium, are progressing in Kunigal taluk of Tumakuru district. Alongside this, an Engineering College has been sanctioned for Kunigal to expand access to quality higher education for young people.
The college is set to begin from next year, enabling students from the region to pursue technical education closer to home.
By prioritising sports, education and infrastructure, our Government is committed to the comprehensive development of Kunigal. -
Dr. G Parameshwara
@DrParameshwara
Our Government is taking continuous measures to ensure essential support during the drought, including drinking water for people and fodder for livestock.
₹1 crore has been released to each Assembly constituency, while districts have received ₹3–₹4 crore. With drinking water needs increasing, around ₹15 crore has been kept with Deputy Commissioners for immediate use in areas facing drinking water and fodder shortages.
We are working on a war footing to ease farmers’ distress, and there is satisfaction that the drought situation has been handled effectively so far.
ಬರ ಪರಿಸ್ಥಿತಿಯಲ್ಲಿ ಜನರಿಗೆ ಕುಡಿಯುವ ನೀರು, ಜಾನುವಾರುಗಳಿಗೆ ಮೇವು ಸೇರಿದಂತೆ ಅಗತ್ಯ ಸೌಲಭ್ಯಗಳನ್ನು ತಲುಪಿಸಲು ಸರ್ಕಾರ ನಿರಂತರವಾಗಿ ಕ್ರಮ ಕೈಗೊಳ್ಳುತ್ತಿದೆ.
ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ₹1 ಕೋಟಿ, ಜಿಲ್ಲೆಗಳಿಗೆ ₹3 ರಿಂದ ₹4 ಕೋಟಿ ವರೆಗೆ ಅನುದಾನ ಬಿಡುಗಡೆ ಮಾಡಲಾಗಿದೆ. ಕುಡಿಯುವ ನೀರಿನ ಅಗತ್ಯ ಹೆಚ್ಚಿರುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳ ಬಳಿ ಸುಮಾರು ₹15 ಕೋಟಿ ಹಣವನ್ನು ಮೀಸಲಿರಿಸಿ, ಕುಡಿಯುವ ನೀರು ಹಾಗೂ ಮೇವಿನ ಸಮಸ್ಯೆ ಎದುರಾಗಿರುವ ಕಡೆ ತಕ್ಷಣ ಬಳಸಿಕೊಳ್ಳುವಂತೆ ಸೂಚಿಸಲಾಗಿದೆ.
ರೈತರ ಸಂಕಷ್ಟವನ್ನು ನಿವಾರಿಸುವ ನಿಟ್ಟಿನಲ್ಲಿ ನಾವು ಸಮರೋಪಾದಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಈ ವರೆಗೆ ಬರ ಪರಿಸ್ಥಿತಿಯನ್ನು ಅತ್ಯಂತ ಸಮರ್ಥವಾಗಿ ನಿಭಾಯಿಸಿದ್ದೇವೆ ಎನ್ನುವ ತೃಪ್ತಿಯಿದೆ. -
Dr. G Parameshwara
@DrParameshwara
ತುಮಕೂರಿನ ಅಭಿವೃದ್ಧಿಗೆ ಹೊಸ ಅವಕಾಶಗಳನ್ನು ಕಲ್ಪಿಸಿ, ಜಿಲ್ಲೆಯ ಪ್ರಗತಿಗೆ ಮತ್ತಷ್ಟು ವೇಗ ನೀಡುವುದು ನಮ್ಮ ಸರ್ಕಾರದ ಆದ್ಯತೆಯಾಗಿದೆ.
ಈ ನಿಟ್ಟಿನಲ್ಲಿ ತುಮಕೂರಿನಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ನಿರ್ಮಿಸಲು ಪ್ರಯತ್ನಿಸುತ್ತಿದ್ದು, ಅದು ಸಾಕಾರಗೊಂಡರೆ ಜಿಲ್ಲೆಯ ಯುವಕರಿಗೆ ಉದ್ಯೋಗ ಹಾಗೂ ಹೊಸ ಅವಕಾಶಗಳ ಬಾಗಿಲು ತೆರೆಯುತ್ತದೆ. ಜೊತೆಗೆ ಜನರ ಪ್ರಯಾಣಕ್ಕೂ ಹೆಚ್ಚಿನ ಅನುಕೂಲವಾಗಲಿದೆ. ಜಿಲ್ಲೆಯ ಆರ್ಥಿಕ ಬೆಳವಣಿಗೆಗೂ ಇದು ಹೊಸ ಚೈತನ್ಯ ನೀಡಲಿದೆ.
ಅಭಿವೃದ್ಧಿಯ ಹೆಜ್ಜೆಗಳು ಮುಂದುವರಿಯುವಾಗ ರೈತರ ಹಿತವೂ ಅಷ್ಟೇ ಮುಖ್ಯ. ರೈತರ ಜಮೀನಿಗೆ ತೊಂದರೆಯಾಗದಂತೆ ಸರ್ಕಾರಿ ಜಮೀನು ಹಾಗೂ ಸ್ವಯಂಪ್ರೇರಣೆಯಿಂದ ನೀಡುವ ಭೂಮಿಯನ್ನು ಬಳಸಿಕೊಂಡು ವಿಮಾನ ನಿಲ್ದಾಣ ನಿರ್ಮಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು. ತುಮಕೂರಿನ ಪ್ರಗತಿಯ ಜೊತೆಗೆ ರೈತರ ನೆಲ, ಬದುಕು ಮತ್ತು ಭವಿಷ್ಯವನ್ನು ಕಾಪಾಡುವುದು ನಮ್ಮ ಬದ್ಧತೆ.
Creating new opportunities for Tumakuru and accelerating the district’s development is a priority for our Government.
Efforts are underway to establish an airport in Tumakuru. Once realised, it will open up new employment and opportunities for the youth, improve connectivity and give fresh momentum to the district’s economy.
At the same time, farmers’ interests remain equally important. The airport will be planned using government land and land voluntarily offered, without affecting farmers’ holdings.
Our commitment is to drive Tumakuru’s progress while protecting the land, livelihoods and future of its farmers. -
Dr. G Parameshwara
@DrParameshwara
ಅಹವಾಲು ನಿಮ್ಮದು, ಪರಿಹರಿಸುವ ಜವಾಬ್ದಾರಿ ನಮ್ಮದು.
ಜನರು ತಮ್ಮ ಸಮಸ್ಯೆಗಳ ಪರಿಹಾರಕ್ಕಾಗಿ ಕಚೇರಿಯಿಂದ ಕಚೇರಿಗೆ ಅಲೆದಾಡಬಾರದು. ಸರ್ಕಾರವೇ ಜನರ ಬಳಿಗೆ ತೆರಳಿ, ಅವರ ಅಹವಾಲುಗಳನ್ನು ನೇರವಾಗಿ ಆಲಿಸಿ, ಸಾಧ್ಯವಾದಷ್ಟು ತ್ವರಿತವಾಗಿ ಪರಿಹಾರ ಕಲ್ಪಿಸಬೇಕು ಎಂಬ ಉದ್ದೇಶದಿಂದ ಪ್ರಜಾಸೇವಾ ಆಂದೋಲನವನ್ನು ಆರಂಭಿಸಿದ್ದೇವೆ.
ಪಿಂಚಣಿ, ವಸತಿ, ರಸ್ತೆ, ಕುಡಿಯುವ ನೀರು, ವಿದ್ಯುತ್, ಆರೋಗ್ಯ, ಶಿಕ್ಷಣ ಸೇರಿದಂತೆ ಜನರ ದೈನಂದಿನ ಬದುಕಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಒಂದೇ ವೇದಿಕೆಯಲ್ಲಿ ಆಲಿಸಿ, ಸಂಬಂಧಿಸಿದ ಇಲಾಖೆಗಳ ಮೂಲಕ ಪರಿಹಾರಕ್ಕೆ ಕ್ರಮ ಕೈಗೊಳ್ಳಲಾಗುತ್ತಿದೆ. ಸಲ್ಲಿಕೆಯಾಗುವ ಪ್ರತಿಯೊಂದು ಅರ್ಜಿಯೂ ಕೇವಲ ಅರ್ಜಿಯಾಗಿ ಉಳಿಯದೆ, ಅದಕ್ಕೆ ಸೂಕ್ತ ಸ್ಪಂದನೆ ದೊರೆಯಬೇಕು ಎಂಬುದು ನಮ್ಮ ಆಶಯ.
ʼಪ್ರಜಾಸೇವಾ ಆಂದೋಲನʼ ಕೇವಲ ಅಹವಾಲು ಸ್ವೀಕರಿಸುವ ಕಾರ್ಯಕ್ರಮವಲ್ಲ; ಸರ್ಕಾರದ ಸೇವೆಗಳನ್ನು ಜನರಿಗೆ ಇನ್ನಷ್ಟು ಹತ್ತಿರ ತಂದು, ಆಡಳಿತದ ಮೇಲೆ ಅವರ ವಿಶ್ವಾಸವನ್ನು ಗಟ್ಟಿಗೊಳಿಸುವ ಪ್ರಯತ್ನವಾಗಿದೆ.
ಜನರ ಮಾತಿಗೆ ಕಿವಿಯಾಗುವುದು, ಅವರ ಸಮಸ್ಯೆಗೆ ಪರಿಹಾರ ನೀಡುವುದು ಮತ್ತು ಅರ್ಹರಿಗೆ ಸರ್ಕಾರದ ಸೌಲಭ್ಯಗಳನ್ನು ಸಮಯಕ್ಕೆ ಸರಿಯಾಗಿ ತಲುಪಿಸುವುದೇ ನಮ್ಮ ಜನಸೇವೆಯ ಉದ್ದೇಶ.This media couldn't be displayed. See it on the original post. -
Dr. G Parameshwara
@DrParameshwara
ಚುನಾವಣೆ ಸಂದರ್ಭದಲ್ಲಿ ಜನರಿಗೆ ನೀಡಿದ ಪ್ರತಿಯೊಂದು ಭರವಸೆಯನ್ನೂ ಈಡೇರಿಸುವುದು ನಮ್ಮ ಜವಾಬ್ದಾರಿ ಮತ್ತು ಬದ್ಧತೆಯಾಗಿದೆ.
ಕಳೆದ ಮೂರು ವರ್ಷಗಳಲ್ಲಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಜನರಿಗೆ ನೀಡಿದ ಭರವಸೆಗಳನ್ನು ಈಡೇರಿಸಲಾಗಿದೆ. ಅದೇ ಬದ್ಧತೆ ಮತ್ತು ಜನಪರ ಆಡಳಿತದ ಆಶಯವನ್ನು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ನೇತೃತ್ವದಲ್ಲೂ ಮುಂದುವರಿಸಲಾಗುತ್ತಿದೆ. ಸಿದ್ದರಾಮಯ್ಯ ಅವರ ಆಡಳಿತಾತ್ಮಕ ಅನುಭವ ಮತ್ತು ಅಭಿಪ್ರಾಯಗಳನ್ನು ಪಡೆದುಕೊಂಡು, ಜನರ ಆಶಯಗಳಿಗೆ ಸ್ಪಂದಿಸುವ ಮೂಲಕ ಸರ್ಕಾರ ಕಾರ್ಯನಿರ್ವಹಿಸುತ್ತಿದೆ.
ನಮ್ಮದು ನುಡಿದಂತೆ ನಡೆಯುವ ಸರ್ಕಾರ...
Fulfilling every promise made to the people during elections is our responsibility and commitment.
Over the past three years, the promises made under Siddaramaiah’s leadership have been fulfilled. The same commitment to people-centric governance continues under Chief Minister D.K. Shivakumar’s leadership.
The Government is moving forward by drawing on Siddaramaiah’s administrative experience and views, while responding to the aspirations of the people.
Ours is a Government that delivers on its word. -
Dr. G Parameshwara
@DrParameshwara
During the drought, our Government has prioritised essential support such as drinking water for people and fodder for livestock. To further ease farmers’ distress, the Union Government should also consider a complete farm loan waiver.
Drinking water remains our first priority. ₹1 crore has been released to every Assembly constituency, while districts have received ₹3–₹4 crore. These funds have already been utilised through the Zilla Panchayats for drinking water needs. With further requirements arising, around ₹15 crore has been kept with Deputy Commissioners for use wherever drinking water or fodder shortages are reported.
*Appeal to the Union Government for Farm Loan Waiver: Farmers are facing severe distress due to drought and need relief. The State Government has already waived interest on farmers’ loans, while the farming community is seeking a complete loan waiver. We have also appealed to the Union Government in this regard.
Former Prime Minister Dr. Manmohan Singh had earlier taken the decision to waive farm loans worth ₹72,000 crore across the country. Karnataka is not receiving its due GST share properly, and around ₹15,000–₹17,000 crore due under the Jal Jeevan Mission has also not been received. The Union Government should therefore waive farmers’ loans across the country and take full credit for it; we seek no share in that credit.
*Measures for the Poor, Workers and Fisherfolk: At the Cabinet meeting held in Mangaluru, the Chief Minister and Cabinet Ministers announced programmes worth around ₹32,000 crore aimed at benefiting the poor, fisherfolk and ordinary workers.
*Priority to Tumakuru District’s Development: Along with legislators from Tumakuru district, I have submitted representations to the Chief Minister on several pressing issues concerning the district. Tumakuru is only around 65 km from Bengaluru and must also grow rapidly. The Chief Minister has said efforts are being made to bring an airport to the region. If approved, it will benefit local youth and residents. However, farmers should not lose their land for the project. The airport can be developed using government land and land voluntarily offered by willing landowners.
*15 Lakh Housing Sites for the Poor: A large number of applications received during the Praja Seva Andolana were for houses and housing sites. The Chief Minister and I have decided to provide around 15 lakh housing sites to poor families across the State. Each site will measure 30x40 feet.
As Revenue Minister, I have set a target of distributing 5 lakh sites by December this year. Deputy Commissioners have been instructed to identify more land, and preparations are already underway for around 20,000 sites in Tumakuru district, which can be distributed by December.
*Engineering College Sanctioned for Kunigal: Several development works, including a stadium, are underway in Kunigal. An Engineering College has also been sanctioned for Kunigal and is expected to begin functioning from next year. I have also requested that a Government Medical College to be sanctioned by the State be allotted to Tumakuru district.
*Three-Day Special Session for Farmers’ Issues: A three-day special session has been convened on September 21, 22 and 23, with a strong focus on farmers’ issues. All legislators, including those from the Opposition, have been asked to hold sustained discussions on farmers’ concerns for two days. Usually, discussions focus on Agriculture, Horticulture or Sericulture Departments, but farmers’ issues themselves rarely receive such extensive attention. This special session has therefore been convened to ensure that farmers’ lives are not devastated by the drought.
The Kasturirangan Committee Report will also be discussed, particularly in the context of protecting green areas, trees and vegetation across seven districts of the State.
*Officials Directed to Dispose of Applications Quickly: Applications received at the Praja Seva meeting must be disposed of without delay. I will personally review the progress, along with the local MLA, Deputy Commissioner and Zilla Panchayat CEO.
Appropriate action will be taken against officials who keep applications pending without taking decisions. Officials are there to serve the people and must respond immediately to their concerns.
*Appreciation for MLA Dr. Ranganath: Kunigal MLA Dr. H.D. Ranganath is an active and educated legislator. It is rare for doctors to enter politics, and he has chosen public service after completing MBBS and MSc. His focus has consistently remained on the development of Kunigal. Such commitment is essential to sustain the spirit of public service.
Going forward, the Praja Seva Andolana should be expanded to the hobli level, so that people’s applications can be resolved locally and similar programmes can continue closer to the public.
- My remarks after inaugurating the Praja Seva Andolana organised by the Tumakuru District Administration and the Praja Seva Department at SLV Kalyana Mantapa in Huliyurdurga, Kunigal taluk. -
Dr. G Parameshwara
@DrParameshwara
ಬರ ಪರಿಸ್ಥಿತಿಯಲ್ಲಿ ಜನರಿಗೆ ಕುಡಿಯುವ ನೀರು, ಜಾನುವಾರುಗಳಿಗೆ ಮೇವು ಸೇರಿದಂತೆ ಅಗತ್ಯ ಸೌಲಭ್ಯಗಳನ್ನು ಒದಗಿಸಲು ಸರ್ಕಾರ ಆದ್ಯತೆ ನೀಡಿದ್ದು, ರೈತರ ಸಂಕಷ್ಟಕ್ಕೆ ಸ್ಪಂದಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ರೈತರ ಸಾಲಮನ್ನಾ ಮಾಡಬೇಕು.
ನಮ್ಮ ಸರ್ಕಾರ ಕುಡಿಯುವ ನೀರಿಗೆ ಮೊದಲ ಆದ್ಯತೆ ನೀಡುತ್ತಿದೆ. ಪ್ರತಿಯೊಂದು ವಿಧಾನಸಭಾ ಕ್ಷೇತ್ರಕ್ಕೂ ಒಂದೊಂದು ಕೋಟಿ ರೂಪಾಯಿ, ಜಿಲ್ಲೆಗಳಿಗೆ 3 ಮತ್ತು 4 ಕೋಟಿ ರೂಪಾಯಿಗಳವರೆಗೆ ಹಣ ಬಿಡುಗಡೆ ಮಾಡಲಾಗಿದೆ. ಈಗಾಗಲೇ ಆ ಹಣವನ್ನು ಜಿಲ್ಲಾ ಪಂಚಾಯಿತಿಯಿಂದ ಕುಡಿಯುವ ನೀರಿಗಾಗಿ ಖರ್ಚು ಮಾಡಲಾಗಿದೆ.
ಇನ್ನೂ ಹಣದ ಬೇಡಿಕೆ ಬರುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳ ಬಳಿ ಸುಮಾರು 15 ಕೋಟಿ ರೂಪಾಯಿ ಹಣ ಇರಿಸಲಾಗಿದ್ದು, ಕುಡಿಯುವ ನೀರು ಹಾಗೂ ಜಾನುವಾರುಗಳಿಗೆ ಮೇವಿನ ಸಮಸ್ಯೆ ಎದುರಾದ ಕಡೆ ಆ ಹಣವನ್ನು ಬಳಸಿಕೊಳ್ಳುವಂತೆ ಸರ್ಕಾರದಿಂದ ಸೂಚನೆ ನೀಡಲಾಗಿದೆ.
*ರೈತರ ಸಾಲಮನ್ನಾಕ್ಕೆ ಕೇಂದ್ರಕ್ಕೆ ಮನವಿ : ಬರದಿಂದಾಗಿ ರೈತರು ಸಂಕಷ್ಟದಲ್ಲಿದ್ದು, ಅವರಿಗೆ ಪರಿಹಾರ ನೀಡುವ ಅಗತ್ಯವಿದೆ. ರಾಜ್ಯ ಸರ್ಕಾರ ಈಗಾಗಲೇ ರೈತರ ಸಾಲದ ಮೇಲಿನ ಬಡ್ಡಿಯನ್ನು ಮನ್ನಾ ಮಾಡಿದೆ. ಆದರೆ, ಸಂಪೂರ್ಣ ಸಾಲಮನ್ನಾ ಮಾಡಬೇಕು ಎಂಬ ಬೇಡಿಕೆ ರೈತ ಸಮುದಾಯದಿಂದ ಬರುತ್ತಿದೆ. ಈ ಕುರಿತು ಕೇಂದ್ರ ಸರ್ಕಾರಕ್ಕೂ ಮನವಿ ಸಲ್ಲಿಸಲಾಗಿದೆ.
ಹಿಂದೆ ಡಾ. ಮನಮೋಹನ್ ಸಿಂಗ್ ಅವರು ದೇಶದ ರೈತರ 72 ಸಾವಿರ ಕೋಟಿ ರೂಪಾಯಿ ಸಾಲವನ್ನು ಮನ್ನಾ ಮಾಡುವ ತೀರ್ಮಾನ ಕೈಗೊಂಡಿದ್ದರು. ರಾಜ್ಯಕ್ಕೆ ಬರಬೇಕಾದ ಜಿಎಸ್ಟಿ ಪಾಲಿನ ಹಣ ಸರಿಯಾಗಿ ಬರುತ್ತಿಲ್ಲ. ಜಲಜೀವನ್ ಮಿಷನ್ನಲ್ಲಿ ರಾಜ್ಯಕ್ಕೆ ಬರಬೇಕಾದ ಸುಮಾರು 15ರಿಂದ 17 ಸಾವಿರ ಕೋಟಿ ರೂಪಾಯಿ ಹಣವೂ ಬರುತ್ತಿಲ್ಲ. ಹೀಗಾಗಿ ಇಡೀ ದೇಶದ ರೈತರ ಸಾಲವನ್ನು ಕೇಂದ್ರ ಸರ್ಕಾರವೇ ಮನ್ನಾ ಮಾಡಲಿ. ಅದರ ಸಂಪೂರ್ಣ ಕ್ರೆಡಿಟ್ ಅನ್ನು ಕೇಂದ್ರ ಸರ್ಕಾರವೇ ತೆಗೆದುಕೊಳ್ಳಲಿ. ಅದರ ಪಾಲನ್ನು ನಾವು ಕೇಳುವುದಿಲ್ಲ.
*ಬಡವರು, ಕಾರ್ಮಿಕರು, ಮೀನುಗಾರರಿಗೆ ಅನುಕೂಲ ಕಲ್ಪಿಸಲು ಕ್ರಮ : ಮುಖ್ಯಮಂತ್ರಿ ಹಾಗೂ ಸಂಪುಟದ ಸಚಿವರು ಮಂಗಳೂರಿನಲ್ಲಿ ಸಚಿವ ಸಂಪುಟ ಸಭೆ ನಡೆಸಿದ್ದೇವೆ. ಬಡವರು, ಮೀನುಗಾರರು ಹಾಗೂ ಸಾಮಾನ್ಯ ಕಾರ್ಮಿಕ ವರ್ಗದವರಿಗೆ ಅನುಕೂಲವಾಗುವಂತೆ ಸುಮಾರು 32 ಸಾವಿರ ಕೋಟಿ ರೂಪಾಯಿಗಳ ಕಾರ್ಯಕ್ರಮಗಳನ್ನು ಪ್ರಕಟಿಸಿ ಬಂದಿದ್ದೇವೆ.
*ಜಿಲ್ಲೆಯ ಅಭಿವೃದ್ಧಿಗೆ ಆದ್ಯತೆ : ತುಮಕೂರು ಜಿಲ್ಲೆಯ ಶಾಸಕರು ಹಾಗೂ ನಾನು ಮುಖ್ಯಮಂತ್ರಿಗಳಿಗೆ ಜಿಲ್ಲೆಯ ಹಲವು ಜ್ವಲಂತ ಸಮಸ್ಯೆಗಳ ಕುರಿತು ಮನವಿ ಸಲ್ಲಿಸಿದ್ದೇವೆ. ಬೆಂಗಳೂರಿಗೆ ಕೇವಲ 65 ಕಿಲೋಮೀಟರ್ ದೂರದಲ್ಲಿರುವ ತುಮಕೂರು ಜಿಲ್ಲೆಯೂ ಅಭಿವೃದ್ಧಿಯಾಗಬೇಕು. ಈ ಭಾಗಕ್ಕೆ ವಿಮಾನ ನಿಲ್ದಾಣ ತರಲು ಪ್ರಯತ್ನಿಸುತ್ತಿರುವುದಾಗಿ ಮುಖ್ಯಮಂತ್ರಿಗಳು ತಿಳಿಸಿದ್ದಾರೆ. ಅದು ಮಂಜೂರಾದರೆ ಈ ಭಾಗದ ಯುವಕರು ಹಾಗೂ ಜನರಿಗೆ ಅನುಕೂಲವಾಗಲಿದೆ. ಆದರೆ, ವಿಮಾನ ನಿಲ್ದಾಣಕ್ಕಾಗಿ ರೈತರು ಜಮೀನು ಕಳೆದುಕೊಳ್ಳಬಾರದು. ಸರ್ಕಾರಿ ಜಮೀನು ಹಾಗೂ ಸ್ವಯಂಪ್ರೇರಣೆಯಿಂದ ಜಮೀನು ನೀಡಲು ಮುಂದಾಗುವವರ ಜಮೀನನ್ನು ಬಳಸಿಕೊಂಡು ವಿಮಾನ ನಿಲ್ದಾಣ ನಿರ್ಮಿಸಬಹುದು.
*ಬಡವರಿಗೆ 15 ಲಕ್ಷ ನಿವೇಶನ : ಪ್ರಜಾಸೇವಾ ಆಂದೋಲನದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮನೆ ಹಾಗೂ ನಿವೇಶನಕ್ಕಾಗಿ ಅರ್ಜಿಗಳು ಬಂದಿವೆ. ರಾಜ್ಯದಲ್ಲಿ ಬಡವರಿಗೆ ಸುಮಾರು 15 ಲಕ್ಷ ನಿವೇಶನಗಳನ್ನು ನೀಡಲು ಮುಖ್ಯಮಂತ್ರಿ ಹಾಗೂ ನಾನು ತೀರ್ಮಾನಿಸಿದ್ದೇವೆ. ಕಳೆದ 30-40 ವರ್ಷಗಳಿಂದ ಈ ರೀತಿಯ ಕಾರ್ಯಕ್ರಮವನ್ನು ಹೆಚ್ಚಿನ ಪ್ರಮಾಣದಲ್ಲಿ ಮುಂದುವರಿಸಿರಲಿಲ್ಲ. ಈ ಬಾರಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ನೇತೃತ್ವದ ಸರ್ಕಾರ ಸುಮಾರು 15 ಲಕ್ಷ ನಿವೇಶನಗಳನ್ನು ನೀಡಲು ತೀರ್ಮಾನಿಸಿದೆ. 30x40 ಅಡಿ ಅಳತೆಯ ನಿವೇಶನಗಳನ್ನೇ ನೀಡಲಾಗುವುದು.
ಕಂದಾಯ ಸಚಿವನಾಗಿ ಈ ವರ್ಷದ ಡಿಸೆಂಬರ್ ಒಳಗಾಗಿ ಐದು ಲಕ್ಷ ನಿವೇಶನಗಳನ್ನು ನೀಡಲೇಬೇಕು ಎಂದು ತೀರ್ಮಾನಿಸಿದ್ದೇನೆ. ಜಿಲ್ಲಾಧಿಕಾರಿಗಳಿಗೆ ಜಿಲ್ಲೆಯಲ್ಲಿ ಹೆಚ್ಚಿನ ನಿವೇಶನಗಳನ್ನು ಗುರುತಿಸುವಂತೆ ಸೂಚಿಸಲಾಗಿದೆ. ಈಗಾಗಲೇ ಸುಮಾರು 20 ಸಾವಿರ ನಿವೇಶನಗಳನ್ನು ಸಿದ್ಧಪಡಿಸಲು ಜಿಲ್ಲೆಯಲ್ಲಿ ತಯಾರಿ ನಡೆದಿದೆ. ಡಿಸೆಂಬರ್ ಒಳಗೆ ಈ 20 ಸಾವಿರ ನಿವೇಶನಗಳನ್ನೂ ಜಿಲ್ಲೆಯಲ್ಲಿ ನೀಡಲು ಸಾಧ್ಯವಾಗಲಿದೆ.
*ಕುಣಿಗಲ್ಗೆ ಇಂಜಿನಿಯರಿಂಗ್ ಕಾಲೇಜು ಮಂಜೂರು : ಕುಣಿಗಲ್ನಲ್ಲಿ ಸ್ಟೇಡಿಯಂ ಸೇರಿದಂತೆ ಹಲವು ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿವೆ. ಇಂಜಿನಿಯರಿಂಗ್ ಕಾಲೇಜು ಕೂಡ ಕುಣಿಗಲ್ಗೆ ಮಂಜೂರಾಗಿದ್ದು, ಮುಂದಿನ ವರ್ಷದಿಂದ ಪ್ರಾರಂಭವಾಗಲಿದೆ. ಸರ್ಕಾರದಿಂದ ಮಂಜೂರಾಗಬೇಕಾದ ಮೆಡಿಕಲ್ ಕಾಲೇಜನ್ನು ತುಮಕೂರು ಜಿಲ್ಲೆಗೆ ನೀಡಬೇಕು ಎಂದು ನಾನು ಮನವಿ ಮಾಡಿದ್ದೇನೆ.
*ರೈತರ ಸಮಸ್ಯೆಗಳ ಚರ್ಚೆಗೆ ಮೂರು ದಿನಗಳ ವಿಶೇಷ ಅಧಿವೇಶನ : ರಾಜ್ಯದಲ್ಲಿ 21, 22 ಮತ್ತು 23ರಂದು ಮೂರು ದಿನಗಳ ವಿಶೇಷ ಅಧಿವೇಶನ ಕರೆಯಲಾಗಿದೆ. ಈ ವಿಶೇಷ ಅಧಿವೇಶನವನ್ನು ರಾಜ್ಯದ ರೈತರಿಗಾಗಿ ಕರೆಯಲಾಗಿದೆ. ಎರಡು ದಿನಗಳ ಕಾಲ ರೈತರ ಸಮಸ್ಯೆಗಳ ಕುರಿತು ಸತತವಾಗಿ ಚರ್ಚೆ ನಡೆಸಬೇಕು ಎಂದು ವಿರೋಧ ಪಕ್ಷದ ಶಾಸಕರು ಸೇರಿದಂತೆ ಎಲ್ಲರಿಗೂ ತಿಳಿಸಲಾಗಿದೆ. ಸಾಮಾನ್ಯವಾಗಿ ಕೃಷಿ, ತೋಟಗಾರಿಕೆ ಅಥವಾ ರೇಷ್ಮೆ ಇಲಾಖೆಗಳ ಚರ್ಚೆಗಳು ನಡೆಯುತ್ತವೆ. ಆದರೆ ರೈತರ ಸಮಸ್ಯೆಗಳ ಕುರಿತು ಇಷ್ಟೊಂದು ಪ್ರಮಾಣದಲ್ಲಿ ಚರ್ಚೆಯಾಗುವುದಿಲ್ಲ. ಬರ ಪರಿಸ್ಥಿತಿಯಲ್ಲಿ ರೈತರ ಜೀವನ ಹಾಳಾಗಬಾರದು ಎಂಬ ದೃಷ್ಟಿಯಿಂದ ರೈತರ ಸಮಸ್ಯೆಗಳನ್ನೇ ಚರ್ಚಿಸಲು ವಿಶೇಷ ಅಧಿವೇಶನ ಕರೆಯಲಾಗಿದೆ.
ಮೂರು ದಿನಗಳ ಅಧಿವೇಶನದಲ್ಲಿ ಕಸ್ತೂರಿ ರಂಗನ್ ಸಮಿತಿಯ ವರದಿಯ ಬಗ್ಗೆಯೂ ಚರ್ಚೆಯಾಗಲಿದೆ. ರಾಜ್ಯದ ಏಳು ಜಿಲ್ಲೆಗಳಲ್ಲಿರುವ ಹಸಿರು ಪ್ರದೇಶ, ಮರ-ಗಿಡಗಳನ್ನು ರಕ್ಷಿಸುವ ಉದ್ದೇಶದಿಂದ ಈ ವಿಚಾರದ ಕುರಿತು ಚರ್ಚೆ ನಡೆಸಲಾಗುವುದು.
*ಅರ್ಜಿಗಳನ್ನು ತ್ವರಿತವಾಗಿ ವಿಲೇವಾರಿ ಮಾಡಲು ಅಧಿಕಾರಿಗಳಿಗೆ ಸೂಚನೆ : ಪ್ರಜಾಸೇವಾ ಸಭೆಯಲ್ಲಿ ಸ್ವೀಕರಿಸಲಾಗಿರುವ ಅರ್ಜಿಗಳನ್ನು ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ತ್ವರಿತವಾಗಿ ವಿಲೇವಾರಿ ಮಾಡಬೇಕು. ಅರ್ಜಿಗಳನ್ನು ಮುಂದೂಡುತ್ತಾ ಹೋಗಬಾರದು. ಸ್ವತಃ ನಾನೇ ಅರ್ಜಿಗಳ ವಿಲೇವಾರಿ ಕುರಿತು ಪರಿಶೀಲನೆ ನಡೆಸುತ್ತೇನೆ. ಜೊತೆಗೆ ಕ್ಷೇತ್ರದ ಶಾಸಕರು, ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಕೂಡ ಪರಿಶೀಲನೆ ನಡೆಸಲಿದ್ದಾರೆ.
ಯಾವ ಅಧಿಕಾರಿ ತೀರ್ಮಾನ ಕೈಗೊಳ್ಳದೆ ಅರ್ಜಿಗಳನ್ನು ಹಾಗೆಯೇ ಇಟ್ಟುಕೊಳ್ಳುತ್ತಾರೋ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುತ್ತೇನೆ. ಅಧಿಕಾರಿಗಳು ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕು. ನೀವು ಜನರಿಗಾಗಿ ಇರುವವರು. ಜನರ ಕೆಲಸ ಮಾಡದೆ ಇದ್ದರೆ ನಿಮ್ಮ ಅಸ್ತಿತ್ವಕ್ಕೂ ಅರ್ಥವಿಲ್ಲ. ಆದ್ದರಿಂದ ಅಧಿಕಾರಿಗಳು ಜನರ ಸಮಸ್ಯೆಗಳಿಗೆ ಕೂಡಲೇ ಸ್ಪಂದಿಸಬೇಕು.
*ಶಾಸಕ ರಂಗನಾಥ್ ಅವರಿಗೆ ಮೆಚ್ಚುಗೆ : ಕುಣಿಗಲ್ ಶಾಸಕ ಡಾ. ರಂಗನಾಥ್ ಅವರು ಬಹಳ ಕ್ರಿಯಾಶೀಲ ಹಾಗೂ ವಿದ್ಯಾವಂತ ಶಾಸಕರಾಗಿದ್ದಾರೆ. ವೈದ್ಯರು ರಾಜಕೀಯಕ್ಕೆ ಬರುವುದು ವಿರಳ. ಎಂಬಿಬಿಎಸ್ ಹಾಗೂ ಎಂಎಸ್ಸಿ ಶಿಕ್ಷಣ ಪಡೆದ ಅವರು ರಾಜಕೀಯಕ್ಕೆ ಬಂದು ಜನಸೇವೆ ಮಾಡುತ್ತಿದ್ದಾರೆ. ಅವರಿಗೆ ಯಾವಾಗಲೂ ತಮ್ಮ ಕ್ಷೇತ್ರದ ಅಭಿವೃದ್ಧಿಯೇ ಮುಖ್ಯವಾಗಿದ್ದು, ‘ನನ್ನ ಕ್ಷೇತ್ರ ಕುಣಿಗಲ್ ಕ್ಷೇತ್ರ’ ಎಂದು ಯಾವಾಗಲು ಹೇಳುತ್ತಿರುತ್ತಾರೆ. ಒಬ್ಬ ಶಾಸಕರಿಗೆ ಇಂತಹ ಕಲ್ಪನೆ ಹಾಗೂ ಬದ್ಧತೆ ಇದ್ದಾಗ ಮಾತ್ರ ಜನಸೇವೆಯ ಮನೋಭಾವವನ್ನು ಉಳಿಸಿಕೊಳ್ಳಲು ಸಾಧ್ಯವಾಗುತ್ತದೆ.
ಮುಂದಿನ ದಿನಗಳಲ್ಲಿ ಪ್ರಜಾಸೇವಾ ಆಂದೋಲನವನ್ನು ಹೋಬಳಿ ಮಟ್ಟಕ್ಕೂ ಕೊಂಡೊಯ್ಯಬೇಕು. ಜನರ ಅರ್ಜಿಗಳು ಹೋಬಳಿ ಮಟ್ಟದಲ್ಲಿಯೇ ಇತ್ಯರ್ಥವಾಗಬೇಕು. ಅಲ್ಲಿಯೂ ಇದೇ ರೀತಿಯ ಕಾರ್ಯಕ್ರಮಗಳನ್ನು ಮುಂದುವರಿಸಬೇಕು.
- ತುಮಕೂರು ಜಿಲ್ಲಾಡಳಿತ ಹಾಗೂ ಪ್ರಜಾಸೇವಾ ಇಲಾಖೆಯ ವತಿಯಿಂದ ಕುಣಿಗಲ್ ತಾಲ್ಲೂಕಿನ ಹುಲಿಯೂರುದುರ್ಗದ ಎಸ್ಎಲ್ವಿ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ಪ್ರಜಾಸೇವಾ ಆಂದೋಲನ ಸಭೆಗೆ ಚಾಲನೆ ನೀಡಿ, ಬಳಿಕ ಮಾತನಾಡಿದೆ. -
Dr. G Parameshwara
@DrParameshwara
ಜನರ ಬದುಕಿನ ನೋವು, ನಿರೀಕ್ಷೆ ಹಾಗೂ ಅಗತ್ಯಗಳನ್ನು ಆಲಿಸಿ ಅವರ ಸಮಸ್ಯೆಗಳಿಗೆ ಸ್ಪಂದಿಸುವುದೇ ನಿಜವಾದ ಜನಸೇವೆ. ತಮ್ಮ ಸಮಸ್ಯೆಗಳ ಪರಿಹಾರಕ್ಕಾಗಿ ಜನರು ಕಚೇರಿಯಿಂದ ಕಚೇರಿಗೆ ಅಲೆದಾಡುವ ಬದಲು, ಆಡಳಿತವೇ ಅವರ ಬಳಿಗೆ ತೆರಳಿ ಪರಿಹಾರ ಕಲ್ಪಿಸಬೇಕು ಎಂಬ ಆಶಯ ನಮ್ಮದು.
ಇಂದು ತುಮಕೂರು ಜಿಲ್ಲಾಡಳಿತ ಹಾಗೂ ಪ್ರಜಾಸೇವಾ ಇಲಾಖೆಯ ವತಿಯಿಂದ ಕುಣಿಗಲ್ ತಾಲ್ಲೂಕಿನಲ್ಲಿ ಆಯೋಜಿಸಿದ್ದ ಪ್ರಜಾಸೇವಾ ಆಂದೋಲನ ಸಭೆಗೆ ಚಾಲನೆ ನೀಡಿ, ಪಿಂಚಣಿ, ವಸತಿ, ರಸ್ತೆ, ಕುಡಿಯುವ ನೀರು, ವಿದ್ಯುತ್, ಆರೋಗ್ಯ, ಶಿಕ್ಷಣ ಸೇರಿದಂತೆ ವಿವಿಧ ಸಮಸ್ಯೆಗಳ ಕುರಿತು ಸಾರ್ವಜನಿಕರಿಂದ ಅಹವಾಲುಗಳನ್ನು ಸ್ವೀಕರಿಸಿ, ಅವರ ಕುಂದುಕೊರತೆಗಳನ್ನು ನೇರವಾಗಿ ಆಲಿಸಿದೆ.
ಸಾರ್ವಜನಿಕರಿಂದ ಸ್ವೀಕರಿಸಿದ ಪ್ರತಿಯೊಂದು ಅರ್ಜಿಯನ್ನೂ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಪರಿಶೀಲಿಸಿ, ಅರ್ಹ ಪ್ರಕರಣಗಳನ್ನು ಕಾಲಮಿತಿಯೊಳಗೆ ತ್ವರಿತವಾಗಿ ವಿಲೇವಾರಿ ಮಾಡುವಂತೆ ಸೂಚಿಸಿದೆ. ಜನರ ಸಮಸ್ಯೆಗಳನ್ನು ಆಲಿಸುವುದು ಮಾತ್ರವಲ್ಲ, ಅವುಗಳಿಗೆ ಪರಿಹಾರ ದೊರಕುವವರೆಗೂ ಜನರ ಜೊತೆ ನಿಲ್ಲುವುದು ನಮ್ಮ ಕರ್ತವ್ಯ ಹಾಗೂ ಬದ್ಧತೆ.
True public service means listening to people’s concerns, hopes and needs, and responding to their problems. Our aim is that people should not have to run from office to office seeking solutions; instead, the administration should reach them and resolve their grievances.
Today, I inaugurated the Praja Seva Andolana organised by the Tumakuru District Administration and the Praja Seva Department in Kunigal taluk. I received grievances from the public on issues including pensions, housing, roads, drinking water, electricity, healthcare and education, and heard their concerns directly.
I instructed the concerned officials to examine every application and resolve eligible cases within a fixed timeframe.
Our duty and commitment are not only to hear people’s problems, but to stand with them until a solution is found. -
Dr. G Parameshwara
@DrParameshwara
ರಾಜ್ಯದ ಅಭಿವೃದ್ಧಿ, ಜನರ ಸಮಸ್ಯೆಗಳಿಗೆ ಪರಿಹಾರ ಹಾಗೂ ಬರದಿಂದ ಸಂಕಷ್ಟಕ್ಕೊಳಗಾಗಿರುವ ರೈತರ ಹಿತವೇ ಸರ್ಕಾರದ ಮೊದಲ ಆದ್ಯತೆಯಾಗಿದೆ.
ಬರ ಹಾಗೂ ಕಸ್ತೂರಿ ರಂಗನ್ ವರದಿ ಕುರಿತು ಚರ್ಚಿಸಲು ವಿಶೇಷ ಅಧಿವೇಶನ ಕರೆಯಲಾಗಿದೆ. ಕೇಂದ್ರ ಸರ್ಕಾರದಿಂದ ಅಗತ್ಯ ನೆರವು ಪಡೆಯುವ ಕುರಿತು ಕೂಡ ಒಗ್ಗಟ್ಟಿನಿಂದ ಚರ್ಚಿಸಿ, ರಾಜ್ಯದ ಹಿತಕ್ಕಾಗಿ ಮುಂದಿನ ಕ್ರಮಗಳನ್ನು ಕೈಗೊಳ್ಳಬೇಕಿದೆ.
ವಿರೋಧ ಪಕ್ಷಗಳು ವೈಯಕ್ತಿಕ ಹಿತಾಸಕ್ತಿಗಳನ್ನು ಬದಿಗಿಟ್ಟು, ಜನರು ಮತ್ತು ರೈತರ ಸಮಸ್ಯೆಗಳ ಪರಿಹಾರಕ್ಕಾಗಿ ಸರ್ಕಾರದೊಂದಿಗೆ ಕೈಜೋಡಿಸಬೇಕು. ಪ್ರಜಾಪ್ರಭುತ್ವದಲ್ಲಿ ಪ್ರತಿಭಟನೆಗೆ ಅವಕಾಶವಿದೆ, ಆದರೆ ಜನರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಸಂದರ್ಭದಲ್ಲೂ ರಾಜಕೀಯಕ್ಕಿಂತ ರಾಜ್ಯದ ಹಿತಕ್ಕೆ ಆದ್ಯತೆ ನೀಡುವುದು ಅಗತ್ಯ.
The development of the State, addressing people’s concerns and protecting farmers affected by drought remain our Government’s foremost priorities.
A special session has been convened to discuss the drought situation and the Kasturirangan Report. We must also discuss, with a united approach, the assistance required from the Union Government and take further steps in the interest of the State.
Opposition parties should set aside personal interests and join hands with the Government to address the concerns of people and farmers. Democracy provides space for protest, but when it comes to solving people’s problems, the interests of the State must take priority over politics. -
Dr. G Parameshwara
@DrParameshwara
ಜನರ ದಿನನಿತ್ಯದ ಬದುಕಿನಲ್ಲಿ ಸಾರಿಗೆ ಎಂದರೆ ಕೇವಲ ಬಸ್ಗಳ ಸಂಚಾರವಲ್ಲ ಬದಲಿಗೆ ಅದು ಶಿಕ್ಷಣ, ಉದ್ಯೋಗ, ಕೃಷಿ, ಆರೋಗ್ಯ ಸೇರಿದಂತೆ ಹಲವು ಅಗತ್ಯಗಳಿಗೆ ಸಂಪರ್ಕ ಕಲ್ಪಿಸುವ ಜೀವನಾಡಿ. ಸಾರಿಗೆ ಸೌಲಭ್ಯವನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ಕೊರಟಗೆರೆಯ ಹುಲಿಕುಂಟೆ ಗ್ರಾಮದ ಜನರ ಅಗತ್ಯಗಳಿಗೆ ಸ್ಪಂದಿಸುವ ಮತ್ತೊಂದು ಮಹತ್ವದ ಹೆಜ್ಜೆಯನ್ನು ಇಟ್ಟಿದ್ದೇವೆ.
ಬಹುಕಾಲದಿಂದ ನಿರೀಕ್ಷೆಯಲ್ಲಿದ್ದ ಉತ್ತಮ ಸಾರಿಗೆ ಸೌಲಭ್ಯಕ್ಕೆ ಬಲ ತುಂಬುವ ಸಲುವಾಗಿ ಕೆಎಸ್ಆರ್ಟಿಸಿ ಉಪವಿಭಾಗ ಹಾಗೂ ಬಸ್ ಡಿಪೋ ನಿರ್ಮಾಣಕ್ಕಾಗಿ 6 ಎಕರೆ ಸರ್ಕಾರಿ ಜಮೀನನ್ನು ಗುರುತಿಸಿದ್ದೇವೆ.
ಈ ಯೋಜನೆಯಿಂದ ವಿದ್ಯಾರ್ಥಿಗಳಿಗೆ, ರೈತರಿಗೆ, ಕಾರ್ಮಿಕರಿಗೆ ಹಾಗೂ ನಿತ್ಯ ಪ್ರಯಾಣಿಕರ ಸಂಚಾರ ಮತ್ತಷ್ಟು ಸುಗಮವಾಗಲಿದೆ. ಕೊರಟಗೆರೆ, ಮಧುಗಿರಿ, ತುಮಕೂರು, ಬೆಂಗಳೂರು ಮಾರ್ಗಗಳಲ್ಲಿ ಸಾರಿಗೆ ಸಂಪರ್ಕವನ್ನು ಬಲಪಡಿಸುವ ಮೂಲಕ ಜನರ ಸಂಚಾರಕ್ಕೆ ಮತ್ತಷ್ಟು ಅನುಕೂಲ ಕಲ್ಪಿಸುವ ಹೆಜ್ಜೆ ಇದಾಗಿದೆ.
Transport is more than just bus services; it is a vital link to education, employment, agriculture, healthcare and everyday needs.
To strengthen public transport in Koratagere and address the long-standing needs of people in Hulikunte village, 6 acres of government land have been identified for a KSRTC sub-division and bus depot.
The project will make travel easier for students, farmers, workers and daily commuters, while improving connectivity on the Koratagere, Madhugiri, Tumakuru and Bengaluru routes.
This is another step towards making public transport more accessible and convenient for the people. -
Dr. G Parameshwara
@DrParameshwara
I inaugurated the Praja Seva Andolana organised by the Tumakuru District Administration and the Praja Seva Department at SLV Kalyana Mantapa in Huliyurdurga, Kunigal taluk, where I received petitions from the public and listened to their grievances and concerns.
People from various villages brought to my attention issues related to pensions, housing, roads, drinking water, electricity, healthcare, education and other government services and benefits.
Every petition submitted by the public must receive a proper response and solution. I directed the concerned officials to examine the applications on priority, resolve eligible cases within a fixed timeframe and take necessary action on long-pending issues.
Government schemes and welfare benefits must reach every eligible beneficiary without delay. No eligible person should be deprived of government support, and officials must act with greater responsibility and care.
People should not have to run from one office to another to resolve their problems. The purpose of the Praja Seva Andolana is to take the administration closer to the people, hear their grievances directly and provide solutions on the spot wherever possible.
Our priority is to respond quickly to people’s concerns, provide effective solutions and ensure transparent, accountable and people-friendly governance.
Kunigal MLA Dr. H.D. Ranganath, Deputy Commissioner Shubha Kalyan, Zilla Panchayat CEO Ashwija, Tahsildar and officials from various departments were present. -
Dr. G Parameshwara
@DrParameshwara
ತುಮಕೂರು ಜಿಲ್ಲಾಡಳಿತ ಹಾಗೂ ಪ್ರಜಾಸೇವಾ ಇಲಾಖೆಯ ವತಿಯಿಂದ ಕುಣಿಗಲ್ ತಾಲ್ಲೂಕಿನ ಹುಲಿಯೂರುದುರ್ಗದ ಎಸ್ಎಲ್ವಿ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ಪ್ರಜಾಸೇವಾ ಆಂದೋಲನ ಸಭೆಗೆ ಚಾಲನೆ ನೀಡಿ, ಸಾರ್ವಜನಿಕರಿಂದ ಅಹವಾಲುಗಳನ್ನು ಸ್ವೀಕರಿಸಿ ಅವರ ಸಮಸ್ಯೆ ಹಾಗೂ ಕುಂದುಕೊರತೆಗಳನ್ನು ಆಲಿಸಿದೆ.
ವಿವಿಧ ಗ್ರಾಮಗಳಿಂದ ಆಗಮಿಸಿದ್ದ ಸಾರ್ವಜನಿಕರು ಪಿಂಚಣಿ, ವಸತಿ, ರಸ್ತೆ, ಕುಡಿಯುವ ನೀರು, ವಿದ್ಯುತ್, ಆರೋಗ್ಯ, ಶಿಕ್ಷಣ ಸೇರಿದಂತೆ ವಿವಿಧ ಇಲಾಖೆಗೆ ಸಂಬಂಧಿಸಿದ ಸಮಸ್ಯೆಗಳು ಹಾಗೂ ಸರ್ಕಾರದಿಂದ ದೊರೆಯಬೇಕಿರುವ ಸೌಲಭ್ಯಗಳ ಕುರಿತು ನೇರವಾಗಿ ನನ್ನ ಗಮನಕ್ಕೆ ತಂದರು.
ಜನರಿಂದ ಸಲ್ಲಿಕೆಯಾದ ಪ್ರತಿಯೊಂದು ಅರ್ಜಿಯೂ ಕೇವಲ ಅರ್ಜಿಯಾಗಿ ಉಳಿಯಬಾರದು; ಅದಕ್ಕೆ ಸೂಕ್ತ ಸ್ಪಂದನೆ ಮತ್ತು ಪರಿಹಾರ ದೊರೆಯಬೇಕು. ಈ ನಿಟ್ಟಿನಲ್ಲಿ ಸ್ವೀಕರಿಸಿದ ಅರ್ಜಿಗಳನ್ನು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಆದ್ಯತೆಯ ಮೇರೆಗೆ ಪರಿಶೀಲಿಸಿ, ಅರ್ಹ ಪ್ರಕರಣಗಳನ್ನು ಕಾಲಮಿತಿಯೊಳಗೆ ವಿಲೇವಾರಿ ಮಾಡುವಂತೆ ಸೂಚಿಸಿದೆ. ದೀರ್ಘಕಾಲದಿಂದ ಬಾಕಿ ಉಳಿದಿರುವ ಸಮಸ್ಯೆಗಳಿಗೂ ಆದ್ಯತೆ ನೀಡಿ ಅಗತ್ಯ ಕ್ರಮ ಕೈಗೊಳ್ಳುವಂತೆ ನಿರ್ದೇಶನ ನೀಡಿದೆ.
ಸರ್ಕಾರದ ಯೋಜನೆಗಳು ಹಾಗೂ ಜನಪರ ಕಾರ್ಯಕ್ರಮಗಳ ಸೌಲಭ್ಯಗಳು ಅರ್ಹ ಫಲಾನುಭವಿಗಳಿಗೆ ಯಾವುದೇ ವಿಳಂಬವಿಲ್ಲದೆ ತಲುಪಬೇಕು. ಯಾವುದೇ ಅರ್ಹ ವ್ಯಕ್ತಿ ಸರ್ಕಾರಿ ಸೌಲಭ್ಯಗಳಿಂದ ವಂಚಿತರಾಗಬಾರದು. ಈ ವಿಚಾರದಲ್ಲಿ ಅಧಿಕಾರಿಗಳು ಹೆಚ್ಚಿನ ಜವಾಬ್ದಾರಿ ಮತ್ತು ಕಾಳಜಿಯಿಂದ ಕಾರ್ಯನಿರ್ವಹಿಸಬೇಕು ಎಂದು ತಿಳಿಸಿದೆ.
ಜನರು ತಮ್ಮ ಸಮಸ್ಯೆಗಳ ಪರಿಹಾರಕ್ಕಾಗಿ ಕಚೇರಿಯಿಂದ ಕಚೇರಿಗೆ ಅಲೆದಾಡುವ ಪರಿಸ್ಥಿತಿ ಇರಬಾರದು. ಆಡಳಿತವೇ ಜನರ ಬಳಿಗೆ ತೆರಳಿ ಅವರ ಅಹವಾಲುಗಳನ್ನು ಆಲಿಸಿ, ಸಾಧ್ಯವಾದಷ್ಟು ಸ್ಥಳದಲ್ಲಿಯೇ ಪರಿಹಾರ ಒದಗಿಸಬೇಕು ಎಂಬ ಉದ್ದೇಶದಿಂದ ಇಂತಹ ಪ್ರಜಾಸೇವಾ ಆಂದೋಲನಗಳನ್ನು ಆಯೋಜಿಸಲಾಗುತ್ತಿದೆ.
ಜನರ ಸಮಸ್ಯೆಗಳಿಗೆ ತ್ವರಿತವಾಗಿ ಸ್ಪಂದಿಸುವುದು, ಅವರ ಅಹವಾಲುಗಳಿಗೆ ಪರಿಣಾಮಕಾರಿ ಪರಿಹಾರ ಕಲ್ಪಿಸುವುದು ಹಾಗೂ ಪಾರದರ್ಶಕ, ಜವಾಬ್ದಾರಿಯುತ ಮತ್ತು ಜನಸ್ನೇಹಿ ಆಡಳಿತ ನೀಡುವುದು ನಮ್ಮ ಆದ್ಯತೆಯಾಗಿದೆ.
ಸಭೆಯಲ್ಲಿ ಕುಣಿಗಲ್ ಶಾಸಕರಾದ ಡಾ. ಹೆಚ್.ಡಿ.ರಂಗನಾಥ್, ಜಿಲ್ಲಾಧಿಕಾರಿಗಳಾದ ಶುಭ ಕಲ್ಯಾಣ್, ಜಿಲ್ಲಾ ಪಂಚಾಯತ್ ಸಿಇಒ ಅಶ್ವಿಜ, ತಹಶೀಲ್ದಾರರು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.
Dr. G Parameshwara
@DrParameshwara
-
Dr. G Parameshwara
@DrParameshwara
ಕೊರಟಗೆರೆ ಕ್ಷೇತ್ರದ ಗ್ರಾಮೀಣ ಭಾಗದ ಜನರಿಗೆ ಗುಣಮಟ್ಟದ ಆರೋಗ್ಯ ಸೇವೆ ಸುಲಭವಾಗಿ ದೊರೆಯಬೇಕು ಎಂಬ ಉದ್ದೇಶದಿಂದ ಆರೋಗ್ಯ ಮೂಲಸೌಕರ್ಯವನ್ನು ನಿರಂತರವಾಗಿ ಬಲಪಡಿಸಲಾಗುತ್ತಿದೆ.
ತೋವಿನಕೆರೆ ಗ್ರಾಮದಲ್ಲಿ ₹14 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಸಮುದಾಯ ಆರೋಗ್ಯ ಕೇಂದ್ರ ಉದ್ಘಾಟನೆಗೆ ಸಿದ್ಧವಾಗಿದೆ.
ಇದರ ಜೊತೆಗೆ ಬುಕ್ಕಾಪಟ್ಟಣ ಹಾಗೂ ದೊಡ್ಡಸಾಗ್ಗರೆ ಗ್ರಾಮಗಳಲ್ಲಿ ತಲಾ ₹3 ಕೋಟಿ ವೆಚ್ಚದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳ ನೂತನ ಕಟ್ಟಡಗಳು ನಿರ್ಮಾಣಗೊಂಡಿವೆ.
ಗ್ರಾಮೀಣ ಪ್ರದೇಶದ ಜನರು ಉತ್ತಮ ಚಿಕಿತ್ಸೆಗೆ ದೂರದ ಊರುಗಳಿಗೆ ತೆರಳುವ ಅವಶ್ಯಕತೆ ಕಡಿಮೆಯಾಗಬೇಕು, ಅಗತ್ಯ ಆರೋಗ್ಯ ಸೇವೆಗಳು ಅವರ ಮನೆಬಾಗಿಲಿನ ಸಮೀಪದಲ್ಲೇ ಲಭ್ಯವಾಗಬೇಕು ಎಂಬುದು ನಮ್ಮ ಆಶಯ. -
Dr. G Parameshwara
@DrParameshwara
ಯುಪಿಐ ಭಾರತದ ಡಿಜಿಟಲ್ ಆರ್ಥಿಕತೆಯನ್ನು ಜನಸಾಮಾನ್ಯರಿಗೆ ಸುಲಭಗೊಳಿಸಿದ ಸಾರ್ವಜನಿಕ ಡಿಜಿಟಲ್ ಮೂಲಸೌಕರ್ಯ. ಆದರೆ ₹2,000ಕ್ಕಿಂತ ಹೆಚ್ಚಿನ ವ್ಯಾಪಾರಿ ವಹಿವಾಟುಗಳಿಗೆ ಎಂಡಿಆರ್ ಜಾರಿಗೆ ಬರುತ್ತಿರುವ ಸಂದರ್ಭದಲ್ಲಿ, ಈ ಹೊಸ ವ್ಯವಸ್ಥೆಯಿಂದ ನಿಜವಾಗಿ ಲಾಭ ಪಡೆಯುವವರು ಯಾರು?
ಎಂಡಿಆರ್ ಅನ್ನು ವ್ಯಾಪಾರಿ ಪಾವತಿಸುವ ಸಂದರ್ಭದಲ್ಲಿ, ಅದರ ಮೂಲಕ ಬ್ಯಾಂಕ್ಗಳು, ಪಾವತಿ ಆ್ಯಪ್ಗಳು ಮತ್ತು ಇತರ ಮಧ್ಯವರ್ತಿಗಳಿಗೆ ಆದಾಯದ ಅವಕಾಶ ಸೃಷ್ಟಿಯಾಗುತ್ತದೆ. ಈಗಾಗಲೇ ಯುಪಿಐ ವಹಿವಾಟಿನ ದೊಡ್ಡ ಪಾಲನ್ನು ಪ್ರಮುಖ ಖಾಸಗಿ ಪಾವತಿ ವೇದಿಕೆಗಳು ನಿರ್ವಹಿಸುತ್ತಿವೆ.
ಜನರ ಅನುಕೂಲಕ್ಕಾಗಿ ನಿರ್ಮಿಸಿದ ಸಾರ್ವಜನಿಕ ಡಿಜಿಟಲ್ ವ್ಯವಸ್ಥೆ, ಕೆಲವೇ ದೊಡ್ಡ ಖಾಸಗಿ ಸಂಸ್ಥೆಗಳ ಆದಾಯದ ಅವಕಾಶವಾಗಬಾರದು. ವ್ಯಾಪಾರಿಗಳ ಮೇಲಿನ ಹೊರೆ ಹೆಚ್ಚಿಸಿ, ಅದರ ಲಾಭವನ್ನು ಕೆಲವೇ ಸಂಸ್ಥೆಗಳು ಪಡೆಯುವ ವ್ಯವಸ್ಥೆ ಏಕೆ? ಯುಪಿಐ ಜನರಿಗಾಗಿ ಇರಬೇಕೇ ಹೊರತು, ಕೆಲವರ ಆದಾಯದ ಮೂಲವಾಗಬಾರದು.
UPI is a public digital infrastructure that made digital payments accessible to millions. But with MDR on merchant transactions above ₹2,000, the question is: who really benefits?
When merchants pay MDR, banks, payment apps and other intermediaries gain a new revenue stream. A large share of UPI transactions is already handled by major private payment platforms.
A public digital system built for people should not become a revenue source for a few large private players.
Why burden merchants for the benefit of a few? UPI should remain for the people. -
Dr. G Parameshwara
@DrParameshwara
UPI is a key public digital infrastructure that has transformed India’s payment ecosystem. Simple, accessible and low-cost, it has become part of everyday transactions for everyone from small merchants to crores of citizens.
Before introducing any fee-based policy into such a system, the Union Government must clearly explain how it will affect merchants, consumers and the wider digital economy.
Why impose additional costs on merchants, and who ultimately benefits from them?
Why has it become necessary to alter the very character of India’s digital payment system?
ಯುಪಿಐ ದೇಶದ ಡಿಜಿಟಲ್ ಪಾವತಿ ವ್ಯವಸ್ಥೆಗೆ ವೇಗ ನೀಡಿದ ಪ್ರಮುಖ ಸಾರ್ವಜನಿಕ ಮೂಲಸೌಕರ್ಯ. ಸರಳ, ಸುಲಭ ಹಾಗೂ ಕಡಿಮೆ ವೆಚ್ಚದ ಪಾವತಿ ವ್ಯವಸ್ಥೆಯಾಗಿ ಇದು ಸಣ್ಣ ವ್ಯಾಪಾರಿಗಳಿಂದ ಹಿಡಿದು ಕೋಟ್ಯಂತರ ಜನರ ದೈನಂದಿನ ವಹಿವಾಟಿನ ಭಾಗವಾಗಿದೆ.
ಇಂತಹ ವ್ಯವಸ್ಥೆಯಲ್ಲಿ ಶುಲ್ಕದ ನೀತಿ ಜಾರಿಗೆ ತರುವ ಮುನ್ನ, ಅದರ ಪರಿಣಾಮ ವ್ಯಾಪಾರಿಗಳು, ಗ್ರಾಹಕರು ಮತ್ತು ಒಟ್ಟಾರೆ ಡಿಜಿಟಲ್ ಆರ್ಥಿಕತೆಯ ಮೇಲೆ ಹೇಗಿರಲಿದೆ ಎಂಬುದನ್ನು ಕೇಂದ್ರ ಸರ್ಕಾರ ಸ್ಪಷ್ಟಪಡಿಸಬೇಕು.
ವ್ಯಾಪಾರಿಯ ಮೇಲೆ ಹೆಚ್ಚುವರಿ ವೆಚ್ಚದ ಹೊರೆ ಹಾಕಿ, ಅದರ ಪ್ರಯೋಜನ ಯಾರಿಗೆ?
ಭಾರತದ ಡಿಜಿಟಲ್ ಪಾವತಿ ವ್ಯವಸ್ಥೆಯ ಸ್ವರೂಪವನ್ನೇ ಬದಲಿಸುವ ಅಗತ್ಯ ಏಕೆ ಬಂತು? -
Dr. G Parameshwara
@DrParameshwara
ನಗದು ಬಳಕೆಯನ್ನು ಕಡಿಮೆ ಮಾಡಿ ಡಿಜಿಟಲ್ ಪಾವತಿಯನ್ನು ಉತ್ತೇಜಿಸುವ ಉದ್ದೇಶದಿಂದ ದೇಶಾದ್ಯಂತ UPI ಬಳಕೆ ವೇಗವಾಗಿ ವೃದ್ಧಿಸಿದೆ. ಜನಸಾಮಾನ್ಯರಿಂದ ಹಿಡಿದು ಸಣ್ಣ ವ್ಯಾಪಾರಿಗಳವರೆಗೆ ಕೋಟ್ಯಂತರ ಜನರು ಈ ಸರಳ ಪಾವತಿ ವ್ಯವಸ್ಥೆಯನ್ನು ಅವಲಂಬಿಸಿದ್ದಾರೆ.
ಇಂತಹ ಸಂದರ್ಭದಲ್ಲಿ ವ್ಯಾಪಾರ ವಹಿವಾಟುಗಳ ಮೇಲೆ ಆರ್ಥಿಕ ಹೊರೆಯನ್ನು ಹೆಚ್ಚಿಸದಂತೆ ನೋಡಿಕೊಳ್ಳುವುದು ಅಗತ್ಯ. ಡಿಜಿಟಲ್ ಆರ್ಥಿಕತೆಯನ್ನು ವಿಸ್ತರಿಸುವ ನೀತಿಗಳೇ ಮುಂದುವರಿಯಬೇಕು ಹೊರತು ಅದರ ಬಳಕೆಗೆ ಅಡ್ಡಿಯಾಗುವ ಶುಲ್ಕದ ವ್ಯವಸ್ಥೆಗಳಲ್ಲ.
UPI use has grown rapidly across the country as part of efforts to reduce cash transactions and promote digital payments. From ordinary citizens to small merchants, crores of people now depend on this simple payment system.
At such a time, it is important to ensure that merchant transactions are not burdened with additional costs. Policies should continue to expand the digital economy, not introduce charges that could discourage people from using digital payments. -
Dr. G Parameshwara
@DrParameshwara
UPI ಪಾವತಿ ವ್ಯವಸ್ಥೆಯನ್ನು ಉಚಿತ ಎಂದು ಹೇಳಿದರೂ, ವ್ಯಾಪಾರಿಗಳಿಂದ MDR ವಸೂಲಿ ಮಾಡುವ ವ್ಯವಸ್ಥೆ ಜಾರಿಯಾದರೆ ಅದರ ಪರಿಣಾಮ ವ್ಯಾಪಾರದ ಒಟ್ಟಾರೆ ವೆಚ್ಚದ ಮೇಲೆ ಬೀಳುವ ಸಾಧ್ಯತೆಯನ್ನು ನಿರಾಕರಿಸಲಾಗುವುದಿಲ್ಲ. ಹೆಚ್ಚುವರಿ ವಹಿವಾಟು ವೆಚ್ಚವು ಅಂತಿಮವಾಗಿ ಸರಕು ಮತ್ತು ಸೇವೆಗಳ ಬೆಲೆಯಲ್ಲಿ ಪ್ರತಿಫಲಿಸಿದರೆ, ಅದರ ಪರೋಕ್ಷ ಹೊರೆ ಗ್ರಾಹಕರ ಮೇಲೆಯೇ ಬೀಳಲಿದೆ.
ದೇಶದ ಡಿಜಿಟಲ್ ಪಾವತಿ ವ್ಯವಸ್ಥೆಯನ್ನು ಜನಸ್ನೇಹಿ ಹಾಗೂ ವೆಚ್ಚದ ಹೊರೆಯಿಲ್ಲದಂತೆ ಬೆಳೆಸಬೇಕಾದ ಸಂದರ್ಭದಲ್ಲಿ, ಇಂತಹ ಶುಲ್ಕ ವ್ಯವಸ್ಥೆಯು ಸಣ್ಣ ವ್ಯಾಪಾರಿಗಳು ಮತ್ತು ಸಾಮಾನ್ಯ ಗ್ರಾಹಕರ ಮೇಲೆ ಹೆಚ್ಚುವರಿ ಒತ್ತಡ ಉಂಟುಮಾಡುವಂತಾಗಬಾರದು.
Even if UPI is described as free for users, introducing MDR for merchants could increase the overall cost of doing business. If these additional transaction costs are reflected in the prices of goods and services, the burden may ultimately fall indirectly on consumers.
At a time when digital payments should be made more people-friendly and affordable, such charges must not place additional pressure on small merchants and ordinary consumers. -
Dr. G Parameshwara
@DrParameshwara
₹2,000ಕ್ಕಿಂತ ಹೆಚ್ಚಿನ UPI ವ್ಯಾಪಾರ ವಹಿವಾಟುಗಳಿಗೆ ಶುಲ್ಕ ವಿಧಿಸುವ ಕೇಂದ್ರ ಸರ್ಕಾರದ ಹೊಸ ನಿಯಮ ಡಿಜಿಟಲ್ ಪಾವತಿ ವ್ಯವಸ್ಥೆಯ ವಿಸ್ತರಣೆಯ ಕುರಿತು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಜೊತೆಗೆ, ದೇಶದ ಡಿಜಿಟಲ್ ವಹಿವಾಟಿನ ಮೇಲೆ ಇದು ಗಂಭೀರ ಪರಿಣಾಮ ಬೀರಲಿದೆ.
UPI ರೀತಿಯ ಜನಸ್ನೇಹಿ ಪಾವತಿ ವ್ಯವಸ್ಥೆಯನ್ನು ಮತ್ತಷ್ಟು ಉತ್ತೇಜಿಸಿ, ಅದರ ವ್ಯಾಪ್ತಿಯನ್ನು ವಿಸ್ತರಿಸುವ ಬದಲು ಕೇಂದ್ರ ಸರ್ಕಾರ ಶುಲ್ಕದ ಹೊರೆ ಹೊರಿಸಿದೆ.
ಡಿಜಿಟಲ್ ಆರ್ಥಿಕತೆಯ ವೇಗಕ್ಕೆ ಬ್ರೇಕ್ ಹಾಕುವ ಇಂತಹ ನಿರ್ಧಾರಗಳ ಅಗತ್ಯವೇನಿದೆ ಎಂಬುದನ್ನು ಕೇಂದ್ರ ಸರ್ಕಾರ ಮತ್ತೊಮ್ಮೆ ಯೋಚಿಸಬೇಕು.
The Union Government’s new rule imposing charges on UPI merchant transactions above ₹2,000 raises serious questions about the future expansion of digital payments and could have a significant impact on the country’s digital transactions.
Instead of further promoting a people-friendly payment system like UPI and expanding its reach, the Union Government is adding a new cost burden.
The Government must reconsider whether decisions that could slow the momentum of India’s digital economy are necessary at all. -
Dr. G Parameshwara
@DrParameshwara
The development of the State, addressing people’s concerns and protecting farmers affected by drought remain our Government’s foremost priorities. It is not appropriate for the Opposition to view every issue through a political lens.
Our Government is working to hold a comprehensive discussion on the drought situation, take the Opposition into confidence and find effective ways to support farmers in distress.
*Need for Discussion and Solutions on Drought: The entire State is facing drought conditions. The Legislature must discuss the situation in detail, the measures required for drought relief and the assistance to be sought from the Union Government. It is with this objective that a special session has been convened. The Kasturirangan Report will also be discussed.
Opposition parties should actively participate in discussions concerning people’s issues. In a democracy, everyone has the right to protest and the Government does not oppose it. However, there is a time and context for everything, and every issue should not be turned into a political matter. People are watching.
*Special Priority to Coastal Development: Our Government has also given special priority to the comprehensive development of the coastal region, with a focus on tourism, roads, bridges and other infrastructure.
For the first time, a Cabinet meeting was held in Mangaluru, where important decisions were taken on 61 issues. Our objective is to implement projects that directly benefit the people of the coastal region.
*Govt Committed to Fulfilling Manifesto Promises: An election manifesto is a guiding document for a Government, and fulfilling the promises made to the people is our responsibility. The commitments made under Siddaramaiah’s leadership over the past three years have been fulfilled, and the same commitment continues under Chief Minister D.K. Shivakumar’s leadership, while drawing on Siddaramaiah’s experience and views.
Elections to local bodies will be conducted, followed in phases by elections to Zilla Panchayats, Taluk Panchayats and Gram Panchayats.
*Steps Underway to Fill 72,000 Vacancies: The State Government has also initiated recruitment to fill vacancies across departments, with the process underway for 72,000 posts. In the Revenue Department alone, more than 900 Surveyor posts are being filled. Further vacancies will be filled based on departmental requirements.
- My response to the media near my residence today. -
Dr. G Parameshwara
@DrParameshwara
ರಾಜ್ಯದ ಅಭಿವೃದ್ಧಿ, ಜನರ ಸಮಸ್ಯೆಗಳಿಗೆ ಪರಿಹಾರ ಹಾಗೂ ಬರದಿಂದ ಸಂಕಷ್ಟಕ್ಕೊಳಗಾಗಿರುವ ರೈತರ ಹಿತವೇ ಸರ್ಕಾರದ ಮೊದಲ ಆದ್ಯತೆಯಾಗಿದೆ. ವಿಪಕ್ಷದವರು ಪ್ರತಿಯೊಂದು ವಿಷಯವನ್ನೂ ರಾಜಕೀಯ ದೃಷ್ಟಿಯಿಂದ ನೋಡುವುದು ಸರಿಯಲ್ಲ.
ರಾಜ್ಯದಲ್ಲಿ ಎದುರಾಗಿರುವ ಬರ ಪರಿಸ್ಥಿತಿಯ ಕುರಿತು ಸಮಗ್ರವಾಗಿ ಚರ್ಚಿಸಿ, ವಿರೋಧ ಪಕ್ಷಗಳನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ರೈತರನ್ನು ಸಂಕಷ್ಟದಿಂದ ಹೊರತರುವ ನಿಟ್ಟಿನಲ್ಲಿ ಸರ್ಕಾರ ಕಾರ್ಯನಿರ್ವಹಿಸುತ್ತಿದೆ.
*ಬರದ ಬಗ್ಗೆ ಚರ್ಚಿಸಿ ಪರಿಹಾರ ಕಂಡುಕೊಳ್ಳಬೇಕಿದೆ : ಇಡೀ ರಾಜ್ಯದಲ್ಲಿ ಬರ ಪರಿಸ್ಥಿತಿ ಎದುರಾಗಿದೆ. ಇದರ ಬಗ್ಗೆ ಸದನದಲ್ಲಿ ಸಮಗ್ರ ಚರ್ಚೆಯಾಗಬೇಕು. ಬರ ಪರಿಹಾರಕ್ಕೆ ಯಾವ ಕ್ರಮಗಳನ್ನು ಕೈಗೊಳ್ಳಬೇಕು, ಕೇಂದ್ರ ಸರ್ಕಾರದ ಯಾವ ರೀತಿ ನೆರವು ಕೇಳಬೇಕು ಎಂಬುದರ ಕುರಿತು ಒಗ್ಗಟ್ಟಿನಿಂದ ಚರ್ಚಿಸಬೇಕಿದೆ. ಇದೇ ಉದ್ದೇಶದಿಂದ ವಿಶೇಷ ಅಧಿವೇಶನವನ್ನು ಕರೆಯಲಾಗಿದೆ. ಬರ ಪರಿಸ್ಥಿತಿಯ ಜೊತೆಗೆ ಕಸ್ತೂರಿರಂಗನ್ ವರದಿಯ ಕುರಿತೂ ಚರ್ಚೆಯಾಗಲಿದೆ.
ವಿರೋಧ ಪಕ್ಷಗಳು ಜನರ ಸಮಸ್ಯೆಗಳಿಗೆ ಸಂಬಂಧಿಸಿದ ವಿಷಯಗಳ ಚರ್ಚೆಯಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಭಟನೆ ನಡೆಸುವ ಹಕ್ಕು ಎಲ್ಲರಿಗೂ ಇದೆ. ಅದನ್ನು ಸರ್ಕಾರ ವಿರೋಧಿಸುವುದಿಲ್ಲ. ಆದರೆ ಪ್ರತಿಯೊಂದಕ್ಕೂ ಸಮಯ ಮತ್ತು ಸಂದರ್ಭವಿದ್ದು, ಎಲ್ಲ ವಿಷಯಗಳನ್ನೂ ರಾಜಕೀಯಕ್ಕೆ ಬಳಸಿಕೊಳ್ಳುವುದು ಸೂಕ್ತವಲ್ಲ. ಜನರು ಎಲ್ಲವನ್ನೂ ಗಮನಿಸುತ್ತಿದ್ದಾರೆ.
*ಕರಾವಳಿ ಅಭಿವೃದ್ಧಿಗೆ ವಿಶೇಷ ಆದ್ಯತೆ : ಕರಾವಳಿ ಪ್ರದೇಶದ ಸಮಗ್ರ ಅಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು ಪ್ರವಾಸೋದ್ಯಮ, ರಸ್ತೆ, ಸೇತುವೆ ಹಾಗೂ ಇತರೆ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಸರ್ಕಾರ ಆದ್ಯತೆ ನೀಡಿದೆ.
ಇತಿಹಾಸದಲ್ಲೇ ಮೊದಲ ಬಾರಿಗೆ ಮಂಗಳೂರಿನಲ್ಲಿ ಸಚಿವ ಸಂಪುಟ ಸಭೆ ನಡೆಸಿ 61 ವಿಷಯಗಳಿಗೆ ಸಂಬಂಧಿಸಿದ ಮಹತ್ವದ ನಿರ್ಣಯಗಳನ್ನು ಕೈಗೊಂಡಿದ್ದೇವೆ. ಕರಾವಳಿ ಭಾಗದ ಜನರಿಗೆ ನೇರವಾಗಿ ಅನುಕೂಲವಾಗುವ ಅಭಿವೃದ್ಧಿ ಯೋಜನೆಗಳನ್ನು ಅನುಷ್ಠಾನಗೊಳಿಸುವುದು ಸರ್ಕಾರದ ಉದ್ದೇಶ. ಜನಸಮುದಾಯಕ್ಕೆ ಅನುಕೂಲ ಕಲ್ಪಿಸುವುದೇ ನಮ್ಮ ಪ್ರಥಮ ಆದ್ಯತೆ.
*ಪ್ರಣಾಳಿಕೆಯ ಭರವಸೆಗಳನ್ನು ಈಡೇರಿಸುವುದು ಸರ್ಕಾರದ ಬದ್ಧತೆ : ಚುನಾವಣಾ ಪ್ರಣಾಳಿಕೆ ಸರ್ಕಾರಕ್ಕೆ ಮೂಲಗ್ರಂಥವಿದ್ದಂತೆ. ಜನರಿಗೆ ನೀಡಿರುವ ಭರವಸೆಗಳನ್ನು ಈಡೇರಿಸುವುದು ನಮ್ಮ ಜವಾಬ್ದಾರಿ. ಕಳೆದ ಮೂರು ವರ್ಷಗಳಲ್ಲಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ನೀಡಿದ ಭರವಸೆಗಳನ್ನು ಈಡೇರಿಸಲಾಗಿದೆ. ಅದೇ ಬದ್ಧತೆಯನ್ನು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ನೇತೃತ್ವದಲ್ಲಿ ಮುಂದುವರಿಸಲಾಗುತ್ತಿದೆ. ಸಿದ್ದರಾಮಯ್ಯ ಅವರ ಅನುಭವ ಮತ್ತು ಅಭಿಪ್ರಾಯಗಳನ್ನು ಪಡೆದುಕೊಂಡೇ ಸರ್ಕಾರ ಕಾರ್ಯನಿರ್ವಹಿಸುತ್ತಿದೆ.
ಸ್ಥಳೀಯ ಸಂಸ್ಥೆಗಳ ಚುನಾವಣೆಗಳನ್ನು ನಡೆಸಲಾಗುವುದು. ನಂತರ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಹಾಗೂ ಗ್ರಾಮ ಪಂಚಾಯಿತಿ ಚುನಾವಣೆಗಳನ್ನೂ ಹಂತ ಹಂತವಾಗಿ ನಡೆಸಲಾಗುವುದು.
*72 ಸಾವಿರ ಹುದ್ದೆಗಳ ಭರ್ತಿಗೆ ಕ್ರಮ : ರಾಜ್ಯ ಸರ್ಕಾರ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಕ್ರಮ ಕೈಗೊಂಡಿದ್ದು, ಒಟ್ಟು 72 ಸಾವಿರ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ನಡೆಯುತ್ತಿದೆ. ಕಂದಾಯ ಇಲಾಖೆಗೆ ಸಂಬಂಧಿಸಿದಂತೆ 900ಕ್ಕೂ ಹೆಚ್ಚು ಸರ್ವೇಯರ್ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ಇಲಾಖೆಗಳ ಅವಶ್ಯಕತೆಗೆ ಅನುಗುಣವಾಗಿ ಮುಂದಿನ ದಿನಗಳಲ್ಲಿಯೂ ಖಾಲಿ ಹುದ್ದೆಗಳ ಭರ್ತಿಗೆ ಕ್ರಮ ಕೈಗೊಳ್ಳಲಾಗುವುದು.
- ಇಂದು ನನ್ನ ನಿವಾಸದ ಬಳಿ ಮಾಧ್ಯಮದವರೊಂದಿಗೆ ಮಾತನಾಡಿದೆ. -
Dr. G Parameshwara
@DrParameshwara
My best wishes to the Indian contingent participating in the 20th Asian Games at Aichi-Nagoya, Japan.
As our athletes take to one of Asia’s biggest sporting stages, I wish each of them strength, confidence and success in their respective events.
I am proud to see more than 20 athletes from Karnataka representing India across different disciplines. Their hard work, discipline and commitment are an inspiration to young sportspersons across our State.
May all our athletes perform to the best of their abilities and bring glory to Karnataka and India.
Best wishes to Team India!
ಜಪಾನ್ನ ಐಚಿ-ನಗೋಯಾದಲ್ಲಿ ನಡೆಯಲಿರುವ 20ನೇ ಏಷ್ಯನ್ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುತ್ತಿರುವ ಭಾರತೀಯ ಕ್ರೀಡಾಪಟುಗಳಿಗೆ ನನ್ನ ಹೃತ್ಪೂರ್ವಕ ಶುಭಾಶಯಗಳು.
ಏಷ್ಯಾದ ಅತಿದೊಡ್ಡ ಕ್ರೀಡಾ ವೇದಿಕೆಗಳಲ್ಲಿ ಒಂದಾದ ಈ ಕ್ರೀಡಾಕೂಟದಲ್ಲಿ ಭಾರತವನ್ನು ಪ್ರತಿನಿಧಿಸುತ್ತಿರುವ ನಮ್ಮ ಕ್ರೀಡಾಪಟುಗಳು ಆತ್ಮವಿಶ್ವಾಸದಿಂದ ಕಣಕ್ಕಿಳಿದು ಅತ್ಯುತ್ತಮ ಸಾಧನೆ ಮಾಡಲಿ ಎಂದು ಹಾರೈಸುತ್ತೇನೆ.
ವಿವಿಧ ಕ್ರೀಡಾ ವಿಭಾಗಗಳಲ್ಲಿ ಕರ್ನಾಟಕದ 20ಕ್ಕೂ ಹೆಚ್ಚು ಕ್ರೀಡಾಪಟುಗಳು ಭಾರತವನ್ನು ಪ್ರತಿನಿಧಿಸುತ್ತಿರುವುದನ್ನು ನೋಡಿದಾಗ ಹೆಮ್ಮೆ ಎನಿಸುತ್ತಿದೆ. ಅವರ ಪರಿಶ್ರಮ, ಶಿಸ್ತು ಮತ್ತು ಕ್ರೀಡೆಯ ಮೇಲಿನ ಬದ್ಧತೆ ನಮ್ಮ ರಾಜ್ಯದ ಯುವ ಕ್ರೀಡಾಪಟುಗಳಿಗೆ ಸ್ಫೂರ್ತಿಯಾಗಿದೆ.
ನಮ್ಮ ಎಲ್ಲಾ ಕ್ರೀಡಾಳುಗಳು ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಅತ್ಯುತ್ತಮ ಪ್ರದರ್ಶನ ನೀಡಿ ಕರ್ನಾಟಕ ಮತ್ತು ಭಾರತದ ಕೀರ್ತಿಯನ್ನು ಮತ್ತಷ್ಟು ಎತ್ತರಕ್ಕೇರಿಸಲಿ.
#asiangames2026 #teamindia -
Dr. G Parameshwara
@DrParameshwara
ಮಂಗಳೂರಿನಲ್ಲಿ ಇಂದು ನಡೆದ ವಿಶೇಷ ಸಚಿವ ಸಂಪುಟ ಸಭೆಯಲ್ಲಿ ಕರಾವಳಿ ಭಾಗದ ಸಮಗ್ರ ಅಭಿವೃದ್ಧಿಗೆ ಒತ್ತು ನೀಡುವ ಹಲವು ಮಹತ್ವದ ನಿರ್ಣಯಗಳನ್ನು ಕೈಗೊಳ್ಳಲಾಗಿದೆ.
ಪ್ರವಾಸೋದ್ಯಮ ಅಭಿವೃದ್ಧಿ, ಮೀನುಗಾರಿಕಾ ವಲಯಕ್ಕೆ ಹೆಚ್ಚಿನ ಉತ್ತೇಜನ, ರಸ್ತೆ ಮತ್ತು ಇತರೆ ಮೂಲಸೌಕರ್ಯಗಳ ಬಲವರ್ಧನೆ, ಧಾರ್ಮಿಕ ಹಾಗೂ ಸಾಂಸ್ಕೃತಿಕ ತಾಣಗಳ ಅಭಿವೃದ್ಧಿ, ಉದ್ಯೋಗ ಸೃಷ್ಟಿ ಮತ್ತು ಕರಾವಳಿ ಜನರ ಜೀವನಮಟ್ಟ ಸುಧಾರಣೆಗೆ ಪೂರಕವಾಗುವ ಹಲವು ವಿಷಯಗಳಿಗೆ ಸಭೆಯಲ್ಲಿ ಆದ್ಯತೆ ನೀಡಲಾಗಿದೆ.
ಕರಾವಳಿಯ ಆರ್ಥಿಕ, ಸಾಮಾಜಿಕ ಹಾಗೂ ಪ್ರವಾಸೋದ್ಯಮ ಸಾಮರ್ಥ್ಯವನ್ನು ಇನ್ನಷ್ಟು ವಿಸ್ತರಿಸುವ ನಿಟ್ಟಿನಲ್ಲಿ ಕೈಗೊಂಡ ಪ್ರಮುಖ ನಿರ್ಣಯಗಳು ಹೀಗಿವೆ..
At the Special Cabinet Meeting held in Mangaluru today, several important decisions were taken with a focus on the comprehensive development of Coastal Karnataka.
Priority was given to tourism development, greater support for the fisheries sector, strengthening roads and other infrastructure, development of religious and cultural destinations, employment generation, and initiatives aimed at improving the quality of life of people in the coastal region.
The key decisions taken to further expand the economic, social and tourism potential of Coastal Karnataka are as follows..
#cabinetdecisions -
Dr. G Parameshwara
@DrParameshwara
ಮಂಗಳೂರಿನಲ್ಲಿ ಇಂದು ನಡೆದ ವಿಶೇಷ ಸಚಿವ ಸಂಪುಟ ಸಭೆಯಲ್ಲಿ ಕರಾವಳಿ ಭಾಗದ ಸಮಗ್ರ ಅಭಿವೃದ್ಧಿಗೆ ಒತ್ತು ನೀಡುವ ಹಲವು ಮಹತ್ವದ ನಿರ್ಣಯಗಳನ್ನು ಕೈಗೊಳ್ಳಲಾಗಿದೆ.
ಪ್ರವಾಸೋದ್ಯಮ ಅಭಿವೃದ್ಧಿ, ಮೀನುಗಾರಿಕಾ ವಲಯಕ್ಕೆ ಹೆಚ್ಚಿನ ಉತ್ತೇಜನ, ರಸ್ತೆ ಮತ್ತು ಇತರೆ ಮೂಲಸೌಕರ್ಯಗಳ ಬಲವರ್ಧನೆ, ಧಾರ್ಮಿಕ ಹಾಗೂ ಸಾಂಸ್ಕೃತಿಕ ತಾಣಗಳ ಅಭಿವೃದ್ಧಿ, ಉದ್ಯೋಗ ಸೃಷ್ಟಿ ಮತ್ತು ಕರಾವಳಿ ಜನರ ಜೀವನಮಟ್ಟ ಸುಧಾರಣೆಗೆ ಪೂರಕವಾಗುವ ಹಲವು ವಿಷಯಗಳಿಗೆ ಸಭೆಯಲ್ಲಿ ಆದ್ಯತೆ ನೀಡಲಾಗಿದೆ.
ಕರಾವಳಿಯ ಆರ್ಥಿಕ, ಸಾಮಾಜಿಕ ಹಾಗೂ ಪ್ರವಾಸೋದ್ಯಮ ಸಾಮರ್ಥ್ಯವನ್ನು ಇನ್ನಷ್ಟು ವಿಸ್ತರಿಸುವ ನಿಟ್ಟಿನಲ್ಲಿ ಕೈಗೊಂಡ ಪ್ರಮುಖ ನಿರ್ಣಯಗಳು ಹೀಗಿವೆ..
At the Special Cabinet Meeting held in Mangaluru today, several important decisions were taken with a focus on the comprehensive development of Coastal Karnataka.
Priority was given to tourism development, greater support for the fisheries sector, strengthening roads and other infrastructure, development of religious and cultural destinations, employment generation, and initiatives aimed at improving the quality of life of people in the coastal region.
The key decisions taken to further expand the economic, social and tourism potential of Coastal Karnataka are as follows..
#cabinetdecisions -
Dr. G Parameshwara
@DrParameshwara
ಮಂಗಳೂರಿನಲ್ಲಿ ಇಂದು ನಡೆದ ವಿಶೇಷ ಸಚಿವ ಸಂಪುಟ ಸಭೆಯಲ್ಲಿ ಕರಾವಳಿ ಭಾಗದ ಸಮಗ್ರ ಅಭಿವೃದ್ಧಿಗೆ ಒತ್ತು ನೀಡುವ ಹಲವು ಮಹತ್ವದ ನಿರ್ಣಯಗಳನ್ನು ಕೈಗೊಳ್ಳಲಾಗಿದೆ.
ಪ್ರವಾಸೋದ್ಯಮ ಅಭಿವೃದ್ಧಿ, ಮೀನುಗಾರಿಕಾ ವಲಯಕ್ಕೆ ಹೆಚ್ಚಿನ ಉತ್ತೇಜನ, ರಸ್ತೆ ಮತ್ತು ಇತರೆ ಮೂಲಸೌಕರ್ಯಗಳ ಬಲವರ್ಧನೆ, ಧಾರ್ಮಿಕ ಹಾಗೂ ಸಾಂಸ್ಕೃತಿಕ ತಾಣಗಳ ಅಭಿವೃದ್ಧಿ, ಉದ್ಯೋಗ ಸೃಷ್ಟಿ ಮತ್ತು ಕರಾವಳಿ ಜನರ ಜೀವನಮಟ್ಟ ಸುಧಾರಣೆಗೆ ಪೂರಕವಾಗುವ ಹಲವು ವಿಷಯಗಳಿಗೆ ಸಭೆಯಲ್ಲಿ ಆದ್ಯತೆ ನೀಡಲಾಗಿದೆ.
ಕರಾವಳಿಯ ಆರ್ಥಿಕ, ಸಾಮಾಜಿಕ ಹಾಗೂ ಪ್ರವಾಸೋದ್ಯಮ ಸಾಮರ್ಥ್ಯವನ್ನು ಇನ್ನಷ್ಟು ವಿಸ್ತರಿಸುವ ನಿಟ್ಟಿನಲ್ಲಿ ಕೈಗೊಂಡ ಪ್ರಮುಖ ನಿರ್ಣಯಗಳು ಹೀಗಿವೆ..
At the Special Cabinet Meeting held in Mangaluru today, several important decisions were taken with a focus on the comprehensive development of Coastal Karnataka.
Priority was given to tourism development, greater support for the fisheries sector, strengthening roads and other infrastructure, development of religious and cultural destinations, employment generation, and initiatives aimed at improving the quality of life of people in the coastal region.
The key decisions taken to further expand the economic, social and tourism potential of Coastal Karnataka are as follows..
#cabinetdecisions -
Dr. G Parameshwara
@DrParameshwara
ಕರಾವಳಿ ಭಾಗದ ಯುವ ಕ್ರೀಡಾಪಟುಗಳಿಗೆ ಉತ್ತಮ ಅವಕಾಶಗಳನ್ನು ಕಲ್ಪಿಸಿ, ಕ್ರೀಡಾ ಪ್ರತಿಭೆಗಳಿಗೆ ಅಗತ್ಯ ಮೂಲಸೌಕರ್ಯ ಒದಗಿಸುವ ನಿಟ್ಟಿನಲ್ಲಿ ನಮ್ಮ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ.
ಮಂಗಳೂರಿನ ಮಂಗಳ ಕ್ರೀಡಾಂಗಣವನ್ನು ₹20 ಕೋಟಿ ವೆಚ್ಚದಲ್ಲಿ ಅಂತರರಾಷ್ಟ್ರೀಯ ದರ್ಜೆಯ ಕ್ರೀಡಾಂಗಣವಾಗಿ ಅಭಿವೃದ್ಧಿಪಡಿಸಲು ಸಚಿವ ಸಂಪುಟ ತೀರ್ಮಾನಿಸಿದೆ. ಜೊತೆಗೆ, ಉಡುಪಿಯ ಜಿಲ್ಲಾ ಕ್ರೀಡಾಂಗಣದಲ್ಲಿ ₹10 ಕೋಟಿ ವೆಚ್ಚದಲ್ಲಿ ಸಿಂಥೆಟಿಕ್ ಟ್ರ್ಯಾಕ್ ಅಳವಡಿಸಲು ಅನುಮೋದನೆ ನೀಡಲಾಗಿದೆ.
ಕರಾವಳಿಯ ಪ್ರತಿಭಾವಂತ ಕ್ರೀಡಾಪಟುಗಳಿಗೆ ತಮ್ಮ ಸಾಮರ್ಥ್ಯವನ್ನು ಮತ್ತಷ್ಟು ಬೆಳೆಸಿಕೊಳ್ಳಲು ಗುಣಮಟ್ಟದ ಕ್ರೀಡಾ ಸೌಲಭ್ಯಗಳು ದೊರೆಯಬೇಕು ಎಂಬುದು ನಮ್ಮ ಸರ್ಕಾರದ ಆಶಯ.
Our Government has taken an important step to create better opportunities for young athletes in Coastal Karnataka and provide the infrastructure needed to nurture sporting talent.
The Cabinet has decided to develop Mangala Stadium in Mangaluru into an international-standard sports stadium at a cost of ₹20 crore. Approval has also been given to install a synthetic track at the Udupi District Stadium at a cost of ₹10 crore.
Our aim is to ensure that talented athletes from the coastal region have access to quality sports facilities to further develop their potential. -
Dr. G Parameshwara
@DrParameshwara
ಮಂಗಳೂರಿನಲ್ಲಿ ಇಂದು ನಡೆದ ವಿಶೇಷ ಸಚಿವ ಸಂಪುಟ ಸಭೆಯಲ್ಲಿ ಕರಾವಳಿ ಭಾಗದ ಸಮಗ್ರ ಅಭಿವೃದ್ಧಿಗೆ ಒತ್ತು ನೀಡುವ ಹಲವು ಮಹತ್ವದ ನಿರ್ಣಯಗಳನ್ನು ಕೈಗೊಳ್ಳಲಾಗಿದೆ.
ಪ್ರವಾಸೋದ್ಯಮ ಅಭಿವೃದ್ಧಿ, ಮೀನುಗಾರಿಕಾ ವಲಯಕ್ಕೆ ಹೆಚ್ಚಿನ ಉತ್ತೇಜನ, ರಸ್ತೆ ಮತ್ತು ಇತರೆ ಮೂಲಸೌಕರ್ಯಗಳ ಬಲವರ್ಧನೆ, ಧಾರ್ಮಿಕ ಹಾಗೂ ಸಾಂಸ್ಕೃತಿಕ ತಾಣಗಳ ಅಭಿವೃದ್ಧಿ, ಉದ್ಯೋಗ ಸೃಷ್ಟಿ ಮತ್ತು ಕರಾವಳಿ ಜನರ ಜೀವನಮಟ್ಟ ಸುಧಾರಣೆಗೆ ಪೂರಕವಾಗುವ ಹಲವು ವಿಷಯಗಳಿಗೆ ಸಭೆಯಲ್ಲಿ ಆದ್ಯತೆ ನೀಡಲಾಗಿದೆ.
ಕರಾವಳಿಯ ಆರ್ಥಿಕ, ಸಾಮಾಜಿಕ ಹಾಗೂ ಪ್ರವಾಸೋದ್ಯಮ ಸಾಮರ್ಥ್ಯವನ್ನು ಇನ್ನಷ್ಟು ವಿಸ್ತರಿಸುವ ನಿಟ್ಟಿನಲ್ಲಿ ಕೈಗೊಂಡ ಪ್ರಮುಖ ನಿರ್ಣಯಗಳು ಹೀಗಿವೆ..
At the Special Cabinet Meeting held in Mangaluru today, several important decisions were taken with a focus on the comprehensive development of Coastal Karnataka.
Priority was given to tourism development, greater support for the fisheries sector, strengthening roads and other infrastructure, development of religious and cultural destinations, employment generation, and initiatives aimed at improving the quality of life of people in the coastal region.
The key decisions taken to further expand the economic, social and tourism potential of Coastal Karnataka are as follows..
#cabinetdecisions -
Dr. G Parameshwara
@DrParameshwara
ಮಂಗಳೂರಿನಲ್ಲಿ ಇಂದು ನಡೆದ ವಿಶೇಷ ಸಚಿವ ಸಂಪುಟ ಸಭೆಯಲ್ಲಿ ಕರಾವಳಿ ಭಾಗದ ಸಮಗ್ರ ಅಭಿವೃದ್ಧಿಗೆ ಒತ್ತು ನೀಡುವ ಹಲವು ಮಹತ್ವದ ನಿರ್ಣಯಗಳನ್ನು ಕೈಗೊಳ್ಳಲಾಗಿದೆ.
ಪ್ರವಾಸೋದ್ಯಮ ಅಭಿವೃದ್ಧಿ, ಮೀನುಗಾರಿಕಾ ವಲಯಕ್ಕೆ ಹೆಚ್ಚಿನ ಉತ್ತೇಜನ, ರಸ್ತೆ ಮತ್ತು ಇತರೆ ಮೂಲಸೌಕರ್ಯಗಳ ಬಲವರ್ಧನೆ, ಧಾರ್ಮಿಕ ಹಾಗೂ ಸಾಂಸ್ಕೃತಿಕ ತಾಣಗಳ ಅಭಿವೃದ್ಧಿ, ಉದ್ಯೋಗ ಸೃಷ್ಟಿ ಮತ್ತು ಕರಾವಳಿ ಜನರ ಜೀವನಮಟ್ಟ ಸುಧಾರಣೆಗೆ ಪೂರಕವಾಗುವ ಹಲವು ವಿಷಯಗಳಿಗೆ ಸಭೆಯಲ್ಲಿ ಆದ್ಯತೆ ನೀಡಲಾಗಿದೆ.
ಕರಾವಳಿಯ ಆರ್ಥಿಕ, ಸಾಮಾಜಿಕ ಹಾಗೂ ಪ್ರವಾಸೋದ್ಯಮ ಸಾಮರ್ಥ್ಯವನ್ನು ಇನ್ನಷ್ಟು ವಿಸ್ತರಿಸುವ ನಿಟ್ಟಿನಲ್ಲಿ ಕೈಗೊಂಡ ಪ್ರಮುಖ ನಿರ್ಣಯಗಳು ಹೀಗಿವೆ..
At the Special Cabinet Meeting held in Mangaluru today, several important decisions were taken with a focus on the comprehensive development of Coastal Karnataka.
Priority was given to tourism development, greater support for the fisheries sector, strengthening roads and other infrastructure, development of religious and cultural destinations, employment generation, and initiatives aimed at improving the quality of life of people in the coastal region.
The key decisions taken to further expand the economic, social and tourism potential of Coastal Karnataka are as follows..
#cabinetdecisions -
Dr. G Parameshwara
@DrParameshwara
ಮಂಗಳೂರಿನಲ್ಲಿ ಇಂದು ನಡೆದ ವಿಶೇಷ ಸಚಿವ ಸಂಪುಟ ಸಭೆಯಲ್ಲಿ ಕರಾವಳಿ ಭಾಗದ ಸಮಗ್ರ ಅಭಿವೃದ್ಧಿಗೆ ಒತ್ತು ನೀಡುವ ಹಲವು ಮಹತ್ವದ ನಿರ್ಣಯಗಳನ್ನು ಕೈಗೊಳ್ಳಲಾಗಿದೆ.
ಪ್ರವಾಸೋದ್ಯಮ ಅಭಿವೃದ್ಧಿ, ಮೀನುಗಾರಿಕಾ ವಲಯಕ್ಕೆ ಹೆಚ್ಚಿನ ಉತ್ತೇಜನ, ರಸ್ತೆ ಮತ್ತು ಇತರೆ ಮೂಲಸೌಕರ್ಯಗಳ ಬಲವರ್ಧನೆ, ಧಾರ್ಮಿಕ ಹಾಗೂ ಸಾಂಸ್ಕೃತಿಕ ತಾಣಗಳ ಅಭಿವೃದ್ಧಿ, ಉದ್ಯೋಗ ಸೃಷ್ಟಿ ಮತ್ತು ಕರಾವಳಿ ಜನರ ಜೀವನಮಟ್ಟ ಸುಧಾರಣೆಗೆ ಪೂರಕವಾಗುವ ಹಲವು ವಿಷಯಗಳಿಗೆ ಸಭೆಯಲ್ಲಿ ಆದ್ಯತೆ ನೀಡಲಾಗಿದೆ.
ಕರಾವಳಿಯ ಆರ್ಥಿಕ, ಸಾಮಾಜಿಕ ಹಾಗೂ ಪ್ರವಾಸೋದ್ಯಮ ಸಾಮರ್ಥ್ಯವನ್ನು ಇನ್ನಷ್ಟು ವಿಸ್ತರಿಸುವ ನಿಟ್ಟಿನಲ್ಲಿ ಕೈಗೊಂಡ ಪ್ರಮುಖ ನಿರ್ಣಯಗಳು ಹೀಗಿವೆ..
At the Special Cabinet Meeting held in Mangaluru today, several important decisions were taken with a focus on the comprehensive development of Coastal Karnataka.
Priority was given to tourism development, greater support for the fisheries sector, strengthening roads and other infrastructure, development of religious and cultural destinations, employment generation, and initiatives aimed at improving the quality of life of people in the coastal region.
The key decisions taken to further expand the economic, social and tourism potential of Coastal Karnataka are as follows..
#cabinetdecisions -
Dr. G Parameshwara
@DrParameshwara
ಮಂಗಳೂರಿನಲ್ಲಿ ಇಂದು ನಡೆದ ವಿಶೇಷ ಸಚಿವ ಸಂಪುಟ ಸಭೆಯಲ್ಲಿ ಕರಾವಳಿ ಭಾಗದ ಸಮಗ್ರ ಅಭಿವೃದ್ಧಿಗೆ ಒತ್ತು ನೀಡುವ ಹಲವು ಮಹತ್ವದ ನಿರ್ಣಯಗಳನ್ನು ಕೈಗೊಳ್ಳಲಾಗಿದೆ.
ಪ್ರವಾಸೋದ್ಯಮ ಅಭಿವೃದ್ಧಿ, ಮೀನುಗಾರಿಕಾ ವಲಯಕ್ಕೆ ಹೆಚ್ಚಿನ ಉತ್ತೇಜನ, ರಸ್ತೆ ಮತ್ತು ಇತರೆ ಮೂಲಸೌಕರ್ಯಗಳ ಬಲವರ್ಧನೆ, ಧಾರ್ಮಿಕ ಹಾಗೂ ಸಾಂಸ್ಕೃತಿಕ ತಾಣಗಳ ಅಭಿವೃದ್ಧಿ, ಉದ್ಯೋಗ ಸೃಷ್ಟಿ ಮತ್ತು ಕರಾವಳಿ ಜನರ ಜೀವನಮಟ್ಟ ಸುಧಾರಣೆಗೆ ಪೂರಕವಾಗುವ ಹಲವು ವಿಷಯಗಳಿಗೆ ಸಭೆಯಲ್ಲಿ ಆದ್ಯತೆ ನೀಡಲಾಗಿದೆ.
ಕರಾವಳಿಯ ಆರ್ಥಿಕ, ಸಾಮಾಜಿಕ ಹಾಗೂ ಪ್ರವಾಸೋದ್ಯಮ ಸಾಮರ್ಥ್ಯವನ್ನು ಇನ್ನಷ್ಟು ವಿಸ್ತರಿಸುವ ನಿಟ್ಟಿನಲ್ಲಿ ಕೈಗೊಂಡ ಪ್ರಮುಖ ನಿರ್ಣಯಗಳು ಹೀಗಿವೆ..
At the Special Cabinet Meeting held in Mangaluru today, several important decisions were taken with a focus on the comprehensive development of Coastal Karnataka.
Priority was given to tourism development, greater support for the fisheries sector, strengthening roads and other infrastructure, development of religious and cultural destinations, employment generation, and initiatives aimed at improving the quality of life of people in the coastal region.
The key decisions taken to further expand the economic, social and tourism potential of Coastal Karnataka are as follows..
#cabinetdecisions -
Dr. G Parameshwara
@DrParameshwara
ಮಂಗಳೂರಿನಲ್ಲಿ ಇಂದು ನಡೆದ ವಿಶೇಷ ಸಚಿವ ಸಂಪುಟ ಸಭೆಯಲ್ಲಿ ಕರಾವಳಿ ಭಾಗದ ಸಮಗ್ರ ಅಭಿವೃದ್ಧಿಗೆ ಒತ್ತು ನೀಡುವ ಹಲವು ಮಹತ್ವದ ನಿರ್ಣಯಗಳನ್ನು ಕೈಗೊಳ್ಳಲಾಗಿದೆ.
ಪ್ರವಾಸೋದ್ಯಮ ಅಭಿವೃದ್ಧಿ, ಮೀನುಗಾರಿಕಾ ವಲಯಕ್ಕೆ ಹೆಚ್ಚಿನ ಉತ್ತೇಜನ, ರಸ್ತೆ ಮತ್ತು ಇತರೆ ಮೂಲಸೌಕರ್ಯಗಳ ಬಲವರ್ಧನೆ, ಧಾರ್ಮಿಕ ಹಾಗೂ ಸಾಂಸ್ಕೃತಿಕ ತಾಣಗಳ ಅಭಿವೃದ್ಧಿ, ಉದ್ಯೋಗ ಸೃಷ್ಟಿ ಮತ್ತು ಕರಾವಳಿ ಜನರ ಜೀವನಮಟ್ಟ ಸುಧಾರಣೆಗೆ ಪೂರಕವಾಗುವ ಹಲವು ವಿಷಯಗಳಿಗೆ ಸಭೆಯಲ್ಲಿ ಆದ್ಯತೆ ನೀಡಲಾಗಿದೆ.
ಕರಾವಳಿಯ ಆರ್ಥಿಕ, ಸಾಮಾಜಿಕ ಹಾಗೂ ಪ್ರವಾಸೋದ್ಯಮ ಸಾಮರ್ಥ್ಯವನ್ನು ಇನ್ನಷ್ಟು ವಿಸ್ತರಿಸುವ ನಿಟ್ಟಿನಲ್ಲಿ ಕೈಗೊಂಡ ಪ್ರಮುಖ ನಿರ್ಣಯಗಳು ಹೀಗಿವೆ..
At the Special Cabinet Meeting held in Mangaluru today, several important decisions were taken with a focus on the comprehensive development of Coastal Karnataka.
Priority was given to tourism development, greater support for the fisheries sector, strengthening roads and other infrastructure, development of religious and cultural destinations, employment generation, and initiatives aimed at improving the quality of life of people in the coastal region.
The key decisions taken to further expand the economic, social and tourism potential of Coastal Karnataka are as follows..
#cabinetdecisions -
Dr. G Parameshwara
@DrParameshwara
ಮಂಗಳೂರಿನಲ್ಲಿ ಇಂದು ನಡೆದ ವಿಶೇಷ ಸಚಿವ ಸಂಪುಟ ಸಭೆಯಲ್ಲಿ ಕರಾವಳಿ ಭಾಗದ ಸಮಗ್ರ ಅಭಿವೃದ್ಧಿಗೆ ಒತ್ತು ನೀಡುವ ಹಲವು ಮಹತ್ವದ ನಿರ್ಣಯಗಳನ್ನು ಕೈಗೊಳ್ಳಲಾಗಿದೆ.
ಪ್ರವಾಸೋದ್ಯಮ ಅಭಿವೃದ್ಧಿ, ಮೀನುಗಾರಿಕಾ ವಲಯಕ್ಕೆ ಹೆಚ್ಚಿನ ಉತ್ತೇಜನ, ರಸ್ತೆ ಮತ್ತು ಇತರೆ ಮೂಲಸೌಕರ್ಯಗಳ ಬಲವರ್ಧನೆ, ಧಾರ್ಮಿಕ ಹಾಗೂ ಸಾಂಸ್ಕೃತಿಕ ತಾಣಗಳ ಅಭಿವೃದ್ಧಿ, ಉದ್ಯೋಗ ಸೃಷ್ಟಿ ಮತ್ತು ಕರಾವಳಿ ಜನರ ಜೀವನಮಟ್ಟ ಸುಧಾರಣೆಗೆ ಪೂರಕವಾಗುವ ಹಲವು ವಿಷಯಗಳಿಗೆ ಸಭೆಯಲ್ಲಿ ಆದ್ಯತೆ ನೀಡಲಾಗಿದೆ.
ಕರಾವಳಿಯ ಆರ್ಥಿಕ, ಸಾಮಾಜಿಕ ಹಾಗೂ ಪ್ರವಾಸೋದ್ಯಮ ಸಾಮರ್ಥ್ಯವನ್ನು ಇನ್ನಷ್ಟು ವಿಸ್ತರಿಸುವ ನಿಟ್ಟಿನಲ್ಲಿ ಕೈಗೊಂಡ ಪ್ರಮುಖ ನಿರ್ಣಯಗಳು ಹೀಗಿವೆ..
At the Special Cabinet Meeting held in Mangaluru today, several important decisions were taken with a focus on the comprehensive development of Coastal Karnataka.
Priority was given to tourism development, greater support for the fisheries sector, strengthening roads and other infrastructure, development of religious and cultural destinations, employment generation, and initiatives aimed at improving the quality of life of people in the coastal region.
The key decisions taken to further expand the economic, social and tourism potential of Coastal Karnataka are as follows..
#cabinetdecisions -
Dr. G Parameshwara
@DrParameshwara
ಗ್ರಾಮೀಣ ಪ್ರದೇಶಗಳ ಉತ್ತಮ ಸಂಪರ್ಕ, ಗುಣಮಟ್ಟದ ರಸ್ತೆ ಮತ್ತು ಸುಗಮ ಸಂಚಾರಕ್ಕೆ ಆದ್ಯತೆ ನೀಡುವ ಮಹತ್ವದ ನಿರ್ಧಾರವನ್ನು ಮಂಗಳೂರಿನಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಕೈಗೊಳ್ಳಲಾಗಿದೆ.
ಮುಖ್ಯಮಂತ್ರಿಗಳ ಗ್ರಾಮೀಣಾಭಿವೃದ್ಧಿ ಯೋಜನೆಯಡಿ ₹10,000 ಕೋಟಿ ವೆಚ್ಚದಲ್ಲಿ 15,000 ಕಿ.ಮೀ. ಗ್ರಾಮೀಣ ಸಂಪರ್ಕ ರಸ್ತೆಗಳ ಅಭಿವೃದ್ಧಿಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ. ಗ್ರಾಮದಿಂದ ಗ್ರಾಮಕ್ಕೆ, ಗ್ರಾಮ ಪಂಚಾಯಿತಿಗೆ, ತಾಲೂಕು ಕೇಂದ್ರಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳು ಇದರಿಂದ ಅಭಿವೃದ್ಧಿಯಾಗಲಿವೆ.
ಇದರ ಜೊತೆಗೆ ಗ್ರಾಮಗಳ ಪರಿಮಿತಿಯೊಳಗೆ ₹6,000 ಕೋಟಿ ವೆಚ್ಚದಲ್ಲಿ ಸಿಸಿ ರಸ್ತೆ ಮತ್ತು ಚರಂಡಿಗಳ ನಿರ್ಮಾಣ ಕೈಗೊಳ್ಳಲಾಗುವುದು.
ಬಲಿಷ್ಠ ಗ್ರಾಮೀಣ ಮೂಲಸೌಕರ್ಯವೇ ಸಮಗ್ರ ಕರ್ನಾಟಕದ ಅಭಿವೃದ್ಧಿಗೆ ಅಡಿಪಾಯ.
At the Cabinet meeting held in Mangaluru, an important decision was taken to improve rural connectivity, road quality and ease of travel.
Under the Chief Minister’s Rural Development Scheme, administrative approval has been given to develop 15,000 km of rural connectivity roads at a cost of ₹10,000 crore. These roads will strengthen connectivity between villages, Gram Panchayats and taluk headquarters.
In addition, CC roads and drains will be constructed within village limits at a cost of ₹6,000 crore.
Strong rural infrastructure is the foundation for the comprehensive development of Karnataka.
#cabinetdecisions -
Dr. G Parameshwara
@DrParameshwara
ಮಂಗಳೂರಿನಲ್ಲಿ ಇಂದು ನಡೆದ ವಿಶೇಷ ಸಚಿವ ಸಂಪುಟ ಸಭೆಯಲ್ಲಿ ಕರಾವಳಿ ಭಾಗದ ಸಮಗ್ರ ಅಭಿವೃದ್ಧಿಗೆ ಒತ್ತು ನೀಡುವ ಹಲವು ಮಹತ್ವದ ನಿರ್ಣಯಗಳನ್ನು ಕೈಗೊಳ್ಳಲಾಗಿದೆ.
ಪ್ರವಾಸೋದ್ಯಮ ಅಭಿವೃದ್ಧಿ, ಮೀನುಗಾರಿಕಾ ವಲಯಕ್ಕೆ ಹೆಚ್ಚಿನ ಉತ್ತೇಜನ, ರಸ್ತೆ ಮತ್ತು ಇತರೆ ಮೂಲಸೌಕರ್ಯಗಳ ಬಲವರ್ಧನೆ, ಧಾರ್ಮಿಕ ಹಾಗೂ ಸಾಂಸ್ಕೃತಿಕ ತಾಣಗಳ ಅಭಿವೃದ್ಧಿ, ಉದ್ಯೋಗ ಸೃಷ್ಟಿ ಮತ್ತು ಕರಾವಳಿ ಜನರ ಜೀವನಮಟ್ಟ ಸುಧಾರಣೆಗೆ ಪೂರಕವಾಗುವ ಹಲವು ವಿಷಯಗಳಿಗೆ ಸಭೆಯಲ್ಲಿ ಆದ್ಯತೆ ನೀಡಲಾಗಿದೆ.
ಕರಾವಳಿಯ ಆರ್ಥಿಕ, ಸಾಮಾಜಿಕ ಹಾಗೂ ಪ್ರವಾಸೋದ್ಯಮ ಸಾಮರ್ಥ್ಯವನ್ನು ಇನ್ನಷ್ಟು ವಿಸ್ತರಿಸುವ ನಿಟ್ಟಿನಲ್ಲಿ ಕೈಗೊಂಡ ಪ್ರಮುಖ ನಿರ್ಣಯಗಳು ಹೀಗಿವೆ..
At the Special Cabinet Meeting held in Mangaluru today, several important decisions were taken with a focus on the comprehensive development of Coastal Karnataka.
Priority was given to tourism development, greater support for the fisheries sector, strengthening roads and other infrastructure, development of religious and cultural destinations, employment generation, and initiatives aimed at improving the quality of life of people in the coastal region.
The key decisions taken to further expand the economic, social and tourism potential of Coastal Karnataka are as follows..
#cabinetdecisions -
Dr. G Parameshwara
@DrParameshwara
ಮಂಗಳೂರಿನಲ್ಲಿ ಇಂದು ನಡೆದ ವಿಶೇಷ ಸಚಿವ ಸಂಪುಟ ಸಭೆಯಲ್ಲಿ ಕರಾವಳಿ ಭಾಗದ ಸಮಗ್ರ ಅಭಿವೃದ್ಧಿಗೆ ಒತ್ತು ನೀಡುವ ಹಲವು ಮಹತ್ವದ ನಿರ್ಣಯಗಳನ್ನು ಕೈಗೊಳ್ಳಲಾಗಿದೆ.
ಪ್ರವಾಸೋದ್ಯಮ ಅಭಿವೃದ್ಧಿ, ಮೀನುಗಾರಿಕಾ ವಲಯಕ್ಕೆ ಹೆಚ್ಚಿನ ಉತ್ತೇಜನ, ರಸ್ತೆ ಮತ್ತು ಇತರೆ ಮೂಲಸೌಕರ್ಯಗಳ ಬಲವರ್ಧನೆ, ಧಾರ್ಮಿಕ ಹಾಗೂ ಸಾಂಸ್ಕೃತಿಕ ತಾಣಗಳ ಅಭಿವೃದ್ಧಿ, ಉದ್ಯೋಗ ಸೃಷ್ಟಿ ಮತ್ತು ಕರಾವಳಿ ಜನರ ಜೀವನಮಟ್ಟ ಸುಧಾರಣೆಗೆ ಪೂರಕವಾಗುವ ಹಲವು ವಿಷಯಗಳಿಗೆ ಸಭೆಯಲ್ಲಿ ಆದ್ಯತೆ ನೀಡಲಾಗಿದೆ.
ಕರಾವಳಿಯ ಆರ್ಥಿಕ, ಸಾಮಾಜಿಕ ಹಾಗೂ ಪ್ರವಾಸೋದ್ಯಮ ಸಾಮರ್ಥ್ಯವನ್ನು ಇನ್ನಷ್ಟು ವಿಸ್ತರಿಸುವ ನಿಟ್ಟಿನಲ್ಲಿ ಕೈಗೊಂಡ ಪ್ರಮುಖ ನಿರ್ಣಯಗಳು ಹೀಗಿವೆ..
At the Special Cabinet Meeting held in Mangaluru today, several important decisions were taken with a focus on the comprehensive development of Coastal Karnataka.
Priority was given to tourism development, greater support for the fisheries sector, strengthening roads and other infrastructure, development of religious and cultural destinations, employment generation, and initiatives aimed at improving the quality of life of people in the coastal region.
The key decisions taken to further expand the economic, social and tourism potential of Coastal Karnataka are as follows..
#cabinetdecisions -
Dr. G Parameshwara
@DrParameshwara
ಮಂಗಳೂರಿನಲ್ಲಿ ಇಂದು ನಡೆದ ವಿಶೇಷ ಸಚಿವ ಸಂಪುಟ ಸಭೆಯಲ್ಲಿ ಕರಾವಳಿ ಭಾಗದ ಸಮಗ್ರ ಅಭಿವೃದ್ಧಿಗೆ ಒತ್ತು ನೀಡುವ ಹಲವು ಮಹತ್ವದ ನಿರ್ಣಯಗಳನ್ನು ಕೈಗೊಳ್ಳಲಾಗಿದೆ.
ಪ್ರವಾಸೋದ್ಯಮ ಅಭಿವೃದ್ಧಿ, ಮೀನುಗಾರಿಕಾ ವಲಯಕ್ಕೆ ಹೆಚ್ಚಿನ ಉತ್ತೇಜನ, ರಸ್ತೆ ಮತ್ತು ಇತರೆ ಮೂಲಸೌಕರ್ಯಗಳ ಬಲವರ್ಧನೆ, ಧಾರ್ಮಿಕ ಹಾಗೂ ಸಾಂಸ್ಕೃತಿಕ ತಾಣಗಳ ಅಭಿವೃದ್ಧಿ, ಉದ್ಯೋಗ ಸೃಷ್ಟಿ ಮತ್ತು ಕರಾವಳಿ ಜನರ ಜೀವನಮಟ್ಟ ಸುಧಾರಣೆಗೆ ಪೂರಕವಾಗುವ ಹಲವು ವಿಷಯಗಳಿಗೆ ಸಭೆಯಲ್ಲಿ ಆದ್ಯತೆ ನೀಡಲಾಗಿದೆ.
ಕರಾವಳಿಯ ಆರ್ಥಿಕ, ಸಾಮಾಜಿಕ ಹಾಗೂ ಪ್ರವಾಸೋದ್ಯಮ ಸಾಮರ್ಥ್ಯವನ್ನು ಇನ್ನಷ್ಟು ವಿಸ್ತರಿಸುವ ನಿಟ್ಟಿನಲ್ಲಿ ಕೈಗೊಂಡ ಪ್ರಮುಖ ನಿರ್ಣಯಗಳು ಹೀಗಿವೆ..
At the Special Cabinet Meeting held in Mangaluru today, several important decisions were taken with a focus on the comprehensive development of Coastal Karnataka.
Priority was given to tourism development, greater support for the fisheries sector, strengthening roads and other infrastructure, development of religious and cultural destinations, employment generation, and initiatives aimed at improving the quality of life of people in the coastal region.
The key decisions taken to further expand the economic, social and tourism potential of Coastal Karnataka are as follows..
#cabinetdecisions -
Dr. G Parameshwara
@DrParameshwara
ಮಂಗಳೂರಿನಲ್ಲಿ ಇಂದು ನಡೆದ ವಿಶೇಷ ಸಚಿವ ಸಂಪುಟ ಸಭೆಯಲ್ಲಿ ಕರಾವಳಿ ಭಾಗದ ಸಮಗ್ರ ಅಭಿವೃದ್ಧಿಗೆ ಒತ್ತು ನೀಡುವ ಹಲವು ಮಹತ್ವದ ನಿರ್ಣಯಗಳನ್ನು ಕೈಗೊಳ್ಳಲಾಗಿದೆ.
ಪ್ರವಾಸೋದ್ಯಮ ಅಭಿವೃದ್ಧಿ, ಮೀನುಗಾರಿಕಾ ವಲಯಕ್ಕೆ ಹೆಚ್ಚಿನ ಉತ್ತೇಜನ, ರಸ್ತೆ ಮತ್ತು ಇತರೆ ಮೂಲಸೌಕರ್ಯಗಳ ಬಲವರ್ಧನೆ, ಧಾರ್ಮಿಕ ಹಾಗೂ ಸಾಂಸ್ಕೃತಿಕ ತಾಣಗಳ ಅಭಿವೃದ್ಧಿ, ಉದ್ಯೋಗ ಸೃಷ್ಟಿ ಮತ್ತು ಕರಾವಳಿ ಜನರ ಜೀವನಮಟ್ಟ ಸುಧಾರಣೆಗೆ ಪೂರಕವಾಗುವ ಹಲವು ವಿಷಯಗಳಿಗೆ ಸಭೆಯಲ್ಲಿ ಆದ್ಯತೆ ನೀಡಲಾಗಿದೆ.
ಕರಾವಳಿಯ ಆರ್ಥಿಕ, ಸಾಮಾಜಿಕ ಹಾಗೂ ಪ್ರವಾಸೋದ್ಯಮ ಸಾಮರ್ಥ್ಯವನ್ನು ಇನ್ನಷ್ಟು ವಿಸ್ತರಿಸುವ ನಿಟ್ಟಿನಲ್ಲಿ ಕೈಗೊಂಡ ಪ್ರಮುಖ ನಿರ್ಣಯಗಳು ಹೀಗಿವೆ..
At the Special Cabinet Meeting held in Mangaluru today, several important decisions were taken with a focus on the comprehensive development of Coastal Karnataka.
Priority was given to tourism development, greater support for the fisheries sector, strengthening roads and other infrastructure, development of religious and cultural destinations, employment generation, and initiatives aimed at improving the quality of life of people in the coastal region.
The key decisions taken to further expand the economic, social and tourism potential of Coastal Karnataka are as follows..
#cabinetdecisions -
Dr. G Parameshwara
@DrParameshwara
ಮಂಗಳೂರಿನಲ್ಲಿ ಇಂದು ನಡೆದ ವಿಶೇಷ ಸಚಿವ ಸಂಪುಟ ಸಭೆಯಲ್ಲಿ ಕರಾವಳಿ ಭಾಗದ ಸಮಗ್ರ ಅಭಿವೃದ್ಧಿಗೆ ಒತ್ತು ನೀಡುವ ಹಲವು ಮಹತ್ವದ ನಿರ್ಣಯಗಳನ್ನು ಕೈಗೊಳ್ಳಲಾಗಿದೆ.
ಪ್ರವಾಸೋದ್ಯಮ ಅಭಿವೃದ್ಧಿ, ಮೀನುಗಾರಿಕಾ ವಲಯಕ್ಕೆ ಹೆಚ್ಚಿನ ಉತ್ತೇಜನ, ರಸ್ತೆ ಮತ್ತು ಇತರೆ ಮೂಲಸೌಕರ್ಯಗಳ ಬಲವರ್ಧನೆ, ಧಾರ್ಮಿಕ ಹಾಗೂ ಸಾಂಸ್ಕೃತಿಕ ತಾಣಗಳ ಅಭಿವೃದ್ಧಿ, ಉದ್ಯೋಗ ಸೃಷ್ಟಿ ಮತ್ತು ಕರಾವಳಿ ಜನರ ಜೀವನಮಟ್ಟ ಸುಧಾರಣೆಗೆ ಪೂರಕವಾಗುವ ಹಲವು ವಿಷಯಗಳಿಗೆ ಸಭೆಯಲ್ಲಿ ಆದ್ಯತೆ ನೀಡಲಾಗಿದೆ.
ಕರಾವಳಿಯ ಆರ್ಥಿಕ, ಸಾಮಾಜಿಕ ಹಾಗೂ ಪ್ರವಾಸೋದ್ಯಮ ಸಾಮರ್ಥ್ಯವನ್ನು ಇನ್ನಷ್ಟು ವಿಸ್ತರಿಸುವ ನಿಟ್ಟಿನಲ್ಲಿ ಕೈಗೊಂಡ ಪ್ರಮುಖ ನಿರ್ಣಯಗಳು ಹೀಗಿವೆ..
At the Special Cabinet Meeting held in Mangaluru today, several important decisions were taken with a focus on the comprehensive development of Coastal Karnataka.
Priority was given to tourism development, greater support for the fisheries sector, strengthening roads and other infrastructure, development of religious and cultural destinations, employment generation, and initiatives aimed at improving the quality of life of people in the coastal region.
The key decisions taken to further expand the economic, social and tourism potential of Coastal Karnataka are as follows..
#cabinetdecisions -
Dr. G Parameshwara
@DrParameshwara
ಮಂಗಳೂರಿನಲ್ಲಿ ಇಂದು ನಡೆದ ವಿಶೇಷ ಸಚಿವ ಸಂಪುಟ ಸಭೆಯಲ್ಲಿ ಕರಾವಳಿ ಭಾಗದ ಸಮಗ್ರ ಅಭಿವೃದ್ಧಿಗೆ ಒತ್ತು ನೀಡುವ ಹಲವು ಮಹತ್ವದ ನಿರ್ಣಯಗಳನ್ನು ಕೈಗೊಳ್ಳಲಾಗಿದೆ.
ಪ್ರವಾಸೋದ್ಯಮ ಅಭಿವೃದ್ಧಿ, ಮೀನುಗಾರಿಕಾ ವಲಯಕ್ಕೆ ಹೆಚ್ಚಿನ ಉತ್ತೇಜನ, ರಸ್ತೆ ಮತ್ತು ಇತರೆ ಮೂಲಸೌಕರ್ಯಗಳ ಬಲವರ್ಧನೆ, ಧಾರ್ಮಿಕ ಹಾಗೂ ಸಾಂಸ್ಕೃತಿಕ ತಾಣಗಳ ಅಭಿವೃದ್ಧಿ, ಉದ್ಯೋಗ ಸೃಷ್ಟಿ ಮತ್ತು ಕರಾವಳಿ ಜನರ ಜೀವನಮಟ್ಟ ಸುಧಾರಣೆಗೆ ಪೂರಕವಾಗುವ ಹಲವು ವಿಷಯಗಳಿಗೆ ಸಭೆಯಲ್ಲಿ ಆದ್ಯತೆ ನೀಡಲಾಗಿದೆ.
ಕರಾವಳಿಯ ಆರ್ಥಿಕ, ಸಾಮಾಜಿಕ ಹಾಗೂ ಪ್ರವಾಸೋದ್ಯಮ ಸಾಮರ್ಥ್ಯವನ್ನು ಇನ್ನಷ್ಟು ವಿಸ್ತರಿಸುವ ನಿಟ್ಟಿನಲ್ಲಿ ಕೈಗೊಂಡ ಪ್ರಮುಖ ನಿರ್ಣಯಗಳು ಹೀಗಿವೆ..
At the Special Cabinet Meeting held in Mangaluru today, several important decisions were taken with a focus on the comprehensive development of Coastal Karnataka.
Priority was given to tourism development, greater support for the fisheries sector, strengthening roads and other infrastructure, development of religious and cultural destinations, employment generation, and initiatives aimed at improving the quality of life of people in the coastal region.
The key decisions taken to further expand the economic, social and tourism potential of Coastal Karnataka are as follows..
#cabinetdecisions -
Dr. G Parameshwara
@DrParameshwara
ಕರಾವಳಿ ಮತ್ತು ಮಲೆನಾಡಿನ ಪ್ರಕೃತಿ, ಸಂಸ್ಕೃತಿ ಹಾಗೂ ಪ್ರವಾಸೋದ್ಯಮದ ಅಪಾರ ಸಾಮರ್ಥ್ಯವನ್ನು ಸಮಗ್ರವಾಗಿ ಬಳಸಿಕೊಂಡು ಆರ್ಥಿಕ ಅಭಿವೃದ್ಧಿ ಮತ್ತು ಉದ್ಯೋಗ ಸೃಷ್ಟಿಗೆ ಉತ್ತೇಜನ ನೀಡುವ ಉದ್ದೇಶದಿಂದ, ಮಂಗಳೂರಿನಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ‘ಕರಾವಳಿ ಮಲೆನಾಡು ಕರ್ನಾಟಕ ಪ್ರವಾಸೋದ್ಯಮ ನೀತಿ–2026’ಕ್ಕೆ ಅನುಮೋದನೆ ನೀಡಲಾಗಿದೆ.
ರಾಜ್ಯಕ್ಕೆ ಆಗಮಿಸುವ ಪ್ರವಾಸಿಗರ ಪೈಕಿ ಶೇ.40–45ರಷ್ಟು ಪ್ರವಾಸಿಗರು ಈ ಭಾಗಕ್ಕೆ ಭೇಟಿ ನೀಡುತ್ತಿದ್ದು, ಅಂದಾಜು ₹2,876.44 ಕೋಟಿ ವಿದೇಶಿ ವಿನಿಮಯ ಆದಾಯ ಬರುತ್ತಿದೆ. ಈ ಸಾಮರ್ಥ್ಯವನ್ನು ಮತ್ತಷ್ಟು ವಿಸ್ತರಿಸಲು ಅಗತ್ಯ ಮೂಲಸೌಕರ್ಯ, ಸಂಪರ್ಕ ಜಾಲ ಮತ್ತು ಪ್ರವಾಸಿ ಸೌಲಭ್ಯಗಳನ್ನು ಅಭಿವೃದ್ಧಿಪಡಿಸಲಾಗುವುದು.
ನೀತಿಯಡಿ ಆದ್ಯತೆಯ ಪ್ರವಾಸಿ ಯೋಜನೆಗಳು ಮತ್ತು ಪ್ರವಾಸಿ ಸರ್ಕ್ಯೂಟ್ಗಳು, ತೀರ್ಥಕ್ಷೇತ್ರ–ಪಾರಂಪರಿಕ ತಾಣಗಳು, ಬೀಚ್–ಸರ್ಫ್, ಕ್ರೂಸ್, ಆಹಾರ, ಕಾಫಿ, ಪಶ್ಚಿಮ ಘಟ್ಟ ಪರಿಸರ–ಸಾಹಸ ಹಾಗೂ ಮಂಗಳೂರು ಸೇರಿದಂತೆ ವಿವಿಧ ಪ್ರವಾಸಿ ಸರ್ಕ್ಯೂಟ್ಗಳಿಗೆ ಉತ್ತೇಜನ ನೀಡಲಾಗುವುದು.
ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ರಾಜ್ಯ ಪ್ರವಾಸೋದ್ಯಮ ಮಂಡಳಿ ಸ್ಥಾಪಿಸಲಾಗುವುದು. ಹೂಡಿಕೆದಾರರ ಅನುಕೂಲಕ್ಕಾಗಿ ಪ್ರವಾಸೋದ್ಯಮ ಹೂಡಿಕೆ ಸಹಾಯ ಕೇಂದ್ರಗಳು ಮತ್ತು ಏಕಗವಾಕ್ಷಿ ವ್ಯವಸ್ಥೆ ಜಾರಿಗೆ ಬರಲಿದ್ದು, ಪ್ರವಾಸೋದ್ಯಮಕ್ಕೆ ಕೈಗಾರಿಕೆಯ ಸ್ಥಾನಮಾನ, ಹೂಡಿಕೆ ಉತ್ತೇಜನ ಪ್ರದೇಶಗಳಲ್ಲಿ ಆಸ್ತಿ ತೆರಿಗೆ ವಿನಾಯಿತಿ ಸೇರಿದಂತೆ ಹಲವು ಪ್ರೋತ್ಸಾಹಕ ಕ್ರಮಗಳನ್ನು ಕೈಗೊಳ್ಳಲಾಗುವುದು.
ಮೂಲಸೌಕರ್ಯ ಅಭಿವೃದ್ಧಿ, ಭೂಮಿ ನಿರ್ವಹಣೆ, Ease of Doing Business, ಕೌಶಲ್ಯ ತರಬೇತಿ ಹಾಗೂ ಸ್ಥಳೀಯರಿಗೆ ಹೆಚ್ಚಿನ ಉದ್ಯೋಗಾವಕಾಶ ಕಲ್ಪಿಸುವುದಕ್ಕೂ ಆದ್ಯತೆ ನೀಡಲಾಗುವುದು.
₹500 ಕೋಟಿ ವೆಚ್ಚದಲ್ಲಿ ಅನುಷ್ಠಾನಗೊಳ್ಳಲಿರುವ ಈ ನೀತಿ, ಕರಾವಳಿ–ಮಲೆನಾಡಿನ ಪ್ರವಾಸೋದ್ಯಮಕ್ಕೆ ಹೊಸ ಚೈತನ್ಯ ನೀಡುವುದರ ಜೊತೆಗೆ ಸ್ಥಳೀಯ ಆರ್ಥಿಕತೆಗೆ ಮತ್ತಷ್ಟು ಬಲ ತುಂಬಲಿದೆ.
To harness the immense potential of the coast and Malnad in nature, culture and tourism, while boosting economic growth and employment, the Cabinet meeting held in Mangaluru has approved the Coastal-Malnad Karnataka Tourism Policy–2026.
Around 40–45% of tourists visiting Karnataka travel to this region, which generates an estimated ₹2,876.44 crore in foreign exchange earnings. The policy aims to further unlock this potential by strengthening infrastructure, connectivity and tourist facilities.
Priority will be given to tourism projects and circuits covering pilgrimage and heritage destinations, beaches and surfing, cruises, cuisine, coffee tourism, Western Ghats eco-adventure tourism, Mangaluru and other key circuits.
A State Tourism Board chaired by the Chief Minister will be constituted. Tourism Investment Facilitation Centres and a single-window system will be introduced for investors. Tourism will also be accorded industry status, along with incentives such as property tax exemptions in designated investment promotion areas.
The policy will also focus on infrastructure, land management, Ease of Doing Business, skill development and creating more employment opportunities for local communities.
To be implemented at a cost of ₹500 crore, the policy will give fresh momentum to tourism across Coastal Karnataka and Malnad while strengthening the local economy. -
Dr. G Parameshwara
@DrParameshwara
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲ್ಲೂಕಿನಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆಗೆ ಸಚಿವ ಸಂಪುಟ ಅನುಮೋದನೆಯನ್ನು ನೀಡಿದೆ. ಈ ಮೂಲಕ ಕರಾವಳಿ ಭಾಗದ ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರದ ಅಭಿವೃದ್ಧಿಯಲ್ಲಿ ಮಹತ್ವದ ಹೆಜ್ಜೆಯನ್ನು ಇಟ್ಟಿದ್ದೇವೆ.
ಜಿಲ್ಲೆಗೊಂದು ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪಿಸುವ ಹಾಗೂ ಸಮಾಜಕ್ಕೆ ಸೇವೆ ಸಲ್ಲಿಸುವ ವೈದ್ಯರನ್ನು ರೂಪಿಸುವ ನಮ್ಮ ಸರ್ಕಾರದ ಆಶಯದಂತೆ, ಪುತ್ತೂರು ತಾಲ್ಲೂಕಿನ ಬನ್ನೂರು ಗ್ರಾಮದ ಸೇಡಿಯಾಪು ಬಳಿ ಗುರುತಿಸಿರುವ ನಿವೇಶನದಲ್ಲಿ ₹549 ಕೋಟಿ ವೆಚ್ಚದಲ್ಲಿ ಜಿಲ್ಲಾ ಸರ್ಕಾರಿ ವೈದ್ಯಕೀಯ ಕಾಲೇಜು, ಬೋಧನಾ ಆಸ್ಪತ್ರೆ, ವಿದ್ಯಾರ್ಥಿಗಳ ಹಾಸ್ಟೆಲ್ಗಳು ಹಾಗೂ ಅಗತ್ಯ ಮೂಲಸೌಕರ್ಯಗಳನ್ನು ನಿರ್ಮಿಸಲು ತೀರ್ಮಾನಿಸಿದ್ದೇವೆ
ಸರ್ಕಾರಿ ವೈದ್ಯಕೀಯ ಕಾಲೇಜಿನ ಸ್ಥಾಪನೆಯಿಂದ ಜಿಲ್ಲೆಯ ಜನರಿಗೆ ಗುಣಮಟ್ಟದ ವೈದ್ಯಕೀಯ ಶಿಕ್ಷಣ ಮತ್ತು ಆರೋಗ್ಯ ಸೇವೆಗಳು ಮತ್ತಷ್ಟು ಸುಲಭವಾಗಿ ದೊರೆಯಲಿವೆ. ಜತೆಗೆ, ಗ್ರಾಮೀಣ ಹಾಗೂ ಕರಾವಳಿ ಭಾಗದ ವಿದ್ಯಾರ್ಥಿಗಳಿಗೆ ವೈದ್ಯಕೀಯ ಶಿಕ್ಷಣದ ಅವಕಾಶಗಳು ವಿಸ್ತರಿಸಲಿವೆ.
The Cabinet has approved the establishment of a Government Medical College in Puttur taluk, Dakshina Kannada district, marking an important step in strengthening healthcare and medical education in the coastal region.
In line with our Government’s vision of establishing a Government Medical College in every district and nurturing doctors committed to public service, a District Government Medical College, Teaching Hospital, student hostels and other essential infrastructure will be built at Sediyapu near Bannur village in Puttur taluk at a cost of ₹549 crore.
The new medical college will further improve access to quality medical education and healthcare services for the people of the district, while expanding opportunities for students from rural and coastal areas to pursue medical education.
#cabinetdecisions -
Dr. G Parameshwara
@DrParameshwara
At the Cabinet meeting held in Mangaluru, the Government has taken the historic decision to accord Tulu, an integral part of Karnataka’s rich linguistic and cultural heritage, the status of the State’s second official language.
With a history of nearly 2,000 years, a distinct literary tradition and a rich cultural heritage, Tulu is one of the five Dravidian languages. This decision will be an important step towards preserving and promoting the language and passing its rich legacy on to future generations.
Responding to the long-standing demand of Tulu organisations and the public, the Government took this decision after reviewing reports submitted by experts and officials. The declaration will apply to Udupi and Dakshina Kannada districts, with the district administrations serving as the nodal agencies for implementation.
An annual grant of ₹82 lakh will be provided for translation, training and other language-related activities to facilitate the use of Tulu, along with Kannada, for official purposes.
Tulu Language and Culture — A Proud Part of Karnataka’s Rich Heritage
#cabinetdecisions -
Dr. G Parameshwara
@DrParameshwara
ಕರ್ನಾಟಕದ ಶ್ರೀಮಂತ ಭಾಷಾ ಮತ್ತು ಸಾಂಸ್ಕೃತಿಕ ಪರಂಪರೆಯ ಅವಿಭಾಜ್ಯ ಭಾಗವಾಗಿರುವ ತುಳು ಭಾಷೆಗೆ ರಾಜ್ಯದ ಎರಡನೇ ಅಧಿಕೃತ ಭಾಷೆಯ ಸ್ಥಾನಮಾನ ನೀಡುವ ಮಹತ್ವದ ನಿರ್ಧಾರವನ್ನು ಮಂಗಳೂರಿನಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಕೈಗೊಳ್ಳಲಾಗಿದೆ.
ಸುಮಾರು ಎರಡು ಸಾವಿರ ವರ್ಷಗಳ ಇತಿಹಾಸ, ವಿಶಿಷ್ಟ ಸಾಹಿತ್ಯ ಹಾಗೂ ಶ್ರೀಮಂತ ಸಾಂಸ್ಕೃತಿಕ ಪರಂಪರೆ ಹೊಂದಿರುವ ತುಳು, ಪಂಚ ದ್ರಾವಿಡ ಭಾಷೆಗಳಲ್ಲಿ ಒಂದಾಗಿರುವ ಅಪೂರ್ವ ಭಾಷೆಯಾಗಿದೆ. ಪ್ರಾಚೀನತೆ ಮತ್ತು ಆಧುನಿಕ ಸಾಹಿತ್ಯಿಕ ಸಮೃದ್ಧತೆಯನ್ನು ಒಳಗೊಂಡಿರುವ ತುಳು ಭಾಷೆಯ ಸಂರಕ್ಷಣೆ, ಅಭಿವೃದ್ಧಿ ಹಾಗೂ ಮುಂದಿನ ಪೀಳಿಗೆಗೆ ಅದರ ಪರಂಪರೆಯನ್ನು ತಲುಪಿಸುವ ನಿಟ್ಟಿನಲ್ಲಿ ಈ ನಿರ್ಧಾರ ಮಹತ್ವದ ಹೆಜ್ಜೆಯಾಗಲಿದೆ.
ತುಳು ಸಂಘ–ಸಂಸ್ಥೆಗಳು ಹಾಗೂ ಸಾರ್ವಜನಿಕರ ಬಹುಕಾಲದ ಬೇಡಿಕೆಗೆ ಸ್ಪಂದಿಸಿ, ತಜ್ಞರು ಮತ್ತು ಅಧಿಕಾರಿಗಳ ವರದಿಗಳನ್ನು ಪರಿಶೀಲಿಸಿದ ಬಳಿಕ ಸರ್ಕಾರ ಈ ಮಹತ್ವದ ತೀರ್ಮಾನ ಕೈಗೊಂಡಿದೆ. ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಿಗೆ ಅನ್ವಯವಾಗುವಂತೆ ಈ ಘೋಷಣೆ ಮಾಡಲು ತೀರ್ಮಾನಿಸಲಾಗಿದ್ದು, ಜಿಲ್ಲಾಡಳಿತವನ್ನು ಅನುಷ್ಠಾನದ ಕೇಂದ್ರವನ್ನಾಗಿ ಮಾಡಲಾಗುವುದು.
ಕನ್ನಡದ ಜೊತೆಗೆ ತುಳು ಭಾಷೆಯನ್ನೂ ಸರ್ಕಾರಿ ಉದ್ದೇಶಗಳಿಗಾಗಿ ಬಳಸುವ ನಿಟ್ಟಿನಲ್ಲಿ ಅನುವಾದ, ತರಬೇತಿ ಸೇರಿದಂತೆ ವಿವಿಧ ಭಾಷಾ ಚಟುವಟಿಕೆಗಳಿಗೆ ಪ್ರತಿ ವರ್ಷ ₹82 ಲಕ್ಷ ಅನುದಾನ ಒದಗಿಸಲು ನಿರ್ಧರಿಸಲಾಗಿದೆ.
ತುಳು ಭಾಷೆ, ಸಂಸ್ಕೃತಿ - ಕರ್ನಾಟಕದ ಶ್ರೀಮಂತ ಪರಂಪರೆ
#cabinetdecisions -
Dr. G Parameshwara
@DrParameshwara
ಇಂದು ಉಡುಪಿ ಜಿಲ್ಲೆಯ ಕಾಪು ತಾಲ್ಲೂಕಿನ ಬೆಳಪು ಗ್ರಾಮದಲ್ಲಿರುವ ಮಂಗಳೂರು ವಿಶ್ವವಿದ್ಯಾನಿಲಯದ ‘ಸ್ನಾತಕೋತ್ತರ ಅಧ್ಯಯನ ಮತ್ತು ಅತ್ಯಾಧುನಿಕ ಸಂಶೋಧನಾ ಕೇಂದ್ರ’ದ ಕಟ್ಟಡವನ್ನು ಪರಿಶೀಲಿಸಿದೆ.
ಸುಮಾರು ₹53.85 ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ ಈ ವಿಶಾಲ ಕಟ್ಟಡ ಮತ್ತು ಕ್ಯಾಂಪಸ್ಗೆ ಪರಿಣಾಮಕಾರಿ ಬಳಕೆ ಕಲ್ಪಿಸುವ ನಿಟ್ಟಿನಲ್ಲಿ ಸರ್ಕಾರ ಗಂಭೀರವಾಗಿ ಚಿಂತನೆ ನಡೆಸುತ್ತಿದೆ.This media couldn't be displayed. See it on the original post. -
Dr. G Parameshwara
@DrParameshwara
ಕರಾವಳಿ ಭಾಗದ ಯುವಜನರ ಕ್ರೀಡಾ ಪ್ರತಿಭೆಗೆ ಇನ್ನಷ್ಟು ಅವಕಾಶಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ಕ್ರೀಡಾ ಮೂಲಸೌಕರ್ಯವನ್ನು ಬಲಪಡಿಸಲು ನಮ್ಮ ಸರ್ಕಾರ ಬದ್ಧವಾಗಿದೆ.
ಉಡುಪಿ ಸ್ಟೇಡಿಯಂ, ಮಂಗಳೂರಿನ ಮಂಗಳ ಸ್ಟೇಡಿಯಂ ಸೇರಿದಂತೆ ಕರಾವಳಿ ಭಾಗದ ಕ್ರೀಡಾಂಗಣಗಳ ಅಭಿವೃದ್ಧಿಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಉಡುಪಿಯಲ್ಲಿ ಅಂತಾರಾಷ್ಟ್ರೀಯ ಮಟ್ಟದ ಸರ್ಫಿಂಗ್ ಸ್ಪರ್ಧೆಗಳು ನಡೆಯುತ್ತಿದ್ದು, ಇಂತಹ ಕ್ರೀಡಾ ಕಾರ್ಯಕ್ರಮಗಳಿಗೆ ಮತ್ತಷ್ಟು ಉತ್ತೇಜನ ನೀಡುವ ಮೂಲಕ ಕರಾವಳಿ ಭಾಗದ ಪ್ರವಾಸೋದ್ಯಮವನ್ನು ಅಭಿವೃದ್ಧಿಪಡಿಸಬಹುದಾಗಿದೆ. ಇದರಿಂದ ಉದ್ಯೋಗಾವಕಾಶಗಳ ಸೃಷ್ಟಿಯೊಂದಿಗೆ ಸ್ಥಳೀಯ ಆರ್ಥಿಕ ಚಟುವಟಿಕೆಗಳಿಗೂ ಹೆಚ್ಚಿನ ವೇಗ ದೊರೆಯಲಿದೆ.
ಕರಾವಳಿಯ ಕ್ರೀಡಾ ಪ್ರತಿಭೆಗಳಿಗೆ ಉತ್ತಮ ಮೈದಾನ, ಅತ್ಯಾಧುನಿಕ ಸೌಲಭ್ಯ ಮತ್ತು ವಿಶ್ವಮಟ್ಟದ ಅವಕಾಶಗಳು ದೊರೆಯಬೇಕು ಎಂಬುದು ನಮ್ಮ ಸರ್ಕಾರದ ಆಶಯ.
Our Government is committed to strengthening sports infrastructure and creating more opportunities for young sporting talent in the coastal region.
Necessary steps will be taken to develop Udupi Stadium, Mangala Stadium in Mangaluru, and other sports facilities along the coast. Udupi already hosts international-level surfing competitions, and promoting such events further can boost coastal tourism, create jobs and strengthen the local economy.
Our aim is to ensure that coastal sporting talent gets access to better grounds, modern facilities and world-class opportunities. -
Dr. G Parameshwara
@DrParameshwara
ಕರ್ನಾಟಕದ ಕರಾವಳಿಯು ಅಪಾರ ಅಭಿವೃದ್ಧಿ ಅವಕಾಶಗಳನ್ನು ಹೊಂದಿರುವ ಪ್ರದೇಶ. ಈ ಅವಕಾಶಗಳನ್ನು ಸಮರ್ಥವಾಗಿ ಬಳಸಿಕೊಂಡು ಕರಾವಳಿಯ ಭವಿಷ್ಯದ ಬೆಳವಣಿಗೆಗೆ ಹೊಸ ದಿಕ್ಕು ನೀಡುವುದು ನಮ್ಮ ಸರ್ಕಾರದ ಉದ್ದೇಶವಾಗಿದೆ.
ಕರಾವಳಿಯ ಜ್ವಲಂತ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವುದರ ಜೊತೆಗೆ, ಪ್ರವಾಸೋದ್ಯಮಕ್ಕೆ ಹೊಸ ಉತ್ತೇಜನ, ಅಂತಾರಾಷ್ಟ್ರೀಯ ಮಟ್ಟದ ಸರ್ಫಿಂಗ್ನಂತಹ ಕಾರ್ಯಕ್ರಮಗಳಿಗೆ ಪ್ರೋತ್ಸಾಹ ಹಾಗೂ ಕರಾವಳಿಗೆ ಸೂಕ್ತವಾದ ನೂತನ ಪ್ರವಾಸೋದ್ಯಮ ನೀತಿ ಕುರಿತು ಸಚಿವ ಸಂಪುಟದಲ್ಲಿ ಚರ್ಚಿಸಲಾಗುವುದು.
ಪ್ರವಾಸೋದ್ಯಮದ ಬೆಳವಣಿಗೆಯೊಂದಿಗೆ ಉದ್ಯೋಗ ಸೃಷ್ಟಿ ಮತ್ತು ಆರ್ಥಿಕ ಚಟುವಟಿಕೆಗಳಿಗೆ ವೇಗ ನೀಡಲು ಸಾಫ್ಟ್ ಇಂಡಸ್ಟ್ರಿಗಳನ್ನು ಕರಾವಳಿ ಭಾಗಕ್ಕೆ ಆಕರ್ಷಿಸುವ ಪ್ರಯತ್ನವೂ ನಡೆಯಲಿದೆ.
ಬೆಳೆಯಲಿದೆ ಕರಾವಳಿ, ಪ್ರಜ್ವಲಿಸಲಿದೆ ಕರ್ನಾಟಕ
Karnataka’s coastal region holds immense potential for development. Our Government’s aim is to harness these opportunities effectively and give a new direction to the future growth of the coast.
Along with addressing the pressing issues of the region, the Cabinet will discuss giving a fresh push to tourism, promoting international-level surfing and introducing a new tourism policy suited to the coastal region.
Efforts will also be made to attract soft industries to the coast, creating more employment opportunities and accelerating economic activity alongside tourism growth.
A Growing Coast, A Brighter Karnataka -
Dr. G Parameshwara
@DrParameshwara
ಇಂದು ಉಡುಪಿ ಜಿಲ್ಲೆಯ ಕಾಪು ತಾಲ್ಲೂಕಿನ ಬೆಳಪು ಗ್ರಾಮದಲ್ಲಿರುವ ಮಂಗಳೂರು ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ಅಧ್ಯಯನ ಹಾಗೂ ಅತ್ಯಾಧುನಿಕ ಸಂಶೋಧನಾ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲಿಸಿದೆ. ಉನ್ನತ ಶಿಕ್ಷಣ ಹಾಗೂ ಸಂಶೋಧನಾ ಕ್ಷೇತ್ರಕ್ಕೆ ಅಗತ್ಯವಾದ ಉತ್ತಮ ಮೂಲಸೌಕರ್ಯ ಕಲ್ಪಿಸುವುದು ನಮ್ಮ ಸರ್ಕಾರದ ಆದ್ಯತೆಯಾಗಿದೆ.
ವಿದ್ಯಾರ್ಥಿಗಳು, ಸಂಶೋಧಕರು ಹಾಗೂ ಯುವ ಪ್ರತಿಭೆಗಳಿಗೆ ಗುಣಮಟ್ಟದ ಶೈಕ್ಷಣಿಕ ವಾತಾವರಣ ಕಲ್ಪಿಸುವ ನಿಟ್ಟಿನಲ್ಲಿ ಈ ಕೇಂದ್ರವನ್ನು ಸಮರ್ಪಕವಾಗಿ ಹಾಗೂ ಸದ್ಬಳಕೆಯಾಗುವ ರೀತಿಯಲ್ಲಿ ಅಭಿವೃದ್ಧಿಪಡಿಸುವ ಕುರಿತು ಅಗತ್ಯ ಕ್ರಮಗಳ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಿದೆ. ಕರಾವಳಿ ಭಾಗದಲ್ಲಿ ಶಿಕ್ಷಣ, ಸಂಶೋಧನೆ ಹಾಗೂ ಕ್ರೀಡಾ ಹಾಗೂ ಕ್ಷೇತ್ರವನ್ನು ಮತ್ತಷ್ಟು ಬಲಪಡಿಸುವುದು ನಮ್ಮ ಸಂಕಲ್ಪ.
Today, I visited and inspected the building of Mangalore University’s Postgraduate Studies and Advanced Research Centre at Belapu village in Kaup taluk of Udupi district. Providing quality infrastructure for higher education and research is a priority of our Government.
I discussed with officials the necessary steps to develop the centre effectively and ensure its optimal use, with the aim of creating a quality academic environment for students, researchers and young talent.
Our resolve is to further strengthen education, research and sports in the coastal region. -
Dr. G Parameshwara
@DrParameshwara
ಮಾತ ತುಳುವೆರೆಗ್ ಎನ್ನ ಉಡಲ್ದಿಂಜಿನ ಸೊಲ್ಮೆಲು!
ಕರ್ನಾಟಕದ ಇತಿಹಾಸದಲ್ಲೇ ಮೊದಲ ಬಾರಿ ನಿಮ್ಮೂರಿನಲ್ಲಿ ನಾವು ಸಚಿವ ಸಂಪುಟ ಸಭೆಯನ್ನು ಇಟ್ಟುಕೊಂಡಿದ್ದೇವೆ. ಕರಾವಳಿಯು ಕರ್ನಾಟಕದ ಅವಿಭಾಜ್ಯ ಅಂಗ, ಕರಾವಳಿಯ ಪ್ರಗತಿಯಲ್ಲಿ ರಾಜ್ಯದ ಪ್ರಗತಿಯೂ ಅಡಗಿದೆ ಎಂದು ನಾವು ನಂಬಿದ್ದೇವೆ.
ಇಂದಿನ ಸಂಪುಟ ಸಭೆಯಲ್ಲಿ ಕರಾವಳಿ ಪ್ರದೇಶದ ಜನರ ಸಮಸ್ಯೆಗಳನ್ನು ಚರ್ಚಿಸಿ ಪರಿಹಾರ ರೂಪಿಸುವ ಜೊತೆಗೆ, ಈ ಭಾಗದ ಜಿಲ್ಲೆಗಳ ಮೀನುಗಾರಿಕೆ, ಪ್ರವಾಸೋದ್ಯಮ, ಕೃಷಿ, ಕೈಗಾರಿಕೆ ಮುಂತಾದ ವಲಯಗಳಲ್ಲಿ ಸಮಗ್ರ ಪ್ರಗತಿ ಸಾಧಿಸುವ ಗುರಿ ನಮ್ಮ ಸರ್ಕಾರದ್ದಾಗಿದೆ.
ಇದು ಬರೀ ಸಚಿವ ಸಂಪುಟ ಸಭೆಯಲ್ಲ, ಇಡೀ ಸರ್ಕಾರವನ್ನೇ ನಿಮ್ಮ ಬಳಿಗೆ ತರುವ ಒಂದು ಮಹತ್ವದ ಹೆಜ್ಜೆ. ನಮ್ಮ ಈ ಪ್ರಯತ್ನಕ್ಕೆ ನಿಮ್ಮ ಸಹಕಾರವೂ ಇರಲಿ. -
Dr. G Parameshwara
@DrParameshwara
Today, I inspected the building of Mangalore University’s Postgraduate Studies and Advanced Research Centre at Belapu village in Kaup taluk of Udupi district.
The massive building, constructed at a cost of around ₹53.85 crore, has remained unused for the past few years and risks falling into disrepair. The Government is considering how the building and the campus can be put to suitable and productive use.
The establishment of a Science Centre had been announced in the 2014–15 Budget. The project was intended to be implemented under the Union Government’s RUSA scheme, with funding from Mangalore University and RUSA.
There was a proposal to establish two Science Centres in the State, and one of them was planned in Mangaluru. After preparing the required infrastructure plan, discussing the requirements and obtaining approvals, construction work was taken up. Infrastructure worth around ₹50–60 crore has already been created.
However, the RUSA programme was discontinued for various reasons, and with no further funding from Mangalore University, work on the Science Centre remained incomplete. A proposal has now been made to revive the Science Centre, and the matter has also been brought to the attention of the Higher Education Minister.
The State is also considering setting up a Sports University, and I visited the campus to examine whether it could be suitable for the purpose. Udupi district does not have a Government Medical College, and the possibility of establishing one here is also being examined.
After gathering all the necessary information, the matter will be discussed with the Chief Minister and an appropriate decision will be taken. Overall, the Government will take the necessary steps to ensure that the buildings and the developed campus are put to effective use.
Priority to coastal development and tourism: The coastal region has several pressing issues, and finding solutions to them is one of the key objectives of today’s Cabinet meeting. Some issues that had already come to the Government’s attention have been addressed, while several other smaller concerns and matters are yet to be taken up. These will be discussed and necessary decisions will be made.
Kerala and Goa have effectively utilised their coastal regions, and our Government intends to develop Karnataka’s coastline more effectively as well. International-level surfing events are already being held in Udupi. Encouraging such activities and further developing coastal tourism can create employment and boost economic activity. The Tourism Policy will also be discussed at the Cabinet meeting.
Bringing very large industries to the region may be difficult, but efforts will be made to attract soft industries to the coastal belt.
Development of stadiums: The Cabinet meeting will also discuss improving sports infrastructure in the coastal region. Necessary decisions will be taken regarding the development of Udupi Stadium, Mangala Stadium in Mangaluru, and other sports facilities.
Decisions taken by the Cabinet will be implemented. A Cabinet decision is a decision of the entire Government. Government decisions will be carried out; otherwise, there would be no purpose in bringing matters before the Cabinet. There will always be criticism, and we take it positively.
Kasturirangan Report and drought to be discussed in the special session: A special session has been convened on September 21, 22 and 23. The Kasturirangan Report will be discussed first. In view of the severe drought situation in the State, we will also discuss how the Government should respond to farmers and what kind of assistance should be provided. This special session has been convened keeping farmers’ interests in mind.
MLC Manjunath Bhandary, Kaup MLA Gurme Suresh Shetty, former Minister Vinay Kumar Sorake, Principal Secretary of the Department of Youth Empowerment and Sports Naveen Raj Singh, Deputy Commissioner Swaroopa T.K., Mangalore University Registrar Santosh B. Jagalasar, Karnataka Housing Board Engineer Sahana, former Belapu Panchayat President Deviprasad Shetty, contractor Vasudev Shetty and several others were present. -
Dr. G Parameshwara
@DrParameshwara
ಇಂದು ಉಡುಪಿ ಜಿಲ್ಲೆಯ ಕಾಪು ತಾಲ್ಲೂಕಿನ ಬೆಳಪು ಗ್ರಾಮದಲ್ಲಿರುವ ಮಂಗಳೂರು ವಿಶ್ವವಿದ್ಯಾನಿಲಯದ ‘ಸ್ನಾತಕೋತ್ತರ ಅಧ್ಯಯನ ಮತ್ತು ಅತ್ಯಾಧುನಿಕ ಸಂಶೋಧನಾ ಕೇಂದ್ರ’ದ ಕಟ್ಟಡವನ್ನು ಪರಿಶೀಲಿಸಿದೆ.
ಸುಮಾರು ₹53.85 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿರುವ ಈ ಬೃಹತ್ ಕಟ್ಟಡವು ಕೆಲ ವರ್ಷಗಳಿಂದ ಬಳಕೆಯಾಗದೆ ಖಾಲಿ ಬಿದ್ದಿದ್ದು, ದುರಾವಸ್ಥೆಗೆ ತಲುಪುವ ಭೀತಿಯಲ್ಲಿದೆ. ಕಟ್ಟಡ ಹಾಗೂ ಕ್ಯಾಂಪಸ್ ಅನ್ನು ಸೂಕ್ತ ಮತ್ತು ಸದ್ಬಳಕೆಯ ಉದ್ದೇಶಕ್ಕಾಗಿ ಬಳಸಿಕೊಳ್ಳುವ ಕುರಿತು ಸರ್ಕಾರದ ಹಂತದಲ್ಲಿ ಚಿಂತನೆ ನಡೆಸಲಾಗುತ್ತಿದೆ.
2014-15ನೇ ಸಾಲಿನ ಬಜೆಟ್ನಲ್ಲಿ ವಿಜ್ಞಾನ ಕೇಂದ್ರ ಸ್ಥಾಪಿಸುವ ಕುರಿತು ಘೋಷಣೆ ಮಾಡಲಾಗಿತ್ತು. ಕೇಂದ್ರ ಸರ್ಕಾರದ ರೂಸಾ (RUSA) ಯೋಜನೆಯಡಿ, ಮಂಗಳೂರು ವಿಶ್ವವಿದ್ಯಾನಿಲಯ ಹಾಗೂ ರೂಸಾ ಅನುದಾನದ ಮೂಲಕ ಈ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಲು ಉದ್ದೇಶಿಸಲಾಗಿತ್ತು.
ರಾಜ್ಯದಲ್ಲಿ ಎರಡು ವಿಜ್ಞಾನ ಕೇಂದ್ರಗಳನ್ನು ಸ್ಥಾಪಿಸುವ ಪ್ರಸ್ತಾವನೆ ಇದ್ದು, ಅದರಲ್ಲಿ ಒಂದನ್ನು ಮಂಗಳೂರಿನಲ್ಲಿ ಸ್ಥಾಪಿಸಲು ಆಯ್ಕೆ ಮಾಡಲಾಗಿತ್ತು. ವಿಜ್ಞಾನ ಕೇಂದ್ರಕ್ಕೆ ಅಗತ್ಯವಿರುವ ಮೂಲಸೌಕರ್ಯಗಳ ಕುರಿತು ನಕ್ಷೆ ತಯಾರಿಸಿ, ಅಗತ್ಯತೆಗಳ ಬಗ್ಗೆ ಚರ್ಚಿಸಿ, ಅನುಮೋದನೆ ಪಡೆದುಕೊಂಡ ಬಳಿಕ ಕಾಮಗಾರಿ ಆರಂಭಿಸಲಾಗಿತ್ತು. ಸುಮಾರು ₹50ರಿಂದ ₹60 ಕೋಟಿ ವೆಚ್ಚದಲ್ಲಿ ಅಗತ್ಯ ಮೂಲಸೌಕರ್ಯಗಳನ್ನು ನಿರ್ಮಿಸಲಾಗಿದೆ.
ಕಾರಣಾಂತರಗಳಿಂದ ರೂಸಾ ಕಾರ್ಯಕ್ರಮ ಸ್ಥಗಿತಗೊಂಡಿದ್ದು, ಮಂಗಳೂರು ವಿಶ್ವವಿದ್ಯಾನಿಲಯದಿಂದಲೂ ಅನುದಾನ ದೊರೆಯದ ಹಿನ್ನೆಲೆಯಲ್ಲಿ ವಿಜ್ಞಾನ ಕೇಂದ್ರದ ಕಾಮಗಾರಿ ಅರ್ಧಕ್ಕೆ ನಿಂತಿದೆ. ಇದೀಗ ವಿಜ್ಞಾನ ಕೇಂದ್ರಕ್ಕೆ ಚಾಲನೆ ನೀಡುವ ಕುರಿತು ಪ್ರಸ್ತಾಪ ಮಾಡಲಾಗಿದ್ದು, ಈ ವಿಚಾರ ಉನ್ನತ ಶಿಕ್ಷಣ ಸಚಿವರ ಗಮನಕ್ಕೂ ಬಂದಿದೆ.
ರಾಜ್ಯದಲ್ಲಿ ಸ್ಪೋರ್ಟ್ಸ್ ಯುನಿವರ್ಸಿಟಿ ಮಾಡಬೇಕು ಎಂಬ ಚಿಂತನೆ ಇದೆ. ಅದು ಇಲ್ಲಿ ಸಾಧ್ಯವಾಗಬಹುದೇ ಎಂಬುದನ್ನು ಪರಿಶೀಲಿಸಲು ಬಂದಿದ್ದೇನೆ. ಉಡುಪಿ ಜಿಲ್ಲೆಗೆ ಸರ್ಕಾರಿ ಮೆಡಿಕಲ್ ಕಾಲೇಜು ಇಲ್ಲ. ಅದಕ್ಕೂ ಸಾಧ್ಯತೆ ಇರಬಹುದೇ ಎಂಬುದನ್ನು ಪರಿಶೀಲಿಸಲು ಬಂದಿದ್ದೇನೆ.
ಈ ಎಲ್ಲಾ ವಿಚಾರಗಳ ಕುರಿತು ಮಾಹಿತಿ ಪಡೆದು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು. ಒಟ್ಟಾರೆ, ಇಲ್ಲಿ ನಿರ್ಮಿಸಿರುವ ಕಟ್ಟಡಗಳು ಹಾಗೂ ಅಭಿವೃದ್ಧಿಪಡಿಸಿರುವ ಕ್ಯಾಂಪಸ್ ಅನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಲು ಸರ್ಕಾರದ ಹಂತದಲ್ಲಿ ಅಗತ್ಯ ತೀರ್ಮಾನಗಳನ್ನು ತೆಗೆದುಕೊಳ್ಳಲಾಗುವುದು.
*ಕರಾವಳಿ ಭಾಗದ ಅಭಿವೃದ್ಧಿ ಹಾಗೂ ಪ್ರವಾಸೋದ್ಯಮಕ್ಕೆ ಆದ್ಯತೆ : ಈ ಭಾಗದಲ್ಲಿ ಹಲವು ಜ್ವಲಂತ ಸಮಸ್ಯೆಗಳಿದ್ದು, ಅವುಗಳಿಗೆ ಪರಿಹಾರ ಕಂಡುಕೊಳ್ಳುವುದು ಇಂದಿನ ಸಚಿವ ಸಂಪುಟ ಸಭೆಯ ಪ್ರಮುಖ ಉದ್ದೇಶಗಳಲ್ಲಿ ಒಂದಾಗಿದೆ. ಈಗಾಗಲೇ ಸರ್ಕಾರದ ಗಮನಕ್ಕೆ ಬಂದಿರುವ ಕೆಲವು ಸಮಸ್ಯೆಗಳಿಗೆ ತೀರ್ಮಾನ ಕೈಗೊಳ್ಳಲಾಗಿದೆ. ಆದರೆ ಇನ್ನೂ ಹಲವು ಸಣ್ಣಪುಟ್ಟ ಸಮಸ್ಯೆಗಳು ಹಾಗೂ ವಿವಿಧ ವಿಚಾರಗಳು ಸರ್ಕಾರದ ಗಮನಕ್ಕೆ ಬಂದಿಲ್ಲ. ಈ ಬಗ್ಗೆ ಚರ್ಚಿಸಿ ಅಗತ್ಯ ತೀರ್ಮಾನಗಳನ್ನು ಕೈಗೊಳ್ಳಲಾಗುವುದು.
ಕರಾವಳಿ ಭಾಗವನ್ನು ಕೇರಳ ಹಾಗೂ ಗೋವಾ ರಾಜ್ಯಗಳು ಪರಿಣಾಮಕಾರಿಯಾಗಿ ಬಳಸಿಕೊಂಡಿವೆ. ಕರ್ನಾಟಕದ ಕರಾವಳಿ ಭಾಗವನ್ನೂ ಇನ್ನಷ್ಟು ಪರಿಣಾಮಕಾರಿಯಾಗಿ ಅಭಿವೃದ್ಧಿಪಡಿಸುವ ಉದ್ದೇಶ ಸರ್ಕಾರಕ್ಕಿದೆ. ಉಡುಪಿಯಲ್ಲಿ ಅಂತಾರಾಷ್ಟ್ರೀಯ ಮಟ್ಟದ ಸರ್ಫಿಂಗ್ ನಡೆಯುತ್ತಿದೆ. ಇಂತಹ ಕಾರ್ಯಕ್ರಮಗಳನ್ನು ಪ್ರೋತ್ಸಾಹಿಸುವ ಮೂಲಕ ಕರಾವಳಿ ಭಾಗದಲ್ಲಿ ಪ್ರವಾಸೋದ್ಯಮವನ್ನು ಇನ್ನಷ್ಟು ಬೆಳೆಸಿದರೆ ಉದ್ಯೋಗ ಸೃಷ್ಟಿಯಾಗುವುದರ ಜೊತೆಗೆ ಆರ್ಥಿಕ ಚಟುವಟಿಕೆಗಳೂ ಹೆಚ್ಚಾಗಲಿವೆ. ಈ ಹಿನ್ನೆಲೆಯಲ್ಲಿ ಟೂರಿಸಂ ಪಾಲಿಸಿಯ ಬಗ್ಗೆಯೂ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಲಾಗುವುದು.
ದೊಡ್ಡ ದೊಡ್ಡ ಕೈಗಾರಿಕೆಗಳನ್ನು ಈ ಭಾಗಕ್ಕೆ ತರುವುದು ಕಷ್ಟವಾಗಬಹುದು. ಆದರೆ ಸಾಫ್ಟ್ ಇಂಡಸ್ಟ್ರಿಗಳನ್ನು ಕರಾವಳಿ ಭಾಗಕ್ಕೆ ತರಲು ಪ್ರಯತ್ನಿಸಲಾಗುವುದು.
*ಕ್ರೀಡಾಂಗಣಗಳ ಅಭಿವೃದ್ಧಿಗೆ ತೀರ್ಮಾನ : ಕರಾವಳಿ ಭಾಗದಲ್ಲಿ ಉತ್ತಮ ಕ್ರೀಡಾಂಗಣ ವ್ಯವಸ್ಥೆ ಕಲ್ಪಿಸುವ ಕುರಿತು ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಲಾಗುವುದು. ಉಡುಪಿ ಸ್ಟೇಡಿಯಂ, ಮಂಗಳೂರಿನ ಮಂಗಳ ಸ್ಟೇಡಿಯಂ ಸೇರಿದಂತೆ ಕ್ರೀಡಾಂಗಣಗಳ ಅಭಿವೃದ್ಧಿಗೆ ಸಂಬಂಧಿಸಿದಂತೆ ಅಗತ್ಯ ತೀರ್ಮಾನಗಳನ್ನು ಕೈಗೊಳ್ಳಲಾಗುವುದು.
ಸಚಿವ ಸಂಪುಟದಲ್ಲಿ ತೆಗೆದುಕೊಳ್ಳುವ ತೀರ್ಮಾನಗಳು ಅನುಷ್ಠಾನಕ್ಕೆ ಬರುತ್ತವೆ. ಸಚಿವ ಸಂಪುಟದ ತೀರ್ಮಾನವೆಂದರೆ ಅದು ಇಡೀ ಸರ್ಕಾರದ ತೀರ್ಮಾನವಾಗಿದೆ. ಸರ್ಕಾರ ಕೈಗೊಳ್ಳುವ ನಿರ್ಣಯಗಳನ್ನು ಅನುಷ್ಠಾನಗೊಳಿಸಲಾಗುವುದು. ಇಲ್ಲವಾದರೆ ಸಚಿವ ಸಂಪುಟಕ್ಕೆ ಯಾವುದೇ ವಿಚಾರಗಳನ್ನು ತರುವ ಅವಶ್ಯಕತೆಯೇ ಇರುವುದಿಲ್ಲ. ಟೀಕೆ ಮಾಡುವವರು ಇದ್ದೇ ಇರುತ್ತಾರೆ. ಅದನ್ನೆಲ್ಲ ನಾವು ಸಕಾರಾತ್ಮಕವಾಗಿ ತೆಗೆದುಕೊಳ್ಳುತ್ತೇವೆ.
*ವಿಶೇಷ ಅಧಿವೇಶನದಲ್ಲಿ ಕಸ್ತೂರಿ ರಂಗನ್ ವರದಿ, ಬರದ ಕುರಿತು ಚರ್ಚೆ: ಸೆಪ್ಟೆಂಬರ್ 21, 22 ಮತ್ತು 23ರಂದು ವಿಶೇಷ ಅಧಿವೇಶನ ಕರೆಯಲಾಗಿದೆ. ಮೊದಲನೆಯದಾಗಿ ಕಸ್ತೂರಿ ರಂಗನ್ ವರದಿ ವಿಚಾರದ ಬಗ್ಗೆ ಚರ್ಚಿಸಲಾಗುವುದು. ರಾಜ್ಯದಲ್ಲಿ ವಿಪರೀತ ಬರ ಪರಿಸ್ಥಿತಿ ಇರುವ ಹಿನ್ನೆಲೆಯಲ್ಲಿ ರೈತರಿಗೆ ಯಾವ ರೀತಿ ಸ್ಪಂದಿಸಬೇಕು ಹಾಗೂ ಯಾವ ರೀತಿಯಲ್ಲಿ ನೆರವು ನೀಡಬೇಕು ಎಂಬ ಬಗ್ಗೆಯೂ ಚರ್ಚಿಸಲಾಗುವುದು. ಈ ವಿಶೇಷ ಅಧಿವೇಶನವನ್ನು ರೈತರ ಹಿತದೃಷ್ಟಿಯಿಂದ ಕರೆಯಲಾಗಿದೆ.
ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯರಾದ ಮಂಜುನಾಥ್ ಭಂಡಾರಿ, ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಮಾಜಿ ಸಚಿವರಾದ ವಿನಯ್ ಕುಮಾರ್ ಸೊರಕೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಾದ ನವೀನ್ ರಾಜ್ ಸಿಂಗ್, ಜಿಲ್ಲಾಧಿಕಾರಿಗಳಾದ ಸ್ವರೂಪಾ ಟಿ.ಕೆ., ಮಂಗಳೂರು ವಿವಿ ರಿಜಿಸ್ಟ್ರಾರ್ ಸಂತೋಷ್ ಬಿ.ಜಗಲಾಸರ್, ಕರ್ನಾಟಕ ಗೃಹ ಮಂಡಳಿ ಇಂಜಿನಿಯರ್ ಸಹನಾ, ಬೆಳಪು ಪಂಚಾಯಿತಿ ಮಾಜಿ ಅಧ್ಯಕ್ಷರಾದ ದೇವಿಪ್ರಸಾದ್ ಶೆಟ್ಟಿ, ಗುತ್ತಿಗೆದಾರ ವಾಸುದೇವ್ ಶೆಟ್ಟಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. -
Dr. G Parameshwara
@DrParameshwara
ಕನ್ನಡ ಚಿತ್ರರಂಗದಲ್ಲಿ ತಮ್ಮ ಅಮೋಘ ಅಭಿನಯದ ಮೂಲಕ ವಿಭಿನ್ನ ಪಾತ್ರಗಳಿಗೆ ಜೀವ ತುಂಬಿದ ಸಾಹಸಸಿಂಹ ಡಾ. ವಿಷ್ಣುವರ್ಧನ್ ಅವರು ಹಲವು ಜನಪ್ರಿಯ ಚಿತ್ರಗಳಲ್ಲಿ ಮನೋಜ್ಞ ಪಾತ್ರಪೋಷಣೆಯ ಮೂಲಕ ತಮ್ಮದೇ ಆದ ಛಾಪು ಮೂಡಿಸಿದ್ದಾರೆ.
ಕನ್ನಡ ಸಿನಿರಂಗಕ್ಕೆ ಅಪಾರ ಕೊಡುಗೆಯನ್ನು ನೀಡಿದ ಡಾ. ವಿಷ್ಣುವರ್ಧನ್ ಅವರ ಜನ್ಮದಿನದ ಸಂದರ್ಭದಲ್ಲಿ ಅವರಿಗೆ ನನ್ನ ನಮನಗಳನ್ನು ಸಲ್ಲಿಸುತ್ತೇನೆ. -
Dr. G Parameshwara
@DrParameshwara
ರಾಜ್ಯದಲ್ಲಿನ ಬರ ಪರಿಸ್ಥಿತಿಯ ಪರಿಶೀಲನೆ ಮುಂದುವರಿದಿದ್ದು, 17 ಜಿಲ್ಲೆಗಳ 53 ತಾಲ್ಲೂಕುಗಳನ್ನು 3ನೇ ಹಂತದ ಗ್ರೌಂಡ್ ಟ್ರೂಥಿಂಗ್ಗೆ ಆಯ್ಕೆ ಮಾಡಲಾಗಿದೆ.
ಸೆಪ್ಟೆಂಬರ್ 19 ಮತ್ತು 20ರಂದು ಅಧಿಕಾರಿಗಳ ತಂಡಗಳು ಆಯ್ಕೆಯಾದ ಗ್ರಾಮಗಳ ಜಮೀನುಗಳಿಗೆ ಭೇಟಿ ನೀಡಿ ಬೆಳೆ ಹಾನಿಯನ್ನು ನೇರವಾಗಿ ಪರಿಶೀಲಿಸಲಿವೆ. ‘Crop Loss GT’ ಆ್ಯಪ್ ಮೂಲಕ ಜಮೀನಿನ ವಿವರ, ಜಿಪಿಎಸ್ ಮಾಹಿತಿ, ಜಿಯೋ-ಟ್ಯಾಗ್ ಚಿತ್ರಗಳು ಹಾಗೂ ಬೆಳೆ ಹಾನಿಯ ಪ್ರಮಾಣವನ್ನು ಸ್ಥಳದಲ್ಲೇ ದಾಖಲಿಸಲಾಗುತ್ತದೆ. ಸೆಪ್ಟೆಂಬರ್ 21ರೊಳಗೆ ಅಂತಿಮ ವರದಿ ಸಲ್ಲಿಸುವಂತೆ ಸೂಚಿಸಲಾಗಿದೆ.
ಈ ಪರಿಶೀಲನೆಯ ವರದಿ ಆಧರಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು. ಪ್ರತಿ ರೈತನ ನೈಜ ಬೆಳೆ ಹಾನಿಯೂ ಸರಿಯಾಗಿ ದಾಖಲಾಗಬೇಕು ಎಂಬುದೇ ನಮ್ಮ ಉದ್ದೇಶ.
The review of the drought situation across the State is continuing, and 53 taluks in 17 districts have been selected for the third phase of ground truthing.
On September 19 and 20, teams of officials will visit farms in the selected villages and directly assess crop damage. Using the ‘Crop Loss GT’ app, land details, GPS information, geo-tagged photographs and the extent of crop loss will be recorded on-site. Officials have been directed to submit the final report by September 21.
Further action will be taken based on this assessment. Our objective is to ensure that the actual crop loss suffered by every farmer is recorded accurately. -
Dr. G Parameshwara
@DrParameshwara
ರಾಜ್ಯದಲ್ಲಿನ ಬರ ಪರಿಸ್ಥಿತಿಯನ್ನು ನಿರಂತರ ವೈಜ್ಞಾನಿಕವಾಗಿ ಮೌಲ್ಯಮಾಪನ ಮಾಡಲಾಗುತ್ತಿದ್ದು, 3ನೇ ಹಂತದ ಗ್ರೌಂಡ್ ಟ್ರೂಥಿಂಗ್ಗೆ 17 ಜಿಲ್ಲೆಗಳ 53 ತಾಲೂಕುಗಳನ್ನು ಆಯ್ಕೆ ಮಾಡಲಾಗಿದೆ.
ಬೆಳೆ ಹಾನಿಯ ನೈಜ ಸ್ಥಿತಿಯನ್ನು ನಿಖರವಾಗಿ ಮತ್ತು ಪಾರದರ್ಶಕವಾಗಿ ದಾಖಲಿಸಲು ‘Crop Loss GT’ ಮೊಬೈಲ್ ಆ್ಯಪ್ ಬಳಸಲಾಗುತ್ತಿದೆ. ಇದರ ಮೂಲಕ ಜಿಯೋ-ಟ್ಯಾಗ್ ಮಾಡಲಾದ ಛಾಯಾಚಿತ್ರಗಳು, ಜಿಪಿಎಸ್ ಮಾಹಿತಿ, ಜಮೀನಿನ ವಿವರ ಹಾಗೂ ಬೆಳೆ ಹಾನಿಯ ಪ್ರಮಾಣವನ್ನು ಸ್ಥಳದಲ್ಲಿಯೇ ದಾಖಲಿಸಲಾಗುತ್ತದೆ.
ಮುಂಗಾರು ಹಂಗಾಮು ಮುಗಿಯುವವರೆಗೂ ಬರ ಪರಿಸ್ಥಿತಿಯ ಮೇಲ್ವಿಚಾರಣೆ ಮುಂದುವರಿಯಲಿದ್ದು, ಅಗತ್ಯ ಕಂಡುಬಂದಲ್ಲಿ ಮುಂದಿನ ಹಂತದಲ್ಲಿಯೂ ಹೆಚ್ಚುವರಿ ತಾಲೂಕುಗಳನ್ನು ಗ್ರೌಂಡ್ ಟ್ರೂಥಿಂಗ್ಗೆ ಸೇರಿಸಲಾಗುವುದು.
The drought situation across the State is being continuously assessed on a scientific basis, and 53 taluks across 17 districts have been selected for the third phase of ground truthing.
To record the actual extent of crop damage accurately and transparently, the ‘Crop Loss GT’ mobile app is being used. Geo-tagged photographs, GPS information, land details and the extent of crop loss will be recorded directly at the field level.
Monitoring of the drought situation will continue until the end of the monsoon season. If required, additional taluks will also be included for ground truthing in the next phase. -
Dr. G Parameshwara
@DrParameshwara
ರಾಜ್ಯದಲ್ಲಿನ ಬರ ಪರಿಸ್ಥಿತಿಯನ್ನು ವೈಜ್ಞಾನಿಕವಾಗಿ ಪರಿಶೀಲಿಸಿ, 2ನೇ ಹಂತದ ಗ್ರೌಂಡ್ ಟ್ರೂಥಿಂಗ್ ವರದಿ ಆಧರಿಸಿ ಹೆಚ್ಚುವರಿ 23 ತಾಲೂಕುಗಳನ್ನು ಬರಪೀಡಿತ ಪ್ರದೇಶಗಳೆಂದು ಘೋಷಿಸಿದ್ದೇವೆ. ಇದರೊಂದಿಗೆ ರಾಜ್ಯದಲ್ಲಿ ʼಬರಪೀಡಿತʼ ಎಂದು ಘೋಷಿಸಲಾದ ತಾಲೂಕುಗಳ ಸಂಖ್ಯೆ 124ಕ್ಕೆ ಏರಿಕೆಯಾಗಿದೆ.
ರೈತರ ನೈಜ ಬೆಳೆ ಹಾನಿಯನ್ನು ಸಮರ್ಪಕವಾಗಿ ದಾಖಲಿಸಿ, ಅರ್ಹ ರೈತರಿಗೆ ನಿಯಮಾನುಸಾರ ಪರಿಹಾರ ತಲುಪಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿದ್ದೇವೆ
ರೈತರ ಹಿತ ಕಾಪಾಡಿ, ಸಂಕಷ್ಟದ ಸಮಯದಲ್ಲಿ ಅವರಿಗೆ ಬೆಂಬಲವಾಗಿ ನಿಲ್ಲುವುದು ನಮ್ಮ ಜವಾಬ್ದಾರಿ.
After a scientific assessment of the drought situation in the State, 23 additional taluks have been declared drought-hit based on the second-phase ground truthing report. With this, the total number of taluks declared drought-hit in Karnataka has risen to 124.
Necessary steps are being taken to accurately record the actual crop losses suffered by farmers and ensure that eligible farmers receive relief in accordance with the prescribed norms.
Protecting farmers’ interests and standing by them in times of distress is our responsibility. -
Dr. G Parameshwara
@DrParameshwara
₹2,000ಕ್ಕಿಂತ ಹೆಚ್ಚಿನ ಯುಪಿಐ ವ್ಯಾಪಾರ ವಹಿವಾಟುಗಳ ಮೇಲೆ ಶುಲ್ಕ ವಿಧಿಸುವ ಕೇಂದ್ರ ಸರ್ಕಾರದ ನಿರ್ಧಾರವು ಭಾರತದ ಡಿಜಿಟಲ್ ಪಾವತಿ ವ್ಯವಸ್ಥೆಯ ಪ್ರಗತಿಯಲ್ಲಿ ಒಂದು ಹೆಜ್ಜೆ ಹಿಂದಕ್ಕೆ ಇಟ್ಟಂತಾಗಿದೆ.
ಯುಪಿಐ ಯಶಸ್ವಿಯಾಗಲು ಪ್ರಮುಖ ಕಾರಣವೆಂದರೆ ಅದರ ಬಳಕೆಯಲ್ಲಿನ ಸರಳ ವಿಧಾನ, ಸುಲಭ ಮತ್ತು ಉಚಿತ ಲಭ್ಯತೆ. ಸಾಮಾನ್ಯ ನಾಗರಿಕರಿಂದ ಹಿಡಿದು ಸಣ್ಣ ವ್ಯಾಪಾರಿಗಳವರೆಗೆ ಎಲ್ಲರನ್ನೂ ನಗದು ವಹಿವಾಟಿನಿಂದ ಡಿಜಿಟಲ್ ಆರ್ಥಿಕತೆಯತ್ತ ಕರೆದೊಯ್ಯುವಲ್ಲಿ ಇದು ಪ್ರಮುಖ ಪಾತ್ರ ವಹಿಸಿತು. ₹2,000ಕ್ಕಿಂತ ಹೆಚ್ಚಿನ ನಿರ್ದಿಷ್ಟ ವಹಿವಾಟುಗಳ ಮೇಲೆ ಶೇ.0.4ರ ವ್ಯಾಪಾರ ರಿಯಾಯಿತಿ ದರ (ಎಂಡಿಆರ್) ವಿಧಿಸುವ ಈಗಿನ ನಿರ್ಧಾರವು ಈ ಮೂಲಭೂತ ವ್ಯವಸ್ಥೆಯನ್ನು ದುರ್ಬಲಗೊಳಿಸುತ್ತದೆ.
ಗ್ರಾಹಕರಿಗೆ ನೇರವಾಗಿ ಯಾವುದೇ ಶುಲ್ಕ ವಿಧಿಸಲಾಗುವುದಿಲ್ಲ ಎಂದು ಸರ್ಕಾರ ಹೇಳುತ್ತಿದೆ. ಆದರೆ, ಪಾವತಿ ಸ್ವೀಕರಿಸುವುದಕ್ಕಾಗಿ ವ್ಯಾಪಾರಿಗೆ ಹೆಚ್ಚುವರಿ ವೆಚ್ಚವನ್ನು ವಿಧಿಸಿದಾಗ, ಅಂತಿಮವಾಗಿ ಆ ವೆಚ್ಚವನ್ನು ಯಾರು ಭರಿಸುತ್ತಾರೆ ಎಂಬುದೇ ನಿಜವಾದ ಪ್ರಶ್ನೆ. ಈ ಹೆಚ್ಚುವರಿ ವೆಚ್ಚವು ವಸ್ತುಗಳ ಬೆಲೆ ಅಥವಾ ಇತರ ಶುಲ್ಕಗಳ ರೂಪದಲ್ಲಿ ಸಾಮಾನ್ಯ ಗ್ರಾಹಕರ ಮೇಲೆಯೇ ಬೀಳುವ ಸಾಧ್ಯತೆಯ ಬಗ್ಗೆ ಸಹಜವಾಗಿಯೇ ಆತಂಕವಿದೆ.
ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಹೇಳಿರುವಂತೆ, ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಸರ್ಕಾರ ಮತ್ತೊಮ್ಮೆ ಅಮೆರಿಕದ ಒತ್ತಡಕ್ಕೆ ಮಣಿದು ಭಾರತದ ಡಿಜಿಟಲ್ ಪಾವತಿ ವ್ಯವಸ್ಥೆಯನ್ನು ಅಮೆರಿಕದ ಕಾರ್ಪೊರೇಟ್ ಹಿತಾಸಕ್ತಿಗಳಿಗೆ ಮುಕ್ತಗೊಳಿಸುತ್ತಿದೆ ಎಂಬುದು ಸ್ಪಷ್ಟವಾಗಿದೆ. ₹2,000ಕ್ಕಿಂತ ಹೆಚ್ಚಿನ ವಹಿವಾಟುಗಳು ಒಟ್ಟು ಯುಪಿಐ ವಹಿವಾಟುಗಳ ಸಂಖ್ಯೆಯಲ್ಲಿ ತುಲನಾತ್ಮಕವಾಗಿ ಸಣ್ಣ ಪಾಲು ಹೊಂದಿದ್ದರೂ, ಒಟ್ಟು ವಹಿವಾಟಿನ ಮೌಲ್ಯದಲ್ಲಿ ಅವು ಸುಮಾರು ಶೇ.65ರಷ್ಟು ಪಾಲು ಹೊಂದಿವೆ ಎಂದು ಅವರು ಹೇಳಿದ್ದಾರೆ. ಭಾರತದ ಡಿಜಿಟಲ್ ಪಾವತಿ ಆರ್ಥಿಕತೆಯ ಇಷ್ಟು ದೊಡ್ಡ ಭಾಗದ ಮೇಲೆ ಶುಲ್ಕ ವಿಧಿಸುವ ವ್ಯವಸ್ಥೆ ಜಾರಿಗೆ ಬರುತ್ತಿದ್ದರೆ, ಹೀಗೆ ನೀತಿಯಲ್ಲಿ ಬದಲಾವಣೆ ಮಾಡುವ ಅಗತ್ಯವೇನಿತ್ತು? ಮತ್ತು ಅಂತಿಮವಾಗಿ ಯಾರ ಹಿತಾಸಕ್ತಿಗಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ? ಎಂಬುದಕ್ಕೆ ಸರ್ಕಾರ ಉತ್ತರಿಸಲೇಬೇಕು.
ಈ ಹೊಸ ವ್ಯವಸ್ಥೆಯಿಂದ ಲಾಭ ಪಡೆಯುವವರ ಬಗ್ಗೆಯೂ ಸೂಕ್ಷ್ಮವಾಗಿ ಪರಿಶೀಲನೆ ನಡೆಯಬೇಕಿದೆ. ಎಂಡಿಆರ್ ಅನ್ನು ವ್ಯಾಪಾರಿ ಪಾವತಿಸುತ್ತಾನೆ. ಆದರೆ ಬ್ಯಾಂಕ್ಗಳು, ಪಾವತಿ ಕಂಪನಿಗಳು ಮತ್ತು ಇತರ ಮಧ್ಯವರ್ತಿಗಳಿಗೆ ಹೊಸ ಆದಾಯದ ಮೂಲವೊಂದು ಸೃಷ್ಟಿಯಾಗುತ್ತದೆ. ಇದೇ ವೇಳೆ, ಗೂಗಲ್ ಪೇ ಮತ್ತು ವಾಲ್ಮಾರ್ಟ್ ಬೆಂಬಲಿತ ಫೋನ್ಪೇಗಳು ಭಾರತದ ಯುಪಿಐ ವ್ಯವಸ್ಥೆಯ ಬಹುಪಾಲು ವಹಿವಾಟುಗಳನ್ನು ನಿಯಂತ್ರಿಸುತ್ತಿವೆ. ಭಾರತದ ಕಡಿಮೆ ವೆಚ್ಚದ ಸಾರ್ವಜನಿಕ ಡಿಜಿಟಲ್ ಮೂಲಸೌಕರ್ಯವಾಗಿ ನಿರ್ಮಿಸಲಾದ ವ್ಯವಸ್ಥೆಯನ್ನು ನಿಧಾನವಾಗಿ ದೊಡ್ಡ ಖಾಸಗಿ ಬ್ಯಾಂಕ್ಗಳು, ಹಣಕಾಸು ತಂತ್ರಜ್ಞಾನ ವೇದಿಕೆಗಳು ಮತ್ತು ಜಾಗತಿಕ ಕಾರ್ಪೊರೇಟ್ ದೈತ್ಯರಿಗೆ ಆದಾಯದ ಅವಕಾಶವಾಗಿ ಪರಿವರ್ತಿಸಬಾರದು. ಇದರ ಹೊರೆ ಭಾರತೀಯ ವ್ಯಾಪಾರಿಗಳ ಮೇಲೆ ಬೀಳುತ್ತಿದ್ದರೆ, ಕೆಲವು ದೊಡ್ಡ ಹಣಕಾಸು ಮತ್ತು ತಂತ್ರಜ್ಞಾನ ಕಂಪನಿಗಳು ಅದರಿಂದ ಲಾಭ ಪಡೆಯುವಂತಾಗುತ್ತದೆ.
ಇದರಿಂದಾಗಿ ಯುಪಿಐ ಇನ್ನೂ ‘ಉಚಿತ’ವಾಗಿಯೇ ಉಳಿದಿದೆ ಎಂಬ ಸರ್ಕಾರದ ಹೇಳಿಕೆಯನ್ನು ಅಕ್ಷರಶಃ ಒಪ್ಪಿಕೊಳ್ಳುವುದು ಕಷ್ಟವಾಗುತ್ತಿದೆ. ವಹಿವಾಟು ಹಂತದಲ್ಲಿ ವಿಧಿಸುವ ಶುಲ್ಕವು ಎಲ್ಲಿಯೂ ಮಾಯವಾಗುವುದಿಲ್ಲ. ಅದು ವ್ಯಾಪಾರ ನಡೆಸುವ ವೆಚ್ಚದ ಒಂದು ಭಾಗವಾಗುತ್ತದೆ. ಅಂತಿಮವಾಗಿ ಆ ವೆಚ್ಚವು ಸಾಮಾನ್ಯ ಜನರು ಪಾವತಿಸುವ ವಸ್ತುಗಳ ಬೆಲೆಯಲ್ಲಿಯೂ ಪ್ರತಿಫಲಿಸಬಹುದು. ವಹಿವಾಟಿನ ಸರಪಳಿಯ ಒಂದು ಹಂತದಲ್ಲಿ ಹೊಸ ಶುಲ್ಕವನ್ನು ವಿಧಿಸಿ, ಗ್ರಾಹಕರಿಗೆ ಮಾತ್ರ ಉಚಿತ ಎಂದು ಹೇಳುವುದರಿಂದ ಈ ಮೂಲಭೂತ ವಾಸ್ತವವನ್ನು ಬದಲಾಯಿಸಲು ಸಾಧ್ಯವಿಲ್ಲ.
ನಮ್ಮ ಡಿಜಿಟಲ್ ಆರ್ಥಿಕತೆಯ ಉದ್ದೇಶ ವ್ಯಾಪಾರ ನಡೆಸುವ ವೆಚ್ಚವನ್ನು ಕಡಿಮೆ ಮಾಡುವುದಾಗಿರಬೇಕು. ಹೊಸ ಹೊರೆಗಳನ್ನು ಸೃಷ್ಟಿಸುವುದಲ್ಲ. ತಂತ್ರಜ್ಞಾನವು ಸಾಮಾನ್ಯ ಜನರನ್ನು ಸಬಲಗೊಳಿಸಬೇಕು ಮತ್ತು ನಮ್ಮ ವ್ಯಾಪಾರಿಗಳನ್ನು ಬಲಪಡಿಸಬೇಕು. ಪ್ರತಿಯೊಂದು ಡಿಜಿಟಲ್ ವಹಿವಾಟನ್ನೂ ಮತ್ತೊಂದು ಶುಲ್ಕ ವಿಧಿಸುವ ಅವಕಾಶವನ್ನಾಗಿ ಪರಿವರ್ತಿಸಬಾರದು.
ಭಾರತವು ವಿಶ್ವದಲ್ಲೇ ಅತ್ಯಂತ ಸಮಗ್ರ ಮತ್ತು ಸರ್ವರನ್ನೂ ಒಳಗೊಂಡ ಡಿಜಿಟಲ್ ಆರ್ಥಿಕತೆಯನ್ನು ನಿರ್ಮಿಸುವ ಗುರಿ ಹೊಂದಬೇಕು. ಪ್ರತಿಯೊಬ್ಬ ಭಾರತೀಯನಿಗೂ ಕೈಗೆಟುಕುವ, ಸುಲಭವಾಗಿ ಲಭ್ಯವಾಗುವ ಡಿಜಿಟಲ್ ಪಾವತಿ ವ್ಯವಸ್ಥೆಯನ್ನು ರಕ್ಷಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಈ ನಿರ್ಧಾರವನ್ನು ಮರುಪರಿಶೀಲಿಸಬೇಕು ಎಂದು ಒತ್ತಾಯಿಸುತ್ತೇನೆ. -
Dr. G Parameshwara
@DrParameshwara
The decision to introduce charges on UPI merchant transactions above ₹2,000 is a step backwards for India’s digital payments journey.
UPI succeeded because it was simple, accessible and free. It encouraged everyone, from ordinary citizens to small businesses, to move away from cash and become part of the digital economy. Introducing a 0.4% Merchant Discount Rate (MDR) on specified transactions above ₹2,000 risks weakening that very foundation.
The Government says consumers will not be charged directly. But the real question is when a merchant is made to pay more for accepting a payment, who ultimately bears that cost? There is a genuine concern that these additional costs could find their way back to ordinary consumers through prices and other charges.
As Leader of the Opposition Shri @RahulGandhi has pointed out, it is clear that the @narendramodi Government is once again yielding to American pressure and opening India’s digital payments ecosystem further to American corporate interests. He has pointed out that while transactions above ₹2,000 may constitute a relatively small share of UPI transactions by volume, they account for nearly 65% of the total transaction value. If such a large part of India’s digital payments economy is now being opened up to charges, the Government must answer why this policy reversal was necessary and whose interests it ultimately serves.
The beneficiaries of this new regime also deserve close scrutiny. The merchant pays the MDR, while banks, payment companies and other intermediaries gain a new revenue stream. At the same time, Google Pay and Walmart-backed PhonePe dominate a very large share of India’s UPI ecosystem. What was built as India’s low-cost public digital infrastructure should not slowly be converted into a revenue opportunity for large private banks, fintech platforms and global corporate giants. The burden is placed on Indian merchants, while some of the biggest financial and technology companies stand to benefit.
This makes the Government’s claim that UPI remains “free” increasingly difficult to take at face value. A charge imposed at the merchant end does not disappear into thin air. It becomes part of the cost of doing business, and eventually that cost can find its way into the prices paid by ordinary people. Calling it free for consumers while creating a new charge elsewhere in the same transaction chain does not address that basic reality.
Our digital economy should reduce the cost of doing business, not create new burdens. Technology must empower the common man and strengthen our merchants and not make every digital transaction another opportunity to impose a charge.
India should aspire to build the world’s most inclusive digital economy. The Union Government must reconsider this decision and protect the principle that made UPI a global success: affordable, accessible digital payments for every Indian. -
Dr. G Parameshwara
@DrParameshwara
ಬರದ ಹೊಡೆತಕ್ಕೆ ರೈತರ ಬೆಳೆ ನಲುಗಿದಾಗ, ಅವರ ಕುಟುಂಬದ ಬದುಕು ಕೂಡ ಸಂಕಷ್ಟಕ್ಕೆ ಸಿಲುಕುತ್ತದೆ. ಇಂತಹ ಕಷ್ಟದ ಸಂದರ್ಭದಲ್ಲಿ ಅನ್ನದಾತನಿಗೆ ಸರ್ಕಾರದ ನೆರವು ವಿಳಂಬವಾಗದೆ ತಲುಪಬೇಕು ಎಂಬ ಕಾಳಜಿಯಿಂದ ತ್ವರಿತ ಪರಿಹಾರ ಕ್ರಮಗಳನ್ನು ಕೈಗೊಳ್ಳುತ್ತಿದ್ದೇವೆ.
ಬರ ಘೋಷಣೆಯಾದ 45 ದಿನಗಳೊಳಗೆ ಪರಿಹಾರ ಯೋಜನೆಯನ್ನು ಜಾರಿಗೊಳಿಸಲು ಕ್ರಮ ಕೈಗೊಳ್ಳಲಾಗಿದ್ದು, ಪರಿಹಾರ ಪ್ರಕ್ರಿಯೆಯನ್ನು 2027ರ ಜನವರಿ 9ರೊಳಗೆ ಪೂರ್ಣಗೊಳಿಸಲು ನಿರ್ಧರಿಸಲಾಗಿದೆ. ಜೊತೆಗೆ, ಸಹಕಾರ ಬ್ಯಾಂಕ್ಗಳ ಸಾಲ ಮರುಪಾವತಿ ಅವಧಿ ವಿಸ್ತರಣೆಗೆ ಶೀಘ್ರ ಪರಿಹಾರ ಕ್ರಮ ಕೈಗೊಂಡಿದ್ದೇವೆ.
ರೈತರ ನೋವು ನಮ್ಮ ನೋವು. ಅವರ ಬದುಕಿಗೆ ಆಸರೆಯಾಗಿ, ಸಂಕಷ್ಟದ ಸಮಯದಲ್ಲಿ ಧೈರ್ಯ ತುಂಬುವುದು ನಮ್ಮ ಸರ್ಕಾರದ ಕರ್ತವ್ಯ.
When drought damages crops, it also puts the livelihoods of farming families at risk. In such difficult times, Government support must reach farmers without delay. With this in mind, we are taking swift relief measures.
Steps have been taken to implement the relief scheme within 45 days of the drought declaration, and the entire relief process is targeted for completion by January 9, 2027. We have also initiated measures to extend the loan repayment period for cooperative bank loans.
Farmers’ distress is our concern. Standing by them and giving them confidence in difficult times is our Government’s responsibility. -
Dr. G Parameshwara
@DrParameshwara
ರೈತರು ತಮ್ಮ ಹಕ್ಕುಗಳು, ಸಾಲ ಸೌಲಭ್ಯಗಳು ಹಾಗೂ ಸರ್ಕಾರದ ನೆರವಿನ ಬಗ್ಗೆ ಸ್ಪಷ್ಟ ಮಾಹಿತಿ ಹೊಂದಿರುವುದು ಬಹಳ ಮುಖ್ಯ. ಸಂಕಷ್ಟದ ಸಂದರ್ಭದಲ್ಲಿ ಯಾವುದೇ ಗೊಂದಲಕ್ಕೆ ಒಳಗಾಗದೆ, ಸೂಕ್ತ ಮಾಹಿತಿಯೊಂದಿಗೆ ನಿರ್ಧಾರ ಕೈಗೊಳ್ಳಲು ಅನ್ನದಾತರಿಗೆ ಅಗತ್ಯ ಮಾರ್ಗದರ್ಶನ ನೀಡುವುದು ನಮ್ಮ ಸರ್ಕಾರದ ಕರ್ತವ್ಯ.
ಈ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗಳು, ಸಿಇಒಗಳು ಹಾಗೂ ಬ್ಯಾಂಕ್ಗಳ ವ್ಯವಸ್ಥಾಪಕರ ಸಭೆ ನಡೆಸಿ ರೈತರಲ್ಲಿ ಜಾಗೃತಿ ಮೂಡಿಸಲು ತೀರ್ಮಾನಿಸಿದ್ದು, ಕೃಷಿ, ತೋಟಗಾರಿಕೆ ಹಾಗೂ ಪಶುಸಂಗೋಪನೆ ಇಲಾಖೆಗಳ ಅಧಿಕಾರಿಗಳ ಮೂಲಕ ರೈತರಿಗೆ ಅಗತ್ಯ ಮಾಹಿತಿಯನ್ನು ತಲುಪಿಸಲು ಕ್ರಮ ಕೈಗೊಳ್ಳಲಾಗುತ್ತಿದೆ.
ರೈತರ ಸಂಕಷ್ಟದ ಸಂದರ್ಭದಲ್ಲಿ ಸೂಕ್ತ ಮಾಹಿತಿ, ಅಗತ್ಯ ನೆರವು ಮತ್ತು ಸರ್ಕಾರದ ಬೆಂಬಲ ಜೊತೆಗಿರಲಿದೆ.
It is important that farmers have clear information about their rights, loan facilities and Government support. In times of distress, our Government has a responsibility to ensure that farmers receive the right guidance to make informed decisions without confusion.
To create greater awareness, it has been decided to hold meetings with Deputy Commissioners, CEOs and bank managers. Necessary information will also be provided to farmers through officials from the Agriculture, Horticulture and Animal Husbandry Departments.
In times of hardship, farmers will have access to clear information, necessary assistance and the support of the Government. -
Dr. G Parameshwara
@DrParameshwara
ಮಣ್ಣಿನಲ್ಲಿ ಬೆವರು ಸುರಿಸಿ, ನಾಡಿಗೆ ಅನ್ನ ನೀಡುವ ರೈತರ ಕಷ್ಟದ ದಿನಗಳಲ್ಲಿ ಆತನ ಜೊತೆ ನಿಲ್ಲುವುದು ನಮ್ಮ ಜವಾಬ್ದಾರಿ. ಈ ನಿಟ್ಟಿನಲ್ಲಿ ರೈತರ ಮೇಲಿನ ಸಾಲದ ಒತ್ತಡವನ್ನು ತಗ್ಗಿಸಿ, ಅವರು ಆತಂಕವಿಲ್ಲದೆ ಕೃಷಿ ಚಟುವಟಿಕೆಗಳನ್ನು ಮುಂದುವರಿಸಲು ನೆರವಾಗುವ ಉದ್ದೇಶದಿಂದ ಹಲವು ಮಹತ್ವದ ಕ್ರಮಗಳನ್ನು ಕೈಗೊಂಡಿದ್ದೇವೆ.
ಸದ್ಯ ಘೋಷಣೆಯಾಗಿರುವ ಸಾಧಾರಣ ಬರಪೀಡಿತ 12 ತಾಲ್ಲೂಕುಗಳ ರೈತರ ಸಾಲದ ಮರುಪಾವತಿ ಅವಧಿಯನ್ನು 36 ತಿಂಗಳಿಗೆ ವಿಸ್ತರಿಸಲಾಗಿದೆ. ಮೊರಟೋರಿಯಂ ಅವಧಿಯಲ್ಲಿ ಬಲವಂತದ ಸಾಲ ವಸೂಲಾತಿಯನ್ನು ನಿಷೇಧಿಸಲಾಗಿದ್ದು, ಇದೇ ಅವಧಿಯಲ್ಲಿ ರೈತರಿಗೆ ಅಗತ್ಯವಿದ್ದಲ್ಲಿ ಹೊಸ ಸಾಲ ಪಡೆಯಲು ಅವಕಾಶ ಕಲ್ಪಿಸಿದ್ದೇವೆ.
Standing by farmers who toil in the fields and feed the State is our responsibility. To reduce their debt burden and help them continue farming without fear or uncertainty, our Government has taken several important measures.
For farmers in the 12 taluks currently declared moderately drought-hit, the loan repayment period has been extended to 36 months.
Coercive loan recovery has been prohibited during the moratorium period, and farmers will also be allowed to access fresh loans during the same period if required. -
Dr. G Parameshwara
@DrParameshwara
ರೈತರ ಸಂಕಷ್ಟದ ಸಮಯದಲ್ಲಿ ಸಾಲದ ಒತ್ತಡ ಮತ್ತಷ್ಟು ಹೆಚ್ಚಾಗಬಾರದು. ಬಲವಂತದ ಸಾಲ ವಸೂಲಾತಿಯಿಂದ ಅನ್ನದಾತನ ಬದುಕಿನಲ್ಲಿ ಆತಂಕ ಮೂಡಬಾರದು ಎಂಬ ಕಾಳಜಿಯಿಂದ ನಮ್ಮ ಸರ್ಕಾರ ಹಲವು ಮಹತ್ವದ ಕ್ರಮಗಳನ್ನು ಕೈಗೊಂಡಿದೆ. ರೈತರಿಗೆ ನೆಮ್ಮದಿ, ಧೈರ್ಯ ಹಾಗೂ ಬದುಕನ್ನು ಕಟ್ಟಿಕೊಳ್ಳಲು ಅಗತ್ಯವಾದ ಸಮಯ ನೀಡುವುದು ನಮ್ಮ ಆದ್ಯತೆ.
ರೈತರ ಹಿತದೃಷ್ಟಿಯಿಂದ ನಮ್ಮ ಸರ್ಕಾರವು ಹಲವು ಮಹತ್ವದ ನಿರ್ಧಾರಗಳನ್ನು ಕೈಗೊಂಡಿದೆ. ಕಿಸಾನ್ ಕ್ರೆಡಿಟ್ ಕಾರ್ಡ್, ಕೃಷಿ ಸಾಲಗಳು, ಹೈನುಗಾರಿಕೆ, ರೇಷ್ಮೆ, ಮೀನುಗಾರಿಕೆ ಸೇರಿದಂತೆ ಕೃಷಿ ಸಂಬಂಧಿತ ಸಾಲಗಳಿಗೆ ಪರಿಹಾರ ಯೋಜನೆ ಅನ್ವಯವಾಗಲಿದೆ.
ಸದ್ಯ ಬರಪೀಡಿತ 89 ತಾಲ್ಲೂಕುಗಳ ರೈತರ ಸಾಲದ ಮರುಪಾವತಿ ಅವಧಿಯನ್ನು 60 ತಿಂಗಳಿಗೆ ವಿಸ್ತರಿಸಲಾಗಿದೆ.
Farmers should not face greater debt pressure during times of distress. With the concern that coercive loan recovery should not add to their hardship, our Government has taken several important measures to give farmers relief, confidence and the time needed to rebuild their livelihoods.
The relief measures will apply to Kisan Credit Card loans, agricultural loans, dairy, sericulture, fisheries and other agriculture-related loans.
For farmers in the 89 drought-hit taluks, the loan repayment period has been extended to 60 months. -
Dr. G Parameshwara
@DrParameshwara
ಬಿಸಿಲು, ಮಳೆ, ಬರದಿಂದಾಗಿ ಉಂಟಾದ ಬೆಳೆ ನಷ್ಟದ ನಡುವೆಯೂ ದೇಶಕ್ಕೆ ಅನ್ನ ನೀಡುವ ರೈತರ ಹೆಗಲ ಮೇಲಿನ ಸಾಲದ ಹೊರೆ ಮತ್ತಷ್ಟು ಭಾರವಾಗಬಾರದು ಎಂಬುದು ನಮ್ಮ ಸರ್ಕಾರದ ದೃಢ ಸಂಕಲ್ಪ.
ಈ ನಿಟ್ಟಿನಲ್ಲಿ ಸರ್ಕಾರದ ಮುಖ್ಯ ಕಾರ್ಯದರ್ಶಿಗಳ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ರೈತರ ಮೇಲಿನ ಆರ್ಥಿಕ ಒತ್ತಡವನ್ನು ತಗ್ಗಿಸಲು ಕೃಷಿ ಹಾಗೂ ಕೃಷಿ ಸಂಬಂಧಿತ ಸಾಲಗಳ ಮರುಪಾವತಿಗೆ ವಿಶೇಷ ಪರಿಹಾರ ಕ್ರಮಗಳನ್ನು ಕೈಗೊಳ್ಳಲಾಗಿದೆ. ಪ್ರಸಕ್ತ ವರ್ಷ ರೈತರಿಂದ ಯಾವುದೇ ರೀತಿಯ ಬಲವಂತದ ಸಾಲ ವಸೂಲಾತಿಗೆ ಅವಕಾಶ ನೀಡದಂತೆ ಕಟ್ಟುನಿಟ್ಟಿನ ಝೀರೋ ಟಾಲರೆನ್ಸ್ ನೀತಿಯನ್ನು ಜಾರಿಗೆ ತರಲಾಗಿದೆ.
ಸಾಲದ ಒತ್ತಡದಿಂದ ರೈತರ ಮನೆಯ ನೆಮ್ಮದಿ ಕದಡಬಾರದು. ಬಿತ್ತಿದ ಬೆಳೆಯ ಮೇಲೆ, ಬದುಕಿನ ಮೇಲೆ, ಭವಿಷ್ಯದ ಮೇಲೆ ರೈತರ ನಂಬಿಕೆ ಉಳಿಯಬೇಕು. ಕಷ್ಟದ ಈ ಸಂದರ್ಭದಲ್ಲಿ ಅನ್ನದಾತನ ಜೊತೆ ಸರ್ಕಾರ ನಿಲ್ಲಲಿದೆ. ರೈತರ ಕಣ್ಣೀರನ್ನು ಒರೆಸಿ, ಅವರ ಬದುಕಿಗೆ ಧೈರ್ಯ ತುಂಬುವುದು ನಮ್ಮ ಸರ್ಕಾರದ ಬದ್ಧತೆ.
Even amid crop losses caused by heat, rain and drought, our Government is determined to ensure that the farmers who feed the nation are not burdened further by debt.
At a meeting chaired by the Chief Secretary, special relief measures were taken to ease the financial pressure on farmers by providing flexibility in the repayment of agricultural and allied loans. A strict zero-tolerance policy has also been put in place to prevent any form of coercive loan recovery from farmers during the current year.
Debt pressure should not disturb the peace of farmers’ families. Farmers must retain confidence in their crops, their livelihoods and their future.
In this difficult time, the Government will stand firmly with our farmers. Easing their distress and restoring confidence in their lives remains our commitment. -
Dr. G Parameshwara
@DrParameshwara
ಇಂದು ಕೊರಟಗೆರೆ ತಾಲೂಕು ಪಂಚಾಯಿತಿಯ ನೂತನ ಕಟ್ಟಡ ನಿರ್ಮಾಣ ಕಾಮಗಾರಿ ನಡೆಯುತ್ತಿರುವ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದೆ. ಕಾಮಗಾರಿಯನ್ನು ಗುಣಮಟ್ಟದೊಂದಿಗೆ ನಿಗದಿತ ಅವಧಿಯೊಳಗೆ ಪೂರ್ಣಗೊಳಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದೆ.
ನೂತನ ಕಟ್ಟಡವು ಸಾರ್ವಜನಿಕರಿಗೆ ಇನ್ನಷ್ಟು ಸುಗಮ ಹಾಗೂ ಪರಿಣಾಮಕಾರಿ ಆಡಳಿತ ಸೇವೆ ಒದಗಿಸುವ ಕೇಂದ್ರವಾಗಲಿ ಎಂಬುದು ನನ್ನ ಆಶಯ.This media couldn't be displayed. See it on the original post. -
Dr. G Parameshwara
@DrParameshwara
Our Government is continuously carrying out a scientific assessment of the drought situation caused by deficient monsoon rainfall across the State and is taking phased measures to respond quickly to the distress faced by farmers.
In the first phase, ground verification was carried out in 102 taluks, following which 101 taluks were declared drought-hit — 89 severely drought-hit and 12 moderately drought-hit.
Now, in the second phase, an additional 23 taluks have been declared drought-hit. Of these, 21 taluks are severely drought-hit and 2 taluks are moderately drought-hit, taking the total number of drought-hit taluks in the State to 124.
Severely drought-hit taluks: Tiptur, Karatagi, Manvi, Sindhanur, Sirwar, Afzalpur, Aland, Chittapur, Kalaburagi, Yadrami, Shahabad, Bhalki, Basavana Bagewadi, Babaleshwar, Tikota, Rattihalli, Hubballi, Navalgund, Hubballi Urban, Annigeri and Kadur.
Moderately drought-hit taluks: Ponnampet and Virajpet.
In addition, based on scientific parameters such as rainfall recorded between June 1 and September 16, soil moisture and crop conditions, 53 taluks across 17 districts have now been selected for the third phase of ground truthing.
To make the assessment more accurate and transparent, the ‘Crop Loss GT’ mobile app is being used. Through the app, geo-tagged photographs, GPS details, land information and the extent of crop damage will be recorded directly from the field.
Teams of officials will visit farms in the selected villages on September 19 and 20 to assess crop damage on the ground. Deputy Commissioners and concerned officials have been directed to submit the final report by September 21.
The Government must have a clear picture of the actual distress faced by farmers. No farmer who has genuinely suffered crop loss should be left out of the documentation process. Further action will be taken based on scientific assessment, transparent verification and accurate reporting.
Monitoring of the drought situation will continue until the end of the monsoon season. If required, additional taluks will also be taken up for ground truthing in the next phase.
Responding to farmers’ distress is our Government’s first priority. Based on the actual extent of crop damage, we remain committed to ensuring that necessary assistance reaches eligible farmers in accordance with the rules. -
Dr. G Parameshwara
@DrParameshwara
ರಾಜ್ಯದಲ್ಲಿ ಮುಂಗಾರು ಮಳೆಯ ಕೊರತೆಯಿಂದ ಉಂಟಾಗಿರುವ ಬರ ಪರಿಸ್ಥಿತಿಯನ್ನು ನಮ್ಮ ಸರ್ಕಾರ ನಿರಂತರ ವೈಜ್ಞಾನಿಕವಾಗಿ ಮೌಲ್ಯಮಾಪನ ನಡೆಸುತ್ತಿದ್ದು, ರೈತರ ಸಂಕಷ್ಟಕ್ಕೆ ತ್ವರಿತವಾಗಿ ಸ್ಪಂದಿಸುವ ನಿಟ್ಟಿನಲ್ಲಿ ಹಂತ ಹಂತವಾಗಿ ಕ್ರಮ ಕೈಗೊಳ್ಳುತ್ತಿದ್ದೇವೆ.
ಮೊದಲ ಹಂತದಲ್ಲಿ 102 ತಾಲೂಕುಗಳಲ್ಲಿ ಪ್ರತ್ಯಕ್ಷ ಪರಿಶೀಲನೆ ನಡೆಸಿ, 89 ತೀವ್ರ ಬರ ಹಾಗೂ 12 ಸಾಧಾರಣ ಬರ ಸೇರಿದಂತೆ ಒಟ್ಟು 101 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಿದ್ದೇವೆ. ಇದೀಗ ಎರಡನೇ ಹಂತದಲ್ಲಿ ಮತ್ತೆ ಹೆಚ್ಚುವರಿಯಾಗಿ 23 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಿ ಆದೇಶ ಹೊರಡಿಸಿದ್ದೇವೆ.
ಈ ಪೈಕಿ 21 ತಾಲೂಕುಗಳು ತೀವ್ರ ಬರಪೀಡಿತ ಹಾಗೂ 2 ತಾಲೂಕುಗಳು ಸಾಧಾರಣ ಬರಪೀಡಿತವಾಗಿದ್ದು, ಇದರೊಂದಿಗೆ ರಾಜ್ಯದಲ್ಲಿ ಬರಪೀಡಿತ ಎಂದು ಘೋಷಿಸಲಾದ ತಾಲೂಕುಗಳ ಸಂಖ್ಯೆ 124ಕ್ಕೆ ಏರಿಕೆಯಾಗಿದೆ.
ತೀವ್ರ ಬರಪೀಡಿತ ತಾಲೂಕುಗಳು: ತಿಪಟೂರು, ಕಾರಟಗಿ, ಮಾನ್ವಿ, ಸಿಂಧನೂರು, ಸಿರವಾರ, ಅಫಜಲಪುರ, ಆಳಂದ, ಚಿತ್ತಾಪುರ, ಕಲಬುರಗಿ, ಯಡ್ರಾಮಿ, ಶಹಾಬಾದ್, ಭಾಲ್ಕಿ, ಬಸವನಬಾಗೇವಾಡಿ, ಬಬಲೇಶ್ವರ, ತಿಕೋಟಾ, ರಟ್ಟೀಹಳ್ಳಿ, ಹುಬ್ಬಳ್ಳಿ, ನವಲಗುಂದ, ಹುಬ್ಬಳ್ಳಿ ನಗರ, ಅಣ್ಣಿಗೇರಿ ಹಾಗೂ ಕಡೂರು.
ಸಾಧಾರಣ ಬರಪೀಡಿತ ತಾಲೂಕುಗಳು: ಪೊನ್ನಂಪೇಟೆ ಮತ್ತು ವೀರಾಜಪೇಟೆ
ಇದರ ಜೊತೆಗೆ, ಜೂನ್ 1ರಿಂದ ಸೆಪ್ಟೆಂಬರ್ 16ರವರೆಗಿನ ಮಳೆ ಪ್ರಮಾಣ, ಮಣ್ಣಿನ ತೇವಾಂಶ, ಬೆಳೆ ಸ್ಥಿತಿ ಸೇರಿದಂತೆ ವಿವಿಧ ವೈಜ್ಞಾನಿಕ ಮಾನದಂಡಗಳ ಆಧಾರದ ಮೇಲೆ ಇದೀಗ 17 ಜಿಲ್ಲೆಗಳ 53 ತಾಲೂಕುಗಳನ್ನು ಮೂರನೇ ಹಂತದ ಗ್ರೌಂಡ್ ಟ್ರೂಥಿಂಗ್ಗೆ ಆಯ್ಕೆ ಮಾಡಲಾಗಿದೆ.
ಈ ಪರಿಶೀಲನೆಯನ್ನು ಹೆಚ್ಚು ನಿಖರ ಹಾಗೂ ಪಾರದರ್ಶಕವಾಗಿ ನಡೆಸಲು ‘Crop Loss GT’ ಮೊಬೈಲ್ ಆ್ಯಪ್ ಬಳಸಲಾಗುತ್ತಿದೆ. ಇದರ ಮೂಲಕ ಜಿಯೋ-ಟ್ಯಾಗ್ ಮಾಡಲಾದ ಛಾಯಾಚಿತ್ರಗಳು, ಜಿಪಿಎಸ್ ಮಾಹಿತಿ, ಜಮೀನಿನ ವಿವರ ಹಾಗೂ ಬೆಳೆ ಹಾನಿಯ ಪ್ರಮಾಣವನ್ನು ಸ್ಥಳದಲ್ಲಿಯೇ ದಾಖಲಿಸಲಾಗುತ್ತದೆ.
ಸೆಪ್ಟೆಂಬರ್ 19 ಮತ್ತು 20ರಂದು ಅಧಿಕಾರಿಗಳ ತಂಡಗಳು ಆಯ್ಕೆಯಾದ ಗ್ರಾಮಗಳ ಜಮೀನುಗಳಿಗೆ ಭೇಟಿ ನೀಡಿ ಬೆಳೆ ಹಾನಿಯನ್ನು ನೇರವಾಗಿ ಪರಿಶೀಲಿಸಲಿದ್ದು, ಸೆಪ್ಟೆಂಬರ್ 21ರೊಳಗೆ ಅಂತಿಮ ವರದಿ ಸಲ್ಲಿಸಲು ಜಿಲ್ಲಾಧಿಕಾರಿಗಳು ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಲಾಗಿದೆ.
ರೈತರು ಎದುರಿಸುತ್ತಿರುವ ಸಂಕಷ್ಟದ ವಾಸ್ತವ ಸ್ಥಿತಿ ಸರ್ಕಾರದ ಗಮನಕ್ಕೆ ಬರಬೇಕು. ಯಾವ ರೈತನೂ ನೈಜ ಬೆಳೆ ಹಾನಿಯ ದಾಖಲೀಕರಣದಿಂದ ಹೊರಗುಳಿಯಬಾರದು ಎಂಬುದು ನಮ್ಮ ಆಶಯ. ವೈಜ್ಞಾನಿಕ ಪರಿಶೀಲನೆ, ಪಾರದರ್ಶಕ ಸಮೀಕ್ಷೆ ಮತ್ತು ನಿಖರ ವರದಿಯ ಆಧಾರದಲ್ಲಿ ಮುಂದಿನ ಕ್ರಮಗಳನ್ನು ಕೈಗೊಳ್ಳಲಾಗುವುದು.
ಮುಂಗಾರು ಹಂಗಾಮು ಮುಗಿಯುವವರೆಗೂ ಬರ ಪರಿಸ್ಥಿತಿಯ ಮೇಲ್ವಿಚಾರಣೆ ಮುಂದುವರಿಯಲಿದ್ದು, ಅಗತ್ಯ ಕಂಡುಬಂದಲ್ಲಿ ಮುಂದಿನ ಹಂತದಲ್ಲಿಯೂ ಹೆಚ್ಚುವರಿ ತಾಲೂಕುಗಳನ್ನು ಗ್ರೌಂಡ್ ಟ್ರೂಥಿಂಗ್ಗೆ ಸೇರಿಸಲಾಗುವುದು.
ರೈತರ ಸಂಕಷ್ಟಕ್ಕೆ ಸ್ಪಂದಿಸುವುದು ಸರ್ಕಾರದ ಮೊದಲ ಆದ್ಯತೆ. ಬೆಳೆ ಹಾನಿಯ ನೈಜ ಚಿತ್ರಣ ಆಧರಿಸಿ, ನಿಯಮಾನುಸಾರ ಅಗತ್ಯ ನೆರವು ತಲುಪಿಸಲು ನಾವು ಬದ್ಧರಿದ್ದೇವೆ. -
Dr. G Parameshwara
@DrParameshwara
ರಾಜ್ಯ ಅಭಿವೃದ್ಧಿಯಾಗಬೇಕಾದರೆ ಪ್ರತಿ ಹಳ್ಳಿ, ಪ್ರತಿ ಗ್ರಾಮವೂ ಪ್ರಗತಿ ಕಾಣಬೇಕು. ಈ ನಿಟ್ಟಿನಲ್ಲಿ ನನ್ನೂರು, ನನ್ನ ಗ್ರಾಮ, ನನ್ನ ಜಿಲ್ಲೆ, ನನ್ನ ರಾಜ್ಯದ ಸಮಗ್ರ ಬದಲಾವಣೆಯ ಚಿತ್ರಣವನ್ನು ಮುಂದಿಟ್ಟುಕೊಂಡು ಕೆಲಸ ಮಾಡುತ್ತಿದ್ದೇನೆ.
ಇಂದು ನಾನು ಪ್ರತಿನಿಧಿಸುತ್ತಿರುವ ಕೊರಟಗೆರೆ ವಿಧಾನಸಭಾ ಕ್ಷೇತ್ರ ಮೂಲಸೌಕರ್ಯ, ಶಿಕ್ಷಣ, ಕ್ರೀಡೆ, ಆರೋಗ್ಯ, ಶುಚಿತ್ವ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲೂ ಮುಂಚೂಣಿಯಲ್ಲಿರುವುದು ನೋಡುವಾಗ ಖುಷಿಯಾಗುತ್ತದೆ. ಕೊರಟಗೆರೆ ಪುಟ್ಟ ಊರು. ಆದರೆ ಇಲ್ಲಾಗುತ್ತಿರುವ ಅಭಿವೃದ್ಧಿಗಳು ಬಹು ದೊಡ್ಡವು. ಅದು ಎಷ್ಟರಮಟ್ಟಿಗೆ ಎಂಬುದು ನನ್ನೂರಿನ ಜನರ ಮೊಗದಲ್ಲಿ ಮೂಡುತ್ತಿರುವ ಮಂದಹಾಸವೇ ಸಾಬೀತುಪಡಿಸುತ್ತಿದೆ.
ನನ್ನನ್ನು ಹರಸಿ - ಹಾರೈಸಿದ ನನ್ನೂರಿನ ಜನ ನಾನು ಮಾಡಿದ ಕೆಲಸಕ್ಕೆ ಪ್ರಶಂಸೆಯ ಮಹಾಪೂರಣವನ್ನೇ ಅರ್ಪಿಸುತ್ತಿರುವುದನ್ನು ನೋಡುವಾಗ ನಿಜಕ್ಕೂ ನನ್ನ ಸಾರ್ವಜನಿಕ ಜೀವನ ಸಾರ್ಥಕ ಎನಿಸುತ್ತದೆ.
ನಾನು ನಿಮ್ಮವನು, ನಿಮ್ಮ ಮನೆಮಗ. ನಿಮಗೆ ನೆಮ್ಮದಿ, ಸಂತೋಷದ ಜೀವನವನ್ನು ಕಲ್ಪಿಸಿಕೊಡುವುದು ನನ್ನ ಜವಾಬ್ದಾರಿ ಮತ್ತು ಕರ್ತವ್ಯ. ಅದಕ್ಕಾಗಿಯೇ ನನ್ನ ರಾಜಕೀಯ ಜೀವನ ಮೀಸಲು. -
Dr. G Parameshwara
@DrParameshwara
ತುಮಕೂರು ತಾಲೂಕಿನ ಊರ್ಡಿಗೆರೆಯಲ್ಲಿ ಸ್ಥಳೀಯ ಮುಖಂಡರಾದ ದುರ್ಗಪ್ಪನವರು ನೂತನವಾಗಿ ಆರಂಭಿಸಿರುವ ನಂದಿನಿ ಕ್ಷೀರ ಮಳಿಗೆಗೆ ಭೇಟಿ ನೀಡಿ, ಬಾದಾಮಿ ಹಾಲು ಸವಿದೆ.
ನಂದಿನಿ ನಮ್ಮ ಕರ್ನಾಟಕದ ಹೆಮ್ಮೆಯ ಬ್ರ್ಯಾಂಡ್. ರೈತರ ಪರಿಶ್ರಮಕ್ಕೆ ಬೆಲೆ ತಂದುಕೊಡುವುದರ ಜೊತೆಗೆ, ಗ್ರಾಹಕರಿಗೆ ಗುಣಮಟ್ಟದ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ತಲುಪಿಸುವ ಮೂಲಕ ಮನೆಮಾತಾಗಿದೆ. ಗುಣಮಟ್ಟ, ವಿಶ್ವಾಸ ಮತ್ತು ರೈತರ ಹಿತವನ್ನು ಕಾಪಾಡಿಕೊಂಡು ಬೆಳೆದಿರುವ ಈ ಸಂಸ್ಥೆ ನಮ್ಮೆಲ್ಲರ ಹೆಮ್ಮೆ.
ಸ್ಥಳೀಯವಾಗಿ ನಂದಿನಿ ಮಳಿಗೆಯನ್ನು ಆರಂಭಿಸಿ ಸ್ವಾವಲಂಬನೆಯ ಹೆಜ್ಜೆ ಇಟ್ಟಿರುವ ದುರ್ಗಪ್ಪನವರ ಪ್ರಯತ್ನ ಶ್ಲಾಘನೀಯ. ಅವರ ನೂತನ ಉದ್ಯಮ ಯಶಸ್ವಿಯಾಗಿ ಬೆಳೆಯಲಿ ಎಂದು ಶುಭ ಹಾರೈಸಿದೆ.
ಈ ಸಂದರ್ಭದಲ್ಲಿ ಪಕ್ಷದ ಕಾರ್ಯಕರ್ತರು ಹಾಗೂ ಸ್ಥಳೀಯರು ತಮ್ಮ ಅಹವಾಲು - ಬೇಡಿಕೆಗಳನ್ನು ಸಲ್ಲಿಸಿದರು. -
Dr. G Parameshwara
@DrParameshwara
ಇಂದು ಕೊರಟಗೆರೆ ತಾಲೂಕು ಪಂಚಾಯಿತಿಯ ನೂತನ ಕಟ್ಟಡ ನಿರ್ಮಾಣ ಕಾಮಗಾರಿಯನ್ನು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದೆ.
ಕಟ್ಟಡ ಕಾಮಗಾರಿಯ ಪ್ರಗತಿ, ಗುಣಮಟ್ಟದ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದು, ಕಾಮಗಾರಿಯನ್ನು ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸುವಂತೆ ಸೂಚಿಸಿದೆ. -
Dr. G Parameshwara
@DrParameshwara
ಇಂದು ಕೊರಟಗೆರೆ ನಗರದ ಜಾಮಿಯಾ ಸಮುದಾಯ ಭವನದಲ್ಲಿ ನಡೆದ ಬ್ಯಾಲ್ಯ ಗ್ರಾಮದ ಕಾಂಗ್ರೆಸ್ ಮುಖಂಡರಾದ ಈರಮಲ್ಲಯ್ಯ ಅವರ ಪುತ್ರನ ವಿವಾಹ ಮಹೋತ್ಸವದಲ್ಲಿ ಭಾಗವಹಿಸಿ, ನೂತನ ವಧು-ವರರಿಗೆ ಶುಭ ಹಾರೈಸಿದೆ.
-
Dr. G Parameshwara
@DrParameshwara
ಬ್ರಹ್ಮಾಂಡದ ಸೃಷ್ಟಿಯಲ್ಲಿ ಪ್ರಮುಖ ಪಾತ್ರ ವಹಿಸಿದವರು ದೇವಶಿಲ್ಪಿ ವಿಶ್ವಕರ್ಮರು.
ವಿಶ್ವಕರ್ಮರ ಜನ್ಮದಿನವಾದ ಈ ದಿನದಂದು ವಾಸ್ತುಶಿಲ್ಪ ಮತ್ತು ಕರಕುಶಲ ವೃತ್ತಿಯಲ್ಲಿ ತೊಡಗಿಸಿಕೊಂಡಿರುವ ನಾಡಿನ ಸಮಸ್ತ ವಿಶ್ವಕರ್ಮ ಬಂಧುಗಳಿಗೆ ವಿಶ್ವಕರ್ಮ ಜಯಂತಿಯ ಶುಭಾಶಯಗಳು. -
Dr. G Parameshwara
@DrParameshwara
ಹೈದ್ರಾಬಾದ್ ನಿಜಾಮರ ಆಳ್ವಿಕೆಯಿಂದ ಕರ್ನಾಟಕದ ಹಲವು ಜಿಲ್ಲೆಗಳು ವಿಮೋಚನೆಗೊಂಡು, ಭಾರತದ ಏಕತೆಯೊಂದಿಗೆ ಬೆಸೆದುಕೊಂಡ ಈ ದಿನ ನಾಡಿನ ಇತಿಹಾಸದಲ್ಲಿ ಅಚ್ಚಳಿಯದ ಮಹತ್ವದ ದಿನವಾಗಿದೆ.
ಅಖಂಡ ಭಾರತ ನಿರ್ಮಾಣಕ್ಕಾಗಿ ತಮ್ಮ ಬದುಕನ್ನೇ ಅರ್ಪಿಸಿದ ಎಲ್ಲಾ ವೀರರ ಅಮರ ತ್ಯಾಗವನ್ನು ಗೌರವದಿಂದ ಸ್ಮರಿಸಿ, ನಮಿಸುತ್ತೇನೆ. -
Dr. G Parameshwara
@DrParameshwara
2024ನೇ ಸಾಲಿನ ಪ್ರತಿಷ್ಠಿತ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಗೆ ಆಯ್ಕೆಯಾದ ಕನ್ನಡದ ಹಿರಿಯ ನಟ ಶ್ರೀ ಅನಂತ್ ನಾಗ್ ಅವರಿಗೆ ಅಭಿನಂದನೆಗಳು.
ಭಾರತೀಯ ಚಿತ್ರರಂಗಕ್ಕೆ ಅವರು ನೀಡಿರುವ ಅಪಾರ ಕೊಡುಗೆಗೆ ಸಂದ ಈ ಗೌರವ ಕನ್ನಡಿಗರೆಲ್ಲರಿಗೂ ಹೆಮ್ಮೆ ತಂದಿದೆ. ಶ್ರೀಯುತರ ಕಲಾಸೇವೆ ಇನ್ನಷ್ಟು ಕಾಲ ಮುಂದುವರಿಯಲಿ ಎಂದು ಹಾರೈಸುತ್ತೇನೆ.
Congratulations to veteran Kannada actor Shri Anant Nag on being selected for the prestigious Dadasaheb Phalke Award for 2024.
This honour, recognising his immense contribution to Indian cinema, is a proud moment for all Kannadigas. I wish him many more years of meaningful contribution to the world of cinema. -
Dr. G Parameshwara
@DrParameshwara
ಕಂದಾಯ ಇಲಾಖೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಬಡವರಿಗೆ ನಿವೇಶನ ಒದಗಿಸುವ ಯೋಜನೆಯ ಅನುಷ್ಠಾನಕ್ಕೆ ಹೆಚ್ಚಿನ ಆದ್ಯತೆ ನೀಡುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದೆ.
ಬಡವರಿಗೆ ನಿವೇಶನ ನೀಡುವ ಕಾರ್ಯಕ್ರಮಕ್ಕೆ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ, ಯೋಜನೆಯನ್ನು ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಿ ತ್ವರಿತವಾಗಿ ಕಾರ್ಯಗತಗೊಳಿಸಬೇಕು. ಇನ್ನೂ ಕೆಲವು ಜಿಲ್ಲೆಗಳಲ್ಲಿ ನಿವೇಶನಕ್ಕಾಗಿ ಭೂಮಿ ಗುರುತಿಸುವ ಕಾರ್ಯ ಪೂರ್ಣಗೊಂಡಿಲ್ಲ.
ಆದ್ದರಿಂದ ನಿವೇಶನ ಸಿದ್ಧಪಡಿಸಲು ಅಗತ್ಯವಿರುವ ಭೂಮಿಯನ್ನು ಗುರುತಿಸುವ ಪ್ರಕ್ರಿಯೆಯನ್ನು ಸೆಪ್ಟೆಂಬರ್ ತಿಂಗಳಾಂತ್ಯದೊಳಗೆ ಪೂರ್ಣಗೊಳಿಸುವಂತೆ ಜಿಲ್ಲಾಧಿಕಾರಿಗಳಿಗೆ ಸ್ಪಷ್ಟ ನಿರ್ದೇಶನ ನೀಡಲಾಗಿದೆ. ಅಗತ್ಯವಿರುವ ತಾಂತ್ರಿಕ ಸಹಕಾರವನ್ನು ಹಿರಿಯ ಅಧಿಕಾರಿಗಳು ಒದಗಿಸಲಿದ್ದಾರೆ.
ಬಡ ಕುಟುಂಬಗಳಿಗೆ ಸ್ವಂತ ನಿವೇಶನ ಕಲ್ಪಿಸುವುದು ಅವರ ಭವಿಷ್ಯಕ್ಕೆ ಭದ್ರತೆ ನೀಡುವ ಮಹತ್ವದ ಹೆಜ್ಜೆ. ಈ ಯೋಜನೆಯ ಅನುಷ್ಠಾನದಲ್ಲಿ ಯಾವುದೇ ವಿಳಂಬ ಅಥವಾ ನಿರ್ಲಕ್ಷ್ಯವಾಗದಂತೆ ಅಧಿಕಾರಿಗಳು ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕು.
During the Revenue Department progress review meeting, I directed the Deputy Commissioners to give top priority to the implementation of the scheme to provide housing sites to poor families.
As the programme has received a positive response from the public, officials have been instructed to treat it with due seriousness and accelerate its implementation. In some districts, the process of identifying land for housing sites is still incomplete.
Therefore, clear directions have been issued to the Deputy Commissioners to complete the identification of the required land by the end of September. Senior officials will provide the necessary technical support for the process.
Providing poor families with their own housing sites is an important step towards securing their future. Officials must act responsibly and ensure that there is no delay or negligence in the implementation of the scheme. -
Dr. G Parameshwara
@DrParameshwara
ಕಂದಾಯ ಇಲಾಖೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಪ್ರಜಾಸೇವಾ ಅಭಿಯಾನದ ಮೂಲಕ ಸ್ವೀಕರಿಸಲಾಗುತ್ತಿರುವ ಅರ್ಜಿಗಳನ್ನು ತ್ವರಿತವಾಗಿ ವಿಲೇವಾರಿ ಮಾಡುವಂತೆ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದೆ.
ಪ್ರಜಾಸೇವಾ ಅಭಿಯಾನದಲ್ಲಿ ಕಂದಾಯ ಇಲಾಖೆಗೆ ಸಂಬಂಧಿಸಿದಂತೆ ಪಹಣಿ ತಿದ್ದುಪಡಿ, ಪೋಡಿ, ಪಿಂಚಣಿ ಸೇರಿದಂತೆ ಹಲವು ಅರ್ಜಿಗಳು ಸಲ್ಲಿಕೆಯಾಗುತ್ತಿವೆ. ಇಂತಹ ಅರ್ಜಿಗಳು ಕಚೇರಿಗಳಲ್ಲಿ ಅನಗತ್ಯವಾಗಿ ವಿಳಂಬವಾಗದಂತೆ, ನಿಗದಿತ ಅವಧಿಯಲ್ಲಿ ವಿಲೇವಾರಿ ಮಾಡಿ ಜನರಿಗೆ ಸೇವೆ ಒದಗಿಸಬೇಕು ಎಂದು ನಿರ್ದೇಶಿಸಲಾಗಿದೆ.
ಆರ್ಟಿಸಿ ಹಾಗೂ ಪೋಡಿ ಪ್ರಕರಣಗಳ ಪ್ರಕ್ರಿಯೆಯನ್ನು ಈಗಾಗಲೇ ಸರಳೀಕರಣಗೊಳಿಸಲಾಗಿದ್ದು, ಯಾವುದೇ ಹಂತದಲ್ಲಿ ಗೊಂದಲಗಳಿದ್ದರೆ ಹಿರಿಯ ಅಧಿಕಾರಿಗಳ ಮಾರ್ಗದರ್ಶನ ಪಡೆದು ತ್ವರಿತವಾಗಿ ಪರಿಹರಿಸುವಂತೆ ಸೂಚಿಸಲಾಗಿದೆ.
ಸರ್ಕಾರಿ ಸೇವೆ ಪಡೆಯಲು ಜನರು ಕಚೇರಿಗಳಿಗೆ ಅಲೆದಾಡುವ ಪರಿಸ್ಥಿತಿ ಇರಬಾರದು. ಜನರ ಅರ್ಜಿಗಳಿಗೆ ಸ್ಪಂದನೆ, ತ್ವರಿತ ವಿಲೇವಾರಿ ಮತ್ತು ಪರಿಣಾಮಕಾರಿ ಆಡಳಿತಕ್ಕೆ ನಮ್ಮ ಆದ್ಯತೆ.
During the Revenue Department progress review meeting, I directed all Deputy Commissioners to ensure the speedy disposal of applications received under the Praja Seva Abhiyana.
A large number of applications related to the Revenue Department, including RTC corrections, podi and pension matters, are being received through the campaign. Officials have been instructed to ensure that such applications are not unnecessarily delayed in offices and are disposed of within the stipulated timeframe so that citizens receive timely services.
The procedures relating to RTC and podi cases have already been simplified. If any issues or confusion arise at any stage, officials have been directed to seek guidance from senior officers and resolve them without delay.
People should not have to make repeated visits to government offices to access public services. Responsive governance, timely disposal of applications and effective service delivery remain our priority. -
Dr. G Parameshwara
@DrParameshwara
ಕಂದಾಯ ಇಲಾಖೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಭಾರತ್ ಜೋಡೋ ಯುವ ಸಂಘಗಳ ನೋಂದಣಿ ಹಾಗೂ ಸಂಘಗಳ ಆರಂಭದ ಪ್ರಕ್ರಿಯೆಯನ್ನು ತ್ವರಿತಗೊಳಿಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದೆ.
ತಾಂತ್ರಿಕ ಕಾರಣಗಳಿಂದ ಸ್ಥಗಿತಗೊಂಡಿದ್ದ ನೋಂದಣಿ ಪ್ರಕ್ರಿಯೆಯನ್ನು ಕೂಡಲೇ ಚುರುಕುಗೊಳಿಸಿ, ಅರ್ಜಿ ನಮೂನೆಗಳನ್ನು ವಿತರಿಸಿ ಭರ್ತಿ ಮಾಡಿಸುವುದು, ಸಂಘಗಳ ನೋಂದಣಿ ಪೂರ್ಣಗೊಳಿಸುವುದು ಹಾಗೂ ತರಬೇತುದಾರರ ನೇಮಕಕ್ಕೆ ಅಗತ್ಯ ಕ್ರಮ ಕೈಗೊಳ್ಳುವಂತೆ ನಿರ್ದೇಶಿಸಲಾಗಿದೆ.
ಯುವಜನರಲ್ಲಿ ನಾಯಕತ್ವ, ಸಾಮಾಜಿಕ ಹೊಣೆಗಾರಿಕೆ ಮತ್ತು ಸಕ್ರಿಯ ನಾಗರಿಕ ಭಾಗವಹಿಸುವಿಕೆಯನ್ನು ಬೆಳೆಸುವ ನಿಟ್ಟಿನಲ್ಲಿ ಭಾರತ್ ಜೋಡೋ ಯುವ ಸಂಘ ಮಹತ್ವದ ಹೆಜ್ಜೆಯಾಗಿದೆ.
ಯುವಕರ ಸಾಮರ್ಥ್ಯಕ್ಕೆ ಸೂಕ್ತ ವೇದಿಕೆ ಕಲ್ಪಿಸಿ, ಅವರ ಶಕ್ತಿಯನ್ನು ಸಮಾಜ ಮತ್ತು ರಾಜ್ಯದ ಅಭಿವೃದ್ಧಿಗೆ ಸದುಪಯೋಗಪಡಿಸಿಕೊಳ್ಳುವ ಕಾರ್ಯಕ್ಕೆ ನಮ್ಮ ಸರ್ಕಾರ ಬದ್ಧವಾಗಿದೆ.
During the Revenue Department progress review meeting, I directed the Deputy Commissioners to expedite the registration of Bharat Jodo Yuva Sanghas and speed up the process of establishing the Sanghas.
The registration process, which had been temporarily stalled due to technical reasons, should be resumed immediately. Officials have been instructed to distribute and complete application forms, finish the registration of the Sanghas, and take the necessary steps for the appointment of mentors.
The Bharat Jodo Yuva Sangha is an important initiative aimed at nurturing leadership, social responsibility and active civic participation among young people.
Our government is committed to creating the right platform for youth to realise their potential and channel their energy towards the development of society and the State. -
Dr. G Parameshwara
@DrParameshwara
Engineers play a vital role in the nation’s development, infrastructure building and technological progress. Their knowledge, hard work and innovative thinking continue to strengthen the country’s journey of progress.
Recognising the invaluable contribution of engineers, our government has permitted the use of the title ‘Er’ before their names. This is a special recognition of the dignity of the engineering profession and its professional identity.
May this decision bring greater pride and inspiration to all engineers who carry forward the legacy of vision and excellence of Bharat Ratna Sir M. Visvesvaraya. Recognising the contribution of the nation’s builders and ensuring due respect for their profession remains a commitment of our government.
ದೇಶದ ಅಭಿವೃದ್ಧಿ ಹಾಗೂ ತಂತ್ರಜ್ಞಾನ ಪ್ರಗತಿಯಲ್ಲಿ ಎಂಜಿನಿಯರ್ಗಳ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಅವರ ಜ್ಞಾನ, ಪರಿಶ್ರಮ ಮತ್ತು ನವೀನ ಚಿಂತನೆಗಳು ರಾಷ್ಟ್ರದ ಪ್ರಗತಿಗೆ ಸದಾ ಬಲ ತುಂಬುತ್ತಿವೆ.
ಎಂಜಿನಿಯರ್ಗಳ ಅಮೂಲ್ಯ ಕೊಡುಗೆಯನ್ನು ಗುರುತಿಸಿ, ಅವರ ಹೆಸರಿನ ಮುಂದೆ ‘Er’ ಎಂಬ ಶೀರ್ಷಿಕೆಯನ್ನು ಬಳಸಲು ನಮ್ಮ ಸರ್ಕಾರ ಅನುಮತಿ ನೀಡಿದೆ. ಎಂಜಿನಿಯರಿಂಗ್ ವೃತ್ತಿಯ ಘನತೆ ಹಾಗೂ ವೃತ್ತಿಪರ ಗುರುತಿಗೆ ನೀಡಿರುವ ವಿಶೇಷ ಮಾನ್ಯತೆ ಇದಾಗಿದೆ.
ಭಾರತ ರತ್ನ ಸರ್ ಎಂ. ವಿಶ್ವೇಶ್ವರಯ್ಯ ಅವರ ದೂರದೃಷ್ಟಿ ಮತ್ತು ಸಾಧನೆಯ ಪರಂಪರೆಯನ್ನು ಮುನ್ನಡೆಸುತ್ತಿರುವ ಎಲ್ಲ ಎಂಜಿನಿಯರ್ಗಳಿಗೆ ಈ ನಿರ್ಧಾರ ಮತ್ತಷ್ಟು ಹೆಮ್ಮೆ ಮತ್ತು ಪ್ರೇರಣೆ ನೀಡಲಿ. ರಾಷ್ಟ್ರ ನಿರ್ಮಾಣದ ಶಿಲ್ಪಿಗಳ ಕೊಡುಗೆಯನ್ನು ಗುರುತಿಸಿ, ಅವರ ವೃತ್ತಿಗೆ ಸೂಕ್ತ ಗೌರವ ನೀಡುವುದು ನಮ್ಮ ಸರ್ಕಾರದ ಬದ್ಧತೆ. -
Dr. G Parameshwara
@DrParameshwara
Today, I chaired a progress review meeting of the Revenue Department at Vidhana Soudha through video conference with all Deputy Commissioners and issued necessary directions to the officials.
Expedite the registration of Bharat Jodo Yuva Sanghas: The Bharat Jodo Yuva Sangha is a dream initiative of the Chief Minister. The process of registering the Sanghas, appointing mentors and setting them up must be accelerated. The process had been temporarily halted due to technical issues. Application forms should be distributed immediately and completed without delay. The Bharat Jodo Yuva Sangha is a first-of-its-kind initiative in the country, and its effective implementation will bring recognition to both the government and the officials involved.
Ensure speedy disposal of applications received under Praja Seva Abhiyana: A large number of applications received under the Praja Seva Abhiyana are related to the Revenue Department. Applications concerning RTC corrections, podi, pension-related issues and other matters must be disposed of quickly. Procedures relating to RTC and podi cases have already been simplified. If there are any doubts or procedural issues, officials should seek guidance from senior officers and take further action accordingly.
Housing sites for the poor – ensure timely action: The programme to provide housing sites to the poor has received a positive response from the public. Officials must treat the initiative with due seriousness. In some districts, land is yet to be identified. The process of identifying land for housing sites must be completed by the end of the month. There should be no delay in this regard, and senior officials will provide the necessary technical support.
Additional Chief Secretary, Revenue Department, Rajender Kumar Kataria; Secretary, Disaster Management Department, Manoj Kumar Meena; Revenue Commissioner Meena Nagaraj; Commissioner, Survey Settlement and Land Records Department, Venkataraj and other officials were present at the meeting. -
Dr. G Parameshwara
@DrParameshwara
ಇಂದು ವಿಧಾನಸೌಧದಲ್ಲಿ ಎಲ್ಲ ಜಿಲ್ಲಾಧಿಕಾರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಕಂದಾಯ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ ನಡೆಸಿ, ಅಧಿಕಾರಿಗಳಿಗೆ ಅಗತ್ಯ ಸೂಚನೆಗಳನ್ನು ನೀಡಿದೆ.
ಭಾರತ್ ಜೋಡೋ ಯುವ ಸಂಘದ ನೋಂದಣಿ ಕಾರ್ಯ ತ್ವರಿತಗೊಳಿಸಿ : ಭಾರತ್ ಜೋಡೋ ಯುವ ಸಂಘ ಮುಖ್ಯಮಂತ್ರಿಯವರ ಕನಸಿನ ಯೋಜನೆಯಾಗಿದೆ. ಸಂಘಗಳ ನೋಂದಣಿ, ಮೆಂಟರ್ಸ್ಗಳ ನೇಮಕ ಸೇರಿದಂತೆ ಸಂಘ ಪ್ರಾರಂಭಿಸುವ ಪ್ರಕ್ರಿಯೆಯನ್ನು ಮತ್ತಷ್ಟು ಚುರುಕುಗೊಳಿಸಬೇಕು. ತಾಂತ್ರಿಕ ಸಮಸ್ಯೆ ಉಂಟಾದ ಹಿನ್ನೆಲೆಯಲ್ಲಿ ಸ್ಥಗಿತಗೊಳಿಸಲಾಗಿತ್ತು. ಕೂಡಲೇ ಅರ್ಜಿ ನಮೂನೆಗಳನ್ನು ವಿತರಿಸಿ, ಭರ್ತಿ ಮಾಡಿಸಬೇಕು. ಭಾರತ್ ಜೋಡೋ ಯುವಕ ಸಂಘ ಇಡೀ ದೇಶದಲ್ಲಿ ಮೊದಲ ಬಾರಿಗೆ ಜಾರಿಗೊಳಿಸುತ್ತಿರುವ ಕಾರ್ಯಕ್ರಮ. ಇದರಿಂದ ಸರ್ಕಾರಕ್ಕೆ ಮತ್ತು ಅಧಿಕಾರಿಗಳಿಗೆ ಒಳ್ಳೆ ಹೆಸರು ಬರಲಿದೆ.
ಪ್ರಜಾಸೇವಾ ಅಭಿಯಾನದಲ್ಲಿ ಬರುವ ಅರ್ಜಿಗಳ ತ್ವರಿತ ವಿಲೇವಾರಿ ಮಾಡಿ : ಪ್ರಜಾಸೇವಾ ಅಭಿಯಾನದಲ್ಲಿ ಹೆಚ್ಚಾಗಿ ಕಂದಾಯ ಇಲಾಖೆಗೆ ಸಂಬಂಧಿಸಿದ ಅರ್ಜಿಗಳು ಬರುತ್ತಿವೆ. ಪಹಣಿ ತಿದ್ದುಪಡಿ, ಪೋಡಿ, ಪಿಂಚಣಿ ಸಮಸ್ಯೆ ಸೇರಿದಂತೆ ಮುಂತಾದ ಅರ್ಜಿಗಳನ್ನು ತ್ವರಿತಗತಿಯಲ್ಲಿ ವಿಲೇವಾರಿ ಮಾಡಬೇಕು. ಆರ್ಟಿಸಿ, ಪೋಡಿ ಪ್ರಕರಣಗಳನ್ನು ಸರಳೀಕರಣಗೊಳಿಸಲಾಗಿದೆ. ಆದಾಗ್ಯೂ ಗೊಂದಲಗಳಿದ್ದರೆ ಹಿರಿಯ ಅಧಿಕಾರಿಗಳಿಂದ ಅಗತ್ಯ ಸಲಹೆ ಪಡೆದು, ಮುಂದಿನ ಕ್ರಮ ಕೈಗೊಳ್ಳಬೇಕು.
ಬಡವರಿಗೆ ನಿವೇಶನ - ನಿರ್ಲಕ್ಷ್ಯ ಬೇಡ: ಬಡವರಿಗೆ ನಿವೇಶನ ನೀಡುವ ಕಾರ್ಯಕ್ರಮ ಘೋಷಣೆಯಾದ ಬಳಿಕ ಜನರಿಂದ ಉತ್ತಮ ಪ್ರತಿಕ್ರಿಯೆ ಬರುತ್ತಿದೆ. ಈ ಯೋಜನೆಯನ್ನು ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಬೇಕು. ಕೆಲ ಜಿಲ್ಲೆಗಳಲ್ಲಿ ಭೂಮಿ ಗುರುತಿಸುವ ಕೆಲಸ ಆಗಿಲ್ಲ. ನಿವೇಶನ ಸಿದ್ಧಪಡಿಸಲು ಭೂಮಿ ಗುರುತಿಸುವ ಪ್ರಕ್ರಿಯೆಯನ್ನು ತಿಂಗಳಾಂತ್ಯದ ವೇಳೆಗೆ ಪೂರ್ಣಗೊಳಿಸಬೇಕು. ಈ ಬಗ್ಗೆ ನಿರ್ಲಕ್ಷಿಸುವುದು ಬೇಡ. ಹಿರಿಯ ಅಧಿಕಾರಿಗಳು ಟೆಕ್ನಿಕಲ್ ಸಹಕಾರ ನೀಡಲಿದ್ದಾರೆ.
ಸಭೆಯಲ್ಲಿ ಕಂದಾಯ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗಳಾದ ರಾಜೇಂದರ್ ಕುಮಾರ್ ಕಟಾರಿಯಾ, ವಿಪತ್ತು ನಿರ್ವಹಣಾ ಇಲಾಖೆಯ ಕಾರ್ಯದರ್ಶಿಗಳಾದ ಮನೋಜ್ ಕುಮಾರ್ ಮೀನಾ, ಕಂದಾಯ ಆಯುಕ್ತರಾದ ಮೀನಾ ನಾಗರಾಜ್, ಭೂ ಮಾಪನ ಮತ್ತು ಭೂ ದಾಖಲೆ ಇಲಾಖೆಯ ಆಯುಕ್ತರಾದ ವೆಂಕಟರಾಜ್ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು. -
Dr. G Parameshwara
@DrParameshwara
ನಾಡಿನ ಸಂಸ್ಕೃತಿ, ಪರಂಪರೆ ಹಾಗೂ ವೈಭವವನ್ನು ಪ್ರತಿಬಿಂಬಿಸುವ ತುಮಕೂರು ದಸರಾವನ್ನು ಈ ಬಾರಿ ಇನ್ನಷ್ಟು ಅದ್ಧೂರಿಯಿಂದ ಆಚರಿಸಲು ಸಿದ್ಧತೆ ನಡೆಸಿದ್ದೇವೆ. ಜನರ ಪಾಲ್ಗೊಳ್ಳುವಿಕೆ ಹಾಗೂ ಸಂಭ್ರಮವೇ ಈ ಉತ್ಸವದ ವಿಶೇಷತೆ.
ಅಕ್ಟೋಬರ್ 19 ರಿಂದ 21ರವರೆಗೆ ನಡೆಯಲಿರುವ ಈ ಸಂಭ್ರಮದಲ್ಲಿ ಸ್ಥಳೀಯ ಕಲಾವಿದರು ಹಾಗೂ ಪ್ರತಿಭೆಗಳಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ತುಮಕೂರು ದಸರಾ ಸಂಭ್ರಮಕ್ಕೆ ಮತ್ತಷ್ಟು ಮೆರಗು ನೀಡಲು ಸಿನಿಮಾ ತಾರೆಯರಿಂದ ಮನರಂಜನೆಯ ರಸದೌತಣವೂ ಇರಲಿದೆ. ಅಕ್ಟೋಬರ್ 21ರ ಬೆಳಗ್ಗೆ ಬಿಜಿಎಸ್ ವೃತ್ತದಿಂದ ಆನೆಗಳ ಮೇಲೆ ದೇವಿಯ ಭವ್ಯ ಮೆರವಣಿಗೆ ನಡೆಯಲಿದ್ದು, ಅದೇ ದಿನ ಸಂಜೆ ಜೂನಿಯರ್ ಕಾಲೇಜು ಮೈದಾನದಲ್ಲಿ ಶಮಿ ಪೂಜೆ ನೆರವೇರಿಸಲಾಗುವುದು.
ನಾಡಿನ ಪರಂಪರೆಯ ಸೊಬಗನ್ನು ಸಾರುವ ಈ ದಸರಾ, ತುಮಕೂರಿನ ಜನರ ಮನದಲ್ಲಿ ಸದಾ ಉಳಿಯುವ ಸಂಭ್ರಮದ ಹಬ್ಬವಾಗಬೇಕು ಎಂಬುವುದು ನನ್ನ ಆಶಯ.
We are making preparations to celebrate Tumakuru Dasara on an even grander scale this year, showcasing the rich culture, traditions and heritage of our land. The active participation and enthusiasm of the people are what make this festival truly special.
From October 19 to 21, a variety of cultural programmes featuring local artists and talented performers will be organised. Adding further colour and excitement to the celebrations, film stars will also present special entertainment programmes. On the morning of October 21, a grand procession of the Goddess on elephants will begin from BGS Circle, followed by Shami Puja in the evening at the Junior College Grounds.
It is my wish that this celebration, which reflects the beauty of our traditions and heritage, becomes a memorable festival that remains close to the hearts of the people of Tumakuru.
#tumakurudasara2026 -
Dr. G Parameshwara
@DrParameshwara
ತುಮಕೂರು ಗ್ರಾಮಾಂತರ ಕ್ಷೇತ್ರದ ಮಾಜಿ ಶಾಸಕರಾದ ಡಿ.ಸಿ.ಗೌರಿಶಂಕರ್ ಅವರಿಗೆ ಜನ್ಮದಿನದ ಶುಭಾಶಯಗಳು.
ನಿಮ್ಮ ಜೀವನದಲ್ಲಿ ಸುಖ, ಸಂತೋಷ, ನೆಮ್ಮದಿ ಸದಾ ನೆಲೆಸಿರಲಿ, ನಿಮ್ಮ ಜನಪರ ಸೇವೆಯು ನಿರಂತರವಾಗಿ ಸಾಗಲಿ ಎಂದು ಹಾರೈಸುತ್ತೇನೆ. -
Dr. G Parameshwara
@DrParameshwara
ಮಾಜಿ ಸಚಿವರು, ಆತ್ಮೀಯರು ಆದ ಆರ್.ಬಿ.ತಿಮ್ಮಾಪುರ ಅವರಿಗೆ ಜನ್ಮದಿನದ ಶುಭಾಶಯಗಳು.
ಭಗವಂತನು ತಮಗೆ ಉತ್ತಮ ಆಯುರಾರೋಗ್ಯ, ನೆಮ್ಮದಿ ಹಾಗೂ ಸಂತೋಷವನ್ನು ಕರುಣಿಸಲಿ. ಜನಸೇವೆಗೆ ಮತ್ತಷ್ಟು ಶಕ್ತಿ ತುಂಬಲಿ ಎಂದು ಹಾರೈಸುತ್ತೇನೆ. -
Dr. G Parameshwara
@DrParameshwara
ಇಂದು ತುಮಕೂರಿನ ಕೇಂದ್ರ ಗ್ರಂಥಾಲಯದ ಸಭಾಂಗಣದಲ್ಲಿ ತುಮಕೂರು ಜಿಲ್ಲಾ ಸರ್ಕಾರಿ ಇಂಜಿನಿಯರ್ಗಳ ಸಂಘ ಉದ್ಘಾಟನೆ ಹಾಗೂ ಸರ್.ಎಂ.ವಿಶ್ವೇಶ್ವರಯ್ಯ ಅವರ ಜನ್ಮದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದೆ.
ಸರ್.ಎಂ.ವಿಶ್ವೇಶ್ವರಯ್ಯನವರು ಅಭಿವೃದ್ಧಿಯ ದೂರದೃಷ್ಟಿಯ ನೀಲನಕ್ಷೆ ಇಟ್ಟುಕೊಂಡು ಕೆಲಸ ಮಾಡಿದರ ಫಲವಾಗಿ ಹಳೇ ಮೈಸೂರು ಭಾಗದ ಜಿಲ್ಲೆಗಳು ಅಭಿವೃದ್ಧಿಯಲ್ಲಿ ಮುಂದೆ ಇವೆ.
ಮೈಸೂರಿನ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಅಭಿವೃದ್ಧಿ ಬಗ್ಗೆ ಹೊಂದಿದ್ದ ಚಿಂತನೆ ಇದಕ್ಕೆ ಮುಖ್ಯ ಕಾರಣ. ಅತ್ಯಂತ ನಿಪುಣ ಅಧಿಕಾರಿಗಳನ್ನು ಇಟ್ಟುಕೊಂಡು ಕೆಲಸ ಮಾಡಿದ್ದರಿಂದ ಅಭಿವೃದ್ಧಿ ಸಾಧ್ಯವಾಗಿದೆ.
ಸಮಾಜ ಮತ್ತು ದೇಶದ ಅಭಿವೃದ್ಧಿಯಲ್ಲಿ ಇಂಜಿನಿಯರ್ಗಳ ಪಾತ್ರ ಅತ್ಯಂತ ಮಹತ್ವದ್ದು. ಇಂಜಿನಿಯರ್ಗಳು ಸ್ವಾರ್ಥ ಬದಿಗಿಟ್ಟು ಕೆಲಸ ಮಾಡಬೇಕು. ರಾಜ್ಯದ ಹಿತಾದೃಷ್ಟಿಯಿಂದ ಸರ್ಕಾರಕ್ಕೆ ಅಗತ್ಯ ಸಲಹೆಗಳನ್ನು ನೀಡಬೇಕು.
ಕಾರ್ಯಕ್ರಮದಲ್ಲಿ ತುಮಕೂರು ನಗರ ಶಾಸಕರಾದ ಜಿ.ಬಿ.ಜ್ಯೋತಿ ಗಣೇಶ್, ಜಿಲ್ಲಾಧಿಕಾರಿಗಳಾದ ಶುಭ ಕಲ್ಯಾಣ್, ಜಿಲ್ಲಾ ಪಂಚಾಯತ್ ಸಿಇಒ ಅಶ್ವಿಜಾ ಹಾಗೂ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು. -
Dr. G Parameshwara
@DrParameshwara
ಇಂದು ʼಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ’ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಹಾಗೂ ಮಾಜಿ ಉಪ ಪ್ರಧಾನಿ ಬಾಬು ಜಗಜೀವನ್ ರಾಮ್ ಅವರಿಗೆ ಗೌರವ ನಮನ ಸಲ್ಲಿಸಿದೆ.
ಸಂವಿಧಾನದ ಮೌಲ್ಯಗಳನ್ನು ಅರಿತು, ಪ್ರಜಾಪ್ರಭುತ್ವವನ್ನು ಇನ್ನಷ್ಟು ಬಲಪಡಿಸುವ ಜವಾಬ್ದಾರಿ ನಮ್ಮೆಲ್ಲರದು. ವಿಶೇಷವಾಗಿ ಯುವಪೀಳಿಗೆ ಈ ಆಶಯಗಳನ್ನು ಬದುಕಿನ ಭಾಗವನ್ನಾಗಿಸಿಕೊಳ್ಳಬೇಕು.This media couldn't be displayed. See it on the original post. -
Dr. G Parameshwara
@DrParameshwara
Tumakuru Dasara has earned widespread public appreciation over the past two years and will once again be celebrated on a grand scale from October 11 to 21 this year.
On October 11 at 9 am, various religious programmes will begin at the Government Junior College Grounds. Siddaganga Mutt’s Sri Siddalinga Mahaswamiji, Sri Karada Mutt Swamiji of Bellavi, Sri Dr. Hanumanthanath Swamiji of Narasimha Giri Kshetra, along with several other seers and elected representatives, will participate.
Various cultural programmes will be held on October 19, 20 and 21, with film personalities presenting entertainment programmes. On the morning of October 21, a procession of the Goddess will be taken out from BGS Circle on three elephants, followed by Shami Puja at the Junior College Grounds in the evening.
Officials have been clearly instructed that government work must not be affected in the name of Dasara preparations.
Deputy Commissioners, Tahsildars and VAO officials are currently engaged in SIR work and must continue to discharge those responsibilities. Failure to do so could invite action from the Election Commission. Dasara preparations must therefore be carried out without disrupting essential government work.
Drought report to be submitted to the Centre soon: We are receiving daily updates on rainfall, fodder availability and other drought-related issues. Around one lakh fodder seed kits have already been distributed in the district. Once cultivated, fodder will be available within about 15 days. If farmers produce surplus fodder, the Government will purchase it from them.
So far, 101 taluks have been declared drought-hit. Another notification will be issued tomorrow, adding more taluks to the list. We will then submit the drought report to the Union Home Minister along with the Chief Minister or other Ministers.
Load shedding is not being imposed deliberately. Hydrogen power generation has stopped, causing a disruption in electricity generation and resulting in load shedding.
Cabinet meeting in Mangaluru: The Cabinet meeting in Mangaluru will largely focus on issues concerning that region. We cannot comment before the Cabinet takes its decisions. Matters related to Mangaluru, Udupi, Chikkamagaluru and Madikeri are expected to be taken up.
Bringing neglected communities into the mainstream is the key objective: Many people have been deprived of education for various reasons, and policies must be framed to support them. The primary objective of the Social and Educational Survey Report is to bring neglected communities into the mainstream. If the report remains pending, it will be an injustice to those communities. Our intention, and Siddaramaiah’s, is to resolve the issue at the earliest and take it forward.
The manner in which the Union Government is implementing the caste census raises concerns: The fundamental objective is to ensure justice for everyone. If justice is denied, we will have to raise our voice. Creating opportunities for neglected communities is our responsibility. Society still has many layers of inequality. If these persist even in the 21st century, the purpose of Independence cannot be considered fulfilled.
Local body elections will be conducted after the voters’ list is finalised in October. Thereafter, elections to the Zilla Panchayats, Taluk Panchayats and Gram Panchayats will be held.
— Addressed a press conference in Tumakuru city today and responded to questions from media representatives. -
Dr. G Parameshwara
@DrParameshwara
ವಿಜೃಂಭಣೆಯಿಂದ ನಡೆಯಲಿದೆ ತುಮಕೂರು ದಸರಾ : ತುಮಕೂರು ದಸರಾ ಆಚರಣೆ ಎರಡು ವರ್ಷದಲ್ಲಿ ಜನಮನ್ನಣೆ ಗಳಿಸಿದ್ದು, ಈ ವರ್ಷವೂ ಅಕ್ಟೋಬರ್ 11 ರಿಂದ 21ರವರೆಗೆ ವಿಜೃಂಭಣೆಯಿಂದ ನಡೆಯಲಿದೆ.
ಅಕ್ಟೋಬರ್ 11ರಂದು ಬೆಳಗ್ಗೆ 9 ಗಂಟೆಗೆ ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳಿಗೆ ಚಾಲನೆ ನೀಡಲಾಗುವುದು. ಸಿದ್ಧಗಂಗಾ ಮಠದ ಶ್ರೀ ಸಿದ್ಧಲಿಂಗ ಮಹಾಸ್ವಾಮೀಜಿ ರವರು, ಬೆಳ್ಳಾವಿಯ ಶ್ರೀ ಕಾರದ ಮಠದ ಸ್ವಾಮೀಜಿ, ನರಸಿಂಹ ಗಿರಿಕ್ಷೇತ್ರದ ಶ್ರೀ ಡಾ. ಹನುಮಂತನಾಥ್ ಸ್ವಾಮೀಜಿ ಸೇರಿದಂತೆ ಹಲವು ಮಠಾಧೀಶರು ಮತ್ತು ಜನಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ.
ಅಕ್ಟೋಬರ್ 19, 20 ಮತ್ತು 21 ಮೂರು ದಿನ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತವೆ. ಸಿನಿಮಾ ತಾರೆಯರು ಮನೋರಂಜನಾ ಕಾರ್ಯಕ್ರಮ ನಡೆಸಿ ಕೊಡಲಿದ್ದಾರೆ. ಅಕ್ಟೋಬರ್ 21ರಂದು ಬೆಳಗ್ಗೆ ಬಿಜಿಎಸ್ ವೃತ್ತದಿಂದ ಮೂರು ಆನೆಗಳ ಮೇಲೆ ದೇವಿಯ ಮೆರವಣಿಗೆ ನಡೆಯಲಿದ್ದು, ಸಂಜೆ ಜೂನಿಯರ್ ಕಾಲೇಜು ಮೈದಾನದಲ್ಲಿ ಶಮಿ ಪೂಜೆ ನೆರವೇರಿಸಲಾಗುವುದು.
ದಸರಾ ಆಚರಣೆಯ ನೆಪದಲ್ಲಿ ಯಾವುದೇ ರೀತಿಯ ಸರ್ಕಾರಿ ಕೆಲಸಗಳನ್ನು ನಿಲ್ಲಿಸಬಾರದು ಎಂದು ಅಧಿಕಾರಿಗಳಿಗೆ ಅಗತ್ಯ ಸೂಚನೆ ನೀಡಲಾಗಿದೆ.
ಜಿಲ್ಲಾಧಿಕಾರಿಗಳು, ತಹಶೀಲ್ದಾರರು, ವಿಎಒ ಅಧಿಕಾರಿಗಳು ಎಸ್ಐಆರ್ ಕೆಲಸದಲ್ಲಿ ತೊಡಗಿದ್ದಾರೆ. ಆ ಕರ್ತವ್ಯವನ್ನು ಅವರು ನಿರ್ವಹಿಸಬೇಕಿದೆ. ಇದನ್ನು ಮಾಡದಿದ್ದರೆ ಚುನಾವಣಾ ಆಯೋಗ ಕ್ರಮ ಕೈಗೊಳ್ಳಲಿದೆ. ಸರ್ಕಾರದ ಮುಖ್ಯ ಕೆಲಸಗಳನ್ನು ನಿಲ್ಲಿಸದೆ ದಸರಾ ಆಚರಣೆಯ ಸಿದ್ಧತಾ ಕಾರ್ಯದಲ್ಲಿ ತೊಡಗಬೇಕು.
ಶೀಘ್ರವೇ ಕೇಂದ್ರಕ್ಕೆ ಬರ ವರದಿ ಸಲ್ಲಿಕೆ : ಮೇವಿನ ಸಮಸ್ಯೆ, ಮಳೆ ಸೇರಿದಂತೆ ಬರಗಾಲದ ಸಮಸ್ಯೆಯ ಕುರಿತು ಪ್ರತಿದಿನದ ಮಾಹಿತಿ ಬರುತ್ತಿದೆ. ಈಗಾಗಲೇ ಜಿಲ್ಲೆಯಲ್ಲಿ ಒಂದು ಲಕ್ಷ ಮೇವಿನ ಬೀಜದ ಕಿಟ್ಗಳನ್ನು ನೀಡಲಾಗಿದೆ. ಬೆಳೆ ಹಾಕಿದರೆ 15 ದಿನಕ್ಕೆ ಮೇವು ಬರುತ್ತದೆ. ಹೆಚ್ಚಿನ ಮೇವು ಬೆಳೆದ ರೈತರಿಗೆ ಹಣ ಕೊಟ್ಟು ಮೇವು ಖರೀದಿಸಲಾಗುವುದು.
101 ಬರ ಪೀಡಿತ ತಾಲೂಕುಗಳನ್ನು ಘೋಷಣೆ ಮಾಡಲಾಗಿದೆ. ನಾಳೆ ಮತ್ತೊಂದು ನೋಟಿಫಿಕೇಷನ್ ಬರಲಿದೆ. ಹೆಚ್ಚುವರಿ ತಾಲೂಕುಗಳು ಸಹ ಸೇರ್ಪಡೆಯಾಗಲಿವೆ. ಮುಖ್ಯಮಂತ್ರಿಗಳ ಜೊತೆ ಅಥವಾ ಸಚಿವರ ಜೊತೆ ತೆರಳಿ ಕೇಂದ್ರದ ಗೃಹ ಸಚಿವರಿಗೆ ವರದಿ ಸಲ್ಲಿಸಲಾಗುವುದು.
ಲೋಡ್ ಶೆಡ್ಡಿಂಗ್ ಉದ್ದೇಶಪೂರ್ವಕವಾಗಿ ಮಾಡುತ್ತಿಲ್ಲ. ಹೈಡ್ರೋಜನ್ ಪವರ್ ಜನರೇಟ್ ನಿಂತಿದೆ. ಹಾಗಾಗಿ ವಿದ್ಯುತ್ ಉತ್ಪಾದನೆಯಲ್ಲಿ ವ್ಯತ್ಯಯವಾಗಿದ್ದು, ಲೋಡ್ ಶೆಡ್ಡಿಂಗ್ ಆಗುತ್ತಿದೆ.
ಮಂಗಳೂರಿನಲ್ಲಿ ಸಚಿವ ಸಂಪುಟ ಸಭೆ: ಮಂಗಳೂರಿನಲ್ಲಿ ನಡೆಯುವ ಕ್ಯಾಬಿನೆಟ್ ಸಭೆಯಲ್ಲಿ ಹೆಚ್ಚಿನಾಂಶದ್ದು ಆ ಭಾಗಕ್ಕೆ ಸಂಬಂಧಪಟ್ಟ ವಿಷಯಗಳ ಕುರಿತು ತೀರ್ಮಾನಗಳನ್ನು ಕೈಗೊಳ್ಳಲಾಗುತ್ತದೆ. ಕ್ಯಾಬಿನೆಟ್ ತೀರ್ಮಾನ ಆಗುವವರೆಗೂ ನಾವೇನು ಹೇಳುವಂತಿಲ್ಲ. ಮಂಗಳೂರು, ಉಡುಪಿ, ಚಿಕ್ಕಮಗಳೂರು, ಮಡಿಕೇರಿ ಭಾಗಕ್ಕೆ ಸಂಬಂಧಿಸಿದ ವಿಚಾರಗಳು ನಿರ್ಧಾರ ಆಗುತ್ತದೆ.
ನಿರ್ಲಕ್ಷ್ಯಕ್ಕೆ ಒಳಾಗದ ಸಮುದಾಯಗಳನ್ನು ಮುಖ್ಯವಾಹಿನಿಗೆ ತರುವುದು ಮುಖ್ಯ ಉದ್ದೇಶ : ಅನೇಕ ಕಾರಣಗಳಿಂದ ಅನೇಕರು ಸಮಾಜದಲ್ಲಿ ಶಿಕ್ಷಣದಿಂದ ವಂಚಿತರಾಗಿದ್ದಾರೆ. ಅಂತವರಿಗೆ ಯೋಜನೆಗಳನ್ನು ರೂಪಿಸಬೇಕಿದೆ. ಸಮಾಜದಲ್ಲಿ ನಿರ್ಲಕ್ಷ್ಯಕ್ಕೆ ಒಳಾಗದ ಸಮುದಾಯಗಳನ್ನು ಮುಖ್ಯವಾಹಿನಿಗೆ ತರುವುದು ಸಾಮಾಜಿಕ ಮತ್ತು ಶೈಕ್ಷಣಿಕ ವರದಿಯ ಮುಖ್ಯ ಉದ್ದೇಶ. ಅದು ನೆನೆಗುದಿಗೆ ಬಿದ್ದರೆ ಆ ಸಮುದಾಯಗಳಿಗೆ ಅನ್ಯಾಯವಾಗುತ್ತದೆ. ಆದಷ್ಟು ಬೇಗ ಇತ್ಯರ್ಥಗೊಳಿಸಿ ಮುಂದುವರಿಸುವುದು ನಮ್ಮ ಮತ್ತು ಸಿದ್ದರಾಮಯ್ಯನವರ ಉದ್ದೇಶವಾಗಿದೆ. ಅದನ್ನು ಮಾಡುತ್ತೇವೆ.
ಕೇಂದ್ರ ಸರ್ಕಾರ ಜಾತಿಗಣತಿ ಜಾರಿ ಮಾಡುವ ರೀತಿ ಶಂಕಾಸ್ಪದ : ಕೇಂದ್ರ ಸರ್ಕಾರ ಜಾತಿಗಣತಿ ಜಾರಿ ಮಾಡುವ ರೀತಿ ಶಂಕಾಸ್ಪದವಾಗಿದೆ. ಎಲ್ಲರಿಗೂ ನ್ಯಾಯ ಸಿಗಬೇಕು ಎಂಬುದು ಮುಖ್ಯ ಉದ್ದೇಶ. ಸಿಗಲಿಲ್ಲ ಎಂದಾಗ ಧ್ವನಿ ಎತ್ತಬೇಕಾಗುತ್ತದೆ. ನಿರ್ಲಕ್ಷ್ಯಕ್ಕೆ ಒಳಗಾದ ಸಮುದಾಯಗಳಿಗೆ ಅವಕಾಶ ಕಲ್ಪಿಸುವುದು ನಮ್ಮ ಧರ್ಮ. ಸಮಾಜದಲ್ಲಿ ಪದರುಗಳು ಜಾಸ್ತಿ ಇವೆ. 21ನೇ ಶತಮಾನ ಆದರೂ ಅದು ಹಾಗೇ ಇದೆ ಎಂದಾದರೆ ಸ್ವಾತಂತ್ರ್ಯ ಉದ್ದೇಶ ಈಡೇರಿದಂತಾಗುವುದಿಲ್ಲ.
ಸ್ಥಳೀಯ ಸಂಸ್ಥೆ ಚುನಾವಣೆಗಳನ್ನು ಮಾಡುತ್ತೇವೆ. ಮತದಾರರ ಪಟ್ಟಿ ಅಂತಿಮ ತೀರ್ಮಾನ ಅಕ್ಟೋಬರ್ನಲ್ಲಿ ಆಗುತ್ತದೆ. ತದನಂತರ ಜಿಲ್ಲಾ ಪಂಚಾಯತ್, ತಾಲ್ಲೂಕು ಪಂಚಾಯತ್ ಮತ್ತು ಗ್ರಾಮ ಪಂಚಾಯಿತಿ ಚುನಾವಣೆಗಳನ್ನು ನಡೆಸಲಾಗುವುದು.
- ಇಂದು ತುಮಕೂರು ನಗರದಲ್ಲಿ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿ, ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗಳಿಗೆ ಉತ್ತರಿಸಿದೆ. -
Dr. G Parameshwara
@DrParameshwara
ನಮ್ಮ ತುಮಕೂರಿನ ಸಂಸ್ಕೃತಿ, ಪರಂಪರೆ, ಕಲೆ ಮತ್ತು ಐತಿಹಾಸಿಕ ವೈಭವವನ್ನು ಒಂದೇ ವೇದಿಕೆಯಲ್ಲಿ ಸಂಭ್ರಮಿಸುವ ʼತುಮಕೂರು ದಸರಾ ಉತ್ಸವ 2026ʼಕ್ಕೆ ಸಿದ್ಧತೆಗಳು ಆರಂಭಗೊಂಡಿವೆ.
ಇಂದು ತುಮಕೂರಿನಲ್ಲಿ ಈ ವರ್ಷದ ದಸರಾ ಉತ್ಸವದ ನೂತನ ಲಾಂಛನವನ್ನು ಅನಾವರಣಗೊಳಿಸಿದ್ದೇನೆ. ಕಳೆದ ವರ್ಷ ಅಪಾರ ಜನರ ಸಹಭಾಗಿತ್ವ ಮತ್ತು ಉತ್ಸಾಹದಿಂದ ಯಶಸ್ವಿಯಾದ ತುಮಕೂರು ದಸರಾವನ್ನು, ಈ ಬಾರಿ ಇನ್ನಷ್ಟು ವೈವಿಧ್ಯಮಯ, ಅರ್ಥಪೂರ್ಣ ಮತ್ತು ಜನಾಕರ್ಷಕವಾಗಿ ರೂಪಿಸುವ ಸಂಕಲ್ಪ ಹೊಂದಿದ್ದೇವೆ.
ಅಕ್ಟೋಬರ್ 11ರಿಂದ 21ರವರೆಗೆ ನಡೆಯಲಿರುವ ಈ ಉತ್ಸವದಲ್ಲಿ ನಮ್ಮ ನಾಡಿನ ಕಲೆ, ಸಾಹಿತ್ಯ, ಸಂಸ್ಕೃತಿ ಮತ್ತು ಪರಂಪರೆಯ ಸೊಬಗು ಅನಾವರಣಗೊಳ್ಳಲಿದೆ. ಜೊತೆಗೆ ಯುವಜನತೆ ಹಾಗೂ ಮಕ್ಕಳ ಪ್ರತಿಭೆಗೆ ವಿಶಾಲ ವೇದಿಕೆ ಕಲ್ಪಿಸಿ, ಕೃತಕ ಬುದ್ಧಿಮತ್ತೆ ಮತ್ತು ಆಧುನಿಕ ತಂತ್ರಜ್ಞಾನಗಳ ಬೆಳವಣಿಗೆಯನ್ನು ಪರಿಚಯಿಸುವ ವಿಶೇಷ ಕಾರ್ಯಕ್ರಮಗಳಿಗೂ ಅವಕಾಶ ನೀಡಲಾಗುತ್ತಿದೆ.
ತುಮಕೂರು ದಸರಾ ಕೇವಲ ಹಬ್ಬವಲ್ಲ; ಎಲ್ಲರನ್ನು ಒಂದಾಗಿಸುವ, ನಮ್ಮ ಜಿಲ್ಲೆಯ ಹೆಮ್ಮೆ ಮತ್ತು ವೈಶಿಷ್ಟ್ಯವನ್ನು ಸಾರುವ ಜನೋತ್ಸವ. ಈ ಸಂಭ್ರಮದಲ್ಲಿ ಎಲ್ಲರೂ ಭಾಗಿಯಾಗಿ, ತುಮಕೂರು ದಸರಾವನ್ನು ಮತ್ತಷ್ಟು ವೈಭವಯುತವಾಗಿ ಯಶಸ್ವಿಗೊಳಿಸೋಣ.
Preparations have begun for ‘Tumakuru Dasara 2026’, celebrating the culture, traditions, art and history of our Tumakuru.
Today, I unveiled the new logo for this year’s festival. Building on the tremendous public participation and success of last year, we are determined to make this year’s Dasara even more vibrant, meaningful and engaging.
From October 11 to 21, the festival will showcase our art, literature, culture and traditions, while also creating a wider platform for youth and children. Special programmes on Artificial Intelligence and modern technology will also be featured.
Tumakuru Dasara is more than a festival; it is a people’s celebration that brings everyone together and reflects the pride of our district. Let us all join in and make this year’s Tumakuru Dasara even more grand and memorable.
#tumakurudasara2026 -
Dr. G Parameshwara
@DrParameshwara
ಪ್ರಜಾಪ್ರಭುತ್ವವೆಂದರೆ ಕೇವಲ ಚುನಾವಣೆ ನಡೆಸುವ ವ್ಯವಸ್ಥೆಯಲ್ಲ. ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆ, ಮಾನವ ಹಕ್ಕುಗಳಿಗೆ ಗೌರವ, ಪತ್ರಿಕಾ ಸ್ವಾತಂತ್ರ್ಯ, ಆಡಳಿತದಲ್ಲಿ ಜನರ ಭಾಗವಹಿಸುವಿಕೆ, ಹೊಣೆಗಾರಿಕೆ ಮತ್ತು ಪಾರದರ್ಶಕತೆ ಇವೆಲ್ಲವೂ ಪ್ರಜಾಪ್ರಭುತ್ವದ ಜೀವಾಳ.
ಜನರ ಧ್ವನಿಗೆ ಮನ್ನಣೆ ದೊರೆತು, ಪ್ರತಿಯೊಬ್ಬರ ಹಕ್ಕುಗಳಿಗೆ ರಕ್ಷಣೆ ಸಿಗುವುದರ ಜೊತೆಗೆ ಆಡಳಿತವು ಜನರಿಗೆ ಉತ್ತರದಾಯಿಯಾಗಿರುವ ವ್ಯವಸ್ಥೆಯೇ ನಿಜವಾದ ಪ್ರಜಾಪ್ರಭುತ್ವ. ಇಂತಹ ಪ್ರಜಾಪ್ರಭುತ್ವ ಗಟ್ಟಿಯಾಗಿರುವ ಸಮಾಜದಲ್ಲಿ ಮಾತ್ರ ಶಾಂತಿ, ಸೌಹಾರ್ದತೆ ಮತ್ತು ಸಾಮಾಜಿಕ ಸ್ಥಿರತೆ ನೆಲೆಸಲು ಸಾಧ್ಯ.
ಪ್ರಜಾಪ್ರಭುತ್ವದ ಮೌಲ್ಯಗಳನ್ನು ಕಾಪಾಡುವುದು ಎಂದರೆ ಕೇವಲ ಒಂದು ವ್ಯವಸ್ಥೆಯನ್ನು ರಕ್ಷಿಸುವುದಲ್ಲ, ಜನರ ಸ್ವಾತಂತ್ರ್ಯ, ಹಕ್ಕು, ಗೌರವ ಮತ್ತು ಭವಿಷ್ಯವನ್ನು ರಕ್ಷಿಸುವುದು.
ನಮ್ಮ ಸಂವಿಧಾನ ನೀಡಿರುವ ಪ್ರಜಾಪ್ರಭುತ್ವದ ಆಶಯಗಳನ್ನು ಮತ್ತಷ್ಟು ಬಲಪಡಿಸಿ, ಮುಂದಿನ ಪೀಳಿಗೆಗೆ ಬಲಿಷ್ಠವಾದ ಪ್ರಜಾಪ್ರಭುತ್ವವನ್ನು ಹಸ್ತಾಂತರಿಸುವುದು ನಮ್ಮೆಲ್ಲರ ಜವಾಬ್ದಾರಿ.
Democracy is not merely a system of conducting elections. Free and fair elections, respect for human rights, freedom of the press, public participation in governance, accountability and transparency are the very foundations of democracy.
True democracy is one where people’s voices are respected, every individual’s rights are protected, and the Government remains accountable to the people. Only in a society where democracy is strong can peace, harmony and social stability truly prevail.
Protecting democratic values is not just about safeguarding a system; it is about protecting the freedom, rights, dignity and future of the people.
It is our collective responsibility to strengthen the democratic ideals enshrined in our Constitution and pass on a strong and vibrant democracy to future generations. -
Dr. G Parameshwara
@DrParameshwara
12ನೇ ಶತಮಾನದಲ್ಲಿಯೇ ನಮ್ಮ ಕರ್ನಾಟಕದ ನೆಲದಲ್ಲಿ ಸಮಾನತೆ ಮತ್ತು ಜನಭಾಗಿತ್ವದ ಹೊಸ ಚಿಂತನೆಗೆ ನಾಂದಿ ಹಾಡಿದ ಮಹತ್ವದ ಪ್ರಯತ್ನವೇ ‘ಅನುಭವ ಮಂಟಪ’.
ಬಸವಣ್ಣನವರು ಪ್ರತಿಪಾದಿಸಿದ ಸಮಾನತೆಯ ಆಶಯದಂತೆ, ಸಮಾಜದ ಪ್ರತಿಯೊಂದು ಜಾತಿ, ಪಂಗಡ ಮತ್ತು ವರ್ಗದ ಧ್ವನಿಗೂ ಅವಕಾಶ ದೊರೆಯಬೇಕು, ಜನರ ಅಭಿಪ್ರಾಯಕ್ಕೆ ಮನ್ನಣೆ ಸಿಗಬೇಕು ಎಂಬ ಚಿಂತನೆಗೆ ಅನುಭವ ಮಂಟಪ ವೇದಿಕೆಯಾಯಿತು. ಅಲ್ಲಮ ಪ್ರಭು ಅವರ ಅಧ್ಯಕ್ಷತೆಯಲ್ಲಿ ನಡೆದ ಈ ಚರ್ಚಾ ಪರಂಪರೆ ಸಮಾಜದ ಎಲ್ಲ ವರ್ಗಗಳನ್ನೂ ಒಳಗೊಳ್ಳುವ ವಿಶಿಷ್ಟ ಮಾದರಿಯಾಗಿತ್ತು.
ಸಮಾನತೆ, ಸ್ವಾತಂತ್ರ್ಯ, ಜನಭಾಗಿತ್ವ ಮತ್ತು ವಿಚಾರ ವಿನಿಮಯಕ್ಕೆ ಮಹತ್ವ ನೀಡಿದ ಅನುಭವ ಮಂಟಪದ ಆಶಯಗಳು ಇಂದಿನ ಪ್ರಜಾಪ್ರಭುತ್ವದ ಮೌಲ್ಯಗಳಿಗೂ ದಾರಿದೀಪವಾಗಿವೆ.
ಪ್ರಜಾಪ್ರಭುತ್ವದ ಮೌಲ್ಯಗಳು ನಮ್ಮ ನೆಲದ ಪರಂಪರೆಯಲ್ಲಿಯೇ ಆಳವಾಗಿ ಬೇರೂರಿವೆ ಎಂಬುದನ್ನು ಅನುಭವ ಮಂಟಪ ನಮಗೆ ನೆನಪಿಸುತ್ತದೆ. ಈ ಸಮಾನತೆಯ ಮತ್ತು ಜನಭಾಗಿತ್ವದ ಚಿಂತನೆಯನ್ನು ಮುಂದಿನ ಪೀಳಿಗೆಗೆ ತಲುಪಿಸುವುದು ನಮ್ಮೆಲ್ಲರ ಜವಾಬ್ದಾರಿ.
As early as the 12th century, Karnataka witnessed a remarkable experiment that gave rise to a new vision of equality and public participation -- the Anubhava Mantapa.
Inspired by Basavanna’s ideals of equality, the Anubhava Mantapa became a platform where the voices of every caste, community and section of society could be heard, and where people’s views were given due importance. The tradition of dialogue under the leadership of Allama Prabhu was a unique model that brought together people from all sections of society.
The ideals of the Anubhava Mantapa -- equality, freedom, public participation and exchange of ideas -- continue to serve as a guiding light for the values of democracy today.
The Anubhava Mantapa reminds us that democratic values are deeply rooted in the traditions of our land. It is our collective responsibility to carry forward this spirit of equality and public participation to future generations. -
Dr. G Parameshwara
@DrParameshwara
Today, I unveiled the logo of Tumakuru Dasara 2026 at a programme held at the Central Library auditorium in Tumakuru city and addressed the gathering.
This year’s Tumakuru Dasara will be celebrated on a grand scale. The exhibition will provide space to showcase developments in Artificial Intelligence and modern technology, while more than 2,000 children will be given opportunities to participate in various cultural programmes.
The Mahaanavami festival teaches us many lessons in life. Tumakuru Dasara reflects the culture, civilisation, traditions and history of the district. Everyone should take part, and together we must celebrate Dasara in a way that brings pride and recognition to Tumakuru.
'Tumakuru Dasara 2026' will be held from October 11 to October 21. Chief Minister D.K. Shivakumar has been briefed about this year’s celebrations and invited to attend. He has assured us that he will make time to participate.
The idea of Tumakuru Dasara, which began two years ago, has today grown into a major public attraction on the lines of Mysuru Dasara. The festival is being celebrated beyond caste and religion, bringing people together without creating divisions in the district.
Last year’s Tumakuru Dasara was a major success. The temple replica closely resembled the original temple. Ten days of Navadurga worship, homas and havanas, Kavigoshti, Yuva Dasara, Mahila Dasara and a scientific exhibition contributed significantly to the success of the celebrations.
A scientific and technical exhibition explaining how ISRO builds rockets was organised and proved highly useful for schoolchildren. The ‘Prachand’ combat helicopter was displayed, while helicopter rides drew enthusiastic public participation. A team of 150 artists from Alva’s presented an impressive cultural programme. Every effort was made to ensure that the celebrations included people from all sections of society.
We heard appreciation from many quarters that Dasara was being celebrated in Tumakuru on the lines of Mysuru Dasara. People from all sections, elected representatives, officials and staff participated in the celebrations. Siddaramaiah, who was the Chief Minister at the time, supported the festival by releasing funds.
Tumakuru City MLA G.B. Jyothi Ganesh, BMTC Vice-Chairman Niketh Raj Maurya, District Guarantee Schemes Implementation Committee Chairman Chandrashekhar Gowda, Deputy Commissioner Shubha Kalyan, Zilla Panchayat CEO B.V. Ashwija, Municipal Corporation Commissioner Shubha, Superintendent of Police Ashok K.V. and others were present during the logo unveiling. -
Dr. G Parameshwara
@DrParameshwara
ಇಂದು ತುಮಕೂರು ನಗರದ ಕೇಂದ್ರ ಗ್ರಂಥಾಲಯದ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ʼತುಮಕೂರು ದಸರಾ ಉತ್ಸವ 2026ʼರ ಲಾಂಛನವನ್ನು ಅನಾವರಣಗೊಳಿಸಿ ಮಾತನಾಡಿದೆ.
ಈ ಬಾರಿಯ ತುಮಕೂರು ದಸರಾವನ್ನು ಅದ್ಧೂರಿಯಾಗಿ ಆಚರಿಸಲಾಗುವುದು. ವಸ್ತುಪ್ರದರ್ಶನದಲ್ಲಿ ಎಐ, ಆಧುನಿಕ ತಂತ್ರಜ್ಞಾನ ಅಭಿವೃದ್ಧಿ ಬಗ್ಗೆ ಅವಕಾಶ ಕಲ್ಪಿಸಲಾಗುವುದು. ಸುಮಾರು 2,000ಕ್ಕೂ ಹೆಚ್ಚು ಮಕ್ಕಳಿಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಅವಕಾಶ ಕಲ್ಪಿಸಲಾಗುವುದು.
ಮಹಾನವಮಿ ಹಬ್ಬ ನಮ್ಮ ಜೀವನದಲ್ಲಿ ಅನೇಕ ಪಾಠಗಳನ್ನು ಕಲಿಸುತ್ತದೆ. ತುಮಕೂರು ದಸರಾ ಉತ್ಸವ ಜಿಲ್ಲೆಯ ಸಂಸ್ಕೃತಿ, ನಾಗರೀಕತೆ, ಪರಂಪರೆ, ಇತಿಹಾಸವನ್ನು ಪ್ರತಿಬಿಂಬಿಸುತ್ತದೆ. ಎಲ್ಲರೂ ಭಾಗವಹಿಸಬೇಕು. ತುಮಕೂರಿಗೆ ಕೀರ್ತಿ ತರುವ ರೀತಿಯಲ್ಲಿ ದಸರಾ ಉತ್ಸವ ಆಚರಿಸೋಣ.
'ತುಮಕೂರು ದಸರಾ ಉತ್ಸವ 2026' ಕಾರ್ಯಕ್ರಮವು ಅಕ್ಟೋಬರ್ 11ರಿಂದ ಅಕ್ಟೋಬರ್ 21ರವರೆಗೆ ನಡೆಯಲಿದೆ. ಈ ವರ್ಷದ ತುಮಕೂರು ದಸರಾ ಉತ್ಸವದ ಬಗ್ಗೆ ಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ್ ಅವರ ಗಮನಕ್ಕೆ ತರಲಾಗಿದೆ. ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿದ್ದು, ಬಿಡುವು ಮಾಡಿಕೊಂಡು ಆಗಮಿಸುವುದಾಗಿ ಭರವಸೆ ನೀಡಿದ್ದಾರೆ.
ಎರಡು ವರ್ಷದ ಹಿಂದೆ ನಮಗೆ ಬಂದ 'ತುಮಕೂರು ದಸರಾ ಉತ್ಸವ' ಪರಿಕಲ್ಪನೆಯು ಇಂದು ಮೈಸೂರು ದಸರಾದಂತೆ ಜನಾಕರ್ಷಿಸುತ್ತಿದೆ. ಜಿಲ್ಲೆಯಲ್ಲಿ ವಿಭಿನ್ನವಾದ ಭಾವನೆಗಳು ಬರದಂತೆ, ಜಾತಿ-ಧರ್ಮವನ್ನು ಮೀರಿ ದಸರಾ ಹಬ್ಬವನ್ನು ಆಚರಿಸಲಾಗುತ್ತಿದೆ. ಕಳೆದ ವರ್ಷ ತುಮಕೂರು ದಸರಾ ಬಹಳ ಯಶಸ್ವಿಯಾಗಿ ನಡೆಯಿತು. ದೇವಸ್ಥಾನದ ಪ್ರತಿಕೃತಿಯು ಮೂಲ ದೇವಸ್ಥಾನದಂತೆ ಗೋಚರಿಸುತ್ತಿತ್ತು. ಹತ್ತು ದಿನ ನಡೆದ ನವದುರ್ಗೆಯರ ಪೂಜೆ, ಹೋಮ-ಹವನಗಳು, ಕವಿಗೋಷ್ಠಿ, ಯುವ ದಸರಾ, ಮಹಿಳಾ ದಸರಾ, ವೈಜ್ಞಾನಿಕ ವಸ್ತುಪ್ರದರ್ಶನ ತುಮಕೂರು ದಸರಾ ಯಶಸ್ಸಿಗೆ ಕಾರಣವಾಯಿತು.
ಇಸ್ರೋದವರು ರಾಕೆಟ್ ಯಾವ ರೀತಿ ತಯಾರಿಸುತ್ತಾರೆ ಎಂಬುದರ ಕುರಿತು ವೈಜ್ಞಾನಿಕ ಮತ್ತು ತಾಂತ್ರಿಕ ವಸ್ತುಪ್ರದರ್ಶನ ನಡೆಸಲಾಯಿತು. ಶಾಲಾ ಮಕ್ಕಳ ಕಲಿಕೆಗೆ ಹೆಚ್ಚು ಅನುಕೂಲವಾಯಿತು. 'ಪ್ರಚಂಡ' ಎಂಬ ಯುದ್ಧ ಹೆಲಿಕ್ಯಾಪ್ಟರ್ ಪ್ರದರ್ಶನಕ್ಕೆ ಇಡಲಾಗಿತ್ತು. ಹೆಲಿ ರೈಡ್ ಆಯೋಜನೆಯನ್ನು ಜನರು ಸಂಭ್ರಮಿಸಿದರು. ಅಳ್ವಾಸ್ನ 150 ಕಲಾವಿದರ ತಂಡವು ಸಾಂಸ್ಕೃತಿಕ ಕಾರ್ಯಕ್ರಮವನ್ನು ಸುಂದರವಾಗಿ ನಡೆಸಿಕೊಟ್ಟರು. ಎಲ್ಲರನ್ನು ಒಳಗೊಂಡಂತೆ ದಸರಾ ಆಚರಿಸುವ ಪ್ರಯತ್ನ ಮಾಡಲಾಯಿತು.
ಮೈಸೂರಿನಂತೆ ದಸರಾವನ್ನು ತುಮಕೂರಿನಲ್ಲಿ ಆಚರಿಸಲಾಗುತ್ತಿದೆ ಎಂಬ ಮಾತುಗಳು ಎಲ್ಲೆಡೆಯಿಂದ ಕೇಳಿಬಂದವು. ಎಲ್ಲ ರೀತಿಯ ಜನರು, ಜನಪ್ರತಿನಿಧಿಗಳು, ಅಧಿಕಾರಿ ಮತ್ತು ಸಿಬ್ಬಂದಿಗಳು ಪಾಲ್ಗೊಂಡರು. ಸಿಎಂ ಆಗಿದ್ದ ಸಿದ್ದರಾಮಯ್ಯ ಅವರು ಅನುದಾನ ಬಿಡುಗಡೆ ಮಾಡಿ ಸಹಕರಿಸಿದರು.
ಲಾಂಛನ ಬಿಡುಗಡೆ ವೇಳೆ ತುಮಕೂರು ನಗರದ ಶಾಸಕರಾದ ಜಿ.ಬಿ.ಜ್ಯೋತಿಗಣೇಶ್, ಬಿಎಂಟಿಸಿ ಉಪಾಧ್ಯಕ್ಷರಾದ ನಿಕೇತ್ ರಾಜ್ ಮೌರ್ಯ, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷರಾದ ಚಂದ್ರಶೇಖರ್ ಗೌಡ, ಜಿಲ್ಲಾಧಿಕಾರಿಗಳಾದ ಶುಭ ಕಲ್ಯಾಣ್, ಜಿಲ್ಲಾ ಪಂಚಾಯತ್ ಸಿಇಒ ಬಿ.ವಿ.ಅಶ್ವಿಜಾ, ಮಹಾನಗರ ಪಾಲಿಕೆ ಆಯುಕ್ತರಾದ ಶುಭ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಅಶೋಕ್ ಕೆ.ವಿ ಅವರು ಉಪಸ್ಥಿತರಿದ್ದರು. -
Dr. G Parameshwara
@DrParameshwara
Countries that have a free and fair electoral system, respect for human rights, freedom of the press, people’s participation in governance, accountability and transparency are the countries that enjoy a peaceful environment today. That is what we call democracy.
There are around 90 democratic countries in the world. The developments and systems of governance in the remaining countries are different. We have seen what has happened in our neighbouring countries such as Sri Lanka, Bangladesh, Pakistan and Nepal. But in our country, because the foundation laid by Dr. B.R. Ambedkar is strong, developments that could undermine democracy have not succeeded.
Nearly 65% of the country’s population is young, belonging to the 16–35 age group. They are the ones who will shape our future. Today, Gen Z has come to the forefront, and we need to give them importance. It is our responsibility to hand over a better political system to them. Therefore, we must instil in them the values of the Constitution and democracy.
Our Government has been continuously working in this direction. We have taken the Preamble of the Constitution to every school, college and household. By encouraging students to regularly read and reflect on the Preamble, we are helping them understand the importance of democracy.
Following the decision taken by the United Nations General Assembly in 1997 to observe International Day of Democracy, democratic values are remembered and reaffirmed across the world every year.
In our own State, a new experiment took shape in the 12th century -- the Anubhava Mantapa. Basavanna advocated equality. He believed that every caste and community must be given a voice and that governance must be based on this principle. With this vision, the Anubhava Mantapa was established under the leadership of Allama Prabhu. It would perhaps not be an exaggeration to call it the world’s first democracy.
Today, we call the British Parliament the Father of Democracy, but the Mother of Democracy is in India. In my view, if we are able to uphold equality and live by those values today, it is because the foundations of our democracy are so strong.
Today, the Union Government is attempting to weaken the electoral system in an effort to remain in power permanently. This is extremely dangerous. The first people to be affected by such developments are those at the lower rungs of society -- Dalits, backward classes and minorities.
It was with this understanding that Dr. Ambedkar provided constitutional safeguards to these communities. Such protective provisions are rarely seen elsewhere in the world. Yet today, questions are being raised about why these communities need such safeguards. Absurd questions are being asked about why reservation is necessary.
Dr. Ambedkar introduced reservation for one reason -- to uplift those who had been oppressed for 5,000 years. Should oppressed communities not be brought into the mainstream?
Democracy is a system that can bring revolutionary change to the economic and social lives of people without revolution and without bloodshed.
Dr. Ambedkar clearly said that political democracy cannot survive without the foundation of social democracy. It is a harsh truth that if you fail to understand the feelings of the people and fail to respect their decisions, your political system cannot survive.
No one who acts against democracy can remain in power forever.
Even 80 years after the Constitution was framed, its strength and relevance remain as powerful as ever. Therefore, we must uphold democratic values by keeping those who attempt to undermine the Constitution away from power.
— My remarks at the International Day of Democracy programme organised by the Social Welfare Department at the Banquet Hall of Vidhana Soudha today. -
Dr. G Parameshwara
@DrParameshwara
ಯಾವ ದೇಶದಲ್ಲಿ ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆ ವ್ಯವಸ್ಥೆ ಇದೆ, ಯಾವ ದೇಶದಲ್ಲಿ ಮಾನವತ್ವದ ಹಕ್ಕುಗಳಿಗೆ ಬೆಲೆ ಇದೆ, ಯಾವ ದೇಶದಲ್ಲಿ ಪತ್ರಿಕಾ ಸ್ವಾತಂತ್ರ್ಯವಿದೆ, ಯಾವ ದೇಶದ ಆಡಳಿತದಲ್ಲಿ ಜನಸಮುದಾಯದ ಭಾಗವಹಿಸುವಿಕೆ ಇದೆ ಮತ್ತು ಯಾವ ದೇಶದಲ್ಲಿ ಹೊಣೆಗಾರಿಕೆ ಮತ್ತು ಪಾರದರ್ಶಕತೆ ಇದೆ ಆ ದೇಶಗಳಲ್ಲಿ ಮಾತ್ರ ಇಂದು ಶಾಂತಿಯುತ ವಾತಾವರಣವಿದೆ. ಅದನ್ನೇ ನಾವು ಪ್ರಜಾಪ್ರಭುತ್ವ ಎಂದು ಕರೆಯುತ್ತೇವೆ.
ಪ್ರಪಂಚದಲ್ಲಿ 90 ಪ್ರಜಾಪ್ರಭುತ್ವದ ದೇಶಗಳಿವೆ. ಇನ್ನುಳಿದ ದೇಶಗಳಲ್ಲಿ ನಡೆಯುವಂತಹ ವಿದ್ಯಮಾನಗಳೇ ಬೇರೆ, ಆಡಳಿತವೇ ಬೇರೆ. ನಮ್ಮ ನೆರೆಯ ದೇಶಗಳಾದ ಶ್ರೀಲಂಕಾ, ಬಾಂಗ್ಲಾದೇಶ, ಪಾಕಿಸ್ತಾನ, ನೇಪಾಳಗಳಲ್ಲಿ ಏನೇನು ನಡೆಯಿತು ಎಂಬುದನ್ನು ಗಮನಿಸಿದ್ದೇವೆ. ಆದರೆ ನಮ್ಮ ದೇಶದಲ್ಲಿ ಡಾ. ಬಿ. ಆರ್. ಅಂಬೇಡ್ಕರ್ ಅವರು ಹಾಕಿಕೊಟ್ಟಿರುವ ಅಡಿಪಾಯ ಭದ್ರವಾಗಿರುವುದರಿಂದ ಪ್ರಜಾಪ್ರಭುತ್ವಕ್ಕೆ ಧಕ್ಕೆಯಾಗುವಂತಹ ಬೆಳವಣಿಗೆಗೆ ಗೆಲುವು ಸಿಕ್ಕಿಲ್ಲ.
ದೇಶದ ಜನಸಂಖ್ಯೆಯಲ್ಲಿ ಶೇ. 65ರಷ್ಟು ಯುವ ಸಮುದಾಯವಿದೆ. 16-35 ವಯೋಮಾನದ ಸಮುದಾಯವಿದು. ಇವರು ಮುಂದಿನ ಭವಿಷ್ಯವನ್ನು ನಿರ್ಮಿಸುವವರು. ಈಗ ಜೆನ್ಝೀ ಮುನ್ನೆಲೆ ಬಂದಿದೆ. ಇವರಿಗೆ ನಾವು ಪ್ರಾಮುಖ್ಯತೆ ನೀಡಬೇಕಿದೆ. ಉತ್ತಮ ರಾಜಕೀಯ ವ್ಯವಸ್ಥೆಯನ್ನು ಅವರಿಗೆ ಹಸ್ತಾಂತರಿಸುವ ಜವಾಬ್ದಾರಿ ನಮ್ಮ ಮೇಲಿದೆ. ಹಾಗಾಗಿ ಅವರಿಗೆ ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳನ್ನು ಧಾರೆಯೆರೆಯಬೇಕಿದೆ. ಈ ನಿಟ್ಟಿನಲ್ಲಿ ನಮ್ಮ ಸರ್ಕಾರ ಸಾಕಷ್ಟು ಕೆಲಸಗಳನ್ನು ನಿರಂತರವಾಗಿ ನಡೆಸುತ್ತ ಬಂದಿದೆ. ಪ್ರತಿಯೊಂದು ಶಾಲಾ-ಕಾಲೇಜುಗಳಿಗೆ, ಮನೆಗಳಿಗೆ ಸಂವಿಧಾನದ ಪೀಠಿಕೆಯನ್ನು ತಲುಪಿಸಿದ್ದೇವೆ. ನಿರಂತರವಾಗಿ ಸಂವಿಧಾನದ ಪೀಠಿಕೆಯನ್ನು ಮನನ ಮಾಡಿಕೊಳ್ಳುವ ಮೂಲಕ ವಿದ್ಯಾರ್ಥಿಗಳಲ್ಲಿ ಪ್ರಜಾಪ್ರಭುತ್ವದ ಪ್ರಾಮುಖ್ಯತೆಯನ್ನು ಅರ್ಥೈಸಿಕೊಳ್ಳುವಂತೆ ಮಾಡುತ್ತಿದ್ದೇವೆ.
1997ರಲ್ಲಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ತೆಗೆದುಕೊಂಡ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯ ನಿರ್ಧಾರದ ಫಲವಾಗಿ ಪ್ರತಿ ವರ್ಷ ಪ್ರಜಾಪ್ರಭುತ್ವದ ಮೌಲ್ಯಗಳನ್ನು ವಿಶ್ವಾದ್ಯಂತ ಮೆಲುಕು ಹಾಕಲಾಗುತ್ತಿದೆ. ನಮ್ಮ ರಾಜ್ಯದಲ್ಲಿ 12ನೇ ಶತಮಾನದಲ್ಲಿ ಒಂದು ಹೊಸ ಪ್ರಯತ್ನ ನಡೆಯಿತು. ಆ ಪ್ರಯತ್ನವೇ ಅನುಭವ ಮಂಟಪ. ಅಣ್ಣ ಬಸವಣ್ಣನವರು ಸಮಾನತೆಯ ಪ್ರತಿಪಾದನೆ ಮಾಡಿದರು. ಪ್ರತಿಯೊಂದು ಜಾತಿ, ಪಂಗಡಗಳಿಗೆ ಧ್ವನಿಯನ್ನು ನೀಡಬೇಕು. ಅದರ ಆಧಾರದ ಮೇಲೆ ಆಡಳಿತ ನಡೆಸಬೇಕು ಎಂದು ಅಲ್ಲಮ ಪ್ರಭು ಅಧ್ಯಕ್ಷತೆಯಲ್ಲಿ ಅನುಭವ ಮಂಟಪವನ್ನು ಪ್ರಾರಂಭ ಮಾಡಿದರು. ಬಹುಶಃ ಇಡೀ ವಿಶ್ವದಲ್ಲಿ ಪ್ರಥಮ ಪ್ರಜಾಪ್ರಭುತ್ವ ಇದು ಎಂದರೆ ಅತಿಶಯೋಕ್ತಿಯಲ್ಲ.
ಇಂದು ಬ್ರಿಟಿಷ್ ಪಾರ್ಲಿಮೆಂಟ್ ಅನ್ನು ದಿ ಫಾದರ್ ಆಫ್ ಡೆಮಾಕ್ರಸಿ ಎಂದು ಕರೆಯುತ್ತೇವೆ. ಆದರೆ ಮದರ್ ಆಫ್ ಡೆಮಾಕ್ರಸಿ ಭಾರತದಲ್ಲಿದೆ. ಇಂದು ನಾವೇನಾದರೂ ಸಮಾನತೆಯನ್ನ ಪ್ರತಿಪಾದನೆ ಮಾಡುವುದರ ಜೊತೆಗೆ ಅನುಕರಣೆ ಮಾಡಿ ಬದುಕುತ್ತಿದ್ದೇವೆ ಎಂದು ಹೇಳಿದರೆ, ಆ ಪ್ರಜಾಪ್ರಭುತ್ವದ ಅಡಿಪಾಯ ಬಹಳ ಗಟ್ಟಿ ಇರುವುದರಿಂದ ನಾವು ಬದುಕುತ್ತಿದ್ದೇವೆ ಎಂಬುದು ನನ್ನ ಅಭಿಪ್ರಾಯ.
ಇಂದು ಕೇಂದ್ರ ಸರ್ಕಾರ ಚುನಾವಣಾ ವ್ಯವಸ್ಥೆಯನ್ನು ಹಾಳು ಮಾಡಲು ಪ್ರಯತ್ನಿಸುತ್ತಿದೆ. ಈ ಮೂಲಕ ಅಧಿಕಾರದಲ್ಲಿ ಶಾಶ್ವತವಾಗಿ ಉಳಿಯಲು ಯತ್ನಿಸುತ್ತಿದೆ. ಇದು ಬಹಳ ಅಪಾಯಕಾರಿ. ಇದರ ಪರಿಣಾಮ ಮೊದಲು ಬೀರುವುದೇ ಸಮಾಜದ ಕೆಳಸ್ತರದಲ್ಲಿರುವವರ ಮೇಲೆ. ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರಿಗೆ ಇದರಿಂದ ತೊಂದರೆಯಾಗುತ್ತದೆ. ಇದನ್ನು ಗಮನದಲ್ಲಿಟ್ಟುಕೊಂಡೇ ಅಂಬೇಡ್ಕರ್ ಅವರು ಸಂವಿಧಾನತ್ಮಕ ರಕ್ಷಣೆಯನ್ನು ಈ ಸಮುದಾಯಗಳಿಗೆ ನೀಡಿದ್ದಾರೆ. ಇಂತಹ ರಕ್ಷಣಾತ್ಮಕ ವ್ಯವಸ್ಥೆ ವಿಶ್ವದ ಬೇರೆಡೆ ಕಾಣಸಿಗುವುದು ಅಪರೂಪ. ಅವರಿಗೆ ಯಾಕೆ ಇಂತಹ ರಕ್ಷಣೆ ಕೊಡಬೇಕು ಎಂಬ ಬಗ್ಗೆ ಇಂದು ಚಕಾರ ಎತ್ತಲಾಗುತ್ತಿದೆ. ಮೀಸಲಾತಿ ಏಕೆ ಎಂಬ ಅಸಂಬದ್ಧ ಪ್ರಶ್ನೆಗಳನ್ನು ಕೇಳಲಾಗುತ್ತಿದೆ. ಐದು ಸಾವಿರ ವರ್ಷಗಳಿಂದ ತುಳಿತಕ್ಕೆ ಒಳಗಾದವರನ್ನು ನಾವು ಮೇಲೆತ್ತಬೇಕು ಎಂದು ಅಂಬೇಡ್ಕರ್ ಅವರು ಮೀಸಲಾತಿ ವ್ಯವಸ್ಥೆಯನ್ನು ತಂದರೇ ವಿನಃ ಬೇರೆ ಯಾವುದೇ ಕಾರಣಕ್ಕಲ್ಲ. ಶೋಷಿತ ಸಮುದಾಯಗಳು ಮುಖ್ಯವಾಹಿನಿಗೆ ಬರಬಾರದೆ?
ಪ್ರಜಾಪ್ರಭುತ್ವ ಎಂಬುದು ಕ್ರಾಂತಿಯಿಲ್ಲದೆ, ರಕ್ತಪಾತವಿಲ್ಲದೆ, ಜನರ ಆರ್ಥಿಕ ಮತ್ತು ಸಾಮಾಜಿಕ ಜೀವನದಲ್ಲಿ ಕ್ರಾಂತಿಕಾರಕ ಬದಲಾವಣೆಯನ್ನು ತರುವ ವ್ಯವಸ್ಥೆಯಾಗಿದೆ. ಸಾಮಾಜಿಕ ಪ್ರಜಾಸತ್ತೆಯ ಅಡಿಪಾಯ ಇಲ್ಲದೆ ರಾಜಕೀಯ ಪ್ರಜಾಸತ್ತೆ ನೆಲೆ ನಿಲ್ಲಲು ಸಾಧ್ಯವಿಲ್ಲ ಎಂದು ಅಂಬೇಡ್ಕರ್ ಅವರು ಸ್ಪಷ್ಟವಾಗಿ ಹೇಳಿದ್ದಾರೆ. ನಿಮಗೆ ಜನರ ಭಾವನೆಗಳು ಅರ್ಥವಾಗದಿದ್ದರೆ, ಜನರ ತೀರ್ಮಾನಗಳು ಗೊತ್ತಾಗದೇ ಹೋದರೆ ನಿಮ್ಮ ರಾಜಕೀಯ ನೆಲೆ ನಿಲ್ಲೋದಕ್ಕೆ ಸಾಧ್ಯವಿಲ್ಲ ಎಂಬ ಮಾತು ಕಟುಸತ್ಯ. ಪ್ರಜಾಪ್ರಭುತ್ವಕ್ಕೆ ವಿರುದ್ಧವಾಗಿ ಹೋಗುವ ಯಾರೂ ಅಧಿಕಾರದಲ್ಲಿ ಉಳಿಯುವುದಿಲ್ಲ. ಸಂವಿಧಾನ ರಚನೆಯಾಗಿ 80 ವರ್ಷಗಳೇ ಕಳೆದರೂ ಇಂದು ಅದರ ಪ್ರಖರತೆ ಹಾಗೆಯೇ ಉಳಿದಿದೆ. ಹಾಗಾಗಿ ಸಂವಿಧಾನಕ್ಕೆ ಧಕ್ಕೆ ತರಲು ಯತ್ನಿಸುತ್ತಿರುವವರನ್ನು ಅಧಿಕಾರದಿಂದ ದೂರವುಳಿಸುವ ಮೂಲಕ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಎತ್ತಿಹಿಡಿಯಬೇಕಿದೆ.
- ಸಮಾಜ ಕಲ್ಯಾಣ ಇಲಾಖೆಯ ಆಶ್ರಯದಲ್ಲಿ ಇಂದು ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ನಲ್ಲಿ ನಡೆದ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯಲ್ಲಿ ನನ್ನ ಮಾತುಗಳು -
Dr. G Parameshwara
@DrParameshwara
ಇಂದು ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ನಲ್ಲಿ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಆಯೋಜಿಸಿದ್ದ ‘ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ’ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಶ್ರೀ ಡಿ.ಕೆ. ಶಿವಕುಮಾರ್ ಅವರೊಂದಿಗೆ ಪಾಲ್ಗೊಂಡು ಕಾರ್ಯಕ್ರಮವನ್ನು ಉದ್ಘಾಟಿಸಿದೆ.
ಈ ಸಂದರ್ಭದಲ್ಲಿ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಹಾಗೂ ಮಾಜಿ ಉಪಪ್ರಧಾನಿ ಬಾಬು ಜಗಜೀವನ್ ರಾಮ್ ಅವರ ಭಾವಚಿತ್ರಗಳಿಗೆ ಪುಷ್ಪಾರ್ಚನೆ ಸಲ್ಲಿಸಿ ಗೌರವ ನಮನ ಸಲ್ಲಿಸಿದೆ. ಬಳಿಕ ಯುವಜನರಲ್ಲಿ ಸಂಸದೀಯ ವ್ಯವಸ್ಥೆ, ಸಂವಿಧಾನದ ಮೌಲ್ಯಗಳು ಹಾಗೂ ಪ್ರಜಾಪ್ರಭುತ್ವದ ಆಶಯಗಳ ಕುರಿತು ಅರಿವು ಮೂಡಿಸುವ ‘ಯುವ ಸಂಸತ್’ ಸಭೆಗೆ ಚಾಲನೆ ನೀಡಿದೆ.
ಪ್ರಜಾಪ್ರಭುತ್ವ ಎನ್ನುವುದು ಕೇವಲ ಆಡಳಿತ ವ್ಯವಸ್ಥೆಯಲ್ಲ; ಸಮಾನತೆ, ಸ್ವಾತಂತ್ರ್ಯ, ಸಾಮಾಜಿಕ ನ್ಯಾಯ ಮತ್ತು ಪ್ರತಿಯೊಬ್ಬರ ಧ್ವನಿಗೂ ಗೌರವ ನೀಡುವ ಬದುಕಿನ ಮೌಲ್ಯವಾಗಿದೆ. ಈ ಮೌಲ್ಯಗಳನ್ನು ನಮ್ಮ ಯುವಪೀಳಿಗೆ ಅರ್ಥಮಾಡಿಕೊಂಡು, ಸಂವಿಧಾನದ ಆಶಯಗಳನ್ನು ಮುಂದಿನ ತಲೆಮಾರುಗಳಿಗೆ ಕೊಂಡೊಯ್ಯುವುದು ಅತ್ಯಂತ ಮಹತ್ವದ್ದಾಗಿದೆ.
ಕಾರ್ಯಕ್ರಮದಲ್ಲಿ ಸಮಾಜ ಕಲ್ಯಾಣ ಸಚಿವರಾದ ಕೆ.ಹೆಚ್. ಮುನಿಯಪ್ಪ, ಆಹಾರ ಮತ್ತು ನಾಗರಿಕ ಸರಬರಾಜು ಸಚಿವರಾದ ರಿಜ್ವಾನ್ ಅರ್ಷದ್, ಕನ್ನಡ ಮತ್ತು ಸಂಸ್ಕೃತಿ ಸಚಿವರಾದ ಶಿವರಾಜ್ ಎಸ್. ತಂಗಡಗಿ, ಮಾಜಿ ಸಚಿವರು ಹಾಗೂ ಶಾಸಕರಾದ ಡಾ. ಹೆಚ್.ಸಿ. ಮಹದೇವಪ್ಪ, ಶಾಸಕರಾದ ಅಲ್ಲಮಪ್ರಭು ಪಾಟೀಲ, ಅಶೋಕ್ ಮನುಗೋಳಿ, ವಿಧಾನ ಪರಿಷತ್ ಸದಸ್ಯರಾದ ಡಿ.ಟಿ. ಶ್ರೀನಿವಾಸ್, ಕರ್ನಾಟಕ ವಕೀಲರ ಸಂಘದ ಅಧ್ಯಕ್ಷರಾದ ವಿವೇಕ್ ಸುಬ್ಬರೆಡ್ಡಿ, ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಪಲ್ಲವಿ, ಗ್ಯಾರಂಟಿ ಯೋಜನೆಗಳ ಉಪಾಧ್ಯಕ್ಷರಾದ ಪಿ.ಟಿ. ಪರಮೇಶ್ವರ ನಾಯ್ಕ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
Today, I joined Chief Minister Shri D.K. Shivakumar at the International Day of Democracy programme organised by the Social Welfare Department at the Banquet Hall of Vidhana Soudha and inaugurated the programme.
On the occasion, I paid floral tributes to Dr. B.R. Ambedkar, the architect of our Constitution, and former Deputy Prime Minister Babu Jagjivan Ram. I also inaugurated the ‘Youth Parliament’, an initiative aimed at helping young people understand the parliamentary system, constitutional values and the ideals of democracy.
Democracy is more than a system of governance. It is a way of life founded on equality, liberty, social justice and respect for every voice. It is essential that our youth understand these values and carry the spirit of the Constitution forward to future generations.
Social Welfare Minister K.H. Muniyappa, Food and Civil Supplies Minister Rizwan Arshad, Kannada and Culture Minister Shivaraj S. Tangadagi, former Minister and MLA Dr. H.C. Mahadevappa, MLAs Allamaprabhu Patil and Ashok Managuli, MLC D.T. Srinivas, Karnataka State Bar Council President Vivek Subba Reddy, Nomadic Development Corporation Chairperson Pallavi, Guarantee Schemes Vice-Chairman P.T. Parameshwar Naik and others were present. -
Dr. G Parameshwara
@DrParameshwara
ಕರ್ನಾಟಕದಲ್ಲಿ ಬರ ಪರಿಸ್ಥಿತಿ ಉಂಟಾದ ಸಂದರ್ಭದಲ್ಲಿ ಪರಿಹಾರ ಕ್ರಮಗಳು ವಿಳಂಬವಾಗದಂತೆ ನೋಡಿಕೊಳ್ಳುವುದು ಅತ್ಯಂತ ಮುಖ್ಯ. 2024ರಲ್ಲಿ ಬರ ಪರಿಹಾರದ ವಿಚಾರವಾಗಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಬೇಕಾದ ಪರಿಸ್ಥಿತಿ ಉದ್ಭವಿಸಿತ್ತು. ಹಾಗಾಗಿ, ಬರ ನಿರ್ವಹಣೆ ಮತ್ತು ಪರಿಹಾರ ಬಿಡುಗಡೆ ಪ್ರಕ್ರಿಯೆಯ ಕುರಿತು ಮತ್ತಷ್ಟು ಪರಿಣಾಮಕಾರಿ ವ್ಯವಸ್ಥೆಯ ಅಗತ್ಯತೆಯ ಬಗ್ಗೆ ಚರ್ಚೆಯಾಗಬೇಕಿದೆ.
ಬರದಿಂದಾಗಿ ಕೃಷಿ ಚಟುವಟಿಕೆಗಳಿಗೆ ತೊಂದರೆಯಾಗುವ ಸಂದರ್ಭದಲ್ಲಿ ರೈತರಿಗೆ ಸಮಯೋಚಿತ ನೆರವು ದೊರೆಯುವುದು ಮುಖ್ಯವಾಗಿದೆ. ಪರಿಹಾರ ಕ್ರಮಗಳಲ್ಲಿ ವಿಳಂಬವಾದರೆ ಮರುಬಿತ್ತನೆ, ಕೃಷಿ ಚಟುವಟಿಕೆಗಳು ಹಾಗೂ ಗ್ರಾಮೀಣ ಕುಟುಂಬಗಳ ಜೀವನೋಪಾಯದ ಮೇಲೂ ಪರಿಣಾಮ ಬೀರಬಹುದು.
ಕರ್ನಾಟಕದ ಬರ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಪರಿಹಾರ ಬಿಡುಗಡೆ ಪ್ರಕ್ರಿಯೆ ತ್ವರಿತವಾಗಿ ನಡೆಯುವಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವ ಕುರಿತು ಗಮನಹರಿಸಬೇಕಿದೆ. ರೈತರ ಸಂಕಷ್ಟಕ್ಕೆ ಸ್ಪಂದಿಸುವಲ್ಲಿ ಸಮಯೋಚಿತ ನೆರವು ಪ್ರಮುಖವಾಗಿದೆ.
When drought strikes Karnataka, it is crucial that relief measures are not delayed. In 2024, the State had to approach the Supreme Court for drought relief, highlighting the need for a more effective system for drought management and timely release of assistance.
When agricultural activity is disrupted by drought, farmers need support at the right time. Delayed relief can affect re-sowing, farm operations and the livelihoods of rural families.
Considering Karnataka’s drought situation, the relief process must be made faster and more responsive. Timely assistance is critical to easing the distress of farmers. -
Dr. G Parameshwara
@DrParameshwara
ಬರದ ಸ್ವರೂಪ ಮತ್ತು ಅದರ ಪರಿಣಾಮಗಳು ಕಾಲಾಂತರದಲ್ಲಿ ಬದಲಾಗುತ್ತಿವೆ. ಮಳೆಯ ಪ್ರಮಾಣ ಮಾತ್ರವಲ್ಲದೆ ಮಳೆಯ ಹಂಚಿಕೆ, ದೀರ್ಘ ಒಣಹವೆ, ತಾಪಮಾನ ಏರಿಕೆ ಹಾಗೂ ಬೆಳೆ ನಷ್ಟದಂತಹ ಅಂಶಗಳು ಕೃಷಿಯ ಮೇಲೆ ಪರಿಣಾಮ ಬೀರುತ್ತಿವೆ.
ಹಳೆಯ ದತ್ತಾಂಶ ಮತ್ತು ಏಕರೂಪದ ಮಾನದಂಡಗಳ ಆಧಾರದ ಮೇಲೆ ಹೊಸ ಬಗೆಯ ಬರ ಪರಿಸ್ಥಿತಿಯನ್ನು ಅಳೆಯುವಾಗ ನೈಜ ನಷ್ಟಗಳು ಸಂಪೂರ್ಣವಾಗಿ ದಾಖಲಾಗದಿರುವ ಸಾಧ್ಯತೆಯಿದೆ. ಸ್ಥಳೀಯ ಪರಿಸ್ಥಿತಿ ಮತ್ತು ರೈತರ ನವೀಕೃತ ದತ್ತಾಂಶವನ್ನು ಮೌಲ್ಯಮಾಪನದಲ್ಲಿ ಬಳಸುವುದು ಅಗತ್ಯವಾಗಿದೆ.
ಮಳೆಯ ಹಂಚಿಕೆ, ಒಣಹವೆ, ಬೆಳೆ ನಷ್ಟ, ಸ್ಥಳೀಯ ಪರಿಸ್ಥಿತಿ ಹಾಗೂ ನೈಜ ರೈತರ ದತ್ತಾಂಶಗಳನ್ನು ಒಟ್ಟಾಗಿ ಪರಿಗಣಿಸುವ ಸಮಗ್ರ ಬರ ಮೌಲ್ಯಮಾಪನ ವ್ಯವಸ್ಥೆಯ ಅಗತ್ಯವಿದೆ.
The nature and impact of drought are changing over time. It is not just rainfall quantity, but also rainfall distribution, prolonged dry spells, rising temperatures and crop loss that affect agriculture.
Relying on outdated data and uniform criteria may fail to capture the true extent of today’s drought conditions. Local realities and updated farmer data must also be part of the assessment.
What we need is a comprehensive drought assessment system that considers rainfall distribution, dry spells, crop loss, local conditions and actual farmer data together. -
Dr. G Parameshwara
@DrParameshwara
ಬಿತ್ತನೆ ವಿಫಲವಾದ ನಂತರ ರೈತರಿಗೆ ತಕ್ಷಣದ ನೆರವು ಅತ್ಯಂತ ಮುಖ್ಯವಾಗುತ್ತದೆ. ಸಮಯ ಕಳೆದಂತೆ ಮರುಬಿತ್ತನೆ ಮತ್ತು ಮುಂದಿನ ಕೃಷಿ ಚಟುವಟಿಕೆಗಳಿಗೆ ಅಗತ್ಯವಿರುವ ಅವಕಾಶಗಳು ಕಡಿಮೆಯಾಗಬಹುದು.
ಆದ್ದರಿಂದ ಬಿತ್ತನೆ ವಿಫಲತೆ ಮತ್ತು ಆರಂಭಿಕ ಬೆಳೆ ಹಾನಿಯನ್ನು ಗುರುತಿಸಿದ ಕೂಡಲೇ ಅಗತ್ಯ ಕ್ರಮ ಕೈಗೊಳ್ಳುವ ವ್ಯವಸ್ಥೆ ಕುರಿತು ಪರಿಶೀಲನೆ ಅಗತ್ಯವಾಗಿದೆ. ಆರಂಭಿಕ ಹಂತದಲ್ಲೇ ಬರ ಪರಿಸ್ಥಿತಿಯನ್ನು ಗುರುತಿಸುವ ಅವಕಾಶ ರಾಜ್ಯಗಳಿಗೆ ದೊರೆತರೆ ಪರಿಹಾರ ಕ್ರಮಗಳನ್ನು ತ್ವರಿತವಾಗಿ ಆರಂಭಿಸಲು ಸಾಧ್ಯವಾಗುತ್ತದೆ.
ಮರುಬಿತ್ತನೆಗೆ ಸಾಧ್ಯವಾಗುವ ರೀತಿಯಲ್ಲಿ ಬೀಜ ಖರೀದಿಸಲು, ಕೃಷಿ ಚಟುವಟಿಕೆ ಮುಂದುವರಿಸಲು ಹಾಗೂ ರೈತರ ತಕ್ಷಣದ ಅಗತ್ಯಗಳಿಗೆ ಸ್ಪಂದಿಸುವ ಸೂಕ್ತ ಸಮಯದಲ್ಲಿ ನೆರವು ತಲುಪುವಂತೆ ಬರ ನಿರ್ವಹಣಾ ವ್ಯವಸ್ಥೆಯನ್ನು ರೂಪಿಸುವುದು ಮುಖ್ಯವಾಗಿದೆ.
Immediate support becomes crucial when sowing fails. As time passes, the opportunity for re-sowing and continuing agricultural activities may be lost.
There is therefore a need for a system that enables action as soon as sowing failure and early crop damage are identified. If States are allowed to recognise drought conditions at an early stage, relief measures can begin without delay.
Drought management must ensure timely assistance for re-sowing, purchase of seeds and continuation of farm activities, so that farmers receive support when they need it most. -
Dr. G Parameshwara
@DrParameshwara
ಕೇವಲ ಎರಡು ವಾರಗಳ ಒಣಹವೆಯ ಅವಧಿಯೂ ಬೆಳೆಯ ನಿರ್ಣಾಯಕ ಹಂತದಲ್ಲಿ ಸಂಭವಿಸಿದರೆ ರೈತರ ಇಡೀ ಬೆಳೆಯ ಮೇಲೆ ಗಂಭೀರ ಪರಿಣಾಮ ಬೀರಬಹುದು. ಆದ್ದರಿಂದ ಒಣಹವೆಯನ್ನು ಕೇವಲ ದಿನಗಳ ಸಂಖ್ಯೆಯಿಂದ ಅಳೆಯುವ ಬದಲು ಅದರ ಕೃಷಿ ಪರಿಣಾಮವನ್ನೂ ಪರಿಗಣಿಸುವ ಅಗತ್ಯವಿದೆ.
ಮಣ್ಣಿನ ವಿಧ, ಬೆಳೆಯ ಹಂತ, ತಾಪಮಾನ, ತೇವಾಂಶ ಮತ್ತು ಸ್ಥಳೀಯ ಹವಾಮಾನ ಪರಿಸ್ಥಿತಿಗಳು ಒಣಹವೆಯ ಪರಿಣಾಮವನ್ನು ಬದಲಾಯಿಸುತ್ತವೆ. ಒಂದೇ ಅವಧಿಯ ಒಣಹವೆ ಬೇರೆ ಬೇರೆ ಪ್ರದೇಶಗಳಲ್ಲಿ ಬೇರೆ ರೀತಿಯ ನಷ್ಟವನ್ನು ಉಂಟುಮಾಡಬಹುದು.
ಹೀಗಾಗಿ ಬರ ಮೌಲ್ಯಮಾಪನದಲ್ಲಿ ಒಣಹವೆ ಅವಧಿಯ ಮಾನದಂಡವನ್ನು ವೈಜ್ಞಾನಿಕ ಹಾಗೂ ಸ್ಥಳೀಯ ಅಂಶಗಳ ಆಧಾರದ ಮೇಲೆ ಮರುಪರಿಶೀಲಿಸುವ ಕುರಿತು ಗಮನಹರಿಸಬೇಕಾಗಿದೆ.
Even a two-week dry spell can severely damage an entire crop if it occurs at a critical stage. Dry spells should therefore be assessed not only by duration, but also by their actual impact on agriculture.
Soil type, crop stage, temperature, moisture and local weather conditions can all influence the severity of damage. The same dry spell may affect different regions in different ways.
Drought assessment norms for dry spells must therefore be reviewed using scientific and local factors, so that the real impact on farmers and crops is properly recognised. -
Dr. G Parameshwara
@DrParameshwara
ಉಪಗ್ರಹ ಚಿತ್ರಗಳಲ್ಲಿ ಕೃಷಿ ಪ್ರದೇಶಗಳು ಹಸಿರಾಗಿ ಕಾಣಿಸುವುದರಿಂದ ಮಾತ್ರ ಹೊಲದಲ್ಲಿ ಉತ್ತಮ ಫಸಲು ಬಂದಿದೆ ಎಂದು ನಿರ್ಧರಿಸಲು ಸಾಧ್ಯವಿಲ್ಲ. ಬಿತ್ತನೆ ಅವಧಿಯಲ್ಲಿ ಮಳೆಯ ಕೊರತೆಯಿಂದ ಉಂಟಾಗುವ ‘ಹಸಿರು ಬರ’ದಂತಹ ಪರಿಸ್ಥಿತಿಗಳನ್ನೂ ಮೌಲ್ಯಮಾಪನದಲ್ಲಿ ಗಮನಿಸಬೇಕಾಗಿದೆ.
ಬೆಳೆಯ ನೈಜ ಸ್ಥಿತಿಯನ್ನು ಅರ್ಥಮಾಡಿಕೊಳ್ಳಲು ಉಪಗ್ರಹ ದತ್ತಾಂಶದ ಜೊತೆಗೆ ಸ್ಥಳೀಯ ಪರಿಶೀಲನೆ, ಮಣ್ಣಿನ ಪರಿಸ್ಥಿತಿ, ಬೆಳೆಯ ಹಂತ ಮತ್ತು ಮಳೆಯ ಮಾಹಿತಿಯನ್ನೂ ಪರಿಗಣಿಸುವುದು ಮುಖ್ಯ. ತಂತ್ರಜ್ಞಾನ ಆಧಾರಿತ ಮೌಲ್ಯಮಾಪನವು ಸ್ಥಳೀಯ ವಾಸ್ತವಾಂಶಗಳೊಂದಿಗೆ ಸಮನ್ವಯಗೊಂಡಿರಬೇಕು.
ಬರ ನಿರ್ಧಾರದಲ್ಲಿ ವೈಜ್ಞಾನಿಕ ದತ್ತಾಂಶ ಮತ್ತು ಸ್ಥಳೀಯ ಕೃಷಿ ಪರಿಸ್ಥಿತಿಗಳಿಗೆ ಸಮಾನ ಪ್ರಾಮುಖ್ಯತೆ ದೊರೆತಾಗ ರೈತರ ನೈಜ ಬೆಳೆ ನಷ್ಟವನ್ನು ಹೆಚ್ಚು ಸಮಗ್ರವಾಗಿ ಗುರುತಿಸಲು ಸಾಧ್ಯವಾಗುತ್ತದೆ.
Green fields in satellite images do not necessarily mean a good crop on the ground. Conditions such as ‘green drought’, caused by rainfall deficiency during the sowing period, must also be considered in drought assessment.
To understand the actual condition of crops, satellite data should be supported by ground verification, soil conditions, crop stage and rainfall data. Technology-based assessment must reflect local realities.
Giving equal importance to scientific data and local agricultural conditions will help identify farmers’ actual crop losses more accurately and comprehensively. -
Dr. G Parameshwara
@DrParameshwara
For decades, Mahila Congress has carried the voice, strength and aspirations of women into the heart of public life.
From grassroots struggles to leadership in politics, its journey has been about expanding representation, defending rights and ensuring that women are not merely heard, but empowered to lead.
On Mahila Congress Foundation Day, we salute every worker and leader who continues to strengthen this movement with courage, commitment and service.
When women lead, democracy grows stronger. -
Dr. G Parameshwara
@DrParameshwara
ನಾಡಿನ ಸಮಸ್ತ ಅಭಿಯಂತರ ಮಿತ್ರರಿಗೆ ರಾಷ್ಟ್ರೀಯ ಅಭಿಯಂತರರ ದಿನದ ಶುಭಾಶಯಗಳು.
ವಿಜ್ಞಾನ - ತಂತ್ರಜ್ಞಾನ, ಜಲಾಶಯಗಳು, ವಿದ್ಯುತ್ ಉತ್ಪಾದನೆ, ಬ್ಯಾಂಕುಗಳ ಸ್ಥಾಪನೆ ಹೀಗೆ ಆಧುನಿಕ ಮೈಸೂರು ರಾಜ್ಯ ನಿರ್ಮಾಣದಲ್ಲಿ ಸರ್.ಎಂ.ವಿ ಅವರ ಅನನ್ಯ ಕೊಡುಗೆಯನ್ನು ಈ ದಿನ ಗೌರವದಿಂದ ಸ್ಮರಿಸುತ್ತೇನೆ. -
Dr. G Parameshwara
@DrParameshwara
Democracy is more than the right to vote. It is the right to speak, question, participate and be heard.
It grows stronger when institutions remain accountable, rights are protected, dissent is respected and every citizen has an equal stake in shaping the future.
On International Day of Democracy, let us reaffirm our commitment to a democracy that is inclusive, fearless and truly of the people. -
Dr. G Parameshwara
@DrParameshwara
ಬರವನ್ನು ಅಳೆಯುವಾಗ ಒಟ್ಟು ಮಳೆಯ ಪ್ರಮಾಣದ ಜೊತೆಗೆ ಮಳೆ ಯಾವ ಸಮಯದಲ್ಲಿ ಬಿದ್ದಿತು ಎಂಬುದನ್ನೂ ಪರಿಗಣಿಸುವ ಅಗತ್ಯವಿದೆ. ಬಿತ್ತನೆ ಮತ್ತು ಬೆಳೆ ಬೆಳವಣಿಗೆಯ ನಿರ್ಣಾಯಕ ಹಂತಗಳಲ್ಲಿ ಮಳೆಯ ಕೊರತೆಯಾದರೆ, ನಂತರ ಮಳೆ ಬಂದರೂ ಅದರ ನಷ್ಟವನ್ನು ಸಂಪೂರ್ಣವಾಗಿ ಸರಿಪಡಿಸಲು ಸಾಧ್ಯವಾಗದೇ ಇರಬಹುದು.
ಕೃಷಿಯಲ್ಲಿ ಮಳೆಯ ಹಂಚಿಕೆ ಮತ್ತು ಸಮಯಕ್ಕೆ ವಿಶೇಷ ಮಹತ್ವವಿದೆ. ನಿರ್ಣಾಯಕ ಕೃಷಿ ಹಂತಗಳಲ್ಲಿ ಉಂಟಾಗುವ ಮಳೆ ಕೊರತೆಯು ಬಿತ್ತನೆ, ಮೊಳಕೆ, ಬೆಳೆ ಬೆಳವಣಿಗೆ ಹಾಗೂ ಅಂತಿಮ ಇಳುವರಿಯ ಮೇಲೆ ಪರಿಣಾಮ ಬೀರಬಹುದು.
ಹೀಗಾಗಿ ಬರ ಮೌಲ್ಯಮಾಪನ ವ್ಯವಸ್ಥೆಯಲ್ಲಿ ಮಳೆಯ ಪ್ರಮಾಣದ ಜೊತೆಗೆ ಅದರ ಕಾಲಮಾನ ಮತ್ತು ಹಂಚಿಕೆಯನ್ನೂ ವೈಜ್ಞಾನಿಕವಾಗಿ ಪರಿಗಣಿಸುವ ಕುರಿತು ಪರಿಶೀಲನೆ ಅಗತ್ಯವಾಗಿದೆ.
When assessing drought, it is important to consider not only the total rainfall, but also when the rain occurred. If rainfall is deficient during critical stages of sowing and crop growth, later rains may not fully compensate for the damage.
In agriculture, the timing and distribution of rainfall are crucial. Rainfall deficits during key crop stages can affect sowing, germination, crop growth and ultimately the final yield.
Drought assessment must therefore scientifically account for not just the amount of rainfall, but also its timing and distribution. -
Dr. G Parameshwara
@DrParameshwara
ಬೆಳೆ ನಷ್ಟದ ಪ್ರಮಾಣವನ್ನು ಆಧರಿಸಿ ಪರಿಹಾರ ನೀಡುವ ಸಂದರ್ಭದಲ್ಲಿ ವಿವಿಧ ಮಾರ್ಗಸೂಚಿಗಳ ನಡುವಿನ ವ್ಯತ್ಯಾಸ ಸ್ಪಷ್ಟವಾಗಿರಬೇಕು. ರಾಜ್ಯ ವಿಪತ್ತು ಪರಿಹಾರ ನಿಧಿ ಮತ್ತು ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿಯ ಮಾನದಂಡಗಳು (SDRF/NDRF) ಮತ್ತು ಬರ ಕೈಪಿಡಿ–2020ರಲ್ಲಿರುವ ನಿಬಂಧನೆಗಳ ನಡುವೆ ಅಸಂಗತತೆ ಇದ್ದರೆ ಅದನ್ನು ಪರಿಶೀಲಿಸುವ ಅಗತ್ಯವಿದೆ.
33% ಬೆಳೆ ನಷ್ಟಕ್ಕೆ ಪರಿಹಾರ ನೀಡುವ ವ್ಯವಸ್ಥೆ ಮತ್ತು ತೀವ್ರ ಬರಕ್ಕೆ ಅನ್ವಯಿಸುವ ನಷ್ಟದ ಮಾನದಂಡಗಳ ನಡುವಿನ ವ್ಯತ್ಯಾಸವು ಪರಿಹಾರ ವಿತರಣೆಯಲ್ಲಿ ಗೊಂದಲ ಉಂಟುಮಾಡದಂತೆ, ರೈತರ ಹಿತಾಸಕ್ತಿಯನ್ನು ಎತ್ತಿಹಿಡಿಯುವ ರೀತಿಯಲ್ಲಿ ನಿಯಮಗಳನ್ನು ಏಕರೂಪಗೊಳಿಸಬೇಕಿದೆ.
ಬರ ಪರಿಹಾರದ ಮಾನದಂಡಗಳಲ್ಲಿ ಏಕರೂಪತೆ ಮತ್ತು ಸ್ಪಷ್ಟತೆ ಇರುವುದರಿಂದ ಅರ್ಹತೆಯನ್ನು ನಿರ್ಧರಿಸುವ ಪ್ರಕ್ರಿಯೆ ಸುಲಭವಾಗುತ್ತದೆ. ರಾಜ್ಯದ ವಾಸ್ತವ ಪರಿಸ್ಥಿತಿಗೆ ಅನುಗುಣವಾಗಿ ಮಾರ್ಗಸೂಚಿಗಳನ್ನು ಪರಿಶೀಲಿಸುವುದು ಅಗತ್ಯವಾಗಿದೆ.
When relief is linked to the extent of crop loss, there must be clarity and consistency across different guidelines. Any mismatch between SDRF/NDRF norms and the provisions of the Drought Manual–2020 needs to be reviewed.
The difference between relief eligibility at 33% crop loss and the loss threshold applied for severe drought should not create confusion in relief distribution. The norms must be harmonised in a way that protects farmers’ interests.
Greater uniformity and clarity in drought relief norms will make eligibility easier to determine and ensure a fairer relief process. The guidelines must be reviewed in line with the actual conditions faced by the State. -
Dr. G Parameshwara
@DrParameshwara
ರೈತರ ಸಂಖ್ಯೆ ಮತ್ತು ಅವರ ಕೃಷಿ ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳಲು ನವೀಕೃತ ದತ್ತಾಂಶ ಅತ್ಯಗತ್ಯ. ಹಲವು ವರ್ಷಗಳ ಹಿಂದಿನ ಕೃಷಿ ಗಣತಿಯ ಅಂಕಿಅಂಶಗಳನ್ನೇ ಅವಲಂಬಿಸುವ ಬದಲು, ಲಭ್ಯವಿರುವ ಇಂದಿನ ದತ್ತಾಂಶವನ್ನು ಬಳಸುವ ಕುರಿತು ಚಿಂತಿಸಬೇಕಿದೆ.
ಕರ್ನಾಟಕದ ರೈತ ನೋಂದಣಿ ಮತ್ತು ಏಕೀಕೃತ ಫಲಾನುಭವಿಗಳ ಮಾಹಿತಿ ವ್ಯವಸ್ಥೆ (FRUITS) ದತ್ತಾಂಶವು ರೈತರ ಕೃಷಿ ಚಟುವಟಿಕೆಗಳಿಗೆ ಸಂಬಂಧಿಸಿದ ಪ್ರಮುಖ ಮಾಹಿತಿಯನ್ನು ಒಳಗೊಂಡಿದೆ. ಸಣ್ಣ ಮತ್ತು ಅತಿ ಸಣ್ಣ ರೈತರ ನೈಜ ಸಂಖ್ಯೆಯನ್ನು ಗುರುತಿಸಲು ಇಂತಹ ನವೀಕೃತ ದತ್ತಾಂಶವನ್ನು ಪರಿಗಣಿಸುವುದು ಉಪಯುಕ್ತವಾಗಬಹುದು.
ಬರ ಪರಿಹಾರದ ವ್ಯಾಪ್ತಿಯನ್ನು ನಿರ್ಧರಿಸುವಾಗ ಅರ್ಹ ರೈತರ ನೈಜ ಪರಿಸ್ಥಿತಿ ಮತ್ತು ನವೀಕೃತ ದತ್ತಾಂಶಕ್ಕೆ ಸೂಕ್ತ ಪ್ರಾಮುಖ್ಯತೆ ದೊರೆಯಬೇಕು. ಪರಿಹಾರ ವ್ಯವಸ್ಥೆಯು ರೈತರ ವಾಸ್ತವ ಸ್ಥಿತಿಗೆ ಹೊಂದಿಕೊಳ್ಳುವಂತಿರಬೇಕು.
Up-to-date data is essential to understand the number of farmers and their actual agricultural conditions. Instead of relying only on figures from agricultural censuses conducted years ago, current and available data should also be considered.
Karnataka’s Farmer Registration and Unified Beneficiary Information System (FRUITS) contains key information on farmers and their agricultural activities. Such updated data can help identify the actual number of small and marginal farmers more accurately.
While determining the scope of drought relief, due importance must be given to the current realities of eligible farmers and updated data. The relief system should reflect the actual conditions faced by farmers. -
Dr. G Parameshwara
@DrParameshwara
ಬರವನ್ನು ಕೇವಲ ಒಟ್ಟು ಮಳೆಯ ಪ್ರಮಾಣದ ಆಧಾರದ ಮೇಲೆ ಅಳೆಯುವುದರಿಂದ ಕೃಷಿಯ ಮೇಲಿನ ನೈಜ ಪರಿಣಾಮವನ್ನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ. ಮಳೆಯ ಕೊರತೆ ಯಾವ ಅವಧಿಯಲ್ಲಿ ಉಂಟಾಯಿತು ಮತ್ತು ಅದರ ಪರಿಣಾಮ ಬೆಳೆಗಳ ಮೇಲೆ ಹೇಗಾಯಿತು ಎಂಬುದೂ ಮಹತ್ವದ್ದಾಗಿದೆ.
ಬೆಳೆ ನಷ್ಟ, ಮಳೆಯ ಹಂಚಿಕೆ, ಒಣಹವೆ ಅವಧಿ ಹಾಗೂ ಸ್ಥಳೀಯ ಹವಾಮಾನ ಪರಿಸ್ಥಿತಿಗಳನ್ನು ಬರ ಮೌಲ್ಯಮಾಪನದಲ್ಲಿ ಪರಿಗಣಿಸುವ ಅಗತ್ಯವಿದೆ. ಇಂತಹ ಅಂಶಗಳು ರೈತರ ಕೃಷಿ ಚಟುವಟಿಕೆಗಳ ಮೇಲೆ ನೇರ ಪರಿಣಾಮ ಬೀರುತ್ತವೆ.
ಆದ್ದರಿಂದ ಬರ ಪರಿಹಾರದ ನಿಯಮಗಳನ್ನು ಸರಳ, ಸ್ಪಷ್ಟ ಹಾಗೂ ವಾಸ್ತವ ಪರಿಸ್ಥಿತಿಗೆ ಹೊಂದಿಕೊಳ್ಳುವಂತೆ ರೂಪಿಸುವ ಕುರಿತು ಪರಿಶೀಲನೆ ಅತ್ಯಗತ್ಯವಾಗಿದೆ.. ಅರ್ಹ ರೈತರಿಗೆ ಪರಿಹಾರ ತಲುಪುವಂತೆ ಮೌಲ್ಯಮಾಪನ ವ್ಯವಸ್ಥೆ ಪರಿಣಾಮಕಾರಿಯಾಗಬೇಕು.
Drought cannot be assessed solely on the basis of total rainfall. It is equally important to understand when the rainfall deficit occurred and how it affected crops.
Crop loss, rainfall distribution, duration of dry spells and local climatic conditions must be considered in drought assessment, as these factors directly impact farming activities.
Drought relief norms therefore need to be simple, clear and aligned with ground realities. The assessment system must be effective enough to ensure that relief reaches all eligible farmers in time. -
Dr. G Parameshwara
@DrParameshwara
ಕರ್ನಾಟಕದಲ್ಲಿ ಬದಲಾಗುತ್ತಿರುವ ಬರ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಸರ್ಕಾರ ಬರ ಪರಿಹಾರದ ಮಾನದಂಡಗಳನ್ನು ಮರುಪರಿಶೀಲಿಸುವ ಅಗತ್ಯವಿದೆ. ಮಳೆಯ ಕೊರತೆ, ಬೆಳೆ ನಷ್ಟ, ಒಣಹವೆ ಹಾಗೂ ಸ್ಥಳೀಯ ಪರಿಸ್ಥಿತಿಗಳ ವಾಸ್ತವ ಪರಿಣಾಮಗಳನ್ನು ವೈಜ್ಞಾನಿಕವಾಗಿ ಅರ್ಥೈಸುವುದು ಮುಖ್ಯ.
ಪ್ರಸ್ತುತ ಮಾನದಂಡಗಳು ಬದಲಾಗುತ್ತಿರುವ ಹವಾಮಾನ ಪರಿಸ್ಥಿತಿಯಲ್ಲಿ ರೈತರ ನೈಜ ಸಂಕಷ್ಟವನ್ನು ಸಂಪೂರ್ಣವಾಗಿ ಪ್ರತಿಬಿಂಬಿಸುತ್ತಿವೆಯೇ ಎಂಬುದನ್ನು ಪರಿಶೀಲಿಸಬೇಕಿದೆ. ವಿಶೇಷವಾಗಿ ಕರ್ನಾಟಕದಂತಹ ಕೃಷಿ ಅವಲಂಬಿತ ರಾಜ್ಯಗಳಲ್ಲಿ ಬರದ ಪರಿಣಾಮವನ್ನು ಸಮಗ್ರವಾಗಿ ಅಳೆಯುವ ವ್ಯವಸ್ಥೆ ಅಗತ್ಯವಾಗಿದೆ.
ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿಯ ( NDRF) ಮಾರ್ಗಸೂಚಿಗಳ ಪರಿಷ್ಕರಣೆ ಕುರಿತು ರಾಜ್ಯದ ವಾಸ್ತವಾಂಶಗಳನ್ನು ಪರಿಗಣಿಸಿ ಸೂಕ್ತ ನಿರ್ಧಾರ ಕೈಗೊಳ್ಳುವುದು ಅಗತ್ಯ. ಬರ ಸಂಕಷ್ಟದಲ್ಲಿರುವ ರೈತರಿಗೆ ಪರಿಹಾರ ತಲುಪುವ ವ್ಯವಸ್ಥೆ ಪರಿಣಾಮಕಾರಿಯಾಗಿರಬೇಕು.
Considering the changing nature of drought in Karnataka, the Union Government needs to revisit the existing drought relief norms. It is important to scientifically assess the real impact of rainfall deficiency, crop loss, dry spells and local conditions.
The present norms must be reviewed to determine whether they fully reflect the actual distress faced by farmers under changing climatic conditions. For an agriculture-dependent State like Karnataka, a more comprehensive system is needed to assess the true impact of drought.
While revising the National Disaster Response Fund (NDRF) guidelines, the realities on the ground in Karnataka must be taken into account. The relief mechanism must be effective enough to ensure timely support reaches farmers facing drought distress. -
Dr. G Parameshwara
@DrParameshwara
ನಾಡಬಾಂಧವರಿಗೆ ಗೌರಿ ಗಣೇಶ ಹಬ್ಬದ ಶುಭಾಶಯಗಳು
ವಿಘ್ನನಿವಾರಕ ಗಣಪತಿಯು ಸರ್ವರ ಕಷ್ಟಗಳನ್ನು ದೂರಮಾಡಿ, ಸುಖ, ಶಾಂತಿ, ಸಮೃದ್ಧಿಯನ್ನು ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ. -
Dr. G Parameshwara
@DrParameshwara
Remembering Shri Oscar Fernandes, a veteran Congress leader whose public life rose from Karnataka to the national stage.
Rooted in Udupi, he went on to become a respected parliamentarian, Union Minister and an important organisational pillar of the Indian National Congress. Known for his humility, discipline and unwavering commitment to the party, he earned respect across the country.
His life remains a reminder that simplicity, service and steadfast commitment can leave a lasting mark on public life. -
Dr. G Parameshwara
@DrParameshwara
ನಾವು ಕೈಗೊಂಡಿರುವ ಕೆಲಸಗಳು ಜನರಿಗೆ ತಲುಪಿ, ಅವರ ಬದುಕಿನಲ್ಲಿ ಬದಲಾವಣೆ ಮೂಡುತ್ತಿವೆ ಎಂಬುದನ್ನು ಅವರದೇ ಮಾತುಗಳಲ್ಲಿ ಕೇಳುವಾಗ, ಈ ಸೇವೆಯ ಪಯಣ ಇನ್ನಷ್ಟು ಅರ್ಥಪೂರ್ಣವಾಗಿದೆ ಎಂಬ ಭಾವನೆ ಮೂಡುತ್ತದೆ. ಜನರ ಮೆಚ್ಚುಗೆಗಿಂತಲೂ, ಅವರ ವಿಶ್ವಾಸ ಉಳಿಸಿಕೊಳ್ಳುವುದು ನನಗೆ ಇನ್ನಷ್ಟು ದೊಡ್ಡ ಜವಾಬ್ದಾರಿಯಂತೆ ಅನಿಸುತ್ತದೆ.
ಉಪ ಮುಖ್ಯಮಂತ್ರಿ, ಕಂದಾಯ ಮತ್ತು ಕ್ರೀಡಾ ಸಚಿವನಾಗಿ ಜವಾಬ್ದಾರಿ ವಹಿಸಿಕೊಂಡು 100 ದಿನಗಳನ್ನು ಪೂರೈಸಿರುವ ಈ ಸಂದರ್ಭದಲ್ಲಿ, ಜನರ ಆಶಯಗಳಿಗೆ ಇನ್ನಷ್ಟು ಸಮರ್ಥವಾಗಿ ಸ್ಪಂದಿಸಿ, ಅಭಿವೃದ್ಧಿ ಕಾರ್ಯಗಳಿಗೆ ಹೆಚ್ಚಿನ ವೇಗ ನೀಡುವ ಸಂಕಲ್ಪ ನನ್ನದು. ನಿಮ್ಮ ಪ್ರೋತ್ಸಾಹ, ಸಲಹೆ ಮತ್ತು ವಿಶ್ವಾಸ ನನ್ನ ಪ್ರತಿಯೊಂದು ಹೆಜ್ಜೆಗೆ ಮತ್ತಷ್ಟು ಶಕ್ತಿ ತುಂಬಲಿದೆ.
ನಿಮ್ಮ ನಿರೀಕ್ಷೆಗಳಿಗೆ ತಕ್ಕಂತೆ ಇನ್ನಷ್ಟು ಕೆಲಸ ಮಾಡುವುದೇ ಈ ವಿಶ್ವಾಸಕ್ಕೆ ನಾನು ನೀಡುವ ಗೌರವ.
#100days I #ದೃಢಕರ್ನಾಟಕದಸಂಕಲ್ಪ | #ಶತಕದಪಥ_ಪ್ರಗತಿಯರಥThis media couldn't be displayed. See it on the original post. -
Dr. G Parameshwara
@DrParameshwara
ಖ್ಯಾತ ರಂಗ ನಿರ್ದೇಶಕರು, ಚಿಂತಕರು ಆದ ಶ್ರೀ ಚಿದಂಬರರಾವ್ ಜಂಬೆ ಅವರ ನಿಧನದ ಸುದ್ದಿ ತಿಳಿದು ಅತೀವ ದುಃಖವಾಯಿತು. ತಮ್ಮ ಪ್ರಯೋಗಶೀಲತೆ, ರಂಗಚಿಂತನೆಗಳ ಮೂಲಕ ಕನ್ನಡದ ರಂಗಭೂಮಿಯ ಅನನ್ಯ ಪರಂಪರೆಗೆ ಕಸುವು ತುಂಬಿದ ಅಗ್ರಗಣ್ಯರ ಸಾಲಿನಲ್ಲಿ ಜಂಬೆಯವರ ಹೆಸರು ಅಜರಾಮರ.
ಪ್ರಾಧ್ಯಾಪಕರಾಗಿ, ರಂಗ ಶಿಕ್ಷಕರಾಗಿ, ಮೈಸೂರು ರಂಗಾಯಣದ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದ ಶ್ರೀಯುತರು ನಾಡಿನಾದ್ಯಂತ ನೂರಾರು ಪ್ರತಿಭೆಗಳಿಗೆ ರಂಗ ದೀಕ್ಷೆ ಕೊಟ್ಟ ಮಹನೀಯರು. ಶ್ರೀಯುತರನ್ನು ಕಳೆದುಕೊಂಡು ನಾಡಿನ ಕಲಾಲೋಕ ಇಂದು ಬಡವಾಗಿದೆ.
ಚಿದಂಬರರಾವ್ ಜಂಬೆ ಅವರ ಆತ್ಮಕ್ಕೆ ಭಗವಂತನು ಚಿರಶಾಂತಿಯನ್ನು ಕರುಣಿಸಲಿ. ಅವರ ಶೋಕತಪ್ತ ಕುಟುಂಬದವರ ದುಃಖದಲ್ಲಿ ನಾನೂ ಭಾಗಿ. -
Dr. G Parameshwara
@DrParameshwara
ನಾವು ಕೈಗೊಂಡಿರುವ ಕೆಲಸಗಳು ಜನರಿಗೆ ತಲುಪಿ, ಅವರ ಬದುಕಿನಲ್ಲಿ ಬದಲಾವಣೆ ಮೂಡುತ್ತಿವೆ ಎಂಬುದನ್ನು ಅವರದೇ ಮಾತುಗಳಲ್ಲಿ ಕೇಳುವಾಗ, ಈ ಸೇವೆಯ ಪಯಣ ಇನ್ನಷ್ಟು ಅರ್ಥಪೂರ್ಣವಾಗಿದೆ ಎಂಬ ಭಾವನೆ ಮೂಡುತ್ತದೆ. ಜನರ ಮೆಚ್ಚುಗೆಗಿಂತಲೂ, ಅವರ ವಿಶ್ವಾಸ ಉಳಿಸಿಕೊಳ್ಳುವುದು ನನಗೆ ಇನ್ನಷ್ಟು ದೊಡ್ಡ ಜವಾಬ್ದಾರಿಯಂತೆ ಅನಿಸುತ್ತದೆ.
ಉಪ ಮುಖ್ಯಮಂತ್ರಿ, ಕಂದಾಯ ಮತ್ತು ಕ್ರೀಡಾ ಸಚಿವನಾಗಿ ಜವಾಬ್ದಾರಿ ವಹಿಸಿಕೊಂಡು 100 ದಿನಗಳನ್ನು ಪೂರೈಸಿರುವ ಈ ಸಂದರ್ಭದಲ್ಲಿ, ಜನರ ಆಶಯಗಳಿಗೆ ಇನ್ನಷ್ಟು ಸಮರ್ಥವಾಗಿ ಸ್ಪಂದಿಸಿ, ಅಭಿವೃದ್ಧಿ ಕಾರ್ಯಗಳಿಗೆ ಹೆಚ್ಚಿನ ವೇಗ ನೀಡುವ ಸಂಕಲ್ಪ ನನ್ನದು. ನಿಮ್ಮ ಪ್ರೋತ್ಸಾಹ, ಸಲಹೆ ಮತ್ತು ವಿಶ್ವಾಸ ನನ್ನ ಪ್ರತಿಯೊಂದು ಹೆಜ್ಜೆಗೆ ಮತ್ತಷ್ಟು ಶಕ್ತಿ ತುಂಬಲಿದೆ.
ನಿಮ್ಮ ನಿರೀಕ್ಷೆಗಳಿಗೆ ತಕ್ಕಂತೆ ಇನ್ನಷ್ಟು ಕೆಲಸ ಮಾಡುವುದೇ ಈ ವಿಶ್ವಾಸಕ್ಕೆ ನಾನು ನೀಡುವ ಗೌರವ.
#100days I #ದೃಢಕರ್ನಾಟಕದಸಂಕಲ್ಪ | #ಶತಕದಪಥ_ಪ್ರಗತಿಯರಥThis media couldn't be displayed. See it on the original post. -
Dr. G Parameshwara
@DrParameshwara
ನಾವು ಕೈಗೊಂಡಿರುವ ಕೆಲಸಗಳು ಜನರಿಗೆ ತಲುಪಿ, ಅವರ ಬದುಕಿನಲ್ಲಿ ಬದಲಾವಣೆ ಮೂಡುತ್ತಿವೆ ಎಂಬುದನ್ನು ಅವರದೇ ಮಾತುಗಳಲ್ಲಿ ಕೇಳುವಾಗ, ಈ ಸೇವೆಯ ಪಯಣ ಇನ್ನಷ್ಟು ಅರ್ಥಪೂರ್ಣವಾಗಿದೆ ಎಂಬ ಭಾವನೆ ಮೂಡುತ್ತದೆ. ಜನರ ಮೆಚ್ಚುಗೆಗಿಂತಲೂ, ಅವರ ವಿಶ್ವಾಸ ಉಳಿಸಿಕೊಳ್ಳುವುದು ನನಗೆ ಇನ್ನಷ್ಟು ದೊಡ್ಡ ಜವಾಬ್ದಾರಿಯಂತೆ ಅನಿಸುತ್ತದೆ.
ಉಪ ಮುಖ್ಯಮಂತ್ರಿ, ಕಂದಾಯ ಮತ್ತು ಕ್ರೀಡಾ ಸಚಿವನಾಗಿ ಜವಾಬ್ದಾರಿ ವಹಿಸಿಕೊಂಡು 100 ದಿನಗಳನ್ನು ಪೂರೈಸಿರುವ ಈ ಸಂದರ್ಭದಲ್ಲಿ, ಜನರ ಆಶಯಗಳಿಗೆ ಇನ್ನಷ್ಟು ಸಮರ್ಥವಾಗಿ ಸ್ಪಂದಿಸಿ, ಅಭಿವೃದ್ಧಿ ಕಾರ್ಯಗಳಿಗೆ ಹೆಚ್ಚಿನ ವೇಗ ನೀಡುವ ಸಂಕಲ್ಪ ನನ್ನದು. ನಿಮ್ಮ ಪ್ರೋತ್ಸಾಹ, ಸಲಹೆ ಮತ್ತು ವಿಶ್ವಾಸ ನನ್ನ ಪ್ರತಿಯೊಂದು ಹೆಜ್ಜೆಗೆ ಮತ್ತಷ್ಟು ಶಕ್ತಿ ತುಂಬಲಿದೆ.
ನಿಮ್ಮ ನಿರೀಕ್ಷೆಗಳಿಗೆ ತಕ್ಕಂತೆ ಇನ್ನಷ್ಟು ಕೆಲಸ ಮಾಡುವುದೇ ಈ ವಿಶ್ವಾಸಕ್ಕೆ ನಾನು ನೀಡುವ ಗೌರವ.
#100days I #ದೃಢಕರ್ನಾಟಕದಸಂಕಲ್ಪ | #ಶತಕದಪಥ_ಪ್ರಗತಿಯರಥThis media couldn't be displayed. See it on the original post. -
Dr. G Parameshwara
@DrParameshwara
ರಾಜ್ಯದಲ್ಲಿ ಅರ್ಹ ಪಿಂಚಣಿ ಫಲಾನುಭವಿಗಳಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಪರಿಷ್ಕರಣೆ ನಡೆಸಲಾಗಿತ್ತು. ತೆರಿಗೆ ಪಾವತಿದಾರರು, ನಿಗದಿತ ವಯಸ್ಸಾಗದವರು, ಸರ್ಕಾರಿ ನೌಕರರು ಪಿಂಚಣಿ ಪಡೆಯುತ್ತಿರುವುದು ಗಮನಕ್ಕೆ ಬಂದಿದೆ. ಈ ಹಿನ್ನೆಲೆ ಸುಮಾರು 23 ಲಕ್ಷ ಫಲಾನುಭವಿಗಳ ಪಿಂಚಣಿ ಸ್ಥಗಿತಗೊಂಡಿದೆ.
ಪ್ರಸ್ತುತ ಪಿಂಚಣಿ ಸ್ಥಗಿತಗೊಂಡವರಿಗೆ ಸೂಕ್ತ ದಾಖಲೆಗಳನ್ನು ಒದಗಿಸುವ ಅವಕಾಶವನ್ನು ನೀಡಲಾಗಿದ್ದು, ಪರಿಶೀಲಿಸಿ ಅರ್ಹರಿಗೆ ಪಿಂಚಣಿ ಮುಂದುವರಿಸಲಾಗುವುದು. ಪಿಂಚಣಿದಾರರ ಹಿತದೃಷ್ಟಿಯಿಂದ ನಮ್ಮ ಸರ್ಕಾರ ಈಗಾಗಲೇ ಪಿಂಚಣಿ ಪಡೆಯಲು ಇರುವ ಗರಿಷ್ಠ ಆದಾಯ ಮಿತಿಯನ್ನು ₹32 ಸಾವಿರದಿಂದ ₹1.20 ಲಕ್ಷಕ್ಕೆ ಹೆಚ್ಚಳ ಮಾಡಿದೆ. ಪಿಂಚಣಿ ಅರ್ಹರಿಗಷ್ಟೇ ತಲುಪಬೇಕು, ದುರುಪಯೋಗವಾಗಬಾರದು ಎಂಬುದು ನಮ್ಮ ಉದ್ದೇಶ.
A review was undertaken to ensure justice for eligible pension beneficiaries across the State. It came to notice that some taxpayers, persons below the prescribed age and government employees were also receiving pensions. In this process, pensions of around 23 lakh beneficiaries were suspended.
Those whose pensions have been stopped are now being given an opportunity to submit valid documents. After verification, pensions will be continued for all eligible beneficiaries. In the interest of pensioners, our Government has already increased the maximum income eligibility limit from ₹32,000 to ₹1.20 lakh. Our objective is clear: pensions must reach those who are genuinely eligible and must not be misused. -
Dr. G Parameshwara
@DrParameshwara
ನಾವು ಕೈಗೊಂಡಿರುವ ಕೆಲಸಗಳು ಜನರಿಗೆ ತಲುಪಿ, ಅವರ ಬದುಕಿನಲ್ಲಿ ಬದಲಾವಣೆ ಮೂಡುತ್ತಿವೆ ಎಂಬುದನ್ನು ಅವರದೇ ಮಾತುಗಳಲ್ಲಿ ಕೇಳುವಾಗ, ಈ ಸೇವೆಯ ಪಯಣ ಇನ್ನಷ್ಟು ಅರ್ಥಪೂರ್ಣವಾಗಿದೆ ಎಂಬ ಭಾವನೆ ಮೂಡುತ್ತದೆ. ಜನರ ಮೆಚ್ಚುಗೆಗಿಂತಲೂ, ಅವರ ವಿಶ್ವಾಸ ಉಳಿಸಿಕೊಳ್ಳುವುದು ನನಗೆ ಇನ್ನಷ್ಟು ದೊಡ್ಡ ಜವಾಬ್ದಾರಿಯಂತೆ ಅನಿಸುತ್ತದೆ.
ಉಪ ಮುಖ್ಯಮಂತ್ರಿ, ಕಂದಾಯ ಮತ್ತು ಕ್ರೀಡಾ ಸಚಿವನಾಗಿ ಜವಾಬ್ದಾರಿ ವಹಿಸಿಕೊಂಡು 100 ದಿನಗಳನ್ನು ಪೂರೈಸಿರುವ ಈ ಸಂದರ್ಭದಲ್ಲಿ, ಜನರ ಆಶಯಗಳಿಗೆ ಇನ್ನಷ್ಟು ಸಮರ್ಥವಾಗಿ ಸ್ಪಂದಿಸಿ, ಅಭಿವೃದ್ಧಿ ಕಾರ್ಯಗಳಿಗೆ ಹೆಚ್ಚಿನ ವೇಗ ನೀಡುವ ಸಂಕಲ್ಪ ನನ್ನದು. ನಿಮ್ಮ ಪ್ರೋತ್ಸಾಹ, ಸಲಹೆ ಮತ್ತು ವಿಶ್ವಾಸ ನನ್ನ ಪ್ರತಿಯೊಂದು ಹೆಜ್ಜೆಗೆ ಮತ್ತಷ್ಟು ಶಕ್ತಿ ತುಂಬಲಿದೆ.
ನಿಮ್ಮ ನಿರೀಕ್ಷೆಗಳಿಗೆ ತಕ್ಕಂತೆ ಇನ್ನಷ್ಟು ಕೆಲಸ ಮಾಡುವುದೇ ಈ ವಿಶ್ವಾಸಕ್ಕೆ ನಾನು ನೀಡುವ ಗೌರವ.
#100days I #ದೃಢಕರ್ನಾಟಕದಸಂಕಲ್ಪ | #ಶತಕದಪಥ_ಪ್ರಗತಿಯರಥThis media couldn't be displayed. See it on the original post. -
Dr. G Parameshwara
@DrParameshwara
ವಿದೇಶಗಳ ಪ್ರಮುಖ ನಗರಗಳ ಸೆಂಟರ್ಗಳಲ್ಲಿ ಅಳವಡಿಸಲಾಗಿರುವ ಆಧುನಿಕ ಎಲ್ಇಡಿ ಸ್ಕ್ರೀನ್ಗಳು ಆಯಾ ನಗರಗಳ ಆಕರ್ಷಣೀಯ ತಾಣಗಳಾಗಿವೆ. ಉದಾಹರಣೆಗೆ ನ್ಯೂಯಾರ್ಕ್ ನಗರದಲ್ಲಿ ನ್ಯೂಯಾರ್ಕ್ ಸ್ಕ್ವೇರ್.
ಇದೇ ಮಾದರಿಯಲ್ಲಿ ನಮ್ಮ ತುಮಕೂರು ನಗರಕ್ಕೂ ಆಧುನಿಕ ಸ್ಪರ್ಷ ನೀಡಬೇಕು. ನಗರ ಸೌಂದರ್ಯವನ್ನು ವೃದ್ಧಿಸಬೇಕು, ಜೊತೆಗೆ ನಮ್ಮ ಜನಸಾಮಾನ್ಯರಿಗೆ ಸರ್ಕಾರದ ಕಾರ್ಯಕ್ರಮಗಳು, ಪ್ರವಾಸಿ ಸ್ಥಳಗಳು, ಐತಿಹಾಸಿಕ ಕೇಂದ್ರಗಳು, ದೇವಸ್ಥಾನಗಳು ಮತ್ತಿತರ ದೂರದ ಪ್ರದೇಶಗಳ ಪರಿಚಯ ಸಿಗುವಂತಾಗಬೇಕು ಎಂಬ ಕಾರಣಕ್ಕೆ ಶ್ರೀ ಶಿವಕುಮಾರಸ್ವಾಮಿ ವೃತ್ತದಲ್ಲಿ ಬೃಹತ್ ಆಧುನಿಕ ಡಿಸ್ಪ್ಲೇ ಬೋರ್ಡ್ಅನ್ನು ಅಳವಡಿಸುತ್ತಿದ್ದೇವೆ.
7 ಕೋಟಿ ರೂ. ವೆಚ್ಚದಲ್ಲಿ ಅಳವಡಿಸಲಾಗುತ್ತಿರುವ ಡಿಸ್ಪ್ಲೇಯಿಂದ ತುಮಕೂರು ದಸರಾಗೆ ಹೆಚ್ಚಿನ ಮೆರುಗು ಸಿಗಲಿದೆ. ಇದು ಕೇವಲ ದಸರಾ ಪ್ರಯುಕ್ತ ಅಳವಡಿಸುತ್ತಿರುವುದಲ್ಲ, ಶಾಶ್ವತವಾಗಿ ಇರಲಿದೆ. ತುಮಕೂರು ನಗರದ ಸೌಂದರ್ಯವನ್ನು ಇಮ್ಮಡಿಗೊಳಿಸಲಿದೆ.
Modern LED screens installed at prominent city centres across the world have become major public attractions. Inspired by such urban landmarks, we are bringing a similar modern touch to Tumakuru.
A large state-of-the-art display board is being installed at Sri Shivakumara Swamiji Circle to enhance the city’s visual appeal and provide the public with information on Government programmes, tourist destinations, historical landmarks, temples and other places of interest.
The display system, being installed at a cost of ₹7 crore, will add greater vibrancy to Tumakuru Dasara. It is not a temporary Dasara installation, but a permanent addition that will further enhance the beauty of Tumakuru city. -
Dr. G Parameshwara
@DrParameshwara
ತುಮಕೂರು ದಸರಾಗೆ ಹೊಸ ಮೆರುಗು ನೀಡುವ ಜೊತೆಗೆ, ನಗರದ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸುವ ನಿಟ್ಟಿನಲ್ಲಿ ಅಮಾನಿಕೆರೆಯಲ್ಲಿ ₹4 ಕೋಟಿ ವೆಚ್ಚದಲ್ಲಿ ತೇಲುವ ಸಂಗೀತ ಕಾರಂಜಿಯನ್ನು ನಿರ್ಮಿಸಲಾಗುತ್ತಿದೆ.
ಸಂಗೀತ ಮತ್ತು ಬೆಳಕಿನ ಸಂಯೋಜನೆಯೊಂದಿಗೆ ಮನಮೋಹಕ ಅನುಭವ ನೀಡಲಿರುವ ಈ ಕಾರಂಜಿ ತುಮಕೂರಿನ ಹೊಸ ಜನಾಕರ್ಷಣೆಯ ಕೇಂದ್ರವಾಗಲಿದೆ. ನೂರು ಮೀಟರ್ಗೂ ಹೆಚ್ಚು ಎತ್ತರಕ್ಕೆ ಚಿಮ್ಮುವ ಹಾಗೂ ಸುಮಾರು 300 ಅಡಿ ವಿಸ್ತೀರ್ಣದಲ್ಲಿ ಹರಡಿಕೊಳ್ಳುವ ಈ ಕಾರಂಜಿ ನಗರದ ಜನರಿಗೆ ಕಣ್ಣಿಗೆ ಹಬ್ಬದ ರಸದೌತಣ ನೀಡಲಿದೆ.
ಪ್ರತಿ ಶನಿವಾರ ಮತ್ತು ಭಾನುವಾರ ಕಾರ್ಯಾಚರಿಸುವಂತೆ ಯೋಜಿಸಲಾಗಿದ್ದು, ಜನರ ಅಗತ್ಯತೆ ಆಧರಿಸಿ ಮುಂದಿನ ದಿನಗಳಲ್ಲಿ ಪ್ರತಿದಿನವೂ ಕಾರ್ಯಾಚರಣೆ ನಡೆಸುವ ಬಗ್ಗೆ ಪರಿಶೀಲಿಸಲಾಗುವುದು.
ಇದು ಕೇವಲ ದಸರಾ ಹಬ್ಬದ ಸಂಭ್ರಮಕ್ಕೆ ಸೀಮಿತವಾಗದೆ, ತುಮಕೂರಿನ ಶಾಶ್ವತ ಸೌಂದರ್ಯ, ನಗರಾಭಿವೃದ್ಧಿ ಮತ್ತು ಜನರ ಮನರಂಜನೆಗೆ ಹೊಸ ಆಯಾಮ ನೀಡುವ ಮಹತ್ವದ ಯೋಜನೆಯಾಗಿದೆ.
To add a new attraction to Tumakuru Dasara and further enhance the beauty of the city, a floating musical fountain is being developed at Amanikere at a cost of ₹4 crore.
Blending music and lights, the fountain will offer a captivating visual experience and emerge as a new public attraction in Tumakuru. Rising to a height of over 100 metres and spreading across nearly 300 feet, it will be a spectacular sight for residents and visitors.
Planned to operate every Saturday and Sunday, with daily operation to be considered in the future based on public demand.
This project goes beyond the Dasara celebrations. It will add a new dimension to Tumakuru’s lasting beauty, urban development and public recreation. -
Dr. G Parameshwara
@DrParameshwara
ಭಕ್ತಿ, ಸಂಭ್ರಮ ಮತ್ತು ಸಂಪ್ರದಾಯದೊಂದಿಗೆ ಆಚರಿಸುವ ಗಣೇಶೋತ್ಸವದಲ್ಲಿ ಪ್ರಕೃತಿಯ ಕಾಳಜಿಯೂ ನಮ್ಮ ಆದ್ಯತೆಯಾಗಲಿ.
ಪಿಒಪಿ ಮೂರ್ತಿಗಳ ಬದಲು ಪರಿಸರ ಸ್ನೇಹಿ ಮಣ್ಣಿನ ಗಣೇಶನನ್ನು ಪ್ರತಿಷ್ಠಾಪಿಸಿ, ಪ್ರಕೃತಿಗೆ ಹಾನಿಯಾಗದ ರೀತಿಯಲ್ಲಿ ಹಬ್ಬವನ್ನು ಆಚರಿಸೋಣ.
ನಮ್ಮ ಸಂಭ್ರಮ ಪ್ರಕೃತಿಗೆ ಪೂರಕವಾಗಲಿ, ಮುಂದಿನ ಪೀಳಿಗೆಗೆ ಉತ್ತಮ ಮಾದರಿಯಾಗಲಿ.
ಪರಿಸರ ಸ್ನೇಹಿ ಗಣೇಶೋತ್ಸವ ನಮ್ಮೆಲ್ಲರ ಸಂಕಲ್ಪವಾಗಲಿ.
As we celebrate Ganesh Festival with devotion, joy and tradition, let caring for nature be our priority too.
Choose eco-friendly clay Ganesh idols over PoP idols and celebrate in a way that does not harm the environment.
Let our festivities be in harmony with nature and set a positive example for future generations.
Let an eco-friendly Ganesh Festival be our collective resolve. -
Dr. G Parameshwara
@DrParameshwara
ತುಮಕೂರಿನ ಅಮಾನಿಕೆರೆಯಲ್ಲಿ ನವೀನ ಮಾದರಿಯ ತೇಲುವ ʼಸಂಗೀತ ಕಾರಂಜಿʼ ಅಳವಡಿಸುವ ಕಾಮಗಾರಿ ಹಾಗೂ ಶ್ರೀ ಶಿವಕುಮಾರ ಸ್ವಾಮಿ ವೃತ್ತದಲ್ಲಿ ʼತುಮಕೂರು ಸ್ಕ್ವೇರ್ʼ ನಿರ್ಮಾಣ ಕಾಮಗಾರಿಗೆ ಶುಕ್ರವಾರ ಚಾಲನೆ ನೀಡಿದೆ.
ಈ ಕುರಿತಾದ ಪತ್ರಿಕಾ ವರದಿಗಳು ಹೀಗಿವೆ.. -
Dr. G Parameshwara
@DrParameshwara
ನಿನ್ನೆ ಮಾಧ್ಯಮ ಪ್ರತಿನಿಧಿಗಳು ಕೇಳಿದ ವಿವಿಧ ಪ್ರಶ್ನೆಗಳಿಗೆ ನಾನು ನೀಡಿದ ಪ್ರತಿಕ್ರಿಯೆಗಳು ಇಂದಿನ ಪತ್ರಿಕೆಗಳಲ್ಲಿ..
-
Dr. G Parameshwara
@DrParameshwara
ಬರದ ಸಂಕಷ್ಟದಲ್ಲಿರುವ ಜನರಿಗೆ ತಕ್ಷಣದ ನೆರವು ತಲುಪಿಸುವುದು ಸರ್ಕಾರದ ಜವಾಬ್ದಾರಿ. ಸಾಕಷ್ಟು ಅನುದಾನವಿದ್ದರೂ ನೆರವು ತಲುಪದ ಪರಿಸ್ಥಿತಿ ಯಾವುದೇ ಕಾರಣಕ್ಕೂ ಇರಬಾರದು.
ಜಿಲ್ಲಾಧಿಕಾರಿಗಳ ಪಿಡಿ ಖಾತೆಯಲ್ಲಿರುವ ₹329 ಕೋಟಿ ಅನುದಾನವನ್ನು ಅಗತ್ಯವಿರುವ ಕಡೆ ಬಳಸಿಕೊಳ್ಳುವಂತೆ ಸ್ಪಷ್ಟ ಸೂಚನೆ ನೀಡಲಾಗಿದೆ. ಗ್ರಾಮ, ತಾಲ್ಲೂಕು ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಪರಸ್ಪರ ಸಮನ್ವಯದಿಂದ ಕಾರ್ಯನಿರ್ವಹಿಸಿ, ಪರಿಹಾರ ಕಾರ್ಯಗಳಿಗೆ ವೇಗ ನೀಡಬೇಕು.
ಜನರ ಸಂಕಷ್ಟದ ಸಂದರ್ಭದಲ್ಲಿ ಕರ್ತವ್ಯ ಲೋಪಕ್ಕೆ ಕ್ಷಮೆಯಿಲ್ಲ. ಜವಾಬ್ದಾರಿಯಿಂದ ಕಾರ್ಯನಿರ್ವಹಿಸದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಜನರ ನೆರವಿಗೆ ಸರ್ಕಾರದ ಸಂಪನ್ಮೂಲಗಳು ಸಂಪೂರ್ಣವಾಗಿ ಬಳಕೆಯಾಗಬೇಕು. ಇದೇ ನಮ್ಮ ಸ್ಪಷ್ಟ ನಿಲುವು.
Delivering immediate relief to people affected by drought is the Government’s responsibility. Even when adequate funds are available, there should be no delay in ensuring that assistance reaches those in need.
Clear instructions have been issued to utilise the ₹329 crore available in the PD accounts of Deputy Commissioners wherever required. Officials at the village, taluk and district levels must work in coordination and speed up relief measures.
There is no room for negligence when people are in distress. Strict action will be taken against officials who fail to discharge their responsibilities. Government resources must be fully utilised to support people in need. That is our clear stand. -
Dr. G Parameshwara
@DrParameshwara
ರೈತರಿಗೆ ಸಾಲದ ಹೆಸರಿನಲ್ಲಿ ಒತ್ತಡ, ಕಿರುಕುಳ ನೀಡುವುದನ್ನು ಸರ್ಕಾರ ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ. ರೈತರ ನೆಮ್ಮದಿ ಮತ್ತು ಗೌರವವನ್ನು ಕಾಪಾಡುವುದು ನಮ್ಮ ಜವಾಬ್ದಾರಿ.
ಮೈಕ್ರೋ ಫೈನಾನ್ಸ್ ಸಂಸ್ಥೆಗಳ ಹಾವಳಿಗೆ ಕಡಿವಾಣ ಹಾಕಲು ಕಾನೂನು ರೂಪಿಸಿ ಕಠಿಣ ಕ್ರಮಕ್ಕೆ ಅವಕಾಶ ಕಲ್ಪಿಸಲಾಗಿದೆ. ರೈತರು ಹಾಗೂ ದುರ್ಬಲ ವರ್ಗದ ಜನರಿಗೆ ಅನಗತ್ಯ ಕಿರುಕುಳ ನೀಡದಂತೆ ಸ್ಪಷ್ಟ ಸೂಚನೆ ನೀಡಲಾಗಿದೆ.
ರೈತರ ಬೆನ್ನಿಗೆ ಸರ್ಕಾರವಿದೆ. ಕಾನೂನು ಮೀರಿ ರೈತರಿಗೆ ಒತ್ತಡ ಅಥವಾ ಕಿರುಕುಳ ನೀಡಿದರೆ, ಅಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ರೈತರ ಹಿತದ ವಿಚಾರದಲ್ಲಿ ಯಾವುದೇ ರಾಜಿ ಇಲ್ಲ.
Our Government will not tolerate any pressure or harassment of farmers in the name of loan recovery. Protecting their dignity and peace of mind is our responsibility.
A law has been put in place to curb harassment by microfinance institutions and enable strict action against violations. Clear instructions have also been issued to ensure that farmers and vulnerable sections are not subjected to undue pressure or harassment.
The Government stands firmly with farmers. Anyone who violates the law and harasses or pressures farmers will face strict action. There will be no compromise when it comes to protecting farmers’ interests. -
Dr. G Parameshwara
@DrParameshwara
ಬರದ ಸಂಕಷ್ಟವಿದ್ದರೂ ಜನರ ಆರೋಗ್ಯದ ವಿಚಾರದಲ್ಲಿ ಯಾವುದೇ ರಾಜಿ ಇಲ್ಲ. ಪ್ರತಿಯೊಬ್ಬರಿಗೂ ಸಮಯಕ್ಕೆ ಸರಿಯಾಗಿ ಅಗತ್ಯ ಆರೋಗ್ಯ ಸೇವೆ ದೊರೆಯಬೇಕು ಎಂಬುದು ನಮ್ಮ ಸರ್ಕಾರದ ಆದ್ಯತೆ.
ರಾಜ್ಯದ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಅಗತ್ಯ ಔಷಧಿಗಳು ಲಭ್ಯವಿರುವಂತೆ ಕ್ರಮ ಕೈಗೊಳ್ಳಲಾಗಿದೆ. ಬರದಿಂದ ಉಂಟಾಗಬಹುದಾದ ಆರೋಗ್ಯ ಸಮಸ್ಯೆಗಳ ಮೇಲೂ ನಿರಂತರ ನಿಗಾ ವಹಿಸಲಾಗುತ್ತಿದೆ.
ಸಂಕಷ್ಟದ ಸಮಯದಲ್ಲಿ ಜನರ ಆರೋಗ್ಯವೇ ಮೊದಲ ಆದ್ಯತೆ. ಆರೋಗ್ಯ ಸೇವೆಯಲ್ಲಿ ಯಾವುದೇ ಕೊರತೆಯಾಗದಂತೆ ಸರ್ಕಾರ ಸಂಪೂರ್ಣ ಎಚ್ಚರಿಕೆಯಿಂದ ಕಾರ್ಯನಿರ್ವಹಿಸುತ್ತಿದೆ.
Even amid drought conditions, there can be no compromise on public health. Ensuring that every citizen receives timely and necessary healthcare is a priority for our Government.
Steps have been taken to ensure the availability of essential medicines at all Primary Health Centres across the State. Health issues that may arise due to drought are also being closely monitored.
In times of crisis, people’s health comes first. Our Government is working with complete preparedness to ensure there is no shortage in healthcare services. -
Dr. G Parameshwara
@DrParameshwara
ಮಳೆ ಕಡಿಮೆಯಾದರೂ ರೈತನ ಬದುಕಿನ ಭರವಸೆ ಕಡಿಮೆಯಾಗಬಾರದು. ಹವಾಮಾನ ಪರಿಸ್ಥಿತಿಗೆ ಅನುಗುಣವಾಗಿ ಕಡಿಮೆ ಮಳೆಯಲ್ಲಿ ಬೆಳೆಯಬಹುದಾದ ಬೆಳೆಗಳ ಕೃಷಿಗೆ ರೈತರಿಗೆ ನಿರಂತರ ಪ್ರೋತ್ಸಾಹ ನೀಡಲಾಗುತ್ತಿದೆ.
ರೈತರಿಗೆ ಸಮಯಕ್ಕೆ ಸರಿಯಾಗಿ ಬಿತ್ತನೆ ಬೀಜ ಮತ್ತು ಗೊಬ್ಬರ ದೊರೆಯುವಂತೆ ಸಮರ್ಪಕ ದಾಸ್ತಾನು ಹಾಗೂ ಪೂರೈಕೆಗೆ ಕ್ರಮ ಕೈಗೊಳ್ಳಲಾಗಿದೆ. ಯಾವುದೇ ಸಂದರ್ಭದಲ್ಲಿ ರೈತರಿಗೆ ಕೊರತೆಯಾಗದಂತೆ ಸರ್ಕಾರ ಮುನ್ನೆಚ್ಚರಿಕೆ ವಹಿಸಿದೆ.
ಕೃಷಿಯ ಪ್ರತಿಯೊಂದು ಹಂತದಲ್ಲೂ ರೈತರ ಜೊತೆ ನಿಂತು ಅಗತ್ಯ ನೆರವು, ಸೂಕ್ತ ಮಾರ್ಗದರ್ಶನ ಮತ್ತು ಬೆಂಬಲ ನೀಡುವುದು ನಮ್ಮ ಬದ್ಧತೆ. ಪರಿಸ್ಥಿತಿ ಏನೇ ಇರಲಿ, ರೈತನ ಕೈ ಹಿಡಿಯುವ ಕೆಲಸ ನಿರಂತರವಾಗಿ ಮುಂದುವರಿಯಲಿದೆ.
Even when rainfall is low, farmers should not lose hope. Based on changing weather conditions, farmers are being continuously encouraged to cultivate crops that can grow with less rainfall.
Steps have been taken to ensure timely availability and adequate supply of seeds and fertilisers. The Government is taking all necessary precautions to prevent any shortage for farmers.
Standing with farmers at every stage of cultivation and providing the required assistance, guidance and support is our commitment. Whatever the situation, our Government will continue to stand by farmers. -
Dr. G Parameshwara
@DrParameshwara
ಬರದ ಸಂಕಷ್ಟದ ನಡುವೆ ಜನರು ಉದ್ಯೋಗದ ಅವಕಾಶದಿಂದ ವಂಚಿತರಾಗಬಾರದು ಎಂಬುದು ನಮ್ಮ ಸರ್ಕಾರದ ಸಂಕಲ್ಪ.
ವಿಬಿ-ಜಿ ರಾಮ್-ಜಿ ಯೋಜನೆಯಡಿ ರಾಜ್ಯದ 234 ಬ್ಲಾಕ್ಗಳಲ್ಲಿ 16,993 ಕಾಮಗಾರಿಗಳು ಪ್ರಗತಿಯಲ್ಲಿದ್ದು, ಗ್ರಾಮೀಣ ಭಾಗದಲ್ಲಿ ಉದ್ಯೋಗದ ಅವಕಾಶಗಳನ್ನು ಸೃಷ್ಟಿಸಲಾಗುತ್ತಿದೆ.
ಜುಲೈ 1ರಿಂದ ಆಗಸ್ಟ್ 12ರವರೆಗೆ 33.33 ಲಕ್ಷ ಮಾನವ ದಿನಗಳ ಉದ್ಯೋಗ ಸೃಷ್ಟಿಮಾಡಲಾಗಿದೆ. ಸಂಕಷ್ಟದ ಸಮಯದಲ್ಲಿ ಕೈಗೆ ಕೆಲಸ, ಕುಟುಂಬಕ್ಕೆ ಆದಾಯ, ಜನರ ಬದುಕಿಗೆ ಭರವಸೆ ನೀಡುವ ಕೆಲಸವನ್ನು ನಮ್ಮ ಸರ್ಕಾರ ನಿರಂತರವಾಗಿ ಮಾಡುತ್ತಿದೆ.
Our Government is committed to ensuring that people are not deprived of employment opportunities during the drought crisis.
Under the VB-G RAM-G Scheme, 16,993 works are in progress across 234 blocks in the State, creating employment opportunities in rural areas.
From July 1 to August 12, 33.33 lakh person-days of employment have been generated. In times of distress, our Government continues to provide work in hand, income for families and hope for people’s lives. -
Dr. G Parameshwara
@DrParameshwara
ಸಮಾಜದ ಪ್ರತಿಯೊಂದು ವರ್ಗದ ಜನಸಂಖ್ಯೆ, ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಸ್ಥಿತಿಯ ನಿಖರ ಮಾಹಿತಿ ದೊರೆತಾಗ ಮಾತ್ರ ಎಲ್ಲರಿಗೂ ನ್ಯಾಯಯುತ ಅವಕಾಶಗಳನ್ನು ಕಲ್ಪಿಸುವ ಪರಿಣಾಮಕಾರಿ ನೀತಿಗಳನ್ನು ರೂಪಿಸಲು ಸಾಧ್ಯ.
ನಿಖರ ದತ್ತಾಂಶದ ಆಧಾರದ ಮೇಲೆ ಮೀಸಲಾತಿ, ಶಿಕ್ಷಣ, ಉದ್ಯೋಗ, ಕಲ್ಯಾಣ ಕಾರ್ಯಕ್ರಮಗಳು, ಪ್ರಾತಿನಿಧ್ಯ ಈ ಎಲ್ಲ ಕ್ಷೇತ್ರಗಳಲ್ಲೂ ಅರ್ಹತೆ ಮತ್ತು ಅಗತ್ಯಕ್ಕೆ ತಕ್ಕಂತೆ ಸಮಾನ ಅವಕಾಶ ಕಲ್ಪಿಸಬಹುದು.
ಜಾತಿ ಗಣತಿಯು ಯಾರೊಬ್ಬರೂ ಅವಕಾಶಗಳಿಂದ ವಂಚಿತರಾಗದಂತೆ ಖಚಿತಪಡಿಸಿ, ಸಾಮಾಜಿಕ ನ್ಯಾಯದ ಸಮಾನ ಹಂಚಿಕೆಯನ್ನು ಖಾತ್ರಿಪಡಿಸಬೇಕು ಎನ್ನುವುದು ನಮ್ಮ ಆಗ್ರಹ.
ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ಇದು ಕೇವಲ ಘೋಷಣೆಯಲ್ಲ, ನಿಖರ ದತ್ತಾಂಶದ ಆಧಾರದ ಮೇಲೆ ನ್ಯಾಯಯುತ ಸಮಾಜ ನಿರ್ಮಿಸುವ ನಮ್ಮ ದೃಢ ಸಂಕಲ್ಪ.
ಜಾತಿ ಗಣತಿ ನಡೆಯಲಿ
ಸಾಮಾಜಿಕ ನ್ಯಾಯ ಬಲಗೊಳ್ಳಲಿ
ಸಮಾನ ಅವಕಾಶ ಎಲ್ಲರಿಗೂ ದೊರೆಯಲಿ…
Only with accurate data on the population and the social, educational and economic condition of every section of society can effective policies be framed to ensure fair opportunities for all.
Reliable data can help ensure equitable access to reservation, education, employment, welfare programmes and representation, based on genuine need and eligibility.
Our demand is clear: the caste census must ensure that no community is denied opportunities and that the benefits of social justice are shared fairly.
Equal share for all, equal opportunity for all is not merely a slogan. It is our firm resolve to build a just society based on accurate data.
Let the caste census be conducted.
Let social justice grow stronger.
Let equal opportunities reach everyone. -
Dr. G Parameshwara
@DrParameshwara
ಸಾಮಾಜಿಕ ನ್ಯಾಯದ ಪರಿಣಾಮಕಾರಿ ಅನುಷ್ಠಾನಕ್ಕೆ ಸಮಾಜದ ನೈಜ ಸ್ಥಿತಿಗತಿಯ ನಿಖರ ದತ್ತಾಂಶ ಅತ್ಯಗತ್ಯ. ಈ ನಿಟ್ಟಿನಲ್ಲಿ ದೇಶಾದ್ಯಂತ ವೈಜ್ಞಾನಿಕ ಹಾಗೂ ಪಾರದರ್ಶಕ ಜಾತಿ ಗಣತಿ ನಡೆಯಬೇಕು.
ದೇಶದ ಎಲ್ಲ ರಾಜ್ಯಗಳ ವೈವಿಧ್ಯತೆ ಮತ್ತು ಅಗತ್ಯಗಳನ್ನು ಪರಿಗಣಿಸಿ, ವೈಜ್ಞಾನಿಕವಾದ ರಾಷ್ಟ್ರೀಯ ಪ್ರಮಾಣಿತ ಜಾತಿ ಪಟ್ಟಿ ರೂಪಿಸಬೇಕು. ಅದೇ ರೀತಿ, ರಾಜ್ಯಗಳ ಜೊತೆ ಸಮಾಲೋಚನೆ ನಡೆಸಿ ನಿರ್ದಿಷ್ಟ ಜಾತಿ ಸೂಚಕ ಕೋಡಿಂಗ್ ವ್ಯವಸ್ಥೆ ಜಾರಿಗೆ ತರಬೇಕು.
ನಿಖರ ದತ್ತಾಂಶವಿದ್ದಾಗ ಮಾತ್ರ ಸಮಾಜದ ವಿವಿಧ ವರ್ಗಗಳ ವಾಸ್ತವ ಸ್ಥಿತಿಯನ್ನು ಅರಿತು, ಅವರ ಅಗತ್ಯಗಳಿಗೆ ತಕ್ಕಂತೆ ಯೋಜನೆಗಳು ಹಾಗೂ ನ್ಯಾಯಸಮ್ಮತ ನೀತಿಗಳನ್ನು ರೂಪಿಸಲು ಸಾಧ್ಯ.
ಜಾತಿ ಗಣತಿ ಎಂದರೆ ಕೇವಲ ಸಂಖ್ಯೆಗಳ ಸಂಗ್ರಹವಲ್ಲ, ಅದು ಸಮಾನ ಅವಕಾಶ, ಸಾಮಾಜಿಕ ನ್ಯಾಯ ಮತ್ತು ಸಬಲೀಕರಣದ ವೈಜ್ಞಾನಿಕ ಆಧಾರ.
Accurate data on the realities of society is essential for the effective implementation of social justice. In this direction, the country needs a scientific and transparent caste census.
Taking into account the diversity and needs of all States, a scientifically standardised national caste list should be developed. A specific caste coding system should also be introduced in consultation with the States.
Only with accurate data can we understand the true condition of different sections of society and design policies and welfare programmes that respond to their needs.
A caste census is not merely a collection of numbers; it is a scientific foundation for equal opportunity, social justice and empowerment. -
Dr. G Parameshwara
@DrParameshwara
ಸಾಮಾಜಿಕ ನ್ಯಾಯವು ಸಮಾನತೆಯ ಮಾತಿನಿಂದ ಮಾತ್ರ ಸಾಧ್ಯವಲ್ಲ, ಸಮಾಜದ ವಾಸ್ತವ ಸ್ಥಿತಿಯನ್ನು ವೈಜ್ಞಾನಿಕವಾಗಿ ಅರಿತು, ಅದರ ಆಧಾರದ ಮೇಲೆ ಅವಕಾಶಗಳನ್ನು ರೂಪಿಸಿದಾಗ ಮಾತ್ರ ಅದು ಅರ್ಥಪೂರ್ಣವಾಗುತ್ತದೆ.
ರಾಜ್ಯಗಳ ಅನುಭವ ಹಾಗೂ ದತ್ತಾಂಶವನ್ನು ಗಮನದಲ್ಲಿಟ್ಟುಕೊಂಡು, ದೇಶದಾದ್ಯಂತ ವೈಜ್ಞಾನಿಕ, ಪಾರದರ್ಶಕ ಮತ್ತು ಸಮಗ್ರ ಜಾತಿ ಗಣತಿ ನಡೆಸುವುದು ಇಂದಿನ ಅಗತ್ಯ. ಪ್ರತಿಯೊಂದು ಸಮುದಾಯದ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸ್ಥಿತಿಯ ನಿಖರ ಚಿತ್ರಣ ದೊರೆತಾಗ ಮಾತ್ರ ಅಭಿವೃದ್ಧಿಯ ಅವಕಾಶಗಳು ಮತ್ತು ಸರ್ಕಾರದ ಯೋಜನೆಗಳು ಸಮಾನವಾಗಿ ತಲುಪುವಂತೆ ಪರಿಣಾಮಕಾರಿ ನೀತಿಗಳನ್ನು ರೂಪಿಸಲು ಸಾಧ್ಯ.
ಜಾತಿ ಗಣತಿ ಕೇವಲ ಸಂಖ್ಯೆಗಳ ಸಂಗ್ರಹವಲ್ಲ, ಅದು ಸಾಮಾಜಿಕ ನ್ಯಾಯದ ಬಲಿಷ್ಠ ಅಡಿಪಾಯ. ದೇಶದ ಸಮಾನತೆ, ಅವಕಾಶ ಮತ್ತು ನ್ಯಾಯದ ಭವಿಷ್ಯಕ್ಕಾಗಿ ಕೇಂದ್ರ ಸರ್ಕಾರ ರಾಜ್ಯಗಳ ಅನುಭವಗಳನ್ನು ಬಳಸಿಕೊಂಡು ಸಮಗ್ರ ಜಾತಿ ಗಣತಿಗೆ ಮುಂದಾಗಬೇಕು.
Social justice cannot be achieved by speaking of equality alone. It becomes meaningful only when we scientifically understand the realities of society and create opportunities based on that understanding.
Drawing on the experience and data of States, the country needs a scientific, transparent and comprehensive caste census. Only when we have an accurate picture of the social, educational and economic condition of every community can effective policies be designed to ensure that development opportunities and government schemes reach all sections fairly.
A caste census is not merely about collecting numbers; it is a strong foundation for social justice. For a future built on equality, opportunity and justice, the Union Government must draw from the experience of States and move towards a comprehensive caste census. -
Dr. G Parameshwara
@DrParameshwara
ಜಾತಿ ಗಣತಿ ಎಂದರೆ ಕೇವಲ ಜಾತಿಗಳ ಅಂಕಿ-ಅಂಶಗಳನ್ನು ಸಂಗ್ರಹಿಸುವ ಪ್ರಕ್ರಿಯೆಯಲ್ಲ. ಸಮಾಜದ ಪ್ರತಿಯೊಂದು ಸಮುದಾಯದ ನೈಜ ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕ ಸ್ಥಿತಿಗತಿಗಳನ್ನು ಅರಿತು, ಅವಕಾಶವಂಚಿತರಿಗೆ ಸಮಾನ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಇದು ಮಹತ್ವದ ಹೆಜ್ಜೆಯಾಗಿದೆ.
ಯಾವ ಸಮುದಾಯ ಎಷ್ಟಿದೆ ಎಂಬುದನ್ನು ತಿಳಿದುಕೊಳ್ಳುವುದರ ಜೊತೆಗೆ, ಯಾರಿಗೆ ಎಷ್ಟು ಅವಕಾಶ ದೊರೆತಿದೆ, ಯಾರು ಇನ್ನೂ ಅವಕಾಶಗಳಿಂದ ವಂಚಿತರಾಗಿದ್ದಾರೆ ಎಂಬುದನ್ನು ನಿಖರವಾಗಿ ತಿಳಿದುಕೊಳ್ಳುವುದು ಅಗತ್ಯ.
ನಿಖರ ದತ್ತಾಂಶದ ಆಧಾರದ ಮೇಲೆ ರೂಪುಗೊಳ್ಳುವ ನೀತಿಗಳೇ ಸಾಮಾಜಿಕ ನ್ಯಾಯದ ಅನುಷ್ಠಾನಕ್ಕೆ ಬಲ ನೀಡಬಲ್ಲವು. ಜಾತಿ ಗಣತಿ ಅಂಕಿಸಂಖ್ಯೆಗಳ ದಾಖಲೆಯಾಗದೆ, ಅವಕಾಶವಂಚಿತರ ಬದುಕಿನ ಕನ್ನಡಿಯಾಗಬೇಕು.
A caste census is not merely an exercise in collecting caste-wise numbers. It is an important step towards understanding the true social, economic and educational status of every community and ensuring equal opportunities for those who have been left behind.
Along with knowing the size of each community, it is equally important to understand who has access to opportunities and who continues to remain excluded.
Policies based on accurate data can strengthen the delivery of social justice. A caste census must not remain just a record of statistics - it must reflect the realities of those denied opportunities. -
Dr. G Parameshwara
@DrParameshwara
ಒಂದೇ ಜಾತಿಯನ್ನು ವಿವಿಧ ಹೆಸರುಗಳು, ಉಪಜಾತಿ ಹೆಸರುಗಳು, ಪ್ರಾದೇಶಿಕ ಹಾಗೂ ಸ್ಥಳೀಯ ಹೆಸರುಗಳ ಆಧಾರದಲ್ಲಿ ಪ್ರತ್ಯೇಕವಾಗಿ ಗುರುತಿಸುವುದರಿಂದ ದತ್ತಾಂಶದಲ್ಲಿ ಗೊಂದಲ ಉಂಟಾಗುವ ಸಾಧ್ಯತೆ ಇದೆ. ಇದರಿಂದ ಒಂದೇ ಜಾತಿಯ ಜನರು ಹಲವು ಪ್ರತ್ಯೇಕ ವರ್ಗಗಳಾಗಿ ದಾಖಲಾಗುವ ಮತ್ತು ನೈಜ ಜನಸಂಖ್ಯೆ ವಿಭಜನೆಯಾಗುವ ಅಪಾಯವಿದೆ.
ಹಾಗಾದರೆ ಒಂದೇ ಜಾತಿಯನ್ನು ಹಲವು ಹೆಸರುಗಳಲ್ಲಿ ದಾಖಲಿಸಿದರೆ, ಆ ಜಾತಿಯ ನಿಖರ ಜನಸಂಖ್ಯೆಯನ್ನು ಹೇಗೆ ಗುರುತಿಸಲು ಸಾಧ್ಯ? ನಿಖರ ದತ್ತಾಂಶವೇ ಸಿಗದಿದ್ದರೆ, ಅದರ ಆಧಾರದ ಮೇಲೆ ರೂಪಿಸುವ ಮೀಸಲಾತಿ, ಕಲ್ಯಾಣ ಯೋಜನೆಗಳು ಮತ್ತು ಸಾಮಾಜಿಕ ನ್ಯಾಯದ ನೀತಿಗಳು ಹೇಗೆ ಪರಿಣಾಮಕಾರಿಯಾಗಲು ಸಾಧ್ಯ?
ಆದ್ದರಿಂದ ಜಾತಿ ಗಣತಿ ಹೆಸರಿಗಷ್ಟೇ ನಡೆಯದೆ, ಒಂದೇ ಜಾತಿಯ ವಿವಿಧ ಹೆಸರುಗಳನ್ನು ಸಮರ್ಪಕವಾಗಿ ಗುರುತಿಸಿ, ಪ್ರಮಾಣಿತ ಜಾತಿ ಕೋಡ್ಗಳ ಮೂಲಕ ನಿಖರ ದತ್ತಾಂಶ ಸಂಗ್ರಹಿಸುವ ವ್ಯವಸ್ಥೆಯಾಗಬೇಕು.
Identifying the same caste under different names, sub-castes, regional names and local variations can create confusion in the data. People belonging to the same caste may be recorded under separate categories, fragmenting the actual population count.
If one caste is recorded under multiple names, how can its true population be determined? And without accurate data, how can reservation, welfare schemes and social justice policies be designed effectively?
A caste census must therefore go beyond mere enumeration. Different names of the same caste should be properly mapped, and standardised caste codes must be used to ensure accurate and reliable data. -
Dr. G Parameshwara
@DrParameshwara
ಜಾತಿ ಗಣತಿ ನಡೆಸುವುದು ಕೇವಲ ಜಾತಿಗಳ ಸಂಖ್ಯೆಯನ್ನು ತಿಳಿದುಕೊಳ್ಳುವುದಕ್ಕಾಗಿ ಅಲ್ಲ. ಯಾವ ಸಮುದಾಯದ ಜನಸಂಖ್ಯೆ ಎಷ್ಟಿದೆ, ಅವರ ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಸ್ಥಿತಿ ಹೇಗಿದೆ ಎಂಬ ನಿಖರ ದತ್ತಾಂಶವನ್ನು ತಿಳಿದುಕೊಳ್ಳುವುದು ಇದರ ಮುಖ್ಯ ಉದ್ದೇಶ. ಈ ಮಾಹಿತಿ ಲಭ್ಯವಾದಾಗ ಮಾತ್ರ ಹಿಂದುಳಿದ ಮತ್ತು ಶೋಷಿತ ಸಮುದಾಯಗಳಿಗೆ ಅವರ ಅಗತ್ಯಕ್ಕೆ ತಕ್ಕಂತೆ ಸಮಾನ ಅವಕಾಶ ಹಾಗೂ ನ್ಯಾಯಯುತ ಪ್ರಾತಿನಿಧ್ಯ ಕಲ್ಪಿಸಲು ಸಾಧ್ಯ.
ಜಾತಿ ಗಣತಿ ತಡೆಗೆ ರಾಜಕೀಯವಾಗಿ ಶತಪ್ರಯತ್ನ ನಡೆಸಿ ವಿಫಲವಾಗಿರುವ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ, ಇದೀಗ ಗಣತಿ ಕಾರ್ಯವಿಧಾನದಲ್ಲೇ ಗೊಂದಲ ಸೃಷ್ಟಿಸುವ ಮೂಲಕ ನಿಖರ ದತ್ತಾಂಶ ಜನರಿಗೆ ಸಿಗದಂತೆ ಮಾಡುವ ಪ್ರಯತ್ನ ನಡೆಸುತ್ತಿದೆ ಎಂಬ ಆತಂಕ ಮೂಡಿದೆ.
ಜಾತಿ ಗಣತಿ ಹೆಸರಿಗಷ್ಟೇ ನಡೆಯದೆ, ಪ್ರತಿಯೊಂದು ಸಮುದಾಯದ ನೈಜ ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿಯನ್ನು ಪ್ರತಿಬಿಂಬಿಸುವ ನಿಖರ ದತ್ತಾಂಶವನ್ನು ಒದಗಿಸಬೇಕು. ಆ ದತ್ತಾಂಶವೇ ಮುಂದಿನ ಜನಪರ ನೀತಿಗಳಿಗೆ, ಸಮಾನ ಅವಕಾಶಗಳಿಗೆ ಮತ್ತು ಸಾಮಾಜಿಕ ನ್ಯಾಯದ ಬಲಿಷ್ಠ ಅಡಿಪಾಯವಾಗಬೇಕು.
A caste census is not just about counting castes. Its purpose is to understand the population and the social, educational and economic condition of each community. Only accurate data can ensure equal opportunities and fair representation for backward and marginalised communities.
There is concern that the Union Government led by Prime Minister Narendra Modi, after failing to politically block the caste census, is now creating confusion in the enumeration process, risking the accuracy of the data.
The caste census must reflect the true condition of every community. That data should become the foundation for people-centric policies, equal opportunities and social justice. -
Dr. G Parameshwara
@DrParameshwara
ನಾವು ಕೈಗೊಂಡಿರುವ ಕೆಲಸಗಳು ಜನರಿಗೆ ತಲುಪಿ, ಅವರ ಬದುಕಿನಲ್ಲಿ ಬದಲಾವಣೆ ಮೂಡುತ್ತಿವೆ ಎಂಬುದನ್ನು ಅವರದೇ ಮಾತುಗಳಲ್ಲಿ ಕೇಳುವಾಗ, ಈ ಸೇವೆಯ ಪಯಣ ಇನ್ನಷ್ಟು ಅರ್ಥಪೂರ್ಣವಾಗಿದೆ ಎಂಬ ಭಾವನೆ ಮೂಡುತ್ತದೆ. ಜನರ ಮೆಚ್ಚುಗೆಗಿಂತಲೂ, ಅವರ ವಿಶ್ವಾಸ ಉಳಿಸಿಕೊಳ್ಳುವುದು ನನಗೆ ಇನ್ನಷ್ಟು ದೊಡ್ಡ ಜವಾಬ್ದಾರಿಯಂತೆ ಅನಿಸುತ್ತದೆ.
ಉಪ ಮುಖ್ಯಮಂತ್ರಿ, ಕಂದಾಯ ಮತ್ತು ಕ್ರೀಡಾ ಸಚಿವನಾಗಿ ಜವಾಬ್ದಾರಿ ವಹಿಸಿಕೊಂಡು 100 ದಿನಗಳನ್ನು ಪೂರೈಸಿರುವ ಈ ಸಂದರ್ಭದಲ್ಲಿ, ಜನರ ಆಶಯಗಳಿಗೆ ಇನ್ನಷ್ಟು ಸಮರ್ಥವಾಗಿ ಸ್ಪಂದಿಸಿ, ಅಭಿವೃದ್ಧಿ ಕಾರ್ಯಗಳಿಗೆ ಹೆಚ್ಚಿನ ವೇಗ ನೀಡುವ ಸಂಕಲ್ಪ ನನ್ನದು. ನಿಮ್ಮ ಪ್ರೋತ್ಸಾಹ, ಸಲಹೆ ಮತ್ತು ವಿಶ್ವಾಸ ನನ್ನ ಪ್ರತಿಯೊಂದು ಹೆಜ್ಜೆಗೆ ಮತ್ತಷ್ಟು ಶಕ್ತಿ ತುಂಬಲಿದೆ.
ನಿಮ್ಮ ನಿರೀಕ್ಷೆಗಳಿಗೆ ತಕ್ಕಂತೆ ಇನ್ನಷ್ಟು ಕೆಲಸ ಮಾಡುವುದೇ ಈ ವಿಶ್ವಾಸಕ್ಕೆ ನಾನು ನೀಡುವ ಗೌರವ.
#100days I #ದೃಢಕರ್ನಾಟಕದಸಂಕಲ್ಪ | #ಶತಕದಪಥ_ಪ್ರಗತಿಯರಥThis media couldn't be displayed. See it on the original post. -
Dr. G Parameshwara
@DrParameshwara
ನಾವು ಕೈಗೊಂಡಿರುವ ಕೆಲಸಗಳು ಜನರಿಗೆ ತಲುಪಿ, ಅವರ ಬದುಕಿನಲ್ಲಿ ಬದಲಾವಣೆ ಮೂಡುತ್ತಿವೆ ಎಂಬುದನ್ನು ಅವರದೇ ಮಾತುಗಳಲ್ಲಿ ಕೇಳುವಾಗ, ಈ ಸೇವೆಯ ಪಯಣ ಇನ್ನಷ್ಟು ಅರ್ಥಪೂರ್ಣವಾಗಿದೆ ಎಂಬ ಭಾವನೆ ಮೂಡುತ್ತದೆ. ಜನರ ಮೆಚ್ಚುಗೆಗಿಂತಲೂ, ಅವರ ವಿಶ್ವಾಸ ಉಳಿಸಿಕೊಳ್ಳುವುದು ನನಗೆ ಇನ್ನಷ್ಟು ದೊಡ್ಡ ಜವಾಬ್ದಾರಿಯಂತೆ ಅನಿಸುತ್ತದೆ.
ಉಪ ಮುಖ್ಯಮಂತ್ರಿ, ಕಂದಾಯ ಮತ್ತು ಕ್ರೀಡಾ ಸಚಿವನಾಗಿ ಜವಾಬ್ದಾರಿ ವಹಿಸಿಕೊಂಡು 100 ದಿನಗಳನ್ನು ಪೂರೈಸಿರುವ ಈ ಸಂದರ್ಭದಲ್ಲಿ, ಜನರ ಆಶಯಗಳಿಗೆ ಇನ್ನಷ್ಟು ಸಮರ್ಥವಾಗಿ ಸ್ಪಂದಿಸಿ, ಅಭಿವೃದ್ಧಿ ಕಾರ್ಯಗಳಿಗೆ ಹೆಚ್ಚಿನ ವೇಗ ನೀಡುವ ಸಂಕಲ್ಪ ನನ್ನದು. ನಿಮ್ಮ ಪ್ರೋತ್ಸಾಹ, ಸಲಹೆ ಮತ್ತು ವಿಶ್ವಾಸ ನನ್ನ ಪ್ರತಿಯೊಂದು ಹೆಜ್ಜೆಗೆ ಮತ್ತಷ್ಟು ಶಕ್ತಿ ತುಂಬಲಿದೆ.
ನಿಮ್ಮ ನಿರೀಕ್ಷೆಗಳಿಗೆ ತಕ್ಕಂತೆ ಇನ್ನಷ್ಟು ಕೆಲಸ ಮಾಡುವುದೇ ಈ ವಿಶ್ವಾಸಕ್ಕೆ ನಾನು ನೀಡುವ ಗೌರವ.
#100days I #ದೃಢಕರ್ನಾಟಕದಸಂಕಲ್ಪ | #ಶತಕದಪಥ_ಪ್ರಗತಿಯರಥThis media couldn't be displayed. See it on the original post. -
Dr. G Parameshwara
@DrParameshwara
ತುಮಕೂರು ದಸರಾ ಹಬ್ಬದ ಪೂರ್ವ ತಯಾರಿಯಾಗಿ ಎರಡು ಮಹತ್ವದ ಕಾರ್ಯಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ. ಒಂದು ತುಮಕೂರಿನ ಅಮಾನಿಕೆರೆಯಲ್ಲಿ ನವೀನ ರೀತಿಯ ತೇಲುವ 'ಸಂಗೀತ ಕಾರಂಜಿ' ಅಳವಡಿಸಲಾಗುತ್ತಿದೆ. ಇನ್ನೊಂದು ಶ್ರೀ ಶಿವಕುಮಾರಸ್ವಾಮಿ ವೃತ್ತದಲ್ಲಿ 'ತುಮಕೂರು ಸ್ಕ್ವೇರ್' ನಿರ್ಮಿಸಲಾಗುತ್ತಿದೆ.
ಈ ಉಭಯ ಯೋಜನೆಗಳನ್ನು ಕೇವಲ ದಸರಾ ಹಬ್ಬಕ್ಕಾಗಿ ಮಾಡುತ್ತಿರುವುದಲ್ಲ, ಶಾಶ್ವತವಾಗಿ ಇರಲಿದ್ದು ನಗರವಾಸಿಗಳನ್ನು ರಂಜಿಸಲಿದೆ. ತುಮಕೂರು ನಗರದ ಸೌಂದರ್ಯವೂ ವೃದ್ಧಿಸಲಿದೆ.
ಪ್ರಸ್ತುತ ವಾರದ ಪ್ರತಿ ಶನಿವಾರ, ಭಾನುವಾರ ಸಂಗೀತ ಕಾರಂಜಿ ಕಾರ್ಯಾಚರಿಸುವಂತೆ ಮಾಡುವ ಯೋಜನೆ ಹಾಕಿಕೊಳ್ಳಲಾಗಿದೆ, ಆದರೆ ದಿನನಿತ್ಯವೂ ಅಗತ್ಯತೆ ಇದ್ದರೆ ಅದನ್ನು ಮುಂದೆ ನೋಡಿಕೊಂಡು ಆರಂಭಿಸಲಾಗುವುದು. ನೂರು ಮೀಟರ್ಗೂ ಹೆಚ್ಚು ಎತ್ತರಕ್ಕೆ ಚಿಮ್ಮುವ ಕಾರಂಜಿಯು ಸುಮಾರು 300 ಅಡಿ ವಿಸ್ತೀರ್ಣಕ್ಕೆ ಹರಡಲಿದ್ದು, ಕಣ್ಣುಗಳಿಗೆ ರಸದೌತಣ ನೀಡಲಿದೆ.
ವಿದೇಶಗಳ ಪ್ರಮುಖ ನಗರಗಳಲ್ಲಿ ಜನಾಕರ್ಷಣೆಯ ಸೆಂಟರ್ಗಳಿರುತ್ತವೆ. ಉದಾಹರಣೆಗೆ ನ್ಯೂಯಾರ್ಕ್ನ ನ್ಯೂಯಾರ್ಕ್ ಸ್ಕ್ವೇರ್. ಅದೇ ಮಾದರಿಯಲ್ಲಿ ತುಮಕೂರಿನಲ್ಲಿಯೂ ಸುಮಾರು 4 ಕೋಟಿ ರೂ. ವೆಚ್ಚದಲ್ಲಿ ತುಮಕೂರು ಸ್ಕ್ವೇರ್ ನಿರ್ಮಿಸಲು ಯೋಜನೆ ಹಾಕಿಕೊಂಡಿದ್ದೇವೆ. ತುಮಕೂರು ಕೂಡ ಆಧುನಿಕತೆಯಲ್ಲಿ ಮುಂದಿರುವುದನ್ನು ಪ್ರದರ್ಶಿಸಲು ತುಮಕೂರು ಮಹಾನಗರ ಪಾಲಿಕೆಯ ಶ್ರೀ ಶಿವಕುಮಾರಸ್ವಾಮಿ ವೃತ್ತದಲ್ಲಿ (ಎಸ್ಎಸ್ ವೃತ್ತ) ಬೃಹತ್ ಡಿಸ್ಪ್ಲೇ ಬೋರ್ಡ್ ಅಳವಡಿಸಲಾಗುತ್ತಿದೆ. ಸರ್ಕಲ್ ಹೆಸರನ್ನು ಬದಲಾಯಿಸುವ ಯಾವುದೇ ಉದ್ದೇಶವಿಲ್ಲ. ಎಸ್ಎಸ್ ಸರ್ಕಲ್ ಎಂಬುದು ಹಾಗೆಯೇ ಇರಲಿದೆ. ಆದರೆ ತುಮಕೂರು ಸ್ಕ್ವೇರ್ ಎಂಬ ಇಲೆಕ್ಟ್ರಾನಿಕ್ ಡಿಸ್ಪ್ಲೇ ಬೋರ್ಡ್ಅನ್ನು ಎಲ್ಲ ದಿಕ್ಕುಗಳಲ್ಲಿಯೂ ಅಳವಡಿಸಲಾಗುತ್ತದೆ.
ಸುಮಾರು 7 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಡಿಸ್ಪ್ಲೇ ಬೋರ್ಡ್ನಲ್ಲಿ ನಮ್ಮ ಸರ್ಕಾರದ ಅಭಿವೃದ್ಧಿ ಯೋಜನೆಗಳು, ಐತಿಹಾಸಿಕ ಪ್ರಾಮುಖ್ಯತೆಗಳು, ಪ್ರವಾಸಿ ಕೇಂದ್ರಗಳು, ಐತಿಹಾಸಿಕ ಸ್ಥಳಗಳು, ದೇವಸ್ಥಾನಗಳು, ಸಂಸ್ಕೃತಿಗಳನ್ನು ಪ್ರದರ್ಶಿಸಲಾಗುವುದು. ಮನರಂಜನೆಯ ವೇದಿಕೆಯಾಗಿಯೂ ಉಪಯೋಗಿಸಲಾಗುವುದು. ಇದರಿಂದ ತುಮಕೂರಿನ ಸಾಮಾನ್ಯ ಜನರಿಗೆ ದೂರದೂರುಗಳ ಪರಿಚಯ ಸಿಗಲಿದೆ. ಗೋಳಗುಮ್ಮಟದಂತಹ ಐತಿಹಾಸಿಕ ಸ್ಥಳಗಳನ್ನು ಇಲ್ಲಿಂದಲೇ ನೋಡಬಹುದು.
ಸೂಕ್ತ ದಾಖಲೆಗಳನ್ನು ಒದಗಿಸಿದರೆ ಪಿಂಚಣಿ ಮುಂದುವರಿಯಲಿದೆ : ನಮ್ಮ ಸರ್ಕಾರವು ಪಿಂಚಣಿಯ ಗರಿಷ್ಠ ಆದಾಯ ಮಿತಿಯನ್ನು 33 ಸಾವಿರ ರೂ.ಗಳಿಂದ 1.2 ಲಕ್ಷ ರೂ. ಗೆ ಏರಿಕೆ ಮಾಡಿದೆ. ಇದೀಗ ಸ್ಥಗಿತಗೊಂಡಿರುವ ಪಿಂಚಣಿದಾರರು ಸೂಕ್ತ ವಯಸ್ಸಿನ ದೃಢೀಕರಣ ಪತ್ರ, ಆದಾಯ ಮತ್ತು ವಿಳಾಸ ಪ್ರಮಾಣಪತ್ರಗಳನ್ನು ಒದಗಿಸಿದರೆ ಪಿಂಚಣಿ ಮುಂದುವರಿಯಲಿದೆ. ವಯಸ್ಸು ಆಗದವರೂ, ಟ್ಯಾಕ್ಸ್ ಕಟ್ಟುವವರು, ಸರ್ಕಾರಿ ನೌಕರರು ಪಿಂಚಣಿ ಪಡೆಯುತ್ತಿರುವುದು ಗಮನಕ್ಕೆ ಬಂದಿರುವ ಹಿನ್ನೆಲೆ ಈ ಕ್ರಮ ಕೈಗೊಳ್ಳಲಾಗಿದೆ.
As part of the preparations for Tumakuru Dasara, two major projects are being taken up in the city - a modern floating Musical Fountain at Amanikere and Tumakuru Square at Sri Shivakumara Swamiji Circle.
These are not temporary Dasara attractions. Both projects will remain as permanent additions to the city, offering recreation to residents while enhancing Tumakuru’s beauty.
The musical fountain is initially planned to operate every Saturday and Sunday, with scope for daily shows depending on public demand. The fountain will rise to a height of over 100 metres and spread across nearly 300 feet, creating a spectacular visual experience.
Inspired by iconic public spaces in major global cities, Tumakuru Square is being planned at a cost of around ₹4 crore. Large electronic display boards will be installed at Sri Shivakumara Swamiji Circle, also known as SS Circle. There is no proposal to rename the circle; the name SS Circle will remain unchanged.
The display system, being developed at a cost of around ₹7 crore, will showcase our Government’s development initiatives, tourist destinations, historical landmarks, temples and cultural heritage, while also serving as an entertainment platform.
Pension will continue on submission of valid documents: Our Government has increased the maximum annual income eligibility limit for pensions from ₹33,000 to ₹1.2 lakh. Beneficiaries whose pensions have been stopped can have them restored by submitting valid age proof, income certificate and address proof. This verification was initiated after cases of ineligible beneficiaries, including underage persons, taxpayers and government employees, came to notice.
— My response to the media after performing the groundbreaking ceremony for the floating Musical Fountain at Amanikere and Tumakuru Square. -
Dr. G Parameshwara
@DrParameshwara
ನಾವು ಕೈಗೊಂಡಿರುವ ಕೆಲಸಗಳು ಜನರಿಗೆ ತಲುಪಿ, ಅವರ ಬದುಕಿನಲ್ಲಿ ಬದಲಾವಣೆ ಮೂಡುತ್ತಿವೆ ಎಂಬುದನ್ನು ಅವರದೇ ಮಾತುಗಳಲ್ಲಿ ಕೇಳುವಾಗ, ಈ ಸೇವೆಯ ಪಯಣ ಇನ್ನಷ್ಟು ಅರ್ಥಪೂರ್ಣವಾಗಿದೆ ಎಂಬ ಭಾವನೆ ಮೂಡುತ್ತದೆ. ಜನರ ಮೆಚ್ಚುಗೆಗಿಂತಲೂ, ಅವರ ವಿಶ್ವಾಸ ಉಳಿಸಿಕೊಳ್ಳುವುದು ನನಗೆ ಇನ್ನಷ್ಟು ದೊಡ್ಡ ಜವಾಬ್ದಾರಿಯಂತೆ ಅನಿಸುತ್ತದೆ.
ಉಪ ಮುಖ್ಯಮಂತ್ರಿ, ಕಂದಾಯ ಮತ್ತು ಕ್ರೀಡಾ ಸಚಿವನಾಗಿ ಜವಾಬ್ದಾರಿ ವಹಿಸಿಕೊಂಡು 100 ದಿನಗಳನ್ನು ಪೂರೈಸಿರುವ ಈ ಸಂದರ್ಭದಲ್ಲಿ, ಜನರ ಆಶಯಗಳಿಗೆ ಇನ್ನಷ್ಟು ಸಮರ್ಥವಾಗಿ ಸ್ಪಂದಿಸಿ, ಅಭಿವೃದ್ಧಿ ಕಾರ್ಯಗಳಿಗೆ ಹೆಚ್ಚಿನ ವೇಗ ನೀಡುವ ಸಂಕಲ್ಪ ನನ್ನದು. ನಿಮ್ಮ ಪ್ರೋತ್ಸಾಹ, ಸಲಹೆ ಮತ್ತು ವಿಶ್ವಾಸ ನನ್ನ ಪ್ರತಿಯೊಂದು ಹೆಜ್ಜೆಗೆ ಮತ್ತಷ್ಟು ಶಕ್ತಿ ತುಂಬಲಿದೆ.
ನಿಮ್ಮ ನಿರೀಕ್ಷೆಗಳಿಗೆ ತಕ್ಕಂತೆ ಇನ್ನಷ್ಟು ಕೆಲಸ ಮಾಡುವುದೇ ಈ ವಿಶ್ವಾಸಕ್ಕೆ ನಾನು ನೀಡುವ ಗೌರವ.
#100days I #ದೃಢಕರ್ನಾಟಕದಸಂಕಲ್ಪ | #ಶತಕದಪಥ_ಪ್ರಗತಿಯರಥThis media couldn't be displayed. See it on the original post. -
Dr. G Parameshwara
@DrParameshwara
ರಾಷ್ಟ್ರದ ರಕ್ಷಣೆಗಾಗಿ ಪ್ರಾಣದ ಹಂಗು ತೊರೆದು ಸೇವೆಗೈದ ಹೆಮ್ಮೆಯ ಮಾಜಿ ಯೋಧರ ಸ್ವಂತ ಸೂರಿನ ಕನಸಿಗೆ ನಮ್ಮ ಸರ್ಕಾರ ಬೆಂಬಲವಾಗಿ ನಿಲ್ಲಲಿದೆ. ವಸತಿ ರಹಿತರಿಗಾಗಿ ಪ್ರತಿ ಜಿಲ್ಲೆಯಲ್ಲಿ 30×40 ಅಡಿ ಅಳತೆಯ 50 ಸಾವಿರ ನಿವೇಶನಗಳನ್ನು ಹಂಚಿಕೆ ಮಾಡುವ ನೂತನ ಯೋಜನೆಯನ್ನು ನಾವು ಜಾರಿಗೊಳಿಸಲು ಹೊರಟಿದ್ದು, ಇದರಡಿ ಮಾಜಿ ಯೋಧರಿಗೂ ನಿವೇಶನ ನೀಡಲಾಗುವುದು.
ಮೊದಲ ಹಂತದಲ್ಲಿ ಮುಂದಿನ ಎರಡು ತಿಂಗಳಲ್ಲಿ ರಾಜ್ಯಾದ್ಯಂತ 5 ಲಕ್ಷ ನಿವೇಶನಗಳನ್ನು ಹಂಚಿಕೆ ಮಾಡುವ ಗುರಿ ಹೊಂದಿದ್ದೇವೆ. ಸ್ವಂತ ಸೂರಿರದ ಕುಟುಂಬಗಳ ದಶಕಗಳ ಕನಸನ್ನು ನನಸಾಗಿಸುವ ನಿಟ್ಟಿನಲ್ಲಿ ನಮ್ಮ ಸರ್ಕಾರ ದೃಢ ಹೆಜ್ಜೆ ಇಟ್ಟಿದೆ.
Our Government will support the dream of a home for proud ex-servicemen who served the nation with courage and dedication.
Under our new housing initiative, 50,000 residential sites measuring 30×40 feet will be distributed in each district, and ex-servicemen will also be eligible.
In the first phase, we aim to distribute 5 lakh sites across the State within the next two months. This is a firm step towards helping houseless families realise their long-cherished dream of a home of their own. -
Dr. G Parameshwara
@DrParameshwara
ತುಮಕೂರು ಜಿಲ್ಲೆಯ ಪಾವಗಡದಲ್ಲಿ ನಕ್ಸಲ್ ಹೆಸರಿನಲ್ಲಿ ಬೆದರಿಕೆ ಪತ್ರ ಪತ್ತೆಯಾಗಿರುವ ವಿಚಾರ ನನ್ನ ಗಮನಕ್ಕೆ ಬಂದಿದೆ. ಈ ವಿಚಾರವಾಗಿ ಎಸ್ಪಿ ಜೊತೆ ಮಾತನಾಡಿದ್ದೇನೆ. ಜಿಲ್ಲೆಯ ಜನತೆ ಆತಂಕ ಪಡಬೇಕಿಲ್ಲ. ಜಿಲ್ಲೆಯಲ್ಲಿ ನಕ್ಸಲ್ ಚಟುವಟಿಕೆ ದೃಢವಾದರೆ ತಕ್ಷಣ ನಕ್ಸಲ್ ನಿಗ್ರಹ ದಳವನ್ನು ನಿಯೋಜಿಸಲಾಗುವುದು.
ನಕ್ಸಲ್ ಮುಕ್ತ ಕರ್ನಾಟಕ ಘೋಷಣೆಗೂ ಮುನ್ನ ಅಸ್ತಿತ್ವದಲ್ಲಿದ್ದ ನಕ್ಸಲ್ ನಿಗ್ರಹ ಪಡೆಯನ್ನು ಸಂಪೂರ್ಣವಾಗಿ ವಿಸರ್ಜಿಸಿಲ್ಲ. ಅದರ ಅರ್ಧ ಪಡೆಯನ್ನು ಕೋಮು ಗಲಭೆ ನಿಯಂತ್ರಣಕ್ಕಾಗಿ ಸ್ಪೆಷಲ್ ಆ್ಯಕ್ಷನ್ ಫೋರ್ಸ್ ಆಗಿ ಪರಿವರ್ತಿಸಲಾಗಿದ್ದು, ಉಳಿದ ಅರ್ಧ ಪಡೆ ನಕ್ಸಲ್ ನಿಗ್ರಹ ದಳವಾಗಿಯೇ ಕಾರ್ಯನಿರ್ವಹಿಸುತ್ತಿದೆ. ಹಾಗಾಗಿ ನಕ್ಸಲ್ ಚಟುವಟಿಕೆ ಕಂಡುಬಂದರೆ ನಿಗ್ರಹಿಸಲು ತಕ್ಷಣ ನೆರವಾಗಲಿದೆ.
ರಾಜ್ಯದಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡಲು ಸರ್ಕಾರ ಅಗತ್ಯವಿರುವ ಎಲ್ಲ ಕ್ರಮಗಳನ್ನು ಕೈಗೊಳ್ಳಲಿದೆ.
A threat letter issued in the name of Naxals has been found in Pavagada, Tumakuru district. I have spoken to the Superintendent of Police, and there is no need for the public to panic. If Naxal activity is confirmed, the Anti-Naxal Force will be deployed immediately.
The force has not been fully disbanded after Karnataka was declared Naxal-free. Half now functions as a Special Action Force, while the remaining half continues as the Anti-Naxal Force and can be deployed whenever required.
The Government will take all necessary steps to maintain peace and law and order across the State. -
Dr. G Parameshwara
@DrParameshwara
ತುಮಕೂರು ನಗರದ ಸೌಂದರ್ಯೀಕರಣ ಹಾಗೂ ಸಾರ್ವಜನಿಕ ಆಕರ್ಷಣೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಇಂದು ಎರಡು ಮಹತ್ವದ ಕಾಮಗಾರಿಗಳಿಗೆ ಗುದ್ದಲಿ ಪೂಜೆ ನೆರವೇರಿಸಿದೆ.
ಅಮಾನಿಕೆರೆಯಲ್ಲಿ ನವೀನ ಮಾದರಿಯ ತೇಲುವ ʼಸಂಗೀತ ಕಾರಂಜಿʼ ಅಳವಡಿಸುವ ಕಾಮಗಾರಿ ಹಾಗೂ ಶ್ರೀ ಶಿವಕುಮಾರ ಸ್ವಾಮಿ ವೃತ್ತದಲ್ಲಿ ʼತುಮಕೂರು ಸ್ಕ್ವೇರ್ʼ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿದೆ.
ಈ ಯೋಜನೆಗಳು ನಗರದ ಜನರು ಹಾಗೂ ಪ್ರವಾಸಿಗರಿಗೆ ಹೊಸ ಅನುಭವ ನೀಡುವ ಜೊತೆಗೆ, ತುಮಕೂರು ನಗರದ ಸೌಂದರ್ಯಕ್ಕೆ ಮತ್ತಷ್ಟು ಮೆರುಗು ನೀಡಲಿವೆ.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳಾದ ಶುಭ ಕಲ್ಯಾಣ್, ಮಹಾನಗರ ಪಾಲಿಕೆ ಆಯುಕ್ತರಾದ ಶುಭ, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷರಾದ ಚಂದ್ರಶೇಖರ್ ಗೌಡ ಹಾಗೂ ಬಿಎಂಟಿಸಿ ಉಪಾಧ್ಯಕ್ಷರಾದ ನಿಕೇತ್ ರಾಜ್ ಮೌರ್ಯ ಉಪಸ್ಥಿತರಿದ್ದರು.
Today, I performed the groundbreaking ceremony for two major projects aimed at enhancing the beauty of Tumakuru city and creating new public attractions.
Work has begun on a modern floating ‘Musical Fountain’ at Amanikere and the development of ‘Tumakuru Square’ at Sri Shivakumara Swamiji Circle.
These projects will offer a new experience to residents and visitors while adding greater vibrancy and appeal to Tumakuru city.
Deputy Commissioner Shubha Kalyan, Municipal Corporation Commissioner Shubha, District Guarantee Schemes Implementation Committee Chairman Chandrashekhar Gowda, BMTC Vice-Chairman Niketh Raj Maurya and others were present on the occasion. -
Dr. G Parameshwara
@DrParameshwara
ಬರದ ಸಂಕಷ್ಟ ರೈತರ ಬದುಕಿಗೆ ಮಾತ್ರವಲ್ಲ, ಜಾನುವಾರುಗಳ ಮೇಲೂ ಪರಿಣಾಮ ಬೀರುತ್ತದೆ. ಹಾಗಾಗಿ ಜಾನುವಾರುಗಳ ರಕ್ಷಣೆ ಮತ್ತು ಪಾಲನೆಗೆ ನಮ್ಮ ಸರ್ಕಾರ ವಿಶೇಷ ಆದ್ಯತೆ ನೀಡಿದೆ.
ಜಾನುವಾರುಗಳಿಗೆ ಅಗತ್ಯ ನೀರು, ಲಸಿಕೆ ಹಾಗೂ ಮೇವಿನ ವ್ಯವಸ್ಥೆ ಕಲ್ಪಿಸಲು ಕ್ರಮ ಕೈಗೊಳ್ಳಲಾಗಿದೆ. ಮೇವಿನ ಕೊರತೆಯಾಗದಂತೆ ₹25 ಕೋಟಿ ವೆಚ್ಚದಲ್ಲಿ ಮೇವಿನ ಬೀಜದ ಕಿಟ್ಗಳನ್ನು ವಿತರಿಸಲಾಗುತ್ತಿದ್ದು, ರಾಜ್ಯದಲ್ಲಿ ಸುಮಾರು 152 ಲಕ್ಷ ಟನ್ ಮೇವು ಸಂಗ್ರಹ ಮಾಡಲಾಗಿದೆ.
ರೈತನ ಬದುಕಿನ ಭಾಗವಾಗಿರುವ ಜಾನುವಾರುಗಳನ್ನು ಕಾಪಾಡುವುದು ನಮ್ಮ ಸರ್ಕಾರದ ಜವಾಬ್ದಾರಿ.
Drought affects not only farmers’ livelihoods, but also their livestock. That is why our Government has given special priority to their protection and care.
Steps have been taken to ensure adequate water, vaccination and fodder for livestock. To prevent fodder shortage, fodder seed kits worth ₹25 crore are being distributed, and around 152 lakh tonnes of fodder have been stocked across the State.
Protecting livestock, which is an integral part of a farmer’s livelihood, is our Government’s responsibility.
#farmersfirst #karnatakagovernment -
Dr. G Parameshwara
@DrParameshwara
ಬರದಿಂದ ಸಂಕಷ್ಟಕ್ಕೊಳಗಾಗಿರುವ ರೈತರ ನೆರವಿಗೆ ರಾಜ್ಯ ಸರ್ಕಾರ ಸಂಪೂರ್ಣ ಬದ್ಧವಾಗಿದೆ. ಸೆಪ್ಟೆಂಬರ್ 15ರೊಳಗೆ ರಾಜ್ಯದಲ್ಲಿ ಬರದಿಂದ ಉಂಟಾಗಿರುವ ಒಟ್ಟು ನಷ್ಟದ ಸಮಗ್ರ ಅಂದಾಜು ಸಿದ್ಧಪಡಿಸಲಾಗುವುದು.
ಬೆಳೆನಷ್ಟ, ಕುಡಿಯುವ ನೀರು, ಜಾನುವಾರುಗಳ ಮೇವಿನ ಸಮಸ್ಯೆ ಸೇರಿದಂತೆ ಬರದಿಂದ ಉಂಟಾಗಿರುವ ನಷ್ಟದ ಸಂಪೂರ್ಣ ಮಾಹಿತಿಯನ್ನು ಕ್ರೋಢಿಕರಿಸಿ, ಕೇಂದ್ರ ಸರ್ಕಾರಕ್ಕೆ ಸಮಗ್ರ ಬರ ಪರಿಹಾರದ ಮನವಿ ಸಲ್ಲಿಸಲಾಗುವುದು.
ರೈತರ ಸಂಕಷ್ಟಕ್ಕೆ ಪರಿಹಾರ ದೊರಕಿಸುವುದು ನಮ್ಮ ಮೊದಲ ಆದ್ಯತೆ. ಕರ್ನಾಟಕದ ಪಾಲಿನ ನ್ಯಾಯಯುತ ಪರಿಹಾರಕ್ಕಾಗಿ ಕೇಂದ್ರದ ಮುಂದೆ ರಾಜ್ಯದ ಧ್ವನಿಯನ್ನು ದಿಟ್ಟವಾಗಿ ಮೊಳಗಿಸುತ್ತೇವೆ.
The State Government is fully committed to supporting farmers affected by drought. A comprehensive assessment of the total drought-related losses across the State will be prepared by September 15.
Complete details of crop loss, drinking water shortages, fodder scarcity and other drought-related damage will be compiled and a comprehensive drought relief memorandum will be submitted to the Union Government.
Securing relief for farmers is our top priority. We will firmly raise Karnataka’s voice before the Centre and seek the fair relief that the State deserves. -
Dr. G Parameshwara
@DrParameshwara
ಬರದ ತೀವ್ರತೆಯನ್ನು ಕಚೇರಿಯಲ್ಲಿ ಕುಳಿತು ಅಂದಾಜಿಸಲಾಗುವುದಿಲ್ಲ. ಬರಪೀಡಿತ ಪ್ರದೇಶಗಳಿಗೆ ನೇರವಾಗಿ ತೆರಳಿ ರೈತರ ನೋವನ್ನು ಅರಿಯಬೇಕು. ಇದೇ ಉದ್ದೇಶದಿಂದ ಬರಪೀಡಿತ ಜಿಲ್ಲೆಗಳಿಗೆ ಭೇಟಿ ನೀಡಿ, ಪರಿಸ್ಥಿತಿಯನ್ನು ಖುದ್ದಾಗಿ ಪರಿಶೀಲಿಸಿದ್ದೇನೆ.
ರೈತರ ಹೊಲಗಳಿಗೆ ತೆರಳಿ ಬೆಳೆನಷ್ಟವನ್ನು ಪರಿಶೀಲಿಸಿ, ರೈತರ ಅಹವಾಲುಗಳನ್ನು ಆಲಿಸಿದ್ದೇನೆ. ಸಂಕಷ್ಟದಲ್ಲಿರುವ ರೈತರಿಗೆ ಸರ್ಕಾರದ ನೆರವು ತಲುಪಿಸುವ ನಿಟ್ಟಿನಲ್ಲಿ ಸ್ಥಳೀಯ ಅಧಿಕಾರಿಗಳೊಂದಿಗೆ ಅಗತ್ಯ ಕ್ರಮಗಳ ಕುರಿತು ಚರ್ಚಿಸಿದ್ದೇನೆ.
ಬರದ ಸಂಕಷ್ಟದಲ್ಲಿ ರೈತರಿಗೆ ಸರ್ಕಾರವೇ ಆಸರೆಯಾಗಬೇಕು. ಪರಿಹಾರ ಕಾರ್ಯಗಳು ವೇಗವಾಗಿ ನಡೆಯುವಂತೆ ನಿರಂತರ ಮೇಲ್ವಿಚಾರಣೆ ಮಾಡಲಾಗುತ್ತಿದೆ. ರೈತರ ಕಣ್ಣೀರು ಒರೆಸುವವರೆಗೆ, ಅವರ ಬದುಕಿಗೆ ಭರವಸೆ ನೀಡುವವರೆಗೆ ನಮ್ಮ ಸರ್ಕಾರದ ಪ್ರಯತ್ನ ನಿಲ್ಲದು.
The severity of drought cannot be assessed from an office. We must visit the affected areas and understand the pain of farmers firsthand. With this purpose, I visited drought-hit districts and personally reviewed the situation on the ground.
I visited farmers’ fields, assessed crop losses and heard their grievances. I also discussed the necessary measures with local officials to ensure that Government assistance reaches farmers in distress.
During a drought, the Government must stand as a source of support for farmers. Relief works are being continuously monitored to ensure they move forward without delay.
Our efforts will not stop until we ease the distress of farmers and restore hope in their lives.
#farmersfirst #karnatakagovernment -
Dr. G Parameshwara
@DrParameshwara
ರೈತರು ಬೆಳೆದ ಬೆಳೆ ಕೈಕೊಟ್ಟಾಗ ಅವರಿಗೆ ಸರ್ಕಾರ ಬೆಂಬಲವಾಗಿ ನಿಲ್ಲಬೇಕು. ರಾಜ್ಯದ ರೈತರ ಪರವಾಗಿ ನಮ್ಮ ಸರ್ಕಾರ ಬದ್ಧತೆಯಿಂದ ಕಾರ್ಯನಿರ್ವಹಿಸುತ್ತಿದ್ದು, ರೈತರಿಗೆ ₹700 ಕೋಟಿಗೂ ಹೆಚ್ಚು ಬೆಳೆ ವಿಮೆ ಹಣವನ್ನು ಪಾವತಿಸಲಾಗಿದೆ.
ರೈತರ ಶ್ರಮಕ್ಕೆ ಬೆಲೆ, ಸಂಕಷ್ಟಕ್ಕೆ ನೆರವು ನೀಡುವುದು ನಮ್ಮ ಸರ್ಕಾರದ ಆದ್ಯತೆ. ರೈತರ ಹಿತ ಕಾಪಾಡುವ ನಿಟ್ಟಿನಲ್ಲಿ ಅಗತ್ಯವಿರುವ ಎಲ್ಲ ಕ್ರಮಗಳನ್ನು ಮುಂದುವರಿಸಲಾಗುವುದು.
When farmers lose the crops they have worked hard to grow, the Government must stand by them. Our Government remains committed to supporting Karnataka’s farmers, and over ₹700 crore has been paid towards crop insurance.
Ensuring value for farmers’ hard work and providing support in times of distress is our priority. We will continue to take every necessary step to safeguard the interests of farmers.
#farmersfirst #karnatakagovernment -
Dr. G Parameshwara
@DrParameshwara
ರೈತರ ಬದುಕಿಗೆ ಬೆನ್ನೆಲುಬಾಗಿ ನಿಂತಿರುವ ನಮ್ಮ ಸರ್ಕಾರ
ಬರಗಾಲದಿಂದ ಸಂಕಷ್ಟಕ್ಕೀಡಾದ ನಾಡಿನ ರೈತರ ನೆರವಿಗೆ ನಮ್ಮ ಸರ್ಕಾರ ಸದಾ ಬದ್ಧವಾಗಿದೆ. ರೈತರ ನೋವಿಗೆ ಸ್ಪಂದಿಸಿ, ಸಂಕಷ್ಟದ ಸಮಯದಲ್ಲಿ ಅಗತ್ಯ ನೆರವು ತಲುಪಿಸುವುದು ನಮ್ಮ ಸರ್ಕಾರದ ಆದ್ಯತೆ.
ರಾಜ್ಯದ 101 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಿ, 31 ಜಿಲ್ಲೆಗಳಿಗೆ ಪರಿಹಾರ ಕಾರ್ಯಗಳಿಗಾಗಿ ₹117 ಕೋಟಿ ಬಿಡುಗಡೆ ಮಾಡಲಾಗಿದೆ. ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ₹1 ಕೋಟಿ, ಒಟ್ಟು ₹306 ಕೋಟಿ ನೆರವು ಹಾಗೂ ಪ್ರತಿ ಜಿಲ್ಲೆಗೆ ಕುಡಿಯುವ ನೀರಿಗಾಗಿ ₹5 ಕೋಟಿ ಅನುದಾನ ನೀಡಲಾಗಿದೆ.
ರೈತರ ಬದುಕಿನಲ್ಲಿ ಭರವಸೆ ಮೂಡಿಸುವುದು ನಮ್ಮ ಸಂಕಲ್ಪವಾಗಿದ್ದು, ಇದನ್ನು ವ್ರತದಂತೆ ಪಾಲಿಸಿಕೊಂಡು ಹೋಗುತ್ತಿದ್ದೇವೆ.
Our Government Stands Firmly with Farmers
Our Government remains committed to supporting farmers affected by drought. Responding to their distress and ensuring timely assistance during difficult times is our priority.
We have declared 101 taluks drought-hit and released ₹117 crore to 31 districts for relief works. ₹1 crore has been allocated to each Assembly constituency, amounting to ₹306 crore in total assistance, while ₹5 crore has been provided to each district for drinking water.
Our resolve is to restore hope in the lives of farmers, and we remain firmly committed to this responsibility.
#farmersfirst #karnatakagovernment -
Dr. G Parameshwara
@DrParameshwara
Siddaramaiah’s Delhi visit is natural, given his role as a CWC member: There is no dissatisfaction behind Siddaramaiah’s visit to Delhi. If he had been unhappy, he would not have resigned from the post of Chief Minister.
Siddaramaiah had consistently maintained that he would abide by the decision of the party High Command. Accordingly, he resigned as Chief Minister. That chapter is now over, and there is no point in repeatedly discussing the issue. As Siddaramaiah is currently a member of the Congress Working Committee (CWC), his visit to Delhi is a natural process and should not be interpreted otherwise.
Our Government under the leadership of Chief Minister D.K. Shivakumar has completed 100 days. We have several challenges ahead, but we will face them with confidence and continue to provide good governance.
S. Ravi chosen to ensure an unopposed election: Our party had decided that the Apex Bank President should be chosen unanimously and that an election should be avoided. Accordingly, MLC S. Ravi was selected at the final stage. K.N. Rajanna was also present at the decisive meeting, and the selection was made with his consent. Therefore, there is no question of dissatisfaction over the matter. The Apex Bank is an independent and non-partisan institution, and its Board of Directors will take future decisions.
Anti-Naxal Force for Tumakuru: The matter of posters linked to Naxal activity appearing in Pavagada, Tumakuru district, has come to my notice. I am visiting Tumakuru today and will discuss the issue with the Superintendent of Police. If such activity is confirmed, additional forces will be deployed.
The Anti-Naxal Force based in Karkala was not completely disbanded after Karnataka was declared Naxal-free. Half of the force was converted into a Special Action Force to deal with communal disturbances, while the remaining half continues to function as the Anti-Naxal Force. If Naxal activity is confirmed in Pavagada, the Anti-Naxal Force will be deployed in Tumakuru.
Housing sites for ex-servicemen too: Under the scheme to distribute 50,000 residential sites measuring 30x40 feet in each district to houseless families, ex-servicemen will also be provided sites. In the first phase, 5 lakh sites will be distributed across the State over the next two months.
— My response to questions from the media near my residence today. -
Dr. G Parameshwara
@DrParameshwara
*ಸಿದ್ದರಾಮಯ್ಯರವರು ಸಿಡಬ್ಲ್ಯೂಸಿ ಸದಸ್ಯರಾಗಿರುವುದರಿಂದ ದೆಹಲಿ ಭೇಟಿ ಸಹಜ : ಸಿದ್ದರಾಮಯ್ಯನವರ ದೆಹಲಿ ಭೇಟಿ ಹಿಂದೆ ಯಾವುದೇ ಅಸಮಾಧಾನದ ಕಾರಣಗಳಿಲ್ಲ. ಹಾಗೊಂದು ವೇಳೆ ಅಸಮಾಧಾನ ಇದ್ದಿದ್ದರೆ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆಯನ್ನೇ ಕೊಡುತ್ತಿರಲಿಲ್ಲ.
ಹೈಕಮಾಂಡ್ ಹೇಳಿದಂತೆ ನಡೆದುಕೊಳ್ಳುವುದಾಗಿ ಸಿದ್ದರಾಮಯ್ಯನವರು ಮೊದಲಿನಿಂದಲೂ ಹೇಳುತ್ತ ಬಂದಿದ್ದರು. ಅದರಂತೆ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದಾರೆ. ಇದು ಮುಗಿದು ಹೋದ ಅಧ್ಯಾಯ. ಈ ವಿಚಾರವಾಗಿ ಪುನಃ ಪುನಃ ಚರ್ಚೆ ಮಾಡುವುದರಲ್ಲಿ ಅರ್ಥವಿಲ್ಲ. ಸಿದ್ದರಾಮಯ್ಯ ಅವರು ಪ್ರಸ್ತುತ ಕಾಂಗ್ರೆಸ್ ಕಾರ್ಯಕಾರಿಣಿ ಸಮಿತಿ ಸದಸ್ಯರಾಗಿರುವುದರಿಂದ ದೆಹಲಿ ಭೇಟಿ ಸಹಜ ಪ್ರಕ್ರಿಯೆಯಾಗಿದೆ. ಅದಕ್ಕೆ ಬೇರೆ ಅರ್ಥಗಳನ್ನು ಕಲ್ಪಿಸಬಾರದು.
ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ನೇತೃತ್ವದ ನಮ್ಮ ಸರ್ಕಾರಕ್ಕೆ 100 ದಿನಗಳು ಪೂರೈಸಿವೆ. ಸಾಕಷ್ಟು ಸವಾಲುಗಳು ನಮ್ಮ ಮುಂದಿವೆ. ಧೃತಿಗೆಡದೆ ಎಲ್ಲವನ್ನೂ ನಿಭಾಯಿಸಿಕೊಂಡು ಉತ್ತಮ ಆಡಳಿತ ನೀಡುತ್ತೇವೆ.
*ಅವಿರೋಧ ಆಯ್ಕೆ ಕಾರಣಕ್ಕೆ ಎಸ್. ರವಿಗೆ ಅವಕಾಶ : ಅವಿರೋಧವಾಗಿ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷರನ್ನು ಆಯ್ಕೆ ಮಾಡಬೇಕು, ಚುನಾವಣೆ ನಡೆಸುವುದು ಬೇಡ ಎಂಬುದು ನಮ್ಮ ಪಕ್ಷದ ನಿರ್ಧಾರವಾಗಿತ್ತು. ಹಾಗಾಗಿ ಕೊನೆಯ ಹಂತದಲ್ಲಿ ವಿಧಾನ ಪರಿಷತ್ ಸದಸ್ಯ ಎಸ್. ರವಿ ಅವರನ್ನು ಆಯ್ಕೆ ಮಾಡಲಾಗಿದೆ. ನಿರ್ಣಾಯಕ ಸಭೆಯಲ್ಲಿ ಕೆ. ಎನ್. ರಾಜಣ್ಣ ಅವರೂ ಹಾಜರಿದ್ದರು. ಅವರ ಸಮ್ಮತಿ ಮೇರೆಗೆ ಅಧ್ಯಕ್ಷರ ಆಯ್ಕೆ ನಡೆದಿದೆ. ಹಾಗಾಗಿ ಈ ವಿಚಾರದಲ್ಲಿ ಅಸಮಾಧಾನದ ಪ್ರಶ್ನೆ ಉದ್ಭವಿಸುವುದಿಲ್ಲ. ಅಪೆಕ್ಸ್ ಬ್ಯಾಂಕ್ ಸ್ವತಂತ್ರ ಹಾಗೂ ಪಕ್ಷಾತೀತ ಸಂಸ್ಥೆಯಾಗಿದೆ. ಅದರ ಆಡಳಿತ ಮಂಡಳಿಯ ನಿರ್ದೇಶಕರು ಮುಂದಿನ ತೀರ್ಮಾನ ತೆಗೆದುಕೊಳ್ಳುತ್ತಾರೆ.
*ತುಮಕೂರಿಗೆ ನಕ್ಸಲ್ ನಿಗ್ರಹ ದಳ: ತುಮಕೂರು ಜಿಲ್ಲೆಯ ಪಾವಗಡದಲ್ಲಿ ನಕ್ಸಲ್ ಚಟುವಟಿಕೆಗೆ ಸಂಬಂಧಿಸಿದ ಪೋಸ್ಟರ್ ಪ್ರತ್ಯಕ್ಷವಾಗಿರುವ ವಿಚಾರ ನನ್ನ ಗಮನಕ್ಕೆ ಬಂದಿದೆ. ಇಂದು ತುಮಕೂರಿಗೆ ಭೇಟಿ ನೀಡುತ್ತಿದ್ದೇನೆ. ಅಲ್ಲಿಯ ಎಸ್ಪಿ ಅವರ ಜೊತೆ ಈ ಕುರಿತು ಚರ್ಚೆ ಮಾಡುತ್ತೇನೆ. ಅಂತಹ ಬೆಳವಣಿಗೆ ಕಂಡುಬಂದರೆ ಹೆಚ್ಚುವರಿ ಪಡೆಯನ್ನು ನಿಯೋಜಿಸಲಾಗುವುದು.
ನಕ್ಸಲ್ ಮುಕ್ತ ಕರ್ನಾಟಕ ಘೋಷಣೆ ಬಳಿಕ ಕಾರ್ಕಳದಲ್ಲಿದ್ದ ನಕ್ಸಲ್ ನಿಗ್ರಹ ದಳವನ್ನು ಸಂಪೂರ್ಣವಾಗಿ ಮುಚ್ಚಿಲ್ಲ. ಅರ್ಧ ಪಡೆಯನ್ನು ಕೋಮು ಗಲಭೆ ನಿಯಂತ್ರಣಕ್ಕಾಗಿ ಸ್ಪೆಷಲ್ ಆ್ಯಕ್ಷನ್ ಫೋರ್ಸ್ ಆಗಿ ಪರಿವರ್ತಿಸಲಾಗಿದೆ. ಇನ್ನರ್ಧ ಪಡೆ ನಕ್ಸಲ್ ನಿಗ್ರಹ ದಳ ಆಗಿಯೇ ಕಾರ್ಯಾಚರಣೆ ನಡೆಸುತ್ತಿದೆ. ಪಾವಗಡದಲ್ಲಿ ನಕ್ಸಲ್ ಚಟುವಟಿಕೆ ಖಾತರಿಯಾದರೆ ನಕ್ಸಲ್ ನಿಗ್ರಹ ಪಡೆಯನ್ನು ತುಮಕೂರಿಗೆ ಕರೆಸುತ್ತೇವೆ.
*ಮಾಜಿ ಯೋಧರಿಗೂ ನಿವೇಶನ: ವಸತಿ ರಹಿತರಿಗಾಗಿ ಪ್ರತಿ ಜಿಲ್ಲೆಗೆ 30x40 ಅಡಿ ಅಳತೆಯ 50 ಸಾವಿರ ನಿವೇಶನಗಳನ್ನು ಹಂಚಿಕೆ ಮಾಡುವ ಯೋಜನೆಯಡಿ ಮಾಜಿ ಯೋಧರಿಗೂ ನಿವೇಶನ ನೀಡಲಾಗುವುದು. ಮೊದಲ ಹಂತದಲ್ಲಿ ಮುಂದಿನ ಎರಡು ತಿಂಗಳಲ್ಲಿ ರಾಜ್ಯಾದ್ಯಂತ 5 ಲಕ್ಷ ನಿವೇಶನಗಳನ್ನು ಹಂಚಿಕೆ ಮಾಡಲಾಗುವುದು.
- ಇಂದು ನನ್ನ ನಿವಾಸದ ಬಳಿ ಮಾಧ್ಯಮದವರ ಪ್ರಶ್ನೆಗಳಿಗೆ ಉತ್ತರಿಸಿದೆ. -
Dr. G Parameshwara
@DrParameshwara
ಅರಣ್ಯ ಸಂಪತ್ತು, ವನ್ಯಜೀವಿಗಳು ಹಾಗೂ ಪರಿಸರ ರಕ್ಷಣೆ ಮುಂತಾದ ಕರ್ತವ್ಯಪಾಲನೆ ಸಂದರ್ಭದಲ್ಲಿ ಬಲಿದಾನಗೈದ ಅರಣ್ಯ ಸಿಬ್ಬಂದಿಗಳನ್ನು ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನವಾದ ಇಂದು ಗೌರವಪೂರ್ವಕವಾಗಿ ಸ್ಮರಿಸುತ್ತೇನೆ.
ಅವರ ತ್ಯಾಗ, ಕರ್ತವ್ಯನಿಷ್ಠೆ ಮತ್ತು ಸೇವಾ ಮನೋಭಾವ ನಮಗೆಲ್ಲರಿಗೂ ಸದಾ ಸ್ಪೂರ್ತಿಯಾಗಿರಲಿ. -
Dr. G Parameshwara
@DrParameshwara
ಸಿದ್ದರಾಮಯ್ಯನವರು ಹಾಕಿಕೊಟ್ಟಿರುವ ಮಾರ್ಗದಲ್ಲಿ ಡಿ. ಕೆ. ಶಿವಕುಮಾರ್ ಅವರು ತಮ್ಮದೇ ಹೊಸ ಆಲೋಚನೆಗಳನ್ನು ಇಟ್ಟುಕೊಂಡು ಆಡಳಿತ ನಡೆಸುತ್ತಿದ್ದಾರೆ. ಎಲ್ಲ ಇಲಾಖೆಗಳಲ್ಲಿಯೂ ಹೊಸ ಚಿಂತನೆ ಆರಂಭವಾಗಿದೆ. ಹೊಸ ಕಾರ್ಯಕ್ರಮಗಳು ಆರಂಭವಾಗಿದೆ.
This media couldn't be displayed. See it on the original post. -
Dr. G Parameshwara
@DrParameshwara
ನಿನ್ನೆ ರಾಹುಲ್ ಗಾಂಧಿಯವರ ಐತಿಹಾಸಿಕ ಭಾರತ್ ಜೋಡೊ ಪಾದಯಾತ್ರೆಗೆ ನಾಲ್ಕು ವರ್ಷಗಳು ಪೂರ್ಣಗೊಂಡಿದೆ. ದೇಶವನ್ನು ಒಗ್ಗೂಡಿಸಬೇಕು, ಜನರ ನಡುವೆ ಮತ್ತೆ ವಿಶ್ವಾಸ ಮತ್ತು ಸಹೋದರತ್ವದ ಭಾವನೆ ಬೆಳೆಸಬೇಕು ಎಂಬ ಮಹತ್ತರ ಉದ್ದೇಶದೊಂದಿಗೆ ಅವರು ಈ ಯಾತ್ರೆಯನ್ನು ಕೈಗೊಂಡಿದ್ದರು.
ನಮ್ಮ ದೇಶ ಅನೇಕ ಜಾತಿ, ಧರ್ಮ, ಭಾಷೆ ಮತ್ತು ಸಂಸ್ಕೃತಿಗಳ ಸಂಗಮ. ಆದರೆ ಇತ್ತೀಚಿನ ವರ್ಷಗಳಲ್ಲಿ ಜನರ ನಡುವೆ ಕಂದಕಗಳನ್ನು ಸೃಷ್ಟಿಸಿ, ಪರಸ್ಪರ ಅನುಮಾನ ಮತ್ತು ಅವಿಶ್ವಾಸದ ವಾತಾವರಣ ಬೆಳೆಸಲಾಗಿದೆ. ಈ ವಿಭಜನೆಯ ರಾಜಕಾರಣಕ್ಕೆ ಪ್ರೀತಿ, ಸೌಹಾರ್ದ ಮತ್ತು ಏಕತೆಯ ಸಂದೇಶದ ಮೂಲಕ ಉತ್ತರ ನೀಡಬೇಕು ಎಂಬ ಸಂಕಲ್ಪದಿಂದ ರಾಹುಲ್ ಗಾಂಧಿಯವರು ಸುಮಾರು 3,650 ಕಿ.ಮೀ. ಪಾದಯಾತ್ರೆ ನಡೆಸಿದರು.
ಭಾರತ್ ಜೋಡೊ ಯಾತ್ರೆ ಆರಂಭವಾದಾಗ ಅನೇಕ ಟೀಕೆಗಳು, ವ್ಯಂಗ್ಯಗಳು ಮತ್ತು ಅನುಮಾನಗಳು ವ್ಯಕ್ತವಾದವು. ಆದರೆ ಯಾವುದಕ್ಕೂ ಧೃತಿಗೆಡದೆ, ಒಬ್ಬ ಯುವ ನಾಯಕನಾಗಿ ದೇಶದ ಉದ್ದಗಲಕ್ಕೂ ನಡೆದು, ಲಕ್ಷಾಂತರ ಜನರನ್ನು ಭೇಟಿಯಾಗಿ, ಅವರ ನೋವು-ನಲಿವುಗಳನ್ನು ಆಲಿಸಿ, ಇಡೀ ದೇಶವೇ ತಿರುಗಿ ನೋಡುವಂತಹ ಜನಾಂದೋಲನವನ್ನು ರೂಪಿಸಿದರು.
ಆ ಯಾತ್ರೆಯ ಸಂದೇಶ ಕೇವಲ ಒಂದು ನೆನಪಾಗಿ ಉಳಿಯದೆ, ಯುವಜನರ ಬದುಕಿನ ಭಾಗವಾಗಬೇಕು ಎಂಬ ಉದ್ದೇಶದಿಂದ ಮುಖ್ಯಮಂತ್ರಿ ಶ್ರೀ ಡಿ.ಕೆ. ಶಿವಕುಮಾರ್ ಅವರು ಭಾರತ್ ಜೋಡೊ ಸಂಘಗಳನ್ನು ಸ್ಥಾಪಿಸುವ ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ.
ಗ್ರಾಮೀಣ ಯುವಕರನ್ನು ಒಂದೇ ವೇದಿಕೆಯಡಿ ಸೇರಿಸಿ, ಅವರಲ್ಲಿ ಸಹೋದರತ್ವ, ಸೌಹಾರ್ದ, ಸಾಮಾಜಿಕ ಹೊಣೆಗಾರಿಕೆ ಮತ್ತು ಏಕತೆಯ ಮನೋಭಾವ ಬೆಳೆಸುವುದು ಈ ಸಂಘಗಳ ಆಶಯ. ರಾಜ್ಯಾದ್ಯಂತ ಸುಮಾರು 10 ಸಾವಿರ ಭಾರತ್ ಜೋಡೊ ಸಂಘಗಳನ್ನು ಸ್ಥಾಪಿಸುವ ಗುರಿಯೊಂದಿಗೆ ₹1,000 ಕೋಟಿ ಅನುದಾನವನ್ನು ಮೀಸಲಿರಿಸಲಾಗಿದೆ.
ಈ ಸಂಘಗಳ ಸದಸ್ಯತ್ವ ಆರಂಭವಾದ ಕೇವಲ ಒಂದು ವಾರದಲ್ಲೇ 7.3 ಲಕ್ಷ ಯುವಕರು ಸದಸ್ಯರಾಗಿರುವುದು, ರಾಹುಲ್ ಗಾಂಧಿಯವರ ಭಾರತ್ ಜೋಡೊ ಸಂದೇಶ ಇಂದಿಗೂ ಯುವಜನರ ಮನಸ್ಸಿನಲ್ಲಿ ಜೀವಂತವಾಗಿದೆ ಎಂಬುದಕ್ಕೆ ಸ್ಪಷ್ಟ ಸಾಕ್ಷಿಯಾಗಿದೆ.
ದ್ವೇಷದಿಂದ ದೇಶ ಕಟ್ಟಲು ಸಾಧ್ಯವಿಲ್ಲ; ಪ್ರೀತಿ, ವಿಶ್ವಾಸ ಮತ್ತು ಸಹೋದರತ್ವದಿಂದ ಮಾತ್ರ ಭಾರತವನ್ನು ಇನ್ನಷ್ಟು ಬಲಿಷ್ಠವಾಗಿಸಬಹುದು. ಭಾರತ್ ಜೋಡೊ ಯಾತ್ರೆಯ ಸಂದೇಶವೂ ಅದೇ.This media couldn't be displayed. See it on the original post. -
Dr. G Parameshwara
@DrParameshwara
ನಮ್ಮ ಪ್ರಣಾಳಿಕೆಯಲ್ಲಿ ರಾಜ್ಯದ ಜನತೆಗೆ 590 ಭರವಸೆಗಳನ್ನು ನೀಡಿದ್ದೆವು. ಅವುಗಳಲ್ಲಿ ಈಗಾಗಲೇ 245ಕ್ಕೂ ಹೆಚ್ಚು ಭರವಸೆಗಳನ್ನು ಈಡೇರಿಸುವ ಮೂಲಕ, ನುಡಿದಂತೆ ನಡೆಯುವ ಸರ್ಕಾರ ಎಂಬುದನ್ನು ಸಾಬೀತುಪಡಿಸಿದ್ದೇವೆ.
ಕಳೆದ ಬಜೆಟ್ನಲ್ಲಿ ಸಿದ್ದರಾಮಯ್ಯನವರು ಕರ್ನಾಟಕದ ಸಮಗ್ರ ಅಭಿವೃದ್ಧಿಗೆ ‘11G’ ಅಭಿವೃದ್ಧಿ ಮಾದರಿಯನ್ನು ಮುಂದಿಟ್ಟಿದ್ದರು. ಗ್ಯಾರಂಟಿ ಎಕಾನಮಿ, ಗ್ರಾಸ್ರೂಟ್ ಎಕಾನಮಿ, ಗಿಗ್ ಎಕಾನಮಿ, ಗುಡ್ ಗವರ್ನೆನ್ಸ್, ಜಿಯೋಗ್ರಾಫಿಕಲ್ ಈಕ್ವಾಲಿಟಿ, ಗ್ರೀನ್ ಎಕಾನಮಿ, ಗ್ರೋಯಿಂಗ್ ಅರ್ಬನ್ ಎಕಾನಮಿ, ಗ್ಲೋಬ್ ಟ್ರಾಟಿಂಗ್ ಎಕಾನಮಿ, ಗುಡ್ ಪಬ್ಲಿಕ್ ಎಜುಕೇಷನ್, ಗುಡ್ ಹೆಲ್ತ್ ಟು ಆಲ್ ಸೇರಿದಂತೆ ಜನರ ಬದುಕಿನ ಪ್ರತಿಯೊಂದು ಆಯಾಮವನ್ನೂ ಒಳಗೊಂಡ ಅಭಿವೃದ್ಧಿಯ ದೃಷ್ಟಿಕೋನವನ್ನು ಅವರು ರೂಪಿಸಿದ್ದರು.
ಸಿದ್ದರಾಮಯ್ಯನವರು ಹಾಕಿಕೊಟ್ಟ ಈ ಜನಪರ ಮತ್ತು ಸಮಗ್ರ ಅಭಿವೃದ್ಧಿಯ ಹಾದಿಯನ್ನು ಇಂದಿನ ಮುಖ್ಯಮಂತ್ರಿಗಳು ಮತ್ತಷ್ಟು ಬಲಪಡಿಸಿ ಮುನ್ನಡೆಸುತ್ತಿದ್ದಾರೆ.
ಭರವಸೆಗಳ ಈಡೇರಿಕೆ, ಜನರ ಆರ್ಥಿಕ ಸಬಲೀಕರಣ ಮತ್ತು ಸಮತೋಲನದ ಅಭಿವೃದ್ಧಿಯೇ ನಮ್ಮ ಸರ್ಕಾರದ ಆಡಳಿತದ ಮೂಲಮಂತ್ರವಾಗಿದೆ.
#100days I #ದೃಢಕರ್ನಾಟಕದಸಂಕಲ್ಪ | #ಶತಕದಪಥ_ಪ್ರಗತಿಯರಥThis media couldn't be displayed. See it on the original post. -
Dr. G Parameshwara
@DrParameshwara
ರಾಜ್ಯದ ಜವಳಿ ಮತ್ತು ಸಿದ್ಧ ಉಡುಪು ಕ್ಷೇತ್ರದ ಬೆಳವಣಿಗೆಗೆ ಮತ್ತಷ್ಟು ವೇಗ ನೀಡುವ ನಿಟ್ಟಿನಲ್ಲಿ ನೂತನ ‘ಜವಳಿ ಮತ್ತು ಸಿದ್ಧ ಉಡುಪು ನೀತಿ 2026–31’ಕ್ಕೆ ಸಚಿವ ಸಂಪುಟ ಅನುಮೋದನೆ ನೀಡಿದೆ.
ಬೆಂಗಳೂರು ಸುತ್ತಮುತ್ತ ಯಶಸ್ವಿಯಾಗಿ ಬೆಳೆಯುತ್ತಿರುವ ಜವಳಿ ಮತ್ತು ಸಿದ್ಧ ಉಡುಪು ಕೈಗಾರಿಕೆಗಳನ್ನು ರಾಜ್ಯದ ವಿವಿಧ ಜಿಲ್ಲೆಗಳಿಗೂ ವಿಸ್ತರಿಸಲಾಗುವುದು. ಕೈಗಾರಿಕೆಗಳು ಬೆಂಗಳೂರಿಗೆ ಮಾತ್ರ ಸೀಮಿತವಾಗದೆ ರಾಜ್ಯದ ವಿವಿಧ ಭಾಗಗಳಲ್ಲೂ ಬೆಳೆಯಬೇಕು, ಸ್ಥಳೀಯ ಯುವಕರಿಗೆ ಉದ್ಯೋಗಾವಕಾಶಗಳು ದೊರೆಯಬೇಕು ಮತ್ತು ಜಿಲ್ಲೆಗಳ ಆರ್ಥಿಕ ಚಟುವಟಿಕೆಗಳಿಗೆ ಹೊಸ ವೇಗ ಸಿಗಬೇಕು ಎಂಬುದು ನಮ್ಮ ಸರ್ಕಾರದ ಉದ್ದೇಶ.
ಜವಳಿ ಕ್ಷೇತ್ರದ ವಿಸ್ತರಣೆಯ ಮೂಲಕ ಹೂಡಿಕೆ, ಉದ್ಯೋಗ ಮತ್ತು ಆರ್ಥಿಕ ಸಬಲೀಕರಣಕ್ಕೆ ಹೊಸ ಅವಕಾಶಗಳನ್ನು ಸೃಷ್ಟಿಸಿ ಕರ್ನಾಟಕವನ್ನು ಮತ್ತಷ್ಟು ಮುನ್ನಡೆಸುವುದು ನಮ್ಮ ಸಂಕಲ್ಪ.
To accelerate the growth of Karnataka’s textile and ready-made garment sector, the State Cabinet has approved the new ‘Textile and Garment Policy 2026–31’.
The textile and garment industries that have grown successfully in and around Bengaluru will be expanded to other districts across the State. Our aim is to ensure that industries are not concentrated only in Bengaluru, but grow across Karnataka, creating employment opportunities for local youth and giving fresh momentum to district economies.
By expanding the textile sector, we seek to create new opportunities for investment, employment and economic empowerment, and take Karnataka further forward.
#100days I #ದೃಢಕರ್ನಾಟಕದಸಂಕಲ್ಪ | #ಶತಕದಪಥ_ಪ್ರಗತಿಯರಥ -
Dr. G Parameshwara
@DrParameshwara
ಏರೋಸ್ಪೇಸ್ ಕ್ಷೇತ್ರದಲ್ಲಿ ಕರ್ನಾಟಕದ ಸಾಮರ್ಥ್ಯವನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ‘ಕರ್ನಾಟಕ ಏರೋಸ್ಪೇಸ್ ನೀತಿ 2026–2031’ಕ್ಕೆ ಸಚಿವ ಸಂಪುಟ ಅನುಮೋದನೆ ನೀಡಿದೆ.
ಈ ನೀತಿಯ ಮೂಲಕ ಏರೋಸ್ಪೇಸ್ ಕ್ಷೇತ್ರದಲ್ಲಿ ರಾಜ್ಯದ ಯುವಕರಿಗೆ ಹೆಚ್ಚಿನ ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಗುರಿ ಹೊಂದಲಾಗಿದೆ. ಈಗಾಗಲೇ ಎಚ್ಎಎಲ್ನಲ್ಲಿ 40 ಏರ್ಕ್ರಾಫ್ಟ್ಗಳ ಉತ್ಪಾದನೆಗೆ ಟಾಟಾ ಕಂಪನಿಯಿಂದ ಪ್ರಸ್ತಾವನೆ ಬಂದಿದ್ದು, 72 ಲೈಟ್ ಕಂಬಾಟ್ ಏರ್ಕ್ರಾಫ್ಟ್ಗಳ ಉತ್ಪಾದನೆಗೆ ಎಚ್ಎಎಲ್ ಸಿದ್ಧತೆ ನಡೆಸುತ್ತಿದೆ.
ಕೈಗಾರಿಕಾ ಬೆಳವಣಿಗೆಯ ಜೊತೆಗೆ ರಾಜ್ಯದ ಯುವಕರಿಗೆ ಹೆಚ್ಚಿನ ಉದ್ಯೋಗಾವಕಾಶಗಳನ್ನು ಸೃಷ್ಟಿಸಿ, ಅವರ ಭವಿಷ್ಯಕ್ಕೆ ಹೊಸ ಅವಕಾಶಗಳ ಬಾಗಿಲು ತೆರೆಯುವುದು ನಮ್ಮ ಆದ್ಯತೆ.
To further strengthen Karnataka’s capabilities in the aerospace sector, the State Cabinet has approved the ‘Karnataka Aerospace Policy 2026–2031’.
Through this policy, we aim to create more employment opportunities for the youth of Karnataka in the aerospace sector. Tata has already submitted a proposal to manufacture 40 aircraft at HAL, while HAL is preparing to manufacture 72 Light Combat Aircraft.
Along with industrial growth, our priority is to create more jobs for the youth and open new opportunities for their future.
#100days I #ದೃಢಕರ್ನಾಟಕದಸಂಕಲ್ಪ | #ಶತಕದಪಥ_ಪ್ರಗತಿಯರಥ -
Dr. G Parameshwara
@DrParameshwara
ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ಸೌಲಭ್ಯವನ್ನು ಮತ್ತಷ್ಟು ಸುವ್ಯವಸ್ಥಿತ, ಸುಗಮ ಮತ್ತು ಪಾರದರ್ಶಕಗೊಳಿಸುವ ನಿಟ್ಟಿನಲ್ಲಿ ‘ಶಕ್ತಿ ಸ್ಮಾರ್ಟ್ ಕಾರ್ಡ್’ ನೀಡಲು ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ.
₹237 ಕೋಟಿ ವೆಚ್ಚದಲ್ಲಿ, ಸರ್ಕಾರ–ಖಾಸಗಿ ಸಹಭಾಗಿತ್ವದೊಂದಿಗೆ ಅನುಷ್ಠಾನಗೊಳ್ಳಲಿರುವ ಈ ವ್ಯವಸ್ಥೆ ಶಕ್ತಿ ಯೋಜನೆಗೆ ತಂತ್ರಜ್ಞಾನದ ಹೊಸ ಸ್ಪರ್ಶ ನೀಡಲಿದೆ.
ಮಹಿಳೆಯರ ಸ್ವಾವಲಂಬನೆ, ಸುರಕ್ಷಿತ ಸಂಚಾರ ಮತ್ತು ಆರ್ಥಿಕ ಸಬಲೀಕರಣಕ್ಕೆ ಶಕ್ತಿ ಯೋಜನೆ ನೀಡುತ್ತಿರುವ ಬಲವನ್ನು ಮತ್ತಷ್ಟು ವಿಸ್ತರಿಸುವುದು ನಮ್ಮ ಸರ್ಕಾರದ ಉದ್ದೇಶ.
ಮಹಿಳೆಯರ ಹಕ್ಕಿನ ಪ್ರಯಾಣಕ್ಕೆ ಸ್ಮಾರ್ಟ್ ವ್ಯವಸ್ಥೆ — ಮಹಿಳಾ ಸಬಲೀಕರಣಕ್ಕೆ ನಮ್ಮ ಸರ್ಕಾರದ ಮತ್ತೊಂದು ದೃಢ ಹೆಜ್ಜೆ.
To make free bus travel for women more organised, seamless and transparent, the Government has taken an important step to introduce the ‘Shakti Smart Card’.
To be implemented at a cost of ₹237 crore through a government–private partnership, the system will bring a new technological dimension to the Shakti Scheme.
Our aim is to further strengthen the impact of Shakti in promoting women’s independence, safe mobility and economic empowerment.
A smart system for women’s right to travel — another firm step towards women’s empowerment.
#100days I #ದೃಢಕರ್ನಾಟಕದಸಂಕಲ್ಪ | #ಶತಕದಪಥ_ಪ್ರಗತಿಯರಥ -
Dr. G Parameshwara
@DrParameshwara
ಕಾಲೇಜುಗಳು ಕೇವಲ ಪದವಿ ಪಡೆಯುವ ಸ್ಥಳಗಳಲ್ಲ; ನಾಳೆಯ ನಾಯಕರನ್ನು ರೂಪಿಸುವ ವೇದಿಕೆಗಳು. ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣ, ಜವಾಬ್ದಾರಿ, ಚರ್ಚೆ ಮತ್ತು ನಿರ್ಧಾರ ಕೈಗೊಳ್ಳುವ ಸಾಮರ್ಥ್ಯ ಬೆಳೆಸುವ ನಿಟ್ಟಿನಲ್ಲಿ ಕಾಲೇಜುಗಳಲ್ಲಿ ವಿದ್ಯಾರ್ಥಿ ಚುನಾವಣೆಗಳನ್ನು ಪುನರಾರಂಭಿಸಲು ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ.
ವಿದ್ಯಾರ್ಥಿ ಚುನಾವಣೆಗಳ ಮೂಲಕ ಯುವಜನತೆಗೆ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಅರಿಯುವ, ನಾಯಕತ್ವದ ಅನುಭವ ಪಡೆಯುವ ಹಾಗೂ ತಮ್ಮ ಧ್ವನಿಯನ್ನು ಪರಿಣಾಮಕಾರಿಯಾಗಿ ಪ್ರತಿನಿಧಿಸುವ ಅವಕಾಶ ದೊರೆಯಲಿದೆ.
ಇದು ಕೇವಲ ವಿದ್ಯಾರ್ಥಿ ಚುನಾವಣೆಗಳ ಪುನರಾರಂಭವಲ್ಲ; ನಾಳೆಯ ನಾಯಕತ್ವವನ್ನು ರೂಪಿಸುವ ಮಹತ್ವದ ಹೆಜ್ಜೆ.
Colleges are not merely places to earn degrees; they are platforms that shape the leaders of tomorrow. To nurture leadership, responsibility, debate and decision-making skills among students, the Government has taken an important step to resume student elections in colleges.
Through student elections, young people will get an opportunity to understand democratic values, gain leadership experience and represent their voices effectively.
This is not just the return of student elections; it is an important step towards shaping the leadership of tomorrow.
#100days I #ದೃಢಕರ್ನಾಟಕದಸಂಕಲ್ಪ | #ಶತಕದಪಥ_ಪ್ರಗತಿಯರಥ -
Dr. G Parameshwara
@DrParameshwara
ದೂರದ ಊರುಗಳಿಂದ ಉದ್ಯೋಗ ಅರಸಿ ಬರುವ ಕಾರ್ಮಿಕರಿಗೆ ಕೆಲಸದ ಸ್ಥಳದ ಸಮೀಪದಲ್ಲೇ ವಸತಿ ಸೌಲಭ್ಯ ಕಲ್ಪಿಸುವ ಉದ್ದೇಶದಿಂದ ‘ಶ್ರಮಿಕ ನಿವಾಸ ಯೋಜನೆ’ ಜಾರಿಗೆ ತರಲಾಗುತ್ತಿದೆ.
ಕಂಪನಿಗಳ ಸಹಯೋಗದೊಂದಿಗೆ ಮನೆ ನಿರ್ಮಾಣಕ್ಕೆ ಸಹಾಯಧನ ನೀಡುತ್ತಿದ್ದೇವೆ. ಶ್ರಮಿಕರ ಬೆವರಿನ ಶ್ರಮವೇ ನಮ್ಮ ರಾಜ್ಯದ ಅಭಿವೃದ್ಧಿಯ ಶಕ್ತಿ. ಅವರ ಉದ್ಯೋಗದ ಜೊತೆಗೆ ವಸತಿ, ಸುರಕ್ಷತೆ ಮತ್ತು ನೆಮ್ಮದಿಯ ಬದುಕನ್ನೂ ಖಾತ್ರಿಪಡಿಸುವುದು ನಮ್ಮ ಸರ್ಕಾರದ ಬದ್ಧತೆ.
The ‘Shramika Nivasa Scheme’ is being introduced to provide housing near workplaces for workers who come from distant places in search of employment.
With the support of companies, financial assistance will be provided for the construction of homes. The hard work of our workers is a driving force behind Karnataka’s development. Along with employment, our Government is committed to ensuring housing, security and a dignified life for them.
#100days I #ದೃಢಕರ್ನಾಟಕದಸಂಕಲ್ಪ | #ಶತಕದಪಥ_ಪ್ರಗತಿಯರಥ -
Dr. G Parameshwara
@DrParameshwara
ಪ್ರಸ್ತುತ ತೇಗದ ಮರಕ್ಕೆ ಭಾರಿ ಪ್ರಾಮುಖ್ಯತೆ ಇದೆ. ಈ ನಿಟ್ಟಿನಲ್ಲಿ ತೇಗದ ಗಿಡಗಳನ್ನು ಬೆಳೆಸಲು ರೈತರಿಗೆ ಉತ್ತೇಜನ ನೀಡಲು ನಮ್ಮ ಸರ್ಕಾರ ಮುಂದಾಗಿದೆ.
ಮುಖ್ಯ ರಸ್ತೆ ಪಕ್ಕದ ರೈತರ ಜಮೀನುಗಳಲ್ಲಿ ತೇಗದ ಗಿಡಗಳನ್ನು ನೆಟ್ಟು, ಅವುಗಳನ್ನು ಸುಮಾರು 15 ವರ್ಷಗಳ ಕಾಲ ಪೋಷಿಸಿದರೆ, ಅದರ ಲಾಭಾಂಶದ ಶೇ. 70ರಷ್ಟನ್ನು ರೈತರಿಗೇ ನೀಡುವ ತೇಗ ಸಿರಿ ಯೋಜನೆಯನ್ನು ಜಾರಿಗೊಳಿಸುತ್ತಿದ್ದೇವೆ. ಈ ಯೋಜನೆಗಾಗಿ ಸರ್ಕಾರವು ₹493 ಕೋಟಿಯನ್ನು ವ್ಯಯಿಸುತ್ತಿದೆ.
Teak has significant economic value today. With this in mind, our Government is encouraging farmers to take up teak cultivation.
Under the Tega Siri Scheme, teak saplings will be planted on farmers’ lands along major roads. If the trees are nurtured for around 15 years, farmers will receive 70% of the returns.
The Government is investing ₹493 crore in this initiative to create a long-term source of income for farmers while promoting teak cultivation across the State.
#100days I #ದೃಢಕರ್ನಾಟಕದಸಂಕಲ್ಪ | #ಶತಕದಪಥ_ಪ್ರಗತಿಯರಥ -
Dr. G Parameshwara
@DrParameshwara
ತಂತ್ರಜ್ಞಾನ ಕ್ಷೇತ್ರದಲ್ಲಿ ಕರ್ನಾಟಕದ ಮುನ್ನಡೆಯನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ರಾಜ್ಯದಲ್ಲಿ ಎಐ ವಿಶ್ವವಿದ್ಯಾಲಯ ಸ್ಥಾಪನೆಗೆ ಮಹತ್ವದ ಹೆಜ್ಜೆ ಇಡಲಾಗಿದೆ. ಇದಕ್ಕೆ ಪೂರಕವಾಗಿ, ₹35 ಕೋಟಿ ವೆಚ್ಚದಲ್ಲಿ ಐಐಐಟಿ ಬೆಂಗಳೂರಿನಲ್ಲಿ ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಹಬ್ ಸ್ಥಾಪಿಸಲು ಸರ್ಕಾರ ಮುಂದಡಿಯಿಟ್ಟಿದೆ.
ಕೃತಕ ಬುದ್ಧಿಮತ್ತೆಯ ಕ್ಷೇತ್ರದಲ್ಲಿ ಸಂಶೋಧನೆ, ನಾವೀನ್ಯತೆ ಹಾಗೂ ಕೌಶಲ್ಯಾಭಿವೃದ್ಧಿಗೆ ಉತ್ತೇಜನ ನೀಡುವ ಮೂಲಕ ನಮ್ಮ ಯುವಜನತೆಗೆ ಹೊಸ ಅವಕಾಶಗಳ ಬಾಗಿಲು ತೆರೆಯುವ ಉದ್ದೇಶ ನಮ್ಮದು.
ತಂತ್ರಜ್ಞಾನದಲ್ಲಿ ಮುನ್ನಡೆ, ನವೋದ್ಯಮಕ್ಕೆ ಉತ್ತೇಜನ ಮತ್ತು ಯುವಜನತೆಗೆ ಅವಕಾಶ ಇದೇ ನಮ್ಮ ದೃಢ ಕರ್ನಾಟಕದ ಸಂಕಲ್ಪ.
To further strengthen Karnataka’s leadership in technology, the State has taken a major step towards establishing an AI University. As a complementary initiative, the Government is also setting up an Artificial Intelligence Hub at IIIT Bangalore at a cost of ₹35 crore.
Our aim is to open new opportunities for our youth by promoting research, innovation and skill development in Artificial Intelligence.
Leadership in technology, encouragement for innovation and opportunities for youth - this is our resolve for a stronger Karnataka.
#100days I #ದೃಢಕರ್ನಾಟಕದಸಂಕಲ್ಪ | #ಶತಕದಪಥ_ಪ್ರಗತಿಯರಥ -
Dr. G Parameshwara
@DrParameshwara
ರೈತರಿಂದ ಟ್ರ್ಯಾಕ್ಟರ್ಗಳನ್ನು ಸರ್ಕಾರವೇ ಬಾಡಿಗೆಗೆ ಪಡೆದು ಬಡ ರೈತರ ಜಮೀನು ಉಳುಮೆ ಮಾಡುವ ವಿನೂತನ ಕಾರ್ಯಕ್ಕೆ ಮುಂದಡಿಯಿಟ್ಟಿದೆ.
ಜಿಲ್ಲೆಗೆ ಒಂದರಂತೆ ರಾಜ್ಯದ 31 ತಾಲೂಕುಗಳಲ್ಲಿ ಪ್ರಾಯೋಗಿಕವಾಗಿ "ಮುಖ್ಯಮಂತ್ರಿ ನೇಗಿಲ ಯೋಗಿ ಯೋಜನೆ"ಗೆ ಚಾಲನೆ ನೀಡಲಾಗುತ್ತಿದ್ದು, ಇದಕ್ಕಾಗಿ 152 ಕೋಟಿ ರೂ. ಅನುದಾನ ಬಳಕೆ ಮಾಡಲಾಗುತ್ತದೆ.
ಬಡತನದ ಕಾರಣಕ್ಕೆ ಕೃಷಿ ಕಾರ್ಯಗಳಿಂದ ದೂರ ಸರಿದಿದ್ದ ರೈತರನ್ನು ಮರಳಿ ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಲು ಈ ಯೋಜನೆ ಸಹಕಾರಿಯಾಗಲಿದ್ದು, ಕಡ್ಡಾಯವಾಗಿ 3 ಎಕರೆಗಿಂತ ಕಡಿಮೆ ಜಮೀನು ಇರುವ ರೈತರಿಗೆ ಮಾತ್ರವೇ ಇದರ ಪ್ರಯೋಜನ ಸಿಗಲಿದೆ.
ರೈತರ ಆರ್ಥಿಕ ಸಬಲೀಕರಣ - ಆಹಾರ ಸ್ವಾವಲಂಬನೆ - ಕೃಷಿ ಭೂಮಿಯ ಸದುಪಯೋಗ ಹೀಗೆ ವಿವಿಧೋದ್ದೇಶದ ಕಲ್ಯಾಣ ಕಾರ್ಯಕ್ರಮವನ್ನು ನಾಡಿನ ಬಡ ರೈತರಿಗಾಗಿ ಈ ಮೂಲಕ ಅರ್ಪಿಸುತ್ತಿದ್ದೇವೆ.
Our Government has taken an innovative step to hire tractors from farmers and use them to plough the lands of poor farmers.
The ‘Chief Minister’s Negila Yogi Scheme’ will be launched on a pilot basis in 31 taluks — one in each district — with an allocation of ₹152 crore. The scheme will help farmers who had moved away from cultivation due to financial hardship return to farming. The benefit will be available only to farmers owning less than 3 acres of land.
Through this multi-purpose welfare initiative, we aim to promote economic empowerment of farmers, food self-reliance and productive use of agricultural land, while extending meaningful support to poor farmers across the State. -
Dr. G Parameshwara
@DrParameshwara
ಪ್ರಜೆಗಳ ಸೇವೆಯೇ ಸರ್ಕಾರದ ಮೊದಲ ಕರ್ತವ್ಯ. ಜನರು ನಮ್ಮನ್ನು ಆರಿಸಿರುವುದೇ ಅವರ ಸೇವೆಯನ್ನು ಮಾಡುವುದಕ್ಕಾಗಿ. ಹಾಗಾಗಿ ಸರ್ಕಾರವೇ ಜನರ ಬಳಿಗೆ ಹೋಗಿ ಸೇವೆಯನ್ನು ನೀಡುವ ನಿಟ್ಟಿನಲ್ಲಿ ಪ್ರಜಾಸೇವೆ ಕಾರ್ಯಕ್ರಮವನ್ನು ಆರಂಭಿಸಲಾಗಿದೆ.
ಜನರು ಅರ್ಜಿಗಳನ್ನು ಹಿಡಿದು ಕಚೇರಿಗಳನ್ನು ಅಲೆಯಬಾರದು, ಜನರ ಕುಂದುಕೊರತೆಗಳನ್ನು ಸರ್ಕಾರವೇ ಅವರ ಮನೆ ಬಾಗಿಲಿಗೆ ಹೋಗಿ ಆಲಿಸಿ ಪರಿಹರಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ. ತಿಂಗಳಿಗೆ ಎರಡು ಬಾರಿ ಸಚಿವರು ಹಾಗೂ ಶಾಸಕರು ಪ್ರಜಾಸೇವಾ ಕಾರ್ಯಕ್ರಮಗಳನ್ನು ನಡೆಸಲಿದ್ದಾರೆ.
ಈ ಮೂಲಕ ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಪರಿಹಾರ ಕಂಡುಕೊಳ್ಳುವ ಪ್ರಯತ್ನ ಮಾಡಲಾಗುವುದು. ಜನರ ಬದುಕಿನಲ್ಲಿ ಬದಲಾವಣೆ ತರುವಂತಹ ಜನಸ್ನೇಹಿ ಆಡಳಿತವನ್ನು ಮತ್ತಷ್ಟು ಬಲಪಡಿಸುವುದು ನಮ್ಮ ಸರ್ಕಾರದ ಆದ್ಯತೆ.
Serving the people is the foremost duty of any Government. The people have elected us to serve them, and with that responsibility, the Praja Seva Programme has been launched to take Government services directly to the people.
Citizens should not have to go from office to office carrying applications. The aim of this programme is for the Government to reach people at their doorstep, hear their grievances and work towards resolving them. Ministers and legislators will conduct Praja Seva programmes twice every month.
Through this initiative, efforts will be made to resolve issues on the spot and further strengthen a people-friendly system of governance that brings meaningful change to people’s lives.
#100days I #ದೃಢಕರ್ನಾಟಕದಸಂಕಲ್ಪ | #ಶತಕದಪಥ_ಪ್ರಗತಿಯರಥ -
Dr. G Parameshwara
@DrParameshwara
ಗ್ರಾಮೀಣ ಪ್ರದೇಶಗಳ ಯುವಕರಲ್ಲಿ ಪ್ರತಿಭೆ, ಸಾಮರ್ಥ್ಯ ಮತ್ತು ಸೃಜನಶೀಲತೆ ಇದೆ. ಈ ಯುವಶಕ್ತಿಯನ್ನು ಗುರುತಿಸಿ, ಒಂದೇ ವೇದಿಕೆಯಡಿ ಒಗ್ಗೂಡಿಸಿ, ಅವರ ಸಾಮಾಜಿಕ ಪಾಲ್ಗೊಳ್ಳುವಿಕೆಗೆ ಹಾಗೂ ಅಭಿವೃದ್ಧಿ ಚಟುವಟಿಕೆಗಳಿಗೆ ಹೆಚ್ಚಿನ ಅವಕಾಶ ಕಲ್ಪಿಸುವುದು ನಮ್ಮ ಸರ್ಕಾರದ ಉದ್ದೇಶವಾಗಿದೆ.
ಈ ನಿಟ್ಟಿನಲ್ಲಿ ರಾಜ್ಯಾದ್ಯಂತ ಸುಮಾರು 10 ಸಾವಿರ ಭಾರತ್ ಜೋಡೊ ಯುವ ಸಂಘಗಳನ್ನು ಸ್ಥಾಪಿಸಲಾಗುತ್ತಿದೆ. ಯುವಕರನ್ನು ಸಂಘಟಿಸಿ, ಅವರ ಪ್ರತಿಭೆ ಮತ್ತು ಸಾಮರ್ಥ್ಯಕ್ಕೆ ಸೂಕ್ತ ವೇದಿಕೆ ಒದಗಿಸುವ ಮೂಲಕ ಗ್ರಾಮೀಣ ಭಾಗದಲ್ಲಿ ಹೊಸ ಚೈತನ್ಯ ಮೂಡಿಸಲು ಈ ಸಂಘಗಳು ಸಹಕಾರಿಯಾಗಲಿವೆ. ಈ ಮಹತ್ವದ ಕಾರ್ಯಕ್ರಮಕ್ಕಾಗಿ ₹1ಸಾವಿರ ಕೋಟಿ ಅನುದಾನವನ್ನು ಮೀಸಲಿಡಲಾಗಿದೆ.
ಯುವಕರ ಶಕ್ತಿಯನ್ನು ಗ್ರಾಮೀಣ ಅಭಿವೃದ್ಧಿಯ ಶಕ್ತಿಯನ್ನಾಗಿ ಪರಿವರ್ತಿಸಿ, ಹೊಸ ಅವಕಾಶಗಳೊಂದಿಗೆ ಯುವ ಸಮುದಾಯವನ್ನು ಇನ್ನಷ್ಟು ಸಶಕ್ತಗೊಳಿಸುವುದು ನಮ್ಮ ಸರ್ಕಾರದ ಸಂಕಲ್ಪ.
Rural youth have immense talent, potential and creativity. Our Government aims to recognise this strength, bring young people together on a common platform, and create greater opportunities for their social participation and involvement in development activities.
Towards this goal, around 10,000 Bharat Jodo Yuva Sanghas are being established across the State. By organising rural youth and providing the right platform for their talent and potential, these Sanghas will help bring new energy to rural Karnataka. ₹1,000 crore has been allocated for this important initiative.
Our resolve is to transform the strength of our youth into a driving force for rural development and empower the younger generation with new opportunities.
#100days I #ದೃಢಕರ್ನಾಟಕದಸಂಕಲ್ಪ | #ಶತಕದಪಥ_ಪ್ರಗತಿಯರಥ -
Dr. G Parameshwara
@DrParameshwara
ಸ್ವಂತ ಮನೆ ಕಟ್ಟಿಸಿಕೊಳ್ಳುವ ಕನಸನ್ನು ನನಸು ಮಾಡುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ನಿವೇಶನ ಒದಗಿಸಲು ಮುಂದಾಗಿದೆ. ಭೂಮಿ ಹೊಂದಿರದ ಅರ್ಹ ಫಲಾನುಭವಿಗಳಿಗೆ ರಸ್ತೆ, ನೀರಿನ ಸೌಲಭ್ಯವಿರುವೆಡೆ ಹಾಗೂ ಗ್ರಾಮಕ್ಕೆ ಸಮೀಪವಾಗಿರುವೆಡೆ ನಿವೇಶನ ಒದಗಿಸಲು ಮುಂದಾಗಿದ್ದೇವೆ.
ಪ್ರತಿ ಜಿಲ್ಲೆಗಳಲ್ಲಿ 50 ಸಾವಿರ ನಿವೇಶನಗಳನ್ನು ಹಂಚಿಕೆ ಮಾಡುವ ಗುರಿ ಹೊಂದಲಾಗಿದ್ದು, ಇನ್ನೆರಡು ತಿಂಗಳಲ್ಲಿ ರಾಜ್ಯಾದ್ಯಂತ ಸುಮಾರು 5 ಲಕ್ಷ ನಿವೇಶನಗಳನ್ನು ಹಂಚಿಕೆ ಮಾಡಲು ನಿರ್ಧರಿಸಲಾಗಿದೆ.
ಪ್ರತಿಯೊಂದು ಬಡ ಕುಟುಂಬವೂ ಸ್ವಂತ ಸೂರು ಹೊಂದಿ, ಗೌರವದಿಂದ ಹಾಗೂ ನೆಮ್ಮದಿಯಿಂದ ಬದುಕಬೇಕು ಎಂಬುದು ನಮ್ಮ ಆಶಯವಾಗಿದೆ.
To help families realise the dream of building a home of their own, the State Government has decided to provide residential sites to eligible beneficiaries who do not own land. Sites will be identified in locations with road and water access and close to villages.
The Government has set a target of distributing 50,000 sites in each district, with around 5 lakh sites to be distributed across the State over the next two months.
Our aim is to ensure that every poor family has a home of its own and can live with dignity, security and peace of mind.
#100days I #ದೃಢಕರ್ನಾಟಕದಸಂಕಲ್ಪ | #ಶತಕದಪಥ_ಪ್ರಗತಿಯರಥ -
Dr. G Parameshwara
@DrParameshwara
ನಮ್ಮ ಸರ್ಕಾರದ 100 ದಿನಗಳ ಆಡಳಿತ ಪಯಣದಲ್ಲಿ ಜನರ ಸಂಕಷ್ಟಕ್ಕೆ ತ್ವರಿತವಾಗಿ ಸ್ಪಂದಿಸುವುದನ್ನೇ ಮೊದಲ ಆದ್ಯತೆಯಾಗಿ ಪರಿಗಣಿಸಿದ್ದೇವೆ. ರಾಜ್ಯದಲ್ಲಿ ತೀವ್ರಗೊಳ್ಳುತ್ತಿರುವ ಬರ ಪರಿಸ್ಥಿತಿಯ ನಡುವೆಯೂ ರೈತರು, ಕೃಷಿ ಕಾರ್ಮಿಕರು ಹಾಗೂ ಗ್ರಾಮೀಣ ಜನರ ಬದುಕಿಗೆ ತೊಂದರೆಯಾಗದಂತೆ ಅಗತ್ಯ ಮುನ್ನೆಚ್ಚರಿಕಾ ಮತ್ತು ಪರಿಹಾರ ಕ್ರಮಗಳನ್ನು ಸಮರೋಪಾದಿಯಲ್ಲಿ ಕೈಗೊಳ್ಳುತ್ತಿದ್ದೇವೆ.
ಆದರೆ, ಬರ ಘೋಷಣೆ ಮತ್ತು ಪರಿಹಾರಕ್ಕೆ ಸಂಬಂಧಿಸಿದ ಕೇಂದ್ರದ 2020ರ ಬರ ಕೈಪಿಡಿ ಹಾಗೂ NDRF/SDRF ಮಾನದಂಡಗಳು ಇಂದಿನ ವಾಸ್ತವ ಕೃಷಿ ಪರಿಸ್ಥಿತಿಗೆ ಸಂಪೂರ್ಣವಾಗಿ ಹೊಂದಿಕೆಯಾಗುತ್ತಿಲ್ಲ. ಬೆಳೆ ನಷ್ಟ, ಮಳೆ ಕೊರತೆ, ಸ್ಥಳೀಯ ಕೃಷಿ-ಹವಾಮಾನ ಪರಿಸ್ಥಿತಿ ಹಾಗೂ ನವೀಕೃತ FRUITS ದತ್ತಾಂಶವನ್ನು ಪರಿಗಣಿಸಿ ಈ ನಿಯಮಗಳನ್ನು ವೈಜ್ಞಾನಿಕವಾಗಿ ಮತ್ತು ರೈತಪರವಾಗಿ ಪರಿಷ್ಕರಿಸುವ ಅಗತ್ಯವಿದೆ.
ಬರ ಬಂದ ನಂತರ ಪರಿಹಾರ ನೀಡುವುದಕ್ಕಿಂತ, ಸಂಕಷ್ಟವನ್ನು ಮೊದಲೇ ಗುರುತಿಸಿ ರೈತರ ನೆರವಿಗೆ ನಿಲ್ಲುವ ವ್ಯವಸ್ಥೆ ರೂಪಿಸುವುದು ಇಂದಿಗೆ ಅಗತ್ಯವಾಗಿದೆ. ಈ ದಿಕ್ಕಿನಲ್ಲಿ ಕೇಂದ್ರ ಸರ್ಕಾರವೂ ರಾಜ್ಯದ ಮನವಿಗೆ ಸ್ಪಂದಿಸಿ ಅಗತ್ಯ ನಿಯಮ ಸಡಿಲಿಕೆ ಹಾಗೂ ಪರಿಹಾರವನ್ನು ತ್ವರಿತವಾಗಿ ಒದಗಿಸಬೇಕು.
ಈ 100 ದಿನಗಳಲ್ಲಿ ಜನಪರ ಆಡಳಿತದ ಬುನಾದಿಯನ್ನು ಮತ್ತಷ್ಟು ಗಟ್ಟಿಗೊಳಿಸಿದ್ದೇವೆ. ಮುಂದಿನ ದಿನಗಳಲ್ಲೂ ರೈತರ ಹಿತ, ಜನರಿಗೆ ಭದ್ರತೆ ಮತ್ತು ಅವರ ಸಂಕಷ್ಟಕ್ಕೆ ತ್ವರಿತ ಸ್ಪಂದನೆ ನೀಡುವುದು ನಮ್ಮ ಸರ್ಕಾರದ ಅಚಲ ಆದ್ಯತೆಯಾಗಿರಲಿದೆ.
#100days I #ದೃಢಕರ್ನಾಟಕದಸಂಕಲ್ಪ | #ಶತಕದಪಥ_ಪ್ರಗತಿಯರಥThis media couldn't be displayed. See it on the original post. -
Dr. G Parameshwara
@DrParameshwara
ಇಡೀ ದೇಶದಲ್ಲೇ ಒಂದು ರಾಜ್ಯದ ಆರ್ಥಿಕ ವ್ಯವಸ್ಥೆಯನ್ನು ಅತ್ಯಂತ ಜವಾಬ್ದಾರಿಯುತವಾಗಿ, ಆರೋಗ್ಯಕರವಾಗಿ ಮುನ್ನಡೆಸಿದ ಹಣಕಾಸು ಸಚಿವರು ಯಾರಾದರೂ ಇದ್ದರೆ, ಅದು ಅತಿ ಹೆಚ್ಚು ಬಜೆಟ್ಗಳನ್ನು ಮಂಡಿಸಿದ ನಮ್ಮ ನಾಯಕ ಶ್ರೀ ಸಿದ್ದರಾಮಯ್ಯನವರು ಎಂದು ನಾನು ಅತ್ಯಂತ ಹೆಮ್ಮೆಯಿಂದ ಹೇಳುತ್ತೇನೆ.
ನಮ್ಮ ಪಕ್ಷ ಜನತೆಗೆ ನೀಡಿದ ಭರವಸೆಯಂತೆ, ಸಿದ್ದರಾಮಯ್ಯನವರು ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದರು. ವಿರೋಧಗಳು, ಟೀಕೆಗಳು ಎಷ್ಟೇ ಬಂದರೂ, ಆ ಗ್ಯಾರಂಟಿಗಳು ಇಂದಿಗೂ ಯಶಸ್ವಿಯಾಗಿ ಮುಂದುವರಿದು ಕೋಟ್ಯಂತರ ಕುಟುಂಬಗಳ ಬದುಕಿಗೆ ಆರ್ಥಿಕ ಭದ್ರತೆ ನೀಡುತ್ತಿವೆ.
ಈವರೆಗೆ ಗ್ಯಾರಂಟಿ ಯೋಜನೆಗಳಿಗಾಗಿ ₹1,50,126 ಕೋಟಿ ವೆಚ್ಚ ಮಾಡಲಾಗಿದೆ. ಇವು ಕೇವಲ ನಮ್ಮ ಸರ್ಕಾರದ ಯೋಜನೆಗಳಾಗಿ ಉಳಿದಿಲ್ಲ; ಪಾಶ್ಚಿಮಾತ್ಯ ದೇಶಗಳ ವಿಶ್ವವಿದ್ಯಾಲಯಗಳ ಗಮನವನ್ನೂ ಸೆಳೆದಿವೆ. ಈ ಜನಪರ ಮಾದರಿಯನ್ನು ಅಧ್ಯಯನ ಮಾಡಲು ತಜ್ಞರು ಕರ್ನಾಟಕದತ್ತ ಮುಖ ಮಾಡಿದ್ದಾರೆ ಎನ್ನುವುದು ನಮ್ಮೆಲ್ಲರಿಗೂ ಹೆಮ್ಮೆಯ ವಿಚಾರ.
ನ್ಯೂಯಾರ್ಕ್ ಮೇಯರ್ ಮಮ್ದಾನಿ ಅವರು ಕೂಡ ನಮ್ಮ ಶಕ್ತಿ ಯೋಜನೆಯನ್ನು ಉದಾಹರಣೆಯಾಗಿ ಉಲ್ಲೇಖಿಸಿ, ಅಲ್ಲಿನ ಸಾರ್ವಜನಿಕ ಸಾರಿಗೆಯಲ್ಲಿ 50% ರಿಯಾಯಿತಿ ದರದಲ್ಲಿ ಜಾರಿ ಮಾಡಿದ್ದಾರೆ. ಇದು ಕರ್ನಾಟಕದ ಜನಪರ ಆಡಳಿತದ ಮಾದರಿಯ ಪ್ರಭಾವವನ್ನು ತೋರಿಸುತ್ತದೆ.
ನಾವು ಜನರಿಗೆ ಮಾತು ಕೊಟ್ಟಿದ್ದೇವೆ; ಆ ಮಾತನ್ನು ಉಳಿಸಿಕೊಂಡಿದ್ದೇವೆ.
ನಾವು ಭರವಸೆ ನೀಡಿದ್ದೇವೆ; ಅದನ್ನು ಬದುಕಿನ ಬದಲಾವಣೆಯಾಗಿ ರೂಪಿಸಿದ್ದೇವೆ.This media couldn't be displayed. See it on the original post. -
Dr. G Parameshwara
@DrParameshwara
ನಮ್ಮ ಸರ್ಕಾರಕ್ಕೆ 100 ದಿನಗಳು
ಜನರ ಆಶಯಗಳಿಗೆ ಸ್ಪಂದಿಸಿ, ಅಭಿವೃದ್ಧಿಗೆ ವೇಗ ನೀಡಿ, ಸಾಮಾಜಿಕ ನ್ಯಾಯಕ್ಕೆ ಬಲ ತುಂಬಿದ ಅರ್ಥಪೂರ್ಣ ಪಯಣ ಇದು.
ಪ್ರತಿ ನಿರ್ಧಾರದಲ್ಲೂ ಜನಹಿತ, ಪ್ರತಿ ಹೆಜ್ಜೆಯಲ್ಲೂ ಪ್ರಗತಿ, ಪ್ರತಿ ಯೋಜನೆಯಲ್ಲೂ ದೃಢ ಕರ್ನಾಟಕದ ಕನಸು.
ದೃಢ ಕರ್ನಾಟಕದ ಸಂಕಲ್ಪ – ಶತಕದ ಪಥ, ಪ್ರಗತಿಯ ರಥ
#100days I #ದೃಢಕರ್ನಾಟಕದಸಂಕಲ್ಪ | #ಶತಕದಪಥ_ಪ್ರಗತಿಯರಥThis media couldn't be displayed. See it on the original post. -
Dr. G Parameshwara
@DrParameshwara
ನಮ್ಮ ಸರ್ಕಾರಕ್ಕೆ 100 ದಿನಗಳು
ಜನರ ವಿಶ್ವಾಸವನ್ನು ಜವಾಬ್ದಾರಿಯಾಗಿ ಸ್ವೀಕರಿಸಿ, ಜನಪರ ಆಡಳಿತ, ಅಭಿವೃದ್ಧಿ ಮತ್ತು ಸಾಮಾಜಿಕ ನ್ಯಾಯದ ದಾರಿಯಲ್ಲಿ ದೃಢ ಹೆಜ್ಜೆಗಳನ್ನು ಇಟ್ಟಿದ್ದೇವೆ.
ಇದು ಕೇವಲ 100 ದಿನಗಳ ಲೆಕ್ಕವಲ್ಲ; ಕರ್ನಾಟಕದ ಭವಿಷ್ಯಕ್ಕೆ ಗಟ್ಟಿಯಾಗಿ ಅಡಿಪಾಯ ಹಾಕಿದ ಸಂಕಲ್ಪದ ಪಯಣ.
ದೃಢ ಕರ್ನಾಟಕದ ಸಂಕಲ್ಪ – ಶತಕದ ಪಥ, ಪ್ರಗತಿಯ ರಥ
#100days I #ದೃಢಕರ್ನಾಟಕದಸಂಕಲ್ಪ | #ಶತಕದಪಥ_ಪ್ರಗತಿಯರಥThis media couldn't be displayed. See it on the original post. -
Dr. G Parameshwara
@DrParameshwara
ಅಪೆಕ್ಸ್ ಬ್ಯಾಂಕ್ನ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ವಿಧಾನ ಪರಿಷತ್ ಸದಸ್ಯರಾದ ಎಸ್. ರವಿ ಹಾಗೂ ಉಪಾಧ್ಯಕ್ಷರಾಗಿ ಆಯ್ಕೆಯಾಗಿರುವ ಶರಣಗೌಡ ಬಯ್ಯಾಪುರ ಅವರು ಇಂದು ವಿಧಾನಸೌಧದ ಕಾರ್ಯಾಲಯದಲ್ಲಿ ನನ್ನನ್ನು ಭೇಟಿಯಾಗಿ ಧನ್ಯವಾದ ಸಲ್ಲಿಸಿದರು.
-
Dr. G Parameshwara
@DrParameshwara
As I complete 100 days as Karnataka’s Deputy Chief Minister and Minister for Revenue and Sports, I am sharing the key development initiatives, new schemes and public welfare programmes undertaken by my departments.
We have achieved some milestones, and there is still a long way to go.
Looking forward to your continued cooperation and support as we move ahead on this journey of development.
#100days I #ದೃಢಕರ್ನಾಟಕದಸಂಕಲ್ಪ | #ಶತಕದಪಥ_ಪ್ರಗತಿಯರಥ -
Dr. G Parameshwara
@DrParameshwara
As I complete 100 days as Karnataka’s Deputy Chief Minister and Minister for Revenue and Sports, I am sharing the key development initiatives, new schemes and public welfare programmes undertaken by my departments.
We have achieved some milestones, and there is still a long way to go.
Looking forward to your continued cooperation and support as we move ahead on this journey of development.
#100days I #ದೃಢಕರ್ನಾಟಕದಸಂಕಲ್ಪ | #ಶತಕದಪಥ_ಪ್ರಗತಿಯರಥ -
Dr. G Parameshwara
@DrParameshwara
ರಾಜ್ಯದ ಉಪ ಮುಖ್ಯಮಂತ್ರಿಯಾಗಿ, ಕಂದಾಯ ಮತ್ತು ಕ್ರೀಡಾ ಸಚಿವನಾಗಿ ಜವಾಬ್ದಾರಿ ವಹಿಸಿಕೊಂಡು 100 ದಿನ ಪೂರೈಸಿರುವ ಈ ಸಂದರ್ಭದಲ್ಲಿ ನನ್ನ ಇಲಾಖಾ ವ್ಯಾಪ್ತಿಯಲ್ಲಿ ಹಮ್ಮಿಕೊಳ್ಳಲಾಗಿರುವ ಅಭಿವೃದ್ಧಿ ಕಾರ್ಯಕ್ರಮಗಳು, ನೂತನ ಯೋಜನೆಗಳು, ಜನಕಲ್ಯಾಣ ಕಾರ್ಯಗಳ ಮಾಹಿತಿಯನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ.
ಒಂದಿಷ್ಟು ಸಾಧಿಸಿದ್ದೇವೆ. ಸಾಗಬೇಕಾದ ಹಾದಿ ಬಹಳಷ್ಟಿದೆ.
ಅಭಿವೃದ್ಧಿಯ ಈ ಪಯಣದಲ್ಲಿ ನಿಮ್ಮೆಲ್ಲರ ಸಹಕಾರ ಬೆಂಬಲ ಹೀಗೆಯೇ ಇರಲಿ.
#100days I #ದೃಢಕರ್ನಾಟಕದಸಂಕಲ್ಪ | #ಶತಕದಪಥ_ಪ್ರಗತಿಯರಥ -
Dr. G Parameshwara
@DrParameshwara
ರಾಜ್ಯದ ಉಪ ಮುಖ್ಯಮಂತ್ರಿಯಾಗಿ, ಕಂದಾಯ ಮತ್ತು ಕ್ರೀಡಾ ಸಚಿವನಾಗಿ ಜವಾಬ್ದಾರಿ ವಹಿಸಿಕೊಂಡು 100 ದಿನ ಪೂರೈಸಿರುವ ಈ ಸಂದರ್ಭದಲ್ಲಿ ನನ್ನ ಇಲಾಖಾ ವ್ಯಾಪ್ತಿಯಲ್ಲಿ ಹಮ್ಮಿಕೊಳ್ಳಲಾಗಿರುವ ಅಭಿವೃದ್ಧಿ ಕಾರ್ಯಕ್ರಮಗಳು, ನೂತನ ಯೋಜನೆಗಳು, ಜನಕಲ್ಯಾಣ ಕಾರ್ಯಗಳ ಮಾಹಿತಿಯನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ.
ಒಂದಿಷ್ಟು ಸಾಧಿಸಿದ್ದೇವೆ. ಸಾಗಬೇಕಾದ ಹಾದಿ ಬಹಳಷ್ಟಿದೆ.
ಅಭಿವೃದ್ಧಿಯ ಈ ಪಯಣದಲ್ಲಿ ನಿಮ್ಮೆಲ್ಲರ ಸಹಕಾರ ಬೆಂಬಲ ಹೀಗೆಯೇ ಇರಲಿ.
#100days I #ದೃಢಕರ್ನಾಟಕದಸಂಕಲ್ಪ | #ಶತಕದಪಥ_ಪ್ರಗತಿಯರಥ -
Dr. G Parameshwara
@DrParameshwara
In contemporary politics, if there is one name synonymous with modernity and struggle, it is our Chief Minister Shri D.K. Shivakumar. In just 100 days since assuming office, he has delivered several people-centric programmes to the people of Karnataka. Today, Karnataka is scripting a new chapter in governance. This programme has been organised to share with the people what the Congress Government has delivered in these 100 days and the path we intend to take forward.
The Chief Minister had wished to organise this programme on a much larger scale to show how we are fulfilling the promises made to the people. However, considering the severe drought situation, we felt that a grand celebration would not be appropriate and therefore chose to keep the programme simple.
A new Government came to power in Karnataka on May 20, 2023, after the previous corrupt BJP Government had lost the confidence of the people. On that day, Shri Siddaramaiah took oath and formed the Congress Government in the State. Despite criticism from the Opposition, he successfully implemented several people-centric programmes over the past three years. I extend my special congratulations to him.
*Government taking the drought situation very seriously: Karnataka is facing one of the most severe droughts witnessed in the last 150 years. The entire State is reeling under drought. There is a shortage of drinking water, fodder for livestock has become a concern, and in several districts we are seeing people migrate in search of work. Our Government has taken the situation extremely seriously and made preparations to tackle it.
A similar drought occurred in 2023–24, when Karnataka suffered losses exceeding ₹39,000 crore. We sought around ₹18,000 crore in relief from the Union Government, but there was no response. Ministers and legislators, under the leadership of the then Chief Minister, went to Delhi and protested, yet there was no response. With no other option, we had to approach the Supreme Court. Following the Court’s intervention, the Union Government released ₹3,454 crore. The relationship between the Centre and the States must reflect the constitutional vision given to us by Babasaheb Ambedkar, but the Union Government has failed to give it due importance.
We have already declared 101 taluks drought-hit in accordance with the Union Government’s guidelines. Assessments are underway in more than 100 additional taluks, which are also at the stage of being declared drought-hit. The declarations are being made in phases, and we will soon submit a memorandum to the Union Government seeking drought relief.
After GST was suddenly introduced in 2022, the Union Government had assured States that revenue losses would be compensated. Compensation was provided for a limited period and was later discontinued, resulting in a loss of around ₹18,000–20,000 crore to Karnataka. Under the 15th Finance Commission, Karnataka’s share in tax devolution was reduced by 23%, causing an additional loss of over ₹15,000 crore. Around ₹17,000 crore due to Karnataka under the JJM scheme is also still pending.
Despite all these challenges, I say with pride that if there is one Finance Minister who has kept a State’s economy among the healthiest in the country, it is our leader Siddaramaiah, who has presented 16 Budgets. As promised by our party, he implemented the Five Guarantee Schemes, which continue to run successfully. So far, ₹1,50,126 crore has been spent on these guarantees.
The success of our guarantees has been recognised beyond India as well. Universities from Western countries have appreciated and studied these initiatives. New York Mayor Zohran Mamdani has taken our Shakti scheme as an example and introduced a similar initiative there with a 50% fare concession. This shows that we have stood by the promises we made.
Our manifesto contained 590 promises, and more than 245 have already been fulfilled. In the previous Budget, Siddaramaiah presented the 11G model — Guarantee Economy, Grassroots Economy, Gig Economy, Good Governance, Geographical Equality, Green Economy, Growing Urban Economy, Globe-Trotting Economy, Good Public Education and Good Health to All. The present Chief Minister is taking this vision forward.
This is the Gen Z era. There are around 40 crore Gen Z citizens in the country. They do not look at life through the divisions of caste and religion. Their concern is simple: “How do I build my life?” They are focused on their future. When Siddaramaiah was Chief Minister, the process of filling 72,000 government posts had begun. Recruitment slowed down as the issue of internal reservation was before the courts. That process has now resumed, and the Yuva Udyoga Setu programme is also underway.
*Bharat Jodo Yatra will remain forever in people’s hearts: Yesterday marked four years since Rahul Gandhi undertook the Bharat Jodo Yatra to unite the country. India is home to people of many castes, religions and languages, but divisions have been created among them, making it difficult for people to live together with mutual trust. It was against this backdrop that Rahul Gandhi undertook a 3,650-km Padyatra.
When Rahul Gandhi began the Bharat Jodo Yatra, he faced immense criticism. Yet, as a young leader, he remained undeterred and completed a journey that made the entire country take notice. To ensure that the spirit of this Padyatra remains permanently in people’s hearts, Chief Minister D.K. Shivakumar has decided to establish Bharat Jodo Sanghas.
The objective is to bring rural youth together and foster a spirit of fraternity. Around 10,000 Sanghas are being established across the State, with ₹1,000 crore earmarked for the initiative. Within just one week of opening membership, 7.3 lakh youth have enrolled.
*Our Government is moving forward on the path laid by Siddaramaiah: D.K. Shivakumar is governing the State on the path laid by Siddaramaiah while bringing in his own new ideas. Fresh thinking and new programmes are being introduced across departments.
*Chief Minister’s Negila Yogi Scheme: Farmers are at the heart of our State and must always come first. That is why the Cabinet has decided to implement the Chief Minister’s Negila Yogi Scheme. A large number of rural youth have moved to cities, leaving behind mostly elderly farmers. As a result, thousands of acres of agricultural land remain uncultivated. The Government has therefore decided to facilitate the ploughing of such land.
*Praja Seva Programme: Serving the people is the Government’s foremost duty. People elected us so that we could serve them. The Praja Seva Programme has therefore been launched to take government services directly to the people. Citizens should not have to go from office to office carrying applications. Instead, the Government will reach their doorsteps, hear their grievances and work towards resolving them. Ministers and legislators will conduct Praja Seva programmes twice every month.
*AI University: This is the age of Artificial Intelligence. We cannot afford to fall behind, and neither can our youth. To make effective use of technology and prepare our young people for the future, an AI University is being established. Approval has been given to begin programmes at IIIT Bangalore, followed by the establishment of the AI University.
*50,000 sites in each district: Land is extremely important to people. Previous Minister transformed the Revenue Department through modern technology and digitisation. I will continue those initiatives while also introducing a new programme. The Chief Minister will launch it shortly.
Under this initiative, residential sites will be allotted to families who do not own land to construct even a 30x40 house. Our target is to distribute 50,000 sites in each district, with 5 lakh sites across the State in the first phase within the next two months.
*Karnataka Aerospace Policy 2026–2031: Bengaluru is already a national leader in aerospace technology. Tata has proposed manufacturing 40 aircraft at HAL, while HAL has come forward to manufacture 72 Light Combat Aircraft. These developments will create significant employment opportunities for our youth. With this objective, the new Karnataka Aerospace Policy 2026–2031 has been approved.
Under the Shramika Nivasa Scheme, approval has also been given to provide financial assistance for housing near workplaces for workers who come from distant places to work in large industries and companies, with the cooperation of the respective companies.
*Tega Siri Scheme: Teak has significant value today. Under the Tega Siri Scheme, farmers who plant teak saplings along the boundaries of their farms and nurture them for 15 years will receive a 70% share in the profits.
Bengaluru and its surrounding areas have a large ready-made garment industry employing lakhs of people. To encourage such industries to expand to other districts, the New Textile and Garment Policy 2026–31 has been introduced.
*Student elections to resume: It has been decided to resume student elections in colleges to nurture leadership qualities among students and strengthen democratic values.
*Shakti Smart Card: The Government has also decided to provide Smart Cards to women travelling free under the Shakti Scheme, giving beneficiaries a dedicated identity under the programme.
As the Government led by Chief Minister D.K. Shivakumar completes 100 days, all these programmes are being taken forward from today.
This is not a celebration. It is our answer to the Opposition that continues to criticise our Government. Our focus is firmly on development. Karnataka’s progress is India’s progress.
— My remarks at the “Drudha Karnatakada Sankalpa – 100 Dinagala Yashasvi Pooraike” programme -
Dr. G Parameshwara
@DrParameshwara
ಇತ್ತೀಚಿನ ರಾಜಕೀಯ ರಂಗದಲ್ಲಿ ಬಹುಶಃ ಆಧುನಿಕತೆ ಮತ್ತು ಹೋರಾಟಕ್ಕೆ ಇನ್ನೊಂದು ಹೆಸರು ಇದ್ದರೆ ಅದು ನಮ್ಮ ಮುಖ್ಯಮಂತ್ರಿ ಶ್ರೀ ಡಿ.ಕೆ.ಶಿವಕುಮಾರ್ ಅವರು. ಅಧಿಕಾರ ವಹಿಸಿಕೊಂಡ ನಂತರ ಅನೇಕ ಜನಪರವಾದ ಕಾರ್ಯಕ್ರಮಗಳನ್ನು ಕೇವಲ ನೂರು ದಿನಗಳಲ್ಲಿ ರಾಜ್ಯದ ಜನರಿಗೆ ಕೊಡುವ ಕೆಲಸ ಮಾಡಿದ್ದಾರೆ. ಇಂದು ಕರ್ನಾಟಕ ಆಡಳಿತ ವ್ಯವಸ್ಥೆಯಲ್ಲಿ ಹೊಸ ಇತಿಹಾಸವನ್ನು ಬರೆಯುತ್ತಿದೆ. ಈ ನೂರು ದಿನಗಳು ಪೂರೈಸಿರುವ ಸಂದರ್ಭದಲ್ಲಿ ಕರ್ನಾಟಕದ ಜನತೆಗೆ ಕಾಂಗ್ರೆಸ್ ಪಕ್ಷ ಕೊಟ್ಟಿರುವ ಕಾರ್ಯಕ್ರಮಗಳು ಮತ್ತು ನಮ್ಮ ಮುಂದಿನ ದಾರಿ ಏನು ಎನ್ನುವುದನ್ನು ತಿಳಿಸಲು ಇಂದಿನ ಕಾರ್ಯಕ್ರಮವನ್ನು ಆಯೋಜನೆ ಮಾಡಿದ್ದೇವೆ.
ಬಹಳ ದೊಡ್ಡ ಪ್ರಮಾಣದಲ್ಲಿ ಈ ಕಾರ್ಯಕ್ರಮವನ್ನು ಮಾಡಿ, ರಾಜ್ಯದ ಜನತೆಗೆ ನಾವು ಕೊಟ್ಟ ಮಾತಿನಂತೆ ಹೇಗೆ ನಡೆಯುತ್ತಿದ್ದೇವೆ ಎಂಬುದನ್ನು ತೋರಿಸಿಕೊಡಬೇಕು ಎನ್ನುವ ಆಲೋಚನೆ ಮುಖ್ಯಮಂತ್ರಿಗಳಿಗೆ ಇತ್ತು, ಆದರೆ ಭೀಕರ ಬರಗಾಲ ಇರುವುದರಿಂದ ದೊಡ್ಡ ಕಾರ್ಯಕ್ರಮವನ್ನು ಆಯೋಜನೆ ಮಾಡುವುದು ಸೂಕ್ತವಲ್ಲ ಎಂದು ಹೀಗೆ ಸರಳವಾದ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ.
20 ಮೇ 2023ರಲ್ಲಿ ರಾಜ್ಯದಲ್ಲಿ ಹೊಸ ಸರ್ಕಾರ ಜಾರಿಗೆ ಬಂತು. ಹಿಂದಿನ ಭ್ರಷ್ಟ ಬಿಜೆಪಿ ಸರ್ಕಾರ ಜನಮನ್ನಣೆಯನ್ನು ಕಳೆದುಕೊಂಡಿತ್ತು. ಆ ದಿನ ಸನ್ಮಾನ್ಯ ಸಿದ್ದರಾಮಯ್ಯನವರು ಪ್ರಮಾಣ ವಚನ ಸ್ವೀಕಾರ ಮಾಡಿ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವನ್ನು ಸ್ಥಾಪನೆ ಮಾಡಿದರು. ವಿರೋಧ ಪಕ್ಷಗಳ ಟೀಕೆ – ಟಿಪ್ಪಣಿಗಳ ಹೊರತಾಗಿಯೂ ಸಹ ಮೂರು ವರ್ಷಗಳ ಹಾದಿಯಲ್ಲಿ ಅನೇಕ ಜನಪರವಾದ ಕಾರ್ಯಕ್ರಮಗಳನ್ನು ಅವರು ಯಶಸ್ವಿಯಾಗಿ ಕೊಟ್ಟರು. ಅವರಿಗೆ ವಿಶೇಷವಾದ ಅಭಿನಂದನೆಗಳನ್ನು ಸಲ್ಲಿಸುತ್ತೇನೆ.
ಬರವನ್ನು ಸರ್ಕಾರ ಬಹಳ ಗಂಭೀರವಾಗಿ ಪರಿಗಣಿಸಿದೆ: ಕಳೆದ 150 ವರ್ಷಗಳ ಇತಿಹಾಸದಲ್ಲಿ ಇಂತಹ ಭೀಕರ ಬರಗಾಲ ಬಂದಿರಲಿಲ್ಲ. ಇಡೀ ರಾಜ್ಯ ಇಂದು ಬರದಿಂದಾಗಿ ತತ್ತರಿಸುತ್ತಿದೆ. ಕುಡಿಯುವ ನೀರಿಗೂ ಹಾಹಾಕಾರ, ಜಾನುವಾರುಗಳ ಮೇವಿಗೆ ಸಮಸ್ಯೆ, ಜನರು ಕೆಲಸವಿಲ್ಲದೆ ಗುಳೆ ಹೋಗುವುದನ್ನು ನಾವು ಅನೇಕ ಜಿಲ್ಲೆಗಳಲ್ಲಿ ಕಾಣುತ್ತಿದ್ದೇವೆ. ಇದನ್ನು ನಮ್ಮ ಸರ್ಕಾರ ಬಹಳ ಗಂಭೀರವಾಗಿ ಪರಿಗಣಿಸಿ, ಅದನ್ನು ಎದುರಿಸಲು ಸಿದ್ಧತೆಯನ್ನು ಮಾಡಿಕೊಂಡಿದೆ.
2023-24ರಲ್ಲಿ ಇದೇ ಮಾದರಿಯ ಬರಗಾಲ ಬಂದಿತ್ತು, ಆಗ ರಾಜ್ಯದಲ್ಲಿ 39,000 ಕೋಟಿಗೂ ಮೀರಿದ ನಷ್ಟ ಸಂಭವಿಸಿತ್ತು. ನಾವು 18,000 ಕೋಟಿ ನಷ್ಟವನ್ನು ಕೇಂದ್ರಕ್ಕೆ ತುಂಬಿಕೊಡಲು ಕೇಳಿದ್ದೆವು. ಆದರೆ ಅವರಿಂದ ಯಾವ ಸ್ಪಂದನೆ ಬರಲಿಲ್ಲ. ಕೊನೆಗೆ ಅಂದಿನ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಸಚಿವರು, ಶಾಸಕರು ಎಲ್ಲರೂ ದೆಹಲಿಗೆ ಹೋಗಿ ಪ್ರತಿಭಟನೆ ನಡೆಸಿದರು. ಆದರೂ ಯಾವ ಸ್ಪಂದನೆ ದೊರೆಯಲಿಲ್ಲ. ಆ ನಂತರ ಯಾವುದೇ ವಿಧಿಯಿಲ್ಲದೆ ಸುಪ್ರೀಂ ಕೋರ್ಟ್ ಮೆಟ್ಟಿಲು ಹತ್ತುವಂತಾಯಿತು. ಬಳಿಕ ಸುಪ್ರೀಂ ಕೋರ್ಟ್ನ ಸೂಚನೆ ಮೇರೆಗೆ ಕೇಂದ್ರ ಸರ್ಕಾರ ರೂ.3,454 ಕೋಟಿಯನ್ನು ಬಿಡುಗಡೆ ಮಾಡಿತು. ಕೇಂದ್ರ ಮತ್ತು ರಾಜ್ಯಗಳ ಸಂಬಂಧ ಬಾಬಾ ಸಾಹೇಬರು ನೀಡಿರುವ ಸಂವಿಧಾನದ ಆಶಯಗಳಿಗೆ ತಕ್ಕದಾಗಿ ಇರಬೇಕಿದೆ, ಆದರೆ ಕೇಂದ್ರ ಸರ್ಕಾರಕ್ಕೆ ಇದು ನಗಣ್ಯವಾಗಿದೆ.
ಈಗಾಗಲೇ ನಾವು ಕೇಂದ್ರದ ಮಾರ್ಗಸೂಚಿಗಳ ಅನ್ವಯ 101 ತಾಲ್ಲೂಕುಗಳನ್ನು ಬರಪೀಡಿತ ಎಂದು ಘೋಷಣೆ ಮಾಡಿದ್ದೇವೆ. ಇನ್ನೂ 100ಕ್ಕೂ ಹೆಚ್ಚು ತಾಲ್ಲೂಕುಗಳಲ್ಲಿ ಅಧ್ಯಯನ ನಡೆಯುತ್ತಿದ್ದು, ಅವನ್ನು ಕೂಡ ಬರಪೀಡಿತ ಎಂದು ಘೋಷಣೆ ಮಾಡುವ ಹಂತದಲ್ಲಿದೆ. ನಾವು ಇದನ್ನು ಹಂತಹಂತವಾಗಿ ಘೋಷಣೆ ಮಾಡಿ, ಸದ್ಯದಲ್ಲೇ ಕೇಂದ್ರ ಸರ್ಕಾರಕ್ಕೆ ಬರಪರಿಹಾರಕ್ಕಾಗಿ ಮನವಿಯನ್ನು ಕೊಡಲಿದ್ದೇವೆ.
2022ರಲ್ಲಿ ಏಕಾಏಕಿ ಜಿಎಸ್ಟಿ ವ್ಯವಸ್ಥೆಯನ್ನು ತೆಗೆದುಕೊಂಡು ಬಂದರು. ರಾಜ್ಯಗಳಿಗೆ ಇದರಲ್ಲಿ ನಷ್ಟವಾದರೆ ನಾವು ಪರಿಹಾರ ಕೊಡುತ್ತೇವೆ ಎಂದು ಕೇಂದ್ರ ಸರ್ಕಾರ ಹೇಳಿತ್ತು. ಆದರೆ ನಂತರದ ಒಂದೆರೆಡು ವರ್ಷ ಪರಿಹಾರ ನೀಡಿ ಕೊನೆಗೆ ನಿಲ್ಲಿಸಿದರು. ಇದರಿಂದ ರಾಜ್ಯ ಸರ್ಕಾರಕ್ಕೆ 18 -20 ಸಾವಿರ ಕೋಟಿ ರೂ. ನಷ್ಟವಾಯಿತು. ನಂತರ 15ನೇ ಹಣಕಾಸು ಆಯೋಗದಲ್ಲಿ ರಾಜ್ಯದ ತೆರಿಗೆ ಪಾಲನ್ನು 23% ಕಡಿಮೆ ಮಾಡಿದರು, ಇದರಿಂದ ರಾಜ್ಯಕ್ಕೆ ವಿಪರೀತ ನಷ್ಟವಾಯಿತು. ಇದರಿಂದ ಮತ್ತೆ ರೂ.15,000 ಕೋಟಿಗೂ ಅಧಿಕ ನಷ್ಟವಾಯಿತು. ಜೆಜೆಎಂ ಯೋಜನೆಯಲ್ಲಿ ರಾಜ್ಯಕ್ಕೆ ಕೊಡಬೇಕಾದ ರೂ.17,000 ಕೋಟಿ ಅನುದಾನ ಇನ್ನೂ ಬಾಕಿಯಿದೆ.
ಇಷ್ಟೆಲ್ಲಾ ಸಂಕಷ್ಟಗಳ ನಡುವೆ ಸಹ ಇಡೀ ದೇಶದಲ್ಲೇ ಯಾವುದಾದರೊಂದು ರಾಜ್ಯದ ಆರ್ಥಿಕ ವ್ಯವಸ್ಥೆಯನ್ನು ಅತ್ಯಂತ ಆರೋಗ್ಯಕರವಾಗಿ ಇಟ್ಟಿರುವ ಹಣಕಾಸು ಸಚಿವರು ಯಾರಾದರೂ ಇದ್ದರೆ ಅದು 16 ಬಜೆಟ್ ಗಳನ್ನು ನೀಡಿದ ನಮ್ಮ ನಾಯಕರಾದ ಸಿದ್ದರಾಮಯ್ಯನವರು ಎಂಬುದನ್ನು ಅತ್ಯಂತ ಹೆಮ್ಮೆಯಿಂದ ಹೇಳಬಯಸುತ್ತೇನೆ.
ಸಿದ್ದರಾಮಯ್ಯನವರು ನಮ್ಮ ಪಕ್ಷದ ಭರವಸೆಯಂತೆ 5 ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ಕೊಟ್ಟರು, ಅವುಗಳು ಇಂದಿಗೂ ಯಶಸ್ವಿಯಾಗಿ ಮುನ್ನಡೆಯುತ್ತಿದೆ. ರೂ.1,50,126 ಕೋಟಿಯನ್ನು ಗ್ಯಾರಂಟಿಗಳಿಗಾಗಿ ಖರ್ಚು ಮಾಡಲಾಗಿದೆ. ಈ ಗ್ಯಾರಂಟಿಯನ್ನು ನಾವು ಮಾತ್ರ ಒಪ್ಪಿಕೊಂಡಿದ್ದಲ್ಲ, ಪಾಶ್ಚಿಮಾತ್ಯ ದೇಶದ ವಿಶ್ವವಿದ್ಯಾಲಯಗಳಿಂದ ಈ ಗ್ಯಾರಂಟಿಗಳನ್ನು ಮೆಚ್ಚಿ, ಅದನ್ನು ಅಧ್ಯಯನ ಮಾಡಲಿಕ್ಕಾಗಿ ಬಂದಿದ್ದಾರೆ. ನ್ಯೂಯಾರ್ಕ್ ಮೇಯರ್ ಮಮ್ದಾನಿ ಅವರು ನಮ್ಮ ಶಕ್ತಿ ಯೋಜನೆಯನ್ನು ಉದಾಹರಣೆಯಾಗಿ ತೆಗೆದುಕೊಂಡು, 50% ರಿಯಾಯಿತಿ ದರದಲ್ಲಿ ಅಲ್ಲಿ ಜಾರಿ ಮಾಡಿದ್ದಾರೆ. ಹೀಗೆ ನಾವು ಕೊಟ್ಟ ಮಾತನ್ನು ಉಳಿಸಿಕೊಂಡಿದ್ದೇವೆ.
ನಮ್ಮ ಪ್ರಣಾಳಿಕೆಯಲ್ಲಿ 590 ಭರವಸೆಯನ್ನು ನೀಡಿದ್ದೆವು. ಈಗಾಗಲೇ ನಾವು 245ಕ್ಕೂ ಹೆಚ್ಚು ಭರವಸೆಗಳನ್ನು ಈಡೇರಿಸಿದ್ದೇವೆ. ಕಳೆದ ಬಜೆಟ್ನಲ್ಲಿ ಸಿದ್ದರಾಮಯ್ಯ ಅವರು 11ಜಿ (11G) ಮಾದರಿಯನ್ನು ತಿಳಿಸಿದ್ದಾರೆ. ಗ್ಯಾರಂಟಿ ಎಕಾನಮಿ, ಗ್ರಾಸ್ ರೂಟ್ ಎಕಾನಮಿ, ಗಿಗ್ ಎಕಾನಮಿ, ಗುಡ್ ಗವರ್ನೆನ್ಸ್, ಜಿಯೋಗ್ರಾಫಿಕಲ್ ಈಕ್ವಾಲಿಟಿ, ಗ್ರೀನ್ ಎಕಾನಮಿ, ಗ್ರೋಯಿಂಗ್ ಅರ್ಬನ್ ಎಕಾನಮಿ, ಗ್ಲೋಬ್ ಟ್ರಾಟಿಂಗ್ ಎಕಾನಮಿ, ಗುಡ್ ಪಬ್ಲಿಕ್ ಎಜುಕೇಷನ್, ಗುಡ್ ಹೆಲ್ತ್ ಟು ಆಲ್ ಎಂಬ 11G ಗಳನ್ನು ಉದಾಹರಣೆಯಾಗಿಟ್ಟುಕೊಂಡು ಇಂದಿನ ಮುಖ್ಯಮಂತ್ರಿಗಳು ಮುಂದುವರೆಸುತ್ತಿದ್ದಾರೆ.
ಇದು ಜೆನ್ಜಿ (GenZ) ಯುಗ. ದೇಶದಲ್ಲಿ ಈ ಜೆನ್ಜಿ (GenZ) ಗಳು 40 ಕೋಟಿ ಜನರಿದ್ದಾರೆ. ಇವರಿಗೆ ಜಾತಿ, ಧರ್ಮಗಳ ಬೇಧವಿಲ್ಲ. ಅವರ ಉದ್ದೇಶ ಒಂದೇ “ನಾನು ನನ್ನ ಜೀವನವನ್ನು ಹೇಗೆ ಕಟ್ಟಿಕೊಳ್ಳಬೇಕು?” ಎನ್ನುವುದಾಗಿದೆ. ಇವರು ಭವಿಷ್ಯದ ಬಗ್ಗೆ ಮಾತ್ರ ಚಿಂತಿಸುತ್ತಿದ್ದಾರೆ. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗ 72,000 ಸರ್ಕಾರಿ ಹುದ್ದೆಗಳನ್ನು ತುಂಬುವ ಕಾರ್ಯ ಆರಂಭಿಸಿದ್ದರು. ಒಳಮೀಸಲಾತಿ ವಿಷಯ ನ್ಯಾಯಾಲಯದಲ್ಲಿದ್ದ ಕಾರಣಕ್ಕೆ ಉದ್ಯೋಗ ಭರ್ತಿ ಸ್ವಲ್ಪ ನಿಧಾನವಾಯಿತು. ಈ ಪ್ರಕ್ರಿಯೆ ಈಗ ಆರಂಭಗೊಂಡಿದೆ. ಯುವ ಉದ್ಯೋಗ ಸೇತು ಕಾರ್ಯಕ್ರಮ ಈಗ ಚಾಲನೆಯಲ್ಲಿದೆ.
*ಭಾರತ್ ಜೋಡೊ ಪಾದಯಾತ್ರೆಯು ಶಾಶ್ವತವಾಗಿ ಜನರ ಮನಸ್ಸಲ್ಲಿ ಉಳಿಯಲಿದೆ : ನಿನ್ನೆಗೆ ರಾಹುಲ್ ಗಾಂಧಿ ಅವರು ಭಾರತ್ ಜೋಡೊ ಪಾದಯಾತ್ರೆಯನ್ನು ಮಾಡಿ 4 ವರ್ಷ ಕಳೆಯಿತು. ಇಡೀ ದೇಶವನ್ನು ಒಗ್ಗೂಡಿಸಬೇಕು ಎಂದು ಅವರು ಇದನ್ನು ಮಾಡಿದ್ದರು. ನಮ್ಮ ದೇಶದಲ್ಲಿ ಅನೇಕ ಜಾತಿ, ಧರ್ಮ, ಭಾಷೆಯ ಜನರಿದ್ದಾರೆ. ಇವರ ನಡುವೆ ಕಂದಕಗಳನ್ನು ಸೃಷ್ಟಿ ಮಾಡಿದ್ದಾರೆ. ಒಬ್ಬರನ್ನು ಒಬ್ಬರು ವಿಶ್ವಾಸದಿಂದ ಕಂಡು ಜೀವನ ಮಾಡುವುದು ಕಷ್ಟವಾಗಿದೆ ಎನ್ನುವ ಕಾರಣಕ್ಕೆ ಅವರು 3650 ಕಿ.ಮೀ ಪಾದಯಾತ್ರೆಯನ್ನು ಮಾಡಿದರು.
ರಾಹುಲ್ ಗಾಂಧಿ ಅವರು ಭಾರತ್ ಜೋಡೊ ಯಾತ್ರೆಯನ್ನು ಪ್ರಾರಂಭ ಮಾಡಿದಾಗ ಬಹಳಷ್ಟು ಟೀಕೆ ಟಿಪ್ಪಣಿಗಳು ಬಂತು. ಆದರೆ ಧೃತಿಗೆಡದೆ ಒಬ್ಬ ಯುವಕನಾಗಿ ಇಡೀ ದೇಶವೇ ತಿರುಗಿ ನೋಡುವಂತ ರೀತಿಯಲ್ಲಿ ಆ ಪಾದಯಾತ್ರೆಯನ್ನು ಮಾಡಿದರು. ಈ ಪಾದಯಾತ್ರೆಯು ಜನರ ಮನಸ್ಸಿನಲ್ಲಿ ಶಾಶ್ವತವಾಗಿ ಉಳಿಯುವಂತೆ ಮಾಡಲು ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಅವರು ಭಾರತ್ ಜೋಡೊ ಸಂಘಗಳನ್ನು ಸ್ಥಾಪಿಸುವ ನಿರ್ಧಾರ ತೆಗೆದುಕೊಂಡಿದ್ದಾರೆ.
ಗ್ರಾಮೀಣ ಯುವಕರನ್ನು ಒಟ್ಟಿಗೆ ತರಬೇಕು. ಅವರೆಲ್ಲರೂ ಸಹೋದರತ್ವ ಭಾವನೆಯಿಂದ ಒಟ್ಟಾಗಿ ಜೀವಿಸಬೇಕು. ಅದಕ್ಕಾಗಿ ಈ ಪ್ರಯತ್ನ ನಡೆಸಲಾಗುತ್ತಿದೆ. ರಾಜ್ಯಾದ್ಯಂತ ಸುಮಾರು 10 ಸಾವಿರ ಸಂಘಗಳನ್ನು ಸ್ಥಾಪಿಸಲಾಗುತ್ತಿದೆ. ಅದಕ್ಕಾಗಿ 1 ಸಾವಿರ ಕೋಟಿ ರೂ. ಹಣವನ್ನು ಮೀಸಲಿರಿಸಿದ್ದಾರೆ. ಈ ಸಂಘಗಳಿಗೆ ಸದಸ್ಯತ್ವವನ್ನು ಆರಂಭಿಸಿದ ಕೇವಲ ಒಂದು ವಾರದಲ್ಲಿ 7.3 ಲಕ್ಷ ಯುವಕರು ಸದಸ್ಯತ್ವವನ್ನು ಪಡೆದಿದ್ದಾರೆ.
*ಸಿದ್ದರಾಮಯ್ಯನವರು ಹಾಕಿಕೊಟ್ಟ ಪಥದಲ್ಲಿ ನಮ್ಮ ಸರ್ಕಾರದ ಹೆಜ್ಜೆ : ಸಿದ್ದರಾಮಯ್ಯನವರು ಹಾಕಿಕೊಟ್ಟಿರುವ ಮಾರ್ಗದಲ್ಲಿ ಡಿ. ಕೆ. ಶಿವಕುಮಾರ್ ಅವರು ತಮ್ಮದೇ ಹೊಸ ಆಲೋಚನೆಗಳನ್ನು ಇಟ್ಟುಕೊಂಡು ಆಡಳಿತ ನಡೆಸುತ್ತಿದ್ದಾರೆ. ಎಲ್ಲ ಇಲಾಖೆಗಳಲ್ಲಿಯೂ ಹೊಸ ಚಿಂತನೆ ಆರಂಭವಾಗಿದೆ. ಹೊಸ ಕಾರ್ಯಕ್ರಮಗಳು ಆರಂಭವಾಗಿದೆ.
*ಮುಖ್ಯಮಂತ್ರಿ ನೇಗಿಲ ಯೋಗಿ ಯೋಜನೆ ಜಾರಿ: ರಾಜ್ಯದಲ್ಲಿ ರೈತ ಪ್ರಮುಖ. ರೈತನೇ ಮೊದಲ ಸ್ಥಾನದಲ್ಲಿ ನಿಲ್ಲುವವನು. ಅದಕ್ಕಾಗಿ ಮುಖ್ಯಮಂತ್ರಿ ನೇಗಿಲ ಯೋಗಿ ಯೋಜನೆಯನ್ನು ಜಾರಿಗೊಳಿಸಲು ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಗ್ರಾಮೀಣ ಪ್ರದೇಶದ ಹೆಚ್ಚಿನ ಯುವಕರು ನಗರ ಸೇರಿದ್ದಾರೆ, ವಯಸ್ಸಾದವರಷ್ಟೇ ಉಳಿದಿದ್ದಾರೆ. ಹೀಗಾಗಿ ಸಾವಿರಾರು ಎಕರೆ ಕೃಷಿ ಭೂಮಿ ಉಳುಮೆಯಿಲ್ಲದೆ ಹಾಗೆ ಉಳಿದಿದೆ. ಅದಕ್ಕಾಗಿ ಸರ್ಕಾರವೇ ಅವರ ಜಮೀನನ್ನು ಉಳುಮೆ ಮಾಡಿಕೊಡಲು ನಿರ್ಧರಿಸಿದೆ.
*ಪ್ರಜಾಸೇವೆ ಕಾರ್ಯಕ್ರಮ ಆರಂಭ: ಪ್ರಜೆಗಳ ಸೇವೆಯೇ ಸರ್ಕಾರದ ಮೊದಲ ಕರ್ತವ್ಯ. ಜನರು ನಮ್ಮನ್ನು ಆರಿಸಿರುವುದೇ ಅವರ ಸೇವೆಯನ್ನು ಮಾಡುವುದಕ್ಕಾಗಿ. ಹಾಗಾಗಿ ಸರ್ಕಾರವೇ ಜನರ ಬಳಿಗೆ ಹೋಗಿ ಸೇವೆಯನ್ನು ನೀಡುವ ನಿಟ್ಟಿನಲ್ಲಿ ಪ್ರಜಾಸೇವೆ ಕಾರ್ಯಕ್ರಮವನ್ನು ಆರಂಭಿಸಲಾಗಿದೆ. ಜನರು ಅರ್ಜಿಗಳನ್ನು ಹಿಡಿದು ಕಚೇರಿಗಳನ್ನು ಅಲೆಯಬಾರದು, ಜನರ ಕುಂದುಕೊರತೆಗಳನ್ನು ಸರ್ಕಾರವೇ ಅವರ ಮನೆ ಬಾಗಿಲಿಗೆ ಹೋಗಿ ಆಲಿಸಿ ಪರಿಹರಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ. ತಿಂಗಳಿಗೆ ಎರಡು ಬಾರಿ ಸಚಿವರು ಹಾಗೂ ಶಾಸಕರು ಪ್ರಜಾಸೇವಾ ಕಾರ್ಯಕ್ರಮಗಳನ್ನು ನಡೆಸಲಿದ್ದಾರೆ.
*ಎಐ ವಿಶ್ವವಿದ್ಯಾಲಯ ಆರಂಭ : ಇದು ಕೃತಕಬುದ್ಧಿಮತ್ತೆ ಯುಗ. ಈ ಎಐ ಯುಗದಲ್ಲಿ ನಾವು ಹಿಂದೆ ಬೀಳಬಾರದು. ನಮ್ಮ ಯುವಕರು ಹಿಂದೆ ಬೀಳಬಾರದು. ಹಾಗಾಗಿ ತಂತ್ರಜ್ಞಾನವನ್ನು ಸರಿಯಾಗಿ ಉಪಯೋಗಿಸುವ ಸಲುವಾಗಿ ಎಐ ವಿಶ್ವವಿದ್ಯಾಲಯವನ್ನು ಆರಂಭಿಸಲಾಗುತ್ತಿದೆ. ಐಐಐಟಿ ಬೆಂಗಳೂರಿನಲ್ಲಿ ಕಾರ್ಯಕ್ರಮಗಳನ್ನು ಮಾಡುವುದಕ್ಕೆ, ನಂತರ ಎಐ ವಿವಿ ಸ್ಥಾಪಿಸುವುದಕ್ಕೆ ಅನುಮತಿ ನೀಡಲಾಗಿದೆ.
*ಒಂದು ಜಿಲ್ಲೆಯಲ್ಲಿ 50 ಸಾವಿರ ನಿವೇಶನ ಹಂಚಿಕೆ : ರೈತನಿಗೆ ಭೂಮಿ ಬಹಳ ಮುಖ್ಯ. ಹಿಂದಿನ ಸಚಿವರು ಆಧುನಿಕ ತಂತ್ರಜ್ಞಾನವನ್ನು ಬಳಕೆ ಮಾಡಿ ಡಿಜಿಟಲೀಕರಣಗೊಳಿಸುವ ಮೂಲಕ ಕಂದಾಯ ಇಲಾಖೆಗೆ ಹೊಸ ರೂಪ ಕೊಟ್ಟಿದ್ದಾರೆ. ನಾನು ಕೂಡ ಅವೆಲ್ಲವನ್ನೂ ಮುಂದುವರಿಸುವುದರ ಜೊತೆಗೆ ಒಂದು ವಿನೂತನ ಕಾರ್ಯಕ್ರಮವನ್ನು ಜಾರಿಗೊಳಿಸುವುದಕ್ಕೆ ಯೋಜನೆ ರೂಪಿಸುತ್ತಿದ್ದೇನೆ. ಸದ್ಯದಲ್ಲೇ ಮುಖ್ಯಮಂತ್ರಿಗಳು ಯೋಜನೆಗೆ ಚಾಲನೆ ನೀಡಲಿದ್ದಾರೆ. ಯಾರಿಗೆ 30x40 ಜಾಗದ ಮನೆ ನಿರ್ಮಿಸಿಕೊಳ್ಳಲು ಜಾಗವಿಲ್ಲ ಅಂತವರಿಗೆ ನಿವೇಶನಗಳನ್ನು ಮಂಜೂರು ಮಾಡುವ ಕಾರ್ಯಕ್ರಮವಿದು. ಒಂದು ಜಿಲ್ಲೆಯಲ್ಲಿ 50 ಸಾವಿರ ನಿವೇಶನಗಳನ್ನು ಹಂಚಿಕೆ ಮಾಡುವ ಗುರಿಯನ್ನು ಇಟ್ಟುಕೊಂಡಿದ್ದೇವೆ. ರಾಜ್ಯಾದ್ಯಂತ ಮೊದಲ ಹಂತದಲ್ಲಿ 5 ಲಕ್ಷ ನಿವೇಶನಗಳನ್ನು ಮುಂದಿನ ಎರಡು ತಿಂಗಳಲ್ಲಿ ಕೊಡುವ ಗುರಿಯಿದೆ.
*"ಕರ್ನಾಟಕ ಏರೋಸ್ಪೇಸ್ ಪಾಲಿಸಿ 2026-2031”ರ ಹೊಸ ನೀತಿಗೆ ಅನುಮೋದನೆ : ಏರೋಸ್ಪೇಸ್ ಟೆಕ್ನಾಲಜಿಯಲ್ಲಿ ಬೆಂಗಳೂರು ಇಡೀ ದೇಶದಲ್ಲಿ ಮುಂದೆ ಇದೆ. ಈಗಾಗಲೇ ನಮಗೆ ಎಚ್ಎಎಲ್ನಲ್ಲಿ 40 ಏರ್ಕ್ರಾಫ್ಟ್ಗಳು ಉತ್ಪಾದನೆ ಮಾಡುವುದಾಗಿ ಟಾಟಾ ಕಂಪನಿಯವರು ಪ್ರಸ್ತಾವನೆ ಇಟ್ಟಿದ್ದಾರೆ. 72 ಲೈಟ್ ಕಂಬಾಟ್ ಏರ್ಕ್ರಾಫ್ಟ್ಗಳನ್ನು ಉತ್ಪಾದನೆ ಮಾಡಲು ಎಚ್ಎಎಲ್ನವರು ಮುಂದೆ ಬಂದಿದ್ದಾರೆ. ಇದೆಲ್ಲವೂ ನಮ್ಮ ಯುವಕರಿಗೆ ಉದ್ಯೋಗಾವಕಾಶಗಳನ್ನು ತೆರೆದಿಡಲಿದೆ ಎಂಬ ಕಾರಣಕ್ಕೆ “ಕರ್ನಾಟಕ ಏರೋಸ್ಪೇಸ್ ಪಾಲಿಸಿ 2026-2031”ರ ಹೊಸ ನೀತಿಗೆ ಅನುಮೋದನೆ ನೀಡಲಾಗಿದೆ.
ಅಲ್ಲದೆ, ಶ್ರಮಿಕ ನಿವಾಸ ಯೋಜನೆಯಡಿ ದೂರದ ಊರುಗಳಿಂದ ಬಂದು ದೊಡ್ಡ ಕೈಗಾರಿಕೆ / ಕಂಪನಿಗಳಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಕೆಲಸದ ಸ್ಥಳದ ಸಮೀಪದಲ್ಲೇ ಕಂಪನಿಗಳ ಸಹಯೋಗದಲ್ಲಿ ಮನೆ ನಿರ್ಮಿಸಿಕೊಳ್ಳಲು ಸಹಾಯಧನ ನೀಡಲು ಅನುಮೋದನೆ ನೀಡಲಾಗಿದೆ.
*ತೇಗ ಸಿರಿ ಯೋಜನೆ : ಪ್ರಸ್ತುತ ತೇಗ ಮರಕ್ಕೆ ಹೆಚ್ಚು ಪ್ರಾಮುಖ್ಯತೆ ಇದೆ. ರೈತರು ತಮ್ಮ ತೋಟದ ಬೇಲಿಗಳಲ್ಲಿ ತೇಗದ ಗಿಡಗಳನ್ನು ನೆಟ್ಟು 15 ವರ್ಷ ನೋಡಿಕೊಂಡು ಬೆಳೆಸಿದರೆ ಲಾಭದಲ್ಲಿ ಶೇ 70ರಷ್ಟು ಹಂಚಿಕೆ ಮಾಡುವ ತೇಗ ಸಿರಿ ಯೋಜನೆಗೆ ಅನುಮೋದನೆ ನೀಡಲಾಗಿದೆ.
ಬೆಂಗಳೂರು ಮತ್ತು ಸುತ್ತಮುತ್ತ ಸಿದ್ಧ ಉಡುಪಗಳನ್ನು ತಯಾರು ಮಾಡುವ ಕೈಗಾರಿಕೆಗಳಿವೆ. ಲಕ್ಷಾಂತರ ಜನರು ಇಲ್ಲಿ ಕೆಲಸ ಮಾಡುತ್ತಿದ್ದಾರೆ. ಇಂತಹ ಕೈಗಾರಿಕೆಗಳನ್ನು ಬೇರೆ ಬೇರೆ ಜಿಲ್ಲೆಗಳಲ್ಲೂ ಸ್ಥಾಪಿಸಲು ಉತ್ತೇಜನ ನೀಡುವ ಸಲುವಾಗಿ 'ನೂತನ ಜವಳಿ ಮತ್ತು ಸಿದ್ಧ ಉಡುಪು ನೀತಿ 2026-31’ಯನ್ನು ತರಲಾಗಿದೆ.
*ವಿದ್ಯಾರ್ಥಿ ಚುನಾವಣೆ ಪುನರಾರಂಭ: ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣವನ್ನು ಬೆಳೆಸಲು ಮತ್ತು ಪ್ರಜಾಪ್ರಭುತ್ವ ಮೌಲ್ಯಗಳನ್ನು ವೃದ್ಧಿಗೊಳಿಸಲು ಕಾಲೇಜುಗಳಲ್ಲಿ ವಿದ್ಯಾರ್ಥಿ ಚುನಾವಣೆಗಳನ್ನು ಪುನಾರಂಭಿಸಲು ತೀರ್ಮಾನಿಸಲಾಗಿದೆ.
*ಶಕ್ತಿ ಸ್ಮಾರ್ಟ್ ಕಾರ್ಡ್: ಶಕ್ತಿ ಯೋಜನೆಯಡಿ ಉಚಿತವಾಗಿ ಪ್ರಯಾಣಿಸುತ್ತಿರುವ ಮಹಿಳೆಯರಿಗೆ ಒಂದು ಗುರುತನ್ನು ನೀಡುವ ಸಲುವಾಗಿ ಸ್ಮಾರ್ಟ್ ಕಾರ್ಡ್ ಕೊಡುವ ತೀರ್ಮಾನವನ್ನು ತೆಗೆದುಕೊಳ್ಳಲಾಗಿದೆ.
ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ನೇತೃತ್ವದ ಸರ್ಕಾರಕ್ಕೆ 100 ದಿನಗಳು ಪೂರ್ಣಗೊಂಡ ಹಿನ್ನೆಲೆ ಇಂದಿನಿಂದ ಈ ಎಲ್ಲ ಕಾರ್ಯಕ್ರಮಗಳನ್ನು ಜಾರಿಗೊಳಿಸಲಾಗುತ್ತಿದೆ. ಈ ಕಾರ್ಯಕ್ರಮವು ಸಂಭ್ರಮಾಚರಣೆಯಲ್ಲ, ನಮ್ಮ ಸರ್ಕಾರವನ್ನು ಟೀಕಿಸುತ್ತಿರುವ ವಿರೋಧ ಪಕ್ಷಗಳಿಗೆ ಉತ್ತರವಾಗಿದೆ. ನಾವು ಅಭಿವೃದ್ಧಿಯ ಕಡೆಗೆ ಹೆಚ್ಚು ಗಮನ ಹರಿಸಿದ್ದೇವೆ. ಕರ್ನಾಟಕದ ಪ್ರಗತಿ ಈ ದೇಶದ ಪ್ರಗತಿಯಾಗಿದೆ.
- "ದೃಢ ಕರ್ನಾಟಕದ ಸಂಕಲ್ಪ - 100 ದಿನಗಳ ಯಶಸ್ವಿ ಪೂರೈಕೆ" ಕಾರ್ಯಕ್ರಮದಲ್ಲಿ ನನ್ನ ಮಾತುಗಳು -
Dr. G Parameshwara
@DrParameshwara
ಮುಖ್ಯಮಂತ್ರಿ ಶ್ರೀ ಡಿ.ಕೆ. ಶಿವಕುಮಾರ್ ಅವರ ನೇತೃತ್ವದ ನಮ್ಮ ಸರ್ಕಾರ 100 ದಿನಗಳ ಜನಪರ ಆಡಳಿತವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ಹಿನ್ನೆಲೆಯಲ್ಲಿ ಇಂದು ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ನಲ್ಲಿ ಆಯೋಜಿಸಿದ್ದ “ದೃಢ ಕರ್ನಾಟಕದ ಸಂಕಲ್ಪ – ಶತಕದ ಪಥ, ಪ್ರಗತಿಯ ರಥ” ವಿಶೇಷ ಕಾರ್ಯಕ್ರಮದಲ್ಲಿ ಪಾಲ್ಗೊಂಡೆ.
ಈ ಸಂದರ್ಭದಲ್ಲಿ ‘ಮುಖ್ಯಮಂತ್ರಿ ರೈತ ಚೈತನ್ಯ ಯೋಜನೆ’ ಹಾಗೂ ಗ್ರಾಮೀಣ ಭಾಗದ ವಸತಿ ರಹಿತ ಕುಟುಂಬಗಳಿಗೆ 5 ಲಕ್ಷ ನಿವೇಶನಗಳ ಹಕ್ಕುಪತ್ರ ವಿತರಿಸುವ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿಗಳ ಜೊತೆಗೂಡಿ ಸಹಿ ಮಾಡುವ ಮೂಲಕ ಚಾಲನೆ ನೀಡಿದೆ.
ಸಮಾರಂಭದಲ್ಲಿ ಮಾಜಿ ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯ, ಸಚಿವರಾದ ಕೆ.ಎಚ್. ಮುನಿಯಪ್ಪ, ಕೆ.ಜೆ. ಜಾರ್ಜ್, ಕೃಷ್ಣ ಬೈರೇಗೌಡ, ಬಸವರಾಜ ರಾಯರೆಡ್ಡಿ, ಪ್ರಿಯಾಂಕ್ ಖರ್ಗೆ, ಬೈರತಿ ಸುರೇಶ್ ಸೇರಿದಂತೆ ಸಚಿವ ಸಂಪುಟದ ಸಹೋದ್ಯೋಗಿಗಳು, ಶಾಸಕರು, ವಿಧಾನ ಪರಿಷತ್ ಸದಸ್ಯರು ಹಾಗೂ ಸಂಸದರು ಉಪಸ್ಥಿತರಿದ್ದರು.
As our Government, led by Chief Minister Shri D.K. Shivakumar, successfully completed 100 days of people-centric governance, I participated in the special programme “Drudha Karnatakada Sankalpa – Shatakada Patha, Pragatiya Ratha” held today at the Banquet Hall of Vidhana Soudha.
On the occasion, along with the Chief Minister, I launched the ‘Chief Minister’s Raitha Chaitanya Scheme’ and the programme to distribute title deeds for 5 lakh residential sites to houseless families in rural areas by signing the initiative.
Former Chief Minister Shri Siddaramaiah, Ministers Shri K.H. Muniyappa, Shri K.J. George, Shri Krishna Byre Gowda, Shri Basavaraj Rayareddy, Shri Priyank Kharge, Shri Byrathi Suresh, along with Cabinet colleagues, MLAs, MLCs and MPs were present at the programme. -
Dr. G Parameshwara
@DrParameshwara
As I complete 100 days as Karnataka’s Deputy Chief Minister and Minister for Revenue and Sports, I am sharing the key development initiatives, new schemes and public welfare programmes undertaken by my departments.
We have achieved some milestones, and there is still a long way to go.
Looking forward to your continued cooperation and support as we move ahead on this journey of development.
#100days I #ದೃಢಕರ್ನಾಟಕದಸಂಕಲ್ಪ | #ಶತಕದಪಥ_ಪ್ರಗತಿಯರಥ -
Dr. G Parameshwara
@DrParameshwara
As I complete 100 days as Karnataka’s Deputy Chief Minister and Minister for Revenue and Sports, I am sharing the key development initiatives, new schemes and public welfare programmes undertaken by my departments.
We have achieved some milestones, and there is still a long way to go.
Looking forward to your continued cooperation and support as we move ahead on this journey of development.
#100days I #ದೃಢಕರ್ನಾಟಕದಸಂಕಲ್ಪ | #ಶತಕದಪಥ_ಪ್ರಗತಿಯರಥ -
Dr. G Parameshwara
@DrParameshwara
ರಾಜ್ಯದ ಉಪ ಮುಖ್ಯಮಂತ್ರಿಯಾಗಿ, ಕಂದಾಯ ಮತ್ತು ಕ್ರೀಡಾ ಸಚಿವನಾಗಿ ಜವಾಬ್ದಾರಿ ವಹಿಸಿಕೊಂಡು 100 ದಿನ ಪೂರೈಸಿರುವ ಈ ಸಂದರ್ಭದಲ್ಲಿ ನನ್ನ ಇಲಾಖಾ ವ್ಯಾಪ್ತಿಯಲ್ಲಿ ಹಮ್ಮಿಕೊಳ್ಳಲಾಗಿರುವ ಅಭಿವೃದ್ಧಿ ಕಾರ್ಯಕ್ರಮಗಳು, ನೂತನ ಯೋಜನೆಗಳು, ಜನಕಲ್ಯಾಣ ಕಾರ್ಯಗಳ ಮಾಹಿತಿಯನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ.
ಒಂದಿಷ್ಟು ಸಾಧಿಸಿದ್ದೇವೆ. ಸಾಗಬೇಕಾದ ಹಾದಿ ಬಹಳಷ್ಟಿದೆ.
ಅಭಿವೃದ್ಧಿಯ ಈ ಪಯಣದಲ್ಲಿ ನಿಮ್ಮೆಲ್ಲರ ಸಹಕಾರ ಬೆಂಬಲ ಹೀಗೆಯೇ ಇರಲಿ.
#100days I #ದೃಢಕರ್ನಾಟಕದಸಂಕಲ್ಪ | #ಶತಕದಪಥ_ಪ್ರಗತಿಯರಥ -
Dr. G Parameshwara
@DrParameshwara
ರಾಜ್ಯದ ಉಪ ಮುಖ್ಯಮಂತ್ರಿಯಾಗಿ, ಕಂದಾಯ ಮತ್ತು ಕ್ರೀಡಾ ಸಚಿವನಾಗಿ ಜವಾಬ್ದಾರಿ ವಹಿಸಿಕೊಂಡು 100 ದಿನ ಪೂರೈಸಿರುವ ಈ ಸಂದರ್ಭದಲ್ಲಿ ನನ್ನ ಇಲಾಖಾ ವ್ಯಾಪ್ತಿಯಲ್ಲಿ ಹಮ್ಮಿಕೊಳ್ಳಲಾಗಿರುವ ಅಭಿವೃದ್ಧಿ ಕಾರ್ಯಕ್ರಮಗಳು, ನೂತನ ಯೋಜನೆಗಳು, ಜನಕಲ್ಯಾಣ ಕಾರ್ಯಗಳ ಮಾಹಿತಿಯನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ.
ಒಂದಿಷ್ಟು ಸಾಧಿಸಿದ್ದೇವೆ. ಸಾಗಬೇಕಾದ ಹಾದಿ ಬಹಳಷ್ಟಿದೆ.
ಅಭಿವೃದ್ಧಿಯ ಈ ಪಯಣದಲ್ಲಿ ನಿಮ್ಮೆಲ್ಲರ ಸಹಕಾರ ಬೆಂಬಲ ಹೀಗೆಯೇ ಇರಲಿ.
#100days I #ದೃಢಕರ್ನಾಟಕದಸಂಕಲ್ಪ | #ಶತಕದಪಥ_ಪ್ರಗತಿಯರಥ -
Dr. G Parameshwara
@DrParameshwara
ಬುಧವಾರ ನಡೆದ ಸಚಿವ ಸಂಪುಟ ಸಭೆಯ ಪ್ರಮುಖ ನಿರ್ಣಯಗಳನ್ನು ಮಾಧ್ಯಮಕ್ಕೆ ವಿವರಿಸಿದೆ.
ಈ ಕುರಿತಾದ ಪತ್ರಿಕಾ ವರದಿಗಳು ಹೀಗಿವೆ..
On Wednesday, I briefed the media on the key decisions taken at the Cabinet meeting.
Here are some of the press reports on the decisions.. -
Dr. G Parameshwara
@DrParameshwara
ನ್ಯಾಯವಾದಿಯಾಗಿ ಬದುಕು ಆರಂಭಿಸಿ ಜನಪರ ಕಾಳಜಿಯಿಂದ ಮುಖ್ಯಮಂತ್ರಿ, ಉಪರಾಷ್ಟ್ರಪತಿಯಂತಹ ಉನ್ನತ ಹುದ್ದೆಗಳನ್ನು ಅಲಂಕರಿಸಿ, ದೇಶಕ್ಕಾಗಿ ತಮ್ಮನ್ನು ಸಮರ್ಪಿಸಿಕೊಂಡವರು ಬಿ.ಡಿ. ಜತ್ತಿಯವರು.
ಬಸವ ಸಮಿತಿ ಸ್ಥಾಪನೆಯ ಮೂಲಕ ಶರಣ ಚಿಂತನೆಗಳನ್ನು ವಿಶ್ವವ್ಯಾಪಿಯಾಗಿಸಿದ ಬಿ.ಡಿ. ಜತ್ತಿಯವರ ಜನ್ಮದಿನದ ಈ ಸಂದರ್ಭದಲ್ಲಿ ಅವರಿಗೆ ನನ್ನ ನಮನಗಳು.
ಅವರ ಆದರ್ಶಗಳು ಮತ್ತು ಜನಪರ ಮೌಲ್ಯಗಳು ಸದಾ ನಮಗೆ ಪ್ರೇರಣೆಯಾಗಲಿ. -
Dr. G Parameshwara
@DrParameshwara
-
Dr. G Parameshwara
@DrParameshwara
Today marks the completion of 100 days since I assumed responsibility as the Deputy Chief Minister and Minister for Revenue and Sports. It has been a meaningful journey of responding to people’s concerns, accelerating development works, and strengthening a people-centric administration.
I have always viewed power not as an opportunity, but as a responsibility to serve the people. In every decision, I have tried to keep public welfare at the centre and work with commitment towards the larger interests of the people.
In the Revenue Department, we have worked to make public services faster, more transparent, and easily accessible. From land records to the disposal of applications and other issues that directly affect citizens, we have prioritised timely solutions and taken steps to make the administration more responsive and people-friendly.
In the field of sports, we have initiated several programmes to provide opportunities for young talent, strengthen sporting infrastructure, encourage athletes, and take Karnataka to greater heights in sporting excellence. Our goal is to provide a strong platform for the abilities of our youth and promote sports as a culture of health, discipline, and achievement.
Development is not merely about projects and infrastructure; it is about the positive change it brings to people’s lives. New initiatives, better infrastructure, employment opportunities for youth, and timely responses to the concerns of farmers and ordinary citizens remain central to our vision of inclusive and comprehensive development.
I thank the people of Karnataka for placing their trust in me and giving me the opportunity to serve. Your trust is my strength, and your expectations will continue to guide every step I take.
A new chapter of development has begun; let us walk this path forward together. -
Dr. G Parameshwara
@DrParameshwara
ಉಪಮುಖ್ಯಮಂತ್ರಿ, ಕಂದಾಯ ಹಾಗೂ ಕ್ರೀಡಾ ಸಚಿವನಾಗಿ ಜವಾಬ್ದಾರಿ ವಹಿಸಿಕೊಂಡು ಇಂದಿಗೆ 100 ದಿನಗಳು ಪೂರೈಸಿದೆ. ಜನರ ಸಮಸ್ಯೆಗಳಿಗೆ ಸ್ಪಂದಿಸಿ, ಅಭಿವೃದ್ಧಿ ಕಾರ್ಯಗಳಿಗೆ ವೇಗ ನೀಡುತ್ತಾ, ಜನಪರ ಆಡಳಿತವನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಮುನ್ನಡೆಸಿದ ಅರ್ಥಪೂರ್ಣ ಪಯಣ ಇದಾಗಿದೆ.
ನಾನು ಅಧಿಕಾರವನ್ನು ಅವಕಾಶವಾಗಿ ಅಲ್ಲ, ಜನಸೇವೆಯ ಜವಾಬ್ದಾರಿಯಾಗಿ ಸ್ವೀಕರಿಸಿ, ಪ್ರತಿಯೊಂದು ನಿರ್ಧಾರದಲ್ಲೂ ಜನಹಿತವನ್ನೇ ಕೇಂದ್ರವಾಗಿಸಿಕೊಂಡು ಕಾರ್ಯನಿರ್ವಹಿಸುತ್ತಿದ್ದೇನೆ.
ಕಂದಾಯ ಇಲಾಖೆಯಲ್ಲಿ ಜನಸಾಮಾನ್ಯರಿಗೆ ತ್ವರಿತ, ಪಾರದರ್ಶಕ ಮತ್ತು ಸುಲಭ ಸೇವೆ ದೊರೆಯುವಂತೆ ಆಡಳಿತ ವ್ಯವಸ್ಥೆಯನ್ನು ಮತ್ತಷ್ಟು ಚುರುಕುಗೊಳಿಸುವ ಪ್ರಯತ್ನ ಮಾಡಿದ್ದೇವೆ. ಭೂ ದಾಖಲೆಗಳು, ಅರ್ಜಿಗಳ ವಿಲೇವಾರಿ ಸೇರಿದಂತೆ ಜನರು ನೇರವಾಗಿ ಎದುರಿಸುವ ಸಮಸ್ಯೆಗಳಿಗೆ ಆದ್ಯತೆ ನೀಡಿ, ಆಡಳಿತವನ್ನು ಇನ್ನಷ್ಟು ಜನಸ್ನೇಹಿಯಾಗಿಸುವತ್ತ ಹೆಜ್ಜೆ ಇಟ್ಟಿದ್ದೇವೆ.
ಕ್ರೀಡಾ ಕ್ಷೇತ್ರದಲ್ಲಿ ಯುವ ಪ್ರತಿಭೆಗಳಿಗೆ ಅವಕಾಶ, ಉತ್ತಮ ಮೂಲಸೌಕರ್ಯ, ಕ್ರೀಡಾಪಟುಗಳಿಗೆ ಅಗತ್ಯ ಪ್ರೋತ್ಸಾಹ ಮತ್ತು ರಾಜ್ಯವನ್ನು ಕ್ರೀಡಾ ಸಾಧನೆಯಲ್ಲಿ ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯುವ ದೃಷ್ಟಿಯಿಂದ ಹಲವು ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದೇವೆ. ಯುವಕರ ಸಾಮರ್ಥ್ಯಕ್ಕೆ ವೇದಿಕೆ ಕಲ್ಪಿಸಿ, ಕ್ರೀಡೆಯನ್ನು ಆರೋಗ್ಯ, ಶಿಸ್ತು ಮತ್ತು ಸಾಧನೆಯ ಸಂಸ್ಕೃತಿಯನ್ನಾಗಿ ರೂಪಿಸುವುದು ನಮ್ಮ ಗುರಿಯಾಗಿದೆ.
ಅಭಿವೃದ್ಧಿ ಎಂದರೆ ಕಾಮಗಾರಿಯಲ್ಲ, ಜನರ ಬದುಕಿನಲ್ಲಿ ಕಾಣುವ ಬದಲಾವಣೆ. ನೂತನ ಕಾರ್ಯಕ್ರಮಗಳು, ಮೂಲಸೌಕರ್ಯ, ಯುವಕರಿಗೆ ಉದ್ಯೋಗ, ರೈತರ ಮತ್ತು ಸಾಮಾನ್ಯ ಜನರ ಸಮಸ್ಯೆಗಳಿಗೆ ಸ್ಪಂದಸುವುದು ಹೀಗೆ ಪ್ರತಿಯೊಂದು ವಿಷಯದಲ್ಲೂ ಸಮಗ್ರ ಅಭಿವೃದ್ಧಿಯ ದೃಷ್ಟಿಕೋನದೊಂದಿಗೆ ಕಾರ್ಯನಿರ್ವಹಿಸುವ ಸಂಕಲ್ಪ ನಮ್ಮದು.
ನನ್ನ ಮೇಲೆ ವಿಶ್ವಾಸವಿಟ್ಟು ಜನಸೇವೆಗೆ ಅವಕಾಶ ನೀಡಿದ ರಾಜ್ಯದ ಜನತೆಗೆ ಧನ್ಯವಾದಗಳು. ನಿಮ್ಮ ವಿಶ್ವಾಸವೇ ನನ್ನ ಶಕ್ತಿ, ನಿಮ್ಮ ನಿರೀಕ್ಷೆಗಳೇ ನನ್ನ ಮುಂದಿನ ಹೆಜ್ಜೆಗಳಿಗೆ ದಿಕ್ಕು.
ಅಭಿವೃದ್ಧಿಯ ಪರ್ವಕ್ಕೆ ಮುನ್ನುಡಿ ಬರೆದಾಗಿದೆ; ಈ ಹಾದಿಯಲ್ಲಿ ನಾವು–ನೀವು ಜೊತೆಯಾಗಿ ಸಾಗೋಣ. -
Dr. G Parameshwara
@DrParameshwara
ಕರಾವಳಿ ಮತ್ತು ಮಲೆನಾಡು ಭಾಗಗಳ ಪ್ರವಾಸೋದ್ಯಮ ಸಾಮರ್ಥ್ಯವನ್ನು ಸಮರ್ಪಕವಾಗಿ ಬಳಸಿಕೊಂಡು, ಸುಸ್ಥಿರ ಪ್ರವಾಸೋದ್ಯಮ ಅಭಿವೃದ್ಧಿಗೆ ಉತ್ತೇಜನ ನೀಡುವ ಉದ್ದೇಶದಿಂದ ಇಂದು ಸಿಎಂ ಗೃಹಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಅಧ್ಯಕ್ಷತೆಯಲ್ಲಿ ನಡೆದ ‘ಕರಾವಳಿ–ಮಲೆನಾಡು ಪ್ರವಾಸೋದ್ಯಮ ಅಭಿವೃದ್ಧಿ ನೀತಿ’ ಕುರಿತ ಸಭೆಯಲ್ಲಿ ಭಾಗವಹಿಸಿ ಚರ್ಚಿಸಲಾಯಿತು.
ಪ್ರವಾಸೋದ್ಯಮ ಮೂಲಸೌಕರ್ಯಗಳ ಅಭಿವೃದ್ಧಿ, ಪ್ರವಾಸಿ ತಾಣಗಳಿಗೆ ಉತ್ತಮ ಸಂಪರ್ಕ ವ್ಯವಸ್ಥೆ, ಹೂಡಿಕೆ ಆಕರ್ಷಣೆ, ಸ್ಥಳೀಯರಿಗೆ ಉದ್ಯೋಗಾವಕಾಶ ಸೃಷ್ಟಿ ಹಾಗೂ ಪರಿಸರ ಸಂರಕ್ಷಣೆಯೊಂದಿಗೆ ಪ್ರವಾಸೋದ್ಯಮವನ್ನು ವಿಸ್ತರಿಸುವ ಕುರಿತು ಸಭೆಯಲ್ಲಿ ಸಮಗ್ರವಾಗಿ ಚರ್ಚಿಸಲಾಯಿತು.
ಸಂಬಂಧಪಟ್ಟ ಇಲಾಖೆಗಳ ನಡುವೆ ಪರಿಣಾಮಕಾರಿ ಸಮನ್ವಯ ಸಾಧಿಸಿ, ಕರಾವಳಿ ಮತ್ತು ಮಲೆನಾಡು ಪ್ರದೇಶಗಳನ್ನು ಪ್ರಮುಖ ಪ್ರವಾಸೋದ್ಯಮ ತಾಣಗಳಾಗಿ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳುವ ಕುರಿತು ಅಭಿಪ್ರಾಯ ವಿನಿಮಯ ಮಾಡಿಕೊಳ್ಳಲಾಯಿತು.
ಸಭೆಯಲ್ಲಿ ಇಂಧನ ಮತ್ತು ಪ್ರವಾಸೋದ್ಯಮ ಸಚಿವರಾದ ಕೆ.ಜೆ. ಜಾರ್ಜ್, ಕೃಷಿ ಸಚಿವರಾದ ನರೇಂದ್ರ ಸ್ವಾಮಿ, ಶಾಸಕರಾದ ಅಶೋಕ್ ರೈ, ಅಪರ ಮುಖ್ಯಕಾರ್ಯದರ್ಶಿಗಳಾದ ತುಷಾರ್ ಗಿರಿನಾಥ್, ಕೆಪಿಟಿಸಿಎಲ್ ವ್ಯವಸ್ಥಾಪಕ ನಿರ್ದೇಶಕರಾದ ರಾಮ್ ಪ್ರಸಾತ್ ಮನೋಹರ್ ಸೇರಿದಂತೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
Participated in a meeting chaired by Chief Minister Shri D.K. Shivakumar at his home office, Krishna, to discuss the Coastal–Malnad Tourism Development Policy, aimed at unlocking the tourism potential of the coastal and Malnad regions and promoting sustainable tourism development.
The meeting discussed key priorities, including strengthening tourism infrastructure, improving connectivity to tourist destinations, attracting investment, creating employment opportunities for local communities, and expanding tourism while protecting the region’s environment and natural heritage.
We also discussed the need for effective coordination among concerned departments and the measures required to develop the coastal and Malnad regions into major tourism destinations.
Energy and Tourism Minister Shri K.J. George, Agriculture Minister Shri Narendra Swamy, MLA Shri Ashok Rai, Additional Chief Secretary Shri Tushar Giri Nath, KPTCL Managing Director Shri Ram Prasath Manohar, and senior officials were present at the meeting. -
Dr. G Parameshwara
@DrParameshwara
ರಾಜ್ಯದಲ್ಲಿ ಬರ ಪರಿಶೀಲನೆ ಹಂತ - ಹಂತವಾಗಿ ನಡೆಯುತ್ತಿದೆ. ಮೊದಲ ಹಂತದಲ್ಲಿ 101 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿದೆ. ಇದೀಗ ಹೆಚ್ಚುವರಿಯಾಗಿ 25 ತಾಲೂಕುಗಳನ್ನು ಬರ ಪೀಡಿತ ಎಂದು ಘೋಷಿಸಲಾಗುತ್ತದೆ. ಒಟ್ಟಾರೆ 200ಕ್ಕೂ ಹೆಚ್ಚು ತಾಲೂಕು ಬರ ಪೀಡಿತ ವ್ಯಾಪ್ತಿಗೆ ಬರುವ ಸಾಧ್ಯತೆಯಿದೆ ಎಂದು ನಿನ್ನೆ ಮಾಧ್ಯಮದವರೊಂದಿಗೆ ಮಾತನಾಡುವ ವೇಳೆ ತಿಳಿಸಿದೆ.
ಈ ಕುರಿತಾದ ಪತ್ರಿಕಾ ವರದಿಗಳು ಹೀಗಿವೆ..
Yesterday, I informed the media that the drought assessment in the State is being carried out in phases. In the first phase, 101 taluks have been declared drought-hit, and an additional 25 taluks are now set to be declared drought-hit. Overall, there is a possibility that more than 200 taluks may come under the drought-hit category.
Here are some of the press reports on the matter.. -
Dr. G Parameshwara
@DrParameshwara
This year, Tumakuru Dasara is set to shine brighter and grander than ever. A vibrant line-up of cultural programmes, Yuva Dasara, Mahila Dasara, sporting activities, Kavigoshti, exhibitions, and flower and fruit shows will add colour and festive energy to the celebrations.
Among the major attractions this year are free bus services for the public to enjoy the colourful night illuminations, a grand permanent Light and Sound Fountain at Amanikere, Tumakuru Square, Sri Shivakumara Swamiji Circle, and massive electronic screens designed to engage and attract the youth.
Helicopter rides for the public, a torchlight procession, and a proposed drone show will add even more sparkle to the Dasara festivities.
Come, let us celebrate Tumakuru Dasara, experience its grandeur, and make it truly memorable! -
Dr. G Parameshwara
@DrParameshwara
ಈ ಬಾರಿ ತುಮಕೂರು ದಸರಾ ಇನ್ನಷ್ಟು ವೈಭವದಿಂದ ಕಂಗೊಳಿಸಲಿದೆ. ಸಾಂಸ್ಕೃತಿಕ ಕಾರ್ಯಕ್ರಮಗಳು, ಯುವ ದಸರಾ, ಮಹಿಳಾ ದಸರಾ, ಕ್ರೀಡಾ ಚಟುವಟಿಕೆಗಳು, ಕವಿಗೋಷ್ಠಿ, ವಸ್ತುಪ್ರದರ್ಶನ ಹಾಗೂ ಫಲಪುಷ್ಪ ಪ್ರದರ್ಶನ ಸೇರಿದಂತೆ ಅನೇಕ ಕಾರ್ಯಕ್ರಮಗಳಿಗೆ ಸಂಭ್ರಮದ ವೇದಿಕೆ ಸಿದ್ಧವಾಗುತ್ತಿದೆ.
ರಾತ್ರಿ ವೇಳೆ ವರ್ಣರಂಜಿತ ದೀಪಾಲಂಕಾರವನ್ನು ಕಣ್ತುಂಬಿಕೊಳ್ಳಲು ಸಾರ್ವಜನಿಕರಿಗೆ ಉಚಿತ ಬಸ್ ವ್ಯವಸ್ಥೆ, ಅಮಾನಿಕೆರೆಯಲ್ಲಿ ಶಾಶ್ವತವಾಗಿ ಉಳಿಯಲಿರುವ ಭವ್ಯ ‘ಲೈಟ್ ಆ್ಯಂಡ್ ಸೌಂಡ್’ ಕಾರಂಜಿ, ತುಮಕೂರು ಸ್ಕ್ವೇರ್, ಶ್ರೀ ಶಿವಕುಮಾರ ಸ್ವಾಮೀಜಿ ವೃತ್ತ ಹಾಗೂ ಯುವಕರನ್ನು ಆಕರ್ಷಿಸುವ ಬೃಹತ್ ಎಲೆಕ್ಟ್ರಾನಿಕ್ ಸ್ಕ್ರೀನ್ಗಳು ಈ ಬಾರಿಯ ದಸರಾದ ವಿಶೇಷ ಆಕರ್ಷಣೆಗಳಾಗಲಿವೆ.
ಸಾರ್ವಜನಿಕರಿಗೆ ಆಯೋಜಿಸಲಾದ ಹೆಲಿಕಾಪ್ಟರ್ ರೈಡ್, ಪಂಜಿನ ಮೆರವಣಿಗೆ, ಡ್ರೋನ್ ಶೋ ದಸರಾ ಸಂಭ್ರಮಕ್ಕೆ ಮತ್ತಷ್ಟು ಮೆರುಗು ನೀಡಲಿದೆ.
ಬನ್ನಿ… ತುಮಕೂರು ದಸರಾವನ್ನು ಸಂಭ್ರಮಿಸೋಣ, ಕಣ್ತುಂಬಿಕೊಳ್ಳೋಣ, ಅದ್ದೂರಿಯಾಗಿಸೋಣ!
#tumakurudasara -
Dr. G Parameshwara
@DrParameshwara
ತುಮಕೂರು ದಸರಾ ಕೇವಲ ಸಂಭ್ರಮದ ಆಚರಣೆಯಲ್ಲ, ನಮ್ಮ ನೆಲದ ಕಲೆ, ಕಲಾವಿದರು ಹಾಗೂ ಪ್ರತಿಭೆಗಳನ್ನು ಗೌರವಿಸುವ ಮಹೋತ್ಸವವೂ ಹೌದು.
ಈ ಬಾರಿ ತುಮಕೂರು ದಸರಾ ಉತ್ಸವದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳ ಜೊತೆಗೆ ಕ್ರೀಡೆ ಸೇರಿದಂತೆ ವಿವಿಧ ಕಾರ್ಯಕ್ರಮಗಳಲ್ಲಿ ಸ್ಥಳೀಯ ಕಲಾವಿದರಿಗೆ ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಲು ಹೆಚ್ಚಿನ ಅವಕಾಶ ಕಲ್ಪಿಸಲಾಗುವುದು.
ಕಳೆದ ಬಾರಿ 5,343 ಸ್ಥಳೀಯ ಕಲಾವಿದರಿಗೆ ವೇದಿಕೆ ಕಲ್ಪಿಸಿ, ಅವರ ಪ್ರತಿಭೆಗೆ ಪ್ರೋತ್ಸಾಹ ನೀಡಲಾಗಿತ್ತು. ಈ ಬಾರಿಯೂ ಇನ್ನಷ್ಟು ಕಲಾವಿದರಿಗೆ ಅವಕಾಶ ನೀಡುವ ಮೂಲಕ ಪ್ರತಿಭೆ ಇರುವ ಪ್ರತಿಯೊಬ್ಬರಿಗೂ ವೇದಿಕೆ, ಕಲೆಗೆ ಗೌರವ ಹಾಗೂ ಕಲಾವಿದರ ಕನಸುಗಳಿಗೆ ರೆಕ್ಕೆ ನೀಡುವ ನಿಟ್ಟಿನಲ್ಲಿ ತುಮಕೂರು ದಸರಾ ಉತ್ಸವವನ್ನು ರೂಪಿಸಲಾಗುವುದು.
Tumakuru Dasara is not just a celebration; it is also a festival that honours the art, artists and talent of our land.
This year, along with cultural programmes and sports, greater opportunities will be provided for local artists to showcase their talent across various events.
Last year, 5,343 local artists were given a platform and encouraged. This year too, Tumakuru Dasara will be shaped to create opportunities for even more artists - a platform for every talent, respect for every art form, and wings to every artist’s dream. -
Dr. G Parameshwara
@DrParameshwara
ಮೈಸೂರು ದಸರಾ ಮಾದರಿಯಲ್ಲಿ ಈ ಬಾರಿ ತುಮಕೂರು ದಸರಾವೂ ವೈಭವ, ಸಂಭ್ರಮ ಮತ್ತು ಸಾಂಸ್ಕೃತಿಕ ಶ್ರೀಮಂತಿಕೆಯಿಂದ ಕಂಗೊಳಿಸಲಿದೆ. ಒಂಭತ್ತು ದಿನಗಳ ಕಾಲ ನಡೆಯಲಿರುವ ಈ ನಾಡಹಬ್ಬದಲ್ಲಿ ಧಾರ್ಮಿಕ ಆಚರಣೆ, ಕಲೆ, ಸಾಹಿತ್ಯ, ಸಂಗೀತ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ತುಮಕೂರು ನಗರವೇ ಹಬ್ಬದ ಸಂಭ್ರಮದಲ್ಲಿ ಮಿಂದೇಳಲಿದೆ. ಜಿಲ್ಲೆಯ ಕಲಾವಿದರು, ಕಲಾಸಕ್ತರು ಹಾಗೂ ಸಾರ್ವಜನಿಕರಿಗೆ ಹೆಚ್ಚಿನ ಅವಕಾಶ ಕಲ್ಪಿಸುವ ಮೂಲಕ ತುಮಕೂರು ದಸರಾವನ್ನು ಜನರ ಹಬ್ಬವನ್ನಾಗಿಸುವ ಸಂಕಲ್ಪ ಹೊಂದಲಾಗಿದೆ.
ಭಕ್ತಿ, ಸಂಸ್ಕೃತಿ ಮತ್ತು ಸಂಭ್ರಮದ ವೈಭವದೊಂದಿಗೆ ಈ ಬಾರಿ ತುಮಕೂರು ದಸರಾ ಹೊಸ ಕಳೆ ಹಾಗೂ ಹೊಸ ಚೈತನ್ಯದಿಂದ ಜನಮನ ಸೆಳೆಯಲಿದೆ.
Inspired by the grandeur of Mysuru Dasara, this year’s Tumakuru Dasara will shine with celebration, cultural richness and festive splendour. Over nine days, the city will come alive with religious observances, art, literature, music and cultural programmes.
With greater opportunities for artists, art lovers and the public across the district, the aim is to make Tumakuru Dasara a true people’s festival.
With devotion, culture and celebration at its heart, this year’s Tumakuru Dasara is set to captivate people with renewed vibrancy and festive spirit. -
Dr. G Parameshwara
@DrParameshwara
ಈ ಬಾರಿಯ ತುಮಕೂರು ದಸರಾವನ್ನು ಅದ್ಧೂರಿಯಾಗಿ ಆಚರಿಸಲು ಪೂರ್ವ ಸಿದ್ಧತೆಗಳನ್ನು ನಡೆಸಲಾಗುತ್ತಿದೆ. ರಾಜ್ಯ ಮತ್ತು ಜಿಲ್ಲೆಯ ಕಲೆ, ಸಂಸ್ಕೃತಿ ಹಾಗೂ ಪರಂಪರೆಯ ವೈಭವವನ್ನು ಅನಾವರಣಗೊಳಿಸುವ ನಿಟ್ಟಿನಲ್ಲಿ ನಮ್ಮ ನಾಡಿನ ಕಲೆ-ಸಂಸ್ಕೃತಿ ಹಾಗೂ ಪರಂಪರೆಯನ್ನು ಇಡೀ ರಾಜ್ಯಕ್ಕೆ ಪರಿಚಯಿಸುವ ರೀತಿಯಲ್ಲಿ ದಸರಾ ಉತ್ಸವಕ್ಕೆ ಅದ್ಧೂರಿ ರೂಪ ನೀಡಲಾಗುತ್ತಿದೆ.
ಸೆಪ್ಟೆಂಬರ್ 15ರಂದು ಸರ್ಕಾರಿ ಪದವಿಪೂರ್ವ ಕಾಲೇಜು ಆವರಣದಲ್ಲಿ ತುಮಕೂರು ದಸರಾ ಉತ್ಸವದ ಲಾಂಛನ ಬಿಡುಗಡೆಗೊಳಿಸಲಾಗುವುದು. ಅಕ್ಟೋಬರ್ 11ರಂದು ಧ್ವಜಾರೋಹಣ ಹಾಗೂ ಮಹಾಮಂಗಳಾರತಿಯೊಂದಿಗೆ ತುಮಕೂರು ದಸರಾ ಉತ್ಸವಕ್ಕೆ ಚಾಲನೆ ದೊರೆಯಲಿದೆ.
ನಾಡಿನ ಸಂಸ್ಕೃತಿಯ ಸೊಬಗು, ಕಲಾವಿದರ ಪ್ರತಿಭೆಯ ಮೆರುಗು ಹಾಗೂ ಜನರ ಸಂಭ್ರಮದೊಂದಿಗೆ ಈ ಬಾರಿ ತುಮಕೂರು ದಸರಾ ಹೊಸ ಇತಿಹಾಸ ಬರೆಯಲಿದೆ.
Preparations are underway to celebrate this year’s Tumakuru Dasara on a grand scale. The festival is being shaped to showcase the rich art, culture and traditions of Karnataka and Tumakuru district, bringing the splendour of our heritage before people across the State.
As part of the celebrations, the Tumakuru Dasara logo will be unveiled on September 15 at the Government Pre-University College grounds. The festival will formally begin on October 11 with flag hoisting and Maha Mangalarati.
With the beauty of our culture, the brilliance of our artists and the spirit of the people, Tumakuru Dasara is set to create a new chapter this year. -
Dr. G Parameshwara
@DrParameshwara
ಇಂದು ವಿಧಾನಸೌಧದಲ್ಲಿ ರಾಜ್ಯದಲ್ಲಿನ ಮುಂಗಾರು ಮತ್ತು ಬರ ಪರಿಸ್ಥಿತಿ ಹಾಗೂ ಇತರೆ ನೈಸರ್ಗಿಕ ವಿಕೋಪ ಪರಿಸ್ಥಿತಿಯನ್ನು ಪರಾಮರ್ಶಿಸಲು ಮತ್ತು ಸಮರ್ಥವಾಗಿ ನಿಭಾಯಿಸಲು ನೀತಿ ನಿರೂಪಣೆ ಮತ್ತು ಅಗತ್ಯ ಕ್ರಮಗಳ ಬಗ್ಗೆ ನಿರ್ಣಯಿಸುವ ಕುರಿತಂತೆ ಸಚಿವ ಸಂಪುಟ ಉಪಸಮಿತಿ ಸಭೆಯನ್ನು ನಡೆಸಿ, ಸುದೀರ್ಘವಾಗಿ ಚರ್ಚಿಸಿದೆ.
ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮಳೆಯ ಅಭಾವ, ಬೆಳೆ ಹಾನಿ ಮತ್ತು ನಷ್ಟದ ವಿವರಗಳನ್ನು ಸಮಗ್ರವಾಗಿ ಪರಿಶೀಲಿಸಿ, ಅಧಿಕಾರಿಗಳಿಗೆ ಅಗತ್ಯ ಸೂಚನೆ ನೀಡಿದೆ.
ಮುಂಗಾರು ವೈಫಲ್ಯದಿಂದ ಕುಡಿಯುವ ನೀರು ಹಾಗೂ ಜಾನುವಾರುಗಳಿಗೆ ಮೇವಿನ ಅಭಾವ ಉಂಟಾಗದಂತೆ ಮೇವಿನ ಬ್ಯಾಂಕ್ ಸ್ಥಾಪನೆ, ನೀರಿನ ಸಂರಕ್ಷಣೆಗೆ ಉಪಕ್ರಮ ಮತ್ತು ಟ್ಯಾಂಕರ್ಗಳ ಮೂಲಕ ನೀರು ಪೂರೈಸಲು ಅಗತ್ಯ ಕ್ರಮ ತೆಗೆದುಕೊಳ್ಳಬೇಕು.
ಮುಂಬರುವ ದಿನಗಳಲ್ಲಿ ಎದುರಾಗಬಹುದಾದ ಯಾವುದೇ ತುರ್ತು ಪರಿಸ್ಥಿತಿಯನ್ನು ಎದುರಿಸಲು ಜಿಲ್ಲಾಧಿಕಾರಿಗಳ ಹಂತದಲ್ಲಿ ಲಭ್ಯವಿರುವ ಅಗತ್ಯ ಅನುದಾನ ಸದ್ಭಳಕೆ ಮಾಡುವುದು ಹಾಗೂ ಟಾಸ್ಕ್ಫೋರ್ಸ್ ತಂಡಗಳು ನಿರಂತರವಾಗಿ ಸಭೆ ನಡೆಸಿ ನೈಜಸ್ಥಿತಿಯನ್ನು ಸರ್ಕಾರದ ಗಮನಕ್ಕೆ ತರಬೇಕು ಎಂದು ಸೂಚಿಸಿದೆ.
ಸಭೆಯಲ್ಲಿ ಸಹಕಾರ ಸಚಿವರಾದ ಲಕ್ಷ್ಮಣ ಸವದಿ, ಗ್ರಾಮೀಣಾಭಿವೃದ್ಧಿ ಸಚಿವರಾದ ಈಶ್ವರ ಖಂಡ್ರೆ, ಪಶುಸಂಗೋಪನಾ ಸಚಿವರಾದ ಪುಟ್ಟರಂಗ ಶೆಟ್ಟಿ, ಹಿರಿಯ ಅಧಿಕಾರಿಗಳಾದ ಮನೋಜ್ ಕುಮಾರ್ ಮೀನಾ, ಬಿ. ಫೌಜಿಯಾ ತರನ್ನುಮ್, ಹೊನ್ನಾಂಬಿಕಾ ಸೇರಿದಂತೆ ಇತರರು ಉಪಸ್ಥಿತರಿದ್ದರು.
Today, I chaired a meeting of the Cabinet Sub-Committee at Vidhana Soudha to review the monsoon and drought situation in the State, along with other natural disaster conditions, and held detailed discussions on policy measures and the steps required for effective management.
We comprehensively reviewed rainfall deficiency, crop damage and losses across various districts and issued necessary directions to officials.
In view of the monsoon shortfall, steps must be taken to prevent any shortage of drinking water and fodder for livestock. This includes setting up fodder banks, strengthening water conservation measures and ensuring water supply through tankers wherever required.
I also directed that funds available at the Deputy Commissioner level be utilised effectively to handle any emergency that may arise in the coming days. Task force teams must meet regularly, assess the ground situation and keep the Government informed of developments.
Cooperation Minister Laxman Savadi, Rural Development Minister Eshwar Khandre, Animal Husbandry Minister Puttaranga Shetty, senior officials Manoj Kumar Meena, B. Fouzia Taranum, Honnambika and others were present at the meeting. -
Dr. G Parameshwara
@DrParameshwara
ರಾಜ್ಯ ಅಭಿವೃದ್ಧಿಯಾಗಬೇಕಾದರೆ ಪ್ರತಿ ಹಳ್ಳಿ, ಪ್ರತಿ ಗ್ರಾಮವೂ ಪ್ರಗತಿ ಕಾಣಬೇಕು. ಈ ನಿಟ್ಟಿನಲ್ಲಿ ನನ್ನೂರು, ನನ್ನ ಗ್ರಾಮ, ನನ್ನ ಜಿಲ್ಲೆ, ನನ್ನ ರಾಜ್ಯದ ಸಮಗ್ರ ಬದಲಾವಣೆಯ ಚಿತ್ರಣವನ್ನು ಮುಂದಿಟ್ಟುಕೊಂಡು ಕೆಲಸ ಮಾಡುತ್ತಿದ್ದೇನೆ.
ಇಂದು ನಾನು ಪ್ರತಿನಿಧಿಸುತ್ತಿರುವ ಕೊರಟಗೆರೆ ವಿಧಾನಸಭಾ ಕ್ಷೇತ್ರ ಮೂಲಸೌಕರ್ಯ, ಶಿಕ್ಷಣ, ಕ್ರೀಡೆ, ಆರೋಗ್ಯ, ಶುಚಿತ್ವ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲೂ ಮುಂಚೂಣಿಯಲ್ಲಿರುವುದು ನೋಡುವಾಗ ಖುಷಿಯಾಗುತ್ತದೆ. ಕೊರಟಗೆರೆ ಪುಟ್ಟ ಊರು. ಆದರೆ ಇಲ್ಲಾಗುತ್ತಿರುವ ಅಭಿವೃದ್ಧಿಗಳು ಬಹು ದೊಡ್ಡವು. ಅದು ಎಷ್ಟರಮಟ್ಟಿಗೆ ಎಂಬುದು ನನ್ನೂರಿನ ಜನರ ಮೊಗದಲ್ಲಿ ಮೂಡುತ್ತಿರುವ ಮಂದಹಾಸವೇ ಸಾಬೀತುಪಡಿಸುತ್ತಿದೆ.
ನನ್ನನ್ನು ಹರಸಿ - ಹಾರೈಸಿದ ನನ್ನೂರಿನ ಜನ ನಾನು ಮಾಡಿದ ಕೆಲಸಕ್ಕೆ ಪ್ರಶಂಸೆಯ ಮಹಾಪೂರಣವನ್ನೇ ಅರ್ಪಿಸುತ್ತಿರುವುದನ್ನು ನೋಡುವಾಗ ನಿಜಕ್ಕೂ ನನ್ನ ಸಾರ್ವಜನಿಕ ಜೀವನ ಸಾರ್ಥಕ ಎನಿಸುತ್ತದೆ.
ನಾನು ನಿಮ್ಮವನು, ನಿಮ್ಮ ಮನೆಮಗ. ನಿಮಗೆ ನೆಮ್ಮದಿ, ಸಂತೋಷದ ಜೀವನವನ್ನು ಕಲ್ಪಿಸಿಕೊಡುವುದು ನನ್ನ ಜವಾಬ್ದಾರಿ ಮತ್ತು ಕರ್ತವ್ಯ. ಅದಕ್ಕಾಗಿಯೇ ನನ್ನ ರಾಜಕೀಯ ಜೀವನ ಮೀಸಲು.This media couldn't be displayed. See it on the original post. -
Dr. G Parameshwara
@DrParameshwara
ರಾಜ್ಯದಲ್ಲಿ ಬರ ಪರಿಶೀಲನೆ ಇನ್ನೂ ಮುಕ್ತಾಯವಾಗಿಲ್ಲ. ಹಂತ ಹಂತವಾಗಿ ಈಗಲೂ ನಡೆಯುತ್ತಿದೆ. ಮೊದಲ ಹಂತದಲ್ಲಿ 101 ತಾಲ್ಲೂಕುಗಳನ್ನು ಬರಪೀಡಿತ ಪ್ರದೇಶಗಳೆಂದು ಘೋಷಣೆ ಮಾಡಲಾಗಿದ್ದು, ಎರಡನೇ ಹಂತದ ಪರಿಶೀಲನೆ ಈಗ ನಡೆಯುತ್ತಿದೆ. 25 ತಾಲ್ಲೂಕುಗಳು ಬರ ಪೀಡಿತ ಪ್ರದೇಶಗಳೆಂದು ಘೋಷಣೆಗೆ ಅರ್ಹತೆ ಪಡೆದಿದ್ದು, ಶೀಘ್ರದಲ್ಲೇ ಅಧಿಕೃತ ಘೋಷಣೆ ಮಾಡಲಾಗುವುದು.
ಬರ ಪೀಡಿತ ಪ್ರದೇಶಗಳ ಘೋಷಣೆ ಪ್ರಕ್ರಿಯೆಯನ್ನು ಆದ್ಯತೆ ಮೇರೆಗೆ ಮಾಡುತ್ತಿದ್ದೇವೆ. ಮಳೆಗಾಲ ಮುಕ್ತಾಯ ಆಗುವವರೆಗೂ ಪರಿಶೀಲನೆ ಮುಂದುವರಿಯುತ್ತದೆ. ಕಳೆದ ಬಾರಿ ಸುಮಾರು 200 ತಾಲ್ಲೂಕುಗಳನ್ನು ಬರಪೀಡಿತ ಪ್ರದೇಶಗಳೆಂದು ಘೋಷಣೆ ಮಾಡಲಾಗಿತ್ತು. ಈ ಬಾರಿಯೂ 200ಕ್ಕೂ ಹೆಚ್ಚು ತಾಲ್ಲೂಕುಗಳು ಬರಪೀಡಿತ ಪ್ರದೇಶಗಳೆಂದು ಘೋಷಿಸಲ್ಪಡುವ ಪರಿಸ್ಥಿತಿ ಇದೆ. ಕರಾವಳಿ ಪ್ರದೇಶವನ್ನು ಹೊರತುಪಡಿಸಿ ಉಳಿದೆಲ್ಲೆಡೆ ಬರ ಪರಿಸ್ಥಿತಿ ಇದೆ.
The drought assessment across the State is still underway and is being carried out in phases. In the first phase, 101 taluks have already been declared drought-hit. The second phase of assessment is currently in progress, and 25 more taluks have qualified for inclusion in the drought-hit list. An official declaration will be made shortly.
The process of identifying and declaring drought-hit areas is being taken up on priority and will continue until the end of the monsoon season. Last year, nearly 200 taluks were declared drought-hit. This year too, the situation may lead to more than 200 taluks being declared drought-hit. Except for the coastal region, drought conditions prevail across most parts of the State. -
Dr. G Parameshwara
@DrParameshwara
ಇಂದು ವಿಧಾನಸೌಧದ ಕಾರ್ಯಾಲಯದಲ್ಲಿ ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜಿಲ್ಲಾಧಿಕಾರಿಗಳು, ಉಪವಿಭಾಗಾಧಿಕಾರಿಗಳು, ತಹಶೀಲ್ದಾರರು ಹಾಗೂ ಭೂ ದಾಖಲೆಗಳ ಉಪನಿರ್ದೇಶಕರು/ಸಹಾಯಕ ನಿರ್ದೇಶಕರೊಂದಿಗೆ ಸಭೆ ನಡೆಸಿ, ಅಧಿಕಾರಿಗಳಿಗೆ ಅಗತ್ಯ ನಿರ್ದೇಶನಗಳನ್ನು ನೀಡಿದೆ.
ರಾಜ್ಯದಲ್ಲಿ ಬಡವರಿಗೆ ನಿವೇಶನ ನೀಡಲು ಸರ್ಕಾರ ಗುರಿ ಇಟ್ಟುಕೊಂಡಿದೆ. ಪ್ರತಿ ಜಿಲ್ಲೆಯಲ್ಲಿ 50,000 ನಿವೇಶನಗಳನ್ನು ಸಿದ್ಧಪಡಿಸಬೇಕು. ಇದಕ್ಕೆ ಸಂಬಂಧಿಸಿದಂತೆ ಭೂಮಿ ಗುರುತಿಸುವ ಕಾರ್ಯವನ್ನು ಚುರುಕುಗೊಳಿಸಿ, ಮೊದಲ ಹಂತದಲ್ಲಿ ನಿವೇಶನಗಳನ್ನು ಡಿಸೆಂಬರ್ ವೇಳೆಗೆ ಪೂರ್ಣಗೊಳಿಸಬೇಕು.
ಸರ್ಕಾರದ ಭೂಮಿ ರಕ್ಷಣೆಯು ಪ್ರಮುಖ ಜವಾಬ್ದಾರಿಯಾಗಿದೆ. ಬೆಂಗಳೂರು ಸುತ್ತಮುತ್ತ ಆ ನಿಟ್ಟಿನಲ್ಲಿ ಕೆಲಸ ಮಾಡಬೇಕು. ತಹಶೀಲ್ದಾರರು, ಉಪವಿಭಾಗಾಧಿಕಾರಿಗಳು ಕಚೇರಿಗಳಲ್ಲಿ ಸಾರ್ವಜನಿಕರಿಗೆ ಲಭ್ಯವಿರುವುದಿಲ್ಲ ಎಂಬ ಆರೋಪಗಳು ಬರುತ್ತಿವೆ. ಸಾರ್ವಜನಿಕರಿಗೆ ಕಡ್ಡಾಯ ಲಭ್ಯವಿರಬೇಕು. ಜನರ ಸಮಸ್ಯೆಗಳನ್ನು ಆಲಿಸಿ, ಜನಸ್ನೇಹಿ ಅಧಿಕಾರಿಗಳಾಗಿ ಕೆಲಸ ಮಾಡಬೇಕು. ಅಧಿಕಾರಿಗಳ ವಿರುದ್ಧ ಸಾರ್ವಜನಿಕರಿಂದ ದೂರುಗಳು ಬಂದರೆ ಮುಲಾಜಿಲ್ಲದೆ ಕ್ರಮ ಜರುಗಿಸಲಾಗುವುದು.
ಕಂದಾಯ ಇಲಾಖೆಯ ಎಲ್ಲ ಹಂತದ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಬಡ್ತಿ ನೀಡಲಾಗಿದೆ. ಬಾಕಿ ಉಳಿದಿರುವ ತಹಶೀಲ್ದಾರ್ ವೃಂದದಿಂದ ಉಪವಿಭಾಗಾಧಿಕಾರಿ ಹುದ್ದೆಗೆ ಶೀಘ್ರ ಬಡ್ತಿ ನೀಡಲಾಗುವುದು.
ಸಭೆಯಲ್ಲಿ ಬೆಂಗಳೂರು ನಗರ ಜಿಲ್ಲಾಧಿಕಾರಿಗಳಾದ ಪಿ. ಎಸ್. ಕಾಂತಾರಾಜು, ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಕೆ.ಎನ್.ಅನುರಾಧ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು. -
Dr. G Parameshwara
@DrParameshwara
ಬಗರ್ ಹುಕುಂ ಅರ್ಜಿದಾರರಿಗೆ ಸಕಾಲಿಕ ನೆರವಾಗಲು ಅರ್ಜಿಗಳ ವಿಲೇವಾರಿಗೆ ವೇಗವನ್ನೊದಗಿಸಲಾಗಿದೆ.
ಇದುವರೆಗೆ ಸ್ವೀಕರಿಸಲಾದ ಸುಮಾರು 14 ಲಕ್ಷ ಅರ್ಜಿಗಳ ಪೈಕಿ 4,11,290 ಅರ್ಜಿಗಳನ್ನು ಈಗಾಗಲೇ ಗ್ರಾಮ ಆಡಳಿತಾಧಿಕಾರಿ ಹಂತದಲ್ಲಿ ಪರಿಶೀಲಿಸಲಾಗಿದೆ.
ತಹಶೀಲ್ದಾರರಿಗೆ ಮಾಸಿಕ ಗುರಿ ನೀಡುವ ಮೂಲಕ ಇನ್ನುಳಿದ ಅರ್ಜಿಗಳನ್ನು ವಿಳಂಬವಿಲ್ಲದೆ ವಿಲೇವಾರಿ ಮಾಡಲು ಕ್ರಮ ಕೈಗೊಳ್ಳಲಾಗಿದೆ.This media couldn't be displayed. See it on the original post. -
Dr. G Parameshwara
@DrParameshwara
25 more taluks to be declared drought-hit soon: The assessment of drought conditions in the State is still underway and is being carried out in phases. In the first phase, 101 taluks have already been declared drought-hit. The second phase of assessment is in progress, and 25 more taluks have qualified to be declared drought-hit. They will be notified shortly.
There has been no delay in the process of declaring drought-hit areas. The assessment will continue depending on the shortfall in monsoon and post-monsoon rainfall. Last time, nearly 200 taluks were declared drought-hit. This year too, the situation may warrant declaring more than 200 taluks as drought-hit. Except for the coastal region, drought conditions prevail across most parts of the State.
No drought-hit taluk has been deliberately excluded: There is no need for anyone to worry that their taluk has been left out despite severe drought conditions. The entire State is facing drought. No individual in the State Government has any role in deciding which taluks are declared drought-hit. Allegations that certain taluks have been deliberately excluded are baseless. Drought does not occur based on political affiliation. Taluks represented by Opposition legislators are also part of the list already declared.
If the State Government were to declare drought-hit areas on its own, we would not be able to seek relief from the Union Government. To secure Central drought relief, we must follow the prescribed procedure. Drought-hit areas are declared in accordance with the Union Government’s guidelines, and the State cannot make such declarations arbitrarily. Satellite imagery is examined, ground truthing is carried out, and declarations are made only after scientific assessment. I had made this clear during the Assembly session as well.
No split within AHINDA: The Karnataka State Federation of Backward Classes recently organised its Silver Jubilee celebrations along with a felicitation programme for former Chief Minister Siddaramaiah. There has been some confusion over why certain leaders were not invited. Since the event was primarily organised by the Federation as part of its Silver Jubilee celebrations and to felicitate Siddaramaiah, the organisers may not have invited everyone. There is no division within AHINDA, nor has its leadership split into different camps.
NICE site allotment — decision taken on humanitarian grounds: Former Prime Minister H.D. Deve Gowda’s allegations regarding the NICE issue are baseless. The claim that several Cabinet Ministers are benefiting at the expense of those who lost their land has no basis.
The State Government has taken this decision in accordance with the Supreme Court’s order and on humanitarian grounds. The decision to allot 1,453 sites was taken to ensure justice to farmers who had parted with land now worth hundreds of crores for just a few lakhs. There is no intention to provide any personal benefit to anyone in this matter.
At today’s meeting of the Cauvery Water Management Authority, the State Government will raise the issue of Tamil Nadu using Cauvery water for cultivation across 4.8 hectares of land.
— My Response to the media near my residence. -
Dr. G Parameshwara
@DrParameshwara
ಶೀಘ್ರದಲ್ಲೇ ಇನ್ನೂ 25 ತಾಲ್ಲೂಕುಗಳು ಬರಪೀಡಿತ ಪ್ರದೇಶಗಳೆಂದು ಘೋಷಣೆ : ರಾಜ್ಯದಲ್ಲಿ ಬರ ಪರಿಶೀಲನೆ ಮುಕ್ತಾಯವಾಗಿಲ್ಲ. ಹಂತ ಹಂತವಾಗಿ ನಡೆಯುತ್ತಿದೆ. ಮೊದಲ ಹಂತದಲ್ಲಿ 101 ತಾಲ್ಲೂಕುಗಳನ್ನು ಈಗಾಗಲೇ ಬರಪೀಡಿತ ಪ್ರದೇಶಗಳೆಂದು ಘೋಷಣೆ ಮಾಡಲಾಗಿದ್ದು, ಎರಡನೇ ಹಂತದ ಪರಿಶೀಲನೆ ನಡೆಯುತ್ತಿದೆ. 25 ತಾಲ್ಲೂಕುಗಳು ಬರ ಪೀಡಿತ ಪ್ರದೇಶಗಳೆಂದು ಘೋಷಣೆಗೆ ಅರ್ಹತೆ ಪಡೆದಿದ್ದು, ಶೀಘ್ರದಲ್ಲೇ ಘೋಷಣೆ ಮಾಡಲಾಗುವುದು.
ಬರ ಪೀಡಿತ ಪ್ರದೇಶಗಳ ಘೋಷಣೆ ಪ್ರಕ್ರಿಯೆ ವಿಳಂಬವಾಗಿಲ್ಲ. ಮುಂಗಾರು ಹಾಗೂ ಹಿಂಗಾರು ಕಡಿಮೆ ಆಗುವವರೆಗೂ ಪರಿಶೀಲನೆ ಮುಂದುವರಿಯುತ್ತದೆ. ಕಳೆದ ಬಾರಿ ಸುಮಾರು 200 ತಾಲ್ಲೂಕುಗಳನ್ನು ಬರಪೀಡಿತ ಪ್ರದೇಶಗಳೆಂದು ಘೋಷಣೆ ಮಾಡಲಾಗಿತ್ತು. ಈ ಬಾರಿಯೂ 200ಕ್ಕೂ ಹೆಚ್ಚು ತಾಲ್ಲೂಕುಗಳು ಬರಪೀಡಿತ ಪ್ರದೇಶಗಳೆಂದು ಘೋಷಿಸಲ್ಪಡುವ ಪರಿಸ್ಥಿತಿ ಇದೆ. ಕರಾವಳಿ ಪ್ರದೇಶವನ್ನು ಹೊರತುಪಡಿಸಿ ಉಳಿದೆಲ್ಲೆಡೆ ಬರ ಪರಿಸ್ಥಿತಿ ಇದೆ.
ಬೇಕೆಂದೆ ಬರಪೀಡಿತ ತಾಲ್ಲೂಕುಗಳನ್ನು ಕೈಬಿಟ್ಟಿಲ್ಲ: ತೀವ್ರ ಬರ ಇದ್ದರೂ ತಮ್ಮ ತಾಲ್ಲೂಕುಗಳನ್ನು ಬರಪೀಡಿತ ಪ್ರದೇಶವೆಂದು ಘೋಷಣೆ ಮಾಡಿಲ್ಲ ಎಂದು ಯಾರೂ ಆತಂಕಪಡುವ ಅಗತ್ಯವಿಲ್ಲ. ಇಡೀ ರಾಜ್ಯವೇ ಇಂದು ಬರಗಾಲವನ್ನು ಎದುರಿಸುತ್ತಿದೆ. ಬರಪೀಡಿತ ಪ್ರದೇಶಗಳೆಂದು ಘೋಷಿಸುವ ವಿಚಾರದಲ್ಲಿ ರಾಜ್ಯ ಸರ್ಕಾರದ ಯಾರೊಬ್ಬರ ಪಾತ್ರವೂ ಇಲ್ಲ. ಬೇಕೆಂದೆ ಕೆಲವು ತಾಲ್ಲೂಕುಗಳನ್ನು ಕೈಬಿಟ್ಟಿದ್ದಾರೆ ಎಂಬುದು ಆಧಾರ ರಹಿತ ಆರೋಪವಾಗಿದೆ. ಪಕ್ಷ ನೋಡಿಕೊಂಡು ಬರ ಸಂಭವಿಸಿಲ್ಲ. ಈಗಾಗಲೇ ಘೋಷಿತ ಪಟ್ಟಿಯಲ್ಲಿ ವಿರೋಧ ಪಕ್ಷದ ಶಾಸಕರಿರುವ ತಾಲ್ಲೂಕುಗಳೂ ಇವೆಯಲ್ಲವೇ?
ರಾಜ್ಯ ಸರ್ಕಾರವೇ ತನ್ನ ಪಾಡಿಗೆ ತಾನು ಬರಪೀಡಿತ ಪ್ರದೇಶಗಳನ್ನು ಘೋಷಣೆ ಮಾಡಿದರೆ ಕೇಂದ್ರದಿಂದ ನೆರವು ಪಡೆಯಲು ಸಾಧ್ಯವಾಗುವುದಿಲ್ಲ. ಕೇಂದ್ರದ ಬರಪರಿಹಾರ ಪಡೆಯಲು ನಾವು ಸಹನೆಯಿಂದ ವರ್ತಿಸಿದಷ್ಟೂ ಉತ್ತಮ. ಕೇಂದ್ರ ಸರ್ಕಾರದ ನಿಯಮಗಳಡಿ ಬರಪೀಡಿತ ಪ್ರದೇಶಗಳನ್ನು ಘೋಷಣೆ ಮಾಡಲಾಗುತ್ತದೆಯೇ ವಿನಃ ರಾಜ್ಯ ಸರ್ಕಾರವೇ ಸ್ವಂತ ನಿರ್ಧಾರಗಳನ್ನು ತೆಗೆದುಕೊಂಡು ಘೋಷಣೆ ಮಾಡಲು ಸಾಧ್ಯವಿಲ್ಲ. ಉಪಗ್ರಹ ಆಧಾರಿತ ಚಿತ್ರಗಳನ್ನು ಪರಿಶೀಲಿಸಿ, ಗ್ರೌಂಡ್ ಟ್ರೂಥಿಂಗ್ ಮಾಡಿ, ವೈಜ್ಞಾನಿಕ ಅಧ್ಯಯನದ ಬಳಿಕ ಘೋಷಣೆ ಮಾಡುತ್ತಾರೆ. ಇದನ್ನು ನಾನು ಅಧಿವೇಶನದ ವೇಳೆಯೇ ಸ್ಪಷ್ಟವಾಗಿ ಹೇಳಿದ್ದೇನೆ.
ಅಹಿಂದದಲ್ಲಿ ಒಡಕಿಲ್ಲ: ಕರ್ನಾಟಕ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟವು ಮೊನ್ನೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಅಭಿನಂದನಾ ಕಾರ್ಯಕ್ರಮವನ್ನು ಆಯೋಜಿಸಿತ್ತು. ಈ ಕಾರ್ಯಕ್ರಮಕ್ಕೆ ಕೆಲವರಿಗೆ ಏಕೆ ಆಹ್ವಾನಿಸಿಲ್ಲ ಎಂಬ ಬಗ್ಗೆ ಗೊಂದಲಗಳು ಸೃಷ್ಟಿಯಾಗಿವೆ. ಮುಖ್ಯವಾಗಿ ಇದು ಕರ್ನಾಟಕ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟದ ರಜತ ಮಹೋತ್ಸವ ಮತ್ತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಅಭಿನಂದಿಸುವ ಸಮಾರಂಭವಾಗಿದ್ದರಿಂದ ಒಕ್ಕೂಟದವರು ಕೆಲವರಿಗೆ ಆಹ್ವಾನ ನೀಡದೇ ಇದ್ದಿರಬಹುದು. ಅಹಿಂದ ಸಂಘಟನೆಯಲ್ಲಿ ಯಾವುದೇ ಒಡಕಿಲ್ಲ, ಅಹಿಂದ ನಾಯಕತ್ವ ಕವಲು ದಾರಿ ಹಿಡಿದಿಲ್ಲ.
ನೈಸ್ ನಿವೇಶನ ಹಂಚಿಕೆ - ಮಾನವೀಯತೆ ದೃಷ್ಟಿಯಿಂದ ತೀರ್ಮಾನ : ನೈಸ್ ವಿಚಾರವಾಗಿ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರ ಆರೋಪ ಆಧಾರರಹಿತ. ಭೂಮಿ ಕಳೆದುಕೊಳ್ಳುವವರಿಗಿಂತ ಸಚಿವ ಸಂಪುಟದಲ್ಲಿರುವಂತಹ ಅನೇಕ ಸಚಿವರು ಅದರ ಲಾಭ ಪಡೆಯುತ್ತಿದ್ದಾರೆ ಎಂಬ ಆರೋಪ ಆಧಾರ ರಹಿತವಾಗಿದೆ. ರಾಜ್ಯ ಸರ್ಕಾರವು ಸುಪ್ರೀಂ ಕೋರ್ಟ್ನ ಆದೇಶಕ್ಕೆ ಅನುಗುಣವಾಗಿ ಮಾನವೀಯತೆ ದೃಷ್ಟಿಯಿಂದ ಈ ತೀರ್ಮಾನ ತೆಗೆದುಕೊಂಡಿದೆ. ನೂರಾರು ಕೋಟಿ ಬೆಲೆಬಾಳುವ ಭೂಮಿಯನ್ನು ಕೆಲವು ಲಕ್ಷಗಳಿಗೆ ಬಿಟ್ಟುಕೊಟ್ಟ ರೈತರಿಗೆ ಅನ್ಯಾಯವಾಗದಿರಲು 1453 ನಿವೇಶಗಳನ್ನು ಹಂಚಿಕೆ ಮಾಡುವ ನಿರ್ಧಾರ ತೆಗೆದುಕೊಳ್ಳಲಾಗಿದೆ. ಈ ವಿಚಾರದಲ್ಲಿ ಯಾರಿಗೂ ವೈಯಕ್ತಿಕ ಲಾಭ ಮಾಡಿಕೊಡುವ ಉದ್ದೇಶವಿಲ್ಲ.
ಇಂದು ನಡೆಯಲಿರುವ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಸಭೆಯಲ್ಲಿ ರಾಜ್ಯ ಸರ್ಕಾರವು ತಮಿಳುನಾಡು ಕಾವೇರಿ ನೀರನ್ನು 4.8 ಹೆಕ್ಟೆರ್ ಪ್ರದೇಶದ ಕೃಷಿಗೆ ಬಳಕೆ ಮಾಡುತ್ತಿರುವ ವಿಚಾರವನ್ನು ಪ್ರಸ್ತಾವಿಸಲಿದೆ.
- ನನ್ನ ನಿವಾಸದ ಬಳಿ ಮಾಧ್ಯಮದವರೊಂದಿಗೆ ಮಾತನಾಡಿದೆ. -
Dr. G Parameshwara
@DrParameshwara
On World Physiotherapy Day, I extend my greetings to all physiotherapists whose dedicated work helps people recover, regain mobility and lead healthier, more independent lives.
Their skill, care and commitment make a meaningful difference in the lives of patients every day.
#worldphysiotherapyday -
Dr. G Parameshwara
@DrParameshwara
ಕನ್ನಡ ಸಾಹಿತ್ಯಕ್ಕೆ ತಮ್ಮ ವೈಶಿಷ್ಟ್ಯಪೂರ್ಣ ಬರಹಗಳ ಮೂಲಕ ಹೊಸ ಆಯಾಮ ನೀಡಿದ ಕೆ.ಪಿ. ಪೂರ್ಣಚಂದ್ರ ತೇಜಸ್ವಿಯವರು, ಕರ್ವಾಲೊ, ಜುಗಾರಿ ಕ್ರಾಸ್, ಚಿದಂಬರ ರಹಸ್ಯ ಸೇರಿದಂತೆ ಹಲವು ಕೃತಿಗಳ ಮೂಲಕ ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದ್ದಾರೆ.
ಪ್ರಕೃತಿ, ಪರಿಸರ ಹಾಗೂ ಗ್ರಾಮೀಣ ಬದುಕನ್ನು ತಮ್ಮ ಬರಹಗಳಲ್ಲಿ ಪರಿಣಾಮಕಾರಿಯಾಗಿ ಕಟ್ಟಿಕೊಟ್ಟ ಪೂರ್ಣಚಂದ್ರ ತೇಜಸ್ವಿಯವರ ಜನ್ಮದಿನದ ಸಂದರ್ಭದಲ್ಲಿ ಅವರಿಗೆ ನನ್ನ ನಮನಗಳನ್ನು ಸಲ್ಲಿಸುತ್ತೇನೆ. -
Dr. G Parameshwara
@DrParameshwara
Today, I chaired a preparatory meeting at the Deputy Commissioner’s Office in Tumakuru regarding the upcoming Tumakuru Dasara celebrations, and later addressed the media.
The meeting was convened to discuss the preparations for Tumakuru Dasara, which has been celebrated successfully over the past two years. Members who had worked on the organising committee were part of the discussions, and the Deputy Commissioner presented proposals on how this year’s celebrations could be organised.
It was decided to continue Tumakuru Dasara in keeping with its established traditions. Inspired by the spirit of Mysuru Dasara, the celebrations will include nine days of Navadurga worship, daily homas and havanas, and a wide range of cultural programmes.
We are also committed to providing a platform for artists from Tumakuru district. Last year, 5,343 artists from our district were given an opportunity to perform. It is difficult for such a large number of local talents to get opportunities elsewhere, and we will ensure that they are given a platform this year as well.
A detailed proposal has been prepared for the celebrations. The Tumakuru Dasara logo will be unveiled on September 15, when further details of the festival will also be shared. The celebrations will formally begin on October 11 at the Government Pre-University College grounds in the city with flag hoisting and Maha Mangalarati. Religious programmes, including various pujas, homas and havanas, will continue until October 21.
Cultural programmes, Yuva Dasara, Mahila Dasara and sporting activities will be organised. This year, nine sports will be included. The city will be illuminated on a grand scale, and free bus services will be arranged at night for the public to view the lighting. An exhibition, flower and fruit show, and Kavigoshti will also be held. Suggestions have also been received to organise a separate Kavigoshti for young people.
This year, a major permanent “Light and Sound” fountain will be developed at Amanikere. Tumakuru Square and Shivakumara Swamiji Circle will also be developed, and large electronic screens will be installed, with a special focus on engaging the youth.
Helicopter rides for the public and a torchlight parade will also be organised. Training for children has already begun, and efforts are being made to organise a drone show as well.
We want Tumakuru Dasara to be celebrated in a truly grand and memorable manner. The State Government had provided ₹2 crore for last year’s celebrations, and this year we will seek a higher allocation.
On the Yettinahole Project, former Chief Minister Siddaramaiah and present Chief Minister D.K. Shivakumar had planned to complete the project during 2026–27. The pending 500-metre stretch of work in the forest area is now nearing completion. Yettinahole water will first reach Arsikere and then be brought to Tumakuru. All major issues have been resolved, and trial supply of water to Tumakuru is expected by October. The work is progressing without any hurdles.
The State is also announcing six government medical colleges, including one in Tumakuru. The Tumakuru Medical College will be developed under the PPP model. Private participation will be utilised under government regulation and oversight. The Union Government itself has advised States to take up such projects under the PPP model.
The meeting was attended by Deputy Commissioner Shubha Kalyan, Zilla Panchayat CEO Ashwija, Municipal Corporation Commissioner Shubha, SP Ashok, BMTC Vice-Chairman Niketh Raj Maurya, local leader Muralidhar Halappa, and office-bearers of the Tumakuru Dasara Committee. -
Dr. G Parameshwara
@DrParameshwara
ಇಂದು ತುಮಕೂರಿನ ಜಿಲ್ಲಾಧಿಕಾರಿಗಳ ಕಾರ್ಯಾಲಯದ ಸಭಾಂಗಣದಲ್ಲಿ ತುಮಕೂರು ದಸರಾ ಉತ್ಸವ ಆಚರಣೆಗೆ ಸಂಬಂಧಿಸಿದಂತೆ ಪೂರ್ವಭಾವಿ ಸಭೆ ನಡೆಸಿ, ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದೆ.
ತುಮಕೂರು ದಸರಾ ಉತ್ಸವದ ಬಗ್ಗೆ ಚರ್ಚಿಸಲು ಸಭೆ ಕರೆಯಲಾಗಿತ್ತು. ಕಳೆದ ಎರಡು ವರ್ಷ ಯಶಸ್ವಿಯಾಗಿ ಆಚರಿಸಲಾಗಿದೆ. ಈ ಹಿನ್ನೆಲೆಯಲ್ಲಿ ಸಮಿತಿಯಲ್ಲಿ ಕೆಲಸ ಮಾಡಿದ್ದ ಸದಸ್ಯರೊಂದಿಗೆ ಸಭೆ ನಡೆಸಲಾಗಿದೆ. ಜಿಲ್ಲಾಧಿಕಾರಿಗಳು ಈ ವರ್ಷದ ದಸರಾ ಯಾವ ರೀತಿ ಆಚರಿಸಬೇಕು ಎಂಬುದರ ಬಗ್ಗೆ ಸಭೆಯಲ್ಲಿ ಪ್ರಸ್ತಾಪಿಸಿದ್ದಾರೆ.
ಮೈಸೂರು ದಸರಾ ಉತ್ಸವವನ್ನು ಯಾವುದೇ ಬದಲಾವಣೆಗಳಿಲ್ಲದೆ ಆಚರಿಸಲಾಗುತ್ತಿದೆ. ಅದೇ ರೀತಿಯಾಗಿ ತುಮಕೂರು ದಸರಾ ಉತ್ಸವವನ್ನು ಆಚರಿಸಲು ಸಭೆಯಲ್ಲಿ ತೀರ್ಮಾನಿಸಲಾಗಿದೆ. ಮೈಸೂರಿನಲ್ಲಿ ಚಾಮುಂಡೇಶ್ವರಿಗೆ ಪೂಜೆ ನಡೆಯುತ್ತದೆ. ಆ ವಿಚಾರಧಾರೆಗಳ ಹಿನ್ನೆಲೆಯಲ್ಲಿ ತುಮಕೂರು ದಸರಾ ಮುಂದುವರಿಸಲು ತೀರ್ಮಾನಿಸಲಾಗಿದೆ. ಒಂಬತ್ತು ದಿನ ನವದುರ್ಗೆಯರ ಪೂಜೆ, ಪ್ರತಿದಿನ ಹೋಮ ಹವನ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು.
ತುಮಕೂರು ಜಿಲ್ಲೆಯ ಕಲಾವಿದರಿಗೆ ಅವಕಾಶ ಕಲ್ಪಿಸಬೇಕು. ಕಳೆದ ವರ್ಷ ನಮ್ಮ ಜಿಲ್ಲೆಯ 5,343 ಕಲಾವಿದರಿಗೆ ಅವಕಾಶ ಕಲ್ಪಿಸಲಾಗಿತ್ತು. ಇಷ್ಟೊಂದು ಪ್ರತಿಭೆಗಳಿಗೆ ಬೇರೆ ಜಿಲ್ಲೆಯಲ್ಲಿ ಅವಕಾಶಗಳು ಸಿಗುವುದು ಕಷ್ಟ. ಈ ಬಾರಿಯೂ ಅವಕಾಶ ಕಲ್ಪಿಸಿಕೊಡುತ್ತೇವೆ.
ನಾಡಹಬ್ಬದ ವಿಚಾರದಲ್ಲಿ ಯಾವ ರೀತಿ ಆಚರಿಸಬೇಕು ಎಂಬುದರ ಕುರಿತು ಪ್ರಸ್ತಾವನೆ ಸಿದ್ದಪಡಿಸಿದ್ದಾರೆ. ಸೆ.15ರಂದು ತುಮಕೂರು ದಸರಾ ಉತ್ಸವ ಆಚರಣೆಯ ಲಾಂಛನ ಬಿಡುಗಡೆ ಮಾಡಿ, ದಸರಾ ಆಚರಣೆಯ ಕುರಿತು ಮಾಹಿತಿ ಹಂಚಿಕೊಳ್ಳಲಾಗುವುದು. ನಗರದ ಸರ್ಕಾರಿ ಪದವಿಪೂರ್ವ ಕಾಲೇಜು ಆವರಣದಲ್ಲಿ ಅಕ್ಟೋಬರ್ 11ರಂದು ಧ್ವಜಾರೋಹಣ, ಮಹಾಮಂಗಳಾರತಿ ಮೂಲಕ ತುಮಕೂರು ದಸರಾ ಉತ್ಸವ ಆಚರಣೆಯನ್ನು ಪ್ರಾರಂಭಿಸಲಾಗುವುದು. ಅಕ್ಟೋಬರ್ 21ರವರೆಗೆ ವಿವಿಧ ಪೂಜೆ, ಹೋಮ-ಹವನ ಸೇರಿದಂತೆ ಧಾರ್ಮಿಕ ಆಚರಣೆಗಳು ನಡೆಯುತ್ತವೆ.
ಸಾಂಸ್ಕೃತಿಕ ಕಾರ್ಯಕ್ರಮಗಳು, ಯುವ ದಸರಾ, ಮಹಿಳಾ ದಸರಾ, ಕ್ರೀಡಾ ಚಟುವಟಿಕೆಗಳಿಗೆ ಅವಕಾಶ ಕಲ್ಪಿಸಲಾಗುವುದು. ಈ ಬಾರಿ 9 ಕ್ರೀಡೆಗಳಿಗೆ ಅವಕಾಶವಿದೆ. ನಗರದಲ್ಲಿ ಹೆಚ್ಚು ವೈಭವಯುತವಾಗಿ ದೀಪಾಲಂಕಾರ ಮಾಡಲಾಗುವುದು. ರಾತ್ರಿ ವೇಳೆ ದೀಪಾಲಂಕಾರ ವೀಕ್ಷಿಸಲು ಉಚಿತ ಬಸ್ ವ್ಯವಸ್ಥೆ ಕಲ್ಪಿಸಲಾಗುವುದು. ವಸ್ತುಪ್ರದರ್ಶನ, ಫಲಪುಷ್ಪ ಪ್ರದರ್ಶನ ಇರುತ್ತದೆ. ಕವಿಗೋಷ್ಠಿ ಆಯೋಜಿಸಲಾಗುವುದು. ಯುವಕರಿಗೆ ಪ್ರತ್ಯೇಕ ಕವಿಗೋಷ್ಠಿ ನಡೆಸುವ ಬಗ್ಗೆ ಸಲಹೆಗಳು ಬಂದಿವೆ.
ಈ ಬಾರಿ ಅಮಾನಿಕೆರೆಯಲ್ಲಿ ಅತಿದೊಡ್ಡ "ಲೈಟ್ ಆ್ಯಂಡ್ ಸೌಂಡ್" ಕಾರಂಜಿ ಮಾಡಲಾಗುತ್ತಿದೆ. ಈ ಕಾರಂಜಿ ಶಾಶ್ವತವಾಗಿ ಇರುತ್ತದೆ. ತುಮಕೂರು ಸ್ಕ್ವೇರ್ ಮಾಡಲಾಗುತ್ತಿದೆ. ಶಿವಕುಮಾರ ಸ್ವಾಮೀಜಿ ವೃತ್ತ ಮಾಡಲಾಗುವುದು. ಬಹಳ ದೊಡ್ಡ ಎಲೆಕ್ಟ್ರಾನಿಕ್ ಸ್ಕ್ರೀನಿಂಗ್ಗಳನ್ನು ಹಾಕಲಾಗುವುದು. ಇದು ಯುವಕರಿಗಾಗಿ ಮಾಡಿರುವುದು.
ಸಾರ್ವಜನಿಕರಿಗೆ ಹೆಲಿಕಾಪ್ಟರ್ ರೈಡ್, ಪಂಜಿನ ಕವಾಯತು ಪರೇಡ್ ಇರುತ್ತದೆ. ಈಗಾಗಲೇ ಮಕ್ಕಳಿಗೆ ತರಬೇತಿ ಪ್ರಾರಂಭವಾಗಿದೆ. ಡ್ರೋನ್ ಶೋ ನಡೆಸಲು ಪ್ರಯತ್ನಿಸಲಾಗುವುದು.
ತುಮಕೂರು ದಸರಾ ಚೆನ್ನಾಗಿ ನಡೆಯಲು ಅವಕಾಶ ಮಾಡಿಕೊಡಬೇಕು. ಕಳೆದ ವರ್ಷ ತುಮಕೂರು ದಸರಾ ಆಚರಣೆಗೆ ಸರ್ಕಾರ 2 ಕೋಟಿ ರೂ. ನೀಡಿತ್ತು. ಈ ಬಾರಿ ಹೆಚ್ಚಿನ ಹಣ ಕೇಳಲಾಗುವುದು.
ಹಿಂದಿನ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರು ಮತ್ತು ಈಗಿನ ಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ್ ಅವರು ಎತ್ತಿನಹೊಳೆ ಯೋಜನೆ 2026-27ರಲ್ಲಿ ಪೂರ್ಣಗೊಳಿಸಲು ಯೋಜನೆ ಹಾಕಿಕೊಂಡಿದ್ದರು. ಅರಣ್ಯ ಪ್ರದೇಶದಲ್ಲಿ ನೆನೆಗುದಿಗೆ ಬಿದ್ದಿದ್ದ 500 ಮೀಟರ್ ಕೆಲಸ ಸಂಪೂರ್ಣವಾಗುತ್ತ ಬಂದಿದೆ. ಎತ್ತಿನಹೊಳೆ ನೀರು ಅರಸಿಕೆರೆ ಬರುತ್ತದೆ. ತದನಂತರ ತುಮಕೂರಿಗೆ ನೀರು ಬರಬೇಕು. ಎಲ್ಲ ಸಮಸ್ಯೆ ಸಂಪೂರ್ಣವಾಗಿ ಕ್ಲಿಯರ್ ಅಗಿದೆ. ಅಕ್ಟೋಬರ್ ವೇಳೆಗೆ ಟ್ರಯಲ್ ಆಗಿ ತುಮಕೂರಿಗೆ ನೀರು ತರುವ ಕೆಲಸ ಆಗಲಿದೆ. ಯಾವುದೇ ಅಡಚಣೆ ಇಲ್ಲದೆ ಕೆಲಸ ನಡೆಯುತ್ತಿದೆ.
ರಾಜ್ಯದಲ್ಲಿ 6 ಸರ್ಕಾರಿ ಮೆಡಿಕಲ್ ಕಾಲೇಜು ಘೋಷಣೆ ಮಾಡಲಾಗುತ್ತಿದೆ. ಇದರಲ್ಲಿ ತುಮಕೂರು ಮೆಡಿಕಲ್ ಕಾಲೇಜು ಇದೆ. ಪಿಪಿಪಿ ಮಾದರಿಯಲ್ಲಿ ಮಾಡಲಾಗುವುದು. ಖಾಸಗಿಯವರನ್ನು ನಿಯಂತ್ರಣದಲ್ಲಿಟ್ಟುಕೊಂಡು ಉಪಯೋಗ ಮಾಡಲಾಗುತ್ತದೆ. ಪಿಪಿಪಿ ಮಾದರಿಯಲ್ಲಿ ಪ್ರಾಜೆಕ್ಟ್ ತೆಗೆದುಕೊಳ್ಳುವಂತೆ ಕೇಂದ್ರ ಸರ್ಕಾರವೇ ತಿಳಿಸಿದೆ.
ಸಭೆಯಲ್ಲಿ ಜಿಲ್ಲಾಧಿಕಾರಿಗಳಾದ ಶುಭ ಕಲ್ಯಾಣ್, ಜಿಲ್ಲಾ ಪಂಚಾಯತ್ ಸಿಇಒ ಅಶ್ವಿಜಾ, ಮಹಾನಗರ ಪಾಲಿಕೆ ಆಯುಕ್ತರಾದ ಶುಭ, ಎಸ್ಪಿ ಅಶೋಕ್, ಬಿಎಂಟಿಸಿ ಉಪಾಧ್ಯಕ್ಷರಾದ ನಿಕೇತ್ ರಾಜ್ ಮೌರ್ಯ, ಸ್ಥಳೀಯ ಮುಖಂಡರಾದ ಮುರಳಿಧರ್ ಹಾಲಪ್ಪ ಹಾಗೂ ತುಮಕೂರು ದಸರಾ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು. -
Dr. G Parameshwara
@DrParameshwara
ನನ್ನ ಸ್ವಕ್ಷೇತ್ರ ಕೊರಟಗೆರೆಯಲ್ಲಿ ಆರೋಗ್ಯ ಕ್ರಾಂತಿ ನಡೆದಿದೆ.
₹40 ಕೋಟಿ ವೆಚ್ಚದಲ್ಲಿ ಕೊರಟಗೆರೆ ತಾಲ್ಲೂಕು ಕೇಂದ್ರದಲ್ಲಿ ಸುಸಜ್ಜಿತ 100 ಹಾಸಿಗೆಯ ಹೈಟೆಕ್ ಸಾರ್ವಜನಿಕ ಆಸ್ಪತ್ರೆ ನಿರ್ಮಾಣವಾಗುತ್ತಿದೆ.
ಇದರಿಂದ ಗ್ರಾಮೀಣ ಭಾಗದ ಬಡ ಜನರಿಗೆ ಗುಣಮಟ್ಟದ ಆರೋಗ್ಯ ಸೇವೆ ದೊರೆಯಲಿದ್ದು, ಮುಂದಿನ ದಿನಗಳಲ್ಲಿ ಜಿಲ್ಲಾಸ್ಪತ್ರೆಯ ಮೇಲಿನ ಅವಲಂಬನೆಯೂ ಕಡಿಮೆಯಾಗಲಿದೆ.This media couldn't be displayed. See it on the original post. -
Dr. G Parameshwara
@DrParameshwara
ಸಿದ್ದರಾಮಯ್ಯನವರು ಜಾರಿಗೆ ತಂದ ಪಂಚ ಗ್ಯಾರಂಟಿಗಳಿಗೆ ಅನೇಕ ಟೀಕೆಗಳು ಬಂದವು. ಆದರೆ ಈ ಯೋಜನೆಗಳು ಸಮಾಜದಲ್ಲಿ ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಹಿಂದುಳಿದವರಿಗೆ ಪ್ರಯೋಜನವಾಗಿವೆ. ಪ್ರಧಾನಿ ಮೋದಿಯವರು ಕೂಡ ಗ್ಯಾರಂಟಿಯನ್ನು ಕಾಪಿ ಮಾಡಿದ್ದಾರೆ. ನ್ಯೂಯಾರ್ಕ್ನಲ್ಲೂ ಮಹಿಳೆಯರಿಗೆ ಉಚಿತ ಬಸ್ ಯೋಜನೆಯನ್ನು ಜಾರಿಗೆ ತಂದಿದ್ದಾರೆ. ಅಲ್ಲಿಗೆ ನಮ್ಮ ಗ್ಯಾರಂಟಿ ಜಗದ್ವಿಖ್ಯಾತಿ ಪಡೆದಿದೆ.
(ಬೆಂಗಳೂರು ಅರಮನೆ ಮೈದಾನದಲ್ಲಿ ಕರ್ನಾಟಕ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟವು ಆಯೋಜಿಸಿದ್ದ ಸಿದ್ದರಾಮಯ್ಯ ಅವರ ಅಭಿನಂದನಾ ಕಾರ್ಯಕ್ರಮದ ಭಾಷಣದಿಂದ)
Shri Siddaramaiah’s five guarantee schemes faced a great deal of criticism when they were introduced. But these schemes have made a real difference to people who are economically, socially and educationally disadvantaged.
Even Prime Minister Narendra Modi has adopted the guarantee model. And now, New York too has introduced free bus travel for women. Our guarantee model has truly gained global recognition.
(From my speech at the felicitation programme for Shri Siddaramaiah, organised by the Karnataka State Federation of Backward Classes at Bengaluru Palace Grounds) -
Dr. G Parameshwara
@DrParameshwara
ಸಿದ್ದರಾಮಯ್ಯ ಅವರು ರಾಜ್ಯ ರಾಜಕೀಯದಲ್ಲಿ ಹೊಸ ಚಿಂತನೆಯನ್ನು ಹುಟ್ಟು ಹಾಕಿದ ನಾಯಕ. ಅಹಿಂದ ಹೋರಾಟದ ಮೂಲಕ ನಿರ್ಲಕ್ಷ್ಯಕ್ಕೆ ಒಳಗಾಗಿದ್ದ ಜಾತಿಗಳಿಗೆ, ಧ್ವನಿ ಇಲ್ಲದ ಸಮುದಾಯಗಳಿಗೆ ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಶಕ್ತಿ ತುಂಬುವ ಕೆಲಸ ಮಾಡಿದ್ದಾರೆ. ಸಿದ್ದರಾಮಯ್ಯನವರಿಗೆ ಮಾತ್ರವಲ್ಲದೆ, ನಮ್ಮೆಲ್ಲರ ರಾಜಕಾರಣಕ್ಕೆ ಅಹಿಂದ ಹೋರಾಟ ಬಹಳ ಯಶಸ್ವಿಯಾಗಿ ಕೆಲಸ ಮಾಡಿದೆ.
(ಬೆಂಗಳೂರು ಅರಮನೆ ಮೈದಾನದಲ್ಲಿ ಕರ್ನಾಟಕ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟವು ಆಯೋಜಿಸಿದ್ದ ಸಿದ್ದರಾಮಯ್ಯ ಅವರ ಅಭಿನಂದನಾ ಕಾರ್ಯಕ್ರಮದ ಭಾಷಣದಿಂದ)
Shri Siddaramaiah is a leader who brought a new way of thinking to Karnataka politics. Through the AHINDA movement, he worked to socially and economically empower neglected castes and communities that had long remained voiceless.
The AHINDA movement has not only shaped Siddaramaiah’s political journey, but has also had a profound impact on the politics of all of us associated with it.
(From my speech at the felicitation programme for Shri Siddaramaiah, organised by the Karnataka State Federation of Backward Classes at Bengaluru Palace Grounds) -
Dr. G Parameshwara
@DrParameshwara
ಸಿದ್ದರಾಮಯ್ಯ ಅವರು ರಾಜ್ಯ ಕಂಡ ಅಪರೂಪದ ರಾಜಕಾರಣಿ. ಬಸವಣ್ಣನವರ ತತ್ವಗಳು ಹಾಗೂ ಡಾ. ಬಿ.ಆರ್. ಅಂಬೇಡ್ಕರ್ ಅವರ ಆಶಯಗಳನ್ನು ಮೈಗೂಡಿಸಿಕೊಂಡು, ಬಡವರು, ಶೋಷಿತರು ಮತ್ತು ಧ್ವನಿ ಇಲ್ಲದವರ ಹಕ್ಕುಗಳಿಗಾಗಿ ನಿರಂತರವಾಗಿ ಹೋರಾಡಿದ್ದಾರೆ. ಟೀಕೆಗಳು ಏನೇ ಇರಲಿ, ಜನರ ಹಕ್ಕುಗಳನ್ನು ತಲುಪಿಸುವ ಅವರ ಸೈದ್ಧಾಂತಿಕ ಬದ್ಧತೆ ಪ್ರಶ್ನಾತೀತ.
(ಬೆಂಗಳೂರು ಅರಮನೆ ಮೈದಾನದಲ್ಲಿ ಕರ್ನಾಟಕ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟವು ಆಯೋಜಿಸಿದ್ದ ಸಿದ್ದರಾಮಯ್ಯ ಅವರ ಅಭಿನಂದನಾ ಕಾರ್ಯಕ್ರಮದ ಭಾಷಣದಿಂದ)
Shri Siddaramaiah is one of the rare political leaders Karnataka has witnessed. Guided by the principles of Basavanna and the ideals of Dr. B.R. Ambedkar, he has consistently fought for the rights of the poor, the oppressed and the voiceless.
Whatever the criticism, his ideological commitment to securing people’s rights remains unquestionable.
(From my speech at the felicitation programme for Shri Siddaramaiah, organised by the Karnataka State Federation of Backward Classes at Bengaluru Palace Grounds) -
Dr. G Parameshwara
@DrParameshwara
ಇಂದು ತುಮಕೂರು ಹೊರವಲಯದ ಅಗಳಕೋಟೆ ಶ್ರೀ ಸಿದ್ಧಾರ್ಥ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಜಿಲ್ಲೆಯಾದ್ಯಂತ ಸಿಪಿಆರ್ ಕುರಿತು ಜಾಗೃತಿ ಜಾಥಾ ಮತ್ತು ಸಾರ್ವಜನಿಕವಾಗಿ ತರಬೇತಿಯನ್ನು ನೀಡುವ ಉದ್ದೇಶದಿಂದ ಅಕ್ಟೋಬರ್ 2ರ ವರೆಗೆ ನಡೆಯಲಿರುವ 'ಹಾರ್ಟ್ ಸೇಫ್ ತುಮಕೂರುʼ ಅಭಿಯಾನಕ್ಕೆ ಚಾಲನೆ ನೀಡಿದೆ.
ಇತ್ತೀಚಿನ ದಿನಗಳಲ್ಲಿ ಹೃದಯಾಘಾತದಿಂದ ಸಾವನ್ನಪ್ಪುತ್ತಿರುವವರ ಸಂಖ್ಯೆ ಹೆಚ್ಚಾಗಿದೆ. ಇದನ್ನು ತಡೆಗಟ್ಟಲು ಕನಿಷ್ಠ ಪಕ್ಷ ಸಿಪಿಆರ್ ಬಗ್ಗೆ ತಿಳಿದುಕೊಂಡಿರಬೇಕು. ಆಗ ಒಂದು ಜೀವವನ್ನಾದರೂ ಉಳಿಸಬಹುದು. ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದಲೇ ಈ ಅಭಿಯಾನವನ್ನು ಆರಂಭಿಸಿದ್ದೇವೆ.
ಕಾರ್ಯಕ್ರಮದಲ್ಲಿ ಕಾರ್ಡಿಯೋಥೊರಾಸಿಕ್ ಶಸ್ತ್ರಚಿಕಿತ್ಸಕರಾದ ಡಾ.ತಮೀಮ್ ಅಹ್ಮದ್, ಜಿಲ್ಲಾಧಿಕಾರಿಗಳಾದ ಶುಭ ಕಲ್ಯಾಣ್, ಜಿಲ್ಲಾ ಪಂಚಾಯತ್ ಸಿಇಒ ಅಶ್ವಿಜಾ, ಪೊಲೀಸ್ ವರಿಷ್ಠಾಧಿಕಾರಿ ಅಶೋಕ್ ಕೆ.ವಿ, ಕಾಲೇಜಿನ ಪ್ರಾಂಶುಪಾಲರಾದ ಮಲ್ಲಿಕಾರ್ಜುನ ಸಾಣೆಕೊಪ್ಪ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
Today, at a programme held at Sri Siddhartha Medical College and Hospital, Agalakote, on the outskirts of Tumakuru, I launched the ‘Heart Safe Tumakuru’ campaign, which will continue until October 2. The campaign aims to create awareness about CPR across the district through rallies and provide hands-on CPR training to the public.
In recent times, we have seen an increase in deaths due to cardiac arrest. To help prevent such deaths, everyone should have at least a basic knowledge of CPR. Knowing CPR can help save a life during a critical emergency. This campaign has been launched with the objective of spreading that awareness among the people.
Cardiothoracic surgeon Dr. Tameem Ahmad, Deputy Commissioner Shubha Kalyan, Zilla Panchayat CEO Ashwija, Superintendent of Police Ashok K.V., College Principal Mallikarjun Sanekoppa and several others were present at the programme. -
Dr. G Parameshwara
@DrParameshwara
ಅಭಿವೃದ್ಧಿಯ ಹಾದಿಯಲ್ಲಿ ಮುಂಚೂಣಿಯಲ್ಲಿರುವ ನಮ್ಮ ತುಮಕೂರು ಜಿಲ್ಲೆ ಆರೋಗ್ಯ ಕ್ಷೇತ್ರದಲ್ಲೂ ಸುಸ್ಥಿತಿಯಲ್ಲಿದೆ.
ವೈದ್ಯಕೀಯ ಕಾಲೇಜುಗಳು, ಸುಸಜ್ಜಿತ ಆಸ್ಪತ್ರೆಗಳು ಹಾಗೂ ಪ್ರಯೋಗಾಲಯಗಳನ್ನು ಸ್ಥಾಪಿಸಿ ಜನರಿಗೆ ಗುಣಮಟ್ಟದ ಆರೋಗ್ಯ ಸೇವೆಯನ್ನು ಒದಗಿಸುವ ಮೂಲಕ ರಾಜ್ಯದ ಮಾದರಿ ಹೆಲ್ತ್ ಸಿಟಿಯಾಗಿ ತುಮಕೂರು ರೂಪುಗೊಳ್ಳುತ್ತಿದೆ.
#healthforall #tumakuruThis media couldn't be displayed. See it on the original post. -
Dr. G Parameshwara
@DrParameshwara
ಇಂದು ನನಗೆ ಸಿಕ್ಕಿರುವ ಅಧಿಕಾರ, ಹುದ್ದೆ ಎಲ್ಲವೂ ಕನ್ನಡ ಜನತೆಯ ಪ್ರೀತಿ ಮತ್ತು ಆಶೀರ್ವಾದದ ಸಂಕೇತ.
ನೀವು ನೀಡಿರುವ ಜವಾಬ್ದಾರಿಯನ್ನು ನಾನು ಸಮರ್ಥವಾಗಿ ನಿಭಾಯಿಸಿದ್ದೇನೆ ಎನ್ನುವ ಸಂತೃಪ್ತಿ ನನಗಿದೆ. ಅದನ್ನು ನಿಮ್ಮ ಮಾತುಗಳಲ್ಲಿ ಕೇಳುವಾಗ ಮತ್ತಷ್ಟು ಖುಷಿಯಾಗುತ್ತದೆ.
ಈ ಪ್ರೀತಿ - ವಿಶ್ವಾಸಕ್ಕೆ ಧನ್ಯವಾದಗಳು.This media couldn't be displayed. See it on the original post. -
Dr. G Parameshwara
@DrParameshwara
Today, I inaugurated and addressed the “Silver Jubilee and Grand Awareness Convention of Backward Communities”, organised by the Karnataka State Federation of Backward Castes at the Bangalore Palace Grounds, along with a felicitation programme for former Chief Minister @siddaramaiah .
Siddaramaiah is a leader who brought a new way of thinking to state politics. Through the AHINDA movement, he has worked to socially and economically empower communities that had been neglected and those that had no voice.
For the past 25 years, the Karnataka State Federation of Backward Castes has also worked to give a voice to backward communities, strengthen their struggles, and secure the benefits and representation they are entitled to in government.
The AHINDA movement has worked very successfully—not just for Siddaramaiah, but for the politics of all of us. Siddaramaiah is a rare politician who has emerged from Karnataka. Inspired by the principles and philosophy of Basavanna and guided by the ideals of Bharat Ratna Dr. B.R. Ambedkar, he has worked for social justice.
Siddaramaiah’s politics is a politics of struggle—a struggle for the poor and for those without a voice. Anyone can criticise him. But his commitment has always been to adhere to a principle and ensure that rights reach the people and communities who are entitled to them.
Thousands of years ago, a hierarchical social system was created in this country, resulting in different layers of caste within society. Many leaders have stood against the caste system. Former Chief Minister D. Devaraj Urs, Justice A.J. Havanur and many others fought against it. Siddaramaiah has worked to ensure that backward classes receive the constitutionally guaranteed opportunities and rights due to them.
With the objective of providing economic and social strength to communities facing hardship, Siddaramaiah introduced and effectively implemented guarantee schemes for the first time in the country. Initially, many people criticised these schemes. Those who criticised the guarantee schemes then are now copying them. They are being adopted and implemented in other states as well. Prime Minister Narendra Modi has also accepted the concept of guarantee schemes.
If the regressive caste system in the country is not eliminated, genuine development cannot be achieved. The hierarchical system has divided India into two. One India belongs to the wealthy, privileged and landlords, while another India belongs to daily-wage workers, agricultural labourers and the poor. This must not continue.
Before Independence, Babasaheb Ambedkar, who fought for the rights of the oppressed, refused to accept a divided India based on inequality. He advocated equality and justice for every individual. In that spirit, inequality in the country must be eliminated. India in the 21st century must not be defined by inequality. We must fight against it.
Organisations and associations working for Scheduled Castes and Scheduled Tribes must fight for their rights. We must continue our efforts to secure the rights guaranteed to us by the Constitution.
If all caste communities work together, the administration of the state will remain permanently in the hands of the backward and disadvantaged sections. Such efforts have been successfully undertaken in Uttar Pradesh and Bihar.
Backward communities must receive justice. They must receive justice in education as well. Children from backward communities must become engineers, doctors and professors in universities. Only through the sustained organisational struggle of these communities can this goal be achieved.
It is difficult to find a leader who can provide leadership in the same way as Siddaramaiah. Let us all continue the struggle under his leadership and take a collective pledge to build an equal society. -
Dr. G Parameshwara
@DrParameshwara
ಇಂದು ಬೆಂಗಳೂರು ಅರಮನೆ ಮೈದಾನದಲ್ಲಿ ಕರ್ನಾಟಕ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟವು ಆಯೋಜಿಸಿದ್ದ "ರಜತ ಮಹೋತ್ಸವ ಹಾಗೂ ಹಿಂದುಳಿದ ಜಾತಿಗಳ ಬೃಹತ್ ಜನ ಜಾಗೃತಿ ಸಮಾವೇಶ" ಮತ್ತು ನಿಕಟಪೂರ್ವ ಮುಖ್ಯಮಂತ್ರಿಗಳಾದ @siddaramaiah ಅವರಿಗೆ ಅಭಿನಂದನೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದೆ.
ಸಿದ್ದರಾಮಯ್ಯ ಅವರು ರಾಜ್ಯ ರಾಜಕೀಯದಲ್ಲಿ ಹೊಸ ಚಿಂತನೆಯನ್ನು ಹುಟ್ಟು ಹಾಕಿದ ನಾಯಕ. ಅಹಿಂದ ಹೋರಾಟದ ಮೂಲಕ ನಿರ್ಲಕ್ಷ್ಯಕ್ಕೆ ಒಳಗಾಗಿದ್ದ ಜಾತಿಗಳಿಗೆ, ಧ್ವನಿ ಇಲ್ಲದ ಸಮುದಾಯಗಳಿಗೆ ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಶಕ್ತಿ ತುಂಬುವ ಕೆಲಸ ಮಾಡಿದ್ದಾರೆ.
ಕರ್ನಾಟಕ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟವೂ ಕಳೆದ 25 ವರ್ಷಗಳಿಂದ ಹಿಂದುಳಿದ ಸಮುದಾಯಗಳಿಗೆ ಧ್ವನಿ ನೀಡುವಂತ, ಹೋರಾಟಕ್ಕೆ ಶಕ್ತಿ, ಸರ್ಕಾರದಲ್ಲಿ ಸಿಗಬೇಕಾದ ಸವಲತ್ತುಗಳು ಮತ್ತು ಅಧಿಕಾರಕ್ಕಾಗಿ ಒಕ್ಕೂಟವು ಕೆಲಸ ಮಾಡಿಕೊಂಡು ಬಂದಿದೆ.
ಸಿದ್ದರಾಮಯ್ಯನವರಿಗೆ ಮಾತ್ರವಲ್ಲದೆ, ನಮ್ಮೆಲ್ಲರ ರಾಜಕಾರಣಕ್ಕೆ ಅಹಿಂದ ಹೋರಾಟ ಬಹಳ ಯಶಸ್ವಿಯಾಗಿ ಕೆಲಸ ಮಾಡಿದೆ. ಸಿದ್ದರಾಮಯ್ಯ ಅವರು ರಾಜ್ಯ ಕಂಡ ಅಪರೂಪದ ರಾಜಕಾರಣಿ. ಬಸವಣ್ಣನವರ ತತ್ವ ಸಿದ್ಧಾಂತಗಳನ್ನು ಅನುಕರಿಸಿ, ಭಾರತರತ್ನ ಡಾ. ಬಿ.ಆರ್.ಅಂಬೇಡ್ಕರ್ ಅವರ ಆಶಯಗಳನ್ನು ಮೈಗೂಡಿಸಿಕೊಂಡು ಕೆಲಸ ಮಾಡಿದ್ದಾರೆ.
ಸಿದ್ದರಾಮಯ್ಯ ಅವರದ್ದು ಹೋರಾಟದ ರಾಜಕಾರಣ. ಬಡವರಿಗಾಗಿ, ಧ್ವನಿ ಇಲ್ಲದವರಿಗಾಗಿ ಮಾಡಿದ ಹೋರಾಟದ ರಾಜಕಾರಣ. ಅವರನ್ನು ಯಾರು ಬೇಕಾದರೂ ಟೀಕೆ ಮಾಡಬಹುದು. ಆದರೆ, ಒಂದು ಸಿದ್ಧಾಂತಕ್ಕೆ ಅಂಟಿಕೊಂಡು ಹಕ್ಕುಗಳನ್ನು ಜನಸಮುದಾಯಕ್ಕೆ ತಲುಪಿಸುವ ಕೆಲಸ ಅವರ ಬದ್ಧತೆಯಾಗಿದೆ.
ದೇಶದಲ್ಲಿ ಸಾವಿರಾರು ವರ್ಷಗಳ ಹಿಂದೆ ಶ್ರೇಣಿಕೃತ ವ್ಯವಸ್ಥೆ ಮಾಡಿ, ವಿವಿಧ ಜಾತಿ ಪದರಗಳನ್ನು ಸಮಾಜದಲ್ಲಿ ಸೃಷ್ಟಿ ಮಾಡಿದ್ದಾರೆ. ಜಾತಿವ್ಯವಸ್ಥೆ ವಿರುದ್ಧ ಅನೇಕ ನಾಯಕರು ನಿಂತಿದ್ದಾರೆ. ಮಾಜಿ ಮುಖ್ಯಮಂತ್ರಿ ಡಿ. ದೇವರಾಜ ಅರಸು, ಹಾವನೂರು ಸೇರಿದಂತೆ ಅನೇಕರು ಹೋರಾಡಿದ್ದಾರೆ. ಸಿದ್ದರಾಮಯ್ಯ ಅವರು ಹಿಂದುಳಿದ ವರ್ಗಗಳಿಗೆ ಸಂವಿಧಾನಾತ್ಮಕವಾಗಿ ಸಿಗಬೇಕಾದ ಅವಕಾಶ ಮತ್ತು ಹಕ್ಕುಗಳನ್ನು ಕಲ್ಪಿಸಿಕೊಡುವ ಕೆಲಸ ಮಾಡಿದ್ದಾರೆ.
ಕಷ್ಟದಲ್ಲಿರುವ ಸಮುದಾಯಗಳಿಗೆ ಆರ್ಥಿಕ ಶಕ್ತಿ, ಸಾಮಾಜಿಕ ಶಕ್ತಿ ನೀಡುವ ಉದ್ದೇಶದಿಂದ ದೇಶದಲ್ಲೇ ಮೊಟ್ಟ ಮೊದಲ ಬಾರಿಗೆ ಗ್ಯಾರಂಟಿ ಯೋಜನೆಗಳನ್ನು ಪರಿಚಯಿಸಿ, ಸಮರ್ಪಕವಾಗಿ ಜಾರಿಗೊಳಿಸಿದರು. ಈ ಗ್ಯಾರಂಟಿ ಯೋಜನೆಗಳನ್ನು ಆರಂಭದಲ್ಲಿ ಅನೇಕರು ಟೀಕೆ ಮಾಡಿದರು. ಅಂದು ಗ್ಯಾರಂಟಿ ಯೋಜನೆಗಳನ್ನು ಟೀಕೆ ಮಾಡಿದ ಜನರೇ ಇಂದು ನಕಲು ಮಾಡುತ್ತಿದ್ದಾರೆ. ಬೇರೆ ರಾಜ್ಯಗಳಲ್ಲಿಯೂ ಅಳವಡಿಸಿಕೊಂಡು ಜಾರಿಗೊಳಿಸಲಾಗುತ್ತಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಗ್ಯಾರಂಟಿ ಯೋಜನೆಗಳನ್ನು ಒಪ್ಪಿಕೊಂಡಿದ್ದಾರೆ.
ದೇಶದಲ್ಲಿನ ಅನಿಷ್ಟ ಜಾತಿ ಪದ್ಧತಿ ಹೋಗದಿದ್ದರೆ ಅಭಿವೃದ್ಧಿ ಕಾಣಲು ಸಾಧ್ಯವಿಲ್ಲ. ಶ್ರೇಣಿಕೃತ ವ್ಯವಸ್ಥೆಯಿಂದ ಭಾರತ ಎರಡು ಭಾಗವಾಗಿದೆ. ಉಳ್ಳವರು, ಅನುಕೂಲಸ್ಥರು ಮತ್ತು ಜಮೀನ್ದಾರರಿಗೆ ಭಾರತ ಒಂದು ಭಾಗವಾಗಿದೆ. ಕೂಲಿ ಕಾರ್ಮಿಕರು, ಕೃಷಿ ಕಾರ್ಮಿಕರು, ಬಡವರಿಗೆ ಮತ್ತೊಂದು ಭಾರತ ಭಾಗವಾಗಿದೆ. ಇದು ಆಗಬಾರದು.
ಸ್ವಾತಂತ್ರ್ಯಪೂರ್ವದಲ್ಲಿ ಹೋರಾಟ ಮಾಡಿದ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಭಾರತ ಎರಡು ಭಾಗವಾಗಲೂ ಒಪ್ಪಲಿಲ್ಲ. ಪ್ರತಿಯೊಬ್ಬರಿಗೂ ಸಮಾನತೆ, ನ್ಯಾಯ ಸಿಗಬೇಕು ಎಂದು ಪ್ರತಿಪಾದಿಸಿದ್ದರು. ಆ ನಿಟ್ಟಿನಲ್ಲಿ ದೇಶದಲ್ಲಿನ ಅಸಮಾನತೆ ನಿರ್ಮೂಲನೆಯಾಗಬೇಕಿದೆ. 21ನೇ ಶತಮಾನದ ಭಾರತ ಅಸಮಾನತೆಯಿಂದ ಕೂಡಿರಬಾರದು. ಇದರ ವಿರುದ್ಧ ಹೋರಾಟ ಮಾಡಬೇಕಿದೆ.
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹೆಸರಿನಲ್ಲಿ ಕೆಲಸ ಮಾಡುವ ಸಂಘ ಸಂಸ್ಥೆಗಳು ತಮ್ಮ ಹಕ್ಕಿಗಾಗಿ ಹೋರಾಟ ಮಾಡಬೇಕು. ಸಂವಿಧಾನಾತ್ಮಕವಾಗಿ ನಮಗೆ ಸಿಗಬೇಕಾದ ಹಕ್ಕುಗಳನ್ನು ನಾವು ದಕ್ಕಿಸಿಕೊಳ್ಳುವ ಪ್ರಯತ್ನ ಮುಂದುವರಿಯಬೇಕು.
ಎಲ್ಲ ಜಾತಿ ಸಮುದಾಯಗಳು ಒಟ್ಟಾಗಿ ಕೆಲಸ ಮಾಡಿದರೆ ರಾಜ್ಯದ ಆಡಳಿತ ಶಾಶ್ವತವಾಗಿ ಹಿಂದುಳಿದವರ ಕೈಯಲ್ಲಿ ಉಳಿಯುತ್ತದೆ. ಈ ಪ್ರಯತ್ನ ಉತ್ತರ ಪ್ರದೇಶ, ಬಿಹಾರದಲ್ಲಿ ನಡೆದಿದೆ.
ಮುಲಾಯಂ ಸಿಂಗ್ ಯಾದವ್, ಲಾಲು ಪ್ರಸಾದ್ ಯಾದವ್ ಅವರು ಹೋರಾಟದ ಬದುಕನ್ನು ಅಳವಡಿಸಿಕೊಂಡು ಅಧಿಕಾರ ಪಡೆದುಕೊಂಡಿದ್ದಾರೆ. ಆ ಸಂಘಟನೆಗಳು ಹೆಚ್ಚಿನ ರೀತಿಯಲ್ಲಿ ಕರ್ನಾಟಕದಲ್ಲಿ ಕೆಲಸ ಮಾಡಬೇಕು. ಸಿದ್ದರಾಮಯ್ಯ ಅವರು ಅಧಿಕಾರದಿಂದ ಕೆಳಗೆ ಇಳಿದಿದ್ದಾರೆ ಎಂದು ಯಾರು ಸಹ ಭಾವಿಸಬಾರದು. ಒಂದು ವೇಳೆ ಯಾರಾದ್ರು ಭಾವಿಸಿದರೆ, ಈ ಸಮುದಾಯಗಳ ಸಂಘಟನೆಗಳು ಮುಂಚೂಣಿಯಲ್ಲಿ ನಿಂತು ಹೋರಾಟ ಮಾಡಬೇಕು.
ಹಿಂದುಳಿದ ವರ್ಗದ ಸಮುದಾಯಗಳಿಗೆ ನ್ಯಾಯ ಸಿಗಬೇಕು. ಶೈಕ್ಷಣಿಕವಾಗಿ ನ್ಯಾಯ ಸಿಗಬೇಕು. ಹಿಂದುಳಿದ ಸಮುದಾಯಗಳ ಮಕ್ಕಳು ಇಂಜಿನಿಯರ್, ಡಾಕ್ಟರ್ಸ್, ವಿಶ್ವವಿದ್ಯಾಲಯಗಳಲ್ಲಿ ಪ್ರಾಧ್ಯಾಪಕರಾಗಬೇಕು. ಆ ನಿಟ್ಟಿನಲ್ಲಿ ಸಂಘಟನೆಯ ಹೋರಾಟದ ಕೆಲಸ ನಿಮ್ಮಿಂದ ಮಾತ್ರ ಸಾಧ್ಯ.
ಸಿದ್ದರಾಮಯ್ಯ ಅವರಿಗಿಂತ ವಿಭಿನ್ನವಾದ ನಾಯಕ ನಮಗೆ ಸಿಗಲು ಸಾಧ್ಯವಿಲ್ಲ. ಅವರ ನೇತೃತ್ವದಲ್ಲಿ ನಾವೆಲ್ಲ ಹೋರಾಟ ಮಾಡೋಣ. ಸಮಾನತೆಯ ಸಂಕಲ್ಪ ಮಾಡಬೇಕು.
ಕಾರ್ಯಕ್ರಮದಲ್ಲಿ ಸಚಿವರಾದ ಸಂತೋಷ್ ಲಾಡ್, ಪುಟ್ಟರಂಗ ಶೆಟ್ಟಿ, ಬೈರತಿ ಸುರೇಶ್, ಮಧು ಬಂಗಾರಪ್ಪ, ಡಾ.ಅಜಯ್ ಸಿಂಗ್, ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಹೆಚ್.ಎಂ.ರೇವಣ್ಣ, ಶಾಸಕರಾದ ಬಸವರಾಜ ಶಿವಣ್ಣನವರ್, ಭೀಮಸೇನ ಚಿಮ್ಮನಕಟ್ಟಿ, ಉಮೇಶ್ ಮೇಟಿ, ವಿಧಾನ ಪರಿಷತ್ ಸದಸ್ಯರಾದ ಎಂ.ಆರ್.ಸೀತಾರಾಮ್, ಮಳವಳ್ಳಿ ಶಿವಣ್ಣ ಮುಂತಾದವರು ಇದ್ದರು. -
Dr. G Parameshwara
@DrParameshwara
ಸರ್ಕಾರವೇ ಜನರ ಬಳಿ ಹೋಗಿ ಅವರ ಸಮಸ್ಯೆಗಳನ್ನು ಆಲಿಸಿ, ಪರಿಹರಿಸುವ ನಿಟ್ಟಿನಲ್ಲಿ ಕೆಲಸ ಮಾಡಬೇಕು. ಜನರು ತಮ್ಮ ಸಮಸ್ಯೆಗಳನ್ನು ಹೊತ್ತು ತಾಲೂಕು, ಜಿಲ್ಲಾ ಮಟ್ಟದ ಅಧಿಕಾರಿಗಳ ಕಚೇರಿಗಳಿಗೆ ಅಲೆದಾಡಿಸುವುದನ್ನು ತಪ್ಪಿಸಬೇಕು ಎಂಬ ಉದ್ದೇಶದಿಂದ ಪ್ರಜಾಸೇವಾ ಇಲಾಖೆಯನ್ನು ಆರಂಭಿಸಿದ್ದೇವೆ.
ಶನಿವಾರ ಪ್ರಜಾಸೇವಾ ಇಲಾಖೆ ಹಾಗೂ ತುಮಕೂರು ಜಿಲ್ಲಾಡಳಿತದ ವತಿಯಿಂದ ಗುಬ್ಬಿ ಪಟ್ಟಣದಲ್ಲಿ ಆಯೋಜಿಸಿದ್ದ ಮೊದಲ 'ಪ್ರಜಾಸೇವಾ ಅಭಿಯಾನ ಜನಸಭೆ' ಕಾರ್ಯಕ್ರಮಕ್ಕೆ ಚಾಲನೆ ನೀಡಿದೆ.
ಈ ಕುರಿತಾದ ಪತ್ರಿಕಾ ವರದಿಗಳು ಹೀಗಿವೆ..
The government must go to the people, listen to their problems, and work towards resolving them. With the objective of ensuring that people do not have to carry their grievances from one office to another at the taluk and district levels, we have launched the Praja Seva Department.
On Saturday, I inaugurated the first ‘Praja Seva Abhiyana Janasabhe’ organised by the Praja Seva Department and the Tumakuru District Administration in Gubbi town. -
Dr. G Parameshwara
@DrParameshwara
ಶನಿವಾರ ಭಾರತ ರತ್ನ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನಾಚರಣೆ ಅಂಗವಾಗಿ ಶಾಲಾ ಶಿಕ್ಷಣ ಇಲಾಖೆ ಮತ್ತು ಸಾಕ್ಷರತಾ ಇಲಾಖೆ ಹಾಗೂ ಉನ್ನತ ಶಿಕ್ಷಣ ಇಲಾಖೆಯು ಆಯೋಜಿಸಿದ್ದ 'ರಾಜ್ಯಮಟ್ಟದ ಶಿಕ್ಷಕರ ದಿನಾಚರಣೆ ಹಾಗೂ ರಾಜ್ಯ ಪ್ರಶಸ್ತಿ ಪುರಸ್ಕೃತ ಶಿಕ್ಷಕರಿಗೆ ಪ್ರಶಸ್ತಿ ಪ್ರಧಾನ' ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದೆ.
ಈ ಕುರಿತಾದ ಪತ್ರಿಕಾ ವರದಿಗಳು ಹೀಗಿವೆ.. -
Dr. G Parameshwara
@DrParameshwara
ಕನ್ನಡದ ಪ್ರಥಮ ರಾಷ್ಟ್ರಕವಿ, ಬಹುಭಾಷಾ ಪಂಡಿತರಾದ ಎಂ. ಗೋವಿಂದ ಪೈ ಅವರು ಕನ್ನಡ ಸಾಹಿತ್ಯದ ಕೀರ್ತಿ ಕಿರೀಟಕ್ಕೆ ಅಮೂಲ್ಯ ಕೊಡುಗೆ ನೀಡಿದ ಮಹಾನ್ ಚೇತನರು.
ಕವಿತೆ, ನಾಟಕ ಹಾಗೂ ಸಾಹಿತ್ಯ ಸಂಶೋಧನೆಯ ಮೂಲಕ ಕನ್ನಡ ಸಾರಸ್ವತ ಲೋಕವನ್ನು ಶ್ರೀಮಂತಗೊಳಿಸಿದ ಅವರ ಅಪೂರ್ವ ಸೇವೆಯನ್ನು ಸ್ಮರಿಸುತ್ತಾ, ಅವರ ಪುಣ್ಯಸ್ಮರಣೆಯಂದು ಗೌರವ ನಮನಗಳನ್ನು ಸಲ್ಲಿಸುತ್ತೇನೆ. -
Dr. G Parameshwara
@DrParameshwara
ರಾಜ್ಯ ಸರ್ಕಾರಿ ನೌಕರರಿಗೆ ಶಿಕ್ಷಕರ ದಿನಾಚರಣೆಯ ಶುಭ ಸಂದರ್ಭದಲ್ಲಿ ಶುಭ ಸುದ್ದಿಯೊಂದನ್ನು ತಿಳಿಸಬಯಸುತ್ತೇನೆ.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ನಮ್ಮ ಪಕ್ಷದ ಪ್ರಣಾಳಿಕೆ ರಚನಾ ಸಮಿತಿ ಅಧ್ಯಕ್ಷನಾಗಿದ್ದ ಸಂದರ್ಭದಲ್ಲಿ ಸರ್ಕಾರಿ ನೌಕರರ ಕೂಗಿಗೆ ಕಿವಿಗೊಟ್ಟು, ಮುಂದೆ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಹಳೆ ಪಿಂಚಣಿ ವ್ಯವಸ್ಥೆಯನ್ನು ಜಾರಿ ಮಾಡುವುದಾಗಿ ಪಕ್ಷದ ಪ್ರಣಾಳಿಕೆಯಲ್ಲಿ ಭರವಸೆ ನೀಡಿದ್ದೆವು. ಈಗ ಆ ಬೇಡಿಕೆ ಈಡೇರುವ ಕಾಲ ಸಮೀಪಿಸುತ್ತಿದೆ.
ಹಳೆ ಪಿಂಚಣಿ ವ್ಯವಸ್ಥೆಯನ್ನು ಮರು ಜಾರಿ ಮಾಡಬೇಕೆಂಬ ನಿರ್ಧಾರಕ್ಕೆ ರಾಜ್ಯ ಸರ್ಕಾರ ಬಂದಿದ್ದು, ಶೀಘ್ರದಲ್ಲೇ ಈ ಸಂಬಂಧ ಅಧಿಕೃತ ಆದೇಶವೂ ಹೊರಬೀಳಲಿದೆ.
ಜನರು ಮತ್ತು ಸರ್ಕಾರದ ನಡುವೆ ಕೊಂಡಿಯಂತೆ ಕಾರ್ಯನಿರ್ವಹಿಸುವ ಸರ್ಕಾರಿ ನೌಕರರ ಹಿತಕಾಯಲು ನಾವು ಸದಾ ಬದ್ಧರಿದ್ದೇವೆ. -
Dr. G Parameshwara
@DrParameshwara
My remarks at the State-level Teachers’ Day celebration and award presentation ceremony for State Award-winning teachers, organised at the Banquet Hall of Vidhana Soudha on the occasion of the birth anniversary of Bharat Ratna Dr. Sarvepalli Radhakrishnan:
This is an occasion to remember and honour two great personalities. We celebrate Dr. Radhakrishnan’s birth anniversary as Teachers’ Day to recognise the profound impact he had as a teacher and his contribution to education.
When Dr. Radhakrishnan was a professor in Mysuru, his students once asked him to celebrate his birthday. Instead of celebrating his own birthday, he suggested that the day be observed as Teachers’ Day. In his honour, the entire teaching community is being recognised and celebrated today.
Millions of teachers have contributed to building our nation, and that work continues even today. On this occasion, I offer my heartfelt gratitude and salutations to the entire teaching community.
The second personality I would like to remember is Jyotiba Phule, a great social reformer who pioneered the cause of education for women in India. The physical and mental hardships he faced were beyond what most people could endure. Yet, with firm determination, he began his journey as a teacher in 1845.
New ideas and new thinking are emerging from every corner today. We have always accorded the teacher the highest place, believing that the Guru is the light of knowledge, the path to life and the stepping stone to success. The respect accorded to teachers in India is unparalleled across the world. The Ramayana and Mahabharata also demonstrate the immense respect and importance given to the Guru.
During the First Five-Year Plan, the government of the time accorded priority to education, healthcare, industry and rural development. Education transforms the entire human being. We must imagine where we would have been had we remained illiterate. Education transforms individuals, society and the nation. Therefore, in the last Budget, Chief Minister Siddaramaiah allocated 11.50% of the budget to education. The Union Government allocates only 2.8% to education. This allocation needs to increase.
In the small country of South Korea, a remarkably high number of people pursue PhDs. Education has transformed South Korea’s position on the global map over the past 25–30 years, making it one of the developed nations. Given India’s enormous population, if we had invested more in education, we could have emerged as a global leader.
There are 38 universities in Karnataka. We need to ask ourselves: How many of these universities are healthy and functioning effectively? How much funding is the UGC providing? What are the priorities of the Union Government? Are they focused on taking the entire society towards progressive thinking and national development? Or not? These are questions we need to reflect upon. If only 2.8% is allocated to education, how far can the education sector develop? If Dr. Radhakrishnan were alive today, he would have been deeply saddened to see the level of support being provided to education in the country.
The entire world looked up to Dr. Radhakrishnan. If we fail to prioritise education in a country that produced a personality of his stature, where will the nation go? Despite all these challenges, the country has made progress in education. Karnataka, too, has achieved more than 80% progress.
However, when compared with other countries around the world, we are still behind on the path of development. Around 70% of families in Karnataka are BPL families. Under such circumstances, can we truly call ourselves a developed state? Education is increasingly being considered a key measure of a nation’s development. In Karnataka, the contributions of Nalwadi Krishnaraja Wadiyar played a significant role in advancing education. In states such as Uttar Pradesh and Bihar, primary and higher education have not progressed to the same extent.
We must also remember Babasaheb Ambedkar and reflect on how far we could have progressed if he had not accorded such importance to education through the Constitution.
Minister Madhu Bangarappa is working as a dynamic minister. Working with teachers is not an easy task. It takes tremendous energy and dynamism to accomplish what he has achieved. Basavaraj Rayareddy is serving as the Minister for Higher Education for the second time. He has brought about several changes in the higher education sector. Working in the education sector is not easy. I have also served as the Minister for Higher Education, and I say this from my own experience.
For any state to progress, its captain must be right. Our captain, D.K. Shivakumar, has come forward with new ideas. Work is being undertaken in accordance with his vision. Students in Karnataka are provided with several facilities, including textbooks, footwear, midday meals and hostel facilities. The results of these efforts are beginning to be visible in Karnataka. We have created an environment where students from other states also come to Karnataka to pursue their education. It is a matter of pride that around 40% of admissions to engineering and medical education in the country take place in Karnataka.
I had a teacher named Ramanna. Along with teaching lessons, he showed me the path in life. Anyone can teach with a textbook in hand. But the real responsibility of a teacher is to instil values and guide students towards the right path. It is because of the lessons taught to me by Krishnashastri that I am able to stand here and speak today.
Times have truly changed. Young people today are increasingly thinking about their future. Generation Alpha and Generation Beta are emerging. We need to think about what the India of the future will look like and respond to the aspirations of the younger generation. We need to reflect deeply in this direction.
Our party leadership appointed me as the chairman of the committee responsible for drafting the election manifesto. We had committed to implementing the Old Pension Scheme (OPS). We had promised that if we came to power, we would implement OPS. Due to various reasons, we were unable to implement it during the last three years. However, we will certainly implement OPS in the days ahead.
All teachers in the state have now been officially permitted to proudly use the prefix “Tr.” (Teacher) before their names. The State Government has taken this significant decision on the occasion of Teachers’ Day, and the Chief Minister has announced the decision.
Around 4.5 lakh teachers in Karnataka are engaged in the noble task of shaping the future of our children. To honour their selfless service and contribution, the Department of School Education and Literacy has taken this important decision on the occasion of Teachers’ Day. Minister Madhu Bangarappa has officially announced that Hon’ble Chief Minister D.K. Shivakumar has given his approval to the decision. He also stated that the Department has already issued an order in this regard.
This is a historic decision. Our government will continue to stand with the teaching community of Karnataka and support them in their important mission of shaping the future of our children. -
Dr. G Parameshwara
@DrParameshwara
ಭಾರತರತ್ನ ಡಾ. ಸರ್ವೇಪಲ್ಲಿ ರಾಧಾಕೃಷ್ಣನ್ ರವರ ಜನ್ಮ ದಿನಾಚರಣೆ ಅಂಗವಾಗಿ ವಿಧಾನಸೌಧದ ಬ್ಯಾಂಕ್ವೆಟ್ಹಾಲ್ನಲ್ಲಿ ಆಯೋಜಿಸಿದ್ದ 'ರಾಜ್ಯಮಟ್ಟದ ಶಿಕ್ಷಕರ ದಿನಾಚರಣೆ ಮತ್ತು ರಾಜ್ಯ ಪ್ರಶಸ್ತಿ ಪುರಸ್ಕೃತ ಶಿಕ್ಷಕರಿಗೆ ಪ್ರಶಸ್ತಿ ಪ್ರದಾನ ಸಮಾರಂಭ' ಕಾರ್ಯಕ್ರಮದಲ್ಲಿ ನನ್ನ ಮಾತುಗಳು:
ಎರಡು ಪ್ರಮುಖವಾದ ವ್ಯಕ್ತಿಗಳನ್ನು ನೆನಪಿಸಿಕೊಂಡು ಗೌರವಿಸುವ ಸಂದರ್ಭವಿದು. ರಾಧಾಕೃಷ್ಣನ್ ಅವರು ಶಿಕ್ಷಕರಾಗಿ ಎಂಥಾ ಪರಿಣಾಮ ಬೀರಿದರು ಎಂಬ ನಿಟ್ಟಿನಲ್ಲಿ ಅವರನ್ನು ಗೌರವಿಸಿ, ಅವರ ಹುಟ್ಟುಹಬ್ಬವನ್ನು ಶಿಕ್ಷಕ ದಿನಾಚರಣೆಯನ್ನಾಗಿ ಆಚರಿಸುತ್ತಿದ್ದೇವೆ.
ಮೈಸೂರಿನಲ್ಲಿ ಪ್ರಾದ್ಯಾಪಕರಾಗಿದ್ದ ರಾಧಾಕೃಷ್ಣನ್ ಅವರನ್ನು ಒಮ್ಮೆ ಅವರ ವಿದ್ಯಾರ್ಥಿಗಳು ಇಂದು ನಿಮ್ಮ ಜನ್ಮದಿನ ಆಚರಿಸಬೇಕು ಎಂದು ಕೇಳುತ್ತಾರೆ. ನನ್ನ ಜನ್ಮದಿನ ಆಚರಿಸುವ ಬದಲು ಶಿಕ್ಷಕರ ದಿನಾಚರಣೆಯಾಗಿ ಅಚರಿಸುವಂತೆ ತಿಳಿಸುತ್ತಾರೆ. ಅವರಿಗೆ ಗೌರವ ಸೂಚಿಸುವ ಸಲುವಾಗಿ ಇಡೀ ಶಿಕ್ಷಕ ಸಮುದಾಯವನ್ನು ಇಂದು ಗೌರವಿಸಲಾಗುತ್ತಿದೆ.
ಕೋಟ್ಯಂತರ ಶಿಕ್ಷಕರು ದೇಶವನ್ನು ಕಟ್ಟಿ ಹೋಗಿದ್ದಾರೆ. ಈಗಲೂ ಆ ಕೆಲಸ ಮುಂದುವರೆದಿದೆ. ಹಾಗಾಗಿ ಈ ಸಂದರ್ಭದಲ್ಲಿ ಶಿಕ್ಷಕ ಸಮುದಾಯಕ್ಕೆ ಕೋಟಿಕೋಟಿ ನಮನಗಳನ್ನು ಸಲ್ಲಿಸುತ್ತೇನೆ.
ಎರಡನೆಯದಾಗಿ, ಜ್ಯೋತಿಬಾ ಫುಲೆಯವರು. ದೇಶದಲ್ಲೇ ಮೊದಲ ಬಾರಿಗೆ ಮಹಿಳೆಯರಿಗೆ ಶಿಕ್ಷಣ ನೀಡುವ ಕೆಲಸ ಆರಂಭಿಸಿದ ಮಹಾನ್ ವ್ಯಕ್ತಿ ಜ್ಯೋತಿಬಾ ಫುಲೆ ಅವರು. ಅವರಿಗೆ ದೈಹಿಕವಾಗಿ ಮತ್ತು ಮಾನಸಿಕವಾಗಿ ಕೊಟ್ಟಂತಹ ತೊಂದರೆಗಳು ಯಾರಿಂದಲೂ ಸಹಿಸಲು ಸಾಧ್ಯವಿಲ್ಲ. ಅವರು ಸಂಕಲ್ಪ ಮಾಡಿ 1845ರಲ್ಲಿ ಶಿಕ್ಷಕ ವೃತ್ತಿಯನ್ನು ಪ್ರಾರಂಭಿಸುತ್ತಾರೆ.
ಹೊಸ ಚಿಂತನೆಗಳು ಇಂದು ಎಲ್ಲಾ ಕಡೆಗಳಿಂದ ಹೊರಟಿವೆ. ಗುರುವೆ ಜ್ಞಾನದ ಬೆಳಕು, ಗುರುವೆ ಬದುಕಿನ ದಾರಿ, ಗುರುವೆ ಯಶಸ್ಸಿನ ಮೆಟ್ಟಿಲು ಎಂದು ಗುರುವಿಗೆ ಎಲ್ಲರಿಗಿಂತ ಶ್ರೇಷ್ಠ ಸ್ಥಾನ ಕೊಟ್ಟಿದ್ದೇವೆ. ಗುರುಗಳಿಗೆ ಭಾರತದಲ್ಲಿ ಕೊಟ್ಟಿರುವ ಸ್ಥಾನವನ್ನು ಜಗತ್ತಿನ ಬೇರೆ ಯಾವ ದೇಶದಲ್ಲೂ ನೋಡಲು ಸಾಧ್ಯವಿಲ್ಲ. ರಾಮಾಯಣ, ಮಹಾಭಾರತದಲ್ಲಿ ಗುರುವಿಗೆ ಏನೆಲ್ಲ ಗೌರವ ನೀಡಲಾಗಿತ್ತು ಎಂಬುದನ್ನು ಸಹ ನೋಡಬಹುದು.
ಮೊದಲನೇ ಪಂಚವಾರ್ಷಿಕ ಯೋಜನೆಯಲ್ಲಿ ಅಂದಿನ ಸರ್ಕಾರ ಶಿಕ್ಷಣ, ಆರೋಗ್ಯ, ಕೈಗಾರಿಕೆ ಮತ್ತು ಗ್ರಾಮೀಣಾಭಿವೃದ್ಧಿಗೆ ಆದ್ಯತೆ ನೀಡಿತ್ತು. ಶಿಕ್ಷಣ ಇಡೀ ಮನುಷ್ಯನನ್ನು ಬದಲಾವಣೆ ಮಾಡುತ್ತದೆ. ಅನಕ್ಷರಸ್ಥರಾಗಿದ್ದರೆ ನಾವು ಯಾವ ಸ್ಥಿತಿಯಲ್ಲಿ ಇರುತ್ತಿದ್ದೆವು ಎಂದು ಊಹಿಸಿಕೊಳ್ಳಬೇಕು. ಶಿಕ್ಷಣ ವ್ಯಕ್ತಿಯನ್ನು, ಸಮಾಜವನ್ನು ಮತ್ತು ದೇಶವನ್ನು ಬದಲಾವಣೆ ಮಾಡುತ್ತದೆ. ಹೀಗಾಗಿ ಕಳೆದ ಬಜೆಟ್ನಲ್ಲಿ ಸಿದ್ದರಾಮಯ್ಯ ಅವರು ಶಿಕ್ಷಣಕ್ಕೆ ಶೇ 11.50ರಷ್ಟು ಅನುದಾನ ನೀಡಿದ್ದರು. ಕೇಂದ್ರ ಸರ್ಕಾರ ಶಿಕ್ಷಣಕ್ಕೆ ಶೇ. 2.8 ರಷ್ಟು ಅನುದಾನ ನೀಡುತ್ತಿದೆ. ಈ ಪ್ರಮಾಣ ಹೆಚ್ಚಾಗಬೇಕು.
ಪುಟ್ಟ ದೇಶ ದಕ್ಷಿಣ ಕೋರಿಯಾದಲ್ಲಿ ಜಗತ್ತಿನಲ್ಲೇ ಹೆಚ್ಚಿನ ಸಂಖ್ಯೆಯಲ್ಲಿ ಪಿಹೆಚ್ಡಿ ಪಡೆಯುತ್ತಿದ್ದಾರೆ. ಶಿಕ್ಷಣದಿಂದಾಗಿ ಕಳೆದ ಇಪ್ಪತ್ತೈದು - ಮೂವತ್ತು ವರ್ಷದಲ್ಲಿ ಪ್ರಪಂಚದ ಭೂಪಟದಲ್ಲಿ ಅಭಿವೃದ್ಧಿಶೀಲ ರಾಷ್ಟ್ರಗಳ ಪೈಕಿ ದಕ್ಷಿಣ ಕೊರಿಯಾದ ಸ್ಥಾನವೇ ಬದಲಾಗಿದೆ. ಭಾರತದಲ್ಲಿ ಇಷ್ಟು ದೊಡ್ಡ ಪ್ರಮಾಣದಲ್ಲಿ ಜನಸಂಖ್ಯೆ ಇರುವುದರಿಂದ ಶಿಕ್ಷಣಕ್ಕೆ ಹೆಚ್ಚು ಹಣ ಖರ್ಚು ಮಾಡಿದ್ದರೆ ಜಗತ್ತನ್ನೇ ಆಳಲು ಸಾಧ್ಯವಿತ್ತು.
38 ವಿಶ್ವವಿದ್ಯಾಲಯಗಳು ಕರ್ನಾಟಕದಲ್ಲಿವೆ. ಯಾವ ವಿಶ್ವವಿದ್ಯಾಲಯ ಆರೋಗ್ಯಕರವಾಗಿವೆ. ಯುಜಿಸಿ ಅವರು ಎಷ್ಟು ಅನುದಾನ ನೀಡುತ್ತಿದ್ದಾರೆ. ಕೇಂದ್ರ ಸರ್ಕಾರದ ಆದ್ಯತೆ ಯಾವುದರ ಮೇಲಿದೆ? ಇಡೀ ಸಮುದಾಯವನ್ನು ಪ್ರಗತಿಪರ ಚಿಂತನೆಗೆ ತೆಗೆದುಕೊಂಡು ಹೋಗಿ ದೇಶವನ್ನು ಅಭಿವೃದ್ಧಿ ಮಾಡುವುದರ ಮೇಲಿದೆಯೇ? ಇಲ್ಲವೇ? ಎಂಬುದನ್ನು ನಾವು ಆಲೋಚಿಸಬೇಕಿದೆ. 2.8ರಷ್ಟು ಅನುದಾನ ನೀಡುವುದಾದರೆ ಎಷ್ಟರ ಮಟ್ಟಿಗೆ ಶಿಕ್ಷಣ ಕ್ಷೇತ್ರ ಅಭಿವೃದ್ಧಿಯಾಗುತ್ತದೆ. ರಾಧಾಕೃಷ್ಣನ್ ಅವರು ಇದ್ದಿದ್ದರೆ ದೇಶದ ಶಿಕ್ಷಣ ಕ್ಷೇತ್ರಕ್ಕೆ ಇಂದು ಸಿಗುತ್ತಿರುವ ಬೆಂಬಲ ನೋಡಿ ನೋವನ್ನು ಪಡುತ್ತಿದ್ದರು.
ಇಡೀ ವಿಶ್ವವೇ ರಾಧಾಕೃಷ್ಣನ್ ಅವರನ್ನು ಗಮನಿಸಿತ್ತು. ಅಂತವರು ಬದುಕಿ ಬಾಳಿದ ಭಾರತದಲ್ಲಿ ಶಿಕ್ಷಣಕ್ಕೆ ಆದ್ಯತೆ ಕೊಡದೆ ಹೋದರೆ ದೇಶ ಎಲ್ಲಿಗೆ ಹೋಗುತ್ತದೆ? ಇಷ್ಟೆಲ್ಲದರ ನಡುವೆಯೂ ದೇಶ ಶಿಕ್ಷಣ ಕ್ಷೇತ್ರದಲ್ಲಿ ಪ್ರಗತಿ ಸಾಧಿಸಿದೆ. ಕರ್ನಾಟಕ ಶೇ. 80ಕ್ಕಿಂತ ಹೆಚ್ಚು ಪ್ರಗತಿ ಸಾಧಿಸಿದೆ.
ಜಗತ್ತಿನ ಬೇರೆ ಬೇರೆ ರಾಷ್ಟ್ರಗಳಿಗೆ ಹೋಲಿಕೆ ಮಾಡಿದರೆ ನಾವು ಇನ್ನು ಅಭಿವೃದ್ಧಿ ಪಥದಲ್ಲಿ ಹಿಂದೆ ಉಳಿದಿದ್ದೇವೆ. ಕರ್ನಾಟಕದಲ್ಲಿ ಶೇ. 70ರಷ್ಟು ಬಿಪಿಎಲ್ ಕುಟುಂಬಗಳಿವೆ. ಹೀಗಿದ್ದರೆ ನಾವು ಮುಂದುವರಿದ ರಾಜ್ಯ ಎಂದು ಹೇಳಿಕೊಳ್ಳಲು ಸಾಧ್ಯವೇ? ಶಿಕ್ಷಣವನ್ನು ದೇಶದ ಅಭಿವೃದ್ಧಿಯ ಅಳತೆಗೋಲಾಗಿ ನೋಡಲಾಗುತ್ತಿದೆ. ಕರ್ನಾಟಕದ ಮಟ್ಟಿಗೆ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ನೀಡಿದ ಕೊಡುಗೆಗಳು ಶಿಕ್ಷಣದ ಅಭಿವೃದ್ಧಿಗೆ ಅನುಕೂಲವಾಯಿತು. ಉತ್ತರ ಪ್ರದೇಶ, ಬಿಹಾರ ಇನ್ನು ಮುಂತಾದ ರಾಜ್ಯಗಳಲ್ಲಿ ಪ್ರಾಥಮಿಕ ಮತ್ತು ಉನ್ನತ ಶಿಕ್ಷಣ ಇಷ್ಟರ ಮಟ್ಟಿಗೆ ಬೆಳೆದಿಲ್ಲ.
ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಸಂವಿಧಾನದಲ್ಲಿ ಶಿಕ್ಷಣಕ್ಕೆ ಮಹತ್ವ ನೀಡದೇ ಹೋಗಿದ್ದರೆ ನಾವು ಎಷ್ಟರ ಮಟ್ಟಿಗೆ ಮುಂದಕ್ಕೆ ಒಯ್ಯುತ್ತಿದ್ದೆವು ಎಂದು ಆಲೋಚಿಸಿ, ಅವರನ್ನು ಸ್ಮರಿಸಬೇಕು.
ಮಧು ಬಂಗಾರಪ್ಪ ಅವರು ಕ್ರೀಯಾಶೀಲ ಸಚಿವರಾಗಿ ಕೆಲಸ ಮಾಡುತ್ತಿದ್ದಾರೆ. ಮೇಷ್ಟ್ರುಗಳ ಬಳಿ ಕೆಲಸ ಮಾಡುವುದು ಸುಲಭವಲ್ಲ. ಕ್ರೀಯಾಶೀಲತೆ ಇಲ್ಲದೆ ಇಷ್ಟೆಲ್ಲ ಸಾಧ್ಯವಾಗುವುದಿಲ್ಲ. ಬಸವರಾಜ ರಾಯರೆಡ್ಡಿ ಅವರು ಎರಡನೇ ಬಾರಿ ಉನ್ನತ ಶಿಕ್ಷಣ ಸಚಿವರಾಗಿದ್ದಾರೆ. ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಅನೇಕ ಬದಲಾವಣೆಗಳನ್ನು ತಂದಿದ್ದಾರೆ. ಶಿಕ್ಷಣ ಕ್ಷೇತ್ರದಲ್ಲಿ ಕೆಲಸಮಾಡುವುದು ಅಷ್ಟು ಸುಲಭವಲ್ಲ. ನಾನುಕೂಡ ಉನ್ನತ ಶಿಕ್ಷಣ ಸಚಿವನಾಗಿ ಕೆಲಸ ಮಾಡಿದ್ದೇನೆ. ಆ ಅನುಭವದಿಂದ ಈ ಮಾತು ಹೇಳುತ್ತಿದ್ದೇನೆ.
ಯಾವುದೇ ರಾಜ್ಯ ಪ್ರಗತಿ ಕಾಣಬೇಕಾದರೆ ಕ್ಯಾಪ್ಟನ್ ಸರಿ ಇರಬೇಕು. ನಮ್ಮ ಕ್ಯಾಪ್ಟನ್ ಡಿ.ಕೆ. ಶಿವಕುಮಾರ್ ಅವರು ಹೊಸ ಚಿಂತನೆಗಳನ್ನು ಇಟ್ಟುಕೊಂಡು ಬಂದಿದ್ದಾರೆ. ಅವರ ಆಶಯದಂತೆ ಕೆಲಸ ಮಾಡಲಾಗುತ್ತಿದೆ. ಪುಸ್ತಕ, ಶೂ, ಮಧ್ಯಾಹ್ನ ಬಿಸಿಯೂಟ, ಹಾಸ್ಟೆಲ್ ಸೌಲಭ್ಯ ಹೀಗೆ ರಾಜ್ಯದಲ್ಲಿ ವಿದ್ಯಾರ್ಥಿಗಳಿಗೆ ಅನೇಕ ಸೌಲಭ್ಯಗಳಿವೆ. ಇದರ ಪ್ರತಿಫಲ ಸ್ವಲ್ಪ ಮಟ್ಟಿಗೆ ಕರ್ನಾಟಕದಲ್ಲಿ ಕಾಣಿಸುತ್ತಿದೆ. ಬೇರೆ ರಾಜ್ಯದ ಮಕ್ಕಳನ್ನು ಕರೆಸಿಕೊಂಡು ಓದಿಸುವಂತ ವಾತಾವರಣ ಕರ್ನಾಟಕದಲ್ಲಿ ನಿರ್ಮಾಣವಾಗಿದೆ. ದೇಶದಲ್ಲಿ ಇಂಜಿನಿಯರಿಂಗ್ ಮತ್ತು ವೈದ್ಯಕೀಯ ಶಿಕ್ಷಣಕ್ಕೆ ಕರ್ನಾಟಕದಲ್ಲಿ ಶೇ 40ರಷ್ಟು ಅಡ್ಮಿಷನ್ ಆಗುತ್ತಿವೆ ಎನ್ನುವುದು ಹೆಮ್ಮೆಯ ವಿಷಯ.
ನನಗೆ ರಾಮಣ್ಣ ಮೇಷ್ಟ್ರು ಇದ್ದರು. ಅವರ ಪಾಠದ ಜೊತೆ ಬದುಕಿನ ಹಾದಿ ತೋರಿಸಿದರು. ಪುಸ್ತಕ ಇಟ್ಟುಕೊಂಡು ಯಾರು ಬೇಕಾದರೂ ಪಾಠ ಮಾಡುತ್ತಾರೆ. ಮೌಲ್ಯಗಳನ್ನು ಬಿತ್ತಿ, ವಿದ್ಯಾರ್ಥಿಗಳನ್ನು ಸರಿದಾರಿಗೆ ತರುವುದು ಇದೆಯಲ್ಲ ಆ ಕೆಲಸ ಆಗಬೇಕು. ಕೃಷ್ಣಶಾಸ್ತ್ರಿ ಅವರು ಕಲಿಸಿದ ಪಾಠದಿಂದ ಇಲ್ಲಿ ನಿಂತು ಮಾತನಾಡಲು ನನಗೆ ಸಾಧ್ಯವಾಗಿದೆ.
ಕಾಲ ನಿಜವಾಗಲೂ ಬದಲಾಗಿದೆ. ಯುವಕರು ತಮ್ಮ ಭವಿಷ್ಯದ ಬಗ್ಗೆ ಮಾತ್ರ ಯೋಚಿಸುತ್ತಿದ್ದಾರೆ. ಜೆನ್ ಆಲ್ಫಾ, ಜೆನ್ ಬೀಟಾ ಬರುತ್ತಿದೆ. ಮುಂದಿನ ಭವಿಷ್ಯದ ಭಾರತ ಏನಾಗುತ್ತಿದೆ ಎಂದು ಯೋಚಿಸಬೇಕಿದೆ. ಅವರ ಆಶೋತ್ತರಗಳಿಗೆ ಸ್ಪಂದಿಸಬೇಕಿದೆ. ಈ ನಿಟ್ಟಿನಲ್ಲಿ ಚಿಂತನೆ ನಡೆಸಬೇಕಿದೆ.
ನಮ್ಮ ಪಕ್ಷದ ವರಿಷ್ಠರು ಚುನಾವಣಾ ಪ್ರಣಾಳಿಕೆ ಬರೆಯಲು ಅಧ್ಯಕ್ಷನನ್ನಾಗಿ ನೇಮಿಸಿದ್ದರು. ಒಪಿಎಸ್ ಜಾರಿಗೊಳಿಸಬೇಕು ಎಂದು ಒತ್ತಾಯಿಸಿದ್ದರು. ಅಧಿಕಾರಕ್ಕೆ ಬಂದರೆ ಒಪಿಎಸ್ ಜಾರಿಗೊಳಿಸುತ್ತೇವೆ ಎಂದು ಭರವಸೆ ನೀಡಿದ್ದೇವೆ. ಕಳೆದ ಮೂರು ವರ್ಷದಲ್ಲಿ ಕಾರಣಾಂತರಗಳಿಂದ ಒಪಿಎಸ್ ಜಾರಿಗೊಳಿಸಲು ಆಗಿರಲಿಲ್ಲ. ಮುಂದಿನ ದಿನಗಳಲ್ಲಿ ಒಪಿಎಸ್ ಜಾರಿ ಮಾಡಿಯೇ ತೀರುತ್ತೇವೆ.
ರಾಜ್ಯದ ಎಲ್ಲಾ ಶಿಕ್ಷಕರು ತಮ್ಮ ಹೆಸರಿನ ಹಿಂದೆ ಹೆಮ್ಮೆಯಿಂದ "Tr." (Teacher) ಎಂಬ ಪೂರ್ವಪ್ರತ್ಯಯ ಶೀರ್ಷಿಕೆಯನ್ನು ಬಳಸಲು ಅಧಿಕೃತವಾಗಿ ಅನುಮತಿ ನೀಡಲಾಗಿದೆ. ರಾಜ್ಯ ಸರ್ಕಾರವು ಶಿಕ್ಷಕರ ದಿನಾಚರಣೆಯ ಸಂದರ್ಭದಲ್ಲಿ ಈ ಮಹತ್ವದ ತೀರ್ಮಾನ ಕೈಗೊಂಡಿದೆ. ಮುಖ್ಯಮಂತ್ರಿಗಳು ಈ ನಿರ್ಧಾರವನ್ನು ಪ್ರಕಟಿಸಿದ್ದಾರೆ.
ಕರ್ನಾಟಕದ ಸುಮಾರು 4.5 ಲಕ್ಷ ಶಿಕ್ಷಕರು ನಮ್ಮ ಮಕ್ಕಳ ಭವಿಷ್ಯ ರೂಪಿಸುವ ಮಹತ್ಕಾರ್ಯದಲ್ಲಿ ತೊಡಗಿದ್ದಾರೆ. ಇವರ ನಿಸ್ವಾರ್ಥ ಸೇವೆ ಮತ್ತು ಕೊಡುಗೆಯನ್ನು ಗೌರವಿಸುವ ಸಲುವಾಗಿ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು ಶಿಕ್ಷಕರ ದಿನಾಚರಣೆಯ ಸಂದರ್ಭದಲ್ಲಿ ಈ ಮಹತ್ವದ ತೀರ್ಮಾನ ತೆಗೆದುಕೊಂಡಿದೆ. ಇದಕ್ಕೆ ಮಾನ್ಯ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಒಪ್ಪಿಗೆ ನೀಡಿದ್ದಾರೆ ಎಂದು ಸಚಿವ ಮಧು ಬಂಗಾರಪ್ಪ ಅವರು ಅಧಿಕೃತವಾಗಿ ಪ್ರಕಟಿಸಿದ್ದಾರೆ. ಇಲಾಖೆ ಈ ಸಂಬಂಧ ಈಗಾಗಲೇ ಆದೇಶ ಹೊರಡಿಸಿದೆ ಎಂದು ಸಹ ತಿಳಿಸಿದ್ದಾರೆ. ಇದೊಂದು ಐತಿಹಾಸಿಕ ತೀರ್ಮಾನ. ಮುಂದೆಯೂ ನಮ್ಮ ಸರ್ಕಾರ ನಾಡಿನ ಶಿಕ್ಷಕ ಬಂಧುಗಳ ಜೊತೆಗಿರಲಿದೆ. -
Dr. G Parameshwara
@DrParameshwara
ಭಾರತ ರತ್ನ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ರವರ ಜನ್ಮ ದಿನಾಚರಣೆ ಅಂಗವಾಗಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಉನ್ನತ ಶಿಕ್ಷಣ ಇಲಾಖೆಯು ವಿಧಾನಸೌಧದ ಬ್ಯಾಂಕ್ವೆಟ್ಹಾಲ್ನಲ್ಲಿ ಆಯೋಜಿಸಿದ್ದ 'ರಾಜ್ಯಮಟ್ಟದ ಶಿಕ್ಷಕರ ದಿನಾಚರಣೆ ಮತ್ತು ರಾಜ್ಯ ಪ್ರಶಸ್ತಿ ಪುರಸ್ಕೃತ ಶಿಕ್ಷಕರಿಗೆ ಪ್ರಶಸ್ತಿ ಪ್ರದಾನ ಸಮಾರಂಭ' ಕಾರ್ಯಕ್ರಮವನ್ನು ಉದ್ಘಾಟಿಸಿ, ಶುಭ ಹಾರೈಸಿದೆ.
ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ನ ಸಭಾಪತಿಗಳಾದ ಸಲೀಂ ಅಹ್ಮದ್, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವರಾದ ಎಸ್. ಮಧು ಬಂಗಾರಪ್ಪ, ಉನ್ನತ ಶಿಕ್ಷಣ ಸಚಿವರಾದ ಬಸವರಾಜ ರಾಯರೆಡ್ಡಿ, ಗ್ರೇಟರ್ ಬೆಂಗಳೂರು ನಗರಾಭಿವೃದ್ಧಿ ಸಚಿವರಾದ ಕೃಷ್ಣ ಬೈರೇಗೌಡ, ಆಹಾರ ಮತ್ತು ನಾಗರೀಕ ಸರಬರಾಜು ಸಚಿವರಾದ ರಿಜ್ವಾನ್ ಅರ್ಷದ್, ವಿಧಾನ ಪರಿಷತ್ ಸದಸ್ಯರಾದ ಡಾ. ಕೆ. ಗೋವಿಂದರಾಜು, ಪುಟ್ಟಣ್ಣ, ರಾಮೋಜಿಗೌಡ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗಳಾದ ವಿ. ರಶ್ಮಿ ಮಹೇಶ್ ಮುಂತಾದ ಗಣ್ಯರು ಉಪಸ್ಥಿತರಿದ್ದರು.
On the occasion of the birth anniversary of Bharat Ratna Dr. Sarvepalli Radhakrishnan, I inaugurated and extended my best wishes at the State-level Teachers’ Day celebration and award presentation ceremony for State Award-winning teachers, organised by the Department of School Education and Literacy and the Department of Higher Education at the Banquet Hall of Vidhana Soudha.
The programme was attended by Legislative Council Chairman Saleem Ahmed, Minister for School Education and Literacy S. Madhu Bangarappa, Minister for Higher Education Basavaraj Rayareddy, Minister for Greater Bengaluru Urban Development Krishna Byre Gowda, Minister for Food and Civil Supplies Rizwan Arshad, Legislative Council Members Dr. K. Govindaraju, Puttanna and Ramoji Gowda, Additional Chief Secretary, Department of School Education and Literacy, V. Rashmi Mahesh, and other dignitaries. -
Dr. G Parameshwara
@DrParameshwara
ಜನರ ಮನೆ ಬಾಗಿಲಿಗೆ ಸರ್ಕಾರ ಎಂಬ ಆಶಯದಡಿ ಮಾನ್ಯಮುಖ್ಯಮಂತ್ರಿಗಳ ನೇತೃತ್ವದಲ್ಲಿ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಪ್ರಜಾಸೇವಾ ಇಲಾಖೆ ಇಂದು ರಾಜ್ಯಾದ್ಯಂತ ಕಾರ್ಯಾರಂಭ ಮಾಡಿದೆ. ಮಾನ್ಯ ಮುಖ್ಯಮಂತ್ರಿಗಳು ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲ್ಲೂಕಿನಲ್ಲಿ ಸಾರ್ವಜನಿಕರ ಅಹವಾಲುಗಳನ್ನು ಸ್ವೀಕರಿಸುವ ಮೂಲಕ ಪ್ರಜಾಸೇವಾ ಇಲಾಖೆಗೆ ಚಾಲನೆ ನೀಡಿದರೆ, ಅದೇ ಸಮಯಕ್ಕೆ ನಾನು ನನ್ನ ತವರು ಜಿಲ್ಲೆಯಾದ ತುಮಕೂರಿನ ಗುಬ್ಬಿ ತಾಲ್ಲೂಕಿನಲ್ಲಿ ಸ್ಥಳೀಯ ಶಾಸಕರಾದ ಶ್ರೀನಿವಾಸ್ ಅವರೊಂದಿಗೆ ಸಾರ್ವಜನಿಕರ ಅಹವಾಲುಗಳನ್ನು ಸ್ವೀಕರಿಸುವ ಮೂಲಕ ಪ್ರಜಾಸೇವಾ ಇಲಾಖೆಯ ಕಾರ್ಯಾರಂಭಕ್ಕೆ ಚಾಲನೆ ನೀಡಿದೆ.
ಗುಬ್ಬಿಯಲ್ಲಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಬಳಿಕ ವಿಜಯನಗರದ ಕೂಡ್ಲಿಗಿಯಲ್ಲಿ ಪ್ರಜಾಸೇವಾ ಇಲಾಖೆಯ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಮುಖ್ಯಮಂತ್ರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಂವಾದ ನಡೆಸಿ, ಈ ನೂತನ ಪ್ರಯತ್ನದ ಕುರಿತಾಗಿ ನನ್ನ ಅನಿಸಿಕೆಗಳನ್ನು ಅವರೊಂದಿಗೆ ಹಮಕಚಿಕೊಂಡೆ.
ಜನಸೇವೆಯ ಇಚ್ಛಾಶಕ್ತಿಯಿಂದ ಈ ಕಾರ್ಯಕ್ರಮವನ್ನು ಪರಿಚಯಿಸಿದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ರಾಜ್ಯ ಸರ್ಕಾರದ ಎಲ್ಲ ಜಿಲ್ಲಾ ಉಸ್ತುವಾರಿ ಮಂತ್ರಿಗಳು, ಶಾಸಕರು ರಾಜ್ಯದ ಪ್ರತಿ ಜಿಲ್ಲೆಗಳಲ್ಲಿ ಈ ಕಾರ್ಯಕ್ರಮವನ್ನು ಪ್ರಾರಂಭಿಸಿ ಜನರ ಅಹವಾಲುಗಳನ್ನು ಸ್ವೀಕರಿಸಿದ್ದಾರೆ.
ಗುಬ್ಬಿ ಕ್ಷೇತ್ರದ ಶಾಸಕರು ಹೆಚ್ಚು ಕ್ರಿಯಾಶೀಲರಾಗಿರುವುದರಿಂದ ಗುಬ್ಬಿ ತಾಲ್ಲೂಕಿನಿಂದಲೇ ನಾವು ತುಮಕೂರು ಜಿಲ್ಲೆಯಲ್ಲಿ ಈ ಕಾರ್ಯಕ್ರಮವನ್ನು ಪ್ರಾರಂಭಿಸಿ, ಅತಿಹೆಚ್ಚು ಜನರಿಗೆ ತಲುಪಲು ಸಾಧ್ಯವಾಗಿದೆ. ಬೆಳಿಗ್ಗೆಯಿಂದ ಸಾವಿರಾರು ಜನರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. 11 ಗಂಟೆಯ ಹೊತ್ತಿಗಾಗಲೇ 1 ಸಾವಿರ ಜನರ ಅಹವಾಲುಗಳನ್ನು ನಾನು ಖುದ್ದಾಗಿ ಸ್ವೀಕರಿಸಿ ಋಜು ಹಾಕಿ ಅರ್ಜಿಗಳನ್ನು ತ್ವರಿತಗತಿಯಲ್ಲಿ ವಿಲೇವಾರಿ ಮಾಡುವಂತೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ.
ಅರ್ಜಿ ನೀಡಿದ ಜನರ ಕೆಲಸಗಳನ್ನು ಕಡೆಗಣಿಸಿ ವಿಳಂಬ ಮಾಡಿದ ವಿಚಾರ ನನ್ನ ಗಮನಕ್ಕೆ ಬಂದರೆ ಅಂತಹ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದೇನೆ. ಜನರ ಸಮಸ್ಯೆಗಳು ತ್ವರಿತಗತಿಯಲ್ಲಿ ಪರಿಹಾರವಾಗಬೇಕು ಮತ್ತು ಅರ್ಜಿಗಳನ್ನು ಹಿಡಿದು ಸಾರ್ವಜನಿಕರು ಸರ್ಕಾರಿ ಕಚೇರಿಗಳಿಗೆ ಅಲೆಯಬಾರದು ಎಂಬುದೇ ಈ ಕಾರ್ಯಕ್ರಮದ ಉದ್ದೇಶ. ಈ ಕಾರ್ಯಕ್ರಮದ ನಂತರವೂ ಜನರು ಮತ್ತದೇ ಅರ್ಜಿಗಳನ್ನು ಹಿಡಿದು ಸರ್ಕಾರಿ ಕಚೇರಿಗಳಿಗೆ ಅಲೆದಾಡುವ ಸ್ಥಿತಿ ನಿರ್ಮಾಣವಾದರೆ, ಅದು ಈ ಕಾರ್ಯಕ್ರಮದ ವೈಫಲ್ಯವಾಗುತ್ತದೆ. ಹೀಗಾಗಿ ನಿರ್ಲಕ್ಷ್ಯ ತೋರುವ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಲಾಗುವುದು.
ಬಹಳಷ್ಟು ಜನ ತಮ್ಮೂರಿನ ಕುಡಿಯುವ ನೀರಿನ ಸಮಸ್ಯೆಗಳನ್ನು ಹೊತ್ತು ಬಂದಿದ್ದರು. ಇನ್ನು ಹಲವರು ಕಂದಾಯ ಇಲಾಖೆಯಲ್ಲಿ ತಮಗೆ ಆಗಬೇಕಿರುವ ಕೆಲಸಗಳ ಬಗ್ಗೆ ಅರ್ಜಿಗಳನ್ನು ನೀಡಿದ್ದಾರೆ. ನಿವೇಶನಗಳನ್ನು ಮಂಜೂರು ಮಾಡುವಂತೆ ಮನವಿ ಸಲ್ಲಿಸಿದ್ದಾರೆ. ಮುಖ್ಯಮಂತ್ರಿಗಳ ಆದೇಶದಂತೆ ರಾಜ್ಯಾದ್ಯಂತ ಬಡಜನರಿಗೆ ಈಗಾಗಲೇ 15 ಲಕ್ಷ ನಿವೇಶನಗಳನ್ನು ಮಂಜೂರು ಮಾಡಲು ನಮ್ಮ ಸರ್ಕಾರ ಮುಂದಾಗಿದೆ. ಕಂದಾಯ ಇಲಾಖೆ ವತಿಯಿಂದ ಊರುಗಳಿಗೆ ಹೊಂದಿಕೊಂಡಿರುವ ಸರ್ಕಾರಿ ಜಾಗಗಳಲ್ಲಿ ನಿವೇಶನಗಳನ್ನು ಅಭಿವೃದ್ಧಿಪಡಿಸಿ ಮುಂಬರುವ ಡಿಸೆಂಬರ್ ತಿಂಗಳ ಒಳಗಾಗಿ ಅರ್ಹ ಫಲಾನುಭವಿಗಳಿಗೆ ನಿವೇಶನಗಳನ್ನು ಹಂಚಿಕೆ ಮಾಡಲು ತೀರ್ಮಾನಿಸಲಾಗಿದೆ.
ತುಮಕೂರು ಜಿಲ್ಲೆಯಲ್ಲಿ ವರ್ಷಾಂತ್ಯಕ್ಕೆ 50 ಸಾವಿರ ನಿವೇಶನಗಳನ್ನು ಹಂಚಿಕೆ ಮಾಡಬೇಕು ಎಂಬ ಗುರಿಯನ್ನು ಹೊಂದಲಾಗಿದೆ. ಆ ಪೈಕಿ ಈಗಾಗಲೇ ಸಾವಿರಾರು ನಿವೇಶನಗಳು ಸಿದ್ಧಗೊಂಡಿದ್ದು, ಈ ಬಗ್ಗೆ ಜಿಲ್ಲೆಯ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಎರಡು ಬಾರಿ ಸಭೆ ನಡೆಸಿ ಸೂಚನೆಯನ್ನು ಕೂಡ ನೀಡಿದ್ದೇನೆ.
ಈ ಬಾರಿ ಜಿಲ್ಲೆಯಲ್ಲಿ ಬರಗಾಲದ ಪರಿಸ್ಥಿತಿ ಇದೆ. ಜಿಲ್ಲೆಯ ಒಟ್ಟು ಹತ್ತು ತಾಲ್ಲೂಕುಗಳ ಪೈಕಿ ಮೊದಲ ಹಂತದಲ್ಲಿ 9 ತಾಲ್ಲೂಕುಗಳಲ್ಲಿ ಬರಪರಿಸ್ಥಿತಿಯನ್ನು ಘೋಷಿಸಲಾಗಿದ್ದು, ಎರಡನೇ ಹಂತದಲ್ಲಿ ತಿಪಟೂರು ತಾಲ್ಲೂಕನ್ನು ಕೂಡ ಬರಪೀಡಿತ ಎಂದು ಪರಿಗಣಿಸಲಾಗಿದೆ. ಹೀಗಾಗಿ ಜಿಲ್ಲೆಯ ಒಟ್ಟು 10 ತಾಲ್ಲೂಕುಗಳಲ್ಲಿ ಬರಪರಿಸ್ಥಿತಿ ಇದೆ. ಅಂತೆಯೇ ರಾಜ್ಯದಲ್ಲಿ ಮೊದಲ ಹಂತದಲ್ಲಿ 101 ತಾಲ್ಲೂಕುಗಳಲ್ಲಿ ಬರಪರಿಸ್ಥಿತಿ ಘೋಷಿಸಲಾಗಿದೆ. ಎರಡನೇ ಹಂತದಲ್ಲಿ ಈಗಾಗಲೇ 25 ತಾಲ್ಲೂಕುಗಳ ಗ್ರೌಂಡ್ ಟ್ರೂಥಿಂಗ್ ಪ್ರಕ್ರಿಯೆ ಚಾಲ್ತಿಯಲ್ಲಿದ್ದು, ಇನ್ನೂ 25 ತಾಲ್ಲೂಕುಗಳು ಸೇರ್ಪಡೆಯಾಗಲಿವೆ. ಎರಡನೇ ಹಂತದಲ್ಲಿ ಒಟ್ಟು 50 ತಾಲ್ಲೂಕುಗಳಲ್ಲಿ ಬರ ಘೋಷಣೆ ಮಾಡಲಿದ್ದೇವೆ.
ಈಗಾಗಲೇ ಹಲವೆಡೆ ಕುಡಿಯುವ ನೀರಿನ ಸಮಸ್ಯೆ ಶುರುವಾಗಿದೆ. ಈ ಹಿನ್ನೆಲೆಯಲ್ಲಿ ಟ್ಯಾಂಕರ್ ಗಳ ಮೂಲಕ ನೀರು ಸರಬರಾಜು ಮಾಡುವ ಮತ್ತು ಸ್ಥಳೀಯ ಖಾಸಗಿ ಕೊಳವೆ ಬಾವಿಗಳನ್ನು ಬಾಡಿಗೆಗೆ ಪಡೆದು ನೀರು ಪೂರೈಸುವ ಕೆಲಸವನ್ನು ಮಾಡಲಾಗುತ್ತಿದೆ. ನೀರಿನ ಆಗರಗಳಿರುವ ಕಡೆಗಳಲ್ಲಿ ಜಲ ಜೀವನ್ ಮಿಶನ್ ಕಾರ್ಯಕ್ರಮವನ್ನು ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ತರಬೇಕು ಎಂದು ಸೂಚನೆಯನ್ನು ನೀಡಲಾಗಿದೆ.
ರಾಜ್ಯದ ಪ್ರತಿ ಜಿಲ್ಲೆಯಲ್ಲೂ ಜಾನುವಾರುಗಳಿಗೆ ಸೀಮಿತ ಪ್ರಮಾಣದಲ್ಲಿ ಮೇವಿನ ಸಂಗ್ರಹವಿದೆ. ಒಂದು ವೇಳೆ ಈ ಸಂಗ್ರಹ ಖಾಲಿಯಾದರೆ ಸಂಕಷ್ಟ ಎದುರಾಗಲಿದೆ. ಈ ಹಿನ್ನೆಲೆ ಈಗಾಗಲೇ ಕೆಎಂಎಫ್ ವತಿಯಿಂದ ರೈತರಿಗೆ ಮೇವಿನ ಬೀಜದ ಕಿಟ್ ಗಳನ್ನು ವಿತರಿಸಲಾಗಿದೆ. ಅದೇ ರೀತಿ ಮೇವಿನ ಬೀಜಗಳ ವಿತರಣೆಯ ಉದ್ದೇಶಕ್ಕೆ ಪಶು ಸಂಗೋಪನಾ ಇಲಾಖೆಗೆ ಮಂಜೂರು ಮಾಡಲಾಗಿರುವ 25 ಕೋಟಿ ರೂ. ಅನುದಾನವನ್ನು ಬಳಸಿಕೊಂಡು ಶೀಘ್ರವೇ ಟೆಂಡರ್ ಕರೆದು ಮೇವಿನ ಬೀಜದ ಕಿಟ್ ಗಳನ್ನು ವಿತರಿಸಲು ಕ್ರಮ ಕೈಗೊಳ್ಳಲಾಗುವುದು. ಮೇವು ಬೆಳೆಯುವಂತೆ ರೈತರಲ್ಲೂ ಮನವಿ ಮಾಡಿಕೊಳ್ಳಲಾಗಿದೆ. ಮುಂದಿನ ದಿನಗಳಲ್ಲಿ ಅಗತ್ಯ ಬಿದ್ದರೆ ರೈತರು ಬೆಳೆದ ಮೇವನ್ನು ಸೂಕ್ತ ದರ ನಿಗದಿ ಮಾಡಿ ಸರ್ಕಾರವೇ ಖರೀದಿ ಮಾಡುವುದು ಎನ್ನುವ ಭರವಸೆ ನೀಡಲಾಗಿದೆ.
ಬರಪರಿಸ್ಥಿತಿಯಿಂದ ಜನಗಳು ಊರುಬಿಟ್ಟು ಗುಳೆ ಹೋಗುವ ಪರಿಸ್ಥಿತಿ ಎದುರಾಗಿದೆ. ಉತ್ತರ ಕರ್ನಾಟಕದಲ್ಲಿ ಈ ಪರಿಸ್ಥಿತಿ ಇನ್ನಷ್ಟು ತೀವ್ರವಾಗಿದೆ. ತುಮಕೂರು ಜಿಲ್ಲೆಯಲ್ಲಿ ಇನ್ನೂ ಅಂತಹ ಪರಿಸ್ಥಿತಿ ಉದ್ಭವಿಸಿಲ್ಲ. ಆದ್ದರಿಂದ ರಾಜ್ಯದಲ್ಲಿ ವಿಬಿ ಜಿ ರಾಮ್ ಜಿ ಯೋಜನೆಯಡಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುವ ಮೂಲಕ ಜನರಿಗೆ ಅವರ ಊರುಗಳಲ್ಲಿಯೇ ಉದ್ಯೋಗದ ಖಾತ್ರಿ ಒದಗಿಸಿ ಗುಳೆ ಹೋಗುವುದನ್ನು ತಪ್ಪಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.
ಇಂದಿನ ಪ್ರಜಾಸೇವಾ ಕಾರ್ಯಕ್ರಮ ತುಮಕೂರು ಜಿಲ್ಲೆಯಲ್ಲಿ ಯಶಸ್ವಿಯಾಗಿದೆ. ಜಿಲ್ಲೆಯ 9 ಹೋಬಳಿಗಳಲ್ಲಿ ಜನರು ಏಕಕಾಲಕ್ಕೆ ಈ ಕಾರ್ಯಕ್ರಮವನ್ನು ವೀಕ್ಷಿಸಿದ್ದಾರೆ. ಮುಂದಿನ ದಿನಗಳಲ್ಲಿ ಈ ಕಾರ್ಯಕ್ರಮವನ್ನು ತಾಲ್ಲೂಕು ಮಟ್ಟದಿಂದ ಹೋಬಳಿ ಮಟ್ಟಕ್ಕೆ ಕೊಂಡೊಯ್ಯಲಾಗುವುದು. ಆ ಮೂಲಕ ತಾಲ್ಲೂಕಿನವರೆಗೆ ಬರಲಾಗದ ಅಸಹಾಯಕ ಜನರ ಮನೆ ಬಾಗಿಲಿಗೆ ಸರ್ಕಾರದ ಸೇವೆಗಳನ್ನು ತ್ವರಿತಗತಿಯಲ್ಲಿ ತಲುಪಿಸಲಾಗುವುದು.This media couldn't be displayed. See it on the original post. -
Dr. G Parameshwara
@DrParameshwara
ಸರ್ಕಾರದ ಯೋಜನೆಗಳು ಮತ್ತು ಸೇವೆಗಳು ಜನರಿಗೆ ಸಕಾಲದಲ್ಲಿ ತಲುಪಿಸುವುದಷ್ಟೇ ಅಲ್ಲ, ಜನರು ಎದುರಿಸುತ್ತಿರುವ ಸಮಸ್ಯೆಗಳನ್ನು ಕಾಲಕಾಲಕ್ಕೆ ಆಲಿಸಿ ಪರಿಹರಿಸುವುದು ಕೂಡ ಒಂದು ಸರ್ಕಾರದ ಜವಾಬ್ದಾರಿ. ಈ ಹೊಣೆಯನ್ನು ನಿರ್ವಹಿಸುವುದರಲ್ಲಿ ನಾವು ಹಿಂದೆ ಬಿದ್ದಿಲ್ಲ. ಇನ್ನು ಮುಂದೆ ಜನರು ತಮ್ಮ ಸಮಸ್ಯೆಗಳ ಪರಿಹಾರಕ್ಕಾಗಿ ಸರ್ಕಾರಿ ಕಚೇರಿಗಳ ಬಾಗಿಲು ಕಾಯುತ್ತಾ, ದಿನಗಟ್ಟಲೆ ಅಲೆದಾಡುವ ಪರಿಸ್ಥಿತಿ ಬರಲಾರದು. ನಾಗರಿಕರು ಕುಂದುಕೊರತೆಗಳ ಪರಿಹಾರಕ್ಕಾಗಿ ಸಮಯ ಮತ್ತು ಶ್ರಮ ವ್ಯಯಿಸುವುದನ್ನು ತಪ್ಪಿಸಲು ನಮ್ಮ ಸರ್ಕಾರ ಪ್ರಜಾಸೇವಾ ಅಭಿಯಾನವನ್ನು ಜಾರಿಗೊಳಿಸಿದೆ.
ಆಡಳಿತ ವ್ಯವಸ್ಥೆಯನ್ನೇ ಜನರ ಮನೆಬಾಗಿಲಿಗೆ ಕೊಂಡೊಯ್ಯುವ ಪ್ರಯತ್ನ ಇದಾಗಿದ್ದು, ಅಧಿಕಾರಿಗಳು ಜನರ ನಡುವೆ ತೆರಳಿ ಅವರ ನೈಜ ಸಮಸ್ಯೆಗಳನ್ನು ಆಲಿಸಿ, ಅರಿತುಕೊಳ್ಳುವುದರಿಂದ ಅವುಗಳ ಪರಿಹಾರಕ್ಕಾಗಿ ಅಗತ್ಯ ಆಡಳಿತಾತ್ಮಕ ಕ್ರಮಗಳನ್ನು ಕೈಗೊಳ್ಳಲು ಸಹಕಾರಿಯಾಗಲಿದೆ.
A government’s responsibility is not limited to ensuring that schemes and services reach people on time; it must also listen to the problems they face and work towards resolving them from time to time. We have never fallen short in fulfilling this responsibility. Going forward, people should not have to spend days waiting at the doors of government offices or moving from one office to another in search of solutions. To save citizens the time and effort involved in getting their grievances addressed, our government has introduced the Praja Seva Abhiyana.
This initiative is an effort to take the administration itself to the people’s doorstep. By reaching out to people, listening to their genuine concerns and understanding them firsthand, officials will be better placed to take the necessary administrative steps for their timely resolution. -
Dr. G Parameshwara
@DrParameshwara
ಹಿರಿಯ ಸಾಹಿತಿಗಳಾದ ಪ್ರೊ.ಎಸ್.ಜಿ.ಸಿದ್ದರಾಮಯ್ಯ ಅವರು ನನ್ನ ಕುರಿತಾಗಿ ಆಡಿರುವ ಈ ಮಾತುಗಳನ್ನು ಅತ್ಯಂತ ವಿನಮ್ರನಾಗಿ ಸ್ವೀಕರಿಸಿ, ಅವರಿಗೆ ಧನ್ಯವಾದ ಸಲ್ಲಿಸುತ್ತೇನೆ.
"ಹಿಂದೆ ಗುರು, ಮುಂದೆ ಗುರಿ" ಇವೆರೆಡೂ ಬದುಕಿನಲ್ಲಿ ಬಹಳಾ ಮುಖ್ಯ. ನಾನಿಂದು ಏನಾಗಿದ್ದೇನೆ? ಯಾವ ಎತ್ತರಕ್ಕೆ ಬೆಳೆದಿದ್ದೇನೆ? ಇದರ ಹಿಂದೆ ಕೈಹಿಡಿದು ಅಕ್ಷರ ಕಲಿಸಿದ ಅನೇಕರಿದ್ದಾರೆ, ಲೌಕಿಕ ಜ್ಞಾನ ಧಾರೆಯೆರೆದವರಿದ್ದಾರೆ, ಸೈದ್ಧಾಂತಿಕ ಸ್ಪಷ್ಟತೆಯ ಹಾದಿ ತೋರಿದವರಿದ್ದಾರೆ. ಈ ಎಲ್ಲರನ್ನೂ ಶಿಕ್ಷಕರ ದಿನಾಚರಣೆ ಈ ಸಂದರ್ಭದಲ್ಲಿ ಗೌರವದಿಂದ ನೆನೆದು, ನಮಿಸುತ್ತೇನೆ.This media couldn't be displayed. See it on the original post. -
Dr. G Parameshwara
@DrParameshwara
Behind every citizen who comes forward with a grievance lies a story of difficulty. Whether it is for a government scheme, financial assistance or the resolution of issues in their village, people are often forced to travel to distant government offices with applications in hand. Yet many cannot afford to leave their daily work and keep making repeated visits.
Public service is the true purpose of government. With this belief, our government has established the Praja Seva Department to reach people where they are, listen to their grievances and work towards resolving them.
From today, the Praja Seva Abhiyana will continue as an ongoing initiative, bringing the government closer to you, hearing your concerns and ensuring timely solutions wherever possible.
We will always stand with you to make your everyday life easier and more secure. -
Dr. G Parameshwara
@DrParameshwara
ಅಹವಾಲಿನೊಂದಿಗೆ ಬರುವ ಪ್ರತಿಯೊಬ್ಬ ನಾಗರಿಕನ ಹಿಂದೆಯೂ ಒಂದೊಂದು ಸಂಕಷ್ಟದ ಕತೆಯಿರುತ್ತದೆ. ಸರ್ಕಾರದ ಯೋಜನೆಗಾಗಿ, ಅನುದಾನಕ್ಕಾಗಿ, ಗ್ರಾಮದ ಕುಂದುಕೊರತೆಗಳ ಪರಿಹಾರಕ್ಕಾಗಿ ಅರ್ಜಿಯೊಂದಿಗೆ ದೂರದ ಇಲಾಖಾ ಕಚೇರಿಗಳಿಗೆ ಅಲೆದಾಡಬೇಕಾಗಿರುತ್ತದೆ. ಆದರೆ ದೈನಂದಿನ ಕೆಲಸ ಕಾರ್ಯಗಳನ್ನು ಬಿಟ್ಟು ಅರ್ಜಿ ಹಿಡಿದು ಅಲೆಯುವ ಸ್ಥಿತಿಯಲ್ಲಿ ಜನಸಾಮಾನ್ಯರಿರುವುದಿಲ್ಲ. ಜನ ಸೇವೆಯೇ ಸರ್ಕಾರದ ಸೇವೆ ಎಂಬ ದ್ಯೇಯ ನಮ್ಮದು. ಹಾಗಾಗಿ ಪ್ರಜೆಗಳ ಅಹವಾಲುಗಳನ್ನು ಅವರಿರುವಲ್ಲಿಗೆ ಹೋಗಿ ಆಲಿಸಿ, ಪರಿಹರಿಸಲು ನಮ್ಮ ಸರ್ಕಾರ ಪ್ರಜಾಸೇವಾ ಇಲಾಖೆಯನ್ನು ಸ್ಥಾಪಿಸಿದೆ.
ನಿಮ್ಮ ಬಳಿಯೇ ಬಂದು ನಿಮ್ಮ ಅಹವಾಲುಗಳನ್ನು ಆಲಿಸಿ ಸಾಧ್ಯವಾದಷ್ಟು ಅವುಗಳಿಗೆ ತ್ವರಿತವಾಗಿ ಪರಿಹಾರ ಒದಗಿಸುವ ನಿಟ್ಟಿನಲ್ಲಿ ‘ಪ್ರಜಾಸೇವಾ ಅಭಿಯಾನ’ ಇಂದಿನಿಂದ ನಿರಂತರವಾಗಿ ನಡೆಯಲಿದೆ.
ನೆಮ್ಮದಿಯ ಬದುಕಿಗಾಗಿ ಸದಾ ನಿಮ್ಮೊಂದಿಗೆ ನಿಲ್ಲುತ್ತೇವೆ. -
Dr. G Parameshwara
@DrParameshwara
My remarks at the 139th birth anniversary celebration of Bharat Ratna Dr. Sarvepalli Radhakrishnan and the felicitation of award-winning and retired teachers, organised in Tumakuru by the District Administration and the Department of School Education and Literacy:
Since ancient times, India has placed the Guru in a position of the highest respect. Few societies in the world have honoured teachers in the way India has. Ours is a society built on such noble values and traditions.
Every person has a teacher who leaves a lasting influence on their life. The lessons we learn from such teachers often shape the course of our lives.
When I studied in Gollahalli, I had a Kannada teacher named Ramanna. Had he merely taught me the Kannada syllabus, he might have remained just another teacher in my memory. But even today, I remember the many values and life lessons he taught me. Later, during my university days, Krishna Shastri was another such teacher. Had he not guided and corrected me at the right time, I may not have reached the position I am in today. I dedicate much of the credit for my life’s journey to teachers like them.
Dr. Sarvepalli Radhakrishnan shared his ideas and philosophy with the world. The admiration he received from internationally respected thinkers and scholars itself reflects the magnitude of his contribution to society.
Every teacher must strive to uphold the ideals represented by Dr. Radhakrishnan. A teacher’s responsibility is not limited to academics. It is equally important to help students understand the values of life, show them the right path and help them recognise their own potential. That is why our tradition accords the Guru such an exalted place.
From Jyotiba Phule to the countless teachers of modern India, educators have played a vital role in nation-building. If India is emerging as a strong nation today, teachers deserve a large share of the credit. Countless students have succeeded by following the path shown by their teachers, and their achievements have contributed to India’s progress.
India produces lakhs of engineers and doctors, and behind every successful graduate stand many teachers who guided and nurtured them. Teachers are among the strongest foundations of India’s growth.
Our government has taken several decisions for the welfare of teachers. Teacher recruitment has begun, and steps have been initiated to fill 15,000 posts. Recruitment will also be undertaken in universities.
While preparing our party manifesto, there was a strong demand for the restoration of the Old Pension Scheme (OPS), and we included it in the manifesto. The government has decided to implement OPS, and the necessary order will be issued shortly. Even amid financial constraints, this decision has been taken keeping the interests of employees in mind.
Teachers are among the most aware and responsible members of society. Every student matters to our collective future. The aspirations of young people are changing, and we must ensure that they are guided in the right direction and encouraged to contribute to the development of the country. We must never lead them towards shortcuts or wrong paths in the pursuit of success.
Serving the people is our duty. That is why they have elected us, and we will continue to remain committed to that responsibility. -
Dr. G Parameshwara
@DrParameshwara
ಜಿಲ್ಲಾಡಳಿತ ಹಾಗೂ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ವತಿಯಿಂದ ನಗರದ ತುಮಕೂರಿನಲ್ಲಿ ಆಯೋಜಿಸಿದ್ದ ಭಾರತರತ್ನ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ 139ನೇ ಜನ್ಮ ದಿನಾಚರಣೆ ಹಾಗೂ ಪ್ರಶಸ್ತಿ ವಿಜೇತ ಮತ್ತು ನಿವೃತ್ತ ಶಿಕ್ಷಕರನ್ನು ಸನ್ಮಾನ ಸಮಾರಂಭದಲ್ಲಿ ನನ್ನ ಮಾತುಗಳು:
ಭಾರತದಲ್ಲಿ ಬಹಳ ಪೂರ್ವದಲ್ಲಿ ಅನೇಕ ಮಹರ್ಷಿಗಳು ಗುರುವಿನ ಸ್ಥಾನ ಅಲಂಕರಿಸಿದ್ದರು. ಭಾರತದಂತೆ ಪ್ರಪಂಚದ ಯಾವುದೇ ರಾಷ್ಟ್ರದಲ್ಲಿ ಗುರುವಿಗೆ ಗೌರವಿಸಿರುವ ಉದಾಹರಣೆಗಳನ್ನು ನೋಡಲು ಸಾಧ್ಯವಿಲ್ಲ. ನಮ್ಮದು ಇಂತಹ ಉದಾತ್ತ ಆದರ್ಶಗಳನ್ನು ಹೊಂದಿರುವ ಸಮಾಜ.
ಪ್ರತಿಯೊಬ್ಬರ ಬದುಕಿನಲ್ಲೂ ಕೂಡ ಒಬ್ಬ ಗುರುವಿದ್ದಾನೆ. ಆ ಗುರುವಿನಿಂದ ಕಲಿತ ಅನೇಕ ವಿಚಾರಗಳು ಅವರ ಬದುಕಿನ ಮೇಲೆ ಪ್ರಭಾವ ಬೀರುತ್ತದೆ.
ನಾನು ಗೊಲ್ಲಹಳ್ಳಿಯಲ್ಲಿ ಓದುವಾಗ ರಾಮಣ್ಣ ಎಂಬ ಕನ್ನಡ ಮೇಷ್ಟ್ರು ಇದ್ದರು. ಅವರು ಕನ್ನಡ ಪಾಠವನ್ನಷ್ಟೇ ಮಾಡಿದ್ದರೆ ಅವರನ್ನು ಓರ್ವ ಸಾಮಾನ್ಯ ಶಿಕ್ಷಕರಾಗಿ ಸೀಮಿತ ಮಾಡಬಹುದಿತ್ತು. ಅದರೆ, ಅವರು ಕಲಿಸಿದ ಅನೇಕ ವಿಚಾರಗಳನ್ನು, ಜೀವನ ಪಾಠವನ್ನು ನಾನು ನಿತ್ಯ ಸ್ಮರಿಸುತ್ತೇನೆ. ಎರಡನೇಯವರು ವಿಶ್ವವಿದ್ಯಾಲಯದಲ್ಲಿ ಓದುವಾಗ ಗುರುಗಳಾಗಿದ್ದ ಕೃಷ್ಣಶಾಸ್ತ್ರಿ ಅವರು. ಒಂದು ವೇಳೆ ಇವರು ನನ್ನನ್ನು ತಿದ್ದದೆ ಹೋಗಿದ್ದರೆ, ಈ ಸ್ಥಾನದಲ್ಲಿ ನಾನು ಇರುತ್ತಿರಲಿಲ್ಲ. ನನ್ನ ಜೀವನ ಪಯಣದ ಶ್ರೇಯವನ್ನು ಅವರಿಗೆ ಮುಡಿಪಾಗಿಟ್ಟಿದ್ದೇನೆ.
ಸರ್ವಪಲ್ಲಿ ರಾಧಾಕೃಷ್ಣನ್ ಅವರು ತಮಗೆ ತಿಳಿದ ವಿಚಾರಧಾರೆಗಳನ್ನು ಪ್ರಪಂಚದ ಮುಂದೆ ಇಟ್ಟರು. ಅಂತಾರಾಷ್ಡ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿರುವ ವಿಚಾರವಂತರು, ತಿಳಿದಂತವರು ರಾಧಾಕೃಷ್ಣನ್ ಅವರನ್ನು ಕೊಂಡಾಡುವುದನ್ನು ನೋಡಿದರೆ ಸಮಾಜಕ್ಕೆ ಅವರ ಕೊಡುಗೆ ಎಷ್ಟು ಎಂಬುದು ಗೊತ್ತಾಗುತ್ತದೆ.
ಪ್ರತಿಯೊಬ್ಬ ಶಿಕ್ಷಕನು ಕೂಡ ರಾಧಾಕೃಷ್ಣನ್ ಅವರ ಆದರ್ಶಗಳನ್ನು ಪಾಲಿಸಬೇಕು. ತನ್ನ ವಿದ್ಯಾರ್ಥಿಗೆ ಜೀವನದ ಮೌಲ್ಯಗಳನ್ನು ಅರ್ಥೈಸಬೇಕು, ಬದುಕಿನ ದಾರಿ ಮತ್ತು ಆತನೊಳಗಿನ ಸಾಮರ್ಥ್ಯವನ್ನು ತೋರಿಸುವುದು ಬಹಳ ಮುಖ್ಯ. ಅದಕ್ಕಾಗಿ ಶಿಕ್ಷಕರಿಗೆ ಗುರುವಿನ, ದೇವರ ಸ್ಥಾನ ಕೊಟ್ಟಿದ್ದಾರೆ.
ಆಧುನಿಕ ಜಗತ್ತಿನಲ್ಲಿ ಜ್ಯೋತಿಬಾ ಫುಲೆ ಅವರಿಂದ ಹಿಡಿದು ಲಕ್ಷಾಂತರ ಶಿಕ್ಷಕರು ದೇಶವನ್ನು ಕಟ್ಟಿದ್ದಾರೆ. ಭಾರತ ಬಲಿಷ್ಠ ಭಾರತವಾಗಿ ತಯಾರಾಗುತ್ತಿದ್ದರೆ ಅದಕ್ಕೆ ಶಿಕ್ಷಕರು ಕಾರಣ. ಶಿಕ್ಷಕರು ಹಾಕಿಕೊಟ್ಟ ದಾರಿಯಲ್ಲಿ ಅನೇಕ ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಯಶಸ್ವಿಯಾಗಿರುವುದರಿಂದ ಭಾರತ ಈ ಸ್ಥಾನದಲ್ಲಿ ನಿಂತಿದೆ.
19 ಲಕ್ಷ ಇಂಜಿನಿಯರ್ಗಳು, 10 ಲಕ್ಷ ವೈದ್ಯರನ್ನು ಭಾರತ ಉತ್ಪಾದಿಸುತ್ತಿದೆ. ಯಶಸ್ವಿ ಪದವೀಧರನ ಹಿಂದೆ ಹತ್ತಾರು ಗುರುಗಳು ನಿಂತಿದ್ದಾರೆ. ಭಾರತ ಇಷ್ಟೊಂದು ಬಲಿಷ್ಠವಾಗಿ ಬೆಳೆಯುತ್ತಿರುವುದಕ್ಕೆ ಮೂಲ ಕಾರಣ ಶಿಕ್ಷಕರು.
ಅನೇಕ ತೀರ್ಮಾನಗಳನ್ನು ಶಿಕ್ಷಕರಿಗಾಗಿ ತೆಗೆದುಕೊಂಡಿದ್ದೇವೆ. ಶಿಕ್ಷಕರ ನೇಮಕಾತಿ ಪ್ರಾರಂಭಿಸಿದ್ದೇವೆ. 15,000 ಸಾವಿರ ನೇಮಕಾತಿಗೆ ಕ್ರಮ ತೆಗೆದುಕೊಳ್ಳಲಾಗಿದೆ. ವಿಶ್ವವಿದ್ಯಾಲಯಗಳಲ್ಲಿ ಸಹ ನೇಮಕಾತಿ ಮಾಡಿಕೊಳ್ಳಲಾಗುವುದು.
ಪಕ್ಷದ ಪ್ರಣಾಳಿಕೆ ಬರೆಯುವ ಸಂದರ್ಭದಲ್ಲಿ ಒಪಿಎಸ್ ಮಾಡಿಕೊಡಬೇಕು ಎಂದು ಒತ್ತಾಯಿಸಿದ್ದರು. ಅದನ್ನು ಪ್ರಣಾಳಿಕೆಯಲ್ಲಿ ಸೇರಿಸಿದ್ದೆ. ಒಪಿಎಸ್ ಜಾರಿಗೊಳಿಸಲು ಸರ್ಕಾರ ತೀರ್ಮಾನಿಸಿದೆ. ಕೆಲವೇ ದಿನಗಳಲ್ಲಿ ಆದೇಶ ಹೊರಡಿಸಲಾಗುವುದು. ಆರ್ಥಿಕ ಇಕ್ಕಟ್ಟಿನ ಪರಿಸ್ಥಿತಿಯಲ್ಲೂ ಕೂಡ ಈ ತೀರ್ಮಾನವನ್ನು ನಿಮಗಾಗಿ ತೆಗೆದುಕೊಂಡಿದ್ದೇವೆ.
ನೀವೆಲ್ಲಾ ಪ್ರಜ್ಞಾವಂತರು. ಪ್ರತಿಯೊಬ್ಬ ವಿದ್ಯಾರ್ಥಿಯೂ ಕೂಡ ಸಮಾಜಕ್ಕೆ ಬಹಳ ಮುಖ್ಯ. ಯುವಕರ ಆಸೆ, ಆಕಾಂಕ್ಷೆಗಳು ಬದಲಾಗಿವೆ. ಯುವಕರು ದಾರಿ ತಪ್ಪದೇ ದೇಶದ ಅಭಿವೃದ್ಧಿಗೆ ತೊಡಗಿಸಿಕೊಳ್ಳುವ ಕೆಲಸ ಆಗಬೇಕು. ಯಶಸ್ಸಿಗಾಗಿ ನಾವು ಕವಲುದಾರಿ ಹಿಡಿಯುವಂತೆ ಮಾರ್ಗದರ್ಶನ ಮಾಡಬಾರದು, ಅದರಿಂದ ಯುವಕರು ದಾರಿ ತಪ್ಪುತ್ತಾರೆ.
ಜನರ ಸೇವೆ ಮಾಡುವುದೇ ನಮ್ಮ ಕರ್ತವ್ಯ. ಇದಕ್ಕಾಗಿಯೇ ಜನರು ನಮ್ಮನ್ನು ಆಯ್ಕೆ ಮಾಡಿದ್ದಾರೆ, ಈ ವಿಚಾರದಲ್ಲಿ ನಾವು ಬದ್ಧರಾಗಿ ಮುಂದುವರೆಯುತ್ತೇವೆ. -
Dr. G Parameshwara
@DrParameshwara
ಕ್ರೀಡಾ ಸಾಧನೆಗೆ ಪ್ರೋತ್ಸಾಹ ಅಷ್ಟೆ ಅಲ್ಲ, ಉತ್ತಮ ಆರೋಗ್ಯ ಮತ್ತು ಪೌಷ್ಟಿಕತೆಯೂ ಅಗತ್ಯ. ಈ ನಿಟ್ಟಿನಲ್ಲಿ ರಾಜ್ಯದ ಕ್ರೀಡಾಪಟುಗಳ ದೈಹಿಕ–ಮಾನಸಿಕ ಆರೋಗ್ಯ ಹಾಗೂ ಪೋಷಣೆಗೆ ವಿಶೇಷ ಕಾಳಜಿ ವಹಿಸಲಾಗುತ್ತಿದ್ದು, ಪೌಷ್ಟಿಕ ಆಹಾರದ ಸಮರ್ಪಕ ಪೂರೈಕೆಗಾಗಿ ಕ್ರೀಡಾ ಇಲಾಖೆಯಿಂದ ಪೌಷ್ಟಿಕತಜ್ಞರ ನೇಮಕಕ್ಕೆ ಕ್ರಮ ಕೈಗೊಳ್ಳಲಾಗಿದೆ.
ಮುಂದಿನ ದಿನಗಳಲ್ಲಿ ತರಬೇತುದಾರರು, ಸಿಬ್ಬಂದಿಗಳು ಮತ್ತು ಕ್ರೀಡಾಪಟುಗಳ ಸಮಗ್ರ ಬೆಳವಣಿಗೆಗೆ ಪೂರಕ ವ್ಯವಸ್ಥೆಗಳನ್ನು ಮತ್ತಷ್ಟು ಬಲಪಡಿಸಲಾಗುವುದು. ಪ್ರತಿಯೊಬ್ಬ ಕ್ರೀಡಾಪಟುವೂ ಆರೋಗ್ಯದಿಂದ, ಆತ್ಮವಿಶ್ವಾಸದಿಂದ ತರಬೇತಿ ಪಡೆದು ತನ್ನ ಗರಿಷ್ಠ ಸಾಮರ್ಥ್ಯವನ್ನು ತಲುಪಿ, ಸಾಧನೆಯ ಶಿಖರಕ್ಕೇರಬೇಕು ಎಂಬುದು ನಮ್ಮ ಆಶಯ.
Sporting excellence requires not just encouragement, but also good health and proper nutrition. With this in mind, special attention is being given to the physical and mental well-being of athletes across the State, along with their nutritional needs. Steps have been initiated by the Sports Department to appoint nutritionists to ensure the adequate provision of nutritious food.
In the coming days, the support systems for the holistic development of athletes, coaches and staff will be further strengthened. Our vision is for every athlete to train in good health and with confidence, realise their full potential and reach greater heights in sport. -
Dr. G Parameshwara
@DrParameshwara
ತುಮಕೂರು ಜಿಲ್ಲಾಡಳಿತ ಮತ್ತು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ವತಿಯಿಂದ ತುಮಕೂರಿನಲ್ಲಿ ಇಂದು ಆಯೋಜಿಸಿದ್ದ ಭಾರತರತ್ನ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ 139ನೇ ಜನ್ಮ ದಿನಾಚರಣೆ ಹಾಗೂ ಪ್ರಶಸ್ತಿ ಪುರಸ್ಕೃತ ಮತ್ತು ನಿವೃತ್ತ ಶಿಕ್ಷಕರ ಸನ್ಮಾನ ಸಮಾರಂಭವನ್ನು ಉದ್ಘಾಟಿಸಿದೆ.
ಕಾರ್ಯಕ್ರಮದಲ್ಲಿ ಶಾಸಕರಾದ ಜಿ.ಬಿ.ಜ್ಯೋತಿಗಣೇಶ್, ಬಿ.ಸುರೇಶ್ ಗೌಡ, ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಜಿಲ್ಲಾ ಪಂಚಾಯತ್ ಸಿಇಒ ಅಶ್ವಿಜ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್, ಜಿಲ್ಲಾ ಗ್ಯಾರಂಟಿ ಸಮಿತಿ ಅಧ್ಯಕ್ಷರಾದ ಚಂದ್ರಶೇಖರ್ಗೌಡ ಮುಂತಾದವರು ಉಪಸ್ಥಿತರಿದ್ದರು.
Today, I inaugurated the 139th birth anniversary celebration of Bharat Ratna Dr. Sarvepalli Radhakrishnan, along with a felicitation ceremony for award-winning and retired teachers, organised in Tumakuru by the District Administration and the Department of School Education and Literacy.
MLAs G.B. Jyothi Ganesh and B. Suresh Gowda, Deputy Commissioner Shubha Kalyan, Zilla Panchayat CEO Ashwija, Superintendent of Police Ashok, District Guarantee Committee Chairman Chandrashekhar Gowda, and others were present on the occasion. -
Dr. G Parameshwara
@DrParameshwara
ರಾಜ್ಯದ ಕ್ರೀಡಾಪಟುಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧಿಸಿ, ಪದಕಗಳನ್ನು ಗೆದ್ದು ದೇಶ ಹಾಗೂ ಕರ್ನಾಟಕಕ್ಕೆ ಕೀರ್ತಿ ತರಬೇಕು ಎಂಬುದು ನನ್ನ ಆಶಯ. ಈ ನಿಟ್ಟಿನಲ್ಲಿ ಕ್ರೀಡೆ ಮತ್ತು ಕ್ರೀಡಾಪಟುಗಳಿಗೆ ಉತ್ತೇಜನ ನೀಡಲು ಕಂಠೀರವ ಕ್ರೀಡಾಂಗಣದಲ್ಲಿ ಅಂತಾರಾಷ್ಟ್ರೀಯ ಗುಣಮಟ್ಟದ ಕ್ರೀಡಾ ಮೂಲಸೌಕರ್ಯ ನಿರ್ಮಿಸುವ ಚಿಂತನೆ ನಡೆಸಿದ್ದೇವೆ.
ಇದರ ಮೂಲಕ ರಾಜ್ಯದ ಕ್ರೀಡಾಪಟುಗಳಿಗೆ ಉತ್ತಮ ತರಬೇತಿ, ಅಗತ್ಯ ಸೌಲಭ್ಯ ಹಾಗೂ ವಿಶ್ವಮಟ್ಟದ ಅವಕಾಶಗಳನ್ನು ಕಲ್ಪಿಸುವ ಗುರಿ ಹೊಂದಿದ್ದೇವೆ. ಇದರ ಜೊತೆಗೆ, 2030ರಲ್ಲಿ ಅಹಮದಾಬಾದ್ನಲ್ಲಿ ನಡೆಯಲಿರುವ ಕಾಮನ್ವೆಲ್ತ್ ಗೇಮ್ಸ್ ಹಿನ್ನೆಲೆಯಲ್ಲಿ, ವಿವಿಧ ಕ್ರೀಡೆಗಳ ಆತಿಥ್ಯ ವಹಿಸುವ ಸಾಮರ್ಥ್ಯವನ್ನು ಕರ್ನಾಟಕದಲ್ಲಿ ಬೆಳೆಸುವತ್ತವೂ ದೃಢ ಹೆಜ್ಜೆ ಇಡಲಾಗುತ್ತಿದೆ.
It is my vision that athletes from Karnataka compete at the international level, win medals, and bring laurels to both the State and the country. With this in mind, we are exploring the development of international-standard sports infrastructure at Kanteerava Stadium to further strengthen support for sports and sportspersons.
Through this, we aim to provide athletes in the State with better training, essential facilities and world-class opportunities. At the same time, in view of the 2030 Commonwealth Games to be held in Ahmedabad, firm steps are also being taken to enhance Karnataka’s capacity to host events across various sporting disciplines. -
Dr. G Parameshwara
@DrParameshwara
ಕ್ರೀಡಾಪಟುಗಳ ಪ್ರತಿಭೆಯನ್ನು ಗುರುತಿಸಿ, ಅವರ ಕನಸುಗಳಿಗೆ ರೆಕ್ಕೆ ನೀಡುವುದು ನಮ್ಮ ಸರ್ಕಾರದ ಪ್ರಮುಖ ಆದ್ಯತೆ. ರಾಜ್ಯದಲ್ಲಿ ಕ್ರೀಡೆಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ 34 ಕ್ರೀಡಾ ಹಾಸ್ಟೆಲ್ಗಳನ್ನು ನಡೆಸಲಾಗುತ್ತಿದ್ದು, 2,300 ಕ್ರೀಡಾಪಟುಗಳು ವಿವಿಧ ಕ್ರೀಡೆಗಳಲ್ಲಿ ತರಬೇತಿ ಪಡೆಯುತ್ತಿದ್ದಾರೆ.
ಕ್ರೀಡಾಪಟುಗಳ ಅಗತ್ಯಗಳನ್ನು ಅರಿತು ಅವರಿಗೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸುವ ಉದ್ದೇಶದಿಂದ ಶುಕ್ರವಾರ ಬೆಂಗಳೂರಿನ ವಿದ್ಯಾನಗರ ಕ್ರೀಡಾ ಶಾಲೆಗೆ ಭೇಟಿ ನೀಡಿ, ಕ್ರೀಡಾಂಗಣ ಹಾಗೂ ವಿದ್ಯಾರ್ಥಿ ನಿಲಯದ ಮೂಲಸೌಕರ್ಯಗಳನ್ನು ಪರಿಶೀಲಿಸಿದೆ. ಈ ವೇಳೆ ಕ್ರೀಡಾಪಟುಗಳೊಂದಿಗೆ ಮಾತುಕತೆ ನಡೆಸಿ ಅವರ ಸಮಸ್ಯೆಗಳನ್ನು ಆಲಿಸಿದೆ.
ವಿದ್ಯಾನಗರ ಕ್ರೀಡಾ ಶಾಲೆಯಲ್ಲಿ ಅಥ್ಲೆಟಿಕ್ಸ್, ಫುಟ್ಬಾಲ್, ವಾಲಿಬಾಲ್ ಸೇರಿದಂತೆ ವಿವಿಧ ಕ್ರೀಡೆಗಳಲ್ಲಿ ಗುಣಮಟ್ಟದ ತರಬೇತಿ ನೀಡಲಾಗುತ್ತಿದೆ. ರಾಜ್ಯದ ಪ್ರತಿಭೆಗಳು ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚಿ, ಕರ್ನಾಟಕಕ್ಕೆ ಕೀರ್ತಿ ತರಲು ಅಗತ್ಯವಿರುವ ಎಲ್ಲ ರೀತಿಯ ಪ್ರೋತ್ಸಾಹ ಮತ್ತು ಸೌಲಭ್ಯಗಳನ್ನು ಒದಗಿಸುವುದು ನನ್ನ ಕರ್ತವ್ಯ.
Identifying sporting talent and giving wings to the dreams of athletes is a key priority of our government. To promote sports across the State, 34 sports hostels are being run, where 2,300 athletes are receiving training in various disciplines.
With the objective of understanding athletes’ needs and ensuring the facilities they require, I visited the Vidyanagar Sports School in Bengaluru on Friday and inspected the infrastructure at the stadium and student hostel. I also interacted with the athletes and listened to the issues and challenges they face.
At Vidyanagar Sports School, quality training is being provided in various sports, including athletics, football and volleyball. It is my responsibility to ensure that Karnataka’s sporting talent receives every possible encouragement and facility to excel at the national and international levels and bring laurels to the State. -
Dr. G Parameshwara
@DrParameshwara
My remarks at the inaugural ‘Praja Seva Abhiyana Janasabhe’ event, organised in Gubbi town by the Department of Praja Seva and the Tumakuru District Administration:
Governance must function in a systematic and responsive manner. The government itself must reach out to the people, listen to their grievances and work towards resolving them. The Praja Seva Department is being launched today with the objective of ensuring that people do not have to run from one taluk or district-level government office to another carrying their grievances.
September 5 is the birth anniversary of Dr. Sarvepalli Radhakrishnan, who remains an inspiration to all of us, and is celebrated across the country as Teachers’ Day. The Chief Minister had called for the Praja Seva Abhiyana to be launched on this very day. District In-charge Ministers are inaugurating this new initiative across all district headquarters.
Citizens can directly register grievances relating to any department under this initiative, and the officials concerned must ensure that they are resolved within the stipulated time.
This programme is not limited to today. The Abhiyana will be held in every taluk on the first and third Saturdays of every month. After covering the taluk level, Praja Seva Abhiyana meetings will also be held at the hobli level. This will be a continuous initiative. Those who are unable to submit their applications today can do so on the third Saturday.
Gubbi MLA Srinivas is a representative who works closely among the people. I therefore do not expect a very large number of grievances here. He has built a strong connection with the people of Gubbi taluk through his work for the constituency.
When a citizen submits an application and the administration gives it due priority and resolves the issue, the satisfaction it brings is immense. Our government will work to address people’s problems. Grievances will continue to arise, but if officials resolve them efficiently, Karnataka will earn a reputation for good governance. When people’s problems are addressed quickly, the term responsive administration acquires real meaning.
Our government has implemented the Guarantee Schemes. There was considerable criticism when they were introduced. But these schemes have greatly benefited those who genuinely needed a helping hand from the government. They are supporting the daily lives of labourers and the poor.
For a woman who earns her livelihood through daily wage work, ₹2,000 is a significant amount - its value to her can be far greater than the figure itself suggests. Women who need this support are receiving ₹2,000 under the scheme. The Government Employees’ Association has informed us that women in government service are not availing the ₹2,000 benefit under the Gruha Lakshmi scheme. I thank them for this.
During a visit to Chamarajanagar district, I asked an elderly woman whether she was receiving the ₹2,000 assistance. She told me, “This ₹2,000 helps me buy my medicines. I am able to sustain myself because of this money.” Hearing her words made me feel that our programme had truly served its purpose.
Women have also been given the opportunity to travel free of cost on State-run buses. Women have undertaken 800 crore free trips on transport corporation buses. Inspired by the Shakti scheme, the mayor of a city in the United States introduced free travel for women there. Even the Prime Minister copied our Guarantee model. Karnataka’s Guarantee Schemes have been implemented in different forms across several States. This itself is testimony to the success of our Guarantees.
The Chief Minister has entrusted me with the responsibility of the Revenue Department. Karnataka has always been at the forefront when it comes to pioneering new initiatives in the country. The kind of major reforms witnessed in our State’s Revenue Department have not taken place elsewhere in the country.
During the tenure of Devaraj Urs, the historic principle of “Land to the Tiller” was implemented with the objective of giving ownership of land to those who actually cultivated it through their hard work. The aim was to ensure that poor agricultural labourers had access to land.
After taking charge of the Revenue Department, I have set myself a new objective: to provide residential sites to those who do not own one. Poor families will be provided 30×40 residential sites free of cost. We have planned to distribute more than 15 lakh sites across the State.
A large number of people have neither land nor a house of their own. Providing them with a residential site will enable them to build a home and bring greater security and peace to their lives. We are working to develop sites on available government land and distribute them to the poor. Beneficiaries will be identified and sites distributed through Gram Sabhas with the involvement of local MLAs.
The entire State is facing a severe drought. We have not witnessed a drought of this magnitude in recent times. It is said that a drought of this severity occurred around 150 years ago.
During my visit to Chamarajanagar district, I saw that hardly any crops had survived. Sunflower, maize, flowers and the famous Nanjangud Rasabale banana crop had dried up. Villages have begun facing acute drinking-water shortages. It is deeply painful to witness such conditions.
Drought conditions prevail across all districts of the State. The immediate challenge is ensuring drinking water for people and fodder for livestock. We have provided ₹1 crore to every Assembly constituency for drinking-water management. A total of ₹329 crore has been placed in the PD accounts of Deputy Commissioners, and I have instructed officials to utilise these funds effectively.
Providing water and fodder for people and livestock, along with employment opportunities, is now a priority. I have also instructed officials to discuss the situation with MLAs and take up works under the VB-G RAM G scheme.
It is D.K. Shivakumar’s vision to provide good governance to the people of Karnataka, and the entire Council of Ministers and our legislators stand firmly behind that objective. -
Dr. G Parameshwara
@DrParameshwara
ಪ್ರಜಾ ಸೇವಾ ಇಲಾಖೆ ಹಾಗೂ ತುಮಕೂರು ಜಿಲ್ಲಾಡಳಿತದ ವತಿಯಿಂದ ಗುಬ್ಬಿ ಪಟ್ಟಣದಲ್ಲಿ ಆಯೋಜಿಸಿದ್ದ ಮೊದಲ 'ಪ್ರಜಾ ಸೇವಾ ಅಭಿಯಾನ ಜನಸಭೆ'ಯ ಉದ್ಘಾಟನಾ ಕಾರ್ಯಕ್ರಮದಲ್ಲಿ ನನ್ನ ಮಾತುಗಳು:
ಸರ್ಕಾರದ ಆಡಳಿತ ವ್ಯವಸ್ಥಿತವಾಗಿ ನಡೆಯಬೇಕು, ಸರ್ಕಾರವೇ ಜನರ ಬಳಿ ಹೋಗಿ ಅವರ ಸಮಸ್ಯೆಗಳನ್ನು ಆಲಿಸಿ, ಪರಿಹರಿಸುವ ನಿಟ್ಟಿನಲ್ಲಿ ಕೆಲಸ ಮಾಡಬೇಕು. ಜನರು ತಮ್ಮ ಸಮಸ್ಯೆಗಳನ್ನು ಹೊತ್ತು ತಾಲ್ಲೂಕು, ಜಿಲ್ಲಾ ಮಟ್ಟದ ಅಧಿಕಾರಿಗಳ ಕಚೇರಿಗಳಿಗೆ ಅಲೆದಾಡಿಸುವುದನ್ನು ತಪ್ಪಿಸಬೇಕು ಎಂಬ ಉದ್ದೇಶದಿಂದ ಪ್ರಜಾಸೇವಾ ಇಲಾಖೆಯನ್ನು ಇಂದಿನಿಂದ ಆರಂಭಿಸಲಾಗುತ್ತಿದೆ.
ಸೆಪ್ಟೆಂಬರ್ 5 ನಮ್ಮೆಲ್ಲರಿಗೂ ಆದರ್ಶಪ್ರಾಯರಾದ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನ. ಇಂದು ಇಡೀ ದೇಶದಲ್ಲಿ ಶಿಕ್ಷಕರ ದಿನಾಚರಣೆ ಆಚರಿಸಲಾಗುತ್ತಿದೆ. ಅದೇ ದಿನ ಪ್ರಜಾಸೇವಾ ಅಭಿಯಾನ ಆಚರಿಸಬೇಕು ಎಂದು ಸಿಎಂ ಅವರು ಕರೆ ಕೊಟ್ಟಿದ್ದರು. ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಆಯಾ ಜಿಲ್ಲೆಗಳ ಉಸ್ತುವಾರಿ ಸಚಿವರು ಈ ನೂತನ ಕಾರ್ಯಕ್ಕೆ ಚಾಲನೆ ನೀಡುತ್ತಿದ್ದಾರೆ.
ಯಾವುದೇ ಇಲಾಖೆಯ ಸಮಸ್ಯೆಗಳನ್ನು ನೇರವಾಗಿ ಈ ಇಲಾಖೆಯಡಿ ದಾಖಲಿಸಿದರೆ, ಸಂಬಂಧಪಟ್ಟ ಅಧಿಕಾರಿಗಳು ಅದನ್ನು ಸಕಾಲದಲ್ಲಿ ಪರಿಹರಿಸಿಕೊಡುವ ಕೆಲಸ ಮಾಡಿಕೊಡಬೇಕು.
ಈ ಕಾರ್ಯಕ್ರಮ ಇಂದಿನ ದಿನಕ್ಕೆ ಮಾತ್ರ ಸೀಮಿತವಾಗಿಲ್ಲ. ಪ್ರತಿ ತಿಂಗಳು ಮೊದಲನೆ ಮತ್ತು ಮೂರನೇ ಶನಿವಾರದಂದು ಪ್ರತಿ ತಾಲ್ಲೂಕಿನಲ್ಲಿ ಅಭಿಯಾನ ನಡೆಸಲಾಗುತ್ತದೆ. ತಾಲೂಕು ಮುಗಿದ ಬಳಿಕ ಹೋಬಳಿ ಮಟ್ಟದಲ್ಲಿ ಪ್ರಜಾಸೇವಾ ಅಭಿಯಾನ ಸಭೆ ನಡೆಸಲಾಗುವುದು. ಇದು ನಿರಂತರವಾಗಿ ನಡೆಯುತ್ತದೆ. ಇವತ್ತು ಅರ್ಜಿ ನೀಡಲು ಆಗದವರು ಮೂರನೇ ಶನಿವಾರ ಅರ್ಜಿ ಸಲ್ಲಿಸಬಹುದು.
ಗುಬ್ಬಿ ಶಾಸಕರಾದ ಶ್ರೀನಿವಾಸ್ ಅವರು ಜನಗಳ ಮಧ್ಯೆ ಇದ್ದು ಕೆಲಸ ಮಾಡುವ ಶಾಸಕ. ಅಷ್ಟು ಸಂಖ್ಯೆಯಲ್ಲಿ ಅರ್ಜಿಗಳು ಬರುವುದಿಲ್ಲ ಎನ್ನಿಸುತ್ತದೆ. ಶ್ರೀನಿವಾಸ್ ಅವರು ಕ್ಷೇತ್ರದ ಕೆಲಸದ ವಿಚಾರದಲ್ಲಿ ಗುಬ್ಬಿ ತಾಲ್ಲೂಕಿನ ಜನರೊಂದಿಗೆ ಗುರುತಿಸಿಕೊಂಡಿದ್ದಾರೆ.
ಸಾರ್ವಜನಿಕರಿಂದ ಅರ್ಜಿ ಬಂದಾಗ, ಅದಕ್ಕೆ ಪ್ರಾಮುಖ್ಯತೆ ಕೊಟ್ಟು ಪರಿಹರಿಸಿದರೆ ಅವರಿಗೆ ಆಗುವ ಸಂತೋಷಕ್ಕೆ ಪಾರವೇ ಇರುವುದಿಲ್ಲ. ಸರ್ಕಾರ ಜನರ ಸಮಸ್ಯೆಗಳನ್ನು ಬಗೆಹರಿಸಿಕೊಡುವ ಕೆಲಸ ಮಾಡಲಿದೆ. ಸಮಸ್ಯೆಗಳು ನಿರಂತರವಾಗಿ ಬರುತ್ತಲೇ ಇರುತ್ತವೆ. ಅಧಿಕಾರಿಗಳು ಸಮಸ್ಯೆಗಳನ್ನು ಬಗೆಹರಿಸುವ ಕೆಲಸ ಮಾಡಿದರೆ, ಕರ್ನಾಟಕ ಒಳ್ಳೆಯ ಆಡಳಿತಕ್ಕೆ ಹೆಸರುವಾಸಿಯಾಗುತ್ತದೆ. ಜನರ ಸಮಸ್ಯೆಗಳನ್ನು ಬಹುಬೇಗ ಬಗೆಹರಿಸಿದರೆ ಆಡಳಿತ ಚುರುಕಾಗಿದೆ ಎಂಬ ಮಾತಿಗೆ ಅರ್ಥ ಬರುತ್ತದೆ.
ನಮ್ಮ ಸರ್ಕಾರ ಗ್ಯಾರಂಟಿ ಯೋಜನೆಗಳನ್ನು ನೀಡಿದೆ. ಆರಂಭದಲ್ಲಿ ಬಹಳಷ್ಟು ಟೀಕೆಗಳು ಕೇಳಿಬಂದವು. ಯಾರಿಗೆ ಸಹಾಯ ಹಸ್ತದ ನಿರೀಕ್ಷೆಯಿತ್ತು, ಸರ್ಕಾರದಿಂದ ಸಹಾಯ ಬೇಕಾಗಿತ್ತು ಅಂತವರಿಗೆ ಗ್ಯಾರಂಟಿ ಯೋಜನೆಗಳು ಹೆಚ್ಚು ಅನುಕೂಲವಾಗಿವೆ. ಕೂಲಿ ಮಾಡುವವರಿಗೆ, ಬಡವರಿಗೆ ಜೀವನಕ್ಕೆ ಸಹಾಯವಾಗುತ್ತಿದೆ. ಕೂಲಿ ಮಾಡುವ ಹೆಣ್ಣು ಮಗಳಿಗೆ ಎರಡು ಸಾವಿರ ರೂ. ದೊಡ್ಡದು. ಆಕೆಗೆ ಎರಡು ಸಾವಿರ ರೂಪಾಯಿ ಎರಡು ಲಕ್ಷದ ಮೌಲ್ಯಕ್ಕೆ ಸಮ. ಅವಶ್ಯಕತೆ ಇರುವ ಎಲ್ಲ ಮಹಿಳೆಯರು ಎರಡು ಸಾವಿರ ರೂಪಾಯಿ ಪಡೆಯುತ್ತಿದ್ದಾರೆ. ಸರ್ಕಾರಿ ನೌಕರಿಯಲ್ಲಿರುವ ಮಹಿಳೆಯರು ಗೃಹಲಕ್ಷ್ಮೀ ಯೋಜನೆಯ ಎರಡು ಸಾವಿರ ರೂಪಾಯಿ ಪಡೆಯುವುದಿಲ್ಲ ಎಂದು ಸರ್ಕಾರಿ ನೌಕರರ ಸಂಘ ತಿಳಿಸಿದೆ. ಅವರಿಗೆ ಧನ್ಯವಾದಗಳು.
ಚಾಮರಾಜನಗರ ಜಿಲ್ಲಾ ಪ್ರವಾಸ ಕೈಗೊಂಡಾಗ ಅಜ್ಜಿಯೊಬ್ಬರಿಗೆ ಎರಡು ಸಾವಿರ ರೂ. ಬರುತ್ತದೆಯೇ ಎಂದು ವಿಚಾರಿಸಿದೆ. ಆಗ ಆಕೆ ಎರಡು ಸಾವಿರ ರೂ. ಹಣ ನನಗೆ ಔಷಧ ತೆಗೆದುಕೊಳ್ಳಲು ಸಹಾಯವಾಗುತ್ತಿದೆ. ನಾನು ಬದುಕಿರುವುದೇ ಎರಡು ಸಾವಿರ ರೂ. ಹಣದಿಂದ ಎಂಬ ಮಾತನ್ನು ಹೇಳಿದರು. ಇದನ್ನು ಕೇಳಿ ನಮ್ಮ ಕಾರ್ಯಕ್ರಮ ಸಾರ್ಥಕವೆಂಬ ಭಾವನೆ ಮೂಡಿತ್ತು.
ಹೆಣ್ಣುಮಕ್ಕಳಿಗೆ ಬಸ್ನಲ್ಲಿ ಉಚಿತವಾಗಿ ಸಂಚರಿಸಲು ಅವಕಾಶ ಮಾಡಿಕೊಡಲಾಗಿದೆ. 800 ಕೋಟಿ ಟ್ರಿಪ್ ನಮ್ಮ ಹೆಣ್ಣುಮಕ್ಕಳು ಸಾರಿಗೆ ಬಸ್ಗಳಲ್ಲಿ ಉಚಿತವಾಗಿ ಪ್ರಯಾಣ ಮಾಡಿದ್ದಾರೆ. ಶಕ್ತಿ ಯೋಜನೆಯಿಂದ ಪ್ರೇರಣೆ ಪಡೆದು ಅಮೆರಿಕಾದ ನಗರವೊಂದರ ಮೇಯರ್ ಅಲ್ಲಿನ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸಿದ್ದಾರೆ. ಪ್ರಧಾನಮಂತ್ರಿಯವರು ನಮ್ಮ ಗ್ಯಾರಂಟಿ ಯೋಜನೆಯನ್ನು ಕಾಪಿ ಹೊಡೆದರು. ಎಲ್ಲ ರಾಜ್ಯದಲ್ಲೂ ಕರ್ನಾಟಕದ ಗ್ಯಾರಂಟಿ ಯೋಜನೆಗಳನ್ನು ಬೇರೆಬೇರೆ ರೂಪದಲ್ಲಿ ಅನುಷ್ಠಾನಗೊಳಿಸಲಾಗಿದೆ. ಇದು ನಮ್ಮ ಗ್ಯಾರಂಟಿ ಯೋಜನೆಯ ಯಶಸ್ಸಿಗೆ ಸಾಕ್ಷಿಯಾಗಿದೆ.
ಕಂದಾಯ ಇಲಾಖೆಯನ್ನು ಸಿಎಂ ಅವರು ನನಗೆ ವಹಿಸಿದ್ದಾರೆ. ದೇಶದಲ್ಲಿ ಹೊಸಹೊಸ ಆವಿಷ್ಕಾರ ಮಾಡುವಾಗ ಕರ್ನಾಟಕ ಮುಂದಿದೆ. ನಮ್ಮ ರಾಜ್ಯದ ಕಂದಾಯ ಇಲಾಖೆಯಲ್ಲಿ ಆಗಿರುವಂತಹ ದೊಡ್ಡ ಬದಲಾವಣೆಗಳು ದೇಶದಲ್ಲಿ ಬೇರೆಲ್ಲೂ ಆಗಿರಲಿಲ್ಲ. ದೇವರಾಜ್ ಅರಸು ಅವರ ಅವಧಿಯಲ್ಲಿ, ಕಷ್ಟಪಟ್ಟು ಜಮೀನು ಉಳುಮೆ ಮಾಡುವವರಿಗೆ ಜಮೀನು ನೀಡಬೇಕು ಎಂಬ ನಿಟ್ಟಿನಲ್ಲಿ "ಉಳುವವನೆ ಭೂಮಿಯ ಒಡೆಯ" ಎಂಬ ಕಾರ್ಯಕ್ರಮ ಜಾರಿಗೆ ತಂದರು. ಕೂಲಿ ಮಾಡುವ ಬಡವನಿಗೆ ಭೂಮಿ ಸಿಗಬೇಕು ಎಂಬುದು ಉದ್ದೇಶವಾಗಿತ್ತು.
ನಾನು ಕಂದಾಯ ಇಲಾಖೆಯ ಜವಾಬ್ದಾರಿಯನ್ನು ವಹಿಸಿಕೊಂಡ ಬಳಿಕ ಹೊಸ ಯೋಜನೆಯನ್ನು ಹಾಕಿಕೊಂಡಿದ್ದೇನೆ. ನಿವೇಶನ ಇಲ್ಲದವರಿಗೆ ನಿವೇಶನ ನೀಡಬೇಕು ಎಂಬುದು ನನ್ನ ಆಶಯ. ಬಡವರಿಗೆ 30×40 ಅಳತೆಯ ನಿವೇಶನವನ್ನು ಉಚಿತವಾಗಿ ನೀಡಲಾಗುವುದು. ರಾಜ್ಯಾದ್ಯಂತ 15 ಲಕ್ಷಕ್ಕೂ ಹೆಚ್ಚು ನಿವೇಶನ ಕೊಡುವ ಯೋಜನೆ ಹಾಕಿಕೊಳ್ಳಲಾಗಿದೆ. ಬಹಳಷ್ಟು ಜನರಿಗೆ ಜಾಗ ಇಲ್ಲ, ಮನೆಯೂ ಇಲ್ಲ. ನಿವೇಶನ ನೀಡಿದರೆ ಮನೆ ಕಟ್ಟಿಕೊಳ್ಳಲು ಅನುಕೂಲವಾಗುತ್ತದೆ. ಅವರ ಬದುಕಲ್ಲಿ ನೆಮ್ಮದಿ ಮೂಡುತ್ತದೆ. ಲಭ್ಯ ಇರುವ ಸರ್ಕಾರಿ ಜಾಗದಲ್ಲಿ ನಿವೇಶನ ಸಿದ್ಧಪಡಿಸಿ, ಬಡವರಿಗೆ ಕೊಡುವ ಕೆಲಸ ಮಾಡಲು ಹೊರಟಿದ್ದೇವೆ. ಶಾಸಕರ ಮೂಲಕ ಗ್ರಾಮ ಸಭೆಗಳನ್ನು ಮಾಡಿ, ಬಡವರಿಗೆ ನಿವೇಶನ ಹಂಚಿಕೆ ಮಾಡಲಾಗುತ್ತದೆ.
ಇಡೀ ರಾಜ್ಯದಲ್ಲಿ ಭೀಕರ ಬರ ಎದುರಾಗಿದೆ. ಯಾವತ್ತು ಈ ರೀತಿಯ ಬರ ಬಂದಿಲ್ಲ. ಈ ರೀತಿಯ ಬರ 150 ವರ್ಷದ ಹಿಂದೆ ಬಂದಿತ್ತು ಎಂದು ಹೇಳಲಾಗುತ್ತದೆ.
ಚಾಮರಾಜನಗರ ಜಿಲ್ಲಾ ಪ್ರವಾಸ ಕೈಗೊಂಡಿದ್ದೆ. ಜಿಲ್ಲೆಯಲ್ಲಿ ಯಾವ ಬೆಳೆಯೂ ಇಲ್ಲ. ಸೂರ್ಯಕಾಂತಿ, ಜೋಳ, ಹೂವು, ನಂಜನಗೂಡು ರಸಬಾಳೆ ಒಣಗಿದೆ. ಹಳ್ಳಿಹಳ್ಳಿಯಲ್ಲಿ ನೀರಿಗೆ ಹಾಹಾಕಾರ ಆರಂಭವಾಗಿದೆ. ಇದನ್ನು ನೋಡಿದಾಗ ಮನಸ್ಸಿಗೆ ನೋವಾಗುತ್ತದೆ.
ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಬರ ಪರಿಸ್ಥಿತಿ ಇದೆ. ಜನರಿಗೆ ಕುಡಿಯುವ ನೀರು, ಜಾನುವಾರುಗಳಿಗೆ ಮೇವು ಎಲ್ಲಿಂದ ತರಬೇಕು ಎಂಬ ಪ್ರಶ್ನೆ ಉದ್ಭವವಾಗಿದೆ. ಕುಡಿಯುವ ನೀರಿಗಾಗಿ ಪ್ರತಿ ಕ್ಷೇತ್ರಕ್ಕೆ ಒಂದು ಕೋಟಿ ರೂ.ನೀಡಲಾಗಿದೆ. ಜಿಲ್ಲಾಧಿಕಾರಿಗಳ ಪಿಡಿ ಖಾತೆಯಲ್ಲಿ 329 ಕೋಟಿ ರೂ.ನೀಡಲಾಗಿದೆ. ಇದನ್ನು ಸದ್ಭಳಕೆ ಮಾಡಿಕೊಳ್ಳಬೇಕು ಎಂದು ಸೂಚಿಸಿದ್ದೇನೆ. ಜನ-ಜಾನುವಾರುಗಳಿಗೆ ನೀರು, ಮೇವು ಹಾಗೂ ಉದ್ಯೋಗ ನೀಡುವುದು ಮುಖ್ಯವಾಗಿದೆ. ಶಾಸಕರೊಂದಿಗೆ ಚರ್ಚಿಸಿ ವಿಬಿ ಜಿ ರಾಮ್ಜಿ ಯೋಜನೆಯಡಿ ಕಾಮಗಾರಿಗಳನ್ನು ಆರಂಭಿಸಬೇಕು ಎಂದು ಸಹ ಹೇಳಿದ್ದೇನೆ.
ರಾಜ್ಯದ ಯಜನತೆಗೆ ಒಳ್ಳೆಯ ಆಡಳಿತ ನೀಡಬೇಕು ಎಂಬುದು ಡಿ.ಕೆ.ಶಿವಕುಮಾರ್ ಅವರ ಆಶಯ. ಅದಕ್ಕೆ ನಮ್ಮ ಇಡೀ ಮಂತ್ರಿ ಮಂಡಲ ಮತ್ತು ಶಾಸಕರು ಬೆಂಬಲವಾಗಿ ನಿಂತಿದ್ದಾರೆ. -
Dr. G Parameshwara
@DrParameshwara
ಇಂದು ಪ್ರಜಾ ಸೇವಾ ಇಲಾಖೆ ಹಾಗೂ ತುಮಕೂರು ಜಿಲ್ಲಾಡಳಿತದ ವತಿಯಿಂದ ಗುಬ್ಬಿ ಪಟ್ಟಣದಲ್ಲಿ ಆಯೋಜಿಸಿದ್ದ ಮೊದಲ 'ಪ್ರಜಾ ಸೇವಾ ಅಭಿಯಾನ ಜನಸಭೆ' ಕಾರ್ಯಕ್ರಮಕ್ಕೆ ಚಾಲನೆ ನೀಡಿದೆ.
ಬಳಿಕ, ಅದೇ ವೇದಿಕೆಯಲ್ಲಿ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದ ಅಂಗವಾಗಿ ಮಾಜಿ ರಾಷ್ಟ್ರಪತಿಗಳಾದ ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಗೌರವ ಸಲ್ಲಿಸಿದೆ.
ಈ ಸಂದರ್ಭದಲ್ಲಿ ಗುಬ್ಬಿ ಶಾಸಕರು ಹಾಗೂ ಕೆಎಸ್ಆರ್ಟಿಸಿ ಅಧ್ಯಕ್ಷರಾದ ಎಸ್.ಆರ್.ಶ್ರೀನಿವಾಸ್, ಕಾಡುಗೊಲ್ಲ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಮಹೇಶ್, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ದೀಪಾ ಚೋಳನ್, ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಜಿಲ್ಲಾ ಪಂಚಾಯತ್ ಸಿಇಒ ಅಶ್ವಿಜ.ಬಿ.ವಿ, ಗ್ಯಾರಂಟಿ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷರಾದ ಚಂದ್ರಶೇಖರ್ ಗೌಡ ಮುಂತಾದವರು ಹಾಜರಿದ್ದರು.
Today, I launched the first ‘Praja Seva Abhiyana Janasabhe’ event, organised at Gubbi town by the Department of Praja Seva and the Tumakuru District Administration.
Later, as part of the Teachers’ Day celebrations held at the same venue, I paid floral tributes to former President Dr. Sarvepalli Radhakrishnan.
Gubbi MLA and KSRTC Chairman S.R. Srinivas, Kadugolla Development Corporation Chairman Mahesh, District In-charge Secretary Deepa Cholan, Deputy Commissioner Shubha Kalyan, Zilla Panchayat CEO Ashwija B.V., District President of the Guarantee Implementation Committee Chandrashekhar Gowda, and others were present. -
Dr. G Parameshwara
@DrParameshwara
2026–27ನೇ ಸಾಲಿನ ಕರ್ನಾಟಕ ರಾಜ್ಯ ಶಿಕ್ಷಕರ ಪ್ರಶಸ್ತಿಗೆ ಆಯ್ಕೆಯಾಗಿರುವ ಪ್ರಾಥಮಿಕ, ಪ್ರೌಢ ಹಾಗೂ ಪದವಿ ಪೂರ್ವ ಕಾಲೇಜುಗಳ ಎಲ್ಲಾ ಶಿಕ್ಷಕ/ಶಿಕ್ಷಕಿಯರಿಗೆ ಹೃತ್ಪೂರ್ವಕ ಅಭಿನಂದನೆಗಳು.
ಅಕ್ಷರದ ಜೊತೆಗೆ ಲೌಕಿಕ ಜ್ಞಾನವನ್ನು ಧಾರೆಯೆರೆದು, ಮಕ್ಕಳನ್ನು ಸಮಾಜದ ಸತ್ಪ್ರಜೆಗಳಾಗಿ ರೂಪಿಸುವುದು ಓರ್ವ ಮಾದರಿ ಶಿಕ್ಷಕನ ಕರ್ತವ್ಯ. ಈ ಕರ್ತವ್ಯವನ್ನು ಶ್ರದ್ಧಾಭಕ್ತಿಯಿಂದ ಪಾಲಿಸುತ್ತಿರುವ ತಾವು ಈ ಪ್ರಶಸ್ತಿಗೆ ಅತ್ಯಂತ ಅರ್ಹರು ಎಂದು ಭಾವಿಸಿದ್ದೇನೆ.
ನಿಮ್ಮ ಸೇವೆ - ಸಂಕಲ್ಪವು ಶಿಕ್ಷಕ ವೃತ್ತಿಯಲ್ಲಿ ಮುನ್ನಡೆಯುತ್ತಿರುವ ಪ್ರತಿಯೊಬ್ಬರಿಗೂ ಸ್ಫೂರ್ತಿಯಾಗಲಿ, ನಿಮ್ಮಿಂದ ಇನ್ನಷ್ಟು ವಿದ್ಯಾರ್ಥಿಗಳ ಬದುಕು ಉಜ್ವಲವಾಗಲಿ ಎಂದು ಹಾರೈಸುತ್ತೇನೆ.
Heartfelt congratulations to all the teachers from Primary Schools, High Schools and Pre-University Colleges selected for the Karnataka State Teachers’ Awards 2026–27.
A teacher’s role goes far beyond the classroom. By imparting knowledge, nurturing values and shaping responsible citizens, teachers help build the future of society.
May this recognition inspire many more educators, and may your dedicated service continue to brighten the lives of countless students. -
Dr. G Parameshwara
@DrParameshwara
ಆರ್ಥಿಕ ಸಂಕಷ್ಟ, ಸೌಲಭ್ಯಗಳ ಕೊರತೆ ಯಾವುದಕ್ಕೂ ಎದೆಗುಂದದೆ, ಸವಾಲುಗಳನ್ನೇ ಮೆಟ್ಟಿಲುಗಳನ್ನಾಗಿಸಿಕೊಂಡು ಸಾಧನೆಯ ಹಾದಿಯಲ್ಲಿ ಮುನ್ನಡೆದವರು ಶಿವಮೊಗ್ಗ ಜಿಲ್ಲೆಯ ಭದ್ರಾವತಿಯ ಸಿಂಧುಶ್ರೀ ಗಣೇಶ್.
ಬಡತನದ ಬೇಲಿಯ ನಡುವೆಯೂ ಮಗಳನ್ನು ಒಬ್ಬ ಶ್ರೇಷ್ಠ ಕ್ರೀಡಾಪಟುವನ್ನಾಗಿ ರೂಪಿಸಬೇಕೆಂಬ ತಂದೆಯ ಕನಸನ್ನು ನನಸು ಮಾಡುವ ಗುರಿಯೊಂದಿಗೆ ಸಿಂಧುಶ್ರೀ ಕ್ರೀಡೆಯತ್ತ ಹೆಜ್ಜೆ ಇಟ್ಟರು. ತಂದೆಯ ಮಾರ್ಗದರ್ಶನದಲ್ಲಿ ಕ್ರೀಡೆಯ ಆರಂಭಿಕ ತರಬೇತಿ ಪಡೆದು, ಸೀಮಿತ ಅವಕಾಶಗಳ ನಡುವೆಯೂ ಕಠಿಣ ಪರಿಶ್ರಮ, ನಿರಂತರ ಅಭ್ಯಾಸ ಹಾಗೂ ಅಪಾರ ಛಲದಿಂದ ಒಂದೊಂದೇ ಮೆಟ್ಟಿಲೇರುತ್ತಾ ಮುನ್ನಡೆದರು.
ಸಿಂಧುಶ್ರೀ ಅವರ ಪ್ರತಿಭೆಯನ್ನು ಗುರುತಿಸಿದ ಕ್ರೀಡಾಸಕ್ತರು ಹೆಚ್ಚಿನ ತರಬೇತಿಗಾಗಿ ಅವರನ್ನು ಬೆಂಗಳೂರಿಗೆ ಕಳುಹಿಸಿ, ಪೋಲ್ ವಾಲ್ಟ್ನಲ್ಲಿ ಹೊಸ ಹೆಜ್ಜೆಯತ್ತ ಸಿದ್ಧಗೊಳಿಸಿದರು. ಭುವನೇಶ್ವರದಲ್ಲಿ ನಡೆದ 65ನೇ ರಾಷ್ಟ್ರೀಯ ಸೀನಿಯರ್ ಅಥ್ಲೆಟಿಕ್ ಚಾಂಪಿಯನ್ಷಿಪ್ನಲ್ಲಿ 4.25 ಮೀಟರ್ ಎತ್ತರಕ್ಕೆ ಜಿಗಿದು ಹೊಸ ದಾಖಲೆ ಬರೆದ ಸಿಂಧುಶ್ರೀ, ಇದೀಗ ಏಷ್ಯನ್ ಗೇಮ್ಸ್ನಲ್ಲಿ ಪೋಲ್ ವಾಲ್ಟ್ನಲ್ಲಿ ಭಾರತವನ್ನು ಪ್ರತಿನಿಧಿಸುತ್ತಿರುವುದು ಕರ್ನಾಟಕಕ್ಕೆ ಮಾತ್ರವಲ್ಲ, ಇಡೀ ದೇಶಕ್ಕೆ ಹೆಮ್ಮೆಯ ಕ್ಷಣವಾಗಿದೆ.
ಕ್ರೀಡಾಪಟುಗಳ ಕನಸುಗಳಿಗೆ ಬೆನ್ನೆಲುಬಾಗಿ ನಿಲ್ಲುವ ನಮ್ಮ ಸರ್ಕಾರ, ಸಿಂಧುಶ್ರೀಯ ಸಾಧನೆಯ ಹಾದಿಯಲ್ಲೂ ಜೊತೆಯಾಗಿ ನಿಂತಿದೆ. ಈ ನಿಟ್ಟಿನಲ್ಲಿ ರಾಜ್ಯ ಕ್ರೀಡಾ ಮತ್ತು ಯುವ ಸಬಲೀಕರಣ ಇಲಾಖೆ ಹಾಗೂ ಭಾರತೀಯ ಕ್ರೀಡಾ ಪ್ರಾಧಿಕಾರದ ವತಿಯಿಂದ ಅಂತರರಾಷ್ಟ್ರೀಯ ಗುಣಮಟ್ಟದ 3 ಪೋಲ್ಗಳನ್ನು ಹಾಗೂ ₹5 ಲಕ್ಷ ಆರ್ಥಿಕ ನೆರವನ್ನು ಒದಗಿಸಿದೆ.
ಈ ತಿಂಗಳು ಜಪಾನ್ನಲ್ಲಿ ನಡೆಯಲಿರುವ ಏಷ್ಯನ್ ಗೇಮ್ಸ್ನಲ್ಲಿ ಭಾರತದ ಪರ ಪೋಲ್ ವಾಲ್ಟ್ನಲ್ಲಿ ಕಣಕ್ಕಿಳಿಯಲಿರುವ ಸಿಂಧುಶ್ರೀ ಅವರಿಗೆ ಶುಭಹಾರೈಸುತ್ತೇನೆ. ಅವರ ಯಶೋಗಾಥೆ ಯುವ ಕ್ರೀಡಾಪಟುಗಳಿಗೆ ಸದಾ ಸ್ಫೂರ್ತಿಯಾಗಿದೆ.
#karnatakasports
Dr. G Parameshwara
@DrParameshwara
-
Dr. G Parameshwara
@DrParameshwara
Undeterred by financial hardship and limited facilities, Sindhushree Ganesh of Bhadravati, Shivamogga district, turned every challenge into a stepping stone on her journey in sports.
Determined to fulfil her father’s dream of seeing her become an accomplished athlete, Sindhushree began training under his guidance. With limited opportunities but immense determination, she progressed through hard work and constant practice.
Recognising her talent, sports enthusiasts supported her move to Bengaluru for advanced training in pole vault. At the 65th National Senior Athletics Championships in Bhubaneswar, she cleared 4.25 metres to set a new record. Today, as she prepares to represent India at the Asian Games, she is a source of pride for Karnataka and the country.
Our Government has stood firmly behind her journey. The Department of Youth Empowerment and Sports, along with the Sports Authority of India, has provided three international-standard poles and ₹5 lakh in financial assistance.
I wish Sindhushree the very best as she represents India in pole vault at the Asian Games in Japan this month. May her journey continue to inspire young athletes across the country.
#karnatakasports
Dr. G Parameshwara
@DrParameshwara
-
Dr. G Parameshwara
@DrParameshwara
ಕೊರಟಗೆರೆ ತಾಲ್ಲೂಕಿನ ಹೊಳವನಹಳ್ಳಿ ಹೋಬಳಿಯ ಎಚ್.ವಿ. ಪಾಳ್ಯದ ಯಶಸ್ ಪಿ. ಆರಾಧ್ಯ ಅವರು ಬಾಲ್ಯದಿಂದಲೇ ಕ್ರೀಡೆಯತ್ತ ವಿಶೇಷ ಆಸಕ್ತಿ ಬೆಳೆಸಿಕೊಂಡವರು. ಪುಟ್ಟ ಹಳ್ಳಿಯಲ್ಲಿ ಮೂಡಿದ ಅವರ ಕ್ರೀಡಾ ಕನಸು ಇಂದು ರಾಜ್ಯ, ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟಕ್ಕೆ ತಲುಪಿದೆ.
ಗ್ರಾಮೀಣ ಭಾಗದ ಯುವಕರಿಗೂ ನಿರಂತರ ಪರಿಶ್ರಮ, ಸೂಕ್ತ ತರಬೇತಿ ಮತ್ತು ಸರಿಯಾದ ಮಾರ್ಗದರ್ಶನ ದೊರೆತರೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಲು ಸಾಧ್ಯ ಎಂಬುದಕ್ಕೆ ಯಶಸ್ ಪಿ. ಆರಾಧ್ಯ ಅವರ ಕ್ರೀಡಾ ಪಯಣವೇ ಸಾಕ್ಷಿ.
ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಭಾರತವನ್ನು ಪ್ರತಿನಿಧಿಸುವ ಮಟ್ಟಕ್ಕೆ ಬೆಳೆದಿರುವ ಯಶಸ್ ಅವರ ಸಾಧನೆ, ಇದೀಗ ಒಲಿಂಪಿಕ್ಸ್ನತ್ತ ಸಾಗುತ್ತಿರುವ ಅವರ ಕನಸಿಗೆ ಮತ್ತೊಂದು ಹೆಜ್ಜೆ. ಅವರ ಈ ಪಯಣ ಯುವ ಕ್ರೀಡಾಪಟುಗಳಿಗೆ ಸ್ಫೂರ್ತಿಯಾಗಲಿ.
ಯುವ ಪ್ರತಿಭೆಗಳು ಯಾವುದೇ ಕಾರಣಕ್ಕೂ ಆರ್ಥಿಕ ಸಂಕಷ್ಟದಿಂದಲೋ, ಸೂಕ್ತ ಮಾರ್ಗದರ್ಶನದ ಕೊರತೆಯಿಂದಲೋ ತೆರೆಮರೆಗೆ ಸರಿಯಬಾರದು. ಗ್ರಾಮೀಣ ಪ್ರದೇಶಗಳಲ್ಲಿ ಅಡಗಿರುವ ಪ್ರತಿಭೆಗಳನ್ನು ಗುರುತಿಸಿ, ಅವರಿಗೆ ಅಗತ್ಯ ತರಬೇತಿ, ಮೂಲಸೌಕರ್ಯ, ಮಾರ್ಗದರ್ಶನ ಹಾಗೂ ಆರ್ಥಿಕ ನೆರವು ಒದಗಿಸುವುದು ನಮ್ಮ ಜವಾಬ್ದಾರಿ.
ಯಶಸ್ ಪಿ. ಆರಾಧ್ಯ ಅವರಂತಹ ಪ್ರತಿಭೆಗಳಿಗೆ ಕ್ರೀಡಾ ಇಲಾಖೆ ಸಂಪೂರ್ಣ ಪ್ರೋತ್ಸಾಹ ಮತ್ತು ಸಹಕಾರ ನೀಡಲಿದೆ. ಅವರ ಏಷ್ಯನ್ ಗೇಮ್ಸ್ ಹಾಗೂ ಒಲಿಂಪಿಕ್ಸ್ ಕನಸು ನನಸಾಗಲಿ ಎಂಬುದು ನಮ್ಮ ಹಾರೈಕೆ.
ಯುವ ಪ್ರತಿಭೆಗಳು ಬೆಳೆಯಲಿ..
ಕರ್ನಾಟಕದ ಕೀರ್ತಿ ವಿಶ್ವದೆಲ್ಲೆಡೆ ಮೊಳಗಲಿ.. -
Dr. G Parameshwara
@DrParameshwara
Yashas P. Aradhya of H.V. Palya in Holavanahalli Hobli, Koratagere Taluk, developed a deep interest in sports from a young age. A sporting dream that began in a small village has today reached the State, national and international stage.
Yashas P. Aradhya’s sporting journey is proof that young people from rural areas too can achieve at the international level with continuous hard work, proper training and the right guidance.
Having risen to represent India at the Commonwealth Games, Yashas’ achievement is yet another step towards his Olympic dream. May his journey inspire of young athletes.
Young talent should never be left behind because of financial difficulties or lack of proper guidance. It is our responsibility to identify hidden talent in rural areas and provide them with the necessary training, infrastructure, guidance and financial support.
The Sports Department will extend full encouragement and support to talents like Yashas P. Aradhya. We wish him success in fulfilling his dream of representing India at the Asian Games and the Olympics.
May young talent rise..
May Karnataka’s glory resonate across the world.. -
Dr. G Parameshwara
@DrParameshwara
ಸಮಾಜದಲ್ಲಿ ಕೋಮು ದ್ವೇಷ ತಲೆದೋರಿದಾಗಲೆಲ್ಲ ನಿರ್ಭೀತಿಯಿಂದ ಧ್ವನಿ ಎತ್ತಿದವರು ಗೌರಿ ಲಂಕೇಶ್. ಸಮಾನತೆ, ಸೌಹಾರ್ದತೆ ಮತ್ತು ಸಾಮರಸ್ಯದಿಂದ ಕೂಡಿದ ಸಮಾಜ ನಿರ್ಮಾಣದ ಕನಸು ಕಂಡವರು.
ಸಮಾಜಕ್ಕಾಗಿ ಸದಾ ತುಡಿಯುತ್ತಿದ್ದ, ತಮ್ಮ ಬರಹ ಮತ್ತು ಹೋರಾಟಗಳ ಮೂಲಕ ಜನಪರ ಧ್ವನಿಯಾಗಿ ಬದುಕಿದ ಗೌರಿ ಲಂಕೇಶ್ ಅವರ ಪುಣ್ಯಸ್ಮರಣೆಯಂದು ಗೌರವ ನಮನಗಳನ್ನು ಸಲ್ಲಿಸುತ್ತೇನೆ. -
Dr. G Parameshwara
@DrParameshwara
ಮಾಜಿ ರಾಷ್ಟ್ರಪತಿ, ತತ್ವಜ್ಞಾನಿ ಹಾಗೂ ಶಿಕ್ಷಣ ತಜ್ಞರಾದ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರು ಶಿಕ್ಷಣ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಅವರ ಜನ್ಮದಿನವನ್ನು ಸ್ಮರಿಸುವ ಸಲುವಾಗಿ ಪ್ರತಿವರ್ಷ ಈ ದಿನದಂದು ಶಿಕ್ಷಕರ ದಿನಾಚರಣೆಯನ್ನಾಗಿ ಆಚರಿಸಲಾಗುತ್ತದೆ.
ಅಜ್ಞಾನದ ಕತ್ತಲೆಯನ್ನು ತೊಲಗಿಸಿ, ಜ್ಞಾನದ ಬೆಳಕನ್ನು ಪಸರಿಸುವ ಮೂಲಕ ಭವಿಷ್ಯದ ಪೀಳಿಗೆಯನ್ನು ರೂಪಿಸುವ ಪ್ರತಿಯೊಬ್ಬ ಶಿಕ್ಷಕರಿಗೂ ಶಿಕ್ಷಕರ ದಿನಾಚರಣೆಯ ಶುಭಾಶಯಗಳು.
ಶಿಕ್ಷಕರ ನಿಸ್ವಾರ್ಥ ಸೇವೆ, ಮಾರ್ಗದರ್ಶನ ಸದಾ ಸಮಾಜದ ಪ್ರಗತಿಗೆ ದಾರಿದೀಪವಾಗಲಿ.
#teachersday -
Dr. G Parameshwara
@DrParameshwara
ದೇಶದ ಜಿಡಿಪಿ ಮೇಲ್ಮುಖವಾಗಿ ಸಾಗುತ್ತಿದ್ದರೆ, ಭಾರತೀಯರ ಬದುಕು ಪಾತಳಕ್ಕೆ ಇಳಿದಿದೆ.
ತೈಲ ಬೆಲೆಗಳು, ಜಾಗತಿಕ ಸಂಘರ್ಷಗಳು, ಆಮದಿನ ಮೇಲಿನ ಅವಲಂಬನೆ ಮತ್ತು ಜಾಗತಿಕ ವ್ಯಾಪಾರ ಏರಿಳಿತಗಳನ್ನು ಎದುರಿಸುವಲ್ಲಿ ಭಾರತವು ದುರ್ಬಲ ಸ್ಥಿತಿಯಲ್ಲಿರುವಾಗ ತನ್ನ ಆರ್ಥಿಕ ಶಕ್ತಿಯ ಬಗ್ಗೆ ಹೆಮ್ಮೆಪಡುವುದು ಸಮಂಜಸವಲ್ಲ.
ವಿಶ್ವದಾದ್ಯಂತ ನಡೆಯುತ್ತಿರುವ ಯುದ್ಧಗಳು ಮತ್ತು ಸಂಘರ್ಷಗಳು ಪ್ರತಿ ಭಾರತೀಯರ ಕುಟುಂಬದ ಮೇಲೂ ಪರಿಣಾಮ ಬೀರುತ್ತವೆ. ಕಚ್ಚಾ ತೈಲದ ಬೆಲೆ, ಸಾರಿಗೆ ವೆಚ್ಚ, ಅಗತ್ಯ ವಸ್ತುಗಳ ದರ ಏರಿಕೆ, ರೂಪಾಯಿ ಮೌಲ್ಯ ಮತ್ತು ಆಮದು ಸರಕುಗಳ ಬೆಲೆಗಳ ರೂಪದಲ್ಲಿ ಈ ಪರಿಣಾಮಗಳು ಮನೆಮನೆಗೂ ತಲುಪುತ್ತವೆ.
ಇಂಧನ ಮತ್ತು ಪ್ರಮುಖ ವಸ್ತುಗಳ ಮೇಲಿನ ನಮ್ಮ ಆಮದು ಅವಲಂಬನೆಯು ಇಂತಹ ಜಾಗತಿಕ ಆಘಾತಗಳನ್ನು ದೇಶದ ಆರ್ಥಿಕ ದೌರ್ಬಲ್ಯವನ್ನಾಗಿಸುತ್ತದೆ.
#karnataka #development #indianeconomy -
Dr. G Parameshwara
@DrParameshwara
ದೇಶದ ಜಿಡಿಪಿ ಮೇಲ್ಮುಖವಾಗಿ ಸಾಗುತ್ತಿದ್ದರೆ, ಭಾರತೀಯರ ಬದುಕು ಪಾತಳಕ್ಕೆ ಇಳಿದಿದೆ.
ಜಿಡಿಪಿ ಅಂಕಿ-ಅಂಶಗಳಾಚೆಗೆ ಹೋಗಿ ಭಾರತದ ಬಾಹ್ಯ ಆರ್ಥಿಕ ಸ್ಥಿತಿಯನ್ನು ಪರಿಶೀಲಿಸಬೇಕಾಗಿದೆ. ಸರಕು ವ್ಯಾಪಾರ ಕೊರತೆ ವೇಗವಾಗಿ ಹೆಚ್ಚುತ್ತಿದೆ.
2026-27ರ ಮೊದಲ ತ್ರೈಮಾಸಿಕದಲ್ಲಿ ಭಾರತದ ಚಾಲ್ತಿ ಖಾತೆ ಕೊರತೆ 4.2 ಬಿಲಿಯನ್ ಡಾಲರ್ಗೆ ಏರಿಕೆಯಾಗಿದೆ. ಇದೇ ಅವಧಿಯಲ್ಲಿ ಸರಕು ವ್ಯಾಪಾರ ಕೊರತೆ 86.1 ಬಿಲಿಯನ್ ಡಾಲರ್ಗೆ ತಲುಪಿದೆ. 2025-26ರ ಇಡೀ ಹಣಕಾಸು ವರ್ಷದಲ್ಲಿ ಈ ಕೊರತೆ 333.19 ಬಿಲಿಯನ್ ಡಾಲರ್ ಆಗಿತ್ತು.
ಇದಕ್ಕಿಂತಲೂ ಮುಖ್ಯವಾಗಿ, ಮೌಲ್ಯಮಾಪನ ಪರಿಣಾಮಗಳನ್ನು ಹೊರತುಪಡಿಸಿದ ಬಾಕಿ ಪಾವತಿ ಆಧಾರದ ಮೇಲೆ, ಭಾರತದ ವಿದೇಶಿ ವಿನಿಮಯ ಮೀಸಲುಗಳು 2026ರ ಏಪ್ರಿಲ್–ಜೂನ್ ಅವಧಿಯಲ್ಲಿ 8.1 ಬಿಲಿಯನ್ ಡಾಲರ್ ಕುಸಿದಿವೆ. ಕಳೆದ ವರ್ಷ ಇದೇ ಅವಧಿಯಲ್ಲಿ 4.5 ಬಿಲಿಯನ್ ಡಾಲರ್ ಹೆಚ್ಚಳವಾಗಿತ್ತು. ಈ ಬದಲಾವಣೆಯು ಭಾರತದ ಬಾಹ್ಯ ಆರ್ಥಿಕ ದೌರ್ಬಲ್ಯದ ಬಗ್ಗೆ ಗಂಭೀರ ಪರಿಶೀಲನೆ ನಡೆಸುವ ಅಗತ್ಯವಿದೆ ಎಂಬುದನ್ನು ಸೂಚಿಸುತ್ತದೆ.
#karnataka #development #indianeconomy -
Dr. G Parameshwara
@DrParameshwara
ದೇಶದ ಜಿಡಿಪಿ ಮೇಲ್ಮುಖವಾಗಿ ಸಾಗುತ್ತಿದ್ದರೆ, ಭಾರತೀಯರ ಬದುಕು ಪಾತಳಕ್ಕೆ ಇಳಿದಿದೆ.
ಭಾರತದ ಜಿಡಿಪಿ ಬೆಳವಣಿಗೆ ದರ ಅಂಕಿಅಂಶಕ್ಕೆ ಸೀಮಿತವಾಗಿದ್ದು, ಅದರ ಫಲವು ಜನರ ಬದುಕಿನಲ್ಲಿ ಕಾಣದಾಗಿದೆ.
ಉದ್ಯೋಗವಿಲ್ಲದೆ ಯುವಜನರು ಕಂಗಾಲಾಗಿದ್ದಾರೆ. ಕುಟುಂಬಗಳ ಕೊಳ್ಳುವ ಸಾಮರ್ಥ್ಯ ನಿರಂತವಾಗಿ ಕುಂಠಿತವಾಗುತ್ತಿದೆ. ಅಲ್ಪಸಂಬಳ ಅಥವಾ ಉದ್ಯೋಗ ಭದ್ರತೆಯಿಲ್ಲದೆ ಕಾರ್ಮಿಕರು ದಿನದೂಡುವಂತಿದೆ.
ಹೀಗಿರುವಾಗ ಕೇಂದ್ರ ಸರ್ಕಾರವು ಹೇಳುತ್ತಿರುವ ಜಿಡಿಪಿ ಬೆಳವಣಿಗೆಯಿಂದ ಯಾರಿಗೆ, ಯಾವ ಲಾಭವಾಗಿದೆ?
#karnataka #development #indianeconomy -
Dr. G Parameshwara
@DrParameshwara
ದೇಶದ ಜಿಡಿಪಿ ಮೇಲ್ಮುಖವಾಗಿ ಸಾಗುತ್ತಿದ್ದರೆ, ಭಾರತೀಯರ ಬದುಕು ಪಾತಳಕ್ಕೆ ಇಳಿದಿದೆ.
ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕತೆಗಳಲ್ಲಿ ಒಂದೆಂದು ಹೇಳಿಕೊಳ್ಳುವ ಭಾರತದ ತಲಾ ಆದಾಯ ಜಗತ್ತಿನ ಬಡರಾಷ್ಟ್ರಗಳಿಗೆ ಸಮಾನವಾಗಿದೆ.
ಐಎಂಎಫ್ ಅಂದಾಜಿನ ಪ್ರಕಾರ, 2026ರಲ್ಲಿ ಭಾರತದ ತಲಾದಾಯ ಸುಮಾರು 2,813 ಅಮೆರಿಕನ್ ಡಾಲರ್ ಮಾತ್ರವಾಗಿದ್ದು, ತಲಾ ಆದಾಯದ ದೃಷ್ಟಿಯಿಂದ ಭಾರತವು ಜಾಗತಿಕವಾಗಿ ಸುಮಾರು 150ನೇ ಸ್ಥಾನದಲ್ಲಿದೆ.
ಇನ್ನೂ ಆತಂಕಕಾರಿ ಸಂಗತಿಯೆಂದರೆ, ಭಾರತವು ಬಾಂಗ್ಲಾದೇಶಕ್ಕಿಂತ ಹಿಂದುಳಿದಿದೆ. ಬಾಂಗ್ಲಾದೇಶದ ತಲಾದಾಯ ಸುಮಾರು 2,911 ಅಮೆರಿಕನ್ ಡಾಲರ್ ಎಂದು ಅಂದಾಜಿಸಲಾಗಿದೆ.
ಜಿಡಿಪಿ ಬೆಳವಣಿಗೆಯನ್ನು ಸಂಭ್ರಮಿಸುವಂತೆ ತನ್ನ ನಾಗರಿಕರಿಗೆ ಹೇಳುವ ಕೇಂದ್ರ ಸರ್ಕಾರ ಜನರೆದುರು ಈ ವಾಸ್ತವವನ್ನು ಹೇಳಲಿದೆಯೇ?
#karnataka #development #indianeconomy -
Dr. G Parameshwara
@DrParameshwara
ದೇಶದ ಜಿಡಿಪಿ ಮೇಲ್ಮುಖವಾಗಿ ಸಾಗುತ್ತಿದ್ದರೆ, ಭಾರತೀಯರ ಬದುಕು ಪಾತಳಕ್ಕೆ ಇಳಿದಿದೆ.
ಭಾರತೀಯರ ಬದುಕಿಗೆ ಪ್ರಧಾನಿ ನರೇಂದ್ರ ಮೋದಿ ಸರ್ಕಾರವು ಹೇಳುತ್ತಿರುವ ಜಿಡಿಪಿ ಬೆಳವಣಿಗೆ ತಲುಪಿಲ್ಲ ಎನ್ನುವುದು ಕಠೋರ ಸತ್ಯ. ಜಿಡಿಪಿ ಲೆಕ್ಕಾಚಾರದ ವಿಧಾನ, ಅಂಕಿಅಂಶಗಳ ಮೂಲಗಳು ಮತ್ತು ಅಂದಾಜು ಪ್ರಕ್ರಿಯೆಯಲ್ಲಿ ವಂಚಿಸುವ ಮೂಲಕ ಕೇಂದ್ರ ಸರ್ಕಾರವು ತಿರುಚಿದ ಜಿಡಿಪಿಯನ್ನು ಜನರ ಮುಂದಿಟ್ಟು ಸಂಭ್ರಮಿಸುವಂತೆ ಹೇಳುತ್ತಿದೆ.
ಕೇಂದ್ರ ಸರ್ಕಾರ ಇತ್ತೀಚೆಗೆ ಜಿಡಿಪಿಯ ಮೂಲ ವರ್ಷವನ್ನು 2011-12ರಿಂದ 2022-23ಕ್ಕೆ ಬದಲಾಯಿಸಿದೆ. ಕೋವಿಡ್-19 ಮಹಾಮಾರಿಯಿಂದ ಉಂಟಾದ ಆರ್ಥಿಕ ಕುಸಿತದ ವರ್ಷವನ್ನು ಮೂಲ ವರ್ಷವೆಂದು ಪರಿಗಣಿಸಿ ಜಗತ್ತಿನ ಅರ್ಥಶಾಸ್ತ್ರಜ್ಞರ ಮುಂದೆ ನಗೆಪಾಟಲಿಗೀಡಾಗಿದೆ. ಕೇವಲ ಹೆಚ್ಚಿನ ಬೆಳವಣಿಗೆ ದರಗಳ ಬಗ್ಗೆ ಮಾತ್ರ ಪ್ರಚಾರ ಮಾಡಲಾಗುತ್ತಿದೆ. ಒಂದು ಆರ್ಥಿಕತೆ ಒಂದು ವರ್ಷದಲ್ಲಿ ತೀವ್ರವಾಗಿ ಕುಸಿದರೆ, ಮುಂದಿನ ವರ್ಷ ಆ ಕುಸಿದ ಮಟ್ಟದಿಂದ ಆಗುವ ಬೆಳವಣಿಗೆ ಸಹಜವಾಗಿಯೇ ದೊಡ್ಡ ಶೇಕಡಾವಾರು ಬೆಳವಣಿಗೆಯಂತೆ ಕಾಣಿಸುತ್ತದೆ.
ಈ ಮೇಲಿನ ವಾಸ್ತವವನ್ನು ಕೇಂದ್ರ ಸರ್ಕಾರ ಜನರಿಂದ ಮುಚ್ಚಿಟ್ಟಿದೆ.
#karnataka #development #indianeconomy -
Dr. G Parameshwara
@DrParameshwara
ಯುವಶಕ್ತಿಯೇ ನವ ಕರ್ನಾಟಕದ ಶಕ್ತಿ!
ಕರ್ನಾಟಕದ ಯುವಜನರನ್ನು ಒಗ್ಗೂಡಿಸಿ, ಸಾಮಾಜಿಕ ಸೌಹಾರ್ದತೆ, ಜವಾಬ್ದಾರಿಯುತ ಪೌರತ್ವ ಮತ್ತು ರಾಷ್ಟ್ರ ನಿರ್ಮಾಣದಲ್ಲಿ ಸಕ್ರಿಯ ಭಾಗವಹಿಸುವಿಕೆಗೆ ಪ್ರೇರೇಪಿಸುವ ಮಹತ್ವಾಕಾಂಕ್ಷಿ ‘ಭಾರತ್ ಜೋಡೋ’ ಯೋಜನೆಯ ಲಾಂಛನವನ್ನು ಇಂದು ಅನಾವರಣಗೊಳಿಸಿದೆ.
ಇದು ಕೇವಲ ಒಂದು ಲಾಂಛನವಲ್ಲ, ಒಗ್ಗಟ್ಟಿನ ಸಂಕಲ್ಪ, ಯುವಶಕ್ತಿಯ ಉತ್ಸಾಹ ಮತ್ತು ಭವಿಷ್ಯದ ಭಾರತದ ಕನಸಿನ ಪ್ರತೀಕವಾಗಿದೆ.
ಕರ್ನಾಟಕದ ಪ್ರತಿಯೊಬ್ಬ ಯುವಕ-ಯುವತಿಯೂ ಈ ಚಳವಳಿಯ ಭಾಗವಾಗಿ, ಭಾವೈಕ್ಯ, ಪ್ರಗತಿಶೀಲ ಭಾರತದ ನಿರ್ಮಾಣದಲ್ಲಿ ತಮ್ಮದೇ ಆದ ಕೊಡುಗೆ ನೀಡಲೆಂದು ಆಶಿಸುತ್ತೇನೆ.
ಯುವ ಕರ್ನಾಟಕದಿಂದ ಬಲಿಷ್ಠ ಭಾರತಕ್ಕಾಗಿ ಭಾರತ್ ಜೋಡೋ!
The youth are the strength of a New Karnataka!
Today, I unveiled the logo of ‘Bharat Jodo’, an ambitious initiative of the Government of Karnataka to bring our youth together and inspire them towards social harmony, responsible citizenship and active participation in nation-building.
This is more than a logo, it is a symbol of unity, the energy of our youth and our collective aspiration for a stronger India.
May every young Kannadiga become an active partner in building a united, inclusive and progressive India.
From a Young Karnataka to a Stronger India through Bharat Jodo! -
Dr. G Parameshwara
@DrParameshwara
ಇಂದು ಚಿಕ್ಕಜಾಲದ ವಿದ್ಯಾನಗರದಲ್ಲಿರುವ ಶ್ರೀ ಜಯಪ್ರಕಾಶ್ ನಾರಾಯಣ್ ರಾಷ್ಟ್ರೀಯ ಯುವ ತರಬೇತಿ ಕೇಂದ್ರಕ್ಕೆ (ವಿದ್ಯಾನಗರ ಕ್ರೀಡಾ ಶಾಲೆ) ಭೇಟಿ ನೀಡಿ, ಕ್ರೀಡಾಂಗಣ ಹಾಗೂ ವಿದ್ಯಾರ್ಥಿ ನಿಲಯದ ಮೂಲಸೌಕರ್ಯವನ್ನು ಪರಿಶೀಲನೆ ನಡೆಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದೆ.
ಕ್ರೀಡೆಗೆ ಪ್ರೋತ್ಸಾಹ ನೀಡುವ ದೃಷ್ಟಿಯಿಂದ ರಾಜ್ಯ ಸರ್ಕಾರ ಸುಮಾರು 34 ಸ್ಟೋರ್ಟ್ಸ್ ಹಾಸ್ಟೆಲ್ಗಳನ್ನು ನಡೆಸುತ್ತಿದೆ. ಒಟ್ಟು ಪ್ರಸ್ತುತ ಸಂದರ್ಭದಲ್ಲಿ 2,300 ಕ್ರೀಡಾಪಟುಗಳು ವಿವಿಧ ಕ್ರೀಡೆಗಳಲ್ಲಿ ತರಬೇತಿಯನ್ನು ಪಡೆದುಕೊಳ್ಳುತ್ತಿದ್ದಾರೆ. ಇಲ್ಲಿ ವಿದ್ಯಾನಗರದಲ್ಲಿ ಅಥ್ಲೆಟಿಕ್ಸ್, ಫುಟ್ಬಾಲ್, ವಾಲಿಬಾಲ್, ಜಿಮ್ನ್ಯಾಸ್ಟಿಕ್ಸ್ ಮೊದಲಾದ ಕ್ರೀಡೆಗಳಿಗೆ ತರಬೇತಿ ಕೊಡುತ್ತಿದ್ದಾರೆ. ಅದೇ ರೀತಿ ಬೇರೆ ಕೇಂದ್ರಗಳಲ್ಲಿ ಬೇರೆ ಬೇರೆ ಕ್ರೀಡೆಗಳಿಗೆ ತರಬೇತಿ ಕೊಡುತ್ತಿದ್ದಾರೆ.
ಒಟ್ಟಾರೆ ರಾಜ್ಯದ ದೃಷ್ಟಿಯಿಂದ, ರಾಷ್ಟ್ರದ ದೃಷ್ಟಿಯಿಂದ ಕ್ರೀಡಾಪಟುಗಳನ್ನು ತಯಾರು ಮಾಡುವುದಕ್ಕೆ, ಪ್ರೋತ್ಸಾಹ ನೀಡುವುದಕ್ಕೆ ಸರ್ಕಾರ ಕ್ರೀಡೆ ಮತ್ತು ಯುವ ಸಬಲೀಕರಣ ಎಂಬ ಇಲಾಖೆಯನ್ನೇ ಮಾಡಿದೆ. ಆ ಇಲಾಖೆಯ ವತಿಯಿಂದ ಇವತ್ತು ಹೆಚ್ಚೆಚ್ಚು ಕ್ರೀಡಾಪಟುಗಳನ್ನು ತಯಾರು ಮಾಡುವುದಕ್ಕೆ ಇನ್ನೂ ಹೆಚ್ಚಿನ ಪ್ರೋತ್ಸಾಹ ಕೊಡುತ್ತೇವೆ. ರಾಷ್ಟ್ರಮಟ್ಟದಲ್ಲಿ ಖೇಲೋ ಇಂಡಿಯಾ ಎಂಬ ಯೋಜನೆಯನ್ನು ಮಾಡಿ ಇಡೀ ದೇಶದ ಎಲ್ಲಾ ರಾಜ್ಯಗಳಲ್ಲಿ ಕ್ರೀಡಾಪಟುಗಳನ್ನು ತಯಾರು ಮಾಡುವುದಕ್ಕೆ ಹಣ, ಮೂಲಭೂತ ಸೌಕರ್ಯಗಳನ್ನು ಒದಗಿಸಿಕೊಡುತ್ತಿದ್ದಾರೆ.
ಇಡೀ ದೇಶದ ದೃಷ್ಟಿಯಿಂದ ನಮ್ಮ ಮಕ್ಕಳು ಕೂಡ ರಾಷ್ಟ್ರೀಯ - ಅಂತಾರಾಷ್ಟ್ರೀಯ ಮಟ್ಟದಲ್ಲಿ ವಿವಿಧ ಕ್ರೀಡೆಗಳಲ್ಲಿ ಭಾಗವಹಿಸಿ ಪದಕಗಳನ್ನು ತೆಗೆದುಕೊಂಡು ಬರಬೇಕೆಂಬುದು ನಮ್ಮ ಉದ್ದೇಶವಾಗಿದೆ. ಈಗಾಗಲೇ ಕಾಮನ್ವೆಲ್ತ್ ಕ್ರೀಡಾಕೂಟ ನಡೆದಿದೆ. ಈಗ ಏಷ್ಯನ್ ಗೇಮ್ಸ್ 2024-25 ಜಪಾನ್ನಲ್ಲಿ ನಡೆಯುತ್ತಿದೆ. ಅಲ್ಲಿಗೆಲ್ಲ ನಮ್ಮ ಮಕ್ಕಳು ಹೋಗಿ ಭಾಗವಹಿಸಬೇಕು ಎಂಬುದು ನಮ್ಮ ಆಶಯ.
ಕ್ರೀಡೆ ಜೀವನದಲ್ಲಿ ಶಿಸ್ತನ್ನು ಕಲಿಸುತ್ತದೆ. ಜೀವನದಲ್ಲಿ ಸೋಲು ಗೆಲುವನ್ನು ಎದುರಿಸುವುದನ್ನು ಕಲಿಸಿಕೊಡುತ್ತದೆ. ಗೆಲುವು ಮುಖ್ಯವಲ್ಲ, ಭಾಗವಹಿಸುವಿಕೆ ಮುಖ್ಯ ಎಂಬುದು ಒಲಂಪಿಕ್ಸ್ ಮೋಟೋ. ಹೀಗಿರುವಾಗ ಎಲ್ಲರೂ ಗೆಲ್ಲಲು ಆಗುವುದಿಲ್ಲ. ಕೆಲವು ಸಂದರ್ಭದಲ್ಲಿ ಸೋಲುತ್ತೇವೆ. ಕೆಲವು ಸಂದರ್ಭದಲ್ಲಿ ಗೆಲ್ಲುತ್ತೇವೆ. ಸೋತಂತಹ ಸಂದರ್ಭದಲ್ಲಿ ನಿರಾಶೆ ಆಗುವುದಿಲ್ಲ. ಆಗಬಾರದು ಕೂಡ. ಸೋಲನ್ನು ಜೀವನದಲ್ಲಿ ನಾವು ಯಾವ ರೀತಿ ಎದುರಿಸಬೇಕು ಎಂಬುದನ್ನು ಕಲಿಯಬೇಕು.
ಅನೇಕ ಸಂದರ್ಭದಲ್ಲಿ ಜೀವನದಲ್ಲಿ ನಾವು ಸೋಲುತ್ತೇವೆ. ಆಗ ನಾವು ಅದನ್ನು ಕ್ರೀಡಾ ಮನೋಭಾವದಿಂದ ತೆಗೆದುಕೊಳ್ಳಬೇಕು. ಯಾವುದೇ ಸಂದರ್ಭದಲ್ಲೂ ಕೂಡ ಕ್ರೀಡೆ ಎನ್ನುವುದು ಮನಸನ್ನೇ ಬದಲಾವಣೆ ಮಾಡುತ್ತದೆ. ಅದಕ್ಕೆ ನಮ್ಮ ಸರ್ಕಾರ ಕ್ರೀಡೆಗೆ ಪ್ರೋತ್ಸಾಹ ನೀಡುತ್ತಿದೆ.
ನಾನು ಕ್ರೀಡಾ ಸಚಿವನಾಗಿ ಇಲ್ಲಿಗೆ ಬಂದಿದ್ದೇನೆ. ಈ ಸೌಲಭ್ಯಗಳನ್ನೆಲ್ಲ ನೋಡಿದ್ದೇನೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ರೀತಿಯಲ್ಲಿ ಗುಣಮಟ್ಟವನ್ನು ಹೇಗೆ ಉತ್ತಮಪಡಿಸಬಹುದು ಎಂದು ನೋಡುವ ಉದ್ದೇಶದಿಂದ ಬಂದಿದ್ದೇನೆ. ಬಹಳ ಒಳ್ಳೆಯ ಸೌಲಭ್ಯ ಒದಗಿಸಿದ್ದಾರೆ. ಗುಣಮಟ್ಟ ಇನ್ನೂ ಸ್ವಲ್ಪ ಹೆಚ್ಚಾದರೆ ಮಕ್ಕಳಿಗೆ ತರಬೇತಿ ಕೊಡುವುದಕ್ಕೆ, ಅವರು ಕಲಿಯುವುದಕ್ಕೆ ಚೆನ್ನಾಗಿ ಆಗುತ್ತದೆ. ಸ್ಪರ್ಧಾತ್ಮಕ ಮನೋಭಾವ ಬರುತ್ತದೆ.
ನಮ್ಮ ಮಕ್ಕಳನ್ನು ಹೆಚ್ಚೆಚ್ಚು ಸ್ಪರ್ಧೆಗಳಿಗೆ ಕಳುಹಿಸಬೇಕು. ಅದಕ್ಕಾಗಿಯೇ ನಮ್ಮ ಇಲಾಖೆಯಲ್ಲಿ ಅನೇಕ ಅಧಿಕಾರಿಗಳಿದ್ದಾರೆ. ಅವರೆಲ್ಲ ವಿವಿಧ ಕಾರ್ಯಕ್ರಮಗಳನ್ನು ಮಾಡಿ, ಅತ್ಯುತ್ತಮ ಕೋಚ್ಗಳನ್ನು ನೇಮಕ ಮಾಡಿ, ಅವಕಾಶ ಮಾಡಿಕೊಡಬೇಕು. ಆ ದೃಷ್ಟಿಯಲ್ಲಿ ನಾವು ಕೆಲಸ ಮಾಡುತ್ತೇವೆ. ಉದಾಹರಣೆಗೆ ನಮ್ಮಲ್ಲಿ 23 ಕಡೆ ಸಿಂಥೆಟಿಕ್ ಟ್ರ್ಯಾಕ್ ಹಾಕಿದ್ದಾರೆ. ನಾವೆಲ್ಲ ಅಥ್ಲಿಟಿಕ್ಸ್ ಆಗಿರುವಾಗ ಕಂಠೀರವ ಕ್ರೀಡಾಂಗಣದಲ್ಲಿ ಸಿಂಥೆಟಿಕ್ಸ್ ಇರಲಿಲ್ಲ. ಆಗ ಸಿಂಡರ್ಟ್ರಾಕ್ ಇತ್ತು. ದೆಹಲಿಯಲ್ಲಿ ಬಿಟ್ಟರೆ ಬೇರೆ ಎಲ್ಲೂ ಇರಲಿಲ್ಲ. ಇವತ್ತು ಜಿಲ್ಲಾ ಮಟ್ಟದಲ್ಲೂ ಸಿಂಥೆಟಿಕ್ಸ್ ಇದೆ. ಹೆಚ್ಚಿನ ಅವಕಾಶಗಳಿವೆ. ಈ ಪ್ರತಿಭೆಗಳು ವಿದ್ಯಾಭ್ಯಾಸವನ್ನು ಲೆಕ್ಕಿಸದೆ ಕ್ರೀಡೆಯಲ್ಲಿ ತೊಡಗಿಕೊಂಡಿದ್ದಾರೆ. ತಮ್ಮ ಪ್ರತಿಭೆ ಮತ್ತು ಪರಿಶ್ರಮದ ಮೂಲಕ ಕ್ರೀಡೆಯನ್ನು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ಯಲು ಕ್ರೀಡಾಳುಗಳು ತಮ್ಮ ಬದುಕನ್ನು ಮುಡಿಪಾಗಿಟ್ಟಿದ್ದಾರೆ. ಅವರಿಗೆ ಒಳಿತಾಗಲಿ.
ರಾಜ್ಯದಲ್ಲಿ ಕ್ರೀಡೆ ಮತ್ತು ಕ್ರೀಡಾಳುಗಳಿಗೆ ಅಗತ್ಯ ಪ್ರೋತ್ಸಾಹ ನೀಡುವ ಸಲುವಾಗಿ ಕಂಠೀರವ ಕ್ರೀಡಾಂಗಣದಲ್ಲಿ ಅಂತಾರಾಷ್ಟ್ರೀಯ ಗುಣಮಟ್ಟದ ಮೂಲಸೌಕರ್ಯಗಳನ್ನು ಸೃಷ್ಟಿಸಲು ನಮ್ಮ ಸರ್ಕಾರ ಚಿಂತನೆ ನಡೆಸಿದೆ. 2030ರಲ್ಲಿ ಕಾಮನ್ ವೆಲ್ತ್ ಗೇಮ್ಸ್ ಅಹಮದಾಬಾದ್ ನಲ್ಲಿ ಜರಗುವುದರಿಂದ ನಮ್ಮ ರಾಜ್ಯದಲ್ಲೂ ಕ್ರೀಡಾ ಮೂಲಸೌಕರ್ಯವನ್ನು ಅಂತಾರಾಷ್ಟ್ರೀಯ ಮಟ್ಟಕ್ಕೇರಿಸಿದರೆ ನಾವು ಕೂಡ ಕಾಮನ್ ವೆಲ್ತ್ ಗೇಮ್ಸ್ನ ವಿವಿಧ ಕ್ರೀಡೆಗಳ ಆತಿಥ್ಯ ವಹಿಸಲು ಸಾಧ್ಯವಾಗಬಹುದು ಎಂದು ಯೋಚಿಸಿದ್ದೇವೆ.
ಕ್ರೀಡಾ ಪ್ರತಿಭೆಗಳ ದೈಹಿಕ ಹಾಗೂ ಮಾನಸಿಕ ಆರೋಗ್ಯ ಮತ್ತು ಪೋಷಣೆಯ ಬಗ್ಗೆ ನಿಗಾ ವಹಿಸುವ ಸಲುವಾಗಿ ಪೌಷ್ಟಿಕ ಆಹಾರವನ್ನು ಒದಗಿಸಲು ಮತ್ತು ಪೌಷ್ಟಿಕ ಆಹಾರದ ಪೂರೈಕೆಯನ್ನು ನೋಡಿಕೊಳ್ಳಲು ಪೌಷ್ಟಿಕ ತಜ್ಞರನ್ನು ನೇಮಿಸಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಅದರಂತೆ ಮುಂದಿನ ದಿನಗಳಲ್ಲಿ ತರಬೇತುದಾರರು ಇತರೆ ಸಿಬ್ಬಂದಿ ಸೇರಿದಂತೆ ಕ್ರೀಡಾಳುಗಳ ಬೆಳವಣಿಗೆಗೆ ಪೂರಕ ಕ್ರಮಗಳನ್ನು ಕೈಗೊಳ್ಳಲಾಗುವುದು.
ನಾನು ಕ್ರೀಡಾಪಟುವಾಗಿದ್ದವನು. 100 ಮೀಟರ್ ಓಟವನ್ನು 10.9 ಸೆಕೆಂಡುಗಳಲ್ಲಿ ಓಡಿದ ದಾಖಲೆ ಇದೆ. ಫುಟ್ಬಾಲ್ ಆಟಗಾರನಾಗಿದ್ದೆ. ಆಸ್ಟ್ರೇಲಿಯಾದಲ್ಲಿ ವ್ಯಾಸಂಗ ಮಾಡುತ್ತಿದ್ದಾಗ ಅಡಿಲೇಡ್ ವಿಶ್ವವಿದ್ಯಾಲಯದ ಪದವೀಧರರ ತಂಡವನ್ನು ಪ್ರತಿನಿಧಿಸಿದ್ದೇನೆ. ಕ್ರೀಡಾಸಕ್ತಿ ನನ್ನ ರಕ್ತದಲ್ಲೇ ಇದೆ. ಹೀಗಾಗಿ ಕ್ರೀಡೆಯ ಬಗ್ಗೆ ಅಪಾರ ಒಲವನ್ನು ಹೊಂದಿದ್ದೇನೆ. -
Dr. G Parameshwara
@DrParameshwara
India recorded a $333.19 billion merchandise trade deficit in FY 2025–26.
In Q1 FY 2026–27, the merchandise trade deficit stood at $86.1 billion, while foreign exchange reserves declined by $8.1 billion on a balance-of-payments basis.
A strong economy must withstand global shocks.
Growth must also mean economic security.
#tradedeficit #economicsecurity -
Dr. G Parameshwara
@DrParameshwara
India’s youth deserve more than impressive GDP headlines - they deserve meaningful opportunities.
When millions of educated young Indians are entering the workforce, economic growth must translate into good jobs, secure incomes and a future worthy of their aspirations.
Youth need jobs, not GDP jargon.
#jobsforyouth #youthemployment #inclusivegrowth -
Dr. G Parameshwara
@DrParameshwara
India’s growth story must be about people, not just percentages.
A stronger economy means more jobs, higher incomes, competitive manufacturing, stronger exports and greater economic security for every household. GDP growth has meaning only when its benefits reach ordinary Indians.
Growth must reach every Indian.
#inclusivegrowth #indianeconomy -
Dr. G Parameshwara
@DrParameshwara
India is being projected as a $4+ trillion economy.
But the IMF estimates India's GDP per capita at just $2,813 in 2026, around 150th globally—and below Bangladesh's projected $2,911.
The size of an economy is not the prosperity of its people.
#percapitaincome #indianeconomy -
Dr. G Parameshwara
@DrParameshwara
India changed its GDP base year from 2011–12 to 2022–23, along with changes in methodology and data sources.
COVID created an exceptionally low economic base.
So Indians deserve more than a headline growth rate.
Show the complete growth story. Show the numbers transparently.
#gdp #economicgrowth -
Dr. G Parameshwara
@DrParameshwara
The Government wants Indians to celebrate 7.8% GDP growth.
But the real question is: Growth for whom?
A bigger GDP does not automatically mean better jobs, higher incomes or greater prosperity.
GDP is an economic number.
Prosperity is about people's lives.
#gdp #indianeconomy -
Dr. G Parameshwara
@DrParameshwara
ನೈಸ್ ಯೋಜನೆಗೆ ಜಮೀನು ನೀಡಿದ 1,453 ರೈತರಿಗೆ ನಿವೇಶನ ನೀಡಲು ನಮ್ಮ ಸರ್ಕಾರ ತೀರ್ಮಾನಿಸಿದೆ.
ಈಗಾಗಲೇ 574 ನಿವೇಶನಗಳು ಲಭ್ಯವಿದ್ದು, ಉಳಿದ 879 ನಿವೇಶನಗಳನ್ನು ಅಭಿವೃದ್ಧಿಪಡಿಸಿ, ಸಂತ್ರಸ್ತರ ಬೇಡಿಕೆಯಂತೆ 2 ತಿಂಗಳೊಳಗೆ ನಿವೇಶನ ಹಂಚಿಕೆ ಮಾಡಲು ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ.
ಕೊಟ್ಟ ಮಾತಿನಂತೆ ರೈತರ ಹಿತಾಸಕ್ತಿ ಕಾಪಾಡಲು ನಮ್ಮ ಸರ್ಕಾರ ಸದಾ ಬದ್ಧವಾಗಿದೆ.This media couldn't be displayed. See it on the original post. -
Dr. G Parameshwara
@DrParameshwara
ಇಂದು ಚಿಕ್ಕಜಾಲದ ವಿದ್ಯಾನಗರದಲ್ಲಿರುವ ಶ್ರೀ ಜಯಪ್ರಕಾಶ್ ನಾರಾಯಣ್ ರಾಷ್ಟ್ರೀಯ ಯುವ ತರಬೇತಿ ಕೇಂದ್ರಕ್ಕೆ (ವಿದ್ಯಾನಗರ ಕ್ರೀಡಾ ಶಾಲೆ) ಭೇಟಿ ನೀಡಿ, ಕ್ರೀಡಾಂಗಣ ಹಾಗೂ ವಿದ್ಯಾರ್ಥಿ ನಿಲಯದ ಮೂಲಸೌಕರ್ಯವನ್ನು ಪರಿಶೀಲನೆ ನಡೆಸಿ, ಅಧಿಕಾರಿಗಳಿಂದ ಮಾಹಿತಿ ಪಡೆದೆ.
ಈ ಸಂದರ್ಭದಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಾದ ನವೀನ್ ರಾಜ್ ಸಿಂಗ್, ಕ್ರೀಡಾ ಆಯುಕ್ತರಾದ ಎಂ.ಎನ್.ಅನುಚೇತ್, ಜಯಪ್ರಕಾಶ್ ನಾರಾಯಣ್ ರಾಷ್ಟ್ರೀಯ ಯುವ ತರಬೇತಿ ಕೇಂದ್ರದ ಸಹಾಯಕ ನಿರ್ದೇಶಕರಾದ ಎಂ.ಟಿ.ಮಂಜುನಾಥ್ ಸ್ವಾಮಿ ಸೇರಿದಂತೆ ಇತರರು ಜೊತೆಗಿದ್ದರು.
Visited the Sri Jayaprakash Narayan National Youth Training Centre (Vidyanagar Sports School) in Chikkajala today, inspected the infrastructure at the sports complex and student hostel, and received information from the officials.
Principal Secretary, Department of Youth Empowerment and Sports, Naveen Raj Singh; Sports Commissioner M.N. Anucheth; Assistant Director, Sri Jayaprakash Narayan National Youth Training Centre, M.T. Manjunath Swamy; and others were present.
Dr. G Parameshwara
@DrParameshwara
-
Dr. G Parameshwara
@DrParameshwara
ಸಂಪುಟ ಸಭೆಗೂ ಮುನ್ನ ಪ್ರಮುಖ ಆಡಳಿತಾತ್ಮಕ ನಿರ್ಣಯಗಳನ್ನು ಕೈಗೊಳ್ಳಲು ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಹಾಗೂ ಆಯ್ದ ಸಚಿವರನ್ನೊಳಗೊಂಡ ರಾಜಕೀಯ ವ್ಯವಹಾರಗಳ ಸಚಿವ ಸಂಪುಟ ಉಪಸಮಿತಿ ರಚಿಸಲು ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಈ ಮಾದರಿಯ ಸಮಿತಿ ರಚನೆಯಾಗುತ್ತಿರುವುದು ಕರ್ನಾಟಕದಲ್ಲೇ ಮೊದಲು.
ಸರ್ಕಾರದ ನೀತಿ, ಕಾರ್ಯಕ್ರಮಗಳು ಹಾಗೂ ಆಡಳಿತಾತ್ಮಕ ನಿರ್ಣಯಗಳ ಕುರಿತು ಅಧಿಕೃತ ಮಾಹಿತಿ ನೀಡಲು ಉಪಮುಖ್ಯಮಂತ್ರಿಗಳನ್ನು ಒಳಗೊಂಡು ಆಯ್ದ ಸಚಿವರನ್ನು ಸರ್ಕಾರದ ವಕ್ತಾರರನ್ನಾಗಿ ನೇಮಕ ಮಾಡಲಾಗಿದೆ.This media couldn't be displayed. See it on the original post. -
Post not available here, view on X
Dr. G Parameshwara
@DrParameshwara
-
Dr. G Parameshwara
@DrParameshwara
The Union Government is once again celebrating a high GDP growth number as if it is proof that every Indian is becoming prosperous. But the people of India deserve to ask a simple question: If the economy is growing so rapidly, why are good jobs, higher incomes and economic security still out of reach for so many?
The Government has recently changed the GDP base year from 2011-12 to 2022-23, along with significant changes in methodology, data sources and estimation techniques. At the same time, the Government is highlighting exceptionally high growth rates without adequately acknowledging the COVID-19 shock and the unusually low base created by the pandemic-induced contraction. When an economy falls sharply in one year, subsequent growth from that depressed base can naturally produce a much larger headline percentage. The people therefore deserve to know not just how fast GDP is growing today, but how much of that growth is a genuine expansion of economic activity and how much is a statistical and base-effect phenomenon. But when such changes alter the size and growth trajectory of the economy, the people have every right to demand complete transparency and independent scrutiny.
A GDP number is not a certificate of prosperity. India's per-capita income remains remarkably low for a country that claims to be one of the world's fastest-growing major economies. The IMF estimates India's GDP per capita at only about $2,813 in 2026, placing India at around the 150th position globally in per-capita income. More worryingly, India is projected to trail even Bangladesh, whose per-capita GDP is estimated at about $2,911. The IMF has also explicitly noted that India's income per capita remains relatively low and that high-quality employment reaches only a small section of the country's growing workforce.
The Government must therefore answer, What does 7–8% growth mean to a young graduate who cannot find a job matching his or her education? What does it mean to a family whose real purchasing power remains under pressure? What does it mean to a worker who is forced into low-paid or insecure employment?
India needs jobs, not just growth statistics. We need an economy that converts our demographic strength into productive employment. We need manufacturing that creates millions of jobs, not merely capital-intensive output. We need higher wages, stronger MSMEs and opportunities for our educated youth.
We must also look beyond the GDP headline to India's external economic position. The merchandise trade deficit has widened sharply. In the first quarter of 2026-27, India's current account deficit increased to $4.2 billion, while the merchandise trade deficit rose to $86.1 billion in Q1 FY 26-27. This comes after a merchandise trade deficit of $333.19 billion for the full financial year 2025–26. More significantly, on a balance of payments basis, excluding valuation effects, India's foreign exchange reserves declined by $8.1 billion during April–June 2026, compared with an accretion of $4.5 billion in the same period a year earlier. This reversal warrants serious scrutiny of India's external economic vulnerabilities.
India cannot claim economic strength while remaining vulnerable to oil prices, geopolitical conflicts, import dependence and global trade disruptions.
The wars and conflicts around the world have consequences for every Indian household, through crude oil prices, transport costs, inflation, the rupee and the cost of imported goods. Our dependence on imported energy and critical components makes these geopolitical shocks an economic vulnerability.
At the same time, India must ask why, after more than a decade of promises of Make in India and Atmanirbhar Bharat, we continue to face substantial dependence on imports in critical sectors. Growth must create economic sovereignty.
The Government cannot ask citizens to celebrate a GDP number while avoiding the harder questions of employment, wages, inequality, per-capita income, manufacturing, exports and household prosperity.
India's young population is our greatest strength. But if millions of educated young Indians are unable to find productive and dignified employment, our demographic dividend can become a demographic challenge.
The answer is not to manipulate perceptions with statistics. The answer is to strengthen the real economy.
Karnataka has shown that growth can be built around technology, innovation, human capital, entrepreneurship, manufacturing and global integration. With Karnataka emerging as the leading major state in per-capita income, and crossing the World Bank’s Upper Middle-Income threshold, the State has reaffirmed its place among India’s leading states and demonstrated what sustained, inclusive and innovation-driven growth can achieve. India's economic policy must similarly move beyond the celebration of aggregate numbers and focus on the quality of growth and the quality of life of every Indian.
India does not merely need a higher GDP. India needs higher incomes, better jobs, stronger exports, competitive manufacturing and economic security. India needs growth that reaches every household.
This is not about whether India is growing. India is growing. The real question is, Are we growing fast enough, inclusively enough and sustainably enough to secure the future of our people?
The answer cannot be found in a single GDP headline. It must be found in the life of an ordinary Indian. India's economy must now be saved from the politics of statistics and brought back to the economics of people.
India needs growth. India needs jobs. India needs incomes. India needs economic security. And India needs to act now. -
Dr. G Parameshwara
@DrParameshwara
ಜಾಗತಿಕ ಹೂಡಿಕೆದಾರರನ್ನು ಕರ್ನಾಟಕದತ್ತ ಆಕರ್ಷಿಸಿ, ಕೈಗಾರಿಕೆ, ಉದ್ಯೋಗ ಮತ್ತು ಸಮಗ್ರ ಅಭಿವೃದ್ಧಿಗೆ ಹೊಸ ಅವಕಾಶಗಳನ್ನು ಸೃಷ್ಟಿಸುವ ಸಂಕಲ್ಪದೊಂದಿಗೆ ಬೆಂಗಳೂರಿನಲ್ಲಿ ಏಪ್ರಿಲ್ 20 ರಿಂದ 23ರವರೆಗೆ ಇನ್ವೆಸ್ಟ್ ಕರ್ನಾಟಕ-2027 ಕಾರ್ಯಕ್ರಮವನ್ನು ಆಯೋಜಿಸಲು ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ.
ಇಡೀ ದೇಶದಲ್ಲೇ ಕರ್ನಾಟಕವನ್ನು ಹೂಡಿಕೆಯಲ್ಲಿ ಉತ್ತಮ ತಾಣವನ್ನಾಗಿಸುವುದೇ ನಮ್ಮ ಸರ್ಕಾರದ ಗುರಿ.
#investkarnataka2027This media couldn't be displayed. See it on the original post. -
Dr. G Parameshwara
@DrParameshwara
ರಾಜ್ಯದ ರೈತರು ಸಂಕಷ್ಟದಲ್ಲಿರುವ ಈ ಸಂದರ್ಭದಲ್ಲಿ ಬರ ಸೇರಿದಂತೆ, ಜ್ವಲಂತ ಸಮಸ್ಯೆಗಳನ್ನು ಚರ್ಚಿಸಲು ಕಳೆದ ಅಧಿವೇಶನದಲ್ಲಿ ಅವಕಾಶ ಸಿಗಲಿಲ್ಲ. ಹಾಗಾಗಿ ಈ (ಸೆಪ್ಟೆಂಬರ್) ತಿಂಗಳ 21,22 ಮತ್ತು 23ರಂದು ವಿಶೇಷ ಅಧಿವೇಶನ ಕರೆಯಲು ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ.
ಕಸ್ತೂರಿ ರಂಗನ್ ವರದಿ ಮತ್ತೊಮ್ಮೆ ಚರ್ಚೆಗೆ ಬಂದಿದ್ದು, ಈಗಾಗಲೇ ನಾಲ್ಕೈದು ಬಾರಿ ಅದನ್ನು ತಿರಸ್ಕರಿಸಲಾಗಿದೆ. ಈ ಬಗ್ಗೆ ಜನ ಸಮುದಾಯಕ್ಕೆ ತಿಳಿಸಲು ಕಸ್ತೂರಿ ರಂಗನ್ ವರದಿಯ ಕುರಿತು ವಿಶೇಷ ಅಧಿವೇಶನದಲ್ಲಿ ಚರ್ಚಿಸಲಾಗುವುದು.
ಜನರ ಸಮಸ್ಯೆಗಳಿಗೆ ಧ್ವನಿಯಾಗಿ, ಅವುಗಳಿಗೆ ಪರಿಹಾರ ಕಂಡುಕೊಳ್ಳುವುದು ಹಾಗೂ ರಾಜ್ಯದ ಅಭಿವೃದ್ಧಿಗಾಗಿ ಮಹತ್ವದ ನಿರ್ಧಾರಗಳನ್ನು ಕೈಗೊಳ್ಳುವುದಕ್ಕೆ ನಮ್ಮ ಸರ್ಕಾರ ಸದಾ ಬದ್ಧವಾಗಿದೆ.This media couldn't be displayed. See it on the original post. -
Dr. G Parameshwara
@DrParameshwara
ರಾಜ್ಯದಲ್ಲಿ ಜಾಗತಿಕ ಹೂಡಿಕೆ ಮತ್ತು ವಿದೇಶಾಂಗ ವ್ಯವಹಾರಗಳ ಇಲಾಖೆಯನ್ನು ಸ್ಥಾಪಿಸಲು ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ.
ಅನಿವಾಸಿ ಭಾರತೀಯರ ಕಲ್ಯಾಣ, ವಿದೇಶಿ ಉದ್ಯೋಗಾವಕಾಶಗಳಿಗೆ ನೆರವು ಹಾಗೂ ಜಾಗತಿಕ ಸಹಯೋಗಕ್ಕೆ ಉತ್ತೇಜನ ನೀಡುವುದು ಈ ಇಲಾಖೆಯ ಪ್ರಮುಖ ಉದ್ದೇಶವಾಗಿದೆ.
ಹೂಡಿಕೆದಾರರನ್ನು ನೇರವಾಗಿ ಮುಖ್ಯಮಂತ್ರಿಗಳೊಂದಿಗೆ ಸಂಪರ್ಕಿಸಿ, ಅವರ ಪ್ರಸ್ತಾವನೆಗಳನ್ನು ಸಂಬಂಧಪಟ್ಟ ಇಲಾಖೆಗಳೊಂದಿಗೆ ಸಮನ್ವಯಗೊಳಿಸುವ ಮೂಲಕ ಕರ್ನಾಟಕವನ್ನು ಜಾಗತಿಕ ಹೂಡಿಕೆಯ ಪ್ರಮುಖ ತಾಣವನ್ನಾಗಿ ರೂಪಿಸುವ ನಿಟ್ಟಿನಲ್ಲಿ ಮಹತ್ವದ ಪಾತ್ರ ವಹಿಸಲಿದೆ.
ರಾಜ್ಯದ ಜಾಗತಿಕ ಸಂಪರ್ಕವನ್ನು ಮತ್ತಷ್ಟು ಬಲಪಡಿಸಲು ವಿಶೇಷ ಮಂಡಳಿ ರಚಿಸಲಾಗುವುದು. ಸಂಶೋಧನೆ, ನಾವೀನ್ಯತೆ, ಸಾಂಸ್ಕೃತಿಕ ವಿನಿಮಯ, ಕ್ರೀಡೆ, ಆರೋಗ್ಯ, ವೈದ್ಯಕೀಯ ಹಾಗೂ ಪ್ರವಾಸೋದ್ಯಮ ಕ್ಷೇತ್ರಗಳಲ್ಲಿ ಜಾಗತಿಕ ಸಹಯೋಗಕ್ಕೆ ಒತ್ತು ನೀಡಲಾಗುವುದು.This media couldn't be displayed. See it on the original post. -
Dr. G Parameshwara
@DrParameshwara
Every day, many people come to me with a grievance in hand, hope in their eyes and the expectation of a solution in their hearts. But from now on, you will not have to come to us. We will come to you. Our Government will reach your doorstep.
Our Government, which has consistently introduced people-centric programmes, is now launching the new Praja Seva Department. On the first and third Saturdays of every month, Praja Seva Abhiyana meetings will be held at the district, taluk and hobli levels across the State, under the leadership of the respective District In-charge Ministers and MLAs. Public grievances will be received and eligible applications will be addressed.
Bring your grievance to us. It is our responsibility to hear you and find a solution.
A new chapter in public service begins! -
Dr. G Parameshwara
@DrParameshwara
ಕೈಯಲ್ಲೊಂದು ಅಹವಾಲು, ಕಣ್ಣುಗಳಲ್ಲೊಂದು ಭರವಸೆ, ಮನದಲ್ಲೊಂದು ಪರಿಹಾರದ ನಿರೀಕ್ಷೆ ಇಟ್ಟುಕೊಂಡು ಪ್ರತಿನಿತ್ಯ ನನ್ನ ಬಳಿಗೆ ಅದೆಷ್ಟೋ ಜನರು ಬರುತ್ತಾರೆ. ಆದರೆ, ಇನ್ನು ಮುಂದೆ ನೀವಿದ್ದ ಕಡೆಗೆ ನಾವೇ ಬರುತ್ತೇವೆ. ನಿಮ್ಮ ಮನೆ ಬಾಗಿಲಿಗೆ ನಮ್ಮ ಸರ್ಕಾರವೇ ಬರಲಿದೆ.
ಜನಪರ ಕಾರ್ಯಕ್ರಮಗಳನ್ನು ರೂಪಿಸುತ್ತಾ ಬಂದಿರುವ ನಮ್ಮ ಸರ್ಕಾರ ಇದೀಗ ನೂತನ ಪ್ರಜಾಸೇವಾ ಇಲಾಖೆಯನ್ನು ಪ್ರಾರಂಭಿಸುತ್ತಿದೆ. ಪ್ರತಿ ತಿಂಗಳ ಮೊದಲ ಹಾಗೂ ಮೂರನೇ ಶನಿವಾರ ರಾಜ್ಯದ ಎಲ್ಲಾ ಜಿಲ್ಲೆ, ತಾಲೂಕು ಹಾಗೂ ಹೋಬಳಿ ಮಟ್ಟದಲ್ಲಿ ಆಯಾ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಶಾಸಕರ ಅಧ್ಯಕ್ಷತೆಯಲ್ಲಿ ಪ್ರಜಾಸೇವೆ ಆಂದೋಲನಾ ಸಭೆಗಳು ನಡೆಯಲಿದ್ದು, ಜನರಿಂದ ಅಹವಾಲು ಸ್ವೀಕರಿಸಿ, ಅರ್ಹ ಅರ್ಜಿಗಳಿಗೆ ಪರಿಹಾರ ಒದಗಿಸಲಾಗುವುದು.
ನಿಮ್ಮ ಅಹವಾಲುಗಳನ್ನು ನಮ್ಮ ಬಳಿಗೆ ತನ್ನಿ, ಅದನ್ನು ಕೇಳಿ ಪರಿಹರಿಸುವ ಹೊಣೆ ನಮ್ಮದು.
ಇದು ಜನಸೇವೆಯ ಹೊಸ ಅಧ್ಯಾಯ! -
Dr. G Parameshwara
@DrParameshwara
ರಾಜ್ಯ ಅಭಿವೃದ್ಧಿಯಾಗಬೇಕಾದರೆ ಪ್ರತಿ ಹಳ್ಳಿ, ಪ್ರತಿ ಗ್ರಾಮವೂ ಪ್ರಗತಿ ಕಾಣಬೇಕು. ಈ ನಿಟ್ಟಿನಲ್ಲಿ ನನ್ನೂರು, ನನ್ನ ಗ್ರಾಮ, ನನ್ನ ಜಿಲ್ಲೆ, ನನ್ನ ರಾಜ್ಯದ ಸಮಗ್ರ ಬದಲಾವಣೆಯ ಚಿತ್ರಣವನ್ನು ಮುಂದಿಟ್ಟುಕೊಂಡು ಕೆಲಸ ಮಾಡುತ್ತಿದ್ದೇನೆ.
ಇಂದು ನಾನು ಪ್ರತಿನಿಧಿಸುತ್ತಿರುವ ಕೊರಟಗೆರೆ ವಿಧಾನಸಭಾ ಕ್ಷೇತ್ರ ಮೂಲಸೌಕರ್ಯ, ಶಿಕ್ಷಣ, ಕ್ರೀಡೆ, ಆರೋಗ್ಯ, ಶುಚಿತ್ವ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲೂ ಮುಂಚೂಣಿಯಲ್ಲಿರುವುದು ನೋಡುವಾಗ ಖುಷಿಯಾಗುತ್ತದೆ. ಕೊರಟಗೆರೆ ಪುಟ್ಟ ಊರು. ಆದರೆ ಇಲ್ಲಾಗುತ್ತಿರುವ ಅಭಿವೃದ್ಧಿಗಳು ಬಹು ದೊಡ್ಡವು. ಅದು ಎಷ್ಟರಮಟ್ಟಿಗೆ ಎಂಬುದು ನನ್ನೂರಿನ ಜನರ ಮೊಗದಲ್ಲಿ ಮೂಡುತ್ತಿರುವ ಮಂದಹಾಸವೇ ಸಾಬೀತುಪಡಿಸುತ್ತಿದೆ.
ನನ್ನನ್ನು ಹರಸಿ - ಹಾರೈಸಿದ ನನ್ನೂರಿನ ಜನ ನಾನು ಮಾಡಿದ ಕೆಲಸಕ್ಕೆ ಪ್ರಶಂಸೆಯ ಮಹಾಪೂರಣವನ್ನೇ ಅರ್ಪಿಸುತ್ತಿರುವುದನ್ನು ನೋಡುವಾಗ ನಿಜಕ್ಕೂ ನನ್ನ ಸಾರ್ವಜನಿಕ ಜೀವನ ಸಾರ್ಥಕ ಎನಿಸುತ್ತದೆ.
ನಾನು ನಿಮ್ಮವನು, ನಿಮ್ಮ ಮನೆಮಗ. ನಿಮಗೆ ನೆಮ್ಮದಿ, ಸಂತೋಷದ ಜೀವನವನ್ನು ಕಲ್ಪಿಸಿಕೊಡುವುದು ನನ್ನ ಜವಾಬ್ದಾರಿ ಮತ್ತು ಕರ್ತವ್ಯ. ಅದಕ್ಕಾಗಿಯೇ ನನ್ನ ರಾಜಕೀಯ ಜೀವನ ಮೀಸಲು.This media couldn't be displayed. See it on the original post. -
Dr. G Parameshwara
@DrParameshwara
Remembering Dadabhai Naoroji, the “Grand Old Man of India”, on his birth anniversary.
A pioneering nationalist, economist and statesman, his powerful critique of colonial exploitation helped awaken India’s political consciousness and strengthen the foundations of our freedom struggle.
My respectful tributes to this great son of India.
#dadabhainaoroji -
Dr. G Parameshwara
@DrParameshwara
ಅನ್ಯಾಯ, ಅಧರ್ಮದ ವಿರುದ್ಧ ಸತ್ಯ ಹಾಗೂ ಧರ್ಮದ ಹಾದಿಯನ್ನು ತೋರಿದ ಶ್ರೀಕೃಷ್ಣನ ಆದರ್ಶಗಳು ನಮ್ಮೆಲ್ಲರ ಬದುಕಿಗೆ ದಾರಿದೀಪವಾಗಲಿ.
ನಾಡಿನ ಸಮಸ್ತ ಜನತೆಗೆ ಶ್ರೀಕೃಷ್ಣ ಜನ್ಮಾಷ್ಟಮಿಯ ಶುಭಾಶಯಗಳು.
ಶ್ರೀ ಕೃಷ್ಣನು ನಿಮ್ಮೆಲ್ಲರ ಬಾಳಿನಲ್ಲಿ ಸುಖ, ಶಾಂತಿ, ನೆಮ್ಮದಿಯನ್ನು ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ.
#krishnajanmashtami -
Dr. G Parameshwara
@DrParameshwara
Here are the key decisions taken at today’s Cabinet meeting..
-
Dr. G Parameshwara
@DrParameshwara
ಇಂದಿನ ಸಚಿವ ಸಂಪುಟ ಸಭೆಯ ಪ್ರಮುಖ ನಿರ್ಣಯಗಳು ಹೀಗಿವೆ..
-
Dr. G Parameshwara
@DrParameshwara
ನೈಸ್ ಯೋಜನೆಗೆ ಜಮೀನು ನೀಡಿದ 1,453 ರೈತರಿಗೆ ನಿವೇಶನ ನೀಡಲು ನಮ್ಮ ಸರ್ಕಾರ ತೀರ್ಮಾನಿಸಿದೆ. ಈಗಾಗಲೇ 574 ನಿವೇಶನಗಳು ಲಭ್ಯವಿದ್ದು, ಉಳಿದ 879 ನಿವೇಶನಗಳನ್ನು ಅಭಿವೃದ್ಧಿಪಡಿಸಿ, ಸಂತ್ರಸ್ತರ ಬೇಡಿಕೆಯಂತೆ 2 ತಿಂಗಳೊಳಗೆ ನಿವೇಶನ ಹಂಚಿಕೆ ಮಾಡಲು ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ.
ಕೊಟ್ಟ ಮಾತಿನಂತೆ ರೈತರ ಹಿತಾಸಕ್ತಿ ಕಾಪಾಡಲು ನಮ್ಮ ಸರ್ಕಾರ ಸದಾ ಬದ್ಧವಾಗಿದೆ.
Our government has decided to allot housing sites to 1,453 farmers who gave their land for the NICE project. Of these, 574 sites are already available, while the remaining 879 will be developed and allotted within two months, in line with the demand of the affected farmers. The decision was taken at today’s Cabinet meeting.
As promised, our government remains committed to protecting the interests of farmers. -
Dr. G Parameshwara
@DrParameshwara
ಸಂಪುಟ ಸಭೆಗೂ ಮುನ್ನ ಪ್ರಮುಖ ಆಡಳಿತಾತ್ಮಕ ನಿರ್ಣಯಗಳನ್ನು ಕೈಗೊಳ್ಳಲು ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಹಾಗೂ ಆಯ್ದ ಸಚಿವರನ್ನೊಳಗೊಂಡ ರಾಜಕೀಯ ವ್ಯವಹಾರಗಳ ಸಚಿವ ಸಂಪುಟ ಉಪಸಮಿತಿ ರಚಿಸಲು ಇಂದಿನ ಸಚಿವ ಸಂಪುಟದಲ್ಲಿ ತೀರ್ಮಾನಿಸಲಾಗಿದೆ. ಈ ಮಾದರಿಯ ಸಮಿತಿ ರಚನೆಯಾಗುತ್ತಿರುವುದು ಕರ್ನಾಟಕದಲ್ಲೇ ಮೊದಲು.
ಸರ್ಕಾರದ ನೀತಿ, ಕಾರ್ಯಕ್ರಮಗಳು ಹಾಗೂ ಆಡಳಿತಾತ್ಮಕ ನಿರ್ಣಯಗಳ ಕುರಿತು ಅಧಿಕೃತ ಮಾಹಿತಿ ನೀಡಲು ಉಪಮುಖ್ಯಮಂತ್ರಿಗಳನ್ನು ಒಳಗೊಂಡು ಆಯ್ದ ಸಚಿವರನ್ನು ಸರ್ಕಾರದ ವಕ್ತಾರರನ್ನಾಗಿ ನೇಮಕ ಮಾಡಲಾಗಿದೆ.
The Cabinet today decided to constitute a Cabinet Sub-Committee on Political Affairs comprising the Chief Minister, Deputy Chief Minister and select Ministers to facilitate key administrative decisions ahead of Cabinet meetings. This is the first such committee to be constituted in Karnataka.
The government has also appointed select Ministers, including the Deputy Chief Minister, as official spokespersons to communicate information on government policies, programmes and administrative decisions. -
Dr. G Parameshwara
@DrParameshwara
ಜಾಗತಿಕ ಹೂಡಿಕೆದಾರರನ್ನು ಕರ್ನಾಟಕದತ್ತ ಆಕರ್ಷಿಸಿ, ಕೈಗಾರಿಕೆ, ಉದ್ಯೋಗ ಮತ್ತು ಸಮಗ್ರ ಅಭಿವೃದ್ಧಿಗೆ ಹೊಸ ಅವಕಾಶಗಳನ್ನು ಸೃಷ್ಟಿಸುವ ಸಂಕಲ್ಪದೊಂದಿಗೆ ಬೆಂಗಳೂರಿನಲ್ಲಿ ಏಪ್ರಿಲ್ 20 ರಿಂದ 23ರವರೆಗೆ ಇನ್ವೆಸ್ಟ್ ಕರ್ನಾಟಕ-2027 ಕಾರ್ಯಕ್ರಮವನ್ನು ಆಯೋಜಿಸಲು ಸಚಿವ ಸಂಪುಟದಲ್ಲಿ ತೀರ್ಮಾನಿಸಲಾಗಿದೆ.
ಇಡೀ ದೇಶದಲ್ಲೇ ಕರ್ನಾಟಕವನ್ನು ಹೂಡಿಕೆಯಲ್ಲಿ ಉತ್ತಮ ತಾಣವನ್ನಾಗಿಸುವುದೇ ನಮ್ಮ ಸರ್ಕಾರದ ಗುರಿ.
With the aim of attracting global investors to Karnataka and creating new opportunities for industry, employment and overall development, the Cabinet has decided to organise Invest Karnataka 2027 in Bengaluru from April 20 to 23.
Our government’s goal is to make Karnataka the most preferred investment destination in the country. -
Dr. G Parameshwara
@DrParameshwara
ರಾಜ್ಯದಲ್ಲಿ ಜಾಗತಿಕ ಹೂಡಿಕೆ ಮತ್ತು ವಿದೇಶಾಂಗ ವ್ಯವಹಾರಗಳ ಇಲಾಖೆಯನ್ನು ಸ್ಥಾಪಿಸಲು ಸಚಿವ ಸಂಪುಟದಲ್ಲಿ ತೀರ್ಮಾನಿಸಲಾಗಿದೆ.
ಅನಿವಾಸಿ ಭಾರತೀಯರ ಕಲ್ಯಾಣ, ವಿದೇಶಿ ಉದ್ಯೋಗಾವಕಾಶಗಳಿಗೆ ನೆರವು ಹಾಗೂ ಜಾಗತಿಕ ಸಹಯೋಗಕ್ಕೆ ಉತ್ತೇಜನ ನೀಡುವುದು ಈ ಇಲಾಖೆಯ ಪ್ರಮುಖ ಉದ್ದೇಶವಾಗಿದೆ.
ಹೂಡಿಕೆದಾರರನ್ನು ನೇರವಾಗಿ ಮುಖ್ಯಮಂತ್ರಿಗಳೊಂದಿಗೆ ಸಂಪರ್ಕಿಸಿ, ಅವರ ಪ್ರಸ್ತಾವನೆಗಳನ್ನು ಸಂಬಂಧಪಟ್ಟ ಇಲಾಖೆಗಳೊಂದಿಗೆ ಸಮನ್ವಯಗೊಳಿಸುವ ಮೂಲಕ ಕರ್ನಾಟಕವನ್ನು ಜಾಗತಿಕ ಹೂಡಿಕೆಯ ಪ್ರಮುಖ ತಾಣವನ್ನಾಗಿ ರೂಪಿಸುವ ನಿಟ್ಟಿನಲ್ಲಿ ಮಹತ್ವದ ಪಾತ್ರ ವಹಿಸಲಿದೆ.
ರಾಜ್ಯದ ಜಾಗತಿಕ ಸಂಪರ್ಕವನ್ನು ಮತ್ತಷ್ಟು ಬಲಪಡಿಸಲು ವಿಶೇಷ ಮಂಡಳಿ ರಚಿಸಲಾಗುವುದು. ಸಂಶೋಧನೆ, ನಾವೀನ್ಯತೆ, ಸಾಂಸ್ಕೃತಿಕ ವಿನಿಮಯ, ಕ್ರೀಡೆ, ಆರೋಗ್ಯ, ವೈದ್ಯಕೀಯ ಹಾಗೂ ಪ್ರವಾಸೋದ್ಯಮ ಕ್ಷೇತ್ರಗಳಲ್ಲಿ ಜಾಗತಿಕ ಸಹಯೋಗಕ್ಕೆ ಒತ್ತು ನೀಡಲಾಗುವುದು.
The State Cabinet has decided to establish a Department of Global Investment and Foreign Affairs in Karnataka.
The department will focus on the welfare of Non-Resident Indians, support overseas employment opportunities and promote greater global collaboration.
It will also play a key role in positioning Karnataka as a leading global investment destination by directly connecting investors with the Chief Minister and coordinating their proposals with the concerned departments.
A special council will be constituted to further strengthen Karnataka’s global engagement. Greater emphasis will be placed on international collaboration in research, innovation, cultural exchange, sports, healthcare, medicine and tourism. -
Dr. G Parameshwara
@DrParameshwara
ರಾಜ್ಯದ ರೈತರು ಸಂಕಷ್ಟದಲ್ಲಿರುವ ಈ ಸಂದರ್ಭದಲ್ಲಿ ಬರ ಸೇರಿದಂತೆ, ಜ್ವಲಂತ ಸಮಸ್ಯೆಗಳನ್ನು ಚರ್ಚಿಸಲು ಕಳೆದ ಅಧಿವೇಶನದಲ್ಲಿ ಅವಕಾಶ ಸಿಗಲಿಲ್ಲ. ಹಾಗಾಗಿ ಈ (ಸೆಪ್ಟೆಂಬರ್) ತಿಂಗಳ 21,22 ಮತ್ತು 23ರಂದು ವಿಶೇಷ ಅಧಿವೇಶನ ಕರೆಯಲು ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ.
ಕಸ್ತೂರಿ ರಂಗನ್ ವರದಿ ಮತ್ತೊಮ್ಮೆ ಚರ್ಚೆಗೆ ಬಂದಿದ್ದು, ಈಗಾಗಲೇ ನಾಲ್ಕೈದು ಬಾರಿ ಅದನ್ನು ತಿರಸ್ಕರಿಸಲಾಗಿದೆ. ಈ ಬಗ್ಗೆ ಜನ ಸಮುದಾಯಕ್ಕೆ ತಿಳಿಸಲು ಕಸ್ತೂರಿ ರಂಗನ್ ವರದಿಯ ಕುರಿತು ವಿಶೇಷ ಅಧಿವೇಶನದಲ್ಲಿ ಚರ್ಚಿಸಲಾಗುವುದು.
ಜನರ ಸಮಸ್ಯೆಗಳಿಗೆ ಧ್ವನಿಯಾಗಿ, ಅವುಗಳಿಗೆ ಪರಿಹಾರ ಕಂಡುಕೊಳ್ಳುವುದು ಹಾಗೂ ರಾಜ್ಯದ ಅಭಿವೃದ್ಧಿಗಾಗಿ ಮಹತ್ವದ ನಿರ್ಧಾರಗಳನ್ನು ಕೈಗೊಳ್ಳುವುದಕ್ಕೆ ನಮ್ಮ ಸರ್ಕಾರ ಸದಾ ಬದ್ಧವಾಗಿದೆ.
At a time when farmers across the State are facing distress, there was no opportunity in the previous session to discuss pressing issues, including the drought. Therefore, the Cabinet has decided to convene a special session on September 21, 22 and 23.
The Kasturirangan Report has once again come up for discussion, though it has already been rejected four to five times. To clearly convey the State’s position to the people, the report will be discussed during the special session.
Our government remains committed to giving voice to the concerns of the people, finding solutions to their problems, and taking important decisions for the development of the State. -
Dr. G Parameshwara
@DrParameshwara
ಇಂದು ನನ್ನ ಅಧ್ಯಕ್ಷತೆಯಲ್ಲಿ ರಾಜ್ಯದಲ್ಲಿ ಬರ, ಪ್ರವಾಹ ಮತ್ತು ಇತರೆ ನೈಸರ್ಗಿಕ ವಿಕೋಪಗಳಿಂದ ಉದ್ಭವಿಸಬಹುದಾದ ಪರಿಸ್ಥಿತಿಯನ್ನು ಪರಾಮರ್ಶಿಸಲು ಹಾಗೂ ಸಮರ್ಥ ನಿರ್ವಹಣೆಗಾಗಿ ಮಾರ್ಗದರ್ಶನ ನೀಡಲು ರಚಿಸಲಾಗಿರುವ ಸಚಿವ ಸಂಪುಟ ಉಪಸಮಿತಿ ಸಭೆಯು ವಿಧಾನಸೌಧದಲ್ಲಿ ನಡೆಯಿತು.
ಸಭೆಯಲ್ಲಿ ರಾಜ್ಯದಲ್ಲಿ ತಲೆದೋರಿರುವ ಪ್ರಾಕೃತಿಕ ವಿಕೋಪವನ್ನು ಸಮರ್ಥವಾಗಿ ನಿಭಾಯಿಸಲು, ನೀತಿ ನಿರೂಪಣೆ ರೂಪಿಸಲು ಹಾಗೂ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ನಿರ್ಣಯಿಸಲು ಅಗತ್ಯ ನಿರ್ದೇಶನಗಳನ್ನು ನೀಡುವ ಕುರಿತಂತೆ ಸುದೀರ್ಘ ಚರ್ಚೆ ನಡೆಸಲಾಯಿತು.
ಗ್ರಾಮೀಣಾಭಿವೃದ್ಧಿ ಸಚಿವರಾದ ಈಶ್ವರ್ ಖಂಡ್ರೆ, ಸಹಕಾರ ಸಚಿವರಾದ ಲಕ್ಷ್ಮಣ ಸವದಿ, ಕೃಷಿ ಸಚಿವರಾದ ನರೇಂದ್ರಸ್ವಾಮಿ, ಪಶುಸಂಗೋಪನೆ ಮತ್ತು ರೇಷ್ಮೆ ಸಚಿವರಾದ ಪುಟ್ಟರಂಗಶೆಟ್ಟಿ ಹಾಗೂ ಗ್ರಾಮೀಣಾಭಿವೃದ್ಧಿ ಇಲಾಖೆ, ಕೃಷಿ ಇಲಾಖೆ, ಪಶುಸಂಗೋಪನೆ ಮತ್ತು ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. -
Dr. G Parameshwara
@DrParameshwara
ಬರ ಸಂಕಷ್ಟದ ಈ ಸಮಯದಲ್ಲಿ ರೈತರು, ಸಾರ್ವಜನಿಕರಿಗೆ ಬೆಂಬಲವಾಗಿ ನಮ್ಮ ಸರ್ಕಾರ ನಿಲ್ಲಲಿದೆ.
This media couldn't be displayed. See it on the original post. -
Dr. G Parameshwara
@DrParameshwara
ಬರದಿಂದಾಗಿ ಹೊಲದಲ್ಲಿ ಬಿತ್ತಿರುವ ಬೆಳೆ ಕೈಕೊಟ್ಟಿದ್ದು, ಇದರಿಂದ ಕೊಟ್ಟಿಗೆಯಲ್ಲಿ ಮೇವು ಇಲ್ಲದೆ ರೈತ ಕಣ್ಣೀರಿಡುವ ಪರಿಸ್ಥಿತಿ ನಿರ್ಮಾಣವಾಗಬಾರದು ಎಂಬುದು ನಮ್ಮ ಸರ್ಕಾರದ ಕಾಳಜಿ. ಬರ ಪೀಡಿತ ಪ್ರದೇಶಗಳಲ್ಲಿ ಜಾನುವಾರುಗಳಿಗೆ ಮೇವು ಕೊರತೆಯಾಗದಂತೆ ಸರ್ಕಾರ ಗರಿಷ್ಠ ಆದ್ಯತೆ ನೀಡುತ್ತಿದೆ. ಚಾಮರಾಜನಗರದ ಗುಂಡ್ಲುಪೇಟೆ ತಾಲೂಕಿನಲ್ಲಿ ಪ್ರಸ್ತುತ ಕೇವಲ 17 ವಾರಗಳಿಗೆ ಸಾಲುವಷ್ಟು ಮೇವು ಲಭ್ಯವಿರುವ ಹಿನ್ನೆಲೆಯಲ್ಲಿ, ಮುಂದಿನ ದಿನಗಳಲ್ಲಿ ಯಾವುದೇ ಕೊರತೆ ಎದುರಾಗದಂತೆ ಮೇವು ಬ್ಯಾಂಕ್ ಸ್ಥಾಪನೆಗೆ ಕ್ರಮ ಕೈಗೊಳ್ಳಲಾಗಿದೆ.
ಜಾನುವಾರುಗಳ ಹಸಿವು ನೀಗಿಸುವುದು ಕೂಡ ರೈತನ ಬದುಕನ್ನು ಕಾಪಾಡುವಷ್ಟೇ ಮಹತ್ವದ್ದು. ಈ ನಿಟ್ಟಿನಲ್ಲಿ ಮೇವಿನ ಕಿಟ್ಗಳ ವಿತರಣೆಗೆ ಪಶುಸಂಗೋಪನಾ ಇಲಾಖೆಗೆ ಈಗಾಗಲೇ ₹25 ಕೋಟಿ ಬಿಡುಗಡೆ ಮಾಡಿದೆ. ಕುಡಿಯುವ ನೀರು, ಮೇವು ಸೇರಿದಂತೆ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಒದಗಿಸಲು ಸರ್ಕಾರ ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಳ್ಳುತ್ತಿದೆ.
Our government is determined to ensure that farmers do not face the double burden of crop loss in their fields and fodder shortage for their livestock. Ensuring adequate fodder in drought-affected areas is therefore being given the highest priority.
In Gundlupet taluk of Chamarajanagar district, the available fodder stock is currently sufficient for only about 17 weeks. To prevent any shortage in the coming months, steps are being taken to establish a fodder bank.
Protecting livestock is as important as protecting the livelihood of farmers. With this in mind, ₹25 crore has already been released to the Animal Husbandry Department for the distribution of fodder kits. The government is taking all necessary measures to ensure essential support, including drinking water and fodder, throughout the drought period. -
Dr. G Parameshwara
@DrParameshwara
ರಾಜ್ಯದಲ್ಲಿ ಬರ ಪರಿಸ್ಥಿತಿ ತೀವ್ರವಾಗಿರುವ ಈ ಸಂದರ್ಭದಲ್ಲಿ ಗ್ರಾಮೀಣ ಜನರ ಬದುಕು ಕುಡಿಯುವ ನೀರು, ಜಾನುವಾರುಗಳ ಮೇವು, ಆಹಾರ ಹಾಗೂ ಉದ್ಯೋಗದ ಕೊರತೆಯಿಂದ ಸಂಕಷ್ಟಕ್ಕೆ ಸಿಲುಕದಂತೆ ನೋಡಿಕೊಳ್ಳುವುದು ನಮ್ಮ ಆದ್ಯ ಕರ್ತವ್ಯ.
ಬರಪೀಡಿತ ಪ್ರದೇಶಗಳಿಗೆ ತೆರಳಿ ರೈತರ ಕಷ್ಟಗಳನ್ನು ನೇರವಾಗಿ ಆಲಿಸಿ, ಅವರಿಗೆ ಧೈರ್ಯ ತುಂಬುವ ನಿಟ್ಟಿನಲ್ಲಿ ಬುಧವಾರ ಚಾಮರಾಜನಗರ ಜಿಲ್ಲೆಯ ವಿವಿಧ ಬರಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ.
ಗುಂಡ್ಲುಪೇಟೆ ತಾಲ್ಲೂಕಿನ ರಂಗನಾಥಪುರ, ನಿಟ್ರೆ, ಸೋಮಹಳ್ಳಿ, ಶೀಗೆವಾಡಿ, ಚಾಮರಾಜನಗರ ತಾಲ್ಲೂಕಿನ ಮುಕ್ಕಡಹಳ್ಳಿ, ಹೆಗ್ಗೋಠಾರ ಗ್ರಾಮ ಹಾಗೂ ಹನೂರು ತಾಲ್ಲೂಕಿನ ಅಜ್ಜೀಪುರದ ಗ್ರಾಮಗಳಿಗೆ ಭೇಟಿ ನೀಡಿ ಪರಿಸ್ಥಿತಿಯನ್ನು ಅವಲೋಕಿಸಿದೆ. ಬೆಳೆ ನಷ್ಟದಿಂದ ನೋವಿನಲ್ಲಿರುವ ರೈತರಿಗೆ ನಿಮ್ಮೊಂದಿಗೆ ಸದಾ ನಾವಿದ್ದೇವೆ ಎಂದು ಭರವಸೆ ತುಂಬಿದೆ.
ಬಳಿಕ ಪ್ರಗತಿ ಪರಿಶೀಲನಾ ಸಭೆ ನಡೆಸಿ, ಬರ ನಿರ್ವಹಣೆಗೆ ಸಂಬಂಧಿಸಿದಂತೆ ಜಾನುವಾರುಗಳಿಗೆ ಸಮರ್ಪಕವಾಗಿ ಮೇವು ಲಭ್ಯವಾಗುವಂತೆ, ಜನರಿಗೆ ಕುಡಿಯುವ ನೀರು, ಆಹಾರ ಹಾಗೂ ಉದ್ಯೋಗದಂತಹ ಮೂಲಭೂತ ಸೌಲಭ್ಯಗಳಲ್ಲಿ ಯಾವುದೇ ಕೊರತೆಯಾಗದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಅಗತ್ಯ ಸೂಚನೆಗಳನ್ನು ನೀಡಿದೆ.
At a time when the State is facing a severe drought, it is our foremost responsibility to ensure that rural families do not suffer due to shortages of drinking water, fodder for livestock, food or employment.
With this objective, I visited several drought-affected areas of Chamarajanagar district on Wednesday to assess the situation firsthand, listen directly to the difficulties faced by farmers and reassure them that the government stands with them.
I visited Ranganathapura, Nitre, Somahalli and Shigevadi villages in Gundlupet taluk, Mukkadahalli and Heggothara in Chamarajanagar taluk, and Ajjipura in Hanur taluk. I reviewed the ground situation and assured farmers distressed by crop losses that we will continue to stand by them.
Later, I chaired a progress review meeting and directed officials to take all necessary measures for effective drought management, ensure adequate fodder for livestock, and prevent any shortage of basic necessities such as drinking water, food and employment. -
Dr. G Parameshwara
@DrParameshwara
-
Dr. G Parameshwara
@DrParameshwara
ಇಂದು ರಾಜ್ಯದ ಹಲವು ಭಾಗಗಳಲ್ಲಿ ಹಿಂದೆಂದೂ ಕಾಣದಂತಹ ಬರ ಪರಿಸ್ಥಿತಿ ನಿರ್ಮಾಣವಾಗಿದ್ದು, ಜನರ ಬದುಕಿನ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ. ಈ ಸಂಕಷ್ಟದ ಸಮಯದಲ್ಲಿ ಜನರಿಗೆ ಕುಡಿಯುವ ನೀರು ಒದಗಿಸುವುದು ನಮ್ಮ ಸರ್ಕಾರದ ಮೊದಲ ಆದ್ಯತೆಯಾಗಿದೆ.
ಚಾಮರಾಜನಗರ ಜಿಲ್ಲೆಯ 1 ತಾಲೂಕಿನ 17 ಗ್ರಾಮ ಪಂಚಾಯತಿಗಳ ವ್ಯಾಪ್ತಿಯ 48 ಗ್ರಾಮಗಳಿಗೆ 48 ಟ್ಯಾಂಕರ್ಗಳ ಮೂಲಕ ಹಾಗೂ 11 ಗ್ರಾಮಗಳಿಗೆ 11 ಖಾಸಗಿ ಬೋರ್ವೆಲ್ಗಳನ್ನು ಬಾಡಿಗೆಗೆ ಪಡೆದು ಕುಡಿಯುವ ನೀರು ಪೂರೈಸಲಾಗುತ್ತಿದೆ. ಜಿಲ್ಲೆಯ 1 ನಗರ ಸ್ಥಳೀಯ ಸಂಸ್ಥೆಯ 4 ವಾರ್ಡ್ಗಳಿಗೆ 2 ಟ್ಯಾಂಕರ್ಗಳ ಮೂಲಕ ಕುಡಿಯುವ ನೀರು ಪೂರೈಸಲಾಗುತ್ತಿದೆ.
ಬರದ ಸಂಕಷ್ಟದಲ್ಲಿ ಯಾವುದೇ ಕುಟುಂಬವೂ ಕುಡಿಯುವ ನೀರಿನ ಅಭಾವ ಎದುರಿಸಬಾರದು. ಜನರ ದಾಹ ನೀಗಿಸುವುದು ಕೇವಲ ಆಡಳಿತದ ಜವಾಬ್ದಾರಿಯಲ್ಲ, ಅದು ನಮ್ಮ ಕರ್ತವ್ಯವಾಗಿದೆ. ಈ ಕಷ್ಟದ ಸಮಯದಲ್ಲಿ ಸರ್ಕಾರ ಜನರ ಜೊತೆಗಿದ್ದು, ಅವರ ಸಂಕಷ್ಟಕ್ಕೆ ಸ್ಪಂದಿಸಿ ಅಗತ್ಯ ನೆರವು ನೀಡಲಿದೆ.
Several parts of the State are today facing an unprecedented drought, severely affecting the lives of people. In this difficult situation, ensuring drinking water to every household is our government’s foremost priority.
In Chamarajanagar district, 48 villages across 17 Gram Panchayats in one taluk are being supplied drinking water through 48 tankers, while 11 villages are being served through 11 hired private borewells. In one Urban Local Body, drinking water is being supplied to four wards through two tankers.
No family should be left without drinking water during this drought. Ensuring that no family is left without drinking water during this drought is our foremost responsibility. Our government will stand by the people through this difficult period, respond to their needs and provide all necessary support. -
Dr. G Parameshwara
@DrParameshwara
ರಾಜ್ಯದಲ್ಲಿ ಮಳೆ ಕೊರತೆಯಿಂದಾಗಿ ರೈತರು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ. ಬೆಳೆ ನಷ್ಟ, ಕುಡಿಯುವ ನೀರಿನ ಕೊರತೆ, ಜಾನುವಾರುಗಳಿಗೆ ಮೇವು ಸಿಗದಿರುವುದು ಸೇರಿದಂತೆ ಹಲವು ಸಮಸ್ಯೆಗಳು ಗ್ರಾಮೀಣ ಬದುಕನ್ನು ಕಂಗೆಡಿಸಿವೆ. ಈ ಹಿನ್ನೆಲೆ ಬುಧವಾರ ಚಾಮರಾಜನಗರ ಜಿಲ್ಲೆಯ ವಿವಿಧ ವಿಧಾನಸಭಾ ಕ್ಷೇತ್ರಗಳಿಗೆ ಭೇಟಿ ನೀಡಿ, ರೈತರ ಜಮೀನುಗಳಿಗೆ ತೆರಳಿ ಬರ ಪರಿಸ್ಥಿತಿಯನ್ನು ಖುದ್ದು ಪರಿಶೀಲಿಸಿದೆ. ಇದೇ ವೇಳೆ ಸಂಕಷ್ಟದಲ್ಲಿರುವ ರೈತರೊಂದಿಗೆ ಮಾತುಕತೆ ನಡೆಸಿ ಅವರ ನೋವು- ಅಹವಾಲುಗಳನ್ನು ಆಲಿಸಿದೆ.
ಜೂನ್ನಿಂದ ಆಗಸ್ಟ್ ಅಂತ್ಯದವರೆಗೆ ಜಿಲ್ಲೆಯಲ್ಲಿ 193 ಮಿ.ಮೀ. ವಾಡಿಕೆ ಮಳೆಯಾಗಬೇಕಿದ್ದರೂ, ಕೇವಲ 87 ಮಿ.ಮೀ. ಮಳೆಯಾಗಿದೆ. ಇದರಿಂದ ಶೇ.55ರಷ್ಟು ತೀವ್ರ ಮಳೆ ಅಭಾವ ಉಂಟಾಗಿದ್ದು, ಜಿಲ್ಲೆಯ 5 ತಾಲೂಕುಗಳನ್ನು ಬರಪೀಡಿತ ತಾಲೂಕುಗಳೆಂದು ಘೋಷಿಸಲಾಗಿದೆ.
ಸಂಕಷ್ಟದಲ್ಲಿರುವ ರೈತರು ಮತ್ತು ಜನರ ನೆರವಿಗೆ ತಕ್ಷಣ ಸ್ಪಂದಿಸಿ, ಅಗತ್ಯ ಪರಿಹಾರ ಹಾಗೂ ಮೂಲಭೂತ ಸೌಲಭ್ಯಗಳನ್ನು ಒದಗಿಸುವುದು ನಮ್ಮ ಸರ್ಕಾರದ ಆದ್ಯತೆಯಾಗಿದೆ.
Farmers across the State are facing severe distress due to deficient rainfall. Crop losses, drinking water shortages and lack of fodder for livestock have placed immense pressure on rural communities.
Against this backdrop, on Wednesday I visited several Assembly constituencies in Chamarajanagar district and personally inspected the drought situation in farmers’ fields. I also interacted with distressed farmers and listened to their concerns and grievances.
Between June and the end of August, Chamarajanagar district should have received 193 mm of rainfall, but received only 87 mm, resulting in a severe deficit of 55%. All five taluks in the district have been declared drought-affected.
Our government’s priority is to respond swiftly to the distress faced by farmers and people, and ensure that necessary relief and basic amenities are provided without delay. -
Dr. G Parameshwara
@DrParameshwara
ನೆತ್ತಿ ಸೀಳುವ ಬಿಸಿಲಿಗೆ
ಒಣಗಿದೆ ಹಸಿರು ಪೈರು
ಮುನಿಸು ತೋರಿದ ಮುಂಗಾರಿಗೆ
ಮಂಕಾಗಿದೆ ಬದುಕುಗಳು..
ಜೊತೆಗಿದ್ದೇವೆ ನಾವು
ಕೈ ಹಿಡಿದು ಬೆಂಬಲಿಸುವೆವು
ನೆಲದೊಡೆಯನ ಕಣ್ಣೀರ ಒರೆಸಿ
ಭರವಸೆಯ ಹಸ್ತ ಚಾಚುವೆವು..
ಬರದ ಬೇಗೆ ಅನ್ನದಾತನ ಬಾಧಿಸಲು ಬಿಡೆವು! -
Dr. G Parameshwara
@DrParameshwara
ರಾಜ್ಯ ಅಭಿವೃದ್ಧಿಯಾಗಬೇಕಾದರೆ ಪ್ರತಿ ಹಳ್ಳಿ, ಪ್ರತಿ ಗ್ರಾಮವೂ ಪ್ರಗತಿ ಕಾಣಬೇಕು. ಈ ನಿಟ್ಟಿನಲ್ಲಿ ನನ್ನೂರು, ನನ್ನ ಗ್ರಾಮ, ನನ್ನ ಜಿಲ್ಲೆ, ನನ್ನ ರಾಜ್ಯದ ಸಮಗ್ರ ಬದಲಾವಣೆಯ ಚಿತ್ರಣವನ್ನು ಮುಂದಿಟ್ಟುಕೊಂಡು ಕೆಲಸ ಮಾಡುತ್ತಿದ್ದೇನೆ.
ಇಂದು ನಾನು ಪ್ರತಿನಿಧಿಸುತ್ತಿರುವ ಕೊರಟಗೆರೆ ವಿಧಾನಸಭಾ ಕ್ಷೇತ್ರ ಮೂಲಸೌಕರ್ಯ, ಶಿಕ್ಷಣ, ಕ್ರೀಡೆ, ಆರೋಗ್ಯ, ಶುಚಿತ್ವ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲೂ ಮುಂಚೂಣಿಯಲ್ಲಿರುವುದು ನೋಡುವಾಗ ಖುಷಿಯಾಗುತ್ತದೆ. ಕೊರಟಗೆರೆ ಪುಟ್ಟ ಊರು. ಆದರೆ ಇಲ್ಲಾಗುತ್ತಿರುವ ಅಭಿವೃದ್ಧಿಗಳು ಬಹು ದೊಡ್ಡವು. ಅದು ಎಷ್ಟರಮಟ್ಟಿಗೆ ಎಂಬುದು ನನ್ನೂರಿನ ಜನರ ಮೊಗದಲ್ಲಿ ಮೂಡುತ್ತಿರುವ ಮಂದಹಾಸವೇ ಸಾಬೀತುಪಡಿಸುತ್ತಿದೆ.
ನನ್ನನ್ನು ಹರಸಿ - ಹಾರೈಸಿದ ನನ್ನೂರಿನ ಜನ ನಾನು ಮಾಡಿದ ಕೆಲಸಕ್ಕೆ ಪ್ರಶಂಸೆಯ ಮಹಾಪೂರಣವನ್ನೇ ಅರ್ಪಿಸುತ್ತಿರುವುದನ್ನು ನೋಡುವಾಗ ನಿಜಕ್ಕೂ ನನ್ನ ಸಾರ್ವಜನಿಕ ಜೀವನ ಸಾರ್ಥಕ ಎನಿಸುತ್ತದೆ.
ನಾನು ನಿಮ್ಮವನು, ನಿಮ್ಮ ಮನೆಮಗ. ನಿಮಗೆ ನೆಮ್ಮದಿ, ಸಂತೋಷದ ಜೀವನವನ್ನು ಕಲ್ಪಿಸಿಕೊಡುವುದು ನನ್ನ ಜವಾಬ್ದಾರಿ ಮತ್ತು ಕರ್ತವ್ಯ. ಅದಕ್ಕಾಗಿಯೇ ನನ್ನ ರಾಜಕೀಯ ಜೀವನ ಮೀಸಲು.This media couldn't be displayed. See it on the original post. -
Dr. G Parameshwara
@DrParameshwara
ಇಂದು ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲ್ಲೂಕಿನ ರಂಗನಾಥಪುರ, ನಿಟ್ರೆ, ಸೋಮಹಳ್ಳಿ, ಶೀಗೆವಾಡಿ, ಚಾಮರಾಜನಗರ ತಾಲ್ಲೂಕಿನ ಮುಕ್ಕಡಹಳ್ಳಿ, ಹೆಗ್ಗೋಠಾರ ಗ್ರಾಮ ಹಾಗೂ ಹನೂರು ತಾಲ್ಲೂಕಿನ ಅಜ್ಜೀಪುರದ ಬರಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ.
ಬೆಳೆ ನಷ್ಟದ ನೋವಿನಲ್ಲಿರುವ ರೈತನಿಗೆ ನಿಮ್ಮೊಂದಿಗೆ ನಾವಿದ್ದೇವೆ ಭರವಸೆಯನ್ನು ನೀಡಿದೆ.This media couldn't be displayed. See it on the original post. -
Dr. G Parameshwara
@DrParameshwara
Adequate funds are available in the PD accounts of all Deputy Commissioners. These funds must be used immediately, in accordance with government guidelines, for drinking water and other urgent relief works. Relief measures should not be delayed on the pretext of waiting for additional funds.
Priority must be given to drinking water for both people and livestock. Officials must also ensure that livestock receive the required vaccinations on time. Reservoir water should be used with utmost caution, and no village or urban area should face any drinking water shortage.
During periods of severe water scarcity, people tend to store water for longer durations, which can increase the risk of diseases such as dengue and chikungunya. This must be taken seriously and people should be made aware of the necessary precautions. Task Force and District Disaster Management Authority meetings should also be held regularly. During drought years, health problems caused by contaminated drinking water tend to increase, and officials must maintain strict vigilance to prevent such incidents.
In El Niño years, sudden spells of rain can increase the risk of floods and lightning. Necessary action must therefore be taken based on weather advisories. There should also be no shortage of sowing seeds. If crops fail after sowing due to lack of rain and rainfall resumes later, demand for seeds and fertilisers may rise again. Officials must be prepared for such a situation.
There must be no shortage of fodder for livestock. According to the reports, fodder stocks appear to be low. Deputy Commissioners and CEOs must get the actual availability verified through their teams.
Farmers who have access to borewells or other water sources should be encouraged to cultivate fodder and provided fodder seed kits. All rainfall monitoring stations must also be kept in proper working condition.
No habitation should face drinking water scarcity. If tanker-supplied water is stored for long periods, especially when sudden rainfall occurs, the risk of infectious diseases may increase. Necessary precautions must be taken. Farmers should also be encouraged to grow crops suited to low-rainfall conditions.
₹5 crore has been provided to the district for emergency drinking water requirements. The funds must be used judiciously. Reservoir water should be used for drinking purposes. If borewells dry up, private borewells may be hired. If the problem persists, existing borewells may be deepened. Drilling new borewells should be the last option, while tankers should be used wherever there is an urgent need.
A senior KAS officer has been appointed as taluk in-charge officer for every taluk in the State. These officers should be effectively utilised, and the Chief Secretary has been asked to monitor this closely.
In the coming days, officials must ensure adequate drinking water, fodder and essential vaccinations for livestock, maintain sufficient stocks of seeds and fertilisers for farmers, and prevent any disruption in drinking water supply.
A large number of people from this region migrate in search of work. With the MGNREGA scheme also having undergone changes, available funds and schemes must be effectively utilised to create employment opportunities and prevent distress migration.
With the drought intensifying, water scarcity is likely to worsen even in forest areas. Wild animals may come out of forests in search of water and fodder, which could create problems for people. Preventive measures must be put in place from now itself to address this situation.
All Primary Health Centres must maintain adequate stocks of medicines. We are facing an extremely serious and unprecedented situation. In some countries, emergency measures have already been announced due to the impact of El Niño. All PDOs, Revenue Inspectors and Tahsildars must go among the people, listen to their problems and respond to them. Officials at the Gram Panchayat, taluk and district levels must work in close coordination. The Deputy Commissioner and Zilla Panchayat CEO carry greater responsibility and must take the situation very seriously.
Many officials are not working from their respective headquarters. The Chief Minister and I have already warned against this. Officials must change their working style and remain at their headquarters while discharging their duties. Deputy Commissioners must take strict action, without hesitation, against those who ignore these directions.(2/2) -
Dr. G Parameshwara
@DrParameshwara
Today, after visiting drought-affected areas of Chamarajanagar district, I chaired a progress review meeting at Dr. B.R. Ambedkar Bhavan in Hanur town and issued necessary directions to officials.
The drought situation in the State is becoming more serious by the day. The purpose of today’s meeting was to review the situation in detail. The government is taking drought management very seriously, and officials and elected representatives must not treat it lightly.
Our immediate challenges are to ensure basic necessities such as drinking water, food, employment for livelihoods and healthcare, along with adequate fodder and water for livestock. The Revenue Department, in coordination with other concerned departments, must manage the situation in a way that ensures neither people nor livestock face any hardship.
Since July 2026, only 0.81 lakh person-days of employment have been generated in Chamarajanagar, compared with 2.50 lakh person-days during the same two-month period last year -- a decline of 67%. If 2.50 lakh person-days could be generated in a year of better rainfall, why has employment generation fallen so sharply this year? Are people not seeking work? What are the Zilla Panchayat CEO and the officials under him doing?
Crop insurance enrolment in Chamarajanagar is also low. Across the State, 49.64 lakh farmer applications covering 33,17,167 hectares have been insured. In Chamarajanagar, however, only 18,436 farmers covering 9,984 hectares have enrolled. Agriculture and Horticulture Department officials must pay serious attention to this. Why were farmers not encouraged to enrol? This should not happen.
Officials have reported that the district has fodder stock sufficient for 23 weeks. This needs to be verified. Farmers who have access to borewells should be provided fodder seeds and encouraged to cultivate fodder.
Chamarajanagar should have received 193 mm of normal rainfall, but has received only 87 mm, resulting in a rainfall deficit of 55% and placing the district in the ‘Deficit’ category. In August alone, the rainfall deficit was as high as 76%.
Monsoon rainfall data from June 1 to August 31 shows that Kollegala in Chamarajanagar district recorded the highest deficit at 67%, followed by Yelandur at 65%. K.R. Nagar and T. Narasipura in Mysuru district recorded deficits of 64%. The government has already declared all five taluks of Chamarajanagar district - Chamarajanagar, Gundlupet, Kollegala, Hanur and Yelandur - as severely drought-affected.
Drinking water problems have been reported in 17 Gram Panchayats of one taluk in Chamarajanagar district. Water is being supplied to 48 villages through 48 tankers, while 11 private borewells have been hired to supply water to 11 villages. In urban areas, two tankers are being used to supply water to four wards of one Urban Local Body.
The district currently has 2,22,566 tonnes of fodder, sufficient for around 23 weeks. However, Gundlupet taluk has fodder stock for only 17 weeks, making it necessary to prepare an emergency plan to ensure there is no shortage until the next monsoon.
Since Gundlupet has fodder stock for only 17 weeks, a fodder bank must be established immediately and an emergency plan put in place to ensure adequate supply until the next monsoon. The government has already released ₹25 crore to the Animal Husbandry Department for distribution of fodder kits. (1/2) -
Dr. G Parameshwara
@DrParameshwara
ಎಲ್ಲಾ ಜಿಲ್ಲಾಧಿಕಾರಿಗಳ ಪಿಡಿ ಖಾತೆಯಲ್ಲಿ ಸಾಕಷ್ಟು ಹಣವಿದೆ. ಈ ಅನುದಾನವನ್ನು ಸರ್ಕಾರದ ಮಾರ್ಗಸೂಚಿಯಂತೆ ಕುಡಿಯುವ ನೀರು ಮತ್ತು ಇತರೆ ತುರ್ತು ಪರಿಹಾರ ಕಾರ್ಯಗಳಿಗೆ ತಕ್ಷಣವೇ ಬಳಸಿ. ಅನುದಾನಕ್ಕಾಗಿ ಕಾಯುವ ನೆಪವೊಡ್ಡಿ ಪರಿಹಾರ ಕಾರ್ಯ ವಿಳಂಬ ಮಾಡಬೇಡಿ.
ಜನರು ಮತ್ತು ಜಾನುವಾರುಗಳಿಗೆ ಕುಡಿಯುವ ನೀರಿಗೆ ಆದ್ಯತೆ ನೀಡಬೇಕು. ಜಾನುವಾರುಗಳಿಗೆ ಅಗತ್ಯವಿರುವ ಲಸಿಕೆಗಳನ್ನು ಕಾಲಕಾಲಕ್ಕೆ ನೀಡಲಾಗುತ್ತಿದೆಯೇ ಎಂದು ಪರಿಶೀಲಿಸಿಕೊಳ್ಳಿ. ಜಲಾಶಯಗಳಲ್ಲಿನ ನೀರನ್ನು ಅತ್ಯಂತ ಎಚ್ಚರಿಕೆಯಿಂದ ಬಳಸಬೇಕು. ಯಾವುದೇ ಗ್ರಾಮ - ನಗರ ಪ್ರದೇಶಗಳಲ್ಲಿ ಯಾರೊಬ್ಬರಿಗೂ ಕುಡಿಯುವ ನೀರಿನ ಕೊರತೆಯಾಗದಂತೆ ನೋಡಿಕೊಳ್ಳಿ.
ನೀರಿನ ಕೊರತೆ ಹೆಚ್ಚಾಗುವ ಸಂದರ್ಭಗಳಲ್ಲಿ ಜನರು ನೀರನ್ನು ಶೇಖರಿಸಿಟ್ಟುಕೊಳ್ಳುತ್ತಾರೆ. ಇದರಿಂದ ಡೆಂಘಿ, ಚಿಕೂನ್ಗುನ್ಯಾ ರೀತಿಯ ಸಾಂಕ್ರಾಮಿಕ ರೋಗಗಳು ಹರಡಬಹುದು. ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಜನರಿಗೆ ಸೂಕ್ತ ತಿಳುವಳಿಕೆ ನೀಡಿ. ನಿಯಮಿತವಾಗಿ ಟಾಸ್ಕ್ ಫೋರ್ಸ್, ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆಯನ್ನು ನಡೆಸಿ. ಸಾಮಾನ್ಯವಾಗಿ ಬರಗಾಲದ ವರ್ಷಗಳಲ್ಲಿ ಕಲುಷಿತ ನೀರು ಕುಡಿದು ಸಮಸ್ಯೆಗೆ ಸಿಲುಕಿಕೊಳ್ಳುವವರ ಪ್ರಮಾಣ ಹೆಚ್ಚಿರುತ್ತದೆ. ಈ ಕುರಿತು ನೀವುಗಳು ಹೆಚ್ಚಿನ ನಿಗಾವಹಿಸಿ ಸಮಸ್ಯೆಗಳಾಗದಂತೆ ನೋಡಿಕೊಳ್ಳಬೇಕು.
ಎಲ್ ನಿನೊ ಇರುವ ವರ್ಷಗಳಲ್ಲಿ ಸಾಮಾನ್ಯವಾಗಿ ಹಠಾತ್ ಆಗಿ ಮಳೆ ಬರುವುದರಿಂದ ಪ್ರವಾಹಗಳು, ಸಿಡಿಲುಗಳು ಬರುವ ಸಂಭವಗಳು ಹೆಚ್ಚಿರುತ್ತವೆ. ಹವಾಮಾನ ಸೂಚನೆಗಳನ್ನು ಆಧರಿಸಿ ಕ್ರಮವಹಿಸಬೇಕು. ಬಿತ್ತನೆ ಬೀಜ ಕೊರತೆ ಆಗಬಾರದು. ಬೀಜ ಬಿತ್ತನೆ ಮಾಡಿ ಮಳೆ ಇಲ್ಲವಾಗಿ ಮತ್ತೆ ಮಳೆ ಬಂದರೆ ಮತ್ತೆ ಬೀಜ-ಗೊಬ್ಬರಕ್ಕೆ ಬೇಡಿಕೆ ಬರಬಹುದು. ಅದಕ್ಕೆ ಸಿದ್ಧರಾಗಿ.
ಜಾನುವಾರುಗಳಿಗೆ ಮೇವಿನ ಕೊರತೆ ಆಗದಂತೆ ನೋಡಿಕೊಳ್ಳಬೇಕು. ನಿಮ್ಮ ವರದಿಗಳ ಪ್ರಕಾರ ಜಾನುವಾರುಗಳಿಗೆ ಮೇವಿನ ಸಂಗ್ರಹ ಕಡಿಮೆ ಇದೆ. ಇದನ್ನು ಜಿಲ್ಲಾಧಿಕಾರಿಗಳು ಮತ್ತು ಸಿಇಒಗಳು ನಿಮ್ಮ ತಂಡದ ಮೂಲಕ ಪರಿಶೀಲನೆ ಮಾಡಿಸಿ ಖಚಿತ ಪಡಿಸಿಕೊಳ್ಳಿ.
ಕೊಳವೆ ಬಾವಿ ಸೇರಿದಂತೆ ಯಾರ್ಯಾರಿಗೆ ನೀರಿನ ಮೂಲಗಳಿವೆಯೊ ಅವರು ಮೇವು ಬೆಳೆಯುವಂತೆ ಪ್ರೋತ್ಸಾಹ ನೀಡಿ. ಮೇವಿನ ಬೀಜಗಳ ಕಿಟ್ಗಳನ್ನು ನೀಡಿ. ಮಳೆ ಮಾಪನ ಕೇಂದ್ರಗಳು ಎಷ್ಟಿದ್ದಾವೋ ಅಷ್ಟೂ ಸಮರ್ಪಕವಾಗಿರುವಂತೆ ನೋಡಿಕೊಳ್ಳಬೇಕು.
ಯಾವ ಜನವಸತಿ ಪ್ರದೇಶಕ್ಕೂ ಕುಡಿಯುವ ನೀರಿನ ಸಮಸ್ಯೆ ಆಗದಂತೆ ನೋಡಿಕೊಳ್ಳಬೇಕು. ಹಠಾತ್ ಆಗಿ ಮಳೆ ಆಗುವುದರಿಂದ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡುವಾಗ ನೀರಿನ ಸಂಗ್ರಹಣೆಗಳು ಹೆಚ್ಚು ಕಾಲ ಇರುವಂತಾದರೆ ಸಾಂಕ್ರಾಮಿಕ ಕಾಯಿಲೆಗಳು ತೀವ್ರಗೊಳ್ಳಬಹುದು. ಅದರ ಕುರಿತು ಮುನ್ನೆಚ್ಚರಿಕೆ ವಹಿಸಿ. ರೈತರಿಗೆ ಕಡಿಮೆ ಮಳೆ ನೀರಿನಲ್ಲಿ ಬೆಳೆಯುವ ಬೆಳೆಗಳನ್ನು ಬೆಳೆಯಲು ಪ್ರೋತ್ಸಾಹಿಸಿ.
ನಿಮ್ಮ ಜಿಲ್ಲೆಯಲ್ಲಿ ಕುಡಿಯುವ ನೀರಿಗಾಗಿ ತುರ್ತು ಅಗತ್ಯಗಳಿಗಾಗಿ 5 ಕೋಟಿ ರೂ. ಗಳನ್ನು ಒದಗಿಸಿದ್ದೇವೆ. ಅದನ್ನು ಜುಡಿಷಿಯಸ್ ಆಗಿ ಬಳಕೆ ಮಾಡಿ. ಜಲಾಶಯಗಳ ನೀರನ್ನು ಕುಡಿಯುವ ಉದ್ದೇಶಕ್ಕಾಗಿ ಬಳಸಿ. ಕೊಳವೆ ಬಾವಿಗಳಲ್ಲಿ ಖಾಲಿಯಾದರೆ ಖಾಸಗಿ ಕೊಳವೆ ಬಾವಿಗಳನ್ನು ಬಾಡಿಗೆಗೆ ತೆಗೆದುಕೊಳ್ಳಿ. ನಂತರವೂ ಸಮಸ್ಯೆಗಳಿದ್ದರೆ ಕೊಳವೆ ಬಾವಿಗಳನ್ನು ಡೀಪನಿಂಗ್ ಮಾಡಿ. ಕಡೆಯ ಆದ್ಯತೆ ಹೊಸ ಕೊಳವೆ ಬಾವಿಗಳನ್ನು ಕೊರೆಯುವುದು. ಈ ನಡುವೆ ತುರ್ತು ಅಗತ್ಯಗಳಿದ್ದರೆ ಟ್ಯಾಂಕರ್ ಬಳಸಿ.
ರಾಜ್ಯದ ಪ್ರತಿ ತಾಲ್ಲೂಕಿಗೂ ಒಬ್ಬೊಬ್ಬರಂತೆ ಹಿರಿಯ ಕೆಎಎಸ್ ಅಧಿಕಾರಿಗಳನ್ನು ತಾಲ್ಲೂಕು ಉಸ್ತುವಾರಿ ಅಧಿಕಾರಿಗಳೆಂದು ನೇಮಕ ಮಾಡಲಾಗಿದೆ. ಇವರನ್ನು ಸಮರ್ಪಕವಾಗಿ ಬಳಸಿಕೊಳ್ಳಿ. ಮುಖ್ಯ ಕಾರ್ಯದರ್ಶಿಯವರು ಈ ಕುರಿತು ಗಮನ ಹರಿಸಬೇಕು.
ಒಟ್ಟಾರೆ ಮುಂದಿನ ದಿನಗಳಲ್ಲಿ ಜಾನುವಾರುಗಳಿಗೆ ಕುಡಿಯುವ ನೀರು, ಮೇವು, ಅಗತ್ಯ ಲಸಿಕೆ ಇತ್ಯಾದಿಗಳ ಕುರಿತು ಗಮನ ಹರಿಸಿ. ರೈತರಿಗೆ ಬೇಕಿರುವ ಬಿತ್ತನೆ ಬೀಜ, ಗೊಬ್ಬರಗಳ ದಾಸ್ತಾನನ್ನು ಸಮರ್ಪಕವಾಗಿಟ್ಟುಕೊಳ್ಳಿ. ಕುಡಿಯುವ ನೀರಿಗೆ ತೊಂದರೆಯಾಗದಂತೆ ನೋಡಿಕೊಳ್ಳಿ.
ಈ ಭಾಗದಲ್ಲಿ ಉದ್ಯೋಗಕ್ಕಾಗಿ ಗುಳೆ ಹೋಗುವವರು ಹೆಚ್ಚಿನ ಪ್ರಮಾಣದಲ್ಲಿದ್ದಾರೆ. ನರೇಗಾ ಯೋಜನೆ ಕೂಡ ಮಾರ್ಪಾಟಾಗಿದೆ. ಲಭ್ಯ ಅನುದಾನ ಮತ್ತು ಯೋಜನೆಗಳನ್ನು ಬಳಸಿಕೊಂಡು ಜನರಿಗೆ ಉದ್ಯೋಗವನ್ನು ನೀಡಲು ಕ್ರಮವಹಿಸಬೇಕು.
ಬರದ ತೀವ್ರತೆಯಿಂದ ಕಾಡಿನಲ್ಲಿಯೂ ನೀರಿಗೆ ಹಾಹಾಕಾರ ಉಂಟಾಗಲಿದೆ. ಕಾಡು ಪ್ರಾಣಿಗಳು ನೀರಿಗಾಗಿ, ಮೇವಿನ ಸಮಸ್ಯೆಯಿಂದ ಕಾಡಿನಿಂದ ಹೊರಬರುತ್ತವೆ. ಇದರಿಂದ ಜನರಿಗೆ ಸಮಸ್ಯೆ ಉಂಟಾಗಲಿದೆ. ಈ ಸಮಸ್ಯೆಗೆ ಈಗಿನಿಂದಲೇ ಪರಿಹಾರ ಕಂಡುಕೊಳ್ಳಬೇಕು.
ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಮೆಡಿಸಿನ್ ಸಂಗ್ರಹವಿರಬೇಕು. ಬಹಳ ಗಂಭೀರವಾದ, ಯಾವತ್ತೂ ನೋಡದ ಪರಿಸ್ಥಿತಿಯನ್ನು ಎದುರಿಸುತ್ತಿದ್ದೇವೆ. ಎಲ್ ನಿನೋ ಪರಿಣಾಮದಿಂದ ಕೆಲ ದೇಶಗಳಲ್ಲಿ ತುರ್ತು ಘೋಷಣೆ ಮಾಡಲಾಗಿದೆ. ಎಲ್ಲ ಪಿಡಿಒ, ಆರ್ಐ, ತಹಶೀಲ್ದಾರರು ಜನರ ಬಳಿಗೆ ಹೋಗಿ ಸಮಸ್ಯೆಗಳನ್ನು ಆಲಿಸಬೇಕು. ಗ್ರಾಮ ಪಂಚಾಯಿತಿ, ತಾಲ್ಲೂಕು ಮಟ್ಟ, ಜಿಲ್ಲಾ ಮಟ್ಟದ ಅಧಿಕಾರಿಗಳು ಒಟ್ಟಾಗಿ ಸಮನ್ವಯತೆಯಿಂದ ಜನರಿಗಾಗಿ ಕೆಲಸ ಮಾಡಬೇಕು. ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯತ್ ಸಿಇಒ ಅವರಿಗೆ ಹೆಚ್ಚಿನ ಜವಾಬ್ದಾರಿ ಇದೆ. ಹೆಚ್ಚು ಗಂಭೀರವಾಗಿ ಕೆಲಸ ಮಾಡಬೇಕು.
ಬಹುತೇಕ ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿದ್ದು ಕೆಲಸ ಮಾಡುತ್ತಿಲ್ಲ. ಈ ಬಗ್ಗೆ ಮುಖ್ಯಮಂತ್ರಿಯವರು ಮತ್ತು ನಾನು ಈಗಲೇ ಎಚ್ಚರಿಕೆ ನೀಡಿದ್ದೇವೆ. ನಿಮ್ಮ ಕಾರ್ಯಚಟುವಟಿಕೆಯ ಶೈಲಿಯನ್ನು ಬದಲಾಯಿಸಿಕೊಳ್ಳಬೇಕು. ಎಲ್ಲರೂ ಕೇಂದ್ರಸ್ಥಾನದಲ್ಲಿದ್ದು ಕೆಲಸ ಮಾಡಬೇಕು. ಇದನ್ನು ನಿರ್ಲಕ್ಷಿಸುವ ಅಧಿಕಾರಿಗಳ ವಿರುದ್ಧ ಜಿಲ್ಲಾಧಿಕಾರಿಗಳು ಮುಲಾಜಿಲ್ಲದೆ ಕ್ರಮ ಜರುಗಿಸಿ. (2/2) -
Dr. G Parameshwara
@DrParameshwara
ಇಂದು ಚಾಮರಾಜನಗರ ಜಿಲ್ಲೆಯ ಬರಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ ಬಳಿಕ ಹನೂರು ಪಟ್ಟಣದ ಡಾ. ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಪ್ರಗತಿ ಪರಿಶೀಲನಾ ಸಭೆ ನಡೆಸಿ, ಅಧಿಕಾರಿಗಳಿಗೆ ಅಗತ್ಯ ಸೂಚನೆಗಳನ್ನು ನೀಡಿದೆ.
ರಾಜ್ಯದ ಬರ ಪರಿಸ್ಥಿತಿ ದಿನೇ ದಿನೇ ಗಂಭೀರವಾಗುತ್ತಿದೆ. ಇಂದು ಸಭೆ ಕರೆದಿರುವ ಉದ್ದೇಶ ಬರದ ಕುರಿತಾದ ಪರಿಶೀಲನೆ ಮಾಡುವುದೇ ಆಗಿದೆ. ಸರ್ಕಾರ ಬರ ನಿರ್ವಹಣೆಯ ಕುರಿತು ಬಹಳ ಗಂಭೀರವಾಗಿದೆ. ಅಧಿಕಾರಿಗಳು, ಜನಪ್ರತಿನಿಧಿಗಳು ಬರವನ್ನು ಹಗುರವಾಗಿ ಪರಿಗಣಿಸಬಾರದು.
ಜನರಿಗೆ ಮೂಲಭೂತ ಅವಶ್ಯಕತೆಗಳಾದ ಕುಡಿಯುವ ನೀರು, ಆಹಾರ, ಜೀವನೋಪಾಯಕ್ಕೆ ಅಗತ್ಯವಿರುವ ಉದ್ಯೋಗ, ಆರೋಗ್ಯ, ಜಾನುವಾರುಗಳಿಗೆ ಮೇವು, ನೀರು ಒದಗಿಸುವುದು ನಮ್ಮ ಮುಂದಿರುವ ಸವಾಲುಗಳು. ಇದನ್ನು ಕಂದಾಯ ಇಲಾಖೆಯು ಇತರೆ ಸಂಬಂಧಿತ ಇಲಾಖೆಗಳ ಜೊತೆ ಸೇರಿ ಜನ-ಜಾನುವಾರುಗಳಿಗೆ ಯಾವುದೇ ಸಮಸ್ಯೆಯಾಗದಂತೆ ಪರಿಸ್ಥಿತಿಯನ್ನು ನಿಭಾಯಿಸಬೇಕಾಗಿದೆ.
ಚಾಮರಾಜನಗರದಲ್ಲಿ ಜುಲೈ 2026 ರಿಂದ ಈಚೆಗೆ ಕೇವಲ 0.81 ಲಕ್ಷ ಮಾನವ ದಿನಗಳಷ್ಟು ಉದ್ಯೋಗಗಳನ್ನು ಸೃಷ್ಟಿಸಲಾಗಿದೆ. ಆದರೆ ಕಳೆದ ವರ್ಷ ಇದೇ 2 ತಿಂಗಳುಗಳಲ್ಲಿ 2.50 ಲಕ್ಷ ಉದ್ಯೋಗಗಳನ್ನು ಸೃಜಿಸಲಾಗಿತ್ತು. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಶೇ.67 ರಷ್ಟು ಕಡಿಮೆಯಾಗಿದೆ. ಉತ್ತಮ ಮಳೆ ಬಂದ ವರ್ಷ 2.50 ಲಕ್ಷ ಉದ್ಯೋಗ ಸೃಷ್ಟಿಯಾದರೆ ಈ ವರ್ಷ ಯಾಕೆ ಇಷ್ಟು ಕಡಿಮೆಯಾಗಿದೆ. ಜನರು ಉದ್ಯೋಗ ಕೇಳುತ್ತಿಲ್ಲವೇ? ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳು ಮತ್ತು ಅವರ ಅಧೀನ ಅಧಿಕಾರಿಗಳು ಏನು ಮಾಡುತ್ತಿದ್ದಾರೆ?
ಚಾಮರಾಜನಗರದಲ್ಲಿ ಕೃಷಿ ಬೆಳೆ ವಿಮೆಯೂ ಕಡಿಮೆಯಾಗಿದೆ. ರಾಜ್ಯದಲ್ಲಿ 49.64 ಲಕ್ಷ ರೈತರ ಅರ್ಜಿಗಳಿಗೆ ಹಾಗೂ 33,17,167 ಹೆಕ್ಟೇರ್ ಭೂಮಿಗೆ ಬೆಳೆ ವಿಮೆ ಮಾಡಿಸಲಾಗಿದೆ. ಆದರೆ ಚಾಮರಾಜನಗರದಲ್ಲಿ ಕೇವಲ 18,436 ಜನ 9,984 ಹೆಕ್ಟೇರ್ ಪ್ರದೇಶಕ್ಕೆ ಮಾತ್ರ ನೋಂದಾಯಿಸಿಕೊಂಡಿರುತ್ತಾರೆ. ಕೃಷಿ ಮತ್ತು ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಈ ಬಗ್ಗೆ ಗಮನವಹಿಸಬೇಕು. ರೈತರಿಗೆ ಉತ್ತೇಜನ ನೀಡುವ ಕೆಲಸಗಳನ್ನು ಯಾಕೆ ಮಾಡಲಿಲ್ಲ. ಈ ರೀತಿ ಆಗಬಾರದು.
ನಿಮ್ಮ ಅಧಿಕಾರಿಗಳು ಹೇಳಿರುವಂತೆ ನಿಮ್ಮ ಬಳಿ 23 ವಾರಗಳಿಗೆ ಸಾಕಾಗುವಷ್ಟು ಮೇವಿನ ದಾಸ್ತಾನು ಇದೆ. ಈ ಮಾಹಿತಿ ಸರಿಯಿದೆಯೇ ಎಂದು ಪರಿಶೀಲಿಸಿಕೊಳ್ಳಬೇಕಾಗಿದೆ. ಯಾವ ಯಾವ ರೈತರ ಬಳಿ ಕೊಳವೆ ಬಾವಿಗಳಿವೆಯೊ ಅವರಿಗೆ ಮೇವಿನ ಬೀಜಗಳನ್ನು ನೀಡಿ ಮೇವು ಬೆಳೆಯುವಂತೆ ಉತ್ತೇಜನ ನೀಡಬೇಕು.
ಚಾಮರಾಜನಗರದಲ್ಲಿ ವಾಡಿಕೆ ಮಳೆ 193 ಮಿ.ಮೀ ಆಗಬೇಕಿತ್ತು, ಆದರೆ ಸುರಿದಿರುವುದು ಕೇವಲ 87 ಮಿ.ಮೀ ಮಳೆ. ಇಲ್ಲೂ ಕೂಡ ಶೇ. 55 ರಷ್ಟು ಮಳೆ ಕೊರತೆಯಾಗಿದ್ದು, ಜಿಲ್ಲೆ 'Deficit' ವರ್ಗದಲ್ಲಿದೆ. ವಿಶೇಷವಾಗಿ ಆಗಸ್ಟ್ ತಿಂಗಳಿನಲ್ಲಿ ಶೇ. 76 ರಷ್ಟು ಭಾರಿ ಮಳೆ ಕೊರತೆ ಉಂಟಾಗಿದೆ.
ಜೂನ್ 1 ರಿಂದ ಆಗಸ್ಟ್ 31 ರವರೆಗಿನ ಮುಂಗಾರು ಮಳೆಯ ಅಂಕಿ-ಅಂಶಗಳನ್ನು ಗಮನಿಸಿದರೆ, ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲದಲ್ಲಿ ಅತಿ ಹೆಚ್ಚು ಅಂದರೆ ಶೇ. 67 ರಷ್ಟು ಮಳೆ ಕೊರತೆಯಾಗಿದೆ ಹಾಗೂ ಯಳಂದೂರಿನಲ್ಲಿ ಶೇ. 65 ರಷ್ಟು ಮಳೆ ಕೊರತೆಯಾಗಿದೆ. ಮೈಸೂರು ಜಿಲ್ಲೆಯ ಕೆ.ಆರ್. ನಗರ ಹಾಗೂ ಟಿ. ನರಸೀಪುರದಲ್ಲಿ ಶೇ. 64 ರಷ್ಟು ಮಳೆ ಕೊರತೆಯಾಗಿದೆ. ಚಾಮರಾಜನಗರ ಜಿಲ್ಲೆಯ ಎಲ್ಲಾ 5 ತಾಲೂಕುಗಳನ್ನು (ಚಾಮರಾಜನಗರ, ಗುಂಡ್ಲುಪೇಟೆ, ಕೊಳ್ಳೇಗಾಲ, ಹನೂರು, ಯಳಂದೂರು) 'ತೀವ್ರ' (Severe) ಬರಪೀಡಿತ ಎಂದು ಸರ್ಕಾರ ಈಗಾಗಲೇ ಘೋಷಿಸಿದೆ.
ಚಾಮರಾಜನಗರ ಜಿಲ್ಲೆಯ 1 ತಾಲೂಕಿನ 17 ಗ್ರಾಮ ಪಂಚಾಯತಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆಯಿದೆ. ಇಲ್ಲಿ 48 ಗ್ರಾಮಗಳಿಗೆ 48 ಟ್ಯಾಂಕರ್ಗಳ ಮೂಲಕ ನೀರು ಪೂರೈಸಲಾಗುತ್ತಿದ್ದು, 11 ಖಾಸಗಿ ಬೋರ್ವೆಲ್ಗಳನ್ನು ಬಾಡಿಗೆಗೆ ಪಡೆಯಲಾಗಿದೆ ಹಾಗೂ 11 ಗ್ರಾಮಗಳಿಗೆ ನೀರು ಪೂರೈಸಲಾಗುತ್ತಿದೆ. ಚಾಮರಾಜನಗರದ 1 ನಗರ ಸ್ಥಳೀಯ ಸಂಸ್ಥೆಯ 4 ವಾರ್ಡ್ಗಳಿಗೆ 2 ಟ್ಯಾಂಕರ್ಗಳ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ.
ಚಾಮರಾಜನಗರ ಜಿಲ್ಲೆಯಲ್ಲಿ ಒಟ್ಟು 2,22,566 ಟನ್ ಮೇವು ಲಭ್ಯವಿದ್ದು, ಇದು ಸರಿಸುಮಾರು 23 ವಾರಗಳಿಗೆ ಸಾಕಾಗುತ್ತದೆ. ಆದರೆ, ಗುಂಡ್ಲುಪೇಟೆ ತಾಲೂಕಿನಲ್ಲಿ ಕೇವಲ 17 ವಾರಗಳಿಗೆ ಮಾತ್ರ ಮೇವು ಲಭ್ಯವಿದ್ದು, ಮುಂದಿನ ಮುಂಗಾರಿನವರೆಗೆ ಮೇವಿನ ಕೊರತೆಯಾಗದಂತೆ ತುರ್ತು ಯೋಜನೆಯನ್ನು ಸಿದ್ಧಪಡಿಸಬೇಕಿದೆ.
ಗುಂಡ್ಲುಪೇಟೆಯಲ್ಲಿ ಕೇವಲ 17 ವಾರಗಳಿಗೆ ಮಾತ್ರ ಮೇವು ಲಭ್ಯವಿರುವುದರಿಂದ, ಅಲ್ಲಿ ತಕ್ಷಣವೇ ಮೇವು ಬ್ಯಾಂಕ್ ಸ್ಥಾಪನೆಗೆ ಮತ್ತು ಮುಂದಿನ ಮುಂಗಾರಿನವರೆಗೆ ಮೇವು ಒದಗಿಸಲು ತುರ್ತು ಯೋಜನೆ ಮಾಡಿಕೊಳ್ಳಬೇಕಾಗಿದೆ. ಮೇವಿನ ಕಿಟ್ಗಳನ್ನು ವಿತರಿಸಲು ಪಶುಸಂಗೋಪನಾ ಇಲಾಖೆಗೆ ಸರ್ಕಾರ ಈಗಾಗಲೇ 25 ಕೋಟಿ ರೂ. ಗಳನ್ನು ಬಿಡುಗಡೆ ಮಾಡಿದೆ. (1/2) -
Dr. G Parameshwara
@DrParameshwara
ಇಂದು ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲ್ಲೂಕಿನ ರಂಗನಾಥಪುರ, ನಿಟ್ರೆ, ಸೋಮಹಳ್ಳಿ, ಶೀಗೆವಾಡಿ, ಚಾಮರಾಜನಗರ ತಾಲ್ಲೂಕಿನ ಮುಕ್ಕಡಹಳ್ಳಿ, ಹೆಗ್ಗೋಠಾರ ಗ್ರಾಮ ಹಾಗೂ ಹನೂರು ತಾಲ್ಲೂಕಿನ ಅಜ್ಜೀಪುರದ ಬರಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ ಬಳಿಕ ಹನೂರು ಪಟ್ಟಣದ ಡಾ. ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಪ್ರಗತಿ ಪರಿಶೀಲನಾ ಸಭೆ ನಡೆಸಿದೆ.
ಚಾಮರಾಜನಗರ ಜಿಲ್ಲೆಯ ಐದು ತಾಲ್ಲೂಕುಗಳು ತೀವ್ರ ಬರಪೀಡಿತ ಎಂದು ಘೋಷಣೆಯಾಗಿರುವ ಹಿನ್ನೆಲೆಯಲ್ಲಿ ಕುಡಿಯುವ ನೀರಿನ ಲಭ್ಯತೆ, ಜಾನುವಾರುಗಳಿಗೆ ಮೇವು ಲಭ್ಯತೆ, ಜನರಿಗೆ ಉದ್ಯೋಗ ನೀಡುವುದು ಸೇರಿದಂತೆ ವಿವಿಧ ವಿಷಯಗಳ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದೆ. ಬಳಿಕ ಜನರಿಗೆ ಯಾವುದೇ ಸಮಸ್ಯೆಯಾಗದಂತೆ ಅಗತ್ಯ ಮುನ್ನೆಚ್ಚರಿಕಾ ಕ್ರಮ ವಹಿಸಿ ಬರ ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸುವ ನಿಟ್ಟಿನಲ್ಲಿ ಅಧಿಕಾರಿಗಳಿಗೆ ಅಗತ್ಯ ಸೂಚನೆಗಳನ್ನು ನೀಡಿದೆ.
ಸಭೆಯಲ್ಲಿ ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವರಾದ ಪುಟ್ಟರಂಗ ಶೆಟ್ಟಿ, ಹನೂರು ಶಾಸಕರಾದ ಮಂಜುನಾಥ್, ಕೊಳ್ಳೇಗಾಲ ಶಾಸಕರಾದ ಕೃಷ್ಣಮೂರ್ತಿ, ಗುಂಡ್ಲುಪೇಟೆ ಶಾಸಕರಾದ ಗಣೇಶ್ ಪ್ರಸಾದ್, ನಂಜನಗೂಡು ಶಾಸಕರಾದ ದರ್ಶನ್ ಧ್ರುವನಾರಾಯಣ್, ಜಿಲ್ಲಾಧಿಕಾರಿಗಳಾದ ಶ್ರೀರೂಪ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
Today, after visiting drought-affected areas in Ranganathapura, Nitre, Somahalli and Shigevadi villages of Gundlupet taluk, Mukkadahalli and Heggothara villages of Chamarajanagar taluk, and Ajjipura in Hanur taluk, I chaired a progress review meeting at Dr. B.R. Ambedkar Bhavan in Hanur town.
With all five taluks of Chamarajanagar district declared severely drought-affected, I sought updates from officials on drinking water availability, fodder for livestock, employment generation and other key issues. I then directed officials to take all necessary precautionary measures and manage the drought situation effectively so that people do not face any hardship.
Chamarajanagar District In-charge Minister Puttaranga Shetty, Hanur MLA Manjunath, Kollegala MLA Krishnamurthy, Gundlupet MLA Ganesh Prasad, Nanjangud MLA Darshan Dhruvanarayan, Deputy Commissioner Shreeroopa and others were present at the meeting. -
Dr. G Parameshwara
@DrParameshwara
ಶ್ರಮಕ್ಕೆ ತಕ್ಕ ಪ್ರತಿಫಲದ ನಿರೀಕ್ಷೆಯಲ್ಲಿ ರೈತ ಬಿತ್ತಿದ ಬೆಳೆಗಳು ಬರ ಪರಿಸ್ಥಿತಿಯಿಂದ ಒಣಗಿ ನಿಂತಿವೆ. ತಾನು ಬೆಳೆದ ಬೆಳೆ ಕಣ್ಣೆದುರೇ ಒಣಗುತ್ತಿರುವ ಇಂತಹ ಕಷ್ಟದ ಸಂದರ್ಭದಲ್ಲಿ ರೈತರ ಕೈಹಿಡಿಯುವುದು ನಮ್ಮ ಆದ್ಯ ಕರ್ತವ್ಯವಾಗಿದೆ. ಅವರ ಸಂಕಷ್ಟವನ್ನು ಪರಿಹರಿಸುವ ನಿಟ್ಟಿನಲ್ಲಿ ನಮ್ಮ ಸರ್ಕಾರ ಶ್ರಮಿಸುತ್ತಿದೆ.
ಇಂದು ಗುಂಡ್ಲುಪೇಟೆ ತಾಲ್ಲೂಕಿನ ರಂಗನಾಥಪುರ, ನಿಟ್ರೆ, ಸೋಮಹಳ್ಳಿ, ಶೀಗೆವಾಡಿ ಹಾಗೂ ಚಾಮರಾಜನಗರ ತಾಲ್ಲೂಕಿನ ಮುಕ್ಕಡಹಳ್ಳಿ, ಹೆಗ್ಗೋಠಾರ ಗ್ರಾಮಗಳಿಗೆ ಭೇಟಿ ನೀಡಿ ಬರ ಪರಿಸ್ಥಿತಿಯನ್ನು ಪರಿಶೀಲಿಸಿ, ರೈತರ ಸಮಸ್ಯೆಯನ್ನು ಆಲಿಸಿದೆ. ಈ ತಿಂಗಳ 15ರವರೆಗೆ ಬರ ಪರಿಸ್ಥಿತಿಯ ಸಮಗ್ರ ವೀಕ್ಷಣೆ ನಡೆಸಿ, ವಾಸ್ತವಾಂಶಗಳ ಆಧಾರದ ಮೇಲೆ ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸಲಿದ್ದೇವೆ.
ಕೇಂದ್ರ ಸರ್ಕಾರವು ರಾಜ್ಯದ ಪರಿಸ್ಥಿತಿಯನ್ನು ಅರ್ಥೈಸಿಕೊಂಡು ಶೀಘ್ರದಲ್ಲೇ ಬರ ಪರಿಹಾರ ಒದಗಿಸುತ್ತದೆ ಎಂಬ ನಿರೀಕ್ಷೆಯಲ್ಲಿದ್ದೇವೆ.
The crops sown by farmers with the hope of receiving a fair return for their hard work are withering due to the drought. At a time when farmers are watching their crops dry up before their eyes, standing by them and supporting them is our foremost responsibility. Our government is working to address their distress.
Today, I visited Ranganathapura, Nitre, Somahalli and Shigevadi villages in Gundlupet taluk, and Mukkadahalli and Heggothara villages in Chamarajanagar taluk, reviewed the drought situation and listened to the concerns of farmers. We will continue a comprehensive assessment of the drought situation until the 15th of this month and submit a report to the Union Government based on the ground realities.
We expect the Union Government to understand the situation in Karnataka and release drought relief at the earliest. -
Dr. G Parameshwara
@DrParameshwara
ಕೇಂದ್ರ ಸರ್ಕಾರ ಕರ್ನಾಟಕದ ವಿಚಾರದಲ್ಲಿ ತೋರುತ್ತಿರುವ ಮಲತಾಯಿ ಧೋರಣೆ ಆಕ್ಷೇಪಾರ್ಹ. ಬರ ಪರಿಸ್ಥಿತಿಯಿಂದ ಕಳೆದ ವರ್ಷ ಕರ್ನಾಟಕಕ್ಕೆ ಸಂಭವಿಸಿದ ಬೆಳೆಹಾನಿ ಪ್ರಮಾಣ ₹39,000 ಕೋಟಿಗೂ ಅಧಿಕ. ಕೇಂದ್ರ ಸರ್ಕಾರದಿಂದ ಬರ ಪರಿಹಾರದ ನಿರೀಕ್ಷೆಯಲ್ಲಿ ರಾಜ್ಯ ಸರ್ಕಾರ ₹18,000 ಕೋಟಿ ಅನುದಾನಕ್ಕೆ ಮನವಿ ಮಾಡಿತ್ತು. ಆದರೆ, ಕೇಂದ್ರದಿಂದ ದೊರೆತಿದ್ದು ಕೇವಲ ₹3,500 ಕೋಟಿ. ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ಬಳಿಕ ಅಲ್ಪ ಮೊತ್ತದ ಪರಿಹಾರ ಒದಗಿಸಲಾಗಿತ್ತು.
ಪ್ರಸಕ್ತ ಸಾಲಿನಲ್ಲೂ ಬರ ಪರಿಸ್ಥಿತಿ ತೀವ್ರವಾಗಿದ್ದು, ಅಧಿಕ ಪ್ರಮಾಣದ ಬೆಳೆ ನಷ್ಟ ಸಂಭವಿಸಿದೆ. ಈಗಾಗಲೇ ರಾಜ್ಯದ 101 ತಾಲ್ಲೂಕುಗಳನ್ನು ಬರ ಪೀಡಿತ ಪ್ರದೇಶವೆಂದು ಘೋಷಿಸಲಾಗಿದ್ದು, ಪರಿಶೀಲನೆ ಕಾರ್ಯ ನಡೆಯುತ್ತಿದೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ತಾಲ್ಲೂಕುಗಳು ಸೇರ್ಪಡೆಗೊಳ್ಳುವ ಸಂಭವವಿದೆ. ಈ ಹಿನ್ನೆಲೆ ಕನ್ನಡಿಗರ ಸಂಕಷ್ಟವನ್ನು ಅರ್ಥೈಸಿಕೊಂಡು ಅಗತ್ಯ ಪರಿಹಾರ ಧನವನ್ನು ಬಿಡುಗಡೆ ಮಾಡಬೇಕು. ಕೇಂದ್ರ ಸರ್ಕಾರವು ಹಿಂದಿನ ವರ್ಷಗಳಂತೆ ಈ ಬಾರಿಯೂ ಅಸಡ್ಡೆ ಮಾಡದೆ ರೈತರ ನೆರವಿಗೆ ನಿಲ್ಲಬೇಕು.
The Centre’s discriminatory approach towards Karnataka is unacceptable. Last year, the State suffered crop losses of more than ₹39,000 crore due to drought. The State Government sought ₹18,000 crore in drought relief from the Centre, but received only ₹3,500 crore - and even that limited relief came only after Karnataka approached the Supreme Court.
This year too, the drought situation is severe and crop losses have been extensive. So far, 101 taluks have been declared drought-affected, and assessments are still underway. More taluks are likely to be added in the coming days.
The Union Government must understand the distress faced by the people of Karnataka and release adequate drought relief. Unlike in previous years, the Centre must not remain indifferent and should stand by our farmers in this hour of need. -
Dr. G Parameshwara
@DrParameshwara
ಸಮಯ, ಸಂದರ್ಭಗಳು ಯಾವುದೇ ಇರಲಿ, ನಾವು ರೈತರ ಜೊತೆಗಿದ್ದೇವೆ. ಅವರಿಗೆ ಬೆಂಬಲವಾಗಿ ನಿಲ್ಲುತ್ತೇವೆ.
This media couldn't be displayed. See it on the original post. -
Dr. G Parameshwara reposted
CM of Karnataka
@CMofKarnataka
ಜನಸಾಮಾನ್ಯರು ತಮ್ಮ ಸಮಸ್ಯೆಗಳನ್ನು ಹಿಡಿದುಕೊಂಡು ಬೆಂಗಳೂರಿನ ವಿಧಾನಸೌಧಕ್ಕೋ, ಕಚೇರಿಗಳಿಗೋ ಅಲೆದಾಡುವ ದಿನಗಳಿಗೆ ಕರ್ನಾಟಕ ಸರ್ಕಾರವು ತೆರೆ ಎಳೆಯುತ್ತಿದೆ. ಅಧಿಕಾರ ವಿಕೇಂದ್ರೀಕರಣದ ಆಶಯದೊಂದಿಗೆ, ಜನರ ಸಮಸ್ಯೆಗಳಿಗೆ ಸ್ಥಳದಲ್ಲೇ ತ್ವರಿತ ಪರಿಹಾರ ನೀಡುವ ‘ಪ್ರಜಾಸೇವಾ ಅಭಿಯಾನ’ಕ್ಕೆ ಸೆಪ್ಟೆಂಬರ್ 5 ರಂದು ವಿಜಯನಗರದ ಕೂಡ್ಲಿಗಿಯಲ್ಲಿ ಚಾಲನೆ ಸಿಗುತ್ತಿದೆ. ಪ್ರಜಾಪ್ರಭುತ್ವದಲ್ಲಿ ಪ್ರಜೆಗಳೇ ಪ್ರಭುಗಳು. ಜನರ ಬಳಿಗೆ ನೇರವಾಗಿ ಸರಕಾರ ಬರುವ ಐತಿಹಾಸಿಕ ಹೆಜ್ಜೆ ಇದು.
-
Dr. G Parameshwara
@DrParameshwara
Standing by people during the hardship of drought is our responsibility. Protecting lives, crops and livestock by taking every necessary measure is a top priority for our government.
In this regard, I reviewed the drought situation in K.R. Nagar, Hunsur and Varuna constituencies of Mysuru district on Tuesday. I assessed the severity of the drought firsthand and listened to the difficulties being faced by people. Later, I held a progress review meeting with officials and directed them to ensure adequate fodder for livestock and that basic needs such as drinking water, food and employment are available to people without any disruption.
Our government is committed to ensuring food for every family, drinking water for every person, and adequate fodder and water for livestock. -
Dr. G Parameshwara
@DrParameshwara
ಬರದ ಸಂಕಷ್ಟದಲ್ಲಿ ಜನರಿಗೆ ಆಸರೆಯಾಗಿ ನಿಲ್ಲುವುದು ನಮ್ಮ ಹೊಣೆಗಾರಿಕೆ. ಜನರ ಬದುಕು, ಬೆಳೆ ಹಾಗೂ ಜಾನುವಾರುಗಳ ರಕ್ಷಣೆಗೆ ಅಗತ್ಯವಿರುವ ಎಲ್ಲ ಕ್ರಮಗಳನ್ನು ಕೈಗೊಳ್ಳುವುದು ನಮ್ಮ ಸರ್ಕಾರದ ಮೊದಲ ಆದ್ಯತೆಯಾಗಿದೆ.
ಈ ನಿಟ್ಟಿನಲ್ಲಿ ಮಂಗಳವಾರ ಮೈಸೂರು ಜಿಲ್ಲೆಯ ಕೆ.ಆರ್. ನಗರ, ಹುಣಸೂರು ಹಾಗೂ ವರುಣಾ ಕ್ಷೇತ್ರಗಳಲ್ಲಿ ಬರ ಪರಿಶೀಲನೆ ನಡೆಸಿದೆ. ಬರದ ತೀವ್ರತೆಯನ್ನು ಖುದ್ದಾಗಿ ಅರಿತು, ಜನರು ಎದುರಿಸುತ್ತಿರುವ ಕಷ್ಟಗಳನ್ನು ಆಲಿಸಿದೆ. ಬಳಿಕ ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನಾ ಸಭೆ ನಡೆಸಿ, ಜಾನುವಾರುಗಳಿಗೆ ಮೇವು ಲಭ್ಯವಾಗುವಂತೆ, ಜನರಿಗೆ ಕುಡಿಯುವ ನೀರು, ಆಹಾರ ಹಾಗೂ ಉದ್ಯೋಗದಂತಹ ಮೂಲಭೂತ ಅಗತ್ಯಗಳಿಗೆ ಕೊರತೆಯಾಗದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಿದೆ.
ಪ್ರತಿಯೊಂದು ಕುಟುಂಬಕ್ಕೂ ಆಹಾರ, ಪ್ರತಿಯೊಬ್ಬರಿಗೂ ಕುಡಿಯುವ ನೀರು ಹಾಗೂ ಜಾನುವಾರುಗಳಿಗೆ ಅಗತ್ಯ ಮೇವು ಮತ್ತು ನೀರಿನ ವ್ಯವಸ್ಥೆ ಕಲ್ಪಿಸುವುದು ನಮ್ಮ ಸರ್ಕಾರದ ಬದ್ಧತೆ. -
Dr. G Parameshwara
@DrParameshwara
ರಾಜ್ಯದಲ್ಲಿ ತೀವ್ರ ಬರ ಪರಿಸ್ಥಿತಿ ಉಂಟಾಗಿದ್ದು, ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಮಳೆ ಅಭಾವದಿಂದ ರೈತರ ಬದುಕು ದುಸ್ತರವಾಗಿದ್ದು, ಕುಡಿಯುವ ನೀರು, ಜಾನುವಾರುಗಳಿಗೆ ಮೇವು ಹಾಗೂ ಜೀವನೋಪಾಯದಂತಹ ಮೂಲಭೂತ ಅಗತ್ಯಗಳಿಗೂ ಜನರು ಪರದಾಡುವಂತಾಗಿದೆ. ಈ ಹಿನ್ನೆಲೆಯಲ್ಲಿ ಮಂಗಳವಾರ ಮೈಸೂರು ಜಿಲ್ಲೆಯ ವಿವಿಧ ವಿಧಾನಸಭಾ ಕ್ಷೇತ್ರಗಳಲ್ಲಿ ಸಂಚರಿಸಿ, ರೈತರ ಜಮೀನುಗಳಿಗೆ ಭೇಟಿ ನೀಡಿ, ಬರ ಪರಿಸ್ಥಿತಿ ವೀಕ್ಷಿಸಿ, ಖುದ್ದು ರೈತರಿಂದಲೇ ಅವರ ನೋವು - ಅಹವಾಲನ್ನು ಆಲಿಸಿದೆ.
ಜೂನ್ನಿಂದ ಆಗಸ್ಟ್ ಅಂತ್ಯದವರೆಗೆ ಜಿಲ್ಲೆಯಲ್ಲಿ 310 ಮಿ.ಮೀ. ವಾಡಿಕೆ ಮಳೆಯಾಗಬೇಕಿದ್ದರೂ, ಕೇವಲ 140 ಮಿ.ಮೀ. ಮಳೆಯಾಗಿದೆ. ಇದರಿಂದ ಶೇ.55ರಷ್ಟು ತೀವ್ರ ಮಳೆ ಅಭಾವ ಉಂಟಾಗಿದ್ದು, ಜಿಲ್ಲೆಯ 8 ತಾಲೂಕುಗಳನ್ನು ಬರಪೀಡಿತ ತಾಲೂಕುಗಳೆಂದು ಘೋಷಿಸಲಾಗಿದೆ. ಸಂಕಷ್ಟದಲ್ಲಿರುವ ರೈತರು ಮತ್ತು ಜನರ ನೆರವಿಗೆ ತಕ್ಷಣ ಸ್ಪಂದಿಸಿ, ಅಗತ್ಯ ಪರಿಹಾರ ಹಾಗೂ ಮೂಲಭೂತ ಸೌಲಭ್ಯಗಳನ್ನು ಒದಗಿಸುವುದು ನಮ್ಮ ಸರ್ಕಾರದ ಆದ್ಯತೆಯಾಗಿದೆ.
Karnataka is facing a severe drought, causing immense hardship to people across the State. The lack of rainfall has badly affected farmers, while access to basic needs such as drinking water, fodder for livestock and livelihood opportunities has also become a major concern.
Against this backdrop, on Tuesday I visited several Assembly constituencies in Mysuru district, inspected drought-affected farmlands and personally heard the concerns and grievances of farmers.
Between June and the end of August, Mysuru district should have received 310 mm of rainfall, but received only 140 mm, resulting in a severe deficit of 55%. Eight taluks in the district have consequently been declared drought-affected.
Our government’s priority is to respond swiftly to the distress faced by farmers and people, and ensure necessary relief and basic amenities are provided without delay. -
Dr. G Parameshwara
@DrParameshwara
Severe crop damage has been observed across Gundlupet taluk. Maize, sunflower, sugarcane and even the Nanjangud banana, which is widely grown in this region, have dried up due to deficient rainfall. Compared with other drought-affected parts of the State, Gundlupet has suffered particularly severe crop losses.
Only some farmers have insured their crops, while many others do not have any insurance coverage. As a result, farmers are facing serious distress. Appropriate relief will be provided to those who have suffered crop losses.
The Chief Minister has also inspected drought-affected areas in Gadag district. I have already visited drought-hit areas in North Karnataka along with him, and I will continue to inspect more areas in North Karnataka in the coming days. From what we have observed, the drought situation this year is more severe than in previous years. We will continue the drought inspections until the 15th and thereafter submit a report to the Union Government.
Last year, Karnataka suffered crop losses of around ₹39,000 crore due to drought. We had then sought around ₹18,000 crore in relief, but the Union Government did not respond. Eventually, we had to approach the Supreme Court. It was only after the Supreme Court’s direction that the Centre released just ₹3,500 crore.
This year too, the State is facing a severe drought situation. I urge the Union Government to release adequate relief based on the report to be submitted by the State Government.
- My response to the media after visiting and inspecting drought-affected areas in Ranganathapura, Nitre, Somahalli and Shigevadi villages of Gundlupet taluk, and Mukkadahalli and Heggothara villages of Chamarajanagar taluk. -
Dr. G Parameshwara
@DrParameshwara
ಗುಂಡ್ಲುಪೇಟೆ ತಾಲ್ಲೂಕಿನಲ್ಲಿ ತೀವ್ರವಾಗಿ ಬೆಳೆ ಹಾನಿಯಾಗಿರುವುದು ಕಂಡುಬಂದಿದೆ. ಮೆಕ್ಕೆಜೋಳ, ಸೂರ್ಯಕಾಂತಿ, ಕಬ್ಬು ಮತ್ತು ಈ ಭಾಗದಲ್ಲಿ ಜನಪ್ರಿಯವಾಗಿರುವ ನಂಜನಗೂಡು ಬಾಳೆಯ ಬೆಳೆ ಕೂಡ ಮಳೆ ಕೊರತೆಯಿಂದಾಗಿ ಒಣಗಿದೆ. ರಾಜ್ಯದಲ್ಲಿ ಬರ ಪರಿಸ್ಥಿತಿ ಇರುವ ಬೇರೆ ಭಾಗಗಳಿಗೆ ಹೋಲಿಸಿದರೆ ಗುಂಡ್ಲುಪೇಟೆಯಲ್ಲಿ ಬರದಿಂದ ತೀವ್ರ ಪ್ರಮಾಣದಲ್ಲಿ ಬೆಳೆ ಹಾನಿಯುಂಟಾಗಿದೆ.
ಕೆಲವು ರೈತರು ಮಾತ್ರ ಬೆಳೆಗಳಿಗೆ ವಿಮೆ ಮಾಡಿಸಿದ್ದಾರೆ. ಇನ್ನು ಹಲವು ರೈತರು ಯಾವುದೇ ರೀತಿಯ ವಿಮೆಯನ್ನು ಹೊಂದಿಲ್ಲ. ಹೀಗಾಗಿ ರೈತರು ಸಂಕಷ್ಟದಲ್ಲಿ ಸಿಲುಕಿಕೊಂಡಿದ್ದಾರೆ. ಬೆಳೆಹಾನಿ ಅನುಭವಿಸುತ್ತಿರುವ ರೈತರಿಗೆ ಸೂಕ್ತ ಪರಿಹಾರ ಕಲ್ಪಿಸಲಾಗುವುದು.
ಮುಖ್ಯಮಂತ್ರಿಗಳು ಕೂಡ ಗದಗ ಜಿಲ್ಲೆಯ ಬರ ಪರಿಶೀಲನೆ ನಡೆಸಿದ್ದಾರೆ. ನಾನು ಕೂಡ ಅವರೊಂದಿಗೆ ಉತ್ತರ ಕರ್ನಾಟಕ ಭಾಗದಲ್ಲಿ ಈಗಾಗಲೇ ಬರ ವೀಕ್ಷಣೆ ಮಾಡಿದ್ದೇನೆ. ಮುಂದಿನ ದಿನಗಳಲ್ಲಿಯೂ ಉತ್ತರ ಕರ್ನಾಟಕ ಭಾಗದಲ್ಲೂ ಬರ ಪರಿಶೀಲನೆ ನಡೆಸಲಿದ್ದೇನೆ. ಪರಿಸ್ಥಿತಿಯನ್ನು ಅವಲೋಕಿಸಿದರೆ ಕಳೆದೆಲ್ಲ ವರ್ಷಕ್ಕಿಂತ ಈ ಬಾರಿ ಭೀಕರ ಬರಗಾಲ ಎದುರಾಗಿದೆ. ಈ ಹಿನ್ನೆಲೆ 15ನೇ ತಾರೀಕಿನವರೆಗೆ ಬರ ವೀಕ್ಷಣೆ ನಡೆಸಿ ಕೇಂದ್ರಕ್ಕೆ ವರದಿ ಸಲ್ಲಿಸಲಾಗುವುದು.
ಕಳೆದ ವರ್ಷ ಬರದಿಂದ ರಾಜ್ಯ 39,000 ಕೋಟಿ ರೂಪಾಯಿಗಳಷ್ಟು ಬೆಳೆಹಾನಿಯನ್ನು ಅನುಭವಿಸಿತ್ತು. ಆಗ ನಾವು 18,000 ಕೋಟಿ ರೂಪಾಯಿಗಳಷ್ಟು ಪರಿಹಾರ ನೀಡುವಂತೆ ಮನವಿ ಮಾಡಿದ್ದೆವು. ಆದರೆ, ಕೇಂದ್ರ ಸರ್ಕಾರ ಸ್ಪಂದಿಸಿರಲಿಲ್ಲ. ಕೊನೆಗೆ ನಾವು ಸುಪ್ರೀಂಕೋರ್ಟ್ ಮೆಟ್ಟಿಲೇರಬೇಕಾಯ್ತು. ಸರ್ವೋಚ್ಛ ನ್ಯಾಯಾಲಯ ನಿರ್ದೇಶನ ನೀಡಿದ ನಂತರ ಕೇಂದ್ರ ಕೇವಲ 3,500 ಕೋಟಿ ರೂಪಾಯಿಗಳ ಅನುದಾನ ನೀಡಿತ್ತು. ಈ ಬಾರಿ ಕೂಡ ರಾಜ್ಯದಲ್ಲಿ ತೀವ್ರ ಬರಗಾಲದ ಪರಿಸ್ಥಿತಿ ಇದ್ದು, ಸರ್ಕಾರ ಸಲ್ಲಿಸುವ ವರದಿಗೆ ಅನುಗುಣವಾಗಿ ಕೇಂದ್ರ ಪರಿಹಾರ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸುತ್ತೇನೆ.
- ಗುಂಡ್ಲುಪೇಟೆ ತಾಲ್ಲೂಕಿನ ರಂಗನಾಥಪುರ, ನಿಟ್ರೆ, ಸೋಮಹಳ್ಳಿ, ಶೀಗೆವಾಡಿ ಹಾಗೂ ಚಾಮರಾಜನಗರ ತಾಲ್ಲೂಕಿನ ಮುಕ್ಕಡಹಳ್ಳಿ, ಹೆಗ್ಗೋಠಾರ ಗ್ರಾಮಗಳಿಗೆ ಭೇಟಿ ನೀಡಿ ಬರ ಪರಿಶೀಲನೆ ನಡೆಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದೆ. -
Dr. G Parameshwara
@DrParameshwara
ಇಂದು ಚಾಮರಾಜನಗರ ಜಿಲ್ಲಾ ಪ್ರವಾಸದ ವೇಳೆ ಗುಂಡ್ಲುಪೇಟೆ ತಾಲ್ಲೂಕಿನ ಬೇಗೂರಿನಲ್ಲಿ ರೈತ ಮುಖಂಡರ ಅಹವಾಲುಗಳನ್ನು ಸ್ವೀಕರಿಸಿ, ಸಮಸ್ಯೆಯನ್ನು ಆಲಿಸಿದೆ.
-
Dr. G Parameshwara
@DrParameshwara
ಇಂದು ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ರಂಗನಾಥಪುರ, ನಿಟ್ರೆ, ಸೋಮಹಳ್ಳಿ, ಶೀಗೆವಾಡಿ ಹಾಗೂ ಚಾಮರಾಜನಗರ ತಾಲೂಕಿನ ಮುಕ್ಕಡಹಳ್ಳಿ, ಹೆಗ್ಗೋಠಾರ ಗ್ರಾಮಗಳ ವಿವಿಧೆಡೆ ಬರ ವೀಕ್ಷಣೆ ನಡೆಸಿದೆ.
ಕೃಷಿ ಮತ್ತು ತೋಟಗಾರಿಕೆ ಬೆಳೆಹಾನಿ, ಜಾನುವಾರುಗಳಿಗೆ ಮೇವಿನ ಕೊರತೆ, ವಿಬಿ ಜಿ ರಾಮ್ ಜಿ ಯೋಜನೆಯಡಿ ಜನರಿಗೆ ಉದ್ಯೋಗ ನೀಡಿ ಕೈಗೊಂಡಿರುವ ಕಾಮಗಾರಿಯನ್ನು ಖುದ್ದು ವೀಕ್ಷಿಸಿ, ರೈತರ ಸಮಸ್ಯೆಯನ್ನು ಆಲಿಸಿದೆ. ನಿಮ್ಮೊಂದಿಗೆ ನಮ್ಮ ಸರ್ಕಾರ ಇರುವುದಾಗಿ ಭರವಸೆಯನ್ನು ನೀಡಿದೆ.
ಈ ವೇಳೆ ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವರಾದ ಪುಟ್ಟರಂಗ ಶೆಟ್ಟಿ, ಗುಂಡ್ಲುಪೇಟೆ ಶಾಸಕರಾದ ಗಣೇಶ್ ಪ್ರಸಾದ್, ನಂಜನಗೂಡು ವಿಧಾನಸಭಾ ಕ್ಷೇತ್ರದ ಶಾಸಕರಾದ ದರ್ಶನ್ ಧ್ರುವನಾರಾಯಣ್, ಚಾಮರಾಜನಗರ ಜಿಲ್ಲಾಧಿಕಾರಿಗಳಾದ ಶ್ರೀರೂಪ ಸೇರಿದಂತೆ ಇತರರು ಜೊತೆಗಿದ್ದರು.
Today, I visited several drought-affected areas in Ranganathapura, Nitre, Somahalli and Shigevadi villages of Gundlupet taluk, and Mukkadahalli and Heggothara villages of Chamarajanagar taluk.
I personally inspected the damage to agricultural and horticultural crops, the shortage of fodder for livestock, and works being carried out under the VB-G RAM G scheme to provide employment to people. I also listened to the concerns of farmers and assured them that our government stands with them during this difficult time.
Chamarajanagar District In-charge Minister Puttaranga Shetty, Gundlupet MLA Ganesh Prasad, Nanjangud MLA Darshan Dhruvanarayan, Chamarajanagar Deputy Commissioner Shreeroopa and others accompanied me during the visit. -
Dr. G Parameshwara
@DrParameshwara
ಮೈಸೂರು ಜಿಲ್ಲಾ ಪ್ರವಾಸದ ಎರಡನೇ ದಿನವಾದ ಇಂದು ಪುಣ್ಯಕ್ಷೇತ್ರ ನಂಜನಗೂಡಿನ ಶ್ರೀ ಶ್ರೀಕಂಠೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದೆ.
ಶ್ರಿಕಂಠೇಶ್ವರನಿಗೆ ವಿಶೇಷ ಪೂಜೆ ಸಲ್ಲಿಸಿ, ರಾಜ್ಯದ ಜನತೆಗೆ ಒಳಿತಾಗಲಿ, ಬರ ತಲೆದೋರಿರುವ ಈ ಸಂದರ್ಭದಲ್ಲಿ ಜೀವಸಂಕುಲಕ್ಕೆ ಯಾವುದೇ ಸಮಸ್ಯೆಯಾಗದಂತೆ ಎಲ್ಲರೂ ನೆಮ್ಮದಿ, ಸಂತೋಷದಿಂದ ಜೀವನ ನಡೆಸುವಂತಾಗಲಿ ಎಂದು ಪ್ರಾರ್ಥಿಸಿದೆ.
ಈ ಸಂದರ್ಭದಲ್ಲಿ ನಂಜನಗೂಡು ವಿಧಾನಸಭಾ ಕ್ಷೇತ್ರದ ಶಾಸಕರಾದ ದರ್ಶನ್ ಧ್ರುವನಾರಾಯಣ್ ಜೊತೆಗಿದ್ದರು. -
Dr. G Parameshwara
@DrParameshwara
ಇಂದು ನಂಜನಗೂಡು ತಾಲ್ಲೂಕಿನ ಗಟ್ಟವಾಡಿ ಗ್ರಾಮಕ್ಕೆ ಭೇಟಿ ನೀಡಿ, ಹಾನಿಗೊಳಗಾದ ರೈತರ ಜಮೀನುಗಳಿಗೆ ತೆರಳಿ ಬರ ವೀಕ್ಷಣೆ ಮಾಡಿದೆ.
ಗ್ರಾಮದಲ್ಲಿ ಮಕ್ಕೆಜೋಳ ಮತ್ತು ಸೂರ್ಯಕಾಂತಿ ಬೆಳೆ ಬೆಳೆದಿದ್ದ ರೈತರಾದ ಶಿವಬಸಪ್ಪ ಮತ್ತು ಮಹದೇವಪ್ಪ ಅವರ ಜಮೀನುಗಳಿಗೆ ಭೇಟಿ ನೀಡಿ ಮಳೆ ಕೊರತೆಯಿಂದಾಗಿ ಬೆಳೆ ಒಣಗಿ ನಾಶವಾಗಿರುವುದನ್ನು ಪರಿಶೀಲಿಸಿದೆ. ಈ ವೇಳೆ ಬೆಳೆ ಹಾನಿಯಿಂದ ಸಂಕಷ್ಟಕ್ಕೀಡಾಗಿರುವ ರೈತರು ತಾವು ಸಾಲ ಮಾಡಿ ಬೆಳೆ ಬೆಳೆದಿದ್ದು, ಈಗ ದಿಕ್ಕು ತೋಚದಂತಾಗಿದೆ ಎಂದು ತಮ್ಮ ಸಮಸ್ಯೆಯನ್ನು ಹೇಳಿಕೊಂಡರು.
ರೈತರ ಸಮಸ್ಯೆ ಆಲಿಸಿ ಕೂಡಲೇ ಸ್ಥಳದಲ್ಲಿದ್ದ ಅಧಿಕಾರಿಗಳಿಂದ ತಾಲ್ಲೂಕಿನಲ್ಲಿರುವ ಬರ ಪರಿಸ್ಥಿತಿಯ ಬಗ್ಗೆ ಹೆಚ್ಚಿನ ಮಾಹಿತಿ ಪಡೆದುಕೊಂಡೆ. ತಾಲ್ಲೂಕಿನಲ್ಲಿ ವಾರ್ಷಿಕ 4,500 ಹೆಕ್ಟೇರ್ ಪ್ರದೇಶದಲ್ಲಿ ಅಲಸಂದೆ, 4,200 ಹೆಕ್ಟೇರ್ ಪ್ರದೇಶದಲ್ಲಿ ಉದ್ದು, 3,500 ಹೆಕ್ಟೇರ್ ಪ್ರದೇಶದಲ್ಲಿ ಹೆಸರು, 3,400 ಹೆಕ್ಟೇರ್ ಪ್ರದೇಶದಲ್ಲಿ ಮೆಕ್ಕೆಜೋಳ, 8,000 ಹೆಕ್ಟೇರ್ ಪ್ರದೇಶದಲ್ಲಿ ಹತ್ತಿ ಬೆಳೆಯಲಾಗುತ್ತದೆ. ಆದರೆ, ಈ ಬಾರಿ ಮಳೆ ಕೊರತೆಯಿಂದ ತಾಲ್ಲೂಕಿನಲ್ಲಿ 3,500 ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಬಿತ್ತನೆಯಾಗಿದೆ. ಈಗ ಬಿತ್ತನೆಯಾಗಿದ್ದ ಆ ಬೆಳೆಯೂ ಕೂಡ ತೀವ್ರ ಬರದಿಂದ ನಾಶವಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.
ರೈತರು ಹಾಗೂ ಅಧಿಕಾರಿಗಳಿಂದ ವಸ್ತುಸ್ಥಿತಿಯ ಬಗ್ಗೆ ಸಂಪೂರ್ಣ ಮಾಹಿತಿ ಪಡೆದ ನಂತರ ಶೀಘ್ರವೇ ಪರಿಹಾರ ಒದಗಿಸಲು ಕ್ರಮ ಕೈಗೊಳ್ಳುವ ವಾಗ್ಧಾನ ನೀಡಿದ್ದೇನೆ. ರೈತರಿಗೆ ಬೆಂಬಲವಾಗಿ ನಮ್ಮ ಸರ್ಕಾರ ಸದಾ ಜೊತೆಗಿರಲಿದೆ. -
Dr. G Parameshwara
@DrParameshwara
ಇಂದು ಮೈಸೂರು ಜಿಲ್ಲಾ ಪ್ರವಾಸದ ವೇಳೆ ನಂಜನಗೂಡು ತಾಲೂಕಿನ ಬರಪೀಡಿತ ಪ್ರದೇಶಗಳಾದ ಚಿಕ್ಕ ಕವಲಂದೆ, ಗಟ್ಟವಾಡಿ ಗ್ರಾಮಗಳಿಗೆ ಭೇಟಿ ನೀಡಿ, ಪರಿಶೀಲನೆ ನಡೆಸಿದೆ.
ಜೋಳ, ಸೂರ್ಯಕಾಂತಿ ಬಿತ್ತನೆಯಾಗಿರುವ ಜಮೀನುಗಳನ್ನು ಖುದ್ದು ವೀಕ್ಷಿಸಿ, ರೈತರೊಂದಿಗೆ ಸಮಾಲೋಚನೆ ನಡೆಸಿ ಸಮಸ್ಯೆಯನ್ನು ಆಲಿಸಿದೆ.
ಈ ಸಂದರ್ಭದಲ್ಲಿ ನಂಜನಗೂಡು ಶಾಸಕರಾದ ದರ್ಶನ್ ಧ್ರುವನಾರಾಯಣ್, ಜಿಲ್ಲಾಧಿಕಾರಿಗಳಾದ ಲಕ್ಷ್ಮೀಕಾಂತ್ ರೆಡ್ಡಿ, ಜಿಲ್ಲಾ ಪಂಚಾಯತ್ ಸಿಇಒ ಯುಕೇಶ್ ಕುಮಾರ್, ನಂಜನಗೂಡು ತಹಶೀಲ್ದಾರರು ಹಾಗೂ ಕೃಷಿ ಅಧಿಕಾರಿಗಳು ಜೊತೆಗಿದ್ದರು. -
Dr. G Parameshwara
@DrParameshwara
ನಿನ್ನೆ ಮೈಸೂರು ಜಿಲ್ಲೆಯ ಕೆ.ಆರ್. ನಗರ, ಹುಣಸೂರು ಹಾಗೂ ವರುಣಾ ವಿಧಾನಸಭಾ ಕ್ಷೇತ್ರಗಳ ವಿವಿಧ ಬರಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ, ಬರ ವೀಕ್ಷಣೆ ನಡೆಸಿದೆ.
ಆ ಬಳಿಕ ಮೈಸೂರು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಪ್ರಗತಿ ಪರಿಶೀಲನಾ ಸಭೆ ನಡೆಸಿ, ಬರ ನಿರ್ವಹಣೆ, ಜನ-ಜಾನುವಾರುಗಳಿಗೆ ಕುಡಿಯುವ ನೀರಿನ ಲಭ್ಯತೆ, ಜನರಿಗೆ ಉದ್ಯೋಗ ಸೇರಿದಂತೆ ವಿವಿಧ ವಿಷಯಗಳ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದು, ಅಗತ್ಯ ಸೂಚನೆಗಳನ್ನು ನೀಡಿದೆ.
ಈ ಕುರಿತಾದ ಮಾಧ್ಯಮ ವರದಿಗಳು ಹೀಗಿವೆ..
Yesterday, I visited several drought-affected areas in the K.R. Nagar, Hunsur and Varuna Assembly constituencies of Mysuru district and reviewed the situation on the ground.
Later, I chaired a progress review meeting at the Mysuru Zilla Panchayat hall, where I sought updates from officials on drought management, drinking water availability for people and livestock, employment and other key issues, and issued necessary directions.
Here are some media reports on the visit and review meeting.. -
Dr. G Parameshwara
@DrParameshwara
ಮಂಗಳವಾರ ಮೈಸೂರು ಜಿಲ್ಲಾ ಪ್ರವಾಸ ಕೈಗೊಂಡು, ಕೆ.ಆರ್. ನಗರ, ಹುಣಸೂರು ಹಾಗೂ ವರುಣಾ ವಿಧಾನಸಭಾ ಕ್ಷೇತ್ರಗಳ ವಿವಿಧ ಬರಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ, ವೀಕ್ಷಣೆ ನಡೆಸಿ, ಬಳಿಕ ಮಾಧ್ಯಮಕ್ಕೆ ಮಾತನಾಡಿದೆ.
ಅದಕ್ಕೂ ಮುನ್ನ ಕೆ.ಆರ್.ನಗರ ಕ್ಷೇತ್ರಕ್ಕೆ ಭೇಟಿ ನೀಡಿ, ಅಂಬೇಡ್ಕರ್ ಭವನದ ನಿರ್ಮಾಣದ ಕುರಿತು ಸ್ಥಳೀಯರಿಗಿದ್ದ ಗೊಂದಲಗಳನ್ನು ಮಾತುಕತೆಯ ಮೂಲಕ ಪರಿಹರಿಸಿದೆ.
ಈ ಕುರಿತಾದ ಪತ್ರಿಕಾ ವರದಿಗಳು ಹೀಗಿವೆ.. -
Dr. G Parameshwara
@DrParameshwara
ನಿನ್ನೆ ಕೆ.ಆರ್.ನಗರ ತಾಲ್ಲೂಕಿನ ಕಂಚುಗಾರ ಕೊಪ್ಪಲು ಗ್ರಾಮಕ್ಕೆ ಭೇಟಿ ನೀಡಿ, ಮಳೆ ಕೊರತೆಯಿಂದ ಬೆಳೆಗಳಿಗೆ ಉಂಟಾಗಿರುವ ಹಾನಿ ಹಾಗೂ ರೈತರ ಪರಿಸ್ಥಿತಿಯನ್ನು ಖುದ್ದಾಗಿ ಪರಿಶೀಲಿಸಿದೆ.
ಹೊಗೆಸೊಪ್ಪು, ರಾಗಿ ಸೇರಿದಂತೆ ವಿವಿಧ ಬೆಳೆಗಳಲ್ಲಿ ನಷ್ಟ ಅನುಭವಿಸುತ್ತಿರುವ ರೈತರಿಗೆ ಸೂಕ್ತ ಪರಿಹಾರ ಒದಗಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಕೆ.ಆರ್.ನಗರ ತಾಲೂಕನ್ನು ಈಗಾಗಲೇ ಬರಪೀಡಿತ ಪ್ರದೇಶವೆಂದು ಘೋಷಿಸಲಾಗಿದ್ದು, ಬರ ಪರಿಸ್ಥಿತಿಯ ಕುರಿತು ಕೇಂದ್ರ ಸರ್ಕಾರಕ್ಕೆ ಸದ್ಯದಲ್ಲೇ ವಿಸ್ತೃತ ಮನವಿ ಸಲ್ಲಿಸಲಾಗುವುದು.
ಕೇಂದ್ರದ ತಂಡ ಇಲ್ಲಿಗೆ ಬಂದು ಪರಿಶೀಲನೆ ನಡೆಸಿದ ಬಳಿಕ ನಿಯಮಾನುಸಾರ ಬರ ಪರಿಹಾರದ ಹಣ ಬಿಡುಗಡೆ ಮಾಡುವ ಪ್ರಕ್ರಿಯೆ ನಡೆಯಲಿದೆ. ಮಳೆ ಕೊರತೆಯ ತೀವ್ರತೆಯನ್ನು ಪರಿಗಣಿಸಿ, ಹೆಚ್ಚಿನ ತಾಲೂಕುಗಳನ್ನು ಬರಪೀಡಿತ ಪ್ರದೇಶಗಳೆಂದು ಘೋಷಣೆ ಮಾಡಲು ಇರುವ ನಿಯಮಗಳನ್ನು ಸಡಿಲಿಸುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲಾಗಿದೆ.
Visited Kanchugara Koppalu village in K.R. Nagar taluk and assessed the crop damage caused by deficient rainfall and the difficulties faced by farmers.
Necessary steps will be taken to provide appropriate relief to farmers who have lost tobacco, ragi and other crops. K.R. Nagar taluk has already been declared drought-affected, and a detailed memorandum will soon be submitted to the Union Government.
After assessment by a Central team, drought relief will be processed as per norms. We have also urged the Centre to relax the criteria so that more severely affected taluks can be declared drought-hit. -
Dr. G Parameshwara
@DrParameshwara
ಮೈಸೂರು ಜಿಲ್ಲೆಯ ಕೆ.ಆರ್. ನಗರ ತಾಲ್ಲೂಕಿನ ಸಮಗ್ರ ಅಭಿವೃದ್ಧಿಗೆ ಒತ್ತು ನೀಡಲಾಗಿದ್ದು, ಪ್ರಸ್ತುತ ₹6.50 ಕೋಟಿ ವೆಚ್ಚದಲ್ಲಿ ಅಂಬೇಡ್ಕರ್ ಭವನ ನಿರ್ಮಿಸಲಾಗುತ್ತಿದೆ. ಹೆಚ್ಚುವರಿ ವೆಚ್ಚವಾದಲ್ಲಿ ಅದನ್ನು ಭರಿಸಲು ಸರ್ಕಾರ ಸಿದ್ಧವಿದೆ. ಸ್ಥಳೀಯರ ಬೇಡಿಕೆಗೆ ಅನುಗುಣವಾಗಿ ಅಂಬೇಡ್ಕರ್ ಪ್ರತಿಮೆಯನ್ನು ಬದಲಾಯಿಸಿ, ಮುಂದಿನ ಮೂರು ತಿಂಗಳಲ್ಲಿ ಹೊಸ ಪ್ರತಿಮೆಯನ್ನು ಸ್ಥಾಪಿಸಲಾಗುವುದು.
ನಮ್ಮ ಸರ್ಕಾರವು ರಾಜ್ಯದ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಬಡವರಿಗೆ 4-5 ಸಾವಿರ ನಿವೇಶನಗಳನ್ನು ಹಂಚಿಕೆ ಮಾಡಲು ನಿರ್ಧರಿಸಿದೆ. ಅದರಂತೆ, ಕೆ.ಆರ್.ನಗರ ಕ್ಷೇತ್ರದಲ್ಲೂ ಗ್ರಾಮ ಸಭೆಗಳ ಮೂಲಕ ಅರ್ಹ ಫಲಾನುಭವಿಗಳನ್ನು ಗುರುತಿಸಿ ನಿವೇಶನಗಳನ್ನು ಹಂಚಿಕೆ ಮಾಡಲಾಗುವುದು.
Our government is giving focused attention to the comprehensive development of K.R. Nagar taluk in Mysuru district. An Ambedkar Bhavan is currently being constructed at a cost of ₹6.50 crore, and the government is prepared to provide additional funds if required. In response to the demand of local residents, the existing Ambedkar statue will also be replaced and a new statue will be installed within the next three months.
Our government has decided to allot 4,000–5,000 housing sites to the poor in every Assembly constituency across the State. Accordingly, eligible beneficiaries in K.R. Nagar constituency will be identified through Gram Sabhas and allotted housing sites. -
Dr. G Parameshwara
@DrParameshwara
ಇಂದು ಮೈಸೂರಿನ ವಿವಿಧ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಸಂಚರಿಸಿ, ರೈತರ ಹೊಲಗಳಿಗೆ ಭೇಟಿನೀಡಿ, ಬರಪರಿಸ್ಥಿತಿಯ ವೀಕ್ಷಣೆ ನಡೆಸಿ, ಅವರ ಅಹವಾಲನ್ನು ಆಲಿಸಿದೆ.
ಅಗತ್ಯ ಪ್ರಮಾಣದಲ್ಲಿ ಬಾರದ ಮಳೆಯಿಂದಾಗಿ ಹೊಲದಲ್ಲಿ ಹಸಿರಿದ್ದರೂ, ಫಸಲಿಲ್ಲ. ಬೆಳೆಯಿಲ್ಲದೆ ತಮ್ಮ ಬದುಕು ಮುಂದೇನು ಎನ್ನುವ ಆತಂಕ ಅವರಲ್ಲಿ ಮನೆಮಾಡಿದೆ. ಇಂತಹ ಸ್ಥಿತಿಯಲ್ಲಿ ನಾಡಿನ ಅನ್ನದಾತರನ್ನು ಕಾಣಬೇಕಾಗಿ ಬಂದದ್ದು ಅತ್ಯಂತ ನೋವಿನ ಸಂಗತಿ.
ರೈತರಿಗೆ ಸೂಕ್ತ ಬೆಳೆನಷ್ಟ ತಲುಪಿಸಲು ಎನ್ಡಿಆರ್ಎಫ್ ನ ಮಾನದಂಡಗಳು ತೊಡಕಾಗಿವೆ. ಈ ಸಂಬಂಧ ಕೇಂದ್ರಕ್ಕೆ ಪತ್ರ ಬರೆದು ಮಾನದಂಡಗಳನ್ನು ಪರಿಷ್ಕರಿಸುವಂತೆ ಒತ್ತಾಯ ಮಾಡಿದ್ದೇನೆ. ಮತ್ತೆ ಸೆಪ್ಟೆಂಬರ್ನಲ್ಲಿ ಬೆಳೆನಷ್ಟಕ್ಕೆ ಪರಿಹಾರ ಕೋರಿ ಕೇಂದ್ರಕ್ಕೆ ಜ್ಞಾಪನ ಪತ್ರ ಕಳಿಸಲಾಗುವುದು.
ರೈತರ ಹಿತ ಕಾಯುವುದು ನನ್ನ ಕರ್ತವ್ಯ ಮಾತ್ರವಲ್ಲ, ಬದ್ಧತೆಯೂ ಆಗಿದೆ. ಇದೇ ಮಾತನ್ನು ಮೈಸೂರಿನ ರೈತಬಂಧುಗಳಿಗೆ ಹೇಳಿದ್ದೇನೆ.This media couldn't be displayed. See it on the original post. -
Dr. G Parameshwara
@DrParameshwara
In Mysuru district, drinking water issues have been reported in 14 Gram Panchayats across six taluks. Six villages are being supplied through six tankers, while nine villages are receiving water through 10 hired private borewells. Fourteen tankers are also being used in 13 wards across three Urban Local Bodies. The district currently has 7,04,890 tonnes of fodder, sufficient for about 33 weeks, though availability is lower in Mysuru, Hunsur and Periyapatna taluks. The government has already released ₹25 crore to the Animal Husbandry Department for distribution of fodder kits.
Adequate funds are available in the PD accounts of all Deputy Commissioners. These funds must be used immediately, as per government guidelines, for drinking water and other urgent relief works. Relief should not be delayed on the pretext of waiting for additional funds.
Priority must be given to drinking water for people and livestock. Officials must also ensure timely vaccination of livestock and use reservoir water judiciously so that no village or urban area faces drinking water scarcity.
During periods of water shortage, people often store water for long durations, which can increase the risk of diseases such as dengue and chikungunya. Officials must create awareness and regularly hold Task Force and District Disaster Management Authority meetings.
There is also a higher risk of health problems caused by contaminated drinking water during drought years. Strict vigilance is necessary. In El Niño years, intermittent rainfall can also increase the possibility of sudden floods and lightning, and officials must act based on weather advisories.
There must be no shortage of seeds or fertilisers. If crops fail after sowing due to lack of rain and rainfall resumes later, there could be a sudden rise in demand for both. Officials must be prepared in advance to handle such situations.
Fodder shortages must also be prevented. Deputy Commissioners and CEOs should verify actual fodder availability through their teams. Farmers with access to borewells or other water sources should be encouraged to grow fodder, and fodder seed kits should be distributed.
No habitation should face drinking water scarcity. While supplying water through tankers, precautions must be taken to prevent prolonged storage that could lead to diseases such as dengue. Farmers should also be encouraged to cultivate crops that require less water.
₹5 crore has been provided to Mysuru district for emergency drinking water requirements. Reservoir water should be used for drinking purposes. If borewells dry up, private borewells may be hired; if required, existing borewells may be deepened. Drilling new borewells should be the last option, while tankers should be used to meet immediate needs.
A senior KAS officer has been appointed as taluk in-charge officer for every taluk in the State. These officers should be effectively utilised, and the Chief Secretary has been asked to monitor this closely.
In the coming days, officials must ensure adequate drinking water, fodder and vaccinations for livestock, maintain sufficient stocks of seeds and fertilisers for farmers, and prevent any disruption in drinking water supply. Since many people from this region migrate in search of work, available funds and schemes must be effectively utilised to generate employment and support livelihoods. (2/2) -
Dr. G Parameshwara
@DrParameshwara
After visiting various taluks of Mysuru district today to assess the drought situation, I chaired a progress review meeting at the Zilla Panchayat hall, sought updates from officials on key issues and issued clear directions.
The primary purpose of the meeting was to review drought management. The government is taking the situation very seriously, and officials and elected representatives must not treat it lightly. Our focus is to ensure basic necessities such as drinking water, food, employment for livelihoods and healthcare, along with adequate fodder and water for livestock. The Revenue Department, in coordination with other concerned departments, must ensure that neither people nor livestock face hardship.
Between June and the end of August, Mysuru district should have received 310 mm of rainfall, but received only 140 mm, resulting in a severe deficit of 55%. The rainfall deficit was 56% in June, 61% in July and 45% in August. Eight taluks - Heggadadevanakote, Hunsur, K.R. Nagar, Mysuru, Nanjangud, Saligrama, Saragur and T. Narasipura - have been declared severely drought-affected.
Since July 2026, only 1.91 lakh person-days of employment have been generated in Mysuru, compared to 4.33 lakh person-days during the same two-month period last year - a decline of 55%. I questioned why employment generation has fallen so sharply during a drought year and directed the Zilla Panchayat CEO and officials to take the matter seriously.
Crop insurance enrolment in Mysuru is also very low. Across the State, 49.64 lakh farmer applications covering 33,17,167 hectares have been insured, while in Mysuru only 20,836 farmers covering 8,046 hectares have enrolled. Agriculture and Horticulture Department officials have been directed to actively encourage farmers to enrol. Negligence and irresponsibility will not be tolerated.
Officials have reported that the district has fodder stocks sufficient for 33 weeks. This must be verified. Farmers with borewells and other water sources should be provided fodder seeds and encouraged to cultivate fodder.
We have already completed review meetings for the Belagavi and Kalaburagi Revenue Divisions. I have also personally reviewed and inspected the situation in Belagavi, Chitradurga, Tumakuru, Chikkaballapur and Kolar districts. (1/2) -
Dr. G Parameshwara
@DrParameshwara
ಮೈಸೂರು ಜಿಲ್ಲೆಯಲ್ಲಿ 6 ತಾಲೂಕುಗಳ 14 ಗ್ರಾಮ ಪಂಚಾಯತಿಗಳಲ್ಲಿ ಸಮಸ್ಯೆಯಿದ್ದು, 6 ಗ್ರಾಮಗಳಿಗೆ 6 ಟ್ಯಾಂಕರ್ಗಳ ಮೂಲಕ ಹಾಗೂ 9 ಗ್ರಾಮಗಳಿಗೆ 10 ಖಾಸಗಿ ಬೋರ್ವೆಲ್ಗಳ ಮೂಲಕ ನೀರು ಒದಗಿಸಲಾಗುತ್ತಿದೆ. ಮೈಸೂರು ಜಿಲ್ಲೆಯ 3 ನಗರ ಸ್ಥಳೀಯ ಸಂಸ್ಥೆಗಳ (ULBs) 13 ವಾರ್ಡ್ಗಳಿಗೆ 14 ಟ್ಯಾಂಕರ್ಗಳನ್ನು ಬಳಸಲಾಗುತ್ತಿದೆ. ಮೈಸೂರು ಜಿಲ್ಲೆಯಲ್ಲಿ ಒಟ್ಟಾರೆ 33 ವಾರಗಳಿಗೆ ಆಗುವಷ್ಟು 7,04,890 ಟನ್ ಮೇವು ಲಭ್ಯವಿದೆ. ಮೈಸೂರು (25 ವಾರ), ಹುಣಸೂರು (25 ವಾರ) ಹಾಗೂ ಪಿರಿಯಾಪಟ್ಟಣ (26 ವಾರ) ತಾಲೂಕುಗಳಲ್ಲಿ ಲಭ್ಯತೆ ಕಡಿಮೆಯಿದೆ. ಮೇವಿನ ಕಿಟ್ಗಳನ್ನು ವಿತರಿಸಲು ಪಶುಸಂಗೋಪನಾ ಇಲಾಖೆಗೆ ಸರ್ಕಾರ ಈಗಾಗಲೇ ₹25 ಕೋಟಿಗಳನ್ನು ಬಿಡುಗಡೆ ಮಾಡಿದೆ.
ಎಲ್ಲಾ ಜಿಲ್ಲಾಧಿಕಾರಿಗಳ ಪಿಡಿ ಖಾತೆಯಲ್ಲಿ ಸಾಕಷ್ಟು ಹಣವಿದೆ. ಈ ಅನುದಾನವನ್ನು ಸರ್ಕಾರದ ಮಾರ್ಗಸೂಚಿಯಂತೆ ಕುಡಿಯುವ ನೀರು ಮತ್ತು ಇತರೆ ತುರ್ತು ಪರಿಹಾರ ಕಾರ್ಯಗಳಿಗೆ ತಕ್ಷಣವೇ ಬಳಸಿ. ಅನುದಾನಕ್ಕಾಗಿ ಕಾಯುವ ನೆಪವೊಡ್ಡಿ ಪರಿಹಾರ ಕಾರ್ಯ ವಿಳಂಬ ಮಾಡಬೇಡಿ.
ಜನರು ಮತ್ತು ಜಾನುವಾರುಗಳಿಗೆ ಕುಡಿಯುವ ನೀರಿಗೆ ಆದ್ಯತೆ ನೀಡಬೇಕು. ಜಾನುವಾರುಗಳಿಗೆ ಅಗತ್ಯವಿರುವ ಲಸಿಕೆಗಳನ್ನು ಕಾಲಕಾಲಕ್ಕೆ ನೀಡಲಾಗುತ್ತಿದೆಯೇ ಎಂದು ಪರಿಶೀಲಿಸಿಕೊಳ್ಳಿ. ಜಲಾಶಯಗಳಲ್ಲಿನ ನೀರನ್ನು ಅತ್ಯಂತ ಎಚ್ಚರಿಕೆಯಿಂದ ಬಳಸಬೇಕು. ಯಾವುದೇ ಗ್ರಾಮ - ನಗರ ಪ್ರದೇಶಗಳಲ್ಲಿ ಯಾರೊಬ್ಬರಿಗೂ ಕುಡಿಯುವ ನೀರಿನ ಕೊರತೆಯಾಗದಂತೆ ನೋಡಿಕೊಳ್ಳಬೇಕು.
ನೀರಿನ ಕೊರತೆ ಹೆಚ್ಚಾಗುವ ಸಂದರ್ಭಗಳಲ್ಲಿ ಜನರು ನೀರನ್ನು ಶೇಖರಿಸಿಟ್ಟುಕೊಳ್ಳುತ್ತಾರೆ. ಇದರಿಂದ ಡೆಂಗ್ಯೂ, ಚಿಕೂನ್ ಗುನ್ಯಾ ರೀತಿಯ ಸಾಂಕ್ರಾಮಿಕ ರೋಗಗಳು ಹರಡಬಹುದು. ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಜನರಿಗೆ ಸೂಕ್ತ ತಿಳುವಳಿಕೆ ನೀಡಬೇಕು. ನಿಯಮಿತವಾಗಿ ಟಾಸ್ಕ್ ಫೋರ್ಸ್, ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆಗಳನ್ನು ನಡೆಸಬೇಕು.
ಸಾಮಾನ್ಯವಾಗಿ ಬರಗಾಲದ ವರ್ಷಗಳಲ್ಲಿ ಕಲುಷಿತ ನೀರು ಕುಡಿದು ಸಮಸ್ಯೆಗೆ ಸಿಲುಕಿಕೊಳ್ಳುವವರ ಪ್ರಮಾಣ ಹೆಚ್ಚಿರುತ್ತದೆ. ಈ ಕುರಿತು ನೀವುಗಳು ಹೆಚ್ಚಿನ ನಿಗಾವಹಿಸಿ ಸಮಸ್ಯೆಗಳಾಗದಂತೆ ನೋಡಿಕೊಳ್ಳಬೇಕು. ಎಲ್ ನಿನೊ ಇರುವ ವರ್ಷಗಳಲ್ಲಿ ಸಾಮಾನ್ಯವಾಗಿ ಬಿಟ್ಟು ಬಿಟ್ಟು ಮಳೆ ಬರುವುದರಿಂದ ಹಠಾತ್ ಪ್ರವಾಹಗಳು, ಸಿಡಿಲುಗಳು ಬರುವ ಸಂಭವಗಳು ಹೆಚ್ಚಿರುತ್ತವೆ. ಹವಾಮಾನ ಸೂಚನೆಗಳನ್ನು ಆಧರಿಸಿ ಕ್ರಮವಹಿಸಬೇಕು.
ಬಿತ್ತನೆ ಬೀಜ ಕೊರತೆ ಆಗಬಾರದು. ಬೀಜ ಬಿತ್ತನೆ ಮಾಡಿದ ಮೇಲೆ ಮಳೆ ಇಲ್ಲವಾಗಿ ಮತ್ತೆ ಮಳೆ ಬಂದರೆ ಮತ್ತೆ ಬೀಜ-ಗೊಬ್ಬರಕ್ಕೆ ಬೇಡಿಕೆ ಬರಬಹುದು. ಅದಕ್ಕೆ ಸಿದ್ಧರಾಗಿ. ಬೆಳೆ ಒಣಗಿ ಮತ್ತೆ ಮಳೆ ಬಿದ್ದಾಗ ಏಕಾಏಕಿ ಬಿತ್ತನೆ ಬೀಜ, ಗೊಬ್ಬರಗಳಿಗೆ ಬೇಡಿಕೆ ಹೆಚ್ಚಬಹುದು. ರೈತರ ಒತ್ತಡ ಹೆಚ್ಚಾಗಲೂಬಹುದು ಅದನ್ನು ನಿರ್ವಹಿಸಲು ಬೇಕಾದ ಸಿದ್ಧತೆಗಳನ್ನು ಮಾಡಿಕೊಳ್ಳಿ.
ಜಾನುವಾರುಗಳಿಗೆ ಮೇವಿನ ಕೊರತೆ ಆಗದಂತೆ ನೋಡಿಕೊಳ್ಳಬೇಕು. ನಿಮ್ಮ ವರದಿಗಳ ಪ್ರಕಾರ ಜಾನುವಾರುಗಳಿಗೆ ಮೇವಿನ ಸಂಗ್ರಹ ಕಡಿಮೆ ಇದೆ. ಇದನ್ನು ಜಿಲ್ಲಾಧಿಕಾರಿಗಳು ಮತ್ತು ಸಿಇಒಗಳು ನಿಮ್ಮ ತಂಡದ ಮೂಲಕ ಪರಿಶೀಲನೆ ಮಾಡಿಸಿ ಖಚಿತಪಡಿಸಿಕೊಳ್ಳಿ. ಕೊಳವೆ ಬಾವಿ ಸೇರಿದಂತೆ ಯಾರ್ಯಾರಲ್ಲಿ ನೀರಿನ ಮೂಲಗಳಿವೆಯೊ ಅವರು ಮೇವು ಬೆಳೆಯುವಂತೆ ಪ್ರೋತ್ಸಾಹ ನೀಡಿ. ಮೇವಿನ ಬೀಜಗಳ ಕಿಟ್ಗಳನ್ನು ವಿತರಿಸಲು ಕ್ರಮ ಕೈಗೊಳ್ಳಬೇಕು.
ಯಾವ ಜನವಸತಿ ಪ್ರದೇಶಕ್ಕೂ ಕುಡಿಯುವ ನೀರಿನ ಸಮಸ್ಯೆ ಆಗದಂತೆ ನೋಡಿಕೊಳ್ಳಬೇಕು. ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡುವಾಗ ನೀರಿನ ಸಂಗ್ರಹಣೆಗಳು ಹೆಚ್ಚು ಕಾಲ ಇರುವಂತಾದರೆ ಡೆಂಗ್ಯೂನಂತಹ ಕಾಯಿಲೆಗಳು ತೀವ್ರಗೊಳ್ಳಬಹುದು. ಅದರ ಕುರಿತು ಮುನ್ನೆಚ್ಚರಿಕೆ ವಹಿಸಿ. ರೈತರಿಗೆ ಕಡಿಮೆ ಮಳೆ ನೀರಿನಲ್ಲಿ ಬೆಳೆಯುವ ಬೆಳೆಗಳನ್ನು ಬೆಳೆಯಲು ಪ್ರೋತ್ಸಾಹಿಸಬೇಕು.
ನಿಮ್ಮ ಜಿಲ್ಲೆಯಲ್ಲಿ ಕುಡಿಯುವ ನೀರಿಗಾಗಿ ತುರ್ತು ಅಗತ್ಯಗಳಿಗಾಗಿ 5 ಕೋಟಿ ರೂ. ಗಳನ್ನು ಒದಗಿಸಿದ್ದೇವೆ. ಅದನ್ನು ಬಳಕೆ ಮಾಡಿ. ಕುಡಿಯುವ ನೀರಿಗೆ ಜಲಾಶಯಗಳ ನೀರನ್ನು ಬಳಸಿ. ಕೊಳವೆ ಬಾವಿಗಳಲ್ಲಿ ಖಾಲಿಯಾದರೆ ಖಾಸಗಿ ಕೊಳವೆ ಬಾವಿಗಳನ್ನು ಬಾಡಿಗೆಗೆ ತೆಗೆದುಕೊಳ್ಳಿ. ನಂತರವೂ ಸಮಸ್ಯೆಗಳಿದ್ದರೆ ಕೊಳವೆ ಬಾವಿಗಳನ್ನು ಡೀಪನಿಂಗ್ ಮಾಡಿ. ಕಡೆಯ ಆದ್ಯತೆ ಹೊಸ ಕೊಳವೆ ಬಾವಿಗಳನ್ನು ಕೊರೆಯುವುದು. ಈ ನಡುವೆ ತುರ್ತು ಅಗತ್ಯಗಳಿದ್ದರೆ ಟ್ಯಾಂಕರ್ ಬಳಸಿ.
ರಾಜ್ಯದ ಪ್ರತಿ ತಾಲ್ಲೂಕಿಗೂ ಒಬ್ಬೊಬ್ಬರಂತೆ ಹಿರಿಯ ಕೆಎಎಸ್ ಅಧಿಕಾರಿಗಳನ್ನು ತಾಲ್ಲೂಕು ಉಸ್ತುವಾರಿ ಅಧಿಕಾರಿಗಳೆಂದು ನೇಮಕ ಮಾಡಲಾಗಿದೆ. ಇವರನ್ನು ಸಮರ್ಪಕವಾಗಿ ಬಳಸಿಕೊಳ್ಳಿ. ಮುಖ್ಯ ಕಾರ್ಯದರ್ಶಿಯವರು ಈ ಕುರಿತು ಗಮನ ಹರಿಸಬೇಕು.
ಒಟ್ಟಾರೆ ಮುಂದಿನ ದಿನಗಳಲ್ಲಿ ಜಾನುವಾರುಗಳಿಗೆ ಕುಡಿಯುವ ನೀರು, ಮೇವು, ಅಗತ್ಯ ಲಸಿಕೆ ಇತ್ಯಾದಿಗಳ ಕುರಿತು ಗಮನ ಹರಿಸಿ. ರೈತರಿಗೆ ಬೇಕಿರುವ ಬಿತ್ತನೆ ಬೀಜ, ಗೊಬ್ಬರಗಳ ದಾಸ್ತಾನನ್ನು ಸಮರ್ಪಕವಾಗಿಟ್ಟುಕೊಳ್ಳಿ. ಕುಡಿಯುವ ನೀರಿಗೆ ತೊಂದರೆಯಾಗದಂತೆ ನೋಡಿಕೊಳ್ಳಿ. ಈ ಭಾಗದಲ್ಲಿ ಉದ್ಯೋಗಕ್ಕಾಗಿ ಗುಳೆ ಹೋಗುವವರು ಹೆಚ್ಚಿನ ಪ್ರಮಾಣದಲ್ಲಿದ್ದಾರೆ. ನರೇಗಾ ಯೋಜನೆ ಕೂಡ ಮಾರ್ಪಾಟಾಗಿದೆ. ಲಭ್ಯ ಅನುದಾನ ಮತ್ತು ಯೋಜನೆಗಳನ್ನು ಬಳಸಿಕೊಂಡು ಜನರಿಗೆ ಉದ್ಯೋಗವನ್ನು ನೀಡಲು ಕ್ರಮವಹಿಸಬೇಕು. (2/2) -
Dr. G Parameshwara
@DrParameshwara
ಇಂದು ಮೈಸೂರಿನ ವಿವಿಧ ತಾಲೂಕುಗಳಿಗೆ ಭೇಟಿ ನೀಡಿ ಬರ ಪರಿಶೀಲನೆ ನಡೆಸಿದ ಬಳಿಕ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಪ್ರಗತಿ ಪರಿಶೀಲನಾ ಸಭೆ ನಡೆಸಿ, ವಿವಿಧ ವಿಷಯಗಳ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದು, ಅಗತ್ಯ ನಿರ್ದೇಶನಗಳನ್ನು ನೀಡಿದೆ.
ಈ ಸಭೆಯ ಪ್ರಧಾನ ಉದ್ದೇಶ ಬರದ ಕುರಿತು ಪರಿಶೀಲನೆ ಮಾಡುವುದೇ ಆಗಿದೆ. ಸರ್ಕಾರ ಬರ ನಿರ್ವಹಣೆಯ ಕುರಿತು ಬಹಳ ಗಂಭೀರವಾಗಿದೆ. ಅಧಿಕಾರಿಗಳು, ಜನಪ್ರತಿನಿಧಿಗಳು ಬರವನ್ನು ಹಗುರ ಮನಸ್ಥಿತಿಯಾಗಿ ಪರಿಗಣಿಸಬಾರದು. ಜನರ ಮೂಲಭೂತ ಅವಶ್ಯಕತೆಗಳಾದ ಕುಡಿಯುವ ನೀರು, ಆಹಾರ, ಜೀವನೋಪಾಯಕ್ಕೆ ಅಗತ್ಯವಿರುವ ಉದ್ಯೋಗ, ಆರೋಗ್ಯ ಜಾನುವಾರುಗಳಿಗೆ ಮೇವು, ನೀರು ಮುಂತಾದವುಗಳನ್ನು ನೋಡಿಕೊಳ್ಳುವುದಾಗಿದೆ. ಇದನ್ನು ಕಂದಾಯ ಇಲಾಖೆಯು ಇತರೆ ಸಂಬಂಧಿತ ಇಲಾಖೆಗಳ ಜೊತೆ ಸೇರಿ ಜನ-ಜಾನುವಾರುಗಳಿಗೆ ಯಾವುದೇ ಸಮಸ್ಯೆಯಾಗದಂತೆ ಪರಿಸ್ಥಿತಿಯನ್ನು ನಿಭಾಯಿಸಬೇಕಾಗಿದೆ.
ಜೂನ್ನಿಂದ ಆಗಸ್ಟ್ ಅಂತ್ಯದವರೆಗೆ ಮೈಸೂರಿನಲ್ಲಿ ವಾಡಿಕೆ ಮಳೆ 310 ಮಿ.ಮೀ ಆಗಬೇಕಿತ್ತು, ಆದರೆ ಕೇವಲ 140 ಮಿ.ಮೀ ಮಳೆಯಾಗಿದೆ. ಅಂದರೆ, ಶೇ. 55 ರಷ್ಟು ತೀವ್ರ ಮಳೆ ಕೊರತೆ ಉಂಟಾಗಿದ್ದು, ಜಿಲ್ಲೆಯು ಕೊರತೆ ಪಟ್ಟಿಯಲ್ಲಿದೆ. ಮೈಸೂರು ಜಿಲ್ಲೆಯಲ್ಲಿ ಜೂನ್ನಲ್ಲಿ ಶೇ. 56, ಜುಲೈನಲ್ಲಿ ಶೇ. 61 ಮತ್ತು ಆಗಸ್ಟ್ನಲ್ಲಿ ಶೇ. 45ರಷ್ಟು ಮಳೆ ಕೊರತೆ ದಾಖಲಾಗಿದೆ. ಮೈಸೂರು ಜಿಲ್ಲೆಯ 8 ತಾಲೂಕುಗಳನ್ನು (ಹೆಗ್ಗಡದೇವನಕೋಟೆ, ಹುಣಸೂರು, ಕೆ.ಆರ್. ನಗರ, ಮೈಸೂರು, ನಂಜನಗೂಡು, ಸಾಲಿಗ್ರಾಮ, ಸರಗೂರು, ಟಿ. ನರಸೀಪುರ) 'ತೀವ್ರ' (Severe) ಬರಪೀಡಿತ ತಾಲೂಕುಗಳೆಂದು ಘೋಷಿಸಲಾಗಿದೆ.
ಮೈಸೂರಿನಲ್ಲಿ ಜುಲೈ-2026 ರಿಂದ ಈಚೆಗೆ ಕೇವಲ 1.91 ಲಕ್ಷ ಮಾನವ ದಿನಗಳಷ್ಟು ಮಾತ್ರ ಉದ್ಯೋಗಗಳನ್ನು ಸೃಷ್ಟಿಸಲಾಗಿದೆ. ಆದರೆ ಕಳೆದ ವರ್ಷ ಇದೇ 2 ತಿಂಗಳುಗಳಲ್ಲಿ 4.33 ಲಕ್ಷ ಉದ್ಯೋಗಗಳನ್ನು ಸೃಜಿಸಲಾಗಿತ್ತು. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಶೇ.55 ರಷ್ಟು ಕಡಿಮೆಯಾಗಿದೆ. ಉತ್ತಮ ಮಳೆ ಬಂದ ವರ್ಷ 4.33 ಲಕ್ಷ ಉದ್ಯೋಗ ಸೃಷ್ಟಿಯಾದರೆ ಈ ವರ್ಷ ಯಾಕೆ ಇಷ್ಟು ಕಡಿಮೆಯಾಗಿದೆ. ಜನರು ಉದ್ಯೋಗ ಕೇಳುತ್ತಿಲ್ಲವೇ? ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳು ಮತ್ತು ಅವರ ಅಧೀನ ಅಧಿಕಾರಿಗಳು ಏನು ಮಾಡುತ್ತಿದ್ದಾರೆ?
ಮೈಸೂರಿನಲ್ಲಿ ಕೃಷಿ ಬೆಳೆ ವಿಮೆಯೂ ಕಡಿಮೆಯಾಗಿದೆ. ರಾಜ್ಯದಲ್ಲಿ 49.64 ಲಕ್ಷ ರೈತರ ಅರ್ಜಿಗಳಿಗೆ ಹಾಗೂ 33,17,167 ಹೆಕ್ಟೇರ್ ಭೂಮಿಗೆ ಬೆಳೆ ವಿಮೆ ಮಾಡಿಸಲಾಗಿದೆ. ಆದರೆ ಮೈಸೂರಿನಲ್ಲಿ ಕೇವಲ 20,836 ಜನ 8,046 ಹೆಕ್ಟೇರ್ ಪ್ರದೇಶಕ್ಕೆ ಮಾತ್ರ ನೋಂದಾಯಿಸಿಕೊಂಡಿದ್ದಾರೆ. ಕೃಷಿ ಮತ್ತು ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಯಾಕಿಷ್ಟು ನಿರ್ಲಕ್ಷ್ಯ ಮಾಡುತ್ತಿದ್ದಾರೆ? ರೈತರಿಗೆ ಉತ್ತೇಜನ ನೀಡುವ ಕೆಲಸಗಳನ್ನು ಯಾಕೆ ಮಾಡಲಿಲ್ಲ? ಬೇಜವಾಬ್ದಾರಿತನ ತೋರಿದರೆ ಸಹಿಸುವುದಿಲ್ಲ.
ನಿಮ್ಮ ಅಧಿಕಾರಿಗಳು ಹೇಳಿರುವಂತೆ ನಿಮ್ಮ ಬಳಿ 33 ವಾರಗಳಿಗೆ ಸಾಕಾಗುವಷ್ಟು ಮೇವಿನ ದಾಸ್ತಾನು ಇದೆ. ಈ ಮಾಹಿತಿ ಸರಿಯಿದೆಯೇ ಎಂದು ಪರಿಶೀಲಿಸಿಕೊಳ್ಳಬೇಕಾಗಿದೆ. ಯಾವ ಯಾವ ರೈತರ ಬಳಿ ಕೊಳವೆ ಬಾವಿಗಳಿವೆಯೊ ಅವರಿಗೆ ಮೇವಿನ ಬೀಜಗಳನ್ನು ನೀಡಿ ಮೇವು ಬೆಳೆಯುವಂತೆ ಉತ್ತೇಜನೆ ನೀಡಬೇಕು.
ನಾವು ಈಗಾಗಲೇ ಬೆಳಗಾವಿ ಮತ್ತು ಕಲಬುರಗಿ ಕಂದಾಯ ವಿಭಾಗಗಳ ಪರಿಶೀಲನಾ ಸಭೆಗಳನ್ನು ಮಾಡಿ ಮುಗಿಸಿದ್ದೇವೆ. ಸ್ವತಃ ನಾನು ಬೆಳಗಾವಿ, ಚಿತ್ರದುರ್ಗ, ತುಮಕೂರು, ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಗಳ ಪರಿಶೀಲನೆ ನಡೆಸಿದ್ದೇನೆ. ಸ್ಥಳ ಪರಿಶೀಲನೆ ಮಾಡಿದ್ದೇನೆ. (1/2) -
Dr. G Parameshwara
@DrParameshwara
ಇಂದು ಮೈಸೂರು ಜಿಲ್ಲಾ ಪ್ರವಾಸ ಕೈಗೊಂಡು, ಕೆ.ಆರ್. ನಗರ, ಹುಣಸೂರು ಹಾಗೂ ವರುಣಾ ವಿಧಾನಸಭಾ ಕ್ಷೇತ್ರಗಳ ವಿವಿಧ ಬರಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ, ವೀಕ್ಷಣೆ ನಡೆಸಿದೆ.
ಬಳಿಕ ಮೈಸೂರು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಪ್ರಗತಿ ಪರಿಶೀಲನಾ ಸಭೆ ನಡೆಸಿ, ಬರ ನಿರ್ವಹಣೆ, ಜನ-ಜಾನುವಾರುಗಳಿಗೆ ಕುಡಿಯುವ ನೀರಿನ ಲಭ್ಯತೆ, ಜನರಿಗೆ ಉದ್ಯೋಗ ಸೇರಿದಂತೆ ವಿವಿಧ ವಿಷಯಗಳ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದು, ಅಗತ್ಯ ಸೂಚನೆಗಳನ್ನು ನೀಡಿದೆ.
ಸಭೆಯಲ್ಲಿ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಯತೀಂದ್ರ ಸಿದ್ದರಾಮಯ್ಯ, ಮಾಜಿ ಸಚಿವರು ಹಾಗೂ ಪಿರಿಯಾಪಟ್ಟಣ ಶಾಸಕರಾದ ಕೆ. ವೆಂಕಟೇಶ್, ಶಾಸಕರಾದ ದರ್ಶನ್ ಧ್ರುವನಾರಾಯಣ್, ಹರೀಶ್ ಗೌಡ, ವಿಧಾನ ಪರಿಷತ್ ಸದಸ್ಯರಾದ ಡಾ. ತಿಮ್ಮಯ್ಯ, ಮೈಸೂರು ಪ್ರಾದೇಶಿಕ ಆಯುಕ್ತರಾದ ನಿತೇಶ್ ಪಾಟೀಲ್, ಜಿಲ್ಲಾಧಿಕಾರಿಗಳಾದ ಲಕ್ಷ್ಮೀಕಾಂತ್ ರೆಡ್ಡಿ, ಜಿಲ್ಲಾ ಪಂಚಾಯತ್ ಸಿಇಒ ಯುಕೇಶ್ ಕುಮಾರ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
Today, during my visit to Mysuru district, I toured several drought-affected areas in the K.R. Nagar, Hunsur and Varuna Assembly constituencies and reviewed the situation on the ground.
Later, I chaired a progress review meeting at the Mysuru Zilla Panchayat hall and sought updates from officials on drought management, availability of drinking water for people and livestock, employment opportunities and other related issues. Necessary instructions were issued to address the situation effectively.
Mysuru District In-charge Minister Dr. Yathindra Siddaramaiah, former Minister and Periyapatna MLA K. Venkatesh, MLAs Darshan Dhruvanarayan and Harish Gowda, MLC Dr. Thimmaiah, Mysuru Regional Commissioner Nitesh Patil, Deputy Commissioner Lakshmikanth Reddy, Zilla Panchayat CEO Yukesh Kumar and others were present at the meeting. -
Dr. G Parameshwara
@DrParameshwara
ಮೈಕ್ರೋ ಫೈನಾನ್ಸ್ಗಳ ಹಾವಳಿ ತಡೆಯಲು ಈಗಾಗಲೇ ನಾವು ಕಾನೂನು ರೂಪಿಸಿದ್ದೇವೆ. ರೈತರಿಗೆ ಯಾವುದೇ ರೀತಿಯ ಒತ್ತಡ ಅಥವಾ ಕಿರುಕುಳ ನೀಡಬಾರದು ಎಂದು ಸ್ಪಷ್ಟ ಸೂಚನೆ ನೀಡಿದ್ದೇನೆ. ಈ ಸೂಚನೆಗಳನ್ನು ಉಲ್ಲಂಘಿಸಿ ರೈತರಿಗೆ ತೊಂದರೆ ನೀಡಿದರೆ, ಸಂಬಂಧಪಟ್ಟವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು.
We have already enacted a law to curb harassment by microfinance institutions. Clear instructions have been issued that farmers must not be subjected to any pressure or harassment. If these directions are violated and farmers are troubled, strict action will be taken against those responsible. -
Dr. G Parameshwara
@DrParameshwara
ಇಂದು ಮೈಸೂರು ಜಿಲ್ಲಾ ಪ್ರವಾಸದ ವೇಳೆ ವರುಣಾ ಕ್ಷೇತ್ರಕ್ಕೆ ಭೇಟಿ ನೀಡಿ, ಜನರನ್ನುದ್ದೇಶಿಸಿ ಮಾತನಾಡಿದೆ.
ಇಂದು ರಾಜ್ಯದಲ್ಲಿ ಭೀಕರ ಬರಗಾಲ ಇದೆ. ಮಳೆಯ ಪ್ರಮಾಣ ಬಹಳ ಕಡಿಮೆಯಾಗಿ ಇಡೀ ರಾಜ್ಯದಲ್ಲಿ ಕುಡಿಯುವ ನೀರಿಗೆ ಸಮಸ್ಯೆ ಉಂಟಾಗಿದೆ. ನೂರಾರು ಹಳ್ಳಿಗಳಿಗೆ ಈಗಾಗಲೇ ಟ್ಯಾಂಕರ್ ಮೂಲಕ ನೀರು ಪೂರೈಸುತ್ತಿದ್ದೇವೆ. ಜಾನುವಾರುಗಳಿಗೆ ಕೇವಲ 30 ವಾರಗಳಿಗೆ ಸಾಕಾಗುವಷ್ಟು ಮೇವು ಇದೆ. ಇಂತಹ ಪರಿಸ್ಥಿತಿಯಲ್ಲಿ ನಾವು ರಾಜ್ಯದ ಪ್ರವಾಸ ಮಾಡಿ ಎಲ್ಲೆಲ್ಲಿ ಬರ ಇದೆ ಎಂದು ಪರಿಶೀಲನೆ ಮಾಡಿ, ಈಗಾಗಲೇ 101 ತಾಲ್ಲೂಕುಗಳನ್ನು ಬರಪೀಡಿತ ಪ್ರದೇಶ ಎಂದು ಘೋಷಣೆ ಮಾಡಿದ್ದೇವೆ.
ಇನ್ನೊಂದು ವಾರದಲ್ಲಿ ಇನ್ನೂ 50 ತಾಲ್ಲೂಕುಗಳನ್ನು ಬರಪೀಡಿತ ಪ್ರದೇಶ ಎಂದು ಘೋಷಣೆ ಮಾಡಬಹುದು. ಇಂದು ಮೈಸೂರು ಜಿಲ್ಲೆಯಲ್ಲಿ ನಾಳೆ ಚಾಮರಾಜನಗರ ಜಿಲ್ಲೆಯಲ್ಲಿ ಪ್ರವಾಸ ಮಾಡುತ್ತಿದ್ದೇನೆ. ಬರಗಾಲ ಪೀಡಿತ ತಾಲ್ಲೂಕುಗಳಿಗೆ ಭೇಟಿ ನೀಡುತ್ತಿದ್ದೇನೆ. ಪರಿಸ್ಥಿತಿಯನ್ನು ಅವಲೋಕನ ಮಾಡಿ ಮುಂದಿನ ದಿನಗಳಲ್ಲಿ ಸಾಮಾನ್ಯ ಜನರ ಪರವಾಗಿ, ರೈತರ ಪರವಾಗಿ ತೀರ್ಮಾನಗಳನ್ನು ತೆಗೆದುಕೊಳ್ಳುತ್ತೇವೆ. ಹೀಗಾಗಿ ವಸ್ತುಸ್ಥಿತಿಯನ್ನು ನಾನೇ ಕಣ್ಣಾರೆ ನೋಡಬೇಕು ಎಂದು ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರ ಕ್ಷೇತ್ರಕ್ಕೆ ಬಂದಿದ್ದೇನೆ.
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಇಂದು ಗದಗ ಜಿಲ್ಲೆಯಲ್ಲಿ ಪ್ರವಾಸ ಮಾಡುತ್ತಿದ್ದಾರೆ. ಈಗಾಗಲೇ ನಾನು ಮತ್ತು ಮುಖ್ಯಮಂತ್ರಿಗಳು ಕಲಬುರಗಿ, ಬೆಳಗಾವಿ, ಬೆಂಗಳೂರು ವಿಭಾಗಗಳಲ್ಲಿ ಬರ ಪರಿಶೀಲನೆಯನ್ನು ಮಾಡಿದ್ದೇವೆ. ಪರಿಸ್ಥಿತಿ ಬಹಳ ಗಂಭೀರವಾಗಿದೆ. ಇಂದು ಕೆ.ಆರ್ ಪೇಟೆ, ಕೆ. ಆರ್ ನಗರ ಮತ್ತು ಹುಣಸೂರಿಗೆ ಭೇಟಿ ನೀಡಿದ್ದೇನೆ. ಬರ ಪರಿಸ್ಥಿತಿಯ ಬಗ್ಗೆ ರೈತರಿಂದ, ಅಧಿಕಾರಿಗಳಿಂದ ಮಾಹಿತಿ ಪಡೆದಿದ್ದೇನೆ.
ಈ ಸಂದರ್ಭದಲ್ಲಿ ಸಚಿವರಾದ @Dr_Yathindra_S , ಸ್ಥಳೀಯ ಮುಖಂಡರು ಜೊತೆಗಿದ್ದರು. -
Dr. G Parameshwara
@DrParameshwara
ಕೇಂದ್ರ ಸರ್ಕಾರದ ನಿಯಮಗಳಡಿಯಲ್ಲೇ ಬರ ಘೋಷಿಸಬೇಕು: ರಾಜ್ಯದ ಕಾನೂನಿನಡಿಯಲ್ಲಿ ಬರ ಘೋಷಣೆ ಮಾಡಿದರೆ ಪರಿಹಾರ ಸಿಗುವುದಿಲ್ಲ. ಕೇಂದ್ರ ಸರ್ಕಾರದ ನಿಯಮಗಳಡಿಯಲ್ಲೇ ಮಾಡಬೇಕು. ಹಾಗಾಗಿ 101 ತಾಲೂಕುಗಳನ್ನು ಬರಪೀಡಿತ ಪ್ರದೇಶ ಎಂದು ಘೋಷಿಸಿದ್ದೇವೆ. ಇನ್ನೊಂದು ವಾರ ಬಿಟ್ಟು ಪರಿಶೀಲನೆ ನಡೆಸಿ, ಆಗ ಈ ವರ್ಗಕ್ಕೆ ಸೇರುವ ಪ್ರದೇಶಗಳನ್ನು ಬರಪೀಡಿತ ಎಂದು ಘೋಷಿಸಲಾಗುವುದು.
ಇನ್ನೆರಡು ವಾರದೊಳಗೆ ಕೇಂದ್ರಕ್ಕೆ ಸಮಗ್ರ ಬರ ವರದಿಯನ್ನು ಸಲ್ಲಿಸುತ್ತೇವೆ. ಆ ಬಳಿಕ ಕೇಂದ್ರದ ತಂಡಗಳು ಬಂದು ಪರಿಶೀಲನೆ ನಡೆಸಿ, ನಂತರವಷ್ಟೇ ಪರಿಹಾರ ಬಿಡುಗಡೆಯಾಗುತ್ತದೆ. ಅದರ ಮೊದಲು ನಮಗೆ ಯಾವುದೇ ಪರಿಹಾರ ಹಣವನ್ನು ನಮಗೆ ಕೊಡುವುದಿಲ್ಲ.
ಮುಖ್ಯಮಂತ್ರಿಗಳು ಇಂದು ಗದಗದಲ್ಲಿ ಬರವೀಕ್ಷಣೆ ಮಾಡುತ್ತಿದ್ದಾರೆ. ನಾನು ಇಲ್ಲಿ ವೀಕ್ಷಣೆ ಮಾಡುತ್ತಿದ್ದೇನೆ. ಮುಖ್ಯಮಂತ್ರಿಗಳ ಆದೇಶದಂತೆ ಎಲ್ಲ ಸಚಿವರು ತಮಗೆ ನಿಯೋಜಿಸಿರುವ ಜಿಲ್ಲೆಗಳ ಬರ ವೀಕ್ಷಣೆ ನಡೆಸುತ್ತಿದ್ದಾರೆ. ಆನಂತರ ಎಲ್ಲವನ್ನೂ ಒಟ್ಟಾಗಿ ಪರಿಶೀಲಿಸಿ, ರೈತರಿಗೆ ಯಾವ ರೀತಿಯಲ್ಲಿ ಸಹಾಯ ಮಾಡಬೇಕು, ಇನ್ಶೂರೆನ್ಸ್ ಏನು ಮಾಡಬೇಕು ಎಂದು ತೀರ್ಮಾನ ಮಾಡುತ್ತೇವೆ.
ಜೋಳಕ್ಕೆ ಬಿಳಿಸುಳಿ ರೋಗ ಬಂದಿದೆ. ಈ ರೋಗ ಇನ್ಶೂರೆನ್ಸ್ನಲ್ಲಿ ಕವರ್ ಆಗಲ್ಲ. ಹಾಗಾಗಿ ಇನ್ಶೂರೆನ್ಸ್ ಕಂಪನಿಯವರೊಂದಿಗೆ ಮಾತನಾಡಿ ಈ ಬಗ್ಗೆ ಕ್ರಮ ಕೈಗೊಳ್ಳುವ ಬಗ್ಗೆ ಪ್ರಯತ್ನ ಮಾಡಲಾಗುವುದು. ಇದನೆಲ್ಲ ತಿಳಿದುಕೊಳ್ಳಲೆಂದೇ ಇಂದು ನಾನು ಬರವೀಕ್ಷಣೆಗೆ ಬಂದಿದ್ದೇನೆ.
ಅಂತಾರಾಷ್ಟ್ರೀಯ ಹವಾಮಾನ ವರದಿಯ ಪ್ರಕಾರ, ಸೆಪ್ಟೆಂಬರ್ ನಲ್ಲಿ ಒಂದನೇ ವಾರ ಅಥವಾ ಎರಡನೇ ವಾರದಲ್ಲಿ ಮಳೆ ಕಂಪ್ಲೀಟ್ ಆಗಿ ನಿಂತು ಹೋಗುತ್ತದೆ ಎಂಬ ಮಾಹಿತಿ ಇದೆ. ಎಲ್ ನಿನೋದಿಂದಾಗಿ 123 ವರ್ಷಗಳ ಬಳಿಕ ಈ ಪರಿಸ್ಥಿತಿ ಇದೆ. ಮಳೆ ಬರುತ್ತದೆ ಎಂದು ಹೇಳಲು ಆಗವುದಿಲ್ಲ. ಹೀಗಾಗಿ ರೈತರಿಗೆ ಮುಂದೆ ಯಾವ ರೀತಿ ಸಹಾಯ ಮಾಡಬೇಕು ಎಂಬುದನ್ನು ತೀರ್ಮಾನ ಮಾಡುತ್ತೇವೆ.
ಮೋಡ ಬಿತ್ತನೆ ಮಾಡಲು ಆದೇಶ ಕೊಟ್ಟಿದ್ದಾರೆ. ಈ ಬಗ್ಗೆ ನಮ್ಮ ಟೆಕ್ನಿಕಲ್ ತಂಡದವರು ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಅದರಲ್ಲಿ ಎಷ್ಟರ ಮಟ್ಟಿಗೆ ಸಹಾಯ ಆಗುತ್ತದೆ ಎಂಬುದನ್ನು ನೋಡಬೇಕು. ಟೆಕ್ನಿಕಲ್ ವರದಿಯ ಪ್ರಕಾರ ಹೆಚ್ಚು ಮಳೆ ಬರುವುದಿಲ್ಲ. ಅದು ತುಂತುರು ಮಳೆ ಬಂದ ಹಾಗೆ ಬರುತ್ತದೆ. ಜೊತೆಗೆ ಅದು ಬೆಳೆಗಳಿಗೆ ಸಾಕಾಗುತ್ತದೆ ಎಂದು ಹೇಳಿದ್ದಾರೆ. ಹೀಗಾಗಿ ಇದನ್ನು ನಾವೆಲ್ಲರೂ ಒಪ್ಪಿಕೊಂಡಿದ್ದೇವೆ.
ಹುಣಸೂರು ಹಾಗೂ ಪಿರಿಯಾಪಟ್ಟಣ ತಾಲೂಕಿನಲ್ಲಿ ತಂಬಾಕು ಸಸ್ಯ ಬೆಳೆಯುತ್ತಾರೆ. ಆದರೆ ಈ ಬಾರಿ ಹುಣಸೂರು ತಾಲ್ಲೂಕಿನಲ್ಲೇ 16 ಸಾವಿರಕ್ಕೂ ಹೆಚ್ಚು ಹೇಕ್ಟರ್ ಪ್ರದೇಶದಲ್ಲಿ ನಷ್ಟ ಉಂಟಾಗಿದೆ. ಆದರೆ ಕೇಂದ್ರ ಸರ್ಕಾರದ ಮಾನದಂಡಗಳ ಪ್ರಕಾರ, ವಾಣಿಜ್ಯ ಬೆಳೆಗಳಿಗೆ ಪರಿಹಾರ ಇಲ್ಲ. ರಾಜ್ಯ ಸರ್ಕಾರದಿಂದ ಪರಿಹಾರ ನೀಡುವ ಕುರಿತು ಇಂದು ನಾನು ಬರವೀಕ್ಷಣೆ ಮಾಡಿದ ಬಳಿಕ ಈ ಬಗ್ಗೆ ಮುಖ್ಯಮಂತ್ರಿಗಳೊಂದಿಗೆ ಸಂಪುಟದಲ್ಲಿ ಚರ್ಚೆ ಮಾಡಿ ರೈತರಿಗೆ ಏನು ಸಹಾಯ ಮಾಡಬೇಕು ಎಂಬುದನ್ನು ತೀರ್ಮಾನ ಮಾಡುತ್ತೇವೆ. ಒಂದು ತಾಲ್ಲೂಕಿನಲ್ಲಿ 16 ಸಾವಿರ ಹೆಕ್ಟೇರ್ ನಷ್ಟ ಆಗಿದೆ ಎಂದರೆ, ಪಕ್ಕದ 6 ತಾಲ್ಲೂಕುಗಳಲ್ಲಿಯೂ ಇದುವೇ ಪರಿಸ್ಥಿತಿ ಇದೆ. ಹೀಗಾಗಿ ಈ ಕುರಿತು ಚರ್ಚೆ ಮಾಡುತ್ತೇವೆ.
ನೂತನ ಕಂದಾಯ ಕಟ್ಟಡ ನಿರ್ಮಾಣ: ಹುಣಸೂರು ತಾಲ್ಲೂಕಿನ ಕಂದಾಯ ಇಲಾಖೆಯ ಕಟ್ಟಡಗಳು ಸೋರುತ್ತಿರುವ ಬಗ್ಗೆ ಜಿಲ್ಲಾಧಿಕಾರಿಗಳಿಂದ ಮಾಹಿತಿ ಪಡೆದುಕೊಳ್ಳುತ್ತೇನೆ. ಈ ಕುರಿತು ಪ್ರಸ್ತಾವನೆ ಬಂದಿದ್ದರೆ ಅದನ್ನು ಪರಿಶೀಲನೆ ಮಾಡಿ ಮುಂದೆ ನೂತನ ಕಟ್ಟಡವನ್ನು ನಿರ್ಮಿಸಲು ತೀರ್ಮಾನ ಮಾಡುತ್ತೇವೆ.
Drought has to be declared under the Union Government’s norms: If drought is declared only under State norms, relief will not be available. It has to be done in accordance with the Union Government’s guidelines. Accordingly, we have declared 101 taluks as drought-affected. The situation will be reviewed again after a week, and areas that meet the prescribed criteria will also be declared drought-affected.
Within the next two weeks, we will submit a comprehensive drought memorandum to the Union Government. Thereafter, Central teams will visit the State and conduct an assessment, following which relief funds will be released. No drought relief will be released before this process is completed.
The Chief Minister is reviewing the drought situation in Gadag today, while I am inspecting affected areas here. As directed by the Chief Minister, all Ministers are visiting the districts assigned to them to assess the drought situation. Once these inspections are completed, we will review the overall situation and decide what assistance should be extended to farmers, including measures related to crop insurance.
Maize crops have been affected by Downy Mildew, which is not covered under crop insurance. We will take up the issue with insurance companies and explore possible measures. Understanding such ground-level problems is one of the reasons I am undertaking these drought inspections.
According to international climate reports, rainfall is expected to largely cease by the first or second week of September. We are witnessing this situation after 123 years due to El Niño. We cannot say with certainty whether there will be further rainfall. Therefore, we will decide what additional support should be provided to farmers in the coming days.
Orders have also been issued for cloud seeding, and our technical teams are making the necessary preparations. We will have to assess how effective it can be. According to the technical assessment, it may not bring heavy rainfall, but could result in light showers, which experts have said may be sufficient to provide some relief to crops. We have therefore agreed to proceed with it.
Tobacco is widely cultivated in Hunsur and Periyapatna taluks. This year, more than 16,000 hectares have been affected in Hunsur taluk alone. However, under the Union Government’s norms, commercial crops are not eligible for compensation. After completing today’s drought inspection, I will discuss with the Chief Minister and in the Cabinet what assistance the State Government can provide to affected farmers. If 16,000 hectares have been damaged in one taluk alone, the situation is likely to be similar in the six neighbouring taluks as well. We will examine the issue comprehensively.
New Revenue Department Building: I will obtain details from the Deputy Commissioner regarding the leaking Revenue Department buildings in Hunsur taluk. If a proposal has already been submitted, we will examine it and take a decision on constructing a new building.
- My response to the media today after inspecting drought-affected areas at Kattemalalawadi village in Hunsur taluk. -
Dr. G Parameshwara
@DrParameshwara
ಇಂದು ಹುಣಸೂರು ತಾಲೂಕಿನ ಬರಪೀಡಿತ ಪ್ರದೇಶವಾದ ಕಟ್ಟೆಮಳಲವಾಡಿ ಗ್ರಾಮದ ಜಮೀನುಗಳಿಗೆ ಭೇಟಿ ನೀಡಿ, ಬರದಿಂದ ಹಾನಿಗೊಳಗಾದ ಮೆಕ್ಕೆಜೋಳ, ಹೊಗೆಸೊಪ್ಪು, ರಾಗಿ ಬೆಳೆಗಳನ್ನು ಪರಿಶೀಲಿಸಿದೆ.
ಈ ಸಂದರ್ಭದಲ್ಲಿ ರೈತರ ಸಮಸ್ಯೆಗಳನ್ನು ಆಲಿಸಿ, ಬರ ಪರಿಸ್ಥಿತಿ ಹಾಗೂ ಬೆಳೆ ನಷ್ಟದ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದೆ.
ಬಿಳಿಸುಳಿ ರೋಗದಿಂದ ಮೆಕ್ಕೆಜೋಳ ಬೆಳೆ ನಾಶವಾಗುತ್ತಿದ್ದು, ಬೆಳೆ ವಿಮೆ (ಇನ್ಶೂರೆನ್ಸ್) ಮೂಲಕ ಪರಿಹಾರ ದೊರೆಯುತ್ತಿಲ್ಲ ಎಂದು ರೈತರು ತಮ್ಮ ಸಮಸ್ಯೆಯನ್ನು ನನ್ನ ಗಮನಕ್ಕೆ ತಂದರು. ತಕ್ಷಣವೇ ಪರಿಹರಿಸಿಕೊಡುವಂತೆ ಸ್ಥಳದಲ್ಲೇ ಅಧಿಕಾರಿಗಳಿಗೆ ಸೂಚಿಸಿದೆ.
ಈ ವೇಳೆ ಹುಣಸೂರು ಶಾಸಕರಾದ ಹರೀಶ್ ಗೌಡ, ಕೆ.ಆರ್.ನಗರ ಶಾಸಕರಾದ ರವಿಶಂಕರ್, ಮಾಜಿ ಶಾಸಕರಾದ ಹೆಚ್.ಪಿ.ಮಂಜುನಾಥ್, ಜಿಲ್ಲಾಧಿಕಾರಿಗಳಾದ ಲಕ್ಷ್ಮೀಕಾಂತ್ ರೆಡ್ಡಿ, ತಹಶೀಲ್ದಾರರು ಮತ್ತು ಕೃಷಿ ಅಧಿಕಾರಿಗಳು ಜೊತೆಗಿದ್ದರು.
Today, I visited the farmlands of Kattemalalavadi village in Hunsur taluk, one of the drought-affected areas, and inspected maize, tobacco and ragi crops damaged by the drought.
During the visit, I interacted with farmers, listened to their concerns, and sought details from officials on the prevailing drought situation and the extent of crop loss.
Farmers brought to my attention that maize crops are being affected by Downy Mildew and that they are not receiving compensation under the crop insurance scheme. I immediately directed the officials on the spot to take necessary action and resolve the issue.
Hunsur MLA Harish Gowda, K.R. Nagar MLA Ravishankar, former MLA H.P. Manjunath, Deputy Commissioner Lakshmikanth Reddy, the Tahsildar and officials from the Agriculture Department accompanied me during the visit. -
Dr. G Parameshwara
@DrParameshwara
Along with local MLA Ravishankar, I visited the fields of farmers growing ragi and tobacco at Kanchugara Koppalu village in K.R. Nagar taluk and inspected the crop damage. Due to the lack of rainfall just a few days after sowing and germination, the crops have been completely destroyed. This year, sowing was taken up in only about 10 hectares across the taluk, and even those crops have now been lost. From the ground situation, it is evident that crop damage has occurred across the taluk. K.R. Nagar taluk has therefore already been declared drought-affected.
The State Government will submit a memorandum to the Union Government on the drought situation in Karnataka. The Chief Minister is inspecting drought-affected areas in Gadag district today, while I will be visiting drought-hit areas in Mysuru and Chamarajanagar districts today and tomorrow. After these inspections, our government will review the situation and take a decision on the assistance to be provided to farmers. Tobacco and ragi are widely cultivated in K.R. Nagar taluk, but the crops have been completely lost and farmers have been left without any yield. We will take an appropriate decision in this regard.
The Chief Minister and I have already written to the Union Government seeking relaxation of the norms for declaring drought-affected areas. If the norms are relaxed, more taluks can be brought under the drought-affected category. However, we have not received any response from the Centre so far. We will therefore submit a detailed memorandum shortly. Relief funds will be released after a Central team visits the State and conducts an assessment.
Strict Action Against Microfinance Firms Harassing Farmers: We have also taken note of increasing complaints of harassment of farmers by microfinance institutions. A law is already in place, and clear instructions have been issued that farmers must not be pressured or harassed in any manner. Strict action will be taken against those who violate these directions.
- My response to the media after visiting farmers’ fields at Kanchugara Koppalu village in K.R. Nagar taluk, Mysuru district, and assessing the drought situation today. -
Dr. G Parameshwara
@DrParameshwara
ಕೆ.ಆರ್.ನಗರ ತಾಲ್ಲೂಕಿನ ಕಂಚುಗಾರ ಕೊಪ್ಪಲು ಗ್ರಾಮದಲ್ಲಿ ರಾಗಿ ಮತ್ತು ಹೊಗೆಸೊಪ್ಪು ಬೆಳೆದ ರೈತರ ಜಮೀನುಗಳಿಗೆ ಸ್ಥಳೀಯ ಶಾಸಕರಾದ ರವಿಶಂಕರ್ ಅವರೊಂದಿಗೆ ಭೇಟಿ ನೀಡಿ ಪರಿಶೀಲನೆಯನ್ನು ನಡೆಸಿದೆ. ಬೆಳೆ ಬಿತ್ತನೆಯಾಗಿ ಮೊಳಕೆಯೊಡೆದ ಕೆಲವೇ ದಿನಕ್ಕೆ ಮಳೆ ಕೊರತೆ ಎದುರಾದ ಕಾರಣ ಬೆಳೆ ಸಂಪೂರ್ಣವಾಗಿ ನಾಶವಾಗಿದೆ. ಇಡೀ ತಾಲ್ಲೂಕಿನಲ್ಲಿ ಈ ಬಾರಿ ಕೇವಲ 10 ಹೆಕ್ಟೇರ್ ಕೃಷಿ ಪ್ರದೇಶದಲ್ಲಿ ಬಿತ್ತನೆಯಾಗಿದ್ದು, ಸದ್ಯ ಆ ಬೆಳೆ ಕೂಡ ನಾಶವಾಗಿದೆ. ವಸ್ತುಸ್ಥಿತಿಯನ್ನು ಗಮನಿಸಿದಾಗ ಇಡೀ ತಾಲ್ಲೂಕಿನಲ್ಲಿ ಬೆಳೆಹಾನಿ ಉಂಟಾಗಿರುವುದು ಗಮನಕ್ಕೆ ಬಂದಿದೆ. ಈ ಹಿನ್ನೆಲೆ ಕೆ.ಆರ್ ನಗರ ತಾಲ್ಲೂಕನ್ನು ಈಗಾಗಲೇ ಬರಗಾಲಪೀಡಿತ ಪ್ರದೇಶ ಎಂದು ಘೋಷಿಸಲಾಗಿದೆ.
ಕೇಂದ್ರ ಸರ್ಕಾರಕ್ಕೆ ರಾಜ್ಯದಲ್ಲಿನ ಬರ ಪರಿಸ್ಥಿತಿಯ ಕುರಿತು ಜ್ಞಾಪನಾ ಪತ್ರವನ್ನು ಸಲ್ಲಿಸಲಾಗುವುದು. ಮುಖ್ಯಮಂತ್ರಿಗಳು ಇಂದು ಗದಗ ಜಿಲ್ಲೆಗೆ ಬರಪೀಡಿತ ಪ್ರದೇಶದ ವೀಕ್ಷಣೆಗೆ ತೆರಳಿದ್ದಾರೆ. ನಾನು ಇಂದು ಮತ್ತು ನಾಳೆ ಮೈಸೂರು ಹಾಗೂ ಚಾಮರಾಜನಗರ ಜಿಲ್ಲೆಗಳ ಬರ ವೀಕ್ಷಣೆ ಮಾಡುತ್ತೇನೆ. ಅಂತಿಮವಾಗಿ ನಮ್ಮ ಸರ್ಕಾರ ಚರ್ಚಿಸಿ ರೈತರ ಸಮಸ್ಯೆ ಪರಿಹಾರಕ್ಕೆ ತೀರ್ಮಾನ ತೆಗೆದುಕೊಳ್ಳುತ್ತದೆ. ಕೆ.ಆರ್.ನಗರ ತಾಲೂಕಿನಲ್ಲಿ ಹೊಗೆಸೊಪ್ಪು, ರಾಗಿ ಹೆಚ್ಚು ಬೆಳೆಯುತ್ತಾರೆ. ಆದರೆ ಎಲ್ಲಾ ಬೆಳೆಗಳು ನಷ್ಟವಾಗಿದೆ. ರೈತರಿಗೆ ಯಾವ ಬೆಳೆಯೂ ಸಿಕ್ಕಿಲ್ಲ. ಈ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಾಗುವುದು.
ಈಗಾಗಲೇ ನಾನು ಮತ್ತು ಮುಖ್ಯಮಂತ್ರಿಗಳು ಕೇಂದ್ರಕ್ಕೆ ಪತ್ರವನ್ನು ಬರೆದಿದ್ದೇವೆ. ಬರಪೀಡಿತ ಘೋಷಣೆಗೆ ಇರುವ ನಿಯಮಗಳನ್ನು ಸಡಿಲಿಸುವಂತೆ ಕೋರಿದ್ದೇವೆ. ನಿಯಮ ಸಡಿಲಿಸಿದರೆ ಹೆಚ್ಚು ತಾಲೂಕುಗಳನ್ನು ಬರಪೀಡಿತ ಪ್ರದೇಶ ಎಂದು ಘೋಷಿಸಬಹುದು. ಆದರೆ ಕೇಂದ್ರದಿಂದ ಈವರೆಗೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಹಾಗಾಗಿ ವಿಸ್ತೃತ ಮೆಮೊರಾಂಡಮ್ ಅನ್ನು ಸದ್ಯದಲ್ಲೇ ಸಲ್ಲಿಸುತ್ತೇವೆ. ಅವರ ತಂಡ ಇಲ್ಲಿಗೆ ಬಂದು ಪರಿಶೀಲನೆ ನಡೆಸಿದ ಬಳಿಕ ಹಣ ಬಿಡುಗಡೆಯಾಗುತ್ತದೆ.
ಮೈಕ್ರೋ ಫೈನಾನ್ಸ್ನವರು ರೈತರಿಗೆ ಕಿರುಕುಳ ನೀಡಿದರೆ ಕ್ರಮ : ಮೈಕ್ರೋ ಫೈನಾನ್ಸ್ಗಳ ಹಾವಳಿ ಹೆಚ್ಚಾಗುತ್ತಿರುವುದು ನಮ್ಮ ಗಮನಕ್ಕೆ ಬಂದಿದೆ. ಈಗಾಗಲೇ ನಾವು ಕಾನೂನನ್ನು ಮಾಡಿದ್ದೇವೆ. ಯಾವುದೇ ರೀತಿಯಲ್ಲಿ ರೈತನಿಗೆ ಒತ್ತಾಯ ಮಾಡಬಾರದು. ಅವರಿಗೆ ಕಿರುಕುಳ ನೀಡಬಾರದು ಎಂದು ಸೂಚಿಸಿದ್ದೇನೆ. ಸೂಚನೆ ಮೀರಿದ್ದಲ್ಲಿ ಅವರ ವಿರುದ್ಧ ಕಠಿಣ ಕ್ರಮವನ್ನು ತೆಗೆದುಕೊಳ್ಳಲಾಗುವುದು
- ಇಂದು ಮೈಸೂರು ಜಿಲ್ಲೆಯ ಕೆ.ಆರ್.ನಗರ ತಾಲ್ಲೂಕಿನ ಕಂಚುಗಾರ ಕೊಪ್ಪಲು ಗ್ರಾಮದ ರೈತರ ಜಮೀನುಗಳಿಗೆ ತೆರಳಿ ಬರ ವೀಕ್ಷಣೆ ನಡೆಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದೆ. -
Dr. G Parameshwara
@DrParameshwara
ಇಂದು ಮೈಸೂರು ಜಿಲ್ಲಾ ಪ್ರವಾಸದ ವೇಳೆ ಕೆ.ಆರ್.ನಗರ ಕ್ಷೇತ್ರಕ್ಕೆ ಭೇಟಿ ನೀಡಿ, ಅಂಬೇಡ್ಕರ್ ಭವನದ ನಿರ್ಮಾಣದ ಕುರಿತು ಸ್ಥಳೀಯರಿಗಿದ್ದ ಗೊಂದಲಗಳನ್ನು ಮಾತುಕತೆಯ ಮೂಲಕ ಪರಿಹರಿಸಿದೆ.
6.50 ಕೋಟಿ ರೂಪಾಯಿಗಳ ಅಂದಾಜು ವೆಚ್ಚದಲ್ಲಿ ಅಂಬೇಡ್ಕರ್ ಭವನ ನಿರ್ಮಾಣ ಮಾಡಲಾಗುತ್ತಿದೆ. ಹೆಚ್ಚಿನ ಅನುದಾನಕ್ಕಾಗಿ ಸ್ಥಳೀಯ ಶಾಸಕರಾದ ಡಿ. ರವಿಶಂಕರ್ ಅವರು ಈ ಹಿಂದೆಯೇ ಬೇಡಿಕೆ ಇಟ್ಟಿದ್ದಾರೆ. ಅದರಂತೆ ಹೆಚ್ಚುವರಿ ಅನುದಾನದ ಅಗತ್ಯವಿದ್ದರೆ ಖಂಡಿತವಾಗಿಯೂ ಅನುದಾನ ನೀಡುವುದಾಗಿ ಈಗಾಗಲೇ ಭರವಸೆ ನೀಡಿದ್ದೇನೆ. ಗುತ್ತಿಗೆದಾರರ ಜೊತೆಗೂ ಈ ವಿಷಯವಾಗಿ ಚರ್ಚೆ ನಡೆಸಿದ್ದು, ಶೀಘ್ರದಲ್ಲೇ ಕಾಮಗಾರಿಯನ್ನು ಪೂರ್ಣಗೊಳಿಸುವಂತೆ ಸೂಚಿಸಿದ್ದೇನೆ.
ನಗರದಲ್ಲಿರುವ ಅಂಬೇಡ್ಕರ್ ಪ್ರತಿಮೆಯನ್ನು ಬದಲಾಯಿಸುವಂತೆ ಈ ಹಿಂದೆ ಭೇಟಿ ನೀಡಿದ್ದಾಗಲೇ ಸೂಚಿಸಿದ್ದೆ. ಅದರಂತೆ ಈಗಾಗಲೇ ಶಾಸಕರು ಆದೇಶವನ್ನು ಹೊರಡಿಸಿದ್ದಾರೆ. ಸ್ಥಳವನ್ನು ತೆರುವುಗೊಳಿಸುವಂತೆ ಜಿಲ್ಲಾಧಿಕಾರಿಗಳು ಹಾಗೂ ಸ್ಥಳೀಯ ಅಧಿಕಾರಿಗಳಿಗೂ ಸೂಚನೆಯನ್ನು ನೀಡಿದ್ದೇನೆ. ಮುಂದಿನ ಮೂರು ತಿಂಗಳುಗಳ ಒಳಗಾಗಿ ಹೊಸದಾಗಿ ಅಂಬೇಡ್ಕರ್ ಪ್ರತಿಮೆಯನ್ನು ಸ್ಥಾಪಿಸಲಾಗುವುದು.
ಸರ್ಕಾರದಿಂದ ನಿವೇಶನಗಳನ್ನು ಹಂಚಿಕೆ ಮಾಡುವಂತೆ ಕ್ಷೇತ್ರದ ಜನರು ಅರ್ಜಿಗಳನ್ನು ನೀಡಿ ಮನವಿ ಮಾಡಿದ್ದಾರೆ. ಈ ಬಗ್ಗೆ ನಾನು ಈಗಾಗಲೇ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿದ್ದೇನೆ. ರಾಜ್ಯದ ಪ್ರತಿ ಕ್ಷೇತ್ರಗಳಲ್ಲಿ ಬಡವರಿಗೆ 4-5 ಸಾವಿರ ನಿವೇಶನಗಳನ್ನು ಹಂಚಿಕೆ ಮಾಡಬೇಕೆಂದು ನಿರ್ಧರಿಸಲಾಗಿದೆ. ಅದರಂತೆ ಕೆ.ಆರ್.ನಗರ ಕ್ಷೇತ್ರದಲ್ಲೂ ಗ್ರಾಮ ಸಭೆಗಳ ಮೂಲಕ ಅರ್ಹ ಫಲಾನುಭವಿಗಳನ್ನು ಗುರುತಿಸಿ ನಿವೇಶನಗಳನ್ನು ಹಂಚಿಕೆ ಮಾಡಲಾಗುವುದು.
During my visit to Mysuru district today, I visited K.R. Nagar constituency and, through discussions with local residents, resolved the confusion surrounding the construction of the Ambedkar Bhavan.
The Ambedkar Bhavan is being constructed at an estimated cost of ₹6.50 crore. Local MLA D. Ravishankar had earlier sought additional funds for the project, and I have already assured that further funds will certainly be provided if required. I have also discussed the matter with the contractor and directed that the construction work be completed at the earliest.
During my previous visit, I had instructed that the existing Ambedkar statue in the town be replaced. Accordingly, the MLA has already initiated the necessary process. I have also directed the Deputy Commissioner and local officials to clear the site. A new Ambedkar statue will be installed within the next three months.
Residents of the constituency have also submitted applications seeking allotment of housing sites from the government. I have already discussed this matter with the Chief Minister. It has been decided to allot around 4,000 to 5,000 housing sites to the poor in every Assembly constituency across the State. Accordingly, eligible beneficiaries in K.R. Nagar constituency will be identified through Gram Sabhas and housing sites will be allotted to them. -
Dr. G Parameshwara
@DrParameshwara
ಇಂದು ಮೈಸೂರು ಜಿಲ್ಲಾ ಪ್ರವಾಸದ ಸಂದರ್ಭದಲ್ಲಿ ಕೆ.ಆರ್.ನಗರ ತಾಲೂಕಿನ ಬರಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ.
ಮಳೆ ಕೊರತೆಯಿಂದ ಒಣಗುತ್ತಿರುವ ರಾಗಿ, ಹೊಗೆಸೊಪ್ಪು ಬೆಳೆಗಳನ್ನು ಪರಿಶೀಲಿಸಿ, ರೈತರೊಂದಿಗೆ ಸಮಾಲೋಚನೆ ನಡೆಸಿ ಮಾಹಿತಿ ಪಡೆದೆ.
ಈ ವೇಳೆ ಕೆ.ಆರ್.ನಗರ ಶಾಸಕರಾದ ರವಿಶಂಕರ್, ಜಿಲ್ಲಾಧಿಕಾರಿಗಳಾದ ಲಕ್ಷ್ಮೀಕಾಂತ್ ರೆಡ್ಡಿ, ಜಿಲ್ಲಾ ಪಂಚಾಯತ್ ಸಿಇಒ, ಕೆ.ಆರ್.ನಗರ ತಹಶೀಲ್ದಾರರು, ಕೃಷಿ ಇಲಾಖೆಯ ಅಧಿಕಾರಿಗಳು ಜೊತೆಗಿದ್ದರು.
During my visit to Mysuru district today, I visited and inspected the drought-affected areas of K.R. Nagar taluk.
I examined ragi and tobacco crops that are drying up due to the rainfall deficit, interacted with farmers and gathered information about the situation.
K.R. Nagar MLA Ravishankar, Deputy Commissioner Lakshmikanth Reddy, Zilla Panchayat CEO, K.R. Nagar Tahsildar and officials from the Agriculture Department accompanied me during the visit. -
Dr. G Parameshwara
@DrParameshwara
ಇಂದು ಮೈಸೂರು ಜಿಲ್ಲಾ ಪ್ರವಾಸದ ವೇಳೆ ಕೆ.ಆರ್.ನಗರದಲ್ಲಿ ಅಂಬೇಡ್ಕರ್ ಭವನ ನಿರ್ಮಾಣ ಕಾಮಗಾರಿಯನ್ನು ವೀಕ್ಷಿಸಿದೆ.
ಈ ಸಂದರ್ಭದಲ್ಲಿ ನಾಗರಿಕರ ಅಹವಾಲುಗಳನ್ನು ಸ್ವೀಕರಿಸಿ, ಅವರ ಸಮಸ್ಯೆಗಳನ್ನು ಆಲಿಸಿದೆ.
During my visit to Mysuru district today, I inspected the ongoing construction work of the Ambedkar Bhavan in K.R. Nagar.
On the occasion, I also received grievances from citizens and listened to the issues and concerns raised by them. -
Dr. G Parameshwara
@DrParameshwara
ಇಂದು ನನಗೆ ಸಿಕ್ಕಿರುವ ಅಧಿಕಾರ, ಹುದ್ದೆ ಎಲ್ಲವೂ ಕನ್ನಡ ಜನತೆಯ ಪ್ರೀತಿ ಮತ್ತು ಆಶೀರ್ವಾದದ ಸಂಕೇತ.
ನೀವು ನೀಡಿರುವ ಜವಾಬ್ದಾರಿಯನ್ನು ನಾನು ಸಮರ್ಥವಾಗಿ ನಿಭಾಯಿಸಿದ್ದೇನೆ ಎನ್ನುವ ಸಂತೃಪ್ತಿ ನನಗಿದೆ. ಅದನ್ನು ನಿಮ್ಮ ಮಾತುಗಳಲ್ಲಿ ಕೇಳುವಾಗ ಮತ್ತಷ್ಟು ಖುಷಿಯಾಗುತ್ತದೆ.
ಈ ಪ್ರೀತಿ - ವಿಶ್ವಾಸಕ್ಕೆ ಧನ್ಯವಾದಗಳು -
Dr. G Parameshwara
@DrParameshwara
ರಂಗಭೂಮಿಯ ಭೀಷ್ಮ, ಖ್ಯಾತ ನಾಟಕಕಾರ ಹಾಗೂ ನಿರ್ದೇಶಕರಾದ ಬಿ.ವಿ. ಕಾರಂತ್ ಅವರ ಪುಣ್ಯಸ್ಮರಣೆಯಂದು ನನ್ನ ಗೌರವ ನಮನಗಳನ್ನು ಸಲ್ಲಿಸುತ್ತೇನೆ.
ಅವರು ದೆಹಲಿಯ ರಾಷ್ಟ್ರೀಯ ನಾಟಕ ಶಾಲೆಯ ನಿರ್ದೇಶಕರಾಗಿ ದೇಶದಾದ್ಯಂತ ರಂಗಭೂಮಿಗೆ ಭದ್ರ ಬುನಾದಿ ಹಾಕಿದ್ದಾರೆ. ಜೊತೆಗೆ ಮೈಸೂರಿನಲ್ಲಿ ರಂಗಾಯಣವನ್ನು ಸ್ಥಾಪಿಸಿ, ಕನ್ನಡ ರಂಗಭೂಮಿಗೆ ಹೊಸ ಆಯಾಮ ನೀಡಿದ್ದಾರೆ. ಶ್ರೀಯುತರ ಕಲಾಸೇವೆ ಸದಾ ಸ್ಮರಣೀಯ. -
Dr. G Parameshwara
@DrParameshwara
ರಾಜ್ಯ ಅಭಿವೃದ್ಧಿಯಾಗಬೇಕಾದರೆ ಪ್ರತಿ ಹಳ್ಳಿ, ಪ್ರತಿ ಗ್ರಾಮವೂ ಪ್ರಗತಿ ಕಾಣಬೇಕು. ಈ ನಿಟ್ಟಿನಲ್ಲಿ ನನ್ನೂರು, ನನ್ನ ಗ್ರಾಮ, ನನ್ನ ಜಿಲ್ಲೆ, ನನ್ನ ರಾಜ್ಯದ ಸಮಗ್ರ ಬದಲಾವಣೆಯ ಚಿತ್ರಣವನ್ನು ಮುಂದಿಟ್ಟುಕೊಂಡು ಕೆಲಸ ಮಾಡುತ್ತಿದ್ದೇನೆ.
ಇಂದು ನಾನು ಪ್ರತಿನಿಧಿಸುತ್ತಿರುವ ಕೊರಟಗೆರೆ ವಿಧಾನಸಭಾ ಕ್ಷೇತ್ರ ಮೂಲಸೌಕರ್ಯ, ಶಿಕ್ಷಣ, ಆರೋಗ್ಯ, ಶುಚಿತ್ವ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲೂ ಮುಂಚೂಣಿಯಲ್ಲಿರುವುದು ನೋಡುವಾಗ ಖುಷಿಯಾಗುತ್ತದೆ. ಕೊರಟಗೆರೆ ಪುಟ್ಟ ಊರು. ಆದರೆ ಇಲ್ಲಾಗುತ್ತಿರುವ ಅಭಿವೃದ್ಧಿಗಳು ಬಹು ದೊಡ್ಡವು. ಅದು ಎಷ್ಟರಮಟ್ಟಿಗೆ ಎಂಬುದು ನನ್ನೂರಿನ ಜನರ ಮೊಗದಲ್ಲಿ ಮೂಡುತ್ತಿರುವ ಮಂದಹಾಸವೇ ಸಾಬೀತುಪಡಿಸುತ್ತಿದೆ.
ನನ್ನನ್ನು ಹರಸಿ - ಹಾರೈಸಿದ ನನ್ನೂರಿನ ಜನ ನಾನು ಮಾಡಿದ ಕೆಲಸಕ್ಕೆ ಪ್ರಶಂಸೆಯ ಮಹಾಪೂರಣವನ್ನೇ ಅರ್ಪಿಸುತ್ತಿರುವುದನ್ನು ನೋಡುವಾಗ ನಿಜಕ್ಕೂ ನನ್ನ ಸಾರ್ವಜನಿಕ ಜೀವನ ಸಾರ್ಥಕ ಎನಿಸುತ್ತದೆ.
ನಾನು ನಿಮ್ಮವನು, ನಿಮ್ಮ ಮನೆಮಗ. ನಿಮಗೆ ನೆಮ್ಮದಿ, ಸಂತೋಷದ ಜೀವನವನ್ನು ಕಲ್ಪಿಸಿಕೊಡುವುದು ನನ್ನ ಜವಾಬ್ದಾರಿ ಮತ್ತು ಕರ್ತವ್ಯ. ಅದಕ್ಕಾಗಿಯೇ ನನ್ನ ರಾಜಕೀಯ ಜೀವನ ಮೀಸಲು.This media couldn't be displayed. See it on the original post. -
Dr. G Parameshwara
@DrParameshwara
ಕಾಂಗ್ರೆಸ್ ವರಿಷ್ಠರಾದ ಶ್ರೀ @RahulGandhi ಅವರ ವಿರುದ್ಧ ಉತ್ತರಾಖಂಡ ಪೊಲೀಸರು ಎಫ್ಐಆರ್ ದಾಖಲಿಸಿರುವುದು ಪ್ರಜಾಪ್ರಭುತ್ವ, ಸಂವಿಧಾನ ಮತ್ತು ಸಾಮಾಜಿಕ ನ್ಯಾಯದ ಮೇಲೆ ನಡೆದಿರುವ ಗಂಭೀರ ದಾಳಿ. ಜಾತಿ ತಾರತಮ್ಯ ಮತ್ತು ಅಸ್ಪೃಶ್ಯತೆಯ ವಿರುದ್ಧ ಧ್ವನಿ ಎತ್ತಿದ ನಾಯಕರನ್ನೇ ಪ್ರಕರಣದಲ್ಲಿ ಸಿಲುಕಿಸುವ ಮೂಲಕ ಬಿಜೆಪಿ ಸರ್ಕಾರ ತನ್ನ ನಿಜವಾದ ಮನಸ್ಥಿತಿಯನ್ನು ಬಹಿರಂಗಪಡಿಸಿದೆ.
ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಶ್ರೀ ಮಲ್ಲಿಕಾರ್ಜುನ ಖರ್ಗೆ ಅವರು ಹಲ್ದ್ವಾನಿಯಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಬಳಿಕ, ಅವರು ಭೇಟಿ ನೀಡಿದ ಸ್ಥಳವನ್ನು ‘ಶುದ್ಧೀಕರಣ’ ಮಾಡಲಾಗಿದೆ. ದೇಶದ ಪ್ರಮುಖ ದಲಿತ ನಾಯಕನೊಬ್ಬರು ಭೇಟಿ ನೀಡಿದ ನಂತರ ಇಂತಹ ಕೃತ್ಯ ನಡೆದಿರುವುದು ಸಾಮಾನ್ಯ ಸಂಗತಿಯಲ್ಲ. ಇದು ನಮ್ಮ ಸಮಾಜದಲ್ಲಿ ಇನ್ನೂ ಜೀವಂತವಾಗಿರುವ ಜಾತಿ ತಾರತಮ್ಯದ ಮನೋಭಾವದ ಕುರಿತು ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ.
ದಲಿತ ನಾಯಕರೊಬ್ಬರು ಭೇಟಿ ನೀಡಿದ ಸ್ಥಳವನ್ನು ‘ಶುದ್ಧೀಕರಿಸುವುದು’ ದೇಶದ ಸಂವಿಧಾನದಡಿ ಸ್ವೀಕಾರಾರ್ಹವೇ? ಇಲ್ಲದಿದ್ದರೆ ಈ ಕೃತ್ಯ ಎಸಗಿದವರನ್ನು ಶಿಕ್ಷಿಸಬೇಕಲ್ಲವೇ? ಇಂಥದ್ದೊಂದು ಸರಳ ಪ್ರಶ್ನೆಯನ್ನು ಶ್ರೀ ರಾಹುಲ್ ಗಾಂಧಿ ಅವರು ಕೇಳಿದ್ದಾರೆ. ಜಾತಿ ತಾರತಮ್ಯವನ್ನು ಪ್ರಶ್ನಿಸಿದ್ದಾರೆ. ಅಸ್ಪೃಶ್ಯತೆಯಂತಹ ಅನಿಷ್ಟ ಪದ್ಧತಿಗಳ ವಿರುದ್ಧ ಧ್ವನಿ ಎತ್ತಿದ್ದಾರೆ.
ಆದರೆ, ಬಿಜೆಪಿ ಸರ್ಕಾರ ಮಾಡಿದ್ದೇನು? ಜಾತಿ ತಾರತಮ್ಯ ನಡೆಸಿದವರ ವಿರುದ್ಧ ಕ್ರಮ ಕೈಗೊಳ್ಳುವ ಬದಲು, ಅದನ್ನು ಪ್ರಶ್ನಿಸಿದ ಶ್ರೀ ರಾಹುಲ್ ಗಾಂಧಿ ಅವರ ವಿರುದ್ಧವೇ ಎಫ್ಐಆರ್ ದಾಖಲಿಸಿದೆ. ಇದಕ್ಕಿಂತ ವಿಪರ್ಯಾಸ ಮತ್ತೇನಿದೆ?
ಇದಕ್ಕಿಂತಲೂ ಆಘಾತಕಾರಿ ಸಂಗತಿಯೆಂದರೆ, ದಲಿತರ ಗೌರವ, ಸಮಾನತೆ ಮತ್ತು ಸಂವಿಧಾನಾತ್ಮಕ ಹಕ್ಕುಗಳ ಪರವಾಗಿ ಮಾತನಾಡಿದ ಶ್ರೀ ರಾಹುಲ್ ಗಾಂಧಿ ಅವರ ವಿರುದ್ಧವೇ ಎಸ್ಸಿ/ಎಸ್ಟಿ ಕಾಯ್ದೆಯಡಿ ಪ್ರಕರಣ ದಾಖಲಿಸಿರುವುದು. ದಲಿತರ ರಕ್ಷಣೆಗೆ ರೂಪಿಸಲಾಗಿರುವ ಕಾನೂನನ್ನು ದಲಿತರ ಪರವಾಗಿ ಧ್ವನಿ ಎತ್ತುವವರ ವಿರುದ್ಧ ಬಳಸುತ್ತಿರುವುದು ಕಾನೂನಿನ ದುರುಪಯೋಗವಲ್ಲದೆ ಮತ್ತೇನು?
ಅಸ್ಪೃಶ್ಯತೆಯ ವಿರುದ್ಧ ಮಾತನಾಡುವುದು ಅಪರಾಧವೇ? ಜಾತಿ ತಾರತಮ್ಯವನ್ನು ಪ್ರಶ್ನಿಸುವುದು ಅಪರಾಧವೇ? ದಲಿತರ ಸ್ವಾಭಿಮಾನಕ್ಕಾಗಿ ಧ್ವನಿ ಎತ್ತುವುದು ಅಪರಾಧವೇ? ಎನ್ನುವುದು ನನ್ನ ಪ್ರಶ್ನೆ. ಭಾರತದ ಸಂವಿಧಾನವು ಅಸ್ಪೃಶ್ಯತೆಯನ್ನು ನಿಷೇಧಿಸಿದೆ. ಪ್ರತಿಯೊಬ್ಬ ನಾಗರಿಕನಿಗೂ ಸಮಾನತೆ, ಸ್ವಾಭಿಮಾನ ಮತ್ತು ಘನತೆಯಿಂದ ಬದುಕುವ ಹಕ್ಕನ್ನು ನೀಡಿದೆ. ಡಾ. ಬಿ.ಆರ್. ಅಂಬೇಡ್ಕರ್ ಅವರು ಕಟ್ಟಿಕೊಟ್ಟ ಸಂವಿಧಾನದ ಆಶಯಗಳನ್ನು ರಕ್ಷಿಸುವುದು ಸರ್ಕಾರದ ಕರ್ತವ್ಯ. ಆದರೆ, ಆ ಆಶಯಗಳ ಪರವಾಗಿ ಮಾತನಾಡುವವರನ್ನೇ ಬೆದರಿಸುವುದು ಮತ್ತು ಪ್ರಕರಣಗಳಲ್ಲಿ ಸಿಲುಕಿಸುವುದು ಸಂವಿಧಾನದ ಮೇಲೆ ಬಿಜೆಪಿಗಿರುವ ಅಗೌರವವನ್ನು ತೋರುತ್ತದೆ.
ಪೊಲೀಸ್ ಪ್ರಕರಣಗಳ ಮೂಲಕ ರಾಹುಲ್ ಗಾಂಧಿಯವರ ಧ್ವನಿಯನ್ನು ಅಡಗಿಸಲು ಸಾಧ್ಯವಿಲ್ಲ. ಅವರ ಜೊತೆ ನನ್ನಂತಹ ಕೋಟ್ಯಂತರ ಭಾರತೀಯರಿದ್ದಾರೆ. ದಲಿತ ಸಮುದಾಯದವನಾಗಿ ನನ್ನ ಸಂಪೂರ್ಣ ಬೆಂಬಲ ಅವರಿಗಿದೆ.
ಇಂತಹ ಘಟನೆಗಳಿಂದ ಸಾಮಾಜಿಕ ನ್ಯಾಯದ ಪ್ರಶ್ನೆಗಳನ್ನು ಎತ್ತುವುದನ್ನು ನಾವು ನಿಲ್ಲಿಸುವುದಿಲ್ಲ. ಬದಲಿಗೆ ಜಾತಿ ತಾರತಮ್ಯದ ವಿರುದ್ಧದ ಹೋರಾಟವನ್ನು ನಾವು ಮತ್ತಷ್ಟು ತೀವ್ರಗೊಳಿಸುತ್ತೇವೆ. ದಲಿತರ ಸ್ವಾಭಿಮಾನ ಮತ್ತು ಘನತೆಯ ಪರವಾಗಿ ಕಾಂಗ್ರೆಸ್ ಪಕ್ಷದ ಧ್ವನಿ ಇನ್ನಷ್ಟು ಗಟ್ಟಿಯಾಗಲಿದೆ.
ಶ್ರೀ ರಾಹುಲ್ ಗಾಂಧಿ ಅವರ ವಿರುದ್ಧ ದಾಖಲಿಸಿರುವ ಎಫ್ಐಆರ್ ಅನ್ನು ತಕ್ಷಣವೇ ಹಿಂಪಡೆಯಬೇಕು. ಹಲ್ದ್ವಾನಿಯಲ್ಲಿ ನಡೆದಿರುವ ‘ಶುದ್ಧೀಕರಣ’ದ ಹೆಸರಿನ ಆಚರಣೆಯ ಕುರಿತು ನಿಷ್ಪಕ್ಷಪಾತ ಮತ್ತು ಪಾರದರ್ಶಕ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು.
ಸಂವಿಧಾನವನ್ನು ದುರ್ಬಲಗೊಳಿಸುವ, ಜಾತಿ ತಾರತಮ್ಯವನ್ನು ಸಮರ್ಥಿಸುವ ಮತ್ತು ಸಾಮಾಜಿಕ ನ್ಯಾಯದ ಧ್ವನಿಯನ್ನು ಹತ್ತಿಕ್ಕುವ ಯಾವುದೇ ಪ್ರಯತ್ನದ ವಿರುದ್ಧ ಕಾಂಗ್ರೆಸ್ ಪಕ್ಷ ನಿರಂತರವಾಗಿ ಹೋರಾಡಲಿದೆ. -
Dr. G Parameshwara
@DrParameshwara
The FIR registered by the Uttarakhand Police against top Congress leader Shri @RahulGandhi is a serious attack on democracy, the Constitution and social justice. By filing a case against a leader who raised his voice against caste discrimination and untouchability, the BJP government has exposed its true mindset.
After Congress President Shri Mallikarjun Kharge addressed a public meeting in Haldwani, a so-called “purification” ritual was carried out at the venue he had visited. Such an act taking place after the visit of one of the country’s most prominent Dalit leaders cannot be dismissed as an ordinary matter. It raises serious questions about the casteist mindset that continues to exist in our society.
Is it acceptable under the Constitution of this country to “purify” a place after a Dalit leader has visited it? If not, should those responsible for such an act not be punished? Shri Rahul Gandhi has simply raised this question. He has questioned caste discrimination and spoken out against the evil practice of untouchability.
But what did the BJP government do? Instead of taking action against those responsible for the discriminatory act, it registered an FIR against Shri Rahul Gandhi for questioning it. What could be more ironic than this?
What is even more shocking is that a case has been registered against Shri Rahul Gandhi under the SC/ST Act, despite the fact that he spoke in support of the dignity, equality and constitutional rights of Dalits. What else can this be called but a misuse of a law that was enacted to protect Dalits, when the same law is being used against those who speak in their support?
My question is simple: Is speaking against untouchability a crime? Is questioning caste discrimination a crime? Is raising one’s voice for the dignity and self-respect of Dalits a crime?
The Constitution of India has abolished untouchability and guarantees every citizen the right to equality, dignity and self-respect. It is the duty of every government to protect the ideals of the Constitution given to us by Dr. B.R. Ambedkar. But threatening and filing cases against those who stand up for these very ideals only shows the BJP’s disregard for the Constitution.
Rahul Gandhi’s voice cannot be silenced through police cases. Crores of Indians like me stand with him. As a member of the Dalit community, he has my complete support.
Such incidents will not stop us from raising questions of social justice. On the contrary, we will intensify our fight against caste discrimination. The Congress party will raise its voice even more strongly for the dignity and self-respect of Dalits.
The FIR registered against Shri Rahul Gandhi must be withdrawn immediately. There must be a fair and transparent investigation into the so-called “purification” ritual carried out in Haldwani, and strict legal action must be taken against those responsible.
The Congress party will continue to fight every attempt to weaken the Constitution, justify caste discrimination and suppress the voice of social justice. -
Dr. G Parameshwara
@DrParameshwara
ಇಂದು ವಿಧಾನಸೌಧದಲ್ಲಿ ಕರ್ನಾಟಕ ಮತ್ತು ಕೇರಳ ಸಬ್ ಏರಿಯಾ ಜನರಲ್ ಆಫೀಸರ್ ಕಮಾಂಡಿಂಗ್ (GOC) ಮೇಜರ್ ಜನರಲ್ ಭರತ್ ಮೆಹ್ತಾನಿ ಅವರು ಮುಖ್ಯಮಂತ್ರಿ ಶ್ರೀ ಡಿ.ಕೆ.ಶಿವಕುಮಾರ್ ಹಾಗೂ ನನ್ನನ್ನು ಭೇಟಿ ಮಾಡಿ, ಸಮಾಲೋಚನೆ ನಡೆಸಿದರು.
ಈ ವೇಳೆ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಾದ ಡಾ. ಶಾಲಿನಿ ರಜನೀಶ್, ಮುಖ್ಯಮಂತ್ರಿಯವರ ಅಪರ ಮುಖ್ಯ ಕಾರ್ಯದರ್ಶಿಗಳಾದ ತುಷಾರ್ ಗಿರಿನಾಥ್ ಸೇರಿದಂತೆ ಇತರರು ಉಪಸ್ಥಿತರಿದ್ದರು. -
Dr. G Parameshwara
@DrParameshwara
ಇಂದು ನನಗೆ ಸಿಕ್ಕಿರುವ ಅಧಿಕಾರ, ಹುದ್ದೆ ಎಲ್ಲವೂ ಕನ್ನಡ ಜನತೆಯ ಪ್ರೀತಿ ಮತ್ತು ಆಶೀರ್ವಾದದ ಸಂಕೇತ.
ನೀವು ನೀಡಿರುವ ಜವಾಬ್ದಾರಿಯನ್ನು ನಾನು ಸಮರ್ಥವಾಗಿ ನಿಭಾಯಿಸಿದ್ದೇನೆ ಎನ್ನುವ ಸಂತೃಪ್ತಿ ನನಗಿದೆ. ಅದನ್ನು ನಿಮ್ಮ ಮಾತುಗಳಲ್ಲಿ ಕೇಳುವಾಗ ಮತ್ತಷ್ಟು ಖುಷಿಯಾಗುತ್ತದೆ.
ಈ ಪ್ರೀತಿ - ವಿಶ್ವಾಸಕ್ಕೆ ಧನ್ಯವಾದಗಳುThis media couldn't be displayed. See it on the original post. -
Dr. G Parameshwara
@DrParameshwara
ನಿಮ್ಮ ಅಹವಾಲು ನನ್ನ ಬಳಿ ತಲುಪಿದೆ. ನಾನು ಬಗೆಹರಿಸಿಕೊಡುವೆನೆಂಬ ಭರವಸೆ ನಿಮ್ಮ ಕಣ್ಣುಗಳಲ್ಲಿ ಕಾಣಿಸುತ್ತಿದೆ. ಆ ನಂಬಿಕೆಯನ್ನು ಉಳಿಸಿಕೊಳ್ಳುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ.
-
Dr. G Parameshwara
@DrParameshwara
Remembering former President of India Shri Pranab Mukherjee on his death anniversary.
A distinguished statesman, seasoned parliamentarian and dedicated public servant, he served the nation in several important roles with wisdom, dignity and a deep commitment to democratic values.
His immense contribution to India’s public life and institutions will always be remembered with respect and gratitude.
#pranabmukherjee -
Dr. G Parameshwara
@DrParameshwara
ರಾಜ್ಯದ ಅಭಿವೃದ್ಧಿಶೀಲ ಜಿಲ್ಲೆಗಳ ಸಾಲಿನಲ್ಲಿ ನಮ್ಮ ತುಮಕೂರು ಮುಂಚೂಣಿಯಲ್ಲಿದೆ.
ಕೃಷಿ ಕ್ಷೇತ್ರದಲ್ಲಿ 3ನೇ ಸ್ಥಾನದಲ್ಲಿರುವ ತುಮಕೂರು ರಾಜ್ಯದ ಜಿಎಸ್ಡಿಪಿಗೆ ಕೊಡುಗೆ ನೀಡುವ ಪ್ರಮುಖ ಜಿಲ್ಲೆಗಳ ಪೈಕಿ ನಾಲ್ಕನೇ ಸ್ಥಾನದಲ್ಲಿದೆ. ಜಿಲ್ಲೆಯು ರಾಜ್ಯದ ಜಿಎಸ್ಡಿಪಿಗೆ ಕೃಷಿ ಮತ್ತು ಅದರ ಪೂರಕ ವಲಯಗಳಿಂದ ₹1,75,000 ಕೋಟಿಗೂ ಹೆಚ್ಚಿನ ಕೊಡುಗೆಯನ್ನು ನೀಡುತ್ತಿದೆ.
ತೆಂಗು, ಅಡಿಕೆ, ಸಿರಿಧಾನ್ಯಗಳು, ಹುಣಸೆ, ಮಾವು, ಹಲಸು, ಹಣ್ಣು-ತರಕಾರಿ, ಎಣ್ಣೆಕಾಳುಗಳು, ಹೈನುಗಾರಿಕೆ, ರೇಷ್ಮೆ ಮುಂತಾದ ಉತ್ಕೃಷ್ಟ ಉತ್ಪನ್ನಗಳಿಂದ ಜಿಲ್ಲೆಯು ಜಾಗತಿಕ ಭೂಪಟದಲ್ಲಿ ಮಹತ್ವದ ಸ್ಥಾನ ಪಡೆದುಕೊಂಡಿದೆ.
ಆದರೆ, ಈ ಬಾರಿ ಸಮರ್ಪಕವಾಗಿ ಮಳೆಯಾಗದೆ ಜಿಲ್ಲೆಯಲ್ಲಿ ಬರದ ಛಾಯೆ ಆವರಿಸಿರುವುದರಿಂದ ಬೆಳೆಹಾನಿ ಉಂಟಾಗಿ ರೈತರು ಸಂಕಷ್ಟಕ್ಕೀಡಾಗಿದ್ದಾರೆ. ಈ ಹಿನ್ನೆಲೆ ಜಿಲ್ಲೆಯಾದ್ಯಂತ ಪ್ರವಾಸ ಕೈಗೊಂಡು ಬರಪರಿಸ್ಥಿತಿಯನ್ನು ಅವಲೋಕಿಸಲಾಗಿದ್ದು, ಬರ ನಿರ್ವಹಣೆಗೆ ನೆರವು ಕೋರಿ ಈಗಾಗಲೇ ಕೇಂದ್ರಕ್ಕೆ ಮನವಿ ಮಾಡಲಾಗಿದೆ. ಸದ್ಯದಲ್ಲೇ ವಿಸ್ತೃತ ವರದಿಯನ್ನು ಸಿದ್ಧಪಡಿಸಿ ಕೇಂದ್ರಕ್ಕೆ ಸಲ್ಲಿಸಲಾಗುವುದು.
ಜಿಲ್ಲೆಯ ಕೃಷಿ ವಲಯದ ಸರ್ವತೋಮುಖ ಅಭಿವೃದ್ಧಿಗೆ ನಮ್ಮ ಸರ್ಕಾರ ಬದ್ಧವಾಗಿದ್ದು, ಆ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿದೆ.
#nammatumakuruThis media couldn't be displayed. See it on the original post. -
Dr. G Parameshwara
@DrParameshwara
The passing of former Minister C. Veeranna, who was very close to me, has caused me immense pain. We will undertake work that will ensure his name remains permanently etched in the history of Tumakuru.
I did not do politics alongside Veeranna. However, when I returned from abroad, my father took me to his house. At that time, I knew nothing about politics. Veeranna was then the Minister for Small Savings. Despite being a minister, he lived like an ordinary person in a small shed in Gandhinagar. There was not even enough space inside for guests to sit. He would bring chairs outside and speak to them there. I had a certain perception of what ministers were supposed to be like, but I was surprised when I met him. He was a person of extraordinary simplicity.
Veeranna had honestly told me that getting a medical college would be very difficult and that various discussions were taking place in that regard. That was the first time I met him. Later, I contested the 1989 Assembly elections, while Veeranna contested from the Koratagere Assembly constituency.
During the vote counting in Chikkaballapur, Veerabhadraiah was leading by 800 votes. Veeranna insisted that a recount should be conducted, saying that an 800-vote margin was not significant and alleging that there had been malpractice. I went there, calmed him down and urged him not to create a disturbance, but instead to seek a recount.
About twenty days before his passing, I visited Veeranna at his home. He could barely speak clearly. He asked me, “Parameshwara, look at what has become of me despite living an honest life.” It deeply moved me. He was a man of remarkable simplicity. Throughout his life, he never compromised on anything or on any principle. He even felt hesitant to ask me for help in finding a job for his son. I reassured him, saying, “I will look after him as I would my own son.”
In today’s polluted political environment, a personality like Veeranna’s becomes even more significant. Today’s politics cannot be compared with the politics of those days. When money dominates politics, where does honesty remain? There is simply no rating that can measure Veeranna’s honesty and simplicity.
I came to Koratagere in 2008. During the 2013 elections, although Veeranna did not directly campaign alongside me, he stood by me by telling his friends and local leaders that Parameshwara was a good man and urging them to vote for me. Losing Veeranna is a deeply personal loss for me.
The politics of Tumakuru today remains much the same as it was then. Leaders such as Y.K. Ramaiah, Veeranna, Lakshminarasimhaiah and Rajavardhan practised a certain kind of politics, and that same political culture continues in the district even today.
Society must change. Across the country, people are saying they want to live with dignity and on equal terms with everyone else. We must think about how the minds of young people have changed. Their thinking has evolved. Caste, religion and language are no longer barriers for them. They have entered the struggle asking what their future holds. The caste system should have disappeared, but it has not. We must create opportunities for young people. We need to reflect on the realities before us. A poor person should not remain poor forever. We must think by placing the extraordinary honesty and integrity of a person like Veeranna before us as an example.
Siddaramaiah did not set out saying he would change the entire country. He thought about what could be done for different communities. Devaraj Urs gave a voice to those who had none. Siddaramaiah has worked to empower weaker communities. He served as Chief Minister for eight years, and I worked alongside him as KPCC President. There were never any differences between us. Both of us have always shared the same thoughts and vision. Had we held fundamentally different views, it would not have been possible for us to work together.
Siddaramaiah had come to Tumakuru to inaugurate several development projects. When there was opposition to naming the Tumakuru Bus Stand, Rajanna suggested that it be named after Devaraj Urs. The matter was brought to the attention of Siddaramaiah, who was then the Chief Minister, and a name board was installed overnight before the inauguration the next morning.
All of us must think one step ahead from the perspective of social transformation. We will undertake work that will ensure C. Veeranna’s name remains permanently etched in Tumakuru.
— I spoke today after participating in the condolence programme held in memory of former Minister C. Veeranna, organised by the Veeranna Abhimanigala Balaga and the Karnataka State Valmiki Community’s Like-Minded Forum at the Central Library Auditorium in Tumakuru. -
Dr. G Parameshwara
@DrParameshwara
ನನಗೆ ಬಹಳ ಆತ್ಮೀಯರು ಆಗಿದ್ದ ಮಾಜಿ ಸಚಿವರಾದ ಸಿ.ವೀರಣ್ಣ ಅವರ ಅಗಲಿಕೆ ಬಹಳ ನೋವುಂಟು ಮಾಡಿದೆ. ಅವರ ಹೆಸರು ತುಮಕೂರಿನಲ್ಲಿ ಶಾಶ್ವತವಾಗಿ ಉಳಿಯುವಂತಹ ಕೆಲಸವನ್ನು ನಾವು ಮಾಡುತ್ತೇವೆ.
ನಾನು ವೀರಣ್ಣನವರ ಜೊತೆಗೆ ರಾಜಕಾರಣ ಮಾಡಿದವನಲ್ಲ. ಆದರೆ ನಾನು ವಿದೇಶದಿಂದ ಬಂದಾಗ ನಮ್ಮ ತಂದೆಯವರು ಅವರ ಮನೆಗೆ ಕರೆದುಕೊಂಡು ಹೋಗಿದ್ದರು. ನನಗೆ ಆಗ ರಾಜಕೀಯದ ಗಂಧ ಗಾಳಿಯು ಗೊತ್ತಿರಲಿಲ್ಲ. ಆ ಸಮಯದಲ್ಲಿ ವೀರಣ್ಣನವರು ಸಣ್ಣ ಉಳಿತಾಯ ಸಚಿವರು ಆಗಿದ್ದರು. ಒಬ್ಬ ಮಂತ್ರಿಯಾಗಿ ಗಾಂಧಿನಗರದಲ್ಲಿ ಸಾಮಾನ್ಯರಂತೆ ಒಂದು ಶೆಡ್ನಲ್ಲಿ ವಾಸಿಸುತ್ತಿದ್ದರು. ಅತಿಥಿಗಳು ಬಂದರೆ ಒಳಗಡೆ ಕುಳಿತುಕೊಳ್ಳಲು ಜಾಗ ಇರಲಿಲ್ಲ. ಕುರ್ಚಿ ತರಿಸಿ ಹೊರಗಡೆ ಕೂರಿಸಿಕೊಂಡು ಮಾತನಾಡಿಸಿದ್ದರು. ಮಂತ್ರಿಗಳು ಅಂದರೆ ಏನೇನೋ ಕಲ್ಪನೆ ಇತ್ತು. ಆದರೆ ಅವರನ್ನು ನನಗೆ ನೋಡಿ ಆಶ್ಚರ್ಯವಾಯಿತು. ಅಷ್ಟು ಸರಳತೆಯಿಂದ ಇದ್ದಂತಹ ವ್ಯಕ್ತಿ ಅವರು.
ವೀರಣ್ಣ ಅವರು ನಿಮಗೆ ಮೆಡಿಕಲ್ ಕಾಲೇಜು ಸಿಗುವುದು ಬಹಳ ಕಷ್ಟ. ಬೇರೆಬೇರೆ ರೀತಿಯ ಮಾತುಗಳು ನಡೆಯುತ್ತಿವೆ ಎಂಬುದನ್ನು ಪ್ರಾಮಾಣಿಕವಾಗಿ ತಿಳಿಸಿದ್ದರು. ಅದೇ ಮೊದಲು ನಾನು ಅವರನ್ನು ನೋಡಿದ್ದು. ಆನಂತರ ನಾನು 1989ರಲ್ಲಿ ಚುನಾವಣೆಗೆ ಸ್ಪರ್ಧಿಸಿದೆ. ವೀರಣ್ಣನವರು ಕೊರಟಗೆರೆ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದರು.
ಚಿಕ್ಕಬಳ್ಳಾಪುರದಲ್ಲಿ ಮತ ಎಣಿಕೆ ನಡೆಯುತ್ತಿತ್ತು. 800 ಮತದಿಂದ ವೀರಭದ್ರಯ್ಯನವರು ಮುಂದಿದ್ದರು. ವೀರಣ್ಣನವರು ಮರು ಎಣಿಕೆ ನಡೆಸಬೇಕು, 800 ಮತ ದೊಡ್ಡದ್ದಲ್ಲ, ಮೋಸ ಮಾಡಿದ್ದಾರೆ ಎಂದು ಗಲಾಟೆ ಮಾಡಿದ್ದರು. ಆಗ ನಾನು ಹೋಗಿ ಸಮಾಧಾನ ಮಾಡಿ, ಗಲಾಟೆ ಮಾಡುವುದು ಬೇಡ, ಮರು ಎಣಿಕೆ ಮಾಡಿಸಿ ಎಂದು ಸಮಾದಾನಪಡಿಸಿದ್ದೆ.
ವೀರಣ್ಣನವರು ತೀರಿಕೊಳ್ಳುವ ಇಪ್ಪತ್ತು ದಿನದ ಮೊದಲು ಅವರ ಮನೆಗೆ ಭೇಟಿ ನೀಡಿದ್ದೆ. ಮಾತುಗಳು ಸ್ಪಷ್ಟವಾಗಿ ಬರುತ್ತಿರಲಿಲ್ಲ. ʼಪರಮೇಶ್ವರ, ಪ್ರಾಮಾಣಿಕವಾಗಿ ಇದ್ದಿದ್ದಕ್ಕೆ ಹೇಗಿದ್ದೇನೆ ನೋಡಿದ್ರʼ ಎಂದು ಕೇಳಿದ್ದರು. ಬಹಳ ನೋವಾಯಿತು. ಅವರೊಬ್ಬ ಸರಳತೆಯ ವ್ಯಕ್ತಿ. ಇಡೀ ಜೀವನದಲ್ಲಿ ಯಾವುದಕ್ಕೂ ಮತ್ತು ಯಾವ ವಿಚಾರದಲ್ಲೂ ರಾಜಿ ಆದವರೇ ಅಲ್ಲ. ಅವರ ಮಗನಿಗೆ ಕೆಲಸ ಕೊಡಲು ನನಗೆ ಹೇಳಬೇಕಾದರೆ ಮುಜುಗರ ಪಟ್ಟಿದ್ದರು. ನಾನು ನಿಮ್ಮ ಮಗನಿದ್ದಂತೆ, ನಾನು ನೋಡಿಕೊಳ್ಳುತ್ತೇನೆ ಎಂದು ಧೈರ್ಯ ತುಂಬಿದ್ದೆ.
ಇವತ್ತಿನ ಕಲುಷಿತ ರಾಜಕಾರಣದಲ್ಲಿ ವೀರಣ್ಣನವರಂತಹ ವ್ಯಕ್ತಿತ್ವ ಬಹಳ ಪ್ರಾಮುಖ್ಯತೆ ಪಡೆಯುತ್ತದೆ. ಇವತ್ತಿನ ರಾಜಕಾರಣವನ್ನು ಹೋಲಿಸಲು ಸಾಧ್ಯವಾಗುವುದಿಲ್ಲ. ರಾಜಕಾರಣದಲ್ಲಿ ಹಣದ ಮುಂದೆ ಪ್ರಾಮಾಣಿಕತೆ ಎಲ್ಲಿ ಉಳಿಯುತ್ತದೆ. ವೀರಣ್ಣನವರ ಪ್ರಾಮಾಣಿಕತೆ ಮತ್ತು ಸರಳತೆಗೆ ರೇಟಿಂಗ್ ನೀಡಲು ಆಗುವುದಿಲ್ಲ.
ನಾನು 2008ರಲ್ಲಿ ಕೊರಟಗೆರೆ ಬಂದೆ. ವೀರಣ್ಣ ಅವರು 2013ರ ಚುನಾವಣೆಯಲ್ಲಿ ನನ್ನ ಜೊತೆ ನೇರವಾಗಿ ಬಂದು ಸಹಾಯ ಮಾಡದಿದ್ದರೂ, ಪರಮೇಶ್ವರ್ ಒಳ್ಳೆಯವನು. ಅವನಿಗೆ ಮತ ಹಾಕುವಂತೆ ಸ್ನೇಹಿತರುಗಳಿಗೆ ಮತ್ತು ಮುಖಂಡರುಗಳಿಗೆ ಹೇಳುವ ಮೂಲಕ ನನ್ನೊಂದಿಗೆ ನಿಂತಿದ್ದರು. ವೀರಣ್ಣನವರನ್ನು ಕಳೆದುಕೊಂಡಿರುವುದು ನನಗೆ ವೈಯಕ್ತಿಕವಾಗಿ ನೋವಾಗಿದೆ.
ಅಂದು ತುಮಕೂರಿನ ರಾಜಕಾರಣ ಹೇಗಿತ್ತೋ ಇಂದಿಗೂ ಹಾಗೆಯೇ ಇದೆ, ಬದಲಾಗಿಲ್ಲ. ವೈ.ಕೆ.ರಾಮಯ್ಯ, ವೀರಣ್ಣ, ಲಕ್ಷ್ಮೀನರಸಿಂಹಯ್ಯ, ರಾಜವರ್ಧನ್ ಇವರೆಲ್ಲ ಹೇಗಿದ್ದರೋ, ಅದೇ ರೀತಿಯ ರಾಜಕಾರಣ ಈಗಲೂ ಜಿಲ್ಲೆಯಲ್ಲಿದೆ.
ಸಮಾಜ ಬದಲಾಗಬೇಕು. ಎಲ್ಲರಂತೆ ನಾನು ಬದುಕಬೇಕು ಎಂಬ ಮಾತುಗಳು ಇಡೀ ದೇಶದಲ್ಲಿ ಬರುತ್ತಿವೆ. ಯುವಕರ ಮನಸ್ಸು ಯಾವ ರೀತಿ ಬದಲಾಗಿದೆ ಎಂಬುದನ್ನು ಯೋಚಿಸಬೇಕು. ಯುವಕರ ಆಲೋಚನೆಗಳು ಬದಲಾಗಿದೆ. ಜಾತಿ, ಧರ್ಮ, ಭಾಷೆ ಅಡ್ಡಿ ಬರುತ್ತಿಲ್ಲ. ನಮ್ಮ ಭವಿಷ್ಯ ಏನು ಎಂಬ ಪ್ರಶ್ನೆ ಇಟ್ಟುಕೊಂಡು ಹೋರಾಟಕ್ಕೆ ಇಳಿದಿದ್ದಾರೆ. ಜಾತಿ ವ್ಯವಸ್ಥೆ ಹೋಗಬೇಕಿತ್ತು, ಹೋಗಲಿಲ್ಲ. ಯುವಕರಿಗೆ ಅವಕಾಶಗಳನ್ನು ಕಲ್ಪಿಸಿಕೊಡಬೇಕು. ವಸ್ತುಸ್ಥಿತಿ ಏನಿದೆ, ಆ ಬಗ್ಗೆ ಚಿಂತನೆ ನಡೆಯಬೇಕು. ಬಡವ ಬಡವನಾಗಿಯೇ ಉಳಿಯಬಾರದು. ವೀರಣ್ಣನಂತಹ ಅತ್ಯಂತ ಪ್ರಾಮಾಣಿಕತೆಯ ವ್ಯಕ್ತಿತ್ವವನ್ನು ಮುಂದೆ ಇಟ್ಟುಕೊಂಡು ಯೋಚನೆ ಮಾಡಬೇಕಿದೆ.
ಸಿದ್ದರಾಮಯ್ಯನವರು ಇಡೀ ದೇಶ ಬದಲಾಯಿಸುತ್ತೇನೆ ಎಂದು ಹೋಗಲಿಲ್ಲ. ಸಮುದಾಯಗಳಿಗೆ ಏನು ಮಾಡಬಹುದು ಎಂದು ಯೋಚಿಸಿದರು. ದೇವರಾಜ ಅರಸು ಅವರು ದ್ವನಿ ಇಲ್ಲದವರಿಗೆ ಧ್ವನಿಕೊಟ್ಟರು. ದುರ್ಬಲ ಸಮುದಾಯಗಳಿಗೆ ಶಕ್ತಿ ಕೊಡುವ ಕೆಲಸವನ್ನು ಸಿದ್ದರಾಮಯ್ಯನವರು ಮಾಡಿದ್ದಾರೆ. ಎಂಟು ವರ್ಷ ಮುಖ್ಯಮಂತ್ರಿಗಳಾಗಿ ಕೆಲಸ ಮಾಡಿದರು. ನಾನು ಕೂಡ ಕೆಪಿಸಿಸಿ ಅಧ್ಯಕ್ಷನಾಗಿ ಜೊತೆಗೆ ಕೆಲಸ ಮಾಡಿದೆ. ಯಾವತ್ತೂ ಕೂಡ ನಮ್ಮಿಬ್ಬರ ಮಧ್ಯೆ ವ್ಯತ್ಯಾಸಗಳು ಬರಲಿಲ್ಲ. ನಾವಿಬ್ಬರೂ ಒಂದೇ ರೀತಿಯ ಯೋಚನೆ, ಚಿಂತನೆಗಳನ್ನು ಇಟ್ಟುಕೊಂಡವರು. ವಿಭಿನ್ನವಾದ ಚಿಂತನೆಗಳನ್ನು ಮಾಡಿದ್ದರೆ ಸಹಕಾರ ನೀಡಲು ಆಗುತ್ತಿರಲಿಲ್ಲ.
ಸಿದ್ದರಾಮಯ್ಯನವರು ಅನೇಕ ಕೆಲಸ ಕಾರ್ಯಗಳನ್ನು ತುಮಕೂರಿನಲ್ಲಿ ಉದ್ಘಾಟಿಸಲು ಬಂದಿದ್ದರು. ತುಮಕೂರು ಬಸ್ಸ್ಟ್ಯಾಂಡ್ಗೆ ಹೆಸರು ಇಡಲು ಅಪಸ್ವರ ಬಂದಿತ್ತು. ದೇವರಾಜ ಅರಸು ಅವರ ಹೆಸರು ಇಡೋಣ ಎಂದು ರಾಜಣ್ಣ ಹೇಳಿದರು. ಆಗ ಸಿಎಂ ಆಗಿದ್ದ ಸಿದ್ದರಾಮಯ್ಯ ಅವರ ಗಮನಕ್ಕೆ ತಂದು ರಾತ್ರೋರಾತ್ರಿ ಫಲಕ ಹಾಕಿ, ಬೆಳಗ್ಗೆ ಉದ್ಘಾಟಿಸಲಾಯಿತು.
ನಾವೆಲ್ಲರೂ ಸಮಾಜದ ಬದಲಾವಣೆಯ ದೃಷ್ಟಿಯಲ್ಲಿ ಒಂದು ಹೆಜ್ಜೆ ಮುಂದೆ ಯೋಚನೆ ಮಾಡಬೇಕು. ಸಿ.ವೀರಣ್ಣನವರ ಹೆಸರು ತುಮಕೂರಿನಲ್ಲಿ ಶಾಶ್ವತವಾಗಿ ಉಳಿಯುವಂತ ಕೆಲಸ ನಾವು ಮಾಡುತ್ತೇವೆ.
- ಇಂದು ತುಮಕೂರಿನ ಕೇಂದ್ರ ಗ್ರಂಥಾಲಯದ ಸಭಾಂಗಣದಲ್ಲಿ ವೀರಣ್ಣನವರ ಅಭಿಮಾನಿ ಬಳಗ ಮತ್ತು ಕರ್ನಾಟಕ ರಾಜ್ಯ ವಾಲ್ಮೀಕಿ ಸಮಾಜದ ಸಮಾನ ಮನಸ್ಕರ ವೇದಿಕೆ ವತಿಯಿಂದ ಆಯೋಜಿಸಿದ್ದ ಮಾಜಿ ಸಚಿವರಾದ ಸಿ.ವೀರಣ್ಣನವರಿಗೆ ನುಡಿ ನಮನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದೆ. -
Dr. G Parameshwara
@DrParameshwara
ಇಂದು ತುಮಕೂರಿನ ಕೇಂದ್ರ ಗ್ರಂಥಾಲಯದ ಸಭಾಂಗಣದಲ್ಲಿ ವೀರಣ್ಣನವರ ಅಭಿಮಾನಿ ಬಳಗ ಮತ್ತು ಕರ್ನಾಟಕ ರಾಜ್ಯ ವಾಲ್ಮೀಕಿ ಸಮಾಜದ ಸಮಾನ ಮನಸ್ಕರ ವೇದಿಕೆ ವತಿಯಿಂದ ಆಯೋಜಿಸಿದ್ದ ಮಾಜಿ ಸಚಿವರಾದ ಸಿ.ವೀರಣ್ಣನವರಿಗೆ ನುಡಿ ನಮನ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ಪುಷ್ಪಾರ್ಪಣೆಯ ಮೂಲಕ ಗೌರವ ನಮನ ಸಲ್ಲಿಸಿದೆ.
ಈ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ, ರಾಜ್ಯ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿಗಳಾದ ಟಿ.ಬಿ.ಜಯಚಂದ್ರ, ಮಧುಗಿರಿ ಶಾಸಕರು ಹಾಗೂ ಮಾಜಿ ಸಚಿವರಾದ ಕೆ.ಎನ್.ರಾಜಣ್ಣ, ಶಾಸಕರಾದ ಅಶೋಕ್ ಪಟ್ಟಣ್, ಮಾಜಿ ಸಚಿವರಾದ ಸೊಗಡು ಶಿವಣ್ಣ, ಪಿ.ಜಿ.ಆರ್.ಸಿಂಧ್ಯಾ, ಮಾಜಿ ಸಂಸದರಾದ ಜಿ.ಎಸ್.ಬಸವರಾಜ್, ವಿ.ಎಸ್.ಉಗ್ರಪ್ಪ, ಮಾಜಿ ಎಂಎಲ್ಸಿ ಡಾ. ಎಂ.ಆರ್.ಹುಲಿನಾಯ್ಕರ್, ಹಿರಿಯ ಪತ್ರಕರ್ತರಾದ ನಾಗಣ್ಣ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. -
Dr. G Parameshwara
@DrParameshwara
ರಾಜ್ಯದಲ್ಲಿ 101 ತಾಲೂಕುಗಳನ್ನು ಬರಪೀಡಿತ ಪ್ರದೇಶ ಎಂದು ಘೋಷಣೆ ಮಾಡಿದ್ದೇವೆ. ಇನ್ನೂ 15 ದಿನಗಳಿಗೆ ಪರಿಶೀಲನೆ ಮಾಡುತ್ತೇವೆ. ಆ ಬಳಿಕ ಕೆಲವು ತಾಲೂಕುಗಳು ಬರಪೀಡಿತ ಪ್ರದೇಶದ ವರ್ಗಕ್ಕೆ ಬರುವ ಸಾಧ್ಯತೆ ಇರುತ್ತದೆ. ಅವುಗಳ ಆಧಾರದ ಮೇಲೆ ಮತ್ತೆ ಘೋಷಣೆ ಮಾಡುತ್ತೇವೆ.
ಈ ತಿಂಗಳ ಕೊನೆಗೆ ಅಥವಾ ಸೆಪ್ಟೆಂಬರ್ ಮೊದಲ ವಾರದಲ್ಲಿ ಕೇಂದ್ರಕ್ಕೆ ಬರ ವರದಿಯನ್ನು ಸಲ್ಲಿಸುತ್ತೇವೆ.
ಈ ಕುರಿತಾಗಿ ನಿನ್ನೆ ಮಾಧ್ಯಮಕ್ಕೆ ಮಾತನಾಡಿದೆ. -
Dr. G Parameshwara
@DrParameshwara
The Gruha Lakshmi scheme was launched with the vision that every woman in Karnataka should become financially empowered and lead a life of dignity and security. Today, this guarantee has successfully completed three years.
The ₹2,000 deposited every month into the account of the woman head of each family is helping meet expenses such as children’s education, healthcare, groceries and other daily necessities. Countless families are now living with greater comfort and happiness, and our Guarantee Schemes have brought a positive change to their lives.
It gives me immense happiness to see women who were once confined within the four walls of their homes now moving ahead with greater freedom and living with financial independence. These Guarantee Schemes, launched for the welfare of Kannadigas, will not be stopped under any circumstances.
#3yearsofgruhalakshmi -
Dr. G Parameshwara
@DrParameshwara
ನಾಡಿನ ಪ್ರತಿಯೊಬ್ಬ ಮಹಿಳೆಯೂ ಆರ್ಥಿಕವಾಗಿ ಸಬಲರಾಗಿ ನೆಮ್ಮದಿಯಿಂದ ಜೀವನವನ್ನು ಸಾಗಿಸಬೇಕು ಎಂಬ ಉದ್ದೇಶದಿಂದ ಜಾರಿಗೆ ತಂದ ಗೃಹಲಕ್ಷ್ಮಿ ಯೋಜನೆಯು ಇಂದಿಗೆ ಯಶಸ್ವಿಯಾಗಿ ಮೂರು ವರುಷಗಳನ್ನು ಪೂರೈಸಿದೆ.
ಪ್ರತಿ ಕುಟುಂಬದ ಯಜಮಾನಿಯ ಖಾತೆಗೆ ಜಮೆಯಾಗುವ ₹2,000 ಅವರ ಮಕ್ಕಳ ಓದಿಗೆ, ಆಸ್ಪತ್ರೆಯ ಖರ್ಚಿಗೆ, ದೈನಂದಿನ ದಿನಸಿ ಪದಾರ್ಥಗಳನ್ನು ಕೊಳ್ಳಲು ಉಪಯೋಗವಾಗುತ್ತಿದೆ. ಅದೆಷ್ಟೋ ಕುಟುಂಬಗಳು ಇಂದು ಸುಖ, ಸಂತೋಷದಿಂದ ಜೀವನ ನಡೆಸುತ್ತಿದೆ. ನಮ್ಮ ಗ್ಯಾರಂಟಿ ಯೋಜನೆಗಳು ಆ ಮಟ್ಟಿಗೆ ಅವರ ಬದುಕಿನಲ್ಲಿ ಸಕಾರಾತ್ಮಕ ಪರಿಣಾಮ ಬೀರಿದೆ.
ಅಡುಗೆ ಕೋಣೆಯೊಳಗಿದ್ದ ಹೆಣ್ಣುಮಗಳು ಇಂದು ಸ್ವತಂತ್ರವಾಗಿ ಓಡಾಡುತ್ತಾ, ಆರ್ಥಿಕವಾಗಿ ಸ್ವಾವಲಂಬಿಗಳಾಗಿ ಬದುಕು ಸಾಗಿಸುವುದನ್ನು ನೋಡುವಾಗ ಬಹಳ ಖುಷಿಯಾಗುತ್ತದೆ. ನಿಮಗಾಗಿ, ನಿಮ್ಮ ಕಲ್ಯಾಣಕ್ಕಾಗಿ ಆರಂಭಿಸಿದ ಈ ಗ್ಯಾರಂಟಿ ಯೋಜನೆಗಳು ಯಾವ ಕಾರಣಕ್ಕೂ ಸ್ಥಗಿತಗೊಳ್ಳುವುದಿಲ್ಲ.
ಗೃಹಲಕ್ಷ್ಮಿಯರ ಬದುಕು ಬದಲಾಗಿದೆ, ಅವರ ಜೀವನ ಇಂದು ಯಶೋಗಾಥೆಯಾಗಿದೆ.
#3yearsofgruhalakshmi -
Dr. G Parameshwara
@DrParameshwara
Karnataka is today one of the fastest-growing states in the country in the field of sports. In recent years, our athletes have delivered outstanding performances at national and international competitions, bringing pride and recognition to the State.
On this National Sports Day, I would like to share a few highlights of the support, facilities and incentives our Government is providing to strengthen Karnataka’s sports sector and encourage our athletes.
Our Government will always stand by Karnataka’s proud athletes who represent India at the world’s biggest sporting events. Since taking charge as Sports Minister, I have been working with determination to strengthen and develop the sports sector in a comprehensive manner.
To encourage our athletes, the State Government provides a special incentive of ₹5 lakh each to sportspersons from Karnataka participating in the Olympics, Commonwealth Games, Asian Games and Asian Para Games, along with an additional cash award of ₹15 lakh for medal winners.
This year, para-athlete K.S. Shilpa, who won a bronze medal at the Commonwealth Games held in Glasgow, Scotland, was awarded a total of ₹20 lakh. Our objective is to recognise sporting excellence, honour achievers and provide the encouragement needed to build a stronger sporting culture among the youth of Karnataka.
Athletes can achieve extraordinary results when they are provided with quality infrastructure and opportunities at every stage. With this in mind, our Government is developing 32 stadiums across the State at a cost of ₹36 crore.
From this year, we have also decided to organise the Dasara Games systematically from the taluk level, including kabaddi, athletics and traditional rural sports. This will take sports closer to young people and create more opportunities for talent to emerge from every part of Karnataka.
We are equally conscious that sporting excellence should not come at the cost of a student’s education. During my tenure as Higher Education Minister, sports reservation was introduced in CET for the first time. As a result of this initiative, 115 student-athletes have secured medical and engineering seats through sports reservation in the current year.
By removing barriers to sports reservation, we have created opportunities for young people to excel both in education and in sports.
Similarly, 2% reservation has been provided for sportspersons in the recruitment of 72,000 government posts in the State. This is expected to create nearly 2,000 employment opportunities for sporting achievers.
In addition, 13 medal-winning athletes from the Commonwealth Games, Asian Games and Asian Para Games have been honoured with direct appointments to Group A and Group B government posts through special recruitment.
Students representing the State and the country should never be forced to choose between sports and education. With this objective, attendance relaxation has been provided to students competing in 34 recognised sports.
Students participating in State and national-level competitions are eligible for up to 15% attendance relaxation, while those competing at the international level are eligible for up to 25% relaxation. Students with a minimum of 50% attendance will be eligible to appear for examinations. Through this measure, we are ensuring that student-athletes receive the support they need to pursue sporting excellence without compromising their education.
Karnataka’s junior and youth basketball teams have delivered outstanding performances at the national level. To provide them with better infrastructure and training facilities, the Government has decided to reserve 5 acres of land for basketball development, where a modern centre with advanced sports infrastructure and training facilities will be developed.
A plan has also been prepared to upgrade Kanteerava Stadium in Bengaluru at a cost of ₹5,000 crore ahead of the 2030 Commonwealth Games, with the objective of enabling Bengaluru to host selected Commonwealth Games events.
Through these initiatives, our Government is committed to nurturing Karnataka’s exceptional sporting talent, building world-class infrastructure and enabling our athletes to showcase India’s sporting strength on international platforms.
As Sports Minister, I will extend every possible support and assistance required to take Karnataka’s sports sector forward. -
Dr. G Parameshwara
@DrParameshwara
ಕರ್ನಾಟಕವು ಕ್ರೀಡಾ ಕ್ಷೇತ್ರದಲ್ಲಿ ಇಂದು ದೇಶದಲ್ಲೇ ವೇಗವಾಗಿ ಬೆಳೆಯುತ್ತಿರುವ ರಾಜ್ಯವಾಗಿದೆ. ಇತ್ತೀಚಿನ ವರ್ಷಗಳಲ್ಲಿ ರಾಜ್ಯದ ಕ್ರೀಡಾಪಟುಗಳು, ರಾಷ್ಟ್ರೀಯ, ಅಂತಾರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಅತ್ಯುತ್ತಮ ಸಾಧನೆ ತೋರಿ, ನಾಡಿಗೆ ಕೀರ್ತಿ ತರುತ್ತಿರುವುದು ನಮಗೆ ಹೆಮ್ಮೆಯ ವಿಷಯ. ರಾಷ್ಟ್ರೀಯ ಕ್ರೀಡಾ ದಿನವಾದ ಇಂದು ಕ್ರೀಡಾ ಕ್ಷೇತ್ರದ ಬೆಳವಣಿಗೆಗೆ ನಮ್ಮ ಸರ್ಕಾರ ನೀಡುತ್ತಿರುವ ಬೆಂಬಲ ಮತ್ತು ಸೌಲಭ್ಯ, ಪ್ರೋತ್ಸಾಹಗಳ ಕುರಿತು ಕೆಲವು ಮಾಹಿತಿಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಬಯಸುತ್ತೇನೆ.
ವಿಶ್ವದ ಅತಿದೊಡ್ಡ ಕ್ರೀಡಾಕೂಟಗಳಲ್ಲಿ ಭಾರತವನ್ನು ಪ್ರತಿನಿಧಿಸುವ ಕರ್ನಾಟಕದ ಹೆಮ್ಮೆಯ ಕ್ರೀಡಾಪಟುಗಳ ಬೆಂಬಲಕ್ಕೆ ನಮ್ಮ ಸರ್ಕಾರ ಸದಾ ನಿಲ್ಲಲಿದೆ. ನಾನು ಕ್ರೀಡಾ ಸಚಿವನಾಗಿ ಜವಾಬ್ದಾರಿ ವಹಿಸಿಕೊಂಡ ಬಳಿಕ ಕ್ರೀಡಾ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಟೊಂಕ ಕಟ್ಟಿ ನಿಂತಿದ್ದೇನೆ.
ಕ್ರೀಡಾಳುಗಳಿಗೆ ಉತ್ತೇಜನ ನೀಡುವ ಸಲುವಾಗಿ ಒಲಿಂಪಿಕ್ಸ್, ಕಾಮನ್ವೆಲ್ತ್ ಗೇಮ್ಸ್, ಏಷ್ಯನ್ ಗೇಮ್ಸ್ ಹಾಗೂ ಏಷ್ಯನ್ ಪ್ಯಾರಾ ಗೇಮ್ಸ್ಗಳಲ್ಲಿ ಭಾಗವಹಿಸುವ ರಾಜ್ಯದ ಕ್ರೀಡಾಪಟುಗಳಿಗೆ ತಲಾ ₹5 ಲಕ್ಷ ವಿಶೇಷ ಪ್ರೋತ್ಸಾಹಧನ ಹಾಗೂ ಪದಕ ವಿಜೇತರಿಗೆ ಹೆಚ್ಚುವರಿಯಾಗಿ ₹15 ಲಕ್ಷ ನಗದು ಬಹುಮಾನವನ್ನು ನೀಡುತ್ತದ್ದೇವೆ. ಈ ವರ್ಷ ಸ್ಕಾಟ್ಲೆಂಡ್ನ ಗ್ಲಾಸ್ಕೋದಲ್ಲಿ ನಡೆದ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಕಂಚಿನ ಪದಕ ಗೆದ್ದ ಪ್ಯಾರಾ ಅಥ್ಲೀಟ್ ಕೆ.ಎಸ್.ಶಿಲ್ಪಾ ಅವರಿಗೆ ಒಟ್ಟು ₹20 ಲಕ್ಷ ನೀಡಿದ್ದೇವೆ. ಆ ಮೂಲಕ ಕ್ರೀಡಾ ಸಾಧಕರನ್ನು ಗುರುತಿಸಿ, ಅವರನ್ನು ಗೌರವಿಸಿ, ಅಗತ್ಯ ಪ್ರೋತ್ಸಾಹ ನೀಡುವ ಮೂಲಕ ರಾಜ್ಯದ ಯುವಜನತೆಯಲ್ಲಿ ಕ್ರೀಡಾಸ್ಪೂರ್ತಿಯನ್ನು ಹೆಚ್ಚಿಸುವುದು ನಮ್ಮ ಉದ್ದೇಶವಾಗಿದೆ.
ಕ್ರೀಡಾಳುಗಳಿಗೆ ಪ್ರತಿ ಹಂತದಲ್ಲೂ ಉತ್ತಮ ಮೂಲಸೌಕರ್ಯ ಹಾಗೂ ಹೆಚ್ಚಿನ ಅವಕಾಶಗಳು ಲಭ್ಯವಾದರೆ ಅಸಾಧಾರಣ ಸಾಧನೆಗೈಯಲು ಸಾಧ್ಯವಾಗುತ್ತದೆ. ಈ ಹಿನ್ನೆಲೆ ನಮ್ಮ ಸರ್ಕಾರವು ₹36 ಕೋಟಿ ವೆಚ್ಚದಲ್ಲಿ ರಾಜ್ಯಾದ್ಯಂತ 32 ಕ್ರೀಡಾಂಗಣಗಳನ್ನು ಅಭಿವೃದ್ಧಿಪಡಿಸುತ್ತಿದೆ. ಈ ವರ್ಷದಿಂದ ಕಬಡ್ಡಿ, ಅಥ್ಲೆಟಿಕ್ಸ್ ಹಾಗೂ ಸಾಂಪ್ರದಾಯಿಕ ಗ್ರಾಮೀಣ ಕ್ರೀಡೆಗಳನ್ನು ಒಳಗೊಂಡ ದಸರಾ ಕ್ರೀಡಾಕೂಟವನ್ನು ತಾಲ್ಲೂಕು ಮಟ್ಟದಿಂದಲೇ ವ್ಯವಸ್ಥಿತವಾಗಿ ಆಯೋಜಿಸಲು ತೀರ್ಮಾನಿಸಿದ್ದೇವೆ. ಈ ಮೂಲಕ ಕ್ರೀಡೆಯನ್ನು ಯುವಜನರ ಬಳಿಗೆ ಕೊಂಡೊಯ್ದು, ಕರ್ನಾಟಕದ ಪ್ರತಿಯೊಂದು ಭಾಗದಿಂದಲೂ ಕ್ರೀಡಾ ಪ್ರತಿಭೆಗಳು ಹೊರಹೊಮ್ಮಲು ಹೆಚ್ಚಿನ ಅವಕಾಶಗಳನ್ನು ಸೃಷ್ಟಿಸಲಾಗುತ್ತಿದೆ.
ಹಾಗೆಯೇ ಕ್ರೀಡಾ ಸಾಧನೆಯು ಕ್ರೀಡಾಳುಗಳ ಶೈಕ್ಷಣಿಕ ಬದುಕಿಗೆ ಅಡ್ಡಿಯಾಗಬಾರದು ಎಂಬ ಕಾಳಜಿ ನಮ್ಮದು. ಹೀಗಾಗಿ ನಾನು ಉನ್ನತ ಶಿಕ್ಷಣ ಸಚಿವನಾಗಿದ್ದ ಅವಧಿಯಲ್ಲಿ ಮೊದಲ ಬಾರಿಗೆ CET ಪರೀಕ್ಷೆಯಲ್ಲಿ ಕ್ರೀಡಾಪಟುಗಳಿಗೆ ಮೀಸಲಾತಿಯನ್ನು ಪರಿಚಯಿಸಲಾಯಿತು. ಆ ಪ್ರಯತ್ನದ ಫಲವಾಗಿ ಪ್ರಸಕ್ತ ಸಾಲಿನಲ್ಲಿ ಮೀಸಲಾತಿಯ ಮೂಲಕ 115 ವಿದ್ಯಾರ್ಥಿ ಕ್ರೀಡಾಪಟುಗಳು ವೈದ್ಯಕೀಯ ಮತ್ತು ಎಂಜಿನಿಯರಿಂಗ್ ಸೀಟುಗಳನ್ನು ಪಡೆಯಲು ಸಾಧ್ಯವಾಗಿದೆ. ಹೀಗೆ ಕ್ರೀಡಾ ಮೀಸಲಾತಿಗೆ ಇರುವ ಅಡೆತಡೆಗಳನ್ನು ನಿವಾರಿಸುವ ಮೂಲಕ ನಮ್ಮ ಯುವಜನರು ಶಿಕ್ಷಣ ಹಾಗೂ ಕ್ರೀಡಾ ಕ್ಷೇತ್ರಗಳಲ್ಲಿ ಅತ್ಯುತ್ತಮ ಸಾಧನೆಗೈಯಲು ಅವಕಾಶಗಳನ್ನು ಕಲ್ಪಿಸಿಕೊಟ್ಟಿದ್ದೇವೆ.
ಅಂತೆಯೇ, ರಾಜ್ಯದ 72,000 ಸರ್ಕಾರಿ ಹುದ್ದೆಗಳ ನೇಮಕಾತಿಯಲ್ಲಿ ಕ್ರೀಡಾಪಟುಗಳಿಗೆ ಶೇ. 2ರಷ್ಟು ಮೀಸಲಾತಿಯನ್ನು ಕಲ್ಪಿಸಲಾಗಿದೆ. ಇದರಿಂದಾಗಿ ಸುಮಾರು 2,000 ಹುದ್ದೆಗಳು ರಾಜ್ಯದ ಕ್ರೀಡಾ ಸಾಧಕರಿಗೆ ದೊರೆಯಲಿವೆ. ಇದರ ಜೊತೆಗೆ ಕಾಮನ್ವೆಲ್ತ್ ಗೇಮ್ಸ್, ಏಷ್ಯನ್ ಗೇಮ್ಸ್ ಹಾಗೂ ಏಷ್ಯನ್ ಪ್ಯಾರಾ ಗೇಮ್ಸ್ನಲ್ಲಿ ಪದಕ ಗೆದ್ದ 13 ಕ್ರೀಡಾಪಟುಗಳನ್ನು ವಿಶೇಷ ನೇಮಕಾತಿ ಮೂಲಕ ‘ಎ’ ಮತ್ತು ‘ಬಿ’ ಗುಂಪಿನ ಸರ್ಕಾರಿ ಹುದ್ದೆಗಳಿಗೂ ನೇಮಕ ಮಾಡಿ ಗೌರವಿಸಲಾಗಿದೆ.
ನಮ್ಮ ರಾಜ್ಯ ಮತ್ತು ದೇಶವನ್ನು ಪ್ರತಿನಿಧಿಸುವ ವಿದ್ಯಾರ್ಥಿಗಳು ಕ್ರೀಡೆ & ಶಿಕ್ಷಣದ ನಡುವೆ ಯಾವುದಾದರೊಂದನ್ನು ಆಯ್ಕೆ ಮಾಡಿಕೊಳ್ಳುವ ಇಕ್ಕಟ್ಟಿಗೆ ಸಿಲುಕಿಕೊಳ್ಳಬಾರದು ಎಂಬ ಸದುದ್ದೇಶದಿಂದ ಮಾನ್ಯತೆ ಪಡೆದ 34 ಕ್ರೀಡೆಗಳಲ್ಲಿ ಸ್ಪರ್ಧಿಸುವ ವಿದ್ಯಾರ್ಥಿಗಳಿಗೆ ಹಾಜರಾತಿಯಲ್ಲಿ ವಿನಾಯಿತಿಯನ್ನು ನೀಡಲಾಗಿದೆ. ರಾಜ್ಯ ಹಾಗೂ ರಾಷ್ಟ್ರೀಯ ಮಟ್ಟದ ಕ್ರೀಡಾಕೂಟಗಳಲ್ಲಿ ಭಾಗವಹಿಸುವವರಿಗೆ ಶೇ. 15 ರಷ್ಟು ಹಾಜರಾತಿ ವಿನಾಯಿತಿ, ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಕೂಟಗಳಲ್ಲಿ ಭಾಗವಹಿಸುವವರಿಗೆ ಶೇ. 25ರಷ್ಟು ಹಾಜರಾತಿ ವಿನಾಯಿತಿಯನ್ನು ನೀಡಲಾಗುತ್ತದೆ. ಕನಿಷ್ಠ ಶೇ.50 ರಷ್ಟು ಹಾಜರಾತಿ ಹೊಂದಿರುವ ವಿದ್ಯಾರ್ಥಿಗಳು ಪರೀಕ್ಷೆಗಳಿಗೆ ಹಾಜರಾಗಲು ಅರ್ಹರಾಗಿರುತ್ತಾರೆ. ಈ ಮೂಲಕ ಕ್ರೀಡಾ ಸಾಧನೆ ಮಾಡಲು ಹೊರಟಿರುವ ವಿದ್ಯಾರ್ಥಿಗಳಿಗೆ ಬೆನ್ನೆಲುಬಾಗಿ ನಿಂತಿದ್ದೇವೆ.
ರಾಷ್ಟ್ರೀಯ ಮಟ್ಟದಲ್ಲಿ ಅತ್ಯುತ್ತಮ ಪ್ರದರ್ಶವನ್ನು ತೋರಿರುವ ಕರ್ನಾಟಕದ ಜೂನಿಯರ್ ಹಾಗೂ ಯೂತ್ ಬ್ಯಾಸ್ಕೆಟ್ಬಾಲ್ ತಂಡಗಳ ಆಟಗಾರರಿಗೆ ಅಗತ್ಯ ಮೂಲಸೌಕರ್ಯ ಮತ್ತು ತರಬೇತಿ ಸೌಲಭ್ಯಗಳನ್ನು ಕಲ್ಪಿಸಲು ಉದ್ದೇಶಿಸಲಾಗಿದೆ. ಈ ಹಿನ್ನೆಲೆ ಬ್ಯಾಸ್ಕೆಟ್ಬಾಲ್ ಅಭಿವೃದ್ಧಿಗೆ 5 ಎಕರೆ ಜಾಗವನ್ನು ಮೀಸಲಿಡಲು ನಿರ್ಧರಿಸಿದ್ದು, ಅತ್ಯಾಧುನಿಕ ಕ್ರೀಡಾ ಮೂಲಸೌಕರ್ಯ ಹಾಗೂ ತರಬೇತಿ ಸೌಲಭ್ಯವುಳ್ಳ ಕೇಂದ್ರವನ್ನು ಅಭಿವೃದ್ಧಿಪಡಿಸಲಾಗುವುದು.
2030ರ ಕಾಮನ್ವೆಲ್ತ್ ಗೇಮ್ಸ್ಗೂ ಮುನ್ನ ಬೆಂಗಳೂರಿನ ಕಂಠೀರವ ಕ್ರೀಡಾಂಗಣವನ್ನು ₹5,000 ಕೋಟಿ ವೆಚ್ಚದಲ್ಲಿ ಉನ್ನತೀಕರಿಸುವ ಯೋಜನೆಯನ್ನು ರೂಪಿಸಲಾಗಿದ್ದು, ಕಾಮನ್ವೆಲ್ತ್ ಗೇಮ್ಸ್ನ ಆಯ್ದ ಕ್ರೀಡಾ ಸ್ಪರ್ಧೆಗಳನ್ನು ಬೆಂಗಳೂರಿನಲ್ಲಿ ಆಯೋಜಿಸಲು ಅವಕಾಶ ಕಲ್ಪಿಸುವ ಗುರಿಯನ್ನು ಹೊಂದಲಾಗಿದೆ.
ಹೀಗೆ ನಮ್ಮ ರಾಜ್ಯದ ಅಸಾಧಾರಣ ಕ್ರೀಡಾ ಪ್ರತಿಭೆಗಳಿಗೆ ಅಗತ್ಯ ಪ್ರೋತ್ಸಾಹವನ್ನು ಒದಗಿಸಿ, ಅತ್ಯಾಧುನಿಕ ಕ್ರೀಡಾ ಮೂಲಸೌಕರ್ಯವನ್ನು ಕಲ್ಪಿಸಿ ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಭಾರತದ ಕ್ರೀಡಾ ಸಾಮರ್ಥ್ಯವನ್ನು ಅನಾವರಣಗೊಳಿಸಲು ನಮ್ಮ ಸರ್ಕಾರ ಅಣಿಯಾಗಿದೆ. ಕ್ರೀಡಾ ಸಚಿವನಾಗಿ ನಾನು ಎಲ್ಲ ರೀತಿಯ ಸಂಪೂರ್ಣ ಸಹಕಾರ, ಅಗತ್ಯ ನೆರವನ್ನು ನೀಡಲಿದ್ದೇನೆ. -
Dr. G Parameshwara
@DrParameshwara
ರಾಜ್ಯ ಸರ್ಕಾರವು ಕ್ರೀಡಾ ಮೂಲಸೌಕರ್ಯದ ಭವಿಷ್ಯದ ಬಗ್ಗೆ ಮಹತ್ವಾಕಾಂಕ್ಷೆಯ ಚಿಂತನೆ ನಡೆಸುತ್ತಿದೆ. 2030ರ ಕಾಮನ್ವೆಲ್ತ್ ಗೇಮ್ಸ್ಗೂ ಮುನ್ನ ಬೆಂಗಳೂರಿನ ಕಂಠೀರವ ಕ್ರೀಡಾಂಗಣವನ್ನು ₹5,000 ಕೋಟಿ ವೆಚ್ಚದಲ್ಲಿ ಉನ್ನತೀಕರಿಸುವ ಯೋಜನೆಯನ್ನು ರೂಪಿಸಲಾಗಿದ್ದು, ಕಾಮನ್ವೆಲ್ತ್ ಗೇಮ್ಸ್ನ ಆಯ್ದ ಕ್ರೀಡಾ ಸ್ಪರ್ಧೆಗಳನ್ನು ಬೆಂಗಳೂರಿನಲ್ಲಿ ಆಯೋಜಿಸುವ ಅವಕಾಶ ಕಲ್ಪಿಸುವ ಗುರಿಯನ್ನು ಹೊಂದಲಾಗಿದೆ.
ಇಂತಹ ಅವಕಾಶವು ಕರ್ನಾಟಕದ ಕ್ರೀಡಾ ಸಾಮರ್ಥ್ಯ, ಅತ್ಯಾಧುನಿಕ ಮೂಲಸೌಕರ್ಯ ಹಾಗೂ ಕ್ರೀಡೆಯ ಮೇಲಿನ ಉತ್ಸಾಹವನ್ನು ಭಾರತ ಮತ್ತು ವಿಶ್ವದ ಪ್ರೇಕ್ಷಕರ ಮುಂದೆ ಅನಾವರಣಗೊಳಿಸಲು ಸಹಕಾರಿಯಾಗಲಿದೆ.
Karnataka is thinking big about the future of sporting infrastructure. A ₹5,000 crore plan has been envisioned to upgrade Bengaluru’s Kanteerava Stadium ahead of the 2030 Commonwealth Games, with the ambition of creating an opportunity for Bengaluru to host select sporting events.
Such an opportunity would allow Karnataka to showcase its sporting capabilities, infrastructure and enthusiasm for sport before audiences across India and the world.
#nationalsportsday #kanteeravastadium #commonwealthgames #nammabengaluru -
Dr. G Parameshwara
@DrParameshwara
ಕರ್ನಾಟಕದ ಜೂನಿಯರ್ ಹಾಗೂ ಯೂತ್ ಬಾಸ್ಕೆಟ್ಬಾಲ್ ತಂಡಗಳು ರಾಷ್ಟ್ರೀಯ ಮಟ್ಟದಲ್ಲಿ ತಮ್ಮ ಅತ್ಯುತ್ತಮ ಪ್ರದರ್ಶವನ್ನು ತೋರಿದ್ದಾರೆ. ಈ ಪ್ರತಿಭೆಗಳು ಇನ್ನಷ್ಟು ಎತ್ತರಕ್ಕೆ ಬೆಳೆಯಲು ಅಗತ್ಯವಾದ ಉತ್ತಮ ಮೂಲಸೌಕರ್ಯ ಮತ್ತು ತರಬೇತಿ ಸೌಲಭ್ಯಗಳನ್ನು ಕಲ್ಪಿಸುವುದು ನಮ್ಮ ಸರ್ಕಾರದ ಉದ್ದೇಶ.
ಈ ನಿಟ್ಟಿನಲ್ಲಿ ಬಾಸ್ಕೆಟ್ಬಾಲ್ ಅಭಿವೃದ್ಧಿಗೆ 5 ಎಕರೆ ಜಾಗವನ್ನು ಮೀಸಲಿಡಲು ನಿರ್ಧರಿಸಿದ್ದು, ಕ್ರೀಡಾಪಟುಗಳಿಗಾಗಿ ಆಧುನಿಕ ಕ್ರೀಡಾ ಮೂಲಸೌಕರ್ಯ ಹಾಗೂ ತರಬೇತಿ ಸೌಲಭ್ಯಗಳನ್ನು ಅಭಿವೃದ್ಧಿಪಡಿಸಲಾಗುವುದು.ಕರ್ನಾಟಕದ ಯುವ ಬಾಸ್ಕೆಟ್ಬಾಲ್ ಪ್ರತಿಭೆಗಳು ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸುವಂತಾಗಬೇಕು ಎಂಬುದು ನಮ್ಮ ಆಶಯ.
Karnataka’s Junior and Youth basketball teams have demonstrated their potential at the national level. That talent deserves the infrastructure and training ecosystem needed to go further. The Government has therefore decided to allot five acres of land for basketball development, with modern infrastructure and training facilities planned for our athletes.
We want Karnataka’s young basketball talent to compete, excel and win at the highest levels.
#nationalsportsday #karnatakabasketball -
Dr. G Parameshwara
@DrParameshwara
ರಾಜ್ಯ ಮತ್ತು ಭಾರತವನ್ನು ಪ್ರತಿನಿಧಿಸುವ ವಿದ್ಯಾರ್ಥಿಗಳು ಕ್ರೀಡೆ ಮತ್ತು ಶಿಕ್ಷಣದ ನಡುವೆ ಒಂದನ್ನು ಆಯ್ಕೆ ಮಾಡಿಕೊಳ್ಳುವ ಪರಿಸ್ಥಿತಿ ಎದುರಾಗಬಾರದು. ಮಾನ್ಯತೆ ಪಡೆದ 34 ಕ್ರೀಡೆಗಳಲ್ಲಿ ಸ್ಪರ್ಧಿಸುವ ವಿದ್ಯಾರ್ಥಿಗಳಿಗೆ ಹಾಜರಾತಿ ವಿನಾಯಿತಿ ನೀಡಲಾಗಿದೆ.
ರಾಜ್ಯ ಹಾಗೂ ರಾಷ್ಟ್ರೀಯ ಮಟ್ಟದ ಕ್ರೀಡಾಕೂಟಗಳಲ್ಲಿ ಭಾಗವಹಿಸುವವರಿಗೆ 15% ಹಾಜರಾತಿ ವಿನಾಯಿತಿ, ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಕೂಟಗಳಲ್ಲಿ ಭಾಗವಹಿಸುವವರಿಗೆ 25% ಹಾಜರಾತಿ ವಿನಾಯಿತಿ ನೀಡಲಾಗುತ್ತದೆ. ಕನಿಷ್ಠ 50% ಹಾಜರಾತಿ ಹೊಂದಿರುವ ವಿದ್ಯಾರ್ಥಿಗಳು ಪರೀಕ್ಷೆಗಳಿಗೆ ಹಾಜರಾಗಲು ಅರ್ಹರಾಗಿರುತ್ತಾರೆ.
ತರಬೇತಿ, ಸ್ಪರ್ಧೆಗಳಲ್ಲಿ ಭಾಗವಹಿಸುವಿಕೆ ಹಾಗೂ ರಾಜ್ಯ ಅಥವಾ ದೇಶವನ್ನು ಪ್ರತಿನಿಧಿಸುವುದು ವಿದ್ಯಾಭ್ಯಾಸಕ್ಕೆ ಅಡ್ಡಿಯಾಗದಂತೆ ನೋಡಿಕೊಳ್ಳುವುದೇ ಇದರ ಉದ್ದೇಶ.
Students representing Karnataka and India should not be forced to choose between sport and education. Attendance relaxation has been extended to student-athletes competing in 34 recognised sports — 15% for State and national-level competitions and 25% for international competitions. Students maintaining at least 50% attendance will be eligible to appear for examinations.
This is about ensuring that training, competition and representing the State or country do not become barriers to education.
#nationalsportsday #studentathletes #educationandsports -
Dr. G Parameshwara
@DrParameshwara
ಕ್ರೀಡಾ ಸಾಧನೆಯು ಎಂದಿಗೂ ಶೈಕ್ಷಣಿಕ ಅವಕಾಶಗಳಿಗೆ ಅಡ್ಡಿಯಾಗಬಾರದು. ನಾನು ಉನ್ನತ ಶಿಕ್ಷಣ ಸಚಿವನಾಗಿದ್ದ ಅವಧಿಯಲ್ಲಿ, ಮೊದಲ ಬಾರಿಗೆ CETನಲ್ಲಿ ಕ್ರೀಡಾಪಟುಗಳಿಗೆ ಮೀಸಲಾತಿಯನ್ನು ಪರಿಚಯಿಸಲಾಯಿತು. ಈ ವರ್ಷದಲ್ಲಿ, ಮೀಸಲಾತಿಯ ಮೂಲಕ 115 ವಿದ್ಯಾರ್ಥಿ ಕ್ರೀಡಾಪಟುಗಳು ವೈದ್ಯಕೀಯ ಮತ್ತು ಎಂಜಿನಿಯರಿಂಗ್ ಸೀಟುಗಳನ್ನು ಪಡೆದಿದ್ದಾರೆ.
ಯುವಜನರು ಶೈಕ್ಷಣಿಕ ಹಾಗೂ ಕ್ರೀಡಾ ಕ್ಷೇತ್ರಗಳಲ್ಲಿ ಶ್ರೇಷ್ಠ ಸಾಧನೆ ಮಾಡಲು ಅನುವಾಗುವಂತಹ ಇನ್ನಷ್ಟು ಅವಕಾಶಗಳನ್ನು ಸೃಷ್ಟಿಸುವುದು ನಮ್ಮ ಉದ್ದೇಶವಾಗಿದೆ.
Sporting excellence should never come at the cost of educational opportunity. During my tenure as Higher Education Minister, reservation for sportspersons was introduced in CET for the first time. This year alone, 115 student-athletes have secured medical and engineering seats through this provision.
We will continue creating opportunities that allow young people to pursue both academic and sporting excellence.
#nationalsportsday #highereducation -
Dr. G Parameshwara
@DrParameshwara
ರಾಜ್ಯದ ಕ್ರೀಡಾ ಸಾಧಕರಿಗೆ ಉದ್ಯೋಗದ ಹೊಸ ಅವಕಾಶಗಳ ಬಾಗಿಲುಗಳನ್ನು ತೆರೆಯುತ್ತಿದೆ. 72,000 ಸರ್ಕಾರಿ ಹುದ್ದೆಗಳ ನೇಮಕಾತಿಯಲ್ಲಿ ಕ್ರೀಡಾಪಟುಗಳಿಗೆ 2% ಮೀಸಲಾತಿ ಕಲ್ಪಿಸಲಾಗಿದ್ದು, ಇದರ ಮೂಲಕ ಸುಮಾರು 2,000 ಹುದ್ದೆಗಳು ಕ್ರೀಡಾ ಸಾಧಕರಿಗೆ ದೊರೆಯಲಿವೆ.
ಇದರ ಜೊತೆಗೆ, ಕಾಮನ್ವೆಲ್ತ್ ಗೇಮ್ಸ್, ಏಷ್ಯನ್ ಗೇಮ್ಸ್ ಹಾಗೂ ಏಷ್ಯನ್ ಪ್ಯಾರಾ ಗೇಮ್ಸ್ನಲ್ಲಿ ಪದಕ ಗೆದ್ದ 13 ಕ್ರೀಡಾಪಟುಗಳನ್ನು ವಿಶೇಷ ನೇಮಕಾತಿ ಮೂಲಕ ‘ಎ’ ಮತ್ತು ‘ಬಿ’ ಗುಂಪಿನ ಸರ್ಕಾರಿ ಹುದ್ದೆಗಳಿಗೆ ನೇಮಕ ಮಾಡಲಾಗಿದೆ.
Karnataka is opening new doors of employment for accomplished sportspersons. A 2% reservation has been approved for sportspersons in the proposed recruitment of 72,000 State Government vacancies, potentially making nearly 2,000 posts available to athletes.
Alongside this, 13 medal winners from the Commonwealth Games, Asian Games and Asian Para Games have been appointed to Group ‘A’ and ‘B’ posts through special recruitment.
#nationalsportsday #governmentjobs -
Dr. G Parameshwara
@DrParameshwara
ಕ್ರೀಡಾ ಸಾಧನೆಯು ಎಂದಿಗೂ ಶೈಕ್ಷಣಿಕ ಅವಕಾಶಗಳಿಗೆ ಅಡ್ಡಿಯಾಗಬಾರದು. ನಾನು ಉನ್ನತ ಶಿಕ್ಷಣ ಸಚಿವನಾಗಿದ್ದ ಅವಧಿಯಲ್ಲಿ, ಮೊದಲ ಬಾರಿಗೆ CETನಲ್ಲಿ ಕ್ರೀಡಾಪಟುಗಳಿಗೆ ಮೀಸಲಾತಿಯನ್ನು ಪರಿಚಯಿಸಲಾಯಿತು. ಈ ವರ್ಷದಲ್ಲಿ, ಮೀಸಲಾತಿಯ ಮೂಲಕ 115 ವಿದ್ಯಾರ್ಥಿ ಕ್ರೀಡಾಪಟುಗಳು ವೈದ್ಯಕೀಯ ಮತ್ತು ಎಂಜಿನಿಯರಿಂಗ್ ಸೀಟುಗಳನ್ನು ಪಡೆದಿದ್ದಾರೆ.
ಯುವಜನರು ಶೈಕ್ಷಣಿಕ ಹಾಗೂ ಕ್ರೀಡಾ ಕ್ಷೇತ್ರಗಳಲ್ಲಿ ಶ್ರೇಷ್ಠ ಸಾಧನೆ ಮಾಡಲು ಅನುವಾಗುವಂತಹ ಇನ್ನಷ್ಟು ಅವಕಾಶಗಳನ್ನು ಸೃಷ್ಟಿಸುವುದು ನಮ್ಮ ಉದ್ದೇಶವಾಗಿದೆ.
Sporting excellence should never come at the cost of educational opportunity. During my tenure as Higher Education Minister, reservation for sportspersons was introduced in CET for the first time. This year alone, 115 student-athletes have secured medical and engineering seats through this provision.
We will continue creating opportunities that allow young people to pursue both academic and sporting excellence.
#nationalsportsday #highereducation -
Dr. G Parameshwara
@DrParameshwara
ಇಂದು ಮೈಸೂರಿನ ಸುತ್ತೂರು ವೀರಸಿಂಹಾಸನ ಮಹಾಸಂಸ್ಥಾನ ಮಠದಲ್ಲಿ ನಡೆದ ಶ್ರೀ ಡಾ. ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳವರ 111ನೇ ಜಯಂತಿ ಮಹೋತ್ಸವದಲ್ಲಿ ಪಾಲ್ಗೊಂಡು ಮಾತನಾಡಿದೆ.
ಪಂಚವಾರ್ಷಿಕ ಯೋಜನೆಯಲ್ಲಿ ಶಿಕ್ಷಣಕ್ಕೆ ಆದ್ಯತೆ ನೀಡಿದ ಪರಿಣಾಮ ಇಂದು ಭಾರತ ಶಕ್ತಿಯುತ ದೇಶವಾಗಿ ಬೆಳೆದಿದೆ. ಇದರಲ್ಲಿ ಶಿವರಾತ್ರಿ ರಾಜೇಂದ್ರ ಮಹಾಸ್ವಾಮೀಜಿಯವರ ಕೊಡುಗೆ ಅಪಾರ.
ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳವರ ಹುಟ್ಟು ಇಡೀ ಸಮಾಜಕ್ಕಾಗಿ ಮತ್ತು ದೇಶಕ್ಕಾಗಿ ಆಗಿತ್ತು ಎನ್ನುವುದನ್ನು ಅವರ ಬದುಕು ತೋರಿಸಿದೆ. ಅತ್ಯಂತ ಕಿರಿಯ ವಯಸ್ಸಿನಲ್ಲಿ ಬೇರೊಬ್ಬರಿಗೆ ಸಹಾಯ ಮಾಡಬೇಕು. ನನ್ನಿಂದ ಬದುಕು ಕಟ್ಟಿಕೊಳ್ಳುವ ರೀತಿಯಲ್ಲಿ ಆಗಬೇಕು ಎಂಬ ಮನಸ್ಥಿತಿಯನ್ನು 8ನೇ ವಯಸ್ಸಿನಲ್ಲೇ ಬೆಳೆಸಿಕೊಂಡರು. ಇಂದು ಶ್ರೀಗಳ ಕೊಡುಗೆ ವಿಸ್ತಾರಗೊಂಡು ಪ್ರಕಾಶಮಾನವಾಗಿ ಬೆಳಗುತ್ತಿದೆ. ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ರವರು ಹಿರಿಯ ಸ್ವಾಮೀಜಿಗಳ ಹಾದಿಯಲ್ಲಿ ನಡೆದುಕೊಂಡು ಬಂದಿದ್ದಾರೆ.
ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳು ಶಿಕ್ಷಣಕ್ಕೆ ಒತ್ತು ನೀಡಿ, ಸಮಾಜದ ಪರಿವರ್ತನೆಗೆ ಪ್ರಯತ್ನಿಸಿದರು. ಅವರಿಂದಾಗಿ 375 ಜೆಎಸ್ಎಸ್ ಸಂಸ್ಥೆಗಳು ನಡೆಯುತ್ತಿವೆ. ಇಷ್ಟೊಂದು ಶಿಕ್ಷಣ ಸಂಸ್ಥೆಗಳನ್ನು ಕಟ್ಟುವುದು ಸುಲಭದ ಮಾತಲ್ಲ. 1,00,000ಕ್ಕೂ ಹೆಚ್ಚು ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ತುಮಕೂರಿನ ಸಿದ್ಧಗಂಗಾ ಮಠ ಹಾಗೂ ಮೈಸೂರಿನ ಸುತ್ತೂರು ಮಠ ಹೊರದೇಶಗಳಲ್ಲೂ ಶಿಕ್ಷಣ ಸಂಸ್ಥೆಗಳನ್ನು ಕಟ್ಟಿ, ಶಿಕ್ಷಣಕ್ಕೆ ಪ್ರಾತಿನಿಧ್ಯ ನೀಡಿವೆ.
ಭಾರತವನ್ನು ಹೊರತುಪಡಿಸಿ ಬೇರೆ ಯಾವ ದೇಶಗಳು ಇಷ್ಟೊಂದು ಪ್ರಮಾಣದಲ್ಲಿ ಇಂಜಿನಿಯರ್ಗಳನ್ನು ಮತ್ತು ವೈದ್ಯರನ್ನು ಉತ್ಪಾದಿಸಿಲ್ಲ. ಮುಂದುವರಿದ ರಾಷ್ಟ್ರವಾಗಿರುವ ಅಮೆರಿಕ ಕೂಡ ಇಷ್ಟೊಂದು ಪ್ರಮಾಣದಲ್ಲಿ ಇಂಜಿನಿಯರ್ ಮತ್ತು ವೈದ್ಯರನ್ನು ನೀಡಲು ಸಾಧ್ಯವಾಗಿಲ್ಲ. ಇದಕ್ಕೆ ಸ್ವಾಮೀಜಿಗಳಂತಹ ದೂರದೃಷ್ಟಿ ಇರುವುದರಿಂದ ಸಾಧ್ಯವಾಗಿದೆ.
ಸಿದ್ಧಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿಯವರು ಪ್ರತಿನಿತ್ಯ 10 ಸಾವಿರ ಮಕ್ಕಳಿಗೆ ಅನ್ನದಾಸೋಹದ ಜೊತೆಗೆ ಅಕ್ಷರ ದಾಸೋಹ ಮಾಡುತ್ತಿದ್ದಾರೆ. ರಾಜ್ಯದಲ್ಲಿ ಬಹಳಷ್ಟು ಶ್ರೀಮಠಗಳು ಧಾರ್ಮಿಕ ಚಿಂತನೆಯ ಜೊತೆಜೊತೆಯಾಗಿ ಶಿಕ್ಷಣ ಕ್ಷೇತ್ರದಲ್ಲಿ ಸೇವೆ ಮಾಡುತ್ತಿವೆ.
ಕರ್ನಾಟಕ ಗುಣಮಟ್ಟ ಶಿಕ್ಷಣ ನೀಡುವುದರಲ್ಲಿ ದೇಶದಲ್ಲೇ ಮೊದಲ ಸ್ಥಾನದಲ್ಲಿದೆ. ಇಲ್ಲಿ ತಯಾರಾದ ಇಂಜಿನಿಯರ್, ಡಾಕ್ಟರ್ಗಳಿಗೆ ಪ್ರಪಂಚದಾದ್ಯಂತ ಬೇಡಿಕೆಯಿದೆ. ಕರ್ನಾಟದಲ್ಲಿರುವ ಟ್ಯಾಲೆಂಟ್ ಪೂಲ್ ಬೇರೆ ಎಲ್ಲೂ ಸಿಗುವುದಿಲ್ಲ. ಇದಕ್ಕೆ ಮುಖ್ಯಕಾರಣ ಶ್ರೀ ಮಠಗಳಂತ ಸಂಸ್ಥೆಗಳು. ಸರ್ಕಾರದ ಜೊತೆಜೊತೆಯಾಗಿ ಶಿಕ್ಷಣ ಸೇವೆ ಮಾಡುತ್ತಿವೆ. ಬೇರೆ ರಾಜ್ಯಗಳಲ್ಲಿ ಇಂತಹ ಬೆಳವಣಿಗೆಯನ್ನು ನೋಡಲು ಸಾಧ್ಯವಿಲ್ಲ. ಶಿಕ್ಷಣ ಕ್ಷೇತ್ರದಲ್ಲಿ ಬದಲಾವಣೆ ತರಲು ಶ್ರೀಮಠಗಳು ಕಾರಣ. ಭಾರತ ಬಹಳ ವೇಗವಾಗಿ ಬದಲಾಗುತ್ತಿದೆ. ಧಾರ್ಮಿಕವಾಗಿ, ಶೈಕ್ಷಣಿಕವಾಗಿ, ಅಭಿವೃದ್ಧಿಯ ದೃಷ್ಟಿಯಿಂದ ಅನೇಕ ಬದಲಾವಣೆಗಳನ್ನು ನೋಡುತ್ತಿದ್ದೇವೆ.
ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ, ಸಚಿವರಾದ ಸಿ. ಪುಟ್ಟರಂಗಶೆಟ್ಟಿ, ಸಂಸದರಾದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಶಾಸಕರಾದ ತನ್ವೀರ್ ಸೇಠ್, ಎ.ಆರ್. ಕೃಷ್ಣಮೂರ್ತಿ, ಟಿ.ಎಸ್.ಶ್ರೀವತ್ಸ, ವಿಧಾನ ಪರಿಷತ್ ಸದಸ್ಯ ಡಾ. ತಿಮ್ಮಯ್ಯ, ಕೆ.ವಿವೇಕಾನಂದ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. -
Dr. G Parameshwara
@DrParameshwara
ಇಂದು ಮೈಸೂರಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಶೋಷಿತ ಸಮುದಾಯದ ಹಿರಿಯ ನಾಯಕರು ಹಾಗೂ ಮಾಜಿ ಸಚಿವರಾದ ವಿ.ಶ್ರೀನಿವಾಸ್ ಪ್ರಸಾದ್ ಅವರ ಸಮಾಧಿಗೆ ಭೇಟಿ ನೀಡಿ, ಪುಷ್ಪಾರ್ಪಣೆಯ ಮೂಲಕ ಗೌರವ ನಮನ ಸಲ್ಲಿಸಿದೆ.
-
Dr. G Parameshwara
@DrParameshwara
ಕ್ರೀಡಾ ಪ್ರತಿಭೆಗಳಿಗೆ ಪ್ರತಿ ಹಂತದಲ್ಲೂ ಉತ್ತಮ ಮೂಲಸೌಕರ್ಯ ಹಾಗೂ ಹೆಚ್ಚಿನ ಅವಕಾಶಗಳು ಸಿಕ್ಕಿದರೆ ದುಪ್ಪಟ್ಟು ಸಾಧನೆ ಮಾಡಲು ಸಾಧ್ಯ.
ಈ ನಿಟ್ಟಿನಲ್ಲಿ ನಮ್ಮ ಸರ್ಕಾರವು ₹36 ಕೋಟಿ ವೆಚ್ಚದಲ್ಲಿ ಕರ್ನಾಟಕದಾದ್ಯಂತ 32 ಕ್ರೀಡಾಂಗಣಗಳನ್ನು ಅಭಿವೃದ್ಧಿಪಡಿಸುತ್ತಿದೆ. ಈ ವರ್ಷದಿಂದ ಕಬಡ್ಡಿ, ಅಥ್ಲೆಟಿಕ್ಸ್ ಹಾಗೂ ಸಾಂಪ್ರದಾಯಿಕ ಗ್ರಾಮೀಣ ಕ್ರೀಡೆಗಳನ್ನು ಒಳಗೊಂಡ ದಸರಾ ಕ್ರೀಡಾಕೂಟವನ್ನು ತಾಲ್ಲೂಕು ಮಟ್ಟದಿಂದಲೇ ವ್ಯವಸ್ಥಿತವಾಗಿ ಆಯೋಜಿಸಲಾಗುತ್ತಿದೆ.
ಕ್ರೀಡೆಯನ್ನು ಯುವಜನರ ಬಳಿಗೆ ಕೊಂಡೊಯ್ದು, ಕರ್ನಾಟಕದ ಪ್ರತಿಯೊಂದು ಭಾಗದಿಂದಲೂ ಕ್ರೀಡಾ ಪ್ರತಿಭೆಗಳು ಹೊರಹೊಮ್ಮಲು ಹೆಚ್ಚಿನ ಅವಕಾಶಗಳನ್ನು ಸೃಷ್ಟಿಸುವುದು ನಮ್ಮ ಗುರಿ.
Strong sporting talent needs strong infrastructure and opportunities at every level. Our Government is developing 32 stadiums across Karnataka with an investment of ₹36 crore.
From this year, the Dasara Games will also be systematically organised from the taluk level, including Kabaddi, Athletics and traditional rural sports.
The aim is clear: take sport closer to our youth and create more opportunities for talent to emerge from every part of Karnataka.
#nationalsportsday #dasaragames -
Dr. G Parameshwara
@DrParameshwara
ಇಂದು ಮೈಸೂರಿನ ಸುತ್ತೂರು ವೀರಸಿಂಹಾಸನ ಮಹಾಸಂಸ್ಥಾನ ಮಠಕ್ಕೆ ಭೇಟಿ ನೀಡಿ, ಶ್ರೀ ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳ ಪುತ್ಥಳಿಗೆ ಪುಷ್ಪನಮನ ಸಲ್ಲಿಸಿದೆ.
ಬಳಿಕ ಪರಮಪೂಜ್ಯ ಜಗದ್ಗುರು ಡಾ. ಶ್ರೀ ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳವರ 111ನೇ ಜಯಂತಿ ಮಹೋತ್ಸವದ ಕಾರ್ಯಕ್ರಮದಲ್ಲಿ ಪಾಲ್ಗೊಂಡೆ. ಈ ವೇಳೆ ಶ್ರೀಮಠದ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮೀಜಿಯವರ ಆಶೀರ್ವಾದವನ್ನು ಪಡೆದೆ. -
Dr. G Parameshwara
@DrParameshwara
ಭಾರತವನ್ನು ವಿಶ್ವದ ಅತಿದೊಡ್ಡ ಕ್ರೀಡಾಕೂಟಗಳಲ್ಲಿ ಪ್ರತಿನಿಧಿಸುವ ಕರ್ನಾಟಕದ ಕ್ರೀಡಾಪಟುಗಳ ಬೆಂಬಲಕ್ಕೆ ನಮ್ಮ ಸರ್ಕಾರ ಸದಾ ನಿಲ್ಲಲಿದೆ. ಒಲಿಂಪಿಕ್ಸ್, ಕಾಮನ್ವೆಲ್ತ್ ಗೇಮ್ಸ್, ಏಷ್ಯನ್ ಗೇಮ್ಸ್ ಹಾಗೂ ಏಷ್ಯನ್ ಪ್ಯಾರಾ ಗೇಮ್ಸ್ಗಳಲ್ಲಿ ಭಾಗವಹಿಸುವ ರಾಜ್ಯದ ಕ್ರೀಡಾಪಟುಗಳಿಗೆ ₹5 ಲಕ್ಷ ವಿಶೇಷ ಪ್ರೋತ್ಸಾಹಧನ ನೀಡಲಾಗುವುದು. ಪದಕ ವಿಜೇತರಿಗೆ ₹15 ಲಕ್ಷ ಹೆಚ್ಚುವರಿ ನಗದು ಬಹುಮಾನ ನೀಡಲಾಗುವುದು.
ರಾಷ್ಟ್ರೀಯ ಕ್ರೀಡಾ ದಿನದಂದು, ಪ್ರತಿಭೆಗಳನ್ನು ಗುರುತಿಸಿ, ಅವರ ಸಾಧನೆಯನ್ನು ಗೌರವಿಸಿ, ಕರ್ನಾಟಕದ ಕ್ರೀಡಾಪಟುಗಳು ಇನ್ನಷ್ಟು ಎತ್ತರಕ್ಕೆ ಏರಲು ಅಗತ್ಯ ಪ್ರೋತ್ಸಾಹ ಮತ್ತು ಬೆಂಬಲ ನೀಡುವುದು ನಮ್ಮ ಉದ್ದೇಶವಾಗಿದೆ.
Karnataka is committed to standing behind athletes who represent India on the biggest sporting stages. Athletes from the State participating in the Olympics, Commonwealth Games, Asian Games and Asian Para Games will receive a special incentive of ₹5 lakh, while medal winners will receive an additional cash award of ₹15 lakh.
On National Sports Day, we reaffirm our commitment to recognising talent, rewarding excellence and helping Karnataka’s athletes aim even higher.
#nationalsportsday #karnatakasports -
Dr. G Parameshwara
@DrParameshwara
ಇಂದು ನನಗೆ ಸಿಕ್ಕಿರುವ ಅಧಿಕಾರ, ಹುದ್ದೆ ಎಲ್ಲವೂ ಕನ್ನಡ ಜನತೆಯ ಪ್ರೀತಿ ಮತ್ತು ಆಶೀರ್ವಾದದ ಸಂಕೇತ.
ನೀವು ನೀಡಿರುವ ಜವಾಬ್ದಾರಿಯನ್ನು ನಾನು ಸಮರ್ಥವಾಗಿ ನಿಭಾಯಿಸಿದ್ದೇನೆ ಎನ್ನುವ ಸಂತೃಪ್ತಿ ನನಗಿದೆ. ಅದನ್ನು ನಿಮ್ಮ ಮಾತುಗಳಲ್ಲಿ ಕೇಳುವಾಗ ಮತ್ತಷ್ಟು ಖುಷಿಯಾಗುತ್ತದೆ.
ಈ ಪ್ರೀತಿ - ವಿಶ್ವಾಸಕ್ಕೆ ಧನ್ಯವಾದಗಳುThis media couldn't be displayed. See it on the original post. -
Dr. G Parameshwara
@DrParameshwara
ಕೆಜಿ ಹಳ್ಳಿಯ ಬಿಲಾಲ್ ಮಸೀದಿ ಸಮಿತಿಯ ಅಧ್ಯಕ್ಷರು ಹಾಗೂ ಇಸ್ಲಾಂ ಧಾರ್ಮಿಕ ಮುಖಂಡರಾದ ಅಲ್ಹಾಜ್ ಅಮೀರ್ ಜಾನ್ ಖಾದ್ರಿ ಅವರು ನಿಧನರಾದ ಸುದ್ದಿ ಕೇಳಿ ದುಃಖವಾಯಿತು.
ಧಾರ್ಮಿಕ ಕಾರ್ಯಗಳ ಜೊತೆಗೆ ಸಾಮಾಜಿಕ ಸೇವೆಯನ್ನು ಕಾಳಜಿಯಿಂದ ನಡೆಸಿಕೊಂಡು ಬಂದಿದ್ದ ಶ್ರೀಯುತರು, ತಮ್ಮ ಆದರ್ಶಗಳ ಮೂಲಕ ನಮ್ಮೊಂದಿಗೆ ಸದಾ ಜೀವಂತ.
ಮೃತರ ಆತ್ಮಕ್ಕೆ ಶಾಂತಿ ಸಿಗಲಿ, ಅವರು ಕುಟುಂಬರ್ಗ ಮತ್ತು ಅನುಯಾಯಿಗಳಿಗೆ ನೋವು ಭರಿಸುವ ಶಕ್ತಿ ಸಿಗಲೆಂದು ಪ್ರಾರ್ಥಿಸುತ್ತೇನೆ.
I am saddened to learn of the passing of Alhaj Ameer Jaan Qadri, President of the Bilal Masjid Trust in K.G. Halli and a respected Islamic religious leader.
Along with his religious service, he was deeply committed to social service. He will continue to be remembered through the values and ideals he upheld.
I pray for peace to his departed soul and strength to his family and followers to bear this loss. -
Dr. G Parameshwara
@DrParameshwara
ಕರ್ನಾಟಕ ಆರ್ಯ ವೈಶ್ಯ ಸಮುದಾಯ ಅಭಿವೃದ್ಧಿ ನಿಗಮದ 4 ಯೋಜನೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಈ ಯೋಜನೆಗಳು ಆರ್ಯ ವೈಶ್ಯ ಸಮುದಾಯದ ಸದಸ್ಯರಿಗೆ ಶಿಕ್ಷಣ, ಸ್ವಯಂ ಉದ್ಯೋಗ, ಜೀವನೋಪಾಯ ಸೃಷ್ಟಿ ಹಾಗೂ ಕೃಷಿ ಕ್ಷೇತ್ರಗಳಲ್ಲಿ ನೆರವು ನೀಡುವ ಉದ್ದೇಶ ಹೊಂದಿವೆ.
ಅಕ್ಟೋಬರ್ 15ರಂದು ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿರುತ್ತದೆ. ಆರ್ಯ ವೈಶ್ಯ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿ ಅರ್ಜಿ ಸಲ್ಲಿಸಿ ಯೋಜನೆಗಳ ಸದುಪಯೋಗ ಪಡೆದುಕೊಳ್ಳಬೇಕು.
ಅರ್ಜಿ ಸಲ್ಲಿಕೆಗಾಗಿ: kacdc.karnataka.gov.in
ಸಹಾಯವಾಣಿ: 94484 51111 / 9611612302This media couldn't be displayed. See it on the original post. -
Dr. G Parameshwara
@DrParameshwara
*Drought report to be submitted to the Centre by the first week of September: We have declared 101 taluks drought-affected in the State. The situation will be reviewed again after 15 days, and if more taluks qualify, they will also be declared drought-affected.
We will submit the drought report to the Union Government by the end of this month or in the first week of September. Crop losses are being assessed, based on which the memorandum will be prepared. Central teams will then visit the State for assessment, following which drought relief will be released.
We will decide the compensation to be provided to farmers per acre. Our first priorities are drinking water, fodder for livestock and employment through works to prevent distress migration, and measures are already underway.
The 2023 drought caused losses of around ₹39,000 crore in Karnataka. We had sought ₹18,000 crore, but after our protest in Delhi and the Supreme Court’s intervention, only ₹3,500 crore was released. This should not happen again.
I have urged the Centre to ensure that last year’s situation is not repeated. Our memorandum will be prepared strictly as per the prescribed drought norms, and the Centre should examine it and release the relief due to us. Around ₹1,200 crore under the SDRF is yet to be released. The State’s share is 25% and the Centre’s 75%. We have urged the Centre to release the amount immediately so that relief can be disbursed to farmers within a week to 10 days.
*BJP has politicised the issue: B. Nagendra has not committed any offence, yet the BJP kept demanding his resignation and politicised the matter. As a disciplined party worker, he resigned to avoid causing embarrassment to the Government, though there was no need for him to do so.
His name did not figure in the CBI or ED charge sheets. Having served as Home Minister, I am aware of the facts. Unnecessary political pressure was created to force his resignation. We will place the facts before the people in the coming days.
We had told the Opposition to raise the issue in the House and place whatever documents they had on record, and that we were fully prepared to answer. They had no documents and merely indulged in politics.
*Siddaramaiah is not silent: He attended the Legislature session and was present in the House. He will take rest for a month or two and then resume his activities.
— My responses to questions from the media during a visit to the residence of a Congress leader in Mysuru today. -
Dr. G Parameshwara
@DrParameshwara
*ಸೆಪ್ಟೆಂಬರ್ ಮೊದಲ ವಾರದೊಳಗಾಗಿ ಕೇಂದ್ರಕ್ಕೆ ಬರ ವರದಿ ಸಲ್ಲಿಕೆ: ರಾಜ್ಯದಲ್ಲಿ 101 ತಾಲೂಕುಗಳನ್ನು ಬರಪೀಡಿತ ಪ್ರದೇಶ ಎಂದು ಘೋಷಣೆ ಮಾಡಿದ್ದೇವೆ. ಇನ್ನೂ 15 ದಿನಗಳಿಗೆ ಪರಿಶೀಲನೆ ಮಾಡುತ್ತೇವೆ. ಆ ಬಳಿಕ ಕೆಲವು ತಾಲೂಕುಗಳು ಬರಪೀಡಿತ ಪ್ರದೇಶದ ವರ್ಗಕ್ಕೆ ಬರುವ ಸಾಧ್ಯತೆ ಇರುತ್ತದೆ. ಅವುಗಳ ಆಧಾರದ ಮೇಲೆ ಮತ್ತೆ ಘೋಷಣೆ ಮಾಡುತ್ತೇವೆ.
ಈ ತಿಂಗಳ ಕೊನೆಗೆ ಅಥವಾ ಸೆಪ್ಟೆಂಬರ್ ಮೊದಲ ವಾರದಲ್ಲಿ ಕೇಂದ್ರಕ್ಕೆ ಬರ ವರದಿಯನ್ನು ಸಲ್ಲಿಸುತ್ತೇವೆ. ಬೆಳೆ ನಷ್ಟವನ್ನು ಅಂದಾಜು ಮಾಡಲಾಗುತ್ತಿದ್ದು, ಅದರ ಆಧಾರದ ಮೇಲೆ ಮೊಮೊರಾಂಡಮ್ ಅನ್ನು ಸಿದ್ಧಪಡಿಸುತ್ತೇವೆ. ಆ ಬಳಿಕ ಕೇಂದ್ರದಿಂದ ತಂಡಗಳು ಬಂದು ರಾಜ್ಯದಲ್ಲಿ ಸಮೀಕ್ಷೆ ನಡೆಸುತ್ತಾರೆ. ನಂತರ ಬರ ಪರಿಹಾರ ಬಿಡುಗಡೆಯಾಗುತ್ತದೆ.
ರೈತರಿಗೆ ಎಕರೆಗೆ ಏನು ಪರಿಹಾರ ಕೊಡಬೇಕು ಎಂಬ ಬಗ್ಗೆ ನಿರ್ಧಾರ ಮಾಡುತ್ತೇವೆ. ಕುಡಿಯುವ ನೀರು, ಜಾನುವಾರುಗಳಿಗೆ ಮೇವು, ಗುಳೆ ತಪ್ಪಿಸಲು ಕಾಮಗಾರಿಗಳನ್ನು ಕೈಗೊಳ್ಳುವುದು ನಮ್ಮ ಮೊದಲ ಆದ್ಯತೆ. ಈ ವಿಚಾರವಾಗಿ ಈಗಾಗಲೇ ಕ್ರಮಕೈಗೊಳ್ಳುತ್ತಿದ್ದೇವೆ. ರಾಜ್ಯದಲ್ಲಿ 2023ರಲ್ಲಿ ಉಂಟಾದ ಬರಗಾಲದಿಂದ ₹39,000 ಕೋಟಿ ನಷ್ಟವಾಗಿತ್ತು. ₹18,000 ಕೋಟಿ ನೀಡುವಂತೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ನಾವು ದೆಹಲಿಯಲ್ಲಿ ಹೋಗಿ ಪ್ರತಿಭಟನೆ ನಡೆಸಿ, ಸುಪ್ರೀಂ ಕೋರ್ಟ್ ನಿರ್ದೇಶನದ ಬಳಿಕ ₹3,500 ಕೋಟಿ ಬಿಡುಗಡೆ ಮಾಡಿದರು. ಈ ಬಾರಿ ಹಾಗಾಗಬಾರದು.
ಈ ವರ್ಷ ನಾನು ಕೇಂದ್ರಕ್ಕೆ ಮನವಿಯನ್ನು ಮಾಡಿದ್ದೇನೆ. ಕಳೆದ ಬಾರಿಯ ಘಟನೆಗಳು ಮತ್ತೆ ಮರುಕಳಿಸದಂತೆ ನೋಡಿಕೊಳ್ಳಬೇಕು. ನಾವು ಮೆಮೊರಾಂಡಮ್ ಏನು ಸಲ್ಲಿಸುತ್ತೇವೆಯೋ ಅದನ್ನು ಬರ ಘೋಷಣೆಗಿರುವ ಮಾನದಂಡಗಳಂತೆ ಮಾಡಿದ್ದೇವೆ. ಅದನ್ನು ಪರಿಶೀಲಿಸಿ, ನಮಗೆ ಪರಿಹಾರ ಹಣವನ್ನು ಕೊಡಲಿ. ಎಸ್ಡಿಆರ್ಎಫ್ನಲ್ಲಿ ₹1,200 ಕೋಟಿ ಹಣವನ್ನು ಕೊಡಲು ತೀರ್ಮಾನ ಮಾಡಿದ್ದಾರೆ. ಇನ್ನೂ ಅದನ್ನು ನಮಗೆ ಕೊಡಬೇಕು. ನಮ್ಮದು 25% ಹಾಗೂ ಕೇಂದ್ರದಿಂದ 75% ಇರುತ್ತೆ. 1,200 ಕೋಟಿ ಹಣವನ್ನು ತಕ್ಷಣ ಬಿಡುಗಡೆ ಮಾಡಿ ಎಂದು ಅವರಿಗೆ ಹೇಳಿದ್ದೇವೆ. ಅದು ಬಿಡುಗಡೆಯಾದರೆ ನಾವು ನಮ್ಮ ರೈತರಿಗೆ ಪರಿಹಾರ ಕೊಡಲು ಅನುಕೂಲವಾಗುತ್ತದೆ. ಒಂದು ವಾರ ಅಥವಾ 10 ದಿನಗೊಳಗಾಗಿ ಹಣವನ್ನು ರೈತರಿಗೆ ಕೊಟ್ಟುಬಿಡುತ್ತೇವೆ.
*ಬಿಜೆಪಿಯವರು ರಾಜಕೀಯ ಮಾಡಿದ್ದಾರೆ : ನಾಗೇಂದ್ರ ಅವರು ಯಾವುದೇ ಅಪರಾಧವನ್ನು ಮಾಡಿಲ್ಲ. ಆದರೂ, ಅವರನ್ನು ಬಿಜೆಪಿಯವರು ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿ ರಾಜಕೀಯ ಮಾಡಿದ್ದಾರೆ. ನಾಗೇಂದ್ರ ಅವರು ಪಕ್ಷದಲ್ಲಿ ಶಿಸ್ತಿನ ಸಿಪಾಯಿಯಾಗಿ ಸರ್ಕಾರಕ್ಕೆ ಮುಜುಗರ ಆಗಬಾರದು ಎಂಬ ದೃಷ್ಟಿಯಿಂದ ರಾಜೀನಾಮೆ ನೀಡಿದ್ದಾರೆ. ಅವರು ರಾಜೀನಾಮೆ ನೀಡುವ ಅಗತ್ಯ ಇರಲಿಲ್ಲ. ಸಿಬಿಐ, ಇಡಿ ಚಾರ್ಜ್ಶೀಟ್ನಲ್ಲಿ ಅವರ ಹೆಸರು ಇರಲಿಲ್ಲ. ನಾನು ಗೃಹ ಸಚಿವನಾಗಿದ್ದ ಕಾರಣ ಆ ಬಗ್ಗೆ ನನಗೆ ಮಾಹಿತಿ ಇದೆ. ಸುಮ್ಮನೆ ಅನಾವಶ್ಯಕವಾಗಿ ರಾಜಕಾರಣ ಮಾಡಿ ಅವರನ್ನು ರಾಜೀನಾಮೆ ಕೊಡುವಂತೆ ಮಾಡಿದ್ದಾರೆ. ನಾವು ಮುಂದಿನ ದಿನಗಳಲ್ಲಿ ವಸ್ತುಸ್ಥಿತಿಯ ಬಗ್ಗೆ ಜನಸಮುದಾಯಕ್ಕೆ ತಿಳಿಸುತ್ತೇವೆ.
ಸದನದಲ್ಲೂ ಕಾನೂನಾತ್ಮಕವಾಗಿ ಪ್ರಶ್ನೆಗಳನ್ನು ಕೇಳಿ, ನಾವು ಉತ್ತರವನ್ನು ನೀಡುತ್ತೇವೆ ಎಂದು ವಿಪಕ್ಷಕ್ಕೆ ಹೇಳಿದ್ದೆವು. ನಿಮ್ಮಲ್ಲಿ ದಾಖಲೆಗಳು ಇದ್ದರೆ ಅದನ್ನು ಸದನಕ್ಕೆ ಹೇಳಿ, ಅದಕ್ಕೆ ಉತ್ತರ ನೀಡಲು ನಾವು ಸಮರ್ಥರಿದ್ದೇವೆ ಎಂದು ಹೇಳಿದ್ದೆವು. ಅವರಲ್ಲಿ ದಾಖಲೆಗಳೇ ಇಲ್ಲ, ಸುಖಾಸುಮ್ಮನೆ ರಾಜಕಾರಣ ಮಾಡಿದ್ದಾರೆ.
*ಸಿದ್ದರಾಮಯ್ಯನವರೆಲ್ಲಿ ಮೌನವಾಗಿದ್ದಾರೆ. ಅವರು ಸದನಕ್ಕೆ ಬಂದಿದ್ದರು. ಸದನದಲ್ಲಿ ಉಪಸ್ಥಿತರಿದ್ದರು. ಒಂದೆರಡು ತಿಂಗಳು ಆರಾಮವಾಗಿ ವಿಶ್ರಾಂತಿ ತೆಗೆದುಕೊಂಡು ಮತ್ತೆ ಚಟುವಟಿಕೆಯನ್ನು ಶುರು ಮಾಡುತ್ತಾರೆ.
- ಇಂದು ಮೈಸೂರಿನಲ್ಲಿ ಕಾಂಗ್ರೆಸ್ ಮುಖಂಡರ ನಿವಾಸಕ್ಕೆ ಭೇಟಿ ನೀಡಿದ ವೇಳೆ ಮಾಧ್ಯಮದವರ ಪ್ರಶ್ನೆಗಳಿಗೆ ಉತ್ತರಿಸಿದೆ. -
Dr. G Parameshwara
@DrParameshwara
ಅನ್ನ,ಅಕ್ಷರದ ಜೊತೆಗೆ ಲೌಕಿಕ ಜ್ಞಾನವನ್ನು ಧಾರೆಯೆರೆದು ಕೋಟ್ಯಾಂತರ ಮಕ್ಕಳ ಬದುಕಿಗೆ ಬೆಳಕಾದ ಸುತ್ತೂರು ಶ್ರೀಮಠದ ಪರಮಪೂಜ್ಯ ಜಗದ್ಗುರು ಡಾ. ಶ್ರೀ ಶಿವರಾತ್ರಿ ರಾಜೇಂದ್ರ ಸ್ವಾಮೀಜಿಯವರ ಜಯಂತಿಯಂದು ಅವರಿಗೆ ಗೌರವ ನಮನಗಳನ್ನು ಸಲ್ಲಿಸುತ್ತೇನೆ.
ಧಾರ್ಮಿಕ ಕಾರ್ಯದ ಜೊತೆಗೆ ಸಾಮಾಜಿಕ ಸೇವೆಯನ್ನು ತಪಸ್ಸಿನಂತೆ ಆಚರಿಸಿದ ಪೂಜ್ಯ ಗುರುಗಳ ಬದುಕು - ಆದರ್ಶಗಳು ಎಲ್ಲರಿಗೂ ಮಾದರಿಯಾಗಲಿ. -
Dr. G Parameshwara
@DrParameshwara
ಇಂದು ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ, ನಾಡಿನ ಅಧಿದೇವತೆ ಶ್ರೀ ಚಾಮುಂಡೇಶ್ವರಿ ಅಮ್ಮನವರ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದೆ.
ರಾಜ್ಯದಲ್ಲಿ ಬರ ತಲೆದೋರಿರುವ ಈ ಸಂದರ್ಭದಲ್ಲಿ ಸಮಸ್ತ ಜನರಿಗೂ ನೆಮ್ಮದಿ ಹಾಗೂ ಶಾಂತಿಯನ್ನು ತಾಯಿಯು ಕರುಣಿಸಲಿ, ಸರ್ವರಿಗೂ ಒಳಿತಾಗಲಿ ಎಂದು ಪ್ರಾರ್ಥಿಸಿದೆ. -
Dr. G Parameshwara
@DrParameshwara
ಜಾತ್ಯತೀತ ಚಿಂತನೆಯ ಜನಾನುರಾಗಿ ನಾಯಕ, ಮುತ್ಸದ್ಧಿ ರಾಜಕಾರಣಿ ಹಾಗೂ ಮಾಜಿ ಮುಖ್ಯಮಂತ್ರಿಗಳಾದ ರಾಮಕೃಷ್ಣ ಹೆಗಡೆ ಅವರ ಜನ್ಮದಿನದಂದು ಗೌರವ ನಮನಗಳನ್ನು ಸಲ್ಲಿಸುತ್ತೇನೆ.
ಪಂಚಾಯತ್ ರಾಜ್ ವ್ಯವಸ್ಥೆ, ಲೋಕಾಯುಕ್ತ ಸಂಸ್ಥೆ, ವಿಧವಾ ಪಿಂಚಣಿ ಸೇರಿದಂತೆ ಹಲವು ಜನಪರ ಯೋಜನೆಗಳಿಗೆ ಮುನ್ನುಡಿ ಬರೆದ ರಾಮಕೃಷ್ಣ ಹೆಗಡೆ ಅವರು ಆಡಳಿತದಲ್ಲಿ ಪಾರದರ್ಶಕತೆ ಹಾಗೂ ಸಾಮಾಜಿಕ ನ್ಯಾಯಕ್ಕೆ ಹೊಸ ದಿಕ್ಕು ತೋರಿದರು.
ಕನ್ನಡ ನಾಡು-ನುಡಿಯ ಬಗ್ಗೆ ಅಪಾರ ಕಾಳಜಿ ಹೊಂದಿದ್ದ ಅವರ ಜನಪರ ಸೇವೆ, ಸರಳತೆ ಹಾಗೂ ಆಡಳಿತಾತ್ಮಕ ದೂರದೃಷ್ಟಿ ಸದಾ ಸ್ಮರಣೀಯ. -
Dr. G Parameshwara
@DrParameshwara
Sport is more than competition - it is discipline, resilience, teamwork and the courage to keep going.
On National Sports Day, we remember the legendary Major Dhyan Chand, the hockey wizard whose extraordinary skill and dedication made him an enduring symbol of sporting excellence.
Let us celebrate every athlete who pushes boundaries, inspires generations and brings pride to the nation.
#nationalsportsday -
Dr. G Parameshwara
@DrParameshwara
ಇಂದು ಮೈಸೂರು ನಗರಕ್ಕೆ ಭೇಟಿ ನೀಡಿದ ವೇಳೆ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ನಮನ ಸಲ್ಲಿಸಿದೆ.
ಈ ವೇಳೆ ನನ್ನನ್ನು ಕಾಂಗ್ರೆಸ್ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಅದ್ದೂರಿಯಾಗಿ ಸ್ವಾಗತಿಸಿದರು. ಅವರ ಪ್ರೀತಿ - ವಿಶ್ವಾಸಕ್ಕೆ ನಾನು ಆಭಾರಿ. -
Dr. G Parameshwara
@DrParameshwara
The disposal of pending Bagair Hukum applications is being accelerated across Karnataka to ensure timely decisions for applicants.
Out of 14,37,181 applications received, 4,11,290 have been verified at the Village Administrative Officer level, while 6,98,933 remain pending for disposal and 24,684 are still awaiting action at taluk offices.
Tahsildars have been directed to set monthly targets and clear pending cases without delay.
ಅರ್ಜಿದಾರರಿಗೆ ಸಕಾಲಿಕ ನೆರವು ದೊರೆಯುವುದನ್ನು ಖಚಿತಪಡಿಸಿಕೊಳ್ಳಲು ಕರ್ನಾಟಕದಾದ್ಯಂತ ಬಾಕಿ ಇರುವ ಬಗರ್ ಹುಕುಂ ಅರ್ಜಿಗಳ ವಿಲೇವಾರಿಯನ್ನು ತ್ವರಿತಗೊಳಿಸಲಾಗುತ್ತಿದೆ.
ಇದುವರೆಗೆ ಸ್ವೀಕರಿಸಲಾದ 14,37,181 ಅರ್ಜಿಗಳ ಪೈಕಿ 4,11,290 ಅರ್ಜಿಗಳನ್ನು ಗ್ರಾಮ ಆಡಳಿತಾಧಿಕಾರಿ ಹಂತದಲ್ಲಿ ಪರಿಶೀಲಿಸಲಾಗಿದೆ. 6,98,933 ಅರ್ಜಿಗಳು ವಿಲೇವಾರಿಗೆ ಬಾಕಿಯಿದ್ದು, 24,684 ಅರ್ಜಿಗಳು ತಾಲ್ಲೂಕು ಕಚೇರಿಗಳಲ್ಲಿ ವಿಲೇವಾರಿಗೆ ಬಾಕಿ ಇವೆ.
ತಹಶೀಲ್ದಾರರಿಗೆ ಮಾಸಿಕ ಗುರಿ ನಿಗದಿಪಡಿಸಿ, ಬಾಕಿ ಅರ್ಜಿಗಳನ್ನು ಯಾವುದೇ ವಿಳಂಬವಿಲ್ಲದೆ ವಿಲೇವಾರಿ ಮಾಡುವಂತೆ ಸೂಚಿಸಲಾಗಿದೆ. -
Dr. G Parameshwara
@DrParameshwara
Karnataka is accelerating the digitisation of land records to make land-related services faster, more transparent and easier for citizens to access.
Digitisation has been completed in 10 districts, while work continues in the remaining 21 districts, where 24.43 crore pages are pending. A daily target of 9,600 pages has been fixed, with officials directed to complete the remaining work by the end of September.
ಭೂ ದಾಖಲೆಗಳ ಕುರಿತಾದ ಸೇವೆಗಳನ್ನು ತ್ವರಿತವಾಗಿ, ಪಾರದರ್ಶಕ ರೀತಿಯಲ್ಲಿ ಹಾಗೂ ನಾಗರಿಕರಿಗೆ ಸುಲಭವಾಗಿ ಲಭ್ಯವಾಗುವಂತೆ ಮಾಡಲು ರಾಜ್ಯದಲ್ಲಿ ಭೂ ದಾಖಲೆಗಳ ಡಿಜಿಟಲೀಕರಣ ಕಾರ್ಯವನ್ನು ತ್ವರಿತಗೊಳಿಸಲಾಗಿದೆ.
10 ಜಿಲ್ಲೆಗಳಲ್ಲಿ ಡಿಜಿಟಲೀಕರಣ ಪೂರ್ಣಗೊಂಡಿದ್ದು, ಉಳಿದ 21 ಜಿಲ್ಲೆಗಳಲ್ಲಿ ಕಾರ್ಯ ಮುಂದುವರಿದಿದೆ. ಈ ಜಿಲ್ಲೆಗಳಲ್ಲಿ ಇನ್ನೂ 24.43 ಕೋಟಿ ಪುಟಗಳ ಡಿಜಿಟಲೀಕರಣ ಬಾಕಿಯಿದೆ. ಪ್ರತಿದಿನ 9,600 ಪುಟಗಳ ಡಿಜಿಟಲೀಕರಣದ ಗುರಿ ನಿಗದಿಪಡಿಸಲಾಗಿದ್ದು, ಉಳಿದ ಕಾರ್ಯವನ್ನು ಸೆಪ್ಟೆಂಬರ್ ಅಂತ್ಯದೊಳಗೆ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. -
Dr. G Parameshwara
@DrParameshwara
Distribution of title deeds must be followed by timely registration to ensure beneficiaries receive complete legal recognition of their rights. Of the 2,05,175 title deeds distributed so far, 1,55,575 have already been registered, and officials have been directed to complete all remaining registrations by September 30.
ಹಕ್ಕುಪತ್ರಗಳ ವಿತರಣೆ ಬಳಿಕ ಫಲಾನುಭವಿಗಳ ಹಕ್ಕುಗಳಿಗೆ ಕಾನೂನುಬದ್ಧ ಹಕ್ಕು ದೊರೆಯುವಂತೆ ನೋಂದಣಿ ಪ್ರಕ್ರಿಯೆಯನ್ನು ಸಮಯಬದ್ಧವಾಗಿ ಪೂರ್ಣಗೊಳಿಸಬೇಕು. ಇದುವರೆಗೆ ವಿತರಿಸಲಾಗಿರುವ 2,05,175 ಹಕ್ಕುಪತ್ರಗಳಲ್ಲಿ 1,55,575 ಹಕ್ಕುಪತ್ರಗಳು ಈಗಾಗಲೇ ನೋಂದಣಿಯಾಗಿವೆ. ಉಳಿದ ಎಲ್ಲಾ ಹಕ್ಕುಪತ್ರಗಳ ನೋಂದಣಿ ಪ್ರಕ್ರಿಯೆಯನ್ನು ಸೆಪ್ಟೆಂಬರ್ 30ರೊಳಗೆ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. -
Dr. G Parameshwara
@DrParameshwara
The Karnataka Arya Vysya Community Development Corporation continues to strengthen the community through education, livelihood, self-employment and financial support.
Over the past 7 years, a total of ₹85 crore, including grants and repayments, has supported 16,785 beneficiaries through loans, subsidies and fee reimbursements, with the Corporation recording 96% progress.
The Corporation has also successfully recovered ₹11 crore in loan repayments, while 740 beneficiaries have fully repaid their loans. These achievements reflect the KACDC’s continuing efforts towards the overall development and economic empowerment of the Arya Vaishya community.
ಕರ್ನಾಟಕ ಆರ್ಯ ವೈಶ್ಯ ಸಮುದಾಯ ಅಭಿವೃದ್ಧಿ ನಿಗಮವು ಶಿಕ್ಷಣ, ಜೀವನೋಪಾಯ, ಸ್ವಯಂ ಉದ್ಯೋಗ ಹಾಗೂ ಆರ್ಥಿಕ ನೆರವಿನ ಮೂಲಕ ಸಮುದಾಯದ ಸಬಲೀಕರಣಕ್ಕೆ ನಿರಂತರವಾಗಿ ಶ್ರಮಿಸುತ್ತಿದೆ.
ಕಳೆದ 7 ವರ್ಷಗಳಲ್ಲಿ, ಅನುದಾನ ಮತ್ತು ಮರುಪಾವತಿ ಸೇರಿದಂತೆ ಒಟ್ಟು ₹85 ಕೋಟಿ ನೆರವಿನ ಮೂಲಕ ಸಾಲ, ಸಹಾಯಧನ ಹಾಗೂ ಶುಲ್ಕ ಮರುಪಾವತಿ ಯೋಜನೆಗಳಡಿ 16,785 ಫಲಾನುಭವಿಗಳಿಗೆ ನೆರವು ನೀಡಲಾಗಿದೆ. ನಿಗಮವು 96% ಪ್ರಗತಿ ದಾಖಲಿಸಿದೆ.
ಇದೇ ವೇಳೆ, ನಿಗಮವು ₹11 ಕೋಟಿ ಸಾಲ ಮರುಪಾವತಿಯನ್ನು ಯಶಸ್ವಿಯಾಗಿ ವಸೂಲಿ ಮಾಡಿದ್ದು, 740 ಫಲಾನುಭವಿಗಳು ತಮ್ಮ ಸಾಲವನ್ನು ಸಂಪೂರ್ಣವಾಗಿ ಮರುಪಾವತಿಸಿದ್ದಾರೆ. ಈ ಸಾಧನೆಗಳು ಆರ್ಯ ವೈಶ್ಯ ಸಮುದಾಯದ ಸಮಗ್ರ ಅಭಿವೃದ್ಧಿ ಹಾಗೂ ಆರ್ಥಿಕ ಸಬಲೀಕರಣಕ್ಕಾಗಿ KACDC ಕೈಗೊಂಡಿರುವ ನಿರಂತರ ಪ್ರಯತ್ನಗಳನ್ನು ಪ್ರತಿಬಿಂಬಿಸುತ್ತವೆ. -
Dr. G Parameshwara
@DrParameshwara
From education and self-employment to livelihood opportunities and irrigation support, the Karnataka Arya Vaishya Community Development Corporation is offering four key schemes for the overall development of the Arya Vaishya community.
Explore the Arivu Educational Loan Scheme, Self-Employment Direct Loan Scheme, Arya Vaishya Aahara Vahini / Vehicle Scheme, and Vasavi Ganga Kalyana Scheme and find the support that suits your needs.
Applications for 2026–27 are now open.
Apply at: kacdc.karnataka.gov.in
Helpline: 94484 51111 / 9611612302
Last date to apply: October 15, 2026 -
Dr. G Parameshwara
@DrParameshwara
ಶಿಕ್ಷಣ ಮತ್ತು ಸ್ವಯಂ ಉದ್ಯೋಗದಿಂದ ಹಿಡಿದು ಜೀವನೋಪಾಯದ ಅವಕಾಶಗಳು ಹಾಗೂ ನೀರಾವರಿ ನೆರವಿನವರೆಗೆ, ಕರ್ನಾಟಕ ಆರ್ಯ ವೈಶ್ಯ ಸಮುದಾಯ ಅಭಿವೃದ್ಧಿ ನಿಗಮವು ಆರ್ಯ ವೈಶ್ಯ ಸಮುದಾಯದ ಸಮಗ್ರ ಅಭಿವೃದ್ಧಿಗಾಗಿ ನಾಲ್ಕು ಪ್ರಮುಖ ಯೋಜನೆಗಳನ್ನು ಜಾರಿಗೊಳಿಸುತ್ತಿದೆ.
ಅರಿವು ಶೈಕ್ಷಣಿಕ ಸಾಲ ಯೋಜನೆ, ಸ್ವಯಂ ಉದ್ಯೋಗ ನೇರ ಸಾಲ ಯೋಜನೆ, ಆರ್ಯ ವೈಶ್ಯ ಆಹಾರ ವಾಹಿನಿ / ವಾಹನ ಯೋಜನೆ, ವಾಸವಿ ಗಂಗಾ ಕಲ್ಯಾಣ ಯೋಜನೆಗಳ ಬಗ್ಗೆ ಅರಿಯಿರಿ.
ಇದರಲ್ಲಿ ನಿಮ್ಮ ಅಗತ್ಯಕ್ಕೆ ಸೂಕ್ತವಾದ ಯೋಜನೆಯ ನೆರವು ಪಡೆಯಿರಿ.
2026–27ನೇ ಸಾಲಿನ ಅರ್ಜಿಗಳು ಈಗ ತೆರೆದಿವೆ.
ಅರ್ಜಿ ಸಲ್ಲಿಸಲು: kacdc.karnataka.gov.in
ಸಹಾಯವಾಣಿ: 94484 51111 / 9611612302
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಅಕ್ಟೋಬರ್ 15, 2026 -
Dr. G Parameshwara
@DrParameshwara
ಕರ್ನಾಟಕ ಆರ್ಯ ವೈಶ್ಯ ಸಮುದಾಯ ಅಭಿವೃದ್ಧಿ ನಿಗಮವು 2026–27ನೇ ಸಾಲಿಗೆ ನಾಲ್ಕು ಕಲ್ಯಾಣ ಯೋಜನೆಗಳಿಗೆ ಅರ್ಜಿ ಆಹ್ವಾನಿಸಿದೆ. ಈ ಯೋಜನೆಗಳು ಆರ್ಯ ವೈಶ್ಯ ಸಮುದಾಯದ ಸದಸ್ಯರಿಗೆ ಶಿಕ್ಷಣ, ಸ್ವಯಂ ಉದ್ಯೋಗ, ಜೀವನೋಪಾಯ ಸೃಷ್ಟಿ ಹಾಗೂ ಕೃಷಿ ಕ್ಷೇತ್ರಗಳಲ್ಲಿ ನೆರವು ನೀಡುವ ಉದ್ದೇಶ ಹೊಂದಿವೆ.
ಅರ್ಹ ಫಲಾನುಭವಿಗಳು ಈ ಅವಕಾಶವನ್ನು ಸದುಪಯೋಗಪಡಿಸಿಕೊಂಡು ಅಕ್ಟೋಬರ್ 15, 2026ರೊಳಗೆ ಅರ್ಜಿ ಸಲ್ಲಿಸಿ.
ಅರ್ಜಿ ಸಲ್ಲಿಸಲು: kacdc.karnataka.gov.in
ಸಹಾಯವಾಣಿ: 94484 51111 / 9611612302
The Karnataka Arya Vysya Community Development Corporation has invited applications for four welfare schemes for 2026–27, aimed at supporting members of the Arya Vysya community in education, self-employment, livelihood generation and agriculture.
Eligible applicants are encouraged to make use of these opportunities and apply before October 15, 2026.
Apply at: kacdc.karnataka.gov.in
Helpline: 94484 51111 / 9611612302 -
Dr. G Parameshwara
@DrParameshwara
Karnataka is fast-tracking the declaration of 10,896 villages as Revenue Villages to strengthen legal recognition and land rights.
Officials have been directed to clear 5,768 preliminary notification proposals within 15 days, while 702 final notification proposals pending with Deputy Commissioners are directed to be completed without delay.
10,896 ಗ್ರಾಮಗಳನ್ನು ಕಂದಾಯ ಗ್ರಾಮಗಳಾಗಿ ಘೋಷಿಸುವ ಪ್ರಕ್ರಿಯೆಗೆ ನಮ್ಮ ಸರ್ಕಾರ ವೇಗ ನೀಡಿದೆ. ಕಾನೂನು ಮಾನ್ಯತೆ ಮತ್ತು ಭೂ ಹಕ್ಕುಗಳನ್ನು ಬಲಪಡಿಸುವ ಉದ್ದೇಶದಿಂದ 10,896 ಗ್ರಾಮಗಳನ್ನು ಕಂದಾಯ ಗ್ರಾಮಗಳಾಗಿ ಘೋಷಿಸುವ ಪ್ರಕ್ರಿಯೆಯನ್ನು ತ್ವರಿತಗೊಳಿಸಲಾಗಿದೆ.
5,768 ಪ್ರಾಥಮಿಕ ಅಧಿಸೂಚನೆ ಪ್ರಸ್ತಾವನೆಗಳನ್ನು 15 ದಿನಗಳೊಳಗೆ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಅಲ್ಲದೆ, ಜಿಲ್ಲಾಧಿಕಾರಿಗಳ ಬಳಿ ಬಾಕಿ ಇರುವ 702 ಅಂತಿಮ ಅಧಿಸೂಚನೆ ಪ್ರಸ್ತಾವನೆಗಳನ್ನು ವಿಳಂಬವಿಲ್ಲದೆ ಪೂರ್ಣಗೊಳಿಸುವಂತೆ ನಿರ್ದೇಶಿಸಲಾಗಿದೆ. -
Dr. G Parameshwara
@DrParameshwara
A secure place to live begins with access to land and basic amenities. The State has set a target to identify 15.50 lakh housing sites by September 15, with land for at least 50,000 sites in every district and a goal of distributing at least 5 lakh sites before December.
Priority will be given to Dalits, backward classes, minorities, persons with disabilities, widows, sexual minorities and other vulnerable groups, while ensuring the residential sites have access to roads, drinking water and essential amenities.
ಸುರಕ್ಷಿತ ಹಾಗೂ ನೆಮ್ಮದಿಯ ಬದುಕಿಗೆ ಸ್ವಂತ ನಿವೇಶನ ಮತ್ತು ಮೂಲಭೂತ ಸೌಕರ್ಯಗಳ ಲಭ್ಯತೆ ಅತ್ಯಗತ್ಯ. ಈ ನಿಟ್ಟಿನಲ್ಲಿ ಸೆಪ್ಟೆಂಬರ್ 15ರೊಳಗೆ 15.50 ಲಕ್ಷ ವಸತಿ ನಿವೇಶನಗಳನ್ನು ಗುರುತಿಸುವ ಗುರಿಯನ್ನು ರಾಜ್ಯ ಸರ್ಕಾರ ಹೊಂದಿದ್ದು, ಪ್ರತಿ ಜಿಲ್ಲೆಯಲ್ಲಿ ಕನಿಷ್ಠ 50,000 ನಿವೇಶನಗಳಿಗೆ ಅಗತ್ಯವಿರುವ ಭೂಮಿಯನ್ನು ಗುರುತಿಸಲಾಗುವುದು. ಡಿಸೆಂಬರ್ಗೂ ಮುನ್ನ ಕನಿಷ್ಠ 5 ಲಕ್ಷ ನಿವೇಶನಗಳನ್ನು ಹಂಚಿಕೆ ಮಾಡುವ ಗುರಿ ಹೊಂದಲಾಗಿದೆ.
ದಲಿತರು, ಹಿಂದುಳಿದ ವರ್ಗ, ಅಲ್ಪಸಂಖ್ಯಾತರು, ವಿಕಲಚೇತನರು, ವಿಧವೆಯರು, ಲೈಂಗಿಕ ಅಲ್ಪಸಂಖ್ಯಾತರು ಹಾಗೂ ಇತರೆ ದುರ್ಬಲ ವರ್ಗಗಳಿಗೆ ಆದ್ಯತೆ ನೀಡಲಾಗುವುದು. ಹಂಚಿಕೆಯಾಗುವ ನಿವೇಶನಗಳಿಗೆ ರಸ್ತೆ ಸಂಪರ್ಕ, ಕುಡಿಯುವ ನೀರು ಹಾಗೂ ಅಗತ್ಯ ಮೂಲಭೂತ ಸೌಕರ್ಯಗಳು ಲಭ್ಯವಾಗುವಂತೆ ಕ್ರಮ ಕೈಗೊಳ್ಳಲಾಗುವುದು. -
Dr. G Parameshwara
@DrParameshwara
Today, I inaugurated the 6th State-Level "Aikyata Samavesha" organised by the Karnataka State Government SC/ST Employees’ Coordination Committee at Shringar Palace, Palace Grounds, Bengaluru, and addressed the gathering.
Notifications are being issued to fill 72,000 vacant government posts across various departments in the State. Discussions are also underway at the government level to fill backlog vacancies.
Earlier, backlog vacancies were filled following sustained efforts during the tenure of former Chief Minister S. M. Krishna. I will now discuss the matter with D. K. Shivakumar and work towards filling the backlog vacancies.
A request has been made to provide land for the Coordination Committee. If suitable land is identified, Minister K. H. Muniyappa and I will facilitate its allotment. Chief Minister D. K. Shivakumar has agreed in principle to implement the Old Pension Scheme (OPS), and it will be implemented in the coming days.
You should have been given greater prominence at government employees’ conventions. There are more than one lakh employees from the SC/ST communities, yet you have not presented your issues as demands before the Chief Minister. Mere display of strength is not enough. The organisation of government SC/ST employees must become stronger, and its voice must reach those who take decisions. Your strength must be demonstrated effectively. Only when everyone comes together for such conventions will they have their true meaning.
You have not fully understood the strength and significance of Babasaheb Dr. B. R. Ambedkar. It is not enough to say that you have secured jobs through reservation, earn salaries and are able to support your families. We must reflect on why this community continues to remain marginalised even today. The caste system has continued for thousands of years.
Whether one accepts it or not, it was the Congress party that led the country to independence. A platform where Congress national president Mallikarjun Kharge had participated was subjected to purification rituals. Similarly, former Deputy Prime Minister Babu Jagjivan Ram faced a similar situation after inaugurating a statue of Madan Mohan Malaviya at Banaras Hindu University, where the place was subsequently subjected to purification.
People working as daily-wage labourers in rural areas continue to live in huts. We have still not been able to change this system or provide them with permanent homes and addresses. Every one of us should take a pledge: “I will transform and educate at least four people.” Only then can we work towards eliminating the caste system.
Looking at this convention, one is compelled to ask: Where is your voice for social change? Where is your concern for the community? SC/ST employees, who number in the lakhs, must raise their voice. You have submitted several demands for consideration. You must demonstrate your strength to ensure that your committee receives official recognition from the government.
If Minister K. H. Muniyappa and I do not raise our voice for you, then for whom should we raise it? We are here to fight for your rights and concerns. We will convey your request to the Chief Minister and seek recognition for the government employees’ committee.
We will work towards fulfilling your demands. But you must also think about what you can do for society. You should consider adopting children from poor families and supporting their education. You must understand that helping such children will make your life truly meaningful. Along with your own children, help children from poor families become engineers and doctors.
A majority of children from marginalised communities are scoring more than 90% marks. If they receive greater encouragement and support, they can secure jobs in the open category as well and progress further in society. -
Dr. G Parameshwara
@DrParameshwara
ಇಂದು ಕರ್ನಾಟಕ ರಾಜ್ಯ ಸರ್ಕಾರಿ ಎಸ್ಸಿ, ಎಸ್ಟಿ ನೌಕರರ ಸಮನ್ವಯ ಸಮಿತಿಯು ಬೆಂಗಳೂರು ಅರಮನೆ ಮೈದಾನದ ಶೃಂಗಾರ್ ಪ್ಯಾಲೆಸ್ನಲ್ಲಿ ಆಯೋಜಿಸಿದ್ದ 6ನೇ 'ರಾಜ್ಯಮಟ್ಟದ ಐಕ್ಯತಾ ಸಮಾವೇಶ' ಕಾರ್ಯಕ್ರಮವನ್ನು ಉದ್ಘಾಟಿಸಿ ಬಳಿಕ ಮಾತನಾಡಿದೆ.
ರಾಜ್ಯದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ 72 ಸಾವಿರ ಸರ್ಕಾರಿ ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಲಾಗುತ್ತಿದ್ದು, ಬ್ಯಾಕ್ಲಾಗ್ ಹುದ್ದೆಗಳನ್ನು ಭರ್ತಿ ಮಾಡಲು ಸರ್ಕಾರದ ಹಂತದಲ್ಲಿ ಚರ್ಚೆ ನಡೆಯುತ್ತಿದೆ.
ಹಿಂದೆ ಎಸ್.ಎಂ.ಕೃಷ್ಣ ಅವರು ಮುಖ್ಯಮಂತ್ರಿಯಾಗಿದ್ದ ವೇಳೆ ಹೋರಾಟ ಮಾಡಿ ಬ್ಯಾಕ್ಲಾಗ್ ಹುದ್ದೆಗಳನ್ನು ಭರ್ತಿ ಮಾಡಲಾಗಿತ್ತು. ಈಗ ಡಿ.ಕೆ.ಶಿವಕುಮಾರ್ ಅವರೊಂದಿಗೆ ಮಾತನಾಡಿ ಬ್ಯಾಕ್ಲಾಗ್ ಹುದ್ದೆಗಳನ್ನು ತುಂಬಲಾಗುವುದು.
ಸಮನ್ವಯ ಸಮಿತಿಗೆ ಜಾಗ ನೀಡುವಂತೆ ಮನವಿ ಮಾಡಲಾಗಿದೆ. ಜಾಗ ಗುರುತಿಸಿದರೆ ಸಚಿವರಾದ ಕೆ.ಹೆಚ್.ಮುನಿಯಪ್ಪ ಅವರು ಮತ್ತು ನಾನು ಮಂಜೂರು ಮಾಡಿಸುತ್ತೇವೆ. ಒಪಿಎಸ್ ಜಾರಿಗೊಳಿಸಲು ಸಿಎಂ ಡಿ.ಕೆ.ಶಿವಕುಮಾರ್ ಅವರು ತಾತ್ವಿಕವಾಗಿ ಒಪ್ಪಿದ್ದಾರೆ. ಮುಂದಿನ ದಿನಗಳಲ್ಲಿ ಅನುಷ್ಟಾನಗೊಳಿಸಲಾಗುವುದು.
ಸರ್ಕಾರಿ ನೌಕರರ ಸಮಾವೇಶದಲ್ಲಿ ನಿಮಗೆ ಪ್ರಾಶಸ್ತ್ಯ ನೀಡಬೇಕಾಗಿತ್ತು. ಎಸ್ಸಿ, ಎಸ್ಟಿ ಸಮುದಾಯದಲ್ಲಿ ಲಕ್ಷಕ್ಕೂ ಹೆಚ್ಚು ನೌಕರರಿದ್ದರು, ನಿಮ್ಮ ಸಮಸ್ಯೆಗಳನ್ನು ಬೇಡಿಕೆಯಾಗಿ ಮುಖ್ಯಮಂತ್ರಿಗಳಿಗೆ ನೀಡಲಿಲ್ಲ. ನಿಮ್ಮ ಶಕ್ತಿ ಪ್ರದರ್ಶನ ಸಾಲುವುದಿಲ್ಲ. ಸರ್ಕಾರಿ ಎಸ್ಸಿ, ಎಸ್ಟಿ ನೌಕರರ ಸಂಘಟನೆ ಮತ್ತಷ್ಟು ಗಟ್ಟಿಯಾಗಬೇಕು. ತೀರ್ಮಾನಗಳನ್ನು ತೆಗೆದುಕೊಳ್ಳುವವರಿಗೆ ತಲುಪಬೇಕು. ಅದಕ್ಕೆ ನಿಮ್ಮ ಶಕ್ತಿಯ ಪ್ರದರ್ಶನ ಆಗಬೇಕು. ಎಲ್ಲರೂ ಒಟ್ಟಾಗಿ ಸಮಾವೇಶ ಮಾಡಿದರೆ ನಿಜವಾದ ಅರ್ಥ ಬರುತ್ತದೆ.
ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಶಕ್ತಿ ನಿಮಗೆ ಅರ್ಥವಾಗಿಲ್ಲ. ಮೀಸಲಾತಿಯಿಂದ ನೌಕರಿ ಸಿಕ್ಕಿದೆ. ಸಂಬಳ ಬರುತ್ತದೆ. ಹೆಂಡತಿ ಮಕ್ಕಳನ್ನು ಸಾಕುತ್ತೇವೆ ಎಂದರೆ ಸಾಲುವುದಿಲ್ಲ. ಈ ಸಮುದಾಯ ಇಂದಿನವರೆಗೂ ಶೋಷಿತ ಸಮುದಾಯವಾಗಿ ಉಳಿದಿರುವ ಬಗ್ಗೆ ಚಿಂತಿಸಬೇಕಿದೆ.
ಸಾವಿರ ವರ್ಷಗಳಾದರು ಜಾತಿ ವ್ಯವಸ್ಥೆ ಮುಂದುವರೆಯುತ್ತಿದೆ. ಯಾರು ಬೇಕಾದರು ಒಪ್ಪಲಿ, ಬಿಡಲಿ, ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದು ಕಾಂಗ್ರೆಸ್ ಪಕ್ಷ. ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗಿರುವ ಮಲ್ಲಿಕಾರ್ಜುನ್ ಖರ್ಗೆ ಅವರು ಭಾಗವಹಿಸಿದ ವೇದಿಕೆಯನ್ನು ಶುದ್ಧೀಕರಣ ಮಾಡಿದರು. ಮಾಜಿ ಉಪ ಪ್ರಧಾನಿ ಬಾಬು ಜಗಜೀವನ್ ರಾಮ್ ಅವರು ಬನಾರಸ್ ವಿಶ್ವವಿದ್ಯಾಲಯದಲ್ಲಿ ಮದನ್ ಮೋಹನ್ ಮಾಳವೀಯ ಅವರ ಪ್ರತಿಮೆ ಉದ್ಘಾಟಿಸಿದ ಬಳಿಕ ಜಾಗವನ್ನು ಶುದ್ಧೀಕರಣ ಮಾಡಿದ್ದರು.
ಹಳ್ಳಿಗಾಡಿನಲ್ಲಿ ಕೂಲಿ ಮಾಡುವ ಜನ ಗುಡಿಸಲುಗಳಲ್ಲಿ ಜೀವನ ಸಾಗಿಸುತ್ತಿದ್ದಾರೆ. ಈ ವ್ಯವಸ್ಥೆಯನ್ನು ಬದಲು ಮಾಡಲು ಇನ್ನೂ ಸಾಧ್ಯವಾಗಿಲ್ಲ. ಶಾಶ್ವತ ವಿಳಾಸ ಕಲ್ಪಿಸಲು ಆಗಿಲ್ಲ. ಪ್ರತಿಯೊಬ್ಬರು, 'ನಾವೆಲ್ಲ ನಾಲ್ಕು ಜನರನ್ನು ಪರಿವರ್ತಿಸಿ, ವಿದ್ಯಾವಂತರನ್ನಾಗಿ ಮಾಡುತ್ತೇನೆ' ಎಂಬ ಸಂಕಲ್ಪ ಮಾಡಬೇಕು. ಆಗ ಜಾತಿ ವ್ಯವಸ್ಥೆಯನ್ನು ಹೋಗಲಾಡಿಸಲು ಸಾಧ್ಯ.
ಸಮಾವೇಶವನ್ನು ನೋಡಿದರೆ ಸಮಾಜದ ಬದಲಾವಣೆ ಬಗ್ಗೆ ನಿಮ್ಮ ಧ್ವನಿ ಎಲ್ಲಿದೆ? ಕಳಕಳಿ ಎಲ್ಲಿದೆ ಎಂಬ ಪ್ರಶ್ನೆ ಮೂಡುತ್ತದೆ. ಲಕ್ಷಾಂತರ ಜನ ಇರುವ ಎಸ್ಸಿ, ಎಸ್ಟಿ ನೌಕರರು ಧ್ವನಿ ಎತ್ತಬೇಕು. ಕೆಲವು ಬೇಡಿಕೆಗಳನ್ನು ಈಡೇರಿಸಲು ಮನವಿ ಮಾಡಿದ್ದೀರಿ. ನಿಮ್ಮ ಸಮಿತಿಗೆ ಸರ್ಕಾರದಿಂದ ಮಾನ್ಯತೆ ಸಿಗುವಂತೆ ಶಕ್ತಿ ಪ್ರದರ್ಶಿಸಬೇಕು.
ನಾನು ಮತ್ತು ಸಚಿವ ಕೆ.ಹೆಚ್.ಮುನಿಯಪ್ಪ ಅವರು ನಿಮ್ಮ ಪರವಾಗಿ ಬಿಟ್ಟರೆ ಇನ್ಯಾರ ಪರವಾಗಿ ಧ್ವನಿ ಎತ್ತಬೇಕು. ನಾವು ನಿಮ್ಮ ಪರವಾಗಿ ಹೋರಾಟ ಮಾಡುವಂತವರು. ಸಿಎಂ ಅವರಿಗೆ ತಿಳಿಸಿ ಸರ್ಕಾರಿ ನೌಕರರ ಸಮಿತಿಗೆ ಮಾನ್ಯತೆ ನೀಡುವಂತೆ ತಿಳಿಸಲಾಗುವುದು.
ನಿಮ್ಮ ಬೇಡಿಕೆಗಳನ್ನು ನಾವು ಈಡೇರಿಸುತ್ತೇವೆ. ಸಮಾಜಕ್ಕೆ ನೀವು ಏನು ಮಾಡಬೇಕು ಎಂಬುದರ ಬಗ್ಗೆ ಯೋಚಿಸಿ. ಬಡವರ ಮಕ್ಕಳನ್ನು ದತ್ತು ತೆಗೆದುಕೊಂಡು ಅವರ ವಿದ್ಯಾಭ್ಯಾಸಕ್ಕೆ ಅನುಕೂಲ ಮಾಡಿಕೊಡಬೇಕು. ಇದು ಮಾಡಿದರೆ ನನ್ನ ಜೀವನ ಸಾರ್ಥಕವಾಗುತ್ತದೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕಿದೆ. ನಿಮ್ಮ ಮಕ್ಕಳೊಂದಿಗೆ ಬಡವರ ಮಕ್ಕಳನ್ನು ಇಂಜಿನಿಯರ್, ವೈದ್ಯರನ್ನಾಗಿ ಮಾಡಿಸಿ. ಶೋಷಿತ ಸಮುದಾಯದ ಬಹುತೇಕ ಮಕ್ಕಳು ಶೇ. 90ಕ್ಕಿಂತ ಹೆಚ್ಚಿನ ಅಂಕ ಪಡೆಯುತ್ತಿದ್ದಾರೆ. ಅವರಿಗೆ ಇನ್ನಷ್ಟು ಪ್ರೋತ್ಸಾಹ, ಉತ್ತೇಜನ ನೀಡಿದರೆ ಸಾಮಾನ್ಯ ವರ್ಗದಲ್ಲಿ ನೌಕರಿ ಪಡೆದು, ಸಮಾಜದಲ್ಲಿ ಮುಂದೆ ಬರುತ್ತಾರೆ. -
Dr. G Parameshwara
@DrParameshwara
The Government of Karnataka strongly condemns the anti-people notification issued by the Union Government regarding the implementation of the Kasturirangan Report. I wish to make it clear to the people of Karnataka that there has been no change in our stand that the report must not be implemented under any circumstances.
The notification issued by the Union Government declaring 1,449 villages across 10 districts in the Western Ghats as Ecologically Sensitive Areas (ESAs) has caused serious concern among lakhs of families in the State. Keeping the interests of the people living in Malnad and the Western Ghats regions in mind, we have decided to discuss the Centre’s decision and explore solutions. We have also decided to convene a one-day special session of the Legislature for this purpose.
For centuries, the people living in Karnataka’s Western Ghats have built their lives by adopting a balanced way of living in harmony with nature and respecting the environment around them. This close relationship between people and nature is what has sustained the vitality of the Western Ghats even today. In such circumstances, attempting to displace people suddenly in the name of environmental protection is an anti-life and inhumane approach.
If the Union Government genuinely cares about protecting the environment, it must listen to the concerns and grievances of the people who have lived in the villages of the Western Ghats for generations. It must also hold necessary consultations with the State Government and arrive at a consensus-based decision acceptable to all stakeholders. We certainly cannot accept such a unilateral decision taken without taking anyone into confidence.
So far, Karnataka has rejected the notifications issued by the Union Government seeking implementation of the report six times, and has also clearly communicated its position. Despite this, the Centre’s repeated attempts to impose its stand on the people of Karnataka without listening to our concerns are contrary to the principles of federalism.
On July 31, 2024, the Union Government took a unilateral decision and issued a draft notification seeking implementation of the Kasturirangan Report. Subsequently, at the Cabinet meeting held on September 26, 2024, under the chairmanship of then Chief Minister Siddaramaiah, the Government of Karnataka passed a resolution opposing the Centre’s notification and communicated the ground realities to the Union Government.
Now, once again, the Union Government has embarked on an unjust course of action that directly affects the lives and livelihoods of the people of Karnataka. This is an issue that goes beyond party ideologies and political differences. I firmly believe that there can be no ideology greater than the lives and livelihoods of our people.
Therefore, I am confident that leaders of the Opposition will also support the decision we take in the House to prevent the implementation of this report. I also hope that Karnataka’s Members of Parliament will put pressure on the Union Government and persuade it to reconsider and change its position.
People living in the Western Ghats region need not be anxious under any circumstances. Your government stands with you. As a government, we will sincerely make every possible effort within our means to prevent the implementation of the Kasturirangan Report. -
Dr. G Parameshwara
@DrParameshwara
ಕಸ್ತೂರಿ ರಂಗನ್ ವರದಿ ಜಾರಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರವು ಹೊರಡಿಸಿರುವ ಜನವಿರೋಧಿ ಅಧಿಸೂಚನೆಯನ್ನು ನಮ್ಮ ಸರ್ಕಾರವು ಬಲವಾಗಿ ಖಂಡಿಸುತ್ತದೆ. ಯಾವುದೇ ಕಾರಣಕ್ಕೂ ವರದಿ ಜಾರಿಗೆ ಅವಕಾಶ ನೀಡಬಾರದು ಎಂಬ ನಮ್ಮ ನಿಲುವಿನಲ್ಲಿ ಬದಲಾವಣೆ ಇಲ್ಲ ಎನ್ನುವುದನ್ನು ಈ ಮೂಲಕ ರಾಜ್ಯದ ಜನರ ಗಮನಕ್ಕೆ ತರಲು ಬಯಸುತ್ತೇನೆ.
ಪಶ್ಚಿಮ ಘಟ್ಟ ಪ್ರದೇಶದ 10 ಜಿಲ್ಲೆಗಳ 1,449 ಗ್ರಾಮಗಳನ್ನು ಪರಿಸರ ಸೂಕ್ಷ್ಮ ಪ್ರದೇಶಗಳೆಂದು ಘೋಷಿಸಿ ಕೇಂದ್ರ ಸರ್ಕಾರ ಹೊರಡಿಸಿರುವ ಈ ಅಧಿಸೂಚನೆಯು ರಾಜ್ಯದ ಲಕ್ಷಾಂತರ ಕುಟುಂಬಗಳನ್ನು ತೀವ್ರ ಆತಂಕಕ್ಕೆ ಈಡುಮಾಡಿದೆ. ಹೀಗಾಗಿ ನಾವು ಮಲೆನಾಡು ಹಾಗೂ ಪಶ್ಚಿಮ ಘಟ್ಟ ಪ್ರದೇಶಗಳ ಜನರ ಹಿತವನ್ನು ಗಮನದಲ್ಲಿ ಇಟ್ಟುಕೊಂಡು ಕೇಂದ್ರದ ನಿರ್ಣಯದ ಬಗ್ಗೆ ಚರ್ಚೆ ನಡೆಸಿ, ಪರಿಹಾರ ಕಂಡುಕೊಳ್ಳಲು ಒಂದು ದಿನದ ವಿಶೇಷ ಅಧಿವೇಶನವನ್ನು ಕರೆಯಲು ಸಹ ನಿರ್ಧಾರ ಮಾಡಿದ್ದೇವೆ.
ಶತಮಾನಗಳಿಂದ ರಾಜ್ಯದ ಪಶ್ಚಿಮ ಘಟ್ಟ ಪ್ರದೇಶಗಳಲ್ಲಿ ವಾಸಿಸುತ್ತಿರುವ ಜನರು ಅಲ್ಲಿನ ಪ್ರಕೃತಿಯೊಂದಿಗೆ ಸಮತೋಲಿತ ಜೀವನ ಶೈಲಿಯನ್ನು ಅಳವಡಿಸಿಕೊಂಡು, ತಮ್ಮ ಸುತ್ತಲಿನ ಪರಿಸರವನ್ನು ಗೌರವಿಸುತ್ತಲೇ ಬದುಕು ಕಟ್ಟಿಕೊಂಡಿದ್ದಾರೆ. ಮನುಷ್ಯ ಮತ್ತು ಪರಿಸರದ ನಡುವಿನ ಈ ಅನ್ಯೋನ್ಯಭಾವವೇ ಇಂದಿಗೂ ಪಶ್ಚಿಮ ಘಟ್ಟಗಳ ಜೀವಂತಿಕೆಯನ್ನು ಹಿಡಿದಿಟ್ಟಿದೆ. ಹೀಗಿರುವಾಗ ಇದ್ದಕ್ಕಿದ್ದಂತೆ ಪರಿಸರ ಸಂರಕ್ಷಣೆಯ ಹೆಸರಿನಲ್ಲಿ ಜನರನ್ನು ಒಕ್ಕಲೆಬ್ಬಿಸಲು ಹೊರಡುವುದು ಜೀವವಿರೋಧಿ, ಅಮಾನವೀಯ ನಡೆಯಾಗುತ್ತದೆ.
ಕೇಂದ್ರ ಸರ್ಕಾರಕ್ಕೆ ಪರಿಸರ ಸಂರಕ್ಷಣೆ ಮಾಡುವ ನೈಜ ಕಾಳಜಿ ಇದ್ದಲ್ಲಿ, ಪಶ್ಚಿಮ ಘಟ್ಟ ಪ್ರದೇಶಗಳ ಗ್ರಾಮಗಳಲ್ಲಿ ತಲೆಮಾರುಗಳಿಂದ ವಾಸಮಾಡುತ್ತಿರುವ ಜನರ ಆತಂಕ, ಅಹವಾಲುಗಳನ್ನು ಆಲಿಸಬೇಕು. ಹಾಗೆಯೇ ರಾಜ್ಯ ಸರ್ಕಾರದ ಜೊತೆ ಅಗತ್ಯ ಚರ್ಚೆ ನಡೆಸಿ, ಎಲ್ಲರೂ ಒಪ್ಪುವಂತಹ ಒಮ್ಮತದ ನಿರ್ಣಯಕ್ಕೆ ಬರಬೇಕು. ಹೀಗೆ ಯಾರನ್ನೂ ವಿಶ್ವಾಸಕ್ಕೆ ಪಡೆಯದೆ ತೆಗೆದುಕೊಳ್ಳುವ ಏಕಪಕ್ಷೀಯ ನಿರ್ಧಾರವನ್ನು ಖಂಡಿತಾ ಒಪ್ಪಲು ಸಾಧ್ಯವಿಲ್ಲ.
ಈವರೆಗೆ 6 ಬಾರಿ ವರದಿ ಜಾರಿ ಮಾಡಬೇಕೆಂದು ಕೇಂದ್ರ ಹೊರಡಿಸಿದ್ದ ಅಧಿಸೂಚನೆಯನ್ನು ಕರ್ನಾಟಕದಲ್ಲಿ ತಿರಸ್ಕರಿಸಿ, ಸ್ಪಷ್ಟನೆಯನ್ನು ಸಹ ನೀಡಲಾಗಿದೆ. ಆದರೂ ಕೇಂದ್ರ ನಮ್ಮ ದನಿಗೆ ಕಿವಿಗೊಡದೆ ಮತ್ತೆ ಮತ್ತೆ ಕನ್ನಡಿಗರ ಮೇಲೆ ತನ್ನ ನಿಲುವನ್ನು ಹೇರಲು ಬಯಸುತ್ತಿರುವುದು ಒಕ್ಕೂಟ ತತ್ವಕ್ಕೆ ವಿರುದ್ಧವಾಗಿದೆ.
2024ರ ಜುಲೈ 31 ರಂದು ಕೇಂದ್ರ ಸರ್ಕಾರ ಏಕಪಕ್ಷೀಯವಾಗಿ ನಿರ್ಧಾರ ಕೈಗೊಂಡು, ಕಸ್ತೂರಿ ರಂಗನ್ ವರದಿ ಜಾರಿ ಮಾಡುವಂತೆ ಕರಡು ಅಧಿಸೂಚನೆ ಹೊರಡಿಸಿತ್ತು. 26 ಸೆಪ್ಟೆಂಬರ್ 2024ರಂದು ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಕೇಂದ್ರದ ಅಧಿಸೂಚನೆಯ ವಿರುದ್ಧ ನಿರ್ಣಯ ಕೈಗೊಂಡು, ಕೇಂದ್ರಕ್ಕೆ ವಾಸ್ತವ ಸಂಗತಿಯ ಮನವರಿಕೆಯನ್ನು ಸಹ ಮಾಡಕೊಡಲಾಗಿತ್ತು. ಈಗ ಮತ್ತೆ ಕೇಂದ್ರ ಸರ್ಕಾರವು ಕನ್ನಡಿಗರ ಬದುಕಿನ ಜೊತೆ ಚೆಲ್ಲಾಟವಾಡುವ ದುಷ್ಟ ಕಾರ್ಯಕ್ಕೆ ಕೈಹಾಕಿದೆ.
ಇದು ಪಕ್ಷ ಸಿದ್ಧಾಂತ ಹಾಗೂ ರಾಜಕೀಯವನ್ನು ಮೀರಿದ ವಿಚಾರ. ಜನರ ಬದುಕನ್ನು ಮೀರಿದ ಸಿದ್ಧಾಂತ ಯಾವುದು ಇಲ್ಲ ಎನ್ನುವುದು ನನ್ನ ನಂಬಿಕೆ. ಹೀಗಾಗಿ ವಿಪಕ್ಷಗಳ ನಾಯಕರು ಕೂಡ ಈ ವರದಿ ಜಾರಿಯಾಗದಂತೆ ನಾವು ಸದನದಲ್ಲಿ ಕೈಗೊಳ್ಳುವ ನಿರ್ಧಾರಕ್ಕೆ ಬೆಂಬಲಿಸುತ್ತಾರೆ, ಹಾಗೆಯೇ ರಾಜ್ಯದ ಸಂಸದರು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಿ, ತನ್ನ ನಿಲುವನ್ನು ಬದಲಿಸಿಕೊಳ್ಳುವಂತೆ ಮನವೊಲಿಸುತ್ತಾರೆ ಎಂಬ ಭರವಸೆ ನನಗಿದೆ.
ಪಶ್ಚಿಮ ಘಟ್ಟ ಭಾಗದ ಜನರು ಯಾವುದೇ ಕಾರಣಕ್ಕೂ ಆತಂಕಕ್ಕೆ ಒಳಗಾಗುವುದು ಬೇಡ. ನಿಮ್ಮೊಂದಿಗೆ ನಮ್ಮ ಸರ್ಕಾರವಿದೆ. ವರದಿ ಜಾರಿಯನ್ನು ತಡೆಯಲು ಒಂದು ಸರ್ಕಾರವಾಗಿ ಯಾವೆಲ್ಲಾ ಪ್ರಯತ್ನಗಳನ್ನು ಮಾಡಲು ಸಾಧ್ಯವಿದೆ ಅದನ್ನು ನಾವು ಪ್ರಾಮಾಣಿಕವಾಗಿ ಮಾಡುತ್ತೇವೆ. -
Dr. G Parameshwara
@DrParameshwara
ಇಂದು ನನಗೆ ಸಿಕ್ಕಿರುವ ಅಧಿಕಾರ, ಹುದ್ದೆ ಎಲ್ಲವೂ ಕನ್ನಡ ಜನತೆಯ ಪ್ರೀತಿ ಮತ್ತು ಆಶೀರ್ವಾದದ ಸಂಕೇತ.
ನೀವು ನೀಡಿರುವ ಜವಾಬ್ದಾರಿಯನ್ನು ನಾನು ಸಮರ್ಥವಾಗಿ ನಿಭಾಯಿಸಿದ್ದೇನೆ ಎನ್ನುವ ಸಂತೃಪ್ತಿ ನನಗಿದೆ. ಅದನ್ನು ನಿಮ್ಮ ಮಾತುಗಳಲ್ಲಿ ಕೇಳುವಾಗ ಮತ್ತಷ್ಟು ಖುಷಿಯಾಗುತ್ತದೆ.
ಈ ಪ್ರೀತಿ - ವಿಶ್ವಾಸಕ್ಕೆ ಧನ್ಯವಾದಗಳುThis media couldn't be displayed. See it on the original post. -
Dr. G Parameshwara
@DrParameshwara
A well-equipped 100-bed high-tech government hospital is coming up at Koratagere taluk headquarters at a cost of ₹40 crore. It will provide quality healthcare to people in rural areas and reduce dependence on the district hospital.
A ₹14 crore Community Health Centre has also been completed at Thovinakere and is ready for inauguration. New Primary Health Centre buildings have been constructed at Bukkapatna and Doddasaggere at a cost of ₹3 crore each.
The Government remains committed to strengthening healthcare infrastructure in the Koratagere Assembly constituency and ensuring better healthcare services for the people.
ಕೊರಟಗೆರೆ ತಾಲ್ಲೂಕು ಕೇಂದ್ರದಲ್ಲಿ ₹40 ಕೋಟಿ ವೆಚ್ಚದಲ್ಲಿ ಸುಸಜ್ಜಿತ 100 ಹಾಸಿಗೆಯ ಹೈಟೆಕ್ ಸಾರ್ವಜನಿಕ ಆಸ್ಪತ್ರೆ ನಿರ್ಮಾಣವಾಗುತ್ತಿದೆ. ಇದರಿಂದ ಗ್ರಾಮೀಣ ಭಾಗದ ಬಡ ಜನರಿಗೆ ಗುಣಮಟ್ಟದ ಆರೋಗ್ಯ ಸೇವೆ ದೊರೆಯಲಿದ್ದು, ಮುಂದಿನ ದಿನಗಳಲ್ಲಿ ಜಿಲ್ಲಾಸ್ಪತ್ರೆಯ ಮೇಲಿನ ಅವಲಂಬನೆಯೂ ಕಡಿಮೆಯಾಗಲಿದೆ.
ಮಾತ್ರವಲ್ಲದೆ, ತೋವಿನಕೆರೆ ಗ್ರಾಮದಲ್ಲಿ ₹14 ಕೋಟಿ ವೆಚ್ಚದಲ್ಲಿ ಸಮುದಾಯ ಆರೋಗ್ಯ ಕೇಂದ್ರ ನಿರ್ಮಾಣಗೊಂಡಿದ್ದು, ಉದ್ಘಾಟನೆಗೆ ಸಿದ್ಧವಾಗಿದೆ. ಬುಕ್ಕಾಪಟ್ಟಣ ಹಾಗೂ ದೊಡ್ಡಸಾಗ್ಗರೆ ಗ್ರಾಮಗಳಲ್ಲಿ ತಲಾ ₹3 ಕೋಟಿ ವೆಚ್ಚದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಕಟ್ಟಡಗಳು ನಿರ್ಮಾಣವಾಗಿವೆ.
ಕೊರಟಗೆರೆ ವಿಧಾನಸಭಾ ಕ್ಷೇತ್ರದಲ್ಲಿ ಆರೋಗ್ಯ ಕ್ಷೇತ್ರದ ಅಭಿವೃದ್ಧಿಗೆ ಇನ್ನಷ್ಟು ಒತ್ತು ನೀಡಿ, ಜನರಿಗೆ ಉತ್ತಮ ಆರೋಗ್ಯ ಸೇವೆ ಒದಗಿಸಲು ಸರ್ಕಾರ ಬದ್ಧವಾಗಿದೆ. -
Dr. G Parameshwara
@DrParameshwara
ಇಂದು ಕರ್ನಾಟಕ ರಾಜ್ಯ ಸರ್ಕಾರಿ ಎಸ್ಸಿ, ಎಸ್ಟಿ ನೌಕರರ ಸಮನ್ವಯ ಸಮಿತಿಯು ಬೆಂಗಳೂರು ಅರಮನೆ ಮೈದಾನದ ಶೃಂಗಾರ್ ಪ್ಯಾಲೆಸ್ನಲ್ಲಿ ಆಯೋಜಿಸಿದ್ದ 6ನೇ 'ರಾಜ್ಯಮಟ್ಟದ ಐಕ್ಯತಾ ಸಮಾವೇಶ' ಕಾರ್ಯಕ್ರಮವನ್ನು ಉದ್ಘಾಟಿಸಿದೆ.
ಈ ಸಂದರ್ಭದಲ್ಲಿ ಕೊಳ್ಳೇಗಾಲದ ಚೇತವನ ವಿಹಾರದ ಬೌದ್ಧ ಬಿಕ್ಕು ಪೂಜ್ಯ ಮನೋರಕ್ಕಿತ ಬಂತೇಜಿ, ಕೊಳ್ಳೇಗಾಲ ಶಾಸಕರಾದ ಎ.ಆರ್. ಕೃಷ್ಣಮೂರ್ತಿ, ಜಗಳೂರು ಶಾಸಕರಾದ ಬಿ.ದೇವೇಂದ್ರಪ್ಪ, ಮಾಜಿ ಸಚಿವರಾದ ಹೆಚ್.ಆಂಜನೇಯ, ಡಾ. ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಸಿ.ನರೇಂದ್ರ, ಕರ್ನಾಟಕ ರಾಜ್ಯ ಸರ್ಕಾರಿ ಎಸ್ಸಿ, ಎಸ್ಟಿ ನೌಕರರ ಸಮನ್ವಯ ಸಮಿತಿಯ ಅಧ್ಯಕ್ಷರಾದ ಡಿ.ಶಿವಶಂಕರ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
I inaugurated the 6th State-Level Unity Convention organised by the Karnataka State Government SC/ST Employees Coordination Committee at the Shringar Palace, Bengaluru Palace Grounds.
The programme was attended by Venerable Manorakkhita Bhanteji, Buddhist monk from Chetavana Vihara, Kollegal; A.R. Krishnamurthy, MLA from Kollegal; B. Devendrappa, MLA from Jagalur; former Minister H. Anjaneya; C. Narendra, Chairman of the Dr. B.R. Ambedkar Development Corporation; D. Shivashankar, President of the Karnataka State Government SC/ST Employees Coordination Committee; and several others. -
Dr. G Parameshwara
@DrParameshwara
*Drought report to be submitted to the Centre soon: After reviewing the drought situation, our Government has declared 101 taluks drought-affected. We will shortly prepare and submit the drought report to the Union Government.
The situation will be reviewed again after 15 days, and another 40–50 taluks may qualify as drought-affected. They will be declared accordingly. Meanwhile, we will submit our proposal to the Centre, following which Central teams will visit Karnataka for assessment before drought relief is released.
*Will urge the Centre to waive farmers’ loans: Parts of Andhra Pradesh, Telangana, Maharashtra, Uttar Pradesh and Bihar are also facing drought. Just as Dr. Manmohan Singh’s Government waived ₹72,000 crore in farm loans, a similar nationwide loan waiver by the Centre would benefit farmers across the country. I will urge the Union Government to consider this.
*No need for Nagendra to resign: We have maintained that Nagendra need not resign, as his name does not figure in the charge sheet. We had asked the Opposition to raise its questions in the House and assured them that we were ready to respond to whatever information they had. Instead, they are unnecessarily demanding his resignation. I will know more after speaking to the Chief Minister about his discussions with the party High Command.
*Steps to assist Kannadigas in Nepal: Kannadigas are among those affected by the floods in Nepal. According to the latest information available to me, 12 Kannadigas are affected. Officials will be sent to Kathmandu to gather further details, and immediate action will be taken.
— My responses to questions from the media near my residence today. -
Dr. G Parameshwara
@DrParameshwara
*ಶೀಘ್ರವೇ ಕೇಂದ್ರಕ್ಕೆ ಬರ ವರದಿ ಸಲ್ಲಿಕೆ : ರಾಜ್ಯದಲ್ಲಿ ಬರ ಪರಿಶೀಲನೆಯನ್ನು ನಡೆಸಿ, 101 ತಾಲೂಕುಗಳನ್ನು ಬರ ಪೀಡಿತ ಪ್ರದೇಶವೆಂದು ಘೋಷಿಸಿದ್ದೇವೆ. ಶೀಘ್ರವೇ ಬರ ವರದಿಯನ್ನು ಸಿದ್ಧಪಡಿಸಿ, ಕೇಂದ್ರ ಸರ್ಕಾರಕ್ಕೆ ಸಲ್ಲಿಸುತ್ತೇವೆ.
ಇನ್ನೂ 15 ದಿನಗಳಿಗೆ ಪರಿಶೀಲನೆ ಮಾಡುತ್ತೇವೆ. ಬಳಿಕ 40 ರಿಂದ 50 ತಾಲೂಕುಗಳು ಬರಪೀಡಿತ ಪ್ರದೇಶದ ವರ್ಗಕ್ಕೆ ಬರುವ ಸಾಧ್ಯತೆ ಇರುತ್ತದೆ. ಆಗ ಮತ್ತೆ ಘೋಷಣೆ ಮಾಡುತ್ತೇವೆ. ಈ ಮಧ್ಯೆ ಪ್ರಸ್ತಾವನೆಯನ್ನು ಸಿದ್ಧಪಡಿಸಿ ಕೇಂದ್ರಕ್ಕೆ ಸಲ್ಲಿಸುತ್ತೇವೆ. ಆ ಬಳಿಕ ಕೇಂದ್ರದಿಂದ ತಂಡಗಳು ಬಂದು ರಾಜ್ಯದಲ್ಲಿ ಸಮೀಕ್ಷೆ ನಡೆಸುತ್ತಾರೆ. ನಂತರ ಬರ ಪರಿಹಾರ ಬಿಡುಗಡೆಯಾಗುತ್ತದೆ.
*ರೈತರ ಸಾಲ ಮನ್ನಾ ಮಾಡುವಂತೆ ಕೇಂದ್ರಕ್ಕೆ ಒತ್ತಾಯ: ಕೇಂದ್ರದಿಂದ ಸಾಲ ಮನ್ನಾ ಮಾಡಿದರೆ ಮುಗಿದೇ ಹೋಗುತ್ತದೆ. ಆಂಧ್ರ, ತೆಲಂಗಾಣ, ಮಹಾರಾಷ್ಟ್ರ, ಉತ್ತರಪ್ರದೇಶ, ಬಿಹಾರದ ಕೆಲವು ಭಾಗಗಳಲ್ಲಿ ಬರ ಇದೆ. ಹಾಗಾಗಿ ಇಡೀ ದೇಶದಲ್ಲಿ ಯಾವ ರೀತಿಯಲ್ಲಿ ಡಾ. ಮನಮೋಹನ್ ಸಿಂಗ್ ಅವರು ₹72 ಸಾವಿರ ಕೋಟಿ ಹಣವನ್ನು ಮನ್ನಾ ಮಾಡಿದ್ದರೋ, ಅದೇ ರೀತಿಯಾಗಿ ಕೇಂದ್ರ ಸರ್ಕಾರ ಮನ್ನಾ ಮಾಡಿದರೆ ದೇಶದ ಎಲ್ಲಾ ರೈತರಿಗೆ ಅನುಕೂಲವಾಗುತ್ತದೆ. ಕೇಂದ್ರ ಸರ್ಕಾರವನ್ನು ಈ ಬಗ್ಗೆ ಒತ್ತಾಯ ಮಾಡುತ್ತೇನೆ.
*ನಾಗೇಂದ್ರ ಅವರು ರಾಜೀನಾಮೆ ನೀಡುವ ಅಗತ್ಯವಿಲ್ಲ: ನಾವು ನಾಗೇಂದ್ರ ಅವರಿಗೆ ರಾಜೀನಾಮೆ ನೀಡುವ ಅಗತ್ಯವಿಲ್ಲ ಎಂದು ಹೇಳಿದ್ದೇವೆ. ಚಾರ್ಜ್ಶೀಟ್ನಲ್ಲಿ ಅವರ ಹೆಸರೂ ಇಲ್ಲ. ಸದನದಲ್ಲಿ ವಿರೋಧ ಪಕ್ಷದವರು ಇದರ ಬಗ್ಗೆ ಪ್ರಶ್ನೆಗಳನ್ನು ಕೇಳಲಿ, ಅವರ ಜೊತೆಗೆ ಏನು ಮಾಹಿತಿ ಇದೆಯೋ, ಅದಕ್ಕೆಲ್ಲ ನಾವು ಉತ್ತರಗಳನ್ನು ಕೊಡುತ್ತೇವೆ ಎಂದು ಹೇಳಿದ್ದೆವು. ಆದರೆ, ಅನಾವಶ್ಯಕವಾಗಿ ವಿರೋಧ ಪಕ್ಷದವರು ರಾಜೀನಾಮೆ ನೀಡಲು ಒತ್ತಾಯ ಮಾಡುತ್ತಿದ್ದಾರೆ. ನಮ್ಮ ವರಿಷ್ಠರ ಜೊತೆಯಲ್ಲಿ ಮುಖ್ಯಮಂತ್ರಿಗಳು ಏನು ಚರ್ಚೆ ಮಾಡಿಕೊಂಡು ಬಂದಿದ್ದಾರೋ ಗೊತ್ತಿಲ್ಲ. ಮುಖ್ಯಮಂತ್ರಿಗಳ ಜೊತೆಗೆ ನಾನು ಚರ್ಚೆ ಮಾಡಿದ ಬಳಿಕ ನನಗೆ ತಿಳಿಯುತ್ತದೆ.
*ಕನ್ನಡಿಗರ ರಕ್ಷಣೆಗೆ ಕ್ರಮ : ನೇಪಾಳದಲ್ಲಿ ಸಂಭವಿಸಿದ ಪ್ರವಾಹದಲ್ಲಿ ಸಂಕಷ್ಟಕ್ಕೆ ಸಿಲುಕಿಕೊಂಡಿರುವವರಲ್ಲಿ ಕನ್ನಡಿಗರು ಇದ್ದಾರೆ. ನನಗೆ ಈಗ ಬಂದ ಮಾಹಿತಿಯ ಪ್ರಕಾರ ಕನ್ನಡಿಗರು 12 ಜನರಿದ್ದಾರೆ. ಕಠ್ಮಂಡು ಗೆ ಅಧಿಕಾರಿಗಳನ್ನು ಕಳುಹಿಸಲಾಗುವುದು. ಅಲ್ಲಿಂದ ಮಾಹಿತಿಯನ್ನು ಪಡೆದುಕೊಳ್ಳುತ್ತೇವೆ. ಕೂಡಲೇ ಕ್ರಮ ಕೈಗೊಳ್ಳುತ್ತೇವೆ.
- ಇಂದು ನನ್ನ ನಿವಾಸದ ಬಳಿ ಮಾಧ್ಯಮದವರ ಪ್ರಶ್ನೆಗಳಿಗೆ ಉತ್ತರಿಸಿದೆ. -
Dr. G Parameshwara
@DrParameshwara
ಸೈಬರ್ ಅಪರಾಧ ಪ್ರಕರಣವೊಂದರ ತನಿಖೆಗಾಗಿ ಮಧ್ಯಪ್ರದೇಶಕ್ಕೆ ತೆರಳಿದ್ದ ಬೆಂಗಳೂರಿನ ಪೊಲೀಸ್ ಇನ್ಸ್ಪೆಕ್ಟರ್ ರವಿ ಕೆ.ಬಿ ಅವರು ಅಪಘಾತದಲ್ಲಿ ಸಾವನ್ನಪ್ಪಿದ ವಿಚಾರ ತಿಳಿದು ಅತೀವ ದುಃಖವಾಯಿತು.
ಅಪರಾಧ ಪ್ರಕರಣಗಳಿಗೆ ಕಡಿವಾಣ ಹಾಕಿ, ನಿರ್ಭೀತ - ಸುರಕ್ಷಿತ ಸಮಾಜ ಕಟ್ಟುವಲ್ಲಿ ಪೊಲೀಸ್ ಸಿಬ್ಬಂದಿಗಳ ತ್ಯಾಗ - ಬಲಿದಾನವು ವ್ಯರ್ಥವಾಗಲಾರದು. ನಿಮ್ಮ ಕರ್ತವ್ಯನಿಷ್ಠೆ ಮತ್ತು ಸೇವಾ ಮನೋಭಾವವನ್ನು ಅತ್ಯಂತ ಹೆಮ್ಮೆಯಿಂದ ಸ್ಮರಿಸಿ, ನನ್ನ ಭಾವಪೂರ್ಣ ನಮನಗಳನ್ನು ಸಲ್ಲಿಸುತ್ತೇನೆ.
ಮೃತ ಪೊಲೀಸ್ ಸಿಬ್ಬಂದಿ ರವಿಯವರ ಆತ್ಮಕ್ಕೆ ಚಿರಶಾಂತಿ ಕೋರುತ್ತೇನೆ. ರವಿಯವರ ಅಗಲಿಕೆಯಿಂದ ನೊಂದಿರುವ ಅವರ ಕುಟುಂಬ ಸದಸ್ಯರಿಗೆ ನೋವು ಭರಿಸುವ ಶಕ್ತಿ ಸಿಗಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ.
ಈ ದುರ್ಘಟನೆಯಲ್ಲಿ ಗಾಯಗೊಂಡಿರುವ ನಮ್ಮ ಇತರೆ ಪೊಲೀಸ್ ಸಿಬ್ಬಂದಿಗಳು ಆದಷ್ಟು ಶೀಘ್ರ ಗುಣಮುಖರಾಗಲಿ ಎಂದು ಹಾರೈಸುತ್ತೇನೆ.
I am deeply saddened by the death of Bengaluru Police Inspector Ravi K.B., who lost his life in an accident while in Madhya Pradesh to investigate a cybercrime case.
The sacrifices of our police personnel in fighting crime and building a safe, fearless society will never be forgotten. I pay my heartfelt tribute to Inspector Ravi and remember with pride his dedication to duty and spirit of service.
I pray for peace to his departed soul and strength to his bereaved family. I also wish a speedy recovery to the other police personnel injured in the accident. -
Dr. G Parameshwara
@DrParameshwara
Drought does not affect crops alone — it can also force rural families to migrate in search of employment. To prevent distress migration and provide livelihood support locally, the Karnataka Government has taken up 16,460 works under the VB-GRAM-G programme.
Between July 1 and August 24, these works generated 66.73 lakh person-days of employment. A large number of these works are also connected to drought mitigation and management, creating employment while strengthening local drought resilience.
The Government’s approach is clear: provide work locally, protect livelihoods and help families withstand the drought without being forced to migrate.
ಬರ ಪರಿಸ್ಥಿತಿ ಬೆಳೆಗಳ ಮೇಲೆ ಮಾತ್ರ ಪರಿಣಾಮ ಬೀರುವುದಿಲ್ಲ, ಉದ್ಯೋಗಕ್ಕಾಗಿ ಗ್ರಾಮೀಣ ಕುಟುಂಬಗಳು ಗುಳೆ ಹೋಗುವ ಪರಿಸ್ಥಿತಿಯನ್ನೂ ಸೃಷ್ಟಿಸುತ್ತದೆ.
ಗುಳೆ ಹೋಗುವುದನ್ನು ತಪ್ಪಿಸಲು ಹಾಗೂ ಸ್ಥಳೀಯವಾಗಿ ಉದ್ಯೋಗಾವಕಾಶ ಕಲ್ಪಿಸಲು, ರಾಜ್ಯ ಸರ್ಕಾರವು ವಿಬಿ ಜಿ ರಾಮ್ ಜಿ ಯೋಜನೆಯಡಿ 16,460 ಕಾಮಗಾರಿಗಳನ್ನು ಕೈಗೊಂಡಿದೆ.
ಜುಲೈ 1ರಿಂದ ಆಗಸ್ಟ್ 24ರವರೆಗೆ 66.73 ಲಕ್ಷ ಮಾನವ ದಿನಗಳ ಉದ್ಯೋಗ ಸೃಷ್ಟಿಸಲಾಗಿದೆ. ಈ ಪೈಕಿ ಹಲವು ಕಾಮಗಾರಿಗಳು ಬರ ನಿರ್ವಹಣೆ ಹಾಗೂ ಬರದ ಪರಿಣಾಮ ತಗ್ಗಿಸುವ ಕಾರ್ಯಗಳಿಗೆ ಸಂಬಂಧಿಸಿದ್ದು, ಉದ್ಯೋಗದ ಜೊತೆಗೆ ಗ್ರಾಮೀಣ ಪ್ರದೇಶಗಳ ಬರ ಎದುರಿಸುವ ಸಾಮರ್ಥ್ಯವನ್ನೂ ಬಲಪಡಿಸುತ್ತಿವೆ.
ಸ್ಥಳೀಯವಾಗಿ ಕೆಲಸ ನೀಡಿ, ಜೀವನೋಪಾಯ ರಕ್ಷಿಸಿ, ಗುಳೆ ಹೋಗುವ ಅನಿವಾರ್ಯತೆಯಿಂದ ಕುಟುಂಬಗಳನ್ನು ಕಾಪಾಡುವುದೇ ಸರ್ಕಾರದ ನಿಲುವಾಗಿದೆ. -
Dr. G Parameshwara
@DrParameshwara
ಗುರುವಾರ ವಿಕಾಸಸೌಧದಲ್ಲಿ ಕಂದಾಯ ಇಲಾಖೆಯ ವಿವಿಧ ಕಾರ್ಯಕ್ರಮಗಳ ಕುರಿತಂತೆ ಎಲ್ಲ ಜಿಲ್ಲಾಧಿಕಾರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಪ್ರಗತಿ ಪರಿಶೀಲನಾ ಸಭೆ ನಡೆಸಿ, ಅಗತ್ಯ ನಿರ್ದೇಶನಗಳನ್ನು ನೀಡಿದ್ದೇನೆ.
ಬಡವರಿಗೆ ನಿವೇಶನದ ಹಕ್ಕು ನೀಡುವುದು ನಮ್ಮ ಸರ್ಕಾರದ ಪ್ರಧಾನ ಆದ್ಯತೆ. ಪ್ರತಿ ಜಿಲ್ಲೆಯಲ್ಲಿ ಕನಿಷ್ಠ 50,000 ನಿವೇಶನಗಳಿಗೆ ಸಾಕಾಗುವಷ್ಟು ಭೂಮಿಯನ್ನು ಹುಡುಕುವಂತೆ ಸೂಚನೆಯನ್ನು ನೀಡಿದ್ದೇನೆ.
ಈ ಕುರಿತಾದ ಪತ್ರಿಕಾ ವರದಿಗಳು ಹೀಗಿವೆ..
On Thursday, I held a progress review meeting at Vikasa Soudha through video conference with all Deputy Commissioners on various programmes of the Revenue Department and issued necessary directions.
Providing housing sites to the poor is one of our Government’s top priorities. I have directed officials to identify enough land in every district for at least 50,000 housing sites.
Here are some of the media reports on the same.. -
Dr. G Parameshwara
@DrParameshwara
On Thursday, I addressed a press conference at Vidhana Soudha on the drought situation in the State.
Our Government has declared 101 taluks as drought-affected, based on the criteria prescribed by the Union Government. The situation in 32 more taluks is being reviewed again.
Here are some of the media reports on the same..
ರಾಜ್ಯದ ಬರಪೀಡಿತ ತಾಲೂಕುಗಳ ಕುರಿತಂತೆ ವಿಧಾನಸೌಧದಲ್ಲಿ ಗುರುವಾರ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದೆ.
ರಾಜ್ಯದ 101 ತಾಲೂಕುಗಳನ್ನು ಬರಪೀಡಿತ ಎಂದು ನಮ್ಮ ಸರ್ಕಾರ ಘೋಷಿಸಿದೆ. ಕೇಂದ್ರ ಸರ್ಕಾರ ನಿಗದಿಪಡಿಸಿದ ಮಾನದಂಡಗಳನ್ನು ಪರಿಗಣಿಸಿ ಈ ಘೋಷಣೆ ಮಾಡಲಾಗಿದೆ. ಇನ್ನೂ 32 ತಾಲೂಕುಗಳಲ್ಲಿನ ಪರಿಸ್ಥಿತಿಯನ್ನು ಪುನರ್ ಪರಿಶೀಲಿಸಲಾಗುತ್ತಿದೆ.
ಈ ಕುರಿತಾದ ಪತ್ರಿಕಾ ವರದಿಗಳು ಹೀಗಿವೆ.. -
Dr. G Parameshwara
@DrParameshwara
ರಾಜ್ಯದ ಬರಪೀಡಿತ ತಾಲೂಕುಗಳ ಕುರಿತಂತೆ ವಿಧಾನಸೌಧದಲ್ಲಿ ಗುರುವಾರ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದೆ.
ರಾಜ್ಯದ 101 ತಾಲೂಕುಗಳನ್ನು ಬರಪೀಡಿತ ಎಂದು ನಮ್ಮ ಸರ್ಕಾರ ಘೋಷಿಸಿದೆ. ಕೇಂದ್ರ ಸರ್ಕಾರ ನಿಗದಿಪಡಿಸಿದ ಮಾನದಂಡಗಳನ್ನು ಪರಿಗಣಿಸಿ ಈ ಘೋಷಣೆ ಮಾಡಲಾಗಿದೆ. ಇನ್ನೂ 32 ತಾಲೂಕುಗಳಲ್ಲಿನ ಪರಿಸ್ಥಿತಿಯನ್ನು ಪುನರ್ ಪರಿಶೀಲಿಸಲಾಗುತ್ತಿದೆ.
ಈ ಕುರಿತಾದ ಪತ್ರಿಕಾ ವರದಿಗಳು ಹೀಗಿವೆ..
On Thursday, I addressed a press conference at Vidhana Soudha on the drought situation in the State.
Our Government has declared 101 taluks as drought-affected, based on the criteria prescribed by the Union Government. The situation in 32 more taluks is being reviewed again.
Here are some of the media reports on the same.. -
Dr. G Parameshwara
@DrParameshwara
ಅಸಮಾನತೆಯ ವಿರುದ್ಧ ಧ್ವನಿಯೆತ್ತಿ, ಶೋಷಿತ ಸಮುದಾಯಗಳಿಗೆ ಧಾರ್ಮಿಕ ಹಕ್ಕು ಮತ್ತು ಸ್ವಾಭಿಮಾನದ ಬದುಕಿನ ದಾರಿ ತೋರಿದ ಸಮಾಜ ಸುಧಾರಕ, ದಾರ್ಶನಿಕ ನಾರಾಯಣ ಗುರುಗಳ ಜಯಂತಿಯಂದು ಅವರಿಗೆ ನನ್ನ ಗೌರವ ನಮನಗಳನ್ನು ಸಲ್ಲಿಸುತ್ತೇನೆ.
ಒಂದೇ ಜಾತಿ, ಒಂದೇ ಮತ, ಒಂದೇ ದೇವರು ಎಂಬ ಮಾನವತೆಯ ಸಂದೇಶ ಸಾರಿದ ಅವರ ಚಿಂತನೆ, ಹೋರಾಟ ಮತ್ತು ಸಾಧನೆ ನಮಗೆಲ್ಲ ಆದರ್ಶಪ್ರಾಯವಾದುದು. -
Dr. G Parameshwara
@DrParameshwara
ರಕ್ಷಾಬಂಧನವು ಸಹೋದರ–ಸಹೋದರಿಯರ ನಡುವಿನ ಬಾಂಧವ್ಯವನ್ನು ಗಟ್ಟಿಗೊಳಿಸುವ ಪವಿತ್ರ ಹಬ್ಬ.
ಈ ಹಬ್ಬವು ದ್ವೇಷ, ವೈಮನಸ್ಸುಗಳನ್ನು ದೂರ ಮಾಡಿ ಪ್ರೀತಿ, ವಿಶ್ವಾಸದ ಬಂಧವು ಬೆಸೆಯಲು ಪ್ರೇರಣೆಯಾಗಲಿ ಎಂದು ಆಶಿಸುತ್ತೇನೆ.
ನಾಡಿನ ಜನತೆಗೆ ರಕ್ಷಾಬಂಧನದ ಶುಭಾಶಯಗಳು.
#happyrakshabandhan -
Dr. G Parameshwara
@DrParameshwara
The drought is now reflected not only in rainfall and sowing figures, but also in scientific assessments of soil and vegetation.
As of August 26, the Moisture Adequacy Index showed serious soil-moisture deficiency in 178 taluks — nearly 74% of the State’s taluks. Among them, 86 taluks face very severe moisture deficiency, while 92 taluks face moderate moisture deficiency.
Satellite assessment conducted during the first fortnight of August has also confirmed vegetation stress in 165 taluks due to moisture shortage.
The ground assessment and satellite evidence point to the same reality.
What more is the Centre waiting for?
ಬರದ ಪರಿಣಾಮ ಮಳೆ ಮತ್ತು ಬಿತ್ತನೆ ಅಂಕಿ-ಅಂಶಗಳಲ್ಲಿ ಮಾತ್ರವಲ್ಲದೆ, ಮಣ್ಣು ಮತ್ತು ಸಸ್ಯವರ್ಗದ ವೈಜ್ಞಾನಿಕ ಮೌಲ್ಯಮಾಪನದಲ್ಲೂ ಸ್ಪಷ್ಟವಾಗಿ ಕಾಣಿಸುತ್ತಿದೆ.
ಆಗಸ್ಟ್ 26ರ ವೇಳೆಗೆ, ತೇವಾಂಶ ಸಮರ್ಪಕತಾ ಸೂಚ್ಯಂಕದ ( Moisture Adequacy Index) ಪ್ರಕಾರ ರಾಜ್ಯದ 178 ತಾಲ್ಲೂಕುಗಳಲ್ಲಿ ಅಂದರೆ ಸುಮಾರು ಶೇ.74ರಷ್ಟು ತಾಲ್ಲೂಕುಗಳಲ್ಲಿ ಗಂಭೀರ ಮಣ್ಣಿನ ತೇವಾಂಶ ಕೊರತೆ ದಾಖಲಾಗಿದೆ. ಈ ಪೈಕಿ 86 ತಾಲ್ಲೂಕುಗಳಲ್ಲಿ ಅತ್ಯಂತ ತೀವ್ರ ತೇವಾಂಶ ಕೊರತೆ ಹಾಗೂ 92 ತಾಲ್ಲೂಕುಗಳಲ್ಲಿ ಸಾಧಾರಣ ತೇವಾಂಶ ಕೊರತೆ ಕಂಡುಬಂದಿದೆ.
ಆಗಸ್ಟ್ ಮೊದಲ ಎರಡು ವಾರಗಳಲ್ಲಿ ನಡೆಸಿದ ಉಪಗ್ರಹ ಮೌಲ್ಯಮಾಪನದಂತೆ 165 ತಾಲ್ಲೂಕುಗಳಲ್ಲಿ, ತೇವಾಂಶದ ಕೊರತೆಯಿಂದ ಸಸ್ಯವರ್ಗಗಳು ಒಣಗುತ್ತಿರುವುದು ದೃಢಪಟ್ಟಿದೆ. ಗ್ರೌಂಡ್ ಟ್ರೂಥಿಂಗ್ ಮೌಲ್ಯಮಾಪನವಾಗಲಿ, ಉಪಗ್ರಹದ ಅಂಕಿ-ಅಂಶಗಳಾಗಲಿ ಎರಡೂ ಒಂದೇ ವಾಸ್ತವವನ್ನು ಹೇಳುತ್ತಿವೆ.
ಬರದ ವಾಸ್ತವವನ್ನು ಅರಿಯಲು ಕೇಂದ್ರ ಸರ್ಕಾರ ಇನ್ನೆಷ್ಟು ಪುರಾವೆಗಳಿಗಾಗಿ ಎದುರುನೋಡುತ್ತಿದೆ. -
Dr. G Parameshwara
@DrParameshwara
The Karnataka Government is strengthening the crop-insurance safety net for farmers affected by the rainfall deficit. This year, a record 49 lakh agriculture and horticulture farmers have already enrolled under the crop-insurance scheme.
Importantly, even farmers who are unable to sow because of inadequate rainfall may be eligible for insurance compensation under the “Prevented Sowing” category.
To enable more farmers to make use of this provision, the deadline for crop-insurance enrolment has been extended up to August 31.
The Government urges eligible farmers to use the extended period and secure insurance protection against drought-related crop losses.
ಮಳೆ ಕೊರತೆಯಿಂದ ಸಂಕಷ್ಟಕ್ಕೆ ಒಳಗಾಗಿರುವ ರೈತರಿಗೆ ಬೆಳೆ ವಿಮೆಯ ಭದ್ರತೆಯನ್ನು ಸರ್ಕಾರದ ವತಿಯಿಂದ ನೀಡುತ್ತಿದ್ದೇವೆ. ಈ ವರ್ಷ ಕೃಷಿ ಹಾಗೂ ತೋಟಗಾರಿಕೆ ಕ್ಷೇತ್ರದ ದಾಖಲೆ ಮಟ್ಟದಲ್ಲಿ 49 ಲಕ್ಷ ರೈತರು ಈಗಾಗಲೇ ಬೆಳೆ ವಿಮಾ ಯೋಜನೆಯಡಿ ನೋಂದಣಿಯಾಗಿದ್ದಾರೆ.
ಮುಖ್ಯವಾಗಿ, ಮಳೆ ಕೊರತೆಯಿಂದ ಬಿತ್ತನೆ ಮಾಡಲು ಸಾಧ್ಯವಾಗದ ರೈತರು “Prevented Sowing” ಅಡಿಯಲ್ಲಿ ವಿಮಾ ಪರಿಹಾರ ಪಡೆಯಲು ಅವಕಾಶವಿದೆ. ಹೆಚ್ಚಿನ ರೈತರು ಈ ಸೌಲಭ್ಯ ಬಳಸಿಕೊಳ್ಳಲು ಬೆಳೆ ವಿಮಾ ನೋಂದಣಿ ಅವಧಿಯನ್ನು ಆಗಸ್ಟ್ 31ರವರೆಗೆ ವಿಸ್ತರಿಸಲಾಗಿದೆ.
ಅರ್ಹ ರೈತರು ಈ ಅವಕಾಶವನ್ನು ಸದುಪಯೋಗಪಡಿಸಿಕೊಂಡು, ಬರದಿಂದ ಉಂಟಾಗುವ ನಷ್ಟಕ್ಕೆ ವಿಮಾ ರಕ್ಷಣೆ ಪಡೆಯಿರಿ. -
Dr. G Parameshwara
@DrParameshwara
The Government is preparing not only for the needs of people, but also for the protection of Karnataka’s livestock.
According to information from Deputy Commissioners and the Animal Husbandry Department, the State currently has around 151 lakh tonnes of fodder stock, sufficient for approximately 33 weeks.
However, fodder availability is lower in some areas. In 49 taluks, stocks are sufficient for about 25 weeks, while in 18 taluks, availability is for less than 20 weeks.
To strengthen fodder availability, the Government has released ₹25 crore for distributing fodder seed kits to farmers with access to water. KMF is also distributing fodder kits.
Farmers who can cultivate fodder are being encouraged to do so and conserve it carefully for the months ahead.
ರಾಜ್ಯದಲ್ಲಿನ ತೀವ್ರ ಬರ ಪರಿಸ್ಥಿತಿಯ ನಡುವೆ ಸರ್ಕಾರ ಜನರ ಅಗತ್ಯಗಳ ಜೊತೆಗೆ ಜಾನುವಾರುಗಳ ರಕ್ಷಣೆಗೆ ಕೂಡ ಪ್ರಮುಖ ಆದ್ಯತೆ ನೀಡಿದೆ.
ಜಿಲ್ಲಾಧಿಕಾರಿಗಳು ಹಾಗೂ ಪಶುಸಂಗೋಪನಾ ಇಲಾಖೆಯಿಂದ ದೊರೆತಿರುವ ಮಾಹಿತಿಯ ಪ್ರಕಾರ, ರಾಜ್ಯದಲ್ಲಿ 151 ಲಕ್ಷ ಟನ್ಗಳಷ್ಟು ಮೇವಿನ ಸಂಗ್ರಹವಿದೆ. ಇದು 33 ವಾರಗಳಿಗೆ ಸಾಕಾಗುತ್ತದೆ. ಆದರೆ ಕೆಲವು ಪ್ರದೇಶಗಳಲ್ಲಿ ಮೇವಿನ ಲಭ್ಯತೆ ಕಡಿಮೆಯಿದೆ. 49 ತಾಲೂಕುಗಳಲ್ಲಿ ಸುಮಾರು 25 ವಾರಗಳಿಗೆ, ಹಾಗೂ 18 ತಾಲೂಕುಗಳಲ್ಲಿ 20 ವಾರಗಳಿಗಿಂತ ಕಡಿಮೆ ಅವಧಿಗೆ ಸಾಕಾಗುವಷ್ಟು ಮೇವಿನ ಸಂಗ್ರಹವಿದೆ.
ಮೇವಿನ ಲಭ್ಯತೆಯನ್ನು ಹೆಚ್ಚಿಸಲು, ನೀರಿನ ಸೌಲಭ್ಯ ಹೊಂದಿರುವ ರೈತರಿಗೆ ಮೇವಿನ ಬೀಜ ಕಿಟ್ಗಳನ್ನು ವಿತರಿಸಲು ಸರ್ಕಾರ ₹25 ಕೋಟಿ ಬಿಡುಗಡೆ ಮಾಡಿದೆ. ಕೆಎಂಎಫ್ ಕಡೆಯಿಂದಲೂ ಕಿಟ್ಗಳನ್ನು ನೀಡುತ್ತಿದ್ದೇವೆ.
ಮೇವು ಬೆಳೆಯಲು ಸಾಧ್ಯವಿರುವ ರೈತರು ಮೇವು ಬೆಳೆದು, ಮುಂದಿನ ತಿಂಗಳುಗಳಿಗಾಗಿ ಅದನ್ನು ಸೂಕ್ತವಾಗಿ ಸಂಗ್ರಹಿಸಿಕೊಳ್ಳಲು ಸರ್ಕಾರ ಪ್ರೋತ್ಸಾಹಿಸುತ್ತಿದೆ. -
Dr. G Parameshwara
@DrParameshwara
The impact of drought is visible across Karnataka’s major crops like Paddy, Ragi, Groundnut, Maize, Tur. The horticulture sector has also been affected. Against the normal 4.36 lakh hectares, only 3.04 lakh hectares, around 69% had been covered as of August 25.
Even in areas where sowing has taken place, inadequate rainfall is preventing crops from achieving normal growth.
How much more proof does the Centre need?
ಭತ್ತ, ರಾಗಿ, ಶೇಂಗಾ, ಮೆಕ್ಕೆಜೋಳ, ತೊಗರಿ ಸೇರಿದಂತೆ ಕರ್ನಾಟಕದ ಪ್ರಮುಖ ಬೆಳೆಗಳ ಮೇಲೂ ಬರದ ಪರಿಣಾಮ ಉಂಟಾಗಿದೆ. ತೋಟಗಾರಿಕೆ ಕ್ಷೇತ್ರವೂ ಇದರಿಂದ ಬಾಧಿತವಾಗಿದೆ. ಆಗಸ್ಟ್ 25ರ ವೇಳೆಗೆ, ವಾಡಿಕೆಯ 4.36 ಲಕ್ಷ ಹೆಕ್ಟೇರ್ ಪ್ರದೇಶದ ಪೈಕಿ ಕೇವಲ 3.04 ಲಕ್ಷ ಹೆಕ್ಟೇರ್ (ಶೇ.69) ಪ್ರದೇಶದಲ್ಲಿ ಮಾತ್ರ ಬಿತ್ತನೆ ಪೂರ್ಣಗೊಂಡಿದೆ.
ಬಿತ್ತನೆಯಾಗಿರುವ ಪ್ರದೇಶಗಳಲ್ಲಿಯೂ ಸಾಕಷ್ಟು ಮಳೆಯಾಗದ ಕಾರಣ ಬೆಳೆಗಳು ನಿರೀಕ್ಷಿತ ಬೆಳವಣಿಗೆ ಸಾಧಿಸಲು ಸಾಧ್ಯವಾಗುತ್ತಿಲ್ಲ. ಬರದ ವಾಸ್ತವ ಅರಿಯಲು ಕೇಂದ್ರಕ್ಕೆ ಇನ್ನೆಷ್ಟು ಪುರಾವೆ ಬೇಕು? -
Dr. G Parameshwara
@DrParameshwara
There will be no shortage of funds for drinking-water arrangements during the drought.
The Karnataka Government has already released ₹117 crore to 31 districts, and ₹189 crore at ₹1 crore for each rural Assembly constituency.
That takes the total amount released for drinking-water purposes to ₹306 crore.
District administrations and local authorities have been empowered with funds to arrange tankers, hire borewells and take other emergency measures wherever required.
₹306 crore released. Drinking water remains a top prioriy.
ಬರ ಪರಿಸ್ಥಿತಿಯನ್ನು ನಿಭಾಯಿಸಲು ನಮ್ಮಲ್ಲಿ ಹಣದ ಕೊರತೆಯಿಲ್ಲ.
ಈಗಾಗಲೇ 31 ಜಿಲ್ಲೆಗಳಿಗೆ ₹117 ಕೋಟಿ ಹಾಗೂ ಪ್ರತಿ ಗ್ರಾಮೀಣ ಕ್ಷೇತ್ರಕ್ಕೆ ₹1 ಕೋಟಿಯಂತೆ ₹189 ಕೋಟಿ ಸೇರಿ ಒಟ್ಟು ₹306 ಕೋಟಿ ಕುಡಿಯುವ ನೀರಿಗಾಗಿ ಬಿಡುಗಡೆ ಮಾಡಲಾಗಿದೆ.
ಅಗತ್ಯವಿರುವ ಕಡೆ ಟ್ಯಾಂಕರ್ಗಳ ಮೂಲಕ ನೀರು ಪೂರೈಸಲು, ಕೊಳವೆ ಬಾವಿಗಳನ್ನು ಬಾಡಿಗೆಗೆ ಪಡೆಯಲು ಹಾಗೂ ಇತರೆ ತುರ್ತು ಕ್ರಮಗಳನ್ನು ಕೈಗೊಳ್ಳಲು ಜಿಲ್ಲಾಡಳಿತ ಮತ್ತು ಸ್ಥಳೀಯ ಸಂಸ್ಥೆಗಳಿಗೆ ಅಗತ್ಯ ಹಣಕಾಸಿನ ಅಧಿಕಾರ ನೀಡಲಾಗಿದೆ.
ಕುಡಿಯುವ ನೀರು ಪೂರೈಕೆ ನಮ್ಮ ಸರ್ಕಾರದ ಮೊದಲ ಆದ್ಯತೆ. -
Dr. G Parameshwara
@DrParameshwara
The Karnataka Government has already stepped up drinking-water arrangements in drought-hit areas.
As of August 22: 758 villages are being supplied drinking water through 149 tankers. The Government has also hired 714 private borewells to ensure uninterrupted supply in affected rural areas.
In urban Karnataka, 114 wards under 18 Urban Local Bodies are being supplied water through 48 tankers, along with 18 hired private borewells.
Anticipating a possible worsening of the drought, preparations are also being made to address drinking-water problems that could arise in 2,059 Gram Panchayats during the coming summer.
The Government is acting early to ensure that drinking water remains available wherever it is needed.
ರಾಜ್ಯ ಸರ್ಕಾರ ಈಗಾಗಲೇ ಬರಪೀಡಿತ ಪ್ರದೇಶಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆಗೆ ಸಕಲ ಸಿದ್ಧತೆಯನ್ನು ಮಾಡಿಕೊಂಡಿದೆ.
ಆಗಸ್ಟ್ 22ರ ವರೆಗಿನ ಮಾಹಿತಿಯಂತೆ, ರಾಜ್ಯದ 758 ಗ್ರಾಮಗಳಿಗೆ 149 ಟ್ಯಾಂಕರುಗಳ ಮೂಲಕ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದೆ. 714 ಖಾಸಗಿ ಕೊಳವೆ ಬಾವಿಗಳನ್ನು ಬಾಡಿಗೆಗೆ ಪಡೆದುಕೊಳ್ಳಲಾಗಿದೆ.
ನಗರ ಪ್ರದೇಶದ 18 ಸ್ಥಳೀಯ ಸಂಸ್ಥೆಗಳ 114 ವಾರ್ಡುಗಳಿಗೆ 48 ಟ್ಯಾಂಕರುಗಳ ಮೂಲಕ ನೀರು ಸರಬರಾಜು ಮಾಡುತ್ತಿದ್ದೇವೆ. ಇಲ್ಲಿಯೂ 18 ಖಾಸಗಿ ಕೊಳವೆ ಬಾವಿಗಳನ್ನು ಬಾಡಿಗೆಗೆ ಪಡೆಯಲಾಗಿದೆ.
ಪರಿಸ್ಥಿತಿ ತೀವ್ರವಾದರೆ ಮುಂದಿನ ಬೇಸಿಗೆಯಲ್ಲಿ 2,059 ಗ್ರಾಮ ಪಂಚಾಯತ್ಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉದ್ಭವಿಸಬಹುದು ಎಂದು ಅಂದಾಜು ಮಾಡಿ ಅದಕ್ಕೆ ಸೂಕ್ತ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ.
ಅಗತ್ಯವಿರುವ ಎಲ್ಲೆಡೆ ಕುಡಿಯುವ ನೀರು ಲಭ್ಯವಾಗುವಂತೆ ಸರ್ಕಾರ ಮುನ್ನೆಚ್ಚರಿಕೆಯ ಕ್ರಮಗಳೊಂದಿಗೆ ಕಾರ್ಯನಿರ್ವಹಿಸುತ್ತಿದೆ. -
Dr. G Parameshwara
@DrParameshwara
The rainfall deficit is directly affecting agricultural activity across Karnataka. As of August 21, sowing had taken place in only 60 lakh hectares, against the normal sowing area of 84.10 lakh hectares.
Of Karnataka’s 240 taluks, 104 taluks recorded less than 75% sowing, while 42 taluks recorded less than 25% sowing. This means vast stretches of farmland have either remained unsown or have seen substantially reduced agricultural activity because of inadequate rainfall.
When will relief reach our farmers?
ಮಳೆ ಕೊರತೆಯ ನೇರ ಪರಿಣಾಮ ಕರ್ನಾಟಕದ ಕೃಷಿ ಚಟುವಟಿಕೆಗಳ ಮೇಲೆ ಬೀರುತ್ತಿದೆ. ಆಗಸ್ಟ್ 21ರ ವೇಳೆಗೆ, ವಾಡಿಕೆಯಂತೆ 84.10 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಬೇಕಿತ್ತು. ಆದರೆ ಕೇವಲ 60 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಬಿತ್ತನೆಯಾಗಿದೆ.
ಕರ್ನಾಟಕದ ಒಟ್ಟು 240 ತಾಲ್ಲೂಕುಗಳ ಪೈಕಿ 104 ತಾಲ್ಲೂಕುಗಳಲ್ಲಿ ಶೇ.75ಕ್ಕಿಂತ ಕಡಿಮೆ ಬಿತ್ತನೆ ನಡೆದಿದ್ದರೆ, 42 ತಾಲ್ಲೂಕುಗಳಲ್ಲಿ ಶೇ.25ಕ್ಕಿಂತಲೂ ಕಡಿಮೆ ಬಿತ್ತನೆಯಾಗಿದೆ. ಮಳೆ ಕೊರತೆಯಿಂದಾಗಿ ರಾಜ್ಯದ ಕೃಷಿ ಪ್ರದೇಶಗಳು ಬಿತ್ತನೆಯಾಗದೆ ಉಳಿದಿದ್ದು, ಹಲವು ಕಡೆ ಕೃಷಿ ಚಟುವಟಿಕೆಗಳು ಗಣನೀಯವಾಗಿ ಕುಂಠಿತಗೊಂಡಿವೆ.
ಈ ಕಷ್ಟದ ಸಂದರ್ಭದಲ್ಲಿ ನಮ್ಮ ರೈತರಿಗೆ ಕೇಂದ್ರದಿಂದ ಬರ ಪರಿಹಾರ ಯಾವಾಗ ತಲುಪಲಿದೆ? -
Dr. G Parameshwara
@DrParameshwara
The rainfall shortage is not confined to one part of Karnataka. Every major climatic region of the State is experiencing a substantial deficit.
Overall, Karnataka received only 465 mm against the normal 666 mm rainfall, resulting in a 30% deficit. The drought is statewide, measurable and backed by official data.
Why should Karnataka wait for relief?
ಕರ್ನಾಟಕದ ಒಂದು ಭಾಗಕ್ಕೆ ಮಾತ್ರ ಮಳೆಯ ಕೊರತೆ ಸೀಮಿತವಾಗಿಲ್ಲ. ರಾಜ್ಯದ ಪ್ರತಿಯೊಂದು ಪ್ರಮುಖ ಹವಾಮಾನ ವಲಯಗಳಲ್ಲೂ ಗಣನೀಯ ಪ್ರಮಾಣದ ಮಳೆಯ ಕೊರತೆ ಉಂಟಾಗಿದೆ.
ರಾಜ್ಯದಲ್ಲಿ ವಾಡಿಕೆಯ 666 ಮಿ.ಮೀ. ಮಳೆಯಾಗಬೇಕಿದ್ದರೂ ಕೇವಲ 465 ಮಿ.ಮೀ. ಮಳೆಯಾಗಿದ್ದು, ಒಟ್ಟಾರೆ ಶೇ.30ರಷ್ಟು ಮಳೆ ಕೊರತೆ ದಾಖಲಾಗಿದೆ. ಬರ ಪರಿಸ್ಥಿತಿ ರಾಜ್ಯಾದ್ಯಂತ ವ್ಯಾಪಿಸಿದ್ದು, ಅಧಿಕೃತ ಅಂಕಿ-ಅಂಶಗಳಿಂದಲೂ ಇದು ಸ್ಪಷ್ಟವಾಗಿ ದೃಢಪಟ್ಟಿದೆ.
ಹಾಗಿದ್ದರೂ ಕರ್ನಾಟಕ ಏಕೆ ಇನ್ನೂ ಬರ ಪರಿಹಾರಕ್ಕಾಗಿ ಕಾಯಬೇಕು? -
Dr. G Parameshwara
@DrParameshwara
Following the norms prescribed under the Union Government’s Drought Manual–2020, Karnataka has carried out detailed drought assessment and ground-truthing across affected taluks.
Of the 134 taluks qualifying under Trigger-1, field verification has so far established that 101 taluks qualify for drought declaration.
Of these, 89 taluks are under Severe Drought and 12 taluks are under Moderate Drought. Another 32 taluks qualifying under Trigger-1 are under further examination, and the Integrated Drought Assessment will continue every 15 days.
Karnataka has carried out the required scientific assessment on the ground.
Will the Centre respond now?
ಕೇಂದ್ರ ಸರ್ಕಾರದ ಬರ ಕೈಪಿಡಿ- 2020ರಲ್ಲಿ ನಿಗದಿಪಡಿಸಿರುವ ಮಾನದಂಡಗಳ ಅನುಸಾರ, ಕರ್ನಾಟಕವು ಬರಪೀಡಿತ ತಾಲ್ಲೂಕುಗಳಲ್ಲಿ ಸಮಗ್ರ ಬರ ಮೌಲ್ಯಮಾಪನ ಹಾಗೂ ಗ್ರೌಂಡ್ ಟ್ರೂಥಿಂಗ್ (ವಸ್ತು ಸ್ಥಿತಿ ಅಧ್ಯಯನ) ನಡೆಸಿದೆ.
ಟ್ರಿಗರ್–1ರಡಿ ಅರ್ಹತೆ ಪಡೆದ 134 ತಾಲ್ಲೂಕುಗಳ ಪೈಕಿ, ಇದುವರೆಗೆ ನಡೆಸಿದ ಸ್ಥಳೀಯ ಪರಿಶೀಲನೆಯಲ್ಲಿ 101 ತಾಲ್ಲೂಕುಗಳು ಬರಪೀಡಿತ ಎಂದು ಘೋಷಿಸಲಾಗಿದೆ. ಇವುಗಳಲ್ಲಿ 89 ತಾಲ್ಲೂಕುಗಳು ತೀವ್ರ ಬರ (Severe Drought) ಹಾಗೂ 12 ತಾಲ್ಲೂಕುಗಳು ಸಾಧಾರಣ ಬರ (Moderate Drought) ಪರಿಸ್ಥಿತಿಯಲ್ಲಿವೆ. ಟ್ರಿಗರ್–1ರಡಿ ಅರ್ಹತೆ ಪಡೆದಿರುವ ಇನ್ನೂ 32 ತಾಲ್ಲೂಕುಗಳ ಪರಿಶೀಲನೆ ಮುಂದುವರಿದಿದ್ದು, ಪ್ರತಿ 15 ದಿನಗಳಿಗೊಮ್ಮೆ ಸಮಗ್ರ ಬರ ಮೌಲ್ಯಮಾಪನ ನಡೆಸಲಾಗುತ್ತದೆ.
ಕರ್ನಾಟಕವು ಅಗತ್ಯವಿರುವ ವೈಜ್ಞಾನಿಕ ಗ್ರೌಂಡ್ ಟ್ರೂಥಿಂಗ್ ಮೌಲ್ಯಮಾಪನವನ್ನು ಕೈಗೊಂಡಿದ್ದು, ಈಗಲಾದರೂ ಕೇಂದ್ರ ಸರ್ಕಾರ ಸ್ಪಂದಿಸಲಿದೆಯೇ? -
Dr. G Parameshwara
@DrParameshwara
ಇಂದು ವಿಕಾಸಸೌಧದಲ್ಲಿ ಕರ್ನಾಟಕ ಆರ್ಯ ವೈಶ್ಯ ಸಮುದಾಯ ಅಭಿವೃದ್ಧಿ ನಿಗಮದ 4 ಯೋಜನೆಗಳಿಗೆ 2026-27ನೇ ಸಾಲಿಗೆ ಅರ್ಜಿ ಆಹ್ವಾನಿಸುವ ಕರಪತ್ರಗಳನ್ನು ಬಿಡುಗಡೆಗೊಳಿಸಿ, ಮಾತನಾಡಿದೆ.
ರಾಜ್ಯದಲ್ಲಿ ಆರ್ಥಿಕವಾಗಿ, ಶೈಕ್ಷಣಿಕವಾಗಿ ಹಿಂದುಳಿದ ಆರ್ಯ ವೈಶ್ಯ ಸಮುದಾಯದವರಿಗೆ ಶಿಕ್ಷಣ, ಸ್ವಯಂ ಉದ್ಯೋಗ, ಕೃಷಿಗೆ ಮತ್ತು ಆಹಾರ ತಯಾರಿಕೆಗೆ ಸಂಬಂಧಪಟ್ಟ ಯೋಜನೆಗಳನ್ನು ರೂಪಿಸಿ, ಆರ್ಯ ವೈಶ್ಯ ಸಮುದಾಯದ ಸರ್ವತೋಮುಖ ಅಭಿವೃದ್ಧಿಗಾಗಿ ʼಕರ್ನಾಟಕ ಆರ್ಯ ವೈಶ್ಯ ಸಮುದಾಯ ಅಭಿವೃದ್ಧಿ ನಿಗಮʼವನ್ನು ಸ್ಥಾಪಿಸಲಾಗಿದೆ.
ಕಳೆದ 7 ವರ್ಷಗಳಿಂದ ನಿಗಮಕ್ಕೆ ಬಿಡುಗಡೆಯಾದ ಅನುದಾನ ಹಾಗೂ ಮರುಪಾವತಿ ಮೊತ್ತ ಸೇರಿಸಿ ಒಟ್ಟು ₹85 ಕೋಟಿಗಳಲ್ಲಿ 16,785 ಫಲಾನುಭವಿಗಳಿಗೆ ಸಾಲ - ಸಬ್ಸಿಡಿ ಮತ್ತು ಶುಲ್ಕ ಮರುಪಾವತಿ ನೀಡಿ ಶೇ.96ರಷ್ಟು ಪ್ರಗತಿ ಸಾಧಿಸಲಾಗಿರುತ್ತದೆ.
₹11 ಕೋಟಿ ಸಾಲ ಮರುಪಾವತಿಯನ್ನು ಪಡೆಯುವಲ್ಲಿ ನಿಗಮವು ಯಶಸ್ವಿಯಾಗಿರುತ್ತದೆ ಹಾಗೂ 740 ಫಲಾನುಭವಿಗಳು ಪೂರ್ಣಪ್ರಮಾಣದಲ್ಲಿ ಸಾಲ ಮರುಪಾವತಿ ಮಾಡಿರುವುದು ಈ ನಿಗಮದ ವಿಶಿಷ್ಟ ಸಾಧನೆಯಾಗಿದೆ.
2026-27ನೇ ಸಾಲಿಗೆ ಎಲ್ಲಾ ಯೋಜನೆಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಅಕ್ಟೋಬರ್ 15ರಂದು ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿರುತ್ತದೆ. ಆರ್ಯ ವೈಶ್ಯ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿ ಅರ್ಜಿ ಸಲ್ಲಿಸಿ ಯೋಜನೆಗಳ ಸದುಪಯೋಗ ಪಡೆದುಕೊಳ್ಳಬೇಕು.
ಈ ಸಂದರ್ಭದಲ್ಲಿ ನಿಗಮದ ಅಧ್ಯಕ್ಷರಾದ ಕೆ.ವಿ.ರಾಮ್ ಪ್ರಸಾದ್, ಕಂದಾಯ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗಳಾದ ರಾಜೇಂದ್ರ ಕುಮಾರ್ ಕಟಾರಿಯಾ, ನಿಗಮದ ವ್ಯವಸ್ಥಾಪಕ ನಿರ್ದೇಶಕಿಯಾದ ದೀಪಶ್ರೀ ಕೆ. ಉಪಸ್ಥಿತರಿದ್ದರು.
Today at Vikasa Soudha, I released brochures inviting applications for four schemes of the Karnataka Arya Vysya Community Development Corporation for 2026–27.
The Corporation was established for the overall development of economically and educationally disadvantaged members of the Arya Vysya community through schemes supporting education, self-employment, agriculture and food processing.
Over the past seven years, the Corporation has utilised ₹85 crore, including grants and repayments, to provide loans, subsidies and fee reimbursements to 16,785 beneficiaries, achieving 96% progress. It has also recovered ₹11 crore in loans, with 740 beneficiaries fully repaying their loans.
Applications are now open for all schemes for 2026–27, and October 15 is the last date to apply. I urge members of the Arya Vysya community to apply in large numbers and make full use of these opportunities.
Corporation Chairman K.V. Ram Prasad, Additional Chief Secretary Rajender Kumar Kataria, Managing Director Deepashree K., and others were present. -
Dr. G Parameshwara
@DrParameshwara
Karnataka is facing an exceptionally severe drought in 2026. Since 1976, this year is among the four years with the lowest rainfall recorded between June 1 and this period of the monsoon.
From June 1 to August 26, Karnataka should have received 666 mm of rainfall, but received only 465 mm — a deficit of 30%. As many as 29 districts and 190 taluks are in the Deficit to Large Deficit rainfall category.
Further, 134 taluks have experienced dry spells of three weeks or more, making them eligible for assessment under Trigger-1 of the Union Government’s Drought Manual–2020.
The evidence of drought is clear and widespread.
When will the Centre act?
ರಾಜ್ಯವು 2026ರಲ್ಲಿ ತೀವ್ರ ಬರ ಪರಿಸ್ಥಿತಿ ಎದುರಿಸುತ್ತಿದೆ. 1976ರ ನಂತರ ಜೂನ್ 1 ರಿಂದ ಈ ಅವಧಿವರೆಗೆ ದಾಖಲಾದ ಅತಿ ಕಡಿಮೆ ಮಳೆಯಾದ ನಾಲ್ಕು ವರ್ಷಗಳ ಪೈಕಿ 2026 ಕೂಡ ಸೇರಿದೆ.
ಜೂನ್ 1ರಿಂದ ಆಗಸ್ಟ್ 26ರ ವರೆಗೆ ಕರ್ನಾಟಕದಲ್ಲಿ ವಾಡಿಕೆಯಂತೆ 666 ಮಿ.ಮೀ. ಮಳೆಯಾಗಬೇಕಿತ್ತು. ಆದರೆ ಕೇವಲ 465 ಮಿ.ಮೀ. ಮಳೆಯಾಗಿದ್ದು, ಶೇ.30ರಷ್ಟು ಮಳೆ ಕೊರತೆ ಉಂಟಾಗಿದೆ.
ರಾಜ್ಯದ 29 ಜಿಲ್ಲೆಗಳ 190 ತಾಲ್ಲೂಕುಗಳು ಮಳೆ ಕೊರತೆ ಹಾಗೂ ತೀವ್ರ ಮಳೆ ಕೊರತೆಯ ವ್ಯಾಪ್ತಿಯಲ್ಲಿದ್ದು, 134 ತಾಲ್ಲೂಕುಗಳು ಸತತ ಮೂರು ಅಥವಾ ಅದಕ್ಕಿಂತ ಹೆಚ್ಚು ವಾರಗಳ ಒಣಹವೆ ಎದುರಿಸಿವೆ. ಈ ತಾಲ್ಲೂಕುಗಳು ಕೇಂದ್ರ ಸರ್ಕಾರದ ಬರ ಕೈಪಿಡಿ–2020ರ ಟ್ರಿಗರ್–1 ಅಡಿಯಲ್ಲಿ ಬರ ಮೌಲ್ಯಮಾಪನಕ್ಕೆ ಅರ್ಹವಾಗಿವೆ.
ಬರದ ಗಂಭೀರತೆ ಸ್ಪಷ್ಟವಾಗಿದ್ದು, ಸಾಕ್ಷ್ಯಗಳು ವ್ಯಾಪಕವಾಗಿವೆ. ಈಗಲಾದರೂ ಕೇಂದ್ರ ಸರ್ಕಾರ ಕರ್ನಾಟಕದ ಬರ ಪರಿಸ್ಥಿತಿಗೆ ಸ್ಪಂದಿಸಿ ಅಗತ್ಯ ಪರಿಹಾರವನ್ನು ಬಿಡುಗಡೆ ಮಾಡಲಿದೆಯೇ? -
Dr. G Parameshwara
@DrParameshwara
ಇಂದು ನನಗೆ ಸಿಕ್ಕಿರುವ ಅಧಿಕಾರ, ಹುದ್ದೆ ಎಲ್ಲವೂ ಕನ್ನಡ ಜನತೆಯ ಪ್ರೀತಿ ಮತ್ತು ಆಶೀರ್ವಾದದ ಸಂಕೇತ.
ನೀವು ನೀಡಿರುವ ಜವಾಬ್ದಾರಿಯನ್ನು ನಾನು ಸಮರ್ಥವಾಗಿ ನಿಭಾಯಿಸಿದ್ದೇನೆ ಎನ್ನುವ ಸಂತೃಪ್ತಿ ನನಗಿದೆ. ಅದನ್ನು ನಿಮ್ಮ ಮಾತುಗಳಲ್ಲಿ ಕೇಳುವಾಗ ಮತ್ತಷ್ಟು ಖುಷಿಯಾಗುತ್ತದೆ.
ಈ ಪ್ರೀತಿ - ವಿಶ್ವಾಸಕ್ಕೆ ಧನ್ಯವಾದಗಳುThis media couldn't be displayed. See it on the original post. -
Dr. G Parameshwara
@DrParameshwara
This National Sports Day, Karnataka is opening the doors to sport for everyone!
The Department of Youth Empowerment and Sports, in association with Playo, is making sports facilities accessible free of cost across all 31 districts on August 29, from 9 AM to 9 PM.
Pick your sport, book your slot for ₹0 and get playing.
Karnataka, Let’s Play!
ಈ ಬಾರಿ ರಾಷ್ಟ್ರೀಯ ಕ್ರೀಡಾ ದಿನದಂದು ನಿಮ್ಮಿಷ್ಟದ ಕ್ರೀಡೆಯನ್ನು ಉಚಿತವಾಗಿ ಆಡುವ ಅವಕಾಶ ಕಲ್ಪಿಸುತ್ತಿದ್ದೇವೆ..!
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, Playo ಸಹಯೋಗದೊಂದಿಗೆ, ಆಗಸ್ಟ್ 29ರಂದು ಬೆಳಿಗ್ಗೆ 9ರಿಂದ ರಾತ್ರಿ 9ರ ವರೆಗೆ ರಾಜ್ಯದ 31 ಜಿಲ್ಲೆಗಳ ಕ್ರೀಡಾ ಸೌಲಭ್ಯಗಳನ್ನು ಉಚಿತವಾಗಿ ಬಳಸುವ ಅವಕಾಶ ಕಲ್ಪಿಸಿದ್ದೇವೆ.
Playo ಮೂಲಕ ನಿಮ್ಮ ಇಷ್ಟದ ಕ್ರೀಡೆಯನ್ನು ಆಯ್ಕೆ ಮಾಡಿ, ₹0ಕ್ಕೆ ನಿಮ್ಮ ಸ್ಲಾಟ್ ಬುಕ್ ಮಾಡಿ. ಬನ್ನಿ, ಆಡಿ.
#nationalsportsday
Dr. G Parameshwara
@DrParameshwara
-
Dr. G Parameshwara
@DrParameshwara
Today, I held a progress review meeting at Vikasa Soudha through video conference with all Deputy Commissioners on various programmes of the Revenue Department and issued necessary directions.
Providing the poor with the right to a housing site is one of our Government’s top priorities. Even today, countless people in the State do not have a place they can call their own. We must immediately identify enough land in every district for at least 50,000 housing sites. The land should be suitable for habitation, with road and water connectivity, and as far as possible, located close to existing villages.
The housing-site distribution programme should not be treated as a routine Ashraya scheme. It is a special initiative of the Government to provide sites to the poor. In the first phase, at least 5 lakh sites must be distributed before December. Suitable land must therefore be identified and the sites prepared in advance.
A proper list of people without houses or housing sites must be prepared. Priority should be given to Dalits, backward classes, minorities, persons with disabilities, widows, sexual minorities and other vulnerable groups. Our Government’s target is to distribute 15.50 lakh housing sites across the State. Land for this purpose must be identified by September 15.
The declaration of revenue villages is one of the Government’s pilot projects. A total of 10,896 villages are to be declared as revenue villages, but so far only 3,354 have been declared. There are 5,768 proposals for preliminary notification and 702 proposals for final notification pending with Deputy Commissioners. The concerned DCs have been directed to send preliminary-notification proposals to the Government within the next 15 days and complete final notification wherever possible.
Of the 2,05,175 title deeds issued so far, only 1,55,575 have been registered. The remaining registrations must be completed by September 30.
On digitisation of land records, the task has been completed in 10 districts, while 21 districts remain. Against a target of 71,78,55,342 pages, 47,35,43,778 pages have been digitised so far, leaving 24,43,11,564 pages pending. This is an important task and cannot be neglected.
A daily target of 9,600 pages had been fixed, but some districts have fallen short. The concerned Deputy Commissioners must explain the shortfall and ensure completion by the end of September.
MLAs have also urged speedy disposal of cases relating to missing land-record files. Cases that can be settled immediately should be disposed of, and those that are liable to be rejected should be rejected without delay. The Additional Chief Secretary of the Department has been asked to examine whether such cases can be converted into appeals and resolved accordingly.
Under the Bagair Hukum scheme, a total of 14,37,181 applications have been received. Of these, 4,11,290 applications have been verified at the Village Administrative Officer level and taken up for consideration for grant, while 3,02,274 applications have been rejected at the Deputy Commissioner level. Another 6,98,933 applications remain pending, while 24,684 applications are still awaiting action at taluk offices. Tahsildars have been instructed to fix monthly targets and dispose of these applications without delay.
In Vijayanagara district, despite very poor rainfall, it has been reported that fodder stocks are sufficient for 47 weeks. All Deputy Commissioners must review fodder availability with greater seriousness. Districts with stocks sufficient for less than 30 weeks must exercise greater caution and prepare an action plan immediately. The Government will not tolerate any lapses.
Fodder seed kits are already being distributed through KMF, and ₹25 crore is now being provided for distribution of fodder seed kits to farmers. The Animal Husbandry Department has been instructed to begin distribution immediately.
Several major dairy-farming regions have not received normal rainfall. In districts such as Kolar, Chikkaballapur, Tumakuru, Bengaluru Rural, Mandya, Hassan, Mysuru, Chamarajanagar, Chitradurga and Ballari, sowing itself has been inadequate. This could lead to fodder shortages.
In 2023, despite poor crop yields, there was no serious shortage of fodder, and the situation was described as a ‘green drought’. This time, the situation is different. Officials must recognise this and take adequate precautionary measures.
Senior officers including Rajendra Kumar Kataria, Manoj Kumar Meena, Meena Nagaraj, Venkataraj and M.N. Anucheth, along with other officials, were present at the meeting. -
Dr. G Parameshwara
@DrParameshwara
ಇಂದು ವಿಕಾಸಸೌಧದಲ್ಲಿ ಕಂದಾಯ ಇಲಾಖೆಯ ವಿವಿಧ ಕಾರ್ಯಕ್ರಮಗಳ ಕುರಿತಂತೆ ಎಲ್ಲ ಜಿಲ್ಲಾಧಿಕಾರಿಗಳೊಂದಿಗೆ ವೀಡಿಯೋ ಕಾನ್ಫರೆನ್ಸ್ ಮೂಲಕ ಪ್ರಗತಿ ಪರಿಶೀಲನಾ ಸಭೆ ನಡೆಸಿ, ಅಗತ್ಯ ಸೂಚನೆಗಳನ್ನು ನೀಡಿದೆ.
ಬಡವರಿಗೆ ನಿವೇಶನದ ಹಕ್ಕು ನೀಡುವುದು ನಮ್ಮ ಸರ್ಕಾರದ ಪ್ರಧಾನ ಆದ್ಯತೆ. ತಮಗೆ ತಿಳಿದಂತೆ ರಾಜ್ಯದ ಅಸಂಖ್ಯಾತ ಜನರಿಗೆ ವಿಳಾಸ ಹೇಳಲು ಕೂಡ ಒಂದು ಜಾಗವಿಲ್ಲ. ಈ ಕೂಡಲೇ ನಾವು ಪ್ರತಿ ಜಿಲ್ಲೆಯಲ್ಲಿ ಕನಿಷ್ಠ 50,000 ನಿವೇಶನಗಳಿಗೆ ಸಾಕಾಗುವಷ್ಟು ಭೂಮಿಯನ್ನು ಹುಡುಕಬೇಕು. ಆ ಜಮೀನು ಜನರ ವಾಸಕ್ಕೆ ಸೂಕ್ತವಾಗಿರಲಿ. ರಸ್ತೆ, ನೀರಿನ ಸೌಲಭ್ಯ ಇರಬೇಕು. ಸಾಧ್ಯವಾದಷ್ಟು ಗ್ರಾಮಗಳಿಗೆ ಹತ್ತಿರದ ಜಮೀನುಗಳನ್ನೇ ಗುರುತಿಸಿ ಸಿದ್ಧಪಡಿಸಬೇಕು.
ನಿವೇಶನ ಹಂಚಿಕೆ ಕಾರ್ಯಕ್ರಮ ಸಾಮಾನ್ಯ ಆಶ್ರಯ ಯೋಜನೆ ಎಂದು ಪರಿಗಣಿಸಬೇಡಿ. ಬಡವರಿಗೆ ನಿವೇಶನ ನೀಡುವುದು ಸರ್ಕಾರದ ವಿಶೇಷ ಯೋಜನೆಯಾಗಿದೆ. ಮೊದಲ ಹಂತದಲ್ಲಿ ಇದೇ ಡಿಸೆಂಬರ್ಗಿಂತ ಮೊದಲು ಕನಿಷ್ಠ 5 ಲಕ್ಷ ನಿವೇಶನಗಳನ್ನು ಹಂಚಿಕೆ ಮಾಡಬೇಕು. ಅದಕ್ಕಾಗಿ ಸೂಕ್ತ ಜಾಗ ಗುರುತಿಸಿ ನಿವೇಶನಗಳನ್ನು ಸಿದ್ಧಪಡಿಸಬೇಕು.
ವಾಸ್ತವವಾಗಿ ವಸತಿ ಮತ್ತು ನಿವೇಶನ ರಹಿತರ ಪಟ್ಟಿ ಸಿದ್ಧಪಡಿಸಬೇಕು. ಅದರಲ್ಲಿ ದಲಿತರು, ಹಿಂದುಳಿದವರು ಮತ್ತು ಅಲ್ಪಸಂಖ್ಯಾತರು, ಅಂಗವಿಕಲರು, ವಿಧವೆಯರು, ಲೈಂಗಿಕ ಅಲ್ಪಸಂಖ್ಯಾತರು ಮುಂತಾದವರಿಗೆ ಆದ್ಯತೆ ನೀಡಬೇಕು. ನಮ್ಮ ಸರ್ಕಾರದ ಗುರಿ ರಾಜ್ಯದಲ್ಲಿ 15,50,000 ವಸತಿ ನಿವೇಶನಗಳನ್ನು ಹಂಚುವುದಾಗಿದೆ. ಸೆಪ್ಟೆಂಬರ್ 15ರೊಳಗೆ ಭೂಮಿ ಗುರುತಿಸಬೇಕು.
ಕಂದಾಯ ಗ್ರಾಮಗಳು ಸರ್ಕಾರದ ಪೈಲಟ್ ಪ್ರಾಜೆಕ್ಟ್ಗಳಲ್ಲಿ ಒಂದು. ರಾಜ್ಯದಲ್ಲಿ ಈವರೆಗೆ 10,896 ಗ್ರಾಮಗಳನ್ನು ಕಂದಾಯ ಗ್ರಾಮಗಳೆಂದು ಘೋಷಿಸಬೇಕಾಗಿರುತ್ತದೆ. ಆದರೆ ಇದುವರೆಗೆ ಕಂದಾಯ ಗ್ರಾಮಗಳೆಂದು ಘೋಷಿಸಿರುವ ಗ್ರಾಮಗಳ ಸಂಖ್ಯೆ 3,354 ಮಾತ್ರ. ಇನ್ನು ಪ್ರಾಥಮಿಕ ಅಧಿಸೂಚನೆಗಾಗಿ 5,768 ಪ್ರಸ್ತಾವನೆಗಳು ಜಿಲ್ಲಾಧಿಕಾರಿಗಳ ಬಳಿ ಬಾಕಿ ಇವೆ. ಅಂತಿಮ ಅಧಿಸೂಚನೆ ಮಾಡಲು 702 ಪ್ರಸ್ತಾವನೆಗಳು ಜಿಲ್ಲಾಧಿಕಾರಿಗಳ ಬಳಿ ಬಾಕಿ ಇವೆ. ಈ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಪ್ರಾಥಮಿಕ ಅಧಿಸೂಚನೆ ಪ್ರಸ್ತಾವನೆಗಳನ್ನು ಮುಂದಿನ 15 ದಿನಗಳ ಒಳಗಾಗಿ ಸರ್ಕಾರಕ್ಕೆ ಕಳುಹಿಸಿಕೊಡಬೇಕು. ಅಂತಿಮ ಅಧಿಸೂಚನೆ ಹೊರಡಿಸಲು ಸಾಧ್ಯವಿದ್ದರೆ ಅದನ್ನು ಮಾಡಿ ಪ್ರಕ್ರಿಯೆ ಅಂತಿಮಗೊಳಿಸಬೇಕು.
ನಾವು ಇದುವರೆಗೆ ಕೊಟ್ಟ 2,05,175 ಹಕ್ಕುಪತ್ರಗಳಲ್ಲಿ 1,55,575 ಮಾತ್ರ ನೋಂದಣಿಯಾಗಿವೆ. ಉಳಿದವುಗಳನ್ನು ನೋಂದಣಿ ಮಾಡಲು ಬಾಕಿ ಉಳಿಸಿಕೊಳ್ಳಲಾಗಿದೆ. ಈ ಪ್ರಕ್ರಿಯೆಯನ್ನು ಸಹ ಸೆಪ್ಟೆಂಬರ್ 30 ರೊಳಗೆ ಮುಕ್ತಾಯಗೊಳಿಸಬೇಕು.
ಭೂದಾಖಲೆಗಳ ಡಿಜಿಟಲೀಕರಣ ವಿಚಾರಕ್ಕೆ ಬಂದರೆ, ಇದುವರೆಗೆ 10 ಜಿಲ್ಲೆಗಳಲ್ಲಿ ಟಾಸ್ಕ್ ಮುಕ್ತಾಯಗೊಳಿಸಲಾಗಿದೆ. ಇನ್ನೂ 21 ಜಿಲ್ಲೆಗಳಿವೆ. ಈ 21 ಜಿಲ್ಲೆಗಳ ಒಟ್ಟು 71,78,55,342 ಪುಟಗಳ ಗುರಿಯಲ್ಲಿ ಈವರೆಗೆ 47,35,43,778 ಪುಟಗಳನ್ನು ಮಾಡಲಾಗಿದೆ. ಉಳಿದಂತೆ ಡಿಜಿಟಲೈಸ್ 24,43,11,564 ಪುಟಗಳನ್ನು ಡಿಜಿಟಲೈಸ್ ಮಾಡಬೇಕಾಗಿದೆ. ಆದರೆ ಹಲವು ಜಿಲ್ಲೆಗಳ ಜಿಲ್ಲಾಧಿಕಾರಿಗಳು ಈ ಮಹತ್ವದ ವಿಚಾರವನ್ನು ಸಂಪೂರ್ಣ ನಿರ್ಲಕ್ಷಿಸಿದಂತೆ ಕಾಣುತ್ತಿದೆ. ಹಾಗಾಗಬಾರದು.
ನಿಮಗೆ ಒಂದು ದಿನಕ್ಕೆ 9,600 ಪುಟಗಳನ್ನು ಡಿಜಿಟಲೈಸ್ ಮಾಡಬೇಕೆಂದು ಗುರಿ ನಿಗದಿಪಡಿಸಲಾಗಿತ್ತು. ಆದರೆ ಕೆಲ ಜಿಲ್ಲೆಗಳು ನೀಡಿರುವ ಗುರಿಗಿಂತ ಕಡಿಮೆ ಸಾಧಿಸಿವೆ. ಈ ಬಗ್ಗೆ ಸಂಬಂಧಿಸಿದ ಜಿಲ್ಲಾಧಿಕಾರಿಗಳು ವಿವರಣೆ ನೀಡಬೇಕು. ಸೆಪ್ಟೆಂಬರ್ ಅಂತ್ಯದ ವೇಳೆಗೆ ಪೂರ್ಣಗೊಳಿಸಬೇಕು.
ಮಿಸ್ಸಿಂಗ್ ರೆಕಾರ್ಡ್ ಕಡತಗಳನ್ನು ಶೀಘ್ರ ಇತ್ಯರ್ಥಪಡಿಸುವಂತೆ ಶಾಸಕರುಗಳು ಸಭೆಗಳಲ್ಲಿ ಒತ್ತಾಯಿಸಿದ್ದಾರೆ. ಆದ್ದರಿಂದ ಕೂಡಲೇ ಇತ್ಯರ್ಥ ಮಾಡಬಹುದಾದ ಪ್ರಕರಣಗಳನ್ನು ಇತ್ಯರ್ಥ ಮಾಡಬೇಕು. ತಿರಸ್ಕರಿಸುವ ಪ್ರಕರಣಗಳನ್ನು ತಿರಸ್ಕರಿಸಬೇಕು. ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗಳು ಈ ಪ್ರಕರಣಗಳನ್ನು ಅಪೀಲುಗಳಿಗೆ ಕನ್ವರ್ಟ್ ಮಾಡಿ ಇತ್ಯರ್ಥ ಮಾಡಲು ಸಾಧ್ಯವೇ ಎಂಬುದನ್ನು ಪರಿಶೀಲಿಸಬೇಕು.
ಬಗರ್ ಹುಕುಂ ಯೋಜನೆಯಡಿ ಒಟ್ಟು 14,37,181 ಅರ್ಜಿಗಳು ಬಂದಿವೆ. 4,11,290 ಅರ್ಜಿಗಳನ್ನು ಗ್ರಾಮ ಆಡಳಿತ ಅಧಿಕಾರಿಗಳ (V.A) ಹಂತದಲ್ಲಿ ಪರಿಶೀಲಿಸಿ ಮಂಜೂರಾತಿಗೆ ಒಳಪಡಿಸಲಾಗಿದೆ ಹಾಗೂ 3,02,274 ಅರ್ಜಿಗಳನ್ನು ಜಿಲ್ಲಾಧಿಕಾರಿಗಳ ಹಂತದಲ್ಲಿ ತಿರಸ್ಕರಿಸಲಾಗಿದೆ. 6,98,933 ಅರ್ಜಿಗಳು ವಿಲೇವಾರಿಯಾಗದೆ ಉಳಿದಿವೆ. ತಾಲೂಕು ಕಚೇರಿಯಲ್ಲಿಯೇ 24,684 ಅರ್ಜಿಗಳು ಕ್ರಮಕ್ಕಾಗಿ ಹಾಗೇ ಉಳಿದಿವೆ. ತಹಶೀಲ್ದಾರ್ಗಳು ಪ್ರತಿ ತಿಂಗಳ ಗುರಿ ನಿಗದಿಪಡಿಸಿಕೊಂಡು ಇವುಗಳನ್ನು ತಕ್ಷಣ ವಿಲೇವಾರಿ ಮಾಡಬೇಕು.
ವಿಜಯನಗರ ಜಿಲ್ಲೆಯಲ್ಲಿ ಮಳೆಯೇ ಆಗಿಲ್ಲ. ಆದರೂ 47 ವಾರಗಳಿಗೆ ಸಾಕಾಗುವಷ್ಟು ಮೇವಿನ ಸಂಗ್ರಹವಿದೆ ಎಂದು ಹೇಳಿದ್ದಾರೆ. ಎಲ್ಲಾ ಜಿಲ್ಲಾಧಿಕಾರಿಗಳು ಈ ಕುರಿತು ಹೆಚ್ಚಿನ ಶ್ರದ್ಧೆಯಿಂದ ಕೆಲಸ ಮಾಡಬೇಕು. 30 ವಾರಗಳಿಗಿಂತ ಕಡಿಮೆ ಮೇವಿನ ಸಂಗ್ರಹ ಇರುವವರು ಅತಿ ಹೆಚ್ಚು ಮುತುವರ್ಜಿ ವಹಿಸಬೇಕು. ಕೂಡಲೇ ಯೋಜನೆ ರೂಪಿಸಿಕೊಳ್ಳಬೇಕು. ಯಾವುದೇ ಲೋಪದೋಷಗಳಿಗೆ ಆಸ್ಪದ ನೀಡಿದರೆ ಸರ್ಕಾರ ಸುಮ್ಮನಿರುವುದಿಲ್ಲ.
ಈಗಾಗಲೇ ಕೆಎಂಎಫ್ ವತಿಯಿಂದ ಮೇವಿನ ಬೀಜದ ಕಿಟ್ಗಳನ್ನು ಕೊಡುತ್ತಿದ್ದೇವೆ. ರೈತರಿಗೆ ಮೇವಿನ ಬೀಜದ ಕಿಟ್ ನೀಡಲು ಈಗ 25 ಕೋಟಿ ರೂ. ನೀಡಲಾಗುವುದು. ಪಶುಸಂಗೋಪನಾ ಇಲಾಖೆಯವರು ಈ ಕೂಡಲೆ ಕಿಟ್ಗಳನ್ನು ವಿತರಿಸಲು ಪ್ರಾರಂಭಿಸಬೇಕು.
ರಾಜ್ಯದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಹೈನುಗಾರಿಕೆ ಇರುವ ಕಡೆ ವಾಡಿಕೆಯಷ್ಟು ಮಳೆಯಾಗಿಲ್ಲ. ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಬೆಂಗಳೂರು ಗ್ರಾಮಾಂತರ, ಮಂಡ್ಯ, ಹಾಸನ, ಮೈಸೂರು, ಚಾಮರಾಜನಗರ, ಚಿತ್ರದುರ್ಗ, ಬಳ್ಳಾರಿ ಮುಂತಾದ ಕಡೆ ಬಿತ್ತನೆಯೇ ಸರಿಯಾಗಿ ಆಗಿಲ್ಲ. ಬಿತ್ತನೆ ಆಗದಿರುವುದರಿಂದ ಮೇವಿನ ಸಮಸ್ಯೆ ಉಂಟಾಗಲಿದೆ. 2023ರಲ್ಲಿ ಉತ್ತಮ ಬೆಳೆ ಬರದಿದ್ದರೂ ಸಹ ಮೇವಿಗೆ ಕೊರತೆಯಿರಲಿಲ್ಲ. ಅದನ್ನು ಹಸಿಬರ ಎಂದು ಕರೆಯಲಾಗಿತ್ತು. ಈಗ ಪರಿಸ್ಥಿತಿ ಭಿನ್ನವಾಗಿದೆ ಎಂಬುದನ್ನು ಅರಿತು ಮುಂಜಾಗ್ರಕತೆ ವಹಿಸಬೇಕು.
ಸಭೆಯಲ್ಲಿ ಹಿರಿಯ ಅಧಿಕಾರಿಗಳಾದ ರಾಜೇಂದ್ರ ಕುಮಾರ್ ಕಟಾರಿಯಾ, ಮನೋಜ್ ಕುಮಾರ್ ಮೀನಾ, ಮೀನಾ ನಾಗರಾಜ್, ವೆಂಕಟರಾಜ್, ಎಂ.ಎನ್.ಅನುಚೇತ್ ಸೇರಿದಂತೆ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು. -
Dr. G Parameshwara
@DrParameshwara
ಇಂದು ವಿಕಾಸಸೌಧದಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಎಲ್ಲ ಜಿಲ್ಲಾಧಿಕಾರಿಗಳೊಂದಿಗೆ ಕಂದಾಯ ಇಲಾಖೆಯ ವಿವಿಧ ಕಾರ್ಯಕ್ರಮಗಳ ಕುರಿತಂತೆ ಪ್ರಗತಿ ಪರಿಶೀಲನಾ ಸಭೆ ನಡೆಸಿದೆ.
ವಸತಿ ನಿವೇಶನಗಳಿಗೆ ಸರ್ಕಾರಿ ಜಮೀನುಗಳನ್ನು ಕಾಯ್ದಿರಿಸುವುದು, ಬಗರ್ ಹುಕುಂ, ಭೂ-ಸುರಕ್ಷಾ, ದರಖಾಸ್ತು ಪೋಡಿ ಅಳತೆ ಪ್ರಗತಿ, ಇ-ಪೌತಿ ಹಾಗೂ ಬರ ನಿರ್ವಹಣೆ, ಕುಡಿಯುವ ನೀರು, ಜಾನುವಾರುಗಳಿಗೆ ಮೇವು ಸೇರಿದಂತೆ ವಿವಿಧ ವಿಷಯಗಳ ಕುರಿತು ಚರ್ಚಿಸಿ, ಅಧಿಕಾರಿಗಳಿಂದ ಮಾಹಿತಿ ಪಡೆದೆ.
ಸಭೆಯಲ್ಲಿ ಹಿರಿಯ ಅಧಿಕಾರಿಗಳಾದ ರಾಜೇಂದರ್ ಕುಮಾರ್ ಕಟಾರಿಯಾ, ಮನೋಜ್ ಕುಮಾರ್ ಮೀನಾ, ಮೀನಾ ನಾಗರಾಜ್, ವೆಂಕಟರಾಜ್ ಸೇರಿದಂತೆ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.
Today, I held a progress review meeting at Vikasa Soudha through video conference with all Deputy Commissioners on various programmes of the Revenue Department.
We reviewed issues including reservation of government land for housing sites, Bagair Hukum, Bhoosuraksha, progress of Darakhastu Podi surveys, e-Pauti, and fodder availability for livestock, and obtained updates from the officials concerned.
Senior officers including Rajender Kumar Kataria, Manoj Kumar Meena, Meena Nagaraj and Venkataraj, along with other officials, were present at the meeting. -
Dr. G Parameshwara
@DrParameshwara
This National Sports Day, Karnataka is opening the doors to sport for everyone!
The Department of Youth Empowerment and Sports, in association with Playo, is making sports facilities accessible free of cost across all 31 districts on August 29, from 9 AM to 9 PM.
Pick your sport, book your slot for ₹0 and get playing.
Karnataka, Let’s Play!
ಈ ಬಾರಿ ರಾಷ್ಟ್ರೀಯ ಕ್ರೀಡಾ ದಿನದಂದು ನಿಮ್ಮಿಷ್ಟದ ಕ್ರೀಡೆಯನ್ನು ಉಚಿತವಾಗಿ ಆಡುವ ಅವಕಾಶ ಕಲ್ಪಿಸುತ್ತಿದ್ದೇವೆ..!
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, Playo ಸಹಯೋಗದೊಂದಿಗೆ, ಆಗಸ್ಟ್ 29ರಂದು ಬೆಳಿಗ್ಗೆ 9ರಿಂದ ರಾತ್ರಿ 9ರ ವರೆಗೆ ರಾಜ್ಯದ 31 ಜಿಲ್ಲೆಗಳ ಕ್ರೀಡಾ ಸೌಲಭ್ಯಗಳನ್ನು ಉಚಿತವಾಗಿ ಬಳಸುವ ಅವಕಾಶ ಕಲ್ಪಿಸಿದ್ದೇವೆ.
Playo ಮೂಲಕ ನಿಮ್ಮ ಇಷ್ಟದ ಕ್ರೀಡೆಯನ್ನು ಆಯ್ಕೆ ಮಾಡಿ, ₹0ಕ್ಕೆ ನಿಮ್ಮ ಸ್ಲಾಟ್ ಬುಕ್ ಮಾಡಿ. ಬನ್ನಿ, ಆಡಿ.
#nationalsportsday -
Dr. G Parameshwara
@DrParameshwara
Our Government has already released ₹117 crore to all 31 districts. In addition, ₹189 crore has been released at the rate of ₹1 crore to each rural constituency. In all, ₹306 crore has been released for drinking water supply. There is no shortage of funds to manage the drought situation.
Deputy Commissioners currently have ₹329 crore in their PD accounts, and they have been instructed to utilise the funds once drought is declared. The Government is spending a total of ₹635 crore on drought management in the State.
As per the recommendations of the 16th Finance Commission, the Union Government is required to sanction ₹1,239 crore to the SDRF, with ₹450 crore to be released as the first instalment. We are awaiting this release. The State Government will contribute ₹310 crore.
Out of the ₹300 crore Litigation Fund, ₹116 crore has been released. The overall drought loss has not yet been assessed. We will review the drought situation every 15 days and declare additional taluks drought-affected wherever the prescribed criteria are met.
By the end of this month, we will submit our proposal to the Union Government and place it before the Prime Minister, Union Home Minister and Union Agriculture Minister.
Last time, the Union Government did not release ₹3,500 crore. We had to stage a protest in Delhi, and the funds were released only after directions from the Supreme Court. Such a situation should not arise again. Considering the hardship faced by people and livestock, the Union Government must release drought relief without delay.
The 2023 drought caused losses of around ₹39,000 crore in Karnataka. We had submitted a proposal seeking ₹18,000 crore. After our protest and the Supreme Court’s intervention, ₹3,500 crore was released. This should not be repeated this time.
To instil confidence among the people, the Chief Minister had directed Ministers to visit drought-affected areas. They visited the affected regions and submitted their reports. Deputy Commissioners have also conducted ground-truthing and submitted their reports.
The Opposition, however, has not submitted any report on its drought study. If they submit one, we will consider it. Farmers need relief and assistance; there should be no politics over this issue. I appeal to the Opposition to submit its report.
Under the Fasal Bima Yojana, a record 49 lakh farmers cultivating agricultural and horticultural crops have already enrolled for crop insurance this year. The Government has also strongly encouraged enrolment in the interest of farmers.
Even if farmers are unable to sow due to inadequate rainfall, they can claim insurance compensation under the special ‘Prevented Sowing’ category. To enable more farmers to benefit from this provision, the last date for applying for crop insurance has been extended to August 31. I urge farmers to make use of this extended deadline and the benefits available under the scheme and ensure that they enrol.
To prevent distress migration due to drought, we have taken up 16,460 works under the VB-GRAM-G scheme, generating 66.73 lakh person-days of employment between July 1 and August 24. A large number of these works are related to drought management.
Officials will also be deployed at bus stands and railway stations to help prevent distress migration. Necessary instructions will be issued to the concerned officers.
The Podi campaign will be continued, revenue villages will be declared, and title deeds will be distributed to the people. The campaign initiated by Krishna Byre Gowda will be carried forward.
Overall, the Government is fully prepared to tackle the drought situation. We will effectively ensure employment for people, drinking water for people and livestock, and adequate fodder for cattle.
Once a taluk is declared drought-affected, SDRF funds can immediately be utilised for drinking water supply. Further action on crop compensation will be taken after submitting a memorandum to the Union Government.
Steps to assist Kannadigas in Nepal: Eight people from Bengaluru are stranded in Nepal, and steps are being taken to rescue them. We have no information about any deaths.
A helpline has already been opened. People can contact 1070 / 080-22253707 for assistance. If any of your family members or acquaintances are unreachable, please inform us immediately.
Senior officials will be sent to Kathmandu, and further action will be taken based on the information received. We have shared all the information officially available so far. The Resident Commissioner in Delhi has also been contacted and instructed to take immediate action. (2/2) -
Dr. G Parameshwara
@DrParameshwara
Today, I addressed a press conference at Vidhana Soudha on the drought situation in the State.
Karnataka is witnessing an unprecedented drought this year. Our Government is spending ₹635 crore to manage the situation effectively and ensure that people and livestock do not face hardship. There is no shortage of funds.
From June 1 to August 26, the State received only 465 mm of rainfall against the normal 666 mm, resulting in a 30% deficit. As many as 29 districts and 190 taluks fall under the Deficit to Large Deficit rainfall categories, with 12 taluks experiencing Large Deficit rainfall. As of August 26, 134 taluks had experienced dry spells of more than three consecutive weeks and qualified for assessment under Trigger-1.
Under the Union Government’s Drought Manual, 2020, several trigger parameters have to be met before a taluk can be declared drought-affected. Trigger-1 relates to dry spells of three or more weeks. Trigger-2 considers factors such as the extent of sowing, condition of crops, soil moisture, groundwater levels and water availability in tanks and reservoirs.
Based on these parameters, assessments and ground-truthing were carried out. While 134 taluks qualified under Trigger-1, 101 taluks have currently qualified to be declared drought-affected after ground-truthing. The remaining 32 taluks that qualified under Trigger-1 are under review.
After the first phase of declaring 101 taluks drought-affected, the situation will be reviewed every 15 days. Ground-truthing has been carried out hobli-wise and the findings analysed.
There are several shortcomings in the present Central drought criteria. For instance, a taluk may go without rain for two weeks and receive a single spell of rain in between, causing it to lose eligibility under Trigger-1 even when crops have failed to grow. We have repeatedly urged the Union Government to revise these criteria as was done earlier, but the issue has not been addressed. This is why drought has to be declared in phases.
As of August 21, sowing stood at 71% in the State. Against a target of 84.10 lakh hectares, sowing had taken place in only 60 lakh hectares. Of the State’s 240 taluks, sowing was below 75% in 104 taluks, and below 25% in 42 taluks.
The situation is similar in horticulture. As of August 25, only 3.04 lakh hectares, or 69%, had been covered against a target of 4.36 lakh hectares. Even crops that have been sown are not achieving expected growth due to inadequate rainfall. Farmers have therefore been advised to cultivate short-duration varieties suited to low-rainfall conditions, and seeds have been distributed accordingly.
The rainfall deficit has also caused a sharp decline in soil moisture. According to the Moisture Adequacy Index (MAI) as of August 26, 178 taluks, or 74% of the State, are facing severe soil-moisture deficiency. Of these, 86 taluks face very severe deficiency and 92 taluks moderate deficiency, adversely affecting the early growth of crops.
Groundwater levels have declined in 132 taluks compared with the average of the previous decade, and there is concern that they may fall further. The Government is therefore taking up measures to improve groundwater availability. I also appeal to the people of the State to recognise the seriousness of the situation and give priority to groundwater conservation.
During the corresponding period last year, reservoir storage stood at 815.70 TMC. This year, as of August 26, it is only 684.09 TMC.
As per data available up to August 22, drinking water is being supplied to 758 villages through 149 tankers, while 714 private borewells have been hired. In urban areas, water is being supplied through 48 tankers to 114 wards across 18 Urban Local Bodies, and 18 private borewells have also been hired.
If the situation worsens, it is estimated that 2,059 Gram Panchayats could face drinking water shortages next summer. Necessary preparations have already been made to deal with such a situation.
According to information from Deputy Commissioners and the Animal Husbandry Department, the State has around 151 lakh tonnes of fodder, sufficient for about 33 weeks. In 49 taluks, stocks are sufficient for around 25 weeks, while in 18 taluks, fodder availability is sufficient for less than 20 weeks.
We have released ₹25 crore to provide fodder seed kits to farmers who have access to water. KMF is also distributing fodder seed kits. Farmers who have grown fodder have been requested to preserve it carefully.
(1/2) -
Dr. G Parameshwara
@DrParameshwara
Our Government has officially declared 101 taluks drought-affected for Kharif 2026, based on a scientific three-stage assessment and ground-truthing carried out across the State. Of these, 89 taluks have been classified as severely affected and 12 as moderately affected.
The declaration comes into effect immediately. District authorities have been directed to take up drought relief and response measures as per SDRF norms, while Agriculture and Horticulture Departments will jointly assess crop losses.
The drought situation will continue to be reviewed every week through the Kharif season, and additional taluks will also be declared drought-affected if they meet the prescribed criteria.
Our Government will remain fully committed to protecting farmers, ensuring drinking water and fodder availability, and extending all necessary relief to people affected by the drought.
ಬರ ಘೋಷಣೆಗೆ ಕೇಂದ್ರ ಸರ್ಕಾರ ನೀಡಿರುವ ಮಾನದಂಡಗಳಿಗೆ ಅನುಗುಣವಾಗಿ ಸಮಗ್ರ ಪರಿಶೀಲನೆ ನಡೆಸಿ ನಮ್ಮ ಸರ್ಕಾರವು 101 ತಾಲೂಕುಗಳನ್ನು ಬರಪೀಡಿತ ಪ್ರದೇಶವೆಂದು ಘೋಷಿಸಿದೆ. ಇವುಗಳಲ್ಲಿ 89 ತಾಲೂಕುಗಳು ತೀವ್ರ ಬರಪೀಡಿತ ಹಾಗೂ 12 ತಾಲ್ಲೂಕುಗಳನ್ನು ಸಾಧಾರಣ ಬರಪೀಡಿತ ಎಂದು ವರ್ಗೀಕರಿಸಲಾಗಿದೆ.
ಈ ಘೋಷಣೆ ತಕ್ಷಣದಿಂದಲೇ ಜಾರಿಗೆ ಬರಲಿದೆ. SDRF ಮಾರ್ಗಸೂಚಿಗಳ ಪ್ರಕಾರ ಬರ ಪರಿಹಾರ ಮತ್ತು ತುರ್ತು ಸ್ಪಂದನೆಗೆ ಕ್ರಮಗಳನ್ನು ಕೈಗೊಳ್ಳುವಂತೆ ಜಿಲ್ಲಾಡಳಿತಕ್ಕೆ ಸೂಚಿಸಲಾಗಿದೆ. ಕೃಷಿ ಮತ್ತು ತೋಟಗಾರಿಕೆ ಇಲಾಖೆಗಳು ಜಂಟಿಯಾಗಿ ಬೆಳೆ ನಷ್ಟದ ಮೌಲ್ಯಮಾಪನ ನಡೆಸಲಿವೆ.
ಬರ ಪರಿಸ್ಥಿತಿಯನ್ನು ಖಾರಿಫ್ ಅವಧಿ ಪೂರ್ಣವಾಗುವವರೆಗೆ ಪ್ರತಿ ವಾರವೂ ಪರಿಶೀಲಿಸಲಾಗುವುದು. ನಿಗದಿತ ಮಾನದಂಡಗಳಿಗೆ ಒಳಪಡುವ ಹೆಚ್ಚುವರಿ ತಾಲೂಕುಗಳನ್ನೂ ಮುಂದಿನ ದಿನಗಳಲ್ಲಿ ಬರಪೀಡಿತವೆಂದು ಘೋಷಿಸಲಾಗುವುದು.
ರೈತರ ಹಿತ ಕಾಪಾಡುವುದು, ಕುಡಿಯುವ ನೀರು ಮತ್ತು ಜಾನುವಾರುಗಳಿಗೆ ಮೇವಿನ ಲಭ್ಯತೆಯನ್ನು ಖಚಿತಪಡಿಸುವುದು ಹಾಗೂ ಬರದಿಂದ ಸಂಕಷ್ಟಕ್ಕೊಳಗಾದ ಜನರಿಗೆ ಅಗತ್ಯವಿರುವ ಎಲ್ಲ ರೀತಿಯ ಸಹಕಾರವನ್ನು ನೀಡಲು ನಮ್ಮ ಸರ್ಕಾರ ಸಂಪೂರ್ಣ ಬದ್ಧವಾಗಿದೆ. -
Dr. G Parameshwara
@DrParameshwara
ನಮ್ಮ ಸರ್ಕಾರ ಈಗಾಗಲೇ ರಾಜ್ಯದ 31 ಜಿಲ್ಲೆಗಳಿಗೆ ₹117 ಕೋಟಿ ಬಿಡುಗಡೆ ಮಾಡಿದೆ. ಇದರ ಜೊತೆಗೆ ಪ್ರತಿ ಗ್ರಾಮೀಣ ಕ್ಷೇತ್ರಕ್ಕೆ ತಲಾ ₹1 ಕೋಟಿಯಂತೆ ₹189 ಕೋಟಿಗಳನ್ನು ಬಿಡುಗಡೆ ಮಾಡಿದ್ದೇವೆ. ಒಟ್ಟಾರೆ ₹306 ಕೋಟಿಗಳನ್ನು ಕುಡಿಯುವ ನೀರಿನ ಉದ್ದೇಶಗಳಿಗಾಗಿ ಬಿಡುಗಡೆ ಮಾಡಿದ್ದೇವೆ. ಬರ ಪರಿಸ್ಥಿತಿಯನ್ನು ನಿಭಾಯಿಸಲು ನಮ್ಮಲ್ಲಿ ಹಣದ ಕೊರತೆಯಿಲ್ಲ.
ಜಿಲ್ಲಾಧಿಕಾರಿಗಳ ಬಳಿ ಪಿಡಿ ಅಕೌಂಟ್ನಲ್ಲಿ ₹329 ಕೋಟಿ ಇದೆ. ಬರ ಘೋಷಣೆಯಾದ ಬಳಿಕ ಬಳಕೆಗೆ ಸೂಚಿಸಲಾಗಿದೆ. ಸರ್ಕಾರವು ರಾಜ್ಯದಲ್ಲಿ ಬರ ನಿರ್ವಹಣೆಗೆ ಒಟ್ಟು ₹635 ಕೋಟಿ ರೂ. ಖರ್ಚು ಮಾಡುತ್ತಿದೆ.
16ನೇ ಹಣಕಾಸು ಆಯೋಗದ ಶಿಫಾರಸ್ಸಿನ ಪ್ರಕಾರ, ಕೇಂದ್ರ ಸರ್ಕಾರ ಎಸ್ಡಿಆರ್ಎಫ್ಗೆ ₹1,239 ಕೋಟಿ ಮಂಜೂರು ಮಾಡಬೇಕು. ಮೊದಲ ಕಂತಿನಲ್ಲಿ ₹450 ಕೋಟಿ ಬಿಡುಗಡೆ ಮಾಡಬೇಕು. ಆ ನಿರೀಕ್ಷೆಯಲ್ಲಿ ನಾವಿದ್ದೇವೆ. ₹310 ಕೋಟಿ ರಾಜ್ಯ ಸರ್ಕಾರ ನೀಡಲಿದೆ.
ಲಿಟಿಗೇಷನ್ ಫಂಡ್ನಲ್ಲಿ ₹300 ಕೋಟಿ ಪೈಕಿ ₹116 ಕೋಟಿ ಬಿಡುಗಡೆಯಾಗಿದೆ. ಬರದ ನಷ್ಟವನ್ನು ಅಂದಾಜಿಸಿಲ್ಲ. ಬರ ಪರಿಸ್ಥಿತಿಯನ್ನು15 ದಿನಕ್ಕೊಮ್ಮೆ ಪರಿಶೀಲನೆ ನಡೆಸುತ್ತೇವೆ. ಬರಪೀಡಿತ ತಾಲೂಕುಗಳು ಕಂಡುಬಂದರೆ ಘೋಷಣೆ ಮಾಡುತ್ತೇವೆ. ಈ ತಿಂಗಳ ಕೊನೆಯ ವೇಳೆಗೆ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುತ್ತೇವೆ. ಪ್ರಧಾನ ಮಂತ್ರಿಗಳು, ಗೃಹ ಸಚಿವರು ಮತ್ತು ಕೃಷಿ ಸಚಿವರಿಗೆ ಸಲ್ಲಿಸುತ್ತೇವೆ.
ಕಳೆದ ಬಾರಿ ಕೇಂದ್ರ ಸರ್ಕಾರ ₹3500 ಕೋಟಿ ನೀಡಲಿಲ್ಲ. ದೆಹಲಿಯಲ್ಲಿ ಪ್ರತಿಭಟನೆ ನಡೆಸಲಾಯಿತು. ಸುಪ್ರೀಂ ಕೋರ್ಟ್ ನಿರ್ದೇಶನದ ಬಳಿಕ ಹಣ ಬಿಡುಗಡೆ ಮಾಡಿದರು. ಆ ಪರಿಸ್ಥಿತಿ ತರಬಾರದು. ಜನ, ಜಾನುವಾರುಗಳ ಪರಿಸ್ಥಿತಿಯನ್ನು ಪರಿಗಣಿಸಿ ಶೀಘ್ರವಾಗಿ ಹಣ ಬಿಡುಗಡೆ ಮಾಡುವ ಕೆಲಸ ಕೇಂದ್ರ ಸರ್ಕಾರ ಮಾಡಬೇಕು.
ರಾಜ್ಯದಲ್ಲಿ 2023ರಲ್ಲಿ ಉಂಟಾದ ಬರಗಾಲದಿಂದ ₹39,000 ಕೋಟಿ ನಷ್ಟವಾಗಿತ್ತು. ₹18,000 ಕೋಟಿ ನೀಡುವಂತೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಪ್ರತಿಭಟನೆ ನಡೆಸಿದ, ಸುಪ್ರೀಂ ಕೋರ್ಟ್ ನಿರ್ದೇಶನದ ಬಳಿಕ ₹3,500 ಕೋಟಿ ಬಿಡುಗಡೆ ಮಾಡಿದರು. ಈ ಬಾರಿ ಹಾಗಾಗಬಾರದು.
ಜನಗಳಿಗೆ ಆತ್ಮಸ್ಥೈರ್ಯ ನೀಡುವ ನಿಟ್ಟಿನಲ್ಲಿ ಬರಪೀಡಿತ ಪ್ರದೇಶಗಳಿಗೆ ಭೇಟಿ ನೀಡುವಂತೆ ಮುಖ್ಯಮಂತ್ರಿಗಳು ಸಚಿವರುಗಳಿಗೆ ಸೂಚಿಸಿದ್ದರು. ಅವರು ಭೇಟಿ ನೀಡಿ, ವರದಿ ನೀಡಿದ್ದಾರೆ. ಜೊತೆಗೆ ಜಿಲ್ಲಾಧಿಕಾರಿಗಳು ಕೂಡ ಗ್ರೌಂಡ್ ಟ್ರೂಥಿಂಗ್ ನಡೆಸಿ ವರದಿ ನೀಡಿದ್ದಾರೆ. ವಿಪಕ್ಷದವರು ಬರ ಅಧ್ಯಯನ ನಡೆಸಿರುವ ಬಗ್ಗೆ ವರದಿ ನೀಡಿಲ್ಲ. ಅವರು ನೀಡುವ ವರದಿಯನ್ನು ಪರಿಗಣಿಸುತ್ತೇವೆ. ರೈತರಿಗೆ ಬೇಕಿರುವುದು ನೆರವು, ಸಹಾಯ. ಈ ವಿಚಾರದಲ್ಲಿ ರಾಜಕೀಯ ಮಾಡಬಾರದು. ವರದಿ ನೀಡುವಂತೆ ವಿಪಕ್ಷದವರನ್ನು ಮನವಿ ಮಾಡುತ್ತೇನೆ.
ಫಸಲ್ ಬಿಮಾ ಯೋಜನೆಯಡಿ ಈ ಬಾರಿ ದಾಖಲೆ ಮಟ್ಟದಲ್ಲಿ ಕೃಷಿ ಹಾಗೂ ತೋಟಗಾರಿಕೆ ಬೆಳೆ ಬೆಳೆಯುವ 49 ಲಕ್ಷ ರೈತರು ಈಗಾಗಲೇ ಬೆಳೆ ವಿಮೆ ಮಾಡಿಸಿದ್ದಾರೆ. ರೈತರ ಹಿತರಕ್ಷಣೆಗಾಗಿ ಸರ್ಕಾರವೂ ಸಹ ಇದಕ್ಕೆ ಹೆಚ್ಚಿನ ಒತ್ತಾಸೆ ನೀಡಿದೆ.
ಮಳೆಯ ಕೊರತೆಯಿಂದಾಗಿ ಒಂದು ವೇಳೆ ಬೀಜ ಬಿತ್ತಲು ಸಾಧ್ಯವಾಗದಿದ್ದರೂ ಸಹ 'Prevented sowing' (ಬಿತ್ತನೆ ತಡೆ) ಎಂಬ ವಿಶೇಷ ಕ್ಯಾಟಗರಿಯಡಿ ವಿಮಾ ಪರಿಹಾರ ಪಡೆಯಲು ಅವಕಾಶವಿದೆ. ಈ ಸೌಲಭ್ಯದ ಸದುಪಯೋಗ ಪಡೆಯಲು ಅನುಕೂಲವಾಗುವಂತೆ, ಬೆಳೆ ವಿಮೆಗೆ ಅರ್ಜಿ ಸಲ್ಲಿಸುವ ಅಂತಿಮ ದಿನಾಂಕವನ್ನು ಆಗಸ್ಟ್ 31ರವರೆಗೆ ವಿಸ್ತರಿಸಲಾಗಿದೆ. ರೈತ ಬಾಂಧವರು ಈ ಹೆಚ್ಚುವರಿ ಕಾಲಾವಕಾಶ ಹಾಗೂ ಯೋಜನೆಯಲ್ಲಿನ ಅವಕಾಶಗಳನ್ನು ಬಳಸಿಕೊಂಡು ತಪ್ಪದೇ ನೋಂದಣಿ ಮಾಡಿಕೊಳ್ಳಬೇಕು.
ಬರದ ಕಾರಣದಿಂದ ಜನರು ಗುಳೆ ಹೋಗುವುದನ್ನು ತಪ್ಪಿಸಲು ವಿಬಿ ಜಿ ರಾಮ್ ಜಿ (VB-GRAM-G) ಯೋಜನೆಯಡಿ 16,460 ಕಾಮಗಾರಿಗಳನ್ನು ತೆಗೆದುಕೊಂಡು ಜುಲೈ-1 ರಿಂದ ಆಗಸ್ಟ್ 24ರವರೆಗೆ 66.73 ಲಕ್ಷ ಮಾನವ ದಿನಗಳನ್ನು ಸೃಜಿಸಿದ್ದೇವೆ. ಬರ ಪರಿಸ್ಥಿಯನ್ನು ನಿಭಾಯಿಸುವ ಬಹುಪಾಲು ಕಾಮಗಾರಿಗಳು ಇದರಲ್ಲಿ ಸೇರಿವೆ. ಗುಳೆ ತಡೆಗೆ ಬಸ್ ನಿಲ್ದಾಣ, ರೈಲ್ವೆ ನಿಲ್ದಾಣಗಳಲ್ಲಿ ಅಧಿಕಾರಿಗಳನ್ನು ನೇಮಿಸಲಾಗುವುದು. ಈ ಬಗ್ಗೆ ಅಧಿಕಾರಿಗಳಿಗೆ ಸೂಚನೆ ನೀಡಲಾಗುವುದು.
ಪೋಡಿ ಅಭಿಯಾನ, ಕಂದಾಯ ಗ್ರಾಮಗಳ ಘೋಷಣೆ ಮಾಡಿ ಜನರಿಗೆ ಹಕ್ಕುಪತ್ರಗಳನ್ನು ವಿತರಿಸಲಾಗುವುದು. ಕೃಷ್ಣಬೈರೇಗೌಡ ಅವರು ಮಾಡಿರುವ ಅಭಿಯಾನ ಮುಂದುವರಿಸಲಾಗುವುದು.
ಒಟ್ಟಿನಲ್ಲಿ ಸರ್ಕಾರವು ಬರ ಪರಿಸ್ಥಿತಿಯನ್ನು ಎದುರಿಸಲು ಸರ್ವ ಸನ್ನದ್ಧವಾಗಿದೆ. ಜನರಿಗೆ ಉದ್ಯೋಗ, ಜನ, ಜಾನುವಾರುಗಳಿಗೆ ಕುಡಿಯುವ ನೀರು, ಜಾನುವಾರುಗಳಿಗೆ ಮೇವು ಇತ್ಯಾದಿಗಳನ್ನು ಸಮರ್ಥವಾಗಿ ನಿಭಾಯಿಸುತ್ತೇವೆ. ಬರಪೀಡಿತ ಎಂದು ಘೋಷಣೆಯಾದ ತಾಲ್ಲೂಕುಗಳಿಗೆ ತಕ್ಷಣಕ್ಕೆ ಎಸ್ಡಿಆರ್ಎಫ್ ನಿಧಿಯಲ್ಲಿ ಕುಡಿಯುವ ನೀರಿಗೆ ಖರ್ಚು ಮಾಡುವುದಕ್ಕೆ ಅವಕಾಶ ಸಿಗುತ್ತದೆ. ಬೆಳೆ ಪರಿಹಾರದ ಕುರಿತು ಕೇಂದ್ರಕ್ಕೆ ಮೆಮೊರಾಂಡಮ್ ಸಲ್ಲಿಸಿದ ನಂತರ ಮುಂದಿನ ಕ್ರಮ ತೆಗೆದುಕೊಳ್ಳುತ್ತೇವೆ.
ಕನ್ನಡಿಗರ ರಕ್ಷಣೆಗೆ ಕ್ರಮ : ನೇಪಾಳದಲ್ಲಿ ಬೆಂಗಳೂರಿನ 8 ಜನರು ಸಂಕಷ್ಟದಲ್ಲಿ ಸಿಲುಕಿದ್ದಾರೆ. ಅವರ ರಕ್ಷಣೆಗೆ ಕ್ರಮ ಕೈಗೊಂಡಿದ್ದೇವೆ. ಮೃತರ ಬಗ್ಗೆ ಮಾಹಿತಿ ಇಲ್ಲ. ಈಗಾಗಲೇ ಸಹಾಯವಾಣಿಯನ್ನು ತೆರೆಯಲಾಗಿದ್ದು, 1070 / 08022253707 ಕ್ಕೆ ಸಂಪರ್ಕಿಸಿದರೆ ಕ್ರಮ ತೆಗೆದುಕೊಳ್ಳುತ್ತೇವೆ. ನಿಮ್ಮ ಕುಟುಂಬಸ್ಥರು ಅಥವಾ ಪರಿಚಯಸ್ಥರು ಸಂಪರ್ಕಕ್ಕೆ ಸಿಕ್ಕಿಲ್ಲ ಎಂದಾದರೆ ತಕ್ಷಣವೇ ಮಾಹಿತಿ ನೀಡಿ.
ಕಠ್ಮಂಡು ಗೆ ಹಿರಿಯ ಅಧಿಕಾರಿಗಳನ್ನು ಕಳುಹಿಸಲಾಗುವುದು. ಮುಂದಿನ ಮಾಹಿತಿಗಳನ್ನು ಆಧರಿಸಿ ಕ್ರಮ ತೆಗೆದುಕೊಳ್ಳಲಾಗುವುದು. ಅಧಿಕೃತವಾಗಿ ಬಂದಿರುವ ಮಾಹಿತಿಯನ್ನು ಹಂಚಿಕೊಳ್ಳಲಾಗಿದೆ. ದೆಹಲಿಯ ರೆಸಿಡೆಂಟ್ ಕಮಿಷನರ್ ಅವರನ್ನು ಸಂಪರ್ಕಿಸಲಾಗಿದ್ದು, ಕೂಡಲೇ ಕ್ರಮ ಕೈಗೊಳ್ಳಲು ತಿಳಿಸಲಾಗಿದೆ. (2/2) -
Dr. G Parameshwara
@DrParameshwara
ಇಂದು ರಾಜ್ಯದ ಬರಪೀಡಿತ ತಾಲೂಕುಗಳ ಕುರಿತಂತೆ ವಿಧಾನಸೌಧದಲ್ಲಿ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದೆ.
ರಾಜ್ಯದಲ್ಲಿ ಹಿಂದೆಂದೂ ಕಾಣದ ಬರ ಈ ವರ್ಷ ಬಂದಿದೆ. ಜನ - ಜಾನುವಾರುಗಳಿಗೆ ಯಾವುದೇ ಸಮಸ್ಯೆಯಾಗದಂತೆ ಬರ ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸಲು ₹635 ಕೋಟಿ ವ್ಯಯಿಸುತ್ತಿದ್ದೇವೆ. ನಮ್ಮಲ್ಲಿ ಹಣದ ಕೊರತೆ ಇಲ್ಲ.
ರಾಜ್ಯದಲ್ಲಿ ಜೂನ್ 1ರಿಂದ ಆಗಸ್ಟ್ 26ರ ವರೆಗೆ 666 ಮಿಲಿ ಮೀಟರ್ ಮಳೆಯಾಗಬೇಕಾದ ಕಡೆ ಕೇವಲ 465 ಮಿ.ಮೀ ಮಳೆಯಾಗಿದೆ. ಇದರಿಂದಾಗಿ ಶೇ.30 ರಷ್ಟು ಮಳೆ ಕೊರತೆಯಾಗಿದೆ. ರಾಜ್ಯದ 29 ಜಿಲ್ಲೆಗಳು ಹಾಗೂ 190 ತಾಲ್ಲೂಕುಗಳು ಮಳೆ ಕೊರತೆ ಮತ್ತು ತೀವ್ರ ಮಳೆ ಕೊರತೆಯ (Deficit to Large Deficit) ವ್ಯಾಪ್ತಿಯಲ್ಲಿದ್ದು, ಅದರಲ್ಲಿ 12 ತಾಲ್ಲೂಕುಗಳು ತೀವ್ರ ಮಳೆ ಕೊರತೆಯನ್ನು ಅನುಭವಿಸುತ್ತಿವೆ. ಆಗಸ್ಟ್ 26ರ ವೇಳೆಗೆ, ಮಳೆಯಿಲ್ಲದೆ ಸತತ ಮೂರಕ್ಕಿಂತ ಹೆಚ್ಚು ವಾರಗಳ ಕಾಲ ಒಣಹವೆ (Dry-spell) ಅನುಭವಿಸಿದ 134 ತಾಲ್ಲೂಕುಗಳನ್ನು ಗುರುತಿಸಲಾಗಿದೆ ಹಾಗೂ ಅವು ಟ್ರಿಗರ್-1 ಅಡಿಯಲ್ಲಿ ಮೌಲ್ಯಮಾಪನಕ್ಕೆ ಅರ್ಹತೆ ಪಡೆದಿವೆ.
ಕೇಂದ್ರ ಸರ್ಕಾರವು Drought Manual -2020 ರ ಪ್ರಕಾರ ಬರಪೀಡಿತ ತಾಲ್ಲೂಕು ಎಂದು ಘೋಷಿಸಲು ಹಲವು ಟ್ರಿಗರ್ ಪಾಯಿಂಟುಗಳ ಅವಶ್ಯವಿದೆ ಎಂದಿದೆ. ಟ್ರಿಗರ್-1 : 3 ಅಥವಾ ಅದಕ್ಕಿಂತ ಹೆಚ್ಚಿನ ವಾರಗಳಲ್ಲಿ ಮಳೆಯಾಗದಿದ್ದರೆ- ಡ್ರೈ ಸೈಲ್ ವೀಕ್ಸ್ ಎಂದು ಕರೆಯುತ್ತೇವೆ. ಟ್ರಿಗರ್-2 : ಬಿತ್ತನೆಯ ಪ್ರಮಾಣ, ಬಿತ್ತಿದ ಬೆಳೆಗಳ ಸ್ಥಿತಿಗತಿ, ಮಣ್ಣಿನ ತೇವಾಂಶ, ಅಂತರ್ಜಲದ ಪ್ರಮಾಣ, ಕೆರೆಕಟ್ಟೆಗಳಲ್ಲಿ, ಅಣೆಕಟ್ಟುಗಳಲ್ಲಿನ ನೀರಿನ ಪ್ರಮಾಣ ಇತ್ಯಾದಿಗಳು ಇದರಲ್ಲಿ ಸೇರುತ್ತವೆ.
ಈ ಎರಡೂ ಅಂಶಗಳನ್ನು ಆಧರಿಸಿ ನಾವು ಅಸೆಸ್ಮೆಂಟ್ ಮಾಡಿದ್ದೇವೆ. ಗ್ರೌಂಡ್ ಟ್ರೂಥಿಂಗ್ ಮಾಡಿದ್ದೇವೆ. 134 ತಾಲ್ಲೂಕುಗಳು ಟ್ರಿಗರ್ - 1 ಪ್ರಕಾರ ಅರ್ಹತೆ ಪಡೆದಿವೆ. ಗ್ರೌಂಡ್ ಟ್ರೂಥಿಂಗ್ ಮಾಡಿದಾಗ ಸದ್ಯಕ್ಕೆ 101 ತಾಲ್ಲೂಕುಗಳು ಬರಪೀಡಿತ ಎಂದು ಘೋಷಿಸುವುದಕ್ಕೆ ಅರ್ಹತೆ ಪಡೆದಿವೆ. ಉಳಿದ 32 ತಾಲ್ಲೂಕುಗಳು ಟ್ರಿಗರ್ 1 ಪ್ರಕಾರ ಅರ್ಹತೆ ಪಡೆದಿವೆ. ಅವುಗಳನ್ನು ಪರಿಶೀಲಿಸುವ ಕೆಲಸ ನಡೆಯುತ್ತಿದೆ.
ಮೊದಲ ಹಂತದಲ್ಲಿ 101 ತಾಲೂಕುಗಳು ಬರ ಘೋಷಣೆಯಾದ ಬಳಿಕ, ಪ್ರತಿ 15 ದಿನಕ್ಕೆ ಪರಿಶೀಲನೆ ನಡೆಸುತ್ತೇವೆ. ಹೋಬಳಿವಾರು ಗ್ರೌಂಡ್ ಟ್ರೂಥಿಂಗ್ ನಡೆಸಿರುವ ಮಾಹಿತಿ ಇದೆ. ಅದನ್ನು ವಿಶ್ಲೇಷಿಸಿ ಬರಪೀಡಿತ ಎಂದು ಪರಿಗಣಿಸಲಾಗಿದೆ. ಕೆಲವು ತಾಲ್ಲೂಕುಗಳಲ್ಲಿ ಎರಡು ವಾರ ಮಳೆ ಇಲ್ಲದೆ ಮಧ್ಯದಲ್ಲಿ ಯಾವಾಗಲೋ ಒಮ್ಮೆ ಮಳೆ ಬಂದರೂ ಅದು ಟ್ರಿಗರ್- 1 ವಿಚಾರದಲ್ಲಿ ಅರ್ಹತೆ ಕಳೆದುಕೊಂಡು ಬಿಡುತ್ತದೆ. ಆದರೆ ಅಲ್ಲಿ ಬೆಳೆಯಾಗಿರುವುದಿಲ್ಲ. ಆದರೂ ಬರಪೀಡಿತ ಎಂದು ಘೋಷಿಸಲು ಆಗುವುದಿಲ್ಲ.
ಈ ರೀತಿಯ ಅನೇಕ ಸಮಸ್ಯೆಗಳು ಆ ಮಾನದಂಡಗಳಲ್ಲಿವೆ. ಅವುಗಳನ್ನು ಹಿಂದಿನಂತೆ ಸರಿಪಡಿಸಿ ಎಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸುತ್ತಲೇ ಇದ್ದೇವೆ. ಆದರೂ ಕೇಂದ್ರ ಸರ್ಕಾರ ಈ ಕುರಿತು ತಲೆಕೆಡಿಸಿಕೊಳ್ಳುತ್ತಿಲ್ಲ. ನಮ್ಮಲ್ಲೂ ಇದೇ ಸಮಸ್ಯೆಯಾಗಿರುವುದು. ಹಾಗಾಗಿ ಹಂತ ಹಂತವಾಗಿ ನಾವು ಬರ ಘೋಷಣೆ ಮಾಡಬೇಕಾಗುತ್ತದೆ.
ಆಗಸ್ಟ್ 21ರ ವರೆಗೆ ರಾಜ್ಯದಲ್ಲಿ ಶೇ.71 ರಷ್ಟು ಬಿತ್ತನೆಯಾಗಿದೆ. 84.10 ಲಕ್ಷ ಹೆಕ್ಟೇರುಗಳಷ್ಟು ಪ್ರದೇಶದಲ್ಲಿ ಬಿತ್ತನೆಯಾಗಬೇಕಿತ್ತು. ಆದರೆ ಕೇವಲ 60 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಬಿತ್ತನೆಯಾಗಿದೆ. ಒಟ್ಟು 240 ತಾಲ್ಲೂಕುಗಳ ಪೈಕಿ 104 ತಾಲ್ಲೂಕುಗಳಲ್ಲಿ ಶೇ.75 ಕ್ಕಿಂತ ಕಡಿಮೆ ಬಿತ್ತನೆಯಾಗಿದ್ದು, ಅದರಲ್ಲಿ 42 ತಾಲ್ಲೂಕುಗಳಲ್ಲಿ ಶೇ.25 ಕ್ಕಿಂತಲೂ ಕಡಿಮೆ ಬಿತ್ತನೆಯಾಗಿದೆ.
ತೋಟಗಾರಿಕೆ ಬೆಳೆಗಳೂ ಅಷ್ಟೆ, ಆಗಸ್ಟ್ 25ರ ವರೆಗೆ 4.36 ಲಕ್ಷ ಹೆಕ್ಕೇರುಗಳ ಪೈಕಿ ಕೇವಲ 3.04 ಲಕ್ಷ ಹೆಕ್ಟೇರುಗಳಲ್ಲಿ (ಶೇ.69) ಮಾತ್ರ ಬಿತ್ತನೆಯಾಗಿದೆ. ಬಿತ್ತನೆಯಾದ ಬೆಳೆಗಳಿಗೂ ಕೂಡ ಮಳೆ ಸಾಲದೆ ನಿರೀಕ್ಷಿತ ಬೆಳವಣಿಗೆ ಸಾಧ್ಯವಾಗುತ್ತಿಲ್ಲ. ಮಳೆಯ ಕೊರತೆಯ ನಡುವೆಯೆ ಬೆಳೆಯುವ ಅಲ್ಪಾವಧಿ ತಳಿಗಳನ್ನು ಬೆಳೆಯುವಂತೆ ತಿಳುವಳಿಕೆ ನೀಡಿ ರೈತರಿಗೆ ಬಿತ್ತನೆ ಬೀಜವನ್ನು ವಿತರಿಸಲಾಗಿದೆ.
ಅಲ್ಲದೇ, ಮಳೆಯ ಅಭಾವದಿಂದಾಗಿ ಮಣ್ಣಿನ ತೇವಾಂಶವೂ ತೀವ್ರವಾಗಿ ಕುಸಿದಿದೆ. ಆಗಸ್ಟ್ 26ರವರೆಗಿನ ತೇವಾಂಶ ಸಮರ್ಪಕತಾ ಸೂಚ್ಯಂಕದ (MAI) ಪ್ರಕಾರ, ರಾಜ್ಯದ 178 ತಾಲ್ಲೂಕುಗಳಲ್ಲಿ (ಶೇ.74) ಮಣ್ಣಿನ ತೇವಾಂಶದ ತೀವ್ರ ಕೊರತೆ ಎದುರಾಗಿದೆ. ಇದರಲ್ಲಿ 86 ತಾಲ್ಲೂಕುಗಳು ಅತಿ ತೀವ್ರ ಹಾಗೂ 92 ತಾಲ್ಲೂಕುಗಳು ಸಾಧಾರಣ ತೇವಾಂಶ ಕೊರತೆಯನ್ನು ಎದುರಿಸುತ್ತಿದ್ದು, ಇದು ಬೆಳೆಗಳ ಪ್ರಾಥಮಿಕ ಬೆಳವಣಿಗೆಯ ಮೇಲೆ ದುಷ್ಪರಿಣಾಮ ಬೀರಿದೆ.
ರಾಜ್ಯದ 132 ತಾಲ್ಲೂಕುಗಳಲ್ಲಿ ಕಳೆದ ದಶಕದ ಸರಾಸರಿಗೆ ಹೋಲಿಸಿದರೆ ಅಂತರ್ಜಲ ಮಟ್ಟ ಕುಸಿದಿದ್ದು, ಮುಂದಿನ ದಿನಗಳಲ್ಲಿ ಅದು ಇನ್ನಷ್ಟು ಕುಸಿಯುವ ಆತಂಕವಿದೆ, ಹಾಗಾಗಿ ಸರ್ಕಾರವು ಅಂತರ್ಜಲ ಅಭಿವೃದ್ಧಿಗೆ ಪೂರಕವಾದ ಕಾರ್ಯಕ್ರಮಗಳನ್ನು ಕೈಗೆತ್ತಿಕೊಳ್ಳುತ್ತಿದೆ. ರಾಜ್ಯದ ಜನತೆ ಕೂಡ ಪರಿಸ್ಥಿತಿಯ ಗಂಭೀರತೆಯನ್ನು ಅರಿತುಕೊಂಡು ಅಂತರ್ಜಲ ಸಂರಕ್ಷಣೆಗೆ ಆದ್ಯತೆ ನೀಡಬೇಕು. ಕಳೆದ ವರ್ಷ ಇದೇ ಅವಧಿಯಲ್ಲಿ 815.70 ಟಿಎಂಸಿಗಳಷ್ಟು ನೀರು ಸಂಗ್ರಹವಾಗಿತ್ತು. ಈ ವರ್ಷ (ಆಗಸ್ಟ್ 26ರ ವರೆಗೆ) ಕೇವಲ 684.09 ಟಿಎಂಸಿಗಳಷ್ಟು ಮಾತ್ರ ಸಂಗ್ರಹವಾಗಿದೆ.
ಆಗಸ್ಟ್ 22ರ ವರೆಗಿನ ಮಾಹಿತಿಯಂತೆ, ರಾಜ್ಯದ 758 ಗ್ರಾಮಗಳಿಗೆ 149 ಟ್ಯಾಂಕರುಗಳ ಮೂಲಕ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದೆ. 714 ಖಾಸಗಿ ಕೊಳವೆ ಬಾವಿಗಳನ್ನು ಬಾಡಿಗೆಗೆ ಪಡೆದುಕೊಳ್ಳಲಾಗಿದೆ. ನಗರ ಪ್ರದೇಶದ 18 ಸ್ಥಳೀಯ ಸಂಸ್ಥೆಗಳ 114 ವಾರ್ಡುಗಳಿಗೆ 48 ಟ್ಯಾಂಕರುಗಳ ಮೂಲಕ ನೀರು ಸರಬರಾಜು ಮಾಡುತ್ತಿದ್ದೇವೆ. ಇಲ್ಲಿಯೂ 18 ಖಾಸಗಿ ಕೊಳವೆ ಬಾವಿಗಳನ್ನು ಬಾಡಿಗೆಗೆ ಪಡೆಯಲಾಗಿದೆ. ಪರಿಸ್ಥಿತಿ ತೀವ್ರವಾದರೆ ಮುಂದಿನ ಬೇಸಿಗೆಯಲ್ಲಿ 2,059 ಗ್ರಾಮ ಪಂಚಾಯತ್ಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉದ್ಭವಿಸಬಹುದು ಎಂದು ಅಂದಾಜು ಮಾಡಿ ಅದಕ್ಕೆ ಸೂಕ್ತ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ.
ಜಿಲ್ಲಾಧಿಕಾರಿಗಳು ಹಾಗೂ ಪಶುಸಂಗೋಪನಾ ಇಲಾಖೆಯವರು ನೀಡಿದ ಮಾಹಿತಿ ಪ್ರಕಾರ, ರಾಜ್ಯದಲ್ಲಿ 151 ಲಕ್ಷ ಟನ್ಗಳಷ್ಟು ಮೇವಿನ ಸಂಗ್ರಹವಿದೆ. ಇದು 33 ವಾರಗಳಿಗೆ ಸಾಕಾಗುತ್ತದೆ. 49 ತಾಲ್ಲೂಕುಗಳಲ್ಲಿ 25 ವಾರಗಳಿಗೆ ಹಾಗೂ 18 ತಾಲ್ಲೂಕುಗಳಲ್ಲಿ 20 ವಾರಗಳಿಗಿಂತ ಕಡಿಮೆ ಅವಧಿಗೆ ಸಾಕಾಗುವಷ್ಟು ಮೇವಿನ ಸಂಗ್ರಹವಿದೆ. ಇದರ ನಡುವೆ ನೀರಿನ ಆಸರೆ ಹೊಂದಿರುವ ರೈತರಿಗೆ ಮೇವಿನ ಬೀಜದ ಕಿಟ್ಗಳನ್ನು ನೀಡಲು 25 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿದ್ದೇವೆ. ಕೆಎಂಎಫ್ ಕಡೆಯಿಂದಲೂ ಕಿಟ್ಗಳನ್ನು ನೀಡುತ್ತಿದ್ದೇವೆ. ಮೇವು ಬೆಳೆದ ರೈತರು ಅದನ್ನು ಜೋಪಾನ ಮಾಡಬೇಕೆಂದು ವಿನಂತಿಸಿದ್ದೇವೆ. (1/2) -
Dr. G Parameshwara
@DrParameshwara
If any tourists or citizens from Karnataka are unreachable following the natural disaster and flash floods in Nepal, please share their details with the Government immediately.
The State Government is in constant touch with the Ministry of Home Affairs and Ministry of External Affairs and is taking urgent steps to trace missing persons and support affected families.
If a family member, friend or acquaintance is missing in Nepal, please provide their full name, mobile number, last known location and time of contact, and permanent address.
Google Form:
docs.google.com/forms/d/1gnw8B8vaYknr0Y2Lkn_fpWubPnKI6a8C…
The State Emergency Operation Centre (SEOC) is available 24x7 for assistance.
Toll Free: 1070
Phone: 080-22253707
Email: [seockarnataka@gmail.com](mailto:seockarnataka@gmail.com) -
Dr. G Parameshwara
@DrParameshwara
ನೇಪಾಳದಲ್ಲಿ ಸಂಭವಿಸಿದ ಭೀಕರ ಪ್ರವಾಹದಿಂದಾಗಿ ಕರ್ನಾಟಕ ಮೂಲದ ಪ್ರವಾಸಿಗರು ಅಥವಾ ನಾಗರಿಕರು ಸಂಪರ್ಕಕ್ಕೆ ಸಿಗದೇ ಇದ್ದಲ್ಲಿ, ತಕ್ಷಣವೇ ಅವರ ವಿವರಗಳನ್ನು ಒದಗಿಸಿ.
ಕೇಂದ್ರ ಗೃಹ ಸಚಿವಾಲಯ ಹಾಗೂ ವಿದೇಶಾಂಗ ವ್ಯವಹಾರಗಳ ಸಚಿವಾಲಯದೊಂದಿಗೆ ರಾಜ್ಯ ಸರ್ಕಾರವು ನಿರಂತರ ಸಂಪರ್ಕದಲ್ಲಿದ್ದು, ಸಂತ್ರಸ್ತ ಕುಟುಂಬಗಳಿಗೆ ಅಗತ್ಯ ನೆರವು ನೀಡಲು ಮತ್ತು ನಾಪತ್ತೆಯಾದವರನ್ನು ಪತ್ತೆಹಚ್ಚಲು ತ್ವರಿತ ಕ್ರಮ ಕೈಗೊಳ್ಳುತ್ತಿದೆ.
ನೇಪಾಳದಲ್ಲಿ ನಿಮ್ಮ ಕುಟುಂಬಸ್ಥರು, ಸ್ನೇಹಿತರು ಅಥವಾ ಪರಿಚಿತರು ನಾಪತ್ತೆಯಾಗಿದ್ದಾರೆಂದು ಶಂಕಿಸಲಾಗಿದ್ದರೆ, ಸಾರ್ವಜನಿಕರು ಆ ವ್ಯಕ್ತಿಯ ಪೂರ್ಣ ಹೆಸರು, ಮೊಬೈಲ್ ಸಂಖ್ಯೆ, ಕೊನೆಯದಾಗಿ ಸಂಪರ್ಕಿಸಿದ ಸ್ಥಳ, ಸಮಯ ಹಾಗೂ ಖಾಯಂ ವಿಳಾಸದ ವಿವರಗಳನ್ನು ಸರ್ಕಾರಕ್ಕೆ ತಕ್ಷಣವೇ ಒದಗಿಸಬೇಕು.
ವಿವರಗಳನ್ನು ಈ ಗೂಗಲ್ಫಾರ್ಮ್ನಲ್ಲಿ ತುಂಬಿರಿ : docs.google.com/forms/d/1gnw8B8vaYknr0Y2Lkn_fpWubPnKI6a8C…
ಸಂತ್ರಸ್ತರು ಮತ್ತು ಅವರ ಕುಟುಂಬಸ್ಥರ ನೆರವಿಗಾಗಿ ರಾಜ್ಯ ತುರ್ತು ಕಾರ್ಯಾಚರಣೆ ಕೇಂದ್ರ (SEOC) 24x7 ಸಹಾಯವಾಣಿ ತೆರೆದಿದ್ದು, ಸಾರ್ವಜನಿಕರು 1070 (ಟೋಲ್ ಫ್ರೀ) ಅಥವಾ 080-22253707 ಸಂಖ್ಯೆಗೆ ಕರೆ ಮಾಡಬಹುದು. seockarnataka@gmail.com ಇಮೇಲ್ ಮೂಲಕವೂ ಮಾಹಿತಿ ನೀಡಬಹುದು. -
Dr. G Parameshwara
@DrParameshwara
ಇಂದು ಸಿಎಂ ಅವರ ಗೃಹ ಕಚೇರಿ ಕೃಷ್ಣಾದಲ್ಲಿ ರಾಜ್ಯದ ʻಸಮಗ್ರ ಅಭಿವೃದ್ಧಿʼಕುರಿತಂತೆ ಮುಖ್ಯಮಂತ್ರಿ ಶ್ರೀ ಡಿ.ಕೆ.ಶಿವಕುಮಾರ್ ಅವರ ಅಧ್ಯಕ್ಷತೆಯಲ್ಲಿ ಕಾಂಗ್ರೆಸ್ ಪಕ್ಷದ ಶಾಸಕರ 2ನೇ ದಿನದ ಸಭೆ ನಡೆಯಿತು.
ವಿಧಾನ ಪರಿಷತ್ ಸದಸ್ಯರುಗಳು ಹಾಗೂ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಮತ್ತು ಬೆಂಗಳೂರು ದಕ್ಷಿಣ ಜಿಲ್ಲೆಗಳ ಶಾಸಕರುಗಳೊಂದಿಗೆ ಸುದೀರ್ಘವಾಗಿ ಚರ್ಚಿಸಲಾಯಿತು.
ಈ ಸಂದರ್ಭದಲ್ಲಿ ಕೆಪಿಸಿಸಿ ಅಧ್ಯಕ್ಷರು ಹಾಗೂ ವಿಧಾನ ಪರಿಷತ್ ಸದಸ್ಯರಾದ ಬಿ.ಕೆ ಹರಿಪ್ರಸಾದ್, ಸಚಿವರಾದ ಬಿ.ಝಡ್. ಜಮೀರ್ ಅಹ್ಮದ್ ಖಾನ್, ಉಪ ಸಭಾಪತಿಗಳಾದ ಉಮಾಶ್ರೀ ಹಾಗೂ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
Today, the second day of the Congress legislators’ meeting on the State’s comprehensive development was held at the Chief Minister’s residence office, Krishna, under the chairmanship of Chief Minister Shri D.K. Shivakumar.
Detailed discussions were held with Members of the Legislative Council and legislators from Bengaluru Urban, Bengaluru Rural and Bengaluru South districts.
KPCC President and MLC B.K. Hariprasad, Minister B.Z. Zameer Ahmed Khan, Deputy Chairperson Umashree, Chief Secretary Shalini Rajneesh and several others were present. -
Dr. G Parameshwara
@DrParameshwara
Our Pourakarmikas work every day to keep our towns and cities clean. Ensuring dignity and security in their own lives is the responsibility of the Government. 176 houses have been approved for permanent sanitation workers across 11 urban local bodies in Tumakuru, with the State Government contributing ₹6 lakh towards each ₹7.50 lakh house. This is a meaningful step towards providing secure housing and a better quality of life for those whose service keeps our communities healthy and clean.
ತುಮಕೂರು ಸ್ವಚ್ಛ ಮತ್ತು ಸುಂದರ ನಗರವಾಗಿ ಕಾಣುವುದರ ಹಿಂದೆ ಪೌರಕಾರ್ಮಿಕರ ಅಪಾರ ಶ್ರಮ ಇದೆ. ಅವರ ಬದುಕಿನಲ್ಲೂ ಗೌರವ ಮತ್ತು ಭದ್ರತೆಯನ್ನು ಖಚಿತಪಡಿಸುವುದು ಸರ್ಕಾರದ ಜವಾಬ್ದಾರಿಯಾಗಿದೆ.
ಈ ನಿಟ್ಟಿನಲ್ಲಿ ತುಮಕೂರಿನ 11 ನಗರ ಸ್ಥಳೀಯ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ವಸತಿರಹಿತ ಖಾಯಂ ಪೌರಕಾರ್ಮಿಕರಿಗಾಗಿ 176 ಮನೆಗಳಿಗೆ ಅನುಮೋದನೆ ನೀಡಲಾಗಿದೆ. ಪ್ರತಿ ಮನೆಗೆ ₹7.50 ಲಕ್ಷ ವೆಚ್ಚ ಅಂದಾಜಿಸಲಾಗಿದ್ದು, ರಾಜ್ಯ ಸರ್ಕಾರದಿಂದ ₹6 ಲಕ್ಷ ನೆರವು ನೀಡಲಾಗುತ್ತಿದೆ.
ನಗರಗಳನ್ನು ಸ್ವಚ್ಛವಾಗಿಡಲು ಶ್ರಮಿಸುವ ಪೌರಕಾರ್ಮಿಕರಿಗೆ ಸುರಕ್ಷಿತ ವಸತಿ ಮತ್ತು ಉತ್ತಮ ಜೀವನ ಕಲ್ಪಿಸುವತ್ತ ಇದು ಮಹತ್ವದ ಹೆಜ್ಜೆಯಾಗಿದೆ. -
Dr. G Parameshwara
@DrParameshwara
*Drought declaration after Cabinet discussion: A comprehensive review of the drought situation is underway. Ground-truthing reports from 102 taluks have been received, and drought will be declared after discussion in the next Cabinet meeting.
The BJP had also sent teams to assess the drought situation, but neither discussed their findings in the House nor submitted a report or even a letter to the Chief Minister or to me as Revenue Minister. The State is facing drinking water shortages and farmers have suffered crop losses. The Opposition should have discussed these issues and offered constructive suggestions. Instead, they indulged only in politics in the House.
*What Siddaramaiah said is true: It is true that Siddaramaiah had urged the High Command to make me Deputy Chief Minister. When he resigned, he had also said that Parameshwara should be made Chief Minister, though the High Command did not consider it. He later proposed my name for Deputy Chief Minister as well. So, what Siddaramaiah has said is true.
*Cabinet reshuffle is only speculation: The Chief Minister is likely to visit Delhi today or tomorrow. If he meets the High Command, Nagendra’s resignation may be discussed. Talk of a Cabinet reshuffle is only speculation, and any decision will be taken by the High Command.
Nagendra’s name does not figure in any charge sheet. I have served as Home Minister and am aware of the facts. Any decision on a CBI probe will be taken after discussion in the Cabinet. The BJP’s padayatra on this issue is purely political. We had told them to raise their questions in the House and that we were prepared to answer them, but they have chosen to protest instead.
*Roadside parking fees: We had discussed this even when I was Bengaluru Development Minister. Roads are meant for public movement. If vehicles are parked on both sides, there is hardly any road space left. Discussions are underway and a decision will be taken.
*Internal reservation has been implemented: Siddaramaiah said yesterday that reservation and internal reservation are essential to eliminate inequality. Our Government has already implemented internal reservation following a struggle that went on for many years. Its implementation has been challenged in court in view of the Supreme Court’s 50% ceiling on total reservation. Internal reservation has been implemented within these legal limitations.
— My responses to questions from the media near my residence office today. -
Dr. G Parameshwara
@DrParameshwara
*ಸಂಪುಟ ಸಭೆಯಲ್ಲಿ ಚರ್ಚಿಸಿ ಬರ ಘೋಷಣೆ : ರಾಜ್ಯದ ಬರ ಪರಿಸ್ಥಿತಿಯ ಸಮಗ್ರ ಅವಲೋಕನ ನಡೆಯುತ್ತಿದೆ. 102 ತಾಲೂಕುಗಳ ಗ್ರೌಂಡ್ ಟ್ರೂಥಿಂಗ್ ವರದಿ ಬಂದಿದ್ದು, ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ಬರ ಘೋಷಣೆ ಮಾಡುತ್ತೇವೆ.
ಬರ ಪರಿಸ್ಥಿತಿಯನ್ನು ಅವಲೋಕಿಸಲು ಬಿಜೆಪಿಯವರು ಕೂಡ ತಂಡ ಮಾಡಿಕೊಂಡು ಹೋಗಿದ್ದರು. ಆದರೆ ಆ ಬಗ್ಗೆ ಸದನದಲ್ಲಿ ಚರ್ಚೆಯೂ ಮಾಡಿಲ್ಲ. ಮುಖ್ಯಮಂತ್ರಿಗಳಿಗಾಗಲಿ, ಕಂದಾಯ ಸಚಿವನಾದ ನನಗಾಗಲಿ ವರದಿ ಅಥವಾ ಪತ್ರವನ್ನೂ ನೀಡಿಲ್ಲ. ರಾಜ್ಯದಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ. ರೈತರಿಗೆ ಬೆಳೆ ನಷ್ಟವಾಗಿದೆ. ವಿರೋಧ ಪಕ್ಷದವರು ಈ ಬಗ್ಗೆ ಚರ್ಚೆಗಳನ್ನು ಮಾಡಿ, ಸಲಹೆಗಳನ್ನು ಕೊಡಬೇಕು. ಆ ಕೆಲಸ ಮಾಡುವ ಬದಲು ಸದನದಲ್ಲಿ ಬರೀ ರಾಜಕೀಯ ಮಾಡಿದ್ದಾರೆ.
*ಸಿದ್ದರಾಮಯ್ಯನವರು ಹೇಳಿರುವುದು ನಿಜ: ನನ್ನನ್ನು ಉಪ ಮುಖ್ಯಮಂತ್ರಿಗಳನ್ನಾಗಿ ಮಾಡಿ ಎಂದು ಹೈಕಮಾಂಡ್ಗೆ ಸಿದ್ದರಾಮಯ್ಯನವರು ಒತ್ತಾಯಿಸಿರುವುದು ನಿಜ. ಸಿದ್ದರಾಮಯ್ಯ ಅವರು ರಾಜೀನಾಮೆ ನೀಡುವ ವೇಳೆ ಪರಮೇಶ್ವರ ಅವರನ್ನು ಮುಖ್ಯಮಂತ್ರಿ ಮಾಡಬೇಕು ಎಂದು ಹೇಳಿದ್ದರು. ಅದನ್ನು ಹೈಕಮಾಂಡ್ ಪರಿಗಣನೆಗೆ ತೆಗೆದುಕೊಂಡಿಲ್ಲ. ಉಪ ಮುಖ್ಯಮಂತ್ರಿಯಾಗಿ ನನ್ನನ್ನು ಮಾಡಬೇಕು ಎಂದೂ ಅವರು ಹೇಳಿದ್ದಾರೆ. ಹಾಗಾಗಿ ಸಿದ್ದರಾಮಯ್ಯನವರು ಹೇಳಿರುವುದು ಸತ್ಯ.
*ಸಂಪುಟ ಪುನರ್ ರಚನೆ ಊಹಾಪೋಹವಷ್ಟೇ: ಇಂದು ಅಥವಾ ನಾಳೆ ಮುಖ್ಯಮಂತ್ರಿಗಳು ದೆಹಲಿಗೆ ಹೋಗುತ್ತಾರೆ. ಹೈಕಮಾಂಡ್ ಭೇಟಿಯಾದರೆ ಅಲ್ಲಿ ನಾಗೇಂದ್ರ ಅವರ ರಾಜೀನಾಮೆ ಬಗ್ಗೆ ಚರ್ಚೆಗಳು ನಡೆಯಬಹುದು. ಸಂಪುಟ ಪುನರ್ ರಚನೆ ಊಹಾಪೋಹವಷ್ಟೇ. ಹೈಕಮಾಂಡ್ ತೀರ್ಮಾನದಂತೆ ಆಗುತ್ತದೆ.
ಯಾವ ಚಾರ್ಜ್ಶೀಟ್ನಲ್ಲೂ ನಾಗೇಂದ್ರ ಅವರ ಹೆಸರು ಇಲ್ಲ. ನಾನು ಗೃಹಸಚಿವನಾಗಿದ್ದವನು. ನನಗೆ ಮಾಹಿತಿ ಇದೆ. ಸಿಬಿಐ ತನಿಖೆ ಮಾಡುವ ಬಗ್ಗೆ ಸಚಿವ ಸಂಪುಟದಲ್ಲಿ ಚರ್ಚೆ ಮಾಡಿ ತೀರ್ಮಾನ ಆಗುತ್ತದೆ. ಈ ವಿಚಾರದಲ್ಲಿ ಬಿಜೆಪಿ ಪಾದಯಾತ್ರೆ ಮಾಡುತ್ತಿರುವುದು ರಾಜಕೀಯವಷ್ಟೇ. ಸದನದಲ್ಲೂ ಪ್ರಶ್ನೆಗಳನ್ನು ಕೇಳಿ ಉತ್ತರಿಸಲು ನಾವು ಸಮರ್ಥರಿದ್ದೇವೆ ಎಂದು ಹೇಳಿದ್ದೆವು. ಆದರೆ ಈಗ ಪ್ರತಿಭಟನೆ ಮಾಡುತ್ತಿದ್ದಾರೆ.
*ನಾನು ಬೆಂಗಳೂರು ಉಸ್ತುವಾರಿ ಸಚಿವನಾಗಿದ್ದ ಸಮಯದಲ್ಲೂ ರಸ್ತೆ ಬದಿ ನಿಲ್ಲಿಸುವ ವಾಹನಗಳಿಗೆ ಶುಲ್ಕ ವಿಧಿಸುವ ಬಗ್ಗೆ ಚರ್ಚೆ ಮಾಡಿದ್ದೆವು. ರಸ್ತೆಗಳು ಇರುವುದು ಜನ ಓಡಾಡುವುದಕ್ಕೆ. ಎರಡೂ ಬದಿಯಲ್ಲಿ ವಾಹನಗಳನ್ನು ನಿಲ್ಲಿಸಿದರೆ ರಸ್ತೆಗಳು ಕಾಣುವುದೇ ಇಲ್ಲ. ಹಾಗಾಗಿ ಈ ಬಗ್ಗೆ ಚರ್ಚೆಗಳು ನಡೆಯುತ್ತಿದ್ದು, ತೀರ್ಮಾನ ಗೊತ್ತಾಗಲಿದೆ.
* ಒಳಮೀಸಲಾತಿ ಜಾರಿಯಾಗಿದೆ :ಅಸಮಾನತೆ ತೊಲಗಬೇಕಾದರೆ ಮೀಸಲಾತಿ ಮತ್ತು ಒಳಮೀಸಲಾತಿ ಇರಲೇಬೇಕು ಎಂದು ನಿನ್ನೆಯ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ಅವರು ಹೇಳಿದ್ದಾರೆ. ಅವರು ಒಳಮೀಸಲಾತಿ ಬಗ್ಗೆಯೂ ಮಾತನಾಡಿದ್ದಾರೆ. ಒಳಮೀಸಲಾತಿ ಈಗ ಮುಗಿದ ಕಥೆ. ಬಹಳ ವರ್ಷಗಳಿಂದ ನಡೆಯುತ್ತಿದ್ದ ಹೋರಾಟದ ಹಿನ್ನೆಲೆಯಲ್ಲಿ ಒಳಮೀಸಲಾತಿಯನ್ನು ನಮ್ಮ ಸರ್ಕಾರ ಜಾರಿಗೊಳಿಸಿದೆ. ಒಟ್ಟು ಮೀಸಲಾತಿಯ ಪ್ರಮಾಣ ಶೇಕಡಾ ಐವತ್ತನ್ನು ಮೀರಬಾರದು ಎಂದು ಸುಪ್ರೀಂಕೋರ್ಟ್ ಆದೇಶ ಇರುವ ಕಾರಣ ಒಳಮೀಸಲಾತಿಯ ಜಾರಿಯನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಲಾಗಿದೆ. ಈ ಇತಿಮಿತಿಯಲ್ಲಿ ಒಳಮೀಸಲಾತಿ ಜಾರಿಗೊಳಿಸಲಾಗಿದೆ.
- ಇಂದು ನನ್ನ ಗೃಹಕಚೇರಿ ಬಳಿ ಮಾಧ್ಯಮದವರ ಪ್ರಶ್ನೆಗಳಿಗೆ ನನ್ನ ಉತ್ತರ -
Dr. G Parameshwara
@DrParameshwara
ವಿಜಯಪುರ ಜಿಲ್ಲೆಯ ಭೂತನಾಳ ಕೆರೆಯಲ್ಲಿ ಆರು ಮಂದಿಯ ಮೃತದೇಹಗಳು ಪತ್ತೆಯಾಗಿರುವ ಘಟನೆ ಆಘಾತ ತಂದಿದೆ. ಅವರಲ್ಲಿ ಮಕ್ಕಳು ಸೇರಿದ್ದಾರೆ ಎಂಬುದು ಅತ್ಯಂತ ನೋವಿನ ಸಂಗತಿ.
ಈಗಾಗಲೇ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿ ಮೃತದೇಹಗಳನ್ನು ಹೊರತೆಗೆದಿದ್ದಾರೆ. ಘಟನೆಯ ಬಗ್ಗೆ ಅಗತ್ಯ ತನಿಖೆ ನಡೆಸಿ, ಸತ್ಯಾಸತ್ಯತೆಯನ್ನು ಪತ್ತೆ ಮಾಡಲಾಗುವುದು.
ಮೃತರ ಆತ್ಮಕ್ಕೆ ಭಗವಂತನು ಚಿರಶಾಂತಿಯನ್ನು ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ. ನೊಂದ ಕುಟುಂಬದ ಜೊತೆ ನಮ್ಮ ಸರ್ಕಾರ ನಿಲ್ಲಲಿದೆ.
The discovery of six bodies in Bhutanal Lake in Vijayapura district is deeply shocking. It is especially heartbreaking that children are among the deceased.
Fire and Emergency Services personnel have recovered the bodies. A thorough investigation will be conducted to ascertain the facts.
I pray for peace for the departed souls. Our Government stands with the bereaved families in this difficult time. -
Dr. G Parameshwara
@DrParameshwara
ಇಂದು ನನಗೆ ಸಿಕ್ಕಿರುವ ಅಧಿಕಾರ, ಹುದ್ದೆ ಎಲ್ಲವೂ ಕನ್ನಡ ಜನತೆಯ ಪ್ರೀತಿ ಮತ್ತು ಆಶೀರ್ವಾದದ ಸಂಕೇತ.
ನೀವು ನೀಡಿರುವ ಜವಾಬ್ದಾರಿಯನ್ನು ನಾನು ಸಮರ್ಥವಾಗಿ ನಿಭಾಯಿಸಿದ್ದೇನೆ ಎನ್ನುವ ಸಂತೃಪ್ತಿ ನನಗಿದೆ. ಅದನ್ನು ನಿಮ್ಮ ಮಾತುಗಳಲ್ಲಿ ಕೇಳುವಾಗ ಮತ್ತಷ್ಟು ಖುಷಿಯಾಗುತ್ತದೆ.
ಈ ಪ್ರೀತಿ - ವಿಶ್ವಾಸಕ್ಕೆ ಧನ್ಯವಾದಗಳುThis media couldn't be displayed. See it on the original post. -
Dr. G Parameshwara
@DrParameshwara
Warm greetings to all Malayali brothers and sisters on the joyous occasion of Onam. May this festival of harvest fill every home with joy, peace and prosperity, and further strengthen the bonds of harmony and fraternity that unite us.
#happyonam -
Dr. G Parameshwara
@DrParameshwara
On Women’s Equality Day, we reaffirm our commitment to building a society where every woman enjoys equal rights, equal opportunities, dignity and a strong voice in shaping her future.
Women’s equality is not only a question of justice; it is essential for the social, economic and democratic progress of our society. Let us continue working towards a future where every woman can live, learn, work and lead without barriers.
#womensequalityday -
Dr. G Parameshwara
@DrParameshwara
ಅನಾಥರು ಹಾಗೂ ಬಡವರ ಸೇವೆಯನ್ನೇ ತಮ್ಮ ಬದುಕಿನ ಧ್ಯೇಯವನ್ನಾಗಿಸಿಕೊಂಡ ಭಾರತರತ್ನ ಮದರ್ ತೆರೇಸಾ ಅವರ ಜನ್ಮದಿನದಂದು ಗೌರವ ನಮನಗಳನ್ನು ಸಲ್ಲಿಸುತ್ತೇನೆ.
ಮಾನವೀಯ ಮೌಲ್ಯಗಳ ಸಾಕಾರ ಮೂರ್ತಿಯಾಗಿದ್ದ ಮದರ್ ತೆರೇಸಾ ಅವರ ಸಾಮಾಜಿಕ ಕಾಳಜಿ ಹಾಗೂ ಸೇವಾ ಮನೋಭಾವ ಸದಾ ನಮಗೆಲ್ಲರಿಗೂ ಪ್ರೇರಣೆ.
ಅಸಹಾಯಕರ ಬದುಕಿಗೆ ಭರವಸೆಯ ಬೆಳಕಾಗಿದ್ದ ಅವರ ನಿಸ್ವಾರ್ಥ ಸೇವೆಯನ್ನು ಸದಾ ಸ್ಮರಿಸೋಣ.
#motherteresa -
Dr. G Parameshwara
@DrParameshwara
ನಾಡಿನ ಸಮಸ್ತ ಮುಸ್ಲಿಂ ಬಾಂಧವರಿಗೆ ಈದ್ ಮಿಲಾದ್ ಹಬ್ಬದ ಶುಭಾಶಯಗಳು.
ಸೌಹಾರ್ದತೆಯ ಪ್ರತೀಕವಾದ ಪವಿತ್ರ ಈದ್ ಮಿಲಾದ್ ಎಲ್ಲರಿಗೂ ಸುಖ, ಶಾಂತಿ, ಸಮೃದ್ಧಿ, ನೆಮ್ಮದಿಯನ್ನು ನೀಡಲಿ ಎಂದು ಶುಭ ಹಾರೈಸುತ್ತೇನೆ. -
Dr. G Parameshwara
@DrParameshwara
Remembering Dr. N. S. Hardikar, distinguished freedom fighter, patriot and founder of the Congress Seva Dal, on his death anniversary.
His unwavering commitment to the freedom movement, discipline, public service and nation-building continues to inspire us.
#nshardikar -
Dr. G Parameshwara
@DrParameshwara
ಫಸಲ್ ಭೀಮಾ ಯೋಜನೆಯಡಿ ಈ ಬಾರಿ ದಾಖಲೆ ಮಟ್ಟದಲ್ಲಿ 49 ಲಕ್ಷ ಕೃಷಿ ಹಾಗೂ ತೋಟಗಾರಿಕಾ ರೈತರು ಬೆಳೆ ವಿಮೆ ಮಾಡಿಸಿದ್ದಾರೆ. ರೈತರಿಗೆ ಬೆಳೆ ವಿಮೆಯ ಮಹತ್ವ ತಿಳಿಸಿ, ನೋಂದಣಿಗೆ ಸರ್ಕಾರವೂ ಉತ್ತೇಜನ ನೀಡಿದೆ.
ಮಳೆ ಕೊರತೆಯಿಂದ ಬೀಜ ಬಿತ್ತನೆ ಸಾಧ್ಯವಾಗದ ಸಂದರ್ಭದಲ್ಲೂ ‘Prevented Sowing’ ಅಡಿಯಲ್ಲಿ ವಿಮಾ ಪರಿಹಾರ ಪಡೆಯುವ ಅವಕಾಶವಿದೆ. ಈ ಅವಕಾಶವನ್ನು ಬಳಸಿಕೊಂಡು ರೈತರು ಬೆಳೆ ವಿಮೆಗೆ ನೋಂದಣಿ ಮಾಡಿಕೊಳ್ಳುವಂತೆ ಉತ್ತೇಜಿಸಲಾಗಿದೆ.
Under the Fasal Bima Yojana, a record 49 lakh agriculture and horticulture farmers have enrolled for crop insurance this year. The Government has also actively encouraged farmers to understand the importance of crop insurance and register for coverage.
Even if sowing is not possible due to inadequate rainfall, farmers can claim compensation under the ‘Prevented Sowing’ provision. Farmers are being encouraged to make use of this benefit and enrol for crop insurance. -
Dr. G Parameshwara
@DrParameshwara
ಮುಖ್ಯಮಂತ್ರಿ ಶ್ರೀ @DKShivakumar ಅವರ ಅಧ್ಯಕ್ಷತೆಯಲ್ಲಿ ಇಂದು ಸಿಎಂ ಗೃಹಕಚೇರಿ ಕೃಷ್ಣಾದಲ್ಲಿ ಕಾಂಗ್ರೆಸ್ ಪಕ್ಷದ ಶಾಸಕರ ಸಭೆ ನಡೆಯಿತು.
ಶಾಸಕರ ಬೇಡಿಕೆಗಳನ್ನು ಆಲಿಸುವುದರ ಜೊತೆಗೆ, ವಿವಿಧ ತಾಲೂಕುಗಳು, ಜಿಲ್ಲೆಗಳ ಅಭಿವೃದ್ಧಿ ಕುರಿತು ಚರ್ಚಿಸಲಾಯಿತು.
ಈ ಸಂದರ್ಭದಲ್ಲಿ ಸಚಿವರುಗಳಾದ ಕೆ.ಹೆಚ್.ಮುನಿಯಪ್ಪ, ಪ್ರಿಯಾಂಕ್ ಖರ್ಗೆ, ಮಧು ಬಂಗಾರಪ್ಪ, ಬಿ.ಬಸವಂತಪ್ಪ, ಸತೀಶ್ ಜಾರಕಿಹೊಳಿ, ಹೆಚ್.ಸಿ. ಬಾಲಕೃಷ್ಣ, ಶಿವಲಿಂಗೇಗೌಡ, ಎಸ್.ಎಸ್. ಮಲ್ಲಿಕಾರ್ಜುನ, ಟಿ.ರಘುಮೂರ್ತಿ, ಕೆಪಿಸಿಸಿ ಅಧ್ಯಕ್ಷರು ಹಾಗೂ ವಿಧಾನ ಪರಿಷತ್ ಸದಸ್ಯರಾದ ಬಿ.ಕೆ.ಹರಿಪ್ರಸಾದ್ ಸೇರಿದಂತೆ ಹಲವು ಶಾಸಕರು ಉಪಸ್ಥಿತರಿದ್ದರು.
A meeting of Congress MLAs was held today at Chief Minister’s Residence Office, Krishna, chaired by Chief Minister Shri D.K. Shivakumar.
The meeting discussed the demands of MLAs and deliberated on the development of various taluks and districts.
Ministers K.H. Muniyappa, Priyank Kharge, Madhu Bangarappa, B. Basavanthappa, Satish Jarkiholi, H.C. Balakrishna, Shivalinge Gowda, S.S. Mallikarjun, T. Raghumurthy, KPCC President and MLC B.K. Hariprasad, among others, were present. -
Dr. G Parameshwara
@DrParameshwara
ಬರ ಪರಿಸ್ಥಿತಿ ಎದುರಿಸಲು ಸರ್ಕಾರ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದೆ. 758 ಗ್ರಾಮಗಳಿಗೆ 149 ಟ್ಯಾಂಕರ್ಗಳ ಮೂಲಕ ನೀರು ಪೂರೈಸಲಾಗುತ್ತಿದ್ದು, 714 ಖಾಸಗಿ ಕೊಳವೆ ಬಾವಿಗಳನ್ನು ಬಾಡಿಗೆಗೆ ಪಡೆಯಲಾಗಿದೆ. ನಗರ ಪ್ರದೇಶದ 114 ವಾರ್ಡ್ಗಳಿಗೂ ಟ್ಯಾಂಕರ್ ಮೂಲಕ ನೀರು ಪೂರೈಸಲಾಗುತ್ತಿದೆ.
ಮುಂದಿನ ಬೇಸಿಗೆಯಲ್ಲಿ 2,059 ಗ್ರಾಮ ಪಂಚಾಯತ್ಗಳಲ್ಲಿ ನೀರಿನ ಸಮಸ್ಯೆ ಎದುರಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ಅಗತ್ಯ ಸಿದ್ಧತೆಗಳನ್ನು ಈಗಾಗಲೇ ಮಾಡಿಕೊಳ್ಳಲಾಗಿದೆ.
The Government has taken all necessary precautionary measures to tackle the drought situation. Drinking water is being supplied to 758 villages through 149 tankers, while 714 private borewells have been hired. Tanker water is also being supplied to 114 wards in urban areas.
With the possibility of water shortages in 2,059 Gram Panchayats next summer, necessary preparations have already been made in advance. -
Dr. G Parameshwara
@DrParameshwara
ರಾಜ್ಯದ 102 ತಾಲೂಕುಗಳಲ್ಲಿ ಈಗಾಗಲೇ ಗ್ರೌಂಡ್ ಟ್ರೂಥಿಂಗ್ ಪೂರ್ಣಗೊಳಿಸಲಾಗಿದೆ. ಈ ವರದಿಯನ್ನು ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ, ಅಗತ್ಯವಿರುವ ತಾಲೂಕುಗಳನ್ನು ಬರಪೀಡಿತ ತಾಲೂಕುಗಳೆಂದು ಘೋಷಿಸಲಾಗುವುದು. ಬಳಿಕ ಕೇಂದ್ರ ಸರ್ಕಾರಕ್ಕೆ ಮೆಮೊರಾಂಡಮ್ ಸಲ್ಲಿಸಲಾಗುವುದು.
ಬರ ಪರಿಸ್ಥಿತಿಯ ಅವಲೋಕನ ನಿರಂತರ ಪ್ರಕ್ರಿಯೆಯಾಗಿರುವುದರಿಂದ, ಉಳಿದ ತಾಲೂಕುಗಳ ಸ್ಥಿತಿಗತಿಗಳನ್ನೂ ಪರಿಶೀಲಿಸಿ ಗ್ರೌಂಡ್ ಟ್ರೂಥಿಂಗ್ ನಡೆಸಲಾಗುವುದು. ಪರಿಸ್ಥಿತಿಗೆ ಅನುಗುಣವಾಗಿ ಮುಂದಿನ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು.
Ground-truthing has already been completed in 102 taluks across the State. The findings will be discussed in the next Cabinet meeting, following which the eligible taluks will be declared drought-affected. A memorandum will then be submitted to the Union Government.
As drought assessment is a continuous process, the situation in the remaining taluks will also be reviewed and ground-truthing carried out wherever necessary. Further action will be taken based on the situation. -
Dr. G Parameshwara
@DrParameshwara
ಬುಗಡನಹಳ್ಳಿ ಕೆರೆಯಲ್ಲಿ ನೀರಿನ ಮಟ್ಟ ಕಡಿಮೆಯಾಗಿತ್ತು. ಹೇಮಾವತಿ ಜಲಾಶಯದಲ್ಲಿ ನೀರು ಲಭ್ಯವಿರುವ ಹಿನ್ನೆಲೆಯಲ್ಲಿ, ತುಮಕೂರು ನಗರಕ್ಕೆ ಮುಂದಿನ ಮೂರುವರೆ ತಿಂಗಳ ಕುಡಿಯುವ ನೀರಿನ ಅಗತ್ಯವಿದೆ ಎಂದು ಮನವಿ ಮಾಡಿದ್ದರಿಂದ ನೀರು ಬಿಡಲಾಗಿದೆ. ಮತ್ತೆ ಡಿಸೆಂಬರ್ ವೇಳೆಗೆ ನೀರು ಅಗತ್ಯವಾಗಲಿದ್ದು, ಕೆರೆಯನ್ನು ತುಂಬಿಸಿಕೊಂಡರೆ ಮುಂದಿನ ಮೇ- ಜೂನ್ವರೆಗೆ ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗುವುದಿಲ್ಲ.
ಈ ಬಾರಿ ರಾಜ್ಯದಲ್ಲಿ ಬರಗಾಲದ ಪರಿಸ್ಥಿತಿ ಇರುವುದರಿಂದ ಬುಗಡನಹಳ್ಳಿ ಕೆರೆಗೆ ಹರಿದುಬರುವ ನೀರನ್ನು ಕುಡಿಯುವ ಉದ್ದೇಶಕ್ಕೆ ಮಾತ್ರ ಬಳಸಬೇಕು. ಯಾವುದೇ ಕಾರಣಕ್ಕೂ ಕೃಷಿ ಚಟುವಟಿಕೆಗಳಿಗೆ ಬಳಸಬಾರದು.
Water levels in Bugadanahalli Lake had declined. With water available in the Hemavathi Reservoir, a request was made to meet Tumakuru city’s drinking water needs for the next three-and-a-half months, following which water has been released.
The released water must be used only for drinking purposes and not for agricultural activities under any circumstances. -
Dr. G Parameshwara
@DrParameshwara
ರಾಜ್ಯದಲ್ಲಿ ಮುಂಗಾರು ಮಳೆ ಕೊರತೆ ಹಾಗೂ ಸುದೀರ್ಘ ಒಣಹವೆಯಿಂದ ಕೃಷಿ ಚಟುವಟಿಕೆಗಳಿಗೆ ಹಿನ್ನಡೆಯಾಗಿದೆ. ಬರದ ತೀವ್ರತೆಯನ್ನು ಕೇವಲ ಅಂಕಿ-ಅಂಶಗಳ ಆಧಾರದಲ್ಲಿ ಅಲ್ಲ, ನೆಲದ ವಾಸ್ತವ ಪರಿಸ್ಥಿತಿಯನ್ನು ಪರಿಶೀಲಿಸಿ ನಿರ್ಧರಿಸಬೇಕು. ಈ ನಿಟ್ಟಿನಲ್ಲಿ ರಾಜ್ಯದ ಬರಪೀಡಿತ ಪ್ರದೇಶಗಳಲ್ಲಿ *ಗ್ರೌಂಡ್ ಟ್ರೂಥಿಂಗ್ (ಕ್ಷೇತ್ರ ಪರಿಶೀಲನೆ)* ನಡೆಸಲಾಗುತ್ತಿದೆ.
The State has seen a setback in agricultural activities due to deficient monsoon rainfall and a prolonged dry spell. The severity of drought must be determined not merely on the basis of data, but by assessing the actual conditions on the ground.
Accordingly, ground truthing (field verification) is being carried out in drought-affected areas across the State. -
Dr. G Parameshwara
@DrParameshwara
ನಮ್ಮ ಸರ್ಕಾರ ಈಗಾಗಲೇ ಕುಡಿಯುವ ನೀರಿಗಾಗಿ ರಾಜ್ಯದ 31 ಜಿಲ್ಲೆಗಳಿಗೆ ₹117 ಕೋಟಿ ಬಿಡುಗಡೆ ಮಾಡಿದೆ. ಇದರ ಜೊತೆಗೆ ಪ್ರತಿಯೊಂದು ಗ್ರಾಮೀಣ ಕ್ಷೇತ್ರಕ್ಕೆ ತಲಾ ₹1 ಕೋಟಿಯಂತೆ ₹189 ಕೋಟಿ ಬಿಡುಗಡೆ ಮಾಡಲಾಗಿದೆ.
ಒಟ್ಟಾರೆ ₹306 ಕೋಟಿ ಹಣವನ್ನು ಕುಡಿಯುವ ನೀರಿನ ವ್ಯವಸ್ಥೆಗಾಗಿ ಬಿಡುಗಡೆ ಮಾಡಿದ್ದೇವೆ. ಬರ ಪರಿಸ್ಥಿತಿ ನಿಭಾಯಿಸಲು ನಮ್ಮ ಸರ್ಕಾರದ ಬಳಿ ಹಣದ ಕೊರತೆಯಿಲ್ಲ.
Our Government has already released ₹117 crore to 31 districts for drinking water supply. In addition, ₹189 crore has been released at the rate of ₹1 crore for each rural constituency.
In all, ₹306 crore has been released to ensure drinking water supply. There is no shortage of funds to tackle the drought situation. -
Dr. G Parameshwara
@DrParameshwara
ರಾಜ್ಯದಲ್ಲಿ 33 ವಾರಗಳಿಗೆ ಸಾಕಾಗುವಷ್ಟು ಸುಮಾರು 152 ಲಕ್ಷ ಟನ್ ಮೇವು ಸಂಗ್ರಹವಿದೆ. 44 ತಾಲೂಕುಗಳಲ್ಲಿ 25 ವಾರಗಳಿಗೆ ಹಾಗೂ 17 ತಾಲೂಕುಗಳಲ್ಲಿ 20 ವಾರಗಳಿಗೆ ಸಾಕಾಗುವಷ್ಟು ಮೇವಿನ ಲಭ್ಯತೆ ಇದೆ.
ನೀರಿನ ಆಸರೆ ಇರುವ ರೈತರಿಗೆ ಮೇವಿನ ಬೀಜದ ಕಿಟ್ಗಳನ್ನು ವಿತರಿಸಲು ₹25 ಕೋಟಿ ಬಿಡುಗಡೆ ಮಾಡಲಾಗಿದೆ. ಕೆಎಂಎಫ್ ವತಿಯಿಂದಲೂ ಮೇವಿನ ಬೀಜದ ಕಿಟ್ಗಳನ್ನು ನೀಡುತ್ತಿದ್ದೇವೆ.
The State has around 152 lakh tonnes of fodder, sufficient for 33 weeks. Fodder availability is enough for 25 weeks in 44 taluks and 20 weeks in 17 taluks.
Our Government has released ₹25 crore to distribute fodder seed kits to farmers with access to irrigation. KMF is also providing fodder seed kits to farmers. -
Dr. G Parameshwara
@DrParameshwara
ಇಂದು ನನಗೆ ಸಿಕ್ಕಿರುವ ಅಧಿಕಾರ, ಹುದ್ದೆ ಎಲ್ಲವೂ ಕನ್ನಡ ಜನತೆಯ ಪ್ರೀತಿ ಮತ್ತು ಆಶೀರ್ವಾದದ ಸಂಕೇತ.
ನೀವು ನೀಡಿರುವ ಜವಾಬ್ದಾರಿಯನ್ನು ನಾನು ಸಮರ್ಥವಾಗಿ ನಿಭಾಯಿಸಿದ್ದೇನೆ ಎನ್ನುವ ಸಂತೃಪ್ತಿ ನನಗಿದೆ. ಅದನ್ನು ನಿಮ್ಮ ಮಾತುಗಳಲ್ಲಿ ಕೇಳುವಾಗ ಮತ್ತಷ್ಟು ಖುಷಿಯಾಗುತ್ತದೆ.
ಈ ಪ್ರೀತಿ - ವಿಶ್ವಾಸಕ್ಕೆ ಧನ್ಯವಾದಗಳುThis media couldn't be displayed. See it on the original post. -
Dr. G Parameshwara
@DrParameshwara
Spoke to the media in Bengaluru today.
The CM will meet MLAs in batches through the day to hear their concerns and address their issues. As the ruling party, it is important for us to remain united and accessible to our elected representatives.
We have appointed one minister for each district to oversee both party affairs and development works, including resolving local issues.
We will also discuss the drought situation today. Based on the prescribed norms and ground-truthing, 102 taluks are currently facing drought conditions. We are reviewing the situation every week and will submit the comprehensive drought report to the Centre by the end of this month. -
Dr. G Parameshwara
@DrParameshwara
ಪ್ರತಿನಿತ್ಯ ಅನೇಕ ಶಾಸಕರುಗಳು ಮುಖ್ಯಮಂತ್ರಿಗಳನ್ನು ಭೇಟಿ ಮಾಡಲು ಪ್ರಯತ್ನಿಸುತ್ತಾರೆ. ಆ ಕಾರಣಕ್ಕಾಗಿ ಇಂದು ಮುಖ್ಯಮಂತ್ರಿಗಳು ಶಾಸಕರುಗಳ ಜೊತೆ ಸಭೆ ನಡೆಸಲಿದ್ದಾರೆ. ಅವರ ಸಮಸ್ಯೆಗಳನ್ನು ಆಲಿಸಿ, ಬಗೆಹರಿಸುವ ನಿಟ್ಟಿನಲ್ಲಿ ಚರ್ಚೆಗಳು ನಡೆಯಲಿದೆ.
ಬ್ಯಾಚ್ ಟು ಬ್ಯಾಚ್ ರೀತಿಯಲ್ಲಿ ಸಾಯಂಕಾಲದವರೆಗೆ ಶಾಸಕರುಗಳ ಜೊತೆ ಸಭೆಯನ್ನು ಮಾಡಿ ಸಮಸ್ಯೆಯನ್ನು ಆಲಿಸಿ ಮುಖ್ಯಮಂತ್ರಿಗಳು ಉತ್ತರವನ್ನು ಒದಗಿಸಲಿದ್ದಾರೆ.
ನಾವು ಪ್ರತಿ ಜಿಲ್ಲೆಗೆ ಒಬ್ಬ ಮಂತ್ರಿಯನ್ನು ನೇಮಕ ಮಾಡಿದ್ದೇವೆ. ಅವರು ಪಕ್ಷದ ಕೆಲಸವನ್ನು ಮಾಡಬೇಕು. ಜೊತೆಗೆ ಅಭಿವೃದ್ಧಿ ಕೆಲಸವನ್ನು ಮಾಡಬೇಕು. ಜಿಲ್ಲಾ ಮಂತ್ರಿಗಳಾಗಿದ್ದಾಗ, ಆ ಜಿಲ್ಲೆಗೆ ಸಂಬಂಧಿಸಿದ ಪಕ್ಷದ ಸಮಸ್ಯೆಯನ್ನು ಬಗೆಹರಿಸಬೇಕು. ಜೊತೆಗೆ ಅಭಿವೃದ್ಧಿ ಕೆಲಸಗಳನ್ನು ಮಾಡಬೇಕು. ಇದು ಮೊದಲಿನಿಂದಲೂ ನಡೆದುಕೊಂಡು ಬಂದಿರುವಂತದ್ದು.
ಆಗಸ್ಟ್ ಮಾಸಾಂತ್ಯದೊಳಗೆ ಕೇಂದ್ರಕ್ಕೆ ಬರ ವರದಿಯನ್ನುಸಲ್ಲಿಸುವ ಬಗ್ಗೆ ಇಂದಿನ ಸಭೆಯಲ್ಲಿ ಚರ್ಚೆ ಮಾಡುತ್ತೇವೆ. ಮಾನದಂಡಗಳ ಪ್ರಕಾರ, ಈಗ 102 ತಾಲೂಕುಗಳಲ್ಲಿ ಬರ ಇದೆ. ಗ್ರೌಂಡ್ ಟ್ರೂಥಿಂಗ್ ಮಾಡಿದ್ದನ್ನು ನಾವು ಸಚಿವ ಸಂಪುಟದಲ್ಲಿ ಚರ್ಚಿಸುತ್ತೇವೆ. ಪ್ರತಿ ವಾರವೂ ಈ ಬಗ್ಗೆ ವಿಮರ್ಶಿಸುತ್ತೇವೆ. ಈ ತಿಂಗಳ ಕೊನೆಯಲ್ಲಿ ಸಂಪೂರ್ಣ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸುತ್ತೇವೆ.
- ಇಂದು ನನ್ನ ನಿವಾಸದ ಬಳಿ ಮಾಧ್ಯಮದವರೊಂದಿಗೆ ಮಾತನಾಡಿದೆ. -
Dr. G Parameshwara
@DrParameshwara
ನಮ್ಮ ಸರ್ಕಾರವು ಬರ ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸಲು ಕೈಗೊಂಡಿರುವ ಕ್ರಮಗಳ ಬಗ್ಗೆ ನಿನ್ನೆ ಸದನಕ್ಕೆ ವಿವರಿಸಿದೆ.
ಈ ಕುರಿತಾದ ಪತ್ರಿಕಾ ವರದಿಗಳು ಹೀಗಿವೆ..
Yesterday, I briefed the House on the measures taken by our Government to effectively tackle the drought situation.
Here are some of the media reports on the same.. -
Dr. G Parameshwara
@DrParameshwara
₹3.49 crore has been sanctioned for the comprehensive development of Nanjangud Taluk Stadium. Of this, the indoor stadium building being constructed at a cost of ₹1.9 crore has been completed, with painting work currently in progress. The upgradation of facilities at the Taluk Stadium, at a cost of ₹1.5 crore, is also underway.
ನಂಜನಗೂಡು ತಾಲ್ಲೂಕು ಕ್ರೀಡಾಂಗಣದ ಸಮಗ್ರ ಅಭಿವೃದ್ಧಿಗೆ ₹3.49 ಕೋಟಿ ಮಂಜೂರು ಮಾಡಲಾಗಿದ್ದು, ಈ ಪೈಕಿ ₹1.9 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿರುವ ಒಳಾಂಗಣ ಕ್ರೀಡಾಂಗಣದ ಕಟ್ಟಡ ಕಾಮಗಾರಿ ಪೂರ್ಣಗೊಂಡಿದ್ದು, ಬಣ್ಣಬಳಿಯುವ ಕಾರ್ಯ ಪ್ರಗತಿಯಲ್ಲಿದೆ. ಇನ್ನುಳಿದ ₹1.5 ಕೋಟಿ ವೆಚ್ಚದಲ್ಲಿ ತಾಲ್ಲೂಕು ಕ್ರೀಡಾಂಗಣದ ಸೌಲಭ್ಯಗಳ ಉನ್ನತೀಕರಣ ಪ್ರಕ್ರಿಯೆ ಪ್ರಗತಿಯಲ್ಲಿದೆ.
#nanjangudtalukstadium -
Dr. G Parameshwara
@DrParameshwara
Water security is fundamental to the future of Tumakuru’s villages, farmers and families. The ₹1,000 crore Hemavathi Express Link Canal will help bring water to 94 villages across five taluks, fill tanks and recharge groundwater. With 75% of the required land already acquired and ₹450 crore released, the project is progressing towards implementation. We are committed to ensuring a more secure and sustainable water future for Tumakuru.
ತುಮಕೂರಿನ ಗ್ರಾಮೀಣ ಬದುಕಿಗೆ, ಕೃಷಿಕರಿಗೆ ಮತ್ತು ಪ್ರತಿ ಕುಟುಂಬಕ್ಕೆ ನೀರಿನ ಭದ್ರತೆ ಒದಗಿಸುವುದು ಬಹಳ ಮುಖ್ಯವಾಗಿದ್ದು, ಈ ನಿಟ್ಟಿನಲ್ಲಿ ನಮ್ಮ ಸರ್ಕಾರವು ₹1,000 ಕೋಟಿ ವೆಚ್ಚದ ಹೇಮಾವತಿ ಎಕ್ಸ್ಪ್ರೆಸ್ ಲಿಂಕ್ ಕಾಲುವೆ ಯೋಜನೆಯ ಅನುಷ್ಠಾನದಲ್ಲಿ ಮಹತ್ವದ ಹೆಜ್ಜೆ ಇಟ್ಟಿದೆ. ಈ ಯೋಜನೆಯು ಐದು ತಾಲೂಕುಗಳ 94 ಗ್ರಾಮಗಳಿಗೆ ನೀರು ಪೂರೈಸುವುದರ ಜೊತೆಗೆ, ಕೆರೆಗಳನ್ನು ತುಂಬಿಸಿ ಅಂತರ್ಜಲಮಟ್ಟ ಹೆಚ್ಚಿಸಲು ಸಹಕಾರಿಯಾಗಲಿದೆ.
ಈಗಾಗಲೇ 75% ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲಾಗಿದ್ದು, ₹450 ಕೋಟಿ ಅನುದಾನ ಬಿಡುಗಡೆಯಾಗಿದೆ. ಯೋಜನೆಯನ್ನು ಶೀಘ್ರದಲ್ಲೇ ಕಾರ್ಯರೂಪಕ್ಕೆ ತರಲಾಗುತ್ತಿದ್ದು, ತುಮಕೂರಿಗೆ ಶುದ್ಧ ನೀರಿನ ಲಭ್ಯತೆಯನ್ನು ಖಾತ್ರಿಪಡಿಸಲು ನಾವು ಬದ್ಧರಾಗಿದ್ದೇವೆ. -
Dr. G Parameshwara
@DrParameshwara
ನಮ್ಮ ಸರ್ಕಾರ ಜಾರಿಗೆ ತಂದ ಪಂಚ ಗ್ಯಾರಂಟಿ ಯೋಜನೆಗಳು ರಾಜ್ಯದ ಪ್ರಗತಿಯ ಪಥದಲ್ಲಿ ಹೊಸ ಮೈಲಿಗಲ್ಲನ್ನು ಸೃಷ್ಟಿಸುವ ಜೊತೆಗೆ ಜನರ ಬದುಕಿನ ಗತಿಯನ್ನೇ ಬದಲಿಸಿವೆ.
ಅನ್ನಭಾಗ್ಯ, ಶಕ್ತಿ, ಗೃಹಲಕ್ಷ್ಮಿ, ಗೃಹ ಜ್ಯೋತಿ, ಯುವ ನಿಧಿ ಯೋಜನೆಗಳಿಗೆ ಕಳೆದ 3 ವರ್ಷಗಳಲ್ಲಿ 1,90,000 ಕೋಟಿ ರೂಪಾಯಿಗಳ ಅನುದಾನವನ್ನು ಒದಗಿಸಲಾಗಿದೆ. ಆ ಪೈಕಿ ಈವರೆಗೆ 1,46,000 ಕೋಟಿ ರೂಪಾಯಿಗಳಿಗೂ ಹೆಚ್ಚಿನ ಮೊತ್ತವನ್ನು ಯೋಜನೆಗಳ ಅನುಷ್ಠಾನಕ್ಕೆ ವಿನಿಯೋಗಿಸಲಾಗಿದೆ.
ತುಮಕೂರು ಜಿಲ್ಲೆಯಲ್ಲಿ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ವಿವರ ನೋಡುವುದಾದರೆ, 6,27,049 ಪಡಿತರ ಚೀಟಿಗಳನ್ನು ಹೊಂದಿರುವ 22.25 ಲಕ್ಷ ಅರ್ಹ ಫಲಾನುಭವಿಗಳು ಅನ್ನಭಾಗ್ಯ ಯೋಜನೆಯ ಅನುಕೂಲ ಪಡೆದುಕೊಳ್ಳುತ್ತಿದ್ದಾರೆ. 2025-26ನೇ ಸಾಲಿನಲ್ಲಿ ಕನಿಷ್ಠ ಬೆಂಬಲ ಬೆಲೆಯಡಿ ಪ್ರತಿ ಕ್ವಿಂಟಾಲ್ ರಾಗಿಗೆ 4,886 ರೂಪಾಯಿಗಳ ದರದಲ್ಲಿ ಜಿಲ್ಲೆಯ 54,025 ಮಂದಿ ರೈತರಿಂದ ನೇರವಾಗಿ ಒಟ್ಟು 12,32,508 ಕ್ವಿಂಟಾಲ್ ರಾಗಿಯನ್ನು ಖರೀದಿಸಲಾಗಿದೆ.
ಮಹಿಳಾ ಪ್ರಯಾಣಿಕರು ಶಕ್ತಿ ಯೋಜನೆಯಡಿ ಈವರೆಗೆ 23.64 ಕೋಟಿ ಬಾರಿ ಸರ್ಕಾರಿ ಬಸ್ಗಳಲ್ಲಿ ಉಚಿತವಾಗಿ ಪ್ರಯಾಣಿಸಿದ್ದು, ಇದಕ್ಕಾಗಿ ಈವರೆಗೆ 758 ಕೋಟಿ ರೂಪಾಯಿಗಳನ್ನು ವಿನಿಯೋಗಿಸಲಾಗಿದೆ.
ಗೃಹಲಕ್ಷ್ಮಿ ಯೋಜನೆಯಡಿ ತುಮಕೂರು ಜಿಲ್ಲೆಯಲ್ಲಿ ಕಳೆದ 3 ವರ್ಷಗಳಲ್ಲಿ 6,19,452 ಫಲಾನುಭವಿಗಳ ಖಾತೆಗೆ ಒಟ್ಟು 6,555 ಕೋಟಿ ರೂಪಾಯಿಗಳನ್ನು ವರ್ಗಾಯಿಸಲಾಗಿದೆ.
ತುಮಕೂರು ಜಿಲ್ಲೆಯ 8 ಲಕ್ಷ ಕುಟುಂಬಗಳು ಗೃಹಜ್ಯೋತಿ ಯೋಜನೆ ಫಲಾನುಭವಿಗಳಾಗಿದ್ದು, ಯೋಜನೆಗಾಗಿ ಈವರೆಗೆ 872.07 ಕೋಟಿ ರೂಪಾಯಿಗಳನ್ನು ವ್ಯಯಿಸಲಾಗಿದೆ.
ಯುವನಿಧಿ ಯೋಜನೆಯಡಿ ಜಿಲ್ಲೆಯಲ್ಲಿ ಇದುವರೆಗೂ 10,814 ಅರ್ಹ ಫಲಾನುಭವಿಗಳಿಗೆ ಒಟ್ಟು 34.38 ಕೋಟಿ ರೂಪಾಯಿಗಳ ನಿರುದ್ಯೋಗ ಭತ್ಯೆಯನ್ನು ಡಿಬಿಟಿ ಮೂಲಕ ಪಾವತಿ ಮಾಡಲಾಗಿದೆ.
ಮಧ್ಯವರ್ತಿಗಳ ಹಾವಳಿಯಿಲ್ಲದೆ ಸರ್ಕಾರದ ನೆರವು ನೇರವಾಗಿ ಜನರ, ಅದರಲ್ಲೂ ಮಹಿಳೆಯರ ಕೈಸೇರುತ್ತಿದೆ. ಆ ಮೂಲಕ ರಾಜ್ಯದ ಕಾರ್ಮಿಕ ಶಕ್ತಿಯಲ್ಲಿ ಮಹಿಳೆಯರ ಭಾಗೀದಾರಿಕೆ ಶೇ.23 ರಷ್ಟು ಹೆಚ್ಚಾಗಿದೆ. ಹೆಣ್ಣುಮಕ್ಕಳು ಸ್ವಾವಂಲಂಬಿಗಳಾಗಿ ಬದುಕು ಕಟ್ಟಿಕೊಳ್ಳಲು ಸಾಧ್ಯವಾಗಿದೆ. ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದ ಲಕ್ಷಾಂತರ ಬಡ ಕುಟುಂಬಗಳು ಗ್ಯಾರಂಟಿಗಳ ನೆರವಿನಿಂದ ಚೇತರಿಸಿಕೊಂಡಿವೆ.
ನಮ್ಮ ಈ ಗ್ಯಾರಂಟಿಗಳು ಯೋಜನೆಗಳು ಕರ್ನಾಟಕವನ್ನು ಹಿಂದೆಂದಿಗಿಂತಲೂ ಸದೃಢ ಮತ್ತು ಕ್ರೀಯಾಶೀಲ ರಾಜ್ಯವನ್ನಾಗಿಸುವ ಜೊತೆಗೆ ಕರ್ನಾಟಕದ ಅಭಿವೃದ್ಧಿ ಮಾದರಿಯನ್ನು ದೇಶಕ್ಕೆ ಪರಿಚಯಿಸಿವೆ.
#guaranteesarkaraThis media couldn't be displayed. See it on the original post. -
Dr. G Parameshwara
@DrParameshwara
ಶೂಟಿಂಗ್ ಕ್ರೀಡೆಯಲ್ಲಿ ರಾಜ್ಯದ ಯುವ ಪ್ರತಿಭೆಗಳಿಗೆ ಹೆಚ್ಚಿನ ಅವಕಾಶಗಳನ್ನು ಕಲ್ಪಿಸಲು ಸರ್ಕಾರ ನಿರಂತರವಾಗಿ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸುತ್ತಿದೆ. ಯುವ ಶೂಟರ್ಗಳಿಗೆ ಗುಣಮಟ್ಟದ ತರಬೇತಿ, ಉತ್ತಮ ಸೌಲಭ್ಯ ಮತ್ತು ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಮಿಂಚುವ ಅವಕಾಶ ಕಲ್ಪಿಸುವುದು ಸರ್ಕಾರದ ಉದ್ದೇಶವಾಗಿದೆ.
The Government is continuously strengthening infrastructure to create greater opportunities for the State’s young talent in shooting sports. Our aim is to provide young shooters with quality training, better facilities, and opportunities to excel at the State and national levels. -
Dr. G Parameshwara
@DrParameshwara
ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ದರಖಾಸ್ತು ಪೋಡಿ ಅಭಿಯಾನವು ಯಶಸ್ಸಿನ ಹಾದಿಯಲ್ಲಿದ್ದು, ಹೆಚ್ಚಿನ ಪ್ರಗತಿಗೆ ಭೂಮಾಪನ ಇಲಾಖೆ ವತಿಯಿಂದ ಅಧಿಕಾರಿಗಳ ಜೊತೆ ನಿಯಮಿತ ವಿಡಿಯೋ ಸಂವಾದದ ಮೂಲಕ ಪ್ರಗತಿ ಪರಿಶೀಲನೆ ನಡೆಸಲಾಗುತ್ತಿದೆ.
ಭೂಮಾಪಕರಿಗೆ ಅಳತೆ ಕಾರ್ಯದ ತ್ವರಿತ ನಿರ್ವಹಣೆಗೆ ರೋವರ್ ಉಪಕರಣಗಳನ್ನು ಹಂತ ಹಂತವಾಗಿ ವಿತರಿಸಲಾಗುತ್ತಿದೆ. ಹೆಚ್ಚಿನ ಪ್ರಕರಣಗಳು ಬಾಕಿ ಇರುವ ತಾಲ್ಲೂಕುಗಳಿಗೆ ಕಡಿಮೆಯಿರುವ ತಾಲ್ಲೂಕಿನಿಂದ ಭೂಮಾಪಕರನ್ನು ನಿಯೋಜಿಸಲಾಗುತ್ತಿದೆ.
The State Government’s ambitious Darakhasthu Podi campaign is making steady progress. To accelerate implementation, the Survey Department is regularly reviewing progress through video conferences with officials and providing necessary guidance.
Rover equipment is being distributed to surveyors in phases to speed up measurement work. Surveyors are also being deployed from taluks with fewer pending cases to taluks where the pendency is higher.
#podimuktagramaabhiyan #nannabhoomi -
Dr. G Parameshwara
@DrParameshwara
ಕರ್ನಾಟಕ ರಾಜ್ಯ ಕಂದಾಯ ಇಲಾಖೆ ಗ್ರಾಮ ಸಹಾಯಕರ ಸಂಘದವರು ಇಂದು ಫ್ರೀಡಂ ಪಾರ್ಕ್ನಲ್ಲಿ ನಡೆಸುತ್ತಿದ್ದ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ, ವಿವಿಧ ಬೇಡಿಕೆಗಳನ್ನೊಳಗೊಂಡ ಮನವಿ ಪತ್ರವನ್ನು ಸ್ವೀಕರಿಸಿದೆ.
ಆ ಬಳಿಕ ಮಾತನಾಡಿ, ನಿಮ್ಮದು ನ್ಯಾಯಯುತವಾಗಿರುವಂತಹ ಬೇಡಿಕೆ. ನಿಮ್ಮ ಸಂಕಷ್ಟಗಳು, ಸಮಸ್ಯೆಗಳನ್ನು ಮುಖ್ಯಮಂತ್ರಿಗಳ ಜೊತೆಗೆ ಚರ್ಚೆ ಮಾಡಿ, ಬಗೆಹರಿಸಲು ಎಲ್ಲಾ ರೀತಿಯ ಪ್ರಮಾಣಿಕ ಪ್ರಯತ್ನವನ್ನು ಮಾಡುತ್ತೇನೆ.
ನೀವು ಪ್ರತಿಭಟನೆ ನಡೆಸುತ್ತಿರುವ ವಿಚಾರವನ್ನು ಮುಖ್ಯಮಂತ್ರಿಗಳ ಗಮನಕ್ಕೂ ತಂದಿದ್ದೇನೆ. ನಾಳೆ ಅಥವಾ ನಾಡಿದ್ದು ಸಂಘದ ಐದಾರು ಮುಖಂಡರುಗಳನ್ನು ನನ್ನ ಕಚೇರಿಯಲ್ಲಿ ಭೇಟಿ ಮಾಡಿ ಚರ್ಚಿಸುತ್ತೇನೆ. ಆ ಬಳಿಕ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿಸುತ್ತೇನೆ. ನಿಮ್ಮ ಪರವಾಗಿ ನಾನು ನಿಲ್ಲುತ್ತೇನೆ ಎಂಬ ಭರವಸೆಯನ್ನು ನೀಡಿದೆ.
I visited the protest site at Freedom Park today, where members of the Karnataka State Revenue Department Village Assistants’ Association were staging a protest, and received their memorandum containing various demands.
Speaking on the occasion, I said that their demands were genuine and justified. I assured them that I would discuss their difficulties and problems with the Chief Minister and make every sincere effort to resolve them.
I have also brought the matter of their protest to the attention of the Chief Minister. I will meet with five or six representatives of the association at my office tomorrow or the day after and discuss their concerns. Following that, I will facilitate a meeting with the Chief Minister.
I assured them that I would stand by them and represent their concerns. -
Dr. G Parameshwara
@DrParameshwara
The state is currently facing a severe drought situation. I appeal to the people of the state to understand the gravity of the situation and give priority to conserving groundwater.
Our government has taken several measures to effectively tackle the drought situation. Drinking water is being supplied to 758 villages through 149 tankers. We have hired 714 private borewells. In urban areas, water is being supplied through tankers to 114 wards in 18 local bodies. Here too, 18 private borewells have been hired. Anticipating that drinking water problems may arise in 2,059 Gram Panchayats during the coming summer if the situation worsens, appropriate preparations have already been made.
The state has around 152 lakh tonnes of fodder stock, which is sufficient for 33 weeks. There is enough fodder for 25 weeks in 44 taluks and for 20 weeks in 17 taluks. Meanwhile, we have released ₹25 crore to provide fodder seed kits to farmers who have access to water. Kits are also being distributed through KMF. I have appealed to farmers who have grown fodder to preserve and store it carefully.
Our government has already released ₹117 crore to all 31 districts of the state. In addition, ₹189 crore has been released at the rate of ₹1 crore for each rural constituency. In total, ₹306 crore has been released for drinking water-related purposes. We have no shortage of funds to tackle the drought situation.
Under the Fasal Bima Yojana, a record 49 lakh farmers engaged in agriculture and horticulture have enrolled for crop insurance this year. The government has also encouraged this. If farmers are unable to sow their crops, they can receive insurance compensation under the “Prevented Sowing” category. Farmers have been encouraged to make use of this provision and enrol themselves.
The Chief Minister and I have held review meetings with officials and elected representatives in the Belagavi, Kalaburagi and Bengaluru Revenue Divisions. We have inspected farmers’ plantations, fields and agricultural lands. I personally visited Tumakuru, Chikkaballapur, Kolar, Chitradurga and Belagavi districts to assess the situation. Our other ministers are also visiting the districts assigned to them and reviewing the situation.
Based on the forecast issued by the India Meteorological Department in April this year, we have held several meetings and video conferences with the concerned officials, including Deputy Commissioners and Chief Executive Officers of Zilla Panchayats, and issued appropriate directions. The primary objective is to ensure that people and livestock do not face any shortage of drinking water, that appropriate crop varieties are selected based on rainfall conditions, and that adequate monitoring is carried out to prevent fodder shortages for livestock. We have also directed officials to ensure that health problems and infectious diseases caused by contaminated water do not arise and to prevent people from being forced to migrate in search of employment. The government is closely monitoring the situation and taking all necessary measures to manage it.
To prevent drought-induced migration, we have undertaken 16,460 works under the VB G Ram G scheme and generated 65.19 lakh person-days of employment from July 1 till date.
The drought declaration process is being hindered by the drought guidelines issued by the Central Government in 2020. We have completed the ground-truthing exercise for the 102 taluks that currently meet the eligibility criteria. The matter will be discussed in the next Cabinet meeting, following which the eligible taluks will be declared drought-affected and a memorandum will be submitted to the Central Government. Since this is a continuous process, the situation in the remaining taluks will also be monitored, ground-truthing will be undertaken, and further action will be taken accordingly.
Many of the provisions in the drought management manual newly adopted by the Central Government are not farmer-friendly. Therefore, we have written to the Prime Minister and the concerned Union Ministers urging them to relax these provisions. We have also appealed to members of the Opposition to extend their support to the state government on this issue.
Our government is taking the drought situation very seriously and has made all necessary preparations to ensure that neither people nor livestock face any hardship.
- I explained to the House today the measures being taken to effectively tackle the drought situation. -
Dr. G Parameshwara
@DrParameshwara
ರಾಜ್ಯವು ಪ್ರಸ್ತುತ ಸಾಲಿನಲ್ಲಿ ತೀವ್ರ ಸ್ವರೂಪದ ಬರ ಪರಿಸ್ಥಿತಿಯನ್ನು ಎದುರಿಸುತ್ತಿದೆ. ರಾಜ್ಯದ ಜನತೆ ಕೂಡ ಪರಿಸ್ಥಿತಿಯ ಗಂಭೀರತೆಯನ್ನು ಅರಿತುಕೊಂಡು ಅಂತರ್ಜಲ ಸಂರಕ್ಷಣೆಗೆ ಆದ್ಯತೆ ನೀಡಬೇಕೆಂದು ಮನವಿ ಮಾಡುತ್ತೇನೆ.
ನಮ್ಮ ಸರ್ಕಾರವು ಬರ ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸಲು ಅನೇಕ ಕ್ರಮಗಳನ್ನು ಕೈಗೊಂಡಿದೆ. ರಾಜ್ಯದ 758 ಗ್ರಾಮಗಳಿಗೆ 149 ಟ್ಯಾಂಕರುಗಳ ಮೂಲಕ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದೆ. 714 ಖಾಸಗಿ ಕೊಳವೆ ಬಾವಿಗಳನ್ನು ಬಾಡಿಗೆಗೆ ಪಡೆದುಕೊಳ್ಳಲಾಗಿದೆ. ನಗರ ಪ್ರದೇಶದ 18 ಸ್ಥಳೀಯ ಸಂಸ್ಥೆಗಳ 114 ವಾರ್ಡ್ಗಳಿಗೆ ಟ್ಯಾಂಕರ್ಗಳ ಮೂಲಕ ನೀರು ಸರಬರಾಜು ಮಾಡುತ್ತಿದ್ದೇವೆ. ಇಲ್ಲಿಯೂ 18 ಖಾಸಗಿ ಕೊಳವೆ ಬಾವಿಗಳನ್ನು ಬಾಡಿಗೆಗೆ ಪಡೆಯಲಾಗಿದೆ. ಪರಿಸ್ಥಿತಿ ತೀವ್ರವಾದರೆ ಮುಂದಿನ ಬೇಸಿಗೆಯಲ್ಲಿ 2,059 ಗ್ರಾಮ ಪಂಚಾಯತ್ಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉದ್ಭವಿಸಹುದು ಎಂದು ಅಂದಾಜು ಮಾಡಿ ಅದಕ್ಕೆ ಸೂಕ್ತ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ.
ರಾಜ್ಯದಲ್ಲಿ 152 ಲಕ್ಷ ಟನ್ಗಳಷ್ಟು ಮೇವಿನ ಸಂಗ್ರಹವಿದೆ. ಇದು 33 ವಾರಗಳಿಗೆ ಸಾಕಾಗುತ್ತದೆ. 44 ತಾಲೂಕುಗಳಲ್ಲಿ 25 ವಾರಗಳಿಗೆ ಹಾಗೂ 17 ತಾಲೂಕುಗಳಲ್ಲಿ 20 ವಾರಗಳಿಗೆ ಸಾಕಾಗುವಷ್ಟು ಮೇವಿನ ಸಂಗ್ರಹವಿದೆ. ಇದರ ನಡುವೆ ನೀರಿನ ಆಸರೆ ಹೊಂದಿರುವ ರೈತರಿಗೆ ಮೇವಿನ ಬೀಜದ ಕಿಟ್ಗಳನ್ನು ನೀಡಲು ₹25 ಕೋಟಿ ಬಿಡುಗಡೆ ಮಾಡಿದ್ದೇವೆ. ಕೆಎಂಎಫ್ ಕಡೆಯಿಂದಲೂ ಕಿಟ್ಗಳನ್ನು ನೀಡುತ್ತಿದ್ದೇವೆ. ಮೇವು ಬೆಳೆದ ರೈತರು ಅದನ್ನು ಜೋಪಾನ ಮಾಡಬೇಕೆಂದು ವಿನಂತಿಸಿದ್ದೇನೆ.
ನಮ್ಮ ಸರ್ಕಾರ ಈಗಾಗಲೇ ರಾಜ್ಯದ 31 ಜಿಲ್ಲೆಗಳಿಗೆ ₹117 ಕೋಟಿ ಬಿಡುಗಡೆ ಮಾಡಿದೆ. ಇದರ ಜೊತೆಗೆ ಪ್ರತೀ ಗ್ರಾಮೀಣ ಕ್ಷೇತ್ರಕ್ಕೆ ತಲಾ ₹1 ಕೋಟಿಯಂತೆ ₹189 ಕೋಟಿ ಬಿಡುಗಡೆ ಮಾಡಿದೆ. ಒಟ್ಟಾರೆ ₹306 ಕೋಟಿಗಳನ್ನು ಕುಡಿಯುವ ನೀರಿನ ಉದ್ದೇಶಗಳಿಗಾಗಿ ಬಿಡುಗಡೆ ಮಾಡಿದ್ದೇವೆ. ಬರ ಪರಿಸ್ಥಿತಿಯನ್ನು ನಿಭಾಯಿಸಲು ನಮ್ಮಲ್ಲಿ ಹಣದ ಕೊರತೆಯಿಲ್ಲ.
ಫಸಲ್ ಭೀಮಾ ಯೋಜನೆಯಲ್ಲಿ ಈ ಬಾರಿ ದಾಖಲೆ ಮಟ್ಟದಲ್ಲಿ ಕೃಷಿ ಹಾಗೂ ತೋಟಗಾರಿಕೆ ಮಾಡುವ 49 ಲಕ್ಷ ರೈತರು ಬೆಳೆ ವಿಮೆ ಮಾಡಿಸಿದ್ದಾರೆ. ಇದಕ್ಕೆ ಸರ್ಕಾರವೂ ಸಹ ಒತ್ತಾಸೆ ನೀಡಿದೆ. ಬೀಜ ಬಿತ್ತಲು ಸಾಧ್ಯವಾಗದಿದ್ದರೆ Prevented sowing ಎಂಬ ಕೆಟಗರಿಯಡಿ ವಿಮಾ ಪರಿಹಾರ ನೀಡಲು ಸಾಧ್ಯವಿದೆ. ಅದರಲ್ಲಿನ ಅವಕಾಶಗಳನ್ನು ಬಳಸಿಕೊಂಡು ಸಹ ನೋಂದಣಿ ಮಾಡಲು ಉತ್ತೇಜಿಸಲಾಗಿದೆ.
ಮುಖ್ಯಮಂತ್ರಿಗಳು ಹಾಗೂ ನಾನು ಬೆಳಗಾವಿ, ಕಲಬುರಗಿ ಮತ್ತು ಬೆಂಗಳೂರು ಕಂದಾಯ ವಿಭಾಗಗಳಲ್ಲಿ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳೊಂದಿಗೆ ಪರಿಶೀಲನಾ ಸಭೆಗಳನ್ನು ನಡೆಸಿದ್ದೇವೆ. ರೈತರ ತೋಟ, ಹೊಲ ಗದ್ದೆಗಳನ್ನು ಪರಿಶೀಲಿಸಿದ್ದೇವೆ. ಸ್ವತಃ ನಾನು ತುಮಕೂರು, ಚಿಕ್ಕಬಳ್ಳಾಪುರ, ಕೋಲಾರ, ಚಿತ್ರದುರ್ಗ, ಬೆಳಗಾವಿ ಜಿಲ್ಲೆಗಳಿಗೆ ಹೋಗಿ ಪರಿಸ್ಥಿತಿಯನ್ನು ಅವಲೋಕಿಸಿದ್ದೇನೆ. ನಮ್ಮ ಉಳಿದ ಸಚಿವರುಗಳು ಜವಾಬ್ದಾರಿ ನೀಡಿರುವ ಜಿಲ್ಲೆಗಳಿಗೆ ಹೋಗಿ ಪರಿಸ್ಥಿತಿಯನ್ನು ಅವಲೋಕಿಸುತ್ತಿದ್ದಾರೆ.
ಭಾರತೀಯ ಹವಾಮಾನ ಇಲಾಖೆಯು ಈ ವರ್ಷದ ಏಪ್ರಿಲ್ ತಿಂಗಳಲ್ಲಿ ನೀಡಿದ ಮುನ್ಸೂಚನೆಯನ್ನು ಆಧರಿಸಿ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಸೇರಿದಂತೆ ಸಂಬಂಧಿತ ಅಧಿಕಾರಿಗಳೊಂದಿಗೆ ಹಲವು ಸಭೆಗಳನ್ನು, ವಿಡಿಯೋ ಕಾನ್ಫರೆನ್ಸ್ಗಳನ್ನು ನಡೆಸಿ ಸೂಕ್ತ ನಿರ್ದೇಶನಗಳನ್ನು ನೀಡಿದ್ದೇವೆ. ಮುಖ್ಯವಾಗಿ ಜನ, ಜಾನುವಾರುಗಳಿಗೆ ಕುಡಿಯುವ ನೀರಿಗೆ ತೊಂದರೆಯಾಗಬಾರದು, ಮಳೆಯ ಸ್ಥಿತಿಗತಿಗಳನ್ನಾಧರಿಸಿ ಸೂಕ್ತ ಬೆಳೆ ತಳಿಗಳನ್ನು ನಿರ್ಧಾರ ಮಾಡಬೇಕು. ಜಾನುವಾರುಗಳಿಗೆ ಮೇವಿನ ಕೊರತೆಯಾಗದಂತೆ ನಿಗಾವಹಿಸಬೇಕು. ಕಲುಷಿತ ನೀರಿನಿಂದ ಉಂಟಾಗುವ ಆರೋಗ್ಯದ ಸಮಸ್ಯೆಗಳು, ಸಾಂಕ್ರಾಮಿಕ ರೋಗಗಳು ಉದ್ಭವವಾಗದಂತೆ ನಿಗಾವಹಿಸಬೇಕು ಮತ್ತು ಜನರು ನಿರುದ್ಯೋಗದ ಕಾರಣದಿಂದ ಗುಳೆ ಹೋಗುವ ಪರಿಸ್ಥಿತಿಯನ್ನು ತಪ್ಪಿಸಬೇಕೆಂದು ನಿರ್ದೇಶನಗಳನ್ನು ನೀಡಿ ಸರ್ಕಾರವು ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತೆಗೆದುಕೊಂಡು ನಿಭಾಯಿಸುತ್ತಿದೆ.
ಬರದ ಕಾರಣದಿಂದ ಜನರು ಗುಳೆ ಹೋಗುವುದನ್ನು ತಪ್ಪಿಸಲು ವಿಬಿ ಜಿ ರಾಮ್ ಜಿ ಯೋಜನೆಯಡಿ 16,460 ಕಾಮಗಾರಿಗಳನ್ನು ಕೈಗೊಂಡು ಜುಲೈ 1 ರಿಂದ ಈವರೆಗೆ 65.19 ಲಕ್ಷ ಮಾನವ ದಿನಗಳನ್ನು ಸೃಜಿಸಿದ್ದೇವೆ.
ಬರ ಘೋಷಣೆ ಮಾಡುವುದಕ್ಕೆ ಕೇಂದ್ರ ಸರ್ಕಾರವು 2020ರಲ್ಲಿ ಬಿಡುಗಡೆಗೊಳಿಸಿರುವ ಬರ ನಿಯಮಗಳು ಅಡ್ಡಿಯಾಗಿದೆ. ಈಗ ಅರ್ಹತೆ ಪಡೆದಿರುವ 102 ತಾಲೂಕುಗಳ ಗ್ರೌಂಡ್ ಟ್ರೂಥಿಂಗ್ ಅನ್ನು ಮುಗಿಸಿದ್ದೇವೆ. ಇದನ್ನು ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ಬರ ಪೀಡಿತ ತಾಲೂಕುಗಳೆಂದು ಘೋಷಿಸಲಾಗುವುದು ಹಾಗೂ ಕೇಂದ್ರ ಸರ್ಕಾರಕ್ಕೆ ಮೆಮೊರಾಂಡಮ್ ಸಲ್ಲಿಸಲಾಗುವುದು. ಇದು ನಿರಂತರವಾದ ಪ್ರಕ್ರಿಯೆ ಆಗಿರುವುದರಿಂದ ಉಳಿದ ತಾಲೂಕುಗಳ ಸ್ಥಿತಿಗತಿಗಳನ್ನೂ ಅವಲೋಕಿಸಿಕೊಂಡು ಗ್ರೌಂಡ್ ಟ್ರೂಥಿಂಗ್ ಮಾಡಿ ಮುಂದಿನ ಕ್ರಮಗಳನ್ನು ಕೈಗೊಳ್ಳಲಾಗುವುದು.
ಕೇಂದ್ರ ಸರ್ಕಾರವು ಹೊಸದಾಗಿ ಅಳವಡಿಸಿರುವ ಬರ ನಿರ್ವಹಣೆ ಕೈಪಿಡಿಯ ಅನೇಕ ಮಾರ್ಗಸೂಚಿಗಳು ರೈತರಿಗೆ ಪೂರಕವಾಗಿಲ್ಲ. ಆದ್ದರಿಂದ ಅವುಗಳನ್ನು ಸಡಿಲಗೊಳಿಸುವಂತೆ ಪ್ರಧಾನಿಗಳು ಹಾಗೂ ಕೇಂದ್ರ ಸರ್ಕಾರದ ಸಂಬಂಧಿತ ಸಚಿವರುಗಳಿಗೆ ಪತ್ರ ಬರೆದು ಒತ್ತಾಯಿಸಿದ್ದೇವೆ. ಈ ವಿಚಾರದಲ್ಲಿ ಸರ್ಕಾರದ ನೆರವಿಗೆ ಬರಬೇಕೆಂದು ವಿರೋಧ ಪಕ್ಷದ ಸದಸ್ಯರಲ್ಲಿಯೂ ನಾವು ಮನವಿ ಮಾಡಿದ್ದೇವೆ.
ನಮ್ಮ ಸರ್ಕಾರವು ಬರವನ್ನು ಗಂಭೀರವಾಗಿ ಪರಿಗಣಿಸಿದ್ದು, ಜನ-ಜಾನುವಾರುಗಳಿಗೆ ಯಾವುದೇ ಸಮಸ್ಯೆಯಾಗದ ಹಾಗೆ ನಿರ್ವಹಿಸಲು ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಿಕೊಂಡಿದೆ.
- ಬರ ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸಲು ಕೈಗೊಂಡಿರುವ ಕ್ರಮಗಳ ಬಗ್ಗೆ ಇಂದು ಸದನಕ್ಕೆ ವಿವರಿಸಿದೆ. -
Dr. G Parameshwara
@DrParameshwara
ಇಂದು ನನಗೆ ಸಿಕ್ಕಿರುವ ಅಧಿಕಾರ, ಹುದ್ದೆ ಎಲ್ಲವೂ ಕನ್ನಡ ಜನತೆಯ ಪ್ರೀತಿ ಮತ್ತು ಆಶೀರ್ವಾದದ ಸಂಕೇತ.
ನೀವು ನೀಡಿರುವ ಜವಾಬ್ದಾರಿಯನ್ನು ನಾನು ಸಮರ್ಥವಾಗಿ ನಿಭಾಯಿಸಿದ್ದೇನೆ ಎನ್ನುವ ಸಂತೃಪ್ತಿ ನನಗಿದೆ. ಅದನ್ನು ನಿಮ್ಮ ಮಾತುಗಳಲ್ಲಿ ಕೇಳುವಾಗ ಮತ್ತಷ್ಟು ಖುಷಿಯಾಗುತ್ತದೆ.
ಈ ಪ್ರೀತಿ - ವಿಶ್ವಾಸಕ್ಕೆ ಧನ್ಯವಾದಗಳುThis media couldn't be displayed. See it on the original post. -
Dr. G Parameshwara
@DrParameshwara
ರಾಜ್ಯದಲ್ಲಿ ಬರ ನಿರ್ವಹಣೆಗೆ ಸಮರೋಪಾದಿ ಕ್ರಮ ತೆಗೆದುಕೊಳ್ಳಲಾಗಿದ್ದು, ಕುಡಿಯುವ ನೀರು ಪೂರೈಕೆಗೆ ಮೊದಲ ಆದ್ಯತೆಯನ್ನು ನೀಡಲಾಗಿದೆ. ರಾಜ್ಯದ ಪ್ರತಿ ವಿಧಾನಸಭಾ ಕ್ಷೇತ್ರಗಳಿಗೆ ಬರ ನಿರ್ವಹಣೆಗೆಂದು ತಲಾ ₹1 ಕೋಟಿ ಬಿಡುಗಡೆ ಮಾಡಲಾಗಿದೆ. ಟ್ಯಾಂಕರ್ ಹಾಗೂ ಬಾಡಿಗೆ ಕೊಳವೆಬಾವಿಗಳ ಮೂಲಕ ಕುಡಿಯುವ ನೀರನ್ನು ಪೂರೈಸಲು ಕ್ರಮ ತೆಗೆದುಕೊಳ್ಳಲಾಗಿದೆ.
The State Government has taken proactive measures to manage the drought, with top priority given to ensuring an uninterrupted supply of drinking water. ₹1 crore has been released to each Assembly constituency for drought management. Drinking water is being supplied through tankers and hired borewells wherever required.
#drinkingwater -
Dr. G Parameshwara
@DrParameshwara
ರಾಜ್ಯದಲ್ಲಿ ಬರಪೀಡಿತ ಜಿಲ್ಲೆಗಳಲ್ಲಿ ಪರಿಹಾರ ಕಾರ್ಯವನ್ನು ಸಮರೋಪಾದಿಯಲ್ಲಿ ನಡೆಸಲಾಗುತ್ತಿದ್ದು, ಜಾನುವಾರುಗಳ ಮೇವು ಕೊರತೆ ನೀಗಿಸಲು ಹಾಗೂ ಸ್ಥಳೀಯರಿಗೆ ಉದ್ಯೋಗ ಕಲ್ಪಿಸಲು ಮೊದಲ ಪ್ರಾಶಸ್ತ್ಯವನ್ನು ನೀಡಲಾಗಿದೆ.
ನೀರಾವರಿ ಸೌಲಭ್ಯ ಹೊಂದಿರುವ ರೈತರಿಗೆ ಉಚಿತ ಮೇವು ಕಿಟ್ ವಿತರಿಸಲು ₹25 ಕೋಟಿ ವ್ಯಯಿಸಲಾಗುತ್ತಿದೆ. ವಿಬಿಜಿ ರಾಮ್ ಜಿ ಯೋಜನೆಯಡಿ 234 ಬ್ಲಾಕ್ಗಳಲ್ಲಿ 16,993 ಕಾಮಗಾರಿಗಳು ಪ್ರಗತಿಯಲ್ಲಿದ್ದು, ಜುಲೈ 1ರಿಂದ ಆಗಸ್ಟ್ 12ರವರೆಗೆ 33.33 ಲಕ್ಷ ಮಾನವ ದಿನಗಳ ಉದ್ಯೋಗ ಸೃಷ್ಟಿಸುವ ಮೂಲಕ ಉದ್ಯೋಗಕ್ಕಾಗಿ ಗುಳೆ ಹೋಗುವುದನ್ನು ತಪ್ಪಿಸಲಾಗಿದೆ.
Drought relief measures are being carried out proactively across the State’s drought-affected districts, with priority given to addressing the shortage of fodder for livestock and providing employment to local communities.
₹25 crore is being utilised to distribute free fodder kits to farmers with irrigation facilities. Under the VB-G RAM G scheme, 16,993 works are underway across 234 blocks, generating 33.33 lakh person-days of employment between July 1 and August 12, thereby helping prevent distress migration in search of work.
#livestockfeed #jobcreation -
Dr. G Parameshwara
@DrParameshwara
₹2 ಕೋಟಿ ವೆಚ್ಚದಲ್ಲಿ ಹಾವೇರಿ ಜಿಲ್ಲೆಯ ರಟ್ಟಿಹಳ್ಳಿಯಲ್ಲಿ ತಾಲ್ಲೂಕು ಕ್ರೀಡಾಂಗಣ ನಿರ್ಮಾಣ ಯೋಜನೆ ಪ್ರಗತಿಯಲ್ಲಿದ್ದು, ಪ್ರಸ್ತುತ ನಿವೇಶನದ ಹದ್ದುಬಸ್ತು ಗುರುತಿಸಿ, ಇಲಾಖೆಯ ಸ್ವಾಧೀನಕ್ಕೆ ಹಸ್ತಾಂತರಗೊಂಡ ನಂತರ ನಿಯಮಾನುಸಾರ ವಿಸ್ತೃತ ಯೋಜನಾ ವರದಿ ಸಿದ್ಧಪಡಿಸಿ, ಕ್ರೀಡಾಂಗಣ ನಿರ್ಮಾಣಕ್ಕೆ ಕ್ರಮ ತೆಗೆದುಕೊಳ್ಳಲಾಗುವುದು.
The project to construct a Taluk Stadium at Rattihalli in Haveri district at a cost of ₹2 crore is progressing. Once the site boundaries are demarcated and the land is formally handed over to the Department, a Detailed Project Report (DPR) will be prepared as per norms, following which further steps will be taken to construct the stadium.
#talukstadium #rattihalli -
Dr. G Parameshwara
@DrParameshwara
ಇಂಧನ ಹಾಗೂ ಪ್ರವಾಸೋದ್ಯಮ ಸಚಿವರು, ಆತ್ಮೀಯರು ಆದ @thekjgeorge ಅವರಿಗೆ ಜನ್ಮದಿನದ ಶುಭಾಶಯಗಳು.
ಭಗವಂತನು ತಮಗೆ ಉತ್ತಮ ಆಯುರಾರೋಗ್ಯವನ್ನು ಕೊಟ್ಟು ಕರುಣಿಸಲಿ, ಇನ್ನಷ್ಟು ಜನಪರ ಕಾರ್ಯಗಳಿಗೆ ಶಕ್ತಿಯನ್ನು ನೀಡಲಿ ಎಂದು ಶುಭ ಹಾರೈಸುತ್ತೇನೆ. -
Dr. G Parameshwara
@DrParameshwara
ತುಮಕೂರಿನ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ, ₹132 ಕೋಟಿ ಅಂದಾಜು ವೆಚ್ಚದಲ್ಲಿ ಕೈಗೊಂಡಿರುವ 300 ಹಾಸಿಗೆಗಳ ಸಾಮರ್ಥ್ಯದ ನೂತನ ಕಟ್ಟಡ ನಿರ್ಮಾಣ ಕಾರ್ಯವನ್ನು ವೀಕ್ಷಿಸಿದೆ. ಈ ವೇಳೆ ಹಳೇ ಕಟ್ಟಡ ತೆರವು ಕಾರ್ಯವನ್ನೂ ಪರಿಶೀಲಿಸಿದೆ.
-
Dr. G Parameshwara
@DrParameshwara
ಶನಿವಾರ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನಲ್ಲಿ ನೂತನವಾಗಿ ನಿರ್ಮಿಸಲಾದ ಡಾ. ಬಿ.ಆರ್.ಅಂಬೇಡ್ಕರ್ ಭವನ - ಅನುಭವ ಕೇಂದ್ರ ಹಾಗೂ ಭಗವಾನ್ ಬುದ್ಧರ ಪುತ್ಥಳಿ, ಭಾರತರತ್ನ ಡಾ. ಬಿ.ಆರ್. ಅಂಬೇಡ್ಕರ್ ಪುತ್ಥಳಿ ಮತ್ತು ಡಿಜಿಟಲ್ ಅಧ್ಯಯನ ಕೇಂದ್ರವನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದೆ.
ಈ ಕುರಿತಾದ ಪತ್ರಿಕಾ ವರದಿಗಳು ಹೀಗಿವೆ.. -
Dr. G Parameshwara
@DrParameshwara
On #nationalspaceday, we celebrate India’s remarkable journey in space exploration and honour the scientists, engineers and institutions driving our nation towards new frontiers. May their achievements inspire young minds to pursue science, innovation and discovery.
#isro -
Dr. G Parameshwara
@DrParameshwara
ಸಂಶೋಧಕ, ನಿಘಂಟು ತಜ್ಞ, ಪದ್ಮಶ್ರೀ ಪುರಸ್ಕೃತರಾದ ಪ್ರೊ. ಜಿ.ವೆಂಕಟಸುಬ್ಬಯ್ಯ ಅವರ ಜನ್ಮದಿನದಂದು ಅವರನ್ನು ಸ್ಮರಿಸಿ, ನಮಿಸುತ್ತೇನೆ.
'ನಡೆದಾಡುವ ನಿಘಂಟು' ಎಂದೇ ಖ್ಯಾತರಾಗಿರುವ ಶ್ರೀಯುತರು ಕನ್ನಡ ಸಾಹಿತ್ಯ ಕ್ಷೇತಕ್ಕೆ ನೀಡಿದ ಕೊಡುಗೆಗಳು ಅಗಣ್ಯ. -
Dr. G Parameshwara
@DrParameshwara
ಕೊರಟಗೆರೆ ಕ್ಷೇತ್ರದ ವಿವಿಧೆಡೆ ಜರುಗಿದ ಕಾಂಗ್ರೆಸ್ ಪಕ್ಷದ ಮುಖಂಡರುಗಳ ಕುಟುಂಬದವರ ವಿವಾಹ ಆರತಕ್ಷತೆ ಸಮಾರಂಭದಲ್ಲಿ ಪಾಲ್ಗೊಂಡು, ನೂತನ ವಧು ವರರಿಗೆ ಶುಭ ಹಾರೈಸಿದೆ.
-
Dr. G Parameshwara
@DrParameshwara
ತುಮಕೂರು ನಗರಕ್ಕೆ ಕುಡಿಯುವ ನೀರು ಪೂರೈಸುವ 'ಬುಗುಡನಹಳ್ಳಿ ಕೆರೆ'ಗೆ ಹೇಮಾವತಿ ಜಲಾಶಯದಿಂದ ನೀರನ್ನು ಹರಿಸಲಾಗುತ್ತಿದ್ದು, ಇಂದು ಸಂಜೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಅಧಿಕಾರಿಗಳಿಂದ ಮಾಹಿತಿ ಪಡೆದೆ.
-
Dr. G Parameshwara
@DrParameshwara
ತುಮಕೂರಿನ ಅಗಳಕೋಟೆಯ ಡಾ. ಹೆಚ್.ಎಂ.ಗಂಗಾಧರಯ್ಯ ಮೆಮೋರಿಯಲ್ ಹಾಲ್ನಲ್ಲಿ ಜಿಲ್ಲಾ ಕಾಂಗ್ರೆಸ್ ವತಿಯಿಂದ ಆಯೋಜಿಸಿದ್ದ "ಎಸ್ಐಆರ್: ಇದು ಮತದಾರರ ಪಟ್ಟಿ ಪರಿಷ್ಕರಣೆಯಲ್ಲ, ಮತಾಧಿಕಾರ ಹರಣ" ಕುರಿತ ಕಾರ್ಯಗಾರದಲ್ಲಿ ಪಾಲ್ಗೊಂಡು ಮಾತನಾಡಿದೆ.
-
Dr. G Parameshwara
@DrParameshwara
2025-26ನೇ ಸಾಲಿನ ಲೆಕ್ಕ ಶೀರ್ಷಿಕೆ 5054ರ ಅಡಿ ಕೆಆರ್ಐಡಿಎಲ್ ಮೂಲಕ ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಹೆಗ್ಗೆರೆ ಗ್ರಾಮದಲ್ಲಿ 8 ಕೋಟಿ ರೂ. ವೆಚ್ಚದಲ್ಲಿ ಕೈಗೊಳ್ಳುತ್ತಿರುವ ಗ್ರಾಮೀಣ ರಸ್ತೆ ಅಭಿವೃದ್ಧಿ ಮತ್ತು ಸೇತುವೆ ಕಾಮಗಾರಿಗಳಿಗೆ ಇಂದು ಭೂಮಿಪೂಜೆಯನ್ನು ನೆರವೇರಿಸಿದೆ.
-
Dr. G Parameshwara
@DrParameshwara
Children from oppressed communities must become educated. Even if it means having one less meal, we should not worry. We must resolve to educate our children.
Only Education can bring about social change. -
Dr. G Parameshwara
@DrParameshwara
ಶೋಷಿತ ಸಮುದಾಯಗಳ ಮಕ್ಕಳು ವಿದ್ಯಾವಂತರಾಗಬೇಕು. ಒಂದೊತ್ತು ಊಟ ಕಡಿಮೆಯಾದರೂ ಚಿಂತೆ ಇಲ್ಲ. ನಮ್ಮ ಮಕ್ಕಳನ್ನು ವಿದ್ಯಾವಂತರನ್ನಾಗಿಸುತ್ತೇವೆ ಎಂಬ ಸಂಕಲ್ಪ ಮಾಡಬೇಕು.
ಶಿಕ್ಷಣ ಮಾತ್ರವೇ ಸಮಾಜವನ್ನು ಬದಲಾಯಿಸುತ್ತದೆ. -
Dr. G Parameshwara
@DrParameshwara
Celebrated the success of our young kayaking & canoeing champions who brought laurels to Karnataka at the National Championship in Bhopal & the Asmita Championship in Raipur.
Proud that Amanikere facility in Tumakuru supported their journey. Congratulations to our champions!🏅 -
Dr. G Parameshwara
@DrParameshwara
Children from oppressed communities must become educated. Even if it means having one less meal, we should not worry. We must resolve to educate our children. Education alone can transform us.
Dr. M.C. Sudhakar has created history by establishing the Dr. B.R. Ambedkar Bhavan – Anubhava Kendra in Chintamani taluk. I have not seen an Ambedkar Bhavan of this kind anywhere in the state, including Bengaluru.
Understanding Dr. Ambedkar’s achievements and history is not an easy task. That work has been undertaken here. The Ambedkar Anubhava Kendra and Digital Study Centre will be extremely useful for schoolchildren in their learning. Dr. M.C. Sudhakar’s name will remain etched in the history of Chintamani. All of you must stand by him.
Dr. Ambedkar was born into an extremely poor family. He overcame numerous hardships and pursued higher education. Babasaheb Ambedkar was the first person from the Dalit community in India to pursue education abroad. During that period, six people in the world were regarded as great intellectuals, and Babasaheb was among them. At Columbia University, he acquired knowledge that would contribute to transforming India.
Today, India has grown into the world’s fourth-largest economy. The credit for the economic self-reliance we are achieving must also go to Babasaheb Ambedkar. The Reserve Bank of India is also one of his contributions. Ambedkar was among the first leaders to emphasise women’s representation. He introduced the Hindu Code Bill to ensure equality for women. Every woman in India should keep the photograph of such a great leader and pay homage to him.
No other country had incorporated equality, justice and fraternity into its Constitution in the same manner. Without these three principles, democracy would have no meaning. Babasaheb Ambedkar insisted that our people must have the right to choose their representatives and be represented. He held discussions with Mahatma Gandhi on this issue. If we follow Ambedkar’s path, we will achieve self-respect, equality and fraternity. Let us all walk the path shown by Ambedkar.
We are witnessing the state of society today. People from oppressed communities have become educated, officers and ministers. Yet, the fact that society has still not fully accepted oppressed communities is evident from the recent incident involving Mallikarjun Kharge. It is difficult to understand what message was intended to be conveyed to society by purifying a place visited by AICC President Mallikarjun Kharge. A similar act of purification was carried out after Babu Jagjivan Ram visited Banaras Hindu University. No one condemned such regressive actions. We must all wake up and take a stand against such practices.
We have been fighting to bring about change for oppressed communities. Karnataka was the first state in the country to introduce the SCSP/TSP legislation. By bringing this legislation, Siddaramaiah has secured a permanent place in the hearts of all of us. We are all striving to bring change by following the path shown by Babasaheb Ambedkar.
— Spoke after inaugurating the newly constructed Dr. B.R. Ambedkar Bhavan – Anubhava Kendra, the statue of Lord Buddha, the statue of Bharat Ratna Dr. B.R. Ambedkar and the Digital Study Centre in Chintamani city of Chikkaballapur district today. -
Dr. G Parameshwara
@DrParameshwara
ಶೋಷಿತ ಸಮುದಾಯಗಳ ಮಕ್ಕಳು ವಿದ್ಯಾವಂತರಾಗಬೇಕು. ಒಂದೊತ್ತು ಊಟ ಕಡಿಮೆಯಾದರೂ ಚಿಂತೆ ಇಲ್ಲ. ನಮ್ಮ ಮಕ್ಕಳನ್ನು ವಿದ್ಯಾವಂತರನ್ನಾಗಿಸುತ್ತೇವೆ ಎಂಬ ಸಂಕಲ್ಪ ಮಾಡಬೇಕು. ಶಿಕ್ಷಣ ಮಾತ್ರ ಸಮಾಜವನ್ನು ಬದಲಾಯಿಸುತ್ತದೆ.
ಚಿಂತಾಮಣಿ ತಾಲೂಕಿನಲ್ಲಿ ಡಾ. ಬಿ.ಆರ್.ಅಂಬೇಡ್ಕರ್ ಭವನ - ಅನುಭವ ಕೇಂದ್ರವನ್ನು ನಿರ್ಮಿಸುವ ಮೂಲಕ ಡಾ. ಎಂ.ಸಿ.ಸುಧಾಕರ್ ಅವರು ಇತಿಹಾಸ ಸೃಷ್ಟಿಸಿದ್ದಾರೆ. ಇಡೀ ರಾಜ್ಯದಲ್ಲಿ ಬೆಂಗಳೂರು ನಗರ ಸೇರಿದಂತೆ ಎಲ್ಲಿಯೂ ಇಂತಹ ಅಂಬೇಡ್ಕರ್ ಭವನ ನೋಡಿಲ್ಲ.
ಅಂಬೇಡ್ಕರ್ ಅವರ ಸಾಧನೆ ಮತ್ತು ಇತಿಹಾಸವನ್ನು ಅರ್ಥೈಸುವುದು ಅಷ್ಟು ಸುಲಭದ ಕೆಲಸವಲ್ಲ. ಆ ಕೆಲಸವನ್ನು ಇಲ್ಲಿ ಮಾಡಲಾಗಿದೆ. ಶಾಲಾ ಮಕ್ಕಳ ಕಲಿಕೆಗೆ ಅಂಬೇಡ್ಕರ್ ಅನುಭವ ಕೇಂದ್ರ, ಡಿಜಿಟಲ್ ಅಧ್ಯಯನ ಕೇಂದ್ರ ಅನುಕೂಲವಾಗಲಿದೆ. ಡಾ.ಎಂ.ಸಿ. ಸುಧಾಕರ್ ಅವರ ಹೆಸರು ಚಿಂತಾಮಣಿಯ ಇತಿಹಾಸದಲ್ಲಿ ಉಳಿಯಲಿದೆ. ನೀವೆಲ್ಲರೂ ಅವರ ಜೊತೆ ನಿಲ್ಲಬೇಕು.
ಅಂಬೇಡ್ಕರ್ ಅವರು ಅತ್ಯಂತ ಬಡ ಕುಟುಂಬದಲ್ಲಿ ಜನಿಸಿದವರು. ಎಲ್ಲ ಕಷ್ಟಗಳನ್ನು ಮೀರಿ ಪದವಿ ಪಡೆದುಕೊಂಡರು. ಹೊರದೇಶದಲ್ಲಿ ವ್ಯಾಸಂಗ ಮಾಡಿದ ದಲಿತ ಸಮುದಾಯಕ್ಕೆ ಸೇರಿದ ಭಾರತದ ಮೊದಲ ವ್ಯಕ್ತಿ ಬಾಬಾ ಸಾಹೇಬ್ ಅಂಬೇಡ್ಕರ್. ಆ ಕಾಲಘಟ್ಟದಲ್ಲಿ ಪ್ರಪಂಚದಲ್ಲಿ ಆರು ಜನರನ್ನು ಜ್ಞಾನಿಗಳು ಎಂದು ಹೇಳಲಾಗುತ್ತದೆ. ಅದರಲ್ಲಿ ಬಾಬಾ ಸಾಹೇಬರು ಕೂಡ ಒಬ್ಬರು. ಕೊಲಂಬಿಯಾ ವಿಶ್ವವಿದ್ಯಾಲಯದಲ್ಲಿ ಭಾರತವನ್ನು ಬದಲಾಯಿಸುವಂತ ಜ್ಞಾನ ಸಂಪಾದನೆ ಮಾಡಿದ್ದಾರೆ.
ಇಂದು ಭಾರತ ಪ್ರಪಂಚದ 4ನೇ ಆರ್ಥಿಕ ರಾಷ್ಟ್ರವಾಗಿ ಬೆಳೆದಿದೆ. ನಾವೆಲ್ಲ ಆರ್ಥಿಕ ಸ್ವಾವಲಂಬಿಗಳಾಗುತ್ತಿರುವುದಕ್ಕೆ ಬಾಬಾ ಸಾಹೇಬರಿಗೆ ಆ ಕೀರ್ತಿ ಸಲ್ಲಬೇಕು. ರಿಸರ್ವ್ ಬ್ಯಾಂಕ್ ಕೂಡ ಬಾಬಾ ಸಾಹೇಬರು ಕೊಟ್ಟ ಕೊಡುಗೆ. ಮಹಿಳೆಯರ ಪ್ರಾತಿನಿಧ್ಯಕ್ಕೆ ಮೊದಲು ಒತ್ತು ನೀಡಿದವರು ಅಂಬೇಡ್ಕರ್. ಮಹಿಳೆಯರಿಗೆ ಸಮಾನತೆ ಕಲ್ಪಿಸಲು ಹಿಂದೂ ಕೋಡ್ ಬಿಲ್ ತಂದರು. ಅಂತಹ ಮಹಾನ್ ನಾಯಕನ ಫೋಟೋವನ್ನು ಇಟ್ಟುಕೊಂಡು ಭಾರತ ದೇಶದ ಪ್ರತಿಯೊಬ್ಬ ಹೆಣ್ಣುಮಗಳು ಪೂಜೆ ಮಾಡಬೇಕು.
ಯಾವ ದೇಶಗಳು ಕೂಡ ಸಮಾನತೆ, ನ್ಯಾಯ, ಭ್ರಾತೃತ್ವವನ್ನು ಸಂವಿಧಾನದಲ್ಲಿ ಬರೆದಿಡುವ ಕೆಲಸ ಮಾಡಿಲ್ಲ. ಈ ಮೂರು ಅಂಶಗಳು ಇಲ್ಲವಾಗಿದ್ದರೆ ಪ್ರಜಾಪ್ರಭುತ್ವಕ್ಕೆ ಅರ್ಥ ಬರುತ್ತಿರಲಿಲ್ಲ. ನಮ್ಮವರನ್ನು ಆಯ್ಕೆ ಮಾಡುವ ಮತ್ತು ಪ್ರತಿನಿಧಿಸುವ ಹಕ್ಕು ನಮ್ಮವರಿಗೆ ಸಿಗಬೇಕು ಎಂಬುದನ್ನು ಬಾಬಾ ಸಾಹೇಬ್ರು ಒತ್ತಾಯಿಸಿದರು. ಈ ಕುರಿತು ಮಹಾತ್ಮ ಗಾಂಧೀಜಿಯವರೊಂದಿಗೆ ಸಂವಾದ ನಡೆಸಿದರು. ಅಂಬೇಡ್ಕರ್ ಅವರ ದಾರಿಯಲ್ಲಿ ನಾವು ನಡೆದರೆ, ಸ್ವಾಭಿಮಾನ, ಸಮಾನತೆ ಮತ್ತು ಭ್ರಾತೃತ್ವ ಬರುತ್ತದೆ. ನಾವೆಲ್ಲ ಅಂಬೇಡ್ಕರ್ ಅವರ ಹಾದಿಯಲ್ಲಿ ಸಾಗೋಣ.
ಪ್ರಸ್ತುತ ಸಮಾಜ ಯಾವ ರೀತಿ ಇದೆ ಎಂಬುದನ್ನು ನಾವು ನೋಡುತ್ತಿದ್ದೇವೆ. ಶೋಷಿತ ಸಮಾಜಕ್ಕೆ ಸೇರಿದವರು ವಿದ್ಯಾವಂತರಾಗಿದ್ದಾರೆ, ಅಧಿಕಾರಿಗಳಾಗಿದ್ದಾರೆ, ಮಂತ್ರಿಗಳಾಗಿದ್ದಾರೆ. ಆದರೆ, ಸಮಾಜ ಶೋಷಿತ ಸಮುದಾಯಗಳನ್ನು ಈವರೆಗೂ ಒಪ್ಪಲಿಲ್ಲ ಎಂಬುದಕ್ಕೆ ಇತ್ತೀಚೆಗೆ ಮಲ್ಲಿಕಾರ್ಜುನ ಖರ್ಗೆ ಅವರ ವಿಚಾರದಲ್ಲಿ ನಡೆದ ಘಟನೆಯೇ ಸಾಕ್ಷಿ. ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರು ಭೇಟಿ ನೀಡಿದ ಸ್ಥಳವನ್ನು ಶುದ್ಧೀಕರಿಸಿ ಸಮಾಜಕ್ಕೆ ಯಾವ ಸಂದೇಶ ನೀಡಲು ಹೊರಟಿದ್ದಾರೆ ಎಂಬುದು ಅರ್ಥವಾಗುತ್ತಿಲ್ಲ. ಬಾಬು ಜಗಜೀವನ್ ರಾಮ್ ಅವರು ಬನಾರಸ್ ವಿಶ್ವವಿದ್ಯಾಲಯಕ್ಕೆ ಭೇಟಿ ನೀಡಿದ ನಂತರವೂ ಶುದ್ಧೀಕರಣ ಮಾಡಿದ್ದರು. ಇಂತಹ ತಪ್ಪಿನ ನಡೆಗಳನ್ನು ಯಾರೊಬ್ಬರು ಖಂಡಿಸಲಿಲ್ಲ. ನಾವೆಲ್ಲರೂ ಇನ್ನಾದರೂ ಎಚ್ಚೆತ್ತುಕೊಳ್ಳಬೇಕು.
ಶೋಷಿತ ಸಮುದಾಯಗಳಿಗೆ ಬದಲಾವಣೆ ತರಬೇಕು ಎಂದು ಹೋರಾಟ ಮಾಡಿಕೊಂಡು ಬಂದಿದ್ದೇವೆ. ದೇಶದಲ್ಲಿ ಮೊಟ್ಟ ಮೊದಲ ಬಾರಿಗೆ ಎಸ್ಸಿಎಸ್ಪಿ / ಟಿಎಸ್ಪಿ ಜಾರಿಗೆ ತಂದಿರುವುದು ಕರ್ನಾಟಕ. ಈ ಕಾಯ್ದೆ ತರುವ ಮೂಲಕ ಸಿದ್ದರಾಮಯ್ಯ ಅವರು ನಮ್ಮೆಲ್ಲರ ಮನಸ್ಸಿನಲ್ಲಿ ಉಳಿದಿದ್ದಾರೆ. ನಾವೆಲ್ಲರೂ ಬಾಬಾ ಸಾಹೇಬರು ಹಾಕಿದ ದಾರಿಯಲ್ಲಿ ನಡೆದು ಬದಲಾವಣೆ ತರುವ ಪ್ರಯತ್ನ ಮಾಡುತ್ತಿದ್ದೇವೆ.
- ಇಂದು ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ನಗರದಲ್ಲಿ ನೂತನವಾಗಿ ನಿರ್ಮಿಸಲಾದ ಡಾ. ಬಿ.ಆರ್. ಅಂಬೇಡ್ಕರ್ ಭವನ - ಅನುಭವ ಕೇಂದ್ರ ಹಾಗೂ ಭಗವಾನ್ ಬುದ್ಧರ ಪುತ್ಥಳಿ, ಭಾರತ ರತ್ನ ಡಾ. ಬಿ.ಆರ್. ಅಂಬೇಡ್ಕರ್ ಪುತ್ಥಳಿ ಮತ್ತು ಡಿಜಿಟಲ್ ಅಧ್ಯಯನ ಕೇಂದ್ರವನ್ನು ಲೋಕಾರ್ಪಣೆಗೊಳಿಸಿದ ಬಳಿಕ ಮಾತನಾಡಿದೆ. -
Dr. G Parameshwara
@DrParameshwara
ಇಂದು ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನಲ್ಲಿ ನೂತನವಾಗಿ ನಿರ್ಮಿಸಲಾದ ಡಾ. ಬಿ.ಆರ್.ಅಂಬೇಡ್ಕರ್ ಭವನ - ಅನುಭವ ಕೇಂದ್ರ ಹಾಗೂ ಭಗವಾನ್ ಬುದ್ಧರ ಪುತ್ಥಳಿ, ಭಾರತರತ್ನ ಡಾ. ಬಿ.ಆರ್. ಅಂಬೇಡ್ಕರ್ ಪುತ್ಥಳಿ ಮತ್ತು ಡಿಜಿಟಲ್ ಅಧ್ಯಯನ ಕೇಂದ್ರವನ್ನು ಲೋಕಾರ್ಪಣೆಗೊಳಿಸಿದೆ.
ಈ ಸಂದರ್ಭದಲ್ಲಿ ಸಮಾಜ ಕಲ್ಯಾಣ ಸಚಿವರಾದ ಕೆ.ಹೆಚ್.ಮುನಿಯಪ್ಪ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರಾದ ಈಶ್ವರ ಖಂಡ್ರೆ, ಮಾಜಿ ಸಚಿವರಾದ ಡಾ. ಹೆಚ್.ಸಿ.ಮಹದೇವಪ್ಪ, ಡಾ. ಎಂ.ಸಿ.ಸುಧಾಕರ್, ಸಂಸದರಾದ ಎಂ. ಮಲ್ಲೇಶ್ ಬಾಬು, ವಿಧಾನ ಪರಿಷತ್ ಸದಸ್ಯರಾದ ಎಂ.ಎಲ್. ಅನೀಲ್ ಕುಮಾರ್, ಡಿ.ಟಿ.ಶ್ರೀನಿವಾಸ್, ಜಿಲ್ಲಾಧಿಕಾರಿಗಳಾದ ಪ್ರಭು ಜಿ, ಜಿಲ್ಲಾ ಪಂಚಾಯತ್ ಸಿಇಒ ಡಾ. ನವೀನ್ ಭಟ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಕುಶಲ್ ಚೌಕ್ಸೆ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. -
Dr. G Parameshwara
@DrParameshwara
ಚಿಂತಾಮಣಿ ತಾಲೂಕಿನ ಅಭಿವೃದ್ಧಿಗೆ ಮತ್ತೊಂದು ಮಹತ್ವದ ಹೆಜ್ಜೆ ✨
ಇಂದು ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕು ಪಂಚಾಯಿತಿ ಭವನದ ಅತ್ಯಾಧುನಿಕ ಹವಾನಿಯಂತ್ರಿತ 300 ಆಸನಗಳ ಸಾಮರ್ಥ್ಯಸೌಧ ಸಭಾಂಗಣ, 150 ಆಸನಗಳ ಸಭಾಭವನ ಹಾಗೂ ಚಿಂತಾಮಣಿ ನಗರದ ಹೃದಯಭಾಗದಲ್ಲಿರುವ ಆಜಾದ್ ಚೌಕ್ ಅಭಿವೃದ್ಧಿ ಕಾಮಗಾರಿಯನ್ನು ಉದ್ಘಾಟಿಸಿದೆ.
ದೂರದೃಷ್ಟಿಯಿಂದ ನಿರ್ಮಿಸಲಾಗಿರುವ ಈ ಸಭಾಂಗಣಗಳು ಆಡಳಿತಾತ್ಮಕ ಸಭೆಗಳು, ಸರ್ಕಾರಿ ಕಾರ್ಯಕ್ರಮಗಳು ಹಾಗೂ ವಿಡಿಯೋ ಸಂವಾದಗಳಿಗೆ ಉತ್ತಮ ವೇದಿಕೆಯಾಗಲಿವೆ.
ಈ ಸಂದರ್ಭದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರಾದ ಈಶ್ವರ ಖಂಡ್ರೆ, ಮಾಜಿ ಸಚಿವರು ಹಾಗೂ ಚಿಂತಾಮಣಿ ಶಾಸಕರಾದ ಡಾ. ಎಂ.ಸಿ. ಸುಧಾಕರ್, ವಿಧಾನ ಪರಿಷತ್ ಸದಸ್ಯರಾದ ಅನೀಲ್, ಜಿಲ್ಲಾಧಿಕಾರಿಗಳಾದ ಪ್ರಭು, ಪೊಲೀಸ್ ವರಿಷ್ಠಾಧಿಕಾರಿಗಳಾದ ಕುಶಾಲ್ ಚೌಕ್ಸಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
#chintamani #chikkaballapur #development #karnataka -
Dr. G Parameshwara
@DrParameshwara
x.com/i/broadcasts/1rxmqpObMpnxy
ಚಿಂತಾಮಣಿ ತಾಲೂಕಿನಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಡಾ. ಬಿ.ಆರ್.ಅಂಬೇಡ್ಕರ್ ಭವನ ಮತ್ತು ಅನುಭವ ಕೇಂದ್ರ ಲೋಕಾರ್ಪಣೆಗೊಳಿಸಿದ ಬಳಿಕ ನನ್ನ ಮಾತುಗಳು -
Dr. G Parameshwara
@DrParameshwara
x.com/i/broadcasts/1aJbdEDegXYKX
ಚಿಂತಾಮಣಿ ತಾಲೂಕಿನಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಡಾ. ಬಿ.ಆರ್.ಅಂಬೇಡ್ಕರ್ ಭವನ ಮತ್ತು ಅನುಭವ ಕೇಂದ್ರದ ಲೋಕಾರ್ಪಣೆ ಕಾರ್ಯಕ್ರಮದ ನೇರಪ್ರಸಾರ -
Dr. G Parameshwara
@DrParameshwara
ಸರಳ ಸಜ್ಜನಿಕೆಯ ರಾಜಕಾರಣಿಯಾಗಿ, ರಾಜ್ಯದ ಸಚಿವರಾಗಿ, ಮುಖ್ಯಮಂತ್ರಿಗಳಾಗಿ ಜನಪರ ಆಡಳಿತದ ಮೂಲಕ ಬೆಂಗಳೂರು ಹಾಗೂ ಕರ್ನಾಟಕದ ಅಭಿವೃದ್ಧಿಗೆ ಶ್ರಮಿಸಿದ ಆರ್.ಗುಂಡೂರಾವ್ ಅವರ ಪುಣ್ಯಸ್ಮರಣೆಯಂದು ನನ್ನ ಗೌರವ ನಮನಗಳು.
-
Dr. G Parameshwara
@DrParameshwara
ಕನ್ನಡ ಭಾಷೆಯ ಶ್ರೀಮಂತಿಕೆಯನ್ನು ತಮ್ಮ ವಿಶಿಷ್ಟ ಕೃತಿಗಳ ಮೂಲಕ ಜಗತ್ತಿಗೆ ಪರಿಚಯಿಸಿದ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಾದ ಯು.ಆರ್.ಅನಂತಮೂರ್ತಿ ಅವರ ಪುಣ್ಯಸ್ಮರಣೆಯಂದು ಅವರಿಗೆ ನನ್ನ ಗೌರವ ನಮನಗಳನ್ನು ಸಲ್ಲಿಸುತ್ತೇನೆ.
ಕನ್ನಡ ಸಾಹಿತ್ಯ ಲೋಕಕ್ಕೆ ಶ್ರೀಯುತರು ನೀಡಿದ ಕೊಡುಗೆಗಳು ಸದಾ ಸ್ಮರಣೀಯ. -
Dr. G Parameshwara
@DrParameshwara
CM Shri @DKShivakumar and I met the senior management delegation of Innovation Platform Capital (IPC), led by Gursharan Singh Kundan, to discuss their proposed integrated Green Data Centre in Tumakuru.
With a Phase-I investment of nearly ₹17,000 crore, the project envisions next-generation digital infrastructure powered by its own green energy, with zero fresh-water consumption and Zero Liquid Discharge (ZLD), aligned with the UN Sustainable Development Goals.
This initiative will further strengthen Karnataka’s position as a global hub for sustainable, next-generation digital infrastructure.
ಇಂದು ಮುಖ್ಯಮಂತ್ರಿ ಶ್ರೀ ಡಿ. ಕೆ. ಶಿವಕುಮಾರ್ ಅವರೊಂದಿಗೆ ಗುರ್ಶರಣ್ ಸಿಂಗ್ ಕುಂದನ್ ಅವರ ನೇತೃತ್ವದ ಇನ್ನೋವೇಶನ್ ಪ್ಲಾಟ್ಫಾರ್ಮ್ ಕ್ಯಾಪಿಟಲ್ (IPC)ನ ಹಿರಿಯ ಆಡಳಿತ ಮಂಡಳಿ ನಿಯೋಗವನ್ನು ಭೇಟಿ ಮಾಡಿ, ತುಮಕೂರಿನಲ್ಲಿ ಅವರು ಪ್ರಸ್ತಾಪಿಸಿರುವ ಸಮಗ್ರ ಗ್ರೀನ್ ಡೇಟಾ ಸೆಂಟರ್ ಯೋಜನೆ ಕುರಿತು ಚರ್ಚಿಸಿದೆವು.
ಸುಮಾರು ₹17,000 ಕೋಟಿ ಹೂಡಿಕೆಯ ಮೊದಲ ಹಂತದ ಈ ಯೋಜನೆಯು, ಪರಿಸರ ಸ್ನೇಹಿ ಇಂಧನ ಬಳಕೆ ಮೂಲಕ ಅತ್ಯಾಧುನಿಕ ಡಿಜಿಟಲ್ ಮೂಲಸೌಕರ್ಯವನ್ನು ನಿರ್ಮಿಸುವ ಉದ್ದೇಶ ಹೊಂದಿದೆ. ಈ ಯೋಜನೆಯಲ್ಲಿ ಹೊಸದಾಗಿ ಶುದ್ಧ ನೀರಿನ ಬಳಕೆ ಇಲ್ಲದಿರುವುದು ಹಾಗೂ ಶೂನ್ಯ ತ್ಯಾಜ್ಯ ನೀರಿನ ವಿಸರ್ಜನೆ (ZLD) ವ್ಯವಸ್ಥೆಯನ್ನು ಅಳವಡಿಸಿಕೊಳ್ಳಲಾಗುತ್ತಿದ್ದು, ವಿಶ್ವಸಂಸ್ಥೆಯ ಸುಸ್ಥಿರ ಅಭಿವೃದ್ಧಿ ಗುರಿಗಳಿಗೆ (UN SDGs) ಅನುಗುಣವಾಗಿದೆ.
ಈ ಮಹತ್ವದ ಯೋಜನೆಯು ಸುಸ್ಥಿರ ಹಾಗೂ ಭವಿಷ್ಯದ ತಲೆಮಾರಿನ ಡಿಜಿಟಲ್ ಮೂಲಸೌಕರ್ಯದ ಜಾಗತಿಕ ಕೇಂದ್ರವಾಗಿ ಕರ್ನಾಟಕದ ಸ್ಥಾನವನ್ನು ಮತ್ತಷ್ಟು ಬಲಪಡಿಸಲಿದೆ. -
Dr. G Parameshwara
@DrParameshwara
ರಾಜ್ಯದಲ್ಲಿ ಕರ್ನಾಟಕ ಪಬ್ಲಿಕ್ ಶಾಲೆಗಳನ್ನು ಅಭಿವೃದ್ಧಿ ಪಡಿಸಲು ₹1,750 ಕೋಟಿ ಏಶಿಯನ್ ಡೆವಲಪ್ಮೆಂಟ್ ಬ್ಯಾಂಕ್ (ADB) ನೆರವಿನ ಒಪ್ಪಂದಕ್ಕೆ ಮುಖ್ಯಮಂತ್ರಿ ಶ್ರೀ @DKShivakumar ಅವರ ಸಮ್ಮುಖದಲ್ಲಿ ಶಾಲಾ ಶಿಕ್ಷಣ ಇಲಾಖೆ ಹಾಗೂ ಏಷ್ಯನ್ ಡೆವಲಪ್ಮೆಂಟ್ ಬ್ಯಾಂಕ್ ಅಧಿಕಾರಿಗಳು ಸಹಿ ಹಾಕಿದರು. ಈ ಸಂದರ್ಭದಲ್ಲಿ ಹಾಜರಿದ್ದು, ನಮ್ಮ ಸರ್ಕಾರದ ನೂತನ ಪ್ರಯತ್ನಕ್ಕೆ ಶುಭ ಕೋರಿದೆ.
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವರಾದ @Madhu_Bangarapp, ಆರ್ಥಿಕ ವ್ಯವಹಾರಗಳ ಇಲಾಖೆಯ ಉಪ ಕಾರ್ಯದರ್ಶಿ ಸೌರಭ್ ಸಿಂಗ್, ಎಡಿಬಿ ನಿರ್ದೇಶಕಿ ಮಿಯೋ ಒಕಾ, ಕೈವಿ ಯಿಯೋ, ರಾಜ್ಯ ಶಾಲಾ ಶಿಕ್ಷಣ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿಗಳಾದ ಡಾ. ರಶ್ಮಿ ಮಹೇಶ್ ಹಾಗೂ ಎಡಿಬಿ ಅಧಿಕಾರಿಗಳು ಉಪಸ್ಥಿತರಿದ್ದರು.
The Education Department and officials of the Asian Development Bank (ADB) signed an agreement for ₹1,750 crore in ADB assistance to develop Karnataka Public Schools across the state, in the presence of Chief Minister Shri D. K. Shivakumar. I was present on the occasion and extended my best wishes for this new initiative of our government.
Minister for Primary and Secondary Education Shri Madhu Bangarappa, Deputy Secretary of the Department of Economic Affairs Shri Saurabh Singh, ADB Country Director Mio Oka, Kai Wei Yeo, Additional Chief Secretary of the School Education Department Dr. Rashmi Mahesh, and ADB officials were present on the occasion. -
Dr. G Parameshwara
@DrParameshwara
ಸ್ಕಾಟ್ಲೆಂಡ್ನ ಗ್ಲಾಸ್ಕೊದಲ್ಲಿ ನಡೆದ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಕಂಚಿನ ಪದಕ ಗೆದ್ದ ಕರ್ನಾಟಕದ ಹೆಮ್ಮೆಯ ಪ್ಯಾರಾ ಅಥ್ಲೀಟ್ ಕೆ.ಎಸ್.ಶಿಲ್ಪಾ ಅವರನ್ನು ಇಂದು ಅಭಿನಂದಿಸಿ, 20 ಲಕ್ಷ ರೂ.ಗಳ ಚೆಕ್ ಅನ್ನು ವಿತರಿಸಲಾಯಿತು.
ಶಿಲ್ಪಾ ಅವರ ಕ್ರೀಡಾ ಸಾಧನೆ ಯುವ ಕ್ರೀಡಾಪಟುಗಳಿಗೆ ಸ್ಫೂರ್ತಿಯಾಗಲಿ ಹಾಗೂ ಅವರು ಇನ್ನಷ್ಟು ಸಾಧನೆಗಳನ್ನು ಮಾಡುವಂತಾಗಲಿ ಎಂದು ಈ ಸಂದರ್ಭದಲ್ಲಿ ಶುಭ ಹಾರೈಸಿದೆ.
ಮುಖ್ಯಮಂತ್ರಿಗಳಾದ ಶ್ರೀ ಡಿ. ಕೆ. ಶಿವಕುಮಾರ್, ಕರ್ನಾಟಕ ಒಲಿಂಪಿಕ್ ಅಸೋಸಿಯೇಷನ್ ಅಧ್ಯಕ್ಷರು, ವಿಧಾನ ಪರಿಷತ್ ಸದಸ್ಯರಾದ ಗೋವಿಂದರಾಜು, ಶಾಸಕರಾದ ರವಿಶಂಕರ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
Karnataka’s proud para-athlete K. S. Shilpa, who won a bronze medal at the Commonwealth Games held in Glasgow, Scotland, was felicitated today and presented with a cheque of ₹20 lakh.
On this occasion, I extended my best wishes to Shilpa, hoping that her sporting achievement will inspire young athletes and motivate her to achieve even greater milestones in the future.
Chief Minister Shri D. K. Shivakumar, President of the Karnataka Olympic Association and MLC Govindaraju, MLA Ravishankar, and several others were present. -
Dr. G Parameshwara
@DrParameshwara
Growing older is inevitable. Growing up is optional.
Our senior citizens carry the wisdom of generations, deserve the care and respect they have earned, and have so much love to give.
On #worldseniorcitizensday, let us cherish their stories, value their presence, care for them with warmth, and make sure every evening of life is filled with dignity, companionship and joy.
Because the love and wisdom of a generation should never grow old.
#worldseniorcitizensday -
Dr. G Parameshwara
@DrParameshwara
ಗುರುವಾರ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ನಲ್ಲಿ ನಡೆದ ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಅವರ 111ನೇ ಜನ್ಮದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ, ಬಳಿಕ ಪ್ರೊ. ಪಿ.ವಿ.ನಂಜರಾಜ ಅರಸು ಅವರಿಗೆ 'ಡಿ. ದೇವರಾಜ ಅರಸು ಪ್ರಶಸ್ತಿ' ಪ್ರದಾನ ಮಾಡಿ, ಮಾತನಾಡಿದೆ.
ಈ ಕುರಿತಾದ ಪತ್ರಿಕಾ ವರದಿಗಳು ಹೀಗಿವೆ.. -
Dr. G Parameshwara
@DrParameshwara
ಸ್ತ್ರೀಯರ ಸ್ವಾವಲಂಬಿ ಬದುಕಿಗೆ ಭದ್ರ ಬುನಾದಿ ʼಅಕ್ಕ ಕೆಫೆʼ.
ಮಹಿಳೆಯರ ನೇತೃತ್ವದಲ್ಲಿ ನಡೆಯುತ್ತಿರುವ ಅಕ್ಕ ಕೆಫೆಗಳು ಗ್ರಾಮೀಣ ಪ್ರದೇಶದಲ್ಲಿ ಸ್ಥಳೀಯ ಆಹಾರವನ್ನು ಶುಚಿ - ರುಚಿಯಾಗಿ ಕೈಗೆಟಕುವ ದರದಲ್ಲಿ ಒದಗಿಸುತ್ತಿದೆ. ಆ ಮೂಲಕ ತಾಯಂದಿರು ಸ್ವಾವಲಂಬಿಗಳಾಗಿ, ಸ್ವತಂತ್ರವಾಗಿ ಜೀವನ ಕಟ್ಟಿಕೊಳ್ಳಲು ಅವಕಾಶ ಮಾಡಿಕೊಟ್ಟಿದ್ದೇವೆ.
ಇದು ಪ್ರತೀ ಹೆಣ್ಣುಮಗಳ ಬದುಕಿನಲ್ಲಾದ ಬದಲಾವಣೆ
ಪ್ರತಿ ಮನೆಯ ಮಹಾಲಕ್ಷ್ಮಿಯರ ಬದುಕಿನ ನೆಮ್ಮದಿಯ ದಿನಗಳು!
“Akka Café” — a strong foundation for women’s economic independence.
Led and operated by women, Akka Cafés provide clean, delicious and affordable local food in rural areas. Through this initiative, we have created opportunities for mothers to become economically independent and build a life of their own with dignity and confidence.
This is the change in the lives of every woman.
When every Mahalakshmi rises, every home prospers.
#varamahalakshmi #womenempowerment #karnatakaforwomen -
Dr. G Parameshwara
@DrParameshwara
ದೌರ್ಜನ್ಯ, ನಿರ್ಲಕ್ಷ್ಯ ಅಥವಾ ಶೋಷಣೆಗೆ ಒಳಗಾದ ಮಹಿಳೆಯರಿಗೆ ಸಕಾಲದಲ್ಲಿ ನೆರವು ಮತ್ತು ರಕ್ಷಣೆ ಒದಗಿಸಿ ಭಯಮುಕ್ತ ವಾತಾವರಣವನ್ನು ಸೃಷ್ಟಿಸಲು ಅಕ್ಕಪಡೆಗಳನ್ನು ಸ್ಥಾಪಿಸಿದ್ದೇವೆ.
ಹೆಣ್ಣುಮಕ್ಕಳು ಎದುರಿಸುತ್ತಿರುವ ಸಮಸ್ಯೆಗಳ ವಿರುದ್ಧದ ಹೋರಾಟಕ್ಕೆ ನಮ್ಮ ಸರ್ಕಾರ ಬೆಂಬಲವಾಗಿ ನಿಂತು, ಅವರಿಗೆ ಘನತೆ ಮತ್ತು ನೆಮ್ಮದಿಯ ಬದುಕನ್ನು ಕಲ್ಪಿಸಿಕೊಡಲು ಮುಂದಡಿಯಿಟ್ಟಿದ್ದೇವೆ.
ಇದು ಪ್ರತೀ ಹೆಣ್ಣುಮಗಳ ಬದುಕಿನಲ್ಲಾದ ಬದಲಾವಣೆ
ಪ್ರತಿ ಮನೆಯ ಮಹಾಲಕ್ಷ್ಮಿಯರ ಬದುಕಿನ ನೆಮ್ಮದಿಯ ದಿನಗಳು!
We have established Akka Squads to provide timely assistance and protection to women facing violence, neglect or exploitation, and to create a safe and fear-free environment for them.
Our government has stood firmly by women in their fight against the challenges they face and has taken a step forward to ensure that they can live with dignity, security and peace of mind.
This is the change in the lives of every woman.
When every Mahalakshmi rises, every home prospers.
#varamahalakshmi #womenempowerment #karnatakaforwomen -
Dr. G Parameshwara
@DrParameshwara
ʼಶಕ್ತಿʼ ಬರೀ ಯೋಜನೆಯಾಗಿರದೇ, ಶಿಕ್ಷಣ, ಉದ್ಯೋಗ, ಆಸ್ಪತ್ರೆ ಮುಂತಾದ ಕಡೆಗಳಿಗೆ ಮಹಿಳೆಯರು ಉಚಿತವಾಗಿ ಸಾರಿಗೆ ಬಸ್ಗಳಲ್ಲಿ ಪ್ರಯಾಣಿಸುವ ಸೌಲಭ್ಯವನ್ನು ಕಲ್ಪಿಸಿಕೊಟ್ಟಿದೆ. ಜೊತೆಗೆ ದೇವಸ್ಥಾನ, ಪ್ರವಾಸಿ ತಾಣಗಳನ್ನು ಸುತ್ತಬೇಕು ಎಂದುಕೊಂಡಿದ್ದ ಅದೆಷ್ಟೋ ಹೆಣ್ಣುಮಕ್ಕಳ ಕನಸು ಈ ಮೂಲಕ ನನಸಾಗಿದೆ.
ನಾಡಿನ ಪ್ರತಿ ಮಹಿಳೆಗೂ ಆರಾಮದಾಯಕ ಮತ್ತು ಸ್ವಾವಲಂಬನೆಯ ಬದುಕಿನ ಪಯಣವನ್ನು ಕಟ್ಟಿಕೊಟ್ಟಿದ್ದೇವೆ. ಅಡುಗೆ ಕೋಣೆಯೇ ತನ್ನ ಪ್ರಪಂಚ ಎಂದುಕೊಂಡಿದ್ದ ತಾಯಂದಿರು ಇಂದು ಸ್ವತಂತ್ರವಾಗಿ ತಮಗಿಷ್ಟ ಬಂದ ಸ್ಥಳಗಳಿಗೆ ಪ್ರಯಾಣಿಸುವುದನ್ನು ನೋಡುವಾಗ ಖುಷಿಯಾಗುತ್ತದೆ.
ಇದು ಪ್ರತೀ ಹೆಣ್ಣುಮಗಳ ಬದುಕಿನಲ್ಲಾದ ಬದಲಾವಣೆ
ಪ್ರತಿ ಮನೆಯ ಮಹಾಲಕ್ಷ್ಮಿಯರ ಬದುಕಿನ ನೆಮ್ಮದಿಯ ದಿನಗಳು!
“Shakti” is not merely a scheme; it has provided women with free bus travel to places such as educational institutions, workplaces and hospitals. It has also helped fulfil the dreams of countless women who wished to visit temples and tourist destinations.
We have created a journey towards a comfortable and self-reliant life for every woman in the state. It is heartening to see mothers who once believed that the kitchen was their entire world now travelling independently to places of their choice.
This is the change in the lives of every woman.
When every Mahalakshmi rises, every home prospers.
#varamahalakshmi #womenempowerment #karnatakaforwomen -
Dr. G Parameshwara
@DrParameshwara
ʼಮಹಿಳಾ ಸಬಲೀಕರಣʼ ಎನ್ನುವುದು ಬರೀ ಬಾಯಿ ಮಾತಾಗದೇ, ನಿಜಾರ್ಥದಲ್ಲಿ ಅನುಷ್ಠಾನಗೊಂಡು ಇಂದು ನಾಡಿನ ಮಹಿಳೆಯರು ಸ್ವಾವಲಂಬಿಯಾಗಿ, ನೆಮ್ಮದಿಯಿಂದ ಜೀವನ ನಡೆಸುವುದನ್ನು ನೋಡುವಾಗ ಸಂತೃಪ್ತಿಯಾಗುತ್ತದೆ.
ಅಡುಗೆ ಕೋಣೆಯ ಸಾಸಿವೆ ಡಬ್ಬದಲ್ಲಿ ಒಂದೊಂದು ರೂಪಾಯಿಯಂತೆ ಹಣವನ್ನು ಕೂಡಿಡುತ್ತಿದ್ದ ತಾಯಂದಿರು ಇಂದು ತಮ್ಮ ಬ್ಯಾಂಕ್ ಖಾತೆಗೆ ಬೀಳುವ ಗೃಹಲಕ್ಷ್ಮಿಯ ₹2,000 ಹಣವನ್ನು ಅಗತ್ಯ ಖರ್ಚುಗಳಿಗೆ ವಿನಿಯೋಗಿಸಿ, ಉಳಿದ ಹಣವನ್ನು ಅದೇ ಸಾಸಿವೆ ಡಬ್ಬದಲ್ಲಿ ಉಳಿತಾಯ ಮಾಡುತ್ತಿದ್ದಾರೆ.
ಇದು ಪ್ರತೀ ಹೆಣ್ಣುಮಗಳ ಬದುಕಿನಲ್ಲಾದ ಬದಲಾವಣೆ
ಪ್ರತಿ ಮನೆಯ ಮಹಾಲಕ್ಷ್ಮಿಯರ ಬದುಕಿನ ನೆಮ್ಮದಿಯ ದಿನಗಳು!
“Women’s empowerment” should not remain merely a slogan. It is truly fulfilling to see it being implemented in its real sense, enabling the women of our state to live independent and peaceful lives.
Mothers who once saved money one rupee at a time in the mustard container in their kitchens are today using the ₹2,000 Gruha Lakshmi assistance credited to their bank accounts for essential expenses and saving the remaining amount in that very same mustard container.
This is the change in the lives of every woman.
When every Mahalakshmi rises, every home prospers.
#varamahalakshmi #womenempowerment #karnatakaforwomen -
Dr. G Parameshwara
@DrParameshwara
ನಾಡಿನ ಸಮಸ್ತ ಜನತೆಗೆ ವರಮಹಾಲಕ್ಷ್ಮಿ ಹಬ್ಬದ ಶುಭಾಶಯಗಳು.
ತಾಯಿ ಮಹಾಲಕ್ಷ್ಮಿಯು ಸರ್ವರಿಗೂ ಆಯುರಾರೋಗ್ಯ, ಸಮೃದ್ಧಿ, ಯಶಸ್ಸು ಕೊಟ್ಟು ಕಾಪಾಡಲಿ. ಬರದಿಂದ ರಾಜ್ಯದಲ್ಲಿ ಆತಂಕ ಮನೆಮಾಡಿರುವ ಈ ಸಂದರ್ಭದಲ್ಲಿ ಸಮಸ್ತ ಜನರಿಗೂ ಶಾಂತಿ - ನೆಮ್ಮದಿಯ ದಾರಿ ತೋರಲಿ ಎಂದು ಪ್ರಾರ್ಥಿಸುತ್ತೇನೆ.
#varamahalakshmi -
Dr. G Parameshwara
@DrParameshwara
ವಿಧಾನಸೌಧದ ಕಾರಿಡಾರ್ನಲ್ಲಿ ಬರುವಾಗ ನಮ್ಮ ತಂದೆಯವರನ್ನು ಸಿಬ್ಬಂದಿಗಳು ಪಕ್ಕಕ್ಕೆ ಸರಿಸಿದ್ದರು. ಇದನ್ನು ಗಮನಿಸಿದ ದೇವರಾಜ ಅರಸು ಅವರು ನಮ್ಮ ತಂದೆಯವರನ್ನು ಕಚೇರಿಗೆ ಕರೆಸಿ ಮಾತನಾಡಿಸಿದ್ದರು. ಶ್ರೀ ಸಿದ್ಧಾರ್ಥ ಇಂಜಿನಿಯರಿಂಗ್ ಕಾಲೇಜಿಗೆ ಅನುಮತಿ ನೀಡಿಸಿದ್ದರು. ಉನ್ನತ ಶಿಕ್ಷಣದ ಬೆಳವಣಿಗೆಗೆ ಅಡಿಗಲ್ಲು ಹಾಕಿದರು.
Once, while my father was walking through the corridors of Vidhana Soudha, staff moved him aside. Devaraj Urs noticed this, invited him to his office and spoke with him. He later granted approval for Sri Siddhartha Institute of Technology, contributing significantly to the growth of higher education in the State. -
Dr. G Parameshwara
@DrParameshwara
ಕ್ಯಾಲಿಫೋರ್ನಿಯಾದ ಎಲೆಕ್ಟ್ರಾನಿಕ್ಸ್ ಹಬ್ಗಳ ಮಾದರಿಯಲ್ಲಿ ಬೆಂಗಳೂರಿನಲ್ಲಿ ‘ಎಲೆಕ್ಟ್ರಾನಿಕ್ ಸಿಟಿ’ ನಿರ್ಮಿಸಿದ ದೇವರಾಜ ಅರಸು ಅವರು ಲಕ್ಷಾಂತರ ಯುವಕರಿಗೆ ಉದ್ಯೋಗಾವಕಾಶಗಳನ್ನು ಕಲ್ಪಿಸಿದರು. ಭವಿಷ್ಯದ ಆರ್ಥಿಕ ಚಟುವಟಿಕೆಗಳಿಗೆ ಭದ್ರ ಅಡಿಗಲ್ಲು ಹಾಕಿದರು. ಸಾಮಾಜಿಕ ನ್ಯಾಯ ಮತ್ತು ಅಭಿವೃದ್ಧಿಗೆ ಆದ್ಯತೆ ನೀಡಿ ಕರ್ನಾಟಕವನ್ನು ದೇಶದಲ್ಲೇ ಮಾದರಿ ರಾಜ್ಯವನ್ನಾಗಿ ರೂಪಿಸಿದರು.
Inspired by California’s electronics hubs, Devaraj Urs developed Bengaluru’s Electronic City, creating employment opportunities for lakhs of young people and laying a strong foundation for Karnataka’s future economy. By prioritising social justice and development, he helped shape Karnataka into a model State for the country. -
Dr. G Parameshwara
@DrParameshwara
ನಾವು 21ನೇ ಶತಮಾನಕ್ಕೆ ಕಾಲಿಟ್ಟಿದ್ದೇವೆ. ಎಲ್ಲೆಡೆ ಆಧುನಿಕತೆಯ ಗಾಳಿ ಬೀಸುತ್ತಿದೆ. ಹೀಗಿದ್ದರೂ, ಇಂದಿಗೂ ಅನೇಕ ರಾಜ್ಯಗಳಲ್ಲಿ ಮಲ ಹೊರುವ ಅನಿಷ್ಟ ಪದ್ಧತಿ ಮುಂದುವರಿದಿರುವುದು ನೋವಿನ ಸಂಗತಿ. ಈ ಅಮಾನವೀಯ ಪದ್ಧತಿಯನ್ನು ನಿಷೇಧಿಸಿ, ಆ ಸಮುದಾಯಗಳಿಗೆ ಗೌರವ ಮತ್ತು ಘನತೆ ತಂದುಕೊಡುವ ಮೂಲಕ ದೇಶದಲ್ಲಿ ದೊಡ್ಡ ಸಾಮಾಜಿಕ ಬದಲಾವಣೆಗೆ ಮುನ್ನುಡಿ ಬರೆದವರು ದೇವರಾಜ ಅರಸು ಅವರು.
Through the Land Reforms Act, Devaraj Urs made those who cultivated the land its rightful owners. In North Karnataka, where a few landlords held thousands of acres, he redistributed land to poor farmers and gave land rights to those who worked it. He did not merely speak of the equality envisioned by the Constitution - he translated it into people’s lives. -
Dr. G Parameshwara
@DrParameshwara
ಭೂಸುಧಾರಣಾ ಕಾಯ್ದೆಯ ಮೂಲಕ ಉಳುವವರನ್ನೇ ಹೊಲದ ಒಡೆಯರನ್ನಾಗಿ ಮಾಡಿದವರು ದೇವರಾಜ ಅರಸು. ಉತ್ತರ ಕರ್ನಾಟಕದಲ್ಲಿ ಕೆಲವೇ ಭೂಮಾಲೀಕರು ಸಾವಿರಾರು ಎಕರೆ ಭೂಮಿ ಹೊಂದಿದ್ದರು. ಅಂತಹ ಭೂಮಿಯನ್ನು ಬಡ ರೈತರಿಗೆ ಹಂಚಿ, ದುಡಿಯುವ ಕೈಗಳಿಗೆ ಭೂಮಿಯ ಹಕ್ಕು ನೀಡಿದರು. ಸಂವಿಧಾನ ಪ್ರತಿಪಾದಿಸಿದ ಸಮಾನತೆಯನ್ನು ಕೇವಲ ಮಾತಿನಲ್ಲಿ ಹೇಳದೆ, ಅದನ್ನು ಜನರ ಬದುಕಿನಲ್ಲಿ ಅಕ್ಷರಶಃ ಜಾರಿಗೆ ತಂದವರು.
Through the Land Reforms Act, Devaraj Urs made those who cultivated the land its rightful owners. In North Karnataka, where a few landlords held thousands of acres, he redistributed land to poor farmers and gave land rights to those who worked it. He did not merely speak of the equality envisioned by the Constitution - he translated it into people’s lives. -
Dr. G Parameshwara
@DrParameshwara
ಜೆನ್ಜಿಗಳು ಇಂದು ಎಲ್ಲೆಡೆ ಸದ್ದು ಮಾಡುತ್ತಿದ್ದಾರೆ. ಅವರ ಆಸೆ ಆಕಾಂಕ್ಷೆಗಳು ವಿಭಿನ್ನವಾಗಿವೆ. ಅವರಿಗೆ ಜಾತಿ, ಧರ್ಮಗಳ ಭೇದಕ್ಕಿಂತ ತಮ್ಮ ಜೀವನವನ್ನು ಕಟ್ಟಿಕೊಳ್ಳುವುದೇ ಮುಖ್ಯವಾಗಿದೆ. ಇಂತದ್ದೊಂದು ಆಲೋಚನೆಯ ಕಡೆಗೆ ಅವರು ಇಡೀ ಸಮಾಜವನ್ನು ಕೊಂಡೊಯ್ಯುತ್ತಿರುವುದು ಗಮನಾರ್ಹವಾಗಿದೆ.
Gen Z is making its voice heard. Their aspirations are different - they are focused on building their future, beyond divisions of caste and religion. This outlook is helping lead society towards a more inclusive future. -
Dr. G Parameshwara
@DrParameshwara
ಕಂದಾಯ ಕಟ್ಟದ ಕೃಷಿ ಭೂಮಿಯನ್ನು ಮುಟ್ಟುಗೋಲು ಮಾಡಿಕೊಳ್ಳಲು ಅವಕಾಶವಿದ್ದು, ಅವುಗಳ ಪಹಣಿಯಲ್ಲಿ ಸರ್ಕಾರಿ ಫಡಾ ಎಂದು ಇದೆ. ಪಹಣಿಗಳಲ್ಲಿ ರೈತರ ಹೆಸರನ್ನು ಪುನಃಸ್ಥಾಪಿಸಲು 2012ರ ಡಿಸೆಂಬರ್ 7ರಿಂದ 2014ರ ಸೆಪ್ಟೆಂಬರ್ 6ರವರೆಗೆ ಅವಕಾಶ ನೀಡಲಾಗಿತ್ತು. ಈಗ ಮತ್ತೆ ಅವಕಾಶ ಕಲ್ಪಿಸಲಾಗುವುದು.
- ವಿಧಾನ ಪರಿಷತ್ ಕಲಾಪದ ಪ್ರಶ್ನೋತ್ತರ ವೇಳೆಯಲ್ಲಿ ಸದಸ್ಯರಾದ ಎಸ್.ರವಿ ಅವರ ಪ್ರಶ್ನೆಗೆ ನನ್ನ ಉತ್ತರ.
Agricultural land with unpaid land revenue can be forfeited, resulting in a ‘Government Fada’ entry in the RTC. Farmers were earlier given an opportunity, from 7 December 2012 to 6 September 2014, to restore their names in the RTC. We will now provide another opportunity to do so.
- My response to MLC S. Ravi’s question during Question Hour in the Legislative Council. -
Dr. G Parameshwara
@DrParameshwara
ಇಂದು ವಿಧಾನಮಂಡಲದ ಮುಂಗಾರು ಅಧಿವೇಶನದ ಕಾರ್ಯಕಲಾಪಗಳನ್ನು ವೀಕ್ಷಿಸಲು ವಿಧಾನಸೌಧಕ್ಕೆ ಆಗಮಿಸಿದ್ದ ತುಮಕೂರಿನ ಕಾಲೇಜು ವಿದ್ಯಾರ್ಥಿಗಳು ನನ್ನ ಕಾರ್ಯಾಲಯಕ್ಕೂ ಭೇಟಿ ನೀಡಿದರು. ಈ ವೇಳೆ ವಿದ್ಯಾರ್ಥಿಗಳೊಂದಿಗೆ ಆತ್ಮೀಯವಾಗಿ ಸಂವಾದ ನಡೆಸಿದೆ.
ವಿಧಾನಮಂಡಲದ ಕಾರ್ಯವೈಖರಿ, ಪ್ರಜಾಪ್ರಭುತ್ವ ವ್ಯವಸ್ಥೆ ಹಾಗೂ ಸದನಗಳಲ್ಲಿ ಶಾಸಕರುಗಳ ಚರ್ಚೆಗಳು, ಜನಪ್ರತಿನಿಧಿಗಳ ಜವಾಬ್ದಾರಿಗಳನ್ನು ಹತ್ತಿರದಿಂದ ವೀಕ್ಷಿಸಿರುವ ವಿದ್ಯಾರ್ಥಿಗಳು ತಮ್ಮ ಹೊಸ ಅನುಭವವನ್ನು ನನ್ನೊಂದಿಗೆ ಹಂಚಿಕೊಂಡರು.
ವಿಧಾನಮಂಡಲ ಕಾರ್ಯಕಲಾಪಗಳ ಕುರಿತು ಪ್ರಬಂಧ ಬರೆದು ನನಗೆ ಕಳುಹಿಸುವಂತೆ ವಿದ್ಯಾರ್ಥಿಗಳಿಗೆ ತಿಳಿಸಿ, 'ಸಂವಿಧಾನ ಓದು' ಪುಸ್ತಕವನ್ನು ನೀಡಿ ಶುಭಹಾರೈಸಿದೆ.
ಯುವಜನತೆ ದೇಶದ ರಾಜಕೀಯ ಮತ್ತು ಶಾಸನಸಭೆಯ ಕಾರ್ಯಕಲಾಪಗಳ ಬಗ್ಗೆ ಆಸಕ್ತಿ ವಹಿಸುವುದು ಪ್ರಜಾಪ್ರಭುತ್ವದ ದೃಷ್ಟಿಯಿಂದ ಆಶಾದಾಯಕ ಬೆಳವಣಿಗೆ. -
Dr. G Parameshwara
@DrParameshwara
ವಿವಿಧ ಸಾಮಾಜಿಕ ಭದ್ರತಾ ಪಿಂಚಣಿಗಳಾದ ವೃದ್ಧಾಪ್ಯ ವೇತನ, ವಿಧವಾ ವೇತನ, ಅಂಗವಿಕಲ ವೇತನ ಸೇರಿದಂತೆ ಇತ್ಯಾದಿಗಳಿಗೆ ಆದಾಯ ಮಿತಿ ₹32 ಸಾವಿರ ಇದ್ದುದರಿಂದ ಲಕ್ಷಾಂತರ ಜನರು ಪಿಂಚಣಿ ಸೌಲಭ್ಯದಿಂದ ಹೊರಗೆ ಉಳಿದಿದ್ದರು. ಇದೀಗ ಆದಾಯ ಮಿತಿಯನ್ನು ₹1.20 ಲಕ್ಷಕ್ಕೆ ಹೆಚ್ಚಿಸುವ ಮೂಲಕ ಬಹುಕಾಲದ ಸಮಸ್ಯೆಯನ್ನು ಬಗೆಹರಿಸಲಾಗಿದೆ.
ಇದರಿಂದ ₹32 ಸಾವಿರಕ್ಕಿಂತ ಹೆಚ್ಚು ಹಾಗೂ ₹1.20 ಲಕ್ಷಕ್ಕಿಂತ ಕಡಿಮೆ ವಾರ್ಷಿಕ ಆದಾಯವಿರುವ ಅರ್ಹ ಫಲಾನುಭವಿಗಳಿಗೆ ನಿರಾಳತೆ ಸಿಕ್ಕಂತಾಗಿದೆ.
ಸಕಾಲದಲ್ಲಿ ಅರ್ಹ ಫಲಾನುಭವಿಗಳನ್ನು ಗುರುತಿಸಿ, ಸಾಮಾಜಿಕ ಭದ್ರತೆ ಒದಗಿಸುವುದು ನಮ್ಮ ಸರ್ಕಾರದ ಆದ್ಯತೆಯಾಗಿದೆ.
The annual income limit of ₹32,000 for social security pensions such as old-age, widow and disability pensions had left lakhs of people outside the pension net. By increasing the limit to ₹1.20 lakh, we have resolved this long-pending issue.
The decision will bring relief to 23,14,544 beneficiaries with an annual income above ₹32,000 and below ₹1.20 lakh.
Identifying eligible beneficiaries in a timely manner and ensuring social security for them remains a priority of our Government. -
Dr. G Parameshwara
@DrParameshwara
Tumakuru is rapidly strengthening its position as one of Karnataka’s most promising investment destinations. At the Global Investors’ Meet, MoUs for 7 large industries with an expected investment of ₹75,480 crore have opened the door to nearly 29,200 direct employment opportunities. Our focus is on converting these investment commitments into industries on the ground, creating quality jobs and building a stronger economic future for Tumakuru.
ರಾಜ್ಯದ ಅತ್ಯಂತ ಭರವಸೆಯ ಹೂಡಿಕೆ ತಾಣಗಳಲ್ಲಿ ಒಂದಾಗಿ ತುಮಕೂರು ಜಿಲ್ಲೆ ತನ್ನ ಸ್ಥಾನವನ್ನು ಬಲಪಡಿಸಿಕೊಳ್ಳುತ್ತಿದೆ. ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ 7 ಬೃಹತ್ ಕೈಗಾರಿಕೆಗಳೊಂದಿಗೆ ₹75,480 ಕೋಟಿ ಹೂಡಿಕೆಯ ಒಪ್ಪಂದಗಳು ನಡೆದಿದ್ದು, ಇದರಿಂದ ಸುಮಾರು 29,200 ನೇರ ಉದ್ಯೋಗಾವಕಾಶಗಳು ಸೃಷ್ಟಿಯಾಗುವ ನಿರೀಕ್ಷೆಯಿದೆ.
ಹೂಡಿಕೆಗಳನ್ನು ಕೈಗಾರಿಕೆಗಳಾಗಿ ಸಾಕಾರಗೊಳಿಸಿ, ಯುವಕರಿಗೆ ಉತ್ತಮ ಭವಿಷ್ಯ ರೂಪಿಸುವ ಉದ್ಯೋಗಗಳನ್ನು ಸೃಷ್ಟಿಸುವುದು ಹಾಗೂ ತುಮಕೂರಿನ ಆರ್ಥಿಕ ಸ್ಥಿತಿಯನ್ನು ಮತ್ತಷ್ಟು ಬಲಪಡಿಸುವುದು ನಮ್ಮ ಗುರಿಯಾಗಿದೆ. -
Dr. G Parameshwara
@DrParameshwara
Tumakuru’s industrial growth is creating new opportunities for investment, enterprise and employment. With 28,215 registered MSMEs, ₹712 crore in investment and over 2.02 lakh direct jobs, the district has developed a strong base of small and medium industries. We will continue strengthening this ecosystem so that more industries grow in Tumakuru, more investments come in and more jobs are created for our youth.
ತುಮಕೂರಿನಾದ್ಯಂತ ಬೆಳೆಯುತ್ತಿರುವ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ದಿಮೆಗಳು ಹೂಡಿಕೆ ಮತ್ತು ಉದ್ಯೋಗ ಸೃಷ್ಟಿಯನ್ನು ಹೆಚ್ಚಿಸುತ್ತಿವೆ.
ಜಿಲ್ಲೆಯಲ್ಲಿ 28,215 ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ದಿಮೆಗಳು ನೋಂದಣಿಯಾಗಿದ್ದು , ₹712 ಕೋಟಿ ಬಂಡವಾಳ ಹೂಡಿಕೆಯಾಗಿದೆ. ಇದರಿಂದ ಸುಮಾರು 2.02 ಲಕ್ಷಕ್ಕೂ ಹೆಚ್ಚು ಜನರಿಗೆ ನೇರ ಉದ್ಯೋಗಾವಕಾಶ ಸೃಷ್ಟಿಯಾಗಲಿವೆ.
ಜಿಲ್ಲೆಗೆ ಇನ್ನಷ್ಟು ಉದ್ದಿಮೆ ಮತ್ತು ಹೂಡಿಕೆಗಳು ಹರಿದುಬರುವಂತೆ ಪ್ರೋತ್ಸಾಹಿಸುವ ಮೂಲಕ ಸ್ಥಳೀಯ ಯುವಕರಿಗೆ ಹೆಚ್ಚಿನ ಉದ್ಯೋಗಾವಕಾಶ ಕಲ್ಪಿಸುವುದು ನಮ್ಮ ಉದ್ದೇಶವಾಗಿದೆ. -
Dr. G Parameshwara
@DrParameshwara
ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹಾಗೂ ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಅವರ ಜನ್ಮದಿನದ ಅಂಗವಾಗಿ ಕೆಪಿಸಿಸಿ ವತಿಯಿಂದ ಫ್ರೀಡಂ ಪಾರ್ಕ್ನಲ್ಲಿ ಆಯೋಜಿಸಿದ್ದ 'ಸದ್ಭಾವನಾ ದಿನಾಚರಣೆ' ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದೆ.
ಭಾರತವು ತಾಂತ್ರಿಕವಾಗಿ ಮತ್ತು ಆರ್ಥಿಕವಾಗಿ ಬಲಿಷ್ಟವಾಗಿರುವುದಕ್ಕೆ ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರ ಕೊಡುಗೆ ಸಾಕಷ್ಟಿದೆ.
21ನೇ ಶತಮಾನಕ್ಕೆ ನಾವು ಕಾಲಿಡುತ್ತಿದ್ದೇವೆ. ನಾಡಿನ ಜನತೆ ಸಮಾಧಾನ, ಸಂತೋಷದಿಂದ ಬಾಳಬೇಕು. ಇದೇ ಕನಸನ್ನು ಕಂಡವರು ರಾಜೀವ್ ಗಾಂಧಿಯವರು. ಭಾರತ ಆಧುನಿಕವಾಗಿ ತಂತ್ರಜ್ಞಾನದಲ್ಲಿ ಅಭಿವೃದ್ಧಿ ಹೊಂದಿದೆ. ಹಳ್ಳಿಯಿಂದ ದೆಹಲಿವರೆಗೆ ಇಂಟರ್ನೆಟ್ ಸಂಪರ್ಕದಿಂದ ಸುಲಭವಾಗಿ ತಲುಪುತ್ತೇವೆ. ಇದಕ್ಕೆ ಸಂಪೂರ್ಣ ಕಾರಣಕರ್ತರು ರಾಜೀವ್ ಗಾಂಧಿಯವರು.
ತಳ ಸಮುದಾಯಗಳಿಗೆ ಅವಕಾಶ, ಮಹಿಳೆಯರಿಗೆ ಸಮಾನತೆ ಕಲ್ಪಿಸಲು ಸಂವಿಧಾನದ 73 ಮತ್ತು 74ನೇ ಕಲಂಗಳಿಗೆ ತಿದ್ದುಪಡಿ ತಂದು ಮೀಸಲಾತಿ ಕಲ್ಪಿಸಿದರು. ದೇಶದಲ್ಲಿ ಬಹುದೊಡ್ಡ ಬದಲಾವಣೆಯಿಂದ ಮಹಿಳೆಯರು ಸ್ಥಳೀಯ ಸಂಸ್ಥೆಗಳಲ್ಲಿ ಪ್ರತಿನಿಧಿಗಳಾಗಿದ್ದಾರೆ.
ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಅವರು ರಾಜ್ಯದಲ್ಲಿ ಅನೇಕ ಪ್ರಗತಿಪರ ಕಾರ್ಯಕ್ರಮಗಳನ್ನು ಜಾರಿಗೆ ತಂದರು. ಶೋಷಣೆಗೆ ಒಳಗಾಗುತ್ತಿದ್ದ ರೈತನನ್ನು, ಉಳುವವನೇ ಭೂಮಿಯ ಒಡೆಯನನ್ನಾಗಿ ಮಾಡಿದರು.
1974ರಲ್ಲಿ ಬೆಂಗಳೂರಿನಲ್ಲಿ ಎಲೆಕ್ಟ್ರಾನಿಕ್ ಸಿಟಿ ನಿರ್ಮಿಸಿದರು. ದೇಶದ ಯುವಕರಿಗೆ ಭವಿಷ್ಯ ಕಟ್ಟಿಕೊಡುವ ಕೆಲಸ ಮಾಡಿದರು. ಕರ್ನಾಟಕವನ್ನು ಒಗ್ಗೂಡಿಸಿ ಪ್ರಪಂಚದಲ್ಲೇ ಪ್ರಖ್ಯಾತಿ ಮಾಡಿದರು. ಧ್ವನಿ ಇಲ್ಲದ ಸಮಾಜದ ಕಟ್ಟಕಡೆಯ ವ್ಯಕ್ತಿಗೆ ಶಕ್ತಿ ತುಂಬುವ ಕೆಲಸ ಮಾಡಿದರು.
ದೇವರಾಜ ಅರಸು ಅವರ ದಾರಿಯಲ್ಲೇ ನಡೆದುಬಂದ ಸಿದ್ದರಾಮಯ್ಯನವರು ತಮ್ಮ ಇಡೀ ಜೀವನದಲ್ಲಿ ಬಡವರಿಗೆ ನ್ಯಾಯ ಒದಗಿಸುವ ಕೆಲಸವನ್ನು ಮಾಡಿದ್ದಾರೆ. ಅನೇಕ ಜನಪರ ಕಾರ್ಯಕ್ರಮಗಳನ್ನು ಜಾರಿಗೊಳಿಸಿದ್ದಾರೆ. ರಾಜ್ಯದಲ್ಲಿ ಅನ್ನಭಾಗ್ಯ ಯೋಜನೆಯನ್ನು ಜಾರಿಗೊಳಿಸುವ ಮೂಲಕ ಬಡವರ ಹಸಿವು ನೀಗಿಸುವ ಕೆಲಸ ಮಾಡಿದ್ದಾರೆ. ರಾಜ್ಯ ರಾಜಕೀಯ ಮತ್ತು ಆಡಳಿತದ ಇತಿಹಾಸದಲ್ಲಿ ಸಿದ್ದರಾಮಯ್ಯನವರ ಹೆಸರು ಶಾಶ್ವತವಾಗಿ ಉಳಿಯಲಿದೆ.
ಹರಿಪ್ರಸಾದ್ ಅವರು 35 ವರ್ಷ ಎಐಸಿಸಿ ಮಟ್ಟದಲ್ಲಿ ಪಕ್ಷ ಸಂಘಟನೆಯ ಕೆಲಸ ಮಾಡಿದ್ದಾರೆ. 30ಕ್ಕೂ ಹೆಚ್ಚು ರಾಜ್ಯಗಳ ಉಸ್ತುವಾರಿ ವಹಿಸಿಕೊಂಡು ಕಾಂಗ್ರೆಸ್ ಪಕ್ಷವನ್ನು ಬಲಪಡಿಸಿದ್ದಾರೆ. ಮುಂಬರುವ ಚುನಾವಣೆ ಹರಿಪ್ರಸಾದ್ ಅವರ ನೇತೃತ್ವದಲ್ಲಿ ನಡೆಯಲಿದ್ದು, ಪಕ್ಷದಲ್ಲಿ ಕೆಲಸ ಮಾಡಿದ ನಿಷ್ಟಾವಂತ ಕಾರ್ಯಕರ್ತರು ಮತ್ತು ಮುಖಂಡರುಗಳಿಗೆ ನ್ಯಾಯ ಒದಗಿಸುವ ಜವಾಬ್ದಾರಿ ನಿಮ್ಮ ಮೇಲಿದೆ. -
Dr. G Parameshwara
@DrParameshwara
ಡಿ.ದೇವರಾಜ ಅರಸು ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಬಳಸುತ್ತಿದ್ದ ಬೆಂಜ್ ಕಾರಿನಲ್ಲಿ ಕೂತು ಇಂದು ವಿಕಾಸಸೌಧಕ್ಕೆ ಭೇಟಿನೀಡಿದೆ.
ದೇವರಾಜ ಅರಸು ಅವರು ತಮ್ಮ ಜನಪರ ಕಾಳಜಿ, ಸೈದ್ಧಾಂತಿಕ ಬದ್ಧತೆಯಿಂದಾಗಿ ನನ್ನಂತಹ ಅದೆಷ್ಟೋ ರಾಜಕಾರಣಿಗಳಿಗೆ ಮಾದರಿಯಾದವರು. ಅವರು ಓಡಾಡಿದ ಕಾರಿನಲ್ಲಿ ಪ್ರಯಾಣಿಸಲು ಅವಕಾಶ ದೊರೆತಿದ್ದು ನನ್ನ ಬದುಕಿನ ಸ್ಮರಣೀಯ ಕ್ಷಣ.
ಸಚಿವರಾದ ಶಿವರಾಜ ತಂಗಡಗಿ ಹಾಗೂ ಚಿಕ್ಕಮಗಳೂರು ಶಾಸಕರಾದ ಹೆಚ್.ಡಿ. ತಮ್ಮಯ್ಯ ಜೊತೆಗಿದ್ದರು. -
Dr. G Parameshwara
@DrParameshwara
Gramthana property records are being modernised through accurate surveys, measurements and updated mapping. Under the SVAMITVA Scheme, implemented in partnership with the Central Government, the work will be completed in phases with the coordination of the Revenue and Panchayat Raj Departments.
Village map copies required by the public will be made easily available. Where fewer than five copies of a village map remain, all changes will be incorporated, a revised draft map prepared and sent for reprinting.
ಗ್ರಾಮಠಾಣಾ ಆಸ್ತಿಗಳ ನಿಖರ ಸರ್ವೇ, ಅಳತೆ ಮತ್ತು ನಕ್ಷೆ ತಯಾರಿ ಮೂಲಕ ಆಸ್ತಿ ದಾಖಲೆಗಳನ್ನು ಆಧುನಿಕಗೊಳಿಸಲಾಗುತ್ತಿದೆ. ಕೇಂದ್ರ ಸರ್ಕಾರದ ಸಹಭಾಗಿತ್ವದ ಸ್ವಾಮಿತ್ವ ಯೋಜನೆಯಡಿ ಕಂದಾಯ ಹಾಗೂ ಪಂಚಾಯತ್ ರಾಜ್ ಇಲಾಖೆಗಳ ಸಹಕಾರದೊಂದಿಗೆ ಈ ಕಾರ್ಯವನ್ನು ಹಂತ ಹಂತವಾಗಿ ಪೂರ್ಣಗೊಳಿಸಲಾಗುವುದು.
ಸಾರ್ವಜನಿಕರಿಗೆ ಅಗತ್ಯವಿರುವ ಗ್ರಾಮ ನಕಾಶೆಗಳ ಪ್ರತಿಗಳನ್ನು ಸುಲಭವಾಗಿ ಒದಗಿಸಲಾಗುವುದು. ಐದು ಪ್ರತಿಗಳಿಗಿಂತ ಕಡಿಮೆ ಇರುವ ಗ್ರಾಮ ನಕಾಶೆಯಲ್ಲಿನ ಎಲ್ಲಾ ಬದಲಾವಣೆಗಳನ್ನು ದಾಖಲಿಸಿ, ಕಚ್ಚಾ ನಕಾಶೆ ತಯಾರಿಸಿ ಮರುಮುದ್ರಣಕ್ಕೆ ಸಲ್ಲಿಸುವ ವ್ಯವಸ್ಥೆಯನ್ನೂ ಜಾರಿಗೊಳಿಸಲಾಗಿದೆ. -
Dr. G Parameshwara
@DrParameshwara
ಜೆನ್ಜಿ ಗಳು ಇಂದು ಎಲ್ಲೆಡೆ ಸದ್ದು ಮಾಡುತ್ತಿದ್ದಾರೆ. ಅವರ ಆಸೆ ಆಕಾಂಕ್ಷೆಗಳು ಬೇರೆ ಇವೆ. ಅವರಿಗೆ ಜಾತಿ, ಧರ್ಮಗಳ ವ್ಯತ್ಯಾಸ ಬೇಕಿಲ್ಲ. ಜೀವನ ಕಟ್ಟಿಕೊಳ್ಳುವುದೇ ಮುಖ್ಯ. ಇಂತದ್ದೊಂದು ಆಲೋಚನೆಯ ಕಡೆಗೆ ಅವರು ಇಡೀ ಸಮಾಜವನ್ನು ಕೊಂಡೊಯ್ಯುತ್ತಿರುವುದು ಗಮನಾರ್ಹವಾಗಿದೆ.
ಇಂದು ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ಮತ್ತು ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರ ಜನ್ಮದಿನ. ಇಬ್ಬರು ದೇಶದಲ್ಲಿ ಬದಲಾವಣೆಗೆ ಅಡಿಗಲ್ಲು ಹಾಕಿದ ಮಹಾನ್ ನಾಯಕರು. ಸಮಾಜದ ಒಳಿತಿನ ದೃಷ್ಟಿಯಿಂದ ತಮ್ಮ ಅಧಿಕಾರಾವಧಿಯಲ್ಲಿ ಹಲವು ಬದಲಾವಣೆ ತಂದಿದ್ದಾರೆ. ದೇವರಾಜ ಅರಸು ಅವರು ಶ್ರೇಣೀಕೃತ ವ್ಯವಸ್ಥೆಯನ್ನು ಅರ್ಥ ಮಾಡಿಕೊಂಡವರು. ಸಮಾಜದಲ್ಲಿ ಪ್ರತಿಯೊಬ್ಬರಿಗೂ ಗೌರವ, ಸ್ವಾಭಿಮಾನದ ಬದುಕು ಸಿಗಬೇಕು ಎಂದು ಅನೇಕ ಕಾರ್ಯಕ್ರಮಗಳನ್ನು ಕೊಟ್ಟಿದ್ದಾರೆ. ಅವುಗಳಿಂದ ಇಂದು ಅನೇಕ ಧನಾತ್ಮಕ ಬದಲಾವಣೆಯನ್ನು ನಾವು ಕಾಣುತ್ತಿದ್ದೇವೆ.
ಪ್ರಪಂಚದ ಯಾವುದೇ ದೇಶದಲ್ಲಿ ಶ್ರೇಣಿಕೃತ ವ್ಯವಸ್ಥೆ ಇಲ್ಲ. ನಾನಂತು ಯಾವ ದೇಶದಲ್ಲೂ ಜಾತಿ ವ್ಯವಸ್ಥೆ ನೋಡಿಲ್ಲ. ಭಾರತದಲ್ಲಿ ಯಾಕೆ ಬಂತು ಎನ್ನುವುದಕ್ಕೆ ಉತ್ತರ ಎಲ್ಲರಿಗೂ ಗೊತ್ತಿದೆ. ಮನುಷ್ಯನನ್ನು ಮನುಷ್ಯನನ್ನಾಗಿ ಕಾಣಬೇಕು ಎಂಬುದೇ ದೇವರಾಜ ಅರಸು ಅವರ ಕನಸಾಗಿತ್ತು. ಅದನ್ನು ಸಾಕಾರ ಮಾಡಲು ಅವರು ಶ್ರಮಿಸಿದರು.
ಭಗವಾನ್ ಬುದ್ಧರು ಸಮಾನತೆಯನ್ನು ಪ್ರತಿಪಾದನೆ ಮಾಡಿದರು. ಬಸವೇಶ್ವರರು ಸಮಾಜದ ಪರಿವರ್ತನೆಗೆ ನಾಂದಿ ಹಾಡಿದರು. ಹೀಗೆ ಅನೇಕ ಧೀಮಂತ ನಾಯಕರು ತಮ್ಮ ಜೀವಿತಕಾಲದಲ್ಲಿ ಸಮಾಜಕ್ಕಾಗಿ ಕೊಡುಗೆಗಳನ್ನು ನೀಡಿದ್ದಾರೆ. ದೇವರಾಜ ಅರಸು ಅವರು ಸ್ವಾಭಿಮಾನದ ಬದುಕು ಕಲ್ಪಿಸುವ ಪ್ರಾಮಾಣಿಕ ಪ್ರಯತ್ನ ನಡೆಸಿದರು. ಸಾಮಾಜಿಕವಾಗಿ ಹಿಂದುಳಿದವರು, ದಲಿತರು, ಅಲ್ಪಸಂಖ್ಯಾತ ಸಮುದಾಯಗಳನ್ನು ಸಮಾಜದ ಮುಖ್ಯವಾಹಿನಿಗೆ ತರಲು ಅನೇಕ ರೀತಿಯ ಪ್ರಯತ್ನಗಳನ್ನು ಮಾಡಿದರು.
ಮಲ ಹೊರುವ ಪದ್ಧತಿ ಜಗತ್ತಿನ ಯಾವ ದೇಶದಲ್ಲೂ ಇರಲಿಲ್ಲ. ನಾವು 21 ಶತಮಾನಕ್ಕೆ ಕಾಲಿಟ್ಟಿದ್ದೇವೆ, ಎಲ್ಲೆಡೆ ಆಧುನಿಕತೆಯ ಗಾಳಿ ಬೀಸುತ್ತಿದೆ. ಹೀಗಿದ್ದರೂ ಇಂದಿಗೂ ಈ ಅನಿಷ್ಟ ಪದ್ಧತಿ ಅನೇಕ ರಾಜ್ಯಗಳಲ್ಲೂ ಇದೆ ಎನ್ನುವುದು ನೋವಿನ ವಿಚಾರ. ಮಲಹೊರುವ ಪದ್ಧತಿಯನ್ನು ನಿಷೇಧ ಮಾಡಿ, ಆ ಸಮುದಾಯಗಳಿಗೆ ಗೌರವ ತರುವ ಕೆಲಸ ಮಾಡಿರುವುದೇ ದೇಶದಲ್ಲಿ ಮೊದಲ ದೊಡ್ಡ ಬದಲಾವಣೆ. ಈ ಬದಲಾವಣೆಗೆ ಮುನ್ನುಡಿ ಬರೆದವರು ದೇವರಾಜ ಅರಸು ಅವರು.
ಮನುಷ್ಯನಿಗೆ ಭೂಮಿ ಆಸ್ತಿಯಷ್ಟೇ ಅಲ್ಲ ಶಕ್ತಿಯೂ ಆಗಿದೆ. ಕಷ್ಟಪಟ್ಟು ಭೂಮಿಯ ಉಳುಮೆ ಮಾಡುವವರನ್ನೇ ಭೂಸುಧಾರಣಾ ಕಾಯ್ದೆಯ ಮೂಲಕ ಭೂಮಿಯ ಒಡೆಯನನ್ನಾಗಿ ಮಾಡಿದರು. ಉತ್ತರ ಕರ್ನಾಟಕ ಭಾಗದಲ್ಲಿ ಕೆಲವೇ ಕೆಲವು ಭೂಮಾಲೀಕರು ಎರಡು ಸಾವಿರ, ಮೂರು ಸಾವಿರ ಎಕರೆ ಜಮೀನು ಹೊಂದಿದ್ದರು. ಅಂತವರ ಭೂಮಿಯನ್ನು ಬಡವರಿಗೆ ಹಂಚಿದರು. ಇದು ಸಾಮಾನ್ಯ ಕೆಲಸವಲ್ಲ. ಸಂವಿಧಾನದಲ್ಲಿ ಪ್ರತಿಪಾದಿಸಿರುವ ಸಮಾನತೆಯನ್ನು ಅಕ್ಷರಶಃ ಜೀವನದಲ್ಲಿ ಅಳವಡಿಸಿಕೊಂಡವರು ದೇವರಾಜ ಅರಸು.
ದೂರದೃಷ್ಟಿ ಹೊಂದಿದ್ದ ದೇವರಾಜ ಅರಸು ಅವರು ಕ್ಯಾಲಿಫೋರ್ನಿಯಾದಲ್ಲಿರುವ ಎಲೆಕ್ಟ್ರಾನಿಕ್ ಸಿಟಿ ಮಾದರಿಯಲ್ಲಿ ಬೆಂಗಳೂರಿನಲ್ಲಿ ಎಲೆಕ್ಟ್ರಾನಿಕ್ ಸಿಟಿಯನ್ನು ನಿರ್ಮಿಸಿದರು. ಲಕ್ಷಾಂತರ ಯುವಕರಿಗೆ ಉದ್ಯೋಗ ನೀಡುವ ಮೂಲಕ ಭವಿಷ್ಯದ ಆರ್ಥಿಕ ಚಟುವಟಿಕೆಗಳಿಗೆ ಅಡಿಗಲ್ಲು ಹಾಕಿದರು. ಸಾಮಾಜಿಕ ನ್ಯಾಯ ಮತ್ತು ಅಭಿವೃದ್ಧಿ ದೃಷ್ಟಿಯಲ್ಲಿ ಕರ್ನಾಟಕವನ್ನು ದೇಶದಲ್ಲೇ ಮಾದರಿ ರಾಜ್ಯವನ್ನಾಗಿ ಮಾಡಿದರು. ರಾಜ್ಯದ ಮುಖ್ಯಮಂತ್ರಿಯಾಗಿ ಅಮೋಘ ಸೇವೆ ಸಲ್ಲಿಸಿ ಇತಿಹಾಸವನ್ನು ಬಿಟ್ಟು ಹೋಗಿದ್ದಾರೆ.
ಕರ್ನಾಟಕ ಪ್ರಪಂಚದಲ್ಲೇ ಮಾದರಿಯಾಗಿದೆ. ಲಕ್ಷಾಂತರ ಮಕ್ಕಳು ವಿದೇಶ ಮತ್ತು ಬೇರೆ ರಾಜ್ಯಗಳ ಮಕ್ಕಳು ಉನ್ನತ ಶಿಕ್ಷಣ ಪಡೆಯಲು ಬರುತ್ತಿದ್ದಾರೆ. ಗುಣಮಟ್ಟದ ಶಿಕ್ಷಣ ರಾಜ್ಯದಲ್ಲಿ ಸಿಗುತ್ತಿದೆ. ಇದಕ್ಕೆ ಅಡಿಗಲ್ಲು ಹಾಕಿದವರು ದೇವರಾಜ ಅರಸು ಅವರು.
ವಿಧಾನಸೌಧದ ಕಾರಿಡಾರ್ನಲ್ಲಿ ಬರುವ ನಮ್ಮ ತಂದೆಯವರನ್ನು ಸಿಬ್ಬಂದಿಗಳು ಪಕ್ಕಕ್ಕೆ ಸರಿಸಿದ್ದರು. ಇದನ್ನು ಗಮನಿಸಿದ್ದ ದೇವರಾಜ ಅರಸು ಅವರು ತಮ್ಮ ಕಚೇರಿಗೆ ಕರೆದೊಯ್ದು ಮಾತನಾಡಿಸಿದ್ದರು. ಶ್ರೀ ಸಿದ್ಧಾರ್ಥ ಇಂಜಿನಿಯರಿಂಗ್ ಕಾಲೇಜಿಗೆ ಅವರು ಅನುಮತಿ ನೀಡಿದ್ದರು. ಉನ್ನತ ಶಿಕ್ಷಣಕ್ಕೆ ಅಡಿಗಲ್ಲು ಹಾಕಿದವರು ದೇವರಾಜ ಅರಸು ಅವರು.
ನಮ್ಮ ರಾಜ್ಯದ ಮಕ್ಕಳು ಪ್ರಪಂಚದ ಎಲ್ಲ ಕಡೆ ಉದ್ಯೋಗ ನಿಮಿತ್ತ ವಾಸಿಸುತ್ತಿದ್ದಾರೆ. ಕರ್ನಾಟಕವು ಶಿಕ್ಷಣದಲ್ಲಿ ಶಕ್ತಿ ಪಡೆದುಕೊಂಡಿದ್ದರೆ ಅದು ದೇವರಾಜ ಅರಸು ಅವರ ಕೊಡುಗೆ ಎಂದು ಭಾವಿಸುತ್ತೇನೆ. ಸ್ವಾತಂತ್ರ್ಯ ಬಂದಾಗ ಮಹಾತ್ಮ ಗಾಂಧಿಯವರು ಡೆಮಾಕ್ರಟಿಕ್ ರಿಪಬ್ಲಿಕ್ ಬಯಸಿದ್ದರು. ಇದನ್ನು ಮಾಡಿ ತೋರಿಸಿದವರು ದೇವರಾಜ ಅರಸು ಅವರು ಎನ್ನುವುದು ನಮಗೆ ಹೆಮ್ಮೆಯ ವಿಷಯ.
ಇತಿಹಾಸ ಇಲ್ಲದೆ ಹೋಗಿದ್ದರೆ ನಮಗೆ ಇದನ್ನೆಲ್ಲಾ ಹೇಳುವವರು ಯಾರು. ಮೈಸೂರಿನ ಇತಿಹಾಸ ಬರೆಯದೆ ಹೋಗಿದ್ದರೆ ನಾಡಿನ ಅರ್ಧ ಇತಿಹಾಸ ನಮಗೆ ಗೊತ್ತಾಗುತ್ತಿರಲಿಲ್ಲ. ನಂಜರಾಜ ಅರಸು ಅವರನ್ನು ಗುರುತಿಸಿ ದೇವರಾಜ ಅರಸು ಪ್ರಶಸ್ತಿ ನೀಡುವ ಮೂಲಕ ಪ್ರಶಸ್ತಿಗೆ ಗೌರವ ತರುವ ಕೆಲಸವನ್ನು ಮಾಡಿದ್ದಾರೆ. ಭಗವಂತನು ನಂಜರಾಜ ಅರಸು ಅವರಿಗೆ ಸುಧೀರ್ಘ ಆಯುಷ್ಯ, ಆರೋಗ್ಯ ಶಕ್ತಿ ನೀಡಲಿ ಎಂದು ಆಶಿಸುತ್ತೇನೆ.
ಸಿದ್ಧರಾಮಯ್ಯ ಅವರು ದೇವರಾಜ ಅರಸು ಅವರ ದಾರಿಯಲ್ಲಿ ನಡೆದುಕೊಂಡು ಬಂದವರು. ದನಿಯಿಲ್ಲದ ಜನರಿಗೆ ದನಿ ನೀಡುವ ಕೆಲಸ ಮಾಡಿದ್ದಾರೆ. ಬಡವರಿಗೆ ಶಕ್ತಿ ತುಂಬುವ ಕೆಲಸ ಮಾಡಿದ್ದಾರೆ. ಡಿ.ಕೆ.ಶಿವಕುಮಾರ್ ಅವರು ತಮ್ಮದೇ ಆದ ಆಲೋಚನೆಗಳನ್ನು ಹೊಂದಿದ್ದಾರೆ. ಎಲ್ಲರಿಗೂ ಸಮಾನತೆ ಸಿಗಬೇಕು, ರಾಜ್ಯ ಪ್ರಗತಿ ಹೊಂದಬೇಕು ಎಂಬ ಕನಸು ಹೊಂದಿದ್ದಾರೆ.
ಈ ಎಲ್ಲರ ಸಹಭಾಗಿತ್ವದಲ್ಲಿ ರಾಜ್ಯವನ್ನು ಅಭಿವೃದ್ಧಿ ಹೊಂದಿದ ರಾಜ್ಯವನ್ನಾಗಿ ಮಾಡುತ್ತೇವೆ. ಜನಪರ ಯೋಜನೆಗಳನ್ನು ಮುಂದುವರಿಸುವ ಜೊತೆಗೆ ಹೊಸ ಕಾರ್ಯಕ್ರಮಗಳನ್ನು ಘೋಷಣೆ ಮಾಡುತ್ತೇವೆ. ಈಗಾಗಲೇ ಭಾರತ್ ಜೋಡೋ ಯುವ ಸಂಘವನ್ನು ಮಾಡಲಾಗುತ್ತಿದೆ. ಹೀಗೆ ನಾವು ಗ್ಯಾರಂಟಿ ಯೋಜನೆ, ಅಭಿವೃದ್ಧಿ ಹಾಗೂ ಕಲ್ಯಾಣ ಕಾರ್ಯಕ್ರಮಗಳನ್ನು ಸಮಾನವಾಗಿ ಜಾರಿ ಮಾಡುತ್ತಾ, ರಾಜ್ಯವನ್ನು ಪ್ರಗತಿಯ ಹಾದಿಯಲ್ಲಿ ಮುನ್ನಡೆಸುತ್ತಿದ್ದೇವೆ.
- ಇಂದು ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ನಲ್ಲಿ ನಡೆದ ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಅವರ 111ನೇ ಜನ್ಮದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ, ಪ್ರೊ. ಪಿ.ವಿ.ನಂಜರಾಜ ಅರಸು ಅವರಿಗೆ 'ಡಿ. ದೇವರಾಜ ಅರಸು ಪ್ರಶಸ್ತಿ' ಪ್ರದಾನ ಮಾಡಿದ ಬಳಿಕ ಮಾತನಾಡಿದೆ. -
Dr. G Parameshwara
@DrParameshwara
ಇಂದು ವಿಕಾಸಸೌಧದ ಸಮ್ಮೇಳನ ಸಭಾಂಗಣದಲ್ಲಿ ಸದ್ಭಾವನಾ ದಿನದ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಪ್ರತಿಜ್ಞಾ ವಿಧಿ ಬೋಧಿಸಿದೆ.
ವಿಧಾನಸಭಾಧ್ಯಕ್ಷರಾದ ಜಿ.ಎಸ್. ಪಾಟೀಲ್, ವಿಧಾನ ಪರಿಷತ್ ಸಭಾಪತಿಗಳಾದ ಸಲೀಂ ಅಹ್ಮದ್ ಸೇರಿದಂತೆ ಸಚಿವಾಲಯದ ಎಲ್ಲಾ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ಪ್ರತಿಜ್ಞಾ ವಿಧಿ ಸ್ವೀಕರಿಸಿದರು. -
Dr. G Parameshwara
@DrParameshwara
ನಮ್ಮ ಸರ್ಕಾರ ಇಂದು ದಿವಂಗತ ದೇವರಾಜ ಅರಸು ಅವರ 111 ನೇ ಜನ್ಮದಿನವನ್ನು ಆಚರಣೆ ಮಾಡುತ್ತಿದೆ. ಈ ದೇಶದಲ್ಲಿ ಸಾಮಾಜಿಕ ನ್ಯಾಯಕ್ಕಾಗಿ, ಬಡ ಜನತೆಗಾಗಿ, ದೀನ ದಲಿತರಿಗಾಗಿ ಹೋರಾಟ ಮಾಡಿದವರಲ್ಲಿ ದೇವರಾಜ ಅರಸು ಮೊದಲಿಗರು.
ದೇವರಾಜ ಅರಸು ಅವರು ಸುದೀರ್ಘ ಕಾಲ ಮುಖ್ಯಮಂತ್ರಿಗಳಾಗಿ ಈ ರಾಜ್ಯದಲ್ಲಿ ಅನೇಕ ಐತಿಹಾಸಿಕ ಕಾರ್ಯಕ್ರಮಗಳನ್ನು ಜಾರಿ ಮಾಡುವ ಮೂಲಕ ಶೋಷಿತರು, ನಿರ್ಲಕ್ಷ್ಯಕ್ಕೆ ಒಳಗಾಗಿದ್ದ ಸಮುದಾಯಕ್ಕೆ ನ್ಯಾಯವನ್ನು ಒದಗಿಸುವಲ್ಲಿ ಯಶಸ್ವಿಯಾದವರು.
ರೈತ ಸಮುದಾಯಕ್ಕೆ 'ಉಳುವವನೇ ಭೂಮಿಯ ಒಡೆಯ' ಘೋಷವಾಕ್ಯದ ಮೂಲಕ ಯಾರು ಭೂಮಿಯನ್ನು ಉಳುತ್ತಿದ್ದರೋ ಅವರಿಗೆ ಆ ಜಮೀನು, ಭೂಮಿ ಸಿಗಬೇಕು ಎಂಬ ಕಾನೂನಿನ ಮೂಲಕ ಇಡೀ ದೇಶದಲ್ಲಿ ಮೊದಲನೆಯ ಬಾರಿ ಬದಲಾವಣೆಯನ್ನು ತಂದವರು. ಯುವಕರಿಗೆ ಉತ್ತಮ ಭವಿಷ್ಯವನ್ನು ಕಲ್ಪಿಸುವುದು, ಶಿಕ್ಷಣ ಸಂಸ್ಥೆಗಳು, ಹಾಸ್ಟೆಲ್ ಗಳು ಸೇರಿದಂತೆ ಬೇರೆ ಬೇರೆ ರೀತಿಯಲ್ಲಿ ಅಭಿವೃದ್ಧಿ ಕೆಲಸಗಳನ್ನು ರಾಜ್ಯದಲ್ಲಿ ಮಾಡಿದ್ದಾರೆ.
ನಮ್ಮ ಸರ್ಕಾರ ಅವರ ಆದರ್ಶಗಳನ್ನು, ಅವರು ಹಾಕಿಕೊಟ್ಟ ಕಾರ್ಯಕ್ರಮಗಳನ್ನು ಇವತ್ತಿಗೂ ಕೂಡ ಮುಂದುವರಿಸಿಕೊಂಡು ಬರುತ್ತಿದೆ. ಮುಂದೆಯೂ ಕೂಡ ಮುಂದುವರೆಸುತ್ತದೆ.
- ವಿಧಾನಸೌಧದ ಪಶ್ಚಿಮ ದ್ವಾರದ ಬಳಿ ಇರುವ ದೇವರಾಜ ಅರಸು ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ಪುಷ್ಪನಮನ ಸಲ್ಲಿಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದೆ. -
Dr. G Parameshwara
@DrParameshwara
ಇಂದು ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ನಲ್ಲಿ ನಡೆದ ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಅವರ 111ನೇ ಜನ್ಮದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ, ಬಳಿಕ ಪ್ರೊ. ಪಿ.ವಿ.ನಂಜರಾಜ ಅರಸು ಅವರಿಗೆ 'ಮಾಜಿ ಮುಖ್ಯಮಂತ್ರಿ ಡಿ. ದೇವರಾಜ ಅರಸು ಪ್ರಶಸ್ತಿ' ಪ್ರದಾನ ಮಾಡಿ, ಅಭಿನಂದಿಸಿದೆ.
ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸಭಾಪತಿಗಳಾದ ಸಲೀಂ ಅಹ್ಮದ್, ಸಚಿವರಾದ ಶಿವರಾಜ್ ಎಸ್.ತಂಗಡಗಿ, ಬಸವಂತಪ್ಪ, ಡಾ. ಯತೀಂದ್ರ ಸಿದ್ದರಾಮಯ್ಯ, ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಟಾನ ಪ್ರಾಧಿಕಾರದ ಅಧ್ಯಕ್ಷರಾದ ಹೆಚ್.ಎಂ.ರೇವಣ್ಣ, ಶಾಸಕರಾದ ಅಲ್ಲಮಪ್ರಭು ಪಾಟೀಲ್, ಪ್ರದೀಪ್ ಈಶ್ವರ್, ಭೀಮಣ್ಣ ಚಿಮ್ಮನಕಟ್ಟಿ, ವಿಧಾನ ಪರಿಷತ್ ಸದಸ್ಯರಾದ ಎಫ್.ಹೆಚ್.ಜಕ್ಕಪ್ಪನವರ್, ಗಾಯತ್ರಿ ಶಾಂತನಗೌಡ ಮುಂತಾದವರು ಉಪಸ್ಥಿತರಿದ್ದರು.
Dr. G Parameshwara
@DrParameshwara
-
Dr. G Parameshwara
@DrParameshwara
ಸಾಮಾಜಿಕ ಪರಿವರ್ತನೆಯ ಹರಿಕಾರರು, ಹಿಂದುಳಿದ ವರ್ಗಗಳ ಕಲ್ಯಾಣಕ್ಕಾಗಿ ಶ್ರಮಿಸಿದ ಮಾಜಿ ಮುಖ್ಯಮಂತ್ರಿಗಳಾದ ಡಿ.ದೇವರಾಜ ಅರಸು ಅವರ 111ನೇ ಜನ್ಮದಿನಾಚರಣೆಯ ಅಂಗವಾಗಿ ವಿಧಾನಸೌಧದ ಪಶ್ಚಿಮ ದ್ವಾರದ ಬಳಿ ಇರುವ ದೇವರಾಜ ಅರಸು ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ಪುಷ್ಪನಮನ ಸಲ್ಲಿಸಿದೆ.
ಈ ಸಂದರ್ಭದಲ್ಲಿ ವಿಧಾನಸಭಾ ಅಧ್ಯಕ್ಷರಾದ ಜಿ.ಎಸ್.ಪಾಟೀಲ್, ವಿಧಾನ ಪರಿಷತ್ ಸಭಾಪತಿಗಳಾದ ಸಲೀಂ ಅಹ್ಮದ್, ಸಚಿವರಾದ ಶಿವರಾಜ ಎಸ್. ತಂಗಡಗಿ, ಕೆ.ಹೆಚ್.ಮುನಿಯಪ್ಪ, ಪುಟ್ಟರಂಗ ಶೆಟ್ಟಿ, ಶಾಸಕರಾದ ಅಬ್ಬಯ್ಯ ಪ್ರಸಾದ್, ಅಲ್ಲಮಪ್ರಭು ಪಾಟೀಲ, ವಿಧಾನ ಪರಿಷತ್ ಸದಸ್ಯರಾದ ಗಾಯತ್ರಿ ಶಾಂತನಗೌಡ ಇತರರು ಉಪಸ್ಥಿತರಿದ್ದರು. -
Dr. G Parameshwara
@DrParameshwara
ನಿನ್ನೆ ವಿಧಾನಮಂಡಲ ಅಧಿವೇಶನದಲ್ಲಿ ರಾಜ್ಯದ ಹಿತಾಸಕ್ತಿಯ ಕುರಿತು ಗೌರವಾನ್ವಿತ ಸದಸ್ಯರುಗಳು ಎತ್ತಿದ ಪ್ರಶ್ನೆಗಳಿಗೆ ನಾನು ನೀಡಿದ ಉತ್ತರಗಳು ಇಂದಿನ ಪತ್ರಿಕೆಗಳಲ್ಲಿ..
Here are today’s newspaper reports on my responses to the questions raised by Hon’ble Members on matters concerning the State’s interests during yesterday’s Legislature Session. -
Dr. G Parameshwara
@DrParameshwara
ವಿವಿಧ ಸಾಮಾಜಿಕ ಭದ್ರತಾ ಪಿಂಚಣಿಗಳಾದ ವೃದ್ಧಾಪ್ಯ ವೇತನ, ವಿಧವಾ ವೇತನ, ಅಂಗವಿಕಲ ವೇತನ ಇತ್ಯಾದಿಗಳಿಗೆ ಆದಾಯ ಮಿತಿಯನ್ನು ₹32,000 ದಿಂದ ₹1,20,000 ಕ್ಕೆ ಹೆಚ್ಚಿಸಿ ಆದೇಶ ಹೊರಡಿಸಿದ್ದೇವೆ.
ಈ ಕುರಿತಾದ ಮಾಧ್ಯಮ ವರದಿಗಳು ಹೀಗಿವೆ..
We have issued an order increasing the income limit for various social security pensions, including old-age, widow and disability pensions, from ₹32,000 to ₹1,20,000.
Here are some media reports on the decision.. -
Dr. G Parameshwara
@DrParameshwara
ಕನ್ನಡ ಸಾರಸ್ವತ ಲೋಕದ ಖ್ಯಾತ ಕಾದಂಬರಿಕಾರರು, ಸಾಹಿತಿಗಳು ಆದ ಎಸ್.ಎಲ್.ಭೈರಪ್ಪ ಅವರನ್ನು ಅವರ ಜನ್ಮದಿನದ ಸಂದರ್ಭದಲ್ಲಿ ನೆನೆದು, ನಮಿಸುತ್ತೇನೆ.
-
Dr. G Parameshwara
@DrParameshwara
Talented athletes must have access to quality infrastructure, not just in major cities but across every part of the district. From badminton stadiums in Koratagere, Tiptur and Sira to Karnataka’s first shooting centre in Tumakuru and kayaking and canoeing facilities at Amanikere, we are expanding sporting opportunities across the district. Our aim is to give young athletes the facilities they need to train, compete and bring greater glory to the country through sports.
ತುಮಕೂರು ಜಿಲ್ಲೆಯನ್ನು ಪ್ರತಿಭಾವಂತ ಕ್ರೀಡಾಪಟುಗಳ ನೆಚ್ಚಿನ ತಾಣವನ್ನಾಗಿಸುವ ಗುರಿಯೊಂದಿಗೆ ಜಿಲ್ಲೆಯಾದ್ಯಂತ ಉತ್ತಮ ಕ್ರೀಡಾ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ. ನಗರ ಪ್ರದೇಶಕ್ಕಷ್ಟೇ ಸೀಮಿತವಾಗಿಸದೆ ಜಿಲ್ಲೆಯಾದ್ಯಂತ ಕ್ರೀಡಾಪಟುಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಯೋಜನೆಗಳನ್ನು ರೂಪಿಸಲಾಗುತ್ತಿದೆ.
ಕೊರಟಗೆರೆ, ತಿಪಟೂರು ಮತ್ತು ಶಿರಾದಲ್ಲಿ ಬ್ಯಾಡ್ಮಿಂಟನ್ ಸ್ಟೇಡಿಯಂಗಳಿಂದ ತುಮಕೂರಿನಲ್ಲಿ ರಾಜ್ಯದ ಮೊದಲ ಶೂಟಿಂಗ್ ಕೇಂದ್ರ ನಿರ್ಮಾಣದವರೆಗೆ ಕ್ರೀಡಾ ಸೌಲಭ್ಯಗಳನ್ನು ವಿಸ್ತರಿಸಲಾಗುತ್ತಿದೆ. ಜೊತೆಗೆ ಅಮಾನಿಕೆರೆಯಲ್ಲಿ ಕಯಾಕಿಂಗ್ ಮತ್ತು ಕ್ಯಾನೋಯಿಂಗ್ ಕ್ರೀಡಾ ಸೌಲಭ್ಯಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ.
ಯುವ ಕ್ರೀಡಾಪಟುಗಳಿಗೆ ಉತ್ತಮ ತರಬೇತಿ ಮತ್ತು ಕ್ರೀಡಾ ಅವಕಾಶಗಳನ್ನು ಕಲ್ಪಿಸುವ ಮೂಲಕ ರಾಜ್ಯ ಹಾಗೂ ದೇಶಕ್ಕೆ ಕೀರ್ತಿ ತರುವಂತೆ ಪ್ರೋತ್ಸಾಹಿಸುವುದು ನಮ್ಮ ಗುರಿಯಾಗಿದೆ. -
Dr. G Parameshwara
@DrParameshwara
Remembering former Prime Minister Shri Rajiv Gandhi with deep respect and gratitude on Sadbhavana Diwas.
As India’s youngest Prime Minister, Shri Rajiv Gandhi envisioned a modern, forward-looking nation. His leadership gave a decisive push to India’s telecommunications and technology revolution, computerisation, education reforms, youth empowerment and grassroots democracy. By lowering the voting age from 21 to 18, he gave millions of young Indians a stronger voice in shaping the country’s future.
His commitment to national unity, communal harmony and an inclusive India remained at the heart of his public life. He ultimately sacrificed his life in the service of the nation, leaving behind a legacy that continues to inspire generations.
Heartfelt tributes to Shri Rajiv Gandhi.
#sadbhavanadiwas #rememberingrajivgandhi -
Dr. G Parameshwara
@DrParameshwara
ಅಧಿಕಾರ, ಸಂಪತ್ತು ಹಾಗೂ ಅವಕಾಶಗಳು ಕೆಲವರ ಸ್ವತ್ತಾಗದೆ, ಸಮಾಜದ ಎಲ್ಲ ವರ್ಗಗಳಿಗೂ ಸಮಾನವಾಗಿ ದೊರೆಯುವಂತೆ ಸಾಮಾಜಿಕ ನ್ಯಾಯದ ಪರಿಕಲ್ಪನೆಗೆ ಬಲ ತುಂಬಿದವರು ಮಾಜಿ ಮುಖ್ಯಮಂತ್ರಿ ಡಿ. ದೇವರಾಜ ಅರಸು.
ಭೂ ಸುಧಾರಣೆಯ ಮೂಲಕ ಶೋಷಿತರ ಬದುಕಿಗೆ ಬೆಳಕಾದ ಪರಿವರ್ತನೆಯ ಹರಿಕಾರ ದೇವರಾಜ ಅರಸು ಅವರ ಜನ್ಮದಿನದಂದು ಗೌರವ ನಮನವನ್ನು ಸಲ್ಲಿಸುತ್ತೇನೆ. ಅವರ ಬದುಕು ನಮ್ಮಂತಹ ರಾಜಕಾರಣಿಗಳಿಗೆ ಅನುಕರಣೀಯ.
#ದೇವರಾಜ_ಅರಸು -
Dr. G Parameshwara
@DrParameshwara
ರಾಜ್ಯದ ಮಾಜಿ ಸಚಿವರು, ಆತ್ಮೀಯರು ಆಗಿದ್ದ ಬಿ. ಸಿ. ನಾಗೇಶ್ ಅವರು ನಮ್ಮನ್ನು ಆಗಲಿದ್ದಾರೆ. ಇದು ಬಹಳ ನೋವಿನ ಸಂಗತಿ. ಅವರ ಅಂತ್ಯಕ್ರಿಯೆಯನ್ನು ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿಸಲಾಗುವುದು.
ನಾಗೇಶ್ ಅವರು ಬಹಳ ಸ್ನೇಹಜೀವಿ. ಎಲ್ಲರನ್ನೂ ಕೂಡ ಅತ್ಯಂತ ವಿಶ್ವಾಸ ಮತ್ತು ಪ್ರೀತಿಯಿಂದ ಕಾಣುತ್ತಿದ್ದರು. ಅವರ ತಂದೆ ಹಾಕಿಕೊಟ್ಟ ದಾರಿಯಲ್ಲೇ ನಡೆದು ಬಂದವರು. ಅನುಕೂಲಸ್ಥರಾದರೂ ಕೂಡ ಅದನ್ನೆಂದು ತೋರಿಸಿಕೊಂಡವರಲ್ಲ. ಜನರಿಗೆ ಸಹಾಯ ಮಾಡುತ್ತಾ ಸಾರ್ವಜನಿಕ ಬದುಕಿನಲ್ಲಿ ತನ್ನದೇ ಆದಂತಹ ಛಾಪನ್ನು ಬಿಟ್ಟುಹೋಗಿದ್ದಾರೆ.
ಅವರು ಸಚಿವರಾಗಿದ್ದ ಸಂದರ್ಭದಲ್ಲಿ ಅನೇಕ ಬಾರಿ ನನಗೆ ಕರೆ ಮಾಡಿ ಸಲಹೆಗಳನ್ನು ಕೇಳುತ್ತಿದ್ದರು. ನನ್ನ ಬಳಿ ಚರ್ಚಿಸುತ್ತಿದ್ದರು. ನಾನು ಬೇರೆ ಪಕ್ಷದವನಾದರೂ ನನ್ನೊಂದಿಗಿನ ಅವರ ಸ್ನೇಹ ಬಹಳ ಆಳವಾಗಿತ್ತು.
ನಾನು 1994ರಲ್ಲಿ ಚುನಾವಣೆಯಲ್ಲಿ ಸೋತ ಸಂದರ್ಭದಲ್ಲಿ, ಖುದ್ದು ನನ್ನ ಮನೆಗೆ ಬಂದು ಭೇಟಿ ಮಾಡಿದ್ದರು. 'ತಾವು ಬಿಜೆಪಿ ಸೇರಬೇಕು. ನಿಮ್ಮನ್ನು ಚೆನ್ನಾಗಿ ನೋಡಿಕೊಳ್ಳುತ್ತೇವೆ' ಎಂದು ಒತ್ತಾಯಿಸಿದ್ದರು. 'ನನಗೆ ಅನಂತ್ ಕುಮಾರ್ ಅವರು ಹೇಳಿ ಕಳಿಸಿದ್ದಾರೆ. ಹೇಗಾದರೂ ಮಾಡಿ ಪರಮೇಶ್ವರ ಅವರ ಮನವೊಲಿಸಿ. ಅಡ್ವಾಣಿ ಅವರು ತುಮಕೂರಿಗೆ ಬರುತ್ತಿದ್ದು, ಪರಮೇಶ್ವರ ಅವರಿಗೆ ಟಿಕೆಟ್ ಘೋಷಿಸೋಣ ಎಂದಿದ್ದಾರೆ' ಎಂಬ ವಿಷಯವನ್ನು ನನ್ನ ಮುಂದೆ ಪ್ರಸ್ತಾಪಿಸಿದ್ದರು. ಇದಕ್ಕೆ ನಾನು ಒಪ್ಪಲಿಲ್ಲ. ನಮ್ಮ ಪಕ್ಷ ಸಿದ್ಧಾಂತಗಳೇ ಬೇರೆ. ಅವರೆಡು ಒಂದೇ ಆಗುವುದಿಲ್ಲ. ನಾವಿಬ್ಬರು ಉತ್ತಮ ಸ್ನೇಹಿತರಾಗಿ ಇರೋಣ ಎಂದಿದ್ದೆ. ಹಾಗೆಯೇ ಇದ್ದೆವು ಕೂಡ.
ಬೆಂಗಳೂರಿಗೆ ಹೋಗೋ ಸಮಯದಲ್ಲಿ ನಮ್ಮ ಮನೆಮುಂದೆ ಕಾರು ನಿಲ್ಲಿಸಿ, ನಾನಿದ್ರೆ ಮನೆಗೂ ಬರುತ್ತಿದ್ದರು. ಅಷ್ಟೊಂದು ಆಳವಾದ ಸ್ನೇಹ ನಮ್ಮಿಬ್ಬರಿಗಿತ್ತು. ಅವರನ್ನು ಕಳೆದುಕೊಂಡು ಬಹಳ ನೋವಾಗಿದೆ. ಅವರ ಆತ್ಮಕ್ಕೆ ಶಾಂತಿಯನ್ನು ಕೋರುತ್ತೇನೆ. ಅವರ ಕುಟುಂಬ ವರ್ಗದವರಿಗೆ ಈ ನೋವನ್ನು ಭರಿಸುವ ಶಕ್ತಿಯನ್ನು ಭಗವಂತ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ.
- ಇಂದು ತಿಪಟೂರಿಗೆ ಭೇಟಿ ನೀಡಿ ಬಿ. ಸಿ. ನಾಗೇಶ್ ಅವರ ಪಾರ್ಥೀವ ಶರೀರದ ದರ್ಶನ ಪಡೆದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದೆ. -
Dr. G Parameshwara
@DrParameshwara
ಇಂದು ತಿಪಟೂರಿಗೆ ಭೇಟಿ ನೀಡಿ, ನಮ್ಮನ್ನಗಲಿದ ಹಿರಿಯ ನಾಯಕರು, ಮಾಜಿ ಸಚಿವರಾದ ಬಿ. ಸಿ. ನಾಗೇಶ್ ಅವರ ಪಾರ್ಥೀವ ಶರೀರದ ದರ್ಶನ ಪಡೆದು, ಅಂತಿಮ ನಮನ ಸಲ್ಲಿಸಿದೆ.
ಶ್ರೀಯುತರ ಅಗಲಿಕೆಯ ನೋವಿನಲ್ಲಿದ್ದ ಕುಟುಂಬವರ್ಗಕ್ಕೆ ಸಾಂತ್ವನ ತಿಳಿಸಿದೆ. -
Dr. G Parameshwara
@DrParameshwara
ಸಾಮಾಜಿಕ ಭದ್ರತಾ ಪಿಂಚಣಿ ಯೋಜನೆಯಡಿ ₹32,000 ದಿಂದ ₹1,20,000 ಒಳಗಿನ ವಾರ್ಷಿಕ ಆದಾಯ ಮಿತಿ ಹೊಂದಿರುವ ಅರ್ಹ ಫಲಾನುಭವಿಗಳ ಪಿಂಚಣಿಗಳನ್ನು ಮುಂದುವರೆಸುವಂತೆ ಆದೇಶ ಹೊರಡಿಸಿದ್ದೇವೆ.
ವಿವಿಧ ಸಾಮಾಜಿಕ ಪಿಂಚಣಿಗಳಾದ ವೃದ್ಧಾಪ್ಯ ವೇತನ, ವಿಧವಾ ವೇತನ, ಅಂಗವಿಕಲ ವೇತನ ಇತ್ಯಾದಿಗಳಿಗೆ 32 ಸಾವಿರ ರೂ. ಆದಾಯ ಮಿತಿ ಇತ್ತು. ಬಹಳ ದಿನಗಳಿಂದ ಇದುವೇ ಆದಾಯ ಮಿತಿಯಿದ್ದ ಕಾರಣ ಲಕ್ಷಾಂತರ ಜನರು ಪಿಂಚಣಿ ಸೌಲಭ್ಯದಿಂದ ಹೊರಗೆ ಉಳಿದಿದ್ದರು. ಅದನ್ನು ₹1,20,000 ಗಳಿಗೆ ಏರಿಕೆ ಮಾಡುವ ಮೂಲಕ ಬಹುಕಾಲದ ಸಮಸ್ಯೆಯನ್ನು ಬಗೆಹರಿಸಿದ್ದೇವೆ.
ಕುಟುಂಬ ದತ್ತಾಂಶದಿಂದ ಪಡೆದ ಮಾಹಿತಿಗಳನ್ನು ರಾಜ್ಯದಲ್ಲಿ ಪಿಂಚಣಿ ಪಡೆಯುತ್ತಿರುವ ಫಲಾನುಭವಿಗಳ ಮಾಹಿತಿಯೊಂದಿಗೆ ಸಂಯೋಜಿಸಿದಾಗ 23,14,544 ಫಲಾನುಭವಿಗಳು ಸಂದೇಹಾಸ್ಪದ ಎಂದು ಕಂಡುಬಂದಿದ್ದು, ಈ ಫಲಾನುಭವಿಗಳ ಭೌತಿಕ ಪರಿಶೀಲನೆಗಾಗಿ ಸಂಯೋಜನೆ ಮೊಬೈಲ್ ಆ್ಯಪ್ ಸಿದ್ಧಪಡಿಸಿ ಪರಿಶೀಲನೆ ನಡೆಸಲಾಗಿತ್ತು.
ಈ ಸಮಯದಲ್ಲಿ ದಾಖಲಾತಿಗಳನ್ನು ಹಾಜರುಪಡಿಸದ, ನೀಡಿದ ವಿಳಾಸದಲ್ಲಿ ವಾಸವಿಲ್ಲದಿದ್ದ ಮತ್ತು ಆದಾಯ ದೃಢೀಕರಣ ಪತ್ರ ಹಾಜರುಪಡಿಸದಿದ್ದ 18,06,032 ಮಂದಿಯ ಪಿಂಚಣಿಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು.
ಗ್ರಾಮ ಆಡಳಿತಾಧಿಕಾರಿಗಳು ಸಂಯೋಜನೆ ಮೊಬೈಲ್ ಆ್ಯಪ್ ಮೂಲಕ ಪರಿಶೀಲಿಸಿದ ನಂತರ ಸಂಬಂಧಪಟ್ಟ ತಾಲೂಕು ತಹಶೀಲ್ದಾರರಿಂದ ನಿಯಮಾನುಸಾರ ಪರಿಶೀಲನೆ ಮಾಡಿ ಅರ್ಹ ಫಲಾನುಭವಿಗಳಿಗೆ ಪಿಂಚಣಿ ನೀಡಲು ನಿರ್ದೇಶನ ನೀಡಲಾಗಿದೆ. ಆದರೆ, 23,14,544 ಸಂದೇಹಾಸ್ಪದ ಫಲಾನುಭವಿಗಳ ಭೌತಿಕ ಪರಿಶೀಲನೆ ಸಮಯದಲ್ಲಿ ಆದಾಯವು ₹32,000 ಕ್ಕಿಂತ ಹೆಚ್ಚಿರುವುದು ಕಂಡುಬಂತು.
23,14,544 ಮಂದಿಯ ಪೈಕಿ ₹32,000ಕ್ಕಿಂತ ಹೆಚ್ಚು ಹಾಗೂ ₹1,20,000 ಕ್ಕಿಂತ ಕಡಿಮೆ ವಾರ್ಷಿಕ ಆದಾಯ ಇರುವಂತಹ ಫಲಾನುಭವಿಗಳ ಪಿಂಚಣಿಯನ್ನು ಮುಂದುವರೆಸುವಂತೆ ಈ ಮೊದಲು ಸೂಚಿಸಿದ್ದೆ.
ಅದರಂತೆ 23,14,544 ಮಂದಿಯ ಪೈಕಿ ಪರಿಶೀಲನೆಯ ನಂತರ ₹32,000ಕ್ಕಿಂತ ಹೆಚ್ಚು ಹಾಗೂ ₹1,20,000 ಒಳಗಿನ ವಾರ್ಷಿಕ ಆದಾಯ ಮಿತಿಯನ್ನು ಹೊಂದಿರುವ ಅರ್ಹ ಫಲಾನುಭವಿಗಳ ಪಿಂಚಣಿಗಳನ್ನು ಮುಂದುವರಿಸಲು ತೀರ್ಮಾನಿಸಿದ್ದೇವೆ. -
Dr. G Parameshwara
@DrParameshwara
Quality healthcare must be accessible to every family, irrespective of income or location. That is why major investments are being made across Tumakuru to strengthen trauma care, maternal and child healthcare, diagnostics, nursing education, cancer treatment and specialised medical services. From the ₹100 crore Cancer Hospital to the new 300-bed District Hospital, these projects are about building lasting public health infrastructure closer to the people. The goal is a stronger healthcare network where every citizen can access timely and affordable treatment with dignity.
ಆರ್ಥಿಕ ಸ್ಥಿತಿಗತಿ ಮತ್ತು ಪ್ರದೇಶಗಳ ತಾರತಮ್ಯವಿಲ್ಲದೇ ಪ್ರತಿಯೊಂದು ಕುಟುಂಬಕ್ಕೂ ಗುಣಮಟ್ಟದ ಆರೋಗ್ಯ ಸೇವೆ ಲಭ್ಯವಾಗಬೇಕು. ಈ ನಿಟ್ಟಿನಲ್ಲಿ ತುಮಕೂರಿನಲ್ಲಿ ಟ್ರಾಮಾ ಕೇರ್ ಸೆಂಟರ್, ತಾಯಿ ಮತ್ತು ಮಕ್ಕಳ ಆಸ್ಪತ್ರೆ, ನರ್ಸಿಂಗ್ ಕಾಲೇಜು, ಕ್ಯಾನ್ಸರ್ ಚಿಕಿತ್ಸೆ ಸೇರಿದಂತೆ ವಿಶೇಷ ವೈದ್ಯಕೀಯ ಸೇವೆಗಳನ್ನು ಬಲಪಡಿಸಲು ಹಲವು ಮಹತ್ವದ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗುತ್ತಿದೆ.
₹100 ಕೋಟಿ ವೆಚ್ಚದಲ್ಲಿ ಕ್ಯಾನ್ಸರ್ ಆಸ್ಪತ್ರೆ ನಿರ್ಮಿಸಲಾಗಿದ್ದು, 300 ಹಾಸಿಗೆಗಳ ನೂತನ ಜಿಲ್ಲಾ ಆಸ್ಪತ್ರೆ ಸೇರಿದಂತೆ ಜನರಿಗೆ ಸಮೀಪದಲ್ಲೇ ಉತ್ತಮ ಆರೋಗ್ಯ ಸೇವೆ ದೊರೆಯುವಂತೆ ಸುಸಜ್ಜಿತ ಆರೋಗ್ಯ ಮೂಲಸೌಕರ್ಯವನ್ನು ಕಲ್ಪಿಸಲಾಗುತ್ತಿದೆ. ಪ್ರತಿಯೊಬ್ಬ ನಾಗರಿಕನಿಗೂ ಸಕಾಲದಲ್ಲಿ ಕೈಗೆಟುಕುವ ದರದಲ್ಲಿ ಆರೋಗ್ಯ ಸೇವೆ ಕಲ್ಪಿಸುವುದು ನಮ್ಮ ಗುರಿಯಾಗಿದೆ. -
Dr. G Parameshwara
@DrParameshwara
ಗಣಿ ಮತ್ತು ಖನಿಜಗಳು (ಅಭಿವೃದ್ಧಿ ಮತ್ತು ನಿಯಂತ್ರಣ) ತಿದ್ದುಪಡಿ ಮಸೂದೆ 2026 - ಭಾರತದ ಒಕ್ಕೂಟ ವ್ಯವಸ್ಥೆಯ ಭವಿಷ್ಯದ ಕುರಿತು ಗಂಭೀರ ಪ್ರಶ್ನೆಯನ್ನು ಹುಟ್ಟುಹಾಕುತ್ತಿದೆ.
ರಾಜ್ಯದಲ್ಲಿ ಗಣಿಗಾರಿಕೆಯಿಂದ ಹಾನಿಗೊಳಗಾಗುವ ರಸ್ತೆಗಳು, ಜಲ ಮತ್ತು ಅರಣ್ಯಗಳ ಮೇಲಿನ ಒತ್ತಡ, ಬಾಧಿತ ಜನರ ಪುನರ್ವಸತಿ ಹಾಗೂ ಸಾರ್ವಜನಿಕ ಮೂಲಸೌಕರ್ಯಗಳ ನಿರ್ಮಾಣದ ವೆಚ್ಚವನ್ನು ಕರ್ನಾಟಕವೇ ಭರಿಸಬೇಕು ಎಂಬ ಕೇಂದ್ರದ ನಿರೀಕ್ಷೆ ಸರಿಯಲ್ಲ. ಖನಿಜ ಸಂಪನ್ಮೂಲಗಳ ಮೇಲಿನ ರಾಜ್ಯಗಳ ಸಂವಿಧಾನಬದ್ಧ ತೆರಿಗೆ ಅಧಿಕಾರಗಳನ್ನು ಕೇಂದ್ರ ಸರ್ಕಾರ ಮೊಟಕುಗೊಳಿಸುವುದು ಸಮಂಜಸವಲ್ಲ.
ರಾಜ್ಯಗಳು ಈಗಾಗಲೇ ಆರೋಗ್ಯ, ಶಿಕ್ಷಣ, ಕೃಷಿ, ಕಲ್ಯಾಣ ಮತ್ತು ಮೂಲಸೌಕರ್ಯ ಕ್ಷೇತ್ರಗಳಲ್ಲಿ ದೊಡ್ಡ ಜವಾಬ್ದಾರಿಗಳನ್ನು ನಿರ್ವಹಿಸುತ್ತಿವೆ. ಇಂತಹ ಸಂದರ್ಭದಲ್ಲಿ ರಾಜ್ಯಗಳ ತೆರಿಗೆ ಹಕ್ಕನ್ನು ಕಸಿಯುವುದು ಅನ್ಯಾಯವಾಗಿದೆ.
ಈ ನಿಟ್ಟಿನಲ್ಲಿ, ಪ್ರಸ್ತುತ ರೂಪದಲ್ಲಿರುವ ಮಸೂದೆಯನ್ನು ಮರುಪರಿಶೀಲಿಸಿ ಹಿಂಪಡೆಯಬೇಕು, ಎಲ್ಲಾ ರಾಜ್ಯ ಸರ್ಕಾರಗಳೊಂದಿಗೆ ಸಮಾಲೋಚನೆ ನಡೆಸಬೇಕು ಹಾಗೂ ರಾಜ್ಯಗಳ ಸಂವಿಧಾನಬದ್ಧ ತೆರಿಗೆ ಸ್ವಾಯತ್ತತೆಯನ್ನು ರಕ್ಷಿಸಬೇಕು ಎಂದು ಪ್ರಧಾನಮಂತ್ರಿ ಅವರನ್ನು ಒತ್ತಾಯಿಸಿದ್ದೇನೆ.
ರಾಜ್ಯಗಳನ್ನು ದುರ್ಬಲಗೊಳಿಸುವುದರಿಂದ ಕೇಂದ್ರ ಬಲಿಷ್ಠವಾಗಲು ಸಾಧ್ಯವಿಲ್ಲ. ರಾಜ್ಯಗಳು ಬಲಿಷ್ಠವಾದಾಗ ಮಾತ್ರ ದೇಶ ಬಲಿಷ್ಠವಾಗುತ್ತದೆ.
Dr. G Parameshwara
@DrParameshwara
-
Dr. G Parameshwara
@DrParameshwara
ಪ್ರಸ್ತುತ ಚಾಲ್ತಿಯಲ್ಲಿರುವ ರೀಸರ್ವೆ ಸಂದರ್ಭದಲ್ಲಿ ಎಲ್ಲಾ ಕೃಷಿ ಜಮೀನನ್ನು ಅಳತೆ ಮಾಡಿ ಉಳಿದ ಜನವಸತಿ ಪ್ರದೇಶಗಳನ್ನು ಗ್ರಾಮ ನಕಾಶೆಗಳಲ್ಲಿ ಗ್ರಾಮ ಠಾಣಾಗಳೆಂದು ಗುರುತಿಸಲಾಗಿರುತ್ತದೆ.
ರೀಸರ್ವೆಯ ನಂತರದಲ್ಲಿ ಬೆಳೆದಿರುವ ಗ್ರಾಮಠಾಣಾಗಳನ್ನು ಸರ್ಕಾರವು ದಾಖಲೆ ರಹಿತ ಜನವಸತಿಗಳನ್ನು ಕಂದಾಯ ಗ್ರಾಮ/ಗ್ರಾಮದ ಭಾಗವಾಗಿ ಪರಿವರ್ತಿಸಿ ಅಲ್ಲಿಯ ನಿವಾಸಿಗಳಿಗೆ ವಾಸದ ಹಕ್ಕುದಾಖಲೆಗಳನ್ನು ನೀಡುವ ಕುರಿತು 2019ರಲ್ಲಿ ಕರ್ನಾಟಕ ಭೂ ಸುಧಾರಣಾ ಕಾಯ್ದೆ-1961ರ ಕಲಂ 38-ಎ ರನ್ವಯ 2-ಇ ಅಧಿಸೂಚನೆಯನ್ನು ಜಿಲ್ಲಾಧಿಕಾರಿಗಳು ಕೆಲವು ಷರತ್ತುಗಳನ್ನು ವಿಧಿಸಿ ಜನವಸತಿ ಪ್ರದೇಶವನ್ನು ಗ್ರಾಮಠಾಣಾವಾಗಿ ಪರಿಗಣಿಸಿ ಅದನ್ನು ಕಂದಾಯ ಗ್ರಾಮ/ಗ್ರಾಮದ ಭಾಗ/ಬಡಾವಣೆ ಆಗಿ ಅಧಿಸೂಚಿಸಲು ಪ್ರಸ್ತಾವನೆ ಸಲ್ಲಿಸುವಂತೆ ಸೂಚಿಸಲಾಗಿರುತ್ತದೆ. ಅಧಿಸೂಚನೆಯಾದ ನಂತರದಲ್ಲಿ ಸದರಿ ಅಧಿಸೂಚನೆ ಆಧರಿಸಿ ಭೂಮಾಪನ ಇಲಾಖೆ ವತಿಯಿಂದ ಮುಂದಿನ ಅಗತ್ಯ ಕ್ರಮ ಕೈಗೊಳ್ಳಲಾಗುತ್ತದೆ.
ಮುಂದುವರೆದು, 2020ರಲ್ಲಿ ಕೇಂದ್ರ ಸರ್ಕಾರದಿಂದ ಗ್ರಾಮೀಣ ಜನವಸತಿ ಪ್ರದೇಶಗಳಿಗೆ ಡ್ರೋನ್ ಆಧಾರಿತ ಸರ್ವೆ ಮೂಲಕ ಹಕ್ಕುದಾಖಲೆಗಳನ್ನು ಸಿದ್ಧಪಡಿಸಿ ವಿತರಿಸುವ ಸ್ವಮಿತ್ವ ಯೋಜನೆಯನ್ನು ಜಾರಿಗೊಳಿಸಲಾಗಿದ್ದು, ಅದರಂತೆ ಜನವಸತಿ ಪ್ರದೇಶದ ಎಲ್ಲಾ ಆಸ್ತಿಗಳಿಗೆ ಹಕ್ಕು ದಾಖಲೆಗಳನ್ನು ಸಿದ್ಧಪಡಿಸಿ ವಿತರಿಸಲಾಗುತ್ತಿದೆ.
ಈಗಾಗಲೇ ಅಳತೆಯಾಗಿ ಸರ್ವೆ ನಂಬರ್ಗಳನ್ನು ನೀಡಲಾದ ಪ್ರದೇಶವನ್ನು ಗ್ರಾಮಠಾಣಾ ಎಂದು ಪರಿವರ್ತಿಸಲು ಭೂಕಂದಾಯ ಅಧಿನಿಯಮದಲ್ಲಿ ಅವಕಾಶ ಇರುವುದಿಲ್ಲ. ಸರ್ವೆ ನಂಬರುಗಳನ್ನು ನೀಡಲಾದ ಗ್ರಾಮಠಾಣಾಕ್ಕೆ ಹೊಂದಿಕೊಂಡಿರುವ ಪ್ರದೇಶದಲ್ಲಿ ಮನೆಗಳಿದ್ದರೂ ಅವುಗಳ ಬಳಕೆ ಬದಲಾಗುವುದಿಲ್ಲ. ಗ್ರಾಮಠಾಣಾ ವಿಸ್ತರಣೆ ಮೂಲಕ ಭೂಪರಿವರ್ತನೆಯಾಗದ ಹೊರತು ಭೂಬಳಕೆ ಬದಲಾವಣೆಗೆ ಕಾನೂನಿನ್ವಯ ಯಾವುದೇ ವಿನಾಯಿತಿ ದೊರೆಯುವುದಿಲ್ಲ.
ಗ್ರಾಮಠಾಣಾಗಳನ್ನು ಎಷ್ಟು ವರ್ಷಗಳಿಗೊಮ್ಮೆ ನಿಗದಿಪಡಿಸಬೇಕು ಎಂಬ ನಿರ್ದಿಷ್ಟ ಕಾಲಾವಧಿಯನ್ನು ಕರ್ನಾಟಕ ಭೂಕಂದಾಯ ಅಧಿನಿಯಮ, ನಿಯಮಗಳು ಅಥವಾ ಸರ್ಕಾರದ ಆದೇಶಗಳಲ್ಲಿ ನಿಗದಿಪಡಿಸಿರುವುದಿಲ್ಲ. ಕರ್ನಾಟಕ ಭೂಕಂದಾಯ ಅಧಿನಿಯಮ 1964 ರ ಕಲಂ 115ರನ್ವಯ ಸರ್ವೆ ಗ್ಯಾರಂಟಿ ಅವಧಿ 30 ವರ್ಷವಾಗಿದ್ದು, ಪ್ರತಿ ಸರ್ವೆ ಸೆಟಲ್ಮೆಂಟ್ ಕಾರ್ಯ ಪೂರ್ಣಗೊಂಡ ನಂತರ ಅದರಂತೆ, ಗ್ರಾಮ ನಕಾಶೆಯನ್ನು ಕಾಲೋಚಿತಗೊಳಿಸಬೇಕಾಗಿರುತ್ತದೆ. ಮರು ಭೂಮಾಪನ ಕಾರ್ಯವು ಕೈಗೊಳ್ಳದೇ ಇದ್ದಲ್ಲಿ ಕರ್ನಾಟಕ ಭೂಕಂದಾಯ ಅಧಿನಿಯಮ 1964 ರ ಕಲಂ 126 ರನ್ವಯ ಈ ಹಿಂದಿನ ಸೆಟಲ್ಮೆಂಟ್ ಜಾರಿಯಲ್ಲಿರುತ್ತದೆ.
ಗ್ರಾಮ ನಕಾಶೆಗಳನ್ನು ನಿರ್ದಿಷ್ಟ ಸಂಖ್ಯೆಯ ವರ್ಷಗಳಿಗೊಮ್ಮೆ ಕಡ್ಡಾಯವಾಗಿ ಇಂಡೀಕರಿಸಬೇಕೆಂಬ ಬಗ್ಗೆ ಯಾವುದೇ ಕಾಲಮಿತಿ ನಿಗದಿಪಡಿಸಿರುವುದಿಲ್ಲ. ಗ್ರಾಮ ನಕಾಶೆಗಳನ್ನು ಪ್ರತಿ ರೀಸರ್ವೆ/ಸರ್ವೇ ಸೆಟಲ್ಮೆಂಟ್ ಕಾರ್ಯ ಪೂರ್ಣಗೊಂಡ ನಂತರ ಕಾಲೋಚಿತಗೊಳಿಸಲಾಗುತ್ತದೆ. ಸರ್ವೆ, ರೀಸರ್ವೆ / ರಿ-ಕ್ಲಾಸಿಫಿಕೆಶನ್ ಕಾಲಕ್ಕೆ, ಗಡಿ ಬದಲಾವಣೆ ಹಾಗೂ ಇತರೆ ದಾಖಲೆಗಳ ಆಧಾರದ ಮೇಲೆ ನಕಾಶೆಗಳನ್ನು ಪರಿಷ್ಕರಿಸುವ ವ್ಯವಸ್ಥೆ ಜಾರಿಯಲ್ಲಿರುತ್ತದೆ. ಪ್ರಸ್ತುತ ರಾಜ್ಯದಲ್ಲಿ ರೀಸರ್ವೆ / ರಿ-ಕ್ಲಾಸಿಫಿಕೆಶನ್ ಅವಧಿಯಲ್ಲಿ ಕಾಲೋಚಿತಗೊಳಿಸಲ್ಪಟ್ಟ ನಕಾಶೆಗಳು ಚಾಲ್ತಿಯಲ್ಲಿದ್ದು, ಅಧೀನ ಕಛೇರಿಗಳಿಂದ ಸೂಕ್ತ ಪ್ರಸ್ತಾವನೆ ಸ್ವೀಕೃತವಾದಲ್ಲಿ ಪರಿಶೀಲಿಸಿ ಕಾಲೋಚಿತ ಗ್ರಾಮ ನಕಾಶೆಗಳನ್ನು ಮರು ಮುದ್ರಿಸಿಕೊಡಲಾಗುತ್ತದೆ.
ಸರ್ವೇ ಗ್ಯಾರಂಟಿ ಅವಧಿಯ 30 ವರ್ಷ ಮುಕ್ತಾಯವಾದ ತರುವಾಯ, ಭೂಮಿಯ ಮೇಲೆ ಆಗಿರುವ ಎಲ್ಲಾ ಭೌಗೋಳಿಕ ಬದಲಾವಣೆಗಳನ್ನೊಳಗೊಡಂತೆ ರಾಜ್ಯದ ಎಲ್ಲಾ ಗ್ರಾಮಗಳನ್ನು ಮರು ಭೂಮಾಪನಕ್ಕೊಳಪಡದೇ ಇರುವುದರಿಂದ ನಕಾಶೆಯಲ್ಲಿ ಕಾಲೋಚಿತಗೊಳಿಸಲು ಸಾಧ್ಯವಾಗುತ್ತಿರುವುದಿಲ್ಲ. ಈ ಬಗ್ಗೆ ಕೇಂದ್ರ ಸರ್ಕಾರದ ಸಹಭಾಗಿತ್ವದ ಪ್ರಮುಖ ಯೋಜನೆಯಾದ ಸ್ವಮಿತ್ನ ಯೋಜನೆ ಮೂಲಕ ರಾಜ್ಯದ ಪ್ರತಿ ಗ್ರಾಮ ಠಾಣಾ ಆಸ್ತಿಗಳನ್ನು ಆಧುನಿಕ ಉಪಕರಣ ಬಳಸಿ, ಕಂದಾಯ ಇಲಾಖೆ/ಪಂಚಾಯತ್ ರಾಜ್ ಇಲಾಖೆ ಸಹಕಾರದೊಂದಿಗೆ ಕಾಲೋಚಿತಗೊಳಿಸುವ ಕಾರ್ಯ ಚಾಲ್ತಿಯಲ್ಲಿದ್ದು, ಹಂತ ಹಂತವಾಗಿ ಎಲ್ಲಾ ಗ್ರಾಮ ಠಾಣಾ ಆಸ್ತಿಗಳ ಸರ್ವೇ/ಕಾಲೋಚಿತಗೊಳಿಸುವ ಕಾರ್ಯ ಕೈಗೊಳ್ಳಲಾಗುತ್ತದೆ. ಅದರಂತೆ ಸ್ವಾಮಿತ್ವ ಯೋಜನೆಯಡಿ ರಾಜ್ಯದಲ್ಲಿ ಗ್ರಾಮಠಾಣಾ ಆಸ್ತಿಗಳ ಅಳತೆ ಮತ್ತು ನಕ್ಷೆ ತಯಾರಿಸುವ ಕಾರ್ಯ ಪ್ರಗತಿಯಲ್ಲಿರುತ್ತದೆ.
ಗ್ರಾಮ ನಕಾಶೆಗಳ ಮುದ್ರಣ ಪ್ರತಿಗಳನ್ನು ಭೂದಾಖಲೆಗಳ ಸಹಾಯಕ ನಿರ್ದೇಶಕರ ಕಚೇರಿಯಲ್ಲಿ ಕೋರಿಕೆ ಮೇರೆಗೆ ಸಾರ್ವಜನಿಕರಿಗೆ ವಿತರಿಸಲಾಗುತ್ತಿದ್ದು, 5 ಪ್ರತಿಗಳಿಗಿಂತ ಕಮ್ಮಿ ಆದಂತಹ ಗ್ರಾಮದ ಗ್ರಾಮ ನಕಾಶೆಯಲ್ಲಿನ ಎಲ್ಲಾ ಬದಲಾವಣೆಗಳನ್ನು ಇಂಡೀಕರಿಸಿ ಕಚ್ಚಾ ನಕಾಶೆ ತಯಾರಿಸಿ ಮರು ಮುದ್ರಣಕ್ಕಾಗಿ ಸಲ್ಲಿಸುವ ವ್ಯವಸ್ಥೆ ಜಾರಿಯಲ್ಲಿದೆ.
- ಇಂದು ವಿಧಾನ ಪರಿಷತ್ನಲ್ಲಿ ಪ್ರಶ್ನೋತ್ತರ ವೇಳೆಯಲ್ಲಿ 'ರೀಸರ್ವೆ ಸಮಯದಲ್ಲಿ ಎಲ್ಲಾ ಗ್ರಾಮಗಳ ಗ್ರಾಮ ಠಾಣಾಗಳನ್ನು ನಿಗದಿಪಡಿಸಲಾಗಿರುತ್ತದೆಯೇ' ಎಂಬ ಸದಸ್ಯರಾದ ಎಂ.ಎಲ್.ಅನಿಲ್ ಕುಮಾರ್ ಅವರ ಪ್ರಶ್ನೆಗೆ ನನ್ನ ಉತ್ತರ -
Dr. G Parameshwara
@DrParameshwara
ರಾಜ್ಯದಲ್ಲಿ ಅರಣ್ಯ ಮತ್ತು ಕೃಷಿ ಭೂಮಿ ಹೊರತುಪಡಿಸಿ ಒಟ್ಟು 3251707-06 ಎಕರೆ / ಗುಂಟೆ ಸರ್ಕಾರಿ ಭೂಮಿ ವಿಸ್ತೀರ್ಣವಿದೆ.
ಜಮೀನು ಮಂಜೂರಾತಿ / ಗುತ್ತಿಗೆ ನೀಡಿರುವ ಪ್ರಕರಣಗಳಲ್ಲಿ ಷರತ್ತು ಉಲ್ಲಂಘಿಸಿರುವ ಸಂಸ್ಥೆಗಳ ಮಂಜೂರಾತಿಯನ್ನು ರದ್ದುಪಡಿಸುವ ಕುರಿತಂತೆ ಕರ್ನಾಟಕ ಭೂ ಮಂಜೂರಾತಿ ನಿಯಮಗಳು, 1969ರ ಅನ್ವಯ ವಿವಿಧ ಸಂಸ್ಥೆಗಳಿಗೆ ಜಮೀನು ಮಂಜೂರಾತಿ / ಗುತ್ತಿಗೆಗೆ ನೀಡಲಾದ ಜಮೀನುಗಳ ಮಂಜೂರಾತಿ ಷರತ್ತು / ಗುತ್ತಿಗೆ ಷರತ್ತು ಉಲ್ಲಂಘನೆ ಪ್ರಕರಣಗಳಾದ ಜಮೀನಿನ ನಿಗದಿತ ಉದ್ದೇಶ ಹೊರತುಪಡಿಸಿ ಇತರೆ ಉದ್ದೇಶಗಳಿಗೆ ಬಳಕೆ ಮಾಡಿಕೊಂಡಿರುವ, ಮಂಜೂರಾತಿ ಉದ್ದೇಶಕ್ಕೆ ಜಮೀನನ್ನು ಬಳಕೆ ಮಾಡಿಕೊಳ್ಳದ, ಗುತ್ತಿಗೆ ಅವಧಿ ಮುಕ್ತಾಯಗೊಂಡು ಗುತ್ತಿಗೆ ನವೀಕರಿಸದ, ಉಪ ಗುತ್ತಿಗೆ ನೀಡಿರುವ, ಗುತ್ತಿಗೆ ಮೊತ್ತ ಪಾವತಿಯಾಗದ ಹಾಗೂ ಇನ್ನಿತರೆ ಷರತ್ತುಗಳ ಉಲ್ಲಂಘನೆಯಾಗಿರುವ ಸಂಸ್ಥೆಗಳ ಮಂಜೂರಾತಿಯನ್ನು ರದ್ದುಪಡಿಸಲು ನಿಯಮಾನುಸಾರ ಸೂಕ್ತ ಕ್ರಮ ಕೈಗೊಳ್ಳುವಂತೆ ಮತ್ತು ಸರ್ಕಾರದ ಆದೇಶದನ್ವಯ ಮಂಜೂರಾತಿ / ಗುತ್ತಿಗೆ ನೀಡಲಾದ ಪ್ರಕರಣಗಳಲ್ಲಿ ಮಂಜೂರಾತಿ / ಗುತ್ತಿಗೆ ಷರತ್ತು ಉಲ್ಲಂಘಿಸಿರುವ ಪ್ರಕರಣಗಳಿಗೆ ಸಂಬಂಧಿಸಿದಂತೆ ಮಂಜೂರಾತಿಯನ್ನು ರದ್ದುಗೊಳಿಸಲು ಕೂಡಲೇ ಸರ್ಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸುವಂತೆ ಎಲ್ಲಾ ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ.
ಮುಂದುವರೆದು, ಗುತ್ತಿಗೆ ನೀಡಿರುವ ಸರ್ಕಾರಿ ಜಮೀನುಗಳನ್ನು ಪ್ರಕರಣವಾರು ಪರಾಮರ್ಶಿಸಿ, ಗುತ್ತಿಗೆ ಷರತ್ತುಗಳು ಪಾಲನೆಯಾಗಿರುವ ಬಗ್ಗೆ, ಗುತ್ತಿಗೆ ಹಣ ಕಾಲ ಕಾಲಕ್ಕೆ ಪಾವತಿಸಿರುವ ಬಗ್ಗೆ, ಗುತ್ತಿಗೆ ಮುಗಿದಿರುವ ಪ್ರಕರಣಗಳಲ್ಲಿ ಸರ್ಕಾರಿ ಜಮೀನು ಹಿಂಪಡೆಯುವ ಬಗ್ಗೆ ಜಿಲ್ಲಾಧಿಕಾರಿಗಳು ಪರಾಮರ್ಶಿಸಿ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಹಾಗೂ ಭೂ ಮಂಜೂರಾತಿಯಾದ ಪ್ರಕರಣಗಳಲ್ಲಿಯೂ ಸಹ ಮಂಜೂರಾತಿ ಷರತ್ತು ಮತ್ತು ನಿಬಂಧನೆಗಳು ಪಾಲನೆಯಾಗಿರುವ ಬಗ್ಗೆ ಪರಾಮರ್ಶಿಸಿ, ಉಲ್ಲಂಘನೆಯಾಗಿರುವ ಪ್ರಕರಣಗಳಲ್ಲಿ ಕಾನೂನು ಕ್ರಮಗಳನ್ನು ಜರುಗಿಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.
- ಇಂದು ವಿಧಾನ ಪರಿಷತ್ನಲ್ಲಿ ಪ್ರಶ್ನೋತ್ತರ ವೇಳೆಯಲ್ಲಿ ʼರಾಜ್ಯದಲ್ಲಿ ಅರಣ್ಯ ಮತ್ತು ಕೃಷಿ ಭೂಮಿ ಹೊರತುಪಡಿಸಿ ಸರ್ಕಾರಿ ಭೂಮಿ ವಿಸ್ತೀರ್ಣವೆಷ್ಟುʼ ಎಂಬ ಸದಸ್ಯರಾದ ಶಿವಕುಮಾರ್ ಕೆ. ಅವರ ಪ್ರಶ್ನೆಗೆ ನನ್ನ ಉತ್ತರ -
Dr. G Parameshwara
@DrParameshwara
The MMDR Amendment Bill, 2026 raises a serious question about the future of India’s federal structure.
Karnataka cannot be expected to bear the costs of mining — damaged roads, pressure on water and forests, rehabilitation of affected communities and creation of public infrastructure — while its constitutionally recognised fiscal powers over mineral resources are curtailed by the Union Government.
This is particularly unfair when States already shoulder enormous responsibilities in healthcare, education, agriculture, welfare and infrastructure, even as their independent fiscal space has narrowed.
I have urged the Hon’ble Prime Minister to reconsider and withdraw the Bill in its present form, consult all State Governments meaningfully, and protect the constitutional fiscal autonomy of States.
The Union cannot become stronger by weakening its States. The Union becomes stronger when the States become stronger.
Dr. G Parameshwara
@DrParameshwara
-
Post not available here, view on X
Dr. G Parameshwara
@DrParameshwara
-
Dr. G Parameshwara
@DrParameshwara
A permanent home gives a family more than shelter; it provides security, dignity and a foundation for a better future. Across 11 urban local bodies, including Tumakuru Municipal Corporation, 192 acres of land have been identified to provide permanent housing for homeless families. Our commitment is to ensure that development reaches those who need it most and that every family has the opportunity to live with dignity.
ಸ್ವಂತ ಸೂರು ಒಂದು ಕುಟುಂಬಕ್ಕೆ ಆಶ್ರಯಕ್ಕಿಂತಲ್ಲೂ ಹೆಚ್ಚಾಗಿ, ಭದ್ರತೆ, ಗೌರವ ಮತ್ತು ಉತ್ತಮ ಭವಿಷ್ಯಕ್ಕೆ ಭದ್ರ ಬುನಾದಿಯನ್ನು ಒದಗಿಸುತ್ತದೆ. ಈ ನಿಟ್ಟಿನಲ್ಲಿ ತುಮಕೂರು ಮಹಾನಗರ ಪಾಲಿಕೆ ಸೇರಿದಂತೆ 11 ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ 192 ಎಕರೆ ಜಮೀನು ಗುರುತಿಸಲಾಗಿದ್ದು, ವಸತಿರಹಿತ ಕುಟುಂಬಗಳಿಗೆ ಶಾಶ್ವತ ಮನೆಗಳನ್ನು ಒದಗಿಸುವ ಕ್ರಮ ಕೈಗೊಳ್ಳಲಾಗುತ್ತಿದೆ.
ಅರ್ಹರಿಗೆ ಯೋಜನೆಯನ್ನು ತಲುಪಿಸಿ, ಪ್ರತಿಯೊಂದು ಕುಟುಂಬಕ್ಕೂ ಗೌರವಯುತ ಬದುಕು ಕಲ್ಪಿಸುವುದು ನಮ್ಮ ಬದ್ಧತೆ.
#nammatumakuru -
Dr. G Parameshwara
@DrParameshwara
ರಾಜ್ಯದ ಜನರು ನಮ್ಮನ್ನು ಗಮನಿಸುತ್ತಿದ್ದಾರೆ. ಕಳೆದ 2 ದಿನಗಳಿಂದ ಸದನದಲ್ಲಿ ಚರ್ಚೆಗಳೇ ನಡೆಯುತ್ತಿಲ್ಲ. ರಾಜ್ಯದ ಅಭಿವೃದ್ಧಿ ಬಗ್ಗೆ, ಬರದ ಬಗ್ಗೆ ಚರ್ಚೆಗಳು ಆಗಬೇಕು. ಜನರ ಸಮಸ್ಯೆಗಳ ಕುರಿತು ಚರ್ಚೆಗಳು ನಡೆಯಬೇಕು. ಅದಕ್ಕೆ ವಿರೋಧ ಪಕ್ಷದವರು ಸಹಕರಿಸಬೇಕು.
ರಾಜ್ಯದಲ್ಲಿ ಬರ ಪರಿಸ್ಥಿತಿ ಇದೆ. ಹಳ್ಳಿಗಾಡಿನಲ್ಲಿ ಕುಡಿಯಲು ನೀರಿಲ್ಲ. ಅನೇಕ ಕಡೆಗಳಲ್ಲಿ ಟ್ಯಾಂಕರ್ ಮೂಲಕ ನೀರನ್ನು ಒದಗಿಸುತ್ತಿದ್ದೇವೆ. ಜಾನುವಾರುಗಳಿಗೆ ಮೇವು ಕೂಡ ಕಡಿಮೆಯಾಗುತ್ತಿದೆ. ಅನೇಕ ಜ್ವಲಂತ ಸಮಸ್ಯೆಗಳು ರಾಜ್ಯದ ಜನತೆ ಮತ್ತು ನಮ್ಮ ಮುಂದಿದೆ. ಅದರ ಬಗ್ಗೆ ನಾವು ಚರ್ಚೆ ನಡೆಸಬೇಕು.
ನಾಗೇಂದ್ರ ಅವರನ್ನು ಸಚಿವರನ್ನಾಗಿ ಮಾಡಿರುವ ಬಗ್ಗೆ ವಿರೋಧ ಪಕ್ಷದವರು ಪ್ರಶ್ನೆ ಕೇಳಬಾರದು ಎಂದು ನಾನು ಹೇಳುತ್ತಿಲ್ಲ. ಆದರೆ, ನೀವು ನೋಟಿಸ್ ಕೊಟ್ಟು ಪ್ರಶ್ನೆಯನ್ನು ಕೇಳಬಹುದು. ಯಾಕೆ ಅವರನ್ನು ಮತ್ತೊಮ್ಮೆ ಮಂತ್ರಿಯನ್ನಾಗಿ ಮಾಡಿದ್ದೇವೆ ಎಂಬ ಬಗ್ಗೆ ಸ್ಪಷ್ಟವಾದ ಉತ್ತರವನ್ನು ನಾವು ಕೊಡುತ್ತೇವೆ. ಸದನದ ನಿಯಮಗಳಿಗೆ ಗೌರವ ಕೊಡಬೇಕು. ನಾವೇ ನಿಯಮ ರೂಪಿಸಿ, ಅದರ ವಿರುದ್ಧವೇ ನಡೆದುಕೊಂಡರೆ ಅದೆಷ್ಟು ಸರಿ?
ಇದು ಹಿರಿಯರ ಮನೆ. ‘House of Elders’ ಎಂದು ಕರೆಯುತ್ತಾರೆ. ಈ ಮನೆಯಲ್ಲಿ ಏನೆಲ್ಲ ನಡೆಯುತ್ತದೆ ಎಂಬುದನ್ನು ಇಡೀ ದೇಶವೇ ಗಮನಿಸುತ್ತದೆ. ಇಲ್ಲಿ ನಡೆಯುವಂತಹ ವಿದ್ಯಮಾನಗಳು ಕೆಳಗಿನ ಮನೆಗಿಂತಲೂ ವಿಭಿನ್ನವಾಗಿರುತ್ತದೆ. ಈ ಸದನಕ್ಕೆ ಬಹಳ ಗೌರವವಿದೆ. ನಾವು ಅದನ್ನು ಕಾಪಾಡಬೇಕು.
ನಾನು ವಿರೋಧ ಪಕ್ಷದ ನಾಯಕರಿಗೆ ಮತ್ತು ಎಲ್ಲ ಗೌರವಾನ್ವಿತ ಸದಸ್ಯರಿಗೆ ಮನವಿ ಮಾಡುವುದೇನೆಂದರೆ, ನೀವು ನೋಟಿಸ್ ಕೊಟ್ಟು ಪ್ರಶ್ನೆ ಮಾಡಿ, ಚರ್ಚೆ ಮಾಡಿ. ನಿಮಗೆ ಏನೆಲ್ಲಾ ಮಾಹಿತಿ ಇದೆಯೋ ಅದನ್ನೆಲ್ಲಾ ಹೇಳಿ. ನಾವು ಉತ್ತರವನ್ನು ಕೊಡುತ್ತೇವೆ. ಅದು ಬಿಟ್ಟು ಕಲಾಪಕ್ಕೆ ಅಡ್ಡಿಪಡಿಸುವುದು ಸರಿಯಲ್ಲ.
ಬರ ಸೇರಿದಂತೆ ಅನೇಕ ಸಮಸ್ಯೆಗಳ ಬಗ್ಗೆ ಕೇಂದ್ರಕ್ಕೆ ಮನವಿಯನ್ನು ಕೊಡಬೇಕು. ರಾಜ್ಯದಲ್ಲಿರುವ ಬರ ಪರಿಸ್ಥಿತಿಯನ್ನು ತಿಳಿಸಬೇಕು. 75 ವರ್ಷಗಳ ಬಳಿಕ ಇಂತಹ ಭೀಕರ ಬರ ಎದುರಾಗಿದೆ. ಕೇಂದ್ರವು ನಿಯಮಾವಳಿಗಳನ್ನು ಮಾಡಿದೆ. ಆ ನಿಯಮಾವಳಿಗಳ ಪ್ರಕಾರ ನಾವು ಬರಪೀಡಿತ ಪ್ರದೇಶ ಎಂದು ಘೋಷಣೆ ಮಾಡಬಹುದು. ಈಗಾಗಲೇ ನಾವು ಎಲ್ಲಾ ಜಿಲ್ಲೆಗಳ ಪರಿಸ್ಥಿತಿಯನ್ನು ಅವಲೋಕಿಸುತ್ತಿದ್ದೇವೆ. ವರದಿ ಬಂದ ಮೇಲೆ ಕೇಂದ್ರಕ್ಕೆ ಸಲ್ಲಿಸುತ್ತೇವೆ.
ಆ ಬಳಿಕ ಕೇಂದ್ರ ಸರ್ಕಾರ ತೀರ್ಮಾನ ಮಾಡುತ್ತದೆ. ತಂಡವನ್ನು ಇಲ್ಲಿಗೆ ಕಳಿಸಬಹುದು. ಆ ಆಧಾರದ ಮೇಲೆ ಬರ ಘೋಷಣೆ ಮಾಡಲು ಅನುಮತಿಯನ್ನು ಕೊಡಬಹುದು. ನಾವೇ ಘೋಷಣೆ ಮಾಡಿ ಎಂದರೆ ಆಗುವುದಿಲ್ಲ. ನಾವೇ ಘೋಷಣೆ ಮಾಡಿದರೆ ಪರಿಹಾರದ ಹಣ ಕೊಡುವವರು ಯಾರು? ಕೇಂದ್ರ ಸರ್ಕಾರಕ್ಕೆ ಸಮಗ್ರ ವರದಿಯನ್ನು ನೀಡಬೇಕು. ನಾವೆಲ್ಲರೂ ಸದನದಲ್ಲಿ ಈ ಬಗ್ಗೆ ಚರ್ಚೆ ಮಾಡೋಣ. ಜನರು ನಮ್ಮಿಂದ ಇದನ್ನೇ ನಿರೀಕ್ಷಿಸುತ್ತಿದ್ದಾರೆ. ಸದನದಲ್ಲಿ ರಾಜ್ಯದ ಅಭಿವೃದ್ಧಿಯ ಚರ್ಚೆಗಳು ನಡೆಯಲಿ. -
Dr. G Parameshwara
@DrParameshwara
ಬಿ.ಸಿ.ನಾಗೇಶ್ ಅವರು ನನಗೆ ಆತ್ಮೀಯ ಸ್ನೇಹಿತರು. ಶಾಸಕರಾಗಿ, ಸಚಿವರಾಗಿ ಉತ್ತಮ ಕೆಲಸಗಳನ್ನು ಮಾಡಿದ್ದಾರೆ. ಸಚಿವರಾಗಿದ್ದ ವೇಳೆ ಜಿಲ್ಲೆಯ ಅಭಿವೃದ್ಧಿಯ ವಿಚಾರವಾಗಿ ನನಗೆ ಕರೆ ಮಾಡಿ ಸಲಹೆ ಪಡೆಯುತ್ತಿದ್ದರು.
1994ರಲ್ಲಿ ಮಧುಗಿರಿ ವಿಧಾನಸಭಾ ಕ್ಷೇತ್ರದಲ್ಲಿ ನಾನು ಸೋತಾಗ, ಖುದ್ದು ನನ್ನ ಮನೆಗೆ ಬಂದು ಭೇಟಿ ಮಾಡಿದ್ದರು. 'ತಾವು ಬಿಜೆಪಿ ಸೇರಬೇಕು. ನಿಮ್ಮನ್ನು ಚೆನ್ನಾಗಿ ನೋಡಿಕೊಳ್ಳುತ್ತೇವೆ' ಎಂದು ಒತ್ತಾಯಿಸಿದ್ದರು. 'ನನಗೆ ಅನಂತ್ ಕುಮಾರ್ ಅವರು ಹೇಳಿ ಕಳಿಸಿದ್ದಾರೆ. ಹೇಗಾದರೂ ಮಾಡಿ ಪರಮೇಶ್ವರ ಅವರ ಮನವೊಲಿಸಿ. ಅಡ್ವಾಣಿ ಅವರು ತುಮಕೂರಿಗೆ ಬರುತ್ತಿದ್ದು, ಪರಮೇಶ್ವರ ಅವರಿಗೆ ಟಿಕೆಟ್ ಘೋಷಿಸೋಣ ಎಂದಿದ್ದಾರೆ' ಎಂಬ ವಿಷಯವನ್ನು ನನ್ನ ಮುಂದೆ ಪ್ರಸ್ತಾಪಿಸಿದ್ದರು. ಇದಕ್ಕೆ ನಾನು ಒಪ್ಪಲಿಲ್ಲ.
ನಾಗೇಶ್ ಅವರದ್ದು ಆಗಿನ ಕಾಲದಲ್ಲೇ ತಿಪಟೂರಿನಲ್ಲಿ ಸಾಹುಕಾರರು ಆಗಿದ್ದರು. ಸಾರ್ವಜನಿಕ ಬದುಕಿನಲ್ಲಿ ಕೆಲಸ ಮಾಡುವ ಅವಶ್ಯಕತೆಯೂ ಇರಲಿಲ್ಲ. ಆದರೂ, ಜನರ ಸೇವೆಯಲ್ಲಿ ತೊಡಗಿಸಿಕೊಂಡಿದ್ದರು. ನಾಗೇಶ್ ಅತ್ಯಂತ ಪ್ರಾಮಾಣಿಕ ವ್ಯಕ್ತಿ. ಸಚಿವರಾಗಿ ಒಳ್ಳೆಯ ಕೆಲಸ ಮಾಡಿದ್ದಾರೆ. ಪಕ್ಷಬೇಧ ಮರೆತು ಹಿರಿಯರನ್ನು ಗೌರವದಿಂದ ಮಾತನಾಡಿಸುತ್ತಿದ್ದರು.
ಭಗವಂತನು ಮೃತರ ಅತ್ಮಕ್ಕೆ ಚಿರಶಾಂತಿ ಕರುಣಿಸಲಿ. ಅವರನ್ನು ಕಳೆದುಕೊಂಡ ಕುಟುಂಬವರ್ಗಕ್ಕೆ ನೋವನ್ನು ಭರಿಸುವ ಶಕ್ತಿ ನೀಡಲಿ.
- ಇಂದು ವಿಧಾನ ಪರಿಷತ್ನ ಕಾರ್ಯಕಲಾಪದಲ್ಲಿ ಪಾಲ್ಗೊಂಡು, ನಮ್ಮನ್ನಗಲಿದ ಮಾಜಿ ಸಚಿವರಾದ ಬಿ.ಸಿ.ನಾಗೇಶ್ ಅವರಿಗೆ ಸಂತಾಪ ಸೂಚಿಸಿದೆ. -
Dr. G Parameshwara
@DrParameshwara
Tumakuru’s farmers have built a diverse and resilient agricultural economy, contributing nearly ₹1.75 lakh crore through agriculture and allied sectors. From coconut, arecanut and millets to dairy and sericulture, the district’s produce has earned recognition far beyond Karnataka.
The priority now is to strengthen this agricultural ecosystem further through better infrastructure, value addition, market opportunities and support for farmers so that those who produce our wealth receive a greater share of its benefits.
ತುಮಕೂರಿನ ರೈತರು ಕೃಷಿಕ್ಷೇತ್ರಕ್ಕೆ ಗಣನೀಯ ಕೊಡುಗೆ ನೀಡುತ್ತಿದ್ದು, ಕೃಷಿ ಸಂಬಂಧಿತ ಚಟುವಟಿಕೆಗಳಿಂದ ಸುಮಾರು ₹1.75 ಲಕ್ಷ ಕೋಟಿಯಷ್ಟು ಹಣ ಹರಿದುಬರುತ್ತಿದೆ. ಜಿಲ್ಲೆಯು ತೆಂಗು ಕೃಷಿಯಿಂದ ಹಿಡಿದು ಅಡಿಕೆ, ಸಿರಿಧಾನ್ಯ, ಹೈನುಗಾರಿಕೆ ಹಾಗೂ ರೇಷ್ಮೆ ಕೃಷಿಗಳ ವರೆಗೆ ರಾಜ್ಯದ ಗಡಿಯನ್ನು ಮೀರಿ ಗುರುತಿಸಿಕೊಂಡಿದೆ.
ಉತ್ತಮ ಮೂಲಸೌಕರ್ಯ, ಸುಸ್ಥಿರ ಮಾರುಕಟ್ಟೆ ಮತ್ತು ರೈತರಿಗೆ ಪ್ರೋತ್ಸಾಹ ನೀಡುವ ಮೂಲಕ ಕೃಷಿ ಕ್ಷೇತ್ರವನ್ನು ಮತ್ತಷ್ಟು ಸಮೃದ್ಧಗೊಳಿಸುವುದು ನಮ್ಮ ಸರ್ಕಾರದ ಆದ್ಯತೆಯಾಗಿದೆ. ಕೃಷಿಯನ್ನು ಲಾಭದಾಯಕ ಉದ್ಯೋಗವಾಗಿಸುವುದು ನಮ್ಮ ಗುರಿಯಾಗಿದೆ. -
Dr. G Parameshwara
@DrParameshwara
On World Photography Day, we celebrate the art of capturing moments, preserving memories and telling powerful stories through the lens. My best wishes to photographers everywhere whose creativity helps us see the world from new perspectives and keeps our shared memories alive.
#worldphotographyday -
Dr. G Parameshwara
@DrParameshwara
Humble tributes to the 9th President of India, Shri Shankar Dayal Sharma, on his birth anniversary. A distinguished statesman, scholar and public servant, his life was marked by unwavering commitment to democratic values, constitutional principles and public service. His contribution to our nation and its institutions will always be remembered with respect and gratitude.
#shankardayalsharma #birthanniversary -
Dr. G Parameshwara
@DrParameshwara
A child’s access to education should never be limited by where they come from or their family’s economic circumstances.
With an investment of ₹80 crore and hostel capacity for 1,000 students, better residential educational facilities are being created for poor and rural students in Tumakuru. Providing a safe place to stay, study and pursue their ambitions is an important investment in the district’s future.
ಮಕ್ಕಳ ಶಿಕ್ಷಣಕ್ಕೆ ಅವರ ಕುಟುಂಬದ ಆರ್ಥಿಕ ಸ್ಥಿತಿ ಅಡ್ಡಿಯಾಗಬಾರದು.
ತುಮಕೂರಿನಲ್ಲಿ ₹80 ಕೋಟಿ ವೆಚ್ಚದಲ್ಲಿ 1,000 ವಿದ್ಯಾರ್ಥಿಗಳಿಗೆ ಹೊಸ ಹಾಸ್ಟೆಲ್ಗಳ ಸೌಲಭ್ಯ ಕಲ್ಪಿಸಲಾಗುತ್ತಿದೆ. ಇದರಿಂದ ಬಡ ಮತ್ತು ಗ್ರಾಮೀಣ ಮಕ್ಕಳಿಗೆ ಓದಲು ಹಾಗೂ ತಮ್ಮ ಕನಸುಗಳನ್ನು ನನಸಾಗಿಸಿಕೊಳ್ಳಲು ಅವಕಾಶ ಸಿಗಲಿದೆ.
ಗ್ರಾಮೀಣ ಮಕ್ಕಳ ಉತ್ತಮ ಭವಿಷ್ಯಕ್ಕಾಗಿ ಇದು ಮಹತ್ವದ ಹೆಜ್ಜೆ. -
Dr. G Parameshwara
@DrParameshwara
ಇಂದು ವಿಧಾನಮಂಡಲ ಅಧಿವೇಶನದ ಕಲಾಪ ಆರಂಭಕ್ಕೂ ಮುನ್ನ ವಿಧಾನಸೌಧದ ಕಾರ್ಯಾಲಯದಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ವಿವಿಧ ವಿಷಯಗಳ ಕುರಿತು ಚರ್ಚಿಸಿದೆ.
ಕಂದಾಯ ಹಾಗೂ ಕ್ರೀಡಾ ಇಲಾಖೆಗೆ ಸಂಬಂಧಿಸಿದಂತೆ ಉಭಯ ಸದನಗಳಲ್ಲಿ ಪ್ರಸ್ತಾಪವಾಗುವ ಪ್ರಶ್ನೋತ್ತರ ಕಲಾಪ, ಶಾಸನಾತ್ಮಕ ವಿಚಾರಗಳು, ಸಾರ್ವಜನಿಕ ಹಿತಾಸಕ್ತಿ ಸೇರಿದಂತೆ ವಿವಿಧ ಚರ್ಚೆಯ ವಿಷಯಗಳ ಕುರಿತು ಅಧಿಕಾರಿಗಳಿಂದ ಅಗತ್ಯ ಮಾಹಿತಿ ಪಡೆದೆ.
ರಾಜ್ಯದ ಅಭಿವೃದ್ಧಿ, ಜನರ ಸಮಸ್ಯೆಗಳು, ರೈತರು, ಕಾರ್ಮಿಕರು, ಮಹಿಳೆಯರು, ಯುವಜನರು ಸೇರಿದಂತೆ ವಿವಿಧ ವರ್ಗಗಳ ಹಿತಾಸಕ್ತಿಗೆ ಸಂಬಂಧಿಸಿದ ವಿಚಾರಗಳಿಗೆ ಸದನದಲ್ಲಿ ಸೂಕ್ತವಾಗಿ ಸ್ಪಂದಿಸುವುದು ನಮ್ಮ ಪ್ರಮುಖ ಜವಾಬ್ದಾರಿಯಾಗಿದೆ. -
Dr. G Parameshwara
@DrParameshwara
ಹಿರಿಯ ರಾಜಕಾರಣಿ, ಮಾಜಿ ಶಿಕ್ಷಣ ಸಚಿವರು ಹಾಗೂ ನನ್ನ ಜಿಲ್ಲೆಯವರೇ ಆದ ಬಿ. ಸಿ. ನಾಗೇಶ್ ಅವರ ನಿಧನದ ಸುದ್ದಿ ಕೇಳಿ ಆಘಾತವಾಯಿತು.
ಸರಳ ನಡೆ - ನುಡಿಯ ಮೂಲಕ ಸಮಾಜದಲ್ಲಿ ಅಭಿಮಾನಿ ವರ್ಗವನ್ನು ಸಂಪಾದಿಸಿದ್ದು, ವಿರೋಧ ಪಕ್ಷದ ನಾಯಕರ ಜೊತೆಗೂ ಉತ್ತಮ ಒಡನಾಟವನ್ನು ಹೊಂದಿದ್ದ ಅವರ ಅಗಲಿಕೆಯಿಂದ ನಾಡು ಒಬ್ಬ ಧೀಮಂತ ನಾಯಕನನ್ನು ಕಳೆದುಕೊಂಡಂತಾಗಿದೆ.
ಭಗವಂತನು ಶ್ರೀಯುತರ ಆತ್ಮಕ್ಕೆ ಚಿರಶಾಂತಿಯನ್ನು ಕರುಣಿಸಲಿ ಹಾಗೂ ಅವರ ಕುಟುಂಬಕ್ಕೆ, ಅಭಿಮಾನಿ ವರ್ಗಕ್ಕೆ ಈ ನೋವನ್ನು ಭರಿಸುವ ಶಕ್ತಿ ಕೊಡಲಿ ಎಂದು ಪ್ರಾರ್ಥಿಸುತ್ತೇನೆ. -
Dr. G Parameshwara
@DrParameshwara
ಇಂದು ಬೆಂಗಳೂರಿನ ಖಾಸಗಿ ಹೋಟೆಲ್ನಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರಾದ ಮುಖ್ಯಮಂತ್ರಿ ಶ್ರೀ @DKShivakumar ಅವರ ಅಧ್ಯಕ್ಷತೆಯಲ್ಲಿ ನಡೆದ ಸಿಎಲ್ಪಿ ಸಭೆಯಲ್ಲಿ ಪಾಲ್ಗೊಂಡೆ.
ಸಚಿವರಾದ ಕೆ.ಹೆಚ್. ಮುನಿಯಪ್ಪ, ಕೆ.ಜೆ. ಜಾರ್ಜ್, ಎಂ.ಬಿ. ಪಾಟೀಲ್, ಯು.ಟಿ. ಖಾದರ್, ಸತೀಶ್ ಜಾರಕಿಹೊಳಿ, ಯತೀಂದ್ರ ಸಿದ್ದರಾಮಯ್ಯ, ಮಾಜಿ ಸಚಿವರಾದ ಹೆಚ್.ಕೆ.ಪಾಟೀಲ್, ಸಿ.ಎಲ್.ಪಿ ಕಾರ್ಯದರ್ಶಿಗಳಾದ ಅಲ್ಲಮಪ್ರಭು ಪಾಟೀಲ ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. -
Dr. G Parameshwara
@DrParameshwara
Agriculture remains the backbone of thousands of families across Tumakuru. Over the last three years, support worth ₹6,390 crore has been extended towards 3,06,208 agricultural pump sets in the district.
Ensuring reliable support for irrigation and reducing the burden on farmers are essential to strengthening rural livelihoods. The Government remains committed to standing with Tumakuru’s farming community and building a more secure agricultural future.
ತುಮಕೂರಿನ ಸಾವಿರಾರು ಕುಟುಂಬಗಳಿಗೆ ಕೃಷಿಯೇ ಜೀವನಾಧಾರ. ಜಿಲ್ಲೆಯಲ್ಲಿ 3,06,208 ಪಂಪ್ಸೆಟ್ಗಳಿದ್ದು, ಅವುಗಳಿಗೆ ಕಳೆದ 3 ವರ್ಷಗಳಿಂದ ₹6,390 ಕೋಟಿಗೂ ಹೆಚ್ಚಿನ ಮೊತ್ತವನ್ನು ಪಂಪ್ಸೆಟ್ ಸಬ್ಸಿಡಿಗಾಗಿ ವಿನಿಯೋಗಿಸಿದ್ದೇವೆ.
ನೀರಾವರಿಗೆ ಅಗತ್ಯ ಸಹಾಯಹಸ್ತ ಚಾಚುವ ಮೂಲಕ ಗ್ರಾಮೀಣ ಭಾಗದ ಜನರ ಬದುಕನ್ನು ಸುಸ್ಥಿರಗೊಳಿಸಲು ಹಾಗೂ ರೈತರ ಕಷ್ಟಗಳ ಹೊರೆಯನ್ನು ತಗ್ಗಿಸಲು ನಮ್ಮ ಸರ್ಕಾರ ಬದ್ಧವಾಗಿದೆ. ತುಮಕೂರಿನ ಸಮಸ್ತ ರೈತಬಂಧುಗಳ ಜೊತೆಗೆ ಸರ್ಕಾರ ದೃಢವಾಗಿ ನಿಂತಿದ್ದು, ಕೃಷಿ ಭವಿಷ್ಯವನ್ನು ಕಾಪಾಡುವ ನಿಟ್ಟಿನಲ್ಲಿ ಶ್ರಮಿಸುತ್ತಿದೆ. -
Dr. G Parameshwara
@DrParameshwara
Karnataka’s Guarantee Schemes are making a direct difference to families across Tumakuru. Benefits worth ₹6,555 crore have supported women, youth and households through free bus travel, food security, income support and other welfare initiatives.
For me, development must ultimately translate into greater financial security, dignity and opportunity in people’s everyday lives. The Guarantees are helping ensure that the benefits of Karnataka’s progress reach every section of society.
ನಮ್ಮ ಸರ್ಕಾರದ ಗ್ಯಾರಂಟಿ ಯೋಜನೆಗಳು ತುಮಕೂರಿನ ಜನತೆಯ ಕೈಗೆ ನೇರವಾಗಿ ತಲುಪುತ್ತಿದೆ. ₹6,555 ಕೋಟಿ ಮೌಲ್ಯದ ಗ್ಯಾರಂಟಿ ಯೋಜನೆಗಳ ಮೂಲಕ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ, ಯುವಕರಿಗೆ ಆರ್ಥಿಕ ನೆರವು, ಕುಟುಂಬಗಳಿಗೆ ಉಚಿತ ವಿದ್ಯುತ್ ಸೇರಿದಂತೆ ಹಲವು ಸೌಲಭ್ಯಗಳು ದೊರೆಯುತ್ತಿವೆ.
ಜನತೆಗೆ ಆರ್ಥಿಕ ಭದ್ರತೆ, ಗೌರವಯುತ ಬದುಕು ಮತ್ತು ಉದ್ಯೋಗಾವಕಾಶಗಳನ್ನು ಒದಗಿಸುವುದು ನಮ್ಮ ಅಭಿವೃದ್ಧಿಯ ಮಂತ್ರವಾಗಿದೆ. ಗ್ಯಾರಂಟಿ ಯೋಜನೆಗಳ ಫಲ ಸಮಾಜದ ಎಲ್ಲ ವರ್ಗಗಳಿಗೂ ತಲುಪಿಸುವ ನಿಟ್ಟಿನಲ್ಲಿ ನಮ್ಮ ಸರ್ಕಾರ ಬದ್ಧವಾಗಿದೆ. -
Dr. G Parameshwara
@DrParameshwara
ಇಂದು ವಿಧಾನಸೌಧದ ಕಾರ್ಯಾಲಯದಲ್ಲಿ ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಉಪನೋಂದಣಿ ಕಚೇರಿಗಳಿಗೆ ₹96 ಕೋಟಿ ಅನುದಾನದಡಿ ಸ್ವಂತ ಕಟ್ಟಡ ನಿರ್ಮಾಣ, ನಿವೇಶನ ಹಾಗೂ ಕಚೇರಿಗಳ ಆಧುನೀಕರಣ ಕಾಮಗಾರಿಗಳನ್ನು ಕೈಗೊಳ್ಳುವ ಕುರಿತು ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಸಮಗ್ರವಾಗಿ ಚರ್ಚಿಸಿದೆ.
ಬೆಂಗಳೂರು ನಗರ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಸ್ವಂತ ಕಟ್ಟಡ ಹೊಂದಿರದ ಉಪನೋಂದಣಿ ಕಚೇರಿಗಳಿಗೆ ಸೂಕ್ತ ನಿವೇಶನ ಗುರುತಿಸುವುದು, ಅಗತ್ಯವಿರುವ ಕಡೆಗಳಲ್ಲಿ ಸ್ವಂತ ಕಟ್ಟಡ ನಿರ್ಮಾಣಕ್ಕೆ ಕ್ರಮ ಕೈಗೊಳ್ಳುವುದು ಹಾಗೂ ಈಗಾಗಲೇ ಇರುವ ಕಟ್ಟಡಗಳ ದುರಸ್ತಿ ಮತ್ತು ಆಧುನೀಕರಣದ ಕುರಿತು ಅಧಿಕಾರಿಗಳಿಗೆ ಸೂಚಿಸಿದೆ.
ನೋಂದಣಿ ಕಚೇರಿಗಳಿಗೆ ಆಗಮಿಸುವ ಸಾರ್ವಜನಿಕರಿಗೆ ಉತ್ತಮ ಮೂಲಸೌಕರ್ಯ, ಸುಗಮ ಸೇವೆ ಹಾಗೂ ಕಚೇರಿ ಕಟ್ಟಡಗಳಲ್ಲಿ ಸಮರ್ಪಕ ಸ್ಥಳಾವಕಾಶ, ದಾಖಲೆಗಳ ಸುರಕ್ಷಿತ ಸಂಗ್ರಹಣೆ, ಕಾಮಗಾರಿಗಳನ್ನು ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸುವುದು, ಗುಣಮಟ್ಟವನ್ನು ಕಾಪಾಡಿಕೊಳ್ಳುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದೆ.
ಸಭೆಯಲ್ಲಿ ಹಿರಿಯ ಅಧಿಕಾರಿಗಳಾದ ಮನೋಜ್ ಕುಮಾರ್ ಮೀನಾ, ಮುಲ್ಲೈ ಮುಗಿಲನ್ ಇತರರು ಉಪಸ್ಥಿತರಿದ್ದರು. -
Dr. G Parameshwara
@DrParameshwara
Owning a home begins with having a piece of land to call your own.
Our Government is delivering as promised, moving ahead with the goal of providing residential sites to families without a house or residential plot. 50,000 residential sites will be developed in every district across Karnataka.
The sites will measure 30×40 ft in rural areas and 20×30 ft in urban areas. Officials have been directed to immediately identify available vacant Government land and complete all necessary processes for developing these layouts without delay.
This is an important step towards ensuring secure housing, dignity and a permanent address for every family in need
ಸ್ವಂತದ್ದೊಂದು ತುಂಡು ಭೂಮಿಯಿದ್ದರೆ ಸ್ವಂತ ಮನೆಯ ಕನಸು ಗರಿಗೆದರುತ್ತದೆ. ನಮ್ಮ ಗ್ಯಾರಂಟಿ ಸರ್ಕಾರವು ಚುನಾವಣಾ ಪ್ರಣಾಳಿಕೆಯಲ್ಲಿ ಕೊಟ್ಟ ಭರವಸೆಯಂತೆ ವಸತಿರಹಿತ ಕುಟುಂಬಗಳಿಗೆ ನಿವೇಶನಗಳನ್ನು ಒದಗಿಸುವ ಪ್ರಮುಖ ನಿರ್ಧಾರ ಕೈಗೊಂಡಿದೆ. ರಾಜ್ಯದ ಪ್ರತಿ ಜಿಲ್ಲೆಗಳಲ್ಲೂ 50,000 ನಿವೇಶನಗಳನ್ನು ಹಂಚಿಕೆ ಮಾಡಲು ತೀರ್ಮಾನಿಸಿದ್ದೇವೆ.
ಸರ್ಕಾರದ ಖಾಲಿಯಿರುವ ಜಮೀನುಗಳನ್ನು ತಕ್ಷಣವೇ ಗುರುತಿಸಿ, ಗ್ರಾಮೀಣ ಪ್ರದೇಶಗಳಲ್ಲಿ 30×40 ಚದರ ಅಡಿ ಹಾಗೂ ನಗರ ಪ್ರದೇಶಗಳಲ್ಲಿ 20×30 ಚದರ ಅಡಿ ಅಳತೆಯ ನಿವೇಶನಗಳನ್ನು ರಚಿಸಲಾಗುತ್ತಿದೆ. ಇದಕ್ಕೆ ಅಗತ್ಯವಿರುವ ಎಲ್ಲಾ ಪ್ರಕ್ರಿಯೆಗಳನ್ನು ತ್ವರಿತವಾಗಿ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ.
ಪ್ರತಿಯೊಂದು ಕುಟುಂಬಕ್ಕೂ ಶಾಶ್ವತ ಸ್ವಂತ ವಿಳಾಸವನ್ನು ಕಲ್ಪಿಸುವುದು ನಮ್ಮ ಸರ್ಕಾರದ ಆಶಯವಾಗಿದೆ. -
Dr. G Parameshwara
@DrParameshwara
ನಿಮ್ಮ ಸಮಸ್ಯೆಗಳನ್ನು ಪರಿಹರಿಸುವ ಜವಾಬ್ದಾರಿ ನನ್ನದು!
ಇಂದು ಸಾರ್ವಜನಿಕರಿಂದ ಅಹವಾಲುಗಳನ್ನು ಸ್ವೀಕರಿಸಿ, ಆದ್ಯತೆ ಮೇರೆಗೆ ಬಗೆಹರಿಸಿಕೊಡುವ ಭರವಸೆ ನೀಡಿದೆ. -
Dr. G Parameshwara
@DrParameshwara
Heartiest congratulations to all the recipients of the National Sports Awards 2025!
Congratulations to Arjuna Award recipients Tejaswin Shankar, Muhammed Ajmal V, Priyanka Goswami, Treesa Jolly, Pullela Gayatri Gopichand, Narender, Vidit Santosh Gujarathi, Divya Jitendra Deshmukh, Dhanush Srikanth, Lalremsiami, Rajkumar Pal, Surjeet, Pooja, Rudransh Khandelwal, Ekta Bhyan, Arvind Singh and Akhil Sheoran.
My warm congratulations also to I Arumainayagam, recipient of the Arjuna Award (Lifetime), and to Dronacharya Award recipients Parveer Singh, Chhote Lal Yadav and Neha Nandkumar Chavan, along with Lifetime awardees Dharmendra Singh Yadav and Virender Kumar.
Each of you represents the dedication, discipline and perseverance that define sporting excellence. Your achievements inspire young athletes across India to dream bigger, work harder and aim higher.
Wishing you many more milestones and continued success in the years ahead!
2025ನೇ ಸಾಲಿನ ರಾಷ್ಟ್ರೀಯ ಕ್ರೀಡಾ ಪ್ರಶಸ್ತಿಗೆ ಭಾಜನರಾದ ಸಾಧಕ ಕ್ರೀಡಾಪಟುಗಳಿಗೆ ಅಭಿನಂದನೆಗಳು.
ಅರ್ಜುನ ಪ್ರಶಸ್ತಿ ಪುರಸ್ಕೃತರಾದ ತೇಜಸ್ವಿನ್ ಶಂಕರ್, ಮುಹಮ್ಮದ್ ಅಜ್ಮಲ್ ವಿ, ಪ್ರಿಯಾಂಕಾ ಗೋಸ್ವಾಮಿ, ಟ್ರೀಸಾ ಜಾಲಿ, ಪುಲ್ಲೇಲ ಗಾಯತ್ರಿ ಗೋಪಿಚಂದ್, ನರೇಂದರ್, ವಿದಿತ್ ಸಂತೋಷ್ ಗುಜರಾತಿ, ದಿವ್ಯ ಜಿತೇಂದ್ರ ದೇಶಮುಖ್, ಧನುಷ್ ಶ್ರೀಕಾಂತ್, ಲಾಲ್ರೆಮ್ಸಿಯಾಮಿ, ರಾಜ್ಕುಮಾರ್ ಪಾಲ್, ಸುರ್ಜೀತ್, ಪೂಜಾ, ರುದ್ರಾಂಶ್ ಖಂಡೇಲ್ವಾಲ್, ಏಕ್ತಾ ಭ್ಯಾನ್, ಅರವಿಂದ್ ಸಿಂಗ್, ಅಖಿಲ್ ಶಿಯೋರನ್ ಹಾಗೂ ಅರ್ಜುನ ಪ್ರಶಸ್ತಿ (ಜೀವಮಾನ ಸಾಧನೆ) ಪಡೆದ ಐ. ಅರುಮೈನಾಯಗಂ ಅವರಿಗೆ ಹೃದಯಪೂರ್ವಕ ಅಭಿನಂದನೆಗಳು.
ಅಂತೆಯೇ, ದ್ರೋಣಾಚಾರ್ಯ ಪ್ರಶಸ್ತಿ ಪಡೆದ ಪರ್ವೀರ್ ಸಿಂಗ್, ಛೋಟೆ ಲಾಲ್ ಯಾದವ್, ನೇಹಾ ನಂದಕುಮಾರ್ ಚವಾಣ್ ಹಾಗೂ ದ್ರೋಣಾಚಾರ್ಯ ಜೀವಮಾನ ಸಾಧನೆ ಪ್ರಶಸ್ತಿ ಪುರಸ್ಕೃತರಾದ ಧರ್ಮೇಂದ್ರ ಸಿಂಗ್ ಯಾದವ್ ಮತ್ತು ವೀರೇಂದ್ರ ಕುಮಾರ್ ಅವರಿಗೂ ಹೃತ್ಪೂರ್ವಕ ಶುಭಾಶಯಗಳು.
ನಿಮ್ಮ ಕ್ರೀಡಾ ಸಾಧನೆಯ ಹಿಂದಿರುವ ಬದ್ಧತೆ, ಶಿಸ್ತು ಮತ್ತು ನಿರಂತರ ಪರಿಶ್ರಮ ದೇಶದ ಯುವ ಕ್ರೀಡಾಪಟುಗಳಿಗೆ ಪ್ರೇರಣೆಯಾಗಲಿ.
ಮುಂದಿನ ದಿನಗಳಲ್ಲಿ ಇನ್ನಷ್ಟು ಸಾಧನೆಯನ್ನು ಮಾಡಿ, ನಿರಂತರ ಯಶಸ್ಸು ಪಡೆಯುವಂತಾಗಲಿ ಎಂದು ಶುಭ ಹಾರೈಸುತ್ತೇನೆ. -
Dr. G Parameshwara
@DrParameshwara
Karnataka is laying the foundation for the next generation of sporting excellence. A Sports City planned across nearly 60 acres near Devanahalli will bring multiple disciplines together with integrated infrastructure, creating a stronger ecosystem for training, competition and future champions.
ಭವಿಷ್ಯದ ಕ್ರೀಡಾ ತಾರೆಗಳನ್ನು ರೂಪಿಸುವ ನಿಟ್ಟಿನಲ್ಲಿ ಸರ್ಕಾರ ಹೊಸ ಹೆಜ್ಜೆ ಇಡುತ್ತಿದೆ. ದೇವನಹಳ್ಳಿ ಸಮೀಪ ಸುಮಾರು 60 ಎಕರೆ ಪ್ರದೇಶದಲ್ಲಿ ಸ್ಪೋರ್ಟ್ಸ್ ಸಿಟಿ ನಿರ್ಮಿಸುವ ಯೋಜನೆ ರೂಪಿಸಲಾಗಿದೆ. ಒಂದೇ ಸೂರಿನಡಿ ವಿವಿಧ ಕ್ರೀಡೆಗಳಿಗೆ ಸಮಗ್ರ ಮೂಲಸೌಕರ್ಯ ಕಲ್ಪಿಸಿ, ಕ್ರೀಡಾಪಟುಗಳಿಗೆ ಉತ್ತಮ ತರಬೇತಿ ಹಾಗೂ ಸ್ಪರ್ಧೆಗೆ ಸಜ್ಜಾಗಲು ಸೂಕ್ತ ಕ್ರೀಡಾ ವಾತಾವರಣವನ್ನು ಒದಗಿಸಲಾಗುವುದು.
#karnatakasports -
Dr. G Parameshwara
@DrParameshwara
ಸರ್ವಾನುಮತದಿಂದ ವಿಧಾನಸಭೆಯ ನೂತನ ಉಪ ಸಭಾಧ್ಯಕ್ಷರಾಗಿ ಆಯ್ಕೆಯಾದ ಮಂಕಾಳ ವೈದ್ಯ ಅವರಿಗೆ ಅಭಿನಂದನೆಗಳು.
ಮಂಕಾಳ್ ವೈದ್ಯ ಅವರು ರಾಜಕೀಯ ಅಥವಾ ಅನುಕೂಲಸ್ಥ ಕುಟುಂಬದಿಂದ ಬಂದವರಲ್ಲ, ಸಾಮಾನ್ಯ ಹಿಂದುಳಿದ ಸಮುದಾಯದಿಂದ ಬಂದವರು. ಅವರಿಗೆ ರಾಜಕಾರಣಕ್ಕೆ ಬರಬೇಕು ಎಂಬ ಕಲ್ಪನೆ ಇತ್ತೋ ಇಲ್ಲವೋ ಗೊತ್ತಿಲ್ಲ. ಮೀನುಗಾರಿಕೆ ಉದ್ಯಮವನ್ನು ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ಕುಟುಂಬ ಅವರದ್ದು. ಜಿಲ್ಲಾ ಪಂಚಾಯತ್ ಸದಸ್ಯನಾಗಿ ರಾಜಕೀಯಕ್ಕೆ ಕಾಲಿಟ್ಟು, ಆ ಬಳಿಕ ಮಂತ್ರಿಯಾಗಿ ಇಂದು ಉಪ ಸಭಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಅವರ ರಾಜಕೀಯ ಜೀವನವನ್ನು ನೋಡುವುದಾದರೆ, 2014ರಲ್ಲಿ ನಾನು ಅಧ್ಯಕ್ಷನಾಗಿದ್ದಾಗ ಕಾಂಗ್ರೆಸ್ ಪಕ್ಷಕ್ಕೆ ಅವರನ್ನು ಸೇರಿಸಿಕೊಂಡೆವು. ಅವರಿಗೆ ಸ್ಪರ್ಧಿಸಲು ಟಿಕೆಟ್ ಕೊಟ್ಟೆವು. 2023ರ ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲುವನ್ನು ಕಂಡರು. ಕಳೆದ ಸಚಿವ ಸಂಪುಟದಲ್ಲಿ ಮೀನುಗಾರಿಕೆ ಸಚಿವರಾಗಿ ಕಾರ್ಯನಿರ್ವಹಿಸಿದ್ದಾರೆ. ಅವರೊಬ್ಬ ಉತ್ತಮ ಸಚಿವರಾಗಿದ್ದರು.
ಮಂಕಾಳ್ ವೈದ್ಯ ಅವರು ಸ್ನೇಹಜೀವಿ. ಯಾರನ್ನು ದ್ವೇಷ ಭಾವನೆಯಿಂದ, ಶತ್ರು ಭಾವನೆಯಿಂದ ನೋಡುವಂತಹ ಮನಸ್ಥಿತಿ ಅವರಲಿಲ್ಲ. ಎಲ್ಲರನ್ನೂ ಪ್ರೀತಿಯಿಂದ ಮಾತನಾಡಿಸುತ್ತಾರೆ. ಇಂದು ಅವರನ್ನು ಉಪ ಸಭಾಧ್ಯಕ್ಷ ಸ್ಥಾನಕ್ಕೆ ಇಡೀ ಸದನ ಒಮ್ಮತದಿಂದ ಆಯ್ಕೆ ಮಾಡಿದೆ. ಅವರ ಭವಿಷ್ಯಕ್ಕೆ ಒಳ್ಳೆಯದಾಗಲಿ. ಸದನವನ್ನು ನಡೆಸುವುದರಲ್ಲಿ ಸಭಾಧ್ಯಕ್ಷರಿಗೆ ಅವರು ಸಹಕಾರವನ್ನು ಕೊಡುತ್ತಾರೆ. ಅವರಿಗೆ ಶುಭಹಾರೈಕೆಗಳು.This media couldn't be displayed. See it on the original post. -
Dr. G Parameshwara
@DrParameshwara
ಚಿಕ್ಕನಾಯಕನಹಳ್ಳಿ ತಾಲೂಕಿನ ಬೆಳಗಿಹಳ್ಳಿ ಗ್ರಾಮದಲ್ಲಿ ಶಾಲಾ ಆವರಣದಲ್ಲಿ ಆಟವಾಡುತ್ತಿದ್ದ ವೇಳೆ ವಿದ್ಯಾರ್ಥಿಯೊಬ್ಬನ ಮೇಲೆ ಪಿಲ್ಲರ್ ಕುಸಿದು ಬಿದ್ದ ಪರಿಣಾಮ ಆತ ಸ್ಥಳದಲ್ಲೇ ಸಾವನ್ನಪ್ಪಿದ ಸುದ್ದಿ ತಿಳಿದು ತೀವ್ರ ಆಘಾತವಾಗಿದೆ.
ಇನ್ನೂ ಎಳೆಯ ಪ್ರಾಯದ ಕಂದಮ್ಮ ಹೀಗೆ ದುರಂತ ಸಾವಿಗೀಡಾದುದ್ದು ದುರದೃಷ್ಟಕರ. ತಮ್ಮ ಮಗುವನ್ನು ಕಳೆದುಕೊಂಡ ಹೆತ್ತವರ ನೋವು - ಸಂಕಟವನ್ನು ನಾನು ಅರ್ಥೈಸಿಕೊಳ್ಳಬಲ್ಲೆ. ನೊಂದ ಜೀವಗಳ ಜೊತೆ ನಾನಿದ್ದೇನೆ. ಮೃತನ ಆತ್ಮಕ್ಕೆ ಶಾಂತಿ ಲಭಿಸಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ.
ಮೃತ ಬಾಲಕನ ಕುಟುಂಬಕ್ಕೆ ಸೂಕ್ತ ಪರಿಹಾರವನ್ನು ಒದಗಿಸಲಾಗುವುದು. ಮುಂದೆ ಇಂತಹ ಘಟನೆ ಮರುಕಳಿಸದಂತೆ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲು ಸೂಚನೆ ನೀಡಿದ್ದೇನೆ. -
Dr. G Parameshwara
@DrParameshwara
Karnataka’s young basketball players are already making their mark at national championships. With five acres of land allotted for basketball development and plans for modern infrastructure, the government is backing a sport where the state has shown strong potential and helping Karnataka aim for national and international tournaments.
ಕರ್ನಾಟಕದ ಯುವ ಬಾಸ್ಕೆಟ್ಬಾಲ್ ಆಟಗಾರರು ಈಗಾಗಲೇ ರಾಷ್ಟ್ರೀಯ ಮಟ್ಟದಲ್ಲಿ ಗಮನಾರ್ಹ ಸಾಧನೆಯನ್ನು ಮಾಡಿದ್ದಾರೆ. ಬಾಸ್ಕೆಟ್ಬಾಲ್ ಕ್ರೀಡೆಯ ಅಭಿವೃದ್ಧಿಗಾಗಿ ಸರ್ಕಾರವು ಐದು ಎಕರೆ ಭೂಮಿಯನ್ನು ಮಂಜೂರು ಮಾಡಿದ್ದು, ಈ ಮೂಲಕ ಆಧುನಿಕ ಮೂಲಸೌಕರ್ಯವನ್ನು ಕಲ್ಪಿಸಲು ಕ್ರಮ ಕೈಗೊಳ್ಳುತ್ತಿದೆ. ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ರಾಜ್ಯದ ಕ್ರೀಡಾ ಸಾಧನೆಗೆ ಇದು ಮತ್ತಷ್ಟು ಬಲ ನೀಡಲಿದೆ.
#karnatakasports -
Dr. G Parameshwara
@DrParameshwara
Bengaluru is preparing to take Karnataka’s sporting ambitions to the world stage. The proposed ₹5,000 crore upgrade of Kanteerava Stadium will strengthen the city’s sporting infrastructure and open up opportunities to host major events, including select Commonwealth Games events in 2030.
ಕರ್ನಾಟಕದ ಕ್ರೀಡಾ ಕ್ಷೇತ್ರವನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯಲು ಬೆಂಗಳೂರು ಸಜ್ಜಾಗುತ್ತಿದೆ. ಸುಮಾರು ₹5,000 ಕೋಟಿ ವೆಚ್ಚದಲ್ಲಿ ಕಂಠೀರವ ಕ್ರೀಡಾಂಗಣದ ಸಮಗ್ರ ಅಭಿವೃದ್ಧಿಗೆ ಒತ್ತು ನೀಡಲಾಗಿದ್ದು, ಇದರಿಂದ ಕ್ರೀಡಾ ಮೂಲಸೌಕರ್ಯವು ಮತ್ತಷ್ಟು ಬಲಗೊಳ್ಳಲಿದೆ. ಜೊತೆಗೆ 2030ರ ಕಾಮನ್ವೆಲ್ತ್ ಕ್ರೀಡಾಕೂಟದ ಆಯ್ದ ಸ್ಪರ್ಧೆಗಳು ಸೇರಿದಂತೆ ಪ್ರಮುಖ ಕ್ರೀಡಾಕೂಟಗಳನ್ನು ಆಯೋಜಿಸಲು ಬೆಂಗಳೂರಿಗೆ ಅವಕಾಶ ಸಿಗಲಿದೆ.
#karnatakasports -
Dr. G Parameshwara
@DrParameshwara
ರಾಜ್ಯದ ಪ್ರತಿ ಜಿಲ್ಲೆಯಲ್ಲಿ ತಲಾ 50 ಸಾವಿರ ನಿವೇಶನ ಹಂಚಿಕೆಗೆ ಉದ್ದೇಶಿಸಲಾಗಿದ್ದು, ಖಾಲಿ ಇರುವ ಸರ್ಕಾರಿ ಜಮೀನುಗಳನ್ನು ಗುರುತಿಸಿ ನಿವೇಶನ ರಚನೆಗೆ ಕ್ರಮ ವಹಿಸುವಂತೆ ಕಂದಾಯ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದ್ದೇನೆ.
ಈ ಕುರಿತಾದ ಮಾಧ್ಯಮ ವರದಿಗಳು ಹೀಗಿವೆ.. -
Dr. G Parameshwara
@DrParameshwara
ವಿಧಾನಸಭೆಯ ನೂತನ ಉಪ ಸಭಾಧ್ಯಕ್ಷರಾಗಿ ಆಯ್ಕೆಯಾಗಿರುವ ಆತ್ಮೀಯರಾದ ಮಂಕಾಳ ವೈದ್ಯ ಹಾಗೂ ವಿಧಾನ ಪರಿಷತ್ನ ನೂತನ ಉಪ ಸಭಾಪತಿಗಳಾಗಿ ಆಯ್ಕೆಯಾಗಿರುವ ಶ್ರೀಮತಿ ಉಮಾಶ್ರೀ ಅವರಿಗೆ ಅಭಿನಂದನೆಗಳು.
ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಆಶಯಗಳನ್ನು ಎತ್ತಿಹಿಡಿದು, ಕಲಾಪಗಳನ್ನು ಯಶಸ್ವಿಯಾಗಿ ಮತ್ತು ನಿಷ್ಪಕ್ಷಪಾತವಾಗಿ ನಡೆಸುವ ಕೆಲಸ ನಿಮ್ಮಿಂದಾಗಲಿ ಎಂದು ಹಾರೈಸುತ್ತೇನೆ.
Congratulations to my dear colleagues Shri Mankala Vaidya, who has been elected as the new Deputy Speaker of the Legislative Assembly, and Smt. Umashree, who has been elected as the new Deputy Chairperson of the Legislative Council.
I wish you both a successful tenure, guided by the values of the Constitution and democracy, and marked by fairness, dignity and impartiality in the conduct of the Houses. -
Dr. G Parameshwara
@DrParameshwara
ಕೇಂದ್ರ ಸರ್ಕಾರದ Mines and Minerals (Development and Regulation) Amendment Bill, 2026ರ ಕುರಿತು ರಾಜ್ಯಗಳ ಹಿತಾಸಕ್ತಿಯನ್ನು ಗಮನದಲ್ಲಿ ಇಟ್ಟುಕೊಂಡು ಪ್ರಧಾನಿ ಶ್ರೀ @narendramodi ಹಾಗೂ ಕೇಂದ್ರ ಗಣಿ ಮತ್ತು ಕಲ್ಲಿದ್ದಲು ಸಚಿವರಾದ ಶ್ರೀ @kishanreddybjp ಅವರಿಗೆ ನಾನು ಬರೆದಿರುವ ಪತ್ರದ ಕನ್ನಡ ಸಾರಾಂಶ:
ಮಾನ್ಯ ಪ್ರಧಾನಮಂತ್ರಿಗಳೇ,
ಇತ್ತೀಚೆಗೆ ಸಂಸತ್ತಿನಲ್ಲಿ ಅಂಗೀಕರಿಸಲಾದ Mines and Minerals (Development and Regulation) Amendment Bill, 2026 ಕುರಿತು ಕರ್ನಾಟಕ ಸರ್ಕಾರದ ಪರವಾಗಿ ಗಂಭೀರ ಕಳವಳವನ್ನು ವ್ಯಕ್ತಪಡಿಸುತ್ತಿದ್ದೇನೆ. ವಿಶೇಷವಾಗಿ, ಖನಿಜ ಹಕ್ಕುಗಳು ಮತ್ತು ಖನಿಜ ಹೊಂದಿರುವ ಭೂಮಿಗಳ ಮೇಲೆ ತೆರಿಗೆ ವಿಧಿಸುವ ರಾಜ್ಯ ಸರ್ಕಾರಗಳ ಅಧಿಕಾರವನ್ನು ಸೀಮಿತಗೊಳಿಸುವ ಪ್ರಸ್ತಾವಿತ ನಿಯಮಗಳಿಗೆ ಕರ್ನಾಟಕ ಸರ್ಕಾರ ಬಲವಾದ ಆಕ್ಷೇಪಣೆ ಹೊಂದಿದೆ.
ಭಾರತದ ಸಂವಿಧಾನವು ಕೇಂದ್ರ ಮತ್ತು ರಾಜ್ಯಗಳ ನಡುವೆ ಶಾಸನಾತ್ಮಕ ಹಾಗೂ ಹಣಕಾಸಿನ ಅಧಿಕಾರಗಳನ್ನು ಹಂಚಿಕೆ ಮಾಡಿದೆ. List IIರ Entries 49 ಮತ್ತು 50 ಅಡಿಯಲ್ಲಿ ರಾಜ್ಯಗಳಿಗೆ ಭೂಮಿ ಮತ್ತು ಖನಿಜ ಹಕ್ಕುಗಳ ಮೇಲಿನ ತೆರಿಗೆಗೆ ಸಂಬಂಧಿಸಿದ ಅಧಿಕಾರಗಳನ್ನು ನೀಡಲಾಗಿದೆ. 25 ಜುಲೈ 2024ರಂದು ಸುಪ್ರೀಂ ಕೋರ್ಟ್ನ ಒಂಬತ್ತು ನ್ಯಾಯಮೂರ್ತಿಗಳ ಸಂವಿಧಾನ ಪೀಠವು ನೀಡಿದ ತೀರ್ಪು ಕೂಡ ರಾಜ್ಯಗಳ ಈ ಅಧಿಕಾರವನ್ನು ಪುನರುಚ್ಚರಿಸಿದೆ.
ಕೇಂದ್ರ ಸರ್ಕಾರಕ್ಕೆ ಖನಿಜ ಅಭಿವೃದ್ಧಿಯನ್ನು ನಿಯಂತ್ರಿಸುವ ಸಂವಿಧಾನಾತ್ಮಕ ಅಧಿಕಾರವಿದ್ದರೂ, ಆ ಅಧಿಕಾರವನ್ನು ಬಳಸಿಕೊಂಡು ರಾಜ್ಯಗಳ ಸಂವಿಧಾನಾತ್ಮಕ ಹಣಕಾಸಿನ ಸ್ವಾಯತ್ತತೆಯನ್ನು ಕುಗ್ಗಿಸುವ ಪ್ರಯತ್ನ ಮಾಡಬಾರದು. ನಿಯಂತ್ರಣವು ಅಧಿಕಾರ ಕೇಂದ್ರೀಕರಣಕ್ಕೆ ಕಾರಣವಾಗಬಾರದು; ರಾಷ್ಟ್ರೀಯ ಏಕರೂಪತೆಯ ಹೆಸರಿನಲ್ಲಿ ರಾಜ್ಯಗಳ ಹಣಕಾಸಿನ ಅಧಿಕಾರವನ್ನು ಕಡಿಮೆ ಮಾಡಬಾರದು.
ಇಂತಹ ಮಹತ್ವದ ಸಂವಿಧಾನಾತ್ಮಕ ಮತ್ತು ಹಣಕಾಸಿನ ಪರಿಣಾಮಗಳನ್ನು ಹೊಂದಿರುವ ಕಾನೂನು ರೂಪಿಸುವ ಮೊದಲು, ವಿಶೇಷವಾಗಿ ಖನಿಜ ಉತ್ಪಾದಕ ರಾಜ್ಯಗಳೊಂದಿಗೆ ಸಮಗ್ರ, ರಚನಾತ್ಮಕ ಮತ್ತು ಕಾಲಬದ್ಧ ಸಮಾಲೋಚನೆ ನಡೆಸುವುದು ಅಗತ್ಯವಾಗಿತ್ತು.
ಸುಪ್ರೀಂ ಕೋರ್ಟ್ನ ತೀರ್ಪಿನ ನಂತರ ಕರ್ನಾಟಕ ವಿಧಾನಸಭೆಯು Karnataka (Mineral Rights and Mineral Bearing Land) Tax Bill, 2024 ಅನ್ನು ಅಂಗೀಕರಿಸಿದೆ. ಹೀಗಾಗಿ ಪ್ರಸ್ತಾವಿತ ಕೇಂದ್ರ ತಿದ್ದುಪಡಿಯು ರಾಜ್ಯವು ಈಗಾಗಲೇ ತನ್ನ ಸಂವಿಧಾನಾತ್ಮಕ ಅಧಿಕಾರದ ಆಧಾರದ ಮೇಲೆ ಕೈಗೊಂಡಿರುವ ಕ್ರಮದ ಮೇಲೂ ನೇರ ಪರಿಣಾಮ ಬೀರುತ್ತದೆ.
GST ನಂತರ ರಾಜ್ಯಗಳ ಸ್ವತಂತ್ರ ತೆರಿಗೆ ಆದಾಯದ ಅವಕಾಶಗಳು ಕಡಿಮೆಯಾಗಿದ್ದರೂ, ಶಿಕ್ಷಣ, ಆರೋಗ್ಯ, ಕುಡಿಯುವ ನೀರು, ರಸ್ತೆ, ಕೃಷಿ, ಕಲ್ಯಾಣ ಕಾರ್ಯಕ್ರಮಗಳು ಮತ್ತು ಮೂಲಸೌಕರ್ಯಗಳಂತಹ ಜವಾಬ್ದಾರಿಗಳು ರಾಜ್ಯಗಳ ಮೇಲೆಯೇ ಮುಂದುವರಿದಿವೆ. ಗಣಿಗಾರಿಕೆ ನಡೆಯುವ ಪ್ರದೇಶಗಳಲ್ಲಿ ಪರಿಸರ ಹಾನಿ, ರಸ್ತೆ ಮತ್ತು ಮೂಲಸೌಕರ್ಯಗಳ ಹಾನಿ ಹಾಗೂ ಸ್ಥಳೀಯ ಸಮುದಾಯಗಳ ಮೇಲಿನ ಪರಿಣಾಮಗಳನ್ನು ಸಹ ರಾಜ್ಯ ಸರ್ಕಾರಗಳೇ ಎದುರಿಸಬೇಕಾಗುತ್ತದೆ. ಆದ್ದರಿಂದ ಖನಿಜ ಸಂಪನ್ಮೂಲಗಳ ಮೇಲೆ ರಾಜ್ಯಗಳಿಗೆ ಅರ್ಥಪೂರ್ಣ ಹಣಕಾಸಿನ ಅಧಿಕಾರ ಉಳಿಯುವುದು ನ್ಯಾಯಸಮ್ಮತವಾಗಿದೆ.
ಈ ಹಿನ್ನೆಲೆಯಲ್ಲಿ, ಕರ್ನಾಟಕ ಸರ್ಕಾರವು ಕೆಳಗಿನ ಕ್ರಮಗಳನ್ನು ಕೈಗೊಳ್ಳುವಂತೆ ಮನವಿ ಮಾಡುತ್ತದೆ:
- Mines and Minerals (Development and Regulation) Amendment Bill, 2026 ಅನ್ನು ಪ್ರಸ್ತುತ ರೂಪದಲ್ಲಿ ಮರುಪರಿಶೀಲಿಸಿ ಹಿಂಪಡೆಯಬೇಕು.
- ಎಲ್ಲಾ ರಾಜ್ಯ ಸರ್ಕಾರಗಳೊಂದಿಗೆ, ವಿಶೇಷವಾಗಿ ಖನಿಜ ಉತ್ಪಾದಕ ರಾಜ್ಯಗಳೊಂದಿಗೆ ಸಮಗ್ರ ಸಮಾಲೋಚನೆ ನಡೆಸಬೇಕು.
- ಖನಿಜ ತೆರಿಗೆಯ ಸಂವಿಧಾನಾತ್ಮಕ, ಆರ್ಥಿಕ, ಪರಿಸರ ಮತ್ತು ಹೂಡಿಕೆ ಪರಿಣಾಮಗಳನ್ನು ಪರಿಶೀಲಿಸಲು ಕೇಂದ್ರ–ರಾಜ್ಯ ಸಮಾಲೋಚನಾ ವ್ಯವಸ್ಥೆ ರಚಿಸಬೇಕು.
- ಕರ್ನಾಟಕದ Karnataka (Mineral Rights and Mineral Bearing Land) Tax Bill, 2024 ಸೇರಿದಂತೆ ರಾಜ್ಯಗಳು ಕೈಗೊಂಡಿರುವ ಕಾನೂನು ಕ್ರಮಗಳನ್ನು ಪರಿಗಣಿಸಬೇಕು.
- ಹೂಡಿಕೆ ಮತ್ತು ಖನಿಜ ಅಭಿವೃದ್ಧಿಯನ್ನು ಉತ್ತೇಜಿಸುವ ಜೊತೆಗೆ ರಾಜ್ಯಗಳ ಸಂವಿಧಾನಾತ್ಮಕ ಹಣಕಾಸಿನ ಸ್ವಾಯತ್ತತೆಯನ್ನು ರಕ್ಷಿಸುವ ರಾಷ್ಟ್ರೀಯ ಚೌಕಟ್ಟನ್ನು ಒಮ್ಮತದ ಮೂಲಕ ರೂಪಿಸಬೇಕು.
ಬಲಿಷ್ಠ ರಾಜ್ಯಗಳೇ ಬಲಿಷ್ಠ ಒಕ್ಕೂಟಕ್ಕೆ ಆಧಾರ. ಆದ್ದರಿಂದ, ಸಹಕಾರಿ ಒಕ್ಕೂಟ ವ್ಯವಸ್ಥೆಯ ತತ್ವಗಳನ್ನು ಗೌರವಿಸಿ, ಕೇಂದ್ರ ಮತ್ತು ರಾಜ್ಯಗಳು ಪರಸ್ಪರ ಸಮಾಲೋಚನೆಯ ಮೂಲಕ ಈ ವಿಷಯಕ್ಕೆ ಪರಿಹಾರ ಕಂಡುಕೊಳ್ಳಬೇಕು.
Dr. G Parameshwara
@DrParameshwara
-
Dr. G Parameshwara
@DrParameshwara
I have written to PM Shri @narendramodi and Union Coal & Mines Minister Shri @kishanreddybjp opposing the Mines & Minerals Amendment Bill, 2026.
The Bill undermines the States’ constitutional fiscal powers over mineral rights, disregards the spirit of the Supreme Court’s 2024 judgment and weakens cooperative federalism.
States cannot be expected to shoulder greater responsibilities while their revenue-raising powers are progressively curtailed.
I urge the Union Government to withdraw the Bill and begin meaningful consultations with all States. India’s strength lies in strong States and a strong Union, not centralisation.
Dr. G Parameshwara
@DrParameshwara
-
Post not available here, view on X
Dr. G Parameshwara
@DrParameshwara
-
Dr. G Parameshwara
@DrParameshwara
Netaji Subhas Chandra Bose believed freedom had to be claimed with courage, discipline and sacrifice. Through the Azad Hind movement, he transformed that belief into a powerful force that stirred millions of Indians.
On his death anniversary, we remember a leader whose defiance of colonial rule and unshakable faith in India’s destiny continue to command respect across generations. Jai Hind! 🇮🇳 -
Dr. G Parameshwara
@DrParameshwara
ಜಗತ್ತಿನ ಮೊಟ್ಟಮೊದಲ ಸ್ತ್ರೀ ಸೈನ್ಯ ಕಟ್ಟಿದ ಧೀರ ಮಹಿಳೆ ಬೆಳವಡಿ ಮಲ್ಲಮ್ಮನವರ ಶೌರ್ಯ, ಸಾಹಸ ಮತ್ತು ನಾಡಿನ ಮೇಲಿನ ಅಭಿಮಾನ ಎಲ್ಲರಿಗೂ ಸ್ಫೂರ್ತಿಯಾಗಿದೆ. ಶತ್ರು ಸೈನ್ಯವನ್ನು ಧೈರ್ಯದಿಂದ ಎದುರಿಸಿ, ನಾಡಿನ ರಕ್ಷಣೆಗೆ ಹೋರಾಡಿದ ಅವರ ವೀರಗಾಥೆ ಸದಾ ಸ್ಮರಣೀಯ.
ಮಲ್ಲಮ್ಮನವರ ಜಯಂತಿಯಂದು ಅವರ ಸೇವೆ ಮತ್ತು ಸಮರ್ಪಣಾಭಾವವನ್ನು ಸ್ಮರಿಸಿ ಗೌರವ ನಮನಗಳನ್ನು ಸಲ್ಲಿಸುತ್ತೇನೆ.
#ಬೆಳವಡಿ_ಮಲ್ಲಮ್ಮ -
Dr. G Parameshwara
@DrParameshwara
ನಮ್ಮ ಸರ್ಕಾರವು ಅಧಿಕಾರಕ್ಕೆ ಬರುವ ಮುನ್ನ ಚುನಾವಣಾ ಪ್ರಣಾಳಿಕೆಯಲ್ಲಿ ರಾಜ್ಯದ ಎಲ್ಲಾ ವಸತಿ ರಹಿತರಿಗೆ ನಿವೇಶನಗಳನ್ನು ನೀಡುತ್ತೇವೆಂದು ಘೋಷಿಸಿದ್ದೆವು. ಅದರಂತೆ ರಾಜ್ಯದ ಪ್ರತಿ ಜಿಲ್ಲೆಯಲ್ಲಿ ತಲಾ 50 ಸಾವಿರ ನಿವೇಶನಗಳನ್ನು ಹಂಚಿಕೆ ಮಾಡಲು ಸರ್ಕಾರವು ಉದ್ದೇಶಿಸಿದ್ದು, ಗ್ರಾಮೀಣ ಪ್ರದೇಶಗಳಲ್ಲಿ 30x40 ಅಡಿ ಅಳತೆಯ ಹಾಗೂ ನಗರ ಪ್ರದೇಶಗಳಲ್ಲಿ 20x30 ಅಡಿ ಅಳತೆಯ ನಿವೇಶನಗಳನ್ನು ಸಿದ್ಧಪಡಿಸಿ ಅರ್ಹರಿಗೆ ಒದಗಿಸಲಾಗುವುದು.
ಈ ನಿಟ್ಟಿನಲ್ಲಿ ಲಭ್ಯವಿರುವ ಹಾಗೂ ಖಾಲಿ ಇರುವ ಸರ್ಕಾರಿ ಜಮೀನುಗಳನ್ನು ತಕ್ಷಣವೇ ಗುರುತಿಸಿ, ನಿವೇಶನಗಳ ರಚನೆಗೆ ಅಗತ್ಯವಿರುವ ಎಲ್ಲಾ ಪ್ರಕ್ರಿಯೆಗಳನ್ನು ಯಾವುದೇ ವಿಳಂಬಕ್ಕೆ ಆಸ್ಪದೆ ನೀಡದೆ ತುರ್ತಾಗಿ ಕೈಗೊಳ್ಳುವಂತೆ ಕಂದಾಯ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದ್ದೇನೆ.
ನಾವು ಕೊಟ್ಟ ಮಾತಿಗೆ ಬದ್ಧರಾಗಿ, ಪ್ರಣಾಳಿಕೆಯ ಘೋಷಣೆಗಳನ್ನು ಕಾರ್ಯರೂಪಕ್ಕೆ ತಂದು ನುಡಿದಂತೆ ನಡೆಯುತ್ತಿದ್ದೇವೆ. ಸರ್ವರಿಗೂ ಸ್ವಂತ ಸೂರಿನ ಭಾಗ್ಯವನ್ನು ನೀಡಿ, ಎಲ್ಲರೂ ನೆಮ್ಮದಿಯಿಂದ ಜೀವನ ಸಾಗಿಸುವಂತಾಗಬೇಕು ಎಂಬುದೇ ನಮ್ಮ ಆಶಯ.
Before our government came to power, we had promised in our election manifesto that residential sites would be provided to all those in the state who do not have a site of their own. Accordingly, the government intends to distribute 50,000 residential sites in each district of the state. Residential sites measuring 30x40 feet in rural areas and 20x30 feet in urban areas will be developed and allotted to eligible beneficiaries.
In this regard, I have instructed officials of the Revenue Department to immediately identify available and vacant government land and urgently undertake all necessary processes for the development of residential sites, without allowing any scope for delay.
We are committed to the promises we made and are translating the commitments in our manifesto into action, delivering on our word. Our aim is to ensure that every individual has the opportunity to own a residential site and build a home of their own, so that everyone can live a life of dignity, security and peace of mind. -
Dr. G Parameshwara
@DrParameshwara
Tumakuru’s growing contribution to agriculture, industry and services reflects the district’s expanding role in Karnataka’s economy. Ranking 4th among the State’s GSDP, Tumakuru has the potential to emerge as an even stronger growth engine.
Our focus is to build on these strengths, attract greater investment, create more employment and ensure that this economic progress improves the lives of people across the district.
ಕೃಷಿ, ಕೈಗಾರಿಕೆ ಮತ್ತು ಸೇವಾ ವಲಯಗಳಲ್ಲಿ ತುಮಕೂರಿನ ಕೊಡುಗೆ ಬಹಳಷ್ಟಿದೆ. ಇದರಿಂದ ಕರ್ನಾಟಕದ ಆರ್ಥಿಕತೆಯಲ್ಲಿ ತುಮಕೂರಿನ ಮಹತ್ವವೂ ಹೆಚ್ಚುತ್ತಿದೆ. ರಾಜ್ಯದ ಜಿಎಸ್ಡಿಪಿಯಲ್ಲಿ 4ನೇ ಸ್ಥಾನದಲ್ಲಿರುವ ತುಮಕೂರು, ಇನ್ನಷ್ಟು ದೊಡ್ಡ ಅಭಿವೃದ್ಧಿಯ ಶಕ್ತಿಕೇಂದ್ರವಾಗಿ ಬೆಳೆಯುವ ಸಾಮರ್ಥ್ಯ ಹೊಂದಿದೆ.
ಹೆಚ್ಚಿನ ಹೂಡಿಕೆ, ಉದ್ಯೋಗ ಸೃಷ್ಟಿಸುವುದರ ಜೊತೆಗೆ ಇದರ ಪ್ರಯೋಜನಗಳು ಜಿಲ್ಲೆಯ ಪ್ರತಿಯೊಬ್ಬರಿಗೂ ತಲುಪುವಂತೆ ಮಾಡುವುದು ನಮ್ಮ ಗುರಿ. -
Dr. G Parameshwara
@DrParameshwara
ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನಲ್ಲಿ ಮಳೆಯ ಕೊರತೆ ಉಂಟಾಗಿದ್ದು, ಸದರಿ ತಾಲೂಕನ್ನು ಬರಪೀಡಿತ ತಾಲೂಕೆಂದು ಘೋಷಿಸಲು ಕ್ರಮ ವಹಿಸಲಾಗುತ್ತಿದೆ.
ಕೇಂದ್ರ ಸರ್ಕಾರದ ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯವು ರೂಪಿಸಿರುವ 'ಬರ ನಿರ್ವಹಣಾ ಕೈಪಿಡಿ 2020' ರಲ್ಲಿ (Manual for Drought Management 2020) ನೀಡಿರುವ ಮಾರ್ಗಸೂಚಿಗಳಂತೆ ಬರ ಮೌಲ್ಯಮಾಪನ ಮತ್ತು ಘೋಷಣೆಗೆ ವಸ್ತುನಿಷ್ಠ, ಪಾರದರ್ಶಕ ಮತ್ತು ಸಾಕ್ಷ್ಯ ಆಧಾರಿತ ವಿಧಾನವನ್ನು ಅನುಸರಿಸಿ ಕಡ್ಡಾಯ ಸೂಚಕಗಳಾದ ಮಳೆ ಕೊರತೆ ಅಥವಾ ಒಣಹವೆ, ಬಿತ್ತನೆ ಪ್ರಗತಿ, ಉಪಗ್ರಹ ಆಧಾರಿತ ರಿಮೋಟ್ ಸೆನ್ಸಿಂಗ್-ಆಧಾರಿತ ಸಸ್ಯವರ್ಗದ ಸೂಚ್ಯಂಕಗಳು, ಮಣ್ಣಿನ ತೇವಾಂಶ ಸೂಚ್ಯಂಕಗಳು ಮತ್ತು ಜಲವಿಜ್ಞಾನದ ಸೂಚಕಗಳ ಅಧ್ಯಯನ ನಡೆಸಿ ಮೊಬೈಲ್ ಆ್ಯಪ್ ಬಳಸಿ ಸ್ಥಳ ಪರಿಶೀಲನೆ ಮಾಡುವ ಕಾರ್ಯ ಪ್ರಗತಿಯಲ್ಲಿದ್ದು, ನಿಯಮಾನುಸಾರ ಬರಪೀಡಿತ ತಾಲೂಕೆಂದು ಘೋಷಿಸಲು ಕ್ರಮ ವಹಿಸಲಾಗುತ್ತಿದೆ.
ತೀವ್ರ ಮಳೆ ಅಭಾವದಿಂದಾಗಿ ರೈತಾಪಿ ವರ್ಗದ ಹಾಗೂ ಕೂಲಿ ಕಾರ್ಮಿಕರು ತಮ್ಮ ಮಕ್ಕಳ ಶಿಕ್ಷಣವನ್ನು ಅರ್ಧಕ್ಕೆ ಮೊಟಕುಗೊಳಿಸಿ ದೂರದ ನಗರಗಳಿಗೆ ಉದ್ಯೋಗ ಅರಸಿ ಗುಳೆ ಹೋಗುತ್ತಿರುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ವಿಬಿ ಜಿ ರಾಮ್ ಜಿ ಯೋಜನೆಯಡಿಯಲ್ಲಿ ಬರ ಪರಿಹಾರ ಸಾಮುದಾಯಿಕ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುವುದಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದೆ.
ಈ ಕಾಮಗಾರಿಗಳು ಮುಖ್ಯವಾಗಿ ಜಲ ಸಂರಕ್ಷಣೆ, ಅಂತರ್ಜಲ ಮರುಪೂರಣ ಮತ್ತು ಮಣ್ಣಿನ ತೇವಾಂಶ ಹೆಚ್ಚಳದ ಮೇಲೆ ಗಮನಹರಿಸುತ್ತವೆ. ಇವುಗಳಲ್ಲಿ ಕೆರೆ ಮತ್ತು ತೂಬುಗಳ ಹೂಳೆತ್ತುವುದು, ಕೃಷಿ ಹೊಂಡಗಳ ನಿರ್ಮಾಣ, ಚೆಕ್ ಡ್ಯಾಂ, ನಾಲಾ ಬಂದ್, ಇಂಗು ಗುಂಡಿಗಳು, ಕುಡಿಯುವ ನೀರಿನ ಮೂಲಗಳ ಬಳಿ ಮರುಪೂರಣ ಗುಂಡಿಗಳು/ಶಾಫ್ಟ್ಗಳು, ಬಂಡ್ ನಿರ್ಮಾಣ, ಕಂಪಾರ್ಟ್ಮೆಂಟ್ ಬಂಡಿಂಗ್, ಎತ್ತರದ ಪ್ರದೇಶಗಳಲ್ಲಿ ಕಂಟೂರ್ ಟ್ರೆಂಚಿಂಗ್ ಮತ್ತು ಬರ ನಿರೋಧಕತೆಯನ್ನು ಸುಧಾರಿಸುವ ಇತರ ನೈಸರ್ಗಿಕ ಸಂಪನ್ಮೂಲ ನಿರ್ವಹಣಾ ಕಾಮಗಾರಿಗಳನ್ನು ಕೈಗೊಳ್ಳುವುದರ ಮೂಲಕ ರೈತಾಪಿ ವರ್ಗದ ಹಾಗೂ ಕೂಲಿ ಕಾರ್ಮಿಕರು ಗುಳೆ ಹೋಗುವುದನ್ನು ತಡೆಗಟ್ಟಲು ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಕ್ರಮ ವಹಿಸುತ್ತಿದ್ದಾರೆ.
ವಿಜಯನಗರ ಜಿಲ್ಲೆಯಲ್ಲಿ 2026, ಆಗಸ್ಟ್ 13ರ ವರೆಗೆ ಒಟ್ಟು 38,126 ಕೂಲಿ ಕಾರ್ಮಿಕರಿಗೆ ಕೆಲಸವನ್ನು ನೀಡಲಾಗಿದ್ದು, ಕೂಡ್ಲಿಗಿ ತಾಲ್ಲೂಕಿನಲ್ಲಿ 6,555 ಕೂಲಿ ಕಾರ್ಮಿಕರಿಗೆ ಕೆಲಸ ನೀಡಲಾಗಿದೆ. ಪ್ರಸ್ತುತ ಕೂಡ್ಲಿಗಿ ತಾಲ್ಲೂಕಿನಲ್ಲಿ 29 ಕಾಮಗಾರಿಗಳು ನಡೆಯುತ್ತಿದ್ದು, 21,943 ಮಾನವ ದಿನಗಳನ್ನು ಸೃಜನೆ ಮಾಡಲಾಗಿದೆ.
- ಇಂದು ವಿಧಾನಸಭೆಯಲ್ಲಿ ಪ್ರಶ್ನೊತ್ತರ ವೇಳೆಯಲ್ಲಿ 'ಕೂಡ್ಲಿಗಿ ತಾಲೂಕನ್ನು ಬರಪೀಡಿತ ತಾಲೂಕೆಂದು ಘೋಷಿಸಲು ಸರ್ಕಾರ ಕೈಗೊಂಡಿರುವ ಕ್ರಮಗಳ' ಕುರಿತು ಸದಸ್ಯರಾದ ಎನ್.ಟಿ. ಶ್ರೀನಿವಾಸ್ ಅವರ ಪ್ರಶ್ನೆಗೆ ನನ್ನ ಉತ್ತರ -
Dr. G Parameshwara
@DrParameshwara
Talent deserves both recognition and opportunity. From reservation in government recruitment to financial incentives for Commonwealth Games participants and medal winners, Karnataka is strengthening its support system for sportspersons and encouraging them to aim higher.
ಕ್ರೀಡಾ ಸಾಧಕರಿಗೆ ಬೆಂಬಲದ ಜೊತೆಗೆ ಆರ್ಥಿಕ ಭದ್ರತೆ ದೊರಕಬೇಕು ಎಂಬ ಉದ್ದೇಶದಿಂದ ನಮ್ಮ ಸರ್ಕಾರವು ಸರ್ಕಾರಿ ನೇಮಕಾತಿಯಲ್ಲಿ ಮೀಸಲಾತಿ ಕಲ್ಪಿಸುತ್ತಿದೆ. ಜೊತೆಗೆ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಭಾಗವಹಿಸುವವರು ಹಾಗೂ ಪದಕ ವಿಜೇತರಿಗೆ ಪ್ರೋತ್ಸಾಹ ಧನವನ್ನು ನೀಡಲಾಗುತ್ತಿದೆ. ಈ ಮೂಲಕ ಕ್ರೀಡಾಳುಗಳು ಇನ್ನಷ್ಟು ಸಾಧನೆ ಮಾಡಲು ಉತ್ತೇಜನ ನೀಡಲಾಗುತ್ತಿದೆ.
#karnatakasports -
Dr. G Parameshwara
@DrParameshwara
ಕ್ರೀಡೆಯಲ್ಲಿ ರಾಜ್ಯಕ್ಕೆ ಕೀರ್ತಿ ತರುವ ಕ್ರೀಡಾಪಟುಗಳಿಗೆ ಅವರ ಅರ್ಹತೆಗೆ ಅನುಗುಣವಾಗಿ ನಮ್ಮ ಸರ್ಕಾರ ಉದ್ಯೋಗಾವಕಾಶಗಳನ್ನು ಕಲ್ಪಿಸುತ್ತಿದೆ.
ರಾಜ್ಯ ಪೊಲೀಸ್ ಇಲಾಖೆಯಲ್ಲಿ ಕ್ರೀಡಾಪಟುಗಳ ಮೀಸಲಾತಿಯನ್ನು 2%ರಿಂದ 3%ಕ್ಕೆ ಹೆಚ್ಚಿಸಲಾಗಿದೆ. ಪದಕ ವಿಜೇತ ಕ್ರೀಡಾಪಟುಗಳ ನೇರ ನೇಮಕಾತಿಗೆ ಅವಕಾಶ ನೀಡಲಾಗುತ್ತಿದ್ದು, ಆ ಮೂಲಕ ಕ್ರೀಡಾ ಸಾಧಕರಿಗೆ ಗೌರವದ ಜೊತೆಗೆ ಉದ್ಯೋಗದ ಭದ್ರತೆಯನ್ನೂ ಒದಗಿಸುತ್ತಿದ್ದೇವೆ.
Karnataka is creating stronger career pathways for those who bring pride to the state through sport. With reservation in the State Police Department increased from 2% to 3% and direct recruitment for medal-winning sportspersons, sporting excellence is being recognised with real opportunities.
#karnatakasports -
Dr. G Parameshwara
@DrParameshwara
ಭಾನುವಾರ ಕಂಠೀರವ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ ರಾಷ್ಟ್ರೀಯ ಚಾಂಪಿಯನ್ಶಿಪ್ಗಳಲ್ಲಿ ಸಾಧನೆ ಮಾಡಿದ ರಾಜ್ಯದ ಬಾಸ್ಕೆಟ್ಬಾಲ್ ತಂಡಗಳನ್ನು ಅಭಿನಂದಿಸಿ ಬಳಿಕ ಮಾತನಾಡಿದೆ.
ರಾಜ್ಯದಲ್ಲಿ ಕ್ರೀಡಾ ಚಟುವಟಿಕೆಗಳಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ನಮ್ಮ ಸರ್ಕಾರವು ಹಲವು ಕ್ರಮಗಳನ್ನು ಕೈಗೊಂಡಿದ್ದು, ಕರ್ನಾಟಕವನ್ನು ದೇಶದ ಪ್ರಮುಖ ಕ್ರೀಡಾ ರಾಜ್ಯವನ್ನಾಗಿ ರೂಪಿಸುವ ಗುರಿ ಇಟ್ಟುಕೊಳ್ಳಲಾಗಿದೆ ಎಂದು ತಿಳಿಸಿದೆ.
ಈ ಕುರಿತಾದ ಪತ್ರಿಕಾ ವರದಿಗಳು ಹೀಗಿವೆ..
On Sunday, I congratulated Karnataka’s basketball teams for their achievements at the National Championships held at Kanteerava Stadium.
Speaking on the occasion, I highlighted our government’s initiatives to promote sports and our goal of making Karnataka one of India’s leading sporting states.
Here are some of the press reports on the event.. -
Dr. G Parameshwara
@DrParameshwara
ಇಂದು ವಿಧಾನಮಂಡಲ ಅಧಿವೇಶನ ಆರಂಭಕ್ಕೂ ಮುನ್ನ ವಿಧಾನಸೌಧದ ಕಾರ್ಯಾಲಯದಲ್ಲಿ ಅಧಿಕಾರಿಗಳೊಂದಿಗೆ ಚರ್ಚಿಸಿದೆ.
-
Dr. G Parameshwara
@DrParameshwara
ನಾಡಿನ ಸಮಸ್ತ ಜನತೆಗೆ ನಾಗರಪಂಚಮಿ ಹಬ್ಬದ ಶುಭಾಶಯಗಳು.
ಶ್ರಾವಣ ಮಾಸದ ಮೊದಲ ಹಬ್ಬವಾದ ನಾಗರ ಪಂಚಮಿಯು ತಮ್ಮೆಲ್ಲರ ಬಾಳಿಗೆ ಸುಖ, ಶಾಂತಿ, ಸಮೃದ್ಧಿ ಹೊತ್ತು ತರಲಿ ಎಂದು ಹಾರೈಸುತ್ತೇನೆ.
#nagarapanchami -
Dr. G Parameshwara
@DrParameshwara
ರಾಜ್ಯದಲ್ಲಿ ಕ್ರೀಡಾ ಚಟುವಟಿಕೆಗಳಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಸರ್ಕಾರ ಹಲವು ಮಹತ್ವದ ಕ್ರಮಗಳನ್ನು ಕೈಗೊಂಡಿದ್ದು, ಕರ್ನಾಟಕವನ್ನು ದೇಶದ ಪ್ರಮುಖ ಕ್ರೀಡಾ ರಾಜ್ಯವನ್ನಾಗಿ ರೂಪಿಸುವ ಗುರಿ ಇಟ್ಟುಕೊಳ್ಳಲಾಗಿದೆ.
ರಾಜ್ಯ ಪೊಲೀಸ್ ಇಲಾಖೆಯಲ್ಲಿ ಕ್ರೀಡಾಪಟುಗಳಿಗೆ ಉದ್ಯೋಗಾವಕಾಶ ಕಲ್ಪಿಸುವ ನಿಟ್ಟಿನಲ್ಲಿ ವಿವಿಧ ಹುದ್ದೆಗಳ ನೇಮಕಾತಿಯಲ್ಲಿ ಶೇ.2ರಷ್ಟು ಮೀಸಲಾತಿ ಕಲ್ಪಿಸಲಾಗಿತ್ತು. ತದನಂತರ ಅದನ್ನು ಶೇ. 3ಕ್ಕೆ ಹೆಚ್ಚಿಸಲಾಗಿದೆ. ಹಲವು ಕ್ರೀಡಾಪಟುಗಳು ಪಿಎಸ್ಐ, ಕಾನ್ಸ್ಟೇಬಲ್ ಹುದ್ದೆಗಳಿಗೆ ನೇಮಕವಾಗಿದ್ದಾರೆ. ಪದಕ ವಿಜೇತ ಕ್ರೀಡಾಪಟುಗಳನ್ನು ನೇರ ನೇಮಕಾತಿ ಮಾಡಿಕೊಳ್ಳುವ ಪದ್ಧತಿಯನ್ನು ಜಾರಿಗೆ ತರಲಾಗಿದೆ.
ಸರ್ಕಾರ 72,000 ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ಮುಂದಾಗಿದ್ದು, ಈ ನೇಮಕಾತಿಗಳಲ್ಲಿಯೂ ಕ್ರೀಡಾಪಟುಗಳಿಗೆ ಶೇ.2ರಷ್ಟು ಮೀಸಲಾತಿ ಸೌಲಭ್ಯ ಸಿಗಲಿದೆ. ದೇಶದ ಎಲ್ಲ ರಾಜ್ಯಗಳಲ್ಲೂ ಇಂತಹ ಅವಕಾಶವಿಲ್ಲ. ಕರ್ನಾಟಕದಲ್ಲಿ ಕ್ರೀಡಾಪಟುಗಳಿಗೆ ವಿಶೇಷ ಪ್ರೋತ್ಸಾಹ ನೀಡಲಾಗುತ್ತಿದೆ.
ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಭಾಗವಹಿಸಿದ ಎಲ್ಲಾ ಕ್ರೀಡಾಪಟುಗಳಿಗೆ ತಲಾ ₹5 ಲಕ್ಷ ಪ್ರೋತ್ಸಾಹ ಧನ ನೀಡಲಾಗಿದೆ. ಪದಕ ವಿಜೇತರಿಗೆ ₹15 ಲಕ್ಷ ಪ್ರೋತ್ಸಾಹ ಧನ ನೀಡಲು ಕ್ರಮ ಕೈಗೊಳ್ಳಲಾಗುವುದು. ಪ್ಯಾರಾ ಒಲಿಂಪಿಕ್ಸ್ನಲ್ಲಿ ಮೈಸೂರು ಮೂಲದ ಶಿಲ್ಪಾ ಅವರು ಭಾಗವಹಿಸಿ ಕಂಚಿನ ಪದಕ ಗೆದ್ದಿರುವುದು ರಾಜ್ಯಕ್ಕೆ ಹೆಮ್ಮೆಯ ಸಂಗತಿಯಾಗಿದೆ.
ಸರ್ಕಾರ ಹಾಗೂ ಕ್ರೀಡಾ ಸಂಸ್ಥೆಗಳು ಪ್ರೋತ್ಸಾಹ ನೀಡುವುದು ಒಂದು ಭಾಗವಾಗಿದ್ದು, ಅದಕ್ಕೆ ಪೂರಕವಾಗಿ ಕ್ರೀಡಾಪಟುಗಳು ಶ್ರದ್ಧೆ, ಪರಿಶ್ರಮ ಮತ್ತು ಬದ್ಧತೆಯಿಂದ ತಮ್ಮನ್ನು ತಾವು ಕ್ರೀಡೆಯಲ್ಲಿ ತೊಡಗಿಸಿಕೊಳ್ಳಬೇಕು. ಶ್ರದ್ಧೆಯಿಂದ ಪ್ರಯತ್ನಿಸಿದರೆ ಯಾವುದೇ ಕ್ಷೇತ್ರದಲ್ಲೂ ಸಾಧನೆ ಮಾಡಬಹುದು. ಒಬ್ಬ ಕ್ರೀಡಾಪಟುವಿನ ಬದ್ಧತೆ ಇಡೀ ತಂಡಕ್ಕೆ ಸ್ಪೂರ್ತಿಯಾಗಲಿದೆ.
ರಾಜ್ಯದಲ್ಲಿ ಕ್ರೀಡೆಗೆ ಉತ್ತೇಜನ ನೀಡಲು ಅಗತ್ಯ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಉತ್ತಮ ತರಬೇತಿ ಪಡೆಯಲು ಕ್ರೀಡಾಪಟುಗಳನ್ನು ವಿದೇಶಗಳಿಗೆ ಕಳುಹಿಸುವ ವ್ಯವಸ್ಥೆಯನ್ನೂ ಮಾಡಲಾಗಿದೆ. ಕೇಂದ್ರ ಸರ್ಕಾರದ ‘ಖೇಲೋ ಇಂಡಿಯಾ’ ಕಾರ್ಯಕ್ರಮವೂ ಕ್ರೀಡಾಪಟುಗಳಿಗೆ ಉತ್ತಮ ವೇದಿಕೆಯನ್ನು ಒದಗಿಸುತ್ತಿದೆ.
ದೇವನಹಳ್ಳಿ ಸಮೀಪ ಸುಮಾರು 60 ಎಕರೆ ಪ್ರದೇಶದಲ್ಲಿ ಸ್ಪೋರ್ಟ್ಸ್ ಸಿಟಿ ನಿರ್ಮಿಸಲು ಯೋಜನೆ ರೂಪಿಸಲಾಗಿದೆ. ವಿವಿಧ ಕ್ರೀಡೆಗಳನ್ನು ಒಂದೇ ಸಮಗ್ರ ಕ್ರೀಡಾ ಮೂಲಸೌಕರ್ಯದಲ್ಲಿ ನಡೆಸಲು ಅನುಕೂಲವಾಗುವಂತೆ ನೀಲನಕ್ಷೆ ಸಿದ್ಧಪಡಿಸಲಾಗಿದೆ. ಕರ್ನಾಟಕವನ್ನು ದೇಶದ ಪ್ರಮುಖ ಕ್ರೀಡಾ ರಾಜ್ಯವಾಗಿ ರೂಪಿಸುವ ನಿಟ್ಟಿನಲ್ಲಿ ಸರ್ಕಾರ ಕಾರ್ಯನಿರ್ವಹಿಸುತ್ತಿದೆ.
ರಾಜ್ಯದಲ್ಲಿ ಯಾವ ಕ್ರೀಡೆಗಳಲ್ಲಿ ಉತ್ತಮ ಸಾಧನೆ ಮಾಡಲಾಗುತ್ತಿದೆಯೋ ಅಂತಹ ಕ್ರೀಡೆಗಳಿಗೆ ವಿಶೇಷ ಉತ್ತೇಜನ ನೀಡಲಾಗುವುದು. ಬ್ಯಾಸ್ಕೆಟ್ಬಾಲ್ನಲ್ಲಿ ಕರ್ನಾಟಕ ಉತ್ತಮ ಸಾಧನೆ ಮಾಡುತ್ತಿದೆ. ಈಜು ಕ್ರೀಡೆಯಲ್ಲಿಯೂ ಕರ್ನಾಟಕವೂ ರಾಷ್ಟ್ರೀಯ ಮಟ್ಟದಲ್ಲಿ ಕಳೆದ 33 ವರ್ಷಗಳಿಂದ ಚಾಂಪಿಯನ್ ಆಗಿರುವುದು ರಾಜ್ಯದ ಕ್ರೀಡಾ ಸಾಮರ್ಥ್ಯಕ್ಕೆ ಸಾಕ್ಷಿಯಾಗಿದೆ.
ನಾನು ಕ್ರೀಡಾಪಟುವಾಗಿ ಮತ್ತು ಕ್ರೀಡಾ ಸಚಿವನಾಗಿ ರಾಜ್ಯದ ಕ್ರೀಡಾ ಅಭಿವೃದ್ಧಿಗೆ ನನ್ನದೇ ಆದ ದೂರದೃಷ್ಟಿ ಇಟ್ಟುಕೊಂಡು, ನೀಲನಕ್ಷೆಯನ್ನು ರೂಪಿಸಿಕೊಂಡಿದ್ದೇನೆ. ಬೆಂಗಳೂರಿನ ಕಂಠೀರವ ಕ್ರೀಡಾಂಗಣವನ್ನು ಮೇಲ್ದರ್ಜೆಗೇರಿಸಲು ಯೋಜನೆ ರೂಪಿಸಲಾಗಿದ್ದು, ಸುಮಾರು ₹5,000 ಕೋಟಿ ವೆಚ್ಚದಲ್ಲಿ ಸಮಗ್ರ ಅಭಿವೃದ್ಧಿಗೆ ಗಮನ ಹರಿಸಲಾಗುವುದು.
ಬ್ಯಾಸ್ಕೆಟ್ಬಾಲ್ ಕ್ರೀಡೆಯ ಅಭಿವೃದ್ಧಿಗಾಗಿ ಸರ್ಕಾರ 5 ಎಕರೆ ಜಾಗವನ್ನು ನೀಡಿದೆ. ಕತಾರ್ನಲ್ಲಿ ವಿಶ್ವಕಪ್ ಬ್ಯಾಸ್ಕೆಟ್ಬಾಲ್ ಚಾಂಪಿಯನ್ಶಿಪ್ಗಾಗಿ ಎಂಟು ಕ್ರೀಡಾಂಗಣಗಳನ್ನು ನಿರ್ಮಿಸಿದ್ದಾರೆ. ಎಲ್ಲವೂ ಅತ್ಯುತ್ತಮ ಗುಣಮಟ್ಟದ ಮೂಲಸೌಕರ್ಯವನ್ನು ಹೊಂದಿವೆ. ಅದೇ ರೀತಿಯ ಆಧುನಿಕ ಮೂಲಸೌಕರ್ಯವನ್ನು ಕರ್ನಾಟಕದಲ್ಲಿಯೂ ನಿರ್ಮಿಸಿದರೆ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಚಾಂಪಿಯನ್ಶಿಪ್ಗಳನ್ನು ರಾಜ್ಯದಲ್ಲಿ ಆಯೋಜಿಸಲು ಸಾಧ್ಯವಾಗಲಿದೆ.
ಗುಜರಾತ್ನ ಅಹಮದಾಬಾದ್ನಲ್ಲಿ ಕಾಮನ್ವೆಲ್ತ್ ಗೇಮ್ಸ್ ನಡೆಯಲಿದ್ದು, ಈ ವೇಳೆ ಕಂಠೀರವ ಕ್ರೀಡಾಂಗಣವನ್ನು ಮೇಲ್ದರ್ಜೆಗೇರಿಸಲು ಸಾಧ್ಯವಾದರೆ ಕೆಲವು ಕ್ರೀಡಾ ಸ್ಪರ್ಧೆಗಳನ್ನು ಬೆಂಗಳೂರಿನಲ್ಲಿ ಆಯೋಜಿಸುವ ಅವಕಾಶ ದೊರೆಯಲಿದೆ. ಇದರಿಂದ ಕರ್ನಾಟಕದ ಕ್ರೀಡಾ ಸಾಮರ್ಥ್ಯವನ್ನು ದೇಶ-ವಿದೇಶಗಳಿಗೆ ಪರಿಚಯಿಸಲು ಸಾಧ್ಯವಾಗಲಿದೆ.
ಕರ್ನಾಟಕದಲ್ಲಿ ಕ್ರೀಡಾಪಟುಗಳಿಗೆ ಉತ್ತಮ ತರಬೇತಿ, ಮೂಲಸೌಕರ್ಯ, ಉದ್ಯೋಗದಲ್ಲಿ ಮೀಸಲಾತಿ ಹಾಗೂ ಆರ್ಥಿಕ ಪ್ರೋತ್ಸಾಹ ಸೇರಿದಂತೆ ಅಗತ್ಯ ಎಲ್ಲ ರೀತಿಯ ನೆರವು ಒದಗಿಸುವ ಮೂಲಕ ರಾಜ್ಯವನ್ನು ದೇಶದ ಪ್ರಮುಖ ಕ್ರೀಡಾ ಕೇಂದ್ರಸ್ಥಾನವಾಗಿ ರೂಪಿಸುವುದು ಸರ್ಕಾರದ ಉದ್ದೇಶವಾಗಿದೆ.
ರಾಜ್ಯದಲ್ಲಿ ಕ್ರೀಡಾ ಕ್ಷೇತ್ರದ ಅಭಿವೃದ್ಧಿಗೆ ತಮ್ಮ ಸಂಪೂರ್ಣ ಸಮಯ ಮತ್ತು ಶ್ರಮವನ್ನು ಗೋವಿಂದರಾಜು ಅವರು ಮೀಸಲಿಟ್ಟು ಕೆಲಸ ಮಾಡುತ್ತಿದ್ದಾರೆ. ಯಾವುದೇ ಕೆಲಸವನ್ನು ಕೈಗೆತ್ತಿಕೊಂಡರೂ ಅದನ್ನು ಪ್ರಾಮಾಣಿಕವಾಗಿ ಮತ್ತು ಸಂಪೂರ್ಣವಾಗಿ ಮಾಡದಿದ್ದರೆ ಅವರಿಗೆ ಸಮಾಧಾನವಿರುವುದಿಲ್ಲ. ಕರ್ನಾಟಕದಲ್ಲಿ ಬ್ಯಾಸ್ಕೆಟ್ಬಾಲ್ ಕ್ರೀಡೆ ಬೆಳೆದಿರುವುದಕ್ಕೆ ಗೋವಿಂದರಾಜು ಅವರ ಹಲವು ವರ್ಷಗಳ ನಿರಂತರ ಪ್ರಯತ್ನ ಮತ್ತು ಪರಿಶ್ರಮ ಇದೆ.
ಬ್ಯಾಸ್ಕೆಟ್ಬಾಲ್ ಕ್ರೀಡೆಯನ್ನು ಉತ್ತೇಜಿಸುವ ಉದ್ದೇಶದಿಂದ ಒಳಾಂಗಣ ಕ್ರೀಡಾಂಗಣ ಸೇರಿದಂತೆ ಅಗತ್ಯ ಮೂಲಸೌಕರ್ಯ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗಿದೆ. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಗಳಾಗಿದ್ದ ವೇಳೆ ಅವರ ಮನವೊಲಿಸಿ ರಾಜ್ಯದಲ್ಲಿ ಕ್ರೀಡಾ ಮೂಲಸೌಕರ್ಯ ಅಭಿವೃದ್ಧಿಯ ನಿಟ್ಟಿನಲ್ಲಿ ಕೆಲಸ ಮಾಡಿದ್ದಾರೆ.
- ಕರ್ನಾಟಕ ರಾಜ್ಯ ಬಾಸ್ಕೆಟ್ಬಾಲ್ ಸಂಸ್ಥೆಯು ಕಂಠೀರವ ಕ್ರೀಡಾಂಗಣದ ಕರ್ನಾಟಕ ಒಲಂಪಿಕ್ ಭವನದಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಚಾಂಪಿಯನ್ಶಿಪ್ಗಳಲ್ಲಿ ಸಾಧನೆ ಮಾಡಿದ ಕಿರಿಯ, ಯುವಕರ ಬಾಸ್ಕೆಟ್ಬಾಲ್ ತಂಡಗಳನ್ನು ಅಭಿನಂದಿಸಿ, ಬಳಿಕ ಮಾತನಾಡಿದೆ. -
Dr. G Parameshwara
@DrParameshwara
ಇಂದು ಕರ್ನಾಟಕ ರಾಜ್ಯ ಬಾಸ್ಕೆಟ್ಬಾಲ್ ಸಂಸ್ಥೆಯು ಕಂಠೀರವ ಕ್ರೀಡಾಂಗಣದ ಕರ್ನಾಟಕ ಒಲಂಪಿಕ್ ಭವನದಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಚಾಂಪಿಯನ್ಶಿಪ್ಗಳಲ್ಲಿ ಸಾಧನೆ ಮಾಡಿದ ಕಿರಿಯ, ಯುವಕರ ಬಾಸ್ಕೆಟ್ಬಾಲ್ ತಂಡಗಳನ್ನು ಅಭಿನಂದಿಸಿ, ಶುಭಹಾರೈಸಿದೆ.
ಕಾರ್ಯಕ್ರಮದಲ್ಲಿ ಕರ್ನಾಟಕ ಒಲಂಪಿಕ್ ಸಂಸ್ಥೆಯ ಅಧ್ಯಕ್ಷರು ಹಾಗೂ ವಿಧಾನ ಪರಿಷತ್ ಸದಸ್ಯರಾದ ಡಾ. ಕೆ. ಗೋವಿಂದರಾಜು, ಕ್ರೀಡಾ ಇಲಾಖೆಯ ಆಯುಕ್ತರಾದ ಎಂ.ಎನ್.ಅನುಚೇತ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
Today, I had the honour of congratulating and extending my best wishes to the junior and youth basketball teams of Karnataka who have achieved remarkable success in the National Championships, at an event organized by the Karnataka State Basketball Association at the Karnataka Olympic Bhavan, Kanteerava Stadium.
Dr. K. Govindaraju, President of the Karnataka Olympic Association and Member of the Legislative Council, M.N. Anucheth, Commissioner of the Sports Department, along with several others, were present at the event. -
Dr. G Parameshwara
@DrParameshwara
ತಮ್ಮ ಆಧ್ಯಾತ್ಮಿಕ ಚಿಂತನೆಗಳ ಮೂಲಕ ಸಾಮರಸ್ಯದ ಸಂದೇಶ ಸಾರಿದ ಶ್ರೇಷ್ಟ ಸಂತರು, ಸ್ವಾಮಿ ವಿವೇಕಾನಂದರ ಆಧ್ಯಾತ್ಮ ಗುರುಗಳಾದ ರಾಮಕೃಷ್ಣ ಪರಮಹಂಸರು ಅದ್ವೈತ ವೇದಾಂತ ಸಿದ್ಧಾಂತವನ್ನು ಬೋಧಿಸಿದ್ದರು.
ಪರಮಹಂಸರ ಪುಣ್ಯಸ್ಮರಣೆಯಂದು ನನ್ನ ಗೌರವ ನಮನವನ್ನು ಸಲ್ಲಿಸುತ್ತೇನೆ. ಅವರ ಸರಳ ಬದುಕು, ಉದಾತ್ತ ಚಿಂತನೆಗಳು ಸದಾ ನಮಗೆ ಸ್ಫೂರ್ತಿಯಾಗಲಿ. -
Dr. G Parameshwara
@DrParameshwara
"ತುಮಕೂರು ಸರ್ವಜನಾಂಗದ ಶಾಂತಿಯ ತೋಟವಾಗಲಿ"
ತುಮಕೂರಿನ ಜನತೆ ಶಾಂತಿ ಪ್ರಿಯರು, ಸಜ್ಜನಿಕೆಗೆ ಹೆಸರಾದವರು, ದೇಶಪ್ರೇಮಿಗಳು. ಕೊಟ್ಟ ಮಾತಿನಿಂತೆ ನಮ್ಮ ಸರ್ಕಾರ 5 ಗ್ಯಾರಂಟಿಗಳನ್ನು ಅನುಷ್ಟಾನಕ್ಕೆ ತಂದು ನುಡಿದಂತೆ ನಡೆದಿದ್ದೇವೆ. ಜನರ ಆಶಯಕ್ಕೆ ತಕ್ಕಂತೆ ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಸರ್ಕಾರದ ಯೋಜನೆಗಳ ಸೌಲಭ್ಯವನ್ನು ತಲುಪಿಸುವ ಕೆಲಸ ಮಾಡಲು ನಮ್ಮ ಸರ್ಕಾರ ಬದ್ಧವಾಗಿದೆ.
ಶಿಕ್ಷಣ, ಕ್ರೀಡೆ, ಸಂಸ್ಕೃತಿ, ಕೈಗಾರಿಕೆ, ಯುವಕರಿಗೆ ಉದ್ಯೋಗ ಸೇರಿದಂತೆ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದ್ದು, ಈ ನಿಟ್ಟಿನಲ್ಲಿ ಜಿಲ್ಲೆಯ ಜನತೆ ಸರ್ಕಾರದೊಂದಿಗೆ ಕೈಜೋಡಿಸಬೇಕು. ಜಿಲ್ಲೆಯನ್ನು ಸರ್ವ ಜನಾಂಗದ ಶಾಂತಿಯ ತೋಟವನ್ನಾಗಿ ನಿರ್ಮಾಣ ಮಾಡುವಲ್ಲಿ ಎಲ್ಲರ ಸಹಕಾರ ನಮ್ಮೊಂದಿಗಿರುತ್ತದೆ ಎಂದು ಆಶಿಸುತ್ತೇನೆ.
ಅಹಿಂಸಾ ಮಾರ್ಗದ ಮೂಲಕ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಮಹಾತ್ಮ ಗಾಂಧೀಜಿ, ದೇಶಕ್ಕೆ ಅತ್ಯುತ್ತಮ ಸಂವಿಧಾನ ನೀಡಿದ ಡಾ. ಬಿ.ಆರ್. ಅಂಬೇಡ್ಕರ್ ಹಾಗೂ ದೇಶದ ಎಲ್ಲ ಮಹಾನ್ ನಾಯಕರನ್ನು ನೆನೆಯುತ್ತಾ, ಮತ್ತೊಮ್ಮೆ 80ನೇ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳನ್ನು ತಿಳಿಸುತ್ತೇನೆ.
“May Tumakuru Become a Garden of Peace for All Communities”
The people of Tumakuru are peace-loving, known for their decency and patriotism. As promised, our government has implemented the five Guarantee schemes and delivered on its word. In keeping with the people’s aspirations, we are committed to ensuring that the benefits of government schemes reach even the last person in society.
The government is committed to the district’s comprehensive development in education, sports, culture, industry and employment for youth. I urge the people of the district to join hands with the government, and I hope for everyone’s cooperation in building Tumakuru into a “garden of peace for all communities”.
Remembering Mahatma Gandhi, who led the country to freedom through the path of non-violence; Dr. B.R. Ambedkar, who gave the nation an outstanding Constitution; and all the great leaders of our country, I once again extend my greetings on the 80th Independence Day.
#independenceday -
Dr. G Parameshwara
@DrParameshwara
"ಪ್ರತಿಭಾವಂತರಿಗೆ ಕ್ರೀಡಾ ಸ್ವಾತಂತ್ರ್ಯ "
ತಿಪಟೂರು ತಾಲ್ಲೂಕು ಕಲ್ಪತರು ಕ್ರೀಡಾಂಗಣದಲ್ಲಿ ಬ್ಯಾಡ್ಮಿಂಟನ್ ಒಳಾಂಗಣ ಕ್ರೀಡಾಂಗಣ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ.
ಮಹಾತ್ಮ ಗಾಂಧಿ ಜಿಲ್ಲಾ ಕ್ರೀಡಾಂಗಣದ ವಾಣಿಜ್ಯ ಸಂಕೀರ್ಣದಲ್ಲಿ ಕ್ರೀಡೆಯನ್ನು ಉತ್ತೇಜಿಸುವ ಸಲುವಾಗಿ ರಾಜ್ಯದಲ್ಲೇ ಮೊದಲ ಶೂಟಿಂಗ್ ಕೇಂದ್ರವನ್ನು ಸ್ಥಾಪಿಸಲಾಗಿದೆ.
ಶಿರಾ ತಾಲ್ಲೂಕಿನ ವಿವೇಕಾನಂದ ತಾಲ್ಲೂಕು ಕ್ರೀಡಾಂಗಣದಲ್ಲಿ ಬ್ಯಾಡ್ಮಿಂಟನ್ ಒಳಾಂಗಣ ಕ್ರೀಡಾಂಗಣ ನಿರ್ಮಾಣ ಕಾಮಗಾರಿ ಪೂರ್ಣಗೊಂಡಿರುತ್ತದೆ.
ತುಮಕೂರಿನಲ್ಲಿ ಕ್ರೀಡಾಕೂಟವನ್ನು ಆಯೋಜನೆ ಮಾಡುವುದು ಮಾತ್ರವಲ್ಲದೇ ಬಾಕ್ಸಿಂಗ್ ಒಳಾಂಗಣ, ಶೂಟಿಂಗ್, ವಾಲಿಬಾಲ್, ಬಾಸ್ಕೆಟ್ ಬಾಲ್ ಹಾಗೂ ಟೆನಿಸ್ ಕ್ರೀಡಾ ಅಂಕಣ ಸೇರಿದಂತೆ ನೂತನ ಕ್ರೀಡಾ ಅಂಕಣಗಳನ್ನು ನಿರ್ಮಾಣ ಮಾಡಲಾಗಿದೆ.
“Sporting Freedom for Talented Athletes”
Construction of a badminton indoor stadium at Kalpataru Stadium in Tiptur taluk is in progress.
To promote sports, Karnataka’s first shooting centre has been established in the commercial complex of the Mahatma Gandhi District Stadium.
Construction of the badminton indoor stadium at Vivekananda Taluk Stadium in Sira has been completed.
In addition to hosting sporting events in Tumakuru, new facilities for indoor boxing, shooting, volleyball, basketball and tennis have also been developed.
#independenceday -
Dr. G Parameshwara
@DrParameshwara
"GenZ ಸಮುದಾಯಕ್ಕೆ ಸ್ವಾತಂತ್ರ್ಯದ ಸಿಹಿ"
ಜಿಲ್ಲಾ ಕೈಗಾರಿಕಾ ಕೇಂದ್ರದ ವತಿಯಿಂದ ಮಾರ್ಚ್-2026ರ ಅಂತ್ಯಕ್ಕೆ ಜಿಲ್ಲೆಯಲ್ಲಿ ಒಟ್ಟು 28,215 ಎಂ.ಎಸ್.ಎಂ.ಇ ಕೈಗಾರಿಕೆಗಳು ನೋಂದಣಿಯಾಗಿರುತ್ತದೆ. ಸದರಿ ಕೈಗಾರಿಕೆಗಳಿಂದ ಒಟ್ಟು 712.23 ಕೋಟಿ ರೂ.ಗಳ ಬಂಡವಾಳ ಹೂಡಿಕೆಯಾಗಿದ್ದು, 2,02,324 ಜನರಿಗೆ ನೇರ ಉದ್ಯೋಗವಕಾಶ ಸೃಷ್ಟಿಯಾಗಿದೆ.
2025-26ನೇ ಸಾಲಿನಲ್ಲಿ ರಾಜ್ಯ ಉನ್ನತ ಮಟ್ಟದ ಸಮಿತಿ ಮತ್ತು ರಾಜ್ಯ ಮಟ್ಟದ ಏಕಗವಾಕ್ಷಿ ಅನುಮೋದನಾ ಸಮಿತಿ ಸಭೆಯಲ್ಲಿ ಒಟ್ಟು 26 ಕೈಗಾರಿಕೆಗಳು ಅನುಮೋದನೆಯಾಗಿದ್ದು, ಅನುಷ್ಠಾನ ಹಂತದಲ್ಲಿರುತ್ತವೆ. ಈ ಕೈಗಾರಿಕೆಯಿಂದ ಜಿಲ್ಲೆಗೆ ಒಟ್ಟು 1185.91 ಕೋಟಿ ರೂ. ಬಂಡವಾಳ ಹೂಡಿಕೆಯಾಗಿದ್ದು, ಸದರಿ ಕೈಗಾರಿಕೆಗಳಿಂದ ಒಟ್ಟು 7286 ನೇರ ಉದ್ಯೋಗ ಸೃಷ್ಟಿಯಾಗಲಿದೆ.
ಕರ್ನಾಟಕ ರಾಜ್ಯ ಸರ್ಕಾರದ ವತಿಯಿಂದ ನಡೆದ Global Investors Meet-2025ರ ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ತುಮಕೂರು ಜಿಲ್ಲೆಯಲ್ಲಿ 7 ಬೃಹತ್ ಮತ್ತು ಭಾರಿ ಕೈಗಾರಿಕೆ ಆರಂಭಿಸಲು MOU ಮಾಡಿಕೊಂಡಿರುತ್ತಾರೆ. ಈ ಕೈಗಾರಿಕೆಗಳಿಂದ ಒಟ್ಟು 75,480 ಕೋಟಿ ರೂ. ಬಂಡವಾಳ ಹೂಡಿಕೆ ನಿರೀಕ್ಷಿಸಲಾಗಿದೆ ಹಾಗೂ 29,200 ನೇರ ಉದ್ಯೋಗ ಸೃಷ್ಟಿಯಾಗುವ ನಿರೀಕ್ಷೆ ಇದೆ.
“The Sweet Taste of Freedom for Gen Z”
As of the end of March 2026, a total of 28,215 MSMEs have been registered in Tumakuru district through the District Industries Centre. These industries have attracted ₹712.23 crore in investment and created 2,02,324 direct employment opportunities.
During 2025–26, the State High-Level Committee and the State-Level Single Window Clearance Committee approved 26 industries, which are now under implementation. These industries involve an investment of ₹1,185.91 crore and are expected to create 7,286 direct jobs in the district.
At the Global Investors Meet 2025 organised by the Karnataka Government, MoUs were signed to establish 7 large and mega industries in Tumakuru district. These projects are expected to bring in ₹75,480 crore in investment and generate 29,200 direct jobs.
#independenceday -
Dr. G Parameshwara
@DrParameshwara
"ತುಮಕೂರಿನಲ್ಲಿ ಸಂಸ್ಕೃತಿ, ಕ್ರೀಡೆ ಹಾಗೂ ಕಲೆಯ ಸಮಾಗಮ"
ತುಮಕೂರು ಜಿಲ್ಲೆ ಐತಿಹಾಸಿಕ, ಪಾರಂಪರಿಕ ನಾಡು. ಅಲ್ಲದೆ, ಕಲೆ, ಸಂಸ್ಕೃತಿಗಳ ಬೀಡೂ ಹೌದು. ಸರ್ಕಾರದ ವತಿಯಿಂದ ಕಳೆದ ಎರಡು ವರ್ಷಗಳು ನಾಡ ಹಬ್ಬ ದಸರಾ ಉತ್ಸವವನ್ನು ಐತಿಹಾಸಿಕ ಮೈಸೂರಿನ ದಸರಾ ಉತ್ಸವಕ್ಕೆ ಸರಿಸಮಾನವಾಗಿ ನಡೆಸಿ ಯಶಸ್ವಿಯಾಗಿದ್ದೇವೆ. ಈ ಯಶಸ್ವಿಯಲ್ಲಿ ತಾವೆಲ್ಲರೂ ಭಾಗಿಗಳು ಎಂದು ಹೇಳಲು ನಾನು ಹೆಮ್ಮೆಪಡುತ್ತೇನೆ.
ಜಿಲ್ಲೆಯಲ್ಲಿ ಕರ್ನಾಟಕ ಕ್ರೀಡಾಕೂಟ, ರಾಷ್ಟ್ರ ಮಟ್ಟದ ಅಥ್ಲೆಟಿಕ್ ಯು-20 ಕ್ರೀಡಾಕೂಟ, ಅಂತಾರಾಷ್ಟ್ರೀಯ ಮಟ್ಟದ ಟೆನಿಸ್ ಕ್ರೀಡಾಕೂಟ, ಅಂತರ ಜಿಲ್ಲಾ ಮಟ್ಟದ ಫುಟ್ಬಾಲ್ ಕ್ರೀಡಾಕೂಟಗಳನ್ನು ಯಶಸ್ವಿಯಾಗಿ ಆಯೋಜಿಸಲಾಗಿದೆ.
ಕೊರಟಗೆರೆ ತಾಲ್ಲೂಕು ಕ್ರೀಡಾಂಗಣದಲ್ಲಿ ಬ್ಯಾಡ್ಮಿಂಟನ್ ಒಳಾಂಗಣ ಕ್ರೀಡಾಂಗಣ ನಿರ್ಮಾಣ ಮತ್ತು ವಿವಿಧ ಕ್ರೀಡಾ ಅಂಕಣಗಳ ನಿರ್ಮಾಣ ಕಾಮಗಾರಿಗೆ ಶಂಕು ಸ್ಥಾಪನೆ ನೆರವೇರಿಸಲಾಗಿದ್ದು, ಮಧುಗಿರಿ ತಾಲ್ಲೂಕಿನ ರಾಜೀವ್ ಗಾಂಧಿ ತಾಲ್ಲೂಕು ಕ್ರೀಡಾಂಗಣದಲ್ಲಿ ವಿವಿಧ ಕ್ರೀಡಾ ಅಂಕಣಗಳ ನಿರ್ಮಾಣ ಹಾಗೂ ಉನ್ನತೀಕರಣ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದೆ.
“A Confluence of Culture, Sports and Art in Tumakuru”
Tumakuru is a land of rich history and heritage, and a centre of art and culture. Over the past two years, the government has successfully organised the Nada Habba Dasara celebrations on a scale comparable to the historic Mysuru Dasara. I am proud to say that all of you have been part of this success.
The district has successfully hosted the Karnataka Games, National-level U-20 Athletics Championship, an international-level tennis tournament and an inter-district football tournament.
The foundation stone has been laid for the construction of a badminton indoor stadium and various sports courts at the Koratagere Taluk Stadium, while construction and upgradation of various sports courts have been taken up at the Rajiv Gandhi Taluk Stadium in Madhugiri.
#independenceday -
Dr. G Parameshwara
@DrParameshwara
"ಬಡ ಕುಟುಂಬಗಳಿಗೆ ಸ್ವಂತಸೂರಿನ ಸ್ವಾತಂತ್ರ್ಯ"
ಜಿಲ್ಲೆಯ 11 ನಗರ ಸ್ಥಳೀಯ ಸಂಸ್ಥೆಗಳಲ್ಲಿ ಖಾಯಂ ಪೌರಕಾರ್ಮಿಕರಾಗಿ ಕಾರ್ಯ ನಿರ್ವಹಿಸುತ್ತಿರುವ ವಸತಿ ರಹಿತ ನೌಕರರುಗಳಿಗೆ ಪೌರಕಾರ್ಮಿಕ ಗೃಹಭಾಗ್ಯ ಯೋಜನೆಯಡಿ ಒಟ್ಟು 176 ಮನೆಗಳು ಅನುಮೋದನೆಗೊಂಡಿದೆ. ಪ್ರತಿ ಮನೆಗೆ ಘಟಕ ವೆಚ್ಚ 7.50 ಲಕ್ಷ ರೂ. ಅಂದಾಜಿಸಲಾಗಿದ್ದು, ರಾಜ್ಯ ಸರ್ಕಾರದಿಂದ 6ಲಕ್ಷ ರೂ.ಗಳನ್ನು ಭರಿಸಲಾಗುತ್ತದೆ.
ಪೌರಕಾರ್ಮಿಕ ಗೃಹಭಾಗ್ಯ ಯೋಜನೆಯಡಿ ಈವರೆವಿಗೂ 166 ಮನೆಗಳು ಪೂರ್ಣಗೊಂಡಿದ್ದು, ಉಳಿದ 10 ಮನೆಗಳ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ.
ತುಮಕೂರು ಮಹಾನಗರಪಾಲಿಕೆ ಒಳಗೊಂಡಂತೆ ಜಿಲ್ಲೆಯ ಒಟ್ಟು 11 ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ವಸತಿ ನಿವೇಶನ ರಹಿತರಿಗೆ ಶಾಶ್ವತ ಸೂರು ಕಲ್ಪಿಸಿಕೊಡಲು ವಿವಿಧ ಸರ್ವೇ ನಂಬರ್ಗಳಲ್ಲಿ ಒಟ್ಟಾರೆ 192 ಎಕರೆ ಪ್ರದೇಶವನ್ನು ಈಗಾಗಲೇ ಗುರುತಿಸಲಾಗಿದ್ದು, ನಗರ ಆಶ್ರಯ ಸಮಿತಿಯ ಮೂಲಕ ನಿವೇಶನ ಹಂಚಿಕೆ ಮಾಡಲು ಕ್ರಮ ಕೈಗೊಳ್ಳಲಾಗಿದೆ.
“The Freedom of a Home of Their Own for Poor Families”
Under the Pourakarmika Gruha Bhagya scheme, a total of 176 houses have been sanctioned for homeless permanent pourakarmikas working across the district’s 11 Urban Local Bodies. The estimated unit cost of each house is ₹7.50 lakh, of which the State Government bears ₹6 lakh.
So far, 166 houses have been completed under the Pourakarmika Gruha Bhagya scheme, while construction of the remaining 10 houses is in progress.
To provide permanent housing to those without residential sites across the district’s 11 Urban Local Bodies, including Tumakuru City Corporation, a total of 192 acres of land has already been identified under various survey numbers. Steps are being taken to allot residential sites through the Urban Ashraya Committee.
#independenceday -
Dr. G Parameshwara
@DrParameshwara
"ಸರ್ವರಿಗೂ ಆರೋಗ್ಯ ಸೇವೆಯ ಖಾತ್ರಿ"
ಜನರ ಆರೋಗ್ಯದ ಹಿತದೃಷ್ಟಿಯಿಂದ 56 ಕೋಟಿ ರೂ. ವೆಚ್ಚದಲ್ಲಿ ಟ್ರಾಮಾಕೇರ್ ಸೆಂಟರ್, 50 ಲಕ್ಷ ರೂ. ವೆಚ್ಚದಲ್ಲಿ ಅಪೌಷ್ಠಿಕ ಮಕ್ಕಳ ಪುನಶ್ವೇತನ ಕೇಂದ್ರ, 20 ಕೋಟಿ ರೂ. ವೆಚ್ಚದಲ್ಲಿ ನರ್ಸಿಂಗ್ ಕಾಲೇಜ್, 1.38 ಕೋಟಿ ರೂ. ವೆಚ್ಚದಲ್ಲಿ ನೂತನ ಕಣ್ಣಿನ ಶಸ್ತ್ರಚಿಕಿತ್ಸಾಗಾರ ಮತ್ತು ವಾರ್ಡ್, 20 ಕೋಟಿ ರೂ. ವೆಚ್ಚದಲ್ಲಿ ತಾಯಿ ಮತ್ತು ಮಕ್ಕಳ ಆಸ್ಪತ್ರೆ, 42 ಕೋಟಿ ರೂ. ವೆಚ್ಚದಲ್ಲಿ ಸಿ.ಸಿ.ಬಿ.ಯು ಲೋಕಾರ್ಪಣೆಯಾಗಿ ಈಗಾಗಲೇ ಕಾರ್ಯಾರಂಭಗೊಂಡಿವೆ.
100 ಕೋಟಿ ರೂ. ವೆಚ್ಚದಲ್ಲಿ ಕ್ಯಾನ್ಸರ್ ಆಸ್ಪತ್ರೆ ನಿರ್ಮಿಸಲಾಗಿದ್ದು, 131.90 ಕೋಟಿ ರೂ. ವೆಚ್ಚದಲ್ಲಿ ನೂತನ 300 ಹಾಸಿಗೆಯ ಜಿಲ್ಲಾಸ್ಪತ್ರೆಯ ಹೊಸ ಕಟ್ಟಡವನ್ನು ನಿರ್ಮಿಸಲು ಈಗಾಗಲೇ ಕಾಮಗಾರಿ ಪ್ರಾರಂಭಿಸಲಾಗಿದೆ.
“Healthcare Assurance for All”
To strengthen healthcare for the people, a Trauma Care Centre built at a cost of ₹56 crore, a Rehabilitation Centre for malnourished children at ₹50 lakh, a Nursing College at ₹20 crore, a new eye operation theatre and ward at ₹1.38 crore, a Mother and Child Hospital at ₹20 crore, and a CCBU facility at ₹42 crore have been inaugurated and are already operational.
A Cancer Hospital has been constructed at a cost of ₹100 crore, while work has already begun on a new 300-bed District Hospital building at a cost of ₹131.90 crore.
#independenceday -
Dr. G Parameshwara
@DrParameshwara
"ಸರ್ಕಾರಿ ದಾಖಲೆಗಳ ಸುಲಭ ಲಭ್ಯತೆ"
ಹಕ್ಕುಪತ್ರ ವಿತರಣಾ ಅಭಿಯಾನದಡಿ ತುಮಕೂರು ಜಿಲ್ಲೆಯಲ್ಲಿ ಕಂದಾಯ ಗ್ರಾಮವಾಗಿ ರಚಿಸಲು ಈವರೆಗೂ ಗುರುತಿಸಲಾಗಿರುವ ದಾಖಲೆ ರಹಿತ 1312 ಜನವಸತಿ ಪ್ರದೇಶಗಳ ಪೈಕಿ ಈವರೆಗೂ ಸರ್ಕಾರದಿಂದ 945 ಗ್ರಾಮಗಳಿಗೆ ಪ್ರಾಥಮಿಕ ಅಧಿಸೂಚನೆ ಹಾಗೂ 848 ಗ್ರಾಮಗಳಿಗೆ ಅಂತಿಮ ಅಧಿಸೂಚನೆಯಾಗಿದೆ. ಉಳಿದ ಗ್ರಾಮಗಳು ವಿವಿಧ ಹಂತಗಳಲ್ಲಿ ಅಧಿಸೂಚನೆ ಹೊರಡಿಸಲು ಬಾಕಿ ಇದ್ದು, ಕಾರ್ಯ ಪ್ರಗತಿಯಲ್ಲಿದೆ.
ಈವರೆಗೂ 22,067 ಅರ್ಹ ಫಲಾನುಭವಿಗಳ ಹಕ್ಕುಪತ್ರಗಳನ್ನು ಗಣಕೀಕರಣಗೊಳಿಸಲಾಗಿದ್ದು, ಮೇ 19ರಂದು ನಡೆದ ಕಂದಾಯ ಬೃಹತ್ ಸಮಾವೇಶದಲ್ಲಿ ಸನ್ಮಾನ್ಯ ಮುಖ್ಯಮಂತ್ರಿಯವರಿಂದ ಸವಲತ್ತು/ಹಕ್ಕುಪತ್ರಗಳನ್ನು ವಿತರಿಸಲಾಗಿದೆ. ಗಣಕೀಕೃತ ಹಕ್ಕುಪತ್ರಗಳನ್ನು ವಿತರಿಸಿರುವುದು ಗಿನ್ನಿಸ್ ವರ್ಲ್ಡ್ ಬುಕ್ ರೆಕಾರ್ಡ್ನಲ್ಲಿ ದಾಖಲಾಗಿದೆ.
ಇ-ಪೌತಿ ಆಂದೋಲನವನ್ನು ಸರ್ಕಾರವು ಹೊಸ ತಂತ್ರಾಂಶದ ಮೂಲಕ ಸರಳೀಕರಣಗೊಳಿಸಿ ಅನುಷ್ಠಾನಗೊಳಿಸಿದ್ದು, ಇದರಿಂದ ಸಾರ್ವಜನಿಕರಿಗೆ ಒಂದು, ಎರಡು ದಶಕಗಳಿಂದ ಅವರ ಪೂರ್ವಿಕರ ಹೆಸರಿನಲ್ಲಿರುವ ಜಮೀನುಗಳನ್ನು ಸರಳವಾಗಿ ಅವರ ವಾರಸುದಾರರಿಗೆ ಖಾತೆ ಮಾಡಬಹುದಾಗಿದೆ. ಈ ಸಂಬಂಧ ಜಿಲ್ಲೆಯಲ್ಲಿ ಆಧಾರ್ ಸೀಡಿಂಗ್ ಅಂಕಿ ಅಂಶಗಳ ಪ್ರಕಾರ ಒಟ್ಟು 5.24ಲಕ್ಷ ಪ್ರಕರಣಗಳನ್ನು ಗುರುತಿಸಿದ್ದು, ಈ ಪೈಕಿ 2,25,078 ಅರ್ಜಿಯನ್ನು ಈಗಾಗಲೇ ವಿಲೇವಾರಿ ಮಾಡಲಾಗಿದೆ.
“Easier Access to Government Records”
Under the Hakku Patra Distribution Campaign, 1,312 undocumented habitations in Tumakuru district have been identified for conversion into revenue villages. So far, 945 villages have received preliminary notification and 848 villages final notification. The remaining villages are at various stages of the notification process.
So far, Hakku Patras of 22,067 eligible beneficiaries have been digitised and were distributed by the Hon’ble Chief Minister at the Mega Convention held on May 19. The distribution of digitised Hakku Patras has also been recorded in the Guinness World Records.
The government has also simplified the E-Pauti campaign through new software, enabling land that has remained in the names of ancestors for one or two decades to be more easily transferred to their legal heirs. Based on Aadhaar-seeding data, 5.24 lakh such cases have been identified in the district, of which 2,25,078 applications have already been disposed of.
#independenceday -
Dr. G Parameshwara
@DrParameshwara
"ಜಿಲ್ಲೆಯ ನೀರಾವರಿ ಯೋಜನೆಗಳಿಗೆ ವೇಗ"
ಕುಡಿಯುವ ನೀರಿಗಾಗಿ ಕೈಗೆತ್ತಿಕೊಂಡಿರುವ ಬಹು ನಿರೀಕ್ಷಿತ ಎತ್ತಿನಹೊಳೆ ಕುಡಿಯುವ ನೀರಿನ ಯೋಜನೆಯು ಜಿಲ್ಲೆಯ 8 ತಾಲ್ಲೂಕುಗಳಲ್ಲಿ ಒಟ್ಟು 197 ಗ್ರಾಮಗಳ ಮೂಲಕ 163 ಕಿ.ಮೀ. ವ್ಯಾಪ್ತಿಯಲ್ಲಿ ಹಾದು ಹೋಗುತ್ತಿದ್ದು, ಅವಶ್ಯಕವಾದ 3,118 ಎಕರೆ ಜಮೀನಿನ ಪೈಕಿ ಶೇ.97ರಷ್ಟು ಭೂ ಸ್ವಾಧೀನಪಡಿಸಿಕೊಂಡು ಕೋರಿಕೆ ಸಂಸ್ಥೆಗೆ ಹಸ್ತಾಂತರಿಸಲಾಗಿದೆ. ಕಾಮಗಾರಿ ಪ್ರಗತಿಯಲ್ಲಿದೆ.
ಹೇಮಾವತಿ ನಾಲಾ ಯೋಜನೆಯು ಜಿಲ್ಲೆಯ ಕೆರೆಗಳಿಗೆ ಅಂತರ್ಜಲ ಉತ್ತೇಜನಕ್ಕಾಗಿ ಹೇಮಾವತಿ ನದಿಯಿಂದ ನೀರನ್ನು ಪಂಪ್ ಮಾಡಿ ಗುರುತ್ವಾಕರ್ಷಣ ಕಾಲುವೆಗಳ ಮೂಲಕ 5 ತಾಲ್ಲೂಕುಗಳ ಒಟ್ಟು 94 ಗ್ರಾಮಗಳಿಗೆ ನೀರೊದಗಿಸಲು ಲಿಂಕ್ ಕೆನಾಲ್ ಯೋಜನೆ ಸೇರಿ ಒಟ್ಟು 515 ಎಕರೆ ಜಮೀನಿನ ಪೈಕಿ ಶೇಕಡ 75ರಷ್ಟು ಜಮೀನನ್ನು ಭೂಸ್ವಾಧೀನಪಡಿಸಿಕೊಂಡು ಭೂ ಕೋರಿಕೆ ಸಂಸ್ಥೆಗೆ ಹಸ್ತಾಂತರಿಸಲಾಗಿದೆ.
“Accelerating Irrigation Projects in the District”
The long-awaited Yettinahole Drinking Water Project, taken up to address drinking water needs, passes through 197 villages across 8 taluks of Tumakuru district over a stretch of 163 km. Of the 3,118 acres required, 97% has been acquired and handed over to the requisitioning agency. Work is in progress.
Under the Hemavathi Canal Project, water from the Hemavathi River will be pumped and supplied through gravity canals to 94 villages across 5 taluks, helping replenish lakes and improve groundwater levels. Including the Link Canal Project, 75% of the required 515 acres has been acquired and handed over to the requisitioning agency.
#independenceday -
Dr. G Parameshwara
@DrParameshwara
"ರೈತ ಕುಟುಂಬಗಳಲ್ಲಿ ಸ್ವಾತಂತ್ರ್ಯದ ಬೆಳಕು"
ತೋಟಗಾರಿಕೆ ಬೆಳೆಯನ್ನು ಬೆಳೆಯುವ ರೈತರ ಸರ್ವತೋಮುಖ ಅಭಿವೃದ್ಧಿಗೆ 2025-26ನೇ ಸಾಲಿನಲ್ಲಿ ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ, ಹನಿ ನೀರಾವರಿ, ರಾಷ್ಟ್ರೀಯ ತೋಟಗಾರಿಕೆ ಮಿಷನ್, ರಾಷ್ಟ್ರೀಯ ಕೃಷಿ ವಿಕಾಸ, ಜೇನು ಸಾಕಾಣಿಕೆ, ತೋಟಗಾರಿಕೆಯಲ್ಲಿ ಯಾಂತ್ರೀಕರಣ ಯೋಜನೆಗಳಡಿ 29 ಕೋಟಿ ರೂ.ಗಳ ಅಂದಾಜು ವೆಚ್ಚದಲ್ಲಿ 6,862 ಫಲಾನುಭವಿಗಳಿಗೆ ಸಹಾಯಧನ ವಿತರಿಸಲು ಕ್ರಮ ಕೈಗೊಳ್ಳಲಾಗುತ್ತಿದೆ.
ತುಮಕೂರು ಜಿಲ್ಲೆಯ ರೇಷ್ಮೆ ಬೆಳೆಗಾರರು ಸರ್ಕಾರಿ ರೇಷ್ಮೆ ಗೂಡಿನ ಮಾರುಕಟ್ಟೆಗಳಲ್ಲಿ ತಾವು ಬೆಳೆದ ರೇಷ್ಮೆ ಗೂಡುಗಳಿಗೆ ಗರಿಷ್ಠ ಧಾರಣೆ ಪಡೆಯುತ್ತಿದ್ದಾರೆ. ಜಿಲ್ಲೆಯಲ್ಲಿ 2974 ಮೆ.ಟನ್ ದ್ವಿತಳಿ ಗೂಡು ಹಾಗೂ 5008 ಮೆ.ಟನ್ ಒಟ್ಟು ಗೂಡು ಉತ್ಪಾದಿಸಿ ಜಿಲ್ಲೆಯು ರಾಜ್ಯದಲ್ಲಿಯೇ ಪ್ರಥಮ ಸ್ಥಾನದಲ್ಲಿದೆ.
“Bringing the Light of Freedom to Farmers’ Families”
For the comprehensive development of horticulture farmers, during 2025–26 steps are being taken to provide subsidies to 6,862 beneficiaries at an estimated cost of ₹29 crore under schemes including Pradhan Mantri Krishi Sinchayee Yojana, drip irrigation, National Horticulture Mission, Rashtriya Krishi Vikas Yojana, beekeeping and mechanisation in horticulture.
Tumakuru’s sericulture farmers are receiving competitive prices for their cocoons in government silk cocoon markets. With production of 2,974 metric tonnes of bivoltine cocoons and 5,008 metric tonnes of total cocoons, Tumakuru ranks first in Karnataka in silk cocoon production.
#independenceday -
Dr. G Parameshwara
@DrParameshwara
"ನೊಂದ ರೈತರ ನೆರವಿಗೆ ನಾವು ನಿಂತಿದ್ದೇವೆ"
ಜಿಲ್ಲೆಯಲ್ಲಿ ಜೂನ್ ಮಾಹೆಯಿಂದ ಈವರೆಗೂ ವಾಡಿಕೆ ಮಳೆಗಿಂತ ಕಡಿಮೆ ಮಳೆಯಾಗಿದೆ. ಜೂನ್ ಮಾಹೆಯಲ್ಲಿ ಶೇ.20ರಷ್ಟು ಹಾಗೂ ಜುಲೈ ಮಾಹೆಯಲ್ಲಿ ಶೇ. 75ರಷ್ಟು ಮಳೆ ಕೊರತೆಯಾಗಿದೆ. ಸಮರ್ಪಕವಾಗಿ ಮಳೆಯಾಗದ ಕಾರಣ ಬೆಳೆಗಳು ರೈತರ ಕೈತಪ್ಪಿ ಹೋಗಿದ್ದು, ಜಿಲ್ಲೆಯಲ್ಲಿ ಬರದ ಛಾಯೆ ಎದುರಾಗಿದೆ.
ಜಿಲ್ಲೆಯಾದ್ಯಂತ ಪ್ರವಾಸ ಕೈಗೊಂಡು ಬರಪರಿಸ್ಥಿತಿಯನ್ನು ಅವಲೋಕಿಸಲಾಗಿದ್ದು, ನಿರ್ವಹಣೆಯ ನೆರವು ಕೋರಿ ಈಗಾಗಲೇ ಕೇಂದ್ರಕ್ಕೆ ಮನವಿ ಮಾಡಲಾಗುವುದು.
ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನಲ್ಲಿ ಒಟ್ಟು 3.11 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಲಾಗಿದ್ದು, ಜಿಲ್ಲೆಯ 20185 ರೈತರಿಗೆ 7837 ಕ್ವಿಂಟಾಲ್ ಬಿತ್ತನೆ ಬೀಜವನ್ನು ವಿತರಿಸಲಾಗಿದೆ.
“We Stand With Farmers in Distress”
Tumakuru district has received below-normal rainfall since June, with a 20% deficit in June and 75% deficit in July. Inadequate rainfall has resulted in crop losses, leaving the district under the shadow of drought.
We have toured the district and reviewed the drought situation on the ground. A request has already been made to the Union Government seeking assistance for drought management.
For the current monsoon season, the district has a sowing target of 3.11 lakh hectares. So far, 7,837 quintals of sowing seeds have been distributed to 20,185 farmers.
#independenceday -
Dr. G Parameshwara
@DrParameshwara
"ಸ್ವಾತಂತ್ರ್ಯದ ಗಾಳಿ ಹೊತ್ತುತಂದ ಗ್ಯಾರಂಟಿ ಯೋಜನೆ"
ಸರ್ಕಾರವು 200 ಯೂನಿಟ್ಗಳಿಗಿಂತ ಕಡಿಮೆ ಉಪಯೋಗಿಸುವ ಗೃಹ ಬಳಕೆದಾರರಿಗೆ ಉಚಿತ ವಿದ್ಯುತ್ ಒದಗಿಸುವ 'ಗೃಹಜ್ಯೋತಿ' ಯೋಜನೆಯಡಿ ಜಿಲ್ಲೆಯ 8 ಲಕ್ಷ ಫಲಾನುಭವಿಗಳು ಈ ಯೋಜನೆಯ ಪ್ರಯೋಜನ ಪಡೆಯುತ್ತಿದ್ದು, ಯೋಜನೆಗಾಗಿ ಈವರೆಗೂ 872.07 ಕೋಟಿ ರೂ. ಖರ್ಚು ಮಾಡಲಾಗಿದೆ.
ಯುವ ಜನತೆಯ ಉಜ್ವಲ ಭವಿಷ್ಯಕ್ಕಾಗಿ ರಾಜ್ಯ ಸರ್ಕಾರವು ಜಾರಿಗೆ ತಂದಿರುವ ಯುವನಿಧಿ ಯೋಜನೆಯಡಿ 2023, 2024, 2025, 2026ರಲ್ಲಿ ಡಿಪ್ಲೊಮಾ ಉತ್ತೀರ್ಣರಾದವರಿಗೆ 1,500 ರೂ. ಹಾಗೂ ಯಾವುದೇ ಪದವಿ ಉತ್ತೀರ್ಣರಾದವರಿಗೆ 3,000 ರೂ.ಗಳ ಉದ್ಯೋಗ ಭತ್ಯೆಯನ್ನು ಗರಿಷ್ಠ 2 ವರ್ಷಗಳ ಅವಧಿವರೆಗೂ ನೀಡಲಾಗುತ್ತಿದ್ದು, ಜಿಲ್ಲೆಯಲ್ಲಿ ಇದುವರೆಗೂ ಒಟ್ಟು 10,814 ಅರ್ಹ ನಿರುದ್ಯೋಗಿ ಫಲಾನುಭವಿಗಳಿಗೆ ಒಟ್ಟು 34.38 ಕೋಟಿ ರೂ.ಗಳ ಉದ್ಯೋಗಭತ್ಯೆಯನ್ನು ಡಿ.ಬಿ.ಟಿ. ಮೂಲಕ ಪಾವತಿ ಮಾಡಲಾಗಿದೆ.
ಈ ಎಲ್ಲಾ ಯೋಜನೆಗಳಿಂದಾಗಿ ಜಿಲ್ಲೆಯ ಜನರಲ್ಲಿ ಅಭಿವೃದ್ಧಿಯ ಹೊಸ ಅಧ್ಯಾಯ ಪ್ರಾರಂಭವಾಗಿದೆ.
“Guarantee Schemes Bringing the Winds of Freedom”
Under the Gruha Jyothi scheme, the government provides free electricity to eligible domestic consumers using less than 200 units. In Tumakuru district, 8 lakh beneficiaries are availing the scheme, with ₹872.07 crore spent so far.
For a brighter future for the youth, the Yuva Nidhi scheme provides an unemployment allowance of ₹1,500 per month to diploma holders and ₹3,000 per month to graduates who passed in 2023, 2024, 2025 and 2026, for a maximum of two years.
So far, 10,814 eligible unemployed beneficiaries in the district have received a total of ₹34.38 crore through DBT.
Together, these schemes have opened a new chapter of development for the people of the district. -
Dr. G Parameshwara
@DrParameshwara
ಕಲ್ಪತರು ನಾಡಿನಲ್ಲಿ ಸ್ವಾತಂತ್ರ್ಯ ಸಂಭ್ರಮ.. !
80ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಇಂದು ತುಮಕೂರಿನ ಮಹಾತ್ಮ ಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಧ್ವಜಾರೋಹಣ ನೇರವೇರಿಸಿದ ಕ್ಷಣಗಳುThis media couldn't be displayed. See it on the original post. -
Dr. G Parameshwara
@DrParameshwara
"ಸಬಲೀಕರಣದ ಮೂಲಕ ಸ್ತ್ರೀ ಸ್ವಾತಂತ್ರ್ಯದ ಸಾಕಾರ"
ಮಹಿಳಾ ಸಬಲೀಕರಣಕ್ಕೆ ಪೂರಕವಾಗಿ ರಾಜ್ಯ ಸರ್ಕಾರವು ಸಾರಿಗೆ ಬಸ್ಸುಗಳಲ್ಲಿ ಮಹಿಳೆಯರು ರಾಜ್ಯದಾದ್ಯಂತ ಉಚಿತವಾಗಿ ಪ್ರಯಾಣಿಸಲು 2023ರ ಜೂನ್ 11 ರಿಂದ 'ಶಕ್ತಿ' ಯೋಜನೆಯನ್ನು ಜಾರಿಗೆ ತಂದಿದ್ದು, ಈ ಮಹತ್ವಪೂರ್ಣ ಯೋಜನೆಯಿಂದಾಗಿ ಜಿಲ್ಲೆಯಲ್ಲಿ 23.52 ಕೋಟಿಗೂ ಅಧಿಕ ಬಾರಿ ಮಹಿಳಾ ಪ್ರಯಾಣಿಕರು ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್ಸುಗಳಲ್ಲಿ ಉಚಿತವಾಗಿ ಪ್ರಯಾಣಿಸಿದ್ದಾರೆ.
ಮಹಿಳೆಯರನ್ನು ಆರ್ಥಿಕವಾಗಿ ಸಬಲೀಕರಣಗೊಳಿಸುವ ಸಲುವಾಗಿ ನಮ್ಮ ಸರ್ಕಾರ ಜಾರಿಗೆ ತಂದಿರುವ ಪ್ರತಿಷ್ಠಿತ ಯೋಜನೆಗಳಲ್ಲೊಂದಾದ 'ಗೃಹಲಕ್ಷ್ಮಿ' ಯೋಜನೆಯಡಿ ಕುಟುಂಬದ ಯಜಮಾನಿ ಮಹಿಳೆಗೆ ಪ್ರತಿ ತಿಂಗಳು 2000 ರೂ.ಗಳನ್ನು ನೇರ ನಗದು ವರ್ಗಾವಣೆ ಮೂಲಕ ನೀಡಲಾಗುತ್ತಿದ್ದು, ಈವರೆಗೆ ಜಿಲ್ಲೆಯಲ್ಲಿ 6,19,452 ಫಲಾನುಭವಿಗಳ ಖಾತೆಗೆ ಒಟ್ಟು 3783.40 ಕೋಟಿ ರೂ.ಗಳನ್ನು ವರ್ಗಾಯಿಸಲಾಗಿದೆ.
“Realising Women’s Freedom Through Empowerment”
To strengthen women’s empowerment, the State Government launched the Shakti scheme on June 11, 2023, enabling women to travel free of cost in State-run buses across Karnataka. Under this landmark initiative, women passengers in Tumakuru district have made more than 23.52 crore free journeys on State transport buses.
Under Gruha Lakshmi, one of our flagship schemes for women’s economic empowerment, the woman head of every eligible household receives ₹2,000 per month through Direct Benefit Transfer. So far, ₹3,783.40 crore has been transferred to the accounts of 6,19,452 beneficiaries in the district. -
Dr. G Parameshwara
@DrParameshwara
"ಅಭಿವೃದ್ಧಿಯೇ ಸ್ವಾತಂತ್ರ್ಯ" - ಇದು ನಮ್ಮ ಮೂಲಮಂತ್ರ
ನಮ್ಮ ಸರ್ಕಾರ ಶಕ್ತಿ, ಗೃಹಜ್ಯೋತಿ, ಅನ್ನಭಾಗ್ಯ, ಗೃಹಲಕ್ಷ್ಮಿ ಹಾಗೂ ಯುವನಿಧಿ ಸೇರಿ 5 ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದೆ. ಅರ್ಥಶಾಸ್ತ್ರಜ್ಞ ಅಮರ್ತ್ಯ ಸೇನ್ ಅವರ “ಅಭಿವೃದ್ಧಿಯೇ ಸ್ವಾತಂತ್ರ್ಯ” ಎಂಬ ಸೂತ್ರದಲ್ಲಿ ನಂಬಿಕೆಯಿಟ್ಟು ಪಂಚ ಗ್ಯಾರಂಟಿ ಯೋಜನೆಗಳನ್ನು ರೂಪಿಸಿ ಸಮರ್ಪಕವಾಗಿ ಅನುಷ್ಠಾನ ಮಾಡುತ್ತಿದ್ದೇವೆ.
ಹಸಿವು ಮುಕ್ತ ಕರ್ನಾಟಕ ನಿರ್ಮಾಣದ ಉದ್ದೇಶದಿಂದ ಅನ್ನ ಭಾಗ್ಯ ಯೋಜನೆಯನ್ನು ಜಾರಿಗೆ ತರಲಾಗಿದ್ದು, ಜುಲೈ-2026ರ ಮಾಹೆಯವರೆಗೆ 11,128 ಮೆ.ಟನ್ ಅಕ್ಕಿಯನ್ನು ವಿತರಣೆ ಮಾಡಲಾಗಿದೆ. ಅನ್ನಭಾಗ್ಯ ಯೋಜನೆಯಿಂದ ತುಮಕೂರು ಜಿಲ್ಲೆಯಲ್ಲಿ 6,27,049 ಪಡಿತರ ಚೀಟಿಗಳ 22.25 ಲಕ್ಷ ಫಲಾನುಭವಿಗಳಿಗೆ ಅನುಕೂಲವಾಗಿದೆ.
2025-26ನೇ ಸಾಲಿನಲ್ಲಿ ಸರ್ಕಾರವು ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಪ್ರತಿ ಕ್ವಿಂಟಾಲ್ ರಾಗಿಗೆ 4,886 ರೂ.ಗಳ ದರದಲ್ಲಿ ಜಿಲ್ಲೆಯ 54,025 ರೈತರಿಂದ ನೇರವಾಗಿ ಒಟ್ಟು 12,32,508 ಕ್ವಿಂಟಾಲ್ ರಾಗಿ ಖರೀದಿಸಿದೆ.
“Development is Freedom” — Our Guiding Principle
Our government has implemented the five Guarantee schemes - Shakti, Gruha Jyothi, Anna Bhagya, Gruha Lakshmi and Yuva Nidhi. Inspired by economist Amartya Sen’s idea of “Development as Freedom”, we have designed and effectively implemented these five Guarantees.
To build a hunger-free Karnataka, we launched the Anna Bhagya scheme. Up to July 2026, 11,128 metric tonnes of rice have been distributed. In Tumakuru district alone, 22.25 lakh beneficiaries across 6,27,049 ration cards have benefited from the scheme.
During 2025–26, under the Minimum Support Price scheme, the government directly procured 12,32,508 quintals of ragi from 54,025 farmers in the district at ₹4,886 per quintal. -
Dr. G Parameshwara
@DrParameshwara
"ಸ್ವತಂತ್ರ ಭಾರತದಲ್ಲಿ ಕರ್ನಾಟಕ ಮಹತ್ವದ ಪಾತ್ರ ವಹಿಸುತ್ತಿದೆ"
ಸರ್ವ ಜನಾಂಗದ ಶಾಂತಿಯ ತೋಟ ಎಂಬ ಕವಿವಾಣಿಯಂತೆ ಸ್ವತಂತ್ರ ಭಾರತ ಒಕ್ಕೂಟ ವ್ಯವಸ್ಥೆಯಲ್ಲಿ ಕರ್ನಾಟಕ ಸರ್ಕಾರ ಅತ್ಯಂತ ಮಹತ್ವದ ಸ್ಥಾನವನ್ನು ಪಡೆದು, ರಾಜ್ಯದ ಸರ್ವತೋಮುಖ ಬೆಳವಣಿಗೆಗೆ ಹಲವಾರು ಕಾರ್ಯಕ್ರಮಗಳನ್ನು ರೂಪಿಸುತ್ತಾ ಬಂದಿದೆ. ಮಾಹಿತಿ, ತಂತ್ರಜ್ಞಾನ ಕ್ಷೇತ್ರದಲ್ಲಿ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿದೆ.
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳು, ಅಲ್ಪಸಂಖ್ಯಾತರು ಮತ್ತು ರಾಜ್ಯದ ಬಡಜನರ ಏಳಿಗೆಗಾಗಿ ಹಲವಾರು ನೂತನ ಕಾರ್ಯಕ್ರಮಗಳನ್ನು ರೂಪಿಸಿದ್ದೇವೆ. ನುಡಿದಂತೆ ನಡೆದ ಐದು ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಗೊಳಿಸಿ ಜನರ ವಿಶ್ವಾಸವನ್ನು ಪ್ರೀತಿಯನ್ನು ಗಳಿಸಿದ್ದೇವೆ.
ಅನ್ನ, ಅಕ್ಷರ, ಆಶ್ರಯ ಈ ನೆಲದ ಮೂಲ ತತ್ವ, ಇತ್ತೀಚಿಗಷ್ಟೆ ತ್ರಿವಿಧ ದಾಸೋಹಿ, ನಡೆದಾಡುವ ದೇವರು ಶ್ರೀಸಿದ್ದಗಂಗಾಮಠದ ಲಿಂಗೈಕ್ಯ ಶ್ರೀ ಶ್ರೀ ಶಿವಕುಮಾರಸ್ವಾಮೀಜಿಯವರ 8ನೇ ಪುಣ್ಯ ಸಂಸ್ಮರಣೆ ಆಚರಿಸಿದ್ದೇವೆ. ಶ್ರೀಗಳ ಆಶಯ, ಆದರ್ಶಗಳನ್ನು ನಮ್ಮ ಸರ್ಕಾರ ಚಾಚೂ ತಪ್ಪದೆ ಪಾಲಿಸುತ್ತಿದೆ.
*“Karnataka Plays a Vital Role in Independent India”*
True to the vision of Karnataka as a “garden of peace for all communities”, the State holds an important place in India’s federal structure and continues to implement programmes for its comprehensive development. Karnataka has also earned global recognition in the information technology sector.
We have introduced several initiatives for the upliftment of Scheduled Castes, Scheduled Tribes, Backward Classes, minorities and the poor. By delivering on our promise and implementing the five Guarantee schemes, we have earned the people’s trust and affection.
Food, education and shelter are fundamental principles of this land. We recently observed the 8th death anniversary of Sri Shivakumara Swamiji of Siddaganga Mutt, revered as the Trividha Dasohi and the Walking God. Our government remains committed to faithfully following his ideals and aspirations. -
Dr. G Parameshwara
@DrParameshwara
ಮಾಜಿ ಸಚಿವರು, ಹಿರಿಯ ನಾಯಕರು ಹಾಗೂ ಆತ್ಮೀಯರು ಆದ @HKPatilINC ಅವರಿಗೆ ಜನ್ಮದಿನದ ಶುಭಾಶಯಗಳು.
ಕಾಂಗ್ರೆಸ್ ಪಕ್ಷದ ಸಿದ್ಧಾಂತಗಳಿಗೆ ಬದ್ಧರಾಗಿ, ಜನರ ಆಶೋತ್ತರಗಳಿಗೆ ಸ್ಪಂದಿಸುತ್ತಾ ನಿರಂತರವಾಗಿ ಜನಸೇವೆಯಲ್ಲಿ ತೊಡಗಿರುವ ನಿಮ್ಮ ನಿಸ್ವಾರ್ಥ ಸೇವಾ ಮನೋಭಾವ ಸ್ಫೂರ್ತಿದಾಯಕವಾದುದು.
ಭಗವಂತ ತಮಗೆ ಉತ್ತಮ ಆಯುರಾರೋಗ್ಯ ನೀಡಿ, ಇನ್ನಷ್ಟು ಜನಸೇವೆ ಮಾಡುವ ಶಕ್ತಿಯನ್ನು ನೀಡಲಿ ಎಂದು ಹಾರೈಸುತ್ತೇನೆ. -
Dr. G Parameshwara
@DrParameshwara
ಯುವಜನರಲ್ಲಿ ಕ್ರೀಡೆ, ಸಂಸ್ಕೃತಿ, ವೈಜ್ಞಾನಿಕ ಮನೋಭಾವ, ನಾಯಕತ್ವ ಹಾಗೂ ಸಾಮಾಜಿಕ ಸಾಮರಸ್ಯವನ್ನು ಬೆಳೆಸುವ ಉದ್ದೇಶದಿಂದ 10,000 ಭಾರತ್ ಜೋಡೋ ಯುವ ಸಂಘಗಳು ಅಸ್ತಿತ್ವಕ್ಕೆ ಬರಲಿವೆ.
ಈ ಮೂಲಕ ಯುವಕರ ಕನಸುಗಳಿಗೆ ಬೆಂಬಲ ನೀಡುವುದು ಮತ್ತು ಅವರನ್ನು ದೇಶದ ಸದೃಢ ಪ್ರಜೆಗಳಾಗಿ ರೂಪಿಸಿ ತಮ್ಮ ಭವಿಷ್ಯವನ್ನು ತಾವೇ ಕಟ್ಟಿಕೊಳ್ಳುವ ಸ್ವಾತಂತ್ರ್ಯವನ್ನು ಕಲ್ಪಿಸಿಕೊಡುತ್ತಿದ್ದೇವೆ.
#independenceday -
Dr. G Parameshwara
@DrParameshwara
ತುಮಕೂರು ಜಿಲ್ಲೆ ಐತಿಹಾಸಿಕ, ಪಾರಂಪರಿಕ ನಾಡು. ಅಲ್ಲದೆ, ಕಲೆ, ಸಂಸ್ಕೃತಿಗಳ ಬೀಡೂ ಹೌದು. ಸರ್ಕಾರದ ವತಿಯಿಂದ ಕಳೆದ ಎರಡು ವರ್ಷಗಳು ನಾಡಹಬ್ಬ ದಸರಾ ಉತ್ಸವವನ್ನು ಐತಿಹಾಸಿಕ ಮೈಸೂರಿನ ದಸರಾ ಉತ್ಸವಕ್ಕೆ ಸರಿಸಮಾನವಾಗಿ ನಡೆಸಿ ಯಶಸ್ವಿಯಾಗಿದ್ದೇವೆ. ಈ ಯಶಸ್ವಿಯಲ್ಲಿ ತಾವೆಲ್ಲರೂ ಭಾಗಿಗಳು ಎಂದು ಹೇಳಲು ನಾನು ಹೆಮ್ಮೆಪಡುತ್ತೇನೆ. ಜಿಲ್ಲೆ ಹಾಗೂ ನಾಡಿನ ಸಮಸ್ತ ಕಲಾವಿದರಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಈ ಬಾರಿಯೂ ದಸರಾ ಉತ್ಸವ ಕಾರ್ಯಕ್ರಮವನ್ನು ಆಯೋಜಿಸಲಾಗುವುದು.
ಈ ದೇಶದ ಸಂಪತ್ತು ಯುವ ಸಮುದಾಯ ಎಂದು ನಂಬಿರುವವನು ನಾನು. ಯುವ ಜನತೆ ಸದೃಢಗೊಳ್ಳಬೇಕು. ಬಲಿಷ್ಠ ಭಾರತದ ನಿರ್ಮಾಣಕ್ಕೆ ಸಜ್ಜುಗೊಳ್ಳಬೇಕು ಎಂಬ ಸ್ವಾಮಿ ವಿವೇಕಾನಂದರ ಮಾತಿನಲ್ಲಿ ವಿಶ್ವಾಸ ಇರಿಸಿದ್ದೇನೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಕರ್ನಾಟಕ ಕ್ರೀಡಾಕೂಟ, ರಾಷ್ಟ್ರ ಮಟ್ಟದ ಅಥ್ಲೆಟಿಕ್ ಯು-20 ಕ್ರೀಡಾಕೂಟ, ಅಂತಾರಾಷ್ಟ್ರೀಯ ಮಟ್ಟದ ಟೆನಿಸ್ ಕ್ರೀಡಾಕೂಟ, ಅಂತರ ಜಿಲ್ಲಾ ಮಟ್ಟದ ಫುಟ್ಬಾಲ್ ಕ್ರೀಡಾಕೂಟಗಳನ್ನು ಯಶಸ್ವಿಯಾಗಿ ಆಯೋಜಿಸಲಾಗಿದೆ.
ಕೊರಟಗೆರೆ ತಾಲ್ಲೂಕು ಕ್ರೀಡಾಂಗಣದಲ್ಲಿ ಬ್ಯಾಡ್ಮಿಂಟನ್ ಒಳಾಂಗಣ ಕ್ರೀಡಾಂಗಣ ನಿರ್ಮಾಣ ಮತ್ತು ವಿವಿಧ ಕ್ರೀಡಾ ಅಂಕಣಗಳ ನಿರ್ಮಾಣ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಲಾಗಿದ್ದು, ಮಧುಗಿರಿ ತಾಲ್ಲೂಕಿನ ರಾಜೀವ್ ಗಾಂಧಿ ತಾಲ್ಲೂಕು ಕ್ರೀಡಾಂಗಣದಲ್ಲಿ ವಿವಿಧ ಕ್ರೀಡಾ ಅಂಕಣಗಳ ನಿರ್ಮಾಣ ಹಾಗೂ ಉನ್ನತೀಕರಣ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದೆ. ತಿಪಟೂರು ತಾಲ್ಲೂಕು ಕಲ್ಪತರು ಕ್ರೀಡಾಂಗಣದಲ್ಲಿ ಬ್ಯಾಡ್ಮಿಂಟನ್ ಒಳಾಂಗಣ ಕ್ರೀಡಾಂಗಣ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ. ಮಹಾತ್ಮ ಗಾಂಧಿ ಜಿಲ್ಲಾ ಕ್ರೀಡಾಂಗಣದ ವಾಣಿಜ್ಯ ಸಂಕೀರ್ಣದಲ್ಲಿ ಕ್ರೀಡೆಯನ್ನು ಉತ್ತೇಜಿಸುವ ಸಲುವಾಗಿ ರಾಜ್ಯದಲ್ಲೇ ಮೊದಲ ಶೂಟಿಂಗ್ ಕೇಂದ್ರವನ್ನು ಸ್ಥಾಪಿಸಲಾಗಿದೆ.
ಶಿರಾ ತಾಲ್ಲೂಕಿನ ವಿವೇಕಾನಂದ ತಾಲ್ಲೂಕು ಕ್ರೀಡಾಂಗಣದಲ್ಲಿ ಬ್ಯಾಡ್ಮಿಂಟನ್ ಒಳಾಂಗಣ ಕ್ರೀಡಾಂಗಣ ನಿರ್ಮಾಣ ಕಾಮಗಾರಿ ಪೂರ್ಣಗೊಂಡಿರುತ್ತದೆ. ತುಮಕೂರಿನಲ್ಲಿ ಕ್ರೀಡಾಕೂಟವನ್ನು ಆಯೋಜನೆ ಮಾಡುವುದು ಮಾತ್ರವಲ್ಲದೇ ಬಾಕ್ಸಿಂಗ್ ಒಳಾಂಗಣ, ಶೂಟಿಂಗ್, ವಾಲಿಬಾಲ್, ಬಾಸ್ಕೆಟ್ ಬಾಲ್ ಹಾಗೂ ಟೆನಿಸ್ ಕ್ರೀಡಾ ಅಂಕಣ ಸೇರಿದಂತೆ ನೂತನ ಕ್ರೀಡಾ ಅಂಕಣಗಳನ್ನು ನಿರ್ಮಾಣ ಮಾಡಲಾಗಿದೆ.
ತುಮಕೂರು ಜಿಲ್ಲೆಯಲ್ಲಿ ಜೂನ್ ಮಾಹೆಯಿಂದ ಈವರೆಗೂ ವಾಡಿಕೆ ಮಳೆಗಿಂತ ಕಡಿಮೆ ಮಳೆಯಾಗಿದೆ. ಜೂನ್ ಮಾಹೆಯಲ್ಲಿ ಶೇ.20ರಷ್ಟು ಹಾಗೂ ಜುಲೈ ಮಾಹೆಯಲ್ಲಿ ಶೇ. 75ರಷ್ಟು ಮಳೆ ಕೊರತೆಯಾಗಿದ್ದು, ಸಮರ್ಪಕವಾಗಿ ಮಳೆಯಾಗದ ಕಾರಣ ಬೆಳೆಗಳು ರೈತರ ಕೈತಪ್ಪಿ ಹೋಗಿದೆ. ಹೀಗಾಗಿ ಜಿಲ್ಲೆಯಲ್ಲಿ ಬರದ ಛಾಯೆ ಎದುರಾಗಿದೆ. ಜಿಲ್ಲೆಯಾದ್ಯಂತ ಪ್ರವಾಸ ಕೈಗೊಂಡು ಬರಪರಿಸ್ಥಿತಿಯನ್ನು ಅವಲೋಕಿಸಲಾಗಿದ್ದು, ನಿರ್ವಹಣೆಯ ನೆರವು ಕೋರಿ ಈಗಾಗಲೇ ಕೇಂದ್ರಕ್ಕೆ ಮನವಿ ಮಾಡಿದ್ದೇವೆ. ವಿಸ್ತೃತ ವರದಿಯನ್ನು ಈ ತಿಂಗಳ ಒಳಗಾಗಿ ಸಲ್ಲಿಸಲಾಗುವುದು.
ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನಲ್ಲಿ ಒಟ್ಟು 3.11 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಲಾಗಿದ್ದು, ಜಿಲ್ಲೆಯ 20,185 ರೈತರಿಗೆ 7,837 ಕ್ವಿಂಟಾಲ್ ಬಿತ್ತನೆ ಬೀಜವನ್ನು ವಿತರಿಸಲಾಗಿದೆ. ತೋಟಗಾರಿಕೆ ಬೆಳೆಯನ್ನು ಬೆಳೆಯುವ ರೈತರ ಸರ್ವತೋಮುಖ ಅಭಿವೃದ್ಧಿಗೆ 2025-26ನೇ ಸಾಲಿನಲ್ಲಿ ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ, ಹನಿ ನೀರಾವರಿ, ರಾಷ್ಟ್ರೀಯ ತೋಟಗಾರಿಕೆ ಮಿಷನ್, ರಾಷ್ಟ್ರೀಯ ಕೃಷಿ ವಿಕಾಸ, ಜೇನು ಸಾಕಾಣಿಕೆ, ತೋಟಗಾರಿಕೆಯಲ್ಲಿ ಯಾಂತ್ರೀಕರಣ ಯೋಜನೆಗಳಡಿ 29 ಕೋಟಿ ರೂ.ಗಳ ಅಂದಾಜು ವೆಚ್ಚದಲ್ಲಿ 6,862 ಫಲಾನುಭವಿಗಳಿಗೆ ಸಹಾಯಧನ ವಿತರಿಸಲು ಕ್ರಮ ಕೈಗೊಳ್ಳಲಾಗುತ್ತಿದೆ.
ಶಿಕ್ಷಣ, ಕ್ರೀಡೆ, ಸಂಸ್ಕೃತಿ, ಕೈಗಾರಿಕೆ, ಯುವಕರಿಗೆ ಉದ್ಯೋಗ ಸೇರಿದಂತೆ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದ್ದು, ಈ ನಿಟ್ಟಿನಲ್ಲಿ ಜಿಲ್ಲೆಯ ಜನತೆ ಸರ್ಕಾರದೊಂದಿಗೆ ಕೈಜೋಡಿಸಬೇಕು. ಜಿಲ್ಲೆಯನ್ನು ಸರ್ವ ಜನಾಂಗದ ಶಾಂತಿಯ ತೋಟವನ್ನಾಗಿ ನಿರ್ಮಾಣ ಮಾಡುವಲ್ಲಿ ಎಲ್ಲರ ಸಹಕಾರ ನಮ್ಮೊಂದಿಗಿರುತ್ತದೆ ಎಂದು ಆಶಿಸುತ್ತೇನೆ.
- 80ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಇಂದು ತುಮಕೂರಿನ ಮಹಾತ್ಮ ಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಧ್ವಜಾರೋಹಣ ನೇರವೇರಿಸಿ, ಬಳಿಕ ಮಾತನಾಡಿದೆ. (4/4) -
Dr. G Parameshwara
@DrParameshwara
ತುಮಕೂರಿನ ಜನತೆ ಶಾಂತಿ ಪ್ರಿಯರು, ಸಜ್ಜನಿಕೆಗೆ ಹೆಸರಾದವರು, ದೇಶಪ್ರೇಮಿಗಳು. ಕೊಟ್ಟ ಮಾತಿನಂತೆ ನಮ್ಮ ಸರ್ಕಾರ 5 ಗ್ಯಾರಂಟಿಗಳನ್ನು ಅನುಷ್ಟಾನಕ್ಕೆ ತಂದು ನುಡಿದಂತೆ ನಡೆದಿದೆ. ಜನರ ಆಶಯಕ್ಕೆ ತಕ್ಕಂತೆ ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಸರ್ಕಾರದ ಯೋಜನೆಗಳ ಸೌಲಭ್ಯವನ್ನು ತಲುಪಿಸುವ ಕೆಲಸ ಮಾಡಲು ನಮ್ಮ ಸರ್ಕಾರ ಬದ್ಧವಾಗಿದೆ.
ತುಮಕೂರು ಜಿಲ್ಲೆಯ ರೇಷ್ಮೆ ಬೆಳೆಗಾರರು ಸರ್ಕಾರಿ ರೇಷ್ಮೆ ಗೂಡಿನ ಮಾರುಕಟ್ಟೆಗಳಲ್ಲಿ ತಾವು ಬೆಳೆದ ರೇಷ್ಮೆ ಗೂಡುಗಳಿಗೆ ಗರಿಷ್ಠ ಧಾರಣೆ ಪಡೆಯುತ್ತಿದ್ದಾರೆ. ಜಿಲ್ಲೆಯಲ್ಲಿ 2,974 ಮೆ.ಟನ್ ದ್ವಿತಳಿ ಗೂಡು ಹಾಗೂ 5,008 ಮೆ.ಟನ್ ಒಟ್ಟು ಗೂಡು ಉತ್ಪಾದಿಸಿ ಜಿಲ್ಲೆಯು ರಾಜ್ಯದಲ್ಲಿಯೇ ಪ್ರಥಮ ಸ್ಥಾನದಲ್ಲಿದೆ.
ತುಮಕೂರು-ರಾಯದುರ್ಗ ರೈಲ್ವೆ ಯೋಜನೆಯು ತುಮಕೂರು ಜಿಲ್ಲೆಯ 4 ತಾಲೂಕುಗಳ ಒಟ್ಟು 77 ಗ್ರಾಮಗಳ ಮೂಲಕ 104.02 ಕಿ.ಮೀ ವ್ಯಾಪ್ತಿಯಲ್ಲಿ ಹಾದು ಹೋಗುತ್ತಿದ್ದು, ಒಟ್ಟು ಅವಶ್ಯಕವಾದ 1,396 ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಂಡು ಈಗಾಗಲೇ ಶೇ. 99.9ರಷ್ಟು ಜಮೀನನ್ನು ರೈಲ್ವೆ ಇಲಾಖೆಗೆ ಹಸ್ತಾಂತರಿಸಲಾಗಿದೆ. ಕಾಮಗಾರಿ ಪ್ರಗತಿಯಲ್ಲಿದ್ದು, ಡಿಸೆಂಬರ್ 2027ರ ಅಂತ್ಯದ ವೇಳೆಗೆ ರೈಲ್ವೆ ಸಂಚಾರ ಪ್ರಾರಂಭವಾಗಲಿದೆ.
ತುಮಕೂರು-ದಾವಣಗೆರೆ ರೈಲ್ವೆ ಯೋಜನೆಯು ತುಮಕೂರು ಜಿಲ್ಲೆಯ 2 ತಾಲೂಕುಗಳ ಒಟ್ಟು 35 ಗ್ರಾಮಗಳ ಮೂಲಕ 58.69 ಕಿ.ಮೀ ವ್ಯಾಪ್ತಿಯಲ್ಲಿ ಹಾದು ಹೋಗುತ್ತಿದ್ದು, ಒಟ್ಟು ಅವಶ್ಯಕವಾದ 845 ಎಕರೆ ಜಮೀನಿನ ಪೈಕಿ ಈವರೆಗೂ 816 ಎಕರೆ ಅಂದರೆ ಶೇ.97ರಷ್ಟು ಜಮೀನನ್ನು ಭೂಸ್ವಾಧೀನಪಡಿಸಿಕೊಂಡು ರೈಲ್ವೆ ಇಲಾಖೆಗೆ ಹಸ್ತಾಂತರಿಸಲಾಗಿದೆ. ಕಾಮಗಾರಿ ಪ್ರಗತಿಯಲ್ಲಿದ್ದು, ಡಿಸೆಂಬರ್ 2027ರ ಅಂತ್ಯದ ವೇಳೆಗೆ ರೈಲ್ವೆ ಸಂಚಾರ ಪ್ರಾರಂಭವಾಗಲಿದೆ.
ಕುಡಿಯುವ ನೀರಿಗಾಗಿ ಕೈಗೆತ್ತಿಕೊಂಡಿರುವ ಬಹುನಿರೀಕ್ಷಿತ ಎತ್ತಿನಹೊಳೆ ಕುಡಿಯುವ ನೀರಿನ ಯೋಜನೆಯು ಜಿಲ್ಲೆಯ 8 ತಾಲ್ಲೂಕುಗಳಲ್ಲಿ ಒಟ್ಟು 197 ಗ್ರಾಮಗಳ ಮೂಲಕ 163 ಕಿ.ಮೀ. ವ್ಯಾಪ್ತಿಯಲ್ಲಿ ಹಾದು ಹೋಗುತ್ತಿದ್ದು, ಅವಶ್ಯಕವಾದ 3,118 ಎಕರೆ ಜಮೀನಿನ ಪೈಕಿ ಶೇ.97ರಷ್ಟು ಭೂ ಸ್ವಾಧೀನಪಡಿಸಿಕೊಂಡು ಕೋರಿಕೆ ಸಂಸ್ಥೆಗೆ ಹಸ್ತಾಂತರಿಸಲಾಗಿದೆ. ಕಾಮಗಾರಿ ಪ್ರಗತಿಯಲ್ಲಿದೆ.
ಹೇಮಾವತಿ ನಾಲಾ ಯೋಜನೆಯು ಜಿಲ್ಲೆಯ ಕೆರೆಗಳಿಗೆ ಅಂತರ್ಜಲ ಉತ್ತೇಜನಕ್ಕಾಗಿ ಹೇಮಾವತಿ ನದಿಯಿಂದ ನೀರನ್ನು ಪಂಪ್ ಮಾಡಿ ಗುರುತ್ವಾಕರ್ಷಣ ಕಾಲುವೆಗಳ ಮೂಲಕ 5 ತಾಲ್ಲೂಕುಗಳ ಒಟ್ಟು 94 ಗ್ರಾಮಗಳಿಗೆ ನೀರೊದಗಿಸಲು ಲಿಂಕ್ ಕೆನಾಲ್ ಯೋಜನೆ ಸೇರಿ ಒಟ್ಟು 515 ಎಕರೆ ಜಮೀನಿನ ಪೈಕಿ ಶೇಕಡ 75ರಷ್ಟು ಜಮೀನನ್ನು ಭೂಸ್ವಾಧೀನಪಡಿಸಿಕೊಂಡು ಭೂ ಕೋರಿಕೆ ಸಂಸ್ಥೆಗೆ ಹಸ್ತಾಂತರಿಸಲಾಗಿದೆ.
ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ ವತಿಯಿಂದ ತುಮಕೂರು ಜಿಲ್ಲೆಯ ಕೈಗಾರಿಕಾ ಪ್ರದೇಶಾಭಿವೃದ್ಧಿಗಾಗಿ ಒಟ್ಟು 5 ಹಂತಗಳಲ್ಲಿ ಶಿರಾ ತಾಲ್ಲೂಕು ಸೇರಿದಂತೆ ತುಮಕೂರು ತಾಲ್ಲೂಕಿನ ವಸಂತನರಸಾಪುರ ಕೈಗಾರಿಕಾ ಪ್ರದೇಶ ಹಾಗೂ ಚೆನ್ನೈ-ಬೆಂಗಳೂರು ಇಂಡಸ್ಟ್ರಿಯಲ್ ಕಾರಿಡಾರ್ ಯೋಜನೆಗಳಿಗಾಗಿ ಒಟ್ಟು 10,151 ಎಕರೆ ಜಮೀನಿಗೆ ಅಂತಿಮ ಅಧಿಸೂಚನೆ ಹೊರಡಿಸಲಾಗಿದೆ.
ಕೈಗಾರಿಕಾ ಪ್ರದೇಶಾಭಿವೃದ್ಧಿಗಾಗಿ ಸ್ವಾಧೀನಗೊಂಡ ಜಮೀನುಗಳಿಗೆ ಈವರೆ ಒಟ್ಟು 1,168 ಕೋಟಿ ರೂ.ಗಳ ಪರಿಹಾರ ಪಾವತಿಸಲಾಗಿದ್ದು, 6ನೇ ಹಂತದ 4,731 ಎಕರೆ ಜಮೀನಿಗೆ ಪ್ರಾಥಮಿಕ ಅಧಿಸೂಚನೆ ಹೊರಡಿಸಿದ್ದು, ಜೆಎಂಸಿ ಕಾರ್ಯ ಪ್ರಗತಿಯಲ್ಲಿದೆ.
ನಕಲಿ ದಾಖಲೆಗಳನ್ನು ತಡೆಗಟ್ಟುವುದು ಹಾಗೂ ಸಾರ್ವಜನಿಕರು ಕಚೇರಿಗೆ ಹೋಗದೆ ಸರಳವಾಗಿ ದಾಖಲೆಗಳ ಪ್ರತಿಗಳನ್ನು ಪಡೆಯಲು ಜಾರಿಗೆ ತಂದಿರುವ ʼಭೂ ಸುರಕ್ಷಾ ಯೋಜನೆʼಯಡಿ ಈವರೆಗೆ 2.17 ಕೋಟಿ ಪುಟಗಳು ಸ್ಕ್ಯಾನ್ ಮಾಡಲಾಗಿದ್ದು, ಈವರೆಗೂ ಸ್ಕ್ಯಾನ್ ಆಗಿರುವ 1,42,268 ಪುಟಗಳ ದಾಖಲೆಗಳನ್ನು ಸಾರ್ವಜನಿಕರಿಗೆ ತಂತ್ರಾಂಶದ ಮೂಲಕವೇ ನೀಡಲಾಗಿದೆ.
ʼಹಕ್ಕುಪತ್ರ ವಿತರಣಾ ಅಭಿಯಾನʼದಡಿ ತುಮಕೂರು ಜಿಲ್ಲೆಯಲ್ಲಿ ಕಂದಾಯ ಗ್ರಾಮವಾಗಿ ರಚಿಸಲು ಈವರೆಗೂ ಗುರುತಿಸಲಾಗಿರುವ ದಾಖಲೆ ರಹಿತ 1,312 ಜನವಸತಿ ಪ್ರದೇಶಗಳ ಪೈಕಿ ಈವರೆಗೂ ಸರ್ಕಾರದಿಂದ 945 ಗ್ರಾಮಗಳಿಗೆ ಪ್ರಾಥಮಿಕ ಅಧಿಸೂಚನೆ ಹಾಗೂ 848 ಗ್ರಾಮಗಳಿಗೆ ಅಂತಿಮ ಅಧಿಸೂಚನೆಯಾಗಿದೆ. ಉಳಿದ ಗ್ರಾಮಗಳು ವಿವಿಧ ಹಂತಗಳಲ್ಲಿ ಅಧಿಸೂಚನೆ ಹೊರಡಿಸಲು ಬಾಕಿ ಇದ್ದು, ಕಾರ್ಯ ಪ್ರಗತಿಯಲ್ಲಿದೆ.
ಈವರೆಗೂ 22,067 ಅರ್ಹ ಫಲಾನುಭವಿಗಳ ಹಕ್ಕುಪತ್ರಗಳನ್ನು ಗಣಕೀಕರಣಗೊಳಿಸಲಾಗಿದ್ದು, ಮೇ 19ರಂದು ನಡೆದ ಕಂದಾಯ ಬೃಹತ್ ಸಮಾವೇಶದಲ್ಲಿ ಸನ್ಮಾನ್ಯ ಮುಖ್ಯಮಂತ್ರಿಯವರಿಂದ ಸವಲತ್ತು/ಹಕ್ಕುಪತ್ರಗಳನ್ನು ವಿತರಿಸಲಾಗಿದೆ. ಗಣಕೀಕೃತ ಹಕ್ಕುಪತ್ರಗಳನ್ನು ವಿತರಿಸಿರುವುದು ಗಿನ್ನಿಸ್ ವರ್ಲ್ಡ್ ಬುಕ್ ರೆಕಾರ್ಡ್ನಲ್ಲಿ ದಾಖಲಾಗಿದೆ.
ಇ-ಪೌತಿ ಆಂದೋಲನವನ್ನು ಸರ್ಕಾರವು ಹೊಸ ತಂತ್ರಾಂಶದ ಮೂಲಕ ಸರಳೀಕರಣಗೊಳಿಸಿ ಅನುಷ್ಠಾನಗೊಳಿಸಿದ್ದು, ಇದರಿಂದ ಸಾರ್ವಜನಿಕರಿಗೆ ಸುಮಾರು ಒಂದು, ಎರಡು ದಶಕಗಳಿಂದ ಅವರ ಪೂರ್ವಿಕರ ಹೆಸರಿನಲ್ಲಿರುವ ಜಮೀನುಗಳನ್ನು ಸರಳವಾಗಿ ಅವರ ವಾರಸುದಾರರಿಗೆ ಖಾತೆ ಮಾಡಬಹುದಾಗಿದೆ. ಈ ಸಂಬಂಧ ಜಿಲ್ಲೆಯಲ್ಲಿ ಆಧಾರ್ ಸೀಡಿಂಗ್ ಅಂಕಿ ಅಂಶಗಳ ಪ್ರಕಾರ ಒಟ್ಟು 5.24 ಲಕ್ಷ ಪ್ರಕರಣಗಳನ್ನು ಗುರುತಿಸಿದ್ದು, ಈ ಪೈಕಿ 2,25,078 ಅರ್ಜಿಯನ್ನು ಈಗಾಗಲೇ ವಿಲೇವಾರಿ ಮಾಡಲಾಗಿದೆ. ಇ-ಪೌತಿ ಆಂದೋಲನದಂತಹ ಸರ್ಕಾರದ ಸೌಲಭ್ಯವನ್ನು ಸಾರ್ವಜನಿಕರು ಪಡೆದುಕೊಳ್ಳಬೇಕು.
ಜಿಲ್ಲಾ ಕೈಗಾರಿಕಾ ಕೇಂದ್ರದ ವತಿಯಿಂದ ಮಾರ್ಚ್-2026ರ ಅಂತ್ಯಕ್ಕೆ ಜಿಲ್ಲೆಯಲ್ಲಿ ಒಟ್ಟು 28,215 ಎಂ.ಎಸ್.ಎಂ.ಇ ಕೈಗಾರಿಕೆಗಳು ನೋಂದಣಿಯಾಗಿರುತ್ತದೆ. ಸದರಿ ಕೈಗಾರಿಕೆಗಳಿಂದ ಒಟ್ಟು 712.23 ಕೋಟಿ ರೂ.ಗಳ ಬಂಡವಾಳ ಹೂಡಿಕೆಯಾಗಿದ್ದು, 2,02,324 ಜನರಿಗೆ ನೇರ ಉದ್ಯೋಗವಕಾಶ ಸೃಷ್ಟಿಯಾಗಿದೆ.
2025-26ನೇ ಸಾಲಿನಲ್ಲಿ ರಾಜ್ಯ ಉನ್ನತ ಮಟ್ಟದ ಸಮಿತಿ ಮತ್ತು ರಾಜ್ಯ ಮಟ್ಟದ ಏಕಗವಾಕ್ಷಿ ಅನುಮೋದನಾ ಸಮಿತಿ ಸಭೆಯಲ್ಲಿ ಒಟ್ಟು 26 ಕೈಗಾರಿಕೆಗಳು ಅನುಮೋದನೆಯಾಗಿದ್ದು, ಅನುಷ್ಠಾನ ಹಂತದಲ್ಲಿರುತ್ತವೆ. ಈ ಕೈಗಾರಿಕೆಯಿಂದ ಜಿಲ್ಲೆಗೆ ಒಟ್ಟು 1185.91 ಕೋಟಿ ರೂ. ಬಂಡವಾಳ ಹೂಡಿಕೆಯಾಗಿದ್ದು, ಸದರಿ ಕೈಗಾರಿಕೆಗಳಿಂದ ಒಟ್ಟು 7,286 ನೇರ ಉದ್ಯೋಗ ಸೃಷ್ಟಿಯಾಗಲಿದೆ.
ರಾಜ್ಯ ಸರ್ಕಾರದ ವತಿಯಿಂದ ನಡೆದ Global Investors Meet-2025ರ ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ತುಮಕೂರು ಜಿಲ್ಲೆಯಲ್ಲಿ 7 ಬೃಹತ್ ಮತ್ತು ಭಾರಿ ಕೈಗಾರಿಕೆ ಆರಂಭಿಸಲು MOU ಮಾಡಿಕೊಂಡಿರುತ್ತಾರೆ. ಈ ಕೈಗಾರಿಕೆಗಳಿಂದ ಒಟ್ಟು 75,480 ಕೋಟಿ ರೂ. ಬಂಡವಾಳ ಹೂಡಿಕೆ ನಿರೀಕ್ಷಿಸಲಾಗಿದೆ ಹಾಗೂ 29,200 ನೇರ ಉದ್ಯೋಗ ಸೃಷ್ಟಿಯಾಗುವ ನಿರೀಕ್ಷೆ ಇದೆ.
ತುಮಕೂರು ಜಿಲ್ಲೆಯ ಶಿರಾ ಕೈಗಾರಿಕಾ ಪ್ರದೇಶದ 2ನೇ ಹಂತದ ಕೈಗಾರಿಕಾ ಪ್ರದೇಶದ ಅಭಿವೃದ್ಧಿಯ ಕಾಮಗಾರಿ ಮುಕ್ತಾಯ ಹಂತದಲ್ಲಿದೆ. ವಿಕಸಿತ ಭಾರತ್ ಗ್ರಾಮೀಣ ರೋಜ್ ಗಾರ್ ಅಂಡ್ ಆಜೀವಿಕ ಮಿಷನ್ ಯೋಜನೆಯು ದೇಶಾದ್ಯಂತ ಜುಲೈ 1 ರಿಂದ ಪ್ರಾರಂಭವಾಗಿದ್ದು, ತುಮಕೂರು ಜಿಲ್ಲೆಯಲ್ಲಿಯೂ ಈ ಯೋಜನೆಯನ್ನು ಯಶಸ್ವಿಯಾಗಿ ಅನುಷ್ಠಾನ ಮಾಡಲು ರೂಪುರೇಷೆಯನ್ನು ಸಿದ್ಧಪಡಿಸಲಾಗಿದೆ.
ತುಮಕೂರು ಜಿಲ್ಲೆಯಲ್ಲಿ ʼವಿಬಿ ಜಿ ರಾಮ್ ಜಿ ಯೋಜನೆʼಯಡಿ 51,341 ಕಾಮಗಾರಿಗಳಿಗೆ ಅನುಮೋದನೆ ನೀಡಲಾಗಿದ್ದು, ಜುಲೈ ಆರಂಭದಿಂದ ಇಲ್ಲಿಯವರೆಗೆ ಸುಮಾರು 85 ಸಾವಿರಕ್ಕೂ ಹೆಚ್ಚಿನ ಮಾನವ ದಿನಗಳನ್ನು ಸೃಜಿಸುವ ಮೂಲಕ ಬರಗಾಲದ ಸಂದರ್ಭದಲ್ಲಿ ಗ್ರಾಮೀಣ ಜನರಿಗೆ ಉದ್ಯೋಗ ನೀಡಲಾಗುತ್ತಿದೆ. ಜಿಲ್ಲೆಯಲ್ಲಿ 330 ಗ್ರಾಮ ಪಂಚಾಯಿತಿಗಳಿಗೆ ಜುಲೈ-1ರಿಂದ ಒಟ್ಟು 59 ಕೋಟಿ ರೂ.ಗಳ ಕೂಲಿ ಮೊತ್ತ ಬಿಡುಗಡೆಯಾಗಿದ್ದು, ಇದುವರೆಗೂ 2 ಕೋಟಿ ರೂ.ಗಳ ಕೂಲಿ ಮೊತ್ತವನ್ನು ಫಲಾನುಭವಿಗಳಿಗೆ ನೀಡಲಾಗಿದೆ.
ಎನ್.ಆರ್.ಎಲ್.ಎಮ್. ಯೋಜನೆಯಡಿ ಜಿಲ್ಲೆಯಲ್ಲಿ 2025-26ನೇ ಸಾಲಿನಲ್ಲಿ 10 ತಾಲ್ಲೂಕುಗಳಲ್ಲಿ 14531 ಸ್ವ ಸಹಾಯ ಗುಂಪುಗಳು ಹಾಗೂ 1,42,209 ಸದಸ್ಯರು ಕಾರ್ಯನಿರ್ವಹಿಸುತ್ತಿದ್ದು, ಗ್ರಾಮೀಣ ಭಾಗದ ಬಡ ಮತ್ತು ದುರ್ಬಲ ಹೆಣ್ಣು ಮಕ್ಕಳ ಜೀವನೋಪಾಯವನ್ನು ಸುಧಾರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾ ವೈಯಕ್ತಿಕವಾಗಿ ಮತ್ತು ಅವಲಂಬಿತ ಕುಟುಂಬಗಳ ಆದಾಯದ ಮಟ್ಟವನ್ನು ಹೆಚ್ಚಿಸಿದೆ.
ಜನರ ಆರೋಗ್ಯದ ಹಿತದೃಷ್ಟಿಯಿಂದ 56 ಕೋಟಿ ರೂ. ವೆಚ್ಚದಲ್ಲಿ ಟ್ರಾಮಾಕೇರ್ ಸೆಂಟರ್, 50 ಲಕ್ಷ ರೂ. ವೆಚ್ಚದಲ್ಲಿ ಅಪೌಷ್ಠಿಕ ಮಕ್ಕಳ ಪುನಶ್ವೇತನ ಕೇಂದ್ರ, 20 ಕೋಟಿ ರೂ. ವೆಚ್ಚದಲ್ಲಿ ನರ್ಸಿಂಗ್ ಕಾಲೇಜ್, 1.38 ಕೋಟಿ ರೂ. ವೆಚ್ಚದಲ್ಲಿ ನೂತನ ಕಣ್ಣಿನ ಶಸ್ತ್ರಚಿಕಿತ್ಸಾಗಾರ ಮತ್ತು ವಾರ್ಡ್, 20 ಕೋಟಿ ರೂ. ವೆಚ್ಚದಲ್ಲಿ ತಾಯಿ ಮತ್ತು ಮಕ್ಕಳ ಆಸ್ಪತ್ರೆ, 42 ಕೋಟಿ ರೂ. ವೆಚ್ಚದಲ್ಲಿ ಸಿ.ಸಿ.ಬಿ.ಯು ಲೋಕಾರ್ಪಣೆಯಾಗಿ ಈಗಾಗಲೇ ಕಾರ್ಯಾರಂಭಗೊಂಡಿವೆ.
100 ಕೋಟಿ ರೂ. ವೆಚ್ಚದಲ್ಲಿ ಕ್ಯಾನ್ಸರ್ ಆಸ್ಪತ್ರೆ ನಿರ್ಮಿಸಲಾಗಿದ್ದು, 131.90 ಕೋಟಿ ರೂ. ವೆಚ್ಚದಲ್ಲಿ ನೂತನ 300 ಹಾಸಿಗೆಯ ಜಿಲ್ಲಾಸ್ಪತ್ರೆಯ ಹೊಸ ಕಟ್ಟಡವನ್ನು ನಿರ್ಮಿಸಲು ಈಗಾಗಲೇ ಕಾಮಗಾರಿ ಪ್ರಾರಂಭಿಸಲಾಗಿದೆ.
ಜಿಲ್ಲೆಯ 11 ನಗರ ಸ್ಥಳೀಯ ಸಂಸ್ಥೆಗಳಲ್ಲಿ ಖಾಯಂ ಪೌರಕಾರ್ಮಿಕರಾಗಿ ಕಾರ್ಯ ನಿರ್ವಹಿಸುತ್ತಿರುವ ವಸತಿ ರಹಿತ ನೌಕರರುಗಳಿಗೆ ಪೌರಕಾರ್ಮಿಕ ಗೃಹಭಾಗ್ಯ ಯೋಜನೆಯಡಿ ಒಟ್ಟು 176 ಮನೆಗಳು ಅನುಮೋದನೆಗೊಂಡಿದೆ. ಪ್ರತಿ ಮನೆಗೆ ಘಟಕ ವೆಚ್ಚ 7.50 ಲಕ್ಷ ರೂ. ಅಂದಾಜಿಸಲಾಗಿದ್ದು, ರಾಜ್ಯ ಸರ್ಕಾರದಿಂದ 6 ಲಕ್ಷ ರೂ.ಗಳನ್ನು ಭರಿಸಲಾಗುತ್ತದೆ. ಪೌರಕಾರ್ಮಿಕ ಗೃಹಭಾಗ್ಯ ಯೋಜನೆಯಡಿ ಈವರೆಗೂ 166 ಮನೆಗಳು ಪೂರ್ಣಗೊಂಡಿದ್ದು, ಉಳಿದ 10 ಮನೆಗಳ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ.
- 80ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಇಂದು ತುಮಕೂರಿನ ಮಹಾತ್ಮ ಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಧ್ವಜಾರೋಹಣ ನೇರವೇರಿಸಿ, ಬಳಿಕ ಮಾತನಾಡಿದೆ. (3/4) -
Dr. G Parameshwara
@DrParameshwara
ನಾಡಿನ ಸಮಸ್ತ ಜನತೆಯ ಅಭಿವೃದ್ಧಿಗೆ ಪೂರಕವಾಗಿ ನಮ್ಮ ಸರ್ಕಾರ ಹಲವಾರು ಯೋಜನೆಗಳನ್ನು ರೂಪಿಸಿ ಅನುಷ್ಠಾನಗೊಳಿಸುವ ಮೂಲಕ ಕರ್ನಾಟಕವನ್ನು ಸರ್ವಾಂಗೀಣ ಅಭಿವೃದ್ಧಿಯತ್ತ ಕೊಂಡೊಯ್ಯಲು ಸಂಕಲ್ಪ ಮಾಡಿದೆ.
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳು, ಅಲ್ಪಸಂಖ್ಯಾತರು ಮತ್ತು ರಾಜ್ಯದ ಬಡಜನರ ಏಳಿಗೆಗಾಗಿ ಹಲವಾರು ನೂತನ ಕಾರ್ಯಕ್ರಮಗಳನ್ನು ರೂಪಿಸಿದ್ದೇವೆ. ನುಡಿದಂತೆ ನಡೆದಿದ್ದೇವೆ. ಸರ್ಕಾರ ಅಧಿಕಾರಕ್ಕೆ ಬಂದ ದಿನವೇ ಜಾರಿಗೊಳಿಸಿದ ಐದು ಗ್ಯಾರಂಟಿ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಿ ಜನರ ವಿಶ್ವಾಸ ಹಾಗೂ ಪ್ರೀತಿಯನ್ನು ಗಳಿಸಿದ್ದೇವೆ.
ನಮ್ಮ ಸರ್ಕಾರ ಶಕ್ತಿ, ಗೃಹಜ್ಯೋತಿ, ಅನ್ನಭಾಗ್ಯ, ಗೃಹಲಕ್ಷ್ಮಿ ಹಾಗೂ ಯುವನಿಧಿ ಸೇರಿ 5 ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದೆ. ಅರ್ಥಶಾಸ್ತ್ರಜ್ಞ ಅಮರ್ತ್ಯ ಸೇನ್ ಅವರ “ಅಭಿವೃದ್ಧಿಯೇ ಸ್ವಾತಂತ್ರ್ಯ” ಎಂಬ ಸೂತ್ರದಲ್ಲಿ ನಂಬಿಕೆಯಿಟ್ಟು ಪಂಚ ಗ್ಯಾರಂಟಿ ಯೋಜನೆಗಳನ್ನು ರೂಪಿಸಿ ಸಮರ್ಪಕವಾಗಿ ಅನುಷ್ಠಾನ ಮಾಡುತ್ತಿದ್ದೇವೆ.
ಪಂಚ ಗ್ಯಾರಂಟಿಗಳಲ್ಲೊಂದಾದ ಅನ್ನಭಾಗ್ಯ ಯೋಜನೆಯು ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿದೆ. ʼಹಸಿವು ಮುಕ್ತ ಕರ್ನಾಟಕʼ ನಿರ್ಮಾಣದ ಉದ್ದೇಶದಿಂದ ಅನ್ನಭಾಗ್ಯ ಯೋಜನೆಯನ್ನು ಜಾರಿಗೆ ತರಲಾಗಿದ್ದು, ಜುಲೈ-2026ರ ಮಾಹೆಯವರೆಗೆ 11,128 ಮೆ.ಟನ್ ಅಕ್ಕಿಯನ್ನು ವಿತರಣೆ ಮಾಡಲಾಗಿದೆ. ಅನ್ನಭಾಗ್ಯ ಯೋಜನೆಯಿಂದ ಜಿಲ್ಲೆಯಲ್ಲಿ 6,27,049 ಪಡಿತರ ಚೀಟಿಗಳ 22.25 ಲಕ್ಷ ಫಲಾನುಭವಿಗಳಿಗೆ ಅನುಕೂಲವಾಗಿದೆ.
2025-26ನೇ ಸಾಲಿನಲ್ಲಿ ಸರ್ಕಾರವು ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಪ್ರತಿ ಕ್ವಿಂಟಾಲ್ ರಾಗಿಗೆ 4,886 ರೂ.ಗಳ ದರದಲ್ಲಿ ಜಿಲ್ಲೆಯ 54,025 ರೈತರಿಂದ ನೇರವಾಗಿ ಒಟ್ಟು 12,32,508 ಕ್ವಿಂಟಾಲ್ ರಾಗಿ ಖರೀದಿಸಿದೆ.
ಮಹಿಳಾ ಸಬಲೀಕರಣಕ್ಕೆ ಪೂರಕವಾಗಿ ನಮ್ಮ ಸರ್ಕಾರವು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಬಸ್ಸುಗಳಲ್ಲಿ ಮಹಿಳೆಯರು ರಾಜ್ಯಾದ್ಯಂತ ಉಚಿತವಾಗಿ ಪ್ರಯಾಣಿಸಲು 2023ರ ಜೂನ್ 11 ರಿಂದ 'ಶಕ್ತಿ' ಯೋಜನೆಯನ್ನು ಜಾರಿಗೆ ತಂದಿದ್ದು, ಈ ಮಹತ್ವಪೂರ್ಣ ಯೋಜನೆಯಿಂದಾಗಿ ಜಿಲ್ಲೆಯಲ್ಲಿ 23.52 ಕೋಟಿಗೂ ಅಧಿಕ ಮಹಿಳಾ ಪ್ರಯಾಣಿಕರು ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್ಸುಗಳಲ್ಲಿ ಉಚಿತವಾಗಿ ಪ್ರಯಾಣಿಸಿದ್ದಾರೆ.
ಮಹಿಳೆಯರನ್ನು ಆರ್ಥಿಕವಾಗಿ ಸಬಲೀಕರಣಗೊಳಿಸುವ ಸಲುವಾಗಿ ನಮ್ಮ ಸರ್ಕಾರ ಜಾರಿಗೆ ತಂದಿರುವ ಪ್ರತಿಷ್ಠಿತ ಯೋಜನೆಗಳಲ್ಲೊಂದಾದ 'ಗೃಹಲಕ್ಷ್ಮಿ' ಯೋಜನೆಯಡಿ ಕುಟುಂಬದ ಯಜಮಾನಿ ಮಹಿಳೆಗೆ ಪ್ರತಿ ತಿಂಗಳು 2,000 ರೂ.ಗಳನ್ನು ನೇರ ನಗದು ವರ್ಗಾವಣೆ ಮಾಡಲಾಗುತ್ತಿದ್ದು, ಈವರೆಗೆ ಜಿಲ್ಲೆಯಲ್ಲಿ 6,19,452 ಫಲಾನುಭವಿಗಳ ಖಾತೆಗೆ ಒಟ್ಟು 3,783.40 ಕೋಟಿ ರೂ.ಗಳನ್ನು ವರ್ಗಾಯಿಸಲಾಗಿದೆ.
ಸರ್ಕಾರವು 200 ಯೂನಿಟ್ಗಳಿಗಿಂತ ಕಡಿಮೆ ಉಪಯೋಗಿಸುವ ಗೃಹ ಬಳಕೆದಾರರಿಗೆ ಉಚಿತ ವಿದ್ಯುತ್ ಒದಗಿಸುವ ʼಗೃಹಜ್ಯೋತಿʼ ಯೋಜನೆಯಡಿ ಜಿಲ್ಲೆಯ 8 ಲಕ್ಷ ಫಲಾನುಭವಿಗಳು ಈ ಯೋಜನೆಯ ಪ್ರಯೋಜನ ಪಡೆಯುತ್ತಿದ್ದು, ಯೋಜನೆಗಾಗಿ ಈವರೆಗೂ 872.07 ಕೋಟಿ ರೂ. ಖರ್ಚು ಮಾಡಲಾಗಿದೆ.
ಯುವ ಜನತೆಯ ಉಜ್ವಲ ಭವಿಷ್ಯಕ್ಕಾಗಿ ರಾಜ್ಯ ಸರ್ಕಾರವು ಜಾರಿಗೆ ತಂದಿರುವ ಯುವನಿಧಿ ಯೋಜನೆಯಡಿ 2023, 2024, 2025, 2026ರಲ್ಲಿ ಡಿಪ್ಲೊಮಾ ಉತ್ತೀರ್ಣರಾದವರಿಗೆ 1,500 ರೂ. ಹಾಗೂ ಯಾವುದೇ ಪದವಿ ಉತ್ತೀರ್ಣರಾದವರಿಗೆ 3,000 ರೂ.ಗಳ ಉದ್ಯೋಗ ಭತ್ಯೆಯನ್ನು ಗರಿಷ್ಠ 2 ವರ್ಷಗಳ ಅವಧಿವರೆಗೂ ನೀಡಲಾಗುತ್ತಿದ್ದು, ಜಿಲ್ಲೆಯಲ್ಲಿ ಇದುವರೆಗೂ ಒಟ್ಟು 10,814 ಅರ್ಹ ನಿರುದ್ಯೋಗಿ ಫಲಾನುಭವಿಗಳಿಗೆ ಒಟ್ಟು 34.38 ಕೋಟಿ ರೂ.ಗಳ ಉದ್ಯೋಗಭತ್ಯೆಯನ್ನು ಡಿ.ಬಿ.ಟಿ. ಮೂಲಕ ಪಾವತಿ ಮಾಡಲಾಗಿದೆ. ಈ ಎಲ್ಲಾ ಯೋಜನೆಗಳಿಂದಾಗಿ ಜಿಲ್ಲೆಯ ಜನರಲ್ಲಿ ಅಭಿವೃದ್ಧಿಯ ಹೊಸ ಅಧ್ಯಾಯ ಪ್ರಾರಂಭವಾಗಿದೆ.
- 80ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಇಂದು ತುಮಕೂರಿನ ಮಹಾತ್ಮ ಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಧ್ವಜಾರೋಹಣ ನೇರವೇರಿಸಿ, ಬಳಿಕ ಮಾತನಾಡಿದೆ. (2/4) -
Dr. G Parameshwara
@DrParameshwara
ಬ್ರಿಟೀಷರಿಂದ ಸ್ವತಂತ್ರಗೊಂಡ ಭಾರತ ಹಲವು ಬದಲಾವಣೆಗಳನ್ನು ಕಂಡಿದೆ. ಹಲವು ಸಾಧನೆಗಳಿಗೆ ಸಾಕ್ಷಿಯಾಗಿ ವಿಶ್ವ ಭೂಪಟದಲ್ಲಿ ಗಮನ ಸೆಳೆದು ಮಂಚೂಣಿ ರಾಷ್ಟ್ರಗಳಲ್ಲಿ ಒಂದು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಇಡೀ ವಿಶ್ವದಲ್ಲಿಯೇ ಅತ್ಯಂತ ಶ್ರೇಷ್ಠ ಪ್ರಜಾಪ್ರಭುತ್ವ ಸಂವಿಧಾನವನ್ನು ಭಾರತ ಹೊಂದಿದೆ.
ಕೈಗಾರಿಕೆ, ತಂತ್ರಜ್ಞಾನ, ಕೃಷಿ ಕ್ಷೇತ್ರಗಳಲ್ಲಿ ಸಾಕಷ್ಟು ಅಭಿವೃದ್ಧಿ ಸಾಧಿಸಿ ವಿಶ್ವದ ಗಮನ ಸೆಳೆದಿದೆ. ಇಂತಹ ಸ್ವತಂತ್ರ ಭಾರತದ ಕರ್ನಾಟಕ ರಾಜ್ಯದ ಉಪ ಮುಖ್ಯಮಂತ್ರಿಯಾಗಿ, ಕಂದಾಯ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಚಿವನಾಗಿ, ತುಮಕೂರು ಜಿಲ್ಲೆಯ ಉಸ್ತುವಾರಿ ಸಚಿವನಾಗಿ 80ನೇ ಸ್ವಾತಂತ್ರೋತ್ಸವದ ಧ್ವಜಾರೋಹಣವನ್ನು ಅತ್ಯಂತ ಖುಷಿ ಮತ್ತು ಸಂಭ್ರಮದಿಂದ ನೆರವೇರಿಸಿದ್ದೇನೆ.
ಭಾರತಕ್ಕೆ ಸ್ವಾತಂತ್ರ್ಯ ಸುಲಭದ ಹಾದಿಯಾಗಿರಲಿಲ್ಲ ಎಂಬುದನ್ನು ನಾವು ಭಾರತದ ಇತಿಹಾಸದಿಂದ ತಿಳಿದಿದ್ದೇವೆ. ಕೇವಲ ವ್ಯಾಪಾರದ ನೆಪದಲ್ಲಿ ಭಾರತಕ್ಕೆ ಬಂದ ಪರಕೀಯರು ನಮ್ಮ ದೇಶದ ಸಂಪತ್ತನ್ನು ಲೂಟಿ ಮಾಡಿದ್ದಲ್ಲದೆ, ನಮ್ಮ ಭಾರತದಲ್ಲಿನ ದೌರ್ಬಲ್ಯಗಳನ್ನು ಬಂಡವಾಳವಾಗಿಸಿಕೊಂಡು ನೂರಾರು ವರ್ಷಗಳ ಕಾಲ ನಮ್ಮನ್ನು ಆಳಿದ್ದು ದುರ್ದೈವದ ಸಂಗತಿ. ದೇಶ ಗುಲಾಮಗಿರಿಯ ದಾಸ್ಯದಿಂದ ಮುಕ್ತಿ ಹೊಂದಲು ಪರಕೀಯರ ವಿರುದ್ಧ 1857ರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದಿಂದ 1947ರ ವರೆಗೆ ನಡೆದ ಹೋರಾಟದಲ್ಲಿ ಅನೇಕ ಮಹನೀಯರು ತಮ್ಮ ಪ್ರಾಣತ್ಯಾಗ ಮಾಡಿ ನಮ್ಮೆಲ್ಲರ ಸ್ಮೃತಿಪಟಲದಲ್ಲಿ ಅಜರಾಮರರಾಗಿದ್ದಾರೆ.
ಬ್ರಿಟಿಷರ ಸರ್ವಾಧಿಕಾರಿ ಧೋರಣೆಯನ್ನು ಕಿತ್ತೊಗೆಯಲು ಪಣ ತೊಟ್ಟು ಭಾರತೀಯರಲ್ಲಿ ಸ್ವಾತಂತ್ರ್ಯದ ಕನಸಿನ ಬೀಜ ಬಿತ್ತಿ, ಸ್ವಾಭಿಮಾನದ ಹೋರಾಟದ ಕಿಡಿ ಹೊತ್ತಿಸಿ, ಕ್ರಾಂತಿಯ ಚಳವಳಿ ರೂಪಿಸಿದ ಸಾವಿರಾರು ಮಹಾತ್ಮರಲ್ಲಿ ಲಾಲ ಲಜಪತರಾಯ್, ಬಾಲಗಂಗಾಧರ ತಿಲಕ್, ಗೋಪಾಲಕೃಷ್ಣ ಗೋಖಲೆ, ಮೌಲಾನ ಅಬ್ದುಲ್ ಕಲಾಂ ಆಜಾದ್, ಸರ್ದಾರ್ ವಲ್ಲಭಬಾಯಿ ಪಟೇಲ್, ಸುಭಾಷ್ಚಂದ್ರ ಬೋಸ್, ಸರೋಜಿನಿ ನಾಯ್ಡು ಮುಂತಾದವರು ಒಂದೆಡೆಯಾದರೆ ಸ್ವಾತಂತ್ರ್ಯಕ್ಕಾಗಿ ಮಹಾತ್ಮ ಗಾಂಧೀಜಿಯವರು ಸತ್ಯ ಮತ್ತು ಅಹಿಂಸಾ ಮಾರ್ಗದಲ್ಲಿ ಹೋರಾಡುವ ಮೂಲಕ ರಾಷ್ಟ್ರಪಿತರೆನಿಸಿಕೊಂಡರು. ಇವರು ಬ್ರಿಟಿಷರ ವಿರುದ್ಧ ಅಸಹಕಾರ ಚಳವಳಿ, ಉಪ್ಪಿನ ಸತ್ಯಾಗ್ರಹ, 1942ರ ಭಾರತ ಬಿಟ್ಟು ತೊಲಗಿ ಚಳವಳಿಗಳ ನಾಯಕತ್ವ ವಹಿಸಿ ಭಾರತೀಯರ ಜನಮಾನಸದಲ್ಲಿ ಚರಿತ್ರಾರ್ಹರಾಗಿ ಉಳಿದಿದ್ದಾರೆ.
ಮೈಸೂರು ಹುಲಿ ಟಿಪ್ಪು ಸುಲ್ತಾನ್, ಝಾನ್ಸಿರಾಣಿ ಲಕ್ಷ್ಮೀ ಬಾಯಿ, ತಾತ್ಯಟೋಪಿ, ನಾನಾ ಸಾಹೇಬ್, ಕಿತ್ತೂರು ರಾಣಿ ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ, ಚಂದ್ರಶೇಖರ್ ಆಜಾದ್ ಮುಂತಾದ ಮಹಾತ್ಮರು ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿ ತಮ್ಮನ್ನು ತಾವು ಅರ್ಪಿಸಿಕೊಂಡು ಹುತಾತ್ಮರಾದ ಸಾವಿರಾರು ಮಹನೀಯರ ಸಾಲಿನಲ್ಲಿ ನಿಲ್ಲುತ್ತಾರೆ.
1938ರಲ್ಲಿ ನನ್ನ ಹೆಮ್ಮೆಯ ಜಿಲ್ಲೆ ತುಮಕೂರಿನ ಕುಣಿಗಲ್ ಹಾಗೂ ಮಧುಗಿರಿಯಲ್ಲಿ ಧ್ವಜ ಸತ್ಯಾಗ್ರಹ, 1939ರ ಶಿರಾದಲ್ಲಿ ಅರಣ್ಯ ಸತ್ಯಾಗ್ರಹ, 1942ರ ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಭಾಗವಹಿಸಿದ ಈ ಜಿಲ್ಲೆಯ ಟಿ.ಎಂ. ಮಹಂತಯ್ಯ, ಎ.ವಿ. ಆಚಾರ್, ಟಿ. ಅನಂತರಾಮ ಶೆಟ್ಟಿ, ಕೆ.ಎನ್. ನರಸಿಂಹಯ್ಯ, ಕೆ.ಆರ್. ನರಸಿಂಹ ಐಯ್ಯಂಗಾರ್, ಅಪ್ಪಾಜಪ್ಪ, ಜಿ.ಆರ್. ಚಂಗಲಾರಾಧ್ಯ, ಚನ್ನಪ್ಪ, ಟಿ.ಆರ್. ಪುಟ್ಟಯ್ಯ, ಬಿ. ರಾಜಪ್ಪ, ಎಮ್.ವಿ. ರಾಮರಾವ್ ಮುಂತಾದವರು ತುಮಕೂರಿನವರಾದರೆ ಕೊರಟಗೆರೆಯ ಬಸವರಾಧ್ಯ, ಮಂತ್ರಿ ಚನ್ನಿಗರಾಮಯ್ಯ, ಮಧುಗಿರಿಯ ಮಾಲಿ ಮರಿಯಪ್ಪ ಮತ್ತು ಖಾದ್ರಿ, ಪಾವಗಡದ ಬೂಲಪ್ಪ ಪಿ ರಾಮರಾವ್, ಶಿರಾದ ಗೋವಿಂದಪ್ಪ ರಾಮಪ್ಪ, ಗುಬ್ಬಿಯ ಜಿ.ಹೆಚ್.ಆರ್.ದೇವರು, ಗಂಗಾಧರಪ್ಪ, ಗೋಪಾಲಯ್ಯ, ಚಿಕ್ಕನಾಯಕನಹಳ್ಳಿಯ ನಾರಾಯಣರಾವ್ ಮತ್ತು ಎನ್.ಎಸ್. ಹನುಮಂತರಾವ್, ತುರುವೇಕೆರೆಯ ಅನಂತರಾಮ ಅಯ್ಯಂಗಾರ್, ಟಿ. ಸುಬ್ರಹ್ಮಣ್ಯ, ತಿಪಟೂರಿನ ಅನಿವಾಲದ ನಂಜಪ್ಪ, ಟಿ.ಆರ್. ಮಲ್ಲಪ್ಪ, ಕುಣಿಗಲ್ನ ಕರಿಯಪ್ಪ, ಜಿ. ತಮ್ಮಣ್ಣ ಮುಂತಾದ ಮಹಾತ್ಮರು ಸ್ವತಂತ್ರಕ್ಕಾಗಿ ಹೋರಾಡಿ ಜೈಲುವಾಸ ಅನುಭವಿಸಿದ್ದರು ಎಂಬುದು ಚರಿತ್ರೆಯಲ್ಲಿ ದಾಖಲಾಗಿದೆ.
ಹೀಗೆ ಸಹಸ್ರ ಭಾರತೀಯರ ತ್ಯಾಗ-ಬಲಿದಾನಗಳ ಮೂಲಕ ಬ್ರಿಟಿಷರ ಆಡಳಿತವನ್ನು ಕೊನೆಗಾಣಿಸಿ 1947ರ ಆಗಸ್ಟ್ 15ರಂದು ಭಾರತ ದೇಶವನ್ನು ಸ್ವತಂತ್ರ ರಾಷ್ಟ್ರವನ್ನಾಗಿ ಘೋಷಿಸಲಾಯಿತು. ಸ್ವತಂತ್ರ ಭಾರತದ ಪ್ರಧಾನ ಮಂತ್ರಿಯಾಗಿ ಪಂಡಿತ್ ಜವಹರಲಾಲ್ ಅವರು ಪ್ರಮಾಣ ವಚನ ಸ್ವೀಕರಿಸಿದರು. ಈ ಅಭೂತಪೂರ್ವ ದಿನವನ್ನು ಅತ್ಯಂತ ಸಂತೋಷ, ಸಂಭ್ರಮ, ಸಡಗರದಿಂದ 79 ವರ್ಷಗಳಿಂದಲೂ ದೇಶಾದ್ಯಂತ ಭಾರತದ ಸ್ವತಂತ್ರ ದಿನಾಚರಣೆಯನ್ನಾಗಿ ಆಚರಿಸುತ್ತಾ ಸ್ವಚ್ಛಂದವಾಗಿ ತ್ರಿವರ್ಣ ಧ್ವಜವನ್ನು ಹಾರಿಸಿ ರಾಷ್ಟ್ರಗೀತೆ ಹಾಡಿ ರಾಷ್ಟ್ರ ಪ್ರೇಮವನ್ನು ಮೈಗೂಡಿಸಿಕೊಂಡಿದ್ದೇವೆ.
ಭಾರತದ ಪ್ರತಿ ಪ್ರಜೆಯೂ ಇಂದು ಶಾಂತಿ, ಅಹಿಂಸೆ, ಸಹನೆ, ಮಾನವೀಯತೆ ಮತ್ತು ಸಹಬಾಳ್ವೆ ಮುಂತಾದ ಮೂಲ ಮಂತ್ರಗಳನ್ನು ಮೈಗೂಡಿಸಿಕೊಂಡು ವೈವಿಧ್ಯತೆಯಲ್ಲಿ ಏಕತೆಯನ್ನು ಸಾಧಿಸಿ ಶಿಕ್ಷಣ, ವೈದ್ಯಕೀಯ, ತಂತ್ರಜ್ಞಾನ, ಆರ್ಥಿಕತೆ, ಕೃಷಿ, ರಾಜಕೀಯ ಕ್ಷೇತ್ರವೂ ಒಳಗೊಂಡಂತೆ ಹಲವಾರು ಕ್ಷೇತ್ರಗಳ ಅದ್ವಿತೀಯ ಸಾಧನೆಯನ್ನು ಮಾಡುತ್ತಾ, ಬಹುದೊಡ್ಡ ಪ್ರಜಾಪ್ರಭುತ್ವ ಮತ್ತು ಗಣತಂತ್ರದ ವ್ಯವಸ್ಥೆಯನ್ನು ಎತ್ತಿಹಿಡಿಯುತ್ತಾ, ಅಖಂಡ ಭಾರತದ ಸರ್ವ ಪ್ರಜೆಗಳಿಗೂ ವ್ಯಕ್ತಿಗೌರವ, ಸ್ವಾತಂತ್ರ್ಯ-ಸಮಾನತೆ, ಸಾಮಾಜಿಕ ನ್ಯಾಯವನ್ನು ವಿಸ್ತರಿಸುತ್ತಾ ಜಗತ್ತೇ ಹೆಮ್ಮೆ ಪಡುವಂತಹ ರೀತಿಯಲ್ಲಿ ಮುಂದುವರೆಯುತ್ತಿರುವ ರಾಷ್ಟ್ರವಾಗಿ ವಿಶ್ವದಲ್ಲಿ ಗುರುತಿಸಿಕೊಂಡಿದೆ. ಇದಕ್ಕೆ ಕಾರಣೀಭೂತರಾದ ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರನ್ನು ಈ ಸಂದರ್ಭದಲ್ಲಿ ಸ್ಮರಿಸುತ್ತೇನೆ.
ʼಸರ್ವ ಜನಾಂಗದ ಶಾಂತಿಯ ತೋಟʼ ಎಂಬ ಕವಿವಾಣಿಯಂತೆ ಸ್ವತಂತ್ರ ಭಾರತ ಒಕ್ಕೂಟ ವ್ಯವಸ್ಥೆಯಲ್ಲಿ ಕರ್ನಾಟಕ ಸರ್ಕಾರ ಅತ್ಯಂತ ಮಹತ್ವದ ಸ್ಥಾನವನ್ನು ಪಡೆದು ರಾಜ್ಯದ ಸರ್ವತೋಮುಖ ಬೆಳವಣಿಗೆಗೆ ಹಲವಾರು ಕಾರ್ಯಕ್ರಮಗಳನ್ನು ರೂಪಿಸುತ್ತಾ ಬಂದಿದೆ. ಮಾಹಿತಿ, ತಂತ್ರಜ್ಞಾನ ಕ್ಷೇತ್ರದಲ್ಲಿ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿದೆ.
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳು, ಅಲ್ಪಸಂಖ್ಯಾತರು ಮತ್ತು ರಾಜ್ಯದ ಬಡಜನರ ಏಳಿಗೆಗಾಗಿ ಹಲವಾರು ನೂತನ ಕಾರ್ಯಕ್ರಮಗಳನ್ನು ರೂಪಿಸಿದ್ದೇವೆ. ನುಡಿದಂತೆ ನಡೆದು ಐದು ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಗೊಳಿಸಿ ಜನರ ವಿಶ್ವಾಸ, ಪ್ರೀತಿಯನ್ನು ಗಳಿಸಿದ್ದೇವೆ.
ಅನ್ನ, ಅಕ್ಷರ, ಆಶ್ರಯ ಈ ನೆಲದ ಮೂಲ ತತ್ವ, ಇತ್ತೀಚಿಗಷ್ಟೆ ತ್ರಿವಿಧ ದಾಸೋಹಿ, ನಡೆದಾಡುವ ದೇವರು ಶ್ರೀ ಸಿದ್ದಗಂಗಾಮಠದ ಲಿಂಗೈಕ್ಯ ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿಯವರ 8ನೇ ಪುಣ್ಯಸಂಸ್ಮರಣೆ ಆಚರಿಸಿದ್ದೇವೆ. ಶ್ರೀಗಳ ಆಶಯ, ಆದರ್ಶಗಳನ್ನು ನಮ್ಮ ಸರ್ಕಾರ ಚಾಚೂ ತಪ್ಪದೆ ಪಾಲಿಸುತ್ತಿದೆ.
- 80ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಇಂದು ತುಮಕೂರಿನ ಮಹಾತ್ಮ ಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಧ್ವಜಾರೋಹಣ ನೇರವೇರಿಸಿ, ಬಳಿಕ ಮಾತನಾಡಿದೆ. (1/4) -
Dr. G Parameshwara
@DrParameshwara
ಜಕ್ಕೂರು ವಿಮಾನ ತರಬೇತಿ ಶಾಲೆಯನ್ನು ಪುನರಾರಂಭಿಸುವ ಮೂಲಕ ಪೈಲಟ್ ಆಗಬೇಕೆಂದು ಕನಸು ಕಾಣುವವರಿಗೆ ಅವಕಾಶದ ದಾರಿ ಮಾಡಿಕೊಟ್ಟಿದ್ದೇವೆ.
ಆ ಮೂಲಕ ಆರ್ಥಿಕವಾಗಿ ಹಿಂದುಳಿದ ಪ್ರತಿಭಾವಂತ ಯುವಕರಿಗೆ ತಮ್ಮ ಭವಿಷ್ಯವನ್ನು ತಾವೇ ಕಟ್ಟಿಕೊಳ್ಳುವ ಸ್ವಾತಂತ್ರ್ಯ ನೀಡಿದ್ದೇವೆ.
#independenceday -
Dr. G Parameshwara
@DrParameshwara
ಕ್ರೀಡಾ ಕ್ಷೇತ್ರಕ್ಕೆ ಹೆಚ್ಚಿನ ಉತ್ತೇಜನ ನೀಡುವ ಮೂಲಕ, ಪ್ರತಿಭಾವಂತ ಕ್ರೀಡಾಪಟುಗಳಿಗೆ ತಮ್ಮ ಸಾಮರ್ಥ್ಯವನ್ನು ಮುಕ್ತವಾಗಿ ಅನಾವರಣಗೊಳಿಸಲು ಅವಕಾಶ ನೀಡಿ, ಕ್ರೀಡೆಯನ್ನೇ ವೃತ್ತಿಯನ್ನಾಗಿ ಆಯ್ಕೆ ಮಾಡಿಕೊಂಡು ಸ್ವಾಭಿಮಾನದಿಂದ ಬದುಕುವ ಸ್ವಾತಂತ್ರ್ಯವನ್ನು ಕಲ್ಪಿಸಿದ್ದೇವೆ.
ಕ್ರೀಡಾ ಸಾಧನೆಗೆ ಗೌರವ, ಪ್ರತಿಭೆಗೆ ಪ್ರೋತ್ಸಾಹ ಹಾಗೂ ಭವಿಷ್ಯ ಕಟ್ಟಿಕೊಳ್ಳಲು ಉದ್ಯೋಗ ನೀಡುವುದು ನಮ್ಮ ಸರ್ಕಾರದ ಬದ್ಧತೆ.
#independenceday -
Dr. G Parameshwara
@DrParameshwara
ರಾಜ್ಯದ ಬಡ ಮತ್ತು ಮಧ್ಯಮ ವರ್ಗದ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಉತ್ತೇಜನ ನೀಡುವುದು ನಮ್ಮ ಆದ್ಯತೆ. ಈ ನಿಟ್ಟಿನಲ್ಲಿ ರಾಜ್ಯದ ಎಲ್ಲಾ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ನೀಡುವ ಮೂಲಕ ಅವರ ಪ್ರಯಾಣದ ವೆಚ್ಚದ ಹೊರೆಯನ್ನು ಕಡಿಮೆ ಮಾಡಿ, ಯಾವುದೇ ಆರ್ಥಿಕ ಅಡೆತಡೆಗಳಿಲ್ಲದೆ ಶಿಕ್ಷಣ ಮುಂದುವರಿಸಲು ನೆರವಾಗುತ್ತಿದ್ದೇವೆ.
ವಿದ್ಯಾರ್ಥಿಗಳ ಕನಸುಗಳಿಗೆ ರೆಕ್ಕೆ ನೀಡಿ, ಅವರ ಶಿಕ್ಷಣದ ಹಾದಿಗೆ ಬಲ ತುಂಬುವ ಮೂಲಕ ತಮ್ಮ ಕನಸುಗಳತ್ತ ಸ್ವತಂತ್ರವಾಗಿ ಹೆಜ್ಜೆ ಹಾಕುವ ಸ್ವಾತಂತ್ರ್ಯವನ್ನು ಕಲ್ಪಿಸಿಕೊಟ್ಟಿದ್ದೇವೆ.
#independenceday -
Dr. G Parameshwara
@DrParameshwara
ಸಮಾಜದ ಪ್ರತಿಯೊಬ್ಬರಿಗೂ ಸಾಮಾಜಿಕ ಹಾಗೂ ಶೈಕ್ಷಣಿಕವಾಗಿ ಶಕ್ತಿ ತುಂಬಿ, ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಅವಕಾಶ ಕಲ್ಪಿಸುವುದು ನಮ್ಮ ಸರ್ಕಾರದ ಹೊಣೆಗಾರಿಕೆ. ಈ ನಿಟ್ಟಿನಲ್ಲಿ ಯುವಜನರ ಭವಿಷ್ಯಕ್ಕೆ ಉದ್ಯೋಗದ ಬಲ ತುಂಬುತ್ತಿದ್ದೇವೆ.
ಆ ಮೂಲಕ ಯುವಶಕ್ತಿಯ ಕನಸುಗಳಿಗೆ ರೆಕ್ಕೆ ಕಟ್ಟಿ, ತಮ್ಮ ಆಸಕ್ತಿ ಮತ್ತು ಸಾಮರ್ಥ್ಯಕ್ಕೆ ತಕ್ಕ ಉದ್ಯೋಗವನ್ನು ಆಯ್ಕೆ ಮಾಡಿಕೊಂಡು ಸ್ವಾಭಿಮಾನದಿಂದ ಬದುಕುವ ಸ್ವಾತಂತ್ರ್ಯವನ್ನು ಕಲ್ಪಿಸಿದ್ದೇವೆ.
#independenceday -
Dr. G Parameshwara
@DrParameshwara
80ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಇಂದು ತುಮಕೂರಿನ ಮಹಾತ್ಮ ಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಧ್ವಜಾರೋಹಣ ನೆರವೇರಿಸಿದೆ.
ಈ ಸಂದರ್ಭದಲ್ಲಿ ಶಾಸಕರಾದ ಜಿ.ಬಿ.ಜ್ಯೋತಿ ಗಣೇಶ್, ಬಿ.ಸುರೇಶ್ಗೌಡ, ಜಿಲ್ಲಾಧಿಕಾರಿಗಳಾದ ಶುಭ ಕಲ್ಯಾಣ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಅಶೋಕ್ ಕೆ.ವಿ. ಮುಂತಾದವರು ಉಪಸ್ಥಿತರಿದ್ದರು.
Dr. G Parameshwara
@DrParameshwara
-
Dr. G Parameshwara
@DrParameshwara
80ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ತುಮಕೂರಿನ ಶ್ರೀ ಸಿದ್ಧಗಂಗಾ ಮಠದ ಆವರಣದಲ್ಲಿ ಧ್ವಜಾರೋಹಣ ನೆರವೇರಿಸಿ, ಬಳಿಕ ಮಾತನಾಡಿದೆ.
ಸ್ವಾತಂತ್ರ್ಯ ನಂತರ ಶಿಕ್ಷಣ ಕ್ರಾಂತಿಯಿಂದ ಭಾರತವು ಸ್ವಾವಲಂಬಿ ದೇಶವಾಗಿ ಜಗತ್ತಿನ ಬಲಿಷ್ಠ ರಾಷ್ಟ್ರಗಳ ಸಾಲಿನಲ್ಲಿ ನಿಂತಿದೆ. ಸ್ವಾತಂತ್ರ್ಯ ಬಂದ ಆರಂಭದಲ್ಲಿ ಊಟಕ್ಕೂ ತೊಂದರೆಯಿದ್ದ ಪರಿಸ್ಥಿತಿ ಇತ್ತು. ಆದರೆ ಇಂದು ಆಹಾರ ಉತ್ಪಾದನೆ, ತಂತ್ರಜ್ಞಾನ, ಶಿಕ್ಷಣ ಮತ್ತು ಉದ್ಯೋಗ ಕ್ಷೇತ್ರದಲ್ಲಿ ಸ್ವಾವಲಂಬನೆ ಸಾಧಿಸುವ ಮೂಲಕ ಭಾರತವು ವಿಶ್ವದಲ್ಲೇ ಅತ್ಯಂತ ದೊಡ್ಡ ಸಾಧನೆ ಮಾಡಿದೆ. ವಿಶ್ವದ ನಾಲ್ಕನೇ ಅತಿದೊಡ್ಡ ಆರ್ಥಿಕ ದೇಶವಾಗಿ ಬೆಳೆದಿದ್ದು, ಪ್ರತಿಯೊಬ್ಬರಿಗೂ ಶಿಕ್ಷಣ ನೀಡಬೇಕೆಂಬ ನಮ್ಮ ಪೂರ್ವಜರ ಕನಸು ಸಾಕಾರಗೊಂಡಿದೆ.
ನಮ್ಮ ದೇಶದಲ್ಲಿ 35 ವರ್ಷ ವಯೋಮಿತಿಯೊಳಗಿನ ಯುವಕರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಜಾತಿ, ಧರ್ಮ, ಬಣ್ಣ ಹಾಗೂ ಭಾಷೆಯ ತಾರತಮ್ಯವಿಲ್ಲದೆ ಎಲ್ಲರೂ ಸ್ವಾಭಿಮಾನದ ಬದುಕು ಕಟ್ಟಿಕೊಳ್ಳುತ್ತಿದ್ದಾರೆ. ನಿರುದ್ಯೋಗಿ ಯುವಕರಿಗೆ ಸೂಕ್ತ ಕೌಶಲ್ಯ ತರಬೇತಿ ಹಾಗೂ ಬೆಂಬಲ ನೀಡಿ ಅವರನ್ನು ದೇಶದ ಅಭಿವೃದ್ಧಿಗೆ ಬಳಸುವುದು ನಮ್ಮ ಕರ್ತವ್ಯವಾಗಿದೆ.
ಶ್ರೀ ಸಿದ್ಧಗಂಗಾ ಮಠವು ಲಕ್ಷಾಂತರ ಬಡ ಮಕ್ಕಳಿಗೆ ಅನ್ನ, ಅಕ್ಷರ, ಆಶ್ರಯ ನೀಡುವ ಮೂಲಕ ಅವರ ಜೀವನ ರೂಪಿಸಿದೆ. ಮಠದಲ್ಲಿ ಅಕ್ಷರ ಕಲಿತ ಮಕ್ಕಳು ಇಂದು ವಿಶ್ವದಾದ್ಯಂತ ಉನ್ನತ ಹುದ್ದೆಗಳನ್ನು ಅಲಂಕರಿಸಿ, ದೇಶಕ್ಕೆ ತಮ್ಮದೇ ಆದ ಕೊಡುಗೆ ನೀಡುತ್ತಿದ್ದಾರೆ. ಪರಮಪೂಜ್ಯ ಶ್ರೀ ಶಿವಕುಮಾರ ಮಹಾಸ್ವಾಮೀಜಿಗಳು ಭೌತಿಕವಾಗಿ ನಮ್ಮನ್ನು ಅಗಲಿದ್ದರೂ, ಅವರು ಸಮಾಜಕ್ಕೆ ನೀಡಿದ ತತ್ವಾದರ್ಶಗಳ ಮೂಲಕ ಶಾಶ್ವತವಾಗಿ ನಮ್ಮೊಂದಿಗಿದ್ದಾರೆ. ಶ್ರೀಗಳು ಹಾಕಿಕೊಟ್ಟ ದಾರಿಯಲ್ಲೇ ಸಿದ್ಧಲಿಂಗ ಸ್ವಾಮೀಜಿಗಳು ಶ್ರೀಮಠವನ್ನು ಮುನ್ನಡೆಸುತ್ತಿದ್ದಾರೆ. ಶ್ರೀಮಠವು ಹೀಗೆಯೇ ಸಮಾಜ ಸೇವೆಯನ್ನು ಮುಂದುವರಿಸಿ ದೇಶಕ್ಕೆ ಮತ್ತಷ್ಟು ಕೊಡುಗೆ ನೀಡಲಿ ಎಂದು ಆಶಿಸುತ್ತೇನೆ.
ಈ ಸಂದರ್ಭದಲ್ಲಿ ಸಿದ್ಧಗಂಗಾ ಮಠದ ಪರಮಪೂಜ್ಯ ಶ್ರೀ ಸಿದ್ಧಲಿಂಗ ಸ್ವಾಮೀಜಿ ರವರು ದಿವ್ಯ ಸಾನಿಧ್ಯ ವಹಿಸಿದ್ದರು. ಶಾಸಕರಾದ ಬಿ. ಸುರೇಶ್ ಗೌಡ, ಜಿ. ಬಿ. ಜ್ಯೋತಿಗಣೇಶ್, ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು. -
Dr. G Parameshwara
@DrParameshwara
ಬ್ರಿಟಿಷರ ದಾಸ್ಯಕ್ಕೆ ಸೆಡ್ಡು ಹೊಡೆದು, ಸ್ವಾತಂತ್ರ್ಯದ ಕಿಚ್ಚನ್ನು ಜನಮನದಲ್ಲಿ ಹೊತ್ತಿಸಿದ ವೀರಯೋಧ ಸಂಗೊಳ್ಳಿ ರಾಯಣ್ಣ ಅವರು ತ್ಯಾಗ, ಧೈರ್ಯ ಮತ್ತು ದೇಶಭಕ್ತಿಯ ಪ್ರತೀಕ.
ಕ್ರಾಂತಿಯ ಕಿಡಿ ರಾಯಣ್ಣನ ಜನ್ಮದಿನದಂದು ನನ್ನ ಗೌರವ ನಮನಗಳು. ಅವರ ಅದಮ್ಯ ದೇಶಪ್ರೇಮ ಮತ್ತು ಸಮರ್ಪಣಾಭಾವ ನಮ್ಮೆಲ್ಲರಿಗೂ ಆದರ್ಶವಾಗಲಿ.
#sangollirayanna -
Dr. G Parameshwara
@DrParameshwara
ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಇಂದು ತುಮಕೂರಿನ ಶ್ರೀ ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿ, ಪರಮಪೂಜ್ಯ ಶ್ರೀ ಸಿದ್ಧಲಿಂಗ ಸ್ವಾಮೀಜಿ ಅವರ ಆಶೀರ್ವಾದ ಪಡೆದೆ. ಬಳಿಕ ಮಠದ ಆವರಣದಲ್ಲಿ ಧ್ವಜಾರೋಹಣ ನೆರವೇರಿಸಿದೆ.
-
Dr. G Parameshwara
@DrParameshwara
ಸಂವಿಧಾನದ ಆಶಯಗಳಾದ ಸಮಾನತೆ ಮತ್ತು ಸಾಮಾಜಿಕ ನ್ಯಾಯದ ಮೌಲ್ಯಗಳನ್ನು ಪ್ರತಿಯೊಬ್ಬರ ಬದುಕಿನ ಭಾಗವಾಗಿಸುವುದೇ ನಿಜವಾದ ಸ್ವಾತಂತ್ರ್ಯದ ಅರ್ಥ. ಈ ಆಶಯಗಳ ರಕ್ಷಣೆಗೆ ನಾವೆಲ್ಲರೂ ಬದ್ಧರಾಗೋಣ.
ದೇಶದ ಭವಿಷ್ಯಕ್ಕಾಗಿ ತಮ್ಮ ಬದುಕನ್ನೇ ಅರ್ಪಿಸಿದ ಅಸಂಖ್ಯಾತ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ, ಬಲಿದಾನ ಮತ್ತು ದೇಶಪ್ರೇಮವನ್ನು ನಾವು ಇಂದು ಕೃತಜ್ಞತೆಯಿಂದ ಸ್ಮರಿಸೋಣ.
ಸರ್ವರಿಗೂ 80ನೇ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು.
#independenceday -
Dr. G Parameshwara
@DrParameshwara
ವಿವಿಧತೆಯಲ್ಲಿ ಏಕತೆಯೇ ಭಾರತದ ಶಕ್ತಿ - ಸೌಂದರ್ಯ
ಸ್ವಾತಂತ್ರ್ಯದ ಬೆಳಕಿನಡಿ ಸೌಹಾರ್ದ - ಸಶಕ್ತ ರಾಷ್ಟ್ರ ಕಟ್ಟೋಣ..
ನಾಡಿನ ಸಮಸ್ತರಿಗೂ 80ನೇ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು.
#independenceday
#ಸ್ವಾತಂತ್ರ್ಯ_ದಿನಾಚರಣೆThis media couldn't be displayed. See it on the original post. -
Dr. G Parameshwara
@DrParameshwara
ಸ್ಕಾಟ್ಲೆಂಡ್ನ ಗ್ಲಾಸ್ಗೋದಲ್ಲಿ ನಡೆದ 2026ರ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಭಾರತವು 39 ಪದಕಗಳನ್ನು ಗಳಿಸಿದೆ. 13 ಚಿನ್ನದ ಪದಕ ಗಳಿಸುವುದರ ಮೂಲಕ 4ನೇ ಸ್ಥಾನ ಗಿಟ್ಟಿಸಿಕೊಂಡಿದೆ.
ವಿಶೇಷವಾಗಿ ಮೈಸೂರಿನ ಕೆ.ಎಸ್.ಶಿಲ್ಪಾ ಅವರು ಪ್ಯಾರಾ ಅಥ್ಲೆಟಿಕ್ಸ್ನಲ್ಲಿ ಭಾಗವಹಿಸಿ, ಕಂಚಿನ ಪದಕ ಮುಡಿಗೇರಿಸಿಕೊಂಡಿದ್ದಾರೆ. ಅವರು ಕ್ರೀಡಾಕೂಟಕ್ಕೆ ತೆರಳುವ ಮೊದಲು ₹5 ಲಕ್ಷ ಪ್ರೋತ್ಸಾಹಧನವನ್ನು ನೀಡಿದ್ದೆವು. ಇದೀಗ ಅವರು ಪದಕ ಗೆದ್ದ ಬಂದಿದ್ದು, ಸರ್ಕಾರದಿಂದ ₹15 ಲಕ್ಷ ನೀಡುತ್ತಿದ್ದೇವೆ.
ಕಾಮನ್ವೆಲ್ತ್, ಏಷ್ಯನ್ ಗೇಮ್ಸ್ನಲ್ಲಿ ಭಾಗವಹಿಸುವ ಕ್ರೀಡಾಪಟುಗಳಿಗೆ 5 ಲಕ್ಷ ರೂ. ಹಾಗೂ ಪದಕ ಗೆದ್ದು ಬಂದರೆ 15 ಲಕ್ಷ ರೂ. ಕೊಡುತ್ತೇವೆ. ಮುಂದೆ ಏಷ್ಯನ್ ಗೇಮ್ಸ್ ಬಹುಶಃ ಜಪಾನ್ ನಲ್ಲಿ ನಡೆಯುತ್ತಿದೆ. ಅಲ್ಲಿ ಭಾಗವಹಿಸುವುದಕ್ಕೆ ಆಯ್ಕೆಯಾದ ತಂಡಗಳ ತಯಾರಿ ಕೆಲಸ ಕ್ರೀಡಾ ಇಲಾಖೆಯ ವತಿಯಿಂದ ನಡೆಯುತ್ತಿದೆ.
ಗ್ಲಾಸ್ಗೋದಲ್ಲಿ ನಡೆದ 2026ರ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಪದಕ ಗೆದ್ದ ಎಲ್ಲಾ ಹೆಮ್ಮೆಯ ಕ್ರೀಡಾಪಟುಗಳಿಗೆ ಹಾಗೂ ಮೈಸೂರಿನ ಕೆ.ಎಸ್.ಶಿಲ್ಪಾ ಅವರಿಗೆ ಅಭಿನಂದನೆಗಳು.This media couldn't be displayed. See it on the original post. -
Dr. G Parameshwara
@DrParameshwara
ವಿಧಾನಸಭೆಯ ನೂತನ ಸಭಾಧ್ಯಕ್ಷರಾಗಿರುವ ಜಿ.ಎಸ್.ಪಾಟೀಲ್ ಅವರಿಗೆ ಅಭಿನಂದನೆಗಳು. ನಿಮ್ಮ ಅಧ್ಯಕ್ಷತೆಯಲ್ಲಿ ಸದನವು ಉತ್ತಮ ರೀತಿಯಲ್ಲಿ ನಡೆಯಲಿ ಎಂದು ಶುಭಹಾರೈಸುತ್ತೇನೆ.
ಜಿ.ಎಸ್.ಪಾಟೀಲ್ ಅವರ ಕುಟುಂಬ ಸಮಾಜದಲ್ಲಿ ಅಪಾರ ಜನಪ್ರೀತಿಯನ್ನು ಗಳಿಸಿದೆ. ನನಗೆ ಅವರ ಕುಟುಂಬದಲ್ಲಿ ಬಿ.ಎಸ್ ಪಾಟೀಲ್ ಮತ್ತು ಆರ್.ಎಸ್ ಪಾಟೀಲ್ ತುಂಬಾ ಆತ್ಮೀಯರು. ಬಿ.ಎಸ್ ಪಾಟೀಲ್ ಅವರು ನನ್ನನ್ನು ತುಂಬಾ ಪ್ರೀತಿಯಿಂದ ಕಾಣುತ್ತಿದ್ದರು. ಅವರು ಕಾರ್ಯದರ್ಶಿಯಾಗಿ ರಾಜ್ಯದಲ್ಲಿ ಅನೇಕ ಬದಲಾವಣೆಗಳಿಗೆ ಕಾರಣೀಭೂತರಾಗಿದ್ದಾರೆ.
ಮುಖ್ಯಮಂತ್ರಿಗಳು ಬೆಂಗಳೂರನ್ನು ಗ್ರೇಟರ್ ಬೆಂಗಳೂರು ಮಾಡುವಂತಹ ಸಂದರ್ಭದಲ್ಲಿ ಅವರ ಸಲಹೆ - ಸೂಚನೆಗಳನ್ನು ತೆಗೆದುಕೊಂಡು ಮಾಡಬೇಕು ಎಂದು ಹೇಳಿ ಅವರನ್ನು ಸಮಿತಿಯಲ್ಲಿ ಸೇರಿಸಿಕೊಂಡಿರುವಂತಹ ವಿಷಯ ನಮಗೆಲ್ಲರಿಗೂ ತಿಳಿದಿದೆ. ಆರ್.ಎಸ್ ಪಾಟೀಲ್ ಅವರನ್ನು ಕಂಡರೆ ಅತ್ಯಂತ ಗೌರವ ನನಗಿದೆ. ಲೋಕಸಭಾ ಸದಸ್ಯರಾಗಿ ಎಂತಹ ನಡತೆ ಅವರದ್ದೂ ಎಂದರೆ ನಾವೆಲ್ಲ ಅವರನ್ನು ಅನುಕರಣೆ ಮಾಡಬೇಕು. ಅವರನ್ನು ನಾನು ಈ ಸಂದರ್ಭದಲ್ಲಿ ಸ್ಮರಿಸಿಕೊಳ್ಳುತ್ತೇನೆ.
ಜಿ.ಎಸ್ ಪಾಟೀಲ್ ಅವರು 1989ರಲ್ಲಿ ಆಯ್ಕೆಯಾಗಿ ಬಂದಾಗ ನಾನು ಕೂಡ ಅದೇ ಸಮಯದಲ್ಲಿ ಆಯ್ಕೆಯಾಗಿ ಬಂದೆ. ವೀರೇಂದ್ರ ಪಾಟೀಲ್ ಅವರು ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ನಾವೆಲ್ಲ ಆಯ್ಕೆಯಾಗಿದ್ದೆವು. ಅಂದಿನಿಂದ ಅವರು 8 ಬಾರಿ ಚುನಾವಣೆಗೆ ಸ್ಪರ್ಧಿಸಿದ್ದರು. 4 ಬಾರಿ ಆಯ್ಕೆ ಆಗಿದ್ದಾರೆ. ಸದನದ ಹೊರಗಡೆ ಅಥವಾ ಒಳಗಡೆಯಾಗಲಿ, ಎಲ್ಲಾ ಶಾಸಕರು ಮತ್ತು ವಿರೋಧ ಪಕ್ಷದವರನ್ನು ಅತ್ಯಂತ ಗೌರವದಿಂದ ಕಾಣುತ್ತಿದ್ದರು. ಹೀಗಾಗಿ ಜಿ.ಎಸ್.ಪಾಟೀಲ್ ಅವರಿಗೆ ಸಭಾಧ್ಯಕ್ಷರ ಸ್ಥಾನ ಸೂಕ್ತವಾಗಿದೆ.This media couldn't be displayed. See it on the original post. -
Dr. G Parameshwara
@DrParameshwara
ನಮ್ಮ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಯಾದ ಭಾರತ್ ಜೋಡೋ ಯುವ ಸಂಘವು ಯುವಜನರಲ್ಲಿ ಶಿಸ್ತು, ಸೇವಾ ಮನೋಭಾವ, ಸಾಮಾಜಿಕ ಜವಾಬ್ದಾರಿ, ನಾಯಕತ್ವ ಹಾಗೂ ಸಂಘಟನಾ ಕೌಶಲ್ಯಗಳನ್ನು ಬೆಳೆಸುವ ಉದ್ದೇಶ ಹೊಂದಿದೆ.
ಯುವಕರೇ, ಈ ಕಾರ್ಯಕ್ರಮವನ್ನು ನಿಮಗಾಗಿ, ನಿಮ್ಮ ಒಳಿತಿಗಾಗಿ ರೂಪಿಸಲಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಯುವಕರು ಸಂಘಕ್ಕೆ ನೋಂದಾಯಿಸಿಕೊಂಡು ಸಮಾಜಮುಖಿ ಸೇವಾ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು ಎಂದು ಮನವಿ ಮಾಡುತ್ತೇನೆ.This media couldn't be displayed. See it on the original post. -
Dr. G Parameshwara
@DrParameshwara
ಜಾನಕಿ ಅವರ ಬಗ್ಗೆ ಎಷ್ಟು ಮಾತನಾಡಿದರೂ ಕಡಿಮೆಯೇ. ಸಂಗೀತಕ್ಕೆ ಯಾವ ಜಾತಿ, ಭೇದ, ಧರ್ಮ ಮತ್ತು ಬಣ್ಣ ಇಲ್ಲ. ಸಾವು ಕೂಡ ಇಲ್ಲ. ಸಂಗೀತ ಎಲ್ಲರಿಗೂ ಒಲಿಯುವುದಿಲ್ಲ. ಅವರಿಗೆ ದೇವರು ಕೊಟ್ಟ ವರ ಅದು. 20 ಭಾಷೆಗಳಲ್ಲಿ 48 ಸಾವಿರ ಹಾಡುಗಳನ್ನು ಒಬ್ಬ ವ್ಯಕ್ತಿ ಹಾಡುತ್ತಾರೆ ಎಂದರೆ ಅದೊಂದು ವಿಸ್ಮಯ.
ಅಂತೆಯೇ ಆಶಾ ಭೋಸ್ಲೆ ಅವರು ರಷ್ಯನ್ ಭಾಷೆಯಲ್ಲೂ ಹಾಡಿದ್ದಾರೆ. ಅವರಿಗೂ ಭಗವಂತ ಸಂಗೀತವನ್ನು ವರವಾಗಿ ನೀಡಿದ್ದಾನೆ. ಸಂಗೀತದ ಈ ಮೇರು ಗಾಯಕಿಯರು ನಮ್ಮನ್ನು ಅಗಲಿದ್ದಾರೆ. ಅವರನ್ನು ಅತ್ಯಂತ ಗೌರವದಿಂದ ಸ್ಮರಿಸುತ್ತೇನೆ. ಅವರಿಗೆ ಭಗವಂತ ಶಾಂತಿಯನ್ನು ಕರುಣಿಸಲಿ.
ಭಾರತೀಯ ನಾರಿ ಹೇಗೆ ಇರಬೇಕು ಎಂಬುದಕ್ಕೆ ಉದಾಹರಣೆ ಎಂಬಂತೆ ಬದುಕಿದವರು ನಮ್ಮ ಚೆನ್ನಮ್ಮನವರು. ಯಾರೇ ಮನೆಗೆ ಹೋದರೂ ಊಟ ಕೊಟ್ಟು ಚೆನ್ನಾಗಿ ನೋಡಿಕೊಳ್ಳುತ್ತಿದ್ದರು. ಅನ್ನಪೂರ್ಣೆ ಅವರು. ಆ ತಾಯಿಗೆ ಭಗವಂತನು ಶಾಂತಿಯನ್ನು ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ.
- ನಮ್ಮನ್ನಗಲಿದ ಎಸ್.ಜಾನಕಿ, ಆಶಾ ಭೋಸ್ಲೆ ಮತ್ತು ಚೆನ್ನಮ್ಮ ಅವರಿಗೆ ಇಂದು ವಿಧಾನಸಭೆಯಲ್ಲಿ ಸಂತಾಪ ಸೂಚಿಸಿ, ಮಾತನಾಡಿದೆ.This media couldn't be displayed. See it on the original post. -
Dr. G Parameshwara
@DrParameshwara
ಇಂದು ಸದಾಶಿವನಗರದ ಗೃಹ ಕಚೇರಿಯಲ್ಲಿ ಸಾರ್ವಜನಿಕರ ಅಹವಾಲುಗಳನ್ನು ಸ್ವೀಕರಿಸಿದೆ. ಆದ್ಯತೆ ಮೇರೆಗೆ ಅವುಗಳನ್ನು ಬಗೆಹರಿಸಲಾಗುವುದು.
-
Dr. G Parameshwara
@DrParameshwara
ಇಂದಿನ ವಿಧಾನಸಭಾ ಅಧಿವೇಶನದಲ್ಲಿ ನಮ್ಮನ್ನಗಲಿದ ಗಣ್ಯರಿಗೆ ನನ್ನ ಸಂತಾಪದ ನುಡಿಗಳು
This media couldn't be displayed. See it on the original post. -
Dr. G Parameshwara
@DrParameshwara
ಮಾಜಿ ಸಚಿವರಾದ ವೆಂಕಟರಮಣಪ್ಪನವರು ನನಗೆ ಸಹೋದರನಂತಿದ್ದರು. ಅತ್ಯಂತ ಸರಳ ಜೀವಿ. ಪ್ರೀತಿಗೆ ಮತ್ತೊಂದು ಹೆಸರು ಅವರು. ಸ್ನೇಹಕ್ಕೆ ಬೆಲೆ ಕಟ್ಟುವ ರೀತಿ ಅವರನ್ನು ನೋಡಿ ಕಲಿಯಬೇಕು. ಪಾವಗಡಕ್ಕೆ ಹೋಗಬೇಕು ಅಂದ್ರೆ ಆಂಧ್ರದ ಮೂಲಕ ಹೋಗಬೇಕು. ಆ ಗಡಿನಾಡಿನಲ್ಲಿ ಕನ್ನಡದ ಬಗ್ಗೆ, ರಾಜ್ಯದ ಅಭಿವೃದ್ಧಿಗೆ ಹೋರಾಟ ಮಾಡಿದವರು ವೆಂಕಟರಮಣಪ್ಪನವರು.
ವೀರೇಂದ್ರ ಪಾಟೀಲ್ ಅವರು ಮುಖ್ಯಮಂತ್ರಿಗಳಾಗಿದ್ದಾಗ ಅವರ ಮೊದಲ ಪ್ರವಾಸ ಪಾವಗಡಕ್ಕೆ ಹಾಕಿದ್ದರು. ವೀರೇಂದ್ರ ಪಾಟೀಲ್ ಅವರನ್ನು ನೀವು ಪಾವಗಡಕ್ಕೆ ಬರಲೇಬೇಕು, ಅಲ್ಲಿ ಶನಿಮಹಾತ್ಮನ ದೇವಸ್ಥಾನವಿದೆ ಎಂದು ಕರೆಸಿಕೊಂಡಿದ್ದರು.
ನಾಗಲಮಡಿಕೆಯಿಂದ ಪಾವಗಡಕ್ಕೆ ಕುಡಿಯುವ ನೀರಿನ ಯೋಜನೆಯನ್ನು ಮಾಡುವುದಕ್ಕೆ ಅಡಿಗಲ್ಲು ಹಾಕುವುದಕ್ಕೆ ಮುಖ್ಯಮಂತ್ರಿಗಳು ಬಂದರು ಎಂದು ಹೇಳಿ ಮುಖ್ಯಮಂತ್ರಿಗಳನ್ನು ಪಾವಗಡ ಕ್ಷೇತ್ರಕ್ಕೆ ಕರೆಸಿಕೊಂಡಿದ್ದರ ಹಿಂದಿನ ಕಾರಣ ನಮಗೆ ಆಗ ತಿಳಿಯಿತು. ಅಷ್ಟೊಂದು ತಮ್ಮ ಕ್ಷೇತ್ರಕ್ಕೆ , ತಮ್ಮ ಜನಕ್ಕೆ ಕೆಲಸ ಆಗಬೇಕು ಎಂದು ಹೋರಾಟ ಮಾಡುತ್ತಿದ್ದಂತಹ ವ್ಯಕ್ತಿ ಅವರು. ಅವರ ಅಗಲಿಕೆಯಿಂದ ವೈಯಕ್ತಿಕವಾಗಿ ನನಗೆ ಬಹಳಷ್ಟು ನಷ್ಟವಾಗಿದೆ. ಅವರ ಆತ್ಮಕ್ಕೆ ಶಾಂತಿಯನ್ನು ಕೋರುತ್ತೇನೆ
- ನಮ್ಮನ್ನಗಲಿದ ವೆಂಕಟರಮಣಪ್ಪ ಅವರಿಗೆ ಇಂದು ವಿಧಾನಸಭೆಯಲ್ಲಿ ಸಂತಾಪ ಸೂಚಿಸಿ, ಮಾತನಾಡಿದೆ.This media couldn't be displayed. See it on the original post. -
Dr. G Parameshwara
@DrParameshwara
ವೀರಣ್ಣನವರು ನನ್ನ ಕ್ಷೇತ್ರದವರು. 7ನೇ ವಿಧಾನಸಭೆಗೆ ಆಯ್ಕೆಯಾಗಿ, ನಂತರ ಅದೇ ಕ್ಷೇತ್ರದಿಂದ 8ನೇ ವಿಧಾನಸಭೆಗೆ ಪುನರ್ ಆಯ್ಕೆಯಾಗಿದ್ದರು.
ನಾನು ವಿದೇಶದಿಂದ ಬಂದಾಗ ನಮ್ಮ ತಂದೆಯವರು ಅವರ ಮನೆಗೆ ಕರೆದುಕೊಂಡು ಹೋಗಿದ್ದರು. ನನಗೆ ಆಗ ರಾಜಕೀಯದ ಗಂಧ ಗಾಳಿಯು ಗೊತ್ತಿರಲಿಲ್ಲ. ಆ ಸಮಯದಲ್ಲಿ ವೀರಣ್ಣನವರು ಸಣ್ಣ ಉಳಿತಾಯ ಸಚಿವರು ಆಗಿದ್ದರು. ಒಬ್ಬ ಮಂತ್ರಿಯಾಗಿ ಗಾಂಧಿನಗರದಲ್ಲಿ ಸಾಮಾನ್ಯರಂತೆ ಒಂದು ಶೆಡ್ನಲ್ಲಿ ವಾಸಿಸುತ್ತಿದ್ದರು. ನನಗೆ ನೋಡಿ ಆಶ್ಚರ್ಯವಾಯಿತು. ಅಷ್ಟು ಸರಳತೆಯಿಂದ ಇದ್ದಂತಹ ವ್ಯಕ್ತಿ ಅವರು.
ವೀರಣ್ಣನವರು ಸಾಯುವುದಕ್ಕೂ ಹದಿನೈದು ದಿನದ ಮೊದಲು ನಾನು ಭೇಟಿಯಾಗಿದ್ದೆ. ಅನೇಕ ವಿಚಾರಗಳ ಬಗ್ಗೆ ಮಾತುಕತೆ ಕೂಡ ನಡೆಸಿದ್ದೆವು. ನನಗೆ ವೈಯಕ್ತಿಕವಾಗಿ ಅವರು ಬಹಳಷ್ಟು ಮಾರ್ಗದರ್ಶನ ನೀಡಿದ್ದಾರೆ. ಚುನಾವಣೆ ವೇಳೆ ಹರಸಿ ಹಾರೈಸಿದ್ದಾರೆ. ಪರಮೇಶ್ವರ್ ಒಳ್ಳೆಯವರು ಅವನಿಗೆ ಮತ ಹಾಕಿ ಎನ್ನುತ್ತಿದ್ದರು. ಅವರ ಹಾರೈಕೆ ನನ್ನ ಮೇಲಿದೆ. ಶ್ರೀಯುತರ ಆತ್ಮಕ್ಕೆ ಭಗವಂತನು ಚಿರಶಾಂತಿಯನ್ನು ಕರುಣಿಸಲಿ.
- ನಮ್ಮನ್ನಗಲಿದ ಸಿ.ವೀರಣ್ಣ ಅವರಿಗೆ ಇಂದು ವಿಧಾನಸಭೆಯಲ್ಲಿ ಸಂತಾಪ ಸೂಚಿಸಿ, ಮಾತನಾಡಿದೆ.This media couldn't be displayed. See it on the original post. -
Dr. G Parameshwara
@DrParameshwara
ಬಹಳ ಆತ್ಮೀಯರು ಆಗಿದ್ದ ಡಿ.ಸುಧಾಕರ್ ಅವರನ್ನು ನಾವು ಕಳೆದುಕೊಂಡಿದ್ದೇವೆ. ಕಳೆದ ಅಧಿವೇಶನದ ಸಂದರ್ಭದಲ್ಲಿ ಸುಧಾಕರ್ ಅವರು ನಮ್ಮ ಜೊತೆ ತಮಾಷೆ ಮಾಡಿಕೊಂಡು ಅನೇಕ ವಿಚಾರಗಳನ್ನು ಪ್ರಸ್ತಾಪ ಮಾಡಿಕೊಂಡು, ರಾಜಕೀಯ ವಿಷಯಗಳನ್ನು ಮಾತನಾಡಿಕೊಂಡಿದ್ದರು. ಈಗ ಅವರು ನಮ್ಮೊಂದಿಗಿಲ್ಲ.
ಸುಧಾಕರ್ ಅವರು ನಮಗೆಲ್ಲ ಆತ್ಮೀಯ ಸ್ನೇಹಿತ. ನನಗಂತೂ ಅವರ ಸಹೋದರ, ಚಿಕ್ಕಪ್ಪ ಇಡೀ ಕುಟುಂಬವೇ ಬಹಳ ಹತ್ತಿರ. ಸಣ್ಣ ಜೈನ ಸಮುದಾಯದಿಂದ ಬಂದು ಹಿರಿಯೂರಿನಂತಹ ಬಲಿಷ್ಠ ಕ್ಷೇತ್ರದಲ್ಲಿ ಗೆದ್ದು ಬರುತ್ತಾರೆ ಎಂದರೆ ಎಷ್ಟು ಜನಮನ್ನಣೆಯನ್ನು, ಪ್ರೀತಿಯನ್ನು ಗಳಿಸಿದ್ದರು ಎಂಬುದು ತಿಳಿಯುತ್ತದೆ. 3 ಬಾರಿ ಶಾಸಕರಾಗಿ ಅವರು ಗೆದ್ದಿದ್ದಾರೆ. ರಾಜಕಾರಣದಲ್ಲಿ ನಾವೆಲ್ಲ ಯಾವ ರೀತಿ ಇರಬೇಕು ಎಂಬುದನ್ನು ಅವರ ನಡತೆ ತೋರಿಸಿಕೊಡುತ್ತದೆ. ಯಾರ ಜೊತೆಯಲ್ಲೂ ಸುಧಾಕರ್ ಕೋಪ ಮಾಡಿಕೊಳ್ಳುತ್ತಿರಲಿಲ್ಲ, ಯಾರ ಶತ್ರುತ್ವವನ್ನು ಕಟ್ಟಿಕೊಳ್ಳುತ್ತಿರಲಿಲ್ಲ. ಅಂತಹ ಧೀಮಂತ ವ್ಯಕ್ತಿಯನ್ನು ನಾವು ಕಳೆದುಕೊಂಡಿದ್ದೇವೆ. ಅವರ ಆತ್ಮಕ್ಕೆ ಚಿರಶಾಂತಿಯನ್ನು ಕೋರುತ್ತೇನೆ.
- ನಮ್ಮನ್ನಗಲಿದ ಡಿ.ಸುಧಾಕರ್ ಅವರಿಗೆ ಇಂದು ವಿಧಾನಸಭೆಯಲ್ಲಿ ಸಂತಾಪ ಸೂಚಿಸಿ, ಮಾತನಾಡಿದೆ.This media couldn't be displayed. See it on the original post. -
Dr. G Parameshwara
@DrParameshwara
ಭಾರತ್ ಜೋಡೋ ಯುವ ಸಂಘ ಯೋಜನೆಯಡಿ ನೋಂದಾಯಿಸಿಕೊಂಡಿರುವ ಶಿರಾ ತಾಲೂಕಿನ ಬೇವಿನಹಳ್ಳಿ ಗ್ರಾಮದ ಶ್ರೀ ಚಿದಾನಂದ ಅವರಿಗೆ ಹಾಗೂ ಗುಬ್ಬಿ ತಾಲೂಕಿನ ಇರಕಸಂದ್ರ ಗ್ರಾಮದ ಶ್ರೀ ಸಂತೋಷ್ ಅವರಿಗೆ ನೋಂದಣಿ ದೃಢೀಕರಣ ಪತ್ರವನ್ನು ಇಂದು ಸಾಂಕೇತಿಕವಾಗಿ ವಿತರಿಸಿದೆ.
ನಮ್ಮ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಯಾದ ಭಾರತ್ ಜೋಡೋ ಯುವ ಸಂಘವು ಯುವಜನರಲ್ಲಿ ಶಿಸ್ತು, ಸೇವಾ ಮನೋಭಾವ, ಸಾಮಾಜಿಕ ಜವಾಬ್ದಾರಿ, ನಾಯಕತ್ವ ಹಾಗೂ ಸಂಘಟನಾ ಕೌಶಲ್ಯಗಳನ್ನು ಬೆಳೆಸುವ ಉದ್ದೇಶ ಹೊಂದಿದೆ. ಹೀಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ಯುವಕರು ಸಂಘಕ್ಕೆ ನೋಂದಾಯಿಸಿಕೊಂಡು ಸಮಾಜಮುಖಿ ಸೇವಾ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು.
ಈ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಕೆ.ವಿ.ಅಶೋಕ್, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿಗಳಾದ ಕೆ.ಪಿ. ಸಂಜೀವಪ್ಪ, ಈಶ್ವರಪ್ಪ, ತುಮಕೂರು ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳಾದ ಲಕ್ಷ್ಮೀನಾರಾಯಣ್ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು. -
Dr. G Parameshwara
@DrParameshwara
History shows that the Union Government only moved to release ₹3,000 crore during the previous crisis after the highest court intervened. With state losses currently estimated at a massive scale, why must Karnataka always be forced to litigate for basic relief?
We hope for a constructive approach from the Center. However, if our farmers are left unprotected, we are fully prepared to take our protest to Delhi and move the courts once again.
ಹಿಂದಿನ ಬರ ಬಿಕ್ಕಟ್ಟಿನ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್ ಮಧ್ಯಪ್ರವೇಶಿಸಿದ ಬಳಿಕವಷ್ಟೇ ಕೇಂದ್ರ ಸರ್ಕಾರ ₹3,000 ಕೋಟಿ ಪರಿಹಾರ ಬಿಡುಗಡೆ ಮಾಡಿತ್ತು. ಈಗ ಮತ್ತೆ ಬರ ಪರಿಹಾರಕ್ಕಾಗಿ ಕರ್ನಾಟಕವು ನ್ಯಾಯಾಲಯದ ಮೊರೆ ಹೋಗಬೇಕೆ?
ಕೇಂದ್ರದಿಂದ ಸಕಾಲದ ನೆರವು ಸಿಗುತ್ತದೆ ಎಂದು ನಾವು ನಂಬಿದ್ದೇವೆ. ಹಾಗಿದ್ದೂ, ನಮ್ಮ ರೈತರು ಸಂಕಷ್ಟಕ್ಕೆ ಬಿದ್ದರೆ ದೆಹಲಿಯಲ್ಲಿ ಪ್ರತಿಭಟನೆ ನಡೆಸಲು ಮತ್ತು ಮತ್ತೊಮ್ಮೆ ನ್ಯಾಯಾಲಯದ ಮೊರೆ ಹೋಗಲು ಪೂರ್ಣ ಸಿದ್ಧತೆಯನ್ನು ಮಾಡಿಕೊಂಡಿದ್ದೇವೆ. -
Dr. G Parameshwara
@DrParameshwara
The agricultural crisis in Tumakuru is devastating. Out of 16,000 hectares target for groundnut cultivation, sowing occurred on just 3,000 hectares due to extreme drought. Now, even those crops have dried up, with expected yields plunging to hardly one single hectare.
Our hardworking farmers invested ₹40,000 per acre only to watch their livelihoods turn to dust. Recognizing the severity, the State Government formally approached the Center to declare this a Natural Disaster and provide immediate relief. Yet, the Union Government refuses to acknowledge our plight. Bureaucratic indifference will not silence us. If the Center won't answer the cries of Tumakuru ’s farmers, Karnataka will ask louder!
ತುಮಕೂರಿನಲ್ಲಿ ಉದ್ಭವಿಸಿರುವ ಕೃಷಿ ಬಿಕ್ಕಟ್ಟು ಆಘಾತಕಾರಿಯಾಗಿದೆ. 16,000 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಬೇಕಿದ್ದ ನೆಲಗಡಲೆ ಕೇವಲ 3,000 ಹೆಕ್ಟೇರ್ಗೆ ಸೀಮಿತವಾಗಿದೆ. ಬಿತ್ತನೆ ಮಾಡಲಾಗಿರುವ ಆ ಸೀಮಿತ ಬೆಳೆ ಕೂಡ ನೀರಿಲ್ಲದೆ ಒಣಗಿವೆ. ಹೀಗಾಗಿ ಈ ಬಾರಿ ಕನಿಷ್ಠ ಒಂದು ಹೆಕ್ಟೇರ್ ಪ್ರದೇಶದಲ್ಲಿ ನೆಲಗಡಲೆ ಬೆಳೆ ತೆಗೆಯುವುದು ಕಷ್ಟಸಾಧ್ಯವಾಗಿದೆ.
ಎಕರೆಗೆ ₹40,000 ಖರ್ಚು ಮಾಡಿರುವ ನಮ್ಮ ರೈತರು ಬೆಳೆಹಾನಿಯಿಂದ ಬದುಕಿನ ಭರವಸೆಯನ್ನೇ ಕಳೆದುಕೊಂಡಿದ್ದಾರೆ. ಪರಿಸ್ಥಿತಿಯ ಗಂಭೀರತೆಯನ್ನು ಅರಿತು ಈ ಬರವನ್ನು ನೈಸರ್ಗಿಕ ವಿಪತ್ತು ಎಂದು ಘೋಷಿಸಿ, ತಕ್ಷಣದ ಪರಿಹಾರ ಒದಗಿಸುವಂತೆ ರಾಜ್ಯ ಸರ್ಕಾರ ಕೇಂದ್ರಕ್ಕೆ ಮನವಿ ಮಾಡುತ್ತಲೇ ಇದೆ. ಆದರೆ, ಕೇಂದ್ರ ಸರ್ಕಾರ ಮಾತ್ರ ನಮ್ಮ ಸಂಕಷ್ಟಕ್ಕೆ ಕಿವಿಗೊಡುತ್ತಿಲ್ಲ. ಅಧಿಕಾರಶಾಹಿಯ ಈ ಅಸಡ್ಡೆ ನಮ್ಮ ಧ್ವನಿಯನ್ನು ಹತ್ತಿಕ್ಕಲು ಸಾಧ್ಯವಿಲ್ಲ. ಕೇಂದ್ರ ಸ್ಪಂದಿಸದೆ ಹೋದರೆ ನ್ಯಾಯಯುತ ಪರಿಹಾರಕ್ಕಾಗಿ ತುಮಕೂರಿನ ರೈತರ ಜೊತೆಗೆ ಇಡೀ ನಾಡಿನ ಅನ್ನದಾತರ ಕೂಗು ಪ್ರತಿಧ್ವನಿಸಲಿದೆ. -
Dr. G Parameshwara
@DrParameshwara
I am deeply hurt to learn that the venue in Haldwani, Uttarakhand, where Congress President Mallikarjun Kharge participated in a public meeting on August 8, was reportedly subjected to a “purification” ritual because he belongs to the Dalit community.
India has made history by reaching the Moon’s south pole, yet our society still hesitates to touch a Dalit. It is painful that these two realities continue to coexist in our country.
I strongly condemn this humiliating and inhuman act against our senior leader Mallikarjun Kharge. It is a disturbing reminder that caste discrimination and untouchability continue to survive even today.
If the Leader of the Opposition in the Rajya Sabha can be subjected to such treatment under BJP rule, what must ordinary Dalits be facing? As a Dalit, I am deeply concerned whether India under Narendra Modi is being pushed back towards the age of Manusmriti.
Babasaheb Ambedkar gave us the Constitution as an answer to the humiliation and inequality he experienced and showed oppressed communities the path to a life of dignity. Yet vested interests that refuse to respect the law of this land continue to keep casteism, untouchability, superstition and regressive practices alive.
Such forces are not only anti-Constitution, but anti-national. Whenever they get an opportunity, they reveal the caste cruelty within them. If we do not put an end to this through the law, future generations will certainly not forgive us.
I urge Prime Minister Narendra Modi to ensure that cases are registered against those who practised unconstitutional untouchability in the name of “purification”, thereby insulting the dignity of Mallikarjun Kharge, and that they are subjected to strict punishment under the law.
This is also the right time for Dalits, oppressed and marginalised communities within the BJP to introspect and ask themselves whose hands they are strengthening.
@kharge -
Dr. G Parameshwara
@DrParameshwara
ಉತ್ತರಾಖಂಡದ ಹಲ್ದ್ವಾನಿಯ ರಾಮ ಲೀಲಾ ಮೈದಾನದಲ್ಲಿ ಆಗಸ್ಟ್ 08 ರಂದು ಮಲ್ಲಿಕಾರ್ಜುನ ಖರ್ಗೆಯವರು ಕಾಂಗ್ರೆಸ್ ಪಕ್ಷದ ಸಾರ್ವಜನಿಕ ಸಮಾರಂಭವೊಂದರಲ್ಲಿ ಭಾಗವಹಿಸಿದ್ದರು. ಖರ್ಗೆಯವರು ದಲಿತ ಸಮುದಾಯಕ್ಕೆ ಸೇರಿದವರು ಎನ್ನುವ ಕಾರಣಕ್ಕಾಗಿ ಅವರ ಕಾರ್ಯಕ್ರಮ ನಡೆದಿದ್ದ ಜಾಗವನ್ನು ಶುದ್ಧೀಕರಣ ಯಾಗದ ಮೂಲಕ ಸ್ವಚ್ಚ ಮಾಡಲಾಗಿದೆ ಎನ್ನುವ ವಿಚಾರ ತಿಳಿದು ಮನಸ್ಸಿಗೆ ಘಾಸಿಯಾಯಿತು. ಭಾರತೀಯರು ಮೊದಲ ಬಾರಿಗೆ ಚಂದ್ರನ ದಕ್ಷಿಣ ಧ್ರುವವನ್ನು ಸ್ಪರ್ಶಿಸಿ ವಿಶ್ವದಾಖಲೆ ಬರೆದರೂ, ಸಮಾಜ ಇನ್ನೂ ತನ್ನ ಭಾಗವಾಗಿರುವ ದಲಿತನನ್ನು ಮುಟ್ಟಲು ತಯಾರಿಲ್ಲ ಎನ್ನುವುದು ಕೂಡ ಅಷ್ಟೇ ಸತ್ಯ. ಇವು ಭಾರತೀಯ ಸಮಾಜದ ಎರಡು ಮುಖಗಳು ಎಂದು ಹೇಳಲು ದುಃಖವಾಗುತ್ತದೆ.
ನಮ್ಮ ಪಕ್ಷದ ಹಿರಿಯ ನಾಯಕರಾದ ಮಲ್ಲಿಕಾರ್ಜುನ ಖರ್ಗೆಯವರ ವಿರುದ್ಧ ಜಾತಿಯ ಹೆಸರಿನಲ್ಲಿ ನಡೆದಿರುವ ಈ ಅವಮಾನಕರ, ಅಮಾನವೀಯ ಕೃತ್ಯವನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ. ದೇಶದಲ್ಲಿ ಜಾತಿ ವ್ಯವಸ್ಥೆ ಮತ್ತು ಅಸ್ಪೃಶ್ಯತೆಗಳ ಕರಾಳ ಆಚರಣೆ ಇಂದಿಗೂ ಜೀವಂತವಾಗಿವೆ ಎನ್ನುವುದಕ್ಕೆ ಇದು ಸಾಕ್ಷಿ.
ಬಿಜೆಪಿ ಆಡಳಿತದಲ್ಲಿ ರಾಜ್ಯ ಸಭೆಯ ವಿಪಕ್ಷ ನಾಯಕನಿಗೇ ಈ ಪರಿಸ್ಥಿತಿಯಾದರೆ, ಇನ್ನು ಸಾಮಾನ್ಯ ದಲಿತರ ಪಾಡೇನು? ನರೇಂದ್ರ ಮೋದಿ ಅವರ ಆಡಳಿತದಲ್ಲಿ ಭಾರತ ಮತ್ತೆ ಮನುಸ್ಮೃತಿಯ ಕಾಲಕ್ಕೆ ಮರಳುತ್ತಿದೆಯೇ? ಎನ್ನುವ ಆತಂಕ ಒಬ್ಬ ದಲಿತನಾಗಿ ನನ್ನಲ್ಲಿ ಕಾಡುತ್ತಿದೆ.
ಬಾಬಾ ಸಾಹೇಬ್ ಅಂಬೇಡ್ಕರ್ ಅವರು ತಾವು ಕಂಡುಂಡ ಅವಮಾನ, ಅಸಮಾನತೆಗಳಿಗೆ ಸಂವಿಧಾನದ ರೂಪದಲ್ಲಿ ಪರಿಹಾರವನ್ನು ನೀಡಿದ್ದಾರೆ. ಶೋಷಿತ ಸಮುದಾಯಗಳಿಗೆ ಘನತೆಯ ಬದುಕಿನ ಹಾದಿ ತೋರಿದ್ದಾರೆ. ಸಂವಿಧಾನದ ಮೂಲಕ ಇಂತಹ ಅನಿಷ್ಟಗಳ ನಿರ್ಮೂಲನೆಗೆ ನಾವು ನಿರಂತರ ಶ್ರಮಿಸುತ್ತಿದ್ದರೂ, ಈ ನೆಲದ ಕಾನೂನನ್ನು ಗೌರವಿಸದ ಪಟ್ಟಭದ್ರ ಹಿತಾಸಕ್ತಿಗಳು ಜಾತಿ ಪದ್ಧತಿ, ಅಸ್ಪೃಶ್ಯತೆ, ಮೌಢ್ಯ ಕಂದಾಚಾರಗಳನ್ನು ಈಗಲೂ ಜೀವಂತವಾಗಿಡಲು ಕೆಲಸ ಮಾಡುತ್ತಿವೆ. ಇಂತವರು ಸಂವಿಧಾನ ವಿರೋಧಿಗಳು ಮಾತ್ರವಲ್ಲ, ರಾಷ್ಟ್ರವಿರೋಧಿಗಳು ಕೂಡ ಹೌದು. ಅವಕಾಶ ಸಿಕ್ಕಾಗಲೆಲ್ಲ ತಮ್ಮೊಳಗಿನ ಜಾತಿ ಕ್ರೌರ್ಯವನ್ನು ಹೊರಗೆಡವುತ್ತಿದ್ದಾರೆ. ಇದಕ್ಕೆ ಕಾನೂನಿನ ಮೂಲಕ ಅಂತ್ಯ ಹಾಡದೆ ಹೋದರೆ ಮುಂದಿನ ಪೀಳಿಗೆ ಖಂಡಿತಾ ನಮ್ಮನ್ನು ಕ್ಷಮಿಸುವುದಿಲ್ಲ.
ಶುದ್ಧೀಕರಣದ ನೆಪದಲ್ಲಿ ಸಂವಿಧಾನಬಾಹಿರವಾದ ಅಸ್ಪೃಶ್ಯತೆಯನ್ನು ಆಚರಣೆ ಮಾಡಿರುವ, ಆ ಮೂಲಕ ಮಲ್ಲಿಕಾರ್ಜುನ ಖರ್ಗೆಯವರ ಘನತೆಗೆ ಚ್ಯುತಿಯುಂಟು ಮಾಡಿರುವ ದುಷ್ಟರ ಮೇಲೆ ಮೊಕದ್ದಮೆಯನ್ನು ದಾಖಲಿಸಿ, ಕಠಿಣ ಶಿಕ್ಷೆಗೆ ಗುರಿಪಡಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅವರನ್ನು ಒತ್ತಾಯಿಸುತ್ತೇನೆ.
ಇಂದು ಬಿಜೆಪಿ ಪಕ್ಷದಲ್ಲಿರುವ ಶೋಷಿತ, ದಲಿತ, ತಳ ಸಮುದಾಯಗಳ ಜನರು ತಾವು ಎಂಥವರ ಕೈ ಬಲಪಡಿಸುತ್ತಿದ್ದೇವೆ ಎನ್ನುವುದನ್ನು ಒಮ್ಮೆ ಆತ್ಮವಿಮರ್ಷೆಗೆ ಒಡ್ಡಿಕೊಳ್ಳಲು ಇದು ಸಕಾಲ.
@kharge -
Dr. G Parameshwara
@DrParameshwara
Karnataka is facing an unprecedented agricultural crisis with 240 taluks facing severe droughts. Despite completing all mandatory assessments and submitting our distress reports, the Union Government maintains a troubling silence.
We have done our duty by the book. It is now time for the Center to do theirs. If our letters go unanswered, our voices will only grow louder until justice is delivered to our fields.
ರಾಜ್ಯವು ಹಿಂದೆಂದೂ ಕಂಡರಿಯದ ಭೀಕರ ಕೃಷಿ ಬಿಕ್ಕಟ್ಟನ್ನು ಎದುರಿಸುತ್ತಿದೆ. ರಾಜ್ಯದ 240 ತಾಲ್ಲೂಕುಗಳಲ್ಲಿ ತೀವ್ರ ಬರ ಪರಿಸ್ಥಿತಿ ಇದೆ. ಈ ಬಗ್ಗೆ ಅಧ್ಯಯನ ನಡೆಸಿ ಕೇಂದ್ರಕ್ಕೆ ಸಮಗ್ರ ವರದಿಯನ್ನು ಸಲ್ಲಿಸುತ್ತೇವೆ. ರಾಜ್ಯದ ಬರ ಪರಿಸ್ಥಿತಿಯ ಗಂಭೀರತೆಯನ್ನು ಕೇಂದ್ರಕ್ಕೆ ಈಗಾಗಲೇ ಮನವರಿಕೆ ಮಾಡಿದ್ದರೂ, ಕೇಂದ್ರ ಸರ್ಕಾರ ಮಾತ್ರ ಇನ್ನೂ ಸ್ಪಂದಿಸಿಲ್ಲ.
ನಾವು ನಮ್ಮ ಕರ್ತವ್ಯವನ್ನು ಪ್ರಾಮಾಣಿಕವಾಗಿ ನಿರ್ವಹಿಸಿದ್ದೇವೆ. ಈಗ ಕೇಂದ್ರ ಸರ್ಕಾರ ತನ್ನ ಕರ್ತವ್ಯವನ್ನು ನಿಭಾಯಿಸಬೇಕಿರುವ ಸಮಯ. ನಮ್ಮ ಮನವಿಗೆ ಕೇಂದ್ರ ಸ್ಪಂದಿಸದಿದ್ದರೆ ನ್ಯಾಯಕ್ಕಾಗಿ ನಮ್ಮ ಧ್ವನಿ ಮತ್ತಷ್ಟು ಗಟ್ಟಿಯಾಗಲಿದೆ. -
Dr. G Parameshwara
@DrParameshwara
ಬೆಂಗಳೂರಿನ ಮಹಾಬೋಧಿ ಸೊಸೈಟಿಯ ಪೂಜ್ಯ ಬಿಕ್ಕು ಕಸ್ಸಾಪ ಬಂತೇಜಿ, ಬಿಕ್ಕು ಬುದ್ಧ ದತ್ತ ಬಂತೇಜಿ, ಸುಗತಾನಂದ ಬಂತೇಜಿ ಹಾಗೂ ಇತರರು ಇಂದು ಸದಾಶಿವನಗರದ ನನ್ನ ನಿವಾಸಕ್ಕೆ ಆಗಮಿಸಿ, ಆಶೀರ್ವದಿಸಿ ಶುಭ ಹಾರೈಸಿದರು.
ಬಂತೇಜಿ ರವರು ನೀಡಿದ ಧಮ್ಮ ಸಂದೇಶ ಮತ್ತು ಆಶೀರ್ವಾದಗಳು ನನ್ನ ಜೀವನಕ್ಕೆ ಸದಾ ಮಾರ್ಗದರ್ಶನ. ಅವರ ಹಾರೈಕೆಯು ನಾನು ಜೀವನದಲ್ಲಿ ಸದಾ ಸತ್ಪಥದತ್ತ ಮುನ್ನಡೆಯಲು, ಸಮಾಜದ ಒಳಿತಿಗಾಗಿ ಕಾರ್ಯನಿರ್ವಹಿಸಲು ನಿರಂತರ ಪ್ರೇರಣೆಯಾಗಲಿ. -
Dr. G Parameshwara
@DrParameshwara
ಖಾತೆ ಹಂಚಿಕೆ ಮಾಡಿ, ನೂತನ ಸಚಿವ ಸಂಪುಟ ರಚಿಸಿ, ರಾಜ್ಯವನ್ನು ಅಭಿವೃದ್ಧಿಯ ಹಾದಿಯಲ್ಲಿ ಮುನ್ನಡೆಸುತ್ತಿರುವ ಮುಖ್ಯಮಂತ್ರಿ ಶ್ರೀ @DKShivakumar ಅವರನ್ನು ಅಧಿವೇಶನ ಆರಂಭಕ್ಕೂ ಮುನ್ನ ಭೇಟಿಯಾಗಿ ಅಭಿನಂದಿಸಿದೆ.
-
Dr. G Parameshwara
@DrParameshwara
ವಿಧಾನಸಭೆ ಅಧಿವೇಶನ ಆರಂಭಕ್ಕೂ ಮುನ್ನ ಹಂಗಾಮಿ ಸಭಾಧ್ಯಕ್ಷರಾದ ಟಿ. ಬಿ. ಜಯಚಂದ್ರ ಅವರನ್ನು ಮುಖ್ಯಮಂತ್ರಿ ಶ್ರೀ @DKShivakumar ಅವರ ಜೊತೆಗೂಡಿ ಭೇಟಿಯಾಗಿ ಅಭಿನಂದಿಸಿದೆ.
-
Dr. G Parameshwara
@DrParameshwara
ವಿಧಾನ ಪರಿಷತ್ತಿನ ಸಭಾಪತಿ ಸ್ಥಾನಕ್ಕೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಸಲೀಂ ಅಹ್ಮದ್ ಅವರು ವಿಧಾನ ಪರಿಷತ್ ಕಾರ್ಯದರ್ಶಿ ಜ್ಯೋತಿ ಅವರಿಗೆ ಹಾಗೂ ವಿಧಾನ ಸಭೆಯ ಸಭಾಧ್ಯಕ್ಷರ ಸ್ಥಾನಕ್ಕೆ ಜಿ.ಎಸ್.ಪಾಟೀಲ್ ಅವರು ವಿಧಾನ ಸಭೆಯ ಕಾರ್ಯದರ್ಶಿ ಎಂ.ಕೆ.ವಿಶಾಲಾಕ್ಷಿ ಅವರಿಗೆ ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಮುಖ್ಯಮಂತ್ರಿ ಶ್ರೀ @DKShivakumar ಹಾಗೂ ಸಂಪುಟ ಸಹೋದ್ಯೋಗಿಗಳ ಜೊತೆ ಹಾಜರಿದ್ದು, ಶುಭ ಹಾರೈಸಿದೆ.
-
Dr. G Parameshwara
@DrParameshwara
On World Organ Donation Day, we honour the selfless donors whose gift has given countless people a second chance at life.
Organ donation is not just a medical act - it is a lasting legacy of compassion, hope and humanity. Let us spread awareness, clear misconceptions and recognise the extraordinary impact one donor can make.
#worldorgandonationday #organdonation -
Dr. G Parameshwara
@DrParameshwara
ನಗರಾಭಿವೃದ್ಧಿ ಸಚಿವರಾದ @Dr_Yathindra_S ಅವರು ಇಂದು ನನ್ನನ್ನು ಸದಾಶಿವನಗರದ ಗೃಹಕಚೇರಿಯಲ್ಲಿ ಭೇಟಿಯಾಗಿ, ಕೆಲಕಾಲ ಸಮಾಲೋಚನೆ ನಡೆಸಿದರು.
-
Dr. G Parameshwara
@DrParameshwara
ಬರ ಸಂಕಷ್ಟದ ಈ ಸಮಯದಲ್ಲಿ ರೈತರು, ಸಾರ್ವಜನಿಕರಿಗೆ ಬೆಂಬಲವಾಗಿ ನಮ್ಮ ಸರ್ಕಾರ ನಿಲ್ಲಲಿದೆ.
This media couldn't be displayed. See it on the original post. -
Dr. G Parameshwara
@DrParameshwara
ಸಿಎಂ ಗೃಹಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಶ್ರೀ @DKShivakumar ಅವರ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಹದ್ಯೋಗಿಗಳು ಹಾಗೂ ಹಿರಿಯ ಮುಖಂಡರುಗಳೊಂದಿಗಿನ ಸಭೆಯಲ್ಲಿ ಪಾಲ್ಗೊಂಡು ವಿವಿಧ ಬೆಳವಣಿಗೆಗಳ ಕುರಿತು ಚರ್ಚಿಸಲಾಯಿತು.
ಸಭೆಯಲ್ಲಿ ಕೆಪಿಸಿಸಿ ಅಧ್ಯಕ್ಷರಾದ ಬಿ.ಕೆ. ಹರಿಪ್ರಸಾದ್, ಸಚಿವರಾದ ಕೆ.ಜೆ. ಜಾರ್ಜ್, ಎಂ.ಬಿ. ಪಾಟೀಲ್, ಕೆ.ಎಚ್. ಮುನಿಯಪ್ಪ, ರಾಮಲಿಂಗಾ ರೆಡ್ಡಿ, ಯು.ಟಿ. ಖಾದರ್, ಕೃಷ್ಣ ಬೈರೇಗೌಡ, ಪ್ರಿಯಾಂಕ್ ಖರ್ಗೆ, ಯತೀಂದ್ರ ಸಿದ್ದರಾಮಯ್ಯ ಸೇರಿದಂತೆ ಎಲ್ಲ ಸಚಿವರುಗಳು ಮತ್ತು ಪ್ರಮುಖ ನಾಯಕರುಗಳು ಉಪಸ್ಥಿತರಿದ್ದರು. -
Dr. G Parameshwara
@DrParameshwara
ರಾಜ್ಯದಲ್ಲಿ ಭೀಕರ ಬರ ಪರಿಸ್ಥಿತಿ ಇದೆ. ಈ ಬಾರಿ ಅತೀ ಕಡಿಮೆ ಮಳೆಯಾಗಿದ್ದು, ಬೆಳೆ ನಷ್ಟ ಉಂಟಾಗಿದೆ. ಸಮರ್ಪಕ ಕುಡಿಯುವ ನೀರು, ಜಾನುವಾರುಗಳಿಗೆ ಮೇವು, ರೈತರಿಗೆ ವಿಮೆ ಹಣ ಪಾವತಿ, ಜನರಿಗೆ ಉದ್ಯೋಗ ಒದಗಿಸುವುದು ಸೇರಿದಂತೆ ಅನೇಕ ಸವಾಲುಗಳು ನಮ್ಮೆದುರಿಗಿದೆ.
ಈ ನಿಟ್ಟಿನಲ್ಲಿ ನಾವು ಕಾರ್ಯಪ್ರವೃತ್ತರಾಗಿದ್ದು, ಅಗತ್ಯ ಕ್ರಮಗಳನ್ನು ಕೈಗೊಂಡಿದ್ದೇವೆ. ಸಚಿವರುಗಳು ತಮಗೆ ನಿಯೋಜಿಸಿರುವ ಜಿಲ್ಲೆಗಳಿಗೆ ಭೇಟಿ ನೀಡಿ ಬರ ಪರಿವೀಕ್ಷಣೆ ನಡೆಸುತ್ತಿದ್ದಾರೆ. ನಾನು ಕೂಡ ಕಳೆದೆರಡು ದಿನ ತುಮಕೂರು ಜಿಲ್ಲೆಯಲ್ಲಿ ಪ್ರವಾಸ ಕೈಗೊಂಡು, ವಿವಿಧ ತಾಲೂಕುಗಳಿಗೆ ತೆರಳಿ ಬರ ಪರಿಸ್ಥಿತಿಯ ಪರಿಶೀಲನೆ ನಡೆಸಿದ್ದೇನೆ.
ಇಂತಹ ಸಂಕಷ್ಟದ ಸಮಯದಲ್ಲಿ ರೈತರೊಂದಿಗೆ ನಮ್ಮ ಸರ್ಕಾರ ನಿಲ್ಲಲಿದೆ ಎಂಬ ಭರವಸೆಯನ್ನು ನೀಡಿದ್ದೇನೆ. -
Dr. G Parameshwara
@DrParameshwara
ಈ ವರ್ಷ ರಾಜ್ಯದಲ್ಲಿ ಕಡಿಮೆ ಮಳೆಯಾಗಿದ್ದು, ಭೀಕರ ಬರ ತಲೆದೋರಿದೆ. ಇಂತಹ ಸಂದರ್ಭದಲ್ಲಿ ಜನರಿಗೆ ಕುಡಿಯುವ ನೀರು, ಜಾನುವಾರುಗಳಿಗೆ ಮೇವು, ಜನರಿಗೆ ಉದ್ಯೋಗ ಒದಗಿಸುವ ಸವಾಲುಗಳು ನಮ್ಮೆದುರಿಗಿದೆ. ಈ ನಿಟ್ಟಿನಲ್ಲಿ ನಾವು ಕಾರ್ಯಪ್ರವೃತ್ತರಾಗಿದ್ದೇವೆ.
ಕಳೆದೆರಡು ದಿನ ತುಮಕೂರು ಜಿಲ್ಲಾ ಪ್ರವಾಸ ಕೈಗೊಂಡು, ಬರ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ, ಪರಿಸ್ಥಿತಿ ಅವಲೋಕನ ನಡೆಸಿದ್ದೇನೆ.
ರೈತರ ಜಮೀನುಗಳಿಗೆ ಭೇಟಿ ನೀಡಿ, ಬರದಿಂದ ಉಂಟಾದ ಸಮಸ್ಯೆಗಳ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದು, ಬರ ಪರಿಸ್ಥಿತಿಯ ನಿರ್ವಹಣೆಗೆ ಕೈಗೊಳ್ಳಬೇಕಿರುವ ಕ್ರಮಗಳ ಬಗ್ಗೆ ನಿರ್ದೇಶನ ನೀಡಿದ್ದೇನೆ.
ಇಂತಹ ಸಂಕಷ್ಟದ ಸಮಯದಲ್ಲಿ ರೈತರು ಮತ್ತು ಸಾರ್ವಜನಿಕರೊಂದಿಗೆ ನಮ್ಮ ಸರ್ಕಾರ ಬೆಂಬಲವಾಗಿ ನಿಲ್ಲಲಿದೆ.This media couldn't be displayed. See it on the original post. -
Dr. G Parameshwara
@DrParameshwara
ತುಮಕೂರು ಜಿಲ್ಲೆಯ ಬರಪೀಡಿತ ಪ್ರದೇಶಗಳಿಗೆ ಸಕಾಲದಲ್ಲಿ ನೆರವು ಒದಗಿಸಲು ಸರ್ಕಾರ ಬದ್ಧವಾಗಿದೆ. ಈ ನಿಟ್ಟಿನಲ್ಲಿ ಕುಡಿಯುವ ನೀರಿನ ಪೂರೈಕೆಗೆ ಆದ್ಯತೆ ನೀಡುವುದರ ಜೊತೆಗೆ, ರೈತರ ಹಿತ ಕಾಪಾಡಲು ಅಗತ್ಯವಿರುವ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.
ಕುಡಿಯುವ ನೀರಿನ ವ್ಯವಸ್ಥೆಗಾಗಿ ಜಿಲ್ಲಾ ಪಂಚಾಯಿತಿ ಸಿಇಒ ಅವರಿಗೆ ₹5 ಕೋಟಿ ಅನುದಾನವನ್ನು ನೀಡಲಾಗಿದೆ. ತುರ್ತು ಅಗತ್ಯಕ್ಕಾಗಿ ಪ್ರತಿ ಸ್ಥಳೀಯ ಶಾಸಕರಿಗೆ ₹1 ಕೋಟಿ ಅನುದಾನ ಒದಗಿಸಲಾಗಿದೆ. ಇದರ ಜೊತೆಗೆ, ರಾಜ್ಯಾದ್ಯಂತ ಬರ ಪರಿಸ್ಥಿತಿಗೆ ತ್ವರಿತವಾಗಿ ಸ್ಪಂದಿಸಲು ಜಿಲ್ಲಾಧಿಕಾರಿಗಳು ಹಾಗೂ ಪಿಡಿಒಗಳ ಖಾತೆಗಳಲ್ಲಿ ₹329 ಕೋಟಿ ಲಭ್ಯವಿದೆ.
ಈ ಸಂಕಷ್ಟದ ಸಂದರ್ಭದಲ್ಲಿ ಜನರಿಗೆ ಸಮರ್ಪಕ ಕುಡಿಯುವ ನೀರನ್ನು ಒದಗಿಸುವುದು ನಮ್ಮ ಸರ್ಕಾರದ ಪ್ರಮುಖ ಆದ್ಯತೆಯಾಗಿದೆ. -
Dr. G Parameshwara
@DrParameshwara
ಮಂಗಳವಾರ ತುಮಕೂರಿನ ವಿವಿಧ ತಾಲೂಕುಗಳ ಗ್ರಾಮಗಳಿಗೆ ಭೇಟಿ ನೀಡಿ, ಬರ ಪರಿಸ್ಥಿತಿಯ ಅವಲೋಕನ ನಡೆಸಿದೆ.
ಬಳಿಕ ತಿಪಟೂರು ಮತ್ತು ತುಮಕೂರು ಉಪವಿಭಾಗಗಳ ಪ್ರಗತಿ ಪರಿಶೀಲನಾ ಸಭೆ ನಡೆಸಿ, ಕುಡಿಯುವ ನೀರಿನ ಲಭ್ಯತೆ, ಜಾನುವಾರುಗಳಿಗೆ ಮೇವು, ಜನರಿಗೆ ಉದ್ಯೋಗ ಸೇರಿದಂತೆ ವಿವಿಧ ವಿಷಯಗಳ ಕುರಿತು ಸುದೀರ್ಘವಾಗಿ ಚರ್ಚಿಸಿ, ಬರ ಪರಿಸ್ಥಿತಿ ಎದುರಿಸಲು ಅಧಿಕಾರಿಗಳಿಗೆ ಅಗತ್ಯ ನಿರ್ದೇಶನ ನೀಡಿದೆ.
ಈ ಕುರಿತಾದ ಪತ್ರಿಕಾ ವರದಿಗಳು ಹೀಗಿವೆ.. -
Dr. G Parameshwara
@DrParameshwara
ಇಂದು ತುಮಕೂರಿನ ಸುಕ್ಷೇತ್ರ ಬೆಳ್ಳಾವಿಯ ಶ್ರೀ ಕಾರದೇಶ್ವರ ಮಠಕ್ಕೆ ಭೇಟಿ ನೀಡಿ, ಶ್ರೀ ಮ.ನಿ.ಪ್ರ.ಸ್ವ ಕಾರದ ಮಹಾಶಿವಯೋಗಿಗಳ ಕರ್ತೃ ಗದ್ದುಗೆಗೆ ವಿಶೇಷ ಪೂಜೆ ಸಲ್ಲಿಸಿದೆ.
ಬರದಿಂದ ರಾಜ್ಯದಲ್ಲಿ ಆತಂಕ ಮನೆಮಾಡಿರುವ ಈ ಸಂದರ್ಭದಲ್ಲಿ ಸಮಸ್ತ ಜನರಿಗೂ ಶಾಂತಿ - ನೆಮ್ಮದಿಯ ದಾರಿ ತೋರುವಂತೆ ದೈವಸ್ವರೂಪಿ ಗುರುಗಳಲ್ಲಿ ಮನಪೂರ್ವಕವಾಗಿ ಪ್ರಾರ್ಥಿಸಿದೆ. -
Dr. G Parameshwara
@DrParameshwara
ಬರ ಪರಿಸ್ಥಿತಿಯ ಈ ಸಂದರ್ಭದಲ್ಲಿ ಕುಡಿಯುವ ನೀರಿನ ಸಮಸ್ಯೆಗೆ ತ್ವರಿತವಾಗಿ ಸ್ಪಂದಿಸುವ ಉದ್ದೇಶದಿಂದ, ತುರ್ತು ಪರಿಹಾರ ಅನುದಾನವನ್ನು ಆಯಾ ತಾಲ್ಲೂಕುಗಳ ತಹಶೀಲ್ದಾರ್ಗಳಿಗೆ ಬಿಡುಗಡೆ ಮಾಡಲಾಗಿದೆ. ಅನುದಾನ ಲಭ್ಯವಿದ್ದರೂ ವಿಳಂಬ ಮಾಡುವುದು ಅಥವಾ ಅನುದಾನ ಲಭ್ಯವಿಲ್ಲವೆಂದು ಸುಳ್ಳು ಮಾಹಿತಿ ನೀಡುವುದು ಕಂಡುಬಂದಲ್ಲಿ ಯಾವುದೇ ಮುಲಾಜಿಲ್ಲದೆ ತಕ್ಷಣ ಕ್ರಮ ಕೈಗೊಳ್ಳಲಾಗುವುದು.
ಗ್ರಾಮೀಣ ಜನರಿಗೆ ಶುದ್ಧ ಕುಡಿಯುವ ನೀರು ತಲುಪಿಸುವುದೇ ನಮ್ಮ ಸರ್ಕಾರದ ಆದ್ಯತೆಯಾಗಿದೆ. -
Dr. G Parameshwara
@DrParameshwara
ಪಾವಗಡ ತಾಲ್ಲೂಕಿನ ಬರ ಪರಿಸ್ಥಿತಿ ಪರಿಶೀಲನೆಯ ಭಾಗವಾಗಿ, ಕೃಷಿ ಹಾಗೂ ಕುಡಿಯುವ ನೀರಿನ ಸ್ಥಿತಿಗತಿ ಮತ್ತು ಕೈಗೊಳ್ಳಲಾಗುತ್ತಿರುವ ಪರಿಹಾರ ಕ್ರಮಗಳನ್ನು ಪರಿಶೀಲಿಸಿದೆ. ತಾಲ್ಲೂಕಿನಲ್ಲಿ 19,000 ಹೆಕ್ಟೇರ್ನಲ್ಲಿ ನೆಲಗಡಲೆ ಬಿತ್ತನೆ ಗುರಿ ಹೊಂದಲಾಗಿದ್ದರೂ, ಇದುವರೆಗೆ ಸುಮಾರು 4,000 ಹೆಕ್ಟೇರ್ನಲ್ಲಿ ಮಾತ್ರ ಬಿತ್ತನೆಯಾಗಿದೆ. ಇದರಿಂದ ರೈತರ ಸಮಸ್ಯೆ ಎಷ್ಟಿದೆ ಎಂಬುದು ತಿಳಿಯುತ್ತದೆ.
ಈ ಬಿಕ್ಕಟ್ಟಿನ ಸಂದರ್ಭದಲ್ಲಿ ಜಾನುವಾರುಗಳಿಗೆ ಮೇವಿನ ಕೊರತೆಯಾಗದಂತೆ, ತುಮಕೂರು ಸಹಕಾರಿ ಹಾಲು ಉತ್ಪಾದಕರ ಸಂಘದ ವತಿಯಿಂದ ರೈತರಿಗೆ ಮೇವಿನ ಬೀಜದ ಕಿಟ್ಗಳನ್ನು ವಿತರಿಸಲಾಗಿದೆ. ಮುಂದಿನ ದಿನಗಳಲ್ಲಿ ನೀರಿನ ಕೊರತೆಯಾಗದಂತೆ, ತುಂಗಭದ್ರಾ ಜಲಾಶಯದ ಹಿನ್ನೀರಿನಿಂದ ನೀರು ಪಡೆಯುವ ಮೂಲಕ ಶಾಶ್ವತ ಹಾಗೂ ಸಮರ್ಪಕ ನೀರಿನ ವ್ಯವಸ್ಥೆ ಕಲ್ಪಿಸಲು ಕ್ರಮ ಕೈಗೊಳ್ಳಲಾಗುತ್ತಿದೆ.
ರೈತರ ಕಷ್ಟಗಳಿಗೆ ನಮ್ಮ ಸರ್ಕಾರ ಸದಾ ಸ್ಪಂದಿಸಲಿದೆ. ತಕ್ಷಣದ ಪರಿಹಾರ ಕ್ರಮಗಳ ಜೊತೆಗೆ, ಬರ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿಯೂ ಅಗತ್ಯ ಕ್ರಮಗಳನ್ನು ಮುಂದುವರಿಸಲಾಗುವುದು. -
Dr. G Parameshwara
@DrParameshwara
ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನ ಬರ ಪರಿಸ್ಥಿತಿ ಪರಿಶೀಲನೆಯ ಭಾಗವಾಗಿ, ಸಿಎಪಿ ಅನುದಾನದಡಿ ಕೊರೆದ ಕೊಳವೆಬಾವಿಗಳನ್ನು ಪರಿಶೀಲಿಸಿದೆ. ಜೊತೆಗೆ, ಸುತ್ತಮುತ್ತಲಿನ ಗ್ರಾಮಗಳಿಗೆ ನೀರು ಪೂರೈಸುವ ವ್ಯವಸ್ಥೆಯನ್ನು ಪರಿಶೀಲಿಸಿದೆ.
ಗ್ರಾಮೀಣ ಕುಡಿಯುವ ನೀರಿನ ವ್ಯವಸ್ಥೆಯನ್ನು ಅಧಿಕಾರಿಗಳು ನಿರಂತರವಾಗಿ ಗಮನಿಸುವಂತೆ ಹಾಗೂ ನೀರಿನ ಕೊರತೆ ಇರುವ ಕಡೆಗಳಲ್ಲಿ ಪರ್ಯಾಯ ವ್ಯವಸ್ಥೆಯನ್ನು ಕಲ್ಪಿಸಿ ನೀರು ಪೂರೈಸುವಂತೆ ಸೂಚಿಸಲಾಗಿದೆ.
ಬರದಿಂದ ಎದುರಾಗಿರುವ ಸಮಸ್ಯೆಗಳಿಗೆ ತ್ವರಿತವಾಗಿ ಸ್ಪಂದಿಸಿ, ಸಂಕಷ್ಟದಲ್ಲಿರುವ ಪ್ರತಿಯೊಂದು ಗ್ರಾಮಕ್ಕೂ ಅಗತ್ಯ ನೆರವು ತಲುಪಿಸುವುದು ನಮ್ಮ ಸರ್ಕಾರದ ಬದ್ಧತೆಯಾಗಿದೆ. -
Dr. G Parameshwara
@DrParameshwara
On the birth anniversary of Dr. Vikram Sarabhai, we pay tribute to the visionary scientist who laid the foundation for India’s space programme and gave the nation the confidence to dream beyond the skies.
For Dr. Sarabhai, science was not merely about discovery - it was a powerful instrument for national development and social progress. His vision helped build institutions, nurture generations of scientists and place India firmly on the path of scientific self-reliance.
His remarkable legacy continues to inspire India’s journey in space, science and innovation.
#vikramsarabhai -
Dr. G Parameshwara
@DrParameshwara
ಆಟಿ ಅಮಾವಾಸ್ಯೆಯು ಕರಾವಳಿಯ ಕೃಷಿ ಪರಂಪರೆ, ಶ್ರೀಮಂತ ಸಂಸ್ಕೃತಿ ಹಾಗೂ ಜೀವನ ಪದ್ಧತಿಯೊಂದಿಗೆ ಬೆಸೆದುಕೊಂಡಿರುವ ವಿಶಿಷ್ಟ ಆಚರಣೆಯಾಗಿದೆ.
ಇದೇ ದಿನದಂದು ಕಡಲತಡಿಯ ಕುಂದ ಕನ್ನಡಿಗರು ತಮ್ಮ ಭಾಷೆ ಮತ್ತು ಬದುಕನ್ನು ಜಗತ್ತಿನೆದುರು ತೆರೆದಿಡುವ ಪ್ರಯತ್ನವಾಗಿ ಕುಂದಾಪ್ರ ಕನ್ನಡ ದಿನವನ್ನು ಆಚರಿಸುತ್ತಾರೆ.
ನಮ್ಮ ನಾಡಿನ ವೈವಿಧ್ಯಮಯ ಆಚರಣೆ, ಪದ್ಧತಿಗಳನ್ನು ಸಂಭ್ರಮಿಸೋಣ. ಮುಂದಿನ ಪೀಳಿಗೆಗೆ ಈ ಬಗ್ಗೆ ಅರಿವು ಮೂಡಿಸೋಣ.
ಆಟಿ ಅಮಾವಾಸ್ಯೆ ಮತ್ತು ವಿಶ್ವ ಕುಂದಾಪ್ರ ಕನ್ನಡ ದಿನದ ಶುಭಾಶಯಗಳು. -
Dr. G Parameshwara
@DrParameshwara
On National Librarians’ Day, we celebrate the dedicated librarians who preserve knowledge, nurture curiosity and make learning accessible to generations.
Remembering Dr. S. R. Ranganathan, the Father of Library Science in India, on his birth anniversary and honouring all those who keep the doors of knowledge open for everyone.
#nationallibrariansday #srranganathan -
Dr. G Parameshwara
@DrParameshwara
ಸಾರ್ವಜನಿಕರ ಗಮನಕ್ಕೆ..
ನನ್ನ ದಿನನಿತ್ಯದ ಕಾರ್ಯಕ್ರಮಗಳು, ಸಭೆ - ಸಮಾರಂಭಗಳ ಕುರಿತ ಮಾಹಿತಿ ತಿಳಿದುಕೊಳ್ಳಲು ಈ ಕೂಡಲೇ Dr. G Parameshwara ವಾಟ್ಸಾಪ್ ಚಾನೆಲ್ ಅನ್ನು ಫಾಲೋ ಮಾಡಿ, ನನ್ನೊಂದಿಗೆ ನಿರಂತರ ಸಂಪರ್ಕದಲ್ಲಿರಿ.
Stay connected with me on WhatsApp.
Follow the Dr. G. Parameshwara WhatsApp Channel for regular updates on my daily programmes, meetings, events and public engagements - all in one place, directly on your phone.
Follow the channel and stay updated. Thank you. -
Dr. G Parameshwara
@DrParameshwara
ಯುವಶಕ್ತಿಯೇ ದೇಶದ ಭವಿಷ್ಯದ ಶಕ್ತಿ. ಯುವಜನರಲ್ಲಿ ಸಾಮಾಜಿಕ ಜವಾಬ್ದಾರಿ ಹಾಗೂ ನಾಯಕತ್ವದ ಗುಣಗಳನ್ನು ಬೆಳೆಸುವ ಮೂಲಕ ಅವರನ್ನು ರಾಷ್ಟ್ರ ನಿರ್ಮಾಣದ ಪಾಲುದಾರರನ್ನಾಗಿಸುವ ಹೊಣೆ ನಮ್ಮೆಲ್ಲರದ್ದು.
ಯುವಜನರ ಕನಸುಗಳಿಗೆ ಅವಕಾಶ, ಕೌಶಲ್ಯಗಳಿಗೆ ವೇದಿಕೆ ಹಾಗೂ ಬದುಕಿಗೆ ಭದ್ರತೆ ಕಲ್ಪಿಸುವ ನಿಟ್ಟಿನಲ್ಲಿ ನಮ್ಮ ಸರ್ಕಾರ ಯುವನಿಧಿ, ಕೌಶಲ್ಯ ಕರ್ನಾಟಕ ಸೇರಿದಂತೆ ಹಲವು ಯೋಜನೆಗಳನ್ನು ಜಾರಿಗೊಳಿಸಿದೆ. ಯುವ ಶಕ್ತಿಯನ್ನು ಸಶಕ್ತಗೊಳಿಸಿ ಸಮೃದ್ಧ ಭವಿಷ್ಯವನ್ನು ನಿರ್ಮಿಸೋಣ.
ನನ್ನೆಲ್ಲಾ ಯುವಮಿತ್ರರಿಗೆ ಅಂತಾರಾಷ್ಟ್ರೀಯ ಯುವ ದಿನದ ಶುಭಾಶಯಗಳು. -
Dr. G Parameshwara
@DrParameshwara
ತುಮಕೂರು ಜಿಲ್ಲಾ ಪ್ರವಾಸ ಕೈಗೊಂಡು ವಿವಿಧ ತಾಲೂಕುಗಳಿಗೆ ಭೇಟಿ ನೀಡಿ, ಬರ ಪರಿಸ್ಥಿತಿಯ ಅವಲೋಕನ ನಡೆಸಿದೆ.
ಕುಡಿಯುವ ನೀರಿನ ಲಭ್ಯತೆ, ಜಾನುವಾರುಗಳಿಗೆ ಮೇವು, ಜನರಿಗೆ ಉದ್ಯೋಗ ಸೇರಿದಂತೆ ವಿವಿಧ ವಿಷಯಗಳ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆಯುವುದರ ಜೊತೆಗೆ ರೈತರ ಅಹವಾಲುಗಳನ್ನು ಸ್ವೀಕರಿಸಿದೆ.
ಸಮಯಕ್ಕೆ ಸರಿಯಾಗಿ ಮಳೆಯಾಗದೇ ಇರುವುದರಿಂದ ಬೆಳೆ ನಷ್ಟವಾಗಿದೆ. ಇದರಿಂದ ರೈತರು ಸಂಕಷ್ಟದಲ್ಲಿದ್ದಾರೆ. ಇಂತಹ ಸಮಯದಲ್ಲಿ ಅವರೊಂದಿಗೆ ನಿಲ್ಲುವುದು ಅಧಿಕಾರದಲ್ಲಿರುವ ನಮ್ಮ ಜವಾಬ್ದಾರಿ ಮತ್ತು ಕರ್ತವ್ಯ.
ಅನ್ನದಾತರ ನೆರವಿಗೆ ಸದಾ ನಮ್ಮ ಸರ್ಕಾರ ಇರಲಿದೆ.This media couldn't be displayed. See it on the original post. -
Dr. G Parameshwara
@DrParameshwara
ಇಂದು ತಿಪಟೂರಿನ ಕ್ಷೀರಭವನದ ಸಭಾಂಗಣದಲ್ಲಿ ತಿಪಟೂರು ಮತ್ತು ತುಮಕೂರು ಉಪವಿಭಾಗಗಳ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಬಳಿಕ ಮಾಧ್ಯಮಕ್ಕೆ ಮಾತನಾಡಿದೆ.
ರಾಜ್ಯದಲ್ಲಿ ಗಂಭೀರ ಬರ ಪರಿಸ್ಥಿತಿ ಇದೆ. ಇಂತಹ ಸಮಯದಲ್ಲಿ ತಮಿಳುನಾಡಿಗೆ ಪ್ರತಿನಿತ್ಯ 12 ಸಾವಿರ ಕ್ಯುಸೆಕ್ ನೀರನ್ನು ಹರಿಸಬೇಕು ಎಂಬ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಆದೇಶ ಆತಂಕ ತಂದಿದೆ. ನಾಳೆ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ನಡೆಯುವ ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು.
ಈ ಮೊದಲು ತಮಿಳುನಾಡಿಗೆ ಪ್ರತಿನಿತ್ಯ 3 ಸಾವಿರ ಕ್ಯುಸೆಕ್ ನೀರು ಮಾತ್ರವಲ್ಲ, ಅದಕ್ಕೂ ಹೆಚ್ಚಿನ ರೀತಿಯಲ್ಲಿ ಅಂದರೆ ಸುಮಾರು 20 ಸಾವಿರಕ್ಕೂ ಹೆಚ್ಚು ಕ್ಯುಸೆಕ್ ನೀರನ್ನು ಕೊಟ್ಟಿದ್ದೇವೆ. ಆದರೆ ಈಗ ನಮ್ಮಲ್ಲಿ ಬರ ಇರುವುದರಿಂದ ಈ ಸಮಯದಲ್ಲಿ ಇಂತಹ ಆದೇಶ ನೀಡಿರುವುದು ಆತಂಕ ತಂದಿದೆ.
ನಮ್ಮಲ್ಲಿ ಜಲಾಶಯಗಳಿಗೆ ಒಳಹರಿವು ಕಡಿಮೆಯಾಗಿದೆ. ಕೆಆರ್ಎಸ್ ಕೂಡ ತುಂಬಿಲ್ಲ. ಕಬಿನಿ, ಹೇಮಾವತಿಯಲ್ಲಿ ಸ್ವಲ್ಪ ಮಟ್ಟಿಗೆ ನೀರಿದ್ದು, ಅದನ್ನು ಶೇಖರಣೆ ಮಾಡಿ ಇಟ್ಟುಕೊಂಡಿದ್ದೇವೆ. ಇವತ್ತು 12,000 ಕ್ಯುಸೆಕ್ ನೀರನ್ನು ತಮಿಳುನಾಡಿಗೆ ಬಿಡಬೇಕಾದರೆ ಅಷ್ಟು ನೀರು ನಮ್ಮಲ್ಲಿ ಬೇಕು. ಜಲಾಶಯಗಳ ಒಳಹರಿವು ಹೆಚ್ಚಬೇಕು. ಆದರೆ ಅದು ಆಗಿಲ್ಲ. ಹಾಗಾಗಿ ಮುಂದಿನ ತೀರ್ಮಾನವನ್ನು ನಾಳೆ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ನಡೆಯುವ ಸಂಪುಟ ಸಭೆಯಲ್ಲಿ ತೆಗೆದುಕೊಳ್ಳುತ್ತೇವೆ.
ತುಮಕೂರಿನಲ್ಲಿ ಗಂಭೀರ ಬರ ಪರಿಸ್ಥಿತಿ ಇದೆ. ಜುಲೈ ತಿಂಗಳಲ್ಲಿ ಶೇ.80 ರಿಂದ ಶೇ.90 ರಷ್ಟು ಮಳೆ ಕಡಿಮೆಯಾಗಿದೆ. ಈ ತರಹದ ಪರಿಸ್ಥಿತಿ ಯಾವತ್ತೂ ಬಂದಿರಲಿಲ್ಲ. ನಿನ್ನೆ ಮತ್ತು ಇಂದು ಜಿಲ್ಲೆಯ ತಾಲೂಕುಗಳಿಗೆ ಭೇಟಿ ನೀಡಿ, ಕುಡಿಯುವ ನೀರು, ಮೇವು ಬಗ್ಗೆ ಪರಿಶೀಲನೆ ಮಾಡಿ, ಕೈಗೊಳ್ಳಬೇಕಿರುವ ಕ್ರಮಗಳ ಬಗ್ಗೆ ಅಧಿಕಾರಿಗಳಿಗೆ ಸೂಚನೆಯನ್ನು ಕೊಟ್ಟಿದ್ದೇನೆ. ಮುಖ್ಯಮಂತ್ರಿಗಳು ಕೂಡ ಇಂದು ಬೆಳಗ್ಗೆ ಅಧಿಕಾರಿಗಳ ಜೊತೆಗೆ ವಿಡಿಯೋ ಸಂವಾದ ನಡೆಸಿ ಮಾತನಾಡಿದ್ದಾರೆ. ಬರ ಪರಿಸ್ಥಿತಿಯನ್ನು ಬಹಳ ಗಂಭೀರವಾಗಿ ಪರಿಗಣಿಸಬೇಕು ಮತ್ತು ಎಲ್ಲ ಅಧಿಕಾರಿಗಳು ಸ್ಪಂದಿಸುವಂತೆ ತಿಳಿಸಿದ್ದಾರೆ.
ಪ್ರಸ್ತುತ ರಾಜ್ಯದ ಸ್ಥಿತಿಗತಿಗಳನ್ನು ವರದಿ ಮಾಡಿ, ಈ ತಿಂಗಳೊಳಗಾಗಿ ಕೇಂದ್ರಕ್ಕೆ ಸಲ್ಲಿಸುತ್ತೇವೆ. ಅವರು ನಮಗೆ ಸಹಕಾರವನ್ನು ನೀಡಬೇಕು. ಬರ ಪರಿಶೀಲನೆ ವೇಳೆ ವಿಪಕ್ಷದವರು ಬಂದರೂ ಒಳ್ಳೆಯದು. ಕೆಲವು ದಿನಗಳ ಹಿಂದೆ ನಾವು ದೆಹಲಿಯಲ್ಲಿ ಸಂಸದರೊಂದಿಗೆ ಸಭೆಯನ್ನು ನಡೆಸಿದ್ದೆವು. ನಮ್ಮ ರಾಜ್ಯವನ್ನು ಪ್ರತಿನಿಧಿಸುವ ಎಲ್ಲಾ ಜನಪ್ರತಿನಿಧಿಗಳು ಭಾಗಿಯಾಗಿದ್ದರು. ರಾಜ್ಯಕ್ಕೆ ಸಮಸ್ಯೆಯಾದಾಗ ನಾವೆಲ್ಲ ನಿಮ್ಮ ಜೊತೆ ಇರುತ್ತೇವೆ ಎಂದು ಭರವಸೆ ನೀಡಿದ್ದಾರೆ. ಆ ವಿಶ್ವಾಸವೂ ನಮಗಿದೆ.
ಜಿಲ್ಲೆಗೆ ಹೇಮಾವತಿ ನೀರು ಹರಿಸುವ ಬಗ್ಗೆ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿ, ಈ ವಿಚಾರವನ್ನು ಈಗಾಗಲೇ ಮಾನ್ಯ ಶಾಸಕರು ಸಭೆಯಲ್ಲಿ ಪ್ರಸ್ತಾಪಿಸಿದ್ದಾರೆ. ಐಸಿಸಿ ಸಭೆಯನ್ನು ಮುಂದಿನ ವಾರ ಕರೆಯಲು ತೀರ್ಮಾನಿಸಿದ್ದೇವೆ. ಆ ಸಭೆಯಲ್ಲಿ ತೀರ್ಮಾನ ತೆಗೆದುಕೊಳ್ಳುತ್ತೇವೆ. ಹಾಸನ, ತುಮಕೂರು ಜಿಲ್ಲೆಯ ಶಾಸಕರು ಹಾಗೂ ಐಸಿಸಿ ಸದಸ್ಯರು ಜೊತೆಯಾಗಿ ಕುಳಿತುಕೊಂಡು ತೀರ್ಮಾನಿಸುತ್ತೇವೆ. -
Dr. G Parameshwara
@DrParameshwara
ಇಂದು ತಿಪಟೂರಿನ ಕ್ಷೀರಭವನದ ಸಭಾಂಗಣದಲ್ಲಿ ತಿಪಟೂರು ಮತ್ತು ತುಮಕೂರು ಉಪವಿಭಾಗಗಳ ಪ್ರಗತಿ ಪರಿಶೀಲನಾ ಸಭೆ ನಡೆಸಿ, ಕುಡಿಯುವ ನೀರಿನ ವ್ಯವಸ್ಥೆ, ಬೆಳೆ ಸ್ಥಿತಿ, ಜಾನುವಾರುಗಳಿಗೆ ಮೇವು ಮತ್ತು ಜನರಿಗೆ ಉದ್ಯೋಗ ಸೃಷ್ಟಿಯ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದು, ಬರ ಪರಿಸ್ಥಿತಿ ಎದುರಿಸುವ ನಿಟ್ಟಿನಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಸೂಕ್ತ ನಿರ್ದೇಶನ ನೀಡಿದೆ.
ತಿಪಟೂರು, ಚಿಕ್ಕನಾಯಕನಹಳ್ಳಿ, ತುರುವೇಕೆರೆ, ಗುಬ್ಬಿ, ಕುಣಿಗಲ್ ತಾಲೂಕುಗಳಲ್ಲಿ ಒಟ್ಟು 548 ಶುದ್ಧ ಕುಡಿಯುವ ನೀರಿನ ಘಟಕಗಳಿವೆ. ಈ ಪೈಕಿ 483 ಘಟಕಗಳು ನಿರ್ವಹಣೆಯಲ್ಲಿವೆ. ಉಳಿದ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಕೂಡಲೇ ದುರಸ್ಥಿಗೊಳಿಸಲು ಕ್ರಮ ಕೈಗೊಳ್ಳಬೇಕು. ಯಾವ ಹಳ್ಳಿಯಲ್ಲಿಯೂ ಜನರಿಗೆ ಕುಡಿಯುವ ನೀರಿಗೆ ತೊಂದರೆಯಾಗಬಾರದು.
ಜೆಜೆಎಂ ಯೋಜನೆ ಬಳಿಕ ಶುದ್ಧ ಕುಡಿಯುವ ನೀರಿನ ಘಟಕಗಳ ನಿರ್ವಹಣೆಯನ್ನು ನಿರ್ಲಕ್ಷಿಸಲಾಗಿದೆ. ಈ ಬಗ್ಗೆ ಲೆಕ್ಕಪರಿಶೋಧನೆ ನಡೆದರೆ ಎಲ್ಲ ಸತ್ಯಾಂಶಗಳು ಹೊರಬರುತ್ತವೆ. ಜಿಲ್ಲೆಯಲ್ಲಿನ ಎಲ್ಲ ಶುದ್ಧ ಕುಡಿಯುವ ನೀರಿನ ಘಟಕಗಳ ಕುರಿತು ಲೆಕ್ಕಪರಿಶೋಧನೆ ಆಗಬೇಕು. ಮುಂದಿನ ಜಿಲ್ಲಾ ಮಟ್ಟದ ಕೆಡಿಪಿ ಸಭೆಯಲ್ಲಿ ಲೆಕ್ಕಪರಿಶೋಧನೆಯ ವರದಿಯನ್ನು ನೀಡಬೇಕು.
ಕೃಷಿ ಅಧಿಕಾರಿಯಾಗಿ ಎಷ್ಟು ಜನ ರೈತರಿದ್ದಾರೆ ಎಂಬ ಮಾಹಿತಿ ಇಲ್ಲವೇ? ನೀವೆಲ್ಲ ನಮಗೆ ಸ್ಪಷ್ಟ ಚಿತ್ರಣ ನೀಡುವುದಿಲ್ಲ. ಐದು ತಾಲೂಕುಗಳಲ್ಲಿ 2.52 ಲಕ್ಷ ರೈತರಿದ್ದಾರೆ. ಇವರಲ್ಲಿ 42 ಸಾವಿರ ರೈತರು ಮಾತ್ರ ವಿಮೆ ಕಟ್ಟಿದ್ದಾರೆ. ಹಾಗಿದ್ದರೆ ಈ ಬಗ್ಗೆ ನೀವೆಲ್ಲ ಗಮನಹರಿಸಿಲ್ಲವೇ?
ಸರ್ಕಾರದ ದೂರದೃಷ್ಟಿ, ಯಾವ ರೀತಿ ಆಡಳಿತ ನೀಡಬೇಕು ಎಂಬುದರ ಬಗ್ಗೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಇಂದು ಎಲ್ಲ ಅಧಿಕಾರಿಗಳೊಂದಿಗೆ ವಿಡಿಯೋ ಸಂವಾದದ ಮೂಲಕ ಸಭೆ ನಡೆಸಿದ್ದಾರೆ. ಬರಗಾಲದ ಹಿನ್ನೆಲೆಯಲ್ಲಿ ಜನರು ಸಂಕಷ್ಟಕ್ಕೆ ಸಿಲುಕಿರುವ ಚಿತ್ರಣ ನಮ್ಮ ಕಣ್ಣಿಗೆ ಕಾಣಿಸುತ್ತಿದೆ. ಈ ಹಿನ್ನೆಲೆಯಲ್ಲಿ ಸರ್ಕಾರವು ಬರ ಪರಿಸ್ಥಿತಿಯನ್ನು ಗಂಭೀರವಾಗಿ ಪರಿಗಣಿಸಿದೆ.
ಏಳು ಕೋಟಿ ಜನರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ನೋಡಿಕೊಳ್ಳಬೇಕು ಎಂಬ ಸವಾಲು ನಮ್ಮ ಮುಂದಿದೆ. ಹೀಗಾಗಿ ಬಹುಬೇಗ ಪರಿಸ್ಥಿತಿಯನ್ನು ಅರ್ಥೈಸಿಕೊಳ್ಳಲು ಮುಖ್ಯಮಂತ್ರಿಗಳು ಮತ್ತು ನಾನು ರಾಜ್ಯ ಪ್ರವಾಸ ಕೈಗೊಂಡು ಪರಿಶೀಲನೆ ನಡೆಸಿದ್ದೇವೆ. ಆದರೆ, ನೀವೆಲ್ಲ ಜವಾಬ್ದಾರಿಯನ್ನು ಸರಿಯಾಗಿ ನಿಭಾಯಿಸುತ್ತಿಲ್ಲ ಎಂಬುದು ಸಭೆಯಲ್ಲಿ ನೀಡಿದ ಮಾಹಿತಿಯಿಂದ ಗೊತ್ತಾಗುತ್ತಿದೆ. ಪರಿಸ್ಥಿತಿಯ ಗಂಭೀರತೆಯನ್ನು ಯಾವ ಅಧಿಕಾರಿಗಳು ಅರ್ಥೈಸಿಕೊಂಡಿಲ್ಲ ಎಂಬುದು ಗೊತ್ತಾಗಿದೆ.
ನೀವೆಲ್ಲ ತುರ್ತು ಪರಿಸ್ಥಿತಿ ಎಂದು ಪರಿಗಣಿಸಿ ಕೆಲಸ ಮಾಡಬೇಕು. ಡೇಟಾ ವಿಶ್ಲೇಷಣೆ ಸರಿಯಾಗಿ ಮಾಡಿಲ್ಲ. ಸಂಬಂಧಪಟ್ಟ ಅಧಿಕಾರಿಗಳು ಸಭೆಗೂ ಮೊದಲು ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಬೇಕಲ್ಲವೇ? ನಾವೆಲ್ಲ ಸಾರ್ವಜನಿಕ ಬದುಕಿನಲ್ಲಿ 40 ವರ್ಷ ಕೆಲಸ ಮಾಡಿಕೊಂಡು ಬಂದಿದ್ದೇವೆ. ನೀವು ಜವಾಬ್ದಾರಿ ನಿಭಾಯಿಸುತ್ತಿರುವ ಇಲಾಖೆಯ ಚಿತ್ರಣದ ಡೇಟಾ ಸರಿಯಾಗಿ ನೀಡುತ್ತಿಲ್ಲ ಎಂದಾದರೆ ಹೇಗೆ?
38 ಲಕ್ಷ ಕೋಟಿ ರೂ. ನಷ್ಟವಾಗಿದೆ ಎಂದು ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸಲಾಗಿತ್ತು. ಕೇಂದ್ರ ಸರ್ಕಾರ ರಾಜ್ಯದಲ್ಲಿ ಬರ ಅಧ್ಯಯನಕ್ಕೆ ತಂಡ ಕಳಿಸಿತ್ತು. ಆದಾಗ್ಯೂ ಹಣ ಬಿಡುಗಡೆ ಮಾಡಲಿಲ್ಲ. ಕೋರ್ಟ್ ನಿರ್ದೇಶನದ ಬಳಿಕ 3,000 ಕೋಟಿ ನೀಡಿದರು. ನಿನ್ನೆ ಪಾವಗಡದಲ್ಲಿ ಬರ ಪರಿಸ್ಥಿತಿ ನೋಡಿದರೆ ಕಣ್ಣೀರು ಬಂತು. ಶೇಂಗಾ ಬೆಳೆಗೆ ರೈತರು ಪ್ರತಿ ಎಕರೆಗೆ ₹40 ಸಾವಿರ ಖರ್ಚು ಮಾಡಿದ್ದರು. ಬೆಳೆ ಕೈಸೇರುವ ಯಾವುದೇ ಲಕ್ಷಣ ಇಲ್ಲ. ಇಂತಹ ಪರಿಸ್ಥಿತಿಯಲ್ಲಿ ರೈತ ಏನು ಮಾಡಬೇಕು. ಜನರ ಸಂಕಷ್ಟದ ಸಂದರ್ಭದಲ್ಲಿ ಅಧಿಕಾರಿಗಳು ನಿರ್ಲಕ್ಷ್ಯ ಮಾಡಿದರೆ ಒಳ್ಳೆದಾಗುವುದಿಲ್ಲ.
ಕುಣಿಗಲ್ ತಾಲೂಕಿನ ಗ್ರಾಮಗಳಿಗೆ ಭೇಟಿ ನೀಡಿದಾಗ ಗುಳೆ ಹೋಗಬೇಕಾದ ಪರಿಸ್ಥಿತಿ ಬಂದಿದೆ ಎಂದು ಜನರು ಕಣ್ಣೀರು ಹಾಕಿದ್ದಾರೆ. ತುಮಕೂರು ಜಿಲ್ಲೆಯಲ್ಲಿ ಊರು ಬಿಡಬೇಕಾದ ಪರಿಸ್ಥಿತಿ ಬಂದಿದೆ ಎಂದಾದರೆ, ಉತ್ತರ ಕರ್ನಾಟಕ ಭಾಗದ ಜಿಲ್ಲೆಗಳ ಜನರ ಪರಿಸ್ಥಿತಿ ಹೇಗೆ ಎಂಬ ಪ್ರಶ್ನೆ ಮೂಡುತ್ತದೆ. ಹೀಗಾಗಿ, ನೀವೆಲ್ಲ ಜನರ ಕಷ್ಟಕ್ಕೆ ಮಿಡಿಯುವ ರೀತಿಯಲ್ಲಿ ಕೆಲಸ ಮಾಡಬೇಕು. ಜನರಿಗೆ ಉದ್ಯೋಗ ಕೊಟ್ಟು, ಊರು ಬಿಡದಂತೆ ನೋಡಿಕೊಳ್ಳಬೇಕು.
ಸಿ.ಎಸ್.ಪುರದಲ್ಲಿ ಸರಿಯಾಗಿ ಔಷಧಿಗಳು ಸಿಗುತ್ತಿಲ್ಲ ಎಂದು ದೂರು ನೀಡಿದ್ದಾರೆ. ಸಾಂಕ್ರಾಮಿಕ ರೋಗಗಳು ಬಂದರೆ ಹೇಗೆ ನಿಭಾಯಿಸುತ್ತೀರಿ. ಕೂಡಲೇ ಸಮಸ್ಯೆ ಬಗೆಹರಿಯಬೇಕು. ಕಳೆದ ಬಾರಿ ಕಲುಷಿತ ನೀರು ಕುಡಿದು ಜನ ಮೃತಪಟ್ಟರು. ಇಂತಹ ದುರ್ಘಟನೆಗಳು ಮರುಕಳಿಸದಂತೆ ನೋಡಿಕೊಳ್ಳಿ.
ಪ್ರತಿಯೊಬ್ಬ ತಹಶೀಲ್ದಾರ್, ಇಒಗಳು ಬಹಳ ಗಂಭೀರವಾಗಿ ಪರಿಗಣಿಸಿ ಕೆಲಸ ಮಾಡಬೇಕು. ನೀವು ತಾಲೂಕು ನೋಡಲ್ ಅಧಿಕಾರಿಗಳಾಗಿರುವುದರಿಂದ ಹೆಚ್ಚಿನ ಜವಾಬ್ದಾರಿ ನಿಮ್ಮ ಮೇಲಿದೆ ಎಂಬುದನ್ನು ಮರೆಯಬಾರದು. ನಾನು ಈವರೆಗೂ ಯಾವ ಅಧಿಕಾರಿಗಳಿಗೂ ಕೆಲಸದ ವಿಚಾರದಲ್ಲಿ ವೈಯಕ್ತಿಕವಾಗಿ ಒತ್ತಡ ಹೇರಿಲ್ಲ. ಜನರಿಗೆ ಸಮಸ್ಯೆಯಾಗಿರುವುದು ಕಂಡು ಬಂದರೆ ಸಹಿಸುವುದಿಲ್ಲ. ಎಲ್ಲರೂ ಕೇಂದ್ರ ಸ್ಥಾನದಲ್ಲಿದ್ದು ಕೆಲಸ ಮಾಡಬೇಕು. -
Dr. G Parameshwara
@DrParameshwara
Chaired a crucial review on the drought situation in Tumakuru district. To ensure a swift and unhindered response to the drinking water crisis, emergency relief funds have been directly deployed to the respective Tahsildars.
Strict directives have been issued to all administrative levels: bureaucratic delays or false claims regarding fund availability will face immediate, zero-tolerance action. Our utmost priority is ensuring clean drinking water reaches every citizen across our rural taluks without interruption. -
Dr. G Parameshwara
@DrParameshwara
As part of the drought inspection in Kunigal Taluk, I visited Naganahalli and Mandanapalya villages and interacted with farmers affected by the prevailing dry conditions. I also inspected areca nut plantations that are drying up due to water scarcity.
To strengthen long-term water availability in Kunigal, ₹450 crore has been released to accelerate works on the Hemavati Express Link Canal project. We will also initiate discussions with farmers from Turuvekere and Chikkanayakanahalli who have raised concerns over the project, and work towards resolving the issues through dialogue.
Our government is committed to protecting farmers’ interests while ensuring sustainable water security for drought-affected regions. -
Dr. G Parameshwara
@DrParameshwara
As part of the drought inspection in Pavagada Taluk, I reviewed the prevailing agricultural and drinking water situation and the relief measures being undertaken.
Against the targeted groundnut sowing area of 19,000 hectares, sowing has been completed in only around 4,000 hectares, reflecting the severity of the situation faced by farmers. Fodder seed kits were also distributed to farmers on behalf of the Tumkur Cooperative Milk Producers' Union to support livestock during this difficult period. For long-term water security, steps are being taken to source water from the backwaters of the Tungabhadra reservoir to ensure a permanent and reliable water supply to the region.
Our government stands firmly with farmers and will continue to take both immediate relief measures and long-term steps to address drought-related challenges. -
Dr. G Parameshwara
@DrParameshwara
ಇಂದು ತಿಪಟೂರು ಉಪವಿಭಾಗದ ತಿಪಟೂರು, ಚಿಕ್ಕನಾಯಕನಹಳ್ಳಿ, ತುರುವೇಕೆರೆ ಹಾಗೂ ತುಮಕೂರು ಉಪವಿಭಾಗದ ಗುಬ್ಬಿ, ಕುಣಿಗಲ್ ತಾಲೂಕುಗಳ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ಬರ ಪರಿಸ್ಥಿತಿಯ ಅವಲೋಕನ ನಡೆಸಿದೆ.
ಬಳಿಕ ತಿಪಟೂರಿನ ಕ್ಷೀರಭವನದ ಸಭಾಂಗಣದಲ್ಲಿ ತಿಪಟೂರು ಮತ್ತು ತುಮಕೂರು ಉಪವಿಭಾಗಗಳ ಪ್ರಗತಿ ಪರಿಶೀಲನಾ ಸಭೆ ನಡೆಸಿ, ಕುಡಿಯುವ ನೀರಿನ ವ್ಯವಸ್ಥೆ, ಬೆಳೆ ಸ್ಥಿತಿ, ಜಾನುವಾರುಗಳಿಗೆ ಮೇವು ಮತ್ತು ಜನರಿಗೆ ಉದ್ಯೋಗ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದೆ. ಬರ ಪರಿಸ್ಥಿತಿ ಎದುರಿಸುವ ನಿಟ್ಟಿನಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಸೂಕ್ತ ನಿರ್ದೇಶನ ನೀಡಿದೆ.
ಸಭೆಯಲ್ಲಿ ತಿಪಟೂರು ಶಾಸಕರಾದ ಕೆ.ಷಡಕ್ಷರಿ, ಕುಣಿಗಲ್ ಶಾಸಕರಾದ ಹೆಚ್.ಡಿ.ರಂಗನಾಥ್, ತುರುವೇಕೆರೆ ಶಾಸಕರಾದ ಎಂ.ಟಿ.ಕೃಷ್ಣಪ್ಪ, ಚಿಕ್ಕನಾಯಕನಹಳ್ಳಿ ಶಾಸಕರಾದ ಸಿ.ಬಿ.ಸುರೇಶ್ ಬಾಬು, ಜಿಲ್ಲಾಧಿಕಾರಿಗಳಾದ ಶುಭ ಕಲ್ಯಾಣ್, ಗ್ಯಾರಂಟಿ ಯೋಜನೆಗಳ ಅನುಷ್ಟಾನ ಸಮಿತಿ ಜಿಲ್ಲಾಧ್ಯಕ್ಷರಾದ ಚಂದ್ರಶೇಖರ್ಗೌಡ ಮುಂತಾದವರು ಉಪಸ್ಥಿತರಿದ್ದರು. -
Dr. G Parameshwara
@DrParameshwara
ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನ ಜೆ.ಸಿ.ಪುರ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ 'ವಿಬಿ ಜಿ ರಾಮ್ ಜಿ' ಯೋಜನೆಯಡಿ ಕೈಗೊಂಡಿರುವ ಕೆರೆಯಲ್ಲಿ ಹೂಳೆತ್ತುವ ಕಾಮಗಾರಿಯ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ.
ರೈತರಿಗೆ ರಾಗಿ ಬೀಜ ವಿತರಿಸಿ, ಬಳಿಕ ಸಾರ್ವಜನಿಕರಿಂದ ಅಹವಾಲುಗಳನ್ನು ಸ್ವೀಕರಿಸಿ ಸಮಸ್ಯೆಗಳನ್ನು ಆಲಿಸಿದೆ.
ಈ ಸಂದರ್ಭದಲ್ಲಿ ಚಿಕ್ಕನಾಯಕನಹಳ್ಳಿ ಶಾಸಕರಾದ ಸಿ.ಬಿ.ಸುರೇಶ್ ಬಾಬು, ಕುಣಿಗಲ್ ಶಾಸಕರಾದ ಹೆಚ್.ಡಿ.ರಂಗನಾಥ್, ತಿಪಟೂರು ಶಾಸಕರಾದ ಕೆ. ಷಡಕ್ಷರಿ, ತುರುವೇಕೆರೆ ಶಾಸಕರಾದ ಎಂ.ಟಿ.ಕೃಷ್ಣಪ್ಪ, ಜಿಲ್ಲಾಧಿಕಾರಿಗಳಾದ ಶುಭ ಕಲ್ಯಾಣ್ ಜೊತೆಗಿದ್ದರು. -
Dr. G Parameshwara
@DrParameshwara
ಇಂದು ತುಮಕೂರು ಜಿಲ್ಲೆಯ ತುರುವೇಕೆರೆ ತಾಲೂಕಿನ ಮಾಯಸಂದ್ರದಲ್ಲಿ ರೈತರಿಗೆ ಮೇವಿನ ಬೀಜದ ಕಿಟ್ಗಳನ್ನು ವಿತರಿಸಿದೆ.
ಬಳಿಕ ರೈತರಿಂದ ಅಹವಾಲುಗಳನ್ನು ಸ್ವೀಕರಿಸಿ, ಆದ್ಯತೆ ಮೇರೆಗೆ ಬಗೆಹರಿಸಿಕೊಡುವಂತೆ ಸ್ಥಳದಲ್ಲೇ ಅಧಿಕಾರಿಗಳಿಗೆ ಸೂಚಿಸಿದೆ. -
Dr. G Parameshwara
@DrParameshwara
ಮುಖ್ಯಮಂತ್ರಿ ಶ್ರೀ @DKShivakumar ಅವರು ಇಂದು ವಿಧಾನಸೌಧದಲ್ಲಿ ರಾಜ್ಯದ ಎಲ್ಲ ಸರ್ಕಾರಿ ಅಧಿಕಾರಿಗಳು ಮತ್ತು ನೌಕರರೊಂದಿಗೆ ನಡೆಸಿದ ವಿಡಿಯೋ ಸಂವಾದದಲ್ಲಿ ನಾನು ಕುಣಿಗಲ್ ತಹಶೀಲ್ದಾರ್ ಅವರ ಕಚೇರಿಯಿಂದ ಭಾಗವಹಿಸಿ ಮಾತನಾಡಿದೆ.
ಬರದಿಂದ ಹಾನಿಗೊಳಗಾದ ಬೆಳೆ, ಕುಡಿಯುವ ನೀರಿನ ಪರಿಸ್ಥಿತಿಯ ಪರಿಶೀಲನೆ ಕುರಿತು ತುಮಕೂರು ಜಿಲ್ಲಾ ಪ್ರವಾಸ ಕೈಗೊಂಡಿರುವುದರಿಂದ ನೇರವಾಗಿ ಭಾಗಿಯಾಗಲು ಸಾಧ್ಯವಾಗಿಲ್ಲ. ಡಿ.ಕೆ.ಶಿವಕುಮಾರ್ ಅವರು ಸಿಎಂ ಆದ ನಂತರ ಸರ್ಕಾರವನ್ನು ಜನರ ಹತ್ತಿರ ತೆಗೆದುಕೊಂಡು ಹೋಗಿ ಕೆಲಸ ಮಾಡುವುದಕ್ಕೆ ಆದ್ಯತೆ ನೀಡಿದ್ದಾರೆ. ಎಲ್ಲ ಜನಪ್ರತಿನಿಧಿಗಳು ಜನರ ಅಹವಾಲುಗಳನ್ನು ಕೇಳಬೇಕಿದೆ. ಅಧಿಕಾರಿಗಳು ಜನರಿಗೆ ಸ್ಪಂದಿಸುತ್ತಿಲ್ಲ ಎಂಬ ವಿಚಾರಗಳು ಕೇಳಿ ಬಂದ ಹಿನ್ನೆಲೆ ಪ್ರಜಾಸೇವಾ ಇಲಾಖೆಯನ್ನು ಪ್ರಾರಂಭ ಮಾಡಲಾಗಿದೆ.
ಪ್ರತಿಯೊಂದು ಜಿಲ್ಲಾ, ತಾಲೂಕು ಮಟ್ಟದಲ್ಲಿ ಅಧಿಕಾರಿಗಳನ್ನು ನಿಯೋಜಿಸಿ, ಜನರು ಸಮಸ್ಯೆಗಳನ್ನು ಆಲಿಸಿ ತ್ವರಿತವಾಗಿ ಪರಿಹಾರ ಕ್ರಮ ಕೈಗೊಳ್ಳುವ ಉದ್ದೇಶದಿಂದ ಪ್ರಜಾಸೇವಾ ಇಲಾಖೆಯನ್ನು ಆರಂಭಿಸಲಾಗಿದೆ. ಗ್ರಾಮೀಣ ಭಾಗದಲ್ಲಿ ಅನೇಕ ಸಮಸ್ಯೆ ಎದುರಿಸುತ್ತಿದ್ದೇವೆ. ಈಗಲೂ ಸಾಕಷ್ಟು ಜನರು ಗುಡಿಸಲುಗಳಲ್ಲಿ ವಾಸಿಸುತ್ತಿದ್ದಾರೆ. ಸವಲತ್ತುಗಳು ನೇರವಾಗಿ ಜನರಿಗೆ ತಲುಪಿಸುವುದು ಪೂರ್ಣಪ್ರಮಾಣದಲ್ಲಿ ಸಾಧ್ಯವಾಗುತ್ತಿಲ್ಲ. ಈ ಬಗ್ಗೆ ಯಾರ ಹತ್ತಿರ ಹೋಗಬೇಕು ಎಂಬ ಜನರ ಪ್ರಶ್ನೆಗೆ ಪ್ರಜಾಸೇವಾ ಇಲಾಖೆ ಉತ್ತರವಾಗಲಿದೆ. ಗ್ರಾಮ ಪಂಚಾಯಿತಿಯಿಂದ ವಿಧಾನಸೌಧದವರೆಗೂ ಜನರ ಸಮಸ್ಯೆ ಆಲಿಸಿ, ಸ್ಪಂದಿಸಲಾಗುವುದು.
ಈ ವರ್ಷ ಬರದ ಪರಿಸ್ಥಿತಿ ಗಂಭೀರವಾಗಿದೆ. ನಿನ್ನೆ ದಿನ ಪಾವಗಡ, ಶಿರಾ, ಮಧುಗಿರಿ, ಕೊರಟಗೆರೆ ತಾಲೂಕುಗಳಲ್ಲಿ ಬರ ಪರಿಸ್ಥಿತಿಯನ್ನು ಪರಿಶೀಲಿಸಿದ್ದೇನೆ. ರೈತರು ಒಂದು ಎಕರೆ ಶೇಂಗಾ ಬಿತ್ತನೆಗೆ ₹40 ಸಾವಿರ ಖರ್ಚು ಮಾಡಿದ್ದಾರೆ. ಅವರಿಗೆ ಒಂದು ರೂ. ವಾಪಸ್ ಬರುವ ಸಾಧ್ಯತೆ ಇಲ್ಲ. ಫಲವತ್ತಾದ ಮಣ್ಣಿನಲ್ಲಿ ಬೆಳೆದ ಅಡಿಕೆ ಬೆಳೆ ನೀರಿನ ಕೊರತೆಯಿಂದ ಸಂಪೂರ್ಣವಾಗಿ ಒಣಗುತ್ತಿವೆ. ಹೀಗಾಗಿ ರೈತರ ಸಂಕಷ್ಟದ ಸಂದರ್ಭದಲ್ಲಿ ಅವರ ನೆರವಿಗೆ ನಿಲ್ಲುವುದು ನಮ್ಮ ಆದ್ಯ ಕರ್ತವ್ಯ.
ಬೋರ್ವೆಲ್ಗಳು ಬತ್ತಿ ಹೋಗಿವೆ. ಹೊಸದಾಗಿ ಸಾವಿರ ಅಡಿ ಬೋರ್ವೆಲ್ ಕೊರೆಸಿದರೂ ನೀರು ಸಿಗುತ್ತಿಲ್ಲ. ಈ ಎಲ್ಲ ಸಮಸ್ಯೆಯನ್ನು ಪ್ರತ್ಯಕ್ಷವಾಗಿ ನೋಡಿದ್ದೇನೆ. ಸರ್ಕಾರ ನಿಮ್ಮ ಜೊತೆಗಿದೆ ಎಂದು ಜನರಿಗೆ ಭರವಸೆ ನೀಡಿದ್ದೇನೆ. ಜಾನುವಾರುಗಳಿಗೆ ಮೇವಿನ ಸಮಸ್ಯೆ ಎದುರಾಗುತ್ತಿದೆ. ತುಮಕೂರು ಹಾಲು ಉತ್ಪಾದಕರ ಒಕ್ಕೂಟದ ವತಿಯಿಂದ ಜಿಲ್ಲೆಯಾದ್ಯಂತ ರೈತರಿಗೆ ಒಂದು ಲಕ್ಷ ಕ್ವಿಂಟಾಲ್ ಮೇವಿನ ಬೀಜ ವಿತರಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದೆ. ನೀರಿನ ಸೌಲಭ್ಯ ಇರುವ ರೈತರು ಮೇವು ಬೆಳೆಯುತ್ತಾರೆ. ಹೆಚ್ಚು ಮೇವು ಬೆಳೆದ ರೈತರಿಂದ ಖರೀದಿಸಲಾಗುವುದು. ಪಶು ಸಂಗೋಪನಾ ಇಲಾಖೆಯಿಂದ ಮೇವಿನ ಬೀಜ ವಿತರಿಸಲು ಈವರೆಗೂ ಟೆಂಡರ್ ಕರೆದಿಲ್ಲ. ಈ ಬಗ್ಗೆ ಅಧಿಕಾರಿಗಳು ಶೀಘ್ರದಲ್ಲಿ ಕ್ರಮ ವಹಿಸಬೇಕು.
ರಾಜ್ಯದಲ್ಲಿ ರೈತರಿಗೆ ವಿಮಾ ಹಣ ನೀಡುತ್ತಿಲ್ಲ. ಹಣ ಕಟ್ಟಿಸಿಕೊಳ್ಳುವಾಗ ತೋರಿಸುವ ಆಸಕ್ತಿ, ಬೆಳೆ ನಷ್ಟದ ಸಂರ್ಭದಲ್ಲಿ ಹಣ ಬಿಡುಗಡೆ ಮಾಡಲು ಆಸಕ್ತಿ ತೋರಿಸುತ್ತಿಲ್ಲ. ಈ ಕುರಿತಂತೆ ವಿಮಾ ಕಂಪನಿಯವರೊಂದಿಗೆ ಸಭೆ ನಡೆಸಬೇಕಾಗುತ್ತದೆ.
ಉತ್ತರ ಕರ್ನಾಟಕ ಭಾಗದಲ್ಲಿ ಜನ ಗುಳೆ ಹೋಗುತ್ತಿದ್ದಾರೆ. ಕೇಂದ್ರದಿಂದ ʼವಿಬಿ ಜಿ ರಾಮ್ ಜಿ' ಯೋಜನೆಯ ಹಣ ಬರುತ್ತಿಲ್ಲ. ಸದ್ಯದ ಪರಿಸ್ಥಿತಿಗೆ ರಾಜ್ಯ ಸರ್ಕಾರವೇ ಹಣ ಭರಿಸುತ್ತಿದೆ. ಉದ್ಯೋಗ ನೀಡಿದರೆ ಜನರು ಊರು ಬಿಡುವುದನ್ನು ತಪ್ಪಿಸಬಹುದು. ಜನರಿಗೆ ನಾವೇ ಕೆಲಸ ಕೊಟ್ಟು ಊರಿನಲ್ಲಿ ಉಳಿಸಿಕೊಳ್ಳಬೇಕು.
ರಾಜ್ಯದಲ್ಲಿ ಐದು ಸಾವಿರಕ್ಕು ಹೆಚ್ಚು ಮಳೆ ಮಾಪನ ಕೇಂದ್ರಗಳಿವೆ. ಅದರಲ್ಲಿ 2,500 ಮಳೆ ಮಾಪನ ಕೇಂದ್ರಗಳು ಕಾರ್ಯನಿರ್ವಹಣೆಯಲ್ಲಿವೆ. ಸರಿ ಇಲ್ಲದ್ದು ಕೂಡಲೇ ದುರಸ್ಥಿಗೊಳಿಸಬೇಕು. ಅಗತ್ಯ ಇರುವ ಕಡೆ ಹೊಸದಾಗಿ ಮಳೆ ಮಾಪನ ಕೇಂದ್ರಗಳನ್ನು ಅಳವಡಿಸುವಂತೆ ಸೂಚನೆ ನೀಡಲಾಗಿದೆ. ಸೆಪ್ಟೆಂಬರ್ನಲ್ಲಿ ಬರ ಪರಿಸ್ಥಿತಿ ಮತ್ತಷ್ಟು ತೀವ್ರವಾಗುತ್ತದೆ ಎಂದು ಐಎಂಡಿ ಮುನ್ಸೂಚನೆ ನೀಡಿದೆ. ರಾಜ್ಯದಲ್ಲಿ ಎಲ್ಲ ಅಧಿಕಾರಿಗಳು ಎಮೆರ್ಜೆನ್ಸಿ ಎಂದು ಪರಿಗಣಿಸಿ ಕೆಲಸ ಮಾಡಬೇಕಾಗುತ್ತದೆ. ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡು, ನಿಮ್ಮ ಜೊತೆ ನಾವಿದ್ದೇವೆ ಎಂಬ ಭರವಸೆಯನ್ನು ನೀಡುವ ಮೂಲಕ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಕೆಲಸ ಮಾಡಬೇಕು.
ಎಲ್ಲ ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿದ್ದುಕೊಂಡು ಕೆಲಸ ಮಾಡಬೇಕು. ಈ ಬಗ್ಗೆ ಪರಿಶೀಲಿಸಿ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪಂಚಾಯತ್ ಸಿಇಒ ಅವರು ಸರ್ಕಾರಕ್ಕೆ ವರದಿ ನೀಡಬೇಕು.
ಸಿಎಂ ಅವರು ವಿನೂತನವಾದ ಯೋಜನೆ ಭಾರತ್ ಜೋಡೋ ಸಂಘ ಮಾಡಿದ್ದಾರೆ. ದೇಶದ ಸಾಂಸ್ಕೃತಿಕ, ಸಾಮಾಜಿಕವಾಗಿ ಒಟ್ಟಾಗಿಸುವ ಉದ್ದೇಶದಿಂದ ಆರಂಭಿಸಿದ್ದಾರೆ. ಬರ ಪರಿಸ್ಥಿತಿ ಎದುರಿಸುವುದು ಮತ್ತು ಸರ್ಕಾರದ ಕಾರ್ಯಕ್ರಮಗಳನ್ನು ಒಟ್ಟಿಗೆ ತೆಗೆದುಕೊಂಡು ಹೋಗಬೇಕು. ಮುಖ್ಯಮಂತ್ರಿಯವರು ಗ್ರಾಮ ಪಂಚಾಯತ್ ಮಟ್ಟದಲ್ಲಿ ಜನರ ಸಮಸ್ಯೆಯನ್ನು ಆಲಿಸುವ ನಿಟ್ಟಿನಲ್ಲಿ ಕಾರ್ಯಕ್ರಮಗಳನ್ನು ಕೈಗೊಳ್ಳುತ್ತಿರುವುದು ಉತ್ತಮ ಬೆಳವಣಿಗೆ.
ಚಾಮರಾಜನಗರದಲ್ಲಿ ಜನರಿಗೆ ಉದ್ಯೋಗ ನೀಡದಿದ್ದರೆ ಎಲ್ಲಿಗೆ ಹೋಗುತ್ತಾರೆ. 7,000 ಮಾನವ ದಿನಗಳ ಸೃಜನೆ ಎಂದರೆ ಸಾಲುವುದಿಲ್ಲ. ಬಡವರು ಉದ್ಯೋಗಕ್ಕಾಗಿ ಎಲ್ಲಿಗೆ ಹೋಗುತ್ತಾರೆ. ವಿಬಿ ಜಿ ರಾಮ್ ಜಿ ಯೋಜನೆಯಡಿ ಉದ್ಯೋಗ ನೀಡಿ, ವಲಸೆ ಹೋಗುವುದನ್ನು ತಪ್ಪಿಸಬೇಕು. ಜನರಿಗೆ ತ್ವರಿತಗತಿಯಲ್ಲಿ ಏಳು ದಿನದ ಒಳಗಾಗಿ ಹಣ ಪಾವತಿಸಬೇಕು. ಕೂಲಿ ಹಣ ಪಾವತಿಸಲು ವಿಳಂಬವಾದರೆ ಉದ್ಯೋಗ ನೀಡಿಯೂ ಉಪಯೋಗವಿಲ್ಲದಂತಾಗುತ್ತದೆ.
ಅಲ್ಲದೇ, ಚಾಮರಾಜನಗರ ಹೆಚ್ಚು ಜಾನುವಾರುಗಳಿರುವ ಜಿಲ್ಲೆ. 24 ವಾರಕ್ಕೆ ಆಗುವಷ್ಟು ಮೇವು ಸಂಗ್ರಹವಿದೆ. ಮುಂದಿನ ದಿನಗಳಲ್ಲಿ ಮೇವಿಗೆ ಸಮಸ್ಯೆಯಾಗದಂತೆ ಕ್ರಮ ವಹಿಸಬೇಕು.
ಶಿರಾ ತಾಲೂಕಿನಲ್ಲಿ ಬೇಸಿಗೆಯಲ್ಲಿ ಸುರಿದ ಅಕಾಲಿಕ ಮಳೆಯಿಂದ ದಾಳಿಂಬೆ ಬೆಳೆ ಸಂಪೂರ್ಣ ನಾಶವಾಗಿತ್ತು. ಈವರೆಗೂ ದಾಳಿಂಬೆ ಬೆಳೆ ನಷ್ಟಕ್ಕೆ ಇನ್ಶೂರೆನ್ಸ್ ಕ್ಲಿಯರ್ ಆಗಿಲ್ಲ. ಇದು ರಾಜ್ಯಾದ್ಯಂತ ಇರುವ ಸಮಸ್ಯೆ. ಈ ಬಗ್ಗೆ ಇನ್ಶೂರೆನ್ಸ್ ಕಂಪನಿಯವರೊಂದಿಗೆ ವಿಶೇಷ ಸಭೆ ನಡೆಸುವ ಅಗತ್ಯತೆ ಇದೆ.
ಭಾರತ್ ಜೋಡೋ ಸಂಘ ಕಾರ್ಯಕ್ರಮ ಸಿಎಂ ಡಿ.ಕೆ.ಶಿವಕುಮಾರ್ ಅವರ ಕನಸಿನ ಕೂಸಿನ ಯೋಜನೆ. ಧರ್ಮ, ಜಾತಿ ಆಧಾರದ ಮೇಲೆ ವಿಂಗಡಣೆಯಾಗುತ್ತಿರುವ ಸಮಾಜದಲ್ಲಿ ಸಾಮರಸ್ಯ ಮೂಡಿಸುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಪ್ರತಿಯೊಂದು ಪಂಚಾಯಿತಿಯಲ್ಲಿ ನಾಲ್ಕು ಸಾವಿರ ಜನಸಂಖ್ಯೆ ಇರುವ ಕಡೆ ಒಂದು ಸಂಘ ರಚಿಸಬೇಕು. ಸಂಘದಲ್ಲಿ ಎಲ್ಲ ವರ್ಗದ ಜನರು ಪಾಲ್ಗೊಳ್ಳಬೇಕು. ಸಮಾಜದ ಶೋಷಿತ, ಹಿಂದುಳಿದ ವರ್ಗಗಳನ್ನು ಸಂಘದಿಂದ ಕೈಬಿಡಬಾರದು ಎಂಬ ನಿಟ್ಟಿನಲ್ಲಿ ಸಂಘದ ಸದಸ್ಯತ್ವಕ್ಕೆ ಮೀಸಲಾತಿ ಕಲ್ಪಿಸಲಾಗಿದೆ. ಪಂಚಾಯಿತಿ ಅಧಿಕಾರಿಗಳು ಭಾರತ್ ಜೋಡೋ ಸಂಘಗಳ ಕಾರ್ಯಚಟುವಟಿಕೆಗಳ ಮೇಲೆ ನಿಗಾವಹಿಸಬೇಕು. ರಾಷ್ಟ್ರೀಯ ಹಬ್ಬಗಳನ್ನು ಬಹಳ ವಿಜೃಂಭಣೆಯಿಂದ ಆಚರಿಸಬೇಕು. ಯಾವುದೇ ರೀತಿಯ ವ್ಯತ್ಯಾಸಗಳು ಆಗದಂತೆ ನೋಡಲ್ ಅಧಿಕಾರಿಗಳು ನೋಡಿಕೊಳ್ಳಬೇಕು.
ಸಂಘದ ಕಾರ್ಯಚಟುವಟಿಕೆ ನಡೆಸಲು ಶಾಲಾ-ಕಾಲೇಜುಗಳು, ಪಂಚಾಯಿತಿಗೆ ಸಂಬಂಧಿಸಿದ ಕಟ್ಟಡಗಳನ್ನು ಬಳಸಿಕೊಳ್ಳಬೇಕು. ಈ ಯೋಜನೆಗೆ ₹1000 ಕೋಟಿ ಖರ್ಚು ಮಾಡುತ್ತಿದ್ದೇವೆ ಎಂದರೆ ಸಾಮಾನ್ಯ ಕಾರ್ಯಕ್ರಮವಲ್ಲ. ಸಮಾಜದ ನ್ಯೂನತೆಗಳನ್ನು ಸರಿಪಡಿಸಲು ಯುವಕರಿಗೆ ಅವಕಾಶ ಸಿಗುತ್ತದೆ. 10 ಸಾವಿರ ಸಂಘಗಳನ್ನು ಮಾಡುವ ಕೆಲಸ ಯಾವ ರಾಜ್ಯಗಳು ಮಾಡಿಲ್ಲ. ಆಗಸ್ಟ್ ತಿಂಗಳ ಕೊನೆ ವೇಳೆ ಸಂಘದ ನೋಂದಣಿಯನ್ನು ಪೂರ್ಣಗೊಳಿಸುವಂತೆ ಸೂಚನೆ ನೀಡಲಾಗಿದೆ. ನೋಂದಣಿ ಪೂರ್ಣಗೊಳಿಸಿದ ಬಳಿಕ ಸಿಎಂ ಅವರು ಚಾಲನೆ ನೀಡಲಿದ್ದಾರೆ.
ಈ ಸಂದರ್ಭದಲ್ಲಿ ಕುಣಿಗಲ್ ಶಾಸಕರಾದ ಡಾ. ಹೆಚ್.ಡಿ.ರಂಗನಾಥ್, ಜಿಲ್ಲಾಧಿಕಾರಿಗಳಾದ ಶುಭ ಕಲ್ಯಾಣ್, ತುಮಕೂರು ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಟಾನ ಸಮಿತಿಯ ಅಧ್ಯಕ್ಷರಾದ ಚಂದ್ರಶೇಖರ್ ಗೌಡ, ಬಿಎಂಟಿಸಿ ಉಪಾಧ್ಯಕ್ಷರಾದ ನಿಕೇತ್ ರಾಜ್ ಮೌರ್ಯ ಸೇರಿದಂತೆ ಮುಂತಾದವರು ಇದ್ದರು. -
Dr. G Parameshwara
@DrParameshwara
As part of the drought review in Gubbi Taluk, I inspected borewells drilled under the CAP grant and reviewed the water distribution network supplying villages in the area. Officials have been directed to closely monitor rural drinking water systems and ensure uninterrupted supply wherever scarcity is reported.
Our government remains committed to responding quickly to drought-related challenges and ensuring that every affected village receives the support it needs. -
Dr. G Parameshwara
@DrParameshwara
The Government is taking all necessary measures to ensure that drought-affected areas in Tumakuru receive timely support, particularly for drinking water supply and farmer welfare.
₹5 crore has been placed at the disposal of the Zilla Panchayat Chief Executive Officer for drinking water management, while ₹1 crore has been provided to each local MLA to address urgent requirements in their constituencies. In addition, ₹329 crore has been kept available in the accounts of Deputy Commissioners and PDOs across the State to respond swiftly to drought-related needs.
Our priority is clear — no shortage of funds should come in the way of providing drinking water, protecting livelihoods and supporting farmers during this difficult period. -
Dr. G Parameshwara
@DrParameshwara
ಇಂದು ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ನಾಗನಹಳ್ಳಿ, ಮಂಡನಪಾಳ್ಯ ಗ್ರಾಮದ ಬರಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ, ಅವಲೋಕನ ನಡೆಸಿದೆ.
ಈ ಸಂದರ್ಭದಲ್ಲಿ ಫಲವತ್ತಾದ ಮಣ್ಣಿನಲ್ಲಿ ಬೆಳೆದಿದ್ದ ಅಡಿಕೆ ಬೆಳೆ ನೀರಿನ ಕೊರತೆಯಿಂದ ಒಣಗುತ್ತಿರುವುದು ಕಂಡುಬಂತು. ಬರದಿಂದ ರೈತರು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಮಾಹಿತಿ ಪಡೆದೆ.
ರೈತರು ಬರ ಪರಿಹಾರ ಒದಗಿಸುವಂತೆ ಹಾಗೂ ಹೇಮಾವತಿ ಎಕ್ಸ್ಪ್ರೆಸ್ ಲಿಂಕ್ ಕೆನಾಲ್ ಮೂಲಕ ಕುಣಿಗಲ್ ತಾಲೂಕಿಗೆ ನೀರು ಹರಿಸುವಂತೆ ಮನವಿ ಮಾಡಿದರು.
ಈ ಯೋಜನೆಗೆ ಈಗಾಗಲೇ ₹1,000 ಕೋಟಿ ಅನುದಾನ ಮೀಸಲಿಟ್ಟು, ಕಾಮಗಾರಿಗೆ ಅನುಮೋದನೆ ನೀಡಲಾಗಿದೆ. ಈ ಪೈಕಿ ₹450 ಕೋಟಿ ಹಣವನ್ನು ಈಗಾಗಲೇ ಬಿಡುಗಡೆ ಮಾಡಲಾಗಿದೆ. ಆದರೆ ತುರುವೇಕೆರೆ ಹಾಗೂ ಚಿಕ್ಕನಾಯಕನಹಳ್ಳಿ ಭಾಗದ ರೈತರು ಯೋಜನೆಗೆ ವಿರೋಧ ವ್ಯಕ್ತಪಡಿಸುತ್ತಿರುವ ಹಿನ್ನೆಲೆಯಲ್ಲಿ ಸಮಸ್ಯೆ ಉಂಟಾಗಿದೆ. ಈ ವಿಚಾರವನ್ನು ಮಾತುಕತೆಯ ಮೂಲಕ ಬಗೆಹರಿಸಲಾಗುವುದು ಎಂದು ಭರವಸೆ ನೀಡಿದೆ. -
Dr. G Parameshwara
@DrParameshwara
Dr Manmohan Singh’s legacy is one of integrity, dignity and transformative public service. The Supreme Court’s recent decision upholding the CBI clean chit in the coal allocation case only reinforces what many always believed - the attacks on his integrity were baseless.
From economic growth and poverty reduction to landmark laws like MGNREGA, RTI and the Right to Education, his contribution to India will endure far beyond political propaganda.
Smt Sonia Gandhi’s article in today’s Indian Express is a timely reflection on a statesman history will remember with respect. Do read. -
Dr. G Parameshwara
@DrParameshwara
ಇಂದು ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಸಿ.ಎಸ್.ಪುರ ಹೋಬಳಿಯ ಯಡುವನಹಳ್ಳಿಗೆ ಭೇಟಿ ನೀಡಿ, ತುರ್ತು ಕ್ರಿಯಾ ಯೋಜನೆ (CAP) ಅನುದಾನದಡಿ ಕೊರೆಸಲಾದ ಕುಡಿಯುವ ನೀರಿನ ಕೊಳವೆಬಾವಿಯನ್ನು ಪರಿಶೀಲಿಸಿದೆ.
ಬೋರ್ವೆಲ್ನ ಪ್ರಸ್ತುತ ಸ್ಥಿತಿಗತಿ, ನೀರಿನ ಲಭ್ಯತೆ ಹಾಗೂ ಗ್ರಾಮಸ್ಥರಿಗೆ ಕುಡಿಯುವ ನೀರು ಪೂರೈಸಲು ಕೈಗೊಂಡಿರುವ ಕ್ರಮಗಳ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದೆ.
ಬರ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗದಂತೆ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವುದು ಸರ್ಕಾರದ ಪ್ರಮುಖ ಆದ್ಯತೆಯಾಗಿದೆ. ಜನರಿಗೆ ಅಗತ್ಯ ಪ್ರಮಾಣದಲ್ಲಿ ಕುಡಿಯುವ ನೀರು ಲಭ್ಯವಾಗುವಂತೆ ನಿರಂತರವಾಗಿ ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡುವಂತೆ ಸ್ಥಳದಲ್ಲೇ ಅಧಿಕಾರಿಗಳಿಗೆ ಸೂಚಿಸಿದೆ.
ಈ ವೇಳೆ ಗ್ರಾಮಸ್ಥರು, ಕಸ ವಿಲೇವಾರಿ, ಆಸ್ಪತ್ರೆ ಸಮಸ್ಯೆ ಕುರಿತು ಹಾಗೂ ಸ್ಮಶಾನ ಭೂಮಿ ಮಂಜೂರು ಮಾಡುವಂತೆ ಕೋರಿ ಮನವಿ ಸಲ್ಲಿಸಿದರು. ಅದೆಲ್ಲವನ್ನೂ ಶೀಘ್ರವಾಗಿ ಆದ್ಯತೆ ಮೇರೆಗೆ ಪರಿಶೀಲಿಸಿ ಪರಿಹರಿಸುವಂತೆ ಜಿಲ್ಲಾಧಿಕಾರಿಗಳಿಗೆ ನಿರ್ದೇಶಿಸಿದೆ. -
Dr. G Parameshwara
@DrParameshwara
ಸೋಮವಾರ ತುಮಕೂರು ಜಿಲ್ಲಾ ಪ್ರವಾಸ ಕೈಗೊಂಡು ಶಿರಾ, ಪಾವಗಡ, ಮಧುಗಿರಿ ತಾಲೂಕುಗಳ ವಿವಿಧ ಗ್ರಾಮಗಳ ಬರ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ, ಪರಿಶೀಲನೆ ನಡೆಸಿದೆ.
ಬಳಿಕ ಮಧುಗಿರಿ ಕಂದಾಯ ಉಪ ವಿಭಾಗದ ಪ್ರಗತಿ ಪರಿಶೀಲನಾ ಸಭೆಯನ್ನು ನಡೆಸಿ, ಕುಡಿಯುವ ನೀರಿನ ಲಭ್ಯತೆ, ಜಾನುವಾರುಗಳಿಗೆ ಮೇವು, ಜನರಿಗೆ ಉದ್ಯೋಗ ಸೇರಿದಂತೆ ವಿವಿಧ ವಿಷಯಗಳ ಕುರಿತು ಸುದೀರ್ಘವಾಗಿ ಚರ್ಚಿಸಿ, ಬರ ಪರಿಸ್ಥಿತಿ ಎದುರಿಸಲು ಅಧಿಕಾರಿಗಳಿಗೆ ಅಗತ್ಯ ನಿರ್ದೇಶನ ನೀಡಿದೆ.
ಬರ ಎದುರಿಸಲು ಸರ್ಕಾರ ಕೈಗೊಂಡಿರುವ ಕ್ರಮಗಳು ಸೇರಿದಂತೆ ಇನ್ನಿತರೆ ವಿಚಾರಗಳ ಬಗ್ಗೆ ಮಾಧ್ಯಮಕ್ಕೂ ಮಾತನಾಡಿದೆ.
ಈ ಕುರಿತಾದ ಪತ್ರಿಕಾ ವರದಿಗಳು ಹೀಗಿವೆ.. -
Dr. G Parameshwara
@DrParameshwara
ಸೋಮವಾರ ತುಮಕೂರು ಜಿಲ್ಲಾ ಪ್ರವಾಸ ಕೈಗೊಂಡು ಶಿರಾ, ಪಾವಗಡ, ಮಧುಗಿರಿ ತಾಲೂಕುಗಳ ವಿವಿಧ ಗ್ರಾಮಗಳ ಬರ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ, ಪರಿಶೀಲನೆ ನಡೆಸಿದೆ.
ಬಳಿಕ ಮಧುಗಿರಿ ಕಂದಾಯ ಉಪ ವಿಭಾಗದ ಪ್ರಗತಿ ಪರಿಶೀಲನಾ ಸಭೆಯನ್ನು ನಡೆಸಿ, ಕುಡಿಯುವ ನೀರಿನ ಲಭ್ಯತೆ, ಜಾನುವಾರುಗಳಿಗೆ ಮೇವು, ಜನರಿಗೆ ಉದ್ಯೋಗ ಸೇರಿದಂತೆ ವಿವಿಧ ವಿಷಯಗಳ ಕುರಿತು ಸುದೀರ್ಘವಾಗಿ ಚರ್ಚಿಸಿ, ಬರ ಪರಿಸ್ಥಿತಿ ಎದುರಿಸಲು ಅಧಿಕಾರಿಗಳಿಗೆ ಅಗತ್ಯ ನಿರ್ದೇಶನ ನೀಡಿದೆ.
ಬರ ಎದುರಿಸಲು ಸರ್ಕಾರ ಕೈಗೊಂಡಿರುವ ಕ್ರಮಗಳು ಸೇರಿದಂತೆ ಇನ್ನಿತರೆ ವಿಚಾರಗಳ ಬಗ್ಗೆ ಮಾಧ್ಯಮಕ್ಕೂ ಮಾತನಾಡಿದೆ.
ಈ ಕುರಿತಾದ ಪತ್ರಿಕಾ ವರದಿಗಳು ಹೀಗಿವೆ.. -
Dr. G Parameshwara
@DrParameshwara
ಇಂದಿನ ತುಮಕೂರು ಜಿಲ್ಲೆಯ ವಿವಿಧ ತಾಲೂಕುಗಳ ಬರ ಪೀಡಿತ ಪ್ರದೇಶಗಳ ಭೇಟಿಯ ಕೆಲವು ತುಣುಕುಗಳು
This media couldn't be displayed. See it on the original post. -
Dr. G Parameshwara
@DrParameshwara
ಇಂದು ಮಧುಗಿರಿ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಮಧುಗಿರಿ ಕಂದಾಯ ಉಪ ವಿಭಾಗದ ಪ್ರಗತಿ ಪರಿಶೀಲನಾ ಸಭೆ ನಡೆಸಿ, ಅಧಿಕಾರಿಗಳಿಂದ ಮಾಹಿತಿ ಪಡೆದೆ.
ಬಳಿಕ ಕುಡಿಯುವ ನೀರಿನ ಲಭ್ಯತೆ, ಜಾನುವಾರುಗಳಿಗೆ ಮೇವು, ಜನರಿಗೆ ಉದ್ಯೋಗ ಸೇರಿದಂತೆ ವಿವಿಧ ವಿಷಯಗಳ ಕುರಿತು ಸುದೀರ್ಘವಾಗಿ ಚರ್ಚಿಸಿ, ಬರ ಪರಿಸ್ಥಿತಿ ಎದುರಿಸಲು ಅಧಿಕಾರಿಗಳಿಗೆ ಅಗತ್ಯ ನಿರ್ದೇಶನಗಳನ್ನು ನೀಡಿದೆ.
2022ರಲ್ಲಿ ಜಲಜೀವನ್ ಮಿಷನ್ ಯೋಜನೆ ಪ್ರಾರಂಭವಾಗಿದ್ದು, 2024ರಲ್ಲಿ ಕಾಮಗಾರಿ ಮುಗಿಯಬೇಕಿತ್ತು. 442 ಕಾಮಗಾರಿಗಳು ಈವರೆಗೂ ಪ್ರಾರಂಭವಾಗಿಲ್ಲ. ಗುತ್ತಿಗೆದಾರರಿಗೆ ಕಾಮಗಾರಿ ನೀಡುವಾಗ ಗಡುವು ನೀಡಲಾಗಿರುತ್ತದೆ. ಈ ಬಗ್ಗೆ ಎಚ್ಚರಿಸಬೇಕಲ್ಲವೇ? ಕಾಮಗಾರಿ ವಿಳಂಬ ಮಾಡಿರುವ ಗುತ್ತಿಗೆದಾರರನ್ನು ಬ್ಲಾಕ್ ಲೀಸ್ಟ್ಗೆ ಸೇರಿಸಿ.
1,468 ಶುದ್ಧ ನೀರಿನ ಘಟಕಗಳ ಪೈಕಿ 285 ಘಟಕಗಳು ರಾಸಾಯನಿಕ ಮಾಲಿನ್ಯ ಆಗಿವೆ. ಶುದ್ಧ ಕುಡಿಯುವ ನೀರಿನ ಘಟಕಗಳು ಹಾಳಾಗಿವೆ. ಜಲಜೀವನ್ ಮಿಷನ್ ಯೋಜನೆ ಪ್ರಾರಂಭವಾಗಿಲ್ಲ. ಯಾವುದೇ ಕುಡಿಯುವ ನೀರಿನ ಘಟಕಗಳ ಲ್ಯಾಬ್ ಟೆಸ್ಟ್ ಕೂಡ ನಡೆದಿಲ್ಲ. ಸಭೆಯಲ್ಲಿ ಸಬೂಬು ಹೇಳುತ್ತೀರಿ.
ಇಂಜಿನಿಯರ್ಗಳು ಒಂದೊಂದು ಸಲ ಒಂದೊಂದು ರೀತಿ ಮಾಹಿತಿ ನೀಡುತ್ತೀರಿ. ಜಿಲ್ಲಾ ಮಟ್ಟದ ಸಭೆಯಲ್ಲಿ ಬೇರೆ ಮಾಹಿತಿ ನೀಡಲಾಗಿತ್ತು. ಈಗ ಬೇರೆ ಡೇಟಾ ನೀಡಲಾಗಿದೆ. ಯಾವ ಡೇಟಾ ನಂಬಬೇಕು. ಮುಂದಿನ ಸಭೆಗಳಲ್ಲಿ ಕುಡಿಯುವ ನೀರಿಗೆ ಸಂಬಂಧಿಸಿದಂತೆ ನಗರ ಮತ್ತು ಗ್ರಾಮೀಣ ಭಾಗದ ಎಲ್ಲ ರೀತಿಯ ಯೋಜನೆಗಳ ಮಾಹಿತಿಯನ್ನು ತರಬೇಕು. ಎಷ್ಟು ಶುದ್ಧ ನೀರಿನ ಘಟಕಗಳಿವೆ. ಯಾವುದಕ್ಕೆ ಎಷ್ಟು ಖರ್ಚು ಮಾಡಲಾಗಿದೆ ಎಂಬ ಮಾಹಿತಿ ಲಭ್ಯವಿರಬೇಕು.
ಬರಗಾಲ ಇರುವುದರಿಂದ ಜನರು ಉದ್ಯೋಗಕ್ಕಾಗಿ ಊರುಗಳನ್ನು ಬಿಟ್ಟು ವಲಸೆ ಹೋಗಬಾರದು ಎಂಬ ನಿಟ್ಟಿನಲ್ಲಿ 'ವಿಬಿ ಜಿ ರಾಮ್ ಜಿ' ಯೋಜನೆಯಡಿ ಉದ್ಯೋಗ ನೀಡುವಂತೆ ಸೂಚನೆ ನೀಡಲಾಗಿದೆ. ಶಿರಾ ತಾಲೂಕಿನಲ್ಲಿ ಈವರೆಗೂ ಉದ್ಯೋಗ ನೀಡಿಲ್ಲ. ಬರೀ ₹8 ಲಕ್ಷ ಖರ್ಚು ಮಾಡಲಾಗಿದೆ. ಏನೇ ಕೇಳಿದರು ತಾಂತ್ರಿಕ ಸಮಸ್ಯೆ ಎಂದು ಸಬೂಬು ಹೇಳುತ್ತೀರಿ. ಎಮೆರ್ಜೆನ್ಸಿ ಇದೆ. ತಮಾಷೆಯಾಗಿ ತೆಗೆದುಕೊಂಡರೆ ಸಹಿಸುವುದಿಲ್ಲ.
ಮಳೆಯ ಪ್ರಮಾಣ ಕಡಿಮೆಯಾಗಿರುವುದರಿಂದ ಕೃಷಿ ಚಟುವಟಿಕೆಗಳು ನಿಂತು ಹೋಗಿವೆ. ಶಿರಾದಲ್ಲಿ ಶೇಂಗಾ, ರಾಗಿ ಸೇರಿದಂತೆ ಎಲ್ಲ ಬೆಳೆಗಳು ಒಣಗಿ ಹೋಗುವ ಪರಿಸ್ಥಿತಿ ಇದೆ. ಈಗ ಮಳೆ ಬಂದರೂ ಬೆಳೆಗಳು ಸುಧಾರಿಸಿಕೊಳ್ಳುವ ಪರಿಸ್ಥಿತಿ ಇಲ್ಲ. ಪಾವಗಡ, ಮಧುಗಿರಿ ತಾಲೂಕಿನಲ್ಲಿಯೂ ಇದೇ ಪರಿಸ್ಥಿತಿ ಇದೆ. ನಾಲ್ಕು ತಾಲ್ಲೂಕುಗಳಲ್ಲಿ ಸಂಪೂರ್ಣವಾಗಿ ಬೆಳೆ ಬರುವ ಯಾವ ಮುನ್ಸೂಚನೆಯೂ ಇಲ್ಲ.
ಇಡೀ ಜಿಲ್ಲೆಯಲ್ಲಿ ಬರ ಪರಿಸ್ಥಿತಿ ಗಂಭೀರವಾಗಿದೆ. ಕುಡಿಯುವ ನೀರಿಗೆ ತೊಂದರೆಯಾಗಬಾರದು. ಈ ವಿಚಾರದಲ್ಲಿ ಅಧಿಕಾರಿಗಳು ಸಬೂಬು ಹೇಳಬಾರದು. ಎಲ್ಲ ಇಲಾಖೆಯ ಅಧಿಕಾರಿಗಳು ತೀರ್ಮಾನಗಳನ್ನು ತೆಗೆದುಕೊಳ್ಳುವಾಗ ಜವಾಬ್ದಾರಿಗಳನ್ನು ಬೇರೆಯವರ ಮೇಲೆ ಹಾಕಿದರೆ ಸಹಿಸುವುದಿಲ್ಲ. ಕಾರಣ ಹೇಳಿ, ನುಣುಚಿಕೊಳ್ಳಲು ಪ್ರಯತ್ನಿಸಿದರೆ ಕ್ರಮ ಎದುರಿಸಬೇಕಾಗುತ್ತದೆ.
ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ತಹಶೀಲ್ದಾರ್ ಬಳಿಯು ಹಣ ಇಡಲಾಗಿದೆ. ಕೊರಟಗೆರೆ ತಹಶೀಲ್ದಾರರ ಬಳಿ ₹17 ಲಕ್ಷ, ಮಧುಗಿರಿ ₹41 ಲಕ್ಷ, ಪಾವಗಡ ₹10 ಲಕ್ಷ ಹಾಗೂ ಶಿರಾ ₹10 ಲಕ್ಷ ಹಣ ಇಡಲಾಗಿದೆ. ಅಗತ್ಯತೆ ಬಂದಾಗ ಖರ್ಚು ಮಾಡಲು ಅನುದಾನ ನೀಡಲಾಗಿದೆ. ಅಧಿಕಾರಿಗಳ ವಲಯದಿಂದ ದುಡ್ಡಿಲ್ಲ ಎಂಬ ಅನಾವಶ್ಯಕ ಮಾತುಗಳು ಕೇಳಿ ಬಂದರೆ ಸುಮ್ಮನಿರುವುದಿಲ್ಲ.
ಮಧುಗಿರಿ ಕಂದಾಯ ಉಪವಿಭಾಗದ ನಾಲ್ಕು ತಹಶೀಲ್ದಾರ್ ಮತ್ತು ಇಒಗಳು 'ವಿಬಿ ಜಿ ರಾಮ್ ಜಿ' ಯೋಜನೆಗೆ 51 ಸಾವಿರ ಕಾಮಗಾರಿಗಳಿಗೆ ಅನುಮೋದನೆ ನೀಡಲಾಗಿದೆ. ಎಲ್ಲ ತಾಲೂಕುಗಳಲ್ಲಿ ಸರಿಯಾಗಿ ಕೆಲಸ ನೀಡುತ್ತಿಲ್ಲ. ಮೇಲಾಧಿಕಾರಿಗಳು ಅನುಮೋದನೆ ನೀಡಿ ಸುಮ್ಮನೆ ಕುಳಿತರೆ ಸಾಲುವುದಿಲ್ಲ. ಕಾಮಗಾರಿಗಳು ಸಮರ್ಪಕವಾಗಿ ನಡೆಯುತ್ತಿವೆಯೇ ಎಂಬುದನ್ನು ಪರಿಶೀಲನೆ ನಡೆಸಬೇಕು. ಜನರಿಗೆ ಉದ್ಯೋಗ ನೀಡುವ ವಿಚಾರದಲ್ಲಿ ನಿರ್ಲಕ್ಷ್ಯ ವಹಿಸುವ ಅಧಿಕಾರಿಗಳ ವಿರುದ್ಧ ಮುಲಾಜಿಲ್ಲದೆ ಕ್ರಮ ಜರುಗಿಸಬೇಕು.
ಕುಡಿಯುವ ನೀರು, ಜಾನುವಾರುಗಳಿಗೆ ಮೇವು, ಜನರಿಗೆ ಉದ್ಯೋಗ ನೀಡುವ ವಿಚಾರಗಳನ್ನು ಗಂಭೀರವಾಗಿ ಪರಿಗಣಿಸಿ ಕೆಲಸ ಮಾಡಬೇಕು. ಹವಾಮಾನ ವ್ಯತ್ಯಾಸದಿಂದ ಜನರಿಗೆ ಆರೋಗ್ಯ ಸಮಸ್ಯೆಯಾಗಬಹುದು. ಈಗಿನಿಂದಲೇ ಮುನ್ನೆಚ್ಚರಿಕೆ ವಹಿಸಬೇಕು. ಈ ಬಗ್ಗೆ ಡಿಸಿ, ಸಿಇಒ ಅವರಿಗೆ ಪ್ರತಿ ವಾರ ಮಾಹಿತಿ ನೀಡಬೇಕು.
ಜಿಲ್ಲೆಯ ಎಲ್ಲ ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿದ್ದು ಕೆಲಸ ಮಾಡಬೇಕು. ಯಾವ ಅಧಿಕಾರಿ ಎಲ್ಲೆಲ್ಲಿ ಇದ್ದು ಕೆಲಸ ಮಾಡುತ್ತಿದ್ದಾರೆ ಎಂಬುದರ ಬಗ್ಗೆ ಮಾಹಿತಿ ನೀಡಬೇಕು. ಅಧಿಕಾರಿಗಳು ಜನರ ಕೈಗೆ ಸಿಗುವುದಿಲ್ಲ ಎಂದರೆ ಏನು ಮಾಡುವುದು. ಈ ಬಗ್ಗೆ ಗಮನ ವಹಿಸಿ.
ಕಂದಾಯ, ಕೃಷಿ, ಪಶುಸಂಗೋಪನೆ ಇಲಾಖೆಗಳು ಸಮನ್ವಯತೆಯಿಂದ ಕೆಲಸ ಮಾಡಬೇಕು. ಸರ್ಕಾರದ ಸವಲತ್ತುಗಳನ್ನು ನೀಡುವಾಗ ಅರ್ಹರನ್ನು ಗುರುತಿಸಬೇಕು. ಕಷ್ಟದಲ್ಲಿರುವ ಬಡ ಜನರಿಗೆ ಸರ್ಕಾರದ ಸವಲತ್ತುಗಳು ತಲುಪಿದರೆ ಅನುಕೂಲವಾಗುತ್ತದೆ. -
Dr. G Parameshwara
@DrParameshwara
After interacting with farmers and inspecting groundnut crops in Shira Taluk, I witnessed firsthand the distress caused by inadequate rainfall.
Our government stands in solidarity with the affected farmers. I have directed officials to take immediate measures to address drinking water scarcity and ensure timely support to affected communities.
I have also ordered a detailed review of claims and payouts under the Fasal Bima Scheme over the last three years across all 42 Gram Panchayats of Shira Taluk, to ensure that eligible farmers receive their rightful insurance compensation without delay.
ಇಂದು ಶಿರಾ ತಾಲ್ಲೂಕಿಗೆ ಭೇಟಿ ನೀಡಿದ ಸಂದರ್ಭದಲ್ಲಿ ರೈತರೊಂದಿಗೆ ಚರ್ಚೆ ನಡೆಸಿ, ಶೇಂಗಾ ಬೆಳೆಯ ಪರಿಸ್ಥಿತಿಯನ್ನು ಸ್ಥಳದಲ್ಲೇ ಪರಿಶೀಲಿಸಿದೆ. ಮಳೆ ಕೊರತೆಯಿಂದ ರೈತರು ಎದುರಿಸುತ್ತಿರುವ ಸಂಕಷ್ಟವನ್ನು ಖುದ್ದಾಗಿ ಕಂಡು, ಕುಡಿಯುವ ನೀರಿನ ಕೊರತೆಯನ್ನು ನಿವಾರಿಸಲು ತಕ್ಷಣ ಕ್ರಮ ಕೈಗೊಳ್ಳುವಂತೆ ಹಾಗೂ ಸಂಕಷ್ಟದಲ್ಲಿರುವ ರೈತರಿಗೆ ಅಗತ್ಯ ನೆರವು ಒದಗಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದೆ.
ಅಲ್ಲದೆ, ಶಿರಾ ತಾಲ್ಲೂಕಿನ ಎಲ್ಲಾ 42 ಗ್ರಾಮ ಪಂಚಾಯಿತಿಗಳಲ್ಲಿ ಕಳೆದ ಮೂರು ವರ್ಷಗಳಲ್ಲಿ ಫಸಲ್ ಬಿಮಾ ಯೋಜನೆಯಡಿ ಸಂದಾಯವಾಗದಿರುವ ವಿಮೆ ಪಾವತಿಗಳ ಕುರಿತು ಸಮಗ್ರ ಪರಿಶೀಲನೆ ನಡೆಸುವಂತೆಯೂ ಆದೇಶಿಸಿದ್ದೇನೆ. ಅರ್ಹ ರೈತರಿಗೆ ಯಾವುದೇ ವಿಳಂಬವಿಲ್ಲದೆ ಅವರ ಹಕ್ಕಿನ ವಿಮಾ ಪರಿಹಾರವನ್ನು ನೀಡಲಾಗುವುದು. -
Dr. G Parameshwara
@DrParameshwara
To resolve long-pending issues and accelerate the NICE Road project, the Ministerial Sub-Committee has conducted 8 review meetings. The project has been divided into Sections A, B and C to systematically address legal and implementation challenges.
ದೀರ್ಘಕಾಲದಿಂದ ಬಾಕಿ ಉಳಿದಿರುವ ಸಮಸ್ಯೆಗಳನ್ನು ಪರಿಹರಿಸಿ, ನೈಸ್ ರಸ್ತೆ ಯೋಜನೆಯ ಕಾಮಗಾರಿಗಳಿಗೆ ವೇಗ ನೀಡುವ ಉದ್ದೇಶದಿಂದ ಸಂಪುಟ ಉಪಸಮಿತಿಯು 8 ಪರಿಶೀಲನಾ ಸಭೆಗಳನ್ನು ನಡೆಸಿದೆ. ಜೊತೆಗೆ ಕಾನೂನು ರೀತಿಯಲ್ಲಿ ಅಡೆತಡೆಗಳನ್ನು ವ್ಯವಸ್ಥಿತವಾಗಿ ಪರಿಹರಿಸಲು ಯೋಜನೆಯನ್ನು A, B ಮತ್ತು C ವಿಭಾಗಗಳಾಗಿ ವಿಂಗಡಿಸಲಾಗಿದೆ. -
Dr. G Parameshwara
@DrParameshwara
Tumakuru has been proposed as the site for Bengaluru’s second airport, with the potential to serve 20 districts. Plans also include seamless transit integration with Kempegowda International Airport, with the proposal submitted to the DGCA for technical and feasibility evaluation.
ಬೆಂಗಳೂರಿನ 2ನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ತುಮಕೂರಿನಲ್ಲಿ ನಿರ್ಮಾಣವಾಗಬೇಕು ಎಂಬ ಪ್ರಸ್ತಾವನೆಯಿದ್ದು, ಇದರಿಂದ 20 ಜಿಲ್ಲೆಗಳಿಗೆ ಅನುಕೂಲವಾಗಲಿದೆ. ಈ ಪ್ರಸ್ತಾವನೆಯನ್ನು ತಾಂತ್ರಿಕ ಪರಿಶೀಲನೆ ಹಾಗೂ ಕಾರ್ಯಸಾಧ್ಯತೆ ಪರಿಶೀಲನೆಗಾಗಿ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯಕ್ಕೆ ಸಲ್ಲಿಸಲಾಗಿದೆ. -
Dr. G Parameshwara
@DrParameshwara
A two-day field inspection for swift action in drought-affected areas is underway. Immediate assessments have been ordered in Shira, Chikkanayakanahalli and Pavagad, while regional data is being compiled to finalize targeted relief measures for the plains.
ಬರಪೀಡಿತ ಪ್ರದೇಶಗಳಲ್ಲಿ ತ್ವರಿತ ಕ್ರಮ ಕೈಗೊಳ್ಳಲು ಎರಡು ದಿನಗಳ ಕ್ಷೇತ್ರ ಪರಿಶೀಲನೆ ನಡೆಸುತ್ತಿದ್ದೇನೆ. ಶಿರಾ, ಚಿಕ್ಕನಾಯಕನಹಳ್ಳಿ ಹಾಗೂ ಪಾವಗಡ ತಾಲೂಕುಗಳಲ್ಲಿ ಬರದಿಂದ ಆಗಿರುವ ನಷ್ಟದ ಮಾಹಿತಿ ಸಂಗ್ರಹಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಮಾತ್ರವಲ್ಲದೆ, ಬಯಲುಸೀಮೆಯ ರೈತರಿಗೆ ಅಗತ್ಯ ನೆರವು ನೀಡಲು ಪ್ರದೇಶವಾರು ಮಾಹಿತಿ ಸಂಗ್ರಹಿಸಲಾಗುತ್ತಿದೆ. -
Dr. G Parameshwara
@DrParameshwara
ಇಂದು ತುಮಕೂರು ಜಿಲ್ಲಾ ಪ್ರವಾಸ ಕೈಗೊಂಡು ಶಿರಾ, ಪಾವಗಡ, ಮಧುಗಿರಿ ತಾಲೂಕುಗಳ ವಿವಿಧ ಗ್ರಾಮಗಳ ಬರ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ, ಬಳಿಕ ಮಧುಗಿರಿ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಮಧುಗಿರಿ ಕಂದಾಯ ಉಪ ವಿಭಾಗದ ಪ್ರಗತಿ ಪರಿಶೀಲನಾ ಸಭೆ ನಡೆಸಿ, ಅಧಿಕಾರಿಗಳಿಂದ ಮಾಹಿತಿ ಪಡೆದೆ.
ಕುಡಿಯುವ ನೀರಿನ ಲಭ್ಯತೆ, ಜಾನುವಾರುಗಳಿಗೆ ಮೇವು, ಜನರಿಗೆ ಉದ್ಯೋಗ ಸೇರಿದಂತೆ ವಿವಿಧ ವಿಷಯಗಳ ಕುರಿತು ಸುದೀರ್ಘವಾಗಿ ಚರ್ಚಿಸಿ, ಬರ ಪರಿಸ್ಥಿತಿ ಎದುರಿಸಲು ಅಧಿಕಾರಿಗಳಿಗೆ ಅಗತ್ಯ ನಿರ್ದೇಶನ ನೀಡಿದೆ.
ಈ ಸಂದರ್ಭದಲ್ಲಿ ಮಧುಗಿರಿ ಶಾಸಕರಾದ ಕೆ.ಎನ್.ರಾಜಣ್ಣ, ಪಾವಗಡ ಶಾಸಕರಾದ ಹೆಚ್.ವಿ.ವೆಂಕಟೇಶ್, ಜಿಲ್ಲಾಧಿಕಾರಿಗಳಾದ ಶುಭ ಕಲ್ಯಾಣ್, ಮಧುಗಿರಿ ಉಪ ವಿಭಾಗಾಧಿಕಾರಿಗಳಾದ ಶಿವಪ್ಪ ಸೇರಿದಂತೆ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು. -
Dr. G Parameshwara
@DrParameshwara
ಇಂದು ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಮಿಡಿಗೇಶಿ ಹೋಬಳಿಯ ಅವರಗಲ್ಲು ಗ್ರಾಮದಲ್ಲಿ ಬರ ಪರಿಸ್ಥಿತಿಯ ಅವಲೋಕನ ನಡೆಸಿದೆ. ಜಮೀನುಗಳಿಗೆ ತೆರಳಿ ಬೆಳೆ ಪರಿಸ್ಥಿತಿಯ ಕುರಿತು ರೈತರಿಂದ ಹಾಗೂ ಅಧಿಕಾರಿಗಳಿಂದ ಮಾಹಿತಿ ಪಡೆದೆ.
ಶಾಸಕರಾದ ಕೆ.ಎನ್.ರಾಜಣ್ಣ, ಹೆಚ್.ವಿ.ವೆಂಕಟೇಶ್, ಜಿಲ್ಲಾಧಿಕಾರಿಗಳಾದ ಶುಭ ಕಲ್ಯಾಣ್ ಜೊತೆಗಿದ್ದರು. -
Dr. G Parameshwara
@DrParameshwara
ಇಂದು ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಮೇಲುಕುಂಟೆ ಗ್ರಾಮದ ಶೇಂಗಾ ಬಿತ್ತನೆಯ ಜಮೀನಿಗೆ ಭೇಟಿ ನೀಡಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದೆ.
ರಾಜ್ಯದ ಯಾವುದೇ ಭಾಗಗಳಲ್ಲಿ ಸಮರ್ಪಕ ಮಳೆಯಾಗದ ಪರಿಣಾಮ, ಭೀಕರ ಬರ ಪರಿಸ್ಥಿತಿ ಉಂಟಾಗಿದೆ. ಇಂತಹ ಸಂಕಷ್ಟದ ಸಮಯದಲ್ಲಿ ರೈತರು ಮತ್ತು ಸಾರ್ವಜನಿಕರ ನೆರವಿಗೆ ಸರ್ಕಾರ ನಿಲ್ಲಲಿದೆ.
ಇಡೀ ರಾಜ್ಯದಲ್ಲಿ ಎಲ್ಲಿಯೂ ಸಮರ್ಪಕವಾಗಿ ಮಳೆಯಾಗದ ಕಾರಣ ಬೆಳೆಗಳು ರೈತರ ಕೈತಪ್ಪಿ ಹೋಗಿವೆ. ಕರಾವಳಿ ಮತ್ತು ಮಲೆನಾಡು ಭಾಗಗಳಲ್ಲಿ ಒಂದಿಷ್ಟು ಮಳೆಯಾಗಿರುವುದು ಬಿಟ್ಟರೆ ಬೇರೆ ಎಲ್ಲೂ ಮಳೆಯ ಸೂಚನೆಗಳೇ ಇಲ್ಲ. ಇಡೀ ರಾಜ್ಯದಲ್ಲಿ ಭೀಕರ ಬರ ತಲೆದೋರಿದೆ.
ತುಮಕೂರು ಜಿಲ್ಲೆಯ 10 ತಾಲೂಕುಗಳಲ್ಲಿ ಬರದ ಛಾಯೆ ಇದೆ. ರೈತರು ಕಂಗಾಲಾಗಿದ್ದಾರೆ. ಎಷ್ಟರ ಮಟ್ಟಿಗೆ ಅಂದರೆ ಕುಡಿಯುವ ನೀರಿಗೂ ಸಮಸ್ಯೆಯಾಗುತ್ತಿರುವುದನ್ನು ನೋಡುತ್ತಿದ್ದೇವೆ. ಇಂತಹ ಸಂದರ್ಭದಲ್ಲಿ ಸರ್ಕಾರ ಅವರ ನೆರವಿಗೆ ನಿಲ್ಲಬೇಕು. ಆ ನಿಟ್ಟಿನಲ್ಲಿ ಈಗಾಗಲೇ ಅನೇಕ ಕ್ರಮಗಳನ್ನು ಕೈಗೊಂಡಿದ್ದೇವೆ. ಕುಡಿಯುವ ನೀರಿಗಾಗಿ ಪ್ರತಿ ಜಿಲ್ಲೆಗೆ ₹5 ಕೋಟಿ ಕೊಟ್ಟಿದ್ದೇವೆ. ಪ್ರತಿ ಕ್ಷೇತ್ರಕ್ಕೆ ₹1 ಕೋಟಿ ಕೊಟ್ಟಿದ್ದೇವೆ. ಸಮಸ್ಯೆಗಳು ಎದುರಾದ ಸಂದರ್ಭದಲ್ಲಿ ಅವರಿಗೆ ಪರಿಹಾರ ಕೊಡಬೇಕು, ಅವರ ಸಹಾಯಕ್ಕೆ ನೆರವು ನೀಡುವಂತೆ ಈಗಾಗಲೇ ನಾನು ಮತ್ತು ಮುಖ್ಯಮಂತ್ರಿಗಳು ಸಂಪುಟದಲ್ಲಿ ಚರ್ಚೆ ನಡೆಸಿ ಕ್ರಮ ತೆಗೆದುಕೊಳ್ಳುತ್ತಿದ್ದೇವೆ.
ಪ್ರತಿ ಜಿಲ್ಲೆಯಲ್ಲಿನ ಬರ ಪರಿಸ್ಥಿತಿಯ ಪರಿವೀಕ್ಷಣೆಗಾಗಿ ಮುಖ್ಯಮಂತ್ರಿಗಳು ಸಚಿವರುಗಳಿಗೆ ಜವಾಬ್ದಾರಿ ನೀಡಿದ್ದಾರೆ. ತುಮಕೂರಿನಲ್ಲಿ ನಾನು ಇಂದು ಮತ್ತು ನಾಳೆ ಪರಿಶೀಲನೆ ಮಾಡಿ, ಅಧಿಕಾರಿಗಳ ಜೊತೆಗೆ ವರದಿಯನ್ನು ಸಿದ್ಧಪಡಿಸುತ್ತೇವೆ. ಕರ್ನಾಟಕದ ನೆರವಿಗೆ ಧಾವಿಸುವಂತೆ ಕೋರಿ ಈಗಾಗಲೇ ಕೇಂದ್ರಕ್ಕೂ ಪತ್ರ ಬರೆದಿದ್ದೇವೆ. ಆದರೆ, ಇನ್ನೂ ಪ್ರತಿಕ್ರಿಯೆ ಬಂದಿಲ್ಲ. 240 ತಾಲೂಕುಗಳಲ್ಲಿ ಬರ ಪರಿಸ್ಥಿತಿಯಿದ್ದು, ಈ ಬಗ್ಗೆ ಅಧ್ಯಯನ ಮಾಡಿ ಕೇಂದ್ರಕ್ಕೆ ವರದಿ ಸಲ್ಲಿಸುತ್ತೇವೆ.
ಬರ ಘೋಷಣೆ ಮಾಡಬೇಕಾದರೆ ಕೇಂದ್ರದ ಕೆಲವು ನಿಯಮಗಳಿವೆ. ಹಾಗಾಗಿ ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ. ವರದಿ ಬಂದ ಕೂಡಲೇ ನಮಗೊಂದು ಚಿತ್ರಣ ಸಿಗುತ್ತದೆ. ಆ ಬಳಿಕ ಬೆಳೆ ನಷ್ಟ ಪರಿಹಾರ ನೀಡಲು ಕ್ರಮ ತೆಗೆದುಕೊಳ್ಳುತ್ತೇವೆ. ನಾನು ಇಂದು ಶಿರಾ, ಪಾವಗಡ, ಮಧುಗಿರಿ, ಕೊರಟಗೆರೆ ತಾಲೂಕಿಗೆ ಭೇಟಿ ನೀಡಿ, ನಾಳೆ ಗುಬ್ಬಿ, ತಿಪಟೂರು, ಚಿಕ್ಕನಾಯಕನಹಳ್ಳಿ, ತುರುವೇಕೆರೆ ತಾಲ್ಲೂಕಿಗೆ ಭೇಟಿ ನೀಡುತ್ತೇನೆ. ಬಳಿಕ ಅಧ್ಯಯನ ಮಾಡಿ ವರದಿಯನ್ನು ಸಿದ್ಧಪಡಿಸಲಾಗುವುದು.
ತುಮಕೂರಿನಲ್ಲಿ 11 ತಾಲ್ಲೂಕುಗಳಿಗೆ ಬರ ಪರಿಹಾರದ ಮೊತ್ತ ಹೇಗೆ ವಿಭಜಿಸಲಾಗುತ್ತದೆ ಎಂಬ ಮಾಧ್ಯಮದ ಪ್ರಶ್ನೆಗೆ ಉತ್ತರಿಸಿ, ₹5 ಕೋಟಿ ಪ್ರತಿ ಜಿಲ್ಲೆಗಳಿಗಷ್ಟೆ, ಅದನ್ನು ಜಿಲ್ಲಾ ಪಂಚಾಯತ್ ಸಿಇಒಗಳಿಗೆ ನೀಡಿದ್ದೇವೆ. ತಾಲ್ಲೂಕುವಾರು ಶಾಸಕರಿಗೆ ತಲಾ ₹1 ಕೋಟಿ ಕೊಟ್ಟಿದ್ದೇವೆ. ಸಾಕಾಗಿಲ್ಲ ಎಂದಾದರೆ, ಡಿಸಿ ಮತ್ತು ಪಿಡಿಒ ಖಾತೆಗಳಲ್ಲಿ ₹329 ಕೋಟಿ ಹಣವನ್ನು ಮೀಸಲಿಟ್ಟಿದ್ದೇವೆ. ಅದನ್ನು ತುರ್ತು ಸಮಯದಲ್ಲಿ ಖರ್ಚು ಮಾಡುವಂತೆ ಈಗಾಗಲೇ ತಿಳಿಸಿದ್ದೇವೆ.
ರೈತರು ಇಂದು ಬಹಳಷ್ಟು ಸಂಕಷ್ಟದಲ್ಲಿದ್ದಾರೆ. ಫಸಲ್ ಭೀಮಾ ಯೋಜನೆಯಡಿ ರೈತರು ತಮ್ಮ ವಿಮೆ ಹಣ ಇನ್ನೂ ಬಂದಿಲ್ಲ ಎಂದು ನನಗೆ ಮಾಹಿತಿ ನೀಡಿದ್ದಾರೆ. ಈ ಬಗ್ಗೆ ವಿಮಾ ಕಂಪನಿಯವರಿಗೆ ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಿದ್ದೇನೆ. ರೈತರಿಗೆ ಕಷ್ಟ ಆದಾಗ ವಿಮೆ ಹಣವನ್ನು ನೀಡಬೇಕಿರುವುದು ಅವರ ಕರ್ತವ್ಯ. ಈ ಮೊದಲೇ ನಾನು ಸಭೆ ನಡೆಸಿ ವಿಮಾ ಕಂಪನಿಯವರಿಗೆ ಕಟ್ಟುನಿಟ್ಟಿನ ಸೂಚನೆಯನ್ನು ನೀಡಿದ್ದೇನೆ.
ರೈತರಿಗೆ ನಾವು ನೆರವು ನೀಡುವುದು, ಕಂತು ಕಟ್ಟುವುದು, ತೀರ್ಮಾನ ಮಾಡುವುದು ಒಂದು ಭಾಗ. ಆದರೆ ಕಂಪೆನಿಯವರು ಹಣ ಕೊಡಬೇಕಲ್ಲವೇ. ಕಳೆದ ವರ್ಷ 7 ಸಾವಿರ ಜನ ಕಂತು ಕಟ್ಟಿದ್ದಾರೆ. ಆದರೆ ಇನ್ಶೂರೆನ್ಸ್ ಕಂಪೆನಿಯವರು ಹಣವನ್ನು ಕೊಟ್ಟಿಲ್ಲ. ಹೀಗಾದರೆ ರೈತರಿಗೆ ಇನ್ಶೂರೆನ್ಸ್ ಮೇಲೆ ಹೇಗೆ ನಂಬಿಕೆ ಬರುತ್ತದೆ?
ಇಡೀ ರಾಜ್ಯದಲ್ಲಿ 19 ಲಕ್ಷ ಬಾಂಗ್ಲಾವಾಸಿಗಳು ಇದ್ದಾರೆ ಎಂಬ ವಿಪಕ್ಷಗಳು ಆರೋಪದ ಬಗ್ಗೆ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿ, ಇದನ್ನು ಯಾವ ಆಧಾರದ ಮೇಲೆ ಹೇಳುತ್ತಿದ್ದಾರೆ. ಈ ಬಗ್ಗೆ ಸದನದಲ್ಲಿ ಹಲವು ಬಾರಿ ಉತ್ತರ ಕೊಟ್ಟಿದ್ದೇನೆ. ಇದು ಕೇವಲ ರಾಜಕೀಯ ಆರೋಪವಷ್ಟೆ. ಚುನಾವಣಾ ಆಯೋಗದವರು ಎಸ್ಐಆರ್ ಪ್ರಕ್ರಿಯೆಯನ್ನು ನಡೆಸುತ್ತಾರೆ. ಅವರ ಡೇಟಾದಲ್ಲಿ 19 ಲಕ್ಷ ಬಾಂಗ್ಲಾವಾಸಿಗಳು ಇದ್ದಾರೆ ಎಂದಾದರೆ ಅದರ ಬಗ್ಗೆ ಕ್ರಮ ತೆಗೆದುಕೊಳ್ಳೋಣ. ಬಾಯಿಗೆ ಬಂದ ಹಾಗೆ ಡೇಟಾವನ್ನು ಹೇಳುವುದಲ್ಲ.
ಕೇಂದ್ರದ ವಿರುದ್ಧ ದೆಹಲಿಯಲ್ಲಿ ಮತ್ತೆ ಹೋರಾಟ ಮಾಡುವ ಸಾಧ್ಯತೆಗಳಿವೆಯಾ ಎಂಬ ಮಾಧ್ಯಮದ ಪ್ರಶ್ನೆಗೆ ಉತ್ತರಿಸಿ, ಅಂತಹ ಪರಿಸ್ಥಿತಿ ಬರಲ್ಲ ಎಂದು ಅಂದುಕೊಂಡಿದ್ದೇನೆ. ಪರಿಸ್ಥಿತಿ ಎದುರಾದರೆ ಮಾಡಲೇಬೇಕಲ್ಲವೇ. ನಮ್ಮ ರೈತರ ರಕ್ಷಣೆಗಾಗಿ ಹಣ ಕೊಡಿ ಎಂದು ಕೇಳುತ್ತೇವೆ. ಅದಕ್ಕೆ ಬೇಕಾಗಿರುವ ವರದಿ ಎಲ್ಲಾ ನೀಡುತ್ತೇವೆ. 16 ಸಾವಿರ ಹೆಕ್ಟೇರ್ ಕಡ್ಲೆಗಿಡ ಹಾಕಬೇಕಾಗಿತ್ತು, ಬರೀ 3 ಸಾವಿರ ಹೆಕ್ಟರ್ ಹಾಕಿದ್ದಾರೆ, ಅದು ಒಣಗಿಹೋಗಿದೆ. 3 ಸಾವಿರದಲ್ಲಿ 1 ಹೆಕ್ಟೇರ್ ಕೂಡ ಬರುವುದಿಲ್ಲ. ಈ ಪರಿಸ್ಥಿತಿಯನ್ನು ಕೇಂದ್ರ ಸರ್ಕಾರಕ್ಕೆ ಮನವರಿಕೆ ಮಾಡಲು ಕೊಟ್ಟಾಗ ಹಣ ಕೊಟ್ಟಿಲ್ಲ ಎಂದರೆ ನಾವು ಏನು ಮಾಡಬೇಕು. ನಾವು ಪ್ರತಿಭಟನೆಯೂ ಮಾಡಬೇಕು, ಕೋರ್ಟ್ಗೂ ಹೋಗಬೇಕಾಗುತ್ತದೆ. -
Dr. G Parameshwara
@DrParameshwara
ಇಂದು ಪಾವಗಡ ತಾಲೂಕಿನ ಕಿಲಾರಹಳ್ಳಿಯಲ್ಲಿ ಬರ ಪರಿಸ್ಥಿತಿಯ ಅವಲೋಕನ ನಡೆಸಿದ ಬಳಿಕ ತುಮಕೂರು ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ವತಿಯಿಂದ ರೈತರಿಗೆ ಮೇವಿನ ಬೀಜ ಕಿಟ್ಗಳನ್ನು ವಿತರಿಸಿ, ಮಾತನಾಡಿದೆ.
ನೀರಿನ ಸೌಲಭ್ಯ ಇರುವ ರೈತರಿಗೆ ಮೇವು ಬೆಳೆಯಲು ಉತ್ತೇಜಿಸುವ ನಿಟ್ಟಿನಲ್ಲಿ ತುಮಕೂರು ಜಿಲ್ಲೆಯಲ್ಲಿ 1 ಲಕ್ಷ ಕ್ವಿಂಟಾಲ್ ಮೇವಿನ ಬೀಜ ವಿತರಿಸಲಾಗುತ್ತಿದೆ.
ಪಾವಗಡ ತಾಲೂಕಿನಲ್ಲಿ ಮುಂದಿನ 12 ವಾರಗಳಿಗೆ ಸಾಕಾಗುವಷ್ಟು ಮೇವು ಸಂಗ್ರಹವಿದೆ. ತದನಂತರ ಮೇವಿಗೆ ಯಾವುದೇ ರೀತಿಯ ಸಮಸ್ಯೆಯಾಗಬಾರದು. ಈ ನಿಟ್ಟಿನಲ್ಲಿ ಪ್ರತಿ ತಾಲೂಕಿಗೆ 10 ಸಾವಿರ ಕ್ವಿಂಟಾಲ್ ಮೇವಿನ ಬೀಜ ವಿತರಿಸಲಾಗುತ್ತಿದೆ. ನೀರಿನ ಲಭ್ಯತೆ ಇರುವ ರೈತರು ಮೇವು ಬೆಳೆಯುತ್ತಾರೆ. ಹೆಚ್ಚಿನ ಮೇವು ಬೆಳೆದ ರೈತರಿಂದ ಖರೀದಿಸಲಾಗುವುದು. ಜಾನುವಾರುಗಳಿಗೆ ಬರದ ಬಿಸಿ ತಟ್ಟಬಾರದು, ಅವುಗಳನ್ನು ಉಳಿಸಿಕೊಳ್ಳಬೇಕಿದೆ. ಈ ನಿಟ್ಟಿನಲ್ಲಿ ಸರ್ಕಾರ ಅನೇಕ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ.
ರಾಜ್ಯದಲ್ಲಿ ಮಳೆಯ ಪ್ರಮಾಣ ತೀವ್ರ ಕಡಿಮೆಯಾಗಿದೆ. ರೈತರು ಕಂಗಾಲಾಗಿದ್ದಾರೆ. ಪಾವಗಡ ತಾಲೂಕಿನಲ್ಲಿ 19 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಶೇಂಗಾ ಬಿತ್ತನೆ ಮಾಡಬೇಕಿತ್ತು. ಆದರೆ 4 ಸಾವಿರ ಹೆಕ್ಟೇರ್ನಲ್ಲಿ ಬಿತ್ತನೆಯಾಗಿದೆ. ಬಿತ್ತನೆಯಾಗಿರುವ ಬೆಳೆಯು ಮಳೆಯ ಕೊರತೆಯಿಂದ ಒಣಗುತ್ತಿದೆ. ಪಾವಗಡ ತಾಲ್ಲೂಕಿನಲ್ಲಿ ಶೇಂಗಾ ಬೆಳೆ ಸಂಪೂರ್ಣ ನಾಶವಾಗುತ್ತಿದೆ.
ಅತ್ಯಂತ ಕಠಿಣ ಪರಿಸ್ಥಿತಿಯ ಈ ಸಂದರ್ಭದಲ್ಲಿ ಸರ್ಕಾರ ಕೈಕಟ್ಟಿ ಕೂರಲು ಆಗುವುದಿಲ್ಲ. ಜನರ ಕಷ್ಟಕ್ಕೆ ಸ್ಪಂದಿಸುವುದು ನಮ್ಮ ಆದ್ಯ ಕರ್ತವ್ಯ. ಜನರಿಗೆ ಕುಡಿಯುವ ನೀರಿಗೆ ತಾಪತ್ರಯ ಆಗದಂತೆ ₹5 ಕೋಟಿ ನೀಡಲಾಗಿದೆ. ಕುಡಿಯುವ ನೀರಿಗಾಗಿ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ₹1 ಕೋಟಿ ನೀಡಲಾಗಿದೆ. ಸನ್ನಿವೇಶ ಬಹಳ ಗಂಭೀರವಾಗಿದೆ. ನೀರನ್ನು ಮಿತವಾಗಿ ಬಳಸಬೇಕು. ಹಿಂಗಾರು ಮಳೆಯ ಬಗ್ಗೆ ನಿರೀಕ್ಷೆ ಮಾಡುತ್ತಿದ್ದೇವೆ. ನಿಮ್ಮ ಸಹಕಾರ ಸರ್ಕಾರಕ್ಕೆ ಅಗತ್ಯ. ನಿಮ್ಮ ನೆರವಿಗೆ ನಾವಿದ್ದೇವೆ.
ತುಂಗಾಭದ್ರಾ ಜಲಾಶಯದ ಹಿನ್ನೀರಿನಿಂದ ಪಾವಗಡ ತಾಲೂಕಿಗೆ ಕುಡಿಯುವ ನೀರು ಯೋಜನೆ ಮಾಡಲಾಗಿದೆ. ಕಳೆದ ವರ್ಷ ಯೋಜನೆಗೆ ಚಾಲನೆ ನೀಡಲಾಗಿದೆ. ಈ ಯೋಜನೆ ಇಲ್ಲವಾಗಿದ್ದರೆ ಪಾವಗಡ ತಾಲೂಕಿನಲ್ಲಿ ಕುಡಿಯುವ ನೀರಿಗೆ ತೀವ್ರತರ ಸಮಸ್ಯೆಯಾಗುತ್ತಿತ್ತು. ಅದೃಷ್ಟಕ್ಕೆ ಈ ವರ್ಷ ತುಂಗಾಭದ್ರಾ ಜಲಾಶಯ ಭರ್ತಿಯಾಗುತ್ತಿದೆ. ಪಾವಗಡ ತಾಲೂಕಿಗೆ ಕುಡಿಯುವ ನೀರು ಸಿಗುತ್ತದೆ. ಯಾವುದೇ ರೀತಿಯ ಸಮಸ್ಯೆಯಾಗುವುದಿಲ್ಲ.
ಶಾಸಕ ಹೆಚ್. ವಿ. ವೆಂಕಟೇಶ್ ಅವರು ಬರ ಪರಿಸ್ಥಿತಿಯನ್ನು ಗಂಭೀರವಾಗಿ ತೆಗೆದುಕೊಂಡು, ಸಂಬಂಧಪಟ್ಟ ಸಚಿವರು ಹಾಗೂ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದು ಕೆಲಸ ಮಾಡುತ್ತಿದ್ದಾರೆ.
ಕೆಲವೇ ದಿನಗಳಲ್ಲಿ ಎಲ್ಲ ಸಚಿವರುಗಳು ಬರ ಪರಿಸ್ಥಿತಿಯನ್ನು ಪರಿಶೀಲಿಸಿ, ಸರ್ಕಾರಕ್ಕೆ ವರದಿ ಸಲ್ಲಿಸಲಿದ್ದಾರೆ. ಬಳಿಕ ಕೇಂದ್ರ ಸರ್ಕಾರದ ಗಮನಕ್ಕೆ ತರಲಾಗುವುದು. ಅಗತ್ಯ ಪರಿಹಾರ ಮಂಜೂರು ಮಾಡಲು ಒತ್ತಾಯಿಸಲಾಗುವುದು. ಈ ತಿಂಗಳ ಅಂತ್ಯದ ವೇಳೆಗೆ ವರದಿ ಸಲ್ಲಿಸುತ್ತೇವೆ. -
Dr. G Parameshwara
@DrParameshwara
ಇಂದು ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನ ಕಿಲಾರಹಳ್ಳಿ ಗ್ರಾಮದಲ್ಲಿನ ಜಮೀನುಗಳಿಗೆ ಭೇಟಿ ನೀಡಿ, ಬರ ಪರಿಸ್ಥಿತಿಯನ್ನು ಖುದ್ದು ವೀಕ್ಷಿಸಿ, ರೈತರ ಸಮಸ್ಯೆಯನ್ನು ಆಲಿಸಿದೆ.
ಮಳೆ ಕೊರತೆಯಿಂದ ಬೆಳೆ ಒಣಗುತ್ತಿರುವುದು ಕಂಡುಬಂದಿದ್ದು, ಬೆಳೆ ಪರಿಸ್ಥಿತಿಯ ಕುರಿತು ರೈತರಿಂದ ಹಾಗೂ ಅಧಿಕಾರಿಗಳಿಂದ ಮಾಹಿತಿ ಪಡೆದೆ. -
Dr. G Parameshwara
@DrParameshwara
Shri @RahulGandhi has raised a question that Home Minister @AmitShah cannot evade: who is accountable when young Indians demanding fairness and justice are met with brutal police force?
If Amit Shah knew and approved it, he is culpable. If he did not know what was happening under his own watch, he is incompetent. Either way, silence is no answer.
I urge everyone to read Shri Rahul Gandhi’s important article below.
www.thehindu.com/opinion/lead/either-culpable-or-incompet… -
Dr. G Parameshwara
@DrParameshwara
ಇಂದು ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ತಡಕಲೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ತಿಮ್ಮನಹಳ್ಳಿಗೆ ಭೇಟಿ ನೀಡಿ, 'ವಿಬಿ ಜಿ ರಾಮ್ ಜಿ' ಯೋಜನೆಯಡಿ ಕೈಗೊಂಡಿರುವ ಕಾಮಗಾರಿಯನ್ನು ಪರಿಶೀಲಿಸಿದೆ.
ಗ್ರಾಮದ ಕೆರೆಯಲ್ಲಿ ಕೈಗೆತ್ತಿಕೊಳ್ಳಲಾಗಿರುವ ಹೂಳೆತ್ತುವ ಕಾಮಗಾರಿಯನ್ನು ಪರಿಶೀಲಿಸಿ, ಕಾಮಗಾರಿ ಪ್ರಗತಿಯ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದೆ. ಈ ವೇಳೆ ಅರ್ಹ ಫಲಾನುಭವಿಗಳಿಗೆ ಜಾಬ್ ಕಾರ್ಡ್ಗಳನ್ನು ವಿತರಿಸಿದೆ.
ವಿಬಿ ಜಿ ರಾಮ್ ಜಿ ಯೋಜನೆಯಡಿ ಜನರಿಗೆ ನಿಯಮಿತವಾಗಿ ಕೆಲಸ ನೀಡಬೇಕು. ಕಾಮಗಾರಿಯ ವೇತನ ಪಾವತಿಯಲ್ಲಿ ಯಾವುದೇ ಕಾರಣಕ್ಕೂ ವಿಳಂಬವಾಗದಂತೆ ಅಗತ್ಯ ಕ್ರಮ ವಹಿಸುವಂತೆ ಈ ಸಂದರ್ಭದಲ್ಲಿ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದೆ.
Dr. G Parameshwara
@DrParameshwara
-
Dr. G Parameshwara
@DrParameshwara
ಇಂದು ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಕಾಗೆಲಿಂಗನಹಳ್ಳಿ ಮತ್ತು ಮೇಲುಕುಂಟೆ ಗ್ರಾಮಗಳ ಬರಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ, ಪರಿಶೀಲನೆ ನಡೆಸಿದೆ.
ಸ್ಥಳೀಯ ರೈತರು ಹಾಗೂ ಗ್ರಾಮಸ್ಥರೊಂದಿಗೆ ಸಮಾಲೋಚನೆ ನಡೆಸಿ, ಬರದಿಂದ ಎದುರಾಗಿರುವ ಸಮಸ್ಯೆಗಳು, ಕೃಷಿ ಚಟುವಟಿಕೆಗಳ ಮೇಲಿನ ಪರಿಣಾಮ ಹಾಗೂ ಕುಡಿಯುವ ನೀರಿನ ಲಭ್ಯತೆ ಕುರಿತು ಮಾಹಿತಿ ಪಡೆದೆ.
ಈ ವೇಳೆ ರೈತರ ಅಹವಾಲುಗಳನ್ನು ಆಲಿಸಿ, ಗ್ರಾಮದಲ್ಲಿ ಎದುರಾಗಿರುವ ಸಮಸ್ಯೆಗಳ ಕುರಿತು ಅಧಿಕಾರಿಗಳಿಂದ ವಿವರ ಪಡೆದು, ಅಗತ್ಯ ಪರಿಹಾರ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಿದೆ ಮತ್ತು ಬರ ಪರಿಸ್ಥಿತಿಯಿಂದ ಜನರು ಹಾಗೂ ರೈತರಿಗೆ ಸಮಸ್ಯೆಯಾಗದಂತೆ ನೋಡಿಕೊಳ್ಳುವಂತೆ ತಿಳಿಸಿದೆ.
ಮೇಲುಕುಂಟೆ ಗ್ರಾಮದ ಶೇಂಗಾ ಬಿತ್ತನೆ ಮಾಡಿರುವ ಜಮೀನಿಗೆ ಭೇಟಿ ನೀಡಿ ಪರಿಶೀಲನೆ ನಡೆಸುವ ವೇಳೆ, ಸಮರ್ಪಕವಾಗಿ ಮಳೆಯಾಗದಿರುವ ಹಿನ್ನೆಲೆಯಲ್ಲಿ ತೇವಾಂಶ ಕೊರತೆಯಿಂದ ಶೇಂಗಾ ಬೆಳೆ ಕಾಳು ಕಟ್ಟದಿರುವುದು ಕಂಡುಬಂತು.
ಫಸಲ್ ಭೀಮಾ ಯೋಜನೆಯಡಿ ವಿಮೆ ಕಟ್ಟಿದ್ದರೂ, ಬೆಳೆ ನಷ್ಟದ ವೇಳೆ ಹಣ ಪಾವತಿಯಾಗದಿರುವ ಬಗ್ಗೆ ರೈತರು ನನ್ನ ಗಮನಕ್ಕೆ ತಂದರು. ತಕ್ಷಣವೇ, ಶಿರಾ ತಾಲೂಕಿನ 42 ಗ್ರಾಮ ಪಂಚಾಯಿತಿಗಳ ಕಳೆದ ಮೂರು ವರ್ಷಗಳ ವಿಮಾ ಮಾಹಿತಿ ತರಿಸಿಕೊಡುವಂತೆ ಸ್ಥಳದಲ್ಲೇ ಕೃಷಿ ಅಧಿಕಾರಿಗಳಿಗೆ ಸೂಚಿಸಿದೆ. ರೈತರಿಗೆ ಯಾವುದೇ ರೀತಿಯಲ್ಲೂ ಸಮಸ್ಯೆಯಾಗದಂತೆ, ಅವರ ಅಹವಾಲುಗಳನ್ನು ಅದ್ಯತೆ ಮೇರೆಗೆ ಪರಿಶೀಲಿಸಿ, ಅಗತ್ಯ ಕ್ರಮ ಕೈಗೊಳ್ಳುವಂತೆ ಸ್ಪಷ್ಟ ನಿರ್ದೇಶನ ನೀಡಿದೆ.
Dr. G Parameshwara
@DrParameshwara
-
Dr. G Parameshwara
@DrParameshwara
Spoke to the media near my Sadashivanagar residence today.
Several taluks in Tumakuru district are facing a severe drought situation due to inadequate rainfall. I will visit the affected taluks today and tomorrow to personally review the situation on the ground.
The Chief Minister and I have already divided the State into three divisions and reviewed the drought situation across the taluks. I have personally visited four to five districts, including Tumakuru. However, severe drought conditions continue in places such as Sira, Chikkanayakanahalli and Pavagada, which I will inspect firsthand over the next two days.
Except for the Malnad and coastal districts, most parts of the State have not received adequate rainfall. Water levels in KRS and Kabini have improved marginally, while rainfall in Maharashtra has increased inflows into Almatti and Narayanpur reservoirs. However, the situation in the dry regions remains serious. We will undertake a comprehensive review of the drought situation. Some measures have already been initiated, and the matter is also likely to be discussed in the Legislature.
On portfolio allocation, there is no confusion. The Chief Minister held discussions with the party high command yesterday. It is natural for newly appointed Ministers to have some initial doubts, which are subsequently clarified by the concerned officials. We too went through the same process when we became Ministers for the first time. They are fully capable of responding in the Legislature and there will be no issue.
On H.D. Kumaraswamy’s call asking people not to pay toll on the NICE Road, his opposition to the project is nothing new. We are working to resolve the issues surrounding the project at the earliest. As Chairman of the sub-committee, I have already held seven to eight meetings. The issues have been classified into A, B and C categories and are being examined in detail. After so many years, the project cannot simply be stopped. We will address the issues within the legal framework. Questions regarding its benefits or misuse can be examined separately, but the project must now be completed.
On the BJP-JD(S) padayatra over Bidadi, they have every right to protest. The Chief Minister has stated that there is a proposal to establish a major Artificial Intelligence centre there. It would be better if the Opposition viewed such development from a constructive perspective.
Regarding Union Minister V. Somanna’s proposal to locate Bengaluru’s second airport in Tumakuru, I have supported this idea from the beginning. Its technical feasibility and overall utility will have to be examined. If the airport comes up in Tumakuru, it can benefit nearly 20 districts and also enable easier connectivity with Kempegowda International Airport. The DGCA will ultimately assess whether the proposal is technically feasible. -
Dr. G Parameshwara
@DrParameshwara
ಇಂದು ಸದಾಶಿವನಗರದ ನಿವಾಸದ ಬಳಿ ಮಾಧ್ಯಮದವರೊಂದಿಗೆ ಮಾತನಾಡಿದೆ.
ಇಂದು ಮತ್ತು ನಾಳೆ ತುಮಕೂರಿನ ಎಲ್ಲಾ ತಾಲೂಕುಗಳಿಗೆ ಭೇಟಿ ನೀಡಿ, ಬರ ಪರಿಸ್ಥಿತಿಯ ಅವಲೋಕನೆ ನಡೆಸಲಿದ್ದೇನೆ.
ಈಗಾಗಲೇ ಮುಖ್ಯಮಂತ್ರಿಗಳು ಮತ್ತು ನಾನು 3 ವಿಭಾಗಗಳನ್ನು ಮಾಡಿ, ಪ್ರತಿಯೊಂದು ತಾಲೂಕಿನ ಬರ ಪರಿಸ್ಥಿತಿ ಹೇಗಿದೆ ಎಂದು ಅವಲೋಕನೆ ಮಾಡಿದ್ದೇವೆ. ನಾನು ನಾಲ್ಕೈದು ಜಿಲ್ಲೆಗಳಿಗೆ ಭೇಟಿ ಪರಿಶೀಲನೆಯನ್ನು ನಡೆಸಿದ್ದೇನೆ. ತುಮಕೂರು ಜಿಲ್ಲೆಯದ್ದು ಮಾಡಿದ್ದೆ. ಮಳೆಯಾಗದ ಪರಿಣಾಮ ಶಿರಾ, ಚಿಕ್ಕನಾಯಕನಹಳ್ಳಿ, ಪಾವಗಡ ಸೇರಿದಂತೆ ಇನ್ನೂ ಕೆಲವು ತಾಲೂಕುಗಳಲ್ಲಿ ಗಂಭೀರ ಬರ ಪರಿಸ್ಥಿತಿ ಏರ್ಪಟ್ಟಿದ್ದು, ಇಂದು ಮತ್ತು ನಾಳೆ ಅಲ್ಲಿಗೆ ತೆರಳಿ ಖುದ್ದು ಪರಿಶೀಲನೆ ನಡೆಸಲಿದ್ದೇನೆ.
ಮಲೆನಾಡು ಮತ್ತು ಕರಾವಳಿ ಜಿಲ್ಲೆಗಳನ್ನು ಬಿಟ್ಟರೆ ಬೇರೆ ಯಾವುದೇ ಕಡೆಗಳಲ್ಲಿ ಹೇಳುವಷ್ಟು ಮಳೆಯಾಗಿಲ್ಲ. ಕೆಆರ್ಎಸ್, ಕಬಿನಿ ಜಲಾಶಯಗಳಲ್ಲಿ ನೀರು ಕೊಂಚ ಹೆಚ್ಚಾಗಿದೆ. ಮಹಾರಾಷ್ಟ್ರ ಭಾಗದಲ್ಲಿ ಮಳೆಯಾದ್ದರಿಂದ ಉತ್ತರ ಕರ್ನಾಟಕದ ಆಲಮಟ್ಟಿ, ನಾರಾಯಣಪುರ ಡ್ಯಾಂಗಳು ಸ್ವಲ್ಪ ಮಟ್ಟಿಗೆ ತುಂಬಿದೆ. ಆದರೆ, ಬಯಲು ಪ್ರದೇಶದಲ್ಲಿ ಗಂಭೀರ ಪರಿಸ್ಥಿತಿ ಇದೆ. ಹೀಗಾಗಿ ಬರ ಪರಿಸ್ಥಿತಿಯ ಸಂಪೂರ್ಣ ಅವಲೋಕನ ನಡೆಸುತ್ತೇವೆ. ಈಗಾಗಲೇ ಕೆಲವು ಕ್ರಮಗಳನ್ನು ಕೈಗೊಂಡಿದ್ದೇವೆ. ಸದನದಲ್ಲೂ ಈ ಬಗ್ಗೆ ಚರ್ಚೆಯಾಗುವ ಸಾಧ್ಯತೆ ಇದೆ.
ಖಾತೆ ಹಂಚಿಕೆಯ ಬಗ್ಗೆ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿ, ಗೊಂದಲ ಅಂತೇನಿಲ್ಲ, ಮುಖ್ಯಮಂತ್ರಿಗಳು ನಿನ್ನೆ ಹೈಕಮಾಂಡ್ ಜೊತೆಗೆ ಚರ್ಚೆ ಮಾಡಿದ್ದಾರೆ. ಹೊಸದಾಗಿ ಸಚಿವರು ಆದವರಿಗೆ ಪ್ರಾರಂಭದಲ್ಲಿ ಗೊಂದಲಗಳು ಆಗುವುದು ಸಹಜ. ನಂತರದಲ್ಲಿ ಸಂಬಂಧಪಟ್ಟ ಅಧಿಕಾರಿಗಳು ವಿವರಣೆಯನ್ನು ನೀಡುತ್ತಾರೆ. ನಮಗೂ ಕೂಡ ಮೊದಲ ಬಾರಿ ಮಂತ್ರಿಯಾದಾಗ ಹೀಗೆಯೇ ಆಗಿತ್ತು. ಸದನದಲ್ಲೂ ಉತ್ತರ ನೀಡಲು ಅವರು ಸಮರ್ಥರಿದ್ದಾರೆ. ಯಾವುದೇ ರೀತಿಯಲ್ಲೂ ಸಮಸ್ಯೆಯಾಗುವುದಿಲ್ಲ.
ನೈಸ್ ರಸ್ತೆ ವಿಚಾರವಾಗಿ ಕುಮಾರಸ್ವಾಮಿ ಅವರು ಟೋಲ್ ಕಟ್ಟಬೇಡಿ ಎಂದು ಜನರಿಗೆ ಕರೆ ಕೊಡುತ್ತಿರುವ ಬಗ್ಗೆ ಮಾಧ್ಯಮದರ ಪ್ರಶ್ನೆಗೆ ಪ್ರತಿಕ್ರಿಯಿಸಿ, ಅದೇನು ಹೊಸತಲ್ಲ, ಹಿಂದಿನಿಂದಲೂ ವಿರೋಧಿಸುತ್ತಲೇ ಬಂದಿದ್ದಾರೆ. ಆದಷ್ಟು ಬೇಗ ಪ್ರಾಜೆಕ್ಟ್ ಅನ್ನು ಪರಿಹರಿಸಲು ಪ್ರಯತ್ನಿಸುತ್ತಿದ್ದೇವೆ. ನನ್ನನ್ನೇ ಉಪಸಮಿತಿಯ ಅಧ್ಯಕ್ಷನಾಗಿ ಮಾಡಿದ್ದಾರೆ. ಈಗಾಗಲೇ 7-8 ಸಭೆಗಳನ್ನು ಮಾಡಿದ್ದೇನೆ. ಅಲ್ಲಿ ಎ, ಬಿ, ಸಿ ಎಂದು ಮೂರು ವಿಭಾಗಗಳನ್ನು ಮಾಡಿದ್ದೇವೆ. ಯಾವ ರೀತಿಯ ಸಮಸ್ಯೆಗಳು ಆಗಿವೆ ಎಂಬ ಬಗ್ಗೆ ಚರ್ಚೆ ಮಾಡುತ್ತೇವೆ. ಇಷ್ಟು ವರ್ಷಗಳ ನಂತರ ಯೋಜನೆಯನ್ನು ನಿಲ್ಲಿಸಲು ಆಗುವುದಿಲ್ಲ. ಕಾನೂನು ಚೌಕಟ್ಟಿನಲ್ಲಿ ಇದೆಲ್ಲದರ ಬಗ್ಗೆ ಪರಿಶೀಲಿಸಿ, ಸಮಸ್ಯೆಯನ್ನು ಬಗೆಹರಿಸಲು ಪ್ರಯತ್ನಿಸುತ್ತೇವೆ. ಅದರಲ್ಲಾದ ಉಪಯೋಗ, ದುರುಪಯೋಗದ ಬಗ್ಗೆ ಮುಂದೆ ಪರಿಶೀಲನೆ ಮಾಡುತ್ತಾರೆ. ಈಗ ಯೋಜನೆಯನ್ನು ಪೂರ್ಣಗೊಳಿಸಬೇಕು.
ಬಿಡದಿ ವಿಚಾರವಾಗಿ ಬಿಜೆಪಿ/ ಜೆಡಿಎಸ್ ಪಾದಯಾತ್ರೆ ಕೈಗೊಂಡಿರುವ ಕುರಿತು ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿ, ಪ್ರತಿಭಟನೆ ಮಾಡಲು ಅವರಿಗೆ ಹಕ್ಕಿದೆ, ಮಾಡಲಿ. ಆರ್ಟಿಫೀಶಿಯಲ್ ಇಂಟಲಿಜೆನ್ಸ್ನ ದೊಡ್ಡ ಸೆಂಟರ್ ಅನ್ನೇ ಅಲ್ಲಿ ಮಾಡುವ ಪ್ರಸ್ತಾವನೆ ಇರುವುದಾಗಿ ಮುಖ್ಯಮಂತ್ರಿಗಳು ಹೇಳಿದ್ದಾರೆ. ಹೀಗಿರುವಾಗ ವಿಪಕ್ಷದವರು ಒಳ್ಳೆಯ ದೃಷ್ಟಿಯಲ್ಲಿ ನೋಡಿದರೆ ಉತ್ತಮ.
ಕೇಂದ್ರ ಸಚಿವ ಸೋಮಣ್ಣ ಅವರು 2ನೇ ಏರ್ಪೋರ್ಟ್ ತುಮಕೂರಿನಲ್ಲೇ ಮಾಡಬೇಕು ಎಂದು ಪತ್ರ ಬರೆದಿರುವ ಬಗ್ಗೆ ಪ್ರತಿಕ್ರಿಯಿಸಿ, ನಾನು ಈ ಬಗ್ಗೆ ಮೊದಲಿನಿಂದಲೂ ಹೇಳುತ್ತಾ ಬಂದಿದ್ದೇನೆ. ತಾಂತ್ರಿಕವಾಗಿ ಮತ್ತು ಅದರ ಉಪಯೋಗ ಎಷ್ಟರ ಮಟ್ಟಿಗೆ ಆಗಲಿದೆ ಎನ್ನುವುದನ್ನು ನೋಡಬೇಕಾಗುತ್ತದೆ. ತುಮಕೂರಿನಲ್ಲೇ ಆದರೆ 20 ಜಿಲ್ಲೆಗಳಿಗೆ ಅನುಕೂಲವಾಗುತ್ತದೆ. ಈಗಿರುವ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೂ ಕನೆಕ್ಟಿವಿಟಿ ಮಾಡಲು ಸುಲಭವಾಗುತ್ತದೆ. ಆದರೆ ಡಿಜಿಸಿಎ ನವರು ತಾಂತ್ರಿಕವಾಗಿ ಇದು ಸಾಧ್ಯನಾ, ಇಲ್ಲವಾ ಎಂಬುದರ ಬಗ್ಗೆ ಪರಿಶೀಲಿಸುತ್ತಾರೆ. -
Dr. G Parameshwara
@DrParameshwara
ನಾಡು ಕಂಡ ಧೀಮಂತ ರಾಜಕಾರಣಿ, ಮಾಜಿ ರಾಜ್ಯಪಾಲರಾದ ಬಿ. ರಾಚಯ್ಯ ಅವರು ದಮನಿತರ, ಶೋಷಿತರ, ಅವಕಾಶ ವಂಚಿತರ ಪರವಾಗಿ ಹೋರಾಡಿದ್ದರು.
ಮಿತಭಾಷಿಯಾಗಿದ್ದ ಅವರು ತಮ್ಮ ಬದುಕಿನದುದ್ದಕ್ಕೂ ಸಾಮಾಜಿಕ ನ್ಯಾಯಕ್ಕಾಗಿ ಶ್ರಮಿಸಿ, ಸಮಾಜದಲ್ಲಿ ಸಮಾನತೆಯನ್ನು ತರಲು ಯತ್ನಿಸಿದರು. ಅವರ ಜನ್ಮದಿನವಾದ ಇಂದು ಅವರನ್ನು ಸ್ಮರಿಸಿ, ನಮಿಸುತ್ತೇನೆ. ಅವರ ಬದುಕು ನಮ್ಮಂತಹ ರಾಜಕಾರಣಿಗಳಿಗೆ ಅನುಕರಣೀಯ. -
Dr. G Parameshwara
@DrParameshwara
Remembering former President of India, Bharat Ratna Shri Varahagiri Venkata Giri on his birth anniversary.
A distinguished statesman and an unwavering voice for India’s working class, Shri V. V. Giri dedicated much of his public life to advancing labour rights, workers’ welfare and social justice. His contributions to the trade union movement and his commitment to the dignity of labour remain an enduring part of his legacy.
My respectful tributes to V. V. Giri on his birth anniversary. May his ideals of equality, dignity and service continue to inspire us. -
Dr. G Parameshwara
@DrParameshwara
For decades, the Indian Youth Congress (IYC) has been a platform for young Indians to participate in public life, raise their voices and contribute to nation-building.
Emerging in the years after Independence and taking formal organisational shape in the 1960s, the IYC has nurtured generations of leaders while championing democracy, social justice, secularism and the aspirations of India’s youth.
On IYC Foundation Day, my warm wishes to every young Congress worker who continues to stand for the Constitution, fight for people’s rights and work towards a more inclusive and progressive India.
#iycfoundationday #indianyouthcongress #youthcongress -
Dr. G Parameshwara
@DrParameshwara
ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಾದ ವಿ.ಕೃ. ಗೋಕಾಕ್ ಅವರು ಕನ್ನಡ ಸಾಹಿತ್ಯ ಲೋಕಕ್ಕೆ ಅಪಾರ ಕೊಡುಗೆಗಳನ್ನು ನೀಡಿದ್ದಾರೆ. ʼಭಾರತ ಸಿಂಧು ರಶ್ಮಿ', 'ಸಮರಸವೇ ಜೀವನ', 'ದ್ಯಾವಾ ಪೃಥಿವಿ', 'ಸಮುದ್ರಗೀತೆಗಳು' ಅವರ ಪ್ರಸಿದ್ಧ ಕೃತಿಗಳು.
ಗೋಕಾಕರ ಜನ್ಮದಿನದ ಈ ಸಂದರ್ಭದಲ್ಲಿ ಅವರಿಗೆ ಗೌರವ ನಮನಗಳನ್ನು ಸಲ್ಲಿಸುತ್ತೇನೆ. ಸಾಹಿತ್ಯ ಕ್ಷೇತ್ರದಲ್ಲಿ ಅವರು ಮೂಡಿಸಿದ ಹೆಜ್ಜೆಗುರುತುಗಳು ಎಂದಿಗೂ ಅಚ್ಚಳಿಯದೆ ಉಳಿಯಲಿದೆ. -
Dr. G Parameshwara
@DrParameshwara
ನಾಡು ಕಂಡ ಧೀಮಂತ ನಾಯಕ, ಕರ್ನಾಟಕ ಏಕೀಕರಣ ಚಳವಳಿಯ ಮುಂದಾಳು, ಮಾಜಿ ಮುಖ್ಯಮಂತ್ರಿಗಳಾದ ಎಸ್.ನಿಜಲಿಂಗಪ್ಪ ಅವರ ಪುಣ್ಯಸ್ಮರಣೆಯಂದು ಅವರನ್ನು ಸ್ಮರಿಸಿ, ನಮಿಸುತ್ತೇನೆ.
ಶರಾವತಿ ವಿದ್ಯುತ್ ಯೋಜನೆ ಸೇರಿದಂತೆ ಹಲವಾರು ಅಭಿವೃದ್ಧಿ ಯೋಜನೆಗಳ ಮೂಲಕ ನಾಡಿನ ಪ್ರಗತಿಗೆ ಅವರು ನೀಡಿದ ಕೊಡುಗೆಗಳು ಸ್ಮರಣೀಯ. ಅವರ ಆದರ್ಶಗಳು ಮತ್ತು ಜನಸೇವೆಯ ಬದ್ಧತೆ ನಮಗೆಲ್ಲರಿಗೂ ಸ್ಫೂರ್ತಿಯಾಗಿದೆ. -
Dr. G Parameshwara
@DrParameshwara
On Quit India Movement Day, we remember one of the most powerful chapters in India’s freedom struggle.
On August 8, 1942, Mahatma Gandhi gave the call for the British to leave India, inspiring millions of Indians to rise together for freedom. From national leaders to ordinary citizens, people across the country showed extraordinary courage, endured imprisonment and repression, and made immense sacrifices for the dream of an independent India.
The Quit India Movement reminds us that our freedom was won through determination, unity and the sacrifices of countless people.
Today, we pay our respectful tribute to Mahatma Gandhi and every freedom fighter who stood fearlessly against colonial rule and helped build the path to a free India.
May their courage always inspire us to protect the values of freedom, democracy and unity they fought for.
#quitindiamovementday -
Dr. G Parameshwara
@DrParameshwara
Remembering Gurudev Rabindranath Tagore on his death anniversary.
A towering figure of Indian literature and thought, Tagore enriched our nation through his poetry, philosophy, music and vision of humanism. His words awakened minds, transcended boundaries and continue to speak to generations even today. -
Dr. G Parameshwara
@DrParameshwara
1905 ಆಗಸ್ಟ್ 7ರ ಸ್ವದೇಶಿ ಚಳುವಳಿ ಸ್ಮರಣಾರ್ಥವಾಗಿ ರಾಷ್ಟ್ರೀಯ ಕೈಮಗ್ಗ ದಿನವನ್ನು ಆಚರಿಸಲಾಗುತ್ತದೆ.
ಕೈಮಗ್ಗವು ನಮ್ಮ ದೇಶದ ಸಂಸ್ಕೃತಿ, ಕಲೆ ಮತ್ತು ಪರಂಪರೆಯ ಪ್ರತೀಕವಾಗಿದೆ. ಸ್ವದೇಶಿತನದ ಸಂಕೇತವಾದ ಕೈಮಗ್ಗ ಉತ್ಪನ್ನಗಳನ್ನು ಬಳಸೋಣ. ನೇಕಾರರಿಗೆ ಬೆಂಬಲ, ಪ್ರೋತ್ಸಾಹ ನೀಡೋಣ.
#nationalhandloomday -
Dr. G Parameshwara
@DrParameshwara
Remembering Prof. M. S. Swaminathan, the visionary agricultural scientist and architect of India’s Green Revolution, on his birth anniversary.
He helped transform India from a food-deficient nation into a food-secure country. His lifelong commitment to farmers, scientific innovation and sustainable agriculture continues to guide generations.
His remarkable service to India and its farming community will always be remembered.
#msswaminathan -
Dr. G Parameshwara
@DrParameshwara
My heartfelt thanks to all the party workers, supporters, admirers, friends, and well-wishers who wished me on my birthday.
The immense love and warm wishes you have showered on me, far beyond my expectations, have filled me with a deep sense of satisfaction about my public life. I am truly humbled by the affection you have shown me. I will continue to work with sincerity and dedication to repay this debt of gratitude through my service to the people.
Once again, my heartfelt thanks to each one of you for making my birthday so memorable. May your love, trust, and support continue to remain with me always. -
Dr. G Parameshwara
@DrParameshwara
ನನ್ನ ಹುಟ್ಟುಹಬ್ಬಕ್ಕೆ ಶುಭಹಾರೈಸಿದ ಪಕ್ಷದ ಕಾರ್ಯಕರ್ತರು, ಬೆಂಬಲಿಗರು, ಅಭಿಮಾನಿಗಳು, ಸ್ನೇಹಿತರು ಹಾಗೂ ಹಿತೈಷಿಗಳಿಗೆ ಹೃದಯಾಂತರಾಳದಿಂದ ಧನ್ಯವಾದಗಳು.
ನಿರೀಕ್ಷೆಗೂ ಮೀರಿದ ನಿಮ್ಮೆಲ್ಲರ ಪ್ರೀತಿ, ಹಾರೈಕೆಯನ್ನು ಕಂಡು ನನ್ನ ಸಾರ್ವಜನಿಕ ಬದುಕಿನ ಬಗ್ಗೆ ಸಂತೃಪ್ತ ಭಾವನೆ ಮೂಡಿದೆ. ನಿಮ್ಮ ಪ್ರೀತಿಯ ಋಣಭಾರ ದೊಡ್ಡದು. ನಿಮ್ಮ ಸೇವೆಯ ಮೂಲಕ ಅದನ್ನು ತೀರಿಸಲು ಮುಂದೆಯೂ ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ.
ನನ್ನ ಜನ್ಮದಿನವನ್ನು ಸ್ಮರಣೀಯವಾಗಿಸಿದ ನಿಮಗೆಲ್ಲರಿಗೂ ಮತ್ತೊಮ್ಮೆ ಹೃದಯತುಂಬಿದ ಥ್ಯಾಂಕ್ಯೂ. ಈ ಪ್ರೀತಿ ವಿಶ್ವಾಸ ಸದಾ ಹೀಗೆಯೇ ಇರಲಿ. -
Dr. G Parameshwara
@DrParameshwara
Karnataka’s pride, para-athlete K. S. Shilpa, who won a bronze medal at the Commonwealth Games held in Glasgow, Scotland, will be honoured with a cash award of ₹15 lakh and a Group ‘B’ post in the State Government.
I congratulate Shilpa and hope that her achievement inspires young sportspersons and that her sporting career reaches even greater heights. Our government will continue to provide her with all the necessary support in the days ahead. -
Dr. G Parameshwara
@DrParameshwara
ಸ್ಕಾಟ್ಲೆಂಡ್ನ ಗ್ಲಾಸ್ಕೊದಲ್ಲಿ ನಡೆದ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಕಂಚಿನ ಪದಕ ಗೆದ್ದ ಕರ್ನಾಟಕದ ಹೆಮ್ಮೆಯ ಪ್ಯಾರಾ ಅಥ್ಲೀಟ್ ಕೆ.ಎಸ್.ಶಿಲ್ಪಾ ಅವರಿಗೆ ₹15 ಲಕ್ಷ ನಗದು ಹಾಗೂ ಸರ್ಕಾರದ ಗ್ರೂಪ್ ʼಬಿʼ ಹುದ್ದೆ ನೀಡಿ ಗೌರವಿಸಲಾಗುವುದು.
ಶಿಲ್ಪಾ ಅವರ ಸಾಧನೆ ಯುವ ಕ್ರೀಡಾಪಟುಗಳಿಗೆ ಸ್ಫೂರ್ತಿಯಾಗಲಿ ಹಾಗೂ ಅವರ ಕ್ರೀಡಾ ಬದುಕು ಮತ್ತಷ್ಟು ಉಜ್ವಲವಾಗಲಿ ಎಂದು ಶುಭಹಾರೈಸುತ್ತೇನೆ. ಮುಂದಿನ ದಿನಗಳಲ್ಲಿಯೂ ಶಿಲ್ಪಾ ಅವರಿಗೆ ಅಗತ್ಯವಿರುವ ಎಲ್ಲಾ ರೀತಿಯ ನೆರವನ್ನು ನಮ್ಮ ಸರ್ಕಾರ ನೀಡಲಿದೆ. -
Dr. G Parameshwara
@DrParameshwara
ರಾಜ್ಯದ ಕರಾವಳಿ, ಮಲೆನಾಡು ಜಿಲ್ಲೆಗಳಲ್ಲಿ ಕೆಲವು ದಿನಗಳಿಂದ ಮಳೆಯಾಗುತ್ತಿದ್ದರೂ, ಉತ್ತರ ಕರ್ನಾಟಕ ಭಾಗದ 111 ತಾಲೂಕುಗಳಲ್ಲಿ ಒಣಹವೆ ಮುಂದುವರೆದಿದೆ. ಎಲ್ ನಿನೋ ಪರಿಣಾಮದಿಂದಾಗಿ ಸಮಯಕ್ಕೆ ಸರಿಯಾಗಿ ಮಳೆಯಾಗದೇ, ಭೀಕರ ಬರ ಪರಿಸ್ಥಿತಿ ಎದುರಾಗಿದೆ.
ಈಗಾಗಲೇ ನಾನು ಬೆಳಗಾವಿ, ತುಮಕೂರು, ಚಿತ್ರದುರ್ಗ, ಕಲಬುರಗಿ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಪ್ರಗತಿ ಪರಿಶೀಲನಾ ಸಭೆಗಳನ್ನು ನಡೆಸಿ, ಜನ, ಜಾನುವಾರುಗಳಿಗೆ ಬರದ ಬಿಸಿ ತಟ್ಟದಂತೆ ನೋಡಿಕೊಳ್ಳಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಸಮರ್ಪಕ ಕುಡಿಯುವ ನೀರು, ಜಾನುವಾರುಗಳಿಗೆ ಮೇವು ಜೊತೆಗೆ ಅತಿ ಕಡಿಮೆ ನೀರಿನಲ್ಲಿ ಬೆಳೆಯಬಹುದಾದ ಕೃಷಿಗಳಿಗೆ ಪ್ರೋತ್ಸಾಹ ನೀಡಿ, ರೈತರಿಗೆ ಅಗತ್ಯವಿರುವ ಎಲ್ಲಾ ರೀತಿಯ ಸಹಕಾರವನ್ನು ನೀಡುವಂತೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದ್ದೇನೆ.
ಖುದ್ದು ಬರ ಪರಿಸ್ಥಿತಿಯ ವೀಕ್ಷಣೆಯನ್ನೂ ಮಾಡಿ, ಬೆಳೆ ನಷ್ಟಕ್ಕೀಡಾದ ರೈತರೊಂದಿಗೆ ಮಾತನಾಡಿ, ಅವರ ಅಹವಾಲುಗಳನ್ನು ಆಲಿಸಿ, ಸರ್ಕಾರ ನಿಮ್ಮೊಂದಿಗಿರಲಿದೆ ಎಂಬ ಭರವಸೆಯನ್ನು ನೀಡಿದ್ದೇನೆ. ಅಲ್ಲದೇ, ಬರ ಘೋಷಣೆಗಿರುವ ನಿಯಮಗಳನ್ನು ಸಡಿಲಿಸುವಂತೆ ಹಾಗೂ ಬರ ಪರಿಹಾರವನ್ನು ಮುಂಚಿತವಾಗಿ ನೀಡುವಂತೆಯೂ ಪ್ರಧಾನ ಮಂತ್ರಿಗಳು, ಗೃಹ ಸಚಿವರು ಹಾಗೂ ಕೃಷಿ ಸಚಿವರಿಗೆ ಪತ್ರವನ್ನು ಬರೆದಿದ್ದೇನೆ. ಆದರೆ, ಈವರೆಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.
ನಾವು ಮತ್ತೊಮ್ಮೆ ಪತ್ರ ಬರೆದು ಬರ ಪರಿಸ್ಥಿತಿಯ ಸಂಪೂರ್ಣ ವರದಿಯನ್ನು ಕೇಂದ್ರಕ್ಕೆ ಸಲ್ಲಿಸುತ್ತೇವೆ. ಇದಕ್ಕೆ ಎಲ್ಲಾ ಜಿಲ್ಲೆಗಳ ಬರ ಪರಿಸ್ಥಿತಿಯನ್ನು ಅವಲೋಕಿಸುವ ಅಗತ್ಯವಿದೆ. ಜಿಲ್ಲೆಗಳಿಗೆ ಖುದ್ದು ಭೇಟಿ ನೀಡಿ, ಅಲ್ಲಿನ ಪರಿಸ್ಥಿತಿಯನ್ನು ಪರಿವೀಕ್ಷಣೆ ನಡೆಸಬೇಕಿದೆ. ಅಲ್ಲದೇ, ಕಳೆದೆರಡು ವಾರಗಳಿಂದ ದಕ್ಷಿಣ ಕನ್ನಡ, ಶಿವಮೊಗ್ಗ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುತ್ತಿರುವ ಪರಿಣಾಮ ಬೆಳೆ ನಷ್ಟ, ಮನೆ ಹಾನಿ, ಜೀವ ಹಾನಿ ಪ್ರಕರಣಗಳು ವರದಿಯಾಗುತ್ತಿವೆ. ಈ ಬಗ್ಗೆಯೂ ಮಾಹಿತಿ ಸಂಗ್ರಹಿಸುವ ಅಗತ್ಯವಿದೆ.
ಈ ನಿಟ್ಟಿನಲ್ಲಿ ಬರ ಮತ್ತು ಅತಿವೃಷ್ಟಿಯ ಪರಿವೀಕ್ಷಣೆಗಾಗಿ ಜಿಲ್ಲಾವಾರು ಸಚಿವರುಗಳನ್ನು ನೇಮಿಸಿ, ಪರಿವೀಕ್ಷಣೆ ನಡೆಸಿ ವರದಿ ನೀಡುವಂತೆ ಮುಖ್ಯಮಂತ್ರಿಗಳು ಸೂಚಿಸಿದ್ದಾರೆ. ಅದರಂತೆ, ಸಚಿವರುಗಳು ತಮಗೆ ನಿಯೋಜಿಸಿರುವ ಜಿಲ್ಲೆಗಳಿಗೆ ಖುದ್ದಾಗಿ ಭೇಟಿ ನೀಡಿ, ಅಲ್ಲಿನ ಅಧಿಕಾರಿಗಳ ಜೊತೆ ಪರಿಸ್ಥಿತಿಯನ್ನು ಅವಲೋಕಿಸಿ, ಸಮಗ್ರ ಮಾಹಿತಿ ಒಳಗೊಂಡ ವರದಿಯನ್ನು ನೀಡಲಿದ್ದಾರೆ.
ಆ ಬಳಿಕ ಬರ ಪರಿಸ್ಥಿತಿಯ ಸಂಪೂರ್ಣ ವರದಿಯನ್ನು ಸಿದ್ಧಪಡಿಸಿ, ಆಗಸ್ಟ್ ಮಾಸಾಂತ್ಯದೊಳಗಾಗಿ ಕೇಂದ್ರಕ್ಕೆ ಸಲ್ಲಿಸುತ್ತೇವೆ. ಜೊತೆಗೆ ಅತಿವೃಷ್ಟಿಯಿಂದಾದ ಹಾನಿಗಳಿಗೆ ಪರಿಹಾರವನ್ನು ಒದಗಿಸುವ ನಿಟ್ಟಿನಲ್ಲಿಯೂ ಕ್ರಮ ಕೈಗೊಳ್ಳಲಿದ್ದೇವೆ.
ಕೆಲವೊಮ್ಮೆ ಪ್ರಕೃತಿ ವಿಕೋಪದಿಂದ ಕಾಲಕಾಲಕ್ಕೆ ಮಳೆಯಾಗದೇ ಅಥವಾ ಹೆಚ್ಚು ಮಳೆಯಾಗಿ ಸಮಸ್ಯೆಗಳು ಸೃಷ್ಟಿಯಾಗುತ್ತವೆ. ಅಂತಹ ಸಂದರ್ಭಗಳಲ್ಲಿ ಅಧಿಕಾರದಲ್ಲಿರುವ ನಾವು ಮತ್ತು ಸರ್ಕಾರ ಜನರೊಂದಿಗೆ ನಿಲ್ಲಬೇಕು. ಅದು ನಮ್ಮ ಕರ್ತವ್ಯ ಮತ್ತು ಜವಾಬ್ದಾರಿಯೂ ಹೌದು. ಈ ನಿಟ್ಟಿನಲ್ಲಿ ನಾವು ಕಾರ್ಯಪ್ರವೃತ್ತರಾಗಿದ್ದೇವೆ. -
Dr. G Parameshwara
@DrParameshwara
In view of the drought situation prevailing in the state, I have decided not to celebrate my birthday this year.
I humbly request party workers, supporters, well-wishers, and the public not to organise any celebrations, felicitation programmes, or gatherings of any kind.
As I will be travelling on work, I will not be available for personal meetings on that day. I sincerely value your love, affection, and good wishes. I request you to mark my birthday through meaningful public service and by extending support to people affected by the drought.
Your love and good wishes are the greatest honour and the most precious gifts I could receive. May your affection continue as always.
Thank you. -
Dr. G Parameshwara
@DrParameshwara
ರಾಜ್ಯದಲ್ಲಿ ಬರ ಪರಿಸ್ಥಿತಿ ತಲೆದೋರಿರುವ ಹಿನ್ನೆಲೆ ಈ ವರ್ಷ ನನ್ನ ಜನ್ಮದಿನವನ್ನು ಆಚರಿಸದಿರಲು ನಿರ್ಧರಿಸಿದ್ದೇನೆ.
ಪಕ್ಷದ ಕಾರ್ಯಕರ್ತರು, ಬೆಂಬಲಿಗರು, ಹಿತೈಷಿಗಳು ಹಾಗೂ ಸಾರ್ವಜನಿಕರು ಯಾವುದೇ ರೀತಿಯ ಸಂಭ್ರಮಾಚರಣೆ, ಸನ್ಮಾನ ಕಾರ್ಯಕ್ರಮ ಅಥವಾ ಸಭೆಗಳನ್ನು ಆಯೋಜಿಸಬಾರದು ಎಂದು ವಿನಮ್ರವಾಗಿ ಮನವಿ ಮಾಡುತ್ತೇನೆ.
ನಾನು ಕಾರ್ಯನಿಮಿತ್ತ ದೂರದ ಪ್ರಯಾಣ ಮಾಡಬೇಕಾಗಿರುವುದರಿಂದ ಆ ದಿನ ವೈಯಕ್ತಿಕ ಭೇಟಿಗೆ ಲಭ್ಯವಿರುವುದಿಲ್ಲ. ನಿಮ್ಮ ಪ್ರೀತಿ, ಅಭಿಮಾನ ಮತ್ತು ಶುಭಾಶಯಗಳನ್ನು ನಾನು ಹೃದಯಪೂರ್ವಕವಾಗಿ ಗೌರವಿಸುತ್ತೇನೆ. ನನ್ನ ಜನ್ಮದಿನವನ್ನು ಅರ್ಥಪೂರ್ಣ ಜನಸೇವೆಯ ಮೂಲಕ ಹಾಗೂ ಬರದಿಂದ ಸಂಕಷ್ಟಕ್ಕೊಳಗಾದ ಜನರಿಗೆ ನೆರವು ನೀಡುವ ಮೂಲಕ ಆಚರಿಸುವಂತೆ ಕೋರುತ್ತೇನೆ.
ನಿಮ್ಮ ಪ್ರೀತಿ ತುಂಬಿದ ಹಾರೈಕೆಗಳೇ ನನಗೆ ಸನ್ಮಾನ, ಉಡುಗೊರೆಗಳು. ಎಂದಿನಂತೆ ನಿಮ್ಮ ಅಕ್ಕರೆ ನನಗಾಗಿರಲಿ. ಧನ್ಯವಾದಗಳು -
Dr. G Parameshwara
@DrParameshwara
ರಾಜ್ಯದಲ್ಲಿ ಬರದ ಪರಿಸ್ಥಿತಿ ಇದ್ದು, ಕೆಲವು ಜಿಲ್ಲೆಗಳಲ್ಲಿ ಮಾತ್ರ ಮಳೆಯಾಗುತ್ತಿದೆ. ಕೆಲವು ಜಲಾಶಯಗಳಿಗೆ ನೀರು ಹರಿದು ಬರುತ್ತಿದೆ.
ಕಾವೇರಿ ಜಲಾನಯನ ಪ್ರದೇಶದಲ್ಲಿ ಮೂರು ಡ್ಯಾಮ್ಗಳಲ್ಲಿ ಶೇ. 90ರಷ್ಟು ನೀರು ತುಂಬಿದೆ. ಕೆಆರ್ಎಸ್ ಜಲಾಶಯದಲ್ಲಿ ಒಳ ಹರಿವು ಹೆಚ್ಚಾಗಿದೆ. ಮುಂದಿನ ಎರಡು ಮೂರು ದಿನಗಳಲ್ಲಿ ಶೇ. 90ರಷ್ಟು ನೀರು ತುಂಬುವ ಸಾಧ್ಯತೆ ಇದೆ. -
Dr. G Parameshwara
@DrParameshwara
I addressed the media alongside the Hon'ble Chief Minister at the press conference held in the Banquet Hall of Vidhana Soudha after the Cabinet meeting.
The Cabinet expansion took place today, and the Chief Minister briefed the newly inducted ministers in detail about their responsibilities.
The state continues to face drought conditions, although a few districts have received rainfall. As a result, some reservoirs have started receiving inflows.
Three reservoirs in the Cauvery basin have reached nearly 90% of their storage capacity. Inflows into the KRS Reservoir have increased significantly, and it is expected to reach 90% capacity within the next two to three days.
A prolonged dry spell has continued for the past four weeks in 111 taluks of North Karnataka. The drought situation will worsen if the rainfall deficit persists. MLAs and members of the public have been demanding that these areas be declared drought-affected. However, under the Centre's ten prescribed criteria, it is not possible to officially declare a drought until the end of August. We have written to the Union Government requesting that these norms be relaxed.
The government will assess the drought situation across the state, including areas that fall under the Red Zone and Yellow Zone categories. The matter will be discussed in the Cabinet, and an appropriate decision will be taken. The Revenue Department also made a detailed presentation on the drought situation during the Cabinet meeting. -
Dr. G Parameshwara
@DrParameshwara
ಸಚಿವ ಸಂಪುಟ ಸಭೆ ಬಳಿಕ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ನಲ್ಲಿ ನಡೆದ ಮಾಧ್ಯಮಗೋಷ್ಟಿಯಲ್ಲಿ ಮುಖ್ಯಮಂತ್ರಿಯವರೊಂದಿಗೆ ಪಾಲ್ಗೊಂಡು ಮಾತನಾಡಿದೆ.
ಇಂದು ಕ್ಯಾಬಿನೆಟ್ ವಿಸ್ತರಣೆ ಆಗಿದೆ. ಮುಖ್ಯಮಂತ್ರಿಯವರು ಹೊಸ ಸಚಿವರಿಗೆ ಬಹಳ ವಿಸ್ತಾರವಾಗಿ ಜವಾಬ್ದಾರಿಗಳ ಬಗ್ಗೆ ತಿಳಿಸಿಕೊಟ್ಟಿದ್ದಾರೆ.
ರಾಜ್ಯದಲ್ಲಿ ಬರದ ಪರಿಸ್ಥಿತಿ ಇದ್ದು, ಕೆಲವು ಜಿಲ್ಲೆಗಳಲ್ಲಿ ಮಾತ್ರ ಮಳೆಯಾಗುತ್ತಿದೆ. ಕೆಲವು ಜಲಾಶಯಗಳಿಗೆ ನೀರು ಹರಿದು ಬರುತ್ತಿದೆ.
ಕಾವೇರಿ ಜಲಾನಯನ ಪ್ರದೇಶದಲ್ಲಿ ಮೂರು ಡ್ಯಾಮ್ಗಳಲ್ಲಿ ಶೇ. 90ರಷ್ಟು ನೀರು ತುಂಬಿದೆ. ಕೆಆರ್ಎಸ್ ಜಲಾಶಯದಲ್ಲಿ ಒಳ ಹರಿವು ಹೆಚ್ಚಾಗಿದೆ. ಮುಂದಿನ ಎರಡು ಮೂರು ದಿನಗಳಲ್ಲಿ ಶೇ. 90ರಷ್ಟು ನೀರು ತುಂಬುವ ಸಾಧ್ಯತೆ ಇದೆ.
ಉತ್ತರ ಕರ್ನಾಟಕ ಭಾಗದ 111 ತಾಲ್ಲೂಕುಗಳಲ್ಲಿ 4 ವಾರಗಳಿಂದ ಒಣಹವೆ ಮುಂದುವರಿದಿದೆ. ಮಳೆ ಕೊರತೆ ಹೆಚ್ಚಾದಷ್ಟು ಬರದ ಪರಿಸ್ಥಿತಿ ಹೆಚ್ಚಾಗುತ್ತದೆ. ಹೀಗಾಗಿ ಬರ ಘೋಷಣೆ ಮಾಡಬೇಕು ಎಂದು ಶಾಸಕರು ಮತ್ತು ಜನರು ಒತ್ತಾಯಿಸುತ್ತಿದ್ದಾರೆ. ಆದರೆ, ಕೇಂದ್ರದ 10 ನಿಯಮಗಳ ಪ್ರಕಾರ ಆಗಸ್ಟ್ ಮಾಸಾಂತ್ಯದವರೆಗೆ ಬರ ಘೋಷಣೆ ಮಾಡಲು ಸಾಧ್ಯವಾಗುವುದಿಲ್ಲ. ಅವುಗಳನ್ನು ಸಡಿಲ ಮಾಡುವಂತೆ ಕೇಂದ್ರಕ್ಕೆ ಪತ್ರ ಬರೆದಿದ್ದೇವೆ.
ರಾಜ್ಯದಲ್ಲಿ ಬರ ಪರಿಸ್ಥಿತಿ ರೆಡ್ ಝೋನ್, ಯೆಲ್ಲೋ ಝೋನ್ ಹೋಗಿರುವುದನ್ನು ಪರಿಶೀಲನೆ ಮಾಡಲಾಗುವುದು. ಅದನ್ನು ಕ್ಯಾಬಿನೆಟ್ನಲ್ಲಿ ಚರ್ಚಿಸಿ ನಿರ್ಣಯ ಮಾಡುತ್ತೇವೆ. ಬರದ ಕುರಿತಂತೆ ಕಂದಾಯ ಇಲಾಖೆಯಿಂದ ಸಂಪುಟ ಸಭೆಯಲ್ಲಿ ಪ್ರೆಸೆಂಟೆಷನ್ ನೀಡಲಾಗಿದೆ. -
Dr. G Parameshwara
@DrParameshwara
The sanctity of temples must be preserved while ensuring essential facilities for pilgrims.
10% of the grants received by ‘A’ category temples will be utilised for development works at ‘C’ category temples. This will help strengthen smaller temples and improve the amenities available to devotees.
ದೇವಾಲಯಗಳ ಪಾವಿತ್ರ್ಯವನ್ನು ಕಾಪಾಡುವುದರೊಂದಿಗೆ, ಭಕ್ತರಿಗೆ ಅಗತ್ಯ ಮೂಲಸೌಕರ್ಯಗಳನ್ನು ಕಲ್ಪಿಸುವುದು ನಮ್ಮ ಆದ್ಯತೆಯಾಗಿದೆ.
‘ಎ’ ವರ್ಗದ ದೇವಾಲಯಗಳಿಗೆ ದೊರೆಯುವ ಅನುದಾನದ ಶೇ. 10ರಷ್ಟು ಮೊತ್ತವನ್ನು ‘ಸಿ’ ವರ್ಗದ ದೇವಾಲಯಗಳ ಅಭಿವೃದ್ಧಿಗೆ ಬಳಸಲಾಗುತ್ತದೆ. ಇದರಿಂದ ಸಣ್ಣ ದೇವಾಲಯಗಳಿಗೆ ಮತ್ತಷ್ಟು ಬಲ ಸಿಗಲಿದ್ದು, ಭಕ್ತರಿಗೆ ಉತ್ತಮ ಸೌಲಭ್ಯಗಳು ದೊರಕಲು ಅನುಕೂಲವಾಗುತ್ತದೆ. -
Dr. G Parameshwara
@DrParameshwara
ಇಂದು ಮಾಜಿ ಮುಖ್ಯಮಂತ್ರಿಗಳು, ಆತ್ಮೀಯರು ಆದ ಶ್ರೀ @siddaramaiah ಅವರನ್ನು ಕಾವೇರಿ ನಿವಾಸದಲ್ಲಿ ಭೇಟಿಯಾಗಿ ಜನ್ಮದಿನದ ಶುಭಕೋರಿದೆ.
ಈ ಸಂದರ್ಭದಲ್ಲಿ ಸಚಿವರಾದ ಯು.ಟಿ.ಖಾದರ್, ಬಿ.ಝಡ್.ಜಮೀರ್ ಅಹ್ಮದ್ ಖಾನ್ ಜೊತೆಗಿದ್ದರು. -
Dr. G Parameshwara
@DrParameshwara
Effective surveillance is essential to prevent misuse and ensure the proper monitoring of devotees’ offerings.
Officials have been directed to complete the installation of CCTV cameras to monitor temple hundis by the end of August 2026. Every offering made by a devotee must be handled with transparency and accountability.
ದೇವಸ್ಥಾನಗಳಲ್ಲಿ ಭಕ್ತರ ಕಾಣಿಕೆಗೆ ವಿಶೇಷ ಭದ್ರತೆಯನ್ನು ಒದಗಿಸಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ.
ದೇವಾಲಯಗಳ ಹುಂಡಿಗಳ ಮೇಲ್ವಿಚಾರಣೆಗಾಗಿ ಸಿಸಿಟಿವಿ ಕ್ಯಾಮರಾಗಳ ಅಳವಡಿಕೆಯನ್ನು 2026ರ ಆಗಸ್ಟ್ ಅಂತ್ಯದೊಳಗೆ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ. -
Dr. G Parameshwara
@DrParameshwara
Officials have been directed to survey encroached temple properties on priority, clear them within three months, and hand them over to the Muzrai Department. ‘C’ category temples must not be handed over for adoption to private organisations that may later claim rights over temple properties in the name of development.
Temple lands belong to the temples and must be protected from encroachment and private claims.
ದೇವಸ್ಥಾನಗಳ ಒತ್ತುವರಿಯಾದ ಆಸ್ತಿಗಳನ್ನು ತೆರವುಗೊಳಿಸಲು ಆದ್ಯತೆ ಮೇರೆಗೆ ಸರ್ವೇ ಮಾಡಿಸಿ, ತೆರವುಗೊಳಿಸಿ ಮುಜರಾಯಿ ಇಲಾಖೆಗೆ ಒಪ್ಪಿಸಲು ಕ್ರಮ ಕೈಗೊಳ್ಳಬೇಕು. ಮೂರು ತಿಂಗಳ ಒಳಗಾಗಿ ಪೂರ್ಣಗೊಳಿಸಬೇಕು.
ʼಸಿʼ ವರ್ಗದ ದೇವಸ್ಥಾನಗಳನ್ನು ಅಭಿವೃದ್ಧಿ ಹೆಸರಿನಲ್ಲಿ ಯಾವುದೇ ರೀತಿಯ ಸಂಸ್ಥೆಗಳಿಗೆ ದತ್ತು ನೀಡಬಾರದು. ಅಭಿವೃದ್ಧಿ ಹೆಸರಿನಲ್ಲಿ ದತ್ತು ಪಡೆದವರು ದೇವಸ್ಥಾನದ ಆಸ್ತಿ ನಮ್ಮದು ಎಂದು ತಕಾರಾರು ತೆಗೆಯುತ್ತಾರೆ.
- ರಾಜ್ಯ ಧಾರ್ಮಿಕ ಪರಿಷತ್ತಿನ ಸಭೆಯಲ್ಲಿ ನಾನು ನೀಡಿದ ಸೂಚನೆ -
Dr. G Parameshwara
@DrParameshwara
Temple properties must remain with temples, permanently. Land will be purchased and registered in the name of ‘A’ and ‘B’ category temples to create better facilities for devotees and support the comprehensive development of temple premises.
These directions were issued during my meeting with the Rajya Dharmika Parishad.
ದೇವಾಲಯಗಳ ಆಸ್ತಿಗಳು ಶಾಶ್ವತವಾಗಿ ದೇವಾಲಯಗಳ ಹೆಸರಿನಲ್ಲೇ ಉಳಿಯಬೇಕು. ಭಕ್ತರಿಗೆ ಉತ್ತಮ ಮೂಲಸೌಕರ್ಯ ಕಲ್ಪಿಸಲು ಹಾಗೂ ದೇವಾಲಯಗಳ ಸಮಗ್ರ ಅಭಿವೃದ್ಧಿಗೆ ಅನುಕೂಲವಾಗುವಂತೆ, 'ಎ' ಮತ್ತು 'ಬಿ' ವರ್ಗದ ದೇವಾಲಯಗಳ ಹೆಸರಿನಲ್ಲಿ ಭೂಮಿಯನ್ನು ಖರೀದಿಸಿ ನೋಂದಣಿ ಮಾಡಬೇಕು.
- ರಾಜ್ಯ ಧಾರ್ಮಿಕ ಪರಿಷತ್ತಿನ ಸಭೆಯಲ್ಲಿ ಅಧಿಕಾರಿಗಳಿಗೆ ನಾನು ನೀಡಿದ ಸೂಚನೆಗಳು -
Dr. G Parameshwara
@DrParameshwara
ಕಾವೇರಿ ನದಿ ನೀರಿನ ಹಂಚಿಕೆ ವಿಚಾರದಲ್ಲಿ ಕನ್ನಡಿಗರ ಹಿತಾಸಕ್ತಿಯನ್ನು ಕಾಪಾಡುವುದು ನಮ್ಮ ಸರ್ಕಾರದ ಮೊದಲ ಆದ್ಯತೆ. ಈ ನಿಟ್ಟಿನಲ್ಲಿ ನಡೆದ ಸರ್ವಪಕ್ಷ ಸಭೆಯಲ್ಲಿ ರಾಜ್ಯದ ಹಿತದೃಷ್ಟಿಯಿಂದ ಹಲವು ಮಹತ್ವದ ವಿಷಯಗಳನ್ನು ಚರ್ಚಿಸಲಾಯಿತು.
ಪ್ರತಿ ತಿಂಗಳು ಬೆಂಗಳೂರಿಗರಿಗಾಗಿಯೇ 3.5 ಟಿಎಂಸಿ ನೀರು ಅಗತ್ಯವಿದೆ. 2027ರ ಜೂನ್ವರೆಗೆ ಒಟ್ಟು 39 ಟಿಎಂಸಿ ನೀರಿನ ಅವಶ್ಯಕತೆ ಇರುವುದರಿಂದ, ಲಭ್ಯವಿರುವ ನೀರನ್ನು ಸಮರ್ಪಕವಾಗಿ ಸಂಗ್ರಹಿಸಿ ಮುಂದಿನ ದಿನಗಳಲ್ಲಿ ಕುಡಿಯುವ ನೀರಿನ ಪೂರೈಕೆಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳುವುದು ನಮ್ಮ ಜವಾಬ್ದಾರಿಯಾಗಿದೆ.
ರಾಜ್ಯದಲ್ಲಿ ಉಂಟಾಗಿರುವ ಮಳೆ ಕೊರತೆಯಿಂದ 182 ತಾಲ್ಲೂಕುಗಳು ಬರಪೀಡಿತವಾಗಿವೆ. ರಾಜ್ಯದಲ್ಲಿ ಒಟ್ಟಾರೆ ಶೇ.33ರಷ್ಟು ಮಳೆ ಕೊರತೆ ದಾಖಲಾಗಿದ್ದು, ದಕ್ಷಿಣ ಒಳನಾಡು ಪ್ರದೇಶದಲ್ಲಿ ಶೇ.40ರಷ್ಟು ಮಳೆ ಕೊರತೆ ಉಂಟಾಗಿದೆ. ಇಂತಹ ಕಠಿಣ ಸಂದರ್ಭದಲ್ಲಿ ರಾಜ್ಯದ ಜನರು, ರೈತರಿಗೆ ನೀರಿನ ಸಮಸ್ಯೆಯಾಗದಂತೆ ನೋಡಿಕೊಳ್ಳಲು ಸರ್ಕಾರ ಅಗತ್ಯವಿರುವ ಎಲ್ಲ ಕ್ರಮಗಳನ್ನು ಕೈಗೊಳ್ಳಲಿದೆ.
ನೀರು ಹಂಚಿಕೆ ವಿಚಾರದಲ್ಲಿ ಸಂಕಷ್ಟ ಸೂತ್ರ ಅನುಷ್ಠಾನದ ಕುರಿತು ಕಾನೂನು ತಜ್ಞರೊಂದಿಗೆ ಸಮಾಲೋಚಿಸಿ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು. ಜೊತೆಗೆ, ಲಭ್ಯವಿರುವ ನೀರಿನ ಪ್ರಮಾಣ ಮತ್ತು ಕೃಷಿ ತಜ್ಞರ ಸಲಹೆಗಳನ್ನು ಆಧರಿಸಿ ಜಿಲ್ಲಾವಾರು ಬೆಳೆ ಮಾರ್ಗಸೂಚಿಯನ್ನು ಸಿದ್ಧಪಡಿಸಲಾಗುವುದು.
ಸಂದರ್ಭಗಳು ಯಾವುದೇ ಇರಲಿ, ಜನರೊಂದಿಗೆ ನಮ್ಮ ಸರ್ಕಾರ ಸದಾ ನಿಲ್ಲಲಿದೆ. -
Dr. G Parameshwara
@DrParameshwara
ಅಂತಾರಾಷ್ಟ್ರೀಯ ಪಿಸ್ತೂಲ್ ಶೂಟರ್, ವಿಶ್ವಕಪ್ ಚಿನ್ನದ ಪದಕ ವಿಜೇತೆ ದಿವ್ಯಾ ಟಿ. ಎಸ್. ಅವರು ಇತ್ತೀಚೆಗೆ ನಮ್ಮ ಸರ್ಕಾರದಲ್ಲಿ ಕ್ರೀಡಾ ಕೋಟಾದಡಿ ಅಬಕಾರಿ ಇಲಾಖೆಯ ಉಪ ಅಧೀಕ್ಷಕಿಯಾಗಿ ನೇಮಕಗೊಂಡಿದ್ದಾರೆ.
ಇಂದು ಅವರು ನನ್ನನ್ನು ಭೇಟಿ ಮಾಡಿ, ಕ್ರೀಡಾ ಕೋಟಾದಡಿ ಸರ್ಕಾರಿ ಸೇವೆಗೆ ನೇಮಕಗೊಂಡಿರುವ ಕ್ರೀಡಾಪಟುಗಳಿಗೆ ವಿಶೇಷ ರಜೆ ನೀತಿ ಜಾರಿಗೆ ತರಬೇಕೆಂದು ಮನವಿ ಸಲ್ಲಿಸಿದರು. ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದ ತರಬೇತಿ ಶಿಬಿರಗಳು ಮತ್ತು ಸ್ಪರ್ಧೆಗಳಲ್ಲಿ ಭಾಗವಹಿಸುವ ಸಂದರ್ಭದಲ್ಲಿ ಸರ್ಕಾರಿ ಸೇವೆಯಲ್ಲಿರುವ ಕ್ರೀಡಾಪಟುಗಳಿಗೆ ರಜೆ ಪಡೆಯುವಲ್ಲಿ ಯಾವುದೇ ತೊಂದರೆಯಾಗದಂತೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಈ ವಿಶೇಷ ರಜೆ ನೀತಿಯನ್ನು ಜಾರಿಗೆ ತರಲು ಅವರು ಮನವಿ ಮಾಡಿದರು.
ಕೂಡಲೇ, ಸಂಬಂಧಿತ ಅಧಿಕಾರಿಗಳೊಂದಿಗೆ ದೂರವಾಣಿ ಮೂಲಕ ಮಾತನಾಡಿ, ಈ ವಿಷಯವನ್ನು ಆದ್ಯತೆಯ ಮೇರೆಗೆ ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದೆ.
ರಾಜ್ಯಕ್ಕೆ ಮತ್ತು ದೇಶಕ್ಕೆ ಕೀರ್ತಿ ತರುವ ಕ್ರೀಡಾಪಟುಗಳ ಹಿತಾಸಕ್ತಿಯನ್ನು ಕಾಪಾಡಲು ಹಾಗೂ ಅವರ ಸಾಧನೆಗೆ ಮತ್ತಷ್ಟು ಉತ್ತೇಜನ ನೀಡಲು ನಮ್ಮ ಸರ್ಕಾರ ಬದ್ಧವಾಗಿದೆ.This media couldn't be displayed. See it on the original post. -
Dr. G Parameshwara
@DrParameshwara
ಇಂದು ಲೋಕಭವನದ ಗಾಜಿನಮನೆಯಲ್ಲಿ ನಡೆದ ನೂತನ ಸಚಿವರ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಭಾಗಿಯಾಗಿ, ಸಚಿವ ಸಂಪುಟಕ್ಕೆ ಸೇರ್ಪಡೆಗೊಂಡ ನಾಯಕರುಗಳನ್ನು ಅಭಿನಂದಿಸಿ, ಶುಭಹಾರೈಸಿದೆ.
-
Dr. G Parameshwara
@DrParameshwara
ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ನನ್ನೆಲ್ಲಾ ಆತ್ಮೀಯರಿಗೆ ಅಭಿನಂದನೆಗಳು.
ನಾವೆಲ್ಲರೂ ಜೊತೆಯಾಗಿ ಕರ್ನಾಟಕದ ಪ್ರಗತಿಗೆ ಶ್ರಮಿಸೋಣ. ಇನ್ನಷ್ಟು ಅಭಿವೃದ್ಧಿ ಕಾರ್ಯಕ್ರಮಗಳು, ಯೋಜನೆಗಳನ್ನು ರೂಪಿಸಿ ಜನತೆ ನೀಡಿರುವ ಈ ಅಧಿಕಾರವನ್ನು ಅವರ ಶ್ರೇಯೋಭಿವೃದ್ಧಿಗೆ ಮೀಸಲಿಡೋಣ. -
Dr. G Parameshwara
@DrParameshwara
-
Dr. G Parameshwara
@DrParameshwara
A proud Commonwealth Games 2026 campaign for Team India! 🇮🇳
With 39 medals - 13 Gold, 17 Silver and 9 Bronze - India finished fourth in the medal standings. Heartiest congratulations to all the medal winners, as well as every athlete who represented India with determination, discipline and pride. Appreciation also goes to the coaches and support staff who stood behind the contingent throughout the Games.
As India prepares to host the Commonwealth Games in 2030, the Government of Karnataka will continue to strengthen sporting infrastructure, nurture emerging talent and extend every possible support to athletes striving to bring greater glory to the nation. -
Dr. G Parameshwara
@DrParameshwara
ಮೈಸೂರು ಸಂಸ್ಥಾನದ ಸುವರ್ಣಯುಗಕ್ಕೆ ಭದ್ರ ಅಡಿಪಾಯ ಹಾಕಿದ ನವ ಮೈಸೂರಿನ ನಿರ್ಮಾತೃ, ಮೊಟ್ಟಮೊದಲ ಬಾರಿಗೆ ಕರ್ನಾಟಕದಲ್ಲಿ ಮೀಸಲಾತಿ ವ್ಯವಸ್ಥೆಯನ್ನು ಜಾರಿಗೆ ತಂದ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಪುಣ್ಯಸ್ಮರಣೆಯಂದು ನನ್ನ ಗೌರವ ನಮನಗಳನ್ನು ಸಲ್ಲಿಸುತ್ತೇನೆ.
ಶಿಕ್ಷಣ, ಮೂಲಸೌಕರ್ಯ, ಆಡಳಿತ ಮತ್ತು ಸಾಮಾಜಿಕ ಸುಧಾರಣೆಗಳು ಸೇರಿದಂತೆ ಹಲವಾರು ಕ್ಷೇತ್ರಗಳಿಗೆ ಶ್ರೀಯುತರ ಕೊಡುಗೆ ಅಪಾರ. ಅವರ ದೂರದೃಷ್ಟಿಯ ನಾಯಕತ್ವ, ಜನಪರ ಆಡಳಿತ ಮತ್ತು ಅಭಿವೃದ್ಧಿಯ ಪರಿಕಲ್ಪನೆಗಳು ಇಂದಿಗೂ ನಮ್ಮೆಲ್ಲರಿಗೂ ಆದರ್ಶನೀಯ. -
Dr. G Parameshwara
@DrParameshwara
ನಮ್ಮ ಪಕ್ಷದ ಹಿರಿಯ ನಾಯಕರು, ಮಾಜಿ ಮುಖ್ಯಮಂತ್ರಿಗಳು, ನನ್ನ ಆತ್ಮೀಯರು ಆದ ಶ್ರೀ @siddaramaiah ಅವರಿಗೆ ಜನ್ಮದಿನದ ಶುಭಾಶಯಗಳು.
ರಾಜ್ಯದ ಅಭಿವೃದ್ಧಿ ಮತ್ತು ಬಡವರು, ಶೋಷಿತ ಜನರ ಬಗ್ಗೆ ನಿಮಗಿದ್ದ ಪ್ರೀತಿ - ಕಾಳಜಿಯನ್ನು ಹತ್ತಿರದಿಂದ ಕಂಡಿದ್ದೇನೆ. ನಿಮ್ಮ ಸರ್ಕಾರದಲ್ಲಿ ಸಚಿವನಾಗಿ ಕೆಲಸ ಮಾಡಿರುವುದು ನನ್ನ ರಾಜಕೀಯ ಬದುಕಿನ ಹೆಮ್ಮೆಯ ವಿಚಾರಗಳಲ್ಲೊಂದು. 2 ಬಾರಿ ರಾಜ್ಯದ ಮುಖ್ಯಮಂತ್ರಿಯಾಗಿ ಅನೇಕ ಕಾರ್ಯಕ್ರಮಗಳನ್ನು ಜಾರಿಗೊಳಿಸಿದ್ದೀರಿ. ಕಲ್ಯಾಣ ಕಾರ್ಯಕ್ರಮಗಳು, ಭಾಗ್ಯಗಳು, ಗ್ಯಾರಂಟಿ ಯೋಜನೆಗಳ ಮೂಲಕ ಅದೆಷ್ಟೋ ಮಂದಿಯ ಬಾಳಿಗೆ ಬೆಳಕಾಗಿದ್ದೀರಿ.
ಒಂದೇ ಒಂದು ಕಪ್ಪುಚುಕ್ಕೆಯಿಲ್ಲದ ನಿಮ್ಮ ಸಾರ್ವಜನಿಕ ಬದುಕು, ಜಾತ್ಯತೀತ ನಂಬಿಕೆಯ ಮೇಲಿನ ನಿಮ್ಮ ಬದ್ಧತೆ, ದೇಶದ ಸಾಮಾಜಿಕ ವ್ಯವಸ್ಥೆಯ ಬಗೆಗಿನ ನಿಮ್ಮ ಆಳವಾದ ಜ್ಞಾನ ಮತ್ತು ನಿಮ್ಮ ಹೋರಾಟದ ಬದುಕು ಪ್ರತಿ ರಾಜಕಾರಣಿಗೆ ಮಾದರಿ. ನಿಮ್ಮ ಮಾರ್ಗದರ್ಶನದಲ್ಲಿ ನಮ್ಮ ಸರ್ಕಾರ ಮತ್ತಷ್ಟು ಜನಮನ್ನಣೆ ಗಳಿಸುವಂತಾಗಲಿ ಎನ್ನುವುದು ನನ್ನ ಆಶಯ.
ಭಗವಂತನು ನಿಮಗೆ ಉತ್ತಮ ಆಯುರಾರೋಗ್ಯವನ್ನು ಕರುಣಿಸಲಿ, ಜನಸೇವೆಗೆ ಮತ್ತಷ್ಟು ಶಕ್ತಿಯನ್ನು ಕೊಟ್ಟು ಹರಸಲಿ ಎಂದು ಪ್ರಾರ್ಥಿಸುತ್ತೇನೆ. -
Dr. G Parameshwara
@DrParameshwara
ಕನ್ನಡಪ್ರಭ ಮತ್ತು ಏಷ್ಯಾನೆಟ್ ಸುವರ್ಣ ನ್ಯೂಸ್ ಸಂಸ್ಥೆಯು ಬೆಂಗಳೂರಿನ ಖಾಸಗಿ ಹೋಟೆಲ್ನಲ್ಲಿ ಆಯೋಜಿಸಿದ್ದ 'ರೈತ ರತ್ನ ಪ್ರಶಸ್ತಿ ಪ್ರದಾನ ಸಮಾರಂಭ'ದಲ್ಲಿ ಭಾಗವಹಿಸಿ, ಕೃಷಿ ಕ್ಷೇತ್ರದಲ್ಲಿ ವಿಶಿಷ್ಟ ಸಾಧನೆಗೈದ ರೈತರಿಗೆ ಪ್ರಶಸ್ತಿ ಪ್ರದಾನ ಮಾಡಿ ಅಭಿನಂದಿಸಿ, ಶುಭ ಹಾರೈಸಿದೆ.
ಕೃಷಿ ಕ್ಷೇತ್ರದಲ್ಲಿ ತಮ್ಮ ಪರಿಶ್ರಮ, ನವೀನತೆ ಮತ್ತು ಸಾಧನೆಯ ಮೂಲಕ ಸಮಾಜಕ್ಕೆ ಮಾದರಿಯಾಗಿರುವ ಅನ್ನದಾತರನ್ನು ಗೌರವಿಸುವ ಇಂತಹ ಕಾರ್ಯಕ್ರಮಗಳು ಕೃಷಿ ವಲಯಕ್ಕೆ ಮತ್ತಷ್ಟು ಉತ್ತೇಜನ ನೀಡಲಿವೆ ಎಂಬ ವಿಶ್ವಾಸವಿದೆ.
ನೊಣವಿನಕೆರೆಯ ಶ್ರೀ ಕಾಡಸಿದ್ಧೇಶ್ವರ ಮಠದ ಶ್ರೀ ಡಾ. ಕರಿವೃಷಭ ದೇಶಿಕೇಂದ್ರ ಶಿವಯೋಗೀಶ್ವರ ಮಹಾಸ್ವಾಮೀಜಿ ರವರು ಕಾರ್ಯಕ್ರಮದ ದಿವ್ಯ ಸಾನಿಧ್ಯವಹಿಸಿದ್ದರು. ಪರ್ವ ಗ್ರೂಪ್ನ ಸಂಸ್ಥಾಪಕರಾದ ನೀಲೇಶ್ ಹೆಚ್.ಪಿ, ಚಲನಚಿತ್ರ ನಟಿ ಅದಿತಿ ಪ್ರಭುದೇವ್, ಕನ್ನಡಪ್ರಭ ಮತ್ತು ಸುವರ್ಣನ್ಯೂಸ್ ಸಮೂಹ ಸಂಪಾದಕೀಯ ನಿರ್ದೇಶಕರಾದ ಶ್ರೀ ರವಿ ಹೆಗಡೆ ಉಪಸ್ಥಿತರಿದ್ದರು.
@AsianetNewsSN
@KannadaPrabha -
Dr. G Parameshwara
@DrParameshwara
ಶನಿವಾರ ವಿಧಾನಸೌಧದಲ್ಲಿ ಕಂದಾಯ ಇಲಾಖೆ ವ್ಯಾಪ್ತಿಗೆ ಒಳಪಡುವ ವಿವಿಧ ಅಭಿವೃದ್ಧಿ ಪ್ರಾಧಿಕಾರಗಳ ಪ್ರಗತಿ ಪರಿಶೀಲನಾ ಸಭೆ ಹಾಗೂ ರಾಜ್ಯ ಧಾರ್ಮಿಕ ಪರಿಷತ್ತಿನ ಸಭೆ ನಡೆಸಿ, ಅಧಿಕಾರಿಗಳಿಗೆ ಅಗತ್ಯ ನಿರ್ದೇಶನಗಳನ್ನು ನೀಡಿದೆ.
ಈ ಕುರಿತಾದ ಪತ್ರಿಕಾ ವರದಿಗಳು ಹೀಗಿವೆ.. -
Dr. G Parameshwara
@DrParameshwara
A historic Day 10 for Team India at the Commonwealth Games 2026! 🇮🇳
India delivered a sensational haul of 16 medals, powered by a record-breaking boxing campaign that brought home seven Gold and three Silver medals.
Heartiest congratulations to our boxing champions Preeti Pawar, Jaismine Lamboria, Sakshi Chaudhary, Priya Ghanghas, Arundhati Choudhary, Sachin Siwach and Ankush Panghal on winning Gold, and to Jadumani Singh, Lovlina Borgohain and Narender Berwal on securing Silver.
Congratulations also to Soman Rana for Gold and Shubham Juyal for Silver in the Men’s F57 Shot Put, Praveen Chithravel for Silver and Selva Prabhu Thirumaran for Bronze in the Men’s Triple Jump, Gulveer Singh for Bronze in the Men’s 5000m, and Unnati Sharma for Bronze in Judo.
A truly unforgettable day that showcased the strength, depth and determination of Indian sport. The entire nation is proud of you all. -
Dr. G Parameshwara
@DrParameshwara
ಇಂದು ಮುಖ್ಯಮಂತ್ರಿ ಶ್ರೀ ಡಿ.ಕೆ. ಶಿವಕುಮಾರ್ ಅವರ ಅಧ್ಯಕ್ಷತೆಯಲ್ಲಿ ಕಾವೇರಿ ನದಿ ನೀರಿನ ಹಂಚಿಕೆ ವಿಷಯಕ್ಕೆ ಸಂಬಂಧಿಸಿ ಸಿಎಂ ಗೃಹಕಚೇರಿ ಕೃಷ್ಣಾದಲ್ಲಿ ನಡೆದ ಸರ್ವಪಕ್ಷ ಸಭೆಯಲ್ಲಿ ನಾನು ಪಾಲ್ಗೊಂಡೆ.
ನಮ್ಮ ನಡುವಿನ ರಾಜಕೀಯ ಸಿದ್ಧಾಂತಗಳು ಭಿನ್ನವಾಗಿರಬಹುದು. ಆದರೆ, ಜಲ - ನಾಡು - ನುಡಿ ವಿಚಾರ ಬಂದಾಗ ನಾವೆಲ್ಲರೂ ಪಕ್ಷ ಬೇಧ ಮರೆತು ಒಗ್ಗಟ್ಟಿನಿಂದ ನಿಲ್ಲಬೇಕು. ಇದು ನಮ್ಮನ್ನು ಆಯ್ಕೆ ಮಾಡಿರುವ ಜನರ ನಿರೀಕ್ಷೆಯೂ ಹೌದು.
ಕಾವೇರಿ ವಿಚಾರವಾಗಿ ರಾಜ್ಯಕ್ಕೆ ತಲೆದೋರಿರುವ ಸಮಸ್ಯೆಯನ್ನು ನಾವು ಎದುರಿಸುವ ನಿಟ್ಟಿನಲ್ಲಿ ಇಂದು ಚರ್ಚಿಸಿ, ಸಮಾಲೋಚನೆ ನಡೆಸಿದೆವು. ನಮ್ಮ ಜನರಿಗೆ ಯಾವುದೇ ರೀತಿಯಲ್ಲಿ ತೊಂದರೆಯಾಗದಂತೆ ಎಲ್ಲ ಕಾನೂನಾತ್ಮಕ ಅವಕಾಶಗಳನ್ನು ಬಳಕೆ ಮಾಡಿಕೊಂಡು ಕನ್ನಡಿಗರ ಹಿತ ಕಾಯಲು ನಾವು ಬದ್ಧರಿದ್ದೇವೆ.
ಸಭೆಯಲ್ಲಿ ಕೇಂದ್ರ ಸಚಿವರಾದ ಹೆಚ್.ಡಿ.ಕುಮಾರಸ್ವಾಮಿ, ವಿ.ಸೋಮಣ್ಣ, ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ, ಬಿ.ಎಸ್.ಯಡಿಯೂರಪ್ಪ, ಸದಾನಂದಗೌಡ, ಬಸವರಾಜ ಬೊಮ್ಮಾಯಿ, ಸಚಿವರಾದ ರಾಮಲಿಂಗಾ ರೆಡ್ಡಿ, ಕೃಷ್ಣ ಬೈರೇಗೌಡ, ಎಂ.ಬಿ.ಪಾಟೀಲ್, ಕೆ.ಜೆ.ಜಾರ್ಜ್, ಕರ್ನಾಟಕ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿಗಳಾದ ಟಿ.ಬಿ.ಜಯಚಂದ್ರ, ಅಡ್ವಕೇಟ್ ಜನರಲ್ ಶಶಿಕಿರಣ್ ಶೆಟ್ಟಿ, ವಿರೋಧ ಪಕ್ಷದ ನಾಯಕರಾದ ಆರ್.ಅಶೋಕ್, ಛಲವಾದಿ ನಾರಾಯಣಸ್ವಾಮಿ ಹಾಗೂ ಇತರೆ ಸಂಸದರು, ಸರ್ಕಾರದ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು. -
Dr. G Parameshwara
@DrParameshwara
ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿಯ ಇಂದಿರಾನಗರದಲ್ಲಿ ಭಾರೀ ಮಳೆಗೆ ಗುಡ್ಡ ಕುಸಿದು ಶೆಡ್ ನಲ್ಲಿ ವಾಸಿಸುತ್ತಿದ್ದ ಒಂದೇ ಕುಟುಂಬದ ಮೂವರು ಸಾವನ್ನಪ್ಪಿದ್ದು, ಇನ್ನೂ ಕೆಲವರು ಗಂಭೀರ ಗಾಯಗೊಂಡಿರುವ ವಿಚಾರ ತಿಳಿದು ಆಘಾತವಾಯಿತು. ಕೂಲಿ ಅರಸಿ ದೂರದ ಊರಿನಿಂದ ಬಂದು ನೆಲೆಸಿದ್ದ ಬಡಕುಟುಂಬವೊಂದು ಹೀಗೆ ದುರಂತ ಅಂತ್ಯ ಕಂಡಿದ್ದು ದುರದೃಷ್ಟಕರ.
ಈಗಾಗಲೇ ಜಿಲ್ಲಾಧಿಕಾರಿಗಳೊಂದಿಗೆ ಮಾತನಾಡಿ, ಪರಿಹಾರ ಕಾರ್ಯ ಕೈಗೊಳ್ಳುವ ಜೊತೆಗೆ ಸಂತ್ರಸ್ತರಿಗೆ ಎಲ್ಲಾ ರೀತಿಯ ನೆರವನ್ನು ಒದಗಿಸುವಂತೆ ಸೂಚನೆ ನೀಡಿದ್ದೇನೆ.
ಮೃತರ ಆತ್ಮಕ್ಕೆ ಶಾಂತಿ ಸಿಗಲಿ, ಗಾಯಗೊಂಡವರು ಆದಷ್ಟು ಬೇಗ ಚೇತರಿಸಿಕೊಳ್ಳಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ. ದುಃಖತಪ್ತ ಕುಟುಂಬದವರ ಜೊತೆ ಸರ್ಕಾರ ನಿಲ್ಲಲಿದೆ. -
Dr. G Parameshwara
@DrParameshwara
ಮಾಜಿ ಸಚಿವರು, ಚಾಮರಾಜಪೇಟೆ ಶಾಸಕರು, ಆತ್ಮೀಯರು ಆದ @BZZameerAhmedK ಅವರನ್ನು ಭೇಟಿಯಾಗಿ ಜನ್ಮದಿನದ ಶುಭಕೋರಿದೆ.
ಅವರ ರಾಜಕೀಯ ಬದುಕು ಯಶಸ್ಸಿನಿಂದ ಕೂಡಿರಲಿ, ಆಯುರಾರೋಗ್ಯ ಲಭಿಸಲಿ, ಇನ್ನಷ್ಟು ಕಾಲ ಜನಸೇವೆ ಮಾಡುವಂತಾಗಲಿ ಎಂದು ಹಾರೈಸಿದೆ. -
Dr. G Parameshwara
@DrParameshwara
₹50 crore has been allocated for the development of the historic temple town of Banavasi. The project will focus on heritage conservation and structural restoration to protect the town’s 1,500-year-old legacy for future generations.
Preserving Karnataka’s cultural heritage while improving essential infrastructure remains a priority for our government.
ರಾಜ್ಯದ ಇತಿಹಾಸ, ಸಂಸ್ಕೃತಿ ಮತ್ತು ಪರಂಪರೆಯ ಪ್ರತೀಕವಾಗಿರುವ ಬನವಾಸಿಯನ್ನು ಸಮಗ್ರವಾಗಿ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ನಮ್ಮ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ.
ಈ ನಿಟ್ಟಿನಲ್ಲಿ ಸುಮಾರು 1,500 ವರ್ಷಗಳ ಇತಿಹಾಸ ಹೊಂದಿರುವ ಬನವಾಸಿಗೆ ₹50 ಕೋಟಿ ಅನುದಾನವನ್ನು ಮೀಸಲಿಡಲಾಗಿದೆ. ಈ ಯೋಜನೆಯಡಿ ಬನವಾಸಿಯ ಸಾಂಸ್ಕೃತಿಕ ಪರಂಪರೆಯನ್ನು ಮುಂದಿನ ಪೀಳಿಗೆಗಳಿಗೆ ಸಂರಕ್ಷಿಸುವ ಉದ್ದೇಶದಿಂದ ಪಾರಂಪರಿಕ ಸಂರಕ್ಷಣೆ ಹಾಗೂ ಜೀರ್ಣೋದ್ಧಾರ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತದೆ.
ರಾಜ್ಯದ ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಉಳಿಸಿ ಬೆಳೆಸುವುದರ ಜೊತೆಗೆ, ಅಗತ್ಯ ಮೂಲಸೌಕರ್ಯ ಅಭಿವೃದ್ಧಿಗೆ ಆದ್ಯತೆ ನೀಡಲು ನಮ್ಮ ಸರ್ಕಾರ ಬದ್ಧವಾಗಿದೆ. -
Dr. G Parameshwara
@DrParameshwara
Our government has allocated ₹24.98 crore for development works at Chikkasangama. The funds will support the construction of key facilities, including a Kalyana Mantapa and a Veda Pathashala, while strengthening the area’s cultural and spiritual importance.
We remain committed to taking meaningful development to every region of Karnataka.
ಚಿಕ್ಕಸಂಗಮದ ಅಭಿವೃದ್ಧಿ ಕಾಮಗಾರಿಗಳಿಗೆ ನಮ್ಮ ಸರ್ಕಾರ ₹24.98 ಕೋಟಿ ಅನುದಾನವನ್ನು ಮಂಜೂರು ಮಾಡಿದೆ. ಈ ಅನುದಾನದಡಿ ಕಲ್ಯಾಣ ಮಂಟಪ ಮತ್ತು ವೇದ ಪಾಠಶಾಲೆ ಸೇರಿದಂತೆ ಅಗತ್ಯ ಮೂಲಸೌಕರ್ಯಗಳನ್ನು ನಿರ್ಮಿಸಲಾಗುತ್ತಿದ್ದು, ಕ್ಷೇತ್ರದ ಸಾಂಸ್ಕೃತಿಕ, ಆಧ್ಯಾತ್ಮಿಕ ಪ್ರಾಮುಖ್ಯತೆಗೆ ಹೆಚ್ಚಿನ ಮಹತ್ವವನ್ನು ನೀಡಲಿದೆ.
ರಾಜ್ಯದ ಪ್ರತಿಯೊಂದು ಭಾಗವೂ ಅಭಿವೃದ್ಧಿಯ ಪಥದಲ್ಲಿ ಮುನ್ನಡೆಯುವಂತೆ ಮಾಡುವುದು ನಮ್ಮ ಸರ್ಕಾರದ ದೃಢ ಸಂಕಲ್ಪವಾಗಿದೆ. -
Dr. G Parameshwara
@DrParameshwara
Development authorities must function with accountability, transparency and a clear sense of urgency.
During the review meeting, officials of the Kudalasangama Development Board were questioned over audits pending for 35 years. The Basavakalyan Development Board was directed to complete development works at all 17 monuments by December. The Basavana Bagewadi Development Authority has also been instructed to submit complete details regarding the ₹2.18 crore spent without the required approval.
Our government will ensure that public funds are utilised responsibly and that development works are completed on time.
ಅಭಿವೃದ್ಧಿಯ ಹೊಣೆಗಾರಿಕೆಯನ್ನು ಹೊತ್ತ ಸರ್ಕಾರಿ ಸಂಸ್ಥೆಗಳು ಪಾರದರ್ಶಕವಾಗಿ, ಜವಾಬ್ದಾರಿಯುತವಾಗಿ ಹಾಗೂ ತ್ವರಿತವಾಗಿ ಕಾರ್ಯವನ್ನು ನಿರ್ವಹಿಸಬೇಕು.
ಇಂದು ವಿಧಾನಸೌಧದಲ್ಲಿ ಕಂದಾಯ ಇಲಾಖೆಯ ವಿವಿಧ ಅಭಿವೃದ್ಧಿ ಪ್ರಾಧಿಕಾರಗಳ ಪರಿಶೀಲನಾ ಸಭೆಯನ್ನು ನಡೆಸಿದೆ. ಈ ವೇಳೆ ಕೂಡಲಸಂಗಮ ಅಭಿವೃದ್ಧಿ ಮಂಡಳಿಯ 35 ವರ್ಷಗಳಿಂದ ಬಾಕಿ ಉಳಿದಿದ್ದ ಲೆಕ್ಕಪರಿಶೋಧನೆ ಕುರಿತು ಅಧಿಕಾರಿಗಳನ್ನು ಪ್ರಶ್ನಿಸಿದೆ. ಬಸವಕಲ್ಯಾಣ ಅಭಿವೃದ್ಧಿ ಮಂಡಳಿಯ ತನ್ನ ವ್ಯಾಪ್ತಿಯ 17 ಸ್ಮಾರಕಗಳ ಅಭಿವೃದ್ಧಿ ಕಾಮಗಾರಿಗಳನ್ನು ಡಿಸೆಂಬರ್ ಒಳಗೆ ಪೂರ್ಣಗೊಳಿಸುವಂತೆ ಸೂಚನೆ ನೀಡಿದೆ. ಜೊತೆಗೆ ಬಸವನ ಬಾಗೇವಾಡಿ ಅಭಿವೃದ್ಧಿ ಪ್ರಾಧಿಕಾರಕ್ಕೆ ಅಗತ್ಯ ಅನುಮತಿಯಿಲ್ಲದೆ ವೆಚ್ಚ ಮಾಡಿರುವ ₹2.18 ಕೋಟಿಯ ಸಂಪೂರ್ಣ ವಿವರಗಳನ್ನು ಸಲ್ಲಿಸುವಂತೆ ನಿರ್ದೇಶನ ನೀಡಿದೆ.
ಸಾರ್ವಜನಿಕರ ಹಣದ ಸಮರ್ಪಕ ಬಳಕೆ ಹಾಗೂ ನಿಗದಿತ ಸಮಯಲ್ಲಿ ಅಭಿವೃದ್ಧಿ ಕಾಮಗಾರಿಗಳ ಪೂರ್ಣಗೊಳಿಸುವಿಕೆಗೆ ನಮ್ಮ ಸರ್ಕಾರ ಬದ್ಧವಾಗಿದೆ. -
Dr. G Parameshwara
@DrParameshwara
Today, I chaired a meeting of the Rajya Dharmika Parishad at Vidhana Soudha, held detailed discussions with its members, and issued the following directions:
Land must be purchased in the name of ‘A’ and ‘B’ category temples across the State.
Temples have sufficient funds. Along with development works, land must be purchased in their name so that the property remains with them permanently. This will facilitate infrastructure for devotees and support the temples’ comprehensive development.
The Chief Minister has directed that CCTV cameras be installed to monitor temple donation boxes and prevent the misuse of offerings. This must be completed by the end of August and should not be taken lightly.
Several prominent temples in the State lack basic amenities for devotees. During my visits and inspections, I have often wondered which era we are living in. No one appears willing to take responsibility. How can the sanctity of temples be maintained under such conditions?
There is no shortage of funds to provide basic facilities to devotees. Officials have been directed to prepare master plans, and there must be no negligence in this regard.
‘C’ category temples must not be handed over to any organisation for adoption in the name of development, as those adopting them may later claim rights over temple properties. Instead, 10% of the grants of ‘A’ category temples must be used for the development of ‘C’ category temples.
Strict action has already been ordered to clear encroachments on temple lands. Encroached properties must be surveyed on a priority basis, cleared and handed over to the Muzrai Department within three months.
As the academic year has begun, officials must invite applications for scholarships for the children of priests and employees working in notified temples. -
Dr. G Parameshwara
@DrParameshwara
ಇಂದು ವಿಧಾನಸೌಧದಲ್ಲಿ ರಾಜ್ಯ ಧಾರ್ಮಿಕ ಪರಿಷತ್ತಿನ ಸಭೆ ನಡೆಸಿ, ಸದಸ್ಯರೊಂದಿಗೆ ಸುದೀರ್ಘವಾಗಿ ಚರ್ಚಿಸಿ ಬಳಿಕ ನೀಡಿದ ಅಗತ್ಯ ನಿರ್ದೇಶನಗಳು ಹೀಗಿವೆ..
ರಾಜ್ಯದಲ್ಲಿನ 'ಎ' ವರ್ಗ ಮತ್ತು 'ಬಿ' ವರ್ಗದ ದೇವಸ್ಥಾನಗಳ ಹೆಸರಿಗೆ ಭೂಮಿ ಖರೀದಿಸಬೇಕು.
ದೇವಸ್ಥಾನಗಳಲ್ಲಿ ಸಾಕಷ್ಟು ಹಣವಿದೆ. ಅಭಿವೃದ್ಧಿ ಕಾರ್ಯಗಳ ಜೊತೆಗೆ ದೇವಸ್ಥಾನದ ಹೆಸರಿಗೆ ಭೂಮಿ ಖರೀದಿಸಬೇಕು. ಈ ಆಸ್ತಿ ಶಾಶ್ವತವಾಗಿ ದೇವಸ್ಥಾನಕ್ಕೆ ಉಳಿಯುತ್ತದೆ. ಇದರಿಂದ ಭಕ್ತರಿಗೆ ಮೂಲಸೌಕರ್ಯ ವ್ಯವಸ್ಥೆ ಕಲ್ಪಿಸುವುದು ಸೇರಿದಂತೆ ದೇವಸ್ಥಾನದ ಎಲ್ಲ ರೀತಿಯ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಮತ್ತಷ್ಟು ಅನುಕೂಲವಾಗುತ್ತದೆ.
ದೇವಸ್ಥಾನಗಳ ಹುಂಡಿ ಹಣ ದುರುಪಯೋಗ ತಡೆಯುವ ನಿಟ್ಟಿನಲ್ಲಿ ಹುಂಡಿ ಮೇಲೆ ನಿಗಾವಹಿಸಲು ಸಿಸಿಟಿವಿ ಅಳವಡಿಸುವಂತೆ ಮುಖ್ಯಮಂತ್ರಿಯವರು ಸೂಚನೆ ನೀಡಿದ್ದಾರೆ. ಇದನ್ನು ಆಗಸ್ಟ್ ಕೊನೆಯ ವೇಳೆಗೆ ಪೂರ್ಣಗೊಳಿಸಬೇಕು. ಈ ಬಗ್ಗೆ ಹಗುರವಾಗಿ ಪರಿಗಣಿಸುವುದು ಬೇಡ.
ರಾಜ್ಯದ ಪ್ರಸಿದ್ಧ ದೇವಸ್ಥಾನಗಳಲ್ಲಿ ಭಕ್ತರಿಗೆ ಅಗತ್ಯ ಮೂಲ ಸೌಕರ್ಯಗಳ ಕೊರತೆ ಇದೆ. ನಾನು ಭೇಟಿ ನೀಡಿ ಪರಿಶೀಲಿಸಿದ ದೇವಸ್ಥಾನಗಳಲ್ಲಿ 'ನಾವು ಯಾವ ಯುಗದಲ್ಲಿದ್ದೇವೆ' ಎಂಬ ಪ್ರಶ್ನೆ ಮೂಡುತ್ತದೆ. ಯಾರೊಬ್ಬರು ಜವಾಬ್ದಾರಿ ತೆಗೆದುಕೊಂಡು ಕೆಲಸ ಮಾಡುತ್ತಿಲ್ಲ. ದೇವಸ್ಥಾನಗಳಲ್ಲಿ ಪಾವಿತ್ರ್ಯತೆ ಕಾಪಾಡದೆ ಹೋದರೆ ಹೇಗೆ?
ದೇವಸ್ಥಾನಗಳಲ್ಲಿ ಭಕ್ತರಿಗೆ ಮೂಲಸೌಕರ್ಯ ಒದಗಿಸಲು ಯಾವುದೇ ರೀತಿಯಲ್ಲೂ ಹಣದ ಕೊರತೆ ಇಲ್ಲ. ಮಾಸ್ಟರ್ ಪ್ಲಾನ್ ರೂಪಿಸಲು ಸೂಚಿಸಲಾಗಿದೆ. ಈ ಬಗ್ಗೆ ನಿರ್ಲಕ್ಷಿಸುವುದು ಬೇಡ.
ʼಸಿʼ ವರ್ಗದ ದೇವಸ್ಥಾನಗಳನ್ನು ಅಭಿವೃದ್ಧಿ ಹೆಸರಿನಲ್ಲಿ ಯಾವುದೇ ರೀತಿಯ ಸಂಸ್ಥೆಗಳಿಗೆ ದತ್ತು ನೀಡಬಾರದು. ಅಭಿವೃದ್ಧಿ ಹೆಸರಿನಲ್ಲಿ ದತ್ತು ಪಡೆದವರು ದೇವಸ್ಥಾನದ ಆಸ್ತಿ ನಮ್ಮದು ಎಂದು ತಕಾರಾರು ತೆಗೆಯುತ್ತಾರೆ. 'ಎ' ವರ್ಗದ ದೇವಸ್ಥಾನಗಳ ಅನುದಾನದಲ್ಲಿ ಶೇ. 10ರಷ್ಟನ್ನು 'ಸಿ' ವರ್ಗದ ದೇವಸ್ಥಾನಗಳ ಅಭಿವೃದ್ಧಿ ಕಾರ್ಯ ಕೈಗೊಳ್ಳಲು ಬಳಸಬೇಕು.
ದೇವಸ್ಥಾನಗಳ ಒತ್ತುವರಿಯಾದ ಭೂಮಿಯನ್ನು ತೆರವುಗೊಳಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಈಗಾಗಲೇ ಸೂಚಿಸಲಾಗಿದೆ. ದೇವಸ್ಥಾನಗಳ ಒತ್ತುವರಿಯಾದ ಆಸ್ತಿಗಳನ್ನು ತೆರವುಗೊಳಿಸಲು ಆದ್ಯತೆ ಮೇರೆಗೆ ಸರ್ವೇ ಮಾಡಿಸಿ, ತೆರವುಗೊಳಿಸಿ ಮುಜರಾಯಿ ಇಲಾಖೆಗೆ ಒಪ್ಪಿಸಲು ಕ್ರಮ ಕೈಗೊಳ್ಳಬೇಕು. ಮೂರು ತಿಂಗಳ ಒಳಗಾಗಿ ಪೂರ್ಣಗೊಳಿಸಬೇಕು.
ಶೈಕ್ಷಣಿಕ ವರ್ಷ ಆರಂಭವಾಗಿರುವ ಹಿನ್ನೆಲೆಯಲ್ಲಿ ಅಧಿಸೂಚಿತ ದೇವಾಲಯಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅರ್ಚಕರು ಮತ್ತು ನೌಕರರ ಮಕ್ಕಳಿಗೆ ನೀಡುವ ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನಿಸಲು ಕ್ರಮ ಕೈಗೊಳ್ಳಬೇಕು. -
Dr. G Parameshwara
@DrParameshwara
ಇಂದು ವಿಧಾನಸೌಧದಲ್ಲಿ ರಾಜ್ಯ ಧಾರ್ಮಿಕ ಪರಿಷತ್ತಿನ ಸಭೆ ನಡೆಸಿ, ಸದಸ್ಯರೊಂದಿಗೆ ಚರ್ಚಿಸಿದೆ.
ಕಂದಾಯ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗಳಾದ ರಾಜೇಂದ್ರ ಕುಮಾರ್ ಕಟಾರಿಯಾ, ಮುಜರಾಯಿ ಆಯುಕ್ತರಾದ ಶರತ್ ಹಾಗೂ ರಾಜ್ಯ ಧಾರ್ಮಿಕ ಪರಿಷತ್ನ ಸದಸ್ಯರಾದ ಕೆ.ಎಂ.ನಾಗರಾಜು, ಡಾ. ಎ. ರಾಧಾಕೃಷ್ಣ ರಾಜು, ದ್ವಾರಕನಾಥ್, ಮಲ್ಲಿಕಾ ಪ್ರಶಾಂತ್ ಪಕ್ಕಳ, ರವಿಶಂಕರ್ ಶೆಟ್ಟಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
Today, I chaired a meeting of the Rajya Dharmika Parishad at Vidhana Soudha and held discussions with its members.
Additional Chief Secretary to the Revenue Department Rajendra Kumar Kataria; Muzrai Commissioner Sharath; State Dharmika Parishad members K.M. Nagaraju, Dr. A. Radhakrishna Raju, Dwarakanath, Mallika Prashanth Pakkala and Ravishankar Shetty; and others were present. -
Dr. G Parameshwara
@DrParameshwara
Today, I chaired a progress review meeting at Vidhana Soudha of various development authorities under the Revenue Department and issued the following directions to officials:
It has come to my notice that the Kudalasangama Board has not conducted an audit for the past 35 years. Officials must take the necessary action in this regard.
Once a project plan is prepared, the original cost estimate must be revised with proper justification and approved by the Board. The Government will then take the final decision.
₹24.98 crore has been sought for development works at Chikkasangama, including a Kalyana Mantapa and a Veda Pathashala. Necessary action will be taken on this proposal.
The Basavakalyan Board was established in 2005, but no development work could be undertaken until 2023. The Cabinet approved ₹744 crore for various development works, of which ₹480 crore has been spent. The works related to 17 monuments must be completed at the earliest.
During my visit to Basavakalyan with the Chief Minister, officials had assured us that the works would be completed by the end of December. Seeking further time now is not acceptable. All works must be completed quickly and made ready for inauguration. The Bidar Deputy Commissioner must take the necessary action.
As high-value projects are being undertaken, the works must be inspected at every stage. The expenditure verified so far must be audited. The finishing quality is not satisfactory. Officials must inspect the works and issue the necessary directions to contractors.
A comprehensive ₹50 crore plan has been prepared for the development of Banavasi. After the Board’s approval, the proposal will be submitted to the Chief Minister.
Approval must be obtained before spending money on any work, but this does not appear to have been done. Complete details of the ₹2.18 crore spent must be submitted. The Basavana Bagewadi Development Authority must also submit a proposal outlining the development works to be taken up in the future. -
Dr. G Parameshwara
@DrParameshwara
ಇಂದು ವಿಧಾನಸೌಧದಲ್ಲಿ ಕಂದಾಯ ಇಲಾಖೆ ವ್ಯಾಪ್ತಿಗೆ ಒಳಪಡುವ ವಿವಿಧ ಅಭಿವೃದ್ಧಿ ಪ್ರಾಧಿಕಾರಗಳ ಪ್ರಗತಿ ಪರಿಶೀಲನಾ ಸಭೆ ನಡೆಸಿ, ಅಧಿಕಾರಿಗಳಿಗೆ ನೀಡಿದ ಅಗತ್ಯ ನಿರ್ದೇಶನಗಳು ಹೀಗಿವೆ..
ಕೂಡಲಸಂಗಮ ಮಂಡಳಿಯು 35 ವರ್ಷ ಕಳೆದರೂ ಲೆಕ್ಕ ಪರಿಶೋಧನೆ ನಡೆಸದಿರುವುದು ನನ್ನ ಗಮನಕ್ಕೆ ಬಂದಿದ್ದು, ಈ ಬಗ್ಗೆ ಅಧಿಕಾರಿಗಳು ಅಗತ್ಯ ಕ್ರಮ ಕೈಗೊಳ್ಳಬೇಕು.
ಕಾಮಗಾರಿಗಳಿಗೆ ಸಂಬಂಧಿಸಿದಂತೆ ಯೋಜನೆಯ ಪ್ಲಾನ್ ಸಿದ್ಧಪಡಿಸಿದ ಬಳಿಕ ಮೂಲ ಅಂದಾಜು ವೆಚ್ಚದ ಪರಿಷ್ಕರಣೆ ಮಾಡಿಸಿ, ಜಸ್ಟಿಫಿಕೇಶನ್ ನೀಡಿ ಮಂಡಳಿಯು ಅನುಮೋದನೆ ನೀಡಬೇಕು. ಬಳಿಕ ಮುಂದಿನ ತೀರ್ಮಾನ ಸರ್ಕಾರ ತೆಗೆದುಕೊಳ್ಳಲಿದೆ.
ಚಿಕ್ಕಸಂಗಮದಲ್ಲಿ ಕಲ್ಯಾಣ ಮಂಟಪ, ವೇದ ಪಾಠಶಾಲೆ ಸೇರಿದಂತೆ ಇನ್ನಿತರೆ ಅಭಿವೃದ್ಧಿಗೆ ₹24.98 ಕೋಟಿ ಅನುದಾನ ಕೇಳಲಾಗಿದೆ. ಈ ಬಗ್ಗೆಯೂ ಕ್ರಮ ವಹಿಸಲಾಗುವುದು.
ಬಸವ ಕಲ್ಯಾಣ ಮಂಡಳಿ 2005ರಲ್ಲಿ ಜಾರಿಗೆ ಬಂದಿದೆ. 2023ರವರೆಗೆ ಯಾವುದೇ ಅಭಿವೃದ್ಧಿ ಕೈಗೊಳ್ಳಲು ಸಾಧ್ಯವಾಗಿಲ್ಲ. ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ₹744 ಕೋಟಿ ಹಣವನ್ನು ಮಂಜೂರು ಮಾಡಿ ಸಚಿವ ಸಂಪುಟ ಅನುಮೋದನೆ ನೀಡಿತು. ಇದರಲ್ಲಿ ₹480 ಕೋಟಿ ಖರ್ಚು ಮಾಡಲಾಗಿದೆ. 17 ಸ್ಮಾರಕಗಳ ಕಾಮಗಾರಿ ಶೀಘ್ರದಲ್ಲಿ ಮುಗಿಸಬೇಕು.
ಬಸವ ಕಲ್ಯಾಣಕ್ಕೆ ಮುಖ್ಯಮಂತ್ರಿಯವರೊಂದಿಗೆ ಭೇಟಿ ನೀಡಿದಾಗ ಡಿಸೆಂಬರ್ ಅಂತ್ಯದೊಳಗೆ ಪೂರ್ಣಗೊಳಿಸುವುದಾಗಿ ತಿಳಿಸಲಾಗಿತ್ತು. ಈಗ ಮತ್ತೆ ಹೆಚ್ಚಿನ ಕಾಲಾವಕಾಶ ಕೇಳುತ್ತಿದ್ದೀರಿ. ಇದು ಸರಿಯಲ್ಲ. ಎಲ್ಲ ಕಾಮಗಾರಿಗಳನ್ನು ಶೀಘ್ರವಾಗಿ ಪೂರ್ಣಗೊಳಿಸಿ, ಲೋಕಾರ್ಪಣೆಗೊಳಿಸಲು ಸಿದ್ಧಪಡಿಸಬೇಕು. ಬೀದರ್ ಜಿಲ್ಲಾಧಿಕಾರಿಗಳು ಈ ಬಗ್ಗೆ ಕ್ರಮ ವಹಿಸಿ.
ದೊಡ್ಡ ಮೊತ್ತದ ಕಾಮಗಾರಿಗಳನ್ನು ಕೈಗೊಂಡಿರುವುದರಿಂದ ಎಲ್ಲ ಹಂತದಲ್ಲಿಯೂ ಪರಿಶೀಲನೆ ನಡೆಸಬೇಕು. ಈವರೆಗೆ ನೀವು ಪರಿಶೀಲಿಸಿರುವ ವೆಚ್ಚಗಳ ಕುರಿತ ಮಾಹಿತಿಯನ್ನು ಲೆಕ್ಕ ಪರಿಶೋಧ ಮಾಡಿಸಬೇಕು. ಕಾಮಗಾರಿಯ ಫಿನಿಶಿಂಗ್ ಸರಿಯಾಗಿ ಆಗುತ್ತಿಲ್ಲ. ಅಧಿಕಾರಿಗಳು ಕಾಮಗಾರಿಯನ್ನು ಪರಿಶೀಲಿಸಿ ಗುತ್ತಿಗೆದಾರರಿಗೆ ಅಗತ್ಯ ಸೂಚನೆ ನೀಡಬೇಕು.
ಬನವಾಸಿ ಅಭಿವೃದ್ಧಿಗೆ ಸಂಬಂಧಿಸಿದಂತೆ ₹50 ಕೋಟಿ ಸಮಗ್ರ ಯೋಜನೆಯನ್ನು ಸಿದ್ಧಪಡಿಸಲಾಗಿದೆ. ಮಂಡಳಿಯ ಅನುಮೋದನೆ ಬಳಿಕ, ಪ್ರಸ್ತಾವನೆಯನ್ನು ಮುಖ್ಯಮಂತ್ರಿಯವರಿಗೆ ಸಲ್ಲಿಸಲಾಗುವುದು.
ಯಾವುದೇ ರೀತಿಯ ಕಾಮಗಾರಿಗೆ ಹಣ ಖರ್ಚು ಮಾಡಲು ಅನುಮತಿ ಪಡೆಯಬೇಕಲ್ಲವೇ? ಇದು ಕಾಣಿಸುತ್ತಿಲ್ಲ. ₹2.18 ಕೋಟಿ ಖರ್ಚಾಗಿರುವ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಸಲ್ಲಿಸಬೇಕು. ಮುಂದೆ ಕೈಗೊಳ್ಳಬೇಕಿರುವ ಅಭಿವೃದ್ಧಿ ಕೆಲಸಗಳ ಬಗ್ಗೆ ಬಸವನ ಬಾಗೇವಾಡಿ ಅಭಿವೃದ್ಧಿ ಪ್ರಾಧಿಕಾರ ಪ್ರಸ್ತಾವನೆ ಸಲ್ಲಿಸಬೇಕು. -
Dr. G Parameshwara
@DrParameshwara
A spectacular Day 9 for Team India at the Commonwealth Games 2026! 🇮🇳
Congratulations to Asmita Dey for scripting history with India's first-ever Commonwealth Games Gold in Judo (Women's 48kg), Harsh Singh for becoming the first Indian man to win Judo Gold (Men's 60kg), Yamini Mourya for winning Silver (Women's 57kg Judo), Tejaswin Shankar for becoming the first Indian medallist in the Men's High Jump at the Commonwealth Games with a Bronze, and ace javelin thrower Neeraj Chopra for winning Silver, alongside Yash Vir Singh, who secured Bronze, delivering a memorable double podium for India in the Men's Javelin Throw.
Your remarkable performances have made the nation proud and inspired millions across the country. Wishing you all continued success in the competitions ahead. -
Dr. G Parameshwara
@DrParameshwara
ಇಂದು ವಿಧಾನಸೌಧದಲ್ಲಿ ಕಂದಾಯ ಇಲಾಖೆಯ ವ್ಯಾಪ್ತಿಗೆ ಒಳಪಡುವ ವಿವಿಧ ಅಭಿವೃದ್ಧಿ ಪ್ರಾಧಿಕಾರಗಳ ಪ್ರಗತಿ ಪರಿಶೀಲನಾ ಸಭೆ ನಡೆಸಿ, ಚರ್ಚಿಸಿದೆ.
ವಿವಿಧ ಅಭಿವೃದ್ಧಿ ಪ್ರಾಧಿಕಾರ ಮತ್ತು ಮಂಡಳಿಗಳ ಕಾರ್ಯಚಟುವಟಿಕೆಗಳು, ಅಭಿವೃದ್ಧಿ ಕಾಮಗಾರಿಗಳ ಪ್ರಗತಿ, ಅನುಷ್ಠಾನಗೊಳ್ಳುತ್ತಿರುವ ಯೋಜನೆಗಳು ಹಾಗೂ ಅನುದಾನ ಬಳಕೆಯ ಕುರಿತು ಸಮಗ್ರವಾಗಿ ಚರ್ಚಿಸಿ, ಅಧಿಕಾರಿಗಳಿಗೆ ಅಗತ್ಯ ನಿರ್ದೇಶನಗಳನ್ನು ನೀಡಿದೆ.
ಸಭೆಯಲ್ಲಿ ಸಚಿವರಾದ ಎಂ.ಬಿ.ಪಾಟೀಲ್, ಬ್ಯಾಡಗಿ ಶಾಸಕರಾದ ಬಸವರಾಜ್ ಶಿವಣ್ಣನವರ್, ಶಿಗ್ಗಾವಿ ಶಾಸಕರಾದ ಯಾಸೀರ್ ಖಾನ್ ಪಠಾಣ್, ಕಿತ್ತೂರು ಶಾಸಕರಾದ ಬಾಬಾಸಾಹೇಬ್ ಪಾಟೀಲ್, ಬೀಳಗಿ ಶಾಸಕರಾದ ಜೆ.ಟಿ.ಪಾಟೀಲ್, ಹುನಗುಂದ ಶಾಸಕರಾದ ವಿಜಯಾನಂದ ಎಸ್. ಕಾಶಪ್ಪನವರ್, ಕಂದಾಯ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗಳಾದ ರಾಜೇಂದ್ರ ಕುಮಾರ್ ಕಟಾರಿಯಾ ಹಾಗೂ ಅಭಿವೃದ್ಧಿ ಪ್ರಾಧಿಕಾರಗಳ ಅಧಿಕಾರಿಗಳು ಉಪಸ್ಥಿತರಿದ್ದರು.
Today, I chaired a progress review meeting of various development authorities under the Revenue Department at Vidhana Soudha.
We held a comprehensive discussion on the functioning of the authorities and boards, the progress of development works, ongoing projects and utilisation of funds, and issued the necessary directions to officials.
Minister M.B. Patil; Byadgi MLA Basavaraj Shivannavar; Shiggaon MLA Yasir Khan Pathan; Kittur MLA Babasaheb Patil; Bilagi MLA J.T. Patil; Hungund MLA Vijayanand S. Kashappanavar; Additional Chief Secretary to the Revenue Department Rajendra Kumar Kataria; and officials of the development authorities were present. -
Dr. G Parameshwara
@DrParameshwara
ಮಾಜಿ ಸಚಿವರು, ಚಾಮರಾಜಪೇಟೆ ಶಾಸಕರು ಹಾಗೂ ಆತ್ಮೀಯರಾದ @BZZameerAhmedK ಅವರಿಗೆ ಜನ್ಮದಿನದ ಶುಭಾಶಯಗಳು.
ಕಾಂಗ್ರೆಸ್ ಪಕ್ಷದ ತತ್ವ - ಸಿದ್ಧಾಂತಗಳಿಗೆ ನಿಷ್ಠರಾಗಿ, ಜನಪರವಾದ ಕಾರ್ಯಗಳಲ್ಲಿ ಸದಾ ಮುಂಚೂಣಿಯಲ್ಲಿರುವ ತಮ್ಮ ನಡೆ ಶ್ಲಾಘನೀಯ. ಸಮಾಜದ ಬಡ, ಶೋಷಿತ, ತಳ ಸಮುದಾಯಗಳ ಜನರೆಡೆಗೆ ನಿಮಗಿರುವ ಕಾಳಜಿ, ಪ್ರೀತಿ ಸಾರ್ವಜನಿಕ ಜೀವನದಲ್ಲಿರುವವರಿಗೆ ಮಾದರಿಯಾದುದ್ದು.
ಭಗವಂತ ಉತ್ತಮ ಆಯುರಾರೋಗ್ಯ ನೀಡಿ ಇನ್ನಷ್ಟು ನೊಂದ ಜೀವಗಳಿಗೆ ನಿಮ್ಮಿಂದ ನೆರವಾಗಲು ಶಕ್ತಿ ತುಂಬಲಿ ಎಂದು ಹಾರೈಸುತ್ತೇನೆ. -
Dr. G Parameshwara
@DrParameshwara
ದುಶ್ಚಟಗಳ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಮೂಲಕ ಅವರ ಮನಸ್ಸುಗಳನ್ನು ಪರಿವರ್ತಿಸಿ, ವ್ಯಸನಮುಕ್ತ ಸಮಾಜ ನಿರ್ಮಾಣಕ್ಕೆ ಅವಿರತವಾಗಿ ಶ್ರಮಿಸಿದ ಮಹಾನ್ ಸಮಾಜ ಸುಧಾರಕ, ಪರಮಪೂಜ್ಯ ಶ್ರೀ ಮ.ನಿ.ಪ್ರ. ಡಾ.ಮಹಾಂತ ಶಿವಯೋಗಿಗಳ ಜನ್ಮದಿನದಂದು ನನ್ನ ಗೌರವ ನಮನಗಳು.
ಸರಳ ಜೀವನ, ನಿಸ್ವಾರ್ಥ ಸೇವೆ ಮತ್ತು ಮಾನವೀಯ ಮೌಲ್ಯಗಳ ಮೂಲಕ ಸಮಾಜದಲ್ಲಿ ಸಕಾರಾತ್ಮಕ ಬದಲಾವಣೆ ತರಲು ಅವರು ಸಲ್ಲಿಸಿದ ಸೇವೆ ಅಪಾರ. ಅವರ ಆದರ್ಶಗಳು ಮತ್ತು ಸಮಾಜಮುಖಿ ಕಾರ್ಯಗಳು ನಮಗೆಲ್ಲರಿಗೂ ಪ್ರೇರಣೆದಾಯಕ. -
Dr. G Parameshwara
@DrParameshwara
'ಸ್ವರಾಜ್ಯ ನನ್ನ ಜನ್ಮಸಿದ್ಧ ಹಕ್ಕು' ಎಂದು ಬ್ರಿಟಿಷರ ವಿರುದ್ಧ ಘರ್ಜಿಸಿದ ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರ, ಲೋಕಮಾನ್ಯ ಬಿರುದಾಂಕಿತ ಬಾಲಗಂಗಾಧರ ತಿಲಕ್ ಅವರ ಪುಣ್ಯಸ್ಮರಣೆಯಂದು ನನ್ನ ಗೌರವ ನಮನಗಳು.
ಶಿಕ್ಷಣ, ಪತ್ರಿಕೋದ್ಯಮ ಮತ್ತು ಸಾಮಾಜಿಕ ಜಾಗೃತಿಯ ಮೂಲಕ ದೇಶಭಕ್ತಿಯ ಸಂದೇಶವನ್ನು ಜನಮಾನಸಕ್ಕೆ ತಲುಪಿಸಿದ ಅವರ ಕೊಡುಗೆ ಸದಾ ಸ್ಮರಣೀಯ. -
Dr. G Parameshwara
@DrParameshwara
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸುರಿಯುತ್ತಿರುವ ಭಾರೀ ಗಾಳಿ, ಮಳೆಗೆ ಕಡಬ ತಾಲೂಕಿನ ಕುಂತೂರು ಗ್ರಾಮದಲ್ಲಿ ಅಡಿಕೆ ಮರ ಬಿದ್ದು ಯಾದವ ಗೌಡ ಎಂಬವರು ಮೃತಪಟ್ಟಿದ್ದರೆ, ಬಳ್ಪ ಗ್ರಾಮದ ನೇರ್ಪು ಪರಮೇಶ್ವರ ಗೌಡ ಅವರ ಮನೆ ಮೇಲೆ ಬೃಹತ್ ಮರವೊಂದು ಉರುಳಿ ಬಿದ್ದ ಕಾರಣಕ್ಕೆ ಅವರ ಪತ್ನಿ ಗಂಭೀರ ಗಾಯಗೊಂಡಿರುವ ವಿಚಾರ ತಿಳಿದು ಅತೀವ ದುಃಖವಾಯಿತು.
ಘಟನೆಯ ಕುರಿತು ಜಿಲ್ಲಾಧಿಕಾರಿಗಳೊಂದಿಗೆ ಮಾತನಾಡಿದ್ದು, ನೊಂದ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡುವಂತೆ ಸೂಚಿಸಿದ್ದೇನೆ.
ಮೃತರ ಆತ್ಮಕ್ಕೆ ಶಾಂತಿಯನ್ನು ಕರುಣಿಸಲಿ ಮತ್ತು ಗಾಯಗೊಂಡವರು ಆದಷ್ಟು ಶೀಘ್ರ ಚೇತರಿಸಿಕೊಳ್ಳಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ.
ಮನೆಯ ಸುತ್ತಮುತ್ತ ಬೀಳುವ ಸ್ಥಿತಿಯಲ್ಲಿರುವ ಮರಗಳನ್ನು ಅವು ಬೀಳುವ ವರೆಗೆ ಕಾಯದೆ ಆದಷ್ಟು ಬೇಗನೆ ತೆರವುಗೊಳಿಸಬೇಕು, ಗಾಳಿ ಜೋರಾಗಿ ಬೀಸುವ ಸಂದರ್ಭದಲ್ಲಿ ಮರದ ಕೆಳಗೆ ನಿಲ್ಲದೆ ಎಚ್ಚರಿಕೆ ವಹಿಸಬೇಕು. ಆಗ ಹೆಚ್ಚಿನ ಅವಘಡಗಳು ಸಂಭವಿಸದಂತೆ ತಡೆಯಲು ಸಾಧ್ಯವಿದೆ.
ಬದುಕು ಅಮೂಲ್ಯ. ಜಾಗೃತೆ ವಹಿಸಿ, ಸುರಕ್ಷಿತವಾಗಿರಿ. -
Dr. G Parameshwara
@DrParameshwara
ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ (CWMA) ಆದೇಶದ ಹಿನ್ನೆಲೆಯಲ್ಲಿ, ಕಾವೇರಿ ನೀರು ಹಂಚಿಕೆ ವಿಚಾರವಾಗಿ ಇಂದು ಮುಖ್ಯಮಂತ್ರಿ ಶ್ರೀ @DKShivakumar ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆಸಿ, ಸದ್ಯ ಉದ್ಭವಿಸಿರುವ ಸವಾಲುಗಳು ಮತ್ತು ಅವುಗಳ ಕಾನೂನಾತ್ಮಕ ಪರಿಹಾರ ಮಾರ್ಗೋಪಾಯಗಳ ಬಗ್ಗೆ ಸುದೀರ್ಘ ಸಮಾಲೋಚನೆ ನಡೆಸಿದೆವು.
ಕರ್ನಾಟಕದ ಜೀವನದಿ ಕಾವೇರಿ. ಪ್ರತಿ ಹನಿ ಕಾವೇರಿ ನೀರಿನ ಮೇಲೆ ಕನ್ನಡಿಗರ ಹಕ್ಕಿದೆ. ಇಂದು ರಾಜ್ಯವು ಭೀಕರ ಬರದಿಂದ ಕುಡಿಯುವ ನೀರಿಗೂ ತತ್ವಾರ ಎದುರಿಸುತ್ತಿರುವ ಈ ಸಂಕಷ್ಟದ ಸಮಯದಲ್ಲಿ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಆದೇಶ ಗಾಯದ ಮೇಲೆ ಬರೆ ಎಳೆದಂತಾಗಿದೆ. ಹೀಗಾಗಿ ಲಭ್ಯವಿರುವ ಎಲ್ಲಾ ಕಾನೂನಾತ್ಮಕ ಅವಕಾಶಗಳನ್ನು ಬಳಕೆ ಮಾಡಿಕೊಂಡು ಕನ್ನಡಿಗರ ಹಿತ ಕಾಪಾಡಲು ನಾವು ಕಾರ್ಯಪ್ರವೃತ್ತರಾಗಿದ್ದೇವೆ. ನಾಡು - ನುಡಿ - ಜಲ ಈ ವಿಚಾರಗಳಲ್ಲಿ ನಮ್ಮದು ರಾಜಿಯಿರದ ಬದ್ಧತೆಯಾಗಿದೆ.
ಸಭೆಯಲ್ಲಿ ಸಚಿವರಾದ ರಾಮಲಿಂಗಾ ರೆಡ್ಡಿ, ಸರ್ಕಾರದ ಮುಖ್ಯ ಕಾರ್ಯದರ್ಶಿಗಳಾದ ಶಾಲಿನಿ ರಜನೀಶ್, ಅಡ್ವೊಕೇಟ್ ಜನರಲ್ ಶಶಿಕಿರಣ್ ಶೆಟ್ಟಿ, ಹೆಚ್ಚುವರಿ ಮುಖ್ಯಕಾರ್ಯದರ್ಶಿಗಳಾದ ತುಷಾರ್ ಗಿರಿನಾಥ್, ಗೌರವ್ ಗುಪ್ತಾ, ರಾಜೇಶ್ ಕುಮಾರ್ ಕಠಾರಿಯ, ರಾಜ್ಯ ಪೊಲೀಸ್ ಮಹಾನಿರ್ದೇಶಕರಾದ ಡಾ. ಎಂ.ಎ.ಸಲೀಂ, ಬೆಂಗಳೂರು ನಗರ ಪೊಲೀಸ್ ಆಯುಕ್ತರಾದ ಸೀಮಂತ್ ಕುಮಾರ್ ಸಿಂಗ್ ಸೇರಿದಂತೆ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು. -
Dr. G Parameshwara
@DrParameshwara
Congratulations to Lovepreet Singh on winning the Silver Medal in the Men's +110kg Weightlifting event and to Seema Kaliramna on securing the Bronze Medal in Women's Discus Throw at the Commonwealth Games 2026.
Your grit, determination and outstanding performances have added to India's medal tally and made the nation proud.
Wishing you both continued success in the competitions ahead. Keep inspiring the next generation of athletes to dream big and bring greater glory to India. -
Dr. G Parameshwara
@DrParameshwara
ಕಳೆದ ಮೂರು ವರ್ಷಗಳಿಂದ ನನ್ನ ಮುಂಗಾವಲು ಪಡೆಯ ಪೈಲಟ್ ಅಧಿಕಾರಿಯಾಗಿ ಅತ್ಯಂತ ನಿಷ್ಠೆ, ಶಿಸ್ತು ಮತ್ತು ಕರ್ತವ್ಯಪ್ರಜ್ಞೆಯಿಂದ ಸೇವೆ ಸಲ್ಲಿಸಿದ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಶ್ರೀ ವೆಂಕಟೇಶಯ್ಯ ವಿ ಅವರು ಸೇವಾ ನಿವೃತ್ತಿ ಹೊಂದುತ್ತಿರುವ ಹಿನ್ನೆಲೆಯಲ್ಲಿ ಅವರನ್ನು ಆತ್ಮೀಯವಾಗಿ ಅಭಿನಂದಿಸಿ, ಪೊಲೀಸ್ ಇಲಾಖೆಗೆ ಅವರು ಸಲ್ಲಿಸಿರುವ ಅಮೂಲ್ಯ ಸೇವೆಯನ್ನು ಗೌರವಿಸಿದೆ.
ಶ್ರೀಯುತರ ನಿವೃತ್ತಿ ಜೀವನವು ಉತ್ತಮ ಆರೋಗ್ಯ, ಸಂತೋಷ ಮತ್ತು ನೆಮ್ಮದಿಯಿಂದ ಕೂಡಿರಲಿ ಎಂದು ಈ ವೇಳೆ ಶುಭಹಾರೈಸಿದೆ. -
Dr. G Parameshwara
@DrParameshwara
ಸರಳ ಸಜ್ಜನಿಕೆಯ ರಾಜಕಾರಣಿ, ಮಾಜಿ ಸಂಸದರು ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ಆರ್. ಧ್ರುವನಾರಾಯಣ್ ಅವರ ಜನ್ಮದಿನದಂದು ನನ್ನ ಗೌರವ ನಮನಗಳು.
ಜನಸಾಮಾನ್ಯರ ಧ್ವನಿಯಾಗಿ, ಸಮಾಜಮುಖಿ ಮತ್ತು ಅಭಿವೃದ್ಧಿಪರ ಚಿಂತನೆಗಳೊಂದಿಗೆ ಅವರು ಸಲ್ಲಿಸಿದ ಸಾರ್ವಜನಿಕ ಸೇವೆ ಹಾಗೂ ಅವರ ಮೌಲ್ಯಾಧಾರಿತ ರಾಜಕಾರಣ ನಮ್ಮೆಲ್ಲರಿಗೂ ಅನುಕರಣೀಯ. -
Dr. G Parameshwara
@DrParameshwara
ನಿಮ್ಮ ಅಹವಾಲು ನನ್ನ ಬಳಿ ತಲುಪಿದೆ
ಶೀಘ್ರ ಪರಿಹಾರವು ನಿಮ್ಮಲ್ಲಿಗೆ ತಲುಪಲಿದೆ
ಇದು ನನ್ನ ವಾಗ್ದಾನ! -
Dr. G Parameshwara
@DrParameshwara
ಇಂದು ತುಮಕೂರಿನಲ್ಲಿ ನಾಗರಿಕರಿಂದ ಅಹವಾಲುಗಳನ್ನು ಸ್ವೀಕರಿಸಿ, ಅವರ ಸಮಸ್ಯೆಗಳನ್ನು ಆಲಿಸಿದೆ.
ಜನರ ಸಮಸ್ಯೆಗಳಿಗೆ ಶೀಘ್ರ ಪರಿಹಾರ ದೊರಕಿಸಿಕೊಡಲು ಅಗತ್ಯ ಕ್ರಮ ಕೈಗೊಳ್ಳುವಂತೆ ಸಂಬಂಧಿತ ಅಧಿಕಾರಿಗಳಿಗೆ ಸೂಚಿಸಿದೆ.
ಜನಸೇವೆಗೆ ನಮ್ಮ ಬದ್ಧತೆ ನಿರಂತರ! -
Dr. G Parameshwara
@DrParameshwara
ದೇಶದ ಆರ್ಥಿಕ ಬೆಳವಣಿಗೆಗೆ ಕರ್ನಾಟಕ ನಿರಂತರವಾಗಿ ಕೊಡುಗೆಗಳನ್ನು ನೀಡುತ್ತಿದೆ. ಪ್ರಮುಖವಾಗಿ ಹೂಡಿಕೆಗಳನ್ನು ಆಕರ್ಷಿಸುವಲ್ಲಿ, ಉದ್ಯೋಗಾವಕಾಶಗಳನ್ನು ಸೃಷ್ಟಿಸುವಲ್ಲಿ ಹಾಗೂ ಕೈಗಾರಿಕಾ ಅಭಿವೃದ್ಧಿಗೆ ವೇಗ ನೀಡುವಲ್ಲಿ ನಮ್ಮ ರಾಜ್ಯ ಮುಂಚೂಣಿಯಲ್ಲಿದೆ.
ಆದರೆ, ರಾಜ್ಯದ ಪ್ರಮುಖ ಮೂಲಸೌಕರ್ಯ ಯೋಜನೆಗಳಿಗೆ ಕೇಂದ್ರ ಸರ್ಕಾರದ ಅನುಮೋದನೆ ಮತ್ತು ಅನುದಾನಗಳು ವಿಳಂಬವಾದಾಗ ಅಭಿವೃದ್ಧಿಯ ವೇಗ ಕುಂಠಿತಗೊಳ್ಳುತ್ತದೆ. ಇಂತಹ ವಿಳಂಬಗಳು ಕೈಗಾರಿಕಾ ವಿಸ್ತರಣೆಗೆ ಅಡ್ಡಿಯಾಗುತ್ತವೆ, ಹೊಸ ಉದ್ಯೋಗಾವಕಾಶಗಳ ಸೃಷ್ಟಿಯನ್ನು ನಿಧಾನಗೊಳಿಸುತ್ತವೆ ಹಾಗೂ ಹೂಡಿಕೆದಾರರ ವಿಶ್ವಾಸಕ್ಕೆ ಧಕ್ಕೆಯುಂಟು ಮಾಡುತ್ತವೆ.
ಅಭಿವೃದ್ಧಿ ಎಂದಿಗೂ ವಿಳಂಬದ ಬಲಿಪಶುವಾಗಬಾರದು. ಕರ್ನಾಟಕಕ್ಕೆ ಅಗತ್ಯವಿರುವ ಯೋಜನೆಗಳಿಗೆ ಕೇಂದ್ರ ಸರ್ಕಾರದಿಂದ ಸಕಾಲಿಕ ಅನುಮೋದನೆ ಮತ್ತು ಬೆಂಬಲ ದೊರೆಯಲೇಬೇಕು.
Karnataka continues to power India's economy, attract investment and create opportunities. But growth cannot be sustained when critical infrastructure projects are delayed for years.
Every pending approval means higher costs, slower industrial expansion, fewer jobs and reduced investor confidence. Development should never become a casualty of delay.
Karnataka deserves timely decisions—not endless waiting. -
Dr. G Parameshwara
@DrParameshwara
ಬ್ರಾಹ್ಮಣ ಸಮುದಾಯದ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳ ಸಬಲೀಕರಣಕ್ಕೆ ನಮ್ಮ ಸರ್ಕಾರ ಬದ್ಧವಾಗಿದೆ. ಈ ಉದ್ದೇಶದಿಂದಲೇ 2019ರಲ್ಲಿ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯನ್ನು ಸ್ಥಾಪಿಸಲಾಗಿದ್ದು, ಸಮುದಾಯದ ಹಿಂದುಳಿದವರ ಅಭಿವೃದ್ಧಿಗೆ ವಿಪ್ರ ಸ್ವ ಉದ್ಯಮ ನೇರ ಸಾಲ ಯೋಜನೆಯನ್ನು ಜಾರಿಗೆ ತರಲಾಗಿದೆ.
ಇಲ್ಲಿಯವರೆಗೆ ಮಂಡಳಿಯ ಮೂಲಕ ಸುಮಾರು ₹87 ಕೋಟಿ ನೆರವು ಸಮುದಾಯದ ಫಲಾನುಭವಿಗಳಿಗೆ ತಲುಪಿರುವುದು ಸಂತಸದ ವಿಷಯವಾಗಿದ್ದು, ಮಂಡಳಿಯಿಂದ ಅರ್ಜಿಗಳನ್ನು ಆಹ್ವಾನಿಸಿ, ಅರ್ಹ ಫಲಾನುಭವಿಗಳನ್ನು ಗುರುತಿಸಿ ಅವರಿಗೆ ಅಗತ್ಯ ನೆರವು ನೀಡುವ ಕಾರ್ಯವನ್ನು ಸಮರ್ಥವಾಗಿ ನಿರ್ವಹಿಸಲಾಗುತ್ತಿದೆ.
ಮಂಡಳಿಯು ಇದುವರೆಗೆ ಸುಮಾರು 1,333 ಅರ್ಜಿಗಳನ್ನು ಪರಿಶೀಲಿಸಿ ಫಲಾನುಭವಿಗಳಿಗೆ ನೇರ ಸಾಲ ಸೌಲಭ್ಯ ಒದಗಿಸಿದೆ. ಸಾಲ ಪಡೆದವರು ಅದನ್ನು ಉದ್ದೇಶಿತ ಕಾರ್ಯಗಳಿಗೆ ಬಳಸಿದ್ದಾರೆ. ಬ್ರಾಹ್ಮಣ ಅಭಿವೃದ್ಧಿ ಮಂಡಳಿಯು ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು, ಸರ್ಕಾರದ ಯೋಜನೆಗಳು ಸಮುದಾಯದ ಅಗತ್ಯವಿರುವ ಕುಟುಂಬಗಳಿಗೆ ಪರಿಣಾಮಕಾರಿಯಾಗಿ ತಲುಪುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ. ಈ ಉತ್ತಮ ಕಾರ್ಯಕ್ಕಾಗಿ ಮಂಡಳಿಯ ಅಧ್ಯಕ್ಷರು, ನಿರ್ದೇಶಕರು ಹಾಗೂ ಸಿಬ್ಬಂದಿಯನ್ನು ಸರ್ಕಾರದ ಪರವಾಗಿ ಅಭಿನಂದಿಸುತ್ತೇನೆ.
ಮುಂದಿನ ದಿನಗಳಲ್ಲಿಯೂ ಇನ್ನಷ್ಟು ಪರಿಣಾಮಕಾರಿ ಯೋಜನೆಗಳನ್ನು ಜಾರಿಗೊಳಿಸಿ, ಸಮುದಾಯದ ಅಭಿವೃದ್ಧಿಗೆ ಹೆಚ್ಚಿನ ಸಹಕಾರ ನೀಡಲಾಗುವುದು. 2026–27ನೇ ಸಾಲಿನ ವಿವಿಧ ಯೋಜನೆಗಳಿಗೆ ಈಗಾಗಲೇ ಅರ್ಜಿಗಳನ್ನು ಆಹ್ವಾನಿಸಲಾಗಿದ್ದು, ಅರ್ಜಿ ಸಲ್ಲಿಸಲು ಆಗಸ್ಟ್ 31 ಕೊನೆಯ ದಿನಾಂಕವಾಗಿದೆ. ಅರ್ಹರು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕು.This media couldn't be displayed. See it on the original post. -
Dr. G Parameshwara
@DrParameshwara
ಕೇಂದ್ರ ಸರ್ಕಾರವು ರಾಜ್ಯದ ಹಿತಾಸಕ್ತಿಯ ವಿಚಾರಗಳಲ್ಲಿ ಸಕಾಲದಲ್ಲಿ ನಿರ್ಣಯಗಳನ್ನು ಕೈಗೊಳ್ಳದೆ ವಿಳಂಬ ನೀತಿ ಅನುಸರಿಸುವುದರಿಂದ ಅದು ಕೇವಲ ಆಡಳಿತಾತ್ಮಕ ಪರಿಣಾಮವನ್ನಲ್ಲದೆ, ನೇರವಾಗಿ ಜನರ ಜೀವನದ ಮೇಲೆಯೂ ಪರಿಣಾಮ ಬೀರುತ್ತದೆ.
ಬಹುಮುಖ್ಯವಾಗಿ, ಕೇಂದ್ರ ಸರ್ಕಾರದಿಂದ ಪ್ರಮುಖ ಯೋಜನೆಗಳಿಗೆ ಅನುಮೋದನೆ ವಿಳಂಬವಾದಾಗ ಅದರಿಂದ ಕಷ್ಟ ನಷ್ಟ ಅನುಭವಿಸುವವರು ಸಾಮಾನ್ಯ ಜನರು. ರೈತರು ನೀರಾವರಿ ಯೋಜನೆಗಾಗಿ ಎದುರು ನೋಡುವಂತಹ ಪರಿಸ್ಥಿತಿ ಉಂಟಾಗುತ್ತದೆ. ನಗರವಾಸಿಗಳಿಗೆ ಶುದ್ಧ ಕುಡಿಯುವ ನೀರು ದೊರೆಯುವುದು ಕಷ್ಟವಾಗುತ್ತದೆ. ಅಲ್ಲದೇ ಭವಿಷ್ಯ ರೂಪಿಸುವ ಯುವಕರಿಗೆ ಉದ್ಯೋಗಾವಕಾಶಗಳು ಕಡಿಮೆಯಾಗುತ್ತವೆ. ಇದರ ಒಟ್ಟಾರೆ ಪರಿಣಾಮ ರಾಜ್ಯದ ಅಭಿವೃದ್ಧಿಯ ವೇಗವನ್ನೇ ಕುಂಠಿತಗೊಳಿಸುತ್ತದೆ.
ಕರ್ನಾಟಕದ ಅಭಿವೃದ್ಧಿ ಯೋಜನೆಗಳಿಗೆ ಸಕಾಲದಲ್ಲಿ ಅನುಮೋದನೆ ಸಿಗದಿದ್ದರೆ, ಅದರ ಹೊರೆ ಕೊನೆಗೆ ಪ್ರತಿಯೊಬ್ಬ ಕನ್ನಡಿಗನೂ ಹೊರಬೇಕಾಗುತ್ತದೆ.
Delayed decisions are not just administrative delays—they affect people's lives.
When key infrastructure projects remain pending, farmers wait longer for irrigation, cities struggle for reliable drinking water, young people lose employment opportunities, and entire regions miss out on development they deserve. The cost of delay is ultimately paid by every Kannadiga. -
Dr. G Parameshwara
@DrParameshwara
ಸುಪ್ರೀಂ ಕೋರ್ಟ್ ತೀರ್ಪಿನನ್ವಯ ರಾಜ್ಯದಲ್ಲಿ ಮೇಕೆದಾಟು ಜಲಾಶಯದ ನಿರ್ಮಾಣಕ್ಕೆ ಸಂಬಂಧಿಸಿ ಕರ್ನಾಟಕ ಸರ್ಕಾರ ನೆರೆಯ ರಾಜ್ಯಗಳ ಸಮ್ಮತಿ ಪಡೆಯುವ ಅಗತ್ಯವಿಲ್ಲ ಎಂಬುದನ್ನು ಕೇಂದ್ರ ಜಲಶಕ್ತಿ ಸಚಿವಾಲಯ ಸ್ಪಷ್ಟಪಡಿಸಿದೆ. ಇದರಿಂದಾಗಿ ಕನ್ನಡಿಗರ ದಶಕಗಳ ಹೋರಾಟಕ್ಕೆ ಮತ್ತಷ್ಟು ಬಲ ಬಂದಂತಾಗಿದ್ದು, ಮೇಕೆದಾಟು ಜಲಾಶಯವನ್ನು ಕಟ್ಟುವ ಪಣ ತೊಟ್ಟಿದ್ದ ನಮ್ಮ ಸರ್ಕಾರದ ಕನಸು ಶೀಘ್ರದಲ್ಲೇ ಸಾಕಾರಗೊಳ್ಳಲಿದೆ.
ರಾಜ್ಯದಲ್ಲಿ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಮೇಕೆದಾಟು ಯೋಜನೆಯ ಪರಿಷ್ಕೃತ ಯೋಜನಾ ವರದಿಯನ್ನು ಸಿದ್ಧಪಡಿಸಿ ಕೇಂದ್ರ ಜಲ ಆಯೋಗಕ್ಕೆ ಸಲ್ಲಿಸಿದೆವು. ಕೇಂದ್ರದ ತಾಂತ್ರಿಕ ಅನುಮತಿಯ ನಿರೀಕ್ಷೆಯಲ್ಲಿದ್ದ ನಮಗೆ ಜಲಶಕ್ತಿ ಖಾತೆ ಸಚಿವರು ಸಂಸತ್ ಕಲಾಪದಲ್ಲಿ ನೀಡಿರುವ ಉತ್ತರ ಸಂತಸ ತಂದಿದೆ.
ರಾಜ್ಯದ ಈ ಪ್ರಮುಖ ಕುಡಿಯುವ ನೀರಿನ ಯೋಜನೆ ಸದ್ಯದಲ್ಲೇ ಕಾರ್ಯರೂಪಕ್ಕೆ ಬರುವ ವಿಶ್ವಾಸವಿದೆ. ಈ ಯೋಜನೆಯಿಂದಾಗಿ ಪಕ್ಕದ ತಮಿಳುನಾಡು ಸೇರಿದಂತೆ ನೆರೆಯ ರಾಜ್ಯಗಳ ಜನಜೀವನಕ್ಕೂ ಅನುಕೂಲವಾಗಲಿದೆ.
ಕೇಂದ್ರದಿಂದ ತಾಂತ್ರಿಕ ಅನುಮತಿ ದೊರೆಯುತ್ತಲೇ ನೆರೆಹೊರೆಯವರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಮೇಕೆದಾಟು ಅಣೆಕಟ್ಟು ನಿರ್ಮಾಣಕ್ಕೆ ನಮ್ಮ ಸರ್ಕಾರ ಅಣಿಯಾಗಲಿದೆ. ಆ ಮೂಲಕ ಬೆಂಗಳೂರು ಮತ್ತು ಸುತ್ತಲಿನ ಪ್ರದೇಶಗಳಿಗೆ ಶಾಶ್ವತ ಕುಡಿಯುವ ನೀರಿನ ಸಂಪರ್ಕ ಕಲ್ಪಿಸುವ ದೃಢ ಸಂಕಲ್ಪ ನಮ್ಮದು.This media couldn't be displayed. See it on the original post. -
Dr. G Parameshwara
@DrParameshwara
A proud day for India at the Commonwealth Games 2026.
Heartiest congratulations to Dilip Gavit on winning Gold, Mohammed Basil on securing Silver in the men’s 100m T47, and Murali Sreeshankar on clinching Silver in the men’s long jump with a superb effort of 8.09m.
Your dedication, perseverance and excellence are an inspiration to athletes across the country. Wishing you continued success in the competitions ahead. -
Dr. G Parameshwara
@DrParameshwara
ಕರ್ನಾಟಕದಲ್ಲಿ ಬರದ ಛಾಯೆ ಆವರಿಸಿರುವ ಈ ಸಂದರ್ಭದಲ್ಲಿ ತಮಿಳುನಾಡಿಗೆ ನಿತ್ಯ 3,500 ಕ್ಯುಸೆಕ್ ಕಾವೇರಿ ನೀರನ್ನು ಹರಿಸಬೇಕು ಎಂದು ಹೇಳುವುದು ಸರಿಯಲ್ಲ. ನಮ್ಮಲ್ಲಿ ಅಗತ್ಯಕ್ಕಿಂತ ಹೆಚ್ಚು ನೀರು ಇದ್ದಾಗ ನಾವು ಕೊಡುತ್ತೇವೆ. ಈಗ ಕುಡಿಯಲು ನೀರಿಲ್ಲ ಎಂಬ ಪರಿಸ್ಥಿತಿ ಇರುವಾಗ ಈ ಆದೇಶ ಸರಿಯಲ್ಲ ಎಂದು ನಿನ್ನೆ ಮಾಧ್ಯಮಕ್ಕೆ ಮಾತನಾಡುವ ವೇಳೆ ತಿಳಿಸಿದೆ.
ಈ ಕುರಿತಾದ ಪತ್ರಿಕಾ ವರದಿಗಳು ಹೀಗಿವೆ..
Yesterday, speaking to the media, I said it was unjustified to direct Karnataka to release 3,500 cusecs of Cauvery water to Tamil Nadu every day when the State is facing drought conditions.
We release water whenever we have more than we need. But when Karnataka itself does not have enough water even for drinking, such an order is not justified.
Here are some media reports on the matter: -
Dr. G Parameshwara
@DrParameshwara
ಪ್ರತಿ ವರ್ಷ ನಮ್ಮ ರಾಜ್ಯವು ಸುಮಾರು ₹5 ಲಕ್ಷ ಕೋಟಿ ತೆರಿಗೆಯನ್ನು ಕೇಂದ್ರ ಸರ್ಕಾರದ ಬೊಕ್ಕಸಕ್ಕೆ ಸಂದಾಯ ಮಾಡುತ್ತಿದೆ. ದೇಶದ ಆರ್ಥಿಕ ಬೆಳವಣಿಗೆಯಲ್ಲಿ ಕರ್ನಾಟಕದ ಪಾತ್ರ ಇಷ್ಟು ದೊಡ್ಡದಿದ್ದರೂ, ಕನ್ನಡಿಗರು ಭೀಕರ ಬರ ಎದುರಿಸುತ್ತಿರುವಾಗ ರಾಜ್ಯಕ್ಕೆ ನ್ಯಾಯಯುತವಾಗಿ ಸಿಗಬೇಕಾದ ನೆರವಿನಲ್ಲಿ ಯಾಕೆ ವಿಳಂಬ?
2023–24ರ ಭೀಕರ ಬರ ಅನೇಕ ರೈತರ ಬದುಕನ್ನೇ ಸಂಕಷ್ಟಕ್ಕೆ ತಳ್ಳಿತ್ತು. ಕುಡಿಯುವ ನೀರು, ಕೃಷಿ, ಜೀವನೋಪಾಯ ಎಲ್ಲವೂ ತೀವ್ರ ಸವಾಲಾಗಿ ಪರಿಣಮಿಸಿತ್ತು. ಅಂತಹ ಸಂದರ್ಭದಲ್ಲಿಯೂ ರಾಜ್ಯಕ್ಕೆ ಸಕಾಲದಲ್ಲಿ ಬರ ಪರಿಹಾರ ದೊರೆತಿರಲಿಲ್ಲ.
ಪರಿಸ್ಥಿತಿ ಎಷ್ಟರ ಮಟ್ಟಿಗೆ ಹದಗೆಟ್ಟಿತ್ತೆಂದರೆ, ರಾಜ್ಯ ಸರ್ಕಾರ ನ್ಯಾಯಕ್ಕಾಗಿ ಸುಪ್ರೀಂ ಕೋರ್ಟ್ನ ಮೊರೆ ಹೋಗಬೇಕಾಯಿತು. ರೈತರು ಮತ್ತು ಬರಪೀಡಿತ ಕುಟುಂಬಗಳು ನೆರವಿಗಾಗಿ ತಿಂಗಳುಗಟ್ಟಲೆ ಕಾಯಬೇಕಾಯಿತು. ಈ ಬಾರಿಯಾದರೂ ಕೇಂದ್ರ ಸರ್ಕಾರ ಈ ವಿಚಾರವಾಗಿ ಸಮಯಕ್ಕೆ ಸರಿಯಾಗಿ ಸ್ಪಂದಿಸುತ್ತದೆಯೇ? ಅಥವಾ ನಾವು ಮತ್ತೊಮ್ಮೆ ನಮ್ಮ ಹಕ್ಕಿಗಾಗಿ ನ್ಯಾಯಾಲಯದ ಬಾಗಿಲು ತಟ್ಟಬೇಕಾಗುತ್ತದೆಯೇ? ಎಂಬ ಪ್ರಶ್ನೆ ಕನ್ನಡಿಗರನ್ನು ಕಾಡುತ್ತಿದೆ.
Karnataka contributes nearly ₹5 lakh crore to the Union exchequer every year. Yet, during the devastating 2023–24 drought, timely relief did not arrive.
The State was forced to approach the Supreme Court before drought assistance was finally released. Farmers and drought-affected families should never have had to wait for justice during a humanitarian crisis.
As Karnataka once again faces difficult conditions, one question remains:
Will the Union Government respond in time, or will Karnataka be forced to fight for what is rightfully due? -
Dr. G Parameshwara
@DrParameshwara
ಕಾನೂನನ್ನು ಆಯ್ದ ಕಡೆಗಳಲ್ಲಷ್ಟೇ ಅನ್ವಯಿಸಲಾಗದು. ಸುಪ್ರೀಂ ಕೋರ್ಟ್ನ ಕಾವೇರಿ ತೀರ್ಪು ಮೇಕೆದಾಟು ಯೋಜನೆಯ ಜಾರಿಯು ಕರ್ನಾಟಕದ ಹಕ್ಕು ಎಂದಿದೆ. ರಾಜಕೀಯ ಅನುಕೂಲಕ್ಕಾಗಿ ಅಥವಾ ಪಕ್ಷಪಾತಿ ಒತ್ತಡಕ್ಕೆ ಸಾಂವಿಧಾನಿಕ ಹಕ್ಕುಗಳನ್ನು ಬದಿಗೆ ಸರಿಸಲು ಸಾಧ್ಯವಿಲ್ಲ.
ಅಧಿಕಾರದಲ್ಲಿ ಯಾರಿದ್ದಾರೆ ಎನ್ನುವುದನ್ನು ಮೀರಿ ಕಾನೂನು ಗೆಲ್ಲಬೇಕು.
The rule of law cannot be applied selectively. The Supreme Court's Cauvery judgment upholds Karnataka's right to implement the Mekedatu Project. Constitutional rights cannot be set aside for political convenience or partisan pressure.
The law must prevail—regardless of who is in power. -
Dr. G Parameshwara
@DrParameshwara
ನಮ್ಮ ಸರ್ಕಾರವು ಉತ್ತಮ ಸಾಧನೆ ಮಾಡುತ್ತಿರುವ ಕ್ರೀಡಾಪಟುಗಳನ್ನು ಗುರುತಿಸಿ ಅವರಿಗೆ ಕಾಲಕಾಲಕ್ಕೆ ಅಗತ್ಯ ಸಹಕಾರ ನೀಡಿ, ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಕೂಟಗಳಲ್ಲಿ ಸ್ಪರ್ಧಿಸಲು ಪೂರಕ ವಾತಾವರಣವನ್ನು ಕಲ್ಪಿಸುತ್ತಾ ಬಂದಿದೆ.
ರಾಜ್ಯದ ಪ್ರತಿ ಕ್ರೀಡಾಪಟುಗಳ ಬೆಳವಣಿಗೆಗೆ ಅಗತ್ಯ ನೆರವು ಒದಗಿಸುತ್ತಾ, ಮಹತ್ತರ ಸಾಧನೆಗೆ ಅಣಿಯಾಗಲು ಯುವಶಕ್ತಿಯನ್ನು ಹುರಿದುಂಬಿಸುವ ನಿಟ್ಟಿನಲ್ಲಿ ನಿರಂತರವಾಗಿ ಶ್ರಮಿಸುತ್ತಿದೆ.This media couldn't be displayed. See it on the original post. -
Dr. G Parameshwara
@DrParameshwara
ಕರ್ನಾಟಕವು ಇತ್ತೀಚಿನ ವರ್ಷಗಳಲ್ಲಿಯೇ ಅತ್ಯಂತ ತೀವ್ರ ಬರ ಪರಿಸ್ಥಿತಿಯನ್ನು ಎದುರಿಸುತ್ತಿದೆ. ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಮಳೆಯ ಕೊರತೆ ಕಂಡುಬಂದಿದ್ದು, ಜಲಾಶಯಗಳಲ್ಲಿ ಅರ್ಧಕ್ಕಿಂತಲೂ ಕಡಿಮೆ ನೀರಿನ ಸಂಗ್ರಹವಿದೆ. ಖಾರಿಫ್ ಬಿತ್ತನೆ ಮೇಲೆ ತೀವ್ರ ಪರಿಣಾಮ ಉಂಟಾಗಿದ್ದು, ಪ್ರತಿ ಹನಿ ನೀರೂ ಅಮೂಲ್ಯವಾಗಿದೆ.
ಕರ್ನಾಟಕವು ತನ್ನದೇ ಕುಡಿಯುವ ನೀರಿನ ಅಗತ್ಯಗಳನ್ನು ಪೂರೈಸಲು ಹೋರಾಡುತ್ತಿರುವ ಇಂತಹ ವಿಷಮ ಸನ್ನಿವೇಶದಲ್ಲಿ ತಮಿಳುನಾಡಿಗೆ 3,500 ಕ್ಯೂಸೆಕ್ ನೀರನ್ನು ಬಿಡುಗಡೆ ಮಾಡುವಂತೆ ರಾಜ್ಯವನ್ನು ಒತ್ತಾಯಿಸುವುದು ಗಂಭೀರ ಅನ್ಯಾಯವಾಗಲಿದೆ.
ಅತೀವ ಬರ ಪರಿಸ್ಥಿತಿಯಲ್ಲಿರುವ ಯಾವುದೇ ರಾಜ್ಯವನ್ನು ತನ್ನ ನಾಡಿನ ಜನತೆಯ ಕುಡಿಯುವ ನೀರಿನ ಭದ್ರತೆಯನ್ನು ಅಪಾಯದ ಪರಿಸ್ಥಿತಿಗೆ ದೂಡುವಂತೆ ಒತ್ತಾಯಿಸಲಾಗದು. ಕರ್ನಾಟಕದ ಆತಂಕಗಳನ್ನು ನ್ಯಾಯಯುತವಾಗಿ, ಸಹಾನುಭೂತಿ ಹಾಗೂ ಸಾಂವಿಧಾನಿಕ ಹೊಣೆಗಾರಿಕೆಯೊಂದಿಗೆ ಪರಿಗಣಿಸಬೇಕಾಗಿದೆ.
Karnataka is facing one of its most challenging droughts in recent years. With rainfall deficits across most districts, reservoirs below half their capacity and Kharif sowing severely affected, every drop of water matters.
At a time when Karnataka is struggling to secure even its own drinking-water needs, asking the State to release 3,500 cusecs of water to Tamil Nadu is deeply unjust.
No State should be forced to compromise the drinking-water security of its people during a severe drought. Karnataka’s concerns deserve to be heard with fairness, empathy and constitutional responsibility. -
Dr. G Parameshwara
@DrParameshwara
ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಬಿಳಿಗೆರೆ ಸಮೀಪದ ಕಾಫಿ ತೋಟದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಬೃಹತ್ ಮರ ಬಿದ್ದು ಇಬ್ಬರು ಮಹಿಳಾ ಕಾರ್ಮಿಕರು ಮೃತಪಟ್ಟಿದ್ದು, ಮತ್ತಿಬ್ಬರು ಗಾಯಗೊಂಡಿರುವ ಸುದ್ದಿ ತಿಳಿದು ತೀವ್ರ ಆಘಾತವಾಯಿತು.
ಘಟನೆಯ ಕುರಿತು ಜಿಲ್ಲಾಧಿಕಾರಿಗಳೊಂದಿಗೆ ಮಾತನಾಡಿದ್ದು, ಮೃತರ ಕುಟುಂಬಕ್ಕೆ ಸೂಕ್ತ ಪರಿಹಾರ ಒದಗಿಸುವಂತೆ ಹಾಗೂ ಗಾಯಗೊಂಡವರಿಗೆ ಅಗತ್ಯ ಚಿಕಿತ್ಸೆಯ ವ್ಯವಸ್ಥೆ ಮಾಡುವಂತೆ ಸೂಚನೆ ನೀಡಿದ್ದೇನೆ.
ಮೃತರ ಕುಟುಂಬದ ದುಃಖದಲ್ಲಿ ನಾನೂ ಭಾಗಿ. ಗಾಯಗೊಂಡವರು ಆದಷ್ಟು ಶೀಘ್ರ ಗುಣಮುಖರಾಗಲಿ ಎಂದು ಪ್ರಾರ್ಥಿಸುತ್ತೇನೆ. ದುಃಖತಪ್ತ ಕುಟುಂಬದೊಂದಿಗೆ ಸರ್ಕಾರ ನಿಲ್ಲಲಿದೆ. -
Dr. G Parameshwara
@DrParameshwara
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ 2025–26ನೇ ಸಾಲಿನ ಕ್ರೀಡಾ ವಿದ್ಯಾರ್ಥಿ ವೇತನ ಹಾಗೂ 2026–27ನೇ ಸಾಲಿನ ಶೈಕ್ಷಣಿಕ ಶುಲ್ಕ ಮರುಪಾವತಿ ಯೋಜನೆಗಳಿಗೆ ಅರ್ಜಿ ಸಲ್ಲಿಸುವ ಕೊನೆಯ ದಿನಾಂಕವನ್ನು 2026ರ ಆಗಸ್ಟ್ 31ರವರೆಗೆ ವಿಸ್ತರಿಸಲಾಗಿದೆ.
ಈ ಹಿಂದೆ ಜುಲೈ 31 ಕೊನೆಯ ದಿನಾಂಕವಾಗಿದ್ದು, ಇದೀಗ ಅರ್ಹ ಕ್ರೀಡಾಪಟುಗಳ ಅನುಕೂಲಕ್ಕಾಗಿ ಅವಧಿಯನ್ನು ವಿಸ್ತರಿಸಲಾಗಿದೆ.
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ವಿವಿಧ ಯೋಜನೆಗಳ ಪ್ರಯೋಜನ ಪಡೆಯಲು ಅರ್ಹ ಕ್ರೀಡಾಪಟುಗಳು ನಿಗದಿತ ಅವಧಿಯೊಳಗೆ ಅರ್ಜಿ ಸಲ್ಲಿಸಿ. -
Dr. G Parameshwara
@DrParameshwara
Today, I spoke to the media near my residence in Sadashivanagar.
At a time when Karnataka is facing severe drought conditions, it is unjustified to direct the State to release 3,500 cusecs of Cauvery water to Tamil Nadu. We release water whenever we have more than we need and have previously released more than the stipulated quantity. But when Karnataka itself does not have sufficient drinking water, how is such an order justified?
The Chief Minister has proposed convening an all-party meeting. The Tamil Nadu Chief Minister may visit Bengaluru on August 3, though the visit is yet to be confirmed. If he visits, we will raise the issue with him. The Chief Minister is also meeting legal experts in Delhi today and may take a decision after consultations.
Farmers’ organisations, pro-Kannada groups and other organisations in Mandya and the surrounding regions are naturally protesting over the Cauvery issue. They protested yesterday as well. They know that water is unavailable and fear that the Government may release whatever little water remains.
On the Tamil Nadu Government writing to the Union Government opposing the Mekedatu project, the court has made it clear that Karnataka has a legal right to implement the project and does not require Tamil Nadu’s consent. They are free to write letters, and we have no objection. However, the Prime Minister is not above the court. The court’s decision is final.
Asked about the BJP opposing Vijay’s visit to Karnataka over his stand against Mekedatu, I said neighbouring States will have differences, but such issues must be resolved together. This is natural in a federal system.
Recently, Chandrababu Naidu and Revanth Reddy attended the inauguration of the newly installed gates at the Tungabhadra reservoir, along with our Chief Minister. They discussed river interlinking and water sharing and agreed that the States could resolve these issues among themselves. When another reservoir was proposed, the Union Jal Shakti Minister said at the same event that the Union Government would bear 90% of the cost and the State would contribute 10%.
If neighbouring States can discuss and resolve their issues, why is the BJP objecting? Does it want States to remain in constant conflict? Perhaps the BJP’s policy is that States should not cooperate with one another.
We will monitor the rainfall situation until the end of August and then submit another report to the Union Government. Normally, after a report is submitted in August, a Central team visits the State in September, assesses the situation and decides how much assistance should be released.
A comprehensive report on Karnataka’s current drought situation has already been submitted to the Union Government. We have requested that the State’s drought-affected regions be declared areas affected by a natural calamity and that the Union Government relax its drought-declaration criteria.
Under the existing norms, some taluks facing rainfall deficits of up to 80% cannot be declared drought-affected. We have therefore urged the Union Government to relax these criteria. -
Dr. G Parameshwara
@DrParameshwara
ಇಂದು ಸದಾಶಿವನಗರದ ನಿವಾಸದ ಬಳಿ ಮಾಧ್ಯಮದವರೊಂದಿಗೆ ಮಾತನಾಡಿದೆ.
ಕರ್ನಾಟಕದಲ್ಲಿ ಬರದ ಛಾಯೆ ಆವರಿಸಿರುವ ಈ ಸಂದರ್ಭದಲ್ಲಿ ತಮಿಳುನಾಡಿಗೆ 3,500 ಕ್ಯುಸೆಕ್ ಕಾವೇರಿ ನೀರನ್ನು ಹರಿಸಬೇಕು ಎಂದು ಹೇಳುವುದು ಸರಿಯಲ್ಲ. ನಮ್ಮಲ್ಲಿ ಅಗತ್ಯಕ್ಕಿಂತ ಹೆಚ್ಚು ನೀರು ಇದ್ದಾಗ ನಾವು ಕೊಡುತ್ತೇವೆ. ಈಗ ಕುಡಿಯಲು ನೀರಿಲ್ಲ ಎಂಬ ಪರಿಸ್ಥಿತಿ ಇರುವಾಗ ಈ ಆದೇಶ ಸರಿಯಲ್ಲ.
ಮುಖ್ಯಮಂತ್ರಿಗಳು ಸರ್ವಪಕ್ಷ ಸಭೆಯನ್ನು ಕರೆಯುವುದಾಗಿ ಪ್ರಸ್ತಾಪಿಸಿದ್ದಾರೆ. ನೀರು ಇರುವಾಗ ನಾವು ಅವರು ಕೇಳದೆಯೇ ಕೊಡುತ್ತೇವೆ. ನಿಗದಿಗಿಂತ ಹೆಚ್ಚಿನ ನೀರನ್ನು ಕೊಟ್ಟಿದ್ದೇವೆ. ಈ ಬಾರಿ ನಮಗೆ ಕುಡಿಯುವುದಕ್ಕೆ ನೀರಿಲ್ಲ ಅನ್ನುವ ಪರಿಸ್ಥಿತಿ ಇರುವಾಗ 3,500 ಟಿಎಂಸಿ ನೀರನ್ನು ಕೊಡಬೇಕು ಎಂದು ಹೇಳುವುದು ಎಷ್ಟು ಸರಿ?
ಆಗಸ್ಟ್ 3ರಂದು ತಮಿಳುನಾಡು ಮುಖ್ಯಮಂತ್ರಿಗಳು ಬೆಂಗಳೂರಿಗೆ ಬರುವ ಸಾಧ್ಯತೆ ಇದೆ. ಅದು ಇನ್ನೂ ಖಚಿತವಾಗಿಲ್ಲ. ಒಂದು ವೇಳೆ ಅವರು ಬಂದರೆ ಈ ಬಗ್ಗೆ ಪ್ರಸ್ತಾಪಿಸುತ್ತೇವೆ. ಇಂದು ಮುಖ್ಯಮಂತ್ರಿಗಳು ದೆಹಲಿಯಲ್ಲಿ ಕಾನೂನು ತಜ್ಞರ ಜೊತೆ ಸಭೆ ನಡೆಸಿ ಒಂದು ನಿರ್ಧಾರವನ್ನು ಕೈಗೊಳ್ಳಬಹುದು.
ಕಾವೇರಿ ಹೋರಾಟಕ್ಕೆ ಕನ್ನಡಪರ ಸಂಘಟನೆಗಳು ಕರೆ ಕೊಟ್ಟಿರುವ ಬಗ್ಗೆ ಪ್ರತಿಕ್ರಿಯಿಸಿ, ಸ್ವಾಭಾವಿಕವಾಗಿ ಮಂಡ್ಯ ಮತ್ತು ಸುತ್ತಲಿನ ಭಾಗಗಳಲ್ಲಿ ರೈತ ಸಂಘಟನೆಗಳು, ಬೇರೆ ಬೇರೆ ಸಂಘ ಸಂಸ್ಥೆಗಳು ಪ್ರತಿಭಟನೆಯನ್ನು ಮಾಡುತ್ತಾರೆ. ನಿನ್ನೆ ಕೂಡ ಪ್ರತಿಭಟನೆ ಮಾಡಿದ್ದಾರೆ. ನೀರು ಇಲ್ಲ ಅನ್ನೋದು ಅವರಿಗೂ ಗೊತ್ತಿದೆ. ಸರ್ಕಾರ ಒಂದು ವೇಳೆ ಇರುವ ನೀರನ್ನು ಕೊಟ್ಟುಬಿಡಬಹುದು ಎಂಬ ಆತಂಕ ಅವರಿಗೆ ಇದೆ. ಹಾಗಾಗಿ ಪ್ರತಿಭಟಿಸುತ್ತಿದ್ದಾರೆ.
ಮೇಕೆದಾಟು ಯೋಜನೆ ವಿರೋಧಿಸಿ ತಮಿಳುನಾಡು ಸರ್ಕಾರ ಕೇಂದ್ರಕ್ಕೆ ಪತ್ರ ಬರೆದಿರುವ ಕುರಿತ ಮಾಧ್ಯಮದ ಪ್ರಶ್ನೆಗೆ ಪ್ರತಿಕ್ರಿಯಿಸಿ, ಮೇಕೆದಾಟು ವಿಚಾರದಲ್ಲಿ ಕರ್ನಾಟಕಕ್ಕೆ ಕಾನೂನುಬದ್ಧ ಹಕ್ಕು ಇದೆ, ತಮಿಳುನಾಡಿನ ಸಮ್ಮತಿಯ ಅಗತ್ಯವಿಲ್ಲ ಎಂದು ಕೋರ್ಟ್ ಹೇಳಿದೆ. ಪತ್ರ ಬರೆಯಲಿ, ಅದಕ್ಕೆ ನಮ್ಮ ಆಕ್ಷೇಪ ಇಲ್ಲ. ಆದರೆ, ಪ್ರಧಾನ ಮಂತ್ರಿಗಳು ಕೋರ್ಟ್ಗಿಂತ ಮೇಲೆ ಇರುವುದಿಲ್ಲ. ಕೋರ್ಟ್ ನೀಡುವ ತೀರ್ಮಾನವೇ ಅಂತಿಮ.
ಮೇಕೆದಾಟು ಯೋಜನೆಗೆ ವಿರೋಧ ವ್ಯಕ್ತಪಡಿಸುತ್ತಿರುವ ವಿಜಯ್ ಅವರು ರಾಜ್ಯಕ್ಕೆ ಬರುತ್ತಿರುವುದಕ್ಕೆ ಬಿಜೆಪಿಯವರು ವಿರೋಧಿಸುತ್ತಿರುವ ಬಗ್ಗೆ ಮಾಧ್ಯಮದ ಪ್ರಶ್ನೆಗೆ ಪ್ರತಿಕ್ರಿಯಿಸಿ, ಎರಡು ರಾಜ್ಯದಲ್ಲೂ ಸಮಸ್ಯೆಗಳು ಇರುತ್ತವೆ. ಅದನ್ನು ನಾವು ಸೇರಿ ಬಗೆಹರಿಸುತ್ತೇವೆ. ಒಕ್ಕೂಟ ವ್ಯವಸ್ಥೆಯಲ್ಲಿ ಇದೆಲ್ಲವೂ ಸಾಮಾನ್ಯ. ಇತ್ತೀಚೆಗೆ ತುಂಗಭದ್ರಾ ಜಲಾಶಯಕ್ಕೆ ನೂತನವಾಗಿ ಅಳವಡಿಸಲಾದ ಗೇಟುಗಳ ಲೋಕಾರ್ಪಣೆ ಸಮಾರಂಭಕ್ಕೆ ಚಂದ್ರಬಾಬು ನಾಯ್ದು, ರೇವಂತ್ ರೆಡ್ಡಿ ಅವರು ಬಂದಿದ್ದರು. ನಮ್ಮ ಮುಖ್ಯಮಂತ್ರಿಗಳೂ ಇದ್ದರು. ನದಿ ಜೋಡಣೆ, ನೀರಿನ ಹಂಚಿಕೆಯ ಬಗ್ಗೆ ಅವರು ಪ್ರಸ್ತಾಪಿಸಿ, ನಾವೇ ಬಗೆಹರಿಸಿಕೊಳ್ಳುತ್ತೇವೆ ಎಂದು ಮಾತನಾಡಿಕೊಂಡಿದ್ದಾರೆ. ಇನ್ನೊಂದು ಜಲಾಶಯ ಕಟ್ಟುವ ಬಗ್ಗೆ ಪ್ರಸ್ತಾಪಿಸಿದ್ದಕ್ಕೆ 90% ಕೇಂದ್ರ ಕೊಡುತ್ತದೆ, 10% ರಾಜ್ಯ ಕೊಡಬೇಕು ಎಂದು ಕೇಂದ್ರ ನೀರಾವರಿ ಸಚಿವರು ಅದೇ ಸಭೆಯಲ್ಲಿ ಪ್ರಸ್ತಾಪಿಸಿದ್ದಾರೆ.
ಹೀಗೆ ಅಕ್ಕಪಕ್ಕದ ರಾಜ್ಯಗಳು ಸಮಸ್ಯೆಗಳನ್ನು ಮಾತಾಡಿಕೊಂಡು ಬಗೆಹರಿಸುವುದಾದರೆ, ಇದಕ್ಕೆ ಬಿಜೆಪಿ ಯಾಕೆ ಆಕ್ಷೇಪಿಸುತ್ತಿದೆ? ಅವರು ಹೇಳೋ ಪ್ರಕಾರ ರಾಜ್ಯಗಳು ಜಗಳ ಆಡಿಕೊಂಡೇ ಇರಬೇಕಾ? ಬಹುಶಃ ಹೊಂದಾಣಿಕೆಯಲ್ಲಿ ಹೋಗಬಾರದು ಅನ್ನೋದು ಬಿಜೆಪಿಯ ನೀತಿ ಇರಬೇಕು.
ಆಗಸ್ಟ್ ತಿಂಗಳ ಕೊನೆಯವರೆಗೂ ಮಳೆ ಪರಿಸ್ಥಿತಿಯನ್ನು ಅವಲೋಕಿಸಿ, ಬಳಿಕ ಮತ್ತೊಮ್ಮೆ ಕೇಂದ್ರಕ್ಕೆ ವರದಿಯನ್ನು ಸಲ್ಲಿಸುತ್ತೇವೆ. ಸಾಮಾನ್ಯವಾಗಿ ವರದಿಯನ್ನು ಆಗಸ್ಟ್ನಲ್ಲಿ ಸಲ್ಲಿಸಿದ ನಂತರ, ಸೆಪ್ಟೆಂಬರ್ನಲ್ಲಿ ಕೇಂದ್ರದ ತಂಡ ಭೇಟಿ ನೀಡಿ ಪರಿಶೀಲನೆ ನಡೆಸುತ್ತದೆ. ಆ ಬಳಿಕ ನಾವು ಕೇಳಿರುವ ನೆರವಿನ ಮೊತ್ತವನ್ನು ಪರಿಶೀಲಿಸಿ, ಎಷ್ಟು ಅನುದಾನ ನೀಡಬೇಕು ಎಂಬುದನ್ನು ನಿರ್ಧರಿಸುತ್ತಾರೆ.
ರಾಜ್ಯದಲ್ಲಿನ ಪ್ರಸ್ತುತ ಬರ ಪರಿಸ್ಥಿತಿಯ ಕುರಿತು ಕೇಂದ್ರ ಸರ್ಕಾರಕ್ಕೆ ಸಮಗ್ರ ವರದಿಯನ್ನು ಸಲ್ಲಿಸಲಾಗಿದೆ. ಅದರಲ್ಲಿ ಪ್ರಮುಖವಾಗಿ ಕರ್ನಾಟಕದ ಬರಪೀಡಿತ ಪ್ರದೇಶಗಳನ್ನು ಪ್ರಕೃತಿ ವಿಕೋಪದಡಿ ಘೋಷಿಸುವಂತೆ ಮನವಿ ಮಾಡಲಾಗಿದೆ.
ಬರ ಘೋಷಣೆಗೆ ಕೇಂದ್ರ ಸರ್ಕಾರ ನಿಗದಿಪಡಿಸಿರುವ ಕೆಲವು ಮಾನದಂಡಗಳನ್ನು ಸಡಿಲಗೊಳಿಸುವಂತೆ ಕೋರಿದ್ದೇವೆ. ಪ್ರಸ್ತುತ ಜಾರಿಯಲ್ಲಿರುವ ಮಾನದಂಡಗಳ ಕಾರಣ ಶೇ.80ರವರೆಗೆ ಮಳೆ ಕೊರತೆ ಎದುರಿಸುತ್ತಿರುವ ಕೆಲವು ತಾಲ್ಲೂಕುಗಳನ್ನು ಬರಪೀಡಿತವೆಂದು ಘೋಷಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಮಾನದಂಡಗಳನ್ನು ಸಡಿಲಗೊಳಿಸುವಂತೆ ಹೇಳಿದ್ದೇವೆ. -
Dr. G Parameshwara
@DrParameshwara
ರಾಜ್ಯವನ್ನು ಪ್ರತಿನಿಧಿಸುವ ಎಲ್ಲ ಸಂಸದರು ಪಕ್ಷಬೇಧಗಳನ್ನು ಮರೆತು ನಾಡಿನ ಹಿತದೃಷ್ಟಿಯಿಂದ ಸಂಸತ್ತಿನಲ್ಲಿ ರಾಜ್ಯದ ಪರ ಧ್ವನಿ ಎತ್ತಬೇಕು, ಅನುದಾನ ಹಂಚಿಕೆ ಹಾಗೂ ರಾಜ್ಯದ ಮಹತ್ವಾಕಾಂಕ್ಷಿ ಯೋಜನೆಗಳಿಗೆ ಕೇಂದ್ರ ಅನುಮೋದನೆ ನೀಡುವಂತೆ ಒತ್ತಾಯಿಸಬೇಕೆಂದು ರಾಜ್ಯವನ್ನು ಪ್ರತಿನಿಧಿಸುವ ಸಂಸದರಿಗೆ ಮನವಿ ಮಾಡಿದ್ದೇನೆ.
ಸೋಮವಾರ ದೆಹಲಿಯ ಕರ್ನಾಟಕ ಭವನದಲ್ಲಿ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ರಾಜ್ಯದ ಜನಪ್ರತಿನಿಧಿಗಳೊಂದಿಗೆ ಮಾತನಾಡಿ, ಕೇಂದ್ರ ಸರ್ಕಾರ ರಾಜ್ಯಕ್ಕೆ ಬಾಕಿ ಉಳಿಸಿಕೊಂಡಿರುವ 40 ಸಾವಿರ ಕೋಟಿ ರೂಪಾಯಿಗಳ ಅನುದಾನವನ್ನು ಕೊಡಿಸುವ ನಿಟ್ಟಿನಲ್ಲಿ ರಾಜ್ಯದ ಎಲ್ಲ ಸಂಸದರು ಶ್ರಮಿಸಬೇಕು. ರಾಜ್ಯದಲ್ಲಿ ಬರ ಪರಿಸ್ಥಿತಿ ಎದುರಾಗಿದ್ದು ಬರ ಘೋಷಿಸಲು ನಿಯಮಗಳನ್ನು ಸಡಿಲಿಸಿ ಅಗತ್ಯ ನೆರವು ಒದಗಿಸಲು ಈಗಾಗಲೇ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದು ಆಗ್ರಹಿಸಿದ್ದೇವೆ. ಇದಕ್ಕೆ ರಾಜ್ಯದ ಸಂಸದರು ಕೂಡ ದನಿಗೂಡಿಸಬೇಕು ಎಂದು ಒತ್ತಾಯಿಸಿದೆ.This media couldn't be displayed. See it on the original post. -
Dr. G Parameshwara
@DrParameshwara
ರಾಜ್ಯ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿಗಳು, ಶಿರಾ ಕ್ಷೇತ್ರದ ಜನಪ್ರಿಯ ಶಾಸಕರು, ನನ್ನ ಆತ್ಮೀಯರು ಆದ ಶ್ರೀ ಟಿ.ಬಿ.ಜಯಚಂದ್ರ ಅವರಿಗೆ ಜನ್ಮದಿನದ ಶುಭಾಶಯಗಳು.
ಭಗವಂತನು ನಿಮಗೆ ದೀರ್ಘ ಆಯುಷ್ಯ, ಉತ್ತಮ ಆರೋಗ್ಯವನ್ನು ಕರುಣಿಸುವುದರ ಜೊತೆಗೆ ಜನಸೇವೆ ಮಾಡಲು ಹೆಚ್ಚು ಶಕ್ತಿಯನ್ನು ನೀಡಲಿ ಎಂದು ಹಾರೈಸುತ್ತೇನೆ. -
Dr. G Parameshwara
@DrParameshwara
ಅಜ್ಞಾನದ ಕತ್ತಲನ್ನು ಸರಿಸಿ, ಜ್ಞಾನದ ದೀವಿಗೆ ಬೆಳಗಿಸುವ ಸಮಸ್ತ ಗುರುವರ್ಯರಿಗೂ ಗುರು ಪೂರ್ಣಿಮೆಯ ಶುಭಾಶಯಗಳು.
ಶಿಕ್ಷಣ, ಸಂಸ್ಕಾರ ಮತ್ತು ಮೌಲ್ಯಗಳೊಂದಿಗೆ ಬದುಕಿನ ದಾರಿಯನ್ನು ತೋರಿದ ಪ್ರತಿ ಗುರುವನ್ನು ಈ ದಿನ ನೆನೆಯೋಣ, ಅವರಿಗೆ ಕೃತಜ್ಞರಾಗಿರೋಣ.
#gurupurnima -
Dr. G Parameshwara
@DrParameshwara
India continues to shine at the Commonwealth Games 2026.
Congratulations to Harjinder Kaur for clinching Silver in Women's 69kg Weightlifting with a total lift of 227kg, and to Gulveer Singh for winning Silver in the Men's 10,000m.
Your achievements have made the nation proud. Wishing you continued success in the journey ahead. -
Dr. G Parameshwara
@DrParameshwara
ಇಂದು ಅಂತಾರಾಷ್ಟ್ರೀಯ ಹುಲಿ ದಿನ
ಅತೀ ಹೆಚ್ಚು ಹುಲಿಗಳನ್ನು ಹೊಂದಿರುವ ರಾಜ್ಯಗಳಲ್ಲಿ ಕರ್ನಾಟಕ ಎರಡನೇ ಸ್ಥಾನದಲ್ಲಿದೆ. ರಾಷ್ಟ್ರೀಯ ಪ್ರಾಣಿಯಾಗಿರುವ ಹುಲಿ ಮತ್ತು ಅವುಗಳ ನೈಸರ್ಗಿಕ ಆವಾಸಸ್ಥಾನಗಳ ಸಂರಕ್ಷಣೆ ನಮ್ಮ ಆದ್ಯತೆಯಾಗಲಿ.
#worldtigerday -
Dr. G Parameshwara
@DrParameshwara
ಕೆಪಿಸಿಸಿ ಅಧ್ಯಕ್ಷರು, ಆತ್ಮೀಯರು ಆದ ಶ್ರೀ @HariprasadBK2 ಅವರಿಗೆ ಜನ್ಮದಿನದ ಶುಭಾಶಯಗಳು.
ನಿಮ್ಮ ಸುದೀರ್ಘ ರಾಜಕೀಯ ಅನುಭವ, ಅಚಲ ಸೈದ್ಧಾಂತಿಕ ಬದ್ಧತೆ ಹಾಗೂ ಸಂಘಟನಾ ಸಾಮರ್ಥ್ಯವು ಕಾಂಗ್ರೆಸ್ ಪಕ್ಷವನ್ನು ಮತ್ತಷ್ಟು ಬಲಿಷ್ಠಗೊಳಿಸಲಿ. ದೀರ್ಘ ಆಯಸ್ಸು, ಆರೋಗ್ಯ ಭಾಗ್ಯ ನಿಮ್ಮದಾಗಲಿ ಎಂದು ಶುಭಹಾರೈಸುತ್ತೇನೆ. -
Dr. G Parameshwara
@DrParameshwara
Remembering Ishwar Chandra Vidyasagar on his death anniversary.
A pioneering educationist and social reformer, he dedicated his life to advancing women’s education, supporting widow remarriage and challenging social injustice.
His courage, compassion and progressive vision continue to inspire generations in the pursuit of equality and human dignity.
#ishwarchandravidyasagar -
Dr. G Parameshwara
@DrParameshwara
ಕೃಷಿ ತಂತ್ರಜ್ಞಾನ, ಮಾಹಿತಿ ತಂತ್ರಜ್ಞಾನ, ಜವಳಿ ಹೀಗೆ ನಾನಾ ಕ್ಷೇತ್ರಗಳಲ್ಲಿ ದೇಶದ ಆರ್ಥಿಕತೆಗೆ ಅತೀ ಹೆಚ್ಚು ಕೊಡುಗೆಗಳನ್ನು ಕರ್ನಾಟಕ ನೀಡುತ್ತಿದ್ದರೂ ಕೂಡ ಅಭಿವೃದ್ಧಿಯ ಯೋಜನೆಯಲ್ಲಿ ಮಾತ್ರ ನಮ್ಮ ರಾಜ್ಯಕ್ಕೆ ಅನ್ಯಾಯವಾಗುತ್ತಿದೆ. ರಾಜ್ಯದ ಅಭಿವೃದ್ಧಿಗೆ ಅಗತ್ಯವಿರುವ ಹಲವು ಪ್ರಮುಖ ಮೂಲಸೌಕರ್ಯ ಮತ್ತು ಸಂಪರ್ಕ ಯೋಜನೆಗಳಿಗೆ ಇನ್ನೂ ಕೇಂದ್ರ ಸರ್ಕಾರದ ಅನುಮತಿ ದೊರೆತಿಲ್ಲ.
ಬೆಂಗಳೂರು ಉಪನಗರ ರೈಲು ಯೋಜನೆ, ಬೆಂಗಳೂರು–ಮುಂಬೈ ಹೈಸ್ಪೀಡ್ ರೈಲ್ವೆ ಮಾರ್ಗ, ವಿಜಯಪುರ ವಿಮಾನ ನಿಲ್ದಾಣ, ಕೋಲಾರ ರೈಲ್ವೆ ಕೋಚ್ ಕಾರ್ಖಾನೆ ಹಾಗೂ ತುಮಕೂರು–ರಾಯದುರ್ಗ ರೈಲ್ವೆ ಮಾರ್ಗ ಸೇರಿದಂತೆ ಹಲವು ಮಹತ್ವದ ಯೋಜನೆಗಳು ರಾಜ್ಯದ ಸಂಪರ್ಕ ವ್ಯವಸ್ಥೆಯನ್ನು ಬಲಪಡಿಸುವುದರ ಜೊತೆಗೆ ಕೈಗಾರಿಕಾ ಬೆಳವಣಿಗೆಯನ್ನು ವೇಗಗೊಳಿಸಿ, ಸಾವಿರಾರು ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಸಾಮರ್ಥ್ಯವನ್ನು ಹೊಂದಿದೆ.
ಅಭಿವೃದ್ಧಿ ವಿಳಂಬವಾಗಬಾರದು. ಲಕ್ಷಾಂತರ ಜನರ ಬದುಕಿನ ಮೇಲೆ ಪರಿಣಾಮ ಬೀರುವ ಇಂತಹ ಮಹತ್ವದ ಯೋಜನೆಗಳು ಬಾಕಿ ಉಳಿದಿರುವಾಗ, ಕೇಂದ್ರ ಸರ್ಕಾರಕ್ಕೆ ತ್ವರಿತ ಅನುಮೋದನೆ ಹಾಗೂ ಅಗತ್ಯ ಬೆಂಬಲವನ್ನು ಕೋರುವುದು ಕರ್ನಾಟಕದ ನ್ಯಾಯಸಮ್ಮತ ಹಕ್ಕಾಗಿದೆ
Karnataka continues to be one of India’s leading investment destinations and a major force powering the country’s economy. Yet several transformative infrastructure and connectivity projects that are critical to the state’s future remain pending with the Union Government.
From the Bengaluru Suburban Rail Project and the Bengaluru–Mumbai High-Speed Rail Corridor to Vijayapura Airport, the Kolar Railway Coach Factory and the Tumakuru–Rayadurg Railway Line, these projects can improve connectivity, strengthen industrial growth and generate thousands of jobs across Karnataka.
Development cannot be held back by delays. When projects that benefit millions remain pending, Karnataka has every right to seek timely decisions and the support it deserves. -
Dr. G Parameshwara
@DrParameshwara
Karnataka is facing a deepening drought crisis that demands urgent and united action.
With 169 taluks seeking drought assistance, 90% of districts and 630 hoblis recording deficient or severely deficient rainfall, the time has come for every elected representative from Karnataka to stand together and secure the support our State deserves.
This is not a partisan issue. It concerns our farmers, drinking-water security, rural livelihoods and the future of millions of Kannadigas.
From delayed drought assistance and pending Jal Jeevan Mission funds to long-awaited approvals and funding for key irrigation projects, Karnataka’s legitimate concerns cannot be ignored. -
Dr. G Parameshwara
@DrParameshwara
ರಾಜ್ಯದಲ್ಲಿ ಬರ ಪರಿಸ್ಥಿತಿ ದಿನದಿಂದ ದಿನಕ್ಕೆ ಗಂಭೀರವಾಗುತ್ತಿದ್ದು, ಇದನ್ನು ಎದುರಿಸಲು ತುರ್ತು ಮತ್ತು ಒಗ್ಗಟ್ಟಿನ ಕ್ರಮ ಅಗತ್ಯವಾಗಿದೆ.
ರಾಜ್ಯದ 169 ತಾಲ್ಲೂಕುಗಳು ಬರ ಪರಿಸ್ಥಿತಿಯನ್ನು ಎದುರಿಸುತ್ತಿದ್ದು, ಪರಿಹಾರಕ್ಕಾಗಿ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ. ಇದರಲ್ಲಿ ಸುಮಾರು 90% ಜಿಲ್ಲೆಗಳು ಹಾಗೂ 630 ಹೋಬಳಿಗಳಲ್ಲಿ ಮಳೆ ಕೊರತೆ / ತೀವ್ರ ಮಳೆ ಕೊರತೆ ದಾಖಲಾಗಿದೆ. ಇಂತಹ ಸಂದರ್ಭದಲ್ಲಿ ರಾಜ್ಯದ ಎಲ್ಲ ಜನಪ್ರತಿನಿಧಿಗಳು ಪಕ್ಷಪಾತ ಮಾಡದೆ ರಾಜ್ಯದ ಹಿತಕ್ಕಾಗಿ ಒಂದಾಗಿ ನಿಲ್ಲಬೇಕು.
ಇದೊಂದು ಪಕ್ಷದ ಸಮಸ್ಯೆ ಅಲ್ಲ; ಬದಲಿಗೆ ರೈತರ ಬದುಕು, ಕುಡಿಯುವ ನೀರಿನ ಭದ್ರತೆ, ಗ್ರಾಮೀಣ ಜನರ ಜೀವನೋಪಾಯ ಹಾಗೂ ಕೋಟ್ಯಂತರ ಕನ್ನಡಿಗರ ಭವಿಷ್ಯದ ಪ್ರಶ್ನೆಯಾಗಿದೆ.
ಬರ ಪರಿಹಾರ ನಿಧಿ ಬಿಡುಗಡೆಯಲ್ಲಿ ಆಗುತ್ತಿರುವ ವಿಳಂಬ, ಜಲಜೀವನ್ ಮಿಷನ್ ಅನುದಾನದ ಬಾಕಿ, ನೀರಾವರಿ ಯೋಜನೆಗಳಿಗೆ ಅನುಮತಿ ಹಾಗೂ ಅಗತ್ಯ ಅನುದಾನದ ವಿಳಂಬ ಸೇರಿದಂತೆ ಕರ್ನಾಟಕದ ನ್ಯಾಯಸಮ್ಮತ ಬೇಡಿಕೆಗಳನ್ನು ಕೇಂದ್ರ ಸರ್ಕಾರ ನಿರ್ಲಕ್ಷಿಸದೆ ತಕ್ಷಣವೇ ರಾಜ್ಯಕ್ಕೆ ಸಲ್ಲಬೇಕಾದ ನೆರವನ್ನು ಒದಗಿಸಬೇಕು. -
Dr. G Parameshwara
@DrParameshwara
Karnataka is not asking for charity. We are demanding what is rightfully due to our people.
More than ₹40,000 crore remains pending, while 60 proposals concerning Karnataka continue to await action from the Union Government. These include special grants recommended by the 15th Finance Commission, funding for critical rural infrastructure, Bengaluru’s Peripheral Ring Road, lake-development projects, the Jal Jeevan Mission, the Upper Bhadra Project and procurement of agricultural produce under the Minimum Support Price scheme.
These funds are essential for Karnataka’s farmers, rural communities, drinking-water security and infrastructure development. The State cannot be made to wait indefinitely for commitments already recommended or promised. -
Dr. G Parameshwara
@DrParameshwara
ರಾಜ್ಯದ ಜನರ ಹಿತ ಹಾಗೂ ಅಭಿವೃದ್ಧಿಗಾಗಿ ನಾವು ಯಾರಿಂದಲೂ ದಾನ ಕೇಳುತ್ತಿಲ್ಲ. ನಮ್ಮ ರಾಜ್ಯಕ್ಕೆ ನ್ಯಾಯಯುತವಾಗಿ ಸಲ್ಲಬೇಕಾದ ಹಕ್ಕಿನ ಪಾಲನ್ನು ಮಾತ್ರ ಕೇಳುತ್ತಿದ್ದೇವೆ.
ರಾಜ್ಯಕ್ಕೆ ಬಿಡುಗಡೆಯಾಗಬೇಕಿರುವ ₹40,000 ಕೋಟಿಗೂ ಅಧಿಕ ಅನುದಾನವನ್ನು ಕೇಂದ್ರ ಸರ್ಕಾರ ಇನ್ನೂ ಬಾಕಿ ಉಳಿಸಿಕೊಂಡಿದೆ. ರಾಜ್ಯಕ್ಕೆ ಸಂಬಂಧಿಸಿದ 60 ಪ್ರಸ್ತಾವನೆಗಳನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಿದ್ದು, ಅನುಮತಿಗಾಗಿ ಎದುರು ನೋಡುತ್ತಿದ್ದೇವೆ. 15ನೇ ಹಣಕಾಸು ಆಯೋಗದ ಅನುದಾನ, ಜಲ್ ಜೀವನ್ ಮಿಷನ್, ಭದ್ರಾ ಮೇಲ್ದಂಡೆ, ಪೆರಿಫೆರಲ್ ರಿಂಗ್ ರಸ್ತೆ, ಮೆಟ್ರೋ ವಿಸ್ತರಣೆ, ಬೆಂಗಳೂರು ಉಪನಗರ ರೈಲು, ಮೇಕೆದಾಟು, ಕಳಸಾ-ಬಂಡೂರಿ, ಕೃಷ್ಣಾ ಮೇಲ್ದಂಡೆ ಯೋಜನೆ ಸೇರಿದಂತೆ ರಾಜ್ಯದ ಅಭಿವೃದ್ಧಿಗೆ ಅತ್ಯಂತ ಅಗತ್ಯವಾದ ಹಲವು ಯೋಜನೆಗಳು ಇದರಲ್ಲಿ ಸೇರಿವೆ.
ಈ ಅನುದಾನಗಳು ರಾಜ್ಯದ ರೈತರು, ಗ್ರಾಮೀಣ ಜನರು, ಕುಡಿಯುವ ನೀರಿನ ಭದ್ರತೆ ಹಾಗೂ ಮೂಲಸೌಕರ್ಯ ಅಭಿವೃದ್ಧಿಗೆ ಅಗತ್ಯವಾಗಿವೆ. ಈಗಾಗಲೇ ಶಿಫಾರಸ್ಸು ಮಾಡಿರುವ ಹಾಗೂ ಭರವಸೆ ನೀಡಿರುವ ಅನುದಾನಗಳನ್ನು ಕೇಂದ್ರ ಸರ್ಕಾರ ವಿಳಂಬ ಮಾಡದೆ ಬಿಡುಗಡೆಗೊಳಿಸಬೇಕು. -
Dr. G Parameshwara
@DrParameshwara
Heartiest congratulations to Sharmila Dhankar on winning Gold in the Women’s F57 Shot Put, Valluri Ajaya Babu on securing Silver in the Men’s 79 kg Weightlifting, and Karnataka’s own Shilpa K. Shyla on clinching Bronze in the Women’s F57 Shot Put at the Glasgow 2026 Commonwealth Games.
Your remarkable achievements have made India proud and inspired countless young athletes. Wishing you many more victories and continued success. -
Dr. G Parameshwara
@DrParameshwara
ಬಲಿಷ್ಠ ಕರ್ನಾಟಕವೇ, ಬಲಿಷ್ಠ ಭಾರತದ ಅಡಿಪಾಯ.
ರಾಜ್ಯ ಬಲಿಷ್ಠವಾದರೆ ಮಾತ್ರ, ದೇಶ ಬಲಿಷ್ಠವಾಗಲು ಸಾಧ್ಯ. ಕರ್ನಾಟಕದ ಪರವಾಗಿ ನಾವು ಮಾತನಾಡುವಾಗ ನಮ್ಮ ಧ್ವನಿ ಒಂದೇ ಆಗಿರಬೇಕು. ತಮ್ಮ ರಾಜ್ಯದ ಹಿತಾಸಕ್ತಿಗಾಗಿ ರಾಜಕೀಯವನ್ನು ಮೀರಿ ಒಗ್ಗಟ್ಟಿನಿಂದ ನಿಂತ ನಾಯಕರನ್ನು ಇತಿಹಾಸ ಸದಾ ಗೌರವದಿಂದ ಸ್ಮರಿಸುತ್ತದೆ.
- ಸೋಮವಾರ ನವದೆಹಲಿಯಲ್ಲಿ ನಡೆದ ಕರ್ನಾಟಕದ ಸರ್ವಪಕ್ಷ ಸಂಸದರೊಂದಿಗಿನ ಸಭೆಯಲ್ಲಿ ನನ್ನ ಮಾತು -
Dr. G Parameshwara
@DrParameshwara
ನಿನ್ನೆ ನವದೆಹಲಿಯ ಕರ್ನಾಟಕ ಭವನದಲ್ಲಿ ನಡೆದ ಕರ್ನಾಟಕದ ಸರ್ವಪಕ್ಷ ಸಂಸದರೊಂದಿಗಿನ ಸಭೆಯಲ್ಲಿ ಮಾತನಾಡಿ, ಬರ ಘೋಷಿಸಲು ಇರುವ ನಿಯಮಗಳನ್ನು ಸಡಿಲಿಸಲು ಕೇಂದ್ರವನ್ನು ಒತ್ತಾಯಿಸುವಂತೆ ಹಾಗೂ ಕೇಂದ್ರ ಸರ್ಕಾರವು ಭರವಸೆ ನೀಡಿ, ಬಿಡುಗಡೆಯಾಗದೆ ಬಾಕಿಯಿರುವ ₹40,000 ಕೋಟಿಗೂ ಹೆಚ್ಚಿನ ಅನುದಾನವನ್ನು ರಾಜ್ಯಕ್ಕೆ ಕೊಡಿಸುವ ನಿಟ್ಟಿನಲ್ಲಿ ಎಲ್ಲಾ ಸಂಸದರು ಒಟ್ಟಾಗಿ ಶ್ರಮಿಸುವಂತೆ ಮನವಿ ಮಾಡಿದೆ.
ಈ ಕುರಿತಾದ ಪತ್ರಿಕಾ ವರದಿಗಳು ಹೀಗಿವೆ..
Yesterday, at an all-party meeting of Karnataka MPs at Karnataka Bhavan in New Delhi, I urged them to press the Union Government to relax the norms for declaring drought.
I also appealed to all MPs to work together to secure over ₹40,000 crore in grants promised by the Union Government but yet to be released to Karnataka.
Here are some media reports on the matter. -
Dr. G Parameshwara
@DrParameshwara
ಸೋಮವಾರ ಬೆಂಗಳೂರಿನ ಆವಲಹಳ್ಳಿಯ ಈಸ್ಟ್ ಪಾಯಿಂಟ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ನಡೆದ ಪದವಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ, ಎಂಜಿನಿಯರಿಂಗ್ ಪದವಿ ಪಡೆದ 540 ವಿದ್ಯಾರ್ಥಿಗಳನ್ನು ಅಭಿನಂದಿಸಿದೆ.
ನಿನ್ನೆ ಮಾಧ್ಯಮದವರೊಂದಿಗೂ ಮಾತನಾಡಿ, ಬರ ನಿರ್ವಹಣೆಗೆ ಕೇಂದ್ರ ಸರ್ಕಾರ ವಿಶೇಷ ಅನುದಾನ ಬಿಡುಗಡೆ ಮಾಡಬೇಕು.ಸಂಸತ್ತಿನಲ್ಲಿ ಬರದ ಬಗ್ಗೆ ಪ್ರಸ್ತಾಪಿಸಲು ಮಲ್ಲಿಕಾರ್ಜುನ ಖರ್ಗೆ ಅವರಿಗೆ ಮನವಿ ಮಾಡುವುದಾಗಿಯೂ ತಿಳಿಸಿದೆ.
ಈ ಕುರಿತಾದ ಪತ್ರಿಕಾ ವರದಿಗಳು ಹೀಗಿವೆ.. -
Dr. G Parameshwara
@DrParameshwara
Heartiest congratulations to Karnataka’s proud para-athlete K. S. Shilpa on winning the Bronze Medal in the Women’s F57 Shot Put event at the 2026 Commonwealth Games in Glasgow, Scotland.
With a remarkable throw of 7.26 metres, Shilpa has brought immense pride to Karnataka and enhanced India’s glory on the international stage.
I had spoken to her just last week and wished her the very best for the Commonwealth Games. Knowing her talent, determination and sporting achievements, I was confident that she would return with a medal. I am delighted that she has made that confidence come true.
May this achievement inspire many more young athletes to dream big and overcome every challenge. I wish Shilpa greater success and many more opportunities to proudly raise the Tricolour on international platforms.
Our government will always stand by her and extend every possible support to help her achieve greater heights in her sporting career. -
Dr. G Parameshwara
@DrParameshwara
ಸ್ಕಾಟ್ಲೆಂಡ್ನ ಗ್ಲಾಸ್ಕೊದಲ್ಲಿ ನಡೆಯುತ್ತಿರುವ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಕರ್ನಾಟಕದ ಹೆಮ್ಮೆಯ ಪ್ಯಾರಾ ಅಥ್ಲೀಟ್ ಕೆ.ಎಸ್.ಶಿಲ್ಪಾ ಅವರು ಕಂಚಿನ ಪದಕ ಗೆದ್ದು ಬೀಗಿದ್ದಾರೆ. ಮಹಿಳೆಯರ ಎಫ್-57 ವಿಭಾಗದಲ್ಲಿ 7.26 ಮೀ.ದೂರಕ್ಕೆ ಶಾಟ್ಪುಟ್ ಎಸೆಯುವುದರ ಮೂಲಕ ನಾಡಿನ ಕೀರ್ತಿಯನ್ನು ಮುಗಿಲೆತ್ತರಕ್ಕೆ ಒಯ್ದಿದ್ದಾರೆ.
ಕಳೆದ ವಾರವಷ್ಟೇ ಶಿಲ್ಪಾ ಅವರಿಗೆ ಕರೆ ಮಾಡಿ, ಕಾಮನ್ವೆಲ್ತ್ ಪಂದ್ಯಾಕೂಟದಲ್ಲಿ ಆತ್ಮವಿಶ್ವಾಸದಿಂದ ಪಾಲ್ಗೊಂಡು, ಪದಕ ಗೆದ್ದು ಬರುವಂತೆ ಶುಭಹಾರೈಸಿದ್ದೆ. ಶಿಲ್ಪಾ ಅವರ ಸಾಮರ್ಥ್ಯ ಮತ್ತು ಕ್ರೀಡಾ ಸಾಧನೆಯ ಬಗ್ಗೆ ಅರಿವಿದ್ದ ನನಗೆ, ಅವರು ಖಂಡಿತ ಪದಕ ಗೆಲ್ಲುತ್ತಾರೆ ಎಂಬ ವಿಶ್ವಾಸವಿತ್ತು. ಇಂದು ಅವರು ಕಂಚಿನ ಪದಕ ಗೆದ್ದ ವಿಚಾರ ತಿಳಿದು ಮತ್ತಷ್ಟು ಖುಷಿಯಾಯಿತು.
ನಿಮ್ಮ ಈ ಸಾಧನೆ ಮತ್ತಷ್ಟು ಯುವ ಕ್ರೀಡಾಪಟುಗಳಿಗೆ ಸ್ಫೂರ್ತಿಯಾಗಲಿ. ಇನ್ನಷ್ಟು ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸುವಂತಾಗಲಿ ಎಂದು ಹಾರೈಸುತ್ತೇನೆ. ನಿಮ್ಮ ಕ್ರೀಡಾ ಬದುಕನ್ನು ಉಜ್ವಲವಾಗಿಸಲು ನಮ್ಮ ಸರ್ಕಾರವು ನಿಮ್ಮೊಂದಿಗೆ ಸದಾ ನಿಲ್ಲಲಿದೆ. -
Dr. G Parameshwara
@DrParameshwara
Today's all-party meeting of Karnataka MPs at Karnataka Bhavan, New Delhi, was convened with one objective—to speak in one voice for Karnataka's rightful interests.
I appealed to all Members of Parliament, irrespective of political affiliation, to work together to secure the release of over ₹40,000 crore in pending Central grants and expedite approvals for more than 60 key projects awaiting clearance. These include funds promised under the 15th Finance Commission, Jal Jeevan Mission, Upper Bhadra, Peripheral Ring Road, Metro expansion, Bengaluru Suburban Rail, Mekedatu, Kalasa-Banduri, Krishna Upper Stage, and several other projects critical to Karnataka's future.
Karnataka is facing one of the worst droughts in recent history. More than 169 taluks are affected, rainfall is down by 35%, reservoirs are at alarming levels, sowing has been severely impacted, and farmers, industries and cities are facing increasing uncertainty. I urged the Centre to immediately relax drought declaration norms and extend timely assistance to protect livelihoods and water security.
Our appeal is neither political nor a request for charity. Karnataka contributes over ₹5 lakh crore to the national exchequer and is among India's largest drivers of economic growth, innovation and investment. When Karnataka grows, India grows. Delays in releasing funds and approving projects slow not only the State's progress but also the nation's development.
Every pending proposal represents drinking water for a village, irrigation for a farmer, jobs for our youth, better connectivity for commuters, opportunities for businesses and a stronger economy. These are not merely files awaiting signatures—they are the aspirations of millions of Kannadigas.
I urged all Karnataka MPs to rise above political differences and collectively raise these issues in Parliament and before the Union Government. Karnataka deserves timely approvals, promised funds and its constitutional rights—not as a favour, but as its rightful due under the spirit of cooperative federalism.
A strong Karnataka is the foundation of a strong India. -
Dr. G Parameshwara
@DrParameshwara
ಇಂದು ನವದೆಹಲಿಯ ಕರ್ನಾಟಕ ಭವನದಲ್ಲಿ ನಡೆದ ಕರ್ನಾಟಕದ ಸರ್ವಪಕ್ಷ ಸಂಸದರೊಂದಿಗಿನ ಸಭೆಯಲ್ಲಿ ನನ್ನ ಮಾತುಗಳು
ನಮ್ಮ ನಾಡಿನ ಹಿತಾಸಕ್ತಿಯ ಪ್ರಶ್ನೆ ಎದುರಾದಾಗ ನಾವೆಲ್ಲರೂ ಪಕ್ಷಭೇದ ಮರೆತು ಒಗ್ಗಟ್ಟಿನಿಂದ ನಿಲ್ಲಬೇಕು. ನಮ್ಮ ನಡುವಿನ ರಾಜಕೀಯ ಸಿದ್ಧಾಂತಗಳು ಭಿನ್ನವಾಗಿರಬಹುದು. ಆದರೆ, ರಾಜ್ಯದ ಅಭಿವೃದ್ಧಿಯ ವಿಚಾರ ಬಂದಾಗ, ನಮ್ಮ ನಾಡಿನ ಬಗೆಗಿನ ನಮ್ಮ ಬದ್ಧತೆ ಮಾತ್ರ ಎಂದಿಗೂ ಪ್ರಶ್ನಾತೀತವಾಗಿರಬೇಕು. ಇದೇ ಒಗ್ಗಟ್ಟಿನ ಕಳಕಳಿಯಿಂದಲೇ ಇಂದು ನಾವು ಈ ಸಭೆಯನ್ನು ಕರೆದಿದ್ದೇವೆ.
ರಾಜಕೀಯ ಭೇದಗಳನ್ನು ಬದಿಗಿಟ್ಟು, ಕೇಂದ್ರ ಸರ್ಕಾರದಿಂದ ಬಾಕಿ ಇರುವ ₹40,000 ಕೋಟಿಗೂ ಅಧಿಕ ಅನುದಾನವನ್ನು ತಕ್ಷಣ ಬಿಡುಗಡೆ ಮಾಡುವಂತೆ ಹಾಗೂ ಅನುಮತಿಗಾಗಿ ಕಾಯುತ್ತಿರುವ 60ಕ್ಕೂ ಹೆಚ್ಚು ಪ್ರಮುಖ ಯೋಜನೆಗಳಿಗೆ ಶೀಘ್ರ ಅನುಮೋದನೆ ನೀಡಲು ಕೇಂದ್ರವನ್ನು ಒತ್ತಾಯಿಸುವಂತೆ ಎಲ್ಲಾ ಸಂಸದರಿಗೆ ಮನವಿ ಮಾಡಿದೆ. 15ನೇ ಹಣಕಾಸು ಆಯೋಗದ ಅನುದಾನ, ಜಲ್ ಜೀವನ್ ಮಿಷನ್, ಭದ್ರಾ ಮೇಲ್ದಂಡೆ, ಪೆರಿಫೆರಲ್ ರಿಂಗ್ ರಸ್ತೆ, ಮೆಟ್ರೋ ವಿಸ್ತರಣೆ, ಬೆಂಗಳೂರು ಉಪನಗರ ರೈಲು, ಮೇಕೆದಾಟು, ಕಳಸಾ-ಬಂಡೂರಿ, ಕೃಷ್ಣಾ ಮೇಲ್ದಂಡೆ ಯೋಜನೆ ಸೇರಿದಂತೆ ರಾಜ್ಯದ ಅಭಿವೃದ್ಧಿಗೆ ಅತ್ಯಂತ ಅಗತ್ಯವಾದ ಹಲವು ಯೋಜನೆಗಳು ಇದರಲ್ಲಿ ಸೇರಿವೆ.
ಕರ್ನಾಟಕವು ಅತ್ಯಂತ ತೀವ್ರ ಬರ ಪರಿಸ್ಥಿತಿಯನ್ನು ಎದುರಿಸುತ್ತಿದೆ. ರಾಜ್ಯದ 169ಕ್ಕೂ ಹೆಚ್ಚು ತಾಲ್ಲೂಕುಗಳು ಬರಪೀಡಿತವಾಗಿದ್ದು, ಮಳೆ ಪ್ರಮಾಣವು ಶೇ.35ರಷ್ಟು ಕುಸಿದಿದೆ. ಜಲಾಶಯಗಳ ನೀರಿನ ಮಟ್ಟ ಆತಂಕಕಾರಿ ಸ್ಥಿತಿಯಲ್ಲಿದ್ದು, ಬಿತ್ತನೆ ಸಾಧ್ಯವಾಗುತ್ತಿಲ್ಲ. ರೈತರು, ಕೈಗಾರಿಕೆಗಳು ಹಾಗೂ ನಗರಗಳು ಸಂಕಷ್ಟ ಎದುರಿಸುತ್ತಿವೆ. ಆದ್ದರಿಂದ ಬರ ಘೋಷಣೆಯ ಮಾನದಂಡಗಳನ್ನು ಸಡಿಲಗೊಳಿಸಿ, ತುರ್ತು ನೆರವು ನೀಡುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದೆ.
ಕರ್ನಾಟಕವು ರಾಷ್ಟ್ರದ ಖಜಾನೆಗೆ ₹5 ಲಕ್ಷ ಕೋಟಿಗೂ ಅಧಿಕ ಕೊಡುಗೆ ನೀಡುವ, ದೇಶದ ಆರ್ಥಿಕ ಬೆಳವಣಿಗೆ, ಹೂಡಿಕೆ ಹಾಗೂ ನವೋದ್ಯಮಕ್ಕೆ ಮುಂಚೂಣಿಯಲ್ಲಿರುವ ರಾಜ್ಯವಾಗಿದೆ. ಕರ್ನಾಟಕ ಅಭಿವೃದ್ಧಿಯಾದರೆ ಮಾತ್ರ ಭಾರತ ಅಭಿವೃದ್ಧಿಯಾಗಲು ಸಾಧ್ಯ. ರಾಜ್ಯಕ್ಕೆ ಬರಬೇಕಾದ ಅನುದಾನ ಮತ್ತು ಯೋಜನೆಗಳ ಅನುಮೋದನೆಯಲ್ಲಿ ಆಗುವ ವಿಳಂಬವು ರಾಜ್ಯದಷ್ಟೇ ಅಲ್ಲ, ದೇಶದ ಪ್ರಗತಿಗೂ ಅಡ್ಡಿಯಾಗುತ್ತದೆ.
ಬಾಕಿ ಉಳಿದಿರುವ ಪ್ರತಿಯೊಂದು ಯೋಜನೆಯೂ ಒಂದು ಹಳ್ಳಿಗೆ ಕುಡಿಯುವ ನೀರು, ರೈತರಿಗೆ ನೀರಾವರಿ, ಯುವಕರಿಗೆ ಉದ್ಯೋಗ, ಜನರಿಗೆ ಉತ್ತಮ ಸಂಪರ್ಕ ವ್ಯವಸ್ಥೆ, ಉದ್ಯಮಗಳಿಗೆ ಹೊಸ ಅವಕಾಶಗಳು ಹಾಗೂ ಬಲಿಷ್ಠ ಆರ್ಥಿಕತೆಯ ಭರವಸೆಯಾಗಿದೆ. ಇವು ಕೇವಲ ಕಡತಗಳಲ್ಲ, ಕೋಟ್ಯಂತರ ಕನ್ನಡಿಗರ ಕನಸುಗಳು.
ಎಲ್ಲಾ ಕರ್ನಾಟಕ ಸಂಸದರು ಪಕ್ಷಾತೀತವಾಗಿ ಒಂದಾಗಿ ಸಂಸತ್ತಿನಲ್ಲಿ ಹಾಗೂ ಕೇಂದ್ರ ಸರ್ಕಾರದ ಮುಂದೆ ಈ ವಿಷಯಗಳನ್ನು ಬಲವಾಗಿ ಮಂಡಿಸಬೇಕು ಎಂದು ಮನವಿ ಮಾಡಿದ್ದೇನೆ. ಕರ್ನಾಟಕಕ್ಕೆ ಅದರ ಸಂವಿಧಾನಬದ್ಧ ಹಕ್ಕುಗಳಾದ ಸಮಯೋಚಿತ ಅನುಮೋದನೆ, ಭರವಸೆ ನೀಡಿದ ಅನುದಾನ ಹಾಗೂ ನ್ಯಾಯಯುತ ಪಾಲು ದೊರೆಯಬೇಕು. ಯಾವುದೇ ಉಪಕಾರವಾಗಿ ಅಲ್ಲ. ಯಾವುದೇ ರಿಯಾಯಿತಿಯಾಗಿ ಅಲ್ಲ. ಸಂವಿಧಾನಬದ್ಧ ನ್ಯಾಯ ಹಾಗೂ ರಾಷ್ಟ್ರೀಯ ನ್ಯಾಯದ ಭಾಗವಾಗಿ ಕರ್ನಾಟಕಕ್ಕೆ ಸಲ್ಲಬೇಕಾದ ಹಕ್ಕಾಗಿ ದೊರಕಬೇಕು.
ಬಲಿಷ್ಠ ಕರ್ನಾಟಕವೇ ಬಲಿಷ್ಠ ಭಾರತದ ಅಡಿಪಾಯ. -
Dr. G Parameshwara
@DrParameshwara
As an athlete who clocked 10.9 seconds in the 100-metre sprint at the University of Agricultural Sciences, I understand how greatly athletes of our generation would have benefited from professional physiotherapy and sports science support.
Our government will examine measures to make physiotherapy services available at the district level across Karnataka, ensuring athletes receive timely scientific support alongside coaching.
We will also explore establishing dedicated physiotherapy and sports science facilities as part of the proposed ₹5,000-crore redevelopment of Kanteerava Stadium into an international-standard sports complex. This vision can position Bengaluru as a nationally and internationally recognised centre for sports medicine, physiotherapy and athlete rehabilitation.
#physiotherapy -
Dr. G Parameshwara
@DrParameshwara
ಫಿಸಿಯೋಥೆರಪಿ ಇಂದು ಚಿಕಿತ್ಸೆಗೆ ಮಾತ್ರ ಸೀಮಿತವಾಗಿಲ್ಲ; ಆರೋಗ್ಯಕರ ಜೀವನಶೈಲಿ, ರೋಗಗಳ ತಡೆಗಟ್ಟುವಿಕೆ ಮತ್ತು ಕ್ರೀಡಾಪಟುಗಳ ಕಾರ್ಯಕ್ಷಮತೆ ಹೆಚ್ಚಿಸುವಲ್ಲಿ ಇದು ಅತ್ಯಂತ ಪ್ರಮುಖ ಪಾತ್ರ ವಹಿಸುತ್ತಿದೆ. ಈ ಕ್ಷೇತ್ರವನ್ನು ಮತ್ತಷ್ಟು ಉತ್ತೇಜಿಸಿ, ಕರ್ನಾಟಕವನ್ನು ಫಿಸಿಯೋಥೆರಪಿಯ ಶ್ರೇಷ್ಠ ಕೇಂದ್ರವನ್ನಾಗಿ ಬೆಳೆಸುವ ಸಂಕಲ್ಪ ನಮ್ಮದಾಗಿದೆ.
ಕೃಷಿ ವಿಶ್ವವಿದ್ಯಾಲಯದಲ್ಲಿ 100 ಮೀಟರ್ ಓಟವನ್ನು 10.9 ಸೆಕೆಂಡ್ಗಳಲ್ಲಿ ಪೂರ್ಣಗೊಳಿಸಿದ್ದ ಕ್ರೀಡಾಪಟುವಾಗಿ, ನಮ್ಮ ಕಾಲದ ಕ್ರೀಡಾಪಟುಗಳಿಗೆ ವೃತ್ತಿಪರ ಫಿಸಿಯೋಥೆರಪಿ ಮತ್ತು ಕ್ರೀಡಾ ವಿಜ್ಞಾನದ ಬೆಂಬಲ ದೊರೆತಿದ್ದರೆ ಅವರ ಸಾಧನೆಗಳು ಇನ್ನಷ್ಟು ಉನ್ನತ ಮಟ್ಟಕ್ಕೇರಬಹುದಿತ್ತು ಎಂಬ ಅನುಭವ ನನಗಿದೆ.
ಈ ಹಿನ್ನಲೆಯಲ್ಲಿ ಕರ್ನಾಟಕದ ಎಲ್ಲ ಜಿಲ್ಲೆಗಳಲ್ಲೂ ಕ್ರೀಡಾಪಟುಗಳಿಗೆ ಜಿಲ್ಲಾ ಮಟ್ಟದಲ್ಲಿ ಫಿಸಿಯೋಥೆರಪಿ ಸೇವೆಗಳು ಲಭ್ಯವಾಗುವಂತೆ ಹಾಗೂ ತರಬೇತಿಯೊಂದಿಗೆ ವೈಜ್ಞಾನಿಕ ಬೆಂಬಲವೂ ಸಮಯೋಚಿತವಾಗಿ ದೊರೆಯುವಂತೆ ನಮ್ಮ ಸರ್ಕಾರ ಅಗತ್ಯ ಕ್ರಮಗಳನ್ನು ಕೈಗೊಳ್ಳಲಿದೆ.
ಜೊತೆಗೆ ₹5,000 ಕೋಟಿ ವೆಚ್ಚದಲ್ಲಿ ಕಂಠೀರವ ಕ್ರೀಡಾಂಗಣವನ್ನು ಅಂತಾರಾಷ್ಟ್ರೀಯ ಗುಣಮಟ್ಟದ ಕ್ರೀಡಾ ಸಂಕೀರ್ಣವಾಗಿ ಅಭಿವೃದ್ಧಿಪಡಿಸುವ ಪ್ರಸ್ತಾವನೆಯ ಭಾಗವಾಗಿ, ಫಿಸಿಯೋಥೆರಪಿ ಮತ್ತು ಕ್ರೀಡಾ ವಿಜ್ಞಾನಕ್ಕೆ ಮೀಸಲಾದ ಅತ್ಯಾಧುನಿಕ ಸೌಲಭ್ಯಗಳನ್ನು ಸ್ಥಾಪಿಸುವ ಉದ್ದೇಶವನ್ನು ಹೊಂದಿದ್ದೇವೆ.
ಈ ಮಹತ್ವಾಕಾಂಕ್ಷಿ ಯೋಜನೆಯ ಮೂಲಕ ಬೆಂಗಳೂರನ್ನು ಕ್ರೀಡಾ ವೈದ್ಯಕೀಯ, ಫಿಸಿಯೋಥೆರಪಿ ಹಾಗೂ ಕ್ರೀಡಾಪಟುಗಳ ಪುನರ್ವಸತಿ ಕ್ಷೇತ್ರದಲ್ಲಿ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಬಹುದಾದ ಪ್ರಮುಖ ಕೇಂದ್ರವನ್ನಾಗಿ ರೂಪಿಸುವ ಗುರಿ ನಮ್ಮ ಸರ್ಕಾರದ್ದಾಗಿದೆ. -
Dr. G Parameshwara
@DrParameshwara
ಇಂದು ಕೃಷ್ಣರಾಜಪುರ ಆವಲಹಳ್ಳಿಯ ಈಸ್ಟ್ ಪಾಯಿಂಟ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ನಡೆದ 'ಪದವಿ ಪ್ರದಾನ ಸಮಾರಂಭ'ವನ್ನು ಉದ್ಘಾಟಿಸಿ, ಎಂಜಿನಿಯರಿಂಗ್ ಪದವಿ ಪಡೆದ 540 ವಿದ್ಯಾರ್ಥಿಗಳನ್ನು ಅಭಿನಂದಿಸಿ, ಬಳಿಕ ಮಾತನಾಡಿದೆ.
ಯುವಜನತೆಯು ಅವಕಾಶಗಳನ್ನು ಬಯಸುತ್ತಿದ್ದು, ಅವರ ಬೇಡಿಕೆಗಳಿಗೆ ಸರ್ಕಾರ ವಿಳಂಬವಿಲ್ಲದೆ ಸ್ಪಂದಿಸಬೇಕು.
ದೆಹಲಿಯಲ್ಲಿ ನಡೆದ ಪ್ರತಿಭಟನೆಯನ್ನು ಕೇವಲ ಪ್ರತಿಭಟನೆಯಾಗಿ ನೋಡಬಾರದು. ಅವಕಾಶಗಳನ್ನು ಬಯಸುತ್ತಿರುವ ಯುವಜನರ ಬೇಡಿಕೆಗಳ ಪ್ರತಿಬಿಂಬವಾಗಿ ಅರ್ಥೈಸಿಕೊಳ್ಳಬೇಕು. ಯುವಜನರಿಗೆ ಅವಕಾಶಗಳು ಬೇಕು. ನಾವು ಅವರಿಗೆ ತ್ವರಿತವಾಗಿ ಅವಕಾಶಗಳನ್ನು ಒದಗಿಸಬೇಕು. ಈ ವಾಸ್ತವವನ್ನು ನಮ್ಮ ಸರ್ಕಾರ ಅರ್ಥಮಾಡಿಕೊಂಡಿದೆ.
ಸುಮಾರು ಮೂರು ತಿಂಗಳ ಅವಧಿಯಲ್ಲಿ 72,000 ಹುದ್ದೆಗಳ ನೇಮಕಾತಿ ಪ್ರಕ್ರಿಯೆಗೆ ಚಾಲನೆ ನೀಡಿದ್ದೇವೆ. ಇದು ಆರಂಭವಷ್ಟೇ. ಯುವಜನರು ಸದೃಢ ಭಾರತವನ್ನು ನಿರ್ಮಿಸಲು ಮತ್ತು ದೇಶದ ಮುಂದಿರುವ ಸವಾಲುಗಳನ್ನು ಎದುರಿಸಲು ಅವಕಾಶಗಳನ್ನು ಒದಗಿಸಬೇಕು. ಅವಕಾಶಗಳು ಅನೇಕ ಇವೆ. ಆದರೆ, ಭವಿಷ್ಯದಲ್ಲಿ ಸವಾಲುಗಳೂ ಹೆಚ್ಚಿರಲಿವೆ. ನೀವು ಉತ್ತಮವಾಗಿ ಕಾರ್ಯನಿರ್ವಹಿಸಿ, ಮುಂದಿನ ಸವಾಲುಗಳನ್ನು ಎದುರಿಸಲು ನಿಮ್ಮನ್ನು ನೀವೇ ಸಜ್ಜುಗೊಳಿಸಿಕೊಳ್ಳಬೇಕು.
ಶ್ರೀ ಸಿದ್ಧಾರ್ಥ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ಮತ್ತು ಈಸ್ಟ್ ಪಾಯಿಂಟ್ ಶಿಕ್ಷಣ ಸಂಸ್ಥೆಗಳ ನಡುವೆ ಹಲವು ಸಾಮ್ಯತೆಗಳಿವೆ. ನನ್ನ ತಂದೆ 1959ರಲ್ಲಿ ಗ್ರಾಮವೊಂದರಲ್ಲಿ ಸಣ್ಣ ಶಾಲೆಯನ್ನು ಆರಂಭಿಸಿದ್ದು, ಇಂದು ಆ ಶಿಕ್ಷಣ ಸಂಸ್ಥೆಯು ಎರಡು ವೈದ್ಯಕೀಯ ಕಾಲೇಜುಗಳು, ಎರಡು ಎಂಜಿನಿಯರಿಂಗ್ ಕಾಲೇಜುಗಳು, ಒಂದು ದಂತ ವೈದ್ಯಕೀಯ ಕಾಲೇಜು ಸೇರಿದಂತೆ ಸುಮಾರು 100 ಶಿಕ್ಷಣ ಸಂಸ್ಥೆಗಳಾಗಿ ಬೆಳೆದಿದೆ.
ಶಿಕ್ಷಣ ಸಂಸ್ಥೆಗಳನ್ನು ಹುಟ್ಟುಹಾಕಿ ಯುವಜನರಿಗೆ ಶೈಕ್ಷಣಿಕ ಅವಕಾಶಗಳನ್ನು ಸೃಷ್ಟಿಸುತ್ತಿರುವ ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ಬದ್ಧತೆಯಿಂದ ಕಾರ್ಯನಿರ್ವಹಿಸುತ್ತಿರುವ ಎಸ್.ವಿ. ಪ್ರಮೋದ್ ಗೌಡ ಮತ್ತು ಎಸ್.ವಿ. ರಾಜೀವ್ ಗೌಡ ಅವರಿಗೆ ಅಭಿನಂದನೆಗಳು. ದುಬೈನಲ್ಲಿ ಎರಡು ಶಾಲೆಗಳನ್ನು ಯಶಸ್ವಿಯಾಗಿ ನಡೆಸುತ್ತಿರುವ ಸಂಸ್ಥೆಯ ಕಾರ್ಯವನ್ನು ಶ್ಲಾಘಿಸುತ್ತೇನೆ.
ನಾನು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ಪದವಿ ಮತ್ತು ಸ್ನಾತಕೋತ್ತರ ಪದವಿ ಪೂರ್ಣಗೊಳಿಸಿದ ಬಳಿಕ ಡಾಕ್ಟರೇಟ್ಗಾಗಿ ಆಸ್ಟ್ರೇಲಿಯಾದ ಅಡಿಲೇಡ್ಗೆ ತೆರಳಿದೆ. ಆಗ ಅಲ್ಲಿನ ವಿಶ್ವವಿದ್ಯಾಲಯವು ಭಾರತದ ಸ್ನಾತಕೋತ್ತರ ಪದವಿಯನ್ನು ಸಮಾನ ಪದವಿಯಾಗಿ ಪರಿಗಣಿಸದ ಕಾರಣ, ಪಿಎಚ್ಡಿಗೆ ನೋಂದಾಯಿಸಿಕೊಳ್ಳುವ ಮೊದಲು ಮತ್ತೊಂದು ವರ್ಷ ಸ್ನಾತಕೋತ್ತರ ಅಧ್ಯಯನ ಮಾಡಬೇಕಾಯಿತು.
ಅಂದಿನ ಪರಿಸ್ಥಿತಿ ಹಾಗಿತ್ತು. ಇಂದು ಭಾರತದಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣದಿಂದ ಹಿಡಿದು ಉನ್ನತ, ತಾಂತ್ರಿಕ ಹಾಗೂ ವೈದ್ಯಕೀಯ ಶಿಕ್ಷಣದವರೆಗಿನ ಗುಣಮಟ್ಟವನ್ನು ವಿಶ್ವದ ಯಾವುದೇ ವಿಶ್ವವಿದ್ಯಾಲಯಗಳ ಗುಣಮಟ್ಟಕ್ಕೆ ಹೋಲಿಸಬಹುದಾಗಿದೆ. ಭಾರತೀಯ ಪದವೀಧರರು, ವಿಶೇಷವಾಗಿ ತಂತ್ರಜ್ಞಾನ ಮತ್ತು ವೈದ್ಯಕೀಯ ಕ್ಷೇತ್ರಗಳಲ್ಲಿ ಜಾಗತಿಕವಾಗಿ ಅತ್ಯುತ್ತಮ ಸಾಧನೆ ಮಾಡುತ್ತಿದ್ದಾರೆ. ಕಳೆದ 25 ವರ್ಷಗಳಲ್ಲಿ ಈ ಮಹತ್ವದ ಪರಿವರ್ತನೆ ನಡೆದಿದೆ.
ಭಾರತದಲ್ಲಿ ಶಿಕ್ಷಣ ಪಡೆದಿರುವುದರ ಬಗ್ಗೆ ವಿದ್ಯಾರ್ಥಿಗಳು ಹೆಮ್ಮೆಪಡಬೇಕು. ಭೌತಶಾಸ್ತ್ರ, ಗಣಿತ, ಅರ್ಥಶಾಸ್ತ್ರ, ಎಂಜಿನಿಯರಿಂಗ್ ಮತ್ತು ವೈದ್ಯಕೀಯ ಸೇರಿದಂತೆ ವಿವಿಧ ವಿಷಯಗಳನ್ನು ವಿಶ್ವದ ಪ್ರಮುಖ ವಿಶ್ವವಿದ್ಯಾಲಯಗಳಿಗೆ ಸಮಾನವಾದ ಗುಣಮಟ್ಟದಲ್ಲಿ ಬೋಧಿಸಲಾಗುತ್ತಿದೆ.
ನಾನು 1980ರಲ್ಲಿ ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ನಡೆದ ಅಂತಾರಾಷ್ಟ್ರೀಯ ಸಸ್ಯಶಾಸ್ತ್ರ ಸಮಾವೇಶದಲ್ಲಿ ಪಾಲ್ಗೊಂಡಿದ್ದೆ. ಆಹಾರ ಧಾನ್ಯ ಉತ್ಪಾದನೆಯಲ್ಲಿ ಭಾರತ ಸ್ವಾವಲಂಬನೆ ಸಾಧಿಸಿದ ದೇಶವೆಂಬ ಮಾನ್ಯತೆ ಪಡೆದ ಕ್ಷಣಕ್ಕೆ ನಾನು ಸಾಕ್ಷಿಯಾಗಿದ್ದೆ. 1960ರ ದಶಕದಲ್ಲಿ ಆಹಾರದ ಕೊರತೆ ಮತ್ತು ಬರಗಾಲದಂತಹ ಪರಿಸ್ಥಿತಿಯನ್ನು ಎದುರಿಸಿದ್ದ ಭಾರತವು ಕೃಷಿ ವಿಜ್ಞಾನಿಗಳು ಮತ್ತು ರೈತರ ಪ್ರಯತ್ನದಿಂದ ಎರಡು ದಶಕಗಳಲ್ಲೇ ಆಹಾರ ಧಾನ್ಯಗಳಲ್ಲಿ ಸ್ವಾವಲಂಬನೆ ಸಾಧಿಸಿತು.
ಕೃಷಿ ವಿಜ್ಞಾನಿಗಳು ಹೊಸ ಬೆಳೆ ತಳಿಗಳನ್ನು ಅಭಿವೃದ್ಧಿಪಡಿಸಿ, ಸುಧಾರಿತ ಕೃಷಿ ವಿಧಾನಗಳನ್ನು ಪರಿಚಯಿಸಿದರು. ರೈತರು ಅವುಗಳನ್ನು ದೊಡ್ಡ ಪ್ರಮಾಣದಲ್ಲಿ ಅಳವಡಿಸಿಕೊಂಡ ಕಾರಣ, ಆಹಾರ ಧಾನ್ಯ ಉತ್ಪಾದನೆಯಲ್ಲಿ ಭಾರತ ಸ್ವಾವಲಂಬನೆ ಸಾಧಿಸಲು ಕಾರಣವಾಯಿತು.
ತಂತ್ರಜ್ಞಾನದ ಬೆಳವಣಿಗೆ ಭಾರತವನ್ನು ವಿಶ್ವದ ಪ್ರಮುಖ ನುರಿತ ಮಾನವ ಸಂಪನ್ಮೂಲ ಮತ್ತು ಸೇವಾ ಪೂರೈಕೆದಾರ ರಾಷ್ಟ್ರಗಳಲ್ಲಿ ಒಂದಾಗಿ ರೂಪಿಸಿದೆ. ದೇಶದಲ್ಲಿ ಸುಮಾರು 6,000 ಎಂಜಿನಿಯರಿಂಗ್ ಕಾಲೇಜುಗಳಿದ್ದು, ಪ್ರತಿವರ್ಷ ಸುಮಾರು 15 ಲಕ್ಷ ವಿದ್ಯಾರ್ಥಿಗಳು ಪ್ರವೇಶ ಪಡೆಯುತ್ತಾರೆ ಮತ್ತು ಸುಮಾರು 10 ಲಕ್ಷ ಎಂಜಿನಿಯರಿಂಗ್ ಪದವೀಧರರಾಗಿ ಹೊರಹೊಮ್ಮುತ್ತಿದ್ದಾರೆ. ಬೇರೆ ಯಾವುದೇ ದೇಶದಲ್ಲಿ ಇಷ್ಟು ದೊಡ್ಡ ಪ್ರಮಾಣದಲ್ಲಿ ಎಂಜಿನಿಯರಿಂಗ್ ಪದವಿ ಪಡೆದು ಹೊರಬರುವುದಿಲ್ಲ. ಸಾಫ್ಟ್ವೇರ್, ಮೆಕ್ಯಾನಿಕಲ್, ಎಲೆಕ್ಟ್ರಾನಿಕ್ಸ್ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿಯೂ ಭಾರತೀಯ ಎಂಜಿನಿಯರ್ಗಳು ವಿಶ್ವದಾದ್ಯಂತ ಕಾರ್ಯನಿರ್ವಹಿಸುತ್ತಿದ್ದಾರೆ.
ಮಾಹಿತಿ ತಂತ್ರಜ್ಞಾನ ಸೇವಾ ಕ್ಷೇತ್ರದಲ್ಲಿ ಭಾರತ ಜಾಗತಿಕ ನಾಯಕನಾಗಿ ಹೊರಹೊಮ್ಮಿದ್ದು, ಈ ಬೆಳವಣಿಗೆಯಲ್ಲಿ ಬೆಂಗಳೂರು ಮಹತ್ವದ ಪಾತ್ರ ವಹಿಸಿದೆ. ಬೆಂಗಳೂರಿನಲ್ಲಿರುವ ಬಹುರಾಷ್ಟ್ರೀಯ ಕಂಪನಿಗಳು ಭಾರತೀಯ ಯುವಜನರಿಗೆ ಉದ್ಯೋಗ ನೀಡುವುದಷ್ಟೇ ಅಲ್ಲದೆ, ವಿಶ್ವದ ವಿವಿಧ ರಾಷ್ಟ್ರಗಳಿಗೆ ತಂತ್ರಜ್ಞಾನ ಮತ್ತು ಸೇವೆಗಳನ್ನು ಒದಗಿಸುತ್ತಿವೆ.
ಸ್ಟಾರ್ಟ್ಅಪ್ಗಳನ್ನು ಉತ್ತೇಜಿಸುವಲ್ಲಿ ಹಾಗೂ ವಿದ್ಯಾರ್ಥಿಗಳು ಕಲಿತ ಜ್ಞಾನವನ್ನು ಪ್ರಾಯೋಗಿಕವಾಗಿ ಬಳಸಲು ಅವಕಾಶಗಳನ್ನು ಸೃಷ್ಟಿಸುವಲ್ಲಿ ಕರ್ನಾಟಕ ಮುಂಚೂಣಿಯಲ್ಲಿದೆ. ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಜಾರಿಗೊಳಿಸಲಾಗುತ್ತಿರುವ ವಿಜ್ಞಾನ ಮತ್ತು ತಂತ್ರಜ್ಞಾನ ಉದ್ಯಮಿಗಳ ಪಾರ್ಕ್ಗಳ (Science and Technology Entrepreneurs Park–STEP) ಉಪಕ್ರಮಗಳು ಯುವಜನರ ಆಲೋಚನೆಗಳನ್ನು ತಂತ್ರಜ್ಞಾನ ಮತ್ತು ಯಶಸ್ವಿ ಉದ್ಯಮಗಳಾಗಿ ರೂಪಿಸಲು ಸಹಕಾರಿಯಾಗಿವೆ.
ದೇಶದ ಸ್ಟಾರ್ಟ್ಅಪ್ ಪರಿಸರ ವ್ಯವಸ್ಥೆಯಲ್ಲಿ ಕರ್ನಾಟಕ ಮೊದಲ ಸ್ಥಾನದಲ್ಲಿದೆ. ಯುವಜನರು ತಮ್ಮ ಆಲೋಚನೆಗಳು ಮತ್ತು ಪರಿಕಲ್ಪನೆಗಳನ್ನು ಪ್ರಾಯೋಗಿಕ ತಂತ್ರಜ್ಞಾನಗಳಾಗಿ ಪರಿವರ್ತಿಸುತ್ತಿದ್ದಾರೆ. ಅಂತಹ ಹಲವು ತಂತ್ರಜ್ಞಾನಗಳನ್ನು ಪ್ರಮುಖ ಕಂಪನಿಗಳು ಲಕ್ಷಾಂತರ ಡಾಲರ್ಗಳಿಗೆ ಖರೀದಿಸಿವೆ. ಬೆಂಗಳೂರು ಮತ್ತು ಕರ್ನಾಟಕದಿಂದ ದೊಡ್ಡ ಪ್ರಮಾಣದಲ್ಲಿ ತಂತ್ರಜ್ಞಾನ ವರ್ಗಾವಣೆ ನಡೆಯುತ್ತಿದೆ.
ಕರ್ನಾಟಕದ ಶಿಕ್ಷಣ ಸಂಸ್ಥೆಗಳು, ಭಾರತೀಯ ತಂತ್ರಜ್ಞಾನ ಸಂಸ್ಥೆಗಳು (IITs) ಹಾಗೂ ರಾಜ್ಯದ ಸಾಮಾನ್ಯ ಎಂಜಿನಿಯರಿಂಗ್ ಕಾಲೇಜುಗಳಲ್ಲಿ ವ್ಯಾಸಂಗ ಮಾಡಿದ ಅನೇಕ ಭಾರತೀಯರು ಇಂದು ಜಾಗತಿಕ ಕಂಪನಿಗಳ ಮುಖ್ಯಸ್ಥರಾಗಿದ್ದಾರೆ. ಭಾರತದ ಶಿಕ್ಷಣ ವ್ಯವಸ್ಥೆ, ವಿಶೇಷವಾಗಿ ಕರ್ನಾಟಕದ ಶಿಕ್ಷಣ ವ್ಯವಸ್ಥೆ ಇಂದು ವಿಶ್ವಕ್ಕೆ ನೀಡುತ್ತಿರುವ ಕೊಡುಗೆ ಇದು.
ಸೆಮಿಕಂಡಕ್ಟರ್ ಕ್ಷೇತ್ರದ ಅಭಿವೃದ್ಧಿಗೆ ನಮ್ಮ ಸರ್ಕಾರವು ದೊಡ್ಡ ಮಟ್ಟದಲ್ಲಿ ಉತ್ತೇಜನ ನೀಡುತ್ತಿದೆ. ಬೆಂಗಳೂರು, ತುಮಕೂರು, ಮೈಸೂರು, ಮಂಗಳೂರು ಸೇರಿದಂತೆ ರಾಜ್ಯದ ವಿವಿಧ ನಗರಗಳಲ್ಲಿ ಘಟಕಗಳನ್ನು ಸ್ಥಾಪಿಸಲು ಭೂಮಿ ನೀಡುವಂತೆ ವಿಶ್ವದ ಹಲವು ಕಂಪನಿಗಳು ಸರ್ಕಾರವನ್ನು ಸಂಪರ್ಕಿಸುತ್ತಿವೆ. ಕರ್ನಾಟಕದಲ್ಲಿ ಹೆಚ್ಚು ಪ್ರತಿಭಾವಂತರು ಇರುವುದರಿಂದ ಎರಡನೇ ಹಂತದ ನಗರಗಳಲ್ಲಿಯೂ ಸಹ ಹೂಡಿಕೆ ಮಾಡಲು ಕಂಪನಿಗಳು ಸಿದ್ಧವಾಗಿವೆ. ಪದವೀಧರರಾದ ನೀವೂ ಈ ಪ್ರತಿಭಾ ಸಂಪನ್ಮೂಲದ ಭಾಗವಾಗಿದ್ದೀರಿ. ನಿಮಗೆ ಉತ್ತಮ ಗುಣಮಟ್ಟದ ಶಿಕ್ಷಣ ದೊರೆತಿದ್ದು, ಅತ್ಯುತ್ತಮ ಕೋರ್ಸ್ಗಳನ್ನು ಅಧ್ಯಯನ ಮಾಡಿದ್ದೀರಿ.
ಲೆಕ್ಕಾಚಾರ, ಸಂಶೋಧನೆ, ಸಮಸ್ಯೆಗಳ ಪರಿಹಾರ ಮತ್ತು ನಿರ್ಧಾರ ಕೈಗೊಳ್ಳುವ ವಿಧಾನಗಳನ್ನು ಎಐ ಸಂಪೂರ್ಣವಾಗಿ ಪರಿವರ್ತಿಸಲಿದೆ. ಪದವೀಧರರು ಇಂತಹ ತಾಂತ್ರಿಕ ಬದಲಾವಣೆಗಳನ್ನು ಎದುರಿಸಲು ಮಾತ್ರವಲ್ಲದೆ, ಅವುಗಳಲ್ಲಿ ಸಕ್ರಿಯವಾಗಿ ಭಾಗವಹಿಸಲು ಸಹ ಸಜ್ಜಾಗಬೇಕು.
ರಕ್ಷಣೆ ಮತ್ತು ಅಂತರಿಕ್ಷ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಭಾರತ ಮಹತ್ವದ ಪ್ರಗತಿ ಸಾಧಿಸಿದ್ದು, ಇತರೆ ದೇಶಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಿಕೊಂಡಿದೆ. ಭೂಸೇನೆ, ನೌಕಾಪಡೆ ಮತ್ತು ವಾಯುಪಡೆಯಲ್ಲಿನ ವೃದ್ಧಿಸುತ್ತಿರುವ ಸಾಮರ್ಥ್ಯಗಳ ಜೊತೆಗೆ, ಅನೇಕ ಉಪಗ್ರಹಗಳನ್ನು ಉಡಾವಣೆ ಮಾಡಿರುವ ಹಾಗೂ ಅಂತರಿಕ್ಷ ಸಂಶೋಧನೆಯನ್ನು ಮುಂದುವರಿಸಿರುವ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ISRO) ಸಾಧನೆಗಳು ಅಗಣ್ಯ.
ವೈಮಾನಿಕ ಮತ್ತು ಅಂತರಿಕ್ಷ ತಂತ್ರಜ್ಞಾನ, ಉಪಗ್ರಹ ಉಡಾವಣೆ ಹಾಗೂ ಅದಕ್ಕೆ ಸಂಬಂಧಿಸಿದ ಹಲವು ಸೇವೆಗಳನ್ನು ಇಂದು ಭಾರತವೇ ಅಭಿವೃದ್ಧಿಪಡಿಸಿ, ನಿರ್ವಹಿಸಿ, ವಿಶ್ವಕ್ಕೆ ಒದಗಿಸುತ್ತಿದೆ. ಈ ತಾಂತ್ರಿಕ ಪಯಣ ಭಾರತವನ್ನು ವಿಶ್ವದ ಪ್ರಮುಖ ರಾಷ್ಟ್ರಗಳ ಸಾಲಿಗೆ ಕೊಂಡೊಯ್ದಿದೆ. ಇದರ ಬಗ್ಗೆ ನಾವೆಲ್ಲರೂ ಹೆಮ್ಮೆಪಡಬೇಕು ಮತ್ತು ಈ ಪ್ರಗತಿಯ ಭಾಗವಾಗಬೇಕು.
ಒಂದು ಕಾಲದಲ್ಲಿ ಬಡ ರಾಷ್ಟ್ರವೆಂದು ಪರಿಗಣಿಸಲ್ಪಡುತ್ತಿದ್ದ ಭಾರತ ಇಂದು ವಿಶ್ವದ ನಾಲ್ಕನೇ ಅತಿದೊಡ್ಡ ಆರ್ಥಿಕತೆಯಾಗಿ ಹೊರಹೊಮ್ಮಿದೆ. ಆದರೆ ಆರ್ಥಿಕ ಅಸಮಾನತೆ ಮತ್ತು ಬಡತನ ಇನ್ನೂ ಗಂಭೀರ ಸವಾಲುಗಳಾಗಿ ಉಳಿದಿವೆ.
ನಮ್ಮ ತಂತ್ರಜ್ಞಾನ ಮತ್ತು ಶಿಕ್ಷಣ ವ್ಯವಸ್ಥೆ ಅಭಿವೃದ್ಧಿಯಾಗಿದೆ. ಆದರೆ ದೇಶದ ದೊಡ್ಡ ಪ್ರಮಾಣದ ಜನಸಂಖ್ಯೆ ಇನ್ನೂ ಬಡತನ ರೇಖೆಗಿಂತ ಕೆಳಗಿದೆ. ನಾವು ಇನ್ನೂ ಸಂಪೂರ್ಣ ಸಮಾನತೆಯನ್ನು ಸಾಧಿಸಿಲ್ಲ. ಈ ಸವಾಲನ್ನು ತ್ವರಿತವಾಗಿ ಪರಿಹರಿಸಬೇಕು.
ಭಾರತದ ಜನಸಂಖ್ಯೆಯ ಸುಮಾರು ಶೇ 60ರಷ್ಟು ಮಂದಿ 40 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದಾರೆ. ದೇಶವು ತನ್ನ ಯುವಜನರಿಗೆ ಅಗತ್ಯ ಅವಕಾಶಗಳನ್ನು ಸೃಷ್ಟಿಸಬೇಕು.
ಭಾರತವು ಇತರರೊಂದಿಗೆ ಸರಿಸಮನಾಗಿ ಹೆಜ್ಜೆಹಾಕಲಿಕ್ಕೆ ಮಾತ್ರವೇ ಪ್ರಯಾಸಪಡದೆ ತಾನೇ ಮುಂಚೂಣಿ ನಾಯಕನಾಗಿ ಹೊರಹೊಮ್ಮಬೇಕು. ದೇಶವನ್ನು ಸಶಕ್ತವಾಗಿ ನಿರ್ಮಿಸಲು ಹಾಗೂ ದೇಶದ ಮುಂದಿರುವ ಸವಾಲುಗಳನ್ನು ಪರಿಹರಿಸಲು ಯುವಜನತೆಗೆ ಅವಕಾಶಗಳನ್ನು ನೀಡಬೇಕು.
ಸಮಾರಂಭದಲ್ಲಿ ವಿಧಾನ ಪರಿಷತ್ ಸದಸ್ಯರಾದ ಡಾ. ಕೆ.ಗೋವಿಂದರಾಜು, ಈಸ್ಟ್ ಪಾಯಿಂಟ್ ಸಮೂಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಆರ್.ಎಲ್.ರಮಾದೇವಿ ವೆಂಕಟಪತಿ, ಸಿಇಒ ಎಸ್.ವಿ.ಪ್ರಮೋದ್ ಗೌಡ, ಎಸ್.ವಿ.ರಾಜೀವ್ ಗೌಡ ಮುಂತಾದವರು ಉಪಸ್ಥಿತರಿದ್ದರು. -
Dr. G Parameshwara
@DrParameshwara
Today, I inaugurated the graduation ceremony at East Point College of Engineering in Avalahalli, Krishnarajapuram, and addressed 540 engineering graduates.
I congratulated the graduates on completing an important stage in their lives and wished them success in their careers.
The world is changing rapidly, and while opportunities are expanding, the challenges ahead are equally significant. Our young graduates must be prepared not only to face these changes but also to lead them.
India’s education system has undergone a remarkable transformation. When I went to Adelaide, Australia, for my doctorate, my master’s degree from India was not recognised as equivalent, and I had to complete another year of postgraduate study before registering for a PhD. Today, Indian education - from primary and secondary schooling to technical, medical and higher education - is comparable with leading institutions across the world.
Indian graduates are excelling globally, particularly in technology and medicine. India has nearly 6,000 engineering colleges, admitting around 15 lakh students and producing nearly 10 lakh engineering graduates every year. No other country produces engineers on this scale.
India has emerged as a global leader in information technology (IT) services, with Bengaluru and Karnataka playing a major role. Multinational companies based here are not only creating jobs for our youth but also delivering technology and services to the world.
Karnataka is also leading the country’s start-up ecosystem. Through initiatives such as the Science and Technology Entrepreneurs Park (STEP) in engineering colleges, young people are converting their ideas into practical technologies and successful enterprises. Several technologies developed by our youth have been acquired by major global companies.
We are now promoting emerging sectors such as semiconductors. Companies from across the world are approaching Karnataka to establish facilities not only in Bengaluru but also in Tumakuru, Mysuru, Mangaluru and other cities because our State offers an exceptional talent pool.
Artificial intelligence, semiconductors, defence, aerospace and space technology will shape the future. India has made significant progress in all these areas, reducing its dependence on other countries and emerging as a leading technological nation. Our graduates must prepare themselves to participate in this transformation.
At the same time, technological and economic progress must translate into opportunities for everyone. India may have emerged as the world’s fourth-largest economy, but poverty and inequality continue to remain serious challenges.
Nearly 60% of our population is below the age of 40. The recent protests in Delhi should not be viewed merely as protests - they reflect the aspirations of young people seeking opportunities. The message is clear: our youth need opportunities, and governments must provide them quickly.
Our Government has already begun the recruitment process for 72,000 posts within about three months. This is not the end; it is only the beginning. We must provide our youth with opportunities to build a stronger India and meet the challenges of a rapidly changing world.
India must no longer remain a country that merely catches up with others. We must become a front-runner in education, technology and innovation.
Member of the Legislative Council Dr. K. Govindaraj, East Point Group of Institutions Chairperson R.L. Ramadevi Venkatapathi, CEO S.V. Pramod Gowda, S.V. Rajeev Gowda and others were present. -
Dr. G Parameshwara
@DrParameshwara
ಇಂದು ಸದಾಶಿವನಗರದ ನಿವಾಸದ ಬಳಿ ಮಾಧ್ಯಮದವರೊಂದಿಗೆ ಮಾತನಾಡಿದೆ.
ರಾಜ್ಯದಲ್ಲಿ ಬರ ಪರಿಸ್ಥಿತಿ ಬಹಳ ಗಂಭೀರವಾಗಿದೆ. ಈ ನಿಟ್ಟಿನಲ್ಲಿ ಚರ್ಚಿಸಲು ಮುಖ್ಯಮಂತ್ರಿಗಳು ಇಂದು ಸಂಜೆ ದೆಹಲಿಯಲ್ಲಿ ರಾಜ್ಯದ ಲೋಕಸಭಾ ಮತ್ತು ರಾಜ್ಯಸಭಾ ಸದಸ್ಯರ ಸಭೆ ಕರೆದಿದ್ದಾರೆ. ಜೊತೆಗೆ ಕೇಂದ್ರದಲ್ಲಿ ಬಾಕಿ ಇರುವ ರಾಜ್ಯದ ಪ್ರಸ್ತಾವನೆಗಳು ಹಾಗೂ ರಾಜ್ಯದ ಅಭಿವೃದ್ಧಿಗೆ ಸಹಕಾರ ಪಡೆಯುವುದಕ್ಕೆ ಸಂಬಂಧಿಸಿದಂತೆಯೂ ಚರ್ಚೆಗಳು ನಡೆಯಲಿದೆ.
ಬರ ಪರಿಸ್ಥಿತಿಯ ಸಮರ್ಥ ನಿರ್ವಹಣೆಗೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ನಮ್ಮ ಸರ್ಕಾರವು ಈಗಾಗಲೇ ಅನೇಕ ಚರ್ಚೆಗಳನ್ನು ಮಾಡಿದೆ. ಈ ಮಧ್ಯೆ ಪ್ರಧಾನಮಂತ್ರಿಗಳು, ಗೃಹ ಸಚಿವರು ಮತ್ತು ಕೃಷಿ ಸಚಿವರಿಗೆ ನಾನು ಪತ್ರವನ್ನು ಬರೆದಿದ್ದೇನೆ. ಮುಖ್ಯಮಂತ್ರಿಗಳು ಕೂಡ ಪ್ರಧಾನಮಂತ್ರಿಗಳಿಗೆ ಪತ್ರ ಬರೆದಿದ್ದಾರೆ. ಈವರೆಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.
ರಾಜ್ಯದ ಅನೇಕ ಯೋಜನೆಗಳ ಬಗ್ಗೆಯೂ ಪ್ರಸ್ತಾವನೆಗಳನ್ನು ಕೇಂದ್ರಕ್ಕೆ ಸಲ್ಲಿಸಿದ್ದೇವೆ. ಅದರ ಬಗ್ಗೆಯೂ ನಮ್ಮ ರಾಜ್ಯದ ಪ್ರತಿನಿಧಿಗಳಲ್ಲಿ ಚರ್ಚೆ ಮಾಡಿ, ಸಂಬಂಧಪಟ್ಟ ಸಚಿವರುಗಳಲ್ಲಿ ಮಾತನಾಡಿ ಮಂಜೂರು ಮಾಡಿಸಿಕೊಡಲು ಪ್ರಯತ್ನಿಸುವ ಬಗ್ಗೆಯೂ ಇಂದಿನ ಸಭೆಯಲ್ಲಿ ಚರ್ಚೆಯಾಗಲಿದೆ.
ನಾನು ಮತ್ತು ಮುಖ್ಯಮಂತ್ರಿಗಳು ಈಗಾಗಲೇ ನಮ್ಮ ರಾಜ್ಯದಿಂದ ಹೋಗಿರುವ ಅಧಿಕಾರಿಗಳನ್ನು ದೆಹಲಿಯಲ್ಲಿ ಭೇಟಿಯಾಗಿ ಸಭೆ ನಡೆಸಿ ಚರ್ಚಿಸಿದ್ದೇವೆ. ಅವಶ್ಯ ಬಿದ್ದಲ್ಲಿ ಅವರ ಸಹಾಯವನ್ನು ಪಡೆದುಕೊಳ್ಳುತ್ತೇವೆ.
ಸಂಸತ್ತಿನಲ್ಲಿ ಬರದ ಬಗ್ಗೆ ಪ್ರಸ್ತಾಪಿಸುವಂತೆ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಮನವಿ ಸಲ್ಲಿಸುತ್ತೀರ ಎಂಬ ಮಾಧ್ಯಮದ ಪ್ರಶ್ನೆಗೆ ಪ್ರತಿಕ್ರಿಯಿಸಿ, ಸಂಸತ್ತಿನಲ್ಲಿ ಅಥವಾ ಗೃಹ ಸಚಿವರು ಅಥವಾ ಕೃಷಿ ಸಚಿವರಲ್ಲಿ ಪ್ರತ್ಯೇಕವಾಗಿ ಅವರು ಮಾತನಾಡಬಹುದು. ರಾಜ್ಯಕ್ಕೆ ಸಹಾಯ ಹಸ್ತ ಚಾಚುವಂತೆ ಕೇಂದ್ರಕ್ಕೆ ಪ್ರಸ್ತಾಪ ಮಾಡುವಂತೆ ಮನವಿ ಮಾಡುತ್ತೇವೆ.
ಇಂದಿನ ಸಭೆಯಲ್ಲಿ ಸಚಿವ ಸಂಪುಟ ವಿಸ್ತರಣೆಯ ಬಗ್ಗೆಯೂ ಚರ್ಚೆ ನಡೆಯುವ ಸಾಧ್ಯತೆ ಇದೆ. ಅನುಮತಿ ಸಿಕ್ಕಿದರೆ ಸಚಿವ ಸಂಪುಟ ವಿಸ್ತರಣೆಯಾಗಬಹುದು.
The drought situation in Karnataka is extremely serious. To discuss the issue, the Chief Minister has convened a meeting of the State’s Lok Sabha and Rajya Sabha members in Delhi this evening. The meeting will also discuss proposals from Karnataka pending before the Union Government and ways to secure greater cooperation for the State’s development.
Our Government has already held several discussions on the measures required for effective drought management. I have written to the Prime Minister, the Union Home Minister and the Union Agriculture Minister, while the Chief Minister has also written to the Prime Minister. However, no response has been received so far.
Proposals relating to several projects in Karnataka have also been submitted to the Union Government. At today’s meeting, we will discuss how our representatives can take up these matters with the concerned Union Ministers and help secure the necessary approvals.
The Chief Minister and I have already met officials from Karnataka serving in Delhi and held discussions with them. We will seek their assistance whenever required.
Asked whether AICC President Shri Mallikarjun Kharge would be requested to raise the drought situation in Parliament, I said we would request him to raise the matter either in Parliament or directly with the Union Home Minister and the Union Agriculture Minister, and urge the Centre to extend all necessary assistance to Karnataka.
The possibility of Cabinet expansion may also be discussed at today’s meeting. If approval is received, the Cabinet may be expanded. -
Dr. G Parameshwara
@DrParameshwara
ಅಜಾತ ಶತ್ರು, ಅಭಿವೃದ್ಧಿಯ ಹರಿಕಾರರು, ಮಾಜಿ ಮುಖ್ಯಮಂತ್ರಿಗಳಾದ ಧರಂ ಸಿಂಗ್ ಅವರ ಪುಣ್ಯಸ್ಮರಣೆಯಂದು ನನ್ನ ನಮನಗಳು. ದೀನದಲಿತರ ಏಳಿಗೆ ಮತ್ತು ರಾಜ್ಯದ ಸಮಗ್ರ ಅಭಿವೃದ್ಧಿಗಾಗಿ ನಿಸ್ವಾರ್ಥ ಸೇವೆ ಸಲ್ಲಿಸಿದ ಅವರ ನಡೆ ನಮ್ಮಂತಹ ನಾಯಕರಿಗೆ ಅನುಕರಣೀಯ.
ವಿಶೇಷವಾಗಿ ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ಧಿಗೆ ತಮ್ಮ ದೂರದೃಷ್ಟಿಯ ನಾಯಕತ್ವ ಮತ್ತು ಜನಪರ ಆಡಳಿತದ ಮೂಲಕ ಅಪಾರ ಕೊಡುಗೆ ನೀಡಿದ ಅವರ ಸೇವೆ ಸದಾ ಸ್ಮರಣೀಯ. ಅವರ ಆದರ್ಶಗಳು ಮತ್ತು ಜನಸೇವೆಯ ಬದ್ಧತೆ ನಮಗೆಲ್ಲರಿಗೂ ಸದಾ ಸ್ಫೂರ್ತಿದಾಯಕ. -
Dr. G Parameshwara
@DrParameshwara
Today, on CRPF Foundation Day, we pay tribute to the unwavering courage, discipline and selfless service of the brave personnel of the Central Reserve Police Force.
Their steadfast commitment to protecting the nation, often under the most challenging circumstances, is a source of pride and inspiration for every Indian. -
Dr. G Parameshwara
@DrParameshwara
ಭಾರತ ರತ್ನ ಪುರಸ್ಕೃತ, ಮಾಜಿ ರಾಷ್ಟ್ರಪತಿ, ಶ್ರೇಷ್ಠ ವಿಜ್ಞಾನಿ ಹಾಗೂ ಮಿಸೈಲ್ ಮ್ಯಾನ್ ಎಂದೇ ಖ್ಯಾತರಾದ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಅವರ ಪುಣ್ಯಸ್ಮರಣೆಯಂದು ನನ್ನ ಗೌರವಪೂರ್ವಕ ನಮನಗಳು.
ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರಗಳಿಗೆ ಅವರು ನೀಡಿದ ಕೊಡುಗೆ, ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ರೂಪಿಸುವ ಅವರ ದೂರದೃಷ್ಟಿಯ ನಾಯಕತ್ವ ಅವಿಸ್ಮರಣೀಯ.
ಅವರ ಆದರ್ಶಗಳು ಮತ್ತು ಮೌಲ್ಯಗಳು ಮುಂದಿನ ಪೀಳಿಗೆಗೂ ಸದಾ ಪ್ರೇರಣೆಯಾಗಲಿ.
#apjabdulkalam -
Dr. G Parameshwara
@DrParameshwara
ಬೆಂಗಳೂರಿನ ಐಟಿಸಿ ಗಾರ್ಡೇನಿಯಾದಲ್ಲಿ ಇಂದು ನಡೆದ ಬೆಂಗಳೂರು ಫಿಸಿಯೋಥೆರಪಿಸ್ಟ್ಸ್ ನೆಟ್ವರ್ಕ್ (BPN) ಕೊಲೋಕ್ವಿಯಂ–2026 ಕಾರ್ಯಕ್ರಮವನ್ನು ಉದ್ಘಾಟಿಸಿ ಬಳಿಕ ಮಾತನಾಡಿದೆ.
ಫಿಸಿಯೋಥೆರಪಿ ಇಂದು ಆಧುನಿಕ ಆರೋಗ್ಯ ಸೇವೆ ಮತ್ತು ಕ್ರೀಡಾ ವಿಜ್ಞಾನದ ಅವಿಭಾಜ್ಯ ಅಂಗವಾಗಿ ಬೆಳೆದಿದ್ದು, ರೋಗ ತಡೆಗಟ್ಟುವ ಆರೋಗ್ಯ ಸೇವೆಯಲ್ಲಿ ಫಿಸಿಯೋಥೆರಪಿಗೆ ಹೆಚ್ಚಿನ ಆದ್ಯತೆ ನೀಡುವ ಜೊತೆಗೆ, ಕ್ರೀಡಾ ಕ್ಷೇತ್ರದಲ್ಲಿ ಇದರ ಬಳಕೆಯನ್ನು ಮತ್ತಷ್ಟು ವಿಸ್ತರಿಸಿ, ಕರ್ನಾಟಕವನ್ನು ಫಿಸಿಯೋಥೆರಪಿಯ ಪ್ರಮುಖ ಕೇಂದ್ರವನ್ನಾಗಿ ರೂಪಿಸುವ ಅಗತ್ಯವಿದೆ.
ಬೆಂಗಳೂರು ಫಿಸಿಯೋಥೆರಪಿಸ್ಟ್ಸ್ ನೆಟ್ವರ್ಕ್ ಸತತ 16ನೇ ವರ್ಷ ಈ ಸಮ್ಮೇಳನವನ್ನು ಯಶಸ್ವಿಯಾಗಿ ಆಯೋಜಿಸಿರುವುದಕ್ಕೆ ಅಭಿನಂದನೆಗಳು. ಇಂತಹ ವೃತ್ತಿಪರ ಸಮ್ಮೇಳನಗಳು ಕೇವಲ ತಜ್ಞರನ್ನು ಒಂದೆಡೆ ಸೇರಿಸುವ ವೇದಿಕೆಗಳಲ್ಲ; ಬದಲಾಗಿ ವೃತ್ತಿಯ ಮುಂದಿರುವ ಸವಾಲುಗಳ ಕುರಿತು ಚರ್ಚಿಸಿ, ಜ್ಞಾನ ವಿನಿಮಯ ನಡೆಸಿ, ಭವಿಷ್ಯದ ದಿಕ್ಕನ್ನು ನಿರ್ಧರಿಸುವ ಪರಿಹಾರಗಳನ್ನು ಕಂಡುಕೊಳ್ಳುವ ಮಹತ್ವದ ವೇದಿಕೆಗಳಾಗಿವೆ.
ಸಮ್ಮೇಳನದಲ್ಲಿ ಚರ್ಚೆಗೆ ಆಯ್ಕೆ ಮಾಡಿರುವ ವಿಷಯಗಳು ಯುವ ಫಿಸಿಯೋಥೆರಪಿಸ್ಟ್ಗಳಿಗೆ ಅತ್ಯಂತ ಉಪಯುಕ್ತವಾಗಿದ್ದು, ಆರೋಗ್ಯ ಕ್ಷೇತ್ರದ ಬದಲಾಗುತ್ತಿರುವ ಅಗತ್ಯಗಳನ್ನು ಅರ್ಥಮಾಡಿಕೊಳ್ಳಲು ಹಾಗೂ ರೋಗಿಗಳಿಗೆ ಇನ್ನಷ್ಟು ಪರಿಣಾಮಕಾರಿ ಸೇವೆ ನೀಡಲು ನೆರವಾಗಲಿವೆ.
ದೇಶದಲ್ಲಿ ವೈದ್ಯಕೀಯ ಹಾಗೂ ಫಿಸಿಯೋಥೆರಪಿ ಶಿಕ್ಷಣದ ವ್ಯಾಪ್ತಿ ವಿಸ್ತರಿಸುತ್ತಿದೆ. ಪ್ರತಿವರ್ಷ ಸಾವಿರಾರು ವೈದ್ಯರು ಮತ್ತು ಫಿಸಿಯೋಥೆರಪಿ ವೃತ್ತಿಪರರು ಹೊರಬರುತ್ತಿದ್ದರೂ, ದೇಶದ ಪ್ರತಿಯೊಬ್ಬ ನಾಗರಿಕನಿಗೂ ಗುಣಮಟ್ಟದ ಆರೋಗ್ಯ ಸೇವೆಯನ್ನು ತಲುಪಿಸುವುದು ಇನ್ನೂ ದೊಡ್ಡ ಸವಾಲಾಗಿದೆ.
ನಾನು ಅಥ್ಲೀಟ್ ಆಗಿದ್ದ ಸಂದರ್ಭದಲ್ಲಿ ಸ್ನಾಯು ಸೆಳೆತ ಹಾಗೂ ಗಾಯಗಳಿಂದಾಗಿ ಅನೇಕ ಬಾರಿ ಪ್ರಮುಖ ಸ್ಪರ್ಧೆಗಳನ್ನು ತಪ್ಪಿಸಿಕೊಳ್ಳಬೇಕಾಗುತ್ತಿತ್ತು. ಆ ಸಮಯದಲ್ಲಿ ತರಬೇತಿ ಪಡೆದ ಫಿಸಿಯೋಥೆರಪಿಸ್ಟ್ಗಳ ಮಾರ್ಗದರ್ಶನ ಲಭ್ಯವಿದ್ದರೆ ತಮ್ಮಂತಹ ಕ್ರೀಡಾಪಟುಗಳಿಗೆ ಉತ್ತಮ ಸಾಧನೆ ಮಾಡಲು ಸಾಧ್ಯವಾಗುತ್ತಿತ್ತು.
ನಾನು 100 ಮೀಟರ್ ಓಟವನ್ನು 10.9 ಸೆಕೆಂಡುಗಳಲ್ಲಿ ಪೂರ್ಣಗೊಳಿಸಿದ್ದೆ. ಇಂದಿನಂತೆ ವೈಜ್ಞಾನಿಕ ಪುನರ್ವಸತಿ ಹಾಗೂ ಫಿಸಿಯೋಥೆರಪಿ ಸೇವೆಗಳು ಅಂದು ಲಭ್ಯವಿದ್ದರೆ ಕ್ರೀಡಾಪಟುಗಳು ಇನ್ನಷ್ಟು ಉತ್ತಮ ಸಾಧನೆ ಮಾಡಬಹುದಾಗಿತ್ತು. ಆಧುನಿಕ ಕ್ರೀಡಾ ಕ್ಷೇತ್ರದಲ್ಲಿ ಫಿಸಿಯೋಥೆರಪಿ ಗಾಯಗಳ ತಡೆ, ತ್ವರಿತ ಚೇತರಿಕೆ ಹಾಗೂ ಕ್ರೀಡಾಪಟುಗಳ ನಿರಂತರ ಸಾಧನೆಗೆ ಅತ್ಯಂತ ಅಗತ್ಯವಾಗಿದೆ.
ಕ್ರೀಡಾ ಕ್ಷೇತ್ರದಲ್ಲಿ ಫಿಸಿಯೋಥೆರಪಿಯ ಪಾತ್ರವನ್ನು ಇನ್ನಷ್ಟು ಬಲಪಡಿಸುವ ಅಗತ್ಯವಿದೆ. ರಾಜ್ಯದ ಪ್ರತಿಯೊಂದು ಜಿಲ್ಲೆಯಲ್ಲಿ ಕ್ರೀಡಾಪಟುಗಳಿಗೆ ತರಬೇತುದಾರರ ಜೊತೆಗೆ ಫಿಸಿಯೋಥೆರಪಿಸ್ಟ್ಗಳ ಸೇವೆಯೂ ದೊರೆಯುವಂತೆ ಮಾಡುವ ಕುರಿತು ಸಚಿವ ಸಂಪುಟದ ಮುಂದೆ ಪ್ರಸ್ತಾವನೆ ಮಂಡಿಸಲಾಗುವುದು. ಇದರಿಂದ ಕ್ರೀಡಾಪಟುಗಳ ಸಾಧನೆ ಹಾಗೂ ನೋವು ನಿರ್ವಹಣೆ ಇನ್ನಷ್ಟು ಪರಿಣಾಮಕಾರಿಯಾಗಲಿದೆ.
ರಾಜ್ಯ ಸರ್ಕಾರ ಕ್ರೀಡಾ ಮೂಲಸೌಕರ್ಯ ಅಭಿವೃದ್ಧಿಗೆ ವಿಶೇಷ ಆದ್ಯತೆ ನೀಡುತ್ತಿದ್ದು, ಕ್ರೀಡಾ ವಿಜ್ಞಾನ ಪ್ರಯೋಗಾಲಯಗಳ ಸ್ಥಾಪನೆಗೆ ಈಗಾಗಲೇ ಕ್ರಮ ಕೈಗೊಂಡಿದೆ. ಸುಮಾರು ₹5,000 ಕೋಟಿ ವೆಚ್ಚದಲ್ಲಿ ಕಂಠೀರವ ಕ್ರೀಡಾಂಗಣವನ್ನು ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾ ಸಂಕೀರ್ಣವಾಗಿ ಅಭಿವೃದ್ಧಿಪಡಿಸುವ ಪ್ರಸ್ತಾವನೆಯ ಭಾಗವಾಗಿ ಫಿಸಿಯೋಥೆರಪಿ ಹಾಗೂ ಕ್ರೀಡಾ ವಿಜ್ಞಾನಕ್ಕೆ ಪ್ರತ್ಯೇಕ ಸೌಲಭ್ಯಗಳನ್ನು ಕಲ್ಪಿಸುವ ಬಗ್ಗೆ ಪರಿಶೀಲಿಸಲಾಗುವುದು. ಇದರಿಂದ ಬೆಂಗಳೂರು ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಕ್ರೀಡಾ ವೈದ್ಯಕೀಯ ಮತ್ತು ಫಿಸಿಯೋಥೆರಪಿಯ ಪ್ರಮುಖ ಕೇಂದ್ರವಾಗಿ ಹೊರಹೊಮ್ಮಲಿದೆ.
ದೇಶದಲ್ಲಿ ವೈದ್ಯಕೀಯ ಶಿಕ್ಷಣ ಹಾಗೂ ಆರೋಗ್ಯ ಸೇವೆಯಲ್ಲಿ ಗಮನಾರ್ಹ ಪ್ರಗತಿ ಸಾಧಿಸಿದ್ದರೂ, ಪ್ರತಿಯೊಬ್ಬ ನಾಗರಿಕನಿಗೂ ಸಮರ್ಪಕ ಆರೋಗ್ಯ ಸೇವೆಯನ್ನು ತಲುಪಿಸುವಲ್ಲಿ ಇನ್ನೂ ಸವಾಲುಗಳಿವೆ. ಅನೇಕ ಆರೋಗ್ಯ ಕೇಂದ್ರಗಳಲ್ಲಿ ತಾಂತ್ರಿಕ ಹಾಗೂ ಸಹಾಯಕ ಸಿಬ್ಬಂದಿಯ ಕೊರತೆ ಇದೆ. ಆರೋಗ್ಯ ಮೂಲಸೌಕರ್ಯ ಮತ್ತು ಮಾನವ ಸಂಪನ್ಮೂಲವನ್ನು ಮತ್ತಷ್ಟು ಬಲಪಡಿಸುವ ಅಗತ್ಯವಿದೆ.
ಆರೋಗ್ಯ ಸೇವೆ ಒದಗಿಸುವಲ್ಲಿ ಕರ್ನಾಟಕವು ದೇಶದ ಹಲವು ರಾಜ್ಯಗಳಿಗಿಂತ ಮುಂಚೂಣಿಯಲ್ಲಿದ್ದು, ಆರೋಗ್ಯ, ಶಿಕ್ಷಣ, ಕೈಗಾರಿಕೆ ಹಾಗೂ ಹೂಡಿಕೆ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ರಾಜ್ಯ ಉತ್ತಮ ಸಾಧನೆ ಮಾಡಿದೆ. ಆದರೆ ಆರೋಗ್ಯ ಹಾಗೂ ಶಿಕ್ಷಣದಂತಹ ಆದ್ಯತಾ ಕ್ಷೇತ್ರಗಳಲ್ಲಿ ಸಾರ್ವಜನಿಕ ಹೂಡಿಕೆಯನ್ನು ಮತ್ತಷ್ಟು ಹೆಚ್ಚಿಸುವ ಅಗತ್ಯವಿದ್ದು, ಆರೋಗ್ಯವಂತ ಸಮಾಜವೇ ಸಮಗ್ರ ಅಭಿವೃದ್ಧಿಗೆ ಹಾಗೂ ಆರ್ಥಿಕ ಪ್ರಗತಿಗೆ ಭದ್ರ ಬುನಾದಿಯಾಗಿದೆ.
ಕರ್ನಾಟಕವು ಫಿಸಿಯೋಥೆರಪಿ ಮತ್ತು ಪುನರ್ವಸತಿ ಕ್ಷೇತ್ರದಲ್ಲಿಯೂ ದೇಶದ ಪ್ರಮುಖ ಕೇಂದ್ರವಾಗಿ ಬೆಳೆಯುವ ಎಲ್ಲಾ ಸಾಮರ್ಥ್ಯವನ್ನು ಹೊಂದಿದೆ. ಭಾರತದ ಆರೋಗ್ಯ ಹಾಗೂ ಸ್ವಾಸ್ಥ್ಯದ ಪರಂಪರೆಯನ್ನು ಆಧುನಿಕ ವೈಜ್ಞಾನಿಕ ಜ್ಞಾನದೊಂದಿಗೆ ಸಂಯೋಜಿಸುವ ಮೂಲಕ ಜಾಗತಿಕ ಮಟ್ಟದ ಫಿಸಿಯೋಥೆರಪಿ ಮತ್ತು ಪುನರ್ವಸತಿ ಕೇಂದ್ರಗಳನ್ನು ನಿರ್ಮಿಸುವ ಕುರಿತು ಚಿಂತನೆ ನಡೆಸುವಂತೆ ಕರೆ ನೀಡಿದೆ.
ಸಮ್ಮೇಳನದಲ್ಲಿ ಭಾಗವಹಿಸಿರುವ ತಜ್ಞರು ಫಿಸಿಯೋಥೆರಪಿ ವೃತ್ತಿಯ ಭವಿಷ್ಯದ ಕುರಿತು ಸಮಗ್ರವಾಗಿ ಚರ್ಚಿಸಿ, ಸರ್ಕಾರಕ್ಕೆ ಅಗತ್ಯ ಸಲಹೆ ಹಾಗೂ ಶಿಫಾರಸುಗಳನ್ನು ಸಲ್ಲಿಸುವಂತೆ ಮನವಿ ಮಾಡಿದೆ. ಫಿಸಿಯೋಥೆರಪಿ ಶಿಕ್ಷಣ, ಸಂಶೋಧನೆ, ವೃತ್ತಿಪರ ಬೆಳವಣಿಗೆ ಹಾಗೂ ಸಾರ್ವಜನಿಕ ಆರೋಗ್ಯ ಸೇವೆಯನ್ನು ಬಲಪಡಿಸುವ ಯಾವುದೇ ಉತ್ತಮ ಪ್ರಸ್ತಾವನೆಗಳಿಗೆ ರಾಜ್ಯ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸಲಿದೆ.
ಆಯೋಜಕರು, ದೇಶದ ವಿವಿಧ ಭಾಗಗಳಿಂದ ಆಗಮಿಸಿದ್ದ ಪ್ರತಿನಿಧಿಗಳು ಹಾಗೂ ಪ್ರಶಸ್ತಿ ಪುರಸ್ಕೃತರನ್ನು ಈ ವೇಳೆ ಅಭಿನಂದಿಸಿದೆ. ಯುವ ಫಿಸಿಯೋಥೆರಪಿಸ್ಟ್ಗಳು ಹೊಸ ಚಿಂತನೆ, ವೈಜ್ಞಾನಿಕ ದೃಷ್ಟಿಕೋನ ಹಾಗೂ ನವೀನತೆಯೊಂದಿಗೆ ಈ ವೃತ್ತಿಯನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯಲಿದ್ದಾರೆ ಎಂಬ ವಿಶ್ವಾಸವಿದೆ. -
Dr. G Parameshwara
@DrParameshwara
Attended the Bangalore Physiotherapists Network (BPN) Colloquium 2026 in Bengaluru today and addressed physiotherapists, healthcare professionals and experts from across the country.
Physiotherapy has evolved into an indispensable pillar of modern healthcare and sports science. It should not be viewed merely as a treatment after pain or injury but as an integral part of preventive healthcare, enabling people to lead healthier and more productive lives.
Drawing from my own experience as an athlete, I highlighted the critical role physiotherapists play in injury prevention, recovery and enhancing sporting performance. I also said I will place before the Cabinet a proposal to explore making physiotherapy services available at the district level to better support our sportspersons.
I also invited the physiotherapy fraternity to deliberate on the future of the profession and submit constructive recommendations to the Government. Let us work towards making Karnataka a leading centre for physiotherapy, rehabilitation and sports science.
#bpn2026 #physiotherapy #healthcare #sportsscience #karnataka -
Dr. G Parameshwara
@DrParameshwara
ಇಂದು ತುಮಕೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದೆ.
ನಾಳೆ ದೆಹಲಿಯಲ್ಲಿ ರಾಜ್ಯದ ಎಲ್ಲ ಸಂಸದರ ಸಭೆಯನ್ನು ಕರೆದಿದ್ದೇವೆ. ಬರ ಪರಿಸ್ಥಿತಿಯ ನಿರ್ವಹಣೆಗೆ ಸಹಕಾರವನ್ನು ನೀಡುವಂತೆ ಕೋರಿ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರುವಂತೆ ಅವರಲ್ಲಿ ಮನವಿ ಮಾಡಿಕೊಳ್ಳುತ್ತೇವೆ.
ಕೇಂದ್ರ ಸರ್ಕಾರಕ್ಕೆ ಮುಂದಿನ ತಿಂಗಳು ರಾಜ್ಯದ ಬರ ಪರಿಸ್ಥಿತಿಯ ಸಂಪೂರ್ಣ ಮಾಹಿತಿಯೊಂದಿಗಿನ ಮನವಿಯನ್ನು ಸಲ್ಲಿಸುತ್ತೇವೆ. ಪ್ರಸ್ತುತ ಸ್ಥಿತಿಯಲ್ಲಿ ಎಷ್ಟು ಪರಿಹಾರ ಬೇಕು ಎಂಬುದನ್ನು ಅಂದಾಜಿಸಲು ಆಗುವುದಿಲ್ಲ.
ಈಗಾಗಲೇ ನಾನು ಮತ್ತು ಮುಖ್ಯಮಂತ್ರಿಗಳು ಮೂರು ವಿಭಾಗಗಳನ್ನು ವೀಕ್ಷಣೆ ಮಾಡಿ, ಬರದ ಪರಿಸ್ಥಿತಿಯ ಪರಿಶೀಲನೆ ನಡೆಸಿದ್ದೇವೆ. ಶೀಘ್ರವೇ ಮೈಸೂರು ವಿಭಾಗದಲ್ಲೂ ಪರಿಶೀಲನಾ ಸಭೆಯನ್ನು ಮಾಡುತ್ತೇವೆ. ಚಿತ್ರದುರ್ಗದ ಪರಿಶೀಲನಾ ಸಭೆಯನ್ನು ನಿನ್ನೆ ಮಾಡಿದ್ದೇವೆ. ಬರ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ, ಖುದ್ದು ಪರಿಶೀಲನೆ ನಡೆಸಿದ್ದೇವೆ. ಸೂರ್ಯಕಾಂತಿ ಬೆಳೆಗಳು ಒಣಗಿ ಹೋಗಿವೆ. ಅದನ್ನು ವೀಕ್ಷಣೆ ಮಾಡಿ, ರೈತರಿಂದ ಮಾಹಿತಿ ಪಡೆದುಕೊಂಡಿದ್ದೇವೆ. ಮುಂದೆ ಮಾಡಬೇಕಿರುವ ಕಾರ್ಯಕ್ರಮಗಳ ಬಗ್ಗೆ ಚರ್ಚೆ ಮಾಡುತ್ತೇವೆ.
ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆ ಬಗ್ಗೆ ಮಾಧ್ಯಮದ ಪ್ರಶ್ನೆಗೆ ಉತ್ತರಿಸಿ, ಲಕ್ಷಾಂತರ ಜನರ ಭವಿಷ್ಯದ ಜೊತೆ ಆಟ ಆಡುವಂತಹದ್ದು ಸರಿಯಲ್ಲ. ಧರ್ಮೇಂದ್ರ ಪ್ರಧಾನ್ ಗೆ ಮಾತ್ರವಲ್ಲ, ಆ ಅರ್ಹತೆ ಯಾರಿಗೂ ಇಲ್ಲ. ಯುವಕರ ಭವಿಷ್ಯಕ್ಕೆ ಅನುಕೂಲ ಮಾಡಿಕೊಡಬೇಕೆ ವಿನಃ ಭವಿಷ್ಯಕ್ಕೆ ಅಡ್ಡ ಬರಬಾರದು.
ನೀಟ್ ಪರೀಕ್ಷೆ ಬಹಳ ದೊಡ್ಡದು. ಲಕ್ಷಾಂತರ ಮಕ್ಕಳು ಅವರ ಭವಿಷ್ಯವನ್ನು ನಿರ್ಮಾಣ ಮಾಡಿಕೊಳ್ಳಲು ಬರೆಯುವ ಪರೀಕ್ಷೆ ಇದು. ಅದರಲ್ಲಿ ಯಾವುದೇ ತಪ್ಪುಗಳು ಆಗಬಾರದು. ಜವಾಬ್ದಾರಿಯನ್ನು ಹೊತ್ತಿರುವವರು ಅದನ್ನು ನೋಡಿಕೊಳ್ಳಬೇಕು. ಹೆಜ್ಜೆ ಹೆಜ್ಜೆಗೂ ಪರಿಶೀಲನೆ ಮಾಡಿ, ಪರೀಕ್ಷೆ ಚೆನ್ನಾಗಿ ಆಗುವಂತೆ ನೋಡಿಕೊಂಡು, ಆ ಮಕ್ಕಳಿಗೆ ಹೆಚ್ಚಿನ ಅಂಕಗಳು ಬರುವ ರೀತಿಯಲ್ಲಿ ಅವರಿಗೆ ಅವಕಾಶಗಳನ್ನು ಕಲ್ಪಿಸಬೇಕು.
ಹೀಗಿರುವಾಗ ಯಾರು ತಪ್ಪು ಮಾಡುತ್ತಾರೋ, ಅದು ಸಣ್ಣ ತಪ್ಪಲ್ಲ. ದೆಹಲಿಯಲ್ಲಿ ಯುವಕರು ಪ್ರತಿಭಟನೆ ಮಾಡಿ, ಯಾರು ತಪ್ಪಿತಸ್ಥರಿದ್ದಾರೆ ಅವರಿಗೆ ಶಿಕ್ಷೆ ಆಗಬೇಕು ಮತ್ತು ಅವರನ್ನು ಆ ಜವಾಬ್ದಾರಿಯಿಂದ ತೆಗೆಯಬೇಕು ಎಂದು ಹೋರಾಟ ಮಾಡಿದ್ದರು. ಧರ್ಮೇಂದ್ರ ಪ್ರಧಾನ್ ಅವರು ಜವಾಬ್ದಾರಿ ವಹಿಸಿಕೊಂಡಿದ್ದರು. ಹಾಗಾಗಿ ಅವರು ರಾಜೀನಾಮೆ ನೀಡಬೇಕು ಮತ್ತು ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗಬೇಕು ಎಂಬ ಬೇಡಿಕೆಯನ್ನು.ಇಟ್ಟಿದ್ದರು. ರಾಹುಲ್ ಗಾಂಧಿ ಅವರು ಕೂಡ ಆ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಯುವಕರೇ ನಮ್ಮ ದೇಶದ ಭವಿಷ್ಯ. ಧರ್ಮೇಂದ್ರ ಪ್ರಧಾನ್ ಅವರು ರಾಜೀನಾಮೆ ನೀಡಿ ಒಳ್ಳೆಯ ಕೆಲಸವನ್ನು ಮಾಡಿದ್ದಾರೆ.
ಧರ್ಮೇಂದ್ರ ಪ್ರಧಾನ್ ಅವರು ಮೊದಲೇ ರಾಜೀನಾಮೆ ಕೊಡಬೇಕಿತ್ತು. ಮೊದಲೇ ಕೊಟ್ಟಿದ್ರೆ ಆ 23 ಜನ ಯುವಕರು ಸಾಯುವ ಪರಿಸ್ಥಿತಿ ಬರುತ್ತಿರಲಿಲ್ಲ. ಅವರ ಸಾವಿಗೂ ಇವರೇ ಕಾರಣಕರ್ತರು. ರಾಜೀನಾಮೆ ಕೊಟ್ಟಿರುವುದು ಒಳ್ಳೆಯ ಬೆಳವಣಿಗೆ ಮತ್ತು ಪ್ರಧಾನಮಂತ್ರಿಗಳು ಇನ್ನು ಹೆಚ್ಚಿನ ರೀತಿಯಲ್ಲಿ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಹೇಳಿದ್ದಾರೆ. ಕಾದು ನೋಡೋಣ. -
Dr. G Parameshwara
@DrParameshwara
ಇಂದು ತುಮಕೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದೆ.
ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆ ಸ್ವಾಗತಾರ್ಹ. ರಾಷ್ಟ್ರೀಯ ವಿಷಯಗಳಲ್ಲಿ ಸಚಿವರು ತಮ್ಮ ಜವಾಬ್ದಾರಿಯನ್ನು ಹೊರುವ ಹೊಣೆಗಾರಿಕೆಯನ್ನು ಇದು ಮತ್ತಷ್ಟು ಬಲಪಡಿಸಿದೆ.
ನೀಟ್ ಪರೀಕ್ಷೆ ದೇಶದ ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸುವ ಅತ್ಯಂತ ಮಹತ್ವದ ಪರೀಕ್ಷೆಯಾಗಿದೆ. ಆದರೆ ಪ್ರಶ್ನೆಪತ್ರಿಕೆ ಸೋರಿಕೆ ಆರೋಪದಿಂದ ಪರೀಕ್ಷೆಯ ವಿಶ್ವಾಸಾರ್ಹತೆಗೆ ಧಕ್ಕೆ ಉಂಟಾಗಿ, ವಿದ್ಯಾರ್ಥಿಗಳು ಮತ್ತು ಅವರ ಪೋಷಕರು ತೀವ್ರ ಆತಂಕಕ್ಕೆ ಒಳಗಾಗಿದ್ದರು. ಪ್ರಶ್ನೆಪತ್ರಿಕೆ ಸೋರಿಕೆಗೆ ಕಾರಣರಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಹಾಗೂ ಸಂಬಂಧಪಟ್ಟ ಕೇಂದ್ರ ಸಚಿವರು ರಾಜೀನಾಮೆ ನೀಡಬೇಕು ಎಂದು ವಿದ್ಯಾರ್ಥಿಗಳು ವ್ಯಾಪಕವಾಗಿ ಪ್ರತಿಭಟನೆ ನಡೆಸಿದ್ದರು. ಪ್ರಧಾನಿ ನರೇಂದ್ರ ಮೋದಿ ಅವರು ಈ ಪ್ರಕರಣದಲ್ಲಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದರು. ಅದರಂತೆ ತಪ್ಪಿತಸ್ಥರ ಮೇಲೆ ಕಾನೂನು ಕ್ರಮ ಕೈಗೊಳ್ಳುತ್ತಾರಾ ಕಾದು ನೋಡಬೇಕು.
ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆ ಸ್ವಾಗತಾರ್ಹ. ಅಧಿಕಾರದ ಜವಾಬ್ದಾರಿ ಹೊಂದಿರುವವರು ತಮ್ಮ ಇಲಾಖೆಯಲ್ಲಿ ಆಗುವ ತಪ್ಪುಗಳಿಗೆ ಉತ್ತರದಾಯಕರಾಗಬೇಕು ಎಂಬ ಸ್ಪಷ್ಟ ಸಂದೇಶ ಇದರಿಂದ ಸಿಗುತ್ತದೆ. ಮುಂದಿನ ದಿನಗಳಲ್ಲಿ ಸಾರ್ವಜನಿಕ ಆಡಳಿತದಲ್ಲಿ ಜವಾಬ್ದಾರಿತನವನ್ನು ಇನ್ನಷ್ಟು ಬಲಪಡಿಸುವ ಉತ್ತಮ ಸಂಪ್ರದಾಯಕ್ಕೆ ಇದು ನಾಂದಿ ಹಾಡಲಿದೆ. ಇದರಿಂದ ಮುಂದಿನ ದಿನಗಳಲ್ಲಿ ಸಾರ್ವಜನಿಕ ಆಡಳಿತದಲ್ಲಿ ಜವಾಬ್ದಾರಿತನ ಇನ್ನಷ್ಟು ಹೆಚ್ಚಲಿದೆ.
The resignation of Union Education Minister Dharmendra Pradhan is a welcome step. It reinforces the principle that those holding public office must be accountable for lapses in their departments.
NEET is one of the most important examinations shaping the future of lakhs of students across the country. Allegations of question paper leaks had severely undermined the credibility of the examination, causing immense anxiety among students and parents. Students across the country had demanded strict action against those responsible and called for the resignation of the concerned Union Minister.
Prime Minister Narendra Modi had assured the nation that strict action would be taken against those responsible. It remains to be seen whether that assurance will now be translated into decisive legal action.
This resignation sends a clear message that those entrusted with public responsibility must answer for failures within their departments. It should mark the beginning of a stronger tradition of accountability in public administration and strengthen the culture of responsibility in governance. -
Dr. G Parameshwara
@DrParameshwara
ಕಾರ್ಗಿಲ್ ವಿಜಯ ದಿವಸ ನಮ್ಮ ಭಾರತೀಯ ಸೇನೆಯ ಧೈರ್ಯ, ಶೌರ್ಯ ಮತ್ತು ತ್ಯಾಗದ ಸಂಕೇತವಾಗಿದೆ.
1999ರ ಜುಲೈ 26ರಂದು ಆಪರೇಷನ್ ವಿಜಯ್ ಮೂಲಕ ಶತ್ರುಗಳನ್ನು ಹಿಮ್ಮೆಟ್ಟಿಸಿ, ಕಾರ್ಗಿಲ್ನಲ್ಲಿ ಐತಿಹಾಸಿಕ ವಿಜಯ ಸಾಧಿಸಿದ ಈ ದಿನವು ದೇಶದ ಹೆಮ್ಮೆಯ ದಿನವಾಗಿದೆ. ಮಾತೃಭೂಮಿಯ ರಕ್ಷಣೆಗಾಗಿ ತಮ್ಮ ಪ್ರಾಣವನ್ನೇ ದೇಶಕ್ಕೆ ಅರ್ಪಿಸಿದ ಎಲ್ಲ ಹುತಾತ್ಮ ಯೋಧರಿಗೆ ನನ್ನ ಶತಕೋಟಿ ನಮನಗಳು. -
Dr. G Parameshwara
@DrParameshwara
ಬರ ಪರಿಸ್ಥಿತಿಯನ್ನು ನಮ್ಮ ಸರ್ಕಾರ ಅತ್ಯಂತ ಸಮರ್ಥವಾಗಿ ನಿರ್ವಹಣೆ ಮಾಡುತ್ತಿದೆ. ಶನಿವಾರ ಮುಖ್ಯಮಂತ್ರಿ ಶ್ರೀ ಡಿ.ಕೆ. ಶಿವಕುಮಾರ್ ಅವರೊಂದಿಗೆ ಚಿತ್ರದುರ್ಗ ಜಿಲ್ಲೆಯ ಬರಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ, ರೈತರ ಸಂಕಷ್ಟಗಳನ್ನು ಆಲಿಸಿದೆ.
ಭೌಗೋಳಿಕವಾಗಿ ಚಿತ್ರದುರ್ಗವು ಕಡಿಮೆ ಮಳೆ ಬೀಳುವ ಜಿಲ್ಲೆಗಳಲ್ಲಿ ಒಂದಾಗಿದ್ದು, ತೀವ್ರ ಬರ ಪರಿಸ್ಥಿತಿ ಜನರ ಬದುಕನ್ನು ಇನ್ನಷ್ಟು ದುಸ್ಥರಗೊಳಿಸಿದೆ.
ಜಿಲ್ಲೆಯಲ್ಲಿ ಪ್ರಗತಿ ಪರಿಶೀಲನಾ ಸಭೆ ನಡೆಸಿ, ಮೇವಿನ ಲಭ್ಯತೆ, ಕುಡಿಯುವ ನೀರಿನ ವ್ಯವಸ್ಥೆ, ಕೃಷಿ ಕಾರ್ಮಿಕರಿಗೆ ಉದ್ಯೋಗ ಸೇರಿದಂತೆ ಬರ ನಿರ್ವಹಣೆಗೆ ಸಂಬಂಧಿಸಿದ ಎಲ್ಲಾ ಕ್ರಮಗಳನ್ನು ಇನ್ನಷ್ಟು ತ್ವರಿತವಾಗಿ ಅನುಷ್ಠಾನಗೊಳಿಸುವಂತೆ ಅಧಿಕಾರಿಗಳಿಗೆ ಸ್ಪಷ್ಟ ನಿರ್ದೇಶನ ನೀಡಿದ್ದೇನೆ.
ರಾಜ್ಯದ ಜನರ ಹಿತವೇ ನಮ್ಮ ಸರ್ಕಾರದ ಮೊದಲ ಆದ್ಯತೆ. ಹೀಗಾಗಿ ಜನರ ಜೀವನೋಪಾಯಕ್ಕೆ ಯಾವುದೇ ತೊಂದರೆಯಾಗದಂತೆ ಕ್ರಮ ಕೈಗೊಳ್ಳಲು ಜಿಲ್ಲಾಡಳಿತಕ್ಕೆ ಸೂಚಿಸಿದ್ದು, ಅಗತ್ಯವಿರುವ ಎಲ್ಲಾ ನೆರವು ಮತ್ತು ಪರಿಹಾರ ಕ್ರಮಗಳನ್ನು ನಮ್ಮ ಸರ್ಕಾರ ಶ್ರದ್ಧೆಯಿಂದ ನಿರ್ವಹಿಸುತ್ತಿದೆ. -
Dr. G Parameshwara
@DrParameshwara
ಸರಿಯಾಗಿ ಮಳೆಯಾಗದೆ, ಬೆಳೆದ ಬೆಳೆಗಳು ಕೈಕೊಟ್ಟಿದ್ದು, ರೈತರು ಸಂಕಷ್ಟದಲ್ಲಿದ್ದಾರೆ. ಅನ್ನದಾತರ ಮೇಲೆ ಸಾಕ್ಷಾತ್ ಪ್ರಕೃತಿಯೇ ಮುನಿದಾಗ ಅವರ ಕೈ ಹಿಡಿಯುವುದು ಅಧಿಕಾರದಲ್ಲಿರುವ ನಮ್ಮ ಕರ್ತವ್ಯ ಮಾತ್ರವಲ್ಲದೇ, ಅನ್ನದ ಋಣ ಸಂದಾಯಕ್ಕೆ ಸಿಕ್ಕ ಅವಕಾಶವೆಂದು ಭಾವಿಸಿ ಅವರ ಜೊತೆ ನಿಂತಿದ್ದೇವೆ.
ನಾಡಿನ ರೈತಾಪಿ ವರ್ಗದ ಹಿತಕಾಯುವ ನಮ್ಮ ಬದ್ಧತೆಯಲ್ಲಿ ಯಾವ ರಾಜಿಯೂ ಇಲ್ಲ.This media couldn't be displayed. See it on the original post. -
Dr. G Parameshwara
@DrParameshwara
The Jakkur Government Flying Training School has long been a gateway for students from middle-class and economically disadvantaged families to pursue their dream of becoming pilots.
With its DGCA licence renewed for the next five years, plans are underway to add more training aircraft, extend the runway, and establish satellite training bases in Mysuru and Hassan.
At a time when India's aviation sector is growing rapidly and the demand for skilled pilots is set to rise significantly, investing in institutions like Jakkur is an investment in employment, skill development, and the future of our young people. -
Dr. G Parameshwara
@DrParameshwara
ಮಧ್ಯಮ ವರ್ಗ ಮತ್ತು ಆರ್ಥಿಕವಾಗಿ ಹಿಂದುಳಿದ ಕುಟುಂಬಗಳ ವಿದ್ಯಾರ್ಥಿಗಳ ಪೈಲಟ್ ಆಗುವ ಕನಸಿಗೆ ಮತ್ತೆ ರೆಕ್ಕೆ ಬಂದಿದೆ.
ಜಕ್ಕೂರು ಸರ್ಕಾರಿ ವಿಮಾನಯಾನ ತರಬೇತಿ ಶಾಲೆಯ ಬಾಗಿಲು ಮತ್ತೆ ತೆರೆದಿದ್ದು, ಡಿಜಿಸಿಎ (DGCA) ಪರವಾನಗಿಯು ಮುಂದಿನ ಐದು ವರ್ಷಗಳಿಗೆ ನವೀಕರಣಗೊಂಡಿದೆ. ಈ ಹಿನ್ನೆಲೆಯಲ್ಲಿ, ಹೊಸ ತರಬೇತಿ ವಿಮಾನಗಳನ್ನು ಸೇರ್ಪಡೆಗೊಳಿಸುವುದು, ರನ್ವೇ ವಿಸ್ತರಣೆ ಮಾಡುವುದು ಹಾಗೂ ಮೈಸೂರು ಮತ್ತು ಹಾಸನದಲ್ಲಿ ಬೇಸ್ ತರಬೇತಿ ಕೇಂದ್ರಗಳನ್ನು ಆರಂಭಿಸುವ ಯೋಜನೆ ರೂಪಿಸಲಾಗಿದೆ.
ದೇಶದಲ್ಲಿ ನಾಗರಿಕ ವಿಮಾನಯಾನ ಕ್ಷೇತ್ರವು ವೇಗವಾಗಿ ಬೆಳೆಯುತ್ತಿರುವುದರಿಂದ ನುರಿತ ಪೈಲಟ್ಗಳ ಬೇಡಿಕೆ ಇನ್ನಷ್ಟು ಹೆಚ್ಚಲಿದೆ. ಹೀಗಾಗಿ ಜಕ್ಕೂರು ಸರ್ಕಾರಿ ವಿಮಾನಯಾನ ತರಬೇತಿ ಶಾಲೆಯಂತಹ ಸಂಸ್ಥೆಗಳನ್ನು ಬಲಪಡಿಸಿ ಉದ್ಯೋಗಾವಕಾಶ ಹೆಚ್ಚಿಸುವುದರ ಜೊತೆಗೆ, ಯುವಜನರ ಕೌಶಲ್ಯ ಮತ್ತು ಉಜ್ವಲ ಭವಿಷ್ಯಕ್ಕೆ ದಾರಿಯಾಗಲು ನಮ್ಮ ಸರ್ಕಾರ ಬದ್ಧವಾಗಿದೆ. -
Dr. G Parameshwara
@DrParameshwara
ಸಾಮಾನ್ಯ ಕುಟುಂಬದಲ್ಲಿ ಹುಟ್ಟಿ, ಅಸಾಧಾರಣ ಸಾಧನೆಯ ಮೂಲಕ ಏಷ್ಯನ್ ಗೇಮ್ಸ್ವರೆಗೆ ತಲುಪಿರುವ ಸಿಂಧುಶ್ರೀ ಗಣೇಶ್ ಅವರ ಸಾಧನೆ ನಿಜಕ್ಕೂ ನಾಡಿಗೆ ಹೆಮ್ಮೆಯ ಕ್ಷಣವಾಗಿದೆ.
ಜಪಾನ್ನಲ್ಲಿ ನಡೆಯಲಿರುವ ಏಷ್ಯನ್ ಗೇಮ್ಸ್ನ ಪೋಲ್ ವಾಲ್ಟ್ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಲಿರುವ ಅವರು, ತಮ್ಮ ಕಠಿಣ ಪರಿಶ್ರಮ, ಆತ್ಮವಿಶ್ವಾಸ ಮತ್ತು ಛಲದಿಂದ ಯಶಸ್ಸಿನ ಶಿಖರವನ್ನೇರಲು ಮುನ್ನುಗ್ಗುತ್ತಿದ್ದಾರೆ. ಆರ್ಥಿಕ ಸಂಕಷ್ಟಗಳ ನಡುವೆಯೂ ಅಡೆತಡೆಗಳನ್ನು ಮೆಟ್ಟಿ ನಿಂತು ಸಾಧನೆಯ ಹಾದಿ ತುಳಿದಿರುವ ಅವರ ಪಯಣ ಪ್ರತಿಯೊಬ್ಬ ಯುವ ಕ್ರೀಡಾಪಟುವಿಗೂ ಸ್ಫೂರ್ತಿ.
ನಮ್ಮ ಸರ್ಕಾರವು ಅವರ ಪ್ರತಿಭೆಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ₹5 ಲಕ್ಷ ಪ್ರೋತ್ಸಾಹಧನ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಸ್ಪರ್ಧೆಗಳಲ್ಲಿ ಬಳಸುವ 3 ಗುಣಮಟ್ಟದ ಹೊಸ ಪೋಲ್ಗಳನ್ನು ವಿತರಿಸಿದೆ.
ಕ್ರೀಡಾಳುಗಳ ಜೊತೆ ನಮ್ಮ ಸರ್ಕಾರ ನಿರಂತರವಾಗಿ ಜೊತೆಗಿರಲಿದ್ದು, ಪ್ರತಿಭೆಗಳಿಗೆ ಪ್ರೋತ್ಸಾಹ ನೀಡಿ ಸಾಧನೆಯ ಹಾದಿಯಲ್ಲಿ ಎಲ್ಲಾ ರೀತಿಯ ಸಹಕಾರ ನೀಡಲಿದೆ.
Sindhushree Ganesh's journey to representing India at the Asian Games is a moment of immense pride for Karnataka and the nation.
Despite financial hardships, she has reached this milestone through unwavering determination, hard work and self-belief. She will represent India in the pole vault event at the Asian Games in Japan, inspiring countless young athletes to dream beyond their circumstances.
To support her preparation, our government has provided a ₹5 lakh incentive along with three brand-new international-standard poles for training and competition.
We wish Sindhushree the very best as she carries India's hopes onto the international stage. -
Dr. G Parameshwara
@DrParameshwara
ಇಂದು ಕೊರಟಗೆರೆ ತಾಲೂಕಿನ ಬುಕ್ಕಾಪಟ್ಟಣದಲ್ಲಿ ಮಾಜಿ ಸಚಿವರು, ಆತ್ಮೀಯರು ಆಗಿದ್ದ ಸಿ.ವೀರಣ್ಣ ಅವರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡು, ಅಗಲಿದ ಹಿರಿಯ ನಾಯಕನಿಗೆ ಅಂತಿಮ ನಮನ ಸಲ್ಲಿಸಿದೆ.
ಇದೇ ವೇಳೆ ಶ್ರೀಯುತರ ಅಗಲಿಕೆಯಿಂದ ನೊಂದಿರುವ ಅವರ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿ, ಮೃತರಿಗೆ ಸಕಲ ಸರ್ಕಾರಿ ಗೌರವ ಸಲ್ಲಿಸಿದ ಬಳಿಕ ರಾಷ್ಟ್ರಧ್ವಜವನ್ನು ಕುಟುಂಬದವರಿಗೆ ಹಸ್ತಾಂತರಿಸಿದೆ.
ರಾಜ್ಯದ ಹಾಗೂ ಶೋಷಿತ ಜನರ ಅಭಿವೃದ್ಧಿಗಾಗಿ ಶ್ರಮಿಸಿದ ಅವರ ನಿಧನವು ರಾಜ್ಯ ರಾಜಕಾರಣಕ್ಕೆ ತುಂಬಲಾರದ ನಷ್ಟ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಮತ್ತೊಮ್ಮೆ ಪ್ರಾರ್ಥಿಸುತ್ತೇನೆ. -
Dr. G Parameshwara
@DrParameshwara
My remarks at the Bengaluru Revenue Division-level progress review meeting held in Chitradurga:
Water levels in most reservoirs across Karnataka have fallen to critically low levels, and nearly 80% of the State’s lakes have dried up. The most immediate concern is a possible shortage of drinking water. Strict directions have been issued that the water available in reservoirs must not be used for agricultural activities and should be reserved exclusively for drinking-water needs. Every necessary measure must be taken to protect people from the impact of the drought.
The Government is fully aware of the severity of the situation. Chief Minister Shri D.K. Shivakumar has already reviewed conditions in the Belagavi and Kalaburagi divisions. As Revenue Minister, I have personally visited Chikkaballapur, Kolar, Tumakuru, Chitradurga and several other districts. I will continue visiting and reviewing conditions across the State.
The drought situation is extremely serious. Although some rainfall was received in June, it was not evenly distributed. Farmers began sowing, but the State has since recorded a rainfall deficit of more than 42%. The extent of the deficit varies across districts, bringing agricultural activity to a halt in several areas.
Sowing has been completed on only about 2% of the area in Chikkaballapur, between 1.5% and 2% in Kolar, and between 3% and 4% in Chitradurga, reaching around 10% in a few areas. Overall, only about 15% of the normal sowing has been completed across Karnataka.
Rising surface temperatures in the Pacific Ocean are affecting the formation of rain-bearing clouds. Data from the past 75 years show that El Niño conditions have occurred 25 times. Sea-surface temperatures generally rose by one to two degrees, but this time they have increased by two to three degrees. Due to the Super El Niño, nearly 50% of the world is experiencing drought-like conditions. It is not only Karnataka; States across the country are facing drought.
Temperatures in European countries have reached between 35°C and 40°C, resulting in nearly 5,000 deaths in Europe. Around 20,000 people have died across regions covering nearly half the world, demonstrating the severity of the Super El Niño phenomenon. Several States are experiencing dry weather. Parts of Karnataka’s Malnad and coastal regions have received some rainfall, while rainfall in Maharashtra has resulted in inflow into the Almatti reservoir.
The rainfall deficit in the Bengaluru Revenue Division stands at 28% in Bengaluru Urban, 18% in Bengaluru Rural, 24% in Ramanagara, 36% in Kolar, 28% in Chikkaballapur, 18% in Tumakuru, 28% in Chitradurga, and 48% each in Davanagere and Shivamogga. The overall rainfall deficit in the division is 37%. Karnataka is facing an exceptionally severe drought this year.
The situation has made it necessary to hire private borewells and supply water through tankers. The Government has taken all necessary measures. ₹5 crore has been sanctioned to each district for drinking-water arrangements, and Deputy Commissioners have already begun utilising these funds. We have also announced ₹1 crore for every Assembly constituency.
The State has lakhs of cattle and may face a fodder shortage. Officials have reported that adequate fodder is available for the next 30 to 40 weeks. It must be utilised properly. The Animal Husbandry Department has been directed to distribute fodder-seed kits to farmers in areas where water is available, and the kits are being distributed accordingly.
During previous droughts, fodder was procured from neighbouring States, and fodder banks and goshalas were established. However, neighbouring States are also facing drought due to inadequate rainfall, making it difficult to procure fodder from them this time.
Reports of migration have emerged from Bagalkot, Vijayapura, Koppal, Ballari and Yadgir districts. Officials have been directed to take up works under the VB–G RAM G Scheme and provide employment locally. There is no shortage of funds, and no one needs to panic. Works must begin immediately in villages from which people are migrating.
Task forces have been constituted in every taluk. Deputy Commissioners and Zilla Panchayat CEOs have been instructed to convene district- and taluk-level task force meetings every week. These meetings will help assess the ground situation and prepare action plans, as drinking-water conditions can change from day to day.
Sowing was expected to cover 13.73 lakh hectares in the Bengaluru Revenue Division, but only 1.74 lakh hectares have been sown - just 13%.
The Chief Minister and I have written to the Prime Minister regarding the drought situation. I have also written to the Union Home Minister and the Union Agriculture Minister, explaining the prevailing conditions. The Union Government has prescribed 10 criteria for declaring drought, and we have urged it to relax these norms.
A drought memorandum cannot be submitted to the Union Government before August 15. If rainfall is received after August, the situation may change. Therefore, the submission of the report to the Union Government may be delayed. -
Dr. G Parameshwara
@DrParameshwara
ರಾಜ್ಯದಲ್ಲಿ ಬಹುತೇಕ ಜಲಾಶಯಗಳು ತಳಮಟ್ಟಕ್ಕೆ ಬಂದಿದ್ದು, ಶೇ.80ರಷ್ಟು ಕೆರೆಗಳು ಬತ್ತಿ ಹೋಗಿವೆ. ರಾಜ್ಯದಲ್ಲಿ ಬರದ ಗಂಭೀರತೆಯನ್ನು ನೋಡಿದರೆ ಮೊದಲನೆಯದು ಕುಡಿಯುವ ನೀರಿಗೆ ತೊಂದರೆ ಆಗಬಹುದು. ಜಲಾಶಯಗಳಲ್ಲಿ ಲಭ್ಯತೆ ಇರುವ ನೀರನ್ನು ಕೃಷಿ ಚಟುವಟಿಕೆಗಳಿಗೆ ಬಳಸುವಂತಿಲ್ಲ. ಕುಡಿಯುವ ನೀರಿಗೆ ಮಾತ್ರ ಬಳಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಜನರಿಗೆ ಬರದ ಸಮಸ್ಯೆಯಾಗದಂತೆ ಕ್ರಮ ವಹಿಸಬೇಕು.
ರಾಜ್ಯದಲ್ಲಿ ಬರಗಾಲದ ಪರಿಸ್ಥಿತಿ ಎಷ್ಟು ಗಂಭೀರವಾಗಿದೆ ಎಂಬುದು ತಮ್ಮ ಗಮನಕ್ಕೆ ಬಂದಿದೆ. ಇದನ್ನು ಅರ್ಥ ಮಾಡಿಕೊಂಡು ಮಾನ್ಯ ಮುಖ್ಯಮಂತ್ರಿಯವರು ಬೆಳಗಾವಿ ಮತ್ತು ಕಲಬುರಗಿ ವಿಭಾಗದ ಪರಿಶೀಲನೆ ನಡೆಸಿ, ಪರಿಸ್ಥಿತಿಯನ್ನು ಅವಲೋಕನ ನಡೆಸಿದ್ದಾರೆ.
ನಾನು ಕಂದಾಯ ಸಚಿವನಾಗಿ ಅನೇಕ ಜಿಲ್ಲೆಗಳಿಗೆ ಭೇಟಿ ಕೊಟ್ಟಿದ್ದೇನೆ. ಚಿಕ್ಕಬಳ್ಳಾಪುರ, ಕೋಲಾರ, ತುಮಕೂರು, ಚಿತ್ರದುರ್ಗ ಮುಂತಾದ ಜಿಲ್ಲೆಗಳಿಗೆ ಖುದ್ದು ಭೇಟಿ ನೀಡಿದ್ದೇನೆ. ಬೇರೆ ಜಿಲ್ಲೆಗಳಿಗೂ ಭೇಟಿ ನೀಡಿ ಅವಲೋಕನ ನಡೆಸುತ್ತೇನೆ.
ನಮಗೆ ಕಾಣುತ್ತಿರುವ ಬರದ ಚಿತ್ರಣ ಬಹಳ ಗಂಭೀರವಾಗಿದೆ. ಜೂನ್ನಲ್ಲಿ ಸ್ವಲ್ಪ ಮಟ್ಟಿಗೆ ಮಳೆಯಾದರೂ ಎಲ್ಲ ಭಾಗದಲ್ಲಿ ಮಳೆಯಾಗಿಲ್ಲ. ರೈತರು ಬಿತ್ತನೆ ಮಾಡಿದ್ದಾರೆ. ಈವರೆಗೆ ಶೇ.42ಕ್ಕೂ ಹೆಚ್ಚು ಮಳೆ ಕೊರತೆಯಾಗಿದೆ. ಮಳೆ ಕೊರತೆ ಪ್ರಮಾಣ ಅಂಕಿ-ಅಂಶ ಜಿಲ್ಲೆಯಿಂದ ಜಿಲ್ಲೆಗೆ ಬೇರೆಬೇರೆ ಇದೆ. ಇದರಿಂದ ಕೃಷಿ ಚಟುವಟಿಕೆಗಳು ಎಲ್ಲ ಕಡೆ ನಿಂತು ಹೋಗಿವೆ. ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಬಿತ್ತನೆ ಶೇ.2ರಷ್ಟು ಆಗಿದೆ. ಕೋಲಾರದಲ್ಲಿ ಶೇ.1.5 ರಿಂದ 2ರಷ್ಟಾಗಿದೆ. ಚಿತ್ರದುರ್ಗ ಜಿಲ್ಲೆಯಲ್ಲಿ ಶೇ.3 ಮತ್ತು 4ರಷ್ಟಾಗಿದ್ದು, ಕೆಲವು ಕಡೆ ಶೇ.10ರಷ್ಟು ಬಿತ್ತನೆಯಾಗಿದೆ. ಇಡೀ ರಾಜ್ಯದಲ್ಲಿ ಒಟ್ಟಾರೆ ಶೇ.15ರಷ್ಟು ಬೀಜ ಬಿತ್ತನೆಯಾಗಿದೆ.
ಫೆಸಿಫಿಕ್ ಸಾಗರದ ಮೇಲ್ಮೈ ಭಾಗದ ಉಷ್ಣಾಂಶ ಶೇ.2ರಷ್ಟು ಹೆಚ್ಚಾಗುತ್ತದೆ. ಉಷ್ಣಾಂಶ ಹೆಚ್ಚಾಗುವುದರಿಂದ ಮಳೆ ಮೋಡಗಳು ಸೃಷ್ಟಿಯಾಗುವುದಿಲ್ಲ. ಕಳೆದ 75 ವರ್ಷಗಳ ಅಂಕಿ ಅಂಶಗಳನ್ನು ಗಮನಿಸಿದಾಗ 25 ಸಲ ಎಲ್ ನೀನೋ ಉಂಟಾಗಿದೆ. ಸಾಮಾನ್ಯವಾಗಿ ಸಮುದ್ರ ಮೇಲ್ಮೈ ಉಷ್ಣಾಂಶ 1 ಡಿಗ್ರಿಯಿಂದ 2 ಡಿಗ್ರಿವರೆಗೆ ಹೆಚ್ಚಾಗುತ್ತಿತ್ತು. ಈ ಬಾರಿ 2 ಡಿಗ್ರಿಯಿಂದ 3 ಡಿಗ್ರಿವರೆಗೆ ಹೆಚ್ಚಾಗಿದೆ. ಸೂಪರ್ ಎಲ್ ನೀನೋ ಉಂಟಾಗಿರುವ ಕಾರಣದಿಂದ ಪ್ರಪಂಚದ ಶೇ. 50ರಷ್ಟು ಭಾಗದಲ್ಲಿ ಬರದ ವಾತಾವರಣವನ್ನು ನೋಡುತ್ತಿದ್ದೇವೆ. ಕರ್ನಾಟಕವಷ್ಟೇ ಅಲ್ಲದೇ, ದೇಶದ ಎಲ್ಲ ರಾಜ್ಯಗಳಲ್ಲಿ ಬರ ಎದುರಾಗಿದೆ.
ಯೂರೋಪ್ ರಾಷ್ಟ್ರಗಳಲ್ಲಿ 35 ರಿಂದ 40 ಡಿಗ್ರಿ ಉಷ್ಣಾಂಶ ಹೆಚ್ಚಾಗಿದೆ. ಇದರಿಂದ ಯುರೋಪ್ ದೇಶಗಳಲ್ಲಿ 5,000 ಜನ ಸಾವಿಗೀಡಾಗಿದ್ದಾರೆ. ಪ್ರಪಂಚದ ಅರ್ಧ ಭಾಗದಲ್ಲಿ 20 ಸಾವಿರ ಜನ ಮೃತಪಟ್ಟಿದ್ದಾರೆ. ಸೂಪರ್ ಎಲ್ ನೀನೋ ಗಂಭೀರತೆ ಎಷ್ಟಿದೆ ಎಂಬುದು ಇದರಿಂದಲೇ ಗೊತ್ತಾಗುತ್ತದೆ. ಅನೇಕ ರಾಜ್ಯಗಳು ಒಣ ಹವೆ ಎದುರಿಸುತ್ತಿದ್ದಾರೆ. ರಾಜ್ಯದ ಮಲೆನಾಡು, ಕರಾವಳಿ ಪ್ರದೇಶಗಳಲ್ಲಿ ಸ್ವಲ್ಪ ಮಳೆಬಿದ್ದಿದೆ. ಮಹಾರಾಷ್ಟ್ರದಲ್ಲಿ ಮಳೆ ಆಗಿರುವುದರಿಂದ ಆಲಮಟ್ಟಿ ಜಲಾಶಯಕ್ಕೆ ನೀರು ಬರುತ್ತಿದೆ.
ಬೆಂಗಳೂರು ವಿಭಾಗದಲ್ಲಿ ಮಳೆಯ ಪ್ರಮಾಣ ನೋಡಿದಾಗ ಬೆಂಗಳೂರು ನಗರ ಜಿಲ್ಲೆ -28, ಬೆಂಗಳೂರು ಗ್ರಾಮಾಂತರ ಜಿಲ್ಲೆ -18, ರಾಮನಗರ -24, ಕೋಲಾರ -36, ಚಿಕ್ಕಬಳ್ಳಾಪುರ -28, ತುಮಕೂರು -18, ಚಿತ್ರದುರ್ಗ -28, ದಾವಣಗೆರೆ -48, ಶಿವಮೊಗ್ಗ -48 ರಷ್ಟು ಮಳೆ ಕೊರತೆಯಾಗಿದೆ. ಬೆಂಗಳೂರು ಕಂದಾಯ ವಿಭಾಗದಲ್ಲಿ ಒಟ್ಟು -37 ಮಳೆ ಕೊರತೆಯಾಗಿದೆ. ಈ ವರ್ಷ ನಮ್ಮ ರಾಜ್ಯ ಅತ್ಯಂತ ಗಂಭೀರವಾದ ಬರ ಪರಿಸ್ಥಿತಿಗೆ ತಲುಪಿದೆ.
ಈ ಸನ್ನಿವೇಶದಲ್ಲಿ ಖಾಸಗಿ ಬೋರ್ವೆಲ್ಗಳನ್ನು ಬಾಡಿಗೆಗೆ ಪಡೆದು ಮತ್ತು ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡುವ ಪರಿಸ್ಥಿತಿ ಬಂದಿದೆ. ಸರ್ಕಾರ ಏನೆಲ್ಲ ಕ್ರಮ ತೆಗೆದುಕೊಳ್ಳಬೇಕು ಅದೆಲ್ಲವನ್ನೂ ಮಾಡಿದೆ. ಕುಡಿಯುವ ನೀರಿಗಾಗಿ ಪ್ರತಿ ಜಿಲ್ಲೆಗೆ 5 ಕೋಟಿ ರೂ. ಮಂಜೂರು ಮಾಡಲಾಗಿದೆ. ಈ ಹಣವನ್ನು ಈಗಾಗಲೇ ಜಿಲ್ಲಾಧಿಕಾರಿಗಳು ಖರ್ಚು ಮಾಡುತ್ತಿದ್ದಾರೆ. ಪ್ರತಿ ಕ್ಷೇತ್ರಕ್ಕೆ 1 ಕೋಟಿ ರೂ. ನೀಡುವುದಾಗಿ ಘೋಷಣೆ ಮಾಡಿದ್ದೇವೆ.
ರಾಜ್ಯದಲ್ಲಿ ಲಕ್ಷಾಂತರ ದನ ಕರುಗಳಿವೆ. ಮೇವಿನ ಸಂಕಷ್ಟ ಎದುರಾಗುವ ಸಾಧ್ಯತೆ ಇದೆ. ಮುಂದಿನ 30 ವಾರ, 40 ವಾರಕ್ಕೆ ಆಗುವಷ್ಟು ಮೇವು ಸಂಗ್ರಹವಿದೆ ಎಂದು ಮಾಹಿತಿ ನೀಡಿದ್ದಾರೆ. ಸಂಗ್ರಹವಿರುವ ಮೇವು ಸರಿಯಾಗಿ ಉಪಯೋಗಕ್ಕೆ ಬರಬೇಕು. ಇಲ್ಲವಾದರೆ ಕಷ್ಟಕ್ಕೆ ಸಿಲುಕುತ್ತೇವೆ. ನೀರು ಲಭ್ಯ ಇರುವ ಪ್ರದೇಶದ ರೈತರಿಗೆ ಮೇವಿನ ಬೀಜದ ಕಿಟ್ ನೀಡುವಂತೆ ಪಶುಸಂಗೋಪನಾ ಇಲಾಖೆಯವರಿಗೆ ಸೂಚನೆ ನೀಡಲಾಗಿದೆ. ಅದರ ಪ್ರಕಾರ ಬೀಜದ ಕಿಟ್ ವಿತರಿಸಲಾಗುತ್ತಿದೆ.
ಈ ಹಿಂದೆ ರಾಜ್ಯದಲ್ಲಿ ಬರದ ಪರಿಸ್ಥಿತಿ ಎದುರಾದಾಗ ಪಕ್ಕದ ರಾಜ್ಯದಿಂದ ಮೇವು ತರಿಸಲಾಗುತ್ತಿತ್ತು. ಮೇವು ಬ್ಯಾಂಕ್, ಗೋಶಾಲೆ ಮಾಡಲಾಗುತ್ತಿತ್ತು. ಆದರೆ ನೆರೆ ರಾಜ್ಯಗಳಲ್ಲೂ ಮಳೆ ಇಲ್ಲದೆ ಬರ ಬಿದ್ದಿದೆ. ಅಲ್ಲಿಂದಲೂ ಮೇವು ತರಿಸಲು ಸಾಧ್ಯವಾಗುತ್ತಿಲ್ಲ.
ಬಾಗಲಕೋಟೆ, ವಿಜಯಪುರ, ಕೊಪ್ಪಳ, ಬಳ್ಳಾರಿ, ಯಾದಗಿರಿ ಭಾಗದ ಜಿಲ್ಲೆಗಳಲ್ಲಿ ಗುಳೆ ಹೋಗುತ್ತಿರುವ ಬಗ್ಗೆ ವರದಿ ಬರುತ್ತಿವೆ. ವಿಬಿ ಜಿ ರಾಮ್ ಜಿ ಯೋಜನೆಯಡಿ ಕಾಮಗಾರಿಗಳನ್ನು ಕೈಗೆತ್ತಿಕೊಂಡು, ಜನರಿಗೆ ಉದ್ಯೋಗ ನೀಡುವಂತೆ ಸೂಚಿಸಲಾಗಿದೆ. ಸರ್ಕಾರದಲ್ಲಿ ಹಣದ ಕೊರತೆ ಇಲ್ಲ. ಯಾರು ಕೂಡ ಆತಂಕಕ್ಕೆ ಒಳಗಾಗುವುದು ಬೇಡ. ಗುಳೆ ಹೋಗುತ್ತಿರುವ ಊರುಗಳಲ್ಲಿ ಕೂಡಲೇ ಕಾಮಗಾರಿ ಕೈಗೆತ್ತಿಕೊಳ್ಳಬೇಕು.
ಪ್ರತಿ ತಾಲ್ಲೂಕಿನಲ್ಲಿ ಟಾಸ್ಕ್ ಫೋರ್ಸ್ ರಚಿಸಲಾಗಿದೆ. ಪ್ರತಿವಾರ ಜಿಲ್ಲಾ ಮತ್ತು ತಾಲೂಕು ಮಟ್ಟದ ಟಾಸ್ಕ್ಫೋರ್ಸ್ ಸಭೆ ನಡೆಸುವಂತೆ ಡಿಸಿ, ಸಿಇಒಗಳಿಗೆ ಸೂಚನೆ ನೀಡಲಾಗಿದೆ. ಆಗ ಬರ ಪರಿಸ್ಥಿತಿ ಗಮನಕ್ಕೆ ಬರುತ್ತದೆ. ಬರದ ವಸ್ತುಸ್ಥಿತಿ ಏನೆಂಬುದು ಮತ್ತು ಬರ ಪರಿಸ್ಥಿತಿಯನ್ನು ಎದುರಿಸಲು ಆ್ಯಕ್ಷನ್ ಪ್ಲಾನ್ ರೂಪಿಸಲು ಅನುಕೂಲವಾಗುತ್ತದೆ. ಕುಡಿಯುವ ನೀರಿನ ಸಮಸ್ಯೆ ದಿನದಿನ ಬದಲಾಗುತ್ತಿರುತ್ತದೆ.
ಬೆಂಗಳೂರು ಕಂದಾಯ ವಿಭಾಗದಲ್ಲಿ 13.73 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಬೇಕಿತ್ತು. ಆದರೆ, 1.74 ಲಕ್ಷ ಹೆಕ್ಟೇರ್ ಬಿತ್ತನೆಯಾಗಿದೆ. ಶೇ 13ರಷ್ಟು ಬಿತ್ತನೆಯಾಗಿದೆ. ಬರ ಪರಿಸ್ಥಿತಿಯ ಕುರಿತು ನಾನು ಮತ್ತು ಮುಖ್ಯಮಂತ್ರಿಗಳು ಪ್ರಧಾನಿಯವರಿಗೆ ಪತ್ರ ಬರೆದಿದ್ದೇವೆ. ನಾನು ಕೇಂದ್ರದ ಗೃಹ ಸಚಿವರಿಗೆ ಮತ್ತು ಕೃಷಿ ಸಚಿವರಿಗೂ ಪತ್ರ ಬರೆದು ಪ್ರಸ್ತುತ ಪರಿಸ್ಥಿತಿಯ ಬಗ್ಗೆ ವಿವರಿಸಿದ್ದೇನೆ.
ಬರ ಘೋಷಣೆ ಮಾಡಲು 10 ನಿಯಮಗಳನ್ನು ರೂಪಿಸಿದ್ದಾರೆ. ಈ ನಿಯಮಗಳನ್ನು ಸಡಿಲಿಕೆ ಮಾಡುವಂತೆ ಒತ್ತಾಯಿಸಲಾಗಿದೆ. ಬರ ಪರಿಸ್ಥಿತಿಯ ಕುರಿತು ಆಗಸ್ಟ್ 15ವರೆಗೆ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಲು ಸಾಧ್ಯವಾಗುವುದಿಲ್ಲ. ಆಗಸ್ಟ್ ನಂತರ ಮಳೆ ಬಂದರೆ ಚಿತ್ರಣ ಬದಲಾಗಲಿದೆ. ಹೀಗಾಗಿ ಕೇಂದ್ರಕ್ಕೆ ವರದಿ ನೀಡಲು ವಿಳಂಬವಾಗಲಿದೆ.
- ಚಿತ್ರದುರ್ಗದಲ್ಲಿ ನಡೆದ ಬೆಂಗಳೂರು ಪ್ರಾದೇಶಿಕ ವಿಭಾಗ ಮಟ್ಟದ ಪ್ರಗತಿ ಪರಿಶೀಲನಾ ಸಭೆಯಲ್ಲಿ ನನ್ನ ಮಾತುಗಳು -
Dr. G Parameshwara
@DrParameshwara
ಈ ವರ್ಷ ರಾಜ್ಯದಲ್ಲಿ ಕಡಿಮೆ ಮಳೆಯಾಗಿದ್ದು, ಬರದ ಬಿಸಿಯಿದೆ. ಇಂತಹ ಸಂದರ್ಭದಲ್ಲಿ ಜನರಿಗೆ ಕುಡಿಯುವ ನೀರು, ಜಾನುವಾರುಗಳಿಗೆ ಮೇವು, ಮಂಕಾಗಿರುವ ಕೃಷಿ ಚಟುವಟಿಕೆಗಳಿಗೆ ಜೀವ ತುಂಬಲು, ಸ್ಥಳೀಯವಾಗಿ ಉದ್ಯೋಗ ಒದಗಿಸುವ ಸವಾಲು ನಮ್ಮೆದುರಿಗಿದೆ. ಈಗಾಗಲೇ ಸಾಕಷ್ಟು ಜಿಲ್ಲೆಗಳಲ್ಲಿ ಬರ ಪರಿಸ್ಥಿತಿಯ ಪ್ರಗತಿ ಪರಿಶೀಲನೆಯನ್ನು ನಡೆಸಿದ್ದೇನೆ.
ಇಂದು ಮುಖ್ಯಮಂತ್ರಿ ಶ್ರೀ @DKShivakumar ಅವರೊಂದಿಗೆ ಚಿತ್ರದುರ್ಗ ಜಿಲ್ಲೆಯಲ್ಲಿ ಪ್ರವಾಸ ಕೈಗೊಂಡು, ಹಿರಿಯೂರು ತಾಲೂಕಿನ ಬರ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ, ರೈತರ ಕಷ್ಟ - ಕಾರ್ಪಣ್ಯಗಳನ್ನು ಆಲಿಸಿ ಅವುಗಳ ಪರಿಹಾರಕ್ಕೆ ಯೋಜನೆ ರೂಪಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದೆ.
ಆ ಬಳಿಕ ಚಿತ್ರದುರ್ಗದ ಮುರುಘರಾಜೇಂದ್ರ ಬೃಹನ್ಮಠದ ಅನುಭವ ಮಂಟಪ ಸಭಾಂಗಣದಲ್ಲಿ ಬೆಂಗಳೂರು ಪ್ರಾದೇಶಿಕ ವಿಭಾಗ ಮಟ್ಟದ ಪ್ರಗತಿ ಪರಿಶೀಲನಾ ಸಭೆ ನಡೆಸಿ, ನೀರು, ಮೇವಿನ ಲಭ್ಯತೆ, ಮಳೆ ಕೊರತೆ, ಬಿತ್ತನೆ ಪ್ರಮಾಣ ಮುಂತಾದವುಗಳ ಮಾಹಿತಿ ಪಡೆದು, ಈ ಸಂಕಷ್ಟದ ಸಮಯದಲ್ಲಿ ಸರ್ಕಾರದಿಂದ ರೈತರಿಗೆ ಯಾವೆಲ್ಲ ರೀತಿಯ ನೆರವನ್ನು ನೀಡಲು ಸಾಧ್ಯವೋ, ಅದೆಲ್ಲವನ್ನು ನೀಡುವಂತೆ ಅಧಿಕಾರಿಗಳಿಗೆ ಅಗತ್ಯ ನಿರ್ದೇಶನಗಳನ್ನು ನೀಡಿದೆ.
ಸಭೆಯಲ್ಲಿ ಸಚಿವರಾದ ರಾಮಲಿಂಗಾರೆಡ್ಡಿ, ಈಶ್ವರ ಖಂಡ್ರೆ, ರಾಜ್ಯ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿಗಳಾದ ಟಿ.ಬಿ.ಜಯಚಂದ್ರ, ಸರ್ಕಾರದ ಮುಖ್ಯ ಕಾರ್ಯದರ್ಶಿಗಳಾದ ಶಾಲಿನಿ ರಜನೀಶ್, ಮುಖ್ಯಮಂತ್ರಿಯವರ ಅಪರ ಮುಖ್ಯ ಕಾರ್ಯದರ್ಶಿಗಳಾದ ತುಷಾರ್ ಗಿರಿನಾಥ್ ಸೇರಿದಂತೆ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.
Karnataka has received inadequate rainfall this year and is facing severe drought conditions. Ensuring drinking water for people, fodder for livestock, reviving stalled agricultural activity and creating local employment are major challenges before us. I have already reviewed the drought situation in several districts.
Today, along with Chief Minister Shri D.K. Shivakumar, I visited drought-affected areas in Hiriyur taluk during our tour of Chitradurga district. We listened to the hardships faced by farmers and directed officials to prepare appropriate measures to address their concerns.
Later, I chaired a Bengaluru Revenue Division-level progress review meeting at the Anubhava Mantapa Hall of the Murugharajendra Brihanmatha in Chitradurga. I reviewed the availability of water and fodder, rainfall deficiency, sowing levels and other key issues, and directed officials to extend every possible form of Government assistance to farmers during this difficult period.
Ministers Shri Ramalinga Reddy and Shri Eshwar Khandre, the State Government’s Special Representative in Delhi Shri T.B. Jayachandra, Chief Secretary Smt. Shalini Rajneesh, Additional Chief Secretary to the Chief Minister Shri Tushar Giri Nath and other officials were present at the meeting. -
Dr. G Parameshwara
@DrParameshwara
ದೇಶದ ಬಹುತ್ವದ ಸಂಸ್ಕೃತಿ, ಐಕ್ಯತೆ ಮತ್ತು ಸಹಬಾಳ್ವೆಯ ಸಂದೇಶವನ್ನು ಯುವಜನತೆಗೆ ತಲುಪಿಸುವ ಉದ್ದೇಶದಿಂದ ಲೋಕಸಭೆಯ ವಿರೋಧ ಪಕ್ಷದ ನಾಯಕರಾದ ಶ್ರೀ @RahulGandhi ಅವರು ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಸುಮಾರು 3,570 ಕಿ.ಮೀ.ಗಳ ಭಾರತ್ ಜೋಡೋ ಯಾತ್ರೆ ಕೈಗೊಂಡಿದ್ದರು. ಆ ಯಾತ್ರೆಯ ಆಶಯವನ್ನು ಮುಂದುವರಿಸುತ್ತಾ ಈಗ 'ಭಾರತ್ ಜೋಡೋ ಯುವ ಸಂಘಗಳು' ಅಸ್ತಿತ್ವಕ್ಕೆ ಬರುತ್ತಿವೆ.
ಯುವಜನರಲ್ಲಿ ಕ್ರೀಡೆ, ಸಂಸ್ಕೃತಿ, ವೈಜ್ಞಾನಿಕ ಮನೋಭಾವ, ನಾಯಕತ್ವ ಹಾಗೂ ಸಾಮಾಜಿಕ ಸಾಮರಸ್ಯವನ್ನು ಬೆಳೆಸುವ ಉದ್ದೇಶದಿಂದ ಈ ಸಂಘಗಳನ್ನು ರಚಿಸಲಾಗುತ್ತಿದೆ.
ಶಾಂತಿ, ಸೌಹಾರ್ದತೆ ಮತ್ತು ಸಮಾನತೆಯ ಮೌಲ್ಯಗಳನ್ನು ಬಲಪಡಿಸಿ, ಯುವಕರು ಆರ್ಥಿಕವಾಗಿ ಹಾಗೂ ಸಾಮಾಜಿಕವಾಗಿ ಸದೃಢರಾಗುವಂತೆ ಮಾಡುವುದೇ ಈ ಮಹತ್ವಾಕಾಂಕ್ಷಿ ಯೋಜನೆಯ ಮುಖ್ಯ ಗುರಿಯಾಗಿದೆ.
Dr. G Parameshwara
@DrParameshwara
Dr. G Parameshwara
@DrParameshwara
-
Dr. G Parameshwara
@DrParameshwara
ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ವದ್ದೀಕೆರೆ ಗ್ರಾಮದಲ್ಲಿ ಸೂರ್ಯಕಾಂತಿ ಬಿತ್ತನೆ ಮಾಡಿರುವ ಜಮೀನಿಗೆ ಮುಖ್ಯಮಂತ್ರಿ ಶ್ರೀ @DKShivakumar ಅವರೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ.
ಮಳೆ ಕೊರತೆಯಿಂದ ಸೂರ್ಯಕಾಂತಿ ಬೆಳೆ ಒಣಗುತ್ತಿರುವುದು ಕಂಡುಬಂದಿದ್ದು, ಬೆಳೆ ಪರಿಸ್ಥಿತಿಯ ಕುರಿತು ರೈತರಿಂದ ಹಾಗೂ ಅಧಿಕಾರಿಗಳಿಂದ ಮಾಹಿತಿ ಪಡೆದೆ. ಸಚಿವರಾದ ಈಶ್ವರ್ ಖಂಡ್ರೆ ಜೊತೆಗಿದ್ದರು.
Along with Chief Minister Shri D.K. Shivakumar, I visited a sunflower field in Vaddikere village of Hiriyur taluk, Chitradurga district, and reviewed the condition of the crop.
As the sunflower crop was drying up due to inadequate rainfall, I gathered details from farmers and officials about the crop situation and the challenges they are facing. Minister Shri Eshwar Khandre was also present during the visit. -
Dr. G Parameshwara
@DrParameshwara
ಜಕ್ಕೂರಿನ ಸರ್ಕಾರಿ ವೈಮಾನಿಕ ತರಬೇತಿ ಶಾಲೆಯ ಪರವಾನಗಿಯನ್ನು ಕೇಂದ್ರ ಸರ್ಕಾರ 5 ವರ್ಷಕ್ಕೆ ನವೀಕರಿಸಿದ್ದು, ತಿಂಗಳೊಳಗೆ ತರಬೇತಿ ಪ್ರಕ್ರಿಯೆ ಆರಂಭವಾಗಲಿದೆ. ಶುಕ್ರವಾರ ಇಲ್ಲಿಗೆ ಭೇಟಿ ನೀಡಿ, ಪರಿಶೀಲನೆ ನಡೆಸಿ, ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದೆ.
ಈ ಕುರಿತಾದ ಪತ್ರಿಕಾ ವರದಿಗಳು ಹೀಗಿವೆ..
The Union Government has renewed the licence of the Government Flying Training School at Jakkur for five years, and training operations will begin within a month.
I visited the school on Friday, reviewed its activities and later addressed a media conference.
Here are some media reports on the matter.. -
Dr. G Parameshwara
@DrParameshwara
ಜಪಾನ್ನಲ್ಲಿ ನಡೆಯಲಿರುವ ಏಷ್ಯನ್ ಗೇಮ್ಸ್ನ ಪೋಲ್ ವಾಲ್ಟ್ ಕ್ರೀಡೆಯಲ್ಲಿ ದೇಶವನ್ನು ಪ್ರತಿನಿಧಿಸಲಿರುವ ಕರ್ನಾಟಕದ ಹೆಮ್ಮೆಯ ಕ್ರೀಡಾಪಟು ಸಿಂಧುಶ್ರೀ ಗಣೇಶ್ ಅವರಿಗೆ ಶುಕ್ರವಾರ ಅಂತಾರಾಷ್ಟ್ರೀಯ ಗುಣಮಟ್ಟದ 3 ಮೂರು ಪೋಲ್ಗಳನ್ನು ಹಸ್ತಾಂತರಿಸಿ ಶುಭಹಾರೈಸಿದೆ.
ಈ ಕುರಿತಾದ ಪತ್ರಿಕಾ ವರದಿಗಳು ಹೀಗಿವೆ..
On Friday, I presented three international-standard poles to Karnataka’s proud athlete Sindhushree Ganesh, who will represent India in pole vault at the Asian Games in Japan, and extended my best wishes to her.
Here are some media reports on the matter.. -
Dr. G Parameshwara
@DrParameshwara
ಇಂದು ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಯರಬಳ್ಳಿ ಗ್ರಾಮದಲ್ಲಿನ ಜಮೀನುಗಳಿಗೆ ಮುಖ್ಯಮಂತ್ರಿ ಶ್ರೀ ಡಿ.ಕೆ.ಶಿವಕುಮಾರ್ ಅವರೊಂದಿಗೆ ಭೇಟಿ ನೀಡಿ, ಬರ ಪರಿಸ್ಥಿತಿಯ ಪರಿಶೀಲನೆ ನಡೆಸಿದೆ. ಕೃಷಿ ಚಟುವಟಿಕೆ ಹಾಗೂ ರೈತರ ಸಮಸ್ಯೆಯನ್ನು ಆಲಿಸಿದೆ.
ಈ ವೇಳೆ ಸಚಿವರಾದ ಈಶ್ವರ ಖಂಡ್ರೆ, ಶಾಸಕರಾದ ರಘುಮೂರ್ತಿ, ವಿಧಾನ ಪರಿಷತ್ ಸದಸ್ಯರಾದ ಶ್ರೀನಿವಾಸ್, ಚಿತ್ರದುರ್ಗ ಜಿಲ್ಲಾಧಿಕಾರಿ ಹಾಗೂ ಇತರೆ ಅಧಿಕಾರಿಗಳು ಇದ್ದರು. -
Dr. G Parameshwara
@DrParameshwara
ಕಟ್ಟುನಿಟ್ಟಿನ ನಿಯಮಗಳಿಂದಾಗಿ ಉನ್ನತ ವ್ಯಾಸಂಗದ ಕನಸು ಕಂಡಿದ್ದ ಹಲವು ಕ್ರೀಡಾಸಾಧಕರು ಸರ್ಕಾರಿ ಖೋಟಾದಡಿ ಇಂಜಿನಿಯರಿಂಗ್ ಹಾಗೂ ಮೆಡಿಕಲ್ ಸೀಟುಗಳಿಂದ ಹೊರಗುಳಿದಿದ್ದರು. ಇಂತಹ ಮಕ್ಕಳ ಸಮಸ್ಯೆಯನ್ನು ಆಲಿಸಿ, ಸಕಾಲದಲ್ಲಿ ಪರಿಹರಿಸುವ ಮೂಲಕ ಕ್ರೀಡೆಯ ಜೊತೆಗೆ ಶಿಕ್ಷಣ ಪಡೆಯುವ ಅವರ ಕನಸಿಗಿದ್ದ ಅಡೆತಡೆಯನ್ನು ನಿವಾರಿಸಿದ್ದೇನೆ.
ಕ್ರೀಡಾ ಸಾಧಕರ ಖೋಟಾದಡಿ ಮೆಡಿಕಲ್ ಹಾಗೂ ಇಂಜಿನಿಯರಿಂಗ್ ಸೀಟು ಪಡೆದ ಹಲವರು ನನ್ನನ್ನು ಭೇಟಿಯಾಗಿ, ಕೃತಜ್ಞತೆ ಸಲ್ಲಿಸಿ, ತಮ್ಮ ಅನಿಸಿಕೆಯನ್ನು ಹಂಚಿಕೊಂಡಿದ್ದು ಹೀಗೆ..This media couldn't be displayed. See it on the original post. -
Dr. G Parameshwara
@DrParameshwara
ಸರ್ವರಿಗೂ ಆಷಾಢ ಏಕಾದಶಿಯ ಹಾರ್ದಿಕ ಶುಭಾಶಯಗಳು.
ಶ್ರೀ ಮಹಾವಿಷ್ಣು ಯೋಗನಿದ್ರೆಗೆ ಜಾರುವ ಈ ಪವಿತ್ರ ದಿನದಂದು ಭಗವಂತನು ಪ್ರತಿಯೊಬ್ಬರಿಗೂ ಸುಖ, ಶಾಂತಿ, ನೆಮ್ಮದಿಯನ್ನು ನೀಡಿ ಆಶೀರ್ವದಿಸಲಿ ಎಂದು ಆಶಿಸುತ್ತೇನೆ.
#ಆಷಾಢ_ಏಕಾದಶಿ -
Dr. G Parameshwara
@DrParameshwara
ಮಾಜಿ ಸಚಿವರು, ಮಾಜಿ ಉಪಸಭಾಪತಿಗಳು ಹಾಗೂ ಆತ್ಮೀಯರು ಆಗಿದ್ದ ಸಿ.ವೀರಣ್ಣನವರ ನಿಧನದ ಸುದ್ದಿ ಕೇಳಿ ದುಃಖವಾಯಿತು. ರಾಜ್ಯದ ಹಾಗೂ ಶೋಷಿತ ಜನರ ಬಗ್ಗೆ ಸದಾಕಾಲ ಒಳಿತನ್ನೇ ಬಯಸುತ್ತಿದ್ದ ಅವರ ನಿಧನವು ವೈಯಕ್ತಿಕವಾಗಿ ನನಗೆ ಅಪಾರ ನೋವುಂಟುಮಾಡಿದೆ.
ಕೊರಟಗೆರೆ ವಿಧಾನಸಭಾ ಕ್ಷೇತ್ರದಿಂದ ಶಾಸಕರಾಗಿ ರಾಮಕೃಷ್ಣ ಹೆಗಡೆ ಹಾಗೂ ಎಸ್.ಆರ್.ಬೊಮ್ಮಾಯಿ ಅವರ ಸರ್ಕಾರದಲ್ಲಿ ವಿವಿಧ ಇಲಾಖೆಗಳ ಜವಾಬ್ದಾರಿ ವಹಿಸಿಕೊಂಡು ಅತ್ಯಂತ ಸಮರ್ಥವಾಗಿ ಅವುಗಳನ್ನು ಮುನ್ನಡೆಸಿದವರು. ವೀರಣ್ಣ ಅವರ ಅಗಲಿಕೆಯಿಂದ ಹಳೆಯ ತಲೆಮಾರಿನ ರಾಜಕೀಯ ಕೊಂಡಿಯೊಂದು ಕಳಚಿದೆ.
ವೀರಣ್ಣನವರು ನಮ್ಮೆಲ್ಲರಿಗೂ ಮಾರ್ಗದರ್ಶನ ನೀಡುತ್ತಾ, ಇನ್ನಷ್ಟು ಕಾಲ ನಮ್ಮೊಂದಿಗಿರಬೇಕಿತ್ತು. ತಮ್ಮ ಹೋರಾಟದ ಬದುಕು, ತಳ ಸಮುದಾಯಗಳ ಬಗೆಗಿನ ಕಾಳಜಿ ಮತ್ತು ಸಾಧನೆಗಳ ಮೂಲಕ ನಮ್ಮ ನಡುವೆ ಅವರ ನೆನಪು ಚಿರಸ್ಥಾಯಿ.
ಮೃತರ ಆತ್ಮಕ್ಕೆ ಚಿರಶಾಂತಿ ದೊರಕಲಿ, ಅವರ ಕುಟುಂಬವರ್ಗ ಮತ್ತು ಬಂಧು ಮಿತ್ರರಿಗೆ ನೋವು ಭರಿಸುವ ಶಕ್ತಿ ಸಿಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ. -
Dr. G Parameshwara
@DrParameshwara
ಜಕ್ಕೂರು ಸರ್ಕಾರಿ ವಿಮಾನ ಚಾಲನಾ ತರಬೇತಿ ಶಾಲೆಗೆ ಇಂದು ಭೇಟಿ ನೀಡಿ, ಪರಿಶೀಲನೆ ನಡೆಸಿದೆ.
This media couldn't be displayed. See it on the original post. -
Dr. G Parameshwara
@DrParameshwara
ನಿಮ್ಮ ಸಮಸ್ಯೆಗಳು ನನ್ನದು, ಅದಕ್ಕೆ ಪರಿಹಾರ ಕೊಡಿಸುವ ಜವಾಬ್ದಾರಿಯು ನನ್ನದು!
ಪ್ರಭುವಿನೆಡೆಗೆ ಪ್ರಭುತ್ವದ ಸರ್ಕಾರವಿದು. ನೀವು ಕೊಟ್ಟ ಅಧಿಕಾರ ನಿಮ್ಮ ಬದುಕನ್ನು ಉತ್ತಮಗೊಳಿಸಲು ಬಳಕೆಯಾದರೆ ಅದಕ್ಕಿಂತ ನೆಮ್ಮದಿ, ಸಂತೋಷ ಇನ್ನೇನಿದೆ.
ನಿಮ್ಮ ಅಹವಾಲುಗಳನ್ನು ಸ್ವೀಕರಿಸಿ, ಕಾಲ ಮಿತಿಯೊಳಗೆ ಬಗೆಹರಿಸಿ ನಮ್ಮ ಸರ್ಕಾರದ ಮೇಲೆ ನಿಮಗಿರುವ ವಿಶ್ವಾಸವನ್ನು ಉಳಿಸಿಕೊಳ್ಳಲು ಪ್ರಾಮಾಣಿಕವಾಗಿ ಪ್ರಯತ್ನ ಮಾಡುತ್ತೇನೆ. -
Dr. G Parameshwara
@DrParameshwara
ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ, ಪರೀಕ್ಷಾ ನಿರ್ವಹಣೆಯ ವೈಫಲ್ಯ ಮತ್ತು ವಿದ್ಯಾರ್ಥಿಗಳ ಶಾಂತಿಯುತ ಪ್ರತಿಭಟನೆ ಹತ್ತಿಕ್ಕುತ್ತಿರುವ ನಡೆಯನ್ನು ಖಂಡಿಸಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಗೆ ಬರೆದ ಪತ್ರದಲ್ಲಿ ನೀಟ್ ಪರೀಕ್ಷೆ ವ್ಯವಸ್ಥೆ ಹಿಂತೆಗೆದುಕೊಳ್ಳುವಂತೆ ಮತ್ತು ವೈದ್ಯಕೀಯ ಪದವಿ ಪ್ರವೇಶಕ್ಕೆ ಪಾರದರ್ಶಕತೆ ಹಾಗೂ ಅರ್ಹತೆ ಆಧಾರದಲ್ಲಿ ನಡೆಯುವ ರಾಜ್ಯ ಮಟ್ಟದ ಸಿಇಟಿ ವ್ಯವಸ್ಥೆ ಮರುಸ್ಥಾಪಿಸುವಂತೆ ಆಗ್ರಹಿಸಿದ್ದೇನೆ.
ಕೇಂದ್ರ ಸರ್ಕಾರಕ್ಕೆ ನನ್ನ ಒತ್ತಾಯಗಳು:
- ನೀಟ್ ಹಿಂತೆದುಕೊಳ್ಳಿ ಮತ್ತು ಪಾರದರ್ಶಕತೆ ಮತ್ತು ಅರ್ಹತೆಯ ಆಧಾರದ ಸಿಇಟಿಯನ್ನು ಮರುಸ್ಥಾಪಿಸಿ
- ಕಾಲಮಿತಿಯಲ್ಲಿ ಪಾರದರ್ಶಕ ತನಿಖೆಗೆ ಕ್ರಮವಹಿಸಿ
- ಪ್ರಾಣ ಕಳೆದುಕೊಂಡ ವಿದ್ಯಾರ್ಥಿಗಳ ಕುಟುಂಬಕ್ಕೆ ಹಾಗೂ ಹೋರಾಟದಲ್ಲಿ ಗಾಯಗೊಂಡವರಿಗೆ ಪರಿಹಾರ ಒದಗಿಸಿ
- ಲಾಠಿಚಾರ್ಜ್ ಹಾಗೂ ಅಶ್ರುವಾಯು ದಾಳಿಗೆ ಹೊಣೆಗಾರರು ಯಾರು ಎಂಬುದನ್ನು ತಿಳಿಸಿ
- ವಿದ್ಯಾರ್ಥಿಗಳು ಹಾಗೂ ಶಿಕ್ಷಣ ತಜ್ಞರ ಜೊತೆ ಅರ್ಥಪೂರ್ಣ ಸಂವಾದ ನಡೆಸಿ
- ನಮ್ಮ ಶಿಕ್ಷಣ ವ್ಯವಸ್ಥೆ ಮೇಲಿನ ಸಾರ್ವಜನಿಕರ ವಿಶ್ವಾಸಾರ್ಹತೆಯನ್ನು ಮರುಸ್ಥಾಪಿಸಿ -
Dr. G Parameshwara
@DrParameshwara
ಸಾಧಿಸುವ ಛಲ ಇದ್ದರೆ ಯಾವುದೇ ಕನಸು ಅಸಾಧ್ಯವಲ್ಲ ಎಂಬುದನ್ನು ಶಿವಮೊಗ್ಗ ಜಿಲ್ಲೆಯ ಭದ್ರಾವತಿಯ ಬಡ ಕುಟುಂಬದ ಪ್ರತಿಭಾವಂತ ಯುವತಿ ಸಿಂಧುಶ್ರೀ ಗಣೇಶ್ ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ.
ಕಠಿಣ ಪರಿಶ್ರಮ, ಅಚಲ ಆತ್ಮವಿಶ್ವಾಸ ಮತ್ತು ನಿರಂತರ ಅಭ್ಯಾಸದ ಫಲವಾಗಿ ಸಿಂಧುಶ್ರೀ ಅವರು ಪೋಲ್ ವಾಲ್ಟ್ ಸ್ಪರ್ಧೆಯನ್ನು ಯಶಸ್ವಿಯಾಗಿ ಗೆದ್ದು , ಜಪಾನ್ನಲ್ಲಿ ನಡೆಯಲಿರುವ ಏಷ್ಯನ್ ಗೇಮ್ಸ್ಗೆ ಅರ್ಹತೆ ಪಡೆದು ಭಾರತವನ್ನು ಪ್ರತಿನಿಧಿಸುತ್ತಿರುವುದು ನಮ್ಮೆಲ್ಲರಿಗೂ ಹೆಮ್ಮೆಯ ಕ್ಷಣ. ಕೂಲಿ ಕಾರ್ಮಿಕರಾಗಿದ್ದ ತಂದೆಯ ಕನಸನ್ನು ತನ್ನ ಸಾಧನೆಯ ಮೂಲಕ ನನಸಾಗಿಸಿರುವ ಸಿಂಧುಶ್ರೀ ಅವರ ಬದುಕಿನ ಪಯಣ ಅನೇಕ ಯುವಕರಿಗೆ ಸ್ಫೂರ್ತಿಯಾಗಿದೆ.
ಏಷ್ಯನ್ ಗೇಮ್ಸ್ನಲ್ಲಿ ಸಿಂಧುಶ್ರೀ ಅವರು ದೇಶಕ್ಕೆ ಪದಕ ತಂದು ಕರ್ನಾಟಕದ ಕೀರ್ತಿಯನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯಲಿ ಎಂದು ಹಾರೈಸುತ್ತೇನೆ.
ಅವರ ಸಾಧನೆಗೆ ಬೆಂಬಲವಾಗಿ ಅಂತಾರಾಷ್ಟ್ರೀಯ ಮಟ್ಟದ ಸ್ಪರ್ಧೆಗಳಲ್ಲಿ ಬಳಸುವ ಮೂರು ಗುಣಮಟ್ಟದ ಹೊಸ ಪೋಲ್ಗಳನ್ನು ವಿದೇಶದಿಂದ ತರಿಸಿ ವಿತರಿಸಿದ್ದೇವೆ. ಜೊತೆಗೆ ₹5 ಲಕ್ಷ ಪ್ರೋತ್ಸಾಹ ಧನವನ್ನು ನೀಡಿದ್ದೇವೆ. ಪ್ರತಿಭಾವಂತ ಕ್ರೀಡಾಪಟುಗಳ ಬೆನ್ನಿಗೆ ಸರ್ಕಾರ ಸದಾ ದೃಢವಾಗಿ ನಿಲ್ಲಲಿದೆ.This media couldn't be displayed. See it on the original post. -
Dr. G Parameshwara
@DrParameshwara
ಬರ ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸಲು ಸರ್ಕಾರ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದೆ. ಈಗಾಗಲೇ ಪ್ರತಿ ಶಾಸಕರ ಅಧ್ಯಕ್ಷತೆಯ ಟಾಸ್ಕ್ಫೋರ್ಸ್ ರಚಿಸಿ ₹1 ಕೋಟಿ ಮಂಜೂರು ಮಾಡಲು ತೀರ್ಮಾನಿಸಲಾಗಿದೆ. ಜೊತೆಗೆ, ಕುಡಿಯುವ ನೀರಿನ ಸಮರ್ಪಕ ಪೂರೈಕೆಗಾಗಿ ಪ್ರತಿ ಜಿಲ್ಲೆಗೆ ₹5 ಕೋಟಿ ಬಿಡುಗಡೆ ಮಾಡಲಾಗಿದೆ.
ಇದಲ್ಲದೆ, ಜಿಲ್ಲಾಧಿಕಾರಿಗಳ ಪಿಡಿ ಖಾತೆಗಳಲ್ಲಿ ₹329 ಕೋಟಿ ಲಭ್ಯವಿದ್ದು, ಅಗತ್ಯ ಸಂದರ್ಭಗಳಲ್ಲಿ ತಕ್ಷಣವೇ ಬಳಸುವಂತೆ ಸೂಚಿಸಲಾಗಿದೆ.
ರಾಜ್ಯ ಸರ್ಕಾರ ರಾಜ್ಯದ ಜನರ ಜೊತೆಗೆ ಇದ್ದು ಕುಡಿಯುವ ನೀರು, ಮೇವು, ಆಹಾರ ಇವುಗಳಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸಲು ಸರ್ವ ಸನ್ನದ್ಧವಾಗಿದೆ. -
Dr. G Parameshwara
@DrParameshwara
ಬರದಿಂದ ಜನರು ಉದ್ಯೋಗ ಅರಸಿ ಗುಳೆ ಹೋಗುವ ಪರಿಸ್ಥಿತಿ ನಿರ್ಮಾಣವಾಗದಂತೆ ತಡೆಯುವುದು ಸರ್ಕಾರದ ಪ್ರಮುಖ ಆದ್ಯತೆಯಾಗಿದೆ. ಈ ಹಿನ್ನೆಲೆಯಲ್ಲಿ ವಿಬಿ ಜಿ ರಾಮ್ ಜಿ ಯೋಜನೆ ಅಡಿಯಲ್ಲಿ ಉದ್ಯೋಗ ಒದಗಿಸಿ, ಕಾಮಗಾರಿಗಳನ್ನು ವಿಳಂಬವಿಲ್ಲದೆ ಆರಂಭಿಸುವಂತೆ ಎಲ್ಲ ಜಿಲ್ಲಾ ಪಂಚಾಯತ್ ಸಿಇಒಗಳಿಗೆ ಸೂಚಿಸಿದ್ದೇನೆ.
ಗ್ರಾಮೀಣ ಪ್ರದೇಶದ ಜನರಿಗೆ ಸ್ಥಳೀಯ ಮಟ್ಟದಲ್ಲೇ ಉದ್ಯೋಗಾವಕಾಶ ಕಲ್ಪಿಸಿ, ರಾಜ್ಯದ ಜನರು ಯಾವುದೇ ಸಂಕಷ್ಟ ಎದುರಿಸದಂತೆ ಸರ್ಕಾರ ಎಲ್ಲ ಅಗತ್ಯ ಕ್ರಮಗಳನ್ನು ಕೈಗೊಂಡಿದೆ. -
Dr. G Parameshwara
@DrParameshwara
ಬೆಂಗಳೂರಿನ ಉತ್ತರ ಭಾಗದಲ್ಲಿರುವ ಜಕ್ಕೂರು ಸರ್ಕಾರಿ ವಿಮಾನ ಚಾಲನಾ ತರಬೇತಿ ಶಾಲೆಗೆ ಇಂದು ಭೇಟಿ ನೀಡಿ, ಪರಿಶೀಲನೆ ನಡೆಸಿದೆ.
ಕಾರಣಾಂತರಗಳಿಂದಾಗಿ ಮೂರು ವರ್ಷಗಳಿಂದ ರದ್ದಾಗಿದ್ದ ಸಂಸ್ಥೆಯ ಪರವಾನಗಿಯನ್ನು ಮುಂದಿನ ಐದು ವರ್ಷಗಳ ಅವಧಿಗೆ ನವೀಕರಿಸಲಾಗಿದ್ದು, ಪೈಲಟ್ ಆಗಬೇಕೆಂಬ ಕನಸು ಹೊತ್ತ ಯುವ ಜನರಿಗೆ ಇದರಿಂದ ಅವಕಾಶದ ಬಾಗಿಲು ತೆರೆದಿದೆ.
Dr. G Parameshwara
@DrParameshwara
-
Dr. G Parameshwara
@DrParameshwara
ಚಿತ್ರದುರ್ಗದಲ್ಲಿ ಬೆಂಗಳೂರು ಕಂದಾಯ ವಿಭಾಗದ ಪ್ರಗತಿ ಪರಿಶೀಲನೆ ನಡೆಸಿದ ಬಳಿಕ ಮೈಸೂರು ವಿಭಾಗದಲ್ಲಿ ಬರ ಪರಿಸ್ಥಿತಿಯ ಪರಿಶೀಲನೆ ನಡೆಸಲಾಗುವುದು.
ಮೈಸೂರು ಕಂದಾಯ ವಿಭಾಗದ ಸಭೆ ನಡೆಸುವ ಬಗ್ಗೆ ಸ್ಥಳ, ದಿನಾಂಕ ನಿಗದಿಯಾಗಿಲ್ಲ. ಸಿಎಂ ಅವರು ಸಮಯ ನೀಡುತ್ತಾರೆ. ನಾಲ್ಕು ಕಂದಾಯ ವಿಭಾಗಗಳ ಪ್ರಗತಿ ಪರಿಶೀಲನೆ ಮಾಡಿದರೆ, ರಾಜ್ಯದ ಬರ ಪರಿಸ್ಥಿತಿಯ ಸಂಪೂರ್ಣ ಚಿತ್ರಣ ಸಿಗಲಿದೆ. ತದನಂತರ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು.
ರಾಜ್ಯದಲ್ಲಿ ಕುಡಿಯುವ ನೀರಿಗಾಗಿ ಜಿಲ್ಲಾಧಿಕಾರಿಗಳಿಗೆ ತಲಾ 5 ಕೋಟಿ ರೂ. ನೀಡಲಾಗಿದೆ. ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ 1 ಕೋಟಿ ರೂ. ನೀಡುತ್ತೇವೆ. ಜಿಲ್ಲಾಧಿಕಾರಿಗಳ ಪಿಡಿ ಅಕೌಂಟ್ನಲ್ಲಿ 329 ಕೋಟಿ ರೂ. ಹಣವಿದೆ. ಬರ ಪರಿಸ್ಥಿತಿ ಎದುರಿಸಲು ಸದ್ಯಕ್ಕೆ ಯಾವುದೇ ರೀತಿಯ ಹಣದ ಕೊರತೆ ಇಲ್ಲ.
ಮಳೆಯಾಗದೆ ಇದ್ದರೆ, ಆಗಸ್ಟ್ ತಿಂಗಳ ಎರಡನೇ ವಾರದ ನಂತರ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸುತ್ತೇವೆ. ನಾವು ಬರೆದ ಪತ್ರಗಳಿಗೆ ಈವರೆಗೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಬರ ಪರಿಸ್ಥಿತಿಯ ಪ್ರಸ್ತಾವನೆ ಸಲ್ಲಿಸಿದ ಬಳಿಕ, ಕೇಂದ್ರದಿಂದ ಬರ ಅಧ್ಯಯನ ತಂಡ ರಾಜ್ಯದಲ್ಲಿ ಪರಿಶೀಲನೆ ನಡೆಸಲಿದೆ. ಕೇಂದ್ರ ಸರ್ಕಾರ ಕಳೆದ ಬಾರಿ ಹಣ ನೀಡಿರಲಿಲ್ಲ. ದೆಹಲಿಗೆ ಹೋಗಿ ಪ್ರತಿಭಟನೆ ನಡೆಯಿತು. ಕೋರ್ಟ್ ಆದೇಶದ ಬಳಿಕ ಮೂರು ಸಾವಿರ ಕೋಟಿ ರೂ. ಹಣ ನೀಡಿದರು.
ಕೇಂದ್ರ ಸರ್ಕಾರ ಈ ಬಾರಿ ಹಣ ಕೊಡುತ್ತಾರೆ ಎಂಬ ನಿರೀಕ್ಷೆ ಇಟ್ಟುಕೊಂಡಿದ್ದೇವೆ. ರಾಜ್ಯ ಸರ್ಕಾರವೂ ಹಣದ ಕೊರತೆ ಇಲ್ಲದೆ ಬರ ಪರಿಸ್ಥಿತಿ ನಿಭಾಯಿಸುತ್ತಿದೆ. ವಿಬಿ ಜಿ ರಾಮ್ ಜಿ ಯೋಜನೆಯಡಿ ಕೆಲಸ ಕೈಗೆತ್ತಿಕೊಳ್ಳಲು ಸೂಚಿಸಿದ್ದೇವೆ. ಈ ಯೋಜನೆಗೂ ಹಣದ ಕೊರತೆ ಇಲ್ಲ.
ಜನರು ಗುಳೆ ಹೋಗುತ್ತಿರುವ ಬಗ್ಗೆ ಖಚಿತವಾದ ಅಂಕಿ-ಅಂಶಗಳಿಲ್ಲ. ಮೂರು ಜಿಲ್ಲೆಗಳಲ್ಲಿ ಗುಳೆ ಹೋಗುತ್ತಿದ್ದಾರೆ. ತಾಂಡವೊಂದರಲ್ಲಿ ಎಲ್ಲರೂ ಗುಳೆ ಹೋಗಿರುವ ಬಗ್ಗೆ ವರದಿಯಾಗಿದೆ. ಇದನ್ನು ತಪ್ಪಿಸುವ ಉದ್ದೇಶದಿಂದ ವಿಬಿ ಜಿ ರಾಮ್ ಜಿ ಯೋಜನೆಯಡಿ ಕೂಡಲೇ ಕೆಲಸ ನೀಡಲು ಸೂಚನೆ ನೀಡಲಾಗಿದೆ. ಮುಂದಿನ 30 ವಾರಕ್ಕೆ ಅಗುವಷ್ಟು ಮೇವು ಸಂಗ್ರಹವಿದೆ. ಪಶು ಸಂಗೋಪನಾ ಇಲಾಖೆ ಹಾಗೂ ಕೆಎಂಎಫ್ನಿಂದ ರೈತರಿಗೆ ಮೇವಿನ ಬೀಜದ ಕಿಟ್ ವಿತರಿಸಲಾಗುತ್ತಿದೆ.
ನಮ್ಮಲ್ಲಿ ಎಲ್ಲ ಜಲಾಶಯಗಳು ತಳಮಟ್ಟಕ್ಕೆ ತಲುಪಿವೆ. ಹಾರಂಗಿ, ಕಬಿನಿ, ಆಲಮಟ್ಟಿ, ಕೆಆರ್ಎಸ್ ಒಂದಷ್ಟು ಪ್ರಮಾಣದಲ್ಲಿ ಒಳಹರಿವು ಬರುತ್ತಿದೆ. ಈಗ ಸಂಗ್ರಹ ಇರುವ ನೀರನ್ನು ಕುಡಿಯುವ ನೀರಿಗೆ ಮಾತ್ರ ಬಳಸಲು ಸೂಚನೆ ನೀಡಲಾಗಿದೆ.
ನೀಟ್ ಅಕ್ರಮದಿಂದ ಲಕ್ಷಾಂತರ ವಿದ್ಯಾರ್ಥಿಗಳಿಗೆ ಅನ್ಯಾಯ ಆಗಿರುವ ಬಗ್ಗೆ ನಿನ್ನೆ ಪ್ರಧಾನಿಯವರಿಗೆ ಪತ್ರ ಬರೆದಿದ್ದೇನೆ. ಮರುಪರೀಕ್ಷೆ ಬರೆದವರಲ್ಲಿ ಬಹುತೇಕರು ಅರ್ಹತೆ ಪಡೆದಿಲ್ಲ, ಅವರಿಗಾದ ಅನ್ಯಾಯಕ್ಕೆ ಯಾರು ಹೊಣೆ. ಧರ್ಮೇಂದ್ರ ಪ್ರಧಾನ್ ಅವರು ರಾಜೀನಾಮೆ ನೀಡಲೇಬೇಕು. ಸಿಇಟಿ ಮರು ಆರಂಭಿಸಲಿ.
ನಾನು ಐದು ವರ್ಷ ಉನ್ನತ ಶಿಕ್ಷಣ ಇಲಾಖೆಯ ಸಚಿವನಾಗಿ ಜವಾಬ್ದಾರಿ ನಿಭಾಯಿಸಿದ್ದೇನೆ. ಕರ್ನಾಟಕದಲ್ಲಿ ಯಾವತ್ತು ಕೂಡ ಸೀಟ್ ಬ್ಲಾಕ್ ದಂಧೆ ನಡೆದಿಲ್ಲ. ನೀಟ್ ಅಕ್ರಮದಿಂದ 23 ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪ್ರತಿಭಟನಾ ನಿರತ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಲಾಗಿದೆ. ದೇಶದ ಇತಿಹಾಸದಲ್ಲಿ ಈ ರೀತಿಯ ಘಟನೆ ನಡೆದಿಲ್ಲ.
After reviewing the Bengaluru Revenue Division in Chitradurga, we will assess the drought situation in the Mysuru Division. The date and venue are yet to be finalised and will depend on the Chief Minister’s availability. Once all four revenue divisions are reviewed, we will have a complete picture of the State’s drought situation and take further decisions accordingly.
₹5 crore has been provided to each Deputy Commissioner for drinking-water arrangements, and ₹1 crore will be allocated to every Assembly constituency. A total of ₹329 crore is available in the Deputy Commissioners’ PD accounts. There is currently no shortage of funds to manage the drought.
If there is no rainfall, we will submit a drought memorandum to the Union Government after the second week of August. Our letters have received no response so far. Once the memorandum is submitted, a Central team will visit the State to assess the situation. Last time, the Union Government initially denied funds. We protested in Delhi, and ₹3,000 crore was released only after a court order.
We expect assistance from the Union Government this time. The State Government is managing the drought without any shortage of funds. Officials have been directed to take up works immediately under the VB–G RAM G Scheme, for which adequate funds are available.
There are no confirmed figures on migration. However, reports indicate migration from three districts, including an entire tanda. To prevent this, officials have been directed to provide work immediately under the VB–G RAM G Scheme.
The State has enough fodder for the next 30 weeks. The Animal Husbandry Department and the Karnataka Milk Federation (KMF) are distributing fodder-seed kits to farmers.
Water levels in all reservoirs have fallen considerably. Harangi, Kabini, Almatti and KRS are receiving some inflow. Officials have been directed to reserve the available water exclusively for drinking-water needs.
Yesterday, I wrote to the Prime Minister about the injustice faced by lakhs of students due to the NEET irregularities. Most students who appeared for the re-examination failed to qualify. Who is responsible for this injustice? Dharmendra Pradhan must resign, and the CET system must be restored.
I served as Higher Education Minister for five years. Karnataka never witnessed a seat-blocking scam during that period. Twenty-three students have died by suicide due to the NEET irregularities, and protesting students were assaulted. Such an incident has never occurred in the country’s history. (2/2) -
Dr. G Parameshwara
@DrParameshwara
ಇಂದು ಜಕ್ಕೂರು ಸರ್ಕಾರಿ ವಿಮಾನ ಚಾಲನಾ ತರಬೇತಿ ಶಾಲೆಗೆ ಭೇಟಿ ನೀಡಿ, ಅಲ್ಲಿನ ಚಟುವಟಿಕೆಗಳ ಕುರಿತು ಪರಿಶೀಲನಾ ಸಭೆ ನಡೆಸಿದ ಬಳಿಕ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದೆ.
ಈ ಸರ್ಕಾರಿ ವಿಮಾನ ಚಾಲನಾ ತರಬೇತಿ ಶಾಲೆಯು 1940ರಲ್ಲಿ ಪ್ರಾರಂಭವಾಗಿದ್ದು, ಈವರೆಗೆ ಸಾವಿರಾರು ಪೈಲಟ್ಗಳನ್ನು ತಯಾರು ಮಾಡಿದೆ. ಅವರೆಲ್ಲರೂ ಕೂಡ ಇಂದು ಏರ್ ಇಂಡಿಯಾ ಅಥವಾ ಬೇರೆ ಬೇರೆ ಏರ್ಲೈನ್ಸ್ಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಪೈಲಟ್ ಆಗಬೇಕು ಎಂಬ ಕನಸು ಕಟ್ಟಿಕೊಂಡಿರುವ ಅದೆಷ್ಟೋ ಮಧ್ಯಮ ವರ್ಗದ ಮತ್ತು ಬಡ ಮಕ್ಕಳಿಗೆ ಈ ಸಂಸ್ಥೆಯು ವರದಾನವಾಗಿದೆ. ಸರ್ಕಾರ ಈ ತರಬೇತಿ ಸಂಸ್ಥೆಯನ್ನು ಉಳಿಸಿ, ಬೆಳೆಸಿಕೊಂಡು ಇಲ್ಲಿಯವರೆಗೆ ಬಂದಿದೆ.
ಪ್ರಸ್ತುತವಾಗಿ ಈ ಸಂಸ್ಥೆಯಲ್ಲಿ 5 ಏರ್ಕ್ರಾಫ್ಟ್ಗಳಿವೆ. ಹೊಸದಾಗಿ 2 ಏರ್ಕ್ರಾಫ್ಟ್ಗಳನ್ನು ಕೊಂಡುಕೊಳ್ಳಲು ಖರೀದಿಸಲು ಪ್ರಸ್ತಾವನೆ ಸಲ್ಲಿಸಿದ್ದು, ಅನುಮತಿ ಸಿಕ್ಕ ತಕ್ಷಣ ಖರೀದಿಸಲಾಗುವುದು. ಪ್ರೈವೆಟ್ ಪೈಲಟ್ ಲೈಸನ್ಸ್ ಪಡೆದುಕೊಳ್ಳಲು 40 ಗಂಟೆ ಚಾಲನೆ ಮಾಡಿರಬೇಕು. ಜೊತೆಗೆ ಕಮರ್ಷಿಯಲ್ ಪೈಲಟ್ ಲೈಸನ್ಸ್ ಪಡೆಯಲು 180 ಗಂಟೆ ಚಾಲನೆ ಮಾಡಿರಬೇಕು. ಇಷ್ಟೆಲ್ಲ ಅರ್ಹತೆಗಳು ವಿಮಾನ ಚಾಲನೆ ನಡೆಸಲು ಬೇಕಾಗಿರುತ್ತದೆ. ಇದಕ್ಕೆ ಪೂರಕವಾಗಿ ಈ ಸಂಸ್ಥೆಯಲ್ಲಿ ತರಬೇತಿ ನೀಡಲಾಗುತ್ತದೆ.
ಇಂಡಿಯಾದಲ್ಲಿ ಏರ್ ಕಂಪನಿ ಸೇರಿ 850 ಏರ್ಕ್ರಾಫ್ಟ್ ಪ್ರತಿನಿತ್ಯ ಹಾರಾಟ ನಡೆಸುತ್ತದೆ. ಇದರಲ್ಲಿ 7 ರಿಂದ 8 ಸಾವಿರ ಪೈಲಟ್ಗಳು ಕೆಲಸ ಮಾಡುತ್ತಿದ್ದಾರೆ. ಇಂಡಿಗೋ ಕಂಪನಿಯವರು 5 ವರ್ಷದೊಳಗಾಗಿ ಹೆಚ್ಚಿನ ಏರ್ಕ್ರಾಫ್ಟ್ಗಳ ಖರೀದಿಗೆ ತೀರ್ಮಾನಿಸಿದ್ದಾರೆ. ಹೀಗಿರುವಾಗ ದೇಶದಲ್ಲಿ ಅಂದಾಜು ಸುಮಾರು 35 ಸಾವಿರ ಪೈಲಟ್ಗಳ ಅವಶ್ಯಕತೆ ಬೀಳುತ್ತದೆ. ಹೀಗಾಗಿ ಉದ್ಯೋಗ ಸಿಗುವ ಭರವಸೆ ಇರುವುದರಿಂದ ಪೈಲಟ್ ಆಗಲು ಆಸಕ್ತಿ ಇರುವವರಿಗೆ ಹೆಚ್ಚಿನ ತರಬೇತಿಯನ್ನು ನೀಡಲಾಗುವುದು.
ಸರಿಯಾಗಿ ತರಬೇತಿ ಪಡೆದಿಲ್ಲವಾದರೆ ಅನಾಹುತಗಳು ಸಂಭವಿಸುತ್ತವೆ. ಈ ಸಂಸ್ಥೆಯಲ್ಲಿ ಡಿಜಿಸಿಎ ನವರು ಕಟ್ಟುನಿಟ್ಟಾಗಿ ಪರಿಶೀಲನೆ ನಡೆಸುತ್ತಾರೆ. ನಮ್ಮ ಸಂಸ್ಥೆಯ ಲೈಸೆನ್ಸ್ ರದ್ದಾಗಿತ್ತು. ಇದೀಗ ಮುಂದಿನ ಐದು ವರ್ಷಕ್ಕೆ ಲೈಸೆನ್ಸ್ ರಿನಿವಲ್ ಮಾಡಲಾಗಿದೆ. ಡಿಜಿಸಿಎ ನವರು ಲೈಸೆನ್ಸ್ ರಿನಿವಲ್ ಮಾಡಿಕೊಟ್ಟಿದ್ದಾರೆ.
ಈ ಸಂಸ್ಥೆಯಲ್ಲಿ ಪಿಪಿಎಲ್ ತರಬೇತಿ ನೀಡಲು ಕರ್ನಾಟಕದವರಿಗೆ 10 ಲಕ್ಷ ರೂ., ಹೊರಗಿನವರಿಗೆ 15 ಲಕ್ಷ ರೂ. ಹಾಗೂ ಸಿಪಿಎಲ್ ತರಬೇತಿಗಾಗಿ ಕರ್ನಾಟಕದವರಿಗೆ 37 ಲಕ್ಷ ರೂ. ಹಾಗೂ ಹೊರಗಿನವರಿಗೆ 42 ಲಕ್ಷ ರೂ. ಆಗಲಿದೆ. ಇಷ್ಟೆಲ್ಲಾ ಖರ್ಚು ಮಾಡಿ, ತರಬೇತಿ ಪಡೆದುಕೊಂಡವರಿಗೆ ಉದ್ಯೋಗ ಸಿಗುವುದು ಖಂಡಿತ.
ರನ್ವೇ 954 ಮೀಟರ್ ಇದೆ. ಇದನ್ನು 160 ಮೀ.ಗೆ ಹೆಚ್ಚಿಸಲು 10 ಎಕರೆ ಭೂಮಿ ಸ್ವಾಧೀನ ಪಡೆಯುವ ಪ್ರಸ್ತಾವನೆ ಇದೆ. ಆದರೆ ಈಗಿರುವ ಸಮಸ್ಯೆ ಏನೆಂದರೆ, ಸುತ್ತುಮುತ್ತ ಮನೆಗಳಿವೆ. ಸುತ್ತಲು 2.7 ಕಿ.ಮೀ ವ್ಯಾಪ್ತಿಯಲ್ಲಿ 45 ಮೀಟರ್ ಎತ್ತರಕ್ಕಿಂತ ಕಟ್ಟಡಗಳನ್ನು ನಿರ್ಮಿಸಲು ಸಾಧ್ಯವಿಲ್ಲ. ಅದಕ್ಕೆ ನಾವು ಆಸ್ಪದವನ್ನು ಕೊಡುವುದಿಲ್ಲ. ತರಬೇತಿ ಶಾಲೆಯನ್ನೇ ನಿಲ್ಲಿಸುವಂತೆ ಕೇಳುತ್ತಿದ್ದಾರೆ. ನಾವು ಇದಕ್ಕೆ ಅವಕಾಶ ನೀಡುವುದಿಲ್ಲ. ಸಾವಿರಾರು ಜನರಿಗೆ ಉದ್ಯೋಗ ಕೊಡುವ ಸಂಸ್ಥೆಯನ್ನು ಮುಚ್ಚುವುದಿಲ್ಲ.
ಮೈಸೂರಿನಲ್ಲಿ ಸ್ಯಾಟಲೈಟ್ ಬೇಸ್ ತರಬೇತಿ ಸಂಸ್ಥೆ ಆರಂಭಿಸುವ ಉದ್ದೇಶ ಇಟ್ಟುಕೊಳ್ಳಲಾಗಿದೆ. ಇಲ್ಲಿ ಟೇಕ್ ಆಫ್ ಮಾಡಿದರೆ, ಮೈಸೂರಿನಲ್ಲಿ ಲ್ಯಾಂಡ್ ಮಾಡುತ್ತಾರೆ. ಇದನ್ನು 'ಟಚ್ ಆ್ಯಂಡ್ ಗೋ' ಎಂದು ಹೇಳಲಾಗುತ್ತದೆ. ಇದಕ್ಕೆ ಮೈಸೂರಿನಲ್ಲಿ ಅವಕಾಶವಿದೆ. ಉಪಯೋಗ ಮಾಡಲು ಪರಿಶೀಲನೆ ನಡೆಸಲಾಗುತ್ತಿದೆ. ಹಾಸನದಲ್ಲೂ ಸ್ಯಾಟಲೈಟ್ ಬೇಸ್ ಮಾಡುವ ಉದ್ದೇಶ ಇದೆ.
ಪ್ರಸ್ತುತ ಕ್ರೀಡಾ ಮತ್ತು ಯುವ ಸಬಲೀಕರಣ ಇಲಾಖೆ ಎಂದು ಹೆಸರಿದೆ. ಕ್ರೀಡಾ, ಯುವ ಸಬಲೀಕರಣ ಮತ್ತು ನಾಗರಿಕ ವಿಮಾನಯಾನ ಇಲಾಖೆ ಎಂದು ಹೆಸರನ್ನು ಬದಲಾಯಿಸಲು ಇಲಾಖೆಯ ಪ್ರಧಾನ ಕಾರ್ಯದರ್ಶಿಯವರು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುತ್ತಿದ್ದಾರೆ. ಕ್ಯಾಬಿನೆಟ್ ಅನುಮತಿ ನೀಡಿದರೆ ಹೆಸರು ಬದಲಾಯಿಸಲಾಗುವುದು.
ವಿಶ್ವಮಟ್ಟದಲ್ಲಿ ಮೆಟ್ರೋ ಪಾಲಿಟನ್ ಸಿಟಿಗಳಲ್ಲಿ ಈ ರೀತಿಯ ಏರ್ಪೋರ್ಟ್ಗಳಲ್ಲಿ ವಿಮಾನ ಲ್ಯಾಂಡ್ ಮಾಡಲು ಮತ್ತು ಟೇಕ್ ಮಾಡಲು ಕಷ್ಟ ಆಗುತ್ತಿದೆ. ವಿಮಾನಗಳು ವರ್ಟಿಕಲ್ ಟೇಕ್ ಆಫ್ ಆಗುವುದಕ್ಕೆ ತರಬೇತಿ ನೀಡಲು ಪ್ರಸ್ತಾವನೆ ಇಟ್ಟುಕೊಂಡಿದ್ದೇವೆ.
ಇಂಡಿಯನ್ ಏರ್ಕ್ರಾಫ್ಟ್ ಕಂಪನಿಯವರು ರೆಡಾರ್ಸ್ ಇಟ್ಟಿದ್ದಾರೆ. ಅಲ್ಲಿ ನಮ್ಮ ವಿದ್ಯಾರ್ಥಿಗಳು ಸಂಶೋಧನೆಗೆ ಅವಕಾಶ ಮಾಡಿಕೊಡಲು ಸಾಧ್ಯತೆ ಇದೆ. ಹೊಸ ಅವಿಷ್ಕಾರಗಳು ಬರುತ್ತಿವೆ. ಸಿವಿಲ್ ಏರ್ಕ್ರಾಫ್ಟ್ ಮೇಂಟೆನೆನ್ಸ್ ಅಕಾಡೆಮಿ ಸ್ಥಾಪಿಸುವ ಉದ್ದೇಶ ಇಟ್ಟುಕೊಳ್ಳಲಾಗಿದೆ.
Today, I visited the Government Flying Training School at Jakkur, reviewed its activities and addressed a media conference.
Established in 1940, the school has trained thousands of pilots, many of whom now work with Air India and other airlines. It has been a boon for students from middle-class and economically disadvantaged families who dream of becoming pilots. The Government has preserved and developed this institution over the years.
The school currently has five aircraft. A proposal has been submitted to purchase two more, which will be procured once approval is received. Trainees must complete 40 flying hours for a Private Pilot Licence (PPL) and 180 flying hours for a Commercial Pilot Licence (CPL). The institution provides the training required to meet these qualifications.
Around 850 aircraft operated by airlines across India fly every day, employing nearly 7,000 to 8,000 pilots. IndiGo plans to purchase a significant number of aircraft over the next five years, and the country is expected to require nearly 35,000 pilots. As the sector offers strong employment prospects, more training opportunities will be provided to aspiring pilots.
Inadequate training can lead to serious accidents. The Directorate General of Civil Aviation (DGCA) conducts strict inspections of the school. Its licence, which had earlier been cancelled, has now been renewed by the DGCA for five years.
PPL training costs ₹10 lakh for Karnataka candidates and ₹15 lakh for candidates from outside the State. CPL training costs ₹37 lakh for Karnataka candidates and ₹42 lakh for candidates from other States. Those who invest in and successfully complete the training can be confident of finding employment.
The existing runway is 954 metres long. A proposal has been submitted to acquire 10 acres of land and extend it by another 160 metres. However, residential buildings have come up around the school. Buildings taller than 45 metres cannot be permitted within a 2.7-km radius, and no violations will be allowed. Some have demanded that the training school be closed, but we will not permit it. An institution capable of creating thousands of jobs will not be shut down.
The Government intends to establish a satellite training base in Mysuru. Aircraft taking off from Jakkur can land in Mysuru and carry out “touch-and-go” exercises. Mysuru has the required facilities, and their use is being examined. A satellite training base is also proposed in Hassan.
The department is currently known as the Department of Youth Empowerment and Sports. The Principal Secretary is submitting a proposal to rename it the Department of Sports, Youth Empowerment and Civil Aviation. The name will be changed if the Cabinet approves the proposal.
Aircraft are increasingly facing difficulties in taking off from and landing at airports in metropolitan cities worldwide. We have proposed introducing training for vertical take-off aircraft.
Indian aircraft companies have radar facilities where our students may be given research opportunities. With new technologies and innovations emerging, we also intend to establish a Civil Aircraft Maintenance Academy. (1/2) -
Dr. G Parameshwara
@DrParameshwara
ಪೋಲ್ ವಾಲ್ಟ್ ಕ್ರೀಡೆಯಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಅಮೋಘ ಸಾಧನೆ ಮಾಡುವ ಮೂಲಕ ಜಪಾನ್ನಲ್ಲಿ ನಡೆಯಲಿರುವ ಏಷ್ಯನ್ ಗೇಮ್ಸ್ಗೆ ಆಯ್ಕೆಯಾಗಿರುವ ಸಿಂಧುಶ್ರೀ ಗಣೇಶ್ ಅವರಿಗೆ ಅಂತಾರಾಷ್ಟ್ರೀಯ ಗುಣಮಟ್ಟದ 3 ಪೋಲ್ಗಳನ್ನು ವಿತರಿಸಿ, ಶುಭಹಾರೈಸಿದೆ.
ಕೂಲಿ ಕೆಲಸ ಮಾಡುತ್ತಿದ್ದ ಗಣೇಶ್ ಅವರಿಗೆ ತಮ್ಮ ಪುತ್ರಿಯನ್ನು ಕ್ರೀಡಾಪಟುವನ್ನಾಗಿ ಮಾಡುವ ಆಸೆಯಿತ್ತು. ಅದಕ್ಕಾಗಿ ಚೆನ್ನಾಗಿ ತರಬೇತಿಯನ್ನು ಕೊಡಿಸಿದರು. ಆನಂತರ ಕ್ರೀಡಾಸಕ್ತಿದಾರರು ಗಮನಿಸಿ, ಚೆನ್ನಾಗಿ ಓಡುತ್ತೀಯ. ಬೆಂಗಳೂರಿನಲ್ಲಿ ತರಬೇತಿ ಪಡೆಯುವಂತೆ ಹೇಳಿ ಆಕೆಯನ್ನು ಕಳುಹಿಸಿಕೊಟ್ಟರು. ಆಕೆಯ ಟ್ಯಾಲೆಂಟ್ ಗುರುತಿಸಿ ಪೋಲ್ ವಾಲ್ಟ್ಗೆ ತಯಾರಿ ಆರಂಭಿಸಿದರು.
ಸ್ಪೋರ್ಟ್ಸ್ ಆಥಾರಿಟಿ ಆಫ್ ಇಂಡಿಯಾ ಸಂಸ್ಥೆಯಿಂದ ತರಬೇತಿ ಪಡೆದುಕೊಂಡು ಸಿಂಧುಶ್ರೀ ಗಣೇಶ್ ಇದೀಗ ಏಷ್ಯನ್ ಗೇಮ್ಸ್ಗೆ ಅರ್ಹತೆ ಪಡೆದುಕೊಂಡಿದ್ದಾರೆ. ಜಪಾನ್ನಲ್ಲಿ ನಡೆಯಲಿರುವ ಏಷ್ಯನ್ ಗೇಮ್ಸ್ನಲ್ಲಿ ಪೋಲ್ ವಾಲ್ಟ್ ಕ್ರೀಡಾಪಟುವಾಗಿ ಭಾರತವನ್ನು ಪ್ರತಿನಿಧಿಸಲಿದ್ದಾರೆ.
ಯುವತಿಯ ತಂದೆ ಗಣೇಶ್ ಅವರು ಈಗ ನಮ್ಮ ಜೊತೆಗಿಲ್ಲ. ಆದರೆ ತಂದೆಯ ಆಸೆಯನ್ನು ಸಿಂಧುಶ್ರೀ ಪೂರೈಸಿದ್ದಾರೆ. ತಾಯಿ ಮನೆ ಕೆಲಸ ಮಾಡಿ, ಪುತ್ರಿಯನ್ನು ಪ್ರೋತ್ಸಾಹಿಸಿದ್ದಾರೆ. ಬಡ ಕುಟುಂಬದಿಂದ ಬಂದ ಈ ಹೆಣ್ಣು ಮಗಳಿಗೆ ಶುಭವಾಗಲಿ. ಏಷ್ಯನ್ ಗೇಮ್ಸ್ನಲ್ಲಿ ಸಾಧನೆ ಮಾಡಿ, ದೇಶಕ್ಕೆ ಪದಕ ತರುವ ಮೂಲಕ ನಮ್ಮ ನಾಡಿನ ಕೀರ್ತಿ ಹೆಚ್ಚಿಸಲಿ.
ಸಿಂಧುಶ್ರೀ ಅವರಿಗೆ ಇಂದು ಕರ್ನಾಟಕ ರಾಜ್ಯ ಕ್ರೀಡಾ ಮತ್ತು ಯುವಸಬಲೀಕರಣ ಇಲಾಖೆ ಹಾಗೂ ಭಾರತೀಯ ಕ್ರೀಡಾ ಪ್ರಾಧಿಕಾರದ ವತಿಯಿಂದ ಅಂತಾರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಬಳಸುವ ಗುಣಮಟ್ಟದ 3 ಹೊಸ ಪೋಲ್ಗಳನ್ನು ವಿದೇಶದಿಂದ ತರಿಸಿ ಕೊಡಲಾಗಿದೆ. ಅದರ ಜೊತೆಗೆ 5 ಲಕ್ಷ ರೂ. ಪ್ರೋತ್ಸಾಹಧನವನ್ನು ನೀಡುತ್ತಿದ್ದೇವೆ.
I presented three international-standard poles to Sindhushree Ganesh, who has been selected to represent India in pole vault at the Asian Games in Japan following her outstanding performances at the national level, and extended my best wishes to her.
Her father, Ganesh, who worked as a daily-wage labourer, dreamed of making his daughter an athlete and ensured that she received proper training. Sports enthusiasts noticed her athletic ability, encouraged her to train in Bengaluru, and helped prepare her for pole vaulting.
After receiving training from the Sports Authority of India, Sindhushree has now qualified for the Asian Games and will represent India in pole vault in Japan.
Her father is no longer with us, but Sindhushree has fulfilled his dream. Her mother, who works as a domestic worker, has continued to support and encourage her. I wish this talented young woman from an underprivileged family every success. May she win a medal for the country and bring greater pride to Karnataka.
The Karnataka Department of Youth Empowerment and Sports and the Sports Authority of India have procured three new international-standard poles from abroad for her. The Government is also providing her with an incentive of ₹5 lakh. -
Dr. G Parameshwara
@DrParameshwara
ಕಟ್ಟುನಿಟ್ಟಿನ ನಿಯಮಗಳಿಂದಾಗಿ ಉನ್ನತ ವ್ಯಾಸಂಗದ ಕನಸು ಕಂಡಿದ್ದ ಹಲವು ಕ್ರೀಡಾಸಾಧಕರು ಸರ್ಕಾರಿ ಖೋಟಾದಡಿ ಇಂಜಿನಿಯರಿಂಗ್ ಹಾಗೂ ಮೆಡಿಕಲ್ ಸೀಟುಗಳಿಂದ ಹೊರಗುಳಿದಿದ್ದರು. ಇಂತಹ ಮಕ್ಕಳ ಸಮಸ್ಯೆಯನ್ನು ಆಲಿಸಿ, ಸಕಾಲದಲ್ಲಿ ಪರಿಹರಿಸುವ ಮೂಲಕ ಕ್ರೀಡೆಯ ಜೊತೆಗೆ ಶಿಕ್ಷಣ ಪಡೆಯುವ ಅವರ ಕನಸಿಗಿದ್ದ ಅಡೆತಡೆಯನ್ನು ನಿವಾರಿಸಿದ್ದೇನೆ.
ಕ್ರೀಡಾ ಸಾಧಕರ ಖೋಟಾದಡಿ ಮೆಡಿಕಲ್ ಹಾಗೂ ಇಂಜಿನಿಯರಿಂಗ್ ಸೀಟು ಪಡೆದ ಹಲವರು ನನ್ನನ್ನು ಭೇಟಿಯಾಗಿ, ಕೃತಜ್ಞತೆ ಸಲ್ಲಿಸಿ, ತಮ್ಮ ಅನಿಸಿಕೆಯನ್ನು ಹಂಚಿಕೊಂಡಿದ್ದು ಹೀಗೆ..This media couldn't be displayed. See it on the original post. -
Dr. G Parameshwara reposted
Rahul Gandhi
@RahulGandhi
“The Narendra Modi government has responded to the students’ courage with cowardice and wanton cruelty, treating them not as inheritors of the future but as enemies of the nation.
The Modi government has not just degraded India’s education landscape but has also made a habit of acting with utter impunity, supreme self-delusion, and abject insensitivity.
If is our moral, political and constitutional duty to stand with students and safeguard their future.”
Congress Parliamentary Party Chairperson Smt. Sonia Gandhi Ji. -
Dr. G Parameshwara
@DrParameshwara
ಕಟ್ಟುನಿಟ್ಟಿನ ನಿಯಮಗಳಿಂದಾಗಿ ಉನ್ನತ ವ್ಯಾಸಂಗದ ಕನಸು ಕಂಡಿದ್ದ ಹಲವು ಕ್ರೀಡಾಸಾಧಕರು ಸರ್ಕಾರಿ ಖೋಟಾದಡಿ ಇಂಜಿನಿಯರಿಂಗ್ ಹಾಗೂ ಮೆಡಿಕಲ್ ಸೀಟುಗಳಿಂದ ಹೊರಗುಳಿದಿದ್ದರು. ಇಂತಹ ಮಕ್ಕಳ ಸಮಸ್ಯೆಯನ್ನು ಆಲಿಸಿ, ಸಕಾಲದಲ್ಲಿ ಪರಿಹರಿಸುವ ಮೂಲಕ ಕ್ರೀಡೆಯ ಜೊತೆಗೆ ಶಿಕ್ಷಣ ಪಡೆಯುವ ಅವರ ಕನಸಿಗಿದ್ದ ಅಡೆತಡೆಯನ್ನು ನಿವಾರಿಸಿದ್ದೇನೆ.
ಕ್ರೀಡಾ ಸಾಧಕರ ಖೋಟಾದಡಿ ಮೆಡಿಕಲ್ ಹಾಗೂ ಇಂಜಿನಿಯರಿಂಗ್ ಸೀಟು ಪಡೆದ ಹಲವರು ನನ್ನನ್ನು ಭೇಟಿಯಾಗಿ, ಕೃತಜ್ಞತೆ ಸಲ್ಲಿಸಿ, ತಮ್ಮ ಅನಿಸಿಕೆಯನ್ನು ಹಂಚಿಕೊಂಡಿದ್ದು ಹೀಗೆ..This media couldn't be displayed. See it on the original post. -
Dr. G Parameshwara
@DrParameshwara
ಇಂದು ಜಕ್ಕೂರು ಸರ್ಕಾರಿ ವಿಮಾನ ಚಾಲನಾ ತರಬೇತಿ ಶಾಲೆಗೆ ಭೇಟಿ ನೀಡಿ, ಅಲ್ಲಿನ ಚಟುವಟಿಕೆಗಳ ಕುರಿತು ಪರಿಶೀಲನಾ ಸಭೆ ನಡೆಸಿದೆ.
ಈ ಸಂದರ್ಭದಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಾದ ನವೀನ್ ರಾಜ್ ಸಿಂಗ್, ಆಯುಕ್ತರಾದ ಎಂ.ಎನ್.ಅನುಚೇತ್, ಸಂಸ್ಥೆಯ ನಿರ್ದೇಶಕರಾದ ಬಸವರಾಜ್ ಮುಂತಾದವರು ಉಪಸ್ಥಿತರಿದ್ದರು.
Today, I visited the Government Flying Training School at Jakkur and chaired a review meeting on its activities.
Youth Empowerment and Sports Department Principal Secretary Naveen Raj Singh, Commissioner M.N. Anucheth, the institute’s Director Basavaraj and other officials were present. -
Dr. G Parameshwara
@DrParameshwara
Meet Shilpa K.S., a 37-year-old para-athlete from Kanchugara Koppalu, Karnataka whose extraordinary journey inspires both admiration and respect. At the age of four, Shilpa lost her left leg after being struck by a speeding truck. With the unwavering support of her parents and her own determination, she overcame every challenge, completed her B.Ed. and became a teacher.
Her sporting journey began after her friend Geetha encouraged her to join the Women’s Sitting Volleyball Team. Shilpa went on to captain Karnataka and lead the State to four National Championship titles. She later moved into track and field and won a Bronze Medal at the Dubai World Para Athletics Grand Prix.
Today, Shilpa has been selected for the 2026 Commonwealth Games in Glasgow, becoming the only para-athlete from Karnataka to represent India at the Games. What makes her achievement even more remarkable is that she accomplished all this while using a standard Jaipur Foot.
It is truly heartwarming to celebrate the journey of an athlete who refused to give up, even during the most uncertain phase of her life. It is a powerful reminder that when resilience replaces despair, no setback can define our future.
#glasgow2026 #commonwealthgames2026 #paraathlete #karnatakapride
Dr. G Parameshwara
@DrParameshwara
-
Dr. G Parameshwara
@DrParameshwara
ಬರ ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸಲು ನಮ್ಮ ಸರ್ಕಾರ ಸಿದ್ಧವಿದೆ. ಈಗಾಗಲೇ ₹1 ಕೋಟಿಯನ್ನು ಪ್ರತಿಯೊಬ್ಬ ಶಾಸಕರಿಗೂ ನೀಡಲು ತೀರ್ಮಾನಿಸಿದ್ದೇವೆ. ಅಲ್ಲದೇ, ಕುಡಿಯುವ ನೀರಿನ ಸಮರ್ಪಕ ಪೂರೈಕೆಗಾಗಿ ಪ್ರತಿ ಜಿಲ್ಲೆಗೆ ₹5 ಕೋಟಿ ಹಣವನ್ನು ನೀಡಿದ್ದೇವೆ. ಈಗಾಗಲೇ ಪಿಡಿ ಖಾತೆಗಳಲ್ಲಿ ₹329 ಕೋಟಿ ಲಭ್ಯವಿದೆ. ನಮ್ಮಲ್ಲಿ ಹಣದ ಕೊರತೆ ಇಲ್ಲ.
ರಾಜ್ಯ ಸರ್ಕಾರವು ಎಲ್ಲ ರೀತಿಯಿಂದಲೂ ಬರ ಪರಿಸ್ಥಿತಿಯನ್ನು ಎದುರಿಸಲು ಸಿದ್ಧವಿದ್ದು, ಕೈಗೊಂಡಿರುವ ಕ್ರಮಗಳ ಕುರಿತು ನಿನ್ನೆ ಮಾಧ್ಯಮಕ್ಕೆ ವಿವರಿಸಿದೆ.
ಈ ಕುರಿತಾದ ಪತ್ರಿಕಾ ವರದಿಗಳು ಹೀಗಿವೆ.. -
Dr. G Parameshwara
@DrParameshwara
ಇತ್ತೀಚೆಗೆ ನಡೆದ ನೀಟ್ ಪ್ರಶ್ನೆಪತ್ರಿಕೆ ಸೋರಿಕೆ, ಪರೀಕ್ಷಾ ಏಜೆನ್ಸಿಗಳ ನಿರ್ವಹಣಾ ವೈಫಲ್ಯ ಹಾಗೂ ನ್ಯಾಯಕ್ಕಾಗಿ ಶಾಂತಿಯುತವಾಗಿ ಹೋರಾಡುತ್ತಿದ್ದ ವಿದ್ಯಾರ್ಥಿಗಳ ಮೇಲಿನ ಪೊಲೀಸ್ ದೌರ್ಜನ್ಯವನ್ನು ಖಂಡಿಸಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದಿದ್ದೇನೆ.
ನೀಟ್ ಪರೀಕ್ಷೆ ವ್ಯವಸ್ಥೆಯನ್ನು ಸಂಪೂರ್ಣವಾಗಿ ಕೈಬಿಟ್ಟು, ವೈದ್ಯಕೀಯ ಶಿಕ್ಷಣ ಪ್ರವೇಶದ ಹಕ್ಕನ್ನು ರಾಜ್ಯ ಸರ್ಕಾರಗಳಿಗೆ ಮರಳಿಸಬೇಕು ಮತ್ತು ಹಳೆಯ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ವ್ಯವಸ್ಥೆಯನ್ನು ಮರುಜಾರಿಗೊಳಿಸಬೇಕು ಎಂದು ಒತ್ತಾಯಿಸಿದ್ದೇನೆ.
ಈ ಕುರಿತಾದ ಪತ್ರಿಕಾ ವರದಿಗಳು ಹೀಗಿವೆ..
I have written to Prime Minister Narendra Modi condemning the NEET question paper leak, the failure of examination agencies and the police brutality against students peacefully demanding justice.
I have urged the Union Government to scrap NEET, restore the right of State Governments to conduct medical admissions, and reintroduce the earlier Common Entrance Test (CET) system.
Here are some media reports on the matter.. -
Dr. G Parameshwara
@DrParameshwara
2026ರ ಗ್ಲಾಸ್ಗೋ ಕಾಮನ್ವೆಲ್ತ್ ಗೇಮ್ಸ್ ಕ್ರೀಡಾಕೂಟಕ್ಕೆ ಆಯ್ಕೆಯಾದ ನಮ್ಮ ಕರ್ನಾಟಕದ ಹೆಮ್ಮೆಯ ಕ್ರೀಡಾಪಟುಗಳಾದ ಲೋಕೇಶ್ ಸತ್ಯನಾಥನ್ ಮತ್ತು ಕೆ.ಎಸ್.ಶಿಲ್ಪಾ ಅವರಿಗೆ ತಲಾ ₹5 ಲಕ್ಷ ಪ್ರೋತ್ಸಾಹಧನವನ್ನು ಘೋಷಿಸಿದ್ದೇವೆ. ಜೊತೆಗೆ ಅಗತ್ಯವಿರುವ ಎಲ್ಲ ರೀತಿಯ ನೆರವನ್ನು ನೀಡುವುದಾಗಿ ಭರವಸೆ ನೀಡಿದ್ದೇವೆ.
ಈ ಕುರಿತಾದ ಪತ್ರಿಕಾ ವರದಿಗಳು ಹೀಗಿವೆ.. -
Dr. G Parameshwara
@DrParameshwara
ಕಟ್ಟುನಿಟ್ಟಿನ ನಿಯಮಗಳಿಂದಾಗಿ ಉನ್ನತ ವ್ಯಾಸಂಗದ ಕನಸು ಕಂಡಿದ್ದ ಹಲವು ಕ್ರೀಡಾಸಾಧಕರು ಸರ್ಕಾರಿ ಖೋಟಾದಡಿ ಇಂಜಿನಿಯರಿಂಗ್ ಹಾಗೂ ಮೆಡಿಕಲ್ ಸೀಟುಗಳಿಂದ ಹೊರಗುಳಿದಿದ್ದರು. ಇಂತಹ ಮಕ್ಕಳ ಸಮಸ್ಯೆಯನ್ನು ಆಲಿಸಿ, ಸಕಾಲದಲ್ಲಿ ಪರಿಹರಿಸುವ ಮೂಲಕ ಕ್ರೀಡೆಯ ಜೊತೆಗೆ ಶಿಕ್ಷಣ ಪಡೆಯುವ ಅವರ ಕನಸಿಗಿದ್ದ ಅಡೆತಡೆಯನ್ನು ನಿವಾರಿಸಿದ್ದೇನೆ.
ಕ್ರೀಡಾ ಸಾಧಕರ ಖೋಟಾದಡಿ ಮೆಡಿಕಲ್ ಹಾಗೂ ಇಂಜಿನಿಯರಿಂಗ್ ಸೀಟು ಪಡೆದ ಹಲವರು ನನ್ನನ್ನು ಭೇಟಿಯಾಗಿ, ಕೃತಜ್ಞತೆ ಸಲ್ಲಿಸಿ, ತಮ್ಮ ಅನಿಸಿಕೆಯನ್ನು ಹಂಚಿಕೊಂಡಿದ್ದು ಹೀಗೆ..This media couldn't be displayed. See it on the original post. -
Dr. G Parameshwara
@DrParameshwara
ನಮ್ಮ ಸರ್ಕಾರವು 15,000 ಶಿಕ್ಷಕರ ಹುದ್ದೆಗಳ ಭರ್ತಿಗೆ ಅನುಮೋದನೆ ನೀಡಿದ್ದು, ಮಾನ್ಯ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಮಹತ್ವದ ನಿರ್ಧಾರ ಕೈಗೊಂಡಿದೆ. ಶಿಕ್ಷಕರಾಗುವ ಕನಸು ಕಂಡಿರುವ ಸಾವಿರಾರು ಅಭ್ಯರ್ಥಿಗಳಿಗೆ ಸರ್ಕಾರ ಅವಕಾಶವನ್ನು ಕಲ್ಪಿಸಿದೆ.
ಈ ನೇಮಕಾತಿಯಲ್ಲಿ ಟಿಇಟಿ ಅರ್ಹತೆ ಕಡ್ಡಾಯವಾಗಿದ್ದು, 6,967 ಹುದ್ದೆಗಳನ್ನು ಕಲ್ಯಾಣ ಕರ್ನಾಟಕ ಭಾಗಕ್ಕೆ ಹಾಗೂ 8,033 ಹುದ್ದೆಗಳನ್ನು ರಾಜ್ಯದ ಇತರೆ ಭಾಗಗಳಿಗೆ ಮೀಸಲಿರಿಸಿದೆ. ಪದವೀಧರ ಪ್ರಾಥಮಿಕ ಶಿಕ್ಷಕರು (ಜಿಪಿಟಿ), ಸಹ ಶಿಕ್ಷಕರು (ಪ್ರೌಢಶಾಲೆ), ಪ್ರಾಥಮಿಕ ಶಾಲಾ ಶಿಕ್ಷಕರು, ದೈಹಿಕ ಶಿಕ್ಷಣ ಶಿಕ್ಷಕರು ಹಾಗೂ ಗಣಕ ವಿಜ್ಞಾನ ಶಿಕ್ಷಕರ ಹುದ್ದೆಗಳ ಭರ್ತಿಗೆ ಆದೇಶ ಹೊರಡಿಸಿದೆ.
ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿ, ಈ ಅವಕಾಶದ ಸದುಪಯೋಗ ಪಡೆದುಕೊಳ್ಳಿ. ನಿಮ್ಮ ಶಿಕ್ಷಕರಾಗುವ ಕನಸಿಗೆ ನಮ್ಮ ಸರ್ಕಾರ ಸದಾ ಬೆಂಬಲವಾಗಿ ನಿಲ್ಲಲಿದೆ.
Our Government has approved the recruitment of 15,000 teachers in the Cabinet meeting chaired by Hon’ble Chief Minister Shri D.K. Shivakumar.
Of these, 6,967 posts have been reserved for the Kalyana Karnataka region, while 8,033 posts will be filled across the rest of the State. Recruitment orders have been issued for Graduate Primary Teachers, Assistant Teachers in High Schools, Primary School Teachers, Physical Education Teachers and Computer Science Teachers.
TET-qualified and eligible candidates are encouraged to apply and make the best use of this opportunity. Our Government remains committed to supporting every aspiring teacher and building a stronger future for Karnataka’s children.
#recruitment -
Dr. G Parameshwara
@DrParameshwara
ನಮಗೆ ದೇಶದ ಯುವಕರ ಭವಿಷ್ಯ ಮುಖ್ಯ. ಅವರಿಗೆ ಉತ್ತಮ ಶಿಕ್ಷಣ, ಉದ್ಯೋಗ ನೀಡುವುದು ನಮ್ಮ ಆದ್ಯತೆ. ಯುವಕರು ದೇಶವನ್ನು ಕಟ್ಟುವವರು, ಅವರ ಜೀವನ ರೂಪಿಸಬೇಕಿದೆ.
ಕಾಂಗ್ರೆಸ್ ಪಕ್ಷ ಎಂದಿಗೂ ಯುವಕರ ಭವಿಷ್ಯವನ್ನು ಕಟ್ಟುವ ಕೆಲಸ ಮಾಡಿದೆ. ನಮ್ಮ ಸರ್ಕಾರ 72 ಸಾವಿರ ಸರ್ಕಾರಿ ಹುದ್ದೆಗಳ ಭರ್ತಿಗೆ ಆದೇಶ ಹೊರಡಿಸಿದೆ. ಮುಂದೆ ಭವಿಷ್ಯದಲ್ಲಿ ಹೆಚ್ಚಿನ ನೇಮಕಾತಿ ಮಾಡುತ್ತೇವೆ.
ಎಸ್ಸಿ, ಎಸ್ಟಿ ವಿದ್ಯಾರ್ಥಿಗಳ ಮನವಿಯಂತೆ ಬ್ಯಾಕ್ಲಾಗ್ ಹುದ್ದೆಗಳ ನೇಮಕಾತಿ ಮಾಡಲಾಗುವುದು. ಎಲ್ಲ ವರ್ಗದ ಯುವಕರಿಗೆ ಉದ್ಯೋಗ ಕಲ್ಪಿಸುತ್ತೇವೆ. ಇದು ನಮ್ಮ ಸರ್ಕಾರದ ಆದ್ಯತೆಯಾಗಿದೆ. -
Dr. G Parameshwara
@DrParameshwara
ಮೊದಲು ಸಿಇಟಿ ಪರೀಕ್ಷೆಯನ್ನು ರಾಜ್ಯ ಸರ್ಕಾರವೇ ಮಾಡುತ್ತಿತ್ತು. ಆ ಸಮಯದಲ್ಲಿ ಯಾವುದೇ ಸಮಸ್ಯೆಯಾಗದಂತೆ ಸಿಇಟಿ ನಡೆಯುತ್ತಿತ್ತು. ನಾನು ಉನ್ನತ ಶಿಕ್ಷಣ ಸಚಿವನಾಗಿದ್ದ ಸಮಯದಲ್ಲಿ ಅನೇಕ ವಿದ್ಯಾರ್ಥಿಗಳು ಬಂದು ಪರೀಕ್ಷೆ ಬರೆದಿದ್ದರು. ಆಮೇಲೆ ಸಿಇಟಿ ಬದಲಾಯಿಸಿದ ಕೇಂದ್ರ ಸರ್ಕಾರ ನೀಟ್ ಪರೀಕ್ಷೆಯನ್ನು ಕೈಗೆತ್ತಿಕೊಂಡಿತು. ಇದಕ್ಕೆ ಅನೇಕರು ವಿರೋಧಿಸಿದ್ದರು. ಆದರೆ, ವಿದ್ಯಾರ್ಥಿಗಳು ಒಪ್ಪಿಕೊಂಡರು. ಈಗ ನೋಡಿದರೆ ಪ್ರಶ್ನೆಪತ್ರಿಕೆಗಳು ಸೋರಿಕೆಯಾಗುತ್ತಿದೆ. ವಿದ್ಯಾರ್ಥಿಗಳ ಭವಿಷ್ಯಕ್ಕೆ ಸಮಸ್ಯೆಯಾಗುತ್ತಿದೆ. ವಿದ್ಯಾರ್ಥಿಗಳ ಪರವಾಗಿ ನಿಂತು ಪ್ರಶ್ನಿಸುವವರನ್ನೇ ಬಂಧಿಸುವುದು ಎಷ್ಟರ ಮಟ್ಟಿಗೆ ಸರಿ?
-
Dr. G Parameshwara
@DrParameshwara
ಲಕ್ಷಾಂತರ ಜನ ವಿದ್ಯಾರ್ಥಿಗಳಿಗೆ ಆಗಿರುವ ಮೋಸ, ಅನ್ಯಾಯದ ವಿರುದ್ಧ ಲೋಕಸಭೆಯ ವಿರೋಧ ಪಕ್ಷದ ನಾಯಕರಾದ ರಾಹುಲ್ ಗಾಂಧಿ ಅವರು ಧ್ವನಿ ಎತ್ತಿದ್ದಾರೆ. ಶಾಂತಿಯುತವಾಗಿ ಪ್ರತಿಭಟಿಸುತ್ತಿದ್ದ ರಾಹುಲ್ ಗಾಂಧಿ, ಪ್ರಿಯಾಂಕ ಗಾಂಧಿ ಅವರನ್ನು ಕಾನೂನಿಗೆ ವಿರುದ್ಧವಾಗಿ ಬಂಧಿಸಿ ದುರ್ವರ್ತನೆ ತೋರಿದ್ದಾರೆ. ರಾಹುಲ್ ಗಾಂಧಿ ಅವರ ಧ್ವನಿಯನ್ನು ಅಡಗಿಸುವುದಕ್ಕೆ ಕೇಂದ್ರ ಸರ್ಕಾರ ಈ ಪ್ರಯತ್ನಗಳನ್ನು ಮಾಡುತ್ತಿದೆ. ಯುವಜನತೆಯ ಪರವಾಗಿರುವ ನಮ್ಮ ಧ್ವನಿ, ಪ್ರತಿಭಟನೆ ಹೀಗೆಯೇ ಮುಂದುವರಿಯಲಿದೆ.
-
Dr. G Parameshwara
@DrParameshwara
ರಾಜ್ಯದ ಜನರು ಅಗತ್ಯ ದಾಖಲೆಗಳಿಗಾಗಿ ಸರ್ಕಾರಿ ಕಚೇರಿಗಳಿಗೆ ಅಲೆದಾಡುವುದನ್ನು ತಪ್ಪಿಸುವ ಮತ್ತು ರಾಜ್ಯದಲ್ಲಿ ಚಾಲ್ತಿಯಲ್ಲಿರುವ ಎಸ್ಐಆರ್ ಪ್ರಕ್ರಿಯೆಗೆ ಜನರು ಅಗತ್ಯ ದಾಖಲೆಗಳನ್ನು ಒದಗಿಸಲು ನೆರವಾಗುವ ದೃಷ್ಟಿಯಿಂದ ಮನೆ ಬಾಗಿಲಿಗೆ ಜಾತಿ ಪ್ರಮಾಣ ಪತ್ರ ಮತ್ತು ಶಾಶ್ವತ ನಿವಾಸಿ ಪ್ರಮಾಣ ಪತ್ರವನ್ನು ವಿತರಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದೆ.
ಸರ್ಕಾರವೇ ಮನೆ ಬಾಗಿಲಿಗೆ ದಾಖಲೆಗಳನ್ನು ತಲುಪಿಸುವುದರಿಂದ ಜನರಿಗೆ ಖರ್ಚಿಲ್ಲದೆ ಸುಲಭವಾಗಿ ಅಗತ್ಯ ದಾಖಲೆಗಳು ದೊರೆಯುವ ಜೊತೆಗೆ ತಾವು ಕರ್ನಾಟಕದ ಮೂಲ ನಿವಾಸಿಗಳೆಂದು ಸಾಬೀತು ಪಡಿಸಲು ಸಹಕಾರಿಯಾಗಲಿದೆ. ಕರ್ನಾಟಕದಲ್ಲಿ ಹೊರಗಿನವರು ನೆಲೆಸಿದ್ದಲ್ಲಿ ಈ ಪ್ರಕ್ರಿಯೆಯಿಂದ ಅವರ ಬಗ್ಗೆ ಮಾಹಿತಿಯೂ ಲಭ್ಯವಾಗುತ್ತದೆ. ದಾಖಲೆಗಳನ್ನು ಪಡೆಯಲು ವಿಧಿಸಿರುವ ಮಾನದಂಡಗಳಿಗೆ ಒಳಪಡದೇ ಇರುವವರು ರಾಜ್ಯ ಸರ್ಕಾರದ ಯೋಜನೆಗಳಿಂದಲೂ ಹೊರಗುಳಿಯುತ್ತಾರೆ.
ಜವಾಬ್ದಾರಿಯುತ ಸರ್ಕಾರವಾಗಿ ನಮ್ಮ ಜನರ ಹಿತ ಕಾಯುವ ಹೊಣೆಗಾರಿಕೆಯನ್ನು ಬದ್ಧತೆಯಿಂದ ನಿರ್ವಹಿಸುತ್ತಿದ್ದೇವೆ ಎಂಬ ಸಾರ್ಥಕತೆ ನಮಗಿದೆ.This media couldn't be displayed. See it on the original post. -
Dr. G Parameshwara
@DrParameshwara
ರಾಜ್ಯದಲ್ಲಿ ಹೈನುಗಾರಿಕೆ, ಕುರಿ ಹಾಗೂ ಮೇಕೆ ಸಾಕಾಣಿಕೆಯನ್ನು ಅವಲಂಬಿಸಿರುವ ಲಕ್ಷಾಂತರ ರೈತರು ಮತ್ತು ಕುರಿಗಾಹಿಗಳ ಜೀವನೋಪಾಯವನ್ನು ಬಲಪಡಿಸುವ ಉದ್ದೇಶದಿಂದ 2013-18ರ ಅವಧಿಯಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ನಮ್ಮ ಸರ್ಕಾರವು ಅನುಗ್ರಹ ಯೋಜನೆಯನ್ನು ಜಾರಿಗೆ ತಂದಿತು.
ಬಳಿಕ ಅಧಿಕಾರಕ್ಕೆ ಬಂದ ಸರ್ಕಾರಗಳು ರೈತರಿಗೆ ಆಸರೆಯಾಗಿದ್ದ ಈ ಮಹತ್ವಾಕಾಂಕ್ಷಿ ಯೋಜನೆಯನ್ನು ಅನುದಾನದ ಕೊರತೆಯಿಂದ ಸ್ಥಗಿತಗೊಳಿಸಿತು. 2023ರಲ್ಲಿ ಮತ್ತೆ ಅಧಿಕಾರಕ್ಕೆ ಬಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ನಮ್ಮ ಸರ್ಕಾರ ರೈತರ ಹಿತದೃಷ್ಟಿಯಿಂದ ಈ ಯೋಜನೆಯನ್ನು ಮರು ಜಾರಿಗೊಳಿಸಿತು.
2023ರಿಂದ ಇಲ್ಲಿಯವರೆಗೆ ಈ ಯೋಜನೆಗಾಗಿ ₹134 ಕೋಟಿ ಅನುದಾನವನ್ನು ಬಿಡುಗಡೆ ಮಾಡಿ ವ್ಯಯಿಸಲಾಗಿದೆ. ಇನ್ನೂ ₹97.57 ಕೋಟಿ ಅನುದಾನ ಬಿಡುಗಡೆ ಆಗಬೇಕಿದೆ. ಕೃಷಿಯ ಜೊತೆಗೆ ಪಶುಸಂಗೋಪನೆಯನ್ನು ಕಸುಬಾಗಿಸಿಕೊಂಡಿರುವ ರೈತರ ಹಿತಾಸಕ್ತಿಯನ್ನು ಕಾಪಾಡುವ ದೃಷ್ಟಿಯಿಂದ, ಬಾಕಿ ಇರುವ ₹97.57 ಕೋಟಿ ಅನುದಾನವನ್ನು ತ್ವರಿತವಾಗಿ ಬಿಡುಗಡೆ ಮಾಡುವಂತೆ ಆರ್ಥಿಕ ಇಲಾಖೆಗೆ ಪತ್ರ ಬರೆಯಲಾಗಿದೆ.
ಸಣ್ಣ ಪ್ರಾಣಿಗಳ ಸಾವಿಗೆ ಪರಿಹಾರ ಧನ ವಿತರಿಸಿದ ವಿವರ:
ಅನುಗ್ರಹ ಯೋಜನೆಯಡಿ 2023-24ನೇ ಸಾಲಿನಲ್ಲಿ ಆಕಸ್ಮಿಕವಾಗಿ ಮೃತಪಟ್ಟ 30,705 ಕುರಿ ಹಾಗೂ ಮೇಕೆಗಳಿಗೆ ₹14.93 ಕೋಟಿ, 2024-25ನೇ ಸಾಲಿನಲ್ಲಿ ಮೃತಪಟ್ಟ 89,481 ಸಣ್ಣ ಪ್ರಾಣಿಗಳಿಗೆ ₹32.87 ಕೋಟಿ, 2025-26ನೇ ಸಾಲಿನಲ್ಲಿ ಮೃತಪಟ್ಟ 74,801 ಕುರಿ ಹಾಗೂ ಮೇಕೆಗಳಿಗೆ ₹29 ಕೋಟಿ, ಹಾಗೂ 2026-27ನೇ ಸಾಲಿನಲ್ಲಿ ಕಳೆದ ತಿಂಗಳವರೆಗೆ ಮೃತಪಟ್ಟ 22,579 ಕುರಿ ಹಾಗೂ ಮೇಕೆಗಳಿಗೆ ₹7.25 ಕೋಟಿ ಪರಿಹಾರ ಧನವನ್ನು ವಿತರಿಸಲಾಗಿದೆ.
ದೊಡ್ಡ ಪ್ರಾಣಿಗಳ ಸಾವಿಗೆ ಪರಿಹಾರ ಧನ ವಿತರಿಸಿದ ವಿವರ:
ಅನುಗ್ರಹ ಯೋಜನೆಯಡಿ 2023-24ನೇ ಸಾಲಿನಲ್ಲಿ ಮೃತಪಟ್ಟ 12,965 ಹಸು, ಎಮ್ಮೆ ಹಾಗೂ ಇತರೆ ದೊಡ್ಡ ಜಾನುವಾರುಗಳಿಗೆ ₹12.88 ಕೋಟಿ, 2024-25ನೇ ಸಾಲಿನಲ್ಲಿ ಮೃತಪಟ್ಟ 30,289 ದೊಡ್ಡ ಜಾನುವಾರುಗಳಿಗೆ ₹14.99 ಕೋಟಿ, 2025-26ನೇ ಸಾಲಿನಲ್ಲಿ ಮೃತಪಟ್ಟ 32,804 ದೊಡ್ಡ ಜಾನುವಾರುಗಳಿಗೆ ₹20.85 ಕೋಟಿ, ಹಾಗೂ 2026-27ನೇ ಸಾಲಿನಲ್ಲಿ ಇದುವರೆಗೆ ಮೃತಪಟ್ಟ 6,202 ದೊಡ್ಡ ಜಾನುವಾರುಗಳಿಗೆ ₹5.25 ಕೋಟಿ ಪರಿಹಾರ ಧನವನ್ನು ವಿತರಿಸಲಾಗಿದೆ.
ರೈತರು ರಾಜ್ಯ ಸರ್ಕಾರದಿಂದ ಪರಿಹಾರದ ನಿರೀಕ್ಷೆಯಲ್ಲಿದ್ದು, ಶೀಘ್ರ ಅನುದಾನವನ್ನು ಬಿಡುಗಡೆ ಮಾಡುವಂತೆ ಆರ್ಥಿಕ ಇಲಾಖೆಗೆ ಕೋರಿದ್ದೇನೆ. -
Dr. G Parameshwara
@DrParameshwara
ನಿಮ್ಮ ಪರಿಶ್ರಮಕ್ಕೆ ನಮ್ಮ ಪ್ರೋತ್ಸಾಹ ಸದಾ ಇರಲಿದೆ!
ಆತ್ಮ ಬಲವಿದ್ದರೆ ಎಂತಹ ದೈಹಿಕ ನ್ಯೂನ್ಯತೆಯನ್ನು ಮೆಟ್ಟಿ ನಿಲ್ಲಲು ಸಾಧ್ಯ. ಈ ನಾಣ್ನುಡಿಗೆ ಅರ್ಥವೆಂಬಂತೆ ಬದುಕಿ, ಸಾಧಿಸಿ ತೋರಿಸಿದವರು ನಮ್ಮ ಹೆಮ್ಮೆಯ ಕನ್ನಡತಿ ಪ್ಯಾರಾ ಅಥ್ಲೀಟ್ ಕೆ.ಎಸ್.ಶಿಲ್ಪಾ ಇವರು.
ಮೂಲತಃ ಮೈಸೂರು ಜಿಲ್ಲೆಯ ಕೆ.ಆರ್.ನಗರ ತಾಲೂಕಿನ ಕಂಚುಗಾರ ಕೊಪ್ಪಲು ಗ್ರಾಮದವರಾದ ಶಿಲ್ಪಾ, ನಾಲ್ಕು ವರ್ಷವಿರುವಾಗ ಲಾರಿ ಅಪಘಾತದಲ್ಲಿ ತಮ್ಮ ಎಡಗಾಲನ್ನೇ ಕಳೆದುಕೊಂಡರು. ಆ ನಂತರ ಅವರ ಬದುಕಿನಲ್ಲಿ ಬಂದೊದಗಿದ ಸಂಕಷ್ಟ, ಸವಾಲುಗಳಿಗೆ ಸ್ಪಲ್ಪವೂ ಅಂಜದೇ, ಅದೆಲ್ಲವನ್ನೂ ಮೆಟ್ಟಿ ನಿಂತು ಇಂದು ಸಾಧನೆಯ ಶಿಖರವೇರಿದ್ದಾರೆ.
ನಮ್ಮ ಕನ್ನಡದ ಕುವರಿ 2026ರ ಗ್ಲಾಸ್ಗೋ ಕಾಮನ್ವೆಲ್ತ್ ಗೇಮ್ಸ್ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದು, ಅವರಿಗೆ ಅಭಿನಂದನೆಗಳು. ನಿಮ್ಮ ಪರಿಶ್ರಮಕ್ಕೆ ಮತ್ತು ಸಾಧನೆಗೆ ₹5 ಲಕ್ಷ ಪ್ರೋತ್ಸಾಹಧನವನ್ನು ನೀಡುವುದರ ಜೊತೆಗೆ, ಸರ್ಕಾರದಿಂದ ಅಗತ್ಯವಿರುವ ಎಲ್ಲಾ ರೀತಿಯ ನೆರವನ್ನು ನೀಡಲು ನಾವು ಸಿದ್ಧರಿದ್ದೇವೆ.
ಕಾಮನ್ವೆಲ್ತ್ ಗೇಮ್ಸ್ನಲ್ಲಿ ಪದಕ ಗೆದ್ದು ಕರ್ನಾಟಕದ ಮತ್ತು ದೇಶದ ಹಿರಿಮೆಯನ್ನು ಮತ್ತಷ್ಟು ಹೆಚ್ಚಿಸಲಿ ಎಂದು ಹಾರೈಸುತ್ತೇನೆ. ನಿಮಗೆ ಶುಭವಾಗಲಿ, ನಿಮ್ಮ ಸಾಧನೆಯು ಅನೇಕರಿಗೆ ಸ್ಫೂರ್ತಿಯಾಗಲಿ. -
Dr. G Parameshwara
@DrParameshwara
ಕಟ್ಟುನಿಟ್ಟಿನ ನಿಯಮಗಳಿಂದಾಗಿ ಉನ್ನತ ವ್ಯಾಸಂಗದ ಕನಸು ಕಂಡಿದ್ದ ಹಲವು ಕ್ರೀಡಾಸಾಧಕರು ಸರ್ಕಾರಿ ಖೋಟಾದಡಿ ಇಂಜಿನಿಯರಿಂಗ್ ಹಾಗೂ ಮೆಡಿಕಲ್ ಸೀಟುಗಳಿಂದ ಹೊರಗುಳಿದಿದ್ದರು. ಇಂತಹ ಮಕ್ಕಳ ಸಮಸ್ಯೆಯನ್ನು ಆಲಿಸಿ, ಸಕಾಲದಲ್ಲಿ ಪರಿಹರಿಸುವ ಮೂಲಕ ಕ್ರೀಡೆಯ ಜೊತೆಗೆ ಶಿಕ್ಷಣ ಪಡೆಯುವ ಅವರ ಕನಸಿಗಿದ್ದ ಅಡೆತಡೆಯನ್ನು ನಿವಾರಿಸಿದ್ದೇನೆ.
ಕ್ರೀಡಾ ಸಾಧಕರ ಖೋಟಾದಡಿ ಮೆಡಿಕಲ್ ಹಾಗೂ ಇಂಜಿನಿಯರಿಂಗ್ ಸೀಟು ಪಡೆದ ಹಲವರು ನನ್ನನ್ನು ಭೇಟಿಯಾಗಿ, ಕೃತಜ್ಞತೆ ಸಲ್ಲಿಸಿ, ತಮ್ಮ ಅನಿಸಿಕೆಯನ್ನು ಹಂಚಿಕೊಂಡಿದ್ದು ಹೀಗೆThis media couldn't be displayed. See it on the original post. -
Dr. G Parameshwara
@DrParameshwara
ನಿಮ್ಮ ಪರಿಶ್ರಮಕ್ಕೆ ನಮ್ಮ ಪ್ರೋತ್ಸಾಹ ಸದಾ ಇರಲಿದೆ!
2026ರ ಗ್ಲಾಸ್ಗೋ ಕಾಮನ್ವೆಲ್ತ್ ಗೇಮ್ಸ್ ಕ್ರೀಡಾಕೂಟಕ್ಕೆ ಆಯ್ಕೆಯಾಗಿರುವ ನಮ್ಮ ಕರ್ನಾಟಕದ ಹೆಮ್ಮೆ ಶ್ರೀ ಲೋಕೇಶ್ ಸತ್ಯನಾಥನ್ ಅವರಿಗೆ ಅಭಿನಂದನೆಗಳು. ನಿಮ್ಮ ಸಾಧನೆ ಮತ್ತು ಪರಿಶ್ರಮಕ್ಕೆ ಗೌರವವಾಗಿ ತಲಾ ₹5 ಲಕ್ಷ ಪ್ರೋತ್ಸಾಹಧನವನ್ನು ನೀಡಲು ನಾವು ಹರ್ಷಿತರಾಗಿದ್ದೇವೆ.
ಲೋಕೇಶ್ ಸತ್ಯನಾಥನ್ ಅವರು ಲಾಂಗ್ ಜಂಪ್ನಲ್ಲಿ 8.21 ಮೀಟರ್ ದೂರ ಜಿಗಿದು ರಾಷ್ಟ್ರೀಯ ದಾಖಲೆ ನಿರ್ಮಿಸಿದ್ದಾರೆ. ಅಲ್ಲದೇ, ಅಮೆರಿಕದ ಎನ್ಸಿಎಎ ಚಾಂಪಿಯನ್ಶಿಪ್ನಲ್ಲಿ ಚಿನ್ನದ ಪದಕ ಗೆದ್ದ ಭಾರತದ ಮೊದಲ ಅಥ್ಲೀಟ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ನಿಮ್ಮ ಕ್ರೀಡಾ ಸಾಧನೆಯು ಭವಿಷ್ಯದ ಕ್ರೀಡಾಪಟುಗಳಿಗೆ ಸ್ಪೂರ್ತಿಯಾಗಲಿ. ಕಾಮನ್ವೆಲ್ತ್ ಗೇಮ್ಸ್ನಲ್ಲಿ ಪದಕ ಗೆದ್ದು ಕರ್ನಾಟಕದ ಮತ್ತು ದೇಶದ ಹಿರಿಮೆಯನ್ನು ಮತ್ತಷ್ಟು ಹೆಚ್ಚಿಸಲಿ ಎಂದು ಹಾರೈಸುತ್ತೇನೆ. -
Dr. G Parameshwara
@DrParameshwara
ಬ್ರಾಹ್ಮಣ ಸಮುದಾಯದಲ್ಲಿ ಆರ್ಥಿಕವಾಗಿ ಹಿಂದುಳಿದವರ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದೆ. ಈ ನಿಟ್ಟಿನಲ್ಲಿ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯ "ವಿಪ್ರ ಸ್ವ ಉದ್ಯಮ ನೇರ ಸಾಲ ಯೋಜನೆ" 2026-27ನೇ ಸಾಲಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಸ್ವಯಂ ಉದ್ಯೋಗ ಆರಂಭಿಸಲು ಆಸಕ್ತಿ ಹೊಂದಿರುವವರಿಗೆ ಆರ್ಥಿಕ ನೆರವು ನೀಡಲಾಗುತ್ತಿದೆ.
ನಮ್ಮ ಸರ್ಕಾರವು 2025-26ನೇ ಸಾಲಿನಲ್ಲಿ ಈ ಯೋಜನೆಯನ್ನು ಆರಂಭಿಸಿದ್ದು, ಬ್ರಾಹ್ಮಣ ಸಮುದಾಯದಲ್ಲಿ ಆರ್ಥಿಕವಾಗಿ ಹಿಂದುಳಿದವರಿಗೆ ಗುಡಿ ಕೈಗಾರಿಕೆ, ಸಣ್ಣ ಕೈಗಾರಿಕೆ, ಹೋಟೆಲ್ ಉದ್ಯಮ, ಹೈನುಗಾರಿಕೆ ಸೇರಿದಂತೆ ವಿವಿಧ ಸ್ವಯಂ ಉದ್ಯೋಗ ಚಟುವಟಿಕೆಗಳನ್ನು ಕೈಗೊಳ್ಳಲು ನೆರವು ನೀಡುತ್ತಿದೆ.
ಯೋಜನೆಯಡಿ ₹1 ಲಕ್ಷದಿಂದ ₹2 ಲಕ್ಷದವರೆಗೆ ಸಾಲ ಸಹಾಯಧನ ನೀಡಲಾಗುತ್ತಿದ್ದು, ಶೇ.20ರಷ್ಟು ಸಬ್ಸಿಡಿ ಹಾಗೂ ಉಳಿದ ಶೇ.80ರಷ್ಟು ಸಾಲವನ್ನು ಶೇ.4ರ ಬಡ್ಡಿದರದಲ್ಲಿ 34 ಕಂತುಗಳಲ್ಲಿ ಮರುಪಾವತಿ ಮಾಡಬಹುದಾಗಿದೆ.
ಈ ಯೋಜನೆಯ ಸದುಪಯೋಗ ಪಡೆದುಕೊಂಡು ಬ್ರಾಹ್ಮಣ ಸಮುದಾಯದಲ್ಲಿ ಆರ್ಥಿಕವಾಗಿ ಹಿಂದುಳಿದಿರುವವರು ಸ್ವಾವಲಂಬಿ ಜೀವನ ರೂಪಿಸಿಕೊಳ್ಳಬೇಕು ಎಂಬುದು ನಮ್ಮ ಸರ್ಕಾರದ ಆಶಯವಾಗಿದೆ.
Our Government is committed to the economic empowerment of low-income members of the Brahmin community.
Applications have been invited for 2026–27 under the Karnataka State Brahmin Development Board’s Vipra Swa-Udyama Direct Loan Scheme, which supports those seeking to start self-employment ventures.
Under the scheme, eligible beneficiaries can receive loans ranging from ₹1 lakh to ₹2 lakh, with a 20% subsidy. The remaining 80% can be repaid in 34 instalments at 4% interest. The assistance may be used for cottage and small-scale industries, hotel businesses, dairy farming and other self-employment activities.
The government of Karnataka urges eligible members of the community to make use of this opportunity, build sustainable livelihoods and move towards a self-reliant future.
#selfemployment -
Dr. G Parameshwara
@DrParameshwara
ಕಟ್ಟುನಿಟ್ಟಿನ ನಿಯಮಗಳಿಂದಾಗಿ ಉನ್ನತ ವ್ಯಾಸಂಗದ ಕನಸು ಕಂಡಿದ್ದ ಹಲವು ಕ್ರೀಡಾಸಾಧಕರು ಸರ್ಕಾರಿ ಖೋಟಾದಡಿ ಇಂಜಿನಿಯರಿಂಗ್ ಹಾಗೂ ಮೆಡಿಕಲ್ ಸೀಟುಗಳಿಂದ ಹೊರಗುಳಿದಿದ್ದರು. ಇಂತಹ ಮಕ್ಕಳ ಸಮಸ್ಯೆಯನ್ನು ಆಲಿಸಿ, ಸಕಾಲದಲ್ಲಿ ಪರಿಹರಿಸುವ ಮೂಲಕ ಕ್ರೀಡೆಯ ಜೊತೆಗೆ ಶಿಕ್ಷಣ ಪಡೆಯುವ ಅವರ ಕನಸಿಗಿದ್ದ ಅಡೆತಡೆಯನ್ನು ನಿವಾರಿಸಿದ್ದೇನೆ.
ಕ್ರೀಡಾ ಸಾಧಕರ ಖೋಟಾದಡಿ ಮೆಡಿಕಲ್ ಹಾಗೂ ಇಂಜಿನಿಯರಿಂಗ್ ಸೀಟು ಪಡೆದ ಹಲವರು ನನ್ನನ್ನು ಭೇಟಿಯಾಗಿ, ಕೃತಜ್ಞತೆ ಸಲ್ಲಿಸಿ, ತಮ್ಮ ಅನಿಸಿಕೆಯನ್ನು ಹಂಚಿಕೊಂಡಿದ್ದು ಹೀಗೆ..This media couldn't be displayed. See it on the original post. -
Dr. G Parameshwara
@DrParameshwara
ಮೈಸೂರು ಜಿಲ್ಲೆಯ ಕೆ.ಆರ್.ನಗರ ತಾಲೂಕಿನ ಕಂಚುಗಾರ ಕೊಪ್ಪಲು ಗ್ರಾಮದ ಕೆ.ಎಸ್.ಶಿಲ್ಪಾ ಅವರು ಇಂದಿನಿಂದ ಸ್ಕಾಟ್ಲೆಂಡ್ನ ಗ್ಲಾಸ್ಗೋದಲ್ಲಿ ಆರಂಭಗೊಂಡಿರುವ 2026ರ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಭಾರತೀಯ ಪ್ಯಾರಾ ಅಥ್ಲೆಟಿಕ್ಸ್ ತಂಡವನ್ನು ಪ್ರತಿನಿಧಿಸುತ್ತಿರುವುದು ನಮ್ಮೆಲ್ಲರಿಗೂ ಹೆಮ್ಮೆಯ ವಿಚಾರ.
ಬಡತನ, ದೈಹಿಕ ಸವಾಲುಗಳನ್ನು ಮೆಟ್ಟಿನಿಂತು ನಾಡಿನ ಹೆಣ್ಣುಮಗಳೊಬ್ಬಳು ಇಂತಹ ಉನ್ನತ ಮಟ್ಟಕ್ಕೇರಿರುವುದು ಸಾಮಾನ್ಯ ಸಂಗತಿಯಲ್ಲ. ಆಕೆಯೊಂದಿಗೆ ಮಾತನಾಡಿ, ರಾಜ್ಯ ಸರ್ಕಾರದಿಂದ ಅಗತ್ಯವಿರುವ ಎಲ್ಲಾ ರೀತಿಯ ನೆರವನ್ನು ನೀಡುವುದಾಗಿ ತಿಳಿಸಿದ್ದೇನೆ.
ಶಿಲ್ಪಾ ಅವರು ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಉತ್ತಮ ಸಾಧನೆ ಮಾಡಲಿ ಎಂದು ಶುಭ ಹಾರೈಸುತ್ತೇನೆ. ನಾಡಿನ ಗ್ರಾಮೀಣ ಪ್ರತಿಭೆಯೊಂದು ಅಂತಾರಾಷ್ಟ್ರೀಯ ಮಟ್ಟದ ಪಂದ್ಯಾಕೂಟದಲ್ಲಿ ಪಾಲ್ಗೊಳ್ಳುವುದೇ ಒಂದು ಅನನ್ಯ ಸಾಧನೆ, ಈ ಸಾಧಕಿಯ ಬೆಂಬಲಕ್ಕೆ ನಮ್ಮ ಸರ್ಕಾರ ಸದಾ ಇರಲಿದೆ.This media couldn't be displayed. See it on the original post. -
Dr. G Parameshwara
@DrParameshwara
ಬುಧವಾರ ಕೋಲಾರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ 'ಜಿಲ್ಲೆಯ ಬರ ಪರಿಸ್ಥಿತಿ ಮತ್ತು ಕಂದಾಯ ವಿಷಯʼಗಳ ಕುರಿತು ಪ್ರಗತಿ ಪರಿಶೀಲನಾ ಸಭೆ ನಡೆಸಿ, ಅಧಿಕಾರಿಗಳಿಗೆ ನಾನು ನೀಡಿದ ಅಗತ್ಯ ಸೂಚನೆಗಳು ಹೀಗಿವೆ..
-
Dr. G Parameshwara
@DrParameshwara
I have written to Hon’ble Prime Minister Shri @narendramodi expressing grave concern over the NEET paper leak, examination irregularities and the use of force against students peacefully demanding answers.
I have urged the Union Government to:
- Roll back NEET and restore transparent, merit-based State CETs
- Order an impartial and time-bound inquiry
- Compensate the families of students who lost their lives and those injured during protests
- Fix accountability for the lathi-charge and use of tear gas
- Initiate meaningful dialogue with students and educators
- Restore credibility and public trust in our examination system
The questions raised by our youth deserve answers - not barricades; dialogue - not suppression.
ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ, ಪರೀಕ್ಷಾ ನಿರ್ವಹಣೆಯ ವೈಫಲ್ಯ ಮತ್ತು ವಿದ್ಯಾರ್ಥಿಗಳ ಶಾಂತಿಯುತ ಪ್ರತಿಭಟನೆ ಹತ್ತಿಕ್ಕುತ್ತಿರುವ ನಡೆಯನ್ನು ಪ್ರಶ್ನಿಸಿ ಮಾನ್ಯ ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರಿಗೆ ಬರೆದ ಪತ್ರ
ಕೇಂದ್ರ ಸರ್ಕಾರಕ್ಕೆ ನನ್ನ ಒತ್ತಾಯಗಳು:
- ನೀಟ್ ಹಿಂತೆದುಕೊಳ್ಳಿ ಮತ್ತು ಪಾರದರ್ಶಕತೆ ಮತ್ತು ಅರ್ಹತೆಯ ಆಧಾರದ ಸಿಇಟಿಯನ್ನು ಮರುಸ್ಥಾಪಿಸಿ
- ಕಾಲಮಿತಿಯಲ್ಲಿ ಪಾರದರ್ಶಕ ತನಿಖೆಗೆ ಕ್ರಮವಹಿಸಿ
- ಪ್ರಾಣ ಕಳೆದುಕೊಂಡ ವಿದ್ಯಾರ್ಥಿಗಳ ಕುಟುಂಬಕ್ಕೆ ಹಾಗೂ ಹೋರಾಟದಲ್ಲಿ ಗಾಯಗೊಂಡವರಿಗೆ ಪರಿಹಾರ ಒದಗಿಸಿ
- ಲಾಠಿಚಾರ್ಜ್ ಹಾಗೂ ಅಶ್ರುವಾಯು ದಾಳಿಗೆ ಹೊಣೆಗಾರರು ಯಾರು ಎಂಬುದನ್ನು ತಿಳಿಸಿ
- ವಿದ್ಯಾರ್ಥಿಗಳು ಹಾಗೂ ಶಿಕ್ಷಣ ತಜ್ಞರ ಜೊತೆ ಅರ್ಥಪೂರ್ಣ ಸಂವಾದ ನಡೆಸಿ
- ನಮ್ಮ ಶಿಕ್ಷಣ ವ್ಯವಸ್ಥೆ ಮೇಲಿನ ಸಾರ್ವಜನಿಕರ ವಿಶ್ವಾಸಾರ್ಹತೆಯನ್ನು ಮರುಸ್ಥಾಪಿಸಿ
ಪ್ರಶ್ನಿಸುತ್ತಿರುವ ನಮ್ಮ ಯುವಜನತೆಗೆ ಉತ್ತರ ಪಡೆಯುವ ಹಕ್ಕಿದೆ ; ಬ್ಯಾರಿಕೇಡ್ಗಳನ್ನು ತೆಗೆಯಿರಿ ಮಾತುಕತೆ ಮೂಲಕ ಬಗೆಹರಿಸಿ -
Dr. G Parameshwara
@DrParameshwara
ಇಂದು ಸದಾಶಿವನಗರದ ಗೃಹ ಕಚೇರಿಯಲ್ಲಿ ನಾಗರಿಕರಿಂದ ಅಹವಾಲುಗಳನ್ನು ಸ್ವೀಕರಿಸಿ, ಅವರ ಸಮಸ್ಯೆಗಳನ್ನು ಆಲಿಸಿದೆ. ಸಮಸ್ಯೆಗಳ ಶೀಘ್ರ ಹಾಗೂ ಕಾನೂನುಬದ್ಧ ಪರಿಹಾರಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಈ ವೇಳೆ ಭರವಸೆ ನೀಡಿದೆ.
-
Dr. G Parameshwara
@DrParameshwara
ಕಟ್ಟುನಿಟ್ಟಿನ ನಿಯಮಗಳಿಂದಾಗಿ ಉನ್ನತ ವ್ಯಾಸಂಗದ ಕನಸು ಕಂಡಿದ್ದ ಹಲವು ಕ್ರೀಡಾಸಾಧಕರು ಸರ್ಕಾರಿ ಖೋಟಾದಡಿ ಇಂಜಿನಿಯರಿಂಗ್ ಹಾಗೂ ಮೆಡಿಕಲ್ ಸೀಟುಗಳಿಂದ ಹೊರಗುಳಿದಿದ್ದರು. ಇಂತಹ ಮಕ್ಕಳ ಸಮಸ್ಯೆಯನ್ನು ಆಲಿಸಿ, ಸಕಾಲದಲ್ಲಿ ಪರಿಹರಿಸುವ ಮೂಲಕ ಕ್ರೀಡೆಯ ಜೊತೆಗೆ ಶಿಕ್ಷಣ ಪಡೆಯುವ ಅವರ ಕನಸಿಗಿದ್ದ ಅಡೆತಡೆಯನ್ನು ನಿವಾರಿಸಿದ್ದೇನೆ.
ಕ್ರೀಡಾ ಸಾಧಕರ ಖೋಟಾದಡಿ ಮೆಡಿಕಲ್ ಹಾಗೂ ಇಂಜಿನಿಯರಿಂಗ್ ಸೀಟು ಪಡೆದ ಹಲವರು ನನ್ನನ್ನು ಭೇಟಿಯಾಗಿ, ಕೃತಜ್ಞತೆ ಸಲ್ಲಿಸಿ, ತಮ್ಮ ಅನಿಸಿಕೆಯನ್ನು ಹಂಚಿಕೊಂಡಿದ್ದು ಹೀಗೆ..This media couldn't be displayed. See it on the original post. -
Dr. G Parameshwara
@DrParameshwara
ಇಂದು ಸದಾಶಿವನಗರದ ಗೃಹಕಚೇರಿ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದೆ.
ಬರ ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸಲು ನಮ್ಮ ಸರ್ಕಾರ ಸಿದ್ಧವಿದೆ. ಈಗಾಗಲೇ ₹1 ಕೋಟಿಯನ್ನು ಪ್ರತಿಯೊಬ್ಬ ಶಾಸಕರಿಗೂ ನೀಡಲು ತೀರ್ಮಾನಿಸಿದ್ದೇವೆ. ಅಲ್ಲದೇ, ಕುಡಿಯುವ ನೀರಿನ ಸಮರ್ಪಕ ಪೂರೈಕೆಗಾಗಿ ಪ್ರತಿ ಜಿಲ್ಲೆಗೆ ₹5 ಕೋಟಿ ಹಣವನ್ನು ನೀಡಿದ್ದೇವೆ. ಈಗಾಗಲೇ ಪಿಡಿ ಖಾತೆಗಳಲ್ಲಿ ₹329 ಕೋಟಿ ಲಭ್ಯವಿದೆ. ನಮ್ಮಲ್ಲಿ ಹಣದ ಕೊರತೆ ಇಲ್ಲ.
ಮೈಸೂರು ಮತ್ತು ಬೆಂಗಳೂರು ವಿಭಾಗದ ಪ್ರಗತಿ ಪರಿಶೀಲನೆ ಬಾಕಿ ಇದೆ. ಬೆಂಗಳೂರು ವಿಭಾಗದಲ್ಲಿ ಜುಲೈ 25 ರಂದು ನಾನು ಮತ್ತು ಮುಖ್ಯಮಂತ್ರಿಗಳು ಸಭೆ ನಡೆಸುತ್ತೇವೆ. ಅದಾಗಿ ಮೈಸೂರಿನಲ್ಲಿ ಮಾಡುತ್ತೇವೆ. ಆಗ ನಮಗೆ ರಾಜ್ಯದ ಪರಿಸ್ಥಿತಿಯ ಬಗ್ಗೆ ಸಂಪೂರ್ಣ ಚಿತ್ರಣ ಸಿಗುತ್ತದೆ. ಆ ಬಳಿಕ ಚರ್ಚಿಸಿ, ರೈತರಿಗೆ, ಸಾಮಾನ್ಯ ಜನರಿಗೆ ಸಮಸ್ಯೆಯಾಗದಂತೆ ಯಾವ ರೀತಿಯ ಕ್ರಮಗಳನ್ನು ಕೈಗೊಳ್ಳಬಹುದು ಎಂಬುದರ ಬಗ್ಗೆ ತೀರ್ಮಾನಿಸುತ್ತೇವೆ.
ಜನರು ಉದ್ಯೋಗಕ್ಕಾಗಿ ಗುಳೆ ಹೋಗುವುದನ್ನು ತಪ್ಪಿಸಲು ಎಲ್ಲ ಜಿಲ್ಲಾ ಪಂಚಾಯತ್ ಸಿಇಒಗಳು ವಿಬಿ ಜಿ ರಾಮ್ ಜಿ ಯೋಜನೆಯಡಿ ಕೂಡಲೇ ಜನರಿಗೆ ಉದ್ಯೋಗ ನೀಡುವಂತೆ ಸೂಚಿಸಿದ್ದೇನೆ. ನಮ್ಮಲ್ಲಿ ಹಣದ ಕೊರತೆ ಇಲ್ಲ. ಶೀಘ್ರವೇ ಕಾಮಗಾರಿಗಳನ್ನು ಆರಂಭಿಸುವಂತೆ ತಿಳಿಸಿದ್ದೇನೆ.
ಕೇಂದ್ರ ಸರ್ಕಾರಕ್ಕೆ ನಾವು ಪತ್ರ ಬರೆದಿದ್ದೇವೆ. ಆದರೆ, ಈವರೆಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಆಗಸ್ಟ್ ತಿಂಗಳಲ್ಲಿ ಅವರು ಮನವಿಯನ್ನು ನಿರೀಕ್ಷಿಸುತ್ತಾರೆ. ಅವಾಗ ನಾವು ಮನವಿ ಸಲ್ಲಿಸಿದರೆ ಹಣವನ್ನು ಬಿಡುಗಡೆ ಮಾಡುತ್ತಾರೆ.
ನೀವು ಭೇಟಿ ಕೊಟ್ಟ ಜಿಲ್ಲೆಗಳಲ್ಲಿ ಕೃಷಿ ಚಟುವಟಿಕೆಗಳು ಪ್ರಾರಂಭವಾಗಿದೆಯೇ ಎಂಬ ಮಾಧ್ಯಮದ ಪ್ರಶ್ನೆಗೆ ಉತ್ತರಿಸಿ, ಮುಂಗಾರಿನಲ್ಲಿ ಸ್ಪಲ್ಪ ಮಳೆಯಾದ್ದರಿಂದ ರೈತರು ಬೀಜ ಬಿತ್ತನೆ ಮಾಡಿದ್ದಾರೆ. ಆಮೇಲೆ ಮಳೆಯಾಗಿಲ್ಲ. ಈಗ ಬಿತ್ತನೆ ಮಾಡಿದ್ದೆಲ್ಲ ಒಣಗಿ ಹೋಗಿದೆ. ಈಗ ಮತ್ತೆ ಆಗಸ್ಟ್ ತಿಂಗಳಲ್ಲಿ ಮಳೆಯಾದರೆ ಬೀಜ ಬಿತ್ತನೆ ಮಾಡುತ್ತಾರೆ. ಅದೊಂದು ನಿರೀಕ್ಷೆಯಿದೆ ಎಂದು ತಿಳಿಸಿದೆ.
ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ವಿಚಾರದಲ್ಲಿ ದೆಹಲಿಯಲ್ಲಿ ನಡೆಯುತ್ತಿರುವ ಪ್ರತಿಭಟನೆ ಕುರಿತ ಮಾಧ್ಯಮದ ಪ್ರಶ್ನೆಗೆ ಉತ್ತರಿಸಿ, ಈ ಬಗ್ಗೆ ಸಂಸತ್ತಿನಲ್ಲಿ ಚರ್ಚೆ ಮಾಡಲು ಅವಕಾಶ ಕೇಳಿದ್ದಾರೆ. ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯದ ಪ್ರಶ್ನೆ ಇದು. ಮೊದಲ ಪರೀಕ್ಷೆಯಲ್ಲಿ ಕೆಲವರು ಉತ್ತಮ ಅಂಕಗಳನ್ನು ಪಡೆದುಕೊಂಡಿದ್ದರು. ಎರಡನೇ ಬಾರಿ ಪರೀಕ್ಷೆಯಲ್ಲಿ ಕಡಿಮೆ ಅಂಕಗಳು ಬಂದಿದೆ. ಲಕ್ಷಾಂತರ ಮಕ್ಕಳಿಗೆ ತೊಂದರೆಯಾಗಿದೆ. ಅಧಿಕಾರದಲ್ಲಿರುವವರು ಇದರ ಜವಾಬ್ದಾರಿ ಹೊತ್ತು ರಾಜೀನಾಮೆ ನೀಡಬೇಕು.
ಮೋದಿಯವರು ತನಿಖೆ ಮಾಡಿಸುತ್ತೇವೆ ಎಂದು ಬಹಳ ತಡವಾಗಿ ಪ್ರತಿಕ್ರಿಯಿಸಿದ್ದಾರೆ. ವಿದ್ಯಾರ್ಥಿಗಳ ಪರವಾಗಿ ಇದ್ದೇವೆ ಎಂದು ಹೇಳಿದ್ದಾರೆ. ಹಾಗಿದ್ದ ಮೇಲೆ ಧರ್ಮೇಂದ್ರ ಪ್ರಧಾನ್ ಅವರನ್ನು ಅಧಿಕಾರದಿಂದ ಕೆಳಗಿಳಿಸಿ. ಜವಾಬ್ದಾರಿ ಹೊತ್ತವರ ಮೇಲೆ ಕ್ರಮ ಕೈಗೊಳ್ಳಿ.
ಲೋಕಸಭೆಯ ವಿರೋಧ ಪಕ್ಷದ ನಾಯಕರಾದ ರಾಹುಲ್ ಗಾಂಧಿ ಅವರ ಮೇಲೆ ದುರ್ವತನೆ ತೋರಿದ್ದಾರೆ. ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆ ಎಲ್ಲಿಗೆ ತಲುಪುತ್ತಿದೆ? ಶಾಂತಿಯುತ ಪ್ರತಿಭಟನೆ ನಡೆಸಲು ಸಂವಿಧಾನದಲ್ಲೇ ಅವಕಾಶ ಇರುವಾಗ ಆಡಳಿತದಲ್ಲಿರುವವರು ಅವಕಾಶ ಕೊಡುವುದಿಲ್ಲ ಎಂದರೆ ಏನರ್ಥ?
Our Government is fully prepared to tackle the drought situation. We have decided to provide ₹1 crore to each MLA and have already released ₹5 crore to every district to ensure an adequate supply of drinking water. A total of ₹329 crore is available in the PD accounts. There is no shortage of funds.
Review meetings for the Bengaluru and Mysuru divisions are pending. The Chief Minister and I will review the Bengaluru division on July 25, followed by the Mysuru division. This will give us a complete picture of the situation across the State, after which we will decide on further measures to ensure that farmers and the general public do not face hardship.
To prevent people from migrating in search of work, I have instructed all Zilla Panchayat CEOs to provide employment immediately under the VB–G RAM G Scheme and begin the works without delay. Funds are available.
We have written to the Union Government but have received no response so far. They expect the formal memorandum in August, and funds are expected to be released after it is submitted.
Asked whether agricultural activities had begun in the districts I visited, I said farmers had sown seeds after receiving some monsoon rain. However, there was no rain afterwards, and the crops have dried up. We hope farmers will be able to sow again if it rains in August.
On the protests in Delhi over the NEET question paper leak, I said the Opposition has sought a discussion in Parliament. This concerns the future of lakhs of students. Some who scored well in the first examination received lower marks when it was held again, affecting lakhs of students. Those in power must accept responsibility and resign.
Prime Minister Narendra Modi responded very late by announcing an investigation and claiming to stand with the students. If that is true, remove Dharmendra Pradhan from office and act against those responsible.
Leader of the Opposition in the Lok Sabha Shri Rahul Gandhi was mistreated. Where is our democracy heading? When the Constitution guarantees the right to protest peacefully, what does it mean if those in power refuse to allow it? -
Dr. G Parameshwara
@DrParameshwara
ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಖಂಡಿಸಿ, ವಿದ್ಯಾರ್ಥಿಗಳ ಪರ ನಿಂತು ನವದೆಹಲಿಯಲ್ಲಿ ಪ್ರಧಾನಿಯವರ ನಿವಾಸದ ಮುಂದೆ ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದ ಲೋಕಸಭೆಯ ವಿರೋಧ ಪಕ್ಷದ ನಾಯಕರಾದ ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ಸೇರಿದಂತೆ ನಾನಾ ಕಾಂಗ್ರೆಸ್ ಮುಖಂಡರನ್ನು ಬಂಧಿಸಿ ದುರ್ವತನೆ ತೋರಿರುವ ಕೇಂದ್ರ ಸರ್ಕಾರದ ನಡೆಯನ್ನು ಖಂಡಿಸಿ ನಿನ್ನೆ ಮಾಧ್ಯಮದವರ ಜೊತೆ ಮಾತನಾಡಿದ್ದೆ. ಜೊತೆಗೆ ಚಿಕ್ಕಬಳ್ಳಾಪುರ ಜಿಲ್ಲಾ ಯೂತ್ ಕಾಂಗ್ರೆಸ್ ವತಿಯಿಂದ ಹಮ್ಮಿಕೊಂಡಿದ್ದ 'ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಖಂಡಿಸಿ' ಪ್ರತಿಭಟನೆಯಲ್ಲಿ ಭಾಗವಹಿಸಿದ್ದೆ.
ಈ ಕುರಿತಾದ ಪತ್ರಿಕಾ ವರದಿಗಳು ಹೀಗಿವೆ.. -
Dr. G Parameshwara
@DrParameshwara
ಇಡೀ ರಾಜ್ಯವೇ ಹಲವು ದಶಕಗಳು ಕಾಣದ ಬರಕ್ಕೆ ಈ ವರ್ಷ ತುತ್ತಾಗಿದೆ. ಈ ಸಂದರ್ಭದಲ್ಲಿ ಜನರಿಗೆ ಕುಡಿಯುವ ನೀರು, ಜಾನುವಾರುಗಳಿಗೆ ಮೇವು, ರೈತರ ಬೆಳೆಗಳಿಗೆ ನೀರು ಒದಗಿಸುವ ಸವಾಲು ನಮ್ಮೆದುರಿದೆ. ಜನರ ಕಷ್ಟ ನಷ್ಟಗಳನ್ನು ಆಲಿಸಿ, ಸರ್ಕಾರದಿಂದ ಅಗತ್ಯ ನೆರವು ಒದಗಿಸುವುದು ನಮ್ಮ ಕರ್ತವ್ಯ.
ಈ ನಿಟ್ಟಿನಲ್ಲಿ ನಾವು ಸಂಪೂರ್ಣ ಕಾರ್ಯೋನ್ಮುಖರಾಗಿದ್ದು, ಮುಂದಿನ ದಿನಗಳಲ್ಲಿ ಎದುರಾಗಬಹುದಾದ ಇನ್ನಷ್ಟು ಕಠಿಣ ಸವಾಲುಗಳನ್ನು ಎದುರಿಸಲು ಈಗಾಗಲೇ ತಯಾರಿ ಆರಂಭಿಸಲಾಗಿದೆ.
ಬುಧವಾರ ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಯ ಬರ ಪರಿಸ್ಥಿತಿ ಮತ್ತು ಕಂದಾಯ ವಿಷಯಗಳ ಕುರಿತ ಪ್ರಗತಿ ಪರಿಶೀಲನಾ ಸಭೆಯನ್ನು ನಡೆಸಿ, ಅಧಿಕಾರಿಗಳಿಗೆ ಅಗತ್ಯ ನಿರ್ದೇಶನಗಳನ್ನು ನೀಡಿದೆ.
ಈ ಕುರಿತಾದ ಪತ್ರಿಕಾ ವರದಿಗಳು ಹೀಗಿವೆ.. -
Dr. G Parameshwara
@DrParameshwara
During my meeting with Dalit leaders Shri Mavalli Shankar, Prof. Indira Krishnappa, Shri M. Venkataswamy, Shri Sridhar Kaliveera and Shri Subbu Holeyar, we held detailed discussions on employment, education, land rights and electoral representation of the SC/ST communities.
Our Government is committed to filling backlog vacancies reserved for SC/ST communities in universities and major departments, while ensuring due reservation in the upcoming 72,000 government job openings. The demand to increase the post-matric scholarship from ₹1,800 to ₹3,000 will also be considered in the next Budget.
An SIT has been constituted by the Revenue Department to investigate the allegations concerning 150 acres of SC/ST land said to be under the control of the Art of Living. We will also ensure that no eligible Dalit voter is removed from the electoral roll during the SIR process, with BLA representatives from both parties closely overseeing the exercise.
The rights, dignity and opportunities of Dalit communities will remain central to our governance.
#socialjustice -
Dr. G Parameshwara
@DrParameshwara
ದಲಿತ ಸಮುದಾಯದ ಹಕ್ಕುಗಳನ್ನು, ನ್ಯಾಯೋಚಿತ ಅವಕಾಶಗಳನ್ನು ರಕ್ಷಿಸಲು ನಮ್ಮ ಸರ್ಕಾರವು ಬದ್ಧವಾಗಿದೆ.
ಈ ನಿಟ್ಟಿನಲ್ಲಿ ವಿಶ್ವವಿದ್ಯಾಲಯಗಳು ಹಾಗೂ ಪ್ರಮುಖ ಸರ್ಕಾರಿ ಇಲಾಖೆಗಳಲ್ಲಿ ಬಾಕಿ ಉಳಿದಿರುವ ಎಸ್ಸಿ/ಎಸ್ಟಿ ಬ್ಯಾಕ್ಲಾಗ್ ಹುದ್ದೆಗಳ ಭರ್ತಿಗೆ ಕ್ರಮವಹಿಸಲಾಗುವುದು. ಜೊತೆಗೆ, ಮುಂಬರುವ 72 ಸಾವಿರ ಸರ್ಕಾರಿ ಹುದ್ದೆಗಳ ನೇಮಕಾತಿಯಲ್ಲಿ ಮೀಸಲಾತಿಯನ್ನು ಖಚಿತಪಡಿಸಲಾಗುವುದು. ಪ್ರಸ್ತುತ ಇರುವ ₹1,800ರ ಮೆಟ್ರಿಕ್ ನಂತರದ ವಿದ್ಯಾರ್ಥಿವೇತನವನ್ನು ₹3,000ಕ್ಕೆ ಹೆಚ್ಚಿಸುವ ಬೇಡಿಕೆಯನ್ನು ಮುಂದಿನ ಬಜೆಟ್ನಲ್ಲಿ ಪರಿಶೀಲಿಸಲಾಗುವುದು.
ಕಾನೂನುಬದ್ಧವಾಗಿ ಪರಿಶಿಷ್ಟರಿಗೆ ದೊರೆಯಬೇಕಾದ ಮೀಸಲಾತಿ ಸೌಲಭ್ಯಗಳ ಸಮರ್ಪಕ ಜಾರಿಗೆ ಆದ್ಯತೆ ನೀಡಲಾಗುತ್ತಿದ್ದು, ದಲಿತ ಸಮುದಾಯದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಹೆಚ್ಚಳ, ಭೂ ಹಕ್ಕಿನ ಭರವಸೆ ಹಾಗೂ ಮತದಾನದ ಹಕ್ಕಿನ ರಕ್ಷಣೆಗೆ ನಮ್ಮ ಸರ್ಕಾರವು ಶ್ರಮಿಸಲಿದೆ. ದಲಿತ ಸಮುದಾಯದ ಹಕ್ಕುಗಳನ್ನು ರಕ್ಷಿಸುವುದು ಸರ್ಕಾರದ ಪ್ರಮುಖ ಆದ್ಯತೆಗಳಲ್ಲೊಂದಾಗಿದೆ.
#ಸಾಮಾಜಿಕನ್ಯಾಯ -
Dr. G Parameshwara
@DrParameshwara
ದೇಶ ಕಂಡ ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರ, ಕ್ರಾಂತಿಕಾರಿ ನಾಯಕ ಚಂದ್ರಶೇಖರ್ ಆಜಾದ್ ಅವರ ಜನ್ಮದಿನದಂದು ಗೌರವ ನಮನಗಳನ್ನು ಸಲ್ಲಿಸುತ್ತೇನೆ.
ಸ್ವಾತಂತ್ರ್ಯಕ್ಕಾಗಿ ತಮ್ಮ ಬದುಕನ್ನೇ ಅರ್ಪಿಸಿದ ಅವರ ಧೈರ್ಯ, ತ್ಯಾಗ, ಬಲಿದಾನ ಮತ್ತು ದೇಶಪ್ರೇಮವು ಯುವಜನತೆಗೆ ಸದಾ ಸ್ಫೂರ್ತಿಯಾಗಿರಲಿದೆ. -
Dr. G Parameshwara
@DrParameshwara
‘ಸ್ವರಾಜ್ಯ ನನ್ನ ಜನ್ಮಸಿದ್ಧ ಹಕ್ಕು’ ಎಂಬ ಘೋಷವಾಕ್ಯದ ಮೂಲಕ ದೇಶದ ಜನರಲ್ಲಿ ಸ್ವಾತಂತ್ರ್ಯದ ಕಿಚ್ಚು ಹಚ್ಚಿದ ಮುಂಚೂಣಿ ಹೋರಾಟಗಾರ ಲೋಕಮಾನ್ಯ ಬಾಲಗಂಗಾಧರ ತಿಲಕ್ ಅವರ ಜನ್ಮದಿನದಂದು ನನ್ನ ಗೌರವ ನಮನಗಳು.
ಶಿಕ್ಷಣದ ಮೂಲಕ ಸಮಾಜದಲ್ಲಿ ಜಾಗೃತಿ ಮೂಡಿಸಿ, ಸ್ವಾತಂತ್ರ್ಯ ಹೋರಾಟದಿಂದ ಹಿಡಿದು ಸಮಾಜ ಸುಧಾರಣೆಯವರೆಗೆ ತಮ್ಮಿಡೀ ಬದುಕನ್ನು ದೇಶಕ್ಕಾಗಿ ಸಮರ್ಪಿಸಿದ ಮಹಾಚೇತನರ ಜೀವನಾದರ್ಶಗಳು ನಮಗೆಲ್ಲರೂ ಅನುಕರಣೀಯ.
#ಬಾಲಗಂಗಾಧರ_ತಿಲಕ್ -
Dr. G Parameshwara
@DrParameshwara
Karnataka’s CET enabled lakhs of students to appear for competitive examinations without the uncertainty and chaos now associated with NEET. After the CET-based medical entrance system was replaced, question-paper leaks and examination irregularities became matters of national concern. The Union Government must take full responsibility, ensure a transparent investigation and restore students’ faith in the examination system.
-
Dr. G Parameshwara
@DrParameshwara
Warm birthday greetings to His Holiness the 14th Dalai Lama on his 91st birthday.
May he be blessed with good health and continued strength to inspire the world with his timeless message of peace, compassion, harmony, and human values.
#dalailama -
Dr. G Parameshwara
@DrParameshwara
SSAHE takes a bold step towards future-ready engineering education.
Sri Siddhartha Academy of Higher Education (SSAHE), Karnataka’s Deemed-to-be University, has partnered with UpGrad to launch an industry-aligned School of Technology within its engineering programs.
This collaboration brings AI, Machine Learning, Quantum Computing, Robotics, and Full Stack Engineering into a hands-on, application-first learning model—combining deep academic foundations with real-world tech exposure.
With intensive coding, project-based learning, industry mentorship, and access to innovation labs and global masterclasses, students will graduate industry-ready, not as freshers.
SSAHE continues to redefine engineering education for India’s next generation of innovators.
@upGrad_edu @drmcsudhakar @RonnieScrewvala -
Dr. G Parameshwara
@DrParameshwara
ಕನ್ನಡದ ಸಿನೆಮಾವೊಂದು ಕರ್ನಾಟಕವನ್ನು ದಾಟಿ ದೇಶದುದ್ದಗಲಕ್ಕೂ ಹಾಗೂ ವಿದೇಶದಲ್ಲೂ ಜನಮನವನ್ನು ಗೆಲ್ಲುತ್ತಿರುವುದು ಕನ್ನಡಿಗರೆಲ್ಲರಿಗೂ ಹೆಮ್ಮೆಯ ವಿಚಾರ. ನಮ್ಮ ಕನ್ನಡ ಚಿತ್ರರಂಗ ಬೇರಾರಿಗೂ ಕಮ್ಮಿಯಿಲ್ಲ ಎಂದು ಅವುಗಳ ಯಶಸ್ಸಿನ ಮೂಲಕವೇ ಸಾರುವ ಸಮಯ ಬಂದಿದೆ. #kgf ತಂಡಕ್ಕೆ ನನ್ನ ಹೃತ್ಪೂರ್ವಕ ಶುಭಾಶಯಗಳು!
-
Dr. G Parameshwara
@DrParameshwara
Spot a pothole in Bengaluru? Here is how to report it.




























































































































































































































































































































































































































































































































































































































































































































































































































































































































































































































































































































































































































































































































































































































































































































































































































































































































































































































































































































































































































































































































































































































































































































































































































































































































































































































































































































































































































































































































































